Name: jolada hadagi ramadasaru
Ankita: shreerama
****
ದಾಸರ ಹೆಸರು: ರಾಮದಾಸರು
ಜನ್ಮ ಸ್ಥಳ: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕು ಜೋಳದಹೆಡಿಗೆ
ತಂದೆ ಹೆಸರು: ಚಾಚಾ ಸಾಹೇಬ್
ತಾಯಿ ಹೆಸರು: ಪೀರಮ್ಮ
ಕಾಲ : 1882 -
ಅಂಕಿತನಾಮ: ಶ್ರೀರಾಮ
ಲಭ್ಯ ಕೀರ್ತನೆಗಳ ಸಂಖ್ಯೆ: 800
ಗುರುವಿನ ಹೆಸರು: ಶ್ರೀರಾಮಧೂತ
ಆಶ್ರಯ: ಜಿಲ್ಲೆ ಅಂಗಧ
ರೂಪ: ತೆಳು, ಗಿಡ್ಡ, ಬಡಹಲು ಶರೀರ
ಪೂರ್ವಾಶ್ರಮದ ಹೆಸರು: ಬಡೇ ಸಾಹೇಬ್
ಮಕ್ಕಳು: ಅವರ ಹೆಸರು: ಒಬ್ಬ ಮಗ- ಸೂಫಿ - (ನಿಧನ)
ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು: ಉಗಾಭೋಗ, ಶತಾಷ್ಟಕಗಳು
ಪತಿ: ಪತ್ನಿಯ ಹೆಸರು: ಇಬ್ಬರು - ಹುಸೇನಮ್ಮ, ಅಲ್ಲಮ್ಮ
ಒಡಹುಟ್ಟಿದವರು: ಇಲ್ಲ
ವೃತ್ತಿ: ಗಾದಿ ಹಾಕುವುದು (ಪಿಂಜಾಳ)
ಕಾಲವಾದ ಸ್ಥಳ ಮತ್ತು ದಿನ: 1940 - ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಲಿಂಗದ ಹಳ್ಳಿಯಲ್ಲಿ
ವೃಂದಾವನ ಇರುವ ಸ್ಥಳ: ಲಿಂಗದಹಳ್ಳಿ
ಕೃತಿಯ ವೈಶಿಷ್ಟ್ಯ: ಭಕ್ತಿ, ದ್ವೈತ ಸಿದ್ಧಾಂತ, ಸಾಮಾಜಿಕ ಚಿಂತನೆ
ಇತರೆ: ಶ್ರೀರಾಮನನ್ನು ಅಂಕಿತವಾಗಿದ್ದು ಕೆಂಪದ್ದು ದಾಸ ಸಾಹಿತ್ಯದಲ್ಲಿ ದಾಖಲೆ, ಹಿಂದು ಇಸ್ಲಾಂ - ದಾವಿರ್ಂಕ್ಯ ಸಾಣರಸ್ಯ - ಭಾತ್ವೈಕ್ಯ.
****
ಶ್ರೀರಾಮಾವಧೂತವರಜ ಶ್ರೀ ರಾಮಾಂಕಿತ ಯೋಗಿನೇ
ಜ್ಞಾನ ವೈರಾಗ್ಯಸಿದ್ದ್ಯಥ೯ಂ ನಮಾಮಿ ಚ ಪುನಃ
🙏🙏( ಚಿಪ್ಪಗಿರಿಯ ತಪೋನಿಧಿ ಶ್ರೀ ವಿಜಯದಾಸರ ಸೇವಾ ಬಳಗ )
ಶ್ರೀ ರಾಮದಾಸರ ಮೂಲ ಹೆಸರು ಬಡೇಸಾಬ. ಇಸ್ಲಾಮ್ ಧರ್ಮ ದ ಪಿಂಜಾರ ವರ್ಗಕ್ಕೆ ಸೇರಿದವರು. ರಾಯಚೂರು ಜಿಲ್ಲೆಯ ,ದೇವದುರ್ಗ ತಾಲೂಕಿನ ,ಜೋಳದಹೆಡಗಿ ಗ್ರಾಮದಲ್ಲಿ 1882ರಲ್ಲಿ ಜನಿಸಿದರು.ತಂದೆ ಖಾಜಾಸಾಬ ತಾಯಿ ಪಿರಮ್ಮ. ರಾಮದಾಸರು ಆಗಿನ ಕಾಲದ ಕನ್ನಡ ಖಾಸಗಿ ಶಾಲೆಯಲ್ಲಿ 4 ನೇ ತರಗತಿಯವರೆಗೆ ಅಭ್ಯಾಸ ಮಾಡಿದರು.ಮನೆಯ ಆರ್ಥಿಕ ಪರಸ್ಥಿತಿಯಿಂದಾಗಿ ಮುಂದೆ ಓದದೇ 14 ನೆ ವಯಸ್ಸಿನಲ್ಲಿ ಕೆಲಸ ಮಾಡಲು ಜೋಳದಹೆಡಿಗೆಯ ಮಾಲಿ ಪಾಟೀಲರ ಅಂಗಡಿಯಲ್ಲಿ ಲೆಕ್ಕ ಪತ್ರ ನೋಡಿಕೊಳ್ಳಲು ಸೇರಿಕೊಂಡರು .ಬುದ್ಧಿಯಲ್ಲಿ ಚುರುಕುಮತಿ ಯಾಗಿದ್ದ ಇವರನ್ನು, ಮಾಲಿ ಪಾಟೀಲರು ಬಹಳ ಇಷ್ಟಪಟ್ಟರು. ಆದರೆ ಆ ಕೆಲಸ ರಾಮಾದಾಸರಿಗೆ ಇಷ್ಟವಾಗಲಿಲ್ಲ .ಮುಂದೆ ಮಾನವಿ ತಾಲೂಕಿನ ಹಣಗಿ ಗ್ರಾಮದಲ್ಲಿ ಖಾಸಗಿ ಶಾಲೆಯನ್ನು ತೆರೆದು ಅಲ್ಲಿನ ಮಕ್ಕಳಿಗೆ ಪಾಠ ಮಾಡಲು ಆರಂಭಿಸಿದರು. ಅಲ್ಲಿ ಸರಿಯಾದ ಆರ್ಥಿಕ ಅನುಕೂಲ ಆಗಲಿಲ್ಲ.ಅಲ್ಲಿಂದ ಹುಟ್ಟೂರು ಜೋಳದಹೆಡಿಗಿ ಗ್ರಾಮಕ್ಕೆ ಬಂದರು.
ದೇವದುರ್ಗದ ಹುಸೇನೆಮ್ಮ ಎಂಬ ಯುವತಿಯ ಜೊತೆಗೆ ಮದುವೆ ಆಯಿತು.ಅದೇ ಸಮಯದಲ್ಲಿ ರಾಮದಾಸ ರ ತಂದೆ ತಾಯಿ ತೀರಿಕೊಂಡರು.ಮುಂದೆ ಹುಸೇನಪುರ್ (ಕವಿತಾಳ ಹತ್ತಿರ ಇರುವದು) ಕವಿತಾಳ ಹೀಗೆ ಜೀವನ ನಿರ್ವಹಣೆ ಗಾಗಿ ಊರೂರು ತಿರುಗುತ್ತಾ ಸಾಗುತ್ತಾರೆ .ಅದೇ ಸಮಯದಲ್ಲಿ ಹಾಲಪುರ ಕ್ಕೆ ಬಂದಾಗ, ಯೋಗೇಂದ್ರರಾವ್ ದೇಸಾಯಿಯವರ ಪರಿಚಯವಾಗುತ್ತದೆ.ಹಾಲಪುರ ದಲ್ಲಿ ಒಂದು ವರ್ಶಗಳ ಕಾಲ ಶಾಲೆಯನ್ನು ನಡೆಸುತ್ತಾರೆ .ದೇಸಾಯಿಯವರ ಮನೆಯಲ್ಲಿಯೇ ವಾಸ್ತವ್ಯ ಹುಡುತ್ತಾರೆ. ಮುಂದೆ ಗೊನವಾರ ಕ್ಕೆ ಹೋಗಿ ಅಲ್ಲಿ ಶಾಲೆಯನ್ನು ತರೆಯುತ್ತಾರೆ ಶ್ರೀನಿವಾಸ ರಾವ ಕುಲಕರ್ಣಿ(ಪಟವಾರಿ) ಪರಿಚಯ ವಾಗುತ್ತದೆ .ಅಲ್ಲಿ ಸುಮಾರು ವರ್ಷಗಳ ಇರುತ್ತಾರೆ. ನಂತರ ದೇವದುರ್ಗದ ಹುಸೇನಮ್ಮ ಎಂಬ ಯುವತಿಯ ಜೊತೆಗೆ ಮದುವೆ ಆಗುತ್ತದೆ.ಅದೇ ಸಮಯದಲ್ಲಿ ರಾಮದಾಸ ರ ತಂದೆ ತಾಯಿ ದೇವರ ಪಾದ ಸೇರುತ್ತಾರೆ. ಮುಂದೆ ಹೊಟ್ಟೆಪಾಡಿಗಾಗಿ ರಸ್ತೆ ಕಾಮಗಾರಿಯ ಕೆಲಸದಲ್ಲಿ ಮೇಸ್ತ್ರಿಯಾಗಿ ಕೆಲಸ ಮಾಡುತ್ತಾರೆ.
ನಂತರದಲ್ಲಿ ಅವರ ಸಾಹಿತ್ಯ ಕ್ಷೇತ್ರದಲ್ಲಿರುವ ಒಲವು ಅವರನ್ನು ನಾಟಕದ ಎಡೆಗೆ ಸೆಳೆಯುತ್ತದೆ..ಗೊನವಾರ ದಲ್ಲಿ ತಾವೇ ಕಟ್ಟಿದ ಬಯಲಾಟ ಮಾಡಿಸುವುದು ಇವರ ಕಾಯಕವಾಯಿತು. ನಂತರ ಕೆಲವೊಂದು ಕುಹಕ ಮಾತುಗಳಿಂದ ಮನನೊಂದು ಊರು ಬಿಟ್ಟು ಹಾಗೆ ರಾಯಚೂರ ಕಡೆಗೆ ಬರುತ್ತಾರೆ. ಅಲ್ಲಿ ರೈಲ್ವೆ ನಿಲ್ದಾಣ ಹತ್ತಿರ ಒಬ್ಬ ಸಾಧು ವಿನ ಪರಿಚಯ ವಾಗುತ್ತದೆ. ಅವರ ಜೊತೆಗೆ ಹಂಪಿಗೆ ಬರುತ್ತಾರೆ.ಮನನೊಂದಿದ್ದ ದಾಸರು ಹಂಪಿಯ ತುಂಗಭದ್ರ ನದಿಯ ತಟದ ಕೋದಂಡ ರಾಮನ ಗುಡಿಯ ಮುಂದೆ ಇರುವ ಚಕ್ರತಿರ್ಥ ದಲ್ಲಿ ಹಾರಿ ಬಿಡುತ್ತಾರೆ .ಕಿವಿಯಲ್ಲಿ ಯಾರೋ ಶ್ರೀರಾಮ ಎಂದು ಕೂಗಿದ ಹಾಗೆ ಆಗುತ್ತದೆ.ಕಣ್ಣು ತೆರೆಯುವುದರೊಳಗೆ ನದಿಯ ದಂಡೆಯ ಯಲ್ಲಿ ಇರುತ್ತಾರೆ. ಹೀಗೆ ಬಡೇಸಾಬರು ರಾಮದಾಸರಾಗಿ ಹಾಡುಗಳನ್ನು ಬರೆಯಲಾರಂಭಿಸುತ್ತಾರೆ.
ರಾಮಾದಾಸರಿಗೆ .ಯೋಗೇಂದ್ರರಾವ್ ದೇಸಾಯಿ ಹಾಲಪುರ,ಶ್ರೀ ಶ್ರೀನಿವಾಸರಾವ ಪಟವಾರಿ ,ಛಾಯೆಶ್ವರಾವ್ ಮಸ್ಕಿ, ಗೌಡೂರು ವಿರಯ್ಯಸ್ವಾಮಿ,ಹನುಮಂತ ಆಚಾರ್ಯ ಇಟಗಿ ಅವರ ಜೊತೆಗೆ ಹೆಚ್ಚು ಸಮಯವನ್ನು ಕಳೆದವಂತವರು.
ರಾಮದಾಸರು ಉಪಯೋಗಿಸಿ ತ್ತಿದ್ದ ವಸ್ತುಗಳು.ಹಾಲಪುರಿನ ದೇಸಾಯಿಯವರ ಮನೆಯಲ್ಲಿ ಅವರು ಬಳಸುತ್ತಿದ್ದ ತಿರುಣಿಗೆ ತಂಬಿಗೆ, ಇನ್ನೂ ಇದೆ...ಶ್ರೀನಿವಾಸ್ ರಾವ್ ಕುಲಕರ್ಣಿ ಮನೆಯಲ್ಲಿ ,ತಾಳಗಳು, ಇವೆ. ಬುದ್ದಿನ್ನಿಯ ದೇಸಾಯೀ ಅವರ ಮನೆಯಲ್ಲಿ ಕೈ ಬಡಗಿ(ಬೆತ್ತ) ಇದೆ.ಹಾಲಪುರ ನಲ್ಲಿ ಇದ್ದಾಗ ರಾಮದಾಸರು ಊರಿನ ಜನರ ಜೊತೆಗೆ ಸೇರಿ ಭಜನೆ ಮಾಡ್ತಾ ಇದ್ದರು. ಈಗಲೂ ಆ ಮನೆಯನ್ನು ರಾಮದಾಸರ ಮನೆ ಎಂದು ಕರೆಯುತ್ತಾರೆ.
ತಮ್ಮ ಉಳಿದ ದಿನಗಳನ್ನು ಎರಡನೆಯ ಪತ್ನಿ ಅಲ್ಲಮ್ಮ ನವರ ಜೊತೆಗೆ ದೇವದುರ್ಗ ತಾಲೂಕಿನ ಲಿಂಗದಹಳ್ಳಿ ಯಲ್ಲಿ ಕಳೆದರು.1942ರಲ್ಲಿ ಭೌತಿಕ ಶರೀರವನ್ನು ತ್ಯಜಿಸಿದರು.ಕೃಷ್ಣಾ ನದಿಯ ದಂಡೆಯ ಪಕ್ಕದಲ್ಲಿ ಇರುವ ಪತ್ನಿಯ ಹೊಲದಲ್ಲಿ ಅವರ ಸಮಾಧಿಯನ್ನು ಮಾಡಲಾಯಿತು. ಕೆಲವು ದಿನಗಳ ನಂತರ ,ಸಮಾಧಿಯ ಮೇಲೆ ತುಳಸಿ ಸಸಿಗಳು ಬೆಳೆದಿದ್ದವು .ಹಾಗಾಗಿ ಇವರನ್ನು ತುಳಸೀದಾಸರು ಎಂದು ಕೂಡ ಕರೆಯುತ್ತಾರೆ.ರಾಮ ದಾಸರ ರಚನೆಗಳಲ್ಲಿ ಕೀರ್ತನೆಗಳು 680, ಉಗಾಭೋಗಗಳು 110, ಶತಾಷ್ಟಕಗಳು 5 ,ಅಲ್ಲದೆ ಅನ್ಯಭಾಷೆ ಕೀರ್ತನೆಗಳು10 ರಚಿಸಿದ್ದಾರೆ.
ಹೀಗೆ ಸುಮಾರು ಎಂಟು ನೂರಕ್ಕೂ ಮಿಕ್ಕಿದ ರಚನೆಗಳನ್ನು ಸಾಹಿತ್ಯಕ್ಷೇತ್ರಕ್ಕೆ ಕೊಟ್ಟ ಕೀರ್ತಿ ರಾಮದಾಸರಿಗೆ ಸಲ್ಲುತ್ತದೆ. ಇವರ ರಚನೆಗಳಲ್ಲಿ ಸಾಮಾಜಿಕ ಕಳಕಳಿ, ಮಾನವೀಯ ಮೌಲ್ಯಗಳು ಇದ್ದು, ಅತ್ಯಂತ ಸರಳ ಭಾಷೆಯಲ್ಲಿ ಜನ ಮನ ಮುಟ್ಟುವಂತೆ ಬರೆದಿದ್ದಾರೆ
ಹರಿದಾಸ ಪಂಥದಲ್ಲಿ ಶ್ರೇಷ್ಟ ವಜ್ರದಂತೆ ವಿರಾಜಮಾನರಾದ ಅವಧೂತರೆಂದೇ.ಬದುಕನ್ನು ಹರಿಯ ಚರಣಗಳಲ್ಲಿ ನಿಲಿಸಿದ ದಾಸಶ್ರೇಷ್ಟರಾದ ಶ್ರೀಬಡೇಸಾಹೇಬರ ( ಜೋಳದಹೆಡಗಿ ರಾಮದಾಸರ) ಆರಾಧನೆ.
***
ಶ್ರೀಂ ಶ್ರೀ ಕಂ ಕಪಿಲಾಯ ನಮಃ
7 Jan 2021 margashira bahula dashami
ಯಾವ ಮತವಾದರೇನು, ಹರಿಯಮತ ಎನ್ನದು ಎಂದೇ ನಂಬಿ ಹನುಮನಮತದ ಹಿರಿಮೆಯನ್ಸಾರಿದ ಯಮಾಂಶಜರಾದ ಶ್ರೀ ಕನಕದಾಸಾರ್ಯರು ನಮಗೆ ಸದಾ ಪರಮಪೂಜ್ಯರೇ ಸರಿ.. ಇವರ ಹಾದಿಯಲ್ಲೇ ನಡೆದು ನಮ್ಮ ಹರಿದಾಸರಲ್ಲಿ ಧೀಟಾಗಿ ಸೇರಿದ 18ನೇ ಶತಮಾನದ ರಾಯಚೂರು ಜಿಲ್ಲೆಯ, ದೇವದುರ್ಗದ ಜೋಳದಹೆಡಗಿ ಗ್ರಾಮದಲ್ಲಿ ಜನಿಸಿದ, ಮುಸ್ಲಿಂ ಪಂಥಕ್ಕೆ ಸೇರಿದರೂ ರಾಮ ಶ್ರೀರಾಮ ಅಂಕಿತನಾಮಗಳಿಂದ ಶ್ರೀಹರಿಯ ಗುಣಗಾನವನ್ನು ಮಾಡಿದ, ಹರಿ ಸರ್ವೋತ್ತಮ, ವಾಯುಜೀವೋತ್ತಮತ್ವವನ್ನು ಸಾರಿದ , ಸುಮಾರು 800 ಕ್ಕೆ ಹೆಚ್ಚಿನ ಪದಗಳು, 100 ಉಗಾಭೋಗಗಳೂ, 460 ನುಡಿಗಳುಳ್ಳ ಶ್ರೀ ರಾಮಭಜನೆ ಎನ್ನುವ ಮೇರು ಕೃತಿಯೂ, 5 ಶತಾಷ್ಟಕಗಳನ್ನು ರಚನೆ ಮಾಡಿ, ಪರಮಾತ್ಮನ ಪದಗಳಲ್ಲಿ ಸಮರ್ಪಣೆ ಮಾಡಿ ನಮ್ಮನ್ನು ತಮ್ಮ ಪಥದಲ್ಲಿ ನಡೆಯಲು ಪ್ರೇರಕರಾದ, ಹರಿದಾಸ ಪಂಥದಲ್ಲಿ ಶ್ರೇಷ್ಠ ವಜ್ರದಂತೆ ವಿರಾಜಮಾನರಾದ, ಅವಧೂತರೆಂದೇ ಬದುಕನ್ನು ಹರಿಯ ಚರಣಗಳಲ್ಲಿ ನಿಲಿಸಿದ ದಾಸ ಶ್ರೇಷ್ಠರಾದ ಶ್ರೀ ಜೋಳದಹಡಗಿ ರಾಮದಾಸರ ಪುಣ್ಯದಿನ ಇಂದು..
ಶ್ರೀ ದಾಸಾರ್ಯರ ಅನುಗ್ರಹ ಸದಾ ನಮ್ಮ ಸಮೂಹದಲಿ ಎಲ್ಲಾ ಸದಸ್ಯರ ಮೇಲಿರಲೆಂದು ಪ್ರಾರ್ಥನೆ ಮಾಡುತ್ತಾ.....
-Smt. Padma Sirish
ನಾದನೀರಾಜನದಿಂ ದಾಸಸುರಭಿ
***
year 2021
ಶ್ರೀ ರಾಮಾವಧೂತವರಜ ಶ್ರೀ ರಾಮಾಂಕಿತ ಯೋಗಿನೇ/
ಜ್ಞಾನ ವೈರಾಗ್ಯ ಸಿದ್ಧ್ಯರ್ಥಂ ನಮಾಮಿ ಚ ಪುನಃ//
ಅನ್ಯ ಮತದಲ್ಲಿ ಹುಟ್ಟಿದರೇನು ಹರಿಯಮತವೇ ಶ್ರೇಷ್ಠವೆಂದು ತಿಳಿದು ಜೀವನವನ್ನು ಕಳೆದವರಾದ, ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀರಾಮನನ್ನು ಅವಿರತ ಸೇವಿಸಿ ಜೀವದ ಭಕ್ತಿಯಿಂದ ಆರಾಧನೆ ಮಾಡಿ ಆ ಭಕ್ತಿಯನ್ನು ತಮ್ಮ ಅತ್ಯದ್ಭುತವಾದ ಕೃತಿಗಳ ಮುಖಾಂತರ ಸಜ್ಜನ ವರ್ಗಕ್ಕೆ ಅನುಗ್ರಹ ಮಾಡಿದವರಾದ, ಕನ್ನಡ, ಸಂಸ್ಕೃತ, ದಖನಿ ಉರ್ದು ಭಾಷೆಯಲ್ಲಿ ವಿಶೇಷವಾದ ಪದಪ್ರಯೋಗಗಳಿಂದ ಅಸಾಮಾನ್ಯ ರೀತಿಯಲ್ಲಿ ಕೃತಿ ರಚನೆ ಮಾಡಿದವರಾದ, ಸಾಧಕರಾದವರು ಪರಮಾತ್ಮನ ಅನುಗ್ರಹದಿಂದ ಸಂಸಾಕರಕ್ಕೆ ಬಂದಾಗ ಅವರ ಸಾಧನೆಯ ಕ್ರಮ ಹೇಗಿರಬೇಕೆಂದು ರಚಿಸಿ ತಿಳಿಸಿದವರಾದ, ಅವಧೂತರಂತೆಯೇ ತಮ್ಮ ಜೀವನವನ್ನು ಪರಮಾತ್ಮನಿಗೆ ಸಮರ್ಪಿಸಿದವರಾದ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಅನುಗ್ರಹ ಪಡೆದವರೂ, ಶ್ರೀ ಬುದ್ದಿನ್ನಿ ಮಾಧವತೀರ್ಥ ಯತಿವರೇಣ್ಯರನ್ನೇ ತಮ್ಮ ಸ್ವರೂಪೋದ್ಧಾರಕ ಗುರುಗಳನ್ನಾಗಿ ಪಡೆದವರಾದ, ಶ್ರೀ ಇಟಗಿ ಹನುಮಂತಾಚಾರ್ಯರಂತ ಜ್ಞಾನಿಗಳನ್ನು ಶಿಷ್ಯರನ್ನಾಗಿ ಪಡೆದವರಾದ, 18 ನೆಯ ಶತಮಾನದ ಕೊನೆಯಲ್ಲಿ ಆಗಿಹೋದ ಮಹಾನ್ ದಾಸಾರ್ಯರಾದ
ಶ್ರೀ ಲಿಂಗದಹಳ್ಳಿ ರಾಮದಾಸರ ಮಧ್ಯಾರಾಧನೆಯ ಶುಭಸ್ಮರಣೆಗಳು..
ಶ್ರೀ ರಾಮಾವಧೂತವರಜ ಶ್ರೀ ರಾಮಾಂಕಿತ ಯೋಗಿನೇ/
ಜ್ಞಾನ ವೈರಾಗ್ಯ ಸಿದ್ಧ್ಯರ್ಥಂ ನಮಾಮಿ ಚ ಪುನಃ ಪುನಃ//
ತುರುಕರ ಕುಲದಲಿ ಜನಿಸಿದರಾದರು,
ಹರಿಯೆ ಪರನೆಂದು ಕರವೆತ್ತಿ ಸಾರಿದಾ/
ದಾಸರಿಗೂಂದಿಸು ನೀನು ಮನವೇ
ದಾಸರಿಗೊಂದಿಸು ನೀನು
ಎಂದು,
ಸ್ವಾರ್ಥ ಇಲ್ಲದೆ ಸಕಲ ತೀರ್ಥಯಾತ್ರೆಯಾಚರಿಸಿ/
ಪಾರ್ಥಸಾರಧಿಯ ಮಹಿಮೆಗಳನೆಲ್ಲಾ ತಿಳಿದು/
ಕರ್ತೃ ಶ್ರೀರಾಮನೆಂದು ಡಂಗುರವ ಸಾರಿ/
ಸ್ವಾರ್ಥಿಗಳ ಮದವನ್ನು ಕೊಚ್ಚಿದ ಮಹಿಮನೆ
ವಂದಿಸುವೆ ಅಡಿಗಳಿಗೆ ತಂದೆ ದಾಸಾರ್ಯ
ಬಂದ ಭಯಗಳ ಕಳೆದೆನ್ನ ಎಂದೆಂದು ಉದ್ಧರಿಸು/
ಎಂದೇ ಶ್ರೀ ವೇದಮೂರ್ತಿ ಇಟಗಿ ಹನುಮಂತಾಚಾರ್ಯರಿಂದ ಗೇಗೀಯಮಾನರಾದ 19 ನೆಯ ಶತಮಾನದ ಮಹಾನ್ ದಾಸರು, ಸಾಧಕರಾದವರು ಯಾವ ಮತದಲ್ಲಿ ಹುಟ್ಟಿ ಬಂದರೂ ಹರಿ ಸರ್ವೋತ್ತಮ, ವಾಯು ಜೀವೋತ್ತಮತ್ವವನ್ನು ನಂಬಿ ಬದುಕಿದರೆ ಅವರಿಗೆ ಉದ್ಧಾರವು ನಿಶ್ಚಿತ ಎಂದು ತಮ್ಮ ಜೀವನದಿಂದ, ಅದ್ಭುತವಾದ ಕೃತಿಗಳಿಂದ ಸಾರಿದವರು, ಶ್ರೀರಾಮನ ಪದಕಮಲಗಳಲ್ಲಿ ತಮ್ಮ ಇಡೀ ಜೀವನವನ್ನು ಸಮರ್ಪಣೆ ಮಾಡಿದವರೂ ಆದ ಶ್ರೀ ಲಿಂಗದಹಳ್ಳಿ ರಾಮದಾಸರ ಉತ್ತರಾರಾಧನೆಯ ಶುಭವಂದನೆಗಳು...
*ವೇದಮೂರ್ತಿ ಶ್ರೀ ಇಟಗಿ ಹನುಮಂತಾಚಾರ್ಯರ* ರಚನೆಯನ್ನು ನೋಡೋಣ. ಈ ಕೃತಿಯಲ್ಲಿ ಶ್ರೀ ಹನುಮಂತಾಚಾರ್ಯರು ಶ್ರೀ ರಾಮದಾಸರ ಜೀವನ ಚರಿತ್ರೆಯನ್ನು ವಿವರಿಸಿದ್ದು ಕಾಣಬಹುದು.
*ವೇದಮೂರ್ತಿ ಶ್ರೀ ಇಟಗಿ ಹನುಮಂತಾಚಾರ್ಯರ* ರಚನೆ
ಇಂಥಾ ಮಹಿಮರ ಕಾಣೆನೊ ಈ ಜಗದೊಳಗೆ
ಇಂಥಾ ಮಹಿಮರ ಕಾಣೆ ಮಾಕಾಂತ ಪ್ರಿಯ ಭಕ್ತ
ಅನಂತ ಮಹಿಮೆಯ ತೋರ್ದ ಶಾಂತ ಶ್ರೀ ರಾಮಾಂಕಿತರ
ವರ ನಂದಿನೀ ಲೋಮದಿ ಧರೆಗೆ ಬಂದ
ಪರಧರ್ಮದೊಳು ಜನಿಸಿದಾ
ದುರುಳ ಸಂಸಾರದಿ ಪರಿಪರಿತಾಪಮೀರೆ
ತೊರೆವೆ ಪ್ರಾಣವನೆಂದು ವರಹಜ ತೀರಕೆ ಪೋಗಿ
ಧರೆಸುತೆವರನಾ ಚರಣತಲೆಸಯುವ
ಹರಿ ಆಯುಧತೀರ್ಥದಲಿ ಧುಮುಕಲು
ಗುರುವರ ಪವನನು ಪೊರಿಯುತ ಕರುಣಿಸೆ
ವರ ಅಂಕಿತಪೊಂದಿ ಮೆರೆದ ಶರಣರಾ
ಗಾನಲೋಲನ ಭಜಿಸುತಾ ನೇಮದಿ ಬಂದು
ಗೋನವಾರದಿ ನೆಲೆಸುತ
ಶಾನಭೋಗ ದೈವಜ್ಞರ ಸ್ನೇಹದಿ ತಾನು
ಜಾನಕಿವರ ವರಪಾವನ
ಜೀವನಪರನೊ ಸಾನುರಾಗದಿ ಸಾರುತ ಮುದದಲಿ
ದೀನಜನರನುದ್ಧರಿಸುತ ಕುಜನರ
ಜ್ಞಾನವ ಕಳೆದು ಮಾರಮಣ ಕರುಣ ಪಡೆಯುವ ಮಾರ್ಗತೋರ್ದರಾ
ಯಾತ್ರೆ ತೀರ್ಥವ ಚರಿಸುತ ಇವರು
ಜಗದ್ಧಾತ್ರನ ಮಹಿಮೆ ಪೊಗಳುತ
ಚಿತ್ರಲೀಲೆಯ ತೋರಿ ವಿಕ್ರಮವತ್ಸರ
ಮಾರ್ಗಶಿರಸಿತ ಹತ್ತನೆ ದಿನದಲ್ಲಿ
ನಕ್ರಹರನ ಸ್ಮರಿಸುತ
ಶಕ್ರಲೋಕವತಿಗ್ರಮಿಸಿ ತಾವಕ್ರನಿಂದ ತಾರಕವ ಪೊಂದಿ
ಚಕ್ರಪಾಣಿ *ಶ್ರೀ ನರಶಿಂಹವಿಠಲನ*
ಅಕ್ಕರಪುರಕೆ ಗಕ್ಕನೆ ಏರ್ದರ
ಶ್ರೀ ರಾಮದಾಸರ ಮಧ್ನಾರಾಧನೆಯ ಶುಭವಂದನೆ
-Smt. Padma Sirish
ನಾದನೀರಾಜನದಿಂ ದಾಸಸುರಭಿ
***
No comments:
Post a Comment