Thursday 15 April 2021

shatpuracharyaru nippani vasudevacharyaru ashwija shukla panchami ಷಟ್ಪುರಾಚಾರ್ಯರು





AshvIja shuddha panchami is the ArAdhane of shri shatpurAchAryaru.

shri shatpurAchAryaru...
ArAdhane: AshvIja shuddha panchami
Original name: nippANI shri vAsudEvAchArya
gurugaLu: shri galagali bAbAchArya and 
 jamakhanDi vAdirAjAchAryaru
ankita: prAnApathi viTTala from lingasuguru rAmadAsaru.

He was a staunch believer of the rujutwa of shri vAdirAja tIrtharu. He initially learnt nyAya and vedAnta from one of the foremost scholars of that time - shri galagali bAbAchArya. Then he learnt from shri jamakhanDi vAdirAjAchAryaru and became a great scholar.

He used to offer daily prayers to the following idols which were offered to him by his guru, shri jamakhanDi vAdirAjAchAryaru.
1. hayagrIva dEvaru
2. avatAratraya prANa dEvaru
3. pancha brindAvana of bhAvi samIra shri vAdirAja tIrtharu
4. shri bhUtarAjaru

He took ankita of prAnApathi viTTala from shri lingasuguru rAmadAsaru. He has composed several dEvaranAmAs.

shri shatpurAchArya varada gOvindA gOvindA... 

shri krishnArpaNamastu...
*******

21 October 2020 " ಶ್ರೀ ಪ್ರಾಣಪತಿ ವಿಠ್ಠಲರ ಸ್ಮರಣೆ "
[ ಈದಿನ ಶ್ರೀ ಪ್ರಾಣಪತಿ ವಿಠ್ಠಲರ ಆರಾಧನೆ ]
ಶ್ರೀವಾದಿರಾಜರ ಋಜುತ್ವ ಪ್ರತಿಪಾದಕರಾದ ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರ ಪ್ರೀತಿಯ ಶಿಷ್ಯರು - ಇಂದಿನ ಕಥಾನಾಯಕರಾದ ಶ್ರೀ ಪ್ರಾಣಪತಿವಿಠಲರು. 
ಮೂಲತಃ ನಿಪ್ಪಾಣಿಯವರಾದ ಇವರ ಹೆಸರು ಶ್ರೀ ವಾಸುದೇವಾಚಾರ್ಯರು. 
ಇವರು ಶ್ರೀ ಷಟ್ಟುರಾಚಾರ್ಯರು ಅಥವಾ ಶ್ರೀ ಶಹಾಪುರಾಚಾರ್ಯರೆಂದು ಪ್ರಸಿದ್ಧಿ ಪಡೆದವರು. 
ಪೂಜ್ಯ ಆಚಾರ್ಯರು ಶಾಸ್ತ್ರಾಧ್ಯಯನವನ್ನು ಪೂಜ್ಯ ಶ್ರೀ ಬಾಬಾಚಾರ್ಯ ಗಲಗಲಿಯವರಲ್ಲಿ ಮಾಡಿ - ಮುಂದೆ ಪ್ರೌಢ ವಿದ್ಯೆಯನ್ನೂ - ಸಮಗ್ರ ದ್ವೈತ ವೇದಾಂತರವನ್ನು ಪರಮಪೂಜ್ಯ ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರಳ್ಳಿ ಅಧ್ಯಯನ ಮಾಡಿದ ಭಾಗ್ಯಶಾಲಿಗಳು. 
ಅಂಕಿತ : ಶ್ರೀ ಪ್ರಾಣಪತಿ ವಿಠ್ಠಲ
ಉಪದೇಶ ಗುರುಗಳು : ಶ್ರೀ ಕಮಲಾಪತಿ ವಿಠ್ಠಲರು 
" ಗ್ರಂಥಗಳು "
" ಸಂಸ್ಕೃತ "
1. ಶ್ರೀ ಯಲಗುರೇಶ ಸ್ತುತಿ:
2. ಶ್ರೀ ಗುರು ಮಧ್ವ ಮಹಿಮಾ 
3. ಶ್ರೀ ಬನಶಂಕರೀ ಸ್ತೋತ್ರಮ್ 
4. ಶ್ರೀ ವಾದಿರಾಜ ಗುಣರತ್ನ ಮಾಲಾ 
5. ಶ್ರೀ ವಾದಿರಾಜಾಷ್ಟಕಮ್  
6. ಶ್ರೀ ಭೂತರಾಜ ಸ್ತೋತ್
7. ಶ್ರೀ ವಿಷ್ಣುತೀರ್ಥ ಮಾಹಾತ್ಮ್ಯ
8. ಶ್ರೀ ಪುರಂದರದಾಸ ಮಾಹಾತ್ಮ್ಯಮ್
9. ಶ್ರೀ ವಿಜಯದಾಸ ಮಾಹಾತ್ಮ್ಯಮ್ 
10. ಶ್ರೀ ಗೋಪಾಲದಾಸ ಮಾಹಾತ್ಮ್ಯಮ್ 
11. ಶ್ರೀ ಜಗನ್ನಾಥದಾಸ ಮಾಹಾತ್ಮ್ಯಮ್ 
12. ಶ್ರೀ ಗಲಗಲಿ ಬಾಬಾಚಾರ್ಯ ಮಾಹಾತ್ಮ್ಯಮ್ 
13. ಶ್ರೀ ಸುಧಾಕರ ಗುರುಗುಣ ರತ್ನಮಾಲಾ [ 170 ಶ್ಲೋಕಗಳು ]
" ಹರಿದಾಸ ಸಾಹಿತ್ಯ "
1. ಶ್ರೀ ವೃಂದಾವನಾಚಾರ್ಯರ ಸ್ತುತಿ 
2. ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರ ಸ್ತುತಿ 
3. ಹೊಡಿ ನಗಾರಿ ಮ್ಯಾಲೆ ಕೈಯಾ 
" ಉಪ ಸಂಹಾರ :
ನಿಪ್ಪಾಣಿ ಶ್ರೀ ವಾದಿರಾಜಾಚಾರ್ಯರು " ಮಧುಕರಿ ವೃತ್ತಿ " ಯಿಂದಲೇ ತಮ್ಮ ಜೀವಿತವನ್ನು ನಿರ್ವಹಿಸಿ - ಬಿಂಬೋಪಾಸನೆಯಲ್ಲಿ ನಿಷ್ಣಾತರಾಗಿದ್ದು - ಯಂತ್ರ, ಮಂತ್ರಗಳಲ್ಲಿಯೂ ಅತ್ಯದ್ಭುತ ಸಿದ್ಧಿಯನ್ನು ಪಡೆದಿದ್ದರು. 
 ಶ್ರೀ ಹರಿ ವಾಯು ವಾದಿರಾಜರ ಶ್ರೀ ರಾಘವೇಂದ್ರ ತೀರ್ಥರ ಕಾರುಣ್ಯ ಪಾತ್ರರೂ - ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರ ಪ್ರೀತಿಯ ಶಿಷ್ಯರಾಗಿ ಸೇವೆ ಸಲ್ಲಿಸಿ " ಆಶ್ವೀಜ ಶುದ್ಧ ಪಂಚಮೀ " ಶ್ರೀ ಹರಿಯ ವಾಸ್ತ ಸ್ಥಾನವಾದ ವೈಕುಂಠಕ್ಕೆ ಪ್ರಯಾಣ ಬೆಳೆಸಿದರು. 
ಸತ್ಯಂ ಸತ್ಯಂ ಪುನಃ ಸತ್ಯಂ 
ತ್ರಿವಾಚಾಪಿ ಮಯೋಚ್ಯತೇ ।
ಪಠತಾಂ ಶೃಣ್ವತಾಂ ಚಾಪಿ 
ಸರ್ವಸಂಪದ್ಭವಿಷ್ಯತಿ ।।
by ಆಚಾರ್ಯ ನಾಗರಾಜು ಹಾವೇರಿ
     ಗುರು ವಿಜಯ ಪ್ರತಿಷ್ಠಾನ
****

ಶ್ರೀಂ ಶ್ರೀ ಕಂ ಕಪಿಲಾಯ ನಮಃ

ಶ್ರೀವಾದಿರಾಜ ಗುರುಸಾರ್ವಭೌಮರ ಋಜುತ್ವ ಉಪಾಸನೆಯಲ್ಲಿ ಅಗ್ರಗಣ್ಯರೂ, ಋಜುತ್ವ  ಪ್ರತಿಪಾದನೆ ಮಾಡುವಲ್ಲಿ ಸೇನಾನಿಗಳೂ, ಶ್ರೀರಾಜರ, ಶ್ರೀಭೂತರಾಜರ ಪರಮಾನುಗ್ರಹಕ್ಕೆ ಪಾತ್ರರಾದವರೂ, ಕೊನೆಯ ಉಸಿರಿನ ತನಕ ಶ್ರೀದ್ವೈತಮತದ ಮತ್ತು ಋಜುತ್ವದ‌ ಪ್ರತಿಪಾದನೆಯನ್ನು ಮಾಡಿದವರೂ ಆದ  ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರ
ಪರಮ ಪ್ರೀತಿಯ ಶಿಷ್ಯರೂ, ಲಿಂಗಸೂಗೂರ್ ರಾಮದಾಸರಿಂದ ಪ್ರಾಣಪತಿವಿಠಲರ ಎನ್ನುವ  ಅಂಕಿತವನ್ನು ಪಡೆದು,  ಗುರುಗಳಂತೆ ಋಜುತ್ವೋಪಾಸನೆಯಲ್ಲಿ ಸದಾ ನಿರತರಾದವರು, ಹಯಗ್ರೀವ ದೇವರ, ಪಂಚವೃಂದಾವನದ ಪರಮೋಪಾಸಕರೂ ಆದ, ಪ್ರಖ್ಯಾತ ಕೃತಿಯಾದ ಹೊಡಿ ನಗಾರಿ ಮೇಲೆ ಕೈಯ್ಯ ಗಡಗಡ ಯನ್ನು ರಚನೆ ಮಾಡಿದ ಶ್ರೀ ನಿಪ್ಪಾಣಿ ವಾಸುದೇವಾಚಾರ್ಯರ ಅರ್ಥಾತ್  ಷಟ್ಪುರಾಚಾರ್ಯರ ಶ್ರೀ ( ಪ್ರಾಣಪತಿವಿಠಲರ) ಆರಾಧನಾ ಮಹೋತ್ಸವದ ಶುಭಸ್ಮರಣೆಗಳು...

ಶ್ರೀ ಮಹನೀಯರ ಅನುಗ್ರಹ ಸದಾ ನಮ್ಮ ಎಲ್ಲರಮೇಲಿರಲಿ ಎಂದು ಪ್ರಾರ್ಥನೆ ಮಾಡುತ್ತಾ....

-Smt. Padma Sirish

ನಾದನೀರಾಜನದಿಂ ದಾಸಸುರಭಿ
*******

No comments:

Post a Comment