Wednesday 14 April 2021

srikanta vittalaru srinivasamurthy ashada bahula chaturthi ಶ್ರೀಕಾಂತವಿಠಲರು ಶ್ರೀನಿವಾಸಮೂರ್ತಿ

ashada bahula panchami

 shri gurubyO namaha...hari Om... 

AshADa bahuLa chaturthi is the puNya dina of shri shrIkAnta viTTala dAsaru.

shri shrIkAnta viTTala dAsaru...

ArAdhane: AshADa bahuLa chaturthi

gurugaLu: shri uragAdri viTTala dAsaru

shri shrIkAnta viTTala dAsa varada gOvindA gOvindA...

shri krishNArpaNamastu...

****


from Nagaraju Haveri "ಹರಿದಾಸಸಾಹಿತ್ಯಕ್ಕೆ ಕೊಟ್ಟ ಕೊಡುಗೆ "
" ಈದಿನ - 27.07.2021 ಮಂಗಳವಾರ - ಶ್ರೀ ರಾಯರ, ಶ್ರೀ ಮಾನವಿ ಮುನಿಪುಂಗವರ ಕಾರುಣ್ಯ ಪಾತ್ರರಾದ  ಶ್ರೀ ಶ್ರೀಕಾಂತ ವಿಠ್ಠಲರ ಪುಣ್ಯ ಸ್ಮರಣೆ "
" ಶ್ರೀ ಶ್ರೀ ಶ್ರೀಕಾಂತ ವಿಠ್ಠಲರ ಸಂಕ್ಷಿಪ್ತ ಮಾಹಿತಿ "
ಆಚಾರ್ಯ ನಾಗರಾಜು ಹಾವೇರಿ...
ಶ್ರೀಕಾಂತನ ಏಕಾಂತದಿ ಭಜಿಸುವ । 
ಶ್ರೀಕಾಂತವಿಠಲರ ಸ್ಮರಿಸಿರೋ ।। 
ಶ್ರೀಕಾಂತವಿಠಲನ ದಿವ್ಯ ನಾಮವನು ।
ಮಾಕಾಂತನ ನಿಜ ದಾಸ -
ಉರಗಾದ್ರಿವಾಸರು ಕೊಡಲು ।
ಭೂಕಾಂತ ಶೌರಿಯ ಸೇವೆಯನು -
ಮುದದಿ ಮಾಡಿದ ಧೀರ ।।
ಹರಿಕಥಾಮೃತಸಾರವನು ಹರಿ ।
ಕರುಣದಿ ಕನ್ನಡದಿ ಪ್ರತಿ । ಪದಾರ್ಥವ ।
ನು ರಚಿಸಿ ಉಪಕಾರ ಮಾಡಿ ।
ನರಹರಿ ವೇಂಕಟನಾಥಗೆ -
ಪ್ರಿಯರಾದ ಮಹಾತ್ಮರನು ।।
" ಸಂಕ್ಷಿಪ್ತ ಮಾಹಿತಿ "
ಹೆಸರು : ಶ್ರೀ ಹೇ ಎಸ್ ಶ್ರೀನಿವಾಸಮೂರ್ತಿ
ತಂದೆ : ಶ್ರೀ ಶ್ಯಾಮರಾವ್ ( ಶ್ರೀ ಅಂತರಾತ್ಮವಿಠ್ಠಲ )
ತಾಯಿ : ಸಾಧ್ವೀ ಸೀತಮ್ಮ
ಜನ್ಮಸ್ಥಳ : ಹೊಳೆನರಸೀಪುರ
ವಿದ್ಯಾಭ್ಯಾಸ : 
ಬಿ ಎಸ್ ಸಿ, ಮತ್ತು ವಿದ್ವಾನ್ ಶ್ರೀ ಕಾಶಿ ಶ್ರೀಪಾದಾಚಾರ್ಯರಲ್ಲಿ ಶಾಸ್ತ್ರಾಧ್ಯಯನವನ್ನು ಮಾಡಿದ್ದಾರೆ.
ಧರ್ಮ ಪತ್ನಿ : ಸಾಧ್ವೀ ಪದ್ಮ
ಅಂಕಿತ : ಶ್ರೀ ಶ್ರೀಕಾಂತ ವಿಠ್ಠಲ
ಉಪದೇಶ ಗುರುಗಳು : ಶ್ರೀ ಉರಗಾದ್ರಿವಾಸ ವಿಠ್ಠಲರು
" ಪೂಜ್ಯ ಶ್ರೀ ಹೆಚ್ ಎಸ್ ಶ್ರೀನಿವಾಸ ಮೂರ್ತಿಗಳಿಗೆ ಶ್ರೀ ಉರಗಾದ್ರಿವಾಸವಿಠ್ಠಲರು ಕೊಟ್ಟ ಅಂಕಿತ ಪದ "
ಶ್ರೀಕಾಂತ ವಿಠ್ಠಲ  ತವ -
ಸೇವಕನಾ ದಿವನ ।
ನೀ ಕಾಪಾಡಿ ಸಲಹೋ -
ಸನ್ಮತಿಯನಿತ್ತು ।। ಪಲ್ಲವಿ ।।
ವಾಕು ಲಾಲಿಸು ಈ ಬಾಲ -
ನಿನ್ನವನೆಂದು । ನಿ ।
ರಾಕರಿಸದೆ ನಿನ್ನ -
ಭಕುತಿ ಭಾಗ್ಯವನ್ನಿತ್ತು ।। ಅ ಪ ।।
ಆಯುರಾರೋಗ್ಯ -
ಸದ್ವಿದ್ಯ । ವಾ ।
ಕ್ಕಾಯ ಮನದ -
ಧ್ಯಾನ ವೃದ್ಧಿಗೈಸಿ ।
ವಾಯುಮತಾಗಮ -
ತತ್ತ್ವದಾಯವ ತಿಳಿಸು ।
ಜೀಯ ನಿನ್ನ ಸೇವೆಯನಿತ್ತು -
ಕಾಯೋ ।। ಚರಣ ।।
 ಮಾತಾ ಪಿತೃ ಭ್ರಾತೃ -
ಬಂಧು ಭಗಿನಿಯರಲ್ಲಿ । ಶ್ರೀ ।
ಪತಿ ವಿಭೂತಿಗಳ ನೆನೆದು ।
ಜಿತ ಮನದಿ ಪ್ರೀತಿ ವಿಶ್ವಾಸದಲಿ ।
ಸತತ ಶ್ರೀ ಹರಿ ನಿನ್ನ ಬಿಂಬ -
ಕ್ರಿಯಗಳನೆ ಅರುಹೋ ।। ಚರಣ ।।

ಸಮಕಾಲೀನ ಹರಿದಾಸರು : 
ಶ್ರೀ ಗುರು ಗೋವಿಂದವಿಠ್ಠಲರು, ಶ್ರೀ ತಂದೆ ವೆಂಕಟೇಶವಿಠ್ಠರು.
ಪರಮಪೂಜ್ಯ ಶ್ರೀ ಹೆಚ್ ಎಸ್ ಶ್ರೀನಿವಾಸಮೂರ್ತಿಗಳು ' ಹರಿಕಥಾಮೃತಸಾರ " ದ 33 ಸಂಧಿಗಳಿಗೂ ಅವತರಣಿಕೆ - ಸಾರದ ಪ್ರತಿ ಪದಕ್ಕೂ ಅರ್ಥವನ್ನೂ - ಶ್ರೀ ಸಂಕರ್ಷಣ ಒಡೆಯರು - ಭಾವ ಪ್ರಕಾಶಿಕೆ - ಭಾವದರ್ಪಣ - ಶ್ರೀ ವ್ಯಾಸದಾಸ ಸಿದ್ಧಾಂತ ಕೌಮುದೀ - ಶ್ರೀ ಗುರು ಹೃದಯ ಪ್ರಕಾಶಿಕೆ - ಕೊನೆಯಲ್ಲಿ ಐದೂ ವ್ಯಾಖ್ಯಾನಗಳ ಸಾರ ಸಂಗ್ರಹ ಮಾಡಿ ಸಜ್ಜನರು ಹರಿಕಥಾಮೃತಸಾರದ ಅರ್ಥ ತಿಳಿದು ಪಾರಾಯಣ ಮಾಡಲು ಅನುಕೂಲ ಮಾಡಿಕೊಟ್ಟು ಮಧ್ವ ಸಮಾಜಕ್ಕೆ ಶ್ರೇಷ್ಠ ಮಟ್ಟದ ಕೊಡುಗೆಯನ್ನು ಕೊಟ್ಟು ನಮ್ಮಂಥಾ ಪಾವರ - ಅಜ್ಞಾನಿಗಳಿಗೆ ಮಹದುಪಕಾರ ಮಾಡಿದ ಮಹಾತ್ಮರು!!
ಜೊತೆಗೆ ಅನೇಕ ಹರಿದಾಸ ಸಾಹಿತ್ಯಕ್ಕೂ ಅರ್ಥವನ್ನು ಬರೆದು ಮುದ್ರಿಸಿ ಹರಿದಾಸ ಸಾಹಿತ್ಯವನ್ನು ಮನೆ ಮನೆಗೂ ಹಂಚಿದ ಕೀರ್ತಿ ಪರಮಪೂಜ್ಯ ಶ್ರೀ ಹೇ ಎಸ್ ಶ್ರೀನಿವಾಸಮೂರ್ತಿಗಳದ್ದು.
" ಶ್ರೀ ಮಂತ್ರಾಲಯ ಶ್ರೀ ಶ್ರೀಗಳವರ ಶಬ್ದಗಳಲ್ಲಿ "......
ನಮ್ಮ ಪ್ರೀತಿಯ ಗುರುಗಳಾದ ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥರೂ ಕೂಡಾ " ಶ್ರೀ ಹೇ ಎಸ್ ಶ್ರೀನಿವಾಸಮೂರ್ತಿಗಳು " ಶ್ರೀ ಜಗನ್ನಾಥದಾಸರಾಯರ ಕೃತ ಹರಿಕಥಾಮೃತಸಾರದ ಎಲ್ಲಾ ಸಂಧಿಗಳಿಗೂ ಅರ್ಥ ಬರೆದು - ಅರ್ಥ ಸಹಿತ ಪಾರಾಯಣ ಮಾಡಲು ಅನುಕೂಲ ಮಾಡಿಕೊಟ್ಟ ಪುಣ್ಯಾತ್ಮರು " ಎಂದು ಹೇಳಿದ್ದಾರೆ.
" ಆಚಾರ್ಯ ನಾಗರಾಜು ಹಾವೇರಿ ಶಬ್ದಗಳಲ್ಲಿ ಶ್ರೀ ಹರಿಕಥಾಮೃತಸಾರದ ವೈಭವ "
1. ಶ್ರೀ ಹರಿಕಥೆಯು ಅಮೃತದಂತೆ ಸಾರ
2. ಶ್ರುತಿ ಸ್ಮೃತಿಗಳ ತಾತ್ಪರ್ಯ
2. ಶ್ರೀ ಹರಿಯೇ ಮುಖ್ಯ ಕರ್ತ ( ಹರಿಃ ಸರ್ವೋತ್ತಮತ್ತ್ವಂ ಚ ಸದಾ ಪ್ರತಿಪಾದಯಂತುಂ )
4. ಶ್ರೀ ಹರಿಯ ಗುಣ ವರ್ಣನೆ ರಸಜ್ಞರಿಗೆ ಅಮೃತಕ್ಕಿಂತ ರುಚಿ
5. ಶ್ರೀ ಹರಿಕಥಾಮೃತಸಾರದ ಶ್ರವಣ ಇದ್ದುದಕ್ಕೂ ಸಾರ್ಥಕ
6. ಮೋಕ್ಷಕ್ಕೆ ಮುಖ್ಯ ಸಾಧನ
7. ಶ್ರೀ ಹರಿಯ ಕಥೆಯೇ ಶ್ರೀ ಹನುಮ - ಶ್ರೀ ಭೀಮ - ಶ್ರೀ ಮಧ್ವ ರೂಪಗಳಿಂದ ಹೇಳಲ್ಪಟ್ಟ ಪರಮ ಪ್ರಾಮಾಣಿಕ ಸತ್ಯವಾದ ವಿಷಯ!!
ದ್ವೈತ ಮತದ ಪ್ರಮೇಯಗಳ " ವಿಶ್ವಕೋಶ " ವೆಂಬ ಪ್ರಸಿದ್ಧಿಯಾದ " ಹರಿಕಥಾಮೃತಸಾರ " ಶ್ರೀ ಸಹ್ಲಾದಾಂಶ ಜಗನ್ನಾಥದಾಸಾರ್ಯರ ಮೇರು ಕೃತಿ!
ಶ್ರೀ ದಾಸಾರ್ಯರ ಹರಿಕಥಾಮೃತಸಾರದ 32 ಸಂಧಿಗಳೆಂದರೆ ಶ್ರೀ ವಾಯುದೇವರ 32 ಲಕ್ಷಣಗಳಿದ್ದಂತೆ. ಇದರಲ್ಲಿ 986 ಭಾಮಿನೀ ಷಟ್ಪದಿಯಲ್ಲಿರುವ ಪದ್ಯಗಳಿದ್ದು, ಇದಕ್ಕೆ ಸಂಸ್ಕೃತ - ಕನ್ನಡ ಎರಡೂ ಭಾಷೆಯಲ್ಲೂ ವ್ಯಾಖ್ಯಾನಗಳಿದ್ದು ವಿದ್ವಜ್ಜನರಿಂದ ಮಾನ್ಯವಾಗಿ ಗೌರವಿಸಲ್ಪಡುತ್ತಿದೆ.
ಹೀಗೆ ಹರಿಕಥಾಮೃತಸಾರದ ವಿವಿಧ ವ್ಯಾಖ್ಯಾನಗಳ ಸಮಗ್ರ ಅಧ್ಯಯನದಿಂದ ಮಾತ್ರ " ಸಾರ " ದ ತಿರುಳು - ಗೂಢಾರ್ಥಗಳ ಪ್ರಮೇಯಗಳನ್ನು ಶಾಸ್ತ್ರಾಧ್ಯಯನ ಮಾಡಿದವರಿಗೆ ಮಾತ್ರ ಸಾಧ್ಯ. ಅಂತೆಯೇ " ವಿದ್ವಾನೇವ ವಿಜಾನಾತಿ ವಿದ್ವಜ್ಜನ ಪರಿಶ್ರಮಂ " ಸುಭಾಷಿತ ಮಾತು ಶ್ರೀ ಜಗನ್ನಾಥದಾಸರ ಕೃತ " ಹರಿಕಥಾಮೃತಸಾರ " ಕ್ಕೂ ಸಲ್ಲುತ್ತದೆ.
ಇಂಥಾ ಮೇರು ಕೃತಿಯನ್ನು ಸರಳ ಸುಂದರವಾಗಿ ಅಚ್ಛ ಕನ್ನಡದಲ್ಲಿ ವ್ಯಾಖ್ಯಾನಗಳ ಹರಿಕಥಾಮೃತಸಾರದ ಪ್ರತಿಯೊಂದು ಪದ್ಯದ ಪ್ರತಿಯೊಂದು ಪದಕ್ಕೂ ಅರ್ಥವನ್ನು ಬರೆದು -  ಜೊತೆಗೆ ಅನೇಕ ಹರಿದಾಸ ಪದಗಳಿಗೆ " ಪುರಾಣ - ಇತಿಹಾಸ " ಗ್ರಂಥಗಳನ್ವಯ ಅರ್ಥವನ್ನು ಬರೆದು - ಮುದ್ರಿಸಿ ಶ್ರೀ ಹರಿವಾಯು ಗುರುಗಳ ಸಜ್ಜನ ಭಕ್ತರ ಮನೆ ಮನೆಗೆ ಹರಿದಾಸ ಸಾಹಿತ್ಯವನ್ನು ತಲುಪಿಸಿದ ಕೀರ್ತಿ ಶ್ರೀ ಶ್ರೀಕಾಂತ ವಿಠ್ಠಲಾಂಕಿತ ಪರಮಪೂಜ್ಯ ಶ್ರೀ ಹೆಚ್ ಎಸ್ ಶ್ರೀನಿವಾಸಮೂರ್ತಿ ಅವರಿಗೆ ಸಲ್ಲುತ್ತದೆ.
ಶ್ರೀ ಶ್ರೀಶ ಪ್ರಸನ್ನ ಭೂವರಾಹ ದಾಸರು : -
ಶ್ರೀ ಶ್ರೀಶ ಪ್ರಸನ್ನ ಭೂವರಾಹ ದಾಸರು " ಪರಮಪೂಜ್ಯ ಶ್ರೀ ಶ್ರೀಕಾಂತವಿಠಲಾಂಕಿತ ಶ್ರೀ ಹೆಚ್ ಎಸ್ ಶ್ರೀನಿವಾಸಮೂರ್ತಿ " ಅವರ ಬಗ್ಗೆ ಈ ಕೆಳಗಿನಂತೆ ತಿಳಿಸಿದ್ದಾರೆ. 
ಪೂಜ್ಯ ಶ್ರೀ ಹೆಚ್ ಎಸ್ ಶ್ರೀನಿವಾಸಮೂರ್ತಿ ಅವರು ಬಸವನಗುಡಿಯಲ್ಲಿರುವ ಶ್ರೀ ವ್ಯಾಸರಾಜ ಮಠದಲ್ಲಿ ವ್ಯವಸ್ಥಾಪಕರೆಂದು ಕಾರ್ಯ ನಿರ್ವಹಿಸುತ್ತಿದ್ದರು.
ಪೂಜ್ಯರು ಶ್ರೀ ಉರಗಾದ್ರಿವಾಸ ವಿಠಲರಿಂದ ಅಂಕೀತೋಪದೇಶ ಪಡೆದು ಶ್ರೀ ಮಾನವಿ ಮುನಿಪುಂಗವರ ಮೇರು ಕೃತಿಯಾದ ಶ್ರೀ ಹರಿಕಾಥಾಮೃತಸಾರವನ್ನು ವ್ಯಾಖ್ಯಾನಗಳ ಸಹಿತ ಅರ್ಥವನ್ನು ಬರೆದು ಇಡೀ ಮಧ್ವ ಜನಾಂಗಕ್ಕೆ ಮಹೋಪಕಾರ ಮಾಡಿದ್ದಾರೆ.
ಪೂಜ್ಯರು ಶ್ರೀ ವ್ಯಾಸರಾಜ ಮಠದಲ್ಲಿ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಶ್ರೀ ಜಯತೀರ್ಥರ ಆರಾಧನಾಂಗವಾಗಿ ನಾಡಿನ ದೊಡ್ಡ ದೊಡ್ಡ 33 ಜನ ವಿದ್ವಾಂಸರನ್ನು ಒಂದು ಸಂಧಿಗೆ ಒಬ್ಬ ವಿದ್ವಾಂಸರಂತೆ ಪ್ರವಚನ ಏರ್ಪಾಟು ಮಾಡಿದ್ದರು.
ಪೂಜ್ಯರು ಶ್ರೀ ಜಯತೀರ್ಥರ ಪೂರ್ವಾರಾಧನೆಯಂದು ಇಹಲೋಕ ವ್ಯಾಪಾರವನ್ನು ಮುಗಿಸಿ ಶ್ರೀ ಹರಿಯ ಪುರವಾದ ವೈಕುಂಠಕ್ಕೆ ಪ್ರಯಾಣ ಬೆಳೆಸಿದರು. 
27.07.2021 ಪೂಜ್ಯ ಶ್ರೀ ಹೆಚ್ ಎಸ್ ಶ್ರೀನಿವಾಸಮೂರ್ತಿ ಅವರ ಪುಣ್ಯ ಸ್ಮರಣೆಯ ದಿನ. 
ಅವರ ಸ್ಮರಣೆ ಮಾಡಿಸಿದ ನಿನಗೆ ಶ್ರೀ ಹರಿವಾಯು ಗುರುಗಳು ಮತ್ತು ಶ್ರೀ ಹರಿದಾಸರು ಪರಮಾನುಗ್ರಹ ಮಾಡಲಿ ಎಂದು ಆಶೀರ್ವಾದ ಮಾಡಿದರು.
ನಾನು ಶ್ರೀ ಶ್ರೀಧರಮೂರ್ತಿ ದಾಸರನ್ನು ಭೇಟಿಯಾದಾಗಲೆಲ್ಲ ಪೂಜ್ಯ ಶ್ರೀ ಹೆಚ್ ಎಸ್ ಶ್ರೀನಿವಾಸಮೂರ್ತಿಯವರನ್ನು ಸ್ಮರಣೆ ಮಾಡುತ್ತಿರುತ್ತೇನೆ. 
ಪೂಜ್ಯರು ಶ್ರೀ ಹರಿಕಥಾಮೃತವನ್ನು ಕನ್ನಡದಲ್ಲಿ ಅರ್ಥ ಸಹಿತ ಮುದ್ರಿಸಿದರೆ, ಶ್ರೀ ಶ್ರೀಧರಮೂರ್ತಿದಾಸರ ಬಾಯಲ್ಲಿ ಶ್ರೀ ಹರಿಕಥಾಮೃತಸಾರ ಗಂಗಾ ಪ್ರವಾಹದಂತೆ ಹರಿಯುತ್ತದೆ. 
ಇಂಥಾವರ ಮಧ್ಯೆ ಇರುವುದೇ ನಮ್ಮ ಭಾಗ್ಯ!!
ವಿಶೇಷ ಸೂಚನೆ :
ಇವರ ಬಗ್ಗೆ ಮಾಹಿತಿಯನ್ನು ಶ್ರೀಮತಿ ಸರಸ್ವತೀ ವಟ್ಟಂ ಅಕ್ಕ ಅವರು ಕೊಟ್ಟಿದ್ದಾರೆ. 
ಶ್ರೀಮತಿ ಸರಸ್ವತೀ ವಟ್ಟಂ ಅವರು ಪರಮಪೂಜ್ಯ ಶ್ರೀ ಹೆಚ್ ಎಸ್ ಶ್ರೀನಿವಾಸಮೂರ್ತಿ ಅವರ ಸೊಸೆ. 
ಇವರೂ ಕೂಡ ಹರಿದಾಸ ಸಾಹಿತ್ಯದ ಬಗ್ಗೆ ವಿಶೇಷ ಜ್ಞಾನವನ್ನು ಹೊಂದಿದ್ದಾರೆ 
ಶ್ರೀ ಶ್ರೀಕಾಂತ ವಿಠ್ಠಲಾಂಕಿತ ಪರಮಪೂಜ್ಯ ಶ್ರೀ ಹೆಚ್ ಎಸ್ ಶ್ರೀನಿವಾಸಮೂರ್ತಿ ಅವರ ಕುರಿತು ಮಾಹಿಕೊಟ್ಟ ದಾಸರ ಸೊಸೆಯಾದ ಶ್ರೀಮತಿ ಸರಸ್ವತೀ ವಟ್ಟಂ ಅಕ್ಕ ಅವರಿಗೆ ಧನ್ಯವಾದಗಳು!!
by ಆಚಾರ್ಯ ನಾಗರಾಜು ಹಾವೇರಿ
    ಗುರು ವಿಜಯ ಪ್ರತಿಷ್ಠಾನ
***

ಶ್ರೀ ಉರಗಾದ್ರಿವಾಸ ವಿಠಲರ ಪ್ರೀತಿಯ ಶಿಷ್ಯರು,  ಹರಿಕಥಾಮೃತಸಾರವನ್ನು ಸಜ್ಜನರು ಪಾರಾಯಣ ಮಾಡಲೆಂದೇ ಅನುಕೂಲ ಮಾಡಿಕೊಟ್ಟ ಮಹಾನುಭಾವರು, ಶ್ರೀ ಅಂತರಾತ್ಮವಿಠಲರ ಸುಪುತ್ರರು,  ಹರಿದಾಸ ಸಾಹಿತ್ಯದ ಪದಗಳಿಗೆ ಅರ್ಥವನ್ನು ಬರೆದು ನೀಡಿದ ಮಹಾನುಭಾವರೂ ಆದ ಶ್ರೀ ಶ್ರೀಕಾಂತವಿಠಲರ (ಶ್ರೀ ಶ್ರೀನಿವಾಸಮೂರ್ತಿ) ರವರ ಆರಾಧನೆಯೂ ಇಂದು... 

ಶ್ರೀಮಟ್ಟೀಕಾಕೃತ್ಪಾದರ ಅನುಗ್ರಹ ಆಶೀರ್ವಾದಗಳ ಜೊತೆಗೆ ಶ್ರೀ ದಾಸಾರ್ಯರ ಅನುಗ್ರಹ ಆಶೀರ್ವಾದಗಳು ನಮಗಿರಲೆಂದು ಬೇಡಿಕೊಳ್ಳುತ್ತಾ...

-Smt. Padma Sirish

ನಾದನೀರಾಜನದಿಂ ದಾಸಸುರಭಿ
****

No comments:

Post a Comment