||ಶ್ರೀ ವಿಠ್ಠಲ ಪ್ರಸೀದ||
ಹರಿದಾಸ ಪರಂಪರೆಯ ಲೇಖನ
ಹರಿದಾಸ ಪರಂಪರೆಯ ಲೇಖನ
ಸುಬ್ಬರಾಯ ದಾಸರು
ಅಂಕಿತ ತಂದೆ ಮೋಹನ ದಾಸ
ಚೈತ್ರ ಶುದ್ಧ ನವಮಿ
ಹರಿದಾಸರಲ್ಲಿ ಚೈತ್ರ ಶುದ್ಧ ನವಮಿ ಹರಿಪಾದವನ್ನು ಸೇರಿದವರು ತಂದೆ ಮೋಹನ ದಾಸ ಅಂಕಿತರಾದ “ಪರಮಪ್ರಿಯ” ಬಿರುದಾಂಕಿತರಾದ ಶ್ರೀಸುಬ್ಬರಾಯ ದಾಸರು.
ನಮ್ಮ ಹಿರಿಯರು ಬರೆದಿದ್ದ ಹಾಗೆ ( ಬಾಣದ ಗುರುತು ಹಾಕಿದ್ದಹಾಗೆ ) ವರ ವಿಠ್ಠಲ ದಾಸರು
(ವರಾಹ ವಿಠ್ಠಲರು ಎಂದು ಕೂಡ ಇದೆ). ಇಬ್ಬರಿಗೆ ದಾಸದೀಕ್ಷೆ ನೀಡಿದ್ದರು . ಅವರು ದೊಡ್ಡಬಳ್ಳಾಪುರದ ರಾಘವಪ್ಪ
(ಮುದ್ದು ಮೋಹನ ದಾಸರು.) ಹಾಗು ಶ್ರೀ ಸುಬ್ಬರಾಯದಾಸರು ತಂದೆ ಮುದ್ದು ಮೋಹನ ವಿಠಲಾಂಕಿತರು. ಇವರನ್ನು ನಮ್ಮ ಹಿರಿಯರು
ಭಾಗವತ ಸುಬ್ಬರಾಯರೆಂದು ಗುರುತಿಸಿದ್ದಾರೆ.
ಆದರೆ ಇದರ ಮಾಹಿತಿ ಇಲ್ಲ .
ತುಮಕೂರು ಜಿಲ್ಲೆಯ ನರಸೀಪುರ ಎಂಬ ಗ್ರಾಮ ಸುಬ್ಬರಾಯರ ಜನ್ಮಸ್ಥಳ .ಶೇಷಪ್ಪ ಲಕ್ಷ್ಮೀದೇವಮ್ಮ ಎಂಬ ಜನನಿ ಜನಕರು . ೧೮೬೫ ರಲ್ಲಿ ಜನನ
ವ್ಯಾಸರಾಜ ಪೀಠದಲ್ಲಿ ವಿರಾಜಮಾನರಾಗಿದ್ದ
ಶ್ರೀ ಲಕ್ಷ್ಮಿಪ್ರಿಯತೀರ್ಥರು ಇವರಿಗೆ ಉಪನಯನದಲ್ಲಿ ಗುರೂಪದೇಶ ನೀಡಿದವರು.
ಮುಂದೆ ಅಚ್ಚಮ್ಮ ಎಂಬ ಕನ್ಯೆಯೊಂದಿಗೆ ವಿವಾಹ . ಮುಂದಿನ ಶಾಸ್ತ್ರಭ್ಯಾಸ ಚಿಂಚೋಳಿ
ವೆಂಕಣ್ಣಾಚಾರ್ಯರಲ್ಲಿ ನಡೆಯಿತು . ಅವರಿಗೆ ಬ್ರಹ್ಮಜ್ಞಾನ ಸಂಪಾದಿಸುವ ತವಕ ಅನೇಕ ದಿನಗಳು ಗುಡ್ಡಗಾಡಿನಲ್ಲಿ ಧ್ಯಾನಾಸಕ್ತರಾಗಿರುತ್ತಿದ್ದರು . ಅನೇಕ ದಾಸರಾಯರ ಧಿವ್ಯ ಚರಿತ್ರೆಯನ್ನು ಓದಿ ತಾವೂ
ಹರಿದಾಸರಾಗುವ ಇಚ್ಛೆ ಹೊಂದಿದರು . ಹರಿದಾಸರಾಗುವುದಕ್ಕೆ ಮುಖ್ಯವಾದದ್ದು ತಂಬೂರಿ . ಅದನ್ನು ಖರೀದಿಸಿದರು . ಅದನ್ನು
ಹಿಡಿದು ದೇವರಾಯನದುರ್ಗದ ಕರಿಗಿರಿ ನರಸಿಂಹನ ರತೋತ್ಸವಕ್ಕೆ ಹೋದರು . ಅಲ್ಲಿ ನರಸಿಂಹ ದೇವರಿಂದ “ ಅಂಕಿತ ಸ್ವೀಕಾರದ ಸೂಚನೆ ಸಿಕ್ಕಿತು “ ಅಂಕಿತವಿಲ್ಲದ ದೇಹ ನಿಷಿದ್ಧ ಎಂದು ಬಗೆದು ಸುಬ್ಬರಾಯರು ಅಂಕಿತವನ್ನು ಕರುಣಿಸುವಂತ ಗುರುವನ್ನು ನೀನೆ ಕರುಣಿಸು ಎಂದು ಕರಿಗಿರಿ ನರಸಿಂಹನನ್ನೇ ಬೇಡಿದರು .
ಅವರಿಗೆ ಅಂದಿನ ದಿನಗಳಲ್ಲಿ ಪ್ರಸಿದ್ಧ ಹರಿದಾಸರು ದೊಡ್ಡಬಳ್ಳಾಪುರದಾಸರಾಗಿದ್ದ ಶ್ರೀ
ಮುದ್ದುಮೊಹನ ವಿಠ್ಠಲದಾಸರು .
ನಮ್ಮ ಮಾತಾಮಹರು ಬರೆದಿದ್ದಂತೆ ಅಷ್ಟು ಸುಲಭವಾಗಿ ಶಿಷ್ಯತ್ವ ಕೊಡುತ್ತಿರಲಿಲ್ಲ ಕಠಿಣ ಪರೀಕ್ಷೆ ಒಡ್ಡುತ್ತಿದ್ದರುಶ್ರೀಮುದ್ದು ಮೊಹನದಾಸರು . ದಾಸರು, ಸನ್ಯಾಸಿಗಳಂತೆ ಪೂಜೆ ಮಾಡುತ್ತಿದ್ದರು . ನೈವೇದ್ಯ ಹಸ್ತೋದಕ್ಕಾಗಿಪ್ರತ್ಯೇಕ ಅಡಿಗೆ ತಯಾರಾಗುತ್ತಿತ್ತು
ತುಂಬಾ ಪ್ರಾಮಾಣಿಕವಾದ ಇಚ್ಚೆಯನ್ನು ಭಗವಂತ ಪೂರೈಸುತ್ತಾನಂತೆ . ಮುದ್ದುಮೊಹನದಾಸರು ನರಸೀಪುರಕ್ಕೆ ಆಗಮಿಸಿದರು . ಅವರವೇಷ ಕೃಷ್ಣಾಜಿನ ಕಸೆ ಅಂಗಿ . ಕುದುರೆಯಮೇಲೆ ಆಗಮಿಸಿದ ಅವರು
ಮಾರ್ಗಾಯಾಸ ಪರಿಹರಿಸಿಕೊಳ್ಳಲು , ಹಾಗು
ಸುಬ್ಬರಾಯರ ತಂದೆಯವರ ಪ್ರಾರ್ಥನೆಯಂತೆ
ಅದರಲ್ಲೂ ಅಂದು ಸುಬ್ಬರಾಯರ ಪತ್ನಿಯವರ
ಸೀಮಂತ ವಿದ್ದುದರಿಂದ ಅವರ ಮನೆಯಲ್ಲೇ ವಾಸ್ತವ್ಯ ಹೂಡಿದರು .ದೇವತಾರ್ಚನೆ ನೈವೇದ್ಯ ಎಲ್ಲವು ಆಯಿತು . ಒಂದು ವಿಶೇಷವೆಂದರೆ ಮುದ್ದು ಮೋಹನದಾಸರು ಸಂಸ್ಥಾನಗಳಂತೆ ಪೂಜಾಸಮಯದಲ್ಲಿ ನಗಾರಿ ವಾದ್ಯಗಳನ್ನು ಬಾರಿಸಿಸುತ್ತಿದ್ದರಂತೆ . ಈ ಸಂದರ್ಭದಲ್ಲಿ ಸುಬ್ಬರಾಯರು ತಮಗೆ ಅಂಕೀತೋಪದೇಶ ಮಾಡಬೇಕೆಂದು ಕೇಳಿಕೊಂಡರಂತೆ . ಅವರ
ವೈರಾಗ್ಯ ಗುರುಗಳಿಗೆ ಒಪ್ಪಿಗೆಯಾದರು ತೋರಗೊಡದೆ ಮತ್ತಷ್ಟು ಪರೀಕ್ಷೆ ಮಾಡಲು ಬಯಸಿ ಏನೊಂದು ಹೇಳದೆ ತಮ್ಮ ಶಿಷ್ಯರೊಡನೆ ಅಲ್ಲಿಂದ ಹೊರಟರು . ಕುದುರೆಯಮೇಲಿದ್ದ ದಾಸರು ತಮಗೆ ಮಾರ್ಗ ತೋರಲು ಸುಬ್ಬರಾಯರನ್ನೇ ಆರಿಸಿಕೊಂಡರು .
ಇದೇ ಒಂದು ಅವಕಾಶ ಗುರುಗಳಿಗೆ ತನ್ನಮೇಲೆ
ಕರುಣೆ ಬರುವುದೇನೋ ಎಂದು ದಾಸರ ಪಕ್ಕದಲ್ಲಿ ಕುದುರೆಯ ಸಮವಾಗಿ ನಡೆದರು ಹಾದಿ ತೋರುವ ನೆಪದಲ್ಲಿ . ಗುರುಗಳು ಸುಬ್ಬಣ್ಣ ಹಿಂದಿರುಗು ಎಂದು ಆಜ್ಞೆ ಇತ್ತರು. ಸುಬ್ಬರಾಯರು ನಿರಾಸೆಗೊಂಡರು . ಇದನ್ನು ಗಮನಿಸುತ್ತಿದ್ದ ದಾಸರು ಅವರಮೇಲೆ ಕರುಣೆ ಇಟ್ಟು ತಲೆಯನ್ನು ನೇವರಿಸಿ “ ತಾವು ತುಮಕೂರಿನ ವ್ಯಾಸರಾಜಮಠದಲ್ಲಿ ವಾಸ್ತವ್ಯ
ಹೂಡುತ್ತೇವೆ ಅಲ್ಲಿ ಬಂದು ನೋಡಲು ಹೇಳಿದರು. ಇಷ್ಟು ಆಸಕ್ತರಾದ ಸುಬ್ಬರಾಯರಿಗೆ ದಾಸದೀಕ್ಷೆ ಕೊಡಲು ನಿರ್ದರಿಸಿಕೊಂಡರು .
ಮರುದಿನ ಭೇಟಿಯಾದ ಆಕಾಂಕ್ಷಿ ಸುಬ್ಬರಾಯರಿಗೆ ತಲೆಯಮೇಲೆ ಕೈ ಇಟ್ಟು
ತಂದೆ ಮುದ್ದುಮೊಹನ ವಿಠ್ಠಲ ಎಂದು ಅಂಕಿತ ಪ್ರಧಾನ ಮಾಡಿ ಉದ್ಧರಿಸಿದರು . ಅಲ್ಲಿಂದ ಪ್ರಾರಂಭವಾಯಿತು ಅವರ ಲೋಕೋದ್ದಾರ .
ದೇವರಾಯನ ದುರ್ಗ ದಾಸಕೂಟ ಸ್ಥಾಪನೆ ಆಯಿತು ೧೯೦೦ ರಲ್ಲಿ. ದೇಶದೇಶ ಸಂಚರಿಸಿ
ದಾಸಕೂಟವನ್ನು ಬೆಳೆಸಿದರು .
ಶ್ರೀಸತ್ಯಧ್ಯಾನ ಶ್ರೀಗಳಿಂದ ಆಜ್ಞಾಪಿತರಾಗಿ ಶ್ರೀ
ಶ್ರೀಮನ್ಮಧ್ವ ಸಿದ್ದಂತನ್ನೋಹಿನಿ ಸಭಾ ನಡೆಸುವ ಪರೀಕ್ಷೆಗಳಿಗೆ ಪರೀಕ್ಷಕರಾಗಿ ೧೦ ವರ್ಷಗಳು ಕಾರ್ಯನಿರ್ವಹಿಸಿದರು .
ಇವರು ಮಾಡಿದ ಸಮಾಜಮುಖಿ ಜನಹಿತ ಕಾರ್ಯವೆಂದರೆ , ಇವರ ಭೋದನಾ ಶೈಲಿ ಗಮನಿಸಿದ ಬೆಂಗಳೂರಿನ ಸೆಂಟ್ರಲ್ ಜೈಲ್ ಅಧಿಕಾರಿಗಳು ಅವರನ್ನು ಜೈಲಿನ ಆವರಣಕ್ಕೆ ಕರೆಸಿ ಖೈದಿಗಳಿಗೆ ವಾರಕ್ಕೊಮ್ಮೆ ಧರ್ಮ ಭೋದನೆ ಮಾಡುವಂತೆ ಪ್ರಾರ್ಥಿಸುತ್ತಿದ್ದರು .
ಅವರ ಹೃದಯ ಕರಗುವಂತ ಭೋದನೆಗಳನ್ನು ಕೇಳಿ ಸನ್ಮಾರ್ಗದಿಂದ ಕೈದಿಗಳು ಬಿಡುಗಡೆ ಹೊಂದಿದ್ದರು ಅಷ್ಟು ಹೃದಯ ಕರುಗುವಂತೆ ಉಪನ್ಯಾಸ ಮಾಡುತ್ತಿದ್ದರು.
ದೂರದಲ್ಲಿರುವ ಭಕ್ತ ವೃಂದವನ್ನು ಮನಸ್ಸಿನಲ್ಲಿಟ್ಟು ದ್ವೈತ ಮತ ಪ್ರಚಾರಕ್ಕೆ ಮಾಸಪತ್ರಿಕೆಯೊಂದನ್ನು ಪ್ರಾರಂಭಿಸಿದರು . ಎಲ್ಲರಿಗು ತಲುಪಲಿ ಎಂದು ಕನಿಷ್ಠ ದರವನ್ನು ಇಟ್ಟು ನಷ್ಟವಾದರೂ ಧರ್ಮ ಪ್ರಸಾರ ಅವರ
ಉದ್ದಿಶ್ಯವಾಗಿತ್ತು . ಅನೇಕ ಯಾತ್ರಾಸ್ಥಳಗಳಿಗೆ ಭೇಟಿಯಿತ್ತರು .ಕದರಮಂಡಲಿಯಿಂದ ಪ್ರಾಣದೇವರ ಪ್ರತೀಕ ತಂದರು .
ಭಗವಂತನ ದಾಸತ್ವಕ್ಕೆ ಕುಲವು ಮುಖ್ಯವಲ್ಲ
ಎಂದು ಸಾರಿದವರು. ಸಂಚಾರದಲ್ಲಿ ಉಡುಪಿಗೆ ಭೇಟಿಯಿತ್ತಾಗ ಅವರ ಸಮಾಜ ಸೇವೆ ನೋಡಿ ಅಂದಿನ ಪುತ್ತಿಗೆ ಸ್ವಾಮಿಗಳು “ಪರಮಪ್ರಿಯ”
ಎಂಬ ಬಿರುದು ಕೊಟ್ಟು ಗೌರವಿಸಿದರು .
ಅನೇಕ ಪರಂಪರೆಗಳು ಶಿಷ್ಯರಿಲ್ಲದೆ ಸ್ಥಗಿತಗೊಂಡಿದ್ದವು . ಹಿಂದಿನ ಲೇಖನದಲ್ಲಿ ಹೇಳಿದಂತೆ , ಜಗನ್ನಾಥದಾಸರ
ಮೋಹನದಾಸರ , ಗೋಪಾಲದಾಸರ ಶಿಷ್ಯ ಪರಂಪರೆಗಳು ನಿಂತಿದ್ದಾಗ ವೇಣುಗೋಪಾಲದಾಸರ ಶಿಷ್ಯ ಪರಂಪರೆ ಮುಂದುವರೆಯುವಹಾಗೆ ಮಾಡಿದವರು ತಂದೆ
ಮುದ್ದುಮೊಹನ ವಿಠ್ಠಲ ದಾಸರು,
ಸಾವಿರಕ್ಕೂ ಮಿಕ್ಕಿ ದಾಸಧೀಕ್ಷೆ ಕೊಟ್ಟವರು .
ಅವರು ನಡೆಸುತ್ತಿದ್ದ “ ಪಾರಮಾರ್ಥ ಚಂದ್ರೋದಯ “ ಎಂಬ ಮಾಸ ಪತ್ರಿಕೆಯ ನಿರ್ವಹಣೆ ಮಗನಿಗೆ ವಹಿಸಿದರು . ಕದರಮಂಡಗಿಯಿಂದ ತಂದ ಪ್ರಾಣದೇವರ ವಿಗ್ರಹವನ್ನು ಪ್ರತಿಷ್ಠೆ ಮಾಡಲು ಮುಹೂರ್ತ ಇಟ್ಟರು . ಪ್ರಮಾದಿ ಸಂವತ್ಸರ ಫಾಲ್ಗುಣ ಬಹುಳ ಪಂಚಮಿ ಗುರುವಾರ “ಸುಂದರೇಶ ಪ್ರಾಣದೇವರ” ಪ್ರತಿಷ್ಠೆ ಮಾಡಿದರು .
ವಿಕ್ರಮ ಸಂವತ್ಸರ ಚೈತ್ರ ಶುದ್ಧ ರಾಮನವಮಿ
೧೬ - ೪- ೧೯೪೦ ನೇ ಇಸವಿ ಮಧ್ಯಾನ್ಹ
ಭಗವಂತನ ಚಿಂತನೆ ಮಾಡುತ್ತಾ ಹರಿಪಾದ ಸೇರಿದರು. ಅನೇಕ ಭಗವದ್ಭಕ್ತರಿಗೆ ಹರಿದಾಸದೀಕ್ಷೆ ಕೊಟ್ಟ ಕೀರ್ತಿ ಅವರದು .
ಅವರ ಪುಣ್ಯದಿನ
ನಾಹಂ ಕರ್ತಾ ಹರಿಃ ಕರ್ತಾ
||ಶ್ರೀ ಕೃಷ್ಣಾರ್ಪಣಮಸ್ತು ||
******
.
No comments:
Post a Comment