Sunday 23 May 2021

anantadreesha dasa gokavi anantacharya adavi acharya 1850 ಗೋಕಾವಿ ಅನಂತಾಚಾರ್ಯ

 



Gokavi anantadreesharu 

ಶ್ರೀ ಗೋಕಾವಿ ಅನಂತಾಚಾರ್ಯ

ps: 

01.The period must be during 1750 to 1850

02. Adavi acharyaru are the names given to Anantacharya and also Vishnu Teertharu.

Shri Gokavi anantadreesharu(Gokavi anantachrya) also called as ADAVI ACHARYA is a respected Hindu vedic and religious scholar who advocated Vaishnavism. and Shri Madhvacharya's Dvaita philosophy.written numerous invaluable literature , namely famous "Shri Venkatesh Parijat"(Shri venkatesh mahatme).he was a direct disciple of saint of madhwa philosophy 1008 Shree Vishnuteerth swamiji. He has written numerous number of DASA SAHITY KRITI'S by pen name ANANTADREESH.

Shri Gokavi Anandreesharu  working in Venkatesha temple as chief priest(Archaka) professionally and spiritually. When Shri Adavi acharyaru (Modanoor vishnuteertharu) took vaanaprasthaashrama and stayed in munnoli or Manoli near bank of malaprabha river, shri Anatadreesharu took the benefit of the same and took blessings from Shri vishnuteertharu( AD 1756 - 1806).

With the blessing of lord shri venkatesha and his Master, he became popular in and around Gokak. Later part of the life was spent in Kadakol (near Ramdurg taluk,karnataka,india)

*****


" ಶ್ರೀ ಗೋಕಾವಿ ಅನಂತಾಚಾರ್ಯ ವಿರಚಿತ ಶ್ರೀ ವೇಂಕಟೇಶ ಪಾರಿಜಾತ " 

( ಶ್ರೀ ಶ್ರೀನಿವಾಸ ಕಲ್ಯಾಣ )

ಶ್ರೀ ಅನಂತಾದ್ರೀಶರು " ಶ್ರೀ ವೇಂಕಟೇಶ ಪಾರಿಜಾತ " ಎಂಬ ೧೦ ಅಧ್ಯಾಯಗಳುಳ್ಳದೀರ್ಘ ಕೃತಿಯನ್ನು ರಚಿಸಿದ್ದಾರೆ. ಈ ಕೃತಿಯಲ್ಲಿ ಶ್ರೀ ಶ್ರೀನಿವಾಸನು ಧರೆಗಿಳಿದ ಬಂದ ಕಥೆ, ಶ್ರೀ ವರಾಹದೇವರ ಮತ್ತು ಶ್ರೀ ಶ್ರೀನಿವಾಸನ ಸಂವಾದ; ತಾಯಿ ಪದ್ಮಾವತಿಯ ಬೇಟೆ; ಶ್ರೀ ನಿವಾಸನ ಕಲ್ಯಾಣ ಮಹೋತ್ಸವ ಮೊದಲಾದ ವಿಷಯಗಳನ್ನು ಪರಮ ಅದ್ಭುತವಾಗಿಯೂ ಸೆರೆ ಹಿಡಿದು ಅತಿ ಮನೋಜ್ಞವಾಗಿ ವರ್ಣಿಸಿದ್ದಾರೆ.

ಅಲ್ಲದೆ ಪ್ರತಿಯೊಂದು ಅಧ್ಯಾಯದ ಪ್ರಾರಂಭದಲ್ಲೂ ಶ್ರೀ ವೇಂಕಟೇಶ ಪಾರಿಜಾತ ಆ ಅಧ್ಯಾಯದ ಸಮಗ್ರ ಸಾರವನ್ನು ಸಂಸ್ಕೃತ ಶ್ಲೋಕದಲ್ಲಿ ಸೆರೆ ಹಿಡಿದು ಶ್ರೀ ಶ್ರೀನಿವಾಸ ಕಲ್ಯಾಣ ಪಾರಾಯಣ ಫಲ ದೊರೆತು ಭಕ್ತರ ಮನೋಭೀಷ್ಟಗಳು ಪೂರ್ಣವಾಗಲೆಂದು ಶ್ರೀ ಶ್ರೀನಿವಾಸನಲ್ಲಿ ಪ್ರಾಥಿಸಿ ಶ್ರೀ ಅನಂತಾದ್ರೀಶರು ಮಹದುಪಕಾರ ಮಾಡಿದ್ದಾರೆ!!

ಹರಿದಾಸರುಗಳ ಈ ಸ್ಮರಣೆಯನ್ನು ಭಕ್ತಿ ಶ್ರದ್ಧೆಗಳಿಂದ ನೆನೆದು ಶ್ರೀ ಅನಂತಾದ್ರೀಶರ ಅಂತರ್ಯಾಮಿ ಶ್ರೀ ರಾಘವೇಂದ್ರಗುರ್ವ೦ತರ್ಗತ ಶ್ರೀ ಭಾರತೀ ರಮಣ ಮುಖ್ಯಪ್ರಾಣಾ೦ತರ್ಗತ ಶ್ರೀ ಪದ್ಮಾವತೀsಭಿನ್ನ ಶ್ರೀ ಮಹಾಲಕ್ಷ್ಮೀ ವೇಂಕಟೇಶ್ವರನ ಪರಮಾನುಗ್ರಹಕ್ಕೆ ಪಾತ್ರರಾಗೋಣ!!

" ಶ್ರೀ ವೇಂಕಟೇಶ ಪಾರಿಜಾತ " ಮೊದಲನೆಯ ಅಧ್ಯಾಯದ ಶ್ಲೋಕ ....

ಶ್ರೀಪತಿರ್ಭೃಗುಣಾ ಸರ್ವಲೋಕೋತ್ಕೃಷ್ಟ ಇತೀಡಿತಃ ।

ಗೋಕ್ಷೀರಸಿಕ್ತ ಸರ್ವಾಂಗೋ ವಲ್ಮೀಕಸ್ಥ: ಶುಭಂ ದಿಶೇತ್ ।।

ಆದಿ :

ಪೂರ್ವದಲ್ಲಿ ಭೃಗುಮುನಿಗೆ ।

ಸರ್ವ ಮುನಿಗಳು ಬುದ್ಧಿ ।

ಪೂರ್ವಕ ಹೀಂಗೆ ಹೇಳಿದರು ।

ಗರ್ವಾದಿ ರಹಿತ । ಸ ।।

ತ್ಸರ್ವ ಗುಣ ಸಂಪೂರ್ಣ ।

ಸರ್ವ ದೇವೋತ್ತಮನು ಇವನ್ಯಾರೆಂದು ತಿಳಿ ।

ಸರ್ವಲೋಕದಲಿ ।।

ಅಂತ್ಯ :

ಚಂದಾದ ವೈಕುಂಠ ಮಂದಿರವ ಬಿಟ್ಟು । ಸುರ ।

ವಂದಿತಾನಂದ್ರಿ ಮಂದಿರವ ಮಾಡಿ । ಬಹು ।

ಮಂದಿಯನ್ನು ಸಲಹುವಾ ।।

ನಂದ ಮೂರುತಿಯ । ದಯ ।

ದಿಂದ ಮುಗಿಯಿತು ಇಲ್ಲಿಗೊಂದು ಅಧ್ಯಾಯ ।।

" ಶ್ರೀ ವೇಂಕಟೇಶ ಪಾರಿಜಾತ " ಎರಡನೆಯ ಅಧ್ಯಾಯದ ಶ್ಲೋಕ ....

ಸ್ವಾತ್ಮಾನಾಪಿ ವರಾಹೇಣ ದತ್ತವಾಸ ಸ್ಥಳೋಚ್ಯುತಃ ।

ಮಾಯಾವೀ ಬಕುಲಾಲಾಭತುಷ್ಟೋsವ್ಯಾದ್ವೇ೦ಕಟೇಶ್ವರಃ ।।

ಆದಿ :

ಒಂದುದಿನ ವೆಂಕಟಪತಿಯು । ತ್ವರ ।

ದಿಂದ ಅರುಣೋದಯದಲೆದ್ದನು ।

ಮುಂದಕೌಷಧವನ್ನು ತರಬೇಕೆಂದು ತೆರಳಿದನು ।।

ಅಂದಿಗಲ್ಲೇ ಭೂವರಾಹನು ಬಂದು ಗರ್ಜನೆಯ ಮಾಡುತೆದುರಿಗೆ ।

ಮುಂದಕಲ್ಲೇ ಅಡಗಿದನು ಭಯದಿಂದ ವೆಂಕಟನು ।।

ಅಂತ್ಯ :

ಪರಮ ಭಕುತಳು ಆಗಿ ಬಕುಲಾವತಿಯ ।

ಕರದಿಂದ ಪಥ್ಯ ಸ್ವೀಕರಿಸುತಲೆ ನಿತ್ಯದಲಿ ।

ಸುರನತಾನಂತಾಖ್ಯ ಗಿರಿಯಲಿ ಇರುವನು ।

ಕರುಣದಲಿ ಮುಗಿಯಿತಿಲ್ಲೆರಡು ಅಧ್ಯಾಯ ।।

" ಶ್ರೀ ವೇಂಕಟೇಶ ಪಾರಿಜಾತ " ಮೂರನೆಯ ಅಧ್ಯಾಯದ ಶ್ಲೋಕ ....

ಜನ್ಮನಾಕಾಶನಂದ ವಸುಧಾನಾಗ್ರಜಾ ನಿಜಾನ್ ।

ಪದ್ಮಾವತೀ ಪದ್ಮಭವಾ ವನಕ್ರೀಡಾರತಾವತಾತ್ ।।

ಆದಿ :

ಚಂದದಲಿ ವೆಂಕಟಗೆ ಮುಂದೆ ಪದ್ಮಾವತಿಯ ।

ಸಂದರ್ಶನಾದದ್ದು ಸಂಧಾನ ತರಬೇಕು ।

ಯೆಂದು ಪದ್ಮಾವತಿಯ ತಂದೆಯ ಕಥೆ ಸ್ಮೃತಿಗೆ ।

ತಂದು ಅದು ವಿಸ್ತಾರದಿಂದ ಪೇಳುವೆನು ।।

ಅಂತ್ಯ :

ಉರ್ವಿಯಲಿ ಬಹು ರಮ್ಯ ತೋರುವಾನಂತಾಖ್ಯ ।

ಸಾರ ಗಿರಿ ವೈಕುಂಠ ಸಾರವಿದುಯೆಂದು । ಬಹು ।

ಸಾರುತಲೆ ವರಗಳನ್ನು ಬೀರುತಲೇ ಇರುವವನ ।

ಪೂರ್ಣ ದಯದಿಂದ ಸಂಪೂರ್ಣವಾಯಿತು ಇಲ್ಲೇ ಮೂರು ಅಧ್ಯಾಯ ।।

" ಶ್ರೀ ವೇಂಕಟೇಶ ಪಾರಿಜಾತ " ನಾಲ್ಕನೆಯ ಅಧ್ಯಾಯದ ಶ್ಲೋಕ ....

ಮೃಗಯಾಯೈ ಹಯಾರೂಢ೦ ಗಹನೇ ಹಸ್ತಿನಾಹೃತಂ ।

ಪದ್ಮಾವತೀ ಕಟಾಕ್ಷೇಷು ತಾಡಿತಂ ನೌಮಿ ಶ್ರೀಡಿತ೦ ।।

ಆದಿ :

ಎಂದು ಪದ್ಮಾವತಿಯು ಬಂದಳಾ ವನದಲ್ಲಿ ।

ಅಂದಿಗಾ ವೇಂಕಟನು ಮುಂದೆ ಮೃಗ ಬೇಟೆಯಲಿ ।

ಯಿಂದು ಪೋಗಲಿಬೇಕೆಂದು ಸ್ಮರಿಸಿದ ಕುದುರೆ ।

ಬಂದು ನಿಂತುತು ಅವನ ಮುಂದೆ ಆ ಕ್ಷಣದಿ ।।

ಅಂತ್ಯ :

ಲೋಕದಲಿ ವಿಖ್ಯಾತ ಶ್ರೀಕರಾನಂತಗಿರಿ ।

ಆಕ್ರಮಿಸಿ ಮುಂದೆ ಅನೇಕ ವಿಧ ಭಕ್ತರಿಗೆ ।

ಬೇಕಾದ ವರಗಳನ್ನು ತಾ ಕರೆದು ಕೊಡುವವನ ।

ಶ್ರೀಕರುಣದಿ ಆಯಿತು ನಾಲ್ಕು ಅಧ್ಯಾಯ ।।

" ಶ್ರೀ ವೇಂಕಟೇಶ ಪಾರಿಜಾತ " ಐದನೆಯ ಅಧ್ಯಾಯದ ಶ್ಲೋಕ ....

ಕಾಮಾತೋ ಬಕಲಾವಾಕ್ಯಮೋದಿತೋ ಲೋಕಮೋಹಕಃ ।

ಆಕಾಶ ನೃಪಗೇಹಂ ತಾ ಪ್ರೇಷಯನ್ ಪಾತು ಮಾಧವಃ ।।

ಆದಿ :

ಸೋಕಿತು ಕಾಮನ ಗಾಳಿ ।

ಆಕಾಶನ ಪುತ್ರಿಗೆ ।

ವೈಕುಂಠೇಶನು ತಿರುಗಿ ।

ವೇಂಕಟ ಗಿರಿ ಯೇರಲು ।।

ಅಂತ್ಯ :

ಬೋಧಿಸೀ ಹರಿಯು ಬಕುಲಾದೇವಿಯನು ಕಳುಹಿ ।

ಹಾದಿ ತೋರಿಸಿದಂಥ ಶ್ರೀದ ಶ್ರೀಮದನಂತ ।

ಭೂಧರೇಶನ । ಪೂರ್ಣದ ।

ಯದಿ ವಿಘ್ನಗಳೆಲ್ಲಕೋದು ಮುಗಿಯಿತು ಇಲ್ಲಿಗೈದು ಅಧ್ಯಾಯಾ ।।

" ಶ್ರೀ ವೇಂಕಟೇಶ ಪಾರಿಜಾತ " ಆರನೆಯ ಅಧ್ಯಾಯದ ಶ್ಲೋಕ ....

ಅಘಟ್ಯಘಟನಾಪಟ್ಟೀ ಪುಲಿಂದ ಶ್ರೀಪತೇಸ್ತನು: ।

ನೃಪಜಾಸ್ಮರಪೀಡಾಂ ತಾಂ ಕಥಯಂತೀ ಹರೇದಘಮ್ ।।

ಆದಿ :

ಜಯ ಜಯ ಜಯ ಜಯಪ್ರದ ವೇಷ ।

ಜಯ ನಿತ್ಯ ಸಂತೋಷ ।

ಜಯತು ಜಯ ಲಕ್ಷ್ಮೀಶಾ ವೇಂಕಟೇಶಾ ।।

ಅಂತ್ಯ :

ಉರ್ವಿಯಲಿ ಬಹು ರಮ್ಯ ತೋರುವಾನಂತಾಖ್ಯ ।

ಸಾರ ಗಿರಿಯಲ್ಲಿದ್ದು ಆರಿಗಾದರು ಒಳಗೆ ।

ಪ್ರೇರಕನು ಆಗಿ ವ್ಯಾಪಾರ ಮಾಡಿಸುತಿಹ । ಅ ।

ಪಾರ ಮಹಿಮನ ದಯದಿ ಪೂರ ಮುಗಿಯಿತು ಇಲ್ಲಿಗಾರು ಅಧ್ಯಾಯವು ।।

" ಶ್ರೀ ವೇಂಕಟೇಶ ಪಾರಿಜಾತ " ಏಳನೆಯ ಅಧ್ಯಾಯದ ಶ್ಲೋಕ ....

ಜ್ಞಾಪಿತೋ ಬಕುಲಾವಾಕ್ಯಾಚ್ಚುಕ ಜೀವಾನುಮೋದಿತಃ ।

ಭೂಪೇನ ನಿಶ್ಚಿತೋ ಮಾಯಾದ್ವೀಪಹಾ ಯೋ ವರೋ ಹರಿಃ ।।

ಆದಿ :

ತಿರುಗಿ ಹೋಗಲು ಕೊರವಿ ತಿರುತಿರುಗಿ ನೋಡುತಲೆ ।

ಅರಸಿ ತನ್ನ ತೊಡೆಯಲ್ಲಿರುವ ಆ ಮಗಳ । ಮುಂ ।

ಗುರುಳ ತೀಡುತಲೆ  ಈ ಪರಿಯ ಮಾತಾಡಿದಳು ।

ಕೊರವಿ ಆಡಿದ ಮಾತು ಖರೆ ಏನು ಎನ್ನ ಮಾತಿನರಗಿಳಿಯೆ ನೀನು ।।

ಅಂತ್ಯ :

ಭೂಲೋಕದಲ್ಲಿ ಮಂಗಳಾಲಯಾನಂತಾಖ್ಯ ।

ಶೈಲದಲಿ ಯಿದ್ದು ಈ ಲೀಲೆಯಿಂದಲಿ । ಜಗ ।

ತ್ಪಾಲ ನವ ಮಾಡುವ ದಯಾಳು ನಿನ್ನ ದಯದಿಂದ ।

ಹೇಳಿ ಮುಗಿಯಿತು ಇಲ್ಲಿಗೇಳು ಅಧ್ಯಾಯವು ।।

" ಶ್ರೀ ವೇಂಕಟೇಶ ಪಾರಿಜಾತ " ಎಂಟನೆಯ ಅಧ್ಯಾಯದ ಶ್ಲೋಕ ....

ಸ್ವಪ್ರೇಷಿತಾ ಭುಜಂಗಾರಿಸಮಾನೀತಾಮರೋ ಹರಿಃ ।

ಮಾಯಯಾನೀಯ ಕಮಲಾಂ ಪರಿಣೇತ್ಯುನ್ಮುಖೋsವತಾತ್ ।।

ಆದಿ :

ಮುಂದಾ ವೆಂಕಟಪತಿಯು ಮಂದಿಯನಾ ಮೋಹಿಸುತ ।

ನೊಂದು ಮನದಲಿ ತಾಯಿಯ ಮುಂದೀ ಪರಿ ನುಡಿದಾ ।

ಇಂದುಮುಖಿ ನಿನ್ನ ಹೊರತು ಬಂಧು ಬಳಗಗಳಿಲ್ಲಾ ।

ಇಂದು ಎನಗ್ಯಾರಿಲ್ಲ ಚಂದೇನು ಮದುವೆ ।।

ಅಂತ್ಯ :

ಎಂಟು ಐಶ್ವರ್ಯಗಳು ಉಂಟನಂತಾದ್ರಿಯಲಿ ।

ಹೊಂಟು ಬಂದಿಲ್ಲೆ ನೂರೆಂಟು ವಿಘ್ನಗಳೆಂಬ ।

ಕಂಟಕವ ಹರಿಸಿ ಯೆನ್ನ ಕಂಠದಲ್ಲಿ ನಿಂತು । ವೈ ।

ಕುಂಠ ಪತಿ ಮುಗಿಸಿದಿಲ್ಲೆಂಟು ಅಧ್ಯಾಯಾ ।।

" ಶ್ರೀ ವೇಂಕಟೇಶ ಪಾರಿಜಾತ " ಒಂಬತ್ತನೆಯ ಅಧ್ಯಾಯದ ಶ್ಲೋಕ ....

ಶ್ರೀ ವಾಣೀ ಭಾರತೀ ಗೌರೀ ಶಚೀಭಿ: ಸ್ನಾಪಿತೋsವತಾತ್ ।

ಕುಬೇರಾಲ್ಲಬ್ಧ ವಿತ್ತೋsರ್ಚನ್ ವಿಪ್ರಾನ್ ಲಕ್ಷ್ಮೀಪ್ರಿಯಂಕರಃ ।।

ಆದಿ :

ಸಿರಿ ಸಹಿತನಾಗಿರುವ ಹರಿಯ ಆಜ್ಞೆಯ ಕೊಂಡು ।

ಪರಮೇಷ್ಠಿ ಮಾಡಿದನು ಪರಮಾಷ್ಟ ವರ್ಗಕೆ ।

ತ್ವರದಿ ಮುಂದುದ್ಯೋಗ ಸರಸ್ವತಿಯು ಮೊದಲಾದ ।।

ಸರಸಿಜಾಕ್ಷಿಯರೆಲ್ಲ ಸರಸಾಗಿ ಬೇಗ ಶೃಂಗರಿಸಿಕೊಂಡರು ತಾವು ।

ಗಿರಿಜೆಯಾದಳು ಆಗ ವರ ಕಳಸಗಿತ್ತಿ ತಾ ।

ವರನಾಗಿ ಶೋಭಿಸಿದ ವರ ವೇಂಕಟೇಶ ।।

ಅಂತ್ಯ :

ಪೃಥ್ವಿಯಲ್ಲಿರುವ ಬಹು ಭಕ್ತರನ್ನು ಪಾಲಿಸುವ ।

ಉತ್ತಮಾನಂತಾದ್ರಿಸಕ್ತನಾಗಿರುವ । ಸ ।

ರ್ವೋತ್ತಮನ ದಯವಿರಲು ಮುತ್ತಿರುವ ವಿಘ್ನಗಳು ।

ಹತ್ತದಲೇ ಮುಗಿಯಿತೊಂಭತ್ತು ಅಧ್ಯಾಯಾ ।।

" ಶ್ರೀ ವೇಂಕಟೇಶ ಪಾರಿಜಾತ " ಹತ್ತನೆಯ ಅಧ್ಯಾಯದ ಶ್ಲೋಕ ....

ತಾರ್ಕ್ಷ್ಯಸ್ಕಂದ ಸಮಾರೂಢ: ಶ್ರೀ ಬ್ರಹ್ಮಾದಿ ಭಿರಾವೃತಃ ।

ಶುಖದತ್ತ ಫಲಾಹಾರಃ ಪಾಯಾತ್ ಪದ್ಮಾವತೀ ಪ್ರಿಯಃ ।।

ಆದಿ :

ಹೊರಟಿತು ನಿಬ್ಬಣ ಈ ಪರಿ । ಶ್ರೀ ।

ಹರಿ ಕೂಡಿ ಮರುದಿನ ವೀ ಪರಿ ।।

ಅಂತ್ಯ :

ವಿಸ್ತರಿಸಿ ನಾ ಇನ್ನು ಎತ್ತ ವರ್ಣಿಸಲೇ । ಪುರು ।

ಷೋತ್ತಮನ ಮಹಿಮೆ ತನ್ನ ।

ಚಿತ್ತದೊಲ್ಲಭೆಗಂತ ।।

ಹತ್ತಗೊಡದಲೆ ಇರುವ ಎತ್ತ ಬೇಕಾದತ್ತ ।

ಮತ್ತಾನಂತಾದ್ರಿಯಲಿ ನಿತ್ಯದಲ್ಲಿರುವಾ ।।

ಮತ್ತೆ ಬಿಡದಲೆ ಯೆನ್ನ ಚಿತ್ತದಲಿ ನಿಂತು । ಯಾ ।

ವತ್ತು ಕಾರ್ಯಗಳನ್ನು ನಿತ್ಯ ಮಾಡಿಸುವ । ಸ ।

ರ್ವೋತ್ತಮನು ತಾ ಯೆನ್ನ ಭಕ್ತಿಯಲಿ ಮೆಚ್ಚಿ । ಬೆ ।

ನ್ಹತ್ತಿ ಮಾಡಿಸಿದ ಈ ಹತ್ತು ಅಧ್ಯಾಯಾ ।।

ಮೇಲ್ಕಂಡ ಶ್ರೀ ಅನಂತಾದ್ರೀಶ ವಿರಚಿತ ಶ್ರೀ ವೇಂಕಟೇಶ ಪಾರಿಜಾತ ಹತ್ತು ಅಧ್ಯಾಯಗಳ ಆದ್ಯಂತ ಶ್ಲೋಕಗಳೂ ಮತ್ತು ಆದ್ಯಂತ ಪದ್ಯಗಳನ್ನು ಈ ಶರನ್ನವರಾತ್ರಿಯಲ್ಲಿ ಪಾರಾಯಣ ಮಾಡಲು ಅನುಕೂಲಕ್ಕಾಗಿ ಕೊಡಲಾಗಿದೆ.

by ಆಚಾರ್ಯ ನಾಗರಾಜು ಹಾವೇರಿ

ಗುರು ವಿಜಯ ಪ್ರತಿಷ್ಠಾನ

*****

5 April 2018

ದಾಸಸಾಹಿತ್ಯದಲ್ಲಿ ವಿಶೇಷ ಸಾಧನೆಗೈದ ಸಾಧಕರಿಗೆ ನೀಡುವ ಅನಂತಾದ್ರೀಶ ಪ್ರಶಸ್ತಿಯನ್ನು ಧಾರವಾಡದ ಹಿರಿಯ ಸಾಧಕರಾದ ಅನಂತಾಚಾರ್ಯ ಕಟಗೇರಿ ದಾಸರಿಗೆ ಈ ಸಂದರ್ಭದಲ್ಲಿ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

***


from kannadasiri.com

ಗೋಕಾವಿ ಅನಂತಾದ್ರೀಶರ ಹೆಸರು ಭೀಮಾಚಾರ್ಯರೆಂದು ಕೆಲವು ಗ್ರಂಥಗಳಲ್ಲಿ ಉಲ್ಲೇಖವಾಗಿದೆ (ಜಯಸಿಂಹರು ರಚಿಸಿದ ಶ್ರೀವಿಷ್ಣುತೀರ್ಥರ ಕೃತಿ) ಆದರೆ ನಾವು ಕ್ಷೇತ್ರಕಾರ್ಯ ಕೈಕೊಂಡು ಅವರ ವಂಶಸ್ಥರನ್ನು ಸಂದರ್ಶಿಸಿದಾಗ ಅವರ ಹೆಸರು ಅನಂತಾಚಾರ್ಯರೆಂದು ತಿಳಿದು ಬಂದಿತು. ಗಲಗಲಿ ಪಂಢರಿನಾಥಾಚಾರ್ಯರು ರಚಿಸಿರುವ 'ಮಾಧ್ವವಾಙ್ಮಯ ತಪಸ್ವಿಗಳು' ಗ್ರಂಥದಲ್ಲಿಯೂ ಕೂಡಾ ಇವರ ಹೆಸರನ್ನು ಅನಂತಾಚಾರ್ಯರೆಂದೇ ನÀಮೂದಿಸಲಾಗಿದೆ.

ಅನಂತಾದ್ರೀಶರ ಕಾಲದ ಬಗೆಗೆ ಬೇರೆ ಬೇರೆ ವಿದ್ವಾಂಸರ ಅಭಿಪ್ರಾಯ-ಗಳನ್ನು ಗಮನಿಸಬಹುದಾಗಿದೆ. ಗಲಗಲಿ ಪಂಢರಿನಾಥಚಾರ್ಯರು ಇವರ ಕಾಲವನ್ನು ಕ್ರಿ.ಶ.1800 ರಿಂದ 1880 ಎಂದು ಗುರುತಿಸಿದ್ದಾರೆ. ಆದರೆ ಅನಂತಾಚಾರ್ಯರು ತಮ್ಮ ಗುರುಗಳಾದ ಶ್ರೀ ವಿಷ್ಣುತೀರ್ಥರನ್ನು ಕುರಿತು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಶ್ರೀ ವಿಷ್ಣುತೀರ್ಥರ ಕಾಲವು ಕ್ರಿ.ಶ 1756 ರಿಂದ 1806ರವರೆಗೆ ಇದ್ದದು ತಿಳಿದುಬರುತ್ತದೇ. ಹೀಗಿರುವಾಗ ಗಲಗಲಿಯವರು ಹೇಳವಂತೆ ಅನಂತಾದ್ರೀಶರ ಕಾಲ 1800-1880 ಎಂಬುದು ಸೂಕ್ತವಾದುದಲ್ಲ. ಅನಂತಾದ್ರೀಶರ ಕಾಲವನ್ನು ಸಧ್ಯಕ್ಕೆ ಕ್ರಿ.ಶ 776-1840 ವರೆಗೆ ಎಂದಿಟ್ಟುಕೊಳ್ಳ-ಬಹುದಾಗಿದೆ. ಸಂಗೀತ ವಿದ್ವಾಂಸರಾಗಿದ್ದ ದಾಸರು ಜನಪದ ಪಾರಿಜಾತ ಆಟದಲ್ಲಿ ನೈಪುಣ್ಯತೆ ಗಳಿಸಿದ್ದರೆಂದು ತಿಳಿದುಬರುತ್ತದೆ. ಹೀಗಾಗಿ ಇವರ ರಚನೆಗಲ ಮೇಲೆಯೂ ಜನಪzದÀ ಗಾಢ ಪ್ರಭಾವವನ್ನು ಕಾಣಬಹುದಾಗಿದೆ. ಅನಂತಾದ್ರೀಶರು ಚಿತ್ರಕಲೆಯಲ್ಲಿಯೂ ನಿಷ್ಣಾತರಾಗಿದ್ದರೆಂದು ಹೇಳಲಾಗುತ್ತದೆ. ಶ್ರೀ ಉದಯ ಕಡಕೋಳರು ದಾಸರ ವಂಶಸ್ಥರು. ಇವರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಇವರ ಬಳಿ ದಾಸರು 'ಶ್ರೀವೆಂಕಟೇಶ ಪಾರಿಜಾತ'ದ ಕಥನವನ್ನು ಚಿತ್ರಕಲೆಯಲ್ಲಿ ಬಿಡಿಸಿದ ಗ್ರಂಥವಿದೆ. ದಾಸರು ತಮ್ಮ ಜೀವಿತದ ಕೊನೆಯ ದಿನಗಳನ್ನು ಬೆಳಗಾಂವ ಜಿಲ್ಲೆಯ, ರಾಮದುರ್ಗ ತಾಲೂಕಿನ ಕಡಕೋಳು ಗ್ರಾಮದಲ್ಲಿ ಕಳೆದರೆಂದು ತಿಳಿದು ಬರುತ್ತದೆ.

ಅನಂತಾದ್ರೀಶರು ಏಳು ಸುದೀರ್ಘ ಕಥನಕಾವ್ಯಗಳನ್ನು ನೂರಾರು ಕೀರ್ತನೆಗಳನ್ನು ರಚಿಸಿದ್ದಾರೆಂದು ಹೇಳಲಾಗುತ್ತದೆ. ಆದರೆ ನಮಗೆ ದೊರೆತ ಆಧಾರದ ಮೇಲೆ ಇವರು ಏಳು ಕಥನ ಕಾವ್ಯಗಳನ್ನು, ಏಳು ಕೀರ್ತನೆಗಳನ್ನು ರಚಿಸಿರುವುದು ಸ್ವಪ್ಟವಾಗುತ್ತದೆ.

ಶ್ರೀಗೋಕಾವಿ ಅನಂತಾದ್ರೀಶರ ರಚನೆಗಳ ಸಂಗ್ರಹಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಕಟವಾಗಿರುವ ಮೂರು ಪಠ್ಯಗಳನ್ನು ಆಕರವಾಗಿಟ್ಟುಕೊಳ್ಳಲಾಗಿದೆ. ಅನಂತಾದ್ರೀಶದಾಸರು ವೆಂಕಟೇಶ ಪಾರಿಜಾತ, ಶಿವಪಾರಿಜಾತ, ಧ್ರುವಚರಿತ್ರೆ ಹಾಗೂ ಪ್ರಹ್ಲಾದ ಚರಿತ್ರೆ ಮುಂತಾದ ಕಥನಕಾವ್ಯಗಳನ್ನು ಕೆಲವು ಕೀರ್ತನೆಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ವೆಂಕಟೇಶ ಪಾರಿಜಾತ ಕಥನಕಾವ್ಯವನ್ನು ಗದಗಿನ ಹೊಂಬಾಳಿ ಬಂಧುಗಳು ಪ್ರಕಾಶನದವರು ಕ್ರಿ.ಶ 1960 ರಲ್ಲಿ ಪ್ರಕಟಿಸಿದ್ದಾರೆ.'ಶ್ರೀ ಕೃಷ್ಣಚರಿತ್ರೆ'ಯನ್ನು 1935 ರಲ್ಲಿ ದಿ|| ಬಿಂದಾಚಾರ್ಯಜಯತೀರ್ಥಾಚಾರ್ಯ ಗೋಕಾಕ ಇವರು ಪ್ರಕಟಿಸಿದ್ದರು. 'ಪ್ರಹ್ಲಾದ ಚರಿತ್ರೆ' ಕಥನಕಾವ್ಯವು ಇದೇ ಪ್ರಕಾಶನದಿಂದ ಕ್ರಿ.ಶ 1980ರಲ್ಲಿ ಪ್ರಕಟವಾಗಿದೆ. ಇವೆರಡೂ ಪ್ರಕಟಿತ ಕೃತಿಗಳಲ್ಲಿರುವ ಹಾಡುಗಳನ್ನು ಸಂಗ್ರಹಿಸಿ ಇಲ್ಲಿ ಕೊಡಲಾಗಿದೆ. ಈ ಪ್ರಕಟಿತ ಹಾಡುಗಳಲ್ಲಿ ಅನೇಕ ಅಶುದ್ಧ ಪಾಠಗಳಿದ್ದು ಅವುಗಳನ್ನು ಪರಿಷ್ಕರಿಸಿ ಶುದ್ಧ ಪಾಠಗಳನ್ನು ಮಾತ್ರ ಇಲ್ಲಿ ಸಂಪಾದಿಸಲಾಗಿದೆ. 'ಶಿವಪಾರಿಜಾತ' ಕಥನ ಕಾವ್ಯವು ಜೀರ್ಣಾವಸ್ಥೆಯಲ್ಲಿರುವ ಮುದ್ರಿತ ಕೃತಿಯಾಗಿದ್ದು ಈ ಕೃತಿಯ ಸಂಪಾದಕರ ಪ್ರಕಾಶಕರ ವಿವರಗಳು ತಿಳಿದುಬಂದಿಲ್ಲ. ನಾವು ಕ್ಷೇತ್ರಕಾರ್ಯ ಮಾಡಿದಾಗ ಧ್ವನಿ ಮುದ್ರಿಸಿಕೊಂಡ ವಕ್ತøಗಳ ಹಾಡುಗಳನ್ನು ಈ ಜೀರ್ಣಗೊಂಡ ಕೃತಿಯೊಂದಿಗೆ ತುಲನೆ ಮಾಡಿನೋಡಿ ಶುದ್ಧ ಪಾಠಗಳನ್ನು ಸಿದ್ಧಪಡಿಸಿ ಈ ಕಾವ್ಯವನ್ನು ಸಂಪಾದಿಸಿಕೊಡಲಾಗಿದೆ. 'ಧ್ರುವಚರಿತ್ರೆ' ಕಥನ ಕಾವ್ಯವು ಇದುವರೆಗೆ ಎಲ್ಲಿಯೂ ಪ್ರಕಟವಾಗಿರುವುದಿಲ್ಲ. ಇದರ ಮೂಲ ಪ್ರತಿಯನ್ನು ನಾವು ಶ್ರೀ ಜಯತೀರ್ಥ ಅಷ್ಟಪುತ್ರೆ, ಗೋಕಾಕ, ಇವರಿಂದÀ ಪಡೆದುಕೊಂಡಿದ್ದೇವೆ. ಈ ಹಸ್ತಪ್ರತಿ ದೇವನಾಗರಿ ಲಿಪಿಯಲ್ಲಿದೆ. ಈ ಹಸ್ತಪ್ರತಿಯನ್ನು ಪರಿಷ್ಕರಿಸಿ ದೇವನಾಗರಿ ಲಿಪಿಯಿಂದ ಕನ್ನಡ ಲಿಪಿಗೆ ಬದಲಾಯಿಸಿ ಅದರ ಶುದ್ಧ ಪಾಠವನ್ನು ಇಲ್ಲಿಕೊಡಲಾಗಿದೆ. ಶ್ರೀತುಳಜಾಮಹಾತ್ಮೆ ಹಸ್ತಪ್ರತಿಯನ್ನು ಉದಯ ಆಚಾರ ಗೋಕಾಕರಿಂದ ಸಂಗ್ರಹಿಸಲಾಗಿದ್ದು ಪ್ರಥಮ ಬಾರಿ ಪ್ರಕಟಗೊಳ್ಳುತ್ತಲಿದೆ. ಅನಂತಾದ್ರೀಶರು ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆಂಬುದು ಈಗಾಗಲೇ ಸ್ವಷ್ಟವಾಗಿದೆ. ನಾವು ಕೈಕೊಂಡ ಕ್ಷೇತ್ರಕಾರ್ಯದಲ್ಲಿ ಇವರ ಕೀರ್ತನೆಗಳು ಅಧಿಕ ಸಂಖ್ಯೆಯಲ್ಲಿ ನಮಗೆ ದೊರೆಯಲಿಲ್ಲ. ಈಗ ಸಧ್ಯಕ್ಕೆ ಏಳು ಕೀರ್ತನೆಗಳನ್ನು ಇದರೊಂದಿಗೆ ಸಂಗ್ರಹಿಸಿಕೊಟ್ಟಿದ್ದೇವೆ. ಈ ಕೀರ್ತನೆಗಳನ್ನು ಶ್ರೀಮತಿ ಲಲಿತಾಬಾಯಿ ಕೊಪ್ಪರ, ಶ್ರೀಮತಿ ಗೋದಾವರಿ ಕಲ್ಲೂರಕರ್, ಡಾ||ಶೈಲಜಾ ಕೊಪ್ಪರ್, ಶ್ರೀಮತಿ ಶಾಲಿನಿ ಕೊಪ್ಪರ ವಕ್ತøಗಳಿಂದ ಪಡೆದುಕೊಳ್ಳಲಾಗಿದೆ. ಹಾಗೆ ಪಡೆದು ಕೊಂಡ ಕೀರ್ತನೆಗಳನ್ನು ಪರಿಷ್ಕರಿಸಿ ತೆಗೆದುಕೊಳ್ಳಲಾಗಿದೆ.

***



No comments:

Post a Comment