ಶ್ರೀ ಗುರು ಪುರಂದರ ದಾಸರು.
ಇವರಿಬ್ಬರೂ ಅಣ್ಣ ತಮ್ಮಂದಿರನ್ನು - ಶ್ರೀ ಯಮಾಂಶ ಕನಕದಾಸರು...
ವರದಪ್ಪನೆ ಸೋಮ ।
ಗುರುರಾಯ ದಿನಕರನು ।।
ಎಂದು ಸೂರ್ಯ ಚಂದ್ರರ ಅವತಾರವೆಂದು ಬಣ್ಣಿಸಿದ್ದಾರೆ.
ಇವರು 22 ಪದಗಳನ್ನು ರಚಿಸಿ ತಂದೆಗೆ ತಕ್ಕ ಮಗನಾಗಿ ಹರಿದಾಸ ಪರಂಪರೆಯನ್ನು ಮುಂದುವರೆಸಿದರು.
" ಶ್ರೀ ಗುರು ಪುರಂದರ ದಾಸರು "
ಹೆಸರು : ಶ್ರೀ ಗುರುರಾಯ
ಅಂಶ : ಸೂರ್ಯ
ಕಕ್ಷೆ : 12
ಶ್ರೀ ಗುರುರಾಯರು ಶ್ರೀ ಪುರಂದರದಾಸರ ಎರಡನೇ ಮಗ.
ಇವರು ತಮ್ಮ ತಂದೆಯಿಂದಲೇ " ಗುರು ಪುರಂದರ ವಿಠಲ " ಯೆಂದು ಅಂಕಿತವನ್ನು ಪಡೆದು, ಉಪದೇಶವನ್ನು ಹೊಂದಿ ಹರಿದಾಸರಾದರು.
ಇವರು 32 ಪದಗಳನ್ನೂ, 17 ಸುಳಾದಿಗಳನ್ನೂ, 12 ಉಗಾಭೋಗವನ್ನೂ ರಚಿಸಿದ್ದಾರೆ.
ಶ್ರೀ ಗುರು ಪುರಂದರದಾಸರು ಶ್ರೀ ಚಂದ್ರಿಕಾಚಾರ್ಯರನ್ನೂ, ಶ್ರೀ ವಿಜಯೀ೦ದ್ರತೀರ್ಥರನ್ನೂ ತಮ್ಮ ಕಾವ್ಯ ವಸ್ತುವನ್ನಾಗಿ ಮಾಡಿಕೊಂಡು ಇವರು ಕವನಿಸಿದ್ದಾರೆ.
ವಾಸುದೇವನ ಚರಣ-
ವನಜ ವಂದಿತನೇ । ಸಂ ।
ನ್ಯಾಸ ರತ್ನಾಕರನೇ ।
ವ್ಯಾಸ ಮುನಿರಾಯ ।।
ಎಂಬುದಾಗಿಯೂ, ಹಾಗೂ
ವಿಜಯೀ೦ದ್ರರೆಂಬೋ
ಆಶ್ಚರ್ಯದ ।
ಗಜೇಂದ್ರ ಬಂದಿದೆ ।
ಸುಜನರು ನೋಡ ಬನ್ನಿ ।।
ಎಂದು ಕೊಂಡಾಡಿದ್ದಾರೆ.
ಹರಿ - ಗುರು ಭಕ್ತಿಯು ಇವರ ಪದ - ಪದ್ಯ - ಸುಳಾದಿಗಳಲ್ಲಿ ಚೆನ್ನಾಗಿ ಅಭಿವ್ಯಕ್ತಿಯನ್ನು ಪಡೆದಿದೆ.
****
ಅಣ್ಣ ತಮ್ಮಂದಿರನ್ನು - (ವರದಪ್ಪ, ಗುರುರಾಯ) ಶ್ರೀ ಯಮಾಂಶ ಕನಕದಾಸರು...
ವರದಪ್ಪನೆ ಸೋಮ ।
ಗುರುರಾಯ ದಿನಕರನು ।।
ಎಂದು ಸೂರ್ಯ ಚಂದ್ರರ ಅವತಾರವೆಂದು ಬಣ್ಣಿಸಿದ್ದಾರೆ.
****
No comments:
Post a Comment