Krishnavadhutaru
ಕಾಲ : ಕ್ರಿ ಶ 1835 - 1909.
ಶ್ರೀ ಕೃಷ್ಣಾವಧೂತರು
" ಈದಿನ - 12.02.2020 ಮಾಘ ಬಹುಳ ತೃತೀಯಾ - ಬುಧವಾರದಂದು ಶ್ರೀ ಕೃಷ್ಣಾವಧೂತರ ಆರಾಧನಾ ಮಹೋತ್ಸವ "
" ಶ್ರೀ ಮಂತ್ರಾಲಯ ಪ್ರಭುಗಳ ಕಾರುಣ್ಯಪಾತ್ರರು ಶ್ರೀ ಕೃಷ್ಣಾವಧೂತರು "
ಶ್ರೀ ಕೃಷ್ಣಾವಧೂತರು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ " ನಾರಾಯಣದೇವರ ಕೆರೆ " ಯೆಂಬ ಹಳ್ಳಿಯಲ್ಲಿ ಹುಟ್ಟಿದರು. ( ಇದು ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ಮುಳುಗಿದೆ )
ಕಾಲ : ಕ್ರಿ ಶ 1835 - 1909.
" ಶ್ರೀ ಕೃಷ್ಣಾವಧೂತರ ಸಂಕ್ಷಿಪ್ತ ಚರಿತ್ರೆ "
ಶ್ರೀ ಕೃಷ್ಣಾವಧೂತರು ಶಾಂಡಿಲ್ಯ ಗೋತ್ರೋದ್ಭವರಾದ ಶ್ರೀ ವೆಂಕಟರಮಣಾಚಾರ್ಯ ಮತ್ತು ಸಾಧ್ವೀ ತ್ರಿವೇಣಿಬಾಯಿ ದಂಪತಿಗಳ ಪುತ್ರರು.
ಇವರು 3 ತಿಂಗಳು ಕೂಸುಯಿದ್ದಾಗ ಸಂಡೂರಿನ " ಕುತ್ಸ " ಗೋತ್ರದ ಶ್ರೀ ಭೀಮಸೇನಾಚಾರ್ಯ ಎಂಬವರು ಇವರನ್ನು ದತ್ತಕ ತೆಗೆದುಕೊಂಡರು.
ಶ್ರೀ ಕೃಷ್ಣಾವಧೂತರಿಗೆ ಶ್ರೀ ಭೀಮಸೇನಾಚಾರ್ಯರು " ಮಾಧವ " ನೆಂದು ಹೆಸರಿಡಲಾಯಿತು. ಅವರನ್ನು " ಮಾಧವಕೃಷ್ಣ " ನೆಂದೂ; " ಮುದ್ದುಕೃಷ್ಣ " ನೆಂದೂ ಕರೆದರು.
" ರಾಧಾ " ಎಂಬುವಳೊಡನೆ ಶ್ರೀ ಮಾಧವಕೃಷ್ಣ ( ಶ್ರೀ ಕೃಷ್ಣಾವಧೂತರು ) ತಮ್ಮ 7ನೆಯ ವಯಸ್ಸಿನಲ್ಲಿ ಮದುವೆಯಾದರು. 11ನೇ ವಯಸ್ಸಿನಲ್ಲಿ ತಾಯಿಯನ್ನೂ; 15ನೇ ವಯಸ್ಸಿನಲ್ಲಿ ತಂದೆಯನ್ನೂ ಕಳೆದುಕೊಂಡರು.
" ಮೈಸೂರಿಗೆ ಪಯಣ "
ತಂದೆ ತಾಯಿಗಳ ಮರಣಾನಂತರ ಮನೆಯಲ್ಲಿ ಅವರ ತಂಗಿ ಸರಸ್ವತೀಬಾಯಿ ಅವರ ಒಳ ಸಂಚಿನಿಂದಾಗಿ ಮುದ್ದುಕೃಷ್ಣ ಮತ್ತು ಅವರ ಹೆಂಡತಿ ನಡುವೆ ಪರಸ್ಪರ ತಪ್ಪು ಕಲ್ಪನೆ ಹುಟ್ಟುವಂತೆ ಮಾಡಿದರು. ಶ್ರೀ ಮುದ್ದುಕೃಷ್ಣನನ್ನು ವಿಷ ಹಾಕಿ ಕೊಲ್ಲಲು ಪ್ರಯತ್ನಗಳೂ ಸಹ ನೆಡೆದವು. ಶ್ರೀ ಮುದ್ದುಕೃಷ್ಣ ( ಶ್ರೀ ಕೃಷ್ಣಾವಧೂತರು ) ಮೈಸೂರಿಗೆ ಬಂದು ನೆಲೆಸಿದರು.
" ಶ್ರೀ ಕೃಷ್ಣಾವಧೂತರ ವಿದ್ಯಾ ವೈಭವ "
ಮೈಸೂರಿಗೆ ಬಂದ ನಂತರ ಶ್ರೀ ಕೃಷ್ಣಾವಧೂತರ ನಿಜವಾದ ಅಭ್ಯಾಸ ಪ್ರಾರಂಭವಾಯಿತು. ಅನೇಕ ಕ್ಲಿಷ್ಟ / ಜಟಿಲವಾದ ವಿಷಯಗಳ ಮೇಲೆ ಪ್ರಭುತ್ವ ಸಾಧಿಸಿದರು.
ದಕ್ಷಿಣ ಭಾರತದ ಅನೇಕ ಮಹತ್ವದ ಶೈಕ್ಷಣಿಕ ವಿದ್ಯಾ ಕೇಂದ್ರಗಳಿಗೆ ಭೇಟಿ ಕೊಟ್ಟರು.
ತ್ರಿವೇಂದ್ರಂನಲ್ಲಿ 100 ಶ್ಲೋಕಗಳನ್ನು ಕೇವಲ 20 ನಿಮಿಷಗಳಲ್ಲಿ ರಚಿಸಿ " ಘಟಿಕಾಶತಕವಿ " ಎಂಬ ಬಿರುದನ್ನೂ; " ಬಂಗಾರದ ಕಂಶ " ( ಬಂಗಾರದ ಲೇಖನಿಯನ್ನೂ ) ಪಡೆದರು. ನಂತರ ಕಂಚಿ - ಅರಣಿ - ತಿರುಪತಿ - ಕಾಳಹಸ್ತಿ ಮುಂತಾದ ವಿದ್ಯಾ ಕೇಂದ್ರಗಳಿಗೆ ಭೇಟಿ ಕೊಟ್ಟರು.
ನಂತರ ಹೊಸಪೇಟೆಗೆ ಬಂದು " ರುಕ್ಮಿಣೀ " ಎಂಬುವರನ್ನು ಮದುವೆಯಾಗಿ ಹೊಸಪೇಟೆಯಲ್ಲೇ ವಾಸವಾಗಿದ್ದರು.
" ಶ್ರೀ ರಾಯರ ಕಾರುಣ್ಯ "
ಶ್ರೀ ಕೃಷ್ಣಾವಧೂತರು ೩೨ ವರ್ಷಗಳ ಕಾಲ ದುರಾಚಾರಿಗಳಾಗಿದ್ದು; ಶ್ರೀ ಆಹ್ಲಾದಾಂಶ ಅಪ್ಪಣ್ಣಾಚಾರ್ಯರು ಸ್ವಪ್ನದಲ್ಲಿ ಕಾಣಿಸಿ ಕೊಂಡರೂ; ಎಚ್ಚರಿಸಿದರೂ ವಿಶ್ವಾಸವಿಡದೇ ಕಿವಿಗೊಡಲಿಲ್ಲ.
ಕೊನೆಗೆ ಶ್ರೀ ಮಂತ್ರಾಲಯ ಪ್ರಭುಗಳೇ ಶ್ರೀ ಕೃಷ್ಣಾವಧೂತರಿಗೆ ಸ್ವಪ್ನದಲ್ಲಿ ಬಂದು ದೇವನಾಗರೀ ಲಿಪಿಯಲ್ಲಿ ಬರೆದಿರುವ " ತಾಮ್ರಪಟಲ " ವನ್ನೂ; ಮಂತ್ರಾಕ್ಷತೆಯನ್ನೂ ಕೊಟ್ಟು ಅನುಗ್ರಹಿಸಿದರು.
ಸ್ವಪ್ನದಲ್ಲಿ ದರ್ಶನವಿತ್ತು ತಮ್ಮ ಉಪಾಸನಾ ಕ್ರಮವನ್ನು ನಿರೂಪಿಸುವ ಗ್ರಂಥವನ್ನು ರಚಿಸುವಂತೆ ಆದೇಶವಿತ್ತರು. ಅದರಂತೆಯೇ ಶ್ರೀ ಕೃಷ್ಣಾವಧೂತರು ಗ್ರಂಥವನ್ನು ರಚಿಸಿದರೆಂದು ಈ ಕೆಳಕಂಡ ಅವರ ಮಾತೆ ಪ್ರಮಾಣವಾಗಿದೆ.
ಅಥಾತಃ ಶ್ರೀ ರಾಘವೇಂದ್ರ
ತಂತ್ರಂ ವಕ್ಷ್ಯೇ ತವಾಜ್ಞಯಾ ।
ಕೃಷ್ಣಾವಧೂತ ನಾಮಾಹಂ
ಕಲೌ ಪ್ರತ್ಯಕ್ಷ ಸಿದ್ಧಿದಮ್ ।।
ನಾರಾಯಣಂ ನಮಸ್ಕೃತ್ಯ
ರಾಮಕೃಷ್ಣದ್ವಯಾತ್ಮಕಮ್ ।
ಮಾರುತಿತ್ರಿತಯಂ ಪ್ರಾಣಂ
ತತೋ ಗ್ರಂಥಮುದೀರಯೇ ।।
ಶ್ರೀ ರಾಘವೇಂದ್ರಗುರುರಾಟ್
ಸಾರ್ವಭೌಮಾ೦ಘ್ರಿರೇಣವಃ ।
ಸಿದ್ಧಿ೦ ದಿಶಂತು ಮೇ ವಾಚಾ೦
ರಸಾರ್ಣವ ಇವಾಂಭಸಾಂ ।।
ರಾಘವೇಂದ್ರಗುರೋ:
ಪಾದಪದ್ಮಪಾಂಸು ಲುಠನ್ಮನಾಃ ।
ಅಪ್ಪಣ್ಣಾಚಾರ್ಯವರ್ಯೋsತ್ರ
ಸಿದ್ಧಿ೦ ದಿಶತು ಕರ್ಮಣಿ ।।
ಯಃ ಪೂರ್ವಂ ಬೋಧಯಾಮಾಸ
ಸ್ವಪ್ನೇ ಮಾಂ ವಿಮುಖಂ ಗುರೋ: ।
ದ್ವಾತ್ರಿ೦ಶದ್ವರ್ಷಪರ್ಯಂತಂ
ದುರಾಚಾರರತಂ ಸದಾ ।।
..... ಪದೇ ಪದೇ ಸಮಾಗತ್ಯ
ಸಾಕ್ಷಾತ್ಸ್ವಪ್ನೇ ಬ್ರವೀತಿ ಯತ್ ।
ಗೋಪ್ಯ೦ ವಕ್ತು೦ ನ ತದ್ಯುಕ್ತ೦
ಗುರುರಾಜ: ಕೃಪಾನಿಧಿ: ।।
ಚೋದಿತಸ್ತೇನ ವಕ್ಷ್ಯಾಮಿ
ಭಕ್ತಾsನುಗ್ರಹಕಾಂಕ್ಷಿಣಾಮ್ ।
ಶ್ರೀ ರಾಘವೇಂದ್ರ ತಂತ್ರಾಖ್ಯ೦
ಗ್ರಂಥ೦ ಪ್ರತ್ಯಕ್ಷ ಸಿದ್ಧಿದಮ್ ।।
" ಶ್ರೀ ಕೃಷ್ಣಾವಧೂತರ ಗ್ರಂಥಗಳು "
1. ಹನ್ನೊಂದು ಪ್ರಕರಣಗಳನ್ನೊಳಗೊಂಡ " ಆತ್ಮಚರಿತ್ರೆ ". ಈ ಕೃತಿಯನ್ನು ಶ್ರೀ ಕೃಷ್ಣಾವಧೂತರೇ " ಗುರುದಾಸ " ಎಂಬ ಹೆಸರಲ್ಲಿ ಸರಳ ಸುಂದರ ಸಂಸ್ಕೃತದಲ್ಲಿ ರಚಿಸಿದ್ದಾರೆ.
2. ವ್ಯಾಕರಣ ಶಾಸ್ತ್ರದಲ್ಲಿ..
ಅ) ಸುಲಭ ಸಾಧ್ಯ ವ್ಯಾಕರಣಮ್
3. ಸಾಹಿತ್ಯ ಶಾಸ್ತ್ರದಲ್ಲಿ...
ಅ) ಈಹಾಮೃಗೀ
ಆ) ಪಾಂಡುರಂಗವಿಲಾಸ ಚಂಪೂ
ಇ) ಕೃಷ್ಣಾವಧೂತ ನಟನ ತಂತ್ರಮ್
4. ಅಲಂಕಾರ ಶಾಸ್ತ್ರದಲ್ಲಿ ...
ಅ) ಕಾವ್ಯ ಲಕ್ಷಣ ತಂತ್ರಮ್
ಆ) ಸಾರಸ್ವತಾಲಂಕಾರ ಸೂತ್ರಮ್
ಇ) ಸಾರಸ್ವತಾಲಂಕಾರ ಭಾಷ್ಯಮ್
5. ನ್ಯಾಯ ಶಾಸ್ತ್ರದಲ್ಲಿ...
ಅ) ತರ್ಕ ನವನೀತಮ್
ಆ) ಪದಾರ್ಥ ಸಂಗ್ರಹ
ಇ) ತರ್ಕ ಸಂಗ್ರಹ ವಾಕ್ಯಾರ್ಥ ವಿವೃತಿ
6. ದ್ವೈತ ವೇದಾಂತ ಶಾಸ್ತ್ರದಲ್ಲಿ...
ಅ) ಮಧ್ವಮತ ಸರ್ವಸ್ವಮ್
ಆ) ಮಧ್ವತತ್ತ್ವ ಸೂತ್ರಾಣೀ
ಇ) ಸೂತ್ರ ರತ್ನಾಮೃತ ಲಹರಿ
ಈ) ಆಧ್ಯಾತ್ಮ ನವನೀತಮ್
7. ಅದ್ವೈತ ಶಾಸ್ತ್ರದಲ್ಲಿ...
ಅ) ಅದ್ವೈತ ನವನೀತಮ್
8. ವಿಶಿಷ್ಟಾದ್ವೈತ ಶಾಸ್ತ್ರದಲ್ಲಿ...
ಅ) ವಿಶಿಷ್ಟಾದ್ವೈತ ನವನೀತಮ್
" ಇತರೆ ಗ್ರಂಥಗಳು "
1. ಲಘುರಾಮಾಯಣ
2. ದಶೋಪನಿಷತ್ತುಗಳಿಗೆ ವ್ಯಾಖ್ಯಾನ
3. ಹನುಮದ್ವಿಜಯ
4. ಅನುವ್ಯಾಖ್ಯಾನ ವ್ಯಾಖ್ಯಾನ
5. ರಾಧಾ ವಿಲಾಸ
6. ವಾಸುದೇವೋದಯ
7. ಛಂದ: ಪ್ರಭಾ
8. ಸುಶ್ಲೇಷ ಮಣಿ ಮಂಜೂಷಾ
9. ಪಾಂಚಾಲೀ ಸ್ವಯಂವರಂ
10. ರಾಘವೇಂದ್ರ ತಂತ್ರ೦ ಚ ಮಂತ್ರರತ್ನಾಕರ
11. ಸುಧರ್ಮೇಂದ್ರ ಮಹೋದಯಃ
12. ರಸರಂಜನೀ
13. ಬ್ರಹ್ಮಸೂತ್ರ ತ್ರಿಭಾಷ್ಯಾರ್ಥ ಸಂಗ್ರಹಃ
14. ಕೃಷ್ಣಗೀತಾ ( ಭಗವದ್ಗೀತಾ ) ತ್ರಿಭಾಷ್ಯಾರ್ಥ ಸಂಗ್ರಹ ಚಿತ್ರಪದ್ಧತಿ:
15. ಪ್ರತಾಪರುದ್ರೀಯ ವ್ಯಾಖ್ಯಾ ಭೈಷಜ್ಯರಂಜನಮ್
16. ರುಕ್ಮಿಣೀ ಕಲ್ಯಾಣ ಚರಿತಂ
17. ಪಾರ್ವತೀ ಕಲ್ಯಾಣ ನಾಟಕಂ
18. ವೇದಾಂತಕಾರಿಕಾವಲೀ
20. ವೇದಾಂತ ರತ್ನಮಾಲಾ
20. ಆನಂದ ರಸಸಾಗರ
21. ಸುಭಾಷಿತ ರತ್ನಮಂಜರೀ
" ಉಪಸಂಹಾರ "
ಶ್ರೀ ಕೃಷ್ಣಾವಧೂತರು ಶ್ರೇಷ್ಠ ಕವಿ ಹಾಗೂ ತರ್ಕ ಶಾಸ್ತ್ರ ಕೋವಿದರು.
ವಿವಿಧ ರೀತಿಯ ಛಂದಸ್ಸುಗಳನ್ನು ಉಪಯೋಗಿಸಿದ್ದಾರೆ.
ಶೈಲಿ ಅಲಂಕಾರಿಕ ಆದರೆ ಕೃತ್ರಿಮವಲ್ಲ.
ಕೆಲವು ಪುಸ್ತಕಗಳಲ್ಲಿ ಬಹಳ ಸರಳ ಹಾಗೂ ಹೃದಯಕ್ಕೆ ನೇರವಾಗಿ ಮುಟ್ಟುವಂತೆ ಬರೆದಿದ್ದಾರೆ.
ಇಂಥಾ ಚತುರಸ್ರ ಪಾಂಡಿತ್ಯವುಳ್ಳ ವಿದ್ವಾಂಸರೂ; ಕವಿರ್ಮನಿಷಿಗಳೂ ಕಳೆದ 100 ವರ್ಷಗಳ ಮಾಧ್ವ ಸಾಹಿತ್ಯದಲ್ಲಿ ದೊರುಕುವುದು ಅಸಾಧ್ಯ!!
ಶ್ರೀ ಕೃಷ್ಣಾವಧೂತರು " ಶ್ರೀ ಸುಧರ್ಮೇಂದ್ರ ಮಹೋದಯಃ "
ವಾಹೀಕೃತ ಮಹಾವಾಹ-
ಗಣಾಧಿಪವಿನಾಯಕೌ ।
ಭವತಾಂ ಭವತಾಂ ಭೂತ್ಯೈ
ಪಾರ್ವತೀ ಪರಮೇಶ್ವರೌ ।।
ನಂದಿಯನ್ನು ವಾಹನವನ್ನಾಗಿಸಿಕೊಂಡ ಶಿವನೂ; ಪಕ್ಷಿಯನ್ನು ವಾಹನವನ್ನಾಗಿಸಿಕೊಂಡ ವಿಷ್ಣುವು ನಮ್ಮ ಸಂಪತ್ತನ್ನು ಬೆಳಸಲಿ!!
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
****
Good information, nicely written.
ReplyDelete