Thursday, 20 May 2021

paramatma teertharu bidi sanyasi 2021 ramanagar ಪರಮಾತ್ಮ ತೀರ್ಥರು

 ಶ್ರೀಉತ್ತರಾದಿಮಠದ ಶ್ರೀಗಳಿಂದ ಆಶ್ರಮಪಡೆದು #ಶ್ರೀಪರಮಾತ್ಮತೀರ್ಥರೆಂದು ನಾಮಾಂಕಿತರಾಗಿದ್ದ ಅಪರೂಪದ ಸಾಧಕ ಸಂನ್ಯಾಸಿಗಳು ಇವರು.  ಆಜನ್ಮ ವಿಷ್ಣುಪಂಚಕ, ಹತ್ತಾರು ಭೀಷ್ಮಪಂಚಕ, ಮೂರು ಬಾರಿ ಉಪವಾಸದಲ್ಲೇ ಸಪ್ತಾಹ ಕ್ರಮದಿಂದ ಭಾಗವತ ಶ್ರವಣ ಮಾಡಿದ ಸಾಧನೆ ಮಹನೀಯರದು. ಕಡೆಗಾಲದಲ್ಲಿ ಶ್ರೀಪೇಜಾವರ ಶ್ರೀಪಾದರ ಆಶ್ರಯದಲ್ಲಿದ್ದು #ಶ್ರೀವಿಶ್ವಗುರುಪ್ರಿಯತೀರ್ಥರು ಎಂದು ಪ್ರಖ್ಯಾತರಾಗಿದ್ದರು.  ವೃಂದಾವನಸ್ಥರಾಗುವ ಮೂರು ದಿನಗಳ ಮುಂಚೆಯೂ ನಿರ್ಜಲ ನಿರಾಹಾರದಿಂದ ಸಂಪೂರ್ಣ ಏಳುದಿನಗಳು ಶ್ರೀಮದ್ ಭಾಗವತದ ಶ್ರವಣಮಾಡಿ ಬ್ರಾಹ್ಮಣರ ಭೋಜನ ಮಾಡಿಸಿ ಪಾರಣೆ ನಡೆಸಿದ್ದರು.*    ಇವರ ಮೂಲವೃಂದಾವನವು ನಮ್ಮ ಹನಸೋಗೆ ಮಧ್ವಮಠದ ರಾಮನಗರ ಶಾಖೆಯ ಜಾಗದ ಅನತಿ ದೂರದಲ್ಲಿದೆ. ಶಕ್ತಿಮಾನ್ ರವಿಯವರು ವೃಂದಾವನಕ್ಕೆ ಸ್ಥಳವನ್ನು ಕೊಟ್ಟಿದ್ದಾರೆ. 11.05.2021 . . ಮಹನೀಯರ ಆರಾಧನೆ ಸಲುವಾಗಿ ಸ್ಮರಣೆ ಮಾಡಿದ್ದೇನೆ. -

*****


No comments:

Post a Comment