Thursday, 1 August 2019

madhwacharyaru 1317 badari magha shukla navami ಮಧ್ವಾಚಾರ್ಯರು

 madhwacharya movie
 150 years old painting of jagadguru sriman madwacharya with 32 lakshanas.




Dwadasha Stotra- vande vandyam
https://www.youtube.com/watch?v=C9tKxE7YG1c


Dwadasha Stotra - preenayamo
https://www.youtube.com/watch?v=g-KqyRCV2x0


Sri Madhvacharya was born in the year 1238 A.D, on the Vijayadashami day of the month of Aswayuja in a village about three miles from Udupi in South Canara. His father was a pious brahmin belonging to Bhagavata Sampradaya and a pauranic by profession. Sri Madhvacharya was born at a late period in his father’s life after constant prayer and dedication of vows to Ananteswara in Udipi.
Madhyageha Bhatta, the father, was therefore happy and proud in no ordinary degree in his son whom he christened Vasudeva. Boy Vasudeva was very precocious and his father taught him the three Rs in the privacy of his house. Not even had the boy attained his teens, when he felt an inner urge he could not resist, to taking to the holy orders and took sanyasa under Achutaprekshacharya in Udipi.
Achutaprekshacharya had been brought up in the then current Adwaita school of thought but the philosophy of that school did not appeal to the new sanyasi. Achutaprekshacharya was somewhat displeased with his new disciple but he was however very much impressed with the earnestness, and scholarship of his disciple whom he had named as Purnaprajna. Purnaprajna thereupon began to preach his own philosophy according to which the world is real, the individual souls are different from Brahman, and Vishnu is the Highest Entity in the universe. Many a pandit and scholar of other schools came to him for debate and went back defeated by his keen and irrefutable logic. Purnaprajna, in order to propagate his faith undertook a pilgrimage to various shrines in South India and the pilgrimage was also an opportunity to meet opponents of other schools in the different places. Immediately after he returned from the pilgrimage Purnaprajna wrote the commentary on BhagavadGita. The Gita Bhashya (commentary on the Gita) is the first work of the Acharya.
Seven years after he took to holy orders Purnaprajna commenced a pilgrimage to the North where he touched Benares, Allahabad, Dwaraka, Delhi and other places and reached the famous Badrikshetra. He composed the Brahmasutra Bhashya at this place and went further North alone, all by himself, to the depths of Himalayas, where Sri Vedavyasa is said to have his abode.. On his return journey Purnaprajna came to the banks of Godavari and had debates with two eminent and scholarly pandits Sobhana Bhatta and Samasastry belonging to Adwaita school. 
The Pandits were defeated in the debate and with the conviction of the truth of the school of philosophy expounded by Purnaprajna, both of them became his disciples taking up Sanyasa. Shobana Bhatta became the famous Padmanabhatirtha who succeeded to the pontifical seat of Purnaprajnacharya. Samasastry became Narahari Thirtha and at the behest of the acharya stayed behind to obtain the images of Mula Rama and Sita from the treasury of the local prince. Padmanabha Tirtha followed his master and was greatly devoted to him. 
After his return to Udipi Purnapragna began to write various works establishing the new system of philosophy which has come to be called Dwaitasiddhanta. The cardinal point which distinguishes his system from others is the essential difference between Brahman who is Independent and all else which are dependent. This system has therefore come t be called Dwaitasiddhanta (the philosophy of Basic difference), Purnaprajnacharya declares himself at the end of many of his works to be an avatar of the Wind God Vayu and says that his avatar as Purnaprajna has been foretold in the srutis where he has been called Madhva. Purnapragnacharya is therefore popularly known as Sri Madhvacharya. The Acharya founded the Sri Krishna temple at Udipi and established eight mutts, the sanyasis of which has to worship the image by rotation. The system of rotation has continued until the present da at Udipi. Sri Madhva wrote commentaries or Bhashyas on the ten principal Upanishads, the special treatises called Prakaranas ten in number, the Gita Tatparya and other works during this period. 
Sri Madhvacharya under took the second tour to the north again. He met Jalaluddin Khilji at Delhi and seems to have conversed with him in Urdu. After returning from North he spent the rest of his life in Udipi occasionally visiting a place called Vishnumangala near Udipi. During one of his visits to Vishnumangala he had to meet a reputed champion of the Adwaita school by name
Trivikramapanditacharya. The debate between them seems to have extended to fifteen days and covered all the different systems of philosophy like the Bauddha, Sankhya, Nyaya and Adwaita. 
In the end Trivikramapanditacharya has to admit defeat. He was very much impressed with the Acharya and became his disciple having renounced Adwaita and accepting the Dvaita sidhanta. The conversion of Pandita Trivikrama was a great moral victory for the Acharya and many were the new adherents to his system. Trivikrama Panditacharya became so devoted the Acharya He wrote the commentary known as Tatvapradipa on the Brahmasutra Bhashya of Sri Madhwacharya. At his request Sri Madhvacharya wrote a metrical commentary on the Brahmasutras which is famous as Anuvyakhyana.
Sri Madhvacharya had many disciples belonging to the Sanyasa ashrama and many disciples who were house holders. He vanished from the sight of men in his eightieth year in the month of Magha on the 9th day of the bright fortnight while he was teaching the Aitareya Upanishad Bhashya to his disciples. A shower of flowers is said to have rained on him and he vanished from the sight of men in the shower of flowers.
Sri Madhvacharya has written in all thirty seven works. and they are collectively called Sarvamula. Four of his works are on Brahmasutras, two on Bhagavad Gita, ten are the commentaries on ten Upanishads, one on the Mahabharata and one on the Bhagavata in order to determine their import and ten are the prakaranas. The Rigbhashya is a commentary on the Rigveda (for a few typical Riks). Seven of his works are of the Stotra type. Nobody can fail to be impressed by his works. His method is very brief and simple. His logic is infallible and energetic. The depth of his scholarship is seen in the profuse ness range and variety of quotations from various religious texts. His familiarity with the Upanishadic, puranic, tantric and other literature is in ample evidence in all his works. He is singularly free from the use of alankaraprayoga and he is very matter of fact in all his arguments. 
The Brahmasutra Bhshya of the Acharya possesses in full measure the characteristics a Bhashya should possess. (A words in which the meaning of the sutras is explained by words similar to those in the sutras and in which the author explains his own words is called a Bhashya.) Accordingly the Brahmasutra Bhashya of the Acharya of Sri Madhvacharya is a very brief and precise composition in contrast with the Bhashyas of the Acharyas of the other systems. Sri Madhvacharya however reserves polemical treatment of the Brahmasutras to be effective in Anuvyakhyana. The commentaries on the Upanishads are peculiar and philosophical hosts in themselves. Sri Madhvacharya invariably quotes appropriate puranic and Vedic literature and samhitas with purport to to explain the Upanishadic passages. 
The direct disciples of Sri Madhvacharya, viz. Padmanabha Tirtha, Narahari Tirtha, Trivikramapanditacharya and others have written commentaries on his works. These are called Prachina tikas. They were followed by the brilliant commentaries of Jayatirtha who is famous as Tikacharya. Jayathirtha has written commentaries on almost all the works of Sri Madhvacharya. In particular the commentary on Anuvyakhyana called “Nyayasudha” is famous as a commentary of the highest merit. The works of Jayathirtha have been commented upon by many later scholars of whom Vyasarja and Raghavendra Tirtha are well known. 
***************

ಸರ್ವೊತ್ತಮನಾದ ಶ್ರೀಪತಿಯಾದ ಪರಮಾತ್ಮನ ಅದೇಶವನ್ನು ಪಾಲಿಸಲು ಜೀವೋತ್ತಮನಾದ ಪವಮಾನನು ಶ್ರೀಮದಾನಂದತೀರ್ಥರಾಗಿ ಜನಿಸಿದರು. ಶ್ರೀ ಮಧ್ವಾಚಾರ್ಯರು ಉಡುಪಿಯ ಹತ್ತಿರದಲ್ಲಿರುವ ಪಾಜಕ ಗ್ರಾಮದಲ್ಲಿ ತಂದೆ ಮಧ್ಯಗೇಹ ಭಟ್ಟ ಮತ್ತು ತಾಯಿ ವೇದವತಿಗೆ ಜನಿಸಿದರು. ತಂದೆ ತಾಯಿ ವಾಸುದೇವನೆಂದು ಹೆಸರಿಟ್ಟಿದ್ದರು. ಬಾಲ್ಯದಲ್ಲೆ ಅಸಾಧಾರಣ ಪ್ರತಿಭೆ ತೋರಿದ ವಾಸುದೇವ, ತನ್ನ ಹನ್ನೆರಡೆನೆಯ ವಯಸ್ಸಿನಲ್ಲಿ ವಿಧ್ಯಾಭ್ಯಾಸ ಮತ್ತು ವೇದಾಭ್ಯಾಸಗಳೆರಡನ್ನು ಮುಗಿಸಿ ಗುರು ಅಚ್ಯುತ ಪ್ರಜ್ಞ ಸನ್ಯಾಸವನ್ನು ಪಡೆದು ಪೂರ್ಣಪ್ರಜ್ಞರೆಂಬ ಹೆಸರು ಪಡೆದರು. ಶ್ರೀಮದಾಚಾರ್ಯರಿಗೆ ಗುರುಗಳು ವೈದಿಕ ಸಾಮ್ರಾಜ್ಯದಲ್ಲಿ ಪಟ್ಟಾಭಿಶೇಕ ನೆರವೆರಿಸಿ ಇಟ್ಟ ನಾಮ ಆನಂದತೀರ್ಥ. ವೇದಾಂತ ದರ್ಶನದಲ್ಲಿ , ಮಧ್ವಚಾರ್ಯರು ದ್ವೈತ ಸಿದ್ಧಾಂತದ ಉಗ್ರ ಪ್ರತಿಪಾದಕರು. ಅವರು ಹದಿಮೂರು ಹದಿನಾಲ್ಕನೇ [೧೨೩೮-೧೩೧೭] ಶತಮಾನದಲ್ಲಿ ಇದ್ದವರು. ಅವರು ಭಕ್ತಿ ಮಾರ್ಗದ ಪ್ರವರ್ತಕರಲ್ಲಿ ಪ್ರಮುಖರು. ಅವರು ವಾಯುವಿನ ಅವತಾರದಲ್ಲಿ ಮೂರನೆಯವರಾದ ಮಾರುತಿ ಭೀಮರ ನಂತರ ಬಂದ ಅವತಾರವೆಂದು ಹೇಳುತ್ತಾರೆ (ಮಹಾಭಾರತ ತಾತ್ಪರ್ಯನಿರ್ಣಯದಲ್ಲಿ ಅವರೇ ಹೇಳಿಕೊಂಡಿದ್ದಾರೆ). ಮಧ್ವರು ಉಡುಪಿಯ ಹತ್ತಿರ ಪಾಜಕದಲ್ಲಿ ವಿಜಯ ದಶಮಿಯಂದು ಕ್ರಿ.ಶ.೧೨೩೮ ರಲ್ಲಿ ಒಂದು ಚಿಕ್ಕ ಕುಟೀರದಲ್ಲಿ ಜನಿಸಿದರು. ಅವರ ತಂದೆ ನದಿಲ್ಲಾಯ ನಾರಾಯಣ ಭಟ್ಟ.(ಇಂಗ್ಲಿಷ್ ವಿಕಿಪೀಡಿಯಾ), ತಾಯಿ ವೇದಾವತಿ. ಅವರು ಆ ಮಗುವಿಗೆ ವಾಸುದೇವನೆಂದು ನಾಮಕರಣ ಮಾಡಿದರು. ನಂತರ ಮಧ್ವರು ಪೂರ್ಣಪ್ರಜ್ಞ, ಪೂರ್ಣ ಬೋಧ, ಆನಂದ ತೀರ್ಥ, ಮಧ್ವಾಚಾರ್ಯ ಎಂಬ ಹೆಸರುಗಳಿಂದ ಪ್ರಸಿದ್ಧರಾದರು. ಅವರ ಜನನಕ್ಕೆ ಮುಂಚೆ ಅವರ ತಾಯಿ ತಂದೆ ಪೇಟೆಗೆ ಹೋಗಿದ್ದಾಗ ಒಬ್ಬ ಭಿಕ್ಷುಕ ಧ್ವಜ ಸ್ಥಂಬ ವನ್ನು ಏರಿ, 'ಈ ಊರಿನಲ್ಲಿ ವಾಯು ದೇವನು ಅವತರಿಸುವನು' ಎಂದು ಕೂಗಿ ಹೇಳಿದನೆಂದು ಪ್ರತೀತಿ.ವಾಸುದೇವನು ಚಿಕ್ಕ ಬಾಲಕನಾಗಿದ್ದಾಗಲೇ ಅಸಾಧಾರಣ ಪ್ರತಿಭೆಯನ್ನು ತೋರಿದನು. ಅವನು ಹನ್ನೊಂದನೇ ವರ್ಷದಲ್ಲಿ ಉಡುಪಿಯಲ್ಲಿದ್ದ ಅಚ್ಯುತ ಪ್ರೇಕ್ಷರಿಂದ ಸಂನ್ಯಾಸ ದೀಕ್ಷೆಯನ್ನು ಸ್ವೀಕರಿಸಿದನು. ಅವರು ಅವನಿಗೆ ಸಂನ್ಯಾಸ ದೀಕ್ಷೆ ಕೊಡುವಾಗ ಪೂರ್ಣಪ್ರಜ್ಞರೆಂದು ನಾಮಕರಣ ಮಾಡಿದರು. ಅವರು ಸಂನ್ಯಾಸ ದೀಕ್ಷೆಯನ್ನು ತೆಗೆದುಕೊಂಡ ಒಂದು ತಿಂಗಳ ನಂತರ ಪಂಡಿತೋತ್ತಮರನ್ನು ವೇದಾಂತ ತರ್ಕದಲ್ಲಿ ಸೋಲಿಸಿದರು. ಅದನ್ನು ನೋಡಿ ಅಚ್ಯುತಪ್ರೇಕ್ಷರು ಅವರಿಗೆ ವೇದಾಂತ ಸಾಮ್ರಾಜ್ಯದ ಚಕ್ರವರ್ತಿಯೆಂದು ಹೇಳಿ ಆನಂದತೀರ್ಥ ರೆಂಬ ಬಿರುದನ್ನು ಕೊಟ್ಟರು. ನಂತರ ಅವರು ವೇದದ ಬಲಿಷ್ಟ ಸೂಕ್ತದಲ್ಲಿ ಇರುವ ಮಧ್ವ ಹೆಸರನ್ನು ಆಯ್ದುಕೊಂಡು ಆ ಹೆಸರಿನಲ್ಲಿ ಗ್ರಂಥ ರಚಿಸಿ, ಮಧ್ವಾಚಾರ್ಯರೆಂದು ಪ್ರಸಿದ್ಧರಾದರು. ಅವರು ಪ್ರಚುರಪಡಿಸಿದ ದ್ವೈತ ಸಿದ್ಧಾಂತ ತತ್ವವಾದ ಅಥವಾ ದ್ವೈತ ಮತವೆಂದು ಪ್ರಸಿದ್ಧವಾಗಿದೆ. ಅವರು ದಕ್ಷಿಣ ಭಾರತ ಪ್ರವಾಸ ಕೈಕೊಂಡು ಅನಂತಶಯನ, ಶ್ರೀರಂಗಂ ಮೊದಲಾದ ಕಡೆ ತಮ್ಮ ತತ್ವವಾದ ವನ್ನು ಪ್ರಚಾರ ಮಾಡಿದರು. ಸಂಪ್ರದಾಯವಾದಿಗಳಿಂದ ಇದಕ್ಕೆ ಪ್ರಬಲ ವಿರೋಧ ಕಂಡುಬಂದಿತು. ಮಧ್ವರು ಅದಕ್ಕೆ ಜಗ್ಗದೆ ತಮ್ಮ ವಾದವನ್ನು ಸಮರ್ಥಿಸಿ ಕೊಂಡರು. ನಂತರ ಉಡುಪಿಗೆ ಹಿಂತಿರುಗಿದರು. ಅಲ್ಲಿ ಅವರು ಗೀತೆಗೆ ಭಾಷ್ಯವನ್ನು ಬರೆದರು. ತತ್ವವಾದ ಸಿದ್ಧಾಂತದ ಆಧಾರದಮೇಲೆ ೩೭ ಗ್ರಂಥಗಳನ್ನು ಬರೆದರು. ಅವನ್ನು ಸರ್ವ ಮೂಲಗ್ರಂಥ ಗಳೆಂದು ಕರೆಯುತ್ತಾರೆ. ಈ ಗ್ರಂಥಗಳ ಬಗೆಗೆ ಮತ್ತು ತತ್ವವಾದದ ಬಗೆಗೆ ಭಾರತಾದ್ಯಂತ ತೀವ್ರ ಚರ್ಚೆ ನೆಡೆಯಿತು. ಮಧ್ವರು ತಮ್ಮ ವಾದಕ್ಕೆ ಮೂರು ಬಗೆಯ ಪ್ರಮಾಣಗಳನ್ನು ಆಧಾರವಾಗಿ ತೆಗೆದುಕೊಂಡಿದ್ದಾರೆ. ಅವು ಪ್ರತ್ಯಕ್ಷ, ಅನುಮಾನ [ತಾರ್ಕಿಕ], ಮತ್ತು ಆಗಮ. ಅವರು ಕೆಲವು ಕಾಲದ ನಂತರ ತಮ್ಮ ತತ್ವವಾದ ಪ್ರಚಾರಕ್ಕಾಗಿ ಉತ್ತರ ಭಾರತದ ಯಾತ್ರೆ ಕೈಗೊಂಡರು. ಅವರು ಬದರಿಕಾಶ್ರಮಕ್ಕೆ ಹೋಗಿ ಅಲ್ಲಿ ವೇದ ವ್ಯಾಸರ ಆಶ್ರಮದಲ್ಲಿ ವ್ಯಾಸಮಹರ್ಷಿಗಳನ್ನು ಕಂಡು ಅವರಿಗೆ ತಮ್ಮ ಗೀತೆಯ ಭಾಷ್ಯವನ್ನು ತೋರಿಸಿ ಅವರ ಮೆಚ್ಚುಗೆಯನ್ನು ಪಡೆದುದಾಗಿ ಹೇಳುತ್ತಾರೆ. ಅವರು ಗೀತಾ ಪೀಠಿಕೆಯಲ್ಲಿ ಒಂದುವಾಕ್ಯವನ್ನು ಮಾತ್ರಾ ಬದಲಾಯಿಸಿದುದಾಗಿ ಹೇಳುತ್ತಾರೆ. ನಾನು ಅವನ (ದೇವನ) ಪೂರ್ಣ ಸಾಮರ್ಥ್ಯ ಉಪಯೋಗಿಸಿ ಬರೆದಿದ್ದೇನೆ ಎಂಬುದನ್ನು, ನಾನು ಅವನ ಅಲ್ಪವೇ ಸಾಮರ್ಥ್ಯವನ್ನು ಉಪಯೋಗಿಸಿ ಬರೆದಿದ್ದೇನೆ ಎಂದು ಬದಲಾಯಿಸಿರುವುದಾಗಿ ಹೇಳಿದ್ದಾರೆ. ಅವರು ಬದರಿಯಿಂದ ಹಿಂತಿರುಗಿದ ಮೇಲೆ ಬ್ರಹ್ಮ ಸೂತ್ರ ಭಾಷ್ಯವನ್ನು ಬರೆದರು. ಅವರು ಆನಂತರ ಅನೇಕ ಗ್ರಂಥಗಳನ್ನು ರಚಿಸಿದರೂ, ಅದನ್ನು ಓಲೆಗರಿಯ ಗ್ರಂಥದಲ್ಲಿ ಲಿಪಿಕಾರರಾಗಿ ಬರೆದವರು ಅವರ ಶಿಷ್ಯರಾದ ಸತ್ಯ ತೀರ್ಥರು. ಆನಂತರ ಅವರಕೀರ್ತಿ ದೇಶಾದ್ಯಂತ ಹರಡಿ ಅನೇಕರು ಅವರ ಶಿಷ್ಯರಾದರು. ಅನೇಕರು ಅವರಿಂದ ಸಂನ್ಯಾಸ ಸ್ವೀಕಾರ ಮಾಡಿದರು. ಅವರ ಶಿಷ್ಯ ಅಚ್ಯುತ ಪ್ರೇಕ್ಷ್ಯರಿಗೆ ಅವರ ವಾದದ ಬಗೆಗೆ ಇದ್ದ ಅಲ್ಪ ಸ್ವಲ್ಪ ಸಂಶಯವೂ ಹೋಗಿ ಪೂರ್ಣ ಮನಸ್ಸಿನ ಶಿಷ್ಯರಾದರು. ಬದರಿಯಿಂದ ಬಂದ ಅವರು ಉಡುಪಿಯಲ್ಲಿ ನೆಲೆಸಿ ದಶ ಉಪನಿಷತ್ತುಗಳಿಗೆ ಭಾಷ್ಯವನ್ನು ಬರೆದರು. ಋಗ್ವೇದದ ೪೦ ಸೂಕ್ತಗಳಿಗೆ ಟೀಕೆಯನ್ನು ಬರೆದರು. ಭಾಗವತ (ಮಹಾಭಾರತ ?) ತಾತ್ಪರ್ಯ ನಿರ್ಣಯವನ್ನು ಬರೆದರು. ಪಶ್ಚಿಮ ಸಮುದ್ರ ತೀರದಲ್ಲಿ ಸಿಕ್ಕಿದ ಶ್ರೀ ಕೃಷ್ಣನ ಮೂರ್ತಿಯನ್ನು ಇದೇ ಸಮಯದಲ್ಲಿ ಪ್ರತಿಷ್ಟಾಪಿಸಿದರು. ಫುನಃ ಎರಡನೇ ಬಾರಿ ಬದರಿಗೆ ಪ್ರಯಾಣ ಮಾಡಿದರು. ಬದರಿಯ ಎರಡನೇ ಯಾತ್ರೆಯಲ್ಲಿ ಅವರು ಗಂಗಾನದಿಯನ್ನು ದಾಟಿ ಮುಸ್ಲಿಮರ ದೊರೆ ಇದ್ದ ರಾಜ್ಯದ ಮೂಲಕ ಹೋಗಬೇಕಿತ್ತು. ಹಾಗೆ ಗಂಗೆಯನ್ನು ದಾಟಿದಾಗ ರಾಜ ಭಟರು ಅವರನ್ನು ಮುಸ್ಲಿಮರ ದೊರೆಯ ಎದುರಿಗೆ ಎಳದೊಯಿದರು. ಆದರೂ ಇವರು ಸ್ವಲ್ಪವೂ ಭಯ ಪಡಲಿಲ್ಲ. ಆಗ ಆ ದೊರೆಯು ಇವರ ಧೈರ್ಯವನ್ನು ಕಂಡು ಬೆರಗಾದಾಗ , ಇವರು ವಿಶ್ವವನ್ನು ಬೆಳಗುವ ಆ ದೇವನಾದ ತಂದೆಯನ್ನು ನೀನೂ ಪೂಜಿಸುತ್ತೀಯೆ ಹಾಗೇ ನಾನೂ ಪೂಜಿಸುತ್ತೇನೆ, ನನಗೆ ಭಯವೇಕೆ ಎಂದರು, ಅವನು ಇವರ ಮಾತಿಗೆ ಮೆಚ್ಚಿ ಅನೇಕ ಕೊಡುಗೆಗಳನ್ನು ನೀಡಿದನು. ಆದರೆ ಅವರು ಅದನ್ನೆಲ್ಲಾ ನಿರಾಕರಿಸಿ ಬದರಿಗೆ ಪ್ರಯಾಣ ಬೆಳಸಿದರು. ಅಲ್ಲಿ ಅವರು ಪುನಃ ವ್ಯಾಸರನ್ನೂ ನಾರಾಯಣನನ್ನೂ ದರ್ಶನ ಮಾಡಿ ಹಿಂತಿರುಗಿದರು. ಧರಿಯಲ್ಲಿ ಕಾಶಿಗೆ ಹೋಗಿ ಅಲ್ಲಿ ಅಮರೇಂದ್ರ ಪುರಿ ಎಂಬ ಅದ್ವೈತಿಯನ್ನು ವಾದದಲ್ಲಿ ಸೋಲಿಸಿದರು. ಅಲ್ಲಿಂದ ಕುರುಕ್ಷೇತ್ರಕ್ಕೆ ಬಂದರು. ಅಲ್ಲಿ ನಡೆದ ಒಂದು ಕಥೆ ಇದೆ. ಅವರು ಒಂದು ಸ್ಥಳದಲ್ಲಿ ತಮ್ಮ ಶಿಷ್ಯರಿಗೆ ಅಗೆಯಲು ಹೇಳಿದರು. ಅವರು ಅಲ್ಲಿ ಅಗೆದಾಗ ಅವರಿಗೆ ಅಲ್ಲಿ ಒಂದು ದೊಡ್ಡ ಗದೆ ಕಂಡಿತು. ಅದು ದ್ವಾಪರದಲ್ಲಿ ಭೀಮನುಉಪಯೋಗಿಸಿದ ಗದೆಯೆಂದು ತಿಳಿಸಿ ಅದನ್ನು ಪುನಃ ಹಾಗೆಯೇ ಮಣ್ಣಿನಲ್ಲಿ ಮುಚ್ಚಿಸಿದರು. ನಂತರ ಗೋವಾಕ್ಕೆ ಬಂದು ಉಡುಪಿಗೆ ಹಿಂತಿರುಗಿದರು. ಆಗ ಅವರು ತಮ್ಮ ವಿದ್ವತ್ಪೂರ್ಣ ಸಂಗೀತದಿಂದ ಜನರನ್ನು ರಂಜಿಸಿದುದಾಗಿ ಹೇಳುತ್ತಾರೆ. ಅವರು ನಂತರ ದಕ್ಷಿಣ ಯಾತ್ರೆಯನ್ನು ಮಾಡಿ ಕಾಸರಗೊಡಿನ ಪದ್ಮ ತೀರ್ಥರನ್ನೂ ಪುಂಡರೀಕ ಪುರಿಗಳನ್ನೂ ವಾದದಲ್ಲಿ ಸೋಲಿಸಿದರು. ಪದ್ಮತೀರ್ಥರು ಪೇಜತ್ತಾಯ ಶಂಕರ ಪಂಡಿತರ ಮೂಲಕ ಮಧ್ವರ ಗ್ರಂಥಗಳನ್ನು ಅಪಹರಿಸಿದ್ದರೆಂದೂ ಮಧ್ವರೊಡನೆ ವಾದವಾದ ನಂತರ ಆ ಗ್ರಂಥಗಳನ್ನು ಹಿಂತಿರುಗಿಸಿದರೆಂದೂ ಹೇಳುತ್ತಾರೆ. ಅವರಿಬ್ಬರ ವಾದ ಸಾರಾಂಶವನ್ನು ವಾದ ಅಥವಾ ತತ್ವೋದ್ಯೋತ ಗ್ರಂಥವಾಗಿ ರಚಿಸಿರುವುದಾಗಿ ಹೇಳುತ್ತಾರೆ. ಅವರು ಆನಂತರ ಆಸ್ಥಾನ ಪಂಡಿತರಾದ ತ್ರಿವಿಕ್ರಮ ಪಂಡಿತರನ್ನು ೧೫ ದಿನಗಳಕಾಲ ವಾದ ಮಾಡಿ ಸೋಲಿಸಿದರೆಂದು ಹೇಳುತ್ತಾರೆ. ಅವರು ನಂತರ ಮಧ್ವರ ಬ್ರಹ್ಮ ಸೂತ್ರಕ್ಕೆ ಟೀಕೆಯನ್ನು ಬರೆದರು. ನಾಲ್ಕು ಭಾಗಗಳಲ್ಲಿರುವ ಇದನ್ನು ನಾಲ್ಕು ಶಿಷ್ಯರಿಗೆ ಏಕ ಕಾಲದಲ್ಲಿ ಬಿಡುವಿಲ್ಲದೆ ಹೇಳಿ ಬರೆಸಿದರೆಂದು ಹೇಳುತ್ತಾರೆ. ಅದೇ ಸಮಯದಲ್ಲಿ ನ್ಯಾಯವಿವಾರ್ಣವ ವೆಂಬ ಗ್ರಂಥವನ್ನೂ ರಚಿಸಿದ್ದಾಗಿ ಹೇಳುತ್ತಾರೆ. ಸುಮರು ೭೦ ವರ್ಷ ವಯಸ್ಸಾದ ಮಧ್ವರು ತಮ್ಮ ಸೋದರನಿಗೆ ಸನ್ಯಾಸ ದೀಕ್ಷೆ ಕೊಟ್ಟು ಅವರನ್ನು ಸೋದೆ ಮಠ ಮತ್ತು ಸುಬ್ರಹ್ಮಣ್ಯ ಮಠಕ್ಕೆ ಅಧಿಪತಿಗಳನ್ನಾಗಿಮಾಡಿದರು.
ಉಡುಪಿಯ ಅಷ್ಟ ಮಠಗಳು ೧. ಹೃಷೀಕೇಶ ತೀರ್ಥ- ಫಲಿಮಾರು ಮಠ. ೨. ನರಸಿಂಹ ತೀರ್ಥ -ಆದಮಾರು ಮಠ. ೩. ಜನಾರ್ಧನ ತೀರ್ಥ- ಕೃಷ್ಣಾಪುರ ಮಠ. ೪. ಉಪೇಂದ್ರ ತೀರ್ಥ ಪುತ್ತಿಗೆ ಮಠ. ೫. ವಾಮನ ತೀರ್ಥ - ಶಿರೂರು ಮಠ. ೬. ವಿಷ್ಣು ತೀರ್ಥ -ಸೋದೆ ಮಠ. ೭. ಶ್ರೀರಾಮ ತೀರ್ಥ ಕಾಣಿಯೂರು ಮಠ. ೮. ಅಧೋಕ್ಷಜ ತೀರ್ಥ - ಪೇಜಾವರಮಠ.
ಮಧ್ವರ ಇನ್ನಿಬ್ಬರು ಪ್ರಸಿದ್ಧ ಶಿಷ್ಯರು,
೯ . ಪದ್ಮನಾಭ ತೀರ್ಥ
೧೦. ನರಹರಿತೀರ್ಥ.
ನಂತರ ಉಡುಪಿಯ ಸುತ್ತ ಮುತ್ತ ಸಂಚರಿಸಿ ಉಜಿರೆಯ ಬ್ರಾಹ್ಮಣರೊಡನೆ ಚರ್ಚಿಸಿ ಪೂಜಾವಿಧಿಗೆ ಸಂಬಂಧಪಟ್ಟಂತೆ ಕರ್ಮನಿಯಮ ರಚಿಸಿದರು ಇದು ಖಂಡಾರ್ಥ ನಿರ್ಣಯವೆಂದು ಹೆಸರು ಪಡೆದಿದೆ. ನಂತರ ಪರಂತಿಯಲ್ಲಿರುವ ಪಂಚಲಿಂಗೇಶ್ವರ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದರು. ********************

ಶ್ರೀಮದಾನಂದತೀರ್ಥರಿಂದ ರಚಿತವಾದ 37 (ಮೂವತ್ತೇಳು) ಗಂಥಗಳು ಸರ್ವಮೂಲಗ್ರಂಥಗಳೆಂದು ಕರೆಯಲ್ಪಡುತ್ತದೆ. 📚📖📔📚📖📔📚📖📔 01. ಗೀತಾಭಾಷ್ಯಮ್ ಶ್ರೀಮಧ್ಬಗವದ್ಗೀತೆಯ ವ್ಯಾಖ್ಯಾನ
02. ಗೀತಾತಾತ್ಪರ್ಯ ನಿರ್ಣಯಮ್ ಗೀತಾಭಾಷ್ಯದ ಪೂರಕ ಗ್ರಂಥ 03. ಬ್ರಹ್ಮಸೂತ್ರಭಾಷ್ಯಮ್ ಶ್ರೀವೇದವ್ಯಾಸಕೃತ ಬ್ರಹ್ಮ ಸೂತ್ರಗಳ ವ್ಯಾಖ್ಯಾನ 04. ಅಣುಭಾಷ್ಯಮ್ ಮೇಲಿನ ಸೂತ್ರಗಳ ಅಧೀಕರಣಾರ್ಥ 05. ಅಣುವ್ಯಾಖ್ಯಾನಮ್ ಅದ್ವೈತಾವಿಶಿಷ್ಟಾದ್ವೈತಗಳ ಖಂಡನೆ 06. ನ್ಯಾಯವಿವರಣಮ್ ಮೇಲಿನ ಸೂತ್ರಾದಿಕರಣಗಳ ಪೂರ್ವ ಪಕ್ಷ ಯುಕ್ತಿ, ಸಿದ್ಧಾಂತ ಯುಕ್ತಿ 07. ನರಸಿಂಹ ನಖಸ್ತುತಿಃ ಮೂಲ ಗ್ರಂಥ. ಶ್ರೀನರಸಿಂಹ ದೇವರ ನಖಸ್ತುತಿ 08. ಯಮಕಭಾರತಮ್ ಮೂಲ ಗ್ರಂಥ. ಪರಮಾತ್ಮನ ಸ್ತೋತ್ರ 09. ದ್ವಾದಶಸ್ತೋತ್ರಮ್ ಮೂಲ ಗ್ರಂಥ. ಪರಿಪರಿಯಿಂದ ಮಾಡಿದ ಪರಮಾತ್ಮನ ಪ್ರಾರ್ಥನೆ 10. ಕೃಷ್ಣಾಮೃತಮಹಾರ್ಣವಮ್ ಮೂಲ ಗ್ರಂಥ. ಭಗವದರ್ಚನೆ, ಸ್ಮರಣೆ, ಧ್ಯಾನ ಮತ್ತು ವ್ರತಾಚರಣೆ, ದಿನತ್ರಯ ನಿರ್ಣಯ, ಇತ್ಯಾದಿ, 11. ತಂತ್ರಸಾರ ಸಂಗ್ರಹಃ ಮೂಲ ಗ್ರಂಥ. ಮಂತ್ರೋದ್ಧಾರ, ದೇವತಾರ್ಚನಾವಿಧಿ, ಮೂರ್ತಿ ಪ್ರತಿಷ್ಠಾ 12. ಸದಾಚಾರಸ್ಮೃತಿಃ ಮೂಲ ಗ್ರಂಥ. ನಿತ್ಯ ಕರ್ಮಾಚಾರ 13. ಯತಿಪ್ರಣವ ಕಲ್ಪಮ್ ಮೂಲ ಗ್ರಂಥ. ಪ್ರಣವಾರ್ಥಪ್ರಕಾಶಕ, ಸನ್ಯಾಸಗ್ರಹಣವಿಧಿ 14. ಜಯಂತಿ ನಿರ್ಣಯಃ ಮೂಲ ಗ್ರಂಥ. ಶ್ರೀಕೃಷ್ಣನ ಅವತಾರವಾದ ಜಯಂತಿ ನಿರ್ಣಯ 15. ಭಾಗವತ ತಾತ್ಪರ್ಯ ನಿರ್ಣಯಃ ಮೂಲ ಗ್ರಂಥ. ಶ್ರೀಮದ್ಭಾಗವತದ ತಾತ್ಪರ್ಯಾರ್ಥ 16. ಭಾರತ ತಾತ್ಪರ್ಯ ನಿರ್ಣಯಃ ಮೂಲ ಗ್ರಂಥ. ಸಕಲ ಪುರಾಣಗಳ ಅರ್ಥ ನಿರ್ಣಾಯಕವಾದ್ದು 17. ಋಗ್ಭಾಷ್ಯಮ್ / ಸಂಹಿತಾಭಾಷ್ಯಮ್ ಸಂಹಿತೆಯಲ್ಲಿಯ ಋಕ್ಕುಗಳ ಅರ್ಥ, ಇದು ಎಲ್ಲ ವೇದಾರ್ಥಕ್ಕೆ ಮಾರ್ಗದರ್ಶಕವಾದದ್ದು 18. ಪ್ರಮಾಣಲಕ್ಷಣಮ್ ಮೂಲ ಗ್ರಂಥ. ಪ್ರತ್ಯಕ್ಷ, ಅನುಮಾನ, ಆಗಮ ಈ ಮೂರರ ಲಕ್ಷಣ 19. ಕಥಾಲಕ್ಷಣಮ್ ಮೂಲ ಗ್ರಂಥ. ವಾದಿಗಳ ಲಕ್ಷವಾದವನ್ನು ಮಾಡುವ ಬಗೆ ಹೇಳಿದೆ 20. ಉಪಾಧಿಖಂಡನಮ್ ಮೂಲ ಗ್ರಂಥ. ಬ್ರಹ್ಮನಿಗೆ ಉಪಾಧಿಯು ಹತ್ತಿರವಿರುವ ಕಾರಣ, ಜಗತ್ತು ಜಡಾತ್ಮ ಪ್ರಪಂಚವಾಗಿದೆಯೆಂಬುದಾಗಿ ಹೇಳುವ ಅದ್ವೈತರ ಮತದ ಖಂಡನವು. 21. ಮಾಯಾವಾದಖಂಡನಮ್ ಮೂಲ ಗ್ರಂಥ, ಜಗತ್ತು ಮಾಯೆಯಿಂದ ಮುಂದೋರುವದೆಂಬ ಅದೋಅವೈತರ ಮತ ಖಂಡನೆ 22. ಮಿಥ್ಯಾತ್ವಾನುಮಾನಖಂಡನಮ್ ಮೂಲ ಗ್ರಂಥ. ಜಗತ್ತು ಸುಳ್ಳೆಂದು ಹೇಳುವುದರ ಖಂಡನೆ 23. ತತ್ವಸಂಖ್ಯಾನಮ್ ಮೂಲ ಗ್ರಂಥ. ಸ್ವತಂತ್ರ - ಅಸ್ವತಂತ್ರವೆಂಬ ಎರಡು ತತ್ವಗಳ ವಿಚಾರ 24. ತತ್ವವಿವೇಕಃ ಮೂಲ ಗ್ರಂಥ. ಸ್ವತಂತ್ರ - ಅಸ್ವತಂತ್ರವೆಂಬ ಎರಡು ತತ್ವಗಳ ವಿಚಾರಕ್ಕೆ ಅನುಕೂಲಕರವಾದ ಪ್ರಮಾಣಗಳು. 25. ತತ್ವೋದ್ಯೋತಮ್ ಮೂಲ ಗ್ರಂಥ. ಭೇದಸಾದನೆ 26. ಕರ್ಮನಿರ್ಣಯಃ ಮೂಲ ಗ್ರಂಥ. ಯಜ್ಞಯಾಗಾದಿ ಕರ್ಮಗಳಲ್ಲಿ ಋಕ್ಕುಗಳ ಸಂಯೋಜನೆ 27. ವಿಷ್ಣುತತ್ವನಿರ್ಣಯಮ್ ಮೂಲ ಗ್ರಂಥ. ವೇದದ ಅಪೌರುಷೇಯತ್ವ, ಬಿಂಬ ಪ್ರತಿಬಿಂಬಾದಿ ವಿಷಯಗಳು. ಪರಮತ ಖಂಡನ 28. ಐತರೇಯಭಾಷ್ಯಮ್ ಮಹಿದಾಸರೂಪಿಯಾದ ಪರಮಾತ್ಮನು ಲಕ್ಷ್ಮಿಗೆ ಋಗ್ವೇದದ ಅರ್ಥವನ್ನು ಹೇಳಿದ ವಿವರ 29. ತೈತರೀಯಭಾಷ್ಯಮ್ ಅನಿರುದ್ಧ ಮುಂತಾದ ಪಂಚರೂಪಗಳ ವಿಷಯೋಪದೇಶವನ್ನು ವರುಣನು ತನ್ನ ಮಗನಾದ ಭೃಗುಋಷಿಗೆ ಹೇಳಿದ್ದರ ವಿವರ 30. ಬೃಹದಾರಣ್ಯಕ ಭಾಷ್ಯಮ್ ಅಶ್ವಮೇಧಾದಿ ಯಜ್ಞಗಳಲ್ಲಿ ಪ್ರವರ್ತಕನಾದ ದೇವರ ಮಹಿಮೆಯ ವಿವರ 31. ಈಶಾವಾಸ್ಯಭಾಷ್ಯಮ್ ಸ್ವಾಯಂಭುವ ಮನುವಿನ ದೌಹಿತ್ರನಾಗಿ ಅವತಾರ ಮಾಡಿದ ಯಜ್ಞನಾಮಕ ಪರಮಾತ್ಮನು ರಾಕ್ಷಸರಿಂದ ತ್ರಸ್ತನಾದ ಸ್ವಾಯಂಭುವನನ್ನು ರಕ್ಷಿಸಿದ ಬಗೆ 32. ಕಾಠಕಭಾಷ್ಯಮ್ ಉದ್ಧಾಲಕ ಮುನಿಯು ತನ್ನ ಮಗನಾದ ನಚೀಕೇತನಿಗೆ ಭಗವತ್ತತ್ವಗಳನ್ನು ಹೇಳಿದ ವಿವರ 33. ಛಾಂದೋಗ್ಯಭಾಷ್ಯಮ್ ಲಕ್ಷ್ಮೀದೇವಿಯು ಸಾಮವೇದದಿಂದ ಪರಮಾತ್ಮನನ್ನು ಸ್ತುತಿಸಿದ್ದು, ಪ್ರಾಣದೇವರ ಮತ್ತು ಪರಮಾತ್ಮನ ಮಹಾತ್ಮೆಗಳು, ದೇವತೆಗಳ ತಾರತಮ್ಯಾದಿಗಳ ವಿವರ 34. ಅಥರ್ವಣ ಭಾಷ್ಯಮ್ ಅಂಗಿರಸ ಋಷಿಗಳು ಶೌನಕರಿಗೆ ಪರಾಪರ ವಿದ್ಯೆಯನ್ನು ಉಪದೇಶ ಮಾಡಿದ್ದರ ವಿವರ 35. ಮಾಂಡುಕ್ಯಭಾಷ್ಯಮ್ ವರುಣನು ಮಂಡೂಕ ರೂಪವನ್ನು ತೆಗೆದುಕೊಂಡು ಜಾಗ್ರತಾವಸ್ಥಾ ಪ್ರೇರಕನಾದ ವಿಶ್ವನಾಮಕ ಪರಮಾತ್ಮನನ್ನೂ, ಸ್ವಪ್ನಾವಸ್ಥೆಯ ತೈಜಸನನ್ನೂ, ಸುಷುಪ್ತಿಯ ಪ್ರಾಜ್ಞನನ್ನೂ ಸ್ತುತಿಸಿದುದರ ವಿವರ 36. ಷಟ್ ಪ್ರಶ್ನಭಾಷ್ಯಮ್ ಪಿಪ್ಪಲಾದಿ ಋಷಿಯು ತನ್ನ ಶಿಷ್ಯರಿಗೆ ಪ್ರಶ್ನೋತ್ತರ ರೂಪದಿಂದ ಉಪದೇಶ ಮಾಡಿದ್ದರ ವಿವರ 37. ತಲವಕಾರೋಪನಿಷದ್ಭಾಷ್ಯಮ್ ಯಕ್ಷರೂಪಿಯಾದ ಪರಮಾತ್ಮನು ದೇವತೆಗಳಿಗೆ ಮಾಡಿದ ಉಪದೇಶದ ವಿವರ ಮತ್ತು ಉಮಾದೇವಿಯಿಂದ ಇಂದ್ರನಿಗೆ ಸಿಕ್ಕ ಭಗವದ್ವಾಕ್ಯೋಪದೇಶದ ವಿವರ.
************** ಇವಲ್ಲದರ ಮೊದಲು, ಅಂದರೆ ಯತ್ಯಾಶ್ರಮಕ್ಕೂ ಮೊದಲು ಬಾಲಕ ವಾಸುದೇವನಾಗಿದ್ದಾಗ ಚೆಂಡಾಟವಾಡುತ್ತಿರುವಾಗ ರಚಿಸಿದ ಕಂದುಕಸ್ತುತಿಃ (38) ಶ್ರೀಕೃಷ್ಣಪರಮಾತ್ಮನ ಸ್ತುತಿ. ಬಿಲ್ವಮಂಗಲಸಾದು (39) ಕೇವಲ ಏಳು ಅಕ್ಷರದ ಗ್ರಂಥ
**************
ಆಚಾರ್ಯ ಮಧ್ವರ ಜೀವನ ಚರಿತ್ರೆ ಮತ್ತು ಅವರ ಗ್ರಂಥಗಳು ಮಹಿಮೆ ಗಳನ್ನು ಸಂಕ್ಷಿಪ್ತವಾಗಿ ಪ್ರಶ್ನೋತ್ತರ ರೂಪದಲ್ಲಿ ಸಂಕ್ಷಿಪ್ತವಾಗಿ ವಿವರಣೆ.
ತಮ್ಮ ನಿಜ ಸ್ವರೂಪವನ್ನು ತಮ್ಮ ಜೀವಿತಕಾಲದಲ್ಲೆ ಹೇಳಿ ರುಜುವಾತು ಪಡಸಿದವರು ಭಾರತೀಯರ ಇತಿಹಾಸದಲ್ಲಿಯೇ ಕೇವಲ ಇಬ್ಬರು. ಒಬ್ಬನು ಶ್ರೀಕೃಷ್ಣ ,ತನ್ನನ್ನು ಭಗವಂತನೆಂದಿದ್ದಾನೆ.ಇನ್ನೊಬ್ಬರು ಶ್ರೀಮಧ್ವರು.ತಮ್ಮನ್ನು ತಮ್ಮ ಗ್ರಂಥಗಳಲ್ಲಿ ಅನೇಕ ಬಾರಿ ವಾಯುದೇವರ ಅವತಾರವೆಂದಿದ್ದಾರೆ.ತಮ್ಮ ಪ್ರಪ್ರಥಮ ಕೃತಿ ಗೀತಾ ಭಾಷ್ಯದಲ್ಲಿಯೇ ತಾವು ಅವತಾರ ಪುರುಷರೆಂದು ಹೇಳಿಕೊಂಡವರು ಆಚಾರ್ಯರು. ಅವರ ವಿರೋಧಿಗಳು ಒಡ್ಡಿದ ಪರೀಕ್ಷೆಗಳನ್ನು ಲೀಲಾಜಾಲವಾಗಿ ಎದುರಿಸಿ, ಒಪ್ಪುವಂತೆ ಮಾಡಿದ ಆಚಾರ್ಯರು ಅಪ್ರತಿಮರೆಂದು, ಗಂಡೆದೆ ಪ್ರತೀಕವೆಂದು ನಿರೂಪಿಸಿದ ಧೀಮಂತರು. ಇನ್ನು ಬ್ರಹ್ಮ ಪುರಾಣದ ವೆಂಕಟೇಶ ಮಹಾತ್ಮ್ಯವು " ಯತಿರೂಪೋ ಮಾತರಿಶ್ವಾಷ್ಟಾವಿಂಶತಿಮೇ ಕಲೌ ಅವತೀರ್ಯ ವಸತ್ಯತ್ರ ಮಧ್ವನಾಮಾ" ಕೂರ್ಮ ಪುರಾಣದ ಶ್ರೀಮುಷ್ಣಮಹಾತ್ಮ್ಯ " ಕಲೌ ವಾಯುರ್ಭವಿಷ್ಯತಿ ಮಧ್ವನಾಮಾ ಯತಿರಸೌ ಸಚ್ಛಾಸ್ತ್ರಾಣಿ ಕರಿಷ್ಯತಿ" ಸ್ಕಂದ ಪುರಾಣ ಶ್ರೀಮುಷ್ಣಮಹಾತ್ಯ್ಮ " ವಾಯುಸ್ತು ಯತಿರೂಪೇಣ ಜನಿಷ್ಯತಿ ಕಲೌ ಯುಗೇ ಸ ದಶಪ್ರಮತಿರ್ಭೂತ್ವಾ ಕಲೌ ಧರ್ಮಾನ್ ವದಿಷ್ಯತಿ ಗ್ರಂಥ ಋಣ ಪೂರ್ಣಪ್ರಜ್ಞವಿಜಯ ಪ್ರೊ.ಹಯವದನ ಪುರಾಣಿಕರು. ಪೂರ್ಣಪ್ರಜ್ಞ ವಿದ್ಯಾಪೀಠ.ಬೆಂಗಳೂರು. ಇನ್ನು ಶ್ರೀವಿಜಯದಾಸರ ಬಾಯಲ್ಲಿ ಮಧ್ವರಾಯರ ಕರುಣ ಪಡೆಯದವ ಧರೆಯೊಳಗೆ ಇದ್ದರೇನು ಇಲ್ಲದಿದ್ದರೇನು? ೧-ವಾಸುದೇವನು ವರ್ಷದ ಮಗುವಾಗಿದ್ದಾಗ ಯಾವ ಪ್ರಾಣಿಯ ಬಾಲವನ್ನು ಹಿಡಿದು ಕಾಡಿನಲ್ಲಿ ಕಣ್ಮರೆ ಯಾಗಿದ್ದನು? ಆ ಪ್ರಾಣಿ ಯಾವ ಸಂಕೇತ? ಉತ್ತರ_--- ವಾಸುದೇವ ನು ವೃಷಭ ದ ಬಾಲ ಹಿಡಿದು ಕಾಡಿನಲ್ಲಿ ಕಣ್ಮರೆ ಯಾಗಿದ್ದನು. ವೃಷಭ ಧರ್ಮದ ಸಂಕೇತ ಮತ್ತು ಬಾಲ ಧರ್ಮಸೂಕ್ಷ್ಮದ ಸಂಕೇತ. ೨_ತಂದೆಯ ಸಾಲವನ್ನು ವಾಸುದೇವ ನು ಯಾವರೀತಿ ತೀರಿಸಿದನು? ಉ--ಎತ್ತೊಂದನ್ನು ಮಾರಿದ ಧನಿಕನಿಗೆ ಹಣ ಕೊಡಲಾಗದೆ ಮಧ್ಯಗೇಹ ಭಟ್ಟರು ಪರಿತಪಿಸುತ್ತಿದ್ದಾಗ ಹುಣಸೇಬೀಜಗಳನ್ನು ನೀಡಿ ಸಾಲ ತೀರಿಸಿದನು. ೩-- ತಾಯಿ ವಾಸುದೇವ ನಿಗೆ ಹಾಲು ಮೊಸರು ತುಂಬಿದ್ದ ಪಾತ್ರೆಗಳನ್ನು ಬೆಕ್ಕು ಬರದಂತೆ ಕಾಯಲು ಹೇಳಿದಾಗ ವಾಸುದೇವ ನು ಮಾಡಿದ ಉಪಾಯ ವೇನು? ಹಾಲು ಮೊಸರು ತುಂಬಿದ್ದ ಪಾತ್ರೆಗಳ ಮೇಲೆ ದೊಡ್ಡ ಕಲ್ಲಿನ ಬಂಡೆಗಳನ್ನು ಮುಚ್ಚಿಟ್ಟಿದನು. ೪--ಗುರುಗಳಿಗೋಸ್ಕರ ವಾಸುದೇವ ನು ಕೈಯಲ್ಲಿ ಇದ್ದ ದಂಡದಿಂದ ಯಾವ ತೀರ್ಥ ವನ್ನು ನಿರ್ಮಿಸಿದ ನು?. ಉ-ದಂಡತೀರ್ಥ . ಪರ್ಯಾಯ ಪೀಠ ಏರುವ ಮುನ್ನ ಉಡುಪಿಯ ಅಷ್ಟಮಠಾಧೀಶರಲ್ಲಿ ಪ್ರತಿಯೊಬ್ಬರು ಅಂದು ಬೆಳಗ್ಗೆ ದಂಡತೀರ್ಥದಲ್ಲಿ ಸ್ನಾನ ಮಾಡಿ ಉಡುಪಿಗೆ ತೆರಳುವ ಪದ್ಧತಿ ರೂಢಿಯಲ್ಲಿದೆ. ೫--ವಾಸುದೇವನಿಗೆ ಸನ್ಯಾಸ ದೀಕ್ಷೆ ನೀಡಿದ ಗುರುಗಳು ಯಾರು? ಅವರಿಗೆ ಏನೆಂದು ನಾಮಕರಣ ಮಾಡಿದರು? ವಾಸುದೇವ ನಿಗೆ ಎಷ್ಟು ವಯಸ್ಸಾಗಿತ್ತು?. ಸನ್ಯಾಸ ದೀಕ್ಷೆ ನೀಡಿದ ಗುರುಗಳು ಅಚ್ಯುತ ಪ್ರಜ್ಞರು (ಅಚ್ಯುತ ಪ್ರೇಕ್ಷರು). ಅವರಿಗೆ ಶ್ರೀ ಪೂರ್ಣಬೋಧ ತೀರ್ಥ ರೆಂದು ಹೆಸರಿಟ್ಟರು. ವಾಸುದೇವ ನು ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಿದಾಗ ಅವರು ಹತ್ತು ವರ್ಷಗಳ ಬಾಲಕ ನಾಗಿದ್ದರು. ೬-ಪೂರ್ಣಪ್ರಜ್ಞರು ಗಂಗಾ ಸ್ನಾನ ವನ್ನು ಮಾಡಿದ ಅನಂತ ಸರೋವರ ಮುಂದೆ ಏನೆಂದು ಪ್ರಖ್ಯಾತ ವಾಯಿತು? ಮಧ್ವಸರೋವರ (ಉಡುಪಿ ಯಲ್ಲಿ). ೭-ಆಚಾರ್ಯರ ಮೊದಲ ಭಾಷ್ಯ ಯಾವುದು? ಮೊದಲ ಶಾಸ್ತ್ರ ಕೃತಿ ಗೀತಾಭಾಷ್ಯ. ೮-ತಮ್ಮ ಮೊದಲ ಕೃತಿ ಯನ್ನು ಎಲ್ಲಿ ನಾರಾಯಣನಿಗೆ ಅರ್ಪಿಸಿದರು.? ಬದರಿಯ ಅನಂತಮಠದಲ್ಲಿ ನಾರಾಯಣ ನಿಗೆ ಅರ್ಪಿಸಿದರು. ೯-ದ್ವೈತ ಎಂದರೇನು? ತತ್ವಜ್ಞಾನ ದ ಪ್ರಮೇಯವನ್ನು, ವೇದಗಳು, ಉಪನಿಷತ್ತು ಗಳಿಂದ ಸುವ್ಯವಸ್ಥಿತ ದರ್ಶನ ನೀಡಿದ ಆಚಾರ್ಯ ರಿಗೆ ಏನೆಂದು ಕರೆದರು? ದ್ವೈತ ವೆಂದರೆ ಭಗವಂತನು ಸ್ವತಂತ್ರ ತತ್ವ,ನೆಂದೂ ಮತ್ತೊಂದು ಪರತಂತ್ರ ತತ್ವ ವೆಂದು ಹೇಳುತ್ತಾರೆ. ಆಚಾರ್ಯ ರಿಗೆ '"ದ್ವೈತ ದರ್ಶನ ದ ಸಂಸ್ಥಾಪಕ" ರೆಂದು ಕರೆಯುತ್ತಾರೆ. ೧೦-ಶ್ರೀ ಮಧ್ವಾಚಾರ್ಯ ರು ರಚಿಸಿದ ಸಮಗ್ರ ಪುರಾಣ ಪ್ರಪಂಚದ ವಿಶ್ಲೇಷಣೆ ಗ್ರಂಥ ಯಾವುದು? ಶ್ರೀ ಮಧ್ಭಾಗವತ ತಾತ್ಪರ್ಯ ನಿರ್ಣಯ.. ೧೧-ಶ್ರೀ ಆಚಾರ್ಯ ಮಧ್ವರ ಅವತಾರತ್ರಯ ದ ಸಾಧನೆ ಗಳ ಮೂಲರೂಪದ ಹಿರಿಮೆ ಸಾರುವ ತ್ರಿವಿಕ್ರಮ ಪಂಡಿತರು ರಚಿಸಿದ ಸ್ತುತಿ ಯಾವುದು? ಉ--ಶ್ರೀಹರಿವಾಯುಸ್ತುತಿ. ೧೨__ಶ್ರೀ ಆಚಾರ್ಯ ಮಧ್ವರು ಉತ್ತರ ಬದರಿಗೆ ತೆರಳುವ ಸಮಯದಲ್ಲಿ ಉಡುಪಿಯ ಅನಂತೇಶ್ವರ ದೇವಸ್ಥಾನ ದಲ್ಲಿ ಪುಷ್ಪ ವೃಷ್ಟಿ ಯೊಂದಿಗೆ ತೆರಳಿದ ಅವಧಿ ಯಾವುದು? ಮಾಘ ಶುಕ್ಲ ಪಕ್ಷ ನವಮಿ ತಿಥಿ. ಈಶ್ವರ ಸಂವತ್ಸರ,ಕ್ರಿ.ಶ.೧೨೮೦. ಸಂಕ್ಷಿಪ್ತ ವಿವರಣೆ ಸಂಪೂರ್ಣಂ. ಶ್ರೀ ಕೃಷ್ಣಾರ್ಪಣ ಮಸ್ತು/ಮಧ್ವೈಶಾರ್ಪಣ ಮಸ್ತು//.
***************

ಶ್ರೀವಾಯುದೇವರು ಅವತಾರ ತಾಳಿದ ಮೂರನೇ ಅವತಾರವೇ, ಈ ಶ್ರೀಮಧ್ವಾಚಾರ್ಯರ ಅವತಾರ. ತ್ರೇತಾಯುಗದಲ್ಲಿ ಹನುಮಂತದೇವರಾಗಿ, ದ್ವಾಪರಯುಗದಲ್ಲಿ ಭೀಮಸೇನದೇವರಾಗಿ, ಕಲಿಯುಗದಲ್ಲಿ ಶ್ರೀಮಧ್ವಾಚಾರ್ಯರಾಗಿ, ಶ್ರೀ ಮಧ್ವಾಚಾರ್ಯರು ಅವತರಿಸಿದ್ದು, ಉಡುಪಿಯ ಸನಿಹದಲ್ಲಿ ಇರತಕ್ಕಂತಃ ಪಾಜಕವೆಂಭ ಪುಟ್ಟಗ್ರಾಮದಲ್ಲಿ. ತಂದೆ ಶ್ರೀಮದ್ಯಗೇಹರು. ತಾಯಿ ಶ್ರೀಮತಿ ವೇದವತಿಯಮ್ಮ. ಜನನ ಕ್ರೀ ಶ. 1238 ಶ್ರೀವಿಳಂಭಿನಾಮ ಸಂವತ್ಸರದ, ಆಶ್ವೀಜಮಾಸದ ಶುಕ್ಲಪಕ್ಷದ ವಿಜಯದಶಮಿಯೆಂದು. ಶ್ರೀಪಾದಂಗಳವರ ಅಕ್ಷರಾಭ್ಯಾಸ, ಅದೇ ಪಾಜಕಕ್ಷೇತ್ರದಲ್ಲೇ. ಶ್ರೀಪಾದಂಗಳವರು ಸನ್ಯಾಸದೀಕ್ಷೆಯನ್ನು ಪಡೆದದ್ದು, ಸರ್ವೋನ್ನತವಾದ ಪರಮಹಂಸಾಶ್ರಮ ;. ಪಾಲಿಸಿದ್ದು ಹಂಸನಾಮಕ ಪರಮಾತ್ಮನ ಪರಂಪರೆಯ ವೇದಾಂತಪೀಠ. ಶ್ರೀಪಾದಂಗಳವರು ಬಾಲ್ಯದಲ್ಲಿ ಸ್ನಾನ ಮಾಡುತ್ತಿದ್ದದ್ದು, ಪಾಜಕ ಸುತ್ತಲಿನ ನಾಲ್ಕು ತೀರ್ಥಗಳಲ್ಲಿ. 1) ಪರಶುತೀರ್ಥ 2) ಧನುಸ್ತೀರ್ಥ 3) ಗಧಾತೀರ್ಥ 4) ಬಾಣತೀರ್ಥ. ಮಾತೆಯ ಮಾತಿಗೆ ಮನ್ನಣೆಕೊಟ್ಟು, ಆನಾಲ್ಕು ತೀರ್ಥಗಳು, ಒಂದೇಕಡೆ ಸೇರುವಂತೆ, ಪುಷ್ಕರಣಿ ನಿರ್ಮಾಣ ಅದೇ ಪಾಜಕಕ್ಷೇತ್ರದಲ್ಲಿ ನಿರ್ಮಾಣಮಾಡಿದರು, ಶ್ರೀಪಾದಂಗಳವರು. ಸನ್ಯಾಸದೀಕ್ಷೆ ಪಡೆದನಂತರ ಉಡುಪಿಯಲ್ಲಿರುವ ಪುರಾತನ, ಹಾಗು ಸುಂದರವಾದ, ಶಾಂತಭರಿತವಾದ ಆಲಯ, ಅದು ಶ್ರೀ ಅನಂತೇಶ್ವರ ದೇವಸ್ತಾನ. ಅಲ್ಲೇ ಶ್ರೀಗಳವರು ತಮ್ಮ ಶಿಷ್ಯಂದಿರಿಗೆ ಪಾಠ - ಪ್ರವಚನೆ ಬೋದಿಸುತ್ತಿದ್ದ ಪರಮ ಪವಿತ್ರಸ್ತಾನ. ಶ್ರೀಪಾದಂಗಳವರು ಸ್ತಾಪಿಸಿದ ಅಷ್ಟ ಮಠಗಳು. 1) ಶ್ರೀ ಪಲಿಮಾರು ಮಠ. 2) ಶ್ರೀ ಕೃಷ್ಣಾಪುರ ಮಠ. 3) ಶ್ರೀ ಅದಿಮಾರು ಮಠ. 4) ಶ್ರೀ ಪುತ್ತಿಗೆ ಮಠ. 5) ಶ್ರೀ ಶಿರೂರು ಮಠ. 6) ಶ್ರೀ ಸೋದೆ ಮಠ 7) ಶ್ರೀ ಕಾಣಿಯೂರು ಮಠ. 8) ಶ್ರೀ ಪೇಜಾವರ ಮಠ. ಶ್ರೀಪಾದಂಗಳವರು ಉಡುಪಿಯಲ್ಲೇ, ಶ್ರೀ ಅನಂತೇಶ್ವರ ದೇವಸ್ತಾನದಲ್ಲೇ, ಶಿಷ್ಯರಿಗೆ ಪಾಠಮಾಡುತ್ತಾ, ಅದೃಶ್ಯರಾಗಿದ್ದು, ಕ್ರೀ ಶ. 1317 ಶ್ರೀ ಪಿಂಗಳನಾಮ ಸಂವತ್ಸರದ, ಮಾಘ ಶುದ್ಧ ನವಮಿಯಂದೇ. ಅಲ್ಲಿಂದ ಬದರಿಕಾಶ್ರಮಕ್ಕೆ ತೆರಳಿದ ದಿನವನ್ನೇ, ಮಧ್ವನವಮಿಯೆಂದು ಆಚರಣೆಮಾಡುವ ಪರ್ವದಿನ. ಶ್ರೀ ಗುರುಭ್ಯೋನ್ನಮಃ ಪರಮಗುರುಭ್ಯೋನ್ನಮಃ.
************
ಪ್ರಥಮೋ ಹನುಮನ್ನಾಯ ದ್ವೀತಿಯೋ ಭೀಮಯೇವಚ ಪೂರ್ಣಪ್ರಜ್ಞ ಸ್ತುತಿ ಯಸ್ತು ಭಗವತ್ಕಾರ್ಯ ಸಾಧಕ// ವ್ಯಾಸಾಯ ಭವನಾಶಾಯ ಶ್ರೀಶಾಯ ಗುಣರಾಶಾಯೇ ಹೃದ್ಯಾಯ ಶುದ್ಧ ವಿದ್ಯಾಯ ಮಧ್ವಾಯ ಚ ನಮೋ ನಮಃ. ನ ಮಾಧವ ಸಮೋ ದೇವಿ ಚ ಮಧ್ವಸಮೋ ಗುರು ನ ತದ್ವಾಕ್ಯ ಶಾಸ್ತ್ರಂ ನ ಚ ತಜ್ಞಸಮ ಪುಮಾನ್// "ವಿಶ್ವಗುರು ಆಚಾರ್ಯ ಮಧ್ವರು.-- (೧೨೩೮-೧೩೧೭) ಶ್ರೀ ಆಚಾರ್ಯ ಮಧ್ವರು ಮಧ್ಯಗೇಹ ಭಟ್ಟರು ಮತ್ತು. ವೇದವತಿ ದಂಪತಿ ಗಳ ಪುತ್ರನಾಗಿ ವಾಸುದೇವ ನಾಮಾಂಕಿತ ದಿಂದ ಅನಂತೇಶ್ವರ ನ ಅನುಗ್ರಹ ದಿಂದ ಉಡುಪಿ ಜಿಲ್ಲಾ ಪಾಜಕ ಕ್ಷೇತ್ರದಲ್ಲಿ ಅವತಾರ ಮಾಡಿದರು. ಅವರ ಗುರುಗಳಾದ ಅಚ್ಯುತ ಪ್ರಜ್ಞರು ಅವರಿಗೆ ಸನ್ಯಾಸ ದೀಕ್ಷೆಯನ್ನು ಕೊಟ್ಟು "ಆನಂದ ತೀರ್ಥ"ರೆಂದು ನಾಮಕರಣ ಮಾಡಿದರು. ಆನಂದ ತೀರ್ಥ ರು ದ್ವೈತ ಸಿದ್ಧಾಂತ ವನ್ನು ಬೋಧಿಸುತ್ತಾ ಪ್ರಪಂಚ ಮಾಯಾಕಲ್ಪಿತ,ಜೀವ ಬ್ರಹ್ಮ ರು ಏಕ ಎನ್ನುವ ಅದ್ವೈತ ಸಿದ್ಧಾಂತ ವನ್ನು ಖಂಡಿಸುತ್ತ ಪ್ರಪಂಚ ಸತ್ಯ,ಜೀವ ಜೀವ ಕೂ ಬೇಧ ಜೀವ ಜಡಕ್ಕೂ ಬೇಧ ಎಂದು ಬೋಧಿಸುತ್ತಾ ದೇಶದ ಉದ್ದಗಲಕ್ಕೂ ಸಂಚರಿಸಿ ಪ್ರಚಾರ ಮಾಡಿದರು. ಆಚಾರ್ಯರು ಮೂವತ್ತೇಳು ಗ್ರಂಥಗಳನ್ನು ರಚಿಸಿದ್ದಾರೆ.ಅವುಗಳಿಗೆ ಸರ್ವಮೂಲ ಗ್ರಂಥ ಗಳೆಂದು ಕರೆಯುತ್ತಾರೆ. ಶ್ರೀ ಮಧ್ವಮುನಿ ದ್ವಾದಶ ನಾಮ ಗಳು-- ವಂದಿಪೆ ಪೂರ್ಣಪ್ರಜ್ಞ ನೆ ಜಯ ಜಯ ಕಂದನ ಪೊರೆ ಕಾಲಜ್ಞನೆ ಜಯ ಜಯ//೧// ಜ್ಞಾನ ದಾತ ಶ್ರೀ ಮುನಿವರ ಜಯ ಜಯ ಪ್ರಾಣದಾತ ಭಾರತಿ ವರ ಜಯ ಜಯ//೨// ಶುದ್ಧಸತ್ವ ಶ್ರೀ ಮಧ್ವನೆ ಜಯ ಜಯ ಪದ್ಮಾಸನ ಪದ ಸಿದ್ಧನೆ ಜಯ ಜಯ//೩ ಸುಂದರ ಧ್ವಸ್ತ ದುರಾಗಮ ಜಯ ಜಯ ವಂದಿತ ಸಕಲ ಸದಾಗಮ ಜಯ ಜಯ//೪ ಕರುಣಾಕರ ತತ್ವಜ್ಞ ನೆ ಜಯ ಜಯ ಹರಿ ಪದಾಂಬುಜ ಮಜ್ಞನೆ ಜಯ ಜಯ//೫ ಗುರು ಸದ್ವೈಷ್ಣಾವಾಚಾರ್ಯನೆ ಜಯ ಜಯ ಶರಣ ವಂದ್ಯಜಿತ ಕಾರ್ಯನೆ ಜಯ ಜಯ//೬ ವ್ಯಾಸ ಶಿಷ್ಯ ಶ್ರೀ ಗುರುವರ ಜಯ ಜಯ ದೋಷಿ ಮನುಜಮತ ಪರಿಹರ ಜಯ ಜಯ//೭// ವಾತಾವತಾರ ಯತೀಶ್ವರ ಜಯ ಜಯ ಭೂತಳ ಖ್ಯಾತ ಸುರೇಶ್ವರ ಜಯ ಜಯ//೮ ಆನಂದತೀರ್ಥ ಪರಾನಂದ ಜಯ ಜಯ ಧ್ಯಾನಿಪ ಭಕ್ತ ಜನಾನಂದ ಜಯ ಜಯ//೯ ಭಾಷ್ಯಕರ್ತ ಸನ್ನಾಮಕ ಜಯ ಜಯ ದೋಷ್ಯದ್ವೈತ ನಿರ್ನಾಮಕ ಜಯ ಜಯ//೧೦/ ಮೋದ ಭರಿತ ಜಿತವಾದಿಯೆ ಜಯ ಜಯ ಸಾಧು ವೃಂದ ಸುರ ಪಾದಪ ಜಯ ಜಯ//೧೧// ಸಜ್ಜನ ಬಂಧು ಜೀತೇಂದ್ರಿಯ ಜಯ ಜಯ ದುರ್ಜನ ಹರ ಪ್ರಾಣೇಂದ್ರಿಯ ಜಯ ಜಯ//೧೨// ಮಂಗಳ ತ್ರಯ ರೂಪಾತ್ಮಕ ಜಯ ಜಯ ಮಂಗಳ ದ್ವಾದಶ ನಾಮಕ ಜಯ ಜಯ// ಮಂಗಳ ಸತ್ಕರುಣಾರ್ಣವ ಜಯ ಜಯ ಮಂಗಳ ಭಕ್ತಿ ಪರಿಪೂರ್ಣ ನೆ ಜಯ ಜಯ// ಮಂಗಳ ಗುರು ಭಕ್ತಿ ದಾತನೆ ಜಯ ಜಯ ಮಂಗಳ ವಿಷ್ಣು ಭಕ್ತಿ ಪ್ರೀತನೆ ಜಯ ಜಯ/ ಮಂಗಳ ಲಕ್ಷಣ ಪೂರ್ಣನೆ ಜಯ ಜಯ ಮಂಗಳ ದುಷ್ಟ ವಿದಾರಣ ಜಯ ಜಯ/ ಮಂಗಳ ಶರಧಿಜ ಬಾಲಕ ಜಯ ಜಯ ಮಂಗಳ ವರದೇಂದ್ರ ವಿಠಲಜ ಜಯ ಜಯ// ಶ್ರೀ ಮಧ್ವಮುನಿ ದ್ವಾದಶ ನಾಮ ಸಂಪೂರ್ಣಂ.//

ಪಾಜಕ ಕ್ಷೇತ್ರದಲ್ಲಿ 'ವಾಸುದೇವತೀರ್ಥ'ವನ್ನು ನಿರ್ಮಿಸಿದ, ಉಡುಪಿಯ ಅನಂತ ಸರೋವರ (ಮಧ್ವಸರೋವರ)ದಲ್ಲಿ ಭಾಗೀರಥಿಯನ್ನು ಬರುವಂತೆ ಮಾಡಿದ, ಶ್ರೀಮುಷ್ಣದಲ್ಲಿ 'ದಂಡತೀರ್ಥ'ವನ್ನು ನಿರ್ಮಿಸಿ ಸಜ್ಜನರನ್ನು ಸಲಹಿದ ಮಧ್ವಮುನಿಗಳಿಗೆ ಮನೆಯಲ್ಲಿನ ನಲ್ಲಿಯಲ್ಲಿ ನೀರು ಬರುವಂತೆ ಮಾಡುವುದು ಯಾವ ಲೆಕ್ಕ? ನಾಳೆ ಶ್ರೀಮಧ್ವನವಮಿ, ಶ್ರೀಮಧ್ವಭಗವತ್ಪಾದರು ಶ್ರೀವೇದವ್ಯಾಸರ ಸನ್ನಿಧಿಗೆ ತೆರಳಿದ ಪರ್ವದಿನ. ಸತ್ಯವೆಂದರೆ ನಾಳೆಯ ಪೂಜೆಗೆ ಮಡಿನೀರು ಇರಲಿಲ್ಲ, ಇಂದು ಭಾನುವಾರವಾದ್ದರಿಂದ ನಲ್ಲಿಯಲ್ಲಿ ನೀರು ಬರುವುದೂ ಅದೂ ಬೆಳಗ್ಗೆ ನಿಜಕ್ಕೂ ಊಹಿಸಲಾಗದ ಸಂಗತಿ, ಪೂಜೆಗೆ ಬೋರ್ ನಲ್ಲಿ ನೀರು ತರುತ್ತಿದ್ದ ಹಿಂದಿನ ಮನೆಯವರ ಸುಳಿವೂ ಇಲ್ಲ. ಇದೇ ಯೋಚನೆಯಲ್ಲಿಯೇ ದೇವರ ಮನೆಯಲ್ಲಿ ಕುಳಿತು, ಶ್ರೀಕೃಷ್ಣ,ಮಧ್ವರ ಸನ್ನಿಧಾನದಲ್ಲಿ ನೀರಿಗಾಗಿ ಯೋಚಿಸುತ್ತಾ ಕುಳಿತಿದ್ದಾಗ, ಭಗವತ್ಪಾದರ ಅನುಗ್ರಹ- ಹಾಲಿಗೆಂದು ಹೊರಗೆ ಹೋಗಿದ್ದ ಪತ್ನಿ ಮರಳಿ ಬಂದು 'ನಲ್ಲಿಯಲ್ಲಿ ನೀರು ಬರುತ್ತಿದೆ' ಎಂದು ಹೇಳಿದಾಗ, ಶ್ರೀಮಧ್ವರ ಕಾರುಣ್ಯಕ್ಕೆ ಕಣ್ಣು ತುಂಬಿಬಂದವು.
*************

2021 ಫೆಬ್ರವರಿ 20
ಶ್ರೀ ಮಧ್ವಭಕ್ತಿಯಿಂದ ಮಾಧವಾನುಗ್ರಹ:- (ಮಧ್ವ ನವಮಿ‌ ನಿಮಿತ್ತವಾಗಿ ಗುರುಮಧ್ವರಾಯರಿಗೆ ನುಡಿಯ ನಮನ ಅವರೇ ನುಡಿಸಿದಂತೆ) ಕರಾಳ ಕಲಿಯುಗದ ಪ್ರಭಾವ ಸಜ್ಜನರು ಧರ್ಮಮಾರ್ಗದಿಂದ ವಂಚಿತರಾಗಿ ಅಜ್ಞಾನದ ಕತ್ತಲೆಯಲ್ಲಿ ಬಳಳುತ್ತಿರುವಾಗ,ಜ್ಞಾನದ ದೀವಿಗೆಯನ್ನು ಹಚ್ಚಿ ನಮ್ಮ ಅಜ್ಞಾನವ ತೊಲಗಿಸಲು ಭಗವದಾಜ್ಞೆಯ ಮೆರೆಗೆ ಅವತರಿಸಿದ ಶ್ರೀ ಮಧ್ವಗುರುಗಳೇ ನಮ್ಮ ಮುಖ್ಯಗುರುಗಳು. ಅಂತಹ ಶ್ರೀ ಮದಾನಂದತೀರ್ಥ ಭಗವತ್ಪಾದಾಚಾರ್ಯ ಗುರುಗಳಲ್ಲಿ ಮಾಡುವ ಭಕ್ತಿ ಮಾಧವನ ಅನುಗ್ರಹಕ್ಕೆ ಕಾರಣ. ಯಾವಾಗ ಶರೀರಗಳಲ್ಲಿ ಆರೋಗ್ಯ, ಅವಯವಗಳಲ್ಲಿ ಚುರುಕಿನ ಚಟುವಟಿಕೆಗಳು ಇರುತ್ತವೆಯೋ ಆಗಾಗಲೇ ಗೋವಿಂದನನ್ನು ಅರ್ಚಿಸುವ ಮೂಲಕ ಆಯುಷ್ಯವನ್ನು ಸಾರ್ಥಕ ಮಾಡಿಕೋ ಎಂದು ಎಚ್ಚರಿಕೆಯ ಸಂದೇಶ ಕೊಟ್ಟ ದಿಟ್ಟ ಗುರು ಶ್ರೀ ಪೂರ್ಣಬೋಧರು. "ನ ಮಾಧವೋಸಮೋ ದೇವೋ ನ ಚ ಮಧ್ವ ಸಮೋ ಗುರುಃ" ಎನ್ನುವ ಉಕ್ತಿಯಂತೆ *ಸಮಸ್ತ ಬ್ರಹ್ಮಾಂಡದ ಒಳಗೆ-ಹೊರಗೆ ಸರ್ವೋತ್ತಮನಾದ ವಿಷ್ಣುವಿನಂತ ದೇವರೇ ಇಲ್ಲ,,,ಜೀವೋತ್ತಮರಾದ ವಾಯ್ವವತಾರಿ ಶ್ರೀ ಮಧ್ವರಿಗೆ ಸಮಾನರಾದ ಗುರುಗಳಿಲ್ಲ. ಇಂತಹ *ಗುರುವಿನ ಗುಲಾಮರಾಗುವ ತನಕ ದೊರೆಯದೆನ್ನ ಮುಕುತಿ. ನಮ್ಮ ಮಧ್ವಗುರುಗಳ ಸಿದ್ಧಾಂತದ ಪರಂಪರೆಯ ಸಮಸ್ತ ಮೂಲ ಪೀಠಸ್ಥ ಗುರುಗಳಿಗೆ ನಮೋ ನಮಃ ಎಂದು ದಾಸರು ತೋರಿದ ಮಾರ್ಗದಲ್ಲಿ ಹಾಡುತ್ತ.... ದ್ವೈತ ವಾಙ್ಮಯದ ಗುರುಗಳ ಆಕೃತಿಯ ಸ್ಮರಣೆ ತೇನ ವಿಘ್ನಾಃ ಪ್ರಣಶ್ಯಂತಿ ಸಿಧ್ಯಂತಿ ಚ ಮನೋರಥಾಃ ನಮ್ಮೆಲ್ಲರ ಮನೋಕಾಮನೆಗಳ ಈಡೇರಿಸುವ ಪಾವನ ಪವನ ಮತಸ್ಥರು. ಕೊನೆಯಲ್ಲಿ ಪೂರ್ಣಬೋಧಮತಾನುಗರಾದ ಸಮಸ್ತ ವೈಷ್ಣವಾ ವಿಷ್ಣುಹೃದಯಸ್ತರಿಗೆ ಅನಂತಾನಂತವಾಗಿ ನಮೋ ನಮಃ. ಮಾನವ ಜನ್ಮವನ್ನು ಸಾರ್ಥಕ ಜೀವನವನ್ನಾಗಿ ಮಾಡಿ ಜೀವೋತ್ತಮರ ಮೂಲಕ ಸರ್ವೋತ್ತಮನಲ್ಲಿ ನೆಲೆಸುವ ಸಾಧನ ಮಾರ್ಗ ತೋರಿದ ಜಗದ್ಗುರುಗಳ ಕರುಣೆ ಅನಂತ ಮಾಡಿದ ಉಪಕಾರ ಅನಂತ ಮತ್ತೆ ಮತ್ತೆ ಜನ್ಮವೆತ್ತಿ ಬಂದರು ನಮಗೆ ಗುರುವಾಗಿ ನೀವು ಲಭಿಸಿ ಶ್ರೀ ಮದಾನಂದತೀರ್ಥ ಭಗವತ್ಪಾದರೆನ್ನುತ ಗುರುಗಳ ಪರಂಪರೆಯ ಚರಣ ಸೇವಕರ ಸೇವೆಯನ್ನು ಎಂದೆಂದಿಗೂ ಬಯಸುತ್ತ ಅನಂತಾನಂತ ಶಿರಬಾಗಿ ನಮಿಸುವೆ ಶ್ರೀ ಪೂರ್ಣಪ್ರಜ್ಞರ ಅಂತರ್ಯಾಮಿ ಶ್ರೀ ರಾಮಚಂದ್ರದೇವರ ಚರಣಕಮಲಗಳಲ್ಲಿ.🙏🏻🙏🏻🙏🏻🙏🏻 ✍️ಶ್ರೀಕಾಂತ. ಕುಲಕರ್ಣಿ (ಲಿಂಗಸ್ಗೂರ).
**********
26 October 2020
ಶ್ರೀ ಹರಿಯ ದಾಸರ ಕಣ್ಣಲ್ಲಿ ಶ್ರೀ ಮಧ್ವಾಚಾರ್ಯರು "
ಶ್ರೀ ಭೃಗು ಮಹರ್ಷಿಗಳ ಅಂಶ ಸಂಭೂತರಾದ ಶ್ರೀ ಗುರು ಮಧ್ವಪತಿ ವಿಠಲರು... 
ಶ್ರೀಪತಿ ನಾಭಿಯಿಂದ ಅಜ ಜನಿಸಿದನು । ಅಜನ ಮಾನಸ ಪುತ್ರರೇ ಸನಕಾದ್ಯರು । ಸನಕಾದಿಗಳ ಪುತ್ರರೇ ದುರ್ವಾಸರು । ದುರ್ವಾಸರ ಶಿಷ್ಯರೇ ಸತ್ಯಪ್ರಜ್ಞರು । ಸತ್ಯಪ್ರಜ್ಞರ ಶಿಷ್ಯರೇ ಪ್ರಾಜ್ಞತೀರ್ಥರು । ಪ್ರಾಜ್ಞತೀರ್ಥರ ಶಿಷ್ಯರೇ ಅಚ್ಯುತಪ್ರೇಕ್ಷರು । ಅಚ್ಯುತಪ್ರೇಕ್ಷರ ಕರ ಸಂಜಾತರೇ ಪೂರ್ಣಪ್ರಜ್ಞರು । ಪೂರ್ಣಪ್ರಜ್ಞರೇ ನಮ್ಮ ಭಾಷ್ಯಕಾರರು । ಭಾಷ್ಯಕಾರಈ ಶ್ರೀಮದಾನಂದತೀರ್ಥರು । ಗುರು ಮಧ್ವಪತಿವಿಠಲನ್ನ ನಿಜ ದಾಸರು ।।
" ಶ್ರೀ ನರಹರಿ ತೀರ್ಥರು " { ಅಂಕಿತ - ರಘುಪತಿ }
ಎದುರ್ಯಾರೋ ಗುರುವೇ ಸಮರ್ಯಾರೋ । ಮದನ ಜನಕ ಪದ ಪದ ಷಟ್ಟದನೆ ।।
" ಶ್ರೀ ಶ್ರೀಪಾದರಾಜರು " { ಅಂಕಿತ - ರಂಗವಿಠಲ }
ಮರುದಂಶರ ಮತ ಪಿಡಿಯದೆ ಇಹ ।ಪರದಲ್ಲಿ ಸುಖವಿಲ್ಲವಂತೆ ।।
" ಶ್ರೀ ವ್ಯಾಸರಾಜರು " { ಅಂಕಿತ - ಶ್ರೀ ಕೃಷ್ಣ / ಸಿರಿಕೃಷ್ಣ }
ಆರು ನಿನಗಿಧಿರಧಿಕ ಧಾರುಣಿಯೊಳಗೆ । ಸಾರ ಶಾಸ್ತ್ರವನೊರೆದ ಸರ್ವಜ್ಞ ಮುನಿರಾಯ ।।
" ಶ್ರೀ ವಾದಿರಾಜರು " { ಅಂಕಿತ - ಹಯವದನ  }
ಒಂದು ಬಾರಿ ಸ್ಮರಣೆ ಸಾಲದೆ । ಆ  ।ನಂದ ತೀರ್ಥರ ಪೂರ್ಣಪ್ರಜ್ಞರ -ಸರ್ವಜ್ಞರಾಯರ ಮಧ್ವರಾಯರ ।।
" ಶ್ರೀ ಸೊಬಗುವಿಠಲರು - ಆದ್ಯರು "
ಯತಿ ರೂಪಾದಲಿ ಬಂದು ಕ್ಷಿತಿಯಲ್ಲಿ ನಿಂದು । ದು । ರ್ಮತವ ಖಂಡ್ರಿಸಿದಾತ ನಮ್ಮ ಗುರುವೂ । ಶ್ರುತಿಗೆ ಸಮ್ಮತವಾದ ಮತವಾ ಸ್ಥಾಪಿಸಿ ಮುಕ್ತಿ । ಪಥವಾ ತೋರಿದಾತಾ ನಮ್ಮ ಗುರುವು ಕಾಣಿರೋ । ಹೇಮ ಭೂಮಿ ಕಾಮಿನಿಯರಾಕಾಂಕ್ಷಿಯಾನಳಿದು । ನಿ । ಷ್ಕಾಮಿಯಾಗಿದ್ದಾತಾ ನಮ್ಮ ಗುರುವೂ । ರಾಮಚಂದ್ರ ಸೊಬಗುವಿಠಲನ್ನ ಸೇವಕರಾದಾ । ಶ್ರೀಮದಾಚಾರ್ಯರೇ ನಮ್ಮ ಗುರುಗಳು ಕಾಣಿರೋ ।।   
" ಶ್ರೀ ಸುಲಭವಿಠಲರು - ಆದ್ಯರು "
ಆರಿದಿರು ಮೂಜಗದಲಿ ಸುರಗುರು । ಮಾರುತನವತಾರ ಮಧ್ವಮುನಿಗೆ ।।
" ಶ್ರೀ ಮುದ್ದು ವಿಠಲರು - ಆದ್ಯರು "
ಮುನಿಕುಲದಲಿ ಉದ್ಭವಿಸಿದ ಧೀಮತವಾದ ಸನ್ನುತವಾದಾ । ಅನಿಮಿಷರೊಡೆಯ ಶ್ರೀ ವೇದವ್ಯಾಸನ ಚರಣ ಬಿಡದಿಹ ಸ್ಮರಣ । ಕನಸಲಿ ತೋರಿದ ಅದ್ವೈತಿಗಳನು ತರಿದ ಮುಕ್ತಿಯನೊರೆದ । ಘನವರ ಕೊಡುತಿಹ ಮುದ್ದುವಿಠಲನ ದಾಸ ತಾ ಸನ್ಯಾಸ ।।
" ಶ್ರೀ ಸಿರಿ ವಿಠಲರು - ಆದ್ಯರು "
ಧರಿಗೆ ಸಂಕರ ಮತವ ಮುರಿದ ದುರುಳ ಮಾಯಿಗಳನು ತರಿದ । ಸಿರಿವಿಠಲನ ಭಜಕರಾದ ವರಗುರು ಮಧ್ವರಾಯರೆಂಬ ।।
" ಶ್ರೀ ಅಚಲಾನಂದ ವಿಠಲರು - ಆದ್ಯರು "
ವಾದಿಗಜಕೆ ಮೃಗೇಂದ್ರ ವಾದಿ ವಾರಿಧಿ ವಡಬಾನಳ । ಮಾಯಾ । ವಾದಿ ಪರ್ವತಕೆ ಕುಲಿಶ ಭೇದ ಮತಾಂಬುಧಿಗೆ ಚಂದ್ರ । 
" ಶ್ರೀ ಶ್ರೀನಿವಾಸನಾಯಕರು " { ಅಂಕಿತ - ಪುರಂದರವಿಠಲ  }
ಒಪ್ಪ ಆಚಾರ್ಯನು ದೈವವೇ ಇಲ್ಲವೆಂದ । ಒಬ್ಬ ಆಚಾರ್ಯನು ದೈವಕೆ ಎಂಟು ಗುಣವೆಂಬ । ಒಬ್ಬ ಆಚಾರ್ಯನು ನಿರ್ಗುಣ ನಿರಾಕಾರ ನಿರೂಹನೆಂದು ತಾನೆ ದೈವವೆಂಬ । ಇವರೊಬ್ಬರೂ ವೇದಾರ್ಥವರಿತೂ ಅರಿಯರು । ಇವರೊಬ್ಬರೂ ಶಾಸ್ತ್ರಾರ್ಥವರಿತೂ ಅರಿಯರು । ಒಬ್ಬ ಮಧ್ವಾಚಾರ್ಯರೇ ಪುರಂದರ ವಿಠಲನೊಬ್ಬನೇ । ಎಂದು ತೋರಿ ಕೊಟ್ಟವರಾಗಿ ।। 
" ಶ್ರೀ ವೇದವೇದ್ಯ ತೀರ್ಥರು - [ ಅಂಕಿತ - ಇಮ್ಮಡಿ ದಿರಾಜ ]"
ಮಧ್ವಮುನಿ ವರನಂಘ್ರ್ಯತುಳ ಯೆಚ್ಚರಿಕೆ । ಸದ್ಯೋಗಿ ವರನಮಲ ವೆಚ್ಚರಿಕೆ । ಹೊದ್ದಿದವರ ಹೊರವ ಸದ್ಗುರು ಚರಣವೆಚ್ಚರಿಕೆ । ಹೃದ್ಯ ಇಮ್ಮಡಿ ವಾದಿರಾಜನಡಗೆಚ್ಚರಿಕೆ ।।    
" ಶ್ರೀ ವೇದನಿಧಿ ತೀರ್ಥರು - [ ಅಂಕಿತ - ಶ್ರೀ ಕೃಷ್ಣ ]
ಶ್ರೀದೇವಿ ವದನಾಂಬುಜ ಮಿತ್ರ ಬ್ರಹ್ಮಾದಿ । ವಂದಿತ ಪಾದ ಕಮಲ । ವೇದೋದ್ಧಾರ ಕೃಷ್ಣನಡಿಗೆರೆಗಿಯೆ ಪೇಳ್ವ । ನಾದರಾದಲಿ ಹರಿಕಥೆಯು ।।
ಶ್ರೀ ಭೂಮಿಯೊಡಗೂಡಿ ಪ್ರೇಮದಲಿರುತಿಹ । ಕಾಮನ ಪಿತನಾದ ಹರಿಯೂ । ಯೀ ಮಹಿಯೊಳು ಬಂದು ಉಡುಪಿಯಲಿ ನೆಲೆಸಿದ । ಶ್ರೀ ಮಧ್ವಮುನಿವರಗೊಲಿದು ।।
ಗೆದ್ದು ದುರ್ವಾದಿಗಳ [ ಮಾಯಿಗಳ ] ಶುದ್ಧಾ ಶಾಸ್ತ್ರಗಳನೆ । ಉದ್ಧರಿಸಿದ ಮಧ್ವಮುನಿಗೆ । ಮುದ್ದು ಕೃಷ್ಣ ಮೆಚ್ಚಿ ದ್ವಾರಕಪುರದಿಂದವ ನಿದ್ದಲ್ಲಿಗೊಲಿದು ಬಂದಾ ।।
ಸಕಲ ಶ್ರುತಿ ಪುರಾಣ ನಿಕರವ ಶೋಧಿಸಿ । ನಿಖಿಲ ಜನರಿಗೆ ಬೋಧಿಸುತ । ಲಕುಮಿಯರರಸನೆ ಪರ ದೇವತೆ ಯೆಂದೊರದ । ಸುಖತೀರ್ಥರಿಗೆ ಸರಿಯುಂಟೆ ।।
ಯೀ ಪದವನು ಪೇಳುವ ಕೇಳುವರನ್ನು । ಶ್ರೀಪತಿಯಾದ ಶ್ರೀ ಕೃಷ್ಣ । ತಾಪಗಳನ್ನು ಪರಿಹರಿಸಿ ಸಂತತ । ನಿ । ರ್ಲೇಪರನು ಮಾಡಿ ರಕ್ಷಿಸಲಿ ।। 34 ।।
" ಶ್ರೀ ರಾಘವೇಂದ್ರತೀರ್ಥರು ಮಂತ್ರಾಲಯ " { ಅಂಕಿತ - ವೇಣುಗೋಪಾಲ }
ಪವನ ನಿನ್ನಯ ಪಾದ ಪೊಂದಿದ ಮನುಜನು । ಜವನ ಪುರಕ್ಕೆ ಸಲ್ಲ ವೇಣುಗೋಪಾಲ ಬಲ್ಲ ।।
" ಶ್ರೀ ದಾಸಪ್ಪದಾಸರು " { ಅಂಕಿತ - ವಿಜಯವಿಠಲ }
ಅದ್ವೈತ ಮತ ಕೋಲಾಹಲ ರಿಪು ಮಸ್ತಕ ಶೂಲಾ । ಮಧ್ವರಾಯಾ ವಿಜಯವಿಠಲನ್ನ ಮಹಾಪ್ರೀಯಾ ।।
ಅದ್ವೈತ ಮತಾರಣ್ಯ ದಾವಾ ವ್ಯಾಸ ಶಿಷ್ಯ । ಮಧ್ವಮುನಿ ವಿಜಯವಿಠಲನ ನಿಜದಾಸ ।।
" ಶ್ರೀ ಭಾಗಣ್ಣ ದಾಸರು " { ಅಂಕಿತ - ಗೋಪಾಲವಿಠಲ }
ಮಧ್ವಮುನಿರಾಯ ಉದ್ಧರಿಪುದು ಜೀಯಾ । ಪೊದ್ದಿಸಿದಂತಘ ಒದ್ದು ಕಡೆಗೆ ನೂಕಿ ।ಶುದ್ಧನ್ನ ಮಾಡೆನ್ನಾ ।।
" ಶ್ರೀ ವ್ಯಾಸತತ್ತ್ವಜ್ಞತೀರ್ಥರು " { ಅಂಕಿತ - ವಾಸುದೇವವಿಠಲ }
ಮನವೇ ಮಾನ್ಯನ ಮನ್ನಿಸು । ಶ್ರೀ ವ್ಯಾಸ । ಮುನಿಗೆ ಒಲಿದಿಹ ವಾಯುನಾ ।।
" ಶ್ರೀ ಮೋಹನದಾಸರು " { ಅಂಕಿತ - ಮೋಹನವಿಠಲ }
ಮಧ್ವರಾಯರ ಭಾಗ್ಯ ಎಂಥಾದೋ ವರ್ಣಿಸಲು । ಶುದ್ಧ ಸತ್ವಾತ್ಮಕವಾದ ಶರೀರವು । ಅದ್ವೈತ ಮತವೆಂಬೋ ಅರಣ್ಯವಾ ಪೊಕ್ಕು । ವಿಧ್ವಂಸ ಮಾಡಿ ವಾದಿಗಳನೆ ಗೆದ್ದು । ಪದ್ಧತಿ ತಪ್ಪದಂತೆ ಮತವನ್ನುದ್ಧರಿಸಿ । ವೃದ್ಧಿ ಗೈಸಿದರು ಸರ್ವ ಸಜ್ಜನರನ್ನು ।।
" ಶ್ರೀ ಪಂಗನಾಮದ ತಿಮ್ಮಣ್ಣದಾಸರು " { ಅಂಕಿತ - ವೇಣುಗೋಪಾಲವಿಠಲ }
ಧರೆಗೆ ಭಾರವಾಗಿ ಚರಿಸುತಿರೆ ಮಾಯಿಗಳು । ಧರಿಸಲಾರದ ಧರಣಿ ಸರಸಿಜೋದ್ಭವಗೆ । ಮೊರೆಯಿಡಲು ಅದನಾಗ ಹರ ಸುರರ ಸಹವಾಗಿ । ಹರಿಯ ಸದನವ ಸಾರಿ ಅರುಹಿದನು ಇದನೆಲ್ಲ ।।
ಕಾವನಯ್ಯನು ವಸುಧೆ ಭಾವವನು ತಿಳಿದನಿಲ । ದೇವನೇ ನಿನಗೆ ಆಜ್ಞೆಯನೀಗಲು । ದೇವ ನೀನವತರಿಸಿ ಪಾವನವ ಮಾಡಿ । ಸ । ಜ್ಜೀವಿಗಳ ಪೊರೆದು ದುರ್ಜೀವಿಗಳ ನೀ ಮುಂದೆ ।।
ನಮೋ ನಮೋ ಹರಿಪ್ರಿಯ । ನಮೋ ನಮೋ ಸುರಗೇಯ । ನಮೋ ನಮೋ ಗುರುರಾಯ । ಮಧ್ವಮುನಿ ಜೀಯಾ ।।
" ಶ್ರೀ ಶ್ರೀನಿವಾಸಾಚಾರ್ಯರು " { ಅಂಕಿತ - ಜಗನ್ನಾಥವಿಠಲ }
ಸತ್ಯಂ ಜಗತ್ತಿದು ನೆಚ್ಚೋ । ಸ । ರ್ವೋತ್ತಮ ಹರಿಯೆಂಬೋ ಮಾತನು ಮೆಚ್ಚೋ । ಉತ್ತಮಾನಿಲ ಮತ ಹೆಚ್ಚೋ ನಿತ್ಯ । ಮಿಥ್ಯಾ ವಾದಿಯ ಮತಕನಲನ ಹಚ್ಚೋ ।।
" ಶ್ರೀ ಯೋಗೀ೦ದ್ರರಾಯರು  " { ಅಂಕಿತ - ಪ್ರಾಣೇಶವಿಠಲ }
ವಿಷಯಂಗಳ ತೊರೆದು ಕಾಷಾಯಾಂಬರ ಧರಿಸಿ । ವಸುಧೆಯೊಳಗೆ ದುರ್ಮತವ ಸೋಲಿಸಿ । ಅಸಮ ಶ್ರೀ ಪ್ರಾಣೇಶವಿಠಲ ಪರದೈವವೆಂದು । ಹಸನಾಗಿ ತಿಳಿಸಿದ ಶ್ರೀ ಮಧ್ವಮುನಿಯೆಂಬ ।।
" ಶ್ರೀ ಕರ್ಜಗಿ ದಾಸಪ್ಪನವರು - [ ಅಂಕಿತ - ಶ್ರೀದ ವಿಠಲ ]
ಹನುಮ ಭೀಮ ಮಧ್ವಾಚಾರೆಂದೆನಿಸುವ ನಿರವದ್ಯಾ । ಮನುಮುನಿಗಳ ಹೃದ್ದ್ಯಾ ಘಾನಾ ದುರ್ಜನ ಜಾಲವಗೆದ್ದಾ । ವನಜಭವನ ಮುಂದಿನ ಕಲ್ಪದಲೀ । ತನೆ ನಿಶ್ಚಯ ತನ್ನಣ್ಣುಗರ ಪಾಲಿಪ ।। 
" ಶ್ರೀ ಕಲ್ಲೂರು ಸುಬ್ಬಣ್ಣಾಚಾರ್ಯರು - [ ಅಂಕಿತ - ವ್ಯಾಸವಿಠಲ ]
ಜ್ಞಾನದಾಯಕ ಆನಂದತೀರ್ಥಾ । ದೀನ ಪೋಷಕಾ । ಭಾನುಕೋಟಿ ಶ್ರೀ ವ್ಯಾಸವಿಠಲನ । ಧ್ಯಾನದೊಳೀಹ್ಯ ಸನ್ಮಾನಸ ಹಂಸಾ ।।
" ಶ್ರೀ ಗುರು ಶ್ರೀಶ ವಿಠಲರು "
ಗುರು ಮಧ್ವರಾಯರಿಗೆ ನಮೋ ನಮೋ । ನಮ್ಮ । ಗುರು ಮಧ್ವ ಸಂತತಿಗೆ ನಮೋ ನಮೋ ।।
" ಶ್ರೀ ಬೂರಲದಿನ್ನಿ ನಾರಪ್ಪನವರು - [ ಶ್ರೀ ಮನೋಹರ ವಿಠಲ ]
ಶ್ರೀಮದನಂತನಂಘ್ರಿಯ ನಿಷ್ಠ ಗುರು ಶ್ರೇಷ್ಠ । ಶ್ರೀಮದಾನಂದತೀರ್ಥಾ ಖ್ಯಾತ ಗುಣಮುಕ್ತ । ವ್ಯೋಮಾದಿ ಲೋಕಾಕಾಚಾರ್ಯರ ಪಾದಾಬ್ಜರಜಮಾಂ ಪವಿತ್ರವ ಮಾಡಲಿ ।\ ಪ್ರೇಮಭಾರವ ವೊಹಿಸಿದಳು ವಾಕ್ಯಗಳಿಗೆಲ್ಲ । ನೇಮಿಸುವ ತ್ರಿಭುವನಕೆ ಪೂಜ್ಯಳಾಗಿಹ । ಶರ । ತ್ಸೋಮನಂತೆಳೆನಗೆಯ ಜ್ಯೋತ್ಸ್ಯದಿಂ ಕಕುಭಗಳ ಬೆಳೆಗಿಸುವ ಶ್ರೀ ಭಾರತೀ ।।
" ಶ್ರೀ ಗುರು ಪ್ರಾಣೇಶದಾಸರು "
ಅದ್ವೈತರನು ಕಾದಿ ಗೆದ್ದು ನಿನ್ನ ಭಕ್ತರಿಗೆ । ಗುರು ಮಧ್ವಮುನಿರಾಯಾ । ಶುದ್ಧ ತಾತ್ಪರ್ಯ ವಾಕ್ಕ್ಯ ಪದ್ಧತಿಯ ತಿಳಿಸಿದಿ । ಗುರು ಮಧ್ವಮುನಿರಾಯಾ ।।
" ಶ್ರೀ ಲಕ್ಷ್ಮೀಪತಿ ವಿಠಲರು "
ಖತಿಯಿಂದ ಖಳರು ಕಲಿಯಲಿ ಜನಿಸಿ । ಶ್ರುತಿಗಳಿಗೆ ಪ್ರತಿಕೂಲರಾಗಿ ಸೋಹಂ ಯೆಂಬುವಾ । ಬೀರಲು ಲಕ್ಷ್ಮೀಪತಿ ವಿಠಲ ಪರನೆಂದು । ತತುವ ಗ್ರಂಥವ ಗೈದೆ ಮಾಯ್ಗಳನು ಸದದೆ ।।
" ಶ್ರೀ ಕೂಡ್ಲಿಗಿ ವೆಂಕಟದಾಸರು - [ ಅಂಕಿತ - ವೆಂಕಟವಿಠಲ ]
ಮಧ್ವರಾಯರ ದಯದಿ ಉದ್ಧರಿಸಿ ಸಲಹೋ । ಪದ ಪದ್ಮವನು ನ್ಯೆರೆ ನಂಬಿದೆ । ಅದ್ವೈತ ಮತ ತಿಮಿರ ಮಾರ್ತಾಂಡ ಯನ್ನ । ಹೃತ್ಪದ್ಮದಲಿ ನ್ಯೆಲಿಸಿ ಶ್ರೀ ಪದ್ಮನಾಭನ ತೋರು ।।
" ಶ್ರೀ ತಂದೆ ಶ್ರೀಪತಿ ವಿಠಲರು "
ನಡುಮನೆ ಎಂಬಾ ದ್ವಿಜನಾ ಗೃಹದಲ್ಲೀ । ಅವತರಿಸಿದಿ ಅಲ್ಲೀ । ಮೃಡ ಸರ್ವೋತ್ತಮ ಹರಿಯೇ ತಾನೆಂದು ।ವಿಶ್ವ ಮಿಥ್ಯವೆಂದೂ । ನುಡಿದ ಜನರ ಮತಗಳನೆ ನಿರಾಕರಿಸೀ । ಸಚ್ಛಾಸ್ತ್ರವ ರಚಿಸೀ । ಪೊಡವಿಗೊಡೆಯ ನಮ್ಮ ತಂದೆ ಶ್ರೀಪತಿವಿಠಲನ । ಪೂಜಿಪರೋ ಘನ್ನಾ ।।  
" ಶ್ರೀ ಶ್ರೀಶ ಪ್ರಾಣೇಶದಾಸರು "
ಆನಂದತೀರಥರಾಗಿ ಪರಮಾ । ನಂದದಿ ಕುಮತವನೀಗಿ । ನಂದನಸುತ ಶ್ರೀಶ ಪ್ರಾಣೇಶವಿಠಲಾ । ನಂದನೆ ಪರನೆಂದು ಡಂಗುರ ಸಾರಿದ ।।
" ಶ್ರೀ ಗುರು ಜಗನ್ನಾಥ ವಿಠಲರು "... 
ಯತಿ ಕುಲಾಂಬುಜ ನಿಜ ತರಣಿ ಸದಾ । ನುತಿಪ ಸುಜನರಿಗೆ ದೊರೆವಾನು ಕರುಣಿ । ಕ್ಷಿತಿಯೊಳಗೆ ಮಣಿಮಂತ ಮೊದಲಾ । ದತಿ ದುರಾತ್ಮರ ತತಿಯ ಖಂಡ್ರಿಸಿ । ವಿತತ ನಿಜಹರಿ ಮತವ ಸ್ಥಾಪಿಸಿ । ದತುಳ ಮಹಿಮನ ಸತತ ಭಜಿಸುವ ।।
" ಶ್ರೀವರದೇಶ ವಿಠಲರು "
ಮಧ್ಯಗೇಹ ಸುತ ಸದ್ವೈಷ್ಣವಜನೆ । ಅದ್ವೈತ ಕರಿ ಹರಿ ಸಿದ್ಧಾಂತ ಕರ್ತಾ । ಮಿಥ್ಯಾವಾದಿ ಬಾಯಿ ಯತ್ತದಂತೆ । ಶ್ರು । ತ್ಯರ್ಥವ ಪೇಳ್ದ ಸಮರ್ಥನಹುದೋ । ಹರಿ ಸರ್ವೋತ್ತಮ ಸಿರಿಯು ಅಕ್ಷರಳು । ಸುರರೊಳು ನೀನೆ ಪಿರಿಯನು ಸತ್ಯಾ ।।  
" ಶ್ರೀಮೋದ ವಿಠಲರು ".... 
ಕಲಿಮಲದಿಂದಾ ನೊಂದಾ । ಸಲೆ ಬುಧರೀಗೆ ಜ್ಞಾನ । ಬಲವಾ ಕೊಟ್ಟಂಥಾ ಶ್ರೀ ಮೋದ ವಿ । ಠಲಗೆ ಪ್ರಿಯಸದಾ ।।
" ಶ್ರೀ ಮೋದ ವಿಠಲರ ಮಕ್ಕಳಾದ ಶ್ರೀ ಗುರು ಮೋದ ವಿಠಲರು ".... 
ಮಧ್ಯಗೇಹಜಗೆ ನಮೋ ನಮೋ । ಮುದ್ದು ಮುನಿವರಗೆ ನಮೋ ನಮೋ । ಅದ್ವೈತ ಶಾಸ್ತ್ರಾಬದ್ಧಗೈದ ಗುರು ಮಧ್ವರಾಯರಿಗೆ ನಮೋ ನಮೋ । ಲೋಕ ಪೂಜ್ಯನಿಗೆ ನಮೋ ನಮೋ । ಭೀಕರ ರೂಪಾಗೆ ನಮೋ ನಮೋ । ಏಕವಿಂಶತಿ ಕುಭಾಷ್ಯವ ಖಂಡಿಸಿ । ಶೇಖರ ಮಾಡ್ದಗೆ ನಮೋ ನಮೋ ।।
" ಶ್ರೀ ಗುರು ಶ್ರೀಶ ಪ್ರಾಣೇಶ ವಿಠಲರು "... 
ಮೇದಿನಿ ತಳದಿ ಮಧ್ಯಗೇಹಾಖ್ಯ ಮಡದಿಯ ಜಠರದಿ ಶ್ರೀ ಮಧ್ವಾಖ್ಯ । ಮೋದಮಯದಿ ಉದ್ಭವಿಸೆ ವಿರಾಮವಾದಿತು ದಿತಿಜರ ಹೃದಯ ತ್ರಿಧಾಮ । ಮಾಧವ ಬೋಧದಿ ಮಾಡಿದ ಅಖಿಳ ಶೋಧನೆ ಗ್ರಂಥದ ಆದ್ಯಂತಗಳ । ಸಾಧಿಸಿ ಸಪ್ತತ್ರಿ೦ಶತಿ ಕೃತಿಗಳ ವಾದಿಸಿ ಸದ್ಧರ್ಯ ಪ್ರತಿ । ವಾದಿಗಳೆನಿಪ ಖಳ ಕದಂಬ ವಿವಾದದಿ ಗೆಲಿದು ಶೌರ್ಯ ಸುಖತೀರ್ಥ । ಸುಖತೀರ್ಥ ಸುಖತೀರ್ಥ ದುಷ್ಟ ದುಶಾಸ್ತ್ರಾ೦ಬುಧಿ ವಡಬಾನಳವರ್ಯ । ದುರ್ವಾದಿ`ಮತದ ಸಿರಿಯ ಅದ್ವಯಿತ ಭಾಸ ಭರಿಯ । ವಿಧ್ವಂಸ ಮಾಡಿ ನಿರಯ ಪ್ರದ್ವೇಷಿಗಳಿಗೆ ಸ್ಥಿರಯ । ಮಧ್ವಾರ್ಯ ಮಧ್ವಾರ್ಯ ಮಧ್ವಾರ್ಯ ಸತತ ಹರಿ ಕಾರ್ಯ । ಸಾಧನದಿ ಧುರ್ಯ ಭೇದಮತಿ ಪ್ರೇರ್ಯ ದ್ವಯಿತಮತ ವೀರ್ಯ । ಮಹಾ ಅಪ್ರತಿ ಔದಾರ್ಯ ಪರಮತವೆನಿಪ ತಿಮಿರಕೆ ಸೂರ್ಯ ।।       
" ಶ್ರೀ ಮೈಸೂರು ಕೃಷ್ಣದಾಸರು - [ ಅಂಕಿತ - ಶ್ರೀ ಗುರು ಶ್ರೀನಿವಾಸ ವಿಠಲ ]
ಬುದ್ಧಿಮಂತನ ಭಜಿಸಿ ಬದುಕೋ । ಅದ್ವೈತ ಮತ ವನವನುದ್ದಿ ಭರದೊಳು ಜಗದಿ । ಶುದ್ಧ ಸತ್ವವ ಪೊರೆದು ಸಿದ್ಧನೆನಿಸಿದವನಾ ।।
" ಶ್ರೀ ಮಾನಮಧುರೈ ಶ್ರೀ ವೆಂಕಟದಾಸರು - [ ಅಂಕಿತ - ವೆಂಕಟವಿಠಲ ] "
ಮಧ್ವಮುನಿಯಾಗಿ ಮಾಯವಾದಿಗಳಾ । ಮಾಯೀ ಶಾಸ್ತ್ರವನ್ನು ಮುರಿದಾತನಾ ।।
" ಶ್ರೀ ವಿದ್ಯಾರತ್ನಾಕರ ತೀರ್ಥರು - [ ಅಂಕಿತ - ನಾಮಗಿರೀಶ ] "... 
ನಂದತೀರ್ಥರಾನಂದದಿ ಭಜಿಸಿರೋ । ಬಂದು ಸಲಹಬೇಕೆಂದು ಬೇಡುತಾ ।।
" ಶ್ರೀ ವಿದ್ಯಾ ಪ್ರಸನ್ನ ತೀರ್ಥರು - [ ಅಂಕಿತ - ಪ್ರಸನ್ನ ] .... 
ಆನಂದತೀರ್ಥರ ಆರಾಧನೆಯಿದು । ಆನಂದ ಪೂರಿತ ಮಾನಸದಿಂದ । ಗೋವಿಂದ ಭಕುತರ ಪೂಜಿಸುವ ।।
by ಆಚಾರ್ಯ ನಾಗರಾಜು ಹಾವೇರಿ ಗುರು ವಿಜಯ ಪ್ರತಿಷ್ಠಾನ
***

Raghavendra Mutt, Krishnamurthy Puram Mysore celebrating Madhwa Navami in year 2021.
Rathotsava in our lane at 6th Cross, Krishnamurthy Puram Mysuru.
FEBRUARY 20, 2021
****
YEAR 2021
Madhwa Jayanti
ಶ್ರೀ ಮಧ್ವಭಕ್ತಿಯಿಂದ ಮಾಧವಾನುಗ್ರಹ:- (ಶ್ರೀಮಧ್ವ ಜಯಂತಿ (ವಿಜಯದಶಮಿ) ನಿಮಿತ್ತವಾಗಿ ಗುರುಮಧ್ವರಾಯರಿಗೆ ನುಡಿಯ ನಮನ ಅವರೇ ನುಡಿಸಿದಂತೆ)

ಕರಾಳ ಕಲಿಯುಗದ ಪ್ರಭಾವ ಸಜ್ಜನರು ಧರ್ಮಮಾರ್ಗದಿಂದ ವಂಚಿತರಾಗಿ ಅಜ್ಞಾನದ ಕತ್ತಲೆಯಲ್ಲಿ ಬಳಳುತ್ತಿರುವಾಗ,ಜ್ಞಾನದ ದೀವಿಗೆಯನ್ನು ಹಚ್ಚಿ ನಮ್ಮ ಅಜ್ಞಾನವ ತೊಲಗಿಸಲು ಭಗವದಾಜ್ಞೆಯ ಮೆರೆಗೆ ಅವತರಿಸಿದ ಶ್ರೀ ಮಧ್ವಗುರುಗಳೇ ನಮ್ಮ ಮುಖ್ಯಗುರುಗಳು.

ಅಂತಹ ಶ್ರೀ ಮದಾನಂದತೀರ್ಥ ಭಗವತ್ಪಾದಾಚಾರ್ಯ ಗುರುಗಳಲ್ಲಿ ಮಾಡುವ ಭಕ್ತಿ ಮಾಧವನ ಅನುಗ್ರಹಕ್ಕೆ ಕಾರಣ.

ಯಾವಾಗ ಶರೀರಗಳಲ್ಲಿ ಆರೋಗ್ಯ, ಅವಯವಗಳಲ್ಲಿ ಚುರುಕಿನ ಚಟುವಟಿಕೆಗಳು ಇರುತ್ತವೆಯೋ ಆಗಾಗಲೇ ಗೋವಿಂದನನ್ನು ಅರ್ಚಿಸುವ ಮೂಲಕ ಆಯುಷ್ಯವನ್ನು ಸಾರ್ಥಕ ಮಾಡಿಕೋ ಎಂದು ಎಚ್ಚರಿಕೆಯ ಸಂದೇಶ ಕೊಟ್ಟ ದಿಟ್ಟ ಗುರು ಶ್ರೀ ಪೂರ್ಣಬೋಧರು.

"ನ ಮಾಧವೋಸಮೋ ದೇವೋ ನ ಚ ಮಧ್ವ ಸಮೋ ಗುರುಃ" ಎನ್ನುವ ಉಕ್ತಿಯಂತೆ *ಸಮಸ್ತ ಬ್ರಹ್ಮಾಂಡದ ಒಳಗೆ-ಹೊರಗೆ ಸರ್ವೋತ್ತಮನಾದ ವಿಷ್ಣುವಿನಂತ
ದೇವರೇ ಇಲ್ಲ,,,ಜೀವೋತ್ತಮರಾದ ವಾಯ್ವವತಾರಿ ಶ್ರೀ ಮಧ್ವರಿಗೆ ಸಮಾನರಾದ ಗುರುಗಳಿಲ್ಲ. ಇಂತಹ *ಗುರುವಿನ ಗುಲಾಮರಾಗುವ ತನಕ ದೊರೆಯದೆನ್ನ ಮುಕುತಿ.

ನಮ್ಮ ಮಧ್ವಗುರುಗಳ ಸಿದ್ಧಾಂತದ ಪರಂಪರೆಯ ಸಮಸ್ತ ಮೂಲ ಪೀಠಸ್ಥ ಗುರುಗಳಿಗೆ ನಮೋ ನಮಃ ಎಂದು ದಾಸರು ತೋರಿದ ಮಾರ್ಗದಲ್ಲಿ ಹಾಡುತ್ತ....
ದ್ವೈತ ವಾಙ್ಮಯದ ಗುರುಗಳ ಆಕೃತಿಯ ಸ್ಮರಣೆ ತೇನ ವಿಘ್ನಾಃ ಪ್ರಣಶ್ಯಂತಿ ಸಿಧ್ಯಂತಿ ಚ ಮನೋರಥಾಃ ನಮ್ಮೆಲ್ಲರ ಮನೋಕಾಮನೆಗಳ ಈಡೇರಿಸುವ ಪಾವನ ಪವನ ಮತಸ್ಥರು.

ಕೊನೆಯಲ್ಲಿ ಪೂರ್ಣಬೋಧಮತಾನುಗರಾದ ಸಮಸ್ತ ವೈಷ್ಣವಾ ವಿಷ್ಣುಹೃದಯಸ್ತರಿಗೆ ಅನಂತಾನಂತವಾಗಿ ನಮೋ ನಮಃ.

ಮಾನವ ಜನ್ಮವನ್ನು  ಸಾರ್ಥಕ ಜೀವನವನ್ನಾಗಿ ಮಾಡಿ ಜೀವೋತ್ತಮರ ಮೂಲಕ ಸರ್ವೋತ್ತಮನಲ್ಲಿ ನೆಲೆಸುವ ಸಾಧನ ಮಾರ್ಗ ತೋರಿದ ಜಗದ್ಗುರುಗಳ ಕರುಣೆ ಅನಂತ ಮಾಡಿದ ಉಪಕಾರ ಅನಂತ ಮತ್ತೆ ಮತ್ತೆ ಜನ್ಮವೆತ್ತಿ ಬಂದರು ನಮಗೆ ಗುರುವಾಗಿ ನೀವು ಲಭಿಸಿ ಶ್ರೀ ಮದಾನಂದತೀರ್ಥ ಭಗವತ್ಪಾದರೆನ್ನುತ ಗುರುಗಳ ಪರಂಪರೆಯ ಚರಣ ಸೇವಕರ ಸೇವೆಯನ್ನು ಎಂದೆಂದಿಗೂ ಬಯಸುತ್ತ ಅನಂತಾನಂತ ಶಿರಬಾಗಿ ನಮಿಸುವೆ ಶ್ರೀ ಪೂರ್ಣಪ್ರಜ್ಞರ ಅಂತರ್ಯಾಮಿ ಶ್ರೀ ರಾಮಚಂದ್ರದೇವರ ಚರಣಕಮಲಗಳಲ್ಲಿ.🙏🏻🙏🏻🙏🏻🙏🏻
✍️ಶ್ರೀಕಾಂತ. ಕುಲಕರ್ಣಿ (ಲಿಂಗಸ್ಗೂರ). 15 October 2021
****

ಶ್ರೀಮನ್ಮಧ್ವಾಚಾರ್ಯರಿತ್ತ_ತಂತ್ರರತ್ನ ಶ್ರೀಮಧ್ವಜಯಂತಿಯ ಶುಭಾಶಯಗಳು ಇತಿಹಾಸಪುರಾಣಗಳ ವಿಷಯಗಳಲ್ಲಿ ಮಹಾಭಾರತತಾತ್ಪರ್ಯನಿರ್ಣಯ, ಭಾಗವತತಾತ್ಪರ್ಯನಿರ್ಣಯ ಶ್ರೀಮನ್ಮಧ್ವಾಚಾರ್ಯರ ಮೇರು ಕೃತಿಗಳಾದರೆ, ತಂತ್ರಶಾಸ್ತ್ರದ ವಿಷಯದಲ್ಲಿ ತಂತ್ರಸಾರಸಂಗ್ರಹವು ನಿರ್ಣಾಯಕ ಗ್ರಂಥವಾಗಿದೆ. ಇದರಲ್ಲಿ ನಾರಾಯಣನು ಬ್ರಹ್ಮದೇವರಿಗೆ ಉಪದೇಶಿಸಿದ ಪಂಚರಾತ್ರದಸಾರವು (ತಂತ್ರಸಾರಸಂಗ್ರಹ ೪.೧೬೨) ಅಢಕವಾಗಿದೆ. ಒಬ್ಬ ಬೇರೆ ಬೇರೆ ತಂತ್ರಸಿದ್ಧಾಂತಗಳನ್ನು ನೋಡಿಕೊಂಡಿದ್ದಾಗ ಅದರಲ್ಲಿರುವ ನ್ಯೂನತೆ, ವೈವಿಧ್ಯತೆಗಳಿದ್ದಾಗ ಅದರ ನಿರ್ಣಯವನ್ನು ನೀಡಿ ಸನ್ಮಾರ್ಗದಲ್ಲಿ ನಡೆಸುವಂತಹ ಗ್ರಂಥವಾಗಿದೆ. ಪ್ರಾಚೀನ ಪಂಚರಾತ್ರಸಂಹಿತೆಗಳಂತೆ ತಂತ್ರಸಾರಸಂಗ್ರಹವು ಶಾಸ್ತ್ರಾವತರಣ, ಮಂತ್ರೋದ್ಧಾರ, ಪೂಜೆಯ ಕ್ರಮ, ಪ್ರಾಣಾಯಾಮಾದಿ ಆತ್ಮಶುದ್ಧಿ, ಕಲಶವಿಧಿ, ದೀಕ್ಷಾವಿಧಿ, ಹೋಮಗಳಕ್ರಮ, ಪ್ರತಿಮಾನಿರ್ಮಾಣಕ್ರಮ, ದೇವಾಲಯನಿರ್ಮಾಣದ ಕ್ರಮ, ಪ್ರತಿಮಾಪ್ರತಿಷ್ಠಾಪನೆಯ ವಿಧಾನ, ಉತ್ಸವ, ಜೀರ್ಣೋದ್ಧಾರ, ಸಂಪ್ರೋಕ್ಷಣೆಯ ವಿಧಾನ, ತತ್ವಗಳ ಸ್ವರೂಪ, ವರಾಹಾದಿಮಂತ್ರಗಳ ಸಂಗ್ರಹ, ಲಕ್ಷ್ಮೀ-ಬ್ರಹ್ಮಾದಿ ದೇವತೆಗಳ ಅಪೂರ್ವಮಂತ್ರಗಳು, ಧನ್ವಂತರೀಮಂತ್ರದ ಮಹಿಮೆ, ಮಂತ್ರಗಳ ಉಪಯೋಗ, ಯಂತ್ರರಚನೆಯಕ್ರಮ, ಗುರು-ಶಿಷ್ಯಲಕ್ಷಣ, ಮತ್ತು ಉಪಾಸನವಿಧಿಗಳ ತಿಳಿಸುವ ಗ್ರಂಥವಾಗಿದೆ. ಯಾವುದೇ ಗ್ರಂಥಕ್ಕೆ ಸಿದ್ಧಾಂತದ ಚೌಕಟ್ಟು ಮುಖ್ಯ. ಆಚಾರ್ಯಲಕ್ಷಣವನ್ನು ಹೇಳುವಾಗ ಪಾದ್ಮಸಂಹಿತೆಯು ಸಿದ್ಧಾಂತದ ಸರಿಯಾದ ತಿಳುವಳಿಕೆಗೆ ಶ್ರಮವಹಿದವನಾಗಿರಬೇಕೆಂದೇ ತಿಳಿಸಿದೆ. ತಂತ್ರಶಾಸ್ತ್ರಗಳ ಸಿದ್ಧಾಂತಗಳಲ್ಲಿ ಮಾಡುವ ಸಾಂಕರ್ಯವು ದೋಷವೆಂದು ಭಾರ್ಗವಾದಿ ಸಂಹಿತೆಗಳು ಸಾರಿವೆ. ಶ್ರೀಮದಾಚಾರ್ಯರ ತಂತ್ರಸಾರಸಂಗ್ರಹವು ಭಗವಂತನು ಸರ್ವೋತ್ತಮ, ದೋಷರಹಿತ, ಗುಣಪೂರ್ಣ ಎಂಬ ಸಿದ್ಧಾಂತದ ಹಿನ್ನಲೆಯಲ್ಲಿ ಹೊರಟ ತಂತ್ರಗ್ರಂಥವಾಗಿದೆ. ಇದು ಅವರು ಗ್ರಂಥಾರಂಭದಲ್ಲಿ ಮಾಡಿದ ಮಂಗಳಾಚರಣೆಯಿಂದಲೇ ಸ್ಪಷ್ಟವಾಗುತ್ತದೆ. ಗ್ರಂಥದ ಆರಂಭದಿಂದ ಅಂತ್ಯದವರೆಗೂ ಪರಮಾತ್ಮನ ಗುಣಪೂರ್ಣತ್ವ, ನಿರ್ದೋಷತ್ವ, ಸರ್ವೋತ್ತಮತ್ವ ಪ್ರತಿಪಾದಿತವಾಗಿದೆ. ತಂತ್ರಸಾರಸಂಗ್ರಹವು ನಾಕು ಅಧ್ಯಾಯಗಳನ್ನು ಒಳಗೊಂಡಿದೆ. ಇವುಗಳ ಅಪೂರ್ವತೆಗಳಲ್ಲಿ ಕೆಲವನ್ನು ನೋಡೋಣ. ಮೊದಲನೆ_ಅಧ್ಯಾಯ: ೫೧ ವೈದಿಕಾಕ್ಷರಗಳಿಂದ ಭಗವಂತನ ಯಾವ ರೂಪಗಳು ಚಿಂತಿಸಲ್ಪಡಬೇಕು ಎಂಬುದಕ್ಕೆ ನಮಗೆ ಮಾರ್ಗದರ್ಶನ ಇಲ್ಲಿದೆ. ಪಂಚರಾತ್ರದಲ್ಲೇ ಜಯಾಖ್ಯ ಸಂಹಿತೆಯು ಅಪ್ರಮೇಯ, ಆದಿದೇವ, ಇಷ್ಟ ಇತ್ಯಾದಿ ರೂಪಗಳನ್ನು ತಿಳಿಸಿದರೆ, ಪ್ರಕಾಶಸಂಹಿತೆ ಅಜ, ಆನಂದ, ಇಂದ್ರ ಇತ್ಯಾದಿ ರೂಪಗಳನ್ನು ತಿಳಿಸಿವೆ. ಯಾವ ರೂಪಗಳ ಅನುಸಂಧಾನ ಮಾಡಬೇಕೆಂಬ ಗೊಂದಲ ಸಹಜವಾಗಿರುತ್ತದೆ. ಶ್ರೀಮನ್ಮಧ್ವಾಚಾರ್ಯರು ತಂತ್ರಸಾರಸಂಗ್ರಹದಲ್ಲಿ ಅಜಾದಿರೂಪಗಳನ್ನು ಚಿಂತಿಸಬೇಕೆಂದು ನಿರ್ಣಯಿಸಿಕೊಟ್ಟಿದ್ದು ಅಪೂರ್ವವಾದ ನಿರ್ಣಯ. ಇದೇ ರೀತಿ ನಾರಾಯಣ ಅಷ್ಟಾಕ್ಷರದ ರೂಪಗಳ ಬಗ್ಗೆಯೂ ವರಾಹ, ನರಸಿಂಹ, ಶ್ರೀಧರ, ಶ್ರೀಧರ, ಹಯಶಿರಸ, ಭಾರ್ಗವ, ರಾಮ, ವಾಸುದೇವ ರೂಪಗಳ ಚಿಂತಿಸಬೇಕು ಎಂದು, ವಿಷ್ಣು, ಮಧುಸೂದನ, ತ್ರಿವಿಕ್ರಮ, ವಾಮನ, ಶ್ರೀಧರ, ಹೃಷೀಕೇಶ, ಪದ್ಮನಾಭ, ದಾಮೋದರ ಎಂದೂ, ಹಾಗೆಯೇ ವಿಶ್ವ, ತೈಜಸ, ಪ್ರಾಜ್ಞ, ತುರೀಯ, ಆತ್ಮ, ಅಂತರಾತ್ಮ, ಪರಮಾತ್ಮ ಜ್ಞಾನಾತ್ಮಗಳೆಂಬ ರೂಪಗಳಯ ಎಂಬ ಪಕ್ಷಾಂತರಗಳು ಕಾಣಸಿಗುತ್ತವೆ. ವಿಶ್ವ ತೈಜಸಾದಿ ರೂಪಗಳು ಉಪಾಸ್ಯವಾದವು ಎಂಬುದಾಗಿ ಮೊದಲನೆಯ ಅಧ್ಯಾಯವು ಮಾರ್ಗದರ್ಶನ ಮಾಡುದೆ. ಹೀಗೆ ತಂತ್ರಶಾಸ್ತ್ರಗಳಲ್ಲಿ ಬರುವ ಗೊಂದಲಾತ್ಮಕವಾದ ವಿಷಯಗಳಿಗೆ ನಿರ್ಣಾಯಾತ್ಮಕ ಗ್ರಂಥ ಇದುವಾಗಿದೆ. ಇನ್ನೂ ಆಗಮೋಕ್ತ ಆಲಯಗಳಲ್ಲಿ ಷಡಾಧಾರಪ್ರತಿಷ್ಠೆ ಮಾಡುವ ಕ್ರಮ ಇದೆ. ಈ ಷಡಾಧಾರದ ಚಿಂತನೆ ಪೂರ್ಣವಾಗಿ ದೊರಕುವುದು ಶ್ರೀಮದಾಚಾರ್ಯರ ತಂತ್ರಸಾರಸಂಗ್ರಹದಲ್ಲಿ. ಅನ್ಯ ತಾಂತ್ರಿಕರು ಆಧಾರಶಿಲೆಯನ್ನು ಹೇಳಿದ್ದರೂ ಅದಕ್ಕೆ ದೇವತೆಯನ್ನು ಹೇಳಲಿಲ್ಲ. ಆಧಾರಶಿಲೆಯನ್ನು ಪೃಥಿವಿಯ ಪ್ರಾರ್ಥನಾಮಂತ್ರದಿಂದಲೇ ಆರಾಧಿಸಲಾಗುತ್ತದೆ. ಪರಮಪುರುಷ, ಆಧಾರಶಕ್ತಿ, ಕೂರ್ಮ, ಅನಂತ, ಪೃಥಿವೀ ಅದರ ಮೇಲೆ ಯೋಗಪೀಠ ಇವರೇ ಷಡಾಧಾರಗಳು ಎಂಬ ಸ್ಪಷ್ಟ ಚಿಂತನೆ ಸಿಗುವುದು ತಂತ್ರಸಾರಸಂಗ್ರಹದಲ್ಲಿ ಮಾತ್ರ. ಹೀಗೆ ಹಲವಾರು ಅಪೂರ್ವತೆಗಳ ಮೊದಲನೇ ಅಧ್ಯಾಯ ಒಳಗೊಂಡಿದೆ. ಶ್ರೀಮನ್ಮಧ್ವಾಚಾರ್ಯರು ೨೪ ಕೇಶವಾದಿರೂಪಗಳ ನಿರೂಪಿಸಿದ ರೀತಿ ಅವರ ಗಣಿತಜ್ಞಾನಕ್ಕೆ ನಿದರ್ಶನ. ಎರಡನೇ_ಅಧ್ಯಾಯ: ಕಲಶವೆಂದರೆ ಭಗವಂತನ ೧೦೦ ಕಲಾರೂಪಗಳನ್ನು ಒಳಗೊಂಡದ್ದು ಎಂಬ ಅಪೂರ್ವ ವಿಷಯ, ಎಲ್ಲಾ ಹೋಮಗಳಲ್ಲಿ ಪುರುಷಪ್ರಕೃತಿಯರಾದ ಲಕ್ಷ್ಮೀನಾರಾಯಣಾತ್ಮಕವಾದ ಕುಂಡದಲ್ಲಿ ವಿಷ್ಣುವೀರ್ಯಾತ್ಮಕ ಅಗ್ನಿಯ ಸ್ಥಾಪಿಸಿ ೧೬ ಸಂಸ್ಕಾರಗಳಮಾಡಬೇಕು ಎಂದು ಆಚಾರ್ಯರು ನಿರೂಪಿಸಿದ ವಿಷಯವು ಅಗ್ನಿಯಲ್ಲಿ ಶೈವಾಗ್ನಿ ವೈಷ್ಣವಾಗ್ನಿ ಎಂಬ ಬೇಧ ಇಲ್ಲ, ಗರ್ಭಾದಾನಾದಿ ೧೬ ಸಂಸ್ಕಾರಗಳು ಸರ್ವತ್ರ ಹೋಮಗಳಲ್ಲಿ ಮಾಡಲ್ಪಡಬೇಕೆಂಬ ನಿರ್ಣಯತ್ಮಕ ವಿಷಯಗಳನ್ನು ತಿಳಿಸುತ್ತದೆ. ಯಾಕೆಂದರೆ ತಂತ್ರಾಂತರಗಳು ಶೈವ-ವೈಷ್ಣವಾದಿ ಅಗ್ನಿಭೇದ, ಶಿವನ ಹೊರತಾಗಿ ಇತರ ದೇವತಾ ಹೋಮಗಳಲ್ಲಿ ಅಗ್ನಿಗೆ ೮ ಅಥವಾ ೭ ಸಂಸ್ಕಾರಗಳ ಮಾಡಬೇಕೆಂದು ಹೇಳಿದ್ದಿದೆ. ಇದಲ್ಲದೆ ಕುಂಡದ ಕರಾರುವಕ್ಕಾದ ಅಳತೆಗಳು, ಹೋಮದ್ರವ್ಯಗಳು, ದೀಕ್ಷೆಯವಿಧಿಯ ಕುರಿತಾದ ಅಪೂರ್ವವಿಷಯಗಳ ಒಳಗೊಂಡಿದೆ. ಮೂರನೇ_ಅಧ್ಯಾಯ: ದೇವಾಲಯಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ಒಳಗೊಂಡ ಅಧ್ಯಾಯ. ಇಲ್ಲಿ ಇರುವಷ್ಟು ಕರಾರುವಕ್ಕಾಗಿ ಪ್ರತಿಮೆಯ ಅಂಗಾಂಗಳ ಅಳತೆಗಳ ವಿಚಾರ ಇನ್ನೆಲ್ಲೂ ಕಾಣಲು ಸಿಗಲ್ಲ ಎಂಬ ದೇವನಹಳ್ಳಿಯ ಖ್ಯಾತ ಶಿಲ್ಪಿಗಳಾದ ದಿ. ಹನುಮಂತಾಚಾರ್ಯರ ಮಾತನ್ನು ಬನ್ನಂಜೆ ಗೋವಿಂದಾಚಾರ್ಯರು ತಮ್ಮ ತಂತ್ರಸಾರಸಂಗ್ರಹ ಕನ್ನಡಾನುವಾದದ ಮುನ್ನುಡಿಯಲ್ಲಿ ನೆನಪಿಸಿಕೊಂಡಿದ್ದಾರೆ. ಶ್ರೀಮದಾಚಾರ್ಯರು ಆರಿಸಿಕೊಟ್ಟ ವಾಸ್ತುಪೂಜಾವಿಧಿಯು ನಮಗೆ ವಾಸ್ತುಶಾಸ್ತ್ರದ ವಿಷಯದಲ್ಲಿ ಮಾರ್ಗದರ್ಶಕ. ಭಗವಂತನ ಪ್ರತಿಷ್ಠಾವಿಧಾನದಿಂದ ಹಿಡಿದು ಸಂಪ್ರೋಕ್ಷಣೆವರೆಗಿನ ವಿಷಯಗಳು ಆಚರಣೆಗೆ ಅನುಕೂಲವಾಗುವಂತೆ ಸಂಕ್ಷಿಪ್ತವಾಗಿ ನಿರೂಪಿತವಾಗಿದೆ. ವಿಷ್ಣುವಿನ ಹೊರತಾಗಿ ಇತರ ಶಾಕ್ತಶೈವಾದಿ ಆರಾಧನೆಗಳ ಶಾಸ್ತ್ರಗಳಲ್ಲಿ ನಿಷೇಧಿಸಿದ್ದುಂಟು. ಇದು ಸ್ವತಂತ್ರವಾಗಿ ಆಯಾಯ ದೇವತೆಗಳ ಆರಾಧನೆಯ ಖಂಡಿಸಿದ್ದು, ಭಗವಂತನ ನಿಯಮನಕ್ಕೆ ಒಳಪಟ್ಟವರು ಇತರ ದೇವತೆಗಳು ಎಂಬ ಅನುಸಂಧಾನದಿಂದ ಆರಾಧಿಸುವುದು ಶಾಸ್ತ್ರಸಮ್ಮತ ಇದನ್ನೇ ದೇವತೆಗಳು ಸ್ವೀಕರಿಸುವುದು ಎಂಬ ನಿರ್ಣಯ ಇಲ್ಲಿದೆ. ಇನ್ನೂ ತತ್ವಗಳ ವಿಷಯದಲ್ಲಿ ತಂತ್ರಗಳಲ್ಲಿ ಅಭಿಪ್ರಾಯಬೇಧಗಳಿವೆ. ಸಾಮಾನ್ಯವಾಗಿ ಪಂಚರಾತ್ರಸಂಹಿತೆಗಳು ಪುರುಷವೇ ಮೊದಲಾದ ೨೫ ತತ್ವಗಳನ್ನು ಹೇಳುತ್ತವೆ. ಸೂರ್ಯ, ಚಂದ್ರ, ಅಗ್ನಿ, ವಾಸುದೇವಾದಿ ನಾಕುರೂಪಗಳ ಸೇರಿಸಿ ೩೨ ತತ್ವಗಳು ಎಂದದ್ದೂ ಉಂಟು. ಶೈವತಂತ್ರಗಳು ಶಿವ, ಈಶ್ವರ, ಅಶುದ್ಧವಿದ್ಯಾದಿ ತತ್ವಗಳ ಕಲ್ಪಿಸಿಕೊಂಡು ೩೬ ತತ್ವಗಳ ಹೇಳಿದ್ದೂ ಉಂಟು. ಆದರೆ ೨೫ ತತ್ವಗಳು ಯಾವವು !? ೩೨ ತತ್ವಗಳೆಂದರೆ ಯಾವ್ಯಾವವು !?, ೩೬ ತತ್ವಗಳು ಅವುಗಳ ಅಭಿಮಾನಿ ದೇವತೆಗಳು ಯಾರ್ಯಾರು ! ಎಂಬ ಸ್ಪಷ್ಟ ತಿಳುವಳಿಕೆ ಸಿಗುವುದು ತಂತ್ರಸಾರಸಂಗ್ರಹದಲ್ಲಿ ಮಾತ್ರ. ನಾಲ್ಕನೇ_ಅಧ್ಯಾಯ: ತಂತ್ರಶಾಸ್ತ್ರಗಳಲ್ಲಿ ಮಂತ್ರಗಳ ಸಾಗರವೇ ಕಾಣಸಿಗುತ್ತವೆ. ಇವುಗಳಲ್ಲಿ ಕಲಿಯುಗದಲ್ಲಿ ಫಲಕೊಡುವಮಂತ್ರಗಳ ಅಪೂರ್ವವಾದ ಸಂಗ್ರಹ ಇಲ್ಲಿದೆ. ಅಪೂರ್ವವಾದ ಇತರ ತಾಂತ್ರಿಕರಿಂದ ದೂರ ಉಳಿದ ಪರಶುರಾಮ, ವೇದವ್ಯಾಸ, ದತ್ತಾತ್ರೇಯ, ಕಪಿಲಾದಿಮಂತ್ರಗಳು ಇಲ್ಲಿವೆ. ಈ ಅಧ್ಯಾಯವು ಬ್ರಹ್ಮದೇವರಿಗೆ ಆರಾಧನೆ ಇಲ್ಲ ಎಂಬ ತಪ್ಪು ಕಲ್ಪನೆಯ ನಿವಾರಿಸುತ್ತದೆ. ಭಕ್ತಿ ಎಂದರೇನು !? ಎಂತಹ ಆಚಾರ್ಯರ ಆಶ್ರಯಿಸಬೇಕು ! ಎಂಬಿತ್ಯಾದಿ ವಿಷಯಗಳ ಬಗ್ಗೆ ಸ್ಪಷ್ಟ ನಿರ್ಣಯ ಇಲ್ಲಿದೆ. ಯಮ ನಿಯಮಾದಿಗಳ ವಿಷಯ, ದೇಹದಲ್ಲಿರುವ ಷಟ್ಚಕ್ರಗಳ ಲಕ್ಷಣ ಅವುಗಳಲ್ಲಿ ಭಗವಂತನರೂಪಗಳ ಉಪಾಸನೆಯಕ್ರಮಗಳು, ಸುಷುಮ್ನಾದಿ ನಾಡಿಲಕ್ಷಣ, ಧ್ಯಾನಧಾರಣಸಮಾಧಿಗಳ ಮೂಲಕ ಭಗವಂತನ ಸಾಕ್ಷಾತ್ಕಾರ ಇತ್ಯಾದಿ ಯೋಗಿಕಸಾಧನೆಗಳ ಬಗ್ಗೆ ಸಮಗ್ರಮಾಹಿತಿ ಇಲ್ಲಿದೆ. ಒಟ್ಟಾರೆ ಒಬ್ಬ ಸಾಧಕನಿಗೆ ಸಾಧನೆಗೆ ಬೇಕಾದ ಎಲ್ಲಾ ವಿಷಯಗಳು ಈ ಪುಟ್ಟ ಸರಿಸುಮಾರು ೪೦೦ ಶ್ಲೋಕಗಳ ಗ್ರಂಥದಲ್ಲಿ ಅಢಕವಾಗಿದೆ. ಶ್ರೀಮದಾಚಾರ್ಯರು ಸರ್ವಜ್ಞರಾಯರು ಅವರಿಗೆ ಅಪಾರವಾದ ತಂತ್ರ, ಶಿಲ್ಪ, ವಾಸ್ತು ಹಾಗೂ ಜೋತಿಷ್ಯ ಶಾಸ್ತ್ರಗಳ ಅರಿವು ಚೆನ್ನಾಗಿತ್ತೆಂದು ಗ್ರಂಥ ತಿಳಿಸುತ್ತಿದೆ. ತಂತ್ರಸಾರಸಂಗ್ರಹವು ತಂತ್ರಶಾಸ್ತ್ರವನ್ನು ಅನುಸರಿಸುವ ಪ್ರತಿಯೊಬ್ಬನಿಗೂ ಮಾರ್ಗದರ್ಶಕ. ಕೆಲವರು ತಿಳಿಯದ ಜನರು ಇದು ಕೇವಲ ಮಠಕ್ಕೆ ಸಂಬಂಧಿಸಿದ ತಂತ್ರವೆಂದು ತಪ್ಪಾಗಿ ಹೇಳುತ್ತಾರೆ. ಆಚಾರ್ಯರು ಹೇಳಿದ ಪ್ರತಿಯೊಂದು ವಿಷಯ ಅದು ದೇವಾಲಯಕ್ಕೆ ಸಂಬಂಧಿಸಿಯೇ ಆಗಿದೆ. ಈ ಗ್ರಂಥವನ್ನು ಇನ್ನಷ್ಟು ತಿಳಿದು ಆಚರಿಸುವಂತಾಗಲಿ. ಶ್ರೀಮಧ್ವೇಶಾರ್ಪಣಮಸ್ತು - ಬೆಳ್ಳೆ ಸುದರ್ಶನ ಆಚಾರ್ಯ 15 oct 2021
***
ಮಧ್ವಾಚಾರ್ಯರು ಮಾಡಿರುವ ಉಪಕಾರಗಳು??? ೧. ಏಕಾದಶಿ ವ್ರತದ ಬಗ್ಗೆ ನಮಗೆ ಬೆಳಕು ಚೆಲ್ಲಿ, ಅದರಿಂದ ಪಾಪ ಪರಿಹಾರ ಮಾಡಿಕೊಳ್ಳಿ ಪುಣ್ಯ ಗಳಿಸಿಕೊಳ್ಳಿ, ನರಕ ತಪ್ಪಿಸಿಕೊಳ್ಳಿ ಎಂದು ಹೇಳಿಕೊಟ್ಟ ಪರಮ ಆಪ್ತೇಷ್ಟರು. ೨. ತ್ರಿಕಾಲ ಸಂಧ್ಯಾ, ಹರಿಪೂಜೆಯ ಮಹತ್ವ, ವೈಶ್ವದೇವಾದಿ ಮಾಡಬೇಕಾದ ಕರ್ತವ್ಯಗಳ ಬಗ್ಗೆ ಮಾಹಿತಿ, ಹರಿನಾಮ ಸ್ಮರಣೆಯ ಮಾಹಾತ್ಮೆ, ಕರ್ಮ ಸಾರ್ಥಕ್ಯ ಪಡೆಯಲು ಮಾರ್ಗಸೂಚಿ ಮುಂದಾತ ಸದಾಚಾರಗಳನ್ನು ಪಟ್ಟಿ ಮಾಡಿಕೊಟ್ಟು ಗುರುಗಳೆಂದರೆ ಇವರೇ ಎಂದು ಹೆಮ್ಮೆ ಪಡುವಂತೆ ಮಾಡಿದ ಸತ್ಕರ್ಮ ಪ್ರವರ್ತಕರು. (ತ್ರಿಕಾಲ ಸಂಧ್ಯಾ ಬಗ್ಗೆ ಆಚಾರ್ಯರು ಹೇಳಿಲ್ಲ ಅಂಥ ಯಾರಿಗಾದರು ಅನ್ನಿಸಿದ್ದರೆ ನನಗೆ ತಿಳಿಸಿ ತಿಳಿಸುವೆ) ೩. ಗೀತಾ ಸುಗೀತಾ ಕರ್ತವ್ಯಾ.... ಬಹುತೇಕ ತೋಚಿದ ಅರ್ಥವನ್ನು ಮಾಡಿದ್ದ ಅನ್ಯರಿಗೆ ಗೀತಾರ್ಥವನ್ನು ತೋರಿಸಿಕೊಟ್ಟ ಸರ್ವಜ್ಞಾಚಾರ್ಯರಿವರು ೪. ಭಗವಂತ ಕೇವಲ ಶಾಸ್ತ್ರಜ್ಞರಿಗೆ ಅಥವಾ ಬ್ರಾಹ್ಮಣರಿಗೆ ಮಾತ್ರ ಸೀಮಿತವಲ್ಲ ಸ್ತ್ರೀ ಶೂದ್ರಾದಿಗಳಿಗೂ ಭಗವಂತ ಒಲಿಯುವ ಎಂದು/ ಅದಕ್ಕೆ ಮಾಡಬೇಕಾದ ಉಪಾಯವನ್ನೂ ಹೇಳಿಕೊಟ್ಟ ನಿಜಾರ್ಥದಲ್ಲಿ ಜಗದ್ಗುರುಗಳಿವರು ೫. ಪ್ರತ್ಯಕ್ಷಕ್ಕೆ ಸಿದ್ಧವಾದ, ಅನುಭವಕ್ಕೆ ಕಂಡುಬರುವ, ಪಂಚ ಬೇಧ, ತಾರತಮ್ಯವನ್ನು ಜಗತ್ಸತ್ಯವನ್ನು ಆಗಮಕ್ಕೆ ಅನುಮಾನಕ್ಕೆ ಹೊಂದುವಂತೆ ತೋರಿಕೊಟ್ಟ ಪೂರ್ಣಪ್ರಜ್ಞರು. ಜಡ/ಚೇತನದಲ್ಲಿರುವ (ಸ್ವಾಭಾವಿಕವಾದ) ತಾರತಮ್ಯವನ್ನು ತೋರಿಕೊಟ್ಟದ್ದೇ ವಿನಹ ತಾರತಮ್ಯವನ್ನು ಆಚರಣೆಯಲ್ಲಿ ತನ್ನಿ ಎಂದು ಹೇಳಿಕೊಟ್ಟದ್ದಲ್ಲ ೬. ಹರಿಸರ್ವೋತ್ತಮತ್ವ ಮೊದಲಾದ ತಾತ್ವಿಕ ಪ್ರಮೇಯಗಳು ಎಷ್ಟು ನಿರ್ದುಷ್ಟವೆಂದು ಸಾಧಿಸಿ ತೋರಿಸಿ ಕೊಟ್ಟ ಶುದ್ಧಾತ್ಮರು ೭. ಬದುಕಿನ ಗುರಿ ಏನು, ಗುರಿಯನ್ನು ‌ಮುಟ್ಟುವ ಬಗೆ ಎಂತು ಅಂತೆಲ್ಲ ವಿಶದಪಡಿಸಿ, ಆನಂದ ಉಣಬಡಿಸಿದ ಆನಂದತೀರ್ಥರು. ೮. ಅಪುತ್ರಸ್ಯ ಗತಿರ್ನಾಸ್ತಿ ಮಕ್ಕಳಿಲ್ಲದಿದ್ದರೆ ಸದ್ಗತಿ ಇಲ್ಲ ಅಂಥ ಕಂಡುಬರುವ ಮಾತಿಗಳಿಗೆಲ್ಲ ಹೇಗೆ ಸಮಾಧಾನ ತೋರಿಸಿಕೊಟ್ಟ ಕರುಣಾ ಸಮುದ್ರರು ೯. ನಿರ್ಗುಣಂ ಗುಣಭೋಕ್ತೃಚ ಎಂಬಲ್ಲಿ ಇರುವ ಗೊಂದಲಗಳನ್ನು ಪರಿಹಾರ ಮಾಡಿಕೊಟ್ಟ ಕುಟಿಲರಹಿತ ಬುದ್ಧಿಯುಳ್ಳವರು ೧೦. ಬ್ರಹ್ಮ ಸೂತ್ರ, ಭಾರತ, ವೇದ, ಭಾಗವತಾದಿಗಳಲ್ಲಿ ಕಂಡುಬರುವ ವಿರೋಧವನ್ನು ಹೇಗೆ ಪರಿಹರಿಸಬೇಕು ಎಂಬುದನ್ನು ತೋರಿಕೊಟ್ಟ ಆಚಾರ್ಯ ಮಧ್ವರು
***
" ಮದ್ವ ನವಮಿ " ಆಚಾರ್ಯ ಮದ್ವರು ಉಡುಪಿಯಲ್ಲಿ ಅನಂತೇಶ್ವರ ದೇವಸ್ಥಾನದಲ್ಲಿ "ಐತರೇಯ ಉಪನಿಷತ್ ಹೇಳುವಾಗ ಪುಷ್ಪವೃಷ್ಟಿ ಆಯಿತು. ನಂತರ ಅದೃಶ್ಯರಾಗಿ ಇರುವ ಜಾಗ ಎಂಬ ಪ್ರತೀತಿ ಉಂಟು. ಈಗಲೂ ಉಡುಪಿಗೆ ಹೋದರೆ ನಾವು ಆ ಸ್ಥಳವನ್ನು ನೋಡಬಹುದು.  ಅಲ್ಲಿಂದ ಅವರು ಬದರಿಕಾಶ್ರಮ ಪ್ರವೇಶಮಾಡಿದರು. ಆ ದಿವಸವೆ ಮದ್ವ ನವಮಿ.  ಅನಂತ ಜನ್ಮಗಳ ಪುಣ್ಯ ವಿಶೇಷವಿದ್ದರೆ ಮಾತ್ರ ಮಾಧ್ವ ಸಿದ್ಧಾಂತದಲ್ಲಿ ಒಲವು ಮೂಡಲು ಸಾಧ್ಯ. 

ಆಚಾರ್ಯರು " ಭಿನ್ನಾಶ್ಚ ಭಿನ್ನಧರ್ಮಾಶ್ಚ ಪದಾರ್ಥಾ ನಿಖಿಲಾ ಅಪಿ" ಎಂದರು. ಅಂದರೆ... ಪ್ರಪಂಚದಲ್ಲಿ ಒಂದೇ ತೆರನಾದ ಎರಡು ವಸ್ತುಗಳು ಇಲ್ಲವೇ ಇಲ್ಲ. ಒಂದೇ ಮರದ ಎರಡು ಎಲೆಗಳೂ ಕೂಡ ಸಂಪೂರ್ಣ ವಾಗಿ ಸಮನಾಗಿಲ್ಲ. ಎಲೆಯ ವಿಷಯ ಹಾಗಿರಲಿ, ನಮ್ಮದೇ ದೇಹದ ಯಾವುದೇ ಎರಡು ಅಂಗಗಳು ಸಂಪೂರ್ಣವಾಗಿ ಒಂದೇ ಸಮನಾಗಿಲ್ಲ. ದೃಷ್ಟಿ ದೋಷ ವಿರುವವರಿಗೆ ಈ ವಿಷಯ ಸ್ಪಷ್ಟವಾಗಿ ಅನುಭವಕ್ಕೆ ಬರುತ್ತದೆ. ಎರಡು ಕಣ್ಣುಗಳ ವೀಕ್ಷಣಾ ಸಾಮರ್ಥ್ಯವೂ ಕೂಡ ಬೇರೆಬೇರೆಯಾಗಿಯೇ ಇರುತ್ತದೆ.  ಇದನ್ನೇ ಆಚಾರ್ಯರು ತಿಳಿಸಿದ ಭೇದ ತತ್ವ... ಜೀವಿ ಜೀವಿಗಳ ನಡುವೆ, ಜಡ ಜಡಗಳ ನಡುವೆ, ಜೀವ ಜಡಗಳ ನಡುವೆ, ಜೀವ ಮತ್ತು ಜಡಗಳಿಂದ ಪರಮಾತ್ಮನಿಗೆ ಹೀಗೆ ಒಟ್ಟು ಪಂಚಭೇದಗಳನ್ನು ಆಚಾರ್ಯರು ತಿಳಿಸಿದ್ದಾರೆ. ಹೀಗೆ ತತ್ವವಾದವೆಂಬ ಜ್ಯೋತಿಯ ಮೂಲಕ ಭಗವಾನ್ ವೇದವ್ಯಾಸರ ವಾಕ್ಯಗಳ ನಿಜ ಆಂತರ್ಯವನ್ನು ಸಮಾಜಕ್ಕೆ ತೋರಿದವರು ಶ್ರೀಮದಾಚಾರ್ಯರು. 

ಆಚಾರ್ಯರು "ಏಕ ಏವ ಮಹಾಶಕ್ತಿ: ಕುರುತೇ ಸರ್ವಮಂಜಸಾ" ಎಂದರು! ಜಗತ್ತಿನ ಸಮಸ್ತ ಜೀವಿಗಳ, ಸಮಸ್ತ ಪದಾರ್ಥಗಳ ಒಳ ಹೊರಗೆ ನಿಂತು, ಅವರಿಂದ ಸಕಲ ಕರ್ಮಗಳನ್ನು ಮಾಡಿಸುವ ನಾರಾಯಣನೇ ಪರಮಾತ್ಮ ನಾಗಿದ್ದಾನೆ ಪರತತ್ವನಾಗಿದ್ದಾನೆ, ಬ್ರಹ್ಮಾದಿ ಸಕಲ ದೇವತೆಗಳೂ ಶ್ರೀಹರಿಯ ಕಿಂಕರರು! ಅಂದಮಾತ್ರಕ್ಕೆ ಅನ್ಯ ದೇವತೆಗಳ ತಿರಸ್ಕಾರ ಸಲ್ಲದು. ಅವರನ್ನು ಯಥೋಚಿತವಾಗಿ ಆರಾಧಿಸಲೇಬೇಕು. ಆರಾಧಿಸುವಾಗ ಆಯಾ ದೇವತೆಗಳ ಅಂತರ್ಯಾಮಿ ಯಾಗಿ ಶ್ರೀಹರಿಯನ್ನು ಚಿಂತನೆ ಮಾಡಬೇಕು ಎಂದು ತಿಳಿಸಿದವರು ಶ್ರೀಮದಾಚಾರ್ಯರು.

ಶ್ರೀಮದಾಚಾರ್ಯರು! ಅವರು ಪೂರ್ಣತೆಯ ಸಂಕೇತ, ಅದಕ್ಕೆಂದೇ ಅವರು ಪೂರ್ಣಪ್ರಜ್ಞರು! ಅವರು ಜ್ಞಾನಾನಂದದ ಸಂಕೇತ, ಆದ್ದರಿಂದಲೇ ಅವರು ಆನಂದತೀರ್ಥರು!! ಅವರ ತತ್ವಗಳು ದೇವಾನು ದೇವತೆಗಳಿಗೆ,  ಸಜ್ಜನರಿಗೆ ಸುಖದಾಯಕ ಅದಕ್ಕೆಂದೇ ಅವರು ಸುಖ ತೀರ್ಥರು! ಗರುಡ ಶೇಷ ರುದ್ರರನ್ನೊಳ ಗೊಂಡ ಸಮಸ್ತ ಜೀವ ಪ್ರಪಂಚಕ್ಕೆ ಅವರು ಗುರು ಸ್ಥಾನೀಯರು! ಅದಕ್ಕೆಂದೇ ಅವರು ಮಧ್ವರು!!

ಸರ್ವಮೂಲಗಳ ಅಧ್ಯಯನವನ್ನು ಟೀಕಾ ಸಹಿತವಾಗಿ ತಪಸ್ಸಿನಂತೆ ಅಧ್ಯಯನ ಮಾಡುವುದು ಪ್ರತಿಯೊಬ್ಬರ ವ್ರತವಾಗಬೇಕು. ನಾವೂ ಅಧ್ಯಯನ ಮಾಡಿ, ಯಥಾಯೋಗ್ಯವಾಗಿ ನಮ್ಮ ಪ್ರತಿಯೊಬ್ಬ ಕುಟುಂಬ ಸದಸ್ಯರಿಂದಲೂ ಮಧ್ವ ಸಿದ್ಧಾಂತದ ಅಧ್ಯಯನ, ಅನುಸಂಧಾನ ಮಾಡಿಸಿದೆವೆಂದರೆ ಅದೇ ನಾವು ಆಚಾರ್ಯರಿಗೆ ಸಲ್ಲಿಸುವ ನಿಜವಾದ ಗುರುದಕ್ಷಿಣೆ!
ಸಂಗ್ರಹ.
***
ಮೂರವತಾರದಿ_ಚತುರ್ಮುಖಪದವಿ 🔅🔅🔅🔅🔅🔅🔅🔅🔅🔅 ವಿಶೇಷವಾಗಿ ಶ್ರೀಮಧ್ವಾಚಾರ್ಯರ ಅನುಗ್ರಹ ಸಂಪಾದನೆ ಮಾಡೋಣ ಆ ನಿಟ್ಟಿನಲ್ಲಿ ಇದೊಂದು ಪುಟ್ಟ ಸೇವೆ. ಜಗತ್ತಿನ ಜೀವರಾಶಿಗಳ ಸರ್ವೋಚ್ಚಪದವಿ ಅದು ಚತುರ್ಮುಖನ ಪದವಿ. ಎಲ್ಲಾ ಜೀವಿಗಳ ಸಾಧನೆಗೂ ಮೀರಿದ ಸಾಧನೆ ಅದು ಬ್ರಹ್ಮ ಪದವಿಯಲ್ಲಿರುವವರದು. ಎಲ್ಲಾ ಜೀವಿಗಳ ಸುಖಕ್ಕೂ ಮೀರಿದ ಉತ್ಕೃಷ್ಟಸುಖ ಅನುಭವಿಸುವ ಭಗವದ್ಭಕ್ತಮೂರ್ಧನ್ಯರು. ಜೀವ ಕಕ್ಷೆಯಲ್ಲಿ ಸರ್ವೋನ್ನತವಾದ ಸ್ಥಾನ ಅದು ಬ್ರಹ್ಮ ಪದವಿ. ಇಂತಹಾ ಬ್ರಹ್ಮಪದವಿಯಲ್ಲಿ ಕೂಡುವವರು ಕೇವಲ ಋಜುಗಣದವರು. ಈ ಋಜುಗಣದಲ್ಲಿ ಅನ್ಯತಮರಾದ ಶ್ರೀವಾಯುದೇವರ ಪದವಿಗೆ ಬಂದವರೇ ಬ್ರಹ್ಮಪದವಿಯಲ್ಲಿ ಕುಳಿತುಕೊಳ್ಳುವವರು. ಬ್ರಹ್ಮಪದವಿಯಲ್ಲಿ ಅವರು ಅನುಭವಿಸುವ ಸುಖವೇ ಸಹಭೋಗ. ಭೋಗಾಶ್ಚ ಯೇ ಯಾನಿ ಚ ಕರ್ಮಜಾತಾನ್ಯನಾದ್ಯನಂತಾನಿ ಮಮೇಹ ಸಂತಿ | ಮದಾಜ್ಞಯಾ ತಾನ್ಯಖಿಲಾನಿ ಸಂತು ಧಾತುಃ ಪದೇ ತೇ ಸಹಭೋಗನಾಮ|| ಸಕಲ ಪ್ರಾಣಿಗಳಿಂದ ಮಾಡಲ್ಪಡುವ ಪುಣ್ಯ ಕರ್ಮಗಳಿಗೆ ಫಲರೂಪವಾಗಿ ಲಭಿಸುವ ಅನಾದಿಯಾದ ಮತ್ತು ಅನಂತಕಾಲದ ಭೋಗಗಳೆಲ್ಲ ನನ್ನ ವಶದಲ್ಲಿರುವುವು; ಅವೆಲ್ಲ ನನ್ನ ಅಪ್ಪಣಿಯ ಬ್ರಹ್ಮಪದವಿ ಪಡೆಯುವವರ ಅಧೀನದಲ್ಲೂ ಇರುವುವು; ಅದ್ದರಿಂದ ಬ್ರಹ್ಮಪದವಿಗೆ 'ಸಹಭೋಗ' ಎಂದು ಹೆಸರು. ಸಹಭೋಗಹೊಂದುವುದೆಂದರೆ ಬ್ರಹ್ಮಪದವಿ ಪಡೆಯುವುದೆಂದೇ ಅರ್ಥ. ಆಶ್ಚರ್ಯವೆಂದರೆ ಈ ವಾಯುದೇವರು ತಮ್ಮ ಮೂರೂ ಅವತಾರಗಳಲ್ಲಿ ಬ್ರಹ್ಮಪದವಿಯನ್ನು ಶ್ರೀಹರಿಯ ಅನುಗ್ರಹರೂಪವಾಗಿ ಪಡೆದಿದ್ದಾರೆ. ಒಂದೊಂದಾಗಿ ಗಮನಿಸೋಣ. ☀️☀️☀️☀️☀️☀️☀️☀️ ಶ್ರೀಹನುಮಾವತಾರದಲ್ಲಿ ಬ್ರಹ್ಮಪದವಿ 🔅🔅🔅🔅🔅 ವಾಯುದೇವರ 1ನೇ ಅವತಾರ ಹನುಮಂತ. ಅವನ ಚರಿತ್ರೆ ತಿಳಿಸುವ ಆದಿಕಾವ್ಯ ರಾಮಾಯಣ. ಅಂತಹಾ ವಾಲ್ಮೀಕಿ ರಾಮಾಯಣದಲ್ಲಿ ಉತ್ತರ ಕಾಂಡದಲ್ಲಿ ಈ ಅನುಗ್ರಹದ ಉಲ್ಲೇಖವಿದೆ. सर्वासु विद्यासु तपोविधाने प्रस्पर्धते ऽयो हि गुरुं सुराणाम् । सो ऽयं नवव्याकरणार्थवेत्ता *ब्रह्मा भविष्यत्यपि ते प्रसादात् ।। ७.३६.४८ ।।* ಎಲ್ಲಾ ವಿದ್ಯೆಗಳಲ್ಲಿ ತಪಸ್ಸಿನಲ್ಲಿ ದೇವಗುರುವನ್ನೂ ಯಾರು ಸ್ಪರ್ಧಿಸುವನೋ ಅಂತಹ ನವವ್ಯಾಕರಣಾರ್ಥಬಲ್ಲ ಈ ಹನುಮಂತ ನಿನ್ನ ಪ್ರಸಾದದಿಂದ ಮುಂದೆ ನಿನ್ನ ಪ್ರಸಾದದಿಂದ ಚತುರ್ಮುಖನಾಗುತ್ತಾನೆ. ಹೀಗೆ ರಾಮದೇವರಿಂದಲೇ ಬ್ರಹ್ಮಪದವಿ ಪಡೆದ ‌ಧೀರ ಈ ಹನುಮಂತದೇವರು. ( ಸ್ವತಃ ಶೃಂಗೇರಿಸ್ವಾಮಿಗಳೂ ಕೂಡಾ ಈ ವಿಷಯವನ್ನು ಪುಷ್ಟೀಕರಿಸಿದ್ದು ವೀಡಿಯೋ ಉಪಲಬ್ಧವಿದೆ.) ಭೀಮಾವತಾರದಲ್ಲಿ ಬ್ರಹ್ಮಪದವಿ 🔅🔅🔅🔅🔅🔅🔅🔅🔅 ವಾಯುದೇವರ 2ನೇ ಅವತಾರವಾದ ಭೀಮಸೇನನ ಚರಿತ್ರೆ ತಿಳಿಸುವುದು. ಮಹಾಭಾರತ . ಅಂತಹಾ ಮಹಾಭಾರತದಿಂದಲೂ ಭೀಮಸೇನ ಪಾರಮೇಷ್ಠ್ಯ ಪದವಿ ಪಡೆಯುತ್ತಾನೆನ್ನುವುದು ತಿಳಿಯಬಹುದು. ಮಹಾಭಾರತದ ಸಭಾಪರ್ವದಲ್ಲಿ ಬರುವ ಪ್ರಸಂಗಗಳು. ರಾಜಸೂಯ ಯಾಗಕ್ಕೆ ಸಲಹೆ ಕೊಟ್ಟ ಶ್ರೀಕೃಷ್ಣನಿಗೆ ಯುಧಿಷ್ಠಿರ ಭಯದಿಂದ ಹೇಳುವ ಮಾತು. शममेव परं मन्ये शमात्क्षेमं भवेन्मम। आरम्भे पारमेष्ठ्यं तु न प्राप्यमिति मे मतिः।। 2-15-5 ಹೇ...ಕೃಷ್ಣ ಶಮವನ್ನೇ ನಾನು ಉತ್ತಮವೆಂದು ಭಾವಿಸುವೆ. ಏಕೆಂದರೆ ಶಮದಿಂದಲೇ ಕ್ಷೇಮವಾಗುವುದು. ಈ ಪಾರಮೇಷ್ಠ್ಯ ಅರ್ಥಾತ್(ಬ್ರಹ್ಮಪದವಿಯನ್ನು ಕೊಡುವ ಈ ರಾಜಸೂಯ) ಆರಂಭಿಸಿ ಪೂರೈಸಲಾಗದು ಎಂದು ನನ್ನ ಮನಸ್ಸು ಹೇಳುತ್ತಿದೆ. ಇಲ್ಲಿ ಸ್ಪಷ್ಟವಾಗಿ ರಾಜಸೂಯ ಪಾರಮೇಷ್ಠ್ಯಪದವಿ ಕೊಡುವಂಥದ್ದು ಎಂದು ಸೂಚಿಸಿದ್ದಾರೆ ವೇದವ್ಯಾಸರು. प्राप्नुयात्स यशो दीप्तं तत्र यो विघ्नमाचरेत्। जयेद्यश्च जरासन्धं स सम्राण्णियतं भवेत्।। 2-15 ರಾಜಸೂಯಕ್ಕೆ ವಿಘ್ನನಾದ ಜರಾಸಂಧನ ವಧೆ ಮಾಡಿದವನೇ ನಿಶ್ಚಯವಾಗಿ ಸಮ್ರಾಟ್ ಆಗುತ್ತಾನೆ. ಯಶಸ್ಸನ್ನು ದೀಪ್ತಿಯನ್ನೂ ಪಡೆಯುತ್ತಾನೆ. ಇಲ್ಲಿ ಸ್ಪಷ್ಟವಾಗಿ ಪಾರಮೇಷ್ಠ್ಯವಾದ ರಾಜಸೂಯಕ್ಕೆ ವಿಘ್ನನಾದ ಜರಾಸಂಧನ ವಧೆಮಾಡುವವನು ರಾಜಸೂಯಯಾಗದ ಫಲವಾದ ಸಮ್ರಾಟ್ ಪದವಿ ಅರ್ಥಾತ್ ಪಾರಮೇಷ್ಠ್ಯ ಪದವಿ ಹೊಂದುವನು ಎಂದು ಹೇಳಿದಂತಾಗುವುದು. न शक्योऽसौ रणे जेतुं सर्वैरपि सुरासुरैः। प्राणयुद्धेन जेतव्यः स इत्युपलभामहे।। ಮುಂದೆ ಶ್ರೀಕೃಷ್ಣ ಹೇಳುವ ಮಾತು. ಎಲ್ಲಾ ಸುರರಿಂದಲೂ ರಣದಲ್ಲಿ ಈ ಜರಾಸಂಧ ಗೆಲ್ಲಲಾಗದವನು. ಅವನನ್ನು ಪ್ರಾಣಯುದ್ಧದಿಂದಲೇ ಗೆಲ್ಲತಕ್ಕದ್ದು.( ಪ್ರಾಣ ಭೀಮಸೇನ) ಕೊನೆಗೆ ಜರಾಸಂಧನ ವಧೆ ಮಾಡಿ ಸಮ್ರಾಟ್ ಆದವನು ಈ ಭೀಮಸೇನನೇ ಎನ್ನುವುದು ಜಗತ್ಪ್ರಸಿದ್ಧ. ಹಾಗಾಗಿ ಮಹಾಭಾರತವೇ ತಿಳಿಸುವಂತೆ ಜರಾಸಂಧನ ವಧೆ ಮಾಡುವ ಮೂಲಕ ಬ್ರಹ್ಮಪದವಿ ಪಡೆದವನು ಭೀಮ. ಇದನ್ನು ತಿಳಿಸಿದವನೂ ಶ್ರೀಕೃಷ್ಣನೇ. ಶ್ರೀಮಧ್ವಾವತಾರದಲ್ಲಿ ಬ್ರಹ್ಮಪದವಿ 🔅🔅🔅🔅🔅🔅🔅🔅 ಶ್ರೀವಾಯುದೇವರ 3ನೇ ಅವತಾರವಾದ ಶ್ರೀಮಧ್ವಾಚಾರ್ಯರ ಚರಿತ್ರೆ ಹೇಳುವ ಐತಿಹಾಸಿಕ ಕೃತಿ ಶ್ರೀನಾರಾಯಣಪಂಡಿತಾಚಾರ್ಯರು ರಚಿಸಿದ ಸುಮಧ್ವವಿಜಯ. सहभोगमनन्यलभ्यमस्मै हनुमद्रूपवते ददौ पुरा हि। अनवेक्ष्य परं स्वभीष्टकर्त्रे प्रतिदातुं हरिरैधयत्तमेव।। (ನವಮ ಸರ್ಗ) ಶ್ರೀವೇದವ್ಯಾಸದೇವರು, ತಮ್ಮ ಅಪ್ಪಣೆಯನ್ನು ನರವೇರಿಸಿದ ಶ್ರೀಮಧ್ವಾಚಾರ್ಯರಿಗೆ ನೀಡಲು ಅನುರೂಪವಾದ ಬೇರಾವ ವಸ್ತುವನ್ನೂ ಕಾಣದೆ, ತಾವು ಹಿಂದೆ ಅವರ ಹನುಮದ್ರೂಪಕ್ಕೆ ಕೊಟ್ಟಿದ್ದ, ಇತರರಿಗೆ ಎಂದೂ ನೀಡದ 'ಸಹಭೋಗ'ವೆಂಬ ಚತುರ್ಮುಖ ಬ್ರಹ್ಮಪದವಿಯನ್ನೇ, ವಿಶೇಷವಾಗಿ ಪುನಃ ಕರುಣಿಸಿದರು. ಹೀಗೆ ಸ್ವತಃ ವೇದವ್ಯಾಸದೇವರಿಂದ ಬ್ರಹ್ಮಪದವಿಯನ್ನು ಪಡೆದವರು ಶ್ರೀಮಧ್ವಾಚಾರ್ಯರು. 🔅🔅🔅🔅🔅🔅🔅🔅🔅🔅 ಹೀಗೆ ಭಗವಂತನಾದ ನಮ್ಮ ಶ್ರೀಹರಿ ನಮ್ಮ ಶ್ರೀವಾಯುದೇವರಿಗೆ ಮಾಡಿದ ಪರಮಾನುಗ್ರಹಧಾರೆ ಇದು. ಮೂರವತಾರದಲ್ಲೂ ನಾಲ್ಮೋಗನ ಪದವಿಯ ಮಹಾವೈಭವ. ಇಂಥಾ ಭಕ್ತೋತ್ತಮರು ಜಗತ್ತಿನಲ್ಲಿ ಮತ್ತೊಬ್ಬರಿಲ್ಲ. ಇಂತಹಾ ಶ್ರೀಹರಿದಯಿತವರಿಷ್ಠರಾದ ಸರ್ವಜ್ಞರಾದ ಜಗದ್ಗುರುಗಳಾದ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರನ್ನು ಕುಲಗುರುಗಳನ್ನಾಗಿ ಹೊಂದಿದ ನಮ್ಮ ಭಾಗ್ಯಕ್ಕೆ ಎಣೆಯೇ ಇಲ್ಲ. ಪರಂ ಶ್ರೀಮತ್ಪೂರ್ಣಪ್ರಮತಿಗುರುಕಾರುಣ್ಯಸರಣಿಂ ಪ್ರಪನ್ನಾ: ಮಾನ್ಯಾ ಸ್ಮ: ವಿಜಯದಾಸರು ಈ ಮಾತು ಮತ್ತೆ ಮತ್ತೆ ಪ್ರಾರ್ಥಿಸೋಣ. ಅನಂತ ಜನುಮಕ್ಕೆ ನೀನೇ ಗುರುವೆಂಬ ಜ್ಞಾನವೇ ಕೊಡು ಜೀಯಾ ವಿಜಯವಿಠ್ಠಲದಾಸ|| ✍️ಅನಿಲ ಜೋಷಿ •|| मध्वो देदीप्यतेसौ जगति विजयते सत्सभामङ्गलाय ||•
***




*******
(read in English)
click
  MADHWAKYADASOHAM   in English
*******

No comments:

Post a Comment