Thursday, 1 August 2019

raghuprema teertharu 1943 adoni bidi sanyasi peetha tyaga kudli mutt bhadrapada shukla pratipada ರಘುಪ್ರೇಮ ತೀರ್ಥರು








ಶ್ರೀ ರಘುಪ್ರೇಮತೀರ್ಥರು
ಹೆಸರು : ಶ್ರೀ ಮುತ್ತಗಿ ಶ್ರೀನಿವಾಸಾಚಾರ್ಯರು
ತಂದೆ : ಶ್ರೀ ಸ್ವಾಮಿರಾಯಾಚಾರ್ಯ
ಗೋತ್ರ : ಅಗಸ್ತ್ಯ
ಅವತಾರ : ಶಾಲಿವಾಹನ ಶಕೆ 1782 ಕ್ರಿ ಶ 1860 ಸಂವತ್ಸರ : ಸಿದ್ಧರ್ಥಿ
ಮಾಸ : ಆಶ್ವಯುಜ ಪಕ್ಷ :ಕೃಷ್ಣ ತಿಥಿ : ಅಷ್ಟಮೀ ವಾರ : ಬುಧವಾರ
ನಕ್ಷತ್ರ : ಪುನರ್ವಸು ೪ನೇ ಚರಣ ರಾಶಿ : ಕರ್ಕಾಟಕ ಲಗ್ನ : ವೃಶ್ಚಿಕ
ಜ್ಞಾನ ವೈರಾಗ್ಯ ಸಂಪನ್ನರಾದ ಶ್ರೀ ರಘುಪ್ರೇಮತೀರ್ಥರ ಅವತಾರದ ಸುದಿನ

ಮಂಗರಾಯಕೃಪಾಪಾತ್ರಂ ಯಾದವಾದ್ರಿನಿವಾಸಿನಮ್ l
ಸರ್ವಶಾಸ್ತ್ರಮಿತದ್ರುಂ ತಂ ರಘುಪ್ರೇಮಮುನಿಂ ಭಜೇ ll

" ಗುರುಗಳು "
ಶ್ರೀ ಹತ್ತಿಬೆಳೆಗಲ್ ನರಸಿಂಹಾಚಾರ್ಯರು 
( ಶ್ರೀ ಅರಳೀಕಟ್ಟೀ ಆಚಾರ್ಯರು )
ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರು
ಕುಲ ಗುರುಗಳು : ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು
ಆಶ್ರಮ ಗುರುಗಳು : ಶ್ರೀ ರಘುದಾಂತತೀರ್ಥರು
ಆಶ್ರಮ ನಾಮ : ಶ್ರೀ ರಘುಪ್ರೇಮತೀರ್ಥರು
ಅಂಶ : ಶ್ರೀ ಇಂದ್ರದೇವರು
ಆವೇಶ : ಶ್ರೀ ಮಹಾರುದ್ರದೇವರು
" ನಿರ್ಯಾಣ "
ಶಾಲಿವಾಹನ ಶಕೆ 1865 ನೇ ಸ್ವಭಾನು ನಾಮ ಸಂವತ್ಸರದ ಭಾದ್ರಪದ ಶುದ್ಧ ಪ್ರತಿಪದ ( ಕ್ರಿ ಶ 1943 )




info from FB Madhwanet--->

Shri Raghuprema Theertharu
bhAdrapada shukla pratipada is the ArAdhane of shri raghuprEma tIrtharu.

parampare: Had adorned the pItA of kUDali Arya akshObhya tIrtha maTa and then relinquished and remained a biDi sanyAsigaLu.
vidyA gurugaLu: araLikaTTe narasimhAchArya of hattibeLagal
Ashrama gurugaLu: shri raghudAnta tIrtharu
Period: 1860-1943

chiMtAmaNiM svabhaktAnAM kalpavRukShaMcha kAmadaM |
svAminaM tvAM raghuprEma teerthaM vaMdE hyabhIShTadaM ||
ಚಿಂತಾಮಣಿಂ ಸ್ವಭಕ್ತಾನಾ೦ ಕಲ್ಪವೃಕ್ಷ೦ ಚ ಕಾಮದಮ್ ।

ಸ್ವಾಮಿನಂತ್ಯಾಂ ರಘುಪ್ರೇಮತೀರ್ಥಂ ವಂದೇಹ್ಯಭೀಷ್ಟದಮ್ ।।

Shri raghuprEma tIrtharu was a great j~jAni, thapOniDhi, vairAgya purusha, avaDhutha shirOrathna and an aparOxa jnAni. He followed chathurAshrama dharma as prescribed in shastras with utmost sincerity. He was a living embodiment of bhAgavatha dharma. Shri Raghuprema Teertha, being a soul of top order, always preached & practiced the motto "SARAKSHITA RAKSHATI YOHIGARBHE". He thoroughly believed in surrendering to ALMIGHTY in every aspect of life. In short, he lead a life meditating the main tenets of dvaita sidhdhAnta, i.e. shri Hari's Karthruthva, Pujyathva, Bhokthruthva, and Swamithva in every action.
As the saying goes "hanumana mathave hariya mathavu – hariya mathave hanumana mathavu", Shri raghuprEma tIrtharu was bestowed with the divine blessings of Shri vAyu who protected him through the thick & thin.
He was born to a pious couple Smt. Tungabai & Shri Swamirayacharya in the year 1860 A.D. (Ashvayuja Krishna Paksha, Ashtami, Wedenesday) by the blessings of Lord Srinivasa in ayachoti village of Cuddapah district and thus was aptly named by his parents as Srinivasa. Srinivasa was given in adoption to a wealthy & childless couple, Smt. Radhabai and Shri Muthigi Gundacharya. He studied under Shri Vedavyasacharya and mastered subjects like Mani manjari, Shri Sumadhwa Vijaya, Shri Rukmineesha Vijaya, Shri Sudha, Upanishads, etc.
As the destiny had it, Srinivasa was ill treated by his adopted parents. Hence he decided to go on a pilgrimage to overcome these hardships. This proved to be a blessing in disguise. He reached Pampa kshetra during his pilgrimage and performed seva for 40 days. His selfless submission to Shri Mukhyaprana proved fruitful. Shri Vayu appeared in Srinivasa's dream and blessed him by saying "Kacherige Ba kudure koduththene" which was an indication to visit holy places of shri hari & His dasas to get utmost spiritual enlightenment.
Srinivasa then started his journey in search of his adhyathma Guru. He visited several holy places across the country from south to north and east to west for almost 8 years. As Shri Madhwa says, "Bahuchitra jagath bahudhakaranath", Srinivasa enjoyed & relished the beautiful creations of Almighty during his journey. He paid due respects to Great Masters and kshetrabhimani devathas all along his journey. During his visit to Kashi, he came across many people who in disguise of sages craved for materialistic things. This depressed Srinivasa since he could not find his Guru and made him submit to manObhimani Shri Rudhra. He then had an indication that "the time is not yet ripe for him to get his adhyathma Guru". Srinivasa did not stop here. He increased his prayers and as a result of this saw a Banyan tree (Ashwaththa Vruksha) in his dream and was directed to go there. He was happy with the indication but it was not as easy as it sounded. Srinivasa once again started searching for his adhyathma Guru with a new ray of hope. Several years passed by and on one fine day, with the generous blessings of Shri hari-vAyu-guru's, Srinivasa found his adhyathma Guru Shri AraLikatti (Ashwaththa katti) Narasimhacharya of Hattibelegal, a place near Adoni. The life of Srinivasa changed thereafter. He became one of the forefront disciples of Shri Narasimhacharya. He dedicated his entire life to his Guru.
The guru prapthi prakaranam of Shri Madhanuru Vishnu Teertha states that a Guru is like a precious pearl in the ocean that is not easy to find. Only a person who dives deeper into the ocean can find it. The charithra of Shri Raghuprema Teertha depicts the depth of his sadhana in flow with bhAgavatha Dharma.
In the year 1920 A.D. (Roudri Nama Samvatsara, Adhika Shravana, Krishna Paksha, Sapthami, Sukravara – Friday), Srinivasacharya was bestowed the sanyAsa dIksha by Shri Raghudhantha Teertha & Shri Raghukantha Teertha of Kudli Akshobhya Teertha maTa. He later relinquished the pIta and remained a biDi sanyAsigaLu.
There are many instances in the life of Shri Raghuprema Teertha that shows that this learned soul had attained the utmost level of spirituality – aparOxa jnAna. The charithra by Shri Swamirayacharya (his poorvashrama son) aptly describes each such instance. Few such instances are:
Guru Prapthi Prakaranam
Guru Seva Prakaranam
Seva to Shri Mangaraya at Mangarayakote (Shri Vyasaraja Prathistita Shri Pranadeva)
AparOxa jnAna at Mangarayakote
VanaprasthAshrama Acharana
SanyasAshrama Acharana
brIndAvana Pravesha
He installed rAma, sIta, AnjanEya and lakshmaNa vigrahAs next to which he entered brindAvana later.
He has also installed vigrahAsa of purandara dAsaru, vijaya dAsaru and mrithika brindAvana of rAyaru near the same place at vijaya dAsara kaTTe in adOni.
shri Raghuprema Teertha entered the brundavanam during the year 1943 A.D. (Svabhanunama Samvatsara, Bhadrupada, Shukla Paksha, Pratipadha). He is bestowing his Grace to all the devotees even to date.
shri raghuprEma tIrtha guruvantargata, bhArati ramaNa mukhyaprANAntargata, sitA pate shri vaikunTa rAma dEvara pAdAravindakke gOvinda, gOvinda...
shri krishNArpaNamastu...
**********

|| ಶ್ರೀ ರಘುಪ್ರೇಮ ತೀರ್ಥ ಸ್ತೋತ್ರಂ ||

ವಂದೇ ಬ್ರಹ್ಮೇಂದ್ರ ರುದ್ರಾದಿ ವಂದ್ಯ ಶ್ರೀಪಾದ ಪಂಕಜಂ |
ಶಂಖ ಚಕ್ರ ಗದಾ ಪದ್ಮ ಧಾರಿಣಂ ಹಯ ಶೀರ್ಷಕಂ || ೧ ||

ಶ್ರೀಮದಾನಂದ ತೀರ್ಥಾಖ್ಯಂ ಪ್ರಣಮಾಮಿ ಜಗದ್ಗುರುಂ |
ಯದ್ವದಶ್ಚಂದ್ರಿಕಾ ಭಕ್ತ ಸಂತಾಪಂ ವಿನಿಕೃಂತತಿ || ೨ ||

ರಘುಕಾಂತಾಖ್ಯ ರಘುದಾಂತಾಖ್ಯ ಯತಿದ್ವಯ ಸಕಾಶತ: |
ರಘುಪ್ರೇಮ ಮುನಿರ್ಜಾತೋ ಅರಣಿಭ್ಯಾಂ ಪಾವಕೋಯಥಾ |
 || ೩||

ರಘುದಾಂತ ಕರಾಬ್ಜೋತ್ಥಮ್ ಶಮಾದಿ ಗುಣ ಬೃಂಹಿತಂ |
ರಘುಪ್ರೇಮ ಮುನಿಂ ವಂದೇ ರಾಮ ಪಾದೈಕ ಸಂಶ್ರಯಂ || ೪ ||

ಶ್ರೀಮದಾನಂದ ತೀರ್ಥಾರ್ಯ ಸಂಪ್ರದಾಯ ಪಯೋರ್ಣವೇ |
ಸುಧೇವಹಿ ಸಮುದ್ಭೂತೋ ರಘುಪ್ರೇಮಾಖ್ಯ ಸನ್ಮುನಿ: || ೫ ||

ಕಲಿಕಲ್ಮಷ ಯೋಗೇನ ದುಷ್ಟಚೇತಸ್ಕ ಸಜ್ಜನಾನ್ |
ಉದ್ಧರ್ತುಂ ಪ್ರೇಷಿತೋನೂನಂ ಹರಿಣಾಹಂಸರಾಟ್ ಭುವಂ || ೬ ||

ಗುರುವರ್ಯ ಮಹಾಭಾಗ ಸುಜನೇಷು ದಯಾಂಕುರು |
ಪ್ರಾರ್ಥಯಾಮಿ ದಯಾಸಿಂಧೋ ಮಾಮುದ್ಧರ ಭವಾರ್ಣ್ವಾತ್ || ೭ ||

ದಾರಿದ್ರ್ಯ ದು:ಖ ಸಂತಪ್ತಾ ಯೇಜನಾ: ಪರ್ಯುಪಾಸತೇ |
ತೇಷಾಂ ದು:ಖ ಪ್ರಹಾಣಂಸ್ಯಾತ್ ಕ್ಷಿಪ್ರಮ್ ಮೌನೇರನುಗ್ರಹಾತ್ || ೮ ||

ಯೇನರಾಸ್ತರ್ತು ಮಿಚ್ಛಂತಿ ಸುದುಸ್ತರ ಭವಾರ್ಣವಂ |
ಸಮಾಶ್ರಯೇ ಯುರ್ನೌ ಕಾಂ ತೇ ರಘುಪ್ರೇಮಾರ್ಯ ರೂಪಿಣೀಂ || ೯ ||

ಯಸ್ಯಾಂಘ್ರಿ ಧೂಲಿ ಪರಿಭೂಷಿತ ಗಾತ್ರವಂತ: |
ಯಸ್ಯಾಂಘ್ರಿ ಧಾವನ ಜಲಂ ಸಿರಸಾವಹಂತ: |
ಯಸ್ಯಾಂಘ್ರಿ ಕಂಜ ಮಧು ಸೇವನ ಭೃಂಗ ಭೂತಾ: |
ತೇ ನಿತ್ಯ ಸೌಖ್ಯ ಮುಪಯಾಂತಿ ಹರೇ: ಪ್ರಸಾದಾತ್ || ೧೦ ||

ಅಘಾದ್ರೇರ್ದಾರಣೀ ದಕ್ಷ ದೃಷ್ಟಿ ವಜ್ರಿಣಮರ್ಥಯೇ |
ಪ್ರಣತಾರ್ತಿಂ ಪ್ರಣಸ್ಯಾಶು ಪ್ರಣತಾನುದ್ಧರೇತ್ಯಹಂ | ೧೧ ||

ಶಿಷ್ಯೋಹಂ ತನಯೋಹಂ ತೇ ಕಿಂಕರೋಹಮ್ ತವಾನಘ |
ಪ್ರಸೀದ ಕೃಪಯಾಮಹ್ಯಂ ಬಿಂಬರೂಪಂ ಪ್ರದರ್ಶಯ || ೧೨ ||

ಅಸ್ಮಿನ್ ವೃಂದಾವನೇ ಪುಣ್ಯೇ ಸೇವಿತ: ಪದ್ಮಜಾದಿಭಿ: |
ಏಕದ್ವಿತ್ರಿ ಚತುರ್ಭಿಶ್ಚ ಪಂಚಾಷ್ಟ ದಶರೂಪಕೈ: || ೧೩ ||

ಚತುರ್ವಿಂಶತಿ ರೂಪೈರ್ವಾ ಏಕಪಂಚಾ ಶತಾ ತಥಾ |
ಶತರೂಪೈ ಸಹಸ್ರೈಶ್ಚ ರೂಪಕೈ ರಮತೇ ಹರಿ: || ೧೪ ||

ಹಯಗ್ರೀವಶ್ಚ ಕೃಷ್ಣೌಚ ಲಕ್ಷ್ಮೀ ನಾರಾಯಣಸ್ತಥಾ |
ಧನ್ವಂತರಿಶ್ಚ ರಾಮೌಚ ಕಪಿಲೋದತ್ತ ಏವಚ || ೧೫ ||

ನೃಸಿಂಹ ಭೂಧರೇ ಹಂಸೋ ರೂಪೈರೇತೈರಧೋಕ್ಷಜ |
ಸದಾ ಸನ್ನಿಹಿತೋ ಭೂತ್ವಾ ಕ್ರೀಡತೇ ಭಗವಾನ್ ಸ್ವಯಂ || ೧೬ ||

ಯೆ ನರಾ: ಶ್ರದ್ಧಯಾಯುಕ್ತಾ: ಮುನಿರಾಜಂ ಭಜಂತಿತೇ |
ಜ್ಞಾನ ವಿಜ್ಞಾನಮಾರೋಗ್ಯಂ ಧೈರ್ಯಂ ಕೀರ್ತಿಂಚ ಸಂತತಿಂ |೧೭||

ಈಶತ್ವಂಚ ವಶಿತ್ವಂಚ ಶ್ರಿಯಂ ಕ್ಲೇಶ ವಿಮೋಚನಂ |
ಸರ್ವ ಸಿದ್ಧಿಂಚ ಮುಕ್ತಿಂಚ ಲಭಂತೇಹಿ ಯಥೇಪ್ಸಿತಮ್ || ೧೮ ||

ದಿವ್ಯ ಸಾಧನ ಸಮ್ಪತ್ಯಾ ತುಷ್ಟ ಪ್ರಾಣ ಪ್ರಸಾದತ: |
ಚತು: ಶತಾಬ್ಧಿ ಪರ್ಯಂತಂ ಭಜಕೇಷ್ಟ ಪ್ರದಾಯಕ: || ೧೯ ||

ವೃಂದಾವನೇತ್ರ ತಿಷ್ಠೇತ ರಾಜಮಾನೋ ಮಹಾಮುನಿ: |
ಸ್ಮಾರಯನ್ನರ್ಜುನಂ ಭಕ್ತ್ಯಾ ವೈರಾಗ್ಯೇಣ ಶುಕಂತಥಾ || ೨೦ ||

ಯತ್ಫಲಂನಾ ಸಮಾಪ್ನೋತಿ ಪ್ರಸವದ್ಗೋ ಪ್ರದಕ್ಷಿಣಾತ್ |
ಪ್ರದಕ್ಷಿಣಾತ್ತದಾಮಾಪ್ನೋತಿ ಗುರುವೃಂದಾವನಸ್ಯ ವೈ: || ೨೧ ||

ಬ್ರಹ್ಮ ರಾಕ್ಷನ ವೇತಾಲ ಭೂತ ಪ್ರೇತಾದಯೋ ಗಣಾ: |
ನಾಮೋಚ್ಚಾರಣ ಮಾತ್ರೇಣ ಪಲಾಯಂ ತೇನ ಸಂಶಯ: || ೨೨||

ಛಂದ ಶಬ್ದಾದಿ ಶಾಸ್ತ್ರೇಷು ಗತಿ ಹೀನೋಸ್ಮಿ ಬಾಲಕ: |
ಗುರ್ವನುಗ್ರಹ ಲೇಶೇನ ರಚಿತಾ ಸ್ತೋತ್ರಮಾಲಿಕಾ || ೨೩ ||

ಏಕವಾರಂ ಪಠೇನ್ನಿತ್ಯಂ ಲಭತೇ ಜ್ಞಾನಮುತ್ತಮಂ |
ದ್ವಿವಾರಂ ತು ಪಠೇನ್ನಿತ್ಯಂ ಮುಚ್ಚತೇ ಸರ್ವ ಬಂಧನಾತ್ || ೨೪ ||

ತ್ರಿವಾರಂ ಯ: ಪಠೇನ್ನಿತ್ಯಂ ತ್ರಿಕಾಲಜ್ಞೋ ಭವಿಷ್ಯತಿ |
ಪಂಚವಾರಂ ಜಪೇನ್ನಿತ್ಯಂ ಮುಚ್ಚತೇ ಪಂಚಪಾತಕಾತ್ || ೨೫ ||

ಸಪ್ತಧಾ ದಶಧಾ ಚೈವ ಭಕ್ತ್ಯಾ ಜಪತಿ ನಿತ್ಯಶ: |
ಧುನೋತಿ ಸರ್ವ ಪಾಪಾನಿ ನಯಾತಿ ಯಮ ಮಂದಿರಂ || ೨೬ ||

ಚಂದ್ರ ಸೂರ್ಯೋ ಪರಾಗೇಚ ವ್ಯತಿಪಾತೇಚ ವೈಧೃತಾ |
ಜನ್ಮರ್ಕ್ಷೆ ವಾಥ ಪುಷ್ಯಾರ್ಕೇ ಜಪಾಚ್ಛಿದ್ಧಿರ್ಭವಿಷ್ಯತಿ || ೨೭ ||

ಪುರಶ್ಚರಣ ರೀತ್ಯಾವಾ ಶತಮಷ್ಟೋತ್ತರಂ ತಥಾ |
ಏಕದ್ವಿತ್ರಿ ಚತು: ಪಂಚ ಸಪ್ತಕಂ ಮಂಡಲಂ ತಥಾ || ೨೮ ||

ವರ್ಷಮೇಕಂ ಜಪೇದ್ಯೋ ವೈ ಪುರುಷಸ್ತತ್ ಪ್ರಭಾವತ: |
ಸಂಪ್ರಾಪ್ಯ ಸರ್ವಲೋಕಾನ್ ಸ:ಕ್ರಮಾದ್ಯಾತಿ ಪರಂ ಪದಂ || ೨೯ ||

ತ್ರಕ್ಷೋಪಾಂಗಲ ವೇನ ಮನ್ಮಥ ಮುಕಾರ್ಷಿದ್ ಭಸ್ಮಸಾದಂಜಸಾ |
ತದ್ವದ್ ಭಕ್ತ ಮನೋರುಹಾನ್ ಕುವಿಷಯಾನ್ ಕಾಮಾನ್ ಪ್ರದಾಹ್ಯಾಮಲಂ || ೩೦ ||

ಭಕ್ತಿ ಜ್ಞಾನ ವಿರಕ್ತಿ ಭಾಗ್ಯ ಮುಚಿತಂ ದತ್ವಾ ಭವಾರ್ಣೋ ಧೃತಿಂ |
ಕರ್ತಾಯಂ ಮುನಿಪುಂಗವೋ ಅತ್ರ ಭಗವಾನ್ ಪ್ರಾಣೇಶ್ವರ ಸಾಕ್ಷ್ಯಲಂ || ೩೧ ||

ಇತೀದಂ ರಚಿತಂ ಸ್ತೋತ್ರಂ ಸ್ವಾಮಿರಾಯಾಭಿದೇನವೈ |
ಪಠನಾಲ್ಲಭತೇ ಸೌಖ್ಯಮ್ ಶಾಶ್ವತಮ್ ಚೈಹಿಕಂ ತಥಾ || ೩೨ ||

ಚಿಂತಾಮಣಿಂ ಸ್ವಭಕ್ತಾನಾಂ ಕಲ್ಪವೃಕ್ಷಂಚ ಕಾಮದಂ |
ಸ್ವಾಮಿನಂ ತ್ವಾಂ ರಘುಪ್ರೇಮ ತೀರ್ಥಂ ವಂದೇಹ್ಯಭೀಷ್ಟದಂ || ೩೩ ||

|| ಇತಿ ಶ್ರೀ ಮುತ್ತಿಗಿ ಸ್ವಾಮಿರಾಯಾಚಾರ್ಯ ವಿರಚಿತ
ಶ್ರೀ ರಘುಪ್ರೇಮ ತೀರ್ಥ ಸ್ತೋತ್ರಂ ಸಂಪೂರ್ಣಂ ಶ್ರೀ ಕೃಷ್ಣಾರ್ಪಣಮಸ್ತು ||
********

ಶ್ರೀ ರಘುಪ್ರೇಮತೀರ್ಥರ ಸ್ಮರಣೆ bidi sanyasi sripadaraja mutt
ಶ್ರೀ ಸ್ವಾಮಿರಾಯಾಚಾರ್ಯ ಮುತ್ತಗಿ 

ಹಗಳಿರಲು ಭಜಿಸಿರೋ ರಘುಪ್ರೇಮತೀರ್ಥರನು ।
ಬಗೆ ಬಗೆಯ ಸುಖಗಳನು ಕೊಡುವರಿವರು ।। ಪಲ್ಲವಿ ।।

ದಾನ ಧರ್ಮಗಳಲ್ಲಿ ।
ಭಾನುಜಗನು ನೆನಿಸಿ ।
ಮಾನಸ ಪೂಜೆಯಲಿ ನಿರುತರಾಗಿ ।।
ಏನು ಹೇಳಲಿ ಇವರ ಮಹಿಮೆಯ ಅಲ್ಪರಿಗೆ ।
ಏನೇನು ತೋರದೋ ಜ್ಞಾನಿಗಲ್ಲದಲೆ ।। ಚರಣ ।।

ಯಾದವಗಿರಿಯಲ್ಲಿ ಬಂದ ಹರಿ ಭಕ್ತರಿಗೆ ।
ಆದರೂಪಚಾರವನು ಮಾಡುತ ಅವರುಗಳ ।
ಬಾಧೆಗಳ ಪರಿಹರಿಸಿ ।।
ಮೋದವನು ಕೊಡುವಂಥ ಸಾಧು ।
ಯತಿಗಳಿವರು ಸಂದೇಹವಿಲ್ಲ ।। ಚರಣ ।।

ಸೃಷ್ಟಿ ಲಯ ಚಿಂತನೆಯ ಗುಟ್ಟಾಗಿ ಮಾಡುತ ।
ದಿಟ್ಟ ಮನಸ್ಸಿನಿಂದ ಕುಳಿತುಕೊಂಡು ।
ಸೃಷ್ಟಿ ಒಡೆಯಾ ಶ್ರೀ ತಿರುಮಲಾಪುರ ವಾಸನಲ್ಲಿ ।

ಮನಸಿಟ್ಟು ಹರಿ ಪದವನ್ನೇ ಸೇರಿದವರಿವರು ।। ಚರಣ ।।
*********

Song 85

ಶ್ರೀ ರಘುಪ್ರೇಮತೀರ್ಥರ ಸ್ಮರಣೆ bidi sanyasi sripadaraja mutt
ಶ್ರೀ ಲಕುಮೀಶಾಂಕಿತ ಶ್ರೀ ಕುರಡಿ ರಾಘವೇಂದ್ರಾಚಾರ್ಯರು 
ರಾಗ : ಹಂಸಾನಂದಿ ತಾಳ : ಆದಿ

ಶ್ರೀ ರಘುಪ್ರೇಮ ಗುರುವರ್ಯರ ಪದ ।
ವಾರಿಜಗಳ ಭಜಿಸೋ ಸಂತತ ಸುಖಿಸೋ ।। ಪಲ್ಲವಿ ।।

ಆರರ ಬಾಧೆಗಳ್ದೂರೋಡಿಸಿ ಬಲು ।
ಘೋರ ದುರಿತಗಳ್ತರಿವಾ ಸುಖ ಈತ ಗರೆವಾ ।। ಅ ಪ ।।

ರಾಯಚೂಟಿಲಿ ಜನಿಸಿ ತ್ವರಿತದಿ ।
ತಾಯಿಹೀನ ನೆನಿಸಿ ।
ಮಾಯಗಾತಿ ಸಾಕು ತಾಯಿಯು ಗೋಳಿಡೆ ।।
ಕಾಯ ಕ್ಲೇಶ ಪಟ್ಟಾ ಹರಿ ಮೊರೆಯಿಟ್ಟಾ ।। ಚರಣ ।।

ವೆಂಕಟೇಶನೊರದಿ ಜನ್ಮತಾಳಿ ।
ವೆಂಕಟ ನಾಮದೀ ।
ಸಂಕಟ ನಾನಾ ಕಂಟಕದಲಿ । ವೈ ।
ಕುಂಠನ ಕೃಪೆ ಪಡೆದಾ ವ್ರತಧಾರಿಯಾದ ।। ಚರಣ ।।

ಸಕಲ ಕ್ಷೇತ್ರ ಚರಿಸೀ ತೀರ್ಥಾದೀ ।
ಬಕವೈರಿ ಶಾಸ್ತ್ರ ಗ್ರಹಿಸೀ ।
ಮುಕುತಿಯ ಶಾಶ್ವತ ಸುಖಕೇ ಸೇವಿಸೇ ।
ಅಖಿಲ ಜೀವೇಶನೊಲಿದಾ ಹಂಪೆಲಿ ನಲಿದಾ ।। ಚರಣ ।।

ಹತ್ತಿಬೆಳೆಗಲ್ಗೆ ಬಂದೂ ಅರಳೀಕಟ್ಟೀ ।
ಉತ್ತಮಾರ್ಯರಲಿ ನಿಂದೂ ।
ಭಕ್ತಿಲಿ ಇವರ ನಿತ್ಯವೂ ಸೇವಿಸೇ ।
ನಿತ್ಯ ತೃಪ್ತನೊಲಿದಾ ಯದುಗಿರಿಗೆ ಬಂದಾ ।। ಚರಣ ।।

ತೋಷದಿ ಪತ್ನಿಯ ಕೂಡೀ ಸಂತತ ।
ಭಾಸುರ ವ್ರತ ನೇಮ ಮಾಡಿ ।
ಭಾಸುರರಿಗೆ ದಿವ್ಯ ವಾಸಕೆ ಗೃಹ ವಸ್ತು ।
ರಾಶಿ ಸರ್ವಸ್ವ ನೀಡ್ದಾ ಹರಿಕೃಪೆ ಪಡೆದಾ ।। ಚರಣ ।।

ಆದವಾನಿಯಲ್ಲಿ ಸೀತಾರಾಮರ ।
ಮೋದದಿ ಸ್ಥಾಪಿಸಿಲ್ಲೀ ।
ಸಾಧುವರ್ಯ ರಘುದಾಂತತೀರ್ಥರಿಂದಾ ।
ಅದಕರೋದ್ಭವನೀತಾ ಮಳಖೇಡದೀತಾ ।। ಚರಣ ।।

ಸಕಲ ಸುಖವ ಗರೆವಾ ಇವರನು ನಂಬಲು ।
ಲಕುಮೀಶನೇ ಒಲಿವಾ ।
ಮುಕುತಿಯ ಪಥ ತೋರಿ ವಿಕಸಿತ ಮನವಿತ್ತು ।
ಯುಕುತಿ ಧ್ಯಾನವೀವ ಭಕುತರ ಪೊರೆವಾ ।। ಚರಣ ।।

**************


!! ಅಪಾರ ಮಹಿಮೆಯ ಮಹಾನ್ ತಪಸ್ವಿ ಶ್ರೀರಘುಪ್ರೇಮತೀರ್ಥ ಶ್ರೀಪಾದರು !!

ಬರಹ : ಪಿ.ಲಾತವ್ಯ ಆಚಾರ್ಯ ಉಡುಪಿ

ಪ್ರಾಣದೇವರ ಅನನ್ಯ ಉಪಾಸಕರಾಗಿ ಭಕ್ತರಿಗೆ ಸಂಜೀವಿನಿಯಾಗಿ ಮಧ್ವಪರಂಪರೆಯಲಿ ವಜ್ರದಂತೆ ಮಿನುಗುತ್ತಿರುವವರು !

ಜ್ಞಾನ ಸೇವೆ ಸಾಧನೆಗಳ ಹಿಮಾಲಯ ಪರ್ವತ 
ಶ್ರೀರಘುಪ್ರೇಮತೀರ್ಥರು !!

ಶ್ರೀಹರಿಯ ಇಚ್ಛೆಯಂತೆ 
ಬಾಲ್ಯ ಯೌವನದಲ್ಲಿ ಸಂಸಾರದ ಸುಳಿಗೆ ಸಿಲುಕಿದರೂ ನಲುಗದ ಮುತ್ತಿಗಿ ಆಚಾರ್ಯರು !

ಎಡೆಬಿಡದೆ ಗುರುಸೇವೆ ಸಲ್ಲಿಸುತ್ತಾ ಛಲದಿಂದ ಅಧ್ಯಯನವನ್ನು ಸಾಗಿಸುತ್ತಿದ್ದರು !!

ವೃತ ನಿಯಮಾದಿಗಳನ್ನು ನಿಷ್ಠೆಯಿಂದ ನಡೆಸುತ್ತಾ
ಏಳು ವರ್ಷಗಳ ಕಾಲ ಕಾಲ್ನಡಿಗೆಯಲ್ಲೇ 
ಆಸೇತುಹಿಮಾಲಯ ಪರ್ಯಂತ ಸುತ್ತಿದರು !

ಸತ್ಯಪಥ ಅರಸುತ್ತಾ
ತೀರ್ಥಕ್ಷೇತ್ರಗಳ ದರ್ಶಿಸಿ ಶ್ರೀಹರಿಯ ವಿಶೇಷ ಒಲುಮೆಗೆ ಪಾತ್ರರಾಗಿ
ಸಿದ್ದಿಸಾಧಕರೆನಿಸಿದರು !!

ಕೊನೆಗೊಂದು ದಿನ
ಮಾತೆಯ ಕರೆಗೆ ಓಗೊಟ್ಟು ಮತ್ತೆ ತವರೂರಿಗೆ ಆಗಮನವಾಯಿತು !

ಅನುಷ್ಠಾನ ಉಪಾಸನೆ ಕಠಿಣ ವೃತನಿಯಮದಲಿ ಆಚಾರ್ಯರ ಸಾಧನೆ ಮತ್ತೆ ಮುಂದುವರೆಯಿತು !!

ಶ್ರೀಹರಿಯ ಸೇವಾ ನಿಮಿತ್ತ ಭೂಮಿ ಬಂಗಾರ ಕಾಸು ಎಲ್ಲವನೂ ಧಾರೆಯೆರೆದರು !

ಲೋಕ ಕಲ್ಯಾಣ ನಿಮಿತ್ತ ಹೋಮ ಹವನಾದಿ ನಡೆಸಲು ಗೋಪಾಳವ ಆರಂಭಿಸಿದರು !!

ಮಧ್ವಮತದ ತಿರುಳ ಮರೆತು ಉತ್ಕೃಷ್ಟತೆಯ ಮತ್ತಿನಲ್ಲಿ ಮೆರೆಯುತ್ತಿದ್ದ ಮಹನೀಯರಿಗೆ ಸತ್ಯ ಸಿದ್ದಾಂತವನ್ನು ಮನ ಮುಟ್ಟುವಂತೆ ತಿಳಿಹೇಳಿದರು !

ಮತ್ತೆಯೂ ಮುಂದುವರಿದ
ಸಂಸ್ಥಾನ ಶ್ರೀಮಂತಿಕೆ ಸಮೂಹದ ಆಕ್ರಮಣಕ್ಕೆ ಜಗ್ಗದೇ ತತ್ವಜ್ಞಾನದ ರಾಮ ಬಾಣದಲಿ ಎದುರಾಳಿಗಳನು ಮಣಿಸಿದರು !!

ಪರ್ವದಿನವೊಂದರಲ್ಲಿ
ಶ್ರೀರಘುಕಾಂತ ತೀರ್ಥರ ಆಗ್ರಹ ಅಪೇಕ್ಷೆಗೆ ತಲೆಬಾಗಿ ಸನ್ಯಾಸಾಶ್ರಮ ಸ್ವೀಕರಿಸಿದರು !

ಶ್ರೀ ಆರ್ಯಅಕ್ಷೋಭ್ಯತೀರ್ಥ ಸಂಸ್ಥಾನದ ಯತಿಗಳಾಗಿ ಶ್ರೀರಘುಪ್ರೇಮತೀರ್ಥರೆಂದು ಪಟ್ಟಾಭಿಶಿಕ್ತರಾದರು !!

ಘೋರ ವಿಷವನುಣಿಸಿ 
ಶ್ರೀರಘುಪ್ರೇಮ ತೀರ್ಥರನು ಕೊನೆಗೊಳಿಸಲು ಸ್ವಧರ್ಮಿಗಳು 
ವಿಶ್ವಪ್ರಯತ್ನ ನಡೆಸಿದರು !

ತನ್ನ ಆಪ್ತ ಉಪಾಸಕರನ್ನು ಮುಖ್ಯಪ್ರಾಣದೇವರು ಕೈ ಪಿಡಿದು ಉಳಿಸಿ ವಿಷವ ದೂರ ಸರಿಸಿದರು !!

ಅಪಾರ ತಪಃಶಕ್ತಿಯಿಂದ ಬಾನಾಮತಿಯಂತಹ ಭೀಕರ ದುಷ್ಟಶಕ್ತಿಗಳ 
ನಿಗ್ರಹಿಸಿ ಮುಗ್ದ ಸ್ತ್ರೀಗೆ ಹೊಸ ಬದುಕ ರೂಪಿಸಿದರು !

ಜಾತಿಮತ ಬೇಧವಿಲ್ಲದೆ 
ನಂಬಿ ಬರುತ್ತಿದ್ದ ನೂರಾರು ಭಕ್ತರ ಇಂಬನು ಕರುಣಿಸಿ ಕಾಮಧೇನುವಾದರು !!

ತನ್ನ ಆಯುಷ್ಯದ ಒಂದಿಷ್ಟು ಭಾಗ ಧಾರೆಯೆರೆದು ಆಪ್ತ ಸ್ನೇಹಿತನಿಗೆ ಪುನರ್ಜನ್ಮ ನೀಡಿದ ಮಹಾತ್ಮರು ಇವರು !

ಊರು ಪರ ಊರಲ್ಲಿ
ತಿಮ್ಮಪ್ಪ,ಪ್ರಾಣದೇವರ,
ರಾಯರ ಮಠ ಮಂದಿರ ನಿರ್ಮಿಸಿ ನಾಡಲ್ಲಿ ಭಕ್ತಿಯ ಜ್ಯೋತಿ ಬೆಳಗಿಸಿದರು !!

ಪುಣ್ಯ ದಿನವೊಂದರಲ್ಲಿ
ಭಗವಂತನ ದಿವ್ಯ ರಥ ಆಗಮಿಸಲು ಶಿಷ್ಯ ವೃಂದವ ಕರೆಸಿ ಎಲ್ಲರ ಹರಸಿ ರಥವನೇರಿದರು !

ನಿಶೆಯ ಸರಿಸಿ ಜ್ಞಾನದ ಬೆಳಕ ನೀಡೆಂದು ಇಂದು ಬೇಡುತ್ತಿರುವ ಭಕ್ತರನು ವೃಂದಾವನದ ಸನ್ನಿಧಿಯಲ್ಲಿ ಹರಸುತಿರುವರು... ಕಲಿಯುಗದ ಕಲ್ಪವೃಕ್ಷ 
ಶ್ರೀರಘುಪ್ರೇಮ ತೀರ್ಥರು !!

ನಮ್ಮ ಕುಟುಂಬದ ಸರ್ವತೋಮುಖ ಹಿತಕ್ಕಾಗಿ ಸದಾ 
ಪ್ರಾರ್ಥಿಸುತ್ತಿರುವ ವಿದ್ವಾನ್ 
ಶ್ರೀಕರ್ನೂಲ ಶ್ರೀನಿವಾಸ ಆಚಾರ್ಯರ ಅಂತರ್ಗತ ಭಗವಂತನ 
ಪಾದಕಮಲಗಳಿಗೆ ಅರ್ಪಣೆ.
************

ಸೂರಿಗಳರಸ ಶ್ರೀ ನರಸಿಂಹಾರ್ಯರ ।
ಸಾರಿ ಭಜಿಸಿ ಬೇಡಿರೈ ।।
🙏🙏🙏
ಇಂದು ಶ್ರೀ  ಜಂಬುಖಂಡಿ ಆಚಾರ್ಯರ ಶಿಷ್ಯರಾದ ಮತ್ತು ಶ್ರೀ ಮುತ್ತಗಿ ಶ್ರೀನಿವಾಸ ಆಚಾರ್ಯರ ಗುರುಗಳಾದ ಶ್ರೀ ಅರಳಿಕಟ್ಟಿ ನರಸಿಂಹ ಆಚಾರ್ಯರು ಹರಿ ಪುರಕ್ಕೆ ತೆರಳಿದ ದಿನ.
ಇವರು ಶ್ರೀ ಕೌತಾಳಂ ಗುರು ಜಗನ್ನಾಥ ದಾಸರ ಸಮಕಾಲೀನರು.
ಅವರ ಬಗ್ಗೆ ನನ್ನ ಅಲ್ಪಮತಿಗೆ ಬಂದಷ್ಟು ತಿಳಿಸುವ ಪ್ರಯತ್ನ.
ಇವರು ಹತ್ತಿಬೆಳಗಲ್ ಗ್ರಾಮದವರು.ಇದು ಆಲೂರು ಹತ್ತಿರ ಬರುತ್ತದೆ.
ಇವರ ಮಹಾತ್ಮೆ ಸಹ ಬಹಳವಾಗಿ ಇದೆ.
ಇವರ ಜೀವನಚರಿತ್ರೆ ಒಮ್ಮೆ ಅವಲೋಕಿಸಿದಾಗ ನಮಗೆ ಮುಖ್ಯವಾಗಿ ಎರಡು ವಿಷಯಗಳು ಅತ್ಯಂತ ಮಹತ್ವವುಳ್ಳ ದ್ದಾಗಿ ಕಂಡು ಬರುತ್ತದೆ.
ಮೊದಲನೆಯದು
ಶ್ರೀ ಪ್ರಾಣದೇವರ ಸ್ವಪ್ನ ಸೂಚನೆಯಂತೆ ತಮ್ಮ ಇಡಿ ಸರ್ವಸ್ವ ವನ್ನು ದಾನ ಮಾಡಿದ್ದು.. ಮತ್ತು 
ತಮ್ಮ ಪ್ರಾಣವನ್ನು ಸಹ ಆ ಪ್ರಾಣದೇವರಿಗೆ ಒಪ್ಪಿಸಿದ ಮಹಾನುಭಾವರು ಅವರು.
ಎಲ್ಲವನ್ನೂ ದಾನ ಮಾಡಿದ್ದು ಯಾವುದೇ ತರಹದ ಪ್ರಚಾರಕ್ಕೆ,ಅಥವಾ ಪ್ರತಿಷ್ಟೆಗಲ್ಲ.
ನಾವಾದರೆ ಕಿಂಚಿತ್ತೂ ಕೊಟ್ಟರು ಅದರ ಬಗ್ಗೆ ನಮಗೆ ಎಲ್ಲರು ಹೊಗಳಲಿ ಎನ್ನುವ ಮನೋಭಾವನೆ ಇರುತ್ತದೆ. 
ಇವರು ಅಂತಹ ಅಪೇಕ್ಷಿತ ಎಂದು ಪಟ್ಟವರಲ್ಲ.ಮಾಡುವ ಪ್ರತಿಯೊಂದು ಕಾರ್ಯವು ಆ ಮುಖ್ಯ ಪ್ರಾಣನ ಆಜ್ಞೆ ಮತ್ತು ಅವನ ಅಂತರ್ಯಾಮಿಯಾದ ಶ್ರೀ ಹರಿಯ ಪ್ರೀತಿಗಾಗಿಯೇ ಹೊರತು ಬೇರೆ ಯಾವ ಉದ್ದೇಶ ಇಲ್ಲ.
ಇಂತಹ ವಿರಕ್ತ ಮನೋಭಾವನೆ ಬರುವದು ಬಹಳ ವಿರಳ..
ಎರಡನೇ ಯದು..
 ನಲವತ್ತು ದಿನಗಳವರೆಗೆ ಉಪವಾಸ ಕೈಗೊಂಡಿರುವದು.
ಶ್ರೀ ಮುಖ್ಯ ಪ್ರಾಣನ ವಿಶೇಷ ಉಪಾಸಕರು ಇವರಾಗಿದ್ದರಿಂದ ಅವರ ಸೂಚನೆ,ಮತ್ತು ಆಜ್ಞೆಯಂತೆ ೪೦ದಿನಗಳ ಕಾಲ ಉಪವಾಸ ಕೈಗೊಂಡರು.ನಿತ್ಯವು ಶಿಷ್ಯ ಪರಿವಾರದವರ ಜೊತೆಯಲ್ಲಿ ಕುಳಿತು ತೀರ್ಥ ತೆಗೆದುಕೊಂಡು ಗಂಧ,ಅಕ್ಷತಾದಿಗಳನ್ನು ಲೇಪನ ಮಾಡಿಕೊಂಡು ಅವರ ಜೊತೆಯಲ್ಲಿ ಎಲೆ ಹಾಕಿಸಿಕೊಂಡು ಭೋಜನಕ್ಕೆ ಕೂಡಬೇಕು.ಯಾವ ಪದಾರ್ಥಗಳನ್ನು ತಾವು ಹಾಕಿಸಿಕೊಳ್ಳದೇ ಶಿಷ್ಯರು ಊಟವಾಗುವವರೆಗು ಕುಳಿತು ನಿತ್ಯ ಉಪವಾಸ ಮಾಡುತ್ತಾ ಇದ್ದರು.
ಆಕಸ್ಮಿಕವಾಗಿ ಯಾರಾದರೂ ಬಡಿಸುವಾಗ ಒಂದು ಪದಾರ್ಥಗಳು ಇವರ ಎಲೆಗೆ ಬಿತ್ತು ಅಂದರೆ ಅದನ್ನು ಸ್ವೀಕರಿಸಿ, ತಮ್ಮ ಉಪವಾಸ ಭಂಗವಾಯಿತೆಂದು ತಿಳಿದು ಮತ್ತೆ ಪುನಃ   ಮರುದಿನದಿಂದ ೪೦ ದಿನಗಳವರೆಗೆ ಉಪವಾಸ ಪ್ರಾರಂಭಿಸುತ್ತಾ ಇದ್ದರು.
ಆಚಾರ್ಯರ ಈ ಕ್ರಮದಲ್ಲಿ ಅನೇಕ ಸಲ ಭಂಗವಾದದ್ದು ಉಂಟು.
ಹೀಗೆ ಕೊನೆಯಲ್ಲಿ ೪೦ದಿನಗಳ ಕಾಲ ಉಪವಾಸ ವ್ರತವನ್ನು ಆಚರಿಸಿ, ತಮ್ಮ ಶಿಷ್ಯ ಮಂಡಳಿಯ ಸಮಕ್ಷಮದಲ್ಲಿ ಪ್ರಾತಃಕಾಲ,ವಿಳಂಬಿ ನಾಮ ಸಂವತ್ಸರ,ಆಷಾಡ ಮಾಸದ ಶುಕ್ಲ ಪಕ್ಷದ ಪಾಡ್ಯ ದಿನದಂದು ಶ್ರೀ ಹರಿಯ ಪುರಕ್ಕೆ ತೆರಳಿದ ಮಹಾನುಭಾವರು.
ತಮ್ಮ ಕಾಲಾನಂತರದಲ್ಲಿ ತಮ್ಮ ಭಕ್ತನಾದ ಬಡಿಗೇರ ರುದ್ರಪ್ಪನಿಗೆ ದರುಶನ ಕೊಟ್ಟ ಮಹಾನುಭಾವರು.

ಒಂದು ಏಕಾದಶಿ, ಮಾಡಲು ಹೌಹಾರುವ ಅಥವಾ ಎರಡು ಬಂದರಂತು ಕೇಳುವದೇ ಬೇಡ.
 ೪೦ದಿನಗಳ ಉಪವಾಸ ವ್ರತವನ್ನು ಮಾಡಿದ ಆಚಾರ್ಯರ ಈ ಸಾಧನೆ ನಮ್ಮ ಮತಿಗೆ ನಿಲುಕದ ವಿಷಯ.
ಹತ್ತಿ ಬೆಳಗಲ್ ಆಚಾರ್ಯರ ಶಿಷ್ಯರಲ್ಲಿ ಪ್ರಮುಖವಾಗಿ ಶ್ರೀ ಬಿಲ್ವಪತ್ರಿ ಆಚಾರ್ಯರು, ಮತ್ತು ಶ್ರೀ ಮುತ್ತಿಗೆ ಆಚಾರ್ಯರು (ಮುಂದೆ ಇವರೇ ಆಶ್ರಮ ಸ್ವೀಕರಿಸಿ ಶ್ರೀ ರಘುಪ್ರೇಮ ತೀರ್ಥರೆಂದು ಪ್ರಸಿದ್ಧಿ ಯಾಗಿ ಆದವಾನಿಯಲ್ಲಿ ವೃಂದಾವನ ಪ್ರವೇಶವನ್ನು ಮಾಡಿದ ಮಹಾನುಭಾವರು)
ಇಂತಹ ಮಹಾಮಹಿಮರ ಸ್ಮರಣೆ ಪ್ರಾತಃಕಾಲ ನಮ್ಮ ಜೀವನ ಧನ್ಯ..
🙏ಶ್ರೀ ಕೃಷ್ಣಾರ್ಪಣಮಸ್ತು🙏
ನಮ್ಮ ದಾಸರಾಯರು ಹೇಳಿದಂತೆ ಇಂತಹ
||ಪರಮಭಾಗವತರನು ಕೊಂಡಾಡುವದು ಪ್ರತಿದಿನವು||

🙏 ಶ್ರೀ ಹತ್ತಿ ಬೆಳಗಲ್ ಆಚಾರ್ಯ ಗುರುಭ್ಯೋ ನಮಃ🙏
****

year 2021

 6 sep 2021

" ಶ್ರೀ ಇಂದ್ರದೇವರ ಅಂಶ ಸಂಭೂತರಾದ ಶ್ರೀ ರಘುಪ್ರೇಮತೀರ್ಥರು  "

" ದಿನಾಂಕ : 07.09.2021 ಮಂಗಳವಾರ - ಶ್ರೀ ಪ್ಲವ ನಾಮ ಸಂವತ್ಸರ ದಕ್ಷಿಣಾಯನ ವರ್ಷ ಋತು ಭಾದ್ರಪದ ಶುದ್ಧ ಪ್ರತಿಪದ - ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ರಘುಪ್ರೇಮ ತೀರ್ಥರ ಆರಾಧನಾ ಮಹೋತ್ಸವ., ಆದೋನಿ - ಆಂಧ್ರಪ್ರದೇಶ " 

ಚಿಂತಾಮಣಿಂ ಸ್ವಭಕ್ತಾನಾ೦

ಕಲ್ಪವೃಕ್ಷ೦ ಚ ಕಾಮದಮ್ ।

ಸ್ವಾಮಿನಂತ್ಯಾಂ ರಘುಪ್ರೇಮತೀರ್ಥಂ

ವಂದೇಹ್ಯಭೀಷ್ಟದಮ್ ।।

" ಶ್ರೀ ಲಕುಮೀಶಾಂಕಿತ ಶ್ರೀ ಕುರಡಿ ರಾಘವೇಂದ್ರಾಚಾರ್ಯರು "

ರಾಗ : ಹಂಸಾನಂದಿ        ತಾಳ : ಆದಿ 

ಶ್ರೀ ರಘುಪ್ರೇಮ ಗುರುವರ್ಯರ ಪದ ।

ವಾರಿಜಗಳ ಭಜಿಸೋ

ಸಂತತ ಸುಖಿಸೋ ।। ಪಲ್ಲವಿ ।।

ಆರರ ಬಾಧೆಗಳ್ದೂರೋಡಿಸಿ ಬಲು ।

ಘೋರ ದುರಿತಗಳ್ತರಿವಾ

ಸುಖ ಈತ ಗರೆವಾ ।। ಅ ಪ ।।

ರಾಯಚೂಟಿಲಿ ಜನಿಸಿ ತ್ವರಿತದಿ ।

ತಾಯಿಹೀನ ನೆನಿಸಿ ।

ಮಾಯಗಾತಿ ಸಾಕು

ತಾಯಿಯು ಗೋಳಿಡೆ ।।

ಕಾಯ ಕ್ಲೇಶ ಪಟ್ಟಾ ಹರಿ

ಮೊರೆಯಿಟ್ಟಾ ।। ಚರಣ ।।

ವೆಂಕಟೇಶನೊರದಿ ಜನ್ಮತಾಳಿ ।

ವೆಂಕಟ ನಾಮದೀ ।

ಸಂಕಟ ನಾನಾ ಕಂಟಕದಲಿ । ವೈ ।

ಕುಂಠನ ಕೃಪೆ ಪಡೆದಾ

ವ್ರತಧಾರಿಯಾದ ।। ಚರಣ ।।

ಸಕಲ ಕ್ಷೇತ್ರ ಚರಿಸೀ ತೀರ್ಥಾದೀ ।

ಬಕವೈರಿ ಶಾಸ್ತ್ರ ಗ್ರಹಿಸೀ ।

ಮುಕುತಿಯ ಶಾಶ್ವತ ಸುಖಕೇ ಸೇವಿಸೇ ।

ಅಖಿಲ ಜೀವೇಶನೊಲಿದಾ

ಹಂಪೆಲಿ ನಲಿದಾ ।। ಚರಣ ।।

ಹತ್ತಿಬೆಳೆಗಲ್ಗೆ ಬಂದೂ ಅರಳೀಕಟ್ಟೀ ।

ಉತ್ತಮಾರ್ಯರಲಿ ನಿಂದೂ ।

ಭಕ್ತಿಲಿ ಇವರ ನಿತ್ಯವೂ ಸೇವಿಸೇ ।

ನಿತ್ಯ ತೃಪ್ತನೊಲಿದಾ

ಯದುಗಿರಿಗೆ ಬಂದಾ ।। ಚರಣ ।।

ತೋಷದಿ ಪತ್ನಿಯ ಕೂಡೀ ಸಂತತ ।

ಭಾಸುರ ವ್ರತ ನೇಮ ಮಾಡಿ ।

ಭಾಸುರರಿಗೆ ದಿವ್ಯ ವಾಸಕೆ ಗೃಹ ವಸ್ತು ।

ರಾಶಿ ಸರ್ವಸ್ವ ನೀಡ್ದಾ

ಹರಿಕೃಪೆ ಪಡೆದಾ ।। ಚರಣ ।।

ಆದವಾನಿಯಲ್ಲಿ ಸೀತಾರಾಮರ ।

ಮೋದದಿ ಸ್ಥಾಪಿಸಿಲ್ಲೀ ।

ಸಾಧುವರ್ಯ ರಘುದಾಂತತೀರ್ಥರಿಂದಾ ।

ಕರೋದ್ಭವನೀತಾ - 

ಮಳಖೇಡದೀತಾ ।। ಚರಣ ।।

ಸಕಲ ಸುಖವ ಗರೆವಾ

ಇವರನು ನಂಬಲು ।

ಲಕುಮೀಶನೇ ಒಲಿವಾ ।

ಮುಕುತಿಯ ಪಥ ತೋರಿ

ವಿಕಸಿತ ಮನವಿತ್ತು ।

ಯುಕುತಿ ಧ್ಯಾನವೀವ

ಭಕುತರ ಪೊರೆವಾ ।। ಚರಣ ।। 

" ಶ್ರೀ ರಘುಪ್ರೇಮತೀರ್ಥರ ಸಂಕ್ಷಿಪ್ತ ಚರಿತ್ರೆ "

ಹೆಸರು : ಶ್ರೀ ಮುತ್ತಗಿ ಶ್ರೀನಿವಾಸಾಚಾರ್ಯರು 

ತಂದೆ : ಶ್ರೀ ಸ್ವಾಮಿರಾಯಾಚಾರ್ಯ 

ಗೋತ್ರ : ಅಗಸ್ತ್ಯ 

ಅವತಾರ : ಶಾಲಿವಾಹನ ಶಕೆ 1782 ಕ್ರಿ ಶ 1860

ಸಂವತ್ಸರ : ಸಿದ್ಧರ್ಥಿ 

ಮಾಸ : ಆಶ್ವಯುಜ 

ಪಕ್ಷ :ಕೃಷ್ಣ 

ತಿಥಿ : ಅಷ್ಟಮೀ 

ವಾರ : ಬುಧವಾರ 

ನಕ್ಷತ್ರ : ಪುನರ್ವಸು ೪ನೇ ಚರಣ 

ರಾಶಿ : ಕರ್ಕಾಟಕ 

ಲಗ್ನ : ವೃಶ್ಚಿಕ 

" ಗುರುಗಳು " 

ಶ್ರೀ ಹತ್ತಿಬೆಳೆಗಲ್ ನರಸಿಂಹಾಚಾರ್ಯರು 

( ಶ್ರೀ ಅರಳೀಕಟ್ಟೀ ಆಚಾರ್ಯರು )

ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರು 

ಕುಲ ಗುರುಗಳು : 

ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು 

ಆಶ್ರಮ ಗುರುಗಳು : ಶ್ರೀ ರಘುದಾಂತತೀರ್ಥರು 

ಆಶ್ರಮ ನಾಮ : ಶ್ರೀ ರಘುಪ್ರೇಮತೀರ್ಥರು 

" ನಿರ್ಯಾಣ "

ಶಾಲಿವಾಹನ ಶಕೆ 1865 ನೇ ಸ್ವಭಾನು ನಾಮ ಸಂವತ್ಸರದ ಭಾದ್ರಪದ ಶುದ್ಧ ಪ್ರತಿಪದ ( ಕ್ರಿ ಶ 1943 )

" ಶ್ರೀ ಸ್ವಾಮಿರಾಯಾಚಾರ್ಯ ಮುತ್ತಗಿ ".... 

ಹಗಳಿರಲು ಭಜಿಸಿರೋ 

ರಘುಪ್ರೇಮತೀರ್ಥರನು ।

ಬಗೆ ಬಗೆಯ ಸುಖಗಳನು 

ಕೊಡುವರಿವರು ।। ಪಲ್ಲವಿ ।।

ದಾನ ಧರ್ಮಗಳಲ್ಲಿ ।

ಭಾನುಜಗನು ನೆನಿಸಿ ।

ಮಾನಸ ಪೂಜೆಯಲಿ ನಿರುತರಾಗಿ ।।

ಏನು ಹೇಳಲಿ ಇವರ 

ಮಹಿಮೆಯ ಅಲ್ಪರಿಗೆ ।

ಏನೇನು ತೋರದೋ 

ಜ್ಞಾನಿಗಲ್ಲದಲೆ ।। ಚರಣ ।।

ಯಾದವಗಿರಿಯಲ್ಲಿ 

ಬಂದ ಹರಿ ಭಕ್ತರಿಗೆ ।

ಆದರೂಪಚಾರವನು 

ಮಾಡುತ ಅವರುಗಳ ।

ಬಾಧೆಗಳ ಪರಿಹರಿಸಿ ।।

ಮೋದವನು 

ಕೊಡುವಂಥ ಸಾಧು ।

ಯತಿಗಳಿವರು 

ಸಂದೇಹವಿಲ್ಲ ।। ಚರಣ ।।

ಸೃಷ್ಟಿ ಲಯ ಚಿಂತನೆಯ 

ಗುಟ್ಟಾಗಿ ಮಾಡುತ ।

ದಿಟ್ಟ ಮನಸ್ಸಿನಿಂದ 

ಕುಳಿತುಕೊಂಡು ।

ಸೃಷ್ಟಿ ಒಡೆಯಾ ಶ್ರೀ -

ತಿರುಮಲಾಪುರ ವಾಸನಲ್ಲಿ ।

ಮನಸಿಟ್ಟು ಹರಿ ಪದವನ್ನೇ -

ಸೇರಿದವರಿವರು ।। ಚರಣ ।।

ಆಚಾರ್ಯ ನಾಗರಾಜು ಹಾವೇರಿ 

ಗುರು ವಿಜಯ ಪ್ರತಿಷ್ಠಾನ

***

" ಉಗಾಭೋಗ "

" ಶ್ರೀ ರಾಘುಪ್ರೇಮತೀರ್ಥಗುರುಭ್ಯೋನಮಃ "

ರಚನೆ : 

ಆಚಾರ್ಯ ನಾಗರಾಜು ಹಾವೇರಿ

ಮುದ್ರಿಕೆ : 

ವೇಂಕಟನಾಥ 

ರಘುಪ್ರೇಮ ಗುರುವರ್ಯ ನಾ ನಮಿಪೆ ।

ರಘುಕುಲತಿಲಕನ ಯಾದವಗಿರಿಯಲಿ ಮುದದಿ ಸ್ಥಾಪಿಸಿ ।

ರಾಘವನ ಪೌತ್ರನಾವೇಶದಿ ಮೆರೆವಾ ಸುರೇಂದ್ರನೇ ।

ವಿಘ್ನೋಘಾ೦ಧಕಾರ ಶರಶ್ಚಂದಿರ ವಂದ್ಯ -

ವೇಂಕಟನಾಥನಂಘ್ರಿ ಭಜಕ ರಘುಪ್ರೇಮಾರ್ಯ ।।

ಗುರು ವಿಜಯ ಪ್ರತಿಷ್ಠಾನ

***

following is received in whatsapp

ಶ್ರೀಶ್ರೀಮದ್ರಘುಪ್ರೇಮತೀರ್ಥರ ಚರಿತಾಮೃತ -೧

 ವಿಷಯಸೌಜನ್ಯ:

ಶ್ರೀ ಮುತ್ತಿಗಿ ಸ್ವಾಮಿರಾಯಾಚಾರ್ಯರ

ಸುಮಸೌರಭ

ಶ್ರೀಪರಮಾತ್ಮನ ಅತ್ಯರ್ಥಪ್ರಸಾದ, ಶ್ರೀ ವಾಯುದೇವರ ಅನುಗ್ರಹ ಹೊಂದುವುದೇ ಗುರಿಯಾಗಿ, ಜೀವನಾದ್ಯಂತ " ಸರಕ್ಷಿತಾ ರಕ್ಷತಿ ಯೋಹಿಗರ್ಭೇ"ಎಂಬುವ ಶ್ರೀಮದ್ಭಾಗವತ ವಾಖ್ಯವನ್ನು ದೃಢೀಕರಿಸಿಕೊಂಡು ಸಾಧನ ಮಾಡಿದ ಜ್ಞಾನಭಕ್ತಿವೈರಾಗ್ಯ ಸಾಕಾರ ಮೂರ್ತಿಗಳು ಧೀರೋದಾತ್ತಯತಿಗಳು ಶ್ರೀ ಕೂಡ್ಲಿ ಆರ್ಯ ಅಕ್ಷೋಭ್ಯತೀರ್ಥ ಮಠಾಧೀಶರು ಶ್ರೀಶ್ರೀಶ್ರೀಮದ್ರಘುಪ್ರೇಮತೀರ್ಥರ ಚರಿತಾಮೃತವನ್ನು ಸಂಕ್ಷಿಪ್ತವಾಗಿ "ಸುಮಸೌರಭ" ಬೆಳಕಿನಲ್ಲಿ ಶ್ರೀಗಳವರ ಆರಾಧನಾ  ಪರ್ವಕಾಲವನ್ನು ಪುರಸ್ಕರಿಸಿಕೊಂಡು ಪ್ರಸ್ತುತಿ ಪಡಿಸುವ ಕಿರುಪ್ರಯತ್ನ ಸಜ್ಜನರು ಹರಸಲಿಯೆಂದು ಪ್ರಾರ್ಥಿಸುತ್ತಿದ್ದೇನೆ.🙏🙏

ಚಿಂತಾಮಣಿಂ ಸ್ವಭಕ್ತಾನಾಂ

ಕಲ್ಪವೃಕ್ಷಂಚ ಕಾಮದಮ್|

ಸ್ವಾಮಿನಂ ತ್ವಾಂ ರಘುಪ್ರೇಮತೀರ್ಥಂ

ವಂದೇಹ್ಯಭೀಷ್ಟದಮ್|| 🙏🙏

                         ***

ಹಂಸಕುಲೋದ್ಭೂತನೆ ಹಂಸಕುಲದೀಪಕನೆ

ಹಂಸಮಂತ್ರವನು ಜಪಿಸುತ್ತ ಜಪಿಸುತ್ತ ಕುಳಿತಿರ್ಪಹಂಸಪದ ಪಾಂಸು ಪಾಲಿಸಲಿ🙏

■◆■◆■◆■◆■◆■◆■◆■◆■◆■◆


ಭರತಖಂಡದ ಕರ್ನಾಟಕ ರಾಜ್ಯ ಬಳ್ಳಾರಿಜಿಲ್ಲೆಯ ಹೂವಿನಹಡಗಲಿಯಲ್ಲಿ, ಅಗಸ್ತ್ಯ ಗೋತ್ರದ ಸದಾಚಾರಪರಾಯಣ ರಾದ ಶ್ರೀ ಸ್ವಾಮಿರಾಯಾಚಾರ್ಯ ತುಂಗಮ್ಮ ಪುಣ್ಯದಂಪತಿಗಳು ವಾಸಿಸುತ್ತಿದ್ದರು. ತುಂಗಾಬಾಯಿಯನ್ನು ಒಂದು ಬ್ರಹ್ಮ ರಾಕ್ಷಸವು ಪೀಡಿಸುತ್ತಾ, ಅಕೆಯ ಮೂರುನಾಲ್ಕು ಗರ್ಭಚ್ಚೇದನೆ ಮಾಡಿತ್ತು. ಪುನಃ ಗರ್ಭಧರಿಸಲು, ಗರ್ಭಛೇದನ ವಾದೀತೆಂಬಭಯದಿ ದಂಪತಿಗಳು ಶ್ರೀ ಮಂತ್ರಾಲಯಕ್ಕೇ ಬಂದು ಆಪನ್ನರಕ್ಷಕರಾದ ಕರುಣಾಸಂದ್ರರಾದ ಶ್ರೀರಾಘವೇಂದ್ರ ಗುರುರಾಜರ ಸೇವೆಮಾಡಿದರು. ಶ್ರೀ ರಾಯರ ಅನುಗ್ರಹ ಬಲದಿ ಗರ್ಭವು ಸ್ಥಿರವಾಗಿ ವೃದ್ಧಿಯೈದು, ಒಂದು ಗಂಡುಮಗು ಜನಿಸಿತು. ಆ ಹುಡುಗನಿಗೆ ರಘುನಾಥನೆಂದು ನಾಮಕರಣ ಮಾಡಿದರು.


ನಾಲ್ಕೈದು ವರ್ಷಗಳನಂತರ ತುಂಗಾಬಾಯಿ ಪುನಃ ಗರ್ಭಧರಿಸಲು, ಪೂರ್ವದಂತೇ

ಮಂತ್ರಾಲಯಕ್ಕೇ ಬಂದು ಶ್ರೀ ರಾಯರ ಸೇವೆಮಾಡಲು, ಶ್ರೀ ರಾಯರು ತಿರುಪತಿಗೆ ಹೋಗಲು ಆಜ್ಞಮಾಡಿದರು.ದಂಪತಿಗಳು ಅದರಂತೆಯೇ ಪಾದಚಾರಿಗಳಾಗಿ ತಿರುಪತಿಗೇ ಪಯನಗೈದರು. ಮಾರ್ಗದಲ್ಲಿ ಕಡಪಜಿಲ್ಲೆಯ ರಾಯಚೋಟಿಯೆಂಬ ವೀರಭದ್ರ ಕ್ಷೇತ್ರಕ್ಕೆ ಬಂದಾಗ ಮಳೆರಾಯನ ಪ್ರತಾಪದಿಂದ ಪ್ರಯಾಣಕ್ಕೇ ಅಡಚಣಿ ಯುಂಟಾಗಿ ಅಲ್ಲೇ ನಿಲ್ಲಬೇಕಾಯಿತು. ಪ್ರಸವದಿನಗಳು ಸಮೀಪಿಸಿ ರಿಕ್ತರಾದ ದಂಪತಿಗಳು ವ್ಯಾಕುಲಪಡುತ್ತಿರಲು, ಆ ದಿನ ರಾತ್ರಿ ಸ್ವಪ್ನದಲ್ಲಿ"ವ್ಯಾಕುಲವೇಕೋ ಮನವೇ ಸಾಕುವದಾತನು ಶ್ರೀ ಕಾಂತನನುದಿನ" ಎಂದೊಬ್ಬ ತ್ರಿನಾಮಧಾರಿ ಹೇಳಿದಂತಾ ಯಿತು. ತಟ್ಟನೇ ಎಚ್ಚೆತ್ತ ಆಚಾರ್ಯರು ತಮ್ಮ ಪತ್ನಿಗೆ ತಿಳಿಸಿ ಹರ್ಷಚಿತ್ತರಾಗಿ, ಮಾರನೇ ದಿನದಿಂದ ಭಾಗವತಪುರಾಣ ಆರಂಭಿಸಿ ಅಲ್ಲಿಯೇ ವಾಸವಾದರು. "ಕಿಮಲಭ್ಯಂ ಭಗವತಿ ಪ್ರಸನ್ನೇ ಶ್ರೀ ನಿಕೇತನೇ" ಎಂಬಂತೇ ಅವರಿಗೇ ಪುರವಾಸಿಗಳು ಯಾವತೊಂದರೆ ಆಗದಂತೇ ನೋಡಿಕೋಳ್ಳುತ್ತಿದ್ದರು.

ಶಾ.ಶ.1782 (ಕ್ರೀಶ.1860) ಸಿದ್ಧಾರ್ಥಿ ಸಂ|| ಆಶ್ವಯುಜ ಕೃಷ್ಣ ಅಷ್ಟಮಿ ಬುಧವಾರ ಪುನರ್ವಸು ನಕ್ಷತ್ರ ಚತುರ್ಥ ಚರಣ ಸೂರ್ಯೋದಯಾನಂತರ ಎಂಟು ಘಳಿಗೇ ಸುಮೂಹೂರ್ತ ವೃಶ್ಚಿಕ ಲಗ್ನದಲ್ಲಿ ತುಂಗಾಬಾಯಿ ಗಂಡುಮಗುವಿಗೇ ಜನ್ಮವಿತ್ತಳು. ಆ ಹುಡುಗನಿಗೇ ಶ್ರೀನಿವಾಸನೆಂದು ಹಸರಿಟ್ಟರು.

*

ಬ್ರಹ್ಮೋತ್ಸವ ನೋಡಿರಿ:


ಶಿಶು ಶ್ರೀನಿವಾಸನ ಕರೆದುಕೊಂಡು ದಂಪತಿಗಳು ತಿರುಮಲ ಕ್ಷೇತ್ರಕ್ಕೇ ಬಂದು ಸ್ವಾಮಿಪುಷ್ಕರಿಣಿ ಸ್ನಾನ, ವರಾಹ ಶ್ರೀನಿವಾಸರ ದರ್ಶನ ಪಡೆದು ಆನಂದತುಂದಿಲರಾದರು.  ಬ್ರಹ್ಮೋತ್ಸವ ಮಾಡಿಸಲಾಗದ ತಮ್ಮ ಬಡತನ ಬಗ್ಗೆ ನಿಂದಿಸಿಕೊಂಡರು. ಆ ದಿನ ರಾತ್ರಿ ಸ್ವಪ್ನದಲ್ಲಿ "ನಾಳೆ ಬ್ರಹ್ಮೋತ್ಸವ ನೋಡಿ, ಮುಂದೇ ನಿಮ್ಮ ಶಿಶುವಿಂದ ವಿಶೇಷಸೇವಾ ತಗೊಳ್ಳುತ್ತೇನೆ" ಎಂದು ಹೇಳಿದಂತಾಯಿತು. ಮರುದಿವಸ, ಒಬ್ಬ ಗೃಹಸ್ಥ ಬ್ರಹ್ಮೋತ್ಸವಸೇವಾ ಕಟ್ಟಿ ನಿಲ್ಲಲು ಅವಕಾಶವಿಲ್ಲದ್ದರಿಂದ, ಸ್ವಾಮಿರಾಯಾಚಾರ್ಯರ ಮುಖಾಂತರ ಉತ್ಸವಾದಿಗಳು ಮಾಡಿಸಲು ಪೇಷ್ಕಾರರಿಗೇ ತಿಳಿಸಲು, ಆಚಾರ್ಯದಂಪತಿಗಳಿಗೇ ಬ್ರಹ್ಮೋತ್ಸವ ವೀಕ್ಷಣಸೇವಾ ಭಾಗ್ಯದೊರಕಿತು.


ಕಷ್ಟಪರಂಪರೆ :

*****

ಶಿಶು ಶ್ರೀನಿವಾಸನಿಗೇ ಒಂದು ವರ್ಷದೊಳಗೆ ತುಂಗಾಬಾಯಿ ಕಾಲವಶಳಾಗಲು, ಸ್ವಾಮಿರಾಯಾಚಾರ್ಯರು ಮಕ್ಕಳನ್ನು ಕಂಪ್ಲಿಗ್ರಾಮದ ಅವರ ಸೋದರಮಾವಂದಿರ ಸಂರಕ್ಷಣೆಯಲ್ಲಿ ಬಿಟ್ಟರು. ಅಲ್ಲಿ ಬಾಲಕರ ಬವಣಿನೋಡಿ ಆಚಾರ್ಯರು ತಮ್ಮ ಸಂಗಡ ಬಾಲಕರಿಬ್ಬರನ್ನು ಕರೆದುಕೊಂಡು, ಭಾಗವತ ಪುರಾಣ ಹೇಳುತ್ತಾ, ಆದವಾನಿ ಪಟ್ಟಣಕ್ಕೆ ಬಂದರು. ಆದವಾನಿಯ ಆಗರ್ಭ ಶ್ರೀಮಂತ ಮಕ್ಕಳಿಲ್ಲದ ಮುತ್ತಿಗಿ ಗುಂಡಾಚಾರ್ಯ ರಾಧಾಬಾಯಿ ದಂಪತಿಗಳ ಪ್ರಾರ್ಥನೆ ಮೇರೆಗೇ ಶ್ರೀನಿವಾಸನನ್ನು ದತ್ತುಕೊಟ್ಟರು.


ಉಪನಯನ - ಶಾಸ್ತ್ರಾಧ್ಯಯನ:

*********

ಶ್ರೀನಿವಾಸನಿಗೇ ಎಂಟು ವರ್ಷಬರಲು ಉಪನಯನ ಸಂಸ್ಕಾರ ನೆರವೇರಿಸಿ, ನ್ಯಾಯವೇದಾಂತ ಪಂಡಿತರಾದ ಶ್ರೀ ವೇದವ್ಯಾಸಾಚಾರ್ಯರಲ್ಲಿ ಶಾಸ್ತ್ರಾಧ್ಯಯನ ನಡೆಯಿತು. ಕುಶಾಗ್ರಮತಿಯ ಶ್ರೀನಿವಾಸ ಅಲ್ಪಾವಧಿಯಲ್ಲೇ ವಿದ್ಯಕಲಿತು ಗುರುಗಳಿಗಾನಂದ ಉಂಟುಮಾಡಿದರು. 


ವೈಮನಸ್ಯ ಮನಸ್ಕಳಾದ ದತ್ತುತಾಯಿ ಶ್ರೀನಿವಾಸನಿಗೇ ಪರಿಪರಿ ಕಿರುಕುಳಕೊಟ್ಟು, ತಾನಾಗಿಯೇ ಬೇಸತ್ತು ಮನೆಬಿಟ್ಟು ಹೋಗಲೆಂದು ಎಲ್ಲಾ ವಿಧಕೆಲಸಗಳನ್ನು ಮಾಡಿಸುತ್ತಾ ಆಹಾರ ಕೊಡದೇ, ಬಯ್ಯುವುದು, ಹೊಡೆಯುವುದು ಮೊದಲಾದ ಬಾಧೆಗಳನ್ನು ಕೊಡತ್ತಿದ್ದಳು.


ಗಾಬರಿಯಾಗಬೇಡ ನಾವಿದ್ದೇವೆ :

**********

ಆದವಾನಿ ಬೆಟ್ಟದಲ್ಲಿರುವ ರಣಮಂಡಲಾಭಿದ ಮುಖ್ಯಪ್ರಾಣನ ದರ್ಶನಕೇ ತೆರಳಿದ 12 ವರ್ಷದ ಬಾಲಕ ಶ್ರೀನಿವಾಸ ಮನಿಗೆ ಹಿಂತಿರುವದೊಳಗೇ ರಾತ್ರಿಯಾಗಿತ್ತು.  ರಾಧಾಬಾಯಿ ದಂಡಿಸಿ, ಮನೆಯಲ್ಲಿ ಬರಗುಡದೇ ಬಾಗಿಲು ಮುಚ್ಚಿದಳು.  ಉಟ್ಟಬಟ್ಟಿಯಲ್ಲದೇ ಮತ್ಯಾವುದಿಲ್ಲದ ಶ್ರೀನಿವಾಸ ಛಳಿಗೇ ನಡುಗುತ್ತಾ ಅಳುತ್ತಾ, ವಾಯುದೇವರ ಪ್ರಾರ್ಥಿಸುತ್ತಾ ರಾತ್ರಿ ಕಳೆಯುತ್ತಿರಲು, "ಗಾಭರಿಯಾಗಬೇಡ ನಾವಿದ್ದೇವೇ" ಎಂಬ ಆಕಾಶವಾಣಿ ಯಾಯಿತು.


ಕಷ್ಟಪರಂಪರೆ ಸಹಿಸುತ್ತಾ, ಗೃಹಕೃತ್ಯಮಾಡುತ್ತಾ ಶ್ರದ್ಧೆಯಿಂದಶ್ರೀನಿವಾಸ ವಿದ್ಯಾಭ್ಯಾಸ ಮುಂದುವರೆಸಿದನು.


ಭವಿಷ್ಯವಾಣಿ

*****

ಗುರುಗಳ ಹತ್ತಿರ ವಿದ್ಯ ಕಲಿಯುತ್ತ ಕುಳಿತಿರುವ ಶ್ರೀನಿವಾಸನ ಹಸ್ತರೇಖೆಗಳನ್ನು ಪರಿಶೀಲಿಸಿದ ಸಾಮುದ್ರಿಕಶಾಸ್ತ್ರಜ್ಞನು ವಿಸ್ಮಯಗೊಂಡು ಭವಿಷ್ಯ ನುಡಿದನು.

"ಈ ಹುಡಗನ ಅದೃಷ್ಟವೇ ವಿಲಕ್ಷಣ. ಕಡೆಯವರಿಗೇ ಕಷ್ಟ ಪರಂಪರೆ ಅನುಭವಿಸುವನು. ಯಾವ ಆಪ್ತೇಷ್ಟ, ಧನಧಾನ್ಯಗಳಿಂದ ಪೋಷಿತನಾಗದೇ, ಕೇವಲ ವಾಯುದೇವರ ಅನುಗ್ರಹ ದಿಂದ ಪೋಷಿತನಾಗುವನು. ಪ್ರಾಣದೇವರೇ ಮೂರ್ತಿಮಂತ ರಾಗಿದ್ದು, ನುಡಿದಿದ್ದು ಹುಸಿಗೊಡದೇ ನಡೆಸುವರು. ಅಸಾಧ್ಯ ಸುಸಾಧ್ಯ  ಮಾಡುವರು. ಮೇಘ ಸಮೂಹವನ್ನು ಗಾಳಿದೂರ ಗೈಯುವಂತೇ ವಿಘ್ನಗಳ ನೋಡಿಸುವರು. ಕದಾಚಿತ್ ದುಷ್ಟ ಸ್ವಭಾವದಿ ಯಾರಾದರು ಯಾವಬಗೆಯಲ್ಲಾದರು ಇವರ ಮಹತ್ಕಾರ್ಯಗಳೀಗೇ ವಿಘ್ನಮಾಡಲು ಬಹುಪ್ರಯತ್ನಪಟ್ಟರೂ, ಸಿಂಹವು ಗಜಸಮೂಹವನ್ನು ಓಡಿಸುವಂತೇ ವಿಘ್ನಕಾರಿಗಳನ್ನು ಪಲಾಯನಮಾಡಿಸಿ ಆಸೇತುಹಿಮತ್ಪರ್ವತ ಪರ್ಯಂತ ಇವರ ಕೀರ್ತಿ ಹೆಚ್ಚಿಸುವವರು. ವೈದಿಕ, ಲೌಕಿಕ,ಪಂಡಿತ ಪಾಮರರಿಂದ ಮಹನೀಯರೆನಿಸುವರು. ಹಯಪಲ್ಲಕ್ಕಿ ಮೊದಲಾದ ವಾಹನದಿ ಮೆರೆವರು."


ಇಷ್ಟರಲ್ಲಿ ಗುರುಗಳು ವಿಧಿವಶರಾಗಲು, ಮಿಕ್ಕ ಶಾಸ್ತ್ರಭಾಗ ತಂದೆಯವರಲ್ಲಿ ಓದಿದರು.


ವಿವಾಹ-ತೀರ್ಥಯಾತ್ರೆ :

*******

ಫೇರಿಕಾರ ವೆಂಕೋಬರಾಯರ ಮಗಳು ಕುಂ.ಸೌ.ಲಕ್ಷ್ಮೀಬಾಯಿಯೊಂದಿಗೇ ಶ್ರೀನಿವಾಸನ ವಿವಾಹವಾಯಿತು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ, ಗುರುಗಳ ಅನ್ವೇಷಣೆಗಾಗಿ, ಭಗವಂತನ ಹೊರೆತಾಗಿ ಮಿಕ್ಕವಿಷಯಸಂಗ ರಹಿತರಾಗಿ, ತಾಯಿಗೇ ಸಕಲಸಂಪತ್ತು ಬಿಟ್ಟು, ತೀರ್ಥಯಾತ್ರೆಗೆ ಹೊರಟರು.

*

ಕಚೇರಿಗೇ ಬಾ ಕುದುರೇ ಕೊಡುತ್ತೇವೇ

************

ಶ್ರೀ ಪಂಪಾಕ್ಷೇತ್ರದ ಯಂತ್ರೋದ್ಧಾರಕ ಪ್ರಾಣದೇವರಲ್ಲಿ ಅನಶನವ್ರತದಿ ಮಂಡಲಸೇವೇಗೈಯಲು, ಶ್ರೀನಿವಾಸಾಚಾರ್ಯರಿಗೇ "ಕಚೇರಿಗೇ ಬಾ ಕುದುರೇ ಕೊಡುತ್ತೇವೇ" ಎಂದು ಸ್ವಪ್ನ ಸೂಚನೆ ಆಯ್ತು. ಕಚೇರಿಯಂದರೇ ಸನ್ನಿಧಾನ ವಿಶೇಷವುಳ್ಳ ಕ್ಷೇತ್ರ-ತೀರ್ಥಾದಿಗಳು ತಥಾ ಅಪರೋಕ್ಷಜ್ಞಾನಿಗಳ಼ ಸೇವಿಸುವದು. ಕುದುರೆ ಯಂದರೇ ಇಷ್ಟ ಸಾಧನ ಹೊಂದುವ ಸಾಧನ.ಇಷ್ಟ ವೆಂದರೇ ಸ್ವಸ್ವರೂಪಾನಂದಾವಿರ್ಭಾವ ಮುಕ್ತಿ. ಇದಕ್ಕೆ ಸಮ್ಯಕ್ ಜ್ಞಾನ ಬೇಕೆಂದು ತಿಳಿದು, ಸುಜ್ಞಾನಿಗಳ ಅನ್ವೇಷಣಾರ್ಥ ತೀರ್ಥಯಾತ್ರೆ ಮಾಡುವ ನಿರ್ಧಾರಗೈದು, ತಮ್ಮಲ್ಲಿರುವ ಬೆಲೆಬಾಳುವ ಬಂಗಾರ ಆಭರಣಗಳನ್ನು, ಶಾಲುಶಕಲಾತಿಗಳನ್ನು ಯೋಗ್ಯರಿಗೇ ದಾನಮಾಡಿ, ಕೇವಲ ಕೌಶಿಕ ಕಮಂಡಲ, ಮೃಗಾಸನ, ಎರಡುಮೊಳ ಉದ್ದ ಒಂದುಮಳ ಅಗಲದ ಧಾವಳಿತುಂಡು, ಚಿಕ್ಕ ಸಾಲಿಗ್ರಾಮ, ಶಂಖ,ಪ್ರಾಣಪ್ರತೀಕ, ಘಂಟಿ ಸ್ವೀಕರಿಸಿ, ಗೋಪಿಚಂದನಮುದ್ರೆಗಳು ಜಟಾದಲ್ಲಿ ಧಾರಣಮಾಡಿ, ಯಾವಪ್ರಕಾರವು ಚಿಂತಿಸದೇ, ಭಗವಂತ ರಕ್ಷಣೆ ಮಾಡುವನೆಂಬ ದೃಢ ಭರವಸೆಯಿಂದ, ಭಾಗವತೋಕ್ತ ಅನುಸಂಧಾನದಿಂದ ಸಪ್ತವತ್ಸರ ತೀರ್ಥಯಾತ್ರೆ ಮಾಡಿದರು.


ನಾಸಿಕ ಪಟ್ಟಣದಿ ನಿರ್ಜನ ಮನೆಯಲ್ಲಿ ತಂಗಿದ ಇವರನ್ನು ಒಬ್ಬ ಬಾಲಕ ಬಂದು ಬೆಂಕಿ ಅಪಘಾತ ದಿಂದ ರಕ್ಷಣೆ ಮಾಡಿದ್ದು, ಘಟಸರ್ಪ ಕಚ್ಚುವದಿಂದ ಕೇವಲ ತುಲಸೀಮೃತ್ತಿಕಾ ಗಾಯಕ್ಕೆ ಹಚ್ಚಿ ಪ್ರಯಾಣಮಾಡುವದು, ಭಗವಂತ ರಕ್ಷಣೆ ಮಾಡುವದನ್ನು ಅನುಭವಕ್ಕೇ ತಂದುಕೊಂಡರು. ದುರ್ವ್ಯಸನಗ್ರಸ್ತ ಸಂಗೋರಾಮನನ್ನು ದುಶ್ಚಟದಿಂದ ಪಾರುಮಾಡಿದರು. ಇವರು ನುಡಿದಂತೇ ಗೋಪಾಲನೆಂಬ ಪೀಲಾಜಿರಾವ ಗಾಯಕವಾಡವಂಶದ ಕಾಶೀರಾಯನ ಮಗ ಬರೋಡಾ ರಾಜನಾದನು. ಜಾಂಬವತೀ ಅಂಶಸಂಭೂತಳಾದ ವೇಂಕಟದಾಸರು ಶ್ರೀನಿವಾಸಾಚಾರ್ಯನನ್ನು  ಬ್ರಹ್ಮರಾಕ್ಷಸನಿಂದ ಪಾರುಮಾಡಿದರು.


ವ್ಯಾಸಕಾಶಿಯಲ್ಲಿ ತಪವಾಚರಿಸಲು, ಸ್ವಪ್ನದಿ ಒಂದು ಅಶ್ವತ್ಥಕಟ್ಟಿ ಗೋಚರಿಸಿ ಅಲ್ಲಿಗೇ ಹೊಗೆಂದಾಯಿತು. ಷಟ್ ಪ್ರಯಾಗ, ಬದರೀ ಮೋದಲಾದ ಅನೇಕ ಕ್ಷೇತ್ರ ಸಂದರ್ಶಿಸಿದರು.


ಗಂಗಾರಾಧಕರು:

*****

ಕಲ್ಕತ್ತಾ ಸಮೀಪದಲ್ಲಿ ಸಹಸ್ರಮುಖದಿಂದ ಭಾಗೀರಥಿ ಸಮುದ್ರಸೇರುವ ದೃಶ್ಯ ನೋಡುತ್ತಾ, ಇನ್ನೇನು ದಕ್ಷಿಣ ದೇಶಕ್ಕೆ ಬರುವನಿದ್ದೀನಿ. ಭಾಗೀರಥಿ ದೂರವಾಗುತ್ತಾಳೆಂದು ಚಿಂತಿಸುತ್ತಿರಲು, ಆದಿನ ರಾತ್ರಿ ಸ್ವಪ್ನದಲ್ಲಿ ಓರ್ವ ಸುಂದರಸ್ತ್ರೀ ಕಾಣಿಸಿ ನೀನು ಸ್ಮರಣೆ ಮಾಡಿದಾಗ ಬರುವೆನೆಂದು 

ಹೇಳಿದಂತಾಯಿತು. ಅದೇ ಪ್ರಕಾರ ಆದವಾನಿಯಲ್ಲಿ ತೀವ್ರ ಕ್ಷಾಮ ಬಂದಾಗ, ಚೌಕಿಮಠದ ಹತ್ತಿರ ಇರುವ ಬತ್ತಿದ ಭಾವಿಗೇ, ಇವರು ಕರೆದಾಗ, ಭಾಗೀರಥೀ ಸನ್ನಿಧಾನದಿಂದ ಅಮೋಘ ನೀರು ಬಂದು ಇಡೀ ಊರಿಗೇ ಪ್ರಯೋಜನವಾಯಿತು.

*


ಹರಿ ಒಲಿದರೇ ಗುರು ತಾನೇ ದೊರೆವ

***********

ಗುರ್ವನ್ವೇಷಣ ತತ್ಪರರಾಗಿ ಮಾಡಿದ ತೀರ್ಥಯಾತ್ರೆ ಮೋದಲಾದ ಪ್ರಯತ್ನಗಳು ಫಲಿಸದಿರಲು, ಶ್ರೀನಿವಾಸಾಚಾರ್ಯರು ಬಲುಪರಿಯಲಿ ಪರಮಾತ್ಮನನ್ನೇ ಶರಣುಹೊಕ್ಕರು. ಸ್ವಪ್ನದಲ್ಲಿ "ಪ್ರಾಣ ಪ್ರಿಯತಮಂ ಶ್ವಃ ಪಶ್ಯಸಿ" (ನಾಳೆಯ ದಿವಸ ನನ್ನ ಪ್ರಿಯತಮರನ್ನು ನೋಡುತ್ತೀ) ಎಂಬ ಸೂಚನೇ ಆಯಿತು. ಪರಮಾತ್ಮನ ಪ್ರಿಯತಮರು ಯಾರು, ಹೇಗೇ ಬೇಟಿ ಮಾಡುವುದು ಎಂದು ಯೋಚಿಸುತ್ತಿರಲು, "ಪ್ರಾಣಂ ಮತ್ಪ್ರಿಯತಮಂ ಯಃ ಪಶ್ಯತಿ ತಮೇವಾಭಿಗಚ್ಛ" ಎಂದು ಸೂಚನೆ ಆಯಿತು.


ಹತ್ತಿಬೆಳಗಲ್ ವಾಸ್ತವ್ಯರು, ಸೂರಿಜನಶ್ರೇಷ್ಕರು, ವಾಯುದೇವರ ಪರಮಾನುಗ್ರಹಪಾತ್ರರು, ಸೂರ್ಯಾಂಶ ಸಂಭೂತರಾದ ಶ್ರೀಅರಳೀಕಟ್ಟಿ ನರಸಿಂಹಾ ಚಾರ್ಯರಿಗೇ ಸ್ವಪ್ನ ಸೂಚನೆ ಯಾಗಿ, ತಮ್ಮ ಮಕ್ಕಳಾದ ಕೊಪ್ರೇಶಾ ಚಾರ್ಯರನ್ನು ಶ್ರೀನಿವಾಸಾ ಚಾರ್ಯರನ್ನು ಕರೆತರಲು ಕಳುಹಿಸಿದರು. ಸ್ವಪ್ನದಲ್ಲಿ ಅರಳೀಕಟ್ಟಿ ಗೋಚರಿಸಿದ್ದು, ಎಲ್ಲೆಲ್ಲಿ ಶೋಧಿಸಿದರೂ ದೊರಕದ ಗುರುಗಳು ಹತ್ತಿರದ ಹತ್ತಿಬೆಳಗಲ್ ಯಲ್ಲೇ ಪರಮಾತ್ಮನ ಅನುಗ್ರಹದಿ, ಸೂಚನೆಗೈದು ದೊರತಿದ್ದು ನೆನೆದು ಹರ್ಷಪುಲಕಾಂಕಿತರಾದರು. ವೇಗದಿ ಗುರುಗಳಬಳಿ ಬಂದು ಪಾದಕ್ಕೆರಗಿದರು. ಅಕ್ಕರೆಯಿಂದ ಶಿಷ್ಯನನ್ನು ಬರಮಾಡಿಕೊಂಡರು. ಮರುದಿನದಿಂದ ಆನತಿಕಾಲದಲ್ಲಿ ಸಾರಭೂತವಾದ ಶ್ರೀ ಟೀಕಾಕೃತ್ಪಾದರ ಮೇರುಕೃತಿ ಶ್ರೀಮನ್ನ್ಯಾಯಸುಧಾವನ್ನು ಗುರುಗಳ ಮುಖಾಂತರ ಚೆನ್ನಾಗಿ ಅವಗತಮಾಡಿಕೊಂಡರು.


ಶಿಷ್ಯನಮೇಲೇ ಪರಮಾನುಗ್ರಹ ಮಾಡಲು ಬಯಸಿ, ಪರಮಾತ್ಮನ ಅತ್ಯರ್ಥ ಪ್ರಸಾದ ಹೊಂದ ಬೇಕೆಂಬುವರು ತಾವು ಹೇಳುವ ವ್ರತವನ್ನು ಮಾಡಬೇಕು. ಅದೇನಂದರೇ, 9 ದಿವಸ ಅನಶನವ್ರತದಿ ಅಹರ್ನಿಶ ಸರ್ವಸೇವ ಮಾಡಬೇಕು. ಬೆಳಿಗ್ಗೆ ಎದ್ದು ಮನಿಯೋಳಗೆ ಹೋರಗೆ ಕಸಬಳೆದು ಸಾರಿಸಿ ರಂಗೋಲಿ, ಹೊಸ್ತಿಲಿಗೆ ಕೆಮ್ಮಣ್ಣು ಹಚ್ಚಿ ರಂಗವಲ್ಲಿ ಹಾಕುವದು, ಗೋಸೇವಾ, ಹಾಲುಕರೆಯುವದು, ಪಾತ್ರಗಳು ಸ್ವಚ್ಛಗೊಳಿಸುವದು, ಪೂಜೆಗೆ ತುಳಸೀಪುಷ್ಪಗಳು ತರುವುದು, ನೀರು ತರುವುದು, ಭಾಗವತ ಪುರಾಣ ಹೇಳುವುದು, ಪಾಕಮಾಡುವುದು, ಬಡಿಸುವದು,ಎಲೆಗಳು ತೆಗೆದು ಸ್ವಚ್ಛ ಮಾಡುವುದು, ರಾತ್ರಿ ಗುರುಗಳ ಪಾದಸಂವಹನಾದಿ ಸೇವೆಮಾಡುತ್ತಾ, ಅನಿಮಿಷ ಜಾಗರಣೆ ಮಾಡುತ್ತಾ ಶ್ರದ್ಧೆಯಿಂದ ಸರ್ವಸೇವೆ ಮಾಡಬೇಕು. ವ್ಯತ್ಯಾಸ ಬಂದರೇ,ಎಲ್ಲವು ವ್ಯರ್ಥವಾಗುವುದು. " 

ಶ್ರೀನಿವಾಸಾಚಾರ್ಯರು ಮರುಮಾತಾಡದೇ ತಾವು ಆಶೀರ್ವದಿಸಿ ಆಜ್ಞೆ ಮಾಡಿದರೇ ನಾನು ಸಿದ್ಧವೆಂದರು. ಅದೇಪ್ರಕಾರ ಕಠಿಣವಾದ ವ್ರತಮಾಡಿದರು. ಪ್ರಸನ್ನರಾದ ಗುರುಗಳು ಪ್ರಶಂಸಿಸಿ ಏನು ವರಬೇಕೆಂದರು. ಶ್ರೀನಿವಾಸಾಚಾರ್ಯರು "ನಾನು ಬೇಡುವ ದೆಂದರೇ ಭಗವಂತನ ಅತ್ಯರ್ಥಪ್ರಸಾದ. ಅದು ಲಭ್ಯವಾಗುವ ರೀತಿಯಲ್ಲಿ ಅನುಗ್ರಹ ಮಾಡಬೇಕೆಂದು" ಕೇಳಿದರು. ಪರಮಾನಂದ ಭರಿತರಾಗಿ ಗುರುಗಳು ಆಮೃತಹಸ್ತವನ್ನು ಇಟ್ಟು ಆಶೀರ್ವದಿಸಿ, ಸರ್ವೇಷ್ಟಗಳನ್ನು ಕೊಡುವ ಎಲ್ಲಾ ಆರ್ತಿಗಳನ್ನು ನಾಶಪಡಿಸುವ "ಪವಮಾನ" ಮಂತ್ರವನ್ನು ಉಪದೇಶಿಸಿದರು.


ಗುರುವೋಲಿದರೇ ಹರಿ ತಾ ಕಾಣುವ:

**********


ಗುರುಗಳು ಉಪದೇಶೀಸಿದ ಮಂತ್ರವನ್ನು ಚೆನ್ನಾಗಿ ಜಪಿಸಿ ಮಂತ್ರಸಿದ್ಧಿಪಡೆದರು. ಕಳ್ಯಾಣಿತೀರ್ಥದ ಕುಠಾರರಾಮಲಿಂಗೇಶ್ವರನಲ್ಲಿ ಒಂದು ತಿಂಗಳು, ರಣಮಂಡಲದಲ್ಲಿ 40 ದಿವಸ ತಪವುಗೈದರು.  ವಿಜಯರಾಯರ ಕಟ್ಟಿಯಲ್ಲಿ ಧಾರಣಿ ಪಾರಣಿ, 5 ದಿನ ಉಪವಾಸ ಆರನೇದಿನ ಕಲ್ಲುಸಕ್ಕರಿ ಪಾರಣಿ, ವಾಯುದೇವರ ಆಜ್ಞೆ ಮೇರೆಗೇ ಸರ್ವಸ್ವ ದಾನಮಾಡಿದರು. ಮಂಗರಾಯನ ಗುಡಿಯಲ್ಲಿ 40 ದಿವಸ ಶುದ್ಧ ಉಪವಾಸ ಅನಿಮಿಷ ಜಾಗರ ಮಾಡಿದರು. ಎಲ್ಲಾ ಇಂದ್ರಿಯಗಳು ಕುಂಠಿತ ವಾದವು.ಶರೀರವು ಸ್ವಾಧೀನ ತಪ್ಪಿತು. ಪುನಃ ಕುಂಠಿತವಾದ ಸರ್ವೇಂದ್ರಿಯಗಳು ಧೃವರಾಯ ನಂತೇ ಪುನರ್ಜೀವಿತವಾಗಿ ವಾಯು ಲಕ್ಷ್ಮೀ ಸಮೇತ ಪರಮಾತ್ಮನ ಅಂತರಬಾಹ್ಯ ರೂಪಗಳನ್ನು ಯಜನಮಾಡಿದವು. ವಾಯುದೇವರು ವರ ಏನುಬೇಕೆಂದೆನಲೂ, ತಮ್ಮ ಅನುಗ್ರಹವೊಂದೇ ಸಾಕೆಂದರು. ವಾಯುದೇವರು ತಮ್ಮ ವರಹಸ್ತವನ್ನಿಟ್ಟು "ಪ್ರಜಾವಾನ್ ಭವ, ಕೀರ್ತಿಮಾನ್ ಭವ, ಆಯುಷ್ಮಾನ್ ಭವ" ಎಂದುಆಶೀರ್ವದಿಸಿದರು. ಶ್ರೀನಿವಾಸಾಚಾರ್ಯರ ಪ್ರಾರ್ಥನೆಮೇರೆಗೆ "ವೆಂಕಟ ನಾರಸಿಂಹ ವಿಠಲ ರೂಪತ್ರಯಗಳು" ಅದ್ಯಾಪಿ ಮಂಗರಾಯನ ಎಡಭುಜದ ಮೇಲೇ ಅಭಿವ್ಯಕ್ತವಾಗಿವೆ. (ಸ್ವಲಕ್ಷಿತೋ ವೆಂಕಟ ನಾರಸಿಂಹಃ ಶ್ರೀ ವಿಠಲಾತ್ಮ ಭವತು ಸ್ಥಿರೋsತ್ರ ಇತ್ಯರ್ಥಿತೋ ಮಾರುತವಾಮಭಾಗೇ ಸದೃಶ್ಯತೇsದ್ಯಾಪಿ ಹರಿಃಸ್ತ್ರಿರೂಪಃ).


ತಾವು ಪಡೆದ ಅಧ್ಯಾತ್ಮ ಸಿದ್ಧಿಯನ್ನು 

ಶ್ರೀನಿವಾಸಾಚಾರ್ಯರು ಗುರುಗಳಿಗೇ ಸಮರ್ಪಿಸಿದರು. ಆಗ ಶ್ರೀ ಗುರುಗಳು ತಮ್ಮನ್ನು ವಾಯುದೇವರು ನಿನ್ನ ಶಿಷ್ಯನಿಗೇ ಏನು ವರಬೇಕೆಂದು ಕೇಳುತ್ತಿದ್ದಾರೆ, ಏನು ಬೇಕಿಲ್ಲ, ಶ್ರೀ ಹನುಮಂತದೇವರು ಶ್ರೀ ರಾಮದೇವರಲ್ಲಿ ಏನು ಕೇಳಿದರೋ (ಭಗವಂತನಲ್ಲಿ ನಿರಂತರ ಭಕ್ತಿ) ಅದನ್ನೇ ಅನುಗ್ರಹ ಮಾಡೆಂದರು.

*

ಭಗವಂತನ ಅತ್ಯರ್ಥಪ್ರಸಾದ ಪಡೆದ ಶ್ರೀನಿವಾಸಾಚಾರ್ಯರು ತಮ್ಮನ್ನು ಆಶ್ರಯಿಸಿದವರಿಗೇ ಉಪದೇಶ ಮತ್ತು ಆಪತ್ತು ಪರಿಹಾರ ಮಾಡಿದರು. ಅನೇಕ ಜನರು ಶಿಷ್ಯರಾಗಿ ಇವರ ಉಪದೇಶಾಮೃತ ಪಡೆದು ಸಾಧನಗೈದರು.ಇವರಲ್ಲಿ ಗದಗಶೇಷಗಿರಿರಾಯ, ಟಂಕಶಾಲಿ ಶ್ರೀ ನಿವಾಸಾಚಾರ್ಯರು, ಸುಬ್ಬಾರಾವು ಕುಲಕರ್ಣಿ, ಅಮಿತವಿಕ್ರಮರಾಯ, ಸೇಲಂ ಸುಬ್ಬರಾಯಪ್ರಭೃತಿಗಳು ಮಂತ್ರಾಲಯ ಪ್ರಭುಗಳು ಸೂಚಿಸಿದಂತೇ, ಶ್ರೀನಿವಾಸಾಚಾರ್ಯರನ್ನು ಆಶ್ರಯಿಸಿ ಶಿಷ್ಯರಾಗಿ ಉಪದೇಶ ಪಡೆದು ತಮ್ಮ ಸಂಶಯಗಳನ್ನು ಪರಿಹರಿಸಿಕೊಂಡರು.


ಶ್ರೀ ಆಚಾರ್ಯರ ಅಮೃತಹಸ್ತದಿಂದ ಢಪಳಾಪುರ, ನಾರಾಯಣ ಪೇಟೆ, ಜಠರ, ರಣವಾಟ್ಲ, ಕೋಟಂಕೊಂಡ, ವಿಜಾಪುರ, ಆದವಾನಿ ಮೋದಲಾದ ವಿವಿಧಪ್ರದೇಶಗಳಲ್ಲಿ ಶಿಷ್ಯಜನರ ಪ್ರಾರ್ಥನೆಮೇರೆಗೇ ಶಿಷ್ಯರ ಆಪತ್ತು ಪರಿಹಾರಕ್ಕೆ ಅನೇಕ ದೇವತಾ ಮೂರ್ತಿಗಳು ಪ್ರತಿಷ್ಠಿತವಾಗಿ, ಅದ್ಯಾಪಿ ಸೇವಿಸುವ ಜನಕ್ಕೇ ಇಷ್ಟಾರ್ಥ ಪ್ರದಾಯಕವಾಗಿವೆ.


ಶ್ರೀವಿಜಯರಾಯರ ಕಟ್ಟಿ, ಆದವಾನಿ ಜೀರ್ಣೋದ್ಧಾರ :

***********

ಆದವಾನಿಯಲ್ಲಿ ಶ್ರೀಪಂಗನಾಮ ತಿಮ್ಮಣ್ಣದಾಸರ ಅಪಮೃತ್ಯುಪರಿಹಾರ

ಮಾಡಿ ಶ್ರೀ ವಿಜಯದಾಸವರೇಣ್ಯರು, ಅವರ ಪ್ರಾರ್ಥನೆ ಮೇರೆಗೆ,

ಶ್ರೀಮುಖ್ಯಪ್ರಾಣ ದೇವರನ್ನು ಪ್ರತಿಷ್ಠಿಸಿ ಅಲ್ಲಿಯೇ, ನಿವಾಸಗೈದ ಕಾರಣ ಆ ಸ್ಥಳವು ವಿಜಯ ರಾಯರ ಕಟ್ಟಿಯೆಂದು ಹೆಸರಾಯಿತು, ಕಾಲಕ್ರಮೇಣ, ವಿಜಯರಾಯರ ಕಟ್ಟಿಯ ಸ್ಥಳ ಹಸ್ತಾಂತರ ವಾಗಲು,ಶ್ರೀಆಚಾರ್ಯರು ತಮ್ಮ ಪಿತ್ರಾರ್ಜಿತ ಧನದಿಂದ ಖರೀದಿಸಿ, ಜೀರ್ಣೋದ್ಧಾರ ಸಂಪ್ರೋಕ್ಷಣಾದಿಗಳು 1836 ಶಾ.ಶ.ಆನಂದ ಸಂ. ಚೈತ್ರ ಬಹುಳ ಪಂಚಮಿ (ಕ್ರಿ.ಶ.1914)ರಲ್ಲಿ ನೆರವೇರಿಸಿದರು. ಸನ್ನಿಧಾನದಲ್ಲಿ ಆಚಾರ್ಯರುಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ ಬೃಂದಾವನ ಪ್ರತಿಷ್ಠೆಯನ್ನು ಮಾಡಿದರು.

*


by ✍️ त्रिविक्रम प्रह्लादाचार्यः

end

***




No comments:

Post a Comment