Thursday, 1 August 2019

sadhvi shiromani turadagi timmamma 1790 hunuru magha shukla pratipada ಸಾಧ್ವಿ ಶಿರೋಮಣಿ ತುರಡಗಿ ತಿಮ್ಮಮ್ಮನವರು





Smt. Sadhvi Shiromani Turadagi Timmamma


Period: 1705 - 1790

Original Name: Tirumalamba/Timbamba/Timmamma

Ankita: 
Preceptor: 
Place: Hunuru Village/Koppara
Aradhana: Magha Shukla Pratipada ಮಾಘ ಶುದ್ಧ ಪ್ರತಿಪದ. 
Aradhana is conducted by Kanva Mutt
ಅಂಕಿತ: ಹೂನುರು

*******
check date/year

Researchers says there are more than 250 women poet-composers. Some of them include  Bhagamma ( Her ankita was Prayagavva), Turadagi Timmamma, Tulasabai (ankita-Sundarabai), Nadigara Shantibai, Radhabai (ankita-Venkatavitala Raghavendra), Sarasabai, Namagiriyamma, Rangamma, Gundamma ( Rukmaneeshavittala), Ambabai (Gopalakrishna Vittala), Venkatasubbamma (Venkatasubbi), Muliya Mukaambikaamma,  Chechamma (Sheshakka), Kamalabai  (Gurujayesha Vittala), Saraswati Bai (Sri Srinivasa) and others.

ಸಾಧ್ವಿ ಶಿರೋಮಣಿ ತುರಡಗಿ ತಿಮ್ಮಮ್ಮನವರು

sadhvi turadagi timmamma

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಿಡದೂರ ಸೀಮಾದಲ್ಲಿರುವ ಅಮ್ಮನಕಟ್ಟೆ , ಎಂದೆ ಖ್ಯಾತಿಯನ್ನು ಹೊಂದಿರುವ ತಿಮ್ಮಮ್ಮನವರು ತಿರುಪತಿ ವೆಂಕಟೇಶ್ವರ ನ ಅಪ್ರತಿಮ ಭಕ್ತಿ ಯ ಸಾಧ್ವಿ ಶಿರೋಮಣಿ ಯಾಗಿದ್ದವರು
ಹೈದರಾಬಾದ್ ಕರ್ನಾಟಕ ಪ್ರದೇಶದ ನಿಜಾಮ್ ಸಂಸ್ಥಾನದಲ್ಲಿ  ಕ್ರಿ, ಶ ೧೭೧೩_೧೭೪೮ ರಲ್ಲಿ ಬಾಳಿ ಬೆಳಗಿದ ಮಹಾನ್ ಚೇತನ ಜನ್ನ ತಳೆದದ್ದು ಹೀಗೆ,
ತುರುಡಗಿ ಗ್ರಾಮದ ಸತ್ ಸಂಪನ್ನ ವೇದ ಶಾಸ್ತ್ರ ಸಂಪನ್ನರಾದ ನರಸಿಂಹಾಚಾರ ಜೋಶಿ ಮತ್ತು ಚಂದ್ರಲಾದೇವಿಯವರ ಮಗಳಾಗಿ ಜನಿಸಿದ ಕೂಸಿಗೆ ತಿರುಮಲಾಂಬ > ತಿಮ್ಮಾಂಬ> ತಿಮ್ಮಮ್ಮಾ ಎಂದು ಕರೆಯುವ ವಾಡಿಕೆಯಾಯಿತು
ಅಪಾರ ಧರ್ಮಾಭಿಮಾನಿಯಾದ ತಿಮ್ಮಮ್ಮ ಬಾಲ್ಯದಲ್ಲಿ ,ಭಾಗವತ, ಭಾರತಾದಿ ಪುರಾಣ, ಮಧ್ವಮತಕ್ಕನುಗುಣವಾದ ಜಗನ್ನಾಥ ದಾಸರ ಹರಿಕಥಾಮೃತಸಾರ ಹಾಗೂ ದಾಸರ ಪದಗಳುಕರತಲಾಮಲಕವಾದವು
ತುರುಡಗಿ ಗ್ರಾಮದಿಂದ ಮೂರು ಮೈಲುಗಳ ದೂರದಲ್ಲಿರುವ ಮುದ್ದಲಗುಂದಿ ಗ್ರಾಮನಿವಾಸಿಗಳಾದ ವೆಂಕಟನರಸಿಂಹ ನಾಯಕ ಚಿನಿವಾಲ ಮತ್ತು ಸೌ / ಲಕ್ಮೀಬಾಯಿ ಅವರ ಸುಪುತ್ರ ಚಿ / ಅಶ್ವಥರಾಯ  ಎಂಬ ವರನನ್ನು ನಿಶ್ಚಿಯಸಿದರು. ೮ ನೆಯ ವಯಸ್ಸಿನಲ್ಲಿ ಮದುವೆ ಮಾಡಿದರು
ಪ್ರಾರಭ್ದಕರ್ಮಫಲದಂತೆ, ೧೦ ನೆ  ವಯಸ್ಸಿಗೆ ಗಂಡನನ್ನು ಕಳೆದುಕೊಂಡು ಚಿಕ್ಕ ವಯಸ್ಸಿನಲ್ಲಿಯೇ  ವೈಧ್ಯವ್ಯ ಪ್ರಾಪ್ತವಾಯಿತು.ಈ ದುರ್ಘಟನೆಯಿಂದ ಪರಿವಾರಕ್ಕೆ ಆಘಾತವಾಯಿತು.
ಇದರಿಂದಾಗಿ ಸನ್ಯಾಸ ವೃತ ಧಾರಣಮಾಡಿ ಹರಿಯಧ್ಯಾನದಲ್ಲಿ ಪರಮಾತ್ಮನ ಭಕ್ತಿ ಯಲ್ಲಿ ಲೀನವಾದರು
ಸರ್ವದೇಶವು ಪುಣ್ಯ ದೇಶವು ಸರ್ವಕಾಲವು ಪರ್ವಕಾಲವು ಸರ್ವಜೀವರು ದಾನಪಾತ್ರರು ಮೂರುಲೋಕದಲಿ// ಸರ್ವ ಕೆಲಸಗಳೆಲ್ಲ ಪೂಜೆಯು ಸರ್ವವಂದ್ಯನ ವಿಮಲ ಮೂರ್ತಿ ಧ್ಯಾನವುಳ್ಳವಗೆ / ಎನ್ನುವಂತೆ ಬಾಳಿದರು
ಪರಮ ಸಾಧ್ವಿ ಶಿರೋಮಣಿ ಯಾದ ತಿಮ್ಮಮ್ಮನವರುತಮ್ಮ ಗಂಡನ ಮನೆಯ ಕುಲ ದೈವವಾದ ಕೊಪ್ಪರ ನರಸಿಂಹ ದೇವರ ಅನುಗ್ರಹದಿಂದ ,
ಅಪಾರ ದೈವೀ ಸಂಪನ್ನೆಯಾದ ತಿಮ್ಮಮ್ಮನವರು ಮಹಾತಪಸ್ವಿಗಳಾದ ದೇವದುರ್ಗದ ಗಿರಿಯಪ್ಪಯ್ಯನವರ ದರ್ಶನ ಆರ್ಶಿವಾದದ ಬಲದಿಂದ ವೆಂಕಟೇಶ್ವರ ದೇವರ ಭಕ್ತಿ ಯ ಕಾಣ್ಕೆಯಫಲವಾಗಿ
ತಮ್ಮ ೨೦ ನೆಯ ವಯಸ್ಸಿನಲ್ಲಿಇಂದಲೇ, ತಿರುಪತಿಯ ಯಾತ್ರೆಯನ್ನು ೨೦ ವರ್ಷ ಗುರುಗಳ ಮಾರ್ಗದರ್ಶನದಲ್ಲಿ ಪೊರೈಸಿದರು
ಹಲವು  ವರ್ಷಗಳಕಾಲ ಜ್ನಾನ ,ಭಕ್ತಿ, ವೈರಾಗ್ಯ, ಸಂಪಾದಿಸಿ ಬ್ರಾಹ್ಮಿ ಸ್ಥಿತಿ ತಲುಪಿದರು,
ಮುಂದೆ ಕರಡಕಲ್ ನಾಡಿಗೆ ಕರಡಿಕಲ್ಲು ೩೦೦ ರ ಹಳ್ಳಿಗಳಾದ  ಹೂನೂರು ಗ್ರಾಮದಲ್ಲಿ ವಾಸಮಾಡಿ ಹಳ್ಳದ ದಂಡೆಯಮೇಲೆ ಇರುವ ನಿಸರ್ಗ ಮನೋಹರ ವಾದ ಶ್ರೀ ಮಾರುತಿ ದೇವಾಲಯ ವನ್ನು ತಮ್ಮ ಆಶ್ರಮವನ್ನಾಗಿಸಿಕೊಂಡು ಕ್ರಿ,ಶ ೧೭೪೮ ರಲ್ಲಿಯ ಹೊತ್ತಿಗೆ ಅವರ ಪ್ರಾಯ ೪೦ ಆಗಿದ್ದಿತು
ಸ್ವತಂತ್ರ ವಾಗಿ ತಪ್ಪಸ್ಸನ್ನಾಚರಿಸಿದರು, ಇವರ ದೈವೀಕ ಕ್ಕೆ  ಕಂದಗಲ್ ಶಿರಗುಪ್ಪಿ ಗ್ರಾಮದ ಜೋಯಿಸರ ಮನೆತನದ ಅಕ್ಷತೆ ಹನುಮಪ್ಪ, ಹನುಮಂತಾಚಾರ್ಯ ರು ,ಸದಾ ಕಾಲವು ತನ್ನ ಹಣೆಯ ಮೇಲೆ ಅಕ್ಷತೆಯನ್ನು ಧರಿಸುತ್ತಿದ್ದ ಇತನಿಗೆ ಎಲ್ಲರು ಅಕ್ಷತೆ ಹನಮಪ್ಪನಾದನು, ಅಮ್ಮನವರ ಪ್ರತಿದಿನದ ಸೇವಾಕೈಂಕರ್ಯಕ್ಕೆ ಆಸರೆಯಾದನು ಅಮ್ಮನವರ ಪೂಜಾ ಕಾರ್ಯ ದಾರ್ಮಿಕ ಶ್ರಧ್ದೆ, ಸನಾತನ ವೈದಿಕ ಧರ್ಮಾಚಾರಣೆ, ಗೋಸಂರಕ್ಷಣೆ,ಯ ಕಾರ್ಯ ದಿಂದಾಗಿ ಇವರಲ್ಲಿ ಬರುವ ಭಕ್ತರ ಸಂಖ್ಯೆ ಅಧಿಕ ವಾಯಿತು.
ತಿಮ್ಮಮ್ಮನವರು ಪ್ರತಿವರ್ಷ ತಿರುಪತಿ ಯ ವೆಂಕಟಗಿರಿಯಯಾತ್ರೆಗೆ ನವರಾತ್ರಿಯ ಬ್ರಹ್ಮೋತ್ಸವಕ್ಕೆ ಪಾದಾಚಾರಿಯಾಗಿ ಹೋಗಿಬರುತ್ತಿದ್ದರು. ಇವರಜೊತೆಯಲ್ಲಿ ಹಲವಾರು ಜನ ಬಡ ಬ್ರಾಹ್ಮಣರು ಕುಟುಂಬದ ಸದಸ್ಯರು ಸೇರಿ ಹೂನೂರಿನಿಂದ ತಿರುಪತಿ ತಿಮ್ಮಪ್ಪ ನ ಯಾತ್ರೆಗೆ ಕ್ರಿ ಶ ೧೭೬೮ ರಿಂದ ಅಖಂಡವಾಗಿ ೪೦ ಸಲ‌ ತಿರುಪತಿ ವೆಂಕಟರಮಣ ನ ಯಾತ್ರೆ ಯನ್ನು ಸ್ವತಂತ್ರ ವಾಗಿ ಕೈಗೊಂಡರು.
೨೦ ವರ್ಷ ಗುರುಗಳ ಸನ್ನಿದಾನದಿಂದ  ೪೦ ವರ್ಷ ಸ್ವಂತ ಪರಿಶ್ರಮದಿಂದ ಒಟ್ಟು ೬೦ ವರ್ಷ ಗಳಕಾಲ ನಿರಂತರ ತಿರುಪತಿಯಾತ್ರೆ ಯನ್ನು  ಬರಗಾಲ , ಕಾಲರಾ ,ಮತ್ತಿತರ ತರಹದ ಎಂತಹ ಕಷ್ಟ ಕಾರ್ಪಣ್ಯಗಳು ಬಂದರೂ ಸ್ವಲ್ಪ ವೂ ಅಂಜದೆ ಅಳುಕದೆ ಧೈರ್ಯದಿಂದ ಗುರುಗಳ ಅನುಗ್ರಹದಿಂದ ತಮ್ಮ ತಪಸ್ಸು ಶಕ್ತಿ ಯಿಂದ ನಡೆಯಿಸಿಕೊಂಡು ಬಂದರು,
ತಮ್ಮ ೭೭ ನೆಯ ವಯಸ್ಸಿನಲ್ಲಿ ೧೮೦೫ ರಲ್ಲಿ ಮುರಗೋಡಿನ ಮುಚ್ಚಿಂದಬರ ದೀಕ್ಷೀತ ಮಹಾಸ್ವಾಮಿಗಳ ದರ್ಶನಲಾಭ ಪಡೆದುಕೊಂಡರು. ಕ್ರಿ ಶ ೧೮೧೧ ರಲ್ಲಿ ತಮ್ಮ ೮೩ ನೆಯ ವರ್ಷದ ಆ ಇಳಿವಯಸ್ಸಿನಲ್ಲೂ ತಿರುಪತಿ ಯಾತ್ರೆ ಕೈಗೊಂಡು " ನಾನು ಮರಣಹೊಂದಿದ ಬಳಿಕ ನನ್ನ ಶವವನ್ನು ಈ ಹೂನೂರು ಗ್ರಾಮದ  ಪ್ರಾಣದೇವರ ಸಮ್ಮುಖದಲ್ಲಿ ಹಳ್ಳದ ಆಚೆಯ ದಂಡೆಯ ಪ್ರದೇಶದಲ್ಲಿ ದಹನ ಮಾಡಿರಿ  " ಎಂದರು.
ಮುಂದೆ ಮಾಘ ಶುದ್ಧ ಪ್ರತಿಪದದ ದಿವಸ ತಿಮ್ಮಮ್ಮನವರು ತಮ್ಮ ೮೫ ನೆಯ ವಯಸ್ಸಿನಲ್ಲಿ ಇಹಲೋಕದ ಯಾತ್ರೆ ಯನ್ನು ಮುಗಿಸಿ ವೈಕುಂಠವಾಸಿಯಾದರು.

ಅಮ್ಮನವರು ಕಿಡದೂರು ಸೀಮಾದ  ಹಳ್ಳದ ದಂಡೆಯ ಹೊಲದಲ್ಲಿ ಪೂಜೆ ಜಪ ತಪಾದಿಗಳಸ್ಥಾನ, ವೃಂದಾವನದ ಪವಿತ್ರ ಕ್ಷೇತ್ರದಲ್ಲಿ, ಶ್ರೀ ವೆಂಕಟೇಶ್ವರ ಸ್ಮರಣೆಮಾಡುತ್ತಿರಲಾಗಿ  ನಿನ್ನ ದರ್ಶನಕ್ಕೆ ಬರಲು ಅಶಕ್ಯಳಾಗಿರುವೆ, ಎಂದು ದೈನ್ಯದಿಂದ ಕೋರಲು ಆಗ  ತುಳಸಿ ವೈಂದಾವನದಲ್ಲಿ ತಿರುಪತಿ ವೆಂಕಟರಮಣ ಸ್ವಾಮಿ ಪ್ರಕಟಗೊಂಡು, ನಾನು ನಿನ್ನಲಿಯೇ ನೆಲೆಸಿರುವೆನೆಂದು ಅಭಯವಿತ್ತ ಜಾಗವೆ ಈ ಅಮ್ಮನಕಟ್ಟೆ ಅಮ್ಮನವರ ಆಜ್ಞೆಯಂತೆ ಮೃತ ದೇಹ ದಹಿಸಿದ ಸ್ಥಳದಲ್ಲಿ  ಮೂರನೆಯ ದಿನಕ್ಕೆ ಅಶ್ವಥ್ ವೃಕ್ಷ ಮತ್ತು ಬೇವಿನ ಮರ ಹುಟ್ಟಿ, ಸಾಲಿಗ್ರಾಮಗಳ ದೊರೆತ ಈ ಪವಿತ್ರ ಜಾಗದಲ್ಲಿ ಕಟ್ಟೆಕಟ್ಟಿದ ಕ್ಷೇತ್ರವೆ ಶ್ರೀ ಅಮ್ಮನಕಟ್ಟೆ, ಎಂದು ಜಗದ್ವಿಖ್ಯಾತಿ ಪಡೆಯಿತು
ಪ್ರತಿವರ್ಷವೂ ಸಾಧ್ವಿ ಶಿರೋಮಣಿ ತುರಡಗಿ ತಿಮ್ಮಮ್ಮನವರ ಸೇವಾ ವಿಶ್ವಸ್ಥ ಸಮಿತಿಯಿಂದ ಮಾಘ ಶುದ್ಧ ಪ್ರತಿಪದೆಯ ದಿನ ತಿಮ್ಮಮ್ಮನವರ ಪುಣ್ಯಾರಾಧನೆ  ಮಹೋತ್ಸವ ವು ಬಹು ವೈಭವದಿಂದ ನರೆವೇರುವುದು
ಅಪಾರವಾದ ಶ್ರಧ್ದಾ ಭಕ್ತಿ ಯಿಂದ ಆರಾಧನಾ ಕಾರ್ಯಕ್ರಮ ದಲ್ಲಿ ಸರ್ವರೂ ಸೇರಿಕೊಂಡು ಅನನ್ಯವಾಗಿ ಭಾವೈಕೆತೆ ಇಂದ ಅಮ್ಮನವರ  ಮಹೋತ್ಸವ ಕಾರ್ಯ ಕ್ರಮ ಗಳನ್ನು ನರೇವೆರಸುವೆವು ಎಂದು ಸೇವಾಕರ್ತ ಶ್ರೀ ನಿವಾಸಾಚಾರ್ಯ ಜೋಶಿ ಕಳಮಳ್ಳಿಯವರು ನುಡಿಯುತ್ತಾರೆ,
ಅಖಂಡ ಅರವತ್ತು ವರ್ಷಗಳವರೆಗೆ ತಿರುಪತಿ ಪಾದಯಾತ್ರೆ ಮಾಡಿದ ಮಹಾತಾಯಿ ಪಾದಗಳಿಗೆ ಅಕ್ಷರ ನಮನ.
*****

 ತುರುಡಗಿ ತಿಮ್ಮಮ್ಮ 🙏

ಹೆಸರು : ತಿಮ್ಮಮ್ಮ - ತಿರುಪತಿಯ ತಿಮ್ಮಪ್ಪನ ಪರಮ ಭಕ್ತೆ.

ಊರು : ತುರುಡಗಿ ಗ್ರಾಮ, ರಾಯಚೂರು ಜಿಲ್ಲೆ, ಲಿಂಗಸಗೂರು ತಾಲ್ಲೂಕು.

ಜನನ : ಕ್ರಿ. ಶ. ಸುಮಾರು 1728.

ತಂದೆ : ಶ್ರೀ ನರಸಿಂಹ ಜೋಶಿ ( ವೇದ ಶಾಸ್ತ್ರ ಪಾರಂಗತರು )

ಮದುವೆ :8 ನೇ ವಯಸ್ಸಿನಲ್ಲಿ.

ವೈಧವ್ಯ : 10 ನೇ ವಯಸ್ಸಿನಲ್ಲಿ.

ಅಂಕಿತ : ಹೂನೂರೇಶ.

ರಚನೆ : ಅನೇಕ ಪದ, ಪದ್ಯಗಳು, ತಾರತಮ್ಯ ಭಜನಾ ಪಾದಗಳು.

ವಿಶೇಷಗಳು :

ಹೂನೂರು ಪ್ರಾಣದೇವರ  ಗುಡಿಯಲ್ಲಿಯೇ ವಾಸ.

ಪ್ರಾಣದೇವರ ಅನವರತ ಸೇವೆಯಿಂದ ಇವರಿಗೆ ವಾಕ್ಸಿದ್ಧಿ, ಮನ ಶುದ್ಧಿ ಯಿಂದ, ಕುಲದೇವರಾದ ತಿಮ್ಮಪ್ಪನ ಪರಮಾನು ಗ್ರಹದಿಂದ ಅನೇಕ ಅತಿ ಮಾನುಷ ಘಟನೆಗಳಿಂದ, ಗ್ರಾಮದ ಜನರು ಇವರನ್ನು ನಡೆದಾಡುವ ದೇವತೆ ಯಂತೆ ಭಾವಿಸುತ್ತಿದ್ದರು ಎನ್ನುವರು.

ಬಡ ಬಗ್ಗರಿಗೆ, ಜನಹಿತ ಕಾರ್ಯಗಳನ್ನು ಮಾಡಿ, ಸಮಾಜ ಸೇವೆ, ಅನೇಕ ಗೋಶಾಲೆ ನಿರ್ಮಿಸಿ, ಹರಿಕೃಪೆಗೆ ಪಾತ್ರರಾಗಿ, ಹರಿ ಭಕ್ತೆ ಎನಿಸಿರುವರು.

ಇಂಥಹ ಹರಿದಾಸಿನಿಯರ ಅನುಗ್ರಹ ಹಾಗೂ ಇವರ ಅಂತರ್ಗತ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ಹರಿಯ ಅನುಗ್ರಹ ಕೃಪಾಕಟಾಕ್ಷ ಸದಾ ನಮ್ಮ ನಿಮ್ಮೆಲ್ಲರ ಮೇಲಿರಲಿ. ಹರೇ ಶ್ರೀನಿವಾಸ.

***
" ದಿನಾಂಕ : 12.02.2021 - ಶ್ರೀ ಶಾರ್ವರಿ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಮಾಘ ಶುಕ್ಲ ಪ್ರತಿಪದ ಶುಕ್ರವಾರ " ಸಾಧ್ವೀ ಶಿರೋಮಣಿ ತುರಡಗಿ ತಿಮ್ಮಮ್ಮ " ನವರ ಆರಾಧನಾ ಮಹೋತ್ಸನ " " ಸಾಧ್ವೀ ಶಿರೋಮಣಿ ತುರಡಗಿ ತಿಮ್ಮಮ್ಮನವರ ಸಂಕ್ಷಿಪ್ತ ಮಾಹಿತಿ " ಶ್ರೀಮದ್ವೆಂಕಟಪೂತಾಂಗ ಸಾಧು ಸಂತ ಹೃದಯಾಂತರ । ಸಾಧ್ವೀ ಸಾವಕ ತಿಮ್ಮಾ೦ಬ ನಿತ್ಯ ಭಕ್ತಗಣಂ ಮುದಾ ।। " ಸಾಧ್ವೀ ಶಿರೋಮಣಿ ತುರಡಗಿ ತಿಮ್ಮಮ್ಮನವರ ಸಂಕ್ಷಿಪ್ತ ಮಾಹಿತಿ " ಹೆಸರು : ತಿಮ್ಮಮ್ಮ ತಂದೆ : ಶ್ರೀ ನರಸಿಂಹಾಚಾರ್ಯ ಜೋಶಿ ತಾಯಿ : ಸಾಧ್ವೀ ಚಂದ್ರಲಾದೇವಿ ಜನ್ಮಸ್ಥಳ : ತುರಡಗಿ ತಾ ।। ಲಿಂಗಸೂಗೂರು ಕಾಲ : 1728 - 1823 ಕುಲ ದೈವ : ಜಗದೊಡೆಯನಾದ ತಿರುಪತಿಯ ಶ್ರೀ ಶ್ರೀನಿವಾಸ ( ಶ್ರೀ ತಿಮ್ಮಪ್ಪ ) ಅಂಕಿತ : ಹೂನೂರೇಶ " ಕಲೆ " ಮಣ್ಣಿನಿಂದ ದೇವರ ಗೊಂಬೆಗಳನ್ನು ತಯಾರು ಮಾಡುವುದು. ದೇವರ ನಾಮಗಳನ್ವಯ ರಂಗೋಲಿ ಹಾಕುವದು " ವಿವಾಹ " ಸಾಧ್ವೀ ತಿಮ್ಮಮ್ಮನವರ ವಿವಾಹವು ತುರಡಗಿ ಸಮೀಪದಲ್ಲೇ ಇರುವ ಮುದ್ದಲಗುಂದಿ ಗ್ರಾಮದ ಶ್ರೀ ವೆಂಕಟ ನರಸಿಂಹ ನಾಯಕರ ಮಗನಾದ ಶ್ರೀ ಅಶ್ವತ್ಥ ನಾಯಕರೊಂದಿಗೆ ತಮ್ಮಮ್ಮನವರ 8 ನೇ ವರ್ಷದಲ್ಲಿ ವಿವಾಹವಾಯಿತು. 10ನೇ ವರ್ಷದಲ್ಲೇ ಇವರಿಗೆ ಪತಿ ವಿಯೋಗವಾಯಿತು. " ಹೂನೂರೇಶ ಮತ್ತು ಶ್ರೀ ಶ್ರೀನಿವಾಸನ ಪರಮಾನುಗ್ರಹ " ಸಾಧ್ವೀ ತುರಡಗಿ ತಿಮ್ಮಮ್ಮನವರು ಅವರ ತಂದೆ ತಾಯಿಯ ಮರಣಾನಂತರ " ಹೂನೂರು " ಗ್ರಾಮಕ್ಕೆ ಬಂದು ನೆಲೆಸಿದರು. ಹೂನೂರು ಗ್ರಾಮದ ಶ್ರೀ ಪ್ರಾಣದೇವರ ಗುಡಿಯಲ್ಲಿ ವಾಸ. ನಿತ್ಯ ಹಳ್ಳದ ಸ್ನಾನ - ಗುಡಿಯ ಸ್ವಚ್ಛತೆ - ಶ್ರೀ ಮುಖ್ಯಪ್ರಾಣದೇವರ ಎದುರು ಅಹರ್ನಿಶಿ ಧ್ಯಾನದಲ್ಲೇ ಮಗ್ನರಾಗಿರುವುದು ಇವರ ದಿನಚರಿಯಾಯಿತು. ವರ್ಷಕ್ಕೊಮ್ಮೆ ಕುಲದೈವನಾದ ತಿರುಪತಿಯ ಶ್ರೀ ಶ್ರೀನಿವಾಸನ ದರ್ಶನ. ತಿರುಮಲೆಯಲ್ಲಿ ಇವರಿಗೆ ವಾಸ ಸ್ಥಾನ ದೊರಕಿದ್ದೂ ಅಲ್ಲದೇ ತಾಮ್ರದ ಗೋಪಾಲ ಬುಟ್ಟಿಯೂ ದೊರಕಿತು. ತಿಮ್ಮಮ್ಮನವರ ಸಾಧನೆ ಹೆಚ್ಚಿದಂತೆ ಅವರ ಅವರ ವಾಕ್ಸಿದ್ಧಿ - ತಪಸ್ಸಿದ್ಧಿ ಸಿದ್ಧಿಯಾಯಿತು. ಅವರ ಉಪದೇಶವನ್ನು ಕೇಳಿದ ಜನರ ತಾಪಗಳು ದೂರವಾಗುತ್ತಿದ್ದವು. ತಿಮ್ಮಮ್ಮನವರ ಶಿಷ್ಯ ಸಂಖ್ಯೆಯು ಅಪಾರವಾಗಿ ಬೆಳೆದು ಹೂನೂರಿನ ಶ್ರೀ ಮುಖ್ಯಪ್ರಾಣದೇವರ ಗುಡಿ ಆಶ್ರಮವಾಗಿ ಮಾರ್ಪಟ್ಟಿತು. ಜನರ ಭಕ್ತಿ ವಿಶ್ವಾಸದ ಪ್ರತೀಕವಾಗಿ ಗೋಶಾಲೆ ಮತ್ತು ನಿರಂತರ ಅನ್ನದಾನ ಪ್ರಾರಂಭವಾಯಿತು. " ಮಹಿಮೆಗಳು " 1. ತಿಮ್ಮಮ್ಮನವರು ಶಿಷ್ಯರೊಂದಿಗೆ ಯಾತ್ರೆಗೆ ಹೊರಟಾಗ ಮಾರ್ಗ ಮಧ್ಯದಲ್ಲಿ ಅವರ ಶಿಷ್ಯ ಅಕ್ಷತಿ ಹನುಮಂತರಾಯರು ಹಣವನ್ನು ಕಳೆದುಕೊಂಡು ಈ ವಿಷಯವನ್ನು ತಿಮ್ಮಮ್ಮನವರಿಗೆ ಹೇಳಲು - ಒಬ್ಬ ಮಾರ್ವಾಡಿ ಭಕ್ತ ಕಾಣಿಕೆ ಕೊಟ್ಟಿದ್ದು. 2. ಯಾತ್ರೆಯ ಮಾರ್ಗ ಮಧ್ಯದಲ್ಲಿ ಗ್ರಾಮಗಳಲ್ಲೆಲ್ಲ ಕಾಲರಾ ರೋಗ ಹಬ್ಬಿತ್ತು. ಆಗ ತಿಮ್ಮಮ್ಮನವರು ಮಾರಿಕಾ ದೇವಿಯನ್ನು ಪ್ರಾರ್ಥಿಸಿದಾಗ ನೀನು ಹೋಗುವ ಗ್ರಾಮದಲ್ಲಿ ತಾನು ಪ್ರವೇಶಿಸುವುದಿಲ್ಲವೆಂದು ತಿಳಿಸಿದ್ದು. 3. ಸಿದ್ಧಿ ಪುರುಷರಾದ ಶ್ರೀ ಮುರಗೋಡು ಚಿದಂಬರ ದೀಕ್ಷಿತರು ತಿಮ್ಮಮ್ಮನವರನ್ನು ಕಾಣಲು ಹುಲಿಯ ಮೇಲೆ ಕುಳಿತು ಬಂದರು. ಗೌರವಾದರಗಳಿಂದ ಶ್ರೀ ದೀಕ್ಷಿತರನ್ನು ಸತ್ಕರಿಸಿ - ತಾವು ಕುಳಿತ ಕಟ್ಟೆಯನ್ನೇ ಚಲಿಸಲು ಆಜ್ಞಾಪಿಸಿದರು. ಅದನ್ನು ನೋಡಿದ ಶ್ರೀ ಚಿದಂಬರ ದೀಕ್ಷಿತರು ನಾನು ಸಜೀವ ಪ್ರಾಣಿಯ ಮೇಲೆ ಕುಳಿತು ಬಂದರೆ - ನೀವು ನಿರ್ಜೀವ ಕಟ್ಟೆಯನ್ನೇ ವಾಹನವನ್ನಾಗಿ ಮಾಡಿಕೊಂಡಿರಿ ಎಂದು ಶ್ಲಾಘಿಸಿದರು. " ನಿರ್ಯಾಣ " ಸಾಧ್ವೀ ತಿಮ್ಮಮ್ಮನವರು ತಮ್ಮ ಅಂತ್ಯ ಕಾಲ ಸಮೀಪಿಸತೆಂದು ತಿಳಿದು ತಮ್ಮ ದಹನ ಸಂಸ್ಕಾರವನ್ನು ಹೂನೂರು ಶ್ರೀ ಪ್ರಾಣದೇವರ ಸಮ್ಮುಖದಲ್ಲಿರುವ ಹಳ್ಳದ ದಂಡೆಯ ಮೇಲೆ ನೆರವೇರಿಸಲು ತಿಳಿಸಿದ್ದೂ ಅಲ್ಲದೇ - ಅದೇ ಸ್ಥಳದಲ್ಲಿ ಅಶ್ವತ್ಥ ವೃಕ್ಷದ ಸಸಿಗಳು ಏಳುತ್ತವೆ ಎಂದೂ - ಅವು ತಮ್ಮ ಸಾನಿಧ್ಯದ ಸಂಕೇತವೆಂದು ತಿಳಿಸಿದರು. ಪೂರ್ವ ಸೂಚನೆಯಂತೆ " ಮಾಘ ಶುದ್ಧ ಪ್ರತಿಪದ " ದಿನದಂದು ಶ್ರೀ ಹರಿಯ ಧ್ಯಾನ ಮಾಡುತ್ತಾ ಇಹಲೋಕ ತ್ಯಜಿಸಿದರು. ಅವರ ಸೂಚನೆಯಂತೆ ಉತ್ತರ ಕ್ರಿಯೆ ನೆರವೇರಿಸಲಾಯಿತು. ಅಕಾಲ ವೃಷ್ಟಿಯಿಂದ ವಿಪರೀತ ಮಳೆಯಾಗಿ ಅವರ ಅಸ್ಥಿ ಸಂಚಯಗಳೆಲ್ಲ ಹರಿದು ಹೋಯಿತು. ಭಕ್ತ ಜನ ಚಿಂತಿತರಾದಾಗ ಸ್ವಪ್ನ ಮುಖೇನ ಸೂಚನೆ ದೊರೆಯಿತು. ಅದರಂತೆ ದಕ್ಷಿಣ ದಿಕ್ಕಿನಲ್ಲಿ ದೊರೆತ ಶ್ರೀ ಪ್ರಾಣದೇವರನ್ನು ವೃಂದಾವನ ರೂಪದ ಕಟ್ಟೆಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಆ ಕಟ್ಟೆಯನ್ನು ಸಾಧ್ವೀ ತಿಮ್ಮಮ್ಮನವರ ಕಟ್ಟೆಯೆಂದು ಕರೆಯಲಾಗುತ್ತದೆ. ಇಂದು ಇಲ್ಲಿ ಹೆಮ್ಮರವಾದ ಅಶ್ವತ್ಥ ವೃಕ್ಷ ಕಂಗೊಳಿಸುತ್ತಿದೆ. ಇಲ್ಲಿ ಶ್ರೀ ವೆಂಕಟೇಶದೇವರ ಮತ್ತು ಶ್ರೀ ಮುಖ್ಯಪ್ರಾಣದೇವರ ನಿತ್ಯ ಸನ್ನಿಧಾನವಿದೆ. ಪ್ರತಿ ವರ್ಷವೂ " ಮಾಘ ಶುದ್ಧ ಪ್ರತಿಪದ ಸಾಧ್ವೀ ತಿಮ್ಮಮ್ಮನವರ ಆರಾಧನೆ " ನಡೆಯುತ್ತದೆ. ಆ ಸಂದರ್ಭದಲ್ಲಿ ಅವರು ಉಪಯೋಗಿಸುತ್ತಿದ್ದ ಗೋಪಾಲ ಬುಟ್ಟಿ - ಬಡಿಗೆ - ಶ್ರೀ ವೆಂಕಟೇಶದೇವರನ್ನೂ- ಶ್ರೀ ಮುಖ್ಯಪ್ರಾಣದೇವರನ್ನೂ ಪಲ್ಲಕ್ಕಿಯಲ್ಲಿಟ್ಟು ವೇದ ಘೋಷಗಳೊಡನೆ ಉತ್ಸವ ಮಾಡುತ್ತಾರೆ. ಸಾಧ್ವೀ ತುರಡಗಿ ತಿಮ್ಮಮ್ಮನವರು " ಹೂನೂರೇಶ " ಅಂಕಿತದಲ್ಲಿ.... ಶ್ರೀನಿವಾಸನ ನೆನೆಯಿರೋ ಸಾಯುವತನಕ । ನಿಶ್ಚಿಂತವಾಗಿ ನಿಮಗೆ ಸಿಗುವುದು ನಾಕ । ಸಂಸಾರ ಜಂಜಾಟ ಎಲ್ಲಿಯ ತನಕ । ನನ್ನವರೆಂಬರು ಸಂಪತ್ತು ಇರುವತನಕ । ಸತ್ಯವು ಉಳಿಯುವದು ಕೊನೆತನಕ । ಫಲ ಮಾತ್ರ ಸಿಗುವದು ಅನುಗ್ರಹದ ಬಳಿಕ । ಭಕ್ತಿಯು ಕುಂದದು ಶ್ರದ್ಧೆಯಿರುವತನಕ । ಶ್ರದ್ಧೆಯು ಬಾರದು ಆತ್ಮ ನಿವೇದನತನಕ । ತುರಡಗಿ ವಾಸ ತಿಮ್ಮಪ್ಪಗೆ ಬೇಕಾಗುವತನಕ । " ಹೂನೂರೇಶ " ನ ದಯವಿರಲಿ ದೇಹವಿರುವತನಕ ।। by ಆಚಾರ್ಯ ನಾಗರಾಜು ಹಾವೇರಿ ಗುರು ವಿಜಯ ಪ್ರತಿಷ್ಠಾನ

***

ರಾಜಲಕ್ಷ್ಮೀ ಯವರ ಧ್ವನಿ  ತುರುಡಿಗಿ ತಿಮ್ಮಮ್ಮನವರ ಚರಿತ್ರೆ 

***

18ನೆಯ ಶತಮಾನದ ಪರಮ ಶ್ರೇಷ್ಠ ಹರಿದಾಸಿ,, ವೆಂಕಪ್ಪನ ಪರಮ ಭಕ್ತೆ, ರಾಯಚೂರು ಜಿಲ್ಲೆಯ, ತುರುಡಗಿ ಗ್ರಾಮದಲ್ಲಿ ಜನಿಸಿದಂತಹವರು, ಹೂನೂರೇಶ ಪ್ರಾಣದೇವರ ಸೇವೆಯಲ್ಲೇ ಜೀವನವನ್ನು ಕಳೆದಂತಹವರು, ಆ ಮುಖ್ಯ ಪ್ರಾಣದೇವರ ಹೆಸರಿನಿಂದಲೇ ಕೃತಿ ರಚನೆ ಮಾಡಿದವರಾದ, ಪವಾಡಗಳನ್ನು ತೋರಿಸಿದ ಇಂದಿಗೂ ತೋರಿಸುತ್ತಿರುವ ಹೂನೂರೇಶ ಅಂಕಿತಸ್ಥರು.

ಅಮ್ಮನವರು ಕಿಡದೂರು ಸೀಮೆಯ ಹಳ್ಳದ ದಂಡೆಯ ಹೊಲದಲ್ಲಿ ಪೂಜೆ ಜಪ ತಪಾದಿಗಳಸ್ಥಾನ, ವೃಂದಾವನದ ಪವಿತ್ರ ಕ್ಷೇತ್ರದಲ್ಲಿ, ಶ್ರೀ ವೆಂಕಟೇಶ್ವರನ ಸ್ಮರಣೆಮಾಡುತ್ತಿರಲಾಗಿ  ನಿನ್ನ ದರ್ಶನಕ್ಕೆ  ಬರಲು ಅಶಕ್ಯಳಾಗಿರುವೆ ಎಂದು ದೈನ್ಯದಿಂದ ವೆಂಕಪ್ಪನನ್ನು ಕೋರಲು ಆಗ  ತುಳಸಿ ವೃಂದಾವನದಲ್ಲಿ  ತಿರುಪತಿಯ ತಿಮ್ಮಪ್ಪ  ಪ್ರಕಟಗೊಂಡು, ನಾನು ನಿನ್ನಲಿಯೇ ನೆಲೆಸಿರುವೆನೆಂದು ಅಭಯವಿತ್ತ ಜಾಗದಲ್ಲಿಯೇ ಈ ಅಮ್ಮನಕಟ್ಟೆಯು ಇದೆ


ಹಾಗೆಯೇ ಅಮ್ಮನವರ ಆಜ್ಞೆಯಂತೆ ಅವರ ದೇಹ ದಹಿಸಿದ ಸ್ಥಳದಲ್ಲಿ  ಮೂರನೆಯ ದಿನಕ್ಕೆ  ಅಶ್ವಥ್ ವೃಕ್ಷ  ಮತ್ತು ಬೇವಿನ ಮರ ಹುಟ್ಟಿ, ಸಾಲಿಗ್ರಾಮಗಳ ದೊರೆತ ಈ ಪವಿತ್ರ ಜಾಗದಲ್ಲಿ ಕಟ್ಟೆಕಟ್ಟಿದ ಕ್ಷೇತ್ರವೆ ಶ್ರೀ ಅಮ್ಮನಕಟ್ಟೆ, ಎಂದು ಜಗದ್ವಿಖ್ಯಾತಿ ಪಡೆಯಿತು... 


ತಾಯಿಯೇ ಹೇಳಿದಂತೆ ಹುನೂರೇಶನ ದೇವಸ್ಥಾನದ ಚೂರು ದೂರದಲ್ಲಿ ಆಕೆಯನ್ನು ದಹನಮಾಡಿದ ಸ್ಥಳದಲ್ಲಿ ಅಶ್ವತ್ಥ ವೃಕ್ಷ, ಬೇವಿನ ವೃಕ್ಷ ಬೆಳೆದ ಜಾಗದಲ್ಲಿ, ತಾಯಿಯ ಸನ್ನಿಧಾನವು ಅದರಲ್ಲೇ ಇದ್ದು ಇಂದಿಗೂ ಆ ವೃಕ್ಷದ ಸುತ್ತಲೂ ಪ್ರದಕ್ಷಿಣೆ ಮಾಡುವುದರಿಂದ ಜನರ ಹಾಗೂ, ಹಸುಗಳ ರೋಗಗಳು ನಾಶವಾಗುತ್ತಿವೆ.. ಪ್ರತೀ ವರ್ಷ ಆರಾಧನೆಯ ದಿನ ಎಲ್ಲಾ ಕಡೆಯಿಂದ ಎಲ್ಲಾ ಜಾತಿಯ ಜನರೂ ತಾಯಿ ತಿಮ್ಮಮ್ಮನವರ ಕಟ್ಟೆಯ ದರ್ಶನ ಮಾಡಿಕೊಂಡು ಹೋಗುತ್ತಾರೆ.. ಉತ್ಸವ ಜಾತರೆ ನಡೆದಂತೆ ಅದ್ಭುತವಾಗಿ ನಡಯುತ್ತದೆ.

ಇಂಥಾ ಪರಮ ಶ್ರೇಷ್ಠ  ಹರಿದಾಸಿಯ ದರುಶನ ಭಾಗ್ಯ ಎಲ್ಲರಿಗೂ ಸಿಗಲೀ.

***

1 comment:

  1. Could you please post some dasarapadas by her?
    TIA

    ReplyDelete