Thursday, 1 August 2019

vishnu teertharu 1806 madanur koppala bidi sanyasi maagha bahula trayodashi ವಿಷ್ಣುತಿರ್ಥರು









VISHNU THEERTHA
(ADAVI ACHARYA.ARANYAKACHARYA)
 1756-1816 check MADANOOR

info from FB madhwanet--->
ArAdhanE of shri mAdanUr vishNu tIrtharu
Shri gurubyO namaha…
Shri mAdanUr Vishnu tIrtharu
Period: 1756-1806
pUrvAshrama name: shri jatIrthAchArya
vidyA gurugaLu: shri vyAsatatvagna tIrtharu (biDi sanyAsigaLU in rAyara maTa)
Ashrama gurugaL: shri satyavara tIrtharu (uttarAdhi maTa)
Aradhana: mAga krishNa trayOdashi
brindAvana: mAdanUr, near koppal
|| EDamUkOpi vAgmithvAm jaDOpi prAgna moulitAm | yath krupAlEshathO yAti Sri Vishnu tIrtham tamAshraye||


His grandfather, shri Tirumala AchArya, was an amsha of “chavana rushi”. Shri Tirumala AchArya, has a dream where shri jayatIrtharu appears and mentions that he would send his favorite disciple who would simplify the meaning of shriman nyAya Sudha and explain the same. Shri Tirumala AchArya calls his son, Shri Narahari and his daughter-in-law, shri BhAgIrathi and mentions that a great scholar will be born and should be named jayatIrtha. So it happened and shri jayatIrtha was born.

Shri jayatIrtha did all his vidyabhyasa at mantrAlaya and became an expert in shastra, veda, etc. While at manthrAlaya, he was directed in his dream by rAyaru to become a disciple of I.G. venkaTaramaNAcharya, who was teaching several people. I.G. venkaTaramaNAcharya later became shri vyAsatatvagna tIrtharu, a biDi sanyAsaigaLu in rAyara maTa.
His bhakti towards his guru was absolute as this incident shows. Once, Sri vyAsa tathvagna tIrtha had to go to IG town to bless one of his devotees. Sri vyAsa tathvagna tIrtha started to move to IG town on a horse. Sri JayatIrtha started following his guru walking and thinking about Sri Krishna. Sri vyAsa tathvagna tIrtha saw his student walking bare foot and offered his pAda rakshas to wear. Sri JayatIrtha was delighted to get the pAda rakshas and with great devotion cleaned pAda rakshas and covered with a cloth and placed the pAda rakshas on his head. This shows the ultimate guru bhakthi of Sri JayatIrtha. Sri JayatIrtha walked bare footed without bothering the heat of the Sun. When swamiji reached the town, he saw his student keeping his pAda rakshas on his head and walking bare foot. Sri vyAsa tathvagna tIrtha was very pleased at the guru bhakthi of Sri JayatIrtha and blessed him whole heartedly. Shri vyAsa tatvagna tIrtha was an aparOksha gnAni and he was a haridAsa with the ankita “vAsuDeva viTTala” before he took sanyAsa. His brindAvana is in vEni sOmapura.
Once shri I.G. venkaTaramaNAcharya’s requests some of his students to do sri Narasimha mantra japa to avoid the apamrutyu of his son. As the japa is a “ugra mantra” no one came forward to do that except shri jayatIrtha. shri jayatIrtha did the tapas of that mantra for 7 days without food and water. At the end of the 7th day, he came to gOpAla krishNa temple and kept various items for panchAmruta. He was so week from the tapas that he could not wait for the formal pUja. He offered the panchAmruta to shri krishNa through mAnasa pUje and partook the same and slept. shri venkaTaramaNAchAr, being a jnAni, understood this and asked his students to continue with rest of the pUja process. People were astonished that no panchAmruta was being offered to Krishna. When shri jayatIrtha woke up during mangaLa Arati, he felt bad that he had made a mistake. However, to everyone’s surprise, panchAmruta started flowing from the idol of krishNa and everyone partook it. This shows the greatness of shri vishNu tIrtharu.
He then got married as advised by his guru. His wife was also pious and extremely devoted to shri hari. They had a beautiful child and named him KrishNa. Shri jayatIrtha was becoming wealthy but he would distribute all his wealth amongst poor people.
He was once sick and lying down when he heard the purandara dAsara kIrthane - mancha bAradu, maDadi bAraLu kanchu kannaDi bAradu. This song had deep impact on him and he became akhanda vairagi. He distributed his remaining wealth to others and left his house with wife and son and became a nomadic. He used to teach tatvagnAna to people and bless them immensely.
He once wanted to visit badarikshrama. However, shri TIkAchAryaru appeared in his dream and instructed him to start teaching nyAyasdha in simple form to people and that he would himself show him badarikAshrama. Shri jayatIrtharu listened to the order of shri tIkArAyaru and started teaching shriman nyAya Sudha. And tIkAchAryaru showed him badarakAshrama including shrimadAchAryaru’s presence there.
He performed several miracles, some of them are:
Showed rudra dEvaru, kaLI and prANa dEvaru to his disciples.

Prevented the apamruthu of his son.

Blessed his daughter-in-law another lady to beget a child.

He also spent time in vAnaprasthAshrama. Now that he had experienced 3 phases of the human life – brahmacharya, grihastAshrama, vAnaprasthAshrama and had attained great vairagya, he decided to seek sanyAsa, the last phase.

He was given sanyAsAshrama by sri satya vara tIrtharu of uttarAdi maTa and was named Vishnu tIrtharu. Since he spent lot of his time in vAnaprasthAshrama, he is also known as aDavi AchAryaru.
He finally settled in a place called mODEshwara, which has a nice Shiva temple. He completed Sudha mangaLa 108 times. That was the kind of anugraha he had of TikArAyaru. He is believed to be an amsha of rudra dEvaru. Since he could not visit badari, badari nArAyaNa visited him in his dream and mentioned about his vigraha. He retrieved the vigraha and even today it can be seen behind his brindAvana. He entered brindAvana on shiva rathri day and to this day blesses his devotees.
Some of his works are:
bhAgavata sArOddhAra (condensed bhAgavata into 30 prakaraNas)

gIta sArOddhAra

sudhA tippaNi

Aatma Sukha bhOdini

upadEsha patra

Antya kAlada smarane

shOdashE – chaturdashE

AadhyAtma rasaranjanE

sumanOranjani: This is a commentry on Tatva prakAshika composed by Sri tIkAcharya.

srimadh sumadhva vijayamEya sangraha mAlika

ramA sthothra (believed to turn copper into gold)

nyAya sudhA sthOthra



For more details of his life, you can visit www.srimadanurvishnuteertha.com

Shri vishNu tIrtha guruvantargata, sri satya vara tIrtha guruvantargata, shri vyAsatatvagna tIrtha guruvantargata, shri rAghavEndra guruvantargata, shri tIkAcharya guruvantargata, bhArati ramaNa mukhyprANAntargata, shri badari nArAyaNa dEvara pAdAravindakke gOvinda, gOvinda….

Shri krishNArpaNamastu…


Shripati Pachhapurkar Sir please contact number


*********


information copied from 
https://madhwafestivals.wordpress.com 
Vishnu thirtharu (1756 – 1806)
ವಿಷ್ಣುತೀರ್ಥಃ ಕಲ್ಪವೃಕ್ಷೋ ವಿಷ್ಣುತೀರ್ಥಶ್ಚ ಕಾಮಧೃಕ್ ।
ಚಿಂತಾಮಣಿರ್ವಿಷ್ಣುತೀರ್ಥೋ ಯತೀಂದ್ರಃ ಕಾಮದಃ ।।
viShNutIrthaH kalpavRukShO viShNutIrthaSca kAmadhRuk |
cintAmaNirviShNutIrthO yatIndraH kAmadaH ||

ಯಸ್ಯ ಪ್ರಚಂಡತಪಸಾ ಶೃತಿಗೀತವೃತ್ತಸ್ತುಷ್ಟೋ ಹರಿ: ಕಿಲ ವಶಂ ವದತಾಪಮಾಪ |
ಶ್ರೀಮಧ್ವಸನ್ಮತ ಪಯೋನಿಧಿ ಪೂರ್ಣಚಂದ್ರ: ಶ್ರೀವಿಷ್ಣುತೀರ್ಥ ಮುನಿರಾದ್ಮಾತನೋತು      ||
yasya prachanDatapasaa shrutigItavRuttastuShTHO hari: kila vashaM vadataapamaapa |
shrImadhvasanmata payOnidhi pUrNachandra: shrIviShNutIrtha muniraadmaatanOtu ||
Actual name                Jayatheerthacharya
Ashrama Gurugalu        Sri Satyavara Tirtharu
Ashrama Nama             Sri Vishnu Tirtharu
Aradhana                      Maagha-Bahula Trayodashi
other names                 Adavi swamigalu,  Aranyakacharyaru

Birth:
He was born to the holy couple Sri Mathi Bhagirathi and Sri Balachar, by the divine grace  of Sri JayaTirtha. and thats why his parents named him as “Jayatirtha.”
Vedanta Studies
Sri Vishnu Tîrtha pursued his advanced spiritual studies under the Sri I.G. VenkataRamanachar( (Sri Vyasatatvajnaru) in holy Mantralayam and  became an expert in Shastra, Veda
Attained Vairaagya thru purandara dasara devara nama:
Once while Jayatirtha was sitting in his house over a cot, a Dasaru who was passing by chanting the kirtanas of Sri Purandara dasaru sang those lines
“Mancha Baradu, Madadi Baralu, Kanchu Kannadi Baradu,
Sanchitathi Dravya Baradu Munche Maadiro dharmava. “
ಮಂಚ ಬಾರದು | ಮಡದಿ ಬಾರಳು |ಕಂಚು ಕನ್ನಡಿ ಬಾರದು |
ಸಂಚಿತಾರ್ತದ ದ್ರವ್ಯ ಬಾರದು | ಮುಂಚೆ ಮಾಡಿರೊ ಧರ್ಮವ |
– Cot, wife and children, Mirror and other accessory show items, monetary earnings and material pleasures will not come with YOU; first you follow Dharma only that will come.
Those words transformed Jayathirtha’s life.
Jayatirtha immediately renounced Samsara life. He passed all his Samsara duties on to his Son and accepted the 3rd order of Ashrama which is the Vanprastha-ashrama and he became Avadhuta.
In the year 1796, Shri Satyavara Teertharu (disciple of Sri Satyasandha Teertharu) ordained him into the sanyâsa order by the name of Sri Vishnu Tirtha.
Sri Vishnu Tirtha is a Rudra Amsha. During his lifetime,  he profoundly completed the entire “Sri Nyaya Sudha Mangala” 108 times
Works by sri Madanuru Vishnu Tirtharu :
1. Adhyaatmruta rasa ranjani
2. Bimbastuti
3. Muktamaala
4. Rama Stotra
5. Sumadhwa Vijaya prameya phalamaalika
6. Nyaayasudhaa stotra
7. Srikrishnaastaka (Antya kaala smarane)
8. BimbaarpaNa vidhi
9. Bhagavata Dharma stotra
10. Atma sukha bodhini patrika
11. Achyutaananta stotra
12. Sri Jayatirthashtaka
13. Sri Jayatirtha Stotra
14. Upadesha Stotra
15. Aajnaa patra
16. ShoDashi
17. Chaturdashi
18. Srimad Bhagavatha Saaroddaara
19. Srimad Bhagavatha Dhruta saara
20. Dhyaana snaana vidhi
Brindavana:
His aradhana is celebrated on Magha Bahula Trayodashi day. His Brindâvana is located at Madanur. (Madanur is in Koppal district, Karnataka. From Koppal, Madanur is six miles away – 30 minutes journey.

The brundavana of Sri Vishnu Theertha is located in Madinoora / Madanur Village, 12 kms from Koppala.

*****

info from sumadhwaseva.com--->


ಯಸ್ಯ ಪ್ರಚಂಡತಪಸಾ ಶೃತಿಗೀತವೃತ್ತಸ್ತುಷ್ಟೋ ಹರಿ: ಕಿಲ ವಶಂ ವದತಾಪಮಾಪ |
ಶ್ರೀಮಧ್ವಸನ್ಮತ ಪಯೋನಿಧಿ ಪೂರ್ಣಚಂದ್ರ: ಶ್ರೀವಿಷ್ಣುತೀರ್ಥ ಮುನಿರಾದ್ಮಾತನೋತು      ||
yasya prachaMDatapasaa shrutigItavRuttastuShTHO hari: kila vashaM vadataapamaapa |
shrImadhvasanmata payOnidhi pUrNachaMdra: shrIviShNutIrtha muniraadmaatanOtu |
 
Janma Naama – Jayatirthacharya
Birth Place – Sirihatta
Vidyabhyasa  – AijiVenkataramacharyaru (Sri Vyasatatvajnaru)
Other names of Vishnu Tirtharu – Adavi Swamigalu, Aranyakacharyaru
Ashrama Gurugalu – Sri Satyavara Tirtharu
Ashrama Nama – Sri Vishnu Tirtharu
Sanyasashrama Sweekara – 1794 (His 40th year)
Vrundavana Pravesha – 1806 (shivaratri)
Vrundavana – Madanooru (Near Kusha River)
Aradhana Day – Magha Bahula Trayodashi

Shishyaas –

Gokavi Anantadri Bheemacharyaru
Tonapi Balacharyaru
Moraba Sheshacharyaru
Moraba Ramacharyaru
Kaujalagi Venkatacharyaru

Annigeri Annacharyaru

Badarinarayana Vigraha found in his dream – once he got a dream wherein he saw Badarinarayana Vigraha at a place.  Next day, when he went to that place in search of that vigraha, he got the vigraha and the same vigraha is being worshipped and kept over his vrundavana at Madanuru.
Chaturashrama –  Like his Gurugalu Vyasatatvajnaru, Madanuru Vishnu Tirtharu also has gone through all the four – Chaturashramas, viz., Brahmacharya, Gruhasta, Sanyasa and Vanaprasta

Jayatirtha drunk the Panchamrutha –

Once when Jayatirtha (Vishnu tirtharu’s poorvashrama), Sri IG Venkataramanacharyaru, the gurugalu, told his shishyaas to do japa of Nrusimha Mantra, on behalf of Gopalakrishnacharya, the son of IG Venkataramanacharya who was suffering from severe health problem and was facing unnatural death.  Sri Jayatirtha started chanting the mantras and did it for seven days even without food or water.  On the seventh day, he completed the mantra and had become very lean and was hungry.  He came straight to Gopalakrishna Temple and took the items kept for preparing Panchamrutha for Gopalakrishna himself.  All the people were stunned at this.   After some time, during Mangalarathi the panchamrutha was coming out of the mouth of Gopalakrishna devaru. Then the people noticed that the panchamrutha which Jayatirtha had eaten were done samarpana to bimbamoorthy in him.  The son of IG Venkataramanachar also recovered.
Vairagya through Purandaradasara devaranama 
Once Jayatirthachar was sitting happily on his decorated bed alongwith his wife.  Then a Daasa came near his house and was singing the devaranama –
govinda namo govinda namo govinda naaraayana
mancha baaradu | maDadi baaraLu |
kanchu kannadi baaradu |
sanchitaartada dravya baaradu |
munche maadiro dharmava |
ಗೋವಿಂದ ನಮೋ ಗೋವಿಂದ ನಮೋ ಗೋವಿಂದ ನಾರಾಯಣ
ಮಂಚ ಬಾರದು | ಮಡದಿ ಬಾರಳು |
ಕಂಚು ಕನ್ನಡಿ ಬಾರದು |
ಸಂಚಿತಾರ್ತದ ದ್ರವ್ಯ ಬಾರದು |
ಮುಂಚೆ ಮಾಡಿರೊ ಧರ್ಮವ |
On hearing this immediately Jnaana in Jayatirtha made him to got out of his bed, left his house and never touched the bed again.    Each word in the song was so inspiring that he left everything step by step and took vairagya.
Granthas by sri Madanuru Vishnu Tirtharu : (already shown earier)
Chaturdashi Grantha –   In this grantha, he has narrated Chaturdasha upaasane.    viz., Jeeva homa prakarana, Upanayana prakarana, Suryagati prakarana, Ayuryajna prakarana, vedaadhyayana prakarana, bhikshaaTana prakaraNa, bhojana prakaraNa, paapaalepa prakaraNa, Jeeva prayaaNa maarga prakaraNa, brahmayajna prakaraNa, shudda yajna prakaraNa, svaroopa yajna prakaraNa, sulabha pooja prakaraNa, guruprasaada laabha prakaraNa.
In the Jeeva Homa prakaraNa – He has narrated the tatva niyamaka devate for Homa
In the upanayana prakaraNa – He has narrated the Rushi, Chandassu, Devate, etc., for Gayatri Mantra.  There is a separate Rushi for Om, BhU:, bhuva:, suva:,  etc.,   Similarly there is separate Chandassu for Om, BhU:, bhuva:, suva:,  etc.,  there is a separate devate for Om, BhU:, bhuva:, suva:,  etc.,  
In Vedaadhyayana prakaraNa –  He has narrated the anusandhaana for vedaadhyana
In Bhojana prakaraNa – He has narrated the Vaishwaanara dhyaana krama, abhimaani devate for different svaaha,

Shodashi Grantha –  In this grantha, he has narrated Shodasha the various aspects of Jeeva – it has 16 prakaraNaas – viz.,  Bandhaka prakaraNa,  bandhaka nivrutti prakaraNa,  bimba pratibimbabhaava prakaraNa,  sthoola shareera srusti prakaraNa,  avastaatraya nirmaNa prakaraNa,  praaNa vyaapaara prakaraNa,  bimba samstaapana prakaraNa,  bhojana prakaraNa,  indriya vyaapara prakaraNa,  tatva kaarya prakaraNa,  rathaadi prakaraNa, jaagrat prakaraNam, svapna prakaraNam,  suShupti prakaraNam, gamanaagamana prakaraNam,  mokSha prakaraNam,
********

read more ಕ್ಲಿಕ್ click below _/
   ವಿಷ್ಣು ತೀರ್ಥರು ೧೮೦೬
********



ಮಾದನೂರಿನ ತಪೋಮೂರ್ತಿ ಶ್ರೀ ವಿಷ್ಣುತೀರ್ಥರ ಆರಾಧನಾ

ಭಾಗವತ ಶಿರೋಮಣಿ  ಶ್ರೀ ವಿಷ್ಣುತೀರ್ಥರ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಹೆಸರು : ಶ್ರೀ ಜಯತೀರ್ಥಾಚಾರ್ಯರು
ತಂದೆ : ಶ್ರೀ ಬಾಳಾಚಾರ್ಯರು
ತಾಯಿ : ಸಾಧ್ವೀ ಭಾಗೀರಥೀಬಾಯಿ
ಕಾಲ : ಕ್ರಿ ಶ 1756 - 1806
ಜನ್ಮಸ್ಥಳ : ಸವಣೂರು ಹತ್ತಿರವಿರುವ ಸಿದ್ಧಾಪುರ ಗ್ರಾಮ
ಅಂಶ : ಶ್ರೀ ರುದ್ರದೇವರು
ಸ್ವರೂಪೋದ್ಧಾರಕ ಗುರುಗಳು :
                         ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು
ವಿದ್ಯಾ ಗುರುಗಳು : 
             ಐಜಿ ಶ್ರೀ ವೇಂಕಟರಾಮಾಚಾರ್ಯರು ( ಶ್ರೀ ವ್ಯಾಸತತ್ತ್ವಜ್ಞರು )
ಸಹಪಾಠಿಗಳು :
ಉತ್ತರಾದಿ ಮಠದ ಶ್ರೀ ಸತ್ಯಪ್ರಿಯತೀರ್ಥರ ಪೂರ್ವಾಶ್ರಮ ಪುತ್ರರು ಮಹಾಭಾಷ್ಯಂ ಶ್ರೀ ಶ್ರೀನಿವಾಸಾಚಾರ್ಯರು
ಆಶ್ರಮ ಗುರುಗಳು : ಶ್ರೀ ಸತ್ಯವರ ತೀರ್ಥರು
ಬೃಂದಾವನ ಸ್ಥಳ : ಮಾದನೂರು
ಆರಾಧನೆ : ಮಾಘ ಬಹುಳ ತ್ರಯೋದಶೀ ( ಮಹಾ ಶಿವರಾತ್ರಿ )

|| ಶ್ರೀ ಗುರುರಾಜೋ ವಿಜಯತೇ ||
|| ಶ್ರೀ ವಿಷ್ಣುತೀರ್ಥ ಗುರುಭ್ಯೋ ನಮಃ ||

ಮಾಘ ಶುದ್ಧ ತ್ರಯೊದಶಿ : ವಿಷ್ಣುತೀರ್ಥರ ಆರಾಧನೆ ,ಮಾದನೂರು

ಮಧ್ವಾಚಾರ್ಯ ಮೂಲಮಹಾಸಂಸ್ಥಾನ ದಕ್ಷಿಣಾಧಿ ಕವೀಂದ್ರಮಠ ಈಗಿನ ಶ್ರೀರಾಘವೇಂದ್ರ ಸ್ವಾಮಿಗಳ ಮಠದ  ಶ್ರೀಭುವನೇಂದ್ರತೀರ್ಥರ ಕರಕಮಲ ಸಂಜಾತರಾದ ಅಗ್ನಿ ದೇವರ ಅಂಶ ಸಂಭೂತರಾದ ದೃಷ್ಟದ್ಯುಮ್ನನ ಅವತಾರವಾದ ಶ್ರೀವ್ಯಾಸತತ್ವಜ್ಞತೀರ್ಥರ ಶಿಷ್ಯರಾದ ಶ್ರೀ ವಿಷ್ಣುತೀರ್ಥರ ಆರಾಧನೆ.

ಅವಧೂತ ಶಿರೂಮಣಿಗಳು ರುದ್ರಾಂಶ ಸಂಭೂತರು ಅಡವಿ ಸ್ವಾಮಿಗಳು ಎಂದು ಪ್ರಸಿದರಾದವರು ಶ್ರೀವಿಷ್ಣುತೀರ್ಥರು. ಶ್ರೀಬಾಳಾಚಾರ್ಯರು ಮತ್ತು ಶ್ರೀಮತಿ ಭಾಗೀರಥಿ ದಂಪತಿಗಳಿಗೆ ಶ್ರೀ ಟೀಕಾರಾಯರ ವಿಶೇಷ ಅನುಗ್ರಹದಿಂದ ಜನಿಸಿದ ಸುಪುತ್ರರೇಶ್ರೀಜಯತೀರ್ಥಾಚಾರ್ಯರು. ಜ್ಞಾನಿಗಳಾದ ಶ್ರೀವ್ಯಾಸತತ್ವಜ್ಞತೀರ್ಥರಲ್ಲಿ ಸಕಲ ವೇದಾಂತ ಶಾಸ್ತ್ರವನ್ನು ಅಧ್ಯಾಯನ ಮಾಡಿ ವಿದ್ವತ್ ಪ್ರಚಂಡನೆನಿಸಿದರು.

ವೈರಾಗ್ಯ ಶಿಖಾಮಣಿಗಳು :
ಒಮ್ಮೆ ಶ್ರೀಆಚಾರ್ಯರು ಮಂಚದಮೇಲೆ ಕುಳಿತು ವಿಶ್ರಾಂತಿ ಪಡೆಯುತ್ತಿರುವಾಗ ಮನೆಹತ್ತಿರ ದಾಸರೋರ್ವರು ಹಾಡುತ್ತಿದ ಪುರಂದರದಾಸರ ವೈರಾಗ್ಯದ ಕೀರ್ತನೆ ಆಚಾರ್ಯರ ಕಿವಿಗೆ ಬಿತ್ತು.

ಮಂಚ ಬಾರದು | ಮಡದಿ ಬಾರಳು |ಕಂಚು ಕನ್ನಡಿ ಬಾರದು |ಸಂಚಿತಾರ್ತದ ದ್ರವ್ಯ ಬಾರದು | ಮುಂಚೆ ಮಾಡಿರೊ ಧರ್ಮವ |

ಆಚಾರ್ಯರಿಗೆ ಮನಸ್ಸಿಗೆ ತುಂಬಾ ಹತ್ತಿರವೆನಿಸಿ ಸಂಸಾರ ಬಂಧನವನ್ನು ತ್ಯಜಿಸಿ ಶ್ರೀ ಸತ್ಯವರತೀರ್ಥರಲ್ಲಿ ಆಶ್ರಮ ಸ್ವೀಕರಿಸಿದರು. ಜ್ಞಾನಿಗಳಾದ ಶ್ರೀವಿಷ್ಣುತೀರ್ಥರು 108 ಬಾರಿ ಶ್ರೀಮನ್ನ್ಯಾಯ ಸುಧಾ ಮಂಗಳವನ್ನು ಮಾಡಿ ಶ್ರೀಮದಾಚಾರ್ಯರ ಕರುಣಾಸುಪಾತ್ರರಾದರು. 

ಗ್ರಂಥಗಳು :
* ಅಧ್ಯಾಮೃತ ರಸ ರಂಜಿನಿ
* ಬಿಂಬ ಸ್ತುತಿ
* ಮುಕ್ತ ಮಾಲ
* ರಾಮ ಸ್ತೋತ್ರ
* ಸುಮಧ್ವವಿಜಯ ಪ್ರಮೇಯ ಫಲಮಾಲೀಕ
* ನ್ಯಾಯಸುಧಾ ಸ್ತೋತ್ರ
* ಶ್ರೀಕೃಷ್ಣಾಷ್ಟಕ
* ಬಿಂಬಾರ್ಪಣ ವಿಧಿ
* ಭಾಗವತ ಧರ್ಮ ಸ್ತೋತ್ರ
( ಆತ್ಮ ಸುಖ ಭೋದಿನಿ ಪತ್ರಿಕ)
* ಅಚ್ಯುತಾನಂತ ಸ್ತೋತ್ರ
* ಜಯತೀರ್ಥ ಅಷ್ಟಕ
* ಜಯತೀರ್ಥ ಸ್ತೋತ್ರ
* ಉಪದೇಶ ಸ್ತೋತ್ರ
* ಆಜ್ಞಾ ಪಾತ್ರ
* ಷೋಡಶಿ
* ಚತುರ್ದಶಿ
* ಶ್ರೀಮದ್ ಭಾಗವತ ಸಾರೋದ್ಧರ
* ಶ್ರೀಮದ್ ಭಾಗವತ ಧೃತ ಸಾರ
* ಧ್ಯಾನ ಸ್ನಾನ ವಿಧಿ

ವರದ ವಿಷ್ಣು ತೀರ್ಥಾನೀ ಕೊಡು ಕರುಣದಿ
ಪುರುಷಾರ್ಥ |
ವರದ ಅಭೀಷ್ಟೆಯ ಕರದು ಎನಗೆ ನೀ
ವರದನೆಂಬೊ ನಿನ್ನ ಬಿರುದನ ರಕ್ಷಿಸು ||

ಅಜನ ಜನಕನಲ್ಲಿ ಇರುವಿಯೊ ವಿಜನ ದೇಶದಲ್ಲೀ
ಸುಜನರು ಇದ್ದಲ್ಲಿ ಬರುವೆಯೊ ಭಜನೆಮಾಡುವಲ್ಲೀ
ಸುಜನರ ತಾಪಕೆ ವ್ಯಜನನು ನೀನೂ
ಸುಜನಕಲ್ಪತರು ಕುಜನಕುಠಾರಾ ||

ನಂದನಂದನನೂ ಅವನಿನ್ನ ಬಂಧನದೊಳಗಿಹನೂ
ಅಂಧನಾಗಿ ನಾನೂ ಸಂಸೃತಿ ಬಂಧನದೊಳಗಿನ್ನೂ
ನೊಂದೆನು ಬೆಂದೆನು ಬಂದೆನು ನಿನ್ನಲಿ
ಕಂದನ ಲಾಲಿಸು ಒಂದಿನ ಬಿಡದೆ ||

ಮರೆತೆನು ನಾನಿನ್ನಾ ಅವಗುಣ ಮರೆತು ಪಾಲಿಸು ಮುನ್ನಾ
ಪರತರಗುರು ನಿನ್ನಾ ಹೊರತು ಗತಿ ಗುರುತುಕಿಲ್ಲ ಮುನ್ನಾ
ಅರಿತು ಅನಂತಾದ್ರಿ ನಿಲಯನ ತೋರಿಸು
ತ್ವರತ ಮೋದ ಪುರನಿರತ ಸದ್ಗುರುವೆ ||

ಶ್ಲೋಕ:
ವಿಷ್ಣುತೀರ್ಥಃ ಕಲ್ಪವೃಕ್ಷೋ ವಿಷ್ಣುತೀರ್ಥಶ್ಚ ಕಾಮಧೃಕ್ ।
ಚಿಂತಾಮಣಿರ್ವಿಷ್ಣುತೀರ್ಥೋ ಯತೀಂದ್ರಃ ಕಾಮದಃ ।।

ಯಸ್ಯ ಪ್ರಚಂಡತಪಸಾ ಶೃತಿಗೀತವೃತ್ತಸ್ತುಷ್ಟೋ ಹರಿ: ಕಿಲ ವಶಂ ವದತಾಪಮಾಪ |
ಶ್ರೀಮಧ್ವಸನ್ಮತ ಪಯೋನಿಧಿ ಪೂರ್ಣಚಂದ್ರ: ಶ್ರೀವಿಷ್ಣುತೀರ್ಥ ಮುನಿರಾದ್ಮಾತನೋತು    ||

ಸತ್ಯಂ ಸತ್ಯಂ ಪುನಃ ಸತ್ಯಂ ವಿಷ್ಣುತೀರ್ಥಪ್ರಸಾದತಃ |
ಸರ್ವೆ ಕಾಮಾ ಭವಂತ್ಯೇವ ಶಪಥೋ ಬಿಂಬಸನ್ನಿಧೌ ||

ಶ್ರೀ ಇಭರಾಮಪುರಾಧೀಶ

ವಿಷ್ಣುತೀರ್ಥಚಾರ್ಯ ಇಭರಾಮಪುರ
******

ಶ್ರೀವಿಷ್ಣುತೀರ್ಥರ ಉಪದೇಶ ಪತ್ರ
                      ****
    ಶ್ರೀವಿಷ್ಣುತೀರ್ಥರು ತಮ್ಮ ಶಿಷ್ಯರಾದ ಗೋಕಾವಿ ಅನಂತಾದ್ರಿ ಭೀಮಾಚಾರ್ಯರಿಗೆ ಕಳುಹಿಸಿದ ಉಪದೇಶ ಪತ್ರದ ವಿವರ ಹೀಗಿದೆ
    ನೀವು ಪ್ರವರ್ತಿಸೋ ಪ್ರಕಾರ : ಒಂದು ದಿವಸಕ್ಕೆ 60 ಘಳಿಗಿ ಅದರೊಳಗೆ ಪಶ್ಚಿಮ ರಾತ್ರಿಯಲ್ಲಿ 6 ಘಳಿಗಿ ಇರಲಿಕ್ಕೆ ಎದ್ದು ; 4 ಘಳಿಗಿ ಶಾಸ್ತ್ರ ವಿಚಾರ ; 2 ಘಳಿಗಿ ಉಪದಿಷ್ಟಮಾರ್ಗದಿಂದ ಶ್ರೀಹರಿ ವಿಚಾರ ; ಹಗಲು ೩೦ಘಳಿಗಿ ಒಳಗೆ  2 ಘಳಿಗಿ ಸ್ನಾನ ; 2 ಘಳಿಗಿ ಜಪ ; 2 ಘಳಿಗಿ ದೇವತಾರ್ಚನೆ; 2 ಘಳಿಗಿ ಭೋಜನ ; 2 ಘಳಿಗಿ ಆಲಸ್ಯ ಪರಿಹಾರ ಮಾಡಿಕೊಂಬೋಣ ; ಉಳಿದ 20 ಘಳಿಗಿ ಶಾಸ್ತ್ರ ಶ್ರವಣ ಪ್ರವಚನ ; ಪೂರ್ವರಾತ್ರಿ 2 ಘಳಿಗಿ ಸಂಧ್ಯಾವಂದನೆ , ದೇವರ ಪೂಜೆ ; 8 ಘಳಿಗಿ ಪುಸ್ತಕಾವಲೋಕನಾದಿಗಳು ; 14 ಘಳಿಗಿ ನಿದ್ರಾ- ಈ ಪ್ರಕಾರ ಪ್ರವರ್ತಿಸಬೇಕು 
    ತಮ್ಮ ತಮ್ಮ ಶಕ್ತ್ಯಾನುಸಾರ ಯೋಗ್ಯತಾಭಿವ್ಯಕ್ತಿ              ಕಾಲಾನುಸಾರ ಅಧಿಕವಾಗಿ ವ್ಯಾಸಂಗ ಮಾಡಬೇಕು ..ಶ್ರೀಹರಿಯು ದಾರಿಗೆ ದಾವುದು ಮಾಡೋ ಅಧಿಕಾರಕೊಟ್ಟು ಹುಟ್ಟಿಸಿದ್ದಾನೋ ಅವರು ಅದನ್ನು ಮಾಡದೆ ಉಳಿದ ಸಹಸ್ರ ಸಾಧನ ಮಾಡಿದರೂ ಶ್ರೀಹರಿಯ ಆಜ್ಞಾ ಮೀರಿದವರೇ ಸರಿ .ನಿಮಗೆ ಯೋಗ್ಯತಾನುಸಾರ ಸಾಧನ ಸಾಮಗ್ರಿ  ಕೊಟ್ಟಿರಲಿಕ್ಕೆ ಮುಕ್ತಿಸಾಧನ ಮಾಡದೆ ಇದ್ದರೆ ಹ್ಯಾಗೆ ಶ್ರಮವಾಗದೆ ಹೋದೀತು ? ಇದೇ ವಿಷಯದಲ್ಲಿ ಸರ್ವದಾ ಉದ್ಯೋಗಿ ಆಗಿ ಇರಬೇಕು.ಲೌಕಿಕ ತನ್ನಿಂದ ತಾನೇ ಬಂದೀತು. ಯದೃಚ್ಛಲಾಭ ಸಂತುಷ್ಟನಾಗಿರುವದೇ ಮುಖ್ಯವು .ಯಾಚನ ಮಾಡಿದರೂ ಪ್ರಾಣಪರಿಪಾಲನ ಮಾತ್ರೋಪಯುಕ್ತವೆ ಮಾಡಬೇಕು .ಹೆಚ್ಚು ಮಾಡಿದಾತನು ಶ್ರಮಪಟ್ಟಾನು
*******


ಶ್ರೀ ವಿಷ್ಣುತೀರ್ಥ - 1

ಶ್ರೀಮದ್ಭಾಗವತ ಸಾರೋದ್ಧಾರ ಕರ್ತೃಗಳೂ, ಶ್ರೀ ರುದ್ರದೇವರ ಅಂಶ ಸಂಭೂತರೂ, ಶ್ರೀ ಅಗ್ನಿದೇವರ ಅಂಶ ಸಂಭೂತರಾದ ಶ್ರೀ ವ್ಯಾಸತತ್ತ್ವಜ್ಞ ತೀರ್ಥರ ವಿದ್ಯಾ ಶಿಷ್ಯರೂ ಆದ ಮಾದನೂರಿನ ತಪೋಮೂರ್ತಿ ಶ್ರೀ ವಿಷ್ಣುತೀರ್ಥರ ಆರಾಧನಾ ಮಹೋತ್ಸವ 

ಯಸ್ಯ ಪ್ರಚಂಡ ತಪಸಾ 
ಶ್ರುತಿಗೀತವೃತ್ತೈಸ್ತುಷ್ಟೋ 
ಹರಿಃ ಕಿಲ ವಶಂ ವದತಾಮವಾಪ ।    
ಶ್ರೀ ಮಧ್ವ ಸಮ್ಮತ ಪಯೋನಿಧಿ 
ಪೂರ್ಣಚಂದ್ರ: 
ಶ್ರೀ ವಿಷ್ಣುತೀರ್ಥ ಮುನಿರಾಣ್ಮುದ
ಮಾತನೋತು ।।

ಶ್ರೀ ವಿಷ್ಣುತೀರ್ಥರಂಥ ಮಹಾತ್ಮರು ಜನಿಸುವುದು ವಿರಳ. 

ಇಂಥ ಉತ್ತಮ ಶ್ಲೋಕರ ಗುಣಾನುಕಥನವು ಪರಮ ಶ್ರೇಯಸ್ಸಿಗೆ ಕಾರಣವಾಗಿದೆ. 

ಇವರ ಚರಿತ್ರೆಯು ಜನರಿಗೆ ಮಾರ್ಗದರ್ಶಕವೂ ಆಗಿದೆ. 

ಶ್ರೀ ವಿಷ್ಣುತೀರ್ಥರು ಕ್ರಿ ಶ 1756ನೇ ಸಂವತ್ಸರ ಶ್ರಾವಣ ಕೃಷ್ಣ ಅಷ್ಟಮೀ ದಿವಸ ಸವಣೂರು ಪ್ರಾಂತ ಸಿದ್ಧಾಪುರ ಗ್ರಾಮದಲ್ಲಿ ಜನಿಸಿದರು. 

ತಂದೆ : ಶ್ರೀ ಬಾಳಾಚಾರ್ಯರು 
ತಾಯಿ : ಸಾಧ್ವೀ ಭಾಗೀರಥೀ ಬಾಯಿ 

ಈ ದಂಪತಿಗಳು ಮಹಾ ಸದಾಚಾರ ಸಂಪನ್ನರೂ, ಆಚಾರ ನಿಷ್ಠರೂ ಆಗಿದ್ದರು. 

ಈ ದಂಪತಿಗಳು ಬಹು ದಿನಗಳು ಮಕ್ಕಳಾಗದ ಕಾರಣ ಶ್ರೀ ಜಯತೀರ್ಥರ ಸೇವೆ ಮಾಡಿದರು. 

ಶ್ರೀ ಜಯತೀರ್ಥರ ಚರಣಾನುಗ್ರಹದಿಂದ ಹುಟ್ಟಿದ ಕಾರಣ ಇವರಿಗೆ " ಜಯತೀರ್ಥ " ಯೆಂದು ನಾಮಕರಣ ಮಾಡಿದರು. 

ಜನ್ಮಾಷ್ಟಮಕ್ಕೆ ಉಪನಯನಾದಿಗಳು ನಡೆದವು. 

" ಸಂಕ್ಷಿಪ್ತ ಮಾಹಿತಿ "

ಕಾಲ : ಕ್ರಿ ಶ 1756 - 1806

ಅಂಶ : ಶ್ರೀ ರುದ್ರದೇವರು

ಕಾಲ ಕೂಟ ತಾ ಪಾನವ 
ಮಾಡಿದ । ಗರಗೊ ।
ರಳ್ಯೆಂದೆನಿಸಿದನು ಶಿರನುತ 
ತಂದೆ ವರದ । ಗೋ ।
ಪಾಲ ವಿಠ್ಠಲನ ಧ್ಯೇನಿಪನೋ
ಸೇವಿಪನೋ ।।
ಪಾವಿನ ಪದನೋ ವನದಲಿ 
ನಿಂದು ರಾಮನ । ಜಪಿ ।
ಸುವ ಹರ ಶ್ರೀವನಾರ್ಯರಂಘ್ರಿಯ ।।

" ಸ್ವರೂಪೋದ್ಧಾರಕ ಗುರುಗಳು "

ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು

" ಮಂತ್ರಾಲಯ ಪ್ರಭುಗಳ ಕಾರುಣ್ಯ "

ಜಯತೀರ್ಥನ ಶಕ್ತಿ; ಕುಶಾಗ್ರಮತಿ ಮತ್ತು ವಿದ್ಯಾಸಕ್ತಿಯನ್ನು ಕಂಡು ಶ್ರೀ ಬಾಳಾಚಾರ್ಯರು ಸಂತೋಷ ಪಟ್ಟು ಪ್ರೌಢ ಶಿಕ್ಷಣವನ್ನು ಯೋಗ್ಯ ಗುರುಗಳಿಂದ ಕೊಡಿಸಿ ಅವರನ್ನು ವಿದ್ವಾಂಸರನ್ನಾಗಿ ರೂಪಿಸಬೇಕೆಂದು ಬಯಸೀ ಇದಕ್ಕಾಗಿ ಯೋಗ್ಯ ಪಂಡಿತಾಗ್ರೇಸರರನ್ನು ಆಶ್ರಯಿಸಬೇಕೆಂದು ವಿಚಾರ ಮಾಡಿ ತಮ್ಮ ಮಗನಿಗೆ ಯೋಗ್ಯ ಗುರುಗಳನ್ನು ತೋರಿಸಲು ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರೊಬ್ಬರೇ ಸಮರ್ಥರೆಂದು ತಿಳಿದು ಮಗನೊಂದಿಗೆ ಶ್ರೀ ಬಾಳಾಚಾರ್ಯರು ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ ಬಂದರು.

ಶ್ರೀ ಬಾಳಾಚಾರ್ಯರು ಮಗನೊಂದಿಗೆ ಮಂತ್ರಾಲಯಕ್ಕೆ ಬಂದು ತುಂಗಭದ್ರೆಯಲ್ಲಿ ಮಿಂದು ಶುಭ್ರನಾಗಿ ಬಂದು ಶ್ರೀ ಗುರುಸಾರ್ವಭೌಮರ ವೃಂದಾವನದ ಮುಂದೆ ನಿಂತು " ತನಗೆ ಜ್ಞಾನ ತೋರುವ ಯೋಗ್ಯ ಗುರುವನ್ನು ತೋರಿಸು " ಎಂದು ಜಯತೀರ್ಥನು ವಿನಮ್ರವಾಗಿ ಪ್ರಾರ್ಥಿಸಿದ!

ವಿದ್ಯಾ ಪಕ್ಷಪಾತಿಗಳೂ; ಭಕ್ತ ಶಿಷ್ಯ ಜನೋದ್ಧಾರಕರೂ; ಕಲಿಯುಗ ಕಲ್ಪವೃಕ್ಷ ಕಾಮಧೇನುವೆಂದು ಜಗತ್ಪ್ರಸಿದ್ಧರೂ; ಅಘಟಿತಘಟನಾ ಕಾರ್ಯ ಮಾಡುವುದರಲ್ಲಿ ಸಮರ್ಥರೂ ಆದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರೇ " ಕರುವನ್ನು ( ಜಯತೀರ್ಥ ) ಹಸುವಿನ ( ಐಜಿ ಶ್ರೀ ವೇಂಕಟರಾಮಾಚಾರ್ಯರು ) ಬಳಿ ಸೇರಿಸುವ ಅದೃಶ್ಯ ಸೂತ್ರಧಾರರಾಗಿ, ಪಂಡಿತ ಶ್ರೇಷ್ಠ ಶ್ರೀ ಐಜಿ ವೇಂಕಟರಾಮಾಚಾರ್ಯರನ್ನು ಮಂತ್ರಾಲಯಕ್ಕೆ ಬರುವಂತೆ ಪ್ರೇರೇಪಿಸಿದರು.

ನೀತ ಗುರುಗಳಿಗಾಗಿ ಹಂಬಲಿಸುತ್ತಾ ತಮ್ಮನ್ನಾಶ್ರಯಿದ ಜಯತೀರ್ಥನಿಗೆ ಶ್ರೀ ಐಜಿ ವೇಂಕಟರಾಮಾಚಾರ್ಯರಂಥಾ ಜ್ಞಾನಿ ಶ್ರೇಷ್ಠರನ್ನು ಶ್ರೀ ಗುರುರಾಜರು ಕರುಣಿಸಿದರು. 

ಜಯತೀರ್ಥನಂತೂ ಶ್ರೀ ಐಜಿ ವೇಂಕಟರಾಮಾಚಾರ್ಯರ ದರ್ಶನ ಮಾತ್ರದಿಂದಲೋ ಪುಲಕಿತನಾದನು. 

ಎಷ್ಟೋ ಜನ್ಮಗಳ ಸಂಬಂಧವಿರುವಂತೆ ಭಾವವಿಷ್ಟನಾಗಿ ಅವರ ಸಾಮಿಪ್ಯವನ್ನು ಬಯಸಿದನು.

" ಶ್ರೀ ಐಜಿ ವೇಂಕಟರಾಮಾಚಾರ್ಯರ ಕೃಪಾ ದೃಷ್ಟಿ "

ಶ್ರೀ ಐಜಿ ವೇಂಕಟರಾಮಾಚಾರ್ಯರ ಪವಿತ್ರವಾದ ಪಾದ ಕಮಲಗಳ ಮೇಲೆ ಜಯತೀರ್ಥನು ತನ್ನ ಶಿರವನ್ನಿಟ್ಟು ವಿದ್ಯಾ ದಾನ ಮಾಡಿ ಉದ್ಧರಿಸಬೇಕೆಂದು ಪ್ರಾರ್ಥಿಸಿದ. 

ಜಯತೀರ್ಥನ ನಯ - ವಿನಯಾದಿ ಸದ್ಗುಣಗಳನ್ನು ಕಂಡು ಶ್ರೀ ಐಜಿ ವೇಂಕಟರಾಮಾಚಾರ್ಯರಿಗೆ ಅತೀವ ಸಂತೋಷವಾಯಿತು. 

ಇಂತಹಾ ಶಿಷ್ಯ ರತ್ನವನ್ನು ಪಡೆಯಬೇಕೆಂದೇ ಶ್ರೀ ಐಜಿ ವೇಂಕಟರಾಮಾಚಾರ್ಯರು ಶ್ರೀ ಗುರುಸಾರ್ವಭೌಮರ ಪ್ರೇರಣೆಯಂತೆ ಮಂತ್ರಾಲಯಕ್ಕೆ ಆಗಮಿಸಿದ್ದರು.

ಶ್ರೀ ಹರಿ ವಾಯು ಗುರುಗಳ ಪರಮಾನುಗ್ರಹದಿಂದ ತಮ್ಮ ವಿದ್ಯೆಯನ್ನು ಧಾರೆಯೆರೆಯಲು ಅನಾಯಾಸವಾಗಿ ಶಿಷ್ಯೋತ್ತಮನೋಬ್ಬನು ದೊರಕಿದನೆಂದು ಶ್ರೀ ಐಜಿ ವೇಂಕಟರಾಮಾಚಾರ್ಯರು ಬಹಳ ಸಂತೋಷಪಟ್ಟರು.

ಶ್ರೀ ಐಜಿ ವೇಂಕಟರಾಮಾಚಾರ್ಯರು ತಮ್ಮ ಪಾದಾಕ್ರಾಂತನಾದ ಜಯತೀರ್ಥನನ್ನು ಮೈದಡವಿ ಎಬ್ಬಿಸಿ ಆತ್ಮೀಯತೆಯಿಂದ ಮಾತನಾಡಿಸಿ; ಅವನ ಕಾಂತಿಯುಕ್ತವಾದ ಮುಖ ಕಮಲದಲ್ಲಿ ಅವತಾರ ಪುರುಷನ ದಿವ್ಯ ಲಕ್ಷಣಗಳನ್ನು ಕಂಡು ಪುಳಕಿತರಾದರು. 

ಮುಂದೆ ಜಯತೀರ್ಥನಿಂದ ದ್ವೈತ ಮತಕ್ಕೆ ಅನುಪಮವಾದ ಸೇವೆ ಸಲ್ಲುವುದೆಂದು ಮನಗೊಂಡು ಶ್ರೀ ಐಜಿ ವೇಂಕಟರಾಮಾಚಾರ್ಯರು ಜಯತೀರ್ಥನನ್ನು ತಮ್ಮ ವಿದ್ಯಾ ಶಿಷ್ಯನನ್ನಾಗಿ ಸ್ವೀಕರಿಸಿದರು.

" ವಿದ್ಯಾ ಗುರುಗಳು "

ಐಜಿ ಶ್ರೀ ವೇಂಕಟರಾಮಾಚಾರ್ಯರು ( ಶ್ರೀ ವ್ಯಾಸತತ್ತ್ವಜ್ಞರು )

ವೇಣೀ ಸೋಮಾಪುರದ ಶ್ರೀ ಐಜಿ ಆಚಾರ್ಯರಲ್ಲಿ ಬಹ್ಮಚರ್ಯದಿಂದ ವಿದ್ಯಾಭ್ಯಾಸ ಮಾಡಿ ನ್ಯಾಯ - ವ್ಯಾಕರಣ - ಮೀಮಾಂಸಾ - ವೇದಾಂತಗಳಲ್ಲಿ ಘನ ಪಂಡಿತರಾಗುತ್ತಾರೆ. 

" ಪ್ರೌಢ ಗ್ರಂಥಗಳ ಅಧ್ಯಯನ "

ಜ್ಞಾನ ಭಕ್ತಿ ವೈರಾಗ್ಯ ಭರಿತರೂ; ಶ್ರೇಷ್ಠ ವಿದ್ವಾಂಸರಾದ ಶ್ರೀ ಐಜಿ ವೇಂಕಟರಾಮಾಚಾರ್ಯರ ಶಿಷ್ಯತ್ವವನ್ನು ವಹಿಸಿ ಗುರು ಶುಶ್ರೂಷನಿರತನಾದ ಜಯತೀರ್ಥನ ಜ್ಞಾನದಾಹ, ವಿಧೇಯತೆ, ಗುರುಭಕ್ತಿ, ಅರ್ಪಣಾಭಾವ ಮುಂತಾದ ಸದ್ಗುಣಗಳು ಶ್ರೀ ಐಜಿ ವೇಂಕಟರಾಮಾಚಾರ್ಯರ ಮನಸ್ಸನ್ನು ಸೆರೆ ಹಿಡಿದವು. 

ಅಲ್ಲದೇ ಜಯತೀರ್ಥನಿಗೆ ಸಮಗ್ರವಾದ ದ್ವೈತ ವೇದಾಂತ ವಿದ್ಯೆಯನ್ನು ಆಮೂಲಾಗ್ರವಾಗಿ ಪಾಠ ಮಾಡಿ ವಿದ್ವತ್ಪ್ರಪಂಚವೇ ಬೆರಗಾಗುವಂತೆ ಶ್ರೇಷ್ಠ ಪಂಡಿತನನ್ನಾಗಿ ತಯಾರು ಮಾಡಿ ತಮ್ಮ ವಿದ್ಯೆಯನ್ನು ಜಯತೀರ್ಥನಿಗೆ ಧಾರೆಯೆರೆದರು.

" ಶ್ರೀ ಐಜಿ ವೇಂಕಟರಾಮಾಚಾರ್ಯರ ಮಾತೃವಾತ್ಸಲ್ಯ "

ಶ್ರೀ ಐಜಿ ವೇಂಕಟರಾಮಾಚಾರ್ಯರು ತಾವು ಹೋದಲ್ಲೆಲ್ಲಾ ತಮ್ಮ ಪ್ರೀತಿಯ ವಿದ್ಯಾ ಶಿಷ್ಯನಾದ ಜಯತೀರ್ಥನನ್ನು ಕರೆದುಕೊಂಡು ಹೋಗುತ್ತಿದ್ದರು. 

ವಿದ್ವಜ್ಜನ ಸಮೂಹದಲ್ಲಿ; ಪಂಡಿತ ಮಂಡಲಿಯಲ್ಲಿ; ರಾಜಾಸ್ಥಾನದಲ್ಲಿ ಶಿಷ್ಯನನ್ನು ಮುಕ್ತಕಂಠದಿಂದ ಪ್ರಶಂಸಿಸಿ ಅವನ ಪ್ರತಿಭಾ ಸಾಮರ್ಥ್ಯಗಳನ್ನು ಪ್ರಕಟ ಪಡಿಸುವ ಅವಕಾಶಗಳನ್ನು ಕಲ್ಪಿಸಿ ಕೊಡುತ್ತಿದ್ದರು.

" ಗುರು ಪುತ್ರನ ಅಪಮೃತ್ಯು ಪರಿಹಾರ "

ಶ್ರೀ ಜಯತೀರ್ಥಾಚಾರ್ಯರು ವೇಣಿಸೋಮಪುರದಲ್ಲಿ ಶ್ರೀ ಐಜಿ ವೇಂಕಟರಾಮಾಚಾರ್ಯರ ಆಶ್ರಯದಲ್ಲಿದ್ದಾಗ ಅವರ ಮಕ್ಕಳಾದ ಶ್ರೀ ಗೋಪಾಲಕೃಷ್ಣಾಚಾರ್ಯರಿಗೆ ಪ್ರಾರಬ್ಧ ವಶಾತ್ ಅಪಮೃತ್ಯು ಪ್ರಾಪ್ತವಾದಾಗ ಗುರುಗಳ ಆಜ್ಞೆಯಂತೆ " ಶ್ರೀ ನೃಸಿಂಹ ಮಂತ್ರ " ವನ್ನು ಒಂದು ಸಪ್ತಾಹ ಜಪ ಮಾಡಿ ಅವರ ಅಪಮೃತ್ಯುವನ್ನು ಪರಿಹಾರ ಮಾಡಿದರು. 

ಹೇಳಿ ಕೇಳಿ ಮೊದಲೇ ಇವರು ಮೂಲ ರೂಪದಲ್ಲಿ ನೃಸಿಂಹೋಪಾಸಕರಲ್ಲವೇ!

" ಪಾದುಕಾ ಮಹಿಮೆ "

" ಶ್ರೀ ಕಾರ್ಪರ ನರಹರಿ ದಾಸರ ಮಾತಲ್ಲಿ .... "

ಗುರು ತುರುಗವನನುಸರಿಸಿ ।
ಬರುತಿರಲು ಬಿಸಿಲೊಳು ।
ಗುರು ಪ್ರೀತಿಯನು ಬಯಸಿ ।।
ಗುರುವಿತ್ತ ಪಾದುಕ ।
ವೆರಡು ಶಿರದಲಿ ।
ಧರಿಸಿ ಮಹಿಮೆಯನು ತಿಳಿಸಿ ।।

ಒಂದು ಸಲ ಶ್ರೀ ಐಜಿ ವೇಂಕಟರಾಮಾಚಾರ್ಯರು ತಮ್ಮ ಶಿಷ್ಯನ ಮನೆಗೆ ಶುಭ ಸಮಾರಂಭಕ್ಕೆ ಹೋಗಬೇಕಾದ ಸಂದರ್ಭದಲ್ಲಿ ತಮ್ಮ ಶಿಷ್ಯರನ್ನೆಲ್ಲಾ ಮೊದಲೇ ಕಳುಹಿಸಿದ್ದರು.

ಶ್ರೀ ಐಜಿ ವೇಂಕಟರಾಮಾಚಾರ್ಯರು ಕುದುರೆಯ ಮೇಲೆ ಸಮಾರಂಭಕ್ಕೆ ಹೊರಟರು. 

ಜೊತೆಯಲ್ಲಿ ಅವರ ಪ್ರಿಯ ಶಿಷ್ಯರಾದ ಶ್ರೀ ಜಯತೀರ್ಥಾಚಾರ್ಯರೊಂದಿಗೆ. 

ಬೇಸಿಗೆ ಆದ್ದರಿಂದ ಬಿಸಿಲಿನ ತಾಪದಿಂದ ಹೆಜ್ಜೆಯಿಡುವುದೇ ಕಠಿಣವಾಯಿತು. 

ಬಿಸಿಲಿನಲ್ಲಿ ಬರಿಗಾಲಲ್ಲಿ ನಡೆಯುತ್ತಿದ್ದ ಶಿಷ್ಯನನ್ನು ಕಂಡು ಪರಿತಾಪಗೊಂಡು ಶ್ರೀ ಐಜಿ ವೇಂಕಟರಾಮಾಚಾರ್ಯರು ತಮ್ಮ ಪಾದುಕೆಯನ್ನು ತೆಗೆದು ತಮ್ಮ ಶಿಷ್ಯರಾದ ಶ್ರೀ ಜಯತೀರ್ಥಾಚಾರ್ಯರಿಗೆ ಕೊಟ್ಟರು.

ಶ್ರೀ ಜಯತೀರ್ಥಾಚಾರ್ಯರು ಗುರುಗಳು ನೀಡಿದ ಪಾದುಕೆಗಳನ್ನು ವಿನಮ್ರವಾಗಿ ಸ್ವೀಕರಿಸಿ; ಗುರುಭಕ್ತಿ ಧುರಂಧರರಾದ ಅವರಿಗೆ ಅವುಗಳನ್ನು ಕಾಲಿನಲ್ಲಿ ಮೆಟ್ಟಿಕೊಳ್ಳಲು ಮನಸ್ಸಾಗಲಿಲ್ಲ. 

ಭವ ತಾರಕವಾದ ಗುರುಗಳ ಪಾದುಕೆಗಳು ಅನಾಯಾಸವಾಗಿ ತಮ್ಮ ಕರಗತವಾಗಿದ್ದಕ್ಕೆ ಬಹಳ ಸಂತೋಷ ಪಟ್ಟು ತಮ್ಮ ತಲೆಯ ಮೇಲೆ ಇಟ್ಟುಕೊಂಡು ನಡೆಯಲಾರಂಭಿಸಿದರು. 

ಪಾದುಕೆಯ ಮಹಿಮೆಯಿಂದ ಬಿಸಿಲಿನ ತಾಪ ಆಗದೇ ತಂಪಾದ ಹುಲ್ಲಿನ ಮೇಲೆ ಹೆಜ್ಜೆ ಇತ್ತಂತೆ ಅನುಭವವಾಯಿತು. 

ಗುರುಗಳ ಪಾದುಕೆಯು ಅದ್ಭುತ ಮಹಿಮೆಯನ್ನೇ ಮಾಡಿಬಿಟ್ಟಿತು.

" ಅವಧೂತರಾದರು " 

ಮುಂದೆ ಶ್ರೀ ಜಯತೀರ್ಥಾಚಾರ್ಯರು ಗೃಹಸ್ಥಾಶ್ರಮಿಗಳಾಗಿ ಶಿಷ್ಯರಿಗೆ ಆದರದಿಂದ ಪಾಠ ಪ್ರವಚನ ಮಾಡುತ್ತಲಿದ್ದರು. 

ದೇವರು ತಕ್ಕಮಟ್ಟಿದೆ ಐಶ್ವರ್ಯ ಕೊಟ್ಟಿದ್ದರಿಂದ ಯಾವುದಕ್ಕೂ ಕೊರತೆಯಿಲ್ಲದೆ, ಹೆಂಡತಿ - ಮಕ್ಕಳಿಂದ ಕೂಡಿ ಸಂಸಾರದಲ್ಲಿ ತಲ್ಲೀನರಾಗಿದ್ದರು. 

ಒಂದುದಿನ ಶ್ರೀ ಆಚಾರ್ಯರು ಹಂಸ ತೂಲಿಕಾ ತಲ್ಪದಲ್ಲಿ ಮಲಗಿಕೊಂಡು ತಮ್ಮ ಪತ್ನಿಯ ಕೈಯಿಂದ ಪಾದ ಸಂವಾಹನ ಮಾಡಿಸಿ ಕೊಳ್ಳುತ್ತಿದ್ದ ಸಮಯದಲ್ಲಿ... 

 ಗೋವಿಂದಾ ನಮೋ 
ಗೋವಿಂದಾ ನಮೋ ।
ಗೋವಿಂದಾ ನಾರಾಯಣ ।। ಪಲ್ಲವಿ ।।

ಗೋವರ್ಧನ ಗಿರಿಯನೆತ್ತಿದ ।
ಗೋವಿಂದಾ ನಮ್ಮ ರಕ್ಷಿಸೋ ।। ಚರಣ ।।

ಮಂಚಬಾರದು ಮಡದಿಬಾರಳು ।
ಕಂಚು ಕನ್ನಡಿ ಬಾರದು ।
ಸಿಂಚಿತಾರ್ಥವು ಕಿಂಚಬಾರದು ।
ಮುಂಚೆ ಮಾಡಿರೋ ಧರ್ಮವ ।। ಚರಣ ।।

... ದಿಟ್ಟತನದಲಿ ಪಟ್ಟವಾಳುವ ।
ಕೃಷ್ಣರಾಯನ ಚರಣವ ।
ಮುಟ್ಟಿ ಭಾಜಿಸಿರೋ ಸಿರಿ ಪುರಂದರ ।
ವಿಠ್ಠಲೇಶನ ಪಾದವ ।। ಚರಣ ।।

ಎಂಬ ಪದವು ಬೀದಿ ದಾಸಯ್ಯನಿಂದ ಹಾಡಿದ್ದು ಕೇಳಿ ಬಂತು. 

ಶ್ರೀ ಪುರಂದರದಾಸರ ಈ ಪದವು ಶ್ರೀ ಜಯತೀರ್ಥಾಚಾರ್ಯರ ಜೀವನ ದಿಶೆಯನ್ನೇ ಬದಲು ಮಾಡಿತು. 

ತತ್ ಕ್ಷಣವೇ ಶ್ರೀ ಜಯತೀರ್ಥಾಚಾರ್ಯರು ವೈರಾಗ್ಯ ತಾಳಿ ಪತ್ನಿ, ಪುತ್ರ, ಗೃಹಾದಿಗಳನ್ನು ತ್ಯಾಗ ಮಾಡಿದರು. 

ಸರ್ವಾಧಾರನೂ; ಸರ್ವಸಾರನೂ ಆದ ಪರಮಾತ್ಮನನ್ನು ಹೊರತು ಪಡಿಸಿ ಜಗತ್ತಿನಲ್ಲಿರುವ ಸರ್ವ ಚರಾಚರ ವಸ್ತುಗಳೂ ಸಾರ ರಹಿತವೆಂದರಿತು ಶ್ರೀ ಜಯತೀರ್ಥಾಚಾರ್ಯರು ಅವಧೂತರಾದರು.

ಮಳಖೇಡಕ್ಕೆ ಹೋಗಿ ಶ್ರೀ ಜಯತೀರ್ಥರ ಮೂಲ ಮೃತ್ತಿಕಾ ಸನ್ನಿಧಾನದಲ್ಲಿ ಸೇವೆ ಮಾಡಬೇಕೆಂದು ಪ್ರಯಾಣ ಮಾಡಿದರು. ಎರಡು ಸಲ ಪ್ರಯತ್ನ ಮಾಡಿದರೂ ದಾರಿಯಲ್ಲಿ ದೊಡ್ಡ ಸರ್ಪವು ಅಡ್ಡಗಟ್ಟಿದ್ದರಿಂದ ಅಪಶಕುನವೆಂದು ರಾತ್ರಿ ಮಲಗಿದರು. 

ಆ ರಾತ್ರಿ ಈ ರೀತಿ ಸ್ವಪ್ನವಾಯಿತು. 

ಸ್ವಾಧ್ಯಾಯಾನ್ ಮಾ ಪ್ರಮದಃ ।
ಸ್ವಾಧ್ಯಾಯ ಪ್ರವಚನ ಏವೇತಿ ।

ನಾಕೋ ಮೌದ್ಗಲ್ಯ: 
ತದ್ಧಿ ತಪಃ ತದ್ಧಿ ತಪಃ ।

ಎಂದು ಹೇಳಿದಂತೆ ಆಯಿತು. 

ಮುಂದೆ ವಾನಪ್ರಸ್ಥಾಶ್ರಮ ಸ್ವೀಕರಿಸಿ ಮಲಾಪಹಾರಿಣೀ ತೀರದಲ್ಲಿರುವ ಮುನವಳ್ಳಿ ಗ್ರಾಮದಲ್ಲಿ ವಾಸ ಮಾಡಿಕೊಂಡಿ ಶಿಷ್ಯರಿಗೆ ಪಾಠ ಪ್ರವಚನ ಮಾಡುತ್ತಿದ್ದರು. 

ಮುನವಳ್ಳಿಯಲ್ಲಿ ನಿತ್ಯ ಕರ್ಮಾನುಷ್ಠಾನ ಮಾಡುತ್ತಾ ಪ್ರತಿದಿನ ಸುಮಧ್ವ ವಿಜಯ ಪೂರ್ತಿ ಪ್ರಯಾಣದಿಂದ ಸಂಚಾರ ಮಾಡಿ ಮಧುಕರೀ ವೃತ್ತಿಯಿಂದ ಶಿಷ್ಯರನ್ನು ಪೋಷಿಸಿ 12 ಆವರ್ತಿ ಶ್ರೀಮನ್ನ್ಯಾಯಸುಧಾ ಪರಿಮಳ ಪಾಠ ಪ್ರವಚನ ಜರುಗಿಸಿ ಮಂಗಳ ಮಾಡಿ ಶ್ರೀ ಹರಿಗೆ ಸಮರ್ಪಿಸಿದರು. 

" ಶ್ರೀ ರಮಾ ಸ್ತೋತ್ರ " ದ ಮಹಿಮಾ.... 

ಈ ಅವಧೂತ ಶಿಖಾಮಣಿಗಳು ಪ್ರತಿನಿತ್ಯ ಆಹ್ನೀಕ ಮಾಡುವ ಸಮಯದಲ್ಲಿ ಇವರ ಶಿಷ್ಯರು ಇವರಿಗೆ ತಿಳಿಯದಂತೆ ಒಂದು ತಾಮ್ರದ ಘಟ್ಟಿ ದೊಡ್ಡ ಅರ್ಧಾಣೆಯನ್ನು ಇವರ ಆಸನ ಬುಡದಲ್ಲಿ ಇಡುತ್ತಿದ್ದರು. 

14 ಶ್ಲೋಕಗಳಿಂದ ರಮಾ ಸ್ತೋತ್ರವನ್ನು ನಿತ್ಯವೂ ಅಭಿಮಂತ್ರಿಸುತ್ತಿದ್ದರು. 

ಇವರ ಆಹ್ನೀಕ ಮುಗಿದ ಮೇಲೆ ಆ ಆಸನದ ಬುಡದಲ್ಲಿಯ ಆ ತಾಮ್ರದ ನಾಣ್ಯವು ಚಿನ್ನದ್ದಾಗಿರುತ್ತಿತ್ತು. 

ಈ ಚಿನ್ನದ ನಾಣ್ಯವನ್ನು ಮಾಡಿ 200 ಜನ ಶಿಷ್ಯರಿಗೆ ನಿತ್ಯವೂ ಮೃಷ್ಟಾನ್ನ ಭೋಜನ ನಡೆಯುತ್ತಿತ್ತು. 

ಈ ರೀತಿ ಒಂದು ವರ್ಷ ನಡೆಯಿತು. 

ಇತಿ ದೇವೀ ಸ್ತವ೦ ಪುಣ್ಯಂ 
ಸರ್ವ ಪಾಪ ಪ್ರಣಾಶನಂ ।
ಯಃ ಪಠೇದ್ ಶ್ರುಣುಯಾದ್ವಾಪಿ 
ಸ ಮುಕ್ತೋ ನಾತ್ರ ಸಂಶಯಃ ।।

" ಉತ್ತರಾದಿ ಮಠಾಧೀಶರಿಂದ ಬಹಿಷ್ಕಾರ "

ಕಾರಣಾಂತರದಿಂದ ಇವರಿಗೆ ಶ್ರೀ ಸತ್ಯಸಂಧತೀರ್ಥರಿಂದ ಬಹಿಷ್ಕಾರ ಪತ್ರ ಬಂದಿತು. 
ಆ ಪಾತ್ರವನ್ನು ಮಾನ್ಯ ಮಾಡಿ ಶ್ರೀ ಶ್ರೀಗಳವರು ಇದ್ದಲ್ಲಿಗೆ ಹೋಗಿ ಅವರು ಬಿಡಾರ ಮಾಡಿದ ಗೃಹದ ಸುತ್ತಲೂ ಸುಧಾ ಪಠಣ ಮಾಡುತ್ತಾ ಕಸ ಬಳಿದು, ಗೋಮಯದಿಂದ ಸಾರಿಸಿ ಭಗವದ್ರೂಪಗಳನ್ನು ರಂಗವಲ್ಲಿಯಿಂದ ಅಲಂಕರಿಸಿ ಜನರು ಏಳುವದರಲ್ಲಿಯೇ ಅದೃಶ್ಯವಾಗುತ್ತಿದ್ದರು. 

ಹೀಗೆ ಎಷ್ಟೋದಿನ ನಡೆಯಿತು. 

ಮುಂದೆ ಶ್ರೀ ಸತ್ಯವರ ತೀರ್ಥರು ಪೀಠಕ್ಕೆ ಬಂದರು. 

ಇವರು ನಿತ್ಯವೂ ಇದನ್ನು ನೋಡಿ ಆಶ್ಚರ್ಯ ಚಕಿತರಾಗಿ ಯಾರೋ ಹೀಗೆ ಮಾಡುತ್ತಾರೆಂಬುದನ್ನು ಪತ್ತೆ ಮಾಡಬೇಕೆಂದು ಕರದೀಪ ಹಿಡಿಸಿಕೊಂಡು ಬಂದು ಇವರನ್ನು ವಿಚಾರಿಸಲಾಗಿ... 

" ತಮಗೆ ಮಠದಿಂದ ಬಹಿಷ್ಕಾರಾಜ್ಞೆ ಆಗಿದೆ. ಅದರ ನಿವಾರಣಕ್ಕೆ, ಗುರ್ವಾನುಗ್ರಹಕ್ಕೆ ಈ ರೀತಿ ಸೇವಾ ನಿರತನಾಗಿದ್ದೇನೆಂದು " ಬಿನ್ನವಿಸಿದರು. 

ನಿಮ್ಮಂಥ ಮೇರು ವಿದ್ಯಾ ಕೋವಿದರಿಗೆ, ಭಕ್ತರಿಗೆ ಯಾರು ಬಹಿಷ್ಕಾರ ಪತ್ರ ಕಳಿಸಿದ್ದೆಂದು ಖಿನ್ನರಾಗಿ ಸನ್ಮಾನ ಮಾಡಿ ಸಮ್ಮುಖದಲ್ಲಿ ಕೂಡಿಸಿಕೊಂಡು ಭೋಜನಾದಿಗಳನ್ನು ಮಾಡಿಸಿದರು. 

" ಶ್ರೀ ಜಯತೀರ್ಥಾಚಾರ್ಯರು ಶ್ರೀ ವಿಷ್ಣುತೀರ್ಥರಾಗಿ ವಿರಾಜಿಸಿದರು "

ಉತ್ತರಾದಿ ಮಠದ ಶ್ರೀ ಸತ್ಯವ್ರತೀರ್ಥರು ಶ್ರೀ ಜಯತೀರ್ಥಾಚಾರ್ಯರಿಗೆ ಆಶ್ರಮವನ್ನು ಕೊಟ್ಟು " ವಿಷ್ಣುತೀರ್ಥ " ಎಂಬ ಹೆಸರನ್ನು ಶ್ರೀ ಸತ್ಯವ್ರ ತೀರ್ಥರು ನೀಡಿದ್ದು ಅನ್ವರ್ಥಕ ಎನಿಸಿತು. 

ಶ್ರೀ ಸತ್ಯವರ ತೀರ್ಥರ ಸಚ್ಛಿಷ್ಯರಾದರೂ ಪೀಠಾಧಿಪತ್ಯವನ್ನು ಒಂದರೆಕ್ಷಣವೂ ಬಯಸದೇ ತಪಸ್ಸಂನಾಚರಿಸಲು ಪುನಃ ಅಡವಿಯನ್ನೇ ಸೇರಿದರು.

ಇವರು ತಮ್ಮ 45ನೇ ವಯಸ್ಸಿನಲ್ಲಿ ಆಶ್ರಮ ಸ್ವೀಕಾರ ಮಾಡಿದರು. 

" ಶಿಷ್ಯ ಸಂಪತ್ತು "

ಪಂಡಿತಾಗ್ರಣಿಗಳಾದ ಶ್ರೀ ಜಯತೀರ್ಥಾಚಾರ್ಯರಲ್ಲಿ ನೂರಾರು ಜನ ಶಿಷ್ಯರು ಶಾಸ್ತ್ರಾಧ್ಯಯನ ಮಾಡುತ್ತಿದ್ದರು. 

ಅವರಲ್ಲಿ ಪ್ರಮುಖರು..

ಶ್ರೀ ಅಡವಿ ಕೃಷ್ಣಾಚಾರ್ಯರುಇವರು ಶ್ರೀ ವಿಷ್ಣುತೀರ್ಥರ ಪೂರ್ವಾಶ್ರಮ ಪುತ್ರರು. ಇವರು .......

ಲಘು ಸುಧಾ ರಂಜನೀ ಎಂಬ ನ್ಯಾಯಸುಧಾ ಟಿಪ್ಪಣಿ, 
ಸುಮನೋರಂಜನೀ ಎಂಬ ತತ್ತ್ವ ಪ್ರಕಾಶಿಕಾ ಟೀಕೆ, 
ಶ್ರೀ ವಿಷ್ಣುತೀರ್ಥರು ರಚಿಸಿದ ನ್ಯಾಯಸುಧಾ ಸ್ತೋತ್ರಕ್ಕೆ ವ್ಯಾಖ್ಯಾನ ಮತ್ತು ಶ್ರೀ ವಿಷ್ಣುತೀರ್ಥರ ಕುರಿತಾದ ಅನೇಕ ಸ್ತೋತ್ರಗಳನ್ನು ರಚಿಸಿದ್ದಾರೆ.

ಶ್ರೀ ಗೋಕಾವಿ ಅನಂತಾಚಾರ್ಯರು 
( ಶ್ರೀ ಅನಂತಾದ್ರೀಶರು )ಇವರು ಪಂಡಿತರೂ, ಶ್ರೇಷ್ಠ ಕವಿಗಳೂ ಆಗಿದ್ದರು. 

" ಅನಂತಾದ್ರೀಶ " ಯೆಂಬ ಅಂಕಿತದಲ್ಲಿ 
ಶ್ರೀ ವೆಂಕಟೇಶ ಪಾರಿಜಾತ 
ಕೃಷ್ಣ ಚರಿತ್ರೆ 
ಶ್ರೀ ವಿಷ್ಣುತೀರ್ಥ ಕನ್ನಡ ಪಂಚರತ್ನ ಸ್ತೋತ್ರ 

ಮತ್ತು ಅನೇಕ ಪದ ಪದ್ಯಗಳನ್ನು ರಚಿಸಿದ ಪ್ರತಿಭಾವಂತ ವಿದ್ವಾಂಸರು.

ಮೊರಬದ ಶ್ರೀ ಶೇಷಾಚಾರ್ಯಟೊಣಪಿ ಶ್ರೀ ಬಾಳಾಚಾರ್ಯಇವರು ರಚಿಸಿರುವ " ತತ್ತ್ವ ಪ್ರಕಾಶಿಕಾ ಟಿಪ್ಪಣಿ ಮತ್ತು ಐತರೇಯ ರಹಸ್ಯ ರಂಜನೀ " ಯೆಂಬ ಗ್ರಂಥಗಳನ್ನು ರಚಿಸಿದ್ದಾರೆ. 

ಅವುಗಳನ್ನು ಒಂದುಸಲ ಅವಲೋಕಿಸಿದರೆ ಇವರ ಗ್ರಂಥ ರಚನಾ ಸಾಮರ್ಥ್ಯ ತಿಳಿಯುತ್ತದೆ.


ಮಾದನೂರ ವಿಷ್ಣುತೀರ್ಥ ಗುರುಭ್ಯೋ ನಮ:

ಪುತ್ರರತ್ನಗಳ ರಕ್ಷಿಸಿದೆ (ಬ್ರಹ್ಮಚರ್ಯ ಮತ್ತು ಗ್ರಹಸ್ಥಾಶ್ರಮ) 
ಅಸಿಪತ್ರ ವೃತವನಾಚರಿಸಿದೆ (ವಾನಪ್ರಸ್ಥಾಶ್ರಮ) 
ಸತ್ಪಾತ್ರರಿಗೆ ಪತ್ರಗಳನೆ ಬರೆದು (ಸಂನ್ಯಾಸಾಶ್ರಮ) 
ತಾಪತ್ರಯಗಳೆದುರಿಸುವ ದಾರಿ ತೋರಿದೆ
ಬದರೀಶ ಕೃಪಾಪಾತ್ರ ವಿಷ್ಣುತೀರ್ಥರೆ 
ಮುದ್ದು ಶ್ರೀ ರಾಮನ ಕೃಪೆಗೆ ಪಾತ್ರನೆನಿಸೆನ್ನ ||

ಎನ್ನ ಪಾಲಿಸೋ ಗುರು ವಿಷ್ಣುತೀರ್ಥ    

ಘನ್ನ ಮಹಿಮ ಜಯತೀರ್ಥ ಪ್ರೀತಿಪಾತ್ರ

ಸಿದ್ಧಪುರಿಯಲಿ ಜನಿಸಿ ಜಯತೀರ್ಥನೆನಿಸಿ ರಾಯರ ಕಾರುಣ್ಯದಿ ಗುರುವನೆ ಪಡೆದೆ | ಬಿಂಬ ಪೂಜೆಯ ಮಾಡೆ ಹರಿಯೊಲಿದು ಗುರುಸುತನ ಪೀಡೆಕಳೆದೆ ||೧||

ಭಾರತೀಶನ ತೋರಿದೆ ಶಿಷ್ಯರಿಗೆ ನಂದಿವಾಹನನ ತೋರಿಸಿದೆಯೋ ನೀನವರಿಗೆ | ಕಲಿರೂಪವ ನೋಡಬಯಸಲವರಿಗೆ ಕಲಿಯ ಸ್ವರೂಪವ ತೋರಿಸಿದೆ  ||೨||

ಸುಧೆಯ ಸ್ವಾದವ ನೂರೆಂಟು ಬಾರಿ ಭಾಗವತರಿಗುಣಿಸಿದೆ ಮೋದಪುರೀಶ   | ಸತ್ಯವರ ಕುವರನೆನಿಸಿ ವರದ ವಿಷ್ಣುತೀರ್ಥನೆಂದೆನಿಸಿದೆಯೋ ಲೋಕದಿ ||೩||

ಚತುರಾಶ್ರಮಗಳ ಪಾಲಿಸಿದೆ ಚತುರ್ವಿಧ ಪುರುಷಾರ್ಥಗಳ ಕರುಣಿಸುವೆಯೋ | ಕುಶನದಿಯ ತೀರದಿ ನೆಲೆಸಿ  ಚಿಂತಿಪರ ಚಿಂತಾಮಣಿಯೆಂದೆನಿದೆಯೊ ಗುರುವೆ||೪||


ಸಾರೋದ್ಧಾರಗಳ ಜಗಕೆ ನೀನಿತ್ತೆ ಆಧ್ಯಾತ್ಮ ಸಾಧಕರಿಗೆ ರಸರಂಜನಿಯನಿತ್ತೆ | ಮುದ್ದು ಶ್ರೀ ರಾಮನ  ಕಾರುಣ್ಯದಿ  ಅವಧೂತ ಶಿರೋಮಣಿ ಎಂದೆನಿಸಿ ಬದರೀಶನ ಧ್ಯಾನದೊಳಿಪ್ಪೆ ||೫||
*****************


ಇಂದು - ಶ್ರೀಮದ್ಭಾಗವತ ಸಾರೋದ್ಧಾರ ಕರ್ತೃಗಳೂ, ಶ್ರೀ ಅಗ್ನಿದೇವರ ಅಂಶ ಸಂಭೂತರಾದ,ಶ್ರೀ ರುದ್ರದೇವರ ಅಂಶ ಸಂಭೂತರೂ,  ಶ್ರೀ ವ್ಯಾಸತತ್ತ್ವಜ್ಞ ತೀರ್ಥರ ವಿದ್ಯಾ ಶಿಷ್ಯರೂ ಆದ ಮಾದನೂರಿನ ತಪೋಮೂರ್ತಿ ಶ್ರೀ ವಿಷ್ಣುತೀರ್ಥರ ಮಧ್ಯರಾದನೆ . 💐💐

ದ್ವೈತ ವೇದಾಂತ ಇತಿಹಾಸದಲ್ಲಿ ಶ್ರೀ ವಿಷುತೀರ್ಥರದು ವಿಶಿಷ್ಟವಾದ ಸ್ಥಾನವಿದೆ.ಮಧ್ವಮತದ ಇತಿಹಾಸದ ಅಂಗಳದಲ್ಲಿ ತಮ್ಮ ವ್ಯರಾಗ್ಯ,ಜ್ಞಾನಗಳಿಂದ ಧ್ರುವತಾರೆಯಂತೆ ಬೆಳಗಿದವರು ವಿಷ್ಣುತೀರ್ಥರು .ಶ್ರೀ ಮಧ್ವಾಚಾರ್ಯರ ಅನುಜರಾದ ಶ್ರೀ ವಿಷ್ಣುತೀರ್ಥರ ನಂತರದಲ್ಲಿ ಪ್ರಸಿದ್ಧರಾದ ಮತ್ತೊಬ್ಬ ವಿಷ್ಣುತೀರ್ಥರೆಂದರೆ ಅಡವಿ ಆಚಾರ್ಯರು,ಅರಣ್ಯಕಾಚಾರ್ಯರು,ಅವಧೂತ ಶಿರೋಮಣಿಗಳು ಎಂಬಿತ್ಯಾದಿಯಾಗಿ ಪ್ರಸಿದ್ಧರಾದ ಮಾದಿನೂರಿನ ಶ್ರೀ ವಿಷ್ಣುತೀರ್ಥರೆ ಇಂದಿನ ಕಥಾ ನಾಯಕರಾಗಿದ್ದಾರೆ. 

ಶ್ರೀ ಜಯತೀರ್ಥಾಚಾರ್ಯರೆಂದು ಸನ್ಯಾಸ ಪೂರ್ವ ಹೆಸರಿನಿಂದ ಪ್ರಖ್ಯಾತರಾಗಿ ಶ್ರೀ ಭಾಗವತ ಸಾರೋಧಾರ ಎಂಬ ಗ್ರಂಥವನ್ನು ರಚಿಸಿ ನಂತರದಲ್ಲಿ ಶ್ರೀ ವಿಷ್ಣುತೀರ್ಥರೆಂಬ ಆಶ್ರಮ ನಾಮದಿಂದ ಪ್ರಖ್ಯಾತರಾಗಿದ್ದರೆ.

 ತಮ್ಮ 8ನೆ ವಯಸ್ಸಿನಲ್ಲಿ ಆಚಾರ್ಯರಿಗೆ ಉಪನಯನ ವಾಯಿತು.ಅಂದಿನಿಂದಲೂ ಶ್ರೀ ಸುಮಧ್ವ ವಿಜಯಗ್ರಂಥದ ಪಾರಾಯಣದ ಫಲ ಪ್ರಾಪ್ತಿ ಕೆಲಕಾಲ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಸೇವೆಗೈದು ನಂತರ ಗದ್ವಾಲ ಸೆಮೆಯಲ್ಲಿರುವ ಮಹಾನ್ ತಪಸ್ವಿಗಳುಆದ ಶ್ರೀ ಐಜಿ. ವೆಂಕಟ ರಾಮಚಾರ್ಯರನ್ನು ತಮ್ಮ ವಿದ್ಯಾಭ್ಯಾಸಕ್ಕಾಗಿ ಗುರುಗಳಾಗಿ ಸ್ವೀಕರಿಸದರು. 

 ಶ್ರೀ ಐಜಿ ಆಚಾರ್ಯರು ಬಿಚಿಪಲ್ಲಿ ಎಂಬಲ್ಲಿ ಪ್ರಾಣದೇವರನ್ನು ಆರಾಧಿಸಿ ವಾಸುದೇವವಿಠಲವೆಂಬ ಅಂಕಿತವನ್ನು ಹೊಂದಿ ಮುಂದೆ ಸನ್ಯಾಸ ಸ್ವೀಕರಿಸಿ ಶ್ರೀ ವ್ಯಾಸತತ್ವಜ್ಞಾರಾಗಿ ಆಶ್ರಮ ಸ್ವೀಕರಿಸಿದರು. 

 ಒಂದು ಬಾರಿ ಐಜಿ ಆಚಾರ್ಯರು ಕೂದರೆಮೇಲೆ ಪ್ರಯಣಿಸುತ್ತಿದ್ದ ಸಂದರ್ಭದಲ್ಲಿ ಶಿಸ್ಯರಾದ ಜಯತೀರ್ಥರು(ಶ್ರೀ ವಿಷ್ಣುತೀರ್ಥರು)ಬರಿಗಾಲಿನಿಂದಲೇ ನಡೆದು ಬರುತಿದ್ದದನ್ನು ಕಂಡು ತಮ್ಮ ಪಾದರಕ್ಷೆಗಳನ್ನು ತೊಡಲು ಕೊಟ್ಟಾಗ ಅವುಗಳನ್ನು ತೊಡದೇ ಭಕ್ತಿ ಆದರದಿಂದ ತಲೆಯ ಮೇಲೆ ಇಟ್ಟುಕೊಂಡು,ಜಯತೀರ್ಥರ ಗುರು ಭಕ್ತಿಯಿಂದ ಸಂಪ್ರೀತರಾಗಿ ಐಜಿ ಆಚಾರ್ಯರು ಅನುಗ್ರಹಿಸಿದರು. 

 ಇನ್ನೊಮೆ ಗುರು ಪುತ್ರನಿಗೆ ಮಹಜ್ವರ ಬಂದಾಗ್ಗೆ ಏಳು ದಿವಸ ಉಪವಾಸ ವ್ರತದಿಂದ ಶ್ರೀ ನರಸಿಂಹ ಜಪ ಮಾಡಿ ಮಹಜ್ವರ ನಿವಾರಣೆಮಾಡಿ ಗುರುದಕ್ಷಿಣೆ ಮುಟ್ಟಿಸಿದರು. 

 ಕಿನ್ನಾಳ ಗ್ರಾಮದ ಸಮೀಪ ಕುಶಾ ನದಿದಡಲ್ಲಿ ಮಾದಿನೂರು ಗ್ರಾಮದಲ್ಲಿ ಪರ್ಣ ಕುಟೀರ ವಾಸ.ಶಿಷ್ಯರು ಮಧುಕರಿಯಿಂದ ತಂದ ಭಿಕ್ಷೆಯನ್ನೇ ಸೇವಿಸುತ್ತಿದ್ದರು. 

ಓಮ್ಮೆ ಕಿನ್ನಾಳ  ಪ್ರದೇಶದಲ್ಲಿ ಭೀಕರ ಬರಗಾಲ ತೋರಿತು. ದೇಸಾಯರ ಸಹಾಯ ಯಾಚಿಸದೆ ಶ್ರೀ ರಮಾ ಸ್ತೋತ್ರ ದಿಂದ ಶ್ರೀ ಮಹಾ ಲಷ್ಮಿದೇವಿಯನ್ನು ಪೂಜೆಸಿ ಬರಗಾಲ ಎದುರಿಸಿದರು.ಇಂದಿಗೂ ಈ ಸ್ತೋತ್ರ ಮಹಾನ್ ಪ್ರಭಾವವುಳ್ಳದಾಗಿದೆ. 

 ಇನ್ನೊಮ್ಮೆ  ಶ್ರೀ ವಿಷ್ಣುತೀರ್ಥರು ಶ್ರೀ ಸುಧಾಗ್ರಂಥದ ಮಂಗಳದಲ್ಲಿ " *ಇಂಥ ಸ್ಥಳದಲ್ಲಿ ನಾನು ಇರುವೇ" *ಎಂದು ಸಾಕ್ಷಾತ್ ಶ್ರೀ ಬದರೀ ನಾಥನು ಶ್ರೀ ವಿಷ್ಣುತೀರ್ಥರ ಸ್ವಪ್ನದಲ್ಲಿ ದರ್ಶನ ನೀಡಿ ಅನುಗ್ರಹಿಸಿ ಹೇಳಿದಂತೆ ದಿವ್ಯಸ್ವಪ್ನವಾಯಿತು.
ಆ ಸ್ಥಳದಲ್ಲಿ ಹೋಗಿ ನೋಡಲು ಶ್ರೀ ಬದರಿನಾಥನ ಸುಂದರವಾದ  ವಿಗ್ರಹ ಕಾಣಿಸಿತು.* ಈ ಸಂಧರ್ಭದಲ್ಲಿ ಶ್ರೀ ವಿಷ್ಣು ತೀರ್ಥರು ತಮ್ಮ ಜನ್ಮದ ಮೂಲೋದ್ದೇಶ ಸಾಫಲ್ಯದ ಸೂಚನೆಯಾಗಿಯೇ ಸಾಕ್ಷಾತ್ ಬದರಿ ನಾರಾಯಣನು ಅನುಗ್ರಹಿಸಿದನು ಮತ್ತು ಶ್ರೀ ಟಿಕಾರಾಯರು ತಮಗೆ ಒಪ್ಪಿಸಿದ ಕಾರ್ಯದಿಂದ ಕೃತಕೃತ್ಯರಾದೆ ವೆಂದು ಭಾವಿಸಿದರು.* 

 ಶ್ರೀ ವಿಷ್ಣುತೀರ್ಥರು  ಅಣ್ಣಿಗೆರಿಯ ಅಮೃತೇಶ್ವರನ ಗುಡಿಯಲ್ಲಿಯ ಒಂದು ಉತ್ತಮ ಶಿಲೆಯನ್ನು ತರಿಸಿ ತಮ್ಮ ವೃಂದಾವನವನ್ನು ಮಾಡಿಸಿದರು.ತಾವೇ ರಚಿಸಿದ "ಅಂತ್ಯಕಾಲ ಸ್ಮರಣೆ"ಯ ಮಂತ್ರಗಳನ್ನು ಪಠಿಸುತ್ತ, ಪದ್ಮಾಸನಸ್ತರಾಗಿ  ಶ್ರೀ ಹರಿಧ್ಯಾನದಲ್ಲಿ ಶ್ರೀ ವಿಷ್ಣುತೀರ್ಥರು ಸಮಾಧಿಸ್ತರಾದರು. 

 ಅಪಾರ ಗ್ರಂಥರಾಶಿಯನ್ನು ಜ್ಞಾನಿಗಳ ಅಧ್ಯಯನಕ್ಕಾಗಿ ಬಿಟ್ಟುಹೋಗಿದ್ದಾರೆ,ಅಂಥಹ ಪರಮಪುನೀತರ ಜೀವನ- ಆದರ್ಶ-ಸಾಧನೆ-ಸಿದ್ದಿ-ತಪಸ್ಸು ನಮ್ಮೆಲ್ಲರಿಗೂ ಮಾರ್ಗದರ್ಶಕವಾಗಲಿ. 


 *ಮರೆತೆನು ನಾ ನಿನ್ನ, ಎನ್ನವಗುಣ ಮರೆತು ಪಾಲಿಸೆನ್ನ, ಪರತರ ಗುಣ ನಿನ್ನ ಹೊರೆತು ಅನ್ಯ ಗತಿಇಲ್ಲ ಮುನ್ನ..

ಅರಿತು ಅನಂತಾದ್ರಿನಿಲಯನ ತೋರಿಸೋ,ತ್ವರಿತ ಮೋದ ಪುರನಿರತ ಸದ್ಗುರುವೇ..

ವರದ ವಿಷ್ಣುತೀರ್ಥ,ಕರುಣದಿ ನೀ ಕೊಡು ಪುರುಷಾರ್ಥ..* 

ಶ್ರೀ ಗುರುಗಳ ಸೇವೆಯಲ್ಲಿ..


💐ಎಸ್.ವಿಜಯ ವಿಠ್ಠಲ 💐
*********
ಸಾರ್ಧತ್ರಿಕೋಟಿ ಉತ್ತಮತೀರ್ಥಮಜ್ಜನಂ| ಯಚ್ಚಿಂತನಂ ತಂ ಭಜ ವಿಷ್ಣುತೀರ್ಥಂ"||

ಯಾರ ಸ್ಮರಣೆಯನ್ನು ಮಾಡಿದರೆ ಮೂರುವರೆ ಕೋಟಿ ಉತ್ತಮ ತೀರ್ಥಗಳಲ್ಲಿ ಸ್ನಾನ ಮಾಡಿದ ಫಲ ದೊರೆಯುವುದೋ ಅಂತಹ ವಿಷ್ಣುತೀರ್ಥರನ್ನು ಭಜಿಸುವೆ...
🙏🙏🙏🙏
ಶ್ರೀ ಐಜಿ ಆಚಾರ್ಯರ ಮಕ್ಕಳಾದ ಶ್ರೀ ಗೋಪಾಲ ಕೃಷ್ಣ ಆಚಾರ್ಯರು ಬಹು ದೊಡ್ಡ ಪಂಡಿತರು. ಅಕಸ್ಮಾತ್ ಆಗಿ ಅವರಿಗೆ ವಿಷಮ ಜ್ವರ.ಅದು ಅಪಮೃತ್ಯು ರೂಪದಲ್ಲಿ ಬಂದೊದಗಿದೆಂದು ಶ್ರೀ ಐಜಿ ಆಚಾರ್ಯ ರಿಗೆ ತಿಳಿಯಿತು.ಸಕಲ ಔಷಧ ಉಪಚಾರ ನಡೆಯುತ್ತದೆ.
ತಮ್ಮ ಬಳಿ ಇದ್ದ ೩/೪ ಜನ ಶಿಷ್ಯರಿಗೆ ಕೆಲ ಮಂತ್ರ ಜಪವನ್ನು ಮಾಡಲು ಆಜ್ಞೆಯನ್ನು ಮಾಡುತ್ತಾರೆ. ಅದರಲ್ಲಿ ನರಸಿಂಹ ಮಂತ್ರ ಜಪ ಸಹ.ಯಾರು ಅದನ್ನು ಮಾಡಲು ಮುಂದೆ ಬರುವದಿಲ್ಲ. ನರಸಿಂಹ ಮಂತ್ರ ಮೃತ್ಯು ನಿವಾರಕ ಅಂತಹ ಉಗ್ರ ಮಂತ್ರ ಜಪ ಮಾಡಲು ಯಾರು ಮುಂದೆ ಬರುವದಿಲ್ಲ...
ಜ್ಞಾನಿಗಳು ಮಹಾ ತಪಸ್ವಿಗಳು ಆದ ಅಡವಿ ಆಚಾರ್ಯರು ಗುರುಗಳ ಅಪ್ಪಣೆ ಆದರೆ ಜಪವನ್ನು ಮಾಡುತ್ತೇನೆ ಅಂತ ವಿಜ್ಞಾಪನೆ ಮಾಡಿಕೊಳ್ಳಲು
ಗುರುಗಳ ಆಜ್ಞೆ ಪ್ರಕಾರ ತಮ್ಮ ಗುರುಪುತ್ರನ ಅಪಮೃತ್ಯು ನಿವಾರಣೆ ಗಾಗಿ ಶ್ರೀ ನರಸಿಂಹ ಮಂತ್ರ ಜಪ ಆರಂಭಮಾಡುತ್ತಾರೆ..
ಇತ್ತ ಶ್ರೀ ಐಜಿ ಆಚಾರ್ಯರು ಸಹ ತಮ್ಮ ಉಪಾಸ್ಯ ಮೂರ್ತಿ ಯಾದ ಶ್ರೀ ಗೋಪಾಲ ಕೃಷ್ಣ ನ ಬಳಿ ಪ್ರಾರ್ಥನೆ ಮಾಡಿಕೊಳ್ಳುವರು.
ವಿನಯದಲಿ ವಿಜ್ಞಾಪನೆ ಮಾಡುವೆ ಈ ತನಯನ್ನ| ಪರಿಪಾಲಿಸುವದೆಂದು |
... ನೀನೆಂದು ನಾಮಗಳು ರಚಿಸುತಾ|
ಬಾಳಲಿ ಬಹುಕಾಲ ಗೋಪಾಲ ದಾಸ|
ಈ ಸುತನಯ ಎನ್ನತೆರ ನಿನ್ನವನೆಂದರಿತು|
ವಾಸುದೇವ ವಿಠ್ಠಲ ಕಾಪಾಡೋ ಕರುಣಿ||

 ಅಡವಿ ಆಚಾರ್ಯರ ಮಂತ್ರ ಜಪ ಮುಗಿಯಿತು. ಗುರುಪುತ್ರರ ಅಪಮೃತ್ಯು ದೂರಾಯಿತು.

ಇತ್ತ ಶ್ರೀ ಗೋಪಾಲ ಕೃಷ್ಣ ನಿಗೆ ಪಂಚಾಮೃತ ಮಾಡಬೇಕೆಂದು ಸಕಲ ಸಾಮಗ್ರಿಗಳನ್ನು ಸಿದ್ದ ಪಡಿಸಿದ್ದಾರೆ. ಒಂದು ಕಡೆ ಐಜಿ ಆಚಾರ್ಯರು ಅಹ್ನೀಕ ಮಾಡುತ್ತಾ ಕುಳಿತಿದ್ದಾರೆ.
ಮಧ್ಯಾಹ್ನ ದ ಸಮಯ..
ವೈಶಾಖ ಮಾಸ.ಉಗ್ರ ಮಂತ್ರ ಜಪವನ್ನು ಮುಗಿಸಿ ಶ್ರೀ ಅಡವಿ ಆಚಾರ್ಯರು ದೇವಾಲಯಕ್ಕೆ ಬರುತ್ತಾರೆ... ಹೊಟ್ಟೆ ಯಲ್ಲಿ ಸಂಕಟ.ಬಹಳ ಹಸಿವೆ ಆಗಿದೆ...
ಸುತ್ತಲೂ ನೋಡಿದಾಗ ಒಂದು ಕಡೆ ವಿಶಿಷ್ಟವಾದ ರೀತಿಯಲ್ಲಿ ಜೋಡಿಸಿದ ಪಂಚಾಮೃತ ಸಾಮಾನುಗಳನ್ನು ಕಾಣುತ್ತಾರೆ.
ಹಸಿವೆಯ ಭರದಲ್ಲಿ ಎಲ್ಲಾ ಪದಾರ್ಥಗಳನ್ನು ಹಾಲು,ಜೇನು,ಮೊಸರು,ತುಪ್ಪ, ಸಕ್ಕರೆ,ಬಾಳೆ ಹಣ್ಣುಗಳನ್ನು ಶ್ರೀ ಗೋಪಾಲ ಕೃಷ್ಣ ನಿಗೆ ಸಮರ್ಪಣೆ ಮಾಡಿ ಬಿಂಬ ಮೂರುತಿಯಾದ ಶ್ರೀ ಕೃಷ್ಣನಿಗೆ ಅಂತರಂಗದಲ್ಲಿ ಪಂಚಾಮೃತ ಅಭಿಷೇಕ ಮಾಡಿದರು...
"ಶ್ರೀ ಕೃಷ್ಣಾರ್ಪಣಮಸ್ತು" ಎಂದು ಹೇಳಿ
ನಂತರ ಎಲ್ಲಾ ಸ್ವೀಕರಿಸಿ ಶ್ರೀ ಅಡವಿ ಆಚಾರ್ಯರು ಒಂದು ಕಡೆ ಮಲಗಿದರು...
ಇತ್ತ ಜಪ ವಾದ ಮೇಲೆ ಐಜಿ ಆಚಾರ್ಯರು ಬಂದು ನೋಡುತ್ತಾರೆ. 
ತಮ್ಮ ಜ್ಞಾನ ದೃಷ್ಟಿಯಿಂದ ಶ್ರೀ ಹರಿಗೆ ಪಂಚಾಮೃತವಾಗಿದ್ದು ತಿಳಿದು ,ದೇವರಿಗೆ ಅಲಂಕಾರ ನೈವೇದ್ಯ ಮಾಡಿ ಮಂಗಾಳಾರುತಿ ಮಾಡಲು ಆರಂಭಿಸಿದರು...
ಸುತ್ತ ಇದ್ದ ಶಿಷ್ಯರಿಗೆ ಆಶ್ಚರ್ಯ!! ಶ್ರೀ ಗೋಪಾಲ ಕೃಷ್ಣ ನಿಗೆ ಪಂಚಾಮೃತ ಆಗಿಲ್ಲ. ಅವಾಗಲೇ ನೈವೇದ್ಯ ಮಂಗಳಾರತಿ ಎಂದು ಗುಸುಗುಸು ಮಾತನಾಡುತ್ತಾ ಮನದಲ್ಲಿ ಸಂಶಯಪಡುತ್ತಾರೆ.
ಗಂಟೆಯ ಸಪ್ಪಳದಿಂದ ಶ್ರೀ ಅಡವಿ ಆಚಾರ್ಯರು ಎದ್ದು ಕುಳಿತು ಕಣ್ಣಿಗೆ ನೀರು ಹಚ್ಚಿ ಕೊಂಡು ದೇವರ ಎದುರಿಗೆ ಬಂದು ನಿಲ್ಲುತ್ತಾರೆ.
"ಶ್ರೀ ಐಜಿ ಆಚಾರ್ಯರು ಮಂಗಳಾರತಿ ಮಾಡುವ ಸಮಯದಲ್ಲಿ ಶ್ರೀ ಗೋಪಾಲ ಕೃಷ್ಣನ ಬಾಯಿಯಿಂದ ಪಂಚಾಮೃತ ಹೊರಬರುವದು ಎಲ್ಲಾರಿಗೆ ಕಾಣುತ್ತದೆ.".
ಆ ನಂತರ ಪಂಚಾಮೃತ ಸ್ವೀಕಾರ ಮಾಡಿ ಎಲ್ಲಾರಿಗು ಗುರು ಶಿಷ್ಯರ ಮಹಿಮೆ ತಿಳಿಯಿತು.
ಹೀಗೆ ಭಗವಂತನು ತನ್ನ ಭಕ್ತರ ಒಳಗೆ ನಿಂತು ಮಾಡುವ ಲೀಲೆ ಬಹು ವಿಚಿತ್ರ.
ಐಜಿ ಆಚಾರ್ಯರೆ ಮುಂದೆ ಯತಿ ಆಶ್ರಮ ಸ್ವೀಕರಿಸಿ ಶ್ರೀ ವ್ಯಾಸ ತತ್ವಜ್ಞರೆಂದು ಕರೆಯಲ್ಪಡುವರು.
ಅವರ ಶಿಷ್ಯರು ಆದ 
ಶ್ರೀ ಅಡವಿ ಆಚಾರ್ಯರು ಮುಂದೆ ಪುರಂದರ ದಾಸರ ಗೋವಿಂದ ನಮೋ ಎನ್ನುವ ಕೀರ್ತನೆಯಲ್ಲಿ ಬರುವ
 ಮಂಚ ಬಾರದು| 
ಮಡದಿ ಬಾರದು| 
ಕಂಚು ಕನ್ನಡಿ ಬಾರದು|| ಎನ್ನುವ ನುಡಿಯನ್ನು ಕೇಳಿ ಸಮಸ್ತ ಸಂಪತ್ತು ತ್ಯಜಿಸಿ ವಿರಾಗಿಗಳಾಗಿ ಯತಿ ಆಶ್ರಮ ಸ್ವೀಕಾರ ಮಾಡಿ ಶ್ರೀ ವಿಷ್ಣುತೀರ್ಥರೆಂದು ಪ್ರಸಿದ್ಧಿ ಯಾದ ಇಂದಿನ ಆರಾಧನಾ ಮಹೋತ್ಸವ ದ ಕಥಾ ನಾಯಕರು...
ಇಂತಹ ಗುರುಗಳ ಆರಾಧನ ದಿನದಂದು ಅವರ ಬಳಿ  
ನಮಗೆ ಸಹ ಜೀವನದಲ್ಲಿ ಬರುವ ವಿಪತ್ತು ಗಳನ್ನು ಕಳೆದು..,
ಶ್ರೀ ಹರಿ ವಾಯು ಗುರುಗಳ ಬಳಿ ನಮ್ಮ ಮನಸ್ಸು ನಿಲ್ಲುವ ಹಾಗೇ ಮತ್ತು ಅವರ ಸೇವೆಯನ್ನು ಮಾಡುವ ಭಾಗ್ಯ ಕೊಡಿಸಿರಿ ಎಂದು ಕೇಳಿಕೊಳ್ಳುತ್ತಾ🙏
ಶ್ರೀ ವಿಷ್ಣು ತೀರ್ಥ ಗುರುಗಳ ಅಂತರ್ಯಾಮಿಯಾದ ಆ ಶ್ರೀಹರಿಗೆ ಈ ಪುಟ್ಟ ಲೇಖನ ಮಾಲೆ ಸಮರ್ಪಣೆ ಮಾಡುತ್ತಾ.. 
🙏ಶ್ರೀ ಕೃಷ್ಣಾರ್ಪಣಮಸ್ತು🙏
ಕೆಳಗಡೆ ಶ್ರೀ ವಿಷ್ಣು ತೀರ್ಥ ಗುರುಗಳ ವೃಂದಾವನ ಚಿತ್ರ.
🙏🙏🙏🙏🙏
ವರದ ವಿಷ್ಣು ತೀರ್ಥ|
ನೀ ಕೊಡು ಪುರುಷಾರ್ಥ||
🙏ಅ.ವಿಜಯವಿಠ್ಠಲ🙏
**********




ಮಾದನೂರಿನ ತಪೋಮೂರ್ತಿ ಶ್ರೀ ವಿಷ್ಣುತೀರ್ಥರ ಆರಾಧನಾ

" ಮಂತ್ರಾಲಯ ಪ್ರಭುಗಳ ಕಾರುಣ್ಯ "

ಜಯತೀರ್ಥನ ಶಕ್ತಿ; ಕುಶಾಗ್ರ ಮತಿ ಮತ್ತು ವಿದ್ಯಾಸಕ್ತಿಯನ್ನು ಕಂಡು ಶ್ರೀ ಬಾಳಾಚಾರ್ಯರು ಸಂತೋಷ ಪಟ್ಟು ಪ್ರೌಢ ಶಿಕ್ಷಣವನ್ನು ಯೋಗ್ಯ ಗುರುಗಳಿಂದ ಕೊಡಿಸಿ ಅವರನ್ನು ವಿದ್ವಾಂಸರನ್ನಾಗಿ ರೂಪಿಸಬೇಕೆಂದು ಬಯಸೀ ಇದಕ್ಕಾಗಿ ಯೋಗ್ಯ ಪಂಡಿತಾಗ್ರೇಸರರನ್ನು ಆಶ್ರಯಿಸಬೇಕೆಂದು ವಿಚಾರ ಮಾಡಿ ತಮ್ಮ ಮಗನಿಗೆ ಯೋಗ್ಯ ಗುರುಗಳನ್ನು ತೋರಿಸಲು ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರೊಬ್ಬರೇ ಸಮರ್ಥರೆಂದು ತಿಳಿದು ಮಗನೊಂದಿಗೆ ಶ್ರೀ ಬಾಳಾಚಾರ್ಯರು ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ ಬಂದರು.

ಶ್ರೀ ಬಾಳಾಚಾರ್ಯರು ಮಗನೊಂದಿಗೆ ಮಂತ್ರಾಲಯಕ್ಕೆ ಬಂದು ತುಂಗಭದ್ರೆಯಲ್ಲಿ ಮಿಂದು ಶುಭ್ರನಾಗಿ ಬಂದು ಶ್ರೀ ಗುರುಸಾರ್ವಭೌಮರ ವೃಂದಾವನದ ಮುಂದೆ ನಿಂತು " ತನಗೆ ಜ್ಞಾನ ತೋರುವ ಯೋಗ್ಯ ಗುರುವನ್ನು ತೋರಿಸು " ಎಂದು ಜಯತೀರ್ಥನು ವಿನಮ್ರವಾಗಿ ಪ್ರಾರ್ಥಿಸಿದ!

ವಿದ್ಯಾ ಪಕ್ಷಪಾತಿಗಳೂ; ಭಕ್ತ ಶಿಷ್ಯ ಜನೋದ್ಧಾರಕರೂ; ಕಲಿಯುಗ ಕಲ್ಪವೃಕ್ಷ ಕಾಮಧೇನುವೆಂದು ಜಗತ್ಪ್ರಸಿದ್ಧರೂ; ಅಘಟಿತಘಟನಾ ಕಾರ್ಯ ಮಾಡುವುದರಲ್ಲಿ ಸಮರ್ಥರೂ ಆದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರೇ " ಕರುವನ್ನು ( ಜಯತೀರ್ಥ ) ಹಸುವಿನ ( ಐಜಿ ಶ್ರೀ ವೇಂಕಟರಾಮಾಚಾರ್ಯರು ) ಬಳಿ ಸೇರಿಸುವ ಅದೃಶ್ಯ ಸೂತ್ರಧಾರರಾಗಿ, ಪಂಡಿತ ಶ್ರೇಷ್ಠ ಶ್ರೀ ಐಜಿ ವೇಂಕಟರಾಮಾಚಾರ್ಯರನ್ನು ಮಂತ್ರಾಲಯಕ್ಕೆ ಬರುವಂತೆ ಪ್ರೇರೇಪಿಸಿದರು.

ನೀತ ಗುರುಗಳಿಗಾಗಿ ಹಂಬಲಿಸುತ್ತಾ ತಮ್ಮನ್ನಾಶ್ರಯಿದ ಜಯತೀರ್ಥನಿಗೆ ಶ್ರೀ ಐಜಿ ವೇಂಕಟರಾಮಾಚಾರ್ಯರಂಥಾ ಜ್ಞಾನಿ ಶ್ರೇಷ್ಠರನ್ನು ಶ್ರೀ ಗುರುರಾಜರು ಕರುಣಿಸಿದರು. ಜಯತೀರ್ಥನಂತೂ ಶ್ರೀ ಐಜಿ ವೇಂಕಟರಾಮಾಚಾರ್ಯರ ದರ್ಶನ ಮಾತ್ರದಿಂದಲೋ ಪುಲಕಿತನಾದನು. ಎಷ್ಟೋ ಜನ್ಮಗಳ ಸಂಬಂಧವಿರುವಂತೆ ಭಾವವಿಷ್ಟನಾಗಿ ಅವರ ಸಾಮಿಪ್ಯವನ್ನು ಬಯಸಿದನು.

" ಶ್ರೀ ಐಜಿ ವೇಂಕಟರಾಮಾಚಾರ್ಯರ ಕೃಪಾ ದೃಷ್ಟಿ "

ಶ್ರೀ ಐಜಿ ವೇಂಕಟರಾಮಾಚಾರ್ಯರ ಪವಿತ್ರವಾದ ಪಾದ ಕಮಲಗಳ ಮೇಲೆ ಜಯತೀರ್ಥನು ತನ್ನ ಶಿರವನ್ನಿಟ್ಟು ವಿದ್ಯಾ ದಾನ ಮಾಡಿ ಉದ್ಧರಿಸಬೇಕೆಂದು ಪ್ರಾರ್ಥಿಸಿದ. ಜಯತೀರ್ಥನ ನಯ - ವಿನಯಾದಿ ಸದ್ಗುಣಗಳನ್ನು ಕಂಡು ಶ್ರೀ ಐಜಿ ವೇಂಕಟರಾಮಾಚಾರ್ಯರಿಗೆ ಅತೀವ ಸಂತೋಷವಾಯಿತು. ಇಂತಹಾ ಶಿಷ್ಯ ರತ್ನವನ್ನು ಪಡೆಯಬೇಕೆಂದೇ ಶ್ರೀ ಐಜಿ ವೇಂಕಟರಾಮಾಚಾರ್ಯರು ಶ್ರೀ ಗುರುಸಾರ್ವಭೌಮರ ಪ್ರೇರಣೆಯಂತೆ ಮಂತ್ರಾಲಯಕ್ಕೆ ಆಗಮಿಸಿದ್ದರು.

ಶ್ರೀ ಹರಿ ವಾಯು ಗುರುಗಳ ಪರಮಾನುಗ್ರಹದಿಂದ ತಮ್ಮ ವಿದ್ಯೆಯನ್ನು ಧಾರೆಯೆರೆಯಲು ಅನಾಯಾಸವಾಗಿ ಶಿಷ್ಯೋತ್ತಮನೋಬ್ಬನು ದೊರಕಿದನೆಂದು ಶ್ರೀ ಐಜಿ ವೇಂಕಟರಾಮಾಚಾರ್ಯರು ಬಹಳ ಸಂತೋಷಪಟ್ಟರು.

ಶ್ರೀ ಐಜಿ ವೇಂಕಟರಾಮಾಚಾರ್ಯರು ತಮ್ಮ ಪಾದಾಕ್ರಾಂತನಾದ ಜಯತೀರ್ಥನನ್ನು ಮೈದಡವಿ ಎಬ್ಬಿಸಿ ಆತ್ಮೀಯತೆಯಿಂದ ಮಾತನಾಡಿಸಿ; ಅವನ ಕಾಂತಿಯುಕ್ತವಾದ ಮುಖ ಕಮಲದಲ್ಲಿ ಅವತಾರ ಪುರುಷನ ದಿವ್ಯ ಲಕ್ಷಣಗಳನ್ನು ಕಂಡು ಪುಳಕಿತರಾದರು. ಮುಂದೆ ಜಯತೀರ್ಥನಿಂದ ದ್ವೈತ ಮತಕ್ಕೆ ಅನುಪಮವಾದ ಸೇವೆ ಸಲ್ಲುವುದೆಂದು ಮನಗೊಂಡು ಶ್ರೀ ಐಜಿ ವೇಂಕಟರಾಮಾಚಾರ್ಯರು ಜಯತೀರ್ಥನನ್ನು ತಮ್ಮ ವಿದ್ಯಾ ಶಿಷ್ಯನನ್ನಾಗಿ ಸ್ವೀಕರಿಸಿದರು.

" ಪ್ರೌಢ ಗ್ರಂಥಗಳ ಅಧ್ಯಯನ "

ಜ್ಞಾನ ಭಕ್ತಿ ವೈರಾಗ್ಯ ಭರಿತರೂ; ಶ್ರೇಷ್ಠ ವಿದ್ವಾಂಸರಾದ ಶ್ರೀ ಐಜಿ ವೇಂಕಟರಾಮಾಚಾರ್ಯರ ಶಿಷ್ಯತ್ವವನ್ನು ವಹಿಸಿ ಗುರು ಶುಶ್ರೂಷನಿರತನಾದ ಜಯತೀರ್ಥನ ಜ್ಞಾನದಾಹ, ವಿಧೇಯತೆ, ಗುರುಭಕ್ತಿ, ಅರ್ಪಣಾಭಾವ ಮುಂತಾದ ಸದ್ಗುಣಗಳು ಶ್ರೀ ಐಜಿ ವೇಂಕಟರಾಮಾಚಾರ್ಯರ ಮನಸ್ಸನ್ನು ಸೆರೆ ಹಿಡಿದವು. ಅಲ್ಲದೇ ಜಯತೀರ್ಥನಿಗೆ ಸಮಗ್ರವಾದ ದ್ವೈತ ವೇದಾಂತ ವಿದ್ಯೆಯನ್ನು ಆಮೂಲಾಗ್ರವಾಗಿ ಪಾಠ ಮಾಡಿ ವಿದ್ವತ್ಪ್ರಪಂಚವೇ ಬೆರಗಾಗುವಂತೆ ಶ್ರೇಷ್ಠ ಪಂಡಿತನನ್ನಾಗಿ ತಯಾರು ಮಾಡಿ ತಮ್ಮ ವಿದ್ಯೆಯನ್ನು ಜಯತೀರ್ಥನಿಗೆ ಧಾರೆಯೆರೆದರು.

" ಶ್ರೀ ಐಜಿ ವೇಂಕಟರಾಮಾಚಾರ್ಯರ ಮಾತೃವಾತ್ಸಲ್ಯ "

ಶ್ರೀ ಐಜಿ ವೇಂಕಟರಾಮಾಚಾರ್ಯರು ತಾವು ಹೋದಲ್ಲೆಲ್ಲಾ ತಮ್ಮ ಪ್ರೀತಿಯ ವಿದ್ಯಾ ಶಿಷ್ಯನಾದ ಜಯತೀರ್ಥನನ್ನು ಕರೆದುಕೊಂಡು ಹೋಗುತ್ತಿದ್ದರು. ವಿದ್ವಜ್ಜನ ಸಮೂಹದಲ್ಲಿ; ಪಂಡಿತ ಮಂಡಲಿಯಲ್ಲಿ; ರಾಜಾಸ್ಥಾನದಲ್ಲಿ ಶಿಷ್ಯನನ್ನು ಮುಕ್ತಕಂಠದಿಂದ ಪ್ರಶಂಸಿಸಿ ಅವನ ಪ್ರತಿಭಾ ಸಾಮರ್ಥ್ಯಗಳನ್ನು ಪ್ರಕಟ ಪಡಿಸುವ ಅವಕಾಶಗಳನ್ನು ಕಲ್ಪಿಸಿ ಕೊಡುತ್ತಿದ್ದರು.

" ಗುರು ಪುತ್ರನ ಅಪಮೃತ್ಯು ಪರಿಹಾರ "

ಶ್ರೀ ಜಯತೀರ್ಥಾಚಾರ್ಯರು ವೇಣಿಸೋಮಪುರದಲ್ಲಿ ಶ್ರೀ ಐಜಿ ವೇಂಕಟರಾಮಾಚಾರ್ಯರ ಆಶ್ರಯದಲ್ಲಿದ್ದಾಗ ಅವರ ಮಕ್ಕಳಾದ ಶ್ರೀ ಗೋಪಾಲಕೃಷ್ಣಾಚಾರ್ಯರಿಗೆ ಪ್ರಾರಬ್ಧ ವಶಾತ್ ಅಪಮೃತ್ಯು ಪ್ರಾಪ್ತವಾದಾಗ ಗುರುಗಳ ಆಜ್ಞೆಯಂತೆ " ಶ್ರೀ ನೃಸಿಂಹ ಮಂತ್ರ " ವನ್ನು ಒಂದು ಸಪ್ತಾಹ ಜಪ ಮಾಡಿ ಅವರ ಅಪಮೃತ್ಯುವನ್ನು ಪರಿಹಾರ ಮಾಡಿದರು. ಹೇಳಿ ಕೇಳಿ ಮೊದಲೇ ಇವರು ಮೂಲ ರೂಪದಲ್ಲಿ ನೃಸಿಂಹೋಪಾಸಕರಲ್ಲವೇ!

" ಪಾದುಕಾ ಮಹಿಮೆ "

" ಶ್ರೀ ಕಾರ್ಪರ ನರಹರಿ ದಾಸರ ಮಾತಲ್ಲಿ .... "

ಗುರು ತುರುಗವನನುಸರಿಸಿ ।
ಬರುತಿರಲು ಬಿಸಿಲೊಳು ।
ಗುರು ಪ್ರೀತಿಯನು ಬಯಸಿ ।।
ಗುರುವಿತ್ತ ಪಾದುಕ ।
ವೆರಡು ಶಿರದಲಿ ।
ಧರಿಸಿ ಮಹಿಮೆಯನು ತಿಳಿಸಿ ।।

ಒಂದು ಸಲ ಶ್ರೀ ಐಜಿ ವೇಂಕಟರಾಮಾಚಾರ್ಯರು ತಮ್ಮ ಶಿಷ್ಯನ ಮನೆಗೆ ಶುಭ ಸಮಾರಂಭಕ್ಕೆ ಹೋಗಬೇಕಾದ ಸಂದರ್ಭದಲ್ಲಿ ತಮ್ಮ ಶಿಷ್ಯರನ್ನೆಲ್ಲಾ ಮೊದಲೇ ಕಳುಹಿಸಿದ್ದರು.

ಶ್ರೀ ಐಜಿ ವೇಂಕಟರಾಮಾಚಾರ್ಯರು ಕುದುರೆಯ ಮೇಲೆ ಸಮಾರಂಭಕ್ಕೆ ಹೊರಟರು. ಜೊತೆಯಲ್ಲಿ ಅವರ ಪ್ರಿಯ ಶಿಷ್ಯರಾದ ಶ್ರೀ ಜಯತೀರ್ಥಾಚಾರ್ಯರೊಂದಿಗೆ. ಬೇಸಿಗೆ ಆದ್ದರಿಂದ ಬಿಸಿಲಿನ ತಾಪದಿಂದ ಹೆಜ್ಜೆಯಿಡುವುದೇ ಕಠಿಣವಾಯಿತು. ಬಿಸಿಲಿನಲ್ಲಿ ಬರಿಗಾಲಲ್ಲಿ ನಡೆಯುತ್ತಿದ್ದ ಶಿಷ್ಯನನ್ನು ಕಂಡು ಪರಿತಾಪಗೊಂಡು ಶ್ರೀ ಶ್ರೀ ಐಜಿ ವೇಂಕಟರಾಮಾಚಾರ್ಯರು ತಮ್ಮ ಪಾದುಕೆಯನ್ನು ತೆಗೆದು ತಮ್ಮ ಶಿಷ್ಯರಾದ ಶ್ರೀ ಜಯತೀರ್ಥಾಚಾರ್ಯರಿಗೆ ಕೊಟ್ಟರು.

ಶ್ರೀ ಜಯತೀರ್ಥಾಚಾರ್ಯರು ಗುರುಗಳು ನೀಡಿದ ಪಾದುಕೆಗಳನ್ನು ವಿನಮ್ರವಾಗಿ ಸ್ವೀಕರಿಸಿ; ಗುರುಭಕ್ತಿ ಧುರಂಧರರಾದ ಅವರಿಗೆ ಅವುಗಳನ್ನು ಕಾಲಿನಲ್ಲಿ ಮೆಟ್ಟಿಕೊಳ್ಳಲು ಮನಸ್ಸಾಗಲಿಲ್ಲ. ಭವ ತಾರಕವಾದ ಗುರುಗಳ ಪಾದುಕೆಗಳು ಅನಾಯಾಸವಾಗಿ ತಮ್ಮ ಕರಗತವಾಗಿದ್ದಕ್ಕೆ ಬಹಳ ಸಂತೋಷ ಪಟ್ಟು ತಮ್ಮ ತಲೆಯ ಮೇಲೆ ಇಟ್ಟುಕೊಂಡು ನಡೆಯಲಾರಂಭಿಸಿದರು. ಪಾದುಕೆಯ ಮಹಿಮೆಯಿಂದ ಬಿಸಿಲಿನ ತಾಪ ಆಗದೇ ತಂಪಾದ ಹುಲ್ಲಿನ ಮೇಲೆ ಹೆಜ್ಜೆ ಇತ್ತಂತೆ ಅನುಭವವಾಯಿತು. ಗುರುಗಳ ಪಾದುಕೆಯು ಅದ್ಭುತ ಮಹಿಮೆಯನ್ನೇ ಮಾಡಿಬಿಟ್ಟಿತು.

" ಅವಧೂತರಾದರು "

ಒಂದುದಿನ ಮಧ್ಯಾಹ್ನ ಶ್ರೀ ಜಯತೀರ್ಥಾಚಾರ್ಯರು ಸುಂದರವಾಗಿ ಅಲಂಕೃತವಾದ ಶಯ್ಯಾ ಗೃಹದಲ್ಲಿ ತಮ್ಮ ಧರ್ಮಪತ್ನಿಯ ಜೋತೆಯಲ್ಲಿರುವ ವೇಳೆಯಲ್ಲಿ ಅವರ ಮನೆಯ ಬಳಿ ಬಂದು ನಿಂತ ದಾಸನೊಬ್ಬ ಶ್ರೀ ಪುರಂದರದಾಸರ ಈ ಕೆಳಕಂಡ ಸುಂದರ ಪದವನ್ನು ಸುಶ್ರಾವ್ಯವಾಗಿ ಹಾಡ ತೊಡಗಿದ..

ಗೋವಿಂದಾ ನಮೋ ಗೋವಿಂದಾ ನಮೋ ।
ಗೋವಿಂದಾ ನಾರಾಯಣ ।। ಪಲ್ಲವಿ ।।

ಗೋವರ್ಧನ ಗಿರಿಯನೆತ್ತಿದ ।
ಗೋವಿಂದಾ ನಮ್ಮ ರಕ್ಷಿಸೋ ।। ಚರಣ ।।

ಮಂಚಬಾರದು ಮಡದಿಬಾರಳು ।
ಕಂಚು ಕನ್ನಡಿ ಬಾರದು ।
ಸಿಂಚಿತಾರ್ಥವು ಕಿಂಚಬಾರದು ।
ಮುಂಚೆ ಮಾಡಿರೋ ಧರ್ಮವ ।। ಚರಣ ।।

... ದಿಟ್ಟತನದಲಿ ಪಟ್ಟವಾಳುವ ।
ಕೃಷ್ಣರಾಯನ ಚರಣವ ।
ಮುಟ್ಟಿ ಭಾಜಿಸಿರೋ ಸಿರಿ ಪುರಂದರ ।
ವಿಠ್ಠಲೇಶನ ಪಾದವ ।। ಚರಣ ।।

ಸರ್ವಾಧಾರನೂ; ಸರ್ವಸಾರನೂ ಆದ ಪರಮಾತ್ಮನನ್ನು ಹೊರತು ಪಡಿಸಿ ಜಗತ್ತಿನಲ್ಲಿರುವ ಸರ್ವ ಚರಾಚರ ವಸ್ತುಗಳೂ ಸಾರ ರಹಿತವೆಂದರಿತು ಶ್ರೀ ಜಯತೀರ್ಥಾಚಾರ್ಯರು ಅವಧೂತರಾದರು.

" ಶಿಷ್ಯ ಸಂಪತ್ತು "

ಪಂಡಿತಾಗ್ರಣಿಗಳಾದ ಶ್ರೀ ಜಯತೀರ್ಥಾಚಾರ್ಯರಲ್ಲಿ ನೂರಾರು ಜನ ಶಿಷ್ಯರು ಶಾಸ್ತ್ರಾಧ್ಯಯನ ಮಾಡುತ್ತಿದ್ದರು. ಅವರಲ್ಲಿ ಪ್ರಮುಖರು..

ಶ್ರೀ ಅಡವಿ ಕೃಷ್ಣಾಚಾರ್ಯರು

ಇವರು ಶ್ರೀ ವಿಷ್ಣುತೀರ್ಥರ ಪೂರ್ವಾಶ್ರಮ ಪುತ್ರರು. ಇವರು ಲಘು ಸುಧಾ ರಂಜನೀ ಎಂಬ ನ್ಯಾಯಸುಧಾ ಟಿಪ್ಪಣಿ, ಸುಮನೋರಂಜನೀ ಎಂಬ ತತ್ತ್ವ ಪ್ರಕಾಶಿಕಾ ಟೀಕೆ, ಶ್ರೀ ವಿಷ್ಣುತೀರ್ಥರು ರಚಿಸಿದ ನ್ಯಾಯಸುಧಾ ಸ್ತೋತ್ರಕ್ಕೆ ವ್ಯಾಖ್ಯಾನ ಮತ್ತು ಶ್ರೀ ವಿಷ್ಣುತೀರ್ಥರ ಕುರಿತಾದ ಅನೇಕ ಸ್ತೋತ್ರಗಳನ್ನು ರಚಿಸಿದ್ದಾರೆ.

ಶ್ರೀ ಗೋಕಾವಿ ಅನಂತಾಚಾರ್ಯರು ( ಶ್ರೀ ಅನಂತಾದ್ರೀಶರು )

ಇವರು ಪಂಡಿತರೂ, ಶ್ರೇಷ್ಠ ಕವಿಗಳೂ ಆಗಿದ್ದರು. " ಅನಂತಾದ್ರೀಶ " ಯೆಂಬ ಅಂಕಿತದಲ್ಲಿ " ಶ್ರೀ ವೆಂಕಟೇಶ ಪಾರಿಜಾತ ", " ಕೃಷ್ಣ ಚರಿತ್ರೆ ", " ಶ್ರೀ ವಿಷ್ಣುತೀರ್ಥ ಕನ್ನಡ ಪಂಚರತ್ನ ಸ್ತೋತ್ರ " ಮತ್ತು ಅನೇಕ ಪದ ಪದ್ಯಗಳನ್ನು ರಚಿಸಿದ ಪ್ರತಿಭಾವಂತ ವಿದ್ವಾಂಸರು.

ಮೊರಬದ ಶ್ರೀ ಶೇಷಾಚಾರ್ಯ

ಟೊಣಪಿ ಶ್ರೀ ಬಾಳಾಚಾರ್ಯ

ಇವರು ರಚಿಸಿರುವ " ತತ್ತ್ವ ಪ್ರಕಾಶಿಕಾ ಟಿಪ್ಪಣಿ ಮತ್ತು ಐತರೇಯ ರಹಸ್ಯ ರಂಜನೀ " ಯೆಂಬ ಗ್ರಂಥಗಳನ್ನು ರಚಿಸಿದ್ದಾರೆ. ಅವುಗಳನ್ನು ಒಂದುಸಲ ಅವಲೋಕಿಸಿದರೆ ಇವರ ಗ್ರಂಥ ರಚನಾ ಸಾಮರ್ಥ್ಯ ತಿಳಿಯುತ್ತದೆ.

ಅಣ್ಣಿಗೇರಿ ಶ್ರೀ ಅಣ್ಣಯ್ಯಾಚಾರ್ಯ

" ಶ್ರೀ ಜಯತೀರ್ಥಾಚಾರ್ಯರು ಶ್ರೀ ವಿಷ್ಣುತೀರ್ಥರಾಗಿ ವಿರಾಜಿಸಿದರು "

ಉತ್ತರಾದಿ ಮಠದ ಶ್ರೀ ಸತ್ಯವ್ರತೀರ್ಥರು ಶ್ರೀ ಜಯತೀರ್ಥಾಚಾರ್ಯರಿಗೆ ಆಶ್ರಮವನ್ನು ಕೊಟ್ಟು " ವಿಷ್ಣುತೀರ್ಥ " ಎಂಬ ಹೆಸರನ್ನು ಶ್ರೀ ಸತ್ಯವ್ರ ತೀರ್ಥರು ನೀಡಿದ್ದು ಅನ್ವರ್ಥಕ ಎನಿಸಿತು. ಶ್ರೀ ಸತ್ಯವರ ತೀರ್ಥರ ಸಚ್ಛಿಷ್ಯರಾದರೂ ಪೀಠಾಧಿಪತ್ಯವನ್ನು ಒಂದರೆಕ್ಷಣವೂ ಬಯಸದೇ ತಪಸ್ಸಂನಾಚರಿಸಲು ಪುನಃ ಅಡವಿಯನ್ನೇ ಸೇರಿದರು.

" ಗ್ರಂಥಗಳು "

" ಶ್ರೀ ಕೃಷ್ಣಾಷ್ಟಕಮ್ ( ಅಂತ್ಯ ಕಾಲ ಪ್ರಾರ್ಥನಾ ) "

ಇದು ಶ್ರೀ ವಿಷ್ಣುತೀರ್ಥರ ಕೃತಿಗಳಲ್ಲಿಯೇ ಅಪೂರ್ವವಾದ ಕೃತಿ. ಇದರಲ್ಲಿ ಎಂದು ಶ್ಲೋಕಗಳಿವೆ. ಇದು ಸಂಸ್ಕೃತದಲ್ಲಿ ರಚಿತವಾಗಿದೆ. ಪ್ರತಿಯೊಂದು ಪಂಕ್ತಿಯೋ ಮೆಲಕು ಹಾಕುವಂತಿದ್ದು ಭಕ್ತ ಹೃದಯ ತನ್ನ ಅಂತ್ಯ ಕಾಲದ ವರೆಗೂ ಕೂಡಿಟ್ಟು ಕೊಳ್ಳಬೇಕಾದ ಬಹು ಆಪ್ತ ಕೃತಿ ಇದಾಗಿದೆ.

ಶ್ರೀ ವಾಸುದೇವ ಮಧುಸೂದನ ಕೈಟಭಾರೇ
ಲಕ್ಷೀಶ ಪಕ್ಷಿವರ ವಾಹನ ವಾಮನೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೧ ।।

ಗೋವಿಂದ ಗೋಕುಲಪತೇ ನವನೀತ ಚೋರ
ಶ್ರೀ ನಂದನಂದನ ಮುಕುಂದ ದಯಾಪರೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೨ ।।

ನಾರಾಣಾಖಿಲ ಗುಣಾರ್ಣವ ವೇದ
ಪಾರಾಯಣ ಪ್ರಿಯ ಗಜಾಧಿಪ ಮೋಚಕೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೩ ।।

ಆನಂದ ಸಚ್ಚಿದಾಖಿಲಾತ್ಮಕ ಭಕ್ತ ವರ್ಗ
ಸ್ವಾನನ್ದ ದಾನ ಚತುರಾಗಮ ಸನ್ನುತೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೪ ।।

ಶ್ರೀ ಪ್ರಾಣತೋsಧಿಕ ಸುಖ್ಯಾತಕ ರೂಪ ದೇವ
ಪ್ರೋದ್ಯದ್ದಿವಾಕರ ನಿಭಾಚ್ಯುತ ಸದ್ಗುಣೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೫ ।।

ವಿಶ್ವಾಂಧಕಾರಿ ಮುಖ ದೈವತ ವಂದ್ಯ ಶಾಶ್ವತ್
ವಿಶ್ವೋದ್ಭವಸ್ಥಿತಿಮೃತಿ ಪ್ರಭೃತಿ ಪ್ರದೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೬ ।।

ನಿತ್ತೈಕ ರೂಪ ದಶ ರೂಪ ಸಹಸ್ರ ಲಕ್ಷಾ
ನಂತ ರೂಪ ಶತ ರೂಪ ವಿರೂಪಕೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೭ ।।

ಸರ್ವೇಶ ಸರ್ವಗತ ಸರ್ವ ಶುಭಾನುರೂಪ
ಸರ್ವಾಂತರಾತ್ಮಕ ಸದೋದಿತ ಸತ್ಪ್ರಿಯೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೮ ।।

" ಶ್ರೀ ರಮಾಸ್ತೋತ್ರಮ್ "

ಇದು ಶ್ರೀ ವಿಷ್ಣುತೀರ್ಥರ ಮಂತ್ರ ಮತ್ತು ತಪಃಶಕ್ತಿಯನ್ನು ಪ್ರತಿಬಿಂಬಿಸುವ ಸ್ತೋತ್ರ ಮತ್ತು ಐತಿಹಾಸಿಕ ಹಿನ್ನೆಲೆ ಉಳ್ಳದ್ದು.

ಆದಿ :
ಯಯೈವೇದಂ ಸಚ್ಚಿನ್ನಿರುಪಮನಿಜಾನಂದನಿರತಂ
ಪರಬ್ರಹ್ಮಾಪ್ಯಾದೌ ಗುಣಸಮತನೂರಾಪ್ಯ ಸೃಜತಿ ।
ಅವತ್ಯತ್ತಿ ಪ್ರೇಷ್ಟಾನ್ ಪದಮಪಿ ನಯತ್ಯಸ್ತವಿಪದಃ
ಪರ ಬ್ರಹ್ಮಾಣೀ ಸಾ ನಾನು ವಿಜಯತೇ ಮದ್ಧ್ರುದಿ ಸದಾ ।।

ಅಂತ್ಯ :
ಅಟತು ವಿವಿಧದೇಶಂ ಸರ್ವದಾ ಸಪ್ರಯಾಸಂ
ಪಠತು ನಿಖಿಲ ವೇದಾನ್ ಸಂಗಕಾನ್ನಿತ್ಯಮೇವ ।
ಲುಠತು ಸಕಲ ದೇವಾನಾಂ ಪುತಃ ಪಾಂಸು ಮಧ್ಯೇ
ಪಟಲ ವಿಘಟನಂ ಸ್ಯಾತ್ತಾಂ ವಿನಾ ನೈವ ಜಂತೋಃ ।।

ಇತಿ ದೇವೀ ಸ್ತುತಿಂ ಪುಣ್ಯಂ ಸರ್ವ ಪಾಪ ಪ್ರಣಾಶನಮ್ ।
ಯಃ ಪಠೇತ ಶ್ರೂಣುಯಾದ್ವಾಪಿ ಸ ಮುಕ್ತೋ ನಾತ್ರ ಸಂಶಯಃ ।।

" ಸುಮಧ್ವ ವಿಜಯ ಪ್ರಮೇಯ ಫಲ ಮಾಲಿಕಾ "

ಇದು ಶ್ರೀ ನಾರಾಯಣ ಪಂಡಿತಚಾರ್ಯರಿಂದ ರಚಿತವಾದ 1008 ಶ್ಲೋಕವುಳ್ಳ ಸುಮಧ್ವ ವಿಜಯ ಪಾರಾಯನದಿಂದ ತಮಗೆ ಸಿಕ್ಕ ಫಲವನ್ನು ಕೇವಲ 22 ಶ್ಲೋಕದಲ್ಲಿ ಮೂಲಕ್ಕೆ ಚ್ಯುತಿ ಬಾರದಂತೆ ಗ್ರಂಥದ ಸಾರ ಸರ್ವಸ್ವವನ್ನು ಅತ್ಯಂತ ಸತ್ವಯುತವಾಗಿ ಬಿಂಬಿಸುವ ಈ ಕೃತಿ ಶ್ರೀ ವಿಷ್ಣುತೀರ್ಥರ ಪಾಂಡಿತ್ಯಕ್ಕೂ, ಪ್ರತಿಭಾ ಸಾಮಥ್ಯಕ್ಕೂ ಹಿಡಿದ ಕೈಗನ್ನಡಿಯಾಗಿದೆ.

ಆದಿ :
ಶ್ರೀ ಮಧ್ವ ವಿಜಯೇ ಸರ್ಗಾಃ ಷೋಡಶಾನುಕ್ರಮಾವಹಮ್ ।
ತೇಷಾಂ ಪ್ರಮೇಯಂ ವಕ್ಷ್ಯಾಮಿ ಸಂಗ್ರಹೇಣ ಫಲಂ ತಥಾ ।।

ಅಂತ್ಯ :
ಇತ್ತಂ ಸುಮಧ್ವ ವಿಜಯೇ ಪ್ರಮೇಯ ಫಲ ಮಾಲಿಕಾ ।
ರಚಿತ ಭಿಕ್ಷುಣಾ ಭೂಯಾದ್ವಿಷ್ಣುವಕ್ಷಃಸ್ಥಲಾಶ್ರಿತಾ ।।

" ಅಧ್ಯಾತ್ಮಾಮೃತ ರಸರಂಜನೀ "

49 ಶ್ಲೋಕಗಳುಳ್ಳ " ಆಧ್ಯಾತ್ಮಾಮೃತ ರಸರಂಜನೀ " ಯೆಂಬ ಕೃತಿಯಲ್ಲಿ ಮನೋದೋಷ ನಿರಸನ ಪ್ರಕರಣ: ಧ್ಯಾನ ಪ್ರಕರಣ ಮತ್ತು ಸರ್ವ ಸಮರ್ಪಣ ಪ್ರಕರಣಗಳ ಕುರಿತು ತಿಳಿಸುವ ಕೃತಿ.

ಆದಿ :
ಪಾಹಿ ಪಾಂಡವಪಾಲ ಕಾಮಿತ ಪಾಪಿನಂ ಭವತಾಪತೋ
ಏಹಿ ಮಾನಸಮಂದಿರಾಂಗಣ ದೇಶಮೀಶ ನಮೋಸ್ತುತೇ ।
ಪುತ್ರಮಿತ್ರಕಲತ್ರಪೂರ್ವಕ ಮತ್ರಗಂ ನ ಪರತ್ರಗಂ
ಯತ್ರ ಯತ್ರ ಗತಿರ್ಮಮೇಶ್ವರ ತತ್ರ ತೇsಸ್ತಿ ಪದಾಂಬುಜಮ್ ।।

ಅಂತ್ಯ :
ದೋಷೇತಾsಪಿ ಮದೇಯಾ ವಾಗ್ಧಾರ್ಯೈವ ಧರಣೀಸುರೈಃ ।
ಶ್ಲಾಘ್ಯತೇ ಗುಣಲುಬ್ಧರ್ಹಿ ಕಂಟಕೇತಾಪಿ ಕೇತಕೀ ।।

" ಮುಕ್ತಮಾಲಾ " ( ಭಗವದ್ಗೀತಾ ಸಾರೋದ್ಧಾರ )

ಕೇವಲ 20 ಶ್ಲೋಕಗಳಲ್ಲಿ 18 ಅಧ್ಯಾಯಗಳ 700 ಶ್ಲೋಕಗಳ ಸಾರವನ್ನು ಶ್ರೀ ವಿಷ್ಣುತೀರ್ಥರು ಸಂಗ್ರಹಿಸಿ ಕೊಟ್ಟಿದ್ದಾರೆ.

ಆದಿ :
ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ ।
ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯಃ ।।

ಅಂತ್ಯ :
ಅವಧೂತ ಶಿರೋರತ್ನ ಜಯತೀರ್ಥಾರ್ಯ ನಿರ್ಮಿತಾ ।
ಮುಕ್ತಮಾಲಾsನಸಂಧೇಯಾ ಪರತತ್ತ್ವ ಪರೀಕ್ಷಕೈಃ ।।

" ನ್ಯಾಯಸುಧಾ ಸ್ತೋತ್ರ "

ಶ್ರೀ ಜಯತೀರ್ಥರ ಮೇರು ಕೃತಿಯಾದ ಶ್ರೀಮನ್ನ್ಯಾಯಸುಧಾ ಗ್ರಂಥವನ್ನು ಕೊಂಡಾಡುವ 8 ಶ್ಲೋಕಗಳುಳ್ಳ ಸ್ತೋತ್ರ ರತ್ನವಿದು. ಶ್ರೀ ಟೀಕಾಕೃತ್ಪಾದರ ಗ್ರಂಥಗಳನ್ನು ಭಕ್ತಿ ಶ್ರದ್ಧೆಗಳಿಂದ ಅಧ್ಯಯನ ಮಾಡುವವರು ಈ ಭವ ಬಂಧನದಲ್ಲಿ ಪುನಃ ಬೀಳುವುದೇ ಇಲ್ಲವೆಂದು ಒತ್ತಿ ಹೇಳುವ ಕೃತಿ.

ಆದಿ :
ಯದು ತಾಪಸಲಭ್ಯಮನಂತ ಭವೈ
ಸ್ತದುತೋ ಪರತತ್ತ್ವಮಿಹೈಕ ಪದಾತ್ ।
ಜಯತೀರ್ಥ ಕೃತೌ ಪ್ರವಣೋ ನ ಪುನ
ರ್ಭವ ಭಾಗ್ಭವತೀತಿ ಮತಿರ್ಹಿ ಮಮ ।।

ಅಂತ್ಯ :
ದಶಮಾಂತ್ಯಪತಿಸ್ಸದನಂ ನ ಕದಾ
ಪೃಥ ಮುಂಚತಿ ಯತ್ವ್ಸಯಮೇವ ರಸಾತ್ ।
ಜಯತೀರ್ಥ ಕೃತೌ ಪ್ರವಣೋ ನ ಪುನ
ರ್ಭವ ಭಾಗ್ಭವತೀತಿ ಮತಿರ್ಹಿ ಮಮ ।।

" ಭಾಗವತ ಧರ್ಮ ಸ್ತೋತ್ರ "

8 ಶ್ಲೋಕಗಳುಳ್ಳ ಈ ಕೃತಿಯಲ್ಲಿ ಭಾಗವತ ಧರ್ಮದ ಹಿರಿಮೆಯನ್ನೂ; ಭಗವದ್ಭಕ್ತರ ಮಹಿಮೆಯನ್ನೂ ಅತ್ಯಂತ ಸುಂದರವಾಗಿ ಚಿತ್ರಿಸಿದ್ದಾರೆ ಶ್ರೀ ವಿಷ್ಣುತೀರ್ಥರು.

ಆದಿ :
ಯತ ಏವ ಇಹೈವ ವಸಂತಿ ಸುಖಂ
ಸುಖತೀರ್ಥ ಸುತೀರ್ಥ ಸುವೃದ್ಧಿಪರಾಃ ।
ನಹಿ ಕಾಲ ಬಲಂ ಹರಿಪಾದ ರಜೋ
ಧುತ ಪಾಪ ಗಣೇಷು ಜನೇಷು ಸದಾ ।।

ಅಂತ್ಯ :
ಯದಮುತ್ರ ಯಮೋsಪಿ ಸಮಸ್ಸಖಿಭಿ
ರ್ಭವತೀಶ ಪದಾನುಗಜಾತಯತಃ ।
ನಹಿ ಕಾಲ ಬಲಂ ಹರಿಪಾದ ರಜೋ
ಧುತ ಪಾಪ ಗಣೇಷು ಜನೇಷು ಸದಾ ।।

" ಉಪದೇಶ ಪತ್ರ "

ಶ್ರೀ ವಿಷ್ಣುತೀರ್ಥರಿಗೆ ತಮ್ಮ ಶಿಷ್ಯರಾದ ಗೋಕಾವಿ ಅನಂತಾದ್ರೀಶರಲ್ಲಿ ಎಂಥಹಾ ಅಂತಃಕಾರಣವಿತ್ತು. ಸಾಧನೆಯ ಸತ್ಪಥದಲ್ಲಿ ಅವರನ್ನು ಸುರಕ್ಷಿತವಾಗಿ ಮುನ್ನಡೆಸುವ ಕಳಕಳಿಯಿತ್ತು ಎಂಬುದನ್ನು ಈ ಉಪದೇಶ ಪತ್ರದಿಂದ ವ್ಯಕ್ತವಾಗುತ್ತದೆ. ಇದು ಕನ್ನಡದಲ್ಲಿ ಬರೆಯಲ್ಪಟ್ಟ ಪತ್ರ.

" ಆಜ್ಞಾ ಪತ್ರಮ್ "

ಉಪದೇಶ ಪತ್ರದಲ್ಲಿ ಉದ್ಹೃತವಾದ ಬಹುತೇಕ ವಿಷಯಗಳನ್ನೊಳಗೊಂಡ ಸಂಸ್ಕೃತದ " ಆಜ್ಞಾ ಪತ್ರ " ವನ್ನು ಸ್ವತಃ ಶ್ರೀ ವಿಷ್ಣುತೀರ್ಥರೇ ತಮ್ಮ ಶಿಷ್ಯರ ಮಾರ್ಗದರ್ಶನಕ್ಕಾಗಿ ಹೊರಡಿಸುತ್ತಿದ್ದರು.

" ಆತ್ಮ ಸುಖಬೋಧಿನಿ ಪತ್ರಿಕಾ "

ಪರಮಾತ್ಮನ ಅನುಗ್ರಹದಿಂದಲೇ ಜೀವರಿಗೆ ಸ್ವರೂಪ ಸುಖ ಸಾಧ್ಯ ಎಂಬುದನ್ನು ನಿರೂಪಿಸಲು ಹೊರಟಿರುವ ಕೃತಿ. ಇದು ಕನ್ನಡದಲ್ಲಿ ರಚಿತವಾಗಿದೆ.

" ಬಿಂಬಾರ್ಪಣ ವಿಧಿಃ "

ಸರ್ವ ಕರ್ಮಗಳನ್ನೂ ಬಿಂಬ ರೂಪಿ ಭಗವಂತನಿಗೆ ಸಮರ್ಪಿಸುವ " ಬಿಂಬಾರ್ಪಣ ವಿಧಿಃ " ಶ್ರೀ ವಿಷ್ಣುತೀರ್ಥರ ಸಂಸ್ಕೃತ ಭಾಷೆಯ ಸುಲಲಿತ ಶೈಲಿಯಲ್ಲಿ ರಚಿಸಿರುವ ಗದ್ಯ ಕೃತಿಯಾಗಿದೆ.

" ಶ್ರೀಮನ್ನ್ಯಾಯಸುಧಾಟಿಪ್ಪಣಿ " ( ರಸ ರಂಜನೀ )

ಶ್ರೀಮನ್ನ್ಯಾಯಸುಧಾ ಗ್ರಂಥದ ಮೂಲದರ್ಥವನ್ನು ಸಜ್ಜನರಿಗೆ ತಿಳಿಯ ಪಡಿಸಲೆಂದೇ ಶ್ರದ್ಧೆಯಿಂದ ತಮ್ಮೆಲ್ಲಾ ಪ್ರತಿಭಾ ಸಾಮರ್ಥ್ಯವನ್ನು ಕ್ರೋಢೀಕರಿಸಿ " ಶ್ರೀಮನ್ನ್ಯಾಯಸುಧಾ ಟಿಪ್ಪಣಿ " ಯನ್ನು ರಚಿಸಿದ್ದಾರೆ.

" ಷೋಡಶೀ "

ಅಮೂಲ್ಯವಾದ ಅನೇಕ ಪ್ರಮೇಯ ಪುಂಜಗಳಿಂದ ಕೂಡಿದ ಈ ದೀರ್ಘ ರಚನೆಯಲ್ಲಿ...

ಬಂಧಕ, ಬಂಧಕ ನಿವೃತ್ತಿ, ಬಿಂಬ ಪ್ರತಿಬಿಂಬ ಭಾವ, ಬಿಂಬ ಸ್ಥಾಪನಾ, ಸ್ಥೂಲ ಶರೀರ ಸೃಷ್ಠಿ, ಅವಸ್ಥಾತ್ರಾಯ ನಿರ್ಮಾಣ, ಪ್ರಾಣ ವ್ಯಾಪಾರ, ಭೋಜನ, ಇಂದ್ರಿಯ ವ್ಯಾಪಾರ, ತತ್ತ್ವಕಾರ್ಯ, ರಥಾದಿ, ಜಾಗೃತ, ಸ್ವಪ್ನ, ಸುಷುಪ್ತಿ, ಗಮನಾಗಮನ ಮತ್ತು ಮೋಕ್ಷ ಎಂಬ 16 ಪ್ರಕರಣಗಳಿದ್ದು " ಷೋಡಶೀ " ಯೆಂಬ ಹೆಸರನ್ನು ಅನ್ವರ್ಥಗೊಳಿಸಿದೆ.

" ಚತುರ್ದಶೀ "

ಜೀವ ಹೋಮ, ಉಪನಯನ, ಸೂರ್ಯಗತಿ, ಆಯುರ್ಯಜ್ಞ, ವೇದಾಧ್ಯಯನ, ಭಿಕ್ಷಾಟನೆ, ಭೋಜನ, ಪಾಪಲೇಪ, ಜೀವ ಪ್ರಯಾಣ ಮಾರ್ಗ, ಬ್ರಹ್ಮಯಜ್ಞ, ಶುದ್ಧಯಜ್ಞ, ಸ್ವರೂಪಯಜ್ಞ, ಸುಲಭ ಪೂಜೆ, ಗುರು ಪ್ರಸಾದ ಲಾಭ ಯೆಂಬ 14 ಪ್ರಕರಣಗಳೊಂದಿಗೆ ಅತ್ಯಮೂಲ್ಯವಾದ ಪ್ರಮೇಯಗಳನ್ನೊಳಗೊಂಡ ಕೃತಿ.

" ತತ್ತ್ವ ಪ್ರಕಾಶಿಕಾ ಟಿಪ್ಪಣಿ " ( ಸುಮನೋರಂಜನೀ )

ಶ್ರೀಮಜ್ಜಯತೀರ್ಥರ ಕೃತಿ ರತ್ನವಾದ ತತ್ತ್ವಪ್ರಕಾಶಿಕೆಗೆ ಟಿಪ್ಪಣಿಯನ್ನು ಬರೆದು ಅದನ್ನು " ಸುಮನೋರಂಜನೀ " ಯೆಂದು ಕರೆದಿದ್ದಾರೆ.

" ಧ್ಯಾನ ( ಸ್ನಾನ ) ವಿಧಿಃ "

ಧ್ಯಾನ ಸ್ನಾನ ನಿಷ್ಣಾತರಾದ ಶ್ರೀ ಅಡವಿ ಸ್ವಾಮಿಗಳು ಧ್ಯಾನ ಸ್ನಾನ ವಿಧಿಯನ್ನು ತಿಳಿಸುವ ಈ ಮಹತ್ವ ಪೂರ್ಣ ಕೃತಿಯನ್ನು ರಚಿಸಿ ಸಾಧಕರಿಗೆ ಉಪಕಾರ ಮಾಡಿದ್ದಾರೆ.

" ಶ್ರೀಮದ್ಭಾಗವತ ಸಾರೋದ್ಧಾರ "

ಗೀತಾಸಾರೋದ್ಧಾರದಂತೆ ಶ್ರೀಮದ್ಭಾಗವತಸಾರೋದ್ಧಾರವೂ ಶ್ರೀ ಅಡವಿ ಸ್ವಾಮಿಗಳಿಂದ ರಚಿತವಾದ ಅಪೂರ್ವ ಕೃತಿ. ಪ್ರತಿಯೊಂದು ಶ್ಲೋಕಗಳಿಗೂ ಶ್ರೀಮದ್ಭಾಗವತದಲ್ಲಿ ಅಡಗಿರುವ ಅರ್ಥ ರತ್ನಗಳನ್ನು ಎತ್ತಿ ತೋರುವ ಅವರ ನಿರೂಪಣಾ ಕೌಶಲ್ಯ ಅತ್ಯದ್ಭುತವಾಗಿದೆ.

" ಶ್ರೀಮದ್ಭಾಗವತಧೃತಸಾರಃ "

ಶ್ರೀಮದ್ಭಾಗವತಧೃತಸಾರದಲ್ಲಿ ಶ್ರೀ ಅಡವಿ ಸ್ವಾಮಿಗಳು ಶ್ರೀಮದ್ಭಾಗವತದ ಪ್ರತಿ ಸ್ಕಂದಕ್ಕೂ ಅರ್ಥ ವ್ಯಾಪ್ತಿಯನ್ನು ಸಮಗ್ರವಾಗಿ ಬಿಂಬಿಸುವ 3 ಶ್ಲೊಕಗಳಂತೆ 12 ಸ್ಕಂದಗಳಿಂದ 36 ಶ್ಲೋಕಗಳಲ್ಲಿ ಸಂಗ್ರಹಿಸಿ ಕೊಟ್ಟಿದ್ದಾರೆ.

" ಬಿಂಬ ಸ್ತುತಿಃ "

68 ಶ್ಲೋಕಗಳುಳ್ಳ ಈ ಕೃತಿಯಲ್ಲಿ ಬಿಂಬ ರೂಪಿ ಪರಮಾತ್ಮನು ಜೀವಿಗಳ ವಿವಿಧ ಅಂಗಾಂಗಗಳಲ್ಲಿ; ವಿವಿಧ ರೂಪಗಳಲ್ಲಿ; ವಿವಿದ ರೂಪಗಳಿಂದ ನೆಲೆಸಿ ಹೇಗೆ ವಿಧ ವಿಧ ಕಾರ್ಯಗಳನ್ನು ನಿರ್ವಹಿಸುವನೆಂಬ ವಿಷಯ ತುಂಬಾ ಸೊಗಸಾಗಿ ವರ್ಣಿತವಾಗಿದೆ.

" ಶ್ರೀ ಅಚ್ಯುತಾನಂತ ಸ್ತೋತ್ರಮ್ "

ಇದರಲ್ಲಿ 8 ಶ್ಲೋಕಗಳಿದ್ದು ಸರಳ ಸುಂದರವಾಗಿ ರಚಿತವಾಗಿದೆ. ಸಂಗೀತ ಬದ್ಧವಾದ ಈ ಕೃತಿಯಲ್ಲಿ ಪರಮಾತ್ಮನ ಗುಣಗಳನ್ನು ಮುಕ್ತಕಂಠದಿಂದ ಕೊಂಡಾಡಿದ ಕೃತಿ.

" ಶ್ರೀ ಜಯತೀರ್ಥಾಷ್ಟಕಮ್ ಅಥವಾ ಶ್ರೀ ಜಯತೀರ್ಥ ಸ್ತೋತ್ರಮ್ "

ಈ ಕೃತಿಯಲ್ಲಿ ಹಾಸುಹೊಕ್ಕಾಗಿರುವ ಶ್ರೀ ಜಯತೀರ್ಥರ ಗುಣಗಾನ ಮತ್ತು ಅವರ ಮಹಿಮಾನ್ವಿತ ವ್ಯಕ್ತಿತ್ವವನ್ನು ಸಮರ್ಥವಾಗಿ ಬಿಂಬಿಸಿದ್ದಾರೆ.

" ಅವತಾರ ಸಮಾಪ್ತಿ "

ಶ್ರೀ ಕೃಷ್ಣನ ಜಯಂತೀಯಂದು ಅವತರಿಸಿ; ಶ್ರೀ ಕೃಷ್ಣ ಕೃಪೆಗೆ ಪಾತ್ರರಾಗುವ ಉತ್ಕೃಷ್ಟವಾದ ಕಾರ್ಯಗಳನ್ನು ಮಾಡಿ; ನಂಬಿ ಬಂದ ಶಿಷ್ಟ ಜನರಿಗೆ ಶ್ರೇಷ್ಠವಾದ ಶ್ರೀ ಕೃಷ್ಣ ಪಥವನ್ನು ತೋರಿಸಿ; ಭಕ್ತ ವೃಂದದ ಇಷ್ಟಾರ್ಥವನ್ನು ಸಲ್ಲಿಸಲು; ಶ್ರೀ ಕೃಷ್ಣ ಸಖರೂ, ವೈಷ್ಣವೋತ್ತಮರೂ ಆದ ಶ್ರೀ ರುದ್ರದೇವರ ಜಯಂತೀ ದಿನವಾದ ಶಿವರಾತ್ರಿಯೆಂದು ಶ್ರೀ ವಿಷ್ಣುತೀರ್ಥರು ಕೃಷ್ಣಾ ನದೀ ತೀರದಲ್ಲಿರುವ ಮಾದನೂರಿನಲ್ಲಿ ವೃಂದಾವನಸ್ಥರಾದರು.

ಸಾರ ಗ್ರಂಥಗಳ ರಚಿಸಿ ಸತ್ಯವರ ತೀರ್ಥ । ಕು ।
ಮಾರರೆಂದೆನಿಸಿ ಸುಕ್ಷೇತ್ರ ಮಾದನೂರೊಳು ತನುವಿರಿಸಿ ।
ಹರಿಪದವ ಧ್ಯಾನಿಸಿ ।
ಸೇರಿದವರಘ ದೂರ ಮಾಡುವ ।।
ಚಾರು ಕೃಷ್ಣಾ ತೀರ । ಕಾರ್ಪರ ।
ನಾರಸಿಂಹನ ಒಲುಮೆ ಪಡೆದ । ಅ ।
ಪಾರ ಮಹಿಮರ ಚಾರುಚರಣವ ।।
*****

ಸಾರ ರಹಿತ ಸಂಸಾರ ಸಂತಾಪ ಕಳೆವ ।
ಸಾರೋದ್ಧಾರವನು ರಚಿಸಿದ ಕೋಲೆ ।।
ಸಾರೋದ್ಧಾರವನು ರಚಿಸಿದ ವಿಷ್ಣುತೀರ್ಥ
ಸೂರಿವರೇಣ್ಯರ ಬಳಗೊಂಬೆ ಕೋಲೆ ।।

ವಿಷ್ಣುತೀರ್ಥಃ ಕಲ್ಪವೃಕ್ಷೋ ವಿಷ್ಣುತೀರ್ಥಶ್ಚ ಕಾಮಧೃಕ್ ।
ಚಿಂತಾಮಣಿರ್ವಿಷ್ಣುತೀರ್ಥೋ ಯತೀಂದ್ರಃ ಕಾಮದಃ ।।

" ಶ್ರೀ ವೆಂಕಟೇಶವಿಠ್ಠಲ ( ಬಳ್ಳಾರಿ ಜೋಯಿಸ್ ವೇಂಕಣ್ಣಾಚಾರ್ಯರು ) ರ ಶಬ್ದಗಳಲ್ಲಿ... "

ವಿಷ್ಣುತೀರ್ಥರೆನ್ನಿ ಥಟ್ಟನೆ ಜನರೆಲ್ಲ ।
ವಿಷ್ಣುತೀರ್ಥರೆನ್ನಿರೋ ।
ಕಷ್ಟವಾ ಕಳೆದು ಮನದಿಷ್ಟವ ಸಲ್ಲಿಪರೋ ।। ಪಲ್ಲವಿ ।।

" ವಿ " ಯೆನ್ನೆ ಕಾರ್ಯ ವಿಜಯವಾಗುವುದು ।
ವಿಷ್ಣುತೀರ್ಥರೆನ್ನಿರೋ ।। ಚರಣ ।।

" ಷ್ಣು " ಯೆನ್ನಲು ತೀವ್ರ ಐಶ್ವರ್ಯ ಬರುವದು ।
ವಿಷ್ಣುತೀರ್ಥರೆನ್ನಿರೋ ।। ಚರಣ ।।

" ತೀ " ಯೆನ್ನಲು ತೀವ್ರ ಜ್ಞಾನ ಬರುವದು ।
ವಿಷ್ಣುತೀರ್ಥರೆನ್ನಿರೋ ।। ಚರಣ ।।

" ರ್ಥ " ಯೆನ್ನೆ ಋಷಿಯಂತೆ ಜ್ಞಾನಾಗೋದು ।
ವಿಷ್ಣುತೀರ್ಥರೆನ್ನಿರೋ ।। ಚರಣ ।।

ಸ್ಥಿರವಾಗಿ ವೆಂಕಟೇಶವಿಠಲನಾ ।
ವಿಷ್ಣುತೀರ್ಥರೆನ್ನಿರೋ ।। ಚರಣ ।।

ಸ್ವಾಮಿಗಳೆಂದು ಪ್ರಸಿದ್ಧರಾದ; ಅವಧೂತ ಶಿರೋಮಣಿಗಳೂ; ವೈರಾಗ್ಯ ನಿಧಿಗಳೂ ಮಾದನೂರಿನ ಮಹಾ ಮುನಿಗಳು ಶ್ರೀ ವಿಷ್ಣುತೀರ್ಥರು.

ಜ್ಞಾನದ ಬೆಳಕನ್ನು ಬೀರಿ ಧರ್ಮ ಧ್ವಜವನ್ನು ಎತ್ತಿ ಹಿಡಿಯಲು ಧರೆಗಿಳಿದು ಬಂದ ಪರಮ ವೈಷ್ಣವಾಗ್ರಣಿಗಳಾದ ಶ್ರೀ ಮಹಾರುದ್ರದೇವರ ಅಂಶ ಸಂಭೂತರೇ ಶ್ರೀ ವಿಷ್ಣುತೀರ್ಥರು.

ಭಗವದಾಜ್ಞೆಯಂತೆ ಭುವಿಯಲ್ಲಿ ಅವತರಿಸಿ ಭಗವತ್ತತ್ತ್ವಗಳನ್ನು ಪ್ರಸಾರ - ಪ್ರಚಾರ ಮಾಡಲು ತಮ್ಮ ಬದುಕನ್ನು ಮೀಸಲಿಟ್ಟ ಭಾಗವತೋತ್ತಮರು.

ಭಾಗವತ ಶಿರೋಮಣಿಗಳಾದ ಶ್ರೀಮದ್ವಿಷ್ಣುತೀರ್ಥರ ಜೀವನ ರೋಮಾಂಚಕಾರಿಯಾದದ್ದು. ಶ್ರೀ ವಿಷ್ಣುತೀರ್ಥರ ಪ್ರಖರ ವೈರಾಗ್ಯ; ಅಸದೃಶವಾದ ಪಾಂಡಿತ್ಯ - ಗ್ರಂಥ ರಚನಾ ವೈಶಿಷ್ಟ್ಯ - ವಿದ್ಯಾ ಗುರುಗಳಾದ ಐಜಿ ಶ್ರೀ ವೇಂಕಟರಾಮಾಚಾರ್ಯರಲ್ಲಿ ( ಶ್ರೀ ವ್ಯಾಸತತ್ತ್ವಜ್ಞತೀರ್ಥರಲ್ಲಿ ) ಮತ್ತು ಹರಿವಾಯುಗಳಲ್ಲಿ ಅವಿಚ್ಛಿನ್ನವಾದ ಭಕ್ತಿ ಅತ್ಯದ್ಭುತವಾದದ್ದು.


ಕಾಲ ಕೂಟ ತಾ ಪಾನವ ಮಾಡಿದ । ಗರಗೊ ।
ರಳ್ಯೆಂದೆನಿಸಿದನು ಶಿರನುತ ತಂದೆ ವರದ । ಗೋ ।
ಪಾಲ ವಿಠ್ಠಲನ ಧ್ಯೇನಿಪನೋ ಸೇವಿಪನೋ ।।
ಪಾವಿನ ಪದನೋ ವನದಲಿ ನಿಂದು ರಾಮನ । ಜಪಿ ।
ಸುವ ಹರ ಶ್ರೀವನಾರ್ಯರಂಘ್ರಿಯ ।।
**********

ಮಹಾಶಿವರಾತ್ರಿ ಮತ್ತು ಮಾದನೂರಿನ ಶ್ರೀ ವಿಷ್ಣುತೀರ್ಥರ ಆರಾಧನೆ 

ಮಹಾರುದ್ರದೇವರು 

ಸಕಲರಲ್ಲಿ ಮನೋನಿಯಮಕರಾಗಿ ಪರಮಾತ್ಮನಲ್ಲಿ ಭಕ್ತಿಯನ್ನು ಪ್ರೇರೇಪಿಸುವ ಕಾರ್ಯ ಮಾಡುವ ಪರಮ ಮಂಗಲರು ಶ್ರೀ ಮಹಾರುದ್ರದೇವರು. ಒಂದು ಬಾರಿ ಶಿವ ನಾಮೋಚ್ಚಾರಣೆಯಿಂದ ಸರ್ವದುಃಖನಾಶವಾಗಿ ಆಕ್ಷಣ ಶುಚಿಯಾಗುವನು. ಪುರಂದರ ದಾಸರು ಹೇಳುವಂತೆ ಈತನ ನಾಮವೇ ಒಂದೇ ಸುಮಂಗಲ. ಶಿವನನ್ನು ಸ್ಮಶಾನವಾಸಿ ಎಂದು ಹೇಳುವ ಜನರಿಗೆ ಸತಿದೇವಿಹೇಳುವ ಮಾತು ಯತಿಗಳಾದ ಸನಕಾದಿಗಳು ಬಂದು ಶಿವನ ಪಾದಧೂಳಿಯನ್ನು ಧರಿಸುತ್ತಾರೆ ಎಂದ ಮೇಲೆ ಆತಾ ಅಮಂಗಳ ಹೇಗಾಗುತ್ತಾನೆ. ಪರಮಾತ್ಮನ ಆಜ್ಞೆಯಂತೆ ಸ್ಮಶಾನವಾಸ ಭಸ್ಮಧಾರಣೆ ಮುಂತಹುದನ್ನು ಮಾಡಿ ತನ್ನ ಶಿರದಲ್ಲಿ ಶ್ರೀಹರಿಯ ಪಾದೋದಕವನ್ನು ಧರಿಸಿ ನಿತ್ಯಮಂಗಲವನ್ನು ಮಾಡುವ ಮಂಗಳ ಮೂರ್ತಿ ಶ್ರೀ ಮಹಾರುದ್ರ ದೇವರು. 

ಇಂದು ಮಹಾಶಿವರಾತ್ರಿ ಲಯಕರ್ತನಾದ ಮಹಾರುದ್ರ ದೇವರು ಲಿಂಗರೂಪದಲ್ಲಿ ಪ್ರಾದುರ್ಭಾವರಾಗಿ ಅವತಾರ ಮಾಡಿದ ಶುಭದಿನ. ಪದ್ದತಿಯಂತೆ ಶೈವರು ಉಪವಾಸಾದಿಗಳನ್ನು ಮಾಡಿ ಸಂತೃಪ್ತಗೊಳಿಸಿ ವೈಷ್ಣವರು ಪರಮ ವೈಷ್ಣವೋತ್ತಮರಾದ ಮಹಾರುದ್ರದೇವರ ಅಭಿಷೇಕ ಪೂಜೆಗಳನ್ನೂ ಮಾಡಿ ಸಂಧ್ಯಾಕಾಲದಲ್ಲಿ ಮಹಾರುದ್ರದೇವರ ದರ್ಶಿಸಿ ಪ್ರಾರ್ಥನೆಯನ್ನು ಮಾಡೋಣ 

||ವಾಮದೇವ ವಿರಂಚಿತನಯ ಉಮಾಮನೋಹರ ಉಗ್ರ ಧೂರ್ಜಟಿ 
ಸಾಮಜಾಜಿನ ವಸನ ಭೂಷಣ ಸುಮನಸ ಉತ್ತಂಸ , 
ಕಾಮಹರಾ ಕೈಲಾಸ ಮಂದಿರ ಸೋಮ ಸೂರ್ಯ ಅನಲ ವಿಲೋಚನಾ 
ಕಾಮಿತಪ್ರದ ಕರುಣಿಸೇಮಗೆ ಸದಾ ಸುಮಂಗಲವ||

ಶ್ರೀ ವಿಷ್ಣು ತೀರ್ಥರು 

||ವಿಷ್ಣುತೀರ್ಥಃ ಕಲ್ಪವೃಕ್ಷೋ ವಿಷ್ಣುತೀರ್ಥಶ್ಚ ಕಾಮಧೃಕ್ ।
ಚಿಂತಾಮಣಿರ್ವಿಷ್ಣುತೀರ್ಥೋ ಯತೀಂದ್ರಃ ಕಾಮದಃ ।।

||ಯಸ್ಯ ಪ್ರಚಂಡತಪಸಾ ಶೃತಿಗೀತವೃತ್ತಸ್ತುಷ್ಟೋ ಹರಿ: ಕಿಲ ವಶಂ ವದತಾಪಮಾಪ |
ಶ್ರೀಮಧ್ವಸನ್ಮತ ಪಯೋನಿಧಿ ಪೂರ್ಣಚಂದ್ರ: ಶ್ರೀವಿಷ್ಣುತೀರ್ಥ ಮುನಿರಾದ್ಮಾತನೋತು||

ಪರಮವಿರಕ್ತ ಶಿಖಾಮಣಿಗಳಾದ ಶ್ರೀ ಅಡವಿಚಾರ್ಯರೆಂದೇ ಪ್ರಸಿದ್ಧರಾದ ಶ್ರೀ ವಿಷ್ಣುತೀರ್ಥ ಶ್ರೀಪಾದಂಗಳವರ ಆರಾಧನಾ ಮಹೋತ್ಸವ. ಇವರ ಕಾಲ 1756 - 1806 

ಇವರ ಪೂರ್ವಾಶ್ರಮದ ನಾಮ : ಶ್ರೀ ಜಯತೀರ್ಥಚಾರ್ಯರು 
ಆಶ್ರಮಗುರುಗಳು : ಶ್ರೀ ಸತ್ಯವರ ತೀರ್ಥರು (ಉತ್ತರಾಧಿಮಠ ಯತಿಪರಂಪರೆ) 
ಆಶ್ರಮ ನಾಮ : ಶ್ರೀ ವಿಷ್ಣು ತೀರ್ಥರು 
ಆರಾಧನೆ : ಮಾಘ ಬಹುಳ ತ್ರಯೋದಶಿ 
ಇವರ ಇತರ ಹೆಸರುಗಳು : ಅಡವಿ ಸ್ವಾಮಿಗಳು , ಅರಣ್ಯಾಕಾಚಾರ್ಯರು 

ಶ್ರೀ ಜಯತೀರ್ಥರ ಸೇವೆಯಿಂದ ಆಶೀರ್ವಾದದಿಂದ ಶ್ರೀಮತಿ ಭಾಗೀರತಿ ಮತ್ತು ಶ್ರೀ ಬಾಳಚಾರ್ಯರಲ್ಲಿ ಜನಿಸಿದ ಇವರಿಗೆ ಶ್ರೀಜಯತೀರ್ಥರೆಂದೇ ಹೆಸರಿಟ್ಟರು.

ಇವರು ಮಂತ್ರಾಲಯಮಠದ ಶ್ರೀ ವ್ಯಾಸಾತತ್ವಜ್ನ್ಯತೀರ್ಥರಲ್ಲಿ ಅಧ್ಯಯನ ಮಾಡಿದರು ( ಆಗಿನ್ನೂ ವ್ಯಾಸಾತತ್ವಜ್ನ್ಯತೀರ್ಥರಿಗೆ ಸನ್ಯಾಸಶ್ರಮ ಆಗಿರಲಿಲ್ಲ) 

ಒಮ್ಮೆ ಪುರಂದರದಾಸರ ಒಂದು ಪದ್ಯ ಇವರ ಕಿವಿಗೆ ಬೀಳಲು ಮನಸ್ಸು ಸಂಸಾರದಲ್ಲಿ ವಿರಕ್ತಿ  ಹುಟ್ಟಿ ಶ್ರೀ ಹರಿಯಲ್ಲಿ ಭಕ್ತಿ ಹುಟ್ಟಿತು. 

ಮಂಚ ಬಾರದು | ಮಡದಿ ಬಾರಳು |ಕಂಚು ಕನ್ನಡಿ ಬಾರದು |
ಸಂಚಿತಾರ್ತದ ದ್ರವ್ಯ ಬಾರದು | ಮುಂಚೆ ಮಾಡಿರೊ ಧರ್ಮವ |

1796 ಶ್ರೀ ಸತ್ಯವರತೀರ್ಥ ಶ್ರೀಪಾದಂಗಳವರಲ್ಲಿ ಸನ್ಯಾಸ ಆಶ್ರಮ ಪಡೆದು ಕೊಂಡು ಶ್ರೀ ವಿಷ್ಣು ತೀರ್ಥರು ಎಂದು ಪ್ರಸಿದ್ಧರಾದರು. 

ಇವರ ಪೂರ್ವಾಶ್ರಮದಲ್ಲಿ ರುದ್ರದೇವರ ದರ್ಶನ ಪಡೆದಿದ್ದ ಮಹನೀಯರು, ಮತ್ತು ರುದ್ರಾ೦ಶ ಸಂಭೂತರು. 

108 ಬಾರಿ ಸುಧಾಮಂಗಳ ಮಾಡಿದ ಮಹನೀಯರು 

ಇವರ ಮೂಲ ಕೃತಿಗಳು 

ಆಧಾತ್ಮತಾಮೃತ ರಸರಂಜನಿ
ಬಿಂಬಸ್ತುತಿ 
ಮುಕ್ತಮಾಲಾ
ರಮಾ ಸ್ತೋತ್ರ
ಸುಮಧ್ವವಿಜಯ ಪ್ರಮೇಯ ಫಲಮಾಲಿಕೆ 
ನ್ಯಾಯಸುಧಾಸ್ತೋತ್ರ
ಬಿಂಬರೂಪಣಾ ವಿಧಿ
ಭಾಗವತ ಧರ್ಮ ಸ್ತೋತ್ರ 
ಶ್ರೀ ಜಯತೀರ್ಥ ಶತಕ 
ಶ್ರೀ ಜಯತೀರ್ಥ ಸ್ತೋತ್ರ
ಷೋಡಶಿ 
ಚತುರ್ದಶಿ 
ಪ್ರಸಿದ್ಧವಾದ ಕೃತಿ ಶ್ರೀಮಧ್ಭಾಗವತ ಸಾರೋದ್ಧಾರ 
ಧ್ಯಾನ ಸ್ನಾನ ವಿಧಿ ಮತ್ತು ಇನ್ನು ಅನೇಕ ಕೃತಿಗಳನ್ನು ರಚಿಸಿದ್ದಾರೆ. 

ಮಹಾರುದ್ರದೇವರ ಮತ್ತು ರುದ್ರಾ೦ಶ ಸಂಭೂತರಾದ ಶ್ರೀ ವಿಷ್ಣುತೀರ್ಥರ ಚರಣಾರವಿಂದಗಳಲ್ಲಿ ಅನಂತ ಪ್ರಣಾಮಗಳು 

ಪ್ರೀತ್ಯೋಸ್ತು ಕೃಷ್ಣ ಪ್ರಭೋ
ಶ್ರೀಶ ಸಮೀರ ದಾಸ 
ಫಣೀಂದ್ರ 

ಇವರ ಬೃಂದಾವನ ಕೊಪ್ಪಳ ಜಿಲ್ಲೆಯ ಮಾದನೂರಿನಲ್ಲಿದೆ, ಇವರ ಬೃಂದಾವನದ ಮೇಲೆ ಬದರೀನಾರಾಯಣ ಮತ್ತು ಎಡರುಗಡೆಯಲ್ಲಿ ಶ್ರೀವ್ಯಾಸರಾಜ ಯತಿ ಪ್ರತಿಷ್ಠಿತ ಶ್ರೀಮುಖ್ಯಪ್ರಾಣದೇವರು, ಇವರ ಬೃಂದಾವನ ದರ್ಶನದಿಂದಲೇ ಬದರಿಯಾತ್ರೆಯ ಫಲಬರುತ್ತದೆ ಎಂಬ ನಂಬಿಕೆಇದೆ. 


ಆರಾಧನೆ ವಿಶೇಷ ಇವರು ರುದ್ರಾ೦ಶ ಸಂಭೂತರಾದರಿಂದ ಇವರು ದೇಹತ್ಯಾಗ ಮಾಡಿದ್ದು   ಮಹಾಶ್ರೀವರಾತ್ರಿಯಂದೇ.
********

ಕೊಪ್ಪಳ ಜಿಲ್ಲೆಯ ಧಾರ್ಮಿಕ, ಐತಿಹಾಸಿಕ & ಪ್ರವಾಸಿ ತಾಣಗಳು
ಸ್ಥಳ - ಸ್ಥಳ ವಿಶೇಷ - ಜಿ.ಕೇಂ.ಕೊಪ್ಪಳ ದಿಂದ ದೂರ (ಕಿ.ಮಿ)
೧) #ಹುಲಗಿ :- ಹುಲಿಗೆಮ್ಮದೇವಿ 

ಕೊಪ್ಪಳದಿಂದ ದೂರ : 25 km

೨) #ಕುಕನೂರ :- ಮಹಾಮಾಯಿ ಗುಡಿ

ಕಲ್ಲೂರ ಶ್ರೀ ಕಲ್ಲನಾಥೇಶ್ವರ.

ಕೊಪ್ಪಳದಿಂದ ದೂರ : 25km

೩) #ಅನೆಗುಂದಿ :-ನವಬೃಂದಾವನ. ಅಂಜನಾದ್ರಿ , ಪಂಪಾಸಪೋವರ ಶ್ರೀಲಕ್ಷ್ಮಿ, ಹಾಗೂ ದುರ್ಗಾದೇವಿ ದೇವಸ್ಥಾನ.

ಕೊಪ್ಪಳದಿಂದ ದೂರ : 50km

೪) #ಕರ್ಕಿಹಳ್ಳಿ :- ಶ್ರೀ ಶಿವ ಚಿದಂಬರೇಶ್ವರ, ಶ್ರೀ ಚನ್ನಕೇಶವ ದೇವಸ್ಥಾನ. 

ಕೊಪ್ಪಳ ದಿಂದ 20 ಕಿ.ಮಿ. &ಹೊಸಪೇಟೆಯಿಂದ 20 ಕಿ.ಮಿ.

೫) #ವೆಂಕಟಗಿರಿ :- ವೆಂಕಟೇಶ್ವರ ದೇವಸ್ಥಾನ

ಕೊಪ್ಪಳದಿಂದ50, ಗಂಗಾವತಿಯಿಂದ 18 ಕಿಮಿ

೬) #ಶಿವಪುರ : - ಶ್ರೀ ಮಾರ್ಕಂಡೇಶ್ವರ ದೇವಸ್ಥಾನ ತುಂಗಾ ತೀರ.

(ಹುಲಿಗಿಯಿಂದ 3 .ಕಿ.ಮಿ. & ಕೊಪ್ಪಳ ದಿಂದ 28 ಕಿ.ಮಿ.)T

೭) #ಮಾದಿನೂರ : - ಶ್ರೀ ವಿಷ್ಣುತಿರ್ಥರ ಬೃಂದಾವನ

ಕೊಪ್ಪಳದಿಂದ ದೂರ : 12km

೮) #ಕುಷ್ಟಗಿ :- ಅಡವಿರಾಯನ ದೇವಸ್ಥಾನ 

ಕೊಪ್ಪಳದಿಂದ ದೂರ : 50km

೯) #ನವಲಿ : - ಭೋಗಾಪುರೇಶ ದೇವಸ್ಥಾನ.

ಕೊಪ್ಪಳದಿಂದ ದೂರ : 45km

೧೦) #ಪುರ :- ಸಹಸ್ರ ಲಿಂಗಗಳು (70km)
೧೧) #ಇಟಗಿ :- ದೇವಾಲಯಗಳ ನಗರಿ , ಮಹಾದೇವ ದೇವಾಲಯ (35km)
೧೨) #ಚಿಕ್ಕವಂಕಲಕುಂಟ :- ವ್ಯಾಸರಾಜರು ಪ್ರತಿಷ್ಠಾಪನೆ ಮಾಡಿದ ಪ್ರಾಣದೇವರು.(40km)
೧೩) #ಕಿನ್ನಾಳ :- ಶ್ರೀ ಸತ್ಯಜ್ಞಾನತಿರ್ಥರ ಮನೆ, ಪಾದುಕೆ ನೋಡಬಹುದು, ದೇಶವಿದೇಶದಲ್ಲಿ ಹೆಸರು ಮಾಡಿರುವ ಕರಕುಶಲ ವಸ್ತುಗಳು ತಯಾರಿಕೆ & ಲಭ್ಯ. (12km)
೧೪) #ಗುತ್ತುರ :- ಯಲಬುರ್ಗಾ ತಾಲೂಕಿನ ಗುತ್ತುರ ಪ್ರಾಣದೇವರು. (40km)
೧೫) #ಕನಕಗಿರಿ : - ಕನಕಚಲಾಪತಿ ದೇವಸ್ಥಾನ (ಕಣ್ಣದ್ದಿವರು ಕನಕಗಿರಿ ನೋಡಬೇಕೆಂಬ ಪ್ರತೀತಿ)-(50km)
೧೬) #ಅಂಜನಾದ್ರಿ :- ಆನೆಗುಂದಿ* - ಆಂಜನೇಯನ ಜನ್ಮಸ್ಥಳ. - (45km)
೧೭) #ಕೊಪ್ಪಳ_ಮಳೆಮಲ್ಲೇಶ್ವರ : - ಅರ್ಜುನ ಶಿವನನ್ನು ಕುರಿತ ತಪಸ್ಸು ಮಾಡಿದ ಸ್ಥಳ. ವರ್ಷದ ೨೪ ಗಂಟೆಯು ಬೆಟ್ಟದಲ್ಲಿಯ ಶಿವಲಿಂಗದ ಮೇಲೆ ನಿಸರ್ಗದತ್ತವಾಗಿ ನೀರು ಹರಿಯುತ್ತಿರುವುದು.(ಕೊಪ್ಪಳದಿಂದ ೧ಕಿ.ಮಿ)
೧೮) #ಮುನಿರಾಬಾದ_ಡ್ಯಾಂ :- ಪ್ರೇಕ್ಣಣಿಯ ಸ್ಥಳ(28km)
೧೯) #ಭಾಗ್ಯನಗರ :- ಸೀರೆ ತಯಾರಿಕೆ ಉದ್ಯಮ.(1km)
೨೦) #ಮಧ್ವತಪೋವನ :- ಮಾದಿನೂರ ಮಾರ್ಗದಲ್ಲಿ ಮಧ್ವಾಚಾರ್ಯರ ಏಕಶಿಲಾ ಮೂರ್ತಿ, ಪುಷ್ಕರಣಿ ಹೊಂದಿರುವ ಆಧ್ಯಾತ್ಮಿಕ ಕೇಂದ್ರ. - (8km)
೨೧) #ಹನಮಸಾಗರ :- ಅಭಿನವ ತಿರುಪತಿ ಎಂಬ ಖ್ಯಾತಿಯವೆಂಕಟೇಶ್ವರ ದೇವಸ್ಥಾನ & ಚಂದಾಲಿಂಗೇಶ್ವರ ದೇವಸ್ಥಾನ ಹಾಗೂ ಕಬ್ಬರಿಗೆ ಸನಿಹದ ಕಪಲೆಪ್ಪ ಜಲಪಾತ ಪ್ರಸಿದ್ದ ವಾಗಿವೆ (80km)
ಸಂಗ್ರಹ  Girish Kulkarni Koppal
*****





*****

ಶ್ರೀವಿಷ್ಣುತೀರ್ಥ ಮುನಿರಾಟ್ ಮುದಮಾತನೋತು

ಆಧ್ಯಾತ್ಮ ಮಾರ್ಗದಲ್ಲಿ ವಿಷ್ಣುತೀರ್ಥರು ಅಗ್ರಗಣ್ಯರು. ವಿರಕ್ತ ಶಿಖಾಮಣಿಗಳು. ಮಹಾಜ್ಙಾನಿಗಳು. ಶ್ರೀಮಟ್ಟೀಕಾಕೃತ್ಪಾದರ ಮಹಾನ್ ಭಕ್ತರು. ಗುರುಭಕ್ತಿಯ ಪರಾಕಾಷ್ಠೆ ಶ್ರೀವಿಷ್ಣುತೀರ್ಥರಲ್ಲಿ. ಅಂತಹ ಶ್ರೀ ವಿಷ್ಣುತೀರ್ಥರ ಆರಾಧನ ಮಹೋತ್ಸವ. 

ಶ್ರೀಮಟ್ಟೀಕಾಕೃತ್ಪಾದರ ಅನುಗ್ರಹದಿಂದ ಜನಿಸಿದ ಕಾರಣಕ್ಕೇ "ಜಯತೀರ್ಥ" ಎಂದು ನಾಮಕರಣ ಮಾಡಿದರು. ಶ್ರೀ ಜಯತೀರ್ಥಾಚಾರ್ಯರನ್ನು ಆಗಿನ ಕಾಲದ ಮಹಾಜ್ಙಾನಿಗಳಾದ ವೆಂಕಟ ರಾಮಾಚಾರ್ಯ (ಶ್ರೀವ್ಯಾಸತತ್ಚಜ್ಙ ತೀರ್ಥರ) ಬಳಿ ಅಧ್ಯಯನಕ್ಕಾಗಿ ಕಳುಹಿಸಿದರು. ನಿರಂತರ ಗುರುಶುಶ್ರೂಷೆ, ಅಖಂಡ ಅಧ್ಯಯನ ಇವುಗಳ ಪ್ರಭಾವದಿಂದ ಮಹಾಪಂಡಿತರಾಗಿಯೇ ಹೊರಬಂದರು ಜಯತೀರ್ಥಾಚಾರ್ಯರು. 


ಗುರ್ವನುಗ್ರಹ....


ತುಂಗಾ ತೀರ, ವೇಣೀಸೋಂಪೂರು ಕ್ಷೆತ್ರ. ಶ್ರೀವ್ಯಾಸತತ್ವಜ್ಙತೀರ್ಥರ ಪೂರ್ವಾಶ್ರಮದಲ್ಲಿ ವೆಂಕಟರಾಮಾಚಾರ್ಯರು ವಿದ್ಯಾಪೀಠವನ್ನು ನಡೆಸುತ್ತಿರುತ್ತಾರೆ. ಅಲ್ಲಿಯೇ ಶ್ರೀ ಜಯತೀರ್ಥಾಚಾರ್ಯರ ಆಗಮನ. ಒಂದು ಕಾಲದಲ್ಲಿ ಗುರು ಪುತ್ರನಿಗೆ ದೊಡ್ಡ ಕಾಯಿಲೆ, ಕಾಯಿಲೆ ಪ್ರಭಾವ ತೀಕ್ಷ್ಣವಾದಾಗ, ಕೊನೆಯ ಆಸರೆ ದೇವರೇ ಎಂದು ಭಾವಿಸಿದ ಆಚಾರ್ಯರು ಶಿಷ್ಯರಿಗೆ ಹೇಳುತ್ತಾರೆ ಸರ್ವಸಿದ್ದಿಪ್ರದ, ಸರ್ವಾನಿಷ್ಟ ನಿವಾರಕ "ನರಸಿಂಹ" ಮಂತ್ರವನ್ನು ಉಪವಾಸವಿದ್ದು ಇಷ್ಟು ಜಪ ಮಾಡಬೇಕು, ಯಾರು ಮಾಡುತ್ತೀರಿ ??? ಎಂದು ಶಿಷ್ಯರಿಗೆ ಕೇಳುತ್ತಾರೆ. 


ಎಲ್ಲ ಶಿಷ್ಯರೂ ಹಿಂದು ಮುಂದು ನೋಡಿದಾಗ ಶ್ರೀಜಯತೀರ್ಥಾಚಾರ್ಯರು ತಾವು ಸಿದ್ಧರಾಗಿ ತುಂಗಭದ್ರಾನದಿಯಲ್ಲಿ ಏಳು ದಿನಗಳ ಕಾಲ ಅಖಂಡವಾಗಿ ನರಸಿಂಹ ಮಂತ್ರದ ಜಪವನ್ನು ಮಾಡುತ್ತಾರೆ. (ಜಪದ ಪ್ರಭಾವದಿಂದ ಭಂಡೆ ಸೀಳಿಹೋಗಿತ್ತು ಎಂದು ಹೆಳುತ್ತಾರೆ.) ಇದು ಗುರುಗಳ ಆಜ್ಙಾಪಾಲನೆ. 


ಸುಧಾಮಂಗಳಗಳು....

ಶ್ರೀಮಟ್ಟೀ ಕೃತ್ಪಾದರ ಅನುಗ್ರಹದಿಂದ ಜನಿಸಿದ್ದಕ್ಕಾಗಿ, ಅವರ ದಿವ್ಯ ಸೇವಾ ರೂಪವಾಗಿ ಶ್ರೀವ್ಯಾಸತತ್ವಜ್ಙತೀರ್ಥರ ಅನುಗ್ರಹದಿಂದ ನೂರೆಂಟು ಬಾರಿ ಶ್ರೀಮನ್ಯಾಯಸುಧಾ ಪಾಠವನ್ನು ಹೇಳಿ ಮ

ಮಂಗಳಗಳನ್ನು ಮಾಡುತ್ತಾರೆ. ಶ್ರೀಮನ್ಯಾಸುಧ ಗ್ರಂಥಕ್ಕೆ ದಿವ್ಯ ವಾದ ವ್ಯಾಖ್ಯಾನವನ್ನೂ ರಚಿಸಿ ಸಾಮಾನ್ಯಾರಾದ ನಮಗೆ  ಅನುಗ್ರಹಿಸುತ್ತಾರೆ. 

ವಿರಕ್ತ ಶಿಖಾಮಣಿಗಳು


ಸಣ್ಣ ವಯಸ್ಸು, ಮಹಾ ಪಾಂಡಿತ್ಯ, ಅತ್ಯುತ್ತಮ ರೂಪಿ, ಶ್ರೀಮಂತಿಕೆ, ಜೊತೆಗೆ ಅತ್ಯಂತ ಸಾಧ್ವಿ ಗುಣವಂತೆಯಾದ ಮಡದಿ. ಮದುವೆಯಾಗಿ ಕೆಲ ವರ್ಷಗಳು ಉರುಳಿವೆ. ಆ ಪ್ರಸಂಗದಲ್ಲಿ ಒಬ್ವ ಬ್ರಾಹ್ಮಣ ಭಿಕ್ಷುಕ ಮಂಚ ಬಾರದು  ಮಡದಿ ಬಾರಳು, ಕಂಚು ಕನ್ನಡಿ ಮಾರದು, ಸಂಚಿತಾರ್ಥದ ದ್ರವ್ಯ ಬಾರದು ಮುಂಚೆ ಮಾಡಿರೋ ಧರ್ಮವ ಎಂಬ ಹಾಡು ಹಾಡುತ್ತಾ ಮನೆಯ ಬಾಗಿಲಗೆ ಬಂದ ಬ್ರಾಹ್ಮಣ. ಆ ಬ್ರಾಹ್ಮಣನ ಹಾಡು ಕೇಳಿದಾಕ್ಷಣ ಈ ಸಂಸಾರ ಅಸಾರ,ಅನಿತ್ಯ ಎಂದು ಭಾವಿಸಿ ವನಪ್ರಸ್ಥಕ್ಕೆ ಸಿದ್ಧರಾಗಿ ವಾನಪ್ರಸ್ಥಾಶ್ರಮವನ್ನು ಸ್ವೀಕರಿಸುತ್ತಾರೆ, ಮುಂದೆ ಶ್ರೀ ಸತ್ಯವರತಿರ್ಥರಿಂ ಆಶ್ರಮವನ್ನು ಸ್ವೀಕರಿಸಿ ಶ್ರೀ ವಿಷಗಣುತೀರ್ಥರು ಎಂದೇ ಪ್ರಸಿದ್ಧರಾಗುತ್ತಾರೆ. 

ಸಿದ್ಧಪುರುಷರು....

ಮಾದಿನೂರು ಪ್ರಾಂತದ ಒಂದು ಊರು. ಆ ಊರಿಗೇ ಕ್ಷಾಮ ಬಂದರೆ. ಲಕ್ಷ್ಮೀದೇವಿಯ ಸ್ತೋತ್ರವನ್ನು ರಚಿಸಿ, ಆ ಮಹಾತಾಯಿಯ ಅನುಗ್ರಹದಿಂ, ನಿತ್ಯ ಸಾಮಾನ್ಯ ನಾಣ್ಯಗಳನ್ನು ಭಂಗಾರದ ನಾಣ್ಯಗಳನ್ನಾಗಿ ಮಾಡಿ ಸಮಗ್ರವಾದ ಊರನ್ನೇ ಆರು ತಿಂಗಳ ವರೆಗೆ ರಕ್ಷಣೆ ಮಾಡುತ್ತಾರೆ, ನೋಡಿಕೊಳ್ಳುತ್ತಾರೆ. 

ಗ್ರಂಥಕರ್ತೃಗಳಿವರು....

ಶ್ರೀಮನ್ಯಾಸುಧಾ ವ್ಯಾಖ್ಯಾನ, ಶ್ರೀಮನ್ಯಾಸುಧಾ ಸ್ತೋತ್ರ, ಭಾಗವತ ಸಾರೋದ್ಧಾರ,  ಅಧ್ಯಾತ್ಮ ರಸರಂಜಿನೀ, ಷೋಡಶೀ, ಚತುರ್ದಶೀ, ಮುಂತಾದ ಅನೇಕ ಗ್ರಂಥಗಳನ್ನು ರಚಿಸುತ್ತಾರೆ. ಲಕ್ಷ್ಮೀ ಸ್ತುತಿ ಮೊದಲಾದ ಅನೇಕ ಸ್ತೋತ್ರಗಳನ್ನೂ ರಚಿಸಿಕೊಡುತ್ತಾರೆ. ಸಮಗ್ರ ಜೀವನ ಶ್ರೀಮದಾಚಾರ್ಯರ ಶ್ರೀಮಟ್ಟೀಕಾಕೃತ್ಪಾದರ ಸೇವೆಗೆ ತಮ್ಮನ್ನು ತಾವು ಸವಿಸಿಕೊಳ್ಳುತ್ತಾರೆ.

ಬ್ರಹ್ಮಚರ್ಯ, ಗಾರ್ಹಸ್ತ್ಯ, ವಾನಪ್ರಸ್ಥ, ಸನ್ಯಾಸ ಹೀಗೆ ಚತುರಾಶ್ರಮವನ್ನೂ ಸ್ವೀಕರಿಸುತ್ತಾರೆ. ಕೌಲಗಿ ಟೊಣಪಿ ಮೊದಲಾದ ಶಿಶ್ಯರಿಗೆ ತಾವು ಪೂಜಿಸಿದ, ಉಪಾಸಿಸಿದ ಅನೇಕ ಮೂರ್ತಗಳನ್ನೂ ಕೊಡುತ್ತಾರೆ. ಅವರ ವಂಶದಲ್ಕಿ ಇಂದಿಗೂ ದಿವ್ಯ ಮೂರ್ತಿಗಳು ಇವೆ. ಬಿಂಬಾರಾಧನೆಯನ್ನು ಸಾಮಾನ್ಯ ಜನರವರೆಗೆ ತಂದು ಕೊಟ್ಟ ಕೀರ್ತಿ ವಿಷ್ಣುತೀರ್ಥರದ್ದು ಎಂದು ನಮ್ಮ ಅನೇಕ ಹಿರಿಯರು ಮಾತಾಡಿರುವದನ್ನು ನಾನು ಕೇಳಿದ್ದೇನೆ. ಅಂತಹ ವಿಷ್ಣು ತೀರ್ಥರು ನಮ್ಮ ಆಪತ್ತುಗಳನ್ನಹ ಪರಿಹರಿಸಿ, ತಮ್ಮ ಭವ್ಯ ಜೀವನದಲ್ಲಿ ಅಳವಡಿಸಿಕೊಂಡಂತ ವಿಷಯಗಳಲ್ಲಿ ಸ್ವಲ್ಪವನ್ನಾದರೂ ದಯಪಾಲಿಸಿ ಮುದ ಮೋಕ್ಷಾನಂದವನ್ನಜ ದಯಪಾಲಿಸಲಿ.

ಯಸ್ಯಪ್ರಚಂಡತಪಸಾ ಶೃತಿಗೀತವೃತ್ತ ತುಷ್ಟೋ ಹರೀ ಕಿಲ ವಶಂ ವದತಾಮವಾಪ | ಶ್ರೀಮಧ್ವ ಸನ್ಮತಿ ಪಯೋನಿಧಿ ಪೂರ್ಣಚಂದ್ರಃ ಶ್ರೀವಿಷ್ಣುತೀರ್ಥ ಮುನಿರಾಟ್ ಮುದಮಾತನೋತು  ಕನಿಷ್ಠ ನೂರೆಂಟು ಬಾರಿಯಾದರೂ ಪಠಿಸಿ ಅನುಗ್ರಹಕ್ಜೆ ಪಾತ್ರರಾಗೋಣ.




✍🏽✍🏽✍🏽ನ್ಯಾಸ..

ಗೋಪಾಲ ದಾಸ
*******
ಲೇಖನ ಮಧುಸೂದನ ಕಲಿಭಟ್ ಬೆಂಗಳೂರು.
ಶಾರ್ವರಿ ಮಾಘ ಶು. ಅಷ್ಟಮಿ 
ಶ್ರೀ ವಿಷ್ಣು ತೀರ್ಥರು. ಮಾದನೂರು ಭಾಗ 1.

ಕಲಿಯುಗದಲ್ಲಿ ಪರಮಾತ್ಮನಿಗೆ ಅವತಾರವಿಲ್ಲ. ಹೀಗಾದರೆ ಆಗಾಗ ಉಂಟಾದ ಅಧರ್ಮದ ನಾಶ ಹೇಗೆ ಆಗಬೇಕು. ಅದಕ್ಕೆ ಭಾಗವತ ಮುಂತಾದ ಪುರಾಣಗಳಲ್ಲಿ, ಭಗವದ್ಗೀತೆಯಲ್ಲಿ ಸಾಕ್ಷಾತ್ ಪರಮಾತ್ಮನ ವಾಣಿ, ಏನೆಂದರೆ ಸಂಭವಾಮಿ ಯುಗೇ ಯುಗೇ. ಅಂದರೆ ಭಗವಂತ ತನ್ನ ಭಕ್ತರಾದ ದೇವತೆಗಳಿಗೆ ಅವತಾರ ಮಾಡಲು ಪ್ರೇರಣೆ ಮಾಡಿ ಅಧರ್ಮ ನಾಶ ಮಾಡಿಸಿ ಜನತೆಗೆ ಧರ್ಮದ ಉಪದೇಶ ಮಾಡಿಸುತ್ತಾನೆ.
ನಮಗೆಲ್ಲರಿಗೂ ತಿಳಿದಂತೆ ಮಧ್ವರು, ಜಯತೀರ್ಥರು, ಶ್ರೀಪಾದರಾಜರು, ವ್ಯಾಸತೀರ್ಥರು, ರಘುತ್ತಮರು,ವಾದಿರಾಜರು, ರಾಘವೇಂದ್ರರು ಮುಂತಾದವರು ಅಲ್ಲದೇ ದಾಸವರೇಣ್ಯರು ಎಲ್ಲರೂ ದೇವತೆಗಳ ಅವತಾರಿಗಳಾಗಿದ್ದಾರೆ.

ಪ್ರಸ್ತುತ ಕಥಾ ನಾಯಕರಾದ ಶ್ರೀ ವಿಷ್ಣುತೀರ್ಥರು ರುದ್ರದೇವರ ಅವತಾರ. ಶುಕರಾಗಿ ಪರೀಕ್ಷಿತನಿಗೆ ಪುರಾಣಗಳ ರಾಜ ಭಾಗವತವನ್ನು ಶ್ರವಣ ಮಾಡಿಸಿದ ಮಹಾನುಭಾವರು. ಇಷ್ಟು ತೃಪ್ತಿ ಆಗದೆ ರುದ್ರರು ಮತ್ತೆ ವಿಷ್ಣು ತೀರ್ಥರೆಂದು ಅವತರಿಸಿ ಅತಿ ಅಲ್ಪ ಆಯುಷ್ಯದಲ್ಲಿ ಭಾಗವತವನ್ನು ದಿನಕ್ಕೆ ಒಂದು ಶ್ಲೋಕದಂತೆ ಪಾರಾಯಣ ಮಾಡಲು ಅನುಕೂಲ ಆಗುವಂತೆ ಭಾಗವತ ಸಾರೋದ್ಧಾರ ಬರೆದ ಮಹಾನುಭಾವರು, ಅಂಥವರಿಗೆ ಎಷ್ಟು ಸಲ ಕೃತಜ್ಞತೆ ಅರ್ಪಿಸಿದರೂ ಕಡಿಮೆ ಎನಿಸುವದು. ನನ್ನ ಬುದ್ಧಿಗೆ ಹೊಳೆದಷ್ಟು ಮಹಾನುಭಾವರ ಚರಿತ್ರೆ ಬರೆಯಲು ಪ್ರಯತ್ನಿಸುವೆ.

ಶ್ರೀ ವಿಷ್ಣುತೀರ್ಥರ ಚರಿತ್ರೆ ಭಾಗ 2.

ವಿಷ್ಣುತೀರ್ಥರ ಬಗ್ಗೆ ಅವರ ಚರಿತ್ರೆ ಬಗ್ಗೆ ಮಾಹಿತಿ ಸಿಗುವದು ಬಹಳ ಕಡಿಮೆ.ಹಳೆ ಧಾರವಾಡ ಜಿಲ್ಲೆ, ಈಗಿನ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನಲ್ಲಿ ಸಿದ್ದಾಪುರ ಎಂಬ ಗ್ರಾಮವಿದೆ. ಅಲ್ಲಿ ಸದಾಚಾರ ಸಂಪನ್ನರಾದ ಬಾಳಾಚಾರ್ಯ ಮತ್ತು ಭಾಗೀರತಿಭಾಯಿ ಎಂಬ ದಂಪತಿಗಳು ಇದ್ದರು. ಇಬ್ಬರಿಗೂ ಪುತ್ರ ಸಂತಾನದ ಅಪೇಕ್ಷೆ ಇತ್ತು. ಅದಕ್ಕಾಗಿ ಊರಲ್ಲಿಯೇ ಶ್ರೀ ಜಯತೀರ್ಥರ ಸೇವೆ ಮಾಡಿದರು. ಅದರ ಫಲವಾಗಿ ಅವರಿಗೆ ಪುತ್ರ ಸಂತಾನವಾಯಿತು. ದಂಪತಿಗಳಿಗೆ ಅದ ಸಂತೋಷಕ್ಕೆ ಪಾರವೇ ಇಲ್ಲ. ಸಜ್ಜನರನ್ನು ದೇವರು ಪರೀಕ್ಷೆ ಮಾಡಿ ಫಲ ಕೊಡುತ್ತಾನೆ. ಬಾಳಾಚಾರ್ಯರು ಮಗನಿಗೆ ಜಯತೀರ್ಥ ಎಂದು ನಾಮಕರಣ ಮಾಡಿದರು. ಬಾಲಕ ಹೆಸರಿಗೆ ತಕ್ಕಂತೆ ವಿದ್ಯೆಯಲ್ಲಿ ಮುಂದಾದನು. ಆಚಾರ್ಯರು ಮಗನಿಗೆ ಉಪನಯನ ಮಾಡಿ ಗುರುಕುಲಕ್ಕೆ ಕಳಿಸಬೇಕೆಂದು ವಿಚಾರಿಸಿದರು. ಅದರಂತೆ ಆಗಿನ ರಾಯಚೂರು ಪ್ರಾಂತದ ಗದ್ವಾಲ ಪ್ರಾಂತದಲ್ಲಿ ಇದ್ದ ಶ್ರೀ ಐಜಿ ಆಚಾರ್ಯರಲ್ಲಿಗೆ ಕಳಿಸಿದರು. ಐಜಿ ಆಚಾರ್ಯರು ಸಾಮಾನ್ಯರಲ್ಲ, ಮುಂದೆ ವ್ಯಾಸತತ್ವಜ್ಞ ರೆಂದು. ಪ್ರಸಿದ್ದರಾದರು. ಜಯತೀರ್ಥನ ಬುದ್ಧಿ ಚಾತುರ್ಯಕ್ಕೆ ಸಂತೋಷಗೊಂಡು ಎಲ್ಲ  ವಿದ್ಯೆ ಕಳಿಸಿದರು.. ಜಯತೀರ್ಥನಲ್ಲಿ ವರ್ಣಾಶ್ರಮ ನಿಷ್ಠೆ ಭಕ್ತಿ ಪರೀಕ್ಷಿಸಲು ಗುರುಗಳು ನರಸಿಂಹ ಜಪ ಹೇಳಿದರೂ. ಉಳಿದ ಶಿಷ್ಯರು ಹಿಂಜರಿದರು. ಜಯತೀರ್ಥ ಗುರುಗಳಿಗೆ ಒಪ್ಪಿಕೊಂಡು ಜಪ ಮಾಡಿದನು. ಕೊನೆಯದಿನ ಜಪ ಮುಗಿದ ಮೇಲೆ ಧ್ಯಾನದಿಂದ ಹೊರಬಂದು ಪಂಚಾಮೃತದ ಸಾಮಗ್ರಿಯನ್ನು ತಿಂದನು.ಗುರುಗಳು ಪೂಜಿಗೆ ಕುಳಿತಾಗ ಆ ಪದಾರ್ಥ ದೇವರಿಗೆ ನೈವೇದ್ಯ ಆಗಿದೆ ಎಂದರು. ಆಮೇಲೆ ಜಯತೀರ್ಥನಲ್ಲಿ ಇದ್ದ ಭಕ್ತಿ ನರಸಿಂಹದೇವರ ಕೃಪೆಯನ್ನು ಎಲ್ಲರಿಗೂ ಹೇಳಿ ಸಂತೋಷಪಟ್ಟರು.

ಶ್ರೀ ವಿಷ್ಣುತೀರ್ಥರ ಚರಿತ್ರೆ ಭಾಗ 3.


ಜಯತೀರ್ಥನ ಗುರುಕುಲ ವಾಸ ಮುಗಿಯುತ್ತಲೇ ತಂದೆ ಬಾಳಚಾರ್ಯರು ಮಗನಿಗೆ ಯೋಗ್ಯ ಕನ್ಯೆ ಸಂಗಡ ಮಾಡುವೆ ಮಾಡಿದರು. ದೇವರ ದಯದಿಂದ ಸಂಸಾರ ಸಾಗಿತ್ತು. ಮಕ್ಕಳು ಆದವು. ನಿತ್ಯ ಪಾಠ ಪ್ರವಚನ ದೇವರ ಪೂಜೆಗಳು ಸಾಗಿದ್ದವು. ಒಂದು ದಿನ ಜಯತೀರ್ಥ್ಆಚಾರ್ಯರು ಮಧ್ಯಾಹ್ನ ಭೋಜನಾ ನಂತರ ವಿಶ್ರಾಂತಿ ಪಡೆಯುತ್ತಿದ್ದರು. ಸಾಧ್ವಿ ಪತ್ನಿ ಗಂಡನ ಪಾದಸೇವೆ ಮಾಡುತ್ತಿದ್ದಳು. ಹೊರಗಡೆ ಒಬ್ಬ ದಾಸರು ಪುರಂದರದಾಸರ ಹಾಡು ಹಾಡುತ್ತ ನಿಂತಿದ್ದರು. ಸುಶ್ರಾವ್ಯ ಹಾಡು ಕೇಳುತ್ತಿದ್ದರು. ಮೊದಲೇ ಪಂಡಿತರು, ಒಮ್ಮಿಂದೊಮ್ಮೆಲೆ ಎದ್ದು ಕುಳಿತರು. ದಾಸರನ್ನು ಒಳಗೆ ಕರೆದು ಮತ್ತೆ ಮತ್ತೆ ಅದೇ ಹಾಡನ್ನು ಕೇಳಿದರು. ದಾಸರ ಹಾಡು,"ಮಂಚ ಬಾರದು, ಮಡದಿ ಬಾರಳು, ಕಂಚು ಕನ್ನಡಿ ಬಾರದು,
ಸಂಚಿತಾರ್ಥವ ಮತ್ತೆ ಬಾರದು ಮುಂಚೆ ಮಾಡಿರಿ ಧರ್ಮವಾ. ಎಂದು ಹಾಡಿದರು. ಜಯತೀರ್ಥ ಆಚಾರ್ಯರಿಗೆ ಹಾಡು ಕೇಳಿ ಅಂತರಂಗದಲ್ಲಿ ಜ್ಞಾನದ ದೀಪ ಬೆಳಗಿತು. ಈ ಸಂಸಾರ ಭೋಗ ನಶ್ವರ ಎಂದು ಅರಿತು ಮಗನಿಗೆ ಮನೆಯ ಜವಾಬ್ದಾರಿ ವಹಿಸಿ, ವೈರಾಗ್ಯದಿಂದ ಹೊರ ಹೊರಟರು. ಎಲ್ಲಿಯಾದರೂ ಪುಣ್ಯ ಕ್ಷೇತ್ರಕ್ಕೆ ಹೋಗಿ ಪರಮಾತ್ಮನ ಧ್ಯಾನದಲ್ಲಿ ಹೊತ್ತು ಕಳೆಯಬೇಕೆಂದು ಹೊರಟರು. ಅವರಿಗೆ ಮೊದಲಿನಿಂದಲೂ ಬದರಿ ಕ್ಷೇತ್ರಕ್ಕೆ ಹೋಗ ಬೇಕೆಂಬ ಆಸೆ. ದಾರಿಯಲ್ಲಿ ಒಂದು ಸರ್ಪವು ಅಡ್ಡ ಬಂದಿತು. ಮೊದಲೇ ಜ್ಞಾನಿಗಳು, ಕೇಳಬೇಕೆ ಮಧ್ವರ ತತ್ವ ಪ್ರಚಾರಕ್ಕೆ ಶ್ರೀ ಜಯತೀರ್ಥರ ಆಜ್ಞೆ ಎಂದು ತಿಳಿದು ಹಿಂದಕ್ಕೆ ಬಂದು, ಸವದತ್ತಿ ಹತ್ತಿರ ಮುನವಳ್ಳಿ ಗ್ರಾಮಕ್ಕೆ ಬಂದು ಕಾಡಿನಲ್ಲಿ ಒಂದು ಅರಳಿಗಿಡದ ಕೆಳಗೆ ತಮ್ಮ ವಾಸ್ತವ್ಯ ಹೂಡಿದರು. ಮಲಾಪಹಾರಿ ತಟ. ತಮ್ಮ ವಾನಪ್ರಸ್ಥ ಜೀವನ ಪ್ರಾರಂಭ ಮಾಡಿದರು. ಸಕ್ಕರೆ ಇದ್ದಲ್ಲಿ ಇರುವೆ ಎಂಬಂತೆ ಜ್ಞಾನಿಗಳ ಹಿಂದೆ ಶಿಷ್ಯ ಸಮೂಹ ಬೆಳೆಯುತ್ತಾ ಹೋಯಿತು. ನಿತ್ಯ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ನದಿ ಸ್ನಾನ ಮಾಡಿ ಸುಮಧ್ವ ವಿಜಯ ಪಾರಾಯಣ ಮಾಡುತ್ತಿದ್ದರು. ಸ್ಥಳದ ಮಹಿಮೆಯಂತೆ ಆಚಾರ್ಯರ ಪಾಠದ ಮಹಿಮೆ ಪ್ರಸಾರವಾಯಿತು. ಮುನಿಗಳು ವಾಸ ಮಾಡಿದ ಸ್ಥಳ ಎಂದು ಆ ಗ್ರಾಮಕ್ಕೆ ಮುನವಳ್ಳಿ ಎಂದು ಹೆಸರು ಬಂದಿತ್ತು. ಜಮದಗ್ನಿ, ಪರಶು ರಾಮರು ಓಡಾಡಿದ ಸ್ಥಳ. ಗಡಿಯಾರ ಇಲ್ಲದ ದಿನಗಳು. ಆಚಾರ್ಯರ ಸುಮಧ್ವ ವಿಜಯ ಪಾರಾಯಣ ಧ್ವನಿಗೇ ಎಲ್ಲರೂ ಸಮಯ ತಿಳಿದುಕೊಳ್ಳುತ್ತಿದ್ದರು. ಆಚಾರ್ಯರಿಗೆ ದಿನದಿಂದ ದಿನಕ್ಕೆ ವೈರಾಗ್ಯ ಬೆಳೆಯುತ್ತಾ ಹೋಯಿತು. ಹನ್ನೆರಡು ಸಲ ಸುಧಾ ಮಂಗಳ ಮಾಡಿದರು. ಶ್ರೀ ರಾಘವೇಂದ್ರರ ಮಠದ ಸ್ವಾಮಿಗಳಿಂದ ಸನ್ಯಾಸ ಕೇಳಿದರು. ಫಲಕಾರಿ ಆಗಲಿಲ್ಲ. ತಮ್ಮ ದೈನಂದಿನ ಕಾರ್ಯಕ್ರಮವನ್ನೇ ಮುಂದುವರೆಸಿದರು

ಶ್ರೀ ವಿಷ್ಣುತೀರ್ಥರ ಚರಿತ್ರೆ ಭಾಗ 4.

ಜಯತೀರ್ಥ ಆಚಾರ್ಯರು ನಿತ್ಯ ಅನುಷ್ಠಾನ ಗಳಿಗೆ ಒಂದು ವೇಳಾಪತ್ರಿಕೆ ಮಾಡಿಕೊಂಡಿದ್ದರು. ನಸುಕಿನಲ್ಲಿ ಎದ್ದು ಪಾರಾಯಣ ಸ್ನಾನ, ಸಂಧ್ಯೆ,ಪಾಠ ಪೂಜೆ ಮಾಡಿ ಮಧ್ಯಾಹ್ನದ ವೇಳೆಗೆ ಊಟ. ನಂತರ ಸ್ವಲ್ಪ ವಿಶ್ರಾಂತಿ, ಮತ್ತೆ ಪಾಠ ಪ್ರವಚನ, ರಾತ್ರಿ ಪೂಜೆ ಮಂಗಳಾರತಿ. ಹೀಗೆ ಪಾಲಿಸುತ್ತಿದ್ದರು. ಅವರಲ್ಲಿ ವ್ಯಾಸಂಗಕ್ಕೆ ಇದ್ದ ಗೃಹಸ್ಥ ಶಿಷ್ಯರಿಗೆ ಇದು ಸ್ವಲ್ಪ ಕಠಿಣ ಎನಿಸುತ್ತಿತ್ತು. ಕಾರಣ ಆಚಾರ್ಯರು ಅವರೆಲ್ಲರಿಗೂ "ಅಜ್ಞಾಪತ್ರ "ಎಂಬ ಎರಡೂ ಪುಟದ ವೇಳಾಪತ್ರಿಕೆ ಬರೆದುಕೊಟ್ಟರು. ಭಾಗವತದ 18000 ಶ್ಲೋಕಗಳನ್ನು ನಿತ್ಯ ಪಾರಾಯಣಕ್ಕೆ ಅನುಕೂಲ ಆಗುವಂತೆ 365 ಶ್ಲೋಕಗಳಿಗೆ ಸಂಕ್ಷಿಪ್ತ ಮಾಡಿ ನಿತ್ಯ ಒಂದು ಶ್ಲೋಕ ಓದುವಂತೆ ಅನುಕೂಲ ಮಾಡಿ ಭಾಗವತಸಾರೋದ್ಧಾರ ಎಂದು ಕರೆದರು. ಇದಲ್ಲದೆ ಸೃಷ್ಟಿಯ ರಹಸ್ಯ, ದೇಹದಲ್ಲಿ ಇರುವ ದೇವತೆಗಳ ವಿವರ ಬಗ್ಗೆ ಬರೆದು ದೇಹದಲ್ಲಿ ಒಂದು ಅವಯವ ಕೆಲಸ ಮಾಡಬೇಕಾದರೆ ಎಷ್ಟು ಜನರು ದೇವತೆಗಳ ಮುಖಾಂತರ  ಆಜ್ಞೆ ಅವಯವಕ್ಕೆ ಬರುವದು. ಎಂಬುದನ್ನು ಷೋಡಶಿ ಎಂಬ ಗ್ರಂಥದಲ್ಲಿ ಇಂದ್ರಿಯ ವ್ಯಾಪಾರ ಭಾಗದಲ್ಲಿ ವರ್ಣಿಸಿದ್ದಾರೆ. ಚತುರ್ದಶಿ, ಆಧ್ಯಾತ್ಮ ರಸರಂಜನೀ ಎಂಬಗ್ರಂಥಗಳನ್ನು ಬರೆದು ವೇದವ್ಯಾಸರ ಸೇವೆ ಮಾಡಿದ್ದಾರೆ.
ಉತ್ತರಾದಿಮಠದ ಅಂದಿನ ಪೀಠಾಧಿಪತಿಗಳಾದ ಶ್ರೀ ಸತ್ಯವರ ತೀರ್ಥರಿಂದ ಸನ್ಯಾಸದೀಕ್ಷೆ ಪಡೆದು ಶ್ರೀ ವಿಷ್ಣು ತೀರ್ಥ ಎನಿಸಿದರು.

ಶ್ರೀ ವಿಷ್ಣುತೀರ್ಥರ ಚರಿತ್ರೆ ಭಾಗ 5.


ಜಯತೀರ್ಥ ಆಚಾರ್ಯರು ನಿತ್ಯ ಅನುಷ್ಠಾನ ಗಳಿಗೆ ಒಂದು ವೇಳಾಪತ್ರಿಕೆ ಮಾಡಿಕೊಂಡಿದ್ದರು. ನಸುಕಿನಲ್ಲಿ ಎದ್ದು ಪಾರಾಯಣ ಸ್ನಾನ, ಸಂಧ್ಯೆ,ಪಾಠ ಪೂಜೆ ಮಾಡಿ ಮಧ್ಯಾಹ್ನದ ವೇಳೆಗೆ ಊಟ. ನಂತರ ಸ್ವಲ್ಪ ವಿಶ್ರಾಂತಿ, ಮತ್ತೆ ಪಾಠ ಪ್ರವಚನ, ರಾತ್ರಿ ಪೂಜೆ ಮಂಗಳಾರತಿ. ಹೀಗೆ ಪಾಲಿಸುತ್ತಿದ್ದರು. ಅವರಲ್ಲಿ ವ್ಯಾಸಂಗಕ್ಕೆ ಇದ್ದ ಗೃಹಸ್ಥ ಶಿಷ್ಯರಿಗೆ ಇದು ಸ್ವಲ್ಪ ಕಠಿಣ ಎನಿಸುತ್ತಿತ್ತು. ಕಾರಣ ಆಚಾರ್ಯರು ಅವರೆಲ್ಲರಿಗೂ "ಅಜ್ಞಾಪತ್ರ "ಎಂಬ ಎರಡೂ ಪುಟದ ವೇಳಾಪತ್ರಿಕೆ ಬರೆದುಕೊಟ್ಟರು. ಭಾಗವತದ 18000 ಶ್ಲೋಕಗಳನ್ನು ನಿತ್ಯ ಪಾರಾಯಣಕ್ಕೆ ಅನುಕೂಲ ಆಗುವಂತೆ 365 ಶ್ಲೋಕಗಳಿಗೆ ಸಂಕ್ಷಿಪ್ತ ಮಾಡಿ ನಿತ್ಯ ಒಂದು ಶ್ಲೋಕ ಓದುವಂತೆ ಅನುಕೂಲ ಮಾಡಿ ಭಾಗವತಸಾರೋದ್ಧಾರ ಎಂದು ಕರೆದರು. ಇದಲ್ಲದೆ ಸೃಷ್ಟಿಯ ರಹಸ್ಯ, ದೇಹದಲ್ಲಿ ಇರುವ ದೇವತೆಗಳ ವಿವರ ಬಗ್ಗೆ ಬರೆದು ದೇಹದಲ್ಲಿ ಒಂದು ಅವಯವ ಕೆಲಸ ಮಾಡಬೇಕಾದರೆ ಎಷ್ಟು ಜನರು ದೇವತೆಗಳ ಮುಖಾಂತರ  ಆಜ್ಞೆ ಅವಯವಕ್ಕೆ ಬರುವದು. ಎಂಬುದನ್ನು ಷೋಡಶಿ ಎಂಬ ಗ್ರಂಥದಲ್ಲಿ ಇಂದ್ರಿಯ ವ್ಯಾಪಾರ ಭಾಗದಲ್ಲಿ ವರ್ಣಿಸಿದ್ದಾರೆ. ಚತುರ್ದಶಿ, ಆಧ್ಯಾತ್ಮ ರಸರಂಜನೀ ಎಂಬಗ್ರಂಥಗಳನ್ನು ಬರೆದು ವೇದವ್ಯಾಸರ ಸೇವೆ ಮಾಡಿದ್ದಾರೆ.
ಉತ್ತರಾದಿಮಠದ ಅಂದಿನ ಪೀಠಾಧಿಪತಿಗಳಾದ ಶ್ರೀ ಸತ್ಯವರ ತೀರ್ಥರಿಂದ ಸನ್ಯಾಸದೀಕ್ಷೆ ಪಡೆದು ಶ್ರೀ ವಿಷ್ಣು ತೀರ್ಥ ಎನಿಸಿದರು.ಶ್ರೀ ವಿಷ್ಣುತೀರ್ಥರಿಗೆ ಮೊದಲಿನಿಂದಲೂ ಬದರಿ ಕ್ಷೇತ್ರಕ್ಕೆ ಹೋಗಬೇಕೆಂಬ ಆಸೆ ಬಹಳ ಇತ್ತು. ಕೇವಲ 50 ವರ್ಷದಆಯುಷ್ಯದಲ್ಲಿ ಚತುರವರ್ಣಗಳನ್ನು ನಿಯಮಬದ್ಧವಾಗಿ ಆಚರಿಸಿ ತೋರಿಸಿದ ಧೀರರು. ತಮ್ಮ ವಾನಪ್ರಸ್ಥದಲ್ಲಿ 12 ವರ್ಷ ವನದಲ್ಲಿ ಇದ್ದ ಕಾರಣ ಇವರನ್ನು ಅಡವಿ ಆಚಾರ್ಯ, ಅರಣ್ಯಕಾಚಾರ್ಯ ಎಂದು ಕರೆದರು. ಇಂದಿಗೂ ಇವರ ಪೂರ್ವಾಶ್ರಮದ ವಂಶದವರಿಗೆ ಅಡವಿಯವರು ಎಂದು ಮನೆತನದ ಹೆಸರಾಗಿ ಬಂದಿದೆ. ವಿಷ್ಣುತೀರ್ಥರು ವೈರಾಗ್ಯಕ್ಕೆ ಹೆಸರಾದವರು. ದಿನನಿತ್ಯ ಪೂಜೆ ಮಾಡುವಾಗ ಒಂದು ತಾಮ್ರದ ರಾಮಟೆಂಕಿ ನಾಣ್ಯವನ್ನು ದೇವರಾವಪೀಠದ ಕೆಳಗೆ ಇಟ್ಟು ಲಕ್ಷ್ಮೀ ಸ್ತೋತ್ರ ಮಾಡುತ್ತಿದ್ದರು. ಪೂಜೆ ಮುಗಿಯುತ್ತಲೇ ನಾಣ್ಯವು ಬಂಗಾರದ್ದಾಗುತ್ತಿತ್ತು. ಅದನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಮಠದ ದೈನಂದಿನ ಖರ್ಚು ನಿರ್ವಹಿಸಿ ಹೆಚ್ಚಿಗೆ ಆಗಿದ್ದನ್ನು ನದಿಗೆ ಹಾಕಿಸುತ್ತಿದರು.ಇದರಿಂದ ಅವರ ವೈರಾಗ್ಯ ಭಾವನೆ ಎದ್ದು ಕಾಣಿಸುತ್ತದೆ. ವಿಷ್ಣುತೀರ್ಥರು ಕೇವಲ ಸಾಹಿತ್ಯ ಸೇವೆ ಅಲ್ಲದೇ ಶಿಷ್ಯರಿಗೂ ಅದೆಷ್ಟೋ. ಸಹಾಯ ಮಾಡಿದ್ದಾರೆ. ಒಮ್ಮೆ ಸಂತಾನವಿಲ್ಲದ ಶಿಷ್ಯ ದಂಪತಿಗಳು ಅವರಲ್ಲಿ ಭಿನ್ನವಿಸಿಕೊಂಡಾಗ ಅವರು ಕರುಣೆ ತೋರಿ, ಒಬ್ಬಳಿಗೆ ದೇವರಪೂಜೆಗಾಗಿ ರಂಗೋಲಿ ಹಾಕಲು, ಇನ್ನೊಬ್ಬಳಿಗೆ ಪೂಜೆಯ ಸಲಕರನೆಗಳನ್ನು ಶುದ್ಧ ಮಾಡಿಕೊಡಲು ಹೇಳಿದರು. ಅದರಂತೆ ಅವರು ಭಕ್ತಿ ವಿಶ್ವಾಸದಿಂದ ಸೇವಿಸಿದರು. ಅದರ ಫಲವಾಗಿ ಪುತ್ರ ಸಂತಾನ ಪಡೆದರು. ಶ್ರೀ ವಿಷ್ಣುತೀರ್ಥರು ತಮ್ಮ ಕೊನೆಯ ದಿನಗಳನ್ನು ಕೊಪ್ಪಳದ ಹತ್ತಿರ ಮೊದಪುರಿ, ಮಾದನೂರಲ್ಲಿ ಕಳೆದರು.ರುದ್ರರ ಅವತಾರಿ ಗಳಾಗಿದ್ದರಿಂದ ಮಾದನೂರು ಸಮೀಪದ ಸೋಮೇಶ್ವರ ದೇವಾಲಯದಲ್ಲಿ ಪಾಠ ಹೇಳುತ್ತಿದ್ದರು. ಕುಶಾನದಿ, ಹಿರೇಹಳ್ಳ, ಮತ್ತು ಇನ್ನೊಂದು ಹಳ್ಳ ಕೂಡುವ ಜಾಗ ತ್ರಿವೇಣಿಸಂಗಮ ಎಂದು ಕರೆದರು. ಅವರಿಗೆ ಬದರಿನಾಥನು ಹೊಲದಲ್ಲಿ ಸಿಕ್ಕಿದ್ದರಿಂದ ಅದೇ ಮೂರ್ತಿಯನ್ನು ತಮ್ಮ ವೃಂದಾವನದ ಮೇಲ್ಭಾಗದಲ್ಲಿ ಸ್ಥಾಪಿಸಲು ಹೇಳಿದರೂ. ರುದ್ರರ ಆರಾಧನೆ ದಿನವಾದ ಶಿವರಾತ್ರಿ, ಮಾಘ ಬಹುಳ ತ್ರಯೋದಶಿ ಯಂದು ಮಾದನುರಿನ ಕುಶಾ ನದಿ ತೀರದಲ್ಲಿ ವೃಂದಾವನಸ್ಥ ರಾದರು. ಇಂದಿಗೂ ಮಧ್ಯರಾಧನೆ ದಿನ ಮುಂಜಾನೆ ಗುರುಗಳ ಪಲ್ಲಕ್ಕಿಯನ್ನು ಅವರು ಪಾಠವಮಾಡುತ್ತಿದ್ದ ಸೋಮೇಶ್ವರ ಗುಡಿಯವರೆಗೆ ತೆಗೆದುಕೊಂಡು ಹೋಗಿ ಮಂಗಳಾರತಿ ಮಾಡಿಕೊಂಡು ಬರುವ ಪರಂಪರೆ ಇದೆ. ವಿಷ್ಣು ತೀರ್ಥರು ಇಂದಿಗೂ ಅದೆಷ್ಟೋ ಜನರಿಗೆ ಅವರವರ ಇಚ್ಛೆ ಪೂರ್ತಿ ಮಾಡುತ್ತಲಿದ್ದಾರೆ. ವಿಷ್ಣು ತೀರ್ಥರ ಅಂತರ್ಗತ ರುದ್ರದೇವರ ಅಂತರ್ಗತ ಭಾ. ಮು. ಅಂ. ಬದರಿ ನಾರಾಯಣ ಭಿನ್ನಾ ಭಿನ್ನಾ ನರಸಿಂಹದೇವರು ಎಲ್ಲ ಭಕ್ತರಿಗೆ ಆಯುರಾರೋಗ್ಯ ಐಶ್ವರ್ಯ ಕೊಟ್ಟು ಸಲಹಲಿ ಎಂದು ಪ್ರಾರ್ಥಿಸುವೆ.
-madhusudan kalibhat
***


" ಶ್ರೀ ವಿಷ್ಣುತೀರ್ಥ - 1 "
" ವೈರಾಗ್ಯ ನಿಧಿಗಳೂ -  ಪರಮ ವೈಷ್ಣವೋತ್ತಮರಾದ ಶ್ರೀ ರುದ್ರ ದೇವರ ಅಂಶ ಸಂಭೂತರೂ - ಭಾಗವತ ಶಿರೋಮಣಿ ಶ್ರೀ ವಿಷ್ಣುತೀರ್ಥರು "
" ದಿನಾಂಕ : 11.03.2021 ಗುರುವಾರ ಮಾದನೂರಿನ ತಪೋಮೂರ್ತಿ ಶ್ರೀ ವಿಷ್ಣುತೀರ್ಥರ ಆರಾಧನಾ ಮಹೋತ್ಸವ "
ಸಾರ ರಹಿತ ಸಂಸಾರ ಸಂತಾಪ ಕಳೆವ ।
ಸಾರೋದ್ಧಾರವನು ರಚಿಸಿದ ಕೋಲೆ ।।
ಸಾರೋದ್ಧಾರವನು ರಚಿಸಿದ ವಿಷ್ಣುತೀರ್ಥ 
ಸೂರಿವರೇಣ್ಯರ ಬಳಗೊಂಬೆ ಕೋಲೆ ।।
ವಿಷ್ಣುತೀರ್ಥಃ ಕಲ್ಪವೃಕ್ಷೋ 
ವಿಷ್ಣುತೀರ್ಥಶ್ಚ ಕಾಮಧೃಕ್ ।
ಚಿಂತಾಮಣಿರ್ವಿಷ್ಣುತೀರ್ಥೋ 
ಯತೀಂದ್ರಃ ಕಾಮದಃ ।।
" ಶ್ರೀ ವೆಂಕಟೇಶವಿಠ್ಠಲ ( ಬಳ್ಳಾರಿ ಜೋಯಿಸ್ ವೇಂಕಣ್ಣಾಚಾರ್ಯರು ) ರ ಮಾತುಗಳಲ್ಲಿ....... "
ವಿಷ್ಣುತೀರ್ಥರೆನ್ನಿ ಥಟ್ಟನೆ ಜನರೆಲ್ಲ ।
ವಿಷ್ಣುತೀರ್ಥರೆನ್ನಿರೋ ।
ಕಷ್ಟವಾ ಕಳೆದು -
ಮನದಿಷ್ಟವ ಸಲ್ಲಿಪರೋ ।। ಪಲ್ಲವಿ ।।
" ವಿ " ಯೆನ್ನೆ ಕಾರ್ಯ -
ವಿಜಯವಾಗುವುದು ।
ವಿಷ್ಣುತೀರ್ಥರೆನ್ನಿರೋ ।। ಚರಣ ।।
" ಷ್ಣು " ಯೆನ್ನಲು ತೀವ್ರ -
ಐಶ್ವರ್ಯ ಬರುವದು ।
ವಿಷ್ಣುತೀರ್ಥರೆನ್ನಿರೋ ।। ಚರಣ ।।
" ತೀ " ಯೆನ್ನಲು ತೀವ್ರ -
ಜ್ಞಾನ ಬರುವದು ।
ವಿಷ್ಣುತೀರ್ಥರೆನ್ನಿರೋ   ।। ಚರಣ ।।
" ರ್ಥ " ಯೆನ್ನೆ ಋಷಿಯಂತೆ -
ಜ್ಞಾನಾಗೋದು ।
ವಿಷ್ಣುತೀರ್ಥರೆನ್ನಿರೋ ।। ಚರಣ ।।
ಸ್ಥಿರವಾಗಿ ವೆಂಕಟೇಶವಿಠಲನಾ ।
ವಿಷ್ಣುತೀರ್ಥರೆನ್ನಿರೋ ।। ಚರಣ ।।
ಸ್ವಾಮಿಗಳೆಂದು ಪ್ರಸಿದ್ಧರಾದ - ಅವಧೂತ ಶಿರೋಮಣಿಗಳೂ - ವೈರಾಗ್ಯ ನಿಧಿಗಳೂ ಮಾದನೂರಿನ ಮಹಾ ಮುನಿಗಳು ಶ್ರೀ ವಿಷ್ಣುತೀರ್ಥರು. 
ಜ್ಞಾನದ ಬೆಳಕನ್ನು ಬೀರಿ ಧರ್ಮ ಧ್ವಜವನ್ನು ಎತ್ತಿ ಹಿಡಿಯಲು ಧರೆಗಿಳಿದು ಬಂದ ಪರಮ ವೈಷ್ಣವಾಗ್ರಣಿಗಳಾದ ಶ್ರೀ ಮಹಾರುದ್ರದೇವರ ಅಂಶ ಸಂಭೂತರೇ ಶ್ರೀ ವಿಷ್ಣುತೀರ್ಥರು. 
ಭಗವದಾಜ್ಞೆಯಂತೆ ಭುವಿಯಲ್ಲಿ ಅವತರಿಸಿ - ಭಗವತ್ತತ್ತ್ವಗಳನ್ನು ಪ್ರಸಾರ - ಪ್ರಚಾರ ಮಾಡಲು ತಮ್ಮ ಬದುಕನ್ನು ಮೀಸಲಿಟ್ಟ ಭಾಗವತೋತ್ತಮರು. 
ಭಾಗವತ ಶಿರೋಮಣಿಗಳಾದ ಶ್ರೀಮದ್ವಿಷ್ಣುತೀರ್ಥರ ಜೀವನ ರೋಮಾಂಚಕಾರಿಯಾದದ್ದು. 
ಶ್ರೀ ವಿಷ್ಣುತೀರ್ಥರ ಪ್ರಖರ ವೈರಾಗ್ಯ -  ಅಸದೃಶವಾದ ಪಾಂಡಿತ್ಯ - ಗ್ರಂಥ ರಚನಾ ವೈಶಿಷ್ಟ್ಯ - ವಿದ್ಯಾ ಗುರುಗಳಾದ ಐಜಿ ಶ್ರೀ ವೇಂಕಟರಾಮಾಚಾರ್ಯರಲ್ಲಿ ( ಶ್ರೀ ವ್ಯಾಸತತ್ತ್ವಜ್ಞತೀರ್ಥರಲ್ಲಿ ) ಮತ್ತು ಹರಿವಾಯುಗಳಲ್ಲಿ ಅವಿಚ್ಛಿನ್ನವಾದ ಭಕ್ತಿ ಅತ್ಯದ್ಭುತವಾದದ್ದು.
******
" ಶ್ರೀ ವಿಷ್ಣುತೀರ್ಥ - 2 "
ಮಹಾ ಮಹಿಮಾನ್ವಿತರಾದ ಶ್ರೀ ವಿಷ್ಣುತೀರ್ಥರ ಆರಾಧನಾ ಶುಭ ಸಂದರ್ಭದಲ್ಲಿ  ಅವರ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. 
" ಶ್ರೀ ವಿಷ್ಣುತೀರ್ಥರ ಸಂಕ್ಷಿಪ್ತ ಮಾಹಿತಿ "
ಹೆಸರು  : ಶ್ರೀ ಜಯತೀರ್ಥಾಚಾರ್ಯರು 
ತಂದೆ : ಶ್ರೀ ಬಾಳಾಚಾರ್ಯರು 
ತಾಯಿ : ಸಾಧ್ವೀ ಭಾಗೀರಥೀಬಾಯಿ 
ಕಾಲ : ಕ್ರಿ ಶ 1756 - 1806
ಜನ್ಮಸ್ಥಳ : ಸವಣೂರು ಹತ್ತಿರವಿರುವ ಸಿದ್ಧಾಪುರ ಗ್ರಾಮ 
ಅಂಶ : ಶ್ರೀ ರುದ್ರದೇವರು 
ಕಾಲ ಕೂಟ ತಾ ಪಾನವ 
ಮಾಡಿದ । ಗರಗೊ ।
ರಳ್ಯೆಂದೆನಿಸಿದನು  ಶಿರನುತ 
ತಂದೆ ವರದ । ಗೋ ।
ಪಾಲ ವಿಠ್ಠಲನ ಧ್ಯೇನಿಪನೋ
 ಸೇವಿಪನೋ ।।
ಪಾವಿನ ಪದನೋ ವನದಲಿ 
ನಿಂದು ರಾಮನ । ಜಪಿ  ।
ಸುವ ಹರ ಶ್ರೀವನಾರ್ಯರಂಘ್ರಿಯ ।।
ಸ್ವರೂಪೋದ್ಧಾರಕ ಗುರುಗಳು : 
ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು 
ವಿದ್ಯಾ ಗುರುಗಳು : 
ಐಜಿ ಶ್ರೀ ವೇಂಕಟರಾಮಾಚಾರ್ಯರು ( ಶ್ರೀ ವ್ಯಾಸತತ್ತ್ವಜ್ಞರು )
ಸಹಪಾಠಿಗಳು :
ಉತ್ತರಾದಿ ಮಠದ ಶ್ರೀ ಸತ್ಯಪ್ರಿಯತೀರ್ಥರ ಪೂರ್ವಾಶ್ರಮ ಪುತ್ರರು ಮಹಾಭಾಷ್ಯಂ ಶ್ರೀ ಶ್ರೀನಿವಾಸಾಚಾರ್ಯರು 
ಆಶ್ರಮ ಗುರುಗಳು : ಶ್ರೀ ಸತ್ಯವರ ತೀರ್ಥರು 
ಬೃಂದಾವನ ಸ್ಥಳ  : ಮಾದನೂರು 
ಆರಾಧನೆ : ಮಾಘ ಬಹುಳ ತ್ರಯೋದಶೀ ( ಮಹಾ ಶಿವರಾತ್ರಿ )
*****
" ಶ್ರೀ ವಿಷ್ಣುತೀರ್ಥ - 3 "
" ಮಂತ್ರಾಲಯ ಪ್ರಭುಗಳ ಕಾರುಣ್ಯ "
ಜಯತೀರ್ಥನ ಶಕ್ತಿ - ಕುಶಾಗ್ರ ಮತಿ ಮತ್ತು ವಿದ್ಯಾಸಕ್ತಿಯನ್ನು ಕಂಡು ಶ್ರೀ ಬಾಳಾಚಾರ್ಯರು ಸಂತೋಷ ಪಟ್ಟು ಪ್ರೌಢ ಶಿಕ್ಷಣವನ್ನು ಯೋಗ್ಯ ಗುರುಗಳಿಂದ ಕೊಡಿಸಿ - ಅವರನ್ನು ವಿದ್ವಾಂಸರನ್ನಾಗಿ ರೂಪಿಸಬೇಕೆಂದು ಬಯಸೀ - ಇದಕ್ಕಾಗಿ ಯೋಗ್ಯ ಪಂಡಿತಾಗ್ರೇಸರರನ್ನು ಆಶ್ರಯಿಸಬೇಕೆಂದು ವಿಚಾರ ಮಾಡಿ - ತಮ್ಮ ಮಗನಿಗೆ ಯೋಗ್ಯ ಗುರುಗಳನ್ನು ತೋರಿಸಲು ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರೊಬ್ಬರೇ ಸಮರ್ಥರೆಂದು ತಿಳಿದು ಮಗನೊಂದಿಗೆ ಶ್ರೀ ಬಾಳಾಚಾರ್ಯರು ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ ಬಂದರು. 
ಶ್ರೀ ಬಾಳಾಚಾರ್ಯರು ಮಗನೊಂದಿಗೆ ಮಂತ್ರಾಲಯಕ್ಕೆ ಬಂದು ತುಂಗಭದ್ರೆಯಲ್ಲಿ ಮಿಂದು ಶುಭ್ರನಾಗಿ ಬಂದು ಶ್ರೀ ಗುರುಸಾರ್ವಭೌಮರ ವೃಂದಾವನದ ಮುಂದೆ ನಿಂತು......
" ತನಗೆ ಜ್ಞಾನ ತೋರುವ ಯೋಗ್ಯ ಗುರುವನ್ನು ತೋರಿಸು " 
ಎಂದು ಜಯತೀರ್ಥನು ವಿನಮ್ರವಾಗಿ ಪ್ರಾರ್ಥಿಸಿದ!
ವಿದ್ಯಾ ಪಕ್ಷಪಾತಿಗಳೂ - ಭಕ್ತ ಶಿಷ್ಯ ಜನೋದ್ಧಾರಕರೂ - ಕಲಿಯುಗ ಕಲ್ಪವೃಕ್ಷ ಕಾಮಧೇನುವೆಂದು ಜಗತ್ಪ್ರಸಿದ್ಧರೂ - ಅಘಟಿತಘಟನಾ ಕಾರ್ಯ ಮಾಡುವುದರಲ್ಲಿ ಸಮರ್ಥರೂ ಆದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರೇ...... 
 " ಕರುವನ್ನು ( ಜಯತೀರ್ಥ ) ಹಸುವಿನ ( ಐಜಿ ಶ್ರೀ ವೇಂಕಟರಾಮಾಚಾರ್ಯರು ) ಬಳಿ ಸೇರಿಸುವ ಅದೃಶ್ಯ ಸೂತ್ರಧಾರರಾಗಿ - ಪಂಡಿತ ಶ್ರೇಷ್ಠ ಶ್ರೀ ಐಜಿ ವೇಂಕಟರಾಮಾಚಾರ್ಯರನ್ನು ಮಂತ್ರಾಲಯಕ್ಕೆ ಬರುವಂತೆ ಪ್ರೇರೇಪಿಸಿದರು. 
ನೀತ ಗುರುಗಳಿಗಾಗಿ ಹಂಬಲಿಸುತ್ತಾ ತಮ್ಮನ್ನಾಶ್ರಯಿದ ಜಯತೀರ್ಥನಿಗೆ ಶ್ರೀ ಐಜಿ ವೇಂಕಟರಾಮಾಚಾರ್ಯರಂಥಾ ಜ್ಞಾನಿ ಶ್ರೇಷ್ಠರನ್ನು ಶ್ರೀ ಗುರುರಾಜರು ಕರುಣಿಸಿದರು. 
ಜಯತೀರ್ಥನಂತೂ ಶ್ರೀ ಐಜಿ ವೇಂಕಟರಾಮಾಚಾರ್ಯರ ದರ್ಶನ ಮಾತ್ರದಿಂದಲೋ ಪುಲಕಿತನಾದನು. 
ಎಷ್ಟೋ ಜನ್ಮಗಳ ಸಂಬಂಧವಿರುವಂತೆ ಭಾವವಿಷ್ಟನಾಗಿ ಅವರ ಸಾಮಿಪ್ಯವನ್ನು ಬಯಸಿದನು.
****
" ಶ್ರೀ ವಿಷ್ಣುತೀರ್ಥ - 4 "
" ಶ್ರೀ ಐಜಿ ವೇಂಕಟರಾಮಾಚಾರ್ಯರ ಕೃಪಾ ದೃಷ್ಟಿ "
ಶ್ರೀ ಐಜಿ ವೇಂಕಟರಾಮಾಚಾರ್ಯರ  ಪವಿತ್ರವಾದ ಪಾದ ಕಮಲಗಳ ಮೇಲೆ ಜಯತೀರ್ಥನು ತನ್ನ ಶಿರವನ್ನಿಟ್ಟು ವಿದ್ಯಾ ದಾನ ಮಾಡಿ ಉದ್ಧರಿಸಬೇಕೆಂದು ಪ್ರಾರ್ಥಿಸಿದ - ಜಯತೀರ್ಥನ ನಯ - ವಿನಯಾದಿ ಸದ್ಗುಣಗಳನ್ನು ಕಂಡು ಶ್ರೀ ಐಜಿ ವೇಂಕಟರಾಮಾಚಾರ್ಯರಿಗೆ ಅತೀವ ಸಂತೋಷವಾಯಿತು. 
ಇಂತಹಾ ಶಿಷ್ಯ ರತ್ನವನ್ನು ಪಡೆಯಬೇಕೆಂದೇ ಶ್ರೀ ಐಜಿ ವೇಂಕಟರಾಮಾಚಾರ್ಯರು ಶ್ರೀ ಗುರುಸಾರ್ವಭೌಮರ ಪ್ರೇರಣೆಯಂತೆ ಮಂತ್ರಾಲಯಕ್ಕೆ ಆಗಮಿಸಿದ್ದರು. 
ಶ್ರೀ ಹರಿ ವಾಯು ಗುರುಗಳ ಪರಮಾನುಗ್ರಹದಿಂದ ತಮ್ಮ ವಿದ್ಯೆಯನ್ನು ಧಾರೆಯೆರೆಯಲು ಅನಾಯಾಸವಾಗಿ ಶಿಷ್ಯೋತ್ತಮನೋಬ್ಬನು ದೊರಕಿದನೆಂದು ಶ್ರೀ ಐಜಿ ವೇಂಕಟರಾಮಾಚಾರ್ಯರು ಬಹಳ ಸಂತೋಷಪಟ್ಟರು. 
ಶ್ರೀ ಐಜಿ ವೇಂಕಟರಾಮಾಚಾರ್ಯರು ತಮ್ಮ ಪಾದಾಕ್ರಾಂತನಾದ ಜಯತೀರ್ಥನನ್ನು ಮೈದಡವಿ ಎಬ್ಬಿಸಿ ಆತ್ಮೀಯತೆಯಿಂದ ಮಾತನಾಡಿಸಿ; ಅವನ ಕಾಂತಿಯುಕ್ತವಾದ ಮುಖ ಕಮಲದಲ್ಲಿ ಅವತಾರ ಪುರುಷನ ದಿವ್ಯ ಲಕ್ಷಣಗಳನ್ನು ಕಂಡು ಪುಳಕಿತರಾದರು. 
ಮುಂದೆ ಜಯತೀರ್ಥನಿಂದ ದ್ವೈತ ಮತಕ್ಕೆ ಅನುಪಮವಾದ ಸೇವೆ ಸಲ್ಲುವುದೆಂದು ಮನಗೊಂಡು ಶ್ರೀ ಐಜಿ ವೇಂಕಟರಾಮಾಚಾರ್ಯರು ಜಯತೀರ್ಥನನ್ನು ತಮ್ಮ ವಿದ್ಯಾ ಶಿಷ್ಯನನ್ನಾಗಿ ಸ್ವೀಕರಿಸಿದರು. 
" ಪ್ರೌಢ ಗ್ರಂಥಗಳ ಅಧ್ಯಯನ "
ಜ್ಞಾನ ಭಕ್ತಿ ವೈರಾಗ್ಯ ಭರಿತರೂ - ಶ್ರೇಷ್ಠ ವಿದ್ವಾಂಸರಾದ ಶ್ರೀ ಐಜಿ ವೇಂಕಟರಾಮಾಚಾರ್ಯರ ಶಿಷ್ಯತ್ವವನ್ನು ವಹಿಸಿ ಗುರು ಶುಶ್ರೂಷನಿರತನಾದ ಜಯತೀರ್ಥನ ಜ್ಞಾನದಾಹ - ವಿಧೇಯತೆ - ಗುರುಭಕ್ತಿ - ಅರ್ಪಣಾಭಾವ ಮುಂತಾದ ಸದ್ಗುಣಗಳು ಶ್ರೀ ಐಜಿ ವೇಂಕಟರಾಮಾಚಾರ್ಯರ ಮನಸ್ಸನ್ನು ಸೆರೆ ಹಿಡಿದವು. 
ಅಲ್ಲದೇ ಜಯತೀರ್ಥನಿಗೆ ಸಮಗ್ರವಾದ ದ್ವೈತ ವೇದಾಂತ ವಿದ್ಯೆಯನ್ನು ಆಮೂಲಾಗ್ರವಾಗಿ ಪಾಠ ಮಾಡಿ ವಿದ್ವತ್ಪ್ರಪಂಚವೇ ಬೆರಗಾಗುವಂತೆ ಶ್ರೇಷ್ಠ ಪಂಡಿತನನ್ನಾಗಿ ತಯಾರು ಮಾಡಿ ತಮ್ಮ ವಿದ್ಯೆಯನ್ನು ಜಯತೀರ್ಥನಿಗೆ ಧಾರೆಯೆರೆದರು. 
" ಶ್ರೀ ಐಜಿ ವೇಂಕಟರಾಮಾಚಾರ್ಯರ ಮಾತೃವಾತ್ಸಲ್ಯ "
ಶ್ರೀ ಐಜಿ ವೇಂಕಟರಾಮಾಚಾರ್ಯರು ತಾವು ಹೋದಲ್ಲೆಲ್ಲಾ ತಮ್ಮ ಪ್ರೀತಿಯ ವಿದ್ಯಾ ಶಿಷ್ಯನಾದ ಜಯತೀರ್ಥನನ್ನು ಕರೆದುಕೊಂಡು ಹೋಗುತ್ತಿದ್ದರು. 
ವಿದ್ವಜ್ಜನ ಸಮೂಹದಲ್ಲಿ - ಪಂಡಿತ ಮಂಡಲಿಯಲ್ಲಿ - ರಾಜಾಸ್ಥಾನದಲ್ಲಿ ಶಿಷ್ಯನನ್ನು ಮುಕ್ತಕಂಠದಿಂದ ಪ್ರಶಂಸಿಸಿ ಅವನ ಪ್ರತಿಭಾ ಸಾಮರ್ಥ್ಯಗಳನ್ನು ಪ್ರಕಟ ಪಡಿಸುವ ಅವಕಾಶಗಳನ್ನು ಕಲ್ಪಿಸಿ ಕೊಡುತ್ತಿದ್ದರು.
*****
" ಶ್ರೀ ವಿಷ್ಣುತೀರ್ಥ - 5 "
" ಗುರು ಪುತ್ರನ ಅಪಮೃತ್ಯು ಪರಿಹಾರ "
ಶ್ರೀ ಜಯತೀರ್ಥಾಚಾರ್ಯರು ವೇಣಿಸೋಮಪುರದಲ್ಲಿ ಶ್ರೀ ಐಜಿ ವೇಂಕಟರಾಮಾಚಾರ್ಯರ ಆಶ್ರಯದಲ್ಲಿದ್ದಾಗ ಅವರ ಮಕ್ಕಳಾದ ಶ್ರೀ ಗೋಪಾಲಕೃಷ್ಣಾಚಾರ್ಯರಿಗೆ ಪ್ರಾರಬ್ಧ ವಶಾತ್ ಅಪಮೃತ್ಯು ಪ್ರಾಪ್ತವಾದಾಗ ಗುರುಗಳ ಆಜ್ಞೆಯಂತೆ " ಶ್ರೀ ನೃಸಿಂಹ ಮಂತ್ರ " ವನ್ನು ಒಂದು ಸಪ್ತಾಹ ಜಪ ಮಾಡಿ ಅವರ ಅಪಮೃತ್ಯುವನ್ನು ಪರಿಹಾರ ಮಾಡಿದರು. 
ಹೇಳಿ ಕೇಳಿ ಮೊದಲೇ ಇವರು ಮೂಲ ರೂಪದಲ್ಲಿ ನೃಸಿಂಹೋಪಾಸಕರಲ್ಲವೇ !
" ಪಾದುಕಾ ಮಹಿಮೆ "
" ಶ್ರೀ ಕಾರ್ಪರ ನರಹರಿ ದಾಸರ ಮಾತಲ್ಲಿ .... "
ಗುರು ತುರುಗವನನುಸರಿಸಿ ।
ಬರುತಿರಲು ಬಿಸಿಲೊಳು ।
ಗುರು ಪ್ರೀತಿಯನು ಬಯಸಿ ।।
ಗುರುವಿತ್ತ ಪಾದುಕ ।
ವೆರಡು ಶಿರದಲಿ ।
ಧರಿಸಿ ಮಹಿಮೆಯನು ತಿಳಿಸಿ ।।
ಒಂದು ಸಲ ಶ್ರೀ ಐಜಿ ವೇಂಕಟರಾಮಾಚಾರ್ಯರು ತಮ್ಮ ಶಿಷ್ಯನ ಮನೆಗೆ ಶುಭ ಸಮಾರಂಭಕ್ಕೆ ಹೋಗಬೇಕಾದ ಸಂದರ್ಭದಲ್ಲಿ ತಮ್ಮ ಶಿಷ್ಯರನ್ನೆಲ್ಲಾ ಮೊದಲೇ ಕಳುಹಿಸಿದ್ದರು. 
ಶ್ರೀ ಐಜಿ ವೇಂಕಟರಾಮಾಚಾರ್ಯರು ಕುದುರೆಯ ಮೇಲೆ ಸಮಾರಂಭಕ್ಕೆ ಹೊರಟರು. 
ಜೊತೆಯಲ್ಲಿ ಅವರ ಪ್ರಿಯ ಶಿಷ್ಯರಾದ ಶ್ರೀ ಜಯತೀರ್ಥಾಚಾರ್ಯರೊಂದಿಗೆ. 
ಬೇಸಿಗೆ ಆದ್ದರಿಂದ ಬಿಸಿಲಿನ ತಾಪದಿಂದ ಹೆಜ್ಜೆಯಿಡುವುದೇ ಕಠಿಣವಾಯಿತು. 
ಬಿಸಿಲಿನಲ್ಲಿ - ಬರಿಗಾಲಲ್ಲಿ ನಡೆಯುತ್ತಿದ್ದ ಶಿಷ್ಯನನ್ನು ಕಂಡು ಪರಿತಾಪಗೊಂಡು ಶ್ರೀ ಶ್ರೀ ಐಜಿ ವೇಂಕಟರಾಮಾಚಾರ್ಯರು ತಮ್ಮ ಪಾದುಕೆಯನ್ನು ತೆಗೆದು ತಮ್ಮ ಶಿಷ್ಯರಾದ ಶ್ರೀ ಜಯತೀರ್ಥಾಚಾರ್ಯರಿಗೆ ಕೊಟ್ಟರು. 
ಶ್ರೀ ಜಯತೀರ್ಥಾಚಾರ್ಯರು ಗುರುಗಳು ನೀಡಿದ ಪಾದುಕೆಗಳನ್ನು ವಿನಮ್ರವಾಗಿ ಸ್ವೀಕರಿಸಿ - ಗುರುಭಕ್ತಿ ಧುರಂಧರರಾದ ಅವರಿಗೆ ಅವುಗಳನ್ನು ಕಾಲಿನಲ್ಲಿ ಮೆಟ್ಟಿಕೊಳ್ಳಲು ಮನಸ್ಸಾಗಲಿಲ್ಲ. 
ಭವ ತಾರಕವಾದ ಗುರುಗಳ ಪಾದುಕೆಗಳು ಅನಾಯಾಸವಾಗಿ ತಮ್ಮ ಕರಗತವಾಗಿದ್ದಕ್ಕೆ ಬಹಳ ಸಂತೋಷ ಪಟ್ಟು ತಮ್ಮ ತಲೆಯ ಮೇಲೆ ಇಟ್ಟುಕೊಂಡು ನಡೆಯಲಾರಂಭಿಸಿದರು. 
ಪಾದುಕೆಯ ಮಹಿಮೆಯಿಂದ ಬಿಸಿಲಿನ ತಾಪ ಆಗದೇ ತಂಪಾದ ಹುಲ್ಲಿನ ಮೇಲೆ ಹೆಜ್ಜೆ ಇತ್ತಂತೆ ಅನುಭವವಾಯಿತು. 
ಗುರುಗಳ ಪಾದುಕೆಯು ಅದ್ಭುತ ಮಹಿಮೆಯನ್ನೇ ಮಾಡಿಬಿಟ್ಟಿತು. 
" ಅವಧೂತರಾದರು "
ಒಂದುದಿನ ಮಧ್ಯಾಹ್ನ ಶ್ರೀ ಜಯತೀರ್ಥಾಚಾರ್ಯರು ಸುಂದರವಾಗಿ ಅಲಂಕೃತವಾದ ಶಯ್ಯಾ ಗೃಹದಲ್ಲಿ ತಮ್ಮ ಧರ್ಮಪತ್ನಿಯ ಜೋತೆಯಲ್ಲಿರುವ ವೇಳೆಯಲ್ಲಿ ಅವರ ಮನೆಯ ಬಳಿ ಬಂದು ನಿಂತ ದಾಸನೊಬ್ಬ ಶ್ರೀ ಪುರಂದರದಾಸರ  ಈ ಕೆಳಕಂಡ ಸುಂದರ ಪದವನ್ನು ಸುಶ್ರಾವ್ಯವಾಗಿ ಹಾಡ ತೊಡಗಿದ.. 
ಗೋವಿಂದಾ ನಮೋ 
ಗೋವಿಂದಾ ನಮೋ ।
ಗೋವಿಂದಾ ನಾರಾಯಣ ।। ಪಲ್ಲವಿ ।।
ಗೋವರ್ಧನ ಗಿರಿಯನೆತ್ತಿದ ।
ಗೋವಿಂದಾ 
ನಮ್ಮ ರಕ್ಷಿಸೋ ।। ಚರಣ ।।
ಮಂಚಬಾರದು 
ಮಡದಿಬಾರಳು ।
ಕಂಚು ಕನ್ನಡಿ ಬಾರದು ।
ಸಿಂಚಿತಾರ್ಥವು 
ಕಿಂಚಬಾರದು ।
ಮುಂಚೆ ಮಾಡಿರೋ 
ಧರ್ಮವ ।। ಚರಣ ।।
... ದಿಟ್ಟತನದಲಿ 
ಪಟ್ಟವಾಳುವ ।
ಕೃಷ್ಣರಾಯನ ಚರಣವ ।
ಮುಟ್ಟಿ ಭಾಜಿಸಿರೋ 
ಸಿರಿ ಪುರಂದರ ।
ವಿಠ್ಠಲೇಶನ ಪಾದವ ।। ಚರಣ ।।
ಸರ್ವಾಧಾರನೂ - ಸರ್ವಸಾರನೂ ಆದ ಪರಮಾತ್ಮನನ್ನು ಹೊರತು ಪಡಿಸಿ ಜಗತ್ತಿನಲ್ಲಿರುವ ಸರ್ವ ಚರಾಚರ ವಸ್ತುಗಳೂ ಸಾರ ರಹಿತವೆಂದರಿತು ಶ್ರೀ ಜಯತೀರ್ಥಾಚಾರ್ಯರು ಅವಧೂತರಾದರು. 
" ಶಿಷ್ಯ ಸಂಪತ್ತು "
ಪಂಡಿತಾಗ್ರಣಿಗಳಾದ ಶ್ರೀ ಜಯತೀರ್ಥಾಚಾರ್ಯರಲ್ಲಿ ನೂರಾರು ಜನ ಶಿಷ್ಯರು ಶಾಸ್ತ್ರಾಧ್ಯಯನ ಮಾಡುತ್ತಿದ್ದರು. 
ಅವರಲ್ಲಿ ಪ್ರಮುಖರು.. 
ಶ್ರೀ ಅಡವಿ ಕೃಷ್ಣಾಚಾರ್ಯರು
ಇವರು ಶ್ರೀ ವಿಷ್ಣುತೀರ್ಥರ ಪೂರ್ವಾಶ್ರಮ ಪುತ್ರರು. 
ಇವರು ಲಘು ಸುಧಾ ರಂಜನೀ ಎಂಬ ನ್ಯಾಯಸುಧಾ ಟಿಪ್ಪಣಿ - ಸುಮನೋರಂಜನೀ ಎಂಬ ತತ್ತ್ವ ಪ್ರಕಾಶಿಕಾ ಟೀಕೆ - ಶ್ರೀ ವಿಷ್ಣುತೀರ್ಥರು ರಚಿಸಿದ ನ್ಯಾಯಸುಧಾ ಸ್ತೋತ್ರಕ್ಕೆ ವ್ಯಾಖ್ಯಾನ ಮತ್ತು ಶ್ರೀ ವಿಷ್ಣುತೀರ್ಥರ ಕುರಿತಾದ ಅನೇಕ ಸ್ತೋತ್ರಗಳನ್ನು ರಚಿಸಿದ್ದಾರೆ. 
ಶ್ರೀ ಗೋಕಾವಿ ಅನಂತಾಚಾರ್ಯರು ( ಶ್ರೀ ಅನಂತಾದ್ರೀಶರು )
ಇವರು ಪಂಡಿತರೂ - ಶ್ರೇಷ್ಠ ಕವಿಗಳೂ ಆಗಿದ್ದರು. 
" ಅನಂತಾದ್ರೀಶ " ಯೆಂಬ ಅಂಕಿತದಲ್ಲಿ " ಶ್ರೀ ವೆಂಕಟೇಶ ಪಾರಿಜಾತ ", " ಕೃಷ್ಣ ಚರಿತ್ರೆ ", " ಶ್ರೀ ವಿಷ್ಣುತೀರ್ಥ ಕನ್ನಡ ಪಂಚರತ್ನ ಸ್ತೋತ್ರ " ಮತ್ತು ಅನೇಕ ಪದ ಪದ್ಯಗಳನ್ನು ರಚಿಸಿದ ಪ್ರತಿಭಾವಂತ ವಿದ್ವಾಂಸರು. 
ಮೊರಬದ ಶ್ರೀ ಶೇಷಾಚಾರ್ಯ 
ಟೊಣಪಿ ಶ್ರೀ ಬಾಳಾಚಾರ್ಯ 
ಇವರು ರಚಿಸಿರುವ " ತತ್ತ್ವ ಪ್ರಕಾಶಿಕಾ ಟಿಪ್ಪಣಿ ಮತ್ತು ಐತರೇಯ ರಹಸ್ಯ ರಂಜನೀ " ಯೆಂಬ ಗ್ರಂಥಗಳನ್ನು ರಚಿಸಿದ್ದಾರೆ. 
ಅವುಗಳನ್ನು ಒಂದುಸಲ ಅವಲೋಕಿಸಿದರೆ ಇವರ ಗ್ರಂಥ ರಚನಾ ಸಾಮರ್ಥ್ಯ ತಿಳಿಯುತ್ತದೆ. 
ಅಣ್ಣಿಗೇರಿ ಶ್ರೀ ಅಣ್ಣಯ್ಯಾಚಾರ್ಯ 
" ಶ್ರೀ ಜಯತೀರ್ಥಾಚಾರ್ಯರು ಶ್ರೀ ವಿಷ್ಣುತೀರ್ಥರಾಗಿ ವಿರಾಜಿಸಿದರು "
ಉತ್ತರಾದಿ ಮಠದ ಶ್ರೀ ಸತ್ಯವ್ರತೀರ್ಥರು ಶ್ರೀ ಜಯತೀರ್ಥಾಚಾರ್ಯರಿಗೆ ಆಶ್ರಮವನ್ನು ಕೊಟ್ಟು " ವಿಷ್ಣುತೀರ್ಥ " ಎಂಬ ಹೆಸರನ್ನು ಶ್ರೀ ಸತ್ಯವ್ರ ತೀರ್ಥರು ನೀಡಿದ್ದು ಅನ್ವರ್ಥಕ ಎನಿಸಿತು. 
ಶ್ರೀ ಸತ್ಯವರ ತೀರ್ಥರ ಸಚ್ಛಿಷ್ಯರಾದರೂ ಪೀಠಾಧಿಪತ್ಯವನ್ನು ಒಂದರೆಕ್ಷಣವೂ ಬಯಸದೇ ತಪಸ್ಸಂನಾಚರಿಸಲು ಪುನಃ ಅಡವಿಯನ್ನೇ ಸೇರಿದರು.
****
" ಶ್ರೀ ವಿಷ್ಣುತೀರ್ಥ - 6 "
" ಗ್ರಂಥಗಳು "
" ಶ್ರೀ ಕೃಷ್ಣಾಷ್ಟಕಮ್ ( ಅಂತ್ಯ ಕಾಲ ಪ್ರಾರ್ಥನಾ ) "
ಇದು ಶ್ರೀ ವಿಷ್ಣುತೀರ್ಥರ ಕೃತಿಗಳಲ್ಲಿಯೇ ಅಪೂರ್ವವಾದ ಕೃತಿ. 
ಇದರಲ್ಲಿ 8 ಶ್ಲೋಕಗಳಿವೆ. 
ಇದು ಸಂಸ್ಕೃತದಲ್ಲಿ ರಚಿತವಾಗಿದೆ. 
ಪ್ರತಿಯೊಂದು ಪಂಕ್ತಿಯೂ ಮೆಲಕು ಹಾಕುವಂತಿದ್ದು ಭಕ್ತ ಹೃದಯ ತನ್ನ ಅಂತ್ಯ ಕಾಲದ ವರೆಗೂ ಕೂಡಿಟ್ಟು ಕೊಳ್ಳಬೇಕಾದ ಬಹು ಆಪ್ತ ಕೃತಿ ಇದಾಗಿದೆ. 
ಶ್ರೀ ವಾಸುದೇವ ಮಧುಸೂದನ ಕೈಟಭಾರೇ 
ಲಕ್ಷೀಶ ಪಕ್ಷಿವರ ವಾಹನ ವಾಮನೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು 
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೧ ।।
ಗೋವಿಂದ ಗೋಕುಲಪತೇ ನವನೀತ ಚೋರ 
ಶ್ರೀ ನಂದನಂದನ ಮುಕುಂದ ದಯಾಪರೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು 
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೨ ।।
ನಾರಾಯಣಾಖಿಲ ಗುಣಾರ್ಣವ ವೇದ 
ಪಾರಾಯಣ ಪ್ರಿಯ ಗಜಾಧಿಪ ಮೋಚಕೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು 
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೩ ।।
ಆನಂದ ಸಚ್ಚಿದಾಖಿಲಾತ್ಮಕ ಭಕ್ತ ವರ್ಗ 
ಸ್ವಾನನ್ದ ದಾನ ಚತುರಾಗಮ ಸನ್ನುತೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು 
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೪ ।।
ಶ್ರೀ ಪ್ರಾಣತೋsಧಿಕ ಸುಖ್ಯಾತಕ ರೂಪ ದೇವ 
ಪ್ರೋದ್ಯದ್ದಿವಾಕರ ನಿಭಾಚ್ಯುತ ಸದ್ಗುಣೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು 
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೫ ।।
ವಿಶ್ವಾಂಧಕಾರಿ ಮುಖ ದೈವತ ವಂದ್ಯ ಶಾಶ್ವತ್ 
ವಿಶ್ವೋದ್ಭವಸ್ಥಿತಿಮೃತಿ ಪ್ರಭೃತಿ ಪ್ರದೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು 
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೬ ।।
ನಿತ್ತೈಕ ರೂಪ ದಶ ರೂಪ ಸಹಸ್ರ ಲಕ್ಷಾ 
ನಂತ ರೂಪ ಶತ ರೂಪ ವಿರೂಪಕೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು 
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೭ ।।
ಸರ್ವೇಶ ಸರ್ವಗತ ಸರ್ವ ಶುಭಾನುರೂಪ 
ಸರ್ವಾಂತರಾತ್ಮಕ ಸದೋದಿತ ಸತ್ಪ್ರಿಯೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು 
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೮ ।।
" ಶ್ರೀ ರಮಾಸ್ತೋತ್ರಮ್ "
ಇದು ಶ್ರೀ ವಿಷ್ಣುತೀರ್ಥರ ಮಂತ್ರ ಮತ್ತು ತಪಃಶಕ್ತಿಯನ್ನು ಪ್ರತಿಬಿಂಬಿಸುವ ಸ್ತೋತ್ರ ಮತ್ತು ಐತಿಹಾಸಿಕ ಹಿನ್ನೆಲೆ ಉಳ್ಳದ್ದು. 
ಆದಿ :
ಯಯೈವೇದಂ ಸಚ್ಚಿನ್ನಿರುಪಮನಿಜಾನಂದನಿರತಂ 
ಪರಬ್ರಹ್ಮಾಪ್ಯಾದೌ ಗುಣಸಮತನೂರಾಪ್ಯ ಸೃಜತಿ ।
ಅವತ್ಯತ್ತಿ ಪ್ರೇಷ್ಟಾನ್ ಪದಮಪಿ ನಯತ್ಯಸ್ತವಿಪದಃ 
ಪರ ಬ್ರಹ್ಮಾಣೀ ಸಾ ನಾನು ವಿಜಯತೇ ಮದ್ಧ್ರುದಿ ಸದಾ ।।
ಅಂತ್ಯ :
ಅಟತು ವಿವಿಧದೇಶಂ ಸರ್ವದಾ ಸಪ್ರಯಾಸಂ 
ಪಠತು ನಿಖಿಲ ವೇದಾನ್ ಸಂಗಕಾನ್ನಿತ್ಯಮೇವ ।
ಲುಠತು ಸಕಲ ದೇವಾನಾಂ ಪುತಃ ಪಾಂಸು ಮಧ್ಯೇ 
ಪಟಲ ವಿಘಟನಂ ಸ್ಯಾತ್ತಾಂ ವಿನಾ ನೈವ ಜಂತೋಃ ।।
ಇತಿ ದೇವೀ ಸ್ತುತಿಂ ಪುಣ್ಯಂ ಸರ್ವ ಪಾಪ ಪ್ರಣಾಶನಮ್ ।
ಯಃ ಪಠೇತ ಶ್ರೂಣುಯಾದ್ವಾಪಿ ಸ ಮುಕ್ತೋ ನಾತ್ರ ಸಂಶಯಃ ।।
" ಸುಮಧ್ವ ವಿಜಯ ಪ್ರಮೇಯ ಫಲ ಮಾಲಿಕಾ "
ಇದು ಶ್ರೀ ನಾರಾಯಣ ಪಂಡಿತಚಾರ್ಯರಿಂದ ರಚಿತವಾದ 1008 ಶ್ಲೋಕವುಳ್ಳ ಸುಮಧ್ವ ವಿಜಯ ಪಾರಾಯಣದಿಂದ ತಮಗೆ ಸಿಕ್ಕ ಫಲವನ್ನು ಕೇವಲ 22 ಶ್ಲೋಕದಲ್ಲಿ ಮೂಲಕ್ಕೆ ಚ್ಯುತಿ ಬಾರದಂತೆ ಗ್ರಂಥದ ಸಾರ ಸರ್ವಸ್ವವನ್ನು ಅತ್ಯಂತ ಸತ್ವಯುತವಾಗಿ ಬಿಂಬಿಸುವ ಈ ಕೃತಿ.
ಶ್ರೀ ವಿಷ್ಣುತೀರ್ಥರ ಪಾಂಡಿತ್ಯಕ್ಕೂ, ಪ್ರತಿಭಾ ಸಾಮಥ್ಯಕ್ಕೂ ಹಿಡಿದ ಕೈಗನ್ನಡಿಯಾಗಿದೆ. 
ಆದಿ :
ಶ್ರೀ ಮಧ್ವ ವಿಜಯೇ ಸರ್ಗಾಃ 
ಷೋಡಶಾನುಕ್ರಮಾವಹಮ್ ।
ತೇಷಾಂ ಪ್ರಮೇಯಂ ವಕ್ಷ್ಯಾಮಿ 
ಸಂಗ್ರಹೇಣ ಫಲಂ ತಥಾ ।।
ಅಂತ್ಯ :
ಇತ್ತಂ ಸುಮಧ್ವ ವಿಜಯೇ 
ಪ್ರಮೇಯ ಫಲ ಮಾಲಿಕಾ ।
ರಚಿತ ಭಿಕ್ಷುಣಾ ಭೂಯಾ-
ದ್ವಿಷ್ಣುವಕ್ಷಃಸ್ಥಲಾಶ್ರಿತಾ ।।
" ಅಧ್ಯಾತ್ಮಾಮೃತ ರಸರಂಜನೀ "
49 ಶ್ಲೋಕಗಳುಳ್ಳ " ಆಧ್ಯಾತ್ಮಾಮೃತ ರಸರಂಜನೀ " ಯೆಂಬ ಕೃತಿಯಲ್ಲಿ ಮನೋದೋಷ ನಿರಸನ ಪ್ರಕರಣ: ಧ್ಯಾನ ಪ್ರಕರಣ ಮತ್ತು ಸರ್ವ ಸಮರ್ಪಣ ಪ್ರಕರಣಗಳ ಕುರಿತು ತಿಳಿಸುವ ಕೃತಿ. 
ಆದಿ :
ಪಾಹಿ ಪಾಂಡವಪಾಲ ಕಾಮಿತ 
ಪಾಪಿನಂ ಭವತಾಪತೋ ಏಹಿ 
ಮಾನಸಮಂದಿರಾಂಗಣ
ದೇಶಮೀಶ ನಮೋಸ್ತುತೇ ।
ಪುತ್ರಮಿತ್ರಕಲತ್ರಪೂರ್ವಕ 
ಮತ್ರಗಂ ನ ಪರತ್ರಗಂ 
ಯತ್ರ ಯತ್ರ ಗತಿರ್ಮಮೇಶ್ವರ 
ತತ್ರ ತೇsಸ್ತಿ ಪದಾಂಬುಜಮ್ ।।
ಅಂತ್ಯ : 
ದೋಷೇತಾsಪಿ ಮದೇಯಾ 
ವಾಗ್ಧಾರ್ಯೈವ ಧರಣೀಸುರೈಃ ।
ಶ್ಲಾಘ್ಯತೇ ಗುಣಲುಬ್ಧರ್ಹಿ 
ಕಂಟಕೇತಾಪಿ ಕೇತಕೀ ।।
" ಮುಕ್ತಮಾಲಾ " ( ಭಗವದ್ಗೀತಾ ಸಾರೋದ್ಧಾರ )
ಕೇವಲ 20 ಶ್ಲೋಕಗಳಲ್ಲಿ  - 18 ಅಧ್ಯಾಯಗಳ 700 ಶ್ಲೋಕಗಳ ಸಾರವನ್ನು ಶ್ರೀ ವಿಷ್ಣುತೀರ್ಥರು ಸಂಗ್ರಹಿಸಿ ಕೊಟ್ಟಿದ್ದಾರೆ. 
ಆದಿ : 
ಧರ್ಮಕ್ಷೇತ್ರೇ ಕುರುಕ್ಷೇತ್ರೇ 
ಸಮವೇತಾ ಯುಯುತ್ಸವಃ ।
ಮಾಮಕಾಃ ಪಾಂಡವಾಶ್ಚೈವ 
ಕಿಮಕುರ್ವತ ಸಂಜಯಃ ।।
ಅಂತ್ಯ :
ಅವಧೂತ ಶಿರೋರತ್ನ 
ಜಯತೀರ್ಥಾರ್ಯ ನಿರ್ಮಿತಾ ।
ಮುಕ್ತಮಾಲಾsನಸಂಧೇಯಾ 
ಪರತತ್ತ್ವ ಪರೀಕ್ಷಕೈಃ ।।
" ನ್ಯಾಯಸುಧಾ ಸ್ತೋತ್ರ "
ಶ್ರೀ ಜಯತೀರ್ಥರ ಮೇರು ಕೃತಿಯಾದ ಶ್ರೀಮನ್ನ್ಯಾಯಸುಧಾ ಗ್ರಂಥವನ್ನು ಕೊಂಡಾಡುವ 8 ಶ್ಲೋಕಗಳುಳ್ಳ ಸ್ತೋತ್ರ ರತ್ನವಿದು. 
ಶ್ರೀ ಟೀಕಾಕೃತ್ಪಾದರ ಗ್ರಂಥಗಳನ್ನು ಭಕ್ತಿ ಶ್ರದ್ಧೆಗಳಿಂದ ಅಧ್ಯಯನ ಮಾಡುವವರು ಈ ಭವ ಬಂಧನದಲ್ಲಿ ಪುನಃ ಬೀಳುವುದೇ ಇಲ್ಲವೆಂದು ಒತ್ತಿ ಹೇಳುವ ಕೃತಿ. 
ಆದಿ :
ಯದು ತಾಪಸಲಭ್ಯಮನಂತ 
ಭವೈ ಸ್ತದುತೋ 
ಪರತತ್ತ್ವಮಿಹೈಕ ಪದಾತ್ ।
ಜಯತೀರ್ಥ ಕೃತೌ ಪ್ರವಣೋ 
ನ ಪುನ ರ್ಭವ ಭಾಗ್ಭವತೀತಿ 
ಮತಿರ್ಹಿ ಮಮ ।।
ಅಂತ್ಯ : 
ದಶಮಾಂತ್ಯಪತಿಸ್ಸದನಂ ನ ಕದಾ 
ಪೃಥ ಮುಂಚತಿ ಯತ್ವ್ಸಯಮೇವ ರಸಾತ್ ।
ಜಯತೀರ್ಥ ಕೃತೌ ಪ್ರವಣೋ ನ 
ಪುನ ರ್ಭವ ಭಾಗ್ಭವತೀತಿ ಮತಿರ್ಹಿ ಮಮ ।।
" ಭಾಗವತ ಧರ್ಮ ಸ್ತೋತ್ರ "
8 ಶ್ಲೋಕಗಳುಳ್ಳ ಈ ಕೃತಿಯಲ್ಲಿ ಭಾಗವತ ಧರ್ಮದ ಹಿರಿಮೆಯನ್ನೂ; ಭಗವದ್ಭಕ್ತರ ಮಹಿಮೆಯನ್ನೂ ಅತ್ಯಂತ ಸುಂದರವಾಗಿ ಚಿತ್ರಿಸಿದ್ದಾರೆ ಶ್ರೀ ವಿಷ್ಣುತೀರ್ಥರು. 
ಆದಿ : 
ಯತ ಏವ ಇಹೈವ ವಸಂತಿ ಸುಖಂ 
ಸುಖತೀರ್ಥ ಸುತೀರ್ಥ ಸುವೃದ್ಧಿಪರಾಃ ।
ನಹಿ ಕಾಲ ಬಲಂ ಹರಿಪಾದ 
ರಜೋ ಧುತ ಪಾಪ 
ಗಣೇಷು ಜನೇಷು ಸದಾ ।।
ಅಂತ್ಯ : 
ಯದಮುತ್ರ ಯಮೋsಪಿ 
ಸಮಸ್ಸಖಿಭಿ ರ್ಭವತೀಶ 
ಪದಾನುಗಜಾತಯತಃ ।
ನಹಿ ಕಾಲ ಬಲಂ ಹರಿಪಾದ 
ರಜೋ ಧುತ ಪಾಪ -
ಗಣೇಷು ಜನೇಷು ಸದಾ ।।
" ಉಪದೇಶ ಪತ್ರ "
ಶ್ರೀ ವಿಷ್ಣುತೀರ್ಥರಿಗೆ ತಮ್ಮ ಶಿಷ್ಯರಾದ ಗೋಕಾವಿ ಅನಂತಾದ್ರೀಶರಲ್ಲಿ ಎಂಥಹಾ ಅಂತಃಕಾರಣವಿತ್ತು. 
ಸಾಧನೆಯ ಸತ್ಪಥದಲ್ಲಿ ಅವರನ್ನು ಸುರಕ್ಷಿತವಾಗಿ ಮುನ್ನಡೆಸುವ ಕಳಕಳಿಯಿತ್ತು ಎಂಬುದನ್ನು ಈ ಉಪದೇಶ ಪತ್ರದಿಂದ ವ್ಯಕ್ತವಾಗುತ್ತದೆ. 
ಇದು ಕನ್ನಡದಲ್ಲಿ ಬರೆಯಲ್ಪಟ್ಟ ಪತ್ರ. 
" ಆಜ್ಞಾ ಪತ್ರಮ್ "
ಉಪದೇಶ ಪತ್ರದಲ್ಲಿ ಉದ್ಹೃತವಾದ ಬಹುತೇಕ ವಿಷಯಗಳನ್ನೊಳಗೊಂಡ ಸಂಸ್ಕೃತದ " ಆಜ್ಞಾ ಪತ್ರ " ವನ್ನು ಸ್ವತಃ ಶ್ರೀ ವಿಷ್ಣುತೀರ್ಥರೇ ತಮ್ಮ ಶಿಷ್ಯರ ಮಾರ್ಗದರ್ಶನಕ್ಕಾಗಿ ಹೊರಡಿಸುತ್ತಿದ್ದರು. 
" ಆತ್ಮ ಸುಖಬೋಧಿನಿ ಪತ್ರಿಕಾ "
ಪರಮಾತ್ಮನ ಅನುಗ್ರಹದಿಂದಲೇ ಜೀವರಿಗೆ ಸ್ವರೂಪ ಸುಖ ಸಾಧ್ಯ ಎಂಬುದನ್ನು ನಿರೂಪಿಸಲು ಹೊರಟಿರುವ ಕೃತಿ. 
ಇದು ಕನ್ನಡದಲ್ಲಿ ರಚಿತವಾಗಿದೆ. 
" ಬಿಂಬಾರ್ಪಣ ವಿಧಿಃ "
ಸರ್ವ ಕರ್ಮಗಳನ್ನೂ ಬಿಂಬ ರೂಪಿ ಭಗವಂತನಿಗೆ ಸಮರ್ಪಿಸುವ " ಬಿಂಬಾರ್ಪಣ ವಿಧಿಃ " ಶ್ರೀ ವಿಷ್ಣುತೀರ್ಥರ ಸಂಸ್ಕೃತ ಭಾಷೆಯ ಸುಲಲಿತ ಶೈಲಿಯಲ್ಲಿ ರಚಿಸಿರುವ ಗದ್ಯ ಕೃತಿಯಾಗಿದೆ. 
" ಶ್ರೀಮನ್ನ್ಯಾಯಸುಧಾಟಿಪ್ಪಣಿ " ( ರಸ ರಂಜನೀ )
ಶ್ರೀಮನ್ನ್ಯಾಯಸುಧಾ ಗ್ರಂಥದ ಮೂಲದರ್ಥವನ್ನು ಸಜ್ಜನರಿಗೆ ತಿಳಿಯ ಪಡಿಸಲೆಂದೇ ಶ್ರದ್ಧೆಯಿಂದ ತಮ್ಮೆಲ್ಲಾ ಪ್ರತಿಭಾ ಸಾಮರ್ಥ್ಯವನ್ನು ಕ್ರೋಢೀಕರಿಸಿ " ಶ್ರೀಮನ್ನ್ಯಾಯಸುಧಾ ಟಿಪ್ಪಣಿ " ಯನ್ನು ರಚಿಸಿದ್ದಾರೆ. 
" ಷೋಡಶೀ "
ಅಮೂಲ್ಯವಾದ ಅನೇಕ ಪ್ರಮೇಯ ಪುಂಜಗಳಿಂದ ಕೂಡಿದ ಈ ದೀರ್ಘ ರಚನೆಯಲ್ಲಿ... 
ಬಂಧಕ - ಬಂಧಕ ನಿವೃತ್ತಿ - ಬಿಂಬ ಪ್ರತಿಬಿಂಬ ಭಾವ - ಬಿಂಬ ಸ್ಥಾಪನಾ - ಸ್ಥೂಲ ಶರೀರ ಸೃಷ್ಠಿ - ಅವಸ್ಥಾತ್ರಾಯ ನಿರ್ಮಾಣ - ಪ್ರಾಣ ವ್ಯಾಪಾರ,- -  ಭೋಜನ - ಇಂದ್ರಿಯ ವ್ಯಾಪಾರ - ತತ್ತ್ವಕಾರ್ಯ- ರಥಾದಿ - ಜಾಗೃತ - ಸ್ವಪ್ನ - ಸುಷುಪ್ತಿ - ಗಮನಾಗಮನ ಮತ್ತು ಮೋಕ್ಷ ಎಂಬ 16 ಪ್ರಕರಣಗಳಿದ್ದು " ಷೋಡಶೀ " ಯೆಂಬ ಹೆಸರನ್ನು ಅನ್ವರ್ಥಗೊಳಿಸಿದೆ. 
" ಚತುರ್ದಶೀ "
ಜೀವ ಹೋಮ - ಉಪನಯನ - ಸೂರ್ಯಗತಿ - ಆಯುರ್ಯಜ್ಞ - ವೇದಾಧ್ಯಯನ - ಭಿಕ್ಷಾಟನೆ - ಭೋಜನ - ಪಾಪಲೇಪ - ಜೀವ ಪ್ರಯಾಣ ಮಾರ್ಗ -  ಬ್ರಹ್ಮಯಜ್ಞ - ಶುದ್ಧಯಜ್ಞ - ಸ್ವರೂಪಯಜ್ಞ - ಸುಲಭ ಪೂಜೆ - ಗುರು ಪ್ರಸಾದ ಲಾಭ ಯೆಂಬ 14 ಪ್ರಕರಣಗಳೊಂದಿಗೆ ಅತ್ಯಮೂಲ್ಯವಾದ ಪ್ರಮೇಯಗಳನ್ನೊಳಗೊಂಡ ಕೃತಿ. 
" ತತ್ತ್ವ ಪ್ರಕಾಶಿಕಾ ಟಿಪ್ಪಣಿ " ( ಸುಮನೋರಂಜನೀ )
ಶ್ರೀಮಜ್ಜಯತೀರ್ಥರ ಕೃತಿ ರತ್ನವಾದ ತತ್ತ್ವಪ್ರಕಾಶಿಕೆಗೆ ಟಿಪ್ಪಣಿಯನ್ನು ಬರೆದು ಅದನ್ನು " ಸುಮನೋರಂಜನೀ " ಯೆಂದು ಕರೆದಿದ್ದಾರೆ. 
" ಧ್ಯಾನ ( ಸ್ನಾನ ) ವಿಧಿಃ "
ಧ್ಯಾನ ಸ್ನಾನ ನಿಷ್ಣಾತರಾದ ಶ್ರೀ ಅಡವಿ ಸ್ವಾಮಿಗಳು ಧ್ಯಾನ ಸ್ನಾನ ವಿಧಿಯನ್ನು ತಿಳಿಸುವ ಈ ಮಹತ್ವ ಪೂರ್ಣ ಕೃತಿಯನ್ನು ರಚಿಸಿ ಸಾಧಕರಿಗೆ ಉಪಕಾರ ಮಾಡಿದ್ದಾರೆ. 
" ಶ್ರೀಮದ್ಭಾಗವತ ಸಾರೋದ್ಧಾರ "
ಗೀತಾಸಾರೋದ್ಧಾರದಂತೆ ಶ್ರೀಮದ್ಭಾಗವತಸಾರೋದ್ಧಾರವೂ ಶ್ರೀ ಅಡವಿ ಸ್ವಾಮಿಗಳಿಂದ ರಚಿತವಾದ ಅಪೂರ್ವ ಕೃತಿ. 
ಪ್ರತಿಯೊಂದು ಶ್ಲೋಕಗಳಿಗೂ ಶ್ರೀಮದ್ಭಾಗವತದಲ್ಲಿ ಅಡಗಿರುವ ಅರ್ಥ ರತ್ನಗಳನ್ನು ಎತ್ತಿ ತೋರುವ ಅವರ ನಿರೂಪಣಾ ಕೌಶಲ್ಯ ಅತ್ಯದ್ಭುತವಾಗಿದೆ. 
" ಶ್ರೀಮದ್ಭಾಗವತಧೃತಸಾರಃ "
ಶ್ರೀಮದ್ಭಾಗವತಧೃತಸಾರದಲ್ಲಿ ಶ್ರೀ ಅಡವಿ ಸ್ವಾಮಿಗಳು ಶ್ರೀಮದ್ಭಾಗವತದ ಪ್ರತಿ ಸ್ಕಂದಕ್ಕೂ ಅರ್ಥ ವ್ಯಾಪ್ತಿಯನ್ನು ಸಮಗ್ರವಾಗಿ ಬಿಂಬಿಸುವ 3 ಶ್ಲೊಕಗಳಂತೆ 12 ಸ್ಕಂದಗಳಿಂದ 36 ಶ್ಲೋಕಗಳಲ್ಲಿ ಸಂಗ್ರಹಿಸಿ ಕೊಟ್ಟಿದ್ದಾರೆ. 
" ಬಿಂಬ ಸ್ತುತಿಃ "
68 ಶ್ಲೋಕಗಳುಳ್ಳ ಈ ಕೃತಿಯಲ್ಲಿ ಬಿಂಬ ರೂಪಿ ಪರಮಾತ್ಮನು ಜೀವಿಗಳ ವಿವಿಧ ಅಂಗಾಂಗಗಳಲ್ಲಿ; ವಿವಿಧ ರೂಪಗಳಲ್ಲಿ; ವಿವಿದ ರೂಪಗಳಿಂದ ನೆಲೆಸಿ ಹೇಗೆ ವಿಧ ವಿಧ ಕಾರ್ಯಗಳನ್ನು ನಿರ್ವಹಿಸುವನೆಂಬ ವಿಷಯ ತುಂಬಾ ಸೊಗಸಾಗಿ ವರ್ಣಿತವಾಗಿದೆ. 
" ಶ್ರೀ ಅಚ್ಯುತಾನಂತ ಸ್ತೋತ್ರಮ್ "
ಇದರಲ್ಲಿ 8 ಶ್ಲೋಕಗಳಿದ್ದು ಸರಳ ಸುಂದರವಾಗಿ ರಚಿತವಾಗಿದೆ. 
ಸಂಗೀತ ಬದ್ಧವಾದ ಈ ಕೃತಿಯಲ್ಲಿ ಪರಮಾತ್ಮನ ಗುಣಗಳನ್ನು ಮುಕ್ತಕಂಠದಿಂದ ಕೊಂಡಾಡಿದ ಕೃತಿ. 
" ಶ್ರೀ ಜಯತೀರ್ಥಾಷ್ಟಕಮ್ ಅಥವಾ ಶ್ರೀ ಜಯತೀರ್ಥ ಸ್ತೋತ್ರಮ್ "
ಈ ಕೃತಿಯಲ್ಲಿ ಹಾಸುಹೊಕ್ಕಾಗಿರುವ ಶ್ರೀ ಜಯತೀರ್ಥರ ಗುಣಗಾನ ಮತ್ತು ಅವರ ಮಹಿಮಾನ್ವಿತ ವ್ಯಕ್ತಿತ್ವವನ್ನು ಸಮರ್ಥವಾಗಿ ಬಿಂಬಿಸಿದ್ದಾರೆ. 
" ಅವತಾರ ಸಮಾಪ್ತಿ "
ಶ್ರೀ ಕೃಷ್ಣನ ಜಯಂತೀಯಂದು ಅವತರಿಸಿ; ಶ್ರೀ ಕೃಷ್ಣ ಕೃಪೆಗೆ ಪಾತ್ರರಾಗುವ ಉತ್ಕೃಷ್ಟವಾದ ಕಾರ್ಯಗಳನ್ನು ಮಾಡಿ; ನಂಬಿ ಬಂದ ಶಿಷ್ಟ ಜನರಿಗೆ ಶ್ರೇಷ್ಠವಾದ ಶ್ರೀ ಕೃಷ್ಣ ಪಥವನ್ನು ತೋರಿಸಿ; ಭಕ್ತ ವೃಂದದ ಇಷ್ಟಾರ್ಥವನ್ನು ಸಲ್ಲಿಸಲು; ಶ್ರೀ ಕೃಷ್ಣ ಸಖರೂ, ವೈಷ್ಣವೋತ್ತಮರೂ ಆದ ಶ್ರೀ ರುದ್ರದೇವರ ಜಯಂತೀ ದಿನವಾದ ಶಿವರಾತ್ರಿಯೆಂದು ಶ್ರೀ ವಿಷ್ಣುತೀರ್ಥರು ಕೃಷ್ಣಾ ನದೀ ತೀರದಲ್ಲಿರುವ ಮಾದನೂರಿನಲ್ಲಿ ವೃಂದಾವನಸ್ಥರಾದರು. 
ಸಾರ ಗ್ರಂಥಗಳ ರಚಿಸಿ 
ಸತ್ಯವರ ತೀರ್ಥ । ಕು ।
ಮಾರರೆಂದೆನಿಸಿ ಸುಕ್ಷೇತ್ರ 
ಮಾದನೂರೊಳು ತನುವಿರಿಸಿ ।
ಹರಿಪದವ ಧ್ಯಾನಿಸಿ ।
ಸೇರಿದವರಘ ದೂರ ಮಾಡುವ ।। 
ಚಾರು ಕೃಷ್ಣಾ ತೀರ । 
ಕಾರ್ಪರ ।
ನಾರಸಿಂಹನ ಒಲುಮೆ ಪಡೆದ । ಅ ।
ಪಾರ ಮಹಿಮರ ಚಾರುಚರಣವ ।।
ಆಚಾರ್ಯ ನಾಗರಾಜು ಹಾವೇರಿ 
ಗುರು ವಿಜಯ ಪ್ರತಿಷ್ಠಾನ
****.
ವಿಜಯಾಶ್ರಮ, ಸಿರವಾರ
***********

ಶ್ರೀ ಐಜಿ ಆಚಾರ್ಯರ ಮಕ್ಕಳಾದ ಶ್ರೀ ಗೋಪಾಲ ಕೃಷ್ಣ ಆಚಾರ್ಯರು ಬಹು ದೊಡ್ಡ ಪಂಡಿತರು. ಅಕಸ್ಮಾತ್ ಆಗಿ ಅವರಿಗೆ ವಿಷಮಜ್ವರ ಅಪಮೃತ್ಯು ಬಂದೊದಗಿದೆಂದು ಶ್ರೀ ಐಜಿ ಆಚಾರ್ಯ ರಿಗೆ ತಿಳಿಯಿತು.ಸಕಲ ಔಷಧ ಉಪಚಾರ ನಡೆಯುತ್ತದೆ.
ತಮ್ಮ ಬಳಿ ಇದ್ದ ೩/೪ ಜನ ಶಿಷ್ಯರಿಗೆ ಕೆಲ ಮಂತ್ರ ಜಪವನ್ನು ಮಾಡಲು ಆಜ್ಞೆಯನ್ನು ಮಾಡುತ್ತಾರೆ. ಅದರಲ್ಲಿ ನರಸಿಂಹ ಮಂತ್ರ ಜಪ ಸಹ.ಯಾರು ಅದನ್ನು ಮಾಡಲು ಮುಂದೆ ಬರುವದಿಲ್ಲ. ನರಸಿಂಹ ಮಂತ್ರ ಮೃತ್ಯು ನಿವಾರಕ ಅಂತಹ ಉಗ್ರ ಮಂತ್ರ ಜಪ ಮಾಡಲು ಯಾರು ಮುಂದೆ ಬರುವದಿಲ್ಲ.
ಜ್ಞಾನಿಗಳು ಮಹಾ ತಪಸ್ವಿಗಳು ಆದ ಅಡವಿ ಆಚಾರ್ಯರು ಗುರುಗಳ ಅಪ್ಪಣೆ ಆದರೆ ಜಪವನ್ನು ಮಾಡುತ್ತೇನೆ ಅಂತ ವಿಜ್ಞಾಪನೆ ಮಾಡಿಕೊಳ್ಳಲು
ಗುರುಗಳ ಆಜ್ಞೆ ಪ್ರಕಾರ ತಮ್ಮ ಗುರುಪುತ್ರನ ಅಪಮೃತ್ಯು ನಿವಾರಣೆ ಗಾಗಿ ಶ್ರೀ ನರಸಿಂಹ ಮಂತ್ರ ಜಪ ಆರಂಭಮಾಡುತ್ತಾರೆ*.
ಇತ್ತ ಶ್ರೀ ಐಜಿ ಆಚಾರ್ಯರು ಸಹ ತಮ್ಮ ಉಪಾಸ್ಯ ಮೂರ್ತಿ ಯಾದ ಶ್ರೀ ಗೋಪಾಲ ಕೃಷ್ಣ ನ ಬಳಿ ಪ್ರಾರ್ಥನೆ ಮಾಡಿಕೊಳ್ಳುವರು
ವಿನಯದಲಿ ವಿಜ್ಞಾಪನೆ ಮಾಡುವೆ ಈ ತನಯನ್ನ| ಪರಿಪಾಲಿಸುವದೆಂದು |
... ನೀನೆಂದು ನಾಮಗಳು ರಚಿಸುತಾ|
ಬಾಳಲಿ ಬಹುಕಾಲ ಗೋಪಾಲ ದಾಸ|
ಈ ಸುತನಯ ಎನ್ನತೆರ ನಿನ್ನವನೆಂದರಿತು|
ವಾಸುದೇವ ವಿಠ್ಠಲ ಕಾಪಾಡೋ ಕರುಣಿ||

 ಅಡವಿ ಆಚಾರ್ಯರ ಮಂತ್ರ ಜಪ ಮುಗಿಯಿತು. ಗುರುಪುತ್ರರ ಅಪಮೃತ್ಯು ದೂರಾಯಿತು.
ಇತ್ತ ಶ್ರೀ ಗೋಪಾಲ ಕೃಷ್ಣ ನಿಗೆ ಪಂಚಾಮೃತ ಮಾಡಬೇಕೆಂದು ಸಕಲ ಸಾಮಗ್ರಿಗಳನ್ನು ಸಿದ್ದ ಪಡಿಸಿದ್ದಾರೆ. ಒಂದು ಕಡೆ ಐಜಿ ಆಚಾರ್ಯರು ಅಹ್ನೀಕ ಮಾಡುತ್ತಾ ಕುಳಿತಿದ್ದಾರೆ.
ಮಧ್ಯಾಹ್ನ ದ ಸಮಯ..
ವೈಶಾಖ ಮಾಸ.ಉಗ್ರ ಮಂತ್ರ ಜಪವನ್ನು ಮುಗಿಸಿ ಶ್ರೀ ಅಡವಿ ಆಚಾರ್ಯರು ದೇವಾಲಯಕ್ಕೆ ಬರುತ್ತಾರೆ. ಹೊಟ್ಟೆ ಯಲ್ಲಿ ಸಂಕಟ.ಬಹಳ ಹಸಿವೆ ಆಗಿದೆ.
ಸುತ್ತಲೂ ನೋಡಿದಾಗ ಒಂದು ಕಡೆ ವಿಶಿಷ್ಟವಾದ ರೀತಿಯಲ್ಲಿ ಜೋಡಿಸಿದ ಪಂಚಾಮೃತ ಸಾಮಾನುಗಳನ್ನು ಕಾಣುತ್ತಾರೆ.
ಹಸಿವೆಯ ಭರದಲ್ಲಿ ಎಲ್ಲಾ ಪದಾರ್ಥಗಳನ್ನು ಹಾಲು,ಜೇನು,ಮೊಸರು,ತುಪ್ಪ, ಸಕ್ಕರೆ,ಬಾಳೆ ಹಣ್ಣುಗಳನ್ನು ಶ್ರೀ ಗೋಪಾಲ ಕೃಷ್ಣ ನಿಗೆ ಸಮರ್ಪಣೆ ಮಾಡಿ ಬಿಂಬ ಮೂರುತಿಯಾದ ಶ್ರೀ ಕೃಷ್ಣ ನಿಗೆ ಅಂತರಂಗದಲ್ಲಿ ಪಂಚಾಮೃತ ಅಭಿಷೇಕ ಮಾಡಿದರು.
ಶ್ರೀ ಕೃಷ್ಣಾರ್ಪಣಮಸ್ತು ಎಂದು ಹೇಳಿ
ನಂತರ ಎಲ್ಲಾ ಸ್ವೀಕರಿಸಿ ಶ್ರೀ ಅಡವಿ ಆಚಾರ್ಯರು ಒಂದು ಕಡೆ ಮಲಗಿದರು.
ಇತ್ತ ಜಪ ವಾದ ಮೇಲೆ ಐಜಿ ಆಚಾರ್ಯರು ಬಂದು ನೋಡುತ್ತಾರೆ. 
ತಮ್ಮ ಜ್ಞಾನ ದೃಷ್ಟಿಯಿಂದ ಶ್ರೀ ಹರಿಗೆ ಪಂಚಾಮೃತವಾಗಿದ್ದು ತಿಳಿದು ,ದೇವರಿಗೆ ಅಲಂಕಾರ ನೈವೇದ್ಯ ಮಾಡಿ ಮಂಗಾಳಾರುತಿ ಮಾಡಲು ಆರಂಭಿಸಿದರು.
ಸುತ್ತ ಇದ್ದ ಶಿಷ್ಯರಿಗೆ ಆಶ್ಚರ್ಯ!! ಶ್ರೀ ಗೋಪಾಲ ಕೃಷ್ಣ ನಿಗೆ ಪಂಚಾಮೃತ ಆಗಿಲ್ಲ. ಅವಾಗಲೇ ನೈವೇದ್ಯ ಮಂಗಳಾರತಿ ಎಂದು ಗುಸುಗುಸು ಮಾತನಾಡುತ್ತಾ ಮನದಲ್ಲಿ ಸಂಶಯಪಡುತ್ತಾರೆ.
ಗಂಟೆ ಯ ಸಪ್ಪಳದಿಂದ ಶ್ರೀ ಅಡವಿ ಆಚಾರ್ಯರು ಎದ್ದು ಕುಳಿತು ಕಣ್ಣಿಗೆ ನೀರು ಹಚ್ಚಿ ಕೊಂಡು ದೇವರ ಎದುರಿಗೆ ಬಂದು ನಿಲ್ಲುತ್ತಾರೆ.
ಶ್ರೀ ಐಜಿ ಆಚಾರ್ಯರು ಮಂಗಳಾರತಿ ಮಾಡುವ ಸಮಯದಲ್ಲಿ ಶ್ರೀ ಗೋಪಾಲ ಕೃಷ್ಣನ ಬಾಯಿಯಿಂದ ಪಂಚಾಮೃತ ಹೊರಬರುವದು ಎಲ್ಲಾರಿಗೆ ಕಾಣುತ್ತದೆ..
ಆ ನಂತರ ಪಂಚಾಮೃತ ಸ್ವೀಕಾರ ಮಾಡಿ ಎಲ್ಲಾರಿಗು ಗುರು ಶಿಷ್ಯರ ಮಹಿಮೆ ತಿಳಿಯಿತು.
ಹೀಗೆ ಭಗವಂತನು ತನ್ನ ಭಕ್ತರ ಒಳಗೆ ನಿಂತು ಮಾಡುವ ಲೀಲೆ ಬಹು ವಿಚಿತ್ರ.
ಐಜಿ ಆಚಾರ್ಯ ರೆ ಮುಂದೆ ಯತಿ ಆಶ್ರಮ ಸ್ವೀಕರಿಸಿ ಶ್ರೀ ವ್ಯಾಸ ತತ್ವಜ್ಞ ರೆಂದು ಕರೆಯಲ್ಪಡುವ ರು
ಅವರ ಶಿಷ್ಯರು ಆದ 
*ಶ್ರೀ ಅಡವಿ ಆಚಾರ್ಯರು ಮುಂದೆ ಪುರಂದರ ದಾಸರ ಗೋವಿಂದ ನಮೋ ಎನ್ನುವ ಕೀರ್ತನೆಯಲ್ಲಿ ಬರುವ
 ಮಂಚ ಬಾರದು 
ಮಡದಿ ಬಾರದು 
ಕಂಚು ಕನ್ನಡಿ ಬಾರದು ಎನ್ನುವ ನುಡಿಯನ್ನು ಕೇಳಿ ಸಮಸ್ತ ಸಂಪತ್ತು ತ್ಯಜಿಸಿ ವಿರಾಗಿಗಳಾಗಿ ಯತಿ ಆಶ್ರಮ ಸ್ವೀಕಾರ ಮಾಡಿ ಶ್ರೀ ವಿಷ್ಣುತೀರ್ಥರೆಂದು ಪ್ರಸಿದ್ಧಿ ಯಾದ ಇಂದಿನ ಆರಾಧನಾ ಮಹೋತ್ಸವ ದ ಕಥಾ ನಾಯಕರು...
ಇಂತಹ ಗುರುಗಳ ಆರಾಧನ ದಿನದಂದು ಅವರ ಬಳಿ  
ನಮಗೆ ಸಹ ಜೀವನದಲ್ಲಿ ಬರುವ ವಿಪತ್ತು ಗಳನ್ನು ಕಳೆದು,
ಶ್ರೀ ಹರಿ ವಾಯು ಗುರುಗಳ ಬಳಿ ನಮ್ಮ ಮನಸ್ಸು ನಿಲ್ಲುವ ಹಾಗೇ ಮತ್ತು ಅವರ ಸೇವೆಯನ್ನು ಮಾಡುವ ಭಾಗ್ಯ ಕೊಡಿಸಿರಿ ಎಂದು ಕೇಳಿಕೊಳ್ಳುತ್ತಾ🙏
ಶ್ರೀ ವಿಷ್ಣು ತೀರ್ಥ ಗುರುಗಳ ಅಂತರ್ಯಾಮಿಯಾದ ಆ ನಾರಾಯಣ ನಿಗೆ ಈ ಪುಟ್ಟ ಲೇಖನ ಮಾಲೆ ಸಮರ್ಪಣೆ ಮಾಡುತ್ತಾ ಶ್ರೀ ಕೃಷ್ಣಾರ್ಪಣಮಸ್ತು🙏
ಕೆಳಗಡೆ ಶ್ರೀ ವಿಷ್ಣು ತೀರ್ಥ ಗುರುಗಳ ವೃಂದಾವನ ಚಿತ್ರ.
🙏🙏🙏🙏🙏
ವರದ ವಿಷ್ಣು ತೀರ್ಥ|
ನೀ ಕೊಡು ಪುರುಷಾರ್ಥ||

🙏ಅ.ವಿಜಯವಿಠ್ಠಲ🙏
************

ಮಾದನೂರು ಶ್ರೀವಿಷ್ಣುತೀರ್ಥರು ದ್ವೈತಸಿದ್ಧಾಂತದ ಮಿನುಗುತಾರೆ. ಮಹಾನ್ ತಪಸ್ವಿಗಳು. ರುದ್ರಾಂಶರು. ಅಪರೋಕ್ಷ ಜ್ಞಾನಿಗಳು. ಲೌಕಿಕ ಸಂಪತ್ತು ತೃಣೀಕರಿಸಿದವರು.   
ವಿರಕ್ತ ಶಿಖಾಮಣಿಗಳು. ಅಡವಿಯಲ್ಲಿದ್ದು ಶಾಸ್ತ್ರ ಅಧ್ಯಯನ ಅಧ್ಯಾಪನ ಮಾಡಿದರು.ಅನೇಕ ಗ್ರಂಥಗಳನ್ನು ರಚಿಸಿದರು. 
ಶ್ರೀಅಡವಿ ಆಚಾರ್ಯರೆಂದೇ ಪ್ರಸಿದ್ಧರಾದವರು 

 ಶಿಷ್ಯರ, ಸಾತ್ವಿಕರ ಉದ್ಧಾರ, ಪರಮ ಪುರುಷಾರ್ಥ ಅವರ ಗುರಿ.ಶಿಷ್ಯರ ಸದಾ ಹಿತಾಚಿಂತಕರು. 

ಒಮ್ಮೆ ಅವರು ಊರಲ್ಲಿ ಇದ್ದಿರಲಿಲ್ಲ, ದೂರದಲ್ಲಿದ್ದರು. 
ಆಗ ಶಿಷ್ಯರ ಹಿತಬಯಸಿ ಪತ್ರ ಬರೆಯುತ್ತಾರೆ. 

ಪ್ರೀತಿಯಿಂದ ತುಂಬಿದ ಉಪದೇಶ. ಆಜ್ಞೆಗಿಂತ ಹೆಚ್ಚೇ ಸರಿ. 

         ಅದಕ್ಕಾಗಿ ಆಜ್ಞಾಪತ್ರವೆಂದು ಸುಪ್ರಸಿದ್ಧ.

ವೇಳೆಯ ಸದುಪಯೋಗ, ಸಾಧನೆಯ ಬಗೆ ಹೇಗೆ ಎಂದು ಹೇಳುತ್ತಾರೆ. ಸುವರ್ಣಾಕ್ಷರದಲ್ಲಿ ಬರೆದಿಡಬೇಕು. ಅಷ್ಟೊಂದು ಅಮೂಲ್ಯ ಪತ್ರ.

ಶ್ರೀವಿಷ್ಣುತೀರ್ಥರು ಉತ್ತರ ಕರ್ನಾಟಕದ ಆಡುಭಾಷೆಯಲ್ಲಿ ಅಂತಃಕರಣ ತುಂಬಿ ಆಡಿದ ಮಾತುಗಳು -

ಬೆಳಿಗ್ಗೆ ಸೂರ್ಯೋದಯಕ್ಕೆ ೨ ಗಂಟೆ ಮೊದಲು ಅಂದರೆ ಪ್ರಾತಃ ೪ ಗಂಟೆಗೆ ಎದ್ದೇಳಿ. 

ಸುಮಾರು ಎರಡೂವರಿ ಗಂಟೆ ಶಾಸ್ತ್ರ ಅಧ್ಯಯನ ಮಾಡ್ರಿ ,  ನಂತರ ಓದಿದ್ದರ ಚಿಂತನಾ ಮಾಡ್ರಿ. 

ಮುಂದೆ ಬೆಳಿಗ್ಗೆ ೬ ರಿಂದ ಸಂಜೆ ೬ರ  ವರೆಗೆ ೧೨ ಗಂಟೆ ಹಗಲು.

 ಸ್ನಾನ, ಸಂಧ್ಯಾವಂದವೆ, ಜಪ, ಪೂಜೆಗಾಗಿ ಎರಡೂವರೆ ಗಂಟೆ.  

ಭೋಜನ, ಅಲ್ಪವಿರಾಮ ಒಂದೂವರಿಗಂಟೆ . 

ಉಳಿದ ಎಂಟು ಗಂಟೆ ಶ್ರವಣ, ಮನನ, ಅಧ್ಯಯನಾದಿಗಳನ್ನ  ಮಾಡಿರಿ. 

ಆಮೇಲೆ ಸಾಯಂಸಂಧ್ಯಾ ಜಪತಪಾದಿ.  ರಾತ್ರಿ ಭೋಜನಾದಿ. 

ಜೊತೆಗೆ ಮೂರು ಗಂಟೆ ಪುಸ್ತಕ ಗ್ರಂಥ   ಅವಲೊಕನ. 

ನಿದ್ರೆ ಬಂದು ಕಣ್ಣು ಮುಚ್ಚುವವರೆಗೆ. ನಂತರ ಅವಶ್ಯವಿದ್ದಷ್ಟು ಸುಮಾರು ಆರುಗಂಟೆ ನಿದ್ರೆ ಸಾಕು.

ಹೀಗೆ ತಮ್ಮ ಯೋಗ್ಯತಾನುಸಾರ ವ್ಯಾಸಂಗ ಮಾಡಬೇಕು. 

ಸತತ ಅಧ್ಯಯನ ಶೀಲರಾಗಿರಿ.

ಏನು ಮಾಡಲು ದೇವರು ಈ ದೇಹವನ್ನು ಕೊಟ್ಟಿದ್ದಾನೋ ಅದನ್ನು ಸರಿಯಾಗಿ ಮಾಡಿ.

ನಿರಂತರ ಪ್ರಯತ್ನವಿರಲಿ. 
ನೀವು ಮಾಡುವ ಪ್ರತಿಯೊಂದು ಕೆಲಸವನ್ನು ದೇವರಕೆಲಸ ಎಂದೇ ಭಾವಿಸಿ. ಪ್ರತಿಫಲಾಪೇಕ್ಷೆ ಬೇಡ. 

ಸಿಕ್ಕಿದ್ದರಲ್ಲಿ, ಸಿಕ್ಕಷ್ಟರಲ್ಲಿ ಸಂತುಷ್ಟರಾಗಿರಿ. ಸಂತೃಪ್ತರಾಗಿರಿ. ಮಾನವ ಜನ್ಮ ಬಂಗಾರದ ಅವಕಾಶ.  ಭರತಖಂಡ ಸಾಧನ ಭೂಮಿ.   ವ್ಯರ್ಥ ಮಾಡಬೇಡಿ.  

ಪಾರಮಾರ್ಥಿಕ ಸಾಧನೆ ಸದಾ ಮಾಡಿ.  ಬೆಳೆಯೊಡನೆ ಕಳೆ. ಲೌಕಿಕ ತಾನೇ ಬಂದೀತು.

ಪರರಲ್ಲಿ ಅಶನ, ವಸನ, ಮಾನ, ಮರ್ಯಾದೆ ಇವೆಲ್ಲ ಅನರ್ಥ. ಅಲ್ಲ ಪುರುಷಾರ್ಥ.

ಕಿಂಚಿತ್ ಓದಿ ಅಹಂ ಪಡಬೇಡಿ. ನನ್ನಂಥ ಪಂಡಿತ ಇನ್ನೊಬ್ಬನಿಲ್ಲ ಎನ್ನಬೇಡಿ. ವಂಚಕತನ ಬೇಡ.  

ಜನರ ಮೆಚ್ಚಿಸುವ ಡಂಬಾಚಾರ ಬೇಡ. ಜನಾರ್ದನನ ಮೆಚ್ಚಿಸುವ ಸದಾಚಾರ ಇರಲಿ.

ಅಧರ್ಮ ಅವನತಿಗೆ ದಾರಿ.
ಧರ್ಮ ಉನ್ನತಿಗೆ ಮಾರ್ಗ.

ಸಂಸಾರ ಅಸಾರ. 
ದಾಟುವುದು ಕಠಿಣ. 

ಈ ಕಲಿಯುಗದಲ್ಲಿ ವಿಘ್ನಗಳೇ ಹೆಚ್ಚು.

ಸಜ್ಜನ ಸಂಗ ಬೇಕು. 
ಗುರು ಹಿರಿಯರಲ್ಲಿ ಭಕ್ತಿ  ಆದರ ಮಾಡಬೇಕು. 

ಸ್ವೋತ್ತಮ ದ್ರೋಹ ಬೇಡ.

ಸಂಸಾರದಲ್ಲಿ ತಾಪತ್ರಯಗಳು ಸಹಜ.

ಹೆಂಡತಿ ಮಕ್ಕಳು ಮನೆ ಮಠಗಳಲ್ಲೇ ಆಸಕ್ತರಾಗಿ ಮುಳುಗಬೇಡಿ.

ಜೀವನ ವ್ಯರ್ಥ. ಜೀವನ ಪರ್ಯಂತ ಚಿಂತಾಸಂತಾಪ ಮಗ್ನರಾಗುವದು, ಸಾಧನೆಯಿಲ್ಲದೇ   ಪುನಃ ಪುನಃ ಜನನ ಮರಣ ಪಾತ್ರರಾಗಬೇಡಿ.

ಉಪದ್ರವಗಳಿಗೆ ಕಲ್ಲಾಗಿ ನಿಲ್ಲಬೇಕು.  ತನ್ನ ದೋಷ, ತನ್ನವರ ದೋಷ ತಿಳಿದುಕೊಂಡು ತನ್ನ ಉದ್ಧಾರ ಮಾಡಿಕೊಳ್ಳುವವನು ಬಲು ಜಾಣ. 

ಹರಿ ವಾಯು ಗುರು ಭಕ್ತಿ ಮಾಡಬೇಕು. ಮಧ್ವಾಚಾರ್ಯರ  ಶಾಸ್ತ್ರ ನಿರತರಾಗಿರ ಬೇಕು.

 ಅದರಿಂದಲೇ ಅನಿಷ್ಟ ನಿವೃತ್ತಿ. ಇಷ್ಟ ಪ್ರಾಪ್ತಿ.

ಕಲಿಯುಗ ಬಾಧೆ ಎಂಬೋದೇ ರೋಗ.  

ಶ್ರೀ ಮದಾಚಾರ್ಯರ ಸರ್ವಮೂಲಗ್ರಂಥಗಳೇ ದಿವ್ಯ ಔಷಧ, ಮೃಷ್ಟಾನ್ನ ಭೋಜನ. ಆದರದಿಂದ ನಿರಂತರ ಸೇವಿಸಬೇಕು."
ಇದು ಇಷ್ಟೆಲ್ಲ ಕಳಕಳಿಯಿಂದ  ಶ್ರೀವಿಷ್ಣುತೀರ್ಥರು ಶಿಷ್ಯರಿಗೆ ಉದ್ಧಾರಕ್ಕಾಗಿ ಬರೆದ ಪತ್ರ. 

ಆಜ್ಞಾ ಪತ್ರದ ಸಂಕ್ಷಿಪ್ತ ಸಾರ.

ಅವರ ಶಿಷ್ಯರಾಗೋಣ. ಆಜ್ಞಾಪತ್ರದಂತೆ ನಡೆಯಲು ಯತ್ನಿಸೋಣ.

ಹರಿವಾಯುಗುರುಗಳ ಅನುಗ್ರಹ ಪಡೆಯೋಣ.


       🙏🙏 ಶ್ರೀ ಕೃಷ್ಣಾರ್ಪಣಮಸ್ತು🙏🙏
**************

year 2021


*
ನೇರವಾಗಿ ನದಿಯ ನೀರಿಗೇನೇ ಬಾಯಿಹಚ್ಚಿ ನೀರು ಕುಡಿಯುತ್ತಿದ್ದ ಒಂದು ಸಂದರ್ಭದದಲ್ಲಿನ 
  "ಕಿಂ ಪಶು ಪೂರ್ವದೇಹೇ" ಎಂಬ ಎಚ್ಚರಿಕೆಯು  ಹಿಂದಿನಜನ್ಮಗಳ ನೆನಪಿಗೆ ಕಾರಣವಾಗಿ ಮಹಾನುಭಾವರಾದ ಶ್ರೀಮತ್ಟೀಕಾಕೃತ್ಪಾದ ರ ಉದಯಕ್ಕೆ  ಕಾರಣವಾಯಿತು. ಅದರಂತೆ ಒಬ್ಬ ಹಾದಿಯಲ್ಲಿ ಹೋಗುವ ದಾಸಯ್ಯನ ಬಾಯಿಂದ-- 
"ಮಂಚ ಬಾರದು ಮಡದಿ ಬಾರದು ಕಂಚು ಕನ್ನಡಿ ಬಾರದು|"  ಎಂಬ ಪದವು ಮನಸ್ಸಿನಲ್ಲಿ ಒಂದು ಮುಖ್ಯವಾದ ಬದಲಾವಣೆಯಾಗುವ ಮೂಲಕ ಮಹಾನುಭಾವರಾದ ಶ್ರೀವಿಷ್ಣುತೀರ್ಥರ ಉದಯಕ್ಕೆ ಕಾರಣವಾಯಿತು.
 ನೋಡಿ  ಈಗ ಅಷ್ಟು ಶಕ್ತಿಯಂತೂ ನಮಗಿಲ್ಲದಿದ್ದರೂ ಕೊನೆಪಕ್ಷ ನಾವು ನಮ್ಮ ಜೀವನದಲ್ಲಿ ಅನೇಕ ಹಿರಿಯರಿಂದ ಬೈಯ್ಯಿಸಿಕೊಂಡದ್ದು ಮತ್ತು ಸಾಕಷ್ಟು ಪದಪದ್ಯಗಳನ್ನು ಕೇಳಿ ಏನೋ ದೊಡ್ಡದಾಗಿ ತಾಳತಟ್ಟಿದ್ದೂ ಉಂಟು. ಆದರೆ ನಮ್ಮಲ್ಲಿ ಆದ ಬದಲಾವಣೆ ಮಾತ್ರ ಶೂನ್ಯ. 
***********


***

No comments:

Post a Comment