Thursday 1 August 2019

vedesha teertharu mannur matha uttaradi mutt bidi sanyasi karteeka shukla shashti ವೇದೇಶತೀರ್ಥರು

shri gurubyO namaha, hari Om...





info from sumadhwaseva.com--->

kArthIka shuddha shashTi is the ArAdhanE of shri vEdEsha tIrtharu of uttarAdi maTa.

shri vEdEsha tIrtharu...

Parampare: biDi sanyAsigaLu in uttarAdi maTa
gurugaLu: shri raghUtama tIrtharu
shishyaru: shri yAdavArayaru, shri bidarahaLLi srInivAsA tIrtharu and others
brindAvana: manUr next to mAdhava tIrthara brindAvana.


ಶ್ರೀ ವೇದೇಶ ಗುರುಂ ವಂದೇ ಯಾದವಾರ್ಯಗುರೋರ್ಗುರುಮ್ |
ಛಾಂದೋಗ್ಯಭಾಷ್ಯಸಟ್ಟೀಕಾಕರ್ತಾರಮಹಮಾದರಾತ್ |
श्री वेदेश गुरुं वंदे यादवार्यगुरोर्गुरुम् ।
छांदोग्यभाष्यसट्टीकाकर्तारमहमादरात् ।

sri vEdEsha gurum vandE yaadavaaryagurOrgurum |
ChaandOgyabhaaShyasaTTIkaakartaaramahamaadaraat |


Sri Vedesha Tirtharu is the direct disciple of Sri Raghottama Tirtharu of Uttaradimutt,

He is the vidya Gurugalu of Sri Yadavaryaru, who is also his brother
His Vrundavana is at Manuru.
Poorvashrama name – Seenappa Nayak son of  Raghappa Nayak
Even though he took ashrama from Raghottama Tirtharu, he did not took the peeta of Uttaradhi mutt.  That is why his name is not found in the Parampare list of Uttaradimutt. Since he was a bidi sanyasi, i.e., without any Mutt Peetadhipathitwa,  he never called himself Thirtharu. It is very clearly written on the title of the book that this was written by VEDESHA BHIKSHU and not TEERTHARU. .


He had taught the following Shloka to his Shishyaru Sri Yadavaryaru :

agratO naarasimhashcha, pruShThatO gOpInaMdanaH |
ubhayoH pArshvayOrAstAM sasharau rAmalakShmaNau |

Lakshmi Narasimha is protecting me from front, Krishna is protecting me from behind, Rama and lakshmana are protecting me from either sides.He was chanting the shloka all the times.

Once, when Yadavaryaru was a trader, who was dealing gold ornaments,  some thieves who came to attack Yadavaryaru for theft of the gold and jewellery of the pooja items  which he was carrying,  ran away.  They had seen four strong men protecting him, which Yadavaryaru himself could not see.    As the thieves who came to rob him ran away, some people asked him as to who are all behind him.   Then he went to his gurugalu and asked him as to who are all there near him.  Then gurugalu told him that it is because of the importance of the shloka which he was chanting Narasimha devaru, and krishna roopi paramathma were protecting him from front and back and rama and lakshma were protecting on his sides.  Thus he was protected on all the sides.

Grantha by Sri Vedesha Tirtharu :=   Chandogya Bhashya Teeka

Some of the stotras where Sri Yadavaryaru, the famous Commentarian on Bhagavatha has praised Sri Vedesha Tirtharu can be found in the attachment :-


Shlokas on Vedesha Tirtharu – Click


***********


shrI vEdEsha tIrtharu was the direct disciple of Sri raghUtama tIrtharu. He was engrossed in teaching at the vidyApITa established by shri raghUtama tIrtharu at manUr. He was so dedicated to teaching that he did not adorn the pITa and remained a bidi sanyAsigaLu.


He was the vidya Gurugalu of Sri Yadavaryaru, who was also his pUrvAshrama brother and shri bidarahaLLi srInivAsAchAryaru, who was another brother's son in pUrvAshrama. 


Poorvashrama name – Seenappa Nayak, son of Raghappa Nayak


He was a great scholar and has written several works. Granthas by Sri Vedesha Tirtharu:


1. chAndogya upanishath bhAshya TIka
2. kATakOpanishath bhashya TIka
3. aitrEya upanishath bhAshya TIka
4. pramANa lakshaNa TIka
5. vishNu tatva virNirNaya TIka
6. kathAlakshaNa TIka
7. pramANapaddathi TIka


shri vEdEsha tIrtha gurvAntargata, bhArathiramaNa mukhyaprANantargata, sItA pate shri rAmachandra dEvara pAdAravindakke gOvindA gOvindA...   

shri krishNArpaNamastu...
[7:44 AM, 11/13/2018] +91 95358 37843: ಶ್ರೀ ವೇದೇಶತೀರ್ಥರ ಆರಾಧನೆ

ವಿರಕ್ತ ಶಿಖಾಮಣಿಗಳು, ಜ್ಙಾನಿಗಳೂ, ತಪಸ್ವಿಗಳೂ, ಸಾಧಕರೂ, ರಘೂತ್ತಮತೀರ್ಥ ಶ್ರೀಪಾದಂಗಳವರ ಹಾಗೂ ಶ್ರೀವೇದವ್ಯಾಸತೀರ್ಥ ಶ್ರೀದರ ಶಿಷ್ಯರೂ, ಯಾದವಾರ್ಯರಂಥ ಮಹಾಜ್ಙಾನಿಗಳ  ಗುರುಗಳೂ ಆದ ಶ್ರೀವೇದೇಶತೀರ್ಥರ ಆರಾಧನಾ ಮಹೋತ್ಸವ ಇಂದು.

ಶ್ರೀಮದಾಚಾರ್ಯರ ಸರ್ವಮೂಲಗಳಲ್ಲಿ ಬರುವ ಹತ್ತೂ ಪ್ರಮೇಯ ಗ್ರಂಥಗಳಿಗೆ ಇರುವ ಟೀಕೆಗೆ ವೇದೇಶತೀರ್ಥೀಯಾ ಎಂಬ ಟಿಪ್ಪಣಿ ಬರೆದವರು ಶ್ರೀ ವೇದೇಶತೀರ್ಥರು.  ಹತ್ತು ಉಪನಿಷತ್ತುಗಳಲ್ಲಿ ಕಠಿಣವಾದ ಉಪನಿಷತ್ತು ಛಾಂದೊಗ್ಯ ಉಪನಿಷತ್ತು. ಉಪನಿಷದ್ಭಾಷ್ಯವೂ ಅಷ್ಟೇ. ಉಪನಿಷದ್ಭಾಷ್ಯಕ್ಕೆ ಟೀಕೆ, ಹಾಗೂ ಉಪನಿಷತ್ತಿಗೆ ಖಂಡಾರ್ಥಗಳನ್ನು ರಚಿಸಿ ಮಹಾನ್ ಅನುಗ್ರಹ ಮಾಡಿದ ಮಹಾತ್ಮರು ಶ್ರೀವೇದೇಶತೀರ್ಥರು. ಅಂತೆಯೆ ಅವರೆಲ್ಲ ಗ್ರಂಥಗಳಿಗೆ ವೇದೇಶತೀರ್ಥೀಯ ಎಂಬುವದಾಗಿಯೇ ಪ್ರಸಿದ್ಧಿಗೆ ತಂದ ಮಹಾಜ್ಙಾನಿ ಶ್ರೀವೇದೇಶತೀರ್ಥರು. 

ವಿರಕ್ತ ಶಿಖಾಮಣಿ

ವೈರಾಗ್ಯದ ಪರಾಕಾಷ್ಠೆ ಶ್ರೀವೇದಶತೀರ್ಥರದ್ದು. ನುಚ್ಚು ಸೇವಿಸಿಯೇ ಜೀವನ. ತ್ಯಾಗಮಯೀ ಸ್ವರೂಪ. "ಅನುಜೋದಯಮಾಶಾಸೇ"ತತಮ್ಮನೆಂಬ ಸೂರ್ಯನ ಉದಯಕ್ಕಾಗಿ ನಾನು ಎಲ್ಲವನ್ನೂ ತ್ಯಜಿಸುವೆ ಎಂಬ ತ್ಯಾಗದ ಫಲವಾಗಿಯೇ ಈ ಮಹಾ ಜ್ಙಾನಸೂರ್ಯರಾದ ಶ್ರೀಯಾದವಾರ್ಯರ  ಉದಯವಾಯಿತು. 

ವೇದಶತೀರ್ಥರ ಸಂದೇಶ

ಇಂದಿನ ಘೋರ ಕಲಿಕಾಲ ಶ್ರೀಮದಾಚಾರ್ಯರ ತತ್ವಜ್ಙಾನದಿಂ ವಿಮುಖರಾದವರದ್ದೇ ಕಾಲ. ಅಧಾರ್ಮಿಕರಾದ, ವಿಷ್ಣುಭಕ್ತರಾಗದವರದ್ದೇ ತಾಂಡವವಾಡುವ ದುರ್ಧರ ಕಾಲ. ವಿಷ್ಣುಭಕ್ತ್ಯಾದಿ ಗುಣಗಳು ಇಲ್ಲ. ಗುಣವಂತರು ಇಲ್ಲ. ಗುಣಗಳನ್ನೋ ಗುಣವಂತರನ್ನೋ ಗುರುತಿಸುವವರಂತೂ ಇಲ್ಲವೇ ಇಲ್ಲ. ಆದ್ದರಿಂದ ಇಂದಿನಿಂದ, ಈ ಕ್ಷಣದಿಂದ, ಒಂದೂ ಕ್ಷಣ ಬಿಡದೆ, ಜಗತ್ತಿನ ಉದ್ಧಾರಕ್ಕೆ, ಶ್ರೀವಿಷ್ಣುಪ್ರೀತಿಗೆ ನಿರಂತರ ಶ್ರೀಮದಾಚಾರ್ಯರ ಶಾಸ್ತ್ರಗಳಿಗೆ ವ್ಯಾನ ಮಾಡುವಂತಹವರಾಗಿ  ಎಂದು ಯಾದವಾರ್ಯರಿಗೆ ಆದೇಶವನ್ನು ಸಂದೇಶವನ್ನು ಕೊಡುತ್ತಾರೆ. 

ಚರಮಶ್ಲೋಕ

ವೇದೇಶಯೋಗಿನಂ ವಂದೇ
ಯಾದವಾರ್ಯ ಗುರೋರ್ಗುರುಮ್.
ಛಾಂದೋಗ್ಯ ಭಾಷ್ಯ ಸಟ್ಟೀಕಾ
ಕರ್ತಾರಮಹಮಾದರಾತ್ ||

ಇಂದಿಗೂ ಶ್ರೀಮದಾಚಾರ್ಯರ ಸಾಕ್ಷಾತ್ ಶಿಶ್ಯರಾದ ಶ್ರೀಮಾಧವತೀರ್ಥರ ದಿವ್ಯಸನ್ನಿಧಾನದ (ಮಣ್ಣೂರು) ಯಲ್ಲಿಯೇ ವಾಸವಾಗಿದ್ದಾರೆ. ಈ ಶ್ಲೋಕದಿಂದ ಹೆಚ್ಚುಬಾರಿ ೧೦೮ ೧೦೦೮ ಬಾರಿ ಪಾರಾಯಣ ಮಾಡಿ ಅವರ ಅನುಗ್ರಹಕ್ಕೆ ಪಾತ್ರರಾಗೋಣ. 

ಪ್ರಾರ್ಥನೆ

ಮಹಾಮಹಿಮೋತರಾದ ಶ್ರೀವೇದಶತೀರ್ಥರಲ್ಲಿ ತಮ್ಮ ಜ್ಙಾನ, ವೈರಾಗ್ಯ, ಶಾಸ್ತ್ರನಿಷ್ಠೆ, ಸಾಮಾಜಿಕ ಕಳಕಳಿ ಇವುಗಳಲ್ಲಿಯ ಕೋಟ್ಯಂಶವಾದರೂ ನನಗೆ ಬರಲಿ ಎಂದು ಅನಂತ ಪ್ರಣಾಮಗಳನ್ನು ಸಲ್ಲಿ ಸುತ್ತಾ ಪ್ರಾರ್ಥಿಸುವೆ. ಜೊತೆಗೆ ನಿಮ್ಮ ಸಂದೇಶವನ್ನು ಆಜ್ಙೆಯಂತೆ ಧರಿಸಿ ಪಾಲಿಸುವಂತಾಗಲಿ  ಎಂದೂ ಪ್ರಾರ್ಥಿಸುತ್ತೇನೆ. ನಿಮ್ಮ ಅನುಗ್ರಹ ದಯೆ ಕರುಣೆ ಎಂದಿಗೂ ಇರಲಿ. ಎಂದಿಗೂ ನಿಮ್ಮ ದಾಸನೇ ನಾನು. 

ಶ್ರೀವೇದೇಶತೀರ್ಥರ ಆದೇಶ ಪತ್ರ

ಇಂದು ಪ್ರಾತಃಸ್ಮರಣೀಯ ಶ್ರೀಶ್ರೀ ಶ್ರೀವೇದಶತೀರ್ಥರ ಆರಾಧನಾ ಮಹೋತ್ಸವ. 

ಶ್ರೀವೇದೇಶತೀರ್ಥರು ತಮ್ಮ ಕೊನೆ ಕಾಲದಲ್ಲಿ  , ತಮ್ಮ ಪೂರ್ವಾಶ್ರಮ ತಮ್ಮಂದಿರಾದ ಶ್ರೀಯಾದವಾರ್ಯರಿಗೆ ಉಪದೇಶರೂಪದ ಪರಮ ಸುಂದರವಾದ, ಅವಶ್ಯಪಾಲನೆ ಮಾಡಲೇಬೇಕಾದ  ಆದೇಶ ಪತ್ರವನ್ನು ಕಳುಹಿಸುತ್ತಾರೆ. 

"ವೇದೇಶತೀರ್ಥಗುರುರಾಜ ಧುರಂಧರೋಸೌ
ಸ್ವಾತ್ಮಾವಸಾನಸಮಯೇ ಯದಶಿಕ್ಷಯನ್ಮಾಂ.
ಕಾಲೋಯಮೀರಸುತಶಾಸ್ತ್ರ ವಿಚಾರಹೀನಾಃ
ನೀಚೋಚ್ಛ್ರಯಗ್ರಸಿತಸಾಧು ಗುಣೋದಯಶ್ಚ
ತಸ್ಮಾತ್ ತ್ವಮದ್ಯಮರುದಾತ್ಮಜ ದಿವ್ಯಶಾಸ್ತ್ರ
ವ್ಯಾಖ್ಯಾನಮೇವ ಸತತಂ ಕುರು ಮಾ ತ್ಯಜೇತಿ."

ಹೇ ಯಾದವಾರ್ಯರೇ !! ಈ ಕಾಲವು ಶ್ರೀಮದಾಚಾರ್ಯರ ಶಾಸ್ತ್ರಾಧ್ಯನಗಳಿಂದ ವಿಹಿತವಾಗಿದೆ. ಅತ್ಯಂತ ದುಷ್ಟರಿಗರ ನೀಚರಿಗೇನೇ ಉಚ್ಛ್ರಾಯ ಸ್ಥಿತಿ ಇದೆ. ನೀಚರಿಗೇ ಬೇಳವಣಿಗೆ ಎಂಬುವದು ಇದೆ. ಕೇತುಗ್ರಸ್ತ ಸೂರ್ಯನಂತೆ ಗುಣಗಳೆಲ್ಲವೂ ದೋಷಗಳಿಂದ ಗ್ರಸಿತವಾಗಿ ಹೋಗಿವೆ. ಗುಣಗಳು ಪ್ರಕಾಶಕ್ಕೇ ಬರುವದಿಲ್ಲ. ಆದ್ದರಿಂದ....

ಇಂದಿನಿಂದ ಈ ಕ್ಷಣದಿಂದ ಶ್ರೀಮದಾಚಾರ್ಯರ ಶಾಸ್ತ್ರ ವ್ಯಾಖ್ಯಾನವು ನಿರಂತರ ಸಾಗಲಿ. ಯಾವ ಕ್ಷಣಕ್ಕೂ ಶ್ರೀಮಾದಾಚಾರ್ಯರ ಶ್ರೀಮಟ್ಟೀಕಾಕೃತ್ಪಾದರ ಶಾಸ್ತ್ರಗಳ ಅಧ್ಯಯನ ನಿಲ್ಲುವದು ಬೇಡ. ಯಾವ ಕ್ಷಣವೂ ಬಿಡುವ ಹಾಗಿಲ್ಲ. ಎಂದು ಆದೇಶ ಮಾಡುತ್ತಾರೆ.

"ಶ್ರವಣಾದಿ ವಿನಾ ನೈವ ಕ್ಷಣಂ ತಿಷ್ಠೇದಪಿ ಕ್ವಚಿತ್. 
ಅತ್ಯಶಕ್ಯೇ ತು ನಿದ್ರಾದೌ ಪುನರೇವ ಸಮಭ್ಯಸೇತ್"

ದೇವರ ಭಕ್ತಿ ಬೆಳೆಯಲು ಜ್ಙಾನ ಬೇಕು. ಜ್ಙಾನದ ನಿರಂತರ ಪ್ರವಾಹ ಇದ್ದರೆ ಭಕ್ತಿ ಕ್ಷಣಕ್ಷಣ ಬೆಳೆಯುತ್ತದೆ. ಆದ್ದರಿಂದ ಶಾಸ್ತ್ರಾರ್ಥಗಳ ಶ್ರವಣ ಮನನ ನಿಧಿಧ್ಯಾಸನ ಇಲ್ಲದೆ ಕ್ಷಣಕಾಲವೂ ಇರುವ ಹಾಗಿಲ್ಲ. 

ನಿದ್ರೆ ಬರುವ ಕ್ಷಣದ ವರೆಗೂ ಅಧ್ಯಯನ ಸಾಗಲಿ. ನಿದ್ರೆ ಮುಗಿದ ಕ್ಷಣದಿಂದ ಅಧ್ಯಯನ ಆರಂಭವಾಗಲಿ. ಎಂದು ಶ್ರೀಮದಾಚಾರ್ಯರ ಆದೇಶ.

ಅಧ್ಯಯನ‌ ನಿಂತು ನೀರಾದರೆ ಹುಳಗಳು ಹತ್ತಿಯಾವು. ನಿರಂತರ ಹರಿಯುವ ನೀರು ಸಿಹಿಯಾಗಿ  ತಿಳಿಯಾಗಿ ನೂರಾರು ಜನರಿಗೆ ಸಾರ್ಥಕವಾಗತ್ತೆ. ಹಾಗೆ ಜ್ಙಾನವೂ ಸಹ.... 

ಶ್ರೀಮದಾಚಾರ್ಯರ ಶಾಸ್ತ್ರಗಳೆಂಬ ಜ್ಙಾನಗಂಗೆಯಲ್ಲಿ ಆಮೆಯಂತೆ ಅನುದಿನ ಅನುಕ್ಷಣ ಜ್ಞಾನವನ್ನು ಪಡೆಯುವಂತೆ ಇಂದಿನ ಕಥಾನಾಯಕರಾದ ಶ್ರೀವೇದೇಶ ತೀರ್ಥರು ಅನುಗ್ರಹಿಸಲಿ ಕರುಣಿಸಲಿ. ಕ್ಷಣಕಾಲವೂ ವ್ಯರ್ಥವಾಗದಂತೆ ಪ್ರೇರಿಸಲಿ ಎಂದು ಪ್ರಾರ್ಥನೆ ಮಾಡುತ್ತಾ ಕೋಟಿ ಕೋಟಿ ನಮಸ್ಕಾರಗಳನ್ನು ಸಲ್ಲಿಸೋಣ. 

✍🏽ನ್ಯಾಸ...
ಗೋಪಾಲ ದಾಸ.

ವಿಜಯಾಶ್ರಮ, ಸಿರವಾರ.
**********


ಶ್ರೀ ವೇದೇಶ ತೀರ್ಥ ಗುರುಭ್ಯೋ ನಮಃ

ಯಾರ ಶಿಷ್ಯರು, ಪ್ರಶಿಷ್ಯರು, ಪ್ರಶಿಷ್ಯರ ಶಿಷ್ಯರು ಕೇವಲ ಉತ್ತಮ ವಿದ್ವಾಂಸರಷ್ಟೇ ಅಲ್ಲ, ಶ್ರೇಷ್ಠ ಟಿಪ್ಪಣಿಕಾರರು ಆದರೋ, ಅಂಥಾ 
ಭಾವಬೋಧಕಾರರಾದ ಶ್ರೀ ರಘೂತ್ತಮ ತೀರ್ಥರ ಶಿಷ್ಯರು, 
ಶ್ರೀ ವೇದೇಶ ತೀರ್ಥರು ಅವರ ಮಹಿಮೆ ಅಪಾರ.  ಅತ್ಯದ್ಭುತ ಟಿಪ್ಪಣಿಕಾರರು.  
ಪೂರ್ವಾಶ್ರಮ ತಮ್ಮಂದಿರಾದ ಶ್ರೀ ಯಾದವಾರ್ಯರೇ ಮೊದಲಾದ ಅನೇಕ ಪಂಡಿತರತ್ನರನ್ನು ನಿರ್ಮಾಣ ಮಾಡಿದವರು. ಮಧ್ವಸಿದ್ಧಾಂತದ ಪ್ರಸಾರಕ್ಕಾಗಿ, ಕೇವಲ ಅದರಲ್ಲಿಯೇ ಸಮಯವನ್ನು ಮೀಸಲಿಡಬೇಕು, ಬೇರೆ ಅಡಚಣೆಗಳು ಬ್ಯಾಡ ಅಂತ ಶ್ರೀಮುದತ್ತರಾದಿ ಮಠದ ಪೀಠವನ್ನು ತ್ಯಾಗ ಮಾಡಿ ಶ್ರೀ ಯಾದವಾರ್ಯರಂಥ ಅತ್ಯದ್ಭುತ ಜ್ಞಾನಿಗಳನ್ನು ಕೊಟ್ಟವರು -ಕೊಟ್ಟ ಕೀರ್ತಿ -ಶ್ರೇಯಸ್ಸು  ಶ್ರೀ ವೇದೇಶ ತೀರ್ಥರದ್ದು.  
ಇಂದಿಗೂ ಪಾಠಪ್ರವಚನ ಪರಂಪರೆಯಲ್ಲಿ ಶ್ರೀ ವೇದೇಶ ತೀರ್ಥರ ಟಿಪ್ಪಣಿ ಸಹಿತ ಪಾಠ. ಅಷ್ಟು ಸರಳ ಮತ್ತು ವಿದ್ವತ್ಪೂರ್ಣ.  ವಿಶೇಷವಾಗಿ ಛಾಂದೋಗ್ಯ ಭಾಷ್ಯಟೀಕಾ ಟಿಪ್ಪಣಿ,  ಕಥಾಲಕ್ಷಣ ಟೀಕಾ ಟಿಪ್ಪಣಿ ಇಲ್ಲದೇ ಈ ಗ್ರಂಥಗಳ ಅಧ್ಯಯನ ಕಷ್ಟ. 
ಪರಮವೈರಾಗ್ಯ ಶಿಖಾಮಣಿಗಳು. ಶ್ರೀ ವೇದೇಶ ತೀರ್ಥರ ದೊಡ್ಡ ಕೊಡುಗೆ ಅಂದ್ರೆ ಶ್ರೀ ಯಾದವಾರ್ಯರಂಥ ಜ್ಞಾನಿಗಳನ್ನು ಮಾಧ್ವ ಸಮಾಜಕ್ಕೆ ಕೊಟ್ಟಿದ್ದು.

ಶ್ರೀಮನ್ಯಾಯಸುಧಾಕೃತೇ: ವಿವರಣಾತ್ ವೈದುಷ್ಯಮನ್ಯಾದೃಶಂ 
ಶ್ರೀಮದ್ಭಾಗವತಾಶಯಸ್ಯ ವಿಶದೀಕೃತ್ಯಾ ವಿರಕ್ತಿಂ ಪರಾಮ್
ಭಕ್ತಿಂ ಮುಕ್ತಿಫಲಪ್ರದಾಂ ಜಗತಿ ಯೇ ಪ್ರಾದರ್ಶಯನ್ ಆತ್ಮನ:
ತತ್ಪುಣ್ಯಾಕರ ಯಾದವಾರ್ಯಮಹಿತಂ ವೇದೇಶ ತೀರ್ಥಂ ಭಜೇ 

ಶ್ರೀಮನ್ಯಾಯಸುಧಾ ಮತ್ತು ಶ್ರೀಮದ್ಭಾಗವತ ಗ್ರಂಥಕ್ಕೆ ಇರುವ ಪ್ರಮುಖ ಟಿಪ್ಪಣಿಗಳಲ್ಲಿ ಶ್ರೀ ಯಾದವಾರ್ಯರ ಟಿಪ್ಪಣಿ -ಟೀಕಾ ಬಹಳ ಪ್ರಸಿದ್ಧ. 

ಯಾರ ಶ್ರೀಮನ್ಯಾಯಸುಧಾಗ್ರಂಥಕ್ಕೆ 
ಇರುವ ವಿವರಣೆ ವಿದ್ವಜ್ಜನರಿಂದ ಅತ್ಯಂತ ಮಾನ್ಯವೋ, ಜಗತ್ತಿನಲ್ಲಿ 
ಜ್ಞಾನ ವೈರಾಗ್ಯ ಮತ್ತು ಆತ್ಮ -ಪರಮಾತ್ಮನಲ್ಲಿ ಭಕ್ತಿಯನ್ನು -ಮುಕ್ತಿಯನ್ನು 
ಕೊಡುವಂಥ ಶ್ರೀಮದ್ಭಾಗವತ ಗ್ರಂಥದ ಆಶಯ -ಅಭಿಪ್ರಾಯವನ್ನು ವಿಶದೀಕರಿಸಿ, ಭಾಗವತದ ಅಭಿಪ್ರಾಯವನ್ನು ಚೆನ್ನಾಗಿ ಪ್ರದರ್ಶಿಸದರೋ, 
ಅಂಥಾ ಪುಣ್ಯಕರರಾದ ಯಾದವಾರ್ಯರನ್ನು ಕೊಟ್ಟಂಥ,  ಅಥವಾ ಅಂಥಾ  ಯಾದವಾರ್ಯರನ್ನು ಕೊಟ್ಟು ಪುಣ್ಯ ಕಾರ್ಯಮಾಡಿದ, ಅಂದ್ರೆ ಅಂಥಾ ಯಾದವಾರ್ಯರಿಗೆ ಸಕಲ ಶಾಸ್ತ್ರಗಳ ಪಾಠಹೇಳಿ, ಯಾದವಾರ್ಯರು ಆ ರೀತಿ ತಯಾರಾಗಲಿಕ್ಕೆ ಅವರ ಮಹಿಮೆಗೆ  ಕಾರಣರಾದ, ಇಂಥಾ ಪುಣ್ಯಕರ ಕೆಲಸ ಮಾಡಿದ ಶ್ರೀ ವೇದೇಶ ತೀರ್ಥರನ್ನು ಭಜಿಸುತ್ತೀನಿ. 


ಶ್ರೀ ವೇದೇಶ ಗುರುಂ ವಂದೇ ಯಾದವಾರ್ಯಗುರೋರ್ಗುರುಮ್
ಛಾಂದೋಗ್ಯಭಾಷ್ಯಸಟ್ಟೀಕಾಕರ್ತಾರಮಹಮಾದರಾತ್

ಶ್ರೀ ವೇದೇಶ ತೀರ್ಥ ಗುರುಭ್ಯೋ ನಮಃ 
**************

ಶ್ರೀ ವೇದೇಶತೀರ್ಥರ ಆರಾಧನಾ ಅಂಗವಾಗಿ ಅವರ ಸ್ಮರಣೆ :- 

ಶ್ರೀ ವೇದೇಶತೀರ್ಥರು 
ವೃಂದಾವನಸ್ಥಳ ಮಣ್ಣೂರು

ವೇದೇಶಯೋಗಿನಂ ವಂದೇ
ಯಾದವಾರ್ಯಗುರೋರ್ಗುರುಂ ! 
ಛಾಂದೋಗ್ಯಭಾಷ್ಯಸಟ್ಟೀಕಾ
ಕರ್ತಾರಮಹಮಾದರಾತ್ !!

ಅರ್ಥ : - ಯಾದವಾರ್ಯರಿಗೆ ಗುರುಗಳಾದ, ಛಾಂದೋಗ್ಯಭಾಷ್ಯಕ್ಕೆ ಅದ್ಭುತವಾದ ಟಿಪ್ಪಣಿಯನ್ನು ಬರೆದ ಶ್ರೀ ವೇದೇಶತೀರ್ಥರನ್ನು ಭಕ್ತಿಯಿಂದ ನಮಸ್ಕರಿಸುತ್ತೇನೆ ಅಂತ ಪ್ರಾರ್ಥನೆ.

ನಾವು ಯಾದವಾರ್ಯರ ಬಗ್ಗೆ ಮಹಿಮೆಗಳನ್ನು ಕೇಳಿದಾಗ ಮೈರೋಮಾಂಚನವಾಗುತ್ತೆ. ಪುರಾಣಗಳ ರಾಜ ಶ್ರೀಮದ್ಭಾಗವತಕ್ಕೆ ಅತ್ಯದ್ಭುತವಾದ ಟಿಪ್ಪಣಿ ಬರೆದವರು ಯಾದವಾರ್ಯರು. ಅಂಥ ಯಾದವಾರ್ಯರಿಗೂ ಗುರುಗಳಾದವರು ಶ್ರೀ ವೇದೇಶತೀರ್ಥರು. ಇವರೂ ಕೂಡ ಅತ್ಯದ್ಭುತವಾದ ಟಿಪ್ಪಣಿಕಾರರು. ಯಾದವಾರ್ಯರಂಥ ಶ್ರೇಷ್ಠರತ್ನಗಳನ್ನು ಜಗತ್ತಿಗೆ ನೀಡಲೆಂದೇ ತಾವು ಶ್ರೀಮದುತ್ತರಾದಿಮಠದ ಪೀಠವನ್ನೇ ತ್ಯಾಗಮಾಡಿದವರು. ಸದಾ ಪಾಠಪ್ರವಚನನಿರತರು. ಪರಮವಿರಾಗಿಗಳು. ಮಹಾಮಹಿಮೋಪೇತರು.

ಅಂಥ ಶ್ರೀ ವೇದೇಶತೀರ್ಥರು ಎಲ್ಲರಿಗೂ ಅನುಗ್ರಹಿಸಲಿ.

ಸರ್ವೇ ಜನಾಃ ಸುಖಿನೋ ಭವಂತು ! 

ಸುಘೋಷಾಚಾರ್ಯ ಕೊರ್ಲಹಳ್ಳಿ
************

know more here SUMADHWASEVA

ಶ್ರೀ ವೇದೇಶತೀರ್ಥರ ಆರಾಧನಾ ಅಂಗವಾಗಿ ಅವರ ಸ್ಮರಣೆ :- 

ಶ್ರೀ ವೇದೇಶತೀರ್ಥರು 
ವೃಂದಾವನಸ್ಥಳ ಮಣ್ಣೂರು

ವೇದೇಶಯೋಗಿನಂ ವಂದೇ
ಯಾದವಾರ್ಯಗುರೋರ್ಗುರುಂ ! 
ಛಾಂದೋಗ್ಯಭಾಷ್ಯಸಟ್ಟೀಕಾ
ಕರ್ತಾರಮಹಮಾದರಾತ್ !!

ಅರ್ಥ : - ಯಾದವಾರ್ಯರಿಗೆ ಗುರುಗಳಾದ, ಛಾಂದೋಗ್ಯಭಾಷ್ಯಕ್ಕೆ ಅದ್ಭುತವಾದ ಟಿಪ್ಪಣಿಯನ್ನು ಬರೆದ ಶ್ರೀ ವೇದೇಶತೀರ್ಥರನ್ನು ಭಕ್ತಿಯಿಂದ ನಮಸ್ಕರಿಸುತ್ತೇನೆ ಅಂತ ಪ್ರಾರ್ಥನೆ.

ನಾವು ಯಾದವಾರ್ಯರ ಬಗ್ಗೆ ಮಹಿಮೆಗಳನ್ನು ಕೇಳಿದಾಗ ಮೈರೋಮಾಂಚನವಾಗುತ್ತೆ. ಪುರಾಣಗಳ ರಾಜ ಶ್ರೀಮದ್ಭಾಗವತಕ್ಕೆ ಅತ್ಯದ್ಭುತವಾದ ಟಿಪ್ಪಣಿ ಬರೆದವರು ಯಾದವಾರ್ಯರು. ಅಂಥ ಯಾದವಾರ್ಯರಿಗೂ ಗುರುಗಳಾದವರು ಶ್ರೀ ವೇದೇಶತೀರ್ಥರು. ಇವರೂ ಕೂಡ ಅತ್ಯದ್ಭುತವಾದ ಟಿಪ್ಪಣಿಕಾರರು. ಯಾದವಾರ್ಯರಂಥ ಶ್ರೇಷ್ಠರತ್ನಗಳನ್ನು ಜಗತ್ತಿಗೆ ನೀಡಲೆಂದೇ ತಾವು ಶ್ರೀಮದುತ್ತರಾದಿಮಠದ ಪೀಠವನ್ನೇ ತ್ಯಾಗಮಾಡಿದವರು. ಸದಾ ಪಾಠಪ್ರವಚನನಿರತರು. ಪರಮವಿರಾಗಿಗಳು. ಮಹಾಮಹಿಮೋಪೇತರು.

ಅಂಥ ಶ್ರೀ ವೇದೇಶತೀರ್ಥರು ಎಲ್ಲರಿಗೂ ಅನುಗ್ರಹಿಸಲಿ.
***
ಶ್ರೀ ವೇದೇಶ ತೀರ್ಥರ ಚರಿತ್ರೆ. ಮಣ್ಣೂರು.ಕಾರ್ತೀಕ ಶುದ್ಧ ಷಷ್ಠಿ. ಲೇ. ಮಧುಸೂದನ ಕಲಿಭಟ್. ಧಾರವಾಡ.  

ಶ್ರೀ ವೇದೇಶರು ರಘುತ್ತಮ ತೀರ್ಥರ ಪ್ರಶಿಷ್ಯರು. ಆದರೆ ಸನ್ಯಾಸಕ್ಕಾಗಿ ಶ್ರೀ ರಘುತ್ತಮರನ್ನೇ ಪ್ರಾರ್ಥಿಸಿಕೊಂಡವರು. ರಘುತ್ತಮ, ವೇದವ್ಯಾಸ, ರಾಘವೇಂದ್ರರು, ಇವರ ಸಮಕಾಲೀನರು. ವೇದೇಶ ತೀರ್ಥರ ಮೂಲತಃ ಗುಲಬರ್ಗಾ ಜಿಲ್ಲೆಯ ಮಣ್ಣುರಿನವರು. ಮಧ್ವ ಪರಂಪರೆ ಇತಿಹಾಸ ನೋಡಿದಾಗ ಪುರಂದರರು ಚಿನಿವಾಲ ವೃತ್ತಿ ಮಾಡಿ ವಿಠಲನ ಮೋಡಿ ಪರೀಕ್ಷೆಯಿಂದ ವೈರಾಗ್ಯ ತಾಳಿ ದಾಸರಾದರು. ಆದರೆ ವೇದೇಶರು ಮೂಲದಲ್ಲಿ ಚಿನಿವಾಲ ವೃತ್ತಿ ಮಾಡಿ ಗ್ರಹಸ್ಥರಾಗಿ ನಂತರ ಸಂಸಾರದಲ್ಲಿ ವೈರಾಗ್ಯ ತಾಳಿ ಸನ್ಯಾಸಿ ಆದವರು.ವೇದೇಶರ. ಪೂರ್ವಾಶ್ರಮದ ಜೀವನ ಕಥೆ ನೋಡೋಣ.
ಮಣ್ಣೂರಿನಲ್ಲಿ ಚಿನಿವಾಲ ವೃತ್ತಿ ಮಾಡಿಕೊಂಡು ಘನ ಶ್ರೀಮಂತರಾದ ನಾಯಕ ಮನೆತನ ಇತ್ತು. ಮೂಲ ಪುರುಷ ಯಾರೂ ತಿಳಿದಿಲ್ಲ. ಈ ಮನೆತನದಲ್ಲಿ ಮೂವರು ಸಹೋದರರು ಇದ್ದರು.ಹಿರಿಯನು ಭಾಗಪ್ಪಯ್ಯ, ನಡುವಿನವನು ಕೃಷ್ಣಪ್ಪಯ್ಯ, ಕೊನೆಯವನು ಯಾದಪ್ಪಯ್ಯ. ಮೂವರು ಚಿನಿವಾಲ ವೃತ್ತಿ ಮಾಡಿಕೊಂಡು ಮಾಧ್ವ ಸಂಪ್ರದಾಯ, ನಡೆಸಿಕೊಂಡು ಇದ್ದರು. ಮೂವರೂ ಊರಿಂದ ಊರಿಗೆ ಹಸಿಬೆಯಲ್ಲಿ ಬಂಗಾರದ ಆಭರಣ ಇಟ್ಟುಕೊಂಡು ಮಾರಾಟಮಾಡಿ ಕೊಂಡು ಮನೆಗೆ ಬರುತ್ತಿದ್ದರು. ಹೊರಗಡೆ ಹೋದರೂ ತಮ್ಮ ಧರ್ಮದ ಆಚರಣೆ ಬಿಟ್ಟಿರಲಿಲ್ಲ. ಕಾರಣ ಧರ್ಮವು ಅವರನ್ನು ಕಾಯುತ್ತಿತ್ತು.

ಹೀಗಿರಲಾಗಿ ನಡುವಿನ ಸಹೋದರ ಕೃಷ್ಣಪ್ಪಯ್ಯ ಹೆಂಡತಿ ಮತ್ತು ಶ್ರೀನಿವಾಸ ಎಂಬ ಪುತ್ರನನ್ನು ಬಿಟ್ಟು ಅಕಾಲ ಮೃತ್ಯುವಿಗೆ ಬಲಿಯಾದನು. ಕುಟುಂಬದ ಪೂರ್ಣ ಹೊರೆ ಹಿರಿಯರಾದ ಭಾಗಪ್ಪಯ್ಯನ ಹೆಗಲಿಗೆ ಬಿತ್ತು. ಅವನಿಗೆ ಜನರು ಶ್ರೀನಿವಾಸನಾಯಕ ಎಂದೂ ಕರೆಯುತ್ತಿದ್ದರು. ತಮ್ಮನ ಸಾವಿನಿಂದ ಸಂಸಾರ ಬೇಜಾರೆನಿಸಿ ಮಧ್ವ ತತ್ವ ಅಭ್ಯಾಸ ಮಾಡೋಣ ಎಂದು ಮನೆ ತ್ಯಜಿಸಿ ಶ್ರೀ ರಘುತ್ತಮ ರಲ್ಲಿಗೆ ಬಂದು ಸನ್ಯಾಸ ಬೇಕೆಂದು ಯಾಚಿಸಿದರು.

ಮನೆಯ ವಿಷಯ ಹೇಳಿ ಸಂಸಾರದ ಬಗ್ಗೆ ವೈರಾಗ್ಯ ಹುಟ್ಟಿದೆ ಎಂದರು. ಮತ್ತು ತನಗೆ  ಪೀಠಾಧಿಪತ್ಯ ಬೇಡಬೆದು ಸ್ಪಷ್ಟ ಹೇಳಿದರು. ರಘುತ್ತಮರು ಜ್ಞಾನ ದೃಷ್ಟಿಯಿಂದ ನೋಡಿ ತಮ್ಮ ಶಿಷ್ಯ ವೇದವ್ಯಾಸ ತೀರ್ಥರಿಗೆ ಹೇಳಿ ಸನ್ಯಾಸಕ್ಕೆ ಯೋಗ್ಯ ವ್ಯಕ್ತಿ ಎಂದೂ ಹೇಳಿದರು. ಗುರುಗಳ ಆಜ್ಞೆಯಂತೆ ವೇದವ್ಯಾಸರು ಶ್ರೀನಿವಾಸನಾಯಕರಿಗೆ ವೇದೇಶ ತೀರ್ಥ ಎಂದು ನಾಮಕರಣ ಮಾಡಿ ನಿತ್ಯ ಪಾಠ ರಘುತ್ತಮರಲ್ಲಿ ಪ್ರಾರಂಭ ಆಯಿತು.

ಶ್ರೀ ರಘುವರ್ಯರ ನಂತರ ರಘುತ್ತಮರು ದೇಶದ ನಾನಾ ಭಾಗಗಳಿಂದ ಬ್ರಾಹ್ಮಣ ವಿದ್ಯಾರ್ಥಿ ಗಳನ್ನು ಕರೆತಂದು ಮಣ್ಣೂರಿನಲ್ಲಿ ವಿದ್ಯಾಪೀಠ ಪ್ರಾರಂಭ ಮಾಡಿದರು.

ಶ್ರೀ ರಘುತ್ತಮರು ಮಣ್ಣೂರಿನಲ್ಲಿ ವಿದ್ಯಾಪೀಠ ಪ್ರಾರಂಭ. ಮಾಡಿದರು. ಆದರೆ ದೇಶದ ರಾಜಕೀಯ ವಾತಾವರಣ ಸರಿ ಇರಲಿಲ್ಲ. ಹೈದೆರಾಬಾದ, ವಿಜಾಪುರ,ಶಾಹಿಗಳು, ಸುಲ್ತಾನರು ಹೀಗೆ ತುರ್ಕರೆಲ್ಲ ಕೂಡಿ ವಿಜಯ ನಗರದ ಸಾಮ್ರಾಜ್ಯವನ್ನು ರಕ್ಕಸತಂಗಡಗಿ ಯುದ್ಧದಲ್ಲಿ ಸೋಲಿಸಿ ವಿಜಯನಗರವನ್ನು ಹಾಲು ಹಂಪಿಯನ್ನಾಗಿ ಮಾಡಿ ನೀರು ಕುಡಿದಿದ್ದರು.ಇಂಥ ಸಮಯದಲ್ಲಿ ರಘುತ್ತಮರು, ದಿಗ್ವಿಜಯ ಯಾತ್ರೆಗೆ ಮುಂದಾಲೋಚನೆ ಮಾಡುತ್ತಿದ್ದರು. ವಿದ್ಯಾಪೀಠದಲ್ಲಿ 12 ವರ್ಷ ವಿದ್ಯಾಭ್ಯಾಸ ಮಾಡಿ ಸುಧಾ ಮಂಗಳ ಮಾಡುವವರಿದ್ದರು. ಆಗ ಗುರುಗಳು ಶ್ರೀ ವೇದೇಶ ತೀರ್ಥರನ್ನು ಮತ್ತು ವೇದವ್ಯಾಸ ತೀರ್ಥರನ್ನು ಕರೆಕಳಿಸಿ ಅವರಿಗೆ ತಮ್ಮ ವಿಚಾರ ಹೇಳಿದರು. ಮೊದಲನೆಯದಾಗಿ ಸಜ್ಜನರಿಗೆ ತಿಳಿಯುವಂತೆ ಮಧ್ವರ, ಜಯತೀರ್ಥರ ಗ್ರಂಥಕ್ಕೆ ಟಿಪ್ಪಣಿ ಆಗಬೇಕು. ಎರಡನೆಯದಾಗಿ ಮಧ್ವ ಮತವೆಂಬ ಸೂರ್ಯನಿಗೆ ಅದ್ವೈತಿಗಳು ಧೂಳು ತೂರಿ ತಮ್ಮ ಅಜ್ಞಾನ ಪ್ರಸಾರ ಮಾಡುವದನ್ನು ವಾದಗಳ ಮುಖೇನ ಗೆದ್ದು ನಿಲ್ಲಬೇಕು. ಇನ್ನೂ ಕೊನೆಯದಾಗಿ ಮಣ್ಣೂರಿನ ವಿದ್ಯಾಪೀಠ ನಿರಂತರ ನಡೆಯಬೇಕು. ಇದನ್ನು ನೀವಿಬ್ಬರೂ ವಿಚಾರಿಸಿ ಯಾವ ಕೆಲಸ ಹಂಚಿಕೊಳ್ಳುವಿರಿ ಹೇಳಿರಿ ಎಂದೂ ಕೇಳಿದರೂ. ಆಗ ಸಹೋದರರಂತೆ ಇದ್ದ ಯತಿ ದ್ವಯರಲ್ಲಿ ವೇದವ್ಯಾಸರು, ವೇದೇಶರು ಚಿಕ್ಕವರು ಅವರು ವಹಿಸಿಕೊಂಡು ಬಿಟ್ಟ ಕಾರ್ಯ ನಾನು ಮಾಡುವೆ ಎಂದೂ ಉದಾರ ಭಾವನೆಯಿಂದ ಹೇಳಿದರು. ಆಗ ವೇದೇಶರು ತಮ್ಮ ಪೂರ್ವಾಶ್ರಮ ಸಹೋದರ ಯಾದವಾರ್ಯರಿಗೆ ಶಾಸ್ತ್ರ ಪಾಠ ಹೇಳುತ್ತಾ ಮಣ್ಣೂರಿನ ವಿದ್ಯಾಪೀಠ ನೋಡಿಕೊಂಡು ಇರುವೆ ಎಂದೂ ಹೇಳಿದರು. ಅದರಂತೆ ರಘುತ್ತಾಮ ಒಪ್ಪಿದರು. ಗುರುಗಳು ದಿಗ್ವಿಜಯ ಯಾತ್ರೆಗೆ ಹೋದನಂತರ ವೇದೇಶರು ಚಾಣಾಕ್ಷ ರೀತಿಯಲ್ಲಿ ವಿದ್ಯಾಪೀಠ ನಡೆಸಿ ಗುರುಗಳ ಪ್ರೀತಿಗೆ ಪಾತ್ರರಾದರು. ಮಧ್ವ ವಿದ್ಯಾಪೀಠಗಳಲ್ಲಿ ಪ್ರಥಮ ಸ್ಥಾನ ಮಣ್ಣುರಿಗೆ ಸಿಗುವದು ಅದರಂತೆ ಕುಲಪತಿ ಸ್ಥಾನ ಶ್ರೀ ವೇದೇಶರಿಗೆ ಸಿಕ್ಕಿತ್ತು ಎಂದೂ ಬರೆಯಲು ಹೆಮ್ಮೆ ಎನಿಸುವದು. ಸಮಾಜದಲ್ಲಿಯ ರಾಜಕೀಯ, ಆರ್ಥಿಕ ಸಮಸ್ಯೆ ಬಗೆಹರಿಸಿಕೊಂಡು ಎಷ್ಟೋ ಜನ ಪಂಡಿತರನ್ನು ತಯಾರು ಮಾಡಿದರು.

ರಘುತ್ತಮರ ಕೊನೆಗಾಲದಲ್ಲಿ ಯಾದವಾರ್ಯರು, ಮತ್ತು ತಮ್ಮನಮಗ ಶ್ರೀನಿವಾಸನನ್ನು ಕರೆದುಕೊಂಡು ತಿರುಕೊಯಿಲೂರಿಗೆ ಹೋಗಿ ತಾವೂ ಬರೆದ, ಯಾದವಾರ್ಯರು ಬರೆದ ಗ್ರಂಥಗಳನ್ನು ಗುರುಗಳಿಗೆ ಅರ್ಪಿಸಿ ಭಾರವಾದ ಮನದಿಂದಲೇ ಮಣ್ಣೂರಿಗೆ ಬಂದರು. ಕೆಲದಿನಗಳ ನಂತರ ಶ್ರೀನಿವಾನಿಗೆ ಪಾಠ ಹೇಳಿದರು. ಯಾದವಾರ್ಯರು ತಮ್ಮ ಕಾರ್ಯಕ್ಷೇತ್ರವನ್ನು ಯಕ್ಕುಂಡಿ ಮಾಡಿಕೊಂಡರು. ರಘುತ್ತಮರು ಶ್ರೀನಿವಾಸ ಬಾಲಕಗೆ ಇವನು ನೀವಿಬ್ಬರೂ ಬಿಟ್ಟ ಟಿಪ್ಪಣಿ ಬರೆಯುವನು. ಎಂದೂ ಹರಿಸಿದರು. ಅದರಂತೆ ರಾಘವೇಂದ್ರರ ಕೃಪೆಗೆ ಪಾತ್ರರಾದ ಶ್ರೀನಿವಾಸ ತೀರ್ಥರೇ ಈ ಬಾಲಕ ಶ್ರೀನಿವಾಸ. ವೇದೇಶರು ತಮ್ಮ. ಕೊನೆ ದಿನಗಳನ್ನು ಮಣ್ಣುರಿನಲ್ಲಿಯೇ ಕಳೆದರು. ಕಾರ್ತೀಕ ಶುದ್ಧ ಷಷ್ಠಿ ದಿನ ಹರಿಧ್ಯಾನ ಪರರಾದರು. ಪೀಠಧಿಪತ್ಯ ಬೇಡವೆಂದು ಮೊದಲೇ ಹೇಳಿದ್ದರಿಂದ ಯಾರಿಗೂ ಆಶ್ರಮ ಕೊಡಲಿಲ್ಲ. ಇಂಥ ಜ್ಞಾನಿಗಳಾದ ವೇದೇಶ ತೀರ್ಥರ ಅಂತರ್ಗತ ಭಾ. ಮು. ಅಂ. ನರಸಿಂಹ ದೇವರು ಎಲ್ಲರಿಗೂ ಹರಿಸರ್ವೋತ್ತಮ ಜ್ಞಾನ ದಯಪಾಲಿಸಲಿ ಎಂದೂ ಬೇಡುವ ಮಧುಸೂದನ ಕಲಿಭಟ್.
****



******

No comments:

Post a Comment