Thursday 1 August 2019

krishnadvaipayanaru bidi sanyasi 1669 kusumurthy AP uttaradi mutt jyeshta pournima ಕೃಷ್ಣದ್ವೈಪಾನಯನರು







info from FB madhwanet-->

shri gurubyO namaha, hari Om... 

jEshTa piurNami is the ArAdhane of shri krishNadwaipAyaNaru.

krishNadwaipAyaNaru... 

ArAdhanE: jEshTa pourNami 
Period: 1600 - 1669
gurugaLu: shri vEdavvyAsa tIrtharu and vEdanidhi tIrtharu of uttarAdhi maTa
brindAvana: kusumurti, on the banks of bhIma river, near Raichur, 45 Kms from manthralayam

When shri vEdavyAsa tIrtharu was observing  chAturmAsya Vrata, a boy fell into river. Shri vEdavyAsa tIrtharu with his power saved him and gave him sanyAshrama and named him as krishNadwaipAyaNaru. After getting sanyAsAshrama, krishNadwaipAyaNaru did akhanDa tapas of one Crore vEdavyAsa mantra japa and had the darshan of shri vEdavyAsa dEvaru. 

Once shri rAyarU was doing pATA to his disciples. It was jEshTa shuddha pourNamI of soumya samvatsara. All of a sudden rAyarU got up, looked at the sky and offered his reverence with hands clasped. rAyarU’s discsiples were stunned and requested rAyarU to explain. In reply, rAyarU replied that Sri Krishna Dwaipayanaru was departing from this world in a vimAna. On seeing me, he paid his respects from space, to which he too reciprocated.

His brindAvana is located at Kusumurthi, a village on the banks of the river bhImA in Raichur District. KrishNadwaipayaNaru chose that place as it was flanked by the river bhImA, had the “Sangama” of krishNa and bhImA rivers at a nearby spot and there was sangamEshwarA’s divya sannidhAna. Furthermore, it was the abode of the great jnAni, shri jiTamitra tIrtharu, of rAyara maTa. 

shri krishNadwaipAyaNaru varada gOvindA, gOvindA. 


shri krishNArpaNamastu...

*********
18-jan-2019
ಶ್ರೀ  ಕೃಷ್ಣ  ದ್ವೈಪಾಯನರ ಆರಾಧನೆ 

ಪ್ರಾತಃ ಸ್ಮರಣೀಯರಾದ ಶ್ರೀ ಕೃಷ್ಣದ್ವಯಪಾಯನ ತೀರ್ಥರ ಆರಾಧನೆ ಅವರ ಸ್ಮರಣೆ ಮಾಡಿ ಹರಿವಾಯುಗುರುಗಳ ಅನುಗ್ರಹಕ್ಕೆ ಪಾತ್ರರಾಗೋಣ 

ಪ್ರಾಯಶಃ ಇವರ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲ ಇವರು ಶ್ರೀ ಉತ್ತರಾದಿ ಮಠದ ಪರಂಪರೆಯಲ್ಲಿ ಬರುತ್ತಾರೆ 

ಇವರ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಲಭ್ಯವಿಲ್ಲದಿದ್ದರು ಇವರ ಶಿಷ್ಯರ ಹಾಗೂ ಹರಿದಾಸರ ಕೃತಿಗಳಲ್ಲಿ ಗುರುಗಳ ವ್ಯಕ್ತಿತ್ವ ವರ್ಚಸ್ಸು ಮಹಿಮೆಗಳು ತಿಳಿಯುತ್ತವೆ 

ಕಥಾನಾಯಕರ ತಪೋಮಯ ಭವ್ಯ ಸ್ವರೂಪದ ಪರಿಚಯ ಜ್ಞಾನಿಗಳ ನುಡಿಯಂತೆ ಮಾತಿನಂತೆ ವಿವರಿಸುತ್ತಾ ಹೋಗುತ್ತೆನೆ 

ಇವರ ಜನನ ಸುಮಾರು 1619-1669 ಇರಬಹುದು ಶ್ರೀ ಉತ್ತರಾದಿ ಮಠದ ಶ್ರೀ ವೇದವ್ಯಾಸ ತೀರ್ಥರಿಂದ ಯತ್ಯಾಶ್ರಮ ಸ್ವೀಕಾರ ಮಾಡಿದ ಮಹಾನುಭಾವರು 
ಪೂರ್ವಾಶ್ರಮದಲ್ಲಿ ಚಿಕ್ಕ ಬಾಲಕರಿರುವಾಗಲೇ ಮಹಾಬಲೇಶ್ವರ ಶ್ರೀ ಕೃಷ್ಣಾನದಿಯ ಉಗಮ ಸ್ಥಾನದಲ್ಲಿ ಪ್ರವಾಹವು ತುಂಬಿ ಹರಿಯುತ್ತಿರುವಾಗ ನದಿಯನ್ನು ದಾಟುವ ಛಲದಿಂದ ಈಜು ಬಿದ್ದರು ಪ್ರವಾಹದ ಸೆಳತಕ್ಕೆ ಕೈಸೊತು ಶ್ರೀ ರಾಮಚಂದ್ರನ ಸ್ಮರಿಸುತ್ತ ನದಿಯನ್ನು ದಾಟಿ ಭವ ಸಾಗರದ ದಡವನ್ನು ಹರಿಸ್ಮರಣೆಯಿಂದ ದಾಟಿ ಭಕುತರನ್ನು ದಾಟಿಸಿದ ಮಹಾನುಭಾವರು 

ತಾವು ಉಪಾಸನಾಗೈಯುತ್ತಿದ್ದ ಭೀಮಾನದಿಯ ಕೂಸುಮೂರ್ತಿಯಲ್ಲಿ ಕೃಷ್ಣಾ ಸಂಗಮದ ಪರಿಯಂತ ಸುಮಾರು ಐದಾರು ಮೈಲು ಪ್ರದೇಶದಲ್ಲಿ ಸುಂದರವಾದ ತೆಂಗಿನ ತೋಟಗಳನ್ನು ನಿರ್ಮಿಸಿ ತಮ್ಮ ತಪೋಮಯ ಸಾಧನಗಮ್ಯವಾದ ಶ್ರೀವರಾಹದೇವರಿಗೆ ವಿಹಾರಾರ್ಥವಾಗಿ ವ್ಯವಸ್ಥೆ ಮಾಡಿದ್ದರು ಅಷ್ಟೇ ಅಲ್ಲದೆ ತೈಲಾಭ್ಯಂಗಾರ್ಥವಾಗಿ ವರಾಹ ದೇವರನ್ನು ಆಹ್ವಾನಿಸುತ್ತಿದ್ದರು 

ತಮ್ಮ ಆರಾಧ್ಯ ದೈವವಾದ ಶ್ರೀ ವೇದವ್ಯಾಸ ದೇವರೊಂದಿಗೆ ಕರಾವಲಂಬನ ಪೂಜೆ ಮುಗಿದ ಮೇಲೆ ಪ್ರತಿನಿತ್ಯ ಮಾಡುತ್ತಿದ್ದರು ಅಂದರೆ ಪೂಜೆ ಮುಗಿದ ಮೇಲೆ ಶ್ರೀ ವೇದವ್ಯಾಸ ದೇವರಿಗೆ ಮಾಡುತ್ತಿದ್ದರು ಅಂತಹ ಮಹಿತಾತ್ಮರು ಇವರು 

ಇವರ ಶಿಷ್ಯ ಬಳಗ ಏಷ್ಟಿತ್ತೆಂದರೆ ರಾತ್ರಿ ಅಡುಗೆಗೆ 6-7 ಸೇರು ಬೇಳೆ ಹಾಕುತ್ತಿದ್ದರಂತೆ ಅರ್ಥಾತ್ 6-7ಸೇರು ಬೇಳೆ ಹಾಕಿ ಹುಳಿ ಮಾಡುತ್ತಿದ್ದರೆಂದರೆ ಸುಮಾರು ಇವರ ಶಿಷ್ಯ ವೃಂದ 400ಜನ ಶಿಷ್ಯರಿರಬೇಕು 

ಇಲ್ಲಿ ಭೀಮಾನದಿ ದಕ್ಷಿಣಾಭಿಮುಖವಾಗಿ ಹರಿಯುತ್ತಿರುವುದು ಇಲ್ಲಿಯ ಮತ್ತೋಂದು ವಿಶೇಷ 

ಇವರ ಭವ್ಯವಾದ ದಿವ್ಯವಾದ ಬೃಂದಾವನದ ಪವಿತ್ರ ಸನ್ನಿಧಿಯಲ್ಲಿ ಸ್ವಪ್ನ ಸೂಚಿತರಾಗಿ ಸಾನಿಧ್ಯ ಪ್ರಕಟಿಸಿರುವ ಗುರುಗಳು ಅಂದರೆ ಅವರ ಬೃಂದಾವನದ ಜೊತೆಗೆ ಅಲ್ಲಿ ಶ್ರೀ ಜಯತೀರ್ಥರು ಶ್ರೀ ಜಿತಾಮಿತ್ರ ತೀರ್ಥರು ಶ್ರೀ ವೇದವ್ಯಾಸ ತೀರ್ಥರು ಶ್ರೀರಾಘವೇಂದ್ರತೀರ್ಥರು ಮತ್ತು ಶ್ರೀ ಸತ್ಯಬೋಧರ ವಿಶೇಷ ಸಾನಿಧ್ಯವು ಅಲ್ಲಿದೆ ಅದರ ಸಾಂಕೇತಿಕವಾಗಿ ಬೃಂದಾವನದ ಸುತ್ತಲು ಶಿಲೆಗಳಿವೆ 

ಇಂತಹ ಗುರುಗಳು ನಮ್ಮ ರಾಯಚೂರಿನ ಸುಮಾರು 30ಕಿಲೋಮಿಟರ್ ದೂರದಲ್ಲಿ ನೆಲೆಸಿರುವುದು ನಮ್ಮ ಅಹೋಭಾಗ್ಯ 

ಇಂದು ಪ್ರಾತಃ ಸ್ಮರಣೀಯರಾದ,ಮಂತ್ರಾಲಯ ಪ್ರಭುಗಳ ಸಮಕಾಲೀನರಾದ ಶ್ರೀ ಕೃಷ್ಣದ್ವ್ಯೆಪಾಯನರು ಹರಿಪಾದವನ್ನು ಸೇರಿದ ಸುದಿನ.
ಒಂದು ದಿನ ರಾಯರು ಶಿಷ್ಯರಿಗೆಪಾಠವನ್ನು ಮಾಡುತ್ತಾ ಇರಬೇಕಾದರೆ ತಕ್ಷಣ ಆಕಾಶದ ಕಡೆ ದೃಷ್ಟಿ ಹಾಯಿಸಿ ನಗೆಮೊಗದಿಂದ ಕರಮುಗಿದರು.
ಅಲ್ಲಿದ್ದವರೆಲ್ಲ ಏನುಸಹ ಅರ್ಥ ಆಗಲಿಲ್ಲ.

ಆಗ ಅವರೆಲ್ಲರೂ ಗುರುಗಳನ್ನು ಕೇಳಿದಾಗ ಆಗ ರಾಯರುಇಂದು ಶ್ರೀ ಕೃಷ್ಣದ್ವ್ಯೆಪಾಯನರು ಹರಿ ಪಾದ ಸೇರಿದರು.ಈಗ ಅವರು ವಿಮಾನರೂಢರಾಗಿ ಈ ಲೋಕವನ್ನು ತ್ಯಜಿಸಿ ಹೋಗುತ್ತಿದ್ದರು. ನಮ್ಮನ್ನು ಕಂಡು ಅಭಿನಂದಿಸಿದರು. ನಾವು ಸಹ ಪ್ರತಿ ಅಭಿನಂದನೆ ಮಾಡಿದೆವು.ಅಷ್ಟೇ ಎಂದು ಅಪ್ಪಣೆ ಕೊಡಿಸಿದರು.
ಇದು ಮಂತ್ರಾಲಯ ಪ್ರಭುಗಳ ಚರಿತ್ರೆಯಲ್ಲಿ ಬರುತ್ತದೆ.

ಇಂತಹ ಗುರುಗಳ ಬೃಂದಾವನ ಭೀಮಾನದಿಯ ತಟದಲ್ಲಿರುವ ಕುಸುಮೂರ್ತಿ ಎಂಬ ಗ್ರಾಮದಲ್ಲಿದೆ. ಅದೊಂದು ಅಪೂರ್ವ ಸ್ಥಳ. ಮಗ್ಗಲಿನಲ್ಲಿ ಭೀಮಾನದಿ.

ಸ್ವಲ್ಪ ದೂರದಲ್ಲಿಯೆ ಕೃಷ್ಣಾ ಭೀಮ ನದಿಗಳ ಪವಿತ್ರ ಸಂಗಮ.
ಎಲ್ಲಕ್ಕಿಂತ ಹೆಚ್ಚಾಗಿ ಶ್ರೀ ರುದ್ರಾಂಶರೆಂದು ಪ್ರಖ್ಯಾತರಾದ ಈಗಲು ಬಂದ ಆಶ್ರಿತರಿಗೆ ಶರಣು ಜನರಿಗೆ ಉದ್ದಾರ ಮಾಡುತ್ತಾ ಇರುವ 
ಶ್ರೀ ಜಿತಾಮಿತ್ರ ಗುರುಗಳು  ಇರುವ ಸನ್ನಿಧಾನ ನೆಲೆಗೆ ಹತ್ತಿರ.

ಇಂದು ಅವರ ಸ್ಮರಣೆಯನ್ನು ಮಾಡೋಣ..

🙏ಹರೇ ಶ್ರೀನಿವಾಸ🙏
*****

ಮಹಾಮಹಿಮರು ಶ್ರೀ ಕೃಷ್ಣದ್ವೈಪಾಯನ ತೀರ್ಥರು
by  ಫಣೀಂದ್ರ  ಕೆ 

" ವರಭೀಮಾತಟದಿ ವಿರಾಜಿಸುವಂಥ 
 ಕುಸುಮರೌತಿ ಷಷ್ಟ ಶರಣಾಗತ ನರರಿಗೆ ಸಕಲಾಭೀಷ್ಟಗಳನ್ನುಗಳನ್ನೂ ಕೊಡುವ 
 ಸು ಸಮರ್ಥ ಧರೆಯೊಳು ಮೆರೆಯುವ ಶ್ರೀ ಹರಿ ಕಾರ್ಪರ ನರಹರಿಯನೊಲಿಸಿರುವ 
 ಪರಮ ಮಹಾತ್ಮ "

ಲೇಖಕರು: ಫಣೀಂದ್ರ ಕೆ
ಈ ಸಾಲುಗಳನ್ನು ನೋಡಿದರೆ ಕೃಷ್ಣ ದ್ವೈಪಾಯನ ತೀರ್ಥರ ವ್ಯಕ್ತಿತ್ವ ಎಂತಹದು ಎಂದು ತಿಳಿಯುತ್ತದೆ. ನಮ್ಮ ಮಧ್ವಸಿದ್ಧಾಂತದಲ್ಲಿ ವಿಶೇಷವಾಗಿ ಜ್ನ್ಯಾನಿಗಳ ಸಮೂಹವೇ ಇದೆ. ಅವುಗಳಲ್ಲಿ ಮಹಾಜ್ನ್ಯಾನಿಗಳು,  ತಪಸ್ವಿಗಳು, ವೇದವ್ಯಾಸದೇವರನ್ನು ವಿಶೇಷವಾಗಿ ಆರಾಧನೆಮಾಡಿದ, ಕೋಟಿ ಬಾರಿ ವೇದವ್ಯಾಸ ಮಂತ್ರ ಜಪಮಾಡಿ, ಸಾಧನೆ ಮಾಡಿಕೊಂಡಿರುವ, ಪರಮ ವಿರಕ್ತ ಶಿಖಾಮಣಿಗಳು ಶ್ರೀ ಕೃಷ್ಣದ್ವೈಪಾಯನ ತೀರ್ಥರು.

ಪ್ರಾತಃಸ್ಮರಣೀಯರಾದ ಶ್ರೀ ಕೃಷ್ಣದ್ವೈಪಾಯನ ತೀರ್ಥರು ಶ್ರೀ ವೇದವ್ಯಾಸ ತೀರ್ಥರ ಅತ್ಯಂತ ಪ್ರೀತ್ಯಾಸ್ಪದ ಶಿಷ್ಯರು. ಇಂದು ಅವರ ಆರಾಧನಾ ಮಹೋತ್ಸವ. ನಮಗೆ "ಪೂರ್ಣಬೋಧಗುರುವಂಶ ಕಥಾ  ಕಲ್ಪತರು"  ಎಂಬ ಗ್ರಂಥದಲ್ಲಿ  ಮತ್ತು ಕೃಷ್ಣ ದ್ವೈಪಾಯನಾಮಷ್ಟಕ ಎಂಬ ಕೃತಿಯಲ್ಲಿ ಇವರ ಮಹಿಮೆ ತಿಳಿಯಬಹುದು.

ಕೃಷ್ಣದ್ವೈಪಾಯನ ತೀರ್ಥರು ಈಗಿನ ಆಂಧ್ರಪ್ರದೇಶದ ಮಕ್ತಲ್ ತಾಲೂಕು, ಮಾಗನೂರು ಮಂಡಲ, ಭೀಮಾನದಿ ತೀರದಲ್ಲಿ "ಕುಸುಮೂರ್ತಿ" ಎಂಬ ಪುಟ್ಟಹಳ್ಳಿಯಿಂದ ಸುಮಾರು ಒಂದು ಕಿ.ಮೀ ಒಳಗೆ ಹೋದರೆ, ಭಾಗೀರತಿ ದೇವಿಯ ದಿವ್ಯಸಾನಿದ್ಯ, ವೇದವ್ಯಾಸ ಮಂದಿರ ಎಂತಲೂ ಕರೆಯುತ್ತಾರೆ. ರಾಯಚೂರಿನಿಂದ ಹೈದರಾಬಾದ್ ಗೆ ಹೋಗುವ ಮಾರ್ಗದಲ್ಲಿ, ಕೃಷ್ಣ ನದಿ ಮತ್ತು ಆ ಗ್ರಾಮಕ್ಕೆ "ಕೃಷ್ಣ" ಎಂದೇ ಹೆಸರು, ( ಈಗ ಅಲ್ಲಿ ಒಂದು ರೈಲ್ವೆಸ್ಟೇಷನ್ ಇದೆ) ಅಲ್ಲಿಂದ 15 ಕಿ ಮೀ ಒಳಗಡೆ ಹೋದರೆ, "ಕುಸುಮೂರ್ತಿ" ಗ್ರಾಮ ಸಿಗುತ್ತದೆ. ಸನಿಹದಲ್ಲಿ ನಮಗೆ ಜಿತಾಮಿತ್ರಗೆಡ್ಡೆ, ಮಾಂಡವ್ಯಋಷಿಗಳಿಗೆ ಪ್ರಸನ್ನರಾದ ಶ್ರೀ ವೆಂಕಟೇಶದೇವರ ಸನ್ನಿದಾನ - ಗುಡೆಬೆಳ್ಳೂರು, ಕೊಲ್ಹಾಪುರದಲ್ಲಿ ಶ್ರೀ ಸತ್ಯಪೂರ್ಣತೀರ್ಥರ ಸನ್ನಿದಾನ, ಹಾಗೆ ಆತಕೂರಿನಲ್ಲಿ ಶ್ರೀ ಉತ್ತರಾಧಿಮಠದ ನಾಲ್ಕು ಯತಿಗಳ ಸನ್ನಿದಾನ ಹತ್ತಿರದಲ್ಲೇ ಇದೆ.

ಇವರ ಕಾಲ ಹದಿನಾರನೇ ಶತಮಾನ 1619 ರಿಂದ 1669 ರವರೆಗೂ ಪಾಠ ಪ್ರವಚನಗಳನ್ನು ಮಾಡಿ ಅಲೌಕಿಕ  ಸಾಧನೆ ಮಾಡಿದ ಮಹನೀಯರು. ಸುಮಾರು ಐವತ್ತು ವರ್ಷಕ್ಕಿಂತ ಹೆಚ್ಚು ಸನ್ಯಾಸ ಜೀವನ ಮಾಡಿದವರು.
ರಘುತ್ತಮ ತೀರ್ಥ ಶ್ರೀಪಾದಂಗಳವರಲ್ಲಿ ಸ್ವಲ್ಪ ಕಾಲ ಇದ್ದು ಅಧ್ಯಯನ ಮಾಡಿದ್ದವರು, ವೇದವ್ಯಾಸ ತೀರ್ಥರು - ಪೆನುಗೊಂಡದಲ್ಲಿ ಸನ್ಯಾಸಾಶ್ರಮ ಸ್ವೀಕರಿಸಿದವರು. ಮಣ್ಣೂರಿನ ಮಹಾತಪಸ್ವಿಗಳಾದ ಶ್ರೀ ವೇದೇಶ ತೀರ್ಥರಲ್ಲಿ ಅಧ್ಯಯನ ಮಾಡಿದವರು ಇಂದಿನ ಆರಾಧ್ಯರು.  

ಇವರು ಅನೇಕ ಮಠಗಳ ಪೀಠಾಧಿಪತಿಗಳ ಸಮಕಾಲೀನರಾಗಿ ಜೊತೆಗಿದ್ದವರು, ಶ್ರೀ ರಘುತ್ತಮ ತೀರ್ಥರು, ಶ್ರೀ ವೇದವ್ಯಾಸ ತೀರ್ಥರು, ಶ್ರೀ ವಿದ್ಯಾಧೀಶ ತೀರ್ಥರು, ಶ್ರೀ ವೇದನಿಧಿತೀರ್ಥರು, ಶ್ರೀ ಸತ್ಯವ್ರತ ತೀರ್ಥರು, ಸತ್ಯನಿಧಿ ತೀರ್ಥರು, ಶ್ರೀ ಸತ್ಯಾನಂದ ತೀರ್ಥರು, ವಿದ್ಯಾಪತಿ ತೀರ್ಥರು ಹೀಗೆ ಅನೇಕ ಯತಿಶ್ರೇಷ್ಠರನ್ನು ಕಂಡು ಅವರ ಜೊತೆಗೆ ಇದ್ದ ಮಹಾನುಭಾವರು ಶ್ರೀ ಕೃಷ್ಣದ್ವೈಪಾಯನ ತೀರ್ಥರು. ಮಂತ್ರಾಲಯ ಮಠದ ಶ್ರೀ ಕಲಿಯುಗ ಕಾಮಧೇನುಗಳಾದ ಶ್ರೀ ರಾಘವೇಂದ್ರ ತೀರ್ಥರ ಗುರುಗಳಾದ ಶ್ರೀ ಸುಧೀಂದ್ರ ತೀರ್ಥರು, ರಾಯರು ಹಾಗೆ ಯಾದವೇಂದ್ರ ತೀರ್ಥರು, ವ್ಯಾಸರಾಜ ಮಠದ ಕಂಬಾಲೂರು ಶ್ರೀರಾಮಚಂದ್ರ ತೀರ್ಥರು ಅನೇಕ ಮಹನೀಯರ ಸಮಕಾಲೀನವರು.

ಇವರ ಪೂರ್ವಾಶ್ರಮದ ಹೆಚ್ಚಿನ ವಿಚಾರ ಅಷ್ಟು ಪ್ರಚಾರವಾಗಿಲ್ಲ, ಚಿಂಚೊಳಿ ಕೃಷ್ಣದ್ವೈಪಾಯನ ಚಾರ್ಯರು ಎಂದೇ ಪ್ರಸಿದ್ದಿ ಎಂದು, ಸತ್ಕಾಥಾ  ಎಂಬ ಗ್ರಂಥದಿಂದ ತಿಳಿಯಬಹುದು. ಕಂಚಿವರದರಾಜನ ಸನ್ನಿದಿಯಲ್ಲಿ ವಾಸಿಸುತ್ತಿದ್ದರು ಎಂದು ತಿಳಿದು ಬರುತ್ತದೆ. ಒಮ್ಮೆ ಕೃಷ್ಣ ನದಿ ಉಗಮಸ್ಥಾನ ಮಹಾಭಲೇಶ್ವರದಲ್ಲಿ ರಭಸದಿಂದ ಹರಿಯುತ್ತಿದ್ದ ಕೃಷ್ಣ ನದಿಯಲ್ಲಿ ಅನಿವಾರ್ಯ ಕಾರಣದಿಂದ ನದಿ ದಾಟಲು ಪ್ರಯತ್ನಿಸಿ ಈಜುತ್ತಿದ್ದರೆ, ಮಾರ್ಗ ಮದ್ಯ ಆಯಾಸದಿಂದ ಶ್ರೀ ರಾಮಚಂದ್ರ ದೇವರನ್ನು ಪ್ರಾರ್ಥನೆ ಮಾಡಲು ಮುಂದಿನ ದಾರಿ ಬಹಳಷ್ಟು ಸುಲಭವಾಗಿತ್ತಂತೆ.

ಬಾಲ್ಯದಲ್ಲಿ ನಾನು ಏನಾದರೂ ಭಗವದ್ಅನುಗ್ರಹ  ಪಡೆಯಬೇಕೆಂಬ ಉತ್ಕರ್ಷೆಯಿಂದ ಶ್ರೀ ರಘುತ್ತಮ ತೀರ್ಥರ ಕಾಲದಲ್ಲಿ ಅನೇಕ ಶಿಷ್ಯರ ಜೊತೆಗಿದ್ದು, ವೇದವ್ಯಾಸ ತೀರ್ಥರು ಕಾಲಕ್ರಮದಲ್ಲಿ ಕಂಚಿಕ್ಷೇತ್ರಕ್ಕೆ ಬಂದಾಗ ಅವರಲ್ಲಿ ಸನ್ಯಾಸಾಶ್ರಮ ಪಡೆದು ಬ್ರಹ್ಮಚಾರಿ ಇದ್ದಾಗಲೇ ಯತ್ಯಾಶ್ರಮ ಪಡೆದವರು. ಕೃಷ್ಣದ್ವೈಪಾಯನ ಚಾರ್ಯರು ಪ್ರಣವ ಮಂತ್ರ ಪಡೆದು ಕೃಷ್ಣದ್ವೈಪಾಯನ ತೀರ್ಥರಾದರು. ಇವರ ವೈರಾಗ್ಯ, ಪ್ರತಿಭೆ ಅಸಾಧಾರಣ ದೈವಭಕ್ತಿ ಮುಂತಾದವುಗಳನ್ನು ಗುರುತಿಸಿ ವೇದವ್ಯಾಸ ತೀರ್ಥರು ಮಣ್ಣೂರಿನಲ್ಲಿ ಶ್ರೀ ವೇದೇಶ ತೀರ್ಥರಲ್ಲಿ ಹೆಚ್ಚಿನ ಅಧ್ಯಯನಕ್ಕೆ ಕಳುಹಿಸುತ್ತಾರೆ.

ಕೃಷ್ಣದ್ವೈಪಾಯನ ತೀರ್ಥರ ಬಳಿ  ಸುಮಾರು ಒಂದು ಸಲಕ್ಕೆ ನೂರಕ್ಕೂ ಹೆಚ್ಚಿನ ಶಿಷ್ಯರು ಇರುತ್ತಿದ್ದರಂತೆ, ವಾದಿ ದಿಗ್ವಿಜಯ, ಕೆಲವು ಕುಹುಕಿಗಳು ಇವರಿಗೆ ಮತ್ತು ಮಠಗಳಿಗಿಂತ ಹೆಚ್ಚಿನ ಶಿಷ್ಯರು ಇಟ್ಟುಕೊಂಡು ಮಠಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಇಲ್ಲಸಲ್ಲದ ಮಾತುಗಳನ್ನು ಆಡಿದಾಗ, ತಮ್ಮ ಎಲ್ಲ ಶಿಷ್ಯರನ್ನು ಶ್ರೀಮಠಕ್ಕೆ ತಂದು ಒಪ್ಪಿಸುತ್ತಾರೆ, ಆಗ ವೇದವ್ಯಾಸ ತೀರ್ಥರೇ ಪುನಃ ಇವರಿಗೆ ನಾವೇನಾದರೂ ನಿಮಗೆ ಈ ರೀತಿ ಹೇಳಿದ್ದೀವೆಯೇ ಎಂದು ಹೇಳಿ ನಿಮಗೆ ಇನ್ನು ಒಂದು ಬಹುಮಾನ ಕೊಡುತ್ತೇವೆ ಎಂದು ಹೇಳಿ, ಅಣು ಸಂಸ್ಥಾನವನ್ನು ಇವರಿಗೆ ಕೊಟ್ಟು ಉತ್ತರದೇಶಕ್ಕೆ ದಿಗ್ವಿಜಯ ಮಾಡಿಎಂದು ಹೇಳಿ ಕೊಟ್ಟು ಕಳುಹಿಸದರು.

ಪ್ರತಿನಿತ್ಯ ತಂತ್ರಸಾರೋಕ್ತ ಮಂತ್ರಗಳ ಪ್ರತಿನಿತ್ಯ ಪಠಣ, ಒಂದು ಮುಷ್ಠಿ ಮೃತ್ತಿಕೆಯಲ್ಲಿ ವೇದವ್ಯಾಸದೇವನ್ನು ಆವಾಹನೆ ಮಾಡಿ ಕೋಟಿ ಭಾರಿ ವೇದವ್ಯಾಸ ಮಂತ್ರ ಜಪಮಾಡಿ ಆ ವೇದವ್ಯಾಸ ದೇವರ ದಿವ್ಯಸನ್ನಿದಾನ ತಂದಿದ್ದಾರೆ, ಸರ್ವಮೂಲ ಗ್ರಂಥಗಳ, ಸುಧಾಮೃತವನ್ನು ನಿತ್ಯ ಅಧ್ಯಯನವನ್ನು ಮಾಡಿ ತಾವಿದ್ದ "ಕುಸುಮೂರ್ತಿ" ಎಂಬ ಗ್ರಾಮವನ್ನೇ ವ್ಯಾಸಮಂದಿರ ಮಾಡಿದ್ದವರು. ಪ್ರತಿಒಂದು ಸಿದ್ದಿಗಳನ್ನು ವೇದವ್ಯಾಸ ತೀರ್ಥರಲ್ಲಿ ಸಮರ್ಪಣೆ ಮಾಡಿದ ಮಹನೀಯರು. ಅವರು ಪೂಜಿಸಿದ ಶ್ರೀ ವೇದವ್ಯಾಸದೇವರ ವಿಗ್ರಹ ಇಂದಿಗೂ ಉತ್ತರಾಧಿಮಠದಲ್ಲಿ ಪೂಜೆಗೊಳ್ಳುತ್ತಿದೆ.

ಒಂದುಬಾರಿ ಕೃಷ್ಣದ್ವೈಪಾಯನ ತೀರ್ಥರು ಗಂಗಾಸ್ನಾನ ಮಾಡಬೇಕು ಎಂದು ಮನಸ್ಸು ಮಾಡಿದರು. ಅವರು ಪ್ರತಿನಿತ್ಯ ಸುಮಾರು 400 ಜನ ಇವರಲ್ಲಿ ಅಧ್ಯಯನ ಮಾಡುತ್ತಿದ್ದರಂತೆ. ಕಾಶಿಯಾತ್ರೆ ಮಾಡಬೇಕು ಎಂದು ಯೋಚಿಸಿ ಉಗ್ರಾಣದಲ್ಲಿದ್ದ ಪಾತ್ರೆಗಳಲ್ಲಿ ಬೀಜಾಕ್ಷರ ಬರೆದು ನಾವು ಬರುವವರೆಗೂ ಪ್ರತಿನಿತ್ಯ ಇಲ್ಲಿ ಅನ್ನದಾನ ಮತ್ತು ವಿದ್ಯಾರ್ಥಿಗಳಿಗೆ ಪಂಡಿತರಿಗೆ ಕೊರತೆ ಆಗಬಾರದು ಎಂದು ಬರೆದು ಅಲ್ಲಿಂದ ಯಾತ್ರೆಗೆ ಹೊರಟರು. ಸ್ವಲ್ಪ ದೂರ ಹೋಗುವಲ್ಲಿಗೆ ಸಾಕ್ಷಾತ್ ಭಾಗೀರತಿ ಸೂಚನೆ ಮಾಡಿ,  ಎಲ್ಲಾ ತೀರ್ಥಗಳ ಸನ್ನಿದಾನದೊಂದಿಗೆ ಬಿರುಬಿಸಲಿನಲ್ಲಿ ಒಂದು ಟೊಂಗೆಯಲ್ಲಿ ಗಂಗೆ ಆವಿರ್ಭಾವಳಾಗಿ ಕೃಷ್ಣದ್ವೈಪಾಯನ ಶಿರಸ್ಸಿನಲ್ಲಿ ಹರಿದಿರುವದು ಇಂದಿಗೂ ಸಾಕ್ಷಿಯಾಗಿದೆ. ಇಂದಿಗೂ ಭೀಮೆಯಲ್ಲಿ ಭಾಗೀರತಿ ಸನ್ನಿದಾನ ಅಂದಿನಿಂದ ಇದೆ ಎಂದು ಹೇಳುತ್ತಾರೆ.

ಕೃಷ್ಣ ದ್ವೈಪಾಯನ ತೀರ್ಥರು ಒಂದು ನರಸಿಂಹ ದೇವರು ಮತ್ತು ಎಂಟು ಮುಖ್ಯಪ್ರಾಣ ದೇವರ ಪ್ರತಿಷ್ಠೆ ಮಾಡಿದ್ದಾರೆ.
ಕೃಷ್ಣದ್ವೈಪಾಯನ ತೀರ್ಥರಲ್ಲಿ ಮೊದಲು ಶ್ರೀ ಸತ್ಯನಾಥ ತೀರ್ಥರು ಅಧ್ಯಯನ ಮಾಡಿದ್ದರು ಎಂದು ಹೇಳುತ್ತಾರೆ.
ಇವರು ಪೂಜಿಸಿದ ಪ್ರತಿಮೆಗಳು ಇಂದು ಉತ್ತಾರಾಧಿ ಮಠದಲ್ಲಿ ಪೂಜೆಗೊಳ್ಳುತ್ತಿದೆ.

ವೇದೇಶ ತೀರ್ಥರಾಗಿ, ವೇದವ್ಯಾಸ ತೀರ್ಥರಿಂದ ಆಶ್ರಮ ಧರಿಸಿ ತಮ್ಮ ಜೀವನವನ್ನೇ ಪಾಠ ಪ್ರವಚನಕ್ಕೆ ಮುಡುಪಾಗಿಟ್ಟಂತ ಮಹನೀಯರು ಶ್ರೀ ಕೃಷ್ಣದ್ವೈಪಾಯನ ತೀರ್ಥರು. ಆದರೆ ದುರದೃಷ್ಟವಶಾತ್ ಇವರ ಗ್ರಂಥಗಳು ಉಪಲಬ್ದ್ಹವಾಗಿಲ್ಲ. ಹೆಚ್ಚಿನ ಶೋಧನೆ ಮಾಡಬೇಕಾಗಿದೆ, ಕಿಲಕನಾಮ,  ಸಂವತ್ಸರ ಗ್ರೀಷ್ಮ ಋತು  ಜೇಷ್ಠ ಶುದ್ಧ ಪೌರ್ಣಮಿಯಂದು ಇಹಲೋಕದ ಯಾತ್ರೆ ಮುಗಿಸಿ ಪರಮಾತ್ಮನಪುರಕ್ಕೆ ದಿವ್ಯವಿಮಾನದಲಿ ಸಾಗಿದರು.  ಇವರ ಬೃಂದಾವನ ಕಾರ್ಯ ನಿರ್ಮಾಣ ಮಾಡಿದವರು ಮುದ್ಗಲ ಚಾರ್ಯರು, ಇವರ ಬೃಂದಾವನ ಸುತ್ತ 4 ವಿಶೇಷ ಮೂರ್ತಿಗಳನ್ನೂ ನಿರ್ಮಿಸಿದ್ದರು. ಕೃಷ್ಣ ದ್ವೈಪಾಯನ ತೀರ್ಥರು ಶಿಷ್ಯರಿಗೆ ಪಾಠ ಹೇಳುತ್ತಾ ಕೂತಿದ್ದಾರೆ, ದೇವಲೋಕದ ವಿಮಾನ ಬಂದಿತು ದೇವತೆಗಳ ಕೈಕೊಟ್ಟು ಅವರನ್ನು ವಿಮಾನದಲ್ಲಿ ಕುಳ್ಳರಿಸಿ ಹೊರಡುತ್ತಾರೆ.

ತುಂಗಭದ್ರಾ ತೀರದಲ್ಲಿ ರಾಯರು ತಮ್ಮ ಶಿಷ್ಯರೊಂದಿಗೆ ಇದ್ದಾಗ ಇದ್ದಕ್ಕಿದ್ದ ಹಾಗೆ ಆಕಾಶ ನೋಡಿ ಕಂಗಳಲ್ಲಿ ನೀರು ತುಂಬಿಕೊಳ್ಳುತ್ತಾರೆ, ಆಗ ಶಿಷ್ಯರು ರಾಯರನ್ನು ಕೇಳುತ್ತಾರೆ, ಆಗ ನಮ್ಮ ಆತ್ಮೀಯರು ಕೃಷ್ಣ ದ್ವೈಪಾಯನರು ಪರಂಧಾಮ ಪ್ರವೇಶಿಸುತ್ತಿದ್ದಾರೆ ಎಂದು ಹೇಳಿ, ಅವರಿಗೆ ಗೌರವ ಪೂರ್ವಕ ನಮಸ್ಕಾರ ಮಾಡಿ, ನಾವು ಹೊರಡುವ ಕಾಲ ಯಾವುದು ಎಂದು ಕೇಳಿದಾಗ, ವಿಮಾನದಲ್ಲಿದ್ದ ಕೃಷ್ಣದ್ವೈಪಾಯನ ತೀರ್ಥರು ತಮ್ಮ ಕೈಯಿಂದ " ಎರಡು ಎರಡು ಎರಡು " ಎಂದು ಮೂರು ಬಾರಿ ಬೆರಳನ್ನು ತೋರಿಸಲು, ರಾಯರ ಬೃಂದಾವನ ಪ್ರವೇಶಕಾಲ ಅಲ್ಲಿಂದ ಎರಡು ವರ್ಷ, ಎರಡು ತಿಂಗಳು, ಎರಡು ದಿನ ಎಂದು ಹೇಳುತ್ತಾರೆ ಅಲ್ಲಿಗೆ ಲೆಕ್ಕ ಹಾಕಿದಾಗ ಎರಡುವರ್ಷದ ನಂತರ ಶ್ರಾವಣ 
ಬಹುಳ ದ್ವೀತಿಯ ಎಂದು ಪರಿಗಣನೆಗೆ ತೆಗೆದು ಕೊಳ್ಳುತ್ತಾರೆ ಎಂದು ಕಲಿಯುಗ ಕಲ್ಪತರು ಎಂಬ ಗ್ರಂಥದಿಂದ ತಿಳಿಯಬಹುದಾಗಿದೆ.

“ ಯತಿವರ ದೂರಿದ ಮೃತಿಗೈಯಲಾಗಸ ಪಥದಲಿ ಕಂಡಾನತಿಸಿದ ಮಹಿಮಾ ” – ಜಗನ್ನಾಥದಾಸರು 

ಹೀಗೆ ನನಗೆ ತೋಚಿದ ಮಟ್ಟದಲ್ಲಿ, ಪಂಡಿತರಾದ ಶ್ರೀ ಭೀಮಸೇನಾಚಾರ್ಯ ಆತಕೂರು ಇವರ ಮಾರ್ಗದರ್ಶನ ದಲ್ಲಿ ಮಹನೀಯರಾದ ಶ್ರೀ ಕೃಷ್ಣದ್ವೈಪಾಯನ ತೀರ್ಥರ ಚರಿತ್ರೆ ಬರೆಯುವ ಸಾಹಸ ಮಾಡಿದ್ದೇನೆ. ತಪ್ಪೇನಿದ್ದರೂ ನನ್ನದೇ ದೋಷ ಎಂದು ಹೇಳುತ್ತಾ ಒಂದೆರಡು ಒಳ್ಳೆಯ ವಿಷಯಗಳು ಗುರುಗಳ ಕಾರುಣ್ಯ ಎಂದು ತಿಳಿಸುತ್ತ ಶ್ರೀ ಕೃಷ್ಣದ್ವೈಪಾಯನ ತೀರ್ಥರ ಚರಣಾರವಿಂದಗಳಿಗೆ ನಮಿಸುತ್ತೇನೆ.

 ಪ್ರೀತೋಸ್ತು ಕೃಷ್ಣ ಪ್ರಭೋ 
 ಫಣೀಂದ್ರ  ಕೆ 

 ಶ್ರೀ ಕೃಷ್ಣಾರ್ಪಣಮಸ್ತು.  
****

know more here  SUMADHWASEVA




No comments:

Post a Comment