Thursday 1 August 2019

bidarahalli sreenivasa teertharu 1640 bidi sanyasi bhadrapada bahula dwiteeya honnali ಶ್ರೀನಿವಾಸ ತೀರ್ಥರು



info from sumadhwaseva.com--->



Sreenivasa Thirtharu Bhadrapada bahula Bidige Honnali

bidarahaLLi srInivAsa tIrtharu (gruhastaru)

Punyadina: Bhadrapada krishNa dwitIya
Period: 1590 – 1640
Gurugalu: Sri yAdavAryaru
KaTTe: Honnali in Shimoga District

ಶ್ರೀ ಶ್ರೀನಿವಾಸಗುರೂನ್ ವಂದೇ ಶ್ರೀನಿವಾಸಾಂಘ್ರಿ ಸದ್ರತೀನ್ |
ಶ್ರೀಮಧ್ವಶಾಸ್ತ್ರದುಗ್ದಾಬ್ಧಿಪಾರಗಂತ್ರೂನ್ ಅಹಂ ಭಜೇ |

श्री श्रीनिवासगुरून् वंदे श्रीनिवासांघ्रि सद्रतीन् ।
श्रीमध्वशास्त्रदुग्दाब्धिपारगंत्रून् अहं भजे ।

shri bidarahaLLi srInivAsa tIrtharu was the son of the younger brother of shri yAdavAryaru and shri vEDEsha tIrtharu. His father passed away at a young age and he was brought up by shri yAdavAryaru.

Mantrakshate at Mantralaya –

Once Sri Bidarahalli Srinivasacharyaru went to Raghavendra Swamigalu, during Chaturmasya. After samstana pooja, Rayaru asked Bidarahalli Srinivasacharyaru to sit for Theerthaprasada, but he hesitated to take the items as Rayaru takes Mustard (sasive) as a gesture to the offering of Kanakadasaru. As Bidarahalli Srinivasa thirtharu is from Uttaradimutt, he thought that he will have Vrathabhanga if he takes mustard. Then Rayaru told his disciples to serve him only items which does not contain Mustard. After the Theerthaprasada, Rayaru gave him mantrakshate and returned to his place Bidarahalli. When he went home, he observed that the mantrakshate given by Rayaru has turned to be black colour in his hands, whereas the mantrakshate given by rayaru for Yadavaryaru is still red colour only . Yadavaryaru told him that he has done wrong by not accepting mustard at the rayara mutt. Next day itself, Srinivasacharyaru went back to Rayaru and apologized for the same, and had the Theerthaprasada with mustard and received the mantrakshate from Rayaru.

Srinivasacharyarun was a nephew of Yadavaaryaru.

Bidarahalli Srinivasachar got the title “Thirtha”:

Once Rayaru, on his way went to Bidarahalli and met Srinivasacharyaru in his house and stayed there for a few days accepting his bhikshe. There, Rayaru had the opportunity of reading the works of Bidarahalli Srinivasacharyaru and was with full of admiration for Srinivasacharya,  who even though was a gruhasta, had dedicated himself to the spread of knowledge. Rayaru blessed him with the title “THIRTHA” and renamed him as “Bidarahalli Srinivasa Thirtha” instead of  “Bidarahalli Srinivasachar”. Thus he got the “thirtha” title even though he was not a sanyasi.

His works :- Commentary on

1. Srimanyaayasudha
2. Tatvaprakashika
3. Dashaprakaranateeka
4. Pramanapaddati
5. Bhagavatha
6. Rugbhashya

CLICK FOR FILE ON

BIDARAHALLI SRINIVASACHARYARU



****************

6 sep 2009 is Srinivasa Tiirtha's punyadina. He belongs to Bidarahalli, a village in Dharwad Dist. of Karnataka. Sri Vadiraja has described this place as one of the unique pilgrim spots in India.

Srinivasaacharya was a nephew and a star disciple of the famous scholar Sri Yadavarya. He was a unique householder who lived in a humble hamlet with his devoted wife and son, Venkatapathi. The glosses that he had written were already well known as they were very helpful to the students of Dvaita Vedanta.

He was filled with admiration for Srinivasaacharya, who, though being a householder, had dedicated himself to the
spread of knowledge and also trained his son in the same path. It is said that Sri Raghavendra blessed him thus:

"Your service to the spread of knowledge and learning and your love for truth cannot be adequately praised.
Undoubtedly, your spiritual efforts are on par with an ascetic's endeavors. Hence forth, you are notSrinivasaacharya but Srinivasa Tiirtha ".

Thus he became well-known as Biidarahalli Srinivasa Tiirtha. He was a rare person, who lived like a householder all his life, but got the status of a noble ascetic. Sri Raghavendra, thus singled out a householder on the basis of his merit and excellence.

****

ಬಿದರಹಳ್ಳಿ ಶ್ರೀನಿವಾಸ ತೀರ್ಥರು

||ಶ್ರೀ ಶ್ರೀನಿವಾಸಗುರೂನ್ ವಂದೇ ಶ್ರೀನಿವಾಸಾಂಘ್ರಿ ಸದ್ರತೀನ್ |
ಶ್ರೀಮಧ್ವಶಾಸ್ತ್ರದುಗ್ದಾಬ್ಧಿಪಾರಗಂತ್ರೂನ್ ಅಹಂ ಭಜೇ ||

ಮಧ್ವಸಿದ್ದಾಂತದಲ್ಲಿ ಯತಿಗಳ ನಂತರ ಗೃಹಸ್ಥ ಜೀವನದಲ್ಲಿ ಯತಿಧರ್ಮಾ ಪಾಲಿಸಿ ಭಗವಂತನನ್ನು ಅರ್ಚಿಸಿ ಸಾಧನೆಯನ್ನು ಮಾಡಿಕೊಳ್ಳಬಹುದು ಎಂದು ತೋರಿಸಿ ಕೊಟ್ಟ ಮಹನೀಯರಲ್ಲಿ ಶ್ರೀ ತ್ರಿವಿಕ್ರಮ ಪಂಡಿತರು, ನಾರಾಯಣ ಪಂಡಿತರು ಹಾಗೆ ಮೊನ್ನೆಯಷ್ಟೇ ಆರಾಧಿತರಾದ ಶ್ರೀ ಯಾದವಾರ್ಯರು ಹಾಗೆ ಅವರನಂತರ ಇಂದಿನ ಆರಾಧಿತರಾಗಿರುವ ಶ್ರೀ ಶ್ರೀನಿವಾಸ ತೀರ್ಥರು ಒಬ್ಬರು.

ಕಲಿಯುಗ ಕಾಮಧೇನು ಕಲ್ಪವೃಕ್ಷಗಳಾದ ಶ್ರೀ ರಾಯರಿಂದ   "ತೀರ್ಥ" ಎಂಬ ಬಿರುದನ್ನು   ಶ್ರೀ ಶ್ರೀನಿವಾಸ ಆಚಾರ್ಯರಿಗೆ  ಕೊಟ್ಟರು  ಎಂದರೆ ಅವರ ಗ್ರಂಥ ಕೌಶಲ್ಯ ಎಷ್ಟಿರಬೇಕು ಎಂದು ಊಹಿಸಲು ಅಸಾಧ್ಯ.

ಅಶ್ವತ್ಥನಾರಾಯಣನ ಸನ್ನಿಧಾನದಲ್ಲಿ ಖ್ಯಾತವಾಗಿರುವ ಬಿದಿರಹಳ್ಳಿಯ ನಿವಾಸಿಗಳಾದ ಶ್ರೀ ಶ್ರೀನಿವಾಸ ತೀರ್ಥರು ಅದಕ್ಕೂ ಮುಂಚೆ ಇಂದಿನ ಶಿವಮೊಗ್ಗ ಜಿಲ್ಲೆಯ ಹೊನ್ನಳಿಯಲ್ಲೂ ವಾಸವಿದ್ದರು. ತಂದೆ ತಾಯಿಗಳು ಸಂಪ್ರದಾಯಸ್ಥ ಕುಟುಂಬ ನಿತ್ಯ ಮಧ್ವಶಾಸ್ತ್ರ ಪ್ರವಚನ ಪಾಠ ಹೀಗೆ ಸಾತ್ವಿಕವಾಗಿ ಜೀವನ ನಡೆದಿತ್ತು. ಪರಾನ್ನ ನೇಮವನ್ನು ಮಾಡಿದ ಮಹನೀಯರು, ಹಾಗೆ ನಿತ್ಯ ಅನ್ನದಾನ ಮಾಡಿಯೇ ತಾವು ಊಟಮಾಡುತ್ತಿದ್ದರು. ಜೊತೆಗೆ ತಮ್ಮ ಭಾವನವರಾದ ಶ್ರೀ ಯಾದವಾರ್ಯರ ಗುರುಕುಲ ನೋಡಿಕೊಳ್ಳುವುದೇ ಪ್ರಥಮ ಕೆಲಸ.

ಯಾದವಾರ್ಯರ ಕರಕಮಲಸಂಜಾತರು ಶ್ರೀ ಶ್ರೀನಿವಾಸ ತೀರ್ಥರು ಹಾಗೆ ಯಾದವರ್ಯಾರ ಭಾಮೈದುನ ಶ್ರೀ ಶ್ರೀನಿವಾಸತೀರ್ಥರು. ಗುರುಗಳಲ್ಲಿ ಅತ್ಯಂತ ಭಕ್ತಿ ಮತ್ತು ಗುರುಗಳ ಸೇವೆಯೇ ಪರಮಗುರಿ

ಮಂತ್ರಾಕ್ಷತೆ ಕಪ್ಪಗಿದ್ದು
ಒಂದು ಸಮಯದಲ್ಲಿ ಶ್ರೀ ಶ್ರೀನಿವಾಸ ತೀರ್ಥರು ಶ್ರೀ ಗುರುರಾಘವೇಂದ್ರ ತೀರ್ಥರು ರಾಯಚೂರಿನ ಸಮೀಪ ಸಂಜೀವರಾಯರ ಗುಡಿಯಲ್ಲಿ ಚಾತುರ್ಮಾಸ್ಯ ವ್ರತ ಸ್ವೀಕರಿಸಿದ್ದರು. ಅಲ್ಲಿಗೆ ಕನಕದಾಸರು ತಮ್ಮ ಪೂರ್ವಜನ್ಮದ ಪ್ರಾರಬ್ಧನುಸಾರವಾಗಿ ಆ ಊರಿನಲ್ಲಿ ವಾಸಿಸುತ್ತಿದ್ದು ರಾಯರಿಗೆ ಕಾಣಿಕೆಯಾಗಿ ಸಾಸಿವೆಯನ್ನು ತಂದು ಕೊಟ್ಟಿದ್ದರು. ಆ ದಿನ ಅಡಿಗೆಯಲ್ಲಿ ಸಾಸಿವೆಯನ್ನು ಬಳಸಲು ರಾಯರು ಆದೇಶಿಸದ್ದರು. ಶಾಖಾವ್ರತ ಆದ ಕಾರಣ ಸಾಸಿವೆ ನಿಷಿದ್ಧ, ಆದರೆ ರಾಯರ ಆದೇಶದಿಂದ ಅಂದು ಅಡಿಗೆಯಲ್ಲಿ ಬಳಸಲಾಯಿತು. ಇದನ್ನು ತಿಳಿದ ಶ್ರೀನಿವಾಸಪಂಡಿತರು ಮೂಲರಾಮನಿಗೆ ಅರ್ಪಿತವಾದ ನೈವೇದ್ಯವನ್ನು ಸ್ವೀಕರಿಸದೆ ಪೂಜೆಯ ನಂತರ ರಾಯರ ಬಳಿಯಲ್ಲಿ ತಾವು ಊರಿಗೆ ಹೊರಡುತ್ತೇವೆ, ಮಂತ್ರಾಕ್ಷತೆ ದಯಪಾಲಿಸಿ ಎಂದು ಕೇಳಲು ರಾಯರು ತೀರ್ಥ ಪ್ರಸಾದ ಸ್ವೀಕರಿ ಹೋಗಿ ಎಂದು ಹೇಳಲು, ತುಂಬಾ ಕಾರ್ಯ ಒತ್ತಡ ಇರುವುದರಿಂದ ಹೋಗಲೇಬೇಕು ಎಂದು ಹೇಳಲು ರಾಯರು ಮಂತ್ರಾಕ್ಷತೆ ಅನುಗ್ರಹಿಸಿದರು.

ಹಾಗೆ ಮಧ್ಯಾಹ್ನ ಊಟ ಮಾಡದೆ ತಾವು ಬಂದು ಮನೆಯಲ್ಲಿ ರಾತ್ರಿ ಊಟ ಮಾಡಿದರು, ದಣಿವು ಆಯಾಸದಿ೦ದ ರಾತ್ರಿ ವಿಶ್ರಾಂತಿ ತೆಗೆದು ಕೊಂಡರು. ಮರುದಿನ ಎದ್ದು ಪೂಜೆ ನಂತರ ಮಂತ್ರಾಕ್ಷತೆಯನ್ನು ಒಂದು ಡಬ್ಬಿಯಲ್ಲಿ ಇಡುವ ವಾಡಿಕೆಯಂತೆ ತಾವು ರಾಯರು ಕೊಟ್ಟ ಮಂತ್ರಾಕ್ಷತೆಯನ್ನು ಹಾಕಿಡಲು ನೋಡಿದಾಗ ಮಂತ್ರಾಕ್ಷತೆ ಕಪ್ಪಾಗಿ ಸಾಸಿವೆ ಬಣ್ಣದ ಹಾಗೆ ಇತ್ತಂತೆ. ಆಶ್ಚರ್ಯ ಮತ್ತು ಅಪರಾಧ ಎರಡು ಒಟ್ಟಿಗೆ ಆಗಲು ತಮ್ಮ ಗುರುಗಳಾದ ಯಾದವಾರ್ಯರಿಗೆ ಈ ವಿಷಯ ಹೇಳಲು, ಅವರು ಮನ್ನಸ್ಸಿಗೆ ತುಂಬಾ ಬೇಜಾರು ಮಾಡಿಕೊಂಡು ನೀನು ಗುರುದ್ರೋಹ ಮಾಡಿದ್ದಿಯ ಮೊದಲು ಹೋಗಿ ರಾಯರಲ್ಲಿ ಕ್ಷಮೆಕೇಳು ಎನ್ನಲು ತಾವು ಮಾಡಿದ ಅಪರಾಧದಿಂದ ಮನನೊಂದು ಕೂಡಲೇ ತಾವು ಸಂಜೀವ ರಾಯರ ಗುಡಿಗೆ ಹೋದರು.  

ರಾಯರು ಶ್ರೀನಿವಾಸ ಚಾರ್ಯರ ನಿರೀಕ್ಷೆಯಲ್ಲೇ ಇದ್ದರು, ತಾವು ಬಂದು ರಾಯರ ಚರಣ ಕಮಲಗಳಿಗೆ ವಂದಿಸಿ ಅಶ್ರುಧಾರೆಯನ್ನು ಸುರಿಸಿದರು, ಪಶ್ಚಾತಾಪದಿಂದ ಮನ ನೊಂದಿದ್ದ ಶ್ರೀನಿವಾಸಚಾರ್ಯರಿಗೆ ಸಂತೈಸಿ ನಿಮಗೆ ನಿಮ್ಮ ತಪ್ಪಿನ ಅವರಿವಾಗಿದೆ ಅಲ್ಲವೇ ಎಂದು ಹೇಳಲು, ಪುನಃ ವಂದಿಸಿ ತಾವು ಚಾತುರ್ಮಾಸ್ಯ ಮುಗಿದಕೂಡಲೇ ನಮ್ಮ ಮನೆಗೆ ಭಿಕ್ಷೆಗೆ ಬರಬೇಕು ಎಂದು ಕೇಳಿದರು. ಅದರಂತೆ ರಾಯರು ಅವರಿಗೆ ಒಪ್ಪಿಗೆ ಕೊಟ್ಟರು. "

ಶ್ರೀನಿವಾಸ ಚಾರ್ಯರು - ಶ್ರೀನಿವಾಸ ತೀರ್ಥ ರಾಗಿದ್ದು
ನಂತರ ಚಾತುರ್ಮಾಸ್ಯ ಮುಗಿದ ಮೇಲೆ ರಾಯರು ಒಂದು ಶುಭ ಸಂದರ್ಭದಲ್ಲಿ (ಸಾಮಾನ್ಯ ನವರಾತ್ರಿ ಎಂದು ಹೇಳುತ್ತಾರೆ) ಶ್ರೀನಿವಾಸ ತೀರ್ಥರ ಮನೆಯಲ್ಲಿ ಭಿಕ್ಷೆಗಾಗಿ ಬಂದು ಅಲ್ಲೇ ಒಂದು ಎಂಟು ದಿನಗಳ ಕಾಲ ಅಲ್ಲೇ ತಂಗಿದ್ದರು, ಪ್ರತಿದಿನ ಪೂಜೆ ನಂತರ ಶಾಸ್ತ್ರಧ್ಯಾಯನ ಸಂದರ್ಭ, ರಾಯರ ಕೃತಿಗಳನ್ನು ಎಲ್ಲರು ಓದಲು ಪ್ರಾರಂಭಿಸಿದರು, ಆದರೆ ರಾಯರು ಅಚಾನಕ್ ಆಗಿ ಶ್ರೀನಿವಾಸ ತೀರ್ಥರ ದೇವರ ಮನೆಯ ಒಂದು ಮೂಲೆಯಲ್ಲಿ ಹಲವಾರು ಗ್ರಂಥಗಳನ್ನು ನೋಡಿದರು, ಅದನ್ನು ನೋಡಿ ಆಶ್ಚರ್ಯದಿಂದ ಅಲ್ಲೇ ಕುಳಿತು ಗ್ರಂಥಾವಲೋಕನ ಮಾಡಿದರು, ಎಷ್ಟು ಹೊತ್ತಾದರೂ ಆಚೆ ಬರಲಿಲ್ಲ. ಮಧ್ಯಾಹ್ನ ಕಾಲ ಎಲ್ಲರು ರಾಯರು ಭಿಕ್ಷೆ ಸ್ವೀಕರಿಸುವುದನ್ನೇ ಕಾಯುತ್ತ ಇದ್ದರು. ರಾಯರು ಆಚೆ ಬಂದು, ಶ್ರೀ ಶ್ರೀನಿವಾಸ ಚಾರ್ಯರಲ್ಲಿ ನಿಮ್ಮಬಳಿ ನಮಗೆ ಕೆಲಸವಿದೆ ನೀವು ನಮಗೆ ಕೆಲಸಮಾಡಿಕೊಟ್ಟರೆ ಮಾತ್ರ ಇಂದು ಇಲ್ಲಿ ಭಿಕ್ಷೆ ಸ್ವೀಕರಿಸುತ್ತೇವೆ ಎಂದುರು.   ತಕ್ಷಣ ಶ್ರೀನಿವಾಸಾಚಾರ್ಯರು ನಿಮ್ಮ ಅಪ್ಪಣೆ ಎನ್ನಲು ನಾವು ಇಲ್ಲೇ ಸ್ವಲ್ಪ ಕಾಲ ಉಳಿದು ನೀವು ಮಡಿಯಲ್ಲಿ ಬರೆದ ಗ್ರಂಥಗಳ ಅಧ್ಯಯನ ಮಾಡಿ ಹೋಗುತ್ತೇವೆ ಎಂದರು. ತಕ್ಷಣ ಶ್ರೀನಿವಾಸ ತೀರ್ಥರು ಈ ಬಡವನ ಮೇಲೆ ಮಹಾಭಾಗ್ಯ ಮಾಡಿದ್ದೀರಾ ಎಂದು ಹೇಳಿ, ಅವರ ವಾಸ್ತವ್ಯಕ್ಕೆ ಅನುಕೂಲ ಮಾಡಿ ಕೊಟ್ಟರು, ಶ್ರೀಶ್ರೀನಿವಾಸ ಚಾರ್ಯರು ರಾಯರಲ್ಲಿ ನಾನು ಬರೆದ ಕೃತಿ ಓದಲು ಅರ್ಹವಿಲ್ಲ ಅಂತಹದರಲ್ಲಿ ತಾವು ಇಷ್ಟ ಪಟ್ಟು ಓದುತ್ತಿದ್ದಿರಾ ಎಂದು ಹೇಳಲು, ಭಗವಂತನ ದಿವ್ಯವಾದ ಮಹಿಮಾಪೂರ್ವಕವಾಗಿ ಆಚಾರ್ಯರ ಸೇವೆಯನ್ನು ಶ್ರದ್ದೆ ಮತ್ತು ಅತ್ಯಂತ ಶುದ್ಧವಾಗಿ ಮಾಡುತ್ತಿದ್ದೀರಾ (ಪೂಜಾ ನಂತರ ಮಡಿಯಲ್ಲೇ ಗ್ರಂಥರಚನೆ) ಆದರಿಂದ ಇಂದಿನಿಂದ ನಿಮಗೆ "ತೀರ್ಥ"ಎಂಬ ಬಿರುದನ್ನೂ  ನಿಮಗೆ ಕೊಡುತ್ತಿದ್ದೇವೆ. ನೀವು ಶ್ರೀನಿವಾಸ ಚಾರ್ಯರಲ್ಲ ಶ್ರೀನಿವಾಸ ತೀರ್ಥರು ಎಂದು ಹೇಳಿ ನಿಮಗೆ ಈ ಸಮಗ್ರ ಶಾಸ್ತ್ರವಿದ್ಯೆಯನ್ನು ದಯಪಾಲಿಸಿದ ಶ್ರೀ ಯಾದವರ್ಯಾರು ನಮಗೂ ಆಪ್ತರು ಎಂದು ಹೇಳಿ ಹೀಗೆ ನಿಮ್ಮ ಅಧ್ಯಯನ ಮುಂದುವರೆಯಲಿ ಎಂದು ಅನುಗ್ರಹಿಸಿದರು.
ಹೀಗೆ ಶ್ರೀನಿವಾಸಾಚಾರ್ಯರು ಶ್ರೀನಿವಾಸ ತೀರ್ಥರಾಗಿದ್ದು. ಇಲ್ಲಿ ರಾಯರು ತಮ್ಮ ಹೆಸರಿನ ತೀರ್ಥ ಎಂಬುದನ್ನು ಕೊಟ್ಟಿದ್ದು ಎಂದು ಅರ್ಥೈಸುತ್ತಾರೆ. ಆದರೆ ರಾಯರು ತೀರ್ಥ ಎಂಬ ಬಿರುದನ್ನೂ ಮಾತ್ರ ಕೊಟ್ಟಿದ್ದು ಹೊರತು ತಮ್ಮ ಹೆಸರಿನಲ್ಲಿನ ತೀರ್ಥ ಎಂಬುದನ್ನು ಕೊಟ್ಟಿಲ್ಲ. ಇದರ ಬಗ್ಗೆ ಹೆಚ್ಚಿನ ಸಂಶೋಧನೆ ಅಗತ್ಯವಿದೆ. 

ಶ್ರೀ ಶ್ರೀನಿವಾಸ ತೀರ್ಥರ ಕೃತಿರತ್ನಗಳು
೧. ನಾರಾಯಣ ಶಭಾರ್ಥ ವಿವರಣೆ
೨. ಶ್ರೀಮನ್ನ್ಯಾಯಸುಧಾ ಟಿಪ್ಪಣಿ
೩. ತತ್ವಪ್ರಕಾಶಿಕ ಟಿಪ್ಪಣಿ
೪. ದಶಪ್ರಕರಣಟೀಕಾ - ಟಿಪ್ಪಣಿ
೫. ಪ್ರಮಾಣ ಪದ್ಧತಿ - ಟಿಪ್ಪಣಿ (ಶ್ರೀ ಜಯತೀರ್ಥರ ಮೂಲಕೃತಿ)
೬. ಭಾಗವತ - ಟಿಪ್ಪಣಿ
೭. ಋಗ್ಭಾಷ್ಯ  - ಟಿಪ್ಪಣಿ

ಪ್ರೀತೋಸ್ತು ಕೃಷ್ಣ ಪ್ರಭೋ
ಶ್ರೀಶ ಸಮೀರ ದಾಸ
ಫಣೀಂದ್ರ ಕೆ
***

ಹೀಗೆ ಭಾದ್ರಪದ ಕೃಷ್ಣ ದ್ವೀತಿಯದಲ್ಲಿ ಬಿದರಹಳ್ಳಿ(ಹೊನ್ನಾಳಿ)ಯಲ್ಲಿ ಹರಿಪಾದವನ್ನು ಸೇರಿದರು. ಅವರು ಶಾಸ್ತ್ರಧ್ಯಾಯನ ಮಾಡುತ್ತಿದ್ದ ಕಟ್ಟೆಯಲ್ಲಿ ಅವರ ಪೂರ್ಣ ಸನ್ನಿದಾನವಿದೇ. ಗುರುಗಳ  ಚರಣಾರವಿಂದಗಳಲ್ಲಿ ಅನಂತ ಪ್ರಣಾಮಗಳನ್ನು ಸಲ್ಲಿಸುತ್ತಾ "ಓಂ ಶ್ರೀ ಶ್ರೀನಿವಾಸ ತೀರ್ಥ ಗುರುಭ್ಯೋ ನಮಃ"ಎಂದು ಹೇಳುತ್ತಾ ನಮಗೂ ಸಚಾಸ್ತ್ರದಲ್ಲಿ ಕಿಂಚಿತ್ ಆಸಕ್ತಿ ಮತ್ತು ಜ್ನ್ಯಾನ ನೀಡಲಿ ಎಂದು ಪ್ರಾರ್ಥಿಸೋಣ. ಒಂದೆರಡು ವಿಷಯಗಳು ಈ ಲೇಖನ ಕುಸುಮದಲ್ಲಿ ಇದ್ದರೆ ಶ್ರೀ ವೇದವ್ಯಾಸರ ದಯೆ ಮತ್ತು ಲೋಪದೋಷಗಳಿದ್ದರೆ  ನನ್ನದೇ ಎಂದು ಹೇಳ್ತುತ್ತ ಮಧ್ವಾ೦ತರ್ಗತ ವೇದವ್ಯಾಸದೇವರಲ್ಲಿ ಸಮರ್ಪಿಸೋಣ.

||ಶ್ರೀ ಕೃಷ್ಣಾರ್ಪಣಮಸ್ತು||
***
 ಶ್ರೀನಿವಾಸತೀರ್ಥರು ಹೊನ್ನಾಳಿ. ಭಾದ್ರಪದ ಕೃಷ್ಣ. ತೃತೀಯಾ.
ಮಧುಸೂದನ ಕಲಿಭಟ್ ಬೆಂಗಳೂರು ( ಧಾರವಾಡ ) 

ಶ್ರೀ ಯಾದವಾರ್ಯರ ತಮ್ಮ ಕೃಷ್ಣಪ್ಪನಾಯಕರ ಮಗನೇ ಇಂದಿನ ಕಥಾನಾಯಕ ಶ್ರೀ ಶ್ರೀನಿವಾಸತೀರ್ಥರು. ಇವರಿಗೆ ತೀರ್ಥ ಪದವಿಯನ್ನು ಕೊಟ್ಟವರು  ಪ್ರಹ್ಲಾದಂಶ ರಾದ ಶ್ರೀ ಮಂತ್ರಾಲಯ ಪ್ರಭುಗಳು. ಅಲ್ಲಿಯವರೆಗೆ ಇವರು ಶೀನಪ್ಪನಾಯಕರೆಂದೇ ಪ್ರಸಿದ್ಧರಾಗಿದ್ದರು.  ಇವರ ಬಾಲ್ಯ ವಿದ್ಯಾಭ್ಯಾಸ ಎಲ್ಲವೂ  ಶ್ರೀ ಯಾದವಾರ್ಯರಲ್ಲಿ ಆಯಿತು. ಶ್ರೀನಿವಾಸಾಚಾರ್ಯರಿಗೆ ಯೋಗ್ಯ ಸಂಬಂಧದಲ್ಲಿ ಮದುವೆಯು ಆಯಿತು. ಆಚಾರ್ಯರು ಮಾವನ ಮನೆಯಲ್ಲಿಯೇ ಇದ್ದರು. ಒಂದುಸಲ ಯಾದವಾರ್ಯರು ಬೀಗರ ಮನೆಗೆ ಬಂದು ಪರಿಸ್ಥಿತಿಯನ್ನು ಕಂಡು ಆಚಾರ್ಯರ ಮಾವನಿಗೆ ಲೌಕಿಕದಲ್ಲಿ ಮುಳುಗಿದರೆ ನಿಮ್ಮ ಅಳಿಯ ಶಾಸ್ತ್ರ ಅಧ್ಯಯನ ಯಾವಾಗ  ಎಂದು ತಿಳಿಹೇಳಿ, ಆಚಾರ್ಯರನ್ನು ಮಾವನಮನೆ ಬಿಡಿಸಿ ಪಾಠ ಹೇಳಲು ಪ್ರಾರಂಭ ಮಾಡಿದರು. ಶ್ರೀನಿವಾಸಾಚಾರ್ಯರು ಮಧ್ವ ಶಾಶ್ತ್ರಪಂಡಿತರಾದರು.  ಬಿದರಹಳ್ಳಿಯಲ್ಲೇ ಬಹಳದಿನ ವಾಸಿಸಿದ್ದ ಕಾರಣ ಇವರಿಗೆ ಬಿದರಹಳ್ಳಿ ಶ್ರೀನಿವಾಸಾಚಾರ್ಯ ಎಂದು ಉಪನಾಮ ಬಂದಿತು .
ಒಂದುಸಲ ಯಾದವಾರ್ಯರು ಊರಿಗೆ ಬಂದಾಗ ಒಬ್ಬನೇ ಬಂದು ಭೆಟ್ಟಿಯಾಗು ಎಂದರು. ಅದರಂತೆ ಆಚಾರ್ಯರು ಯಕ್ಕುಂಡಿಗೆ ಹೋಗಿ ಯಾದವಾರ್ಯರನ್ನು ಏಕಾಂತದಲ್ಲಿ ಭೆಟ್ಟಿ ಆದರು.  ಆರ್ಯರು ತಮ್ಮನ ಮಗನಿಗೆ ಇನ್ನು ಲೌಕಿಕದ ಭೋಗ ಸುಖ ಕಡಿಮೆ ಮಾಡು. ಮಧ್ವರ ಗ್ರಂಥಗಳಿಗೆ ಟಿಪ್ಪಣಿ ಬರೆಯಬೇಕೆಂದು ಹೇಳಿದರು. ಶ್ರೀನಿವಾಸಚಾರ್ಯರ ಜೀವನ ವ್ಯಾಸ ಸಾಹಿತ್ಯಕ್ಕೆ ಮುಡುಪಾಗಿ ಪರಿವರ್ತಿತ ವಾಯಿತು. ಇದಕ್ಕೆ ಕಾರಣ ಯಾದವಾರ್ಯರು. 
ಒಮ್ಮೆ ಮಂತ್ರಾಲಯದ ಶ್ರೀ ರಾಘವೇಂದ್ರರು ಬಿದರಹಳ್ಳಿಗೆ ದಯಮಾಡಿಸಿದರು.  ಅವರಿಗೆ ಬರೆಯಲು ಮಸಿ ಬೇಕಾಗಿತ್ತು. ಸಮೀಪದಲ್ಲಿ ಯಾರ ಹತ್ತಿರ ಸಿಗುವದೆಂದು ಕೇಳಿದರೂ.  ಶ್ರೀನಿವಾಸಾಚಾರ್ಯರು ಊರಲ್ಲಿ ಬರೆಯುತ್ತ ಇರುತ್ತಾರೆ. ಅವರ ಹತ್ತಿರ ಮಸಿ ಇರುವದು ತಿಳಿದು ರಾಯರು ಆಚಾರ್ಯರ ಕಡೆಗೆ ಶಿಷ್ಯರನ್ನೂ ಕಳಿಸಿದರು. ಶ್ರೀನಿವಾಸಾಚಾರ್ಯರು ಸಂತೋಷದಿಂದ ಮಡಿಯಿಂದ ಮಸಿ ತಂದುಕೊಟ್ಟರು. ಏಕೆ ಹೀಗೆ ಮಡಿ ಎಂದು ಕೇಳಿದಾಗ ಆಚಾರ್ಯರು ಹೇಳಿದರು. ಗುರುಗಳೇ ಕರ್ಕರಾಶಿಯಲ್ಲಿ ಗುರುಗ್ರಹವಿದ್ದಾಗ, ತುಂಗಭದ್ರೆಯಲ್ಲಿ ಗಂಗಾ ಸನ್ನಿಹಿತಳಾದಾಗ ಮಡಿಯಿಂದ ನೀರು ತಂದು ಮಾಡಿದ ಮಸಿ.  ಕಾರಣ ನಿಮ್ಮಂಥವರಿಗೂ ಮಡಿಯಿಂದ ಮಸಿ ಕೊಟ್ಟೆನು. ಎಂದು  ಉತ್ತರಿಸಿದರು.  ರಾಯರಿಗೆ ಆದ ಆನಂದ ಅಷ್ಟಿಷ್ಟಲ್ಲ. ಆಚಾರ್ಯರೇ ಮಸಿ ಯಲ್ಲಿ ಇಷ್ಟು ಪವಿತ್ರತೆ ಇದೇ ಎಂದಮೇಲೆ ನೀವು ಬರೆದ ಕೃತಿ ಹೇಗಿರಬಾರದು ಎಂದು ಪ್ರಶ್ನೆ ಮಾಡಿದರು. ಆಚಾರ್ಯರು ಸಾಷ್ಟಾಂಗ ನಮಸ್ಕರಿಸಿದರು.  ರಾಯರ ಅಪೇಕ್ಷೆಯಂತೆ ತಮ್ಮ ಗ್ರಂಥಗಳನ್ನು ತೋರಿಸಿದರು. ಆಗ ಸಾಕ್ಷಾತ್ ವ್ಯಾಸತೀರ್ಥರ ಅವತಾರಿಗಳಾದ ರಾಘವೇಂದ್ರರು, ಆಚಾರ್ಯರೇ ನಾವು ಸನ್ಯಾಸಿಗಳೆಂದು ನಮಗೆ ತೀರ್ಥ ಶಬ್ದ ಸಂಬೋಧನೆ ಇದೆ . ಇನ್ನು  ಮುಂದೆ ನೀವು ಕೇವಲ ಶ್ರೀನಿವಾಸಚಾರ್ಯರಲ್ಲ ನೀವು ಶ್ರೀನಿವಾಸತೀರ್ಥ ರೆಂದು ಪ್ರಸಿದ್ಧರಾಗಿ  ಗ್ರಂಥ ರಚನೆ ಮಾಡಿರೆಂದು ಆಶೀರ್ವದಿಸಿದರು.  ಯಾದವಾರ್ಯರಿಗೆ ತಮ್ಮ ಮಗನಿಗೆ ರಾಯರ ಕೃಪೆಯಾಯಿತೆಂದು ಸಂತೋಷಪಟ್ಟರು. 
 
ಹೀಗಿರಲಾಗಿ ಚಾತುರ್ಮಾಸದ ವೃತದ ಸಮಯದಲ್ಲಿ ತೀರ್ಥರು ಮಂತ್ರಾಲಯಕ್ಕೆ ಬಂದರು. ರಾಯರ ಸಂಗಡ ಉಭಯ ಕುಶಲೋಪರಿ, ವಿಷಯ ತರ್ಕ ಆದವು. ಕಡೆಗೆ ಊಟಕ್ಕೆ ಕುಳಿತಾಗ ತಮ್ಮ ಮಠಾಭಿಮಾನದಿಂದ ಸಾಸಿವೆ ಅನಾವೃತ ಎಂದು ಅದನ್ನು ಬಿಟ್ಟು ಊಟ ಮಾಡಿ ಎದ್ದರು.  ರಾಯರು ಏನೂ ಮಾತೆತ್ತಲಿಲ್ಲ. ಮುಗುಳ್ನಗುತ್ತಾ ಮಂತ್ರಾಕ್ಷತೆ ಕೊಟ್ಟು ಕಳಿಸಿದರು.  ಶ್ರೀನಿವಾಸ ತೀರ್ಥರು ಮನೆಗೆ ಬಂದು ಗುರುಗಳಿಗೆ ಸಕಲ ವಾರ್ತೆ ಹೇಳಿದರು. ಯಾದವಾರ್ಯರು ಮಗನೇ ನೀನು ಗುರುದ್ರೋಹ ಮಾಡಿಕೊಂಡು ಬಂದಿರುವೆ.  ಎಂದರು. ಮಂತ್ರಾಕ್ಷತೆ ನೋಡಲಾಗಿ ಕಪ್ಪು ಬಣ್ಣಕ್ಕೆ ತಿರಿಗಿದ್ದವು. ತೀರ್ಥರು ಏನೂ ಯೋಚದೆ ಗುರುಗಳಿಗೆ ನಮಸ್ಕರಿಸಿದರು. ಆಗ ಯಾದವಾರ್ಯರು ನೀನು ಮಂತ್ರಾಲಯಕ್ಕೆ ಹೋಗಿ ಅಲ್ಲಿ ಏನೂ ಆಕ್ಷೇಪ ಮಾಡದೇ ಮಾಡಿದ ಅಡಿಗೆ ಉಂಡು ರಾಯರಿಗೆ ನಮಸ್ಕಾರ ಮಾಡಿ ಬಾ ಎಂದು ಹೇಳಿದರು . ಶ್ರೀನಿವಾತೀರ್ಥರು ಮಂತ್ರಾಲಯಕ್ಕೆ ಬಂದು ರಾಯರಿಗೆ ಹಿಂದೆ ಆದ ಪ್ರಮಾದಕ್ಕೆ ತಪ್ಪು ಆಯಿತೆಂದು ಕ್ಷಮೆ ಯಾಚಿಸಿದರು. ರಾಯರು ಕರುಣಿಗಳು.  ತೀರ್ಥರನ್ನು ಆಶೀರ್ವದಿಸಿ ಯಾದವಾರ್ಯರಿಗೆ ವಯಸ್ಸಾಯಿತು ಅವರಿಗೆ ನಿಮ್ಮ ಗ್ರಂಥ ತೋರಿಸಿರಿ ಅಂದು ಕಳಿಸಿದರು. ಅದರಂತೆ ಊರುಗೆ ಬಂದು ಯಾದವಾರ್ಯರ ಆಶೀರ್ವಾದ ಪಡೆದರು. ಸುಧಾ ಗ್ರಂಥಕ್ಕೆ ಟಿಪ್ಪಣಿ ಆಗಿರಲಿಲ್ಲ. 

ಒಂದೆಡೆಗೆ ಕುಳಿತು ಸುಧಾ ಗ್ರಂಥಕ್ಕೆ ಶ್ರೀನಿವಾಸತೀರ್ಥರು ಟಿಪ್ಪಣಿ ಬರೆದರು. ಅದಕ್ಕೆ ತ್ಯಕ್ತ ಶ್ರೀನಿವಾಸತೀರ್ಥ ಎಂದು ಹೆಸರಿಟ್ಟರು.  ಶ್ರೀನಿವಾಸತೀರ್ಥರ ಟಿಪ್ಪಣಿಗಳು ಮಾಧ್ವ ತತ್ವದ ಅಭ್ಯಾಸಿಗಳಿಗೆ ಕನ್ನಡಿ ಇದ್ದಂತೆ ಆಗಿವೆ. ಸುಮಾರು 29ಗ್ರಂಥಗಳನ್ನು ರಚಿಸಿದ್ದಾರೆ. ಇವರು ಉತ್ತರಾದಿ ಮಠದ ವೇದವ್ಯಾಸ ತೀರ್ಥರು, ವಿದ್ಯಾಧೀಶ ತೀರ್ಥರು, ಮತ್ತು ಮಂತ್ರಾಲಯ ರಾಯರ ಸಮಕಾಲೀನರಲ್ಲದೆ  ಭಾಗವತ, ಸುಧಾ ಗ್ರಂಥಗಳಿಗೆ ಟಿಪ್ಪಣಿ ಬರೆದ ಯಾದವಾರ್ಯರ ವಂಶದವರು ಹಾಗೂ ಶಿಷ್ಯರೆಂದು ಹೇಳಲು ಬರೆಯಲು ಅಂತರಂಗದಲ್ಲಿ  ಮಾಧ್ವ ಅಭಿಮಾನ ಉಕ್ಕುತ್ತದೆ. ಶ್ರೀನಿವಾಸ ತೀರ್ಥರು  ಶಿವಮೊಗ್ಗೆ ಹತ್ತಿರ ಹೊನ್ನಾಳಿಯಲ್ಲಿ ತಮ್ಮ ಕೊನೆಯ ಜೀವನ ಕಳೆದು  ಅಲ್ಲಿಯೇ ಭಾದ್ರಪದ ಬಹುಳ ತೃತೀಯಾ ದಿನ ಶ್ರೀ ರಾಮಧ್ಯಾನಪರರಾದರು. ತೀರ್ಥರ ಅಂತರ್ಯಾಮಿ ಭಾ. ಮು. ಅಂ. ಹಯಗ್ರೀವ ದೇವರು ಎಲ್ಲರಿಗೂ ಜ್ಞಾನ ಕೊಡಲೆಂದು ಬೇಡಿಕೊಳ್ಳುವೆ.
****

info from harshala_rajesh website--->


Sreenivasa Theertaru


- Information provided by Sri. Ranganath S, whose Mother-in-law is daughter of   Bidarahalli Srinivasachar,(i.e, Vamshasta of Srinivas Thirtharu.)

Bidarahalli Sreenivasachar is called as Srinivasa Theertharu. This Thirtha birudhu was given by Sri Raghavendra thirtharu looking at his works on Madhwa Philosophy. Even though he is a gruhastrashrami he carries this Birudu.

Vedesha Thirtharu, Yadavaryaru and Srinivas Thirtharu’s father are all brothers. 

***********

No comments:

Post a Comment