Thursday 1 August 2019

ikoor narasimhacharyaru 1700+ shahapura phalguna shukla dwiteeya ಐಕೂರ ನರಸಿಂಹಚಾರ್ಯರು ಶಹಾಪುರ



ಶಹಾಪುರ, ಮಾರ್ಚ್ 06, 2019 -  ಐಕೂರ ನರಸಿಂಹಾಚಾರ್ಯರ ಆರಾಧನಾ ಮಹೋತ್ಸವವು ಮಾರ್ಚ್ 7, 8 ಹಾಗೂ 9ರಂದು ಐಕೂರ ಗ್ರಾಮದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ. ಫಾಲ್ಗುಣ ಶುದ್ದ ಪ್ರತಿಪದಾ, ದ್ವಿತೀಯಾ ಹಾಗೂ ತೃತೀಯಾ ಈ ಮೂರು ದಿನಗಳ ಕಾಲ ಐಕೂರಾಚಾರ್ಯರ ಪುಣ್ಯಾರಾಧನೆ ನಡೆಯಲಿದ್ದು, ಸುಪ್ರಭಾತ, ಹರಿಕಥಾಮೃತಸಾರ ಪಾರಾಯಣ, ಪ್ರವಚನ ಜರುಗಲಿವೆ. ಭಕ್ತಿಸಂಗೀತ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ. ಮಾರ್ಚ್ 7ರಂದು ಸುಪ್ರಭಾತ, ಹರಿಕಥಾಮೃತಸಾರ ಪಾರಾಯಣ, ಪಂಡಿತ ಕರ್ನೂಲ ಶ್ರೀನಿವಾಸಾಚಾರ್ಯ ಬೆಂಗಳೂರು ಇವರಿಂದ ಪ್ರವಚನ. ಸಾಯಂಕಾಲ ಖ್ಯಾತ ಗಾಯಕರಾದ ಶೇಷಗಿರಿದಾಸ ಅವರಿಂದ ದಾಸವಾಣಿ.

8ರಂದು ಮಧ್ಯಾರಾಧನೆ ದಿನ, ಹರಿಕಥಾಮೃತಸಾರ ಪಾರಾಯಣ, ಕೊಪ್ಪಳದ ಪಂ. ರಘುಪ್ರೇಮಾಚಾರ್ಯ ಅವರಿಂದ ಹಾಗೂ ಪಂಡಿತ ಕರ್ನೂಲ ಶ್ರೀನಿವಾಸಾಚಾರ್ಯ, ಬೆಂಗಳೂರು ಇವರಿಂದ ಪ್ರವಚನ. ಸಾಯಂಕಾಲ ರಾಯಚೂರಿನ ಖ್ಯಾತ ಗಾಯಕರಾದ ವರದೇಂದ್ರ ಗಂಗಾಖೇಡ ಅವರಿಂದ ದಾಸವಾಣಿ. ರಘೋತ್ತಮದಾಸ ಇವರಿಂದ ಕೊಳಲುವಾದನ. 

ಮಾರ್ಚ್ 9 ಭಾನುವಾರದಂದು ಉತ್ತರಾಧನೆ. ಸುಪ್ರಭಾತ, ಹರಿಕಥಾಮೃತಸಾರ ಪಾರಾಯಣ, ಪ್ರವಚನ ಜರುಗಲಿವೆ ಎಂದು ನರಸಿಂಹಮೂರ್ತಿ ಜೋಶಿ ಐಕೂರ ಇವರು ತಿಳಿಸಿದ್ದಾರೆ. 

ವಿಶ್ವಪ್ರೇಮವೇ ರಾಮನೊಲಿಮೆಯ ದಾರಿ ಐಕೂರ ನರಸಿಂಹಾಚಾರ್ಯರರ ತತ್ವ 

ಈಗಿನ ಯಾದಿಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಪುಟ್ಟ ಗ್ರಾಮ ಐಕೂರ ಗ್ರಾಮದಲ್ಲಿ ವೆಂಕಟಾರ್ಯ ಹಾಗೂ ಸೀತಾಂಬೆಯ ಪುತ್ರನಾಗಿ ಜನಿಸಿದ ಐಕೂರ ನರಸಿಂಹಾಚಾರ್ಯರರು 18ನೇ ಶತಮಾನದಲ್ಲಿಯೇ ವಿಶ್ವ ಪ್ರೇಮಕ್ಕೆ ಬೆಲೆ ನೀಡುವ ರೀತಿಯಲ್ಲಿ ನಡೆದುಕೊಂಡ ಮಹಾನ್ ವ್ಯಕ್ತಿ. 

ತತ್ವ ಸಿದ್ದಾಂತಗಳನ್ನು ಆಚರಣೆಯಲ್ಲಿ ತರುವುದರ ಜೊತೆಗೆ ತಮ್ಮಲ್ಲಿರುವ ಪಾಂಡಿತ್ಯವನ್ನು ಜನ ಸಮುದಾಯಕ್ಕೆ ಬೋಧಿಸಿ ಅವರ ಬದುಕು ಹಸನಗೊಳ್ಳುವಂತೆ ದೇವರ ಮಹಿಮೆ, ಆಚಾರ ವಿಚಾರಗಳನ್ನು ಆಡು ಭಾಷೆಯಲ್ಲಿ ತಿಳಿಯುವ ಹಾಗೆ ನಕ್ಕುನಲಿಸುತ್ತ ಹುಡುಗರ ಜೊತೆ ಹುಡುಗರಂತೆ ಜೀವನ ಸಾಗಿಸಿದವರು. ಸುತ್ತಲಿನ ಜನತೆ ಎಷ್ಟೇ ದುಗುಡದಿಂದ ಬಂದಾಗ, ಮಾತಿನ ಜಾಣ್ಮೆಯಿಂದ ಪರಿಹಾರ ಒದಗಿಸಿಕೊಡುತ್ತಿದ್ದರು. ಇವರ ಅಂತರುಪಾಸನೆ, ಬೋಧನೆ, ಜನಸೇವೆ ಮಾಡುವ ರೀತಿ ಜನರನ್ನಾಕರ್ಷಿಸತೊಡಗಿದವು. ಅವರಿಗೆ ಆರೂಢ ರೀತ್ಯಾ ರಾಜಯೋಗವು ಜಾತಕಕ್ಕನುಸರಿಸಿ ಇದ್ದುದರಿಂದಲೂ ವಿಧೇಯರಾದ, ಭಕ್ತಿವಂತರಾದ ಶಿಷ್ಯ ಸಂಗ್ರಹವು ನಡದೇ ನಡೆಯಿತು. ಈ ಕಾರಣದಿಂದ ದೇಶ ಸಂಚಾರವೂ ಅನಿವಾರ್ಯವಾಗಿ ಬಂತು. ಇವರ ಗ್ರಾಮವು ಕಲಬುರ್ಗಿಯ ಜಿಲ್ಲೆಯಲ್ಲಿದೆ. ಸಂಚಾರ ರಾಯಚೂರು ಜಿಲ್ಲೆ, ಕಲಬುರ್ಗಿ ಜಿಲ್ಲೆ, ಭಾಗ್ಯನಗರ ಮುಂತಾದ ಕಡೆಗೆಲ್ಲ ನಡೆಯಿತು. ತಮ್ಮ ಆಯುಷ್ಯದ ಮೂರು ಪಾಲು ಸಂಚಾರದಲ್ಲಿಯೇ ಕಳೆದರೆಂದರೆ ತಪ್ಪಾಗದು. ಮನೆಯಲ್ಲಿ ಮಂತಿಕೆಯ ಸಕಲ ಸಾಧನಗಳಿದ್ದರೂ ಅವರ ಲೋಕಸೇವೆಯ ಆಕಾಂಕ್ಷೆಯು ಮನೆಯಲ್ಲಿಯೇ ಕುಳಿತಿರುವಂತೆ ಮಾಡಲಿಲ್ಲ. ಬಡಜನತೆಯ ಕಲ್ಯಾಣಕ್ಕೋಸ್ಕರ ಆಚಾರ್ಯರು ತಮ್ಮಿಡೀ ಜೀವನ ಸವೆಸಿದರು. ಮಧ್ವ ಮತದ ತತ್ವಕ್ಕನುಸರಿಸಿ ಜೀವನ ಒಂದು ಸತ್ಯ, ಜೀವನದಲ್ಲಿ ವಿಹಿತ ಕರ್ಮಗಳನ್ನು ಮಾಡಬೇಕು. ಸಂಸಾರವೆಂದರೆ ಈ ಪರಿವಾರವನ್ನು ಈ ಸಮಾಜವನ್ನು ಬಿಟ್ಟು ಓಡಿ ಹೋಗುವದಲ್ಲ ಎಂಬುದನ್ನು ಆಚಾರ್ಯರು ಮನದಟ್ಟಾಗಿ ಬೋಧಿಸಿ, ಶಿಷ್ಯರಿಗೆ ಈ ನಿತ್ಯ ಜೀವನದಲ್ಲಿ ಬರುವ ಎಡರುಗಳನ್ನು ಹೇಗೆ ನಿರ್ಲಿಪ್ತತೆಯಿಂದ ತಪ್ಪಿಸಿಕೊಳ್ಳಬೇಕೆಂಬುದನ್ನು ತೋರಿಸುತ್ತಿದ್ದರು. ಪರರಿಗೆ ಎಡರು ಬಂದಾಗ ಆಚಾರ್ಯರು ಯಾವ ಕಷ್ಟಕ್ಕೂ ಹಿಂಜರಿಯದೆ, ತೀರ ಸಾಮಾನ್ಯರಂತೆ ಎಲ್ಲರೊಡನೆ ಬೆರೆತು ಅದನ್ನು ನಿವಾರಿಸುವುದನ್ನು ಆಚಾರ್ಯರು ಮಾಡುತ್ತಿದ್ದರು. ಈ ಆಚಾರ್ಯರು ತಾವು ಹರಿಪಾದ ಸೇರುವ ಮುನ್ನ ಯಾರಿಂದಲೂ ಸೇವೆ ಮಾಡಿಸಿಕೊಳ್ಳದೇ ತಮ್ಮ ಇಹಲೋಕದ ದಾರಿ ಗೊತ್ತಾದರೂ ಕೂಡ ಎಲ್ಲರನ್ನು ದೂರಕಳಿಸಿ ತಾವೊಬ್ಬರೇ ಉಳಿದು ವ್ಯಯ ಸಂವತ್ಸರ ಫಾಲ್ಗುಣ ಶುದ್ಧ ದ್ವಿತೀಯಾದಂದು ಹರಿಪಾದ ಸೇರಿದರು. ವಿಶ್ವಪ್ರೇಮವೇ ರಾಮ ನೊಲಿಮೆಯದಾರಿ ಎಂದು ಜನಸಮುದಾಯಕ್ಕೆ ತಿಳಿಹೇಳಿ ಸಾಧನೆ ಮಾಡಿತೋರಿದ ಪರಮ ಪೂಜ್ಯ ಐಕೂರಾಚಾರ್ಯರ ಪುಣ್ಯಾರಾಧನೆ ಕಾರ್ಯಕ್ರಮವು ಮೂರು ದಿನಗಳ ಕಾಲ ಶಹಾಪುರ ತಾಲೂಕಿನ ಐಕೂರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗುವುದು. 

*****

ಶ್ರೀ ಐಕೂರು ಆಚಾರ್ಯರ ಆರಾಧನಾ ಪ್ರಯುಕ್ತ ಅವರ ಬಗ್ಗೆ ಪುಟ್ಟ ಲೇಖನ.
🙏🙏.
ರಂಗಂಪೇಟೆಯಲ್ಲಿ ಗುರುಸ್ವಾಮಿ,ನರಸಯ್ಯ ಅಂತ ಇಬ್ಬರು ಅಣ್ಣತಮ್ಮಂದಿರು, ವ್ಯಾಪಾರ ಅವರ ವೃತ್ತಿ.
ಶ್ರೀ ಐಕೂರು ಆಚಾರ್ಯರು ಅವರ ಅಂಗಡಿಇಂದ ಮನೆಗೆ ಬೇಕಾಗುವ ಸಾಮಾನುಗಳ ನ್ನು ತರಿಸುತ್ತಾ ಇದ್ದರು.
ಗುರುಸ್ವಾಮಿಗೆ ತೊನ್ನು ರೋಗ ಬಂದಾಗ,ಮಂತ್ರಾಲಯಕ್ಕೆ ಹೋಗಿ ರಾಯರ ಸೇವಾ ಮಾಡಬೇಕೆಂದು ನಿರ್ಧಾರ ಮಾಡಿದ.
ಅಂದೇ ರಾತ್ರಿ 
ರಾಯರು ಅವನ ಸ್ವಪ್ನದಲ್ಲಿ ಕಾಣಿಸಿಕೊಂಡು
ಮಂತ್ರಾಲಯಕ್ಕೆ ಯಾಕ ಬರ್ತಿಯಾಪ್ಪಾ?ಐಕೂರಿನ್ಯಾಗ ನನ್ನ ಭಕ್ತ ನರಸಿಂಹಚಾರ ಅಂತ ಇದ್ದಾರೆ.ಅವರು ಊಟಕ್ಕೆ ಕುಳಿತಾಗ,ಎಲ್ಯಾಗಿನ ಉಚ್ಚಿಷ್ಟ ನಿನ್ನ ಕೈಯಾಗ ಹಾಕು ಅಂತ ಬೇಡಿಕೋ.ನಿನಗೆ ಛೊಲೋ ಆಗ್ತದಾ ಅಂತ ಸೂಚನೆ ಕೊಡುತ್ತಾರೆ..
ಸಮಯ ನೋಡಿಕೊಂಡು ಗುರುಸ್ವಾಮಿ ಐಕೂರಿಗೆ ಬಂದು ಆಚಾರ್ಯರು ಊಟಕ್ಕ ಕುಳಿತಾಗ ಹೋಗಿ ನಿಂತುಕೊಂಡ.
ಇದನ್ನು ಕಂಡ ಆಚಾರ್ಯರು ಊಟ ಮಾಡಿಕೊಂಡು ಹೋಗಿಯಂತ ಕೂಡು ಅಂತ ಹೇಳಿದರು..
ಅವಾಗ ಗುರುಸ್ವಾಮಿ 
ಅಪ್ಪಾರ!! ನಂಗ ನಿಮ್ಮ ಎಲ್ಯಾಗಿನದು ಸ್ವಲ್ಪ ಉಚ್ಚಿಷ್ಟ ನಂಗ ಕೈಯಾಗೆ ಹಾಕ್ರೀ.. ಸ್ವಾಮೇರಾ ಅಂತ ಬಹು ದೈನ್ಯದಿಂದ ಬೇಡಿಕೊಂಡ.
ಅಚಾರ್ಯರು ಕಿಂಚಿತ್ತೂ ಯೋಚನೆ ಮಾಡದೆ ಅವನಿಗೆ ಕೈ ಒಡ್ಡು ಎಂದರು.ಆತ ಕೂಡಲೇ ಕೈ ಒಡ್ಡಿದ ತಕ್ಷಣ ಅವರ ಎಲೆಯಲ್ಲಿ ಇದ್ದ  ಉಚ್ಚಿಷ್ಟ ಅವನ ಕೈಯಲ್ಲಿ ಬಿತ್ತು.
ಸ್ವಲ್ಪ ದಿನದಲ್ಲಿ ಅವನ ತೊನ್ನು ರೋಗ ವಾಸಿಯಾಯಿತು
ಮನೆಯ ಹಾಗು ಊರಿನವರಿಗೆ ಆಶ್ಚರ್ಯ ಹೇಗೆ ವಾಸಿಯಾಯಿತು ಅಂತ.ನಿಜ ವಿಷಯ ತಿಳಿದಾಗ ಜನರೆಲ್ಲ ಆಚಾರ್ಯರನ್ನು ಪ್ರಶಂಸೆಯನ್ನು ಮಾಡಿದಾಗ ಅವರ ಪ್ರಶಂಸೆ ಕೇಳಬಾರದೆಂದು ಆಚಾರ್ಯರು ಸಂಚಾರಕ್ಕೆ ಹೊರಡುತ್ತಾರೆ ಮತ್ತು ಆ ಗುರುಸ್ವಾಮಿಯ ಅಂಗಡಿಯ ಬಾಕಿ ಹಣವನ್ನು ಕೊಟ್ಟು ತಮ್ಮ ಮನೆಯವರೆಗೆ ಅಲ್ಲಿ ಇಂದ ಏನು ಸಾಮಾನು ತರಬ್ಯಾಡ್ರೀ!! ಅಂತ ಸೂಚನೆ ನೀಡುತ್ತಾರೆ
ಎಂತಹ ನಿರ್ಲಿಪ್ತತೆ,ಆಚಾರ್ಯರದ್ದು. ಇಂತಹ  ಘಟನೆಗಳು ನಡೆದಾಗ ಅವರು  ನಿತ್ಯ ಭಗವಂತನಲ್ಲಿ ಅತಿ ದೈನ್ಯದಿಂದ ಇದು ನಿನ್ನ ಮಹಿಮಾ ಅಂತ ಎಲ್ಲಾ ರ ತಲ್ಯಾಗ ಹಾಕು ಸ್ವಾಮಿ..ನಂದು ಇದರಾಗ ಏನು ಇಲ್ಲ... ಅಂತ ಪ್ರಾರ್ಥನಾ ಮಾಡುತ್ತಾ ಇದ್ದರು.
ಇಂತಹ ಅನೇಕ ಶ್ರೀ ಹರಿಯ ಮಹಾತ್ಮೆ ಮತ್ತು ಅನೇಕ ಹರಿದಾಸರ ಹರಿಭಕ್ತರ ಚರಿತ್ರೆ ,ನಿತ್ಯ ಕೇಳುತ್ತಾ ಇರಬೇಕು...
ಪುನಃ ಪುನಃ ಕೇಳುತ್ತಾ ಓದುತ್ತಾ ಇರಬೇಕು...
ಹೇಗೆ ಮನೆಯಲ್ಲಿ ಕಸವನ್ನು ಒಂದೇರಡು ಬಾರಿ ಬಳಿದು ಸ್ವಚ್ಛ ಮಾಡುತ್ತೇವೆಯೋ.
ಹಾಗೇ ಇಂತಹ ವರ ಚರಿತ್ರೆ ಪದೇ ಪದೇ ಕೇಳಿದಾಗ ನಮ್ಮ ಮನಸ್ಸಿನ ಒಳಗಡೆ ಇರುವ ದುರ್ಬುದ್ದಿ ಗಳು ಸಹ ಹೋಗಿ ಮನಸ್ಸು ಸ್ವಚ್ಛ ವಾಗುತ್ತದೆ.
ಹಾಗಾಗಿ ಪದೇ ಪದೇ ಭಗವಂತನ  ಮತ್ತು ಅವನ ಭಕ್ತರ ಚರಿತ್ರೆ ನಿತ್ಯ ಕೇಳಬೇಕು...
ಶ್ರೀ ಐಕೂರು ಆಚಾರ್ಯರು ಅಂತರ್ಯಾಮಿಯಾದ ಶ್ರೀ ಹರಿ ಪ್ರೀತಿಯಾಗಲಿ.
ಶ್ರೀ ಕೃಷ್ಣಾರ್ಪಣಮಸ್ತು🙏

ಪ್ರಾತಃ ಕಾಲ ಇಂತಹ ಮಹಾನುಭಾವ ರ ಸ್ಮರಣೆ ಅವಶ್ಯಕ.
ಧರಣಿ ವಲಯದಿ ಇವರ ಚರಿತೆ ತಿಳಿಯದೆ|
ಜರಿವ ಮನುಜರು ಘೋರ ನಿರಯ ಪಾತ್ರರು|
******

ಶ್ರೀ
 ಐಕೂರು ಆಚಾರ್ಯರ ಚರಿತ್ರೆ ಅವರ ಆರಾಧನೆಯ ಪ್ರಯುಕ್ತ..

ಶ್ರೀ ಹರಿಕಥಾಮೃತ ಸಾರದಲ್ಲಿ  ಭಗವಂತನ ವ್ಯಾಪ್ತಿಯ ಉಪಾಸನೆಯನ್ನು ಶ್ರೀ ಮಾನವಿ ದಾಸರು ಹೇಳಿದ್ದಾರೆ.

ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು
ಬಿಂಬೋಪಾಸನೆಯಲ್ಲಿ ಸಿದ್ಧಿಯನ್ನು ಪಡೆದ,ಶ್ರೀ ಐಕೂರು ನರಸಿಂಹ ಆಚಾರ್ಯರಿಗೆ,ಪರಮಾತ್ಮನ ವ್ಯಾಪ್ತತ್ವ ವನ್ನು ಕಾಣುವಂಥ ದಿವ್ಯ ಚಕ್ಷು ಅವರಿಗೆ ಲಭ್ಯವಾಗಿತ್ತು..
ಹೆಚ್ಚಾಗಿ 
ಅವರು ಚಲ ಪ್ರತಿಮೆಗಳಲ್ಲಿಯೇ ಭಗವಂತನನ್ನು ಕಾಣುವಂಥ ವ್ಯಾಪ್ತೋಪಾಸಕರಾಗಿದ್ದರು..

ಒಂದು ಸಲ ತಮ್ಮ ಮನೆಯಲ್ಲಿ ಭಾಗವತ ಪುರಾಣ ಮಂಗಳ ಏರ್ಪಾಡಾಗಿತ್ತು.ನೂರಾರು ಜನ ಅತಿಥಿ, ಅಭ್ಯಾಗತರು ಇವರ ಮನೆಗೆ ಬಂದಿದ್ದರು.ಭಕ್ಚ್ಯ ಭೋಜ್ಯಗಳ ಅಡಿಗೆ ಸಿದ್ಧವಾಗಿತ್ತು.
ಘಮಘಮಿಸುವ ಹಾಲಿನ ಪಾಯಸವನ್ನು ನೋಡಿದ ಒಂದು ಮಗು (ಬಂದಂತಹ ಅತಿಥಿ ಗಳ ಪೈಕಿ)  ತನಗೆ ಪಾಯಸ ಬೇಕೆಂದು ವಿಪರೀತ ಹಠ ಮಾಡಿತು...
ಆ ಮಗುವಿನ ತಂದೆ ತಾಯಿಗಳು ಎಷ್ಟೋ ಸಮಾಧಾನ ಮಾಡಿದರು ಆ ಮಗುವಿನ ಹಟ ಜೋರಾಯಿತೇ ಹೊರತು ಕಡಿಮೆಯಾಗಲಿಲ್ಲ.
ಪೂಜೆಯಲ್ಲಿ ಕುಳಿತ ಐಕೂರು ಆಚಾರ್ಯರಿಗೆ ಇದು ಕಿವಿಗೆ ಬಿದ್ದಿತು.
ತಕ್ಷಣವೇ 
ದೇವರ ಕಟ್ಟಿ ಇಂದ ಎದ್ದು ಬಂದು  ಆ ಕೂಸನ್ನು ಕರೆದರು..
ಆ ಮಗುವಿನ ತಂದೆ ತಾಯಿಗಳಿಗೆ ಆಚಾರ್ಯರು ಹೇಳ್ತಾರೆ
ಇಂದು  ಈ ಪುಟ್ಟ ಗೋಪಾಲಕೃಷ್ಣ. ಪಾಯಸವನ್ನು ಆಪೇಕ್ಚಿಸಿದ್ದಾನೆ..
ಅದಕ್ಕೆ ನೀವುಗಳು ಯಾಕೆ ಅಡ್ಡಿ ಮಾಡ್ತಾ ಇದ್ದೀರಿ.??ಮೊದಲು ಆ ಕೂಸಿಗೆ ಪಾಯಸ ಕುಡಿಸ್ರೀ..!!
ಪಾಯಸ ಒಂದು ಬಿಟ್ಟು ಉಳಿದ ಪದಾರ್ಥ ಗಳನ್ನೂ ದೇವರಿಗೆ ನೈವೇದ್ಯ ಮಾಡಿದರೆ ಆಯಿತು ಅಂತ ತಮ್ಮ ಪರಿವಾರದವರಿಗೆ ಹೇಳಿ ತಾವು ಹೋಗಿ ಪಾಯಸವನ್ನು ಬಟ್ಟಲಿನಲ್ಲಿ ತಂದು ಆ ಕೂಸಿನ ಮುಂದಿಟ್ಟು  ಶ್ರೀಕೃಷ್ಣಾರ್ಪಣಮಸ್ತು ಅಂತ ಹೇಳಿ🙏 ಕೈ ಮುಗಿದರು..

ಅದೇ ನಾವುಗಳು ಆಗಿದ್ದರೆ ಕೂಸಿಗೆ ಅವರ ಮನೆಯಾಗ ಇರುವವರಿಗೆಲ್ಲ ಬೈಯ್ದು ಇನ್ನೋಂದು ಸಾರಿ ಅವರು ಕೂಸಿನ ಕಟ್ಟಿಕೊಂಡು ಎಲ್ಲಿ ಬರಬಾರದು ಹಾಗೆ ಅವರಿಗೆ ಅನ್ನಿಸುವ ಹಾಗೆ ನಮ್ಮ ವರ್ತನೆ ಇರುತ್ತಾ ಇತ್ತು.

ಇಂತಹ ವಿಶಾಲ ಹೃದಯ ಸಾಮಾನ್ಯ ಜನರಲ್ಲಿ ಬರುವದು ಬಹು ಕಠಿಣ, ಹಾಗು ವಿರಳ.

ಶ್ರೀ ಐಕೂರು ಆಚಾರ್ಯರಂತ ಜ್ಞಾನಿಗಳಿಗೆ, ಈ ತರಹದ ಭಗವಂತನ ವ್ಯಾಪ್ತೊಪಾಸನೆಯ ಚಿಂತಕರಿಗೆ ಇದು ಮಾತ್ರ ಸಾಧ್ಯ..
ಶ್ರೀ ಐಕೂರು ಆಚಾರ್ಯರ ಅಂತರ್ಯಾಮಿಯಾದ ಶ್ರೀ ಹರಿ  ಪ್ರೀತಿಯಾಗಲಿ.
ಶ್ರೀ ಕೃಷ್ಣಾರ್ಪಣಮಸ್ತು

******

ಇಂದು ಶ್ರೀಹರಿಯ ದಾಸ ರಾದ ಮತ್ತು
ಶ್ರೀಸುಳಾದಿ ಕುಪ್ಪೇರಾಯರು,
ಶ್ಯಾಮಸುಂದರ ದಾಸರು,
ಸಿರಿವಾರ ರಾಮಾಚಾರ್ಯರು,
ಕೊಪ್ಪರ ಅರ್ಚಕರಾದ  ಶ್ರೀಗಿರಿಯಾಚಾರ್ಯರು, ಇನ್ನೂ ಅನೇಕ ಶಿಷ್ಯ ಸಂಪತ್ತು ಹೊಂದಿದ,
ಶ್ರೀಹರಿಯ  ಮಹಿಮೆಯ ವಿಜಯಧ್ವಜ ಮೆರೆದಾಡಿಸಲು ಧರೆಯೊಳಗೆ ವಿಜಯದಶಮಿಯ ದಿನ ಜನಿಸಿದ, ಹಾಗು 
ಶ್ರೀ ರಾಯರ ಪಟ್ಟಾಭಿಷೇಕ ಸುದಿನದಂದು  ವೈಕುಂಠ ಯಾತ್ರೆ ಮಾಡಿದ
ಶ್ರೀ ಐಕೂರು ಆಚಾರ್ಯರ ಆರಾಧನೆ..
🙏🙏
ಇವರ ಬಗ್ಗೆ ಪುಟ್ಟ ಪರಿಚಯ..
ತಂದೆ ವೆಂಕಪ್ಪಚಾರ್ಯರು
ತಾಯಿ ಸೀತಾ ಬಾಯಿ ಪರಮ ಸಾತ್ವಿಕ ರು,ದೈವ ಭಕ್ತರು..
 ಇವರಿಗೆ ಮೂವರು ಪುತ್ರಿ ಯರು.
ಪುತ್ರ ಸಂತಾನವಾಗಬೇಕೆಂದು  ಶ್ರೀಮತಿ ಸೀತಮ್ಮನವರು
ತಮ್ಮ ಮಾವನವರಿಗೆ ಒಲಿದು ತಮ್ಮ ಮನೆಗೆ ಬಂದ ನರಸಿಂಹ ದೇವರ ಸೇವೆ ಮಾಡಿದ ಫಲವೇ ಐಕೂರು ಆಚಾರ್ಯರ ಜನನ...
ಇವರಿಗೆ ತೊಟ್ಟಿಲು ಇಡಬೇಕಾದ ಸಮಯದಲ್ಲಿ ಭಾಗವತ ಶ್ರವಣವನ್ನು ಮಾಡಿದ ಮಹಾನುಭಾವ ರು.
ಮನೆಗೆ ಯಾರಾದರೂ ಅತಿಥಿ ಗಳು ಬಂದರೆ ಪುಟ್ಟ ಬಾಲಕ ನರಸಿಂಹ ಓಡಿಹೋಗಿ ಅವರಿಗೆ ಧೀರ್ಘದಂಡ ನಮಸ್ಕಾರ ಹಾಕಿ 
ಅಪ್ಪ ಇದ್ದಾರೆ!! ಬರ್ರಿ!! ಒಳಗೆ ಅಂತ ಕರೆದು ಉಪಚಾರ ಮಾಡು ತ್ತಾ ಇದ್ದರು.
ಇವರಿಗೆ  ಮೊದಲ ಗುರುಗಳು ಶ್ರೀಶೇಷಾಚಾರ್ಯರು ಹಾಗು ಎರಡನೆಯವರು ಶ್ರೀ ಯಳಮೇಲಿ ವಿಠ್ಠಲ ಆಚಾರ್ಯರು, 
ಇವರು ದೊಡ್ಡ ವಿದ್ವಾಂಸರು(ಶ್ರೀ ಇಭರಾಮಪುರ ಅಪ್ಪಾವರ ಅನುಗ್ರಹ ದಿಂದ ಜನಿಸಿದ ವರು.ಇವರ ತಂದೆ ಶ್ರೀ ಯಳಮೇಲಿ ಹಯಗ್ರೀವಾಚಾರ್ಯರು) 
ಮತ್ತೊಬ್ಬ ಗುರುಗಳು ಶ್ರೀನಾಯಕಲ್ ರಾಮಾಚಾರ್ಯರು.
ಇವರು ಕರ್ಮಾಚರಣೆಗಳನ್ನು ಅನು ಸಂಧಾನ ಪೂರ್ವಕ ಶ್ರೀಹರಿಗೆ ಸಮರ್ಪಣೆ ಮಾಡುವಂತಹ ವ್ಯಾಪ್ತೋಪಾಸಕರು..

ಹೀಗೆ ೩ ಗುರುಗಳಲ್ಲಿ ವಿದ್ಯೆಯನ್ನು ಕಲಿತವರು ನರಸಿಂಹ ಆಚಾರ್ಯರು..  ಆಚಾರ್ಯರಿಗೆ  ೩ ಜನ ಪತ್ನಿಯರು ಶ್ರೀಮತಿ ರಾಘಮ್ಮ ತುಳಸಮ್ಮ .ಮತ್ತು ಲಕ್ಷ್ಮಿ ಬಾಯಿ.
ಶ್ರೀಮತಿ ರಾಘಮ್ಮನವರು ಅಲ್ಪಕಾಲದಲ್ಲಿ ಮರಣಹೊಂದಿದ ಮೇಲೆ ಲಕ್ಷ್ಮೀಬಾಯಿಯವರ ಜೊತೆ ವಿವಾಹವಾದರು..
ಇವರು ಹೇಳುವ ಭಾಗವತ ಅದರ ಅರ್ಥ ಬಹು ಸರಳ...
ಒಂದು ಕಡೆ ಹೇಳಿದ ಭಾಗವತ ಇನ್ನೊಂದು ಕಡೆ ಅದೇ ಹೇಳಬೇಕಾದರೆ ಅದರ ಅರ್ಥ ವೇ ಬೇರೆ!!
ಇವರಿಗೆ ಒಬ್ಬ ಸಾಕು ಮಗಳು ಭೀಮವ್ವ ಅಂತ.
ಅವರನ್ನು ನೋಡಿದವರು ಇವಾಗ ಇದ್ದಾರೆ.
ಅವರು ಹೇಳಿದ್ದು.
ಆಚಾರ್ಯರು ಕುದುರೆ ಮೇಲೆ ಕುಳಿತು ಹೊರಟಾಗ ಅವರು ಸಹ ಅವರ ಜೊತೆಗೆ ಹೋಗಬೇಕು.
ಕುದುರೆಯ ಸಮ ಅಷ್ಟು ವೇಗವಾಗಿ ನಡೆಯುತ್ತಾ ಇದ್ದರಂತೆ ಆ ತಾಯಿ ಭೀಮವ್ವನವರು..

ಭಗವಂತನು ಶ್ರೀ ಐಕೂರು ಆಚಾರ್ಯರಲ್ಲಿ ನಿಂತು ಕೆಲ ಮಹಿಮೆಯನ್ನು ತೋರಿಸಿದ್ದಾನೆ. ಅವರ ಬಿಂಬರೂಪಿ ಪರಮಾತ್ಮ ಇವರನ್ನು ಸಾರಿದವರ ಅಘಗಳನ್ನು ಕಳೆದ.. ಮತ್ತು ಇವರ ಕೀರ್ತಿ ಯನ್ನು ಹೆಚ್ಚಾಗಿ ಮಾಡಿದ..
ಅದಕ್ಕಾಗಿ ಆಚಾರ್ಯರು ನಿತ್ಯ ಭಗವಂತನ ಬಳಿಅತಿ ದೈನ್ಯದಿಂದ ಸ್ವಾಮಿ !!ಇದು ನಿನ್ನ ಮಹಿಮಾ ಅಂತ ಎಲ್ಲಾ ಜನಗಳ ತಲ್ಯಾಗ ಹಾಕು ನಂದಲ್ಲ !!ಇದು ಅಂತ ಕೇಳಿಕೊಳ್ಳುತ್ತಾ ಇದ್ದರು..

ಒಂದು ದಿನ ತಮ್ಮ ಹೊಲಕ್ಕೆ ಹೋದಾಗ ಚೂಪಾದ ವಸ್ತುವಂದು ಅವರ ಪಾದಕ್ಕೆ ಚೂರಿಯಿಂದ ತಿವಿದಂತಾಗಿ  ಶ್ರೀ ಹರಿ ಅಂತ ಕೂಗಿದರು..
ರಕ್ತ ಧಾರಾಕಾರವಾಗಿ ಹರಿಯಲು ಆರಂಭಿಸಿತು. ಹೊಲದಲ್ಲಿಯ ಕೊಯ್ಲು ಅವರ ಕಾಲನ್ನು ಗಾಯ ಮಾಡಿತ್ತು. ನಮ್ಮ ಹಾಗೇ ದೇವರನ್ನು ಆಚಾರ್ಯ ರು ನಿಂದನೆ ಮಾಡಲಿಲ್ಲ.
ಅದನ್ನು ನೋಡಿ ನಕ್ಕು ನಿನಗೆಲ್ಲಿ ಸ್ವಾತಂತ್ರ್ಯ ಇದೆಯೋ ಖೋಡಿ!!
ಅಂತ ಹೇಳಿ 
ಶ್ರೀ ಹರಿಯ ಸಂಕಲ್ಪ ತಮ್ಮ ಇಹಯಾತ್ರೆ ಸನಿಹಕ್ಕೆ ಬಂದಿತು ಅಂತ ಕುಂಟುತ್ತಾ ಮನೆಗೆ ಬಂದರು.
ಆ ತರಹದ ಗಾಯವಾದರು ಭಾಗವತ ಪ್ರವಚನ ಬಿಡಲಿಲ್ಲ.
ಬಂದು ಶಿಷ್ಯ ವರ್ಗಕ್ಕೆ ಇದು ಕಡೀ ಪ್ರವಚನ, ಮುಂದಿನ ಶನಿವಾರ ನಮ್ಮ ಪ್ರಯಾಣ!! ಅಂತ ಹೇಳಿ ದರು.
ಇವರ ಮಾತನ್ನು ಕೇಳಿ ಇವರ ಶಿಷ್ಯರು ಎಲ್ಲಾ ರು ಐಕೂರು ಬಂದು ಗುರುಗಳ ಬಳಿಸೇರುತ್ತಾರೆ.
ತಮ್ಮ ಅಂತಿಮ ಯಾತ್ರೆ ಸಮಯದಲ್ಲಿ ಶಿಷ್ಯರು, ಪರಿವಾರ ಹತ್ತಿರ ಇದ್ದರೆ ಅವರ ಮೇಲಿನ ಅಂತಃಕರಣ ತಮ್ಮ ಪಯಣಕ್ಕೆ ಅಡ್ಡಿಯಾಗುವದು ಅಂತ ಎಲ್ಲರ ನ್ನು ಅವರವರ ಊರಿಗೆ  ಹಾಗು ಸಾಕು ಮಗಳಾದ ಭೀಮವ್ವನವರನ್ನು ಸಹ ಬೇರೆ ಕಡೆ ಕಳುಹಿಸಿ ತಾವು
ಏಕಾಂತದಲ್ಲಿ ಭಗವಂತನ ಚಿಂತನೆ ಮಾಡುತ್ತಾ ಇರುತ್ತಾರೆ.
ಸಾಮಾನ್ಯ ಜನರಾದರೆ ಅಂತಿಮಕಾಲದಲ್ಲಿ ಎಲ್ಲಾ ಬಂಧು, ಬಳಗ ,ಆಪ್ತರ ಕರೆಸಿ ಕೊಳ್ಳುವರು,...
ಆ ದಿನ ಶನಿವಾರ ಬೆಳಿಗ್ಗೆ ತಮ್ಮ ಪತ್ನಿ ತುಳಸಮ್ಮನವರನ್ನು ಕರೆದು ಶ್ರೀ ಮದ್ಭಾಗವತ ಗ್ರಂಥ ತರಲು ಹೇಳುತ್ತಾರೆ.ತಮ್ಮ ಅಂತರಂಗದ ಬಿಂಬ ಮೂರ್ತಿಯನ್ನು ಧ್ಯಾನಿಸಿ ಭಾಗವತದ ಸೂಕ್ಷ್ಮ ವಿಷಯಗಳನ್ನು ತಿಳಿಸಿ
ಸುಖ ದುಃಖ ದ ಅನುಭವವಾದರೆ ಭಗವಂತನ ಕಾರುಣ್ಯ ಎಂದು ತಿಳಿ.. ಸುಖ ದುಃಖ ಅವನು ನಮ್ಮ ಒಳಗೆ ಇದ್ದು ಪ್ರಾರಬ್ಧ ಅನುಸಾರ ಕೊಡುತ್ತಾನೆ.
ಇವತ್ತು ರಾತ್ರಿ ಗೆ ನಮ್ಮ ಪ್ರಯಾಣ...
ಈ ಬಡ ದೇಹದ ಸಂಬಂದ ಮುಗಿಯಿತು. ಸಾಧನ ಮಾಡಿಕೊಳ್ರಿ ನೀವಿಬ್ಬರು.. ಇದು ಭಗವಂತನ ಸಂಕಲ್ಪ! ಅಂತ ಹೇಳುತ್ತಾರೆ.
ಇಬ್ಬರು ಧರ್ಮಪತ್ನಿ ಯರ ರೋದನ ಅವರ ಕಿವಿಗೆ ಬಿದ್ದರು ಭಗವಂತನ ಧ್ಯಾನ ದಲ್ಲಿ ಇಟ್ಟ ಅವರ ಮನ ಸಡಿಲಾಗಲಿಲ್ಲ...
ಗಾಯದ ನಂಜು ದೇಹವನ್ನು ತೆಗೆದುಕೊಂಡು ಅವರಿಗೆ ಜರ್ಜರಿತರನ್ನಾಗಿ ಮಾಡಿತ್ತು.
ಸಾಯಂಕಾಲ ಸೂರ್ಯಾಸ್ತ ಆದ ಮೇಲೆ 
ಎಲ್ಲಾ ರು ಕೋಣೆ ಇಂದ ಹೊರಗಡೆ ಹೋಗಿ ಬಿಡ್ರಿ ಇನ್ನ!!!
ಹೊರಗಿನಿಂದ ಚಿಲಕ ಹಾಕ್ರಿ.!! ಒಳಗಡೆ ಯಾರು ಬರಬೇಡ್ರಿ!!..  ನಾವು ಲಯ ಚಿಂತನೆ ಕೂಡುತ್ತೇವೆ ಅಂತ ಹೇಳಿದರು.
ಅವರ ಪತ್ನಿಯರು ಶ್ರೀಹರಿಕಥಾಮೃತಸಾರ ಪಾರಾಯಣ,ಅಕ್ಕಪಕ್ಕದ ಜನರು ಎಲ್ಲಾ ಪಾರಾಯಣ ಮಾಡುತ್ತಾ ಹೊರಗಡೆ ದುಃಖ ತಪ್ತರಾಗಿ ಕುಳಿತಿದ್ದಾರೆ..
ಇದ್ದಕಿದ್ದ ಹಾಗೇ ಶ್ರೀ ಹರಿ!! ಅಂತ  ಕೂಗು ಕೇಳಿದಾಗ ಕೋಣೆಯ ಬಾಗಿಲನ್ನು ತೆಗೆದು ನೋಡಲು ಆಚಾರ್ಯರು ಆಗಲೆ ಲಯ ಚಿಂತನೆ ಮಾಡಿ ಭಗವಂತನ ಪಾದವನ್ನು ಸೇರಿದ್ದರು.
 ಇಂಥಹ ಹರಿಭಕ್ತರನ್ನು
ನರ ರೆಂದವರಿಗೆ ನರಕವು ಬಹು ಹತ್ತಿರ..
🙏🙏🙇‍♂
ಧರಣಿ ವಲಯದಿ ಇವರ ಚರಿತೆ ತಿಳಿಯದೆ|
ಜರಿವ ಮನುಜರು ಘೋರ ನಿರಯ ಪಾತ್ರರು||🙏
ಶ್ರೀ ಐಕೂರು ಆಚಾರ್ಯರ ಪಾದಗಳಲ್ಲಿ ಈ ಪುಟ್ಟ ಲೇಖನ ಸಮರ್ಪಣೆ ಮಾಡುತ್ತಾ ಅವರ ಅಂತರ್ಯಾಮಿಯಾದ ಶ್ರೀ ಹರಿ ಪ್ರೀತಿ ಯಾಗಲಿ.
ಶ್ರೀ ಕೃಷ್ಣಾರ್ಪಣಮಸ್ತು..

*******



ಶ್ರೀ ಐಕೂರು ಆಚಾರ್ಯರ ಚರಿತ್ರೆ ಅವರ ಆರಾಧನೆ ಪ್ರಯುಕ್ತ..
ಶ್ರೀ ಹರಿಕಥಾಮೃತ ಸಾರದಲ್ಲಿ  ಭಗವಂತನ ವ್ಯಾಪ್ತಿಯ ಉಪಾಸನೆಯನ್ನು ಶ್ರೀ ಮಾನವಿ ದಾಸರು ಹೇಳಿದ್ದಾರೆ.
ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು
ಬಿಂಬೋಪಾಸನೆಯಲ್ಲಿ ಸಿದ್ಧಿಯನ್ನು ಪಡೆದ,ಶ್ರೀ ಐಕೂರು ನರಸಿಂಹ ಆಚಾರ್ಯರಿಗೆ,ಪರಮಾತ್ಮನ ವ್ಯಾಪ್ತತ್ವ ವನ್ನು ಕಾಣುವಂಥ ದಿವ್ಯ ಚಕ್ಷು ಅವರಿಗೆ ಲಭ್ಯವಾಗಿತ್ತು..
ಹೆಚ್ಚಾಗಿ 
ಅವರು ಚಲ ಪ್ರತಿಮೆಗಳಲ್ಲಿಯೇ ಭಗವಂತನನ್ನು ಕಾಣುವಂಥ ವ್ಯಾಪ್ತೋಪಾಸಕರಾಗಿದ್ದರು..
ಒಂದು ಸಲ ತಮ್ಮ ಮನೆಯಲ್ಲಿ ಭಾಗವತ ಪುರಾಣ ಮಂಗಳ ಏರ್ಪಾಡಾಗಿತ್ತು.ನೂರಾರು ಜನ ಅತಿಥಿ, ಅಭ್ಯಾಗತರು ಇವರ ಮನೆಗೆ ಬಂದಿದ್ದರು.ಭಕ್ಚ್ಯ ಭೋಜ್ಯಗಳ ಅಡಿಗೆ ಸಿದ್ಧವಾಗಿತ್ತು.
ಘಮಘಮಿಸುವ ಹಾಲಿನ ಪಾಯಸವನ್ನು ನೋಡಿದ ಒಂದು ಮಗು (ಬಂದಂತಹ ಅತಿಥಿ ಗಳ ಪೈಕಿ)  ತನಗೆ ಪಾಯಸ ಬೇಕೆಂದು ವಿಪರೀತ ಹಠ ಮಾಡಿತು...
ಆ ಮಗುವಿನ ತಂದೆ ತಾಯಿಗಳು ಎಷ್ಟೋ ಸಮಾಧಾನ ಮಾಡಿದರು ಆ ಮಗುವಿನ ಹಟ ಜೋರಾಯಿತೇ ಹೊರತು ಕಡಿಮೆಯಾಗಲಿಲ್ಲ.
ಪೂಜೆಯಲ್ಲಿ ಕುಳಿತ ಐಕೂರು ಆಚಾರ್ಯರಿಗೆ ಇದು ಕಿವಿಗೆ ಬಿದ್ದಿತು.
ತಕ್ಷಣವೇ 
ದೇವರ ಕಟ್ಟಿ ಇಂದ ಎದ್ದು ಬಂದು  ಆ ಕೂಸನ್ನು ಕರೆದರು..
ಆ ಮಗುವಿನ ತಂದೆ ತಾಯಿಗಳಿಗೆ ಆಚಾರ್ಯರು ಹೇಳುತ್ತಾರೆ.
"ಇಂದು  ಈ ಪುಟ್ಟ ಗೋಪಾಲಕೃಷ್ಣ. ಪಾಯಸವನ್ನು ಆಪೇಕ್ಚಿಸಿದ್ದಾನೆ..ಅದಕ್ಕೆ ನೀವುಗಳು ಯಾಕೆ ಅಡ್ಡಿ ಮಾಡ್ತಾ ಇದ್ದೀರಿ.??ಮೊದಲು ಆ ಕೂಸಿಗೆ ಪಾಯಸ ಕುಡಿಸ್ರೀ.ಪಾಯಸ ಒಂದು ಬಿಟ್ಟು ಉಳಿದ ಪದಾರ್ಥ ಗಳನ್ನೂ ದೇವರಿಗೆ ನೈವೇದ್ಯ ಮಾಡಿದರೆ ಆಯಿತು" ಅಂತ ತಮ್ಮ ಪರಿವಾರದವರಿಗೆ ಹೇಳಿ ತಾವು ಹೋಗಿ ಪಾಯಸವನ್ನು ಬಟ್ಟಲಿನಲ್ಲಿ ತಂದು ಆ ಕೂಸಿನ ಮುಂದಿಟ್ಟು  "ಶ್ರೀಕೃಷ್ಣಾರ್ಪಣಮಸ್ತು" ಅಂತ ಹೇಳಿ🙏 ಕೈ ಮುಗಿದರು..
ಅದೇ ನಾವುಗಳು ಆಗಿದ್ದರೆ ಕೂಸಿಗೆ ಅವರ ಮನೆಯಾಗ ಇರುವವರಿಗೆಲ್ಲ ಬೈಯ್ದು ಇನ್ನೋಂದು ಸಾರಿ ಅವರು ಕೂಸಿನ ಕಟ್ಟಿಕೊಂಡು ಎಲ್ಲಿ ಬರಬಾರದು ಹಾಗೆ ಅವರಿಗೆ ಅನ್ನಿಸುವ ಹಾಗೆ ನಮ್ಮ ವರ್ತನೆ ಇರುತ್ತಾ ಇತ್ತು.
ಇಂತಹ ವಿಶಾಲ ಹೃದಯ ಸಾಮಾನ್ಯ ಜನರಲ್ಲಿ ಬರುವದು ಬಹು ಕಠಿಣ, ಹಾಗು ವಿರಳ.
ಶ್ರೀ ಐಕೂರು ಆಚಾರ್ಯರಂತ ಜ್ಞಾನಿಗಳಿಗೆ, ಈ ತರಹದ ಭಗವಂತನ ವ್ಯಾಪ್ತೊಪಾಸನೆಯ ಚಿಂತಕರಿಗೆ ಇದು ಮಾತ್ರ ಸಾಧ್ಯ..
ಶ್ರೀ ಐಕೂರು ಆಚಾರ್ಯರ ಅಂತರ್ಯಾಮಿಯಾದ ಶ್ರೀ ಹರಿ  ಪ್ರೀತಿಯಾಗಲಿ.
🙏ಶ್ರೀ ಕೃಷ್ಣಾರ್ಪಣಮಸ್ತು🙏
ಧರಣಿವಲಯದಿ ಇವರ
ಚರಿತೆ ತಿಳಿಯದೆ?|
ಜರಿವ ಮನುಜರು ಘೋರ ನಿರಯ ಪಾತ್ರರು||

🙏ಶ್ರೀ ಐಕೂರುಆಚಾರ್ಯರಿಗೆ ನಮೋ ನಮಃ 🙏
***


" ನಡೆದಾಡುವ ಶ್ರೀಮದ್ಭಾಗವತ ಮಹಾ ಪುರಾಣದ ನಿಘಂಟು - ಪ್ರಾತಃ ಸ್ಮರಣೀಯ ಪರಮ ಪೂಜ್ಯ ಶ್ರೀ ಐಕೂರು ನರಸಿಂಹಾಚಾರ್ಯರ ಆರಾಧನಾ ವಿಶೇಷ - " ಪರಮ ಪೂಜ್ಯ ಶ್ರೀ ಆಚಾರ್ಯರ ಶ್ರೀಮದ್ಭಾಗವತ ಮಹಾ ಪುರಾಣದ ಸಾರ ಸಂಗ್ರಹ " 
ಶ್ರೀಮದ್ಭಾಗವತ ಇದು ಪುರಾಣರಾಜ ಸಕಲ ಶಾಸ್ತ್ರ ಸಂಗ್ರಹ. 
ಬ್ರಹ್ಮಸೂತ್ರಗಳ ಅರ್ಥವೇ ಶ್ರೀಮದ್ಭಾಗವತ ಮಹಾ ಪುರಾಣ. 
ಪ್ರತಿ ಶ್ಲೋಕದಲ್ಲಿಯೂ ಅನೇಕ ಸೂತ್ರಗಳ ಅರ್ಥ ತುಂಬಿದೆ. 
ಅಂತೆಯೇ " ಜನ್ಮಾದ್ಯಸ್ಯಯತಃ " ಯೆಂಬ ಬ್ರಹ್ಮಸೂತ್ರದಿಂದೇ ಶ್ರೀಮದ್ಭಾಗವತದ ಆರಂಭ. 
ಶ್ರೀಮನ್ಮಹಾಭಾರತದ ಮುಕ್ತಾಯ ಶ್ರೀಮದ್ಭಾಗವತ ಶ್ರವಣಕ್ಕೆ ನಾಂದಿ. 
ಶ್ರೀಮನ್ಮಹಾಭಾರತದ ಅರ್ಥ ತುಂಬಿದ ಕೃತಿ ಶ್ರೀಮದ್ಭಾಗವತ ಮಹಾ ಪುರಾಣ. 
ವೇದ ಮಾತೆಯಾದ ಗಾಯತ್ರಿಯ ವಿಸ್ತೃತವಾದ ಭಾಷ್ಯವೇ ಶ್ರೀಮದ್ಭಾಗವತ ಮಹಾ ಪುರಾಣ. 
ಸಮಗ್ರ ವೇದಗಳ ಅನಂತ ಅರ್ಥಗಳು ತುಂಬಿದ್ದು ಈ ಶ್ರೀಮದ್ಭಾಗವತ ಮಹಾ ಪುರಾಣ. 
ವೇದಗಳ ಶ್ಲೋಕ ರೂಪವಾದ ವ್ಯಾಖ್ಯಾನ. 
18 ಪುರಾಣಗಳ ವಿಷಯ ಸಂಗ್ರಹ. 
ವಿಚಾರ ಸಂಗ್ರಹವೇ ಈ ಶ್ರೀಮದ್ಭಾಗವತ ಮಹಾ ಪುರಾಣ. 
ಶ್ರೀ ಭಗವಾನ್ ವೇದವ್ಯಾಸಾವತಾರದಲ್ಲಿ ರಚಿಸಿದ ಕೊನೆಯ ಕೃತಿ. 
" ಪದ್ಮ ಪುರಾಣ " ದಲ್ಲಿ ಶ್ರೀ ಪರಮಾತ್ಮನ ಮಾತು.... 
" ಮಮೋತ್ಸವೇಷು ಸರ್ವೇಷು 
ಶ್ರೀಮದ್ಭಾಗವತಂ ಪರಂ "
ನನ್ನನ್ನು ಕುರಿತು ನೀವು ಮಾಡುವ ಉತ್ಸವಗಳಲ್ಲಿ ಶ್ರೀಮದ್ಭಾಗವತ ಮಹಾ ಪುರಾಣದ ಶ್ರವಣವೇ ದೊಡ್ಡ ಉತ್ಸವ - ಅದೇ ದೇವರ ( ಶ್ರೀ ಹರಿಯ ) ಸಮಾರಾಧನೆ. 
ಅದೇ ನನಗೆ ಭವ್ಯ ಸಮಾರಂಭ ಎಂದು ಶ್ರೀ ಹರಿಯು ಖಚಿತ ಪಡಿಸಿದ್ದಾನೆ. 
ಅಂಥಾ ಶ್ರೀಮದ್ಭಾಗವತದ ನಡೆದಾಡುವ ನಿಘಂಟು ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಐಕೂರು ನರಸಿಂಹಾಚಾರ್ಯರು. 
ಈ ಮಹನೀಯರಿಗೆ ಶ್ರೀಮದ್ಭಾಗವತ ಮಹಾ ಪುರಾಣವು ಅಸ್ಥಿಗತವಾಗಿತ್ತು. 
ಯಾರಾದರೂ ಇವರ ಪಕ್ಕದಲ್ಲಿ ನಡೆದು ಹೋಗುತ್ತಿದ್ದರೆ - ಅವರ ಅಸ್ಥಿಗಳಿಂದ ಕೂಡಾ ಶ್ರೀಮದ್ಭಾಗವತ ಮಹಾ ಪುರಾಣದ ಶ್ಲೋಕಗಳು ಕೇಳಿ ಬರುತ್ತಿತ್ತಂತೆ ಎಂದು ಆ ಪ್ರಾಂತ್ಯದ ಹಿರಿಯರು ಇಂದಿಗೂ ಹೇಳುತ್ತಾರೆ. 
ಇದು ಆ ಮಹಾನುಭಾವರ ವೈಭವ!!
" ಓಂ ಅಥಾತೋ ಬ್ರಹ್ಮಜಿಜ್ಞಾಸಾ ಓಂ "
ಕರ್ಮ ಬದ್ಧವಾಗಿ ಸಂಸಾರದಲ್ಲಿ ಇರುವ ಜೀವಿಯು - ಇದರ ಮುಕ್ತಿ ದ್ವಾರ ಸುಖ ಪ್ರಾಪ್ತಿಗಾಗಿ - ಸಕಲ ಗುಣ ಪೂರ್ಣನಾದ ಬ್ರಹ್ಮನನ್ನು - ಬಿಂಬನನ್ನು ಉಪಾಸಿಸಬೇಕು. 
ಶಮದಮಾದಿಯುತನಾಗಿ ಇದು ಸಂಪೂರ್ಣ ಸಾರಾಂಶ ವಿವರವು ಹ್ಯಾಗೆಂದರೆ.... 
ನಮಗೆ ಸಾಧನೆಗಾಗಿ ದೇಹ ಬೇಕು - ಇದೇ ಸೃಷ್ಟಿ. 
ಅಲ್ಲಿದ್ದ ದೇವರು ಸಾಧನೆ ನಡೆಸಬೇಕು - ಇದೇ ಸ್ಥಿತಿ. 
ಕಾಲಕ್ಕೆ ಅನುಸರಿಸಿ ದೇಹ ಸಾಮರ್ಥ್ಯಾದಿಗಳು ಗಳಿತರಾಗಲು - ಹಳೇದನ್ನು ಬಿಡಿಸಿ - ಬೇರೆ ಹೊಸದನ್ನು ಕೊಡಬೇಕು - ಇದೇ ಲಯ. 
ಸಾಧನೆಯ ಕಾಲಕ್ಕೆ ಯೋಗ್ಯತೆಯನ್ನು ಅನುಸರಿಸಿ ಬುದ್ಧಿ - ಇಂದ್ರಿಯಾದಿಗಳು ಪ್ರೇರಿಸಬೇಕು - ಇದೇ ನಿಯಮನ. 
ಯೋಗ್ಯತೆ ಸರಿಯಾಗಿ ಇದ್ದಾರೆ ಸುಬುದ್ಧಿ ಕೊಡಬೇಕು - ಇದೇ ಜ್ಞಾನ. 
ವಿರುದ್ಧವಾದರೆ ಅಸದ್ ಬುದ್ಧಿ ಕೊಡಬೇಕು - ಇದೇ ಅಜ್ಞಾನ. 
ಅಯೋಗ್ಯ ಬುದ್ಧಿಯ ಫಲವು - ಬಂಧ 
ಯೋಗ್ಯ ಬುದ್ಧಿಯ ಫಲವೇ - ಮೋಕ್ಷ 
ಹೀಗೆ ಈ ೮ ಗುಣಗಳು ದೇವರಲ್ಲಿ ಇರಬೇಕು. 
" ಕ್ರಿಯಾ ಶಕ್ತಿ  "
" ಓಂ ಜನ್ಮಾದ್ಯಸ್ಯಯತಃ ಓಂ " ಯೆಂಬ ಸೂತ್ರದಲ್ಲಿ ಹೇಳುವರು. 
ಇಷ್ಟು ಈತನೇ ಮಾಡುವನು. 
ಅತಏವ ಮಹದುಪಕಾರಿ . 
ಆತನು ಅದೃಶ್ಯನಾದುದರಿಂದ ನಾವು ತನ್ನನ್ನು ತಿಳಿಯಲೋಸುಗ ತನ್ನ ಮಹಿಮಾ ಪ್ರಶಂಸನೆ ಮಾಡುವ ಶಾಸ್ತ್ರಗಳನ್ನು ರಚಿಸಿದನು. 
ಇದೇ " ಓಂ ಶಾಸ್ತ್ರಯೋನಿತ್ವಾತ್ ಓಂ " ಯೆಂಬ ಸೂತ್ರಾರ್ಥವು. 
ಆದ್ದರಿಂದಲೇ ಶಾಸ್ತ್ರದಿಂದಲೇ ಈತನನ್ನು ತಿಳಿಯಬೇಕು. 
" ಗುಣ ಶಕ್ತಿ "
ಜೀವನಂತೆ ಹಿತಕರಣಾದಿ ದೋಷಗಳು ಪರರ ಅಧೀನತಾ ಈತನಲ್ಲಿ ಇಲ್ಲವು. 
ದೋಷಿಯಾದ ಜೀವನಲ್ಲಿ ಮತ್ತು ಜಡವಾದ ಪ್ರಕೃತಿಯಲ್ಲಿ ದೇವರು ಇದ್ದು ವ್ಯಾಪಾರ ಮಾಡುವನಾದ್ದರಿಂದ ಈತನಿಗೆ ಏನಾದರೂ ಆ ದೋಷ ಬಂದೀತೆ ?
ಯೆಂದರೆ - " ಬಾರದು ". 
ಯಾಕೆಂದರೆ.... 
ಈತನು ನಿರ್ಲಿಪ್ತನಾಗಿ ವ್ಯವಹರಿಸುವನು. 
ಅತಏವ ಪೂರ್ಣಾನಂದನಾಗಿ ಇರಬೇಕು. 
ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಐಕೂರು ಆಚಾರ್ಯರ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ಅವರ ಶ್ರೀಮದ್ಭಾಗವತ ಮಹಾ ಪುರಾಣ ಪ್ರವಚನದ ಒಂದು ತುಣಕನ್ನು ಸಜ್ಜನರ ಮಾಹಿತಿಗಾಗಿ..... 
ಶ್ರೀ ರಾಯರ ಅಂತರಂಗ ಭಕ್ತರಾದ ಶ್ರೀ ಐಕೂರು ನರಸಿಂಹಾಚಾರ್ಯರು - ಶ್ರೀ ರಾಯರ ವೇದಾಂತ ಸಾಮ್ರಾಜ್ಯ ಪಟ್ಟಾಭಿಷೇಕ ಮಹೋತ್ಸವದ ಪರಮ ಪವಿತ್ರವಾದ ದಿನದಂದೇ ಶ್ರೀ ನಾರಾಯಣನ ಪುರವಾದ ವೈಕುಂಠಕ್ಕೆ ತೆರಳಿರುವುದು ವಿಶೇಷ.
******


" ಶ್ರೀ ಐಕೂರು ಆಚಾರ್ಯರು - 1 " -by  ಆಚಾರ್ಯ ನಾಗರಾಜು ಹಾವೇರಿ 
" ದಿನಾಂಕ : 15.03.2021 ಸೋಮವಾರ - ಫಾಲ್ಗುಣ ಶುದ್ಧ ದ್ವಿತೀಯಾ - ಶ್ರೀ ವೇದವ್ಯಾಸ ದೇವರ - ಶ್ರೀ ಆನಂದತೀರ್ಥರ ಕಾರುಣ್ಯಪಾತ್ರರೂ - ಶ್ರೀ ರಾಯರ ಮತ್ತು ಶ್ರೀ ಜಗನ್ನಾಥದಾಸರ ಅಂತರಂಗ ಭಕ್ತರೂ ಆದ ಪ್ರಾತಃ ಸ್ಮರಣೀಯ ಪರಮ ಪೂಜ್ಯ ಶ್ರೀ ಐಕೂರು ನರಸಿಂಹಾಚಾರ್ಯರ ಆರಾಧನಾ ಮಹೋತ್ಸವ "
" ಪ್ರಸ್ತಾವನೆ "
ಶ್ರೀಮದ್ಭಾಗವತ ಇದು ಪುರಾಣರಾಜ ಸಕಲ ಶಾಸ್ತ್ರ ಸಂಗ್ರಹ. 
ಬ್ರಹ್ಮಸೂತ್ರಗಳ ಅರ್ಥವೇ ಶ್ರೀಮದ್ಭಾಗವತ ಮಹಾ ಪುರಾಣ. 
ಪ್ರತಿ ಶ್ಲೋಕದಲ್ಲಿಯೂ ಅನೇಕ ಸೂತ್ರಗಳ ಅರ್ಥ ತುಂಬಿದೆ. 
ಅಂತೆಯೇ " ಜನ್ಮಾದ್ಯಸ್ಯಯತಃ " ಯೆಂಬ ಬ್ರಹ್ಮಸೂತ್ರದಿಂದೇ ಶ್ರೀಮದ್ಭಾಗವತದ ಆರಂಭ. 
ಶ್ರೀಮನ್ಮಹಾಭಾರತದ ಮುಕ್ತಾಯ ಶ್ರೀಮದ್ಭಾಗವತ ಶ್ರವಣಕ್ಕೆ ನಾಂದಿ. 
ಶ್ರೀಮನ್ಮಹಾಭಾರತದ ಅರ್ಥ ತುಂಬಿದ ಕೃತಿ ಶ್ರೀಮದ್ಭಾಗವತ ಮಹಾ ಪುರಾಣ. 
ವೇದ ಮಾತೆಯಾದ ಗಾಯತ್ರಿಯ ವಿಸ್ತೃತವಾದ ಭಾಷ್ಯವೇ ಶ್ರೀಮದ್ಭಾಗವತ ಮಹಾ ಪುರಾಣ. 
ಸಮಗ್ರ ವೇದಗಳ ಅನಂತ ಅರ್ಥಗಳು ತುಂಬಿದ್ದು ಈ ಶ್ರೀಮದ್ಭಾಗವತ ಮಹಾ ಪುರಾಣ. 
ವೇದಗಳ ಶ್ಲೋಕ ರೂಪವಾದ ವ್ಯಾಖ್ಯಾನ. 
18 ಪುರಾಣಗಳ ವಿಷಯ ಸಂಗ್ರಹ. 
ವಿಚಾರ ಸಂಗ್ರಹವೇ ಈ ಶ್ರೀಮದ್ಭಾಗವತ ಮಹಾ ಪುರಾಣ. 
ಶ್ರೀ ಭಗವಾನ್ ವೇದವ್ಯಾಸಾವತಾರದಲ್ಲಿ ರಚಿಸಿದ ಕೊನೆಯ ಕೃತಿ. 
ಮೊದಲು ರಚಿಸಿದ ಎಲ್ಲ ಕೃತಿಗಳ ಸಾರ ಸಂಗ್ರಹ. 
ಶ್ರೀ ನಾರಾಯಣ - ಶ್ರೀ ವೇದವ್ಯಾಸ - ಶ್ರೀ ಕೃಷ್ಣ ಈ ಮೂರು ರೂಪಗಳಿಂದ ನಿರೂಪಿಸಿದ - ನಿರ್ಮಿಸಿದ ಏಕೈಕ ಕೃತಿ ಶ್ರೀಮದ್ಭಾಗವತ ಮಹಾ ಪುರಾಣ. 
ಶುಕತಾಲ - ಹರಿದ್ವಾರ - ನೈಮಿಷಾರಣ್ಯದಲ್ಲಿ ನಡೆದ ಸಂವಾದವೇ ಈ ಶ್ರೀಮದ್ಭಾಗವತ ಮಹಾ ಪುರಾಣ. 
ಶುಕ - ಪರೀಕ್ಷಿತರ; ವಿದುರ - ಮೈತ್ರೇಯರ; ಸೂತರು - ಶೌನಕರು ಇದರಲ್ಲಿ ನಡೆದ ಸಂವಾದವೇ ಶ್ರೀಮದ್ಭಾಗವತ ಮಹಾ ಪುರಾಣ. 
ಶ್ರೀಮದಾಚಾರ್ಯರು - ಶ್ರೀ ವಿಜಯಧ್ವಜ ತೀರ್ಥರು - ಶ್ರೀ ಸುಧೀಂದ್ರ ತೀರ್ಥರು - ಶ್ರೀ ವಿಷ್ಣುತೀರ್ಥರು - ಶ್ರೀ ಸತ್ಯಧರ್ಮ ತೀರ್ಥರು - ಶ್ರೀ ಯಾದವರ್ಯಾರು - ಶ್ರೀ ಬಿದರಹಳ್ಳಿ ಶ್ರೀನಿವಾಸಾಚಾರ್ಯರು ಮೊದಲಾದವರಿಂದ ವ್ಯಾಖ್ಯಾನಿಸಲ್ಪಟ್ಟ - " ಮಹಾ ಕೃತಿಯೇ ಶ್ರೀಮದ್ಭಾಗವತ ಮಹಾ ಪುರಾಣ ". 
ಪೀಠಾಧಿಪತಿಗಳೂ - ಪಂಡಿತರೂ - ಪಾಮರರೂ ಎಲ್ಲರಿಗೂ ಸಾಧನದ ಉಪಾಸನೆಯ - ಅನುಸಂಧಾನದ ದೃಷ್ಟಿ ಮೂಡಿಸುವುದೇ ಶ್ರೀಮದ್ಭಾಗವತ ಮಹಾ ಪುರಾಣ. 
" ಸಾಧಕರ ಜೀವನದ ಸಾರ ಸರ್ವಸ್ವವೇ ಶ್ರೀಮದ್ಭಾಗವತ ಮಹಾ ಪುರಾಣ ". 
ಅಂತೆಯೇ ಶ್ರೀ ಮಾದನೂರಿನ ಯತಿಪುಂಗವರೂ - ಪರಮ ವೈರಾಗ್ಯಶಾಲಿಗಳೂ, ಶ್ರೀ ರುದ್ರದೇವರ ಅಂಶ ಸಂಭೂತರೂ ಆದ ಶ್ರೀ ವಿಷ್ಣುತೀರ್ಥ ಮಹಾ ಸ್ವಾಮಿಗಳು " ಭಾಗವತ ಸಾರೋದ್ಧಾರ " ದ ಮೂಲಕ ಎಲ್ಲ ಬುದ್ಧಿ ಜೀವಿಗಳ ಕಣ್ಣು ತೆರೆಯಿಸಿದರು. 
ಪ್ರತಿಯೊಬ್ಬ ಆಸ್ತಿಕರನ್ನೂ - ಧಾರ್ಮಿಕರನ್ನೂ ಶ್ರೀಮದ್ಭಾಗವತ ಮಹಾ ಪುರಾಣದ ಮೂಲಕ ಆತ್ಮಾವಲೋಕನಕ್ಕೆ ಹಚ್ಚಿದರು. 
ಅದರಿಂದಾಗಿ ಸಾಧನದ ಕ್ಷೇತತ್ರದಲ್ಲಿ ಪ್ರಾಮಾಣಿಕತೆ - ಪರಿಶುದ್ಧತೆ ತಂದರು. 
ತೋರಿಕೆ ಪ್ರದರ್ಶನ - ಡಾಂಭಿಕತೆ ಹೊಡೆದೋಡಿಸಿದರು. 
ಇದೆಲ್ಲವೂ ಶ್ರೀಮದ್ಭಾಗವತ ಮಹಾ ಪುರಾಣದ ಪ್ರಭಾವ. 
ಅಂತೆಯೇ.... 
" ಶ್ರೀಮದ್ + ಭಾಗವತ " 
ಯೆಂಬಲ್ಲಿ ಶ್ರೀಮಂತಿಕೆ ಯೆಂದರೇನು?
" ಶ್ರವಣ ರಮಣೀಯತ್ವೇ ಸತಿ, ಪರಿಣಾಮ ರಮಣೀಯತ್ವಂ ಭಾಗವತಸ್ಯ ಶ್ರೀಮತ್ತ್ವಂ " 
ಕೇಳಲು ಎಷ್ಟು ರಮ್ಯವೋ, ರಂಜಕವೋ - ಪ್ರಭಾವ ಪರಿಮಾಣಗಳಲ್ಲಿಯೂ ಅಷ್ಟೇ ಅದ್ಭುತ.
ರಮಣೀಯವಾಗಿರುವುದೇ ಶ್ರೀಮಗಭಾಗವತ ಮಹಾ ಪುರಾಣ ಗ್ರಂಥದ ಶ್ರೀಮಂತಿಕೆ ಎಂದು ಶ್ರೀ ವಿಜಯಧ್ವಜತೀರ್ಥರು ಹೇಳಿದ್ದಾರೆ. 
" ಪದ್ಮ ಪುರಾಣ " ದಲ್ಲಿ ಶ್ರೀ ಪರಮಾತ್ಮನ ಮಾತು.... 
" ಮಮೋತ್ಸವೇಷು ಸರ್ವೇಷು 
ಶ್ರೀಮದ್ಭಾಗವತಂ ಪರಂ "
ನನ್ನನ್ನು ಕುರಿತು ನೀವು ಮಾಡುವ ಉತ್ಸವಗಳಲ್ಲಿ ಶ್ರೀಮದ್ಭಾಗವತ ಮಹಾ ಪುರಾಣದ ಶ್ರವಣವೇ ದೊಡ್ಡ ಉತ್ಸವ.
ಅದೇ ದೇವರ ( ಶ್ರೀ ಹರಿಯ ) ಸಮಾರಾಧನೆ. 
ಅದೇ ನನಗೆ ಭವ್ಯ ಸಮಾರಂಭ ಎಂದು ಶ್ರೀ ಹರಿಯು ಖಚಿತ ಪಡಿಸಿದ್ದಾನೆ. 
ಅಂಥಾ..... 
" ಶ್ರೀಮದ್ಭಾಗವತದ ನಡೆದಾಡುವ ನಿಘಂಟು ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಐಕೂರು ನರಸಿಂಹಾಚಾರ್ಯರು " . 
ಈ ಮಹನೀಯರಿಗೆ ಶ್ರೀಮದ್ಭಾಗವತ ಮಹಾ ಪುರಾಣವು ಅಸ್ಥಿಗತವಾಗಿತ್ತು. 
ಯಾರಾದರೂ ಇವರ ಪಕ್ಕದಲ್ಲಿ ನಡೆದು ಹೋಗುತ್ತಿದ್ದರೆ ಅವರ ಅಸ್ಥಿಗಳಿಂದ ಕೂಡಾ ಶ್ರೀಮದ್ಭಾಗವತ ಮಹಾ ಪುರಾಣದ ಶ್ಲೋಕಗಳು ಕೇಳಿ ಬರುತ್ತಿತ್ತಂತೆ ಎಂದು ಆ ಪ್ರಾಂತ್ಯದ ಹಿರಿಯರು ಇಂದಿಗೂ ಹೇಳುತ್ತಾರೆ. 
ಇದು ಈ ಮಹಾನುಭಾವರ ವೈಭವ!!
***


" ಶ್ರೀ ಐಕೂರು ಆಚಾರ್ಯರು - 2 "
" ಶ್ರೀ ಐಕೂರು ನರಸಿಂಹಾಚಾರ್ಯರ ಸಂಕ್ಷಿಪ್ತ ಚರಿತ್ರೆ "
ಹೆಸರು : 
ಶ್ರೀ ನರಸಿಂಹಾಚಾರ್ಯರು 
ತಂದೆ : 
ಶ್ರೀ ವೇಂಕಟಾರ್ಯರು 
ತಾಯಿ : 
ಸಾಧ್ವೀ ಸೀತಾಂಬೆಯವರು 
ಕಾಲ : 
ಕ್ರಿ ಶ 1883 - 1947
ಜನ್ಮ ಸ್ಥಳ : ಐಕೂರು 
ತಾಲೂಕು ಮತ್ತು ಜಿಲ್ಲೆ : 
ಶಹಾಪುರ ತಾಲೂಕು, ಕಲ್ಬುರ್ಗಿ ಜಿಲ್ಲೆ 
" ವಿದ್ಯಾ ಗುರುಗಳು "
ದೇವಾಂಶ ಸಂಭೂತರೂ - ಅಪರೋಕ್ಷ ಜ್ಞಾನಿಗಳೂ ಆದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಎಲಿಮೇಲಿ ವಿಠಲಾಚಾರ್ಯರು ಮತ್ತು ಶ್ರೀ ನಾಯಕಲ್ ರಾಮಾಚಾರ್ಯರು. 
ಕುಲ ಗುರುಗಳು : 
ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು 
ಗುರೂಪದೇಶ : 
ಶ್ರೀ ರಾಯರ ಮಠದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಸುಶೀಲೇಂದ್ರ ತೀರ್ಥರು 
" ದಾಸ್ಯ ಭಾವ "
ಶ್ರೀ ಆಚಾರ್ಯರು ಗುರು ಸೇವೆ - ಅಹಂಕಾರ ರಾಹಿತ್ಯ - ಬಾಹ್ಯ ಆಚಾರಕ್ಕಿಂತ ಅಂತರಂಗ ಉಪಾಸನೆ ಮೊದಲಾದವುಗಳು ಪ್ರಮುಖ ಉಪಾಸನಾ ಮಾರ್ಗವಾಗಿದ್ದವು. 
ಸ್ವಾರ್ಥ ತ್ಯಾಗ - ಅತಿಥಿಗಳ ಸೇವೆ - ಸತ್ಕಾರ ಇವು ಮನೆಯ ಪರಿಸರದಿಂದ ಮೈಗೂಡಿಕೊಂಡ ಶ್ರೀ ಆಚಾರ್ಯ ಗುಣಗಳಾಗಿದ್ದವು. 
" ಸರಲ ಸುಂದರವಾದ ಸುಲಭೋಪಾಸನಾ ಕ್ರಮ "
ಹರಿದಾಸ ವಾಙ್ಞಯದ ಅತ್ಯಂತ ಪ್ರಮುಖ ಲಕ್ಷಣವಾದ ಶ್ರವಣ ಮಾಧ್ಯಮವನ್ನೇ ಬಲವಾಗಿ ಅವಲಂಬಿಸಿದವರು. 
ತತ್ತ್ವವಾದ ನಿಯಮಗಳನ್ನೂ - ಬಾಳಿನ ಅರ್ಥದೊಂದಿಗೆ ಸಮೀಕರಿಸಿ ನಿತ್ಯ ಜೀವನದಲ್ಲಿ ಸುಲಭವಾಗಿ ಉಪಾಸನೆಗೆ ಅಳವಡಿಸಿ ಕೊಳ್ಳಬಹುದಾದ ವಿಧಾನಗಳನ್ನು ಭಕ್ತ ಜನತೆಯಲ್ಲಿ ಬಿಂಬಿಸಿದರು. 
ಇಂದಿನ ಆಧುನಿಕ ಜೀವನದಲ್ಲಿ ಆಧ್ಯಾತ್ಮಿಕ ಸಾಧನೆಗೆ ಒದಗುವ ಅಡ್ಡಿ - ಅಡೆ ತಡೆಗಳನ್ನು ತಿಳಿದ ಶ್ರೀ ಆಚಾರ್ಯರು ಆಯಾ ಲೌಕಿಕ ವ್ಯಕ್ತಿಗೆ ಸಮಯಾನುಕೂಲದಂತೆ - ಅತ್ಯಂತ ಗಹನವಾದ ಧಾರ್ಮಿಕ ವಿಷಯಗಳನ್ನು ಬಹಳ ಸಂಕ್ಷಿಪ್ತವಾಗಿ - ಸರಳವಾಗಿ ನಿತ್ಯ ಸಾಧನೆಗೆ ಅನುಕೂಲವಾಗುವಂತೆ ಉಪದೇಶಿಸಿದರು. 
" ಶ್ರೀ ಆಚಾರ್ಯರ ಶೈಲಿ " 
ಪೂಜ್ಯಶ್ರೀ ಆಚಾರ್ಯರು ಕೃತಿ ರಚನೆಗೆ ತೊಡಗದಿದ್ದರೂ ತಮ್ಮ ಶಿಷ್ಯ ವೃಂದಕ್ಕೆ ಅವರು ನೀಡಿದ ಉಪದೇಶಗಳು ಇಂದು ಬೃಹತ್ ಗ್ರಂಥವಾಗುವಷ್ಟು ಇದೆ. 
ಪೂಜ್ಯಶ್ರೀ ಆಚಾರ್ಯರು ಪ್ರಮುಖವಾಗಿ ಆರಿಸಿಕೊಂಡಿದ್ದು ಪುರಾಣ ಮಾಧ್ಯಮ. 
ಪೂಜ್ಯಶ್ರೀ ಆಚಾರ್ಯರು ಪುರಾಣ ಹೇಳುವ ಶೈಲಿ ಆಕರ್ಷಕವಾದುದು. 
ಪ್ರೌಢರಿಗೆ - ಅನಕ್ಷರಸ್ಥರಿಗೆ - ಮಕ್ಕಳಿಗೂ ಅರ್ಥವಾಗುವಂತೆ ಅಲ್ಲಲ್ಲಿ ಪದ - ಪದ್ಯ - ಸುಳಾದಿಗಳ ಸಮಾಖ್ಯದೊಡನೆ ವಿವರಿಸುವ ಹೃದ್ಯ ಶೈಲಿಯಾಗಿತ್ತು. 
ಶ್ರೀ ರಾಯರ ಮಠದ ಪರಮಪೂಜ್ಯ ಶ್ರೀ ಸುಶೀಲೇಂದ್ರತೀರ್ಥರಿಗಂತೂ ಶ್ರೀ ಆಚಾರ್ಯರು ಅಚ್ಚುಮೆಚ್ಚು. 
ಇವರನ್ನು ಕರೆಯಿಸಿಕೊಂಡು ಶ್ರೀ ರಾಯರ ಮೂಲ ವೃಂದಾವನ ಮುಂಭಾಗದಲ್ಲಿ ಶ್ರೀಮದ್ಭಾಗವತ ಮಹಾ ಪುರಾಣ ಪ್ರವಚನ ಮಾಡಿಸುತ್ತಿದ್ದರು. 
" ಉಪಾಸನಾ ರಹಸ್ಯ "
ಉಪಾಸನೆಯ ರಹಸ್ಯ ಸರ್ವತ್ರ ಪರಮಾತ್ಮನನ್ನು ಕಾಣುವ ಅನುಸಂಧಾನ - ಸ್ವಾರ್ಥ ತ್ಯಾಗವಿಲ್ಲದೆ ಭಾಗವತ ಧರ್ಮ ಸಿದ್ಧಿಸದೆನ್ನುವ ಬೋಧನೆ ಪೂಜ್ಯಶ್ರೀ ಆಚಾರ್ಯರದಾಗಿತ್ತು. 
ದೇಹದ ಅಶಾಶ್ವತೆ - ಅನಿತ್ಯತೆ - ಅಸ್ವಾತಂತ್ರ್ಯ - ಸೃಷ್ಟಿ ಚಿಂತನೆ - ಶ್ವಾಸ ಮಂತ್ರ - ಜಪ ಸಮರ್ಪಣೆ - ದೇಹ ಚಿಂತನೆ - ( ಅಹಂ-ಮಮ-ನಮಮ ) ಇಂದ್ರಿಯ ನಿಯಾಮಕ ದೇವತಾ ಪ್ರಾರ್ಥನೆ - ಸರ್ವ ಕಾರ್ಯ ಸಮರ್ಪಣೆ -  ಅಪರೋಕ್ಷ ಜ್ಞಾನಿಗಳಿಂದ ರಚಿತವಾದ ದಾಸ ಸಾಹಿತ್ಯದ ಪದ - ಪದ್ಯ - ಸುಳಾದಿಗಳ ಶ್ರವಣ ಮತ್ತು ವ್ಯಾಖ್ಯಾನ ಇದು ಪೂಜ್ಯಶ್ರೀ ಆಚಾರ್ಯರ ದಿನಚರಿಯಾಗಿತ್ತು. 
ಮಾನವ ಜನ್ಮದ ಸಾರ್ಥಕ್ಯ - ಸಾಧನೆ - ಜೀವನ ಸ್ವರೂಪವನ್ನು ತಿಳಿಯುವಲ್ಲಿ ಭಕ್ತಿ ಮಾರ್ಗದ ಮಹತ್ವವನ್ನು ಒತ್ತಿ ಹೇಳುತ್ತಿದ್ದರು. 
ಪೂಜ್ಯಶ್ರೀ ಆಚಾರ್ಯರು ಪ್ರತಿನಿತ್ಯವೂ ಶ್ರೀ ಸತ್ಯನಾರಾಯಣ ಕಥೆಯನ್ನು ಹೇಳುತ್ತಿದ್ದರು. 
ಕಥೆಗಿಂತ ಕಥೆಯಲ್ಲಿ ಅಡಕವಾದ ತತ್ತ್ವ ಸಂದೇಶವನ್ನು ಕೆಲವೇ ನಿಮಿಷಗಳಿಂದ ಗಂಟೆಗಳ ವರೆಗೂ ಬಿತ್ತರಿಸುವ ಅತ್ಯದ್ಭುತ ಕೌಶಲ ಪೂಜ್ಯಶ್ರೀ ಆಚಾರ್ಯರಾಗಿತ್ತು ಎಂದು ಬಲ್ಲವರು ಹೇಳುತ್ತಾರೆ.
*****
" ಶ್ರೀ ಐಕೂರು ಆಚಾರ್ಯರು - 3 "
" ಪುರಾಣ ಮಾಧ್ಯಮ "
ಪೂಜ್ಯಶ್ರೀ ಆಚಾರ್ಯರು... 
ಪುರಾಣರಾಜ ಎಂದು ಕರೆಯಿಸಕೊಳ್ಳುವ ಈ ಶ್ರೀಮದ್ಭಾಗವತ ಮಹಾ ಪುರಾಣವು ದ್ವೈತ ತತ್ತ್ವಾನುಯಾಯಿಗೆ ಸಾಧಕ ಕೈಪಿಡಿಯಂತಿದೆ. 
ಆದ್ದರಿಂದ ಪೂಜ್ಯಶ್ರೀ ಆಚಾರ್ಯರು ಶ್ರೀಮದ್ಭಾಗವತ ಮಹಾ ಪುರಾಣವನ್ನು ಮಾಧ್ಯಮವನ್ನಾಗಿ ಆರಿಕೊಂಡಿದ್ದಾರೆ. 
ವಿಶ್ವ ಧರ್ಮದ ಲಕ್ಷಣಗಳನ್ನು ಒಳಗೊಂಡ 30 ಭಾಗವತ ಧರ್ಮದ ಲಕ್ಷಣಗಳನ್ನು ಮತ್ತು ಪ್ರತಿಯೊಬ್ಬ ಸಾಧಕನೂ ಅದನ್ನು ಅರಿತಿರಬೇಕಾದ ಅವಶ್ಯಕತೆಯನ್ನೂ - ಸಾಧನೆಯ ಮಹತ್ವವನ್ನೂ - ಗುರುಲಕ್ಷಣ - ಗುರುದಕ್ಷಣೆ ಮುಂತಾದ ವಿಚಾರಗಳನ್ನು ಶ್ರೀ ಕೃಷ್ಣ ಲೀಲೆಯೊಂದಿಗೆ ಪೂಜ್ಯಶ್ರೀ ಆಚಾರ್ಯರು ಅತ್ಯಂತ ಹೃದಯಂಗಮವಾಗಿ ಹೇಳುತ್ತಿದ್ದರು. 
" ದಾಸ ಸಾಹಿತ್ಯ ಬಳಕೆ "
ಪೂಜ್ಯಶ್ರೀ ಆಚಾರ್ಯರು ತಮ್ಮ ಬೋಧನೆಗೆ ಶಾಸ್ತ್ರ ಸಾಹಿತ್ಯಕ್ಕಿಂತ ಹೆಚ್ಚಾಗಿ ಹರಿದಾಸ ಸಾಹಿತ್ಯವನ್ನು ಬಳಸಿದ್ದಾರೆ. 
ಹರಿದಾಸ ಸಾಹಿತ್ಯದ ಮೇರು ಕೃತಿಯೆನಿಸಿದ ಶ್ರೀ ಜಗನ್ನಾಥದಾಸರ " ಶ್ರೀಮದ್ ಹರಿಕಥಾಮೃತಸಾರ " ವು ಒಳಗೊಂಡ ಸಕಲ ಶಾಸ್ತ್ರವನ್ನೂ - ಉಪನಿಷದ್ ಪುರಾಣ ಸಂದರ್ಭಗಳನ್ನು - ಹರಿ ಸರ್ವೋತ್ತಮತ್ವ - ವಾಯು ಜೀವೋತ್ತಮತ್ವ ಮುಂತಾದ ವಿಷಯಗಳನ್ನ -, ತಾರತಮ್ಯ ಪಂಚಭೇದದಂತಹ ಗಹನ ಗಂಭೀರವಾದ ವಿಚಾರಗಳನ್ನು ಸರಳ ರೀತಿಯಲ್ಲಿ ಹೇಳುತ್ತಿದ್ದರು. 
" ಶ್ರೀಮದ್ ಹರಿಕಥಾಮೃತಸಾರ " ದ ಒಂದೊಂದು ಸಂಧಿಯನ್ನೂ ಸಂಕ್ಷಿಪ್ತವಾಗಿ ಗದ್ಯ ರೂಪದಲ್ಲಿ ಹೇಳುವ ಶೈಲಿ ಪರಮ ಅದ್ಭುತ. 
" ಶಿಷ್ಯ ಸಂಪತ್ತು "
ಮಾನ್ವಿಯ ಶ್ರೀ ಶ್ಯಾಮಸುಂದರದಾಸರು - ಕಾರ್ಪರ ನರಹರಿ ದಾಸರು ( ಶ್ರೀ ಗಿರಿಯಾಚಾರ್ಯರು ) - ಶ್ರೀ ಅಭಿನವ ಪ್ರಾಣೇಶದಾಸರು - ಐಕೂರಿನ ಶ್ರೀ ವೆಂಕಟೇಶದಾಸರು - ಶ್ರೀ ನರಹರಿದಾಸರು - ಶ್ರೀ ಕಸಬೆ ಪಾಂಡುರಂಗದಾಸರು
" ಸಾಧಕ ಶಿಷ್ಯರು "
ಶ್ರೀ ಸುಳಾದಿ ಕುಪ್ಪೆರಾಯರು - ಶಿರಿವಾರದ ಶ್ರೀ ರಾಮಚಂದ್ರರಾಯರು - ಶಿರಿವಾರದ ಶ್ರೀ ರಾಮಾಚಾರ್ಯರು ಮತ್ತು ಭೀಮಕ್ಕನವರು. 
" ಪದ್ಯ ಮಾಧ್ಯಮದಲ್ಲಿ "
ಹೈದ್ರಾಬಾದಿನ ಶ್ರೀ ಸಿ ಶ್ರೀನಿವಾಸರಾಯರು ಮತ್ತು ಗುಲ್ಬರ್ಗದ ಶ್ರೀ ಆರ್ ಹೆಚ್ ಕುಲಕರ್ಣಿ 
" ಆರಾಧನೆ "
ಶ್ರೀ ರಾಯರ ಅಂತರಂಗ ಭಕ್ತರೂ - ಹರಿದಾಸ ಸಾಹಿತ್ಯ ಕ್ಷೇತ್ರದಲ್ಲಿ ಶಿಷ್ಯ - ಪ್ರಶಿಷ್ಯರನ್ನು ಬೆಳೆಸಿದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಐಕೂರು ನರಸಿಂಹಾಚಾರ್ಯರು... 
ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ದ್ವೈತ ವೇದಾಂತ ದಿಗ್ವಿಜಯ ವಿದ್ಯಾ ಸಿಂಹಾಸನದಲ್ಲಿ ಪಟ್ಟಾಭಿಷಿಕ್ತರಾದ " ಫಾಲ್ಗುಣ ಶುದ್ಧ ದ್ವಿತೀಯಾ " ದಿನದಂದು ಶ್ರೀ ಕಾಲ ನಾಮಕ ಪರಮಾತ್ಮನ ಕರೆಗೆ ಓಗೊಟ್ಟು ಮುಕ್ತಿಪಥದಲ್ಲಿ ಪ್ರಯಾಣ ಬೆಳೆಸಿದರು. 
ಹರಿಕಥಾಮೃತ ಸಾರಜ್ಞ೦
ಹರಿಪಾದ ಸೇವಾಸಕ್ತಮ್ ।
ಹರಿದಾಸ ಜನ ಪ್ರಿಯಂ 
ಹರಿನರಾಖ್ಯ ಗುರು೦ ಭಜೇ ।।
 " ಉಪಸಂಹಾರ " 
ಶ್ರೀಮನ್ಮಧ್ವಮತದ ಪಂಡಿತರ ಜೀವನದ ಉಸಿರು ಶ್ರೀಮದ್ಭಾಗವತ ಮಹಾ ಪುರಾಣ. 
ಅದರ ಅಧ್ಯಯನವೇ ಜೀವನದ ಸಾರ್ಥಕತೆ. 
ಅದರ ಶ್ರವಣವೇ ಜೀವನದ ಧನ್ಯತೆ. 
ಶ್ರೀ ಹರಿಯ ದಾಸನಗುವುದೇ ಸಾಧನೆಯ ಗುರಿ. 
ಶ್ರೀ ಮದ್ಭಾಗವತ ಎಲ್ಲರ ಬದುಕಿನ್ನು ಧರ್ಮದ ದಾರಿಯಲ್ಲಿ ನಡೆಸುವುದು. 
ತಮ್ಮ ಆತ್ಮೋದ್ಧಾರದ ಜೊತೆಯಲ್ಲಿ ತನ್ನವರೆಲ್ಲರನ್ನೂ ಉದ್ಧಾರ ಮಾಡಬೇಕು. 
ಇದುವೇ ಫಲವಿದು ಬಾಳ್ದುದಕೆ. 
ಅಂತೆಯೇ.....
" ದೇಹ ಸಂಬಂಧಿಭಿಃ 
ವಿದ್ಯಾ ಸಂಬಂಧಿಭಿಃ.... 
ಕರಿಷ್ಯೇ ಕಾರಯಿಷ್ಯೇ ಚ " 
ಎಂದು ಶ್ರೀ ಮಂತ್ರಾಲಯ ಪ್ರಭುಗಳ ವಾಣಿ. 
" ದೇಹ ಸಂಬಂಧಿಕರೂ ಅಂದರೆ " ಪೀಠಾಧಿಪತಿಗಳು " ಮತ್ತು ವಿದ್ಯಾ ಸಂಬಂಧಿಕರು ಅಂದರೆ " ದುರಹಂಕಾರವಿಲ್ಲದ ಸಾತ್ವಿಕ ವಿದ್ಯೆಯ ಮುಖಾಂತರ ಸಂಬಂಧಿಗಳಾದ ಸಜ್ಜನರ " ಎಲ್ಲರಿಂದಲೂ ಸತ್ಕರ್ಮ; ಧರ್ಮ ಮಾಡಿಸುವೆ - ನಾನು ಮಾಡುವೆ.
ಇದು ಬದುಕಿನ ಸಂಕಲ್ಪ!! 
ಈ ರೀತಿ ಬಾಳಿದ ಭಾಗವತರ ಪರಂಪರೆಯಲ್ಲಿ ಬಂದ ಸಾಧಕರೂ; ದೈವೀ ಪುರುಷರೂ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಐಕೋರು ನರಸಿಂಹಾಚಾರ್ಯರು. 
ಸಮಗ್ರ ಮಧ್ವ ಶಾಸ್ತ್ರ ತಿಳಿದ ಪಂಡಿತೋತ್ತಮರೂ - ಭಗವದ್ಭಕ್ತರೂ, ಬಿಂಬೋಪಾಸಕರೂ, ಅನುಸಂಧಾನ ಚತುರರೂ; ಶ್ರೀಮದ್ಭಾಗವತ ಧುರೀಣರೂ; ಪ್ರಭಾವಕಾರಿವ್ಯಾಖ್ಯಾನಕಾರರು. 
ಕೇವಲ ಶ್ರೀಮದ್ಭಾಗವತ ಹೇಳುವವರಲ್ಲ. 
ಅದರಂತೆ ಬಾಳಿದವರು. 
ಶ್ರೀಮಧ್ಭಾಗವತ ಇವರ ಅಸ್ಥಿಗತವಾಗಿತ್ತು. 
ಇವರ ದೇಹದಲ್ಲಿರುವ ಪ್ರತಿಯೊಂದು ಅಸ್ಥಿ ಶ್ರೀಮದ್ಭಾಗವತ ಶ್ಲೋಕಗಳನ್ನು ಹೇಳುತ್ತಿತ್ತಂತೆ. 
ಇದು ಶ್ರೀ ಐಕೋರು ಆಚಾರ್ಯರ ಸಂಪರ್ಕದಲ್ಲಿ ಇದ್ದ ಸಜ್ಜನರಿಗೆಲ್ಲರಿಗೂ ಅನುಭವವಾಗಿದೆ. 
ಇದು ಶ್ರೀ ಐಕೋರು ಆಚಾರ್ಯರ ಹಿರಿಮೆ!! 
ರಾಗ : ಪೂರ್ವಿ ತಾಳ : ತ್ರಿವಿಡಿ 
ಬಾರಯ್ಯಾ ಬಾರಯ್ಯಾ ।
ಸೂರಿವರಿಯ ಐಕೋರು -
ನಿಲಯ ಗುರು ।। ಪಲ್ಲವಿ ।। 
ನೀನಾಕಿದ ಸುಜ್ಞಾನದ ಸಸಿಗಳು ।
ಮ್ಲಾನವಾಗುತಿವೆ -
ಸಾನುರಾಗದಲಿ ।। ಚರಣ ।। 
ಸಲೆ ತವ ಕರುಣ ಸಲಿಲವ ಎರದು ।
ಘಳಿಲನೆ ವೃದ್ಧಿಯಗೊಳಿಸಿ -
ಸಲಹಲು ।। ಚರಣ ।। 
ನಾಟಿದ ಸಸಿಗಳು ನೀಟಾಗುವ ಪರಿ ।
ತೋಟಿಗ ನೀ ಕೃಪೆ ನೋಟದಿ -
ಸಲುಹಲು ।। ಚರಣ ।। 
ಕೋವಿದವರ ನೀ ಕಾವಲಿ ಇರಲು । ಕು ।
ಜೀವಿಗಳಿಂದಲಿ -
ಹಾವಳಿಯಾಗದು ।। ಚರಣ ।। 
ನೀ ಮರೆದರೆ ಸುಕ್ಷೇಮವಾಗುದು ।
ಶ್ಯಾಮ ಸುಂದರನ -
ಪ್ರೇಮದ ಪೋತ ।। ಚರಣ ।।
by  ಆಚಾರ್ಯ ನಾಗರಾಜು ಹಾವೇರಿ 
      ಗುರು ವಿಜಯ ಪ್ರತಿಷ್ಠಾನ
***


year 2021 phalguna shukla dwiteeya
ಶ್ರೀಂ ಶ್ರೀ ಕಂ ಕಪಿಲಾಯ ನಮಃ

ರಾಯೆನ್ನೆ ರಾಶಿ ದೋಷಗಳ ದಹಿಸುವರು
ಘಾಯೆನ್ನೆ ಘನ ಜ್ಞಾನ ಭಕುತಿಯನಿತ್ತು
ವೇ ಯೆನ್ನೆ ವೇಗಾದಿ ಜನನ ಮರಣ ಗೆದ್ದು
ದ್ರಾ ಯೆನ್ನೆ ದ್ರವಿಣೋದ ಶೃತಿಗೇವ ಘನಕಾಂಬ

ಎನ್ನುವ ದಾಸಾರ್ಯರ ಮಾತುಗಳನ್ನು ಕ್ಷಣಕ್ಷಣಕ್ಕೂ ಬಿಡದೇ ಸ್ಮರಣೆ ಮಾಡುತ್ತ , ಕಲಿಯುಗ ಕಲ್ಪತರು, ಕಾಮಧೇನು, ನಮಗಾಗಿ ಹುಟ್ಟಿ ಬಂದು ಇಂದಿಗೂ ಮಂತ್ರಮಂದಿರದಲ್ಲಿ ನೆಲಸಿರುವವರಾದ, ಮತ್ತೆ ಪ್ರತಿಯೊಂದು ಊರಿನಲ್ಲಿಯೂ ವೃಂದಾವನದಲ್ಲಿ ನೆಲೆನಿಂತು,  ಭಕ್ತರನು ಬೇಡಿದ್ದಲ್ಲಿ ಬಂದು ಕಾಯುತ್ತಿರುವ ಶ್ರೀ ರಾಘವೇಂದ್ರ ಗುರುಸಾರ್ವಭೌಮರಿಗೆ ಜೀವದ ಭಕ್ತಿಯಿಂದ  ಶರಣಾಗೋಣ...

ಶ್ರೀಮದ್ರಾಘವೇಂದ್ರ ಗುರುಸಾರ್ವಭೌಮರ ಪಟ್ಟಾಭಿಷೇಕ ಮಹೋತ್ಸವದ ಶುಭಾಭಿವಂದನೆಗಳು......

ಇಂದಿನಿಂದ ವಾರದಿನದ ರಾಯರ ಅವತಾರಮಾಡಿದ ದಿನದ ವರೆಗೂ ಸಪ್ತಾಹವನ್ನು ನಾವೂ ಸೇವಾರೂಪದಿ ಆಚರಿಸೋಣ..

ಹಾಗೆಯೇ...

ಹರಿಕಥಾಮೃತ ಸಾರಜ್ಞಂ
ಹರಿಪಾದ ಸೇವಾಸಕ್ತಮ್/
ಹರಿದಾಸ ಜನಪ್ರಿಯಮ್
ಹರಿನರಾಖ್ಯ ಗುರುಮ್ ಭಜೇ//

ಪರಮ ವೈರಾಗ್ಯ ಪುರುಷರು, ಪವಾಡಗಳನ್ನು ತೋರಿದವರು, ಶ್ರೀಮದ್ಭಾಗವತ,  ಹರಿಕಥಾಮೃತಸಾರಗಳನ್ನು, ಅಸ್ಥಿಗತವಾಗಿಸಿಕೊಂಡವರು, ಜೀರ್ಣಿಸಿಕೊಂಡವರು , ಶ್ರೀ  ಶ್ಯಾಮಸುಂದರದಾಸರೇ ಮೊದಲಾದ ಶ್ರೇಷ್ಠ ದಾಸರಿಂದ ಸ್ತುತಿಸಲ್ಪಟ್ಟವರೂ, ಐಕೂರು ಗ್ರಾಮದಲ್ಲಿ ಇಂದೂ ಬೇಡಿದವರಿಗೆ ವರಗಳನ್ನು ನೀಡುತ್ತಿರುವ ಶ್ರೀ ಐಕೂರು ನರಸಿಂಹಾಚಾರ್ಯರ ಆರಾಧನಾ ಪರ್ವಕಾಲದ ಶುಭಾಭಿವಂದನೆಗಳು....

ಮಹಾತ್ಮರ ಚರ್ಯೆಗಳನ್ನು ನೆನೆಯುವುದೇ ಪೂಜೆಯಂತೆ.... 
ರಾಯರ ಕಾರುಣ್ಯ, ಶ್ರೀ ಐಕೂರಾರ್ಯರ ಪರಮಾನುಗ್ರಹ  ನಮ್ಮ ಎಲ್ಲರ ಮೇಲೆ ಸದಾ ಇರಲೀ ಎಂದು ಪ್ರಾರ್ಥನೆ ಮಾಡುತ್ತಾ.....

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽
***


ಶ್ರೀ ಐಕೂರು ಆಚಾರ್ಯರು ತಮ್ಮ ಜೀವಿತಾವಧಿಯಲ್ಲಿ ಬಹು ಪಾಲು ಸುಜೀವಿಗಳ ಉದ್ದಾರಕ್ಕಾಗಿ ಸಂಚಾರದಲ್ಲಿ ಇರುತ್ತಾ ಇದ್ದರಿಂದ ಅವರು ತಮ್ಮ ಮನೆಗೆ ಬೀಗ ಹಾಕುತ್ತಾ ಇರಲಿಲ್ಲ. ತಮ್ಮ ಮನೆಯ ಉಸ್ತುವಾರಿ ತಮ್ಮ ಬಳಗದವರಿಗೆ ಒಪ್ಪಿಸಿ ಹೋಗಿದ್ದರು. ಅವರೇ ಅದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.
ಅಂತಹ ಜ್ಞಾನಿಗಳ ಮನೆಯಲ್ಲಿ ಅವರ ಜೊತೆಯಲ್ಲಿ ಇದ್ದರು ಸಹ ಕಲಿಯ ಪ್ರಭಾವ, 
ಅವರಿಗೆ ದುರಾಸೆ ಬಂದು ಆಚಾರ್ಯರು ಇಲ್ಲದ ಸಮಯದಲ್ಲಿ ನೂರಾರು ಚೀಲ ತುಂಬಿದ ದವಸ ಧಾನ್ಯಗಳು ತುಂಬಿದ ಚೀಲ,ಪಾತ್ರೆ ಸಾಮಾನುಗಳನ್ನು ಯಾವುದನ್ನೂ ಬಿಡದೇ ತಮ್ಮ ಮನೆಗೆ ಸಾಗಿಸಿ ಮನೆಯನ್ನು ಬರಿದು ಮಾಡಿ ಹೋಗಿದ್ದರು.
ಸಂಚಾರ ಮುಗಿಸಿ ಆಚಾರ್ಯರು ಮನೆಗೆ ಬಂದು ನೋಡುತ್ತಾರೆ..
ಮನೆಯಲ್ಲಾ ಖಾಲಿ ಖಾಲಿ.ಅಕ್ಕ ಪಕ್ಕದ ಮನೆಯವರು ನಡೆದ ವಿಷಯತಿಳಿಸಿದರು,ಆಚಾರ್ಯರು ಸ್ವಲ್ಪವೂ ಸಹ ಮನಸ್ಸು ವ್ಯಥೆ ಮಾಡಿಕೊಳ್ಳಲಿಲ್ಲ.
ಜೊತೆಯಲ್ಲಿ ಇದ್ದ ಪರಿವಾರದವರು ಅವರ ಮೇಲೆ ಏನಾದರು ಕ್ರಮ ತೆಗೆದುಕೊಳ್ಳಲು ಆಚಾರ್ಯರು ಬಳಿ ಕೇಳಿದಾಗ
ಆಚಾರ್ಯರು ಶಾಂತ ಮನಸ್ಕರಾಗಿ
"ನೋಡ್ರಪಾ! ಅವರಿಗೆ ಏನು ಬೇಕಾಗ್ಯದ ಅದನ್ನು ತೆಗೆದುಕೊಂಡು ಹೊಗ್ಯಾರಾ.ಅದಕ್ಕೆ ನಾವು ಯಾಕೆ ಚಿಂತೀ ಮಾಡಬೇಕು??
ನಡಿರಿ! ಊರಿಂದ ಬಂದು ಸುಸ್ತು ಆಗ್ಯಾದ ನದೀ ಸ್ನಾನಕ್ಕ  ಹೋಗೋಣ ನಡೀರಿ.ಮುಂದಿನ ದೇವತಾ ಕಾರ್ಯಕ್ರಮಗಳಿಗೆ,ಪುರಾಣಕ್ಕ ಹೊತ್ತು ಆಗ್ತದಾ ಅಂತ ಹೇಳಿ ತಮ್ಮ ಪರಿವಾರ,ಶಿಷ್ಯರು ಕರೆದುಕೊಂಡು ನದಿ ಸ್ನಾನಕ್ಕಾಗಿ ಹೊರಟೇ ಬಿಟ್ಟರು.
ಎಲ್ಲಾರಿಗು ಆಶ್ಚರ್ಯ!! ಹೀಗೂ ಇರುತ್ತಾರೆಯೇ ಮನೆಯಲ್ಲಿ ಎಲ್ಲಾ ಸಾಮಾನು ಹೋದರು ಸಹ ನಿರ್ಲಿಪ್ತರಾಗಿ ಅಂತ.
ಮತ್ತು ಒಂದು ಕಡೆ ಚಿಂತೆ 
ಸ್ನಾನ ಆದ ಮೇಲೆ ಊಟದ ಚಿಂತೆ ಹೇಗೆ??
ಮನೆಯಲ್ಲಿ ಕಾಳು,ಪಾತ್ರೆ ಸಾಮಾನು ಇಲ್ಲ ಹೇಗಪ್ಪಾ?? ಅಂತ.
"ಅಣುರೇಣು ಪೊಟ್ಟೆಗೆ ನಡೆಸುವದೇನು|
ನಿನಗೀಯ ದಿಪ್ಪನೇ ವಿಜಯವಿಠ್ಠಲ ಸ್ವಾಮಿ|" ಎಂಬ ಶ್ರೀ ವಿಜಯ ಪ್ರಭುಗಳ ವಾಣಿಯ ಮೇಲೆ ಅಚಲವಾದ ನಂಬಿಕೆಇಟ್ಟು ನಿಶ್ಚಿಂತೆಯಿಂದ ದೇವರ ಮೇಲೆ ಭಾರ ಹಾಕಿ ಸ್ನಾನ ಆಹ್ನೀಕಕ್ಕೆ ಹೊರಟರು.
ಆಚಾರ್ಯರು ಸ್ನಾನ ಮಾಡಿ ನದಿಇಂದ ಬರಬೇಕಾದರೆ
ಆ ಸಮಯದಲ್ಲಿ  ಒಬ್ಬ ಗೃಹಸ್ಥ ಅವರ ಮನೆಯಲ್ಲಿ ನೈವೇದ್ಯ ಮಾಡಿಸಬೇಕೆಂದು ಸಕಲ ವಿಧವಾದ ವ್ಯವಸ್ಥೆಯನ್ನು ಮಾಡಿದ್ದ.
ಮತ್ತು 
ಆಚಾರ್ಯರು ಪೂಜೆ ಮುಗಿಯುವ ಹೊತ್ತಿಗೆ ನೈವೇದ್ಯ ಸಹ ತಯಾರಾಗಿತ್ತು..
"ಭಗವಂತನ ಈ ಅಘಟಿತ ಘಟನಾ ಘಟನಾ ಕಾರ್ಯವನ್ನು ನೋಡಿ ಎಲ್ಲಾ ರು ಬೆರಗಾಗಿ ಭೋಜನಕಾಲದಲ್ಲಿ ಗೋವಿಂದ ರೂಪಿ ಪರಮಾತ್ಮನ ಸ್ಮರಣೆ ಮಾಡುತ್ತಾ ಹರುಷದಿಂದ ಭೋಜನ ಮಾಡಿದರು...
ಆ ನಂತರ ಭೋಜನವಾದ ಮೇಲೆ ಆಚಾರ್ಯರ ಮನೆಯಲ್ಲಿ ಒಂದು ಜಾನುವಾರುವನ್ನು ಅವರ ಬಂಧುಗಳು ತೆಗೆದುಕೊಂಡು ಹೋಗದೇ  ಮರೆತುಬಿಟ್ಟು ಹೋಗಿದ್ದರು.
ಆವಾಗ ಆಚಾರ್ಯರು ತಾವೇ  ಅವರ ಮನೆಗೆ ಹೊಡೆದು ಕೊಂಡು ಹೋಗಿ
"ನಿಮ್ಮ ಮಕ್ಕಳಿಗೆ ಹಾಲಿನ ಅವಶ್ಯಕತಾ ಅದಾ.ಇದರಿಂದ ಹಾಲು ಕುಡಿಯಲು  ಮತ್ತು ನಿಮಗು ಸಹ ಅನುಕೂಲ ಆಗ್ತದಾ.. ನೀವೇ ಇದನ್ನು ಇಟ್ಟು ಕೊಳ್ರೀ "ಎಂದು ಹೇಳಿ ಹಾಲು ಕೊಡುವ ಜಾನುವಾರು ಯನ್ನು ಅವರ ಮನೆಗೆ ಬಿಟ್ಟು ಬಂದರು..
ಅವರ ತ್ಯಾಗ ಸಂಯಮ,ಲೌಕಿಕ ಜೀವನದಲ್ಲಿ ನಿರ್ಲಿಪ್ತತೆಯನ್ನು ಎಷ್ಟು ಇತ್ತು ಎಂಬುದನ್ನು ನೋಡಲು ಇದೊಂದು ಘಟನಾ ಸಾಕು.
ಪ್ರಾತಕಾಲ ಇಂತಹ ಭಾಗವತರ ಸ್ಮರಣೆ ನಮಗೆ ಕಿಂಚಿತ್ತೂ ಉದ್ದಾರ ಆಗಬಹುದು.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ನಿರುತ ಭಜಿಸಿರೋ ಘೋರ ದುರಿತ ತ್ಯಜಿಸಿರೋ|
ಪರಮ ಸಾಧು ಐಕೂರು ನರಸಿಂಹಾರ್ಯರ||
ಧರಣಿ ವಲಯದಿ ಇವರ ಚರಿತೆ ತಿಳಿಯದೇ|
ಜರಿವ ಮನುಜರು ಘೋರ ನಿರಯ ಪಾತ್ರರು|
by prasadacharya
🙏ಶ್ರೀ ಕಪಿಲಾಯ ನಮಃ🙏
***





No comments:

Post a Comment