Ibhavarada Vittala Dasaru
puNya dina: shrAvaNa bahuLa trayOdashI
puNya dina: shrAvaNa bahuLa trayOdashI
ಋಜುತ್ವೋಪಾಸಕರಾದ
ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರು ಜನಿಸಿದ ದಿನ
ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರು ಜನಿಸಿದ ದಿನ
ashada bahula panchami
Period: 1842-1896
gurugaLu: shri vidyAdIsha tIrtharu (krishNApura maTa) and shri satyaparAkrama tIrtharu (uttarAdi maTa)
ankita: ibhavarada viTTala (given by shri kamalApati viTTala dAsaru)
dhyAna shlOka:
ಚಲತು ಚಲತು ತೂರ್ಣಂ ವಾದಿರಾಟ್ ದ್ವಿಟ್ ಶ್ರುಗಾಲಾ:|
ನಿಕಟಮುಪಗತೋಯಂ ಜಂಬುಖಂಡಾಚಾರ್ಯ ಸಿಂಹಃ ||
He was a staunch devotee of shri bhAvisamIra vAdirAjara tIrtharu and believed in his rujutva deeply.
He was a great scholar and defeated many pundits in kAshi. He was gifted a PALLAKI on his victory. He did samarpaNe of this to his gurugaLu, shri vidyAdIsha tIrtharu. This PALLAKI was further embellished with gold by the successor of shri vidyAdIsha tIrtharu, shri vidyApUrNa tIrtharu and he did samarpaNe of that to Udupi krishna. The same PALLAKI is in use today also.
Acharyaru has written many granthas, of which 44 are available today. He did pratishTApane at various places including the vINApANi prANa dEvaru at dhavaLa gange in sOde.
He had performed many miracles including bringing a dead person to life in sOde.
He was in the forefront taking on anyone who questioned the rujutva of vAdirAja gurusArvabhowmaru and would write granthAs to establish rujutva of shri vAdirAjaru.
shri jambhukhanDi vAdirAjAchArya varada gOvindA gOvindA...
***
|ಶ್ರೀ ಜಂಬುಖಂಡಿ ಆಚಾರ್ಯರ ಜೀವನ ಚರಿತ್ರೆ||
✍ಬುದ್ದಿಕೋಟಿ ಮದ್ದೂರಾಯರು ಎನ್ನುವವರು ಶ್ರೀ ಜಂಬುಖಂಡಿ ಆಚಾರ್ಯರ ಶಿಷ್ಯರು.ಅವರ ತಂದೆಯವರು ಆಚಾರ್ಯರ ಸಮಕಾಲೀನರು .ಅವರು ಆಗಿನ ಕಾಲದಲ್ಲಿ ಅಮಲ್ದಾರ ರಾಗಿದ್ದರು. ಅಂದರೆ ಇವಾಗಿನ ತಹಶಿಲ್ದಾರರ ಹುದ್ದೆಗೆ ಸಮಾನ.
ಶ್ರೀ ಜಂಬುಖಂಡಿ ಆಚಾರ್ಯ ರಿಗು ಅವರಿಗು ಸಹ ಸಂಪರ್ಕ ವಿತ್ತು.ಹಾಗಾಗಿ ಅವರ ಮನೆಗೆ ಆಚಾರ್ಯರು ಭೇಟಿ ಕೊಡುತ್ತಾ ಇದ್ದರು.
ಒಂದು ಸಾರಿ ಆಚಾರ್ಯರು ಬುದ್ದಿಕೋಟಿ ಅವರ ಮನೆಗೆ ಬಂದಿದ್ದಾರೆ.ಸ್ನಾನ, ಪೂಜೆ ಗಳು ಆದಮೇಲೆ ಭೋಜನವನ್ನು ಮುಗಿಸಿ ಕೈ ತೊಳೆಯಲು ಹೊರ ಜಗುಲಿಗೆ ಬಂದಿದ್ದಾರೆ.ಮಧ್ಯಾಹ್ನದ ಎರಡು ಗಂಟೆಯ ಸಮಯ.
ಕೈ ತೊಳೆಯುವ ಸಮಯದಲ್ಲಿ ಅಲ್ಲಿ ಗೆ ಒಬ್ಬ ಬ್ರಾಹ್ಮಣ ಅಂಚಿನ ಧೋತರ,ಶರ್ಟು ಕೋಟು ಧರಿಸಿ,ತಲೆಯ ಮೇಲೆ ರುಮಾಲು ಸುತ್ತಿ ಕೊಂಡು ಭವ್ಯವಾದ ಮುದ್ರೆ,ಅಂಗಾರ ಅಕ್ಷತಾದಿಗಳಿಂದ ಶೋಭಿಸುವ ಬ್ರಾಹ್ಮಣ ತನ್ನ ಕೈಯಲ್ಲಿ ಕಾಗದದ ಪತ್ರಗಳ ಗಂಟನ್ನು ಹಿಡಿದುಕೊಂಡು ಬುದ್ದಿ ಕೋಟಿ ಅಮಲ್ದಾರ ರ ಮನೆಯ ಹೊರಗಡೆ ಬಂದು ನಿಂತಿದ್ದು ಕಂಡು ಆಚಾರ್ಯರು
ಯಾರು! ನೀವು?? ಏನಾದರು ಬೇಕಾಗಿತ್ತು?? ಬಂದ ಉದ್ದೇಶ ಏನು? ಎಂದು ಕೇಳಲು
ಆ ಬ್ರಾಹ್ಮಣ ತನ್ನ ಪರಿಚಯವನ್ನು ಮಾಡಿಕೊಂಡು ಆಚಾರ್ಯರ ಪಾದಕ್ಕೆ ನಮಸ್ಕಾರ ಮಾಡಿದ.ಅವಾಗ ಆಚಾರ್ಯರು ಬಂದಂತಹ ಬ್ರಾಹ್ಮಣ ಸಾಮಾನ್ಯ ನಲ್ಲ.ಒಳ್ಳೆಯ ಜೀವಿ,ಮೇಲಾಗಿ ವಿಷ್ಣು ಭಕ್ತ ಎಂದು ತಿಳಿದುಕೊಂಡವರಾಗಿ ಅವರಿಗೆ ಒಳಗಡೆ ಕುಳಿತಿರಲು ಹೇಳಿ,ತಾವು ಒಳಗಡೆ ಹೋಗಿ ಬುದ್ದಿಕೋಟಿ ಅಮಲ್ದಾರ ರಿಗೆ ಹೇಳುತ್ತಾರೆ.
"ಅದ್ಯಾರು ಹಾಲಗಿಮರ್ಡಿ ಯಂಕಪ್ಪನವರಂತೆ!!,ಕಾಗದ ಪತ್ರ ತರಲು ಹೇಳಿದ್ದರಿಂದ ತಂದಿದ್ದಾರಂತೆ.ಹೋಗಿ ವಿಚಾರಿಸು ಬುದ್ದಿ ಕೋಟಿ" ಅಂತ ಹೇಳಿದರು.
ಆಗ ಅಮಲ್ದಾರ ರು ತಮ್ಮ ಅಧಿಕಾರದ ಅಮಲಿನಲ್ಲಿ
"ಅವನೇ!!,ನನ್ನ ಕೈ ಕೆಳಗೆ ಕೆಲಸ ಮಾಡುವ ಹಾಲಗಿ ಮರ್ಡೀ ಕುಲಕರ್ಣಿ ವೆಂಕಪ್ಪನೇ!ಬಂದಿದ್ದಾನೆಯೇ?
ಕೆಲವು ಮಹತ್ವದ ತಪಾಸಣೆಯ ಕಾಗದ ಪತ್ರಗಳನ್ನು ತರಲು ಹೇಳಿದ್ದೆ ಬಂದಿರಬೇಕು ಎಂದು ಹೇಳಿ ಬಂದಂತಹ ಬ್ರಾಹ್ಮಣ ನಿಗೆ ಒಳಗಡೆ ಕುಳಿತು ಕೊಳ್ಳಲು ಸಹ ತಿಳಿಸದೇ ತಮ್ಮ ಕಾರ್ಯಕ್ರಮ ದಲ್ಲಿ ಮಗ್ನರಾದರು.
ಈ ನಿರ್ಲಕ್ಷ್ಯ ವನ್ನು ಕಂಡು ಶ್ರೀ ಜಂಬುಖಂಡಿ ಆಚಾರ್ಯ ರಿಗೆ ಸಹನೆವಾಗಲಿಲ್ಲ.
ಮನೆಗೆ ಬಂದ ವ್ಯಕ್ತಿ, ಅದರಲ್ಲೂ ಪರಮ ಭಾಗವತ.ತನ್ನ ಕೆಳಗಿನ ಕೆಲಸ ಮಾಡುವವನೇ ಆಗಿದ್ದರು ಕುಳಿತು ಕೊಳ್ಳಲು ಹೇಳುವಷ್ಟು ಸೌಜನ್ಯ ವಿಲ್ಲದೇ ಇರುವದು,ಕಂಡು ಬಹಳ ಕೋಪ ವನ್ನು ತರಿಸಿತು...
ತಕ್ಷಣ ಅವರ ಬಾಯಿಯಿಂದ
"ಏ! ಬುದ್ದಿಕೋಟಿ!! ಅವನಾರೆಂದು ತಿಳಿದಿರುವಿ,ಸಾಮಾನ್ಯ ವ್ಯಕ್ತಿ ಅಲ್ಲ .ಆತನಲ್ಲಿ ತೋರಿದ ಈ ನಿನ್ನ ತಿರಸ್ಕಾರ ಮುಂದೆ ನಿನ್ನ ವಂಶ ನಿರ್ವಂಶಕ್ಕೆ ಕಾರಣವಾದೀತು?? ಎಂದು ಎಚ್ಚರಿಸಿದರು. ಆದರು ಸಹ ಅಮಲ್ದಾರ ತನ್ನ ಅಧಿಕಾರ ದ ಅಮಲಿನಲ್ಲಿ ಅವರ ಮಾತಿಗೆ ಬೆಲೆ ಕೊಡಲಿಲ್ಲ.
ಆಚಾರ್ಯರ ಮಾತಿನಂತೆ ಮುಂದೆ ಅವರ ಮಗನಾದ ಮದ್ದೂರಾಯರು ಸಂತಾನ ಪ್ರಾಪ್ತಿ ಗಾಗಿ ಅನೇಕ ಪೂಜೆ ಯಜ್ಞಾದಿಗಳನ್ನು ಮಾಡಿದರು ಫಲಿಸದೇ ಸಂತಾನವಿಲ್ಲದೇ ಅವರು ಕೊರಗಬೇಕಾಯಿತು.
ದೊಡ್ಡವರಾದ ಜ್ಞಾನಿಗಳ ಮಾತನ್ನು ನಿರ್ಲಕ್ಷ್ಯ ಮಾಡಿದ ಪರಿಣಾಮವಾಗಿ ಅವರ ವಂಶ ಬೆಳೆಯದೇ ಹೋಯಿತು.
ಸಹಜವಾಗಿ ಎಚ್ಚರಿಕೆ ಕೊಟ್ಟ ಅವರ ಮಾತಿನಲ್ಲಿ ಇಷ್ಟು ಶಕ್ತಿ ಇರಬೇಕಾದರೆ ಆಚಾರ್ಯರ ತಪಸ್ಸಿನ ಸಾಮರ್ಥ್ಯ ಎಷ್ಟು ಇರಬಹುದು ಎಂಬುದನ್ನು ಊಹಿಸಬಹುದಾಗಿದೆ. ಅವರೊಬ್ಬ ಸಿದ್ದ ಪುರುಷರು.
ಒಟ್ಟಿನಲ್ಲಿ
ಭಗವದ್ಭಕ್ತರ ಸೇವೆ,ಅವರಿಗೆ ತೋರಿಸುವ ಗೌರವ ಮರ್ಯಾದೆಗಳು,ಅವರ ಅನುಗ್ರಹ ವೇ ಶ್ರೀ ಹರಿಯ ಪ್ರೀತಿಗೆ ಕಾರಣ ಮತ್ತು ನಮ್ಮ ಜನ್ಮ ಉದ್ದಾರವಾಗಲು ಕಾರಣ...
ಯಾರೇ ಆಗಲಿ ಭಗವಂತನ ಭಕ್ತರಿಗೆ ಅಗೌರವ ತೋರಿಸಬೇಡಿ.ಅದು ನಮ್ಮ ವಿನಾಶದ ಹಾದಿ...
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹರಿ ಶರಣರಪಾಲಾ ವಿಜಯವಿಠ್ಠಲ| ತನ್ನ ಸ್ಮರಣೆ ಮಾಡುವಗೆ ಅಂದರೆ ತಾಳಲರಿಯನು||
🙏ಶ್ರೀ ಕಪಿಲಾಯನಮಃ🙏
***
" ಶ್ರೀ ಜಂಬುಖಂಡಿ ಆಚಾರ್ಯರು - 1 "
" ದಿನಾಂಕ : 17.08.2020 ಸೋಮವಾರ ಶ್ರೀ ವಾದಿರಾಜ ಗುರುಸಾರ್ವಭೌಮರ ಋಜುತ್ವ ದೀಕ್ಷಾ ಬದ್ಧರೂ, ಶ್ರೀ ರಾಯರ ಪ್ರೀತಿಪಾತ್ರರೂ ಆದ ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರ ಆರಾಧನಾ ಮಹೋತ್ಸವ "
ಶ್ರೀ ಭಾವಿಸಮೀರರು ವಾದಿರಾಜರು...
" ಋಕ್ಸಂಹಿತ " ದಲ್ಲಿ..
ವಾದೀನಾ೦ ಜ್ಞಾನದಾನೈಕ-
ಶೀಲಾನಾ೦ ರಾಜನಂ ಯತಃ ।
ವೇತಿ ಜ್ಞಾನಂ ಸಮುದ್ದಿಷ್ಟ೦
ದೇತಿ ದಾನಮುದಾಹೃತಮ್ ।।
ಪ್ರೋಕ್ತಶೀಲ ಇಕಾರೇಣ
ರಾಜನಂ ರಾಜ ಶಬ್ದಿತಮ್ ।
ವಾದಿರಾಜಾಭಿದಂ ರೂಪಂ
ದಶಪ್ರಮತಿ ಸಂಜ್ಞಿತಮ್ ।।
ಪೂರ್ಣಜ್ಞಾನಂ ವಿನಾ ಪ್ರೋಕ್ತ
ರಾಜಾನಂ ತ ಕಥ೦ ಭವೇತ್ ।
ದಶೇತಿ ಪೂರ್ಣಮುದ್ದಿಷ್ಟ೦
ಜ್ಞಾನ ಪ್ರಮತಿರೀರಿತಮ್ ।।
ಶ್ರೀ ವಿಜಯರಾಯರು...
ಋಜು ಗಣ ಪಂಕ್ತಿಯೊಳಗೆ ಕುಳಿತಾ । ನಿಜ ನಿರ್ಮಲ ಸುಜ್ಞಾನ ಧ್ಯಾನದಿಂದ ಜ್ಞಾನ ಪಕ್ವಾದ ಮಾನವುಳ್ಳ । ಸುಜನ ಶಿರೋಮಣಿ ವಾದಿರಾಜನು ತಾ । ನಿಜವಾಗಿ ಬೊಮ್ಮಾ೦ಡ ಪುರಾಣ ಸಾಧಕದಿಂದ । ಅಜಪದ ಸಲ್ವದು ಲೇಶ ಸಂಶಯ ಬೇಡಿ ।
ನಿಜ ನಿಜ ನಿಜವೆಂದು ನಿತ್ಯಾದಿ ಕೊಂಡಾಡಿ ।।
ಶ್ರೀ ರಮಾಪತಿವಿಠಲರು...
ಪತಿತ ಪಾವನ । ರಮಾ ।
ಪತಿವಿಠಲನ ನಿರುತ ನೋಳ್ಪ ।
ಲಾತವ್ಯ ಖ್ಯಾತ ।।
ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರು...
ತಥಾಹಿ ಬೃಹತ್ಸಂಹಿತಾಯಾ೦
ಚತುರ್ಮುಖ ವಚನಮ್..
ಸಿತಾಸಿತೇತಿ ಸೂಕ್ತೇನ
ವಾದಿರಾಜೋ ಯತೀಶ್ವರಃ ।
ಗೀಯತೇ, ಸ್ವಂಚ ಭಜತಾಂ
ಆನಂದಂ, ಇತರಂ ತಥಾ ।
ದ್ವೇಷಿಣಾ೦ ದಾಯಕೋ
ವಾಜೀವಕ್ತ್ರಧಾರೀ ಮಹಾನ್ ಯತಿ: ।। ಇತಿ ।।
ತಥಾಹಿ ವ್ಯೋಮ ಸಂಹಿತಾ...
ಸಂಜುರ್ಭುರಾಣಸೂಕ್ತೇನ
ಲಾತವ್ಯೋಹಿ ಸುರೇಶ್ವರಃ ।
ಗೀಯತೇ ಋಜುಗಾಥೋsಸೌ
ವಾದಿರಾಜೋ ಮಹಾನ್ ಯತಿ: ।। ಇತಿ ।।
ಶ್ರೀ ವಾದಿರಾಜರು ಭಾವಿ ಸಮೀರರು ಎಂದು ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರು..
ಶ್ರೀಮದ್ವಾದಿರಾಜ ಋಜುತ್ವ ವಿರೋಧ ಕಪೋಲ ಚಾಪೇಟಿಕಾ
ಋಜುತ್ವ ವಿರೋಧಿ ಪರಿಮರ್ದನ
ಎಂಬ ಪ್ರೌಢ ಗ್ರಂಥಗಳನ್ನು ರಚಿಸಿ ಬಳಿತ್ಥಾದಿ ಸೂಕ್ತಗಳನ್ನು ಋಜುಪುಂಗವರಾದ ಶ್ರೀ ಲಾತವ್ಯ ವಾದಿರಾಜರ ಪರವಾಗಿ ಅನೇಕ ಶ್ರೀ ವಾದಿರಾಜರ ಋಜುತ್ವ ಸಾಧಕ ಪ್ರಮಾಣಗಳಿಂದ ಶ್ರೀ ವಾದಿರಾಜ ಗುರುಸಾರ್ವಭೌಮರು ಭಾವಿಸಮೀರರೆಂದು ಸ್ಪಷ್ಟ ಪಡಿಸಿದ್ದಾರೆ.
ಶ್ರೀ ಕಮಲಾಪತಿವಿಠಲರು...
ಶ್ರೀಮದಶ್ವಗ್ರೀವ ನೊಲುಮಿಗೆ । ಧಾಮರೆನಿಪ ಶ್ರೀರಾಜ । ದಾಸರಾಗಿರೋ ದಿವ್ಯಲೋಕ ಭವ್ಯ ಉಭಯ ವಿಧ । ಕಾವ್ಯ ರಚನ ಲಾತವ್ಯ ಯತೀಂದ್ರರ ದಾಸರಾಗಿರೋ ।।
ಶ್ರೀ ಕಮಲಾಪತಿವಿಠಲರು ತಮ್ಮಿಂದ ರಚಿತವಾದ ಹರಿಕಥಾಮೃತಸಾರಕ್ಕೆ ವ್ಯಾಖ್ಯಾನವಾದ " ಭಾವ ದರ್ಪಣ " ದಲ್ಲಿ...
ವಾದಿರಾಜನ ಪಾದವ ಭಜಿಸಿ । ಭವ ।
ಛೇದಿಸಿ ಪಡೆ ಮೋದವ । ಶ್ರೀದನ ।
ಪದಾರಾಧನ ಸಂಸಕ್ತಾನ । ಲಾತವ್ಯನ ।।
ಮೇದಿನೀಸುರ ಖೇದ ಹಾರ । ಪ್ರತಿ ।
ವಾದಿ ಭೇದ ವಿನೋದ ಶೀಲನ ।।
ಶ್ರೀ ಶ್ರೀಪತಿ ವಿಠಲರು...
ಪೃಥ್ವಿಪಾಲನ ಪುತ್ರಿ ಬರೆದ ಶುಭ ।
ಪತ್ರವ ಲಕುಮಿ ಕಳತ್ರನಿಗಿತ್ತೆ ।।
ಶ್ರೀ ಬಾದರಾಯಣವಿಠಲರು...
ಸುದತಿ ಬೈಷ್ಮಿ ನೀಡಿದ ಒಲೆಯ ತಂದು ।
ಯದುಪತಿಗೊಪ್ಪಿಸಿದವರು ಕಾಣಮ್ಮಾ ।।
' ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರ ಸಂಕ್ಷಿಪ್ತ ಮಾಹಿತಿ "
ಹೆಸರು : ಶ್ರೀ ವಾದಿರಾಜಾಚಾರ್ಯರು
ತಂದೆ ; ಶ್ರೀ ಶ್ರೀನಿವಾಸಾಚಾರ್ಯರು
ತಾಯಿ : ಸಾಧ್ವೀ ಸೀತಾಬಾಯಿ
ಜನ್ಮಸ್ಥಳ : ಹಾನಗಲ್ಲು
ಪ್ರಮಾಣ :ಶ್ರೀ ಜಂಬುಖಂಡಿ ವಾದಿರಾಜಾಚಾರ್ಯ ಕೃತ " ಆತ್ಮಕಥನ " ದಲ್ಲಿ...
ಶುಭಕೃತ್ ವತ್ಸರೇ ದಿವ್ಯೇ ಟೀಕಾಕೃತ್ಪಾದ
ವಾಸರೇ ಹಾನಗಲ್ಲ ಸಮಾಖ್ಯೇ ।।
ಶ್ರೀ ವಾದಿರಾಜ ಗುರುಸಾರ್ವಭೌಮರ ಪರಮಾನುಗ್ರಹದಿಂದ ಶ್ರೀ ಜಂಬುಖಂಡಿ ಆಚಾರ್ಯರು ಶ್ರೀ ಸರ್ವಜ್ಞ ಕಲ್ಪರಾದ ಜಯತೀರ್ಥರ ಆರಾಧನಾ ಶುಭದಿನವಾದ ಆಷಾಢ ಬಹುಳ ಪಂಚಮಿಯಂದು ಅವತರಿಸಿದರು!!
ಕಾಲ : ಕ್ರಿ ಶ 1842 - 1896
ಉಪನಯನ : ಕ್ರಿ ಶ 1847ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥರ ಸಮಕ್ಷಮದಲ್ಲಿ ಶ್ರೀ ವಾದಿರಾಜಾಚಾರ್ಯರಿಗೆ ಗಾಯತ್ರೀ ಮಂತ್ರೋಪದೇಶವನ್ನು ತಂದೆಯವರು ಮಾಡಿದರೆ, ಶ್ರೀ ಶ್ರೀಗಳವರು " ಓಂ ಕ್ಲೀ೦ ಕೃಷ್ಣಾಯ ನಮಃ ಓಂ " ಎಂಬ ಶ್ರೀಕೃಷ್ಣ ಷಡಕ್ಷರ ಮಂತ್ರೋಪದೇಶವನ್ನು ಅನುಗ್ರಹ ಪೂರ್ವಕ ಉಪದೇಶಿಸಿದರು.
ವಿದ್ಯಾ ಗುರುಗಳು :
" ಶಾಸ್ತ್ರಾಧ್ಯಯನ "
ಶ್ರೀ ವಾದಿರಾಜ ಋಜುತ್ವ ದೀಕ್ಷಾ ಬದ್ಧರಾದ ಶ್ರೀ ವಾಯಿ ಶ್ರೀನಿವಾಸಾಚಾರ್ಯ ( ಶ್ರೀ ಸತ್ಯಪರಾಕ್ರಮತೀರ್ಥರು ) ರಲ್ಲಿ ತರ್ಕ - ವ್ಯಾಕರಣ - ಮೀಮಾಂಸಾ - ನ್ಯಾಯ - ವೇದಾಂತ ಗ್ರಂಥಗಳನ್ನು ಅಧ್ಯಯನ ಮಾಡಿದರು.
" ಪ್ರೌಢ ಗ್ರಂಥಗಳ ಅಧ್ಯಯನ "
ಉಡುಪಿಯ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳವರ ಬಳಿ ಶ್ರೀಮನ್ನ್ಯಾಯಸುಧಾದಿ ಪ್ರೌಢ ಗ್ರಂಥಗಳನ್ನು ಅಧ್ಯಯನ ಮಾಡಿ ಶ್ರೇಷ್ಠ ಪಂಡಿತರಾಗಿ ಪ್ರಸಿದ್ಧಿ ಪಡೆದರು.
ಶ್ರೀ ಆಚಾರ್ಯರ ಪತ್ನಿ ; ಸಾಧ್ವೀ ಕಮಲಾಬಾಯಿ
ಪುತ್ರರು : ಶ್ರೀ ಕೃಷ್ಣಾಚಾರ್ಯ, ಶ್ರೀ ಮಾಧವಾಚಾರ್ಯ ಮತ್ತು ಶ್ರೀ ಶ್ರೀನಿವಾಸಾಚಾರ್ಯ
ಅಂಕಿತ : ಇಭವರದವಿಠಲ
ಉಪದೇಶ ಗುರುಗಳು :
ಶ್ರೀ ಕಮಲಾಪತಿವಿಠಲರು ( ಇವರು ಶ್ರೀ ಹರಿಕಥಾಮೃತಸಾರಕ್ಕೆ " ಭಾವದರ್ಪಣ " ಎಂಬ ವ್ಯಾಖ್ಯಾನವನ್ನು ಬರೆದ ಪೂತಾತ್ಮರು )
ಪ್ರಮಾಣ :ಶ್ರೀ ಜಂಬುಖಂಡಿ ಆಚಾರ್ಯರು ಹರಿಕಥಾಮೃತಸಾರಕ್ಕೆ ಬರೆದ " ಭಾವಸೂಚನೆ " ಎಂಬ ಸಂಸ್ಕೃತ ವ್ಯಾಖ್ಯಾನದಲ್ಲಿ...
ಹರಿಕಥಾಮೃತಸಾರಾವತಾರಿಕಾ
ಮಂಜೂಷಾಯಾ೦ ಕಮಲಾಪತಿದಾಸವರ್ಯೈ: ।
ಎಂದು ಪ್ರತಿ ಸ೦ಧಿಯ ಅವತರಣಿಕೆಯಲ್ಲಿಯೂ ತಮ್ಮ ಗುರುಗಳಾದ ಶ್ರೀ ಕಮಲಾಪತಿದಾಸಾರ್ಯರನ್ನು ಸ್ಮರಿಸಿದ್ದಾರೆ.
***
" ಶ್ರೀ ಜಂಬುಖಂಡಿ ಆಚಾರ್ಯರು - 2 "
ದಿನಾಂಕ : 28.08.19 ಬುಧವಾರ ಶ್ರೀ ವಾದಿರಾಜ ಗುರುಸಾರ್ವಭೌಮರ ಋಜುತ್ವ ದೀಕ್ಷಾ ಬದ್ಧರೂ, ಶ್ರೀ ರಾಯರ ಪ್ರೀತಿಪಾತ್ರರೂ ಆದ ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರ ಆರಾಧನಾ ಮಹೋತ್ಸವ "
ಗ್ರಂಥಗಳು :
ಹರಿಕಥಾಮೃತಸಾರಕ್ಕೆ..
ಸಂಸ್ಕೃತದಲ್ಲಿ...
೧. ಶ್ರೀ ವ್ಯಾಸ ದಾಸ ಸಿದ್ಧಾಂತ ಕೌಮುದೀ
೨. ಹರಿಕಥಾಮೃತಸಾರ ಪಂಚಿಕಾ
೩. ಭಾವ ಸೂಚನೆ ( ಇದು ಸಂಸ್ಕೃತ ಮಿಶ್ರಿತ ಕನ್ನಡ ವ್ಯಾಖ್ಯಾನ )
೪. ಶ್ರೀ ವಿದ್ಯಾಧೀಶಾಷ್ಟಕಂ
೫. ಶ್ರೀ ವೃಂದಾವನಾಚಾರ್ಯ ಸ್ತೋತ್ರಮ್ ( ಶ್ರೀ ವಾದಿರಾಜ ಮಠಾಧೀಶರು )
೬. ಶ್ರೀ ವಿಜಯದಾಸ ಮಹೋದಯಾನಾ೦ ಸುಳಾದೇ: ಅರ್ಥ ಕಥನಮ್
೭. ಶ್ರೀ ವಿಷ್ಣುತೀರ್ಥ ವಿಜಯ ( ಶ್ರೀ ಮಾದನೂರಿನ ಶ್ರೀ ವಿಷ್ಣುತೀರ್ಥರು )
೮. ಶ್ರೀ ಸುಮಧ್ವವಿಜಯ ಸರ್ಗಾರ್ಥ:
೯. ಶ್ರೀ ಧವಳಗಂಗಾ ಸ್ತೋತ್ರಮ್
೧೦. ಅಧ್ಯಾತ್ಮರಸರಂಜನೀ ವ್ಯಾಖ್ಯಾನ
೧೧. ಶ್ರೀ ವಾದಿರಾಜ ಪ್ರಾರ್ಥನಾ
೧೨. ಷೋಡಶ ಕಲಾಭಿಮಾನಿ ದೇವತಾ ಸ್ತೋತ್ರಮ್
೧೩. ಪಿತೃಪಾದಸ್ತುತಿ: ( ತೆಲುಗು )
೧೪. ಭವ ವಿಮೋಚಕ ಶ್ರೀ ಗುರುರಾಜ ಪ್ರಾರ್ಥನಾ ( ಶ್ರೀ ವಾದಿರಾಜ ಸ್ತೋತ್ರಂ )
೧೫. ಹಿತೋಪದೇಶಃ
೧೬. ಆತ್ಮ ವೃತ್ತಾಂತಃ ( ಶ್ರೀ ಆಚಾರ್ಯರ ಜೀವನ - ಸಾಧನೆಯ ಕುರಿತು ಬೆಳಕು ಚೆಲ್ಲುವ ಐತಿಹಾಸಿಕ ದಾಖಲೆ )
೧೭. ಲಯ ಕ್ರಮ ನಿರೂಪಣಂ ( ಶೇಷ - ಗರುಡ ಮಾರ್ಗಗಳಿಂದ ಕೊಡಿದ್ದು )
೧೮. ಲಯ ನಿರೂಪಣಂ ( ಪ್ರಮೇಯಗಳಿಂದ ಕೂಡಿದ್ದು )
೧೯. ಅನನ್ಯ ಪ್ರಾರ್ಥನಾ ( ಗದ್ಯ ಪದ್ಯಗಳಿಂದ ಕೂಡಿದ ಕೃತಿ )
೨೦. ಗುರು ಸ್ತೋತ್ರ ವಿವೃತಿ ಶೋಧನಮ್ ( ಶ್ರೀ ಭಾವಿಸಮೀರ ವಾದಿರಾಜರ ಮಹಿಮಾ ಪ್ರತಿಪಾದಕವಾದದ್ದು )
೨೧. ಶ್ರೀ ವಾದಿರಾಜ ಕೃತ ಸ್ತೋತ್ರ ವ್ಯಾಖ್ಯಾನಮ್
೨೨. ಶ್ರೀ ಹಯಗ್ರೀವ ವಾದಿರಾಜ ಪ್ರಾರ್ಥನಾ
೨೩. ಸ್ವಪ್ನ ವೃಂದಾವನಾಖ್ಯಾನ ಪ್ರಾಕೃತ ವ್ಯಾಖ್ಯಾ
೨೪. ಶ್ರೀ ವಾದಿರಾಜ ಋಜುತ್ವ ವಿರೋಧಿ ಕಪೋಲಚಪೇಟಿಕಾ
೨೫. ಶ್ರೀ ವಾದಿರಾಜ ಋಜುತ್ವ ವಿರೋಧಿ ಪರಿಮರ್ದನಮ್
೨೬. ಶ್ರೀ ವಾದಿರಾಜ ಕೃತ ಅಭಯ ಸ್ತುತಿ ವಿವರಣಮ್
೨೭. ಅಪರೋಕ್ಷ ಜ್ಞಾನ ಸಾಧನಾನಿ
೨೮. ಯೋಗಿ ಋಜು ಯೋಗಿ ಸಾಧನಮ್
೨೯. ಜ್ಞಾನಹೇತುಭಕ್ತಿಸಾಧ್ಯೋಪಾಸಿತಃ
೩೦. ಶ್ರೀ ಜಯತೀರ್ಥ ಸ್ತೋತ್ರಮ್
೩೧. ಶ್ರೀಮಟ್ಟೀಕಾಕೃತ್ಪೂಜ್ಯಪೂಜಿತ ರಾಮ ಪ್ರಾರ್ಥನಾ
೩೨. ಶ್ರೀಮನ್ಮಹಾಭಾರತ ತಾತ್ಪರ್ಯ ನಿರ್ಣಯ ಟಿಪ್ಪಣೀ ಗುರುರಾಜೀಯಸಾರಃ
೩೩. ಕರ್ಮಾಕರ್ಮವಿವೇಕ:
೩೪. ಶ್ರೀ ಹನುಮತ್ಪ್ರಾರ್ಥನಾ
೩೫. ಶ್ರೀ ಬ್ಯಾಡಗೀ ಹನುಮತ್ಸ್ತೋತ್ರಮ್
೩೬. ತೀರ್ಥಪದ ನಿರೂಪಣಂ
೩೭. ಓಂಕಾರಾರ್ಥ:
೩೮. ಶ್ರೀ ರಾಮ ಮುಖ್ಯಪ್ರಾಣ ಪ್ರಾರ್ಥನಾ
೩೯. ಬದರೀ ನಾರಾಯಣ ಸ್ತುತಿ:
೪೦. ಆಪಸ್ಸೂಕ್ತಾರ್ಥ ವಿವರಣಮ್
೪೧. ನಾರಾಯಣ ನಾಮ ಸ್ಮರಣ ನಿರೂಪಣಂ
೪೨. ಬ್ರಹ್ಮಸೂತ್ರಾಧಿಕರಣ ಸಾರ ಸಂಗ್ರಹಃ
೪೩ ಕೇಶವಾದಿ ನಮನ ಪ್ರಕಾರಃ
೪೪. ವಿಷ್ಣು ಸಹಸ್ತ್ರ ಶಬ್ದಾರ್ಥ
೪೫. ಸಂಕ್ಷೇಪ ಭಾಷ್ಯ ವ್ಯಾಖ್ಯಾ
" ಶಿಷ್ಯರು "
೧. ನಿಪ್ಪಾಣಿ ಶ್ರೀ ವಾಸುದೇವಾಚಾರ್ಯರು ( ಶ್ರೀ ಷಟ್ಟುರಾಚಾರ್ಯರು - ಶ್ರೀ ಪ್ರಾಣಪತಿ ವಿಠಲ )
೨. ಶ್ರೀ ವಾಳ್ವೇಕರ ಭೀಮಾಚಾರ್ಯರು ( ಶ್ರೀ ಶ್ರೀಶಪ್ರಸನ್ನ ಕೇಶವ ವಿಠಲ )
೩ ಶ್ರೀ ವಾಳ್ವೇಕರ ವೆಂಕಣ್ಣಾಚಾರ್ಯರು
೪. ಶ್ರೀ ವಾಳ್ವೇಕರ ಮಧ್ವಾಚಾರ್ಯರು
೫. ಶ್ರೀ ಅರಳೀಕಟ್ಟೆ ನರಸಿಂಹಾಚಾರ್ಯರು, ಹತ್ತಿಬೆಳಗಲ್
೬. ಶ್ರೀ ಮುತ್ತಗಿ ಶ್ರೀನಿವಾಸಾಚಾರ್ಯರು ( ಶ್ರೀ ರಘುಪ್ರೇಮತೀರ್ಥರು )
೭. ಶ್ರೀ ಕಾಶೀ ರಾಘವೇಂದ್ರಾಚಾರ್ಯರು
" ದ್ವೈತ ಸೂರ್ಯ ಅಸ್ತಂಗತ "
" ಶ್ರೀ ಸುಧಾಕರಗುರುಗುಣ ರತ್ನಮಾಲಾ " ದಲ್ಲಿ.....
ಇತ್ಯಾದ್ಯಮಾನುಷಾಕೃತಿಂ ಕೃತ್ವಾನುಗ್ರಾಹ್ಯ ಶಿಷ್ಯಕಾನ್ ।
ಶ್ರವಣಸ್ಯಾ ಸಿತೇ ಪಕ್ಷೇ ದುರ್ಮುಖಾಭಿಧವತ್ಸರೇ ।।
ತ್ರಯೋದಶ್ಶಾ೦ ಹಿ ಪಂಪಾಯಾ೦ ಅಗಾತ್ ಸ್ವರ್ಗಂ ಗುರೋರ್ಗುರು: ।
ದೇವಾನ್ ಶ್ರೀವಾದಿರಾಡ೦ಘ್ರಿಮೃದ್ಯಶಕಥಯನ್ನಿವ ।।
" ಶ್ರೀ ಜಂಬುಖಂಡೀ ವಾದಿರಾಜಾಷ್ಟಕಮ್ "
ಶ್ರಾವಣಸ್ಯಾ ಸಿತೇ ಪಕ್ಷೇ ಹ್ಯಬ್ದೇ ದುರ್ಮಿಖಿ ನಾಮಕೇ ।
ಸ್ಥಿರವಾಸರ ಯುಕ್ತಾಯಾ೦ ತ್ರಯೋದಶ್ಯಾ೦ ಭಗೋದಯೇ ।।
ತುಂಗಭದ್ರಾ ನದೀತೀರೇ ಪಂಪಾಕ್ಷೇತ್ರ ಸಮೀಪಗೇ ।
ಕಮಲಾಪುರ ವಿಖ್ಯಾತೇ ವಸಂತಃ ಪುಟಭೇದನೇ ।।
ದುರ್ಮುಖಿ ನಾಮ ಸಂವತ್ಸರ ಶ್ರಾವಣ ಬಹುಳ ತ್ರಯೋದಶೀ ಶನಿವಾರ ಪ್ರಾಪ್ತವಾಯಿತು. ಶ್ರೀ ಆಚಾರ್ಯರು ತಾವು ದೇಹವನ್ನು ಬಿಡುವ ಕಾಲ ಸನ್ನಿಹಿತವಾಯಿತೆಂದು ಅರಿತರು. ಕೂಡಲೇ ತಮ್ಮ ಪುತ್ರರೂ ಸೇರಿದಂತೆ ಅಲ್ಲಿ ನೆರೆದಿದ್ದ ಸಮಸ್ತ ಶಿಷ್ಯ ವೃಂದವನ್ನೂ ಕರೆದೂ...
ಜನ್ಮಾಂತರದ ಪುಣ್ಯದ ಫಲದಿಂದ ಈ ಪವಿತ್ರ ಸಾಧನಾ ಭೂಮಿಯಲ್ಲಿ ವಿಪ್ರಜನ್ಮ ಅದರಲ್ಲಿಯೂ ವೈಷ್ಣವ ಜನ್ಮ ಪ್ರಾಪ್ತವಾಗಿದೆ.
ಇದಕ್ಕೆ ಕಳಶವಿಟ್ಟಂತೆ ಋಜೂತ್ತಮರಾದ ಶ್ರೀಮದ್ವಾದಿರಾಜ ಪೂಜ್ಯ ಚರಣರ ಸೇವಾ ಭಾಗ್ಯವೂ ಲಭಿಸಿದೆ. ಈ ಸೌಭಾಗ್ಯವನ್ನು ಎಂದಿಗೂ ವ್ಯರ್ಥಗೊಳಿಸದಿರಿ.
ಶ್ರೀ ವಿಷ್ಣು ಸರ್ವೋತ್ತಮನೆಂಬ ಜ್ಞಾನ ನಿಶ್ಚಲವಾಗಿರಲಿ.
ಶ್ರೀಮದಾಚಾರ್ಯರ ಸಚ್ಛಾಸ್ತ್ರಗಳನ್ನು ಸದಾ ಮನನ ಮಾಡುತ್ತಿರಿ.
ಶ್ರೀ ಲಾತ್ಯವ ಚಕ್ರವರ್ತಿಗಳಾದ ಶ್ರೀ ವಾದಿರಾಜ ಗುರುಸಾರ್ವಭೌಮರು " ಭಾವಿ ಸಮೀರ ಪದಾರ್ಹ " ರೆಂಬ ವಿಶ್ವಾಸ ಸದಾ ಇರಲಿ.
ಎಂದು ಉಪದೇಶ ಮಾಡಿದರು. ನಮ್ಮ ಅವಸಾನವಾದ ನಂತರ ನಮ್ಮ ಪಾರ್ಥಿವ ಶರೀರದ ಉತ್ತರ ಕ್ರಿಯೆಯನ್ನು ಹಂಪೆಯ ಚಕ್ರತೀರ್ಥದ ದಂಡೆಯಲ್ಲಿ ಮಂತ್ರಾಕ್ಷತೆಗಳಿರುವ ಬಂಡೆಯೊಂದರ ಮೇಲೆ ನಡೆಸಿ ಎಂದು ಆದೇಶವಿತ್ತು ಎಲ್ಲರನ್ನೂ ಅನುಗ್ರಹಿಸಿದರು.
ನಂತರ ತಮ್ಮ ಆರಾಧ್ಯ ಗುರುಗಳ ಚರಣವನ್ನು ಸ್ಮರಿಸಿ ಅವರ ಅಂತಃಸ್ಥನಾದ ಶ್ರೀ ಲಕ್ಷ್ಮೀಹಯಾಸ್ಯಾಭಿನ್ನ ತಮ್ಮ ಬಿಂಬ ಮೂರ್ತಿಯ ದರ್ಶನದಿಂದ ತಮ್ಮ ಆಂತರ್ಯದಲ್ಲೇ ಸಂತೋಷ ಪಟ್ಟರು.
ಈ ಸಂದರ್ಭದಲ್ಲಿಯೇ ತಮ್ಮ ಪುತ್ರರು ನೀಡಿದ ಶ್ರೀ ರಾಜರ ಪವಿತ್ರ ಮೃತ್ತಿಕಾ ಜಾಲವನ್ನು ಸೇವಿಸಿ ಲಯ ಚಿಂತನೆ ಮಾಡುತ್ತಾ ತಮ್ಮ ಅವತಾರ ಕಾರ್ಯವನ್ನು ಸಮಾಪ್ತಿಗೊಳಿಸಿದರು.
ಶ್ರೀ ವಾದಿರಾಜ ಗುರುಸಾರ್ವಭೌಮರ " ಋಜುತ್ವ ಸ್ಥಾಪನೆ " ಯಲ್ಲಿ ಅಲ್ಲಿಯ ತನಕ ಜಗತ್ತು ಕಂಡರಿಯದ ಧೈರ್ಯ, ಸಾಹಸಗಳನ್ನು ಮೆರೆದ " ಜಂಬುಖಂಡಿ " ಎಂಬ ಹೆಸರಿನ ಸೂರ್ಯ ಕಣ್ಮರೆಯಾಗಿ ಹೋಯಿತು.
ಕಂಡು ಬಹಳ ಧನ್ಯನಾದೆನೋ ಸಿರಿ ಮಂಗಳಾತ್ಮರ ।। ಪಲ್ಲವಿ ।।
ಕಂಡು ಬಹಳ ಧನ್ಯನಾದೆ ।
ಪುಂಡರೀಕಾಕ್ಷ ತೋ೦ಡರ ಪಾದ ।
ಪುಂಡರೀಕವಿಕ್ಷನ । ಮಾತ್ರಘ ।
ತುಂಡುಗೈಸಿ ಪೊರೆವರನ್ನ ।। ಅ.ಪ ।।
ಆ ಸುಕೃತ ಜಂಬುಖಂಡೀ । ಶ್ರೀನಿ ।
ವಾಸಾರ್ಯಾಬ್ಧಿ ಸಂಭವ । ಕೋವಿದಾಗ್ರಣಿಯು । ಆ ।
ದ ಶ್ರೀ ವಾದಿರಾಜಾಚಾರ್ಯರನ್ನ ।। ಚರಣ ।।
ಭೂತದಯಾ ಶೀಲಶಮ । ದಮೋ ।
ಪೇತರಾಗಿ ಪೃಥ್ವಿಯೊಳು । ಶ್ರೀ ।
ನಾಥನೊಲಿಮೆಯನ್ನು ಪಡೆದು ।
ಖ್ಯಾತ ಭುವನ ಪಾವನ ಮಾಳ್ಪನ ।। ಚರಣ ।।
ಶ್ರೀಶಪ್ರಾಣೇಶವಿಠಲ । ಹೃದಯಾ ।
ಕಾಶದಲ್ಲಿ ಸಿರಿಯ ಸಹಿತ ।
ವಾಸವಾಗಿ ತೋರಿ ಪೊಳೆವ ।
ಭಾಸುರ ಕೀರ್ತಿಲಿ ಮೆರೆವರನ್ನ ।। ಚರಣ ।।
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
***
" ಶ್ರೀ ಜಂಬುಖಂಡಿ ಆಚಾರ್ಯರ ಆರಾಧನೆ "
" ಜ್ಞಾನನಿಧಿ ಪ್ರಿಯರು - ಜ್ಞಾನಿತ್ರಯರು "
ಶ್ರೀ ಜಂಬುಖಂಡಿ ಆಚಾರ್ಯರು ಲಿಂಗಸೂಗೂರಿನ ಅಪರೋಕ್ಷ ಜ್ಞಾನಿಗಳಾದ ಶ್ರೀ ಶ್ರೀಶ ಪ್ರಾಣೇಶ ದಾಸರನ್ನು ಬಹು ಪ್ರಾಕಾರವಾಗಿ ಪೂಜಿಸಿ ಗೌರವಿಸುತ್ತಿದ್ದರಂತೆ.
ಶ್ರೀ ಶ್ರೀಶ ಪ್ರಾಣೇಶ ವಿಠಲಾಂಕಿತ ಶ್ರೀ ರಾಮದಾಸರಿಗೆ ಕಾಲು ಇಲ್ಲದೇ ನಡೆಯಲಿಕ್ಕೆ ಬಾರದೇ ಇದ್ದುದರಿಂದ ಶ್ರೀ ಜಂಬುಖಂಡಿ ಆಚಾರ್ಯರು " ಅವರನ್ನು ನಮ್ಮ ದೇವರು ಬಂದರೆಂದು ಹೊತ್ತುಕೊಂಡು ತಿರುಗುತ್ತಿದ್ದರಂತೆ.
ಒಂದು ದಿನ ಬೆಳಗಾವಿ ಶಹಾಪುರ ನಾಯಕರ ಮನೆಯಲ್ಲಿ ಉಭಯ ಜ್ಞಾನಿಗಳ ಸಮ್ಮೇಳನವಾದಾಗ್ಯೆ " ನಾಯಕರೇ, ಇಂದು ನಮ್ಮ ದೇವರಿಗೆ ಪುನಗಾಭಿಷೇಕ " ಆಗಬೇಕು ಎಂದು ಎರಡು ದೊಡ್ಡ ಗಂಧದ ಎಣ್ಣೆ ಸೀಸೆಗಳನ್ನು ತರಿಸಿ ಶ್ರೀ ದಾಸಾರ್ಯರನ್ನು ಬಚ್ಚಲ ಮನೆಯ ವೇದಿಕೆಯ ಪೀಠದಲ್ಲಿ ಕುಳ್ಳಿರಿಸಿ, ಶ್ರೀ ದಾಸರ ತಲೆಯ ಮೇಲೆ ಗಂಧದ ಎಣ್ಣೆಯನ್ನು ಸುರಿವಿ, ಅದನ್ನೆಲ್ಲಾ ಮೈಯಲ್ಲಾ ಆಗುವಂತೆ ತಾವೇ ತಮ್ಮ ಅಮೃತ ಹಸ್ತಗಳಿಂದ ತಿಕ್ಕಿ, ನಾಲ್ಕು ಹಂಡೆ ಬಿಸಿನೀರಿನಿಂದ ಎರೆದು ಅಭಿಷೇಕ ಮಾಡಿದರು.
ಆನಂತರ ಶ್ರೀ ದಾಸರ ಮೈಯಲ್ಲಾ ಒರೆಸಿ ದೇವರ ಮನೆಯಲ್ಲಿ ಪೀಠದಲ್ಲಿ ಕುಳ್ಳಿರಿಸಿ ಆಚಮನ ಮಾಡಿಸಿ, ದ್ವಾದಶ ನಾಮ ಶ್ರೀ ಮುದ್ರೆ ತಾವೇ ಶ್ರೀ ದಾಸರಿಗೆ ಹಚ್ಚಿ, ಕೇಸರಿಯುಕ್ತ ಗಂಧವನ್ನು ಮೈಯೆಲ್ಲಾ ಪೂಸಿ ಅಕ್ಷತೆಯನ್ನಿಟ್ಟು ಹೂ ಮಾಲೆ ಹಾಕಿ ಬಿಸಿಯಾಗಿ ಕಾಯಿಸಿದ ಕಲ್ಲುಸಕ್ಕರೆ, ದ್ರಾಕ್ಷಿ ಹಾಕಿದ ಹಾಲನ್ನು ದೊಡ್ಡ ಬೆಳ್ಳಿಯ ಪಾತ್ರೆಯಲ್ಲಿ " ದೇವರೇ ನೈವೇದ್ಯವಾಗಲಿ " ಎಂದು ಗಂಭೀರ ಸ್ವರದಿಂದ ಹೇಳಿ ಹಾಲು ಕುಡಿಸಿದರಂತೆ!!
ಚಲಪ್ರತಿಮೆಗಳನ್ನು ಅರ್ಚಿಸುವ ಕೃತ ಯುಗದ ಧರ್ಮ ತೋರಿದರೆಂದು ಕಣ್ಣಾರೆ ನೋಡಿದ ಶಿಷ್ಯರು ಹೇಳಿದ್ದನ್ನು ಮಹಾ ಔತ್ಸುಕ್ಯದಿಂದ ಶಹಾಪುರ ನಾಯಕರಲ್ಲಿ ಕೇಳಿದ್ದನೆಂದು ಮೈಸೂರಿನ ಶ್ರೀ ಗುರುಗೋವಿಂದದಾಸರು " ಹರಿದಾಸ ಭಕ್ತ ವಿಜಯ - 1 " ರಲ್ಲಿ ಉಲ್ಲೇಖಿಸಿದ್ದಾರೆ.
" ಶ್ರೀ ಮುಂಡೇವಾಡಿ ರಾಮದಾಸರಿಗೆ ಪ್ರಸಾದಕ್ಕೆ ಆಮಂತ್ರಣ "
ಒಂದುದಿನ ಶ್ರೀ ಕ್ಷೇತ್ರ ಮಂತ್ರಾಲಯದಲ್ಲಿ ಒಬ್ಬ ಶ್ರೀಮಂತ ಭಕ್ತನ ಔತಣಕ್ಕೆ ಶ್ರೀ ಮುಂಡೇವಾಡಿ ರಾಮದಾಸರು ಒಪ್ಪಿರಲಾಗಿ, ಅದೇ ದಿನವೇ ಶ್ರೀ ಜಂಬುಖಂಡಿ ಆಚಾರ್ಯರು ಶ್ರೀ ದಾಸಾರ್ಯರಿಗೆ ಆಮಂತ್ರಣ ಕೊಟ್ಟು ಮಧುಕರ ಬೇಡಿ ತಂದ ಜೋಳಿಗೆಯನ್ನು ತುಂಗಭದ್ರಾ ನದಿಯಲ್ಲಿ ಅದ್ದಿ ತೆಗೆದು ಶ್ರೀ ಹರಿವಾಯು ಗುರುರಾಜರಿಗೆ ಸಮರ್ಪಿಸಿ ನದಿಯಲ್ಲಿನ ಬಂಡೆಕಲ್ಲುಗಳೇ ಊಟಕ್ಕೆ ಕೂಡ್ರಲು ಮಣಿಯೆಂದೂ ಹಾಗೂ ಚಿನ್ನದ ಹರಿವಾಣವೆಂದೂ, ಕಡುಬಿನ ಹೊಟ್ಟೆಗೆ ತೆಗ್ಗು ಮಾಡುವುದೇ ತುಪ್ಪ ನೀಡಲು ದೊನ್ನೆಯೆಂದು ಅನುಸಂಧಾನ ಮಾಡಲು " ವಿಘ್ನಗಳನ್ನು ದೂರ ಮಾಡುವ ಶ್ರೀ ಗಣಪತಿಗೆ ಪ್ರೀತಿಯ ಪದಾರ್ಥಗಳಾದ ಕರಿಗಡುಬು ತುಪ್ಪವನ್ನು ಯಥೇಚ್ಛವಾಗಿ ಬಡಿಸಿ - ನೀವು ನಮ್ಮ ಆಮಂತ್ರಣವನ್ನು ಮಾನ್ಯ ಮಾಡಿ ಬಂದುದ್ದಕ್ಕೆ ತಿರುಪತಿಯ ಶ್ರೀ ಶ್ರೀನಿವಾಸನು ನಿಮ್ಮಿಂದ ನಿರ್ವಿಘ್ನದಿಂದ ದಂಡ ನಮಸ್ಕಾರದ ಸೇವೆಯನ್ನು ಚೆನ್ನಾಗಿ ತಗೊಳ್ಳುವನು " ಎಂದು ಹಾರೈಸಿ ಕಳುಹಿಸಿದರು.
ಇದೆ ಸತ್ಸಂಗದ ಸುಫಲವು ಎಂದು ಮುಂಡೇವಾಡಿ ಶ್ರೀ ರಾಮದಾಸ ಮಹಾರಾಜರ ಚಾರಿತಾಮೃತ ಕಾವ್ಯದಲ್ಲಿ ಉಲ್ಲೇಖಿತವಾಗಿದೆ!!
" ವಿಶೇಷ ವಿಚಾರ "
ಜ್ಞಾನಿಗಳೂ - ಯತಿಗಳೂ - ಹರಿದಾಸರ ಆರಾಧನೆಯನ್ನು ಸೂರ್ಯೋದಯ ಪುಣ್ಯ ಶುಭತಿಥಿಯನ್ನೇ ತೆಗೆದು ಕೊಂಡು ಆಚರಣೆ ಮಾಡಬೇಕು.
ಈದಿನ ಪ್ರಾತಃಕಾಲದ ಶುಭ ಪುಣ್ಯ ತಿಥಿ : ಶ್ರಾವಣ ಬಹುಳ ತ್ರಯೋದಶೀ
ಆದ್ದರಿಂದ....
ಈದಿನ " ಶ್ರೀ ವಾದಿರಾಜರ ಋಜುತ್ವ ಪ್ರತಿಪಾದಕ ದೀಕ್ಷಾ ಬದ್ಧರೂ - ಶ್ರೀ ರಾಯರ ಅಂತರಂಗ ಭಕ್ತರೂ - ಶ್ರೀ ಶ್ರೀಶ ಪ್ರಾಣೇಶದಾಸರ ಪ್ರೀತಿಪಾತ್ರರೂ - ಶ್ರೀ ಮುಂಡೇವಾಡಿ ರಾಮದಾಸರ ಆಪ್ತಮಿತ್ರರೂ ಆದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರ ಆರಾಧನಾ ಮಹೋತ್ಸವ
***
ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರು (೧೮೪೨ - ೧೮೯೬)
(ಶ್ರೀ ಇಭವರದವಿಠಲ ದಾಸರು)
ಆರಾಧನೆ - ಶ್ರಾವಣ ಬಹುಳ ತ್ರಯೋದಶಿ
ಅವತಾರದ ಕೊನೆಯ ಸ್ಥಳ - ಹಂಪಿ (ಶ್ರೀ ರಘುನಂದನ ತೀರ್ಥರ ಬೃಂದಾವನದ ಹತ್ತಿರ ಸ್ಥಳದಲ್ಲಿ)
ಶ್ರೀ ಜಂಬುಖಂಡಿ ವಾದಿರಾಜಾರ್ಯರು ೧೯ ನೇ ಶತಮಾನದ ಮಹಾನ್ ಅಪರೋಕ್ಷ ಜ್ಞಾನಿವರೇಣ್ಯರಲ್ಲಿ ಒಬ್ಬರು. ಶ್ರೀ ವಾದಿರಾಜರ ಋಜುತ್ವ ಸಮರ್ಥನೆಯ ಮಹಾನ್ ಸೇನಾನಿಗಳು . ತಮ್ಮ ದೀರ್ಘಾವಧಿಯಲ್ಲಿ ಅನೇಕ ಸಾಧನೆ, ಮಹಿಮೆ ಹಾಗು ಜ್ಞಾನದ ಲಹರಿಯನ್ನು ಜಗತ್ತಿಗೆ ತೋರ್ಪಡಿಸಿದ್ದಾರೆ. ಶ್ರೀ ಆಚಾರ್ಯರು ೧೮೪೨ ರಲ್ಲಿ, ಆಷಾಢ ಬಹುಳ ಪಂಚಮಿಯಂದು (ಶ್ರೀ ಟೀಕಾರಾಯರ ಪಂಚಮಿ) ಹಾನಗಲ್ಲು (ಧಾರವಾಡ ಜಿಲ್ಲೆ) ಎನ್ನುವ ಸ್ಥಳದಲ್ಲಿ ಆವತಾರ ಮಾಡಿದ್ದಾರೆ.
ಆಚಾರ್ಯರ ವಿದ್ಯಾಭ್ಯಾಸ:
ಶ್ರೀ ಆಚಾರ್ಯರು ತಮ್ಮ ವಿದ್ಯಾಭ್ಯಾಸವನ್ನು ೨೦ ವರ್ಷಗಳ ಕಾಲ ಶ್ರೀ ವಿದ್ಯಾಧೀಶ ತೀರ್ಥರ (ಕೃಷ್ಣಾಪುರ ಮಠ) ಹಾಗು ಶ್ರೀ ಸತ್ಯಪರಾಕ್ರಮ ತೀರ್ಥರ (ಉತ್ತರಾದಿ ಮಠ) ಬಳಿ ಮಾಡಿದ್ದಾರೆ.
ಶ್ರೀ ಆಚಾರ್ಯರ ಸಮಕಾಲಿನರು:
ಶ್ರೀ ರಘುಪ್ರವೀರ ತೀರ್ಥರು (ಭೀಮನಕಟ್ಟೆ ಮಠ), ಶ್ರೀ ವೃಂದಾವನಾಚಾರ್ಯರು, ಶ್ರೀ ವಿಶ್ವಾಧಿಶ ತೀರ್ಥರು (ಸೋದೆ ಮಠ), ಶ್ರೀ ಸುಜನೇಂದ್ರ ತೀರ್ಥರು, ಶ್ರೀ ಸುಜ್ಞಾನೇಂದ್ರ ತೀರ್ಥರು, ಶ್ರೀ ಸುಧರ್ಮೇಂದ್ರ ತೀರ್ಥರು, ಶ್ರೀ ಸುಗುಣೇಂದ್ರ ತೀರ್ಥರು (ಶ್ರೀ ರಾಘವೇಂದ್ರತೀರ್ಥ ಮಠ), ಶ್ರೀ ಸತ್ಯಪರಾಯಣ ತೀರ್ಥರು, ಶ್ರೀ ಸತ್ಯಪರಾಕ್ರಮ ತೀರ್ಥರು, ಶ್ರೀ ಸತ್ಯವೀರ ತೀರ್ಥರು, ಶ್ರೀ ಸತ್ಯಧೀರ ತೀರ್ಥರು (ಉತ್ತರಾದಿ ಮಠ). ಶ್ರೀ ಕಾಶಿ ರಾಘವೇಂದ್ರಾಚಾರ್ಯರು (ಮಹಾನ್ ಗ್ರಂಥಕಾರರು, ಪಂಚವ್ಯಾಕರಣಾಭಿಜ್ಞರು, ಶಾಸ್ತ್ರ ವಿಚಕ್ಷಣರು ಮತ್ತು ಜ್ಞಾನಿಗಳು)
ಆಚಾರ್ಯರ ತೀರ್ಥ ಯಾತ್ರೆ:
ಶ್ರೀ ಆಚಾರ್ಯರು ೩ ಬಾರಿ ಬದರಿ ಯಾತ್ರೆಯನ್ನು ಮಾಡಿರುತ್ತಾರೆ, ಒಂದು ಬಾರಿ ಶ್ರೀ ಕಾಶಿ ರಾಘವೇಂದ್ರಾಚಾರ್ಯರ ಜೊತೆಗೂಡಿ ವಸುಧಾರ ಕ್ಷೇತ್ರಕ್ಕೆ ಹೋಗಿ ಬಂದಿದ್ದಾರೆ.
ಆಚಾರ್ಯರ ಗುರುಭಕ್ತಿ:
ಶ್ರೀ ಆಚಾರ್ಯರ ಕಾಲದಲ್ಲಿ ಕೆಲ ಕುಹಕಿಗಳು ಹಾಗು ಕಲಿ ಸದ್ರುಷರು ಶ್ರೀ ರಾಘವೇಂದ್ರ ತೀರ್ಥರ ಸ್ತೋತ್ರದ ಮೇಲೆ ಶಂಕೆ ಹಾಗು ಖಂಡನೆಯನ್ನು ಬರೆದಾಗ, ಶ್ರೀ ಆಚಾರ್ಯರು ಅದನ್ನು ಕೇಳಿ ತಿಳಿದ ಕೂಡಲೇ ನಿಮಿಷ ಮಾತ್ರದಲ್ಲಿ ಸರಿಯಾದ ಪ್ರತ್ಯುತ್ತರವಾಗಿ ಪ್ರತಿಖಂಡನೇಯನ್ನು ರಚಿಸಿ ಶ್ರೀ ಗುರುಸಾರ್ವಭೌಮರ ಸ್ತೋತ್ರದ ಪ್ರಮಾನ್ಯವನ್ನು ಸಮರ್ಥಿಸಿದರಲ್ಲದೆ ಶ್ರೀ ಗುರುರಾಯರ ಅನುಗ್ರಹಕ್ಕೆ ಪಾತ್ರರಾದರು. ಶ್ರೀ ಮಠದಿಂದ ಅತ್ಯುತ್ತಮ ಗೌರವಕ್ಕೆ ಪಾತ್ರರಾದರು.
"ಶ್ರೀ ರಾಘವೇಂದ್ರ ಗುರು ಸಂಸ್ತುತಿ ಖಂಡನಸ್ಯ | ಯೋ ಮಂಡನಂ ಚ ನಿಮಿಶಾರ್ಧಮಾತ್ರೆ||"
- ಶ್ರೀ ಗುರುಗುಣ ಚಂದ್ರಿಕಾ
ಆಚಾರ್ಯರ ಕಾಲದ ಒಂದು ಘಟನೆ:
ಕೊಯಂಬತ್ತುರಿನಲ್ಲಿ ಶ್ರೀ ಆಚಾರ್ಯರು ಹಾಗು ಶ್ರೀ ವೃಂದಾವನಾಚಾರ್ಯರು ಮಠದಲ್ಲಿ ತಂಗಿದ್ದಾಗ, ಆ ಕಾಲದ ಬೇರೆ ಮಠದ ಪೀಠಾಧಿಪತಿಯೋಬ್ಬರು ಆನೆಯ ಮೇಲೆ ಆ ಮಠದ ಮುಂದೆಯೇ ಮೆರವಣಿಗೆ ಹೊರಟಿದ್ದರು, ಆಗ ಆಚಾರ್ಯರು ಪೀಠಾಧಿಪತಿಗಳ ಹತ್ತಿರ ಹೋಗಿ 'ತಮಗಿಂತ ಆಶ್ರಮ ಜೇಷ್ಟರು ಜ್ಞಾನಿವರೆಣ್ಯರು ಆದ ಶ್ರೀ ವೃಂದಾವನಾಚಾರ್ಯರು ಮಠದಲ್ಲಿ ಇರುವರು ಆದ್ದರಿಂದ ಆನೆಯಮೇಲಿಂದ ಇಳಿದು ಗೌರವ ಸೂಚಿಸುವುದು ಉಚಿತ' ಎಂದು ವಿನಂತಿಸಿ ಕೊಂಡರು. ಆದರೆ ಇದಕ್ಕೊಪ್ಪದ ಪರ ಮಠದ ಶ್ರೀಗಳು ಹಾಗು ಅಲ್ಲಿನ ಪಂಡಿತರು ಹಾಗೆಯೆ ಹೊರಡಲು ನಿಶ್ಚಯ ಮಾಡಿದರು, ಆಗ ಶ್ರೀ ಆಚಾರ್ಯರು ಆನೆಯ ಮೇಲೆ ಮುಷ್ಠಿ ಪ್ರಹಾರ ಮಾಡಲು ಆನೆಯು ಕೋಲಾಹಲ ಮಾಡಲು, ತಪ್ಪರಿತ ಪರ ಮಠದ ಶ್ರೀಗಳಿಗೆ ತಮ್ಮ ತಪ್ಪಿನ ಅರಿವಾಯಿತು, ತಕ್ಷಣ ಕೆಳಗಿ ಇಳಿದು ಶ್ರೀ ವೃಂದಾವನಾಚಾರ್ಯರಿಗೆ ಗೌರವ ಆದರಗಳ್ಳನ್ನು ಮಾಡಿ ಅನುಗ್ರಹ ಪಡೆದು ಮೆರವಣಿಗೆ ಮುಂದುವರೆಸಿದರು.
ಆಚಾರ್ಯರ ವಾದಿ ದಿಗ್ವಿಜಯ:
ಶ್ರೀ ಆಚಾರ್ಯರು ೧೮೮೦ರಲ್ಲಿ ಕಾಶಿ ಕ್ಷೇತ್ರಕ್ಕೆ ಹೋಗಿ ಅಲ್ಲಿನ ಪ್ರತಿವಾದಿಗಳ ಜೊತೆ ವಾದ ಹೂಡಿ, ಅವರನ್ನು ಮೂಕೀಭೂತರನ್ನಾಗಿ ಮಾಡಿ ಅವರಿಂದ ಜಯಪತ್ರ ಪಡೆದು, ಅಲ್ಲಿನ ಕಾಶಿರಾಜನಿಂದ ಸುವರ್ಣ ಮಾಯವಾದ ಗಜದಂತ ಪಲ್ಲಕ್ಕಿಯನ್ನು ಮನ್ನಣೆಯಾಗಿ ಪಡೆದರು.
"ದುರ್ಮಾಯಿಮತ್ತಗಜಪುಂಗವ ಪಂಚವಕ್ತ್ರ| ಸಂಮಾನಿತಾಖಿಲ ಸುಮಧ್ವಮತಾಭಿಲಾಷ||
- ಶ್ರೀ ಗುರು ಸುಗುಣ ಚಂದ್ರಿಕಾ
ಆ ಪಲ್ಲಕ್ಕಿಯನ್ನು ತಮ್ಮ ಗುರುಗಳಾದ ಶ್ರೀ ವಿದ್ಯಧೀಶರಿಗೆ ಸಮರ್ಪಣೆ ಮಾಡಿದ್ದಾರೆ. ಈಗಲೂ ಪಲ್ಲಕ್ಕಿಯನ್ನು ಕೃಷ್ಣಾಪುರ ಮಠದಲ್ಲಿ ನೋಡಬಹುದು. ಶ್ರೀ ವಿದ್ಯಾಧೀಶರ ಆಶ್ರಮ ಶಿಷ್ಯರು ಶ್ರೀ ವಿದ್ಯಾಪೂರ್ಣರು ಪಲ್ಲಕ್ಕಿಯ ಬಂಗಾರ ಹಾಗು ಮಠದ ಪರವಾಗಿ ಸ್ವಲ್ಪ ಬಂಗಾರ ಸೇರಿಸಿ ಶ್ರೀ ಕೃಷ್ಣನಿಗೆ ಬಂಗಾರದ ಪಲ್ಲಕ್ಕಿಯನ್ನು ಸಮರ್ಪಿಸಿದರು. ಈಗಲೂ ಉಡುಪಿಯಲ್ಲಿ ಶ್ರೀಕೃಷ್ಣನಿಗೆ ಉಪಯೋಗಿಸುವ ಪಲ್ಲಿಕ್ಕಿ ಶ್ರೀ ವಿದ್ಯಾಪೂರ್ಣರು ಸಮರ್ಪಣೆ ಮಾಡಿದುದು.
ಶ್ರೀ ಆಚಾರ್ಯರಿಗೆ ಶ್ರೀ ಸೋದೆಮಠ, ಶ್ರೀ ರಾಘವೇಂದ್ರತೀರ್ಥಮಠಗಳಿಂದ ಅನೇಕ ಬಿರುದು, ಸನ್ಮಾನ ಪ್ರಶಸ್ತಿಗಳು ದೊರಕಿವೆ.
ಆಚಾರ್ಯರು ಪ್ರತಿಷ್ಥಾಪನೆ ಮಾಡಿದ ಕೆಲ ಸ್ಥಳಗಳ ವಿವರಣೆ:
ಶ್ರೀ ಆಚಾರ್ಯರು ಸಿರಗುಪ್ಪ ತಾಲೂಕಿನಲ್ಲಿ ಶ್ರೀ ರಾಜರ ವೃಂದಾವನ ಹಾಗು ಶ್ರೀ ಮುಖ್ಯಪ್ರಾಣ ದೇವರ ಪ್ರತಿಷ್ಥಾಪನೆ ಮಾಡಿದ್ದಾರೆ, ಶ್ರೀ ಸೋದೆಯಲ್ಲಿ ಶ್ರೀ ಧವಳಗಂಗಾ ತೀರದಲ್ಲಿ ವೀಣಾ ಪಾಣಿ ಶ್ರೀ ಪ್ರಾಣದೇವರ ಪ್ರತಿಷ್ಥಾಪನೆ ಮಾಡಿದ್ದಾರೆ. ಜಮಖಂಡಿಯಲ್ಲಿ ಶ್ರೀ ರುಕ್ಮಿಣಿ ಸತ್ಯಾಸಹಿತ ಪಾಂಡುರಂಗವಿಠಲ ಹಾಗು ಶ್ರೀ ಮುಖ್ಯಪ್ರಾಣ ದೇವರ ಪ್ರತಿಷ್ಥಾಪನೆಯನ್ನು ಮಾಡಿದ್ದಾರೆ (ಶ್ರೀ ದ್ವಾರಕಾನಾಥ ದೇವಾಲಯದಲ್ಲಿ). ಇದಲ್ಲದೆ ಆಚಾರ್ಯರಿಗೆ ಅನೇಕ ಮೂರ್ತಿಗಳು ಲಭ್ಯವಾಗಿವೆ, ಶ್ರೀ ಆಚಾರ್ಯರಿಗೆ ಉಸುಕು ನಿರ್ಮಿತ ವಿಠಲದೇವರು ಲಭ್ಯವಾಗಿದೆ, ಶ್ರೀ ಆಚಾರ್ಯರ ಕರಾರ್ಚಿತ ವೀಣಾ ಪಾಣಿ ಶ್ರೀ ಮುಖ್ಯಪ್ರಾಣ ದೇವರು ಹಾಗು ಅನೇಕ ಮೂರ್ತಿಗಳನ್ನು ಬಳ್ಳಾರಿಯಲ್ಲಿ ಶ್ರೀ ಆಚಾರ್ಯರ ವಂಶಿಕರ ಮನೆಯಲ್ಲಿ ನೋಡಬಹುದು.
ಆಚಾರ್ಯ ಕೃತ ಗ್ರಂಥ ವೈಭವ:
ಶ್ರೀ ಆಚಾರ್ಯರು ತಮ್ಮ ದೀರ್ಘಾವಧಿಯಲ್ಲಿ ೪೪ ಗ್ರಂಥಗಳನ್ನು (ಸದ್ಯಕ್ಕೆ ಲಭ್ಯವಾಗಿರುವುದು, ಇನ್ನು ಅನೇಕ ಬರೆದಿದ್ದಾರೆ) ಮಾಧ್ವ ವಾನ್ಜ್ಮಯಕ್ಕೆ ನೀಡಿ ಅನುಗ್ರಹಿಸಿದ್ದಾರೆ. ಗ್ರಂಥಗಳ ಪಟ್ಟಿ ಹೀಗಿದೆ..
೧ ಬೃಹತಿ ಸಹಸ್ರ ವ್ಯಾಖ್ಯಾನ - ಋಕ್ ಸಹಸ್ರ ಪದ್ಯಾರ್ಥ ೨. ಅ. ಶ್ರೀ ವ್ಯಾಸದಾಸಸಿದ್ಧಾಂತ ಕೌಮುದೀ
ಆ. ಶ್ರೀ ಹರಿಕಥಾಮೃತಸಾರ ಪಂಚಿಕ (ಈ ಎರಡು ಗ್ರಂಥಗಳು ಹರಿಕಥಾಮೃತಸಾರಕ್ಕೆ ವ್ಯಾಖ್ಯಾನಗಳು, ಒಂದು ಸಂಸ್ಕೃತ ವ್ಯಾಖ್ಯಾನ) ೩. ಭಾವಸೂಚನಾ ೪. ಓಂ ಕಾರಾರ್ಥ: ೫. ನಾರಾಯಣನಾಮಸ್ಮರಣ ನಿರೂಪಣಂ ೬. ಬದರೀನಾರಾಯಣ ಸ್ತುತಿ: ೭.ಲಯಕ್ರಮನಿರೂಪಣಂ ೮. ಶ್ರೀರಾಮಮುಖ್ಯಪ್ರಾಣಪ್ರಾರ್ಥನಾ
೯. ಶ್ರೀಮನ್ಮಹಾಭಾರತತಾತ್ಪರ್ಯನಿರ್ಣಯಟಿಪ್ಪಣಿ (ಗುರುರಾಜೀಯ ಸಾರ:) ೧೦. ಶ್ರೀಮಟ್ಟಿಕಾಕೃತ್ಪೂಜ್ಯಪೂಜಿತರಾಮ ಪ್ರಾರ್ಥನಾ ೧೧. ಶ್ರೀವಿದ್ಯಾಧಿಶಾಷ್ಟಕಂ ೧೨. ತೀರ್ಥಪದನಿರೂಪಣಂ ೧೩. ಶ್ರೀ ಸುಮಧ್ವವಿಜಯಸರ್ಗಾರ್ಥ: ೧೪. ಶ್ರೀ ವಾದಿರಾಜಋಜುತ್ವವಿರೋಧಿಕಪೋಲಚಪೇಟಿಕಾ ೧೫. ಋಜುತ್ವವಿರೋಧಿ ಪರಿಮರ್ಧನಂ ೧೬. ಕರ್ಮಾಕರ್ಮವಿವೇಕ: ೧೭. ಅಪೂಸೂಕ್ತಾರ್ಥವಿರಯಣಂ ೧೮. ಅತೀಗೌಪ್ಯಂ ೧೯. ಆಧ್ಯಾತ್ಮರಸರಂಜನೀವ್ಯಾಖ್ಯಾ (ಸಂಸ್ಕೃತ ಹಾಗು ಕನ್ನಡ) ೨೦. ಶ್ರೀ ವೃಂದಾವನಾಚಾರ್ಯಸ್ತೋತ್ರಂ ೨೧. ಶ್ರೀ ವಿಜಯದಾಸಮಹೋದಯಾನಾಂ ಸುಳಾದೆ: - ಅರ್ಥಕಥನಂ ೨೨. ಶ್ರೀಹನೂಮತ್ಪ್ರಾರ್ಥನಾ ೨೩. ಶ್ರೀ ವಾದಿರಾಜಕೃತಅಭಯ ಸ್ತುತಿ ವಿವರಣಂ ೨೪. ಅಪರೋಕ್ಷಜ್ಞಾನಸಾಧನಾನಿ ೨೫. ಜ್ನಾನಹೇತುಭಕ್ತಿಸಾಧ್ಯೋಪಾಸ್ತಿ : ೨೬. ಯೋಗಿಋಜುಯೋಗಿಜ್ಞಾನಂ ೨೭. ಕೇಶವಾದಿನಮನಪ್ರಕಾರ: ೨೮. ಸಂಕ್ಷೇಪಭಾಷ್ಯವ್ಯಾಖ್ಯಾ ೨೯. ಶ್ರೀ ಸ್ವಾಪ್ನವೃಂದಾವನ ಆಖ್ಯಾನ ಪ್ರಾಕೃತವ್ಯಾಖ್ಯಾ ೩೦. ವಿಷ್ಣುಸಹಸ್ರನಾಮ - ಶಬ್ದಾರ್ಥ: ೩೧. ಬ್ಯಾಡಗಿ ಹನೂಮತ್ ಸ್ತೋತ್ರಂ ೩೨. ಶ್ರೀ ಧವಳಗಂಗಾ ಸ್ತೋತ್ರಂ ೩೩. ಷೋಡಶಕಲಾಭಿಮಾನಿದೇವತಾ ಸ್ತೋತ್ರಂ ೩೪. ಬ್ರಹ್ಮಸೂತ್ರಾಧಿಕರಣ ಸಾರಸಂಗ್ರಹ: ೩೫. ಶ್ರೀ ಹಯಗ್ರೀವ ವಾದಿರಾಜ ಪ್ರಾರ್ಥನಾ: ೩೬. ಪಿತ್ರುಪಾದಸ್ತುತಿ: ೩೭. ಶ್ರೀವಾದಿರಾಜಕೃತಸ್ತೋತ್ರವ್ಯಾಖ್ಯಾನಂ ೩೮. ಗುರುಸ್ತೋತ್ರವಿವೃತಿಶೋಧನಂ ೩೯. ಶ್ರೀ ವಾದಿರಾಜಪ್ರಾರ್ಥನಾ ೪೦. ಶ್ರೀಜಯತೀರ್ಥಸ್ತೋತ್ರಂ ೪೧. ಲಯಪ್ರಕರಣಂ ೪೨. ಹಿತೋಪದೇಶ: ೪೩. ಆತ್ಮವೃತ್ತಾಂತ: ೪೪. ಭವವಿಮೋಚಕ - ಶ್ರೀ ಗುರುರಾಜ ಪ್ರಾರ್ಥನಾ.
ಆಚಾರ್ಯರ ಋಜುತ್ವ ಸಮರ್ಥನೆಯ ಒಂದು ನೋಟ:
೧೮೫೨ ರಲ್ಲಿ ಒಬ್ಬ ಬ್ರಾಹ್ಮಣ ಸತ್ಯಮಂಗಲ ಎನ್ನುವ ಗ್ರಾಮದಲ್ಲಿ ಮೊಟ್ಟ ಮೊದಲ ಬಾರಿಗೆ ಋಜುತ್ವ ವಿರೋಧಿ ಚಟುವಟಿಕೆ ಪ್ರಾರಂಭ ಮಾಡಿದನು. ಶ್ರೀ ಬ್ರಹ್ಮಾಂಡ ಪುರಾಣದ ಕೊನೆಯ ೫ ಅಧ್ಯಾಯಗಳು ರಜತಪೀಠ ಪುರ ಮಹತ್ಮೆಗೆ ಸಂಬಂಧಿಸಿದ್ದು. ಈ ಬ್ರಾಹ್ಮಣನು ಕೊನೆಯ ೩ ಅಧ್ಯಾಯಗಳನ್ನು ಬದಲು ಮಾಡಿ ಕೃತಕವಾದ ಅಧ್ಯಾಯಗಳನ್ನು ಪುರಾಣದಲ್ಲಿ ಸೇರಿಸಿ ಪ್ರಚಾರ ಮಾಡತೊಡಗಿದ, ಕ್ರಮೇಣ ಅವನ ಮಾತನ್ನು ಕೆಲ ಜನರು ನಂಬಿ ಪುಷ್ಟಿನೀಡಿದರು. 'ಆ ಅಧ್ಯಾಯಗಳಲ್ಲಿ ಶ್ರೀ ರಾಜರು ಋಜುಗಳು ಅಲ್ಲ, ಆಖ್ಯಾನ ಅಪ್ರಾಮಾಣ ಹಾಗು ಶ್ರೀ ವೃಂದಾವನಾಚಾರ್ಯರು ದೈತ್ಯರು' ಎಂದು ಅಪಪ್ರಚಾರ ಮಾಡಿ, ಪ್ರವಚನಗಳನ್ನೂ ಮಾಡಿದ.
ಆ ಸಮಯದಲ್ಲಿ ಶ್ರೀ ರಾಜರ ಋಜುತ್ವ ಸಮರ್ಥಕರಲ್ಲಿ ಒಬ್ಬರಾದ ಶ್ರೀ ರಘುಪ್ರವೀರ ತೀರ್ಥರು ಕುಂಭಕೋಣದಲ್ಲಿ ಚಾತುರ್ಮಾಸ್ಯ ವ್ರತವನ್ನು ಕೈಗೊಂಡಿದ್ದರು. ಅಪಪ್ರಚಾರದ ವಿಷಯ ತಿಳಿದ ಕೂಡಲೇ ಮನನೊಂದು
ಪ್ರಾಯೋಪವೇಶ ಮಾಡಲು ಆರಂಭಿಸಿದರು. ವಿಷಯ ತಿಳಿದ ಶ್ರೀ ಆಚಾರ್ಯರು ಆ ಕುಹಕಿ ಕಲಿಸದ್ರುಶವಾದ ಬ್ರಾಹ್ಮಣ ರಚಿಸಿದ ಕೃತಕ ಪುರಾಣವನ್ನು ತರಿಸಿ ಆ ಗ್ರಂಥಕ್ಕೆ ಖಂಡನೆ ಮಾಡುವುದಾಗಿ ಹೇಳಿ ಸರ್ವರಿಗೂ ವಾದಕ್ಕೆ ಆಹ್ವಾನ ನೀಡಿದರು, ಆದರೆ ಯಾರು ಬರಲಾಗಿ ಮರುದಿನ ಆ ಕೃತಕ ಪುರಾಣವನ್ನು ಸುಡುವುದಾಗಿ ಹೇಳಿ ಅದನ್ನು ತಡೆಯುವುದಕ್ಕೆ ಆಹ್ವಾನ ನೀಡಿ ಮಧ್ಯಾಹ್ನ ಕಾಲದಲ್ಲಿ ಕರ್ಪುರದಿಂದ ಸುಟ್ಟರು, ಆಗ ಅಲ್ಲಿ ಕೆಲ ದುಷ್ಟರು ದಂಡಪಾಣಿಗಳಾಗಿ ಆಚಾರ್ಯರನ್ನು ಹೊಡೆಯಲು ಬರಲು, ಆಚಾರ್ಯರು ತಮ್ಮ ಕೈಯನ್ನು ಪಕ್ಕದಲ್ಲಿರುವವನ ಮೇಲೆ ಇಟ್ಟು ಶ್ರೀ ಭೂತರಾಜರನ್ನು ಸ್ಮರಣೆ ಮಾಡಲು ತಕ್ಷಣ ಆ ವ್ಯಕ್ತಿ ಆ ಎಲ್ಲಾ ದಂಡಪಾಣಿಗಳನ್ನು ಹೊಡೆದೋಡಿಸಿದನು,
ಈ ಸಮಯದಲ್ಲಿ (೧೮೮೩, ೮೪, ೮೫) ಪರ ಮಠದ ಪೀಠಾಧಿಪತಿಗಳೊಬ್ಬರು ಮದರಾಸಿನಲ್ಲಿ ರುಜು ವಿರೋಧಿ ಸಭಾವನ್ನು ಮಾಡಿದರು, ಆ ಸಭೆಗೆ ಹಾಗು ಆ ಬ್ರಾಹ್ಮಣನಿಗೆ ಶ್ರೀ ಸೋದೆ ಮಠದ ಮಹಾನ್ ಜ್ಞಾನಿಗಳು
ಶ್ರೀ ವೃಂದಾನಾಚಾರ್ಯರ ಆಶ್ರಮ ಶಿಷ್ಯರು, ವಾದ ನಿಸ್ಸೀಮರು ಆದ ಶ್ರೀ ವಿಶ್ವಾಧಿಶರು (ಶ್ರೀಗಳು ವೃಂದಾ ವನಸ್ಥರಾದಾಗ ಆಗಿನ ವಿಕ್ಟೋರಿಯರಾಣಿ ಸಾರ್ವಜನಿಕ ರಜೆಯನ್ನು ಘೋಷಿಸಿದ್ದರು) "ಋಜುತ್ವ ಚಂದ್ರೋದಯ" ಹಾಗು "ಶ್ರೀ ಮಧ್ವ ಉಭಯಕಥೋಜ್ಜೀವನ" ಎನ್ನುವ ಗ್ರಂಥಗಳನ್ನು, ಶ್ರೀ ಆಚಾರ್ಯರು " ಋಜುತ್ವ ಕಪೋಲಚಪೆಟಿಕಾ" ಹಾಗು "ಋಜುತ್ವ ವಿರೋಧಿ ಪರಿಮರ್ಧನ" (ಈ ಗ್ರಂಥದಲ್ಲಿ ಬಳಿತ್ಥಾಸೂಕ್ತವನ್ನು ವಾದಿರಾಜರ ಮೂರು ಅವತಾರ ರೂಪಕ್ಕೆ ಅನುವಾದ ಮಾಡಿದ್ದಾರೆ) ಎನ್ನುವ ಪ್ರತಿಖಂಡನ ಗ್ರಂಥಗಳನ್ನು ರಚಿಸಿದರು. ಅದಲ್ಲದೆ ಶ್ರೀ ವಾದಿರಾಜರ ಮೃತ್ತಿಕೆ ಧಾರಣೆ ಮಾಡುವುದನ್ನು ವಿರೋಧಿಸಿ ಪರ ಮಠದವರು "ಮೃತ್ತಿಕ ಗರ್ವನಿರ್ವಾಪಣ" ಎನ್ನುವ ಗ್ರಂಥ ಬರೆದರೂ, ತಕ್ಷಣವಾಗಿ ಆಚಾರ್ಯರು "ಸನ್ಮೃತ್ತಿಕಾ ದ್ರೋಹಿ ಗರ್ವ ನಿರ್ವಾಪಣ" ಎನ್ನುವ ಪ್ರತಿಖಂಡನೆ ಬರೆದು ಶ್ರೀ ಭಾವಿಸಮೀರ ವಾದಿರಾಜರು ತಿಳಿಸಿದಂತೆ "ಅಂತೆ ಸಿದ್ಧಸ್ತು ಸಿದ್ಧಾಂತ:" ಎನ್ನುವಂತೆ ಋಜುತ್ವ ಸಮರ್ಥನೆಯನ್ನು ಪರಿಪೂರ್ಣ ಮಾಡಿದರು.
ಆಚಾರ್ಯರ ದಾಸಸಾಹಿತ್ಯದ ವಿಚಾರ:
ಶ್ರೀ ಆಚಾರ್ಯರಿಗೆ ಶ್ರೀ ಕಮಲಾಪತಿವಿಠಲರು ಅಂಕಿತ ಕೊಟ್ಟಿದ್ದಾರೆ, ಶ್ರೀ ಆಚಾರ್ಯರು ಅನೇಕ ಕೃತಿಗಳನ್ನು ರಚಿಸಿದ್ದಾರೆ ಆದರೆ ಎಷ್ಟೋ ಕೃತಿಗಳು ಉಪಲಬ್ಧವಿಲ್ಲ, ಉಪಲಬ್ಧವಿರುವ ಕೆಲ ಕೃತಿಗಳನ್ನು ಮುದ್ರಿಸಲಾಗಿದೆ. ಆಚಾರ್ಯರ ಅಂಕಿತ " ಇಭವರದ ವಿಠಲ".
ಆಚಾರ್ಯರ ಶಿಷ್ಯರ ವಿವರ:
ಶ್ರೀ ಆಚಾರ್ಯರಿಗೆ ಶ್ರೀ ಷಟ್ಪುರಾಚಾರ್ಯರು, ಶ್ರೀ ಭೀಮಾಚಾರ್ಯರು, ಶ್ರೀ ವಾಳ್ವೆಕರ್ ಮಧ್ವಾಚಾರ್ಯರು, ಶ್ರೀ ವಾಳ್ವೆಕರ್ ವೆಂಕಣ್ಣಾಚಾರ್ಯರು ಹಾಗು ಶ್ರೀ ಅರಳಿಕಟ್ಟೆ ನರಸಿಂಹಾಚಾರ್ಯರು ಎನ್ನುವ ೫ ಜನ ಶಿಷ್ಯರಿದ್ದರು.
ಶ್ರೀ ಆಚಾರ್ಯರು ಅನೇಕ ಮಹಿಮೆಗಳನ್ನು ತೋರಿದ್ದಾರೆ, ಬೇಡಿ ಬಂದ ಭಕ್ತರಿಗೆ ಅನುಗ್ರಹಿಸಿದ್ದಾರೆ. ಈ ಎಲ್ಲಾ ವಿಷಯಗಳನ್ನು ಶ್ರೀ ಷಟ್ಪುರಾಚಾರ್ಯರು ರಚಿಸಿದ "ಶ್ರೀ ಸುಧಾಕರ ಗುರುಗುಣರತ್ನಮಾಲ (ರತ್ನಾವಲಿ)" ಗ್ರಂಥದಲ್ಲಿ (ಆಚಾರ್ಯರ ಮಹಾತ್ಮೆ ಗ್ರಂಥ) ವಿವರಿಸಲಾಗಿದೆ. ಇನ್ನು ಹೆಚ್ಚಿನ ವಿಷಯಗಳಿಗೆ ಆಸಕ್ತಿ ಉಳ್ಳವರು ಈ ಗ್ರಂಥವನ್ನು ನೋಡಬಹುದು.
ಆಚಾರ್ಯರ ಪರಾಕು:
ಚಲತು ಚಲತು ತೂರ್ಣಂ ವಾದಿರಾಟ್ ದ್ವಿಟ್ ಶ್ರುಗಾಲಾ:|
ನಿಕಟಮುಪಗತೋಯಂ ಜಂಬುಖಂಡಾಚಾರ್ಯ ಸಿಂಹಃ ||
ಸ ಹಿ ಖರನಖರಾಭೈ: ದಾರಯನ್ ದುಷ್ಕವೀಭಾನ್|
ಲಸತಿ ನಿಜಸುವಾಕ್ಯೈ: ನೈಕ್ಷಿ ಕಿಂ ಸುಪ್ರತೀತ: || - ರತ್ನಾವಲಿ
ಶ್ರೀ ಭೂವರಾಹಾಯನಮ:| ಶ್ರೀ ಭಾವಿಸಮೀರ ವಾದಿರಾಜಾಯನಮ: | ಶ್ರೀ ಭಾವಿರುದ್ರ ಶ್ರೀ ಭೂತರಾಜಾಯನಮ: |ಶ್ರೀ ಸತ್ಯಧರ್ಮತೀರ್ಥ ಗುರುಭ್ಯೋನಮ:| ಶ್ರೀ ವೃಂದಾವನಾಚಾರ್ಯ ಗುರುಭ್ಯೋನಮ:| ಶ್ರೀ ಸುಜ್ಞಾನೇಂದ್ರತೀರ್ಥ ಗುರುಭ್ಯೋನಮ:| ಶ್ರೀ ವಿದ್ಯಾಧೀಶತೀರ್ಥ ಗುರುಭ್ಯೋನಮ:| ಶ್ರೀ ಸತ್ಯಪರಾಕ್ರಮತೀರ್ಥ ಗುರುಭ್ಯೋನಮ:|
********
ಶ್ರೀ ವಾದಿರಾಜ ಗುರುಸಾರ್ವಭೌಮರ ಋಜುತ್ವ ದೀಕ್ಷಾ ಬದ್ಧರಾದ ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರ ಆರಾಧನಾ ಮಹೋತ್ಸವ "
ಶ್ರೀ ಭಾವಿಸಮೀರರು ವಾದಿರಾಜರು...
" ಋಕ್ಸಂಹಿತ " ದಲ್ಲಿ..
ವಾದೀನಾ೦ ಜ್ಞಾನದಾನೈಕಶೀಲಾನಾ೦ ರಾಜನಂ ಯತಃ ।
ವೇತಿ ಜ್ಞಾನಂ ಸಮುದ್ದಿಷ್ಟ೦ ದೇತಿ ದಾನಮುದಾಹೃತಮ್ ।।
ಪ್ರೋಕ್ತಶೀಲ ಇಕಾರೇಣ ರಾಜನಂ ರಾಜ ಶಬ್ದಿತಮ್ ।
ವಾದಿರಾಜಾಭಿದಂ ರೂಪಂ ದಶಪ್ರಮತಿ ಸಂಜ್ಞಿತಮ್ ।।
ಪೂರ್ಣಜ್ಞಾನಂ ವಿನಾ ಪ್ರೋಕ್ತ ರಾಜಾನಂ ತ ಕಥ೦ ಭವೇತ್ ।
ದಶೇತಿ ಪೂರ್ಣಮುದ್ದಿಷ್ಟ೦ ಜ್ಞಾನ ಪ್ರಮತಿರೀರಿತಮ್ ।।
ಶ್ರೀ ವಿಜಯರಾಯರು...
ಋಜು ಗಣ ಪಂಕ್ತಿಯೊಳಗೆ ಕುಳಿತಾ ।
ನಿಜ ನಿರ್ಮಲ ಸುಜ್ಞಾನ ಧ್ಯಾನದಿಂದ ಜ್ಞಾನ ಪಕ್ವಾದ ಮಾನವುಳ್ಳ ।
ಸುಜನ ಶಿರೋಮಣಿ ವಾದಿರಾಜನು ತಾ ।।
ನಿಜವಾಗಿ ಬೊಮ್ಮಾ೦ಡ ಪುರಾಣ ಸಾಧಕದಿಂದ ।
ಅಜಪದ ಸಲ್ವದು ಲೇಶ ಸಂಶಯ ಬೇಡಿ ।
ನಿಜ ನಿಜ ನಿಜವೆಂದು ನಿತ್ಯಾದಿ ಕೊಂಡಾಡಿ ।।
ಶ್ರೀ ರಮಾಪತಿವಿಠಲರು...
ಪತಿತ ಪಾವನ । ರಮಾ ।
ಪತಿವಿಠಲನ ನಿರುತ ನೋಳ್ಪ ।
ಲಾತವ್ಯ ಖ್ಯಾತ ।।
ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರು...
ತಥಾಹಿ ಬೃಹತ್ಸಂಹಿತಾಯಾ೦ ಚತುರ್ಮುಖ ವಚನಮ್..
ಸಿತಾಸಿತೇತಿ ಸೂಕ್ತೇನ ವಾದಿರಾಜೋ ಯತೀಶ್ವರಃ ।
ಗೀಯತೇ, ಸ್ವಂಚ ಭಜತಾಂ ಆನಂದಂ, ಇತರಂ ತಥಾ ।
ದ್ವೇಷಿಣಾ೦ ದಾಯಕೋ ವಾಜೀವಕ್ತ್ರಧಾರೀ ಮಹಾನ್ ಯತಿ: ।। ಇತಿ ।।
ತಥಾಹಿ ವ್ಯೋಮ ಸಂಹಿತಾ...
ಸಂಜುರ್ಭುರಾಣಸೂಕ್ತೇನ ಲಾತವ್ಯೋಹಿ ಸುರೇಶ್ವರಃ ।
ಗೀಯತೇ ಋಜುಗಾಥೋsಸೌ ವಾದಿರಾಜೋ ಮಹಾನ್ ಯತಿ: ।। ಇತಿ ।।
ಶ್ರೀ ವಾದಿರಾಜರು ಭಾವಿ ಸಮೀರರು ಎಂದು ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರು..
ಶ್ರೀಮದ್ವಾದಿರಾಜ ಋಜುತ್ವ ವಿರೋಧ ಕಪೋಲ ಚಾಪೇಟಿಕಾ
ಋಜುತ್ವ ವಿರೋಧಿ ಪರಿಮರ್ದನ
ಎಂಬ ಪ್ರೌಢ ಗ್ರಂಥಗಳನ್ನು ರಚಿಸಿ ಬಳಿತ್ಥಾದಿ ಸೂಕ್ತಗಳನ್ನು ಋಜುಪುಂಗವರಾದ ಶ್ರೀ ಲಾತವ್ಯ ವಾದಿರಾಜರ ಪರವಾಗಿ ಅನೇಕ ಶ್ರೀ ವಾದಿರಾಜರ ಋಜುತ್ವ ಸಾಧಕ ಪ್ರಮಾಣಗಳಿಂದ ಶ್ರೀ ವಾದಿರಾಜ ಗುರುಸಾರ್ವಭೌಮರು ಭಾವಿಸಮೀರರೆಂದು ಸ್ಪಷ್ಟ ಪಡಿಸಿದ್ದಾರೆ.
ಶ್ರೀ ಕಮಲಾಪತಿವಿಠಲರು...
ಶ್ರೀಮದಶ್ವಗ್ರೀವ ನೊಲುಮಿಗೆ । ಧಾಮರೆನಿಪ ಶ್ರೀರಾಜ । ದಾಸರಾಗಿರೋ ದಿವ್ಯಲೋಕ ಭವ್ಯ ಉಭಯ ವಿಧ । ಕಾವ್ಯ ರಚನ ಲಾತವ್ಯ ಯತೀಂದ್ರರ ದಾಸರಾಗಿರೋ ।।
ಶ್ರೀ ಕಮಲಾಪತಿವಿಠಲರು ತಮ್ಮಿಂದ ರಚಿತವಾದ ಹರಿಕಥಾಮೃತಸಾರಕ್ಕೆ ವ್ಯಾಖ್ಯಾನವಾದ " ಭಾವ ದರ್ಪಣ " ದಲ್ಲಿ...
ವಾದಿರಾಜನ ಪಾದವ ಭಜಿಸಿ । ಭವ ।
ಛೇದಿಸಿ ಪಡೆ ಮೋದವ । ಶ್ರೀದನ ।
ಪದಾರಾಧನ ಸಂಸಕ್ತಾನ । ಲಾತವ್ಯನ ।।
ಮೇದಿನೀಸುರ ಖೇದ ಹಾರ । ಪ್ರತಿ ।
ವಾದಿ ಭೇದ ವಿನೋದ ಶೀಲನ ।।
ಶ್ರೀ ಶ್ರೀಪತಿ ವಿಠಲರು...
ಪೃಥ್ವಿಪಾಲನ ಪುತ್ರಿ ಬರೆದ ಶುಭ ।
ಪತ್ರವ ಲಕುಮಿ ಕಳತ್ರನಿಗಿತ್ತೆ ।।
ಶ್ರೀ ಬಾದರಾಯಣವಿಠಲರು...
ಸುದತಿ ಬೈಷ್ಮಿ ನೀಡಿದ ಒಲೆಯ ತಂದು ।
ಯದುಪತಿಗೊಪ್ಪಿಸಿದವರು ಕಾಣಮ್ಮಾ ।।
' ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರ ಸಂಕ್ಷಿಪ್ತ ಮಾಹಿತಿ "
ಹೆಸರು : ಶ್ರೀ ವಾದಿರಾಜಾಚಾರ್ಯರು
ತಂದೆ ; ಶ್ರೀ ಶ್ರೀನಿವಾಸಾಚಾರ್ಯರು
ತಾಯಿ : ಸಾಧ್ವೀ ಸೀತಾಬಾಯಿ
ಜನ್ಮಸ್ಥಳ : ಹಾನಗಲ್ಲು
ಪ್ರಮಾಣ :
ಶ್ರೀ ಜಂಬುಖಂಡಿ ವಾದಿರಾಜಾಚಾರ್ಯ ಕೃತ " ಆತ್ಮಕಥನ " ದಲ್ಲಿ...
ಶುಭಕೃತ್ ವತ್ಸರೇ ದಿವ್ಯೇ ಟೀಕಾಕೃತ್ಪಾದ ವಾಸರೇ ಹಾನಗಲ್ಲ ಸಮಾಖ್ಯೇ ।।
ಶ್ರೀ ವಾದಿರಾಜ ಗುರುಸಾರ್ವಭೌಮರ ಪರಮಾನುಗ್ರಹದಿಂದ ಶ್ರೀ ಜಂಬುಖಂಡಿ ಆಚಾರ್ಯರು ಶ್ರೀ ಸರ್ವಜ್ಞ ಕಲ್ಪರಾದ ಜಯತೀರ್ಥರ ಆರಾಧನಾ ಶುಭದಿನವಾದ ಆಷಾಢ ಬಹುಳ ಪಂಚಮಿಯಂದು ಅವತರಿಸಿದರು!!
ಕಾಲ : ಕ್ರಿ ಶ 1842 - 1896
ಉಪನಯನ : ಕ್ರಿ ಶ 1847
ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥರ ಸಮಕ್ಷಮದಲ್ಲಿ ಶ್ರೀ ವಾದಿರಾಜಾಚಾರ್ಯರಿಗೆ ಗಾಯತ್ರೀ ಮಂತ್ರೋಪದೇಶವನ್ನು ತಂದೆಯವರು ಮಾಡಿದರೆ, ಶ್ರೀ ಶ್ರೀಗಳವರು " ಓಂ ಕ್ಲೀ೦ ಕೃಷ್ಣಾಯ ನಮಃ ಓಂ " ಎಂಬ ಶ್ರೀಕೃಷ್ಣ ಷಡಕ್ಷರ ಮಂತ್ರೋಪದೇಶವನ್ನು ಅನುಗ್ರಹ ಪೂರ್ವಕ ಉಪದೇಶಿಸಿದರು.
ವಿದ್ಯಾ ಗುರುಗಳು :
" ಶಾಸ್ತ್ರಾಧ್ಯಯನ "
ಶ್ರೀ ವಾದಿರಾಜ ಋಜುತ್ವ ದೀಕ್ಷಾ ಬದ್ಧರಾದ ಶ್ರೀ ವಾಯಿ ಶ್ರೀನಿವಾಸಾಚಾರ್ಯ ( ಶ್ರೀ ಸತ್ಯಪರಾಕ್ರಮತೀರ್ಥರು ) ರಲ್ಲಿ ತರ್ಕ - ವ್ಯಾಕರಣ - ಮೀಮಾಂಸಾ - ನ್ಯಾಯ - ವೇದಾಂತ ಗ್ರಂಥಗಳನ್ನು ಅಧ್ಯಯನ ಮಾಡಿದರು.
" ಪ್ರೌಢ ಗ್ರಂಥಗಳ ಅಧ್ಯಯನ "
ಉಡುಪಿಯ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳವರ ಬಳಿ ಶ್ರೀಮನ್ನ್ಯಾಯಸುಧಾದಿ ಪ್ರೌಢ ಗ್ರಂಥಗಳನ್ನು ಅಧ್ಯಯನ ಮಾಡಿ ಶ್ರೇಷ್ಠ ಪಂಡಿತರಾಗಿ ಪ್ರಸಿದ್ಧಿ ಪಡೆದರು.
ಶ್ರೀ ಆಚಾರ್ಯರ ಪತ್ನಿ ; ಸಾಧ್ವೀ ಕಮಲಾಬಾಯಿ
ಪುತ್ರರು : ಶ್ರೀ ಕೃಷ್ಣಾಚಾರ್ಯ, ಶ್ರೀ ಮಾಧವಾಚಾರ್ಯ ಮತ್ತು ಶ್ರೀ ಶ್ರೀನಿವಾಸಾಚಾರ್ಯ
ಅಂಕಿತ : ಇಭವರದವಿಠಲ
ಉಪದೇಶ ಗುರುಗಳು :
ಶ್ರೀ ಕಮಲಾಪತಿವಿಠಲರು ( ಇವರು ಶ್ರೀ ಹರಿಕಥಾಮೃತಸಾರಕ್ಕೆ " ಭಾವದರ್ಪಣ " ಎಂಬ ವ್ಯಾಖ್ಯಾನವನ್ನು ಬರೆದ ಪೂತಾತ್ಮರು )
ಪ್ರಮಾಣ :
ಶ್ರೀ ಜಂಬುಖಂಡಿ ಆಚಾರ್ಯರು ಹರಿಕಥಾಮೃತಸಾರಕ್ಕೆ ಬರೆದ " ಭಾವಸೂಚನೆ " ಎಂಬ ಸಂಸ್ಕೃತ ವ್ಯಾಖ್ಯಾನದಲ್ಲಿ...
ಹರಿಕಥಾಮೃತಸಾರಾವತಾರಿಕಾ ಮಂಜೂಷಾಯಾ೦ ಕಮಲಾಪತಿದಾಸವರ್ಯೈ: । ಎಂದು ಪ್ರತಿ ಸ೦ಧಿಯ ಅವತರಣಿಕೆಯಲ್ಲಿಯೂ ತಮ್ಮ ಗುರುಗಳಾದ ಶ್ರೀ ಕಮಲಾಪತಿದಾಸಾರ್ಯರನ್ನು ಸ್ಮರಿಸಿದ್ದಾರೆ.
ಗ್ರಂಥಗಳು :
ಹರಿಕಥಾಮೃತಸಾರಕ್ಕೆ..
ಸಂಸ್ಕೃತದಲ್ಲಿ...
೧. ಶ್ರೀ ವ್ಯಾಸ ದಾಸ ಸಿದ್ಧಾಂತ ಕೌಮುದೀ
೨. ಹರಿಕಥಾಮೃತಸಾರ ಪಂಚಿಕಾ
೩. ಭಾವ ಸೂಚನೆ ( ಇದು ಸಂಸ್ಕೃತ ಮಿಶ್ರಿತ ಕನ್ನಡ ವ್ಯಾಖ್ಯಾನ )
೪. ಶ್ರೀ ವಿದ್ಯಾಧೀಶಾಷ್ಟಕಂ
೫. ಶ್ರೀ ವೃಂದಾವನಾಚಾರ್ಯ ಸ್ತೋತ್ರಮ್ ( ಶ್ರೀ ವಾದಿರಾಜ ಮಠಾಧೀಶರು )
೬. ಶ್ರೀ ವಿಜಯದಾಸ ಮಹೋದಯಾನಾ೦ ಸುಳಾದೇ: ಅರ್ಥ ಕಥನಮ್
೭. ಶ್ರೀ ವಿಷ್ಣುತೀರ್ಥ ವಿಜಯ ( ಶ್ರೀ ಮಾದನೂರಿನ ಶ್ರೀ ವಿಷ್ಣುತೀರ್ಥರು )
೮. ಶ್ರೀ ಸುಮಧ್ವವಿಜಯ ಸರ್ಗಾರ್ಥ:
೯. ಶ್ರೀ ಧವಳಗಂಗಾ ಸ್ತೋತ್ರಮ್
೧೦. ಅಧ್ಯಾತ್ಮರಸರಂಜನೀ ವ್ಯಾಖ್ಯಾನ
೧೧. ಶ್ರೀ ವಾದಿರಾಜ ಪ್ರಾರ್ಥನಾ
೧೨. ಷೋಡಶ ಕಲಾಭಿಮಾನಿ ದೇವತಾ ಸ್ತೋತ್ರಮ್
೧೩. ಪಿತೃಪಾದಸ್ತುತಿ: ( ತೆಲುಗು )
೧೪. ಭವ ವಿಮೋಚಕ ಶ್ರೀ ಗುರುರಾಜ ಪ್ರಾರ್ಥನಾ ( ಶ್ರೀ ವಾದಿರಾಜ ಸ್ತೋತ್ರಂ )
೧೫. ಹಿತೋಪದೇಶಃ
೧೬. ಆತ್ಮ ವೃತ್ತಾಂತಃ ( ಶ್ರೀ ಆಚಾರ್ಯರ ಜೀವನ - ಸಾಧನೆಯ ಕುರಿತು ಬೆಳಕು ಚೆಲ್ಲುವ ಐತಿಹಾಸಿಕ ದಾಖಲೆ )
೧೭. ಲಯ ಕ್ರಮ ನಿರೂಪಣಂ ( ಶೇಷ - ಗರುಡ ಮಾರ್ಗಗಳಿಂದ ಕೊಡಿದ್ದು )
೧೮. ಲಯ ನಿರೂಪಣಂ ( ಪ್ರಮೇಯಗಳಿಂದ ಕೂಡಿದ್ದು )
೧೯. ಅನನ್ಯ ಪ್ರಾರ್ಥನಾ ( ಗದ್ಯ ಪದ್ಯಗಳಿಂದ ಕೂಡಿದ ಕೃತಿ )
೨೦. ಗುರು ಸ್ತೋತ್ರ ವಿವೃತಿ ಶೋಧನಮ್ ( ಶ್ರೀ ಭಾವಿಸಮೀರ ವಾದಿರಾಜರ ಮಹಿಮಾ ಪ್ರತಿಪಾದಕವಾದದ್ದು )
೨೧. ಶ್ರೀ ವಾದಿರಾಜ ಕೃತ ಸ್ತೋತ್ರ ವ್ಯಾಖ್ಯಾನಮ್
೨೨. ಶ್ರೀ ಹಯಗ್ರೀವ ವಾದಿರಾಜ ಪ್ರಾರ್ಥನಾ
೨೩. ಸ್ವಪ್ನ ವೃಂದಾವನಾಖ್ಯಾನ ಪ್ರಾಕೃತ ವ್ಯಾಖ್ಯಾ
೨೪. ಶ್ರೀ ವಾದಿರಾಜ ಋಜುತ್ವ ವಿರೋಧಿ ಕಪೋಲಚಪೇಟಿಕಾ
೨೫. ಶ್ರೀ ವಾದಿರಾಜ ಋಜುತ್ವ ವಿರೋಧಿ ಪರಿಮರ್ದನಮ್
೨೬. ಶ್ರೀ ವಾದಿರಾಜ ಕೃತ ಅಭಯ ಸ್ತುತಿ ವಿವರಣಮ್
೨೭. ಅಪರೋಕ್ಷ ಜ್ಞಾನ ಸಾಧನಾನಿ
೨೮. ಯೋಗಿ ಋಜು ಯೋಗಿ ಸಾಧನಮ್
೨೯. ಜ್ಞಾನಹೇತುಭಕ್ತಿಸಾಧ್ಯೋಪಾಸಿತಃ
೩೦. ಶ್ರೀ ಜಯತೀರ್ಥ ಸ್ತೋತ್ರಮ್
೩೧. ಶ್ರೀಮಟ್ಟೀಕಾಕೃತ್ಪೂಜ್ಯಪೂಜಿತ ರಾಮ ಪ್ರಾರ್ಥನಾ
೩೨. ಶ್ರೀಮನ್ಮಹಾಭಾರತ ತಾತ್ಪರ್ಯ ನಿರ್ಣಯ ಟಿಪ್ಪಣೀ ಗುರುರಾಜೀಯಸಾರಃ
೩೩. ಕರ್ಮಾಕರ್ಮವಿವೇಕ:
೩೪. ಶ್ರೀ ಹನುಮತ್ಪ್ರಾರ್ಥನಾ
೩೫. ಶ್ರೀ ಬ್ಯಾಡಗೀ ಹನುಮತ್ಸ್ತೋತ್ರಮ್
೩೬. ತೀರ್ಥಪದ ನಿರೂಪಣಂ
೩೭. ಓಂಕಾರಾರ್ಥ:
೩೮. ಶ್ರೀ ರಾಮ ಮುಖ್ಯಪ್ರಾಣ ಪ್ರಾರ್ಥನಾ
೩೯. ಬದರೀ ನಾರಾಯಣ ಸ್ತುತಿ:
೪೦. ಆಪಸ್ಸೂಕ್ತಾರ್ಥ ವಿವರಣಮ್
೪೧. ನಾರಾಯಣ ನಾಮ ಸ್ಮರಣ ನಿರೂಪಣಂ
೪೨. ಬ್ರಹ್ಮಸೂತ್ರಾಧಿಕರಣ ಸಾರ ಸಂಗ್ರಹಃ
೪೩ ಕೇಶವಾದಿ ನಮನ ಪ್ರಕಾರಃ
೪೪. ವಿಷ್ಣು ಸಹಸ್ತ್ರ ಶಬ್ದಾರ್ಥ
೪೫. ಸಂಕ್ಷೇಪ ಭಾಷ್ಯ ವ್ಯಾಖ್ಯಾ
" ಶಿಷ್ಯರು "
೧. ನಿಪ್ಪಾಣಿ ಶ್ರೀ ವಾಸುದೇವಾಚಾರ್ಯರು ( ಶ್ರೀ ಷಟ್ಟುರಾಚಾರ್ಯರು - ಶ್ರೀ ಪ್ರಾಣಪತಿ ವಿಠಲ )
೨. ಶ್ರೀ ವಾಳ್ವೇಕರ ಭೀಮಾಚಾರ್ಯರು ( ಶ್ರೀ ಶ್ರೀಶಪ್ರಸನ್ನ ಕೇಶವ ವಿಠಲ )
೩ ಶ್ರೀ ವಾಳ್ವೇಕರ ವೆಂಕಣ್ಣಾಚಾರ್ಯರು
೪. ಶ್ರೀ ವಾಳ್ವೇಕರ ಮಧ್ವಾಚಾರ್ಯರು
೫. ಶ್ರೀ ಅರಳೀಕಟ್ಟೆ ನರಸಿಂಹಾಚಾರ್ಯರು, ಹತ್ತಿಬೆಳಗಲ್
೬. ಶ್ರೀ ಮುತ್ತಗಿ ಶ್ರೀನಿವಾಸಾಚಾರ್ಯರು ( ಶ್ರೀ ರಘುಪ್ರೇಮತೀರ್ಥರು )
೭. ಶ್ರೀ ಕಾಶೀ ರಾಘವೇಂದ್ರಾಚಾರ್ಯರು
" ದ್ವೈತ ಸೂರ್ಯ ಅಸ್ತಂಗತ "
" ಶ್ರೀ ಸುಧಾಕರಗುರುಗುಣ ರತ್ನಮಾಲಾ " ದಲ್ಲಿ.....
ಇತ್ಯಾದ್ಯಮಾನುಷಾಕೃತಿಂ ಕೃತ್ವಾನುಗ್ರಾಹ್ಯ ಶಿಷ್ಯಕಾನ್ ।
ಶ್ರವಣಸ್ಯಾ ಸಿತೇ ಪಕ್ಷೇ ದುರ್ಮುಖಾಭಿಧವತ್ಸರೇ ।।
ತ್ರಯೋದಶ್ಶಾ೦ ಹಿ ಪಂಪಾಯಾ೦ ಅಗಾತ್ ಸ್ವರ್ಗಂ ಗುರೋರ್ಗುರು: ।
ದೇವಾನ್ ಶ್ರೀವಾದಿರಾಡ೦ಘ್ರಿಮೃದ್ಯಶಕಥಯನ್ನಿವ ।।
" ಶ್ರೀ ಜಂಬುಖಂಡೀ ವಾದಿರಾಜಾಷ್ಟಕಮ್ "
ಶ್ರಾವಣಸ್ಯಾ ಸಿತೇ ಪಕ್ಷೇ ಹ್ಯಬ್ದೇ ದುರ್ಮಿಖಿ ನಾಮಕೇ ।
ಸ್ಥಿರವಾಸರ ಯುಕ್ತಾಯಾ೦ ತ್ರಯೋದಶ್ಯಾ೦ ಭಗೋದಯೇ ।।
ತುಂಗಭದ್ರಾ ನದೀತೀರೇ ಪಂಪಾಕ್ಷೇತ್ರ ಸಮೀಪಗೇ ।
ಕಮಲಾಪುರ ವಿಖ್ಯಾತೇ ವಸಂತಃ ಪುಟಭೇದನೇ ।।
ದುರ್ಮುಖಿ ನಾಮ ಸಂವತ್ಸರ ಶ್ರಾವಣ ಬಹುಳ ತ್ರಯೋದಶೀ ಶನಿವಾರ ಪ್ರಾಪ್ತವಾಯಿತು. ಶ್ರೀ ಆಚಾರ್ಯರು ತಾವು ದೇಹವನ್ನು ಬಿಡುವ ಕಾಲ ಸನ್ನಿಹಿತವಾಯಿತೆಂದು ಅರಿತರು. ಕೂಡಲೇ ತಮ್ಮ ಪುತ್ರರೂ ಸೇರಿದಂತೆ ಅಲ್ಲಿ ನೆರೆದಿದ್ದ ಸಮಸ್ತ ಶಿಷ್ಯ ವೃಂದವನ್ನೂ ಕರೆದೂ...
ಜನ್ಮಾಂತರದ ಪುಣ್ಯದ ಫಲದಿಂದ ಈ ಪವಿತ್ರ ಸಾಧನಾ ಭೂಮಿಯಲ್ಲಿ ವಿಪ್ರಜನ್ಮ ಅದರಲ್ಲಿಯೂ ವೈಷ್ಣವ ಜನ್ಮ ಪ್ರಾಪ್ತವಾಗಿದೆ.
ಇದಕ್ಕೆ ಕಳಶವಿಟ್ಟಂತೆ ಋಜೂತ್ತಮರಾದ ಶ್ರೀಮದ್ವಾದಿರಾಜ ಪೂಜ್ಯ ಚರಣರ ಸೇವಾ ಭಾಗ್ಯವೂ ಲಭಿಸಿದೆ. ಈ ಸೌಭಾಗ್ಯವನ್ನು ಎಂದಿಗೂ ವ್ಯರ್ಥಗೊಳಿಸದಿರಿ.
ಶ್ರೀ ವಿಷ್ಣು ಸರ್ವೋತ್ತಮನೆಂಬ ಜ್ಞಾನ ನಿಶ್ಚಲವಾಗಿರಲಿ.
ಶ್ರೀಮದಾಚಾರ್ಯರ ಸಚ್ಛಾಸ್ತ್ರಗಳನ್ನು ಸದಾ ಮನನ ಮಾಡುತ್ತಿರಿ.
ಶ್ರೀ ಲಾತ್ಯವ ಚಕ್ರವರ್ತಿಗಳಾದ ಶ್ರೀ ವಾದಿರಾಜ ಗುರುಸಾರ್ವಭೌಮರು " ಭಾವಿ ಸಮೀರ ಪದಾರ್ಹ " ರೆಂಬ ವಿಶ್ವಾಸ ಸದಾ ಇರಲಿ.
ಎಂದು ಉಪದೇಶ ಮಾಡಿದರು. ನಮ್ಮ ಅವಸಾನವಾದ ನಂತರ ನಮ್ಮ ಪಾರ್ಥಿವ ಶರೀರದ ಉತ್ತರ ಕ್ರಿಯೆಯನ್ನು ಹಂಪೆಯ ಚಕ್ರತೀರ್ಥದ ದಂಡೆಯಲ್ಲಿ ಮಂತ್ರಾಕ್ಷತೆಗಳಿರುವ ಬಂಡೆಯೊಂದರ ಮೇಲೆ ನಡೆಸಿ ಎಂದು ಆದೇಶವಿತ್ತು ಎಲ್ಲರನ್ನೂ ಅನುಗ್ರಹಿಸಿದರು.
ನಂತರ ತಮ್ಮ ಆರಾಧ್ಯ ಗುರುಗಳ ಚರಣವನ್ನು ಸ್ಮರಿಸಿ ಅವರ ಅಂತಃಸ್ಥನಾದ ಶ್ರೀ ಲಕ್ಷ್ಮೀಹಯಾಸ್ಯಾಭಿನ್ನ ತಮ್ಮ ಬಿಂಬ ಮೂರ್ತಿಯ ದರ್ಶನದಿಂದ ತಮ್ಮ ಆಂತರ್ಯದಲ್ಲೇ ಸಂತೋಷ ಪಟ್ಟರು.
ಈ ಸಂದರ್ಭದಲ್ಲಿಯೇ ತಮ್ಮ ಪುತ್ರರು ನೀಡಿದ ಶ್ರೀ ರಾಜರ ಪವಿತ್ರ ಮೃತ್ತಿಕಾ ಜಲವನ್ನು ಸೇವಿಸಿ ಲಯ ಚಿಂತನೆ ಮಾಡುತ್ತಾ ತಮ್ಮ ಅವತಾರ ಕಾರ್ಯವನ್ನು ಸಮಾಪ್ತಿಗೊಳಿಸಿದರು.
ಶ್ರೀ ವಾದಿರಾಜ ಗುರುಸಾರ್ವಭೌಮರ " ಋಜುತ್ವ ಸ್ಥಾಪನೆ " ಯಲ್ಲಿ ಅಲ್ಲಿಯ ತನಕ ಜಗತ್ತು ಕಂಡರಿಯದ ಧೈರ್ಯ, ಸಾಹಸಗಳನ್ನು ಮೆರೆದ " ಜಂಬುಖಂಡಿ " ಎಂಬ ಹೆಸರಿನ ಸೂರ್ಯ ಕಣ್ಮರೆಯಾಗಿ ಹೋಯಿತು.
ಕಂಡು ಬಹಳ ಧನ್ಯನಾದೆನೋ ಸಿರಿ ಮಂಗಳಾತ್ಮರ ।। ಪಲ್ಲವಿ ।।
ಕಂಡು ಬಹಳ ಧನ್ಯನಾದೆ ।
ಪುಂಡರೀಕಾಕ್ಷ ತೋ೦ಡರ ಪಾದ ।
ಪುಂಡರೀಕವಿಕ್ಷನ । ಮಾತ್ರಘ ।
ತುಂಡುಗೈಸಿ ಪೊರೆವರನ್ನ ।। ಅ.ಪ ।।
ಆ ಸುಕೃತ ಜಂಬುಖಂಡೀ । ಶ್ರೀನಿ ।
ವಾಸಾರ್ಯಾಬ್ಧಿ ಸಂಭವ । ಕೋವಿದಾಗ್ರಣಿಯು । ಆ ।
ದ ಶ್ರೀ ವಾದಿರಾಜಾಚಾರ್ಯರನ್ನ ।। ಚರಣ ।।
ಭೂತದಯಾ ಶೀಲಶಮ । ದಮೋ ।
ಪೇತರಾಗಿ ಪೃಥ್ವಿಯೊಳು । ಶ್ರೀ ।
ನಾಥನೊಲಿಮೆಯನ್ನು ಪಡೆದು ।
ಖ್ಯಾತ ಭುವನ ಪಾವನ ಮಾಳ್ಪನ ।। ಚರಣ ।।
ಶ್ರೀಶಪ್ರಾಣೇಶವಿಠಲ । ಹೃದಯಾ ।
ಕಾಶದಲ್ಲಿ ಸಿರಿಯ ಸಹಿತ ।
ವಾಸವಾಗಿ ತೋರಿ ಪೊಳೆವ ।
ಭಾಸುರ ಕೀರ್ತಿಲಿ ಮೆರೆವರನ್ನ ।। ಚರಣ ।।
(ಕೃಪೆ- ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ)
ಹರೇ ಶ್ರೀನಿವಾಸ.... ಶ್ರೀವಾದಿರಾಜಾಚಾರ್ಯ ಕಮಲಾಪುರದಲ್ಲಿ ಪಂಚಮುಖಿ ಪ್ರಾಣದೇವರ ಮೂರ್ತಿ ಪ್ರತಿಷ್ಠಾಪಿಸಿರುವುದು ವಿಶೇಷ..
************
|ಶ್ರೀ ಜಂಬುಖಂಡಿ ಆಚಾರ್ಯರ ಜೀವನ ಚರಿತ್ರೆ||
ಬುದ್ದಿಕೋಟಿ ಮದ್ದೂರಾಯರು ಎನ್ನುವವರು ಶ್ರೀ ಜಂಬುಖಂಡಿ ಆಚಾರ್ಯರ ಶಿಷ್ಯರು.ಅವರ ತಂದೆಯವರು ಆಚಾರ್ಯರ ಸಮಕಾಲೀನರು .ಅವರು ಆಗಿನ ಕಾಲದಲ್ಲಿ ಅಮಲ್ದಾರ ರಾಗಿದ್ದರು. ಅಂದರೆ ಇವಾಗಿನ ತಹಶಿಲ್ದಾರರ ಹುದ್ದೆಗೆ ಸಮಾನ.
ಶ್ರೀ ಜಂಬುಖಂಡಿ ಆಚಾರ್ಯ ರಿಗು ಅವರಿಗು ಸಹ ಸಂಪರ್ಕ ವಿತ್ತು.ಹಾಗಾಗಿ ಅವರ ಮನೆಗೆ ಆಚಾರ್ಯರು ಭೇಟಿ ಕೊಡುತ್ತಾ ಇದ್ದರು.
ಒಂದು ಸಾರಿ ಆಚಾರ್ಯರು ಬುದ್ದಿಕೋಟಿ ಅವರ ಮನೆಗೆ ಬಂದಿದ್ದಾರೆ.ಸ್ನಾನ, ಪೂಜೆ ಗಳು ಆದಮೇಲೆ ಭೋಜನವನ್ನು ಮುಗಿಸಿ ಕೈ ತೊಳೆಯಲು ಹೊರ ಜಗುಲಿಗೆ ಬಂದಿದ್ದಾರೆ.ಮಧ್ಯಾಹ್ನದ ಎರಡು ಗಂಟೆಯ ಸಮಯ.
ಕೈ ತೊಳೆಯುವ ಸಮಯದಲ್ಲಿ ಅಲ್ಲಿ ಗೆ ಒಬ್ಬ ಬ್ರಾಹ್ಮಣ ಅಂಚಿನ ಧೋತರ,ಶರ್ಟು ಕೋಟು ಧರಿಸಿ,ತಲೆಯ ಮೇಲೆ ರುಮಾಲು ಸುತ್ತಿ ಕೊಂಡು ಭವ್ಯವಾದ ಮುದ್ರೆ,ಅಂಗಾರ ಅಕ್ಷತಾದಿಗಳಿಂದ ಶೋಭಿಸುವ ಬ್ರಾಹ್ಮಣ ತನ್ನ ಕೈಯಲ್ಲಿ ಕಾಗದದ ಪತ್ರಗಳ ಗಂಟನ್ನು ಹಿಡಿದುಕೊಂಡು ಬುದ್ದಿ ಕೋಟಿ ಅಮಲ್ದಾರ ರ ಮನೆಯ ಹೊರಗಡೆ ಬಂದು ನಿಂತಿದ್ದು ಕಂಡು ಆಚಾರ್ಯರು
ಯಾರು! ನೀವು?? ಏನಾದರು ಬೇಕಾಗಿತ್ತು?? ಬಂದ ಉದ್ದೇಶ ಏನು ಎಂದು ಕೇಳಲು
ಆ ಬ್ರಾಹ್ಮಣ ತನ್ನ ಪರಿಚಯವನ್ನು ಮಾಡಿಕೊಂಡು ಆಚಾರ್ಯರ ಪಾದಕ್ಕೆ ನಮಸ್ಕಾರ ಮಾಡಿದ.ಅವಾಗ ಆಚಾರ್ಯರು ಬಂದಂತಹ ಬ್ರಾಹ್ಮಣ ಸಾಮಾನ್ಯ ನಲ್ಲ.ಒಳ್ಳೆಯ ಜೀವಿ,ಮೇಲಾಗಿ ವಿಷ್ಣು ಭಕ್ತ ಎಂದು ತಿಳಿದುಕೊಂಡವರಾಗಿ ಅವರಿಗೆ ಒಳಗಡೆ ಕುಳಿತಿರಲು ಹೇಳಿ ತಾವು ಒಳಗಡೆ ಹೋಗಿ ಬುದ್ದಿಕೋಟಿ ಅಮಲ್ದಾರ ರಿಗೆ ಹೇಳುತ್ತಾರೆ
"ಅದ್ಯಾವುದು ಹಾಲಗಿಮರ್ಡಿ ಯಂಕಪ್ಪನವರಂತೆ!!,ಕಾಗದ ಪತ್ರ ತರಲು ಹೇಳಿದ್ದರಿಂದ ತಂದಿದ್ದಾರಂತೆ.ಹೋಗಿ ವಿಚಾರಿಸು ಬುದ್ದಿ ಕೋಟಿ" ಅಂತ ಹೇಳಿದರು.
ಆಗ ಅಮಲ್ದಾರ ರು ತಮ್ಮ ಅಧಿಕಾರದ ಅಮಲಿನಲ್ಲಿ
"ಅವನೇ!!,ನನ್ನ ಕೈ ಕೆಳಗೆ ಕೆಲಸ ಮಾಡುವ ಹಾಲಗಿ ಮರ್ಡೀ ಕುಲಕರ್ಣಿ ವೆಂಕಪ್ಪನೇ!ಬಂದಿದ್ದಾನೆಯೇ?
ಕೆಲವು ಮಹತ್ವದ ತಪಾಸಣೆಯ ಕಾಗದ ಪತ್ರಗಳನ್ನು ತರಲು ಹೇಳಿದ್ದೆ ಬಂದಿರಬೇಕು ಎಂದು ಹೇಳಿ ಬಂದಂತಹ ಬ್ರಾಹ್ಮಣ ನಿಗೆ ಒಳಗಡೆ ಕುಳಿತು ಕೊಳ್ಳಲು ಸಹ ತಿಳಿಸದೇ ತಮ್ಮ ಕಾರ್ಯಕ್ರಮ ದಲ್ಲಿ ಮಗ್ನರಾದರು.
ಈ ನಿರ್ಲಕ್ಷ್ಯ ವನ್ನು ಕಂಡು ಶ್ರೀ ಜಂಬುಖಂಡಿ ಆಚಾರ್ಯ ರಿಗೆ ಸಹನೆವಾಗಲಿಲ್ಲ.
ಮನೆಗೆ ಬಂದ ವ್ಯಕ್ತಿ, ಅದರಲ್ಲೂ ಪರಮ ಭಾಗವತ,ತನ್ನ ಕೆಳಗಿನ ಕೆಲಸ ಮಾಡುವವನೇ ಆಗಿದ್ದರು ಕುಳಿತು ಕೊಳ್ಳಲು ಹೇಳುವಷ್ಟು ಸೌಜನ್ಯ ವಿಲ್ಲದೇ ಇರುವದು,ಕಂಡು ಬಹಳ ಕೋಪ ವನ್ನು ತರಿಸಿತು...
ತಕ್ಷಣ ಅವರ ಬಾಯಿಯಿಂದ
"ಏ! ಬುದ್ದಿಕೋಟಿ!! ಅವನಾರೆಂದು ತಿಳಿದಿರುವಿ,ಸಾಮಾನ್ಯ ವ್ಯಕ್ತಿ ಅಲ್ಲ .ಆತನಲ್ಲಿ ತೋರಿದ ಈ ನಿನ್ನ ತಿರಸ್ಕಾರ ಮುಂದೆ ನಿನ್ನ ವಂಶ ನಿರ್ವಂಶಕ್ಕೆ ಕಾರಣವಾದೀತು?? ಎಂದು ಎಚ್ಚರಿಸಿದರು. ಆದರು ಸಹ ಅಮಲ್ದಾರ ತನ್ನ ಅಧಿಕಾರ ದ ಅಮಲಿನಲ್ಲಿ ಅವರ ಮಾತಿಗೆ ಬೆಲೆ ಕೊಡಲಿಲ್ಲ.
ಆಚಾರ್ಯರ ಮಾತಿನಂತೆ ಮುಂದೆ ಅವರ ಮಗನಾದ ಮದ್ದೂರಾಯರು ಸಂತಾನ ಪ್ರಾಪ್ತಿ ಗಾಗಿ ಅನೇಕ ಪೂಜೆ ಯಜ್ಞಾದಿಗಳನ್ನು ಮಾಡಿದರು ಫಲಿಸದೇ ಸಂತಾನವಿಲ್ಲದೇ ಅವರು ಕೊರಗಬೇಕಾಯಿತು.
ದೊಡ್ಡವರಾದ ಜ್ಞಾನಿಗಳ ಮಾತನ್ನು ನಿರ್ಲಕ್ಷ್ಯ ಮಾಡಿದ ಪರಿಣಾಮವಾಗಿ ಅವರ ವಂಶ ಬೆಳೆಯದೇ ಹೋಯಿತು.
ಸಹಜವಾಗಿ ಎಚ್ಚರಿಕೆ ಕೊಟ್ಟ ಅವರ ಮಾತಿನಲ್ಲಿ ಇಷ್ಟು ಶಕ್ತಿ ಇರಬೇಕಾದರೆ ಆಚಾರ್ಯರ ತಪಸ್ಸಿನ ಸಾಮರ್ಥ್ಯ ಎಷ್ಟು ಇರಬಹುದು ಎಂಬುದನ್ನು ಊಹಿಸಬಹುದಾಗಿದೆ. ಅವರೊಬ್ಬ ಸಿದ್ದ ಪುರುಷರು.
ಮನೆಗೆ ಬಂದ ಭಗವದ್ಭಕ್ತರಿಗೆ, ಜ್ಞಾನಿಗಳಿಗೆ, ಅಥವ ಅವರನ್ನು ಕಂಡಾಗ ತಿರಸ್ಕಾರ,ಅಪಹಾಸ್ಯ ನಿಂದನೆ ಮಾಡಿದರೆ, ಸಾಕ್ಷಾತ್ ಭಗವಂತನು ಅವರಿಗೆ ಏಳೇಳು ಜನ್ಮಕ್ಕೂ ಅಥವಾ ಅದಕ್ಕಿಂತ ಹೆಚ್ಚಾಗಿ ಬಹಿಷ್ಕಾರ ಹಾಕಿ ಸತ್ಸಂಗದಿಂದ ದೂರ ಮಾಡಿ,ಸಾಧನಾ ಮಾರ್ಗ ಮತ್ತು ತತ್ವಜ್ಞಾನದ ವಿಮುಖರನ್ನಾಗಿ ಮಾಡುತ್ತಾನೆ...
ಒಟ್ಟಿನಲ್ಲಿ
ಭಗವದ್ಭಕ್ತರ ಸೇವೆ,ಅವರಿಗೆ ತೋರಿಸುವ ಗೌರವ ಮರ್ಯಾದೆಗಳು,ಅವರ ಅನುಗ್ರಹ ವೇ ಶ್ರೀ ಹರಿಯ ಪ್ರೀತಿಗೆ ಕಾರಣ ಮತ್ತು ನಮ್ಮ ಜನ್ಮ ಉದ್ದಾರವಾಗಲು ಕಾರಣ...
ಯಾರೇ ಆಗಲಿ ಭಗವಂತನ ಭಕ್ತರಿಗೆ ಅಗೌರವ ತೋರಿಸಬೇಡಿ.ಅದು ನಮ್ಮ ವಿನಾಶದ ಹಾದಿ...
ಹರಿ ಶರಣರಪಾಲಾ ವಿಜಯವಿಠ್ಠಲ| ತನ್ನ ಸ್ಮರಣೆ ಮಾಡುವಗೆ ಅಂದರೆ ತಾಳಲರಿಯನು||
*************
|ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರು||
✍️ ಶ್ರೀ ಜಂಬುಖಂಡಿ ವಾದಿರಾಜ ಆಚಾರ್ಯರು ಸೋಂದಾ ಕ್ಷೇತ್ರದಲ್ಲಿ ಒಮ್ಮೆವಾಸ್ತವ್ಯ ಮಾಡಿದ್ದಾರೆ.
ಅಂದು ಏಕಾದಶಿ. ರಾತ್ರಿಯಲ್ಲಿ ಜಾಗರಣೆಯ ನಿಮಿತ್ತವಾಗಿ
ಶ್ರೀವಾದಿರಾಜ ತೀರ್ಥ ಗುರುಗಳ ಸನ್ನಿಧಿಯಲ್ಲಿ ಸಕಲ ಭಕ್ತರು ನೆರೆದಿದ್ದಾರೆ.
ಭಗವಂತನ ಮಹಿಮೆಯನ್ನು ಸಾರುವ ಶ್ರೀ ಮದ್ಭಾಗವತದ ಕಥಾ ಪ್ರಸಂಗ ನಡೆದಿದೆ.
ಅವಾಗ್ಗೆ ಅಲ್ಲಿ ಪೀಠದಲ್ಲಿ ಇದ್ದ ಶ್ರೀಗಳ ಆದಿಯಾಗಿ ಸಹ
ಎಲ್ಲಾರು ಪಾಲ್ಗೊಂಡು ಇದ್ದಾರೆ.
ಒಮ್ಮೆಗೆ ಆರ್ತಧ್ವನಿ..ಜೋರಾಗಿ ಅಳುವದು ಕೇಳಿಸಿತು.
ಸೋಂದಾ ಕ್ಷೇತ್ರಕ್ಕೆ ಬಂದ ಒಬ್ಬ ಭಕ್ತನಿಗೆ ಹಾವು ಕಚ್ಚಿ ಆ ವ್ಯಕ್ತಿ ಮೃತನಾಗಿದ್ದಾನೆ.ಅವನ ಬಂಧುಗಳು ಗೋಳಾಡುತ್ತಾ ಇದ್ದಾರೆ.
ತಕ್ಷಣ ಆಚಾರ್ಯರು ಆ ಧ್ವನಿ ಯನ್ನು ಕೇಳಿ ಕೂಡಲೇ ಸಮೀಪಿಸಿ ವಸ್ತ್ರ ಚ್ಛಾದನ ಮಾಡಿದರು.
ನೋಡುವವರಿಗೆಲ್ಲ ಆಶ್ಚರ್ಯ!!
ಶ್ರೀ ಜಂಬುಖಂಡಿ ವಾದಿರಾಜ ಆಚಾರ್ಯರು ಎದ್ದು ನಿಂತು ಕೈಯಲ್ಲಿ ತುಳಸಿ ದಳವನ್ನು ಹಿಡಿದು ಸಮಗ್ರ ಶ್ರೀ ಮದ್ಭಾಗವತ ಪಾರಾಯಣ ವನ್ನು ಮುಂಜಾನೆಯವರೆಗೆ ಮುಖೋದ್ಗತವಾಗಿ ಪಠಿಸಿದರು.
ಶ್ರೀ ವಾದಿರಾಜರ ಸನ್ನಿಧಿಯಲ್ಲಿ ಆ ತುಳಸಿ ದಳವನ್ನು ಸಮರ್ಪಿಸಿ ಅವರ ಅಂತರ್ಯಾಮಿಯಾಗಿ ಇರುವ ಮಧ್ವ ವಲ್ಲಭನಾದ ಆ ಹಯಗ್ರೀವ ದೇವನನ್ನು ಪ್ರಾರ್ಥನೆ ಮಾಡಿ ಆ ಭಕ್ತನಿಗೆ ಜೀವದಾನ ಮಾಡೆಂದು ಪ್ರಾರ್ಥನೆ ಮಾಡಿದರು.
ಪ್ರಾಣಪತಿಯ ಭಕ್ತರಾದಆಚಾರ್ಯರು ಮಾಡಿದ ಪ್ರಾರ್ಥನೆ ವ್ಯರ್ಥ ವಾಗಲಿಲ್ಲ.
ಹೇಗೆ ಮಲಗಿರುವ ವ್ಯಕ್ತಿ ತಕ್ಷಣ ಏಳುವನೋ ಹಾಗೇ ಆ ಭಕ್ತ ನು ಎದ್ದು ಬಂದು ಎಲ್ಲರಿಗು ನಮಸ್ಕರಿಸಿ ದನು.
ಆಚಾರ್ಯರು ಪಾದಕ್ಕೆ ಎರಗಿ ಧನ್ಯನಾದನು.
"ಇದೆಲ್ಲವು ಶ್ರೀ ಹಯಗ್ರೀವ ದೇವರ ಶ್ರೀವಾದಿರಾಜತೀರ್ಥ ಗುರುಗಳ ಹಾಗು ಭೂತರಾಜರ ಅನುಗ್ರಹದಿಂದ ಆಗಿದ್ದು ಬಹಳ ವಿಶೇಷ ಅಂತ ಹೇಳಿ ಅವರನ್ನು ಆಶೀರ್ವಾದ ಮಾಡುತ್ತಾರೆ.
ಶ್ರೀ ವಾದಿರಾಜ ಗುರುಗಳಲ್ಲಿ ಅನನ್ಯ ಭಕ್ತಿ ಇಟ್ಟವರು ಮತ್ತು ಅವರ ಋಜುತ್ವವನ್ನು ಪ್ರತಿಪಾದನೆಯನ್ನು ಮಾಡಲು ಉಪದೇಶದಲ್ಲಾಗಲಿ ಮತ್ತು ಸಮರ್ಥನೆ ಯಲ್ಲಾಗಲಿ ಎಂದು ಹಿಂದೇಟು ಹಾಕಿದವರಲ್ಲ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಕಂಡು ಬಹಳ ಧನ್ಯನಾದೆನು ಸಿರಿ ಮಂಗಳಾತ್ಮರ|
ಕಂಡು ಬಹಳಧನ್ಯನಾದೆ ಪುಂಡರೀಕಾಕ್ಷ ತೋಂಡರ ಪಾದ||
........
ಕೋವಿದಾಗ್ರಣಿಯು ಆದ ಶ್ರೀ ವಾದಿರಾಜಚಾರ್ಯರನ್ನ||
..
ಶ್ರೀಶ ಪ್ರಾಣೇಶವಿಠ್ಠಲ ಹೃದಯಾಕಾಶದಲ್ಲಿ ಸಿರಿಯು ಸಹಿತ|
ವಾಸವಾಗಿ ತೋರಿ ಪೊಳೆವ ಭಾಸುರ ಕೀರ್ತಿಲಿ ಮೆರೆವರನ್ನ||
🙏ಸ್ಮರಿಸು ಗುರುಗಳ ಮನವೇ🙏
**********
.

No comments:
Post a Comment