Thursday, 1 August 2019

vyasatatwajna teertharu venisomapura 1800 bidi sanyasi rayara mutt shravana bahula ashtami ವ್ಯಾಸತತ್ತ್ವಜ್ಞತೀರ್ಥರು



info is from FB madhwanet--->
shri vyAsatatvagna tIrtharu

Birth Place   –   Aiji

Father’s Name –  Sri Venkata Narasimhacharya

Janma Naama  –  Aiji Venkataramacharya

Vidya Gurugalu – Gopala Dasaru

puNya dina: shrAvaNa krishNa ashTami

parampare : biDi sanyAsigaLu in rAyara maTa

Period: 1704 - 1800

gurugaLu: shri bhuvanEndra tIrtharu of rAyara maTa and shri gOpAla dAsaru

vidyA shisyaru: mAdanUr vishNu tIrtharu

brindAvana: vENi sOmapura on the banks of Tungabhadra

ankita: vAsudEva viTTala



His pUrvAshrama name was Ayiji venkataramaNAchAr and he was born in Ayiji to Ayiji venkaTa narasimhAchArya, a great mAdhwa scholar. venkaTa narasimhAchArya was a disciple of bhuvanEndra tIrtharu of rAyara maTa. He was also a contemporary of shri gOpAla dAsaru. venkaTa narasimhAchArya once asked shri gOpAla dAsaru about the future of his son. gOpAla dAsaru mentioned that venkaTaramaNa would become a great scholar. He indeed became a great scholar and as per advise of shri gOpAla dAsaru took sanyAsa from shri bhuvanEndra tIrtharu. He was also a great devotee of rAyaru. He also took the ankita of "vAsudEva viTTala" and composed many dEvaranAmAs. One of his popular ones is "bandano gOVinda, chandadi Ananda...". He decided to remain a haridAsa - sanyAsi and declined the pITa of rAyara maTa.
shri vyAsatatvagna tIrtha karArchita shridEvi, bhUdEvi, samEta srInivAsa dEvaru is being worshipped by shri suvidyEndra tIrtharu now.
shri vyAsatatvagna tIrtharu has consecrated several idols in vENisOmapura, where he attainted brindvana.
1. vENugOpAla swAmy

2. shODasabAhu narasimha dEvaru

3. prANa dEvaru

4. rAma dEvaru

5. hayagrIva dEvaru

His works:
- mAnasa smruthi

- advaita kuTTana

- nyAya damana

- kulisha

- vyAkyAna on nyAya sudha

- ubhayAnauchiti

- sudhAdyukti rahasya

- tatvaprakAshika TippaNi

- tAtparya chandrika TippaNi

- nyAyasudhardhakulisha (nyAyAmruta vyAkhyAna)

- vishNu-tatva-viNirNaya-TIka: guru prabha and laghu prabha

- yati praNava kalpa vyAkyAna

- mandanandini – vyAkhyAna for bhAgavatha saptama skandha
- gAyatri sAra sangraha – gururasaranjini

In 2013, shri suyatIndra tIrtharu and shri subhudEndra tIrtharu of rAyara maTa visited vENisOmapura and did samarpaNe of "silver kavacha" to shri vyAsatatvagna tIrtharu.
In 2014, shri vidyAdIsha tIrtharu of palimAru maTa visited vENisOmapura and did pUjE to shri vyAsatatvagna tIrtharu.
shri krishNArpaNamastu...
[Compiled from various sources...]
*******

info from sumadhwaseva.com--->

It is said that Sri Vyasa Tatvajnaru installed the Pranadevara pratima in front of Rayaru @ Mantralaya

He preferred to be a Haridasa,  and handed over all the idols to the Mantralaya Seer during his period,, Sri Subodendra Tirtharu, who was his disciple.  shrI bhU samEtha shrI shrInivAsa dEvaru and other idols which were worshipped by Sri Vyasa Tatvajnaru is being worshipped by Sri Suvidyendra Tirtharu, the priya shishya of Sri Sushmeendra Tirtharu.

Contemporaries – Sri Bhuvanendra Tirtharu, Sri Satyapriya Tirtharu, Sri Satyabodha Tirtharu, Sri Madanuru Vishnu tirtharu, Sri Gopaladasaru, Sri Jagannatha Dasaru,

Vrundavana – Veni Somapura


His works :


  1. Tatva prakashikaTippani

  2. Tatparya ChandrikaTippani

  3. NyayasudardhaKulisha (NyayaamrutaVyakyana)

  4. Vishnu-tattva-vinirnaya-tika, – Guru prabha and laghu prabha

  5. Yati pravanavakalpa Vyakyana

  6. Mandanandini – Vyakyana for Bhagavatha Saptama Skandha

  7. Gayatri Saara Sangraha –  Gururasaranjini




Some of his devaranamas with ankita Vasudeva Vittala –


  • ಯಾತರವ ನಾನಲ್ಲವೋ ಹರಿಯೇ |

  • ಬಂದ ಕೃಷ್ಣ ಚಂದದಿಂದ ಬಂದ ನೋಡೆ |

  • ರಾಜಮಣಿ ಗುರುರಾಜ ಮಣಿ

*****

|| ಶ್ರೀ ವ್ಯಾಸತತ್ವಜ್ಞತೀರ್ಥ ಗುರುಭ್ಯೋ ನಮಃ ||

ಮಧ್ವಾಚಾರ್ಯ ಮೂಲಮಹಾಸಂಸ್ಥಾನ ದಕ್ಷಿಣಾದಿ ಕವೀಂದ್ರಮಠ ಈಗಿನ ಶ್ರೀರಾಘವೇಂದ್ರ ಸ್ವಾಮಿಗಳ ಮಠದ  ಶ್ರೀಭುವನೇಂದ್ರತೀರ್ಥರ ಕರಕಮಲ ಸಂಜಾತರಾದ ಅಗ್ನಿ ದೇವರ ಅಂಶ ಸಂಭೂತರಾದ ದೃಷ್ಟದ್ಯುಮ್ನನ ಅವತಾರಾದವರು ಶ್ರೀವ್ಯಾಸತತ್ವಜ್ಞತೀರ್ಥರು. 

ಶ್ರೀ ನರಸಿಂಹಾಚಾರ್ಯರ ದಂಪತಿಗಳಿಗೆ ಜನಿಸಿದ ಸುಪುತ್ರರೆ ಶ್ರೀ ವೆಂಕಟರಾಮಣಾಚಾರ್ಯರು. ಶ್ರೀನರಸಿಂಹಾಚಾರ್ಯರು ಮಹಾ ವಿದ್ವಾಂಸರು. ಒಂದು ದಿನ ಶ್ರೀನರಸಿಂಹಾಚಾರ್ಯರ ಮಡದಿ ಗೋಪಾಲ ದಾಸರ ಕೀರ್ತನೆ ಹೇಳುತ್ತಿದ್ದರು.

ವಗತನದಲ್ಲಿ ಸುಖವಿಲ್ಲ ಅದ ನಾನೊಲ್ಲೆನೆಂದರೆ ಬಿಡದಲ್ಲಾ
ಹಗರಣ ಜಗದೊಳು ಮಿಗಿಲಾಯಿತು ಪನ್ನಗಶಯನ ನಗರ ನಿವಾಸ॥

ಕೀರ್ತನೆ ಕೇಳಿದ ಆಚಾರ್ಯರು ಮನಸ್ಸಿಗೆ ತುಂಬಾ ಹತ್ತಿರಯೆಂದೇನಿಸಿತು. ಸಮಕಾಲೀನರಾಗಿದ ಗೋಪಾಲದಸರಿಗೆ ಭೇಟಿಯಾಗಬೇಕೆಂದು ಇಚ್ಛೆ ಆದರೆ ತಾವು ಸ್ವತಃ ಪಂಡಿತರಾಗಿ ಹರಿದಾಸರಿಗೆ ಹೇಗೆ ಭೇಟಿಯಾಗುವುದು ಎಂದು ವ್ಯಾಕುಲದ ಮನೋಭಾವ.

ಶ್ರೀಗೋಪಾಲ ದಾಸರು ಗಾಯತ್ರಿಸಿದ್ಧಿಯಿಂದ ನುಡಿದಿದೆಲ್ಲ ಸತ್ಯವಾಗಿ ಜ್ಯೋತಿಷಿಗಳಾಗಿ ಖ್ಯಾತಿಯನ್ನು ಹೊಂದಿದರು. ತಮ್ಮ ಮಗನ ಭವಿಷ್ಯ ಕೇಳಲು ಶ್ರೀ ನರಸಿಂಹಾಚಾರ್ಯರ ಗೋಪಾಲದಾಸರ ಹತ್ತಿರ ಬಂದಿರುತ್ತಾರೆ.ಅಪರೋಕ್ಷ ಜ್ಞಾನಿಗಳಾದ ದಾಸರು ಆಚಾರ್ಯರ ಮುಖವನ್ನು ನೋಡಿ -
ಆಚಾರೆ , ಬರೆ ಮಗನ ಚಿಂತಿ ಹತ್ಯದೇನು ? ಅವ ಬಹಳ ದೊಡ್ಡ ವಿದ್ವಾಂಸ ಆಗ್ತಾನೆ ಬಿಡ್ರಿ , ಚಿಂತಿ ಬ್ಯಾಡ ಅಂತ ಗೋಪಾಲದಸರು ಅಭಯನೀಡಿದರು.
ಶ್ರೀವೆಂಕಟರಮಣಾಚಾರ್ಯರು ಗೋಪಾಲದಸರ ಪ್ರಭಾವಕೆ ಒಳಗಾಗಿ ದಾಸರ ಅನುಯಾಯಿಗಳಾಗುತ್ತಾರೆ. 

ಶ್ರೀವೆಂಕಟರಮಣಾಚಾರ್ಯರು ತಮ್ಮ ತಂದೆಯಂತೆ ಪ್ರಚಂಡ ಪಂಡಿರಾಗಿದರು. ಗೋಪಾಲದಾಸರ ಪ್ರಭಾವದಿಂದ ಶಾಸ್ತ್ರದ ಜೊತೆಯಲ್ಲಿ ಹರಿದಾಸ ಸಾಹಿತ್ಯದಲ್ಲಿಯೂ ಪಾಂಡಿತ್ಯ. 
ಬಿಚುಪಲ್ಲಿ ಶ್ರೀವ್ಯಾಸರಾಜ ಪ್ರತಿಷ್ಠಾಪಿತ ಶ್ರೀಪ್ರಾಣದೇವರ ಸನ್ನಿಧಿಯಲ್ಲಿ 
ಶ್ರೀವೆಂಕಟರಮಣಾಚಾರ್ಯರು ಬಂದಿಳಿದು, ಈ ಪರಮ ಪುಣ್ಯಕ್ಷೇತ್ರವು ಸಾಧನೆಗೆ ಅನುಕೂಲವಾಗುವಂತಾದ್ದು ಎಂದು ತಿಳಿದರು. 
ಶ್ರೀಮುಖ್ಯಪ್ರಾಣದೇವರ ಪರಮಾನುಗ್ರಹಕ್ಕೆ ಪಾತ್ರರಾದ ಆಚಾರ್ಯರಿಗೆ ಎಲ್ಲವೂ ಕೈಸೇರಿತು. ಅಂದರೆ ಶ್ರೀವಾಯುದೇವರ ಮುಖಾಂತರ 
ಮೋಕ್ಷಪ್ರದನಾದ  “ವಾಸುದೇವವಿಠಲ’’ ಎಂಬ ಅಂಕಿತವು ಶ್ರೀಗೋಪಾಲದಾಸರಿಂದಲೇ 
ಪ್ರಾಪ್ತವಾಯಿತು.ಆಚಾರ್ಯರ ಪಾಂಡಿತ್ಯನೋಡಿ ಶ್ರೀ ಭುವನೇಂದ್ರತೀರ್ಥರು ಸಂಸ್ಥಾನಕೆ ಯೋಗ್ಯರಾದ ಶಿಷ್ಯರೆಂದು ಪರಿಗಣಿಸಿ ಆಚಾರ್ಯರಿಗೆ ಆಶ್ರಮ ನೀಡಿದರು. ಪರಮ ವೈರಾಗ್ಯಶಾಲಿಗಳಾದ ಶ್ರೀವ್ಯಾಸತತ್ವಜ್ಞತೀರ್ಥರು ಕೆಲವುದಿನಗಳ ನಂತರದಲ್ಲಿ ಪೀಠವನು ತ್ಯಾಗಮಡಿದರು.

ಶ್ರೀಗಳ ತಪಶಕ್ತಿ :

ರಾಮ ಭೂಪಾಲನ ಸಂಸ್ಥಾನಕೆ ಶತ್ರುಗಳು ನುಗ್ಗಿ ಬಂದಿದ್ದರು. ಶತ್ರುಗಳ ಅಟ್ಟಹಾಸಕೆ ರಾಜ್ಯ ಕಳೇದುಕೊಳ್ಳುವ ಭೀತಿ. ಇಂತಃ ಸಂದರ್ಭದಲ್ಲಿ 
ರಾಮ ಭೂಪಾಲ ಶ್ರೀವ್ಯಾಸತತ್ವಜ್ಞತೀರ್ಥರ ಮೊರೆಹೋಗುತ್ತಾನೆ. ವ್ಯಾಸತತ್ವಜ್ಞತೀರ್ಥರು ರಾಜನಿಗೆ ಅಭಯನೀಡಿ.

ಧರ್ಮೋಭವತು ಸದ್ಧರ್ಮ
ಮಾರ್ಗಣಾಸ್ಸಂತು ಮಾರ್ಗಣಃ |
ವಾಹಿನೀ ವಾಹಿನೀ ರಾಜನ್ !
 ಸ್ಯಾದರಾತಿ ಪರಾಜಯ ||

ಈ ಒಗಟು ರಾಜರಿಗೆ ಹೇಳಿ ಆಶೀರ್ವದಿಸಿದರು.
ಹೇ ರಾಜನೇ! ನಿನ್ನ ಪ್ರಜೆಗಳ ರಕ್ಷಣೆ ಎಂಬ ಧರ್ಮವೇ ಸದ್ಧರ್ಮವಾಗಲಿ, ನಿನ್ನ ಜನರೇ ಬಾಣಗಳಾಗಲಿ, ನಿನ್ನ ಜನರ ಗುಂಪೇ ಒಂದು ದೊಡ್ಡ ಸೈನ್ಯವಾಗಲಿ, ಇದರಿಂದಾಗಿ ನಿನ್ನ ವೈರಿಗಳ ನಾಶವಾಗಿ ವಿಜಯಿಯಾಗು.

ಶ್ರೀಗಳ ಆಶೀರ್ವಾದದ ಹಾಗೆ ಶತ್ರುಗಳು ಸೈನ್ಯ ದಂಡಯಾತ್ರೆಯ ಸಂದರ್ಭದಲ್ಲಿ ಕೃಷ್ಣ ತುಂಗೆ ರಬ್ಬಸದಿಂದ ಪ್ರವಾಹ ಹರಿದು ಶತ್ರು ಸೈನಿಕರರೆಲ್ಲರು ಪ್ರವಾಹದ ರಬ್ಬಸಕೆ ಸಿಲುಕಿ ಮರಣಹೊಂದುತ್ತಾರೆ. ಯುದ್ಧವಿಲ್ಲದೆಯೇ ರಾಮ ಭೂಪಾಲನಿಗೆ ಜಯ ಉಂಟಾಗಿ ರಾಜ್ಯ ಮತ್ತು ರಾಜ್ಯವನ್ನು ತಮ್ಮ ತಪಶಕ್ತಿಯಿಂದ ಕಾಪಾಡುತ್ತಾರೆ.

ಗ್ರಂಥಗಳು :
* ಮಾನಸಸ್ಮ್ರುತಿ ( ಉಪಾಸನಾಭಾಗ )
* ಸಪ್ತಮಸ್ಕಂದ ಭಾಗವತಕ್ಕೆ ಮಂದನಂದಿನಿ ಎಂಬ ವ್ಯಾಖ್ಯಾನ
* ಗಾಯತ್ರಿ ಸಾರ ಸಂಗ್ರಹ
* ಶ್ರೀಮನ್ಯಾಯಸುಧಾ ವ್ಯಾಖ್ಯಾನ
* ಉಭಯಾನೌಚಿತಿ
* ಸುಧಾದ್ಯುಕ್ತಿರಹಸ್ಯ
* ನ್ಯಾಯಮೃತ ಮಕ್ಷಿಕಾವ್ಯಜನ
* ತಾತ್ಪರ್ಯಚಂದ್ರಿಕಾ ಶರದಾಗಮ
*ಅದ್ವೈತ ಕುಟ್ಟನ
* ನ್ಯಾಯದಮನ
* ಕುಲಿಶ
*ಶ್ರೀಮದ್ಬಿಷ್ಣುತತ್ವನಿರ್ಣಯಕ್ಕೆ "ಲಘುಪ್ರಭಾ" ಮತ್ತು " ಗುರುಪ್ರಭಾ" ಎಂಬ ಎರಡು ವ್ಯಾಖ್ಯಾನಗಳು.
* ಯತಿಪ್ರಣವಕಲ್ಪ ವ್ಯಾಖ್ಯಾನ

ಶ್ರೀಗಳು ವಾಸುದೇವವಿಠ್ಠಲ ಅಂಕಿತನಮದಿಂದ ಹಲವಾರು ಪದ ಪದ್ಯ ಸುಳಾದಿಗಳು ರಚಿಸಿ ದಾಸ ಸಾಹಿತ್ಯ ಶ್ರೀಮಂತಗೊಳಿಸಿದರೆ.

ನಿತ್ಯ ವ್ಯಾಸತತ್ವಜ್ಞರಂಘ್ರಿ ಭಜಿಸೊ | 
ಕೃತ ಕೃತ್ಯನೆಂದೆನಿಸೊ |
ಎತ್ತಿದ ಮಾನವ ಜನ್ಮ ಸಾರ್ಥಕೆನಿಸೊ | ಪುರುಷಾರ್ಥವಗಳಿಸೊ || ಪ ||

ಮೂರವತಾರನ ಮತದೊಳು ಜನಿಸಿದರು
ಮೂರನು ತ್ಯಜಿಸಿದರು
ಮೂರು ಹತ್ತರಿಗೆ ಮುಖವಾಗಿರುತಿಹರು
ಇವರಿಗೆ ಸಮರ್ಯಾರೊ || 1 ||

ಮಾನಸ ಸ್ಮತಿ ಮೊದಲಾದ ಗ್ರಂಥಗೈದ
ದ್ವಿಜರಿಗೆ ಬೋಧಿಸಿದ ||
ಸಾನುರಾಗದಲಿ  ಜ್ಞಾನಾಮೃತವೆರೆದ
ದಶದಿಕ್ಕಿಲಿ ಮೆರೆದ |
ಏನು ಪೇಳಲಿ ಇವರ ದಿವ್ಯಪಾದ 
ಸೇವಿಪರಿಗೆ ಮೋದ || 2 ||

ಶಾಮಸುಂದರನ ಕವನದಿ ಕೊಂಡಾಡಿ
ಬಹಿರಂತರ ನೋಡಿ ||
ಸೋಮಪುರದಿ ದ್ವಿಜ ಸ್ತೋಮದಿಂದ ಕೂಡಿ
ಇರುವರು ಮನೆ ಮಾಡಿ
ಈ ಮಹಾತ್ಮರನು ನರನೆಂದವ ಖೋಡಿ
ಸಂದೇಹ ಬ್ಯಾಡಿ || 3 ||
ಶ್ರೀ ವ್ಯಾಸತತ್ವಜ್ಞ ತೀರ್ಥರು ವಿರಚಿತ ರಾಯರ ಸ್ತೋತ್ರ

ಶ್ರೀರಾಘವೇಂದ್ರ ತವ ಚರಣಂ ಭಜಾಮಿ ।। 
ಶರಣಾಗತ ಜನ ಭವತರಣಮ್ ।। ಪಲ್ಲವಿ ।।

ಶ್ರೀ ಸುಧೀಂದ್ರ ಕರಕಂಜ ಸಂಭವಮ್ ।
ಸುಧಾ೦ಶು ಮುಖ ಸಂಸ್ತುತ ಭಾವಿಭವಮ್ ।।೧।।

ಪಾವನವರ ಮಂತ್ರಾಲಯ ಸದನಮ್ ।
ಪತಿತಪಾವನಂ ಜಿತಮದನಮ್ ।।೨।।

ವಾಸುದೇವ ಕವಿ ಸನ್ನುತ ಶರಣಮ್ ।
ಮೂಲರಾಮ ವರ ಕರುಣಾಭರಣಮ್ ।।೩।।

ಶ್ರೀ ಇಭರಾಮಪುರಾಧೀಶ
ವಿಷ್ಣುತೀರ್ಥಾಚಾರ್ಯ ಇಭರಾಮಪುರ
*****


" ಶ್ರೀ ಐಜಿ ಸ್ವಾಮಿಗಳು - ೧ "

" ವ್ಯಾಸ - ದಾಸ ಸಾಹಿತ್ಯದ ಸವ್ಯಸಾಚಿಗಳು ಶ್ರೀ ಅಗ್ನ್ಯಾ೦ಶ ಸಂಭೂತರಾದ ಶ್ರೀ ವ್ಯಾಸತತ್ತ್ವಜ್ಞತೀರ್ಥರು "

ಶ್ರೀ ವ್ಯಾಸತತ್ತ್ವಜ್ಞತೀರ್ಥರ ಆರಾಧನಾ ಮಹೋತ್ಸವ. ತನ್ನಿಮಿತ್ತ ಆ ಮಹಾ ಮಹಿಮರ ಕಿರು ಪರಿಚಯ "

ಪ್ರಕಟೀಕೃತಟೀಕೋಕ್ತಿರ್ಮರ್ಕಟೀಕೃತ ಮಾಯಿರಾಟ್ ।
ಚರ್ಕ್ರುತಾದ್ವ್ಯಾಸತತ್ತ್ವಜ್ಞಮಸ್ಕರೀ೦ದ್ರ ಕೃಪಾಮಯಿ ।।

" ಶ್ರೀ ಭಾವಿ ರುದ್ರಾವತಾರಿಗಳಾದ ಶ್ರೀ ವರದ ಗೋಪಾಲದಾಸರು...... "

ರಾಗ : ಭೂಪಾಳಿ ತಾಳ : ಝ೦ಪೆ

ಸ್ಮರಿಸು ಗುರುಗಳನೆ ಮನವೇ ।
ಸ್ಮರಿಸು ಗುರುಗಳ ನಿನಗೆ ಪರಮ ಮಂಗಳ । ಬಂದ ।
ದುರಿತ ಪರ್ವತಕೆ ಪವಿ ಎಂದು ತಿಳಿದೂ ।। ಪಲ್ಲವಿ ।।

ಉರಗ ವೃಶ್ಚಿಕ ವ್ಯಾಘ್ರ ಅರಸು ಚೋರಾಗ್ನಿ ಕರಿ ।
ಗರಳ ಜ್ವರ ಮೊದಲಾದ ಭಯಗಳಿಂದಾ ।
ಪೊರದು ಮಂಗಳವೀವ ನರಹರಿಯ ದಾಸರ ।
ಚರಣ ಕಂಡೆನು ದುರಿತ ಪರಿಹಾರವಾಯಿತು ।। ಚರಣ ।।

ಗುರು ಸ್ಮರಣೆಯಿಂದ ಸಕಲ ವಿಪತ್ತು ಪರಿಹಾರ ।
ಗುರು ಸ್ಮರಣೆಯಿಂದ ಪಂಪದವು ನಿನಗೆ ।
ಗುರು ಸ್ಮರಣೆಯಿಂದ ಪುಷ್ಕಳ ದ್ರವ್ಯವದಗುವದು ।
ಗುರು ಸ್ಮರಣೆಯಿಂದಾ ಹರಿ ವಲಿದು ಪೊರೆವಾ ।। ಚರಣ ।।

ಗುರುಗಳಿಗಿಂತಧಿಕ ಇನ್ನಾರು ಆಪ್ತರು ನಿನಗೆ ।
ಗುರುಗಳೇ ಪರಮ ಹಿತಕರರು ನಿನಗೆ ।
ಗುರು ಸ್ವಾಮಿ ವರದ ಗೋಪಾಲ ವಿಠಲ ಸರ್ವ ।
ದುರಿತಗಳ ಕಳೆದು ಸುಖಕರದ ನೋಡೋ ।। ಚರಣ ।।

ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಚಿನ್ನವಾಗಿ ನಡೆದು ಬಂದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮುಖ್ಯ ಸಂಸ್ಥಾನಾಧೀಶ್ವರರೂ; ಶ್ರೀ ಗುರುಸಾರ್ವಭೌಮರ ಉಭಯ ವಂಶಾಬ್ಧಿ ಚಂದ್ರಮರೂ ಆದ ಶ್ರೀ ಭುವನೇಂದ್ರತೀರ್ಥರ ವಿಶೇಷಾನುಗ್ರಹಕ್ಕೆ ಪಾತ್ರರಾದವರೂ; ಜ್ಞಾನ - ಭಕ್ತಿ - ವೈರಾಗ್ಯನಿಧಿಗಳಾದ ಶ್ರೀ ವೆಂಕಟರಾಮಾಚಾರ್ಯರು ಶ್ರೀ ಭುವನೇಂದ್ರತೀರ್ಥರಿಂದ ಸಂನ್ಯಾಸಾಶ್ರಮ ಸ್ವೀಕರಿಸಿ, ಅವರ ಅಮೃತಮಯವಾದ ಹಸ್ತಗಳಿಂದ ಶ್ರೀ ಮದಾಚಾರ್ಯರ ವೇದಾಂತ ದಿಗ್ವಿಜಯ ವಿದ್ಯಾ ಸಾಮ್ರಾಜ್ಯದಲ್ಲಿ ಪಟ್ಟಾಭಿಷಿಕ್ತರಾದ ಮಹಾನುಭಾವರು!!

ಶ್ರೀ ವ್ಯಾಸತತ್ತ್ವಜ್ಞತೀರ್ಥ ಗುರುವರೇಣ್ಯರೇ! ನಿಮ್ಮ ಮಹಿಮೆ ಆಗಾಧವಾಗಿದೆ. ಸರ್ವ ಶಾಸ್ತ್ರ ವಿಶಾರದರೆಂದು ಮಾನ್ಯರಾದ; ಶ್ರೀಮನ್ನ್ಯಾಯಸುಧೆಗೆ " ವ್ಯಜನ ", ತತ್ತ್ವಪ್ರಕಾಶಿಕೆಗೆ " ಗುರುಪ್ರಭಾ ಮತ್ತು ಲಘುಪ್ರಭಾ "; " ಕುಲಿಶ " ಎಂಬ ಪ್ರೌಢ ಗ್ರಂಥಗಳನ್ನು ರಚಿಸಿ ಸಕಲ ವಿದ್ವಾಂಸರೂ; ಧರ್ಮಾಭಿಮಾನಿಗಳಾದ ಸಜ್ಜನರಿಂದ ವಂದಿತರಾಗಿ ಪೂಜಿತರಾದ; ಗದ್ವಾಲಿನ ರಾಜ ರಾಮಭೂಪಾಲನಿಗೆ ಗುರುಗಳಾಗಿ; ಅವನಿಂದ ಪೂಜಿತರಾದ; ವೇಣೀಸೋಮಾಪುರವೆಂಬ ಕ್ಷೇತ್ರಕ್ಕೆ ಪ್ರಭುಗಳಾದವರು ಶ್ರೀ ವ್ಯಾಸತತ್ತ್ವಜ್ಞರು!!

" ಶ್ರೀ ವ್ಯಾಸತತ್ತ್ವಜ್ಞತೀರ್ಥರ ಸಂಕ್ಷಿಪ್ತ ಮಾಹಿತಿ "

ಹೆಸರು : ಶ್ರೀ ವೆಂಕಟರಾಮಾಚಾರ್ಯರು

ತಂದೆ : ಶ್ರೀ ವೆಂಕಟ ನರಸಿಂಹಾಚಾರ್ಯರು

ಗೋತ್ರ : ಕೌಶಿಕ

ವಂಶ : ಷಾಷ್ಠಿಕ

ಜನ್ಮ ಸ್ಥಳ : ಐಜಿ ( ತಾ : ಗದ್ವಾಲ, ಜಿ : ಕರ್ನೂಲ್ - ಆಂಧ್ರಪ್ರದೇಶ್ )

ಶ್ರೀ ವ್ಯಾಸತತ್ತ್ವಜ್ಞತೀರ್ಥರು ಅಪರೋಕ್ಷ ಜ್ಞಾನಿಗಳೂ ಮತ್ತು ಶ್ರೀ ಧೃಷ್ಟದ್ಯುಮ್ನರ ಅವತಾರ. ಇವರ ಪೂರ್ವಾಶ್ರಮಡಾ ಹೆಸರು " ಐಜಿ ವೆಂಕಟರಾಮಾಚಾರ್ಯರು. ಐಜಿ ಮನೆತನವು ಪಾಂಡಿತ್ಯಕ್ಕೆ ಮೊದಲಿಂದಲೂ ಪ್ರಸಿದ್ಧವಾಗಿದೆ. ಇವರ ತಂದೆ ಶ್ರೀ ವೆಂಕಟ ನರಸಿಂಹಾಚಾರ್ಯರು ಮಹಾ ವಿದ್ವಾಂಸರಾಗಿದ್ದರು.

ಶ್ರೀ ಗೋಪಾಲದಾಸರು...

ರಾಗ : ಕಲ್ಯಾಣಿ ತಾಳ : ಝ೦ಪೆ

ಕಂಡೆ ಕರುಣಿಗಳೊಳಗೆ ಅಗ್ರೇಸರರಾದ ।
ಪಂಡಿತ ರಾಮಾರ್ಯರ ।। ಪಲ್ಲವಿ ।।

ಕೊಂಡಾಡಲಿವರನು ಎಷ್ಟರವ ನಾನು ।
ಕಂಡೆ ಯನ್ನ ಮನಕುತ್ಸಾಹವಾಗಿ ।। ಆ. ಪ ।।

ಸಿರಿ ವೆಂಕಟ ನರಸಿಂಹಾಚಾರ್ಯರೆಂಬ ।
ವಾರ ಕ್ಷೀರ ಶರಧಿಯಲ್ಲಿ ।
ಪರಮ ಶೋಭಿತ ಚಂದ್ರನಂತೆ ಉದ್ಭವಿಸಿ ।ಸುಜ ।
ನರಿಗೆ ಆಹ್ಲಾದನಾಗಿ ।।
ವರ ವೇದ ಶಾಸ್ತ್ರಗಳನೋದಿಸಿ ಶಿಷ್ಯ ಜನಕೆ ।
ವರದೊರೆದು ಉಪದೇಶಿಸಿ ।
ಮರಿಯದೆ ಎಂದು ಕ್ಷಣ ಬಿಡದೆ ಹರಿಪರರಾಗಿ ।
ಇರುವ ಮಹಾ ಸುಗುಣರನ್ನು ಇಂದು ।। ಚರಣ ।।

ಶ್ರೀ ವೆಂಕಟ ನರಸಿಂಹಾಚಾರ್ಯರು ತಮ್ಮ ಮಗನ ಭವಿಷ್ಯ ಕುರಿತು ಕೇಳುವುದಕ್ಕಾಗಿ ಉತ್ತನೂರಿಗೆ ಬಂದರು. ಆ ಕಾಲದಲ್ಲಿ ಭವಿಷ್ಯ ನುಡಿಯುವವರೆಂದೇ ಖ್ಯಾತರಾದ ಶ್ರೀ ಗೋಪಾಲದಾಸರನ್ನು ನೋಡಿದಾಗ ಶ್ರೀ ಗೋಪಾಲದಾಸರ ಭವಿಷ್ಯವಾಣಿಯು...

ಶ್ರೀ ಅಗ್ನ್ಯಾ೦ಶರಾದ ಶ್ರೀ ವೆಂಕಟ ರಾಮಾಚಾರ್ಯರ ಬಗ್ಗೆ ಚಿಂತಿಸುವಿರೇಕೆ? ಶ್ರೀ ವೆಂಕಟರಾಮಾಚಾರ್ಯರು ಸರ್ವರಿಂದಲೂ ವಂದ್ಯರಾಗಿ ಶ್ರೀ ವೇದವ್ಯಾಸರ ಮತ್ತು ಶ್ರೀಮದಾನಂದತೀರ್ಥರ ವಿಶೇಷ ಸೇವೆಯನ್ನು ಮಾಡುತ್ತಾರೆ ನಿಶ್ಚಿಂತರಾಗಿಯಿರಿ ಎಂದು ತಮಗೆ ಮುನ್ನಾದಿನ ಸ್ವಪ್ನದಲ್ಲಿ ಆ ಬಾಲಕ ಉಪದೇಶ ಮಾಡಿದ್ದನ್ನು ಸ್ಮರಿಸುತ್ತಾ ಶ್ರೀ ವೆಂಕಟರಾಮಾಚಾರ್ಯರ ಭವಿಷ್ಯವನ್ನು ಹೇಳಿದರು!!

ಚರಣವೆಂದರೆ ಇವರ ಚರಣವೇ ಸುಖಕರ ।
ಹರಿಯಾತ್ರ ಪರವಾಗಿ ಇನ್ನು ।
ಕರಗಳೆಂದರೆ ಇವರ ಕರವೇ ಮಂಗಳಕರ ।
ಹರಿ ಪೂಜೆಯಲ್ಲಿ ಸತತ ।।
ಕರಣಗಳು ಮುಂತಾದ ಸರ್ವೇ೦ದ್ರಿಯಗಳಿಂದ ।
ಹರಿಯನ್ನೇ ವಿಷಯಕರಿಸಿ ।
ಇರುವ ಅನುಭೋಗವು ಇರತೋರಿ ತಮ್ಮ ನಿಜ ।
ಕುರಹ ನೋಡೆಂದು ಚಪ್ಪರಿಸಿ ಬಿಗದಪ್ಪಿದುದ ।। ಚರಣ ।।

ಏಸು ಜನ್ಮದ ಸುಕೃತ ಎನಗಿವರ ಕರುಣ । ಉಪ ।
ದೇಶ ಸ್ವಪನದಿ ಆದುದು ।
ಕೇಶವನೇ ಈ ರೂಪದಿ ಹೇಳಿದನ್ಹ್ಯಾಗೋ ।
ಲೇಶನಾ ಅಂದವನು ಅಲ್ಲ ।।
ದಾಸ ಗುರು ವಿಜಯರಾಯರೇ ಇಲ್ಲಿ ನಿಂದೆನ್ನ ।
ಪೋಷಿಸುವ ಬಗೆಯು ಹೇಗೋ ।
ವಾಸುದೇವ ಹಯಾಸ್ಯ ಗೋಪಾಲವಿಠಲನ ।
ದಾಸರೊಳುಗುತ್ತಮರ ದಯಕೆ ಸರಿಯುಂಟೆ ।। ಚರಣ ।।

ಶ್ರೀ ವೆಂಕಟ ನರಸಿಂಹಾಚಾರ್ಯರು ತಮ್ಮ ಮಗನ ಕುರಿತು ಏನು ಹೇಳಿದರೂ ವಿದ್ಯೆ ಇಲ್ಲದವನು ಹೇಗೆ ಪಂಡಿತನಾಗುತ್ತಾನೆ? ಎಂದು ಶ್ರೀ ದಾಸರನ್ನು ಪ್ರಶ್ನಿಸಿದರು. ಆಗ ಶ್ರೀ ಗೋಪಾಲದಾಸರು..


ಶ್ರೀ ವೆಂಕಟರಾಮಾಚಾರ್ಯರ ಪೂರ್ವ ಸಂಸ್ಕಾರವು ಬಲವತ್ತರವಾದ್ದರಿಂದ ಶ್ರವಣ ಮಾತ್ರದಿಂದಲೇ ಉದ್ಧಾಮ ಪಂಡಿತರಾಗುವರೆಂದೂ; ಇವರು ದ್ವಾಪರದಲ್ಲಿ ಧೃಷ್ಟದ್ಯುಮ್ನನಾಗಿ ಅವತರಿಸಿದಾಗ ಶ್ರೀ ಭೀಮಸೇನದೇವರಿಂದ ಉಪದೇಶ ಪಡೆದ ಮಹಾನುಭಾವರು.
****************


" ಶ್ರೀ ವ್ಯಾಸತತ್ವಜ್ಞತೀರ್ಥರ ಆರಾಧನೆಯ ಹಾರ್ಧಿಕ ಶುಭಾಶಯಗಳು "

ವಾಸುದೇವವಿಠಲ' ಎಂಬ ಅಂಕಿತದಿಂದ ಕನ್ನಡದಲ್ಲಿ ಕೀರ್ತನೆಗಳನ್ನು ರಚಿಸಿರುವ ವ್ಯಾಸತತ್ವಜ್ಞತೀರ್ಥರ ಪೂರ್ವಾಶ್ರಮದ ಹೆಸರು `ವೆಂಕಟರಾಮಾಚಾರ್ಯ’. ಇವರ ಜನ್ಮಸ್ಥಳ ಗದ್ವಾಲ ಸಂಸ್ಥಾನಕ್ಕೆ ಸೇರಿದ ``ಐಜಿ' ಎಂಬ ಗ್ರಾಮ. ಇವರ ಪೂರ್ವೀಕರು ಮೂಲತಃ ರಾಯಚೂರು ಜಿಲ್ಲೆಯ ದಿನ್ನೆ ಎಂಬ ಗ್ರಾಮದವರು. ದಿನ್ನೆ ಗ್ರಾಮದ ಪಂಡಿತ ಜನಾರ್ಧನಾಚಾರ್ಯ ಎಂಬುವರು ಕಾಶಿಯಲ್ಲಿ ವಿದ್ಯಾಭ್ಯಾಸ ಮಾಡಿ ಬಂದು ಗದ್ವಾಲದ ರಾಜರ ವಿದ್ವತ್ ಸಭೆಯಲ್ಲಿ ರಾಜಮನ್ನಣೆಗೆ ಪಾತ್ರರಾಗಿದ್ದವರು. ಐಜಿ ಗ್ರಾಮದ ಜನರ ಪ್ರಾರ್ಥನೆಯಂತೆ ಜನಾರ್ಧನಾಚಾರ್ಯರು ಐಜಿ ಗ್ರಾಮದಲ್ಲಿ ನೆಲೆಸಿದರು. ಉತ್ತಮ ಪಂಡಿತರು, ಘನ ವಿದ್ವಾಂಸರು ಎನಿಸಿಕೊಂಡು ಅನೇಕ ಶಿಷ್ಯರಿಗೆ ಪಾಠ ಹೇಳುತ್ತಿದ್ದರು. ಈ ಜನಾರ್ಧನಾಚಾರ್ಯರ ಮಕ್ಕಳು ವೆಂಕಟನರಸಿಂಹಾಚಾರ್ಯರು. ತಮ್ಮ ತಂದೆಯವರ ಬಳಿಯೇ ವಿದ್ಯಾಭ್ಯಾಸ ಮಾಡಿ ಶಾಸ್ತ್ರ ಪಾಂಡಿತ್ಯವನ್ನು ಸಂಪಾದಿಸಿ ಶ್ರೇಷ್ಠ ದರ್ಜೆಯ ವಿದ್ವಾಂಸರಾಗಿದ್ದರು. ಗದ್ವಾಲ ಸಂಸ್ಥಾನದಿಂದ ರಾಜಮನ್ನಣೆ ಪಡೆದಿದ್ದರು. ಆಪಸ್ಥಂಭ ಶಾಖೆಯ ಕೌಶಿಕ ಗೋತ್ರಜರಾದ ವೆಂಕಟನರಸಿಂಹಾಚಾರ್ಯರ ಏಕೈಕ ಪುತ್ರ ವೆಂಕಟರಾಮಾಚಾರ್ಯರು.

ವೆಂಕಟರಾಮಾಚಾರ್ಯರು ಜನಿಸಿದ್ದು 1704 ರಲ್ಲಿ. ಎಳೆಯ ವಯಸ್ಸಿನಲ್ಲಿ ತುಂಬಾ ಮುಗ್ಧನಂತೆ ವರ್ತಿಸುತ್ತಾ, ಯಾವ ವಿಷಯದಲ್ಲೂ ಆಸಕ್ತಿಯಿಲ್ಲದೆ ಜಡಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದ ಮಗನ ನಡವಳಿಕೆ ತಂದೆತಾಯಿಗಳಿಗೆ ಆತಂಕವನ್ನುಂಟುಮಾಡಿತ್ತು. ಮದುವೆಯಾದ ಮೇಲಾದರೂ ಮಗನ ಸ್ವಭಾವ ಬದಲಾಗಬಹುದೆಂದು ತಂದೆತಾಯಿಗಳು ಭಾವಿಸಿದರು. ಹದಿನೆಂಟನೆಯ ವಯಸ್ಸಿಗೆ ಮದುವೆ ಮಾಡಿದರು. ಒಂದು ಹೆಣ್ಣು ಮಗುವಿನ ತಂದೆಯಾದ ಮೇಲೂ ತಮ್ಮ ಮಗನ ಮುಗ್ಧಭಾವ ಬದಲಾಗಲಿಲ್ಲ. ತಂದೆ ತಾಯಿಗಳು ಹೆಚ್ಚಿನ ಚಿಂತೆಗೆ ಒಳಗಾದರು. ಐಜಿ ಗ್ರಾಮಕ್ಕೆ ಸಮೀಪದಲ್ಲೇ ಇದ್ದ ಉತ್ತನೂರು ಗ್ರಾಮದಲ್ಲಿ ಗೋಪಾಲದಾಸರು ವಾಸವಾಗಿದ್ದರು. ಗೋಪಾಲದಾಸರು ಜೋತಿಷ್ಯ, ಭವಿಷ್ಯಗಳನ್ನು ಹೇಳುವುದರಲ್ಲಿ ಆ ಕಾಲದಲ್ಲಿ ಪ್ರಸಿದ್ಧರಾಗಿದ್ದರು. ವೆಂಕಟ ನರಸಿಂಹಾಚಾರ್ಯರು ತಮ್ಮ ಪತ್ನಿಯ ಸೂಚನೆಯಂತೆ ಮಗನನ್ನು ಕರೆದುಕೊಂಡು ಉತ್ತನೂರಿಗೆ ಬಂದರು. ತಮ್ಮ ಮಗನ ವರ್ತನೆಯನ್ನು ವಿವರಿಸಿ ಅವನ ಭವಿಷ್ಯದ ಬಗ್ಗೆ ಪ್ರಶ್ನಿಸಿದರು. ಮಗನ ಬಗ್ಗೆ ಚಿಂತಿಸುವ ಅಗತ್ಯವಿಲ್ಲವೆಂದು ಗೋಪಾಲದಾಸರು ಭರವಸೆ ನೀಡಿದರು. ``ಪ್ರತಿನಿತ್ಯವೂ ಮಗನನ್ನು ಜೊತೆಯಲ್ಲಿಯೇ ಕೂಡಿಸಿಕೊಂಡು ಎಲ್ಲಾ ಶಾಸ್ತ್ರಗ್ರಂಥಗಳನ್ನು ಪಾರಾಯಣ ಮಾಡುತ್ತಾ ಬನ್ನಿ. ಸ್ವಯಂ ಪ್ರತಿಭೆಯಿಂದ ಅವನು ವಿದ್ಯಾ- ಪಾರಂಗತನಾಗುತ್ತಾನೆ' ಎಂದು ತಿಳಿಸಿದರು. ಅವರ ಸಲಹೆ ಸೂಚನೆಗಳನ್ನು ಅನುಸರಿಸಿ ಆಚಾರ್ಯರು ಪ್ರತಿನಿತ್ಯವೂ ಮಗನ ಎದುರಿನಲ್ಲಿ ಶಾಸ್ತ್ರಗ್ರಂಥಗಳನ್ನು ಪಠಣ ಮಾಡತೊಡಗಿದರು. ಅನತಿ ಕಾಲದಲ್ಲಿಯೇ ವೆಂಕಟರಾಮಾಚಾರ್ಯರ ಜಡತೆ ಮಾಯವಾಯಿತು. ಜ್ಞಾನಜ್ಯೋತಿ ಬೆಳಗತೊಡಗಿತು. ಪ್ರತಿಭಾ ಸಂಪನ್ನರಾಗಿ ವೇದ, ವೇದಾಂಗ ಶಾಸ್ತ್ರ ಪಂಡಿತರೆನಿಸಿಕೊಂಡರು. ದ್ವೈತ ಸಿದ್ಧಾಂತಲ್ಲಿ ವಿಚಾರಶೀಲ ಬುದ್ಧಿಯನ್ನು ಬೆಳೆಸಿಕೊಂಡು ಅನೇಕ ಶಿಷ್ಯರನ್ನು ಸಂಪಾದಿಸಿ- ಕೊಂಡರು. ಇವರ ಪಾಂಡಿತ್ಯ ಮತ್ತು ಪಾಠ ಪ್ರವಚನಗಳ ಶ್ರೇಷ್ಠತೆಯನ್ನು ಅರಿತು ದೂರದ ಊರುಗಳಿಂದಲೂ ಹಲವಾರು ಮಂದಿ ಶಿಷ್ಯವೃತ್ತಿಯನ್ನು ಅರಸಿ ಬಂದರು. ತಮ್ಮ ಪಾಠ ಪ್ರವಚನಗಳಿಗೆ ಸೂಕ್ತವಾದ ಪ್ರಶಾಂತ ಸ್ಥಳವನ್ನು ಅಪೇಕ್ಷಿಸಿ ವೆಂಕಟರಾಮಾಚಾರ್ಯರು ಐಜಿಯನ್ನು ಬಿಟ್ಟು ಬೀಚಪಲ್ಲಿ ಎಂಬ ಗ್ರಾಮಕ್ಕೆ ಬಂದು ನೆಲೆಸಿದರು. ಐಜಿ ಗ್ರಾಮದಿಂದ ಬಂದವರಾದ ಕಾರಣ ಜನ ಇವರನ್ನು ಐಜಿ ಆಚಾರ್ಯರೆಂದೇ ಕರೆಯುತ್ತಿದ್ದರು. ``ಬೀಚಪಲ್ಲಿ' ಗದ್ವಾಲಕ್ಕೆ ಸಮೀಪದಲ್ಲಿ ಕೃಷ್ಣಾನದಿ ತೀರದಲ್ಲಿದೆ. ವ್ಯಾಸರಾಜ ಯತಿಗಳು ಪ್ರತಿಷ್ಠಾಪಿಸಿದ ಪ್ರಾಣದೇವರ ದೇವಾಲಯವಿದೆ. ಈ ಪ್ರಾಣದೇವರ ಸನ್ನಿಧಿಯಲ್ಲಿ ತಮ್ಮ ದಿನನಿತ್ಯದ ಜಪಾನುಷ್ಠಾನ, ಪಾಠ ಪ್ರವಚನ ಇವುಗಳಲ್ಲಿ ನಿರತರಾಗಿ ವೆಂಕಟರಾಮಾಚಾರ್ಯರು ಸಂಸ್ಕತದಲ್ಲಿ ಅನೇಕ ಶಾಸ್ತ್ರಗ್ರಂಥಗಳನ್ನು ರಚಿಸಿದರು. ನೂರಾರು ಮಂದಿ ಶಿಷ್ಯರನ್ನು ಸಂಪಾದಿಸಿದರು. ಇದೇ ಅವಧಿಯಲ್ಲಿ ``ವಾಸುದೇವವಿಠಲ' ಎಂಬ ಅಂಕಿತದಿಂದ ಕನ್ನಡದಲ್ಲಿ ಪದ ಸುಳಾದಿಗಳನ್ನು ರಚಿಸಿದರು. ಹನ್ನೆರಡು ವರ್ಷಗಳ ಕಾಲ ಬೀಚಪಲ್ಲಿಯಲ್ಲಿ ನೆಲೆಸಿ ಅನಂತರ ತುಂಗಭದ್ರಾ ತೀರದ ವೇಣೀಸೋಮಪುರಕ್ಕೆ ಆಗಮಿಸಿದರು. ಗದ್ವಾಲದ ರಾಜನಾದ ಸೋಮಭೂಪಾಲ ಆಚಾರ್ಯರಿಗೆ ಅಗತ್ಯವಾದ ವಸತಿ ಸೌಕರ್ಯವನ್ನು ಕಲ್ಪಿಸಿಕೊಟ್ಟ. ಗ್ರಂಥರಚನೆ, ಶಾಸ್ತ್ರಗ್ರಂಥಗಳ ಪಾಠಪ್ರವಚನ, ದೇವತಾರ್ಚನೆ ಇವುಗಳಲ್ಲಿ ನಿರತರಾದ ವೆಂಕಟರಾಮಾಚಾರ್ಯರು ವೇಣೀಸೋಮಪುರವನ್ನು ಪಂಡಿತರ ಅಗ್ರಹಾರವನ್ನಾಗಿ ಮಾಡಿದರು. ಈ ನಡುವೆ ಇವರಿಗೆ ಪತ್ನೀ ವಿಯೋಗವಾಗಿ ಎರಡನೆಯ ಲಗ್ನವನ್ನು ಮಾಡಿಕೊಂಡರು.

ಐಜಿ ಆಚಾರ್ಯರಲ್ಲಿ ಶಾಸ್ತ್ರಾಭ್ಯಾಸ ಮಾಡಲು ಗೋಪಾಲದಾಸರ ತಮ್ಮಂದಿರಾದ ಸೀನಪ್ಪದಾಸರು (ಗುರುಗೋಪಾಲವಿಠಲ) ದಾಸಪ್ಪದಾಸರು (ವರದ ಗೋಪಾಲವಿಠಲ) ಮತ್ತು ರಂಗಪ್ಪದಾಸರು (ತಂದೆಗೋಪಾಲವಿಠಲ) ವೇಣೀಸೋಮಪುರಕ್ಕೆ ಬಂದು ನೆಲೆಸಿದರು. ಅರಣ್ಯಕಾಚಾರ್ಯ ಅಥವ ಅಡವಿ ಆಚಾರ್ಯರೆಂದು ಪ್ರಸಿದ್ಧರಾದ ವಿಷ್ಣುತೀರ್ಥರು ಕೂಡ ಐಜಿ ಆಚಾರ್ಯರ ಶಿಷ್ಯರಾದರು. ಆಚಾರ್ಯರ ಬಳಿ ಆಗ ಮುನ್ನೂರು ಮಂದಿ ಶಿಷ್ಯರು ಅಭ್ಯಾಸ ಮಾಡುತ್ತಿದ್ದರಂತೆ. ಐಜಿ ಆಚಾರ್ಯರ ಕೀರ್ತಿ ಎಲ್ಲಾ ಕಡೆಗಳಲ್ಲಿ ವ್ಯಾಪಿಸಿತ್ತು. ಅವರ ಶಿಷ್ಯ ಪ್ರಶಿಷ್ಯರ ಶಾಖೋಪಶಾಖೆಗಳು ಬೆಳೆಯುತ್ತಿದ್ದವು. ಶಿಷ್ಯರ ಪಾಲಿಗೆ ಅವರು ಕಲ್ಪವೃಕ್ಷದಂತೆ ವಿರಾಜಮಾನರಾಗಿದ್ದರೆಂದು ವಿಷ್ಣುತೀರ್ಥರು ಸ್ತುತಿಸುತ್ತಾರೆ.

ವೇಣೀಸೋಮಪುರದ ಸಮೀಪ ``ವಲ್ಲೂರು' ಎಂಬ ಗ್ರಾಮಕ್ಕೆ ಆಚಾರ್ಯರು ಆಗಾಗ ಪ್ರವಚನಕ್ಕೆ ಹೋಗುತ್ತ್ತಿದ್ದರು. ಸ್ವಪ್ನ ಸೂಚನೆಯಂತೆ ವಲ್ಲೂರು ಕೆರೆಯ ತೂಬಿನ ಕೆಳಗೆ ದೊರೆತ ಎರಡು ಗೋಪಾಲಕೃಷ್ಣ ವಿಗ್ರಹಗಳಲ್ಲಿ ಒಂದನ್ನು ವಲ್ಲೂರಿನಲ್ಲಿ ಮತ್ತೊಂದನ್ನು ವೇಣೀಸೋಮಪುರದಲ್ಲಿ ಸ್ಥಾಪಿಸಿದರು. ಗದ್ವಾಲ ರಾಜರ ಸಹಕಾರದಿಂದ ದೇವಸ್ಥಾನವನ್ನು ನಿರ್ಮಿಸಿದರು. ಆಚಾರ್ಯರ ಶಿಷ್ಯ ಮಂಡಲಿಗೆ, ವಿದ್ವಜ್ಜನರಿಗೆ, ಹರಿದಾಸರಿಗೆ ಆಶ್ರಯಸ್ಥಾನವಾದ ವೇಣುಗೋಪಾಲನ ದೇವಾಲಯ ಒಂದು ಹರಿದಾಸರ ಕೇಂದ್ರವೇ ಆಯಿತು. ``ನಂದವ್ರಜ ದ್ವಾರಕಾಪುರಿ ಬಿಟ್ಟು ಬಂದದ್ದೇ ಬಹು ಲಾಭವು ' ಎಂಬ ಕೀರ್ತನೆಯಲ್ಲಿ ಗುರುಗೋಪಾಲ ದಾಸರು ವೇಣೀಸೋಮಪುರಕ್ಕೆ ಬಂದು ನೆಲಸಿದ ಪರಮಾತ್ಮನ ಬಾಲಲೀಲೆಗಳನ್ನು ಚಿತ್ರಿಸಿದ್ದಾರೆ. ವೇಣೀಸೋಮಪುರ ಪರಮಾತ್ಮನ ವಾಸಸ್ಥಾನಕ್ಕೆ ಯೋಗ್ಯವಾದ ಅತ್ಯಂತ ರಮ್ಯ ಸ್ಥಳವೆಂದು ತಿಳಿಸಿ ಸತಿಸುತ ಪರಿವಾರ ಜನರೊಂದಿಗೆ ಸ್ಥಿರವಾಗಿ ನೆಲಸಬೇಕೆಂದು, ಗುರುವರ್ಯ ವೆಂಕಟರಾಮಾಚಾರ್ಯರಿಂದ ಪರಿಪರಿಯ ಪೂಜೆಯನ್ನು ಸ್ವೀಕರಿಸಬೇಕೆಂದು ಪ್ರಾರ್ಥಿಸಿದ್ದಾರೆ. ``ಐಜಿ ಆಚಾರ್ಯರು ಗುಣವಂತರು, ಅವರು ಮಣೆಗಾರರಂತೆ ದೇವರನ್ನು ಅದು ಇದು ಕೊಡು ಎಂದು ಬೇಡುವವರಲ್ಲ, ಆದರೆ ಋಣತ್ರಯಗಳಲ್ಲಿ ಪಿತೃಋಣ ಮಾತ್ರ ಹಾಗೇ ಉಳಿದಿದೆ. ಆದ್ದರಿಂದ ಅವರಿಗೆ ಪುತ್ರಸಂತಾನವನ್ನು ನೀಡಿ ಪಿತೃಋಣವನ್ನು ಪರಿಹರಿಸು' ಎಂದು ಗುರುಗೋಪಾಲದಾಸರು ವೇಣುಗೋಪಾಲನಲ್ಲಿ ವಿಜ್ಞಾಪಿಸಿಕೊಂಡಿದ್ದಾರೆ. ಆಚಾರ್ಯರಿಗೆ ನಡುವಯಸ್ಸು ಮೀರುತ್ತಾ ಬಂದಿತ್ತು. ಎರಡನೆಯ ಪತ್ನಿಯಲ್ಲೂ ಪುತ್ರರು ಜನಿಸಲಿಲ್ಲ. ಪುತ್ರ ಸಂತಾನದ ಅಪೇಕ್ಷೆ ಪ್ರಬಲವಾಗತೊಡಗಿತು

ವೆಂಕಟರಾಮಾಚಾರ್ಯರ ಮೊದಲ ಪತ್ನಿಗೆ ಲಕ್ಷಮ್ಮ ಎಂಬ ಹೆಣ್ಣು ಮಗಳಿದ್ದಳು. ಆಕೆಗೆ ಯುಕ್ತ ವಯಸ್ಸಿನಲ್ಲಿ ಲಗ್ನವಾಗಿ ಇಬ್ಬರು ಮಕ್ಕಳು ಜನಿಸಿದ್ದರು. ಅವರಲ್ಲಿ ಗೋಪಾಲಕೃಷ್ಣಾಚಾರ್ಯ ಎಂಬ ಮಗನನ್ನು ಆಚಾರ್ಯರು ದತ್ತು ಸ್ವೀಕರಿಸಿದರು. ಗೋಪಾಲಕೃಷ್ಣಾಚಾರ್ಯರೂ ಕೂಡ ತಮ್ಮ ದತ್ತು ತಂದೆಯಂತೆಯೇ ಭಗವದ್ಭಕ್ತರು, ಪಂಡಿತೋತ್ತಮರು ಆಗಿದ್ದರು. ಅನೇಕ ಶಿಷ್ಯರಿಗೆ ಶಾಸ್ತ್ರಪಾಠವನ್ನು ಹೇಳುತ್ತಿದ್ದರು. ``ತಂದೆ ವಾಸುದೇವವಿಠಲ' ಎಂಬ ಅಂಕಿತದಲ್ಲಿ ಕೀರ್ತನೆಗಳನ್ನು ರಚಿಸಿದ್ದಾರೆ.

ತಮ್ಮ ಎಪ್ಪತ್ತಾರನೆಯ ವಯಸ್ಸಿನಲ್ಲಿ ಐಜಿ ಆಚಾರ್ಯರು ವಾನಪ್ರಸ್ಥಾಶ್ರಮ ವನ್ನು ಸ್ವೀಕರಿಸಿದರು. ತುಂಗಭದ್ರಾನದಿಯ ದಂಡೆಯಲ್ಲಿ ಕುಟೀರವನ್ನು ನಿರ್ಮಿಸಿ ಗೆಡ್ಡೆಗೆಣಸುಗಳನ್ನು ಸೇವಿಸುತ್ತಾ ಜೀವಿಸಿದರು. ಪಾಠ ಪ್ರವಚನಗಳ ಜೊತೆಗೆ ದೇವತಾ ಕಾರ್ಯಗಳನ್ನು ಮುಂದುವರಿಸಿದರು. ಅದೇ ಕಾಲದಲ್ಲಿ ರಾಘವೇಂದ್ರ ಮಠದ ಪೀಠಾಧಿಪತಿಗಳಾಗಿದ್ದ ಭುವನೇಂದ್ರತೀರ್ಥರು ವೇಣೀಸೋಮಪುರಕ್ಕೆ ಬಂದರು. ಆಚಾರ್ಯರು ಶ್ರೀಪಾದಂಗಳನ್ನು ಭೇಟಿಯಾಗಿ ತಮಗೆ ಯತ್ಯಾಶ್ರಮವನ್ನು ನೀಡಲು ಪ್ರಾರ್ಥಿಸಿದರು. ಶ್ರೀಪಾದಂಗಳ ಸೂಚನೆಯಂತೆ ಭಾಗವತ ಸಪ್ತಮ ಸ್ಕಂದಕ್ಕೆ ``ಮಂದನಂದಿನಿ' ಎಂಬ ಟೀಕೆಯನ್ನು ರಚಿಸಿ ಗುರುಗಳಿಗೆ ಸಮರ್ಪಿಸಿದರು. ಭುವನೇಂದ್ರತೀರ್ಥರು ತತ್ವಜ್ಞರಾದ ಆಚಾರ್ಯರಿಗೆ ``ವ್ಯಾಸತತ್ವಜ್ಞತೀರ್ಥ' ಎಂಬ ಅನ್ವರ್ಥ ನಾಮಕರಣ ಮಾಡಿ ಯತ್ಯಾಕ್ರಮ ನೀಡಿದರು.

``ಕವಿ ಭಿರೀಡಿತ ಮಹಾಮುನಿ ವ್ಯಾಸಕೃತ ಸುಭಾ-

ಗವತಾದಿ ಗ್ರಂಥ ವ್ಯಾಖ್ಯಾನ ನೋಡಿ |

ಭುವನೇಂದ್ರರಾಯ ತಾ ಕರುಣದಲಿ ತುರಿಯಾಶ್ರ

ಮವನಿತ್ತು ವ್ಯಾಸ ತತ್ವಜ್ಞರಹುದೆಂದ || '

ಎಂದು ಜಗನ್ನಾಥದಾಸರು ಸ್ತುತಿಸಿದ್ದಾರೆ. ಸನ್ಯಾಸವನ್ನು ಸ್ವೀಕರಿಸಿದ ಮೇಲೆ ಪೀಠಾಧಿಪತ್ಯವನ್ನು ವಹಿಸಿಕೊಳ್ಳಲು ಅಪೇಕ್ಷೆಪಡದ ವ್ಯಾಸತತ್ವಜ್ಞರು ಕೆಲವು ಕಾಲ ತಮ್ಮ ಗುರುಗಳ ಸನ್ನಿಧಿಯಲ್ಲಿ ಮಂತ್ರಾಲಯದಲ್ಲಿ ವಾಸ ಮಾಡಿದರು. ಅನಂತರ ವೇಣೀಸೋಮಪುರಕ್ಕೆ ಹಿಂತಿರುಗಿದರು. ಪೀಠಾಧಿಪತ್ಯದ ಪದವಿ ಪ್ರತಿಷ್ಠೆಗಳಿಗೆ ಹಂಬಲಿಸದೆ, ವೇಣೀಸೋಮಪುರದ ಪ್ರಶಾಂತ ಪರಿಸರದಲ್ಲಿ ಹರಿದಾಸರ ಸಂಗದಲ್ಲಿ ಜಪತಪ ಪೂಜಾದಿಗಳಲ್ಲಿ ನಿರತರಾದರು. ಸನ್ಯಾಸಾಶ್ರಮವನ್ನು ಸ್ವೀಕರಿಸಿದಾಗ ವ್ಯಾಸತತ್ವಜ್ಞರಿಗೆ ಸುಮಾರು ಎಪ್ಪತ್ತೆಂಟು ವರ್ಷ ವಯಸ್ಸಾಗಿತ್ತು. ``ಏಳು ಮನೆಗಳನ್ನು ಬೇಡುವ ಯತಿಧರ್ಮ' ವನ್ನು ಕೂಡ ಮಾಡಲು ಸಾಧ್ಯವಾಗದ ವ್ಯದ್ಧಾಪ್ಯ ಆವರಿಸಿತ್ತು. ``ಏಳಲಾರೆನು ವೃದ್ಧ ಕೇಳಲಾರೆ' ಎಂಬ ಪರಿಸ್ಥಿತಿ ಒದಗಿತ್ತು. ವೈರಾಗ್ಯದ ತುತ್ತತುದಿಗೇರಿದ ಅವರು ಬಯಸಿದ್ದು ``ವಾಸುದೇವವಿಠಲನ ಒಲುಮೆ'ಯೊಂದನ್ನು ಮಾತ್ರ.

ವ್ಯಾಸತತ್ವಜ್ಞರು ``ಪವಾಡಪುರುಷ'ರೆಂದೇ ಆ ಕಾಲದ ಜನ ನಂಬಿದ್ದರು. ಅವರ ಪೂರ್ವಾಶ್ರಮ ಮತ್ತು ಯತ್ಯಾಶ್ರಮಗಳೆರಡರಲ್ಲೂ ಹಲವಾರು ಪವಾಡಗಳು ಅವರ ಜೀವನ ಚರಿತ್ರೆಯ ಅವಿಭಾಜ್ಯ ಭಾಗಗಳಂತೆ ಹೆಣೆದುಕೊಂಡಿವೆ. ಕನಸಿನಲ್ಲಿ ಕಾಣಿಸಿಕೊಂಡ ವೇಣುಗೋಪಾಲನನ್ನು ವೇಣಿಸೋಮಪುರದಲ್ಲಿ ಪ್ರತಿಷ್ಠಾಪಿಸಿದ್ದು, ಮಗನಿಗೆ ಬಂದ ಅಪಮೃತ್ಯುವನ್ನು ಪರಿಹರಿಸಿದ್ದು, ಅಡವಿ ಆಚಾರ್ಯರಿಗೆ ತೋರಿದ ಅನುಗ್ರಹ, ನೀರಿನ ನರಸಪ್ಪನಿಂದ ವಾಕ್ಯಾರ್ಥ ಮಾಡಿಸಿದ್ದು, ಮುಡಮಾಲಿ ಗ್ರಾಮದ ದೇಸಾಯಿಯ ರೋಗವನ್ನು ನಿವಾರಿಸಿದ್ದು, ತುಂಗಭದ್ರಾ ನದಿಯನ್ನು ಮನೆಯವರೆಗೂ ಬರಮಾಡಿಕೊಂಡದ್ದು, ಗೋಪಾಲಕೃಷ್ಣನ ಸಂದರ್ಶನ ಮಾಡಿ ಹಾಡಿದ್ದು, ಹಂಪೆಯ ವಿರೂಪಾಕ್ಷ ರಥವನ್ನು ರಕ್ಷಿಸಿದ್ದು, ಗದ್ವಾಲ ರಾಜನ ಆಪತ್ತು ಪರಿಹರಿಸಿದ್ದು, ಹೀಗೆ ಹಲವಾರು ಪವಾಡಗಳನ್ನು ವ್ಯಾಸತತ್ವಜ್ಞರ ಜೀವನ ಚರಿತ್ರೆಗೆ ಹೊಂದಿಸಲಾಗಿದೆ. ಅವರು ತೋರಿದರೆನ್ನಲಾದ ಅಸಂಖ್ಯಾತ ಮಹಿಮೆಗಳು ಹೊರನೋಟಕ್ಕೆ ಪವಾಡಗಳಂತೆ ಕಂಡರೂ ಅವರು ಪ್ರತಿಷ್ಠೆಗಾಗಿ ಪ್ರಚಾರ ಮಾಡಿದ್ದವು ಅಲ್ಲ. ತೀರ ಸಹಜವೆಂಬಂತೆ ಅವರು ತೋರಿದ ಕರುಣೆಯು ಪವಾಡಗಳೆನಿಸಿಕೊಂಡವು. ತೊಂಭತ್ತಾರು ವರ್ಷಗಳ ತುಂಬು ಬಾಳು ನಡೆಸಿದ ವ್ಯಾಸತತ್ವಜ್ಞತೀರ್ಥರು ರೌದ್ರಿ ಸಂವತ್ಸರದ ಶ್ರಾವಣ ಬಹುಳ ಅಷ್ಟಮಿ (1800) ಸ್ವರ್ಗಸ್ಥರಾದರೆಂದು ಜಗನ್ನಾಥದಾಸರು ತಿಳಿಸುತ್ತಾರೆ.

ಪ್ರಕಟೀಕೃತ ಟೀಕೋಕ್ತಿರ್ಮಕಟೀಕೃತ ಮಾಯಿರಾಟ್ |
ಚಕತ್ರಾತ್ ವ್ಯಾಸತತ್ವಜ್ಞಃ ಮಸ್ಕರೀ೦ದ್ರಕೃಪಾ೦ಮಯಿ


|| ಶ್ರೀಕೃಷ್ಣಾರ್ಪಣಮಸ್ತು ||
***********

ಶ್ರೀ ವ್ಯಾಸತತ್ತ್ವಜ್ಞತೀರ್ಥರ ಮಧ್ಯಾರಾಧನೆ - ವೇಣೀಸೋಮಪುರ " 

" ಶ್ರೀ ವ್ಯಾಸತತ್ತ್ವಜ್ಞತೀರ್ಥರೆಂಬ ಕಲ್ಪವೃಕ್ಷ "

ಅಸದೃಶ ಗುರು ಭಕ್ತಿಯನ್ನು ಮಾಡಿ ಲೋಕಕ್ಕೆ ಮಾರ್ಗದರ್ಶನ ಮಾಡಿಕೊಟ್ಟ ಮಹಾನುಭಾವರೂ; ಮಹಾ ವಿರಕ್ತರೂ; ಭೂಮಂಡಲ ದಿಕ್ಕು ವಿದಿಕ್ಕುಗಳಲ್ಲಿ ವ್ಯಾಪಿಸಿದ ಅಸಾಧಾರಣ ಕೀರ್ತಿಯನ್ನು ಹೊಂದಿದ ಶ್ರೀ ಮಾದನೂರು ವಿಷ್ಣುತೀರ್ಥರು ತಮ್ಮ ವಿದ್ಯಾ ಗುರುಗಳಾದ ಶ್ರೀ ಐಜಿ ವೆಂಕಟ ರಾಮಾಚಾರ್ಯರನ್ನು ಈ ಕೆಳಗಿನಂತೆ ಸ್ತೋತ್ರ ಮಾಡಿದ್ದಾರೆ!!

ದಿಕ್ಪ್ರಾಂತಾತತಪುಣ್ಯಕೀರ್ತಿಸುಲತಾ ಸಂಶೋಭಿತಸ್ಸಂತತಂ ।
ನಾನಾ ಶಿಷ್ಯ ತದೀಯ ಶಿಷ್ಯ ವಿಲಾಸಚ್ಚಾಕೋಪಾಶಾಖಾನ್ವಿತಃ ।।

ಐಜಿ ವೆಂಕಟನರಸಿಂಹದಾಯಿತಾ ದಿವ್ಯಾಲವಾಲೋದ್ಭವಃ ।
ಸಂಭೂಯಾತ್ಸಕಲೇಷ್ಟದೋ ಮಮ ಗುರು: ರಾಮಾರ್ಯ ಕಲ್ಪದ್ರುಮಃ ।।

ದಿಕ್ಕು ವಿದಿಕ್ಕುಗಳಲ್ಲಿ ವ್ಯಾಪಿಸಿದ ಪುಣ್ಯ ಕೀರ್ತಿಯೆಂಬ ಒಳ್ಳೆಯ ಬಳ್ಳಿಯಿಂದ ಚೆನ್ನಾಗಿ ಶೋಭಿಸುತ್ತಿರುವ ಶಿಷ್ಯರೂ; ಅವರ ಶಿಷ್ಯರೂ - ಶಿಷ್ಯ ಪ್ರಶಿಷ್ಯರುಗಳೆಂಬ ಶಾಖೋಪಶಾಖೆಗಳಿಂದ ಕೂಡಿದ ಶ್ರೀ ವೆಂಕಟನರಸಿಂಹಾಚಾರ್ಯರ ಪತ್ನಿಯ ಆಳವಾಲದಿಂದ ಹುಟ್ಟಿದ ಸಾಕಲಾಭೀಷ್ಟಗಳನ್ನೂ ಕೊಡುವ ನನ್ನ ಗುರುಗಳಾದ ಶ್ರೀ ವೆಂಕಟರಾಮಾಚಾರ್ಯ ಕಲ್ಪವೃಕ್ಷವು ನನಗೆ ವಿರಾಜಿಸುತ್ತಿರಲಿ ಎಂದು ಪ್ರಾರ್ಥಿಸಿದ್ದಾರೆ.

ಶ್ರೀ ಮಾದನೂರು ವಿಷ್ಣುತೀರ್ಥರು ಶ್ರೀ ವ್ಯಾಸತತ್ತ್ವಜ್ಞತೀರ್ಥರ ಹಿಂದಿನ ಅವತಾರಗಳನ್ನೂ ಸಹ ಹೇಳಿದ್ದಾರೆ. ಅದು ಹೀಗಿದೆ...

ವಶೀಕೃತೋತ್ತಮಶ್ಲೋಕ ಗುರುಕೃಷ್ಣ ಸುತೀರ್ಥ ತೇ ।
ನಮಃ ಸಹಜವಾಕ್ ಕೃಷ್ಣದ್ವೈಪಾಯನ ಸುತತ್ತ್ವಧೀ: ।।

ವಂದೇಹಂ ವ್ಯಾಸತತ್ತ್ವಜ್ಞ೦ ನಿಂದಿತಾಖಿಲ ದುರ್ಮತಿಂ ।
ವಂದಿತಾಖಿಲಸದ್ವೃಂದಂ ನಂದಸೂನು ಪದಾರ್ಚಕಮ್ ।।

ಶ್ರೀ ವರದಗೋಪಾಲದಾಸರು...

ದಾಸ ಪುರಂದರದಾಸರ ದಯಕೆ ಪಾತುರರಾದ ।
ವಾಸುದೇವವಿಠಲನ್ನ ದಾಸ ಜನರ ।
ಲೇಸಾಗಿ ಸೇವಿಸುವ ಭಾಗ್ಯವೇ ಕೊಡು ಎನಗೆ ।
ಸೂಸಿ ಸುಖವುಂಟು ಸುರಲೋಕಕಿಂತ ।
ಈ ಸುಖವಿತಿಲಕ ಭೂಸುರ ಶಿರೋರತುನ । ಶ್ರೀ ।
ವ್ಯಾಸಮುನಿ ಪದಕಂಜ ಭೃಂಗರೆನಿಪ ।
ಶ್ರೀಶ ಗುರುಕೃಷ್ಣನ್ನ ಭಜಕರ ಸಮೀಪದಲಿ ।
ವಾಸ ಮಾಡಿಸೋ ವರದಗೋಪಾಲವಿಠಲ ।।

ಶ್ರೀ ಕೃಷ್ಣದ್ವೈಪಾಯನತೀರ್ಥರು....

ಭೇದ ಮತಾಂಬುಧಿ ಚಂದಿರಾ ಗುರು ।
ವೇದವ್ಯಾಸ ಮುನಿವರ ಕುಮಾರಾ ।
ಸಾಧು ಸದ್ಗುಣಗಳ ಗಂಭೀರನಾದ ।
ಬಾದರಾಯಣ ನಾಮದಲಿಪ್ಪ ಧೀರಾ ।।

ಭುವನದೊಳಗೆಣೆಗಾಣೆ ನಿಮಗೆ ।
ಕವಿರಾಜ ದ್ವೈಪಾಯನಾರ್ಯ ಅಗಣಿತ ಶೌರ್ಯ ।।

ನರನೆಂದು ನಿಮ್ಮ ತಿಳಿದವನೇ ।
ನರಕ ಯೋಗ್ಯ ಕರುಣೀ ।।

ಶ್ರೀ ವ್ಯಾಸತತ್ತ್ವಜ್ಞತೀರ್ಥರು.....

ಪರಮ ಮೇಧಾವರ । ವೆಂಕಟ ।
ನರಹರಿಯಾರ್ಯರ ಸುಪುತ್ರರೆನಿಸಿ ।
ಬರಲೋದದಲೇ ಮರುತ ಶಾಸ್ತ್ರ ವರದ ಶಾಸ್ತ್ರಗಳ ।।
ಪರತತ್ತ್ವ ರಹಸ್ಯ । ತನ್ನ ।
ಲ್ಲಿರುವ ಶಿಷ್ಯ ಜನಕೆ ಅರುಹಿ ।
ಕರುಣದಿಂದಾ ಪೊರೆವ ನಮ್ಮ ।।

" ಶ್ರೀ ಮಾದನೂರು ವಿಷ್ಣುತೀರ್ಥರ ಪೂರ್ವಾಶ್ರಮ ಮೊಮ್ಮಕ್ಕಳಾದ ಶ್ರೀ ಕೃಷ್ಣಾಚಾರ್ಯರು "

ಕ್ಷೋಣೀದಿಗಂತರಗತಾಸಮ ಕೀರ್ತಿ ಭಾಜಾ ।
ರಣ್ಯಾದಿ ಶಿಷ್ಯನಿಕರೇಣ ಕೃತೋರುಪೂಜಾ ।
ಕೃಷ್ಣಪ್ರಸಾದ ಬಲತಃ ಪರಿವೃದ್ಧಿತೇಜ: ..... ।।

ಭೂಮಂಡಲ ದಿಗಂತರದಲ್ಲಿ ವ್ಯಾಪ್ತ ಕೀರ್ತಿಭಾಜರಾದ ಶ್ರೀ ಅರಣ್ಯಕಾಚಾರ್ಯರೇ ಮೊದಲಾದ ಶಿಷ್ಯ ಸಮೂಹದಿಂದ ಮಾಡಲ್ಪಟ್ಟ ಶ್ರೇಷ್ಠ ಪೂಜಾ ಉಳ್ಳವರು.

ಶ್ರೀ ಕೃಷ್ಣ ಪರಮಾತ್ಮನ ಅನುಗ್ರಹ ಬಲದಿಂದ ಅತಿಶಯ ವೃದ್ಧಿಯನ್ನು ಹೊಂದಿದ ತೇಜಸ್ವಿಗಳಾದ ಶ್ರೀ ವೆಂಕಟರಾಮಾಚಾರ್ಯರು ತಮ್ಮ ಆತ್ಮ ವಿಶ್ವಾಸದಿಂದ ಹೇಳಿದ್ದನ್ನು ಆಚರಣೆಯಲ್ಲಿ ತಂದ ಕ್ರಿಯಾ ಶೀಲತಾ ಲಕ್ಷಣ ಉಳ್ಳವರು!!

ಶ್ರೀ ವ್ಯಾಸತತ್ತ್ವಜ್ಞತೀರ್ಥರ ವಿದ್ಯಾ ಶಿಷ್ಯರಲ್ಲಿ ಶ್ರೀ ಮಾದನೂರು ವಿಷ್ಣುತೀರ್ಥರು ಪ್ರಮುಖರು. ಅದಲ್ಲದೆ ಅನೇಕ ಶಿಷ್ಯ ಸಂಪತ್ತನ್ನು ಹೊಂದಿದ್ದರು.

ರಮಾಕಾಂತಂ ಸಂತಂ ಹರಿಮನುಭಜಂತಂ ಹಿ ವಿಧುಷಾಮ್
ಪುರೋಗಣ್ಯಂ ವರ್ಣ್ಯಂ ಕ್ಷಿತಿ ಸುರ ಗುರುಶಮಂ ।
ಲಸಾದ್ಗ್ರಾತ್ರ೦ ಛಾತ್ರಂ ಸ್ತುತವರ ಚರಿತ್ರಂ ಪ್ರತಿದಿನಮ್
ನಮೋ ನಿತ್ಯಂ ಭಾತೈ ಶಕುಜನಕ ತತ್ತ್ವಜ್ಞ ಮುನಿಪಂ ।।

ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಪ್ರಿಯತೀರ್ಥರ ಪೂರ್ವಾಶ್ರಮ ಪುತ್ರರಾದ ಶ್ರೀ ಮಹಾಭಾಷ್ಯ ಶ್ರೀನಿವಾಸಾಚಾರ್ಯರು ತಮ್ಮ ವಿದ್ಯಾ ಗುರುಗಳಾದ ಶ್ರೀ ವ್ಯಾಸತತ್ತ್ವಜ್ಞತೀರ್ಥರನ್ನು " ಶ್ರೀಯಾಪೂರ್ಣ೦ ತೂರ್ಣ೦ ಕರಯುಗ ವಿಕೀರ್ಣಾಧಿಕ ಧನಂ ಗುಣಾರ್ಣಮ್ " " ಶ್ರೀ ವ್ಯಾಸತತ್ತ್ವಜ್ಞತೀರ್ಥ ಸ್ತೋತ್ರಾಷ್ಟಕಂ " ನಲ್ಲಿ ಸ್ತುತಿಸಿದ್ದಾರೆ.

" ಉಪ ಸಂಹಾರ "

ಶ್ರೀ ಐಜಿ ಆಚಾರ್ಯರು ಪೂರ್ವದಲ್ಲಿ ಶ್ರೀ ಗೋವಿಂದ ಒಡೆಯರಾಗಿಯೂ, ಶ್ರೀ ಕೃಷ್ಣದ್ವೈಪಾಯನತೀರ್ಥರಾಗಿಯೂ ಮುಂದೆ ಶ್ರೀ ವ್ಯಾಸತತ್ತ್ವಜ್ಞತೀರ್ಥರಾಗಿ ಅವತರಿಸಿ ಭೂಸುರರಿಗೆ ಕಲ್ಪವೃಕ್ಷವಾಗಿ ಅಮೃತವನ್ನು ಉಣಿಸುತ್ತಿದ್ದಾರೆ. ಅಂಥಾ ಮಹಾನುಭಾವರ ಮಧ್ಯಾರಾಧನಾ ಶುಭ ಸಂದರ್ಭದಲ್ಲಿ ಆ ಮಹಾತ್ಮರ ಸ್ಮರಣೆ ಮಾಡಿ ಅವರ ಅಂತರ್ಯಾಮಿ ವಾಸುದೇವ ರೂಪಿಯಾದ ಶ್ರೀ ಹರಿಯ ಪಾತ್ರರಾಗೋಣ...

ಶ್ರೀ ಮಾದನೂರು ವಿಷ್ಣುತೀರ್ಥರು....

ದುರ್ವಾದಿ ವದನಾಂಭೋಜಾ ಸರ್ವ ಗರ್ವಾಪಹಂ ಸದಾ ।
ಐಜಿ ವೆಂಕಟರಾಮಾರ್ಯಾಶ್ಚರ್ಯ ಸೂರ್ಯ ಮಹ೦ಭಜೇ ।।

ಐಜೀ ರಾಮಾರ್ಯ ಹೃತ್ಪದ್ಮಸೂರ್ಯಬಿಂಬಸ್ಥಿತಂ ಮಮ ।
ವಾಸುದೇವಂ ಸದಾ ಸೇವೇ ತತ್ತ್ವಮಾರ್ಗ ಪ್ರಭಾಸಕಮ್ ।।

ಆಚಾರ್ಯ ನಾಗರಾಜು ಹಾವೇರಿ...

ಐಜಿ ಆಚಾರ್ಯರ ಕಥಾಮೃತವನು । ಜ ।
ಲಜನಾಭನ ದಯದಿ ಪೇಳುವೆನು ।
ಸುಜನರೆಲ್ಲರು ಕೇಳಿ ಸಾವಧಾನದಿ ।। ಪಲ್ಲವಿ ।।

ಪ್ರಥಮದಿ ನೀ ವ್ಯಾಸಮುನಿ ಶಿಷ್ಯ ಗೋವಿಂದಒಡೆಯ ।
ದ್ವಿತೀಯದಿ ನೀ ಕೃಷ್ಣದ್ವೈಪಾಯನ ನೆನಿಸಿ ।
ತೃತೀಯದಿ ನೀ ವ್ಯಾಸತತ್ತ್ವಜ್ಞನಾಗಿ ಮೆರೆದು ।
ತತ್ತ್ವಮತ ಜ್ಞಾನವ ಕೊಟ್ಟು ಉದ್ಧರಿಸೋ ಗುರುವೇ ।। ಚರಣ ।।

ವೇದಪ್ರತಿಪಾದ್ಯನ ಕಥೆಗೆ ।
ಮಂದನಂದಿನಿಯ ರಚಿಸಿ ।
ವೇದೋದ್ಭವೆಯ ಪತಿಯಿಂದ ।
ವೇದ ಮತ ತತ್ತ್ವವನು ತಿಳಿದ ಗುರುವೇ ।। ಚರಣ ।।

ವೇದೋದ್ಭವೆ ಅನುಜನೇ ಸಲಹೋ ।
ವೇದ ಪೂಜಿತ ರಾಮನ ಮುಟ್ಟಿದ ಧೀರಾ ।
ವೇದವ್ಯಾಸ ಶಿಷ್ಯನ ಪೀಠದಿ ರಾಜಿಸಿ ।
ವೇದವತೀ ಪತಿಯನು ಮುದದಿಂದರ್ಚಿಸಿದ ।। ಚರಣ ।।

ವಿವರಣೆ :

ತತ್ತ್ವಮತ = ವೈಷ್ಣವ ಮತ

ವೇದೋದ್ಭವೆ = ಯಜ್ಞವೇದಿಯಿಂದ ಉದಿಸಿದ ದ್ರೌಪದಿ

ವೇದೋದ್ಭವೆಯ ಪತಿ = ದ್ರೌಪದೀ ಪತಿ ಶ್ರೀ ಭೀಮಸೇನದೇವರು

ವೇದೋದ್ಭವೆ ಅನುಜ = ಧೃಷ್ಟದ್ಯುಮ್ನ

ವೇದ ಪೂಜಿತ ರಾಮ = ಶ್ರೀ ಚತುರ್ಮುಖ ಬ್ರಹ್ಮದೇವರಿಂದ ಪೂಜಿತನಾದ ಶ್ರೀ ಮೂಲರಾಮ

ವೇದವ್ಯಾಸ ಶಿಷ್ಯನ ಪೀಠ =

ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಸಂಸ್ಥಾನಾಧೀಶ್ವರರಾದ ಶ್ರೀ ರಾಘವೇಂದ್ರಸ್ವಾಮಿಗಳವರ ವೇದಾಂತ ದಿಗ್ವಿಜಯ ವಿದ್ಯಾ ಸಾಮ್ರಾಜ್ಯದಲ್ಲಿ ಶ್ರೀ ಭುವನೇಂದ್ರತೀರ್ಥರ ಆಶ್ರಮ ಶಿಷ್ಯರಾಗಿ ಪೀಠದಲ್ಲಿ ಪಟ್ಟಾಭಿಷಿಕ್ತರಾಗಿ ರಾಜಿಸಿದ್ದರು.

ವೇದವತೀ ಪತಿಯನು ಮುದದಿಂದ ಅರ್ಚಿಸಿದ =

ಶ್ರೀ ಅಗ್ನಿದೇವರ ಪುತ್ರಿ ವೇದವತಿ ಪತಿ = ಪದ್ಮಾವತೀ ಪತಿಯಾದ ತಿರುಮಲೆಯ ಚೆಲುವನಾದ ಶ್ರೀ ಶ್ರೀನಿವಾಸನನ್ನು ಭಕ್ತಿ ಶ್ರದ್ಧೆಗಳಿಂಗ ಅರ್ಚಿಸಿದ ಪೂತಾತ್ಮರು!!
ಗುರು ವಿಜಯ ಪ್ರತಿಷ್ಠಾನ
*************


|| ಶ್ರೀ ವ್ಯಾಸತತ್ವಜ್ಞತೀರ್ಥ ಗುರುಭ್ಯೋ ನಮಃ ||

ಗುರುಮಹಿಮೆ : ರಾಜನ ಆಪತ್ತು ಪರಿಹಾರ

ಮಧ್ವಾಚಾರ್ಯ ಮೂಲಮಹಾಸಂಸ್ಥಾನ ದಕ್ಷಿಣಾಧಿ ಕವೀಂದ್ರಮಠ ಈಗಿನ ಶ್ರೀರಾಘವೇಂದ್ರ ಸ್ವಾಮಿಗಳ ಮಠದ  ಶ್ರೀಭುವನೇಂದ್ರತೀರ್ಥರ ಕರಕಮಲ ಸಂಜಾತರಾದ ಅಗ್ನಿ ದೇವರ ಅಂಶ ಸಂಭೂತರಾದ ದೃಷ್ಟದ್ಯುಮ್ನನ ಅವತಾರಾದವರು ಶ್ರೀವ್ಯಾಸತತ್ವಜ್ಞಾತೀರ್ಥರು. 

ರಾಮ ಭೂಪಾಲನ ಎಂಬ ರಾಜನ ಸಂಸ್ಥಾನಕೆ ಶತ್ರುಗಳು ನುಗ್ಗಿ ಬಂದಿದ್ದರು. ಶತ್ರುಗಳ ಅಟ್ಟಹಾಸಕೆ ರಾಜ್ಯ ಕಳೆದುಕೊಳ್ಳುವ ಭೀತಿ. ಇಂತಃ ಸಂದರ್ಭದಲ್ಲಿ ರಾಮ ಭೂಪಾಲ ಶ್ರೀವ್ಯಾಸತತ್ವಜ್ಞತೀರ್ಥರಿಗೆ ಮೊರೆಹೋಗುತ್ತಾನೆ. ವ್ಯಾಸತತ್ವಜ್ಞತೀರ್ಥರು ರಾಜನಿಗೆ ಅಭಯನೀಡಿ.

ಧರ್ಮೋಭವತು ಸದ್ಧರ್ಮ
ಮಾರ್ಗಣಾಸ್ಸಂತು ಮಾರ್ಗಣಃ |
ವಾಹಿನೀ ವಾಹಿನೀ ರಾಜನ್ !
* ಸ್ಯಾದರಾತಿ ಪರಾಜಯ ||*

ಈ ಒಗಟು ರಾಜರಿಗೆ ಹೇಳಿ ಆಶೀರ್ವಾದಿಸಿದರು.
ಹೇ ರಾಜನೇ! ನಿನ್ನ ಪ್ರಜೆಗಳ ರಕ್ಷಣೆ ಎಂಬ ಧರ್ಮವೇ ಸದ್ಧರ್ಮವಾಗಲಿ, ನಿನ್ನ ಜನರೇ ಬಾಣಗಳಾಗಲಿ, ನಿನ್ನ ಜನರ ಗುಂಪೇ ಒಂದು ದೊಡ್ಡ ಸೈನ್ಯವಾಗಲಿ, ಇದರಿಂದಾಗಿ ನಿನ್ನ ವೈರಿಗಳ ನಾಶವಾಗಿ ವಿಜಯಿಯಾಗು.

ಶ್ರೀಗಳ ಆಶೀರ್ವಾದದ ಹಾಗೆ ಶತ್ರುಗಳು ಸೈನ್ಯ ದಂಡಯಾತ್ರೆಯ ಸಂದರ್ಭದಲ್ಲಿ ಕೃಷ್ಣ ತುಂಗೆ ರಬ್ಬಸದಿಂದ ಪ್ರವಾಹ ಹರಿದು ಶತ್ರು ಸೈನಿಕರರೆಲ್ಲರು ಪ್ರವಾಹದ ರಬ್ಬಸಕೆ ಸಿಲುಕಿ ಮರಣಹೊಂದುತ್ತಾರೆ. ಯುದ್ಧವಿಲ್ಲದೆಯೇ ರಾಮ ಭೂಪಾಲನಿಗೆ ಜಯ ಉಂಟಾಗಿ ರಾಜ್ಯ ಮತ್ತು ರಾಜ್ಯವನ್ನು ತಮ್ಮ ತಪಶಕ್ತಿಯಿಂದ ಕಾಪಾಡುತ್ತಾರೆ.

ಇಂತಃ ಮಹಾತಪಸ್ವಿಗಳ ಅಪರೋಕ್ಷ ಜ್ಞಾನಿಗಳ ನಿತ್ಯ ಸ್ಮರಣೆ ನಮಗಾಗಲಿ , ನಮಗೆ ಬಂದ ಎಲ್ಲಾ ದುರಿತೆಗಳು ಪರಿಹಾರಮಾಡಿ ನಿತ್ಯದಲ್ಲಿ ಮಂಗಳವಉಂಟು ಮಾಡಲಿ ಎಂದು ಶ್ರೀವ್ಯಾಸತತ್ವಜ್ಞತೀರ್ಥರಲ್ಲಿ ಪ್ರಾರ್ಥಿಸೋಣ.

ನಿತ್ಯ ವ್ಯಾಸತತ್ವಜ್ಞರಂಘ್ರಿ ಭಜಿಸೊ | 
ಕೃತ ಕೃತ್ಯನೆಂದೆನಿಸೊ |
ಎತ್ತಿದ ಮಾನವ ಜನ್ಮ ಸಾರ್ಥಕೆನಿಸೊ | ಪುರುಷಾರ್ಥವಗಳಿಸೊ || 

by ಶ್ರೀ ಇಭರಾಮಪುರಾಧೀಶ

ವಿಷ್ಣುತೀರ್ಥಚಾರ್ಯ ಇಭರಾಮಪುರ
**************

ಶ್ರೀ ಐಜಿ ಸ್ವಾಮಿಗಳೆಂದು ಕರೆಯಲ್ಪಡುವ ಶ್ರೀ ವ್ಯಾಸತತ್ವಜ್ಞರ ಚರಿತ್ರೆ.

ಶ್ರೀ ಐಜಿ ವೆಂಕಟರಾಮಾಚಾರ್ಯರು  (ಇನ್ನೂ  ಅವರಿಗೆ ಸನ್ಯಾಸ ಆಶ್ರಮವಾಗಿದ್ದಿಲ್ಲ.  ಆನಂತರ ಸನ್ಯಾಸ ಆಶ್ರಮ ವಾದ ಮೇಲೆ ಅವರಿಗೆ ಶ್ರೀ ವ್ಯಾಸ ತತ್ವಜ್ಞರೆಂದು ಹೆಸರು ಬಂತು.)
ತಮ್ಮ ಶಿಷ್ಯರ ಪರಿವಾರ ಸಮೇತ ತಿರುಪತಿ ಯಾತ್ರೆಗೆ ಹೊರಟಿದ್ದಾರೆ. ಸಪ್ತಗಿರಿಯವಾಸನಾದ ಶ್ರೀ ಭೂದೇವಿಯರ ಒಡೆಯನ ಸಂದರುಶನವಾಗಿದೆ.
ಆ ಸಮಯದಲ್ಲಿ ಅಲ್ಲಿ ಮಾರಿಕಾ(ಪ್ಲೇಗ್ ತರಹ) ಉಪದ್ರವ.
ಅಲ್ಲಿದ್ದ ಜನರೆಲ್ಲ ಇವರನ್ನು ನೋಡಿ ಯಾರೋ ಮಹಾತ್ಮ ರು ಬಂದಿರುವರೆಂದು ತಿಳಿದು ಇವರ ಬಳಿ ಬಂದು ಈ ರೋಗದ ಉಪದ್ರವದಿಂದ ಊರಿನ ಜನರನ್ನು ಪಾರು ಮಾಡಲು ಕೇಳಿಕೊಂಡರು.
ಜನರ ಭಾದೆ ನೋಡಲಾರದೆ ಆಚಾರ್ಯರು ಅವರ ಪ್ರಾರ್ಥನೆ ಮೇರೆಗೆ ತಕ್ಷಣ ದಲ್ಲಿ
"ಅಂಜಿಸುವದ್ಯಾಕಮ್ಮ ಕಂಜೋದ್ಬವನಮ್ಮ|
ಅಮ್ಮಾ! ನಮ್ಮಮ್ಮ !ದುರ್ಗಮ್ಮ ಅಮ್ಮಾ ಎನ್ನುವ  ಕೃತಿಯನ್ನು ರಚನೆ ಮಾಡಿ 
ಶ್ರೀ ದುರ್ಗಾದೇವಿ ಅಂತರ್ಗತನಾದ ಶ್ರೀ ನರಸಿಂಹ ದೇವರ ಪ್ರಾರ್ಥನೆ ಮಾಡಿಕೊಳ್ಳಲು ನಂತರ ದಲ್ಲಿ ಆ ಮಾರಿಕಾ ಉಪದ್ರವ ಕಡಿಮೆಯಾಗುತ್ತದೆ. 
ಹೀಗೆ ಲೋಕೋಪಕಾರ ಮಾಡಿ ಮಾರಿಕಾ ಭಯದಿಂದ ಜನರನ್ನು ಕಾಪಾಡಿದ ಮಹಾನುಭಾವರು ಇವರು.
ಇದರ ಸಾಹಿತ್ಯ ಕೆಳಗೆ ಇದೆ.👇
ಅಂಜಿಸುವುದ್ಯಾಕಮ್ಮ ಕಂಜೋದ್ಭವ ನಮ್ಮ ನೀ|
ಅಂಜಿಸಿದರೆ ಲೋಕ ಅಂಜಾದಿರುವುದೆ ||. ಪ ||
ಕುಂಜರಗಮನೆ ನಾವಂಜನದೇವಿ|
ಸಂಜಾತನಾದ ಪ್ರಭಂಜನನುಗರು||
ಕಂಜಾನಾಭನ ಪಾದ ಕಂಜಾಕ್ಕೆ ವಿಮುಖ|
ಸಂಜಿಲಿ ಚಲಿಸುವ ಪುಂಜರು ಕಡಿಮೆ ||೧||

ನಿನ್ನಾನೆ ನಂಬಿ ನಾವಿನ್ನು ಸಂಸೃತಿಯಾ|
ಬನ್ನಾವೆ ಕಳಕೊಂಡು ಚನ್ನಾಗಿ ಜಗದಿ||
ಧನ್ಯರಾದೇವೆಂದು ಮನ್ನಾದಿ ಬಯಸೆ|
ಅನ್ಯಾರಂದದಲೆ ನೀ ನಮ್ಮನ್ನ ನೋಡುವರೆ ||೨||

ಸಿರಿ ನಾರಸಿಂಹನ್ನ ವರ ಭಕ್ತಿಯಲಿ ನೀವು|
ಕರವಶ ಮಾಡಿಪ್ಪೆ ಪರವೇನೆ ನಿನಗೆ|
ಪರಮೇಷ್ಠಿ ಮೊದಲಾದಾಮರರ ನೀ ಪೊರವೆ|
ಸಿರಿ ವಾಸುದೇವವಿಠಲನ್ನ ತೋರಮ್ಮ ||೩||
🙏ಶ್ರೀ ಕೃಷ್ಣಾರ್ಪಣಮಸ್ತು🙏 

ಐಜಿ ಸ್ವಾಮಿಗಳ ಮೇಲೆ ಶ್ರೀ ಗೋಪಾಲ ದಾಸರ ತಮ್ಮಂದಿರು ರಚಿಸಿದ್ದು.👇
ಪಂಕಜಾಕ್ಷಿ ಕೇಳಿದ್ಯಾ ಪಂಕಜ ಗಂಧಿ|
ವೆಂಕಟರಾಮಾರ್ಯರ ಮಹಾ ಮಹಿಮೆಯನ್ನು||
..
ಅಪಮೃತ್ಯು ಅಪರಿಮಿತದ ಪಾಪಗಳೆಲ್ಲ|
ಅಪರೋಕ್ಷ ಜ್ಞಾನಿಯು ಕೃಪೆ ಮಾಡೆ ಪೋಪವು|
ಇವರ ಬಿಟ್ಟವ ಕೆಟ್ಟ|
ಇವರಲ್ಲಿ ಇದ್ದವ ಗೆದ್ದ|
...
ವರದ ಗೋಪಾಲ ವಿಠ್ಠಲನು ಇವರಲ್ಲಿ ನಿಂತು|
ವರವ ಕೊಡುವನೆಂದು ಕರವುತಲಿದ್ದಾನೆ||.

ರುದ್ರಾಂತರ್ಗತ ನಾರಸಿಂಹ ಪಾಹಿಮಾಂ
*************

|| ಶ್ರೀಮನ್ಮೂಲರಾಮೋ ವಿಜಯತೇ ||
|| ಶ್ರೀ ಗುರುರಾಜೋ ವಿಜಯತೇ ||
|| ಶ್ರೀ ವ್ಯಾಸತತ್ವಜ್ಞತೀರ್ಥ ಗುರುಭ್ಯೋ ನಮಃ ||

ಶ್ರೀವ್ಯಾಸತತ್ವಜ್ಞ ತೀರ್ಥರ ಪೂರ್ವಾರಾಧನೆಯ ಪ್ರಯುಕ್ತ ಅವರ ಮಹಿಮೆಯ ಸ್ಮರಣೆ

ಗುರುಮಹಿಮೆ : ರಾಜನ ಆಪತ್ತು ಪರಿಹಾರ

ಮಧ್ವಾಚಾರ್ಯ ಮೂಲಮಹಾಸಂಸ್ಥಾನ ದಕ್ಷಿಣಾಧಿ ಕವೀಂದ್ರಮಠ ಈಗಿನ ಶ್ರೀರಾಘವೇಂದ್ರ ಸ್ವಾಮಿಗಳ ಮಠದ  ಶ್ರೀಭುವನೇಂದ್ರತೀರ್ಥರ ಕರಕಮಲ ಸಂಜಾತರಾದ ಅಗ್ನಿ ದೇವರ ಅಂಶ ಸಂಭೂತರಾದ ದೃಷ್ಟದ್ಯುಮ್ನನ ಅವತಾರಾದವರು ಶ್ರೀವ್ಯಾಸತತ್ವಜ್ಞಾತೀರ್ಥರು. 

ರಾಮ ಭೂಪಾಲನ ಎಂಬ ರಾಜನ ಸಂಸ್ಥಾನಕೆ ಶತ್ರುಗಳು ನುಗ್ಗಿ ಬಂದಿದ್ದರು. ಶತ್ರುಗಳ ಅಟ್ಟಹಾಸಕೆ ರಾಜ್ಯ ಕಳೆದುಕೊಳ್ಳುವ ಭೀತಿ. ಇಂತಃ ಸಂದರ್ಭದಲ್ಲಿ ರಾಮ ಭೂಪಾಲ ಶ್ರೀವ್ಯಾಸತತ್ವಜ್ಞತೀರ್ಥರಿಗೆ ಮೊರೆಹೋಗುತ್ತಾನೆ. ವ್ಯಾಸತತ್ವಜ್ಞತೀರ್ಥರು ರಾಜನಿಗೆ ಅಭಯನೀಡಿ.

ಧರ್ಮೋಭವತು ಸದ್ಧರ್ಮ
ಮಾರ್ಗಣಾಸ್ಸಂತು ಮಾರ್ಗಣಃ |
ವಾಹಿನೀ ವಾಹಿನೀ ರಾಜನ್ !
ಸ್ಯಾದರಾತಿ ಪರಾಜಯ ||

ಈ ಒಗಟು ರಾಜರಿಗೆ ಹೇಳಿ ಆಶೀರ್ವಾದಿಸಿದರು.
ಹೇ ರಾಜನೇ! ನಿನ್ನ ಪ್ರಜೆಗಳ ರಕ್ಷಣೆ ಎಂಬ ಧರ್ಮವೇ ಸದ್ಧರ್ಮವಾಗಲಿ, ನಿನ್ನ ಜನರೇ ಬಾಣಗಳಾಗಲಿ, ನಿನ್ನ ಜನರ ಗುಂಪೇ ಒಂದು ದೊಡ್ಡ ಸೈನ್ಯವಾಗಲಿ, ಇದರಿಂದಾಗಿ ನಿನ್ನ ವೈರಿಗಳ ನಾಶವಾಗಿ ವಿಜಯಿಯಾಗು.

ಶ್ರೀಗಳ ಆಶೀರ್ವಾದದ ಹಾಗೆ ಶತ್ರುಗಳು ಸೈನ್ಯ ದಂಡಯಾತ್ರೆಯ ಸಂದರ್ಭದಲ್ಲಿ ಕೃಷ್ಣ ತುಂಗೆ ರಬ್ಬಸದಿಂದ ಪ್ರವಾಹ ಹರಿದು ಶತ್ರು ಸೈನಿಕರರೆಲ್ಲರು ಪ್ರವಾಹದ ರಬ್ಬಸಕೆ ಸಿಲುಕಿ ಮರಣಹೊಂದುತ್ತಾರೆ. ಯುದ್ಧವಿಲ್ಲದೆಯೇ ರಾಮ ಭೂಪಾಲನಿಗೆ ಜಯ ಉಂಟಾಗಿ ರಾಜ್ಯ ಮತ್ತು ರಾಜ್ಯವನ್ನು ತಮ್ಮ ತಪಶಕ್ತಿಯಿಂದ ಕಾಪಾಡುತ್ತಾರೆ.

ಇಂತಃ ಮಹಾತಪಸ್ವಿಗಳ ಅಪರೋಕ್ಷ ಜ್ಞಾನಿಗಳ ನಿತ್ಯ ಸ್ಮರಣೆ ನಮಗಾಗಲಿ , ನಮಗೆ ಬಂದ ಎಲ್ಲಾ ದುರಿತೆಗಳು ಪರಿಹಾರಮಾಡಿ ನಿತ್ಯದಲ್ಲಿ ಮಂಗಳವಉಂಟು ಮಾಡಲಿ ಎಂದು ಶ್ರೀವ್ಯಾಸತತ್ವಜ್ಞತೀರ್ಥರಲ್ಲಿ ಪ್ರಾರ್ಥಿಸೋಣ.

ನಿತ್ಯ ವ್ಯಾಸತತ್ವಜ್ಞರಂಘ್ರಿ ಭಜಿಸೊ | 
ಕೃತ ಕೃತ್ಯನೆಂದೆನಿಸೊ |
ಎತ್ತಿದ ಮಾನವ ಜನ್ಮ ಸಾರ್ಥಕೆನಿಸೊ | ಪುರುಷಾರ್ಥವಗಳಿಸೊ || 

ಶ್ರೀ ಇಭರಾಮಪುರಾಧೀಶ
ವಿಷ್ಣುತೀರ್ಥಚಾರ್ಯ ಇಭರಾಮಪುರ
************

ಇಂದು (ಆಗಸ್ಟ್ 12 2020)ಶ್ರೀ ಅಗ್ಯಾಂಶ ಸಂಭೂತರಾದ ಶ್ರೀ ವ್ಯಾಸತತ್ವಜ್ಞತೀರ್ಥರ ಮಧ್ಯರಾಧನೆ.💐💐💐💐

 ಶ್ರೀಗಳವರ ವಿಶೇಷತೆಗಳು -

* ಮಧ್ವ ವಾಂಗ್ಮಯದಲ್ಲೇ ಶ್ರೇಷ್ಠ ವ್ಯಾಖ್ಯಾನಕಾರರ ಸಾಲಿನಲ್ಲಿ ನಿಲ್ಲುವವರು.
* ಶ್ರೀ ವಿಷ್ಣುತೀರ್ಥರಂತಹ ಮಹಾಮತಿಗಳನ್ನೂ ಕೊಟ್ಟಿದ್ದು. ಅಲ್ಲದೆ ೩೦೦ ಕ್ಕೂ ಹೆಹ್ಚು ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿ , ತಿರುಪತಿಯಲ್ಲಿ ಅನೇಕ ಬಾರೆ ಶ್ರೀಮನ್ಯಾಯಸುಧಾ ಮಂಗಳ ಮಾಡಿದ್ದು.
* ವ್ಯಾಸಸಾಹಿತ್ಯದಲ್ಲಿ ಅನೇಕ ಗ್ರಂಥಗಳನ್ನು ಕೊಟ್ಟದ್ದಲ್ಲದೆ , ಶ್ರೀ ಗೋಪಾಲದಾಸರಿಂದ ಅಂಕಿತ ಹಾಕಿಸಿಕೊಂಡು 'ವಾಸುದೇವವಿಠಲ" ಎಂಬ ಅಂಕಿತದಿಂದ ಹರಿದಾಸ ಕೀರ್ತನೆಗಳನ್ನೂ ರಚನೆ ಮಾಡಿ ಹರಿದಾಸಧುರೀಣರೆನಿಸಿಕೊಂಡದ್ದು. 
*  ವಿದ್ವದ್ಗದ್ವಾಲ್ ಎಂದೇ ಖ್ಯಾತವಾದ ಗದ್ವಾಲಿಯಾ ಅರಸನಿಗೆ ರಾಜಗುರುಗಳಾಗಿ ಇದ್ದದ್ದು. ಅನೇಕ ವಾದಿಗಳನ್ನು ಜಯಿಸಿದ್ದು.
* ಶ್ರೀಸುಧಾಪಾಠ ನಿರತರಾಗಿದ್ದಾಗ ರಾಜನ ಆಸ್ಥಾನಕ್ಕೆ ಬಂದಿದ್ದ ದುರ್ವಾದಿಯನ್ನು ಅಡುಗೆಯವನಿಗೆ ಅನುಗ್ರಹಿಸಿ ಅವನು ಆ ವಾದಿಯನ್ನು ಗೆಲ್ಲುವಂತೆ ಮಾಡಿಸಿದ್ದು.
* ಶ್ರೀವಿಷ್ಣುತೀರ್ಥರಿಗೆ ಅನೇಕ ಜನರು ಶಿಷ್ಯರು ದೊರಕುವಂತೆ ಮಾಡಿ ಅನುಗ್ರಹಿಸಿದ್ದು.

 ಶ್ರೀಗಳವರು ತೋರಿಸಿದ ಮಹಿಮೆಗಳು- 

* ಶ್ರೀ ಮಂತ್ರಾಲಯ ಮಠದ ಶ್ರೀ ಭುವನೇಂದ್ರ ತೀರ್ಥರಿಂದ ಸನ್ಯಾಸ ಪಡೆದು ಶ್ರೀ ವ್ಯಾಸತತ್ವಜ್ಞ ತೀರ್ಥರಾದದ್ದು. 
* ನೀರಿನವನಿಂದ ಶಾಸ್ತ್ರ ಹೇಳಿಸಿದ್ದು
* ಮುದುಮಾಲಿ ದೇಸಾಯಿಯ ಉದರ ಶೋಲೆ ಪರಿಹರಿಸಿದ್ದು
* ತಿರುಪತಿಯಲ್ಲಿ ರಥ ಎಳೆಯುವಾಗ ತೋರಿದ ಮಹಾ ಮಹಿಮೆ
* ತಮ್ಮ ಪಾದುಕೆಗಳನ್ನು ಸೇವಿಸಿದ ವಿಷ್ಣುತೀರ್ಥರಿಗೆ ಭವಿಷ್ಯದಲ್ಲಿ ಒಳಿತಾಗುವಂತೆ ಅನುಗ್ರಹಿಸಿದ್ದು.
*  ತಮ್ಮ ಮಠದ ಬಳಿ ನದ್ಯಭಿಮಾನಿ ದೇವತೆಯನ್ನು ಪ್ರಾರ್ಥಿಸಿ , ದಂಡದಿಂದ ಗೆರೆ ಹಾಕಿ ತುಂಗಬಧ್ರೆಯನ್ನೆ ತಮ್ಮ ಬಳಿ ಕರೆಸಿಕೊಂಡಿದ್ದು . 
* ಆರಣಿ ಸಂಸ್ಥಾನದಲ್ಲಿ ತಮ್ಮ ನಾಲ್ಕು ಜನ ಶಿಷ್ಯರನ್ನು ಗೆಲ್ಲುವಂತೆ ಮಾಡಿದ್ದು.
* ಬ್ರಹ್ಮರಾಕ್ಷಸನಿಗೆ ಜನ್ಮ ನಿವಾರಣ ಮಾಡಿದ್ದು.
* ಗದ್ವಾಲ್ ರಾಜನ ಆಪತ್ತು ಪರಿಹರಿಸಿದ್ದು.
* ಐಜಿ ಹಳ್ಳವನ್ನು ಗರುಡಾ ನದಿಯನ್ನಾಗಿಸಿದ್ದು 
* ಹಂಪೆಯಲ್ಲಿ ವಿರೂಪಾಕ್ಷನ ರಥಕ್ಕೆ ಹತ್ತಿದ ಬೆಂಕಿಯನ್ನು ವೇಣಿಸೋಮಪುರ ದಿಂದಲೇ ನಂದಿಸಿದ್ದು.
* ಗೋವುಗಳಸಹಿತನಾದ ಶ್ರೀ ಕೃಷ್ಣ ಪರಮಾತ್ಮನ ದರ್ಶಿಸಿದ್ದು.
* ಪೂನ ನಗರದ ವಿದ್ವತ್ಸಭೆಯಲ್ಲಿ ವಾದಿಗಳನ್ನು ಜಯಿಸಿದ್ದು.
* ಮಾರಿಕ ಉಪದ್ರವ ಪರಿಹರಿಸಿದ್ದು.
* ಶ್ರೀಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧಿಪತಿ ಶ್ರೀ ವಿಬುಧೇಂದ್ರ ತೀರ್ಥರಿಗೆ ಒಲಿದು ಬಂದ ಶ್ರೀ ನರಸಿಂಹದೇವರನ್ನು ಅರ್ಚಿಸಿದ್ದು.
* ವರ ರೌದ್ರಿನಾಮಸಂವತ್ಸರ ಶ್ರಾವಣ , ಪರಪಕ್ಷ  ಅಷ್ಟಮಿ  ಭೌಮವಾರ , ಭರಣೀ ನಕ್ಷತ್ರ ಪ್ರಾತಃ ಕಾಲದಲ್ಲಿ ಹರಿಧ್ಯಾನ ತತ್ಪರರಾದರು. 
* ಇಂದಿಗೂ ನೆನೆದ ಭಕ್ತರನ್ನು , ಶ್ರೀ ಮಂತ್ರಾಲಯ ಪ್ರಭುಗಳಂತೆ ಜ್ಞಾನ , ಭಕ್ತಿ , ವೈರಾಗ್ಯಾದಿ ಗಳನ್ನೂ ಕೊಟ್ಟು ಅನುಗ್ರಹಿಸುತ್ತಿರುವ ಮಹಾ ಮಹಿಮರು.. 
ಮೂಲವೃಂದಾವನ.

ಅಭಿನವ ಶುಕಾಚಾರ್ಯರು, ಎಂದೇ ಪ್ರಸಿದ್ದಿಯಾದ ಶ್ರೀ ಸುವಿಧೇಂದ್ರರು ಪೂಜಿಸುವ ಪ್ರತಿಮೆಗಳು,ಶ್ರೀ ವ್ಯಾಸತತ್ವಜ್ಞತೀರ್ಥರು ಪೂಜೆ ಮಾಡಿದ್ದು ಎಂಬುದು ವಿಶೇಷ..
ಗುರುಗಳ ಸೇವೆಯಲ್ಲಿ...

ಎಸ್.ವಿಜಯ ವಿಠ್ಠಲ💐💐💐🙏🏼🙏🏼🙏🏼
***********

"
" ಶ್ರೀ ವ್ಯಾಸತತ್ತ್ವಜ್ಞರು - 1 "
" ವ್ಯಾಸ - ದಾಸ ಸಾಹಿತ್ಯದ ಸವ್ಯಸಾಚಿಗಳು ಶ್ರೀ ಅಗ್ನ್ಯಾ೦ಶ ಸಂಭೂತರಾದ ಶ್ರೀ ವ್ಯಾಸತತ್ತ್ವಜ್ಞತೀರ್ಥರು "
" ದಿನಾಂಕ : 12.08.2020 ಬುಧವಾರ ಶ್ರೀ ವ್ಯಾಸತತ್ತ್ವಜ್ಞತೀರ್ಥರ ಆರಾಧನಾ ಮಹೋತ್ಸವ. ತನ್ನಿಮಿತ್ತ ಆ ಮಹಾ ಮಹಿಮರ ಕಿರು ಪರಿಚಯ 
ಪ್ರಕಟೀಕೃತಟೀಕೋಕ್ತಿರ್ಮ-
ರ್ಕಟೀಕೃತ ಮಾಯಿರಾಟ್ ।
ಚರ್ಕ್ರುತಾದ್ವ್ಯಾಸತತ್ತ್ವಜ್ಞ-
ಮಸ್ಕರೀ೦ದ್ರ ಕೃಪಾಮಯಿ ।।
ಶ್ರೀ ಭಾವಿ ರುದ್ರಾವತಾರಿಗಳಾದ ಶ್ರೀ ಭೂತರಾಜರ ಅಂಶ ಸಂಭೂತರಾದ ಶ್ರೀ ವರದ ಗೋಪಾಲದಾಸರ ಮಾತುಗಳಲ್ಲಿ.... ..
ರಾಗ : ಭೂಪಾಳಿ ತಾಳ : ಝ೦ಪೆ
ಸ್ಮರಿಸು ಗುರುಗಳನೆ ಮನವೇ ।
ಸ್ಮರಿಸು ಗುರುಗಳ ನಿನಗೆ 
ಪರಮ ಮಂಗಳ । ಬಂದ ।
ದುರಿತ ಪರ್ವತಕೆ ಪವಿ 
ಎಂದು ತಿಳಿದೂ ।। ಪಲ್ಲವಿ ।।
ಉರಗ ವೃಶ್ಚಿಕ ವ್ಯಾಘ್ರ 
ಅರಸು ಚೋರಾಗ್ನಿ ಕರಿ ।
ಗರಳ ಜ್ವರ ಮೊದಲಾದ 
ಭಯಗಳಿಂದಾ ।
ಪೊರದು ಮಂಗಳವೀವ 
ನರಹರಿಯ ದಾಸರ ।
ಚರಣ ಕಂಡೆನು ದುರಿತ 
ಪರಿಹಾರವಾಯಿತು ।। ಚರಣ ।।
ಗುರು ಸ್ಮರಣೆಯಿಂದ 
ಸಕಲ ವಿಪತ್ತು ಪರಿಹಾರ ।
ಗುರು ಸ್ಮರಣೆಯಿಂದ 
ಪಂಪದವು ನಿನಗೆ ।
ಗುರು ಸ್ಮರಣೆಯಿಂದ 
ಪುಷ್ಕಳ ದ್ರವ್ಯವದಗುವದು ।
ಗುರು ಸ್ಮರಣೆಯಿಂದಾ 
ಹರಿ ವಲಿದು ಪೊರೆವಾ ।। ಚರಣ ।।
ಗುರುಗಳಿಗಿಂತಧಿಕ 
ಇನ್ನಾರು ಆಪ್ತರು ನಿನಗೆ ।
ಗುರುಗಳೇ ಪರಮ 
ಹಿತಕರರು ನಿನಗೆ ।
ಗುರು ಸ್ವಾಮಿ ವರದ-
 ಗೋಪಾಲ ವಿಠಲ ಸರ್ವ ।
ದುರಿತಗಳ ಕಳೆದು 
ಸುಖಕರದ ನೋಡೋ ।। ಚರಣ ।।
ಮೇಲ್ಕಂಡ ಪದ್ಯದಲ್ಲಿ ಶ್ರೀ ದಾಸವರ್ಯರು - ಶ್ರೀ ವ್ಯಾಸತತ್ತ್ವಜ್ಞ ತೀರ್ಥರು -  ಸ್ಮರಣೆ ಮಾಡಿದ ಸುಜನರಿಗೆ ಏನೆಲ್ಲಾ ಪರಮಾನುಗ್ರಹ ಮಾಡುತ್ತಾರೆಂಬುದನ್ನು ಅತ್ಯಂತ ಮನೋಜ್ಞವಾಗಿ ವಿವರಿಸಿದ್ದಾರೆ. 
ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಚಿನ್ನವಾಗಿ ನಡೆದು ಬಂದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮುಖ್ಯ ಸಂಸ್ಥಾನಾಧೀಶ್ವರರೂ; ಶ್ರೀ ಗುರುಸಾರ್ವಭೌಮರ ಉಭಯ ವಂಶಾಬ್ಧಿ ಚಂದ್ರಮರೂ ಆದ ಶ್ರೀ ಭುವನೇಂದ್ರತೀರ್ಥರ ವಿಶೇಷಾನುಗ್ರಹಕ್ಕೆ ಪಾತ್ರರಾದವರೂ... 
ಜ್ಞಾನ - ಭಕ್ತಿ - ವೈರಾಗ್ಯನಿಧಿಗಳಾದ ಶ್ರೀ ವೆಂಕಟರಾಮಾಚಾರ್ಯರು ಶ್ರೀ ಭುವನೇಂದ್ರತೀರ್ಥರಿಂದ ಸಂನ್ಯಾಸಾಶ್ರಮ ಸ್ವೀಕರಿಸಿ, ಅವರ ಅಮೃತಮಯವಾದ ಹಸ್ತಗಳಿಂದ ಶ್ರೀ ಮದಾಚಾರ್ಯರ ವೇದಾಂತ ದಿಗ್ವಿಜಯ ವಿದ್ಯಾ ಸಾಮ್ರಾಜ್ಯದಲ್ಲಿ ಪಟ್ಟಾಭಿಷಿಕ್ತರಾದ ಮಹಾನುಭಾವರು. 
ಶ್ರೀ ವ್ಯಾಸತತ್ತ್ವಜ್ಞತೀರ್ಥ ಗುರುವರೇಣ್ಯರೇ! 
ನಿಮ್ಮ ಮಹಿಮೆ ಆಗಾಧವಾಗಿದೆ. ಸರ್ವ ಶಾಸ್ತ್ರ ವಿಶಾರದರೆಂದು ಮಾನ್ಯರಾದ; ಶ್ರೀಮನ್ನ್ಯಾಯಸುಧೆಗೆ " ವ್ಯಜನ ", ತತ್ತ್ವಪ್ರಕಾಶಿಕೆಗೆ " ಗುರುಪ್ರಭಾ ಮತ್ತು ಲಘುಪ್ರಭಾ "; " ಕುಲಿಶ " ಎಂಬ ಪ್ರೌಢ ಗ್ರಂಥಗಳನ್ನು ರಚಿಸಿ ಸಕಲ ವಿದ್ವಾಂಸರೂ; ಧರ್ಮಾಭಿಮಾನಿಗಳಾದ ಸಜ್ಜನರಿಂದ ವಂದಿತರಾಗಿ ಪೂಜಿತರಾದ; ಗದ್ವಾಲಿನ ರಾಜ ರಾಮಭೂಪಾಲನಿಗೆ ಗುರುಗಳಾಗಿ; ಅವನಿಂದ ಪೂಜಿತರಾದ; ವೇಣೀಸೋಮಾಪುರವೆಂಬ ಕ್ಷೇತ್ರಕ್ಕೆ ಪ್ರಭುಗಳಾದವರು ಶ್ರೀ ವ್ಯಾಸತತ್ತ್ವಜ್ಞರು!!
" ಶ್ರೀ ವ್ಯಾಸತತ್ತ್ವಜ್ಞತೀರ್ಥರ ಸಂಕ್ಷಿಪ್ತ ಮಾಹಿತಿ "
ಹೆಸರು : ಶ್ರೀ ವೆಂಕಟರಾಮಾಚಾರ್ಯರು
ತಂದೆ : ಶ್ರೀ ವೆಂಕಟ ನರಸಿಂಹಾಚಾರ್ಯರು
ತಾಯಿ : ಸಾಧ್ವೀ ಮಹಾಲಕ್ಷ್ಮೀದೇವಿ 
ಗೋತ್ರ : ಕೌಶಿಕ
ವಂಶ : ಷಾಷ್ಠಿಕ
ಜನ್ಮ ಸ್ಥಳ : ಐಜಿ ( ತಾ : ಗದ್ವಾಲ, ಜಿ : ಕರ್ನೂಲ್ - ಆಂಧ್ರಪ್ರದೇಶ್ )
ಶ್ರೀ ಭಾವಿ ರುದ್ರಾವತಾರಿಗಳಾದ ಶ್ರೀ ಭೂತರಾಜರ ಅಂಶ ಸಂಭೂತರಾದ ಶ್ರೀ ವರದ ಗೋಪಾಲದಾಸರ ಮಾತುಗಳಲ್ಲಿ.... .. 
ರಾಗ : ಸೌರಾಷ್ಟ್ರ   ತಾಳ : ತ್ರಿವಿಡಿ 
ಮಾನಿನಿಯೆ ಈ ಮಹಾತ್ಮ ದಿವಿಜರರು 
ಆವರೊ ತಿಳಿಯಬೇಕೆಲವೆ ।। ಪಲ್ಲವಿ ।।
ಜ್ಞಾನಿ ವೆಂಕಟ ನರಸಿಂಹಾರ್ಯರ 
ಸೂನುವೊ ಉದಿತ ।
ಸುಭಾನುವೊ ಜನಿತ ಕೃಶಾನುವೊ 
ನತಸುರ ಧೇನುವೊ ।
ಜಾನಕೀ ಜಾನೀಯನ 
ಪದಕಮಲ ।
ಧೇನಿಪ ದಿನದಿನ 
ದೀನ ದಯಾಳೊ ।। ಅ ಪ ।।
ಹಿಂದೆ ಮಾಡಿದ ಸುಕೃತ ಫಲವೇ ।
ಬಂದೊದಗಿ ಮುನಿವರನ ಪಾದಾ ।
ದ್ವಂದ್ವಗಳ ಸೇವೆಯು 
ದೊರೆವದಿದು ಛಂದವೋ ಪರಮಾ ।।
ನಂದವೋ ಸುಖಕಾಸ್ಪಂದವೋ 
ಜ್ಞಾನದ ಕಂದವೋ ।
ವಂದಿಪೆ ಜನರಿಗೆ 
ನಂದವ ನೀಡುತಾ ।
ಅಂದದಿಂದೆನ್ನನು 
ಪೊಂದಿಹರೆನಗೇ ।। ಚರಣ ।।
ನಿತ್ಯ ನೈಮಿಥ್ಯಗಳು ದಿನದಿನ ।
ಸತ್ಯವಾಕ್ ಸತ್ಕ್ರಿಯೆಗಳೆಲ್ಲವು ।
ಹೊತ್ತು ಹೊತ್ತಿಗೆ ಹರಿಯ 
ಪೂಜಿಪ ಭಕ್ತರೋ ಇವರತಿ ।।
ಶಕ್ತರೋ ಶಾಸ್ತ್ರಾಸಕ್ತರೋ
ಜೀವನ್ಮುಕ್ತರೋ ।    
ಅತ್ತಿತ್ತೋಡದೆ ತತ್ತಳವಿಲ್ಲದೆ 
ಸತ್ವ ಶ್ರೀಹರಿಗಳು 
ಬಿತ್ತರಿಸುವರೋ ।। ಚರಣ ।।
ಹರಿ ಪರಾತ್ಪರು ಸಿರಿ ವಿರಿಂಚರು ।
ಪರಮ ಪ್ರಿಯರೆಂದು ।
ತರತಮ ಪರಿಪರಿ ಬಗೆಯಿಂದ 
ಪೇಳುವ ಧೀರರೋ ।।
ಜ್ಞಾನ ಗಂಭೀರರೋ 
ದಾನದಿ ಶೂರರೋ ।
ವಾದಿ ಶೈಲಕ ಹೀರರೋ ।
ವೀರ ಶ್ರೀ ವರದ -
ಗೋಪಾಲವಿಠಲನ ।
ಮೂರುತಿ ಮನದಲ್ಲಿ 
ತೋರುವರಿವರು ।। ಚರಣ ।।
***
" ಶ್ರೀ ವ್ಯಾಸತತ್ತ್ವಜ್ಞರು - 2 "
ಶ್ರೀ ವ್ಯಾಸತತ್ತ್ವಜ್ಞತೀರ್ಥರು ಅಪರೋಕ್ಷ ಜ್ಞಾನಿಗಳೂ ಮತ್ತು ಶ್ರೀ ಧೃಷ್ಟದ್ಯುಮ್ನರ ಅವತಾರ. 
ಇವರ ಪೂರ್ವಾಶ್ರಮದ ಹೆಸರು " ಐಜಿ ವೆಂಕಟರಾಮಾಚಾರ್ಯರು ".
ಐಜಿ ಮನೆತನವು ಪಾಂಡಿತ್ಯಕ್ಕೆ ಮೊದಲಿಂದಲೂ ಪ್ರಸಿದ್ಧವಾಗಿದೆ. 
ಇವರ ತಂದೆ ಶ್ರೀ ವೆಂಕಟ ನರಸಿಂಹಾಚಾರ್ಯರು ಮಹಾ ವಿದ್ವಾಂಸರಾಗಿದ್ದರು.
ಶ್ರೀ ಗೋಪಾಲದಾಸರು..
ರಾಗ : ಕಲ್ಯಾಣಿ ತಾಳ : ಝ೦ಪೆ
ಕಂಡೆ ಕರುಣಿಗಳೊಳಗೆ 
ಅಗ್ರೇಸರರಾದ ।
ಪಂಡಿತ ರಾಮಾರ್ಯರ ।। ಪಲ್ಲವಿ ।।
ಕೊಂಡಾಡಲಿವರನು 
ಎಷ್ಟರವ ನಾನು ।
ಕಂಡೆ ಯನ್ನ ಮನ-
ಕುತ್ಸಾಹವಾಗಿ ।। ಆ. ಪ ।।
ಸಿರಿ ವೆಂಕಟ ನರಸಿಂಹಾಚಾರ್ಯರೆಂಬ ।
ವಾರ ಕ್ಷೀರ ಶರಧಿಯಲ್ಲಿ ।
ಪರಮ ಶೋಭಿತ ಚಂದ್ರನಂತೆ 
ಉದ್ಭವಿಸಿ ।ಸುಜ ।
ನರಿಗೆ ಆಹ್ಲಾದನಾಗಿ ।।
ವರ ವೇದ ಶಾಸ್ತ್ರಗಳನೋದಿಸಿ 
ಶಿಷ್ಯ ಜನಕೆ ।
ವರದೊರೆದು ಉಪದೇಶಿಸಿ ।
ಮರಿಯದೆ ಎಂದು ಕ್ಷಣ ಬಿಡದೆ 
ಹರಿಪರರಾಗಿ ।
ಇರುವ ಮಹಾ ಸುಗುಣರನ್ನು 
ಇಂದು ।। ಚರಣ ।।
ಶ್ರೀ ವೆಂಕಟ ನರಸಿಂಹಾಚಾರ್ಯರು ತಮ್ಮ ಮಗನ ಭವಿಷ್ಯ ಕುರಿತು ಕೇಳುವುದಕ್ಕಾಗಿ ಉತ್ತನೂರಿಗೆ ಬಂದರು. 
ಆ ಕಾಲದಲ್ಲಿ ಭವಿಷ್ಯ ನುಡಿಯುವವರೆಂದೇ ಖ್ಯಾತರಾದ ಶ್ರೀ ಗೋಪಾಲದಾಸರನ್ನು ನೋಡಿದಾಗ ಶ್ರೀ ಗೋಪಾಲದಾಸರ ಭವಿಷ್ಯವಾಣಿಯು...
ಶ್ರೀ ಅಗ್ನ್ಯಾ೦ಶರಾದ ಶ್ರೀ ವೆಂಕಟ ರಾಮಾಚಾರ್ಯರ ಬಗ್ಗೆ ಚಿಂತಿಸುವಿರೇಕೆ? 
ಶ್ರೀ ವೆಂಕಟರಾಮಾಚಾರ್ಯರು ಸರ್ವರಿಂದಲೂ ವಂದ್ಯರಾಗಿ ಶ್ರೀ ವೇದವ್ಯಾಸರ ಮತ್ತು ಶ್ರೀಮದಾನಂದತೀರ್ಥರ ವಿಶೇಷ ಸೇವೆಯನ್ನು ಮಾಡುತ್ತಾರೆ ನಿಶ್ಚಿಂತರಾಗಿಯಿರಿ ಎಂದು ತಮಗೆ ಮುನ್ನಾದಿನ ಸ್ವಪ್ನದಲ್ಲಿ ಆ ಬಾಲಕ ಉಪದೇಶ ಮಾಡಿದ್ದನ್ನು ಸ್ಮರಿಸುತ್ತಾ ಶ್ರೀ ವೆಂಕಟರಾಮಾಚಾರ್ಯರ ಭವಿಷ್ಯವನ್ನು ಹೇಳಿದರು!!
ಚರಣವೆಂದರೆ ಇವರ 
ಚರಣವೇ ಸುಖಕರ ।
ಹರಿಯಾತ್ರ ಪರವಾಗಿ ಇನ್ನು ।
ಕರಗಳೆಂದರೆ ಇವರ 
ಕರವೇ ಮಂಗಳಕರ ।
ಹರಿ ಪೂಜೆಯಲ್ಲಿ ಸತತ ।।
ಕರಣಗಳು ಮುಂತಾದ 
ಸರ್ವೇ೦ದ್ರಿಯಗಳಿಂದ ।
ಹರಿಯನ್ನೇ ವಿಷಯಕರಿಸಿ ।
ಇರುವ ಅನುಭೋಗವು 
ಇರತೋರಿ ತಮ್ಮ ನಿಜ ।
ಕುರಹ ನೋಡೆಂದು ಚ-
ಪ್ಪರಿಸಿ ಬಿಗದಪ್ಪಿದುದ ।। ಚರಣ ।।
ಏಸು ಜನ್ಮದ ಸುಕೃತ 
ಎನಗಿವರ ಕರುಣ । ಉಪ ।
ದೇಶ ಸ್ವಪನದಿ ಆದುದು ।
ಕೇಶವನೇ ಈ ರೂಪದಿ 
ಹೇಳಿದನ್ಹ್ಯಾಗೋ ।
ಲೇಶನಾ ಅಂದವನು ಅಲ್ಲ ।।
ದಾಸ ಗುರು ವಿಜಯರಾಯರೇ 
ಇಲ್ಲಿ ನಿಂದೆನ್ನ ।
ಪೋಷಿಸುವ ಬಗೆಯು ಹೇಗೋ ।
ವಾಸುದೇವ ಹಯಾಸ್ಯ 
ಗೋಪಾಲವಿಠಲನ ।
ದಾಸರೊಳುಗುತ್ತಮರ 
ದಯಕೆ ಸರಿಯುಂಟೆ ।। ಚರಣ ।।
ಶ್ರೀ ವೆಂಕಟ ನರಸಿಂಹಾಚಾರ್ಯರು ತಮ್ಮ ಮಗನ ಕುರಿತು ಏನು ಹೇಳಿದರೂ ವಿದ್ಯೆ ಇಲ್ಲದವನು ಹೇಗೆ ಪಂಡಿತನಾಗುತ್ತಾನೆ? ಎಂದು ಶ್ರೀ ದಾಸರನ್ನು ಪ್ರಶ್ನಿಸಿದರು. 
ಆಗ ಶ್ರೀ ಗೋಪಾಲದಾಸರು..ಶ್ರೀ ವೆಂಕಟರಾಮಾಚಾರ್ಯರ ಪೂರ್ವ ಸಂಸ್ಕಾರವು ಬಲವತ್ತರವಾದ್ದರಿಂದ ಶ್ರವಣ ಮಾತ್ರದಿಂದಲೇ ಉದ್ಧಾಮ ಪಂಡಿತರಾಗುವರೆಂದೂ; ಇವರು ದ್ವಾಪರದಲ್ಲಿ ಧೃಷ್ಟದ್ಯುಮ್ನನಾಗಿ ಅವತರಿಸಿದಾಗ ಶ್ರೀ ಭೀಮಸೇನದೇವರಿಂದ ಉಪದೇಶ ಪಡೆದ ಮಹಾನುಭಾವರು.
***
"" ಶ್ರೀ ವ್ಯಾಸತತ್ತ್ವಜ್ಞರು - 3 "
ಶ್ರೀ ಗೋಪಾಲದಾಸರ ಮಾತು... 
ಆಚಾರ್ಯರೇ! ನೀವು ಶ್ರೀ ವೆಂಕಟರಾಮಾಚಾರ್ಯರನ್ನು ಕುಳ್ಳಿರಿಸಿಕೊಂಡು ಸರ್ವಮೂಲ ಗ್ರಂಥಗಳನ್ನು ಪಾರಾಯಣ ಮಾಡುತ್ತಾ ಬನ್ನಿರಿ. 
ಈ ವಿಷಯದಲ್ಲಿ ಅನುಮಾನ ಬೇಡವೆಂದೂ ಶ್ರೀ ಶ್ರೀನಿವಾಸನೇ ನನ್ನಲ್ಲಿ ನಿಂತು ನುಡಿಸುತ್ತಿದ್ದಾನೆಂದೂ; ಅಕ್ಕನವರು ( ಶ್ರೀ ವ್ಯಾಸತತ್ತ್ವಜ್ಞತೀರ್ಥರ ತಾಯಿ ) ಕಳುಹಿಸಿಕೊಟ್ಟರು. 
ಉತ್ತತ್ತಿಯನ್ನು ಅಭಿಮಂತ್ರಿಸಿ ಆಚಾರ್ಯರಿಗೆ ಕೊಟ್ಟು ಕಳುಹಿಸಿದರು!!
ಆಚಾರ್ಯರು ಅಭಿಮಂತ್ರಿಸಿ ಕೊಟ್ಟ ಉತ್ತತ್ತಿಯನ್ನು ತಂದು ತಮ್ಮ ಮಗನಿಗೆ ಕೊಟ್ಟರು.
ಶ್ರೀ ವೆಂಕಟರಾಮಾಚಾರ್ಯರು ಮಹಾ ಪ್ರಸಾದವೆಂದು ಸ್ವೀಕರಿಸಿದ ತಕ್ಷಣ ಶ್ರೀ ಶ್ರೀನಿವಾಸನ ದಯೆಯಿಂದ ಅವರ ಮನ ಪರಿವರ್ತನೆಯಾಯಿತು!!
ಅಂದಿನಿಂದಲೇ ಶ್ರೀ ಆಚಾರ್ಯರು ಸರ್ವಮೂಲ ಗ್ರಂಥಗಳ ಪಾರಾಯಣ ಪ್ರಾರಂಭ ಮಾಡಿದರು. 
ಶ್ರೀ ಗೋಪಾಲದಾಸರ ವಚನದಂತೆ ಶ್ರೀ ವೆಂಕಟರಾಮಾಚಾರ್ಯರು ಉದ್ಧಾಮ ಪಂಡಿತರಾದರು. 
" ಕಿಮಲಭ್ಯ೦ ಭಗವತೀ ಪ್ರಸನ್ನೇ ಶ್ರೀನಿಕೇತನೇ " 
ಎಂಬಂತೆ ಶ್ರೀ ಹರಿಯು ಒಲಿದರೆ ಯಾವುದು ತಾನೇ ಅಸಾಧ್ಯ?
ಶ್ರೀ ವೆಂಕಟರಾಮಾಚಾರ್ಯರು ವೇದ - ವೇದಾಂತ - ಉಪನಿಷತ್ -ಪುರಾಣ - ಇತಿಹಾಸ - ತರ್ಕ - ವ್ಯಾಕರಣ - ಸಾಹಿತ್ಯ - ಅಲಂಕಾರ - ನ್ಯಾಯ - ಮೀಮಾಂಸಾ - ಸಂಗೀತ - ನೃತ್ಯ ಮೊದಲಾದ ಶಾಸ್ತ್ರಗಳಲ್ಲಿಯೂ; ಎಲ್ಲಾ ದರ್ಶನಗಳಲ್ಲೂ ಶ್ರೇಷ್ಠ ಜ್ಞಾನದೊಂದಿಗೆ ಉದ್ಧಾಮ ಪಂಡಿತರಾಗಿ ಅನೇಕ ಶಿಷ್ಯರಿಗೆ ಪಾಠ ಹೇಳುವ ಮಟ್ಟಕ್ಕೆ ತಲುಪಿದ ಮತ್ತು ಪಂಡಿತ ಮಂಡಲಿಯಿಂದ " ಐಜಿ ಆಚಾರ್ಯ " ರೆಂದು ಗೌರವದಿಂದ ಕರೆಯಿಸಿಕೊಳ್ಳುತ್ತಿದ್ದುದನ್ನು ನೋಡಿ ತಂದೆಯವರಾದ ಶ್ರೀ ವೆಂಕಟ ನರಸಿಂಹಾಚಾರ್ಯರಿಗೆ ಪರಮ ಸಂತೋಷವಾಯಿತು.
ಶ್ರೀ ಭಾವಿ ರುದ್ರಾವತಾರಿಗಳಾದ ಶ್ರೀ ಭೂತರಾಜರ ಅಂಶ ಸಂಭೂತರಾದ ಶ್ರೀ ವರದ ಗೋಪಾಲವಿಠಲರು ಈ ಕೃತಿಯಲ್ಲಿ ಶ್ರೀ ವ್ಯಾಸತತ್ತ್ವಜ್ಞತೀರ್ಥರ ಮಹಿಮಾತಿಶಯವನ್ನು ಸುಂದರವಾಗಿ ವರ್ಣಿಸಿದ್ದಾರೆ. 
ರಾಗ : ಕಾಂಬೋಧಿ  ತಾಳ : ಝ೦ಪೆ 
ಪೂರ್ವ ಜನ್ಮದ 
ಪುಣ್ಯ ಫಲವೋ ।
ಸರ್ವದಾ ವ್ಯಾಸತತ್ತ್ವಜ್ಞರ 
ಬಳಿಯ ವಾಸ ।। ಪಲ್ಲವಿ ।।
ಗಂಗಾದಿ ತೀರ್ಥಗಳ 
ಮಿಂದ ಫಲವೇನೋ । ಶ್ರೀ ।
ರಂಗಾದಿಗಳಲ್ಲಿ 
ಬಹು ದಿನವಿದ್ದೆನೋ ।
ಮಂಗಳಾತ್ಮಕರಾದ 
ಮಾರಮಣನ ಭಕ್ತರನು ।
ಕಂಗಳಿಂದಲಿ ದಿನದಿನದಿ 
ಕಾಂಬುವುದು ।। ಚರಣ ।।
ಸ್ನಾನ ಜಪ ವ್ಯಾಖ್ಯಾನ 
ಮಾನಸದೊಳಗೆ ಹರಿ ।
ಧ್ಯಾನವನು ಮಾಡುತಾ-
ನಂದದಿಂದ ।
ಮೀನಾ ಕೂರುಮ 
ವರಹ ನೃಸಿಂಹಾದಿಗಳ ।
ಅನಂತ ಮೂರ್ತಿಗಳ 
ಧೇನಿಪರ ಸಂಗವನು ।। ಚರಣ ।।
ಪರಮ ಭಕುತಿಯಲಿ ಶ್ರೀ ಹರಿಯ 
ಗುಣಗಳ ನೆನೆದು ।
ಪರವಶದಲ್ಲಿ ಮೈಮರೆದು ಕೃಷ್ಣಾ ।
ನರಹರೇ ಹರಿಯೆಂದು 
ಹರಿಹರಿದು ಕುಣಿವ । ಶ್ರೀ ।
ಪರಮಹಂಸರ ಪಾದ 
ಶರಣವಾಗಿಹುದು ।। ಚರಣ ।।
ಎಸು ದಿನವಿದ್ದರೂ 
ಬೇಸರದೆ ನಿಜರನ್ನ ।
ಪೋಷಿಸುತ ಪರಮ 
ಸಂತೋಷದಿಂದ ।
ವಾಸುದೇವ ಹಯಾಸ್ಯ 
ದಾಸರಿಗೆ ಸಮವಾದ ।
ಏಸೇಸು ಸುಕೃತಿಗಳ 
ಕಾಣೆ ಲೋಕದಲಿ ।। ಚರಣ ।।
ಪರಲೋಕ ಚಿಂತೆ ಇಲ್ಲದ 
ಪಾಮರನ ನೋಡಿ ।
ಪರಮ ಕರುಣದಲಿ 
ಕರೆದು ತಂದು ।
ವರದ ಗೋಪಾಲವಿಠಲನ 
ವರ ಗುಣಗಳನು ।
ಒರೆದೊರೆದು ಪೇಳುತಿಹ 
ಗುರು ಶಿರೋಮಣಿ ಸಂಗ ।। ಚರಣ ।।
***
"" ಶ್ರೀ ವ್ಯಾಸತತ್ತ್ವಜ್ಞರು -  4 "
ಅಂಶ : ಶ್ರೀ ಅಗ್ನಿದೇವರು
ಕಕ್ಷೆ : 15
ಶ್ರೀ ವರದ ಗೋಪಾಲದಾಸರು... 
ದಾಸ ಪುರಂದರ ದಾಸರ ದಯಕೆ ಪಾತುರರಾದ ।
ವಾಸುದೇವ ವಿಠಲನ ದಾಸರ ।
ಲೇಸಾಗಿ ಭಜಿಸುವ ಭಾಗ್ಯವನು ಕೊಡು ಸದಾ ।
ಸೂಸಿ ಸುಖವುಂಬ ಸುರಲೋಕದಕಿಂತ ।
ಈ ಸುಗುಣ ಗುರು ತಿಲಕ ಶಿರೋರತುನ ।
ವ್ಯಾಸಮುನಿ ಪದಕಂಜ ಭಜಕರೆನಿಪ ।
ಶ್ರೀಶ ಗುರುಕೃಷ್ಣರ ಭಜಕರ ಸಮೀಪದಲಿ ।
ವಾಸ ಮಾಡಿಸೋ ವರದ ಗೋಪಾಲಾವಿಠಲರೇಯ ।
ಲೇಸು ಇದಕಿಂತ ಇನ್ನೊಂದಿಲ್ಲವೋ ।।
ಶ್ರೀ ವ್ಯಾಸರಾಜರ ಶಿಷ್ಯರಾದ ಶ್ರೀ ಗೋವಿಂದ ಒಡೆಯರು ಶ್ರೀ ಅಗ್ನಿದೇವರ ಅಂಶ ಸಂಭೂತರು. 
ಇವರ ಅಂಕಿತ " ಹರಿ ಪ್ರಸಾದಾಂಕಿತ ಗುರುಕೃಷ್ಣ ". 
ಶ್ರೀ ಗೋವಿಂದ ಒಡೆಯರೇ ಈಗ ಶ್ರೀ ವ್ಯಾಸತತ್ತ್ವಜ್ಞತೀರ್ಥರಾಗಿ ಅವತಾರ ಮಾಡಿದ್ದಾರೆಂದು ಸ್ಪಷ್ಟ ಪಡಿಸಿದ್ದಾರೆ. 
" ಶ್ರೀ ಮಾನವಿಯ ಮುನಿಪುಂಗವರಾದ ಜಗನ್ನಾಥದಾಸರು "....
ಬಾಲನಾ ಬಿನ್ನಪವ ಲಾಲಿಸಿ ಕರುಣದಿ ।
ಗೋಪಾಲದಾಸರಣುಗನೆಂದೂ ।
ಪಾಲಿಪುದು ಪರಮ ಕರುಣಾಳು ಜಗನ್ನಾಥವಿಠಲ ।
ಗಾಳೆನಿಪ ಪವಮಾನ ಸಖನೇ ವೆಂಕಟಾ ।।
ರಾಮಾರ್ಯ ನಿನ್ನಂಘ್ರಿ ಕಮಲಗಳಿಗೆ ।
ನಾ ಮುಗಿವೆ ಕರವ ಕರುಣದಿ ನೋಡು ವೆಂಕಟ ।।
ಗಾಳೆನಿಪ ಪವಮಾನ ಸಖ = ಶ್ರೀ ವಾಯುದೇವ ಮಿತ್ರ = ಶ್ರೀ ಅಗ್ನಿದೇವರು 
( ಶ್ರೀ ವಾಯುದೇವರ ಮಿತ್ರ ಶ್ರೀ ಅಗ್ನಿದೇವರು ) 
ಅಂದರೆ...
ಶ್ರೀ ವ್ಯಾಸತತ್ತ್ವಜ್ಞತೀರ್ಥರು " ಶ್ರೀ ಅಗ್ನಿದೇವರ " ಅವತಾರರೆಂದು ಸ್ಪಷ್ಟ ಪಡಿಸಿದ್ದಾರೆ.
ಶ್ರೀ ಶ್ಯಾಮಸುಂದರದಾಸರು...
ಮೂರವತಾರನ ಮತದೊಳು ಜನಿಸಿದವರು ।
ಮೂರನು ತ್ಯಜಿಸಿದರು ।
ಮೂರು ಮಠದಿ ಯತ್ಯಾಶ್ರಮ ಧರಿಸಿದರು ।।
ಹರಿಯನು ಒಲಿಸಿದರು ।
ಮೂರುಹತ್ತರಿಗೆ ಮುಖವಾಗಿರುತಿಹರು ।
ಇವರಿಗೆ ಸಮರ್ಯಾರೋ ।।
ಮೂರು ಮಠಗಳು ಅಂದರೆ...
1. ಶ್ರೀ ವ್ಯಾಸರಾಜ ಮಠದಲ್ಲಿ " ಶ್ರೀ ವ್ಯಾಸರಾಜರ ಸಾಕ್ಷಾತ್ ವಿದ್ಯಾ ಶಿಷ್ಯರೂ, " ಗುರುಕೃಷ್ಣಾ೦ಕಿತರೂ " , ನವ ವೃಂದಾವನ ಗಡ್ಡೆಯಲ್ಲಿ ವಿರಾಜಮಾನರಾದ ಶ್ರೀ ಗೋವಿಂದ ಒಡೆಯರು.
2. ಉತ್ತರಾದಿ ಮಠ - ಶ್ರೀ ಕೃಷ್ಣದ್ವೈಪಾಯನತೀರ್ಥರು
3. ಶ್ರೀ ರಾಯರ ಮಠದ - ಶ್ರೀ ಭುವನೇಂದ್ರತೀರ್ಥರಿಂದ ತುರ್ಯಾಶ್ರಮ ಸ್ವೀಕರಿಸಿ, ಅವರ ಅಮೃತ ಹಸ್ತಗಳಿಂದ ವೇದಾಂತ ಸಾಮ್ರಾಜ್ಯ ಪಟ್ಟಾಭಿಷೇಕ ಮಾಡಿಸಿಕೊಂಡ " ಶ್ರೀ ವ್ಯಾಸತತ್ತ್ವಜ್ಞತೀರ್ಥರು ".
" ಮೂರುಹತ್ತರಿಗೆ ಮುಖವಾಗಿರುತಿಹರು "
ಸದಾ ಮೂವತ್ತು ವರ್ಷಗಳ ವಯಸ್ಸುಳ ದೇವತೆಗಳಿಗೆ ಮುಖರಾದ " ಶ್ರೀ ಅಗ್ನಿದೇವರು " ಎಂದರ್ಥ.
***
"" ಶ್ರೀ ವ್ಯಾಸತತ್ತ್ವಜ್ಞರು - 5 "
" ಶ್ರೀ ವೆಂಕಟರಾಮಾಚಾರ್ಯರ ಸ್ವಭಾವಕ್ಕೆ ಮನಸೋತ ಶ್ರೀ ಗೋಪಾಲದಾಸರು "
ಶ್ರೀ ವೆಂಕಟನರಸಿಂಹಾಚಾರ್ಯರು ವೈಕುಂಠಯಾತ್ರೆ ಮಾಡಿದ ಅತೀವ ನೊಂದ ಶ್ರೀ ವೆಂಕಟರಾಮಾಚಾರ್ಯರು ಕೃಷ್ಣಾನದೀ ತೀರದಲ್ಲಿರುವ ಬೀಚುಪಲ್ಲಿ ಬಂದು ಸೇವೆ ಮಾಡೆಂದು ಶ್ರೀ ಮುಖ್ಯಪ್ರಾಣದೇವರ ಸ್ವಪ್ನ ಸೂಚನೆಯಾಯಿತು.
ಶ್ರೀ ಮುಖ್ಯಪ್ರಾಣದೇವರ ಆಜ್ಞೆಯಂತೆ ಶ್ರೀ ವೆಂಕಟರಾಮಾಚಾರ್ಯರು ಬೀಚುಪಲ್ಲಿಗೆ ಬಂದು ಸೇವೆ ಸಲ್ಲಿಸಿದರು.
ಶ್ರೀ ಐಜಿ ಆಚಾರ್ಯರು ಶ್ರೀ ದಾಸರ ಹಾಡುಗಳಿಗೆ ಮಾರು ಹೋಗಿ ಶ್ರೀ ದಾಸರು ಇದ್ದಲಿಗೆ ಹೋಗಿ ಅವರು ನಡೆಸುತ್ತಿದ್ದ ಭಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅವರೊಂದಿಗೆ ಆಧ್ಯಾತ್ಮಿಕ ಚಿಂತನೆಯಲ್ಲಿ ಪಾಲ್ಗೊಂಡು ಶ್ರೀ ಗೋಪಾಲದಾಸರೊಂದಿಗೆ ಮಾತಾಡುತ್ತಿದ್ದರೆ ಸಮಯದ ಅರಿವೇ ಇರುತ್ತಿರಲಿಲ್ಲ.
ಶ್ರೀ ಗೋಪಾಲದಾಸರಿಗೂ ಶ್ರೀ ವೆಂಕಟರಾಮಾಚಾರ್ಯರ ಸ್ವಭಾವ - ಮುಗ್ಧತೆ - ನಯ, ವಿನಯ - ತನ್ಮಯತೆಗಳು ಬಹಳ ಇಷ್ಟವಾಗಿ ಆಚಾರ್ಯರ ಮುಗ್ಧ ಸ್ವಭಾವಕ್ಕೆ ಶ್ರೀ ಗೋಪಾಲದಾಸರು ಮನಸೋತಿದ್ದರು!!
ಶ್ರೀ ಮನೋಹರ ವಿಠಲಾಂಕಿತ ಶ್ರೀ ಬೂರಲದಿನ್ನೆ ಮೋನಪ್ಪ [ ಶ್ರೀ ನಾರಾಯಣಪ್ಪ ] ದಾಸರು "... 
ಶ್ರೀವ್ಯಾಸತತ್ತ್ವಜ್ಞರಡಿದಾವರೆಯ ।
ಸೇವಿಸುತ ನುತಿಗಯ್ಯುತಾ ಸತತ ।। ಪಲ್ಲವಿ ।।
ದೇವಾಂಶರಾದಿವರ ಮಹತ್ಮಿಗಳನಿಡನೆಲ್ಲಾ ।
ಭಾವ ಶುದ್ಧಾದಿ ವರ್ಣಿಸುವೆ ಕೇಳಿ ಸುಜನರೂ ।। ಅ ಪ ।।
ಧರೆಯೊಳು ಸದ್ವಂಶ 
ವಿಖ್ಯಾತರುದರದಲಿ ।
ಹರಿಣಾಂಕ ದ್ವಿತಿಯರೆನಿಸಿ । 
ಜನಿಸೀ ।
ಕರುಣಭಾವದಿ ಹರಿಯ 
ಮರೆಯದಲೆ ಜನಕರಿಗೆ । 
ಪರಮ ಹರುಷವನೆ ಬೀರಿ । 
ತೋರೀ ।
ಸ್ಮರನಂತೆ ಸುಂದರದಿ 
ಬಿದಿಗೆ ಚಂದ್ರಮನಂತೆ ।।
ಪರಿವರ್ದಿಸುತ್ತ ಜನಕೆ । 
ಮನಕೆ ।
ಪರಿತೋಷವಿತ್ತತುಳ 
ಬ್ರಹ್ಮಚರ್ಯಾಶ್ರಮವ ।
ಧರಿಸಿ ಸನ್ಮಾರ್ಗದಲ್ಲೀ । 
ಸಲ್ಲೀಸೀ ।
ಶರಧಿ ಮೆಖಳೆಯೊಳಗೆ 
ಸರಿಯಿಲ್ಲಿವರಿಗೆಂದು ।
ತರಳರೊಳು ಸುಜ್ಞಾನ-
ಭರಿತರಾಗುತ ಮೆರೆದ ।। ೧ ।।
***
"" ಶ್ರೀ ವ್ಯಾಸತತ್ತ್ವಜ್ಞರು - 6 "      
" ಅಂಕಿತ ಪ್ರದಾನ "
ಶ್ರೀ ವ್ಯಾಸರಾಜ ಪ್ರತಿಷ್ಠಿತ ಶ್ರೀ ಮುಖ್ಯಪ್ರಾಣದೇವರ ಸನ್ನಿಧಿಯಲ್ಲಿ ಶ್ರೀ ವೆಂಕಟರಾಮಾಚಾರ್ಯರು ಬಂದುಳಿದು; ಈ ಪರಮ ಪುಣ್ಯಕ್ಷೇತ್ರವು ಸಾಧನಗೆ ಅನುಕೂಲವಾಗುವಂತಾದ್ದು ಎಂದು ತಿಳಿದರು.
ಶ್ರೀ ಮುಖ್ಯಪ್ರಾಣದೇವರ ಪರಮಾನುಗ್ರಹಕ್ಕೆ ಪಾತ್ರರಾದ ಶ್ರೀ ವೆಂಕಟರಾಮಾಚಾರ್ಯರಿಗೆ ಎಲ್ಲವೂ ಕೈಸೇರಿತು. 
ಅಂದರೆ....
ಶ್ರೀ ವಾಯುದೇವರ ಮುಖಾಂತರ ಮೋಕ್ಷಪ್ರದನಾದ ಶ್ರೀ ವಾಸುದೇವನ ಒಲಿಮೆಯಿಂದಲೇ " ವಾಸುದೇವವಿಠಲ " ಎಂಬ ಅಂಕಿತವು ಪ್ರಾಪ್ತವಾಯಿತು.
ರಾಗ : ಕಾಂಬೋಧಿ ತಾಳ : ಝ೦ಪೆ
ಪ್ರಾಣನಾಥನೇ ನಿನ್ನ 
ತುತಿಯ ಮಾಡಲು । ಇನ್ನು ।
ತ್ರಾಣ ಎನಗುಂಟೆ 
ಗುರುವೇ ।। ಪಲ್ಲವಿ ।।
ದಾನಿ ಸಿರಿಪತಿಯ ಭಕುತರ 
ಶಿಖಾಮಣಿಯೇ ಗುಣಶ್ರೇಣಿ ।
ಎಣೆಗಾಣೆ ಶ್ರುತಿಧೀ 
ಸ್ಮೃತಿಧೀ ।। ಆ. ಪ ।।
ನಿಖಿಲ ಜೀವರಿಗೆ 
ಅಭಿಮಾನಿ ಪುರುಷ ನೀ ।
ಸಕಲ ಮಹದಾಭಿಮಾನೀ ।
ಸುಖ ರೂಪ ಪುರುಷನಿಗೆ 
ವಾಯು ಅಗ್ನಿ ಆದಿತ್ಯ ।
ತ್ವಕು ರೂಪ ಪುತ್ರನಾದಿ 
ಮೋದಿ ।। ಚರಣ ।।
ಕಮಠ ರೂಪದಿ 
ಲೋಕಗಳಿಗೆ ಆಧಾರನು ।
ಸಮನು ಆಖಣಾಸ್ಮನೇ ।
ಸಮಯ ಬಿಡಧಾಗೆ 
ಹೃದಯದಲಿ ಎಚ್ಛೆತ್ತಿರುವೆ ।
ಸುಮನಸರರಸನು ಪೂರವೇ 
ಬೆರೆವೇ ।। ಚರಣ ।।
ವಾಸುದೇವವಿಠಲನ್ನ ಸಂತತವು ।
ಶ್ವಾಸ ಮಂತ್ರದಿ ಸೇವನ ।
ಲೇಸಾಗಿ ಮಾಡುವ 
ಜೀವರೊಳು ನಿನೇವೇ ।
ದಾಸನ್ನ ಪೊರೆಯೋ 
ಧೀರಾ ವೀರಾ ।। ಚರಣ ।।
ಎಂದು ಶ್ರೀ ಮುಖ್ಯಪ್ರಾಣದೇವರ ಸ್ತೋತ್ರ ಮಾಡಿದ್ದು ಅಲ್ಲದೆ " ವಾಸುದೇವವಿಠಲ " ಎಂಬ ಅಂಕಿತದಲ್ಲಿ " 84 ಪದ - 05 ಪದ್ಯ - 15 ಸುಳಾದಿ " ಗಳನ್ನು ರಚಿಸಿ ಶ್ರೀ ಹರಿದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ!!  
ಶ್ರೀ ಮನೋಹರ ವಿಠಲಾಂಕಿತ ಶ್ರೀ ಬೂರಲದಿನ್ನೆ ಮೋನಪ್ಪ [ ಶ್ರೀ ನಾರಾಯಣಪ್ಪ] ದಾಸರು "...  
ರಾಜರಾಜರ ಸಭಾ 
ಮಧ್ಯದಲ್ಲಿ ಪ್ರತಿವಾದಿ । 
ರಾಜಿಗಳ ಕ್ಷಣದಿ 
ಗೆಲಿದು । ನಲಿದು ।
ಈ ಜಗದಿ ಮಧ್ವಮತ 
ಸಿದ್ಧಾಂತ ಸ್ಥಾಪಿಸುತ ।
ರಾಜಿಸುವ ಲೋಕ 
ವಿಖ್ಯಾತ । ಧಾತಾ ।
ರಾಜಾಂಬರೀಷ 
ರುಕ್ಮಾ೦ಗದರ ತೆರದಿ । ವಿ ।
ಭ್ರಾಜಿಸುವ ವ್ರತಗಳೆಲ್ಲ । ಬಲ್ಲಾ ।
ಭೋಜನೋಲ್ ಕವಿತ 
ಚಮತ್ಕೃತಿಯ ಪದಗಳ । ಸ ।
ಮಾಜದಿಂ ಪೇಳ್ವ ಜಾಣ । ತ್ರಾಣ ।
ಭೂ ಜನಕೆ ಸಕಲೇಷ್ಟ ತಾ 
ಜವದಿ ಕೊಡುವ । ಸುರ ।
ಭೂಜದೊಳು ಶೋಭಿಸುವ 
ಶ್ರೀ ಜನಾರ್ದನನ ಭಜಕಾ ।।
***
"" ಶ್ರೀ ವ್ಯಾಸತತ್ತ್ವಜ್ಞರು - 7 "        
" ಆಶ್ರಮ ಸ್ವೀಕಾರ "
ರಾಗ : ದರ್ಬಾರ್  ತಾಳ : ತ್ರಿಪುಟ 
ವೃಂದಾವನದಿ ವಿರಾಜಿಪ 
ಯತಿವರನಾರೇ ಪೇಳಮ್ಮಯ್ಯ ।। ಪಲ್ಲವಿ ।।
ವೊಂದಿದೆ ಸುಜನರ ವೃಂದ 
ಪೊರೆದ । ಭುವ ।
ನೇಂದ್ರರ ಕರಕಂಜಜ 
ಯತಿವರರೆ ।। ಅ ಪ ।।
ಉದಿತ ಭಾಸ್ಕರನ ತೆರದಿ 
ಸುಶೋಭಿತನಾರೆ ಪೇಳಮ್ಮಯ್ಯ ।
ಪದುಮಾಕ್ಷ ತುಳಸೀ ದಂಡ 
ದ್ವಿಮುಖಿ ಇಹನಾರೆ ಪೇಳಮ್ಮಯ್ಯ ।
ಒದಗಿ ಬರುವ 
ದುರ್ಮದ ತಿಮಿರ ಕಳೆವ ।
ಸುದುದಿತ ಜಲಜಾಪ್ತನು 
ಕಾಣಮ್ಮ ।। ಚರಣ ।।
ಮದ ವಿರಹಿತ ಶಮದಮೆಗಳಿಂ-
ದೊಪ್ಪುವನಾರೇ ಪೇಳಮ್ಮಯ್ಯ ।
ಮೃದುಮಧುರ ವಚನ ಸುಧೆಯ 
ಗರೆವ ಮುನಿದಾರೆ ಪೇಳಮ್ಮಯ್ಯ ।
ವಿದುಷರ ಮನ-
ಕುಮುದಗಳರಳಿಸುತಿಹ ।
ವಿಧು ವರ ವ್ಯಾಸತತ್ತ್ವಜ್ಞ-
ತೀರ್ಥರೇ ।। ಚರಣ ।।
ಮೋದ ಬೀರುವ ಕಳೆವರ-
ದೊಪ್ಪುವನಾರೆ ಪೇಳಮ್ಮಯ್ಯ ।
ಬೋಧಪೂರ್ಣರ ಸುಶಾಸ್ತ್ರ 
ಪೇಳ್ವ ಮುನಿಯಾರೇ ಪೇಳಮ್ಮಯ್ಯ ।
ಶ್ರೀಧರ ವಿಠಲನ ದಾಸೋತ್ತಮರೇ । 
ಕು । ವಾದಿ ಪರ್ವತ 
ಭೇದನಪವೀಧರ ।। ಚರಣ ।।     
ಸಾಕ್ಷಾತ್ ಹಂಸನಾಮಕ ಪರಮಾತ್ಮನ ಸತ್ಪರಂಪರೆಯಾದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧೀಶ್ವರರಾಡಾ ಶ್ರೀ ರಾಘವೇಂದ್ರಸ್ವಾಮಿಗಳವರ ವೇದಾಂತ ಸಾಮ್ರಾಜ್ಯಾಧಿಪತಿಗಳಾದ ಶ್ರೀ ಭುವನೇಂದ್ರತೀರ್ಥರು ತುರ್ಯಾಶ್ರಮ ನೀಡಿ " ವ್ಯಾಸತತ್ತ್ವಜ್ಞತೀರ್ಥ " ರೆಂದು ನಾಮಕರಣ ಮಾಡಿ ದ್ವೈತ ವೇದಾಂತ ಸಾಮ್ರಾಜ್ಯದಲ್ಲಿ ಪಟ್ಟಾಭಿಷೇಕ ಮಾಡಿದರು 
ಈ ವಿಷಯವನ್ನು ಶ್ರೀ ಜಗನ್ನಾಥದಾಸರು...
ಕವಿಭಿರೀಡಿತ ಮಹಾಮುನಿ 
ವ್ಯಾಸಕೃತ । ಸುಭಾ ।
ಗವತಾದಿ ಗ್ರಂಥ 
ವ್ಯಾಖ್ಯಾನ ನೋಡಿ ।
ಭುವನೇಂದ್ರರಾಯರಾ 
ಕರುಣದಲಿ । ತುರೀಯಾಶ್ರ ।
ಮವನಿತ್ತು ಪಟ್ಟಾಭಿಷೇಕವ 
ಮಾಡಿ ವ್ಯಾಸತತ್ತ್ವರಹುರೆಂದ ।।
ಯಾವ ಜನುಮದ 
ಸುಕೃತ ಫಲಿಸಿತೆನಗೆ ।
ಕೋವಿದಾಗ್ರಣಿ 
ವ್ಯಾಸತತ್ತ್ವರ ಕಂಡೆ ।।  
ಶ್ರೀ ಮನೋಹರ ವಿಠಲಾಂಕಿತ ಶ್ರೀ ಬೂರಲದಿನ್ನೆ ಮೋನಪ್ಪ [ ಶ್ರೀ ನಾರಾಯಣಪ್ಪ ] ದಾಸರು "... 
ಅರಿವರ್ಗಮಂ ಜಯಿಸಿ 
ವಿಷಯಾದಿಗಳ ಮಮತೆ ।
ಪರೆಯುರಗ ಕಳಚುವಂತೆ । ಭ್ರಾ೦ತೆ ।
ತೊರೆಯು ನಿಸ್ನೇಹರಾಗಿ ವೈರಾಗ್ಯ 
ತಾಳ್ಪವರ ।ವರತಪಕೆ ಪ್ರೀತರಾಗಿ । 
ಯೋಗಿ ।ಸುರವರ್ಯ ಭುವನೇಂದ್ರ-
ರೊಲಿದು ತುರ್ಯಾಶ್ರಮವ ।।
ಕರುಣದಿಂ ಕೊಡಲು -
ವಹಿಸೀ । ಸಹಿಸೀ ।
ಹರಿ ವಾಸುದೇವ ವಿಠಲನ 
ಪಾದಾಂಬುಜವ । 
ಕರುಣ ಶುದ್ಧಿಯಲಿ 
ಭಜಿಪಾ । ಯಜಿಪಾ ।    
ಪರಮ ಹಂಸೋತ್ತುಂಗ 
ಸ್ಮರಪಂಚ ಶರಭಂಗ ।
ದುರಿತೌಘ ಮಾತಂಗ 
ತರಿವ ಘನ ಸಿಂಗಾ ।।
ಶ್ರೀ ಸಿರಿ ತಂದೆ ಶ್ರೀನಿವಾಸ ದಾಸರು.... 
ಭುವನೇಂದ್ರತೀರ್ಥರಿಂದ ತುರ್ಯಾಶ್ರಮ ಕೊಂಡು । ಭುವನ ಮೋಹನ ವಾಸುದೇವ ವಿಠಲನ ಕೊಂಡಾಡುತ । ಚ್ಯವನ ಮುನಿಗಳಾಶ್ರಮದೊಳು ವಾಸಗೈಯುತ್ತ । ಭಾವ ವಿರುಕುತಿಯಿಂದ  ಸಿತಮನದೊಳು । ಜೀವ ಜೀವರೊಗ್ಯತೆಯನರಿತು ನಿತ್ಯನಿತ್ಯದಲ್ಲಿ । ಪವನ ಸಚ್ಛಾಸ್ತ್ರಗಳ ಬೋಧಿಸಿ ಭಕುತರ । ಕಾವಲ್ಲಿ ಈ ಗುರುಗಳಿಗೆ ಸರಿಗಾಣೆ । ಮಾವಾರಿ ಸಿರಿ ತಂದೆ ಶ್ರೀನಿವಾಸನಿದಕೆ ಸಾಕ್ಷಿ ।।
***
" ಶ್ರೀ ವ್ಯಾಸತತ್ತ್ವಜ್ಞರು - 8 "         
ಶ್ರೀ ಶ್ಯಾಮಸುಂದರ ದಾಸರು..... 
ಮಾನಸಸ್ಮ್ರುತಿ ಮೊದಲಾದ 
ಗ್ರಂಥಗೈದು ದ್ವಿಜರಿಗೆ ಬೋಧಿಸಿದ ।
ಸಾನುರಾಗದಲಿ ಜ್ಞಾನಾಮೃತವೆರೆದ 
ದಶ ದಿಕ್ಕಿಲಿ ಮೆರೆದ ।
ಏನು ಪೇಳಲಿ ಇವರ ದಿವ್ಯ 
ಪಾದ ಸೇವಿಪರಿಗೆ ಮೊದ ।।
" ಗ್ರಂಥಗಳು "
1 & 2. ವಿಷ್ಣುತತ್ತ್ವನಿರ್ಣಯ ಪ್ರಾಚೀನ ಟೀಕಾ ಟಿಪ್ಪಣಿ - 
ಗುರುಪ್ರಭಾ ಮತ್ತು ಲಘುಪ್ರಭಾ
3. ತತ್ತ್ವಪ್ರಕಾಶಿಕಾ ಟಿಪ್ಪಣಿ
4. ತಾತ್ಪರ್ಯಚಂದ್ರಿಕಾ - 
ಶರಾದಾಗಮ ತತ್ತ್ವಮಾರ್ತಾಂಡದ ಖಂಡನೆ
5. ತಾತ್ಪರ್ಯಚಂದ್ರಿಕಾ - ಶಾರದೆಂದು:
6 & 7. ನ್ಯಾಯ ಸುಧಾಕ್ಕೆ - 
ಲಘು ಮತ್ತು ಗುರು ರಸರಂಜನೀ
8. ನ್ಯಾಯಾಮೃತಕ್ಕೆ - ವ್ಯಜನ
9. ಯತಿಪ್ರಣವಕಲ್ಪ ವ್ಯಾಖ್ಯಾನ
10. ಮಂದನಂದಿನೀ 
( ಶ್ರೀಮಧ್ಭಾಗವತ ಸಪ್ತಮ ಸ್ಕಂದದ ವ್ಯಾಖ್ಯಾನ )
11. ಮಾನಸಸ್ಮೃತಿ
12. ಗಾಯತ್ರೀ ಸಾರ ಸಂಗ್ರಹ
13. ಲಘು ರಸ ರಂಜನೀ
14. ಗುರು ರಸ ರಂಜನೀ
15. ದ್ವಿತ್ತ್ವ ವಾದಾರ್ಥ:
16. ಗುರುಪಾದೋಕ್ತಿ ಸಮರ್ಥನಮ್
17 ಸುಧಾದ್ಯುಕ್ತಿರಹಸ್ಯ
18. ನ್ಯಾಯಾಮೃತ ಮಕ್ಷಿ ಕಾವ್ಯಜನ
19. ಅದ್ವೈತ ಕುಟ್ಟಿನಂ
20. ನ್ಯಾಯದಮನ 
" ಮಾನಸ ಸ್ಮೃತಿ "
ಮಾನಸಪೂಜಾ ದುರಂಧರರಾದ ಶ್ರೀ ಅಗ್ನಿದೇವರ ಅಂಶ ಸಂಭೂತರಾದ ಶ್ರೀ ವ್ಯಾಸತತ್ತ್ವಜ್ಞತೀರ್ಥರ " ಮಾನಸ ಸ್ಮೃತಿ " ಅವರು ರಚಿಸಿರುವ ಮೇರು ಕೃತಿಗಳಲ್ಲಿ ಒಂದಾಗಿದೆ. 
ಇದು ದ್ವೈತ ಸಿದ್ಧಾಂತಕ್ಕೆ ಶ್ರೀ ವ್ಯಾಸತತ್ತ್ವಜ್ಞತೀರ್ಥರು ನೀಡಿರುವ ಅಪೂರ್ವ ಕೊಡೆಗೆ. 
ಸಾಮಾನ್ಯವಾಗಿ ನಾವು ಕಡೆಗೆಣಿಸುವ " ಮಾನಸಿಕ ಪೂಜೆ " ಯೆಂಬ ಮುಖ್ಯ ಸಾಧನೆಯ ಮೇಲೆ ಬೀರಿದ " ಕ್ಪ " ಕಿರಣವಾಗಿದೆ. 
ಮಾನಸಿಕ ಉಪಾಸನೆಯ ವಿವಿಧ ಹಂತಗಳನ್ನು ಸ್ವಾರಸ್ಯ ಪೂರ್ಣವಾಗಿ ಬಿಂಬಿಸುವ ಈ ಕೃತಿ ಉಪನಿಷದ್ ಉಕ್ತಿಗಳನ್ನು ಅನುಸರಿಸಿ ರೂಪುಗೊಂಡಿದೆ.  
ಮಂಗಳಾಚರಣೆ.... 
ಶ್ರೀನಿವಾಸ ಪದಾಂಭೋಜ 
ಯುಗಂ ನತ್ವಾ ಗುರೋನಪಿ ।
ಶ್ರೀಶ ಮಾನಸಿಕ ಧ್ಯಾನ 
ವಿಧಿಂ ವಕ್ಷ್ಯೇ ಯಥಾಮತಿ ।। ೧ ।।
ಶ್ರೀಶ ಪಾದಾಂಬುಜಾಸಕ್ತೋ 
ಮಾನಸ ಸ್ನಾನಮಾಚರೇತ್ ।
ಸ್ವದೇಹಾಂತರ್ಗತಾ ನಾಡ್ಯ: 
ಪಿಂಗಳೀಡಾಸುಷುಮ್ನಕಾ: ।। 2 ।।
ಪಿಂಗಳಾ ಯಮುನಾ ಪ್ರೋಕ್ತಾ 
ಇಡಾ ಗಂಗಾ ಪ್ರಕೀರ್ತಿತಾ ।
ತಯೋರಂತಃಸ್ಥಿತಾ ನಾಡೀ 
ಸುಷುಮ್ನಾಖ್ಯಾ ಸರಸ್ವತೀ ।। 3 ।।
ಸುಷುಮ್ನಾಸ್ಥಿತಸಂಜ್ಞೇಯ-
ಹೃತ್ಪದ್ಮಪುರವಾಸಿನಃ ।
ಶ್ರೀಹರೇರ್ಧ್ಯಾನಸಲಿಲಂ 
ಮಾನಸಂ ತೀರ್ಥಮುತ್ತಮಮ್ ।। 4 ।।
ತತ್ತೀರ್ಥಸ್ನಾನನಿಷ್ಪಂಕಃ 
ಶುದ್ಧಶ್ಚೈಕಾಂತದೇಶಗ: ।
ಸಮಾಚಲಾಸನಾಸೀನ-
ಸ್ತದ್ಗತೈಕಾಗ್ರಮಾನಸಃ ।। 5 ।।
ಚಿಂತಯೇದಾತ್ಮನೋ ದೇಹ-
ಮೀಶಾಧಿಷ್ಠಾನಮದ್ಭುತಮ್ ।।
ಈ ಗ್ರಂಥದಲ್ಲಿ ಗುರುಗಳು ಚಿಂತನ ಕ್ರಮಗಳ ಕುರಿತು... 
ದೇಹದಲ್ಲಿರುವ ದಶ ಕವಚಗಳl ಚಿಂತನೆ - 8 ಶ್ಲೋಕಗಳು  
ದೇಹದಲ್ಲಿರುವ ಹಿಂಕಾರಾದಿ ಸಪ್ತ ರೂಪಗಳ ಚಿಂತನೆ - 15 ಶ್ಲೋಕಗಳು  
ತತ್ತ್ವಾಭಿಮಾನಿಗಳೂ ಹಾಗೂ ಮಾತೃಕಾ ದೇವತೆಗಳ ಚಿಂತನೆ - 3 ಶ್ಲೋಕಗಳು
ಶ್ಲೋಕಗಳು ಶ್ರೋತ್ರೇಂದ್ರಿಯಾಭಿಮಾನಿಗಳ ಚಿಂತನೆ - 4 ಶ್ಲೋಕಗಳು
ಶ್ಲೋಕಗಳು ಚಕ್ಷುರಿಂದ್ರಿಯಾಭಿಮಾನಿಗಳ ಚಿಂತನೆ - 6 ಶ್ಲೋಕಗಳು 
ವಿಶ್ವ - ತೈಜಸ - ಪ್ರಾಜ್ಞ ರೂಪಗಳ ಚಿಂತನೆ - 7 ಶ್ಲೋಕಗಳು 
ಅವಸ್ಥಾತ್ರಯಗಳ ಭಗವದ್ರೂಪ ಚಿಂತನೆ - 17 ಶ್ಲೋಕಗಳು  
ಘ್ರಾಣೇ೦ದ್ರಿಯಗಳಲ್ಲಿನ ಭಗವದ್ರೂಪ ಚಿಂತನೆ - 7 ಶ್ಲೋಕಗಳು 
ವಾಗಾಭಿಮಾನಿ ದೇವತೆಗಳಲ್ಲಿನ 
ಭಗವದ್ರೂಪ ಚಿಂತನೆ - 5 ಶ್ಲೋಕಗಳು 
ಹಸ್ತಾದಿಗಳಲಿರುವ ಭಗವದ್ರೂಪ - 
ಪಂಚ ತೀರ್ಥಗಳ ಚಿಂತನೆ - 7 ಶ್ಲೋಕಗಳು 
ವಾಮದೇವ ಯಜ್ಞದಲ್ಲಿನ ಭಗವದ್ರೂಪ ಚಿಂತನೆ - 16 ಶ್ಲೋಕಗಳು 
ಕಾಲಿನಲ್ಲಿ ನೆಲೆಸಿರುವ ದೇವತೆಗಳಲ್ಲಿನ ಭಗವದ್ರೂಪ ಚಿಂತನೆ - 4 ಶ್ಲೋಕಗಳು 
ಅರಿಷಡ್ವರ್ಗಜಯೋಪಾಯದಲ್ಲಿನ ಭಗವದ್ರೂಪ ಚಿಂತನೆ - 7 ಶ್ಲೋಕಗಳು 
ಪ್ರಾಣಾಗ್ನಿ ಹೋತ್ರದಲ್ಲಿನ ಭಗವದ್ರೂಪದ ಚಿಂತನೆ - 16 ಶ್ಲೋಕಗಳು  
ಭೋಜನದಲ್ಲಿ ಪಂಚ ರೂಪಗಳ ಚಿಂತನೆ - 6 ಶ್ಲೋಕಗಳು 
ದೇಹ ರಥದಲ್ಲಿನ ಭಗವದ್ರೂಪ ಚಿಂತನೆ - 4 ಶ್ಲೋಕಗಳು 
ಸುಷುಮ್ನಾ ನಾಡಿಯಲ್ಲಿರುವ ೩೨ ಕಮಲಗಳ ವಿವರ - 26 ಶ್ಲೋಕಗಳು 
ಸೂರ್ಯಮಂಡಲದಲ್ಲಿ ಭಾಗವದುಪಾಸನೆ - 9 ಶ್ಲೋಕಗಳು  
ಮಾರ್ಗತ್ರಯ - 12 ಶ್ಲೋಕಗಳು 
ಶೇಷ ಮಾರ್ಗ - 5 ಶ್ಲೋಕಗಳು 
ಗರುಡ ಮಾರ್ಗ - ೧೧ ಶ್ಲೋಕಗಳು   
೭೨೦೦೦ ನಾಡೀ ವಿಚಾರ - 9 ಶ್ಲೋಕಗಳು 
ಹೃದಯದಲ್ಲಿನ ಭಗವದ್ರೂಪ ಚಿಂತನೆ - 13 ಶ್ಲೋಕಗಳು 
ಬಿಂಬ ರೂಪದ ವಿವರ - 8 ಶ್ಲೋಕಗಳು 
ಜೀವನ ಪರಿಮಾಣ - 2 ಶ್ಲೋಕಗಳು 
ಅಂಗಾಂಗಗಳಲ್ಲಿ ಶ್ರೀ ಹರಿಯ ರೂಪಗಳು - 9 ಶ್ಲೋಕಗಳು 
ಹೃತ್ಕಮಲದಲ್ಲಿರುವ ಭಗವದ್ರೂಪ - 22 ಶ್ಲೋಕಗಳು 
ಧ್ಯಾನದ ಪ್ರಕಾರಗಳು - 8 ಶ್ಲೋಕಗಳು 
ಉಪಸಂಹಾರ - 5 ಶ್ಲೋಕಗಳು. 
" ಫಲ "
ಈ ಮಾನಸ ಸ್ಮೃತಿಯಲ್ಲಿ 276 ಶ್ಲೋಕಗಳು ಇದ್ದು - ಈ ಗ್ರಂಥವನ್ನು ನಿತ್ಯ ಪಾರಾಯಣ ಮಾಡುವ ಸುಜನರಿಗೆ... 
ಜ್ಞಾನ - ಭಕ್ತ್ಯಾದಿಗಳು ಸಿದ್ಧಿಯಾಗುತ್ತವೆ. ಜ್ಞಾನಪೂರ್ವಕವಾಗಿ ಅನುಷ್ಠಾನ ಮಾಡಿದರಂತೂ ಮೋಕ್ಷವೇ ಕಾರಗತವಾಗುತ್ತದೆ ಎಂದು ಶ್ರೀ ವ್ಯಾಸತತ್ತ್ವಜ್ಞತೀರ್ಥರೇ ಗ್ರಂಥಾಂತ್ಯದಲ್ಲಿ ಸ್ಪಷ್ಟ ಪಡಿಸಿದ್ದಾರೆ. 
ಗ್ರಂಥೋsಯಂ ಪಾಠ 
ಮಾತ್ರೇಣ ಭಕ್ತಿಜ್ಞಾನಾದಿಸಿದ್ಧಿದಃ ।
ಜ್ಞಾನೇನ ತದನುಷ್ಠಾನೇ 
ವಿಮುಕ್ತಿ: ಶಾಶ್ವತೀ ಭವೇತ್ ।।
" ಶ್ರೀ ಗಾಯತ್ರೀ ಸಾರ ಸಂಗ್ರಹಃ "
ವೇದ ರಾಶಿಗಳ ಸಾರ ಸರ್ವಸ್ವವನ್ನೂ ಸಮಗ್ರವಾಗಿ ಒಳಗೊಂಡ " ವಿಪ್ರರ ನಿಧಿ " ಯಾದ... 
ಗಾಯತ್ರೀ ಮಂತ್ರದ ಮಹಿಮೆ - ಸ್ವರೂಪ ಮತ್ತು ಉಪಾಸನಾ ಕ್ರಮವನ್ನು ಎಳೆ ಎಳೆಯಾಗಿ ತೆರೆದಿಟ್ಟಿದ್ದಾರೆ. 
ಓಂಕಾರದ ಅಷ್ಟ ವರ್ಣಗಳಿಗೂ ಶ್ರೀ ನಾರಾಯಣನೇ ಅಧಿದೇವತೆ. 
ಒಂದೊಂದು ವರ್ಣಕ್ಕೂ ಮೂರು ಮೂರು ರೂಪಗಳಂತೆ ಒಟ್ಟು 24 ರೂಪಗಳಿವೆಯೆಂದೂ... 
ಓಂಕಾರದಲ್ಲಿ ಪ್ರತಿಪಾದ್ಯ ಭಗವದ್ರೂಪಗಳನ್ನೂ - ವಾಹೃತಿಗಳಲ್ಲಿರುವ ಅಭಿಮಾನಿ ದೇವತೆ ಮತ್ತು ಪ್ರತಿಪಾದ್ಯ ಭಗವದ್ರೂಪಗಳನ್ನೂ - ಗಾಯತ್ರಿಯ 4 ಪಾದಗಳಲ್ಲಿ - ದಶ ಪದಗಳಲ್ಲಿ ಮತ್ತು 4 ವರ್ಣಗಳಲ್ಲಿ ಪ್ರತಿಪಾದ್ಯವಾದ  ಭಗವದ್ರೂಪಗಳನ್ನು ತುಂಬಾ ಅತ್ಯದ್ಭುತವಾಗಿ ಸಂಗ್ರಹಿಸಿದ್ದಾರೆ. 
ಶ್ರೀ ಗಾಯತ್ರೀ ಮಂತ್ರದ ಬಗ್ಗೆ ಅಸದಳವಾದ ಆಸಕ್ತಿ ಮತ್ತು ಶ್ರದ್ಧೆಯನ್ನು ಅಂಕುರಿಸುವಂತೆ ಮಾಡುವ ಈ ಪುಟ್ಟ ಗ್ರಂಥದಲ್ಲಿ ಒಟ್ಟು 87 ಶ್ಲೋಕಗಳಿದ್ದು - ಪಾರಾಯಣಕ್ಕೆ ಯೋಗ್ಯವಾಗಿದ್ದೂ ಅತ್ಯಾವಶ್ಯವಾದ ಗ್ರಂಥ. 
ಆದಿ :
ಪ್ರಣಮ್ಯ ಜಗತಾಮೀಶಂ 
ಶ್ರೀನಿವಾಸಂ ಸದಾಶ್ರಯಂ ।
ಗಾಯತ್ರೀ ಪ್ರತಿಪಾದ್ಯಾರ್ಥಾ೦ 
ಸಾರಂ ಕಿಂಚಿದುದೀರಯೇ ।। 1 ।।
ಅಂತ್ಯ :
ಉಪಾಸ್ಯಾಸ್ತದ್ಗತಂ ವಿಷ್ಣು೦ 
ವಾಸುದೇವಂ ಪ್ರಪಶ್ಯತಿ ।
ಷಡಶೀತಿಮಿತಾಹ್ಯೇತೇ 
ಶ್ಲೋಕಾಸ್ತತ್ರೈವ ಭಾಷ್ಯಗಮ್ ।। 87 ।।
***
" ಶ್ರೀ ವ್ಯಾಸತತ್ತ್ವಜ್ಞರು - 9 "   
" ಮಹಿಮೆಗಳು - ಇವರ ಬಿಟ್ಟವ ಕೆಟ್ಟ ಇವರಲ್ಲಿದ್ದವ ಗೆದ್ದಾ "
" ಶ್ರೀ ಭಾವೀರುದ್ರಾವತಾರಿಗಳಾದ ಶ್ರೀ ಭೂತರಾಜರ ಅಂಶ ಸಂಭೂತರಾದ ಶ್ರೀ ವರದ ಗೋಪಾಲದಾಸರು ".. 
ಪಂಕಜಾಕ್ಷಿ ಕೇಳಿದ್ಯಾ 
ಪಂಕಜಗಂಧಿ ।
ವೆಂಕಟರಾಮಾರ್ಯರ 
ಮಹಾ ಮಹಿಮೆಯು ।। ಪಲ್ಲವಿ ।\
ಅಪಮೃತ್ಯು ಅಪರಿಮಿತದ 
ಪಾಪಗಳೆಲ್ಲ ।
ಅಪರೋಕ್ಷ ಜ್ಞಾನಿಯು ಕೃಪೆ 
ಮಾಡೆ ಪೋಪಾವು ।। ಚರಣ ।।
ಇವರ ಬಿಟ್ಟವ ಕೆಟ್ಟ 
ಇವರಲ್ಲಿದ್ದವ ಗೆದ್ದಾ ।
ಇವರ ಕರುಣಕೆ ಪಾತ್ರನೇ 
ಮಹಾಪಾತ್ರನು ।। ಚರಣ ।।
ಆಧಿವ್ಯಾಧಿ ಸರ್ವಬಾಧೆ 
ಭಯಂಗಳು ।
ಮೋದಿ ಕೃಷ್ಣನ ವಾರ್ತಿ 
ಬೋಧಿಸೆ ದಹಿಪಾವು ।। ಚರಣ ।।
ಮನಕನುಭವ ಅನುಪಮ 
ಮಹಾ ಮಹಿಮರ ।
ಮನಕೆ ಬಂದವನ 
ಸುಮನಸನೆಂದೆನಿಸುವ ।। ಚರಣ ।।
ಪರಮಾತ್ಮ ತಾನೇ
ಪ್ರತ್ಯಕ್ಷ ಮಾತಾಡದೆ ।
ನಿರುತದಿ ಇವರಲ್ಲಿ ನಿಂತು 
ಮಾತಾಡುವ ।। ಚರಣ ।।
ಚಿಂತಿಸುತಿಪ್ಪಾರ 
ಚಿಂತಿತಾರ್ಥಗಳೆಲ್ಲ ।
ಚಿಂತಾಮಣಿಯಂತೆ 
ಸಂತೈಸುತ್ತಿದ್ದಾರೆ ।। ಚರಣ ।।
ವರದ ಗೋಪಾಲವಿಠಲ 
ಇವರಲಿ ನಿಂತು ।
ವರವ ಕೊಡುವೆನೆಂದು 
ಕರೆವುತಲಿ ಇದ್ದಾನೆ ।। ಚರಣ ।।   
1. ಶ್ರೀ ವ್ಯಾಸತತ್ತ್ವಜ್ಞತೀರ್ಥರು ಗದ್ವಾಲ ಮಹಾರಾಜನಿಗೆ ಬಂದ ಆಪತ್ತನ್ನು ತಮ್ಮ ಮಂತ್ರಾಕ್ಷತೆಯ ಮಹಿಮೆಯಿಂದ ಪರಿಹರಿಸಿದರು.
2. ಶ್ರೀ ವ್ಯಾಸತತ್ತ್ವಜ್ಞತೀರ್ಥರು ತುಂಬು ವೃದ್ಧಾಪ್ಯದಲ್ಲಿದ್ದುದರಿಂದ ತುಂಗಭದ್ರೆಯನ್ನು ತಾಯಿ ನನಗೆ ಅಷ್ಟು ದೂರ ಬರಲು ಆಗುವುದಿಲ್ಲ. 
ಆದ್ದರಿಂದ ನೀನೆ ಆಶ್ರಮದ ಹತ್ತಿರಕ್ಕೆ ಬಾ ಎಂದಾಗ..
ಯತಿಗಳೇ! 
ಶ್ರೀ ಹರಿ ವಾಯು ಗುರುಗಳಿಗೆ ಅತ್ಯಂತ ಪ್ರಿಯರಾದ ನೀವು " ನಿಮ್ಮ ದಂಡದಿಂದ ಎಲ್ಲಿಯ ವರೆಗೂ ಗೆರೆಯನ್ನು ಎಳೆಯುತ್ತೀರೋ ಬರುತ್ತೇನೆಂದು ತುಂಗಭದ್ರೆಯು ತಿಳಿಸಿ, ದಂಡದ ಗೆರೆಯನ್ನನುಸರಿಸಿ ಸಡಗದರಿಂದ ಹರಿದು ಬಂದು ಶ್ರೀ ವ್ಯಾಸತತ್ತ್ವಜ್ಞತೀರ್ಥರ ಸಾಧನೆಗೆ ಸಹಕರಿಸಿದ್ದಾಳೆ.
3. ಶ್ರೀ ವ್ಯಾಸತತ್ತ್ವಜ್ಞತೀರ್ಥರು ಭೀಮಾಚಾರ್ಯರೆಂಬ ಸುಧಾ ಪಂಡಿತರ ಬ್ರಹ್ಮಹತ್ಯಾ ದೋಷವನ್ನು ಪರಿಹರಿಸಿದರು.
4. ಮುಡಮಾಲಿ ದೇಸಾಯಿಯ ಉದರ ಬ್ಯಾನಿ ನಿವಾರಣೆ
ಶ್ರೀ ಸಿರಿ ತಂದೆ ಶ್ರೀನಿವಾಸದಾಸರು... 
ಕೋಲನಂದನೆಯಿವರ ಪ್ರಾರ್ಥನೆಯನ್ನಾಲಿಸಿ । ಕೋಲ ಗುರುತು ಪಿಡಿದು ಬಂದಳು ಸಂಭ್ರಮದಿ । ಶೀಲ ವಾಕ್ಯವ ನೋಡಿ ಅಬ್ಬರವ ತೋರುತ್ತ । ಖೂಳರ ಜಾಲವನೆಲ್ಲ ಸೆಳೆದೊಯ್ದಳು ಕೃಷ್ಣೆ । ಬಲು ಖೇದಗೊಂಡ ದ್ವಿಜನೋರ್ವಗೆ ದಿವ್ಯಪ್ರಸಾದವಿತ್ತು । ಹಲವು ಕಾಲದ ಉದರಬಾಧೆಯ ಪರಿಹರಿಸಿದ । ಸಲ್ಲಲಿತ ಕೀರ್ತಿಗಳನ್ನಾಲಿಸಿ ದಾಸರ ಸತ್ಸಂಗದಲಿ । ಕಾಲಿಗೆ ಬಿದ್ದವರ ಕೃಪಾ ಶರಧಿಯೊಳು ಮಜ್ಜನಗೈಯಲು । ಶೀಲ ಬುದ್ಧಿಯು ಪುಟ್ಟಿ ಅನಾದಿ ಕಾಲಕೆ । ಆಲಯವಾಯಿತು ದೇಹ ಸುರರ ವಾಲಾಗದಲ್ಲಿ । ನೀಲವರ್ಣ ಸಿರಿ ತಂದೆ ಶ್ರೀನಿವಾಸನ ರೂಪ । ನಿಲ್ಲಲು ಮನದಲ್ಲಿ ಆನಂದ ಸುಖವಾಯಿತು ಚಿತ್ತದಲ್ಲಿ ।।
***
"" ಶ್ರೀ ವ್ಯಾಸತತ್ತ್ವಜ್ಞರು - 10 "  
" ಒಲಿದು ಬಂದ ಜಗದೊಡೆಯ ಶ್ರೀ ವೇಣುಗೋಪಾಲ ಕೃಷ್ಣ "
ಶ್ರೀ ಆಚಾರ್ಯರಿಗೆ ವೇಣೀಸೋಮಪುರದ ಹತ್ತಿರದಲ್ಲಿರುವ " ವಲ್ಲೂರು " ಯೆಂಬ ಗ್ರಾಮಕ್ಕೆ ಪ್ರವಚನಕ್ಕಾಗಿ ಆಮಂತ್ರಣ ಬಂದಿತ್ತು. 
ಶ್ರೀ ಆಚಾರ್ಯರು ವಲ್ಲೂರಿನಲ್ಲಿ ಇದ್ದಾಗ ಒಂದುದಿನ ರಾತ್ರಿ ಅವರಿಗೆ ಸ್ವಪ್ನವಾಯಿತು. 
" ಬಲ ಪಾದದ ಮೇಲೆ ಎಡ ಪಾದವನ್ನಿಟ್ಟು ವೇಣುಗಾನ ಮಾಡುತ್ತಿರುವ ಶ್ರೀ ಗೋಪಾಲಕೃಷ್ಣ ಸ್ವಪ್ನದಲ್ಲಿ ಕಾಣಿಸಿಕೊಂಡು.... 
ನನ್ನನ್ನು ತೆಗೆದುಕೊಂಡು ಹೋಗಿ ವೇಣಿಸೋಮಪುರದಲ್ಲಿ ಪ್ರತಿಷ್ಠಾಪಿಸ - ಸತ್ಸಂತಾನವಾಗಿ ಶುಭವಾಗುವುದು "
ಯೆಂದು ಹೇಳಿದಂತಾಯಿತು. 
ಬೆಳಿಗ್ಗೆ ಎಚ್ಚರಗೊಂಡ ಶ್ರೀ ಆಚಾರ್ಯರು ಸ್ವಪ್ನದಲ್ಲಿ ಕಂಗೊಳಿಸಿದ ಆ ಮುರಳೀ ಕೃಷ್ಣನ ಮೋಹನಾಕೃತಿಯನ್ನೇ ಧ್ಯಾನಿಸುತ್ತಾ ಭಾವಪರವಶರಾದರು. 
ತಮ್ಮ ಮನದಿಚ್ಚೆಯನ್ನು ತಿಳಿದು ತಾನಾಗಿ ಒಲಿದು ಬಂದ ಶ್ರೀ ಕೃಷ್ಣ ಪರಮಾತ್ಮನ ಭಕ್ತವಾತ್ಸಲ್ಯತೆಯನ್ನು ಪರಿಪರಿಯಿಂದ ಹೃದಯ ತುಂಬಿ ಹಾಡಿದರು. 
ಶ್ರೀ ಆಚಾರ್ಯರಿಗೆ ಎರಡು ಶ್ರೀ ಕೃಷ್ಣನ ವಿಗ್ರಹಗಳು ದೊರೆತವು. 
ಮೊದಲನೆಯದು : - 
ಎಡಗಾಲ ಮೇಲೆ ಬಲಗಾಲನ್ನಿಟ್ಟ ಶ್ರೀ ವೇಣುಗೋಪಾಲನ ವಿಗ್ರಹ. 
ಅದನ್ನು ವಲ್ಲೂರಿನ ಭಕ್ತರ ಪ್ರಾರ್ಥನೆಯಂತೆ ಅಲ್ಲಿಯೇ ಪ್ರತಿಷ್ಠಾಪನೆ ಮಾಡಿದರು. 
ಎರಡನೆಯದು : - 
ಶ್ರೀ ರುಕ್ಮಿಣೀ ಸತ್ಯಭಾಮಾ ಸಹಿತ ಬಲಗಾಲ ಮೇಲೆ ಎಡಗಾಲನ್ನಿಟ್ಟ - ಶಿಲ್ಪ ಶಾಸ್ತ್ರ ವಿರುದ್ಧವೆನ್ನಿಸುವ ಅಪೂರ್ವವಾದ ಸುಂದರ ಶ್ರೀ ವೇಣುಗೋಪಾಲಸ್ವಾಮಿಯ ವಿಗ್ರಹ. 
ಬಂದನೋ ಗೋವಿಂದ 
ಚಂದದಿ ಆನಂದ ।
ಸುಂದರಿಯ ಮಂದಿರಕ್ಕೆ 
ನಂದನ ಕಂದ ।। ಪಲ್ಲವಿ ।।
ಸುಂದರಾಕಾರ ಬಂದು 
ಛಂದ ಗಂಭೀರ ।
ಇಂದು ವದನೆಯರಾ 
ಮುಖಗಳಂದ ನೋಡಿದ ।
ತಂದ ಕುಸುಮಾ ಕರ-
ದಿಂದ ಮುಡಿಸಿದ ।
ಬಂದನೋ ಗೋ-
ವಿಂದ ಅರ-
ವಿಂದ ನಯನ ।। ಚರಣ ।।
ಕಾನನಾದಲ್ಲಿ ಬಲು 
ದೀನನಾದಲ್ಲಿ ।
ವೇಣುನಾದವೂ ತಾ 
ಕೂಡಿ ಮೋದದಿ ।
ಜಾಣನಿವನೂ ಸುಮ 
ಬಾಣ ಪಿತನು ।
ಮಾನಿನಿಯ ಮಂದಿರದಿ 
ಗಾನ ಮಾಡುತಾ ।। ಚರಣ ।।
ಓಡಿ ಬಂದರೋ ಬಲು 
ಬೇಡಿಕೊಂಡರೋ ।
ಗಾಡಿಗಾರನೂ ಅವರ 
ಕೂಡಿ ಮೆರೆದನೂ ।
ಮಾಡಿದ ಚಾಲ 
ವಾಸುದೇವ ವಿಠಲ ।
ಮಾಡಿದ ಮನ 
ಮಾಡಿದ ತಾ 
ಕೂಡಿದನಾಗ ।। ಚರಣ ।।
ಹೀಗೆ ತಮಗೆ ಪ್ರಸನ್ನನಾದ - ಜಗದೊಡೆಯನಾದ ಶ್ರೀ ರುಕ್ಮಿಣೀ ಸತ್ಯಭಾಮಾ ಸಮೇತ ಶ್ರೀ ವೇಣುಗೋಪಾಲಕೃಷ್ಣ ದೇವರನ್ನು ತಲೆಯ ಮೇಲೆ ಹೊತ್ತುಕೊಂಡು ಆನಂದದಿಂದ ಹಾಡುತ್ತಾ - ಕುಣಿಯುತ್ತಾ, ತಮ್ಮ ಶಿಷ್ಯರಿಂದೊಡಗೂಡಿ ವೇಣಿಸೋಮಪುರಕ್ಕೆ ಬಂದು " ವೈಶಾಖ ಶುದ್ಧ ದಶಮಿಯ ಶುಭ ಮಂಗಳ ಮೂಹೂರ್ತದಲ್ಲಿ ವೈಭವದಿಂದ ತಂತ್ರಸಾರೋಕ್ತ " ವಾಗಿ ಪ್ರತಿಷ್ಠಾಪಿಸಿದರು. 
ಬಂದ ಕೃಷ್ಣ ಛಂದದಿಂದ ।
ಬಂದ ನೋಡೆ ಗೋಪ ।
ವೃಂದದಿಂದ ನಂದಿಸುತ ।
ಬಂದ ನೋಡೆ ।। ಪಲ್ಲವಿ ।।
ಗೋವ ಮೇವ ನೀವ ।
ದೇವ ಬಂದ ನೋಡೆ ।
ದೇವತಾ ವಾದ್ಯಗಳಿಂದ 
ಬಂದ ನೋಡೆ ।। ಚರಣ ।।
ಪಾಪ ಪೋಪ ಗೋಪ ।
ರೂಪ ಬಂದ ನೋಡೆ ।
ತಾಪಾ ಲೋಪಾ ಲಾಪಾ ।
ಟೋಪ ಬಂದ ನೋಡೆ ।। ಚರಣ ।।
ಭಾಸುರ ಸುಖ ।
ಸೂಸುತ ಬಂದ ನೋಡೆ ।
ವಾಸುದೇವವಿಠಲ ತಾ 
ಬಂದ ನೋಡೆ ।। ಚರಣ ।।
ಎಂದು ಅತ್ಯಂತ ಮನೋಜ್ಞವಾಗಿ ಶ್ರೀ ವೇಂಕಟರಾಮಾಚಾರ್ಯರು ಶ್ರೀ ವೇಣುಗೋಪಾಲಕೃಷ್ಣ ದೇವರನ್ನು ಹೃದಯತುಂಬಿ ಪ್ರಾರ್ಥಿಸಿದರು.
ಈ ಶುಭ ಸಂದರ್ಭದಲ್ಲಿ ಶ್ರೀ ವರದ - ಶ್ರೀ ಗುರು ಗೋಪಾಲದಾಸರುಗಳು ಕಾಲಿಗೆ ಗೆಜ್ಜೆ ಕಟ್ಟಿ - ತಾಳ ತಂಬೂರಿಯನ್ನು ಹಿಡಿದು ಆನಂದೋದ್ರೇಕದಿಂದ... 
ಶ್ರೀ ವರದ ಗೋಪಾಲದಾಸರು.... 
ನಿಜ ಧಾಮದಿಂದ ವ್ರಜಕೆ ಬಂದು ನೋಡೆ । ನಿಜ ಜನ ಬಾಂಧವರೊಳಗೊಬ್ಬರಾದರನ್ನೆ । ನಿಜದವರಿಲ್ಲೆಂದು ದ್ವಿಜ ಗಮನನೇ ಸೋಮ । ನಿಜಪುರನ ಸೂತ ಬರಲು ಇಲ್ಲಿ ತನ್ನ । ನಿಜ ಜನರನು ನೋಡಿ ನಿಶ್ಚಯವನೆ ಮಾಡಿ । ಸುಜನಾಗ್ರಣಿ ವರದ ಗೋಪಾಲ ವಿಠಲ । ಭಜಕ ರಾಮಾರ್ಯರ ಭಜನೆಗೊಲಿದು ಬಂದೆಯೋ ।।
ಶ್ರೀ ಗುರು ಗೋಪಾಲದಾಸರು... 
ನಂದ ವ್ರಜ ದ್ವಾರಕಾಪುರಿ ಬಿಟ್ಟು । ಬಂದದ್ದೆ ಬಹು ಲಾಭವೋ । ಇಂದಿರಾಪತಿ ದಯಾ- । ಸಿಂಧು ಸುಖಪೂರ್ಣ । ಗೋ । ವಿಂದ ಲಾಲಿಸೋ ಬಿನ್ನಪ ಕೃಷ್ಣಾ ।।
ನೀನಿದ್ದ ಸ್ಥಳದಲ್ಲಿ ಸಕಲ ತೀರ್ಥಗಳು೦ಟು । ನೀನಿದ್ದುದೇ ಕ್ಷೇತ್ರವೋ । ನೀನು ಎಲ್ಲಿರಲಲ್ಲಿ ಬ್ರಹ್ಮಾದಿ ದಿವಿಜರಾ । ಸ್ಥಾನದಲಿ ನೆಲೆಸಿಪ್ಪರೋ । ನೀನಿದ್ದ ಸ್ಥಾನವೇ ವೈಕುಂಠವೆಂದೆನಿಸಿ । ಮೌನಿಗಳು ಸೇವಿಸುವರೋ । ಪ್ರಾಣಪತಿ ಶ್ರೀ ಗುರು ಗೋಪಾಲವಿಠಲ । ಆನಂದ ನಿಲಯ ವಾಸ ಶ್ರೀಕೃಷ್ಣ ।।
ಶ್ರೀ ವೇಂಕಟರಾಮಾಚಾರ್ಯರ ವಿದ್ಯಾ ಶಿಷ್ಯರಾದ ಶ್ರೀ ಚಿಂಚೋಳಿ ಕೃಷ್ಣಾಚಾರ್ಯರು...
ಸಂತಾನ ಪೂರ್ವ 
ವರದೇಶ್ವರ ಗೋಪಿನಾಥ ।
ಶ್ರೀ ವಾಸುದೇವ ಶೂಭಮೂರ್ತಿ 
ಶುಭ ಪ್ರತಿಷ್ಠ ।।
ಎಂದೂ ಸ್ತುತಿಸಿ ಕೊಂಡಾಡಿದರು. 
ಈಗಲೂ ಪ್ರತಿವರ್ಷ ವೈಶಾಖ ಮಾಸದಲ್ಲಿ ಪಂಚರಾತ್ರೋತ್ಸವ ಕಾರ್ಯಕ್ರಮ ಅತ್ಯಂತ ವೈಭವದಿಂದ ನಡೆಯುತ್ತದೆ. 
ವೈಶಾಖ ಶುದ್ಧ ಏಕಾದಶೀಯಂದು ಅಂಕುರಾರ್ಪಣದಿಂದ ಪ್ರಾರಂಭವಾಗಿ.... 
ವೈಶಾಖ ಶುದ್ಧ ತ್ರಯೋದಶೀಯಂದು ಶ್ರೀ ರುಕ್ಮಿಣೀ ಸತ್ಯಭಾಮಾ ಸಮೇತ ಶ್ರೀ ವೇಣುಗೋಪಾಲದೇವರ ಕಲ್ಯಾಣೋತ್ಸವ - ರಾತ್ರಿ ಗರುಡವಾಹನೋತ್ಸವ. 
ವೈಶಾಖ ಶುದ್ಧ ಚತುರ್ದಶೀಯಂದು ಶ್ರೀ ನರಸಿಂಹ ಜಯಂತೀ ಪ್ರಯುಕ್ತ ಶ್ರೀ ಷೋಡಶಬಾಹು ನರಸಿಂಹ ದೇವರ ರಥೋತ್ಸವ... 
ವೈಶಾಖ ಬಹುಳ ಪ್ರತಿಪದೆಯಂದು ಅವಭೃತ ಸ್ನಾನ - ಸರ್ವ ಸಮರ್ಪಣೋತ್ಸವದೊಂದಿಗೆ ಪೂರ್ಣಗೊಳ್ಳುತ್ತದೆ. 
ರಾಗ : ರೇಗುಪ್ತಿ ತಾಳ : ಆದಿ 
ವೇಣುವನೂದುತ ನಿಂತಿಹನಾರೆ 
ಪೇಳಮ್ಮಯ್ಯ । ಪಲ್ಲವಿ ।।
ವಾಣೀಧಮವಿಧಿ ಪ್ರಾಣರೊಡೆಯ 
ಸುರಶ್ರೇಣಿ ವಂದ್ಯ ಜಗತ್ರಾಣ 
ಕಾಣಮ್ಮ ।। ಅ ಪ ।।
ವ್ರಜ ಮಧುರಾಪುರಿ ದ್ವಾರಕಿ 
ತ್ಯಜಿಸದನ್ಯಾರೆ ಪೇಳಮಯ್ಯ ।
ರಜತಪೀಠ ಬಿಟ್ಟಿಲ್ಲಿಗೆ 
ಬಂದಿಹನಾರೆ ಪೇಳಮ್ಮಯ್ಯ ।
ದ್ವಿಜ ರಾಮಾರ್ಯರ 
ಭಜನೆಗೊಲಿದು ತನ್ನ ।
ನಿಜಸ್ಥಳ ತೊರೆದ ಸಾಮಾಜ 
ಪೋಷಕನೇ ।। ಚರಣ ।।
ಕಾಮಿನಿಯರು ಎಡಬಲ-
ದೊಳೊಪ್ಪುತಿಹನಾರೆ ಪೇಳಮ್ಮಯ್ಯ ।
ಹೇಮಗರ್ಭ ಪಿತ ಶ್ರೀ-
 ರಾಮಾನುಜನಾರೇ ಪೇಳಮ್ಮಯ್ಯ ।
ಸೋಮಾರ್ಕರಮತ 
ದೀಧಿತಿವಿಲಸಿತನೊಪ್ಪುವ 
ಕಾಣಮ್ಮ ।। ಚರಣ ।\
ಯಾದವ ಕುಲಮಣಿ ಆದಿ 
ಪುರುಷನಿವನಹುದೇನೆ ಪೇಳಮ್ಮಯ್ಯ ।
ವಾದ ಬಳಿಯಲಿ ಸುಬೋಧಕ 
ಕಪಿಯಿಹನಾರೆ ಪೇಳಮಯ್ಯ ।
ಶ್ರೀಧರ ವಿಠಲ ವಿನೋದಿ 
ರಾಮನೆಂದಾದರದಲಿ ಮುಂದಾದ 
ಹನುಮನೇ ।। ಚರಣ ।।
***
" ಶ್ರೀ ವ್ಯಾಸತತ್ತ್ವಜ್ಞರು - 11 "    
" ಶ್ರೀ ರಾಯರ ಅಂತರಂಗ ಭಕ್ತರು "
ಶ್ರೀ ವ್ಯಾಸತತ್ತ್ವಜ್ಞತೀರ್ಥರು ಶ್ರೀ ಮಂತ್ರಾಲಯ ಪ್ರಭುಗಳ ನಿಸ್ಸೀಮ ಭಕ್ತರಾಗಿದ್ದರು. 
ಶ್ರೀ ರಾಯರ ಗುಣ ಮಹಿಮೆಗಳನ್ನು ಶ್ರೀ ಆಚಾರ್ಯರು ಚೆನ್ನಾಗಿ ಅರಿತಿದ್ದರು 
ಶ್ರೀ ರಾಯರಿಗೂ ಶ್ರೀ ವ್ಯಾಸತತ್ತ್ವಜ್ಞತೀರ್ಥರನ್ನು ಕಂಡರೆ ಎಲ್ಲಿಲ್ಲದ ಅಂತಃಕರಣ - ಪ್ರೀತಿ - ಆಪ್ಯಾಯತೆ - ಮಾತೃವಾತ್ಸಲ್ಯ.  
ಶ್ರೀ ವ್ಯಾಸತತ್ತ್ವಜ್ಞ ತೀರ್ಥರು ತಮ್ಮ ಜೀವಿತಾವಧಿಯಲ್ಲಿ 18 ಶ್ರೀಮನ್ನ್ಯಾಯಸುಧಾ ಪರಿಮಳ ಮಂಗಳ ಮಹೋತ್ಸವ ಮಾಡಿದ್ದಾರೆ. 
1. ಜಗದೊಡೆಯನೂ - ತಿರುಮಲೆಯ ಶ್ರೀ ಶ್ರೀನಿವಾಸನ ಸನ್ನಿಧಾನದಲ್ಲಿ 8 (ಎಂಟು) ಶ್ರೀಮನ್ನ್ಯಾಯಸುಧಾ ಪರಿಮಳ ಮಂಗಳ ಮಹೋತ್ಸವವನ್ನೂ;
2. ಶ್ರೀ ಇಂದ್ರದೇವರ ಅಂಶ ಸಂಭೂತರಾದ ಜಯತೀರ್ಥರ ಮೂಲ ವೃಂದಾವನ ಸನ್ನಿಧಾನ., ನವ ವೃಂದಾವನ ಗಡ್ಡೆಯಲ್ಲಿ  4 ( ನಾಲ್ಕು ) ಶ್ರೀಮನ್ನ್ಯಾಯಸುಧಾ ಪರಿಮಳ ಮಂಗಳ ಮಹೋತ್ಸವವನ್ನೂ;
3. ಕಲಿಯುಗದ ಕಲ್ಪವೃಕ್ಷ - ಕಾಮಧೇನುವೆಂದು ಜಗತ್ಪ್ರಸಿದ್ಧರೂ - ಶ್ರೀ ಪ್ರಹ್ಲಾದಾವತಾರಿಗಳಾದ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಮೂಲ ವೃಂದಾವನ ಸನ್ನಿಧಾನ., ಮಂತ್ರಾಲಯದಲ್ಲಿ  6 ( ಆರು ) ಶ್ರೀಮನ್ನ್ಯಾಯಸುಧಾ ಪರಿಮಳ ಮಂಗಳ ಮಹೋತ್ಸವವನ್ನೂ;
ಅತ್ಯಂತ ವೈಭವದಿಂದ ಆಚರಿಸಿದ ಮಹಾತ್ಮರು. 
ಶ್ರೀ ರಾಯರ ದರ್ಶನಕ್ಕೆ ಮಂತ್ರಾಲಯಕ್ಕೆ ಬಂದು ಶ್ರೀ ಗುರುರಾಜರ ಬೃಂದಾವನದ ಮುಂದೆ ನಿಂತು ಆನಂದ ಬಾಷ್ಪ ಸುರಿಸುತ್ತಾ...
ನ್ಯಾನೇಕೆ ಚಿಂತಿಸಲಿ 
ನ್ಯಾನೇಕೆ ಧೇನಿಸಲಿ ।
ತಾನಾಗಿ ಶ್ರೀ ರಾಘವೇಂದ್ರ 
ಯತಿ ಒಲಿದ ।। ಪಲ್ಲವಿ ।।
.. ಏಸು ಜನ್ಮದಲಿ ಅ-
ರ್ಚಿಸಿದೆನೋ ನಾ ಇನ್ನು ।
ವಾಸುದೇವಾವಿಠಲನ 
ಪಾದಪದುಮ ।
ಲೇಸಾಗಿ ಈ ಸುಕೃತ-
ದಿಂದೆನ್ನ ಹರಿದಾಸ ।
ಈ ಸುಗುಣ ಗುರುರಾಯ 
ಎನಗೆ ಒಲಿದ ।।
ಇನ್ನೊಂದು ಪದ್ಯದಲ್ಲಿ... 
ಮರೆವರೆ ಯೆನ್ನ ರಾಘವೇಂದ್ರ -
ಗುರುವೆ ಸಂಪನ್ನ ।
ಕರೆದು ಕಾಮಿತಗಳ ಕರೆವೆ 
ನಾ ನಿಮಗಿಂದು ।। ಪಲ್ಲವಿ ।।
ಅರ್ತಿಯ ಭಕುತನ್ನ 
ನೋಡೀಗ ನಿನ ದಿವ್ಯ ।
ಕೀರ್ತಿಯ ನೋಡಿಕೋ 
ವಾಸುದೇವವಿಠಲನ ।
ಮೂರ್ತಿಯ ಭಜಕ 
ಭಕ್ತರಾಭೀಷ್ಟ ।
ಪೂರ್ತಿಯ ಜನಕ 
ನಿನ್ನಯ ಗುಣ ।
ಸ್ಫೂರ್ತಿ ಉಳ್ಳನ್ನಕ 
ಪಾಪದ ಲೇಶ ।
ವಾರ್ತಿ ಯೆನಗೆ ಇಲ್ಲವೆಂದು 
ನಿಶ್ಚೈಸಿದೆ ।\ ಚರಣ ।।
ಮತ್ತೊಂದು ಕೃತಿಯಲ್ಲಿ.... 
ಶ್ರೀ ರಾಘವೇಂದ್ರಂ 
ತವ ಚರಣಂ ಭಜಾಮಿ ।
ಶರಣಾಗತ ಜನ 
ಭವತರಣಂ ।।
ಶ್ರೀ ಸುಧೀಂದ್ರ ಕರ-
ಕಂಜ ಸಂಭವಂ ।
ಸುಧಾಂಶು ಮುಖ 
ಸಂಸ್ತುತ ಭಾವಿಭವಂ ।।
ಪಾವನ ವರ 
ಮಂತ್ರಾಲಯ ಸದನಂ ।
ಪತಿತ ಪಾವನಂ 
ಜಿತ ಮದನಂ ।।
ವಾಸುದೇವ ಕವಿ 
ಸನ್ನುತ ಚರಣಂ ।
ಮೂಲರಾಮ ವರ 
ಕರುಣಾಭರಣಮ್ ।।  
ಎಂದು ಸ್ತೋತ್ರ ಮಾಡಿ ಶ್ರೀ ರಾಯರ ಗುಣ ಮಹಿಮೆಯನ್ನು ಮನೋಜ್ಞವಾಗಿ ವರ್ಣಿಸಿದ್ದಾರೆ.
***
" ಶ್ರೀ ವ್ಯಾಸತತ್ತ್ವಜ್ಞರು  - 12 "
" ಶ್ರೀ ಶೇಷಗಿರೀಶನ ಪ್ರೀತಿ ಪಾತ್ರರು ಶ್ರೀ ವ್ಯಾಸತತ್ತ್ವಜ್ಞತೀರ್ಥರು "
ಶ್ರೀ ಐಜಿ ಆಚಾರ್ಯರು ಶ್ರೀ ಹರಿಯ ಆಜ್ಞೆಯಂತೆ ತಾವು ಸಂಕಲ್ಪಿಸಿದ ಪ್ರಕಾರ ಶ್ರೀಮನ್ನ್ಯಾಯಸುಧಾ ಪರಿಮಳ ಸಹಿತ ಪಾಠದ ಮಂಗಳವನ್ನು ಶ್ರೀ ತಿರುಮಲೆಯ ಚೆಲುವನಾದ ಶ್ರೀ ಶ್ರೀನಿವಾಸನ ಸನ್ನಿಧಾನದಲ್ಲಿ ನೆರವೇರಿಸಲು ಶ್ರೀ ಶ್ರೀನಿವಾಸನ ಬ್ರಹ್ಮೋತ್ಸವಕ್ಕೆ ಹೊರಟರು.
ಭೂ ವೈಕುಂಠದಲ್ಲಿ ಕಲ್ಮಶಾದಿಗಳನ್ನು ಮಾಡಬಾರದೆಂದು ಶ್ರೀ ಐಜಿ ಆಚಾರ್ಯರು ಪ್ರತಿನಿತ್ಯ ಬೆಟ್ಟದಿಂದ ಬಂದು ಅಲ್ಲಿಯೇ ತಮ್ಮ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಶ್ರೀ ಶ್ರೀನಿವಾಸನ ದರ್ಶನಕ್ಕೆ ಹೊರಡಲು ಸಿದ್ಧರಾದಾಗ ಶ್ರೀ ಐಜಿ ಆಚಾರ್ಯರಿಗೆ ಶೌಚಕ್ಕೆ ಅವಸರವಾಯಿತು. 
ಆಗ ಅವರು ಶ್ರೀ ಹರಿಯನ್ನು ಸ್ಮರಿಸುತ್ತಾ ಎಲ್ಲಾ ನಿನ್ನ ಚಿತ್ತ ಸ್ವಾಮೀ! 
ಈ ವರ್ಷ ನಿನ್ನ ಬ್ರಹ್ಮೋತ್ಸವವನ್ನು ನೋಡುವ ಭಾಗ್ಯ ನನಗಿಲ್ಲ ಎಂದು ಚಿಂತಿಸುತ್ತಾ ಕೆಳಗಿಳಿದರು.
ಇತ್ತ ಸೂರ್ಯೋದಯವಾಗಿದೆ. 
ಭಕ್ತರು ಶ್ರೀ ಶ್ರೀನಿವಾಸನ ರಥವನ್ನು ಎಳೆಯಲು ಸಿದ್ದರಾಗಿ ಎಳೆಯಲು ಪ್ರಾರಂಭಿಸಿದ್ದಾರೆ.
ಎಷ್ಟು ಎಳೆದರೂ ರಥ ಕದಲಲೇ ಇಲ್ಲ. 
ದೇವಾಲಯದ ಅಧಿಕಾರಿಯಾದ ಮಹಂತನು ಶ್ರೀಶ್ರೀನಿವಾಸನಿಗೆ ಯಾರಾದರೂ ಹರಿಕೆ ಹೊತ್ತಿದ್ದರೆ ಜ್ಞಾಪಿಸಿಕೊಂಡು ಸಮರ್ಪಿಸಿರಿ ಎಂದು ಘೋಷಿಸಿದನು.
ಸ್ವಲ್ಪ ಸಮಯದ ನಂತರ ಬಾಲಕನ ಮೇಲೆ ಶ್ರೀ ವೆಂಕಟೇಶನ ಆವೇಶವು ಬಂದು ಶ್ರೀ ಐಜಿ ಆಚಾರ್ಯರು ನನ್ನ ರಥೋತ್ಸವ ನೋಡಲು ಬಂದಿಲ್ಲ. 
ಅವರನ್ನು ಕರೆದುಕೊಂಡು ಬನ್ನಿ ಎಂದು ನುಡಿದನು.
ಮಹಂತನು ಭೃತ್ಯರಿಗೆ ಶ್ರೀ ಐಜಿ ಆಚಾರ್ಯರನ್ನು ಕರೆ ತರಲು ಆಜ್ಞೆ ಮಾಡಿದನು. 
ಭೃತ್ಯರು ಶ್ರೀ ಐಜಿ ಆಚಾರ್ಯರನ್ನು ಹುಡಿಕಿ ಅತ್ಯಂತ ಭಕ್ತಿ ಗೌರವದಿಂದ ಕರೆದುಕೊಂಡು ಬಂದರು. 
ಆಗ ಶ್ರೀ ಐಜಿ ಆಚಾರ್ಯರು ಆರ್ತರಾಗಿ ಅತ್ಯಂತ ಭಕ್ತಿ ಪುರಸ್ಸರರಾಗಿ...
ರಾಗ : ಯದುಕುಲ ಕಾಂಬೋಧಿ ತಾಳ : ಝ೦ಪೆ
ಯಾತರವ ನಾನಲ್ಲವೋ 
ಹರಿ ಬರಿದೆ ।
ಖ್ಯಾತಿಯ 
ತಂದಿತ್ತೆಯಾ ।। ಪಲ್ಲವಿ ।।
ಮಾತುಗಳ ನಾಲ್ಕಡಿ 
ಸೇರಿದ ಸಭೆಯೊಳಗೆ ।
ಪ್ರೀತಿ ಬಡಿಸುವೆನೋ ನರರ ।
ರೀತಿಯಲಿ ನೀತಿಯಲಿ 
ಶ್ರುತಿಸ್ಮೃತಿಗಳ ಪಠಿಸಿ ।
ನಾಥ ನಿನ್ನನು 
ಪೋಷಿಸಿದೆನೇ ।। ಚರಣ ।।
ಜಪ ಮಣಿಗಳನು ತಿರುಹಿ 
ಬೆರಳಿಂದ ಲೋಗರನು ।
ಕಪಟಗೊಳಿಸುವನಲ್ಲದೆ ।
ತಪವ ಮಾಡಿದೆನೆ ಮನದಿ 
ಭಕುತಿಯಿಂ ನಿನ್ನಯ ।
ಕೃಪೆಯು ಉದಿಸುವ 
ತೆರದಲಿ ।। ಚರಣ ।।
ದಾಸ ವೇಷವ ಧರಿಸಿದೆನು 
ಬಿಡದೆ ಕನಕದಾ ।
ವಾಸನೆಯಿಂದಲ್ಲದೆ ।
ವಾಸುದೇವಾವಿಠಲಾ 
ಶರಣ ತಾನೆಂದು ।
ಲೇಶರಿಯೇನು ಕರುಣಿಸೋ
ದೇವ ।। ಚರಣ ।।
by ಆಚಾರ್ಯ ನಾಗರಾಜು ಹಾವೇರಿ
     ಗುರು ವಿಜಯ ಪ್ರತಿಷ್ಠಾನ
****
year 2021
✍️ಶ್ರೀ ವ್ಯಾಸ ತತ್ವಜ್ಞ ಗುರುಗಳ ಮಹಿಮೆ ಇಂದು ಅವರ ಆರಾಧನಾ ಪ್ರಯುಕ್ತ(ಐಜಿ ಸ್ವಾಮಿಗಳು)
ಶ್ರೀ ವ್ಯಾಸತತ್ವಜ್ಞ ಗುರುಗಳ ಬಳಿ ಅನೇಕ ಜನ ಪಂಡಿತ ಶಿಷ್ಯರು ಇದ್ದರು.
ಅವರಲ್ಲಿ ಕಲ್ಲೂರ ಭೀಮಾಚಾರ್ಯರೆಂಬುವರು ಒಬ್ಬರು.
ಒಂದು ದಿನ ಗುರುಗಳ ಬಳಿಬಂದು ಮಂತ್ರಾಲಯ ಮಹಾಪ್ರಭುಗಳ ಸಂದರ್ಶನಕ್ಕೆ ಹೋಗಲು ಗುರುಗಳ ಅಪ್ಪಣೆ ಕೇಳುತ್ತಾರೆ. ಆದರೆ ಐಜಿ ಸ್ವಾಮಿಗಳು ಅಪ್ಪಣೆ ಕೊಡಲಿಲ್ಲ. ಆದರು ಕೆಲ ದಿನಗಳವರೆಗೆ ಶಿಷ್ಯನು ತಾನು ಹೋಗಲೆಬೇಕೆಂಬ ಹಟವನ್ನು ನೋಡಿ ಅನಿವಾರ್ಯವಾಗಿ ಅಪ್ಪಣೆ ಕೊಡುತ್ತಾರೆ.ಮತ್ತು .
"ಅಲ್ಲಿ ಹೋದಾಗ ಬಾಯಿ ಬಿಗಿ ಹಿಡಿ! ಎಂದು ಎಚ್ಚರಿಕೆ ಮಾತನ್ನು ಹೇಳಿ" ಕಳುಹಿಸುತ್ತಾರೆ..
ನಂತರ ಆಚಾರ್ಯರು ಮಂತ್ರಾಲಯ ಕ್ಷೇತ್ರಕ್ಕೆ ಆಗಮಿಸಿ  ತುಂಗಭದ್ರಾ ನದಿಯಲ್ಲಿ  ಸ್ನಾನಾದಿಗಳನ್ನು ಮಾಡಿ ತಮ್ಮ ನಿತ್ಯ ಆಹ್ನೀಕಗಳನ್ನು ಮುಗಿಸಿ ಕೊಂಡು ಬಂದು ರಾಯರ ದರುಶನಕ್ಕೆ ಬರುತ್ತಾರೆ.ಬಂದು ಗುರುಗಳ ದರುಶನ ಮಾಡಿ ಪ್ರದಕ್ಷಿಣೆ ನಮಸ್ಕಾರ ಮಾಡುತ್ತಾರೆ.
ಆ ಸಮಯದಲ್ಲಿ ಒಬ್ಬ ಭಕ್ತ ಶ್ರೇಷ್ಠರು ಗುರುಗಳ ಸನ್ನಿಧಿಯಲ್ಲಿ ಸುಧಾ ಪಾರಾಯಣ ಮಾಡುತ್ತಾ ಕುಳಿತಿದ್ದರು.ಆಕಸ್ಮಿಕವಾಗಿ ಅವರ ಬಾಯಿಯಿಂದ ಒಂದು ಅಪಶಬ್ದ ಹೊರಟಿತು..
ಇದನ್ನು ಕಂಡು,ಕೇಳಿದ ಭೀಮಾಚಾರ್ಯರು ಸಹನೆ ಮಾಡದೆ ತಮ್ಮ ಗುರುಗಳ ಮಾತನ್ನು ನೆನಪಿಗೆ ತಾರದೆ
"ಏನಿದು?? ಅಪಶಬ್ದ ನುಡಿದಿರಿ!! ಎಂದು ಅವರಿಗೆ ಗದರಿಸಿದರು...
ತಕ್ಷಣ ಆ ಬ್ರಾಹ್ಮಣನ ಮನಸ್ಸು ಬಹು ನೊಂದುಕೊಂಡಿತು.
"ಹೀಗೆ ಭೀಮಾಚಾರ್ಯರು  ಪರಮ ಭಾಗವತರಾದ ಆ ಬ್ರಾಹ್ಮಣನ ಮನಸ್ಸು ನೋಯಿಸಿದ ಪರಿಣಾಮ  ದೋಷ ಸಂಪಾದನೆ ಮಾಡಿಕೊಂಡರು.ಇದು ಅವರಿಗೆ ತಿಳಿಯಲಿಲ್ಲ".
ನಂತರ ತೀರ್ಥ ಪ್ರಸಾದ ಸ್ವೀಕರಿಸಿ,  ಊರಿಗೆ ಹಿಂತಿರುಗಿ ಗುರುಗಳ ಬಳಿ ಬಂದು ನಮಸ್ಕರಿಸಿ ದಾಗ 
ತ್ರಿಕಾಲ ಜ್ಞಾನಿಗಳಾದ ಶ್ರೀ ವ್ಯಾಸತತ್ವಜ್ಞರು ಭೀಮಾಚಾರ್ಯರಿಗೆ ಹೇಳುತ್ತಾರೆ.
"ನಿನಗೆ ಬಾಯಿಯನ್ನು ಬಿಗಿಹಿಡಿ ಎಂದು ಹೇಳಿದ್ದು ಇದೇ ಕಾರಣಕ್ಕಾಗಿ. ಆದರೇನು ಮಾಡುವದು.?? 
ಬ್ರಾಹ್ಮಣ ನಿಂದನೆ ಮಾಡಿ ಬ್ರಹ್ಮ ಹತ್ಯಾದೋಷ ಕಟ್ಟಿ ಕೊಂಡು ಬಂದಿ.ನಿನ್ನ ಪ್ರಾರಬ್ಧ ಅನುಸಾರವಾಗಿ ನಿನ್ನ ಆಯುಷ್ಯ ಹರಣವಾಗಿದೆ.ಊರಿಗೆ ಹೋಗಿ ಬಾ" ಎಂದು ಹೇಳಿ ಮಂತ್ರಾಕ್ಷತೆ ಕೊಟ್ಟು ಕಳುಹಿಸಿದರು.
ಊರಿಗೆ ಬಂದ  ಸ್ವಲ್ಪ ದಿನದಲ್ಲಿ ಅವರು ಕಾಯಿಲೆ ಇಂದ ಮೃತರಾದರು.
"ಪಂಡಿತ ಶ್ರೇಷ್ಠರು,ಭಗವದ್ಭಕ್ತರಾದ ಬ್ರಾಹ್ಮಣನ ಮನಸ್ಸು ನೋಯಿಸಿ,ಅವರ ಮನೋವ್ಯಥೆಗೆ ಕಾರಣರಾದ ದೋಷದಿಂದ ಬ್ರಹ್ಮ ರಾಕ್ಷಸ ಜನ್ಮ ಅವರಿಗೆ ಬಂದಿತು."..
ಎಲ್ಲಾ ಕಡೆ ಸಂಚಾರ ಮಾಡಿ ಕೊನೆಯಲ್ಲಿ ವೇಣಿ ಸೋಮಾಪುರಕ್ಕೆ ಬಂದು ಅಲ್ಲಿ ನದಿಯ ತೀರದಲ್ಲಿ ಇದ್ದ ಒಂದು ಅರಳಿ ವೃಕ್ಷ ದಲ್ಲಿ ವಾಸ ವಾಯಿತು. ನಿತ್ಯ ತನ್ನ ಪ್ರಾರಬ್ಧ ಕರ್ಮವನ್ನು ತನಗೆ ಒದಗಿದ ರಾಕ್ಷಸ ಜನ್ಮವನ್ನು ನೆನೆದು ನಿತ್ಯ ಅಳುತ್ತಾ ಇತ್ತು.
ಒಂದು ದಿನ ಅದೇ ದಾರಿಯಲ್ಲಿ ಶ್ರೀ ಗೋಪಾಲ ದಾಸರ ತಮ್ಮಂದಿರಾದ ದಾಸಪ್ಪ ದಾಸರು ಅಲ್ಲಿ ಹೋಗುತ್ತಾ ಇದ್ದರು...ಅವರನ್ನು ಕಂಡು ಅವರಿಗೆ ಮೊರೆ ಇಟ್ಟಿತು.ಹೇಗಾದರೂ ಈ ಜನ್ಮವನ್ನು ಕಳೆಯಿರಿ ಎಂದು.
ಪರಮ ಕರುಣಿಗಳಾದ ದಾಸಪ್ಪ ದಾಸರು ಅವರಿಗೆ ಬಂದ ಪರಿಸ್ಥಿತಿ ನೋಡಿ 
"ನಾಳೆ ಶ್ರೀಗಳು ಈ ದಾರಿಯಲ್ಲಿ ಬರುವಾಗ ಅವರಲ್ಲಿ ಮೊರೆ ಹೋಗು ಎಂದು ಹೇಳುತ್ತಾರೆ."
ಅವಾಗ್ಗೆ ಬ್ರಹ್ಮ ರಾಕ್ಷಸ ಯೋಚಿಸಿ
"ಗುರುಗಳು ಎಂದರೆ ಮೊದಲೇ ಹೆದರಿಕೆ... 
ಅವರ ಮಾತನ್ನು ಮೀರಿದ ಪರಿಣಾಮವಾಗಿ ,ನಡೆದ ಘಟನೆ ಇಂದ ಈ ಜನ್ಮ ಬಂದಿದೆ...
ಆದರು ದಾಸರ ಮಾತಿನಲ್ಲಿ ವಿಶ್ವಾಸವನ್ನು ಇರಿಸಿ ಗುರುಗಳ ಸಂಚಾರ ಅಲ್ಲಿ ಬಂದಾಗ ಅವರ ಮುಂದೆ ಹೋಗಿ ನಿಂತು ಬಹಳ ಆರ್ತನಾಗಿ ದೀನತೆಇಂದ ಪ್ರಾರ್ಥನೆ ಮಾಡಿಕೊಳ್ಳುತ್ತದೆ.
ತಕ್ಷಣ 
ಗುರುಗಳು ದಾಸಪ್ಪ ದಾಸರ ಕಡೆ ನೋಡಿ "ಇದೆಲ್ಲಾ! ನಿಮ್ಮ ಸೂಚನೆಯೆ!! ಎಂದು ಕೇಳುವರು.
ಅವಾಗ್ಗೆ ದಾಸರು ಸಹ ಆ ಬ್ರಾಹ್ಮಣನ ಪರವಾಗಿ ರಾಕ್ಷಸ ಜನ್ಮ ನಿವಾರಿಸಲು ಗುರುಗಳ ಬಳಿ ತಾವು ಪ್ರಾರ್ಥನೆ ಮಾಡಿಕೊಳ್ಳುವರು..
ನಂತರ 
"ಶ್ರೀಗಳು ಸ್ನಾನ ಮಾಡಿ ತಮ್ಮ ತಪೋಶಕ್ತಿ ಇಂದ  ಆ ಬ್ರಹ್ಮ ರಾಕ್ಷಸನ ಮೇಲೆ ಮಂತ್ರೋದಕ ಪ್ರೋಕ್ಷಣೆ ಮಾಡಿದಾಗ ತಕ್ಷಣವೆ ಆ ಬ್ರಹ್ಮ ರಾಕ್ಷಸ ದೇಹ ಸುಟ್ಟು ಬೂದಿಯಾಗಿ ಆ ಕೆಟ್ಟ ಜನ್ಮದಿಂದ ಅವರಿಗೆ ನಿವೃತ್ತಿ ಯಾಯಿತು"...
ನಂತರ ಮುಂದೆ ಜನ್ಮಾಂತರದಲ್ಲಿ ಉತ್ತಮ ಸಾಧನೆಯನ್ನು ಆ ಜೀವಿ ಮಾಡಿಕೊಂಡಿತು ‌.
ಇದನ್ನು ಕಂಡು ದಾಸಪ್ಪ ದಾಸರು ಶ್ರೀವ್ಯಾಸತತ್ವಜ್ಞ ಗುರುಗಳನ್ನು ಬಹು ವಿಧವಾಗಿ ಹೊಗಳಿ ಸ್ತೋತ್ರ ಮಾಡುತ್ತಾರೆ.
ಹೀಗೆ ಭಗವಂತನು ತನ್ನ ಭಕ್ತರಲ್ಲಿ ನಿಂತು  ಲೋಕದಲ್ಲಿ ಅವರಿಗೆ ಪ್ರಸಿದ್ಧಿ ಮಾಡಲು ಈ ತರಹದ ಕಾರ್ಯಗಳನ್ನು ಮಾಡುತ್ತಾನೆ...
ಭಗವಂತನ ಭಕ್ತರಲ್ಲಿ ಭಕ್ತಿಯನ್ನು ಮಾಡಿ ಅವರನ್ನು ಹೊಗಳುವದೇ ನಮ್ಮ ಮುಂದಿನ ಸಾಧನಕ್ಕೆ ಒಂದು ಮೆಟ್ಟಿಲು ಆಗಬಹುದು...
 ಕಲಿಗಾಲದಲ್ಲಿ ಇಂತಹ ದೊಡ್ಡವರ ಜ್ಞಾನಿಗಳ ಚರಿತ್ರೆ ರೂಪದಲ್ಲಿ ಇರುವ ಮಹಾತ್ಮೆ ಕೇಳುವದು, ಓದುವುದು ಸಹ ನಮ್ಮ ಭಾಗ್ಯ...
ಐಜಿ ಸ್ವಾಮಿ ಗಳ ಅಂತರ್ಯಾಮಿಯಾದ ಶ್ರೀ ವಾಸುದೇವ ವಿಠ್ಠಲ ಪ್ರೀತನಾಗಲಿ....
🙏ಶ್ರೀ ಕೃಷ್ಣಾರ್ಪಣಮಸ್ತು🙏..
ಅಪಮೃತ್ಯು ಅಪರಿಮಿತದ ಪಾಪಗಳೆಲ್ಲ|
ಅಪರೋಕ್ಷ ಜ್ಞಾನಿಯು ಕೃಪೆ ಮಾಡೆ ಪೋಪವು|
ಇವರ ಬಿಟ್ಟವ ಕೆಟ್ಟ|
ಇವರಲ್ಲಿ ಇದ್ದವ ಗೆದ್ದ|
🙏ಶ್ರೀ ಕೃಷ್ಣಾಯ ನಮಃ🙏
****
ಶ್ರೀ ವ್ಯಾಸತತ್ವಜ್ಞ ತೀರ್ಥ ಗುರುಭ್ಯೋ ನಮಃ
ಪ್ರಕಟೀಕೃತಟೀಕೋಕ್ತಿರ್ಮರ್ಕಟೀಕೃತಮಾಯಿರಾಟ್|
ಚಕೃತಾವ್ಯಾಸತತ್ವಜ್ಞಮಸ್ಕರೀಂದ್ರಕೃಪಾಮಯಿ||
ಪೂರ್ವಾಶ್ರಮ ನಾಮ -
 ಐಜಿ ವೆಂಕಟರಾಮಾಚಾರ್ಯರು . 
 ಗುರುಗಳು -
ಶ್ರೀ ತ್ರೈಲೋಕ್ಯ ಗುರು ಶ್ರೀಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನ ಶ್ರೀ ರಾಘವೇಂದ್ರತೀರ್ಥ ಮಠದ ಶ್ರೀ ಭುವನೇಂದ್ರ ತೀರ್ಥರು
ಶಿಷ್ಯರು -
ಶ್ರೀ ಜಯತೀರ್ಥಚಾರ್ಯರೇ( ಇವರೇ ಮುಂದೆ ಶ್ರೀ ವಿಷ್ಣುತೀರ್ಥರೆಂದು ಖ್ಯಾತರಾಗಿ , ಮಾದಿನೂರಿನಲ್ಲಿ ನೆಲೆಸಿರುವರು. ) ಮೊದಲಾದ ೩೦೦ ಕ್ಕೂ ಹೆಚ್ಚು ಜನ ಶಿಷ್ಯರು.
ಗ್ರಂಥಗಳು -
* ಮಾನಸಸ್ಮ್ರುತಿ ( ಉಪಾಸನಾಭಾಗ )
* ಸಪ್ತಮಸ್ಕಂದ ಭಾಗವತಕ್ಕೆ ಮಂದನಂದಿನಿ  ಎಂಬ ವ್ಯಾಖ್ಯಾನ  
*  ಗಾಯತ್ರಿ ಸಾರ ಸಂಗ್ರಹ
* ಶ್ರೀಮನ್ಯಾಯಸುಧಾ ವ್ಯಾಖ್ಯಾನ 
* ಉಭಯಾನೌಚಿತಿ
* ಸುಧಾದ್ಯುಕ್ತಿರಹಸ್ಯ
* ನ್ಯಾಯಮೃತ ಮಕ್ಷಿಕಾವ್ಯಜನ
* ತಾತ್ಪರ್ಯಚಂದ್ರಿಕಾ ಶರದಾಗಮ
*ಅದ್ವೈತ ಕುಟ್ಟನ
* ನ್ಯಾಯದಮನ
* ಕುಲಿಶ
*ಶ್ರೀಮದ್ಬಿಷ್ಣುತತ್ವನಿರ್ಣಯಕ್ಕೆ "ಲಘುಪ್ರಭಾ" ಮತ್ತು " ಗುರುಪ್ರಭಾ" ಎಂಬ ಎರಡು ವ್ಯಾಖ್ಯಾನಗಳು.
*  ಯತಿಪ್ರಣವಕಲ್ಪ ವ್ಯಾಖ್ಯಾನ

ವೃಂದಾವನ ಸ್ಥಳ _ ಮಂತ್ರಾಲಯದ ಹತ್ತಿರದಲ್ಲೆ ಇದೆ . ಗದ್ವಾಲಿ ಪ್ರಾಂತ್ಯದ , ಅಯಿಜ ( ಐಜಿ ) ಪಟ್ಟಣದಿಂದ ಸ್ವಲ್ಪವೇ ದೂರದಲ್ಲಿರುವ ವೇಣಿಸೋಮಪುರ  ಗ್ರಾಮ.

 ವಿಶೇಷತೆಗಳು -
* ಮಧ್ವ ವಾಂಗ್ಮಯದಲ್ಲೇ ಶ್ರೇಷ್ಠ ವ್ಯಾಖ್ಯಾನಕಾರರ ಸಾಲಿನಲ್ಲಿ ನಿಲ್ಲುವವರು.
* ಶ್ರೀ ವಿಷ್ಣುತೀರ್ಥರಂತಹ ಮಹಾಮತಿಗಳನ್ನೂ ಕೊಟ್ಟಿದ್ದು. ಅಲ್ಲದೆ ೩೦೦ ಕ್ಕೂ ಹೆಹ್ಚು ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿ , ತಿರುಪತಿಯಲ್ಲಿ ಅನೇಕ ಬಾರೆ ಶ್ರೀಮನ್ಯಾಯಸುಧಾ ಮಂಗಳ ಮಾಡಿದ್ದು.
* ವ್ಯಾಸಸಾಹಿತ್ಯದಲ್ಲಿ ಅನೇಕ ಗ್ರಂಥಗಳನ್ನು ಕೊಟ್ಟದ್ದಲ್ಲದೆ , ಶ್ರೀ ಗೋಪಾಲದಾಸರಿಂದ ಅಂಕಿತ ಹಾಕಿಸಿಕೊಂಡು 'ವಾಸುದೇವವಿಠಲ" ಎಂಬ ಅಂಕಿತದಿಂದ ಹರಿದಾಸ ಕೀರ್ತನೆಗಳನ್ನೂ ರಚನೆ ಮಾಡಿ ಹರಿದಾಸಧುರೀಣರೆನಿಸಿಕೊಂಡದ್ದು. 
*  ವಿದ್ವದ್ಗದ್ವಾಲ್ ಎಂದೇ ಖ್ಯಾತವಾದ ಗದ್ವಾಲಿಯಾ ಅರಸನಿಗೆ ರಾಜಗುರುಗಳಾಗಿ ಇದ್ದದ್ದು. ಅನೇಕ ವಾದಿಗಳನ್ನು ಜಯಿಸಿದ್ದು.
* ಶ್ರೀಸುಧಾಪಾಠ ನಿರತರಾಗಿದ್ದಾಗ ರಾಜನ ಆಸ್ಥಾನಕ್ಕೆ ಬಂದಿದ್ದ ದುರ್ವಾದಿಯನ್ನು ಅಡುಗೆಯವನಿಗೆ ಅನುಗ್ರಹಿಸಿ ಅವನು ಆ ವಾದಿಯನ್ನು ಗೆಲ್ಲುವಂತೆ ಮಾಡಿಸಿದ್ದು.
* ಶ್ರೀವಿಷ್ಣುತೀರ್ಥರಿಗೆ ಅನೇಕ ಜನರು ಶಿಷ್ಯರು ದೊರಕುವಂತೆ ಮಾಡಿ ಅನುಗ್ರಹಿಸಿದ್ದು.

ಪವಾಡಗಳು-
* ಶ್ರೀ ಮಂತ್ರಾಲಯ ಮಠದ ಶ್ರೀ ಭುವನೇಂದ್ರ ತೀರ್ಥರಿಂದ ಸನ್ಯಾಸ ಪಡೆದು ಶ್ರೀ ವ್ಯಾಸತತ್ವಜ್ಞ ತೀರ್ಥರಾದದ್ದು. 
* ನೀರಿನವನಿಂದ ಶಾಸ್ತ್ರ ಹೇಳಿಸಿದ್ದು
* ಮುದುಮಾಲಿ ದೇಸಾಯಿಯ ಉದರ ಶೋಲೆ ಪರಿಹರಿಸಿದ್ದು
* ತಿರುಪತಿಯಲ್ಲಿ ರಥ ಎಳೆಯುವಾಗ ತೋರಿದ ಮಹಾ ಮಹಿಮೆ
* ತಮ್ಮ ಪಾದುಕೆಗಳನ್ನು ಸೇವಿಸಿದ ವಿಷ್ಣುತೀರ್ಥರಿಗೆ ಭವಿಷ್ಯದಲ್ಲಿ ಒಳಿತಾಗುವಂತೆ ಅನುಗ್ರಹಿಸಿದ್ದು.
*  ತಮ್ಮ ಮಠದ ಬಳಿ ನದ್ಯಭಿಮಾನಿ ದೇವತೆಯನ್ನು ಪ್ರಾರ್ಥಿಸಿ , ದಂಡದಿಂದ ಗೆರೆ ಹಾಕಿ ತುಂಗಬಧ್ರೆಯನ್ನೆ ತಮ್ಮ ಬಳಿ ಕರೆಸಿಕೊಂಡಿದ್ದು . 
* ಆರಣಿ ಸಂಸ್ಥಾನದಲ್ಲಿ ತಮ್ಮ ನಾಲ್ಕು ಜನ ಶಿಷ್ಯರನ್ನು ಗೆಲ್ಲುವಂತೆ ಮಾಡಿದ್ದು.
* ಬ್ರಹ್ಮರಾಕ್ಷಸನಿಗೆ ಜನ್ಮ ನಿವಾರಣ ಮಾಡಿದ್ದು.
* ಗದ್ವಾಲ್ ರಾಜನ ಆಪತ್ತು ಪರಿಹರಿಸಿದ್ದು.
* ಐಜಿ ಹಳ್ಳವನ್ನು ಗರುಡಾ ನದಿಯನ್ನಾಗಿಸಿದ್ದು 
* ಹಂಪೆಯಲ್ಲಿ ವಿರೂಪಾಕ್ಷನ ರಥಕ್ಕೆ ಹತ್ತಿದ ಬೆಂಕಿಯನ್ನು ವೇಣಿಸೋಮಪುರ ದಿಂದಲೇ ನಂದಿಸಿದ್ದು.
* ಗೋವುಗಳಸಹಿತನಾದ ಶ್ರೀ ಕೃಷ್ಣ ಪರಮಾತ್ಮನ ದರ್ಶಿಸಿದ್ದು.
* ಪೂನ ನಗರದ ವಿದ್ವತ್ಸಭೆಯಲ್ಲಿ ವಾದಿಗಳನ್ನು ಜಯಿಸಿದ್ದು.
* ಮಾರಿಕ ಉಪದ್ರವ ಪರಿಹರಿಸಿದ್ದು.
* ಶ್ರೀಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧಿಪತಿ ಶ್ರೀ ವಿಬುಧೇಂದ್ರ ತೀರ್ಥರಿಗೆ ಒಲಿದು ಬಂದ ಶ್ರೀ ನರಸಿಂಹದೇವರನ್ನು ಅರ್ಚಿಸಿದ್ದು.
* ವರ ರೌದ್ರಿನಾಮಸಂವತ್ಸರ ಶ್ರಾವಣ , ಪರಪಕ್ಷ  ಅಷ್ಟಮಿ  ಭೌಮವಾರ , ಭರಣೀ ನಕ್ಷತ್ರ ಪ್ರಾತಃ ಕಾಲದಲ್ಲಿ ಹರಿಧ್ಯಾನ ತತ್ಪರರಾದರು. 
* ಇಂದಿಗೂ ನೆನೆದ ಭಕ್ತರನ್ನು , ಶ್ರೀ ಮಂತ್ರಾಲಯ ಪ್ರಭುಗಳಂತೆ ಜ್ಞಾನ , ಭಕ್ತಿ , ವೈರಾಗ್ಯಾದಿ ಗಳನ್ನೂ ಕೊಟ್ಟು ಅನುಗ್ರಹಿಸುತ್ತಿರುವ ಮಹಾ ಮಹಿಮರು.
***
 

year 2021
ಆಮಂತ್ರಣ "
" ಶ್ರೀ ಅಗ್ನಿದೇವರ ಅಂಶ ಸಂಭೂತರಾದ ಶ್ರೀ ವ್ಯಾಸತತ್ತ್ವಜ್ಞತೀರ್ಥರ ಆರಾಧನಾ ಮಹೋತ್ಸವ., ವೇಣೀಸೋಮಪುರ "
ಶ್ರೀ ಲಕ್ಷ್ಮೀ ನೃಸಿಂಹಸ್ಯ 
ಶ್ರಿಯಂ ದಿಶತು ಮೇ ಸದಾ ।
ಸ್ವಭಕ್ತಾಭೀಷ್ಟದಾನಾಯ 
ಸಮುಪಾತ್ತ ದಶಾಕೃತೇ: ।।
ವಸ್ತು ಸ್ತುತಂ ಸುರಸ್ತೋಮೈ-
ರಸ್ತುಶಸ್ತಂ ಮಯಾ ಸ್ತುತಂ ।
ಮಸ್ತುಹಸ್ತ೦ ಪ್ರಸ್ತುತಾಯ 
ಶ್ರುತಿಮಸ್ತಕವಿಶ್ರುತಮ್ ।।
ಶ್ರೀಮದಾನಂದತೀರ್ಥೇ೦ದು 
ಭಾಸನಂ ಮಮ ಮಾನಸೇ ।
ಆಶಾಸೇ ಸಾಧು ಶಬ್ದಾರ್ಥ
ಸರದೀಶಾಭಿವೃದ್ಧಯೇ ।।
ಶ್ರೀಮತೋರಾಘವೇಂದ್ರಸ್ಯ 
ನಮಾಮಿ ಪದಪಂಕಜೇ ।
ಕಾಮಿತಾಶೇಷ ಕಲ್ಯಾಣ 
ಕಲನಾಕಲ್ಪಪಾದಪೌ ।।
ಪ್ರಕಟೀಕೃತಟೀಕೋಕ್ತಿ: 
ಮರ್ಕಟೀಕೃತಮಾಯಿರಾಟ್ ।
ಚರ್ಕೃತಾದ್ವ್ಯಾಸತತ್ತ್ವಜ್ಞ-
ಮಸ್ಕರೀಂದ್ರ: ಕೃಪಾಮಯಿ ।।
ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಚಿನ್ನವಾಗಿ ನಡೆದು ಬಂದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧೀಶ್ವರರಾದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಪ್ರಸ್ತುತ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆಜ್ಞಾನುಸಾರ...
" ದಿನಾಂಕ : 30.08.2021  ಸೋಮವಾರ [ ಶ್ರೀ ಕೃಷ್ಣಾಷ್ಟಮೀ - ಶ್ರೀ ವ್ಯಾಸತತ್ತ್ವಜ್ಞತೀರ್ಥರು ವೃಂದಾವನ ಪ್ರವೇಶ ಮಾಡಿದ ದಿನ ] 31.08.2021 ಮಂಗಳವಾರ - 
ಶ್ರೀ ಪ್ಲವ ನಾಮ ಸಂವತ್ಸರ ದಕ್ಷಿಣಾಯನ ವರ್ಷ ಋತು ಶ್ರಾವಣ ಕೃಷ್ಣ ಅಷ್ಟಮೀ [ ಶ್ರೀ ಕೃಷ್ಣ ಜನ್ಮಾಷ್ಟಮೀ ] / ನವಮೀ  - ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಭುವನೇಂದ್ರ ತೀರ್ಥರ ವರ ಪುತ್ರಕರಾದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವ್ಯಾಸತತ್ತ್ವಜ್ಞ ತೀರ್ಥರ ಆರಾಧನಾ ಮಹೋತ್ಸವ "
" ಆಚಾರ್ಯ ನಾಗರಾಜು ಹಾವೇರಿ ಕಣ್ಣಲ್ಲಿ ಶ್ರೀ ವ್ಯಾಸತತ್ತ್ವಜ್ಞತೀರ್ಥರು "
" ವಾಸುದೇವ ವಿಠ್ಠಲ " ಅಂಕಿತದಲ್ಲಿ ಕೀರ್ತನೆ ಗಳನ್ನು ರಚಿಸಿದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಅಗ್ನಿದೇವರ ಅಂಶ ಸಂಭೂತರಾದ ಶ್ರೀ ವ್ಯಾಸತತ್ತ್ವಜ್ಞತೀರ್ಥರ ಪೂರ್ವಾಶ್ರಮದ ಹೆಸರು - ಶ್ರೀ ವೇಂಕಟರಾಮಾಚಾರ್ಯರು!
ತಂದೆ : ಶ್ರೀ ವೇಂಕಟನರಸಿಂಹಾಚಾರ್ಯರು  
ತಾಯಿ : ಸಾಧ್ವೀ ಲಕ್ಷ್ಮೀದೇವಿ
ಜನ್ಮಸ್ಥಳ : ಅಯಿಜ [ ಗದ್ವಾಲ್ ತಾಲೂಕ - ಕರ್ನೂಲು ಜಿಲ್ಲೆ ]
ದ್ವೈತ ಶಾಸ್ತ್ರ ವಿದ್ವತ್ ತುಂಬಿದ ಮನೆಯಲ್ಲಿ ಜನಿಸಿದರೂ - 30 ವರ್ಷಗಳ ವರೆಗೆ ಅವಿದ್ಯಾವಂತರಾಗಿ - ಯಾವ ವಿಷಯದಲ್ಲೂ ಆಸಕ್ತಿಯಿಲ್ಲದೆ ಮುಗ್ಧರಂತಿದ್ದರು.
ಮಗನ ರೀತಿ ಮದುವೆಯಾಗಿ ಮಕ್ಕಳಾದಾಗಲೂ ಬದಲಾಗದೆ ಇರುವಾಗ ಆತಂಕ ಪಟ್ಟ ಶ್ರೀ ವೇಂಕಟ ನರಸಿಂಹಾಚಾರ್ಯರು ಸಾಧ್ವೀ ಲಕ್ಷ್ಮೀದೇವಿಮ್ಮ ಅವರ ಮಾತಿಗೆ ಓಗೊಟ್ಟು - ಉತ್ತನೂರಿನಲ್ಲಿದ್ದ ಶ್ರೀ ಗಣೇಶಾಂಶ ಗೋಪಾಲದಾಸರ ಹತ್ತಿರ ಬಂದು ಶ್ರೀ ವೇಂಕಟರಾಮಾಚಾರ್ಯರ ಮುಂದಿನ ಭವಿಷ್ಯ ಹೇಗಿದೆ ಎಂದು ವಿಚಾರಿಸಿದರು.
ಆಗ ಶ್ರೀ ಗೋಪಾಲದಾಸರು.....
ಆಚಾರ್ಯರನ್ನು ಮುಂದೆ ಕೂಡಿಸಿಕೊಂಡು  - ಸರ್ವಮೂಲ ಪಾರಾಯಣ ಮಾಡಿ - ಶ್ರವಣ ಮಾತ್ರದಿಂದ ಅವರು ಜಗತ್ಪ್ರಸಿದ್ಧ ಪಂಡಿತರಾಗುತ್ತಾರೆ ಎಂದು ನುಡಿದರು.
ಮರುದಿನದಿಂದ ಶ್ರೀ ವೆಂಕಟ ನರಸಿಂಹಾಚಾರ್ಯರು ಮಗನಿಗೆ ಕೇಳಿಸುವಂತೆ " ಸರ್ವಮೂಲ ಪಾರಾಯಣ " ಮಾಡಲು ಪ್ರಾರಂಭಿಸಿದರು - ಸರ್ವಮೂಲ ಶ್ರವಣದಿಂದ ಕೆಲವೇ ದಿನಗಳಲ್ಲಿ ಅಪ್ರತಿಮ ಪಂಡಿತರಾದರು.
" ಶ್ರೀ ರಾಯರ ಅಂತರಂಗ ಭಕ್ತರು "
ಶ್ರೀ ವೆಂಕಟ ರಾಮಾಚಾರ್ಯರು ಶ್ರೀ ರಾಯರ ಅಂತರಂಗ ಭಕ್ತರು - ಶ್ರೀ ರಾಯರು ರಾಮಾಚಾರ್ಯ ಎಂದ ಕೂಡಲೇ - ಶ್ರೀ ಆಚಾರ್ಯರು ಶ್ರೀ ರಾಯರ ಮೂಲ ವೃಂದಾವನದ ಮುಂದೆ ಇರುತ್ತದ್ದರು - ಹಾಗೆಯೇ ಶ್ರೀ ರಾಯರೂ ಅಷ್ಟೇ ಶ್ರೀ ಆಚಾರ್ಯರು ಸ್ಮರಣೆ ಮಾಡಿದ ಕೂಡಲೇ ಪ್ರತ್ಯಕ್ಷ ದರ್ಶನ ಕೊಡುತ್ತಿದ್ದರು.
ಶ್ರೀ ರಾಯರ ಮಠದ ಶ್ರೀ ಭುವನೇಂದ್ರ ತೀರ್ಥರಿಂದ ತುರ್ಯಾಶ್ರಮ ಸ್ವೀಕಾರ ಮಾಡಿ - " ಶ್ರೀ ವ್ಯಾಸತತ್ತ್ವಜ್ಞ ತೀರ್ಥ " ಎಂಬ ಹೆಸರಿನೊಂದಿಗೆ ದ್ವೈತ ವೇದಾಂತ ದಿಗ್ವಿಜಯ ವಿದ್ಯಾ ಸಿಂಹಾಸನದಲ್ಲಿ ಕೂಡಿಸಿ ಶ್ರೀ ಭುವನೇಂದ್ರ ತೀರ್ಥರು { ಇಂದ್ರಾ೦ಶರು ] ತಮ್ಮ ಅಮೃತ ಹಸ್ತಗಳಿಂದಿಂದ ಪಟ್ಟಾಭಿಷೇಕ " ಮಾಡಿದರು.
ಶ್ರೀ ವ್ಯಾಸತತ್ತ್ವಜ್ಞತೀರ್ಥರ ಕಾರ್ಯಕ್ಷೇತ್ರ - ವೇಣೀಸೋಮಪುರ
ವಿದ್ಯಾ ಶಿಷ್ಯರು :
1. ಶ್ರೀ ಮಾದನೂರು ವಿಷ್ಣುತೀರ್ಥರು
2. ಶ್ರೀ ಉತ್ತರಾದಿ ಮಠದ ಶ್ರೀ ಸತ್ಯಪ್ರಿಯತೀರ್ಥರ ಪೂರ್ವಾಶ್ರಮ ಪುತ್ರರಾದ ಮಹಾಭಾಷ್ಯ೦ ಶ್ರೀನಿವಾಸಾಚಾರ್ಯರು
3. ಶ್ರೀ ವಾಮನ ಪ್ಯಾಟಿ ಕಣೀಕಲ್ಲೂರು
ಮೊದಲಾದ ಶಿಷ್ಯರ ಜೊತೆಯಲ್ಲಿ ಸುಮಾರು 300 ಕ್ಕೂ ಅಧಿಕ ಶ್ರೇಷ್ಠ ಪಂಡಿತರುಗಳನ್ನು ತಯಾರು ಮಾಡಿದ ಕೀರ್ತಿ ಶ್ರೀ ವ್ಯಾಸತತ್ತ್ವಜ್ಞತೀರ್ಥರದ್ದು.
" ಗಜಗಹ್ವರದ  ಶ್ರೀ ಜಯತೀರ್ಥರ ಮೂಲ ವೃಂದಾವನ ಸನ್ನಿಧಿಯಲ್ಲಿ ಶ್ರೀ ವ್ಯಾಸತತ್ತ್ವಜ್ಞತೀರ್ಥರಿಂದ ಶ್ರೀಮನ್ನ್ಯಾಯಸುಧಾ - ಚಂದ್ರಿಕಾ - ನ್ಯಾಯಾಮೃತ ಮಂಗಲ ಮಹೋತ್ಸವ  "
ಕ್ರಿ ಶ 1790 ರಲ್ಲಿ ಶ್ರೀ ವ್ಯಾಸತತ್ತ್ವಜ್ಞತೀರ್ಥರು ತಮ್ಮ ಗುರುಗಳಾದ ಶ್ರೀ ಭುವನೇಂದ್ರತೀರ್ಥರ ಜೊತೆಯಲ್ಲಿ ಶ್ರೀ ಕ್ಷೇತ್ರ ನವ ವೃಂದಾವನ ಗಡ್ಡೆಗೆ ದಿಗ್ವಿಜಯ ಮಾಡಿ - ಶ್ರೀ ಜಯತೀರ್ಥರ ಆರಾಧನಾ ಮಹೋತ್ಸವವನ್ನು ಅತ್ಯಂತ ವೈಭವದಿಂದ ನೆರವೇರಿಸಿ...
ಶ್ರೀಮನ್ನ್ಯಾಯಸುಧಾ ಪರಿಮಳದೊಂದಿಗೆ - ಶ್ರೀ ವ್ಯಾಸರಾಜರ ಚಂದ್ರಿಕಾ ಗ್ರಂಥವನ್ನು ಚಂದ್ರಿಕಾಪ್ರಕಾಶದೊಂದಿಗೆ, ತರ್ಕತಾಂಡವ - ನ್ಯಾಯಾಮೃತ ಗ್ರಂಥಗಳ ಮಂಗಳ ಮಹೋತ್ಸವ ನೆರವೇರಿಸಿ -
ತಮ್ಮಿಂದ ರಚಿತವಾದ " ಲಘು ಮತ್ತು ಗುರು ರಸರಂಜನೀ - ಕುಲಿಶ [ ಶ್ರೀಮನ್ನ್ಯಾಯಸುಧಾಕ್ಕೆ ಟಿಪ್ಪಣಿ ] - ಶಾರದಾಗಮ ಮತ್ತು ಶಾರದೇಂದು [ ತಾತ್ಪರ್ಯಚಂದ್ರಿಕಾಕ್ಕೆ ] - ನ್ಯಾಯಾಮೃತಕ್ಕೆ - ವ್ಯಜನ " ಶ್ರೀ ಜಯತೀರ್ಥರ ಮೂಲ ವೃಂದಾವನ ಸನ್ನಿಧಾನದಲ್ಲಿ ಸಮರ್ಪಿಸಿದ ಪೂತಾತ್ಮರು ನಮ್ಮ ಶ್ರೀ ವ್ಯಾಸತತ್ತ್ವಜ್ಞತೀರ್ಥರು.
ಶ್ರೀ ವ್ಯಾಸತತ್ತ್ವಜ್ಞತೀರ್ಥರು ಗಜಗಹ್ವರದಲ್ಲಿ ಸ್ಥಿರವಾಗಿ ನೆಲೆನಿಂತ ಶ್ರೀ ಜಯತೀರ್ಥರ ವೈಭವವನ್ನು ಅಚ್ಚ ಕನ್ನಡದಲ್ಲಿ ೩ ಹಾಡುಗಳೊಂದಿಗೆ ಸ್ತುತಿಸಿದ್ದಾರೆ.
ಇದು ಇತಿಹಾಸ ಪ್ರಸಿದ್ಧ ವಿಷಯ.
" ಉಪ ಸಂಹಾರ "
ಶ್ರೀ ವ್ಯಾಸತತ್ತ್ವಜ್ಞತೀರ್ಥರ ಜೀವನದ ತುಂಬೆಲ್ಲಾ ಮಹಿಮೆಗಳ ಸದೃಶ್ಯ ಘಟನೆಗಳು ತುಂಬಿವೆ.   
ಸ್ವಾಹಂಕಾರ ಮತ್ತು ಮಮಕಾರಗಳನ್ನು ದೂರೀಕರಿಸಿ ಶ್ರೀ ವ್ಯಾಸತತ್ತ್ವಜ್ಞತೀರ್ಥರು ನಿರ್ವಾಜ್ಯ ಭಕುತಿಯನ್ನು ಮಾತ್ರ ಬೇಡುತ್ತಾರೆ.
ಶ್ರೀ ವ್ಯಾಸತತ್ತ್ವಜ್ಞತೀರ್ಥರು ಸಂಸ್ಕೃತದಲ್ಲಿ ಉದ್ಗ್ರಂಥಗಳನ್ನು ರಚಿಸುವುದರೊಂದಿಗೆ - ಸುಮಾರು ೩೫೦ ಕ್ಕೂ ಅಧಿಕ ಪದ ಪದ್ಯಗಳನ್ನು ರಚಿಸಿ ಶ್ರೀ ವ್ಯಾಸ - ದಾಸ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ.
ಶ್ರೀ ವ್ಯಾಸತತ್ತ್ವಜ್ಞತೀರ್ಥರು ತಮ್ಮನ್ನು ನಂಬಿ ಬಂದ ಭಕ್ತರ ಪಾಲಿಗೆ ಕಲ್ಪವೃಕ್ಷವೇ ಸರಿ!
" ಆರಾಧಾನಾ ಮಹೋತ್ಸವ ನಡೆಯುವ ಸ್ಥಳ "
ಇಂಥಾ ಮಹಿಮಾನ್ವಿತರಾದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವ್ಯಾಸತತ್ತ್ವಜ್ಞತೀರ್ಥರ ಆರಾಧಾನಾ ಮಹೋತ್ಸವವನ್ನು ಅವರ ಪೂರ್ವಾಶ್ರಮ ವಂಶೀಕರು " ವಿದ್ವಾನ್ ಶ್ರೀ ವೇದವ್ಯಾಸಾಚಾರ್ಯ ಹಾವೇರಿ " ಅವರ ಮಾರ್ಗದರ್ಶನದಲ್ಲಿ....
ಇದೇ " ಶ್ರಾವಣ ಬಹುಳ ನವಮೀ ಮಂಗಳವಾರ " ವೈಭವದಿಂದ ಆಚರಿಸಲಿದ್ದಾರೆ.
ಆರಾಧನಾ ದಿನಾಂಕ : 31.08.2021 ಮಂಗಳವಾರ
ಸ್ಥಳ :
ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಮೂಲ ಮೃತ್ತಿಕಾ ವೃಂದಾವನ ಸನ್ನಿಧಾನ., 5ನೇ ಬಡಾವಣೆ., ಜಯನಗರ., ಬೆಂಗಳೂರು - 560041
ಹೆಚ್ಚಿನ ವಿವರಗಳಿಗೆ :
ವಿದ್ವಾನ್ ಶ್ರೀ ವೇದವ್ಯಾಸಾಚಾರ್ಯ ಹಾವೇರಿ - 99729 2377
ವಿದ್ವಾನ್ ಶ್ರೀ ಪ್ರಾಣೇಶಾಚಾರ್ಯ [ ಅಘಮರ್ಷಣ ] ಹಾವೇರಿ - 70199 34448 & 70266 50506
" ಸರ್ವರಿಗೂ ಆದರದ ಸ್ವಾಗತ "
***

No comments:

Post a Comment