Thursday 1 August 2019

a 00 madhwa parampara and list of madhwa matha mutts ಮಧ್ವ ಪರಂಪರೆ ಮತ್ತು ಮಧ್ವ ಮಠಗಳು


to know more--->just 
                                     👇👇CLICK BELOW
  1.  PALIMARU MUTT 
  2. ADAMARU MUTT
  3. KRISHNAPURA MUTT  
  4. PUTHIGE MUTT
  5. SHIROORU MUTT
  6. SODE MUTT
  7.  KANIYOORU MUTT
  8. PEJAVARA MUTT
  9. BHANDARAKERI MUTT
  10. SUBRAMANYA MUTT
  11. VYASARAJA MUTT
  12. RAYARA or RAGHAVENDRA SWAMY MUTT
  13. UTTARADI MUTT
  14. SRIPADARAJA MUTT
  15. KUNDAPURA VYASARAJA MUTT
  16. KUDLI MUTT
  17. BALAGARU MUTT
  18. BHIMANAKATTE MUTT
  19. MADHAVA THIRTHA MUTT
  20. KANVA MUTT
  21. SAGARAKATTE MUTT
  22. PRAYAG MUTT
  23. CHITRAPURA MUTT
  24. ODAMPALLI MUTT
  25. KASHI MUTT
  26. GOKARNA MUTT

**********


Following link (xls file) provides aradhana dates of madhwa yatigalu--->



************
Sri. Madhwacharyaru started 8 mutts and nominated his shishyas as head of mutts.  During subsequent centuries there were many subdivisions and many more mutts (18 to 20 ?) were established and are being run today independently. Hence, various mutts have different parampara.

Santarana nenesi janaru ಸಂತರನ ನೆನೆಸಿ ಜನರು 
ರಚನೆ- ಶ್ರೀ ವಿಜಯರಾಯರ ಅನುಜರಾದ ಹಯವದನ ವಿಠಲಾಂಕಿತ ಆನಂದದಾಸರು
sung by: 





Sri Sudheendra Teertha was the 29th pontiff of Puthige Mutt.  He gave Puthige Mutt Ashrama to Sri Sugunendra Teertha.   

In 1950s, Sri Sudheendra Teertha (Puthige Mutt) had also given sanyasa Sri Krishnadasa Theertha of Adiudupikere mutt.  This needs to be explored.
*********


Madhwa Parampara


  • Śrī Hamsa (A name of The Supreme Person/Supreme Godhead, Śrī Nārāyana or Śrī Hari; Paramātmā)
  • Śrī Chaturmukha Brahmā
  • Śrī Sanakā Tirtha
  • Sri Sanamdana tirtha
  • Sri Sanatkumara tirtha
  • Sri Sanatana tirtha
  • Śrī Dūrvāsa Tirtha
  • Śrī Jñāna-nidhi Tīrtha
  • Śrī Garuḍa-vāhana Tīrtha
  • Śrī Kaivalya Tīrtha
  • Śrī Jñāneśa Tīrtha
  • Śrī Para Tīrtha
  • Śrī Satya-prajña Tīrtha
  • Śrī Prājña Tīrtha
  • Śrī Acyuta-prekṣa Tīrtha
  • Sri. Madhwacharyaru

*********


official 

*********


ಮಾಧ್ವ ಮಠಗಳು


ಜಗದ್ಗುರು ಶ್ರೀಮನ್ಮಧ್ವಾಚಾರ್ಯರು ಉಡುಪಿಯಲ್ಲಿ ರುಕ್ಮಿಣೀ ಕರಾರ್ಚಿತ ಬಾಲ ಕೃಷ್ಣನ ವಿಗ್ರಹವನ್ನು ಪ್ರತಿಷ್ಠಾಪಿಸಿ,
ಶ್ರೀಕೃಷ್ಣನ ಪೂಜೆಯನ್ನು ಅವಿಚ್ಛಿನ್ನವಾಗಿ ನಡೆಸಲು ಎಂಟು ಮಂದಿ ಬಾಲವಟುಗಳಿಗೆ ಸನ್ಯಾಸಾಶ್ರಮ ನೀಡಿದರು.
ಅ ಎಂಟು ಮಂದಿಯಿಂದ ಮುಂದುವರೆದ ಪರಂಪರೆಯೇ ಇಂದು ಅಷ್ಟ ಮಠಗಳು ಎಂದು ಪ್ರಸಿದ್ಧಿ ಹೊಂದಿವೆ. ಅವು:


೧. ಶ್ರೀ ಪಲಿಮಾರು ಮಠ
೨. ಶ್ರೀ ಅದಮಾರು ಮಠ
೩. ಶ್ರೀ ಕೃಷ್ಣಾಪುರ ಮಠ
೪. ಶ್ರೀ ಪುತ್ತಿಗೆ ಮಠ
೫. ಶ್ರೀ ಶೀರೂರು ಮಠ
೬. ಶ್ರೀ ಸೋಂದ ಮಠ
೭. ಶ್ರೀ ಕಾಣಿಯೂರು ಮಠ
೮. ಶ್ರೀ ಪೇಜಾವರ ಮಠ

ಶ್ರೀ ಮಧ್ವಾಚಾರ್ಯರ ಆಶ್ರಮ ಗುರುಗಳಾದ ಶ್ರೀ ಅಚ್ಯುತಪ್ರೇಕ್ಷಾಚಾರ್ಯರಿಂದ ಸನ್ಯಾಸಾಶ್ರಮ ಸ್ವೀಕರಿಸಿ ಮಧ್ವ ಮತಾನುಯಾಯಿಗಳಾದ ಶ್ರಿಸತ್ಯತೀರ್ಥರಿಂದ ಮುಂದುವರೆದ ಪರಂಪರೆ :

೧. ಶ್ರೀ ಭಂಡಾರಕೇರಿ ಮಠ
೨. ಶ್ರೀ ಭೀಮನಕಟ್ಟೆ ಮಠ

ಇನ್ನು ಶ್ರೀಮಧ್ವರು ದ್ವೈತ ಮತ ಪ್ರಸಾರಕ್ಕಾಗಿ ಸನ್ಯಾಸಾಶ್ರಮ ನೀಡಿದ ಶ್ರೀ ಪದ್ಮನಾಭತೀರ್ಥರಿಂದ ಮುಂದುವರೆದ ಪರಂಪರೆಯಿಂದ ಮುಂದುವರೆದ ಪರಂಪರೆ :

೧. ಶ್ರೀ ಶ್ರೀಪಾದರಾಜ ಮಠ
೨. ಶ್ರೀ ಸೋಸಲೆ ವ್ಯಾಸರಾಜ ಮಠ
೩. ಶ್ರೀ ಮಧವತೀರ್ಥ ಮಠ (ಮಜ್ಜಿಗೆಹಳ್ಳಿ ಮಠ / ತಂಬಿಹಳ್ಳಿ ಮಠ )
೪. ಶ್ರೀ ಕೂಡ್ಲಿ ಆರ್ಯ ಅಕ್ಷೋಭ್ಯತೀರ್ಥ ಮಠ
೫. ಶ್ರೀ ಬಾಳಗಾರು ಆರ್ಯ ಅಕ್ಶೋಭ್ಯತೀರ್ಥ ಮಠ
೮. ಶ್ರೀ ರಾಘವೇಂದ್ರ ಮಠ
೯. ಶ್ರೀ ಉತ್ತರಾದಿ ಮಠ
೧೦. ಶ್ರೀ ಕುಂದಾಪುರ ವ್ಯಾಸರಾಜ ಮಠ

ಕವಲೊಡೆದು ನಿರ್ಮಿತವಾದ ಇನ್ನಿತರ ಮಾಧ್ವ ಮಠ
ಳು

೧. ಶ್ರೀ ಸುಬ್ರಹ್ಮಣ್ಯ ಮಠ (ಕುಕ್ಕೆ)
2. ಶ್ರೀ ಪೇಜಾವರ ಮಠದಿಂದ - ಶ್ರೀ ಚಿತ್ರಾಪುರ ಮಠ
3. ಶ್ರೀ ಕಾಣಿಯೂರು ಮಠದಿಂದ - ಶ್ರೀ ಮಾಧ್ವ ಕಾಣ್ವ ಮಠ
. ಶ್ರೀ ಕುಂದಾಪುರ ವ್ಯಾಸರಾಜ ಮಠದಿಂದ - ಶ್ರೀ ಸಾಗರಕಟ್ಟೆ ವ್ಯಾಸರಾಜ ಮಠ

ಗೌಡ ಸಾರಸ್ವತ ಮಾಧ್ವ ಮಠಗಳು
೧. ಶ್ರೀ ಕಾಶಿ ಮಠ
೨. ಶ್ರೀ ಪರ್ತಗಾಳಿ ಜೀವೋತ್ತಮ ಮಠ

**********


There is ISKCON who are followers of dvaita and madhwacharya.  (not included as madhwa mutt here)

   check link--->    ISKCON


wikipedia link---> iskcon 

********



ಮಾಧ್ವ ಮಠಗಳು  

ಶ್ರೀಮನ್ಮಧ್ವಾಚಾರ್ಯರು ಉಡುಪಿಯಲ್ಲಿ ರುಕ್ಮಿಣೀ ಕರಾರ್ಚಿತ ಬಾಲ ಕೃಷ್ಣನ ವಿಗ್ರಹವನ್ನು ಪ್ರತಿಷ್ಠಾಪಿಸಿ,

ಶ್ರೀಕೃಷ್ಣನ ಪೂಜೆಯನ್ನು ಅವಿಚ್ಛಿನ್ನವಾಗಿ ನಡೆಸಲು ಎಂಟು ಮಂದಿ ಬಾಲವಟುಗಳಿಗೆ ಸನ್ಯಾಸಾಶ್ರಮ ನೀಡಿದರು.

ಅ ಎಂಟು ಮಂದಿಯಿಂದ ಮುಂದುವರೆದ ಪರಂಪರೆಯೇ ಇಂದು ಅಷ್ಟ ಮಠಗಳು ಎಂದು ಪ್ರಸಿದ್ಧಿ ಹೊಂದಿವೆ. ಅವು:


೧. ಶ್ರೀ ಪಲಿಮಾರು ಮಠ

೨. ಶ್ರೀ ಅದಮಾರು ಮಠ

೩. ಶ್ರೀ ಕೃಷ್ಣಾಪುರ ಮಠ

೪. ಶ್ರೀ ಪುತ್ತಿಗೆ ಮಠ

೫. ಶ್ರೀ ಶೀರೂರು ಮಠ

೬. ಶ್ರೀ ಸೋಂದ ಮಠ

೭. ಶ್ರೀ ಕಾಣಿಯೂರು ಮಠ

೮. ಶ್ರೀ ಪೇಜಾವರ ಮಠ 

ಶ್ರೀ ಮಧ್ವಾಚಾರ್ಯರ ಆಶ್ರಮ ಗುರುಗಳಾದ ಶ್ರೀ ಅಚ್ಯುತಪ್ರೇಕ್ಷಾಚಾರ್ಯರಿಂದ ಸನ್ಯಾಸಾಶ್ರಮ ಸ್ವೀಕರಿಸಿ ಮಧ್ವ ಮತಾನುಯಾಯಿಗಳಾದ ಶ್ರಿಸತ್ಯತೀರ್ಥರಿಂದ ಮುಂದುವರೆದ ಪರಂಪರೆ :

 

೧. ಶ್ರೀ ಭಂಡಾರಕೇರಿ ಮಠ

೨. ಶ್ರೀ ಭೀಮನಕಟ್ಟೆ ಮಠ


ಇನ್ನು ಶ್ರೀಮಧ್ವರು ದ್ವೈತ ಮತ ಪ್ರಸಾರಕ್ಕಾಗಿ ಸನ್ಯಾಸಾಶ್ರಮ ನೀಡಿದ ಶ್ರೀ ಪದ್ಮನಾಭತೀರ್ಥರಿಂದ ಮುಂದುವರೆದ ಪರಂಪರೆಯಿಂದ ಮುಂದುವರೆದ ಪರಂಪರೆ :


೧. ಶ್ರೀ ಶ್ರೀಪಾದರಾಜ ಮಠ

೨. ಶ್ರೀ ಸೋಸಲೆ ವ್ಯಾಸರಾಜ ಮಠ

೩. ಶ್ರೀ ಮಧವತೀರ್ಥ ಮಠ (ಮಜ್ಜಿಗೆಹಳ್ಳಿ ಮಠ / ತಂಬಿಹಳ್ಳಿ ಮಠ )

೪. ಶ್ರೀ ಕೂಡ್ಲಿ ಆರ್ಯ ಅಕ್ಷೋಭ್ಯತೀರ್ಥ ಮಠ

೫. ಶ್ರೀ ಬಾಳಗಾರು ಆರ್ಯ ಅಕ್ಶೋಭ್ಯತೀರ್ಥ ಮಠ

೮. ಶ್ರೀ ರಾಘವೇಂದ್ರ ಮಠ

೯. ಶ್ರೀ ಉತ್ತರಾದಿ ಮಠ

೧೦. ಶ್ರೀ ಕುಂದಾಪುರ ವ್ಯಾಸರಾಜ ಮಠ


ಕವಲೊಡೆದು ನಿರ್ಮಿತವಾದ ಇನ್ನಿತರ ಮಾಧ್ವ ಮಠಗಳು 

೧. ಶ್ರೀ ಸುಬ್ರಹ್ಮಣ್ಯ ಮಠ (ಕುಕ್ಕೆ)

2. ಶ್ರೀ ಪೇಜಾವರ ಮಠದಿಂದ - ಶ್ರೀ ಚಿತ್ರಾಪುರ ಮಠ

3. ಶ್ರೀ ಕಾಣಿಯೂರು ಮಠದಿಂದ - ಶ್ರೀ ಮಾಧ್ವ ಕಾಣ್ವ ಮಠ

೪. ಶ್ರೀ ಕುಂದಾಪುರ ವ್ಯಾಸರಾಜ ಮಠದಿಂದ - ಶ್ರೀ ಸಾಗರಕಟ್ಟೆ ವ್ಯಾಸರಾಜ ಮಠ


ಗೌಡ ಸಾರಸ್ವತ ಮಾಧ್ವ ಮಠಗಳು


೧. ಶ್ರೀ ಕಾಶಿ ಮಠ

೨. ಶ್ರೀ ಪರ್ತಗಾಳಿ ಜೀವೋತ್ತಮ ಮಠ

ಮಧ್ವ ಪರಂಪರೆ

ಶ್ರಿಮನ್ಮಧ್ವಾಚಾರ್ಯರು ಉಡುಪಿಯಲ್ಲಿ ರುಕ್ಮಿಣಿ ಕರಾರ್ಚಿತ ಶ್ರೀಕೃಷ್ಣನ ವಿಗ್ರಹವನ್ನು ಪ್ರತಿಷ್ಠಾಪಿಸಿ,

ಎಂಟು ಮಂದಿ ಬಾಲ ವಟುಗಳಿಗೆ ಸನ್ಯಾಸಾಶ್ರಮವನ್ನು ನೀಡಿ ಶ್ರೀಕೃಷ್ಣನ ಪೂಜಾ ಕೈಂಕರ್ಯವನ್ನು ಒಪ್ಪಿಸಿದರು. 

ಅ ಎಂಟು ಯತಿಗಳ ಹೆಸರು ಇಂತಿವೆ :

ಶ್ರೀ ಹೃಷೀಕೇಶ ತೀರ್ಥರು , ಶ್ರೀ ನರಸಿಂಹ ತೀರ್ಥರು, ಶ್ರೀ ಜನಾರ್ದನ ತೀರ್ಥರು, ಶ್ರೀ ಉಪೇಂದ್ರ ತೀರ್ಥರು, ಶ್ರೀ ವಾಮನ ತೀರ್ಥರು, ಶ್ರೀ ವಿಷ್ಣು ತೀರ್ಥರು, ಶ್ರೀ ರಾಮ ತೀರ್ಥರು, ಹಾಗೂ ಶ್ರೀ ಅಧೋಕ್ಷಜ ತೀರ್ಥರು.

ಇವರುಗಳಿಂದ ಮುಂದುವರೆದ ಪರಂಪರೆಯೇ ಇಂದಿನ ಉಡುಪಿಯ ಅಷ್ಠ ಮಠಗಳು. ಅವುಗಳ ಹೆಸರು ಶ್ರೀ ಪಲಿಮಾರು ಮಠ, ಶ್ರೀ ಅದಮಾರು ಮಠ, ಶ್ರೀ ಕೃಷ್ಣಾಪುರ ಮಠ, ಶ್ರೀ ಪುತ್ತಿಗೆ ಮಠ, ಶ್ರೀ ಶಿರೂರು ಮಠ, ಶ್ರೀ ಕುಂಭಾಸಿ ಮಠ (ಶ್ರೀ ಸೋಂದಾ ಮಠ), ಶ್ರೀ ಕಾಣಿಯೂರು ಮಠ ಹಾಗು ಶ್ರೀ ಪೇಜಾವರ ಮಠ. 

ಒಮ್ಮೆ ಶ್ರೀ ಮಧ್ವರು ಗೋದಾವರಿ ತೀರದಲ್ಲಿ ಸಂಚರಿಸುತ್ತಿದ್ದಾಗ, "ಶೋಭನ ಭಟ್ಟ"ರೆಂಬ ಪ್ರಖ್ಯಾತ ಅದ್ವೈತ ಪಂಡಿತರು ಅವರಿಂದ ವಾದದಲ್ಲಿ ಪರಾಜಿತರಾಗಿ ಮುಂದೆ ಅವರಿಂದಲೇ ಸನ್ಯಾಸಾಶ್ರಮವನ್ನು ಸ್ವೀಕರಿಸಿದರು. ಅವರೇ ಶ್ರೀ "ಪದ್ಮನಾಭ ತೀರ್ಥ"ರು.

ಮಧ್ವರು ಇವರಿಗೆ ಮಧ್ವ ಮತ ಪ್ರಸಾರದ ಹೊಣೆಗಾರಿಕೆಯನ್ನು ನೀಡಿದರು.

ಇವರ ಹೆಸರು ಸ್ಕಂದ ಪುರಾಣದಲ್ಲಿ ಉಲ್ಲೇಖಿಸಲ್ಪಟ್ಟಿದೆ. ಇವರು ಮಧ್ವರ ಗ್ರಂಥಗಳಿಗೆ ಟೀಕೆಯನ್ನು ರಚಿಸಿದ ಮೊದಲ ಯತಿಗಳೂ ಹೌದು. ಹಾಗಾಗಿ ಇವರು "ಅದ್ಯ ಟೀಕಾಚಾರ್ಯ"ರೆಂದು ಪ್ರಖ್ಯಾತರಾಗಿದ್ದಾರೆ. 

ಶ್ರೀ ಪದ್ಮನಾಭ ತೀರ್ಥರ ನಂತರ ಶ್ರೀ ನರಹರಿ ತೀರ್ಥರು, ಶ್ರೀ ಮಾಧವ ತೀರ್ಥರು, ಹಾಗೂ ಶ್ರೀ ಅಕ್ಷೋಭ್ಯ ತೀರ್ಥರು ಜಗದ್ಗುರು ಶ್ರೀ ಮಧ್ವರ ಸರ್ವಜ್ಞ ಪೀಠವನ್ನು ಅಲಂಕರಿಸಿದರು. ಈ ಮೂವರೂ ಶ್ರೀ ಮಧ್ವರಿಂದಲೇ ಸನ್ಯಾಸಾಶ್ರಮವನ್ನು ಸ್ವೀಕರಿಸಿದರು ಎಂಬ ಬಲವಾದ ನಂಬಿಕೆ ಇದೆಯಾದರೂ ಸಾಕಷ್ಟು ಪುರಾವೆಗಳು ಸಿಗುವುದಿಲ್ಲ. 

ಶ್ರೀ ಪದ್ಮನಾಭ ತೀರ್ಥರು ಮಧ್ವ ಮತ ಪ್ರಸಾರಕ್ಕಾಗಿ ಒಂದು ಪ್ರತ್ಯೇಕ ಪರಂಪರೆಯನ್ನೇ ಪ್ರಾರಂಭಿಸಿದರು. ಅದುವೇ ಇಂದಿನ ಶ್ರೀ ಶ್ರೀಪಾದರಾಜ ಮಠ ಅಥವಾ ಶ್ರೀ ಮುಳುಬಾಗಿಲು ಮಠ. 

ಅವರ ನಂತರ ಸರ್ವಜ್ಞ ಪೀಠವನ್ನಲಂಕರಿಸಿದ ಶ್ರೀ ನರಹರಿತೀರ್ಥರೂ ಒಂದು ಪ್ರತ್ಯೇಕ ಪರಂಪರೆಯನ್ನು ಪ್ರಾರಂಭಿಸಿದರು. ಇದಕ್ಕೆ ಪುರಾವೆ ಶ್ರೀ ಮುಷ್ಣದ ಶಾಸನ ಒಂದರಲ್ಲಿ "ಶ್ರೀ ನರಹರಿ ತೀರ್ಥ ಮಠದ ಜಗನ್ನಾಥ ತೀರ್ಥರು" ಎಂಬ ಉಲ್ಲೇಖ.

ಈ ಪರಂಪರೆಯು ಯಾವಾಗ ಲೀನವಾಯಿತು. ಈ ಪರಂಪರೆಯಲ್ಲಿ ಎಷ್ಟು ಮಂದಿ ಯತಿಗಳು ಆಗಿ ಹೋದರು ಎಂಬ ಯಾವುದೇ ಮಾಹಿತಿ ನಮಗೆ ಸಿಗದಿರುವುದು ದುರದೃಷ್ಟಕರ. ಬಹುಶಃ ಈ ಪರಂಪರೆಯು ಉತ್ತರ ಭಾರತದಲ್ಲೆಲ್ಲೋ ಅಜ್ಞಾತವಾಗಿದ್ದು ಯಾವುದೇ ಹರಿದಾಸರಿಂದಲೂ ಉಳ್ಲೀಖಿಸಲ್ಪಟ್ಟಿಲ್ಲವೆಂದು ಊಹಿಸಬಹುದಷ್ಟೆ!


ಶ್ರೀ ನರಹರಿ ತೀರ್ಥರ ನಂತರ ಸರ್ವಜ್ಞ ಪೀಠದಲ್ಲಿ ವಿರಾಜಮಾನರಾದ ಶ್ರೀ ಮಾಧವ ತೀರ್ಥರೂ ಮಧ್ವ ಮತದ ಪ್ರಸಾರಣದ ಸಲುವಾಗಿ ತಮ್ಮದೆಯಾದ ಪರಂಪರೆಯೊಂದನ್ನು ಪ್ರಾರಂಭಿಸಿದರು. ಅದುವೇ ಇಂದು ಶ್ರೀ ಮಜ್ಜಿಗೆಹಳ್ಳಿ ಮಠ ಅಥವಾ ಶ್ರೀ ತಂಬೆ ಹಳ್ಳಿ ಮಠ ಎಂದು ಪ್ರಸಿದ್ಧವಾಗಿದೆ.

 

ಶ್ರೀ ಮಾಧವ ತೀರ್ಥರ ನಂತರದವರಾದ ಶ್ರೀ ಅಕ್ಷೋಭ್ಯ ತೀರ್ಥರೂ ಒಂದು ಪ್ರತ್ಯೇಕ ಪರಂಪರೆಯನ್ನು ಪ್ರಾರಂಭಿಸಿದರು. ಅದು ಮುಂದೆ ಶ್ರೀ ಲೋಕವಂದಿತ ತೀರ್ಥರ ಕಾಲದಲ್ಲಿ ಕವಲೊಡೆದು ಕೂಡ್ಲಿ ಅಕ್ಷೋಭ್ಯ ತೀರ್ಥ ಮಠ ಹಾಗು ಬಾಳೆಗಾರು ಅಕ್ಷೋಭ್ಯ ತೀರ್ಥ ಮಠ ಎಂದು ಪ್ರಸಿದ್ಧಿಗೆ ಬಂತು.

ಶ್ರೀ ಅಕ್ಷೋಭ್ಯ ತೀರ್ಥರ ನಂತರ ಸರ್ವಜ್ಞ ಪೀಠ ಆರೋಹಣ ಮಾಡಿದವರು ಶ್ರೀ ಜಯತೀರ್ಥರು.

ಅವರ ನಂತರ ಬಂದ ಶ್ರೀ ವಿದ್ಯಾಧಿರಾಜರ ಕಾಲದಲ್ಲಿ ಆದಿ ಮಠವು ಮೊದಲ ಬಾರಿಗೆ ಕವಲೊಡೆಯಿತು.

ಶ್ರೀ ವಿದ್ಯಾಧಿರಾಜರ ಶಿಷ್ಯರಾದ ಶ್ರೀ ರಾಜೇಂದ್ರ ತೀರ್ಥರಿಂದ ಮುಂದುವರೆದ ಪರಂಪರೆಯೇ ಶ್ರೀ ಪೂರ್ವಾದಿ ಮಠ. ಅದೇ ಪರಂಪರೆಯಲ್ಲಿ ಮುಂದೆ ಬಂದ ಪ್ರಹ್ಲಾದಾವತಾರರಾದ ಶ್ರೀ ವ್ಯಸರಾಜರಿಂದಾಗಿ ಅ ಮಠವು "ಶ್ರೀ ವ್ಯಾಸರಾಜ ಮಠ" ಎಂದು ಪ್ರಸಿದ್ಧಿಗೆ ಬಂತು.

ಶ್ರೀ ವಿದ್ಯಾಧಿರಾಜರ ಮತ್ತೋರ್ವ ಶಿಷ್ಯರಾದ ಶ್ರೀ ಕವೀಂದ್ರ ತೀರ್ಥರಿಂದ ಮುಂದುವರೆದ ಪರಂಪರೆಯು ವಿಬುಧೆಂದ್ರ ಮಠ, ವಿಜಯೀಂದ್ರ ಮಠ ಇತ್ಯಾದಿ ನಾಮಧೇಯಗಳಿಂದ ಪ್ರಸಿದ್ಧಿ ಹೊಂದಿ ಪ್ರಹ್ಲಾದಾವತಾರರಾದ ಶ್ರೀ ರಾಘವೇಂದ್ರ ತೀರ್ಥರಿಂದಾಗಿ ಪ್ರಸ್ತುತ "ಶ್ರೀ ರಾಘವೇಂದ್ರ ತೀರ್ಥ ಮಠ" ಎಂದು ಪ್ರಸಿದ್ಧವಾಗಿದೆ.

******

No comments:

Post a Comment