" ಶ್ರೀ ರಾಯರ ಉಭಯ ವಂಶಾಬ್ಧಿ ಚಂದ್ರಮರೂ - ಶ್ರೀ ರಾಯರ ವಿದ್ಯಾ ಶಿಷ್ಯರೂ - ಶ್ರೀ ವಿಬುಧೇಂದ್ರ ವಿಜಯ ಮಹಾ ಕಾವ್ಯ ಗ್ರಂಥಕರ್ತೃಗಳೂ ಆದ ಶ್ರೀ ಮುನೀಂದ್ರತೀರ್ಥರು "
" ದಿನಾಂಕ : 27.04.2021 ಮಂಗಳವಾರ - ಶ್ರೀ ಪ್ಲವ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಚೈತ್ರ ಶುದ್ಧ ಪೌರ್ಣಿಮಾ - ಶ್ರೀ ಮುನೀಂದ್ರತೀರ್ಥರ ಆರಾಧನಾ ಮಹೋತ್ಸವ, ಶ್ರೀರಂಗಂ "
" ಶ್ರೀ ಮುನೀಂದ್ರತೀರ್ಥರ ಪೂರ್ವೇತಿಹಾಸ "
ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ವೃದ್ಧ ಪಿತಾಮಹ [ ಶ್ರೀ ರಾಯರ ಮುತ್ತಾತನ ತಂದೆ ] ಶ್ರೀ ವೇಂಕಟರಮಣಾಚಾರ್ಯರು ಶ್ರೀ ಶ್ರೀಪಾದರಾಜರ ಜೊತೆಯಲ್ಲಿ ಶ್ರೀ ವಿಬುಧೇಂದ್ರ ತೀರ್ಥರಲ್ಲಿ ಸಮಗ್ರ ದ್ವೈತ ವೇದಾಂತವನ್ನು ಅಧ್ಯನಯನ ಮಾಡಿದ ಮಹಾತ್ಮರು.
ಕ್ರಿ ಶ 15 - 16ನೇ ಶತಮಾನದಲ್ಲಿ ವಿಜಯನಗರದ ರಾಜಾಸ್ಥಾನದಲ್ಲಿ ಚತುಃಶಾಸ್ತ್ರಪಾರಂಗತರೂ - ಸಂಗೀತ - ವೀಣಾದಿ ಗಂಧರ್ವ ಕಲಾ ಸಂಪನ್ನರೂ ಆದ ಶ್ರೀ ಕೃಷ್ಣಾಚಾರ್ಯರು ಪ್ರಸಿದ್ಧರಾಗಿದ್ದರು.
ಶ್ರೀ ವೀಣಾ ಕೃಷ್ಣಾಚಾರ್ಯರು ಶ್ರೀ ವ್ಯಾಸರಾಜ ಗುರುಸಾರ್ವಭೌಮರ ಜೊತೆಯಲ್ಲಿ ಶ್ರೀ ಶ್ರೀಪಾದರಾಜರಲ್ಲಿ ಸಮಗ್ರ ದ್ವೈತ ವೇದಾಂತವನ್ನು ಅಧ್ಯಯನ ಮಾಡಿದ ಭಾಗ್ಯಶಾಲಿಗಳು.
ಶ್ರೀ ಕೃಷ್ಣಾಚಾರ್ಯರು ಕನ್ನಡ ಸಾರ್ವಭೌಮನಾದ ಕೃಷ್ಣದೇವರಾಯನಿಗೆ ವೀಣಾ ವಾದನ ಕಲೆಯನ್ನು ಕಲಿಸಿದ ಗುರುಗಳಾಗಿ ಸಾಮ್ರಾಟನಿಂದ ವಿಶೇಷ ಗೌರವವನ್ನು ಪಡೆದಿದ್ದರು.
ಈ ವಿಷಯ ಶ್ರೀ ರಾಘವೇಂದ್ರವಿಜಯ ಮಹಾ ಕಾವ್ಯದಲ್ಲಿ......
ಉದದಿಶ್ಯ ಸ ಕೃಷ್ಣಭೂವರಾಲೇರ್ನಿಜ-
ಗಾಂಧರ್ವಕಲಾಂ ಕಲಾಮಗೃಣ್ಹಾತ್ ।
ಘನ ಮೌಕ್ತಿಕಗುಚ್ಛಹಾರಪೂರ್ವಾಂ
ಬಿರುದಾಲೀಂ ಗುರು ದಕ್ಷಿಣಾಪದೇಶಾತ್ ।
ಆಭಜನ್ ನೃಪತೇ ರ್ದಿನಪ್ರದೀಪ್ತಂ
ಸತು ವಿಶ್ವಕ್ಪ್ರಬಲಂ ಪ್ರತಾಪ ರಶ್ಮಿಮ್ ।।
ವೀಣಾ ಶ್ರೀ ಕೃಷ್ಣಾಚಾರ್ಯರಿಗೆ ಕನಕಾಚಲಾಚಾರ್ಯರೆಂಬ ಪುತ್ರರಿದ್ದರು.
ವೀಣಾ ಶ್ರೀ ಕನಕಾಚಲಾಚಾರ್ಯರು ಶ್ರೀ ವಿಜಯೀಂದ್ರತೀರ್ಥರ ಜೊತೆಗೆ ಶ್ರೀ ವ್ಯಾಸರಾಜ ಗುರುಸಾರ್ವಭೌಮರಲ್ಲಿ ಸಕಲ ಶಾಸ್ತ್ರಗಳನ್ನು ಅಧ್ಯಯನ ಮಾಡಿದ ಭಾಗ್ಯಶಾಲಿಗಳು.
ಶ್ರೀ ಕನಕಾಚಲಾಚಾರ್ಯರ ಪುತ್ರರು ವೀಣಾ ತಿಮ್ಮಣ್ಣಾಚಾರ್ಯರು.
ವೀಣಾ ಶ್ರೀ ತಿಮ್ಮಣ್ಣಾಚಾರ್ಯರ ಪಾಂಡಿತ್ಯದಿಂದ ಪ್ರಭಾವಿತರಾದ ಕನ್ನಡ ಸಾಮ್ರಾಟ್ ರಂಗರಾಜನು ಇವರಿಗೆ " ಹಗಲು ದೀವಟಿಗೆ " ಗೌರವವಿತ್ತು ಸನ್ಮಾನಿಸಿದನು.
ವೀಣಾ ಶ್ರೀ ತಿಮ್ಮಣ್ಣಾಚಾರ್ಯರು ಶ್ರೀ ವಿಜಯೀಂದ್ರತೀರ್ಥರಲ್ಲಿ ನ್ಯಾಯ - ವೇದಾಂತಾದಿ ಶಾಸ್ತ್ರಗಳನ್ನೋದಿ ಗರುಗಳ ಪ್ರೇಮಾದಗಳಿಗೆ ಪಾತ್ರರಾಗಿದ್ದರು.
ವೀಣಾ ಶ್ರೀ ತಿಮ್ಮಣ್ಣಾಚಾರ್ಯರ ಧರ್ಮಪತ್ನಿ ಸಾಧ್ವೀ ಗೋಪಿಕಾಂಬಾದೇವಿ.
ಈ ದಂಪತಿಗಳಿಗೆ ಕುಲದೇವನಾದ ತಿರುಪತಿಯ ಶ್ರೀ ಶ್ರೀನಿವಾಸನ ಅನುಗ್ರಹ ವರಗಳಿಂದ ಮೂವರು ಮಕ್ಕಳು ಜನಿಸಿದರು.
ಮೊದಲನೆಯವಳು " ವೆಂಕಟಾಂಬಾದೇವಿ "
ಎರಡನೆಯವರು " ವೀಣಾ ಶ್ರೀ ಗುರುರಾಜಾಚಾರ್ಯರು "
ಮೂರನೆಯವರು " ವೀಣಾ ಶ್ರೀ ವೆಂಕಟನಾಥಾಚಾರ್ಯರು " ( ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು )
ವೆಂಕಟಾಂಬಾದೇವಿಯನ್ನು ಮಧುರೆಯ ಆಸ್ಥಾನ ವಿದ್ವಾಂಸರಾದ ಶ್ರೀ ಲಕ್ಷ್ಮೀ ನರಸಿಂಹಾಚಾರ್ಯರಿಗೆ ಕೊಟ್ಟು ವಿವಾಹವಾಗಿತ್ತು.
ಅವರಿಗೆ ಓರ್ವ ಪುತ್ರ ಜನಿಸಿದನು. ಅವರ ಹೆಸರು ಶ್ರೀ ನಾರಾಯಣಾಚಾರ್ಯರು.
ಇವರೇ " ಶ್ರೀ ರಾಘವೇಂದ್ರವಿಜಯ ಮಹಾ ಕಾವ್ಯ " ಗ್ರಂಥಕರ್ತರು.
ಎರಡನೆಯವರಾದ ಶ್ರೀ ಗುರುರಾಜಾಚಾರ್ಯರು ಶ್ರೀ ಸುಧೀಂದ್ರತೀರ್ಥರಲ್ಲಿ ಸಕಲ ಶಾಸ್ತ್ರಗಳನ್ನು ಅಧ್ಯಯನ ಮಾಡಿ ಶ್ರೀ ಮಠದ ವಿದ್ಯಾಪೀಠದ ಅಧ್ಯಾಪಕರಾಗಿ ಕೀರ್ತಿಗಳಿಸಿದ್ದರು.
ಇವರ ಪತ್ನಿ ಸಾಧ್ವೀ ಕಮಲಾದೇವಿ.
ಈ ದಂಪತಿಗಳಿಗೆ ಶ್ರೀ ವೇಂಕಟನಾರಾಯಣಾಚಾರ್ಯರೆಂಬ ಪುತ್ರರಿದ್ದರು.
ಶ್ರೀ ವೇಂಕಟನಾರಾಯಣಾಚಾರ್ಯರು - ಶ್ರೀ ಲಕ್ಷ್ಮೀನಾರಾಯಣಾಚಾರ್ಯರೊಡನೆ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರಲ್ಲಿ ಸರ್ವ ಶಾಸ್ತ್ರಗಳನ್ನು ಕಲಿತು ಶ್ರೇಷ್ಠ ಪಂಡಿತರಾಗಿದ್ದರು.
ಶ್ರೀ ವೇಂಕಟನಾರಾಯಣಾಚಾರ್ಯರಿಗೆ...
ಶ್ರೀ ವೆಂಕಣ್ಣಾಚಾರ್ಯರು ( ಶ್ರೀ ಯೋಗೀಂದ್ರತೀರ್ಥರು )
ಶ್ರೀ ವಾಸುದೇವಾಚಾರ್ಯರು ( ಶ್ರೀ ಸೂರೀ೦ದ್ರತೀರ್ಥರು )
ಶ್ರೀ ಮುದ್ದು ವೆಂಕಟ ಕೃಷ್ಣಾಚಾರ್ಯರು ( ಶ್ರೀ ಸುಮತೀಂದ್ರತೀರ್ಥರು )
ಶ್ರೀ ವಿಜಯೀಂದ್ರಾಚಾರ್ಯರು ( ಶ್ರೀ ಉಪೇಂದ್ರತೀರ್ಥರು )
ಶ್ರೀ ಗರುಡವಾಹನ ಲಕ್ಷ್ಮೀನಾರಾಯಣಾಚಾರ್ಯರು ( ಶ್ರೀ ಮುನೀಂದ್ರತೀರ್ಥರು )
ಐದು ಜನ ಪುತ್ರರು ಜನಿಸಿದರು.
" ಶ್ರೀ ಮುನೀಂದ್ರತೀರ್ಥರ ಸಂಕ್ಷಿಪ್ತ ಮಾಹಿತಿ "
ಚತುಃ ಶಾಸ್ತ್ರ ಪಾಂಡಿತ್ಯಾತಿಶಯದಿಂದ ಶ್ರೀ ವೇದವ್ಯಾಸ - ಶ್ರೀಮದಾಚಾರ್ಯ - ಶ್ರೀ ಟೀಕಾಚಾರ್ಯ - ಶ್ರೀ ವಿಬುಧೇಂದ್ರ - ಶ್ರೀ ವಿಜಯೀಂದ್ರ - ಶ್ರೀ ರಾಘವೇಂದ್ರತೀರ್ಥರ ಸತ್ಪರಂಪರೆಯಿಂದ ಅವಿಚ್ಛಿನ್ನವಾಗಿ ನಡೆದು ಬಂದ ದ್ವೈತ ಸಿದ್ಧಾಂತ ಪಾಠ ಪ್ರವಚನ - ಸಂಪ್ರದಾಯಾನುಸಾರವಾದ ಸಚ್ಛಾಸ್ತ್ರ ಪಾಠ ಪ್ರವಚನದಿಂದ - ತಮ್ಮ ತಪಸ್ಸಿನಿಂದ ಅಬ್ಧವಾದ ತೇಜೋ ವಿಶೇಷದಿಂದ - ಪ್ರಸ್ಥಾನ ತ್ರಯಗಳಲ್ಲಿ ಅದ್ವಿತೀಯ ಪ್ರಬಂಧಗಳನ್ನೂ - ಕಾವ್ಯ ನಾಟಕಾಲಂಕಾರಾದಿ ಶಾಸ್ತ್ರಗಳಲ್ಲಿ ಅಸಾಧಾರಣ ಕೃತಿಗಳನ್ನೂ - ವ್ಯಾಖ್ಯಾನಗಳನ್ನೂ ರಚಿಸಿ ಪರವಾದಿ ನಿಗ್ರಹ - ಸಿದ್ಧಾಂತ ಸ್ಥಾಪನೆ ಮಾಡಿದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಮುನೀಂದ್ರತೀರ್ಥರ ಕುರಿತು ಸಂಕ್ಷಿಪ್ತವಾಗಿ ತಿಳಿಸುವ ಚಿಕ್ಕ ಪ್ರಯತ್ನ ಇಲ್ಲಿದೆ.
ಶ್ರೀ ಗರುಡವಾಹನ ಲಕ್ಷ್ಮೀನಾರಾಯಣಾಚಾರ್ಯರು ಬಾಲ್ಯದಿಂದಲೂ ಕುಶಾಗ್ರಮತಿಗಳೂ - ನವನವೋನ್ಮೇಷಪ್ರತಿಭಾಶಾಲಿಗಳೂ - ಕಾವ್ಯ ರಚನಾ ಧುರೀಣರಾಗಿದ್ದರು.
ತಮ್ಮಂದಿರುಗಳೊಡನೆ ಬಾಲ್ಯ ಪಾಠ - ಕಾವ್ಯ - ಸಾಹಿತ್ಯಗಳನ್ನು ಅಧ್ಯಯನ ಮಾಡಿ - ಮುಂದೆ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರಲ್ಲಿ ನ್ಯಾಯ - ತರ್ಕ - ವ್ಯಾಕರಣ - ಮೀಮಾಂಸಾ ಮತ್ತು ಸಮಗ್ರ ದ್ವೈತ ವೇದಾಂತವನ್ನು ಅಧ್ಯಯನ ಮಾಡಿ ಪಂಡಿತ ಪ್ರಕಾಂಡರೆನಿಸಿದರು.
" ಹೆಸರು "
ಶ್ರೀ ಗರುಡವಾಹನ ಲಕ್ಷ್ಮೀನಾರಾಯಣಾಚಾರ್ಯರು
" ತಂದೆ "
ಶ್ರೀ ವೇಂಕಟ ನಾರಾಯಣಾಚಾರ್ಯರು
" ವಿದ್ಯಾ ಗುರುಗಳು "
ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು
" ಆಶ್ರಮ ಗುರುಗಳು "
ಶ್ರೀ ಉಪೇಂದ್ರತೀರ್ಥರು
" ಆರಾಧನೆ "
ಚೈತ್ರ ಶುದ್ಧ ಪೌರ್ಣಿಮಾ
" ಸ್ಥಳ "
ಶ್ರೀರಂಗಂ
" ವಿಶೇಷ ವಿವರಣೆ "
ಶ್ರೀ ಗರುಡವಾಹನ ಲಕ್ಷ್ಮೀನಾರಾಯಣಾಚಾರ್ಯರೇ ಮುಂದೆ ಶ್ರೀ ಉಪೇಂದ್ರತೀರ್ಥರಿಂದ ಆಶ್ರಮ ಸ್ವೀಕಾರ ಮಾಡಿ " ಶ್ರೀ ಮುನೀಂದ್ರತೀರ್ಥ " ರೆಂದು ಖ್ಯಾತರಾದರು.
ಆದರೆ ಶ್ರೀ ಮುನೀಂದ್ರತೀರ್ಥರು ಹದಿನೈದೇ ದಿನಗಳಲ್ಲಿ ತಮ್ಮ ಪ್ರಥಮ " ಚಾತುರ್ಮಾಸ್ಯ " ಕ್ಕೆ ಮುಂಚಿತವಾಗಿಯೇ ವೃಂದಾವನಸ್ಥರಾದರು.
ಇವರೇ " ಶ್ರೀ ವಿಬುಧೇಂದ್ರ ವಿಜಯ ಮಹಾಕಾವ್ಯ " ಯೆಂಬ ಶ್ರೇಷ್ಠ ಕಾವ್ಯವನ್ನು ರಚಿಸಿದ ಮಹಾನುಭಾವರು.
" ಶ್ರೀ ರಾಯರ ಕೃಪಾ ಪಾತ್ರರು "
ಶ್ರೀ ಗುರುಸಾರ್ವಭೌಮರು ಇವರಲ್ಲಿ ತೋರುತ್ತಿದ್ದ ಅಸಾಧಾರಣ ಪ್ರೀತಿ ವಾತ್ಸಲ್ಯಗಳು - ಪಾಠ ಹೇಳುವಾಗ ಪ್ರತಿಯೊಂದು ವಿಚಾರಗಳನ್ನೂ ಕೂಲಂಕುಷವಾಗಿ ವಿವರಿಸಿ ಹೇಳುತ್ತಿದ್ದ ಕ್ರಮವನ್ನು ಕಂಡು ಎಲ್ಲರೂ ವಿಸ್ಮಿತರಾಗುತ್ತಿದ್ದರು.
ಹೀಗೆ ಶ್ರೀ ಗುರುಸಾರ್ವಭೌಮರಿಂದ ತಯಾರಾಗಿದ್ದರಿಂದಲೇ ಆಚಾರ್ಯರು....
.
ವೇದ - ಉಪನಿಷತ್ - ನ್ಯಾಯ - ತರ್ಕ - ವ್ಯಾಕರಣ - ಮೀಮಾಂಸಾ - ಧರ್ಮಶಾಸ್ತ್ರ - ಸಾಹಿತ್ಯ - ಅಲಂಕಾರ - ಪುರಾಣ - ಇತಿಹಾಸಾದಿ ಸಕಲ ವಿದ್ಯೆಗಳಲ್ಲಿಯೂ ಅನಿತರ ಸಾಧಾರಣ ಪಾಂಡಿತ್ಯವನ್ನು ಸಂಪಾದಿಸಿ ದಕ್ಷಿಣ ಭಾರತದ ಅಂದಿನ ವಿದ್ವನ್ಮಂಡಲಿಯಲ್ಲಿ ಅಗ್ರಸ್ಥಾನವನ್ನು ಗಳಿಸಿ ವಿಖ್ಯಾತರಾಗಲು ಕಾರಣವಾಯಿತು.
ಶ್ರೀ ಮುನೀಂದ್ರತೀರ್ಥರು ಶ್ರೀ ರಾಯರ ಕಾರುಣ್ಯ ಪಾತ್ರರೆಂದು ಅವರ ಚರಮ ಷ್ಲೋಕವೇ ಖಚಿತ ಪಡಿಸುತ್ತದೆ.
ರಾಮ ಪಾದಾಂಬುಜಾಸಕ್ತಂ
ರಾಘವೇಂದ್ರ ಗುರು ಪ್ರಿಯಮ್ ।
ಮುನೀಂದ್ರ ಯೋಗಿನಂ ಸೇವೆ
ಕಾಮಿತಾರ್ಥ ಪ್ರದಾಯಕಮ್ ।।
ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆಯಲ್ಲಿ....
ಮುನಿ ಕುಲೋತ್ತಮ ಗುರು-
ರಾಯರ ಸದ್ವಂಶೋದ್ಭವ ।
ಮುನೀಂದ್ರತೀರ್ಥ ಯತಿ -
ಚಂದ್ರಮನ ನೋಡೋಣ ಬಾ ಸಖೀ ।। ಪಲ್ಲವಿ ।।
ಸುಂದರ ವೃಂದಾವನದಿ ರಾಜಿಸುವ ।
ವಂದ್ಯ ಜನರ ಪೊರೆವ ಯತಿವರ ।। ಚರಣ ।।
ಶೇಷ ಸನ್ನಿಧಾನದಿ ಶೋಭಿಪ । ಅ ।
ಶೇಷ ಸುಜನರ ಕಲ್ಪದ್ರುಮನ ।। ಚರಣ ।।
ವಿಬುಧೇಂದ್ರ ವಿಜಯ ವಿರಚಿಸಿದ ಧೀರ ।
ವಿಬುಧೇಶರೊಡೆಯ ವೇಂಕಟನಾಥನ -
ಪ್ರಿಯ ಗುರುಗಳ ।। ಚರಣ ।।
by acharya Nagaraju Haveri, ಗುರು ವಿಜಯ ಪ್ರತಿಷ್ಠಾನ
******
- Uttaradhi Mutt – 6
- Raghavendra Mutt – 7
- Vyasaraja Mutt – 9
- Sripadaraja Mutt – 15
- Other Brindavanas/Bidi sanyasigalu – 8
Rayara Mutt
Aradhane: Chaitra Shukla Pournima
**********
No comments:
Post a Comment