Thursday, 1 August 2019

yogi narayana acharyraru gadag resident shravana shukla panchami ಯೋಗಿ ನಾರಾಯಣಾಚಾರ್ಯರು




info is from FB madhwanet--->
shri gurubyO namaha...
shrAvaNa shulka panchami, is the ArAdhanE of shri yOgi nArAyaNAchAryaru.
He is the direct desciple of Sri Appavaru.
He was a great devotee of shri appAvaru. His ArAdhanE falls the next day of appAvaru ArAdhanE.
It is interesting how he became a staunch devotee of appAvaru.
Once Sri Appavaru had been to Gadag. Visited the famous temple of Sri Veera Narayana that too in the afternoon. At that time Pooja, Alankara, Naivedya, Mahamangalarati were all completed. The Archakas and the Parupateyedars closed the doors of Garbhaalaya, locked and went home. It is heartening to know that Kumaravyasa Mahakavi, a great poet of Kannada has composed the Bhaarata – Gadugina Bhaarata sitting in the temple leaning on to a pillar with utmost devotion. Swami Sri VeeraNarayana blessed him and he used to say that Veera Narayana is the poet and he was only the copier.
So Appavaru stepped into the temple. He said "I have come all the way to seek your darshana Narayana. Narayanappa, but the doors are all closed and locked, what is this?" At that time to great surprise, the locks opened automatically without the keys and doors opened. Appavaru went inside and took the darshana of darshana Brahma Sri Veera Narayana and started talking to Him. Swami offered Pratyaksha Darshana to Appavaru.
Sri Yogi Narayanacharya, a resident of Gadag, was there on the spot. He actually witnessed the meet and the talk. After seeing Appavara’s divine personality, he immediately surrendered to Appavaru and requested him to accept him as his shishya. From that day onwards Yogi Narayanacharya always followed Sri Appavaru, lived with him and performed the seva with devotion and affection.
Sri Narayanacharya, was a great devotee of Sri Veera Narayana and led the life of a Yogi. He was a scholar, a sculptor and a Sanskrit pandit. It is he who has written about Appavaru and introduced him to the world.
The pratima of appAvaru and chaturbhugha vENugOpAlakrishNa dEvaru at appAvara kaTTe were sculpted by him under the direction of appAvaru. Once yOgi nArAyaNAchAryaru requested appAvaru that there should be some rememberance of appAvaru post appAvaru's period where bhaktAs could come and offer pUje and seek blessings. appAvaru asked Acharyaru what he had on mind. Acharyaru showed him sAligrAma shila and requested that he sculpt appAvara vigraha which would be consecrated post appAvara disappearance from the physical world. appAvaru gladly agreed. appAvaru cut an "uttatthi" into 7 pieces and asked Acharyaru to sculpt the vigraha by taking 1 piece each day. yOgi nArAyaNAchAryaru being a highly skilled sculptor accomplished the task and created a beautiful pratima of appavaru. But some more shila was left. On enquiring appAvaru what to do with it, appavaru directed him to sculpt chaturbhuja vENugOpAla krishNa dEvaru, which Acharyaru did. 


Post appAvaru's niryANa, Acharyaru along with appAvaru's son, ObalAchAryaru, did the pratishTApane of both the vigrahas at the place where appAvaru used to do puje of prANa dEvaru and all his anushTAna. That is what we see today as appAvara kaTTe with chaturbhuja vENugOpAla krishNa dEvara and appAvara vigrahAs. 

We have to be grateful to yOgi nArAyaNAchAryaru for having blessed us with these pratimEs where we can go and seek blessings. 

yOgi nArAyaNAchAryaru mentioned that he would like to be present forever near appAvaru and continue his sEve to appAvaru. He then disappeared from mortal vision near a "nellikai" plant close to the kaTTe. That place is revered as yOgi nArAyaNAchAryara kaTTe and ArAdhane being performed there to this day. 

shri yOgi nArAyaNAchAryar varada gOvindA gOvindA... 

shri krishnArpaNamastu..

********

ಶ್ರವಣ ಶುದ್ಧ ಪಂಚಮಿ ಆರಾಧನೆ ಶ್ರೀ ಯೋಗಿ ನಾರಾಯಣಾಚಾರ್ಯರು: 

ವೀರನಾರಾಯಣಕೃಪಾಪಾತ್ರಂ ಕೃಷ್ಣಾರ್ಯಗುರುಸೇವಕಮ್ | 
ಜ್ಞಾನವೈರಾಗ್ಯಸಂಪನ್ನಂ ಯೋಗೀನಾರಾಯಣಗುರುಂ ಭಜೇ ||

वीरनारायणकृपापात्रं कृष्णार्यगुरुसेवकम्|
ज्ञानवैराग्यसंपन्नं योगीनारायणगुरुं भजे ||

ಕುಲ ಗುರುಗಳು : ಶ್ರೀರಾಘವೇಂದ್ರ ಗುರುಸಾರ್ವಭೌಮರು
ವಿದ್ಯಾ ಗುರುಗಳು : ಜ್ಞಾನಿಗಳಾದ ಉಪಾಧ್ಯಾಯ ರಾಮಚಾರ್ಯರು
ಸ್ವರೂಪೊಧಾರಕ  ಗುರುಗಳು : ಶ್ರೀ ಅಪ್ಪಾವರು
ಸಮಕಾಲೀನ ಅಪರೋಕ್ಷ ಜ್ಞಾನಿಗಳು ಮತ್ತು ದಾಸರು :
ಶ್ರೀ ಅಪ್ಪಾವರು , ಸುರಪುರದ ಆನಂದ ದಾಸರು  , ಮೊದಲಕಲ್ಲು ಶೇಷದಾಸರು , ವಿಜಯರಾಮಚಂದ್ರ ವಿಠಲರು , ಸುಜ್ಞಾನೇಂದ್ರ ತೀರ್ಥರು , ಗಣೇಶಾಚಾರ್ಯರು (ಸುಧರ್ಮೇಂದ್ರ ತೀರ್ಥರು) , ಯಳಮೇಲಿ ಹಯಗ್ರೀವಾಚಾರ್ಯರು , ಹುಲಗಿ ನರಸಪ್ಪಾಚಾರ್ಯರು ,ಗುರುಜಗನ್ನಾಥ ದಾಸರು.



Pics: ಶ್ರೀ ಯೋಗಿ ನಾರಾಯಣಾಚಾರ್ಯರ ಕೈಯಲ್ಲಿ ಮೂಡಿಬಂದ ಅಪ್ರತಿಮ ಶಿಲೆಗಳು.

ಶ್ರೀ ಯೋಗಿ ನಾರಾಯಣಾಚಾರ್ಯರು - ಶ್ರೀ ಅಪ್ಪಾವರಿಗೆ ದೇಶದೆಲ್ಲೆಡೆ ಹಲವಾರು ಶಿಷ್ಯರು ಅಪ್ಪಾವರ ಅನುಗ್ರಹಕ್ಕೆ ಪಾತ್ರರಾಗಿದ್ದರು. ಅವರ ಪ್ರಮುಖ ಶಿಷ್ಯರಲ್ಲಿ ಶ್ರೀ ಯೋಗಿ ನಾರಾಯಣಾಚಾರ್ಯರು ಒಬ್ಬರು.

ಶ್ರೀ ನಾರಾಯಣಾಚಾರ್ಯರು ಮೂಲತಃ ಗದಗಿ ನವರು. ಆಚಾರ್ಯರು ಗದಗಿನ ವೀರ ನಾರಾಯಣನ ಅಂತರಂಗ ಭಕ್ತರು. ತಮ್ಮ ಸ್ವರೂಪೊದ್ದಾರಕ ಗುರುಗಳ  ಪ್ರಾಪ್ತಿಗಾಗಿ ನಿತ್ಯವೂ ಶ್ರೀ ನಾರಾಯಣಾಚಾರ್ಯರು ವೀರ ನಾರಾಯಣನ ಸೇವೆ ಮಾಡುತಿದ್ದರು. ಆಚಾರ್ಯರ ನಿಷ್ಠೆಯ ಸೇವೆಗೆ ಮೆಚ್ಚಿದ ವೀರ ನಾರಾಯಣ ದೇವರು ಸ್ವಪ್ನದಲ್ಲಿ ಆಚಾರ್ಯರಿಗೆ ನಿಮ್ಮ ಸ್ವರೂಪೊದ್ದಾರಕರು ಅತಿ ಶೀಘ್ರದಲ್ಲಿ ನಿನಗೆ ಭೇಟಿ ಆಗುತ್ತದೆ ಅಂತ ಸೂಚನೆ ಕೊಡುತ್ತಾನೆ.

ಶ್ರೀ ಅಪ್ಪಾವರು ಸಂಚಾರ ಅನ್ವಯ ಗದಗಗೆ ಬಂದಿರುತ್ತಾರೆ. ಅಲ್ಲಿ ಮಧ್ಯಾಹ್ನದ ಸಮಯಕೆ ಶ್ರೀ ವೀರ ನಾರಾಯಣನ ದರ್ಶನಕ್ಕೆ ಅಪ್ಪಾವರು ಬಂದಿರುತ್ತಾರೆ , ಬಂದ ಸಮಯದಲ್ಲಿ ಅರ್ಚಕರು ದೇವಸ್ಥಾನ ಗರ್ಭಗುಡಿ ಬೀಗ ಹಾಕಿರುತ್ತಾರೆ. ದೇವಸ್ಥಾನದ ಪ್ರಾಂಗಣದಲ್ಲಿ ಅಪ್ಪಾವರು ವೀರ ನಾರಾಯಣನ ಪ್ರಾರ್ಥಿಸುತ್ತಾ
- ಸ್ವಾಮಿ ನಾನು ನಿನ್ನ ದರ್ಶನಕ್ಕಾಗಿ  ಇಭರಾಮಪುರದಿಂದ ಬಂದಿದ್ದೇನೆ ಅಂತ ಪ್ರಾರ್ಥಿಸಿದಾಗ , ದೇವಸ್ಥಾನದ ಗರ್ಭಗುಡಿಯ ಬಾಗಿಲು ತಾನಾಗಿಯೇ ತೆರೆಯುತ್ತದೆ.
ಇದೇ ಸಮಯದಲ್ಲಿ ಶ್ರೀ ಯೋಗಿ ನಾರಾಯಣಾಚಾರ್ಯರು ದೇವಸ್ಥಾನ ಪ್ರಾಂಗಣದಲ್ಲಿಯೇ ಇರುತ್ತಾರೆ. ಶ್ರೀ ಅಪ್ಪಾವರನ್ನು ಯಾರೋ ಯಾತ್ರಿಕರು ನಾರಾಯಣನ ದರ್ಶನಕ್ಕಾಗಿ ಬಂದಿದ್ದಾರೆ ಎಂದು ತಿಳಿದಿರುತ್ತಾರೆ ಆದರೆ ಅಲ್ಲಿ ನಡೆದಿದ್ದು ಬೇರೆ.
ಅಪ್ಪಾವರ ಪ್ರಾರ್ಥನೆ ದೇವಸ್ಥಾನದ ಗರ್ಭಗುಡಿಯ ಬಾಗಿಲು ತಾನಾಗಿಯೇ ತೆರೆದುದನ್ನು ಕಂಡು ಆಚಾರ್ಯರು ಒಂದು ಕ್ಷಣ ಏನು ತೋಚಲಾಗದೆ ಬೆರಗಾಗುತ್ತಾರೆ .
 ಶ್ರೀ ಅಪ್ಪಾವರು  ವೀರ ನಾರಾಯಣನ ಜೊತೆ ನೇರವಾಗಿ ಸಂದರ್ಶನ ಮಾಡುವುದನ್ನು ಕಂಡು ಶ್ರೀ ಯೋಗಿ  ನಾರಾಯಣಾಚಾರ್ಯರು ಅಪ್ಪಾವರಲ್ಲಿ ಶಿಷ್ಯ ಸ್ವೀಕಾರಕ್ಕಾಗಿ ಪ್ರಾರ್ಥನೆ ಮಾಡುತ್ತಾರೆ. ಆಚಾರ್ಯರ ಪ್ರಾರ್ಥನೆಗೆ
ಶ್ರೀ ಅಪ್ಪಾವರು ಸಂತುಷ್ಟರಾಗಿ ಅವರನ್ನು ತಮ್ಮ ಶಿಷ್ಯ ರನ್ನಾಗಿ ಸ್ವೀಕರಿಸುತ್ತಾರೆ.

 ರಾಯರ ಮೃತಿಕಾ ಬೃಂದಾವನ:
 ಶಿಷ್ಯತ್ವ ಸ್ವೀಕಾರದ ಪ್ರತೀಕವಾಗಿ ನಮ್ಮ ಕುಲ ಗುರುಗಳಾದ ಮಂತ್ರಾಲಯ ಗುರುಸೌರ್ವಭೌಮರ ಬೃಂದಾವನ ಪ್ರತಿಷ್ಠಾಪಿಸಲು ಶ್ರೀ ಅಪ್ಪಾವರು ಇಚಿಸುತ್ತಾರೆ. ಅಪ್ಪಾವರ ಅಜ್ಞೆಯಂತೆ ಶ್ರೀ ಯೋಗಿ ನಾರಾಯಣಾಚಾರ್ಯರು ಬೃಂದಾವನ ಕೆತ್ತನೆ ಮಾಡುತ್ತಾರೆ.ಶ್ರೀ ಅಪ್ಪಾವರು ವೀರ ನಾರಾಯಣನ ಸನ್ನಿಧಾನದಲ್ಲಿಯೇ ರಾಯರ ಭವ್ಯ ಬೃಂದಾವನವನು ಪ್ರತಿಷ್ಠಾಪನೆ ಮಾಡುತ್ತಾರೆ.

 ಶಿಲ್ಪಕಲಾ ನಿಪುಣ :
ಶ್ರೀ ಅಪ್ಪಾವರು ಹಾಗೂ ವೀರ ನಾರಾಯಣನ ಅನುಗ್ರಹದಿಂದ ಶ್ರೀ ಯೋಗಿ ನಾರಾಯಣಾಚಾರ್ಯರು ಶಿಲ್ಪಕಲೆಯ ಅನುಗ್ರಹ ಹೊಂದಿರುತ್ತಾರೆ. ವೀರ ನಾರಾಯಣನ ಸನ್ನಿಧಾನದಲ್ಲಿಯೇ ರಾಯರ ಬೃಂದಾವನ , ಅಪ್ಪಾವರ ಕಟ್ಟೆಯಲ್ಲಿ ಮಂಟಪದಲ್ಲಿ ಕೆತ್ತನೆಗಳು , ಮಂತ್ರಾಲಯದ ತುಂಗಾ ತಟದಲ್ಲಿ ರಾಯರು ಅಹ್ನಿಕ ಮಾಡುತಿದ್ದ ಸ್ಥಳ ಗುರುತಿಸಿ ಅಲ್ಲಿ ಅವತಾರತ್ರಯ ಪ್ರಾಣದೇವರು , ಅಪ್ಪಾವರ ಕಟ್ಟೆಯಲ್ಲಿ ಶಾಲಿಗ್ರಾಮ ಶಿಲೆಯಲ್ಲಿ ಚತುರ್ಭುಜ ವೇಣುಗೋಪಾಲ ಹಾಗು ಶ್ರೀ ಅಪ್ಪಾವರ ಭವ್ಯವಾದ ಮೂರ್ತಿಯು ಶ್ರೀ ಯೋಗಿ ನಾರಾಯಣಾಚಾರ್ಯರ ನೈಪುಣ್ಯತೆ ತೋರಿಸುತ್ತೆ.

 ಶ್ರೀ ಅಪ್ಪಾವರ  ಸ್ತೋತ್ರ :
ಶ್ರೀ ಆಚಾರ್ಯಯರು ತಮ್ಮ  ಗುರುಗಳಾದ ಶ್ರೀ ಅಪ್ಪಾವರ ಮಹಿಮೆ ಸಾರುವ ಶ್ರೀ ಇಭಾರಾಮಪುರ ಶ್ರೀ ಕೃಷ್ಣಾರ್ಯ ಸ್ತೋತ್ರ ರಚಿಸಿದ. ತಾವು ಪ್ರತೀಕ್ಷ್ಯವಾಗಿ ಕಂಡ ಹಾಗು ಶ್ರುತಿ ಸ್ಮೃತಿ ಸಮ್ಮತಿಸುವ ಮಹಿಮೆಗಳು ಮತ್ತು ಆ ಮಹಿಗಳು ಯಾವ ಯಾವ ಪುರಾಣಗಳಲ್ಲಿ ಉಲೇಖವಾಗಿದೇ ಎಂದು  ಸ್ತೋತ್ರಮಾಡಿದರೆ.


 ಅಪರೋಕ್ಷ ಜ್ಞಾನಿಗಳು :

ಸುರಪುರದ ಆನಂದ ದಾಸರು ತಮ್ಮ ಸಮಕಾಲೀನ ಎಲ್ಲಾ ಅಪರೋಕ್ಷ ಜ್ಞಾನಗಳನು ಗುರುತಿಸಿ ರಚಿಸಿದ ಕೀರ್ತನೆ

ಶ್ರೀ ರಾಘವೇಂದ್ರರಾಯರ ಪಾದಾಂಬುಜ ।
ದಾರಾಧಕರ ಕೊಂಡಾಡಿರೋ ।। ಪಲ್ಲವಿ ।।

ಹಲವು ಸಜ್ಜನರೊಳು ತಿಳಿಸಿ ಕೊಳ್ಳದಲಿಪ್ಪ ।
ಬಲವಂತ ಯೋಗಿ ನಾರಾಯಣಾರ್ಯರ ।।

ಮೇಲೆಕಂಡ ಕೀರ್ತನೆಯಿಂದ ಶ್ರೀ ಯೋಗಿ ನಾರಾಯಣಾಚಾರ್ಯರು ಗುರು ಸಾರ್ವಭೌಮ ಶ್ರೀ ಅಪ್ಪಾವರ ಹಾಗೂ ತಮ್ಮ ಇಷ್ಟ ದೈವ ಶ್ರೀ ವೀರ ನಾರಾಯಣನ ಅನುಗ್ರಹಕೆ ಪಾತ್ರರಾಗಿ ಅಪರೋಕ್ಷ   ಜ್ಞಾನ ಹೊಂದಿದ್ದಾರೆ ಎಂದು ತಿಳಿಯಬಹುದು.

- ಇಭರಾಮಪುರಾಧೀಶ
*****

ಶ್ರೀ ಇಭರಾಮಪುರಾಧೀಯ ನಮಃ || 
 || ಶ್ರೀ ಅಪ್ಪಾವರ ಮಹಿಮೆ || 


 ಪರಿಮಳ ಶರೀರ : 

ನದಿಪ್ರದೇಶೇ ಪರಿತೋಪಿ ಸ್ನಾನೇನ ಸುಗಂಧಿಮನ್ |
ಸ್ಮೃತಿಮಾತ್ರಾಚ್ಚ ಕೇಷಾಂಚಿತ್ ಯತ್ರಕುತ್ರಾಪಿ ವಾಸಿನಾಮ್ ||

ಶ್ರೀ ಅಪ್ಪಾವರ ಶಿಷ್ಯರಾದ ಶ್ರೀಯೋಗಿ ನಾಯಣಾಚಾರ್ಯರು ರಚಿಸಿದ ಶ್ರೀ ಇಭರಾಮಪುರ ಶ್ರೀಕೃಷ್ಣಾರ್ಯ ಸ್ತೋತ್ರದಲ್ಲಿ ಬರುವ ಶ್ಲೋಕವಿದು. ಶ್ರೀ ಅಪ್ಪಾವರ ಮಹಿಮೆ ಸಾರುವ ಈ ಸ್ತೋತ್ರ ಮಾಲೆಯಲ್ಲಿ ಶ್ರೀ ಆಚಾರ್ಯರು ಹೇಳುವಂತೆ ಶ್ರೀ ಅಪ್ಪಾವರು ನದಿ ಪ್ರದೇಶದಲ್ಲಿ ಸ್ನಾನ ಮಾಡಿದಾಗ ಸುಗಂಧ ಪರಿಮಳದ ಸುವಾಸನೆ ಅವರ ದೇಹದಿಂದ ಹೊರಬರುತಿತ್ತು. 

 ಕುಹಕಿಗಳಿಂದ  ಪರೀಕ್ಷೆ : 
 ಒಂದು ಬಾರಿ ಶ್ರೀ ಅಪ್ಪಾವರು ದಕ್ಷಿಣ ಭಾರತದ ಯಾತ್ರೆಯ ಸಮಯದಲ್ಲಿ ಕಾವೇರಿ ಸ್ನಾನಕ್ಕೆಂದು ಶ್ರೀರಂಗಪಟ್ಟಣ ನಗರಕ್ಕೆ ಬಂದಾಗ ಅಲ್ಲಿ ಕೆಲ ಕುಹಕಿಗಳು ಶ್ರೀ ಅಪ್ಪಾವರು ಯಾವುದೋ ದ್ರವ್ಯ ಧಾರಣೆ ಮಾಡಿಕೊಂಡು ಜನರಿಗೆ ತಪ್ಪು ಗ್ರಹಿಕೆ ಮಾಡುತ್ತಿದ್ದಾರೆಯೆಂದು ಅವರ ಪರೀಕ್ಷೆ ಮಾಡುಲು ಮುಂದಾಗುತ್ತಾರೆ.

"ನೀವು ಸ್ನಾನ ಮಾಡಿದಾಗ  ಪರಿಮಳದ‌ ಸುವಾಹನೆ ಬರುವುದೆಂದು  ಕೇಳಿದ್ದೇವೆ , ಅದನ್ನು ನೀವು ಈಗ ಕಾವೇರಿ ನದಿಯಲ್ಲಿ ಸ್ನಾನಮಾಡಿ ತೋರಿಸಿ" ಎನ್ನುತ್ತಾರೆ.

ಆಗ ಶ್ರೀ ಅಪ್ಪಾವರು ಸ್ನಾನ ಮಾಡಿದಾಗ ಕಾವೇರಿ ನದಿಯಲ್ಲಿ  ಮತ್ತು ಸುತ್ತ- ಮುತ್ತಲಿನ ಗ್ರಾಮದಲ್ಲಿ ಪರಿಮಳದ ಸುವಾಸನೆ ಹರಡಿತು. ಅಪ್ಪಾವರ ಪರೀಕ್ಷೆ ಮಾಡಲು ಬಂದ ಆ ಕುಹಕಿಗಳಿಗೆ ತಮ್ಮ ತಪ್ಪಿನ ಅರಿವಾಗಿ ಅಪ್ಪಾವರ ಬಳಿ ಶರಣಾಗುತ್ತಾರೆ. ಕರುಣಾ ಸಾಗರರಾದ ಅಪ್ಪಾವರು ಪರೀಕ್ಷೆ ಮಾಡಲು ಬಂದ‌ ಆ  ಜನರನ್ನು  ಕ್ಷಮಿಸಿ ಅನುಗ್ರಹಿಸುತ್ತಾರೆ.

ಶ್ರೀ ಅಪ್ಪಾವರು ಬರೆದ ಪತ್ರಗಳು, ಧರಿಸಿದ ಉಡುಪುಗಳು ,ಅವರು ನದಿಯಲ್ಲಿ ಸ್ನಾನ ಮಾಡಿದಾಗ, ಅವರ ಕೈನಿಂದ ಬಂದ ವಸ್ತುಗಳಲ್ಲಿ ಪರಿಮಳದ ಸುವಾಸನೆ ಬರುತ್ತಿದ್ದ ಕಾರಣ ಶ್ರೀ ಅಪ್ಪಾವರು ಶ್ರೀ ಪರಿಮಳಾಚಾರ್ಯರು ಎಂದು ಪ್ರಸಿದ್ಧಿಯಾಗಿದ್ದರು.

ಶ್ರೀ ಅಪ್ಪಾವರು ನಿರಂತರವಾಗಿ ಶ್ರೀಮನ್ಯಾಯ ಸುಧಾ ಪರಿಮಳ ಗ್ರಂಥದ ಶ್ರವಣ, ಮನನ, ಧ್ಯಾನ , ಪಾಂಡವರು ಪೂಜಿಸಿದ ಅರ್ಜುನ ಕರಾರ್ಜಿತ ಪಂಚಮುಖಿ ಮುಖ್ಯಪ್ರಾಣದೇವರ ನಿರಂತರ ಸೇವೆ, ಉಪಾಸನೆ ಮತ್ತು ಅನುಷ್ಠಾನ ಹಾಗೂ  ಶ್ರೀ ರಾಯರ ಮತ್ತು  ವಾಯುದೇವರ ವಿಶೇಷ ಕಾರುಣ್ಯದಿಂದ ಶೃತಿ- ಸ್ಮೃತಿ ಸಮ್ಮತವಾದ ಈ ಮಹಿಮೆಗಳು ಗೋಚರವಾಗುತ್ತಿತು ಎಂದು ಅಪ್ಪಾವರ ಶಿಷ್ಯರಾದ ಶ್ರೀಯೋಗಿ ನಾಯಣಾಚಾರ್ಯರು  ರಚಿಸಿದ ಶ್ರೀ ಇಭರಾಮಪುರ ಶ್ರೀಕೃಷ್ಣಾರ್ಯ ಸ್ತೋತ್ರದಲ್ಲಿ ಸ್ಪಷ್ಟವಾಗಿ ತಿಳಿಸುತ್ತಾರೆ  . 

ಈಗಲೂ ಶರಣುಬಂದ ಭಕ್ತಜನರಿಗೆ ತಮ್ಮ ಬಹಿರ್ಮುಖತ್ವವನು ಪರಿಮಳದ ಸುವಾಸನೆ ಮೂಲಕ ಅನುಗ್ರಹಿಸುತ್ತಿದ್ದಾರೆ.

 ಶ್ರೀ ಇಂದಿರೇಶ ದಾಸರು ಹೇಳುವಂತೆ : 

 ಅವಾವ ಯೋಗಿಗಳವತಾರ | ಎಂದು 
 ನಾ ವರ್ಣಿಸಲು ಪರಿಮಳ ಶರೀರ |
ಸೇವಿಪ ಸುಜನರ ಮಂದಾರ | ತರು
ಪಾವನಾತ್ಮಕ ಪುಣ್ಯ ಪುರುಷ ಉದಾರ |
ಈ ವಿಧದಿ ಮಹಿಮೆಗಳು ಮಾತ್ತಾವ ನರರಿಗೆ ದೊರಕುವುದು | ಶ್ರೀದೇವಿರಮಣ ಸಹಾಯದಿಂದ  ಧರಾವಲಯದಿ ದಿಗ್ವಿಜಯ ಗೈಸಿದ || 

 ಕಾರ್ಪರ ನರಹರಿ ದಾಸರು: 

ವರ್ಣಿಸಲೊಶವಲ್ಲ ಚರಣಯುಗ್ಮಾರಭ್ಯ
ಶಿರಪರಿಯಂತರ ಗುರುಗಳಾಕೃತಿಯನ್ನು
ನಿರುತ ಧ್ಯಾನಿಪರಿಗೆ ಪರಮ ಮಂಗಳವೀವ
ಪರಿಶೋಭಿಸುವ ರತ್ನಾಭರಣದಿಂದೋಪ್ಪುವ
ಸ್ವರ್ಣತುಲಸಿ ಮುಕ್ತಹಾರ ಭೂಷಿತ ಕಂಧರ
ಸುಂದರವಾದ ಮುಖದೊಳು ಮಂದಸ್ಮಿರ
 ಕಸ್ತೂರಿಯಂತೆ ಪರಿಮಳಾನ್ವಿತ ಶರೀರ 
ಮಂತ್ರಾಲಯ ಗುರುರಾಘವೇಂದ್ರರ ಕರುಣಾಸುಪಾತ್ರರ 

 - ಇಭರಾಮಪುರಾಧೀಶ

*****

ಶ್ರೀ ಅಪ್ಪಾವರಿಗೆ ದೇಶದೆಲ್ಲೆಡೆ ಹಲವಾರು ಶಿಷ್ಯರು ಅಪ್ಪಾವರ ಅನುಗ್ರಹಕ್ಕೆ ಪಾತ್ರರಾಗಿದ್ದರು. ಅವರ ಪ್ರಮುಖ ಶಿಷ್ಯರಲ್ಲಿ ಶ್ರೀ ಯೋಗಿ ನಾರಾಯಣಾಚಾರ್ಯರು ಒಬ್ಬರು. 

ಶ್ರೀ ನಾರಾಯಣಾಚಾರ್ಯರು ಮೂಲತಃ ಗದುಗ್ ನವರು. ಆಚಾರ್ಯರು ಗದಗ್ ವೀರ ನಾರಾಯಣನ ಅಂತರಂಗ ಭಕ್ತರು. ತಮ್ಮ ಸ್ವರೂಪೊದ್ದಾರಕ ಗುರುಗಳ  ಪ್ರಾಪ್ತಿಗಾಗಿ ನಿತ್ಯವೂ ಶ್ರೀ ನಾರಾಯಣಾಚಾರ್ಯರು ವೀರ ನಾರಾಯಣನ ಸೇವೆ ಮಾಡುತಿದ್ದರು. ಆಚಾರ್ಯರ ನಿಷ್ಠೆಯ ಸೇವೆಗೆ ಮೆಚ್ಚಿದ ವೀರ ನಾರಾಯಣ ದೇವರು 
ಸ್ವಪ್ನದಲ್ಲಿ ಆಚಾರ್ಯರಿಗೆ ನಿಮ್ಮ ಸ್ವರೂಪೊದ್ದಾರಕರು ಅತಿ ಶೀಘ್ರದಲ್ಲಿ ನಿನಗೆ ಭೇಟಿ ಆಗುತ್ತಾರೆ ಅಂತ ಸೂಚನೆ ಕೊಡುತ್ತಾನೆ.

ಶ್ರೀ ಅಪ್ಪಾವರು ಸಂಚಾರದ ಅನ್ವಯ ಗದುಗಿಗೆ ಬಂದಿರುತ್ತಾರೆ. ಅಲ್ಲಿ ಮಧ್ಯಾಹ್ನದ ಸಮಯಕೆ ಶ್ರೀ ವೀರ ನಾರಾಯಣನ ದರ್ಶನಕ್ಕೆ ಅಪ್ಪಾವರು ಬಂದಿರುತ್ತಾರೆ , ಬಂದ ಸಮಯದಲ್ಲಿ ಅರ್ಚಕರು ದೇವಸ್ಥಾನ ಗರ್ಭಗುಡಿ ಬೀಗ ಹಾಕಿರುತ್ತಾರೆ. ದೇವಸ್ಥಾನದ ಪ್ರಾಂಗಣದಲ್ಲಿ ಅಪ್ಪಾವರು ವೀರ ನಾರಾಯಣನ ಪ್ರಾರ್ಥಿಸುತ್ತಾ
- ಸ್ವಾಮಿ ನಾನು ನಿನ್ನ ದರ್ಶನಕ್ಕಾಗಿ  ಇಭರಾಮಪುರದಿಂದ ಬಂದಿದ್ದೇನೆ ಅಂತ ಪ್ರಾರ್ಥಿಸಿದಾಗ , ದೇವಸ್ಥಾನದ ಗರ್ಭಗುಡಿಯ ಬಾಗಿಲು ತಾನಾಗಿಯೇ ತೆರೆಯುತ್ತದೆ. 

ಇದೇ ಸಮಯದಲ್ಲಿ ಶ್ರೀ ಯೋಗಿ ನಾರಾಯಣಾಚಾರ್ಯರು ದೇವಸ್ಥಾನ ಪ್ರಾಂಗಣದಲ್ಲಿಯೇ ಇರುತ್ತಾರೆ. ಶ್ರೀ ಅಪ್ಪಾವರನ್ನು ಯಾರೋ ಯಾತ್ರಿಕರು ನಾರಾಯಣನ ದರ್ಶನಕ್ಕಾಗಿ ಬಂದಿದ್ದಾರೆ ಎಂದು ತಿಳಿದಿರುತ್ತಾರೆ ಆದರೆ ಅಲ್ಲಿ ನಡೆದಿದ್ದು ಬೇರೆ. 
ಅಪ್ಪಾವರ ಪ್ರಾರ್ಥನೆ ದೇವಸ್ಥಾನದ ಗರ್ಭಗುಡಿಯ ಬಾಗಿಲು ತಾನಾಗಿಯೇ ತೆರೆದುದನ್ನು ಕಂಡು ಆಚಾರ್ಯರು ಒಂದು ಕ್ಷಣ ಏನು ತೋಚದೆ ಬೆರಗಾಗುತ್ತಾರೆ .

 ಶ್ರೀ ಅಪ್ಪಾವರು  ವೀರ ನಾರಾಯಣನ ಜೊತೆ ನೇರವಾಗಿ ಸಂದರ್ಶನ ಮಾಡುವುದನ್ನು ಕಂಡು ಶ್ರೀ ಯೋಗಿ  ನಾರಾಯಣಾಚಾರ್ಯರು ಅಪ್ಪಾವರಲ್ಲಿ ಶಿಷ್ಯ ಸ್ವೀಕಾರಕ್ಕಾಗಿ ಪ್ರಾರ್ಥನೆ ಮಾಡುತ್ತಾರೆ. ಆಚಾರ್ಯರ ಪ್ರಾರ್ಥನೆಗೆ ಶ್ರೀ ಅಪ್ಪಾವರು ಸಂತುಷ್ಟರಾಗಿ ಅವರನ್ನು ತಮ್ಮ ಶಿಷ್ಯ ರನ್ನಾಗಿ ಸ್ವೀಕರಿಸುತ್ತಾರೆ.

 ರಾಯರ ಮೃತಿಕಾ ಬೃಂದಾವನ: 
 ಶಿಷ್ಯತ್ವ ಸ್ವೀಕಾರದ ಪ್ರತೀಕವಾಗಿ ನಮ್ಮ ಕುಲ ಗುರುಗಳಾದ ಮಂತ್ರಾಲಯ ಗುರುಸೌರ್ವಭೌಮರ ಬೃಂದಾವನ ಪ್ರತಿಷ್ಠಾಪಿಸಲು ಶ್ರೀ ಅಪ್ಪಾವರು ಇಚಿಸುತ್ತಾರೆ. ಅಪ್ಪಾವರ ಅಜ್ಞೆಯಂತೆ ಶ್ರೀ ಯೋಗಿ ನಾರಾಯಣಾಚಾರ್ಯರು ಬೃಂದಾವನ ಕೆತ್ತನೆ ಮಾಡುತ್ತಾರೆ.ಶ್ರೀ ಅಪ್ಪಾವರು ವೀರ ನಾರಾಯಣನ ಸನ್ನಿಧಾನದಲ್ಲಿಯೇ ರಾಯರ ಭವ್ಯ ಬೃಂದಾವನವನು ಪ್ರತಿಷ್ಠಾಪನೆ ಮಾಡುತ್ತಾರೆ. 

 ಶಿಲ್ಪಕಲಾ ನಿಪುಣ : 
ಶ್ರೀ ಅಪ್ಪಾವರು ಹಾಗೂ ವೀರ ನಾರಾಯಣನ ಅನುಗ್ರಹದಿಂದ ಶ್ರೀ ಯೋಗಿ ನಾರಾಯಣಾಚಾರ್ಯರು ಶಿಲ್ಪಕಲೆಯ ಅನುಗ್ರಹ ಹೊಂದಿರುತ್ತಾರೆ. ವೀರ ನಾರಾಯಣನ ಸನ್ನಿಧಾನದಲ್ಲಿಯೇ ರಾಯರ ಬೃಂದಾವನ , ಶ್ರೀ ನರಸಿಂಹ ದೇವರು , ಅಪ್ಪಾವರ ಕಟ್ಟೆಯಲ್ಲಿ ಮಂಟಪದಲ್ಲಿ ಕೆತ್ತನೆಗಳು , ಮಂತ್ರಾಲಯದ ತುಂಗಾ ತಟದಲ್ಲಿ ರಾಯರು ಅಹ್ನಿಕ ಮಾಡುತಿದ್ದ ಸ್ಥಳ ಗುರುತಿಸಿ ಅಲ್ಲಿ ಅವತಾರತ್ರಯ ಪ್ರಾಣದೇವರು , ಅಪ್ಪಾವರ ಕಟ್ಟೆಯಲ್ಲಿ ಶಾಲಿಗ್ರಾಮ ಶಿಲೆಯಲ್ಲಿ ಚತುರ್ಭುಜ ವೇಣುಗೋಪಾಲ ಹಾಗು ಶ್ರೀ ಅಪ್ಪಾವರ ಭವ್ಯವಾದ ಮೂರ್ತಿಯು ಶ್ರೀ ಯೋಗಿ ನಾರಾಯಣಾಚಾರ್ಯರ ನೈಪುಣ್ಯತೆ ತೋರಿಸುತ್ತೆ.

 ತೀರ್ಥ ಯಾತ್ರೆ: 
ಶ್ರೀ ಅಪ್ಪಾವರು ಒಂದು ಬಾರಿ ದಕ್ಷಿಣ ಭಾರತದ ತೀರ್ಥ ಯಾತ್ರೆ ಮಾಡಲು ಇಚ್ಚಿಸುತ್ತಾರೆ. ಇದಕ್ಕಾಗಿಯೇ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಪರಮ ಗುರುಗಳಾದ ಶ್ರೀ ವಿಜಯೀಂದ್ರತೀರ್ಥರ ದರ್ಶನ ಮಾಡಲು ನಿರ್ಧರಿಸುತ್ತಾರೆ. ಯಾತ್ರೆಯ ಬಗ್ಗೆ ಶ್ರೀ ಅಪ್ಪಾವರು ತಮ್ಮ ಶಿಷ್ಯರಾದ ಯೋಗಿ ನಾರಾಯಣಾಚಾರ್ಯರ ಹತ್ತಿರ  ಬಗ್ಗೆ ಹೇಳಿಕೊಳ್ಳುತ್ತಾರೆ.

ಶ್ರೀ ಯೋಗಿನಾರಾಯಣಾಚಾರ್ಯರು ಅಪ್ಪಾವರ ಮಾತಿನಂತೆಯೇ ಎಲ್ಲಾ ಸಿದ್ಧತೆಗಳನ್ನು ಮಾಡಿರುತ್ತಾರೆ. ದೂರದ ಕುಂಭಕೋಣಕೆ ತಲುಪಲು ಸುಮಾರು ವಾರದ ಸಮಯಬೇಕು. ವಾರಗಳೇ ಕಳೆದವು ಶ್ರೀ ವಿಜಯೀಂದ್ರ ತೀರ್ಥರ ಆರಾಧನೆ ಹತ್ತಿರವಾಗುತ್ತದೆ ಜೇಷ್ಟ ಮಾಸದ ಕೃಷ್ಣ ಪಕ್ಷ ಏಕಾದಶಿಯೂ ಕೂಡ ಬಂತು ಮರುದಿನವೇ ಶ್ರೀ ವಿಜಯೀಂದ್ರ ತೀರ್ಥರ ಮಧ್ಯಾರಾಧನೆ ಆದರೂ ಶ್ರೀ ಅಪ್ಪಾವರು ಯಾತ್ರೆಗೆ ಯಾವಾಗ ಹೊರಡುವ  ಬಗ್ಗೆ ಏನು ಸುಳಿವು ಕೊಡಲಿಲ್ಲ.

ಏಕಾದಶಿಯ ರಾತ್ರಿ ಅಪ್ಪಾವರು ಶ್ರೀ ನಾರಾಯಣಾಚಾರ್ಯರಿಗೆ ಕರೆದು ನಾಳೆ ಶ್ರೀ ವಿಜಯೀಂದ್ರರ ಮಧ್ಯಾರಾಧನೆ ದರ್ಶನಕ್ಕೆ ಹೊರಡಬೇಕು ಬೆಳಗ್ಗೆ ಬೇಗ ಎದ್ದು ಅಹ್ನಿಕಾದಿಗಳನ್ನು ಮುಗಿಸಲು ಸೂಚಿಸುತ್ತಾರೆ. ದರ್ಶನದ ಭಾಗ್ಯ ದೊರೆಯುತ್ತದೆ ಎನ್ನುವ ಖುಷಿಯಲ್ಲಿ ಇದ್ದ ಆಚಾರ್ಯರಿಗೆ ಇನ್ನೊಂದುಕಡೆ ದೂರದ ಕುಂಭಕೋಣಕೆ ಬೆಳಗಾಗುವುದರಲ್ಲಿ ಹೇಗೆ ಹೋಗಿ ತಲುಪಬೇಕೆಂಬ ಗೊಂದಲ ಮನಸ್ಸಿನಲ್ಲಿ ಮೂಡತ್ತದೆ.

ಆದರೂ  ಶ್ರೀಅಪ್ಪಾವರ ಆಜ್ಞೆ ಎಂದು ಭಾವಿಸಿ ಬೆಳಗ್ಗೆ ಬೇಗ ಎದ್ದು ಅಹ್ನೀಕಾದಿಗಳನ್ನು ಮುಗಿಸಿದ ಆಚಾರ್ಯರು ಶ್ರೀ ಅಪ್ಪಾವರ ಬಳಿ ಬಂದು ತಮ್ಮ ಮನದಲ್ಲಿನ ಗೊಂದಲಗಳನ್ನು  ಹೇಳಿಕೊಳ್ಳುತ್ತಾರೆ . ಅಪ್ಪಾವರು ಆಚಾರ್ಯರ ಗೊಂದಲಕ್ಕೆ ನಗುತ್ತಾ ನನ್ನ ಕೈ ಹಿಡಿಯಿರಿ ಎನ್ನುತ್ತಾರೆ. 

ಶ್ರೀ ಅಪ್ಪಾವರ ಕೈ ಹಿಡಿದ ಶ್ರೀ ಯೋಗಿ ನಾರಾಯಣಾಚಾರ್ಯರಿಗೆ ಕ್ಷಣಮಾತ್ರದಲ್ಲಿ ಕುಂಭಕೋಣಕೆ ತಲುಪಿಸಿ ಚತುರಧಿಕ ಶತಗ್ರಂಥರತ್ನಗಳ ಒಡೆಯರಾದ ಶ್ರೀ ವಿಜಯೀಂದ್ರ ತೀರ್ಥರ ದರ್ಶನವನ್ನು ಮಾಡಿಸುತ್ತಾರೆ.

************

|| ಶ್ರೀಮನ್ಮೂಲರಾಮೋ ವಿಜಯತೇ ||
|| ಶ್ರೀಗುರುರಾಜೋ ವಿಜಯತೇ||
|| ಶ್ರೀ ಇಭರಾಮಪುರಾಧೀಯ ನಮಃ ||

ಶ್ರೀ ಯೋಗಿ ನಾರಾಯಣಾಚಾರ್ಯರು

ವೀರನಾರಾಯಣಕೃಪಾಪಾತ್ರಂ ಕೃಷ್ಣಾರ್ಯಗುರುಸೇವಕಮ್ | 
ಜ್ಞಾನವೈರಾಗ್ಯಸಂಪನ್ನಂ ಯೋಗೀನಾರಾಯಣಗುರುಂ ಭಜೇ ||

ಶ್ರೀ ಯೋಗಿ ನಾರಾಯಣಾಚಾರ್ಯರು ಕಲಿಯುಗ ಕಲ್ಪವೃಕ್ಷ ಕಾಮಧೇನು ಶ್ರೀರಾಘವೇಂದ್ರ ಗುರುಸಾರ್ವಭೌಮರ ವಿಶೇಷ ಕರುಣಾಸುಪಾತ್ರರು  
ಹಾಗೂ ಶ್ರೀ ಅಪ್ಪಾವರು ಸಾಕ್ಷಾತ್ ಶಿಷ್ಯರು.

ಶ್ರೀಯೋಗಿ ನಾರಾಯಣಾಚಾರ್ಯರು ವಿದ್ಯಾಸಂಪನ್ನರಾದ ಶ್ರೀ ಉಪಾಧ್ಯಾಯ ರಾಮಚಾರ್ಯರಲ್ಲಿ ಸಕಲ ವೇದಾಂತ ಶಾಸ್ತ್ರವನ್ನು ಅಧ್ಯಯನ ಮಾಡಿದರು.  

ಶ್ರೀ ನಾರಾಯಣಾಚಾರ್ಯರು ಮೂಲತಃ ಗದುಗಿನವರು. ಆಚಾರ್ಯರು ಗದಗ್ ವೀರ ನಾರಾಯಣನ ಅಂತರಂಗ ಭಕ್ತರು. ತಮ್ಮ ಸ್ವರೂಪೊದ್ದಾರಕ ಗುರುಗಳ  ಪ್ರಾಪ್ತಿಗಾಗಿ ನಿತ್ಯವೂ ಶ್ರೀ ನಾರಾಯಣಾಚಾರ್ಯರು ವೀರ ನಾರಾಯಣನ ಸೇವೆ ಮಾಡುತಿದ್ದರು. 

ಸ್ವರೂಪೋಧಾರಕ ಗುರುಗಳ ಪ್ರಾಪ್ತಿ

ಆಚಾರ್ಯರ ನಿಷ್ಠೆಯ ಸೇವೆಗೆ ಮೆಚ್ಚಿದ ವೀರ ನಾರಾಯಣ ದೇವರು ಸ್ವಪ್ನದಲ್ಲಿ ಆಚಾರ್ಯರಿಗೆ ನಿಮ್ಮ ಸ್ವರೂಪೊದ್ದಾರಕರು ಅತಿ ಶೀಘ್ರದಲ್ಲಿ ನಿನಗೆ ಭೇಟಿ ಆಗುತ್ತಾರೆ ಅಂತ ಸೂಚನೆ ಕೊಡುತ್ತಾನೆ.

ಶ್ರೀ ಅಪ್ಪಾವರು ಸಂಚಾರದ ಅನ್ವಯ ಗದುಗಿಗೆ ಬಂದಿರುತ್ತಾರೆ. ಅಲ್ಲಿ ಮಧ್ಯಾಹ್ನದ ಸಮಯಕೆ ಶ್ರೀ ವೀರ ನಾರಾಯಣನ ದರ್ಶನಕ್ಕೆ ಅಪ್ಪಾವರು ಬಂದರು , ಬಂದ ಸಮಯದಲ್ಲಿ ಅರ್ಚಕರು ದೇವಸ್ಥಾನ ಗರ್ಭಗುಡಿ ಬೀಗ ಹಾಕಿರುತ್ತಾರೆ. ದೇವಸ್ಥಾನದ ಪ್ರಾಂಗಣದಲ್ಲಿ ಅಪ್ಪಾವರು ವೀರ ನಾರಾಯಣನ ಪ್ರಾರ್ಥಿಸುತ್ತಾ ಸ್ವಾಮಿ ನಾನು ನಿನ್ನ ದರ್ಶನಕ್ಕಾಗಿ  ಇಭರಾಮಪುರದಿಂದ ಬಂದಿದ್ದೇನೆ ಅಂತ ಪ್ರಾರ್ಥಿಸಿದಾಗ , ದೇವಸ್ಥಾನದ ಗರ್ಭಗುಡಿಯ ಬಾಗಿಲು ತಾನಾಗಿಯೇ ತೆರೆಯುತ್ತದೆ. 

ಇದೇ ಸಮಯದಲ್ಲಿ ಶ್ರೀ ಯೋಗಿ ನಾರಾಯಣಾಚಾರ್ಯರು ದೇವಸ್ಥಾನ ಪ್ರಾಂಗಣದಲ್ಲಿಯೇ ಇರುತ್ತಾರೆ. ಶ್ರೀ ಅಪ್ಪಾವರನ್ನು ಯಾರೋ ಯಾತ್ರಿಕರು ನಾರಾಯಣನ ದರ್ಶನಕ್ಕಾಗಿ ಬಂದಿದ್ದಾರೆ ಎಂದು ತಿಳಿದಿರುತ್ತಾರೆ ಆದರೆ ಅಲ್ಲಿ ನಡೆದಿದ್ದು ಬೇರೆ. ಅಪ್ಪಾವರ ಪ್ರಾರ್ಥನೆ ದೇವಸ್ಥಾನದ ಗರ್ಭಗುಡಿಯ ಬಾಗಿಲು ತಾನಾಗಿಯೇ ತೆರೆದುದನ್ನು ಕಂಡು ಆಚಾರ್ಯರು ಒಂದು ಕ್ಷಣ ಏನು ತೋಚದೆ ಬೆರಗಾಗುತ್ತಾರೆ .

 ಶ್ರೀ ಅಪ್ಪಾವರು ವೀರ ನಾರಾಯಣನ ಜೊತೆ ನೇರವಾಗಿ ಸಂದರ್ಶನ ಮಾಡುವುದನ್ನು ಕಂಡು ಸ್ವಪ್ನದಲ್ಲಿ ಸೂಚಿಸಿದ ಹಾಗೆ ತಮಗೆ ಯೋಗ್ಯವಾದ ಗುರುಗಳ ಪ್ರಾಪ್ತಿಯಾಯಿತು ಎಂದು  ಶ್ರೀ ಯೋಗಿ  ನಾರಾಯಣಾಚಾರ್ಯರು ಅಪ್ಪಾವರಲ್ಲಿ ಶಿಷ್ಯ ಸ್ವೀಕಾರಕ್ಕಾಗಿ ಪ್ರಾರ್ಥನೆ ಮಾಡುತ್ತಾರೆ. ಆಚಾರ್ಯರ ಪ್ರಾರ್ಥನೆಗೆ ಶ್ರೀ ಅಪ್ಪಾವರು ಸಂತುಷ್ಟರಾಗಿ ಅವರನ್ನು ತಮ್ಮ ಶಿಷ್ಯ ರನ್ನಾಗಿ ಸ್ವೀಕರಿಸುತ್ತಾರೆ.

 ರಾಯರ ಮೃತಿಕಾ ಬೃಂದಾವನ ಪ್ರತಿಷ್ಠಾಪನೆ: 
 ಶಿಷ್ಯತ್ವ ಸ್ವೀಕಾರದ ಪ್ರತೀಕವಾಗಿ ನಮ್ಮ ಕುಲ ಗುರುಗಳಾದ ಮಂತ್ರಾಲಯ ಗುರುಸಾರ್ವಭೌಮರ ಬೃಂದಾವನ ಪ್ರತಿಷ್ಠಾಪಿಸಲು ಶ್ರೀ ಅಪ್ಪಾವರು ಇಚಿಸುತ್ತಾರೆ. ಅಪ್ಪಾವರ ಅಜ್ಞೆಯಂತೆ ಶ್ರೀ ಯೋಗಿ ನಾರಾಯಣಾಚಾರ್ಯರು ಬೃಂದಾವನ ಕೆತ್ತನೆ ಮಾಡುತ್ತಾರೆ. ಶ್ರೀ ಅಪ್ಪಾವರು ವೀರ ನಾರಾಯಣನ ಸನ್ನಿಧಾನದಲ್ಲಿಯೇ ರಾಯರ ಭವ್ಯ ಬೃಂದಾವನವನು ಪ್ರತಿಷ್ಠಾಪನೆ ಮಾಡುತ್ತಾರೆ. 

 ಶಿಲ್ಪಕಲಾ ನಿಪುಣ : 
ಶ್ರೀ ಅಪ್ಪಾವರು ಹಾಗೂ ವೀರ ನಾರಾಯಣನ ಅನುಗ್ರಹದಿಂದ ಶ್ರೀ ಯೋಗಿ ನಾರಾಯಣಾಚಾರ್ಯರು ಶಿಲ್ಪಕಲೆಯ ಅನುಗ್ರಹ ಹೊಂದಿರುತ್ತಾರೆ. ವೀರ ನಾರಾಯಣನ ಸನ್ನಿಧಾನದಲ್ಲಿಯೇ ರಾಯರ ಬೃಂದಾವನ  , ಅಪ್ಪಾವರ ಕಟ್ಟೆಯಲ್ಲಿ ಮಂಟಪದಲ್ಲಿ ಕೆತ್ತನೆಗಳು , ಮಂತ್ರಾಲಯದ ತುಂಗಾ ತಟದಲ್ಲಿ ರಾಯರು ಅಹ್ನಿಕ ಮಾಡುತಿದ್ದ ಸ್ಥಳ ಗುರುತಿಸಿ ಅಲ್ಲಿ ಅವತಾರತ್ರಯ ಪ್ರಾಣದೇವರು , ಅಪ್ಪಾವರ ಕಟ್ಟೆಯಲ್ಲಿ ಶಾಲಿಗ್ರಾಮ ಶಿಲೆಯಲ್ಲಿ ಚತುರ್ಭುಜ ವೇಣುಗೋಪಾಲ ಹಾಗು ಶ್ರೀ ಅಪ್ಪಾವರ ಭವ್ಯವಾದ ಮೂರ್ತಿಯು ಶ್ರೀ ಯೋಗಿ ನಾರಾಯಣಾಚಾರ್ಯರ ನೈಪುಣ್ಯತೆ ತೋರಿಸುತ್ತೆ.

ಗುರುಗಳ ಅನುಗ್ರಹದಿಂದ ಯಾತ್ರೆ:

ಶ್ರೀ ಅಪ್ಪಾವರು ಒಂದು ಬಾರಿ ದಕ್ಷಿಣ ಭಾರತದ ತೀರ್ಥ ಯಾತ್ರೆ ಮಾಡಲು ಇಚ್ಚಿಸುತ್ತಾರೆ. ಇದಕ್ಕಾಗಿಯೇ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಪರಮ ಗುರುಗಳಾದ ಶ್ರೀ ವಿಜಯೀಂದ್ರತೀರ್ಥರ ದರ್ಶನ ಮಾಡಲು ನಿರ್ಧರಿಸುತ್ತಾರೆ. ಯಾತ್ರೆಯ ಬಗ್ಗೆ ಶ್ರೀ ಅಪ್ಪಾವರು ತಮ್ಮ ಶಿಷ್ಯರಾದ ಯೋಗಿ ನಾರಾಯಣಾಚಾರ್ಯರ ಹತ್ತಿರ  ಬಗ್ಗೆ ಹೇಳಿಕೊಳ್ಳುತ್ತಾರೆ.

ಶ್ರೀ ಯೋಗಿ ನಾರಾಯಣಾಚಾರ್ಯರು ಅಪ್ಪಾವರ ಮಾತಿನಂತೆಯೇ ಎಲ್ಲಾ ಸಿದ್ಧತೆಗಳನ್ನು ಮಾಡಿರುತ್ತಾರೆ. ದೂರದ ಕುಂಭಕೋಣಕೆ ತಲುಪಲು ಸುಮಾರು ವಾರದ ಸಮಯಬೇಕು. ವಾರಗಳೇ ಕಳೆದವು ಶ್ರೀ ವಿಜಯೀಂದ್ರ ತೀರ್ಥರ ಆರಾಧನೆ ಹತ್ತಿರವಾಗುತ್ತದೆ ಜೇಷ್ಟ ಮಾಸದ ಕೃಷ್ಣ ಪಕ್ಷ ಏಕಾದಶಿಯೂ ಕೂಡ ಬಂತು ಮರುದಿನವೇ ಶ್ರೀ ವಿಜಯೀಂದ್ರ ತೀರ್ಥರ ಆರಾಧನೆ ಆದರೂ ಶ್ರೀ ಅಪ್ಪಾವರು ಯಾತ್ರೆಗೆ ಯಾವಾಗ ಹೊರಡುವ  ಬಗ್ಗೆ ಏನು ಸುಳಿವು ಕೊಡಲಿಲ್ಲ.

ಏಕಾದಶಿಯ ರಾತ್ರಿ ಅಪ್ಪಾವರು ಶ್ರೀ ನಾರಾಯಣಾಚಾರ್ಯರಿಗೆ ಕರೆದು ನಾಳೆ ಶ್ರೀ ವಿಜಯೀಂದ್ರರ ಆರಾಧನೆ ದರ್ಶನಕ್ಕೆ ಹೊರಡಬೇಕು ಬೆಳಗ್ಗೆ ಬೇಗ ಎದ್ದು ಅಹ್ನಿಕಾದಿಗಳನ್ನು ಮುಗಿಸಲು ಸೂಚಿಸುತ್ತಾರೆ. ದರ್ಶನದ ಭಾಗ್ಯ ದೊರೆಯುತ್ತದೆ ಎನ್ನುವ ಖುಷಿಯಲ್ಲಿ ಇದ್ದ ಆಚಾರ್ಯರಿಗೆ ಇನ್ನೊಂದುಕಡೆ ದೂರದ ಕುಂಭಕೋಣಕೆ ಬೆಳಗಾಗುವುದರಲ್ಲಿ ಹೇಗೆ ಹೋಗಿ ತಲುಪಬೇಕೆಂಬ ಗೊಂದಲ ಮನಸ್ಸಿನಲ್ಲಿ ಮೂಡತ್ತದೆ.

ಆದರೂ  ಶ್ರೀಅಪ್ಪಾವರ ಆಜ್ಞೆ ಎಂದು ಭಾವಿಸಿ ಬೆಳಗ್ಗೆ ಬೇಗ ಎದ್ದು ಅಹ್ನೀಕಾದಿಗಳನ್ನು ಮುಗಿಸಿದ ಆಚಾರ್ಯರು ಶ್ರೀ ಅಪ್ಪಾವರ ಬಳಿ ಬಂದು ತಮ್ಮ ಮನದಲ್ಲಿನ ಗೊಂದಲಗಳನ್ನು  ಹೇಳಿಕೊಳ್ಳುತ್ತಾರೆ . ಅಪ್ಪಾವರು ಆಚಾರ್ಯರ ಗೊಂದಲಕ್ಕೆ ನಗುತ್ತಾ ನನ್ನ ಕೈ ಹಿಡಿಯಿರಿ ಎನ್ನುತ್ತಾರೆ. 

ಶ್ರೀ ಅಪ್ಪಾವರ ಕೈ ಹಿಡಿದ ಶ್ರೀ ಯೋಗಿ ನಾರಾಯಣಾಚಾರ್ಯರಿಗೆ ಕ್ಷಣಮಾತ್ರದಲ್ಲಿ ಕುಂಭಕೋಣಕೆ ತಲುಪಿಸಿ ಚತುರಧಿಕ ಶತಗ್ರಂಥರತ್ನಗಳ ಒಡೆಯರಾದ ಶ್ರೀ ವಿಜಯೀಂದ್ರ ತೀರ್ಥರ ದರ್ಶನವನ್ನು ಮಾಡಿಸುತ್ತಾರೆ.

 ಶ್ರೀ ಅಪ್ಪಾವರ  ಸ್ತೋತ್ರ : 
ಶ್ರೀ ಆಚಾರ್ಯರು ತಮ್ಮ ಗುರುಗಳಾದ ಶ್ರೀ ಅಪ್ಪಾವರ ಮಹಿಮೆ ಸಾರುವ ಶ್ರೀ ಇಭಾರಾಮಪುರ ಶ್ರೀ ಕೃಷ್ಣಾರ್ಯ ಸ್ತೋತ್ರ ರಚಿಸಿದ. ತಾವು ಪ್ರತೀಕ್ಷ್ಯವಾಗಿ ಕಂಡ ಹಾಗು ಶ್ರುತಿ ಸ್ಮೃತಿ ಸಮ್ಮತಿಸುವ ಮಹಿಮೆಗಳು ಮತ್ತು ಆ ಮಹಿಗಳು ಯಾವ ಯಾವ ಪುರಾಣಗಳಲ್ಲಿ ಉಲೇಖವಾಗಿದೇ ಎಂದು  ಸ್ತೋತ್ರಮಾಡಿದರೆ. 

 ಅಪರೋಕ್ಷ ಜ್ಞಾನ: 
ಸುರಪುರದ ಆನಂದ ದಾಸರು ತಮ್ಮ ಸಮಕಾಲೀನ ಎಲ್ಲಾ ಅಪರೋಕ್ಷ ಜ್ಞಾನಗಳನು ಗುರುತಿಸಿ ರಚಿಸಿದ ಕೀರ್ತನೆ

ಶ್ರೀ ರಾಘವೇಂದ್ರರಾಯರ ಪಾದಾಂಬುಜ ।
ದಾರಾಧಕರ ಕೊಂಡಾಡಿರೋ ।। ಪಲ್ಲವಿ ।।

ಹಲವು ಸಜ್ಜನರೊಳು ತಿಳಿಸಿ ಕೊಳ್ಳದಲಿಪ್ಪ ।
ಬಲವಂತ ಯೋಗಿ ನಾರಾಯಣಾರ್ಯರ ।।

ಮೇಲೆಕಂಡ ಕೀರ್ತನೆಯಿಂದ ಶ್ರೀ ಯೋಗಿ ನಾರಾಯಣಾಚಾರ್ಯರು ಶ್ರೀರಾಘವೇಂದ್ರ ಗುರುಸಾರ್ವಭೌಮರ, ಶ್ರೀ ಅಪ್ಪಾವರ ಹಾಗೂ ತಮ್ಮ ಇಷ್ಟ ದೈವ ಶ್ರೀ ವೀರ ನಾರಾಯಣನ ಅನುಗ್ರಹಕೆ ಪಾತ್ರರಾಗಿ ಅಪರೋಕ್ಷ ಜ್ಞಾನ ಹೊಂದಿದ್ದಾರೆ ಎಂದು ತಿಳಿಯಬಹುದು.

ಸಮಕಾಲೀನ ಅಪರೋಕ್ಷ ಜ್ಞಾನಿಗಳ ಜೊತೆ ಒಡನಾಟ :

ಶ್ರೀ ಆಚಾರ್ಯರು ತಮ್ಮ ಸಮಕಾಲೀನ ಅಪರೋಕ್ಷ ಜ್ಞಾನಿಗಳಾದ ಸುರಪುರದ ಆನಂದ ದಾಸರು  , ಮೊದಲಕಲ್ಲು ಶೇಷದಾಸರು , ವಿಜಯರಾಮಚಂದ್ರ ವಿಠಲರು , ಸುಜ್ಞಾನೇಂದ್ರ ತೀರ್ಥರು , ಗಣೇಶಾಚಾರ್ಯರು , ಯಳಮೇಲಿ ಹಯಗ್ರೀವಾಚಾರ್ಯರು ,  ಅಂತಃ ಜ್ಞಾನಿಗಳ ಸಮ್ಮುಹರೋಡನೆ ವಿಶೇಷ ಒಡನಾಟ ಹೊಂದಿದವರು ಮತ್ತು ಅವರ ಜೊತೆ ಅನೇಕ ಶಾಸ್ತದವಿಚಾರ ಚರ್ಚೆಮಾಡುತ್ತಿದರು.

ಶ್ರವಣ ಶುದ್ಧ ಪಂಚಮಿ ಶ್ರೀಲಯ ಚಿಂತನಾ ಪೂರ್ವಕವಾಗಿ ಹರಿಧ್ಯಾನ ಮಾಡುತ್ತಾ ತಮ್ಮ ಸ್ವರೂಪೋಧಾರ ಅಪ್ಪಾವರ ಸನ್ನಿಧಾನ ಹತ್ತರ ಅದೃಶ್ಯರಾದರು.

ಶ್ರೀ ಇಭರಾಮಪುರಾಧೀಶ

ವಿಷ್ಣುತೀರ್ಥಚಾರ್ಯ ಇಭರಾಮಪುರ
**********

No comments:

Post a Comment