Thursday 1 August 2019

narayana teertharu manvi 1973 bidi sanyasi karteeka bahula saptami ನಾರಾಯಣತೀರ್ಥರು








ಶ್ರೀನಾರಾಯಣತೀರ್ಥರು,ಮಾನವಿ
.
28 Nov 2018  ಶ್ರೀಗಳವರ ಪೂರ್ವಾರಾಧನೆ..

ರಾಯಚೂರು ಎಂದರೆ ದಾಸರ ತವರುರು ಎಂದೇ ಪ್ರಸಿದ್ದಿ,ಶ್ರೀ ವಿಜಯದಾಸರು,ಶ್ರೀ ಗೋಪಾಲ ದಾಸರು,ಶ್ರೀ ಜಗನ್ನಾಥ ದಾಸರು,ಶ್ರೀ ಪ್ರಾಣೇಶ ದಾಸರು,ಶ್ರೀ  ಕಲ್ಲೂರು ಸುಬ್ಬಣ್ಣ ದಾಸರು,ಶ್ರೀ ಶಾಮಸುಂದರ ದಾಸರು,ಶ್ರೀ ಶೇಷದಾಸರು,ಶ್ರೀ ಅಪ್ಪಾರವರು,ಶ್ರೀ ಗೋವಿಂದ ದಾಸರು ಮುಂತಾದ ಅನೇಕ ಹರಿದಾಸರ ಹಾಗೂ ಯತಿವರೇಣ್ಯರ ಕಾರ್ಯ ಕ್ಷೇತ್ರ ಇದೆ ರಾಯಚೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳು..

ಇಂತಹ ಅನೇಕ ಮಹಾಮಹಿಮರನ್ನು ಪೋಷಿಸಿದ ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನಲ್ಲಿ ಮಹಾಮಹಿಮರು ಶ್ರೀ ನಾರಾಯಣತೀರ್ಥರು ನೆಲೆಸಿದ್ದಾರೆ..

ಶ್ರೀ ನಾರಾಯಣತೀರ್ಥ ಶ್ರೀಪಾದಂಗಳವರ ಪೂರ್ವಾಶ್ರಮದ ಹೆಸರು,ಶ್ರೀ ಶ್ರೀನಿವಾಸಮೂರ್ತಿ ಇವರು ಕ್ರಿ.ಶ 1887 ನೆ ಇಸ್ವಿಯಲ್ಲಿ ಶ್ರೀ ರಾಮಚಂದ್ರರಾಯರು ಹಾಗೂ ಜಾನಕಿ ಬಾಯಿ ಯವರಲ್ಲಿ ಜನಿಸಿದರು.

ಇವರು ಮೈಸೂರಿನಲ್ಲಿ ವ್ಯಾಸಂಗ ಮುಗಿಸಿದರು.1905 ರಲ್ಲಿ ಇವರು ಸೇನೆಯಲ್ಲಿ ಸೇರಿದರು,1921 ರಲ್ಲಿ ಇವರ ಕಾರ್ಯ ದಕ್ಷತೆಗೆ ಸುಬೇದಾರ ಪದವಿ ದೊರೆಕಿತು.

 ಭಗವಂತನ ಲೀಲೆ ನೋಡಿ ,ಸೇನೆಯಲ್ಲಿದ್ದರು ಶ್ರೀನಿವಾಸ ಮೂರ್ತಿಗಳು ತಮ್ಮ ಧರ್ಮಾನುಷ್ಠಾನಕ್ಕೆ ಮಾತ್ರ ಲೋಪ ಬರದಂತೆ ಇದ್ದರು,ತ್ರಿಕಾಲ ಸಂಧ್ಯಾವಂದನೆ,ಏಕಾದಶಿ ವ್ರತ ಬಿಡದೆ ಪಾಲಿಸುತ್ತಿದ್ದರು.

 ಒಂದು ಸಲ ಏಕಾದಶಿ ಬಂದಿದೆ,ಶ್ರೀನಿವಾಸ ಮೂರ್ತಿಗಳು ನಿರಹಾರ ದೀಕ್ಷೆಯಲ್ಲಿದ್ದು ಇವರಗೆ ವಹಿಸಿದ ಜರುರಾದ ಒಂದು ಕಾರ್ಯಸ್ಥಳಕ್ಕೆ ಹೋಗಲಾರದೆ ಗೈರುಹಾಜರಾದರು. 

 ಮರುದಿನ ತಮ್ಮ ಹಿಂದಿನ ದಿನದ ರಜೆ ಪತ್ರವನ್ನು ಹಿಡಿದುಕೊಂಡು ಹೋದರು ಆದರೆ ಅಲ್ಲಿ ವಿಚಿತ್ರ ಘಟನೆಯೇ ನಡೆಡಿತ್ತು "ಇವರ ಮೇಲಿನ ಅಧಿಕಾರಿ ನಿನ್ನೆ ನೀವೇ ಬಂದು ಕೆಲಸ ಮಾಡಿದ್ದೀರಿ ಮತ್ತೇಕೆ ರಜೆ ಪತ್ರ ಕೊಡವಿರೆಂದರು.ಚಕಿತರಾದ ಮೂರ್ತಿಗಳು ಇಲ್ಲಾ ನಾನು ಬಂದಿಲ್ಲ,ಹಾಗಾದರೆ ಬಂದವರಾರು??"ಪ್ರಶ್ನೆ ಬೆಳೆಯಿತು .

ಉತ್ತರಕಂಡುಕೊಂಡ ಮೂರ್ತಿಗಳು ಅಧಿಕಾರಿಯನ್ನು ಅಪ್ಪಿಕೊಂಡು "ನೀವೇ ಧನ್ಯರಪ್ಪಾ ಭಗವಂತನನ್ನು ನೋಡಿದವರು ಎಂದು ಕೊಂಡಾಡಿದರು ".ಅಂದಿನಿಂದ ಶ್ರೀ ಮೂರ್ತಿಗಳ ಮನಸ್ಸು ಶ್ರೀಹರಿಯತ್ತ ಬಾಗಿತು.

 ಅಂತರಂಗದ ಕದವು ತೆರೆಯೆತಿಂದು
ಎಂತು ಪುಣ್ಯದ ಫಲವು ಪ್ರಾಪ್ತಿ ಫಲಿಸಿತೇನಗೆ ಎಂಬ ಶ್ರೀ ವಿಜಯಪ್ರಭುಗಳ ನುಡಿಯಂತೆ,ಶ್ರೀ ಮೂರ್ತಿಗಳ ಜೀವನದಲ್ಲೂ ಅಕ್ಷರಶಃ ನಿಜವಾಯಿಲೆತು.

ಅಂತೆಯೇ ಅಂದಿನ ಶ್ರೀ ಅಕ್ಷೋಭ್ಯ ಮಠಾಧಿಷರಾಗಿದ್ದ ಶ್ರೀ ಶ್ರೀ 1008 ಶ್ರೀ ರಘುವೀರತೀರ್ಥರಿಂದ ಸನ್ಯಾಸ ದಿಕ್ಷೆಯನ್ನು ಪಡೆದುಕೊಂಡು ಶ್ರೀ ಶ್ರೀ ನಾರಾಯಣತೀರ್ಥರಾದರು.

ಇಂದು ಶ್ರೀ ನಾರಾಯಣತೀರ್ಥರ ಪೂರ್ವಾರಾಧನೆ ಮಾನವೀಯ ಅವರ ಆಶ್ರಮದಲ್ಲಿ ನಡೀತಾಯಿದೆ.ಇವರ ಮಹಿಮೆಗಳು ಅಪಾರ,ಕೆಲವು ಮಹಿಮೆಗಳನ್ನ ನಾಳಿನ ಸಂಚಿಕೆಯಲ್ಲಿ ನೋಡುವ ಪ್ರಯತ್ನ ಮಾಡೋಣ.

ಶ್ರೀ ನಾರಾಯಣತೀರ್ಥರು,ಪೂರ್ವಾ ಶ್ರಮದಲ್ಲಿ ಸುಬೇದಾರ ಆಗಿದ್ದ,ಒಂದು ಚಿತ್ರ..👇,ಹಾಗೂ ಅವರ ವೃಂದಾವನ,ಶ್ರೀ ನಾರಾಯಣ ತೀರ್ಥರ ಆಶ್ರಮ,ಮಾನವಿ.

ಸ್ಮರಿಸು ಗುರುಗಳ ಮನವೇ,ಸ್ಮರಿಸು ಗುರುಗಳ...

💐🙏🏼ಎಸ್.ವಿಜಯ ವಿಠ್ಠಲ🙏🏼💐


ಇಂದು ಶ್ರೀ ನಾರಾಯಣತೀರ್ಥರ ಮಧ್ಯಾರಾಧನೆ. 💐


ಶ್ರೀಪಾದರು ಅನೇಕ ಮಹಿಮೆಗಳನ್ನು ಮಾಡುತ್ತ ಭಕ್ತರನ್ನು ಉದ್ಧರಿಸುತ್ತ ಕಾರ್ತಿಕ ಬ|| ಸಪ್ತಮಿ(16-11-73)ರಂದು ವೆಂಕಟೇಶ ದೇವರ ಮಂದಿರದಲ್ಲಿ ನಾರಾಯಣ ಸ್ಮರಣೆ ಮಾಡುತ್ತ ಹರಿಪಾದವನ್ನು ಸೇರಿದರು.ಸ್ವಾಮಿಗಳ ಕಳಾಕರ್ಷಣ 6 ತಿಂಗಳಲ್ಲಿ ನಡಿಯಬೇಕಾದದ್ದು ಅನಾನುಕೂಲದಿಂದ ಮಾಡಲಾಗಲಿಲ್ಲ,ಸುಮಾರು 11 ತಿಂಗಳು ಕಳೆದವು,ವ್ಯವಸ್ಥಾಪಕರದ ರಂಗರಾಯರಿಗೆ ಕಳಾಕರ್ಷಣ ಇಷ್ಟು ದಿನ ಆಗಿದೆ ಹೇಗೆ ಮಾಡೋದು ಎಂಬೋ ಚಿಂತೆ ಕಾಡಿತು.ಆಗ ಶ್ರೀಗಳವರು ರಂಗರಾಯರ ಹಾಗೂ ಆಪ್ತರಾದ ವೆಂಕಟೆಶರಾಯರ ಇಬ್ಬರು ಸ್ವಪ್ನದಲ್ಲಿ ದರ್ಶನವಿತ್ತು ನನ್ನ ಶರೀರ ಘಾಸಿಯಾಗಿಲ್ಲ,ಸ್ವಲ್ಪ ಎಡಗಲಿನ ಕಿರಿಬೆರಳು ಮಾತ್ರ ಘಾಸಿಯಾಗಿದೆ.ಹೆದರಬೇಡಿ  ಕಳಾಕರ್ಷಣ ಮಾಡಿ ಎಂದು ಹೇಳಿದರು.

 ಅಂತೆಯೇ ಭಕ್ತವೃಂದವೆಲ್ಲ ಸೇರಿ 26-9-1974 ರಂದು ಕಳಾಕರ್ಷಣ ನೆರವೇರಿಸಿದರು.ಆಗ ರಂಗರಾಯರು ಹಾಗೂ ಅವರ ಆಪ್ತರ ಸ್ವಪ್ನದಲ್ಲಿ ತಿಳಿಸಿದಂತೆ ದೇಹಕ್ಕೇನು ಘಾಸಿಯಾಗದೆ, ಹಚ್ಚಿದ ನಾಮ ಗಂಧ ಕಣ್ಣುರೆಪ್ಪೆ ಹೇಗಿದ್ದವೂ ಹಾಗೆ ಅದೇ ತಾನೇ ಕಣ್ಣು ಮುಚ್ಚಿಕೊಂಡು ಧ್ಯಾನ ಯೋಗರಾಗಿದ್ದಾರೆಂನೋ ಎಂಬಂತೆ   11 ತಿಂಗಳ ಮೇಲೆ ಮಣ್ಣಿನಿಂದ ದೇಹ ಹೊರಗೆ ತೆಗೆದಾಗ ಹೇಗಿತ್ತೋ ಹಾಗೆ ಇರಬೇಕಾದರೆ ಸಾಮಾನ್ಯರೇ ನಿಜವಾಗಲೂ ಮಹಾ ಮಹಿಮರೆ ಭಕ್ತರ ಉದ್ಧಾರಕ್ಕಾಗಿ ಅವತರಿಸಿದ ದೇವಾಂಶರು. 

ಇದೆ ತರಹ ಶ್ರೀ ಧಿರೇಂದ್ರತೀರ್ಥರ(ಹೊಸರತ್ತಿ), ಚರಿತ್ರೆಯಲ್ಲೂ ನಾವು ಕಾಣಬಹುದು.

 ಇಂದು ಮಹಾನ್ ತಪಸ್ವಿಗಳಾದ ಶ್ರೀ  ಸುರೇಂದ್ರತೀರ್ಥರ ಗುರುಗಳು ಹಾಗೂ ಶ್ರೀ ಜಿತಾಮಿತ್ರರ ಶಿಷ್ಯರು ಆದ ಶ್ರೀ ರಘುನಂದನತೀರ್ಥರ ಪೂರ್ವಾರಾಧನೆ(ಹಂಪಿ)..ಈ ಎಲ್ಲಾ ಯತಿಪರಂಪರೆ ನಮ್ಮನ್ನು ರಕ್ಷಿಸಲಿ.. 

ಗುರುಗಳಿಂದಧಿಕ ಇನ್ನಾರು ಆಪ್ತರು ನಿನಗೆ
ಗುರುಗಳೇ ಪರಮ ಹಿತಕರರು ನೋಡು
ಗುರು ಸ್ವಾಮಿ ವರದ ಗೋಪಾಲವಿಠ್ಠಲ ಮಹಾ ದುರಿತಗಳ ಕಳೆದು ಸುಖಗರೆವ ನೋಡು..

ಶ್ರೀ ನಾರಾಯಣತೀರ್ಥರ ಕಳಾಕರ್ಷಣ ಚಿತ್ರ 👇

ಶ್ರೀ ಗುರುಗಳ ಸೇವೆಯಲ್ಲಿ..

💐🙏🏼ಎಸ್.ವಿಜಯವಿಠ್ಠಲ🙏🏼💐



ಶ್ರೀ ನಾರಾಯಣತೀರ್ಥರ ಮಹಿಮೆ-3,ಇಂದು ಉತ್ತರಾಧನೆ,ಮಾನವಿ 💐💐.


 ಒಂದು ಸಲ ಸ್ವಾಮಿಗಳು ಹಾಗೂ ಅವರ ಶಿಷ್ಯಎತ್ತಿನ ಬಂಡಿಯಲ್ಲಿ ಪ್ರಯಾಣಿಸುತ್ತಿರುವಾಗ ಮಾರ್ಗದಲ್ಲಿ ರಾತ್ರಿ ಯಾಯಿತು,ಶಿಷ್ಯ ಕಲ್ಲಪ್ಪಾಚಾರಿ ಭಯಗ್ರಸ್ಥನಾದ,ಶ್ರೀಗಳು ಸ್ವಾಮಿ ಇದ್ದಾನೆಕಲ್ಲಪ್ಪ ಹೆದರದೆ ಈ ಸ್ಲೋಕ ಹೇಳು ಅಂದರು... 


 *ಒಂದು ಕೈಯಲ್ಲಿ ಖಡ್ಗ |ಒಂದು ಕೈಯಲ್ಲಿ ಹಲಗೆ

ಅಂದವಾಗಿ ಪಿಡಿದುಕೊಂಡು| ದಿವರಾತ್ರಿಯಲಿ ಬಂದು ಬದಿಯಲ್ಲಿ
ನಿತ್ಯ ಬಾರಾಸನನಾಗಿ ಹಿಂದೆ ಮುಂದೆ ಉಪದ್ರವ ಆಗದಂತೆ
ಇಂದಿರೆರಮಣ ಕಾಯುತ್ತಲಿರೆ ಎನಗಾವ ಬಂಧನಗಳಿಲ್ಲ
ಧನ್ಯ ಧನ್ಯ ಕಂದಪ೯ನ್ಯಯ
ಸಿರಿ ವಿಜಯವಿಠಲರೆಯ ಎಂದೆಂದಿಗೂ ಆಪತ್ತು ಬರಲೀಯ ನೋಡ||* 
( ಶ್ರೀ ವಿಜಯಪ್ರಭುಗಳು ತಮ್ಮ ಪ್ರಿಯ ಶಿಸ್ಯರಾದ ಶ್ರೀ ಗೋಪಾಲದಾಸರಿಗೆ ಉಡುಪಿಗೆ ಹೋಗುವಾಗ ರಚನೆ ಮಾಡಿದ್ದು )

ವಿಜಯ ದಾಸರು ಸಚಿಸಿದ ಈ ಆಪತ್ತು ಪರಿಹಾರ ಸ್ತೋತ್ರ ಪಠಿಸಿದರು.ಸ್ವಲ್ಪದೂರ ಪ್ರಯಾಣಿಸದಮೇಲೆ ನಾಲ್ಕು ಜನ ಕಳ್ಳರು ಬಂದು ಇವರ ಹತ್ತಿರ ವಿದ್ದ ವಸ್ತುಗಳನ್ನು ದೋಚಿಕೊಂಡು ಮುಂದೆ ಹೋದರು.ಶ್ರೀಗಳು ನಾರಾಯಣ ಸ್ಮರಣೆ ಮಾಡುತ್ತ ಬಂಡಿಯಲ್ಲೇ ಕುಳಿತ್ತಿದ್ದರು .ಕಳ್ಳರು ಒಮ್ಮೆಲೇ ಆಕ್ರಂದನ ಮಾಡುತ್ತ ಸ್ವಾಮಿ ನಮ್ಮನ್ನು ಕಾಪಾಡಿ ನಮಗೇನು ಕಾಣಿಸುತ್ತಿಲ್ಲ ಎಂದು ಪಾದಕ್ಕೆ ಬಂದು ನಮಸ್ಕರಿಸಿದರು.ಶ್ರೀಗಳು ಕಮಂಡ ಲಕದಿಂದ ಮಂತ್ರಿಸಿದ ಜಲ ಪ್ರೋಕ್ಷಿಸಲಾಗಿ ಕಳ್ಳರಿಗೆ ದೃಷ್ಟಿ ಬಂದು ದೋಚಿದ ಸಾಮಾನುಗಳನ್ನು ಹಿಂತಿರುಗಿಸಿ ಹೋದರು. 


ಹೇಗೆ ಅನೇಕ ಮಹಿಮೆಗಳನ್ನೂ ತೋರಿಸುತ್ತ ಶ್ರೀಗಳವರು ಒಮ್ಮೆ ಚಿಕಲ ಪರ್ವಿ ಗ್ರಾಮಕ್ಕೆ ತೆರಳಿದಾಗ ವಿಜಯದಾಸರ ಕಟ್ಟೆ ಮೇಲೆ ಕುಳಿತ್ತುದ್ದರು.ಅಲ್ಲಿನ ವ್ಯವಸ್ಥಾಪಕರಾದ ನರಸಿಂಗ ರಾಯರು ದುಃಖದಿಂದ ಇರುವದನ್ನು ಗಮನಿಸಿ ಮಂತ್ರಿಸಿ ಮಂತ್ರಾಕ್ಷತೆಯನ್ನು ಕೊಟ್ಟು ನಿಮ್ಮ ಚಿರಂಜೀವಿ ಕಟ್ಟೆರಾಯ ಬಹಳ ಗಟ್ಟಿಗ ಅವನೇನು ಮರಣ ಹೊಂದಲಾರ ಇದನ್ನು ಹಾಕಿರೆಂದು ಕೊಟ್ಟರು.ಶ್ರೀಗಳು ನೀಡಿದ ಮಂತ್ರಾಕ್ಷತೆಯನ್ನು ಮಗು ಕಟ್ಟೆರಾಯನ ಮೇಲೆ ಹಾಕಲು ಮರಣ ಶಯ್ಯೆ ಲ್ಲಿದ್ದ ಮಗು ಚೇತರಸಿ ಕೊಂಡು ಎದ್ದು ಆಡಿತಂತೆ. . ಅಂದಿನಿಂದ ನರಸಿಂಗರಾಯರು ಅವರ ಪರಮ ಭಕ್ತರಾದರಂತೆ...


ಹೀಗೆ ಶ್ರೀ ನಾರಾಯಣತೀರ್ಥರ ಮಹಿಮೆಗಳು ಸಾಕಷ್ಟು..ಬನ್ನಿ ಮಾನವಿಗೆ ಹೋದಾಗ ತಪ್ಪದೆ ಈ ಗುರುಗಳ ಬೃಂದಾವನ ದರ್ಶನ ಪಡೆದುಕೊಳ್ಳೋಣ.


ಶ್ರೀರಾಮಾಂಘ್ರಿ ಸರೋಜಯುಗ್ಮಮನಿಶಂ ಸಂಪೂಜಯಂತಂಮುದಾ | ಶ್ರೀನಾರಾಯಣತೀರ್ಥನಾಮಕಮುನಿಶ್ರೇಷ್ಠ ವಿಶಿಷ್ಟಗುಣೈ: | ಭೂವೃಂದಾರಕವೃಂದನಂದದಮಲಂ ಮೃಷ್ಟಾನ್ನ ದಾನಾದಭಿ: | ವಂದೇ ಶ್ರೀರಘುವೀರತೀರ್ಥಕರಜಂ ಭಕ್ತ್ಯಾವಿರಕ್ತ್ಯಾಯುತಂ |


 ಹಾಗೆಯೇ ಇಂದು ಶ್ರೀ ರಾಘವೇಂದ್ರ ಗುರು ಪರಂಪರೆಯಲ್ಲಿ ಬಂದಂತಹ ಶ್ರೀ  ರಘುನಂದನ,ಶ್ರೀ ಸುಜನೇಂದ್ರ ತೀರ್ಥರ ಆರಾಧನೆ ..


ಆರಾಧನೆಯ ಪರ್ವಕಾಲದಲ್ಲಿ ಈ ಎಲ್ಲಾ ಯತಿಗಳು ಬಹಿರ್ ಮುಖಿಗಳಾಗಿರುತ್ತಾರೆ, ಇವರ ಸ್ಮರಣೆ ಮಾಡೋದೇ ಭಾಗ್ಯ.....



ಶ್ರೀ ಗುರುಗಳ ಸೇವೆಯಲ್ಲಿ...


💐🙏🏼ಎಸ್.ವಿಜಯ ವಿಠ್ಠಲ🙏🏼💐

********



No comments:

Post a Comment