AshADa shuddha prathipath is the puNya dina of shri araLikaTTe narasimhAchAryaru.
shri araLikaTTe narasimhAchAryaru:
puNya dina: AshADa shukla prathipath (1898)
shishyaru: more than 300
kaTTe: hatthibeLagal, Alur. It is next to prANa dEvara sannidhAna. This prANa dEvaru was consecrated by shri rAghavEndra tIrtharu.
He was a great scholar and was an aparOksha jnAni. He spent most of his life at hattibeLagal prANa dEvara sannidhAna. This prANa dEvaru had apperared before him several times.
He did "sarvaswa dAna" several times. Among his more than 300 students were shri muttigi srInivAsAchArya (future shri raghuprema tIrtharu in kUDli akshObhya maTa) and biLvapatri Acharyaru. biLvapatri Acharyara kaTTe is next to him at hattibeLagal.
The prANa dEvara sannidhAna is now looked after by the descendents of shri biLvapatri AchAryaru.
He organized chaturmAsya of shri sudharmEndra tIrtharu of rAyara maTa once and got blessed.
He once did upavAsa for 40 days. He also appeared before one of his devotees 2 days after his jIva tyAga.
shri narasimha charyA varada gOvindA gOvindA...
shri krishNArpaNamastu..
********
[7:58 PM, 7/3/2019] +91 95358 37843:
ಅರಳಿಕಟ್ಟಿ ಶ್ರೀನರಸಿಂಹಾಚಾರ್ಯರು ||
19ನೇ ಶತಮಾನದಲ್ಲಿ ಪರಮಾತ್ಮನ ಇಚ್ಛಾದಂತೆ ಬೆಳಕಿಗೆ ಬಾರದ ಸೂರ್ಯನಂತೆ ಅಜ್ಞಾತವಾಗಿ ತನ್ನ ಸಾಧನಾ ಮಾಡಿಕೊಂಡು ಹೆಸುರುಗಳಿಸಿದ ಆ ಸೂರ್ಯನೇ ಇಂದಿನ ಕಥಾನಾಯಕರಾದ ಅರಳಿಕಟ್ಟಿ ಶ್ರೀನರಸಿಂಹಾಚಾರ್ಯರು. ಶ್ರೀಮನ್ಮಂತ್ರಾಲಯ ಪ್ರಭುಗಳ ಮಠದ ಪಂಚಾಂಗದಲ್ಲಿ ಇತ್ತೀಚಿಗೆ ಪೂಜ್ಯ ಆಚಾರ್ಯರ ಪುಣ್ಯದಿನದ ಮಾಹಿತಿಯು ಮುದ್ರಿತವಾಗುತ್ತಿದೆ. ಜಿಜ್ಞಾಸುಗಳಿಗೆ ಪೂಜ್ಯ ಆಚಾರ್ಯರ ಬಗ್ಗೆ ತಿಳಿಯಲು ಯಾವ ಅವಕಾಶವಿಲ್ಲದಂತೆ ಯಾಗಿದೆ. ಪ್ರಾಚೀನ ವ್ಯಕ್ತಿಗಳ ಮೂಲಕ ತಿಳಿದುಕೊಳ್ಳಲು ಅವಕಾಶ ಇಲ್ಲದಿರುವುದು ನಮ್ಮ ದುರ್ದೈವ. ಸಂತಸವೆಂದರೇ, ಇತ್ತೀಚಿಗೆ ಬೆಳಕಿಗೆ ಬಂದ "ಶ್ರೀಸುಧಾಕರ ಗುರುಗುಣ ರತ್ನಮಾಲ" ವೆಂಬ ಹೆಸರಿನ "ಶ್ರೀಜಂಬುಖಂಡಿ ವಾದಿರಾಜಾಚಾರ್ಯರ ಚರಿತ್ರೆ" ಹಾಗು "ಸುಮಸೌರಭ" ವೆಂಬ ಹೆಸರಿನ "ಶ್ರೀರಘುಪ್ರೇಮತೀರ್ಥರ ಚರಿತ್ರೆ"ಗಳಲ್ಲಿ ಅರಳಿಕಟ್ಟಿ ಆಚಾರ್ಯರ ಬಗ್ಗೆ ಕೆಲವೊಂದು ವಿಷಯಗಳು ನಮಗೆ ಸಿಗುವುದು.
ಪೂಜ್ಯ ಆಚಾರ್ಯರ ಗುರು ಪೀಳಿಗೆಯಲ್ಲಿ ಧೂಮಾಚಾರ್ಯರ ವಂಶಪರಂಪರೆಯಲ್ಲಿ ಗದ್ವಾಲಿ ಪಾಂಡುರಂಗ ಕೇಶವಾಚಾರ್ಯರಾರಭ್ಯ ಇವರ ಗುರುಗಳಾದ ಅಪ್ಪಣ್ಣಾಚಾರ್ಯರ ವರೆಗೆ ಅಪರೋಕ್ಷ ಪಡೆದ ಜ್ಞಾನಿವರೇಣ್ಯರು ಎಂದು ತಿಳಿಯುತ್ತದೆ (ಸಪ್ತ ಶೀರ್ಷದವರಿಗೆ -ಸತತ 7 ಜನರು). ಇವರು ಆಂಧ್ರ ಪ್ರಾಂತದ ಆಲೂರು ತಾಲೂಕಿನ ಹತ್ತಿಬೆಳಗಳ್ ಗ್ರಾಮ ನಿವಾಸಿಗಳಾಗಿದ್ದು 300ಕ್ಕು ಹೆಚ್ಚಿನ ಶಿಷ್ಯಸಂಪತ್ತು ಹೊಂದಿದ್ದವರು. ಹಲವುಸಲ ಶ್ರೀಪುರಂದರದಾಸರಂತೆ ಸರ್ವಸ್ವದಾನ ಮಾಡಿದ ಅಪರ ಕರ್ಣರಿವರು. ಊರ ಹೊರಬದಿಯಲ್ಲಿ ಶ್ರೀಮನ್ಮಂತ್ರಾಲಯಪ್ರಭುಗಳಿಂದ ಪ್ರತಿಷ್ಟಿತ ಶ್ರೀಪ್ರಾಣದೇವರ ಸನ್ನಿಧಿಯಲ್ಲಿ ವರ್ಷಗಳ ಪರ್ಯಂತರ ವಾಸವಿದ್ದು ಗ್ರಾಮ ಸೀಮೋಲ್ಲಂಘನಮಾಡಿ ಶ್ರೀಪ್ರಾಣದೇವರ ಸೇವಾ ಮಾಡಿದ ಮಾನ್ಯರು. ಅಂದಿನ ಶ್ರೀರಾಯರಮಠದ ಶ್ರೀಸುಧರ್ಮೇಂದ್ರತೀರ್ಥರ ಚಾತುರ್ಮಾಸ್ಯಾಕ್ಕೆ ಸುವ್ಯವಸ್ಥೆ ಮಾಡಿ, ಅವರ ಅನುಗ್ರಹ ಪಡೆದ ಮೂರ್ಧನ್ಯರು. ಇವರಿಗೆ ಶ್ರೀಮುಖ್ಯಪ್ರಾಣದೇವರು ಪ್ರತ್ಯಕ್ಷ ದರ್ಶಿಗಳು. ಇವರ ಶಿಷ್ಯರಲ್ಲಿ ಪ್ರಮುಖರು ಶ್ರೀಬಿಳ್ವಪತ್ರಿ ಆಚಾರ್ಯರು, ಶ್ರೀಪುಟ್ಟಾಚಾರ್ಯರು, ಶ್ರೀಸುಂಕದ ಶ್ರೀನಿವಾಸಾಚಾರ್ಯರು, ಹಾಗು ಶ್ರೀಮುತ್ತಿಗಿ ಶ್ರೀನಿವಾಸಾಚಾರ್ಯರು.
ಅಂದಿನಕಾಲದಲ್ಲಿ ಅಗ್ರಹಾರವಾಗಿದ್ದ ಹತ್ತಿಬೆಳಗಲ್ ನಲ್ಲಿ ಪ್ರತಿ ಒಂದು ಮನೆಯಲ್ಲಿ ವೇದಾಧ್ಯಯನ ನಡೆಯುತ್ತಿತ್ತು. ಶಿಷ್ಯರುಗಳು ಗೋಪಾಳವೃತ್ತಿಯಿಂದ ತಂದ ಪದಾರ್ಥಗಳಿಂದ ಗುರುಕುಲ ನಡೆಯುತ್ತಿತ್ತು. ಎಲ್ಲರಿಗೂ ಮಧುಕರ ವೃತ್ತಿ ಕಡ್ಡಾಯದಂತಿತ್ತು. ಅರಳಿಕಟ್ಟಿ ಆಚಾರ್ಯರ ಶಿಷ್ಯರ ಪೈಕಿ ಕೆಲವರು ಅಕ್ಕಿ, ಬೇಳೆ ಮತ್ತಿತರ ಪದಾರ್ಥಗಳು ಪೂರೈಸುತ್ತಿದ್ದಲ್ಲದೇ, ತಮ್ಮ ಶಕ್ತ್ಯಾನುಸಾರ ಪ್ರತಿ ತಿಂಗಳಲ್ಲಿ ದ್ರವ್ಯರೂಪದಲ್ಲಿ ಕೆಲವರು ಸೇವಾ ಮಾಡುತ್ತಿದ್ದರು. ಒಂದುಸಲ ಶಿಷ್ಯರುಗಳಿಂದ ಪದಾರ್ಥಗಳು ಬಾರದಿದ್ದಾಗ, ಗುರುಗಳು, ಮುತ್ತಿಗಿ ಆಚಾರ್ಯರ ಜೊತೆ "ಈಗ ನಿನ್ನಿಂದಲೇ ಸರ್ವ ಸೇವಾ ಆಗಬೇಕಾಗಿದೆ. ಇದರಿಂದ ಶ್ರೀಹರಿ, ವಾಯು ಗುರುಗಳು ಪ್ರೀತರಾಗಿ ಅಗಾಧ ಸಾಧನೆ ಮಾಡಿಸುವ ಪ್ರಯುಕ್ತ ಶುದ್ಧ ವೃತ್ತಿ(ಗೋಪಾಳ)ಯಿಂದ ಇಲ್ಲಿಯ ಖರ್ಚು ನಿರ್ವಾಹ ಮಾಡುವಂತೆ ಒಂದು ತಂಬಿಗಿ ಮುಂದಿಟ್ಟು ಆಜ್ಞಾ ಮಾಡಿದರು. ತಾವತ್ಪರ್ಯಂತ ಶ್ರೀಮಂತನೆನಿಸಿ ಅಪರಿಚಿತ ಸ್ಥಳದಲ್ಲಿ ಹ್ಯಾಂಗೆ ಭಿಕ್ಷಾ ಬೇಡಬೇಕೆಂದು ಅಂತರಂಗದಲ್ಲಿ ಸೂಕ್ಷ್ಮವಾಗಿ ಅಭಿಮಾನವಿದ್ದಾಗ್ಯೂ, "ಗುರೋರಾಜ್ಞಾಂ ನ ಲಂಘಯೇತ್" ಅಂತೆಂದುಕೊಂಡು "ಯಸ್ಯಾನುಗ್ರಹಮಿಚ್ಛಾಮಿ ತಸ್ಯವಿತ್ತಂ ಹರಾಮ್ಯಹಂ" ಎಂಬ ವಚನಾನುಸಾರ ಶ್ರೀಶನು ನನ್ನ ಬಾಹ್ಯವಿತ್ತ(ಸಂಪತ್ತು)ದಂತೆ ಅಹಂಕಾರ, ಮಮಕಾರ ರೂಪವಾದ ಅಭಿಮಾನವೆಂಬ ಅಂತರ ವಿತ್ತವನ್ನು(ಜ್ಞಾನವನ್ನು) ಕಳೆಯಲುದ್ಯುಕ್ತನಾಗಿರುವನೆಂದು ಮನಸ್ಸಿನಲ್ಲಿ ಸಂಭ್ರಮಗೊಂಡು ಹತ್ತಿಬೆಳಗಲ್, ಆದವಾನಿ, ಆಲೂರು ಮತ್ತು ಬಳ್ಳಾರಿ ಯಲ್ಲಿ ಅಧಿಕಾರ ವರ್ಗ ಜನರಲ್ಲಿ ಮತ್ತು ವ್ಯಾಪಾರಸ್ಥರಿಂದ ಗೋಪಾಳ ಬೇಡುವುದು ವಾಯುದೇವರ ಮನಸ್ಸಿಗೆ ಬಂದದ್ದರಿಂದ, ಒಂದು ವರ್ಷ, ಎಲ್ಲಾ ನಿತ್ಯ ನೈಮಿತ್ತಿಕ ಖರ್ಚು ನಿರ್ವಹಿಸಿದರು. ಗುರುಗಳು ಒಂದುದಿನ ಉಗ್ರಾಣ ಪ್ರವೇಶಿಸಿ ಯಾವತ್ ಪದಾರ್ಥಗಳು ತುಂಬಿರುವುದು ಕಂಡು ಬಹು ಸಂತುಷ್ಟರಾಗಿ, ದೂರ್ವಾಸರಿಗೆ ದ್ರೌಪದಿಯು ಕೌಪೀನಾರ್ಥ ತನ್ನ ಸೀರೆಯ ಸೆರಗನ್ನು ಹರಿದು ಕೊಟ್ಟುದಕ್ಕೆ ಅಕ್ಷಯಾಂಬುರವಾಗಲೆಂದು ಹರಿಸಿದಂತೆ ನಿನಗೂ ಭಗವಂತನು ಅಕ್ಷಯ ಪದಾರ್ಥಗಳನ್ನು ಕೊಡಲೆಂದು ಆಶೀರ್ವಾದ ಮಾಡಿದರು.
ಅರಳಿಕಟ್ಟಿ ಆಚಾರ್ಯರು, ತಮ್ಮ ಮುಖ್ಯಶಿಷ್ಯರೆನಿಸಿದ ಬಾಡದ ವೆಂಕಟ ನರಸಿಂಹಾಚಾರ್ಯರು (ಬಿಲ್ವಪತ್ರಿ ಆಚಾರ್ಯರು), ಪುಟ್ಟಾಚಾರ್ಯರು, ಸುಂಕದ ಶ್ರೀನಿವಾಸಾಚಾರ್ಯರು ಮತ್ತು ಮುತ್ತಿಗಿ ಆಚಾರ್ಯರನ್ನು ಕರೆದು, ಭಗವತ್ ಪ್ರಸಾದಾರ್ಥ ಗುರು ಪ್ರಸಾದ ಪಡೆಯಬೇಕೆಂದು ಹವಣಿಸುವರು ನಾವು ಹೇಳುವ ಕ್ರಮದಿಂದ ಸೇವಾ ಮಾಡಲು ಸಿದ್ಧರಾಗಿರೆಂದು ಹೇಳುತ್ತಾ, ಒಂಬತ್ತು ದಿನಗಳು ಅನಶನವ್ರತದಿಂದ ಪ್ರಾತರಾರಭ್ಯ ರಾತ್ರಿ ಪರ್ಯಂತರ ಸರ್ವ ಸೇವಾ ಮಾಡಬೇಕು. ಸರ್ವ ಸೇವಾ ಅಂದರೆ "ಅಂಗಳ ಕಸ ಮೊದಲುಗೊಂಡು ಮನೆಯಲ್ಲಿಯ ಕಸ ತೆಗೆಯುವುದು, ಅಂಗಳ ಥಳಿ ಹಾಕಿ, ಮನೆ ಸಾರಿಸಿ, ಹೊಸ್ತಿಲಿಗೆ ಕೆಮ್ಮಣ್ಣು ಹಚ್ಚಿ ರಂಗೋಲಿ ಹಾಕುವುದು, ಆಕಳ ಕಾಲಾಗಿನ ಕಸ ತೆಗೆಯುವುದು, ಆಕಳ ಹಿಂಡುವುದು, ಉಪಸಾರಿಣಿ ಮುಸರೆ ಪಾತ್ರೆಗಳ ತೊಳೆಯುವುದು, ತುಳಸೀ ಪುಷ್ಪಗಳ ತರುವುದು, ನೀರು ತರುವುದು, ಬಟ್ಟೆಗಳ ಒಗೆದು ಒಣಹಾಕುವುದು, ಪಾಠಕ್ಕೆ ಬರುವುದು, ಅಡಿಗೆ ಮಾಡುವುದು, ನಮ್ಮ ದೇವತಾರ್ಚನಕ್ಕೆ ಸರಿಯಾಗಿ ಅಗ್ರೋದಕ ತರುವುದು, ಗಂಧಾಕ್ಷತೆ ಸಿದ್ಧಪಡಿಸುವುದು, ಎಡ ಬಲ ಸೇವಾ ಮಾಡುವುದು, ಭೋಜನಕ್ಕೆ ಕೂಡುವವರಿಗೆ ಬಡಿಸುವುದು, ಎಂಜಲ ತೆಗೆಯುವುದು, ಮುಸುರೆ ತೊಳೆಯುವುದು, ಪಾತ್ರೆಗಳನ್ನು ಸ್ವಚ್ಛ ಇಡುವುದು, ಭಾಗವತ ಪುರಾಣ ಹೇಳುವುದು, ಸಾಯಂಕಾಲದಲ್ಲಿಯೂ ಫಳಾರದವರಿಗೆ ಫಳಾರ, ಊಟದವರಿಗೆ ಅಡಿಗೆ ಸಿದ್ಧ ಪಡಿಸಿ, ಬಡಿಸಿ ಎಂಜಲ ತೆಗೆದು, ಸಾರಿಸಿ, ಮುಸುರೆ ತೊಳೆದು ಪಾತ್ರೆಗಳ ಸ್ವಚ್ಛ ಇಟ್ಟು, ಕರೆದರೆ ಪಾದ ಸಂಹನನ ಮಾಡುತ್ತ ಅನಿಮಿಷ ಜಾಗರವನ್ನು ಬೇಸರದೆ, ಆಲಸ್ಯ ಮಾಡದೆ, ಯಾರಿಗೂ ತೊಂದರೆ ಎಂದೆನಿಸದೆ ಸೇವಾ ಮಾಡುತ್ತ ಜಾಗರೂಕರಾಗಿರಬೇಕು. ಇದರಲ್ಲಿ ಒಂದುದಿನ ವ್ಯತ್ಯಾಸವಾದರೂ ಯಾವತ್ಪರ್ಯಂತರ ಮಾಡಿದ ಸೇವಾ ವ್ಯರ್ಥವಾಗುವುದು" ಎಂದು ವಿವರಿಸಿದರು.
"ಇಷ್ಟು ಸೇವಾ ಹ್ಯಾಂಗಾದರೂ ಮಾಡಬಹುದು ಆದರೆ ಅನಶನ ವ್ರತದಿಂದ ಮಾಡುವುದು ಸಾಧ್ಯವಿಲ್ಲೆಂದು ಬಿಲ್ವಪತ್ರಿ ಆಚಾರ್ಯರೆನ್ನಲು, ಅನಶನ ವ್ರತ ಮಾಡಿದರೂ ಮಾಡಬಹುದು ಇಷ್ಟುಸೇವಾ ಅಸಾಧ್ಯವೆಂದು ಪುಟ್ಟಾಚಾರ್ಯರೆನ್ನಲು, ಅನಶನ ವ್ರತದಿಂದ ಇಷ್ಟುಸೇವಾ ಆಲಸ್ಯ ಮಾಡದೆ ಯಾರಿಂದಲೂ ಸಾಧ್ಯವಿಲ್ಲ ಬೇಕಾದರೇ ಅನ್ನ ಬಿಟ್ಟು ಅವಲಕ್ಕಿ ಇತ್ಯಾದಿ ಘಟ್ಟಿ ಪದಾರ್ಥ ಫಳಾರ ತಿಂದು ರಾತ್ರಿ ಎರಡು ಪ್ರಹರವಾದರೂ ನಿದ್ರಾಕ್ಕೆ ಅವಕಾಶ ಕೊಟ್ಟರೆ ಸ್ವಲ್ಪ ಹೆಚ್ಚು ಕಡಿಮೆ ಸೇವಾ ಮಾಡಿದರೂ ಮಾಡಬಹುದು ಎಂದು ಸುಂಕದ ಶ್ರೀನಿವಾಸಾಚಾರ್ಯರು ಗೊಣಗುಟ್ಟಿದರು. ನೀವೇನನ್ನುತ್ತೀರಿ ಶ್ರೀನಿವಾಸಾಚಾರ್ಯರೇ? ಎಂದು ಇವರ ಮುಖ ನೋಡಲು "ಅನುಗ್ರಹ ಮಾಡಿ ಆಜ್ಞಾಮಾಡಿದರೆ ಮಾಡುತ್ತೇನೆ" ಅಂತ ಸಾಷ್ಟಾಂಗ ಪ್ರಣಾಮ ಮಾಡಿದರು. "ತಥಾಸ್ತು" ಮಾಡು ಶ್ರೀ ಹರಿವಾಯುಗಳ ಅನುಗ್ರಹ ಬಲದಿಂದ ನಿನ್ನ ಸರ್ವೇಂದ್ರಿಯ ನಿಯಾಮಕರು ಸರ್ವಾನುಕೂಲರಾಗಲಿ ಅಂತ ಪ್ರಸನ್ನ ಮುಖದಿಂದ ನುಡಿದರು.
ಆ ಪ್ರಕಾರ ಮರುದಿನ ಪ್ರಾತ:ಕಾಲದಿಂದ ಸೇವಾಸಕ್ತರಾದರು. ರಾತ್ರಿ ಪಾದ ಸಂಹನನ ಕಾಲದಲ್ಲಿ ತಾವಾಗಿಯೇ ಒಂದು ಸಣ್ಣ ಬಟ್ಟಲಲ್ಲಿ ಪಾನಕ ಮಾತ್ರ ತಂದುಕೊಟ್ಟು ತೆಗೆದುಕೊಳ್ಳಲು ಹೇಳಿದರೆ, "ಮಹದಾಜ್ಞಾ"ಎಂದು ಸ್ವೀಕಾರ ಮಾಡಿದರು. ಈರೀತಿ ಸೇವಾ ಒಂಬತ್ತು ದಿನಗಳ ಬಳಿಕ ಗುರುಗಳು ಬಹು ಸಂತುಷ್ಟರಾಗಿ "ಭಲಾ ಭೂಪಾ ಹೌದೋ" ಈ ರೀತಿ ಸೇವಾ ಮಾಡಿದಕ್ಕೆ ವರ ಏನುಬೇಕು ಕೇಳು ಕೊಡುತ್ತೇವೆಂದು ಬೆನ್ನು ಚಪ್ಪರಿಸಲು, ಬ್ರಹ್ಮಾಂಡದೊಳಗಿನ ಯಾವ ಪದಾರ್ಥಗಳು ಬೇಡ, ನನಗೆ ಬೇಕಾಗಿದ್ದು ಪರಮಾತ್ಮನ ಅತ್ಯರ್ಥ ಪ್ರಸಾದ, ಅದು ಲಭ್ಯವಾಗುವ ರೀತಿಯಲ್ಲಿ ಅನುಗ್ರಹ ಮಾಡಬೇಕೆಂದ ಇವರ ಪ್ರಾರ್ಥನೆಗೆ, ಗುರುಗಳು ಆನಂದೋದ್ರೇಕದಿಂದ "ಶ್ರೀಹರಿ, ವಾಯು, ಗುರುಗಳು ನಿನ್ನಲ್ಲಿ ಮೂರ್ತಿಮಂತರಾಗಿ ಇದ್ದು ನೀನು ಇಚ್ಛಿಸುವುದೆಲ್ಲವನ್ನು ಪೂರೈಸುವರು, ನುಡಿದದ್ದು ಹುಸಿಹೋಗಗೊಡದೇ ನಡೆಸುವರು, ಶಾಪಾನುಗ್ರಹ ಶಕ್ತಿ ಕೊಡುವರು, ಆ ಸೇತು ಹಿಮಾಚಲ ಪರ್ಯಂತ ಔದಾರ್ಯಾದಿಗುಣಗಳಲ್ಲಿ ನಿನ್ನ ಸಮಾನಾಧಿಕರಿಲ್ಲವೆಂದು ಕೀರ್ತಿ ಹಬ್ಬಿಸುವರು. ನಿನ್ನ ಆಚರಣೆ ಸಜ್ಜನರಿಗೆ ಸಮ್ಮತವಾಗಿಯೂ, ಮಾರ್ಗದರ್ಶಕವಾಗಿಯೂ, ದುರ್ಜನರಿಗೆ ಕ್ಷೋಭದಾಯಕವಾಗಿ, ಲೋಕಕ್ಕೆ ಹಿತಕರವಾಗಿ ತಥಾ ಆದರ್ಶಪ್ರಾಯವಾಗಿಯೂ ಆಗುವುದು. ನಿನ್ನ ನಡೆ ನುಡಿಗಳು ವೇದಾರ್ಥ ಗರ್ಭಿತವಾಗಿಯೂ ಸರ್ವತೋಮುಖ ಯಜ್ಞದಂತೆ ಪರಿಣಮಿಸಲಿ. ಮಹಾಜ್ಞಾನಿಯಾಗು, ವಿರಕ್ತ ಶಿಖಾಮಣಿಯಾಗು, ಐಹಿಕ ಸಂಪತ್ತು ನಿನಗೆ ಬೇಡವಾದರೂ ತಾನಾಗಿಯೇ ರಥ, ಹಯ, ಪಲ್ಲಕಿ ಮೊದಲಾದ ವೈಭವಗಳಿಂದ ಮೆರೆಯುವಂಥವನಾಗು, ತಥಾಸ್ತು" ಎಂದು ಶಿರಸ್ಸಿನ ಮೇಲೆ ತಮ್ಮ ಅಮೃತ ಹಸ್ತವನ್ನಿಟ್ಟು ಅಶೀರ್ವಾದ ಮಾಡಿದರು.
ಒಂದುದಿನ ಪೂಜ್ಯ ಅರಳಿಕಟ್ಟಿ ಅಚಾರ್ಯರಿಗೆ ಸತತ ೪೦ ದಿನಗಳ ಪರ್ಯಂತರ ಉಪವಾಸ ಮಾಡುವುದಾಗಿ, ವಾಯುದೇವರು ಆಜ್ಞಾಪಿಸಿದ್ದ ಮೂಲಕ, ನಿತ್ಯವೂ ತೀರ್ಥ ಗಂಧಾಕ್ಷತೆ ಧಾರಣಮಾಡಿ ಊಟಕ್ಕೆ ಕೂತು, ಎಲೆಯಲ್ಲಿ ಯಾವ ಪದಾರ್ಥಗಳನ್ನು ಹಾಕಿಸಿಕೊಳ್ಳದೇ, ಶಿಷ್ಯರ ಊಟ ಮುಗಿಯುವವರಿಗೆ ಕೂತು ನಿತ್ಯವೂ ಉಪವಾಸ ಮಾಡುತ್ತಿದ್ದರು. ಬಡಿಸುವಾಗ ಅಕಸ್ಮಾತ್ ಎಲೆಯಲ್ಲಿ ಅಪ್ಪಿತಪ್ಪಿ ಯಾವ ಪದಾರ್ಥವನ್ನಾದರು ಹಾಕಿದರೇ ಅದರನ್ನು ಸ್ವೀಕರಿಸಿ ಅಮೃತೋಪಿ ತೆಗೆದುಕೊಂಡು ಮರುದಿನದಿಂದ ೪೦ ದಿನಗಳವರೆಗೂ ಉಪವಾಸ ಪ್ರಾರಂಭವಾಗುತ್ತಿತ್ತು. ಈ ರೀತಿಲಿ ಹಲವುಸಲ ಭಂಗವಾಗುವ ಸಂದರ್ಭದಲ್ಲಿ ಮತ್ತೊಮ್ಮೆ ಸರ್ವಸ್ವ ದಾನ ಮಾಡುವುದಾಗಿ ಪ್ರಾಣದೇವರು ಆಜ್ಞಾ ಮಾಡಲು, "ಈವರೆಗೂ ಇದ್ದ ಆಸ್ತಿಯಲ್ಲಿ ನನ್ನ ಭೋಗಾರ್ಥ ಕಿಂಚಿದಪಿ ಇಟ್ಟುಗೊಳ್ಳದೇ ತಮಗೆ ಸಮರ್ಪಣ ಮಾಡುತ್ತ ಬಂದಂತೆ, ನನ್ನ ಜೀವಮಾನ ಪರ್ಯಂತ ಮಾಡುತ್ತೇನೆ ಹೊರತು ಈ ಸಲ ಸರ್ವಸ್ವ ದಾನ ಮಾಡುವುದಿಲ್ಲೆಂದು" ಹಟಮಾಡಲು, ಹಾಗಾದರೇ, "ಈ ನಿನ್ನ ದೇಹವನ್ನು ಸಮಯೋಚಿತ ತೆಗೆಯುತ್ತೇ"ವೆಂದು ಶ್ರೀವಾಯುದೇವರು ಸೂಚನೆ ಕೊಟ್ಟರು. ಶ್ರೀವಾಯುದೇವರ ಸೂಚನೆದಂತೆ ಪೂಜ್ಯ ಆಚಾರ್ಯರು 40ನೇ ದಿವಸ ಸರ್ವ ಶಿಷ್ಯ ಮಂಡಲಿ ಸಮಕ್ಷಮ ಪ್ರಾತ:ಕಾಲ ಸೂರ್ಯೋದಯ ಸಮಯಕ್ಕೆ "ಶಾಲಿವಾಹನ ಶಕೆ ವಿಳಂಬಿ ನಾಮ ಸಂವತ್ಸರ ಆಷಾಡ ಶುಕ್ಲ ಪ್ರತಿಪದ ಭಾನುವಾರ (ಕ್ರೀ. ಶ. 1898) ಸ್ವಲೋಕಕ್ಕೆ ತೆರಳಿದರು.
ಪೂಜ್ಯ ಆಚಾರ್ಯರ ಯಾತ್ರಾಮಾಡಿದ ಸುದ್ದಿ, ಶೀಘ್ರವಾಗಿ ನಾಲ್ಕು ದಿಕ್ಕಿಯೂ ಹರಡಿ, ಅಂತ್ಯ ದರ್ಶನಾರ್ಥ ಸುತ್ತಮುತ್ತಲಿನ ಗ್ರಾಮಗಳಿಂದ ಎಲ್ಲ ಜನರು ಬರುವದರಿಂದ, ದಹನ ಸಂಸ್ಕಾರ ಬಿಳ್ವಪತ್ರಿ ಆಚಾರ್ಯರ ಹೊಲದಲ್ಲಿ ರಾತ್ರಿ ಎಂಟು ಘಂಟಿ ನಂತರ ಮಾಡುವುದೆಂದು ತಿಳಿದಕೂಡಲೇ ತಮ್ಮಷ್ಟಕ್ಕೆ ತಾವೇ ನೆರೆದ ಜನರು ಶ್ರೀಗಂಧ, ತುಳಸಿಕಾಷ್ಟ, ಕರ್ಪೂರ, ಊದಿನ ಕಡ್ಡಿಗಳಿಂದಲೇ ಚಿತವನ್ನು ಸಿದ್ದ ಪಡಿಸಿ, ಸುಮಾರು ಎರಡು ಫರ್ಲಾಂಗು ಧೂರವಿದ್ದ ಈ ಸ್ಥಳಕ್ಕೆ ದಿವಟಿಗಳು, ತಾಳ, ತಂಬೂರಿ, ಮೃದಂಗ, ಜಾಗಟಿ ಇತ್ಯಾದಿ ಭಜನೆ ಮೇಳವಾದ್ಯಗಳಿಂದ ವೈಭವದೊಂದಿಗೆ ರಾತ್ರಿ ಹತ್ತು ಗಂಟೆ ಸುಮಾರಕ್ಕೆ ಪ್ರಾರಂಭವಾದ ದಹನ ಸಂಸ್ಕಾರ ವಿಧಿ ಮುಂದೆ ಒಂದು ತಾಸಿನವರೆಗೂ ಮುಂದು ವರಿದು ನಂತರ ಸ್ನಾನ ಮಾಡಿ ರುದ್ರ ದೇವರ ದರ್ಶನ ತೆಗೆದುಕೊಂಡು ಸರ್ವರೂ ಮನೆ ಸೇರಿದರು.
ಆಚಾರ್ಯರು ಯಾತ್ರಾಮಾಡಿದ ಸುದ್ದಿ ತಿಳಿಯದ ಭಕ್ತನಾದ ಬಡಿಗಾರ ರುದ್ರಪ್ಪನು ಮೂರು ದಿನಗಳ ಗ್ರಾಮಾಂತರ ಮುಗಿಸಿ, ಅರುಣೋದಯಕ್ಕೆ ಸರಿಯಾಗಿ ಎಂದಿನಂತೆ ತನ್ನ ಹೊಲಕ್ಕೆ ಮಾರ್ಗದಲ್ಲಿ ಆಚಾರ್ಯರ ದೇಹ ಸಂಸ್ಕಾರ ಮಾಡಿದ ಸ್ಥಳದ ಮೂಲಕ ಹೋಗುವಾಗ,"ಇಲ್ಲಿ ನೆಗ್ಗಿನ ಮುಳ್ಳು ಬಹಳ ಇದೆ ಎಂದೂ ನೀವೂ ಹೊರಗೆ ಬಾರದಿದ್ದವರು ಇವತ್ತು ಬರಿಗಾಲಿನಿಂದ ಏಕೆ ಬಂದಿರಿ ? ಅಂತ ಆಚಾರ್ಯರನ್ನು ನೋಡಿದಂತೆ ಪ್ರಶ್ನಿಸಿದನು. ಅದಕ್ಕೆ ಆಚಾರ್ಯರು ಹೌದು! ಕೆಲವು ದಿವಸ ನಾವು ಇಲ್ಲಿರಬೇಕಾಗಿದೆ" ಅಂತ ಉತ್ತರ ಕೊಡಲು, ಚಪ್ಪಲಿ ಹಾಕಿಕೊಳ್ಳದ ನಿಮಗೆ ಅವಿಗೆ ಮಾಡಿ ತಂದು ಕೊಡಲೇನೆಂದು ಕೇಳಲು, ಹಾಗೇ ಮಾಡೆಂದ ಆಚಾರ್ಯರ ಉತ್ತರಕ್ಕೆ ಪುನ: ನಮಸ್ಕಾರ ಮಾಡಿ ತನ್ನ ಹೊಲಕ್ಕೆ ಹೋಗಿ ಬರುವಾಗ ಕಾಣದಿದ್ದ ಅಚಾರ್ಯರನ್ನು ಮನೆಗೆ ಹೋಗಿರಬಹುದೆಂದೆಣಿಸಿ, ಮಧ್ಯಾಹ್ನದಲ್ಲಿ ಭೊಜನಕ್ಕೆ ಸಿದ್ಧನಾಗುವಮುನ್ನ ಅವನಪದ್ದತಿಯಂತೆ ಆಚಾರ್ಯರ ಮನೆಗೆ ಬಂದು ನಮಸ್ಕಾರ ಮಾಡಿ ಭೋಜನ ಮಾಡುವ ಸಂಪ್ರದಾಯದಂತೆ ಆ ದಿನವೂ ಆಚಾರ್ಯರ ಮನೆಗೆ ಹೋಗಲು ಸಿದ್ಧನಾಗಲು, "ಅಪ್ಪನವರು ಹೋರಟು ಹೋಗಿ ಎರಡು ದಿನಗಳಾದವು ಈಗ ಏತಕ್ಕೆ ಹೋಗುವಿಯೆಂದು ಹೆಂಡತಿ ಹೇಳಲು, "ಛೀ! ಎಂಥ ಮಾತಾಡುವಿ, ನಿನಗೇನು ಹುಚ್ಚು ಹಿಡದಿದೇ? ಎಂದು ಝಬರಿಸಲು,"ಇಲ್ಲ ಅಪ್ಪನವರು ಸತ್ತಿದ್ದು ನಿಜ ನೀನು ಊರಲ್ಲಿ ಇರದಿದ್ದರಿಂದ ನಿನಗೆ ಗೊತ್ತಿಲ್ಲವೆಂದು ಹೇಳಲು, ಹೆಚ್ಚಿಗೆ ಸಿಟ್ಟಿಗೆದ್ದು ಹೆಂಡತಿಗೆ ಒಂದು ಪೆಟ್ಟು ಕೊಟ್ಟು ಆಚಾರ್ಯರ ಮನಿಗೆ ಬಂದನು. ಇಲ್ಲಿ ಎಲ್ಲ ಶಿಷ್ಯರು ದು:ಖಸಾಗರದಲ್ಲಿ ಇರುವುದು ಕಂಡು ಹೆಂಡತಿ ಹೇಳಿದ್ದು ನಿಜವೆಂದು ತೋರಿ, "ಶಿಷ್ಯನಾದ ನನಗೆ ಅಂತ್ಯ ದರ್ಶನವಾಯಿತೆಂದು, ದರ್ಶನ ಕೊಟ್ಟ ಮಹಾಪ್ರಭು" ಎಂದು ಬಹುಪರಿ ಪ್ರಲಾಪಿಸಲು, ಎಲ್ಲ ಶಿಷ್ಯರಿಗೂ ಅವರ ಭಕ್ತಪ್ರಿಯತ್ವದ ಬಗ್ಗೆ ಉದ್ರೇಕ ಉಂಟಾಗಿ, "ಈತನಿಗೆ ದರ್ಶನವಿತ್ತಂತೆ ನಮ್ಮೆಲ್ಲರಿಗೂ ಒಮ್ಮೆ ದರ್ಶನ ಕೊಡಿರೆಂದು ಪ್ರಾರ್ಥನೆ ಮಾಡಲು, "ಪ್ರತಿಯೊಬ್ಬರು ಇದರಂತೆ ಕೆಳುತ್ತ ಹೋದರೆ ಎಷ್ಟು ಸಾರೆ ದರ್ಶನ ಕೊಡಬೇಕು? ಪ್ರಯುಕ್ತ ಬಿಲ್ವಪತ್ರಿ ಅಚಾರ್ಯರ ಉಪಾಸ್ಯ ಪ್ರಾಣಪ್ರತೀಕದ ಕೈಕೆಳಗೆ ನಾವು ಅಭಿವ್ಯಕ್ತರಾಗಿರುತ್ತೇವೆ ದರ್ಶನ ತೆಗೆದುಕೊಂಡು ತೃಪ್ತರಾಗಿರಿ ಅಂತ ಮತ್ತೋರ್ವ ಶಿಷ್ಯರಾದ ಕೀರಣಿ ಶ್ರೀಪಾಂಡುರಂಗಾಚಾರ್ಯರ ಸ್ವಪ್ನದಲ್ಲಿ ಹೆಳಲು, ಎಲ್ಲರೂ ಅಭಿವ್ಯಕ್ತರಾಗಿರುವುದು ನೋಡಿ ದರ್ಶನ ಮಾಡಿದರು. ಕೆಲಕಾಲಾನಂತರ ಕೀರಣಿ ಶ್ರೀಪಾಂಡುರಂಗಾಚಾರ್ಯರು. ಪೂಜ್ಯ ಶ್ರೀಆಚಾರ್ಯರ ಕಟ್ಟಿಗೆ ಮಂಟಪ, ಗರ್ಭಗೃಹ ಇತ್ಯಾದಿಗಳಿಂದ ವೈಭವೋಪೇತ ದೇವಮಂದಿರವನ್ನು ನಿರ್ಮಿಸಿ, ದಿನಾಂಕ 01.10.1903 ರಂದು ಆಚಾರ್ಯರಗೆ ಸಮರ್ಪಣೆ ಮಾಡಿದರು.
ಶ್ಲೋಕ : ಧೂಮಾರ್ಯಪಾದ ಭಜಕಾನ್ ಮಧ್ವಶಾಸ್ತ್ರಾರ್ಥವಾದಿನ: |
ಗೃಹಾದಿ ಸರ್ವಧಾತೄಂಶ್ಚ ನೃಸಿಂಹಾರ್ಯ ಗುರುಂಭಜೇ ||
(received in WhatsApp)
***
" ಶ್ರೀ ರಾಯರ ಅಂತರಂಗ ಭಕ್ತರು ಅಪರೋಕ್ಷ ಜ್ಞಾನಿಗಳಾದ ಶ್ರೀ ಅರಳೀಕಟ್ಟಿ ನರಸಿಂಹಾಚಾರ್ಯರು "
" ದಿನಾಂಕ 03.07.19 ಬುಧವಾರ ಅಪರೋಕ್ಷ ಜ್ಞಾನಿಗಳಾದ ಶ್ರೀ ಅರಳೀಕಟ್ಟಿ ನರಸಿಂಹಾಚಾರ್ಯರ ಆರಾಧನಾ ಮಹೋತ್ಸವ, ಹತ್ತಿಬೆಳೆಗಲ್ "
ಶ್ರೀ ನರಸಿಂಹಾಚಾರ್ಯರು ಹತ್ತಿಬೆಳೆಗಲ್ ಕ್ಷೇತ್ರವಾಸಿಗಳು. ಇವರು ಶ್ರೀ ಮಂತ್ರಾಲಯ ಪ್ರಭುಗಳಿಂದ ಪ್ರತಿಷ್ಠಿತರಾದ ಶ್ರೀ ಮುಖ್ಯಪ್ರಾಣದೇವರ ಸೇವೆಯನ್ನು ಮಾಡಿ ಶ್ರೀ ಹರಿವಾಯು ಗುರುಗಳ ಪರಮಾನುಗ್ರಹಕ್ಕೆ ಪಾತ್ರರಾದವರು.
1. ಶ್ರೀ ವಾಯುದೇವರು ಎಲ್ಲರಿಗೂ ಕಂಡು ಬರುವಂತೆ " ಮಹಾ ಮರ್ಕಟ " ರೂಪದಿಂದ ಮೂರ್ತಿಮಂತರಾಗಿ ೪ ತಿಂಗಳು ಪ್ರತಿ ನಿತ್ಯವೂ ಕ್ಲುಪ್ತ ಕಾಲಕ್ಕೆ ಬಂದು ಶ್ರೀ ಆಚಾರ್ಯರಿಂದ ಸೇವೆ ಸ್ವೀಕಾರ ಮಾಡುತ್ತಿದ್ದರು.
2. ಒಮ್ಮೆ ಮಹಾ ಮಳೆಯ ಮೂಲಕ ಕಟ್ಟಿಗೆಯು ದೊರೆಯದಿರುವ ಕಾರಣ ಪರಿತಪಿಸುತ್ತಿರಲು ಶ್ರೀ ಹರಿಯು ತಾನೇ ಒಣಗಿದ ಕಟ್ಟಿಗೆಯ ಹೊರೆಯನ್ನು ತಂದುಹಾಕಿ ಮಾತನಾಡಿದ ಪ್ರಕಾರ ಒಳಗಿನಿಂದ ಹಣ ತಂದು ಕೊಡುವಷ್ಟರಲ್ಲಿ ಅದೃಶ್ಯನಾಗಿದ್ದನು.
3. ಯಾರೋ ಒಬ್ಬ ಯತಿಗಳು ಪಲ್ಲಕ್ಕಿಯಲ್ಲಿ ತಮ್ಮ ಮಠದ ಪರಿವಾರ ಸಮೇತ ರಾತ್ರಿ ಶ್ರೀ ಅರಳೀಕಟ್ಟೆ ಆಚಾರ್ಯರ ಮನೆಗೆ ಬಂದು ಹೋದಂತೆ ಅನೇಕ ಜನರಿಗೆ ಕಂಡು ಬಂದಿತು.
ಮಾರನೇದಿನ ಪ್ರಾತಃಕಾಲದಲ್ಲಿ ಊರೊಳಗಿನ ಬ್ರಾಹ್ಮಣರು ಶ್ರೀ ಅರಳೀಕಟ್ಟೆ ಆಚಾರ್ಯರ ಮನೆಯಲ್ಲಿರುವ ಯತಿಗಳ ದರ್ಶನಾರ್ಥ ಶ್ರೀ ಆಚಾರ್ಯರ ಮನೆಗೆ ಬರಲು ಯಾರು ಇರಲಿಲ್ಲ.
4. ಶ್ರೀ ಅರಳೀಕಟ್ಟೆ ಆಚಾರ್ಯರ ಮನೆಯ ಉಪ್ಪು ನೀರಿನ ಬಾವಿಯು ಇವರ ಮಹಿಮೆಯಿಂದ ಸಹಿಯಾಗಿಯೂ, ಮಧುರವಾಗಿಯೂ ಪರಿಮಳೋಪೇತವಾಗಿಯೂ ಆಯಿತು.
5. ಇವರಿಗೆ ಸುಮಾರು 60 ಜನ ಶಿಷ್ಯರಿದ್ದರು.
7. ಶ್ರೀ ಅರಳೀಕಟ್ಟೆ ಆಚಾರ್ಯರಿಗೆ ಶ್ರೀ ಇಂದ್ರದೇವರ ಅಂಶ ಸಂಭೂತರೂ, ಶ್ರೀ ರುದ್ರದೇವರ ನಿತ್ಯಾವೇಶಯುಕ್ತರೂ ಆದ ಶ್ರೀ ಮುತ್ತಗಿ ಶ್ರೀನಿವಾಸಾಚಾರ್ಯರು ಪ್ರೀತಿಯ ವಿದ್ಯಾ ಗುರುಗಳು!!
" ಬಿಲ್ವ ಪತ್ರ ಆಚಾರ್ಯರು "
ಶ್ರೀ ಅರಳೀಕಟ್ಟೆ ನರಸಿಂಹಾಚಾರ್ಯರು ಶ್ರೀ ಹರಿವಾಯು ಗುರುಗಳ ಪರಮಾನುಗ್ರಹಕ್ಕಾಗಿ " ಅನಶನ ವ್ರತ " ವನ್ನು ಕೈಗೊಂಡರು.
ಈ ವ್ರತಾಚರಣೆ ಮಾಡುವ ಸಂದರ್ಭದಲ್ಲಿ ಶ್ರೀ ಆಚಾರ್ಯರು ಬಿಲ್ವಪತ್ರಿ - ಮೊಸರು - ಹಾಲು ಸೇವನೆ ಮಾಡುತ್ತಿದ್ದರಿಂದ ಇವರು " ಶ್ರೀ ಬಿಲ್ವಪತ್ರಿ ಆಚಾರ್ಯರೆಂದೇ ಖ್ಯಾರಾದರು!
ಹತ್ತಿಬೆಳೆಗಲ್ಲಿನಲ್ಲಿ ಶ್ರೀ ಆಚಾರ್ಯರು ಸೇವಿಸಿದ ಬಿಲ್ವಪತ್ರೆಯನ್ನು ಸೇವಿಸಿದರೆ ಅದು ಸಿಹಿಯಾಗಿ ಇರುತ್ತದೆ. ಆ ಸಿಹಿ ಇಂದಿಗೂ ಇರುವುದು ಶ್ರೀ ಆಚಾರ್ಯರ ಮಹಿಮೆಯೇ ಸರಿ!
ಶ್ರೀ ಅರಳೀಕಟ್ಟಿ ನರಸಿಂಹಾಚಾರ್ಯರು ಆಷಾಢ ಶುದ್ಧ ಪ್ರತಿಪದದಂದು ವೈಕುಂಠಕ್ಕೆ ತೆರೆಳಿದರು.
ಈ ವಿಷಯವನ್ನು ಶ್ರೀ ಗುರು ಇಂದಿರೇಶಾ೦ಕಿತ ಪಾಂಡುರಂಗಿ ಹುಚ್ಚಾಚಾರ್ಯರು....
ರಾಗ : ಕೇದಾರ ಗೌಳ ತಾಳ : ಆದಿ
ಸೂರಿಗಳರಸ ಶ್ರೀ ನರಸಿಂಹಾರ್ಯರ ।
ಸಾರಿ ಭಜಿಸಿ ಬೇಡಿರೈ ।। ಪಲ್ಲವಿ ।।
ಧಾರುಣಿಯೊಳು ಜನಿಸಿ ಮನೆ ಧನ ।
ಸೂರಿ ಮಾಡುವರೆಲ್ಲಿ ಕಾಣೆನು ।
ವಾರಿಜಾಸನ ವಿನುತ ಹರಿ ಪುರ ।
ಸೇರಿ ಸುಖಿಸುವಪಾರ ಮಹಿಮರ ।। ಅ ಪ ।।
ಧರೆಯೊಳು ಪ್ರಹ್ಲಾದ ವರದ ವಾಯು । ಆಕ್ಷೋ ।
ಭರ ಸೂನು ಜಯತೀರ್ಥಾರ್ಯರು ।
ಪರಿಮಳ ರಚಿಸಿದ ಪರಮ ಹಂಸಾಗ್ರಣಿ ।।
ಗುರು ರಾಘವೇಂದ್ರಾರ್ಯರು ।
ಪರಿ ಪರಿ ಪೂಜಿಸೆ ಮರುಳಾಗೆ ಇವರಿಗೆ ।
ಕರುಣದಿ ಒಲಿದಿಹರೋ - ಇಲ್ಲಿಹರೋ ।। ಚರಣ ।।
ಪರಮ ಕರುಣಾ ಶರಧಿ ಸಂತತ ।
ಶರಣರ ಸರಸಿಜ ಭಜಿಪ ಜನರಿಗೆ ।
ಮರುತ ಶಾಸ್ತ್ರವ ಬೋಧಿಸುತ । ಉ ।।
ದ್ಧರಿಸಿ ಪಾಮರ ನರರ ಪೊರೆವರ ।
ಅರುಹಲಳವಲ್ಲ ಗುರುವರ್ಯರ ಮಹಿಮೆ ।
ಸಿರಿ ಪತಿ ಕರುಣಾಪಾತ್ರಾ ।। ಚರಣ ।।
ಜರಿವ ವಿಳಂಬಿ ವತ್ಸರದೊಳಾಷಾಢ । ಪಾಂ ।
ಡುರ ನಂದ ತಿಥಿಯು ಮಿತ್ರಾ ।
ವರ ವಾಸರದಿ ಶ್ರೀ ಹರಿನಾಮ ಜಪಿಸುತ ।।
ತೆರಳಿ ಪೋದರು ವಿಚಿತ್ರಾ ಪಾವನಗಾತ್ರ ।
ಪರಮ ಮಂಗಳ ಚರಿತ ಸದ್ಗುಣ ಭರಿತ ಸುಜನ । ಚ ।
ಕೋರ ಚಂದಿರ ಅರ ವಿದೂರರ ಸ್ಮರಣೆ ಸಾಧನ ।। ಚರಣ ।।
ಕ್ಲೇಶ ಸುಖಮಯ ತಿಳಿದು । ಮನ ।
ದೊಳಗೇಸು ಸಾಧನಗೈದು ।
ನಿತ್ಯುಪವಾಸದಿಂದಲಿ ನಲಿದು ಭಕ್ತರ ।
ಆಸೆಯನು ಪೂರೈಸಿ ಮೆರೆದಾ ।। ಚರಣ ।।
ಭಾಸುರ ಭಾನು ಸಂಕಾಶರೆನಿಸಿ ಸರ್ವ ।
ದೇಶದೊಳು ಖ್ಯಾತರಾಗೀ ।
ಕಾಸು ಕಾಂಚನಾದಿ ನಿರಾಶಾಸಿಯಂ ।।
ವಿಷಯಾ೦ಬು ರಾಶಿಯನು ದಾಟೀ ಸಾಗೀ ।
ತೋಷದಲಿ ಗುರು ಇಂದಿ ।
ರೇಶರಾಯನ ನಿಜ ದಾಸರೊಳು ಮಿಳಿತರಾಗೇ ಚೆನ್ನಾಗೀ ।। ಚರಣ ।।
" ಮಹಿಮೆ "
ಶ್ರೀ ಅರಳೀಕಟ್ಟೀ ಆಚಾರ್ಯರು ಸ್ವರ್ಗಸ್ಥರಾಗಿ ೩ ದಿನಗಳು ಕಳೆದಿದ್ದವು. ಶ್ರೀ ಆಚಾರ್ಯರಿಗೆ ಹರಿಜನ ಭಕ್ತನೊಬ್ಬನು ಇರುತ್ತಾನೆ. ಅವನು ಶ್ರೀ ಆಚಾರ್ಯರು ಸ್ವರ್ಗಸ್ಥರಾದಾಗ ಊರಲ್ಲಿ ಇರುವುದಿಲ್ಲ. ಅವನು ಊರಿಗೆ ಬರುವಾಗ ಮಾರ್ಗ ಮಧ್ಯದಲ್ಲಿ ಅವನಿಗೆ ಶ್ರೀ ಆಚಾರ್ಯರು ಕಾಣಿಸಿಕೊಂಡು ಏನಪ್ಪಾ! ಈಗ ಬರುತ್ತಿದ್ದೀಯಾ? ಚೆನ್ನಾಗಿಯಿದ್ದೆಯಾ ಎಂದು ಮಾತಾಡಿಸುತ್ತಾರೆ.
ಅವನು ನೇರವಾಗಿ ಮನೆಗೆ ಬಂದಾಗ ಅವನ ಹೆಂಡತಿ ಅಳುತ್ತಾ ಶ್ರೀ ಆಚಾರಪ್ಪ ಅವರು ಹರಿಯಾತ್ರೆ ಮಾಡಿದರೆಂದು ಹೇಳಿದಾಗ, ಆಶ್ಚರ್ಯದಿಂದ ಈಗ ತಾನೇ ನಾನು ಶ್ರೀ ಆಚಾರ್ಯರನ್ನು ಮಾತಾಡಿಸಿಕೊಂಡು ಬರುತ್ತಿದ್ದೇನೆಂದು ಹೇಳಿದಾಗ, ಅವಳು ನೀವು ಬೇಕಾದರೆ ಶ್ರೀ ಆಚಾರಪ್ಪ ಅವರ ಮಾಗೇ ಹೋಗಿ ನೋಡಿ ಸತ್ಯ ತಿಳಿಯುತ್ತದೆ ಎಂದು ನುಡಿದಾಗ, ಅವನು ಶ್ರೀ ಆಚಾರ್ಯರ ಮನೆಗೆ ಬಂದು ವಿಚಾರಿಸಿದರೆ ಶ್ರೀ ಆಚಾರ್ಯರು ಸ್ವರ್ಗಸ್ಥರಾಗಿ 3 ದಿನಗಳು ಆಯಿತು ಎಂದು ಹೇಳಿದರು!!
ಶ್ರೀ ಆಚಾರ್ಯರು ನಂಬಿದ ಭಕ್ತರಿಗೆ ಕಲ್ಪವೃಕ್ಷದಂತೆ ಬೆಂಬಿಡದೇ ಕಾಯುತ್ತಿದ್ದಾರೆ ಎನ್ನುವುದಕ್ಕೆ ಇದೊಂದು ಜ್ವಲಂತ ನಿದರ್ಶನ!
ಶ್ರೀ ಆಚಾರ್ಯರ ಮಹಿಮೆಗಳು ಅನೇಕ. ಅವುಗಳನ್ನು ಹೇಳುತ್ತಾ ಹೋದರೆ ದೊಡ್ಡ ಗ್ರಂಥವೇ ಆದೀತು. ಅವರ ಆರಾಧನಾ ಶುಭ ಸಂದರ್ಭದಲ್ಲಿ ದೊಡ್ಡವರ ಸ್ಮರಣೆ ಬಂದರೆ ಅದು ಜನ್ಮ ಜನ್ಮಾಂತರದ ಸುಕೃತವೇ ಸರಿ!
ಶ್ರೀ ಆಚಾರ್ಯರ ಸ್ಮರಣೆ ಮಾಡಿ ಶ್ರೀ ಹರಿ ವಾಯು ಗುರುಗಳ ಪರಮಾನುಗ್ರಹಕ್ಕೆ ಪಾತ್ರರಾಗೋಣ.....!!!
(received in WhatsApp)
***
ಇಂದು ಶ್ರೀ ಅರಳಿಕಟ್ಟಿ ನರಸಿಂಹ ಆಚಾರ್ಯರು ಶ್ರೀಹರಿಯ ಪುರಕ್ಕೆ ತೆರಳಿದ ದಿನ.
ಅವರ ಬಗ್ಗೆ ನನ್ನ ಅಲ್ಪಮತಿಗೆ ಬಂದಷ್ಟು ತಿಳಿಸುವ ಪ್ರಯತ್ನ.
ಇವರು ಹತ್ತಿಬೆಳಗಲ್ ಗ್ರಾಮದವರು.ಇದು ಆಲೂರು ಹತ್ತಿರ ಬರುತ್ತದೆ.
ಇವರ ಮಹಾತ್ಮೆ ಸಹ ಬಹಳವಾಗಿ ಇದೆ.
ಇವರ ಜೀವನಚರಿತ್ರೆ ಒಮ್ಮೆ ಅವಲೋಕಿಸಿದಾಗ ನಮಗೆ ಮುಖ್ಯವಾಗಿ ಎರಡು ವಿಷಯಗಳು ಅತ್ಯಂತ ಮಹತ್ವವುಳ್ಳ ದ್ದಾಗಿ ಕಂಡು ಬರುತ್ತದೆ.
ಮೊದಲನೆಯದು
ಶ್ರೀ ಪ್ರಾಣದೇವರ ಸ್ವಪ್ನ ಸೂಚನೆಯಂತೆ ತಮ್ಮ ಇಡಿ ಸರ್ವಸ್ವ ವನ್ನು ದಾನ ಮಾಡಿದ್ದು ಮತ್ತು
ತಮ್ಮ ಪ್ರಾಣವನ್ನು ಸಹ ಆ ಪ್ರಾಣದೇವರಿಗೆ ಒಪ್ಪಿಸಿದ ಮಹಾನುಭಾವರು ಅವರು.
ಎಲ್ಲವನ್ನೂ ದಾನ ಮಾಡಿದ್ದು ಯಾವುದೇ ತರಹದ ಪ್ರಚಾರಕ್ಕೆ,ಅಥವಾ ಪ್ರತಿಷ್ಟೆಗಲ್ಲ.
ನಾವಾದರೆ ಕಿಂಚಿತ್ತೂ ಕೊಟ್ಟರು ಅದರ ಬಗ್ಗೆ ನಮಗೆ ಎಲ್ಲರು ಹೊಗಳಲಿ ಎನ್ನುವ ಮನೋಭಾವನೆ ಇರುತ್ತದೆ.
ಇವರು ಅಂತಹ ಅಪೇಕ್ಷಿತ ಎಂದು ಪಟ್ಟವರಲ್ಲ.ಮಾಡುವ ಪ್ರತಿಯೊಂದು ಕಾರ್ಯವು ಆ ಮುಖ್ಯ ಪ್ರಾಣನ ಆಜ್ಞೆ ಮತ್ತು ಅವನ ಅಂತರ್ಯಾಮಿಯಾದ ಶ್ರೀ ಹರಿಯ ಪ್ರೀತಿಗಾಗಿಯೇ ಹೊರತು ಬೇರೆ ಯಾವ ಉದ್ದೇಶ ಇಲ್ಲ.
ಇಂತಹ ವಿರಕ್ತ ಮನೋಭಾವನೆ ಬರುವದು ಬಹಳ ವಿರಳ ನಮಗೆಲ್ಲ.
ಎರಡನೇ ಯದು..
ನಲವತ್ತು ದಿನಗಳವರೆಗೆ ಉಪವಾಸ ಕೈಗೊಂಡಿರುವದು.
ಶ್ರೀ ಮುಖ್ಯ ಪ್ರಾಣನ ವಿಶೇಷ ಉಪಾಸಕರು ಇವರಾಗಿದ್ದರಿಂದ ಅವರ ಸೂಚನೆ,ಮತ್ತು ಆಜ್ಞೆಯಂತೆ ೪೦ದಿನಗಳ ಕಾಲ ಉಪವಾಸ ಕೈಗೊಂಡರು.
ನಿತ್ಯ ವು ಶಿಷ್ಯ ಪರಿವಾರದವರು ಜೊತೆಯಲ್ಲಿ ಕುಳಿತು ತೀರ್ಥ ತೆಗೆದುಕೊಂಡು ಗಂಧ,ಅಕ್ಷತಾದಿಗಳನ್ನು ಲೇಪನ ಮಾಡಿಕೊಂಡು ಅವರ ಜೊತೆಯಲ್ಲಿ ಎಲೆ ಹಾಕಿಸಿಕೊಂಡು ಕೂಡಬೇಕು.ಯಾವ ಪದಾರ್ಥಗಳನ್ನು ತಾವು ಹಾಕಿಸಿಕೊಳ್ಳದೇ ಶಿಷ್ಯರು ಊಟವಾಗುವವರೆಗು ಕೂತು ನಿತ್ಯ ಉಪವಾಸ ಮಾಡುತ್ತಾ ಇದ್ದರು.
ಆಕಸ್ಮಿಕವಾಗಿ ಯಾರಾದರೂ ಬಡಿಸುವಾಗ ಒಂದು ಪದಾರ್ಥಗಳು ಇವರ ಎಲೆಗೆ ಬಿತ್ತು ಅಂದರೆ ಅದನ್ನು ಸ್ವೀಕರಿಸಿ, ತಮ್ಮ ಉಪವಾಸ ಭಂಗವಾಯಿತೆಂದು ತಿಳಿದು ಮತ್ತೆ ಪುನಃ ಮರುದಿನದಿಂದ ೪೦ ದಿನಗಳವರೆಗೆ ಉಪವಾಸ ಪ್ರಾರಂಭಿಸುತ್ತಾ ಇದ್ದರು.
ಆಚಾರ್ಯರು ಈ ಕ್ರಮದಲ್ಲಿ ಅನೇಕ ಸಲ ಭಂಗವಾದದ್ದು ಉಂಟು.
ಹೀಗೆ ಕೊನೆಯಲ್ಲಿ ೪೦ದಿನಗಳ ಕಾಲ ಉಪವಾಸ ವ್ರತವನ್ನು ಆಚರಿಸಿ, ತಮ್ಮ ಶಿಷ್ಯ ಮಂಡಳಿಯ ಸಮಕ್ಷಮದಲ್ಲಿ ಪ್ರಾತಃಕಾಲ,ವಿಳಂಬಿ ನಾಮ ಸಂವತ್ಸರ,ಆಷಾಡ ಮಾಸದ ಶುಕ್ಲ ಪಕ್ಷದ ಪಾಡ್ಯ ದಿನದಂದು ಶ್ರೀ ಹರಿಯ ಪುರಕ್ಕೆ ತೆರಳಿದ ಮಹಾನುಭಾವ ರು.
ಒಂದು ಏಕಾದಶಿ, ಮಾಡಲು ಹೌಹಾರುವ ಅಥವಾ ಎರಡು ಬಂದರಂತು ಕೇಳುವದೇ ಬೇಡ.
ಇಡೀ ಪ್ರಪಂಚಕ್ಕೆ ಸಾರುವ ನಮ್ಮ ಗಳ ಇಂತಹ ಬುದ್ದಿಗೆ..
೪೦ದಿನಗಳ ಉಪವಾಸ ವ್ರತವನ್ನು ಮಾಡಿದ ಆಚಾರ್ಯರ ಈ ಸಾಧನೆ ನಮ್ಮ ಮತಿಗೆ ನಿಲುಕದ ವಿಷಯ.
ಹತ್ತಿ ಬೆಳಗಲ್ ಆಚಾರ್ಯರು ಶ್ರೀ ಜಂಬುಖಂಡಿ ವಾದಿರಾಜ ಆಚಾರ್ಯರು ಅಚ್ಚು ಮೆಚ್ಚಿನ ಶಿಷ್ಯರು ಇವರು.
(received in WhatsApp)
***
ಹತ್ತಿ ಬೆಳಗಲ್ ಆಚಾರ್ಯರ ಶಿಷ್ಯರಲ್ಲಿ ಪ್ರಮುಖವಾಗಿ ಶ್ರೀ ಬಿಲ್ವಪತ್ರಿ ಆಚಾರ್ಯರು, ಮತ್ತು ಶ್ರೀ ಮುತ್ತಿಗೆ ಆಚಾರ್ಯರು (ಮುಂದೆ ಇವರೇ ಆಶ್ರಮ ಸ್ವೀಕರಿಸಿ ಶ್ರೀ ರಘುಪ್ರೇಮ ತೀರ್ಥರೆಂದು ಪ್ರಸಿದ್ಧಿ ಯಾಗಿ ಆದವಾನಿಯಲ್ಲಿ ವೃಂದಾವನ ಪ್ರವೇಶವನ್ನು ಮಾಡಿದ ಮಹಾನುಭಾವರು)
ಇಂತಹ ಮಹಾಮಹಿಮರ ಸ್ಮರಣೆ ಪ್ರಾತಃಕಾಲ ನಿತ್ಯ ವು ಅವಶ್ಯಕ.
ನಮ್ಮ ದಾಸರಾಯರು ಹೇಳಿದಂತೆ ಇಂತಹ
||ಪರಮಭಾಗವತರನು ಕೊಂಡಾಡುವದು ಪ್ರತಿದಿನವು||
🙏ಶ್ರೀ ಕೃಷ್ಣಾರ್ಪಣ ಮಸ್ತು🙏
🙏ನಮಿಪೆ ಶ್ರೀ ಹತ್ತಿ ಬೆಳಗಲ್ ಆಚಾರ್ಯರ ಪಾದಕ್ಕೆ🙏
***
ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರ ಶಿಷ್ಯರೂ ರಾಯರನ್ನು, ಶ್ರೀಮಟ್ಟೀಕಾಕೃತ್ಪಾದರನ್ನೂ ಒಲಿಸಿಕೊಂಡಂತಹಾ , ಶ್ರೀ ರಘುಪ್ರೇಮತೀರ್ಥರ ಪೂರ್ವಾಶ್ರಮದ ಗುರುಗಳೂ, ಶ್ರೀ ಬಿಲ್ವಪತ್ರ ಆಚಾರ್ಯರಿಗೂ, ಮುತ್ತಗಿ ನರಸಿಂಹಾಚಾರ್ಯರಿಗೂ ಗುರುಗಳಾದ,
ಮಹಾ ಮಹಿಮೆಯನ್ನು ತೋರಿ ಭಕ್ತರನು ಸಲಹಿದ, ಇಂದಿಗೂ ಸಲಹುತ್ತಿರುವ ಮಹಾನ್ ಸಾಧಕರಾದ ಶ್ರೀ ಅರಳಿಕಟ್ಟಿ ನರಸಿಂಹಾಚಾರ್ಯರ ಆರಾಧನೆ.
ಇವರ ಕಟ್ಟಿ ರಾಯರು ಪ್ರತಿಷ್ಠೆ ಮಾಡಿದಂತಹಾ ಹನುಮಪ್ಪನ ದೇವಸ್ಥಾನದ ಪಕ್ಕದಲ್ಲಿದೆ. ಹತ್ತಿಬೆಳಗಲ್, ಚಿಪ್ಪಗಿರಿ ಹತ್ತಿರ.. ಇವತ್ತಿಗೂ ನಾವು ಇವರಿಗೆ ಸುಧಾಪಾಠಪ್ರವಚನಾದಿಗಳು ಸಲ್ಲಿಸಿದಕ್ಕಾಗಿ ಒಲಿದು ಬಂದ ಶ್ರೀ ಟೀಕಾಕೃತ್ಪಾದರ ಪುಟ್ಟ ವೃಂದಾವನ ನೋಡಬಹುದು. ಹಾಗೆಯೇ ಆಚಾರ್ಯರು ಪೂಜೆ ಮಾಡಿದಂತಹಾ ವಿಗ್ರಹಗಳು ಸಹಾ. ಶ್ರೀ ಆಚಾರ್ಯರ ಪರಮಾನುಗ್ರಹ ನಮಗಿರಲೀ ಸದಾ.. ನಾವು ಸಾಧನೆಯ ಹಾದಿಯನ್ನು ಹಿಡಿದು ಹರಿವಾಯುಗುರುಗಳ ಅನುಗ್ರಹಕ್ಕೆ ಪಾತ್ರರಾಗಲು ಆಚಾರ್ಯರ ಕಟ್ಟಿ ಒಮ್ಮೆ ದರ್ಶನ ಮಾಡಲೇಬೇಕು, ಅಷ್ಟು ಪವಿತ್ರ ಜಾಗವೂ ಹೌದು...
ಶ್ರೀ ಮಹಾನ್ ಚೇತನರು ನಮ್ಮ ಎಲ್ಲರಮೇಲೆ ಅನುಗ್ರಹ ಸದಾಕಾಲದಲ್ಲಿ ತೋರಲೆಂದು ಪ್ರಾರ್ಥನೆ ಮಾಡುತ್ತಾ .....
-Smt. Padma Sirish
ನಾದನೀರಾಜನದಿಂ ದಾಸಸುರಭಿ 🙏🏽******
write-up by Sri Nagaraju Haveri
" ಈದಿನ - 10.07.2021 ಶನಿವಾರ - ಅಪರೋಕ್ಷ ಜ್ಞಾನಿಗಳೂ - ಶ್ರೀ ರಾಯರ ಅಂತರಂಗ ಭಕ್ತರೂ ಆದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಅರಳೀಕಟ್ಟೆ ನರಸಿಂಹಾಚಾರ್ಯರ ಆರಾಧನಾ ಮಹೋತ್ಸವ "
" ಶ್ರೀ ಅರಳೀಕಟ್ಟೆ ಆಚಾರ್ಯರಲ್ಲಿ ಶ್ರೀ ಹರಿ ವಾಯುಗಳ ಪ್ರಸನ್ನತೆ "
ಶ್ರೀ ವಾಯುದೇವರು ಸರ್ವರಿಗೂ ಕಂಡು ಬರುವಂತೆ ಮಹಾ ಮರ್ಕಟ ರೂಪದಿಂದ ಮೂರ್ತಿಮಂತರಾಗಿ ನಾಲ್ಕು ತಿಂಗಳು ಪ್ರತಿನಿತ್ಯವೂ ಕ್ಲುಪ್ತ ಕಾಲಕ್ಕೆ ಬಂದು ಇವರಿಂದ ಸೇವಾ ಸ್ವೀಕರಿಸುವರು.
ಒಮ್ಮೆ ವಿಶೇಷ ಮಳೆಯ ಮೂಲಕ ಕಟ್ಟಿಗೆಯ ದೊರೆಯದಿರುವ ಕಾರಣ ಪರಿತಪಿಸುತ್ತಿರಲು ಶ್ರೀ ಹರಿಯು ತಾನೇ ಒಣಗಿದ ಕಟ್ಟಿಗೆಯ ಹೊರೆಯನ್ನು ತಂದು ಹಾಕಿ ಮಾತನಾಡಿದ ಪ್ರಕಾರ ಒಳಗಿನಿಂದ ದುಡ್ಡು ತಂದು ಕೊಡುವಷ್ಟರಲ್ಲಿ ಅದೃಶ್ಯನಾಗಿದ್ದನು.
ಯಾರೋ ಒಬ್ಬ ಯತಿಗಳು ಪಲ್ಲಕ್ಕಿಯಲ್ಲಿ ತಮ್ಮ ಮಠದ ಪರಿವಾರ ಸಮೇತ ರಾತ್ರಿ ಬಂದು ಈ ಶ್ರೀ ಆಚಾರ್ಯರ ಮನೆಗೆ ಹೋದಂತೆ ಅನೇಕ ಜನಗಳಿಗೆ ಕಂಡು ಬಂತು.
ಮರುದಿನ ಪ್ರಾತಃ ಕಾಲ ಊರೊಳಗಿನ ಬ್ರಾಹ್ಮಣರು ಆ ಯತಿಗಳ ದರ್ಶನಾರ್ಥ ಈ ಶ್ರೀ ಬಿಲ್ವಪತ್ರಿ ಆಚಾರ್ಯರ ಮನೆಗೆ ಬರಲು ಯಾರೂ ಇದ್ದಿಲ್ಲ.
ಶ್ರೀ ಆಚಾರ್ಯರ ಮನೆಯ ಸವಳು [ ಉಪ್ಪು ನೀರು ] ನೀರು ಕೆಲವು ಕಾಲ ಮಧುರವಾಗಿಯೂ - ಪರಿಮಳೋಪೀಠವಾಗಿಯೂ ಇತ್ತು.
ಈ ರೀತಿ ಅಗಾಧವಾದ ಅನೇಕ ಮಹಿಮೆ ಉಳ್ಳವರಾಗಿ ೬೦ ಮಂದಿ [ ಲೌಕಿಕ - ವೈದಿಕ ] ಧುರೀಣ ಶಿಷ್ಯರುಗಳಿಂದ ಸೇವಿತರಾಗಿ ಸತತ ೨೫ ವರ್ಷಗಳು ಗ್ರಾಮ ಸೀಮೋಲ್ಲಂಘನ ಮಾಡದೆ ದೇವಸ್ಥಾನದಲ್ಲಿಯೇ ಇದ್ದುಕೊಂಡು ವಿರಾಜಿಸಿದರು.
ಶ್ರೀ ಅರಳೀಕಟ್ಟೆ ನರಸಿಂಹಾಚಾರ್ಯರು ಬಿಲ್ವಪತ್ರೀ ಆಚಾರ್ಯರೆಂದೇ ಪ್ರಸಿದ್ಧರು.
******
No comments:
Post a Comment