Wednesday, 1 May 2019

vibudendra teertharu 1490 tirunelveli tamraparni river matha rayara mutt yati 11 margashira shukla dashami ವಿಭುಧೇಂದ್ರ ತೀರ್ಥರು

vibhudendraru.jpg





info from sumadhwaseva.com--->

Sri Vibudendra Teertha

Ashrama Gurugalu – Sri Ramachandra Tirtharu & 
Ashrama Shishyaru – Sri Jitamitra Tirtharu

Vrundavana – Tirunelveli Period – 1435 – 1490

Poorvashrama Name      – Sri Raghunatha BhattaAradhana                   – Margashira Shudha Dashami
Vrundavana Place      – Tirunelvel on the banks of tAmaraparaNi

ಅಕೇರಲಂ ತಥಾ ಸೇತುಮಾಗಂಗಂ ಚಾಹಿಮಾಲಯಂ |
ನಿರಾಕೃತಾದ್ವೈತಶೈವಂ ವಿಬುದೇಂದ್ರಗುರುಂ ಭಜೇ |

अकेरलं तथा सेतुमागंगं चाहिमालयं ।
निराकृताद्वैतशैवं विबुदेंद्रगुरुं भजे ।

ಲಕ್ಷ್ಮೀನಾರಾಯಣಮುನೇವ್ವ್ಯಾಸತೀರ್ಥಾಯಯೋಗಿನೇ |
ವಿಬುದೇಂದ್ರಮುನೇರ್ವಂಶ: ಜಯತೀರ್ಥಾದಿರೇವ ಹಿ |


लक्श्मीनारायणमुनेव्व्यासतीर्थाययॊगिने ।
विबुदेंद्रमुनेर्वंश: जयतीर्थादिरेव हि ।

PARAMPARE GOES LIKE THIS : click the link for Parampare

Sri Vibudendra Tirtharu was the vidyagurugalu of Sri Sripadarajaru
Sri Raghunatha Tirtharu who gave the title of Sripadarajaru to Lakshminaraayana Muni was in the same period.
The Brindavana is located at the banks of river Tamraparni in Tirunelveli. It is said that Sri Vibhudendraru was an astounding scholar of Madhwa Shaastra. He went on digvijaya in North India also.
Dwaita Siddhanta faced a big challenge during the period of Sri Vibhudendraru.   Advaitha parampare had a great following and Sri Vibhudendraru fought many such theological battle and established supremacy of Vishnu.  The fact that how he was a great philosopher can be seen from the fact by seeing his shishya parampare which comprise of Jitamitra Tirtharu, Sripadarajaru, etc.  Sripadarajaru in turn gave many stalwarts in Madhwa philosophy.
Sri Rayara Mutt is worshipping the Shodasha Bahu Narasimha Devaru.  It is the svapna labda for Sri Vibudendra Tirtharu.  Once he went to Ahobala worshipping Narasimha Devaru.  There he had a dream wherein he saw Narasimha devaru with sixteen hands on the banks of the river.  The same dream had come true for him the next day.  The same vigraha is being worshipped at Rayara Mutt parampare even now.  The Vijayanagar Kings hadf donated lands at various places to Sri Vibudendra Tirtharu.
Initially the mutt was called as Sri Vibudendra Tirtha Mutt, subsequently after the entry of Sri Raghavendra Swamigalu, it is called as Rayara Mutt. The Aradhana celebrations are done with grand preparations at Tirunelveli every year.

About the location of the brundavana :

The Moola brundavana of Sri Vibhudendra Theertharu is situated on a raised platform just in front of Sri Theerthakarai Srinivasa Perumal Temple – almost in the midst of the famous river Thamaraparani in Tirunelveli. A week before the aradhana, we were told that the raised platform was surrounded by the flood waters of the river. After reaching Tirunelveli railway station, one has to go to KURUKKUTHURAI – a distance of four kms. From there, the approach to the river is via C.N. Village agraharam. The distance from Tirunelveli Vannarapet bus stop is about 5 kms.  Buses from Bangalore to Kanyakumari, Thiruvananthapuram pass thru Tirunelveli. The Tuticorin Express deviates at Kovilpatti. Get down at Kovilpatti and reach Tirunelveli by bus.
Buses from bangalore to kanyakumari, thiruvananthapuram  pass thro Tirunelveli, besides direct buses to tirunelveli from b’lore.    Tuticorin express deviates@ kovilpatti,Get down @kovilpatti and reach by bus. Thamraparni river bank -approach via C N GRAMAM,beyond kurukkuthurai.

Mrithika has been brought from Tirunelveli and is placed in a silver brindavan and worshipped @ the Thyagarayanagar Rayar mutt , Bangalore – Archak Sri Sudarshan Achar.


*****



************

info from madhwamrutha.org--->
The name Sri Vibudhendra Theertha gives un paralleled positive vibes in the minds and souls of scholars across india. He is reffered as the Commander in chief of Dwaitha philosophy in proptecting,nourishing, devloping & spreading far and wide across indian sub continent. Sri Vibhudendra theertha was 11th Peetadhipathi of Sriman Madhwacharya Moola Mahasamsthana Dakshinaadhi Kavindra mutt.

Poorvashrama name & Fame:
There are two different versions about his Poorvashrama. It is said that Sri Raghunatha Bhatta belongs to shastika sadvamsha either Kambaluru family or Chinnabandari family, to be researched.
He was the greatest of greatest students of Sri Rajendra Theertharu of Poorvadi mutt. He acquired the supreme knowledge of Veda, Shastra & Dwaitha Philosophy  and became authoritative in every aspect. Sri Rajendra Theertharu, taken on a challenge to establish madhwa Siddhanta in the eastern part of Indian subcontinent around Navadweepa (Present Bengal/Orissa) which was a great learning centre as like kashi. Hence he developed a bunch of scholars who could help him in his herculean task. Along with Raghunatha Bhatta, Sri Rajendra Theertharu groomed gems like Sri Vishnudasacharya, Sri Jayadhwaja and many more highly reputed scholars to take on the challenge. Raghunatha Bhatta toured extensively in eastern part of Indian subcontinent and was leading the team on high level scholaritic debate in the process of tatva shastra Siddhanta pratistapana.
Why Sri Ramachandra Theertharu Selected Raghunatha Bhatta as his successor:
Once it happens Sri Ramachandra Theertharu met Sri Raghunatha Bhatta at Srirangapattana during his tour, it did not take much time for Sri Ramachandra Theertharu to recognize Raghunatha Bhatt’s knowledge, ability & sheer deeksha in Madhwa Siddhanta. Raghunatha Bhatta was also poorvasrama relative of Sri Ramachandra Theertha. With no second thought Sri Ramachandra Theertharu decided that he is the right person to protect, progress & glorify Madhwa Siddhanta as the head of the Moola Samsthana of Sri Madhwacharya Dakshinaadi Sri Kavindra theertha mutt. Indeed the Madhwa Siddhanta needed a sheer able person like Raghunatha Bhatta to protect the on slot from various schools of siddanthas, namely Advaitha, Shaiva, Jaina, Bouddha which were already well established in large part of the Indian Subcontinent. Dwaitha philosophy was a very new thought to the contemporary scholars / People. Considering all these facts Sri Ramachandra Theertharu had a long discussion with Sri Raghunatha Bhatta, explained his ambition, prepared & initiated him to sanyasa ashrama. He named him Sri Vibudhendra Theertha (“The Leader of the Learned”). He announced Sri Vibudhendra Theertha as the next pontiff of Dakshinaadi Sri Kaveendra Mutt in presence of elderly & wise men of the place.
First Phase of his Sanyasa Ashrama:
With renewed energy Sri Ramachandra Theertha together with his beloved Shishya moved all over the places around Vijayanagara during which Sri Vibudhendra Theertha took on many debate with scholars of many schools & showed his ability to establish Madhwa philosophy in the region. During this time Sri Ramachandra Theertharu passed on Samsthana rituals, sampradaya’s & duties as the head of the institution. He further developed Sri Vibudhendra Theertha as a great saint along with a philosophical scholar to a great height. Satisfied with the siddi that Sri Vibudhendra attained in very short time & to realize Sri Ramachandra theertha’s mission to consolidate & stabilize Madhwa society around Vijayanagara Kingdom.
Sri Vibudhendra Theertha, who had been part of Sri Rajendra theertha’s mission to spread acharya’s tattvashastra to all learning centers across bharatavarsha in his Poorvashrama, expressed his wish to take a tour to “kashi” which was the Centre of philosophical knowledge filled with learned people. Both Sri Ramachandra Theertha & Sri Vibudhendra Theertha knew that, if Madhwa philosophy has to prevail there must be win over the most learned scholars in philosophy in India who were present in Kashi. Sri Ramachandra Theertha over joyed with his successor’s ambition, readily agreed to his proposal. He also knew the difficulties of travelling all the way to kashi due to his age factor & also knew that the Poorvadhi Sri Rajendra theertha’s linage is also fully engaged in similar task in eastern part of the Bharatavarsha. He felt it is wise to stay back in Vijayanagara to continue & maintain the establishment in southern part of bharatavarsha with limited resources.
The name Poorvaadhi mutt & Dakshinaadi mutt came to existance after Sri Rajendra theertha & Sri Kavindra Theertha choosen to focus in those directions. Since Sri Ramachandra theertha was the head of Dakshinaadi Sri Kavindra mutt & Sri Rajendra Theertha was the head of Poorvadhi mutt.
Sri Ramachandra theertha prepared his beloved Shishya to take up the tour which no other sanyasi from south took  that kind of challenge after Sri Adi Shankaracharya, i.e to engage in philosophical debate in kashi & other knowledge centers near kashi to establish a new Philosophy initiated by Sri Madhwacharya.
Sri Ramachandra Theertha being a learned & wise person knew the importance & need of such hurculine task immediately appointed Sri Vibudhendra Theertha as his successor with proper procedures of pattabhisheka. He handed over all the rights that was passed on to him by Sri Vageesha Theertha which was originated all along from Sri Padmanabha theertha, that include  Titles, property, library (containing books/granta’s written from Vedavyasa, Srimadacharya, Sri Jayatheertha & others), Royal recognitions / signs & learned scholars & followers. Along with Authorised symbols of  peetadhipathi & scholarary status, Sri Ramachandra theertha also gave him the main deities/idols of Samsthana i.e Sri Digvijaya rama, Sri Jayarama & other idols worshiped by Srimadacharya & Sri Jayatheertha etc & kept only Sri Moola Rama & Seeta idol with some minimal pooja accessories for his daily worship. He kept only some working class people to manage day to day administration of the mutt with him. Sri Ramachandra theertha blessed Sri Vibudhendra theertha whole heartedly & sent him to one of the greatest task that any one took in Madhwa parampare.
Sri Vibudhendra Theertha was over whelmed by the opportunity that his guru granted on him to establish Madhwa Philosophy, he started his tour towards Northren direction. Sri Vibudhendra who was well aware of his responsibility bestowed to him to fulfill the dreams of his Vidya guru (Sri Rajendra theertha) and Ashrama guru (Sri Ramachandra Theertha). Started his tour presenting Dwaitha philosophy to scholars, debating with challengers & wining them through out his tour. Knowing Raghunatha Bhatta became the head of Dakshinaadhi Moola Samsthana & his ambitious tour to eastablish dwaitha philosophy at Kashi, his Poorvashrama fellow students and Disciples of Sri Rajendra Theertha,  Sri Jayadhwaja theertha, Vishnudasacharya were very happy & joined hands with Sri Vibudhendra Theertharu in his noble cause, which was started by Sri Rajendra theertha. This Cleary shows the main learned force of dwaitha philosophy was focusing on spreading dwaitha philosophy in northern & eastren part of India, around Kashi & other holy places. Obviously Southern part of the country which was already had quite a number of dwaitha followers left with only Sri Ramachandra Theertharu as the head of dwaitha sect, with very limited resources (Mita Parivara) & limited movements.
Sri Vibudhendra theertha with his ability & sheer knowledge started to win over the stalwarts of different philosophical schools & made them to accept defeat in high quality philosophical debates. He made a shapata that without convincing supremacy of Dwaitha philosophy and win over opponent scholar’s in debate he never used to accept the bhiksha (Bhiksha is the food which sanyasi has to seek from grihasta (Family man) once per day). It shows how sincere Sri Vibudhendra Theertha in his job and responsibility bestowed by his guru. Within short time Sri Vibudhendra Theertha’s name & fame started to grow in multiple folds in northern part of India, soon many learned scholars humbled to have a philosophycal debate with him, it was a feast for the scholars around kashi as they cherished the new philosphical concept being presented to them. This magnanimous effort of Sri Vibudhendra theertha gave a new dimension to dwaitha philosophy & it started recognised among the scholars across northern part of India.
During such time Sri Rajendra Theertha attained brindavana after appointing Sri Jayadhwaja Theertha as the head of Poorvadi Mutt.  Sri Jayadhwaja Theertha composed the charama sloka of his guru summarizing the achievements of Sri Rajendra theertha highilighting that Sri Rajendraru “He developed scholars like Sri Vibudhendraru”
Sri Rajendra theertha’s Charama shloka :
Vibudhendramukhan sishyadin navakrutvahsudham sudhih I
YoopAthayat sa rajendratirtho bhuyadabhishtadah II

It’s the only instance that a shisya’s name has been taken in the charama sloka of any guru available in madhwa parampare.This heigest honour Sri Vibudhendra Theertha’s personality which was given by his Poorvashrama Co-student and the head of the Poorvadi Mutt when he is referring his guru’s achievement.
Second Phase of Sanyasa Ashrama: 
Sri Ramachandra theertha continued with his lean team & camped around Vijayanagara to manage day to day activities to spread tattvavada. As time passed on he started getting the news of his beloved Shishya Sri Vibudhendra Theertha’s success in establishing dwaitha  philosophy & got recognized by scholars around kashi. Sri Vibudhendra Theertha with the blessings of Sri Ramachandra Theertha took the glory of Sri Madhwacharya’s philosophy to a height that no other’s achieved in history of madhwa parampare. This was the best gift any guru can get from his disciple, what more he can ask. Sri Ramachandra Theertha overwhelmed by his successor’s achievement & offered it to Sri Madhwacharya & Lord Sri Moola Rama & Seetadevi.
During this glorious period, when he was passing through a place called Yaragola (a village near current Yadgir) Sri Ramachandra theertha started losing his health conditions seriously & he understood that it would be his last days. Immediately he sent messenger to trace his beloved Shishya & successor Sri Vibudhendra theertha, who was touring in north india, to comeback & take complete charge of the mutt. Within few days his health deteriorated further & Sri Ramachandra theertha understood that it is time to protect the remaining property which was with him is to be handed over to his only successor Sri Vibudhendra theertha. He remembered his guru’s instruction avoid further breaking the community by appointing other successor, He called upon prominent people, chief of the village namely Dharmanna & Basappa etc & explained the extraordinary situation which is in front of them. With the consent he arranged to burry (Bhoogata) all the deities/idols in ground, which include Patta devaru Sri Moola Rama & Seeta idol along with some idols that he kept with him to do daily upasana, Sri Ramachandra Theertha knew that Sri Vibudhendra Theertha already has all the main and important moola Samsthana symbols, idols & documents which Srimadacharya handed over to his disciples. Sri Ramachandra theertha instructed & took the promise from villagers & chief Dharmanna & Basappa that those properties including idols should be handed over to his Shishya & successor Sri Vibudhendra Theertha whenever he returns back from his tour. He asked the head of the village to be custodian of the property which was belonged to mutt.
Sri Ramachandra Theertha instructed his remaining working class people (Karma charakaru like Balaseve, Paricharaka, Cook, watchmen etc.) to protect the place daily and to safeguard it.
With this arrangement made Sri Ramachandra Theertha felt peace in mind that the material will reach Sri Vibudhendra theertha & left this world with a very unique circumstance on the sixth day of Vaishaka Shudha in Nala Samvatsara at Yaragola village.
Upon listening to his guru’s health condition Sri Vibudhendra theertha immediately started to rush back to his guru’s seva, but he had to come down all the  way from kashi to south of India, which took him several months.
Small Analysis:
 One has to understand and analyze the events carefully with the time frame and the facilities which were available during 14th ~15th Century, where in people used to travel by walk or raiding horse or Bullock carts & may maximum can travel 15~20 Miles per day and the distance between Yaragola to the places around Kashi is Appx. 1300 Miles and would generally take more than few months to travel one way for a free (person without any luggage with him). With Maha Samsthana & with the constraints of daily rituals & sanyasi nitya anustana travelling, will take easily more than 6 months to reach Yaragola from Kashi one way.  Sri Ramachandra Theertha definitely knows this constrain and made the arrangement of safeguarding the mutt properties and it clearly indicates the mental preparedness of Sri Ramachandra Theertha that the remaining Mutt property must & must reach only to his Successor (Uttaradhikari) Sri Vibudhendra Theertha and no one else. There can be no alternate arrangement that he might have suggested in those scenario’s.
Emergence of new Mutt :
While Sri Vibudhendra theertha was on his way from kashi many folds of events happened at Yaragola which further created a big crisis in madhwa society which give rise to a new section in Madhwas in later days.
Days were passing after Sri Ramachandra theertha left to holy feet, the mutt people who were passing time without any work started loitering. Suring such occasion a Tuluva Brahmana by name Krishnacharya (belong to Udupi Shiroor Mutt) was passing through the vicinity of Yaragola, caught the eyes of the workless mutt staff. Immediately they plot an idea to exploit situation & approached the Tuluva Krishnacharya, explained him about the current situation of the Moola Samsthana’s idols & wealth, they asked him to act as Sri Vibudhendra Theertha and get wealth along with boxes which contain Main deities Sri Moolarama & seetha idols which were buried under the ground. The workers (Karmacharakaru) of the mutt will support Krishnacharya in getting  it from the villagers. This proposal attracted Krishnacharya very much and he thought for a while that this is his life time opportunity to get the Moola Rama & Seetha idol with huge wealth belong to moola Mahasamsthana. He agreed for the plot, and they entered into a formal agreement to run a separate mutt with the material hence acquired. The revenue which is generated will be shared among all 63 mutt staff (Karmachara’s) and 64th share will be for Tuluva Krishnacharya. Krishnacharya further just act as the priest (Archaka). All required spiritual & administration decision to run the mutt was kept with the karmacharaka’s of mutt & sanyasi has to act according to the decision of 63 people.
They prepared them self into the plot & one fine day the Krishnacharya  appeared as Sanyasi in front of the villagers and claimed himself as successor of Sri Ramachandra Theertha. As decided the workless mutt staff seconded his claim and they succeeded  in winning belief of the chiefs of the village and took Sri Moola Rama, Seeta & other idols which is buried underground and pretend to be the successor of the Sri Ramachandra Theertha went away from Yaragola village. They travelled day and night and crossed Vijayanagara kingdom and reached into Adilshahi kingdom (Old  Bombay Presidency) towards northern part of Karnataka. Sometime later krishnacharya took sanyasa & done pattabhisheka himself & named as Sri Vidyanidhi Theertha. they started to claim themselves as the uttaradhikari of Sri Ramachandra Theertha and travelled extensively so that they may not be reached by the authorities of Vijayanagara. Most of their time they spent in that region and could not be even identify them as Samsthana because there were no signs and certificates (Birudu Bavali etc) nor they had the correct knowledge on Madhwa philosophy. The one point agenda was to convience & get the followers for their newly started unnamed association and earn wealth & to equally divide it into 64 shares including swamiji. As they claim as Uttaradhikari, uttaradhikari whereever they went, gradually people started recognizing them as Uttaradhi Mutt centuries post its existence. During the period of Sri Satyabhodha Theertha formally used Uttaradhi mutt for the association created out of the situation and continued with the identity which people used to recognize them with.
Return of Sri Vibudhendra theertha & prospering of moola Samsthana :
By the time Sri Vibudhendra Theertha return back to Yaragola, Sri Ramachandra Theertha has already attained to holy feet. Being a learned man Sri Vibudhendra theertha made the Vrindavana of his beloved guru & performed rituals as per the shastra. He enquired villagers about the chain of events happened during his absence & missing of maha Samsthana idols & wealth, he console himself & thought its Sir Hari chitta & continued the duty as directed by his guru Sri Ramachandra theertha i.e to flourish Madhwa philosophy in all directions.
He  continued his sanchara went to Ahobila (Narasimha Kshetra), stayed there for some time, performed Austerity (tapsya) & Sri Narasimha upasana, as a result he got an instinct in his dream from which he got a magnanomus Shodasha Bahu Narasimha idol (Sri Narasimha idol with 16 shoulders) in the river. Sri Vibudhendra theertha worshipped the idol along with other Mahasamsthana idols which he had i.e Sri Digvijaya Rama & Sri Jayarama idols. Even now there is a special worship of this idols on Narasimha jayanthi day in SRS Mutt.
With the renewed energy Sri Vibudhendra Theertha extensively travelled, all across India, visited many learning centres like, Gouda desha, Navadweepa, Avantika, Vindya, Kalinga, Kashi, Gaya, Kanchi, Kumbakonam, Rameshwaram, Kerala, Vijayanagara etc. All kings & kingdoms offered Sri Vibudhendra Theertha with high respect and given huge assets, lands & Jewelleries etc. Kings offered him to stay in their kingdom & guide them as their Raja guru, but he instructed his vidya  shishya Sri Lakshminarayana muni to be the guru for vijayanara kingdom. Thus for the first time Sri Vibhudendra theertha got the royal recognition to Madhwa society (Which was followed by Sri Vyasaraja, Vadiraja & Vijayeendra etc). Being focused on his beloved guru’s dreams to establish Madhwa philosophy, Sri Vibudhendra theertha kept moving all over Indian sub-continent. He acquired vijaya Patras form many eminent scholars from different schools all across India. He made 108 vijaya patra’s in a form of golden garland & offered to Lord Sri Venkateshwara at Thirupathi. Thus the Dakshinaadi Moola Mahasamsthana of Sri Madhwacharya started to flourish with knowledge, wealth, scholars & well known to the world as Vidya mutta. Scholars from all direction came to learn at Sri Vibudhendra theertha feet.
Seeing Sri Vibudhendra Theertha’s vast knowledge & his sheer commitment  to Sri dwaith philosophy,Sri Swarnawarna Theertharu of Sri Padmanabha theerhta Mutt (Later Sripadaraja mutt)  asked his junior pontiff Sri Lakshmi Narayana Theertha to seek vidya /knowledge from Sri Vibudhendra Theertha.  Agreed to this request Sri Vibudhendra Theertharu took Lashminarayana muni along & thought him Veda, shastra’s & sidhantha for 12 years. Later groomed him to be the highest quality scholar of the time. Sri Lakshminarayana Muni with his elegance, intelligence & knowledge, went on to became the Raja Guru of Vijayanagara Kings. On an occasion when Sreepadarajaru presented his proud work “Vagvajra” in the presence of many eminent scholars, Vijayanagara king etc, his vidya guru Sri Vibudhendra Theertha bestowed him with a title of “Sreepadaraja“. Henceforth Sri Lakshminarayana muni popularly became known as Sreepadarajaru. Thus was the blessing of Sri Vibudhendra theertha to his student.

Similar to Sri LakshmiNarayan muni, Sri Vibudhendra theertha recognised swaroopa of another great personality Sri Ananthappa on his visit to Shivapura. Took along with him & made him a high quality scholar & later initiated him to sanyasa and named as Sri Jitamitra Theertha.
Later part of his life he stayed down south in the place called Thirunalveli, a shaivait center to establish vaishnava siddantha. He started first ever Vidyalaya (University) for learning Dwaitha philosophy & Vedanta. He Devised & set up a system of graduating for students in Dwaitha philosophy.This became the baseline which was followed by Sreepadaraja in Mulbagalu Unversity & Sri Vysaraja in Anegondi, and had aptly laid foundation for developing eminent personalities like Sri Vyasaraja, Sri Vijayeendra Theertharu, Sri Vadirajaru, Sri Sudhendra theertharu, Sri Kambalur Ramachandra theeirtharu, Sri Raghavendra Theertharu etc. Thus the saying “Madhwa siddantha is the ucchista (Left over) of Sri Vibudhendra theertha” is clearly demonstrated.
During his times, he became the center & important link for all for Madhwa mutts & He had developed healthy relations with many other important institution. It is said that he had a very long philosophical discussion with many advaitha, shaiva, Jaina, Buddha sect scholars. Sri Girvanendra saraswathi & others who flourished during  Rajaraja verman in Kerala were his contemprories.
He must have composed many works during his time, unfortunately none of them is available for public now. But some of his works are said to be available in global university libraries which further needs to be researched. Some of his works are
  1. Adhikarana Sangraha
  2. Sastrasaara sangraha (Sharirika Mimamsa) on Badarayana’s Brahmasutras
After taken on the task single handedly to establish & spread Dwaitha Philosophy in far places in Indian sub-continent, Sri Vibudhendra Theertha handed over the maha Samsthana to Sri Jitamitra theertha & appointed as the successor for Dakshinaadi Kavindra mutt. He attained haripada in Tirunelveli on the banks of river Tamraparani during 1490 AD (Margashira Shudha Dashami). But the knowledge created by him flourished through his students for generations and living till day in sub-continent.
Dhyaana Sloka:
आकॆरलं तथासॆतु मागंगं च हिमालयं
निराकृताद्वैतशैवं  विबुधॆंद्र गुरुं भजॆ 

ಆಕೇರಲಂ ತಥಾಸೇತು ಮಾಗಂಗಂ ಚ ಹಿಮಾಲಯಂ
ನಿರಾಕೃತಾದ್ವೈತಶೈವಂ  ವಿಬುಧೇಂದ್ರ ಗುರುಂ ಭಜೇ

AkEralaM tathAsEtu mAgaMgaMcA himaalayaM
niraakRutAdwaitashaivaM  vibudhEMdra guruM bhajE

**********

by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ

" ಶ್ರೀ ವಿಬುಧರಾಮ - 1 "
" ದಿನಾಂಕ : 24.12.2020 ಗುರುವಾರ - 96ನೇ ಋಜು ಪದಸ್ಥ ಶ್ರೀ ಅವ್ಯಕ್ತರ ಅಂಶ ಸಂಭೂತರಾದ ಶ್ರೀ ವಿಬುಧೇಂದ್ರತೀರ್ಥರ ಆರಾಧನಾ ಮಹೋತ್ಸವ - ತಿರುನಲ್ವೇಲಿ  "
ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧೀಶ್ವರರಾದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಪೂರ್ವೀಕ ಗುರುಗಳಾದ ಶ್ರೀ ವಿಬುಧೇಂದ್ರ ತೀರ್ಥರ ಆರಾಧನಾ ಮಹೋತ್ಸವದ ಅಂಗವಾಗಿ ಅವರ ಮಹಿಮೆಯ ಕುರಿತು ತಿಳಿಸುವ ಚಿಕ್ಕ ಪ್ರಯತ್ನ ಇಲ್ಲಿದೆ. 
" ಶ್ರೀ ವಿಬುಧೇಂದ್ರ ತೀರ್ಥರ ಸಂಕ್ಷಿಪ್ತ ಮಾಹಿತಿ "
ಹೆಸರು : 
ಶ್ರೀ ರಘುನಾಥ ಭಟ್ಟರು 
ವಿದ್ಯಾ ಗುರುಗಳು : 
ಶ್ರೀ ರಾಜೇಂದ್ರತೀರ್ಥರು 
" ಶ್ರೀ ರಾಜೇಂದ್ರತೀರ್ಥರ ಅಚ್ಚುಮೆಚ್ಚಿನ ವಿದ್ಯಾ ಶಿಷ್ಯರು " 
ಶ್ರೀ ರಾಜೇಂದ್ರತೀರ್ಥರಿಗೆ ಶ್ರೀ ರಘುನಾಥಭಟ್ಟರ ( ಶ್ರೀ ವಿಬುಧೇಂದ್ರತೀರ್ಥರ ) ಮೇಲೆ ಎಲ್ಲಿಲ್ಲದ ಮಾತೃವಾತ್ಸಲ್ಯ. 
ವಿದ್ಯಾ ಶಿಷ್ಯರ ವಿದ್ವತ್ಪ್ರೌಢಿಮೆ ಕಂಡು ಅತ್ಯಂತ ಸಂತೋಷ ಶ್ರೀ ರಾಜೇಂದ್ರತೀರ್ಥರಿಗೆ !
ಕಾರಣ ಭಾರತಾದ್ಯಂತ ಸಂಚರಿಸಿ -  ಕಾಶಿ - ನವದ್ವೀಪ - ಕಂಚಿ - ಕುಂಭಕೋಣ - ಕರ್ನಾಟಕಾಂಧ್ರ ರಾಜ್ಯಗಳಲ್ಲಿನ ಸುಪ್ರಸಿದ್ಧ ಮಾಯಾವಾದಿಗಳನ್ನು ಸೋಲಿಸಿ ದ್ವೈತ ಸಿದ್ಧಾಂತ ವಿಜಯ ಪತಾಕೆಯನ್ನು ಹಾರಿಸಿದ ಧೀಮಂತ ಯತಿಸಾರ್ವಭೌಮರು. 
ಕೊನೆಗೆ ಶ್ರೀ ರಾಜೇಂದ್ರತೀರ್ಥರಿಗೆ ಶ್ರೀ ವಿಬುಧೇಂದ್ರತೀರ್ಥರ ಮೇಲೆ ಎಷ್ಟು ಪ್ರೀತಿ ಇತ್ತೆಂದರೆ.... 
ಇವರ ಚರ್ಮ ಶ್ಲೋಕವನ್ನು ನೋಡಿದರೆ ಅರ್ಥವಾಗುತ್ತದೆ. 
ವಿಬುಧೇಂದ್ರಾದಿ ಶಿಷ್ಯಾದೀನ್ 
ನವಕೃತ್ವ ಸುಧಾಂ ಸುಧೀಃ ।
ಅಪಾಠಯತ್ ಸ ರಾಜೇಂದ್ರತೀರ್ಥೋ 
ಭೂಯಾದಭೀಷ್ಟದಃ ।। 
ವಂಶ : 
ಷಾಷ್ಟಿಕ 
ಸಹ ಪಾಠಿಗಳು : 
ಷಡ್ದದರ್ಶಿನೀ ವಲ್ಲಭರೂ, " ವಾದ ರತ್ನಾವಳೀ " ಗ್ರಂಥಕರ್ತರೂ; ಬೆಂಗಾಲಿನ ಭಕ್ತಿ ಪಂಥದ ಅನುಯಾಯಿಗಳೂ ಆದ ಶ್ರೀ ವಿಷ್ಣುದಾಸಾಚಾರ್ಯರು
ಅಂಶ :
96ನೇ ಋಜು ಪದಸ್ಥ ಶ್ರೀ ಅವ್ಯಕ್ತರ ಅಂಶ
ಕಕ್ಷೆ : 3 
ಪ್ರಮಾಣ : 
ಶ್ರೀ ಧೀರೇಂದ್ರತೀರ್ಥರ ಗುರುಗುಣಸ್ತವನ ವ್ಯಾಖ್ಯಾನದಂತೆ.. 
ಅಮೇ ಲಕ್ಷ್ಮೀನಾರಾಯಣ-
ಮುಖಾಶೇಷಯತಯೋಯತೋ 
ವಿದ್ಯಾಮೃದ್ಧಾಮಜ-
ಗುರಧಿಷ್ಠಾನಪತಯಃ ।
ಮುಹುರ್ಮೋಹೋದ೦ಚೆಟ್ 
ಪರಮತಪರೀಭಾವಚತುರಃಸ 
ಮೇ ಭೂಯಃ ಶ್ರೇಯಃ ದಿಶತು 
ವಿಬುಧೇಂದ್ರವತ್ರಿಪತಿಃ ।।
***
" ಶ್ರೀ ವಿಬುಧರಾಮ - 2 "
" ಋಜುಗುಣಸ್ಥರು " 
ಸತ್ಯಲೋಕದ ರಾಜಧಾನಿ ವೈಜಯಂತೀಪುರ. 
ಶ್ರೀ ಚತುರ್ಮುಖ ಬ್ರಹ್ಮದೇವರೇ ಸತ್ಯಲೋಕೇಶರು . 
ಬ್ರಹ್ಮತ್ವ ಯೋಗ್ಯ ಜೀವಾಸ್ತು 
ಋಜವೋ ನಾಮ ಕೀರ್ತಿತಾ ।
ಅನಾದಿ ಕಾಲತಃ ಸರ್ವೇ 
ದೋಷಹೀನಾ ಗುಣಾಧಿಕಃ ।
ಪ್ರಾಣಸ್ಯನಾsಸುರಾವೇಶಃ 
ಆಖಣಾಶ್ಮ ಸಮೋಹಿಸಃ ।।
ಯೆಂಬ ಪ್ರಮಾಣದಂತೆ ಸೃಷ್ಠಿಗೆ ಬಂದ ಋಜುಗುಣಸ್ಥರು 100 ಕಲ್ಪ ಗುಣಸ್ಥರಾಗಿದ್ದು....
01ನೇ ಕಲ್ಪದಿಂದ " ಕಲ್ಕಿ " ಹೆಸರಿನಿಂದ ಆರಂಭಿಸಿ - 96ನೇ ಕಲ್ಪದಲ್ಲಿ ಶ್ರೀ ಅವ್ಯಕ್ತರೂ - 97ನೇ ಕಲ್ಪದಲ್ಲಿ " ಗವ್ಯ " ನಾಮದ ವರೆಗೆ ಬೇರೇ ಬೇರೇ ಹೆಸರುಗಳನ್ನು ಹೊಂದುತ್ತಾ......
98ರಲ್ಲಿ ಶ್ರೀ ಲಾತವ್ಯರೆಂದೂ ( ಶ್ರೀ ವಾದಿರಾಜರು) - 99ರಲ್ಲಿ ಶ್ರೀ ವಾಯುದೇವರೆಂದೂ -  100ನೇ ಕಲ್ಪದಲ್ಲಿ ಶ್ರೀ ಬ್ರಹ್ಮದೇವರೆಂದೂ ಕರೆಯಲ್ಪಡುತ್ತಾರೆ. 
100 ಕಲ್ಪಗಳು ಮುಗಿದ ತರುವಾಯ ಬ್ರಹ್ಮ ಪದದಿಂದ ಮುಕ್ತರಾಗುತ್ತಾರೆ. 
ಶ್ರೀ ಬ್ರಹ್ಮ ವಾಯು ಲಾತವ್ಯ 
ಗವ್ಯ ಪ್ರಭೃತಿಕಾನ್ ಋಜೂನ್ ।
ಸಪತ್ನೀಕಾನ್ ಸದಾ ವಂದೇ 
ವಿಷ್ಣು ತತ್ತ್ವೋಪದೇಶಕಾನ್ ।। 
" ಶ್ರೀ ವಿಜಯೀಂದ್ರ ವಿಜಯ " ದನ್ವಯ... 
ವಿಬುಧೇಂದ್ರಯತಿರ್ಧೀ-
ಮಾನದ್ಯಜಾತೋ ಪುನರ್ಭುವಿ
ಸೇವಾರ್ಥಂ ರಾಮಚಂದ್ರಸ್ಯ 
ಸ ಮಯಾ ಪಾರಿಪಾಲಿತಃ ।
ಕೇಶವಾದೀಷು ಹಂಸೇಷು 
ವಿಷ್ಣುರಿತಿ ವಿಶ್ರುತಃ
ಸ ಏವ ವಿಬುಧೇಂದ್ರಶ್ಚ ಸ 
ಮಯಾ ಯತಿರೂಪಧೃಕ್ ।। 
ಆಶ್ರಮ ಗುರುಗಳು : 
ಶ್ರೀ ರಾಮಚಂದ್ರತೀರ್ಥರು 
ಆಶ್ರಮ ನಾಮ : 
ಶ್ರೀ ವಿಬುಧೇಂದ್ರತೀರ್ಥರು  
ಆಶ್ರಮ ಶಿಷ್ಯರು : 
ಶ್ರೀ ಜಿತಾಮಿತ್ರತೀರ್ಥರು 
ಕಾಲ : 
ಕ್ರಿ ಶ 1435 - 1490 
ವಿದ್ಯಾ ಶಿಷ್ಯರು : 
ಶ್ರೀ ಶ್ರೀಪಾದರಾಜರು ಗ್ರಂಥಗಳು : 
ಬ್ರಹ್ಮಸೂತ್ರ ವ್ಯಾಖ್ಯಾನ
ಶಾರೀರಕ ಮೀಮಾಂಸಾ
ಈಶಾವ್ಯಾಸ್ಯೋಪನಿಷದ್ ವ್ಯಾಖ್ಯಾನ  
ವಿಷ್ಣು ಸಹಸ್ರ ನಾಮ ವ್ಯಾಖ್ಯಾನ  
ಭಗವದ್ಗೀತಾ ವ್ಯಾಖ್ಯಾನ 
ಸಂನ್ಯಾಸ ಪದ್ಧತಿ 
ಮಾಯಾವಾದಖಂಡನ ವ್ಯಾಖ್ಯಾನ 
ವಿಷ್ಣುತತ್ತ್ವ ನಿರ್ಣಯ ವ್ಯಾಖ್ಯಾನ 
ಶ್ರೀಮನ್ನ್ಯಾಯಸುಧಾಸಾರ ಸಂಗ್ರಹಃ  
ಶ್ರೀ ಶ್ರೀನಿವಾಸ ಕರುಣಾಕವಚ ಸ್ತೋತ್ರ 
" ಶ್ರೀ ಶ್ರೀನಿವಾಸ ಕರುಣಾಕವಚ ಸ್ತೋತ್ರ  "
ಈ ಕೃತಿಯನ್ನು ಪರಮಪೂಜ್ಯ ಶ್ರೀ ವಿಬುಧೇಂದ್ರ ತೀರ್ಥರು 108 ಮಾಯಾವಾದಿ ಪಂಡಿತರನ್ನು ಗೆದ್ದ ಕುರುಹುಗಾಗಿ - ಆ ಜಯ ಪತ್ರಗಳನ್ನು ಶ್ರೀ ಶ್ರೀನಿವಾಸನ ಪಾದಾರವಿಂಗಳಲ್ಲಿ ಸಮರ್ಪಿಸಿ - ಶ್ರೀ ಶ್ರೀನಿವಾಸನು ತಮ್ಮ ಮೇಲೆ ತೋರಿದ ಕಾರುಣ್ಯವನ್ನು ನೆನಿಸಿಕೊಂಡು - ಶ್ರೀ ಶ್ರೀನಿವಾಸನ ಮುಂಭಾಗದಲ್ಲಿ ನಿಂತು ಆನಂದಬಾಷ್ಪ ಧಾರಾಕಾರ ಹರಿಯುತ್ತಿರಲು ಅವರ ವದನಾರವಿಂದದಲ್ಲಿ ಹೊರಹೊಮ್ಮಿದ ಸ್ತೋತ್ರ ರತ್ನ. 
ಅಂಕಿತ : 
ವಿಬುಧರಾಮ / ವಿಬುಧೇಂದ್ರರಾಮ 
ಆರಾಧನೆ : 
ಮಾರ್ಗಶೀರ್ಷ ಶುದ್ಧ ದಶಮೀ 
ಬೃಂದಾವನ ಸ್ಥಳ : ತಿರುನಾಲ್ವೇಲಿ
***
" ಶ್ರೀ ವಿಬುಧರಾಮ - 3 " 
" ದ್ವೈತ ಸಿದ್ಧಾಂತ ಪ್ರಚಾರ - ಸಿದ್ಧಾಂತ ಸ್ಥಾಪನೆ - ವಾದಿ ದಿಗ್ವಿಜಯ " 
ಶ್ರೀ ವಿಬುಧೇಂದ್ರತೀರ್ಥರು ಗುರುಗಳ ಆಜ್ಞೆಯನ್ನು ಶಿರಸಾವಹಿಸಿ ದೇಶ ಸಂಚಾರ ಹೊರಟರು. 
ಉತ್ತರ ಭಾರತದಲ್ಲಿ ಶ್ರೀ ರಾಜೇಂದ್ರತೀರ್ಥರ ಉತ್ತರಾಧಿಕಾರಿಗಳೂ; ಶ್ರೀ ಜಯಧ್ವಜತೀರ್ಥರು -
( ಇವರೂ ಶ್ರೀ ಜಯತೀರ್ಥರ ಪೂರ್ವಾಶ್ರಮದ ಸೋದರಳಿಯ ಮತ್ತು ಶ್ರೀ ಜಯತೀರ್ಥರ ವಿದ್ಯಾ ಶಿಷ್ಯರೂ ಹಾಗೂ ಶ್ರೀ ರಾಜೇಂದ್ರತೀರ್ಥರ ಪೂರ್ವಾಶ್ರಮದ ತಮ್ಮಂದಿರು ) ದ್ವೈತ ಪ್ರಚಾರ ಮಾಡಿ ಶ್ರೀ ಮದಾಚಾರ್ಯರ ಸಿದ್ಧಾಂತ ಪ್ರಭಾವವನ್ನು ಅಲ್ಲೆಲ್ಲಾ ಬೀರಿದ್ದರು.
ಶ್ರೀ ವಿಬುಧೇಂದ್ರತೀರ್ಥರು ಯಾವತ್ತೂ ಉತ್ತರ ಭಾರತದಲ್ಲಿ ಸಂಚರಿಸಿ ಪರವಾದಿಗಳನ್ನು ಜಯಿಸಿ ತಮ್ಮ ಸಿದ್ಧಾಂತವನ್ನು ಅಲ್ಲಿ ನೆಲೆವೂರುವಂತೆ ಮಾಡಿದರು. 
ಕಾಶಿಯಲ್ಲಂತೂ ಅವರು ಅಮೋಘವಾದ ದಿಗ್ವಿಜಯವನ್ನು ಪಡೆದರು. 
ಶ್ರೀ ವಿಬುಧೇಂದ್ರತೀರ್ಥರು ವಾದಿ ದಿಗ್ವಿಜಯ ಮಾಡದ ದಿನವೇ ಇಲ್ಲ. 
( ಇದನ್ನು ತಮ್ಮ ಮುಂದಿನ ಅವತಾರವಾದ ಶ್ರೀ ವಿಜಯೀಂದ್ರತೀರ್ಥರಾಗಿಯೂ ಮುಂದುವರೆಸಿದ ಕೀರ್ತಿ ಶ್ರೀ ವಿಬುಧೇಂದ್ರತೀರ್ಥರದ್ದು ). 
ಎಲ್ಲೆಲ್ಲೂ ಶ್ರೀ ವಿಬುಧೇಂದ್ರತೀರ್ಥರು ವಾಕ್ಯಾರ್ಥದಲ್ಲಿ ಅಜೇಯರಾಗಿ ದ್ವೈತ ಮತ ಸ್ಥಾಪನೆ ಮಾಡಿ ವಿಜಯ ಪತಾಕೆ ಹಾರಿಸಿದರು. 
( ಮುಂದೆ ಅಜೇಯ ವಿಜಯೀಂದ್ರರಾಗಿಯೇ ಖ್ಯಾತರಾದರು ). 
ಶ್ರೀ ಬೃಹಸ್ಪತ್ಯಾಂಶ ವಾದೀಂದ್ರ ತೀರ್ಥರ ಮಾತಲ್ಲಿ .........
[ " ಶ್ರೀ ರಾಘವೇಂದ್ರ ಮಠದ ಅರ್ಚಾಗತಿಕ್ರಮಃ " ]
ಅಥ ಕಾಶೀಂ ಪ್ರವಿಷ್ಟಸ್ಯ 
ವಿಬುಧೇಂದ್ರಸ್ಯ ಧೀಮತಃ ।
ಜಲ್ಪಃ ಪ್ರವರ್ತತಾನಲ್ಪೋ 
ಬಹುಜ್ಞೇರ್ವಾದಿಭಿಶ್ಚಿರಂ ।।
" ಶ್ರೀ ಬೃಹಸ್ಪತ್ಯಾಂಶ ವಾದೀಂದ್ರ ತೀರ್ಥರ ಶಬ್ದಗಳಲ್ಲಿ " ...
[ ಗುರುಗುಣಸ್ತವನ ]
ಶ್ರೀಮತ್ಪೂರ್ಣಪ್ರಬೋಧಪ್ರಕಟಿತ-
ಪದವೀಧಾವಿಮೇಧಾವಿಧೀಮತ್-
ಸೇನಾನಾಸೀರಸೀಮಾಸಮುದಿತ-
ವಿದಿತಾಬಾಧಯೋಧಾಧಿನೇತಾ ।
ಮಾಯಸಿದ್ಧಾಂತದೀಕ್ಷಾವಿಘಟನ-
ಘಟನಾಸರ್ವತಂತ್ರಸ್ವತಂತ್ರ:
ಶ್ರೀರಾಮವ್ಯಾಸದಾಸೋ ವಿಲಸತಿ 
ವಿಬುಧೇಂದ್ರಾಭಿಧ: ಸಂಯಮೀಂದ್ರ: ।।
***
" ಶ್ರೀ ವಿಬುಧರಾಮ - 4 " 
" ಅಹೋಬಲ ನರಸಿಂಹನ ಅನುಗ್ರಹ "
ಶ್ರೀ ವಿಬುಧೇಂದ್ರತೀರ್ಥರು ಅಹೋಬಲ ಕ್ಷೇತ್ರಕ್ಕೆ ಬಂದು ಸ್ವಯಂವ್ಯಕ್ತ ಶ್ರೀ ನೃಸಿಂಹನನ್ನು ಬಹುಕಾಲ ಆರಾಧಿಸಿದರು. 
ಹಾಗೆಯೇ ಶ್ರೀ ವಿಬುಧೇಂದ್ರತೀರ್ಥರು ಸಂಚಾರ ಕ್ರಮದಲ್ಲಿ ನದೀ ತೀರದಲ್ಲಿದ್ದಾಗ ಸ್ವಪ್ನವಾಗಿ ಆ ನದೀಯಲ್ಲಿ ಶೋಡಷಬಾಹು ಶ್ರೀ ನೃಸಿಂಹದೇವರ ಪ್ರತಿಮೆ ಲಬ್ಧವಾಯಿತು. 
ಇದು ಶ್ರೀ ರಾಯರ ಮಠದಲ್ಲಿ ವಿರಾಜಮಾನವಾಗಿದೆ. 
ಶ್ರೀಮಲ್ಲಕ್ಷ್ಮೀನೃಸಿಂಹಾರ್ಚಾ 
ವಿಬುಧೇಂದ್ರಯತೀಷ್ಟದಾ ।
ತಸ್ಯಹದ್ವಷ್ಟಭುಜಾಮೂರ್ತಿಃ 
ಸ್ವಪ್ನಾಭಿಜ್ಞಾನಪೂರ್ವಕಮ್ ।।
ರಚನೆ :
ಶ್ರೀ ಕುರುಡಿ ರಾಘವೇಂದ್ರಾಚಾರ್ಯ ಪುರೋಹಿತ್ 
ಅಂಕಿತ : 
ಶ್ರೀ ಲಕುಮೀಶ 
ಉಪದೇಶ ಗುರುಗಳು :
ಶ್ರೀ ಶ್ಯಾಮಸುಂದರ ದಾಸರು 
ರಾಗ : ದರ್ಬಾರಿಕಾನಡ  ತಾಳ : ಅಟ್ಟ 
ತಿರುನಲ್ವೇಲಿಲಿ ಮೆರೆವ -
ಶ್ರೀ ವಿಬುಧೇಂದ್ರರ ।
ಚರಣ ಭಜಿಸೋ 
ನಿರುತಾ ।। ಪಲ್ಲವಿ ।।
ಹರಿ ಕೊಡೆ ಸ್ವಪ್ನ ಅಲ್ಲಿ ।
ಶಿರಿ ಅಹೋಬಲ ತೀರ್ಥದಿ ।
ವರ  ಷೋಡಶ ಬಾಹು ।
ನರಹರಿಯಾ ತಂದ ।। ಅ ಪ ।।
ಶ್ರೀ ರಾಮಚಂದ್ರ ತೀರ್ಥರ ।
ವಾರಿಜ ಕರಜಾತ ।
ಧಾರುಣಿಯೊಳು ಖ್ಯಾತ ।
ಕೋರಿದವರಗರೆದಾತ ।
ನೀರಜಾಸನ ಪೂಜಿತ ।
ಶ್ರೀ ರಾಮಚಂದ್ರನ್ನ ।
ಆರಾಧಿಸಿ ಧ್ಯಾನಿಸಿ । 
ಕೀರುತಿ ಪಡೆದಂಥ ।। ಚರಣ ।।
ಉತ್ತಿ ಬಿತ್ತುವ ಕೃಷಿಲಿ ।
ನಿತ್ಯ ಉಪನೀತವ ।
ಎತ್ತಿ ಗೂಟಕೆ ಹಾಕುವ ।
ಜಿತ್ತಪ್ಪ ನಾಯಕನ ।
ಹತ್ತಿರ ಕರಿದೀಯೆ । ಸ್ತಂ ।
ಬೋದ್ಭವ ಜಲಜಕ್ಕೆ ।
ಮೆತ್ತಗುಣಿಸಿ  ಈತನ ।
ಜಿತಾಮಿತ್ರ ಯತಿಯಗೈದ ।। ಚರಣ ।।
ಆಕೇರಲಾ  ಆಸೇತು -
ಆಗಂಗ ಹಿಮಾಲಯಕೂ ।
ತಾಕಿ ದುರ್ವಾದಿಗಳ -
ಜಯಿಸಿದ ಜಯಪತ್ರವಾ ।
ಲಕುಮೀಶ ನರಹರಿಗೆ 
ನಿತ್ಯವೂ ಅರ್ಪಿಸಿ ।
ತಾ ಕರುಣೆಯ ಪಡೆದು 
ದ್ವೈತ ಧ್ವಜ ಹಾರಿಸಿದ ।। ಚರಣ ।।
***
" ಶ್ರೀ ವಿಬುಧರಾಮ - 5 " 
" ಶ್ರೀ ವಿಬುಧೇಂದ್ರತೀರ್ಥರಿಂದ ಶ್ರೀ ಶೇಷಗಿರಿ ಧೊರೆಗೆ ಪ್ರಪ್ರಥಮ ಸ್ವರ್ಣ ಕಮಲದ ಹಾರ ಸಮರ್ಪಣೆ " 
ಶ್ರೀ ರಾಮಚಂದ್ರತೀರ್ಥರ ಆಶ್ರಮ ಶಿಷ್ಯರೂ ಮತ್ತು ಉತ್ತರಾಧಿಕಾರಿಗಳೂ ಆದ ಶ್ರೀ ವಿಬುಧೇಂದ್ರತೀರ್ಥರು ಅಹೋಬಲ ನರಸಿಂಹನ ದಿವ್ಯ ಕ್ಷೇತ್ರದಲ್ಲಿ ವಾಸಿಸುತ್ತಾ ಅವನ ಅನುಗ್ರಹದಿಂದ ಉದ್ಧಾಮ ಪಂಡಿತರೆಂದೂ ಅಪರೋಕ್ಷ ಜ್ಞಾನಿಗಳಾಗಿ ಪ್ರಖ್ಯಾತರಾಗಿ ಸಮಸ್ತ ಪ್ರತಿವಾದಿ ಪಂಡಿತ ಪ್ರಕಾಂಡರನ್ನು ವಾದದಲ್ಲಿ ಜಯಿಸಿ ಅವರಿಂದ ಪಡೆದು ಕೊಂಡ ಸಕಲ ಜಯ ಪತ್ರಿಕೆಯನ್ನೂ ಶ್ರೀ ಹರಿಗೆ ಸಮರ್ಪಿಸಿದರು. 
ಶ್ರೀ ವಿಬುಧೇಂದ್ರತೀರ್ಥರು ಒಂದೊಂದು ಶ್ಲೋಕ ರೂಪವಾದ ಜಯ ಪತ್ರಿಕೆಯನ್ನು ಒಂದೊಂದು ಸುವರ್ಣ ಕಮಲದಲ್ಲಿ ಕೆತ್ತಿಸಿ ಇಂಥಾ 108 ಸುವರ್ಣ ಮಾಲೆಯನ್ನು ತಯಾರಿಸಿ ತಿರುಪತಿಯ ಶ್ರೀ ಶ್ರೀನಿವಾಸನಿಗೆ ಭಕ್ತಿಯಿಂದ ಸಮರ್ಪಿಸಿದರು. 
ಈ ವಿಷಯವನನ್ನು ಶ್ರೀ ರಾಘವೇಂದ್ರ ವಿಜಯದಲ್ಲಿ... 
ಅಂತ್ಯೇವ ಸಂಸ್ತಸ್ಯ 
ನೃಸಿಂಹದೇವೋಪಾಂತೇ 
ವಸಂಸ್ತತ್ಕೃಪಯಾ ಪ್ರತೀತಃ ।
ವಿಜಿತ್ಯ ಸರ್ವಾನ್ವಿ-
ಬುಧೇಂದ್ರಯೋಗೀ ಬಭೌ 
ಹರೇರರ್ಪಿತ ಜೈತ್ರಪತ್ರಃ ।।
ರಚನೆ :
ಶ್ರೀ ಕುರುಡಿ ರಾಘವೇಂದ್ರಾಚಾರ್ಯ ಪುರೋಹಿತ್ 
ಅಂಕಿತ : 
ಶ್ರೀ ಲಕುಮೀಶ 
ಉಪದೇಶ ಗುರುಗಳು :
ಶ್ರೀ ಶ್ಯಾಮಸುಂದರ ದಾಸರು 
ರಾಗ : ಭೈರವಿ   ತಾಳ : ರೂಪಕ 
ತಿರುನಲ್ವೇಲಿಲಿ ಮೆರೆವ ।
ಗುರು  ವಿಬುಧೇಂದ್ರರ ।
ಚರಣ ವಾರಿಜ ಸ್ತುತಿಪೆ ।। ಪಲ್ಲವಿ ।।
ವರ ಅಹೋಬಲ ಹರಿಯು ಸ್ವಪ್ನದಿ ।
ದೊರೆಯುವೆ ನಿಮಗೆ ಪರಮ ತೀರ್ಥರೆನೆ ।
ನರಹರಿ ಹದಿನಾರು ಭುಜದಲಿ ।
ತ್ವರ ಸುತೀರ್ಥದಿ ಬರಲಿಗೊಂಡಂಥ ।। ಅ ಪ ।।
ರಘುನಾಥ ಭಟ್ಟರೆನಿಸಿ ಪೂರ್ವದಿ ।
ಸುಗುಣ ಪಂಡಿತರೆನಿಸೆ ।
ಜಗದ ಬುಧರಿಂದ ಮಾನ್ಯರೆನಿಸಿದ ।।
ನಗೆ ಮುಖ ರಾಮಚಂದ್ರೆತಿ ।
ಮಿಗೆ ಸುಸಂಸ್ಕಾರದಿ ಯತಿಯಗೈಯ್ಯೆ ।
ನಿಗಮ ಶಾಸ್ತ್ರದ ಪಥದಿ ನಡೆದಂಥ ।। ಚರಣ ।।
ಆದಿ ಶ್ರೀಪಾದರಾಜರಿಗೆ ಶ್ರೀ ವ್ಯಾಸರಾಜರಿಗೂ ।
ಮೋದದಿ ವಿದ್ಯಾ ಬೋಧಕರು ।
ವಾದದಿ ದುರ್ವಾದಿಗಳ ಗೆದ್ದು ।।
ಸಾಧಿಸಿ ಜಯ ಪತ್ರ ಪ್ರತಿದಿನ ।
ಮಾದೇವಿ ನರಹರಿಗೆ ಅರ್ಪಿಸಿ ।
ಭೇದಮತ ಧ್ವಜ ಎತ್ತಿ ಮೆರೆದಂಥ ।। ಚರಣ ।।
ಐವತ್ತೈದು ವರ್ಷ 
ಶ್ರೀವೇದಾಂತ ರಾಜ್ಯವಾಳಿ ।
ಕೋವಿದರನು ಪೋಷಿಸಿ ।
ಭಾವ ಶುದ್ಧಿಲಿ ಲಯವ ಚಿಂತಿಸಿ - ।।
ಶ್ರೀಶ ಲಕುಮೀಶನಂಘ್ರಿಯ ।
ತೋಷದಿಂದಲಿ ಒಲಿಸಿ । ಮಾರ್ಗಶಿ ।
ರ ಶುದ್ಧ ದಶಮಿ 
ವೃಂದಾವನ ಸೇರ್ದ ।। ಚರಣ ।।
***
" ಶ್ರೀ ವಿಬುಧರಾಮ - 6 " 
" ಅವತಾರ ಸಮಾಪ್ತಿ " 
ಶ್ರೀ ಅಹೋಬಲ ಕ್ಷೇತ್ರದಿಂದ ಮಂತ್ರಾಲಯ ಗ್ರಾಮಕ್ಕೆ ಬಂದರು. 
ವಿಜಯನಗರದರಸರ ಆಡಳಿತದಲ್ಲಿದ್ದ ಆ ಗ್ರಾಮದಲ್ಲಿ ಶ್ರೀ ಪ್ರಹ್ಲಾದರಾಜರು ಯಜ್ಞ ಮಾಡಿದ್ದರೆಂದು ಶ್ರೀ ವಿಬುಧೇಂದ್ರತೀರ್ಥರಿಗೆ ಸ್ವಪ್ನ ಸೂಚನೆಯಾದುದ್ದರಿಂದ ಆ ಮಂತ್ರಾಲಯ ಗ್ರಾಮವನ್ನು ಸಂಪಾದಿಸಿ ಅಲ್ಲೇ ಕೆಲ ದಿನ ತಪಸ್ಸನ್ನಾಚರಿಸಿದರು. 
ಅಲ್ಲಿಂದ ಮತ್ತೆ ದಕ್ಷಿಣಕ್ಕೆ ಪ್ರಯಾಣ ಮಾಡಿ - ತಾಮ್ರಪರ್ಣಿ ತೀರದಲ್ಲಿರುವ ತಿರುನಲ್ವೇಲಿಗೆ ಬಂದು ಅಲ್ಲಿಯೇ - " ಸಾಧಾರಣ ನಾಮ ಸಂವತ್ಸರ ಮಾರ್ಗಶೀರ್ಷ ಶುದ್ಧ ದಶಮೀ " ವೃಂದಾವನಸ್ಥರಾದರು. 
ಆಕೇರಲಂ ತಥಾ ಸೇತುಮಾ-
ಗಂಗಾಂ ಚ ಹಿಮಾಲಯಮ್ ।
ನಿರಾಕೃತಾದ್ವೈತಶೈವಂ 
ವಿಬುಧೇಂದ್ರ ಗುರುಂಭಜೇ ।। 
ಶ್ರೀ ಪ್ರಾಣೇಶದಾಸರ ಕಣ್ಣಲ್ಲಿ... 
ಕು ಭವದೊಳಿರುವಾರ 
ಸೊಬಗಿನಿಂದಲಿ ನೋಡಿ ।
ಅಭಯ ಕೊಡುತಿಪ್ಪ 
ವಿಬುಧೇಂದ್ರತೀರ್ಥಾ ।।
" ಉಪ ಸಂಹಾರ " 
ಶ್ರೀ ವಿಬುಧೇಂದ್ರ ತೀರ್ಥರು ಶ್ರೀ ಜಯತೀರ್ಥರ ನಂತರದಲ್ಲಿ ಮಾಧ್ವ ಇತಿಹಾಸದಲ್ಲಿ ಕಂಗೊಳಿಸುವ ದಿವ್ಯಮೂರ್ತಿ. 
ಮಾಧ್ವ ಪರಂಪರೆಯಲ್ಲಿ ಶ್ರೀ ವಿಬುಧೇಂದ್ರತೀರ್ಥರದ್ದು ಉನ್ನತ ಸ್ಥಾನ. 
ಅವರ ಪಾಂಡಿತ್ಯ - ವಾದಿ ದಿಗ್ವಿಜಯವನ್ನು ಎಲ್ಲಾ ಮಾಧ್ವರೂ ತಲೆ ಬಾಗಿ ಒಪ್ಪಿಕೊಂಡಿದ್ದಾರೆ. 
ಶ್ರೀ ವಿಬುಧೇಂದ್ರತೀರ್ಥರ ಚರ್ಮ ಶ್ಲೋಕವೇ ಅವರ ವಿದ್ವತ್ಪ್ರೌಢಿಮೆಗೆ ಸಾಕ್ಷಿಯಾಗಿದೆ. 
ಶ್ರೀಮದಾಚಾರ್ಯರಿಂದ ಅನೂಚಾನವಾಗಿ ಬಂದ ಪಾಠ ಕ್ರಮದ ಸರಪಣಿಯಲ್ಲಿ ಶ್ರೀ ವಿಬುಧೇಂದ್ರತೀರ್ಥರು ಅತಿ ಮುಖ್ಯವಾದ ಕೊಂಡಿಯಂತಿದ್ದಾರೆಂದರೆ ಅತಿಶಯೋಕ್ತಿಯಾಗಲಾರದು. 
ಪರಮ ರಹಸ್ಯವಾದ ಸಿದ್ಧಾಂತ ಪ್ರಮೇಯಗಳನ್ನು ಗುರು ಪರಂಪರೆಯಿಂದ ಅರಿತ ಶ್ರೀ ವಿಬುಧೇಂದ್ರತೀರ್ಥರು ತಮ್ಮ ಶಿಷ್ಯರಾದ ಶ್ರೀ ಜಿತಾಮಿತ್ರತೀರ್ಥರಿಗೆ ಉಪದೇಶ ಮಾಡಿದ್ದಲ್ಲದೆ - ತಮ್ಮ ವಿದ್ಯಾ ಶಿಷ್ಯರಾದ ಶ್ರೀ ಲಕ್ಷ್ಮೀನಾರಾಯಣ ಮುನಿಗಳಿಗೂ ( ಶ್ರೀ ಶ್ರೀಪಾದರಾಜರಿಗೂ ) ಸಕಲ ತತ್ತ್ವಗಳನ್ನೂ, ವೇದಾಂತ ರಹಸ್ಯಗಳನ್ನೂ ಹೇಳಿಕೊಟ್ಟರು. 
ನಾಗರಾಜು ಹಾವೇರಿ... 
ಸುಬುಧರೆಲ್ಲರೂ 
ನೋಡ ಬನ್ನಿರೇ ।
ಸುಬುಧೇಂದ್ರ ಪ್ರಿಯ 
ವಿಬುಧೇಂದ್ರರಾ ।। ಪಲ್ಲವಿ ।। 
ರಾಮಚಂದ್ರತೀರ್ಥ 
ಕರ ಸಂಜಾತ । ಮೂಲ ।
ರಾಮ ದಿಗ್ವಿಜಯರಾಮರ 
ಸೇವಿಪ ।। ಚರಣ ।। 
ನರಸಿಂಹ ಭಟ್ಟನನು 
ಗೆಲೆದು । ಮುದದಿ ।
ಹರಿ ಮತ ಸ್ಥಾಪನೆ 
ಮಾಡಿದ ಧೀರನ ।। ಚರಣ ।। 
ಶ್ರೀಪಾದರಾಜರ್ಗೆ ವೇದ 
ಮತ ಸಾರವ ಬೋಧಿಸಿ ।
ಶ್ರೀಪತಿ ವೆಂಕಟನಾಥನ 
ಸಖನವತಾರ ಜಿತಾಮಿತ್ರನ ಪಿತನ ।। 
ಗುರು ವಿಜಯ ಪ್ರತಿಷ್ಠಾನ
***
" ಶ್ರೀ ವಿಬುಧರಾಮ - 7 "
" ದಿನಾಂಕ : 24.12.2020 ಗುರುವಾರ - 96ನೇ ಋಜು ಪದಸ್ಥರಾದ " ಶ್ರೀ ಅವ್ಯಕ್ತ " ರ ಅಂಶ ಸಂಭೂತರಾದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವಿಬುಧೇಂದ್ರ ತೀರ್ಥರ ಆರಾಧನಾ ಮಹೋತ್ಸವ - ತಿರುನಲ್ವೇಲಿ "  
ಸಾಕಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಸತ್ಪರಂಪರೆಯಾದ...
" ಜಗದ್ಗುರು  ಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನದ ಮೂಲ ಮಹಾ ಸಂಸ್ಥಾನ " ದಲ್ಲಿ ವಿರಾಜಮಾನರಾದ ಶ್ರೀ ವಾಗೀಶ ತೀರ್ಥರ ಕರ ಕಮಲ ಸಂಜಾತರಾದ ಶ್ರೀ ರಾಮಚಂದ್ರ ತೀರ್ಥರ ವರ ಪುತ್ರಕರಾದ ಶ್ರೀ ರಾಮಚಂದ್ರ ತೀರ್ಥರಿಂದ ಆಶ್ರಮ ಸ್ವೀಕಾರ ಮಾಡಿದ ಒಬ್ಬರೇ ಒಬ್ಬರಾದ ಆಶ್ರಮ ಶಿಷ್ಯರೂ - ಉತ್ತರಾಧಿಕಾರಿಗಳೂ - ಶ್ರೀ ರಾಜೇಂದ್ರತೀರ್ಥರ ( ಶ್ರೀ ವ್ಯಾಸರಾಜ ಮಠದ ಪೂರ್ವೀಕ ಗುರುಗಳು ) ವಿದ್ಯಾ ಶಿಷ್ಯರಾದ " ದ್ವೈತ ವಿದ್ಯಾ ಸಾರ್ವಭೌಮ " ಶ್ರೀ ವಿಬುಧೇಂದ್ರತೀರ್ಥರ ಆರಾಧನಾ ಮಹೋತ್ಸವ ". 
" ದ್ವೈತ ಸಿದ್ಧಾಂತದಲ್ಲಿ ಶ್ರೀ ವಿಬುಧೇಂದ್ರ ತೀರ್ಥರ ಸ್ಥಾನ " 
ದ್ವೈತ ಸಿದ್ಧಾಂತದಲ್ಲಿ ಅಸಾಧಾರಣವಾದ ಸ್ಥಾನ ಮಾನಗಳನ್ನು ಪಡೆದು - ಶ್ರೀಮದಾಚಾರ್ಯರ ಸತ್ತತ್ತ್ವಗಳ ಪಾಠ ಪ್ರವಚನ - ಸಂಪ್ರದಾಯ ಸತ್ಪರಂಪರೆ - ಆಚಾರ್ಯ ಪರಂಪರಾಗತ ಸಂಪ್ರದಾಯ ಪದ್ಧತಿಗಳನ್ನು ಉಳಿಸಿ - ಬೆಳಸಿಕೊಂಡು ಭಾರತಾದ್ಯಂತ ದಿಗ್ವಿಜಯ ಯಾತ್ರೆ ಕೈಗೊಂಡು ಮಾಯಾ ಮತಗಳನ್ನು ನಿರಾಕರಿಸಿ - ದುರ್ವಾದಿಗಳನ್ನು ಜಯಿಸಿ ದ್ವೈತ ಸಿದ್ಧಾಂತದ ವಿಜಯ ದುಂದುಭಿಯನ್ನು ಮೊಳಗಿಸಿ - 
ಶ್ರೀ ಶ್ರೀಪಾದರಾಜರು
ಶ್ರೀ ವೀಣಾ ವೆಂಕಟ ರಮಣಾಚಾರ್ಯರೇ 
( ಇವರು ಶ್ರೀ ರಾಯರ ಮುತ್ತಾತನ ತಂದೆ ) 
ಮೊದಲಾದ ನೂರಾರು ಜನ ಮಹಾ ಪ್ರಕಾಂಡ ಪಂಡಿತರಾದ ಶಿಷ್ಯರುಗಳಿಂದ ಗೇಗೀಯ ಮಾನರಾದವರು ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವಿಬುಧೇಂದ್ರತೀರ್ಥರು. 
ಭಗೀರಥನ ಪ್ರಯತ್ನದಿಂದ ಧರೆಗಿಳಿದು ಬಂದ ದೇವ ಗಂಗೆಯನ್ನು ಶ್ರೀಹರಿ ಪಾದೋದ್ಭವಳು ಎಂಬ ಗೌರವದಿಂದ ವಿಷ್ಣು ಭಕ್ತಾಗ್ರೇಸರರಾದ ಶ್ರೀ ರುದ್ರದೇವರು ಹೇಗೆ ಪರಮಾದರದಿಂದ ಶಿರಸ್ಸಿನಲ್ಲಿ ಧರಿಸಿ - ಆ ನಂತರ ಏಳು ಹೊನಲುಗಳಾಗಿ ಧರೆಗೆ ಹರಿಯ ಬಿಟ್ಟು ಲೋಕ ಕಲ್ಯಾಣ ಮಾಡಿದರೋ - ಅದರಂತೆಯೇ ದೇವಲೋಕದ " ವೈದಿಕ ವಿದ್ಯಾ ಭಾಗೀರಥೀ ( ದ್ವೈತ ವಿದ್ಯಾ ಗಂಗೆ ) ಯನ್ನು ವಿಷ್ಣು ಭಕ್ತಾಗ್ರೇಸರರಾದ ಶ್ರೀಮದ್ವಿಬುಧೇಂದ್ರತೀರ್ಥರು ಪರಮಾದರದಿಂದ ತಮ್ಮ ಶಿರಸ್ಸಿನಲ್ಲಿ ಧಾರಣೆ ಮಾಡಿ - ಆಚಂದ್ರಾರ್ಕವಾಗಿ ಆ ಪರಮ ವಿದ್ಯೆಯು ಭೂಲೋಕದಲ್ಲಿ ಉಳಿದು - ಬೆಳೆದು - ಬೆಳಗಿ ಪಾಠ ಪ್ರವಚನ ಉಪಾಸನಾದಿಗಳಿಂದ ಸುಜನರ ಉದ್ಧಾರವಾಗಿ ಲೋಕ ಕಲ್ಯಾಣವಾಗಲೆಂದು ಮಹೋದ್ಧೇಶದಿಂದ - ಶ್ರೀ ಶ್ರೀಪಾದರಾಜರೇ ಮೊದಲಾದ ನೂರಾರು ಜನ ಶಿಷ್ಯರುಗಳಿಗೆ ಪಾಠ ಪ್ರವಚನ ದ್ವಾರ ಆ ವಿದ್ಯಾ ಭಾಗೀರಥಿಯನ್ನು ಪಾತ್ರದಲ್ಲಿ ಹರಿಯ ಬಿಟ್ಟು ಲೋಕ ಕಲ್ಯಾಣ ಮಾಡಿದರು.
" ವಿಶೇಷ ಸೂಚನೆ "
ಪ್ರಾತಃಸ್ಮರಣೀಯ ಪರಮಪೂಜ್ಯ ಶ್ರೀ ವಿಬುಧೇಂದ್ರ ತೀರ್ಥರ ಮೂಲ ವೃಂದಾವನ ಸನ್ನಿಧಾನದಲ್ಲಿ ಪರಮಪೂಜ್ಯ ಶ್ರೀ ವಿದ್ಯಾಶ್ರೀಶ ತೀರ್ಥರು
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
****


Moola brindavanas situ
ated in Tamilnadu
  1. Uttaradhi Mutt – 6
  2. Raghavendra Mutt – 7
  3. Vyasaraja Mutt – 9
  4. Sripadaraja Mutt – 15
  5. Other Brindavanas/Bidi sanyasigalu – 8


Rayara Mutt

Sri Vibhudendra Theertharu(Tirunelveli)
AkEralaM tathA sEtumAgangaM cA himAlayam |
nirAkRutAdvaitaSaivaM vibudhEndraguruM BajE ||

His Brindavana is located at Tirunelvelli (a town situated on the banks of river Tamraparni). He attained brindavana on the day of Margashira Shuddha Dashami of Sadharana Samvatsara in A.D.1490.

above info is  from - 
https://madhwafestivals.wordpress.com/2016/12/09
*****

shri rAjEndra tIrtharu had taught him Sudha 9 times as is evident from the charama shlOka of shri rAjEndra tIrtharu. 

shri vidyAnidhi tIrtharu and shri raghunAtha tIrtharu of uttarAdi maTa were his contemporaries. 

shri vibhudEndra tIrthagurvAntargata, bhArathiramaNa mukhyaprANantargata shri shODashabAhu narasimha dEvara pAdaravindakke gOvinda, gOvinda...

shri krishNArpaNamastu...

*****

ಆತ್ಮೀಯರ ಲೇಖನ 

ಶ್ರೀಮದಾಚಾರ್ಯರ ಸತ್ ಪರಂಪರೆಯಲ್ಲಿ ಬಂದ ಶ್ರೀರಾಮಚಂದ್ರತೀರ್ಥರು ರಘುನಾಥ ಭಟ್ಟ ಎನ್ನುವ ಜ್ಞಾನಿಗಳಿಗೆ ಸಂನ್ಯಾಸ ಕೊಟ್ಟು ವಿಬುಧೇಂದ್ರ ತೀರ್ಥರೆಂದು ಅಭಿದಾನವಿತ್ತರು. ಇವರನ್ನು ಉತ್ತರಾಧಿಕಾರಿಗಳನ್ನಾಗಿ ಆರಿಸಿಕೊಳ್ಳುವುದಕ್ಕೆ ಮುಖ್ಯ ಕಾರಣ ಅವರಲ್ಲಿ ಇದ್ದ ಮಹಾ ಮೇಧಾವಿತನ, ಶಾಸ್ತ್ರಗಳ ಆಳವಾದ ಜ್ಞಾನ. ಆಚಾರ್ಯರ ಪರಂಪರೆಯಿಂದ ಹರಿದು ಬಂದ ಜ್ಞಾನವು ಶ್ರೀರಾಜೇಂದ್ರತೀರ್ಥರಿಂದ ಶ್ರೀರಘುನಾಥಭಟ್ಟರಿಗೆ ಬಂದಿತ್ತು. ಶ್ರೀರಾಜೇಂದ್ರತೀರ್ಥರಲ್ಲಿ ಒಂಭತ್ತು ಬಾರಿ ನ್ಯಾಯಸುಧಾಮಂಗಳವನ್ನು ಮಾಡಿದ ಶ್ರೀವಿಬುಧೇಂದ್ರ ತೀರ್ಥರು ಆಗಿನ ಕಾಲದ ಅತ್ಯುತ್ತಮ ಜ್ಞಾನಿಗಳು ಪಂಡಿತರು ಅಂತ ಪ್ರಸಿದ್ಧಿಹೊಂದಿದ್ದರು. ಅವರು‌ ಶ್ರೀರಾಜೇಂದ್ರ ತೀರ್ಥರಲ್ಲಿ ಶಾಸ್ತ್ರವನ್ನು ಓದಿದ ಪ್ರಸಂಗವನ್ನೇ ಶ್ರೀರಾಜೇಂದ್ರತೀರ್ಥರ ಚರಮ ಶ್ಲೋಕದಲ್ಲಿ ವಿಬುಧೇಂದ್ರಾದಿ ಶಿಷ್ಯಾದೀನ್ ನವಕೃತ್ವಸುಧಾಂಬುಧಿಃ|ಅಪಾಠಯತ್ ಸ ರಾಜೇಂದ್ರತೀರ್ಥೋಭೂದಭೀಷ್ಟದಃ ಎಂದು ತಿಳಿಸಿದ್ದಾರೆ. 

ಸಂನ್ಯಾಸಾಶ್ರಮ ಸಿಕ್ಕಿದ ಮೇಲೆ ಗುರುಗಳಾದ ಶ್ರೀರಾಮಚಂದ್ರತೀರ್ಥರ ಆಜ್ಞೆಯಂತೆ ಉತ್ತರ ಭಾರತದ ದಿಗ್ವಿಜಯಯಾತ್ರೆ ಕೈಗೊಂಡರು. ಹೋದ ಕಡೆಯಲ್ಲೆಲ್ಲಾ ಶ್ರೀಮದಾಚಾರ್ಯರ ಮತ ಸ್ಥಾಪನೆ ಮಾಡಿ, ಪರಮತ ಖಂಡನೆಗಳಿಂದ ಧ್ವಜಪತಾಕೆ ಹಾರಿಸಿ ಪ್ರಸಿದ್ಧರಾದರು. ಮುಖ್ಯವಾಗಿ ಕಾಶಿಯಲ್ಲಿ ಅನೇಕ ಪರಮತದವರನ್ನು ಖಂಡಿಸಿ, ಅನೇಕ ಜನರನ್ನು ಶಿಷ್ಯರನ್ನಾಗಿ ಪಡೆದರು. ಕಾರಣಾಂತರದಿಂದ ಗುರುಗಳ ಅವಸಾನ ಕಾಲಕ್ಕೆ ಶ್ರೀವಿಬುಧೇಂದ್ರರಿಗೆ ಬರಲಾಗಲಿಲ್ಲ. ಗುರುಗಳು ಬೃಂದಾವನರಸ್ಥರಾಗುವ ಮುಂಚೆ ಸಂಸ್ಥಾನದ ಪ್ರತಿಮೆಗಳನ್ನು  ಒಬ್ಬ ನಂಬಿಕಸ್ಥರ ಮನೆಯಲ್ಲಿ ಇಟ್ಟು ತಮ್ಮ ಶಿಷ್ಯರು ಬಂದಾಗ ಹಸ್ತಾಂತರಿಸಬೇಕೆಂದು ಹೇಳಿ ಯರಗೊಳದಲ್ಲಿ  ಬೃಂದಾವನಸ್ಥರಾದರು. ಶ್ರೀವಿಬುಧೇಂದ್ರ ತೀರ್ಥರು ಯರಗೋಳಕ್ಕೆ ಬರುವುದರೊಳಗಾಗಿ ಗುರುಗಳೂ ಬೃಂದಾವನಸ್ಥರಾಗಿದ್ದರು ಮತ್ತೂ ಸಂಸ್ಥಾನದ ಪ್ರತಿಮೆಗಳೂ ಇವರಿಗೆ ಸಿಗಲಿಲ್ಲ. ಭಗವದಿಚ್ಛೆ ಅಂತ ತಿಳಿದು ಗುರುಗಳ ಬೃಂದಾವನ ಸನ್ನಿಧಾನದಲ್ಲೇ ಪಾಠಪ್ರವಚನ ಮಾಡುತ್ತಿದ್ದಾಗ, ಅಹೋಬಲ ಕ್ಷೇತ್ರ ಸ್ವಾಮಿಯಾದ ನರಸಿಂಹ ದೇವರು ತನ್ನ ಕ್ಷೇತ್ರಕ್ಕೆ ಬರಲೆಂದು ಆಜ್ಞಾಪಿಸಿ ಸೂಚನೆಯಿತ್ತನು. ಭಗವಂತನ ಸೂಚನೆಯಂತೆ ಅಹೋಬಲ ಕ್ಷೇತ್ರದಲ್ಲಿದ್ದು ನಿರಂತರ ಜಪ ತಪ ಪಾಠಪ್ರವಚನ ಅನುಷ್ಠಾನಗಳನ್ನು ಮಾಡುತ್ತಾ ನರಸಿಂಹ ದೇವರ ಸೇವೆ ಮಾಡಿದರು.ಅವರ ಭಕ್ತಿಗೆ ಮೆಚ್ಚಿದ ಭಗವಂತ, ಕಾಲಾಂತರದಲ್ಲಿ ಸಂಸ್ಥಾನದ ಪ್ರತಿಮೆಗಳು ಪರಂಪರೆಗೆ   ಮರಳಿ ಬರುತ್ತವೆ, ಈಗ ಇಲ್ಲಿರುವ ಪುಷ್ಕರಣಿಯಲ್ಲಿ ನನ್ನ ಪ್ರತಿಮೆ ಇದೆ, ಅದನ್ನು ಸ್ವೀಕರಿಸಿ ಪೂಜೆ ಮಾಡು ಮತ್ತು ಆಚಾರ್ಯರಿಂದ ಬಂದ ಪರಂಪರೆ ಮುಂದುವರೆಸು ಅಂತ ಆಜ್ಞಾಪಿಸುತ್ತಾನೆ. ಇದರಂತೆ ಅವರಿಗೆ ದಿವ್ಯವಾದ ಷೋಡಶ ಬಾಹು ನರಸಿಂಹ ದೇವರ ಪ್ರತಿಮೆ ಪ್ರಾಪ್ತಿಯಾಗುತ್ತದೆ. ಭಕ್ತಿಯಿಂದ ಪೂಜಿಸುತ್ತಾ, ದಿಗ್ವಿಜಯ ಯಾತ್ರೆ ಕೈಗೊಂಡು ಜಯಭೇರಿ ಬಾರಿಸುತ್ತಾ ಇದ್ದಾಗ,
ಶ್ರೀವಿಬುಧೇಂದ್ರತೀರ್ಥರ  ವಿದ್ವತ್ಕೀರ್ತಿ ಎಲ್ಲೆಡೆ ಹಬ್ಬಿತ್ತಾದ್ದರಿಂದ ನಾನಾಕಡೆಗಳಿಂದ  ಶಿಷ್ಯರು ಇವರಲ್ಲಿ ವಿದ್ಯಾಭ್ಯಾಸ ಮಾಡಬೇಕಂದು ಬರತೊಡಗಿದರು.
ಶ್ರೀಪದ್ಮನಾಭತೀರ್ಥರಿಂದ ಮುಂದುವರೆದ ಮತ್ತೊಂದು ಪರಂಪರೆಯಲ್ಲಿ ಬಂದ ಶ್ರೀ ಸ್ವರ್ಣವರ್ಣತೀರ್ಥರು ತಮ್ಮ ಶಿಷ್ಯರಾದ ಶ್ರೀಲಕ್ಷ್ಮೀನಾರಾಯಣ ಯತಿಗಳನ್ನು ಶ್ರೀವಿಬುಧೇಂದ್ರತೀರ್ಥರಲ್ಲಿ ಶಾಸ್ತ್ರದ ಅಭ್ಯಾಸಕ್ಕಾಗಿ ಕಳುಹಿಸುತ್ತಾರೆ. ಶ್ರೀವಿಬುಧೇಂದ್ರ ತೀರ್ಥರು ಆ ಬಾಲ ಯತಿಗಳಿಗೆ ಇಡೀ ವಿದ್ಯೆ ಧಾರೆ ಎರೆದು ಆಶೀರ್ವದಿಸಿ  ತಾವೇ ಸ್ವತಃ ಆ  ಲಕ್ಷ್ಮೀನಾರಾಯಣಯತಿಗಳಿಗೆ  ಶ್ರೀಪಾದರಾಜರು ಎಂದು ಕರೆದು ಅದೇ  ಹೆಸರಿನಿಂದ ಜಗತ್ಪ್ರಸಿದ್ಧರಾಗುವಂತೆ  ಅನುಗ್ರಹಿಸುತ್ತಾರೆ.  
ಶ್ರೀವಿಬುಧೇಂದ್ರ ತೀರ್ಥರು ಸಂಚಾರದಲ್ಲಿದ್ದಾಗ, ಸೂಚನೆಯಂತೆಯೇ ಮಂಚಾಲೆ ಗ್ರಾಮಕ್ಕೆ ಬಂದು, ಅದು ಶ್ರೀಪ್ರಹ್ಲಾದರಾಜರು ಯಜ್ಞ ಮಾಡಿದ ಪವಿತ್ರ ಕ್ಷೇತ್ರ ಎಂದು ಅಲ್ಲಿ ಅನೇಕ ದಿನಗಳವರೆಗೂ ಜಪತಪಾದಿಗಳನ್ನು ನೆರೆವೇರಿಸುತ್ತಾರೆ. ಹೀಗೆ ಆಗಿನ ಕಾಲದಲ್ಲಿ ಶ್ರೇಷ್ಠ ಜ್ಞಾನಿಗಳಾದ ಶ್ರಿವಿಬುಧೇಂದ್ರ ತೀರ್ಥರು, ತಮ್ಮ ಪರಂಪರೆಯಲ್ಲಿ ಮುಂದೆ ಅನಂತಪ್ಪ ಎನ್ನುವ ಮುಗ್ಧ ಭಕ್ತರೊಬ್ಬರಿಗೆ ಮೊದಲು ಶಾಸ್ತ್ರ ಪಾಠಗಳನ್ನು ಹೇಳಿ ನಂತರ ಸನ್ಯಾಸ ದೀಕ್ಷೆ ಕೊಟ್ಟು, ಶ್ರೀಜಿತಾಮಿತ್ರ ತೀರ್ಥರು ಎಂದು ನಾಮಕರಣಮಾಡಿದರು. ಎಲ್ಲೆಡೆ ಸಂಚಾರ ಮಾಡಿ, ದಿಗ್ವಿಜಯ ಪಾತ್ರೆಗಳನ್ನು ಕೈಗೊಂಡು ಮಾರ್ಗಶಿರ ಶುದ್ಧ ದಶಮಿಯಂದು ತಾಮ್ರಪರ್ಣಿ ನದೀತೀರದ  ತಿರುವನ್ವೇಲಿ ಕ್ಷೇತ್ರದಲ್ಲಿ  ಬೃಂದಾವನಸ್ಥರಾದರು. 
 ಶ್ರೀವಿಬುಧೇಂದ್ರತೀರ್ಥರ  ಬಗ್ಗೆ ಶ್ರೀಪ್ರಾಣೇಶ ದಾಸರು ತಮ್ಮ ಒಂದು ಕೃತಿಯಲ್ಲಿ ಶುಭವನದೊಳಗಿರುವ ಸೊಬಗಿನಿಂದಲಿ ನೋಡಿ, ಅಭಯ ಕೊಡುತಿಪ್ಪ ವಿಬುಧೇಂದ್ರತೀರ್ಥ ಎಂದು ಕೊಂಡಾಡಿದ್ದಾರೆ. 
ಶ್ರೀಲಕುಮೀಶ ದಾಸರು ಭಾರತೀಶನ ತತ್ವ ಭರತಖಂಡದಿ ಸಾರಿ|ನರಹರಿನೊಲಿಸಿದ ಗುರು ವಿಬುಧೇಂದ್ರರ ಅಂತ ಅವರು ಅಖಂಡವಾಗಿ ನಡೆಸಿದ  ತತ್ವಪ್ರಚಾರದ ಬಗ್ಗೆ ಕೊಂಡಾಡಿದ್ದಾರೆ. 
***





2 comments:

  1. Please share phone number of the archakaru of Vibhudendra teerthara matha in Tirunelveli

    ReplyDelete
    Replies
    1. Kindly contact Rayara Mutt, Tirunelveli 0462 232 1328 and get further information. I just now called this number and spoke to Mr. Venkatesh who said the original vrundavana is on the riverbed, 6 kms from the Rayara Mutt, Tirunelveli. Mrutika Vrundavana is in the mutt. Please talk to him. His number is 9600272411.
      Regards

      Delete