Friday, 10 May 2019

satyeshta teertharu atkur 1872 matha uttaradi mutt yati 33 bhadrapada shukla ekadashi ಸತ್ಯೇಷ್ಟ ತೀರ್ಥರು




info from sumadhwaseva.com--->

Sri Satyeshta Tirtha 

Ashrama Period – 1871-1872

ಸತ್ಯಕಾಮಾರ್ಣವೋದ್ಭೂತಃ ಶ್ರೀಮತ್ ಸತ್ಯೇಷ್ಟಸದ್ಗುರುಃ |
ಸತಾಂ ಚಿಂತಾಮಣಿರಿವ ಚಿಂತಿತಾರ್ಥಪ್ರದೊ ಭುವಿ ||


satyakAmArNavOdbhUtaH shrImat satyEShTasadguruH |
satAm chintAmaNiriva chintitArthaprado bhuvi ||


सत्यकामार्णवोद्भूतः श्रीमत् सत्येष्टसद्गुरुः ।
सतां चिंतामणिरिव चिंतितार्थप्रदॊ भुवि ॥




Poorvashrama name – Hattimattur Narasimhacharya

Vrundavana – Atakooru

Aradhana – Bhadrapada Shukla Ekadashi

Ashrama gurugalu – Satyakama Thirtharu

Ashrama Shishyaru – Satyaparakrama Thirtharu

Sri Satyeshta Theertha was in the Peeta for only 8 months and spent most of his time with his guru only. He did not have usual program of tours due to his old age.

He gave Ashrama to Vayi Srinivasacharya and named him Sri Satyaparakrama Theertha and entered Vrundavana at Atakur besides his guru.
***

info from uttaradimutt.org---> Sri Sathyesta Teertha was the pontiff of Shri Uttaradi Matha during the period from1871 to 1872.
His poorvasahrama name was Shri Hattimuttur Narasimhacharya. After being initiated to Vedantha Samrajya, he took up the construction of Brindavana in Atkur, to his beloved guru Shri Satyakama Teertha and performed Mahasamaradhana.
Sri Sathyesta Teertharu, due to his old age, did not extensively travel for propagation of Dvaitha Philosophy. He ruled the vedanta samrajya for a very short time of only 7 months. Shri Sathyesta Teertha ordained Shri Shrinivasacharya as his successor and named him Shri Satyaprakrama Teertha.
He entered Brindavana at Atkur in 1872Angirasa samvatsara Bhadrapada Shuddha Ekadashi on the banks of river Krishna.
Contact DetailsPlace: Atkur Phone no: 9739726649/9341679860Atkur 584102 karnataka***
#ಶ್ರೀ #ಸತ್ಯೇಷ್ಟತೀರ್ಥರು

ಸತ್ಯಕಾಮಾರ್ಣವೋದ್ಭೂತಃ ಶ್ರೀಮತ್ #ಸತ್ಯೇಷ್ಟಸದ್ಗುರುಃ |ಸತಾಂ ಚಿಂತಾಮಣಿರಿವ ಚಿಂತಿತಾರ್ಥಪ್ರದೊ ಭುವಿ ||
ಧಾರವಾಡಜಿಲ್ಲೆಯ ‘‘ಹತ್ತಿಮತ್ತೂರು’’ ಪ್ರಸಿದ್ಧ ಪಂಡಿತರ ಊರು. ಪಂ. ನರಸಿಂಹಾಚಾರ್ಯರು ಅಲ್ಲಿಯ ವಿಖ್ಯಾತ ವಿದ್ವಾಂಸರು, ಶ್ರೀಮದುತ್ತರಾದಿ ಮಠದ ಅಂದಿನ ಪೀಠಾಧಿಪತಿಗಳಾದ ಶ್ರೀಸತ್ಯಕಾಮತೀರ್ಥರಲ್ಲಿ ವಿಶೇಷ ಅಧ್ಯಯನ ಮಾಡಿದ್ದರು. ಶ್ರೀಮಠದಲ್ಲಿಯೇ ವಾಸವಾಗಿದ್ದರು. ಕೃಷ್ಣಾ ತೀರದ ಆತಕೂರಿನಲ್ಲಿ ಒಮ್ಮೆ ಶ್ರೀಸತ್ಯಕಾಮರು ಇವರಿಗೆ ಸಂನ್ಯಾಸ ನೀಡಿ ತಮ್ಮ ಉತ್ತರಾಧಿಕಾರಿಗಳನ್ನಾಗಿ ಮಾಡಿಕೊಂಡರು. ಇವರಿಗೆ ಶ್ರೀ ಸತ್ಯೇಷ್ಟತೀರ್ಥರೆಂದು ಹೆಸರಿಸಿದರು.ವಿಲಕ್ಷಣ ವೈರಾಗ್ಯಶಾಲಿಗಳು ಈ ಸತ್ಯೇಷ್ಟತೀರ್ಥರು. ಆ ಕಾಲಕ್ಕೆ ರಾಜಕೀಯ ಸ್ಥಿತಿಗತಿಗಳು ಅಷ್ಟು ಸರಿಯಾಗಿ ಇರದೇ ಇದ್ದುದರಿಂದ ಇವರು ಎಲ್ಲಿಯೂ ಸಂಚಾರಕ್ಕೆ ತೆರಳಲಿಲ್ಲ. ಆತಕೂರಿನಲ್ಲಿಯೇ ವಾಸಿಸಿದರು. ಉಗ್ರತಪಶ್ಚರ್ಯ, ಪಾಠಪ್ರವಚನ ಇವರ ನಿತ್ಯಕ್ರಮವಾಗಿದ್ದವು. ಕೌಪೀನ ಮಾತ್ರ ಧರಿಸುತ್ತಿದ್ದರು. ಕೃಷ್ಣಾಜಿನದ ಮೇಲೆ ಮಲಗುತ್ತಿದ್ದರು. ಪಾದುಕೆಗಳನ್ನು ಧರಿಸುತ್ತಿದ್ದಿಲ್ಲ. ಪೂರ್ವಾಶ್ರಮದಲ್ಲಿ ಬಡತನ. ಆದರೂ ಪೂರ್ವಾಶ್ರಮದ ಗಳಿಕೆಯನ್ನು ಆಶ್ರಮವಾದ ಮೇಲೆ ಎಲ್ಲ ಸೇರಿಸಿ ಒಂದು ಬಂಗಾರದ ಬಟ್ಟಲು ಮಾಡಿಸಿ, ಅದರ ಮೇಲೆ ತಮ್ಮ ತಾಯಿ ಸೇವೆ ಎಂದು ಬರೆಸಿ ಅದರಿಂದಲೇ ದೇವರಿಗೆ ಸೂತ್ರಪರಮಾನ್ನ ನೈವೇದ್ಯ ಮಾಡುತ್ತಿದ್ದರು. ವೃದ್ಧಾಪ್ಯದಲ್ಲಿಯೇ ಇವರು ಪೀಠದಲ್ಲಿ ವಿರಾಜಿಸಿದ್ದರೂ ಆಡಳಿತ, ಪೂಜಾಕಾರ್ಯಗಳಲ್ಲಿ ಚುರುಕಾಗಿದ್ದರು. ಸದಾ ಪಾಠ ಪ್ರವಚನ ಮಾಡುತ್ತಾ ವರದ ಶ್ರೀನಿವಾಸಾಚಾರ್ಯರ ಉಪನ್ಯಾಸ ನಿರಂತರ ಆಲಿಸುತ್ತಿದ್ದರು. ಹನ್ನೊಂದು ತಿಂಗಳು ಮಾತ್ರ ಪೀಠಾಧಿಪತ್ಯದಲ್ಲಿದ್ದು ಮುಂದೆ ಧಾರವಾಡಜಿಲ್ಲೆಯ ವರದಾ ನದಿಯ ತೀರದ ಮರಡೂರಿನ ಮಹಾ ಪಂಡಿತರಾದ ವಾಯೀ ಶ್ರೀನಿವಾಸಾಚಾರ್ಯರಿಗೆ ಆಶ್ರಮ ನೀಡಿದರು. ಅವರಿಗೆ ಶ್ರೀಸತ್ಯಪರಾಕ್ರಮತೀರ್ಥರೆಂದು ನಾಮಕರಣ ಮಾಡಿದರು. ಭಾದ್ರಪದ ಶುದ್ಧ ಏಕಾದಶಿಯ ದಿನ ಆತಕೂರಿನಲ್ಲಿ ವೃಂದಾವನ ಪ್ರವೇಶಗೈದರು.
सत्यकामार्णवोद्भूतः श्रीमत् सत्येष्टसद्गुरुः ।सतां चिंतामणिरिव चिंतितार्थप्रदॊ भुवि ॥
Uttaradi mutt org
****ಶ್ರೀಸತ್ಯೇಷ್ಟತೀರ್ಥರು 
ಶ್ರೀಮದುತ್ತರಾದಿಮಠಾಧೀಶರಾದ ಶ್ರೀಸತ್ಯೇಷ್ಟತೀರ್ಥರ  ಆರಾಧನಾ ಮಹೋತ್ಸವ ಭಾದ್ರಪದ ಶುಕ್ಲ ಏಕಾದಶೀಇವರ ಪೂರ್ವಾಶ್ರಮದ ಹೆಸರು ಹತ್ತಿಮತ್ತೂರು ನರಸಿಂಹಾಚಾರ್ಯರು ಎಂದು. ಪಂಢರಪುರದ ಪಾಂಡುರಂಗನೆ ಇವರ ಕುಲದೈವ. ಕಾಶ್ಯಪಗೋತ್ರದ ಋಕ್ಶಾಖಿಗಳ ಮನೆತನದಲ್ಲಿ ಹುಟ್ಟಿದವರು. ಸವಣೂರು ಸಮೀಪದ ಹತ್ತಿಮತ್ತೂರು ಎಂಬ ಗ್ರಾಮದಲ್ಲಿ ವಾಸಮಾಡುತ್ತಾ ಅಲ್ಲಿರುವ ಪ್ರಾಣದೇವರ ಆರಾಧಕರಾಗಿದ್ದವರು. ಆ ಗ್ರಾಮದಲ್ಲಿ ಇವರಿಗೆ ಸಂಬಂಧಪಟ್ಟ ಕೃಷಿಭೂಮಿಯೂ ಇತ್ತು. ಆದ್ದರಿಂದಲೆ ಇವರು ಹತ್ತಿಮತ್ತೂರು ಆಚಾರ್ಯರು ಎಂದೆ ಪ್ರಸಿದ್ಧರಾಗಿದ್ದರು.ತಮ್ಮ ಮನೆಗೆ ಯಾರೇ ವೈಷ್ಣವರು ಬಂದರೂ ಅವರ ಪಾದಧೂಳಿಯನ್ನು ಸಂಗ್ರಹಿಸಿ ಇಟ್ಟುಕೊಂಡು ಯಾರಿಗಾದರೂ ರೋಗಗಳು ಬಂದಾಗ ಆ ಬ್ರಾಹ್ಮಣರ ಪಾದಧೂಳಿಯನ್ನು ನೀಡಿ ಪರಿಹರಿಸುತ್ತಿದ್ದರು.ಸತ್ಯಪರಾಯಣತೀರ್ಥರ ಕಾಲದಿಂದಲೂ ಉತ್ತರಾದಿಮಠದ ಆಸ್ಥಾನಪಂಡಿತರಾಗಿದ್ದವರು. ಕೃಚ್ಛ್ರ ಚಾಂದ್ರಾಯಣ ವಿಷ್ಣುಪಂಚಕ ಮೊದಲಾದ, ಶಾಸ್ತ್ರದಲ್ಲಿ ಹೇಳಿದ ಎಲ್ಲಾ ಕಠಿಣವಾದ ವಿಶಿಷ್ಟ ವ್ರತಗಳನ್ನು ಮಾಡಿ ದೇಹವನ್ನು ದಂಡಿಸಿ ಸಾಧನಶರೀರವನ್ನು ಸಾರ್ಥಕಪಡಿಸಿಕೊಂಡವರು. ಇವರು ಮಾಡದ ವ್ರತವೇ ಇರಲಿಲ್ಲ.ದೇವರ ಪೂಜೆಯಲ್ಲಿ ಬಹಳ ಶುದ್ಧಿಯನ್ನು ಅಪೇಕ್ಷೆ ಪಡುತ್ತಿದ್ದರು. ಅದಕ್ಕಾಗಿ ಅವರ ಮನೆಯಲ್ಲಿ ಎರಡು ಬಾವಿಗಳನ್ನು ಬಳಸುತ್ತಿದ್ದರು. ಒಂದು ಕೇವಲ ದೇವರ ಪೂಜೆಗಾಗಿ. ಮತ್ತೊಂದು ಮನೆಯ ಉಳಿದ ಕಾರ್ಯಗಳಿಗಾಗಿ.ವಿಶೇಷವಾಗಿ ದೇವರ ಪೂಜೆಯಲ್ಲಿ ಎಂದೂ ಎಡಗೈಯನ್ನು ಬಳಸಬಾರದು ಎಂಬ ಅತಿಕಷ್ಟಕರವಾದ ಅಪರೂಪದ ವ್ರತವನ್ನು ಭಗವಂತನ ಪ್ರೀತಿಗಾಗಿ ಪಾಲಿಸಿದವರುಇವರು ಪೂಜಿಸಿದ ಸಾಲಿಗ್ರಾಮಗಳು, ಬಲಮೂರಿಶಂಖ, ಪೂಜಾಕಲಶ, ಸಂಪುಟ ಇವುಗಳು ಇಂದಿಗೂ ಅವರ ಪೂರ್ವಾಶ್ರಮದ ವಂಶಸ್ಥರ ಮನೆಯಲ್ಲಿ ಸುರಕ್ಷಿತವಾಗಿವೆ.ವಿಶೇಷವೆಂದರೆ ಆ ಸಂಪುಟದ ಮೇಲೆ ನರಸಿಂಹಾಚಾರ್ಯರೆ ಪ್ರಾಣದೇವರನ್ನು ಕೆತ್ತಿದ್ದಾರೆ. ಇಂಥಹ ಸಾಧಕರಿಗೆ ಸಹಜವಾಗಿ ಶ್ರೀಮದಾಚಾರ್ಯರ ಅನುಗ್ರಹದಿಂದ ವೇದಾಂತಪೀಠಾಧಿಪತ್ಯದ ಯೋಗ ಒದಗಿಬಂದಿತು. ಆಗ ಇವರಿಗೆ ಸುಮಾರು ೮೦ ವರ್ಷಗಳಾಗಿದ್ದವು.ಆಗಿನ ಉತ್ತರಾದಿಮಠದ ಪೀಠಾಧಿಪತಿಗಳಾಗಿದ್ದ ಶ್ರೀಸತ್ಯಕಾಮತೀರ್ಥರು ತಮಗೆ ವಯೋಸಹಜವಾದ ದೇಹಾಲಸ್ಯವಾದ್ದರಿಂದ ಜ್ಞಾನ-ತಪೋ-ವಯೋವೃದ್ಧರಾದ ಹತ್ತಿಮತ್ತೂರು ನರಸಿಂಹಾಚಾರ್ಯರಿಗೆ ಆಶ್ರಮ ಕೊಡಲು ಸಂಕಲ್ಪ ಮಾಡಿದರು. ಕೃಷ್ಣಾತೀರದ ಆತ್ಕೂರಿನಲ್ಲಿ ನರಸಿಂಹಾಚಾರ್ಯರಿಗೆ ವಿಧಿಪೂರ್ವಕವಾಗಿ  ಪ್ರಣವೋಪದೇಶವನ್ನು ಮಾಡಿ ವ್ಯಾಸಮುಷ್ಟಿಗಳನ್ನು ತಲೆಯ ಮೇಲಿಟ್ಟು ವೇದಾಂತಪಟ್ಟಾಭಿಷೇಕವನ್ನೂ ಸತ್ಯಕಾಮತೀರ್ಥರು ಮಾಡಿದರು. ಶ್ರೀಸತ್ಯೇಷ್ಟತೀರ್ಥರು ಎಂದು ನಾಮಕರಣವನ್ನೂ ಮಾಡಿದರು. ಪ್ರಜಾಪತಿಸಂವತ್ಸರದ (ಪ್ರಜೋತ್ಪತ್ತಿ) ಪುಷ್ಯ ಕೃಷ್ಣ ಷಷ್ಠಿ ಮಂಗಳವಾರದಂದು ಸತ್ಯಕಾಮತೀರ್ಥರು ಆತ್ಕೂರಿನಲ್ಲಿಯೇ ಬೃಂದಾವನಪ್ರವೇಶವನ್ನು ಮಾಡಿದರು. ವೃಂದಾವನಪ್ರತಿಷ್ಠಾದಿವಿಧಿಗಳನ್ನು ಮಾಡಿಸಿ, ಗುರುಗಳ ಆರಾಧನೆಯನ್ನು ಯೋಗ್ಯವಾಗಿ ಮಾಡಿ, ಬ್ರಾಹ್ಮಣರಿಗೆ ಅನ್ನದಾನಾದಿಗಳನ್ನು ಸತ್ಯೇಷ್ಟತೀರ್ಥರು ನೆರವೇರಿಸಿದರು. ಅಂದಿನಿಂದ ಎಂಟು ತಿಂಗಳು ಸತ್ಯೇಷ್ಟತೀರ್ಥರು ಪೀಠಾಧಿಪತಿಗಳಾಗಿದ್ದರು. ಆ ಅಲ್ಪ ಅವಧಿಯಲ್ಲಿ ಸ್ವಲ್ಪ ಸಮಯವೂ ವ್ಯರ್ಥವಾಗದಂತೆ ಜೀವನವನ್ನು ನಡೆಸಿದರು.ಮೊದಲೆ ವಿಚಿತ್ರವಾದ ಕ್ಲಿಷ್ಟಕರವಾದ ವ್ರತಗಳನ್ನು ಮಾಡುತ್ತಿದ್ದ, ವೈರಾಗ್ಯಸಂಪನ್ನರಾದ ಸತ್ಯೇಷ್ಟತೀರ್ಥರು ಆಶ್ರಮಾನಂತರದಲ್ಲಿ ಮತ್ತಷ್ಟೂ ಕಠಿಣವಾದ ವ್ರತಗಳನ್ನು ಆಚರಿಸಲಾರಂಭಿಸಿದರು. ವೃದ್ಧಾಪ್ಯವಿದ್ದ ಕಾರಣ ಸಂಚಾರಕ್ಕೆ ಮಹತ್ವ ಕೊಡದೆ ಗುರುಗಳ ಸನ್ನಿಧಿಯಲ್ಲೆ ಪವಿತ್ರವಾದ ಕೃಷ್ಣೆಯ ತೀರದಲ್ಲಿ ರಾಮದೇವರ ಪೂಜೆ, ಮಹಾಮಂತ್ರಗಳ ಜಪ ಪಾಠ-ಪ್ರವಚನ ಮಾಡುತ್ತಾ ಜೀವನವನ್ನು ಸಾಗಿಸಿದರು. ಅಗತ್ಯವಿದ್ದಷ್ಟೆ ಆಹಾರಸ್ವೀಕಾರ ಮಾಡುತ್ತಾ ಪಾದುಕೆಗಳನ್ನೂ ತೊರೆದು ಕೇವಲ ಬರಿಗಾಲಿನಲ್ಲಿ ನಡೆಯುವ ನಿಯಮವನ್ನಿಟ್ಟುಕೊಂಡರು. ಯಾವುದೇ ಮೃದುವಸ್ತುಗಳನ್ನು ಬಳಸದೆ ಕೇವಲ ಕೃಷ್ಣಾಜಿನದ ಮೇಲೆ ವಿಶ್ರಾಂತಿ ಮಾಡುತ್ತಿದ್ದರು. ಎಷ್ಟೆ ವೃದ್ಧಾಪ್ಯವಿದ್ದರೂ ತಮ್ಮ ಅನುಷ್ಠಾನದಲ್ಲಿ, ಸಂಸ್ಥಾನಪೂಜೆಯಲ್ಲಿ, ಮಠದ ನಿತ್ಯ-ನೈಮಿತ್ತಿಕ, ದೈನಂದಿನ-ಪಾಕ್ಷಿಕ-ಮಾಸಿಕ-ವಾರ್ಷಿಕ ಆಚರಣೆಗಳಲ್ಲಿ ಯಾವ ಸಂಕೋಚವೂ ಆಗದಂತೆ ಅತ್ಯುತ್ಸಾಹದಿಂದಲೆ ನಿರತರಾಗಿರುತ್ತಿದ್ದರು. ಪ್ರತಿನಿತ್ಯವೂ ರಾಮ-ದೇವರನ್ನು ಮಹಾವೈಭವಗಳೊಂದಿಗೆ ಪೂಜಿಸುತ್ತಿದ್ದರು.  ವಿಶೇಷದಿನಗಳಲ್ಲಿ ರಾಮದೇವರಿಗೆ ಉತ್ಸಾಹಭಕ್ತಿಗಳಿಂದ ಅಲಂಕಾರಗಳನ್ನು ಮಾಡುತ್ತಿದ್ದರು.ವೃದ್ಧಾಪ್ಯದ ಅತೀವ ದೇಹಾಲಸ್ಯದಿಂದ ಯೋಗ್ಯರಿಗೆ ಆಶ್ರಮ ಕೊಡಲು ಸಂಕಲ್ಪಿಸಿದರು. ಆಗ ಸ್ವಪ್ನದಲ್ಲಿ ವೇದವ್ಯಾಸದೇವರ ಪ್ರೇರಣೆಯಂತೆ ಆಗಿನ ಕಾಲದ ಮಹಾಪಂಡಿತರಾದ ವಾಯಿ ಶ್ರೀನಿವಾಸಾಚಾರ್ಯರಿಗೆ ಆಶ್ರಮವನ್ನು ನೀಡಿ, ಪ್ರಣವೋಪದೇಶವನ್ನು ಮಾಡಿ ಪಟ್ಟಾಭಿಷೇಕವನ್ನೂ ಮಾಡಿ ಸತ್ಯಪರಾಕ್ರಮತೀರ್ಥರು ಎಂದು ನಾಮಕರಣವನ್ನು ಮಾಡಿ ಅವರನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿ ಸ್ವೀಕರಿಸಿದರು. .ಭಾದ್ರಪದ ಶುಕ್ಲ ಏಕಾದಶಿ ಶುಕ್ರವಾರದಂದು ಆತ್ಕೂರಿನಲ್ಲಿ ತಮ್ಮ ಗುರುಗಳ ಸಮೀಪದಲ್ಲೆ ವೃಂದಾವನಪ್ರವೇಶಮಾಡಿದರು.               ಶ್ರೀಸತ್ಯೇಷ್ಟತೀರ್ಥರು ತಮಗಿದ್ದ ಸಮಯವನ್ನು ಭಗವಂತನ ಚಿಂತನೆಯಲ್ಲಿ ಸೇವೆಯಲ್ಲಿ ವ್ರತಗಳಲ್ಲಿ ತೊಡಗಿಸಿಕೊಂಡರು.(whatsapp)***
 

No comments:

Post a Comment