Friday, 10 May 2019

raghuvarya teertharu nava vrundavana 1557 matha uttaradi mutt yati 13 jyeshta bahula triteeya ರಘುವರ್ಯ ತೀರ್ಥರು




info is from sumadhwaseva.com--->

shri raghuvarya tIrtharu


ArAdhanE: jEshTa bahuLa trithIya 
Lineage: uttarAdhi maTa, #13
Period: 1502-1557
gurugaLu: shri raghunAtha tIrtharu
shishyaru: shri raghUtama tIrtharu
brindAvana: nava brindAvana
pUrvAshrama name: shri rAmachandra shAstry

Janma Naama – Sri Ramachandra Shastry


Once on his tour, he visited a village called Manipura near Bhimarathi River, which was under the control of a mlecha kingdom. While crossing the Bhimarathi River, he carried the Sri Mularamadevara pooja box on his shoulders and reached the bank of the river. All of a sudden, Bhimarathi river gave way to the Swamiji to reach the other side of the river. Swamiji crossed the river alongwith his disciples safely, to the surprise of one and all.

When Vasudeva carried Srikrishna also Yamuna gave way so that he could reach Gokula. At that time Vasudeva, the father of Krishna was carrying Krishna paramathma, here Raghuvarya Thirtharu was carrying Sri Moolaramadevaru.


He selected Raghottamaru as his shishya before his birth :

Once on his tour Sri Raghuvarya Theertharu visited a village named Swarnavata which was in the control of a Nizam. The Zaminder of the Village Sri Subbabatta with his wife Gangabai requested the swamiji for a “Bhiksha” in their house, which the swamiji refused as they were childless. The couple requested the swamiji repeatedly to accept their request, upon which the swamiji blessed them with a child with a condition that the child to be handed over to the Mutt. Swamiji did the Moola Ramadevara pooja and gave anugraha sahita mantrakshate to the couple.


Gangabai delivered a male child, for which Swamiji sent a gold plate to the Zamindar’s house from the matha, to receive the child directly in the golden place without touching the earth. Accordingly the child was delivered directly in the golden plate and brought to the Mutt . The child was none other than Sri Raghottama Thirtharu, the great “Bhavadeepikacharyaru” of the Uttaramutt.

Same is the case with Sri Vadirajaru and Sri Vyasarajaru’s birth.  All three yogis are kept in the Golden plate before touching the earth.


(Source –Uttaradimutt)
*********

info from madhwamrutha.org--->

Not much of his purvashrama is known but it is believed that he belong to close circles in the samsthana. Due to pressing situation during the time in Uttaradhi mutt, the saints used to carry Pooja box on their shoulders whenever they were on pilgrimage tour.  During one such tour, swamiji reached one village called Shashana near Bhima River, which was under the rule of Muslim king. The king planned to steal property and other valuables from the mutt. Knowing this, swamiji took all the idols on his shoulders and tried to escape through Bhima River. He prayed lord to pave way and accordingly the river gave him the way. Swamiji along with sishyas escaped and reached other side of the river. The king’s soldiers followed swamiji but died in the river.
Sri Raghuvarya Theertha continued his tour towards Rameswaram and visited one village. In that village there was childless couple. Knowing the arrival of swamiji, the couple met swamiji and requested him to bless with child. Swamiji blessed them with condition that first child be given to mutt and remaining can be kept with them for which they agreed. Later the couple gave birth to male child and as promised they handed over the boy to mutt. The mutt took care of the boy, performed Upanayana. Later the boy was given Ashrama and renamed as Raghottama Theertha. After handing over the samsthana to Raghottama Theertha, sri Raghuvarya Theertha reached the adobe of Hari near Anegondi.

***********

info from uttaradimutt.org---> Shri 1008 Shri Raghuvarya Teertha took over the responsibility of the Uttaradi Matha and ruled the pontificate throne  with great spiritual eminance. It is said that once during the course of his polemical tour, he came to a village called Manipur near the bank of Bhimarathi river, which was besieged by a king. His Holiness wanted to leave the place and go to the other side of the river Bhimarathi. He carried the puja box on his shoulders and reached the bank of the river. At once, the river Bhimarathi halved and gave way to HH to reach the other side of the river. Swamiji crossed the river with his disciples safely and the river regained its original form. All the disciples were struck with wonder on observing HH's mystic power .

This incident can be compared to the river Yamuna wich gave way to Vasudeva carrying his child Lord Shri Krishna to reach gokula. Shri Raguvarya Teertha travelled all over the country on foot like his guru. When he was in the northern tour, one day Shri Moola Rama appeared in a dream of Swamiji and announced that the god Niruti was going to be born in the village called "Swarnavadi" and that child should be brought up at the Matha who would succeed Shri Raghuvarya Teertha in the pontificate throne of the Matha. At the same time a Brahmin couple at Swarnavadi was yearning for a child being childless for a long time. One day god Niruti appeared in their dream and ordered that they should invite Shri Raguvarya Teertharu and receive the holy prasadam at the hands of swami and that a child would be born to them, that the child should be handed over to the Matha. The couple would also be blessed with other children and they would be happy thereafter in their family life. Some time later, Smt. Gangabai, the wife of the Zamindar conceived. Shri Swamiji was informed accordingly. He returend to the village expecting the birth of the child. A big gold plate was sent to the Zamindar's house from the Matha with a direction to receive the child directly in the golden plate without allowing the child to touch the earth. Accordingly the child was received in the golden palte and brought to the Matha where the child was washed with the Abhishekha water. The personality and the face of the child was beautiful like a moon. He was named after Shri Ramachandra by his Holiness and brought up at the Matha itself and was fed only with the Abhishekha milk of the Vyasa Kurma Saligram of the Matha. When Shri Ramachandra became a boy of seven years he had his Upanayana performed at the Matha and the very next year he was ordained as a sannyasi and named as Shri Raghuttama Teertharu.
Shri Raghuvarya Thirtha's end came near. He appointed an eminent scholar to teach the young sanyasi. He entered Brindavana at Anegundi (Navabrindavana).
How to Visit Navabrindavana?
Navabrindavana is small island situated near Anegundi of Koppal District. Anegundi is 20 KM away from Gangavathi. From Anegundi one needs to cross River Tungabhadra by boat to reach Navabrindavana. Navabrindavana is situated in the river Tungabhadra. Another way to approach Navabrindavana is Via Hampi. Hampi is 12 KM way from Hospet of Bellary District. In Hampi , again we have to cross river Tungabhadra to reach Navabrindavana.
Contact DetailsShri Anandcharya Joshi Post : Anegundi 583246 Taluk : Gangavati District : Koppal Phone no: 08533-267562/9449253155******

Once on his tour, he visited a village called Manipura near Bhimarathi River, which was under the control of a mlecha ruler. The king's army started attacking the swAmIji and his group. He ran with the rAma dEvara pUjA box on his shoulders and reached the banks of the river. All of a sudden, Bhimarathi river gave way to the SwAmIji to reach the other side of the river. Swamiji crossed the river along with his disciples safely, to the surprise of one and all.

Once on his tour shri raghuvarya tIrtharu visited a village named Swarnavata which was in the control of a Nizam. The Zamindar of the Village, shri Subbabatta with his wife Gangabai, requested the swamiji for a “Bhiksha” in their house, which the swamiji refused as they were childless. The couple requested the swamiji repeatedly to accept their request, upon which the swamiji blessed them with a child with a condition that the child to be handed over to the maTa. Swamiji did rAma dEvara pUje and gave anugraha sahita mantrAkshate to the couple.

Gangabai delivered a male child, for which Swamiji sent a gold plate to the Zamindar’s house from the maTa, to receive the child directly in the golden plate without touching the earth. The child went on to become shri raghUtamar tIrtharu, the great “bhAvadIpikAchAryaru”.

shri raghuvarya tIrtha varada gOvindA gOvindA... 

shri krishNArpaNamastu...
***********



ರಘುವರ್ಯ ತೀರ್ಥರ ಆರಾಧನೆ

ಒಮ್ಮೆ ರಘುವರ್ಯ ತೀರ್ಥರು ಸಂಚಾರದಲ್ಲಿದ್ದಾಗ ಸ್ವರ್ಣವಾಠಿ ಎಂಬ ಗ್ರಾಮಕ್ಕೆ ಬಂದಾಗ ಒಬ್ಬ ದಂಪತಿಗಳು ಭಿಕ್ಷೆಗೆ ಆಹ್ವಾನಿಸುತ್ತಾರೆ. ನಿಮಗೆ ಮುಂದೆ ಜನಿಸುವ ಮಗುವನ್ನು ನಮ್ಮ ಮಠಕ್ಕೆ ಕೊಡುವುದಾದಲ್ಲಿ ಭಿಕ್ಷೆಗೆ ಆಗಮಿಸುತ್ತೇವೆ ,ಎಂದರು ಗುರುಗಳು. ಮಕ್ಕಳಿಲ್ಲದ ಆ ದಂಪತಿಗಳಿಗೆ ಮುಂದೆ ಹುಟ್ಟಿದ ಈ ಮಗುವನ್ನು ಶ್ರೀ ಮಠಕ್ಕೆ ಒಪ್ಪಿಸುತ್ತಾರೆ.ದೇವರಿಗೆ ಅಭಿಷೇಕ ಮಾಡಿದ ಹಾಲಿನಿಂದಲೇ ಬೆಳೆದ ಈ ಮಗುವಿಗೆ ರಾಮಾಚಾರ್ಯರೆಂಬ ಹೆಸರಿಟ್ಟು ಶ್ರೀ ಮಠದಲ್ಲಿ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ ಮಾಡುತ್ತಾರೆ. ಕ್ರಿ.ಶ. 1556ರಲ್ಲಿ ಪರಮ ಪೂಜ್ಯ ಶ್ರೀ ರಘುವರ್ಯ ತೀರ್ಥರಿಂದ ತಮ್ಮ 8ನೇ ವಯಸ್ಸಿನಲ್ಲೇ ಆಶ್ರಮ ಸ್ವೀಕರಿಸಿ ಶ್ರೀ ರಘುಪತಿ ತೀರ್ಥರು,ಶ್ರೀ ವೇದವ್ಯಾಸ ತೀರ್ಥರು,ಶ್ರೀ ವೇದೇಶ ತೀರ್ಥರು,ತರಂಗಣಿ ರಾಮಾಚಾರ್ಯರು, ರೊಟ್ಟಿ ವೆಂಕಟಾದ್ರಿ ಭಟ್ಟರು,ಶ್ರೀ ಆನಂದ ಭಟ್ಟಾರರು ಮುಂತಾದ ಅನೇಕಾನೇಕ ವಿದ್ವನ್ಮಣಿಗಳನ್ನು ಮಾಧ್ವ ಪ್ರಪಂಚಕ್ಕೆ ನೀಡಿದ ಮಹಾನುಭಾವರೇ ಭಾವಭೋದಕಾರರೆಂದು ಪ್ರಸಿದ್ಧರಾದ ರಘೂತ್ತಮ ತೀರ್ಥರು. 

ಶ್ರೀ ರಘುವರ್ಯ ತೀರ್ಥರು ಒಮ್ಮೆ ಸಂಚಾರದಲ್ಲಿ ಮಣಿಪುರ ಎಂಬ ಗ್ರಾಮಕ್ಕೆ ಬಂದರು ಅಲ್ಲಿ ಭಿಮರತಿ  ನದಿ ಹರಿಯುತ್ತಿತ್ತು. ನದಿಯನ್ನು ದಾಟಬೇಕೆಂದಾಗ ನದಿ ಪ್ರವಾಹದಿಂದ ಕೂಡಿತ್ತು.  ಆಗ ಶ್ರೀ ರಘುವರ್ಯ ತೀರ್ಥರು ತಮ್ಮ ಹೆಗಲಮೇಲೆ ಶ್ರೀ ಮೂಲರಾಮದೇವರ ಪೆಟ್ಟಿಗೆಯನ್ನು ಇಟ್ಟುಕೊಂಡು ನದಿಯ ಬಳಿ ಬಂದರು ಎಲ್ಲರಿಗು ಆಶರ್ಯವಾಗುವಂತೆ ಭಿಮರಥಿ ನದಿಯು ಬೇರೆಯ ದಡಕ್ಕೆ ಹೋಗುವಂತೆ  ದಾರಿಕೊಟ್ಟಿತು. ವಸುದೇವನು ಶ್ರೀಕೃಷ್ಣನನ್ನು ಶಿರದ ಮೇಲೆ ಹೊತ್ತು ಯಮುನೆಯ ಬಳಿ ಹೋದಾಗ ಯಮುನೆ ದಾರಿ ಬಿಟ್ಟಂತೆ ಶ್ರೀ ರಘುವರ್ಯ ತೀರ್ಥರಿಗೆ   ಭಿಮರಥಿ ನದಿಯು ದಾರಿ ಬಿಟ್ಟಿತು.  ಅಲ್ಲಿ ವಸುದೇವನು ಸಾಕ್ಷಾತ್ ಪರಮಾತ್ಮನನ್ನು ಹೊತ್ತಿದ್ದ ಇಲ್ಲಿ ಶ್ರೀ ಮೂಲರಾಮದೇವರನ್ನು ಹೊತ್ತಿದ್ದರು.

ಮಹಾಪ್ರವಾಹಿನೀ ಭೀಮಾ ಯಸ್ಯ ಮಾರ್ಗಮದಾನ್ಮುದಾ |

ರಘುವರ್ಯೋ ಮುದಂ ದದ್ಯಾತ್ಕಾಮಿತಾರ್ಥಪ್ರದಾಯಕಃ ||
**********

ಶ್ರೀ ಸ್ವರ್ಣವರ್ಣ ತೀರ್ಥ ಗುರುಭ್ಯೋ ನಮಃ 
ಶ್ರೀ ರಘುವರ್ಯ ತೀರ್ಥ ಗುರುಭ್ಯೋ ನಮಃ.

ಇಂದು ಮಹಾನುಭಾವರಾದ ಶ್ರೀ ಸ್ವರ್ಣವರ್ಣ ತೀರ್ಥರ ಮಧ್ಯಾರಾಧನೆ,  
ಶ್ರೀ ರಘುವರ್ಯ ತೀರ್ಥರ ಉತ್ತರಾರಾಧನೆಯ ಪರ್ವಕಾಲ. 
ಇಬ್ಬರ ಮಹಿಮೆಗಳೂ ಅನೇಕ, ಮಾಡಿದ ದೊಡ್ಡ ಅನುಗ್ರಹ ಅಂದ್ರೆ 
ಇಬ್ಬರೂ ಮಹಾನುಭಾವರು  ತಮ್ಮ ಶಿಷ್ಯರನ್ನು ನಮ್ಮ ಸಮಾಜಕ್ಕೆ, ಇಡೀ ಜಗತ್ತಿಗೆ ದೊಡ್ಡ ಉಪಕಾರವನ್ನು ಮಾಡಿದವರು. 
ಶ್ರೀ ಸ್ವರ್ಣವರ್ಣ ತೀರ್ಥರು.
ಅತ್ಯಂತ ಅನ್ವರ್ಥಕ ಹೆಸರು.

ತೀರ್ಥ ಅಂದ್ರೆ ಶಾಸ್ತ್ರ,  ಅದರಲ್ಲಿಯ ಪ್ರತಿ ವರ್ಣಗಳು ಪರಮಾತ್ಮನ ಉತ್ಕೃಷ್ಟತೆಯನ್ನು ಹೇಳುತ್ತವೆ ಆದ್ದರಿಂದ ಅವು ಸು=ಶೋಭನ ವರ್ಣಗಳು. ಅಂಥಾ ಸು ವರ್ಣ ಉಳ್ಳ ತೀರ್ಥ -ಶಾಸ್ತ್ರಗಳಲ್ಲಿ ರತರು, ಅನುಷ್ಠಾನ ಸಂಪನ್ನರು ಆದ್ದರಿಂದ ಶ್ರೀ ಸ್ವರ್ಣವರ್ಣ  ತೀರ್ಥರು ಅಂತ ಅನ್ವರ್ಥಕ ಹೆಸರು. 
ಇನ್ನೂ ಒಂದು ರೀತಿಯಿಂದಲೂ ಅನ್ವರ್ಥಕ ಹೆಸರು. ಯಾಕೆ ಅಂದ್ರೆ ನಮ್ಮ ಇತಿಹಾಸವನ್ನು ಸ್ವರ್ಣ ವರ್ಣ -ಸ್ವರ್ಣ ಅಕ್ಷರಗಳಲ್ಲಿ ಬರೆದಿಡುವಂಥ ಯುಗನಿರ್ಮಾಪಕರಾದ ಶ್ರೀ ಶ್ರೀಪಾದರಾಜರನ್ನು  ಕೊಟ್ಟವರು. 
ಶ್ರೀ ಶ್ರೀಪಾದರಾಜರ ಮಹಿಮೆ ಜಗಜ್ಜನಿತ. ಅವರ ದೊಡ್ಡ legacy ಅಂದ್ರೆ ಶ್ರೀ ಮದ್ವ್ಯಾಸರಾಜರಂಥ ಶಕಪುರುಷರನ್ನು -ವಿದ್ವತ್ ಚಕ್ರವರ್ತಿ ಗಳನ್ನು ತಯಾರು ಮಾಡಿದ್ದು. ಶ್ರೀ ವ್ಯಾಸರಾಜರು ಮುಂದೆ ಸ್ವತಃ ದಾಸಸಾಹಿತ್ಯಕ್ಕೆ ವಿಶೇಷವಾಗಿ ಪ್ರವರ್ತಕರು, ವ್ಯಾಸ ಸಾಹಿತ್ಯ ಅಂತೂ ಸರಿಯೇ ಸರಿ. ಶ್ರೀ ವ್ಯಾಸರಾಜರು ಶ್ರೀಮದ್ವಾದಿರಾಜ ಮಹಾಗುರುಗಳಿಗೆ, ಶ್ರೀ ವಿಜಯೀಂದ್ರ ತೀರ್ಥರೇ ಮೊದಲಾದವರಿಗೆ ಪಾಠ ಹೇಳಿದರು. ಶ್ರೀ ವಾದಿರಾಜ ಮಹಾಗುರುಗಳ ಒಂದು legacy ಪ್ರತ್ಯೇಕ,  ಈ ಕಡೆ ಶ್ರೀ ವಿಜಯೀಂದ್ರ ತೀರ್ಥರಿಂದ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ತನಕ ಇನ್ನೊಂದು ಭವ್ಯ ಜ್ಞಾನ ಪರಂಪರೆ.  
ಹೆಚ್ಚು ಕಡಿಮೆ 150- 200 ವರ್ಷದ ಆ ಕಾಲದಲ್ಲಿ ಈ ಎಲ್ಲಾ ಮಹಾನುಭಾವ ಯತಿಗಳೂ ಬಂದು ಹೋದರು,  ಶ್ರೀ ಪುರಂದರ ದಾಸರು etc ದಾಸ ಶ್ರೇಷ್ಠರು ಬಂದು ಹೋದರು.  ಒಂದು ಅರ್ಥದಲ್ಲಿ ಈ ಸುವರ್ಣ ಯುಗ,  ಸ್ವರ್ಣ ವರ್ಣಗಳಲ್ಲಿ ಬರೆದು ಇಡಬೇಕಾದ ಈ ಯುಗ/ಕಾಲ,  ಇದು ಪ್ರಾರಂಭ ಆಗಿದ್ದು  ಶ್ರೀ ಶ್ರೀಪಾದರಾಜರಿಂದ. ಇಂಥಾ ಶ್ರೀಪಾದರಾಜರನ್ನು ಇಡೀ ಜಗತ್ತಿಗೆ ಕೊಟ್ಟ ಕೀರ್ತಿ -ಶ್ರೇಯಸ್ಸು -ಆ ಮಹಿಮೆ ಶ್ರೀ ಸ್ವರ್ಣವರ್ಣ ತೀರ್ಥರದ್ದು.

 ಇನ್ನು ಶ್ರೀ ರಘುವರ್ಯ ತೀರ್ಥರು.  ಮಹಾ ತಪಸ್ವಿಗಳು.

ಅವರ ಸ್ತೋತ್ರದಲ್ಲಿ ಹೇಳಿದಂತೆ ಮಹಾ ಪ್ರವಾಹಿನೀ ಭೀಮಾ ಯಸ್ಯ ಮಾರ್ಗೋಮದಾನ್ಮುದಾ,  ಮಹಾ ಪ್ರವಾಹದಲ್ಲಿ ಇದ್ದ ಭೀಮಾ ನದೀ, ರಘುವರ್ಯ =ಶ್ರೀರಾಮ  ದೇವರನ್ನು ಸದಾ ತಮ್ಮ ತಲೆಯ ಒಳಗೆ ಇಟ್ಟುಕೊಂಡು, ಆಗ ತಲೆಯಮೇಲೆಯೂ ಹೊತ್ತುಕೊಂಡು ಬರ್ತಾ ಇದ್ದ ಶ್ರೀ ರಘುವರ್ಯ ತೀರ್ಥರಿಗೆ ಮಾರ್ಗ ಬಿಟ್ಟಿತು ಅಂತ.  ಇಂಥಾ ಮಹಾನುಭಾವರು ಶ್ರೀ ರಘುವರ್ಯ ತೀರ್ಥರು. ಸಂಸಾರ ಸಾಗರವನ್ನೇ ದಾಟಿಸುವ ತೀರ್ಥ -ಶಾಸ್ತ್ರದ ಮಹಿಮೆ ಏನು ಅನ್ನೋದರ ನಿದರ್ಶನ ಈ ಘಟನೆ..
ಶ್ರೀಮದಾಚಾರ್ಯರ ಇಂಥಾ ಶಾಸ್ತ್ರಗಳನ್ನು ಎಲ್ಲಾ ಕಡೆ ದಿಗ್ವಿಜಯ ಮಾಡಲಿಕ್ಕೆ ಈ ಜಗತ್ತಿಗೆ ಶ್ರೀ ರಘೂತ್ತಮ ತೀರ್ಥರಂಥ ಮಹಾನುಭಾವರನ್ನು ನೀಡಿದ ಕೀರ್ತಿ -ಶ್ರೇಯಸ್ಸು ಶ್ರೀ ರಘುವರ್ಯ ತೀರ್ಥರದ್ದು.  ಕೇವಲ ತಮ್ಮ ಅನುಗ್ರಹ -ಸ್ವಪ್ನದಲ್ಲಿ ಬಂದು ನಾಲಿಗೆಯ ಮೇಲೆ ಬೀಜಾಕ್ಷರ ಬರೆದಿದ್ದರ ಫಲವಾಗಿ ಪುಟ್ಟ ಬಾಲಕರಿದ್ದಾಗಲೇ ಶ್ರೀ 
ರಘೂತ್ತಮ ತೀರ್ಥರು ಯಾವ ವಿಶೇಷ ಅಧ್ಯಯನ ಇಲ್ಲದೇ ಶ್ರೀಮನ್ಯಾಯಸುಧಾದಂಥ ಉದ್ಗ್ರಂಥದ ಪಾಠ ಹೇಳುವವರಾದರು ಅಂದ್ರೆ ಶ್ರೀ ರಘುವರ್ಯ ತೀರ್ಥರ ಮಹಿಮೆ, ಗುರು ಪ್ರಸಾದದ ಮಹಿಮೆ ಏನು ಅನ್ನೋದು ಗೊತ್ತಾಗ್ತದೆ.

ಶ್ರೀಪಾದರಾಜರಿಂದ ಯಾವ ರೀತಿ ಸುವರ್ಣ ಯುಗದ ನಿರ್ಮಾಣ ಆದಂತೆ, ಶ್ರೀ ರಘೂತ್ತಮ ತೀರ್ಥರು ಕೂಡಾ ಒಂದು ಸ್ವರ್ಣಯುಗದ ನಿರ್ಮಾತರೇ. 
ಅವರ ಶ್ಲೋಕದಲ್ಲಿ ಹೇಳಿದಂತೆ - 
ಯಚ್ಚಿಷ್ಯಶಿಷ್ಯಶಿಷ್ಯಾದ್ಯಾಷ್ಟಪ್ಪಣ್ಣಾಚಾರ್ಯ ಸಂಜ್ಞಿತಾ:, 
ಅವರ ಶಿಷ್ಯರು -ಪ್ರಶಿಷ್ಯರು ಕೇವಲ ದೊಡ್ಡ ವಿದ್ವಾಂಸರಲ್ಲ,  ಟಿಪ್ಪಣಿಕಾರರು ಅಂತ ಪ್ರಸಿದ್ಧರಾದರು. ಶ್ರೀ ವೇದೇಶ ತೀರ್ಥರು, ಶ್ರೀ ವಿದ್ಯಾಧೀಶ ತೀರ್ಥರು, ಶ್ರೀ ಸತ್ಯವ್ರತ ತೀರ್ಥರು, ಶ್ರೀ ಸತ್ಯನಾಥ ತೀರ್ಥರು etc  ಹೀಗೆ  ಪ್ರತಿ ಒಬ್ಬರೂ ಮಹಾನ್ ಟಿಪ್ಪಣಿಕಾರರು.  ಈ ಕಡೆ ಶ್ರೀ ವೇದೇಶ ತೀರ್ಥರಿಂದ ಶ್ರೀ ಯಾದವಾರ್ಯಾರು, ಶ್ರೀ ಶ್ರೀನಿವಾಸ ತೀರ್ಥರು- ಅವರ ಶಿಷ್ಯರು -ಉಮರ್ಜಿ, ಲಿಂಗೇರಿ, ಕಲ್ಲಾಪುರ etc ಟಿಪ್ಪಣಿಕಾರರ ಪರಂಪರೆ.  ಇಂಥಾ ಒಂದು ಟಿಪ್ಪಣಿಕಾರರ ಸ್ವರ್ಣಯುಗ ನಿರ್ಮಾಣ ಮಾಡಿದವರು ಶ್ರೀ ರಘೂತ್ತಮ ತೀರ್ಥರು,  ಇಂಥಾ ಶ್ರೀ ರಘೂತ್ತಮತೀರ್ಥರನ್ನು ಜಗತ್ತಿಗೆ ಕೊಟ್ಟು ಮಹಾ ಉಪಕಾರ ಮಾಡಿದವರು ಶ್ರೀ ರಘುವರ್ಯ ತೀರ್ಥರು.

ಈ ರೀತಿಯಾಗಿ ಎಂದಿಗೂ ಮರೆಯಲಾರದ -ತೀರಿಸಲಾರದ ಉಪಕಾರವನ್ನು ಇಡೀ ಜಗತ್ತಿನ ಮೇಲೆ ಮಾಡಿದವರು ಶ್ರೀ ಸ್ವರ್ಣವರ್ಣ ತೀರ್ಥರು,   ಹಾಗೂ ಶ್ರೀ ರಘುವರ್ಯ ತೀರ್ಥರು.

ಇಬ್ಬರೂ ಮಹಾನುಭಾವರ ಕೃಪಾ ದೃಷ್ಟಿ ನಮ್ಮ ಮೇಲೆ ಇರ್ಲಿ,  ಅವರ ಕೃಪೆಗೆ ಅರ್ಹರಾಗುವಂತೆ ನಮ್ಮ ಚರ್ಯೆ ಇರ್ಲಿ ಅಂತ ಪ್ರಾರ್ಥಿಸುತ್ತಾ 
ಶ್ರೀ ಸ್ವರ್ಣವರ್ಣ ತೀರ್ಥ ಗುರುಭ್ಯೋ ನಮಃ

ಶ್ರೀ ರಘುವರ್ಯ ತೀರ್ಥ ಗುರುಭ್ಯೋ ನಮಃ.
*****
* ಶ್ರೀ ರಘುವರ್ಯ ತೀರ್ಥರು *
(ನವವೃಂದಾವನ ಸನ್ನಿಧಾನ )

ಇಂದು ನವವೃಂದಾವನ ಸನ್ನಿಧಾನ ಆನೆಗೊಂದಿಯಲ್ಲಿ ವೃಂದಾವನಸ್ಥರಾಗಿರುವ, ಶ್ರೀ ಪದ್ಮನಾಭ ತೀರ್ಥರ, ಶ್ರೀ ವ್ಯಾಸರಾಯರೇ, ಮೊದಲಾದ ಮಾಧ್ವ ಪರಂಪರೆಯ  ದಿಗ್ಗಜರಲ್ಲಿ ನವವೃಂದಾವನಗಳಲ್ಲಿ ಒಬ್ಬರಾದ ಶ್ರೀ ರಘುವರ್ಯ ತೀರ್ಥರ ಆರಾಧನೆ.

ಶ್ರೀ ಭಾವಭೋದಕಾರರೆಂದು ಪ್ರಸಿದ್ಧರಾದ ಶ್ರೀ ರಘೋತ್ತಮ ತೀರ್ಥರನ್ನು ಗುರುತಿಸಿ, ಅವರಲ್ಲಿ ವಿಶೇಷ ಅನುಗ್ರಹ ಮಾಡಿ ಮಾಧ್ವ ಸಮಾಜಕ್ಕೆ ಕಾರಣರಾದವರೇ ನವವೃಂದಾವನ ವಿರಾಜಿತ ಶ್ರೀ ರಘುವರ್ಯರು

ಶ್ರೀ ರಘುವರ್ಯತೀರ್ಥರು
ಮಹಾಪ್ರವಾಹಿನೀ ಭೀಮಾ ಯಸ್ಯ ಮಾರ್ಗಮದಾನ್ಮುದಾ |
ರಘುವರ್ಯೋ ಮುದಂ ದದ್ಯಾತ್ಕಾಮಿತಾರ್ಥಪ್ರದಾಯಕಃ ||
महाप्रवाहिनी भीमा यस्य मार्गमदान्मुदा ।
रघुवर्यो मुदं दद्यात्कामितार्थप्रदायकः ॥

Janma Naama – Sri Ramachandra Shastry
Period – 1502 – 1557
Ashrama Gurugalu – Sri Raghunatha Tirtharu
Ashrama Shishyaru – Sri Raghottama Tirtharu
Aradhana – Jyesta Krishna Triteeya
Vrundavana – Anegondi, Navavrundavana
 

 

ಒಮ್ಮೆ ಸ್ವಾಮಿಗಳು ತಮ್ಮ ಪ್ರಯಾಣದ ವೇಳೆ ಭೀಮರತಿ ನದಿ ಬಳಿಯ ಮ್ಲೇಂಛನ ಆಡಳಿತದ  ಮಣಿಪುರ  ಎಂಬ ಹೆಸರಿನ ಸ್ಥಳಕ್ಕೆ ಭೇಟಿ ಇತ್ತಾಗ ಮೂಲ ರಾಮದೇವರ ಪೆಟ್ಟಿಗೆಯನ್ನು ಸ್ವಯಂ ತಾವೇ ಹೊತ್ತು ನದಿಯ ದಾಟಿದರು.  ಆ ಸಮಯದಲ್ಲಿ ಭೀಮರತಿ.ನದಿ ತನ್ನಷ್ಟಕ್ಕೆ ತಾನೇ ಸ್ವಾಮಿಗಳಿಗೆ ಹೋಗಲು ದಾರಿ ಮಾಡಿಕೊಟ್ಟಿತಂತೆ.

ಹಿಂದೆ ವಸುದೇವ ಕೃಷ್ಣನ ಹೊತ್ತು ಯಮುನೆಯ ದಾಟುವಾಗ ಯಮುನೆಯೇ ದಾರಿ ಕೊಟ್ಟಂತೆ ಇಲ್ಲಿ ರಾಮಚಂದ್ರ ದೇವರ ಹೊತ್ತು ರಘುವರ್ಯರ ಭೀಮರತಿ ದಾರಿ ನೀಡಿತಂತೆ.

Once on his tour, he visited a village called Manipura near Bhimarathi River, which was under the control of a mlecha kingdom. While crossing the Bhimarathi River, he carried the Sri Mularamadevara pooja box on his shoulders and reached the bank of the river. All of a sudden, Bhimarathi river gave way to the Swamiji to reach the other side of the river. Swamiji crossed the river alongwith his disciples safely, to the surprise of one and all.
 

When Vasudeva carried Srikrishna also Yamuna gave way so that he could reach Gokula. At that time Vasudeva, the father of Krishna was carrying Krishna paramathma, here Raghuvarya Tirtharu was carrying Sri Moolaramadevaru.
 
Sri Raghuvarya Tirtharu selected Sri Raghottamaru as his shishya before his birth :
Once on his tour Sri Raghuvarya Teertharu visited a village named Swarnavata which was in the control of a Nizam. The Zaminder of the Village Sri Subbabatta with his wife Gangabai requested the swamiji for a “Bhiksha” in their house, which the swamiji refused as they were childless. The couple requested the swamiji repeatedly to accept their request, upon which the swamiji blessed them with a child with a condition that the child to be handed over to the Mutt. Swamiji did the Moola Ramadevara pooja and gave anugraha sahita mantrakshate to the couple.
 

Gangabai delivered a male child, for which Swamiji sent a gold plate to the Zamindar’s house from the matha, to receive the child directly in the golden place without sparsha of  the earth. Accordingly the child was delivered directly in the golden plate and brought to the Mutt . The child was none other than Sri Raghottama Tirtharu, the great “Bhavadeepika charyaru” of the Uttaramutt.
 
ಶ್ರೀಸತ್ಯಾತ್ಮತೀರ್ಥಕೃತಾ
ಶ್ರೀರಘುವರ್ಯತೀರ್ಥ ಸ್ತುತಿಃ

ರಘುನಾಥಕರಾಬ್ಜೋತ್ಥಂ
ಮೂಲರಾಮಪದಾರ್ಚಕಮ್.
ರಘುವರ್ಯಮಹಂ ವಂದೇ
ದೇವಾರ್ಚಾಭಾಗ್ಯಸಿದ್ಧಯೇ.

ಪೆನಕೊಂಡನಾಮಕೇ ಗ್ರಾಮೇ
ಹನೂಮತ್ಸ್ಥಾಪಕಂ ಮುನಿಂ.
ರಘುವರ್ಯಮಹಂ ವಂದೇ
ಪ್ರಾಣಾರ್ಚಾಭಾಗ್ಯಸಿದ್ಧಯೇ.

ಭೀಮಾನದೀ ದದೌ ಮಾರ್ಗಂ
ಯಸ್ಮೈ ರಾಮಯುತಾಯ ತಮ್ .
ರಘುವರ್ಯಮಹಂ ವಂದೇ
ಭವೋತ್ತಾರಣಸಿದ್ಧಯೇ .

ಸಚ್ಛಾಶ್ತ್ರಂ ಪಾಠಯಂತಂ
ಶ್ರೀರಘೂತ್ತಮಮುನಿಂ ಪ್ರತಿ.
ರಘುವರ್ಯಮಹಂ ವಂದೇ
ಸಚ್ಛಾಸ್ತ್ರಜ್ಙಾನಸಿದ್ಧಯೇ.

ಮಂತ್ರಾಕ್ಷತಪ್ರದಾನೇನ
ಸತ್ಪುತ್ರಪ್ರಾಪಕಂ ಗುರುಮ್.
ರಘುವರ್ಯಮಹಂ ವಂದೇ
ಸಚ್ಛಿಷ್ಯಪ್ರಾಪ್ತಿ ಸಿದ್ಧಯೇ. (ಸತ್ಪುತ್ರಪ್ರಾಪ್ತಿಸಿದ್ಧಯೇ.)

ರಘೂತ್ತಮಮುನೇಃ ಸ್ವಪ್ನೇ
ಉಪದೇಶಪ್ರದಾಯಕಮ್.
ರಘುವರ್ಯಮಹಂ ವಂದೇ
ಹ್ಯಶ್ರುತಜ್ಙಾನಸಿದ್ಧಯೇ.

ರಘೂತ್ತಮಮುನಿದ್ವಾರಾ
ಮಠವೈಭವವರ್ಧಕಮ್.
ರಘುವರ್ಯಮಹಂ ವಂದೇ
ಸದ್ವೈಭವಸುಸಿದ್ಧಯೇ.

ಗಜಗಹ್ವರಗಂ ತುಂಗಭದ್ರಾತೀರವಾಸಿನಮ್.
ರಘುವರ್ಯಮಹಂ ವಂದೇ
ನದೀಸ್ನಾನಸುಸಿದ್ಧಯೇ.

ಪದ್ಮನಾಭಕವೀಂದ್ರಾದಿ-
ಪೂರ್ವೇ ಸಂಸ್ಥಿತಮಾದರಾತ್.
ರಘುವರ್ಯಮಹಂ ವಂದೇ
ಗುರ್ವನುಗ್ರಹಸಿದ್ಧಯೇ.

ಸತ್ಯಾತ್ಮ ರಚಿತಂ ಪದ್ಯದಶಕಂ
ಯಃ ಪಠೇತ್ ಸುಧೀಃ.
ತಸ್ಯೈತಾಃ ಸಿದ್ಧಯಃ ಸರ್ವಾಃ
ಹಸ್ತಗಾ ನಾತ್ರ ಸಂಶಯಃ.

 
ಶ್ರೀ ರಘುವರ್ಯತೀರ್ಥರ ಸ್ಮರಣೆ ಗ್ರಂಥಕಾರರಿಂದ 

ಸಂಬಂಧಪ್ರದೀಪ  ಗ್ರಂಥದಲ್ಲಿ ರಘುವರ್ಯ ಸ್ತುತಿ :

ನಮಾಮಿ ತರ್ಕಾಭಯಬಾಣಚಾಪಪಾಣೀ ಸದಾ ಮಧ್ವಕರಾಭಿಪೂಜ್ಯೌ।
ಶ್ರೀವ್ಯಾಸರಾಮೌ ಜಯಸನ್ಮುನೀಂದ್ರವಂದ್ಯಾವಲಂ ಮದ್ಗುರುಮಾನಸಸ್ಥೌ।।

 

ತಿಥಿತ್ರಯ ನಿರ್ಣಯ  ದಲ್ಲಿ ;

ನತ್ವಾ ಶ್ರೀರಘುವರ್ಯಾಣಾಂ ಪಾದಪದ್ಮಯುಗಂ ತಥಾ।
ಕರಿಷ್ಯೇ ಸುಖಬೋಧಾಯ ತಿಥಿತ್ರಯವಿನಿರ್ಣಯಂ।।
ರಘುವರ್ಯಮುನೀಂದ್ರಾಣಾಂ ಕರಾಬ್ಜೋತ್ಥೇನ ಭಿಕ್ಷುಣಾ।
ರಘೂತ್ತಮೇನ ರಚಿತಸ್ತಿಥಿತ್ರಯವಿನಿರ್ಣಯ:।।


ನ್ಯಾಯವಿವರಣಭಾವಬೋಧ ಗ್ರಂಥದಲ್ಲಿ  ;

ಶ್ರೀಮಧ್ವಶಾಸ್ತ್ರಂ ಸಮುದೀರ್ಯ ಮೇऽಸ್ಮಿನ್ ವಿಶ್ವಾಸಹೇತೋ: ಸಮದರ್ಶಯದ್ ಯ: ।

ಪ್ರದಾನಸೂತ್ರಪ್ರತಿಪಾದ್ಯಮಾದೌ ವಂದೇ ಗುರುಂ ತಂ ರಘುವರ್ಯಸಂಜ್ಞಂ।।

ತತ್ತ್ವಪ್ರಕಾಶಿಕಾಗೂಢಂ ವಿಚಾರ್ಯ ಗುರುಣೋದಿತಂ।
ಸನ್ನ್ಯಾಯವಿವೃತೇರ್ಭಾವಮುದ್ಧರಿಷ್ಯೇ ಯಥಾಮತಿ।।

ಯೋऽಧ್ಯಾಪಯಿತ್ವಾ ವೇದಾಂಶ್ಚ ಮಧ್ವಸಿದ್ಧಾಂತ ಮಾದಿಶತ್।
ನ್ಯಾಸಂ ಪ್ರಾದಾದ್ಧರೇ: ಪ್ರೀತ್ಯೈ ರಘುವರ್ಯಗುರುಂ ಭಜೇ।।

 ಬೃಹದಾರಣ್ಯಕಭಾವಬೋಧ  :

ಬೃಹದಾರಣ್ಯಭಾಷ್ಯಸ್ಯ ವಿವೃತಿರ್ಯಾ ಕೃತಾ ಮಯಾ।
ತಜ್ಜನ್ಯಪುಣ್ಯಮಖಿಲಮವಾಪ್ನೋತು ಗುರುರ್ಮಮ।।

 

ಪ್ರಮೇಯದೀಪಿಕಾಭಾವಬೋಧ

ನತ್ವಾ ಶ್ರೀಶಂ ಮಧ್ವಮುನಿಂ ಜಯಾರ್ಯಂ ಗುರೋರ್ಗುರುಂ ಗುರುಮಪ್ಯಾದರೇಣ।
ಶ್ರೀಮದ್ಗೀತಾಭಾಷ್ಯಟೀಕಾಸುಭಾವಂ ವಕ್ಷ್ಯೇ ಶಕ್ತ್ಯಾ ಗುರುಶಿಕ್ಷಾನುಸಾರಾತ್।।

 

ವಿಷ್ಣುತತ್ವವಿನಿರ್ಣಯಭಾವಬೋಧ 

ನತ್ವಾ ಲಕ್ಷ್ಮ್ಯಾ: ಪತಿಮಾನಂದತೀರ್ಥಂ ತಥಾ ಜಯಾರ್ಯಂ ಪರಮಂ ಗುರುಂ ಚ।
ಗುರುಂ ಚ ಮೇ ಜಯತೀರ್ಥೀಯಭಾವಂ ವಕ್ಷ್ಯೇ ವಿಷ್ಣುಪ್ರೀತಯೇऽಹಂ ಸ್ವಶಕ್ತ್ಯಾ ।।


ತತ್ವಪ್ರಕಾಶಿಕಾಭಾವಬೋಧ  :

ಪ್ರಣಮ್ಯ ಕಲ್ಯಾಣಗುಣಂ ರಮೇಶಮಗಾಧಬೋಧಂ ಜಯಯೋಗಿವರ್ಯಂ।
ಗುರೋರ್ಗುರುಂ ಗುರುಮಾರ್ಯಾಂಶ್ಚ ತತ್ವಪ್ರಕಾಶಿಕಾಭಾವಮಹಂ ಪ್ರವಕ್ಷ್ಯೇ।।

ರಘುವರ್ಯಗುರುಪ್ರೋಕ್ತೋ ಭಾವೋ ಜಯಮುನೇರಿಹ।
ಲಿಖಿತೋ ಮಂದಬೋಧಾರ್ಥಂ ಪ್ರೀಯತಾಂ ಶ್ರಿಪತಿಸ್ತತ:।।

✍🏻ಇವು ಶ್ರೀರಘೂತ್ತಮಸ್ವಾಮಿಗಳು ತಮ್ಮ ಗ್ರಂಥಗಳಲ್ಲಿ ಶ್ರೀರಘುವರ್ಯತೀರ್ಥರ ಬಗ್ಗೆ ನೀಡಿರುವ ಐತಿಹಾಸಿಕವಾದ ಶಾಸ್ತ್ರೀಯವಾದ ಅಪೂರ್ವಮಾಹಿತಿಗಳನ್ನೊಳಗೊಂಡ ಸ್ತೋತ್ರಗಳು.
 

ಜನಾರ್ದನಸೂರಿಗಳು ವಿದ್ಯಾಧೀಶವಿಜಯ  ;

ದುರ್ಜ್ಞೇಯಯೋ: ಸದಸತೋರ್ವಿಪುಲೈಕಪಾತ್ರಸ್ಥಿತ್ಯಾ ವಿವೇಚನವಿಧೌ ಪಯಸೋ: ಪ್ರವೀಣ:।
ಪದ್ಮಾಶ್ರಯೈಕಹೃದಯೋ ಧುತಪಕ್ಷಪಾದಶ್ಚಕ್ರೇ ನ ಕಸ್ಯ ಕುತಕಂ ರಘುವರ್ಯಹಂಸ:।।


ಶ್ರೀಸತ್ಯಾಭಿನವತೀರ್ಥ ವಿರಚಿತ ರಘುವರ್ಯ ಸ್ತೋತ್ರ

ರಘುವರ್ಯಗುರೋ ದೇಹಿ ರಘುವರ್ಯಪದಾರ್ಚನಂ।
ರಘುವರ್ಯಪದಾಸಕ್ತರಘುವರ್ಯಾರ್ಚನಪ್ರದ।।
***
ಶ್ರೀ ರಘುವರ್ಯ ತೀರ್ಥರು  ನವ ವೃಂದಾವನ ಜ್ಯೇಷ್ಠ ಕೃ. ತೃತೀಯಾ  ಮಧುಸೂದನ ಕಲಿಭಟ್ ಬೆಂಗಳೂರು (ಧಾರವಾಡ ) 

ಉತ್ತರಾದಿ ಮಠದ ಕೀರ್ತಿಶೇಷ ರಾದ, ಭಾವ ಭೋದಕಾರರಾದ ಶ್ರೀ ರಘುತ್ತಮ ತೀರ್ಥರ ಗುರುಗಳೇ ಇಂದಿನ ದಿನದ ಕಥಾನಾಯಕರು. ಗುರುಗಳ ಪೂರ್ವಾಶ್ರಮ ಹೆಸರು ರಾಮಚಂದ್ರ ಶಾಸ್ತ್ರಿಗಳು.  ರಘುನಾಥ  ತೀರ್ಥರಿಂದ ರಘುವರ್ಯ ತೀರ್ಥರೆಂದು ಆಶ್ರಮ ಪಡೆದರು.  ರಘುವರ್ಯರು 54ವರ್ಷಗಳ ಕಾಲ ಸಂಸ್ಥಾನ ಆಳಿದರು. ಶ್ರೀ ವ್ಯಾಸ ತೀರ್ಥರು ಮತ್ತು ಗುರುಗಳಾದ ರಘುನಾಥ ತೀರ್ಥರು ಕಾಲರಾದ ನಂತರದಲ್ಲಿ ಮಧ್ವ ಮತದ ಅಭಿವೃದ್ಧಿ ಕಾರ್ಯವು ಶ್ರೀ ವಿಜಯಿಂದ್ರ ತೀರ್ಥರು ಮತ್ತು ರಘುವರ್ಯರ ಮೇಲೆ ಬಿದ್ದಿತು. ಅದ್ವೈತಿಗಳು ತಮ್ಮ ಮತ ಸ್ಥಾಪನೆಗೆ ಪ್ರಯತ್ನ ಪಡುತ್ತಿದ್ದರು. ಇನ್ನೊಂದು ಕಡೆಗೆ ಮುಸ್ಲಿಮ ನವಾಬರ ದಾಳಿ ಅಲ್ಲಲ್ಲಿ ಆಗುತ್ತಾ ಇತ್ತು. ಇಂಥ ಕ್ಲಿಷ್ಟ ಪರಿಸ್ಥಿತಿಯಲ್ಲಿ ರಘುವರ್ಯರ ಧೈರ್ಯ ಹೇಳತೀರದು. ರಾಮದೇವರ ಪೆಟ್ಟಿಗೆಯನ್ನು ಹೆಗಲಿಗೆ ಹಾಕಿಕೊಂಡು ನಡೆದುಕೊಂಡು ಹೋಗಬೇಕು. ಈಗಿನಂತೆ ವಾಹನ ಸೌಕರ್ಯ ಇರಲಿಲ್ಲ.
ಹೀಗಿರಲಾಗಿ ರಘುವರ್ಯರು ಗುರುಗಳು ಸ್ಥಾಪಿಸಿದ ಮಣ್ಣೂರು ವಿದ್ಯಾಪೀಠದಲ್ಲಿ. ಇದ್ದರೂ. ಆಗ ರಾಯಚೂರು ನವಾಬನು ಮಠದ ಆಸ್ತಿ, ಬೆಳ್ಳಿ ಬಂಗಾರ ಲೂಟಿ ಮಾಡಲು ಪ್ರಯತ್ನಿಸಿದನು. ಸನ್ಯಾಸಿಗಳಾಗಿ ತಮ್ಮ ರಕ್ಷಣೆಯೊಂದಿಗೆ ಮಠದ ಸಿಬ್ಬಂದಿಯನ್ನು ರಕ್ಷಿಸಿಕೊಳ್ಳುವ ಹೊಣೆ ಗುರುಗಳಿಗೆ ಇತ್ತು. ಒಂದು ಮಳೆಗಾಲದಲ್ಲಿ ನವಾಬನ ಸೈನ್ಯ ಮಠಕ್ಕೆ ಮುತ್ತಿಗೆ ಹಾಕುವದು ಎಂಬುದನ್ನು ತಿಳಿದು ರಘುವರ್ಯರು ದೇವರ ಪೆಟ್ಟಿಗೆ ತೆಗೆದುಕೊಂಡು ಶಿಷ್ಯರೊಡನೆ ಭೀಮಾ ತೀರಕ್ಕೆ ಬಂದು ನದಿ ದಾಟಿ ಹೋಗಲು ನಿರ್ಧರಿಸಿದರು. ಭೀಮೆ ಗುರುಗಳಿಗೆ ಮೊಣಕಾಲು ವರೆಗೆ ನೀರು ಬರುವಂತೆಬ್ದಾರಿ ಮಾಡಿಕೊಟ್ಟು ಎಲ್ಲರನ್ನೂ ದಾಟಿಸಿ ಆಪತ್ತಿನಿಂದ ಪಾರು ಮಾಡಿದಳು. ಹಿಂದಿನಿಂದ ಬಂದ ನವಾಬನ ಸೈನಿಕರನ್ನು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದಳು. ಶ್ರೀ ರಾಮಚಂದ್ರ ಎಲ್ಲರನ್ನು ಆಪತ್ತಿನಿಂದ ಪಾರು ಮಾಡಿದನು. ಈ ಘಟನೆಯನ್ನು ಗುರುಗಳ ಚರಮ ಶ್ಲೋಕದಲ್ಲಿ ಅಡಗಿಸಿದ್ದಾರೆ.

.ರಘುವರ್ಯರಿಗೆ ತಮ್ಮ ಅವಸಾನ  ಕಾಲ ಸಮೀಪಿಸಿದೆ ಎಂದು ತಿಳಿದು  ತುಂಗಭದ್ರಾ ತೀರದಲ್ಲಿ ಒಂದು ದಿನ ಮಧ್ವ ಮತ ಹೇಗೆ ಎತ್ತಿ ಮೇಲೆ ತರಬೇಕೆಂದು ವಿಚಾರಿಸುತ್ತಾ ಮಲಗಿದರು. ಆಗ ಸ್ವಪ್ನದಲ್ಲಿ ಆಚಾರ್ಯ ಮಧ್ವರು ಕಾಣಿಸಿಕೊಂಡು ವತ್ಸಾ, ಚಿಂತಿಸಬೇಡ ಸ್ವರ್ಣವಾಟ  ಊರಲ್ಲಿ ನಿಮ್ಮ ಪೂರ್ವಾಶ್ರಮದ ತಂಗಿ ಮತ್ತು ಭಾವ ಸುಬ್ಬಭಟ್ಟರು ವೃತನಿಯಮ ಮಾಡಿಕೊಂಡು ಇರುವರು ಅವರಲ್ಲಿ ಜನಿಸುವ ಮಗ ಮುಂದಿನ ಪೀಠಾದಿಪತಿ. ನೀವು ಅವರಿಗೆ ಆಶೀರ್ವಾದ ಮಾಡಿ ರಿ. ಎಂದು ಹೇಳಿದರು. ಗುರುಗಳು ಸ್ವರ್ಣವಾಟ ಊರಿಗೆ ಬಂದು ತಂಗಿಗೆ ಆಶೀರ್ವಾದ ಮಾಡಿ ಜನಿಸಿದ ಮಗುವನ್ನು ಮಠಕ್ಕೆ ಪಡೆದರು. ಬಾಲಕನಿಗೆ ರಾಮಚಂದ್ರವೆಂದು ಹೆಸರು ಇಟ್ಟರು. ಮಧ್ವರ ಆದೇಶ ದಂತೆ ಆಗಿದ್ದರಿಂದ ಮಧ್ವ ಅಷ್ಟಕ ರಚಿಸಿ ಅರ್ಪಿಸಿದರೂ.ರಾಮಚಂದ್ರ ಗೆ ಆರು ವರ್ಷ ಆದಾಗ ಉಪನಯನ ಮಾಡಿಸಿ ಆಶ್ರಮ ನೀಡಿ ರಘುತ್ತಮ ತೀರ್ಥ ರೆಂದು ಕರೆದರು. ನೂತನ ಪೀಠಾಧಿಪತಿಗಳಿಗೆ ಈಗ ದೇವರ ಪೆಟ್ಟಿಗೆ ಹೆಗಲ ಮೇಲೆ ಹೊತ್ತು ಒಯ್ಯುವ ಕಾಲ.  ನೀವು ಮತವನ್ನು ಸುಧಾರಿಸಿ ದೇವರನ್ನು ಮಂಟಪದಲ್ಲಿ ಇಟ್ಟು ಪೂಜೆ ಮಾಡುವ ವ್ಯವಸ್ಥೆ ಮಾಡಿರಿ.  ಹಿತಶತ್ರು ಗಳಿಂದ ದೂರವಿದ್ದು ಸಂಸ್ಥಾನದ ಕೀರ್ತಿ ಮುಗಿಲು ಮುಟ್ಟುವಂತೆ ಮಾಡಿರೆಂದು ಆಶೀರ್ವಾದ ಮಾಡಿದರು.  ನೂತನ ಯತಿಗಳಿಗೆ  ಪಾಠ ಹೇಳಲು ಮಣ್ಣೂರಿನ ಆದ್ಯ ಮನೆತನದ ಘನ ಪಂಡಿತರಾದ ವರದಾಚಾರ್ಯರಿಗೆ ಹೇಳಿ ಸಂಸ್ಥಾನದ ಪಾಠ ಶಾಸ್ತ್ರ ಸಂಸ್ಕೃತಿ ಅಭಿವೃದ್ಧಿ ನೋಡಿಕೊಳ್ಳಲು ಆಜ್ಞೆ ಮಾಡಿ ಜ್ಯೇಷ್ಠ ಶುಕ್ಲ ಪಕ್ಷ ತದಿಗೆ ದಿನ  ಆನೆಗೊಂದಿ ಹತ್ತಿರ ತುಂಗಭದ್ರಾ ನದಿಯ ನವವೃಂದಾವನ  ದ್ವೀಪದಲ್ಲಿ ಹರಿಧ್ಯಾನ ಪರರಾದರು.  ಗುರುಗಳ ಅಂತರ್ಯಾಮಿ ಭಾ. ಮು. ಅಂ. ಹಯಗ್ರೀವದೇವರು ಎಲ್ಲರಿಗೂ ಜ್ಞಾನ ವೈರಾಗ್ಯ ಭಕ್ತಿ ಕೊಟ್ಟು ಕಾಪಾಡಲೆಂದು ಬೇಡಿಕೊಳ್ಳುವೆ.
*******

ರಘುವರ್ಯತೀರ್ಥರ ಸ್ಮರಣೆ🌹🌹

ಪೂರ್ವಾಶ್ರಮದ ನಾಮ ರಾಮಚಂದ್ರಶಾಸ್ತ್ರಿಎಂದೆನುತ
ಪ್ರಚಾರ ಕಾಲದಲ್ಲಿ ಬಹಳ ಆಸಕ್ತಿಯ ಪೊಂದುತ್ತ||ಪಲ್ಲ||

ಸಂಚಾರಮಾರ್ಗದಿ ಮುಂದೆ  ಮಣಪುರ ಗ್ರಾಮಸೇರಿ
 ಮ್ಲೇಚ್ಛ ರಾಜನಿರಲು  ಮತ್ತೆ ಮುಂದೆ ಸಾಗಿ||೧||



 ಮೂಲರಾಮನ ಪೆಟ್ಟಿಗೆ ಭುಜದ ಮೇಲೆ ಇರಿಸಿ
ನದಿಯ ದಾಟುತಿರಲು ಭೀಮರತಿಯು ದಾರಿಯ ಬಿಡಲು||೨||



 ಸ್ವರ್ಣಾವಳಿ ಗ್ರಾಮದಲ್ಲಿ ಸುಬ್ಬಾಭಟ್ಟ ದಂಪತಿಗಳಿಗೆ 
 ಮಗುವು ಆಗುವ ಸೂಚನೆ ತಿಳಿಸಿ ಮಠಕ್ಕೆ ಕೊಡಬೇಕಂತ
ಹೇಳಿ||೩||



 ಪ್ರಸವದ ಸಮಯದಲ್ಲಿ ಬಂಗಾರು ತಟ್ಟೆಯ ಕಳಿಸಿ
 ಕುಶಲದಿ ಮಗುವನೆ ತರಿಸಿ ಕೂರ್ಮಾಭಿಷೇಕದ ಹಾಲು ಕುಡಿಸಿ||೪||



 ನಾಮಕರಣ ಮಾಡಿ ರಾಮಚಂದ್ರನೆಂದುಯುಕ್ತ
ವಯಸುಬರಲು ಉಪನಯನ ಕಾರ್ಯ ಮಾಡಿ||೫||



 ಸರ್ವಮೂಲ ಗ್ರಂಥಗಳ ಪಾಠ ಪ್ರವಚನ ಮಾಡಿ
ತುರೀಯಾಶ್ರಮವಿತ್ತು"ರಘೋತ್ತಮತೀರ್ಥ" ರೆಂದು ಕರೆದು||೬||



 ಪಿಂಗಳನಾಮ ಸಂವತ್ಸರ ದ ಜ್ಯೇಷ್ಟ  ಬಹುಳ  ತದಿಗಿ
ಮಧ್ವೇಶಕೃಷ್ಣನ  ಪಾದ ಸೇರಿದರು ಬಹು ತ್ವರದಿ||೭||

~~ಹರೇ ಶ್ರೀನಿವಾಸ
*****
ಶ್ರೀ ರಘುವರ್ಯ ತೀರ್ಥರು 

|| ಮಹಾಪ್ರವಾಹಿನೀ ಭೀಮಾ ಯಸ್ಯ ಮಾರ್ಗಮದಾನ್ಮುದಾ |
 ರಘುವರ್ಯೋ ಮುದಂ ದದ್ಯಾತ್ಕಾಮಿತಾರ್ಥಪ್ರದಾಯಕಃ ||

ಉತ್ತರಾಧಿಮಠದ ಯತಿಪರಂಪರೆಯಲ್ಲಿ ಬರುವ ಮಹಾಸಾದ್ವಿಗಳು, ಶ್ರೀ ಮೂಲರಾಮಚಂದ್ರ ದೇವರ ಪರಮಭಕ್ತರು, ಶ್ರೀಮದಾಚಾರ್ಯರಿಂದ 12 ನೇ ಯತಿಗಳಾದವರು.  ಕೇವಲ ಕಾಲ್ನಡಿಯ್ಗೆಯಲ್ಲಿ ಭಾರತದಲ್ಲಿ ಸಂಚಾರಮಾಡಿ ಮಧ್ವಮತವನ್ನು ಪ್ರಚಾರಮಾಡಿದವರು, ರಘುನಾಥ ತೀರ್ಥರಂತಹ ಮಹಾನ್ ಜ್ಞಾನಿಗಳಿಗೆ ಶಿಷ್ಯರು  ಮತ್ತು  ನಮಗೆ ಬೇಡಿದ್ದನ್ನು ನೀಡುವ ಕಲಿಯುಗದ ಕಾಮಧೇನು ಚಿಂತಾಮಣಿಗಳಾದ "ಶ್ರೀ ರಘೋತ್ತಮ ತೀರ್ಥ" ರನ್ನು ಕೊಟ್ಟಂತಹ ಮಹನೀಯರು. ಶ್ರೀ ರಘೋತ್ತಮರ ತೀರ್ಥರ ಗುರುಗಳು.  ಇವರ ಸಮಕಾಲೀನರು " ಶ್ರೀ ವ್ಯಾಸರಾಜರು ತೀರ್ಥರು ".

ಪೂರ್ವಾಶ್ರಮ ನಾಮ : ಶ್ರೀ ರಾಮಚಂದ್ರ ಚಾರ್ಯ 
ಆಶ್ರಮಗುರುಗಳು : ಶ್ರೀ ರಘುನಾಥ ತೀರ್ಥರು
ಆಶ್ರಮ ಶಿಷ್ಯರು : ಶ್ರೀ ರಘೋತ್ತಮ ತೀರ್ಥರು
ಆಶ್ರಮ ಸ್ಥಳ : ಆನೆಗುಂದಿ ಗಜಗಹ್ವರ- ನವಬೃಂದಾವನ ಕ್ಷೇತ್ರ
ಆರಾಧನಾ ದಿನ : ಜೇಷ್ಠ ಕೃಷ್ಣ ತೃತೀಯ
ವೇದಾಂತ ಸಾಮ್ರಾಜ್ಯ ಆಳ್ವಿಕೆ ಕಾಲ : 1502 ರಿಂದ 1557
 
ಇವರ ಪೂರ್ವಾಶ್ರಮದ ಬಗ್ಗೆ ನಮಗೆ ಹೆಚ್ಚು ಮಾಹಿತಿ ಸಿಗುವುದಿಲ್ಲ. ನಮಗೆ ಇತಿಹಾಸದಲ್ಲಿ  ಎಲ್ಲರು ನೆನಪಿಡುವಂತಹ ಅವರ ಜೀವನವೇ ನಮಗೆ ಆದರ್ಶ, ಗುರುಭಕ್ತಿ.  ಸುಮಾರು ಮುನ್ನೂರಕ್ಕೂ ಹೆಚ್ಚು ಯತಿಶಿಷ್ಯರನ್ನು ಹೊಂದಿದ್ದ ರಘುನಾಥ ತೀರ್ಥರ ಶಿಷ್ಯರು. ಪ್ರಖಾಂಡ ಪಂಡಿತರು. "ಗುರುಪ್ರಸಾದೋ ಬಲವಾನ್" ಎಂಬಂತ್ತೆ, ಶ್ರೀ ರಘೋತ್ತಮ ತೀರ್ಥರು ತಮ್ಮ ಗ್ರಂಥಗಳಲ್ಲಿ ಶ್ರೀ ರಘುವರ್ಯ ತೀರ್ಥರ ಕರಕಮಲಾ ಸಂಜಾತರು, ಭಾವಬೋಧ ಗ್ರಂಥವನ್ನು ಬರೆಯುವ ಸಾಮರ್ಥ್ಯ ನಮ್ಮಲ್ಲಿ ಬರಬೇಕಾದರೆ ಅದು ಶ್ರೀ ರಘುವರ್ಯ ತೀರ್ಥರ ಪರಮಾನುಗ್ರಹ ಎಂದು ತಮ್ಮ ವಾಕ್ಯಗಳಲ್ಲೇ ತಿಳಿಸಿದ್ದಾರೆ ಎಂದರೆ, ಇವರ ವ್ಯಕ್ತಿತ್ವ ಊಹಾತೀತಾ.

ಶ್ರೀ ಸತ್ಯಾಭಿನವ ತೀರ್ಥರು ರಚಿಸಿದ " ಗುರುಚರಿತ್ರೆ " ಮತ್ತು " ಶ್ರೀಸತ್ಯನಿಧಿವಿಲಾಸ " ಎಂಬ ಗ್ರಂಥಗಳಲ್ಲಿ ಬರುವ ವಿಷಯ.

ಒಮ್ಮೆ ದೇವಾತಾರ್ಚನೆ ಮಾಡಬೇಕು ಎಂದು ರಘುವರ್ಯರು ಸಿದ್ದಾರಾಗಿದ್ದರೆ, ಭೀಮಾನದಿತೀರದಲ್ಲಿ, ಅಲ್ಲಿನ ಮ್ಲೇಚ್ಛ ರಾಜ ತುರುಷ್ಕ ರಾಜ ಸೈನ್ಯ ಬಂದು ಆಕ್ರಮಣ ಮಾಡಲು ಪ್ರಯತ್ನಿಸಿದರು. ತಕ್ಷಣ ಶ್ರೀ ರಘುವರ್ಯ ತೀರ್ಥರು ಶ್ರೀ ರಾಮದೇವರ ಪೆಟ್ಟಿಗೆಯನ್ನು ಹೊತ್ತಿಕೊಂಡು, ಭೋರ್ಗರೆತ್ತಿರುವ ಪ್ರವಾಹ  ಭೀಮಾನದಿಯಲ್ಲಿ, ಪ್ರವೇಶ ಮಾಡಿದರು. ಹಿಂದೆ ವಾಸುದೇವ ಹೇಗೆ ಶ್ರೀಕೃಷ್ಣ ಪರಮಾತ್ಮನನ್ನ ತಲೆಯಲ್ಲಿ ಇಟ್ಟುಕೊಂಡು ಯಮುನೆಯನ್ನು ದಾಟಿದನೋ, ಹಾಗೆ ಆಕೃಷ್ಣನೇ ಈ ಮೂಲರಾಮನಾದಕಾರಣ ತಲೆಯಲ್ಲಿ ಪೆಟ್ಟಿಗೆ ಇಟ್ಟುಕೊಂಡು ನೀರಿಗೆ ಧುಮುಕೆ ಬಿಟ್ಟರು, ಹಿಂದೆ ಸೈನ್ಯ ಇವರನ್ನು ಹಿಂಬಾಲಿಸಿ ಕೊಂಡು ಬರುತ್ತಿದೆ, ಆದರೆ ಇವರಿಗೆ ರಾಮದೇವರನ್ನು ಹೇಗಾದರೂ ಜೋಪಾನ ಮಾಡಬೇಕು ಎಂಬ ಮನಸ್ಸಿನ ಧ್ಯೇಯದಿಂದ ಭೀಮೆಯಲ್ಲಿ ಇಳಿದಾಗ, ಪ್ರವಾಹವಿದ್ದ ಭೀಮೆ ಶಾಂತಳಾಗಿ ಇವರಿಗೆ ಒಬ್ಬ ಮನುಷ್ಯ ಹೋಗುವಷ್ಟು ದಾರಿಕೊಟ್ಟು ಇಬ್ಬಾಗವಾಗಿ ಹೋದಳು. ರಾಮನಾಮಜಪ ಮಾಡುತ್ತಾ, ಆಕಡೆಯ ದಡವನ್ನು ದಾಟಿದರು, ಮತ್ತೆ ಇನ್ನು ಹೆಚ್ಚಿನ ಪ್ರವಾಹ ನದಿಯಲ್ಲಿ ಉಂಟಾಗಿ ಯಾವ ಮ್ಲೇಚ್ಛ ರಾಜನ ಸೈನಿಕರು ನೀರನ್ನು ಸ್ಪರ್ಶ ಮಾಡದಂತೆ ಆಯಿತು.  ನಂತರ ಮುಂದೆ ರಾಮಚಂದ್ರ ದೇವರ ಪೂಜೆಯಾಯಿತು.

ರಘುವರ್ಯತೀರ್ಥರ ಪರಮಾನುಗ್ರಹದಿಂದ ಶ್ರೀಮಠದಲ್ಲೇ ಭೂಸ್ಪರ್ಶವಿಲ್ಲದೆ  ಬಂಗಾರದ ಹರಿವಾಣದಲ್ಲೇ ಜನಿಸಿದ ಮಹನೀಯರು ಶ್ರೀ ರಘೋತ್ತಮ ತೀರ್ಥರು. ಕೂರ್ಮಸಾಲಿಗ್ರಾಮಕ್ಕೆ ಅಭಿಷೇಕ ಮಾಡಿದ ಹಾಲಿನಿಂದಲೇ ಮಗುವಿನ ಬೆಳವಣಿಗೆ. ದಶಪ್ರಕರಣಗಳ ಪಾಠವನ್ನು ತಾವೇ ಹೇಳಿ, ಎಂಟನೇ ವಯಸ್ಸಿಗೆ ಆಶ್ರಮವನ್ನು ಕೊಟ್ಟು "ಶ್ರೀ ರಘೋತ್ತಮ ತೀರ್ಥ"ಎಂದು ನಾಮಕರಣ ಮಾಡಿದರು.  ವೃಂದಾವನ ಪ್ರವೇಶ ಮಾಡುವ ಸಮಯದಲ್ಲಿ ಆದ್ಯವರದಾಚಾರ್ಯರಲ್ಲಿ ಶ್ರೀ ರಘೋತ್ತಮರಿಗೆ ಹೆಚ್ಚಿನ ಅಧ್ಯಯನ ಮಾಡಲು ಹೇಳಿ, ಆನೆಗುಂದಿಯ ಗಜಗಹ್ವರ ಇಂದಿನ ನವಾವೃಂದಾವನ ಜೇಷ್ಠ ಬಹುಳ ತೃತೀಯದಂದು ವೃಂದಾವನ್ಸ್ಟಾ ರಾದರು. ಮುಂದೆ ಆದ್ಯವರದಾಚಾರ್ಯರು ಶ್ರೀ ಮಠಕ್ಕೆ ಗೌರವ ನೀಡದೆ ಇದ್ದಾಗ ಸ್ವತಹ  ಶ್ರೀ ರಘೋತ್ತಮ ತೀರ್ಥರಲ್ಲಿ ನಿಂತು ಅವರಿಂದ " ಶ್ರೀಭಾವಬೋದ " ಗ್ರಂಥಗಳನ್ನು ರಚಿಸಿದವರು, ಶ್ರೀ ರಘುವರ್ಯ ತೀರ್ಥರು. 

ಹೀಗೆ ರಘುವರ್ಯ ತೀರ್ಥರ ಮಹಿಮೆ ಅಪಾರ,ಅವರ ಸ್ಮರಣೆ ಮಾಡುತ್ತಾ ನಮ್ಮೆಲ್ಲರಿಗೂ ಜ್ಞಾನ ಭಕ್ತಿ ಯತಾಶಕ್ತಿ ದಯಪಾಲಿಸಲಿ ಎಂದು ಗುರುಗಳಲ್ಲಿ ನಮಸ್ಕರಿಸೋಣ

 ಪ್ರೀತೋಸ್ತು ಕೃಷ್ಣ ಪ್ರಭೋ 
 ಫಣೀಂದ್ರ ಕೆ
***
ಶ್ರೀ ರಘುತ್ತಮತೀರ್ಥ ಗುರುಭ್ಯೋ ನಮಃ 


ಒಮ್ಮೆ ಶ್ರೀ ರಘುವರ್ಯತೀರ್ಥರು ಸಂಚಾರದಲ್ಲಿದ್ದಾಗ, ಸ್ವರ್ಣವಾಟೀ ಎಂಬ ಗ್ರಾಮಕ್ಕೆ ಬಂದಾಗ ಒಬ್ಬ ದಂಪತಿಗಳು ತಮಗೆ ಭಿಕ್ಷೆ ನೀಡಲು ಆಹ್ವಾನಿಸಿದಾಗ ಶ್ರೀ ರಘುವರ್ಯರು ಅವರನ್ನು “ಮುಂದೆ ಜನಿಸುವ ನಿಮ್ಮ ಮಗನನ್ನು ನಮ್ಮ ಮಠಕ್ಕೆ ನೀಡಬೇಕು” ಎಂದು ಕೇಳಿದಾಗ ಮಕ್ಕಳಿಲ್ಲದ ಆ ದಂಪತಿಗಳು ಒಪ್ಪುತ್ತಾರೆ.   ಅದರಂತೆ ಆ ದಂಪತಿಗಳು ಹುಟ್ಟಿದ ಗಂಡು ಮಗುವನ್ನು ಶ್ರೀ ಮಠಕ್ಕೆ ಒಪ್ಪಿಸುತ್ತಾರೆ.  ಶ್ರೀ ಮಠದ ಅಭಿಷೇಕದ ಹಾಲಿನಿಂದಲೇ ಬೆಳೆದ ಮಗುವಿಗೆ ರಾಮಾಚಾರ್ಯನೆಂಬ ಹೆಸರನ್ನಿಟ್ಟು ತಮ್ಮ ಶ್ರೀ ಮಠದಲ್ಲೇ ಅವನ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ ಮಾಡುತ್ತಾರೆ.  

ಪರಮಪೂಜ್ಯ ಶ್ರೀ ರಘುವರ್ಯತೀರ್ಥರಿಂದ ತಮ್ಮ ಎಂಟನೇ ವಯಸ್ಸಿನಲ್ಲೇ ಆಶ್ರಮ ಸ್ವೀಕರಿಸಿ ಸುಮಾರು ೩೮ ವರ್ಷಕಾಲ ಪೀಠಾಧಿಪತ್ಯದಲ್ಲಿದ್ದು ಶ್ರೀ ರಘುಪತಿ ತೀರ್ಥರು, ಶ್ರೀ ವೇದವ್ಯಾಸತೀರ್ಥರು, ಶ್ರೀ ವೇದೇಶ ತೀರ್ಥರು, ತರಂಗಿಣಿ ರಾಮಾಚಾರ್ಯರು, ರೊಟ್ಟಿ ವೆಂಕಟಾದ್ರಿಭಟ್ಟರು, ಶ್ರೀ ಆನಂದ ಭಟ್ಟಾರಕರು ಮುಂತಾದ ಹಲವಾರು ವಿದ್ವನ್ಮಣಿಗಳನ್ನು ಮಧ್ವ ಶಾಸ್ತ್ರಕ್ಕೆ ನೀಡಿದ ಮಹಾನುಭಾವರೇ “ಭಾವಭೋಧಕಾರ”ರೆಂದು ಪ್ರಖ್ಯಾತರಾದ
ಶ್ರೀ ಉತ್ತರಾದಿಮಠಕ್ಕೆ ಭಾವಭೋಧಕರು ಯಾರ ಶಿಷ್ಯ, ಪ್ರಶಿಷ್ಯರೇ ಮೊದಲಾದವರೂ ಕೂಡ ಟಿಪ್ಪಣ್ಣಾಚಾರ್ಯರೆಂದು ಪ್ರಸಿದ್ಧರಾಗಿದ್ದಾರೋ, ಅಂತಹ ಮಹಾ ಮಹಿಮರಾದ “ಭಾವಭೋಧ” ಟಿಪ್ಪಣಿಗಳನ್ನು ರಚಿಸಿರುವ ಶ್ರೀ ರಘುತ್ತಮತೀರ್ಥ ಶ್ರೀಪಾದಂಗಳವರನ್ನು ನಿಡಿದ ಶ್ರೀ ರಘುವರ್ಯತೀರ್ಥರ ಪ್ರೀತಿಯ ಶಿಷ್ಯರು.. ಶ್ರೀ ರಘುವರ್ಯತೀರ್ಥ ಸ್ವಾಮಿ ಶ್ರೀಪಾದ ಗುರುಭ್ಯೋ ನಮಃ 
***

No comments:

Post a Comment