Friday, 10 May 2019

satyapoorna teertharu kolpur satyapurna 1726 matha uttaradi mutt yati 22 jyeshta bahula dwiteeya ಸತ್ಯಪೂರ್ಣ ತೀರ್ಥರು








info from sumadhwaseva.com--->

Sri Satyapoorna Tirtha Period 1706 – 1726


सत्याभिनवदुग्दाब्धॆः संजातः सकलेष्टदः ।





श्रीसत्यपूर्णतीर्थॆंदुः संतापान् हंतु संततम् ॥
satyabhinavadugdaabdhE: sanjaata: sakalEshTada:|
shrIsatyapoornatIrthEndu: santaapaan hantu santatam|
ಸತ್ಯಾಭಿನವದುಗ್ದಾಬ್ಧೆಃ ಸಂಜಾತಃ ಸಕಲೇಷ್ಟದಃ |
ಶ್ರೀಸತ್ಯಪೂರ್ಣತೀರ್ಥೆಂದುಃ ಸಂತಾಪಾನ್ ಹಂತು ಸಂತತಮ್ ||
Janma Name   :  Krishnacharya
Ashrama Gurugalu : Sri Satyabhinava Tirtharu
Ashrama Shishyaru: Sri Satyapriya Tirtharu
Sri Satyavijaya Tirtharu
Vrundavana Pravesha – Jyesta Krishna Dwiteeya
Vrundavana – Kolpur  (Mahboob Nagar District, AP)
ASHRAMA GURUGALU –    SRI SATYABHINAVA THIRTHARU
ASHRAMA SHISHYARU – SRI SATYAPRIYA THIRTHARU and
SRI SATYA VIJAYA THIRTHARU
Initially shri satyapUrNa tIrtharu had given sanyAsa to shri satyapriya tIrtharu and asked him to do tatva prachArA in the north. When shri satyapUrNa tIrtharu fell ill, shri satyapriya tIrtharu had not returned from his sanchArA. So, shri satyapUrNa tIrtharu gave sanyAsA to another person by name balachArya and named him shri satyavijaya tIrtharu. He requested him to handover the samsthAna to shri satyapriya tIrtharu once he returned. shri satyapriya tIrtharu, later exchanged danDa in front of satyavijaya tIrtharu and continued the uttarAdhi maTa paramparE.


Vrundavana @ KOLPUR

18 KM FROM MAKTAL

(BETWEEN HYDERABAD-RAICHUR ROAD)

MAHABUBNAGAR  DISTRICT (A.P.)

CONTACT ADDRESS ::
Sri Prahladachar Hunsagi
Uttaradi Math,
7-4-45, Gajgarpeth, Raichur – 584 101
Phone: 08532 – 241248
mobile no of archaka at kolpur 09912229605

Take a deviation at gudeballur, if u r going from raichur this place comes after shakti nagar. after crossing river krishna

***********
info from madhwamrutha.org--->


Sri Satyapoorna Theertha was a great scholar. He is the saint who climbed Tirupati hills with his favorite disciple garlapad Ramacharya reciting ‘Nyayasudha’.  Later he ordained him subsequently as Satyavarya Theertha for his scholarship and gave him anusamsthana and sent him for tour. Sri Satyapoorna Theertha shown many miracles during his life time, one such was a poor Brahmin by name Krishna became minister in Nawab kingdom. He built mutts in places like kanchi, Srimushnam etc. As his end came he searched for Satyavarya Theertha to handover the samsthana but could not trace him. Then he gave Ashrama to one Pandurangi Balachar and named him Satyavijaya Theertha and instructed him to handover Peeta to Satyavarya Theertha after his return.

After handing over Peeta to Satyavijaya Theertha he entered Vrundavana at Kollapura in Mehaboobnagar district of united Telangana.

Source: Uttaradhi mutt sampradaya paddathi, Guru Parampare by Krishna Kolhar Kulkarni, and other sources etc.

***********

satyapUrNa tIrtharu and kAnchi:

------------------------------------------------------
satyapUrNa tIrtharu in his extensive tour of many holy places visited kAnchipuram. On seeing Lord Varadaraja swami, he felt deep devotion and offered Him a golden “padaka”. To this day it exists in the temple and is called “satyapUrNa padaka”.

In kAnchi, he came across a poor Brahmin called Krishnaji Panth, who presented a silver pedestal lamp to swAmIji during pAda pUjA. SwAmIji blessed him and he became a Minister in the court of Arcot Nawab.
There is a mrithikA brindAvana of satyapUrNa tIrtharu in kanchi. This maTa also houses the mrithika brindAvana of rAyarU. 

shri satyapUrNa tIrtha gurvAntargata, bhArathiramaNa mukhyaprANantargata, siTA patE shri digvijaya rAma dEvara pAdAravindakke gOvindA gOvindA...

shri krishNArpaNamastu...
Shri satyapUrNa tIrthara mUla brindAvanA at Kolpur...

Vrundavana @ KOLPUR

18 KM FROM MAKTAL

(BETWEEN HYDERABAD-RAICHUR ROAD)

MAHABUBNAGAR  DISTRICT (A.P.
Kolpur  is 18 KM away from Maktal.  Maktal is situated in between Raichur – Hyderabad

*******

info from uttaradimutt.org---> Shri Satyapoorna Teertharu was the pontiff of Shri Uttaradi Matha. He was formerly known as Shri Krishnacharya. He was initiated to sanyasa and then ordained to Shri Uttaradi Matha by Shri Satyabhinava Teertha.
During his period he donated a lot of wealth, ornaments to many of the temples all around the country for their development. Even today, we can find diamond and gold necklaces being offered to the respective deities of the temples which were given by Shri Satyapoorna Teertha, Gaya is one such example.
Shri Satyapoorna Teertharu ordained Sanyasa to Shri Satyapriya Teertharu. Once Shri Satyapoorna Teertharu fell ill. At that time Shri Satyapriya Teertharu was on tour for propagation of Dvaitha Philsophy and could not come. Shri Satyapoorna Teertharu ordained sanyasa to Shri Satyavijaya Teertharu . Shri Satyapoorna Teertharu entered Brindavana near the bank of the river Krishna in Kolpur on Parabhava samvatsara Jyesta Krishna Dvitiya.
 How to visit Kolpur?
Kolpur comes under Mahabubnagar District. It is 18 KM away from Maktal. Maktal is situated in between Raichur - Hyderabad
|| Shri Krishnarpnamstu ||
Contact Details
CONTACT ADDRESS (year 2009)
Sri Prahladachar Hunsagi
Uttaradi Math,
7-4-45, Gajgarpeth, Raichur – 584 101
Phone: 08532 – 241248
Take a deviation at gudeballur, if u r going from raichur this place comes after shakti nagar. after crossing river krishna.

Sri Prahladachar Hunsagi Uttaradi Math, 7-4-45, Gajgarpeth, Raichur - 584 101 Phone: 08532 - 241248/9618099607 mobile no of archaka at kolpur 09912229605*******
One of the miracles happened in his pUrvAshrama at the aramane of Tanjavur King. An idol of shri krishNa where krishNa was having his ears closed turned into krishNa playing flute on hearing the bhAgavatha pravachana from shri kolhApUr krishNAcharya. He requested the king to give him that idol, to which the king agreed.After accepting sanyAsa, he was once attacked by a gang of bandits. The bandits were surprised to see people on horses guarding the wealth. They were none other than lord Rama, Lakshmana appearing in that form and scaring the bandits.Initially shri satyapUrNa tIrtharu had given sanyAsa to shri satyapriya tIrtharu and asked him to do tatva prachArA in the north. When shri satyapUrNa tIrtharu fell ill, shri satyapriya tIrtharu had not returned from his sanchArA. So, shri satyapUrNa tIrtharu gave sanyAsA to another person by name balachArya and named him shri satyavijaya tIrtharu. He requested him to handover the samsthAna to shri satyapriya tIrtharu once he returned. shri satyapriya tIrtharu, later exchanged danDa in front of satyavijaya tIrtharu and continued the uttarAdhi maTa parampare.  satyapUrNa tIrtharu and kAnchi:---------------------------------------------------satyapUrNa tIrtharu in his extensive tour of many holy places visited kAnchipuram. On seeing Lord Varadaraja swami, he felt deep devotion and offered Him a golden “padaka”. To this day it exists in the temple and is called “satyapUrNa padaka”.  In kAnchi, he came across a poor Brahmin called Krishnaji Panth, who presented a silver pedestal lamp to swAmIji during pAda pUjA. SwAmIji blessed him and he became a Minister in the court of Arcot Nawab. There is a mrithikA brindAvana of satyapUrNa tIrtharu in kanchi.shri satyapUrNa tIrtha varada gOvindA gOvindA... *****ಶ್ರೀ ಸತ್ಯಪೂರ್ಣ ತೀರ್ಥರು - by ಫಣೀಂದ್ರ
|| ಸತ್ಯಾಭಿನವದುಗ್ದಾಬ್ಧೆಃ ಸಂಜಾತಃ ಸಕಲೇಷ್ಟದಃ |  ಶ್ರೀಸತ್ಯಪೂರ್ಣತೀರ್ಥೆಂದುಃ ಸಂತಾಪಾನ್ ಹಂತು ಸಂತತಮ್ ||
ಶ್ರೀ ಉತ್ತರಾಧಿಮಠದ ಯತಿಪರಂಪರೆಯಲ್ಲಿ ಬರುವ ಮಹಾತಪಸ್ವಿಗಳು ಶ್ರೀಮದಾಚಾರ್ಯರಿಂದ 21 ನೇ ಯತಿಗಳಾಗಿ ವೇದಾಂತ ಸಾಮ್ರಾಜ್ಯ ಸುಮಾರು 20 ವರ್ಷವನ್ನು ಆಳಿದ ಮಹನೀಯರು ಶ್ರೀ ಸತ್ಯಪೂರ್ಣ ತೀರ್ಥರು. ಶ್ರೀಸತ್ಯಪೂರ್ಣ ತೀರ್ಥರ ಕೈಯಿಂದ ತೆಗೆದುಕೊಂಡ ಮಂತ್ರಾಕ್ಷತೆ ಎಂದಿಗೂ ಫಲಸಿದ್ಧಿಸಿಲ್ಲ ಎಂಬ ಮಾತೇಕೇಳಿಲ್ಲ. ಅವರ ಮಂತ್ರಾಕ್ಷತೆ ಮಹತ್ವ ಅಂತಹದು.
ಪೂರ್ವಾಶ್ರಮ ನಾಮ - ಶ್ರೀ ಕೃಷ್ಣಾಚಾರ್ಯರು (ವ್ಯಾಸ ಕೇಶವಚಾರ್ಯರು)ಆಶ್ರಮ ಗುರುಗಳು - ಶ್ರೀ ಸತ್ಯಾಭಿನವ ತೀರ್ಥರುಆಶ್ರಮ ಶಿಷ್ಯರು - ಶ್ರೀ ಸತ್ಯವಿಜಯ ತೀರ್ಥರು ಮತ್ತು ಶ್ರೀ ಸತ್ಯವರ್ಯ ತೀರ್ಥರು ( ಶ್ರೀ ಸತ್ಯಪ್ರಿಯ ತೀರ್ಥರು)ಆರಾಧನಾ ದಿನ : ಜೇಷ್ಠ ಬಹುಳ ದ್ವೀತಿಯಬೃಂದಾವನ ಸ್ಥಳ : ಕೋಲಾಪುರ (ಮಟ್ಕಲ್ ಮೆಹಬೂಬ್ನಗರ್)ವೇದಾಂತ ಸಾಮ್ರಾಜ್ಯ ಕಾಲ - 1706 ರಿಂದ 1726
ಶ್ರೀಸತ್ಯಪೂರ್ಣ ತೀರ್ಥರ ವೇದಾಂತ ಸಾಮ್ರಾಜ್ಯಕಾಲದಲ್ಲಾದ ಕೆಲವು ವಿಶೇಷ ಘಟನೆಗಳನ್ನು ನಾವು " ಸತ್ಯವಿಜಯ ತೀರ್ಥ ಅಣುವಿಜಯ " ಎಂಬ ಕೃತಿಯಿಂದ ತೆಗೆದು ಕೊಂಡಿದ್ದೇನೆ.  ಪದ್ಯ ಸಂಖ್ಯೆ 1 ರಿಂದ 25 ರವರೆಗೆ ಶ್ರೀ ಸತ್ಯಪೂರ್ಣ ತೀರ್ಥರ ಮಹಿಮೆಗಳನ್ನೂ ನೋಡಬಹುದು. ಶ್ರೀ ಸತ್ಯಪೂರ್ಣ ತೀರ್ಥರ ಚರಿತ್ರೆಯಲ್ಲಿ ಬರುವ ಪ್ರತಿಯೊಂದು ಘಟನೆಗಳಿಗೂ ಪೂರಕವಾದ ದಾಖಲೆಗಳು, ಶಿಲಾಶಾಸನಗಳು ಇವೆ ಇಂದಿಗೂ ಇದೆ ಎಂದರೆ ಅವರ ಮಹಿಮೆ ಎಂತಹದು ಊಹಿಸಲು ಅಸಾಧ್ಯ.
 ಪೂರ್ವಾಶ್ರಮದಲ್ಲೇ ಶ್ರೀ ಕೃಷ್ಣನ ವಿಗ್ರಹ ಪ್ರಾಪ್ತಿ 
ಶ್ರೀ ಸತ್ಯಪೂರ್ಣ ತೀರ್ಥರು ಪೂರ್ವಾಶ್ರಮದಲ್ಲೇ ಪ್ರಖಾಂಡ ಪಂಡಿತರಾಗಿದ್ದರು. ಕೊಲ್ಹಾಪುರ ಕೃಷ್ಣಾಚಾರ್ಯರು ಎಂದು ಪ್ರಸಿದ್ದಿ ಪಡೆದಿದ್ದರು. ಒಮ್ಮೆ ತಂಜಾವೂರಿನ ಮಹಾರಾಜ ಅಲ್ಲಿ ಒಂದು ಧರ್ಮಸಭೆಯನ್ನು ಏರ್ಪಡಿಸಿದ್ದನು. ಅಲ್ಲಿ ಒಬ್ಬ ಅದ್ವೈತ ಪಂಡಿತನೊಬ್ಬ ಶ್ರೀಮದ್ಭಾಗವತ ಶಿವಪರವಾಗಿದೆ,ಪರಮಾತ್ಮ ನಿರ್ಗುಣ ನಿರಾಕಾರ  ಎಂದು ಹೇಳಿ ಭಾಗವತ ಶ್ಲೋಕಗಳನ್ನು ವ್ಯಾಖ್ಯಾನಿಸುತ್ತಿದ್ದನು. ಅಲ್ಲಿ ಆಸ್ಥಾನದಲ್ಲಿ ಇಟ್ಟಿದ್ದ ಕೃಷ್ಣನ ಪ್ರತಿಮೆಯೊಂದು ಎರಡು  ಕಿವಿಯನ್ನು ಮುಚ್ಚಿಕೊಂಡಂತಿತ್ತು. ಕಾರಣ ವಿಷ್ಣುಸರ್ವೋತ್ತಮತ್ವ ಸಾಧಕವಾದ ಗ್ರಂಥಕ್ಕೆ ತಪ್ಪು ವ್ಯಾಖ್ಯಾನ ಮಾಡಲು ಕೃಷ್ಣನ ವಿಗ್ರಹ ಕಿವಿಮುಚ್ಚಿಕೊಂಡಿದೆ. ಇದನ್ನು ನೋಡಿದ ರಾಜ ಯಾಕೆ ಹೀಗಾಗಿದೆ ಎಂದು ಅಲ್ಲಿದ್ದ ಪಂಡಿತರನ್ನು ಕೇಳಲು, ಯಾರು ಉತ್ತರಿಸಲು ಹೋಗಲಿಲ್ಲ. ಅದೇ ಸಭೆಯಲ್ಲಿ ಶ್ರೀ ಕೃಷ್ಣಾಚಾರ್ಯರು ಇದ್ದರು. ಇವರಿಗೆ ಮೊದಲಿನಿಂದಲೇ ಆ ಭಾಗವತಕ್ಕೆ ಮಾಡಿದ ತಪ್ಪು ವ್ಯಾಖ್ಯಾನ ಮಾಡಿದ್ದನ್ನು ನೋಡಿ ಉದ್ವೇಗ ಮತ್ತು ಬೇಸರ ಎರಡು ಆಗಿತ್ತು. ತಂಜಾವೂರಿನ ಮಹಾರಾಜ ಇಲ್ಲಿ ಯಾರಾದರೂ ಉತ್ತಮ ಪಂಡಿತರು ವ್ಯಾಖ್ಯಾನ ಮಾಡುವರಿದ್ದಾರೆ ವೇದಿಕೆಗೆ ಬನ್ನಿ ಎನ್ನಲು, ತಕ್ಷಣ ಶ್ರೀಕೃಷ್ಣಾಚಾರ್ಯರು ವೇದಿಕೆ ಹತ್ತಿ ರಾಜರಿಗೆ ನಾನು ಮುಂದಿನ ವ್ಯಾಖ್ಯಾನ ಮಾಡುತ್ತೇನೆ ಎಂದರು. ತಂಜಾವೂರಿನ ರಾಜ ಇವರ ಬಗ್ಗೆ ಮೊದಲೇ ಕೇಳಿದ್ದ. ಕೃಷ್ಣಾಚಾರ್ಯರಿಗೆ ಅಪ್ಪಣೆ ಕೊಟ್ಟು ನೀವು ಈ ಭಾಗವತ ವ್ಯಾಖ್ಯಾನವನ್ನು ಮುಂದುವರೆಸಿ ಎನ್ನಲು. ಕೃಷ್ಣಚಾರ್ಯರು ತಾವು " ಸತ್ಯಾಭಿನವ ತೀರ್ಥರ ಕರುಣಾ ಬಲದಿಂದ ವೇದವ್ಯಾಸರು ಬರೆದ ಭಾಗವತ ಮತ್ತು ಶ್ರೀಮದಾಚಾರ್ಯರ ತಾತ್ಪರ್ಯನಿರ್ಣಯವನ್ನು ವ್ಯಾಖ್ಯಾನಿಸಲು ಶುರುಮಾಡಿದರು.
ಆ ಸಭೆಯಲ್ಲಿಯಿದ್ದ ಎಲ್ಲ ಪಂಡಿತರು ತನ್ಮಯರಾಗಿ ಕೃಷ್ಣಾಚಾರ್ಯರ ಪ್ರವಚನ ಕೇಳುತ್ತ ಮೈಮರೆತರು. ಎರಡುದಿನದಲ್ಲಿ ಶ್ರೀ ಕೃಷ್ಣನ ಪ್ರತಿಮೆಯಲ್ಲಿ ಕಿವಿ ಮುಚ್ಚಿದ್ದ ಕೈ ದಶಮಸ್ಕಂದ ವ್ಯಾಖ್ಯಾನದ ಹೊತ್ತಿಗೆ ಕೈ ತೆಗೆಯಿತು. ಆಸಮಯದಲ್ಲಿ ಶ್ರೀಕೃಷ್ಣನ ಅವತಾರ ಸಮಯವೆಂಬಂತೆ ಘಂಟೆಗಳು ಜಾಗಟೆಗಳು ತಾವಾಗಿಯೇ ನಾದ ಝೇಂಕಾರಮಾಡಲು ಪ್ರಾರಂಭಿಸದವು.
" ಕರ್ಣದಮೇಲಿನ ಕೈ ತೆಗೆದ ಕೈವಲ್ಯನಾಗಿ  ಭೋಮ್ ಭೋಮ್ ದ್ವೈತಝೇಂಕಾರ ಮೊಳಗಿತು ಜಯಘಂಟೆಗಳು  ಬಾರಿಸದವು ರಾಜಸಭೆಯಲಿ, ಅಗ್ರ ಪೂಜೆಗೈದುರಾಜ  ಕೊಟ್ಟನು ಪುರಸ್ಕಾರವಾಗಿ  ಶ್ರೀ ಕೃಷ್ಣ ಪ್ರತಿಮೆಯ ನಿವರಿಗೆ" 
ಹೀಗೆ ರಾಜ ಆಶ್ಚರ್ಯ ಪಟ್ಟು ಇವರಿಗೆ ರಾಜಸಭೆಯಲ್ಲಿ ಅಗ್ರಪೂಜೆ ಮಾಡಿ ಆ ಶ್ರೀಕೃಷ್ಣನ ಪ್ರತಿಮೆಯನ್ನೇ ಪುರಸ್ಕಾರವಾಗಿ ಕೊಟ್ಟನು.  ಮುಂದೆ ಶ್ರೀ ಕೃಷ್ಣಾಚಾರ್ಯರು ಆ ವಿಗ್ರಹವನ್ನು ತಮ್ಮ ಗುರುಗಳಾದ ಶ್ರೀ ಸತ್ಯಾಭಿನವ ತೀರ್ಥರಿಗೆ ಕಂಚಿಯಲ್ಲಿ ಕೊಟ್ಟರು. ಇಂದಿಗೂ ಉತ್ತರಾಧಿ ಮಠದಲ್ಲಿ ಜೈ ಜೈಕಾರಗೊಳ್ಳುತ್ತ ಪೂಜೆಗೊಳ್ಳುತ್ತಿದೆ. ಬೆಂಗಳೂರಿನ ಉತ್ತರಾಧಿಮಠದಲ್ಲಿ ಪೂಜೆಗೊಳ್ಳುತ್ತಿದೆ. ಈ ಪ್ರತಿಮೆಯ ಪ್ರತಿಕೃತಿ ಕಂಚಿ ಉತ್ತರಾಧಿಮಠದಲ್ಲಿ ಕಲ್ಲಿನಲ್ಲಿ ಕೆತ್ತಿಸಿದ್ದಾರೆ.
 ಕೃಷ್ಣಾಚಾರ್ಯರು ಶ್ರೀ ಸತ್ಯಪೂರ್ಣ ತೀರ್ಥರಾಗಿದ್ದು 
ಶ್ರೀ ಸತ್ಯಾಭಿನವ ತೀರ್ಥರು ಇವರ ಪೂರ್ಣವಾದ ವರ್ಚಸ್ಸನ್ನು ಕಂಡು " ವ್ಯಯ "ನಾಮ ಸಂವತ್ಸರ, ಜೇಷ್ಠ ಶುದ್ಧ ಚತುರ್ದಶಿಯ೦ದು   ಇವರಿಗೆ ಆಶ್ರಮವನ್ನು ಕೊಟ್ಟು " ಶ್ರೀಸತ್ಯಪೂರ್ಣ ತೀರ್ಥರು " ಎಂದು ನಾಮಕರಣ ಮಾಡಿದರು. ಸತ್ಯಾಭಿನವ ತೀರ್ಥರು ನಾಚರಗುಡಿಯಲ್ಲಿ  ಹರಿಪಾದಸೇರಿದ ಬಳಿಕ ವೈಭವದಿಂದ ಮಹಾಸಮಾರಾಧನೆ ಮಾಡಿದರು. ಅಲ್ಲಿಂದ ಮಧ್ವಮತ ಪ್ರಚಾರಮಾಡುತ್ತಾ, ತಮ್ಮ ಭಕ್ತರಿಗೆ ಶ್ರೀಮನ್ನ್ಯಾಸುಧಾ ಸುಧೆಯ ಉಣಿಸುತ್ತ, ಕರಾಳ ಮಾಯಿಗಳಿಗೆ ಸಿಂಹಸ್ವಪ್ನರಾಗಿದ್ದರು ಶ್ರೀ ಸತ್ಯಪೂರ್ಣ ತೀರ್ಥರು. ಇವರ ಕಾಲದಲ್ಲಿ ಶ್ರೀ ಸತ್ಯಾಭಿನವ ತೀರ್ಥರಂತೆ ವೈಭವವನ್ನು ಮತ್ತೊಮ್ಮೆ ಬೆಳಗಿಸುತ್ತಿದ್ದರು,  ವಿದ್ವತ್ಸಾರ್ವಭೌಮರು. ಆಗಿನ ಕಾಲದಲ್ಲಿದ್ದ ಚೋರರು, ಆಂಗ್ಲ ಅಧಿಕಾರಿಗಳ ಮನಪರಿವರ್ತನೆ ಮಾಡಿದವರು. ಆಧ್ಯಾತ್ಮ  ಜಾಗೃತಿ ಮಾಡಿಸಿದ ಮಹನೀಯರು.  
ಶ್ರೀಸತ್ಯಪೂರ್ಣ ತೀರ್ಥರು ತಿರುಪತಿಯ ಶ್ರೀನಿವಾಸನ್ನು ಸಂದರ್ಶಿಸಿ ಅಲ್ಲಿಂದ ಗೋಧಾವರಿ ಸ್ನಾನಕ್ಕೆ ತೆರಳುತ್ತಿದ್ದಾರೆ, ಮಾರ್ಗಮಧ್ಯದಲ್ಲಿ ಒಂದು ಗ್ರಾಮ ಅಲ್ಲಿ ಶ್ರೀಮಠದ ಒಬ್ಬ ಶಿಷ್ಯನ ಮನೆಯಲ್ಲಿ ಸಂಸ್ಥಾನ  ಪೂಜೆ ನೆರವೇರಿಸಬೇಕು ಎಂಬ ಪ್ರಾರ್ಥನೆಗೆ ಓಗೊಟ್ಟು ಅವನ ಮನೆಯಲಿ ಶ್ರೀಮೂಲರಾಮಚಂದ್ರ ದೇವರ ಪೂಜೆ ಏರ್ಪಾಡಾಗಿತ್ತು.  ಅಲ್ಲಿನ ಒಬ್ಬ ಮ್ಲೇಚ್ಛರಾಜ ಶ್ರೀಮಠದ ವೈಭವವನ್ನು ಕಂಡು ಅದನ್ನು ದೋಚಬೇಕು ಎಂದು ಹವಣಿಸುತ್ತಿದ್ದ. ಇತ್ತ ಭಕ್ತನ ಮನೆಯಲ್ಲಿ ವೈಭವದ ರಾಮದೇವರ ಪೂಜೆ, ಭಿಕ್ಷೆ,  ಅನ್ನಸಂತರ್ಪಣೆ ಮೊದಲಾದ ಕಾರ್ಯಕ್ರಮಗಳು ಜರುಗಿತು. ಶ್ರೀಗಳು ಎಲ್ಲರಿಗು ಮಂತ್ರಾಕ್ಷತೆಕೊಟ್ಟು ಮುಂದೆ ಪ್ರಯಾಣ ಮಾಡುತ್ತಿದ್ದರು. ಆ ಮ್ಲೇಚ್ಛರಾಜ ಮಾರ್ಗಮಧ್ಯದಲ್ಲಿ ಇವರ ಸಂಪತ್ತನ್ನು ದರೋಡೆ ಮಾಡಲು ಸಜ್ಜಾಗಿದ್ದ, ಶ್ರೀ ಸತ್ಯಪೂರ್ಣ ತೀರ್ಥರು ಮೇಣೆ ಯಲ್ಲಿ ಕುಳಿತು ಹೋಗುತ್ತಿದ್ದಾರೆ,  ಆ ಕಳ್ಳರು ಕಾಯುತ್ತಿದ್ದರು,  ಮಹಾಸ್ವಾಮಿಗಳು ಒಮ್ಮೆ ತಮ್ಮ ಮುಖವನ್ನು ಹೊರಗಡೆ ಹಾಕಿದರು, ಈ ಕಳ್ಳರು ಆ ಮಹಾಸ್ವಾಮಿಗಳ  ದಿವ್ಯ ದರ್ಶನ ಮಾಡಿದರು, ಅವರ ತೇಜಸ್ಸನ್ನು ಕಂಡು ಕೂಡಲೇ ಶರಣಾಗತರಾದರು. ಆ ಮ್ಲೇಚ್ಛ ರಾಜನಿಗೆ ಹುಚ್ಚು ಹಿಡಿಯಿತು, ಆ ರಾಜನ ಪರಿವಾರ ಎಲ್ಲ ಬಂದು ಅವರು ಗಳಿಸಿದ ಆಸ್ತಿ ಸಂಪತ್ತು ಎಲ್ಲವನ್ನು ಗುರುಗಳ ಚರಣಾರವಿಂದಕ್ಕೆ ಇಟ್ಟು ಕೈ ಮುಗಿದು ಇವರ ಹುಚ್ಚನ್ನು ಸರಿಮಾಡಬೇಕು ಎಂದು ಪ್ರಾರ್ಥಿಸಿದರು. ಮ್ಲೇಚ್ಛರಾಜ ಬಂದು ಗುರುಗಳಿಗೆ ನಮಸ್ಕಾರ ಮಾಡಿದ. ಶ್ರೀ ಸತ್ಯಪೂರ್ಣ ತೀರ್ಥರು ಹೇಳಿದರು, ನೀನು ನಮ್ಮ ಸಂಪತ್ತನ್ನು ದೋಚಬೇಕು ಎಂದು ಯೋಜನೆ ಮಾಡಿದೆ ಆದರೆ ದೈವ ಸಂಕಲ್ಪದಂತೆ ನಿನ್ನ ಸಮಸ್ತ ಪರಿವಾರ ರಾಜ್ಯ ಎಲ್ಲವು ನಮ್ಮ ರಾಮಚಂದ್ರ ದೇವರು ಇಲ್ಲಿ ಕರೆಸಿಕೊಂಡಿದ್ದಾರೆ ಎಂದರೆ ನರಚಿತ್ತಕ್ಕೆ ಬಂದದ್ದು  ನವಲೇಶ ನಡೆಯದು ಎಂದು ಹೇಳುತ್ತಾರೆ. ಗುರುದ್ರೋಹ, ದೈವ ದ್ರೋಹ ಎಂದಿಗೂ ಮಾಡಬೇಡ ಎಂದು ಅವನ ಸಮಸ್ತವನ್ನು ಕೊಟ್ಟು ಅನುಗ್ರಹ ಮಾಡಿದರು. ಅಂದಿನಿಂದ ಅವನ ಹುಚ್ಚು ಸಂಪೂರ್ಣ ಮಾಯವಾಗಿ ಅವನು ಇವರ ದಾಸನಾದ.
 ಹಯಗ್ರೀವ ದೇವರ ಶ್ರೀರಕ್ಷೆ ಇನ್ನೊಂದು ದಟ್ಟ ಅರಣ್ಯ ದಲ್ಲಿ ಕಳ್ಳರ ಗುಂಪೊಂದು ಇವರನ್ನು ಆಕ್ರಮಣ ಮಾಡಬೇಕು ಎಂದು ಹೇಳಿ ಆಕ್ರಮಣಕ್ಕೆ ಬಂದರು, ಆದರೆ ದೈವಸಂಕಲ್ಪದಂತೆ ಆ ಕಳ್ಳರಿಗೆ ಕುದುರೆಮೇಲೆ ಇರುವ ಸೈನಿಕರು ಇವರ ಸಮಸ್ತ ಸಂಪತ್ತನ್ನು ಕಾಯುತ್ತ ಪಹರೆ ಮಾಡುತ್ತಿದ್ದರು ಅದನ್ನು ನೋಡಿದ ಕಳ್ಳರ ಗುಂಪು ದಿಕ್ಕಾಪಾಲಾಗಿ ಓಡಿಹೋಯಿತು. ಆ ಕಳ್ಳರ ಗುಂಪಿನ ನಾಯಕನ ಹೆಂಡತಿ ಬಂದು ಮಠದಲ್ಲಿ ನಿಮ್ಮ ಬಳಿ ಎಷ್ಟು ಕುದುರೆಗಳು ಇವೆ, ಎಷ್ಟು  ರಕ್ಷಕರು, ಸವಾರರು ಇದ್ದಾರೆ ಎಂದು ವಿಚಾರಿಸಿದಳು,  ಆಗ ಶ್ರೀಮಠದ ದಿವಾನರು  ನಮ್ಮ ಬಳಿ ಯಾವ ಕುದುರೆಗಳಿಲ್ಲ, ಯಾವ ರಕ್ಷಕರು ಇಲ್ಲ ಎನ್ನಲು, ನಮಗೆ ಕುದುರೆ ಸವಾರರು ರಕ್ಷಕರು ಕಾಣಿಸಿದರು ಎಂದು ಹೇಳಲು ಸಾಕ್ಷಾತ್ ಹಯಗ್ರೀವ ದೇವರ ಸೈನ್ಯವೇ ನಿಮಗೆ ದರುಶನ ಕೊಟ್ಟಿದ್ದಾರೆ ಎಂದು ಹೇಳಿ, ಇನ್ನು ಮುಂದಾದರು ಸಾರ್ಥಕ ಜೀವನ ನಡೆಸಿ ಎಂದು ಸತ್ಯಪೂರ್ಣ ತೀರ್ಥರು ಆಶೀರ್ವದಿಸಿ ಅವರ ಮನ ಪರಿವರ್ತನೆ ಮಾಡಿದರು. ಹೀಗೆ ಎಷ್ಟೋ ಜನರನ್ನು ಪರಿವರ್ತಿಸಿದ ಗುರುಗಳು ಶ್ರೀ ಸತ್ಯಪೂರ್ಣ ತೀರ್ಥರು.
 ಕುಂಟ ಕೃಷ್ಣ ಕೃಷಾಜಿಪಂಥ ರಾದದ್ದು 
ಶ್ರೀಸತ್ಯಪೂರ್ಣ ತೀರ್ಥರು ಸಂಚಾರ ಕ್ರಮದಲ್ಲಿ ಒಂದು ಗ್ರಾಮಕ್ಕೆ ಬರುತ್ತಾರೆ, ಪ್ರಾಯಶಃ ಇಂದಿನ ತೆಲಂಗಾಣದ ಒಂದು ಹಳ್ಳಿ, ಆ ಹಳ್ಳಿಯಲ್ಲಿ ಇದ್ದ ಬಹಳ ಜನರು ಶ್ರೀ ಸತ್ಯಪೂರ್ಣ ತೀರ್ಥರ ಪಾದ ಪೂಜೆ ಮಾಡುತ್ತಿರುತ್ತಾರೆ, ಅಲ್ಲಿ ಒಬ್ಬ ಕುಂಟ, ಅವನ ಹೆಸರು ಕೃಷ್ಣ ನೋಡುತ್ತಿದ್ದ, ತನಗೂ ಗುರುಗಳ ಪಾದ ಪೂಜೆ ಮಾಡಬೇಕು ಎಂಬ ಭಕ್ತಿಭಾವ. ಆದರೆ ಕಡುಬಡತನ, ತಂದೆ ತಾಯಿಗಳಿಲ್ಲದ ಒಬ್ಬ ಅನಾಥ, ಮನೆಯಲ್ಲಿ ಅಡುಗೆ ಮಾಡಲು ಪಾತ್ರೆಗಳು ಇಲ್ಲದ ಸ್ಥಿತಿ, ಹೀಗಿದ್ದರೂ ತಮ್ಮ ಮನೆಗೆ ಶ್ರೀ ಸತ್ಯಪೂರ್ಣ ತೀರ್ಥರು ಬರಬೇಕು ಅವರ ಪಾದ ಪೂಜೆ ಮಾಡಬೇಕು ಎಂಬ ಮಹದಾಸೆ. ಧೈರ್ಯ ಮಾಡಿ ದಿವಾನರಲ್ಲಿ ಕೇಳಿದ, ದಿವಾನರು ಒಪ್ಪಿಗೆ ಕೊಡಲಿಲ್ಲ, ಇದನ್ನು ನೋಡುತಿದ್ದ ತಪಸ್ವಿಗಳಾದ ಶ್ರೀ ಸತ್ಯಪೂರ್ಣ ತೀರ್ಥರು ನಡೆ ನಿಮ್ಮ ಮನೆಗೆ ಬರುತ್ತೇನೆ ಎಂದು ಹೇಳಿದರು. ಶ್ರೀಮಠದಿಂದಲೇ ಪಾದಪೂಜೆಗೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು ತಮ್ಮ ಮನೆಗೆ ಅತ್ಯುತ್ಸಾಹದಿಂದ ಬರಮಾಡಿಕೊಂಡು ಪಾದಪೂಜೆ ಮಾಡಿದನು, ಗುರುಕಾಣಿಕೆಯಾಗಿ ಏನು ಕೊಡಲು ತಮ್ಮ ಬಳಿ ಇಲ್ಲದ್ದಿದ್ದಾಗ, ತಮ್ಮ ಮನೆಯಲ್ಲಿ ಒಂದು ಹಳೆಯ ಬೆಳ್ಳಿಯ ಬಟ್ಟಲು ಇತ್ತು, ಅದರಲ್ಲಿ ದೇವರಿಗೆ ನಿತ್ಯ ಸಕ್ಕರೆ ನೈವೇದ್ಯ ಮಾಡುತ್ತಿದ್ದ, ಅದೇ ಬಟ್ಟಲನ್ನು ಗುರುಗಳಿಗೆ ಸಮರ್ಪಣೆ ಮಾಡಿದ. ರಾಜ್ಯಲಕ್ಷ್ಮಿಯೇ ಶ್ರೀಮಠದಲ್ಲಿ ನೆಲೆಯಾಗಿರುವಾಗ ಗುರುಗಳಿಗೆ ಈ ಸಣ್ಣ ಬೆಳ್ಳಿಬಟ್ಟಲ ಅವಶ್ಯಕತೆ ಉಂಟೆ, ಆದರೂ ಭಕ್ತನ ಆಗ್ರಹಕ್ಕೆ ಆ ಬೆಳ್ಳಿಬಟ್ಟಲನು ಸ್ವೀಕರಿಸಿದರು. ಇವನ ಪ್ರಾಮಾಣಿಕತೆ, ಭಕ್ತಿಗೆ ಮೆಚ್ಚಿ ಶ್ರೀ ಸತ್ಯಪೂರ್ಣ ತೀರ್ಥರು, ಇಂದು ನಮ್ಮ ಪಾದ ಪೂಜೆ ಮಾಡಿದ್ದಿ, ಮೂಲರಾಮಚಂದ್ರ ದೇವರ ಅನುಗ್ರಹದಿಂದ ಮುಂದೆ ನಿಮ್ಮ ಮನೆಯಲ್ಲಿ ವೈಭವ ಸಂಸ್ಥಾನ ಪೂಜೆ ನಡೆಯಲಿ ಎಂದು ಆಶೀರ್ವದಿಸಿ ಮಂತ್ರಾಕ್ಷತೆಯನ್ನು ಕೊಟ್ಟರು.
ಆ ಕುಂಟ ಕೃಷ್ಣ ಲೆಕ್ಕದಲ್ಲಿ ಬಹಳ ಜಾಣ, ಗುರುಗಳ ಅನುಗ್ರದಿಂದ ಒಬ್ಬ ವರ್ತಕನ ಮನೆಯಲ್ಲಿ ಲೆಕ್ಕಶೋಧನೆ ಮಾಡುತ್ತಯಿದ್ದ, ಆ ಊರಿನಲ್ಲಿ ಇದ್ದ ರಾಜ್ಯದ ಬೊಕ್ಕಸದ ಅಧಿಕಾರಿಗಳಿಗೆ ಲೆಕ್ಕ ಪತ್ರಗಳನ್ನು ತೋರಿಸಿ ಅವುಗಳ ಬಗೆಗಿನ ವಿಷಯಗಳನ್ನು ತಿಳಿಸಿ ಬರುತ್ತಿದ್ದ, ಇವನ ಕಾರ್ಯ ಚಕ್ಯತೆಯನ್ನು ಕಂಡ ಅಧಿಕಾರಿ ಇವನನ್ನು ಆ ಗ್ರಾಮದಿಂದ ಕಂಚಿ ಗೆ ಕರೆದು ಕೊಂಡು ಹೋಗಿ ಅಲ್ಲಿಯ ಶಾನುಭೋಗರಿಗೆ ಪರಿಚಯ ಮಾಡಿ ಅವರ ಬಳಿಯಲ್ಲಿ ಕೆಲಸ ಮಾಡಿಕೊಂಡಿದ್ದ,  ಆಗಿನ ಆರ್ಕಾಟ್ ನವಾಬರು, ತನ್ನ ಸಾಮಂತ ರಾಜರು, ಶಾನುಭೋಗರ ಲೆಕ್ಕಗಳನ್ನು ಪರಿಶೀಲನೆ ಮಾಡುವ ದಿನ ನಿಗದಿಯಾಯಿತು, ಎಲ್ಲ ಊರಿನ ಅಧಿಕಾರಿಗಳು, ಅವರವರ ಲೆಕ್ಕಪತ್ರಗಳನ್ನು ತೋರಿಸುತ್ತಿದ್ದರು, ಮಧ್ಯಾಹ್ನ ಊಟದ ಸಮಯ, ಬೇರೆ ಎಲ್ಲರು ಉಟಕ್ಕೆ ತೆರಳಿದರು. ಆದರೆ ಈ ಕುಂಟ ಕೃಷ್ಣ್ಹ ಮಾತ್ರ ಅಲ್ಲೇ ಕೂತಿದ್ದ, ಆರ್ಕಾಟ್ ನವಾಬರು ಇವನ್ನು ನೋಡಿ, ನೀನು ಯಾತಕ್ಕಾಗಿ ಹೋಗಲಿಲ್ಲ ಎಂದು ಕೇಳಲು, ಇವನ ಪರಿಸ್ಥಿಯನ್ನು ಕಂಡು, ಇವನ ಲೆಕ್ಕಶೋಧನೆ ಮಾಡುತ್ತಾರೆ, ಇವನ ಸುಂದವಾದ ಅಕ್ಷರಗಳು, ಮತ್ತು ಎಲ್ಲ ಖರ್ಚು ಹೊಂದಿಕೆಯಾಗಿ, ಮತ್ತು ಇತರ ಖರ್ಚನ್ನು ಉಳಿಸುವ ಯೋಜನೆಗಳನ್ನು ನೋಡಿ, ಇವನ ಕಾರ್ಯವೈಖರಿ ಎಲ್ಲವನ್ನು ನೋಡಿ , ತನ್ನ ರಾಜ್ಯದಲ್ಲಿ ವಿತ್ತ  ಮಂತ್ರಿಯನ್ನಾಗಿ ಮಾಡಿಕೊಂಡ. ಅಂದಿನಿಂದ ಕೃಷ್ಣಾಜಿಪಂಥರಾದರು. ಎಲ್ಲಾ ಸಾಮ೦ತ ರಾಜರು ಇವನಿಗೆ ಲೆಕ್ಕಪತ್ರಗಳನ್ನು ಪರಿಶೀಲನೆ ಮಾಡುವ ಮಟ್ಟಿಗೆ ಗುರುಗಳ ಅನುಗ್ರಹದಿಂದ ಬೆಳೆದ. ಹೇಗೆ ಸತ್ಯಪೂರ್ಣ ತೀರ್ಥರ ಮಾತು ಸತ್ಯವಾಯಿತು, ಅವರ ಅನುಗ್ರಹ ಮಂತ್ರಾಕ್ಷತೆ ಶುಕ್ರದೆಸೆಯನ್ನೇ ತೆರೆದಿಟ್ಟಿದೆ.
ಸ್ವಲ್ಪ ದಿನಗಳಲ್ಲಿಯೇ ಇವನ ಕಾರ್ಯವೈಖರಿ ನೋಡಿ ಆರ್ಕಾಟ್ ನವಾಬ ಬಹಳ ಸಂತಸಪಟ್ಟು, ಇನ್ನು ಹೆಚ್ಚಿನ ಜವಾಬ್ಧಾರಿ ಕೊಟ್ಟರು, ಶ್ರೀ ಸತ್ಯಪೂರ್ಣ ತೀರ್ಥರು ಮತ್ತೊಮೆ ಕಂಚಿಗೆ ಬಂದಾಗ ಅತಿ ಗೌರವದಿಂದ ಅವರನ್ನು ಬರಮಾಡಿಕೊಂಡು ನೂತನ ಗೃಹದಲ್ಲಿ ಶ್ರೀಮನ್ಮೂಲರಾಮಚಂದ್ರ ದೇವರ ವೈಭವದ ಪೂಜೆ ಮಾಡಿಸಿದನು. ಅನೇಕ ಮುತ್ತು ರತ್ನ ಸಮೇತ ಬಂಗಾರದ ಮಂಟಪವನ್ನು ಜೊತೆಗೆ ಬಂಗಾರದ ಸರಪಳಿಯನ್ನು ಗುರುಗಳ ಚರಣಗಳಿಗೆ ಅರ್ಪಿಸಿದನು. ಕಂಚಿಯ ವರದರಾಜ ದೇವಸ್ಥಾನದ ಸಮೀಪದಲ್ಲಿಯೇ ಒಂದೂವರೆ ಎಕ್ಕರೆಯ ತೋಟವನ್ನು ಶ್ರೀಮಠಕ್ಕೆ ದಾನವಾಗಿ ಕೊಟ್ಟಿದ್ದಾನೆ, ಆ ಜಾಗದಲ್ಲೇ ಅವರೇ ಶ್ರೀಮಠವನ್ನು ನಿರ್ಮಾಣ ಮಾಡಿಸಿ ಗುರುಗಳಿಗೆ ಕೊಟ್ಟಿದ್ದಾರೆ, ಈಗಲೂ ನಾವು ನೋಡುವ ಕಂಚಿಯಲ್ಲಿ ಶ್ರೀ ಉತ್ತರಾಧಿಮಠ ಶ್ರೀ ಸತ್ಯಪೂರ್ಣ ತೀರ್ಥರಿಗೆ ಕೊಟ್ಟಂತಹ ಕಾಣಿಕೆ. ಮುಂದೆ ಸತ್ಯಪ್ರಮೋದ ತೀರ್ಥರು ಶ್ರೀ ಸತ್ಯಪೂರ್ಣ ತೀರ್ಥರ ಮೃತ್ತಿಕಾ ಬೃಂದಾವನ ನಿರ್ಮಿಸಿದ್ದಾರೆ.
ಇನ್ನೊಬ್ಬ ಕಂಚಿಯಲ್ಲಿ ಒಬ್ಬ ಶ್ರೀಮಂತ ಭಕ್ತನಿದ್ದ,ಆದರೆ ಸಂತಾನವೇ ಇರಲಿಲ್ಲ,   ಅವನಿಗೂ ಶ್ರೀ ಸತ್ಯಪೂರ್ಣ ತೀರ್ಥರು ಅನುಗ್ರಹ ಮಾಡಿದರು, ರಾಮದೇವರ ದಿವ್ಯ ಆಶೀರ್ವಾದದಿಂದ ಗುರುಗಳ ಮಂತ್ರಾಕ್ಷತೆಯಲ್ಲಿ ಸನ್ನಿಹಿತರಾಗಿ ಪುತ್ರಸಂತಾನ ಅನುಗ್ರಹ ಮಾಡಿದರು, ಆ ವ್ಯಾಪಾರಿ ಬಂಗಾರದ ತೊಟ್ಟಿಲಿಗೆ ವಜ್ರದ ಹಾಸನ್ನು ಹಾಸಿರುವ ತೊಟ್ಟಿಲನ್ನು ಶ್ರೀಮಠಕ್ಕೆ ಕಾಣಿಕೆಯಾಗಿ ಕೊಟ್ಟಿದ್ದಾನೆ.
 ಕಂಚಿಯ ವರದರಾಜನಿಗೆ ಪದಕ ಸಮರ್ಪಣೆ 
ಹೇಗೆ ಶ್ರೀಮಠಕ್ಕೆ ಆದಾಯ ಬರುತ್ತಿತ್ತೋ, ದಾಸರ ಉಕ್ತಿಯಂತೆ " ಕೆರೆಯ ನೀರನು ಕೆರೆಗೆ ಚೆಲ್ಲಿ "ಎಂಬಂತೆ ಬಂದ ಆದಾಯವನ್ನು ಪುನಃ ದೇವರಿಗೆ ಸಮರ್ಪಿಸುತ್ತಿದ್ದರು, ಶ್ರೀ ಸತ್ಯಪೂರ್ಣ ತೀರ್ಥರು. ಕಂಚಿಯ ಆರಾಧ್ಯದೈವ ಶ್ರೀ ವರದ ರಾಜನಿಗೆ ವಜ್ರದ ಪದಕ, ಪೂಜಾ ಪಾತ್ರೆಗಳನ್ನು ವಿಶೇಷವಾಗಿ ಕೊಟ್ಟಿದ್ದಾರೆ, ಇಂದಿಗೂ ವರದರಾಜನ ಉತ್ಸವ ಮೂರ್ತಿ ಅಂದರೆ ದೇವರಾಜ ಮೂರ್ತಿಗೆ ಹಾಕಿರುವ ವಜ್ರದ ಪದಕಕ್ಕೆ " ಶ್ರೀ ಸತ್ಯಪೂರ್ಣ ಪದಕ " ಎಂದೇ ಅಲ್ಲಿನ ಅರ್ಚಕರು ಗುರುತಿಸಿ ಹೇಳುತ್ತಾರೆ.
ಹಾಗೆ ಸಂಚಾರದಲ್ಲಿ ಶ್ರೀಮುಷ್ಣಮ್ ಗೆ ಸತ್ಯಪೂರ್ಣ ತೀರ್ಥರು ಬರುತ್ತಾರೆ, ಶ್ರೀಮಠದ ಸಂಪ್ರದಾಯ ಚತುರ್ಯುಗಮೂರ್ತಿ ಚತುರ್ಮುಖ ಬ್ರಹ್ಮ ಕರಾರ್ಚಿತ  ಶ್ರೀಮನ್ಮೂಲರಾಮಚಂದ್ರ ದೇವರ ಪೂಜೆಯ ಜೊತೆಗೆ ಚತುರ್ಯುಗ ಮೂರ್ತಿ ಚತುರ್ಮುಖ ಬ್ರಹ್ಮ ಕರಾರ್ಚಿತ ಶ್ರೀ ಯಜ್ನ್ಯ ವರಾಹದೇವರ ಪೂಜೆಯಾಗಬೇಕು, ಆ ಸಂಪ್ರದಾಯ ಕೆಲವು ವರ್ಷಗಳಿಂದ ನಿಂತಿತ್ತು, ಆದರೆ ಶ್ರೀ ಸತ್ಯಪೂರ್ಣ ತೀರ್ಥರು ಪುನಃ ಆ ಸಂಪ್ರದಾಯವನ್ನು ತಂದು,ಯಜ್ಞ ವರಾಹದೇವರಿಗೆ ಬಂಗಾರದ ಕವಚ ಕೊಡುತ್ತಾರೆ,  ಉತ್ತರಾಧಿಮಠದ ಯಾವುದೇ ಯತಿಗಳು ಕ್ಷೇತ್ರಕ್ಕೆ ಹೋದರೆ ಭೂವರಹ ದೇವರಿಗೆ ಬಂಗಾರದ ಪದಕ ಅಥವಾ ವಜ್ರದ ಪದಕವನ್ನು ಕೊಟ್ಟು ಬರುತ್ತಾರೆ. ಈ ಪದ್ಧತಿ ಪ್ರಾರಂಭ ವಾಗಿದ್ದು ಶ್ರೀ ಸತ್ಯಪೂರ್ಣ ತೀರ್ಥರರಿಂದಲೇ. ಇಂದಿಗೂ ಉತ್ತರಾಧಿ ಮಠದ ಯತಿಗಳು ಹೋದರೆ ಶ್ರೀ ಯಜ್ಞವರಹ ದೇವರನ್ನು ಶ್ರೀಮಠಕ್ಕೆ ತಂದು ಅರ್ಚಕರು ಒಪ್ಪಿಸುತ್ತಾರೆ, ನಿತ್ಯ ಶ್ರೀಮನ್ಮೂಲರಾಮಚಂದ್ರ ದೇವರು ಮತ್ತು ಯಜ್ನ್ಯ ವರಾಹದೇವರಿಗೆ ಒಟ್ಟಿಗೆ ಪೂಜೆ ನಡೆಯುವದು, ನೋಡಲು ಎರಡು ಕಣ್ಣುಗಳು ಸಾಲದು.
ಒಮ್ಮೆ  ವೇಮಪಲ್ಲಿಯಲ್ಲಿ ರಾಜನೊಬ್ಬ ಶ್ರೀಮಠದ ವೈಭವನ್ನು ನೋಡಿ  ಆಹಾ೦ಕಾರದಿಂದ ಬಂದು ಶ್ರೀಮಠದ ಲೆಕ್ಕಪರಿಶೋಧನೆ ಮಾಡಬೇಕು, ಎಂದು ಹೇಳಿ ಗುರುಗಳನ್ನು ಕರೆಸಿ ಎಂದು ಆಗ್ರಹ ಮಾಡಿದನು, ಗುರುಗಳು ಅಂದು ಮೂಲರಾಮದೇವರ ಪೂಜೆ ಮಾಡಿ, ಬೇಕಂತಲೇ ಶಾಸ್ತ್ರಾಧ್ಯಯನ ಮಾಡುತ್ತಾ ಕುಳಿತು ಅವನ್ನು ಕಾಯಿಸಿದರು, ಅವನು ಕಾಯುತ್ತ ಕ್ರೋಧದಿಂದ ಗುರುಗಳ ಬರುವಿಕೆಯನ್ನೇ ಕಾಯುತ್ತಿದ್ದನು. ಗುರುಗಳು ಬಂದರು ಅವರನ್ನು ನೋಡುತ್ತಿದ್ದ ರಾಜನಿಗೆ ಗುರುಗಳು ಸೂರ್ಯನಂತೆ ಪ್ರಕಾಶಮಾನರಾದರು ಅವರ ತೇಜಸ್ಸನ್ನು ಕಂಡ ರಾಜ ಅವರ ಚರಣಗಳಿಗೆ ಬಿದ್ದು, ಇನ್ನು ಮುಂದೆ ನೀವೇ ನಮ್ಮ ಗುರುಗಳಾಗಬೇಕು ಎಂದು ಪ್ರಾರ್ಥಿಸಿ, ತನ್ನ ಪಶ್ಚಾತಾಪಕ್ಕೆ ಕ್ಷಮೆಮಾಡಿ ಧನಧಾನ್ಯಗಳನ್ನೂ ಕೊಟ್ಟು ಗುರುಗಳಿಗೆ ಶಿಷ್ಯನಾದನು.
 ತಿರುಪತಿಯ ದರ್ಶನ. ಒಮ್ಮೆ ಶ್ರೀ ಸತ್ಯಪೂರ್ಣ ತೀರ್ಥರು ಕಲಿಯುಗದ ಪ್ರತ್ಯಕ್ಷದೈವ ತಿರುಪತಿಯ ತಿಮ್ಮಪ್ಪನ ದರುಶನ ಮಾಡಬೇಕು ಎಂದು ಮನಸಾಯಿತು, ಆಗಲೇ ಅವರಿಗೆ ವಯಸಾಗುತಿತ್ತು, ಬೆಟ್ಟವನ್ನು ಹತ್ತಿ ದರುಶನ ಮಾಡಬೇಕೆಂಬ ನಿಶ್ಚಲವಾದ ಭಕ್ತಿ ಮತ್ತು ಸಂಕಲ್ಪ, ನಡೆದುಕೊಂಡೇ ಹೋಗಬೇಕು. ಅಲ್ಲಿದ್ದ ಶಿಷ್ಯರು ಅವರ ಕೈಯನ್ನು ಹಿಡಿದುಕೊಂಡು ಹೋಗಬೇಕು ಎಂದು ನಿರ್ಧರಿಸಿದರು. ಆದರೆ ಗುರುಗಳ ಕೈಹಿಡಿಯಬೇಕಾದರೆ ಅಣುವ್ಯಾಖ್ಯಾನದ ಶ್ರೀಮನ್ನ್ಯಾಯಸುಧಾನುವಾದ ಕಂಠಪಾಠ ಮಾಡಿರಬೇಕು ಅಂತಹವರು ನನ್ನ ಕೈ ಹಿಡಿಯಬೇಕು   ಎಂದು ಷರತ್ತನ್ನು ಹಾಕಿದರು, ಆಗ ಗಾರ್ಲಪಾಡು ರಾಮಾಚಾರ್ಯರು ( ಶ್ರೀ ಸತ್ಯವರ್ಯ  ತೀರ್ಥರು) ಅವರಕೈ ಹಿಡಿದು ವ್ಯಾಖ್ಯಾನ ಮಾಡುತ್ತಾ ಬೆಟ್ಟವನ್ನು ಏರಿ ದೇವರ ದರ್ಶನ ಮಾಡಿಸಿದರು. ಗುರುಗಳಿಗೆ ತುಂಬಾ ಆನಂದವಾಯಿತು, ಮತ್ತು ಇವರಿಗೆ ನಮ್ಮ ಸಮಸ್ತ ಜವಾಬ್ದಾರಿ ಕೊಟ್ಟು ನಮ್ಮ ಉತ್ತರಾಧಿಕಾರಿಗಳನ್ನಾಗಿ ಮಾಡಬೇಕು ಎಂದು ಶ್ರೀನಿವಾಸ ದೇವರ ಮುಂದೆಯೇ ಸಂಕಲ್ಪ ಮಾಡಿದರು.  ದೇವಸ್ಥಾನದ ವತಿಯಿಂದ ಗೌರವ ಮರ್ಯಾದೆ ಸ್ವೀಕರಿಸಿ, ಅಲ್ಲಿರುವ ಪೇಶಕರು ಮತ್ತು ಅಧಿಕಾರಿಗಳ ಜೊತೆ ಮಾತನಾಡುತ್ತ, ಶ್ರೀನಿವಾಸ ದೇವರಿಗೆ ಯಾವುದೋ ಒಂದು ಸೇವೆ ನಿಂತು ಹೋಗಿದೆ ಎಂದು ಹೇಳಿ " ಸುಲಭವರ್ಧನ " ಎಂಬ ಸೇವೆಯನ್ನು ಶ್ರೀಮಠದಿಂದ ಪುನಃ ಪ್ರಾರಂಭಿಸಿದರು. ಬರುವಾಗ ತಿರುಪತಿಯಲ್ಲಿ ಒಂದು ಮುಖ್ಯಪ್ರಾಣದೇವರ ಪ್ರತಿಷ್ಠೆ ಮಾಡುತ್ತಾರೆ. ತಿರುಪತಿಯ ಮಿಟ್ಟಿಬೀದೀ ಯಲ್ಲಿ ಸತ್ಯಪೂರ್ಣ ತೀರ್ಥರಿಂದ ಪ್ರತಿಷ್ಠವಾದ ಶ್ರೀ ಮುಖ್ಯಪ್ರಾಣ ದೇವರ ಸನ್ನಿದಾನವಿದೇ.
ಇಟಗಿ ಗ್ರಾಮದಲ್ಲಿ ಚಾತುರ್ಮಾಸ್ಯದಲ್ಲಿ  ಮುಂದೆ ಗಾರ್ಲಪಾಡು ರಾಮಾಚಾರ್ಯರಿಗೆ ಸನ್ಯಾಸವನ್ನು ಕೊಟ್ಟು ಶ್ರೀ ಸತ್ಯವರ್ಯ ತೀರ್ಥರು ಎಂದು ನಾಮಕರಣ ಮಾಡಿ ದಿಗ್ವಿಜಯಕ್ಕೆ ಉತ್ತರ ಭಾರತಕ್ಕೆ ಕಳುಹಿಸಿದರು. ಅವರೇ ಮುಂದೆ ಶ್ರೀ ಸತ್ಯಪ್ರಿಯ ತೀರ್ಥರು ಎಂದು ಹೆಸರಾದರು. ಮುಂದೆ ಶ್ರೀ ಸತ್ಯಪೂರ್ಣ ತೀರ್ಥರು ಪಾಂಡುರಂಗಿ ಬಾಬಾಚಾರ್ಯರಿಗೆ ಆಶ್ರಮವನ್ನು ಕೊಟ್ಟು ಶ್ರೀ ಸತ್ಯವಿಜಯ ತೀರ್ಥರು ಎಂದು ನಾಮಕರಣ ಮಾಡಿದರು. ಇಬ್ಬರು ಮಹಾಮಹಿಮರ ದಿವ್ಯಚರಿತ್ರೆ ನಾವು ಹಿಂದಿನ ಆರಾಧನೆಗಳಲ್ಲಿ ಓದಿದ್ದೇವೆ. ಶ್ರೀ ಸತ್ಯಪೂರ್ಣ ತೀರ್ಥರು ಮೊದಲು ಸತ್ಯವರ್ಯರಿಗೆ ನಂತರ  ಅನೇಕ ಹಿರಿಯರ, ಭಕ್ತರ, ಪಂಡಿತರ ಕೋರಿಕೆಯಂತೆ ಶ್ರೀ ಸತ್ಯವಿಜಯರಿಗೆ ಆಶ್ರಮ ಕೊಟ್ಟದ್ದು, ವಯಸ್ಸಿನಲ್ಲಿ ಹಿರಿಯರು ಶ್ರೀ ಸತ್ಯವಿಜಯ ತೀರ್ಥರು, ಆಶ್ರಮ ಜೇಷ್ಠರೂ ಶ್ರೀ ಸತ್ಯವರ್ಯರು. ಒಂದು ನಿರ್ಣಯ ಮಾಡುತ್ತಾರೆ, ಮೊದಲು ನಮ್ಮ ಉತ್ತರಾಧಿಕಾರಿಯಾಗಿ ಶ್ರೀ ಸತ್ಯವಿಜಯರು ನಂತರ ಶ್ರೀ ಸತ್ಯವರ್ಯರು ಎಂದು ವ್ಯವಸ್ಥೆ ಮಾಡುತ್ತಾರೆ. ನಂತರ ದಂಡವ್ಯತ್ಯಾಸ ಮಾಡಿ ಸತ್ಯವರ್ಯಾರು ಸತ್ಯವಿಜಯ ತೀರ್ಥರ ಶಿಷ್ಯರಾಗಿ ಸತ್ಯಪ್ರಿಯ ತೀರ್ಥರು ಎಂದು ನಾಮಾಂಕಿತರಾಗಿ ಸತ್ಯವಿಜಯ ತೀರ್ಥರ ಉತ್ತರಾಧಿಕಾರಿಗಳಾಗುತ್ತಾರೆ. ಅಂತ್ಯಂತ ಉದಾರ ಮನಸ್ಸಿನವರು.ಶ್ರೀರಂಗ ಕ್ಷೇತ್ರದಲ್ಲೂ ಮುಖ್ಯಪ್ರಾಣದೇವರ ಪ್ರತಿಷ್ಠೆ ಮಾಡಿದ್ದಾರೆ.
ಮಹಾರಾಷ್ಟ್ರದ ನಾಸಿಕ, ಕೊಳೆನರಸಿಂಹ ಪುರ, ಮುಂತಾದ ಊರಿನ ಸಾವಿರಾರು ಮನೆತನದವರು ಸ್ವಇಚ್ಚೆ ಬಂದವರಿಗೆ ವೈಷ್ಣವ ದೀಕ್ಷೆ ಕೊಟ್ಟಂತ ಮಹನೀಯರು ಶ್ರೀ ಸತ್ಯಪೂರ್ಣ ತೀರ್ಥರು. ಇಂದಿಗೂ ಅವರ ಅರತಿ ಹಾಡುಗಳಲ್ಲಿ " ಜೈ ಹೊ ಶ್ರೀ ಸತ್ಯಪೂರ್ಣ ಚಂದ್ರ " ಎಂಬ ಸಾಲನ್ನು ಸೇರಿಸಿ ಶ್ರೀ ಸತ್ಯಪೂರ್ಣತೀರ್ಥರನ್ನು ಸದಾ ನೆನೆಸಿಕೊಳ್ಳುತ್ತಾರೆ.  
ಹೀಗೆ ಅನೇಕ ಮಹಿಮೆಗಳನ್ನು ತೋರುತ್ತ, ಶ್ರೀ ಸತ್ಯಪೂರ್ಣ ತೀರ್ಥರು ಜೇಷ್ಠ ಬಹುಳ ದ್ವೀತಿಯದಂದು ಕೃಷ್ಣಾ  ತೀರದ  ಕೋಲಾಪುರ್ ಅಥವಾ ಕೋಲಾಪುರದಲ್ಲಿ ಲೌಕಿಕಯಾತ್ರೆಯನ್ನು ಮುಗಿಸಿ ಪರಮಾತ್ಮನ ಪುರವನ್ನು ಸೇರುತ್ತಾರೆ. ಅವರ ಬೃಂದಾವನ ಅತ್ಯಂತ ಪ್ರಶಾಂತವಾದ ಸನ್ನಿದಾನ. ಪ್ರೀತೋಸ್ತು ಕೃಷ್ಣ ಪ್ರಭೋ . ಫಣೀಂದ್ರ ***
ಶ್ರೀ ಸತ್ಯಪೂರ್ಣತೀರ್ಥ ಗುರುಭ್ಯೋ ನಮಃಶ್ರೀ ಸತ್ಯಾಭಿನವ ತೀರ್ಥರ ಶಿಷ್ಯರು , ಮಹಾ ತಪಸ್ವಿಗಳು,  ಜ್ಞಾನ ಶಿರೋಮಣಿಗಳು ಇಂದಿನ ಆರಾಧ್ಯರಾದ  ಶ್ರೀ ಸತ್ಯಪೂರ್ಣ ತೀರ್ಥರು .ಅನ್ವರ್ಥಕ ಹೆಸರು . ಸತ್ಯನಾಮಕ ಪರಮಾತ್ಮನಲ್ಲಿ ಪೂರ್ಣ ಭಕ್ತಿ , ಸತ್ಯ ಸಿದ್ಧಾಂತ ದಲ್ಲಿ ಪರಿಪೂರ್ಣವಾದಂಥ ಶ್ರದ್ಧೆಯ ನಿದರ್ಶನ ಶ್ರೀ ಸತ್ಯಪೂರ್ಣ ತೀರ್ಥರದ್ದು .ಇದಕ್ಕೆ ಒಂದು ನಿದರ್ಶನ ಇವರ  ಪೂರ್ವಾಶ್ರಮದಲ್ಲಿಯೇ ನಡೆದ ಒಂದು ಅತ್ಯದ್ಭುತ, ಚಮತ್ಕಾರದ ಘಟನೆ .ತಂಜಾವೂರ ಮಹಾರಾಜನ ಆಸ್ಥಾನದಲ್ಲಿ ಒಂದು ವಿದ್ವತ್ ಸಭಾ  ನಡೆದಿತ್ತು .ಶ್ರೀ ಸತ್ಯಾಭಿನವರ ಆಜ್ಞೆಯಂತೆ ಶ್ರೀ ಕೃಷ್ಣಾಚಾರ್ಯರು ( ಇವರ ಪೂರ್ವಾಶ್ರಮದ ಹೆಸರು , ವ್ಯಾಸಕೇಶವಾಚಾರ್ಯರು ಅಂತಲೂ  ಉಲ್ಲೇಖ ಇದೆ) ಆ ಸಭೆಗೆ ಹೋಗಿದ್ದರು.ಅಲ್ಲಿ ಒಬ್ಬ ಅದ್ವೈತದ ಪಂಡಿತರು ಭಾಗವತದ ಅರ್ಥ ವಿವರಣೆಯನ್ನು ತಮ್ಮ ಸಿದ್ಧಾಂತ ರೀತ್ಯಾ ಅನುವಾದ ಮಾಡಿದರು.ಅಲ್ಲಿ ಒಂದು ಕೃಷ್ಣನ ಪ್ರತಿಮೆ ಇತ್ತು , ಕಿವಿ ಮುಚ್ಚಿಕೊಂಡ ಭಂಗಿಯಲ್ಲಿ ಇತ್ತು . ಹಿಂಗ್ಯಾಕೆ ಅಂತ ರಾಜ ಪ್ರಶ್ನೆ ಮಾಡಿದ .ಇದೇ chance ಕಾಯ್ತಾ ಇದ್ದರು ಕೃಷ್ಣಾಚಾರ್ಯರು . ಕೃಷ್ಣಾಚಾರ್ಯರು ಅಂದ್ರು , ಈಗ ಏನು ಅದ್ವೈತಿಗಳು ಬ್ರಹ್ಮ ನಿರ್ಗುಣ etc ಹೇಳಿದ್ದಾರೆ ಇದನ್ನು ಸಹಿಸಲಾರದೇ ಕೃಷ್ಣ ಕಿವಿ ಮುಚ್ಚಿಕೊಂಡಾನ ಅಂತ .ಪೂರ್ಣವಾದ ಸತ್ಯವನ್ನು ಹೇಳ್ತೀನಿ ,ಅವಕಾಶ ಕೊಟ್ಟರೆ ಹೇಳ್ತೀನಿ ಅಂದ್ರು ಆಚಾರ್ಯರು.ಸರಿ ಅಂದ ರಾಜ.ಆವಾಗ ,ಆಚಾರ್ಯರು ಶ್ರೀಮದ್ಭಾಗವತವನ್ನು ಶ್ರೀಮದಾಚಾರ್ಯರ  ತಾತ್ಪರ್ಯ ನಿರ್ಣಯದ ಸಮೇತವಾಗಿ ಅನುವಾದ ಮಾಡಿ, ಕೊನೆಗೆ ಹೇಳಿದರು , ಎತಾವತಾ ಪ್ರಭು: ದೇವ: ಏತತ್ ಗ್ರಂಥಪ್ರತಿಪಾದ್ಯ: ವಿಷ್ಣು: ಏವ ಸರ್ವೋತ್ತಮ: ಸರ್ವಗುಣಪರಿಪೂರ್ಣ:ಸಮಸ್ತದೋಷದೂರ: ಸಕಲಜಗಜ್ಜನ್ಮಾದಿಕಾರಣ: ಇತಿ ಸಿದ್ಧಂಈ ಭಾಗವತ ಗ್ರಂಥ ಪ್ರತಿಪಾದ್ಯ ನಾದ ವಿಷ್ಣು ನೇ ಸರ್ವೋತ್ತಮ , ಸಕಲಗುಣ ಪರಿಪೂರ್ಣ , ಸಕಲದೋಷದೂರ , ಜಗಜ್ಜನ್ಮಾದಿಕಾರಣ ಇದು ಸಿದ್ಧವಾಗುತ್ತದೆ ಅಂತ ನಿರ್ಣಯಿಸಿದರು .ಇದು -ಅರ್ಥಾತ್ ಶ್ರೀಮದಾಚಾರ್ಯರ ಸಿದ್ಧಾಂತ ಪೂರ್ಣವಾಗಿ ನನಗೆ ಸಮ್ಮತವಾದದ್ದು , ಇದು ಸತ್ಯ ಅಂತ ನಿದರ್ಶನ ರೂಪದಲ್ಲಿ ಶ್ರೀಕೃಷ್ಣ ಕಿವಿಯ ಮೇಲಿನ ಕೈಗಳನ್ನು ತಗೆದು ಕೊಳಲು ನಾದನ ಮಾಡುವ ಭಂಗಿಯಲ್ಲಿ ನಿಂತ.  ಆಗ ತಂಜಾವೂರು ಮಹಾರಾಜನಿಗೆ ಮತ್ತು ಅಲ್ಲಿ ಇದ್ದ ಎಲ್ಲಾರಿಗೂ , ಶ್ರೀಮನ್ಮಧ್ವಸಿಧ್ಧಾಂತದ  ಶಾಸ್ತ್ರ ವೇ ಪೂರ್ಣ ವಾದ ಸತ್ಯ ಅಂತ ನಿಶ್ಚಿತ ಆಯಿತು . ಶ್ರೀಕೃಷ್ಣನ ಈ ಶುಭವಾದ ಅಭಿನವ ಭಂಗಿಗೆ ಕಾರಣೀಕರ್ತರು ಆದ ಇವರಿಗೆ ಶ್ರೀ ಸತ್ಯಾಭಿನವ ತೀರ್ಥರುಶ್ರೀ ಸತ್ಯಪೂರ್ಣತೀರ್ಥರು ಅಂತ ಅನ್ವರ್ಥಕ ನಾಮಕರಣವನ್ನು ಮಾಡಿ ಪೀಠವನ್ನು ಕೊಟ್ಟರು .ಕಂಚೀ ವರದರಾಜನಿಗೆ ಅದ್ಭುತವಾದ ಪದಕದ ಹಾರವನ್ನು ಸಮರ್ಪಣ ಮಾಡಿದ್ದು ಬಹಳ ವಿಶೇಷ . ಈಗಲೂ ಈ ಹಾರವನ್ನು ವಿಶೇಷ ಉತ್ಸವಗಳ ಸಂದರ್ಭಗಳಲ್ಲಿ ನೋಡಬಹುದು . ಅರ್ಚಕರು ಸತ್ಯಪೂರ್ಣ ತೀರ್ಥರಿಂದ ಸಮರ್ಪಿಸಲ್ಪಟ್ಟ ಹಾರ ಅಂತ ಹೇಳಿ ತೋರಿಸುತ್ತಾರೆ. ಕೃಷ್ಣಾಜಿ ಪಂಥರ ಉದ್ಧಾರ, ಉಡುಪಿಯಲ್ಲಿ ವಿಶೇಷವಾದ ಕೃಷ್ಣನ ಸೇವೆ ,ತಿರುಪತಿಯಲ್ಲಿ ಶ್ರೀನಿವಾಸನ ಸೇವೆ ವಿಶೇಷವಾಗಿ ಪರಮಾತ್ಮನ "ಪೂರ್ಣ" ಅನುಗ್ರಹ ಕ್ಕೆ ಪಾತ್ರರಾದವರು .ತಿರುಪತಿಯ ಬೆಟ್ಟ ಹತ್ತಬೇಕಾದರೇ ನೇ ಇವರಿಗೆ ತಮ್ಮ ಉತ್ತರಾಧಿಕಾರಿಗಳ ಸೂಚನೆ ಯೂ ಅದ್ಭುತ ರೀತಿಯಲ್ಲಿ ಆಯಿತು . ಬೆಟ್ಟ ಹತ್ತಬೇಕಾದರೆ ಸ್ವಲ್ಪ ಆಯಾಸ ಆಯ್ತು . ಆಗ ಶಿಷ್ಯರು ನಮ್ಮ ಕೈ ಹಿಡಿದು ಹತ್ತಿರಿ ಅಂತ ಹೇಳಿದಾಗ , ಸ್ವಾಮಿಗಳು ಒಂದು condition ಹಾಕಿದರು. ಯಾರು ತಿಥಿ ತ್ರಯ ವ್ರತ ವನ್ನು ಬ್ರಹ್ಮಚರ್ಯಾದಿ ವ್ರತ ನಿಷ್ಠೆಯಿಂದ ಮಾಡ್ತೀರಿ ಅವರ ಕೈ ಹಿಡಿದು ಹತ್ತುತ್ತೇನೆ ಅಂದ್ರು . ಆಗ ಮುಂದ ಬಂದವರು ಅಂದ್ರೆ ರಾಮಾಚಾರ್ಯರು ಅಂತ. ರಾಮಾಚಾರ್ಯರು ಹಾಗೂ ಸ್ವಾಮಿಗಳು ಪೂರ್ತಿ ಶ್ರೀಮನ್ನ್ಯಾಯ ಸುಧಾ , ಅನುವ್ಯಾಖ್ಯಾನ ಮುಖೋದ್ಗತ ವಾಗಿ ಪಾರಾಯಣ ಮಾಡುತ್ತಾ ಬೆಟ್ಟ ಹತ್ತಿದರು . ಈ ರಾಮಾಚಾರ್ಯರು ಈ ಪೀಠಕ್ಕೆ ಕೂದಲು ಯೋಗ್ಯರು ಅಂತ ಅಲ್ಲಿ ಅವರಿಗೆ ಒಂದು ಗಿಳಿಯ ಮೂಲಕ ಸೂಚನೆ ಯಾಗಿ ಅವರಿಗೆ ಶ್ರೀ ಸತ್ಯವರ್ಯ ತೀರ್ಥರು ಅಂತ ನಾಮಕರಣ ಮಾಡಿದರು , ಇವರೇ ಮುಂದ ಶ್ರೀ ಸತ್ಯವಿಜಯರ ನಂತರ "ಶ್ರೀ ಸತ್ಯಪ್ರಿಯ " ತೀರ್ಥರಾಗಿ ಉತ್ತರಾದಿ ಮಠದ ಪೀಠವನ್ನು ಅಲಂಕರಿಸಿದರು .ಇನ್ನೂ ಅನೇಕ ಮಹಿಮಗಳಿವೆ , ಗುರುಗಳು ಸ್ಮೃತಿಗೆ ತಂದು ಕೊಟ್ಟಿದ್ದಷ್ಟು ಇಲ್ಲಿ ಸ್ಮೃತಿಗೆ ತರುವ ಪ್ರಯತ್ನ .ಇಂಥಾ ಶ್ರೀಸತ್ಯಪೂರ್ಣ ತೀರ್ಥರು ,ನಮ್ಮ ನಮ್ಮ ಯೋಗ್ಯತಾನುಸಾರ ಪರಮಾತ್ಮನ ಪೂರ್ಣ ಅನುಗ್ರಹ ಆಗಲಿಕ್ಕೆ , ಸತ್ಯ ನಾಮಕ ಪರಮಾತ್ಮನಿಗೆ ಪ್ರಿಯ ವಾದ ಶಾಸ್ತ್ರಗಳ ಬೋಧ ನಮಗೆ ಆಗಿ ಸಂಸಾರದ ತಾಪತ್ರಯಗಳ ಮೇಲೆ ವಿಜಯ ವನ್ನು ತಂದುಕೊಡುವಂತೆ ಶ್ರೀ ಸತ್ಯಪೂರ್ಣ ತೀರ್ಥರು ಅನುಗ್ರಹಿಸಲಿ ಅಂತಪ್ರಾರ್ಥಿಸುತ್ತಾ ಶ್ರೀ ಸತ್ಯಪೂರ್ಣ ತೀರ್ಥ ಗುರುಭ್ಯೋ ನಮಃ. ****
ಶ್ರೀ ಸತ್ಯಪೂರ್ಣ ತೀರ್ಥರು ಜ್ಯೇಷ್ಠ ಕೃ. ದ್ವಿತೀಯಾಕೊಲಪುರ   ಮಧುಸೂದನ ಕಲಿಭಟ್ ಬೆಂಗಳೂರು (ಧಾರವಾಡ ) 
ಶ್ರೀ ಸತ್ಯಾಭಿನವರಿಂದ ಆಶ್ರಮ ಸ್ವೀಕಾರ ಮಾಡಿದರು.  ಇವರ ಪೂರ್ವಾಶ್ರಮ ನಾಮ ಕೊಲ್ಹಾಪುರ ಕೃಷ್ಣಾಚಾರ್ಯ.  ಅಂದಾಜು 20ವರ್ಷ ಸಂಸ್ಥಾನವನ್ನು ಆಳಿದರು. ಶ್ರೀ ರಾಘವೇಂದ್ರರು ದನಕಾಯುವ ವೆಂಕಣ್ಣನಿಗೆ ಅನುಗ್ರಹಿಸಿದಂತೆ, ಸತ್ಯಪೂರ್ಣರು ಕಂಚಿಯಲ್ಲಿ ಒಬ್ಬ ಅನಾಥ ಕುಂಟ ದರಿದ್ರ ಬಾಲಕನಿಗೆ ಅನುಗ್ರಹಿಸಿದ ಕಥೆ ಶ್ರೀಗಳವರ ಚರಿತ್ರೆಯಲ್ಲಿ ಚಿರಸ್ಮರಣೀಯ ಆಗಿದೆ. ಕೃಷ್ಣಾಜಿ ಪಂತ ಎಂಬ ಬಡವ ಅನಾಥ ಬಾಲಕ ಕಂಚಿಯಲ್ಲಿ ವಾಸವಾಗಿದ್ದನು.  ಭಕ್ತರೆಲ್ಲ ಶ್ರೀಪಾದರನ್ನು ಪಾದಪೂಜೆಗೆ ಕರೆದಾಗ ಈ ಬಾಲಕನು ತನ್ನ ಗುಡಿಸಲಿಗೆ ಕರೆದನು.  ಶ್ರೀಗಳು ಉಳಿದವರ ಮಾತು ಕೇಳದೆ ಅಲ್ಲಿಗೆ ಹೋದರು.  ಅವನಲ್ಲಿ ಪಾದಪೂಜೆಗೆ ತಂಬಿಗೆಯು ಇರಲಿಲ್ಲ.  ದಿವಾನರಿಂದಲೇ ಎಲ್ಲ ಸಾಮಗ್ರಿ ಪಡೆದು ಮನೆಯಲ್ಲಿಯ ಹಳೆಯ ಬೆಳ್ಳಿ ತಟ್ಟೆ ತುಣಕಿನಲ್ಲಿ ಬತ್ತಿ ಹಾಕಿ ಗುರುಗಳಿಗೆ ಆರತಿ ಮಾಡಿದನು.  ಶ್ರೀಗಳು ಮಂತ್ರಾಕ್ಷತೆ ಕೊಟ್ಟರು ಆಶಿರ್ವಾದ ಮಾಡಿದರು. ದಿನಕಳೆದಂತೆ ಒಬ್ಬ ಶ್ರೀಮಂತ ಆ ಬಾಲಕನನ್ನು ಗುಮಾಸ್ತ ನಾಗಿ ಮಾಡಿಕೊಂಡನು.  ಇದನ್ನು ಕಂಡ ಅಲ್ಲಿಯ ಮಾಮಲೇದಾರನು ಪಂತನನ್ನು ತನ್ನಲ್ಲಿ ಹೆಚ್ಚು ಪಗಾರ ಕೊಟ್ಟು ಇಟ್ಟುಕೊಂಡನು.  ಒಂದು ಸಲ ಹಳ್ಳಿಗಳ ಲೆಕ್ಕ ಬರೆದು ಹೈದರಾಬಾದ್ ನವಾಬನಿ ಗೆ ತೋರಿಸಲು ಈತನನ್ನು ಕರೆದುಕೊಂಡು ಹೋದರು.  ನವಾಬನ ಎದುರು ಬಾಯಿಪಾಠ ವಾಗಿ  ಎಲ್ಲಹಳಿಗಳ ಲೆಕ್ಕ ಹೇಳಿದ ಜಾಣ ಬಾಲಕನನ್ನು ನವಾಬನು ತನ್ನ ದರ್ಬಾರಿನಲ್ಲಿ ದಿವಾನ ಪದವಿ ಕೊಟ್ಟನು.  ಗುರುಗಳ ದಯೆ ಆಶೀರ್ವಾದದಿಂದ ದರಿದ್ರನಾದ ಕೃಷ್ಣಾಜಿ ದಿವಾನ ಪದವಿಗೆ ಏರಿದನು.  ದಿನ ನಿತ್ಯ ಗುರುಗಳ ಆಗಮನ ದಾರಿ ನೋಡುತ್ತದನು.  ಹೀಗಿರಲಾಗಿ ಒಂದು ದಿನ ಗುರುಗಳ ಸಂಸ್ಥಾನ ಹೈದೆರಾಬಾದಿಗೆ ಆಗಮಿಸಿತು.  ಪಂತನು ಗುರುಗಳಿಗೆ ದೇವರಿಗೆ ಹವಳ, ಮುತ್ತು, ಪಚ್ಛೆ, ಬಂಗಾರದ ಆಭರಣ ದಾನಮಾಡಿದನು.  ಅಲ್ಲದೆ ಮಠಕ್ಕೆ ಬಂಗಾರದ ಹತ್ತು ಭಾರದ ಸರಪಳಿ ಕೊಟ್ಟನು.  ಪಂತನು  ದಿವಾನ ಪದವಿಗೆ ಬಂದ ಮೇಲೆ ಮಗನಿಗಾಗಿ ವಜ್ರದ ತೊಟ್ಟಿಲನ್ನು ಮಾಡಿಸಿದ್ದನು. ಸತ್ಯಪೂರ್ಣರು ದಿವಾಣ ಕೃಷ್ಣಾಜಿಗೆ ಏನೂ ದಿವಾನರೇ ತೊಟ್ಟಿಲು ರಾಮದೇವರಿಗೋ ಅಥವಾ ನಿಮ್ಮ ಮಗನಿಗೋ  ಎಂದಾಗ ದಿವಾನ ತೊಟ್ಟಿಲನ್ನು ಶ್ರೀ ಮಠಕ್ಕೆ ದಾನ ಮಾಡಿದನು.  ಈ ತೊಟ್ಟಿಲು ಮತ್ತು ಬಂಗಾರದ ಸರಪಳಿ ಇಂದಿಗೂ ಶ್ರೀಮಠದಲ್ಲಿ ಇದೆ.  ಗುರುಗಳು ತಿರುಪತಿಗೆ ಹೋದಾಗ ದೇವರಿಗೆ ಬೆಳ್ಳಿ ಬಂಗಾರದ ಪಾತ್ರೆ ಗಳನ್ನು ದಾನವಾಗಿ ಕೊಟ್ಟಿರುವದನ್ನು ಈಗಲೂ ತಿರುಪತಿಯಲ್ಲಿ ಗುರುಗಳ ಹೆಸರು ಹಾಕಿದ ಪಾತ್ರೆ ನೋಡಬಹುದು. ತಿರುಪತಿಯ ಬೆಟ್ಟ ಹತ್ತ ಬೇಕಾದಾಗ ಶಿಷ್ಯರಿಗೆ ಬಾಯಿಪಾಠ ಸರ್ವಮುಲ ಗ್ರಂಥ ಪಠನೆಗೆ ಕರೆದರು.  ಯಾರೂ ಮುಂದೆ ಬರಲಿಲ್ಲ. 
 ಗಾರ್ಲವಾಡ ರಾಮಾಚಾರ್ಯರೆಂಬ ಶಿಷ್ಯರು ಸುಧಾ ಪಠನೆ ಮಾಡುತ್ತ ಬೆಟ್ಟವನ್ನು ಗುರುಗಳ ಜೊತೆಗೆ ಏರಿದರು.  ಶಿಷ್ಯರೆಲ್ಲ ಭಲೇ ಎಂದು ರಾಮಾಚಾರ್ಯರಿಗೆ ನಮಸ್ಕರಿಸಿದರು.  ವೆಂಕಟೇಶನ ದ್ವಾರ ಬಳಿ ಒಂದು ಗಿಳಿ ಬಂದು ಗುರುಗಳ ಎದುರಿಗೆ ಸತ್ಯ ಸತ್ಯ ಸತ್ಯ ಎಂದು ನುಡಿದು ಮಾಯವಾಯಿತು.  ರಾಮಾಚಾರ್ಯರಿಗೆ ಸತ್ಯಪ್ರಿಯ ಎಂದು ಆಶ್ರಮಕೊಟ್ಟರು. ಆದರೆ ಆರೋಗ್ಯಸುಧಾರಿಸಿ ಮುಂದೆ ಸತ್ಯವಿಜಯರಿಗೆ ಆಶ್ರಮ ಕೊಟ್ಟು ನಂತರ ಆಶ್ರಮಜೇಷ್ಟ ರಾದ ಸತ್ಯಪ್ರಿಯರೇ ಹಂಸ ಪೀಠ ವೇರಿದರು .  ಹೀಗೆ ಮಠದ ರಾಮಚಂದ್ರ ದೇವರ ಕೀರ್ತಿ ಮೆರೆದ ಶ್ರೀ ಸತ್ಯಪೂರ್ಣ ತೀರ್ಥರ ಅಂ.  ಭಾ. ಮು.  ಅಂ. ಶ್ರೀ ದಿಗ್ವಿಜಯ ರಾಮನಿಗೆ ಅನಂತಾನಂತ ನಮಸ್ಕಾರಗಳು.       ಸಂಗ್ರಹ  ಮಧುಸೂದನ ಕಲಿಭಟ್.
****



No comments:

Post a Comment