info from sumadhwaseva.com--->
Satyadheera Tirtha
Poorvashrama Name : Sri Jayaramacharya
Ashrama Guru: Sri Satyaveera Theertha
Ashrama Shishya : Sri Satyajnana Theertha
Aradhana : Jeshta Bahula Navami
Vrundavana : Atakur in Kurnool district
Ashrama Period :1886-1906
Ashrama Guru: Sri Satyaveera Theertha
Ashrama Shishya : Sri Satyajnana Theertha
Aradhana : Jeshta Bahula Navami
Vrundavana : Atakur in Kurnool district
Ashrama Period :1886-1906
Aradhana – Jyesta Bahula Navami
Vrundavana – Athakooru
In Athakuru we have the Vrundavanas of Sri Satyakama, Sri Satyeshta, Sri Satyapragna Thirthar
ಸತ್ಯವೀರಾಲವಾಲೋತ್ಥ: ವಿದುಷಾಂ ಚಿಂತಿತಪ್ರದ: |
ಸತ್ಯಧೀರಾಖ್ಯಕಲ್ಪದ್ರು: ಭೂಯಾದಿಷ್ಟಾರ್ಥ ಸಿದ್ದಯೇ |
सत्यवीरालवालोत्थ: विदुषां चिंतितप्रद: ।
सत्यधीराख्यकल्पद्रु: भूयादिष्टार्थ सिद्दये ।
satyavIrAlavAlOtthaH viduShAM ciMtitapradaH
satyadhIrAKya kalpadruH bhUyAdiShTArtha siddhayE
satyadhIrAKya kalpadruH bhUyAdiShTArtha siddhayE
there are four vrindavanas @ athakooru.
1.sri satyakama teertharu
2.sri satyadheer teertharu
3.sri satyeshta teertharu and
3.sri satyaprajna teertharu.
dhanyavadagalu.
1.sri satyakama teertharu
2.sri satyadheer teertharu
3.sri satyeshta teertharu and
3.sri satyaprajna teertharu.
dhanyavadagalu.
********
info from madhwamrutha.org--->
Sri Satyadheera Theertha visited Bangalore, Hyderabad, Rameswaram, Kashi for propagation of Dwaitha Siddhanta. He organized scholarly discourses and debates by the pundits of three systems of philosophy and honoured them with large gifts. He made extensive travel throughout north and south and became unwell at Hyderabad. Knowing that his end was near, he gave Ashrama to Kinhal Jayacharya and named him as Satyajnana Theertha and made him as his successor. he entered Vrundavana at Atakur.
*******
jEshTa krishNa navami is the ArAdhane of shri satyadhIra tIrtharu of uttarAdi maTa.
Parampare: uttarAdhi maTa, #36
brindAvana: AthakUr on the banks of krishNa river
pUrvAshrama name: shri jayAchArya
He was the pUrvAshrama father of shri satyadhyAna tIrtharu.
In his pUrvAshrama, he used to do vAyu stuti punascharaNe praying for good health for his son (future satyadhyAna tIrtharu). One day a man appeared and blessed the child saying that everything would be fine and the child would become a sanyAsi. After that the man disappeared. shri jayAcharya realised it was none other than prANa dEvaru who had appeared.
Once he honoured all the maTa staff with expensive silk shawls as the staff requested for the same innocently. These were originally purchased for the panditharu that were invited for the upcoming ArAdhane of his gurugaLu.
During his sanchara he had installed a bhaktAnjaneya vigraha at Nellore on the banks of Uttara Pinakini.
shri satyadhIra tIrtha varada gOvindA gOvindA...
shri krishNArpaNamastu...
*******
info from uttaradimutt.org---> Shri Satyadheera Teertha was pontiff of the Shri Uttaradi Matha during the period from 1886 to 1906.
His Purvasahrama Name was Shri Jayacharya. After being initiated to Vedantha Samrajya, he took up the construction of Brindavana in Korlahalli to his beloved guru Shri Satyaveera Teertharu and performed Mahasamaradhana. Shri Satyadheera Teertharu visited Bangalore, Hyderabad ,Rameshawara , Kashi and many other places for the propagation of Dwaitha Siddhantha as a part of polemical tour.
Shri Satyadheera Teertha was a great soul and an admirable personality. He belonged to the popular Korlhalli lineage to which 3 of the pontiffs of Shri Uttaradi Math belonged.
Once the Mahasamaradhana of his guru was around the corner and all the preparations were going on. It has been the tradition of Shri Uttaradi Matha to honor the scholars by offering "shaals" (richly woven and decorated cloth) which is exclusive. This time, other workers of the Matha who hardly had any recognition for once wished to wear the "shaal" reserved only for the scholars, This came to HH's notice and in no time, His Holiness ordered numerous such shaals and distributed it among everyone as a mark of his love and appreciation to the selfless service of every class of people associated with Shri Matha. Shri Satyadheera Teertha ordained Shri Kinhal Jayacharya and named him as Shri Satyajnyana Teertha to the pontificate throne of Shri Uttaradi Matha and entered the Brindavana in Atkur on 1906 , Parabhava Jeshtha Krishana Navami ,on the bank of river Krishna.
Contact Details
In uttaradimutt.org it is stated as Korlahalli. Please phone bangalore office and enquire why it is so
Giving below the details correctly
Place: Atkur Phone no: 9739726649/9341679860Atkur 584102 karnataka*******
Here is a clip on Sri. Satyadheera TeertharuA brief insight into the illustrious personality of His Holiness Sri Sri 1008 Sri Satyadheera Tirtha Sripad, who adorned this glorius peetha for almost 20 years and who also happened to be the poorvashram father of Sri Sri Satyadhyan Tirtha Sripad. This audio clip is an edited version of a series of lecture rendered by Poojya Vidwan Shrikantachrya Chekkerur.
Here is a clip on Sri. Satyadheera TeertharuA brief insight into the illustrious personality of His Holiness Sri Sri 1008 Sri Satyadheera Tirtha Sripad, who adorned this glorius peetha for almost 20 years and who also happened to be the poorvashram father of Sri Sri Satyadhyan Tirtha Sripad. This audio clip is an edited version of a series of lecture rendered by Poojya Vidwan Shrikantachrya Chekkerur.
***
ಬರಹ: ಫಣೀಂದ್ರ ಕೆ
ಶ್ರೀ ಸತ್ಯಧೀರ ತೀರ್ಥರು
|| ಸತ್ಯವೀರಾಲವಾಲೋತ್ಥ: ವಿದುಷಾಂ ಚಿಂತಿತಪ್ರದ: | ಸತ್ಯಧೀರಾಖ್ಯಕಲ್ಪದ್ರು: ಭೂಯಾದಿಷ್ಟಾರ್ಥ ಸಿದ್ದಯೇ ||
ಶ್ರೀ ಉತ್ತರಾಧಿ ಮಠದಯತಿ ಪರಂಪರೆಯಲ್ಲಿ ಬರುವ ಮಹಾಜ್ನ್ಯಾನಿಗಳು ವಿರಕ್ತಶಿಖಾಮಣಿಗಳು ಆದ ಆತಕೂರು ನಿವಾಸಿಗಳಾದ, ಪೂರ್ವಾಶ್ರಮದಲ್ಲಿ ಕೊರ್ಲಹಳ್ಳಿ ಮನೆತನದ ಪ್ರಖಾಂಡ ಪಂಡಿತರು. ಮಹಾ ವ್ಯಾಕರಣ ಮತ್ತು ತರ್ಕಶಾಸ್ತ್ರ ವಿದ್ವಾ೦ಸರು. ಶ್ರೀ ಸತ್ಯವೀರ ತೀರ್ಥರ ಶಿಷ್ಯರು ಮತ್ತು ಶ್ರೀ ಸತ್ಯಜ್ನ್ಯಾನ ತೀರ್ಥರ ಗುರುಗಳಾದ, ಪಂಡಿತರ ಮೆಚ್ಚಿನ ಗುರುಗಳಾದ ಶ್ರೀ ಸತ್ಯಧೀರ ತೀರ್ಥರ ಆರಾಧನಾ ಮಹೋತ್ಸವ. ಮಧ್ವಸಿದ್ದಾಂತದಲ್ಲಿ ಮಾಯಿಗಳಿಗೆ ಸಿಂಹ ಸ್ವಪ್ನರಾಗಿದ್ದ ಶ್ರೀ ಸತ್ಯಧ್ಯಾನ ತೀರ್ಥ ಶ್ರೀಪಾದಂಗಳವರ ಪೂರ್ವಾಶ್ರಮದ ತಂದೆಯವರು. ದ್ವೈತ ಸಿದ್ದಾಂತ ಪ್ರತಿಪಾದನೆಗೆ ಉತ್ತರ ಭಾರತ ಮತ್ತು ದಕ್ಷಿಣ ಭಾರತಗಳ ಅನಿರ್ದಿಷ್ಟ ಸಂಚಾರ ಮಾಡಿದ ಮಹನೀಯರು. ಶ್ರೀಮದಾಚಾರ್ಯರಿಂದ 36 ನೇ ಯತಿಗಳು. ಅನುಷ್ಠಾನ ಮತ್ತು ತಪಸ್ಸಿಗೆ ಪೂರ್ವಾಶ್ರಮ ಮತ್ತು ಯತ್ಯಾಶ್ರಮದಲ್ಲೂ ಪ್ರಸಿದ್ಧರಾಗಿದ್ದವರು.
ಪೂರ್ವಾಶ್ರಮ ನಾಮ : ಶ್ರೀ ಕೊರ್ಲಹಳ್ಳಿ ಜಯರಾಮಚಾರ್ಯರು ( ಜಯಾಚಾರ್ಯರು)ಆಶ್ರಮ ಗುರುಗಳು : ಶ್ರೀ ಸತ್ಯವೀರ ತೀರ್ಥರುಆಶ್ರಮ ಶಿಷ್ಯರು : ಶ್ರೀ ಸತ್ಯಜ್ನ್ಯಾನ ತೀರ್ಥರುಆರಾಧನಾ : ಜೇಷ್ಠ ಬಹುಳ ನವಮಿವೃಂದಾವನ ಸ್ಥಳ : ಆತಕೂರುವೇದಾಂತ ಸಾಮ್ರಾಜ್ಯ ಕಾಲ : 1886 - 1906
ಇವರು ಪೂರ್ವಾಶ್ರಮದಲ್ಲಿ ಮಧ್ಯಮ ವರ್ಗದ ಕುಟುಂಬ ವಾಗಿತ್ತು. ಒಟ್ಟು ಏಳು ಜನ ಪುತ್ರಿಯರು ಮತ್ತು ಒಬ್ಬ ಗಂಡು ಮಗ ಅವರಿಗೆ ರಾಘವೇಂದ್ರ ಎಂದು ಹೆಸರಿಟ್ಟಿದ್ದರು. ಆದರೆ ದುರಾದೃಷ್ಟವಶಾತ್ ಅರ್ಧ ವಯಸ್ಸಿನಲ್ಲಿ ದೈವಾಧೀನರಾದರು. ಮೂರು ವರ್ಷದ ನಂತರ ಹುಟ್ಟಿದ ಮಕ್ಕಳೇ ಶ್ರೀ ಸೇತುರಾಮಾಚಾರ್ಯರು. ಒಂದು ಹೊಲವನ್ನು ಖರೀದಿ ಮಾಡಿ ಇಟ್ಟಿರುತ್ತಾರೆ, ಕಾರಣ ನಮಗೆ ಆಶ್ಚರ್ಯವಾಗಬಹುದು ಏಕೆಂದರೆ ಮುಂದೆ ಇದು ಮಧ್ವಶಾಸ್ತ್ರ ಓದುವ ವಿದ್ಯಾರ್ಥಿಗಳಿಗೆ ವಾಸ್ತವ್ಯ ಮತ್ತು ಊಟೋಪಚಾರಗಳಿಗೆ ಅನುಕೂಲವಾಗಲಿ ಎಂದು. ಶಿಷ್ಯರ ಪೋಷಣೆ ಮಾಡುವದೇ ಇವರ ಮೊದಲ ಆದ್ಯತೆ. ಪೂರ್ವಾಶ್ರಮದಲ್ಲೇ ಪ್ರಖಾಂಡ ಪಂಡಿತರಾಗಿದ್ದ ಶ್ರೀ ಜಯರಾಮಚಾರ್ಯರಿಗೆ ಶ್ರೀ ಸತ್ಯವೀರ ತೀರ್ಥರು, ತುರ್ಯಾಶ್ರಮವನ್ನು ನೀಡಿ ''ಶ್ರೀ ಸತ್ಯ ಧೀರ ತೀರ್ಥರು" ಎಂದು ನಾಮಕರಣ ಮಾಡಿದರು. 1888 ರಲ್ಲಿ ಶ್ರೀ ಸತ್ಯವೀರ ತೀರ್ಥರು ಹರಿಪದವನ್ನು ಸೇರಿದರು. ಅವರ ವೃಂದಾವನ ನಿರ್ಮಾಣವನ್ನು ಕೊರ್ಲಹಳ್ಳಿಯಲ್ಲಿ ನಿರ್ಮಿಸಿ ಗುರುಗಳ ಮಹಾಸಮಾರಾಧನೆ ಮಾಡಿದರು. ಅನೇಕರಿಗೆ ಬೆಳ್ಳಿಯ ಪಾತ್ರೆ ಮತ್ತು ರೇಷ್ಮೆಯ ವಸ್ರ್ತಗಳನ್ನೂ ಕೊಟ್ಟರು. ಗುರುಗಳ ಮೃತ್ತಿಕಾ ವೃಂದಾವನವನ್ನು ಆರಣಿಯಲ್ಲಿ ಶ್ರೀ ಸತ್ಯವಿಜಯ ತೀರ್ಥರ ವೃಂದಾವನ ಸನ್ನಿದಿಯಲ್ಲಿ ಪ್ರತಿಷ್ಠಾಪಿಸಿದರು.
ತಪ್ತ ಮುದ್ರಾಧಾರಣ ಇದು ಆಶಾಸ್ತ್ರೀಯ ಎಂದು ಆಕ್ಷೇಪ ಮಾಡಿದಾಗ ಒಂದು ದೊಡ್ಡ ಸಭೆ ಮಾಡಿ ಇದು ವೈದಿಕ ಸಂಪ್ರದಾಯ ಎಂದು ಆಕ್ಷೇಪ ಖಂಡನೆ ಮಾಡಿದ ಮಹನೀಯರು ಶ್ರೀ ಸತ್ಯಧೀರ ತೀರ್ಥರು. ಇಂದು ನಾವು ನೋಡುವ ಪ್ರವಚನ ಸಭೆಗಳು ಮಾಧ್ವಸಿದ್ದಾಂತದಲ್ಲಿ ಮಠಗಳಲ್ಲಿ ನಡೆಯುತ್ತಿದೆ ಎಂದರೆ ಇವರ ಕೊಡುಗೆ ಅಪಾರ.
ಶತಮಾನದ ಶಕಪುರುಷರಾದ "ಶ್ರೀ ಸತ್ಯಧ್ಯಾನ ತೀರ್ಥರ" ವಿದ್ವತ್ತನ್ನು ತೋರಿಸಲು ಮಾರ್ಗದರ್ಶನ ಮಾಡಿದ ಮಹನೀಯರು ಶ್ರೀ ಸತ್ಯಧೀರ ತೀರ್ಥರು. ಪೂರ್ವಾಶ್ರಮದಲ್ಲಿ ಸೇತುರಾಮಚಾರ್ಯರು ಮುಂದೆ ಸತ್ಯಧ್ಯಾನ ತೀರ್ಥರಾದದ್ದು. ಪೂರ್ವಾಶ್ರಮದಲ್ಲಿ ಶ್ರೀ ಸತ್ಯಧೀರರ ಪುತ್ರರೇ ಶ್ರೀ ಸೇತುರಾಮಚಾರ್ಯರು.
ಇವರ ಜೀವನದ ಮುಖ್ಯ ಸಾಧನೆಗಳು ಎಂದರೆ
೧. ಪಾದಚಾರಿಗಳಾಗಿ, ಪಾದಯಾತ್ರೆಯ ಮುಖಾಂತರ ರಾಮೇಶ್ವರ ಯಾತ್ರೆ ಮಾಡಿದ್ದು.ವಿಶೇಷ ವೆಂದರೆ ಸರ್ವಮೂಲ ಗ್ರಂಥಗಳನ್ನು 108 ಬಾರಿ ಪಾರಾಯಣ ಮಾಡುತ್ತಾ ಪಾದಾಚಾರಿಗಳಾಗಿ ರಾಮೇಶ್ವರ ಯಾತ್ರೆ ಮಾಡಿದ್ದು. ಮಹಾಭಾರತ ತಾತ್ಪರ್ಯ ನಿರ್ಣಯ ಮತ್ತು ಮಧ್ವಭಾಷ್ಯ ಸದಾ ಪಾರಾಯಣ ಮಾಡುತ್ತಿದ್ದದ್ದು.
೨. ಬಹಳ ಮೃದು ಸ್ವಭಾವ ಮತ್ತು ಪ್ರಖಾಂಡ ಪಾಂಡಿತ್ಯ - ಶ್ರೀ ಸತ್ಯಧ್ಯಾನ ತೀರ್ಥರ ನೋಡಿದರೆ ಇವರ ವ್ಯಕ್ತಿತ್ವ ಎಂತಹದು ಎಂದು ತಿಳಿಯಬಹುದು
೩. ಮಠದ ಪರಿಚಾರಕರಿಗೆ ರಾಮದೇವರ ಪ್ರಸಾದ ರೂಪದಲ್ಲಿ ಬಂಗಾರದ ರೇಷ್ಮೆಜರಿ ಶಾಲನ್ನು ಕೊಟ್ಟದ್ದು ಒಮ್ಮೆ ಸತ್ಯವೀರ ತೀರ್ಥರ ಮಹಾ ಸಮಾರಾಧನೆ ಪಂಡಿತ ಮಂಡಳಿಗಳಿಗಾಗಿ ಶ್ರೀ ಮಠದಲ್ಲಿ ಬಣ್ಣ ಬಣ್ಣದ ರೇಷ್ಮೆ ಶಾಲನ್ನು ಪ್ರಸಾದ ರೂಪವಾಗಿ ಕೊಡಲು ಇಟ್ಟಿರುತ್ತಾರೆ. ಒಂದು ದಿನ ಇವರ ಪಾದ ಸೇವಕ ರಾಜಪ್ಪ ಅಥವಾ ರಾಜಣ್ಣ ಎಂದು ಕರೆಯುತ್ತಿರುತ್ತಾರೆ. ಇವರು ಸುಮಾರು 500 ಜನಕ್ಕೆ ಮೃಷ್ಟಾನ್ನ ಭೋಜನ ಮಾಡಿ ಬಡಿಸುವವರು, ಅವರು ಶ್ರೀ ಸತ್ಯಧೀರ ತೀರ್ಥರ ಪಾದ ಸೇವೆ ಸಮಯದಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಾನೆ, ಮೃದು ಸ್ವಭಾವದ ಶ್ರೀ ಸತ್ಯಧೀರ ತೀರ್ಥರು ಯಾಕೆ ಅಳುತ್ತಿದ್ದೀಯ ಎಂದು ಕೇಳಿದಾಗ, ರಾಜಣ್ಣ ಸ್ವಾಮಿ ಈ ಚಂದದ ಶಾಲುಗಳನ್ನು ಕೇವಲ ಪಂಡಿತರೇ ಧರಿಸುತ್ತಾರೆ, ನನಗೆ ಯಾವುದೇ ಜ್ನ್ಯಾನವಿಲ್ಲಾ ಆದರೆ ರಾಮದೇವರ ಸೇವೆ ಮಾತ್ರ ದೊಡ್ಡದು, ನನಗು ಒಂದು ಶಾಲನ್ನು ಕೊಡಿ ಮಠದ ಹೊರಗೆ ಹಾಕಿಕೊಳ್ಳುತ್ತೀನೆ ಎಂದು ಕೇಳಿದಾಗ, ಗುರುಗಳು ತಾವೇ ಹೋಗಿ ನಿನಗೆ ಯಾವ ಬಣ್ಣದ ಶಾಲು ಬೇಕೋ ತೆಗೆದೆಕೊ ಎಂದು ನಿರ್ಮಲ ಮನಸ್ಸಿನಿಂದ ಕೊಡುತ್ತಾರೆ. ಯಾರಿಗೂ ಹೇಳಬೇಡ ಒಬ್ಬನೇ ಇದ್ದಾಗ ಧರಿಸಿಕೋ ಎಂದು ಹೇಳಿ ಕಳುಹಿಸುತ್ತಾರೆ. ಸ್ವಾಮಿಗಳು ಅನುಗ್ರಹ ಮಾಡಿ ಕೊಟ್ಟಿದ್ದು, ಹೇಗೆ ಮುಚ್ಚಿಟ್ಟು ಕೊಳ್ಳಲು ಸಾಧ್ಯ? ಶಾಲನ್ನು ಹೊದ್ದುಕೊಂಡು ಎಲ್ಲ ಕಡೆ ಓಡಾಡಿಬಿಟ್ಟ ಆನಂದದಿಂದ. ಇದನ್ನು ನೋಡಿದ ಕೆಲವು ಪರಿಚಾರಕರು ನಮಗೂ ರಾಮದೇವರ ಪ್ರಸಾದ ಕೊಡಿ ಎಂದು ಕೇಳಿದಾಗ, ಮಹಾಸಮಾರಾಧನೆಗೂ ಮೊದಲೇ ಎಲ್ಲರಿಗು ರೇಷ್ಮೆ ಶಾಲನ್ನು ಕೊಟ್ಟು ಬಿಡುತ್ತಾರೆ, ಆಚೆ ಹೋಗಿದ್ದ ದಿವಾನರು ಶ್ರೀ ಸೇತುರಾಮಾಚಾರ್ಯರು ಬಂದು ನೋಡಿ ಆಗಲೇ ಎಲ್ಲಾ ಪಂಡಿತರು ಬಂದಿದ್ದಾರೆ ಎಂದು ನೋಡಲು ಪರಿಚಾರಕರು ಆ ವಸ್ತ್ರಗಳನ್ನು ಹೊದ್ದು ಸಂತಸದಿಂದ ಇದ್ದಾಗ, ದಿವಾನರು ಪರಿಚಾರಕರಿಗೆ ನಿಮಗೆ ಯಾರು ಕೊಟ್ಟದ್ದು ಎಂದು ಸಿಟ್ಟಿನಿಂದ ಕೇಳಿದರು. ಈ ಗಲಾಟೆ ನಡೆಯುತ್ತಿದ್ದನ್ನು ಕೇಳಿದ ಶ್ರೀ ಸತ್ಯಧೀರ ತೀರ್ಥರು ಕೆಳಗಡೆ ಬಂದು ಇವರು ರಾಮ ದೇವರ ಭಕ್ತರು, ಆ ಪಂಡಿತರಿಗೆ ಇಲ್ಲಿ ಅಲ್ಲದಿದ್ದರೆ ಇನ್ನೆಲ್ಲಿಯಾದರು ಮರ್ಯಾದೆ ಗೌರವ ಕೊಡುತ್ತಾರೆ, ಆದರೆ ಈ ಶ್ರೀ ಮಠದ ಪರಿಚಾರಕರು ಯಾವಾಗಲೂ ತಮ್ಮ ಮನೆಕಡೆ ಗಮನ ಕೊಡದೆ ಇಲ್ಲಿ ಸದಾ ಕೆಲಸ ಮಾಡುತ್ತಾರೆ ಅವರಂತೆ ಇವರು ಕೂಡ ರಾಮ ದೇವರ ಭಕ್ತರು ಇವರಿಗೂ ಕೊಡಬೇಕು ಎಂದು ಹೇಳಿದರು. ಶ್ರೀ ಮಠದ ಕೆಲಸಗಳು ಹೇಗಿರುತ್ತವೆ ಎಂದು ನಿಮಗೆ ಗೊತ್ತಿದೆ ಎಂದು ದಿವಾನರನ್ನು ಪ್ರಶ್ನಿಸಿದರು.
ಎಲ್ಲರಲ್ಲೂ ಅಂತರ್ಯಾಮಿ ಯಾಗಿ ದೇವರು ಇರುತ್ತಾನೆ , ಬೃಹತಿ ಸಹಸ್ರ ಪ್ರತಿಪಾದ್ಯನಿಗೆ ವಸ್ತ್ರ ಸಮರ್ಪಣೆ ಅದರಿಂದ ಅವರಿಗೂ ನಾವು ಗೌರವ ಕೊಡಬೇಕು ಎಂದು ಹೇಳಿದಾಗ ಶ್ರೀ ಸತ್ಯಧೀರ ತೀರ್ಥರ ದೃಷ್ಟಿಕೋನ ಎಂತಹದು ಊಹಿಸಲು ಅಸಾಧ್ಯ.ಸೇತುರಾಮಾಚಾರ್ಯರಿಗೆ ಮನಸ್ಸು ಕರಗಿತು, ಹೌದು ಎಂದು ಶ್ರೀಮಠದ ಸೇವಕರಿಗೆ ಮಹಾಸಮಾರಾಧನೆಯಲ್ಲಿ ಇನ್ನು ಅನೇಕ ಉಡುಗೊರೆ ಕೊಟ್ಟರು.
೪. ಶ್ರೀ ಸತ್ಯಧೀರ ತೀರ್ಥರ ಪಾಂಡಿತ್ಯ ಹೇಗಿತ್ತು ಎಂದರೆ, ಬೆಂಗಳೂರು, ಹೈದರಾಬಾದ್, ಕಾಶಿ, ರಾಮೇಶ್ವರ ಮುಂತಾದೆಡೆ ದ್ವೈತ ಸಿದ್ದಾಂತ ಸಭೆಯನ್ನು ನಡೆಸಿದ್ದವರು. ದಿವಾನ್ ಪೂರ್ಣಯ್ಯ ಇವರ ಶಿಷ್ಯರು.
೫. ಅಚೇತನ ಪ್ರತಿಮೆಗಳಲ್ಲೂ ಭಗವಂತನನ್ನು ಕಂಡವರು.
೬. ಶ್ರೀ ಸತ್ಯಾಧ್ಯಾನ ತೀರ್ಥರಿಂದ ಶ್ರೀ " ಸತ್ಯಧೀರ ವಿದ್ಯಾಪಾಠಶಾಲಾ " ಸ್ಥಾಪನೆ.
೭. ಎಡಬಲ ಸೇವೆಯಲ್ಲಿ ಇದ್ದ ಕೀನ್ಹಾಳ್ ಜಯಾಚಾರ್ಯರಿಗೆ ಒಂದು ದಿನ ಮೂಲರಾಮದೇವರ ನಿರ್ಮಾಲ್ಯ ವಿಸರ್ಜನೆ ಮಾಡುವ ಸಂದರ್ಭದಲ್ಲಿ ವ್ಯಾಸ ಮುಷ್ಠಿಗಳ ಮೇಲಿದ್ದ ಹೂವು ಗಂಧ ಮತ್ತು ತುಳಸಿ ಕೈಗೆ ಹಾಕುವ ಸಂಪ್ರದಾಯ ಹೀಗೆ ಹಾಕುವಾಗ ಜೊತೆಗೆ ವೇದವ್ಯಾಸ ದೇವರ ವಿಶೇಷ ಸನ್ನಿದಾನವಿದ್ದ "ಕೂರ್ಮ ರೂಪಿ ವ್ಯಾಸಮುಷ್ಠಿ" ವನ್ನು ಅವರ ಕೈಗೆ ಹಾಕುತ್ತಾರೆ. ಶ್ರೀ ಮಠದಲ್ಲಿರುವ 28 ಪ್ರತಿಮೆ ಮುಟ್ಟಿ ಪೂಜಿಸುವ ಭಾಗ್ಯ ಕೇವಲ ದೇವತಾ ಪುರುಷರಿಗೆ ಮಾತ್ರ ಎನ್ನುವ ನಂಬಿಕೆ ಇದೆ. ಆದರಿಂದ ಪರಮ ವಿರಕ್ತರಾದ, ಶ್ರೀನಿವಾಸ ಮತ್ತು ಶ್ರೀ ಕೃಷ್ಣದೇವರನ್ನು ಒಲಿಸಿಕೊಂಡ ಮಹನೀಯರಾದ ಕೀನ್ಹಾಳ್ ಜಯಾಚಾರ್ಯರಿಗೆ ಸನಾಸ್ಯಾಶ್ರಮ ಕೊಟ್ಟು "ಶ್ರೀ ಸತ್ಯಾಜ್ನ್ಯಾನ ತೀರ್ಥ" ಎಂದು ನಾಮಕರಣ ಮಾಡಿದವರು.
೯ ಗಯಾ ಕ್ಷೇತ್ರದಲ್ಲಿ ಗಯಾಪಲಕರಿಗೆ ವಿಶೇಷ ಉಜ್ಜೀವನ ಕೊಟ್ಟಂತವರು ಮತ್ತು ಗಯಾವಾಡ ರಿಂದ "ಶ್ರೀ ಸತ್ಯಧೀರ ಚರಿತಾಮೃತಮ್" ಎಂಬ ಸಂಸ್ಕೃತದಲ್ಲಿ ರಚಿತವಾದ ಗ್ರಂಥ. ಉತ್ತರಭಾರತದಲ್ಲಿ ಅದರಲ್ಲೂ ಗಯಾ ಕ್ಷೇತ್ರದಲ್ಲಿ ಇವರ ಗ್ರಂಥ ಮತ್ತು ಚರಿತ್ರೆ ಹೇಳುತ್ತಾರೆ ಎಂದರೆ ಇವರ ಸಾಧನೆ ಅಪಾರ.
ಸುಮಾರು 20 ವರ್ಷ ಶ್ರೀ ಮಠವನ್ನು ಉನ್ನತಿಗೆ ತಂದಂತ ಮಹನೀಯರು ಶ್ರೀ ಸತ್ಯಧೀರ ತೀರ್ಥರು ಜೇಷ್ಠ ಬಹುಳ ನವಮಿಯಂದು ಆತಕೂರಿನಲ್ಲಿ ಶ್ರೀ ಹರಿಪಾದವನ್ನು ಸೇರಿದರು.
ಪ್ರೀತೋಸ್ತು ಕೃಷ್ಣ ಪ್ರಭೋ ಫಣೀಂದ್ರ ಕೆ ***year 2021ಶ್ರೀ ೧೦೦೮ ಶ್ರೀ ಸತ್ಯಧೀರತೀರ್ಥರ ಆರಾಧನಾ ದಿನದಿಂದ ಅವರ ಕುರಿತಾದ ಶ್ರೀ ಸತ್ಯಧೀರತೀರ್ಥವಿಜಯಕಾವ್ಯದ ಶ್ಲೋಕದ ಚಿಂತನೆ :-संस्कृत :-श्रीमद्राघवपादपद्मभजनैः प्रोत्फुल्लहृत्पंकजोनानाशास्त्रविचारणैकनिरतोविद्वत्समाजेsनिशम् !श्रीमन्मध्वकुलारविन्दतरणिःश्री सत्यधीरप्रभुःतीर्थःपूज्यपदोत्तरादिमठपोजातो यतीन्द्रोमहान् !! १ !!
ಕನ್ನಡ :-ಶ್ರೀಮದ್ರಾಘವಪಾದಪದ್ಮಭಜನೈಃಪ್ರೋತ್ಫುಲ್ಲಹೃತ್ಪಂಕಜೋನಾನಾಶಾಸ್ತ್ರವಿಚಾರಣೈಕನಿರತೋವಿದ್ವತ್ಸಮಾಜೇsನಿಶಮ್ !ಶ್ರೀಮನ್ಮಧ್ವಕುಲಾರವಿಂದತರಣಿಃಶ್ರೀ ಸತ್ಯಧೀರಪ್ರಭುಃತೀರ್ಥಃಪೂಜ್ಯಪದೋತ್ತರಾದಿಮಠಪೋಜಾತೋ ಯತೀಂದ್ರೋಮಹಾನ್ !! ೧ !!
ಅರ್ಥ :- ಶ್ರೀಮನ್ಮೂಲರಾಮಚಂದ್ರದೇವರ ಪಾದಪದ್ಮಗಳ ಭಜನೆ ಪೂಜಾದಿಗಳಿಂದ ಪ್ರಫುಲ್ಲವಾದ ಮನಸ್ಸಿನಿಂದ ಕೂಡಿದ ಅಂದರೆ ಶ್ರೀಮನ್ಮೂಲರಾಮಚಂದ್ರದೇವರ ಪೂಜಾದಿಗಳನ್ನು ಮಾಡ್ತಾ ಸಂತೋಷದಿಂದ ಇರುವ, ವಿದ್ವಾಂಸರ ಸಭೆಗಳಲ್ಲಿ ಯಾವಾಗಲೂ ಅನೇಕ ಶಾಸ್ತ್ರಗಳ ವಿಚಾರ ಶ್ರೀಮನ್ಮಧ್ವಸಿದ್ಧಾಂತದ ಸ್ಥಾಪನೆ ಮಾಡುವುದರಲ್ಲೇ ನಿರತರಾದ, ಶ್ರೀಮನ್ಮಧ್ವಸಿದ್ಧಾಂತ ಎಂಬ ಕಮಲಕ್ಕೆ ಸೂರ್ಯರಂತಿರುವ ಅಂದರೆ ಶ್ರೀಮನ್ಮಧ್ವಸಿದ್ಧಾಂತವನ್ನು ಎಲ್ಲಾ ಕಡೆಗೂ ಪ್ರಚಾರಿಸಿದ, ಯತಿಶ್ರೇಷ್ಠರಾದ, ಮಹಾನುಭಾವರಾದ, ಪರಮಪೂಜ್ಯರಾದ, ಶ್ರೀಮದುತ್ತರಾದಿಮಠಾಧೀಶರಾದ ಶ್ರೀ ಶ್ರೀ ಸತ್ಯಧೀರಪ್ರಭುಗಳು ನಮ್ಮನ್ನು ಅನುಗ್ರಹಿಸಲಿ.ಸರ್ವೇ ಜನಾಃ ಸುಖಿನೋ ಭವಂತು ! ಸುಘೋಷಾಚಾರ್ಯ ಕೊರ್ಲಹಳ್ಳಿ***
ಶ್ರೀಸತ್ಯಧೀರ ತೀಥ೯ರು 🙏🌺🙏🌺🙏ಪೂವಾ೯ಶ್ರಮದ ಹೆಸರು..ಚಿಕ್ಕೋಡಿ ಜಯರಾಮಾಚಾ೯ರುಶ್ರೀ ಸತ್ಯಧ್ಯಾನತೀಥ೯ರ ಪೂವಾ೯ಶ್ರಮದ ತಂದೆಯವರುಇವರು ಮೂಲತ:ಕೊಲ೯ಹಳ್ನಿ ಮನೆತನದವರು. ಪಾಠ ಹೇಳುವುದಕ್ಕೆ ಚಿಕ್ಕೋಡಿಯಲ್ಲಿ ನೆಲಸಿದ್ದರು. ಪೂವಾ೯ಶ್ರಮದಲ್ಲಿ ತಮ್ಮ ಮಗನಿಗೆ(ಭವಿಷ್ಯದ ಸತ್ಯಧ್ಯಾನ ತೀಥ೯ರಿಗೆ) ಉತ್ತಮ ಆರೋಗ್ಯಕ್ಕಾಗಿ ಪ್ರಾಥಿ೯ಸುತ್ತಾ ವಾಯುಸ್ತುತಿ ಪುನಶ್ಚರಣೆಯನ್ನು ಮಾಡುತ್ತಿದ್ದರು.ಒಂದು ದಿನ ಒಬ್ಬ ವ್ಯಕ್ತಿ ಕಾಣಿಸಿಕೊಂಡು ಮಗುವಿಗೆ ಆಶೀವ೯ದಿಸಿದರು ಎಲ್ಲವೂ ಚೆನ್ನಾಗಿರುತ್ತದೆ ಮತ್ತು ಈ ಮಗು ಸನ್ಯಾಸಿಯಾಗುತ್ತಾನೆ ಎಂದು ಹೇಳಿ ಕಣ್ಮರೆ ಯಾದರು. ಪ್ರತ್ಯಕ್ಷರಾದವರು ಬೇರೆ ಯಾರೂ ಅಲ್ಲ ಪ್ರಾಣದೇವರು ಎಂದು ಜಯರಾಮಾಚಾಯ೯ರಿಗೆ ತಿಳಿಯಿತು. ಶ್ರೀಸತ್ಯವೀರರಿಂದ ಆಶ್ರಮ ಸ್ವೀಕರಿಸಿ ಸತ್ಯಧೀರ ತೀಥ೯ರೆಂದು ಕರೆಸಿ ಕೊಂಡರು.ಸತ್ಯಧೀರರು ಮೊದಲಿನಿಂದಲೂ ಮಠದ ಆಗು ಹೋಗುಗಳನ್ನು ನೋಡಿಕೊಂಡಿದ್ದರಿಂದ ಪೀಠಾರೋಹಣ ಮಾಡಿದ ಕೂಡಲೇ ಮಠದ ಕೀತಿ೯ ಸಕಲ ಭಕ್ತ ಅನುಯಾಯಿಗಳ ದೃಷ್ಟಿ ಹರಿಸಿದರು ಹೈದರಾಬಾದ ದಲ್ಲಿ ಗಣ್ಯ ವ್ಯಕ್ತಿಗಳಿಂದ ಆದರ ಸತ್ಕಾರ ಸ್ವೀಕರಿಸಿ ಕೊಂಡು ಗಣ್ಯರಿಗೂ ಸನ್ಮಾನ ಮಾಡಿ ಮಂತ್ರಾಕ್ಷತೆ ಕೊಟ್ಟು ಆಶೀವ೯ದಿಸಿದರು. ಬೆಂಗಳೂರಿನಲ್ಲಿ ದಿವಾನ್ ಪೂಣ೯ಯ್ಯನವರ. ವಂಶಸ್ಥರಲ್ಲಿ ಪೂಜೆ ಮಾಡಿ ವಾಕ್ಯಾಥ೯ ಸಭೆ ನಡೆಸಿ ಎಲ್ಲ ಪಂಡಿತರಿಗೆ ಯೋಗ್ಯ ಸನ್ಮಾನ ಮಾಡಿದರು. ರಾಮೇಶ್ವರ ಯಾತ್ರೆ ಮುಗಿಸಿ ಕಾಶಿಗೆ ಪ್ರಯಾಣ ಬೆಳೆಸಿ ಅಲ್ಲಲ್ಲಿ ಪ್ರತಿವಾದಿಗಳನ್ನು ಜಯಿಸುತ್ತ ಬಂದರು.ಭಾಗ್ಯನಗರದ ಹತ್ತಿರ ಬಂದಾಗ ಆರೋಗ್ಯ ಕ್ಷೀಣಿಸಲು ಕಿನ್ನಾಳ ಜಯಾಚಾಯ೯ರಿಗೆ ಶ್ರೀಸತ್ಯಜ್ಞಾನ ರೆಂದು ನಾಮಕರಣ ಮಾಡಿ ಆಶ್ರಮ ಕೊಟ್ಟರು.ಆತಕೂರಿಗೆ ಬಂದಾಗ ದೇಹಾಯಾಸವಾಗಿ ಜೇಷ್ಟಮಾಸ ಕೃಷ್ಣಪಕ್ಷ ನವಮಿ ದಿನ ಬೃಂದಾವನಸ್ಥರಾದರು****by ಮಧುಸೂದನ ಕಲಿಭಟ್ ಬೆಂಗಳೂರು (ಧಾರವಾಡ )
ಶ್ರೀ ಸತ್ಯ ಧೀರ ತೀರ್ಥರು ಆತಕೂರು ಜ್ಯೇಷ್ಠ ಕೃ. ನವಮಿ. ಅಭಿನವ ಮಧ್ವಾಚಾರ್ಯರೆಂದೇ ಪ್ರಸಿದ್ಧರಾದ ಶ್ರೀ ಸತ್ಯಧ್ಯಾನ ತೀರ್ಥರ ಪೂರ್ವಾಶ್ರಮದ ತಂದೆಯವರೇ ಇಂದಿನ ಕಥಾನಾಯಕರು. ಇವರ ಪೂರ್ವಾಶ್ರಮದ ಹೆಸರು ಚಿಕ್ಕೋಡಿ ಜಯರಾಮಾಚಾರ್ಯ. ಶ್ರೀ ಸತ್ಯವೀರ ರಿಂದ ಆಶ್ರಮ ಸ್ವೀಕರಿಸಿ ಸತ್ಯಧೀರ ತೀರ್ಥ ರೆಂದು ಕರೆಸಿಕೊಂಡರು. ಸತ್ಯಧೀರರು ಮೊದಲಿನಿಂದಲೂ ಮಠದ ಆಗು ಹೋಗುಗಳನ್ನು ನೋಡಿಕೊಂಡಿದ್ದರಿಂದ ಪೀಠಾರೋಹಣ ಮಾಡಿದ ಕೂಡಲೇ ಹಿಂದಿನಿಂದ ಆಡುವವರ ಬಾಯಿ ಮುಚ್ಚಿಸಿ ಮಠದ ಕೀರ್ತಿಕಡೆಗೆ ಸಕಲ ಭಕ್ತ ಅನುಯಾಯಿಗಳ ದೃಷ್ಟಿ ಹರಿಸಿದರು. ಹೈದೆರಾಬಾದ ದಲ್ಲಿ ಗಣ್ಯ ವ್ಯಕ್ತಿಗಳಿಂದ ಆದರ ಸತ್ಕಾರ ಸ್ವೀಕರಿಸಿಕೊಂಡು ಗಣ್ಯರಿಗೂ ಸನ್ಮಾನ ಮಾಡಿ ಮಂತ್ರಾಕ್ಷತೆ ಕೊಟ್ಟು ಆಶೀರ್ವದಿಸಿದರು. ಅಲ್ಲಿಂದ ಬೆಂಗಳೂರಲ್ಲಿ ದಿವಾನ್ ಪೂರ್ಣಯ್ಯನವರ ವಂಶಸ್ಥರಲ್ಲಿ ಪೂಜೆ ಮಾಡಿ ವಾಕ್ಯಾರ್ಥ ಸಭೆ ನಡೆಸಿ ಎಲ್ಲ ಪಂಡಿತರಿಗೆ ಯೋಗ್ಯ ಸನ್ಮಾನ ಮಾಡಿದರು. ಮುಂದೆ ರಾಮೇಶ್ವರ ಯಾತ್ರೆ ಮುಗಿಸಿ ಕಾಶಿಗೆ ಪ್ರಯಾಣ ಬೆಳೆಸಿ ಅಲ್ಲಲ್ಲಿ ಪ್ರತಿವಾದಿಗಳನ್ನು ಜಯಿಸುತ್ತ ಬಂದರು. ಭಾಗ್ಯನಗರದ ಸಮೀಪ ಬಂದಾಗ ತುಸು ಅರೋಗ್ಯ ಕ್ಷೀಣಿಸಲು ಕಿನ್ನಾಳ ಜಯಾಚಾರ್ಯರಿಗೆ ಶ್ರೀ ಸತ್ಯಜ್ಞಾನ ರೆಂದು ಕರೆದು ಆಶ್ರಮ ಕೊಟ್ಟರು. ಮುಂದೆ ಅರೋಗ್ಯ ಸುಧಾರಿಸಿಕೊಂಡು ರಾಯಚೂರ್ ಮೇಲಿಂದ ಆತಕೂರಿಗೆ ಬಂದಾಗ ದೇಹಾಯಾಸ vaagi. ಜ್ಯೇಷ್ಠ ವದ್ಯ ನವಮಿ ದಿನ ಶ್ರೀ ಹರಿ ಧ್ಯಾನಪರರಾದರು. ಗುರುಗಳ ಅಂತರ್ಯಾಮಿ ಭಾ. ಮು. ಅಂ. ಹಯಗ್ರೀವದೇವರು ಎಲ್ಲರಿಗೂ ಆಯುರಾರೋಗ್ಯ ಐಶ್ವರ್ಯ ಕೊಟ್ಟು ಸಲಹಲಿ ಎಂದು ಬೇಡಿಕೊಳ್ಳುವೆ.-ಮಧುಸೂದನ ಕಲಿಭಟ್***ಶ್ರೀ #ಕೃಷ್ಣಾರ್ಪಣಂ.
ಒಂದು #ಸ್ವಾರಸ್ಯವಾದ #ಕತೆ.
ಮುಲ್ಲೈಕ್ಕೊಡು ಎಂದು ತಮಿಳುನಾಡಿನ ಒಂದು ಪುಟ್ಟ ಗ್ರಾಮ. ಅಲ್ಲಿ #ಶ್ರೀಕೃಷ್ಣ ನ ಒಂದು ಸುಂದರವಾದ ದೇವಾಲಯ. ಅರ್ಚಕರೂ ಅವರಿಗೆ ಸಹಾಯಕನಾಗಿದ್ದ ತುಳಸಿ ಎಂಬ ಯುವಕನೂ ದಿನವೂ ಬೆಳಿಗ್ಗೆ ನಾಲ್ಕು ಗಂಟೆಗೇ ಎದ್ದು ಶುಚಿಯಾಗಿ ದೇವಸ್ಥಾನಕ್ಕೆ ಬರುತ್ತಿದ್ದರು. ದೇವಾಲಯದ ಪಕ್ಕದಲ್ಲೇ ಒಂದು ಹೂದೋಟ. ತೋಟದಿಂದ ಹೂಗಳನ್ನು ತಂದು ದೇವರೀಗೆ ಮಾಲೆಯಾಗಿ ಕಟ್ಟಿಕೊಡುವ ಕೆಲಸ ತುಳಸಿಯದು. ಅವನೋ ಪರಮ ಕೃಷ್ಣ ಭಕ್ತ. ಸದಾ ಕೃಷ್ಣಧ್ಯಾನ ನಿರತ.
ತೋಟದಲ್ಲಿ ಹೂಗಳನ್ನು ಕೀಳುವಾಗಲೂ ಅವನಿಗೆ ಕೃಷ್ಣನದೇ ನೆನಪು. ಕೃಷ್ಣಾರ್ಪಣಂ ಎಂದು ಮನದಲ್ಲಿ ಹೇಳಿಕೊಂಡೇ ಹೂಗಳನ್ನು ಕಿತ್ತು ಪೋಣಿಸಿ ಹಾರ ಮಾಡುವನು ಈ ಭಕ್ತ. ಹತ್ತು ಹದಿನೈದು ಮಾಲೆಗಳನ್ನು ಸಿದ್ಧ ಪಡಿಸಿದ ಮೇಲೆ ಕೃಷ್ಣನಿಗೆ ಅವನ್ನು ತಾನೇ ಮುಡಿಸಿದಂತೆ ಭಾವಿಸಿಕೊಂಡು ಅದೇ ನೆನಪಿನಲ್ಲೇ ಅರ್ಚಕರ ಬಳಿಗೆ ಅವನ್ನು ತಲುಪಿಸಿಬಿಡುವನು.
ಇತ್ತ ಅರ್ಚಕರು ಅವನಿತ್ತ ಮಾಲೆಗಳನ್ನು ಶ್ರೀ ಕೃಷ್ಣನ ಮಂಗಳ ಮೂರ್ತಿಗೆ ಮುಡಿಸಿ ಅಲಂಕಾರ ಮಾಡಲು ಹೋದರೆ, ಅದಾಗಲೇ ದೇವರು ಒಂದು ಹೊಸ ಮಾಲೆಯನ್ನು ಧರಿಸಿ ಹುರುಪಿನೊಂದಿಗೆ ಇವರನ್ನು ಎದುರುಗೊಳ್ಳಲು ಸಿದ್ಧನಾಗಿರುತ್ತಿದ್ದ. ಹಳೆಯ ನಿರ್ಮಾಲ್ಯವನ್ನು ತೆಗೆದು ಹೊಸ ಮಾಲೆಯನ್ನು ದೇವರಿಗೆ ಹಾಕಿ ಅಲಂಕಾರ ಮಾಡಬೇಕೆಂದಿದ್ದ ಅರ್ಚಕರಿಗೆ ಒಂದು ಕಡೆ ನಿರಾಸೆ. ಇನ್ನೊಂದೆಡೆ ಅಚ್ಚರಿ. ಇದು ಹೇಗೆ ಸಾಧ್ಯ ? ಎಂದು ಯೋಚಿಸಿದ ಅವರು ಇದು ತುಳಸಿಯದೇ ಕುಚೇಷ್ಟೆ ಎಂದು ಸಂದೇಹಿಸಿ,ಅವನು ತಾನೇ ಕೈಯಿಂದ ದೇವರಿಗೆ ಹೂ ಮುಡಿಸಿದನಲ್ಲಾ ಎಂದು ಖೇದ ಪಟ್ಟರು. ತತ್ಕ್ಷಣವೇ ಅವನನ್ನು ಕರೆದು , "ತುಳಸಿ! ಇದು ಬಹಳಅಧಿಕ ಪ್ರಸಂಗ! ನೀನು ಮಾಲೆಯನ್ನು ಹೆಣೆದು ಕೊಡಬೇಕೇ ವಿನಃ ನೀನೇ ದೇವರಿಗೆ ಮುಡಿಸಬಾರದು " ಎಂದರು. ಅವನೋ, "ಸ್ವಾಮಿ, ನಾನು ಖಂಡಿತ ದೇವರಿಗೆ ಮುಡಿಸಿಲ್ಲ. ಕಟ್ಟಿದ 15 ಮಾಲೆಗಳನ್ನೂ ನಿಮ್ಮ ಬಳಿಯೇ ಕೊಟ್ಟಿದ್ದೇನೆ "ಎಂದ. "ನಾಳೆಯಿಂದ ನೀನು ಮಾಲೆ ಕಟ್ಟಬೇಡ. ಇನ್ನು ಮೇಲೆ ಹಂಡೆಗಳಿಗೆ ನೀರು ತುಂಬುವ ಕೆಲಸ ಮಾಡು ಸಾಕು " ಎಂದು ಕಟ್ಟಪ್ಪಣೆ ಮಾಡಿದರು ಅರ್ಚಕರು.
ಇದು ಭಗವಂತನ ಹೊಸ ಆಜ್ಞೆ ಎಂದು ಭಾವಿಸಿದ ತುಳಸಿ ಮರುದಿನದಿಂದ ನೀರು ತುಂಬಲಾರಂಭಿಸಿದ. ನೀರೆತ್ತುವಾಗಲೂ ಹಂಡೆಗಳಿಗೆ ತುಂಬುವಾಗಲೂ ಕೃಷ್ಣಾರ್ಪಣ ಎಂದೇ ನೆನೆಯುತ್ತಿದ್ದ. ಅವನ ಮನವೂ ತುಂಬುತ್ತಿತ್ತು. ಅರ್ಚಕರು ಎಂದಿನಂತೆ ಗರ್ಭಗುಡಿಗೆ ಪ್ರವೇಶಿಸಿ ಶ್ರೀಕೃಷ್ಣನಿಗೆ ಅಭಿಷೇಕ ಮಾಡಲು ಹೋಗುತ್ತಾರೆ. ಅರೇ! ಆಗ ತಾನೇ ಶುದ್ಧ ಜಲದಿಂದ ಮಿಂದಂತೆ ಕೃಷ್ಣ ಶುಭ್ರನಾಗಿ ಮಿಂಚುತ್ತಿದ್ದ. ಗರ್ಭಗುಡಿಯಲ್ಲೆಲ್ಲ ನೀರು. ಮೈಯಿಂದ ನೀರು ತೊಟ್ಟಿಕ್ಕುತ್ತಿದ್ದ ಕೃಷ್ಣ ಅರ್ಚಕರನ್ನು ಕಂಡು ಮುಸಿನಗುತ್ತಿದ್ದ.
ಮತ್ತೆ ಅರ್ಚಕರಿಗೆ ಕಡುಕೋಪ! ತುಳಸಿಯನ್ನು ಕರೆದು "ಏನೋ , ದೇವರಿಗೆ ಅಭಿಷೇಕ ಮಾಡುವಷ್ಟು ಧೈರ್ಯ ಬಂತೇ ನಿನಗೆ! ನಿನ್ನಿಂದ ನನಗೆ ಉಪಕಾರಕ್ಕೆ ಬದಲಾಗಿ ತೊಂದರೆಯೇ ಹೆಚ್ಚಾಯ್ತು" ಎಂದೆಲ್ಲಾ ಬೈಯಲಾರಂಭಿಸಿದರು. ತುಳಸಿಗೋ ಕಣ್ಣುಗಳಿಂದ ಧಾರಾಕಾರವಾಗಿ ನೀರು ಸುರಿಯಲಾರಂಭಿಸಿತು. "ಸ್ವಾಮಿ, ನಾನು ಹಂಡೆಗಳಲ್ಲಿ ನೀರು ತುಂಬಿದೆ ಅಷ್ಟೇ! ಅಯ್ಯೋ! ಕೃಷ್ಣನಿಗೆ ಅಭಿಷೇಕ ಮಾಡುವುದು ಹೇಗೆಂದೇ ನನಗೆ ತಿಳಿಯದು" ಎಂದ!
ಸರಿ. ಮಾರನೆಯ ದಿನವೇ ಅರ್ಚಕರು ಅವನನ್ನು ದೇವರಿಗೆ ನೈವೇದ್ಯ ತಯಾರಿಸುವ ಪಾಕಶಾಲೆಗೆ ವರ್ಗಾಯಿಸಿದರು. ಅಡುಗೆ ಭಟ್ಟರಿಗೆ ಅವನು ಸಹಾಯಕನಾದ. ಇಲ್ಲಿಯೂ, ತರಕಾರಿ ಹೆಚ್ಚುವಾಗಲೂ ಇತರ ಕೆಲಸಗಳನ್ನು ಮಾಡುವಾಗಲೂ ಕೃಷ್ಣಾರ್ಪಣ ಎನ್ನುತ್ತಲೇ ತನ್ನ ಕೈಂಕರ್ಯವನ್ನೇ ಕೃಷ್ಣನಿಗೆ ಸಮರ್ಪಿಸುತ್ತಿದ್ದ. ಅರ್ಚಕರು ಈ ಬಾರಿ ಬಹಳ ಜಾಗರೂಕರಾಗಿ, ಗರ್ಭಗೃಹದ ಬಾಗಿಲಿಗೆ ಬೀಗ ಜಡಿದು ಕೀಲಿಕೈಯನ್ನು ತನ್ನೊಡನೆ ತೆಗೆದುಕೊಂಡು ಹೋಗಿಬಿಟ್ಟರು.
ಮರುದಿನ ಯಥಾಪ್ರಕಾರ ಬೀಗ ತೆರೆದವರು ಕೃಷ್ಣನನ್ನು ನೋಡುತ್ತಾ ಬೆಪ್ಪಾಗಿ ನಿಂತರು! ಕೃಷ್ಣನ ಬಾಯಲ್ಲಿ ಘಮಘಮಿಸುವ ಸಕ್ಕರೆ ಪೊಂಗಲ್ ಇಣುಕುತ್ತಿತ್ತು. ಅತ್ತ ಅಡುಗೆಮನೆಯಲ್ಲಿ ಸಕ್ಕರೆ ಪೊಂಗಲ್ ಆಗ ತಾನೇ ಸಿದ್ಧವಾಗುತ್ತಿತ್ತು. "ಅಷ್ಟರಲ್ಲೇ ಅದು ಇಲ್ಲಿಗೆ ಹೇಗೆ ಬಂತು. ನಾನೂ ಬೀಗ ಹಾಕಿ ತಾನೇ ಮನೆಗೆ ಹೋಗಿದ್ದು? ಇಲಿಯೋ ಬೆಕ್ಕೋ ಯಾವುದಾದರೂ ಒಂದು ವೇಳೆ ತಂದಿರಬಹುದೇನೋ !! ಎಂದೆಲ್ಲಾ ಅರ್ಚಕರಿಗೆ ಯೋಚನೆ. ಈ ತುಳಸಿಯೊಬ್ಬ! ಅವನಿಗೆ ಯಾವ ಕೆಲಸ ಕೊಟ್ಟರೂ ಅದು ಹೇಗೋ ನನಗಿಂತ ಮುಂಚೆಯೇ ಕೃಷ್ಣನಿಗೆ ಸೇರಿಬಿಡುವುದಲ್ಲಾ !! ಅವನೇನು ಮಂತ್ರವಾದಿಯೋ ಎಂದು ಗಾಬರಿಗೊಂಡರು.
ಸರಿ! ಅಂದು ಅವನನ್ನೇನೂ ಬೈಯದೇ "ತುಳಸಿ! ನಾಳೆಯಿಂದ ನೀನು ದೇವಸ್ಥಾನದ ಹೊರಗೆ ಕುಳಿತು ಭಕ್ತಾದಿಗಳ ಚಪ್ಪಲಿ ಕಾಯುವ ಕೆಲಸ ಮಾಡು. ನೀನು ಅದಕ್ಕೇ ಲಾಯಕ್ಕು" ಎಂದರು! ಅವರ ಮನಸ್ಸಿನಲ್ಲಿ ಒಂದು ಯೋಚನೆ. " ಹೂವು, ನೀರು,ಪ್ರಸಾದ ಎಲ್ಲವೂ ಉತ್ತಮ ದ್ರವ್ಯಗಳು.ಅದು ಹೇಗೋ ದೇವರ ಬಳಿ ಬಂದು ಸೇರಿಬಿಟ್ಟವು. ಈಗ ಇವನು ಕಾಯುತ್ತಿರುವುದು ಚಪ್ಪಲಿ ತಾನೇ! ನೋಡೋಣ " ಎಂದು.
ಇದೂ ಭಗವಂತನ ಆಜ್ಞೆ ಎಂದು ತಲೆಬಾಗಿದ ತುಳಸಿ ಅಂದಿನಿಂದ ಮುಖ್ಯದ್ವಾರದ ಬಳಿ ನಿಂತು ಭಕ್ತರ ಪಾದರಕ್ಷೆಗಳನ್ನು ಕಾಯತೊಡಗಿದ. ಬಾಯಲ್ಲಿ ಮಾತ್ರ ಅದೇ ಮಂತ್ರ! ಕೃಷ್ಣಾರ್ಪಣಂ!!! ಅರ್ಚಕರು ಎಂದಿನಂತೆ ಬೀಗಹಾಕಿ ಹೊರಟರು.
ಮರುದಿನ ಬೆಳಿಗ್ಗೆ ಗರ್ಭಗೃಹದ ಬಾಗಿಲನ್ನು ತೆರೆದ ಅರ್ಚಕರು ಕಂಡ ದೃಶ್ಯ?? ದಂಗಾಗಿ ನಡುಗಿಬಿಟ್ಟರು ಅವರು. ಕೃಷ್ಣನ ಪಾದದ ಬಳಿ ಒಂದು ಜೊತೆ ಪಾದರಕ್ಷೆ ! ಅದೂ ಪಾದಕಮಲದಲ್ಲಿ, ಪಾದುಕೆಯಿರಬೇಕಾದ ಪೀಠದಲ್ಲಿ ಸಾಧಾರಣವಾದ ಚರ್ಮದ ಚಪ್ಪಲಿ. ಹೇ ಕೃಷ್ಣ! ಅಪಚಾರವಾಯಿತಲ್ಲ ! ಇದು ಇಲ್ಲಿಗೆ ಹೇಗೆ ಬಂತು ! ಎಂಥವನಿಗೂ ಗರ್ಭಗುಡಿಯ ಬೀಗ ಮುರಿದು ಹೀಗೆ ಸಾಧಾರಣ ಚಪ್ಪಲಿಯನ್ನು ದೇವರ ಪಾದದ ಬಳಿ ಇಡಲು ಹೇಗೆ ಮನಸ್ಸು ಬಂದೀತು ಎಂದೆಲ್ಲ ಹಲುಬಿದರು. ಭಯದಿಂದ ಗಾಬರಿಯಿಂದ ಬೆವೆತು ನೀರಾದರು. ಆಗ!!! ಎಲ್ಲಿಂದಲೋ ಒಂದು ವಾಣಿ ಕೇಳಿಸಿತು.
"ಅರ್ಚಕರೇ ಹೆದರಬೇಡಿ. ನಾನಿದ್ದೇನೆ. ಆ ನನ್ನ ಭಕ್ತ ತುಳಸಿಗೆ ನೀವು ಏನು ಕೆಲಸ ಕೊಟ್ಟರೂ ಅವನು ಕೃಷ್ಣಾರ್ಪಣ ಎಂದು ನನಗೆ ಕಾಣಿಕೆ ಸಲ್ಲಿಸಿಬಿಡುತ್ತಾನೆ. ಹೀಗೆ ಅವನು ಅರ್ಪಿಸುವ ಎಲ್ಲವನ್ನೂ ನಾನು ಮನಸಾರೆ ಸ್ವೀಕರಿಸುತ್ತೇನೆ. ಮನಸ್ಸೆಲ್ಲೋ ಬೇರೆಡೆ ಇದ್ದು ಮಾಡುವ ಪೂಜೆಗಿಂತ ಎಲ್ಲವೂ ಕೃಷ್ಣನಿಗೇ ಅರ್ಪಣೆ ಎನ್ನುವವನ ಪ್ರೀತಿಯನ್ನೇ ನಾನು ಸ್ವೀಕರಿಸುತ್ತೇನೆ. ತುಳಸೀ ಒಬ್ಬ ಯೋಗಿ ಆವನ ಭಕ್ತಿ ನನಗೆ ಬಹಳ ಪ್ರಿಯ " ಕೃಷ್ಣಪರಮಾತ್ಮನ ಆ ವಾಣಿಯನ್ನು ಕೇಳಿ ಅರ್ಚಕರು ದೇವಾಲಯದ ಹೊರಗೋಡಿದರು. ತುಳಸಿಯ ಪಾದಗಳಿಗೆ ಸಾಷ್ಟಾಂಗ ಪ್ರಣಾಮ ಮಾಡಿದರು.
ಸಂಗ್ರಹ: ಮಯಿ ಸರ್ವಾಣಿ ಕರ್ಮಾಣಿ ಸಂನ್ಯಸ್ಯ ಅಧ್ಯಾತ್ಮ ಚೇತಸಾ,ನಿರಾಶೀರ್ನಿರ್ಮಮೋ ಭೂತ್ವಾ ಯುಧ್ಯಸ್ವ ವಿಗತ ಜ್ವರಃ.. ಗೀತೆ 3 , 30.
ನಿನ್ನ ಮನವನ್ನು ಸದಾ ನನ್ನಲ್ಲೇ ನೆಟ್ಟು ಆಸೆ ಆಹಂಕಾರಗಳನ್ನು ಬಿಟ್ಟು, ಎಲ್ಲ ಕೆಲಸಗಳನ್ನೂ ನನಗೋಸ್ಕರವೇ ಮಾಡು...
ಭಗವದ್ಭಕ್ತರೇ! ನಾವು ಅಂಗಡಿಗಳಲ್ಲಿ ಹಣ್ಣು ಕೊಂಡು ಅಲ್ಲೇ ಕಚ್ಚಿ ತಿಂದು ಬಿಡುತ್ತೇವೆ. ಹೆಂಗಸರು ಹೂವಿನಂಗಡಿಗಳಲ್ಲಿ ಹೂವನ್ನು ಕೊಂಡು ತತ್ಕ್ಷಣವೇ ಮುಡಿದೂ ಬಿಡುತ್ತಾರೆ. ಈ ಹಣ್ಣನ್ನಾಗಲೀ ಹೂವನ್ನಾಗಲೀ ದೇವರಿಗೆ ಅರ್ಪಿಸಲು ಮಂದಿರಕ್ಕೇ ಹೋಗಬೇಕೆಂದಿಲ್ಲ. ಕೊಂಡ ಕ್ಷಣದಲ್ಲೇ ಮನದಲ್ಲಿ ಭಗವಂತನನ್ನು ನೆನೆದು, "ಇದು ನಿನ್ನ ದಯೆಯಿಂದ ನನಗೆ ದೊರಕಿತು. ನಾನು ನಿನಗೆ ಕೃತಜ್ಞ! ಇದು ನಿನಗೇ ಸೇರಿದ್ದು .ಕೃಷ್ಣಾರ್ಪಣಂ. "ಎಂದೊಮ್ಮೆ ನೆನೆದರೆ ಸಾಕು. ಅದು ಅವನಿಗೆ ಖಂಡಿತ ಹೋಗಿ ಸೇರುತ್ತದೆ. ಏನನ್ನೂ ಕೇಳದ ಕುಚೇಲನಿಗೆ ಎಲ್ಲವನ್ನೂ ಕೊಟ್ಟವನು ಆ ಕೃಷ್ಣನಲ್ಲವೇ? ನಮಗೆ ಬೇಕಾದ್ದನ್ನೆಲ್ಲ ಅವನೇ ಕೊಡುತ್ತಾನೆ ಎಂಬ ನಂಬಿಕೆಯೊಂದಿಗೆ ಇಂದಿನಿಂದ ಅವನನ್ನೇ ಧ್ಯಾನಿಸುವ!!!
ಶ್ರೀ ಕೃಷ್ಣಾರ್ಪಣಮಸ್ತು.***
No comments:
Post a Comment