mArgashira bahuLa pratipath, is the ArAdhane of shri raghunAtha tIrtharu of uttarAdi maTa.
Vrundavana @ Malakheda
Ashrama Gurugalu – Sri Vidyanidhi Tirtharu (YaragoLa)
Ashrama Shishyaru – Sri Raghuvarya Tirtharu (Navavrundavana)
He is the 12th Yati from Srimadacharyaru and 7th Yati from Sri Jaya Tirtharu.
Contemporaries – Sri Purandaradasaru, Kanakadasaru, Sri Vibudendra Tirtharu, Sri Sripadarajaru, Sri Vyasarajaru, Sri Raghottama Tirtharu, etc.
Miracle by Sri Raghunatha Tirtharu –
VyasamusTi turned Koormaroopi saaligrama :
Gave darshana to Sripadarajaru on his way to devaloka:
“Source – Srisudha”
Click for the pdf file on Sri Raghunatha Tirtharu
Sri Raghunatha Tirtharu gave the title “Sripadaraja” to Sri Lakshmi naaraayaNa Tirtha –
**********year 2021
ಮಾರ್ಗಶಿರ ಕೃಷ್ಣ ಪ್ರತಿಪದಾ
ರಘುನಾಥಗುರುಮ್ ನೌಮಿ ವಿದ್ಯಾನಿಧಿಕರೋದ್ಭವಮ್/
ಕೂರ್ಮೋ ವರುಣಗಂಗೇ ಚ ಯಸ್ಯ ಪ್ರತ್ಯಕ್ಷತಾಂ ಗತಾಃ //
ಶ್ರೀಮದುತ್ತರಾದಿಮಠದ ಪರಮ ಶ್ರೇಷ್ಠ ಯತಿಗಳು, ಜ್ಞಾನಿವರೇಣ್ಯರು, ಅವರ ಚರಮ ಶ್ಲೋಕದಲ್ಲಿಯೇ ತಿಳಿಸಿದಂತೆ ವರುಣದೇವರನ್ನು, ಗಂಗಾದೇವಿಯರನ್ನು ಒಲಿಸಿಕೊಂಡವರು, ಪರಮಾತ್ಮನ ಅನುಗ್ರಹದಿಂದ ಕೂರ್ಮರೂಪೀ ಸಾಲಿಗ್ರಾಮವನ್ನು ಪಡೆದವರು, ಜ್ಞಾನಿ ಮೂರ್ಧನ್ಯರು, ಶ್ರೀ ವಿದ್ಯಾನಿಧಿತೀರ್ಥರ ಶಿಷ್ಯರು, ಶ್ರೀ ರಘುವರ್ಯ ತೀರ್ಥರ ಗುರುಗಳು ಆದ ಶ್ರೀ ರಘುನಾಥತೀರ್ಥರ ಆರಾಧನಾ ಮಹೋತ್ಸವ ಇಂದು ಮಲಖೇಡದಲ್ಲಿ..
ಇವರ ಕುರಿತಾಗಿ ನಮ್ಮ ಸಮೀರಾಚಾರ್ಯರ ಲೇಖನೆ ಓದೋಣ ಬನ್ನಿ
ಇಂದು ಮಾಹಾನುಭಾವರಾದ ಯತಿವರೇಣ್ಯರಾದ , ಮಹಾತಪಸ್ವಿಗಳು,ಮಹಾ ಜ್ಞಾನಿಗಳಾದ ಶ್ರೀ ರಘುನಾಥ ತೀರ್ಥರ ಆರಾಧನೆಯ ಪರ್ವಕಾಲ. ಶ್ರೀ ವಿದ್ಯಾನಿಧಿ ತೀರ್ಥರ ಶಿಷ್ಯರು, ಶ್ರೀ ರಘೂತ್ತಮ ತೀರ್ಥರ ಗುರುಗಳಾದ ಶ್ರೀ ರಘುವರ್ಯ ತೀರ್ಥರ ಗುರುಗಳು .
"ರಘುನಾಥ ಗುರುಂ ನೌಮಿ ವಿದ್ಯಾನಿಧಿ ಕರೋದ್ಭವಂ",
ಕೂರ್ಮೋ ವರುಣ ಗಂಗೇಚ ಪ್ರತ್ಯಕ್ಷತಾಂ ಗತಾಃ
ಅನೇಕ ಮಹಿಮೆಗಳು , ಈ ಶ್ಲೋಕದಲ್ಲಿ ಹೇಳಿದ ಮಹಿಮದ ಸ್ಮೃತಿಯನ್ನು ಸ್ವಲ್ಪ ನೋಡೋಣ .
ಕೂರ್ಮ ,ವರುಣ ಗಂಗೆ , ಈ ಮೂರರನ್ನು ಪ್ರತ್ಯಕ್ಷ ಕಂಡವರು ಶ್ರೀ ರಘುನಾಥ ತೀರ್ಥರು.
ಅರ್ಧೋದಯ ಪರ್ವಕಾಲ ಅಂತ್ ಬರ್ತದ . ಬಹಳ ಅಪರೂಪ. ಅಂದ್ರೆ ಅಮಾವಾಸ್ಯೆ ,ಭಾನುವಾರ , ಶ್ರವಣಾ ನಕ್ಷತ್ರ , ವ್ಯತೀಪಾತ ಯೋಗ . ಈ ನಾಲ್ಕು ಸೇರಿದಾಗ ಅರ್ಧೋದಯ ಯೋಗ ಅಂತಾರೆ . ಸಮದ್ರ ಸ್ನಾನ ಶ್ರೇಷ್ಠ ಆವಾಗ . ಈ ಪರ್ವಕಾಲದಲ್ಲಿ ಶ್ರೀ ರಘುನಾಥ ತೀರ್ಥರು ರಾಮೇಶ್ವರಕ್ಕೆ ಹೋಗಿದ್ದರು ಸಮುದ್ರ ಸ್ನಾನಕ್ಕೆ ಅಂತ .ಶಾಂತ ಸಮುದ್ರ ರಾಮೇಶ್ವರದಲ್ಲಿ . ಅಂಥಾ ಶಾಂತ ಅಲೆಗಳು ಇರುವ ಸಮುದ್ರ ಆಗ ಉಕ್ಕಿ ಏರಿ ಬಂತು ಅಂತ ಹೇಳ್ತಾರೆ.ಆಗ ಅಲ್ಲಿ ಒಬ್ಬ ಬ್ರಾಹ್ಮಣನ ವೇಷದಲ್ಲಿ ವರುಣ ದೇವರು ರಾಮ ದೇವರ ದರ್ಶನಕ್ಕೆ ಬಂದೀನಿ ಅಂತ ಹೇಳ್ತಾರೆ.ವರುಣ ದೇವರನ್ನು ಪ್ರತ್ಯಕ್ಷೀಕರಿಸಿಕೊಂಡವರು.
ಮುಂದೆ ಹಂಪಿ ಹತ್ತಿರ ಕಂಪ್ಲಿ ಊರಿಗೆ ಬಂದಾಗ, ಅಲ್ಲಿ ಶ್ರೀ ವ್ಯಾಸರಾಜರ ಸಮಾಗಮನೂ ಆಯಿತು . ಶ್ರೀ ರಘುವರ್ಯ ತೀರ್ಥರೂ ಅಲ್ಲಿ ಇದ್ದರು. ಚಿಕ್ಕ ವಯಸ್ಸು ಶ್ರೀ ರಘುವರ್ಯ ತೀರ್ಥರದ್ದು . ಕಾಶೀ ಯಾತ್ರೆಗೆ ಹೋಗ್ತೀನಿ ಅಂತ ಹೇಳಿದ್ದರಂತೆ.
ಆಗ ಫಾಲ್ಗುಣ ಮಾಸ , ಅಂಥಾ ಬಿಸಿಲಿನ ಕಾಲದಲ್ಲಿಯೂ ಇದ್ದಕ್ಕ ಇದ್ಢಾಗೇ ಮಹಾಪೂರ ,ಪ್ರವಾಹ ಬಂತು ತುಂಗಭದ್ರಾ ನದೀಯಲ್ಲಿ. ಗಂಗಾದೇವಿಯೇ ಯತಿತ್ರಯರ ಸನ್ನಿಧಾನಕ್ಕೆ ಬಂದು ದರ್ಶನ ಕೊಟ್ಟಳು .
ಗಂಗಾ ಪೂಜೆಯೂ ಎಲ್ಲಾರೂ ಮಾಡಿದರು .ಇಲ್ಲಿಯೇ ಗಂಗಾದೇವಿ ಬಂದಿದ್ದಾಳೆ , ಗಂಗಾಸ್ನಾನಕ್ಕೆ ಕಾಶೀಗೆ ಹೋಗೋದು ಬೇಕಾಗಿಲ್ಲ ಅಂತ ರಘುವರ್ಯ ತೀರ್ಥರು ಹೇಳಿದರೂ ಕೂಡಾ , ಇಲ್ಲ ಇದು ಅಲ್ಲಿಗೆ ಬರ್ಲಿಕ್ಕೆ ಗಂಗಾದೇವಿಯ ಆಹ್ವಾನವೇ ಎಂದು ಹೇಳಿ ಗಂಗಾತೀರಕ್ಕೆ ದಿಗ್ವಿಜಯ ಮಾಡಿದರು . ಗಂಗಾ ಪ್ರತ್ಯಕ್ಷ.
ಆಗ ಇನ್ನೂ ಒಂದು ಘಟನೆಯೂ ನಡೀತು . ತುಂಗಭದ್ರಾ ನದೀ ದಂಡೆಮೇಲೆ ನಿರ್ಮಾಲ್ಯ ವಿಸರ್ಜನೆ ಮಾಡಬೇಕಾದರೆ 5 ವ್ಯಾಸಮುಷ್ಟಿಯ ಪೈಕಿ ಒಂದು ನದೀಯಲ್ಲಿ ಬಿದ್ದು ಹೋಯಿತು. ಎಷ್ಟು ಹುಡುಕಿದರೂ ಸಿಗಲಿಲ್ಲ. 7 ದಿನ ಉಪವಾಸ ಇದ್ದರು ಶ್ರೀ ರಘುನಾಥ ತೀರ್ಥರು. 7 ನೇದಿನ ರಾತ್ರಿ ಸ್ವಪ್ನದಲ್ಲಿ ಶ್ರೀ ವೇದವ್ಯಾಸ ದೇವರು ಬಂದು, ಅನೇಕ ಕೂರ್ಮಗಳು ನದೀ ತೀರಕ್ಕೆ ಬರ್ತಾವೆ , ಯಾವ ಕೂರ್ಮಕ್ಕೆ ಕ್ಷೀರಾಭಿಷೇಕ ಮಾಡಿದಾಗ ವರ್ತುಲ ಆಕಾರ- ದುಂಡಾಗಿ ತಿರುಗ್ತದೆ , ಅದರಲ್ಲಿ ನನ್ನ ವಿಶೇಷ ಸನ್ನಿಧಾನ, ಅದನ್ನು ಪೂಜೆಗೆ ಇಟ್ಟುಕೊಳ್ಳಿ ಅಂತ ಹೇಳ್ತಾರೆ . ಅದೇ ರೀತಿ ಮರುದಿಣ ಬೆಳೆಗ್ಗೆ ಆಗುತ್ತದೆ. ಈಗಲೂ ಈ ಕೂರ್ಮ ರೂಪೀ ಸಾಲಿಗ್ರಾಮವನ್ನು ನೋಡಬಹುದು ಉತ್ತರಾದಿಮಠದಲ್ಲಿ . ಕ್ಷೀರಾಭಿಷೇಕ ಆದಾಗ ತಿರುಗುತ್ತದೆ . ಶ್ರೀ ರಘುನಾಥ ತೀರ್ಥರ ತಪಸ್ಸಿನ ಫಲವಾಗಿ ಒಲಿದು ಬಂದ ಕೂರ್ಮ ರೂಪೀ ವೇದವ್ಯಾಸ ದೇವರು .
ನಾರಾಯಣವರ್ಮದಲ್ಲಿ ಹೇಳಿದಂತೆ , ಕೂರ್ಮೋ ಹರಿರ್ಮಾಮ್ ನಿರಯಾತ್ ಅಶೇಷಾತ್, ಕೂರ್ಮ ರೂಪೀ ಭಗವಂತ ನರಕಕ್ಕೆ ಗುರಿಯಾಗುವ ಪಾಪಗಳಿಂದ ರಕ್ಷಣೆ ಮಾಡಲಿ. ವೇದವ್ಯಾಸ ದೇವರು ಜ್ನಾನವನ್ನು ಕೊಡುವಂಥ ವಿಶೇಷ ರೂಪ. ಜ್ನಾನ ಬರಬೇಕು ಅಂದ್ರೆ ತತ್ ಪ್ರತಿಬಂಧಕ ಪಾಪಗಳ ನಾಶ ಆಗಬೇಕು . ಅದಕ್ಕೆ ಜ್ನಾನ ಸಂಪಾದನೆಯಾಗಲಿಕ್ಕೆ ಅಡ್ಡಿಯಾದ ಪಾಪಗಳನ್ನು ನಾಶ ಮಾಡಲಿಕ್ಕೆ ಕೂರ್ಮ ರೂಪದಿಂದ ವೇದವ್ಯಾಸ ದೇವರು ಪ್ರತ್ಯಕ್ಷರಾದರು ಅನ್ನೋ ಅನುಸಂಧಾನ ಸ್ವಾಮಿಗಳದ್ದು .ಇಂಥಾ ಕೂರ್ಮ ರೂಪೀ ಭಗವಂತನ ಪ್ರತ್ಯಕ್ಷ.
"ಗಂಗಾದಿ ಸಕಲ ತೀರ್ಥಂಗಳ ಫಲವಿದು ಹರಿಯ ನಾಮ" ಅಂತ ಹೇಳಿದಹಾಗೆ ಸಕಲ ತೀರ್ಥಗಳ ಫಲ ಆ ರಾಮ ನಾಮಜಪದಲ್ಲಿ ಯೇ ಇದೆ , ಇಂಥಾ ರಘುನಾಥ ನನ್ನು ಸಕಲ ತೀರ್ಥಗಳಲ್ಲಿ ಕಂಡ , ಅವನನ್ನು ಪ್ರತಿಪಾದಿಸುವ ಸಕಲ ಶಾಸ್ತ್ರ - ತೀರ್ಥ ಗಳಲ್ಲಿ
ವಿಹರಿಸಿದ ಶ್ರೀ ರಘುನಾಥ ತೀರ್ಥರು , ಕೂರ್ಮ ರೂಪೀ ಭಗವಂತ ನಮ್ಮ ಪಾಪಗಳನ್ನು ನಾಶ ಮಾಡಿ ,ರಘುನಾಥನ ಪಾದ ಕಮಲಗಳನ್ನು ಸೇರುವ ಮಾರ್ಗವಾದ ಶ್ರೀಮಧ್ವ ಶಾಸ್ತ್ರದಲ್ಲಿ ನಮಗೆ ರತಿಯನ್ನು ಕೊಡಲಿ ಅಂತ ಶ್ರೀ ವೇದವ್ಯಾಸ ದೇವರಲ್ಲಿ ನಮ್ಮ ಪರವಾಗಿ ಪ್ರಾರ್ಥಿಸಿ ಅನುಗ್ರಹಿಸಲಿ ಅಂತ ಪ್ರಾರ್ಥಿಸುತ್ತಾ ....
ಶ್ರೀ ರಘುನಾಥ ತೀರ್ಥ ಗುರುಭ್ಯೋ ನಮಃ
by ಸಮೀರಾಚಾರ್ಯ
***
No comments:
Post a Comment