Friday, 10 May 2019

satyavijaya teertharu 1737 satyavijaya nagaram tamilnadu matha uttaradi mutt yati 23 chaitra bahula ekadashi ಸತ್ಯವಿಜಯ ತೀರ್ಥರು







When Shree SathyaVijaya Theertharu of Shree Uttaraaadhi Mata blessed the king of Aarani (TamilNaadu) to get a Puthra Santhaana, the king presented a golden Gangaala (huge vessel of the size of a water drum used for preparing Anna in MahaaSamaaraadhane). Unbelievable to know that the Gangaala is made of gold. Anyway, that Gangaala is used to prepare Shyaavige Paayasa and offered to Shree MahaaLakshmi by uttaradi mutt pontiff. It is used only on this day in a year.

ಕೃಪೆ : ಶ್ರೀಮದುತ್ತರಾದಿಮಠ ಪುಟ. 
************



LINK


*******
info from sumadhwaseva.com--->

Sri Satyavijaya Tirtharu 1726 - 1737


ಸತ್ಯಪೂರ್ಣಾಂಬುಧೇರ್ಜಾತೋ ವಿದ್ವಜ್ಜನವಿಜೃಂಭಿತ: |

ಧನೀಧ್ವಂಸೀತು ನಸ್ತಾಪಂ ಶ್ರೀಸತ್ಯವಿಜಯೋಡುಪ: ||


सत्यपूर्णाम्बुधेर्जातो विद्वज्जनविजृंभित: ।
धनीध्वंसीतु सस्तापं श्रीसत्यविजयोडुप: ॥


satyapoorNaambudhErjaatO vidvajjanavijRuMbhita: |

dhanIdhvaMsItu sastaapaM shrIsatyavijayODupa: ||


ArAdhana: Chaitra bahuLa yEkAdashi
Parampare: uttarAdi maTa, #23
Period: 1728 -1739
Ashrama Gurugalu: shri satyapUrNa tIrtharu
pUrvashrama Name: Pandurangi Baalacharyaru
Ashrama shishyaru: shri satyapriya tIrtharu

Vrundavana: Satya Vijaya Nagaram, TN

shri satyavijaya tIrtha guruvantargata, bhAratIramaNa mukhyaprANAntargata sItApate shri rAma dEvara pAdAravindakke gOvinda gOvinda

Sri Vyasaraja Pratistita Mukyapranadevaru @ Satyavijayanagara ;

Sri Satya Vijaya Thirtharu :

========================

He is from the pandurangi family

  • During his time Sri Sathya Poorna Thirtha was the mathatipathi of UM.

  • He had given ashrama to Sri Sathya priya teertha who was touring north India for several years.

  • At that time Sri Sathya Poorna Thirtha felt that his end is nearing  but they could not locate Sri Sathya Priya Theertha.

  • Hence Sri Sathya Poorna Thirtha came to Mannargudi in TN and initiated Sri Balacharya into Sanyasa and renamed him as Sri Sathya Vijaya Thirtha with specific instructions that he should hand over the Samasthana to Sri Sathya Priya Theertha.  After some time, Sri Sathya Poorna Thirtha entered brindavan in Sangli.   Even then Sri Sathya Priya Theertha did not turn up.

  • Sri  Sathya Vijaya Thirtha continued his tours during the course of which he came to Arani in TN.  Arani at that time was being ruled by a Madhwa Maratta Brahmin by name Srinivasa Rao Saheb . The jagir was received as a benefit for services rendered by  ancestor Sri Vedoji Bhaskar Pant to Shavaji (Chartapathi Shivaji Maharaj’s father).   More details can be had about the Arani Jagir from www.arnijagir.com .

  • One day after pooja and  theertha prasada they both started walking and when thay came to a spot  they saw a five headed      (some say three headed) snake.   When the Jagirdhar asked Sri Swami the significane, Srigalu explained that very soon he will have to shift his palace as there is a danger of an impending war between the Arcot Nawab and Hyderali.

  • After some time Sri Sathya Vijaya theertha fet that his end was nearing and instructed the jagirdhar that the moment  he is dead,  he is to be carried and when they reach a place where the pall bearers can no more bear the weight , they have to bury him in that spot.  Further he made the inventory of all the things with him and gave a copy to the Jagirdhar and one more to Sri Satya Priya Theertha.   Further the pooja box should be buried after his death and has to be unearthed only after Sri Sathya Priya Thirtha comes back.   Further he instructed that Sri Sathya Priya Theertha has to exchange his danda.


  • On Chaitra Krishna Ekadashi,  Sri SathyaVijaya Theertha passed away  and as instructed they started carrying him . They came to a spot where they were unable to bear the weight. The Jagirdhar Srinivasa Rao Saheb was astonished because it was the very spot where they sighted the snake.   He built the brindavana of Sri Sathya Vijaya Theertha and also shifted the palace there.   He renamed the place as Sri Sathya Vijaya Nagaram in the memory of Sri Swami. Even today you can see the Jagir palace there.


Sri Sathya Priya Thirtha came to Sathyavijaya Nagaram and was breifed by the Jagirdhar about the happenings. The Pooja box was taken out and given to Sri Sathya priyaru.   All went on well until the Jagirdhar informed the swamiji that he has to exchange his danda.   Now this created a peculiar problem.   Sri Sathya Vijayaru was not his ashrama guru and it is a normal practice to receive the danda from the ashrama guru.  Confused he started walking when he reached the Hanuman temple. The hanuman devaru here was consecrated by Sri Vyasarajaru ( it is another place where they are finding it very difficult to run the temple). The moment he reached the temple he was swarmed by monkeys. Just then he had the Vishwaroopa dashana of Sri Vayudevaru. Vayudevaru told him that Sri Sathya Vijaya Theertha was a great soul who followed his guru’s instructed to the core without even appointing a successor and that he should exchange his danda and continue with is sanchara. Sri Sathya Priya did as told by Sri Vayu devaru and continued his sanchara and he entered brindavana in Manamadurai.


(Source – Uttaradimutt & Vishwapriya Anand)


Location of Satya Vijayanagar – It is about 240 kms from Bangalore in Tamilnadu.

Route – Hosur -> Krishnagiri -> Arani -> Satyavijaya Nagar. (From Arani 10 kms) Total distance 240 kms from Bangalore.

Contact – Sri Satyavijayachar,  1/440, “Sri Rama Nivas”,S.M.Road, Sathya Viajaya Nagar, Arani Taluk. Pin:632317 (TN)Phone:04173 – 291915 / 9944463550.



*********

Sri Vyasarajaru has consecrated many idols of Anjaneya throughout India. The first among them is the Yantrodharaka Anjaneya at Chakrateertha near Hampi. One such pratishthapana was done about 500 years ago just at the entrance of Satya Vijaya Nagaram.


Satyavijaya Nagaram
Satyavijaya Nagaram is a village in Arani Taluk, Thiruvannamalai District, Tamilnadu. It is about 240 km from Bangalore and 150 km from Chennai. The Moola Brindavana of Sri Sri 1008
Sri Satya Vijaya Teertharu is situated on the banks of Kamandalanaga River. The math is positioned amidst serene nature away from the crowd and commercialism of habitation. The place reverberates with positive vibrations pertinent for spiritual upliftment and helps forget the mundane issues of life.
This village also houses the palace of the then Raja of Arani, Venkatanatha Rao Sahib, an ardent follower of Madhwa sampradaya. By the inspiration and blessings of Sri Satya Vijaya Teertharu, the Raja constructed the present math around the Moola Brindavana for the convenience of devotees. Subsequently, the king relocated his palace from Arani to Satyavijaya Nagaram. The pontiff instructed the king in his dream to set up this village by colonizing poor brahmin families from nearby locations. Thus, many brahmin families from Maharashtra, Karnataka, Andhra Pradesh and Tamilnadu set up their home base here with Raja's suitable administrative and economic support for subsistence.
Sri Satya Vijaya Teertharu desired the place to be named after the person who came there first. As he himself was the first person to get there, the place was therefore, named by the Raja as Satya Vijaya Nagar. The village people led a happy and prosperous life by the grace of the saint and their generous Raja. It is the one and only place in India named directly after Sri Uttaradi math pontiff.
******
info from adhwamrutha.org--->
He got a fame of naming the village in Tamilnadu on his name. It is called Satyavijayanagara situated near Arani town. The mutt has got enough money and property during his time. Many kings honoured him.


One important incident took place in his time which speaks about great spiritual powers swamiji possessed. In those times Venkatanatha was the chieftain of Arani state. The adjacent Muslim king wanted to attack him with ten thousand army. As Venkatanatha possess less army, he felt tensed. As suggested by someone he approached Sri Satyavijaya Theertha and sought his blessings. Swamiji blessed him and got courage to face the war against Muslim king. He defeated Muslim king in the war and handed over land to swamiji as mark of respect, the village is called Satyavijayanagara.
Sri Satyavarya Theertha who earlier got anusamsthana from Satyapoorna Theertha came to know that Sri Satyavijaya Theertha became head of the mutt. He felt unhappy because even though he is Ashrama Jeshta he could not become head of the mutt. Knowing this, Sri Satyavijaya Theertha did danda pallata to Satyavarya Theertha and renamed him as Satyapriya Theertha.
After handing over Peeta to Satyapriya Theertha he entered Vrundavana at Satyavijayanagara the place which he got as a gift from Arani king.
*********


info from uttaradimutt.org---> Shri Satyavijaya Teertha was the pontiff of Shri Uttaradi Matha after Sri Satyapoorna Tirtha. He was formerly known as Shri Balacharya. His father's name was Shrinivasacharya.
It so happened that before entering Brindavana Sri Satyapoorna Tirtharu wanted to anoint his disciple Satyapriya Tirtha to the seat of Shri Matha. But, at the time of Shri Satyapoorna Teertha entering the Brindavana, Shri Satyapriya Teertha was on tour for propagation of Dvaita philosophy. So Shri Satyavijaya Teertha took the Vedantha Peetha. When Shri Satyapriya Teertha returned Matha Divan and disciples convinced Shri Satyapriya Teertha. Shri Satyapriya Teertha was younger to Satyavijaya Teertha, therefore, they exchanged the Danda (Holy Stick). Shri Satyapriya Teertha went on tour once again. Shri Satyavijaya Teertha continued as pithadhipati and after Shri Satyavijaya Teertha entered brindavana, Shri Satyapriya Teertha took over the pontificate.
On Pingala Samvatsara Chaitra Krishna Ekadashi Shri Satyavijaya Teertha entered Brindavana in Satyavijaya Nagar (Arani) on the banks of river Kaveri.
|| Shri Krishnarpnamstu ||
Contact DetailsSri. Satyavijaya Achar, Sri Satyavijaya Tirtha Moola Brindavana, Road Street, Satyavijaya Nagar - 632 017 Arani District, Tamil Nadu. Phone: 9944463550
******
ಯತಿಭಾಸ್ಕರ ‘ ಶ್ರೀ ಸತ್ಯವಿಜಯ ತೀರ್ಥರು (1726-1737)
by s r pandurangi

ಅಂತೇ ಸಿದ್ಧಸ್ತು ಮಧ್ವಸಿದ್ದಾಂತಃ  ಎಷ್ಟೋ ದಾರ್ಶನಿಕರು ಈ ಪ್ರಪಂಚದಲ್ಲಿ ಆಗಿ ಹೋಗಿದ್ದಾರೆ. ಅವರು ತಮ್ಮ ತಮ್ಮ ಸಿದ್ಧಾಂತವನ್ನು ತಮ್ಮ ತಮ್ಮ ಯೋಗ್ಯತೆಗೆ ತಕ್ಕಂತೆ ಪ್ರತಿಪಾದಿಸಿ ಮಂಡಿಸಿದರು. ಆದರೆ ಅವೆಲ್ಲವೂ ಪರಮಾತ್ಮನ ಸಾನಿಧ್ಯಕ್ಕೆ ಅಥವಾ ಮೋಕ್ಷಮಾರ್ಗಕ್ಕೆ ಕೊಂಡೊಯ್ಯುವಲ್ಲಿ ವಿಫಲವಾದವು. ಆದರೆ ಸುಮಾರು ಎಂಟುನೂರು ವರ್ಷಗಳ ಹಿಂದೆ ಅವತರಿಸಿದ ಶ್ರೀಆನಂದತೀರ್ಥರಿಂದ ಪುನಃ ಬೆಳಕಿಗೆ ಬಂದ ದ್ವೈತ ದರ್ಶನದ ನಂತರ ಯಾವ ಹೊಸ ಸಿದ್ಧಾಂತ ಪ್ರತಿಪಾದಕರು ಅಥವಾ ದಾರ್ಶನಿಕರು ಹುಟ್ಟಿಕೊಳ್ಳಲು ಸಾಧ್ಯವಾಗಿಲ್ಲ. ಏಕೆಂದರೆ ಪರಮಾತ್ಮನನ್ನು ಸಮೀಪಿಸಲು ಸರಿಯಾದ ಮಾರ್ಗ ಗೊತ್ತಾದ ಮೇಲೆ ಅಲ್ಲಿ ಹೊಸದಾಗಿ ಸಂಶೋಧಿಸಲು ಏನೂ ಇರುವುದಿಲ್ಲ. ಆದ್ದರಿಂದಲೇ ಮುಂದಿನವರು ಹೇಳಿದ್ದು ಅಂತಿಮವಾಗಿ ಸಿದ್ಧವಾದದ್ದು ಮಧ್ವಸಿದ್ಧಾಂತ."ಅಂತೇ ಸಿದ್ಧಸ್ತು ಮಧ್ವ ಸಿದ್ಧಾಂತಃ".

ದ್ವೈತವೇದಾಂತದ ಮಹಾಸಾಗರದಲ್ಲಿ ಅನೇಕ ಅನರ್ಘ್ಯ ರತ್ನಗಳು ಆಗಾಗ ತಮ್ಮ ಪಾಂಡಿತ್ಯವೆಂಬ ಬೆಳಕಿನಿಂದ ಪರಮಾತ್ಮನನ್ನು ಬೆಳಗಿವೆ. ಅಂತಹವುಗಳಲ್ಲಿ ಮಧ್ವಾಚಾರ್ಯರ ನಾಲ್ವರು ಶಿಷ್ಯರು, ಶ್ರೀಜಯತೀರ್ಥರು, ಶ್ರೀವ್ಯಾಸತೀರ್ಥರು, ಶ್ರೀವಾದಿರಾಜರು, ಶ್ರೀರಘೂತ್ತಮರು, ಶ್ರೀರಾಘವೇಂದ್ರರು,ಶ್ರೀವಿದ್ಯಾಧೀಶರು ಅನೇಕ ದಾಸಮಹನೀಯರು ಹೀಗೆ ಹೇಳುತ್ತ ಹೋದರೆ ಪಟ್ಟಿ ಮುಗಿಯುವುದಿಲ್ಲ. ಶ್ರೀಆನಂದತೀರ್ಥರ ಪೀಠವಾದ ಉತ್ತರಾದಿ ಮಠದಲ್ಲಿ ಶ್ರೀ ಸತ್ಯಪೂರ್ಣತೀರ್ಥರು ಒಬ್ಬರು ಅವರ ಶಿಷ್ಯರಾದ ಶ್ರೀ ಸತ್ಯವಿಜಯ ತೀರ್ಥರು ಯತಿಗಳಲ್ಲಿ ಭಾಸ್ಕರನಂತೆ ಬೆಳಗಿದವರು. ಇವರ ಚರಿತ್ರೆಯನ್ನು ತಿಳಿದುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಏಕೆಂದರೆ ಹುಟ್ಟಿದ ಪ್ರತಿಯೊಬ್ಬರು ತಮ್ಮ ತಂದೆ,ತಾಯಿ ಬಂಧುಗಳನ್ನು ತಿಳಿದುಕೊಳ್ಳಲು ಹೇಗೆ ಆಸಕ್ತಾಗಿರುತ್ತಾರೋ ಹಾಗೇ ತಮ್ಮ ಗುರುಪರಂಪರೆಯಲ್ಲಿ ಬಂದವರ ಚರಿತ್ರೆಗಳನ್ನು ತಿಳಿದುಕೊಳ್ಳುವುದು ಅಷ್ಟೇ ಆವಶ್ಕಕ.


ಶ್ರೀಮಧ್ವಾಚಾರ್ಯರ ಸಾಕ್ಷಾತ್ ಹಾಗೂ ಪ್ರಥಮ ಶಿಷ್ಯರಾದ ಶ್ರೀಪದ್ಮನಾಭತೀರ್ಥರು ತಮಗೆ ಯತಿ ಆಶ್ರಮವಾದ ನಂತರ ಪೈಠಣದಿಂದ ಪಂಢರಾಪುರಕ್ಕೆ ಬಂದು ಅಲ್ಲಿ ಒಂದು ಮಠವನ್ನು ಕಟ್ಟಿಸಿದರೆಂದೂ ಅಂದಿನಿಂದ ಅವರ ಪೂರ್ವಾಶ್ರಮದವರು ಪಂಢರಾಪುರದಲ್ಲಿ ನೆಲೆಸಿದ್ದು ಕಾಲಾನಂತರದಲ್ಲಿ ಪಂಢರಾಪುರದಿಂದ ಪುಣ್ಯತಾಂಬೆ (ಪುಣ್ಯಸ್ಥಂಭ) ಗ್ರಾಮಕ್ಕೆ ಹೋಗಿ ಅಲ್ಲಿ ಕೆಲಕಾಲ ವಾಸಮಾಡುತ್ತಾರೆ. ಸುಮಾರು 5 ರಿಂದ 6 ತಲೆಮಾರಿನವರೆಗೆ ಅಲ್ಲಿದ್ದು ಮುಂದೆ ಪುಣ್ಯತಾಂಬೆಯ ಮೇಲೆ ಮ್ಲೇಂಛರ ಆಕ್ರಮಣವಾದ್ದರಿಂದ ಅಲ್ಲಿಂದ ಆ ಮನೆತನದವರು ಈಗಿನ ಶೂರ್ಪಾಲಿಗೆ ಬರುತ್ತಾರೆ. ಕಾಲಾಂತರದಲ್ಲಿ ಅಲ್ಲಿಂದ ಆಗಿನ ಧಾರವಾಡ ಜಿಲ್ಲೆಯ ಮಾಸೂರು, ತುಮ್ಮಿನಕಟ್ಟಿ, ಮಿಶ್ರಿಕೋಟಿ, ಕುರುಬಗಟ್ಟಿ, ರಾಣೆಬೆನ್ನೂರ, ಕಬ್ಬೂರ, ದಕ್ಷಿಣ ಕರ್ನಾಟಕದ ಮೈಸೂರು, ಬೆಂಗಳೂರು, ಆಂಧ್ರದ ವಿಶಾಖಪಟ್ಟಣ,ರಾಜಮಹೇಂದ್ರಿ,ವಿಜಯನಗರ, ತಮಿಳುನಾಡಿನ ತಂಜಾವೂರ, ಮದ್ರಾಸ್, ಕುಂಭಕೋಣಮ್, ಕಂಚಿ ಪಟ್ಟಣಗಳಲ್ಲಿ ಹರಡಿ ನೆಲೆಸಿದರು. ಪಂಢರಾಪುರ ವಿಠ್ಠಲನ ಸೇವೆ ಮಾಡುತ್ತಿದ್ದುದರಿಂದ ಆ ಮನೆತನಕ್ಕೆ 'ಪಾಂಡುರಂಗಿ' ಎಂಬ ಹೆಸರು ಬಂದಿತೆಂದೂ ಹೇಳುವರು. ಅವರೆಲ್ಲರ ಗೋತ್ರ ಒಂದೇ ಆಗಿದ್ದು ಹಾಗೂ ಬೇರೆ ಮತಗಳಲ್ಲಿ ಆ ಅಡ್ಢಹೆಸರಿನವರಿಲ್ಲದಿರುವುದು ವಿಶೇಷ.

ಪುಣ್ಯತಾಂಬೆಯಲ್ಲಿರುವಾಗ ಆ ಮನೆತನದಲ್ಲಿ ಬರುವ ಆನಂದಭಟ್ಟ ಎಂಬ ಪಂಡಿತರು ಶ್ರೀವಾದಿರಾಜರ ಅನುಗ್ರಹದಿಂದ ಮಗನನ್ನು ಪಡೆದು ಯತಿ ಪರಂಪರೆಗೆ ನೀಡಿದರು. ಅವರೇ ಶ್ರೀವಿದ್ಯಾಧೀಶರು. (ಉತ್ತರಾದಿಮಠದಲ್ಲಿ ವಿದ್ಯಾಧೀಶರ ನಿರ್ಣಯದ ಮೇಲೇಯೇ ಏಕಾದಶಿ ವೃತ ಆಚರಿಸಲ್ಪಡುತ್ತದೆ.)ಇವರ ಚರಿತ್ರೆ ಬರೆದರೆ ಅದೇ ಒಂದು ಗ್ರಂಥವಾಗುತ್ತದೆ. ಆದ್ದರಿಂದ ಪ್ರಸ್ತುತ ಕಥಾನಾಯಕ ಬಗ್ಗೆ ಮಾತ್ರ ತಿಳಿದುಕೊಳ್ಳೋಣ.

ಪುಣ್ಯತಾಂಬೆಯಿಂದ ಬಂದವರಲ್ಲಿ ಕೆಲವರು ತಮಿಳುನಾಡಿನ ರಾಜಮನ್ನಾರುಗುಡಿ ಎಂಬ ಊರಿನಲ್ಲಿ ನೆಲೆಸಿದರು. ಅಲ್ಲಿ ಮೇರುಸ್ವಾಮಿ ಎಂಬ ಸಾತ್ವಿಕನು ಧರ್ಮಶಾಲೆ,ಮಠವನ್ನು ಕಟ್ಟಿಸಿದ್ದನು. ದೈವ ಪ್ರೇರಣೆಯಿಂದ ಬ್ರಾಹ್ಮಣರಿಗೆ ಅಗ್ರಹಾರವನ್ನು ಕಟ್ಟಿಸಿ ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದ ಕಡೆಯಿಂದ ಅನೇಕ ಪಂಡಿತರು,ಪುರೋಹಿತರು,ಧಾರ್ಮಿಕ ಜನರನ್ನು ಕರೆಸಿಕೊಂಡು ಅವರಿಗೆ ಧಾರ್ಮಿಕ ಕಾರ್ಯ ನಡೆಸಲು ಅನವುಮಾಡಿಕೊಟ್ಟಿದ್ದನು.ಇಂತಹ ಪಂಡಿತರುಗಳಲ್ಲಿ ಗಡ್ಡದ ಶ್ರೀನಿವಾಸಾಚಾರ್ಯ ಪಾಂಡುರಂಗಿಯವರೂ ಒಬ್ಬರು. ಇವರು ಆಳವಾದ ಪಾಂಡಿತ್ಯವನ್ನು ಹೊಂದಿದ್ದು ಧಾರ್ಮಿಕ ಕಾರ್ಯಗಳಾದ ಪೌರೋಹಿತ್ಯ, ಯಜ್ಞ ಯಾಗಾದಿಗಳನ್ನು ನಡೆಸುತ್ತಿದ್ದರು. ಇವರು ರಾಜಮನ್ನಾರಿಯಲ್ಲಿ ನೆಲೆಸಿದ್ದರಿಂದ ಇವರ ಸಂತತಿಗೆ ಮುಂದೆ ಮನ್ನಾರಿ ಪಾಂಡುರಂಗಿ ಎಂದು ಕರೆಯುತ್ತಿದ್ದರು. ಇವರು ನೀಳವಾದ ಗಡ್ಡಹೊಂದಿದ್ದರಿಂದ ಗಡ್ಡದ ಶ್ರೀನಿವಾಸಾಚಾರ್ಯ ಎಂದು ಕರೆಯುತ್ತಿದ್ದರು. ಇವರಿಗೆ ಬಾಳಾಚಾರ್ಯ (1650-1737) ಎಂಬ ಮಗನಿದ್ದು ಅವರೂ ತಂದೆಯಂತೆಯೇ ರಾಜಮನ್ನಾರುಗುಡಿಯಲ್ಲಿ ಪೌರೋಹಿತ್ಯ ಮಾಡಿಸುತ್ತ ನಿತ್ಯ ಅಗ್ನಿಹೋತ್ರಿಗಳಾಗಿದ್ದರು. ಹೀಗೆಯೇ ಒಮ್ಮೆ ಯಾಗಮಾಡಿಸುತ್ತಿರುವಾಗ ಶ್ರೀ ಸತ್ಯಪೂರ್ಣತೀರ್ಥರು ಆ ಊರಿಗೆ ಬರುತ್ತಾರೆ. ಆಗ ಬಾಬಾಚಾರ್ಯರು ಗುರುಗಳ ಸೂಚನೆಯಂತೆ ಯಾಗದ ಹವಿಸ್ಸುಗಳನ್ನು ನದಿಯಲ್ಲಿ ಹಾಕಿ ಗುರುಗಳನ್ನು ಕಾಣಲು ಬರುತ್ತಾರೆ. (ಸಜ್ಜನರ ದರ್ಶನ ಮಾತ್ರದಿಂದ ಯಾರದೇ ಜೀವನದಲ್ಲಿ ಮಹತ್ವವಾದ ಬದಲಾವಣೆ ಆಗುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.) ಆಗ ಕೈಯಲ್ಲಿ ದರ್ಭೆಗಳನ್ನು ಹಿಡಿದುಕೊಂಡು ಬಂದ ಬಾಬಾಚಾರ್ಯರನ್ನು ಕಂಡು ಹಸನ್ಮುಖರಾದ ಗುರುಗಳು ಸನ್ಯಾಸ ಸ್ವೀಕರಿಸಲು ತಿಳಿಸಿದಾಗ ರಾಜಮನ್ನಾರಿಯ ಅಗ್ರಹಾರದ ಪರಿಸರದಲ್ಲಿ ಬಾಬಾಚಾರ್ಯರು ಸನ್ಯಾಸತ್ವ ಸ್ವೀಕರಿಸುತ್ತಾರೆ. ಶ್ರೀ ಸತ್ಯಪೂರ್ಣರು ಅವರಿಗೆ ಶ್ರೀಸತ್ಯವಿಜಯ ಎಂದು ನಾಮಕರಣ ಮಾಡಿ ಉತ್ತರಾಧಿಕಾರಿಯನ್ನಾಗಿ ಮಾಡುತ್ತಾರೆ. ಮುಂದೆ ಇಬ್ಬರೂ ಕಂಚಿಗೆ ಪ್ರಯಾಣ ಮಾಡುತ್ತಾರೆ.

ಕಂಚಿಯು ಆ ಕಾಲದಲ್ಲಿ ಉತ್ತರಾದಿಮಠದ ಧರ್ಮಪ್ರಸಾರ ಕೇಂದ್ರವಾಗಿರುತ್ತದೆ. ಕೆಲವುದಿನ ಅಲ್ಲಿ ಇದ್ದು ಮುಂದೆ ತಿರುಪತಿಗೆ ಪ್ರಯಾಣ ಬೆಳೆಸುತ್ತಾರೆ. ಶ್ರೀ ಸತ್ಯವಿಜಯರಿಗಿಂತ ಮೊದಲು ಶ್ರೀ ಸತ್ಯಪೂರ್ಣರು ಶ್ರೀ ಸತ್ಯವರ್ಯರಿಗೆ ಆಶ್ರಮವನ್ನು ನೀಡಿರುತ್ತಾರೆ. ಮೂರು ಯತಿಗಳು ತಿರುಪತಿಯಲ್ಲಿದ್ದಾಗ ಶ್ರೀ ಸತ್ಯಪೂರ್ಣರು ಶ್ರೀ ಸತ್ಯವಿಜಯರ ನಂತರ ತಾವು ಉತ್ತರಾಧಿಕಾರಿಯಾಗಬೇಕೆಂದು ಶ್ರೀ ಸತ್ಯವರ್ಯರಿಗೆ ಸೂಚಿಸುತ್ತಾರೆ ಇದನ್ನು ಶ್ರೀ ಸತ್ಯವರ್ಯರು ಸಮ್ಮತಿಸುತ್ತಾರೆ. ಕಾಲಾಂತರದಲ್ಲಿ ಶ್ರೀ ಸತ್ಯಪೂರ್ಣರು ಕೋಲ್ಪುರ ಎಂಬ ಗ್ರಾಮದಲ್ಲಿ ವೃಂದಾವನಸ್ಥರಾಗುತ್ತಾರೆ. ನಂತರದಲ್ಲಿ ಶ್ರೀ ಸತ್ಯವಿಜಯರು ಶ್ರೀ ಸತ್ಯವರ್ಯರಿಗೆ ಉತ್ತರಾಧಿಕಾರಿಯನ್ನಾಗಿ ಮಾಡಿ ಶ್ರೀ ಸತ್ಯಪ್ರಿಯತೀರ್ಥರೆಂದು ನಾಮಕರಣ ಮಾಡುತ್ತಾರೆ. ನಂತರ ಶ್ರೀ ಸತ್ಯಪ್ರಿಯತೀರ್ಥರು ಅಣು ಸಂಸ್ಥಾನದೊಂದಿಗೆ ಧರ್ಮಪ್ರಸಾರಕ್ಕಾಗಿ ತೆರಳುತ್ತಾರೆ. ಮುಂದೆ ಶ್ರೀ ಸತ್ಯವಿಜಯರು 'ಆರಣಿ' ಎಂಬ ಪ್ರಾಂತ್ಯಕ್ಕೆ ಆಗಮಿಸುತ್ತಾರೆ. ಈ ಆರಣಿ ಸಂಸ್ಥಾನವು ತಂಜಾವೂರ ಮಹಾಸಂಸ್ಥಾನದ ಅಧೀನಕ್ಕೆ ಒಳಪಟ್ಟು ಅದನ್ನು ವೇದೋಜಿಭಾಸ್ಕರನೆಂಬುವನ ಮಗನಾದ ವೆಂಕಟರಾಜನೆಂಬುವನು ಆಳುತ್ತಿರುತ್ತಾನೆ. ಅವನಿಗೆ ಶ್ರೀಮಠದ ಶಿಷ್ಯನಾದ ಕೃಷ್ಣಾಜಿಪಂತ ನೆಂಬುವನು ಮಂತ್ರಿಯಾಗಿರುತ್ತಾನೆ. ಒಮ್ಮೆ ಆರಣಿಯ ಮೇಲೆ ಅರ್ಕಾಟಿನ ನವಾಬನು ಮುತ್ತಿಗೆ ಹಾಕುತ್ತಾನೆ. ಇದನ್ನು ಎದುರಿಸಲು ವೆಂಕಟರಾಜನ ಬಳಿ ಸಾಕಷ್ಟು ಸೇನಾಬಲ ಇರುವುದಿಲ್ಲ. ಇದು ಅವನ್ನು ಸಾಕಷ್ಟು ಚಿಂತಿತನನ್ನಾಗಿ ಮಾಡುತ್ತದೆ. ಈ ವಿಷಯವನ್ನು ಮಂತ್ರಿ ಕೃಷ್ಣಾಜಿಪಂತನೊಡನೆ ಚರ್ಚಿಸಲಾಗಿ ಕೃಷ್ಣಾಜಿಪಂತನು ಗುರುಗಳ ಅನುಗ್ರಹ ಕೋರಲು ಸೂಚಿಸುತ್ತಾನೆ. ಅದೇಕಾಲಕ್ಕೆ ರಾಜನ ಮಗನ ಸ್ವಪ್ನದಲ್ಲಿ ಆದ ಸೂಚನೆಯಂತೆ ವೆಂಕಟರಾಜನು ಆ ಪ್ರಾಂತ್ಯದಲ್ಲಿ ಬೀಡುಬಿಟ್ಟಿದ್ದ ಶ್ರೀ ಸತ್ಯವಿಜಯರನ್ನು ಅರಮನೆಗೆ ಕರೆಸಿಕೊಂಡು ಸಂಸ್ಥಾನ ಪೂಜೆಯನ್ನು ಮಾಡಿಸಲಾಗಿ ಶ್ರೀಸತ್ಯವಿಜಯರ ಮುಂದೆ ತಮ್ಮ ನಿವೇದನೆಯನ್ನು ಹೇಳಿಕೊಳ್ಳುತ್ತಾನೆ. ಆಗ ಗುರುಗಳು 'ವಿಜಯೀಭವ' ಎಂದು ಆಶೀರ್ವದಿಸಿ ಮಂತ್ರಾಕ್ಷತೆಯನ್ನು ನೀಡುತ್ತಾರೆ. ಅದರ ಮೇಲಿನ ಬಲದಿಂದ ವೆಂಕಟರಾಜನು ಶತ್ರುಸೈನ್ಯದ ಕಾಲುಭಾಗದಷ್ಟು ಸೈನ್ಯದಿಂದಲೇ ಶತ್ರುಸೈನ್ಯವನ್ನು ಸದೆಬಡೆದು ವಿಜಯವನ್ನು ಸಾಧಿಸುತ್ತಾನೆ. ಮುಂದೆ ವೆಂಕಟರಾಜನು ಗುರುಗಳನ್ನು ಸತ್ಕರಿಸಿ ಮಠದ ಶಿಷ್ಯನಾಗುತ್ತಾನೆ ಇಂದಿಗೂ ಆರಣಿ ಸಂಸ್ಥಾನದ ಮನೆತನದವರು ಉತ್ತರಾದಿಮಠದ ಶಿಷ್ಯರಾಗಿದ್ದಾರೆ. ಕೃಷ್ಣಾಜಿಪಂತನು ಶ್ರೀ ಸತ್ಯಪೂರ್ಣರ ಕಾಲದಲ್ಲಿಯೇ ಕಂಚಿಯಲ್ಲಿ ಉತ್ತರಾದಿಮಠವನ್ನು ಕಟ್ಟಿಸಲು ಸಹಾಯಮಾಡಿದ್ದನು. ಶ್ರೀ ಸತ್ಯವಿಜಯರ ಕಾಲದಲ್ಲಿ ವೇದವ್ಯಾಸ ದೇವರಿಗೆ ವಜ್ರಸಂಪುಟ, ಮಠಕ್ಕೆ ಬಂಗಾರದ ಗಂಗಾಳ, ಗದ್ದುಗೆ ಹಾಗೂ ಅನೇಕ ಆಭರಣಗಳನ್ನು ನೀಡಿರುತ್ತಾನೆ ಎಂಬ ವಿಷಯವು ಆಗಿನ ಕಾಲದ ಕಾಗದಪತ್ರಗಳನ್ನು ನೋಡಿದರೆ ಗೊತ್ತಾಗುತ್ತದೆ. ಶ್ರೀ ಸತ್ಯವಿಜಯರು ಕಂಚಿಯ ವರದರಾಜ ದೇವಸ್ಥಾನದ ಗೋಪುರ ನಿರ್ಮಾಣದಲ್ಲಿ ಸೇವೆ ಸಲ್ಲಿಸಿದರೆಂದು ದೇವಾಲಯದಲ್ಲಿನ ಶಾಸನದಿಂದ ತಿಳಿದುಬರುತ್ತದೆ. 

ಮುಂದೆ ಶ್ರೀ ಸತ್ಯವಿಜಯರು ಪ್ರಯಾಣ ಮಾಡುತ್ತ ಶಿರಹಟ್ಟಿ ಮಾರ್ಗವಾಗಿ ಸಾಗುತ್ತಿರುವಾಗ ಅಲ್ಲಿಗೆ ಬಂದ ಚಿತ್ರದುರ್ಗ ಪ್ರಾಂತದ ಆಗಿನ ಹಿರೇಮದಕರಿನಾಯಕನು ಶ್ರೀಗಳಿಗೆ ತಮ್ಮ ಪ್ರಾಂತ್ಯಕ್ಕೆ ಆಗಮಿಸಲು ಕೋರುತ್ತಾನೆ. ಆಗ ಅವನ ಕೋರಿಕೆ ಮೇರೆಗೆ ಶ್ರೀಗಳು ಚಿತ್ರಗುರ್ಗಕ್ಕೆ ತೆರಳುತ್ತಾರೆ. ಆ ಪ್ರಾಂತ್ಯದಲ್ಲಿ ಆಗ ಬರಗಾಲ ಉಂಟಾಗಿರುತ್ತದೆ. ಆಗ ಮಠದ ಪರಿವಾರವು ಚಿತ್ರದುರ್ಗದಲ್ಲಿನ ಕಲ್ಯಾಣಿಯೊಂದರ ಹತ್ತಿರ ಬೀಡು ಬಿಟ್ಟು ಶ್ರೀಗಳು ಅಲ್ಲಿ ಋಷ್ಯಶೃಂಗ ಋಷಿಗಳು  ಹಾಗೂ ಶಾಂತಲೆಯರ ಪ್ರತಿಮೆಯನ್ನು ಸ್ಥಾಪಿಸಿ ಜಪಮಾಡಿಸಲಾಗಿ ಆ ಪ್ರಾಂತ್ಯದಲ್ಲಿ ಮಳೆ ಬರುತ್ತದೆ. ಇದರಿಂದ ಸಂತುಷ್ಟನಾದ ನಾಯಕನು ಅಲ್ಲಿಯ ಆ ಪ್ರದೇಶವನ್ನು ಮಠಕ್ಕೆ ದಾನವಾಗಿ ಕೊಡುವ ವಿಷಯ ಶಾಸನಗಳಿಂದ ತಿಳಿದು ಬರುತ್ತದೆ. ಮುಂದೆ ಅಲ್ಲಿಗೆ ಶ್ರೀಸತ್ಯಬೋಧರು ಆಗಮಿಸಿ ಪ್ರಾಣದೇವರ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಾರೆ.

ಚಿತ್ರದುರ್ಗದ ಪ್ರವಾಸದ ನಂತರ ಶ್ರೀ ಸತ್ಯವಿಜಯರು ರಾಯದುರ್ಗಕ್ಕೆ ಹೊರಡುತ್ತಾರೆ. ಆ ಪ್ರದೇಶದ ದ್ವಾರದಲ್ಲಿಯೇ ಅಲ್ಲಿಯ ರಾಜನಾದ ವೆಂಕಟಪತಿ ನಾಯಕನು ಶ್ರೀಮಠವನ್ನು ಬರಮಾಡಿಕೊಂಡು ತನ್ನ ಅರಮನೆಯಲ್ಲಿಯೇ ಶ್ರೀರಾಮದೇವರ ಪೂಜೆಗೆ ಅನುಕೂಲ ಮಾಡಿಕೊಡುತ್ತಾನೆ. ಅಲ್ಲಿನ ಬ್ರಾಹ್ಮಣರಿಗೆ ಊಟೋಪಚಾರ ಸತ್ಕಾರಗಳನ್ನು ಮಾಡಿ ಶ್ರೀ ಸತ್ಯವಿಜಯರಿಂದ ಆಶೀರ್ವಾದಗಳನ್ನು ಪಡೆಯುತ್ತಾನೆ. ಹೀಗೆಯೇ ಪ್ರಯಾಣ ಮಾಡುತ್ತ ಶ್ರೀ ಸತ್ಯವಿಜಯರು ಪುನಃ ಆರಣಿ ಪ್ರಾಂತ್ಯಕ್ಕೆ ಬರುತ್ತಾರೆ. ಅಲ್ಲಿಯ ರಾಜನಾದ ವೆಂಕಟನಾಥನು ಶ್ರೀಗಳ ಮಾರ್ಗದರ್ಶನದಲ್ಲಿಯೇ ಕಾರ್ಯಗಳನ್ನು ಕೈಗೊಳ್ಳುತ್ತಿದ್ದನು. ಒಮ್ಮೆ ರಾಜನು ಶ್ರೀಗಳ ದರ್ಶನಕ್ಕೆ ಬಂದಾಗ ಮನಸ್ಸಿನಲ್ಲಿ ನೆಮ್ಮದಿ ಇಲ್ಲದಿರುದನ್ನು ಬಿನ್ನೈಸಿಕೊಂಡನು. ಆಗ ಶ್ರೀಗಳು ಧ್ಯಾನಿಸಿ ಪ್ರಾಂತ್ಯದ ರಾಜಧಾನಿಯನ್ನು ಸ್ಥಳಾಂತರಿಸಲು ಸೂಚಿಸಿದರು. ಮುಂದೆ ರಾಜನು ಶ್ರೀಗಳ ಸೂಚನೆಯಂತೆ ಕಮಂಡಲುನಾಗ ಎಂಬ ನದಿಯ ದಂಡೆಯ ಮೇಲೆ ಹೊಸ ಅರಮನೆಯನ್ನು ಕಟ್ಟಿಸಿ ನೂತನವಾದ ನಗರವನ್ನು ನಿರ್ಮಾಣ ಮಾಡಿದನು. ಆ ನಗರದಲ್ಲಿ ಪಾಠಶಾಲೆ,ಧರ್ಮಶಾಲೆ ನಿರ್ಮಿಸಿ ತಂಜಾವೂರಿನಿಂದ ಪಂಡಿತರುಗಳನ್ನು ಕರೆಸಿ ಅವರಿಗೆ ವಸತಿಗೃಹಗಳನ್ನು ನಿರ್ಮಿಸುತ್ತಾನೆ. ತನ್ನ ಅರಮನೆಯ ಪಕ್ಕದಲ್ಲಿಯೇ ಮಠವನ್ನು ನಿರ್ಮಾಣ ಮಾಡಿ ಅದರಲ್ಲಿ ಪಾಕಶಾಲೆ, ಪೂಜಾಗೃಹ ಮುಂತಾದವುಗಳನ್ನು ನಿರ್ಮಿಸುತ್ತಾನೆ. ಆ ನಗರ ನಿರ್ಮಾಣಕ್ಕೆ ಶ್ರೀಗಳ ಪ್ರೇರಣೆಯೇ ಕಾರಣವೆಂದು ತಿಳಿದು ಅದಕ್ಕೆ' ಸತ್ಯವಿಜಯ ನಗರ'ವೆಂದು ನಾಮಕರಣ ಮಾಡುತ್ತಾನೆ. ಮುಂದೆ ದೊಡ್ಡದಾಗಿ ಬೆಳೆದ ಆ ನಗರವು ಇಂದಿಗೂ ಸತ್ರವಿಜಯನಗರ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದೆ. ನೂರಾರು ವರ್ಷಗಳಿಂದ ಒಬ್ಬ ಮಾಧ್ವಸನ್ಯಾಸಿಯ ಹೆಸರಿನ ನಗರವು ಅಸ್ತಿತ್ವದಲ್ಲಿರುವುದು ಹೆಮ್ಮೆಯ ವಿಷಯ. ಅಂದು ಸತ್ಯಪೂರ್ಣರು ಸನ್ಯಾಸ ಸ್ವೀಕರಿಸಲು ಬಾಳಾಚಾರ್ಯರು ನಿರಾಕರಿಸಿದಾಗ ಇಂದು ಸತ್ಯವಿಜಯನಗರವು ಇರುತ್ತಿರಲಿಲ್ಲ. ಅರಣಿ ಸಂಸ್ಥಾನದ ದಿಕ್ಕು ಏನಾಗಿರುತ್ತತ್ತೋ!?. ಗುರುಗಳ ವಾಕ್ಯಕ್ಕೆ ಅಷ್ಟೊಂದು ಶಕ್ತಿ ಇರುತ್ತದೆ.


ನಂತರದ ದಿನಗಳಲ್ಲಿ ಶ್ರೀಸತ್ಯವಿಜಯರು ಅಲ್ಲಿಯ ಮಠದಲ್ಲಿಯೇ ಪಾಠಪ್ರವಚನಗಳನ್ನು ಮಾಡಿಕೊಂಡು ಇರುತ್ತಾರೆ. ಮುಂದೆ ತಮಗೆ ವೃಂದಾವನಸ್ಥಾರಾಗುವ ಕಾಲ ಹತ್ತಿರ ಬಂತೆಂದು ತಿಳಿದಾಗ ರಾಜನ ಅರಮನೆಯಲ್ಲಿಯೇ ತಮ್ಮ ಸಂಸ್ಥಾನದ ಪ್ರತಿಮೆಗಳನ್ನು ಇರಿಸಿ ಅದಕ್ಕೆ ಬೀಗಹಾಕಿ ಬೀಗದಕೈಯನ್ನು ರಾಜನಿಗೆ ಕೊಟ್ಟು ಶ್ರೀ ಸತ್ಯಪ್ರಿಯರು ಬಂದಾಗ ಅದನ್ನು ಒಪ್ಪಿಸಬೇಕೆಂದು ಸೂಚಿಸಿ ಕಮಂಡಲುನಾಗ ನದೀತೀರದ ದಡದಲ್ಲಿರುವ ಮಠದಲ್ಲಿಯೇ ಚೈತ್ರ ಬಹುಳ ಏಕಾದಶಿಯಂದು ವೃಂದಾವನಸ್ಥರಾಗುತ್ತಾರೆ. ಈ ವಿಷಯ ತಿಳಿದ ಶ್ರೀ ಸತ್ಯಪ್ರಿಯರು ಅಲ್ಲಿಗೆ ಬರಲಾಗಿ ರಾಜ ನೀಡಿದ ಬೀಗದಕೈಗಳಿಂದ ಬಾಗಿಲನ್ನು ತೆರೆಯಲು ಹೋದಾಗ ಎಷ್ಟು ಪ್ರಯತ್ನಪಟ್ಟರೂ ಅದು ಬರುವುದಿಲ್ಲ. ಆಗ ಗುರುಗಳ ದರ್ಶನವಿಲ್ಲದೇ ರಾಮದೇವರ ದರ್ಶನಪಡೆಯಲು ಹೋಗಿದ್ದಕ್ಕೆ ಪಶ್ಚಾತ್ತಾಪ ಪಟ್ಟು ತಮ್ಮ ಗುರುಗಳಾದ ಶ್ರೀಸತ್ಯವಿಜಯರ ವೃಂದಾವನ ದರ್ಶನಪಡೆದು ಪ್ರಾರ್ಥಿಸುತ್ತಾರೆ. ಆನಂತರ ಕೋಣೆಯ ಬೀಗವನ್ನು ತೆರೆದು ಸಂಸ್ಥಾನದ ಪೂಜೆಯನ್ನು ನೆರವೇರಿಸಿ ಗುರುಗಳ ಮಹಾಸಮಾರಾಧನೆಯನ್ನು ಮಾಡುತ್ತಾರೆ. ಹೀಗೆ ಶ್ರೀಸತ್ಯವಿಜಯರ ಕಾಲದಲ್ಲಿ ಮಧ್ವ ಮಠವು ವೈಭವಯುತವಾಗಿ ಇದ್ದಿತೆಂದು ತಿಳಿದುಬರುತ್ತದೆ.

ಇಂದು ಶ್ರೀಸತ್ಯವಿಜಯರ ವೃಂದಾವನ ದರ್ಶನಕ್ಕೆ ಹೋಗಲು ಈಗ ಸತ್ಯ ವಿಜಯನಗರ ರೈಲುನಿಲ್ದಾಣವೂ ಇದೆ. ಇಂದಿಗೂ ಆರಣಿ ಊರಿನ ಹತ್ತಿರ ಇರುವ ಸತ್ಯವಿಜಯನಗರದಲ್ಲಿ ಅರಮನೆ, ಶ್ರೀಮಠ, ಶ್ರೀಸತ್ಯವಿಜಯರ ವೃಂದಾವನ, ಧರ್ಮಶಾಲೆ, ಮುಂತಾದುವುಗಳನ್ನು ನೋಡಬಹುದು.

ಸತ್ಯಪೂರ್ಣಾಂಬುಧೇರ್ಜಾತೋ ವಿದ್ವಜ್ಜನ ವಿಜೃಂಭಿತಃ |
ದನೀಧ್ವಂಸೀತು ನಸ್ತಾಪಂ ಶ್ರೀ ಸತ್ಯವಿಜಯೋಡುಪಃ | |

|| ಶ್ರೀ ಕೃಷ್ಣಾರ್ಪಣಮಸ್ತು ||

~ ಸ.ರಾ.ಪಾಂಡುರಂಗಿ
***




#ಶ್ರೀಮದುತ್ತರಾದಿ ಮಠದ, ಶ್ರೀ #ಸತ್ಯವಿಜಯ ತೀರ್ಥ ಶ್ರೀಪಾದಂಗಳವರು ಆರಣಿಯ(ತಮಿಳುನಾಡು) ಮಹಾರಾಜರಿಗೆ ಪುತ್ರಸಂತಾನವಾಗಲಿ ಎಂಬುದಾಗಿ ಆಶೀರ್ವದಿಸಿದಾಗ , ಮಹಾರಾಜರು ಬಂಗಾರದ ಗಂಗಾಳವನ್ನು ಶ್ರೀಮಠಕ್ಕೆ ಸಮರ್ಪಿಸಿದರು.  ಶ್ಯಾವಿಗೆ ಪಾಯಸವನ್ನು ಈ ಗಂಗಾಳದಲ್ಲಿ ತರಿಸಿ ಲಕ್ಷ್ಮೀದೇವಿಗೆ ಸಮರ್ಪಿಸುವರು. ಈ ಪಾತ್ರೆಯನ್ನು ವಿಶೇಷವಾಗಿ ಈ ದಿನದಲ್ಲಿ  ಶ್ರೀಮಠದಲ್ಲಿ ಬಳಸುವರು.
***************


ವಿಜಯೀ ಭವ - ಶ್ರೀ ಶ್ರೀ ಸತ್ಯ ವಿಜಯ ತೀರ್ಥರು 
(ಆರಾಧನಾ ಮಹೋತ್ಸವ ವಿಶೇಷ)

||ಸತ್ಯಪೂರ್ಣಾಂಬುಧೇರ್ಜಾತೋ ವಿದ್ವಜ್ಜನವಿಜೃಂಭಿತ: |
ಧನೀಧ್ವಂಸೀತು ನಸ್ತಾಪಂ ಶ್ರೀಸತ್ಯವಿಜಯೋಡುಪ: ||

ಉತ್ತರಾಧಿ ಮಠದ ಯತಿ ಪರಂಪರೆಯಲ್ಲಿ ಬರುವ "ವಿಜಯೀಭವ" ಎಂದು ಎಲ್ಲರಿಗು ಹರಿಸಿ ಕೇವಲ ಮಂತ್ರಾಕ್ಷತೆಯ ಅನುಗ್ರಹ ಮತ್ತು ಮಹಿಮೆಯನ್ನು ತೋರಿಸಿದ ಗುರುಗಳು, ಮತ್ತು ಅವರ ಹೆಸರಿನಿಂದಲೇ ಇಂದಿಗೂ ಆ ಊರನ್ನು ಗುರುತಿಸುವ ಯತಿ ಶ್ರೇಷ್ಠರಾದ ಶ್ರೀ ಶ್ರೀ ಸತ್ಯವಿಜಯ ತೀರ್ಥರ ಆರಾಧನಾ ಮಹೋತ್ಸವ. 

ಪೂರ್ವಾಶ್ರಮ ನಾಮ : ಶ್ರೀ ಪಾಂಡುರಂಗಿ ಬಾಳಚಾರ್ಯರು 
ಆಶ್ರಮ ಗುರುಗಳು : ಶ್ರೀ ಸತ್ಯಪೂರ್ಣ ತೀರ್ಥರು 
ಆಶ್ರಮ ಶಿಷ್ಯರು : ಶ್ರೀ ಸತ್ಯಪ್ರಿಯ ತೀರ್ಥರು 
ಆರಾಧನಾ ದಿನ : ಚೈತ್ರ ಕೃಷ್ಣ ಏಕಾದಶಿ
ವೃಂದಾವನ ಸ್ಥಳ : ಶ್ರೀ ಸತ್ಯವಿಜಯ ನಗರ, ಆರಣಿ ತಮಿಳುನಾಡು. 
ವೇದಾಂತ ಸಾಮ್ರಾಜ್ಯ ಕಾಲ : 10 ವರ್ಷ 10   ತಿಂಗಳು 10 ದಿನ 
ನದಿತೀರಾ : ಕೌಂಡಿನ್ಯ ನದಿ ಅಥವಾ ಕಮಂಡಲನಾಗನದಿ 

ಪಾಂಡುರಂಗಿ ಮನೆತನದ ಶ್ರೀನಿವಾಸ ಚಾರ್ಯರ ಮಕ್ಕಳಾದ ಶ್ರೀ ಪಾಂಡುರಂಗಿ ಬಾಳಾಚಾರ್ಯರು ಪರಮ ಸಾತ್ವಿಕರು, ಶ್ರೀಮನ್ನ್ಯಾಸುಧಾ ಪಂಡಿತರು, ಪದ್ಮನಾಭ ತೀರ್ಥರ ವಂಶದವರು ಆಗಿದ್ದು, ತಮಿಳುನಾಡಿನ ರಾಜಮನ್ನರುಗುಡಿಯಲ್ಲಿ ವಾಸಿಸುತ್ತಿದ್ದರು. 
ಒಂದು ಸಂದರ್ಭದಲ್ಲಿ ಶ್ರೀ ಬಾಳಾಚಾರ್ಯರು ಗಡ್ಡವನ್ನು ಬಿಟ್ಟಿದ್ದರು, ಕೆಲವರು ಇವರನ್ನು ತುರ್ಕಿಶರು (ಮುಸಲ್ಮಾನರಂತೆ)  ಎಂದು ಇವರನ್ನು ಧೂಷಿಸುತ್ತಿದ್ದರು, ಆದರೆ ಅಂತರಂಗದಲ್ಲಿ ಶ್ರೀ ಬಾಳಚಾರ್ಯರು ದೇಹದ ಅಲಂಕಾರವನ್ನು ಬಿಟ್ಟು ಮನಸ್ಸಿನಲ್ಲಿ ಪರಮಾತ್ಮನನ್ನ ನಿತ್ಯ ಆರಾಧನೆ ಮಾಡುತ್ತಿದ್ದರು. ಇವರ ಮನೆ ಎದುರಿನ ಸ್ತ್ರೀ ಇವರಿಂದ ಒಂದು ದಿನ ತೀರ್ಥವನ್ನು ತೆಗೆದುಕೊಳ್ಳಲಿಲ್ಲ, ಕಾರಣ ಇವರ ರೂಪವನ್ನು ನೋಡಿ ತೀರ್ಥವನ್ನು ತೆಗೆದು ಕೊಳ್ಳಲಿಲ್ಲ. ಅಂದೇ ಅವಳ ಮನೆಯಲ್ಲಿ ಒಂದು ಕಾರ್ಕೋಟಕ ಸರ್ಪ ಪ್ರತ್ಯಕ್ಷವಾಗಿ ನೀನು ಕೂಡಲೇ ಬಾಳಚಾರ್ಯರಲ್ಲಿ ಕ್ಷಮೆಕೇಳಿ ಅವರಿಂದ ಭಗವದ್ ತೀರ್ಥ ತೆಗೆದೆಕೊ ಇಲ್ಲದ್ದಿದರೆ ಕಚ್ಚುವೆ ಎಂದು ಸರ್ಪವೆ ಹೇಳಿತ್ತಂತೆ, ಅಂತ ಭಗವಂತನ ಧ್ಯಾನ ಮಾಡಿದ ಮಹಿಮರು. ಇವರನ್ನು ಬಾಬಾ ಚಾರ್ಯ ಎಂದು ಕರೆಯುತ್ತಿದ್ದರು. ಇವರು ವ್ಯಾಕರಣ, ಮೀಮಾಂಸ, ಯಜ್ನ್ಯಯಾಗಾದಿಗಳ ಋತ್ವಿಜರು ಆಗಿದ್ದರು. ಪ್ರವೃತ್ತಿ ಕರ್ಮದಲ್ಲಿ ನಿಪುಣರು. 

ಒಮ್ಮೆ ಈ ಬಾಬಾಚಾರ್ಯರನ್ನು ಪರೀಕ್ಷೆ ಮಾಡಲು ಸತ್ಯಪೂರ್ಣ ತೀರ್ಥರೇ ಅಲ್ಲಿಗೆ ಬಂದುರು, ಆ ಸಂದರ್ಭದಲ್ಲಿ ಬಾಳಚಾರ್ಯರೇ ಋತ್ವಿಜರು. ಇನ್ನು ಹೋಮ ಶುರುವಾಗಿರಲಿಲ್ಲ ಕೂಡಲೇ ಸತ್ಯಪೂರ್ಣ ತೀರ್ಥರು ಅಲ್ಲಿದ್ದ ಸಾಮಗ್ರಿಗಳನ್ನೂ ನದಿಯಲ್ಲಿ ಎಸೆಯಲು ಹೇಳಿದರು. ಮರುಮಾತಾಡದೆ ಗುರುಗಳ ಮಾತಿನಂತೆ ಎಲ್ಲವನ್ನು ಎಸೆದು ಬಂದರು. ತಕ್ಷಣ ಶ್ರೀ ಸತ್ಯಪೂರ್ಣ ತೀರ್ಥರು ಇವರಿಗೆ ಅನುಗ್ರಹ ಮಾಡಿ, ಪುನಃ ಹೊಸದಾಗಿ ಎಲ್ಲಾ ದ್ರವ್ಯಗಳನ್ನು ಕೊಟ್ಟು ಅವರಿಂದ ವಿಶೇಷ ಹವನಗಳನ್ನು ಮಾಡಿಸಿದರು. 

 ಶ್ರೀಮಜ್ಜಯತೀರ್ಥರಿಗೆ "ಕಿಮ್ ಪಶು ಪೂರ್ವದೇಹೇ" ಎಂಬ ವಾಕ್ಯ ಅವರಿಗೆ ಬದಲಾವಣೆ ತಂದಂತೆ ಇವರಿಗೂ ಪ್ರವೃತ್ತಿ ಕರ್ಮಾ ಸಾಕು ಮತ್ತು ನಿವೃತ್ತಿ ಕರ್ಮದಲ್ಲಿ ಮನಸ್ಸು ಹಂಬಲಿಸಿತು. ಪರಮಾತ್ಮನ ಇಚ್ಛೆಯಂತೆ ಶ್ರೀ ಸತ್ಯಪೂರ್ಣ ತೀರ್ಥರಿಗೆ ಸ್ವಲ್ಪ ದೇಹಾಲಾಸ್ಯವಾದಾಗ ಇವರಿಗೆ ಸಂನ್ಯಾಸಾಶ್ರಮ ಕೊಟ್ಟು " ಶ್ರೀ ಸತ್ಯ ವಿಜಯ ತೀರ್ಥರು" ಎಂದು ವೇದಾಂತ ಸಾಮ್ರಾಜ್ಯದಲ್ಲಿ ಪಟ್ಟಾಭಿಷೇಕ ಮಾಡಿದರು.

ಗುರುಗಳ ಜೊತೆಗೆ ಕಂಚಿ, ತಿರುಪತಿ, ಶ್ರೀಮುಷ್ಣ ಮುಂತಾದ ಕಡೆಗೆ ಸಂಚಾರಕ್ಕೆ ಬಂದರು. 
ಶ್ರೀಮಠದ ಪದ್ದತಿಯಂತೆ ಯಾವ ಉತ್ತರಾದಿ ಮಠದ ಯತಿಗಳು ಶ್ರೀಮುಷ್ಣಮ್ ಗೆ ಬಂದರು ಚತುರ್ಮುಖ ಬ್ರಹ್ಮ ಕರಾರ್ಚಿತ ಶ್ರೀ ಮನ್ಮೂಲರಾಮಚಂದ್ರ ದೇವರ ಜೊತೆಗೆ ಚತುರ್ಮುಖ ಬ್ರಹ್ಮ ಕರಾರ್ಚಿತ ಶ್ರೀ ಯಜ್ಞವರಾಹ ದೇವರಪೂಜೆ ಒಟ್ಟಿಗೆ ನಡೆಯಬೇಕು. ಆದರೆ  ದೇವಾಲಯದ ಅರ್ಚಕ ಕೊಡಲು ನಿರಾಕರಿಸಿದ. ಅಂದೇ ಸಂಜೆ  ದೀಪ ಹಚ್ಚುವ ಸಮಯದಲ್ಲಿ ಇದ್ದಕ್ಕಿದ್ದ ಹಾಗೆ ಬೆಂಕಿ ಹತ್ತಿಕೊಂಡು ಯಜ್ಞ ವರಾಹ ದೇವರ ಹಿಂದಿದ್ದ   ವಸ್ತ್ರಗಳೆಲ್ಲ   ಸುಟ್ಟು ಹೋದವು. ತಕ್ಷಣ ಅಲ್ಲಿದ್ದ ಹಿರಿಯರು ಆ ಅರ್ಚಕನಿಗೆ ನೀನು ಸಂಪ್ರದಾಯ ಉಲ್ಲಂಘನೆ ಮಾಡಿದೆ ಎಂದು ಹೇಳಿದರು, ಮರುದಿನ ಬೆಳಗ್ಗೆ ಯಜ್ಞವರಾಹದೇವರನ್ನು ಶ್ರೀಮಠಕ್ಕೆ ಒಪ್ಪಿಸಿ ಶ್ರೀ ಸತ್ಯಪೂರ್ಣರು ಮತ್ತು ಶ್ರೀ ಸತ್ಯವಿಜಯ ತೀರ್ಥರಲ್ಲಿ ಕ್ಷಮೆ ಬೇಡಿದನು. 

ಮುಂದೆ ಸಂಚಾರದಲ್ಲಿದ್ದ ಶ್ರೀ ಸತ್ಯವರ್ಯ ತೀರ್ಥರು (ಸತ್ಯಪ್ರಿಯ ತೀರ್ಥರು) ಇವರಲ್ಲಿಗೆ ಬಂದಾಗ ಪುನಃ ದಂಡ ಪಲ್ಲಟ ಮಾಡಿ ಶ್ರೀ ಸತ್ಯಪ್ರಿಯ ತೀರ್ಥರು ಎಂದು ನಾಮ ಕರಣ ಮಾಡಿದರು. ಮಧ್ವ ಸಿದ್ದಾಂತದ ಪ್ರಚಾರಕ್ಕಾಗಿ ಪುನಃ ಶ್ರೀ ಸತ್ಯಪ್ರಿಯರು ಅಣು ಸಂಸ್ಥಾನದ ಜೊತೆಗೆ ಉತ್ತರದ ಕಡೆ ಹೊರಟರು. ಇತ್ತ ಶ್ರೀ ಸತ್ಯವಿಜಯ ತೀರ್ಥರು ಆರಣಿ ಕಡೆ ಬಂದರು. ಆರ್ಕಾಟ್  ನವಾಬ  ಆರಣಿ ಪ್ರಾಂತ್ಯದ ಮೇಲೆ ಹೊಂಚುಹಾಕುತ್ತಿದ್ದ. 

ಮಾರ್ಗ ಮಧ್ಯದಲ್ಲೇ ದಟ್ಟ ಕಾಡಿನಲ್ಲಿ ಶ್ರೀಮನ್ಮೂಲರಾಮಚಂದ್ರ ದೇವರ ವೈಭವದ ಪೂಜೆಯಾಯಿತು. ಅಷ್ಟರಲ್ಲಿ ಧರ್ಮಿಷ್ಠನಾದ ಆರಣಿಯ ವೆಂಕಟರಾಜನಿಗೆ ಆರ್ಕಾಟ್ ನವಭಾರ ದಾಳಿಯ ವಿಷಯ ಮೊದಲೇ ತಿಳಿಯಿತು. ತನ್ನ ಸೇನಾ ಬಲ ಕಡಿಮೆ ಇರುವುದು ಗೊತ್ತಾಯಿತು, ಆತನ ಮಂತ್ರಿಕೃಷ್ಣಾಜಿ ಪಂತ  ಬ್ರಾಹ್ಮಣ ಮತ್ತು ಶ್ರೀ ಮಠದ ಅನುಯಾಯಿ, ಅವನಿಗೆ ಶ್ರೀ ಸತ್ಯವಿಜಯ ತೀರ್ಥರು ಈ ಪ್ರಾಂತ್ಯದಲ್ಲಿ ಇರುವುದು ತಿಳಿಯಿತು, ರಾತ್ರಿ ಕೃಷ್ಣಾಜಿ ಪಂತ ಬಂದು ಗುರುಗಳ ಚರಣಕ್ಕೆ ಎರಗಿ ನಾಳೆ ನಮ್ಮ ರಾಜನನ್ನು ಕರೆದು ಕೊಂಡು ಬರುವೆ ಅವರಿಗೆ ಅನುಗ್ರಹ ಮಾಡಬೇಕು ಎಂದು ಹೇಳಿದನು. ಸದಾ ಧರ್ಮಿಷ್ಠನಾದವರಿಗೆ ದೈವ ಮತ್ತು ಗುರುಗಳ ಅನುಗ್ರಹ ಇರುತ್ತದೆ ಎಂದು ಹೇಳಿ ಶ್ರೀ ಸತ್ಯವಿಜಯ ತೀರ್ಥರು ಕಳುಹಿಸಿದರು. 

ಈ ಸಂದರ್ಭದಲ್ಲಿ ಒಂದು ವಿಸ್ಮಯ, ವೆಂಕಟ ರಾಜನಿಗೆ ರಾತ್ರಿ ಕನಸಿನಲ್ಲಿ ಗುರುಗಳ ದರ್ಶನ ಮತ್ತು ವೈಭವದ ಶ್ರೀಮನ್ಮೂಲರಾಮ ದೇವರ ಪೂಜೆಯ ದರ್ಶನ. ಆಶ್ಚರ್ಯ ಪಟ್ಟ ರಾಜ ಮಂತ್ರಿಯಾದ ಕೃಷ್ಣಾಜಿ ಪಂತನನ್ನು ಕರೆದು ಸ್ವಪ್ನ ವೃತಾಂತ ಹೇಳಿದ, ಕೂಡಲೇ ಕೃಷ್ಣಾಜಿ ಪಂತ ನಾನು ಬಂದಿರುವದು ಅದೇ ಕಾರ್ಯಕ್ಕೆ ಎಂದು ಹೇಳಿ ಇಬ್ಬರು ಶ್ರೀ ಸತ್ಯವಿಜಯ ತೀರ್ಥರ ಬಳಿಗೆ ಹೋದರು, ಶ್ರೀಮನ್ಮೂಲರಾಮ ದೇವರ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿದರು. ಬಂದ ಕಾರಣ ಕೇಳಿದ ಶ್ರೀ ಸತ್ಯವಿಜಯ ತೀರ್ಥರು ಆ ವೆಂಕಟರಾಜನನ್ನು ಅನುಗ್ರಹಿಸಿ "ವಿಜಯೀಭವ" ಎಂದು ಆಶೀರ್ವದಿಸಿದರು. ಐದುಕಾಳು ಮಂತ್ರಾಕ್ಷತೆಯನ್ನು ಕೊಟ್ಟರು. ಇದೆ ಮಂತ್ರಾಕ್ಷತೆ ನಿನ್ನ ಶತ್ರು ಸೈನ್ಯವನ್ನು ನಾಶಗೊಳಿಸುತ್ತದೆ ಎಂದು ಹೇಳಿದರು. 

ಮುಂದೆ ಯುದ್ಧ ಶುರುವಾಯಿತು, ವೆಂಟರಾಜನ ಸೈನ್ಯದ ಮುಂದೆ ಆರ್ಕಾಟ್ ನವಾಬನ ಸೈನ್ಯ ನೆಲಕಚ್ಚಿತು. ಯುದ್ಧದಲ್ಲಿ ಗೆದ್ದ ವೆಂಕಟರಾಜ ಅರಮನೆಗೂ ಹೋಗದೆ ಸತ್ಯಪೂರ್ಣ ತೀರ್ಥರ ಕರಸಂಜಾತರಾದ ಶ್ರೀ ಸತ್ಯವಿಜಯ ತೀರ್ಥರಲ್ಲಿ ಬಂದು ಅವರ ಚರಣಗಳಿಗೆ ಶಿರಸ್ಸನ್ನು ಇತ್ತೂ ವಂದನೆ ಮಾಡಿದನು. 

ಮುಂದೆ ಸಂಚಾರ ಕ್ರಮದಲ್ಲಿ ಶ್ರೀ ಸತ್ಯವಿಜಯ ತೀರ್ಥರು ಕಂಚಿಗೆ ಹೋದರು, ಅಲ್ಲಿ ಕ್ಷೇತ್ರಸ್ವಾಮಿ ವರದರಾಜನಿಗೆ ವಿಶೇಷ ಸೇವೆಗಳನ್ನು ಮಾಡಿ, ಅಲ್ಲಿಂದ ಚಿತ್ರದುರ್ಗಕ್ಕೆ ಬಂದರು. ಭೀಕರ ಕ್ಷಾಮದಲ್ಲಿದ್ದ ಚಿತ್ರದುರ್ಗ ಮತ್ತು ಅಲ್ಲಿನ ಜನರ ನೋವನ್ನು ನೋಡಲಾಗದೆ ಅಲ್ಲಿನ ರಾಜ ಹಿರೇಮದಕರಿ ನಾಯಕ ಶ್ರೀ ಸತ್ಯವಿಜಯತೀರ್ಥರಲ್ಲಿ ಕ್ಷಾಮ ಪರಿಹಾರಕ್ಕಾಗಿ ಪ್ರಾರ್ಥನೆ ಮಾಡಲು, ಅಲ್ಲಿನ ಕ್ಷಾಮದ ಪರಿಸ್ಥಿತಿಯನ್ನು ನೋಡಲಾಗದೆ ಅಲ್ಲಿ ಋಷ್ಯಶೃಂಗ ಮತ್ತು ಶಾಂತಾದೇವಿಯ ವಿಗ್ರಹಗಳನ್ನು ಪ್ರತಿಷ್ಠೆ ಮಾಡಿದರು. ಆ ಸಂದರ್ಭದಲ್ಲಿ ಜೋರಾಗಿ ಮಳೆಯಾಗಿ ಪುಷ್ಪ ವೃಷ್ಟಿಯಾದಂತೆ ವರುಣದೇವರು ಶ್ರೀ ಮೂಲರಾಮದೇವರ ಮೇಲೆ ಪುಷ್ಪವೃಷ್ಟಿ ಮಾಡಿದಂತೆ ಜೋರಾಗಿ ಮಳೆಯಾಯಿತು. ಬತ್ತಿದ್ದ ಕೆರೆ ಕುಂಟೆ ಎಲ್ಲವು ಜಲದಿಂದ ತುಂಬಿತು. 

ಮುಂದೆ ಆರಣಿಯ ವೆಂಕಟ ರಾಜನ ಇಚ್ಛೆಯಂತೆ ಸ್ವಲ್ಪ ದಿನಗಳಕಾಲ ಆರಣಿಯ ಸಮೀಪದ ಊರಿನಲ್ಲಿ ಇದ್ದರು, ಆರಣಿಯ ವೆಂಕಟ ರಾಜ ಆ ಊರಿಗೆ "ಶ್ರೀ ಸತ್ಯವಿಜಯ ನಗರ " ಎಂದೇ ಹೆಸರಿಟ್ಟು ತನ್ನ ಅರಮನೆಯನ್ನೇ ಆ ಊರಿನಲ್ಲಿ ಕಟ್ಟಿಸಿದನು. ಮತ್ತು ಗುರುಗಳ ಆಶ್ರಯಕ್ಕಾಗಿ ವಿಸ್ತಾರವಾದ ಒಂದು ಮಠವನ್ನು ಕಟ್ಟಿಸಿದನು. ರಾಮ ದೇವರ ಪೂಜೆಗೆ ಹಲವಾರು ಬೆಳ್ಳಿಯ ಮತ್ತು ಬಂಗಾರದ ವಸ್ತುಗಳನ್ನು ಕೊಟ್ಟನು. ರಾಮದೇವರಿಗಾಗಿ ನೀಡಿದ ಒಂದು ಚಿನ್ನದ ಗಂಗಾಳದಲ್ಲಿ ಇಂದಿಗೂ ಶ್ರಾವಣ ಮಾಸದಲ್ಲಿ ಶಾವಿಗೆ ಪಾಯಸ ಮಾಡಿ ಶ್ರೀಮನ್ಮೂಲರಾಮ ಚಂದ್ರ ದೇವರಿಗೆ ನೈವೇದ್ಯ ಮಾಡುತ್ತಾರೆ. 

ಶ್ರೀಹರಿವಾಯುಗಳ ಪ್ರೇರಣೆಯಂತೆ ತಮ್ಮ ಅವತಾರ ಕಾಲವು ಸಮಾಪ್ತಿ ಎಂಬಂತೆ ಒಂದು ದಿನ ವೆಂಕಟರಾಜನನ್ನ ತಮ್ಮ ಮಠಕ್ಕೆ ಕರೆಸಿಕೊಂಡು, ಒಂದು ಕೋಣೆಯನ್ನು ಕಟ್ಟಿಸಲು ಹೇಳಿದರು, ಅದರಂತೆ ಅವನು ಕಟ್ಟಿಸಿದನು ಆ ಕೋಣೆಯನ್ನು ಶುದ್ದಿ ಮಾಡಿ ಅಲ್ಲಿ ಶ್ರೀಮನ್ಮೂಲರಾಮಚಂದ್ರ ದೇವರು ಮತ್ತು ವೇದವ್ಯಾಸದಿ ಸಂಸ್ಥಾನ ಪ್ರತಿಮೆಗಳನ್ನೂ ಭದ್ರವಾಗಿಡ ಬೇಕೆಂದು ಮೂರು ಪತ್ರಗಳನ್ನು ಬರೆದು ಒಂದು ದೇವರ ಪೆಟ್ಟಿಗೆ ಮೇಲಿಟ್ಟು, ಇನ್ನೊಂದನ್ನು ವೆಂಕಟರಾಜನಿಗೆ ಕೊಟ್ಟು ಮತ್ತೊಂದು ಪತ್ರವನ್ನು ಶ್ರೀ ಸತ್ಯಪ್ರಿಯ ತೀರ್ಥರು ಬಂದ ನಂತರ ಅವರಿಗೆ ಕೊಟ್ಟು ಚರಮ ಶ್ಲೋಕ ಮಾಡಿದ ಬಳಿಕ ದೇವರ ಪೆಟ್ಟಿಗೆ ಮತ್ತು ಬೀಗದ ಕೈಗಳನ್ನೂ ಕೊಡಬೇಕೆಂದು ಆಜ್ನ್ಯೆ ಮಾಡಿದರು. ಮತ್ತು ಮೊದಲೇ ಐದು ಹೆಡೆ ಸರ್ಪವು ಒಂದು ಜಾಗದಲ್ಲಿತ್ತು ಬಹಳ ಹಿಂದೆಯೇ ಅದೇ ಜಾಗದಲ್ಲೇ ನಮ್ಮ ಬೃಂದಾವನ ಮಾಡಬೇಕೆಂದು ಮೊದಲೇ ವೆಂಕಟರಾಜನಿಗೆ ಹೇಳಿದ್ದರು. 

ಸಿದ್ದಾರ್ಥನಾಮ ಸಂವತ್ಸರ ಚೈತ್ರಮಾಸದ ಕೃಷ್ಣ ಪಕ್ಷ ಏಕಾದಶಿ ಶ್ರೀರಾಮನನ್ನು ನೆನೆಯುತ್ತ ಭೌತಿಕ ಕಾಯವನ್ನು ತ್ಯಜಿಸಿದರು. ಗುರುಗಳ ಇಚ್ಛೆಯಂತೆ ಅವರೇ ಮೊದಲೇ ತಿಳಿಸಿದ್ದ ಸ್ಥಳದಲ್ಲೇ ಅವರ ವೃಂದಾವನ ನಿರ್ಮಾಣ ಕಾರ್ಯವಾಯಿತು. ಕಮಂಡಲನಾಗ ನದಿತೀರದಲ್ಲಿ ಅವರ ಬೃಂದಾವನ ನಿರ್ಮಾಣವಾಯಿತು. 

ಇತ್ತ ಸತ್ಯಪ್ರಿಯ ತೀರ್ಥರು ಬಂದರು ಗುರುಗಳ ವೃಂದಾವನ ದರ್ಶನ ಮಾಡಿ ವೆಂಕಟರಾಜನಲ್ಲಿ ಸಂಸ್ಥಾನ ಪ್ರತಿಮೆ ಕೊಡಲು ಕೇಳಿದರು, ಅವನು ಮೊದಲೇ ಹೇಳಿದಂತೆ ತಾವು ಗುರುಗಳ ಚರಮ ಶ್ಲೋಕ ರಚಿಸಿ ನಂತರ ತೆಗೆದು ಕೊಳ್ಳಿ ಎಂದನು. ಶ್ರೀ ಸತ್ಯಪ್ರಿಯ ತೀರ್ಥರು, ಸತ್ಯಪೂರ್ಣರಿಂದ ಮೊದಲು ಪಟ್ಟಾಭಿಷಿಕ್ತರಾದವರು ನಾವು ನಂತರ ಶ್ರೀ ಸತ್ಯವಿಜಯ ತೀರ್ಥರು. ಕಿರಿಯರ ಚರಮಗೀತೆ ಪಾಡುವುದು ಶಾಸ್ತ್ರಸಮ್ಮತವಲ್ಲ ಎಂದು ಹೇಳಿದರು. ನಂತರ ವೆಂಕಟರಾಜ ಇವರಿಗೆ ಉಭಯಯತಿಗಳ ಮದ್ಯೆ ನಾನು ಅಲ್ಪ ಎಂದು ಹೇಳಿ ಬೀಗದ ಕೈ ಗಳನ್ನೂ ಕೊಟ್ಟನು. 

ಸತ್ಯಪ್ರಿಯ ತೀರ್ಥರು ಶ್ರೀಮೂಲರಾಮ ಚಂದ್ರ ದೇವರ ಪೆಟ್ಟಿಗೆ ತೆಗೆಯಲು ನೋಡಿದರು ಎಷ್ಟು ಪ್ರಯತ್ನ ಪಟ್ಟರು ಆಗಲಿಲ್ಲ. ಬೀಗದ ಕೈ ಸರಿಯಿಲ್ಲವೆಂದು ಹೇಳಿ ಪುನಃ ರಾಜನನ್ನು ಕರೆಸಿ ಕೇಳಿದರು. ಅದೇ ಬೀಗದ ಕೈ ಎಂದು ರಾಜ ಹೇಳಲು ಯಾಕೋ ಮನದಲ್ಲಿ ಒಂದು ರೀತಿಯ ವ್ಯಾಕುಲತೆ ಆವರಿಸಿ ನನಗೆ ಮೂಲ ರಾಮನ ಪೂಜಾ ಭಾಗ್ಯವಿಲ್ಲಾ ಎಂದು ಹೇಳಿ ಭಾರವಾದ ಹೃದಯದಿಂದ ಊರಹೊರಗೆ ಹೋದರು. 

ಊರಿನ ಹೊರಗೆ ವ್ಯಾಸರಾಜರಿಂದ ಪ್ರತಿಷ್ಠಿತ ಶ್ರೀ ಮುಖ್ಯಪ್ರಾಣ ದೇವರ ಗುಡಿಇದೆ. ಅಲ್ಲಿ ಆಶ್ಚರ್ಯ ಎಂಬಂತೆ ನೂರಾರು ಕೋತಿಗಳು ಇವರನ್ನು ಅಡ್ಡಗಟ್ಟಿದ್ದವು, ಆ ಕೋತಿಗಳ ಬಾಧೆಗೆ ಹೊರಗೆ ಹೋಗಲಾರದೆ ಆ ಗುಡಿಯ ಒಳಗಡೆ ಬಂದರು. ಮುಖ್ಯಪ್ರಾಣನನ್ನು ಹೇ ಭಾರತೀಶನೇ ಏನಿದು ನಿನ್ನ ಪರೀಕ್ಷೆ ಎಂದು ಪ್ರಾರ್ಥಿಸಲು ಮುಖ್ಯಪ್ರಾಣದೇವರು ಅಶರೀರವಾಣಿಯಿಂದ ನೀವು ಕೂಡಲೇ ಶ್ರೀ ಸತ್ಯವಿಜಯ ತೀರ್ಥರ ಚರಮ ಶ್ಲೋಕ ಮಾಡಬೇಕು ಅವರು ಮಹಾಮಹಿಮರು. ನನ್ನ ಮುಂದೆಯೇ ಶ್ರೀಮನ್ಮೂಲರಾಮ ದೇವರ ಪೂಜೆ ಮಾಡಬೇಕು ಎಂದು ಆದೇಶ ವಾಯಿತು. 

ತಕ್ಷಣ ಪುನಃ ಮಠಕ್ಕೆ ತೆರಳಿ ಗುರುಗಳ ಚರಮ ಶ್ಲೋಕ 

||ಸತ್ಯಪೂರ್ಣಾಂಬುಧೇರ್ಜಾತೋ ವಿದ್ವಜ್ಜನವಿಜೃಂಭಿತ: |
ಧನೀಧ್ವಂಸೀತು ನಸ್ತಾಪಂ ಶ್ರೀಸತ್ಯವಿಜಯೋಡುಪ: ||

 ಮಾಡಿ ತಮ್ಮ ಅಪರಾಧವನ್ನು ಮನ್ನಿಸಬೇಕೆಂದು ಪ್ರಾರ್ಥನೆ ಮಾಡಿ ವೃಂದಾವನ ಪ್ರದಕ್ಷಿಣೆ ಮಾಡಿ ಬೀಗವನ್ನು ತೆಗೆಯುವ ಪ್ರಯತ್ನ ಮಾಡಿದರು. ಕೂಡಲೇ ಬೀಗ ತೆಗೆಯಿತು ಸಂತಸದಿಂದ ಊರ ಹೊರಗಿನ ಮಾರುತಿಯಾ ದಿವ್ಯ ಸನ್ನಿದಿಯಲ್ಲಿ ವೈಭವವಾಗಿ ಶ್ರೀಮನ್ಮೂಲರಾಮ ದೇವರ ಪೂಜೆ ಮಾಡಿದರು. 

ಅಂದು ಒಂದು ವಿಶೇಷ ನಡೆಯಿತು, ರಾಮ ದೇವರಿಗೆ ವಿಶೇಷ ನೈವೇದ್ಯಕ್ಕಾಗಿ ಮತ್ತು ಗುರುಗಳ ಸಮಾರಾಧನೆಗಾಗಿ ವಿಶೇಷ ಭಕ್ಷ ಭೋಜ್ಯಗಳನ್ನೂ ಮಾಡಿಸಿ ರಾಮದೇವರು ನೈವೇದ್ಯ ಮಾಡಿದ್ದರು. ಅಂದು ಸ್ವತಃ ಮುಖ್ಯಪ್ರಾಣ ದೇವರು ಬಂದು ಮಾಡಿದ ಬಂಡಿ ಅನ್ನವನ್ನು ಉಂಡರು, ಸತ್ಯಪ್ರಿಯ ತೀರ್ಥರು ಸ್ವಲ್ಪ ರಾಮನ ಪ್ರಸಾದ ನಮಗೂ ಉಳಿಸು ಎಂದು ಬೇಡಿಕೊಂಡರು, ಸತ್ಯವಿಜಯ ತೀರ್ಥರ ಮತ್ತು ಸತ್ಯಪ್ರಿಯ ತೀರ್ಥರ ಭಕ್ತಿಗೆಮೆಚ್ಚಿ ಸ್ವಲ್ಪ ಅನ್ನವನ್ನು ಬಿಟ್ಟನು, ಆದರೆ ಆದೆ ಅನ್ನಅಕ್ಷಯ ಪಾತ್ರೆಯಂತೆ ಸಾವಿರಾರು ಜನರಿಗೆ ಸಂತರ್ಪಣೆ ಯಾಯಿತು. 

ಹೀಗೆ ಸತ್ಯಪ್ರಿಯ ತೀರ್ಥರು ಅಲ್ಲಿಂದ ಹೊರಡಬೇಕಾದಾಗ ತಾವು ಮಾಡಿದ ತಪ್ಪನ್ನು ಶ್ರೀ ಸತ್ಯವಿಜಯತೀರ್ಥರಲ್ಲಿ ಬಿಕ್ಕಿ ಬಿಕ್ಕಿ ಅತ್ತರು, ಅವರಿಗೆ ವೃಂದಾವನದಿಂದ ಮಂತ್ರಾಕ್ಷತೆ ಅನುಗ್ರಹವಾಗಿ ನಿಮ್ಮ ಸೇವೆಗೆ ನಾವು ತೃಪ್ತರಾಗಿದ್ದೇವೆ ನೀವು ಏನು ಅಪರಾಧ ಮಾಡೇಯಿಲ್ಲ ಎಂದು ಹೇಳಿ ಅಭಯವನ್ನು ಇತ್ತರು. ಮುಂದೆ ವೆಂಕರಾಜನಿಗೆ ಸತ್ಯಪ್ರಿಯ ತೀರ್ಥರು ಅನುಗ್ರಹ ಮಾಡಿ ಪ್ರತಿವರ್ಷ ನಾವು ಇಲ್ಲಿ ಬಂದು ಗುರುಗಳ ಆರಾಧನೆ ಮಾಡುತ್ತೇವೆ ಮಾತು ಇಲ್ಲಿ ನಿತ್ಯ ಪೂಜೆಗೆ ಅರ್ಚಕರನ್ನು ನೇಮಿಸಿ ಹೊರಟರು. 

ಮುಂದೆ ಒಂದು ದಿನ ಒಬ್ಬ ಬ್ರಾಹ್ಮಣ ಶ್ರೀಮನ್ಯಾಯಸುಧಾ ಗ್ರಂಥ ಓದಬೇಕು ಯಾರಾದರೂ ಹೇಳಿಕೊಡುವವರಿಲ್ಲ ಎಂದು ಹೇಳಿ ಬೃಂದಾವನದ ಮುಂದೆ ಕಣ್ಣೀರುಗರೆದನು. ಬೃಂದಾವನದಿಂದಲೇ ಅವನಿಗೆ ಧ್ವನಿ ಕೇಳಿಸಿತು, ಬೆಳಗಿನ ಜಾವದಲ್ಲಿ ನಿನ್ನ ಮನೆಯಲ್ಲಿ ನಿನ್ನ ಪೂರ್ವಜರು ಸಂಗ್ರಹಿಸಿದ ಶ್ರೀಮನ್ನ್ಯಾಯಸುಧಾ ಹೊತ್ತಿಗೆ ತೆಗೆದು ಕೊಂಡು ಬಾ ಎಂದರು. 

ಮರುದಿನ ಬೆಳಗಿನಿಂದ ಶ್ರೀ ಸತ್ಯವಿಜಯ ತೀರ್ಥರ ಪಾಠ ಶುರುವಾಯಿತು, ಈ ಬ್ರಾಹ್ಮಣ ಸುಧಾಪಂಡಿತನಾದ ಗುರುಗಳ ಕಾಣಿಕೆಯೆಂದು ಸುತ್ತಲೂ ಪೌಳಿ ಕಟ್ಟಿಸಿದ, ಮುಂದೆ ಈ ಸಂಸಾರ ಸಾರವಿಲ್ಲವೆಂದು ತಿಳಿದು ಸರ್ವಸಂಗ ಪರಿತ್ಯಾಗಿಯಾಗಿ ಶ್ರೀ ರಂಗ ಒಡೆಯರ್ ಎಂಬ ಸನ್ಯಾಸಿಗಳಾದರು. 

ಇವರ ವೃಂದಾವನ ಪ್ರದಕ್ಷಿಣೆಯಿಂದ ರೋಗರುಜಿನಗಳು ದೂರ, ಕಷ್ಟನಾಶ, ಕಾರ್ಯದಲ್ಲಿ ವಿಜಯ, ಗ್ರಹಪೀಡಾ ಪರಿಹಾರ ಮುಂತಾದ ಭಾಗ್ಯಗಳು ದೊರುಕುತ್ತಿವೆ. ಇಂದಿಗೂ ನೈವೇದ್ಯ ಸಮಯದಲ್ಲಿ ಇವರ ಶೇಷವಸ್ತ್ರ ತಾನಾಗಿಯೇ ಮರೆಮಾಚುತ್ತದೆ ಎಂಬ ನಂಬಿಕೆಇದೆ ಮತ್ತು ನೋಡಿದವರು ಬಹಳ ಜನ ಇದ್ದಾರೆ. 

 ಪ್ರೀತೋಸ್ತು ಕೃಷ್ಣ ಪ್ರಭೋ 
ಶ್ರೀಶ ಸಮೀರ ದಾಸ 
ಫಣೀಂದ್ರ 

ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಆರಣಿ ತಾಲೂಕಿನ ಶ್ರೀ ಸತ್ಯವಿಜಯ ನಗರಂ, ಕಮಂಡಲನಾಗನದಿ ತೀರದ ಮೇಲಿದ್ದ ಪ್ರಶಾಂತವಾದ ರಮಣೀಯ ಸ್ಥಳ. ಈ ಕಮಂಡಲನಾಗನದಿಯ ವಿಶೇಷ ವೇನೆಂದರೆ ಕಮಂಡಲ ನದಿ ಉಗಮ ವಾಗುವುದು ಜವತು ಬೆಟ್ಟದ ಮೇಲೆ ಮತ್ತು ನಾಗ ನದಿ ಉದ್ಭವವಾಗುವುದು ಅಮರ್ಥಿ ಬೆಟ್ಟದ ಮೇಲೆ. ಈ ಎರಡು ನದಿಗಳು ಸಂಗಮವಾಗುವುದು ಸಂಬೂರಎಂಬಲ್ಲಿ ಮುಂದೆ ಇದು ಕಮಂಡಲನಾಗನದಿಯಾಗಿ ಹರಿಯುತ್ತದೆ, ಸರ್ಪದೋಷವಿರುವವರು ಈ ನದಿಯ ಸ್ನಾನದಿಂದ ವಿಶೇಷ ಫಲವನ್ನು ಹೊಂದಬಹುದು. 

ಶ್ರೀ ಸತ್ಯಪ್ರಿಯ ತೀರ್ಥರು, ಸತ್ಯಬೋಧ ತೀರ್ಥರು, ಶ್ರೀ ಸತ್ಯಧರ್ಮ ತೀರ್ಥರು ಮತ್ತು ಅನೇಕ ಹರಿದಾಸರು ಭೇಟಿನೀಡಿ ಮತ್ತಷ್ಟು ಪಾವನ ಮಾಡಿದ ಸ್ಥಳವಿದು. ಇಲ್ಲಿ ಶ್ರೀ ಸತ್ಯವೀರ ತೀರ್ಥರ ಮೃತ್ತಿಕಾ ಬೃಂದಾವನ ಮತ್ತು ಶ್ರೀ ರಂಗ ಒಡೆಯರ ಮೂಲ ಬೃಂದಾವನವಿದೇ. ಶ್ರೀ ಸತ್ಯಪ್ರಮೋದ ತೀರ್ಥರ ಸ್ಥಾಪಿಸಿದ ಕೊನೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಈ ಕ್ಷೇತ್ರದಲ್ಲಿ ಇದೆ. 

ಶ್ರೀ ಸತ್ಯವಿಜಯ ತೀರ್ಥರ ಪಾದ ಧೂಳಿಯಲ್ಲಿ ಮಿಂದ ಜನರೇ ಧನ್ಯರು. ಗುರುಗಳ ಮಹಿಮೆ ಬರೆಯುವ ಪ್ರಯತ್ನ ಮಾಡಿದ್ದೇನೆ. ಲೋಪದೋಷಗಳೇನಾದರೂ ಇದ್ದಾರೆ ನನ್ನವೇ, ಒಂದೆರಡು ಒಳ್ಳೆಯ ವಿಷಯಗಳು ಇದ್ದಾರೆ ಅವರು ಶ್ರೀ ಸತ್ಯವಿಜಯತೀರ್ಥರ ಮಂತ್ರಾಕ್ಷತೆ ಮಹಿಮೆ 


ಶ್ರೀ ಕೃಷ್ಣಾರ್ಪಣಮಸ್ತು
***

ಶ್ರೀಗುರುಭ್ಯೋ ನಮಃ

ಶ್ರೀಮತ್ಸತ್ಯವಿಜಯತೀರ್ಥರ ಆರಾಧನಾಮಹೋತ್ಸವದ ಸಂದರ್ಭದಲ್ಲಿ ಸತ್ಯವಿಜಯತೀರ್ಥರ ಸ್ತೋತ್ರಗಳನ್ನು ಪಠಿಸೋಣ.

ಶ್ರೀವಿಭೀಷಣಸಾಮ್ರಾಜ್ಯ-
ಪ್ರದರಾಮಪದಾಂಬುಜೇ।
ಸಂಸಕ್ತ: ಸತ್ಯವಿಜಯ-
ಹಂಸೋ ಮೇ ಭಾಸತಾಂ ಹೃದಿ।।

✍🏻ಶ್ರೀಸತ್ಯಪ್ರಿಯತೀರ್ಥರು ಕರ್ಮನಿರ್ಣಯಟೀಕಾವ್ಯಾಖ್ಯಾನ.

ಶ್ರೀಸತ್ಯವಿಜಯಂ ವಂದೇ 
ಸರ್ವಾಭಿಷ್ಟಪ್ರದಾಯಕಂ।
ಶ್ರೀಮದಾನಂದತೀರ್ಥಾರ್ಯ-
ಪಾದಯೋ: ಭಕ್ತಿದಂ ಸದಾ।।೧।।

ಸತ್ಯಜೈತ್ರಾಭಿದಂ ನೌಮಿ 
ಶ್ರೀಮಂತಂ ಶ್ರೀಪ್ರದಂ ಮಮ।
ಜ್ಞಾನದಂ ಭಕ್ತಿದಂ ಮೇऽದ್ಯ ಜಯತೀರ್ಥಾರ್ಯಸೇವಕಂ।।೨।।

ಸತ್ಯಪೂರ್ಣಾಬ್ಧಿಸಂಭೂತಂ 
ಭಕ್ತಸ್ವಾಂತೋತ್ಪಲಂ ಸದಾ।
ವಿಕಾಸಯಂತಂ ಸಂಶುದ್ಧಂ ಸತ್ಯಜೈತ್ರೇಂದುಮಾಶ್ರಯೇ।।೩।।

ವೇದಾಂತಶಾಸ್ತ್ರೇಷು ಸದಾ ರಮಂತಂ ಸ್ವಭಕ್ತಸಂರಕ್ಷಣಬದ್ಧಚಿತ್ತಂ।
ಮಹಾನುಭಾವಂ ಭುವನೈಕವಂದ್ಯಂ ವಂದೇ ಗುರುಂ ಸತ್ಯಜಯಾಭಿಧಾನಂ।।೪।।

ಬಂಧುಸ್ತ್ವಂ ಗುರುರಿಷ್ಟದೈವತಮಿತಿ ತ್ವತ್ಪಾದಪಂಕೇರುಹಂ
ಪ್ರಾಪ್ತಂ ಮಾಂ ಪರಿಪಾಲಯೇತಿ ಸತತಂ ಯಾಚೇ ನಿಬದ್ಧಾಂಜಲಿ:।
ಚಿತ್ತಂ ಮದ್ಗುಣದೋಷಚಿಂತನವಿಧೌ ನೂನಂ ಮನಾಕ್ ಮಾ ಕೃಥಾ:
ನಾನ್ಯಾ ಮೇ ಗತಿರಸ್ತಿ ಸತ್ಯವಿಜಯಸ್ವಾಮಿನ್ ತ್ವದಂಘ್ರಿಂ ವಿನಾ।।೫।।

✍🏻ಈ ಶ್ಲೋಕಪಂಚಕವನ್ನು ಸತ್ಯಪ್ರಿಯತೀರ್ಥರು ರಚಿಸಿದ್ದಾರೆ. (ಇವುಗಳ ರಚನೆಯ ಹಿನ್ನಲೆ ಬಹಳ ರೋಚಕವಾಗಿದೆ.)

ರಾಮಪೂಜಾರತಾನ್ ನಿತ್ಯಂ
ಗುರುಪಾದಪ್ರಪೂಜಕಾನ್।
ಶ್ರೀಸತ್ಯಜಯತೀರ್ಥಾಖ್ಯಾನ್
ಪ್ರಪದ್ಯೇ ಜ್ಞಾನಸಿದ್ಧಯೇ।।

✍🏻ಮಧುಸೂದನಭಿಕ್ಷುಗಳು ತಿಥಿನಿರ್ಣಯವ್ಯಾಖ್ಯಾನ.

ನಾರಾಯಣಂ ನಮಸ್ಕೃತ್ಯ ಮಧ್ವಂ ಜಯಮುನೀನಪಿ।
ವಿದ್ಯಾಧೀಶಂ "ಸತ್ಯಜೈತ್ರಂ" ಸಾಕ್ಷಾನ್ಮಮ ಗುರೂನಪಿ।।
(ಆದಿ)

"ಶ್ರೀಸತ್ಯವಿಜಯಶ್ರೀಮದ್
ಗುರುರಾಜ" ನಿಷೇವಿಣಾಂ।
ಬಾಳಾರ್ಯಸೂರಿವರ್ಯಾಣಾಂ 
ನಿಜದಾಸೇನ ಸೂನುನಾ।।
ಶ್ರೀನಿವಾಸೇನ ರಚಿತಂ 
ವರಘೇಡ್ಯುಪನಾಮಿನಾ।
ಇದಂ ಸಮರ್ಪಣಂ ಸ್ತೋತ್ರಂ
ಪ್ರೀಯೇತಾಂ ಮಧ್ವಮಾಧವೌ।।
(ಅಂತ್ಯ)

✍🏻ಸತ್ಯವಿಜಯತೀರ್ಥಪ್ರಶಿಷ್ಯ ವರಖೇಡಿ ಶ್ರೀನಿವಾಸಾಚಾರ್ಯರು ಸರ್ವಸಮರ್ಪಣಸ್ತೋತ್ರ.

ರಮಾರಮಣಮಾನಮ್ಯ ಪೂರ್ಣಬೋಧಜಯಾರ್ಯಕಾನ್।
ವಿದ್ಯಾಧೀಶಂ ಕೇಶವಾರ್ಯಂ 
"ಸತ್ಯಜೈತ್ರಂ" ಗುರೂನ್ಮಮ।।
(ಆದಿ)

"ಶ್ರೀಸತ್ಯವಿಜಯಸ್ವಾಮಿ"-
ನಿಜಶಿಷ್ಯಾನುಬಂಧಿನಾಂ।
ತತ್ಪಾದಸೇವಿನಾಂ ವ್ಯಾಖ್ಯಾ-
ಚಂಚೂನಾಂ ಚ ಮಹಾತ್ಮನಾಂ।। 
ವಿದ್ವಚ್ಚಕ್ರಶಿರೋಭೂಷಾ-
ರತ್ನಾನಾಂ ಜಯಶಾಲಿನಾಂ।
ಬಾಳಾರ್ಯಸೂರಿವರ್ಯಾಣಾಂ 
ದಾಸಭೂತೇನ ಸೂನುನಾ।।
ಅತಿಕೌಶಲಹೀನೇನಾಪ್ಯತ್ಯಂತಸ್ವಲ್ಪಬುದ್ಧಿನಾ।
ಕಿಂಚಿತ್ಕೂತಹಲವತಾ ವರಖೇಡ್ಯುಪನಾಮಿನಾ।।
ಶ್ರೀನಿವಾಸೇನ ರಚಿತಾಂ ಮುಕ್ತಿಮುಕ್ತಾವಲೀಮಿಮಾಂ।
ಸದಯೇ ಹೃದಯೇ ಧೃತ್ವಾ ಕಮಲಾಕಾಮುಕ: ಸದಾ।।
ಗುರ್ವಾದಿಶ್ರೀಪದ್ಮನಾಭ-
ತೀರ್ಥಾಂತಗುರುಹೃದ್ಗತ:।
ಮಧ್ವಾರ್ಯಹೃತ್ಪದ್ಮವಾಸೀ 
ಪ್ರೀಯತಾಂ ಪುರುಷೋತ್ತಮ:।।
(ಅಂತ್ಯ)

(ಅನೇಕ ಅಪೂರ್ವವಿಷಯಗಳಿವೆ ಎಂಬ ಕಾರಣಕ್ಕಾಗಿ ಅಷ್ಟು ಶ್ಲೋಕಗಳನ್ನು ಇಲ್ಲಿ ನೀಡಲಾಗಿದೆ.)

✍🏻ಸತ್ಯವಿಜಯತೀರ್ಥಪ್ರಶಿಷ್ಯ ವರಖೇಡಿ ಶ್ರೀನಿವಾಸಾಚಾರ್ಯರು ಮುಕ್ತಿಮುಕ್ತಾವಲೀ.

ಅತಿಸತ್ಯವಾದನಿರತೋऽತನುಧೀ-
ಸುಕೃತಾಂತಸಂಪ್ರವಚನೇ ಚತುರ:।
ಸ ಉದೈಷ್ಟ ಸತ್ಯವಿಜಯೋ ವಿಜಯೀ 
ಸಕಲಾಸು ದಿಕ್ಷು ಋತಪೂರ್ಣಮುನೇ:।।

✍🏻ಕಾಂಚೀ ಕೃಷ್ಣಾಚಾರ್ಯರು ಸತ್ಯಬೋಧವಿಜಯ.

ಸತ್ಯಪೂರ್ಣಾಂಬುಧೇರ್ಜಾತೋ ವಿದ್ವಜ್ಜನವಿಜೃಂಭಿತ:।
ಧನೀಧ್ವಂಸೀತು ನಸ್ತಾಪಂ ಶ್ರೀಸತ್ಯವಿಜಯೋಡುಪ:।।

✍🏻ಚರಮಶ್ಲೋಕ

ಮಹಾನುಭಾವರಾದ ಶ್ರೀಸತ್ಯವಿಜಯತೀರ್ಥರು ಎಲ್ಲ ಸಜ್ಜನರಿಗೂ ಜ್ಞಾನವನ್ನು ನೀಡಿ ರಕ್ಷಿಸಲಿ.

ಶ್ರೀನಿವಾಸ ಕೊರ್ಲಹಳ್ಳಿ
*************


Moola brindavanas situated in Tamilnadu
  1. Uttaradhi Mutt – 6
  2. Raghavendra Mutt – 7
  3. Vyasaraja Mutt – 9
  4. Sripadaraja Mutt – 15
  5. Other Brindavanas/Bidi sanyasigalu – 8


Uttaradhi Mutt


Sri Sathya Vijaya Theertharu(Aarani/Sathya Vijaya Nagara) 



satyapoorNaambudhErjaatO vidvajjanavijRuMbhita: |
dhanIdhvaMsItu sastaapaM shrIsatyavijayODupa: ||
Gurugalu: Sri Sathya Poorna Theertharu
Sishyaru: Sri Sathya Priya Theertharu
Aradhana: Chaitra Krishna Ekadashi
Shri Satyavijaya Teertharu entered Brindavana in Satyavijaya Nagar (Arani) on the banks of river Kaveri.
Satyavijaya Nagaram is a village in Arani Taluk, Thiruvannamalai District, Tamilnadu. It is about 240 km from Bangalore and 150 km from Chennai.
Contact:
1/440, “Sri Rama Nivas”
S.M.Road, Sathya Viajaya Nagar,
Arani Taluk. Pin:632317 (TN)
Phone:04173 – 291915 / 9944463550.

above info is from https://madhwafestivals.wordpress.com/2016/12/09

******
#ಶ್ರೀಮದುತ್ತರಾದಿ ಮಠದ, ಶ್ರೀ #ಸತ್ಯವಿಜಯ ತೀರ್ಥ ಶ್ರೀಪಾದಂಗಳವರು ಆರಣಿಯ(ತಮಿಳುನಾಡು) ಮಹಾರಾಜರಿಗೆ ಪುತ್ರಸಂತಾನವಾಗಲಿ ಎಂಬುದಾಗಿ ಆಶೀರ್ವದಿಸಿದಾಗ , ಮಹಾರಾಜರು ಬಂಗಾರದ ಗಂಗಾಳವನ್ನು ಶ್ರೀಮಠಕ್ಕೆ ಸಮರ್ಪಿಸಿದರು. ಪಸ್ತುತ ಪೀಠಾಧಿಪತಿಗಳಾದ ಶ್ರೀ ೧೦೦೮ ಶ್ರೀ #ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ಶ್ಯಾವಿಗೆ ಪಾಯಸವನ್ನು ಈ ಗಂಗಾಳದಲ್ಲಿ ತರಿಸಿ ಲಕ್ಷ್ಮೀದೇವಿಗೆ ಸಮರ್ಪಿಸುವರು. ಈ ಪಾತ್ರೆಯನ್ನು ವಿಶೇಷವಾಗಿ ಈ ದಿನದಲ್ಲಿ  ಶ್ರೀಮಠದಲ್ಲಿ ಬಳಸುವರು.

When Shree SathyaVijaya Theertharu of Shree Uttaraaadhi Mata blessed the king of Aarani (TamilNaadu) to get a Puthra Santhaana, the king presented a golden Gangaala (huge vessel of the size of a water drum used for preparing Anna in MahaaSamaaraadhane). Unbelievable to know that the Gangaala is made of gold. Anyway, that Gangaala is used to prepare Shyaavige Paayasa and offered to Shree MahaaLakshmi by Shree Sahtyaathma Teertharu. It is used only on this day in a year.

ಕೃಪೆ : ಶ್ರೀಮದುತ್ತರಾದಿಮಠ ಪುಟ. 

ಶ್ರೀಮನ್ಮೂಲರಾಮದಿಗ್ವಿಜಯರಾಮೋ ವಿಜಯತೇ🙏
**************



No comments:

Post a Comment