tribute by hallerao kembhavi
info from sumadhwaseva.com--->
Sri Satyapramoda Tirtha 1942 - 1997
ಸತ್ಯಾಭಿಜ್ಞಕರಾಬ್ಜೋತ್ಥಾನ್ ಪಂಚಾಷಡ್ವರ್ಷಪೂಜಕಾನ್ |
ಸತ್ಯಪ್ರಮೋದತೀರ್ಥಾರ್ಯಾನ್ ನೌಮಿ ನ್ಯಾಯಸುಧಾರತಾನ್ |
satyaabhijnakaraabjOtthaan panchaashadvarShapUjakaan |
satyapramOda tIrthaaryaan noumi nyaayasudhaarataan |
Birth – 1918 @ Dharwad
Poorvashrama Name – Sri Gururajacharya Guttal
Father’s name – Sri Rangacharya Guttal
Mother’s Name – Kamaladevi
Ashrama Gurugalu – Sri Satyabhigna Tirtharu (Vrundavana @ Ranebennur)
Upanayana – 1927
Initial Education – Sri Rangacharyaru (father)
Higher Education – Nyayashastra from Sri Dharapuram Krishnamurthacharya and Nyayasudha, Vedantha adhyayana from Sri Satyaprajna Tirtharu
Marriage – 1942
Teaching – @ Mysore Uttaradimutt
Ashrama Sweekara – 02.02.1948 at Ranebennur
First Sudha Mangala –1949 @ Malakheda in Teekarayara Sannidhana
- He has done atleast 30 Srimannyaya Sudha Mangala
- Kasta Mouna Vratha – 48 days @ Mahishi & Yaragola
- Satyadhyana Vidyapeeta – Udghatane in 1973 @ Mumbai
- Jayateertha Vidyapeeta – Udghatane in 1989 @ Bangalore
- Uttaradhikari Sweekara – At Tirukoiloru in 1996
- Vrundavana Pravesha – 03.11.1997.
- Few Years before his Vrundavana pravesha, Sri Satyapramoda Thirtharu had requested the Government for grant of permission for Sa-shareera Vrundavana pravesha, but the Government rejected his request considering it to be a suicide.
- Satyapramoda Tirtharu made arrangements for renovation of Cave at Yeragola where Sri Jayatheertharu wrote many granthas and made arrangements for daily pooja at the cave.
- He Started Uttaradi Mutt at Tirumala for the benefit of Maadhwa Piligrims. The present pontiff Sri Satyatma Tirtharu has arranged for nitya Annadana for the benefit of Madhwa Piligrims. Now-a-days, atleast 100-200 people are given free theerthaprasada daily and during Brahmotsava it runs to more than 5000-8000 daily twice in a day.
- Sreepadaru has done many renovation works of the Shri Uttaradimath Branches present in Sri Ranga, Mysore, Bellary, Hubli, Shimogha, Malked, Kanchi, Thirupathi, Hyderabad, Kurnool , Tirukoilur, Kumbhakonam and Madaras.
- HIS GREATEST CONTRIBUTION TO THE MADHWA PARAMPARE IS NONE OTHER THAN SRI SATYATMA THIRTHA SREEPADANGALAVARU WHO IS INSTRUMENTAL IN GUIDING THE PRESENT MADHWA SAMAJA.
Granthas by Satyapramodaru –
- Shriman Nyayasudhamandanam
- Yuktimallika Vyakhyana
- Vaishnava Sidhantarjavam
- Shri Vijayendra Vijaya Vaibhavam
- Bhagavataha Nirdoshattva Lakshanaha
- Vayustuti Mandanam
1. Shriman Nyaayasudhamandanam: – Here, he has condemned the comments of advaithees on Nyayamrutha. He has written about Omkaaraartha, prathyaksha, pramana, anumana, and aagama
2. Yukthimallika Vivruthi: – It explains about Vadirajara Yukthimallika with 5 prakarana titled “sourabha – Guna sourabha and Shuddhi Sourabha in Vyakhyana style – based on the vyakhyana of Sri Surothamatirtharu, poorvashrama brother of Sri Vadirajaru, which was in Poem style.
3) VaishNava Siddantharjavam: – Here Sri Satyapromoda Tirtharu has condemned the grantha titled “Ananadhatheerthiyam Saahasam Shankara Bhagavathpaadhiamaarjavam” of an advaithee, by disproving the five allegations made on Madhwa siddantha.
4)Vijayeendra Vajaya Vaihavam: – Sri Vijayeendra Tirtharu had written Sarva siddhantha saarasaaravivechanam referring to Ramaanuja. Sri Satyapramodaru has upheld that what the views expressed by Sri Vijayeendra was right and apt.
5) Bhagavataha Nirdoshattwa lakshna: – Here he has explained Bhagavat Lakshana by establishing Paramathma’s Gunaparipoornathwa and nirdoshatwa
6)Vayusthuthi Mandanam: – One Vishistadvaitha Pandit had condemned Vayustuthi through his book “Ishaana Stuthi”. Here Satyapramoda Tirtharu has condemned the Ishana Stuthi by the Vishistadvaitha pandit through his book Vayustuthi Mandanam
Vrundavana Location – Sri Raghottamaswamy Moola Vrundavana Sannidhana, Manampondi, Tirukoilore – 605759, Dist – villupuram, TN, Phone – no 04153-24690
********
On the day of his demise of Sri Satyabhigna Theertha at Ranibennur he gave Ashrama to Guttal Guracharya and named him as Satyapramoda Theertha. He entered Vrundavana at Ranibennur.
Vrundavana Location – Sri Raghottamaswamy Moola Vrundavana Sannidhana, Manampondi, Tirukoilore – 605759, Dist – villupuram, TN, Phone – no 04153-24690
On the day of his demise of Sri Satyabhigna Theertha at Ranibennur he gave Ashrama to Guttal Guracharya and named him as Satyapramoda Theertha. He entered Vrundavana at Ranibennur.
ಸತ್ಯಪ್ರಮೋದ ಗುರುವೇ ನಿನ್ನ ಪಾದವ ನಂಬಿರುವೆ |
ಎಂದಿನಂತೆ ನಿನ್ನ ಬಳಿ ಬಂದಿರುವೆ ವರದ ಹಸ್ತವ ತೋರೋ ಗುರುವೆ ||
ಎಂದಿನಂತೆ ನಿನ್ನ ಬಳಿ ಬಂದಿರುವೆ ವರದ ಹಸ್ತವ ತೋರೋ ಗುರುವೆ ||
ಶ್ರೀಸುಧಾಚಾರ್ಯ ಶ್ರೀಪಾದರಾಜ ಶ್ರೀವ್ಯಾಸರಾಜರಿಗೆ ಪ್ರೀಯ |
ಶ್ರೀ ವಾದಿರಾಜರ ಯುಕ್ತಿಮಲ್ಲಿಕೆಗೆ ತಿಪ್ಪಣಿ ಬರೆದ ಧೀರ ||
ಶ್ರೀ ಸುಧಾಮಂಡನ ರಚಿಸಿ ದುರ್ವಾದಿಗಳನು ಬಾಯ್ ಮುಚ್ಚಿಸಿದೆ |
ವಿಜಯೀಂದ್ರ ವಿಜಯ ವೈಭವ ರಚಿಸಿ ಪರಿಮಳಾರ್ಯರಿಗೆ ಪ್ರಿಯನಾದೆ || ೧ ||
ನಿನ್ನ ಸಿಂಹ ಗರ್ಜನೆಯ ಕೇಳಿ ಓಡಿದರು ದುರ್ವಾದಿಗಳು |
ನಿನ್ನ ವಾಕ್ಚಾತುರ್ಯವ ಕಂಡು ಬೆರಗಾಗಿ ಹೋದರು ಪಂಡಿತರು ||
ಅಭಿನವ ಸತ್ಯಧ್ಯಾನರೆ ನಿಮ್ಮ ಮಹಿಮೆಯು ಬಲು ಅಪಾರ |
ಐದು ದಶಕಗಳ ಕಾಲ ಸೀತಾ ರಾಮರ ಪೂಜಿಸಿದೆ ಗುರುವೆ || ೨ ||
ವಾಯುಮತವೆ ಎಂದೆಂದಿಗು ಪರಮಶ್ರೇಷ್ಠವೆಂದು ಸಾರಿದೆಯೊ |
ಹರಿ: ಸರ್ವೋತ್ತಮ: ವಾಯು: ಜೀವೋತ್ತಮ: ||
ಎಂದು ಡಂಗುರವ ಹೊಡೆಸಿದೆಯೊ |
ಶ್ರೀಭಾವಭೋಧಕರ ಸನ್ನಿಧಿಯಲಿ ನಿರಂತರ ನೆಲೆಸೆದೆ ಗುರುವೆ || ೩ ||
ಹಂಸನಾಮಕನ ಪೀಠದಲಿ ಇಂದ್ರನಂತೆ ರಾಜ್ಯವಾಳಿದೆಯೊ |
ದ್ವೈತಸಿದ್ಧಾಂತದ ತತ್ವಗಳ ಎಲ್ಲಕಡೆಗಳಲಿ ಬೀರಿದೆಯೋ ||
ದೇವತೆಗಳು ನೀವು ಇದಕೆ ಸಂಶಯವೆ ಇಲ್ಲ |
ಅನುಮಾನತೀರ್ಥರ ಕೃಪೆಯು ನಮಗೆ ನಿತ್ಯ ದೊರಕುವಂತೆ ಮಾಡೋ ಗುರುವೆ || ೪ ||
ಶ್ರೀಸತ್ಯಾತ್ಮತೀರ್ಥರಲಿ ನಿಂತು ಅನವರತ ಕರುಣಿಸೊ |
ಬಂದ ಭಕ್ತರಿಗೆ ಅಭಯವ ನೀಡುತ ಮನದಲಿ ನೆಲೆಸೊ ||
ಪರಮ ಕರುಣಾಲು ಗುರುವೆ ಅಂತ:ಕರಣದ ಸೆಲೆಯಿರಲಿ |
ದಾಸ ಅನಂತಗೆ ಅಭಯವ ನೀಡುತ ಸದ್ಭಕ್ತರನ್ನು ಸಲಹೋ ಗುರುವೆ ||೫||
(by Anantha Kulkarni)
Vrundavana Location – Sri Raghottamaswamy Moola Vrundavana Sannidhana, Manampondi, Tirukoilore – 605759, Dist – villupuram, TN, Phone – no 04153-24690
*******
info from uttaradimutt.org---> INDIA (BHARATA DESHA) has been the birth place for many religions & philosophies for ages viz. Jainism, Budhisim, Sikhism, Veeraashaivam etc. More importantly it is not only the birth place but also center for "SANATANA HINDU DHARMA" from which sprouted these new & recent religions.
The three major Hindu philosophies are Advaita Siddhanta as propagated by Shankaracharya, Vishista Adavita as propagated by Ramanujacharya and the Dvaita Philosophy as propagated by Shri Madhwacharya.
The Uttaradi Matha propagating Dwaita Sidhanta has been in existence from the time immemorial. The seat of Uttaradi Matha starting from "HANSANAMAKA PARAMATMA" has been passed on to the four faced BRAHMA then to DURVASARU etc, in disciplic succession. Uttaradi Matha is also the abode of glorious idols of "Moola Rama Devaru, Digvijaya Rama Devaru & Moola Sita Devaru etc" . After these idols were worshipped by 'Devatas', in due course they were handed over to the great emperors of SURYA VANSHA who worshipped them till they finally reached the hands of Madhwacharya. After Madhvacharya, great saints like Padmanabha Tirtha, Jaya Teertha, Raghunatha Teertha, Raghottama Teertha, Satya bodha Teertha, Satya Gnana Teertha, Satyadhyana Teertha etc adroned this premier peetha of Vedic Samrajya.
Jagadguru Shri 1008 Shri Satya Pramoda Teertha (from 1948-1997) adorned this glorious peetha and did pooja for the last 50 years without a single day's interruption. Inspite of his fragile frame even at the age of 80 his agility, enthusiasm and memory power put to shame even young men in their twenties. His qualities and desire to reach all the disciples (bhaktas) beyond one's physical limits often surprised one and all. Such "Yuga Purushas" are born once in a century. Words do not convey in real terms his greatness in true perspective. Lacking any better medium, we take recourse to the words to the best of our capacity.
Shri Satya Pramoda Teertha was born to Rangacharya Guttal (One of the celebrated and famous families of sanskrit pundits) hailing from the village Guttal in Dharwad district of Karnataka in the year 1918. Rangacharya Guttal was famous for his scholarship in Vedic philosophy and also for his hospitality, bhakti and vairagya. Our jagadguru was named as 'GURU RAJA'. It was truly an appropriate name as he was to become 'Guru' to all the Madhwas.
From childhood he learnt sanskrit, Vedic scriptures, Madhva Shastra etc., under his great father and later in the famous sanskrit institutions in Mysore and Madras (Chennai). His briliance & scholarship was appreciated by the great scholars of those days. His profound knowledge in 'Tarka Shastra' earned him the title of "Tarka Shiromani" in the examination conducted in 1940 in Chennai (Madras).
He entered "Grahasta Ashrama" in the year 1941. He was blessed with a daughter and a son. It was during this period that the great Shri 1008 Shri Satyabhigna Teertha of Uttaradi Math after his south Indian Digvijaya (Visiting the holy places & blessing the disciples) arrived in Ranebennur (in Karnataka). In view of his failing health it was in the year 1948 (Sarvajithanama Samvatsara Pushya Vadya Ashtami) he crowned Guru Rajacharya as head of Uttaradi Matha and called him as Satya Pramoda Tirtha. He took sanyasa at a very young age, hardly seven years after he entered Grihastha Ashram (married life).
After ascending the throne of Uttaradi Mutt at this young age, he dedicated himself entirely in the propagation of Madhva Sidhanta by touring the length & breadth of the country. He is the first pontiff who visited Orissa after Narahari Teertha. Inspite of his scholarship and brilliance as usual initially there were some pundits of those days who were less responsive and tried to create difficulties for the new Guru. But the Peetha 'Sannidhana' and 'Mahatmya' the greatness and sanctity of the Peetha & the 'anugraha' of the great gurus (blessings of his gurus) was so overwhelming that all of them failed in their pursuit to embarrass him and in due course they prostrated themselves before him begging his pardon and accepted him as Jagadguru unequivocally.
He is the 41st pontiff in Uttaradi Matha after Madhwacharya. Further, besides him there are only four other Gurus who had the rare privilege of doing Pooja of Rama Devaru for more than 50 years. In his illustrious reign of fifty years there is hardly any place worth the name (where Madhwa community lived) he missed visiting and blessing them by way of patha, pravachana, pooja, Ramadevara darshana, Tirtha, Prasad etc. It can be mentioned that any 'Bhakta' who had his darshan once never missed realising his magnetic attraction, his brilliance, compassion and scholarship etc. Time and space does not permit to list and describe all his achievements. Suffice to make a mention of the few.
In the 'vidwat sabha' held at pune (One of the premiere centers of Madhwa Community) 19 institutions and hundreds of pundits honoured him for the brilliant manner and style of his analysis of the 'Sudha' and other great 'Madhva Shastra Granthas'.
In Benaras (which is the home for vedic scholars from time immemorial to the present day) such great Advaita scholars like Hare Rama Shukla, Vamcharan Bhattacharya and (later even great Anant Krishna Shastry etc) after hearing his exposition of Madhva Sidhanta for more than one month were so impressed by his scholarship that they honoured him by taking out his procession on elephant and declared that he is truly the "Abhinava Satyadhyana Teertha".
Similarly at other places also his processions on elephant and/or car was taken out and was also honoured by submitting 'Sanmana Patras' . These 'Sanmanapatras' alone will run in to volumes. Like Satyadhyana Teertha many great 'yatigalu' (sanyasis), Peethadhi Patis came to learn shastras under his guidance. Notable among them are Kudali Mutt Ram Dhyan Teertha, Raghu Pramati Teertha and Raghu Priya Teertha. They are many who took 'Sanyasa Ashram' through his benevolence and pay their obeisances to this day.
In the year 1985 Shri 1008 Shri Satya Pramoda Teertha sat for Chaturmasya at Sode (Karnataka). During this occasion, he delivered discource on the 'Yukti Mallika' (an important work written by the great Vadiraja Teertha whose 'Vrindavan' is at sode). His Holiness has celebrated 'Sudha Mangala' at least 30 times and many of them at the Vrindavans of great previous 'Gurus' like 'JayaTeertha' etc. Many great scholarly works were also written by him, notable among them are 'Nyaya Sudha Mandana' ,'Yukti Mallika Vyakhyan' and 'Eshanya Stuti Khandana' etc. besides various articles. These truly light the path to 'Gnana Marga' for the seekers of the essence of Madhva Shastra. It is no exaggeration to say that to maintain high traditions of Uttaradi Matha like 'madi'(sanctity), vairagya, vrata, niyamas and the sampradayas etc. it needs great spiritual power, unlimited patience, physical endurance.
In his 50 years of Vedic reign besides every day Japa, Tapa, Sudha patha, Pravachana, he did 'VISHNU PANCHAKA VRATA' five times, and did 'KASHTA MOUNA VRATA' at Mahishi & Yaragola. Under his grest guidance hundreds of scholars (Pundits) who could teach 'Sudha' (Sudha Patha) were trained by him. They in turn are running 'GURU KULAS' (Sanskrit schools of Vedic Philosophy) propagating the Madhva Shastra & imparting basic knowledge of sanskrit to young ones & Shastra Shravana to the disciples (Grahastas) and 'Stree Dharma' to ladies etc.
During his reign many great infrastructure projects were under taken. Many math buildings which were in dilapidated condition were remodeled, expanded and renovated. Important institutions which were renovated are the Uttaradi Matha at Hyderabad, Bangalore, Tirukoilur, Hospet, Malakhed, etc. He did pratisthapana of several new math buildings and mrittika brindavanams of earlier 'Gurus' and other great saints at various places. Most important among them are at Bangalore, Mumbai, Hyderabad, Warangal etc. It was during his period that great many exquisite gold, silver, & diamond ornaments and vessels for pooja were made and offered to Rama devaru, which can be seen during daily pooja and on special pooja days like 'Rama Navami', Bali Pratipada, etc.
Every year 'Vidwat Sabhas' at the time of 'Maha Samaradhana' and ' Chaturmasya', were organised and conducted under his guidance. Besides, he also chaired many important 'Gnana Satras' and 'Sabhas'. During his period lakhs & lakhs of followers of Uttaradi Math had darshana, Tapta Mudradharana,Tirtha Prasada, etc. In the later part of his reign his divine spiritual powers attained such great heights that many shishyas who had problems of health, who desired wealth, who desired grooms/brides for their children, issueless couples desirous of children, people possessed with spirits, people seeking promotions, etc. prostrateed at his feet seeking his guidance and grace. Many miracles did happen. These incidents will run into volumes. Hopefully in due course a compendium will be brought out bringing out these and such other miracles by his disciples.
He could speak eloquently and address large gathering in Sanskrit, Tamil, Telugu, kannada & Marathi, though he did not have formal education in these languages. His compassion for the poor and lowly ones was such that even though he was very tired he would hardly refuse to visit them inspite of his failing health. His mind boggling memory would excel any of the super computers of the modern day. Even after decades he could recall the names if the shishyas he met once. He could remember hundreds of telephone numbers of his disciples. There were any number of occasions when he could guide correctly the driver & others along the route to reach the destination not frequently visited . It was one of the great quality of our Guru that pundits, laymen, young & old, learned and not so learned all were dear to him. No pundits ever went empty handed. Each was honoured according to his status. Every shishya felt that Swamiji had special affection for him. This feeling of all the Shishyas can be compared to the feelings of each Gopika who felt that Lord Krishna loved her most.
In great & large society like ours there are a few misled & misguided souls who have always a twisted perception of the actions of even great 'Gurus' It can only be mentioned that it is their fate and destiny and they get what they deserve. We can only pray for their deliverance from their ignorance and misconception. Such ones existed at all times. Many who would have a doubt of a particular action taken at a particular time would later realize the greatness of his heart and correctness of his action and felt humbled and ashamed at the doubts he entertained earlier. Thus after an illustrious reign of 50 years the great and the noble Jagadguru Shri 1008 Shri Satya Pramoda Tirthaaru attained 'Hari Pada Sannidhi' (Left for heavenly abode) at Tirikoilur (Tamilnadu) on 3-11-1997 besides the Vrindavan Of Shri Raghottam Teertha (one of the greatest gurus of Our Math).
As if he knew all the future events he ordained Sanyas Ashram to Sarvagnachar and named him as 'Satyatma Tirtha' on 24-4-1996 at Tirukoilur (Tamil Nadu) where the Vrindavan of Shri Raghottama Teertha exists. It is very pertinent to mention here that among the 41 Gurus of Uttaradi Mutt, Raghottama Teertha is the only Guru (exception Shri Aanand Tirtha Shripada) who took sanyas as brahmachari & rest of the Gurus were 'Grahastashramis' as per the traditions of the Mutt. After him Shri Satyatma Teertha is the next Guru, who had adorned the peetha of Uttaraddi Mutt after taking Sanyas as a brahmachari and thus his reign started from 3-11-1997.
He is the 42nd Guru in the Uttaradi Mutt starting from Shri Ananda Tirtha Shri pada. This is but a very brief portrayal of the achievements in chronological order of our Guru who was a 'Yuga Purusha' in real sense. Even on the last day of his 'Avatara' on this planet he did patha and pooja. Truly such Yuga Purushas are born once in a century. Fortunate are the souls who had the opportunity to have his darshana and blessings. These are the souls who know deep in their hearts what they achieved through his grace. We are very fortunate indeed to have him as our Guru.
Contact DetailsSri Pt. Ananda Tirthachar Chimmalgi Sri Sri Raghuthamma Swamy Moola Brindavana, Manmpoondi (Tirukoailure) - 605759, Dist : Villupuram, Tamilnadu. Phone : 04153 - 24690********
Moola brindavanas situated in Tamilnadu
- Uttaradhi Mutt – 6
- Raghavendra Mutt – 7
- Vyasaraja Mutt – 9
- Sripadaraja Mutt – 15
- Other Brindavanas/Bidi sanyasigalu – 8
Uttaradhi Mutt
shri gurubyO namaha, hari Om...
10 Nov 2018
kArtIka shukla thritIya is the ArAdhane of shri satyaprmOda tIrtharu of uttarAdi maTa.
Sri Sathya Pramoda Theertharu(thirukovilur)
satyaabhijnakaraabjOtthaan panchaashadvarShapUjakaan |satyapramOda tIrthaaryaan noumi nyaayasudhaarataan |
Ashrama Gurugalu – Sri Satyabhigna Tirtharu
Ashrama Sishyaru – Sri Sathyathma Theertharu(Current Pontiff)
Sri Pt. Ananda Tirthachar Chimmalgi
Sri Sri Raghuthamma Swamy Moola Brindavana,
Manmpoondi (Tirukoailure) – 605759,
Dist : Villupuram,
Tamilnadu.
Phone : 04153 – 24690
above info is from https://madhwafestivals.wordpress.com/2016/12/09
********
shri satyaprmOda tIrtharu...
shri satyaprmOda tIrtharu...
ArAdhane: kArtIka shuddha thritIya
parampare: uttarAdi maTa, #41
gurugaLu: Shri satyAbhigna tIrtharu
shishyaru: Shri satyAtma tIrtharu
brindAvana: tirukOilUr
shri satyaprmOda tIrtha guruvantargata, bhAratIramaNa mukhyaprAnantargata sItA pate shri digvijaya rAma dEvAra pAdAravindakke gOvindA, gOvindA...
shri krishnArpaNamastu..
೧೦೦೮ ಶ್ರೀ ಸತ್ಯಪ್ರಮೋದತೀರ್ಥರ ಆರಾಧನಾ ನಿಮಿತ್ತ ಅವರ ಸ್ಮರಣೆ :-
ಶ್ರೀ ಸತ್ಯಪ್ರಮೋದತೀರ್ಥರು :-
ವೃಂದಾವನಸ್ಥಳ ತಿರುಕೋಯಿಲೂರು
ಸತ್ಯಾಭಿಜ್ಞಕರಾಬ್ಜೋತ್ಥಾನ್
ಪಂಚಾಶದ್ವರ್ಷಪೂಜಕಾನ್ !
ಸತ್ಯಪ್ರಮೋದತೀರ್ಥಾರ್ಯಾನ್
ನೌಮಿ ನ್ಯಾಯಸುಧಾರತಾನ್ !!
ಅರ್ಥ :- ಸತ್ಯಾಭಿಜ್ಞತೀರ್ಥರ ಕರಕಮಲಸಂಜಾತರಾದ, ಒಂದು ದಿನವೂ ಬಿಡದೆ ೫೦ ವರ್ಷ ನಿರಂತರ ರಾಮದೇವರ ಪೂಜೆಯನ್ನು ಮಾಡಿದ, ಯಾವಾಗಲೂ ಶ್ರೀಮನ್ನ್ಯಾಯಸುಧಾದಿ ಪಾಠಪ್ರವಚನಾಸಕ್ತರಾದ ಶ್ರೀ ಸತ್ಯಪ್ರಮೋದತೀರ್ಥರನ್ನು ಭಕ್ತಿಯಿಂದ ನಮಸ್ಕರಿಸುತ್ತೇನೆ ಅಂತ ಪ್ರಾರ್ಥನೆ.
ಶ್ರೀ ಸತ್ಯಪ್ರಮೋದತೀರ್ಥರ ಪವಾಡಗಳನ್ನು ಸಾಕ್ಷಾತ್ ನೋಡಿದಂಥ ಭಕ್ತವೃಂದ ಇವತ್ತಿಗೂ ಇದೆ. ಇವತ್ತು ನಮ್ಮ ಗುರುಗಳನ್ನು (ಶ್ರೀ ಸತ್ಯಾತ್ಮತೀರ್ಥರನ್ನು) ಪೀಠದಲ್ಲಿ ಕೂಡಿಸಿ ಅವರಿಂದ ಇಡೀ ಜಗತ್ತನ್ನೇ ಉದ್ಧಾರ ಮಾಡಿಸುತ್ತಿರುವ ಶ್ರೀ ಸತ್ಯಪ್ರಮೋದತೀರ್ಥರು ಎಲ್ಲರಿಗೂ ಅನುಗ್ರಹಿಸಲಿ ಅಂತ ಪ್ರಾರ್ಥನೆ.
ಶ್ರೀ ಸತ್ಯಾತ್ಮತೀರ್ಥಸ್ವಾಮಿಶ್ರೀಪಾದ ಗುರುಭ್ಯೋ ನಮಃ !
ಸರ್ವೇ ಜನಾಃ ಸುಖಿನೋ ಭವಂತು !
-ಸುಘೋಷಾಚಾರ್ಯ ಕೊರ್ಲಹಳ್ಳಿ.
ಮೊನ್ನೆ ಶ್ರೀಸತ್ಯಪ್ರಮೋದತೀರ್ಥರ ಆರಾಧನೆಯ ಪರ್ವಕಾಲದಲ್ಲಿ , ಅವರು ಪೂರ್ವಾಶ್ರಮದಲ್ಲಿ ಮೈಸೂರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಈಗಿನ ಶ್ರೀವ್ಯಾಸರಾಜಮಠದ ಶ್ರೀಗಳವರಾದ ಶ್ರೀವಿದ್ಯಾವಿಜಯ ತೀರ್ಥರ ಪೂರ್ವಾಶ್ರಮದ ತಂದೆ ಯೋಗಿ ಶಾಮಣ್ಣನವರ ಮನೆಗೆ ವಾರಾನ್ನಕ್ಕೆ ಹೋಗುತ್ತಿದ್ದರೆಂಬ ವಿಷಯವು whattsup ನ ಒಂದು ಗ್ರೂಪಲ್ಲಿ ಚರ್ಚೆಯಾಯಿತು.
ಇದನ್ನು ಓದಿದ ಒಬ್ಬರು ಆ ವಿಚಾರದ ಜೊತೆ ಮತ್ತಷ್ಟು ಅಪರೂಪವಾದ ವಿಚಾರಗಳನ್ನು ಬರೆದು ಕಳುಹಿಸಿದ್ದಾರೆ. ಅದು ಈ ಕೆಳಗಿನಂತಿದೆ.
Forwarded as Received:
ಅರಮನೆ ಧರ್ಮಾಧಿಕಾರಿಗಳಾದ ಯೋಗಿಶಾಮಣ್ಣನವರ ಮನೆಗೆ ಪೂರ್ವಾಶ್ರಮದಲ್ಲಿ ಶ್ರೀಸತ್ಯಪ್ರಮೋದತೀರ್ಥರು ವಾರಾನ್ನಕ್ಕೆ ಹೋಗುತ್ತಿದ್ದರೆಂಬ ವಿಚಾರವು ಸತ್ಯವಾದದ್ದು. ಆದರೆ ಅದು ಕೇವಲ ವಾರದಾನ್ನಕ್ಕೇ ಮಾತ್ರ ಸೀಮಿತವಾಗಿರಲಿಲ್ಲವೆಂಬುದು ಎಷ್ಟೋ ಮಂದಿಗೆ ಗೊತ್ತಿಲ್ಲ. ಮೈಸೂರಿನ ಯೋಗಿ ಶಾಮಣ್ಣನವರು ಈಗಿನ ವ್ಯಾಸರಾಜಮಠದ ಸ್ವಾಮಿಗಳಾದ ಶ್ರೀವಿದ್ಯಾವಿಜಯ ತೀರ್ಥರ ಪೂರ್ವಾಶ್ರಮದ ಪಿತೃಪಾದರು. ಇವರು ಆಗಿನ ಮೈಸೂರು ಸಂಸ್ಥಾನದ ಆಸ್ಥಾನ ವಿದ್ವಾಂಸರಾದ ಕೆಲವು ಪಂಡಿತರಿಗೆ ಪಾಠ-ಪ್ರವಚನ, ವಾಕ್ಯಾರ್ಥ ಗೋಷ್ಠಿಗಳು ಇತ್ಯಾದಿಗಳನ್ನು ಪ್ರತಿದಿನ ನಡೆಸುತ್ತಿದ್ದರು. ಸರೋವರಂ ಭೀಮಸೇನಾಚಾರ್, ಆನೆಕಲ್ ಶ್ರೀನಿವಾಸಾಚಾರ್, ಎಲಮೇಲಿ ವಾಸುದೇವಾಚಾರ್ , ಬಾಳೇಬೈಲ್ ಪದ್ಮನಾಭಾಚಾರ್, ದೊಡ್ಡಬಳ್ಳಾಪುರಂ ವಾಸುದೇವಾಚಾರ್ ಮುಂತಾದ ವಿದ್ವಾಂಸರ ಕೂಟ ಸೇರುತ್ತಿತ್ತು. ಅವರ ಮಧ್ಯದಲ್ಲಿ ಶ್ರೀಸತ್ಯಪ್ರಮೋದ ತೀರ್ಥರು ಮೈಸೂರಿನ ಸಂಸ್ಕೃತ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದಾಗ ವಾರದಾನ್ನದ ಜೊತೆಗೆ ಇಂತಹ ವಾಕ್ಯಾರ್ಥಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದರು. ಇವರ ಸೂಕ್ಷ್ಮಗ್ರಾಹಿತ್ವವನ್ನು, ಅಸಾಧಾರಣ ಪ್ರತಿಭೆಯನ್ನು ಮನಗೊಂಡ ಯೋಗಿ ಶಾಮಣ್ಣನವರು ಶ್ರೀಸತ್ಯಪ್ರಮೋದ ತೀರ್ಥರಿಗೆ ( ಪೂರ್ವಾಶ್ರಮದ ಗುತ್ತಲ ಗುರುರಾಜಾಚಾರ್ಯರಿಗೆ) ಪ್ರತ್ಯೇಕವಾಗಿ ಯೋಗಜ್ಞಾನಯುಕ್ತವಾದ ಕೆಲವು ವೇದಾಂತ ರಹಸ್ಯ ಪ್ರಮೇಯಗಳನ್ನು ಏಕಾಂತವಾಗಿ ಉಪದೇಶಿಸುತ್ತಾ ಬಂದರು.ಹೀಗೇ ವಾರಾನ್ನದ ನಿಮಿತ್ತವು ಜ್ಞಾನಪ್ರಾಪ್ತಿಗೂ ಮುಖ್ಯಕಾರಣವಾಯಿತು. ಅದು ಮುಂದೆ ಶ್ರೀಸತ್ಯಪ್ರಮೋದತೀರ್ಥರು "ಸುಧಾ ಮಂಡನಾದಿ" ಉದ್ಗ್ರಂಥಗಳನ್ನು ಬರೆಯಲು ಈ ಯೋಗಯುಕ್ತ ಜ್ಞಾನದ ವೇದಾಂತದ ರಹಸ್ಯವೂ ಕಾರಣವಾಯಿತೆಂಬ ವಿಚಾರವನ್ನು ಶ್ರೀಸತ್ಯಪ್ರಮೋದತೀರ್ಥರೇ ಕೆಲವು ಭಕ್ತರಲ್ಲಿ ಹೇಳಿದ್ದು, ಅವರಿಂದ ತಿಳಿದುಬಂದ ವಿಚಾರ. ಇಂತಹ ಅನೇಕ ವೇದಾಂತದ ರಹಸ್ಯಗಳು ಸಂಗ್ರಹರೂಪವಾಗಿ ಇಂದಿಗೂ ಶ್ರೀವಿದ್ಯಾವಿಜಯತೀರ್ಥರ ಬಳಿಯೂ ಇವೆ. ಆದ್ದರಿಂದಲೇ ಶ್ರೀಸತ್ಯಪ್ರಮೋದತೀರ್ಥರು ಶ್ರೀವಿದ್ಯಾವಿಜಯ ತೀರ್ಥರ (ಪೂರ್ವಾಶ್ರಮದ ಶ್ರೀಪುಷ್ಕರಪ್ರಸಾದಾಚಾರ್ಯರ) ಮೇಲೆ ವಿಶೇಷ ಅಭಿಮಾನವನ್ನು ಮಾಡುತ್ತಿದ್ದರೆಂಬ ವಿಷಯವೂ ಸತ್ಯವಾದದ್ದು. ಈಗಿನಂತೆ ಪ್ರಚಾರದ ಗೀಳು ಇಲ್ಲದ ಕಾಲವೆಂಬುದನ್ನು ಮರೆಯುವಂತಿಲ್ಲ.
**********
ಆಗ ಶ್ರೀ ಸತ್ಯಪ್ರಮೋದ ಶ್ರೀಪಾದಂಗಳು ಉತ್ತರಾದಿ ಮಠದ ಪೀಠಾಧಿಪತಿಗಳಾಗಿದ್ದ ಕಾಲ. ಇದು ಸುಮಾರು 25 ವರ್ಷದ ಹಿಂದೆಯೇ ನಡೆದ ಘಟನೆ.. ಒಂದು ಬಾರಿ ಅವರು ಶ್ರೀ ಟೀಕಾಭಗವತ್ಪಾದರ ದರ್ಶನಕ್ಕೆ ಬಂದು, ಒಂದು ದಿನ ಮಳಖೇಡದಲ್ಲಿ ತಂಗಿ, ಮರುದಿನ ಪೂಜೆ, ನೈವೇದ್ಯ ಎಲ್ಲ ಮುಗಿಸಿ ಸಂಜೆ ಬೆಂಗಳೂರಗೆ ಪ್ರಯಾಣ ಬೆಳೆಸಿದರು..ಅವರು ಪಯಣಿಸುವ ದಾರಿಯಲ್ಲಿ ಸ್ವಲ್ಪ ದಟ್ಟಡವಿಯಂಥ ಪ್ರದೇಶ ಬಂತು.
ಅವರ ಅನುಚರರು ನಿದ್ರೆಯಲ್ಲಿದ್ದರು.. ಡ್ರೈವರ್ ಮತ್ತು ಸ್ವಾಮೀಜಿಗಳು ಮಾತ್ರ ಎಚ್ಚರವಿದ್ದರು. ರಾತ್ರಿ ಸು.1-30, 2, ಗಂಟೆಯಾಗಿರಬಹುದು. ಅವರ ಹೊರಟಿದ್ದ ವಾಹನ ಎದುರಿಗೆ, ಸಣ್ಣದಾಗಿ ಗರ್ಜಿಸುತ್ತ ಹುಲಿಯೊಂದು ನಿಂತಿತ್ತು.. ಅದರ ಸಣ್ಣ ಘರ್ಜನೆ ಎಂದರೂ ಜೋರಾಗಿ ಕೇಳುತ್ತೆ ಮನುಷ್ಯರಿಗೆ. ನಿದ್ರೆಯಲ್ಲಿದ್ದವರೆಲ್ಲ ಹೌಹಾರಿ ಎದ್ದು ಕುಳಿತು, ಕಣ್ಬಿಟ್ಟು ನೋಡಿದರೆ ವಾಹನ ಎದುರು ಹುಲಿ ಗರ್ಜಿಸುತ್ತ ನಿಂತಿದೆ.. ಎಲ್ಲರೂ ಬೆವೆತು ಹೋದರು, ಸ್ವಾಮೀಜಿಗಳು ಹುಲಿಯನ್ನು ನೋಡಿದ ಕೂಡಲೇ, ಎಲ್ಲರಿಗೂ ಧೈರ್ಯ ಹೇಳಿ, ಎಲ್ಲರೂ, ದೇವರ ಪೆಟ್ಟಿಗೆಯನ್ನು ಗಾಡಿಯಲ್ಲೇ ಬಿಟ್ಟು, ಗಾಡಿಯ ಬಾಗಿಲು ಮುಚ್ಚದೇ, ಸ್ವಲ್ಪ ದೂರ ನಡೆಯಿರಿ ಎಂದು ಆಜ್ಞೆಯಿತ್ತರು..
ಎಲ್ಲರೂ ಗಾಬರಿಯಿಂದಲೇ ಅವಸರವಸರವಾಗಿ ಇಳಿದು ಸ್ವಲ್ಪ ದೂರ ನಡೆದು, ಹುಲಿಯನ್ನು ನೋಡುತ್ತಾ ನಿಂತರು.. ಏನಾಶ್ಚರ್ಯ, ಯಾರಿಗೂ ತೊಂದರೆ ಕೊಡದೆ ಹುಲಿ
ವಾಹನವನ್ನೇರಿ, ಶ್ರೀ ರಾಮದೇವರ ಇದ್ದ ಪೆಟ್ಟಿಗೆಯ ಮುಂದೆ ನಿಂತು ಮುಖವನ್ನು ಪೆಟ್ಟಿಗೆಯ ಮೇಲೆ ಸವರಿತು, ಒಂದು ನಿಮಿಷ ಅಲ್ಲೇ ಕುಳಿತು, ಆಮೇಲೆ ಕಾಡಿನಲ್ಲಿ ಮಾಯವಾಯಿತು..
ಎಲ್ಲ ಶಿಷ್ಯರೂ ಬಿಟ್ಟ ಕಣ್ಣು ಬಿಟ್ಟ ಹಾಗೆಯೇ ನೋಡುತ್ತಾ ನಿಂತಿದ್ದರು. ಗುರುಗಳು, " ನಡೆಯಿರಿ ಇನ್ನು, ಹೋಗೋಣ, ಟೀಕಾರಾಯರು ಶ್ರೀರಾಮನ ದರ್ಶನ ಪಡೆದರು !"
ಎಂದು ಹೇಳಿದರು..
ಶಿಷ್ಯರಿಗೆ ಆಶ್ಚರ್ಯವೂ ಆನಂದವೂ ಒಟ್ಟಿಗೆ ಆಯಿತು.. ಎಲ್ಲ ಗುರುಗಳ ಮಹಿಮೆ, ಎಂದುಕೊಂಡು, ಗಾಡಿ ಏರಿ , ಪ್ರಯಾಣ ಮುಂದುವರಿಸಿದರು.
***********
ಶ್ರೀ ಗುರುಭ್ಯೋನಮಃ 🙏🙏
ಒಂದು ಸಲ ಮಳಖೇಡದಲ್ಲಿ ಅಚಾರರು, ಸ್ನಾನ ಸಂಧ್ಯಾವಂದನೆ ಮುಗಿಸಿ, ಪೂಜೆ ಮಾಡಲು ಶ್ರೀ ಟೀಕಾರಾಯರ ಬೃಂದಾವನದ ಬಾಗಿಲು ತೆರೆಯುತ್ತಾರೆ.. ತೆಗೆಯುತ್ತಿದ್ದಂತೆ ಹೌಹಾರಿ ದೂರ ಸರಿಯುತ್ತಾರೆ..
ಒಂದು ದೊಡ್ಡ ಸರ್ಪ ಟೀಕಾರಾಯರ ಬೃಂದಾವನದ ಮೇಲೆ ಕುಳಿತಿದೆ.. ಆಚಾರ್ಯರು ಏನು ಮಾಡಲಿಕ್ಕೂ ತಿಳಿಯದೆ ಬಹಳ ಹೊತ್ತು ಕಾಯುತ್ತಾರೆ.. ಗಂಟೆಗಳು ಉರುಳಿದವು. ಕೊನೆಗೆ ರಾತ್ರಿಯೂ ಆಯ್ತು. ಆಚಾರ್ರೂ, ಏನೇ ಪ್ರಯತ್ನ ಪಟ್ಟರೂ ಆ ಸರ್ಪ ಮಾತ್ರ ಮೇಲಿಂದ ಕೆಳಗಿಳಿಯಲಿಲ್ಲ..
ಹೀಗೆಯೇ 2, 3 ದಿನ ಮುಂದುವರಿಯಿತು. ಆಚಾರ್ ರು ಬರೋದು , ಬಾಗಿಲು ತೆಗೆಯೋದು, ಆ ದೊಡ್ಡ ಸರ್ಪವನ್ನು ಕೆಳಗಿಳಿಸಲು ಪ್ರಯತ್ನಿಸೋದು. ರಾತ್ರಿವರೆಗೂ ಕಾಯೋದು. ಪರಿಹಾರ ಕಾಣದೆ ಮರಳಿ ಮನೆಗೆ ಹೋಗೋದು.
ಆಚಾರ್ರಿಗೆ ಚಿಂತೆಯಾಯ್ತು. ಏನು ಉಪಾಯ ಮಾಡಿದರೂ ಬೃಂದಾವನದ ಮೇಲಿಂದ ಕದಲದ ಸರ್ಪ ನೋಡಿ ಭೀತರಾದರು.. ಸ್ವಾಮಿ ನನ್ನಿಂದೇನಾದರೂ ತಪ್ಪಾಗಿದ್ದರೆ ಕ್ಷಮಿಸಿ ಅಂತ ನಮಸ್ಕಾರ, ಪ್ರದಕ್ಷಿಣೆ ಜಪ, ಎಲ್ಲ ಮಾಡಿದರೂ, ಉಪಯೋಗಕ್ಕೆ ಬಾರದಾಯಿತು.. ಭಯದಿಂದ ರಾತ್ರಿ ನಿದ್ರೆಯೂ ಹತ್ತಿರ ಸುಳಿಯಲಿಲ್ಲ.
ಇನ್ನು ತಡಮಾಡುವುದು ಸರಿಯಲ್ಲವೆಂದು ಈ ವಿಷಯವನ್ನು
ಒಬ್ಬ ಹುಡುಗನನ್ನು ಬೆಂಗಳೂರಿಗೆ ಕಳಿಸಿ, ಶ್ರೀ ಶ್ರೀ ಸತ್ಯಪ್ರಮೋದ ಶ್ರೀಪಾದಂಗಳಿಗೆ ವಿಷಯವನ್ನು ಅರಿಕೆ ಮಾಡು ಎಂದು ಹೇಳಿದರು..
ಬೆಂಗಳೂರಿಗೆ ಬಂದ ಮಲಖೇಡ ಮಠದಲ್ಲಿ ಕೆಲಸ ಮಾಡುವ ಹುಡುಗ, ಶ್ರೀಪಾದಂಗಳಿಗೆ ವಿಷಯ ಅರಿಕೆ ಮಾಡಿದ. ಶ್ರೀಗಳು ತಕ್ಷಣ, ಮಳಖೇಡಕ್ಕೆ ಬಂದಿಳಿದರು.. ಆಚಾರು ಅವರಿಗೆ ಸಾಷ್ಟಾಂಗವೆರಗಿ ನಡೆದ ವಿಷಯ ತಿಳಿಸಿದರು.. ಶ್ರೀಪಾದಂಗಳು ಶ್ರೀ ಟೀಕಾರಾಯರಿಗೆ ಪೂಜೆ ಮಾಡುವ ಅಭಯವನ್ನಿತ್ತರು.. ಆಚಾರು ಅಂದು ನೆಮ್ಮದಿಯಾಗಿ ನಿದ್ರೆ ಮಾಡಿದರು.
ಮರುದಿನ ಶ್ರೀಪಾದಂಗಳು ಬೇಗ ಎದ್ದು ಬೃಂದಾವನದ ಬಾಗಿಲು ತೆರೆಸಿ ನೋಡಿದರು. ಇನ್ನೂ ಆ ದೊಡ್ಡ ಸರ್ಪ ಹೆಡೆಯೆತ್ತಿ, " ನೀವು ಬರುವುದನ್ನೇ ಕಾಯುತ್ತಿದ್ದೆ ಎನ್ನುವ ಹಾಗೇ ಅವರತ್ತ ನೋಡಿತು..
ಶ್ರೀಪಾದಂಗಳು ಆಚಾರ್ರಿಗೆ ಒಂದು ದೊಡ್ಡ ಪರಾತ 2-3 ಲೀಟರ್ ಹಾಲು ತರಲು ಹೇಳಿದರು.. ಆಚಾರ್ರು ತಂದುಕೊಟ್ಟರು.. ಪರಾತದಲ್ಲಿ ಹಾಲು ಹಾಕಿ ಇಟ್ಟರು. ಏನೇ ಮಾಡಿದರೂ ಕೆಳಗಿಳಿಯದ ಅ ಭಯಂಕರ ಸರ್ಪ, ಕೆಳಗಿಳಿದು ಹಾಲು ಕುಡಿಯತೊಡಗಿತು.. ಸ್ವಾಮೀಜಿಗಳು, ಸಾಂಗವಾಗಿ ಪೂಜೆ ನೆರವೇರಿಸಿದರು. ಹೀಗೆಯೇ ಎರಡು ದಿನ ನಡೆಯಿತು, ರಾತ್ರಿ ಪೂಜೆಗೂ, ಹೀಗೇ ಮಾಡಿದರು.
3 ದಿನಗಳಾದ ನಂತರ, ಬಾಗಿಲು ತೆರೆದಾಗ, ಸರ್ಪ ಮಾಯವಾಗಿತ್ತು.. ಆಚಾರ್ರು ಗುರುಗಳಿಗೆ ಅನಂತ ಧನ್ಯವಾದಗಳನ್ನು ಹೇಳಿದರು.
ಸರ್ಪ ರೂಪದಲ್ಲಿ ಯಾರು ಬಂದಿದ್ದರು ಎಂದು ಮಾತ್ರ ಗೊತ್ತಾಗಲಿಲ್ಲ.. ಸ್ವಾಮೀಜಿಗಳು ಹೇಳಲಿಲ್ಲ..
ಹೀಗೆಯೇ ಆಗಾಧ ತಪಸ್ ಶಕ್ತಿಯಿಂದ ಕೂಡಿದ ಭಕ್ತಿಯಿಂದ ಎಂಥ ಸಮಸ್ಯೆಯಾದರೂ ಪರಿಹಾರ ಮಾಡುತ್ತಿದ್ದರು ಶ್ರೀ ಶ್ರೀ ಸತ್ಯಪ್ರಮೋದ ಶ್ರೀಪಾದಂಗಳು
************
'ಸಾರಸ್ವತಸಾನ್ನಿಧ್ಯ' ಲೇಖನ ಮಾಲಿಕೆಯ ತೊಂಬತ್ತೊಂದನೆಯ ಲೇಖನ -ಶ್ರೀಸತ್ಯಪ್ರಮೋದ ತೀರ್ಥರು
ಐವತ್ತು ವರ್ಷಗಳ ಕಾಲ ನಿರಂತರವಾಗಿ ಶ್ರೀಮಧ್ವ ಪೀಠವನ್ನು ಅಲಂಕರಿಸಿ, ಶ್ರೀರಾಮದೇವರನ್ನು ವಿಶೇಷವಾಗಿ ಅರ್ಚಿಸುವ, ತಮ್ಮ ವಾಙ್ಮಯಸೇವೆಯ ಮೂಲಕ ಶ್ರೀವೇದವ್ಯಾಸರನ್ನು ಪೂಜಿಸುವ ಮಹಾಭಾಗ್ಯಕ್ಕೆ ಭಾಜನರಾದವರು ಶ್ರೀಸತ್ಯಪ್ರಮೋದತೀರ್ಥ ಶ್ರೀಪಾದಂಗಳವರು. ಶ್ರೀಮಧ್ವ ಸಿದ್ಧಾಂತಕ್ಕೆ ಪ್ರತಿಕಕ್ಷಿಗಳಿಂದ ಆಕ್ಷೇಪಗಳು ಬಂದಂತಹ ಸಂದರ್ಭದಲ್ಲಿ ಅತ್ಯಂತ ಸಮರ್ಥವಾಗಿ ಅದಕ್ಕೆ ಪ್ರತ್ಯುತ್ತರವನ್ನು ನೀಡಿ, ಪ್ರತಿವಾದಿಗಳನ್ನು ನಿರುತ್ತರಗೊಳಿಸುವ ಮಹಾಪ್ರಯತ್ನದಲ್ಲಿ ನಿರಂತರ ಕ್ರಿಯಾಶೀಲರಾದವರು. ವಿದ್ಯಾಪೀಠಗಳ ಸ್ಥಾಪನೆ, ವಿದ್ವಾಂಸರ ಪೋಷಣೆ, ವಿದ್ವತ್ಪೂರ್ಣಕೃತಿಗಳ ರಚನೆಯನ್ನು ಜೀವನದ ವ್ರತವಾಗಿರಿಸಿಕೊಂಡಿದ್ದ ಶ್ರೀಸತ್ಯಪ್ರಮೋದ ತೀರ್ಥರು ಜನಿಸಿದ್ದು 1918ರಲ್ಲಿ. ತಂದೆ ಶ್ರೀಗುತ್ತಲರಂಗಾಚಾರ್ಯರು ಹಾಗೂ ತಾಯಿ ಶ್ರೀಮತಿ ಕಮಲಾದೇವಿಯವರು. ಶ್ರೀಗಳವರ ಪೂರ್ವಾಶ್ರಮದ ನಾಮ ಶ್ರೀಗುತ್ತಲ ಗುರುರಾಜಾಚಾರ್ಯರು. ಧಾರವಾಡದಲ್ಲಿ ಜನಿಸಿದ ಶ್ರೀಗುರುರಾಜಾಚಾರ್ಯರು ತಮ್ಮ ತಂದೆಯವರಿಂದಲೇ ಪ್ರಾಥಮಿಕ ಶಿಕ್ಷಣವನ್ನು ಹೊಂದಿ, ನಂತರ ಮಹಾವಿದ್ವಾಂಸರಾಗಿದ್ದ ಶ್ರೀ ಧಾರಾಪುರಂ ಕೃಷ್ಣಮೂರ್ತಾಚಾರ್ಯರಲ್ಲಿ ನ್ಯಾಯಶಾಸ್ತ್ರವನ್ನೂ ಹಾಗೂ ಶ್ರೀಮನ್ನ್ಯಾಯಸುಧಾದಿ ಉದ್ಗ್ರಂಥಗಳ ಅಧ್ಯಯನ ಪೂರ್ವಕವಾದ ವೇದಾಂತದ ಅಧ್ಯಯನವನ್ನು ಶ್ರೀ ಸತ್ಯಪ್ರಜ್ಞತೀರ್ಥರಲ್ಲಿ ಮಾಡಿದ ಶ್ರೀಗುರುರಾಜಾಚಾರ್ಯರು ಕೇವಲ ಆರು ವರ್ಷಗಳ ತಮ್ಮ ಗೃಹಸ್ಥಾಶ್ರಮವನ್ನು ತ್ಯಾಗಮಾಡಿ, ಮೂವತ್ತು ವರ್ಷಗಳ ಚಿಕ್ಕಪ್ರಾಯದಲ್ಲಿ ಶ್ರೀಸತ್ಯಾಭಿಜ್ಞರಿಂದ ಸಂನ್ಯಾಸಾಶ್ರಮವನ್ನು ಸ್ವೀಕರಿಸಿ, ಶ್ರೀಸತ್ಯಪ್ರಮೋದತೀರ್ಥರೆಂಬ ಆಶ್ರಮನಾಮದೊಂದಿಗೆ 1948ರಲ್ಲಿ ಶ್ರೀಉತ್ತರಾದಿ ಮಠದ ಪೀಠಾಧಿಪತಿಗಳಾದರು. 1949ರಲ್ಲಿ ತಮ್ಮ ಮೊದಲ ಶ್ರೀಮನ್ನ್ಯಾಯಸುಧಾಮಂಗಳವನ್ನು ಮಳಖೇಡ ಕ್ಷೇತ್ರದಲ್ಲಿ ಶ್ರೀಜಯತೀರ್ಥಗುರುಸಾರ್ವಭೌಮರ ಸನ್ನಿಧಾನದಲ್ಲಿ ನಡೆಸಿದ ಶ್ರೀಸತ್ಯಪ್ರಮೋದ ತೀರ್ಥರು ತಮ್ಮ ಪೀಠಾಧಿಪತ್ಯದ ಕಾಲದಲ್ಲಿ ಮೂವತ್ತಕ್ಕೂ ಹೆಚ್ಚು ಬಾರಿ ಸುಧಾಮಂಗಳಮಹೋತ್ಸವಗಳನ್ನು ನೆರವೇರಿಸಿದರು. ಮಹಿಷಿ ಮತ್ತು ಯರಗೋಳದಲ್ಲಿ ಕಾಷ್ಠಮೌನವ್ರತವನ್ನು ಆಚರಿಸಿದ ಶ್ರೀಸತ್ಯಪ್ರಮೋದರು ಮುಂಬಯಿಯಲ್ಲಿ ಶ್ರೀಸತ್ಯಧ್ಯಾನವಿದ್ಯಾಪೀಠವನ್ನು ಉದ್ಘಾಟಿಸಿದರು ಮಾತ್ರವಲ್ಲದೆ 1989ರಲ್ಲಿ ಬೆಂಗಳೂರಿನಲ್ಲಿ ಶ್ರೀಜಯತೀರ್ಥ ವಿದ್ಯಾಪೀಠವನ್ನು ಪ್ರಾರಂಭಿಸಿ ಶ್ರೀಪೂರ್ಣಪ್ರಜ್ಞರು ಪ್ರತಿಪಾದಿಸಿದ ಸಿದ್ಧಾಂತ, ನ್ಯಾಯ, ವ್ಯಾಕರಣಶಾಸ್ತ್ರಗಳಲ್ಲಿ ಅದ್ವಿತೀಯರಾದ ಪಂಡಿತರನ್ನು ಸಿದ್ಧಗೊಳಿಸುವ ಮಹಾಕಾರ್ಯಕ್ಕೆ ನಾಂದಿಹಾಡಿದರು. ಶ್ರೀಸತ್ಯಪ್ರಮೋದತೀರ್ಥರ ಮಾಧ್ವ ವಾಙ್ಮಯಸೇವೆಯೂ ಅನ್ಯಾದೃಶವಾದುದು.
ಅನಂತಕೃಷ್ಣಶಾಸ್ತ್ರಿಗಳೆಂಬ ಮಾಯಾವಾದದ ಮಹಾ ವಿದ್ವಾಂಸರು ಶ್ರೀಜಯತೀರ್ಥ ಶ್ರೀಮಚ್ಚರಣರ ವಿಶ್ವಮಾನ್ಯಕೃತಿ 'ಶ್ರೀಮನ್ನ್ಯಾಯಸುಧಾ'ಕೃತಿಯನ್ನು ಖಂಡಿಸುವುದಕ್ಕಾಗಿ 'ಅದ್ವೈತ ತತ್ತ್ವಸುಧಾ' ಎಂಬ ಕೃತಿಯನ್ನು ರಚಿಸಿ, ಶ್ರೀಟೀಕಾಕೃತ್ಪಾದರ ಅಭಿಪ್ರಾಯಗಳನ್ನು ನಿರಾಕರಣಮಾಡುವಂತಹ ಪ್ರಯತ್ನ ಮಾಡಿದಾಗ, ಶ್ರೀಜಯತೀರ್ಥರ ಕೃತಿಯ ನಿರ್ದುಷ್ಟತ್ವವನ್ನು ಸಾಧಿಸಲು ' ಶ್ರೀಮನ್ನ್ಯಾಯಸುಧಾಮಂಡನ' ಎಂಬ ಉದ್ಗ್ರಂಥವನ್ನು ರಚಿಸಿ ಅನಂತಕೃಷ್ಣಶಾಸ್ತ್ರಿಗಳ ಆಕ್ಷೇಪಗಳಿಗೆ ಅತ್ಯಂತ ಸಮರ್ಥವಾಗಿ ಉತ್ತರಿಸಿದ ಶ್ರೀಸತ್ಯಪ್ರಮೋದತೀರ್ಥರು .
ಮೈಸೂರಿನ ಪರಕಾಲಮಠದ ಸ್ವಾಮಿಗಳು ಶ್ರೀವಿಜಯೀಂದ್ರತೀರ್ಥರ ಗ್ರಂಥಗಳನ್ನು ಖಂಡಿಸುವ ಪ್ರಯತ್ನಮಾಡಿ 'ವಿಜಯೀಂದ್ರಪರಾಜಯ' ಕೃತಿಯನ್ನು ರಚಿಸಿದಂತಹ ಸಂದರ್ಭದಲ್ಲಿ ಕೇವಲ ಒಂದು ತಿಂಗಳ ಕಾಲದಲ್ಲಿ ಸಂಸ್ಕೃತಭಾಷೆಯಲ್ಲಿ 'ವಿಜಯೀಂದ್ರ ವಿಜಯವೈಭವಂ' ಕೃತಿಯನ್ನು ರಚಿಸಿ, ಶ್ರೀವಿಜಯೀಂದ್ರಗುರುಸಾರ್ವಭೌಮರ ಮಹತಿಯನ್ನು ಎತ್ತಿಹಿಡಿದರು.
ಶ್ರೀವಾದಿರಾಜಗುರುಸಾರ್ವಭೌಮರ ಅತ್ಯಪೂರ್ವವಾದಂತಹ ಕೃತಿ 'ಯುಕ್ತಿಮಲ್ಲಿಕಾ' ಕೃತಿಗೆ ಸುಲಭವಾದಂತಹ ಸಂಸ್ಕೃತ ಟಿಪ್ಪಣಿಯನ್ನು ರಚಿಸಿದರು ಮಾತ್ರವಲ್ಲದೆ, ಶ್ರೀಯುಕ್ತಿಮಲ್ಲಿಕಾಕಾರರ ಬೃಂದಾವನದ ಸನ್ನಿಧಾನದಲ್ಲಿಯೆ 'ಯುಕ್ತಿಮಲ್ಲಿಕಾ' ಕೃತಿಯನ್ನು ಸಮಗ್ರವಾಗಿ ಅನುವಾದಮಾಡಿ ಶ್ರೀರಾಜರ ಅನುಗ್ರಹಕ್ಕೆ ಪಾತ್ರರಾದರು.
ಶ್ರೀತ್ರಿವಿಕ್ರಮಪಂಡಿತಾಚಾರ್ಯರು ರಚಿಸಿದ ಮಂತ್ರತುಲ್ಯವಾದಂತಹ 'ವಾಯುಸ್ತುತಿ'ಯ ಖಂಡನೆಗಾಗಿ ಮಾಯಾವಾದಿಗಳು 'ಈಶಾನಸ್ತುತಿ' ಎಂಬ ಕೃತಿಯನ್ನು ಪ್ರಕಟಿಸಿದಂತಹ ಸಂದರ್ಭದಲ್ಲಿ ಆ ಕೃತಿಯನ್ನು ಖಂಡಿಸಿ ವಾಯುಸ್ತುತಿಯ ಮಂಡನವನ್ನು ಮಾಡಿದ ಯಶವೂ ಶ್ರೀಗಳಿಗೆ ಸಲ್ಲುತ್ತದೆ. ವೈಷ್ಣವ ಸಿದ್ಧಾಂತಾರ್ಜವಂ, ಭಾಗವತ ನಿರ್ದೋಷತ್ವ ಲಕ್ಷಣ: ಮೊದಲಾದ ಕೃತಿಗಳನ್ನು ಸಹ ರಚಿಸಿದರು. ವೈಷ್ಣವಸಿದ್ಧಾಂತಾರ್ಜವಂ ಕೃತಿಯಲ್ಲಿ ಮಾಧ್ವ ಸಿದ್ಧಾಂತದ ಮೇಲೆ ಅದ್ವೈತಿಯೋರ್ವರು ಮಧ್ವ ಸಿದ್ಧಾಂತದ ಮೇಲೆ ಮಾಡಿದ ಐದು ಆಕ್ಷೇಪಣೆಗಳನ್ನು ನಿರಾಕರಣಮಾಡಿ, ಸತ್ಸಿದ್ಧಾಂತವನ್ನು ಸ್ಥಾಪಿಸಿದರೆ, ಭಾಗವತ ನಿರ್ದೋಷತ್ವ ಲಕ್ಷಣ ಕೃತಿಯಲ್ಲಿ ಭಗವಂತನ ಗುಣಪೂರ್ಣತ್ವ ಹಾಗೂ ನಿರ್ದೋಷತ್ವವನ್ನು ವಿಶೇಷವಾಗಿ ಪ್ರತಿಪಾದನೆ ಮಾಡಿದರು. ತಮ್ಮ ಐವತ್ತು ವರ್ಷಗಳ ಸುದೀರ್ಘ ಪೀಠಾಧಿಪತ್ಯದ ಕಾಲದಲ್ಲಿ ಕರ್ನಾಟಕ, ಆಂಧ್ರ,ತೆಮಿಳುನಾಡು, ಮಹಾರಾಷ್ಟ್ರ, ಉತ್ತರಭಾರತದಲ್ಲಿ ಸಂಚರಿಸಿ ಶ್ರೀಮಧ್ವಸಿದ್ಧಾಂತವನ್ನು ಪ್ರಸರಿಸಿ1996ರಲ್ಲಿ ತಮಿಳುನಾಡಿನ ತಿರುಕೊಯಿಲೂರಿನಲ್ಲಿ ಸರ್ವಾಜ್ಞಾಚಾರ್ಯರಿಗೆ ಶ್ರೀಸತ್ಯಾತ್ಮತೀರ್ಥರೆಂಬ ಆಶ್ರಮನಾಮದೊಂದಿಗೆ ಸಂನ್ಯಾಸಾಶ್ರಮವನ್ನು ನೀಡಿ ತಮ್ಮ ಉತ್ತರಾಧಿಕಾರಿಯನ್ನಾಗಿ ನೇಮಿಸಿ, ಶ್ರೀಮಾಧ್ವಯತಿಪರಂಪರೆಗೆ ಮಹಾವಿದ್ವಾಂಸರಾದ ಯತಿಶ್ರೇಷ್ಠರೊಬ್ಬರನ್ನು ಕೊಡುಗೆಯಾಗಿ ನೀಡಿದರು. ವೇದವ್ಯಾಸರ, ಮಧ್ವರ ಸೇವೆಯನ್ನು ನಿರಂತರವಾಗಿ ಮಾಡುತ್ತಾ, ತಮಿಳುನಾಡಿನ ಪಿನಾಕಿನಿ ನದಿ ತೀರ ಮನಂಪುಂಡಿ (ತಿರುಕೊಯಿಲೂರು)ಯಲ್ಲಿ ಈಶ್ವರ ನಾಮ ಸಂವತ್ಸರ ಕಾರ್ತಿಕ ಶುದ್ಧ ತೃತೀಯ 3 ನವೆಂಬರ್ 1997ರಂದು ಪ್ರಾತ:ಸ್ಮರಣೀಯರಾದ ಶ್ರೀರಘೂತ್ತಮತೀರ್ಥ ಗುರುಸಾರ್ವಭೌಮರ ಬೃಂದಾವನದ ಸನ್ನಿಧಾನದಲ್ಲಿ ಬೃಂದಾವನಸ್ಥರಾದ ಶ್ರೀಸತ್ಯಪ್ರಮೋದತೀರ್ಥ ಶ್ರೀಪಾದಂಗಳವರ ಮಾಧ್ವ ವಾಙ್ಮಯಸೇವೆ ನಿತ್ಯಸ್ತುತ್ಯವಾದಂತಹುದು. ವಿದ್ವದ್ವಿಭೂತಿ ಶ್ರೀಸತ್ಯಪ್ರಮೋದತೀರ್ಥರಿಗೆ ಅನಂತ ನಮನಗಳು. ಶ್ರೀಕೃಷ್ಣ,ಮಧ್ವರು ಪ್ರೀತರಾಗಲಿ
***************
#ಶ್ರೀಸತ್ಯಪ್ರಮೋದರನ್ನುಸಂರಕ್ಷಸಿದಶ್ರೀಸತ್ಯಧ್ಯಾನರು
ಶ್ರೀ ಸತ್ಯಪ್ರಮೋದ ತೀರ್ಥರು ಆಶ್ರಮ ಸ್ವೀಕರಿಸಿ ೧೫ ದಿನ ಕಳೆದಿವೆ. ೨೮ ತಾರುಣ್ಯದಲ್ಲಿಯೇ ಶ್ರೀ ಉತ್ತರಾಧಿಮಠ ಪೀಠ ಅವರನ್ನು ಕೈ ಮಾಡಿ ಕರೆಯಿತು. ಶ್ರೀಮಠದ ಶ್ರೀ ಸತ್ಯಧ್ಯಾನ ತೀರ್ಥರ ಗರಡಿಯಲ್ಲಿ ಸಿದ್ಧರಾದ ನೂರಾರು ಪ್ರಚಂಡ ಪಂಡಿತರಿದ್ದಾರೆ. ಮಠದ ಆರ್ಥಿಕ ಸ್ಥಿತಿ ಸರಿಯಲ್ಲ. ತಮ್ಮ ವಯಸ್ಸು ಸಣ್ಣದು. ಆಡಳಿತ ಲೌಕಿಕ ವ್ಯವಸ್ಥೆ ಅಪರಿಚಿತವಾದ್ದು. ಇದೆ ಚಿಂತೆಯಲ್ಲಿ ಶ್ರೀ ಸತ್ಯಪ್ರಮೋದ ತೀರ್ಥರು ಹಗಲಿರುಳೂ ಯೋಚಿಸುತ್ತಿದ್ದರು.
ಸಂಚಾರದಂತೆ ಕೋಣನ ತಂಬಿಗೆಗೆ ಬಂದಿದ್ದಾರೆ. ಮುಂದಿನ ತಿಂಗಳು ಮಳಖೇಡದಲ್ಲಿ ,ಎಲ್ಲ ದಿಗ್ಗಜ ಪಂಡಿತರ ಎದರು ಶ್ರೀಮನ್ ನ್ಯಾಯಸುಧಾ ಅನುವಾದ ಮಂಗಳವಾಗಬೇಕಿದೆ. ಅದೇ ಯೋಚನೆಯಲ್ಲಿ ಬೆಳಗಿನ ಮೂರು ಗಂಟೆಯವರೆಗೆ ಸುಧಾಗ್ರಂಥದ ಟಿಪ್ಪಣಿಗಳನ್ನು ಓದುತ್ತಾ ಕುಳಿತರು. ನಿದ್ರೆ ಇಲ್ಲವೇ ಇಲ್ಲ.
ಸಂಸ್ಥಾನದ ಹೊಣೆಗಾರಿಕೆಯ ಚಿಂತೆಯಲ್ಲಿ ಮುಳುಗಿದ್ದಾರೆ.
ಕಣ್ಣೆದುರು ಯಾರೋ ಬಂದು ನಿಂತರು. ಕಾಲಿನಲ್ಲಿ ಪಾದುಕೆ , ದಂಡಧಾರಿ ತೇಜಸ್ವಿ ಯತಿಗಳು ಭಾರಿ ಬೆಳಕು. ಬಂಗಾರದ ಬಣ್ಣ ಕಣ್ಣು ಕುಕ್ಕಿದವು. ಮತ್ತೋಮ್ಮೆ ಕಣ್ಣು ತಿಕ್ಕಿಕೊಂಡು ನೋಡಿದರು.ಎದರಿಗೆ ಭವ್ಯ ಮೂರ್ತಿ ಶ್ರೀಸತ್ಯಧ್ಯಾನ ತೀರ್ಥರು. ಗಾಬರಿಗೊಂಡು ಶ್ರೀಸತ್ಯಪ್ರಮೋದ ತೀರ್ಥರು ಕೂಡಲೇ ಶ್ರೀ ಸತ್ಯಧ್ಯಾನ ತೀರ್ಥರಿಗೆ ನಮಸ್ಕರಿಸಿದರು.
ಪ್ರತ್ಯಕ್ಷವೋ ಕನಸೋ ದಿಗಿಲು.
ಶ್ರೀಸತ್ಯಧ್ಯಾನ ತೀರ್ಥರು ಹೇಳಿದರು. ಹಗಲಿರುಳು ಸಂಸ್ಥಾನದ ಬಗ್ಗೆ ಪಾಠಪ್ರವಚನದ ಬಗ್ಗೆ ಚಿಂತೆ ಬೇಡ.
ನಾನು ಐವತ್ತು ವರ್ಷ ನಿನ್ನ ಹಿಂದೆಯೇ ಇರುವೆ. ಚಿಂತೆ ಬೇಡ . ಸಂಸ್ಥಾನವು ನಿಮ್ಮ ಕಾಲದಲ್ಲಿ ಸುವರ್ಣ ಶಿಖರಕ್ಕೆ ತಲುಪುವುದು. ಪಾಠಪ್ರವಚನ ನಿರಾತಂಕವಾಗಿ ಸಾಗುವುದು. ನಿಮಗೆ ಬರುವ ಎಲ್ಲ ವಿಘ್ನಗಳು ನಾಶವಾಗುವವುನಾನಿರುವೆ. ನನ್ನ ಪರಿಪೂರ್ಣ ಅನುಗ್ರಹವಿದೆ ಎಂದರು.
ಶ್ರೀಸತ್ಯಪ್ರಮೋದ ತೀರ್ಥರಿಗೆ ಆನಂದ,ಆಶ್ಚರ್ಯ ವಾದವು. ತಮ್ಮ ಅಂತರಾಳವನ್ನು ಅರಿತು ಆಶೀರ್ವದಿಸಿದ ಮಹಾ ಗುರುಗಳನ್ನು ವಂದಿಸಿದರು ಕಣ್ಣು ಬಿಟ್ಟು ನೋಡುವುದರಲ್ಲಿಯೇ ಮೂರ್ತಿ ಅದೃಶ್ಯವಾಯಿತು.
ಅಂದಿನ ಭರವಸೆಯೇ ಐವತ್ತು ವರ್ಷದ ವೇದಾಂತ ಸಾಮ್ರಾಜ್ಯದ ಸಂರಕ್ಷಣೆಗೆ ಕಾರಣವಾಯಿತೆಂದು ಶ್ರೀಸತ್ಯಪ್ರಮೋದ ತೀರ್ಥರು ನೆನೆಸುತ್ತಿದ್ದರು. ನುಡಿದ ಭವಿಷ್ಯವೇ ಸತ್ಯವಾಯಿತು. ಅವರ ಆಶೀರ್ವಾದವೇ ರಕ್ಷಾಕವಚವಾಯಿತು.
||ಶ್ರೀಕೃಷ್ಣಾರ್ಪಮಸ್ತು||
***************
info on sri satyapramoda teertharu
ಶ್ರೀ ಶ್ರೀ ಸತ್ಯಪ್ರಮೋದತೀರ್ಥರ ಕಿರುದರ್ಶನ:-
ಮನೆದೇವರು :- ಶ್ರೀ ನರಸಿಂಹ(ತೊರವಿ)
ವೇದಶಾಖೆ :- ಋಗ್ವೇದ
ಗೋತ್ರ :- ಕಾಶ್ಯಪ
ವಂಶ :- ಗುತ್ತಲ ಮನೆತನ*
ಜನನ :- ಭಾದ್ರಪದ ಕೃಷ್ಣ ಪಂಚಮಿ
ಸ್ಥಳ :- ಧಾರವಾಡ
ಪೂರ್ವಶ್ರಮನಾಮ :- ಗುರುರಾಜಾಚಾರ್ಯಗುತ್ತಲ
ಯತ್ಯಾಶ್ರಮ :- ಸರ್ವಜಿತ್ ಸಂ. ಪುಶ್ಯಕೃಷ್ಣ ಅಷ್ಟಮಿ
ಆಶ್ರಮನಾಮ :- ಶ್ರೀ ಶ್ರೀ ಸತ್ಯಪ್ರಮೋದತೀರ್ಥರು
ಆಶ್ರಮಗುರುಗಳು :- ಶ್ರೀ ಶ್ರೀ ಸತ್ಯಾಭಿಜ್ಞತಿರ್ಥರು
ಆಶ್ರಮಸ್ವೀಕಾರ ಸ್ಥಳ :- ರಾಣೇಬೆನ್ನೂರು
ಪ್ರಥಮ ಸುಧಾಮಂಗಳ:- 1949-50,ಮಳಖೆಢಾದಲ್ಲಿ
ಪ್ರಥಮಚಾತುರ್ಮಸ್ಯ:- 1948, ಆನವಟ್ಟಿ
ಸುಧಾಮಂಗಳಗಳು :- 25ಕ್ಕೂ ಹೇಚ್ಚು ಸಲ
ವಿಷ್ಣುಪಂಚಕ ವ್ರತ:- ಐದು ಸಲ
ಶ್ರೀಗಳವರ ಕಡೆಯ ಚಾತುರ್ಮಾಸ್ಯ :- ಶಿವಮೊಗ್ಗ, 1997 ರಲ್ಲಿ 50 ನೇ ಚಾತುರ್ಮಾಸ್ಯ
ಮೂಲ ವೃಂದಾವನ :- ತಿರುಕೋಯಿಲೂರು
ಪೀಠದ ಉತ್ತಾರಾಧಿಕಾರಿಗಳು:- ಶ್ರೀ ಶ್ರೀ 1008 ಶ್ರೀ ಸತ್ಯಾತ್ಮ ತೀರ್ಥರು
ನೂರಾರು ಘನ ವಿದ್ವಾಂಸರನ್ನು ಸಿದ್ಧಪಡಿಸಿದ ಭೂತಲ ಬೃಹಸ್ಪಗಳಾದ ಶ್ರೀ ಶ್ರೀ 1008 ಸತ್ಯಪ್ರಮೊದ ತೀರ್ಥ ಶ್ರೀಪಾದಂಗಳವರು.
***
ಶ್ರೀಂ ಶ್ರೀ ಕಂ ಕಪಿಲಾಯ ನಮಃ
ಕಾರ್ತೀಕ ಶುಕ್ಲ ತೃತೀಯಾ
ಸತ್ಯಾಭಿಜ್ಞ ಕರಾಬ್ಜೋತ್ಥಾನ್
ಪಂಚಾಶದ್ವರ್ಷ ಪೂಜಕಾನ್/
ಸತ್ಯಪ್ರಮೋದ ತೀರ್ಥಾರ್ಯಾನ್ ನೌಮಿ
ನ್ಯಾಯ ಸುಧಾರತಾನ್
ಶ್ರೀ ಸತ್ಯಪ್ರಮೋದ ತೀರ್ಥರ ಮಧ್ಯಾರಾಧನೆಯ ಶುಭಷ್ಮರಣೆಗಳು....
ಶ್ರೀ ಸಮೀರಾಚಾರ್ಯರ ಲೇಖನ
👇🏽👇🏽👇🏽👇🏽👇🏽👇🏽
ಶ್ರೀ ಸತ್ಯಪ್ರಮೋದ ತೀರ್ಥ ಗುರುಭ್ಯೋ ನಮಃ
ಇಂದು, ಪ್ರಾತಃಸ್ಮರಣೀಯರಾದ, ಮಹಾನುಭಾವರಾದ, ವಿದ್ವನ್ಮಣಿಗಳಾದ, ತಪಸ್ವಿಗಳಾದ, ಶ್ರೀ ಸತ್ಯಪ್ರಮೋದ ತೀರ್ಥರ ಆರಾಧನೆಯ ಪರ್ವಕಾಲ.
ಅವರ ಅತ್ಯದ್ಭುತ ಚರಿತ್ರೆ, ಅವರು ಮಾಡಿದ ಮಹಾಕಾರ್ಯಗಳು, ತೋರಿಸದ ಮಹಿಮೆಗಳು, ಅತ್ಯದ್ಭುತವಾದ ಗ್ರಂಥ ರಚನಾ ಶಕ್ತಿ ಎಲ್ಲರಿಗೂ ಪರಿಚಿತ.
ಎಂಥಾ ಕಷ್ಟ ಬಂದರೂ ಆಶ್ರಮವಾದ ದಿನದಿಂದ ತಾವು ಈ ಭೂಮಿಯ ಮೇಲೆ ಇದ್ದ ಕೊನೆಯ ದಿನದ ವರೆಗೂ 50 ವರ್ಷಗಳ ಕಾಲದಲ್ಲಿ ಒಂದೂ ದಿನ ಬಿಡದೇ ಶ್ರೀಮೂಲರಾಮದೇವರ ಪೂಜೆಯನ್ನು ಅದೇ ವೈಭವದಿಂದ ಮಾಡಿದ ಮಹಾನುಭಾವರು.
ಈ ಅಲ್ಪನ ಜ್ಯೇಷ್ಠ ಪಿತಾಮಹರಾದ ಶ್ರೀ ಕಟ್ಟಿ ಕೇಶವಾಚಾರ್ಯರು -
ಸತ್ಯಪ್ರಮೋದ ವಿಜಯ ಅನ್ನೋ ಕಾವ್ಯ ರಚಿಸಿದ್ದಾರೆ.
ಗುರುಸ್ಮರಣೆಗಾಗಿ,
ಗುರು ಹಿರಿಯರ ಸೇವಾರೂಪದಲ್ಲಿ ಈ ಉತ್ಕೃಷ್ಟ ಕಾವ್ಯದಲ್ಲಿನ ಒಂದೆರಡು ಸಾಲುಗಳಲ್ಲಿ ಸೂಕ್ಷ್ಮವಾಗಿ, ಬಹಳ ಸ್ವಾರಸ್ಯಕರವಾಗಿ ಕವಿಗಳು ಗುರುಗಳ ಮಹಿಮೆಯನ್ನು ಸೂಚಿಸಿದ್ದನ್ನು ಸ್ಮರಿಸುವ ಅತ್ಯಲ್ಪ ಯಥಾಮತಿ ಪ್ರಯತ್ನ.
ಶ್ರೀ ಸತ್ಯಪ್ರಮೋದ ತೀರ್ಥರು ಈ ಭೂಮಿಯನ್ನು ಬಿಟ್ಟು ಹೋದ ದಿನ ಇವತ್ತು.
ಶ್ರೀ ಸತ್ಯಪ್ರಮೋದ ತೀರ್ಥರು ಬೃಂದಾವನಸ್ಥರಾದ ಕಾಲ ಅಂದ್ರೆ = ಈಶ್ವರ ನಾಮ ಸಂವತ್ಸರ, ಕಾರ್ತಿಕ ಮಾಸ, ಶುಕ್ಲ ಪಕ್ಷ ತೃತೀಯಾ
ಸತ್ಯಪ್ರಮೋದ ವಿಜಯದಲ್ಲಿ ಕಟ್ಟಿ ಕೇಶವಾಚಾರ್ಯರು ಶ್ರೀ ಸತ್ಯಪ್ರಮೋದ ತೀರ್ಥರು ಬೃಂದಾವನಸ್ಥರಾದ ಕ್ಷೇತ್ರ ಹಾಗೂ ಕಾಲ, ಎರಡರ ಔಚೈತ್ಯಪೂರ್ಣತೆಯನ್ನು ಬಹಳ ಸ್ವಾರಸ್ಯಕರವಾಗಿ, ಒಂದರ್ಥದಲ್ಲಿ ಅವರ ಇಡೀ ಜೀವನದ , ವ್ಯಕ್ತಿತ್ವವದ ಚಿತ್ರಣ ಕೊಡುವಂತೆ ಹೇಳಿದ್ದಾರೆ.
ಬೃಂದಾವನಸ್ಥರಾದ ಕಾಲದ ಬಗ್ಗೆ ಹೇಳಬೇಕಾದರೆ-
ಶ್ರೀವಿಷ್ಣೋ: ಸ್ಥಿರ ಜಗದೀಶ್ವರತ್ವಮೇಷ: ನಿತ್ಯಂ ಸಂಕಥಯನ್ ಸ ಈಶ್ವರಾಬ್ಧೇ.
ಸಂಶುಕ್ಲೇ ಪ್ರಚುರಮತೇರ್ಮತೇ ಸದೈವ
ಸಂಸ್ಥಿತ್ಯಾ ಗುರುಚರಣ: ಸ ಶುಕ್ಲ ಪಕ್ಷೇ...
ಅಂತ ಹೇಳಿದ್ದಾರೆ.
"ವಿಷ್ಣೋ: ಸರ್ವೋತ್ತಮತ್ವಂ ಚ ಸರ್ವದಾ ಪ್ರತಿಪಾದಯ*
= ವಿಷ್ಣು ಸರ್ವೋತ್ತಮತ್ವವನ್ನು ಯಾವಾಗಲೂ ಪ್ರತಿಪಾದಿಸು
ಅಂತ ಪ್ರತಿ ಒಬ್ಬ ಮಾಧ್ವಯತಿಗಳಿಗೆ ಶ್ರೀಮದಾಚಾರ್ಯರು ಕೊಟ್ಟ ಆಜ್ಞೆ. ಈ ಆಜ್ಞೆಯನ್ನು ಶಿರಸಾವಹಿಸಿ,
ಎಂಥಾ ಪ್ರಸಂಗದಲ್ಲಿ ಇದ್ದರೂ, ಎಂಥಾ ಸಂಚಾರದಲ್ಲಿ ಇದ್ದರೂ
ಸುಧಾದಿ ಗ್ರಂಥಗಳ ಪಾಠ ಇಲ್ಲದೇ ಒಂದು ದಿನವೂ ಇಲ್ಲ, ಪಾಠ ಪ್ರವಚನ ಇಲ್ಲದೇ ಒಂದು ಕಾಳು ನೀರು ಕುಡಿದವರು ಅಲ್ಲ. ಅಂಥಾ ದೀಕ್ಷೆ, ಅಂಥಾ ದೊಡ್ಡ ತಪಸ್ಸು ಶ್ರೀ ಸತ್ಯಪ್ರಮೋದ ತೀರ್ಥರದು.
ಹೀಗೆ, ಈ ರೀತಿಯ ದೊಡ್ಡ ತಪಸ್ಸು ಮಾಡಿದ್ದರಿಂದ, ಅದರ ಸೂಚಕವೆನ್ನುವಂತೆ ಈಶ್ವರ ನಾಮ ಸಂವತ್ಸರದಲ್ಲಿ ಬೃಂದಾವನಸ್ಥರಾದರು, ರಾಮಪಾದವನ್ನು ಹೊಂದಿದರು.
ಕಾರ್ತಿಕ ಮಾಸದ ಶುಕ್ಲ ಪಕ್ಷದಲ್ಲಿ. ಇದರ ಔಚಿತ್ಯ/ ಹೀಗೆ ಯಾಕೆ ಅಂದ್ರೆ
ಸಂಶುಕ್ಲೇ ಪ್ರಚುರಮತೇ: ಮತೇ ಸದೈವ ಸಂಸ್ಥಿತ್ವಾ...
ಶ್ರೀಮದಾಚಾರ್ಯರ -ಪೂರ್ಣಪ್ರಜ್ಞರ
ಶುಕ್ಲ ಅಂದ್ರೆ ಶುಭ್ರ= -ಶುದ್ಧವಾದ ಮತದಲ್ಲಿ ಸುಸ್ಥಿರವಾದ ಬುದ್ಧಿ ಉಳ್ಳವರಾದ್ದರಿಂದ, ಅಂಥಾ ಸಿದ್ಧಾಂತದಲ್ಲಿ ಸುಸ್ಥಿರರಾದ್ದರಿಂದ ಶುಕ್ಲ ಪಕ್ಷದಲ್ಲಿ ರಾಮಪಾದವನ್ನು ಹೊಂದಿದರು.
ಅನೇಕಾನೇಕ ವಾದಿಗಳ ನಿಗ್ರಹ ಮೂಲಕ ಸನ್ಮಾತ ಸ್ಥಾಪನೆ,
ನ್ಯಾಯಸುಧಾಮಂಡನಾದಿ ಗ್ರಂಥಗಳ ರಚನೆ, ಶ್ರೀಮನ್ಮಧ್ವಸಿದ್ಧಾಂತದ
ಸಂಸ್ಥಾನೆಯನ್ನು ವಿಶೇಷವಾಗಿ ಮಾಡಿದ ಶ್ರೀ ವಾದಿರಾಜ ಗುರುಸಾರ್ವಭೌಮರ ಶ್ರೇಷ್ಠಕೃತಿಗಳಲ್ಲಿ ಒಂದಾದ ಯುಕ್ತಿಮಲ್ಲಿಕಾ ಗ್ರಂಥದ ವ್ಯಾಖ್ಯಾನವಿರಬಹುದು, ಶ್ರೀ ವಿಜಯೀಂದ್ರ ಗುರುಗಳ ಬಗ್ಗೆ ಇಲ್ಲದ ಸಲ್ಲದ ಆರೋಪಗಳ ಪ್ರಯತ್ನವಾದಾಗ, ಶ್ರೀ ವಿಜಯೀಂದ್ರ ತೀರ್ಥರು ಸ್ಥಾಪಿಸಿದ ಸಿದ್ಧಾಂತದ ದಿಗ್ವಿಜಯದ ವೈಭವ, ವಿಜಯೀಂದ್ರ ವಿಜಯ ವೈಭವ, ಇಂಥಾ ಅನೇಕ ಅದ್ಭುತ ಕೃತಿಗಳ ರಚನೆ , ಇವುಗಳ ಮೂಲಕ,
ವಿಷ್ಣು ಸರ್ವೋತ್ತಮತ್ವದ ಸಿದ್ಧಾಂತ, ಶುಕ್ಲರಾದ ಶ್ರೀಮದಾಚಾರ್ಯರ ಶುದ್ಧ ಸಿದ್ಧಾಂತದ ಸ್ಥಾಪನೆಯನ್ನು ಪ್ರತಿನಿತ್ಯ ಮಾಡಿದವರು ಆದ್ದರಿಂದ ಕಾಲಾನುಸಾರ ಶುಕ್ಲ ಪಕ್ಷದಲ್ಲಿ ಬೃಂದಾವನಸ್ಥರಾದದ್ದು ಔಚಿತ್ಯಪೂರ್ಣನೇ ಅಂತ ಸತ್ಯಪ್ರಮೋದವಿಜಯಕಾರರ ಅಭಿಪ್ರಾಯ.
ಸಂವತ್ಸರ ಮತ್ತು ಪಕ್ಷದ ಬಗ್ಗೆ ಆಯಿತು.
ಇನ್ನು
ಮಾಸ =ಕಾರ್ತಿಕ ಮಾಸ
ಇದರ ಬಗ್ಗೆ ಹೇಳಿದ್ದಾರೆ ಕಾವ್ಯದಲ್ಲಿ -
ಊರ್ಜತ್ವಂ ಸಮಭಿದಧಸ್ತ್ವಪೀಠನಿಷ್ಠಂ ಊರ್ಜೋsಸೌ ಶುಭತಮಮಾಸಿ ಯೋಗಿವರ್ಯ:... ಅಂತ
"ಬಾಹುಲೋರ್ಜೌ ಕಾರ್ತಿಕಿಕ:" ಅಂತ ಹೇಳಿದಹಾಗೆ ಕಾರ್ತಿಕ ಮಾಸಕ್ಕೆ ಊರ್ಜ ಮಾಸ ಅಂತ ಹೇಳ್ತಾರೆ. ಊರ್ಜ ಅಂದ್ರೆ ಶಕ್ತಿ, ಬಲ, ವೃದ್ಧಿ ಅಂತೆಲ್ಲಾ ಅರ್ಥ ಇವೆ. ತಾವು ಅಲಂಕರಿಸಿದ ಪೀಠದ ಗೌರವವನ್ನು ವೃದ್ಧಿಗೊಳಿಸಿದವರು, ಅದರ ಊರ್ಜಿತತ್ವವನ್ನು, ಶ್ರೀಮದಾಚಾರ್ಯರ ಪೀಠದ ಊರ್ಜಿತತ್ವವನ್ನು ಸಾಕಾರ ಗೊಳಿಸಿದವರು ಆದ್ದರಿಂದ ಕಾರ್ತಿಕಮಾಸ = ಊರ್ಜ ಮಾಸದಲ್ಲಿ ಬೃಂದಾವನಸ್ಥರಾಗಿದ್ದು ಔಚಿತ್ಯಪೂರ್ಣವೇ.
ಅಂದ್ರೆ ಒಟ್ಟಿನಲ್ಲಿ ಈಶ್ವರ ಸಂವತ್ಸರ, ಕಾರ್ತಿಕ ಮಾಸ ಶುಕ್ಲ ಪಕ್ಷದಲ್ಲಿ ಬೃಂದಾವನಸ್ಥರಾಗಿದ್ದು ಶ್ರೀ ಸತ್ಯಪ್ರಮೋದರ ಮಹಿಮೆಯನ್ನು ಪ್ರತಿಬಿಂಬಿಸುವಂಥದ್ದು ಅನ್ನೋದು ಇಲ್ಲಿ ತಿಳಿಯಬೇಕಾದ ತಥ್ಯ.
ವರ್ಷ, ಮಾಸ, ಪಕ್ಷ ಆಯಿತು. ಇನ್ನು ತಿಥಿ =ತೃತೀಯಾ.
ಇದರ ಬಗ್ಗೆನೂ ಹೇಳಿದ್ದಾರೆ -
ಲೋಕೇಷು ಪ್ರಥಮಗುಣ: ಸ ವಿಷ್ಣುರೇವ
ಲಕ್ಷ್ಮೀರಕ್ಷರಸುಪದಾ ಭವೇತ್ ದ್ವಿತೀಯಾ
ಲೋಕೇsಸ್ಮಿನ್ ಕ್ಷರಮಖಿಲಂ ಭವೇತ್ ತೃತೀಯಂ
ಇತ್ಯೇವಂ ಹಿ ಅಧಿಗಮಯನ್ ಸ್ವಶಿಷ್ಯವರ್ಗಂ..... ಅಂತ.
ಒಂದರ್ಥದಲ್ಲಿ ಗೀತಾದಲ್ಲಿ ಹೇಳಿದ ಸಂದೇಶವನ್ನು ಇಲ್ಲಿ ಸ್ಮರಿಸಿದ್ದಾರೆ. ಲೋಕದಲ್ಲಿ ಪ್ರಥಮ ಅಂದ್ರೆ ಅವನು ವಿಷ್ಣು, ಏಕಮೇವ ಅದ್ವಿತೀಯ, ಸರ್ವೋತ್ತಮ, ಎಲ್ಲರಿಗಿಂತ ಭಿನ್ನ ಮತ್ತು ಉತ್ತಮ.
ಎರಡನೇದ್ದಾಗಿ ಅಕ್ಷರ ಪುರುಷಳಾದ ಲಕ್ಷ್ಮೀ ದೇವಿಯರು.
ಮೂರನೇದ್ದು ಬ್ರಹ್ಮ ದೇವರನ್ನು ಮೊದಲು ಮಾಡಿ ಕ್ಷರ= ನಾಶವುಳ್ಳದ್ದಾದ ಸಮಸ್ತ ಪ್ರಪಂಚ.
ಹಿಂಗೆ ಶ್ರೀಕೃಷ್ಣ ಪರಮಾತ್ಮ ಹೇಳಿದ ತತ್ವ, ತಾರತಮ್ಯವನ್ನು ಸಾರಿದವರು, ಮೊದಲು, ನಾರಾಯಣ, ಆಮೇಲೆ ಲಕ್ಷ್ಮೀ, ಒಟ್ಟಾರೆ ಉಳಿದಿದ್ದೆಲ್ಲ ತೃತೀಯ -ಮೂರನೇದ್ದು ಅನ್ನೋ ತತ್ವವನ್ನು ಶಿಷ್ಯರಿಗೆ ಉಪದೇಶ ಮಾಡಿದವರು, ಭೇದ ಸಿದ್ಧಾಂತವನ್ನು ಸ್ಥಾಪಿಸಿದವರು ಆದ್ದರಿಂದ ತೃತೀಯಾ ತಿಥಿಯಲ್ಲಿ ಬೃಂದಾವನಸ್ಥರಾದರು ಅಂತ ನಾವು ತಿಳಿಯಬೇಕು ಅಂತ ಸೂಚನೆ.
ಈ ರೀತಿಯಾಗಿ ಬಹಳ ಸ್ವಾರಸ್ಯಕರ ರೀತಿಯಲ್ಲಿ ಸತ್ಯಪ್ರಮೋದವಿಜಯದಲ್ಲಿ ಶ್ರೀ ಸತ್ಯಪ್ರಮೋದ ತೀರ್ಥರು ಬೃಂದಾವನಸ್ಥರಾದ ಸಂವತ್ಸರ, ಮಾಸ, ಪಕ್ಷ ಹಾಗೂ ತಿಥಿ, ಇವುಗಳ ಆಧಾರದ ಮೇಲೆ ಆ ಮಹಾಗುರುಗಳ ಚರಿತ್ರೆ -ವ್ಯಕ್ತಿತ್ವವನ್ನು ಬಿಂಬಿಸುವ, ಅದನ್ನು reflect ಮಾಡುವ ಕೆಲಸವನ್ನು ಶ್ರೀ ಕಟ್ಟಿ ಕೇಶವಾಚಾರ್ಯರು ಮಾಡಿದ್ದಾರೆ.
ಇನ್ನು ಅವರು ಬೃಂದಾವನಸ್ಥರಾದ ಕ್ಷೇತ್ರ= ಶ್ರೀ ರಘೋತ್ತಮ ತೀರ್ಥರ ಸನ್ನಿಧಿ = ತಿರುಕೋಯಿಲೂರು.
ಅದರ ಆಯ್ಕೆಯಿಂದ ಬಿಂಬಿತವಾಗುವ ಅವರ ವ್ಯಕ್ತಿತ್ವದ ಬಗ್ಗೆಯೂ ಮುಂದೆ ಹೇಳಿದ್ದಾರೆ. ಅದನ್ನು ನಾಳೆ ನೋಡೋಣ.
ಇಂಥಾ ಮಹಾಚೇತನರಾದ ಶ್ರೀ ಸತ್ಯಪ್ರಮೋದ ತೀರ್ಥರ ಅನುಗ್ರಹ ನಮ್ಮೆಲ್ಲರ ಮೇಲೆ ಸದಾ ಇರ್ಲಿ ಅಂತ ಪ್ರಾರ್ಥಿಸುತ್ತಾ,
ಶ್ರೀ ಸತ್ಯಪ್ರಮೋದ ತೀರ್ಥ ಗುರುಭ್ಯೋ ನಮಃ.
ಶ್ರೀ ಯತಿಗಳ ಅನುಗ್ರಹ ಸದಾ ನಮ್ಮ ಸಮೂಹದ ಎಲ್ಲ ಸದಸ್ಯರ ಮೇಲಿರಲೆಂದು ಪ್ರಾರ್ಥನೆ ಮಾಡುತ್ತಾ..
-Smt. Padma Sirish
ನಾದನೀರಾಜನದಿಂ ದಾಸಸುರಭಿ 🙏🏽
**
No comments:
Post a Comment