info from sumadhwaseva.com--->
Sri Satyabhinava Tirtharu
Ashrama Period – 1673 – 1706
satyanaathaabdhisambhUta: sadgOgaNavijRumbhita: | satyaabhinavatIrthEndu santaapaan hantu santatam | ಸತ್ಯನಾಥಾಬ್ಧಿಸಂಭೂತ: ಸದ್ಗೋಗಣವಿಜೃಂಭಿತ: | ಸತ್ಯಾಭಿನವತೀರ್ಥೇಂದು ಸಂತಾಪಾನ್ ಹಂತು ಸಂತತಂ | सत्यनाथाब्धिसंभूत: सद्गोगणविजृंभित: । सत्याभिनवतीर्थेंदु संतापान् हंतु संततं ।Poorvasharama Name: Narasimhacharya
Ashrama Gurugalu : Sri Satyanatha Teertharu
Ashrama Shishyaru – Shri Satyapoorna Teertha
Ashrama given to – Sri Satyadheesha Tirtharu & Sri Satyadhiraja Tirtharu
Pithadhipatitva: 32 Years , 6 Months, 4 Days
Aradhane: Jyeshtha Shuddha Chaturdashi
Vrundavana : Nacharagudi or Nacharkoil (TN)
Entered Vrundavana in Adhika Jyesta Shudda Chaturdashi
17) Showing of samasthana deities to the devotees after performance of pooja.
His Holiness used to give the Teertha, prasada and Shrigandha (Sandal paste) to the disciples. In the afternoon hours, His Holiness used to spend his time with discourses on vedanta and shastra vicharana. Apart from this, numerous rituals were conducted in the Math to attract the devotees in large numbers. These rituals may be divided into five categories i.e., Nityotsava, Vaarotsava, Pakshotsava, Maasotsava, SamvatsarOtsava
He appointed 64 sevaks for offering the ritual and worship to the samasthan idols in the Math.
His Holiness has made seventeen categories of specified ritual to be offered daily for the worship of the samsthana deity which are as follows:
1) Aamantrana utsava
2) Gurupada archana
3) Panchanga Shravana
4) Timely Bath
5) Japa and anusthana
6) Vyakhyana
7) Nirmalya visarjana
8) Navarathna Abhishekha offered to Shri Vedavyasa murthy (Holy bath with Navarathnas)
9) Ksheerabhishekha to Shri Kurma saligrama (sacred bath with milk).
10) Chanting of pancha suktha at the time of pooja of samasthana deities.
11) Saptama tarpana (after sacred bath flowers, garlands, clothes fragrance and perfumes are offered to the diety etc).
12) Chikka Alankara and Mahanaivedyam
13) Using of curtains at the time of offering Naivedya.
14) Offering sugar naivedya in the golden plate
15) Offering water and tamboola
16) Kanakabhishekha to Shri Vedavyasa murthy
17) Showing of samasthana deities to the devotees after performance of pooja.
His Holiness used to give the Teertha, prasada and Shrigandha (Sandal paste) to the disciples. In the afternoon hours, His Holiness used to spend his time with discourses on vedanta and shastra vicharana. Apart from this, numerous rituals were conducted in the Math to attract the devotees in large numbers. These rituals may be divided into five categories i.e., Nityotsava, Vaarotsava, Pakshotsava, Maasotsava, SamvatsarOtsava
As a part of the administration His Holiness used to oversee the day to day accounts i.e. income and expenditure in the night everyday. Further he used to supervise the daily routine in the Math. This pratice is being carried by the pontiffs of the Uttaradhi Math till this day.
He ordained sanyasa to Shri Satyadheesha Teertha. His Brindavan is in Rajahmahendry on the banks of river Godavari. He also ordained sanyasa to Vidyadheeshacharya who was named Shri Satyadhiraja Teertha after giving Sanyasa.
Selection of Uttaradikari – In course of time Shri Satyabhinava Teertha ordained Shri Satyapoorna Teertha to the pontificate throne of Uttaradi Math and entered the Brindavana in Nancharagudi on the banks of river cauvery.
Shri Satyabhinava Thirtharu composed two granthas :
1) Mahabharata Tatparya Nirnaya Vyakhyana
2) Ramamruta Maharnava
Contact details :
Sri Gopal Rao Shri Satyabhinava Brindavana, Post – Nacharkoil, Vai – Kumbhakonam, District: Tanjavoor, T N: 612 602.
Phone: 0435 – 2466380
(Source – Uttaradimut)
Route to Nachargudi :
Nachargudi (Nacharakoil) comes under Thanjavur District. It is 10 K.M away from Kumbhakonam. There is sufficient bus facility to Nachargudi from Kumbhakonam.
read more
******
info from madhwamrutha.org--->
info from FB madhwanet--->
Sri Satyabhinava Theertha was famous for his works on commentary on Mahabharata Tatparya Nirnaya and Bhagavatha Tatparya Nirnaya. He was also a great administrator in addition to the saintliness and scholarship. During his time Uttaradhi mutt has acquired many lands and other properties. During his time the mutt got possessed Elephants, horses, camels and other workers (Karmacharis). He appointed 64 workers in the mutt to take care of various works. Sri Satyadhiraja Theertha and Sri Satyadheesha Theertha took Ashrama from him and worked for the upliftment of the mutt. He acquired many sishyas during his tour. He built many agraharas for the Brahmins; he also built buildings for the mutt at various places. Sri Prasanna Venkata dasa wrote 4 songs praising him. He wrote following Grantha’s.
Commentary on Mahabharata Tatparya Nirnaya
Commentary on Bhagavatha Tatparya Nirnaya
Ramamrutha Maharnava
Sri Satyabhinava Theertha gave Ashrama to Krishnacharya, named him as Sri Satyapoorna Theertha and handed over the Peeta. He entered Vrundavana in Nacharkoil in Tamilnadu.
*********info from FB madhwanet--->
shri satyAbhinava tIrtharU
ArAdhanE: jEshTa shukla chaturdashI
Period: 1673 – 1706
Lineage: 20th from shrimadAchAryaru in uttarAdhi maTa
pUrvAshrama Name: Narasimhacharya
Ashrama gurugalu : shri satyanAtha tIrtharU
Ashrama shishyaru: shri satyapUrNa tIrtharU
Ashrama also given to: shri satyAdhIsha tIrtharU & shri satyAdhirAja tIrtharU
brindAvana: nAchiArkovil, near Kumbakonam (TN)
He appointed 64 sevaks for offering the ritual and worship to the samasthan idols in the math.
He made 17 categories of specified ritual to be offered daily for the worship of the samsthana deity.
Shri satyAbhinava tIrtharU composed 3 granthas :
1) Mahabharata Tatparya Nirnaya Vyakhyana
2) Ramamruta Maharnava
3) Guru Mahima Stuthi
satyanAthAbdhisambhUta: sadgOgaNavijRumbhita
satyAbhinavatIrthEndu santApAn hantu santatam
shri satyAbhinava tIrtha guruvAntargata, maharudradEva guruvAntargata bhArathiramaNa mukhyaprANantargata, sItA patE shri digvijaya rAma dEvara pAdAravindakke gOvindA gOvindA...
shri krishNArpaNamastu....
********
info from uttaradimutt.org---> Shri Satyabhinava Teertharu was the pontiff of the Shri Uttaradi Matha and was formerly known as Shri Narasimhacharya. Soon after being initiated to pontificate thorne of Uttaradi Math, Shri Satyabhinava Teertha made arrangement to regularize certain offerings to the daily worship of Shri Moola Rama, Shri Moola Sita, Shri Vedavyasa and other sacred deities of the Math. He appointed 64 sevaks for offering the ritual and worship to the samasthan idols in the Math. His Holiness has made seventeen categories of specified ritual to be offered daily for the worship of the samsthana deity which are as follows:
1) Aamantranotsavam
2) Gurupadarchana
3) Panchanga Shravana
4) Timely Bath
5) Japa and anusthana
6) Vyakhyana
7) Nirmalya visarjana
8) Navarathna bhishekha offered to Shri Vedavyasa murthy (Holy bath with Navarathnas)
9) Ksheerabhishekha to Shri Kurmas saligrama (sacred bath with milk).
10) Chanting of pancha suktha at the time of pooja of samasthana deities.
11) Saptamatarpana(after sacred bath flowers, garlands, clothes fragrance and perfumes are offered to the diety etc).
12) Chikka Alankara and Mahanaivedyam
13) Using of curtains at the time of offering Naivedyam.
14) Offering sugar naivedya in the golden plate
15) Offering water and tamboola
16) Kanakabhishekha to Shri Vedavyasa murthy
17) Showing of samasthana deities to the devotees after performance of pooja.
His Holiness used to give the Teertha, prasad and Shri Gandha (Sandal paste) to the disciples. In the afternoon hours, His Holiness used to spend his time with discourses on vedanta and shastra vicharana. Apart from this, numerous rituals were conducted in the Math to attract the devotees in large numbers.
These rituals may be divided into five categories i.e.,
1) Nityotsava (Daily)
2) Varotsava(Weekly)
3) Pakshotsava(Fortnightly)
4) Masotsava (Monthly)
5) Samvatsarotsava(Annualy)
As a part of the administration His Holiness used to oversee the day to day accounts i.e. income and expenditure in the night everyday. Further he used to supervise the daily routine in the Math. This pratice is being carried by the pontiffs of the Uttaradhi Math till this day.
Shri Satyabhinava Teertha composed two treatises. Mahabharata Tatparya Nirnaya Vyakhyana" and "Guru Mahima Stuthi" etc. He ordained sanyasa to Shri Satyadheesha Teertha. His Brindavan is in Rajamahendry on the banks of river Godavari. He also ordained sanyasa to Vidyadheeshacharya who was named Shri Satyadhiraja Teertha after coronation as saint. Shri Satyadhiraja Teertha toured all over India for propagation of vedantha. In course of time Shri Satyabhinava Teertha ordained Shri Satyapoorna Teertha to the pontificate throne of Uttaradi Math and entered the Brindavana in Nancharagudi on the banks of river cauvery.
|| Shri Krishnarapanamastu ||
WorksShri Satyabhinava Teertharu composed two treatises: 1) Mahabharata Tatparya Nirnaya Vyakhyana 2) Guru Mahima Stuthi Works on Satyabhinava Teertha: Shri Satyanatha Mahatmya Ratnakara, a mahakavya which narrates the life of Shri Satyabhinava Teertha and his unparalleled gurubhakti.
Contact DetailsSri Gopal Rao Shri Satyabhinava Brindavana, Post – Nacharkoil, Vai - Kumbhakonam, District: Tanjavoor, Phone no: 7795379732*********
*********
Moola brindavanas situated in Tamilnadu
- Uttaradhi Mutt – 6
- Raghavendra Mutt – 7
- Vyasaraja Mutt – 9
- Sripadaraja Mutt – 15
- Other Brindavanas/Bidi sanyasigalu – 8
Uttaradhi Mutt
Sri Sathya Abhinava Theertharu(Nachiar Kovil)
Aradhane: Jyeshtha Shuddha Chaturdashi
Gurugalu: Sri Sathya Natha Theertharu
Sishyaru: Sri Sathya Poorna Theertharu, Sri Sathyadheesa Theertharu and Sri Sathyadhiraja theertharu
His brindavana is located at Nachiargudi(a small town) near Kumbakonam, Tamilnadu
Nachiargudi (Nacharakoil) comes under Thanjavur District. It is 10 K.M away from Kumbhakonam. There is sufficient bus facility to Nachargudi from Kumbhakonam.
Bus facilities are Available from Kumbakonam to Nachiar Kovil.
Contact Information:
Sri Gopal Rao
Shri Satyabhinava Brindavana,
Post – Nacharkoil, Vai – Kumbhakonam,
District: Tanjavoor,
Tamil Nadu: 612 602.
Phone: 0435 2466380
above info is from
https://madhwafestivals.wordpress.com/2016/12/09
*********
ಗುರುಭಕ್ತಿಗೆ ಮತ್ತೊಂದು ಹೆಸರು ಎಂದರೆ ಶ್ರೀ ಸತ್ಯಾಭಿನವ ತೀರ್ಥರು ಎಂದು ಹೇಳಬಹುದು, "ಶ್ರೀ ಸತ್ಯನಾಥ ತೀರ್ಥ ಗುರುಭ್ಯೋ ನಮಃ" ಎಂಬ ಒಂದು ಮಂತ್ರದಿಂದ ತಮಗೆ ಬಂದಿದ್ದ ಎಷ್ಟೋ ಆಪತ್ತುಗಳನ್ನು ಪರಿಹರಿಸಿಕೊಂಡ ಮಹಾನುಭಾವರು ಶ್ರೀ ಸತ್ಯಾಭಿನವ ತೀರ್ಥರು. ಶ್ರೀ ಸತ್ಯಾಭಿನವ ತೀರ್ಥರು ಪಂಚಾಭಿನವಕಾರರು ಎಂದು ಹೆಸರು. " ಗುರುಪ್ರಸಾದೋ ಬಲವಾನ್" ಎಂಬಂತೆ ಗುರುಗಳ ಅನುಗ್ರಹ ಪಡೆಯದೇ ಹರಿಯ ಅನುಗ್ರಹವು ಆಗುವುದಿಲ್ಲ. ಉತ್ತರಾದಿ ಮಠದ ಯತಿಪರಂಪರೆಯಲ್ಲಿ ಬರುವ ಮಹಾಯೋಗಿಗಳು ಶ್ರೀ ಸತ್ಯಾಭಿನವ ತೀರ್ಥರು.
*||ಸತ್ಯನಾಥಾಬ್ಧಿಸಂಭೂತ: ಸದ್ಗೋಗಣವಿಜೃಂಭಿತ: |
ಸತ್ಯಾಭಿನವತೀರ್ಥೇಂದು ಸಂತಾಪಾನ್ ಹಂತು ಸಂತತಂ ||*
ಪೂರ್ವಾಶ್ರಮ ನಾಮ : ಶ್ರೀ ನರಸಿಂಹಚಾರ್ಯ, ಕೇಶವಾಚಾರ್ಯರು ಎಂದು ಹೆಸರಿದೆ
ಆಶ್ರಮ ಗುರುಗಳು : ಶ್ರೀ ಸತ್ಯನಾಥ ತೀರ್ಥರು
ಆಶ್ರಮ ಶಿಷ್ಯರು : ಶ್ರೀ ಸತ್ಯಪೂರ್ಣ ತೀರ್ಥರು
ಇತರ ಸನ್ಯಾಸ ಶಿಷ್ಯರು: ಶ್ರೀ ಸತ್ಯಾದೀಶ ತೀರ್ಥರು ಮತ್ತು ಶ್ರೀ ಸತ್ಯಾಧಿರಾಜ ತೀರ್ಥರು
ವೇದಾಂತ ಸಾಮ್ರಾಜ್ಯ ಕಾಲ : 1673 ರಿಂದ 1706 32 ವರ್ಷ 6 ತಿಂಗಳು ಮತ್ತು 4 ದಿನಗಳು
ವೃಂದಾವನ ಸ್ಥಳ : ನಾಚಿಯಾರ್ ಕೋಯಿಲ್ ತಮಿಳುನಾಡು ಕುಂಭಕೋಣಂ ಹತ್ತಿರ
ಆರಾಧನಾ ದಿನ : ಜೇಷ್ಠ ಶುದ್ಧ ಚತುರ್ದಶಿ
ಇವರ ಜೀವನದ ಚರಿತ್ರೆಯ ಮುಖ್ಯವಾದ ವಿಷಯವನ್ನು ಹೇಳಬೇಕಾದರೆ ಹಲವಾರು ಪುಟಗಳು ಆಗಬಹುದು. ಕಾರಣ ಉತ್ತರಾದಿ ಮಠದ ವೈಭವವನ್ನು ಆನೆ ಕುದುರೆಗಳು, 64 ಕೆಲಸಕ್ಕೆ ಪ್ರತಿಯೊಂದು ಕೆಲಸಕ್ಕೂ ಒಂದೊಂದು ಕುಟುಂಬವನ್ನು ನೇಮಕ ಮಾಡಿ ಎಲ್ಲರಿಗು ಶ್ರೀ ಹರಿಯ ಸೇವೆ ಮತ್ತು ಜೀವನ ನಿರ್ವಹಣೆ ಮಾಡಿಸಿದ ಮಹನೀಯರು. ಇವರ ಸಂಚಾರ ಎಷ್ಟಿತ್ತೆಂದರೆ ಒಂದು ರಾಜ್ಯವೇ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವ ಹಾಗೆ ರಾಜ ವೈಭವದ ಹಾಗೆ ಇತ್ತು.
ಇವರ ಪೂರ್ವಾಶ್ರಮದ ಹೆಸರು ಶ್ರೀ ನರಸಿಂಹಚಾರ್ಯರು, ಇವರು ಸಚಾಸ್ತ್ರ ದಿಂದ ಇದ್ದ ಶೋತ್ರಿಯ ಬ್ರಾಹ್ಮಣರು ಆಗಿದ್ದರು. ಯಾವುದೇ ರೀತಿಯ ಹೆಚ್ಚಿನ ವಿದ್ಯಾಭ್ಯಾಸ ಇರಲಿಲ್ಲ ಆದರೂ ಶ್ರೀ ಮಠದಲ್ಲಿ ಅಡುಗೆ ಕೆಲಸಮಾಡುತ್ತಿದ್ದರು. ಮೊದಲಿನಿಂದಲೂ ಸಾತ್ವಿಕತೆ ಇವರಲ್ಲಿ ಹೆಚ್ಚಾಗಿ ಇತ್ತು. ಯಾರೇ ಏನು ಹೇಳಿದರು ಎಲ್ಲ ಗುರುಸೇವೆ ಎಂದೇ ಮಾಡುತ್ತಿದ್ದರು. ಶ್ರೀ ಸತ್ಯನಾಥ ತೀರ್ಥರು ತಮ್ಮ ಉತ್ತರಾಧಿಕಾರಿ ಆಯ್ಕೆಗೆ ಯೋಚಿಸುತ್ತಿದ್ದರು. ಆ ಕಾಲದಲ್ಲಿ ಪ್ರಕಾಂಡ ಪಂಡಿತರ ಗುಂಪೇ ಇತ್ತು, ಕೆಲವರು ಶ್ರೀ ಸತ್ಯನಾಥ ತೀರ್ಥರಲ್ಲಿ ನಿಮ್ಮ ಪ್ರಖಾಂಡ ಪಾಂಡಿತ್ಯಕ್ಕೆ ಸರಿ ಹೊಂದುವ ಮುಂದಿನ ನಿಮ್ಮ ಉತ್ತರಾಧಿಕಾರಿ ಯತಿಯಾಗುವುದು ನಮ್ಮ೦ತ ಪಂಡಿತರಿಂದ ಮಾತ್ರ ಸಾಧ್ಯ ಎಂದು ಹೇಳಿದ್ದರಂತೆ. ಆಗಲೇ ಶ್ರೀ ಸತ್ಯನಾಥ ತೀರ್ಥರ ದೃಷ್ಟಿ ಶ್ರೀ ನರಸಿಂಹಚಾರ್ಯರ ಮೇಲೆ ಬಿತ್ತು. ತಕ್ಷಣ ಅವರಿಗೆ ಆಶ್ರಮ ಕೊಡುವ ನಿರ್ಧಾರ ಪ್ರಕಟ ಆಯಿತು. ಹಂಸನಾಮಕ ಉತ್ತರ ರೂಪಿ ಪರಮಾತ್ಮನ ಅವಿಚ್ಚಿನ್ನ ಪರಂಪರೆಯ ಜಗದ್ಗುರು ಮದ್ವಾಚಾರ್ಯರ ಪದ್ಮನಾಭಾದಿ ಜಯತೀರ್ಥಾದಿ ಗುರುಗಳ ಶ್ರೀ ವಿದ್ಯಾಧೀಶ ತೀರ್ಥರ ಪರಂಪರೆಯನ್ನು ಬೆಳಗುವ ನಾಯಕರು ಏನು ಇಲ್ಲದ ಎಂದು ಪೀಠಕ್ಕಾಗಿಯೇ ಜೀವನ ಮಾಡುವ ಇವರೇ ನಮ್ಮ ಮುಂದಿನ ಉತ್ತರಾಧಿಕಾರಿಗಳು ಎಂದು ಘೋಷಿಸಿದರು. ಆದರೆ ನರಸಿಂಹಚಾರ್ಯರು ತಮ್ಮೊಳಗೆ ತಾವು ಈ ಪೀಠಕ್ಕೆ ಸಮರ್ಥರಲ್ಲ ನಾವು ಅಲ್ಪ ಜ್ನ್ಯಾನಿಗಳು ಎಂದು ಶ್ರೀ ಸತ್ಯನಾಥ ತೀರ್ಥರಲ್ಲಿ ಪ್ರಾರ್ಥಿಸಿದಾಗ ನೀವೇ ಸಮರ್ಥರು ನಮ್ಮ ಸಂಪೂರ್ಣ ವಿದ್ಯೇ ಯನ್ನು ಧಾರೆಯೆರೆಯುತ್ತಿದೇವೆ ಎಂದು ಹೇಳಿ ತಮ್ಮ ಕೈಯನ್ನು ನರಸಿಂಹ ಚಾರ್ಯರ ಮೇಲೆ ಇತ್ತು ಆಶೀರ್ವದಿಸಿದರು. ಯಾರು ಏನನ್ನು ತಿಳಿಯದ ವ್ಯಕ್ತಿಗೆ ಪೀಠ ಕೊಟ್ಟು ಅವರಿಂದ ಈ ಸಂಸ್ಥಾನಕ್ಕೆ ಉತ್ತಮ ಹೆಸರು ಬರುವಂತೆ ಮಾಡುವೆ ಎಂದು ನಿರ್ಧರಿಸಿದೆ ಅದರಂತೆ ಶ್ರೀ ಸತ್ಯಾಭಿನವರು ಈ ಸಂಸ್ಥಾನಕ್ಕೆ ಅವರು ಕೊಟ್ಟ ಕೊಡುಗೆಗಳು ಅಪಾರ. ಅದ್ಭುತ ಪಾಂಡಿತ್ಯ ಮತ್ತು ಅವರು ಮಹಾಭಾರತದಲ್ಲಿ ಬರುವ ಸಂದೇಹಗಳಿಗೆ ಕೊಟ್ಟಂತ ಅವರ ಉತ್ತರಗಳು ಎಂತಹ ಜ್ನ್ಯಾನಿಗಳಿಗೂ ಒಂದು ಕ್ಷಣ ಯೋಚಿಸಿ ಅದನ್ನು ಓದಿ ಅರ್ಥಮಾಡಿಕೊಂಡು ತಮ್ಮಲ್ಲಿರುವ ಸಂದೇಹಗಳನ್ನು ನಿವಾರಣೆ ಮಾಡಿಕೊಳ್ಳುವಂತಹ ಕೈಪಿಡಿ ಆಗಿದೆ.
ನಂತರ ನರಸಿಂಹ ತೀರ್ಥರಿಗೆ ಆಶ್ರಮಕೊಟ್ಟು ವೇದಾಂತ ಸಾಮ್ರಾಜ್ಯದಲ್ಲಿ ಶ್ರೀ ಸತ್ಯಾಭಿನವ ತೀರ್ಥ ಎಂದು ನಾಮಕರಣ ಮಾಡಿ ಪೀಠ ಕೊಟ್ಟರು. ಸ್ವಲ್ಪ ವಿರೋಧದ ನಡುವೆಯೇ ಪೀಠಾರೋಹಣವಾಯಿತು. ಸತ್ಯನಾಥ ತೀರ್ಥರು ಇರುವಾಗಲೇ ಅವರಿಗೆ ಒಂದು ಚಿಕ್ಕ ಪಟ್ಟವನ್ನು ಕೊಟ್ಟು ವಂಶ ರಾಮದೇವರು ಮತ್ತು ಒಂದು ವ್ಯಾಸಮುಷ್ಠಿಯನ್ನು ಕೊಟ್ಟು ಪೂರ್ವ ದಿಗ್ವಿಜಯಕ್ಕೆ ಹೊರಡಲು ಅಪ್ಪಣೆ ಕೊಡುತ್ತಾರೆ. ಹಾಗೆ ಸತ್ಯನಾಥ ತೀರ್ಥರ ಆಶೀರ್ವಾದ ಮತ್ತು ಅವರ ನೀಡಿದ ವಿದ್ಯೆಯ ಮಾರ್ಗದರ್ಶನ ದಿಂದ ಪೂರ್ವದೇಶದ ಪಂಡಿತ ಮಂಡಳಿಗಳನ್ನು ಜಯಿಸಿ ಜಯಪತ್ರಿಕೆಗಳನ್ನು ತೆಗೆದುಕೊಂಡು ಬಂದು ಶ್ರೀ ಸತ್ಯನಾಥ ತೀರ್ಥರ ಪಾದಗಳಿಗೆ ಸಮರ್ಪಿಸಿದರು. ತಾವು ತಂದ ಜಯಪತ್ರಿಕೆಗಳಲ್ಲಿ ಈ ಎಲ್ಲ ಜಯಗಳು ಶ್ರೀ ಸತ್ಯನಾಥ ತೀರ್ಥರಿಗೆ ಸಲ್ಲಬೇಕು ಎಂದು ಬರೆಯಿಸಿ ಜಯಪತ್ರಿಕೆಗಳನ್ನು ತಂದವರು ಶ್ರೀ ಸತ್ಯಾಭಿನವ ತೀರ್ಥರು.
ವೇಣು ಸಾಗರದಲ್ಲಿ ಭಗವಂತ ವೃದ್ಧ ಬ್ರಾಹ್ಮಣನ ವೇಷದಲ್ಲಿ ದರ್ಶನ ಕೊಟ್ಟಿದ್ದು
ಒಮ್ಮೆ ಪೂರ್ವದೇಶ ದಿಗ್ವಿಜಯದಲ್ಲಿ ಗಂಗಾ ಸಾಗರ ಸಂಗಮ ದರ್ಶನಕ್ಕೆ ಹೋಗುತ್ತಾರೆ, ಅಲ್ಲಿ ಗಂಗಾಸಾಗರ, ವೇಣು ಸಾಗರ, ವಸಿಷ್ಠ ಸಾಗರ ಹೀಗೆ ಅನೇಕ ಕ್ಷೇತ್ರಗಳು ಇವೆ. ಅವುಗಳಲ್ಲಿ ವೇಣು ಸಾಗರಕ್ಕೆ ಹೋದಾಗ ಅಲ್ಲಿ ಸ್ನಾನ ಸಂಕಲ್ಪ ಮಾಡಿಸುವುದಕ್ಕೆ ಯಾವುದೇ ಕ್ಷೇತ್ರ ಬ್ರಾಹ್ಮಣ ಸಿಗುವುದೇ ಇಲ್ಲ. ಶಾಸ್ತ್ರಗಳ ಪ್ರಕಾರ ನಾವು ಯಾವುದೇ ತೀರ್ಥ ಕ್ಷೇತ್ರಕ್ಕೆ ಹೋದಾಗ ಅಲ್ಲಿ ಸ್ನಾನ ಮಾಡುವ ಮುನ್ನ ಕ್ಷೇತ್ರ ಬ್ರಾಹ್ಮಣರ ಕೈಯಿಂದ ಸಂಕಲ್ಪ ಮಾಡಿಸಿಕೊಂಡೆ ಸ್ನಾನ ಮಾಡಬೇಕು ಎಂದು ನಿಯಮವಿದೆ. ಆದರೆ ಇವರಿಗೆ ಒಬ್ಬ ಬ್ರಾಹ್ಮಣರು ಸಿಗಲಿಲ್ಲ. ತಮ್ಮ ಗುರುಗಳ ಸ್ಮರಣೆ "ಶ್ರೀ ಸತ್ಯನಾಥ ತೀರ್ಥ ಗುರುಭ್ಯೋ ನಮಃ" ಎಂದು ಪ್ರಾರ್ಥನೆ ಮಾಡಲು, ಒಬ್ಬ ತೇಜಸ್ವಿಯಾದ ವೃದ್ಧ ಬ್ರಾಹ್ಮಣ ಇವರ ಮುಂದೆ ಬಂದು ಮುಂದೆ ಸಾಗರ ಸಂಗಮವಿದೇ ಎಂದು ಹೇಳಿ ಸಂಕಲ್ಪ ಮಾಡಿಸುತ್ತಾರೆ. ಸ್ನಾನವಾದ ನಂತರ ಬ್ರಾಹ್ಮಣನಿಗೆ ದಕ್ಷಿಣೆ ಕೊಡಬೇಕೆಂದು ನೋಡಲು ಆ ಬ್ರಾಹ್ಮಣ ಅದೃಶ್ಯ ನಾಗಿದ್ದ, ಜ್ನ್ಯಾನ ದೃಷ್ಟಿಯಿಂದ ಅವನು ಸಾಕ್ಷಾತ್ ಭಗವಂತ ಎಂದೇ ತಿಳಿಯಿತು. ಹೀಗೆ ಮೊದಲೇ ಸಾಕ್ಷಾತ್ ಭಗವಂತ ಬ್ರಾಹ್ಮಣ ರೂಪದಲ್ಲಿ ಬಂದು ಇವರಿಗೆ ಸಂಕಲ್ಪ ಮಾಡಿಸಿ ಅದೃಶ್ಯ ನಾದ ಎಂದು ಶ್ರೀಸತ್ಯಾಭಿನವ ತೀರ್ಥರ ಕುರಿತಾದ ನಾಲ್ಕು ಗ್ರಂಥಗಳಲ್ಲಿ ಈ ಕಥೆ ಇದೆ.
ವಸಿಷ್ಠ ಸಾಗರದಲ್ಲಿ ಸಿಹಿನೀರಿನ ಬಾವಿ ತೋರಿಸಿದ್ದು ಮತ್ತು ಹೊಸ ಬಾವಿಗಳ ನಿರ್ಮಾಣ
ಅಲ್ಲಿಂದ ಮುಂದೆ ವಸಿಷ್ಠ ಸಾಗರಕ್ಕೆ ಬರುತ್ತಾರೆ, ಮೊದಲೇ ಸಾಗರವಾದರಿಂದ ಅಲ್ಲಿ ಎಲ್ಲ ಬಾವಿಗಳಲ್ಲೂ ಉಪ್ಪು ನೀರು ಇತ್ತು. ಪೂಜೆ ಆಗಬೇಕು ಮುಂದೆ ಬ್ರಾಹ್ಮಣರ ಭೋಜನವಾಗಬೇಕು ಎಲ್ಲೂ ಸಿಹಿನೀರನ ಬಾವಿಯಿಲ್ಲ. ಆದರೆ ಈ ಹಿಂದೆ ಶ್ರೀ ವಿದ್ಯಾಧೀಶ ತೀರ್ಥರು ಈ ವಸಿಷ್ಠ ಸಾಗರಕ್ಕೆ ಬಂದಾಗ ಅವರು ತಪಃ ಶಕ್ತಿಯಿಂದ ಒಂದು ಸಿಹಿನೀರಿನ ಬಾವಿ ನಿರ್ಮಾಣ ಮಾಡಿದ್ದರು. ಅದು ಕಾಲಾನಂತರದಲ್ಲಿ ನೀರು ಉಪ್ಪಾಗಿತ್ತು. ಅದೇ ಸ್ಥಳದಲ್ಲಿ ಅದೇ ವಿದ್ಯಾಧೀಶರ ಸ್ಮರಣೆ ಮಾಡಿ ತಮ್ಮ ತಪಃ ಸಾಮರ್ಥ್ಯದಿಂದ ಪುನಃ ಬಾವಿಯ ನೀರನ್ನು ಸಿಹಿಗೊಳಿಸಿ ಮತ್ತು ಅಲ್ಲಿಯ ಸ್ಥಳೀಯ ಜನರ ಕೋರಿಕೆ ಮೇರೆಗೆ ನಾಲ್ಕು ದಿಕ್ಕಿನಲ್ಲಿ ಹೊಸ ನಾಲ್ಕು ಬಾವಿಗಳ ನಿರ್ಮಾಣ ಮಾಡಿದರು. ಈ ಕಥೆ ಶ್ರೀ ಸತ್ಯಬೋಧ ತೀರ್ಥರ ಕಾಲದಲ್ಲಿ ಬರೆದಿದ್ದಾರೆ ಆಗಲು ಆ ವಸಿಷ್ಠ ಸಾಗರದಲ್ಲಿ ನೀರು ಇತ್ತು ಮತ್ತು ಇತ್ತೀಚಿಗೆ ಶ್ರೀ ಸತ್ಯಪ್ರಮೋದ ತೀರ್ಥರ ಕಾಲದಲ್ಲೂ ಆ ಬಾವಿ ಇತ್ತು ಎಂದು ಹೇಳಿದ್ದರು. ಶ್ರೀ ಭೀಮಾಚಾರ್ಯರು ಬರೆದ ಶ್ರೀ ಸತ್ಯಾಭಿನವ ಗುರುಭಕ್ತಿ ವೈಭವ ಎಂಬ ಗ್ರಂಥದಲ್ಲೂ ಈ ಕಥೆ ಇದೆ.
ಸತ್ಯಾಭಿನವ ತೀರ್ಥರು ಮತ್ತು ಮೂರು ಆಶ್ರಮ ಶಿಷ್ಯರು
ಪೂರ್ವದೇಶ ದಿಗ್ವಿಜಯದ ನಂತರ ಜಯಪತ್ರಿಕೆಗಳೊಂದಿಗೆ ಬಂದು ಶ್ರೀ ಸತ್ಯನಾಥ ತೀರ್ಥರ ಚರಣಗಳಿಗೆ ಅರ್ಪಿಸಿದಾಗ ಅವರು ಸಂತಸ ಗೊಂಡು ನಮ್ಮ ಯೋಗ್ಯ ಉತ್ತರಾಧಿಕಾರಿ ನೀವಾದಿರಿ ಎಂದು ಹೇಳಿದರು. ಸ್ವಲ್ಪ ದಿನಗಳಲ್ಲಿ ಶ್ರೀ ಸತ್ಯನಾಥ ತೀರ್ಥರು ವೃಂದಾವನಸ್ತರಾದರು. ವೈಭವದ ಮಹಾಸಮಾರಾಧನೆ ಮಾಡಿದರು. ಮುಂದೆ ಅವರಿಗೆ ಆಶ್ರಮ ಶಿಷ್ಯರ ಹುಡುಕಾಟ ನಡೆಯಿತು. ಆಗ ಶ್ರೀ ವಡ್ಡಿ ಜಗನ್ನಾಥ ಚಾರ್ಯರು ಎಂಬ ಪಂಡಿತರಿಗೆ ಆಶ್ರಮ ಕೊಟ್ಟು ಶ್ರೀ ಸತ್ಯಾದೀಶ ತೀರ್ಥರು ಎಂದು ಆಶ್ರಮ ನಾಮ ಕೊಟ್ಟರು. ಪೂರ್ವಾಶ್ರಮದಲ್ಲೇ ಶ್ರೀ ಸತ್ಯಾದೀಶ ತೀರ್ಥರು ಪ್ರಕಾಂಡ ಪಂಡಿತರು ಆಗಿದ್ದರು. ವಾದಿಗಳ ನಿಗ್ರಹ ವೇದವ್ಯಾಕರಣದಲ್ಲಿ ಮಹಾವಿದ್ವಾ೦ಸರು ಎಲ್ಲ ಶಾಸ್ತ್ರಗಳು ಬಲ್ಲಂತ ಆಗಿನ ಕಾಲದ ಅದ್ವೈತ ಪಂಡಿತರ ಹಿಂಡನ್ನೇ ಸೋಲಿಸಿದ ಮಹಾವೀರರು. ವಿಷ್ಣು ಸರ್ವೋತಮತ್ವ ಮತ್ತು ವಾಯು ಜೀವೋತ್ತಮತ್ವ ವನ್ನು ತೋರಿಸಿ ಪ್ರಾಣ ದೇವರ ಪ್ರತಿಷ್ಠೆ ಮಾಡಿ ವಿಜಯವನ್ನು ಸ್ಥಾಪಿಸಿದವರು. ವಾದಿ ನಿಗ್ರಹ ಮಾಡಿ ಜಯಪತ್ರಿಕೆ ಮತ್ತು ಭಕ್ತರು ಕೊಟ್ಟ ಕಾಣಿಕೆಗಳನ್ನೂ ತಂದು ಶ್ರೀ ಸತ್ಯಾಭಿನವ ತೀರ್ಥರ ಚರಣಗಳಿಗೆ ಅರ್ಪಿಸುತ್ತಾರೆ. ಆಗಿನ ಕಾಲದಲ್ಲಿ 40 ಸಾವಿರ ಬಂಗಾರದ ನಾಯಗಳನು ತಂದು ಗುರುಗಳಿಗೆ ಕೊಡುತ್ತಾರೆ. ಇವರ ಕಾರ್ಯಕ್ಕೆ ಸಂತಸಗೊಂಡ ಶ್ರೀ ಸತ್ಯಾಭಿನವ ತೀರ್ಥರು,ಅವರ ಉದಾರತೆ ದಾನದ ವೈಖರಿ ನೋಡಬೇಕಾದರೆ ಅದೇ ದಿನ ಸಂಜೆ ಸುತ್ತಮುತ್ತಲಿನ ಪಂಡಿತರಿಗೆ ಹಂಚಿ ಮತ್ತು ಉಳಿದದ್ದನ್ನು ತಮ್ಮ ಗುರುಗಳಾದ ಶ್ರೀ ಸತ್ಯನಾಥ ತೀರ್ಥರ ಅಗ್ರಹಾರವನ್ನು ಮಹಿಷಿಯ ಬಳಿ ಕಟ್ಟಿಸುತ್ತಾರೆ. ರಜತ ಪಾತ್ರೆ, ಬಂಗಾರದ ಪಾತ್ರೆ ಎಲ್ಲವನ್ನು ವಿದ್ವಾ೦ಸರುಗಳಿಗೆ ಹಂಚಿ ಮತ್ತು ಅಲ್ಲಿದ್ದ ಬಡವರನ್ನು ಗುರುತಿಸಿ ಎಲ್ಲ ವರ್ಗದವರನ್ನು ಸಂತಸದಿಂದ ಇರುವಂತೆ ನೋಡಿಕೊಳ್ಳುತ್ತಾರೆ. ಹೀಗೆ ಅನೇಕಬಾರಿ ಶ್ರೀ ಸತ್ಯಾದೀಶರು ಸಂಚಾರ ಮಾಡಿ ವಾದಿಗಳ ನಿಗ್ರಹಿಸಿ ಸಂಪತ್ತು ತಂದು ಗುರುಗಳಲ್ಲಿ ಅರ್ಪಿಸುವುದು ಅದನ್ನು ಶ್ರೀ ಸತ್ಯಾಭಿನವರು ತಮ್ಮ ಶಿಷ್ಯರು ಮತ್ತು ವಿದ್ವಾ0ಸರಿಗೆ ಹಂಚುವುದು ಹೀಗೆ ಆಗಿತ್ತು. ಆದರೆ ದುರ್ದೈವ ಶ್ರೀ ಸತ್ಯಾದೀಶ ತೀರ್ಥರು ರಾಜ ಮಹೇಂದ್ರಿಯಲ್ಲಿ ಅನಾರೋಗ್ಯದಿಂದ ಹರಿಪಾದ ಸೇರುತ್ತಾರೆ. ಇವರ ಕಣ್ಣು ಮುಂದೆಯೇ ತಮ್ಮ ಪ್ರಿಯ ಶಿಷ್ಯರು ಹರಿಪಾದವನ್ನು ಸೇರಿದ ವಿಚಾರದಿಂದ ತೀವ್ರ ಮನ ನೋಂದಿಕೊಳ್ಳುತ್ತಾರೆ.
ಮುಂದೆ ಕುಂಭಕೋಣದ ಪ್ರಸಿದ್ಧ ಪಂಡಿತರಾದ ಶ್ರೀವ್ಯಾಸ ಕೇಶವ ಚಾರ್ಯರು ಎಂಬುವರಿಗೆ ಆಶ್ರಮ ಕೊಟ್ಟು ಸತ್ಯಾಧಿರಾಜರು ಎಂದು ನಾಮಕರಣ ಮಾಡುತ್ತಾರೆ. ಉತ್ತರಾಧಿ ಮಠದಲ್ಲಿ ಬಹಳಷ್ಟು ಹಸ್ತ ಲಿಖಿತ ತಾಳೆಗರಿಗಳು ಮತ್ತು ಹಲವಾರು ಗ್ರಂಥಗಳು ಇವೆ. ಅವುಗಳೆಲ್ಲ ಶ್ರೀ ಸತ್ಯಾಧಿರಾಜರು ಮತ್ತು ಅವರ ಪ್ರಶಿಷ್ಯರು ಬರೆದ ಪ್ರತಿಗಳು ಇವೆ. ಅಂತಹ ಶ್ರೀ ಸತ್ಯಾಧಿರಾಜ ತೀರ್ಥರು ದೇಶ ಸಂಚಾರಮಾಡಿ ಸಂಪತ್ತನ್ನು ತರುತ್ತಾರೆ. ಶ್ರೀ ಸತ್ಯಾಧಿರಾಜ ತೀರ್ಥರು ತಮ್ಮ ಗುರುಗಳಾದ ಶ್ರೀ ಸತ್ಯಾಭಿನವ ತೀರ್ಥರಿಗೆ ನಿಜವಾದ ಸುವರ್ಣಗಳಿಂದ ಮಾಡಿದ ಪುಷ್ಪಗಳಿಂದಲೇ ಮೂಲರಾಮನಿಗೆ ಅರ್ಪಿಸಿ ತಮ್ಮ ಗುರುಗಳಾದ ಶ್ರೀ ಸತ್ಯಾಭಿನವ ತೀರ್ಥರಿಗೆ ಕನಕಾಭಿಷೇಕ ಮಾಡುತ್ತಾರೆ. ಆ ಎಲ್ಲ ಬಂಗಾರವನ್ನು ಬಡವರಿಗೆ ಮತ್ತು ಶ್ರೀ ವಿದ್ವಾ೦ಸರಿಗೆ ಕೊಡುತ್ತಾರೆ. ಆದರೆ ದುರದೃಷ್ಟದಿಂದ ಶ್ರೀ ಸತ್ಯಾಧಿರಾಜ ತೀರ್ಥರು ತಮಿಳುನಾಡಿನ ರಾಯವೇಲೂರಿನಲ್ಲಿ ವೃಂದಾವನಸ್ತರಾಗುತ್ತಾರೆ. ಮುಂದೆ ಶ್ರೀ ಕೃಷ್ಣಾಚಾರ್ಯರು ಎಂಬ ಪಂಡಿತರಿಗೆ ಶ್ರೀ ಸತ್ಯಪೂರ್ಣ ತೀರ್ಥರು ಎಂದು ನಾಮಕರಣ ಮಾಡಿ ಸನ್ಯಾಸ ದೀಕ್ಷೆ ಕೊಡುತ್ತಾರೆ.
ಶ್ರೀಮಠಕ್ಕೆ ರಾಜ ವೈಭವ ತಂದವರು ಮತ್ತು ಇವರ ದಿನಚರಿ
ಶ್ರೀ ರಘೋತ್ತಮ ತೀರ್ಥರಿಂದ ಮಠದ ಪರಿಕಲ್ಪನೆ ಪ್ರಾರಂಭ ಮತ್ತು ಅವರ ಕಾಲದಲ್ಲಿ ಇದ್ದ ವೈಭೋಗವನ್ನು ಮರಳಿ ತಂದವರು ಶ್ರೀ ಸತ್ಯಾಭಿನವ ತೀರ್ಥರು. ಇವರ ಕಾಲದಲ್ಲಿ ಶ್ರೀ ಮಠದಲ್ಲಿದ್ದ ಕೆಲಸವನ್ನು 64 ವಿಭಾಗಗಳನ್ನು ಮಾಡಿ 64 ಕುಟುಂಬಗಳಿಗೆ ಕೆಲಸವನ್ನು ಕೊಟ್ಟು ಅವರ ಜೀವನವನ್ನು ನಿರ್ವಹಣೆ ಮಾಡಲು ಅನುಕೂಲ ಮಾಡಿಕೊಟ್ಟರು. ಅವರ ಕಾಲದಲ್ಲಿ ರಾಜಸಂಸ್ಥಾನದಂತೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಬೇಕಾದರೆ ಒಂದು ರಾಜ್ಯವೇ ಹೊರಡುವಂತೆ ಹೊರಡುತಿತ್ತು. ಆನೆ ಕುದುರೆಗಳು ರಾಜ ವೈಭವ ಇವರ ಕಾಲದಲ್ಲಿ ಇತ್ತು.
ಪ್ರತಿನಿತ್ಯ ಪ್ರಾತಃಕಾಲದಿ೦ದ ರಾತ್ರಿಯವರೆಗೂ ಅವರ ದಿನಚರೀ ಹೀಗಿತ್ತು.
ಆಮಂತ್ರಣ
ಗುರುಪಾದಅರ್ಚನಾ
ಪಂಚಾಗ ಶ್ರವಣ
ಸ್ನಾನ
ಜಪಅನುಷ್ಠಾನ
ವ್ಯಾಖ್ಯಾನ
ನಿರ್ಮಾಲ್ಯವಿಸರ್ಜನೆ
ವೇದವ್ಯಾಸದೇವರಿಗೆ ಪ್ರತಿದಿನ ನವರತ್ನಾಭಿಷೇಕ
ಕೂರ್ಮಸಾಲಿಗ್ರಾಮಕ್ಕೆ ಪ್ರತಿನಿತ್ಯ ಕ್ಷೀರಾಭಿಷೇಕ
ಪೂಜಾಕಾಲದಲ್ಲಿ ಪಂಚಸೂಕ್ತ ಪಠಣೆ
ಸಪ್ತಮ ತರ್ಪಣ ಮತ್ತು ಗಂಧಸಮರ್ಪಣೆ
ಚಿಕ್ಕ ಅಲಂಕಾರ ಮತ್ತು ಮಹಾನೈವೇದ್ಯ
ನೈವೇದ್ಯ ಸಮಯಕ್ಕೆ ಪರದೇ ಹಿಡಿಯುವ ಪದ್ಧತಿ
ಬಂಗಾರದ ತಟ್ಟೆಯಲ್ಲಿ ಸಕ್ಕರೆ ನೈವೇದ್ಯ
ಬಂದವರಿಗೆ ಶ್ರೀಮಠದ ಮೂಲಕ ತಾಂಬೂಲ ವಿತರಣೆ
ಕನಕಾಭಿಷೇಕ ಶ್ರೀ ಮೂಲರಾಮದೇವರು ಮತ್ತು ಶ್ರೀ ವೇದವ್ಯಾಸರಿಗೆ
ಸಂಸ್ಥಾನ ಪ್ರತಿಮೆಗಳನ್ನು ಎಲ್ಲರಿಗು ವಿವರಿಸುವುದು
ಭೋಜನಾನಂತರ ವಾಕ್ಯಾರ್ಥ ತೀರ್ಥ ಪ್ರಸಾದ ವಿತರಣೆ ಶಾಸ್ತ್ರವಿಚಾರಣೆ ಹಾಗೆ ಶ್ರೀ ಮೂಲರಾಮಚಂದ್ರ ದೇವರಿಗೆ
ನಿತ್ಯೋತ್ಸವ
ವರ್ಷೋತ್ಸವ
ಪಕ್ಷೋತ್ಸವ
ಮಾಸೋತ್ಸವ
ಸಂವತ್ಸರೋತ್ಸವ
ಹಾಗಲ್ಲದೆ ಪ್ರತಿದಿನ ಶ್ರೀಮಠದ ಆದಾಯ ಮತ್ತು ಖರ್ಚಿನ ಲೆಕ್ಕಾಚಾರ ನೋಡುವುದು ಇವರ ದಿನಚರಿ ಯಾಗಿತ್ತು. ಇವರ ಮೊದಲ ಕೆಲಸ ಗುರುಪಾದುಕಾ ಪೂಜಾ ಒಂದು ದಿನವೂ ಮರೆತವರಲ್ಲ. ಇದೆಲ್ಲವೂ ನಮ್ಮ ಗುರುಗಳು ಕೊಟ್ಟ ಭಿಕ್ಷೆ ಇವೆಲ್ಲವೂ ಅವರಿಗೆ ಸೇರಬೇಕು ಎಂದು ಹೇಳುತ್ತಿದ್ದರು. ಒಂದು ದಿನ ರಾಮೇಶ್ವರಂ ಗೆ ಹೋಗಿದ್ದಾಗ ಕಾರಣಾಂತರಗಳಿಂದ ಅಂದು ಸತ್ಯನಾಥ ತೀರ್ಥರ ಪಾದುಕಾ ಪೂಜಾ ಬೆಳಗ್ಗೆ ಆಗಲಿಲ್ಲ. ವಿಚಿತ್ರ ವೆಂಬಂತೆ ಅಂದು ಅವರಿಗೆ ಸೇತು ದರ್ಶನವೇ ಆಗಲಿಲ್ಲ ಇದ್ದಕ್ಕಿದ್ದ ಹಾಗೆ ಮಳೆ ಬಂದು ಸೇತು ದರ್ಶನವಾಗಲಿಲ್ಲ. ಪುನಃ ಬಂದು ಗುರುಪಾದುಕಾ ಪೂಜೆ ಮಾಡಿದ ಮೇಲೆ ಮಾತ್ರ ಸೇತು ದರ್ಶನ ವಾಯಿತು. ನಿತ್ಯದಲ್ಲಿ ಧರ್ಮ ಮಾಡುವವರಿಗೆ ಒಂದು ದಿನವು ದೇವರು ಬಿಡಿಸುವುದಿಲ್ಲ ಹಾಗೆ ಇವರು ಗುರು ಪಾದುಕಾ ಪೂಜೆ ಮಾಡಿದ ಮೇಲೆ ಮಾತ್ರ ಅವರಿಗೆ ಸೇತುದರ್ಶನವಾಯಿತು ಎಂದರೆ ಎಷ್ಟು ಗುರುಭಕ್ತಿ ಎಂದು ಇವರಿಂದ ತಿಳಿಯಬಹುದು.
ಗುರುಸ್ಮರಣೆ ಯಿಂದ ಸಕಲ ಆಪತ್ತು ಪರಿಹಾರ
ಇವರ ಜೀವನದಲ್ಲಿ ಒಬ್ಬ ಯತಿಗೆ ಎಷ್ಟು ರೀತಿಯ ತೊಂದರೆಗಳು ಬರಬಹುದು ಎಂದು ನೋಡಿದರೆ ಅಷ್ಟು ರೀತಿಯ ತೊಂದರೆ ಇವರಿಗೆ ಬಂದಿತ್ತು. ಒಂದು ಚಿನ್ನವನ್ನು ಕಾಯಿಸಿದಾಗ ಮಾತ್ರ ಅದರ ಪರಿಶುದ್ಧತೆ ಪ್ರಮಾಣ ತಿಳಿಯುವಂತೆ ಭಗವಂತ ಇವರನ್ನು ಪರೀಕ್ಷಿಸಿ ಇವರ ಗುರುಭಕ್ತಿ ಮಹಿಮೆಯನ್ನು ತೋರಿಸಿದ. ಅವುಗಳಲ್ಲಿ ಒಂದೆರಡನ್ನು ಸಂಕ್ಷಿಪ್ತವಾಗಿ ನೋಡೋಣ
ಅಗ್ನಿಬಾಧೆಯಿಂದ ಪರಿಹಾರ
ಕೋಲಪುರ ಎಂಬ ಒಂದು ಗ್ರಾಮ ಅಲ್ಲಿ ವೆಂಕಣ್ಣಚಾರ್ಯರು ಎಂಬ ಗೃಹಸ್ಥರು ಅವರ ಮನೆಯಲ್ಲಿ ಭಿಕ್ಷೆ, ನೈವೇದ್ಯ ಸಮಯವಾಯಿತು, ಪೂಜೆ ನೋಡುತ್ತಿದ್ದ ಎಲ್ಲ ಭಕ್ತರು ಹೊರಗಡೆ ಹೋದರು. ಮಧ್ಯಾನ್ಹ ಕಾಲ ಸುಡು ಬಿಸಿಲು ಒಳಗಡೆ ಮಾತ್ರ ಶ್ರೀ ಸತ್ಯಾಭಿನವ ತೀರ್ಥರು ಮತ್ತು ಒಂದೆರಡು ಶಿಷ್ಯರು ಮಾತ್ರ ಒಳಗಡೆ ಇದ್ದರು. ಹುಲ್ಲಿನ ಮನೆ ಇದ್ದಕ್ಕಿದ್ದ ಹಾಗೆ ಬೆಂಕಿ ಹತ್ತಿತು ಹೊರಗಡೆ ಇದ್ದವರು ಅಲ್ಲಿಂದ ಓಡಿ ಹೋಗಲು ಪ್ರಾರಂಭಿಸಿದರು ಆದರೆ ಒಳಗಡೆ ಮಾತ್ರ ಶ್ರೀ ಸತ್ಯಾಭಿನವ ತೀರ್ಥರು ಮಾತ್ರ ನೈವೇದ್ಯ ಮಾಡುತ್ತಿದ್ದರು, ಬೆಂಕಿಯ ತಾಪ ಹೆಚ್ಚಾಯಿತು ಕೂಡಲೇ ಅವರು ಯೋಚನೆ ಮಾಡಿದ್ದು ಮೊದಲು ಶ್ರೀ ಚತುರ್ಯುಗ ಮೂರ್ತಿ ಶ್ರೀ ಮೂಲರಾಮಚಂದ್ರ ದೇವರು, ದಿಗ್ವಿಜಯ ರಾಮಚಂದ್ರ ದೇವರು, ಸೀತಾದೇವಿ, ವಂಶ ರಾಮಚಂದ್ರ ದೇವರು ಮತ್ತು ಇಡೀ ಸಂಸ್ಥಾನವನ್ನು ತಮ್ಮ ಕೈಯಿಂದ ಹೊತ್ತುಕೊಂಡು ಶ್ರೀ ಸತ್ಯನಾಥ ತೀರ್ಥ ಗುರುಭ್ಯೋನಮಃ ಎಂದು ಹೇಳಿ ಪಾಂಡವರನ್ನು ಅರಗಿನ ಅರಮನೆಯಿಂದ ಪಾರು ಮಾಡಿದ ನೀನು ಕಾಪಾಡು ಎಂದು ಹೇಳಿ ಇಡೀ ಪೀಠವನ್ನು ತೆಗೆದುಕೊಂಡು ಹೊರಗಡೆ ಬಂದರು. ಇವರ ಭಕ್ತಿಗೆ ಮೆಚ್ಚಿ ಪರಮಾತ್ಮ ಒಳಗಡೆ ಇದ್ದ ಎಷ್ಟೋ ಜನರಿಗೆ ಏನು ಆಗದೆ ಮತ್ತು ಅಲ್ಲಿದ್ದ ವಸ್ತುಗಳು ಒಂದು ಚೂರು ಸುಡದೇ ಎಲ್ಲವಸ್ತುಗಳು ಸಿಕ್ಕಿತು ಮತ್ತು ಒಳಗಿದ್ದವರಿಗೆ ಏನು ಆಗಲಿಲ್ಲ. ಇದೆ ಶ್ರೀ ಸತ್ಯಾಭಿನವ ತೀರ್ಥರ ಗುರುಭಕ್ತಿಯ ನಿದರ್ಶನ.
ಚೋರಭಾದ ಪರಿಹಾರ
ಆಂಧ್ರಪ್ರದೇಶ ದಟ್ಟ ಕಾಡಿನ ಮದ್ಯೆ ಒಂದು ಹಳ್ಳಿ, ಶ್ರೀ ಮಠದ ಸಂಪೂರ್ಣ ವೈಭವ ಸುತ್ತಮುತ್ತಲಿನ ಜನರಿಗೆ ಗೊತ್ತಿತ್ತು. ಡಕಾಯಿತರ ಗುಂಪಿಗೆ ಈ ವಿಷಯ ಗೊತ್ತಾಗಿ ಈ ಸಂಪೂರ್ಣ ಐಶ್ವರ್ಯವನ್ನು ಕೊಳ್ಳೆಹೊಡೆಯಬೇಕೆಂದು ನಿರ್ಧರಿಸಿ ಮುತ್ತಿಗೆ ಹಾಕಿದರು. ಅಲ್ಲಿದ್ದ ಪಂಡಿತರ ಕೈಯಲ್ಲಿ ಉಂಗುರ ಸರಗಳು ಎಲ್ಲವು ಇದ್ದವು. ಆಗಲೇ ಎಲ್ಲ ಪಂಡಿತರಿಗೆ ಹೊಡೆದು ಅವರಲ್ಲಿದ್ದ ಒಡವೆಗಳನ್ನು ಅಮೂಲ್ಯ ರತ್ನಗಳನ್ನು ವಶಪಡಿಸಿಕೊಂಡರು. ನಿಮ್ಮ ಗುರುಗಳನ್ನು ತೋರಿಸು ಅವರಲ್ಲಿರುವ ವಸ್ತುಗಳನ್ನು ತೆಗೆದುಕೊಳ್ಳಬೇಕೆಂದು ಶ್ರೀ ಸತ್ಯಾಭಿನವ ತೀರ್ಥರ ಕೊನೆಗೆ ಬಂದು ಬಾಗಿಲು ಒಡೆದು ಒಳ ಬಂದರು. ಅಲ್ಲಿ ದೇವರ ಪೆಟ್ಟಿಗೆಗಳು ಅವರಿಗೆ ಕಾಣಿಸಲಿಲ್ಲ. ಕೋಪಗೊಂಡ ಡಕಾಯಿತರು ಶ್ರೀ ಸತ್ಯಾಭಿನವ ತೀರ್ಥರನ್ನು ಚೂಪಾದ ಕಟ್ಟಿ ಚಾಕು ಮತ್ತು ದೀವಟಿಗೆ ಗಳಿಂದ ಚುಚ್ಚಿ ಸುಡಲು ಪ್ರಾರಂಭ ಮಾಡಿದರು. ಆದರೆ ಶ್ರೀ ಸತ್ಯಾಭಿನವ ತೀರ್ಥರು ಶ್ರೀ ಸತ್ಯನಾಥ ತೀರ್ಥರ ಸ್ಮರಣೆ ಮತ್ತು ಲಕ್ಷ್ಮಿ ನರಸಿಂಹ ದೇವರ ಸ್ಮರಣೆ ಮಾಡಲು ಪ್ರಾರಂಭಿಸಿದರು. ಹರಿವಾಯುಗುರುಗಳ ಅನುಗ್ರಹದಿಂದ ಅವರಿಗೆ ಒಂದು ಚೂರು ಸುಡಲಿಲ್ಲ ಮತ್ತು ದೇಹದಿಂದ ಒಂದು ಚೂರು ರಕ್ತ ಬರಲಿಲ್ಲ. ಬೇಕಾದಷ್ಟು ಪ್ರಯತ್ನ ಮಾಡಿದರು ಶ್ರೀಸತ್ಯಾಭಿನವ ತೀರ್ಥರಿಗೆ ಏನು ಆಗಲಿಲ್ಲ. ಶ್ರೀಸತ್ಯನಾಥ ತೀರ್ಥರ ರಕ್ಷಾಕವಚ ವಿರುವಾಗ ಪ್ರತಿಕೂಲ ವಾಗುವಂತೆ ಅವರಿಗೆ ಪುನಃ ಆ ಆಯುಧಗಳೆಲ್ಲ ಚುಚ್ಚಲು ಪ್ರಾರಂಭ ಮಾಡಿದವು. ತಕ್ಷಣ ಅವರು ಅಲ್ಲಿಂದ ಹೊರಟು ಹೋದರು. ದೇವರ ಪೆಟ್ಟಿಗೆ ಸುರಕ್ಷಿತ ವಾಗಿತ್ತು. ಆದರೆ ನಿಜವಾದ ವಜ್ರವೈಡೂರ್ಯ ಇವೆಲ್ಲ ಬಿಟ್ಟು ಮುರಿದ ತಾಮ್ರದ ಪಾತ್ರೆ ಮತ್ತು ಹಳೆಯ ವಸ್ತುಗಳನ್ನು ತೆಗೆದು ಕೊಂಡು ಹೋದರು. ಆ ಸಂದರ್ಭದಲ್ಲಿ ಅಲ್ಲಿನ ರಾಜ ಕೇಶವ ಭೂಪಾಲನಿಗೆ ಈ ವಿಷಯಗೊತ್ತಾಗಿ ಬಂದು ರಾಜ ಗುರುಗಳಲ್ಲಿ ಬಂದು ನಿಮ್ಮ ವಸ್ತುಗಳನ್ನು ಪುನಃ ತಂದು ಕೊಡುವೆನೆಂದ ಆದರೆ ನಿಮ್ಮ ಸೇವೆ ನಮಗೆ ತ್ರುಟಿಪಿಯಾಗಿದೆ ಎಂದು ಹೇಳಿ ಕಳುಹಿಸಿದರು. ಇತ್ತ ಡಕಾಯಿತರು ಪಶ್ಚಾತಾಪವಾಗಿ ಇವರು ತೆಗೆದು ಕೊಂಡು ಹೋದ ವಸ್ತುಗಳೊಂದಿಗೆ ಐನೂರು ಬಂಗಾರದ ವರಹಗಳನ್ನು ದಕ್ಷಿಣೆಯಾಗಿ ಕೊಟ್ಟು ನಮ್ಮ ತಪ್ಪು ಮನ್ನಿಸಿ ಎಂದು ಪ್ರಾರ್ಥಿಸಿಕೊಂಡರು ಹೀಗೆ ನಮಗೆ ಮುಂದೆ ಕಳ್ಳತನ ಮಾಡಲೇ ಬಾರದೆಂದು ಮನಸ್ಸಾಗಿದೆ ಎಂದು ಹೇಳಿದರು. ಹೀಗೆ ಗುರುಸ್ಮರಣೆಯಿಂದ ಚೋರಭಾದೆ ಪರಿಹಾರವಾಯಿತು.
ರಾಜಭಾದ ಪರಿಹಾರ
ಒಮ್ಮೆ ಗ್ರಸ್ತಾಸ್ತ ಚಂದ್ರಗ್ರಹಣ ಬಹುಪುಣ್ಯವಾದ ಪರ್ವಕಾಲ, ಪಂಡರಪುರಕ್ಕೆ ಹೋಗುತ್ತಾರೆ ಭೀಮರತಿಸ್ನಾನ ಮತ್ತು ವೇದೇಶ ತೀರ್ಥರ ಸನ್ನಿದಾನ. ಅಲ್ಲಿ ಅನೇಕ ಸಾವಿರಾರು ಜನ ಸೇರಿರುತ್ತಾರೆ. ಆಗಿನ ಮುಸ್ಲಿಂ ರಾಜ ಔರಂಗಜೆಬ್ ಅವನ ಪರಿವಾರ ಬಂದಿರುತ್ತದೆ. ಆದರೆ ಅವನ ಮಂತ್ರಿ ಮಾತ್ರ ಬ್ರಾಹ್ಮಣನಾದ ಶ್ರೀ ನಾರೊ ಭಾಸ್ಕರ ಎಂಬ ವೈಷ್ಣವ ಶ್ರೀ ಮಠದ ಶಿಷ್ಯ. ಈ ವಿಷಯ ಶ್ರೀ ಸಾಯ್ತಾಭಿನವ ತೀರ್ಥರಿಗೆ ತಿಳಿಯುತ್ತದೆ. ಹತ್ತಿರದ ಬ್ರಹ್ಮಪುರಿ ಎಂಬ ಸ್ಥಳದಲ್ಲಿ ಬಿಡಾರ ಹೂಡಿದ್ದ ರಾಜನ ಪರಿವಾರ ಅವನ ಮಂತ್ರಿ ನಾರೋಭಾಸ್ಕರನಿಗೆ ಪತ್ರ ಕೊಟ್ಟು ಕಳುಹಿಸಿ ಪಂಡರ ಪುರಕ್ಕೆ ರಾಮ ದೇವರು ಬಂದಿದ್ದಾರೆ ದರ್ಶನ ಮಾಡಿ ಹೋಗಿ, ನೀವು ಉತ್ತರದಲ್ಲಿ ಇರುತ್ತೀರಾ ಇಲ್ಲಿಗೆ ಬರುವುದು ಬಹಳ ಅಪರೂಪ ದರ್ಶನ ಮಾಡಿ ಎಂಬ ಆಜ್ಞಾಪತ್ರ ಕಳುಹಿಸುತ್ತಾರೆ. ಆಜ್ನ್ಯಾಪತ್ರವನ್ನು ತೆಗೆದುಕೊಂಡ ನಾರೊ ಭಾಸ್ಕರ ಅತ್ಯಂತ ಗೌರವದಿಂದ ತಮ್ಮ ಮನೆಯಲ್ಲಿ ಇಟ್ಟು ದೇವರ ಮನೆಯಲ್ಲಿ ಧೂಪ ದೀಪಗಳಿಂದ ಪೂಜಿಸಿ ಆ ಆಜ್ನ್ಯಾ ಪತ್ರವನ್ನು ಓದುತ್ತಾರೆ. ನಾರೋಭಾಸ್ಕರ ಮತ್ತು ಇತರ ಮಂತ್ರಿಗಳು ಕೂಡಲೇ ಗುರುಗಳ ದರ್ಶನ ಪಡೆದು ತಾವಿದ್ದ ಬಿಡಾರದಲ್ಲೇ ಶ್ರೀರಾಮದೇವರ ಪೂಜೆ ಮತ್ತು ಭಿಕ್ಷೆಯಾಗಬೇಕೆಂದು ಪ್ರಾರ್ಥಿಸುತ್ತಾರೆ. ಆನೆಯ ಮೇಲೆ ಮೆರವಣಿಗೆ ಚತುರಂಗ ಸೈನ್ಯ ಸಮೇತ ಮೆರವಣಿಗೆ ರಾಮ ದೇವರ ಪೂಜೆ ಮತ್ತು ಭಿಕ್ಷೆ ಆಗುತ್ತದೆ. ಅದೇ ಸಂದರ್ಭದಲ್ಲಿ ನಾರೊ ಭಾಸ್ಕರ ಇತರ ಮಂತ್ರಿಗಳಿಗೆ ಶ್ರೀ ಸತ್ಯಾಭಿನವ ತೀರ್ಥರು ಮತ್ತು ಶ್ರೀಮಠದ ಪರಿಚಯ ಮತ್ತು ಮಧ್ವಸಿದ್ದಾಂತದ ಪರಿಚಯ ಮಾಡಿಸಿ ಕೊಡುತ್ತಾನೆ. ಕೂರ್ಮ ಶಾಲಿಗ್ರಾಮದ ಕಥೆ ಹೇಳುತ್ತಾನೆ. ಇದನ್ನು ಕೇಳಿದ ತಕ್ಷಣ ಅಲ್ಲಿದ್ದ ನಾರೊ ಶಂಕರ ಎಂಬ ಮಂತ್ರಿ ನಕ್ಕು ಬಿಡುತ್ತಾನೆ. ನಾರೊ ಭಾಸ್ಕರರಿಗೆ ಬಹಳ ಅವಮಾನ ಆಗುತ್ತದೆ. ಮರುದಿನ ಪೂಜೆ ಆ ಸಮಯದಲ್ಲಿ ಕೂರ್ಮ ಸಾಲಿಗ್ರಾಮಕ್ಕೆ ಕ್ಷೀರಭಿಷೇಕ ಮಾಡಲು ವಿಶೇಷವಾಗಿ ಅಂದು ತಿರುಗುತ್ತದೆ. ನರೋ ಶಂಕರನಿಗೆ ಬಹಳ ಅವಮಾನ ವಾಗಿ ಮತ್ತು ದುಃಖವಾಯಿತು. ಆ ಸಮಯದಲ್ಲಿ ಒಬ್ಬ ವ್ಯಕ್ತಿ ಆ ಊರಿನಿಂದ ಬಹಿಷ್ಕ್ರತನಾಗಿರುತ್ತಾನೆ. ಅವನು ಔರಂಗ ಜೇಬನ ಮುಂದೆ ಹೋಗಿ ಸುಳ್ಳು ಹೇಳುತ್ತಾನೆ. ನಿಮ್ಮ ಮಂತ್ರಿ ನಾರೊ ಭಾಸ್ಕರ ಒಬ್ಬ ಯತಿಗಳನ್ನು ಕರೆದು ಮೆರವಣಿಗೆ ಮಾಡಿದ್ದಾನೆ, ಆ ಗುರುಗಳು ಯಾರೆಂದರೆ ನಿಮ್ಮ ಶತ್ರು ರಾಜ ರಾಮರಾಯ ಎಂಬುವನ ಗುರುಗಳು ಎಂದು ಹೇಳಲು ಓರಂಗಜೇಬ ಕೋಪೊದ್ದಿತನಾಗಿ ಕೂಡಲೇ ಶ್ರೀ ಸತ್ಯಾಭಿನವರು ಮತ್ತು ನಾರೊಭಾಸ್ಕರನ್ನು ಬಂಧಿಸಲು ಆದೇಶ ನೀಡುತ್ತಾನೆ. ನಿನ್ನ ಶತ್ರುಗಳ ಗುರುವಿನ ಪೂಜೆ ಮಾಡಿದ ಎಂದರೆ ಅವನು ನಿನಗೆ ಮೋಸ ಮಾಡುತ್ತಾನೆ ಎಂದು ತಿಳಿಯಿತಾ ಎನ್ನುತ್ತಾನೆ. ಮುಸ್ಲಿಂ ದೊರೆ ಅವನಿಗೆ ಈ ಧರ್ಮದ ಮೇಲೆ ಯಾವ ನಂಬಿಕೆ ಇಲ್ಲ. ಕೂಡಲೇ ಎಲ್ಲರನ್ನು ಬಂಧಿಸಿ ಎನ್ನಲು. ಆಗಲೇ ಚಾರರು ಬರುವಾಗ, ಗುಪ್ತಚರರ ಮುಖಾಂತರ ವಿಷಯ ತಿಳಿಯುತ್ತದೆ. ಕೂಡಲೇ ನಾರೋಭಾಸ್ಕರನ ಪತ್ನಿ ಸಾವಿತ್ರಿಬಾಯಿ ಸಂಸ್ಥಾನವನ್ನು ಅಲ್ಲಿಂದ ಪಂಡರ ಪುರಕ್ಕೆ ಕಳುಹಿಸುತ್ತಾಳೆ ಮತ್ತು ಹೊರಗಡೆ ನಿಂತು ಇವರು ಸನ್ಯಾಸಿಗಳು ಇವರ ಬಳಿಯಲ್ಲಿ ಏನುಇಲ್ಲ ಎಂದು ಹೇಳುತ್ತಾಳೆ. ವಿರಕ್ತರು ಅವರ ಬಳಿಯಲ್ಲಿ ಏನು ಇಲ್ಲ ಎಂದು ಹೇಳಿ ಬೇಕಾದರೆ ನಿಮ್ಮ ರಾಜನ ಸಮೇತ ಅಲ್ಲಿಗೆ ಬನ್ನಿ ಎನ್ನಲು ಚಾರರು ಪುನಃ ಔರಂಗ ಜೇಬನ ಬಳಿಗೆ ಹೋಗಿ ವಿಷಯ ತಿಳಿಸುತ್ತಾರೆ. ಇತ್ತ ಶ್ರೀ ಸತ್ಯಾಭಿನವರು ಶ್ರೀ ಸತ್ಯನಾಥ ತೀರ್ಥ ಗುರುಭ್ಯೋ ನಮಃ ಎಂಬ ಮಂತ್ರ ಉಚ್ಚಾರಮಾಡಲು ಅಲ್ಲಿ ಔರಂಗಜೇಬ ತನ್ನ ಚಾರರಿಗೆ ಜಪ್ತಿಮಾಡುವದು ಬೇಡ ಅವರನ್ನು ಕರೆದು ಕೊಂಡು ಬನ್ನಿ ನಾನು ನೋಡಬೇಕು ಎಂದು ಹೇಳುತ್ತಾನೆ. ಅವರ ವ್ಯಕ್ತಿತ್ವ ಹೇಗಿದೆ ಎಂದು ಹೇಳಲು ನಾರೋಭಾಸ್ಕರ ಅರಮನೆಗೆ ಗುರುಗಳನ್ನು ಕರೆದು ಕೊಂಡು ಹೋಗಲು ನಿರಾಕರಿಸಿದಾಗ ಔರಂಗ ಜೇಬ ಅವರ ಚಿತ್ರವನ್ನು ಕಳಿಸಿ ಅದನ್ನೇ ನೋಡುವೆ ಎನ್ನಲು, ಒಳ್ಳೆಯ ಚಿತ್ರಕಾರರಿಂದ ಒಂದು ಚಿತ್ರವನ್ನು ಬರೆಸಿ ಔರಂಗ ಜೇಬನ ಬಳಿಗೆ ಕಳುಹಿಸುತ್ತಾರೆ. ಚಿತ್ರ ಕಲಾವಿದ ಕೇವಲ ಸತ್ಯಾಭಿನವರ ಚಿತ್ರ ಮಾತ್ರ ಬರೆದಿರುತ್ತಾನೆ, ಆದರೆ ಔರಂಗ ಜೇಬ ಆ ಚಿತ್ರವನ್ನು ನೋಡುವಾಗ ರಾಮ ದೇವರು ಧನುರ್ಧಾರಿಯಾಗಿ ಲಕ್ಷ್ಮಣ ಮತ್ತು ಹನುಮರು ಇವರನ್ನು ರಕ್ಷಣೆ ಮಾಡುವಂತೆ ಚಿತ್ರ ಕಂಡು ಭಯಗೊಂಡು ಭಕ್ತಿಯಿಂದ ಇವರನ್ನು ಮೊದಲು ಬಿಟ್ಟುಕಳುಹಿಸಿ ಎಂದನು. ಆದರೆ ನಾರೊ ಭಾಸ್ಕರ ಔರಂಗ ಜೇಬನಿಗೆ ನೀನು ಅವರನ್ನು ಬಂಧಿಸುವಂತೆ ಹೇಳಿ ಈಗ ಬಿಟ್ಟು ಅವಮಾನ ಮಾಡುತ್ತಿರುವೆ, ಇದು ಒಳ್ಳೆಯದಲ್ಲ ಎಂದು ಹೇಳಿ ನೀನು ಈಗಲೇ ನಿನ್ನ ಚತುರಂಗ ಬಲ ಸಮೇತ ಅವರಿಗೆ ಮರ್ಯಾದೆ ಯಿಂದ ಮೆರವಣಿಗೆ ಮಾಡಿ ಕಳುಹಿಸಬೇಕು ಎಂದು ಹೇಳಿದನು ಜೊತೆಗೆ ಅನೇಕ ಸಂಪತ್ತನ್ನು ಕೊಡಬೇಕು ಎಂದಾಗ ಔರಂಗ ಜೇಬ ಒಪ್ಪಿ ಮರ್ಯಾದೆ ಮಾಡಿ ಕಳುಹಿಸಿದನು. ಹೀಗೆ ರಾಜಭಾದೆ ಪರಿಹಾರ ಕೇವಲ ಗುರುಸ್ಮರಣೆ ಮಾಡಿ ಕಳೆದು ಕೊಂಡರು.
ನಾಚಿಯಾರ್ ಕೋಯಿಲ್ ವಿಶೇಷ
ಶ್ರೀ ಸತ್ಯಾಭಿನವ ತೀರ್ಥರು ತಾವು ವೃಂದಾವನಸ್ತ ರಾಗಲು ಆಯ್ಕೆ ಮಾಡಿ ಕೊಂಡ ಸ್ಥಳ ನಾಚಿಯಾರ್ ಕೋಯಿಲ್ ಎಂಬ ಗ್ರಾಮ. ಕುಂಭಕೋಣದಿಂದ ಸುಮಾರು ಹತ್ತು ಕಿಲೋಮೀಟರ್ ದೂರವಿರುವ ಸ್ಥಳ. ನಾಚಿಯಾರ್ ಎಂದರೆ ಪದ್ಮಾವತಿ. ಕ್ಷೇತ್ರ ಇತಿಹಾಸ ವಿರುವಹಾಗೆ ಇಲ್ಲಿ ಶ್ರೀನಿವಾಸ ಮತ್ತು ಪದ್ಮಾವತಿ ಮದುವೆಯಾಗಿ ಈ ಸ್ಥಳಕ್ಕೆ ಬಂದರು ಅಲ್ಲಿ ಸ್ವಲ್ಪ ಕಾಲವಿದ್ದು ಅಲ್ಲಿ ಪುನಃ ಮತ್ತೊಮ್ಮೆ ತಾವು ಮದುವೆಯಾದ ರೀತಿಯನ್ನು ನೆನೆದು ಪುನಃ ಮದುವೆಯಾದರು, ಆಗ ಕೃಷ್ಣ ಬಲರಾಮರು ಅಲ್ಲಿ ಬಂದಿದ್ದರು ಮತ್ತು ಸಕಲ ಋಷಿಗಳು ಇದ್ದರು ಎಂಬುದರ ಕುರುಹಾಗಿ ಇಂದಿಗೂ ದೇವಾಲಯದ ಒಳಗಡೆ ಶ್ರೀನಿವಾಸ ಪದ್ಮಾವತಿ ಕೃಷ್ಣ ಬಲರಾಮ ಹಾಗು ವಸಿಷ್ಠ ಋಷಿಗಳ ವಿಗ್ರಹ ಕಾಣಬಹುದು. ಅಲ್ಲಿನ ಒಂದು ವಿಶೇಷ ವೆಂದರೆ ದೇವರ ನೈವೇದ್ಯದ ವಸ್ತುಗಳಿಗೆ ಯಾವುದಕ್ಕೂ ಉಪ್ಪು ಹಾಕುವುದಿಲ್ಲ, ಆದರೆ ನೈವೇದ್ಯದ ನಂತರ ಆ ಆಹಾರ ಉಪ್ಪಾಗಿರುತ್ತದೆ. ಅದಕ್ಕಾಗಿಯೂ ಸ್ಥಳೀಯರು "ಉಪ್ಪಳಿಯಪ್ಪನ್" ಎಂದು ಕರೆಯುತ್ತಾರೆ. ನಾಚಿಯಾರ್ ಗುಡಿ ಅಥವಾ ನಾಚಿಯಾರ್ ಕೋಯಿಲ್ ತುಂಬಾ ವಿಶೇಷತೆ ಯಿಂದ ಕೂಡಿದೆ.
ಗರುಡ ದೇವರ ವಿಶೇಷ
ಈ ದೇವಾಲಯದಲ್ಲಿ ಒಂದು ವಿಸ್ಮಯಕರ ಗರುಡ ದೇವರ ವಿಗ್ರಹವಿದೇ ಸಾಮಾನ್ಯವಾಗಿ ಬೇರೆ ದೇವಾಲಯಗಳಲ್ಲಿ ಹಿತ್ತಾಳೆ ಅಥವಾ ಪಂಚಲೋಹದ ಗರುಡ ವಿಗ್ರಹವಿದ್ದರೆ ಇಲ್ಲಿ ಕಲ್ಲಿನ ಗರುಡ ಮೂರ್ತಿ. ಗರುಡೋತ್ಸವ ಸಂದರ್ಭದಲ್ಲಿ ಈ ಕಲ್ಲಿನ ಗರುಡನನ್ನೇ ಗರ್ಭಗುಡಿಯಿಂದ ತರುತ್ತಾರೆ. ಗರ್ಭಗುಡಿಯಿಂದ ಆಚೆ ತರುವಾಗ ಸುಮಾರು 4 ಜನ ಹಿಡಿಯುತ್ತಾರೆ. ಅಲ್ಲಿಂದ ಪ್ರಥಮ ಪ್ರಾಕಾರಕ್ಕೆ 16 ಜನ ಹಿಡಿಯುತ್ತಾರೆ. ಅಲ್ಲಿಂದ ದ್ವೀತಿಯ ಪ್ರಾಕಾರಕ್ಕೆ 32 ಜನ ಹಿಡಿಯುತ್ತಾರೆ ಹಾಗೆ ದೇವಾಲಯದ ಹೊರಗಡೆ ಬರುವಾಗ ಸುಮಾರು 108 ಜನ ಆ ವಿಗ್ರಹವನ್ನು ಎತ್ತುತ್ತಾರೆ. ಪುನಃ ಉತ್ಸವ ಮುಗಿಸಿ ವಾಪಾಸ್ ಗರ್ಭಗುಡಿಯ ಒಳಗಡೆ ಹೋಗಬೇಕಾದರೆ 108 ಜನರಿಂದ ಭಾರ ಕಡಿಮೆಯಾಗಿ 32 ಜನ ಅಲ್ಲಿಂದ ಪುನಃ 16 ಜನ ಹೀಗೆ ಗರ್ಭ ಗುಡಿಯ ಒಳಗಡೆ ಹೋಗಬೇಕಾದರೆ ಕೇವಲ 4 ಜನ ಎತ್ತುವಷ್ಟು ಭಾರ ಕಡಿಮೆಯಾಗುತ್ತದೆ. ಈ ವಿಸ್ಮಯ ಪ್ರತಿವರ್ಷ ನಡೆಯುತ್ತದೆ. ಸಾಧ್ಯವಾದರೆ ಒಮ್ಮೆ ದೇವರ ದರ್ಶನ ಮತ್ತು ಗುರುಗಳ ದರ್ಶನ ಮಾಡಬಹುದು. ಹೀಗೆ ದೇವಸ್ಥಾನದ ಎದುರಿನಲ್ಲೇ ಶ್ರೀ ಸತ್ಯಾಭಿನವ ತೀರ್ಥರ ಬೃಂದಾವನ ಸನ್ನಿದಿ ಇದೆ. ಶ್ರೀ ಸತ್ಯಾಭಿನವ ತೀರ್ಥರು ಜೇಷ್ಠ ಶುಕ್ಲ ಚತುರ್ದಶಿಯಂದು ನಾಚಿಯಾರ್ ಕೋಯಿಲ್ನಲ್ಲಿ ಲೋಕಿಕ ಕಾಯವನ್ನು ತ್ಯಜಿಸಿ ಶ್ರೀಹರಿಯ ಪಾದಾರವಿಂದಗಳಲ್ಲಿ ಸೇರಿದರು.
ಗುರುಗಳ ಚರಣಾರವಿಂದಗಳಲ್ಲಿ ಶ್ರೀಶಸಮೀರ ದಾಸ ಫಣೀಂದ್ರನ ಅನಂತ ನಮನಗಳನ್ನು ಸಲ್ಲಿಸುತ್ತಾ,
ಗುರುಭಕ್ತಿಯಿಂದ ಗುರುಸ್ಮರಣೆಯಿಂದ ನಮಗೆ ಬಂದಂತಹ ಅನೇಕ ಭವಗಳನ್ನು ಪರಿಹಾರ ಮಾಡಿಕೊಟ್ಟವರು ಎಂದು ತೋರಿಸಿಕೊಟ್ಟ ಮಹನೀಯರು ಶ್ರೀ ಸತ್ಯಾಭಿನವ ತೀರ್ಥರು. ಸಾದ್ಯವಾದರೆ ಒಮ್ಮೆ ಅವರ ದರ್ಶನ ಮಾಡೋಣ ನಮ್ಮ ಯೋಗ್ಯಾತಾನುಸಾರ ಗುರುಸ್ಮರಣೆ ಮಾಡಿ ಶ್ರೀಸತ್ಯಾತ್ಮತೀರ್ಥ, ಶ್ರೀ ಸತ್ಯಾಭಿನವ ಶ್ರೀ ಸತ್ಯಾನಾಥ ತೀರ್ಥಾ೦ತರ್ಗತ ಶ್ರೀ ಭಾರತಿ ರಮಣ ಮುಖ್ಯಪ್ರಾಣಾಂತರ್ಗತ ಶ್ರೀವೇದವ್ಯಾಸ ದೇವರ ಚರಣಗಳಿಗೆ ಈ ಲೇಖನ ಸಮರ್ಪಣೆ ಮಾಡುತ್ತಿದ್ದೇನೆ. ದೋಷಗಳೇನಿದ್ದರೂ ನನ್ನದೇ ಒಂದೆರಡು ವಿಷಯಗಳಿದ್ದರೆ ಶ್ರೀ ಗುರುಗಳ ಅನುಗ್ರಹ.
ಪ್ರೀತೋಸ್ತು ಕೃಷ್ಣ ಪ್ರಭೋ
ಶ್ರೀಶಸಮೀರ ದಾಸ
ಫಣೀಂದ್ರ
ಶ್ರೀ ಕೃಷ್ಣಾರ್ಪಣಮಸ್ತು
****
ಸತ್ಯಾಭಿನವ ತೀರ್ಥರ ಚರಿತ್ರೆ.
ಜ್ಯೇಷ್ಠ ಶುದ್ಧ ಚತುರ್ದಶಿ ನಾಚಾರಕೊವಿಲ.
ಲೇಖನ ಮಧುಸೂದನ ಕಲಿಭಟ್. ಬೆಂಗಳೂರು (ಧಾರವಾಡ )
ಶ್ರೀ ಸತ್ಯಾಭಿನವ ತೀರ್ಥರಿಂದ ರಿಂದ ಉತ್ತರಾದಿ ಮಠದ ಸಂಸ್ಥಾನ ಪೂಜೆಯಲ್ಲಿ ಸಾಕಷ್ಟು ಬದಲಾವಣೆ ಗಳಾದವು. ಇವರ ಪೂರ್ವಾಶ್ರಮ ನಾಮ ಕೇಶವಾಚಾರ್ಯ. ಮಠದ ವಿವಿಧ ಸೇವೆಗಳಿಗೆ 64 ಜನ ಬ್ರಾಹ್ಮಣರನ್ನು ನೇಮಕ ಮಾಡಿದರು. ಇದರಿಂದ ಬಡ ವಿಪ್ರರಿಗೆ ಉದರಂಭಣಕ್ಕೆ ದಾರಿ ಯಾಯಿತು.ಗುರುಗಳನ್ನು ಹಾಡಿ ಹೊಗಳಿದರು. ಬಂದ ಭಕ್ತರಿಗೆ ಮೂಲ ರಾಮದೇವರ ದರ್ಶನ ಮಾಡಿಸುವದು, ಮುಖ್ಯ ಪಂಡಿತರೊಂದಿಗೆ ಗುರುಗಳ ಭೋಜನ, ಮಧ್ಯಾಹ್ನ ಶಾಶ್ತ್ರ ಚರ್ಚೆ, ಭಕ್ತರ ಸಮಸ್ಯೆ ಪರಿಹಾರ, ಸಾಯಂಕಾಲ ನೃತ್ಯ ಸಂಗೀತ, ತೊಟ್ಟಿಲಸೇವೆ ನಂತರ ಭಕ್ತರಿಗೆ ಫಲ ಮಂತ್ರಾಕ್ಷತೆ ಕೊಡುವ ವ್ಯವಸ್ಥೆಪ್ರಾರಂಭ ಆದವು.
ಶ್ರೀ ಸತ್ಯಾಭಿನವ ತೀರ್ಥರು ಉತ್ತರ ಕರ್ನಾಟಕದವರು. ಇವರ ಪೂರ್ವಾಶ್ರಮ ನಾಮಧೇಯ ಕೇಶವಾಚಾರ್ಯ.ಶ್ರೀ ಸತ್ಯನಾಥ ತೀರ್ಥರು ಇವರ ಆಶ್ರಮ ಗುರುಗಳು. ಒಮ್ಮೆ ಸಂಚಾರ ಮಾಡುತ್ತಾ ವೇಣಾಸಾಗರ ಎಂಬ ಹಳ್ಳಿಗೆ ಬಂದರು. ಸ್ನಾನ ಮಾಡುವಾಗ ಸಂಕಲ್ಪ ಹೇಳಲು ಯಾರಾದರೂ ಬ್ರಾಹ್ಮಣ ಇದ್ದಾರೇನೆಂದು ಸುತ್ತ ಮುತ್ತ ನೋಡಿದರು. ಯಾರೂ ಕಾಣಲಿಲ್ಲ. ಅಷ್ಟರಲ್ಲಿ ಒಬ್ಬ ವೃದ್ಧ ಬ್ರಾಹ್ಮಣ ಬಂದು ಗುರುಗಳಿಗೆ ಸ್ನಾನ ಸಂಕಲ್ಪ ಹೇಳಿ ಕಣ್ಮರೆಯಾದನು. ಗುರುಗಳು ಎಷ್ಟು ಹುಡುಕಿಸಿದರೂ ಬ್ರಾಹ್ಮಣ ಸಿಗಲಿಲ್ಲ. ರಾಮನೇ ಬಂದು ಸಂಕಲ್ಪ ಮಾಡಿಸಿದನೆಂದು ಸಂತೋಷ ಆನಂದಾಶ್ರುಗಳಿಂದ ಕೈಮುಗಿದರು.
ಶ್ರೀ ಸತ್ಯಾಭಿನವರು ಅಗ್ನಿಭಯ, ಚೋರಭಯ ಮತ್ತು ರಾಜಭಯಗಳನ್ನು ಕೇವಲ ಗುರುಗಳಾದ ಶ್ರೀ ಸತ್ಯನಾಥ ತೀರ್ಥರನ್ನು ಸ್ಮರಿಸಿ ಪರಿಹರಿಸಿಕೊಂಡಿದ್ದಾರೆ. ಒಂದುಸಲ ತಮಿಳುನಾಡಿನಲ್ಲಿ ಸಂಚರಿಸುವಾಗ ಒಂದು ಊರಿಗೆ ಬಂದರು. ಅಲ್ಲಿ ವೆಂಕಟರಾವ್ ಎಂಬ ಗ್ರಹಸ್ಥನಲ್ಲಿ ಭಿಕ್ಷೆ ನಡೆಯಿತು. ದೇವರ ಪೂಜೆ ನಡೆದಿತ್ತು. ಒಮ್ಮಿಂದೊಮ್ಮೆ ಹುಲ್ಲಿನ ಹೊದಿಕೆ ಇದ್ದ ಮನೆಗೆ ಬೆಂಕಿ ತಗುಲಿತು. ಸೇವಕರು ಗುರುಗಳಿಗೆ ವಿಷಯ ತಿಳಿಸಿದರು. ಸತ್ಯಾಭಿನವರು ಶಾಂತಚಿತ್ತಾರಾಗಿ ತಮ್ಮಗುರುಗಳನ್ನು ಮತ್ತು ಅರಗಿನ ಮನೆಯಿಂದ ಪಾರು ಮಾಡಿದ ಕೃಷ್ಣನನ್ನು ಸ್ಮರಿಸಿದರು. ದೇವರ ಪೆಟ್ಟಿಗೆ ಹೊರಗೆ ತಂದರು. ಅಡಿಗೆಯವರು ಮತ್ತೆ ಇತರರು ಅಗ್ನಿಯ ಬಾಧೆಗೆ ಸಿಲುಕದೆ ಕಿಂಚಿತ್ತೂ ಗಾಯಗಳಾಗದೆ ಪಾರಾದರು. ಎಲ್ಲರೂ ಶ್ರೀರಾಮನ ಮತ್ತು ಗುರುಗಳ ಮಹಿಮೆ ಕೊಂಡಾಡಿದರು. ಸಂಚಾರ ಮಾಡುತ್ತಾ ವಸಿಷ್ಠ ಸಾಗರ ಎಂಬಲ್ಲಿ ಬಂದರು. ಅಲ್ಲಿ ಎಲ್ಲಕಡೆಗೆ ಉಪ್ಪು ನೀರು. ಗುರುಗಳು ತಮ್ಮ ಗುರುಗಳನ್ನೇ ಸ್ಮರಿಸಿ ಕೇವಲ ಮಠಕ್ಕೆ ಅಲ್ಲದೇ ಸಾರ್ವಜನಿಕರಿಗಾಗಿ ಬಾವಿ ತೊಡಿಸಿದರು. ಎಲ್ಲ ಬಾವಿ ಗಳಲ್ಲಿ ಸಿಹಿನೀರು ಬಂದಿದ್ದವು. ಇದು ಸತ್ಯಾಭಿನವರ ಗುರುಭಕ್ತಿಯನ್ನು ಎತ್ತಿ ತೋರಿಸುತ್ತದೆ. ಇನ್ನು ರಾಜ ಭಯದಿಂದ ಪಾರಾದ ಸನ್ನಿವೇಶವನ್ನು ತಿಳಿಯೋಣ.
ಸತ್ಯಾಭಿನವರು ಇಬ್ಬರಿಗೆ ಆಶ್ರಮ ಕೊಟ್ಟರು. ವಡ್ಡಿ ಆಚಾರ್ಯ ಎಂಬವರಿಗೆ ಶ್ರೀ ಸತ್ಯಧೀರಾಜ ತೀರ್ಥ ಎಂದು ಕರೆದರು. ಇನ್ನೊಬ್ಬರು ಮಠದ ಶಿಷ್ಯರು ಶ್ರೀ ಸತ್ಯಾಧೀಶ ತೀರ್ಥರು ಎಂದು ಕರೆದರು. ಇಬ್ಬರೂ ಘನ ಪಂಡಿತರು. ಪ್ರತಿವಾದಿಗಳನ್ನು ಜಯಿಸಿ, ಜಯಪತ್ರಿಕೆ ಸಂಭಾವನೆಗಳನ್ನು ಗುರುಗಳ ಪಾದಕ್ಕೆ ಒಪ್ಪಿಸಿದರು. ಗುರುಗಳು ಸಂತೋಷದಿಂದ ಬಂದ ಸಂಭಾವನೆ ಬ್ರಾಹ್ಮಣರಿಗೆ ಕೊಟ್ಟು ತೃಪ್ತಿ ಪಡಿಸಿ ತಾವು ದೇವರಿಗೆ ಮುಟ್ಟಿತೆಂದು ಸಂತೋಷಪಟ್ಟರು
ಒಂದುಸಲ ಗುರುಗಳು ಪರಿವಾರ ಸಮೇತ ಆಂಧ್ರದಲ್ಲಿ ಸಾಗಿದ್ದರು. ಸಂಸ್ಥಾನದಲ್ಲಿ ಎಲ್ಲ ಕುಟುಂಬಸ್ಥ ಗ್ರಹಸ್ಥರು ಎಲ್ಲಜನ ಕೂಡಿ ಕನಿಷ್ಠ ಎರಡು ನೂರು ಜನರಿರಬಹುದು. ಚೋರರು ಮೊದಲೇ ಇವರಲ್ಲಿ ಬಂಗಾರದ ನಾಣ್ಯ ಮೂರ್ತಿ ಇವೆ ಎಂದು ತಿಳಿದುಕೊಂಡಿದ್ದರು. ಸರಿರಾತ್ರಿ ಯಾಗಿತ್ತು. ಚೋರರು ಬಂದು ದಾಳಿ ನಡೆಸಿದರು. ಗುರುಗಳ ಮೇಲೆಯೇ ಬಿದ್ದರು. ದೀವಟಿಗೆ, ಚಾಕು, ಭರ್ಚಿ ಗಳಿಂದ ದೇಹಕ್ಕೆ ಶಿಕ್ಷೆ ಕೊಡಲು ಪ್ರಾರಂಭಿಸಿದರು. ಗುರುಗಳು ಹೆದರದೆ ತಮ್ಮಗುರುಗಳು ಮತ್ತು ರಾಮನನ್ನು ಸ್ಮರಿಸುತ್ತ ಕುಳಿತರು. ಕಿಂಚಿತ್ತೂ ಗಾಯದಕಲೆ, ಸುಟ್ಟಗಾಯ ಆಗಲಿಲ್ಲ. ಚೋರರಿಗೆ ಸುಟ್ಟಗಾಯದ, ಚೂರಿ ಇರಿತದ ಬೇನೆ ಪ್ರಾರಂಭವಾದವು. ಎಲ್ಲಬಿಟ್ಟು ಪರಿವಾರದಲ್ಲಿಯ ಬೆಳ್ಳಿಬಂಗಾರ ಬಿಟ್ಟು ಹಳೆಯ ಸೀರೆ, ಧೋತರ, ಶಾಲು, ತಾಮ್ರದ ಒಡಕ ತಂಬಿಗೆ ಕಟ್ಟಿಕೊಂಡು ಹೋದರು. ಮರುದಿನ ರಾಜ ಬಂದು ತನ್ನ ರಾಜ್ಯದಲ್ಲಿ ಹೀಗೆ ಆಗಿದ್ದರಿಂದ ಕ್ಷಮೆ ಕಿದನು. ಗುರುಗಳು ಅಯ್ಯಾ ನಮ್ಮ ಗುರುಗಳನ್ನು, ರಾಮನನ್ನು ನೆನೆದು ನಾವು ರಕ್ಷಿಸಿಕೊಂಡಿದ್ದೇವೆ. ನೀನು ಬಂದು ನಿನ್ನ ಕರ್ತವ್ಯ ಮಾಡಿದ್ದಕ್ಕೆ ನಿನಗೆಒಳ್ಳೆಯದಾಗಲಿ ಎಂದು ಹರಿಸಿ ಕಳಿಸಿದರು. ನಂತರ ಚೋರರ ಮುಖಂಡ ಬಂದು ಗುರುಗಳೇ ನಿಮ್ಮಿಂದ ನಾವು ಚೋರತನ ಮಾಡಕೂಡದೆಂದು ನಿಶ್ಚಯಿಸಿದ್ದೇವೆ. ನಿಮ್ಮಿಂದ ನಮ್ಮಲ್ಲಿ ಬದಲಾವಣೆಯಾಗಿದೆ ಎಂದು ಸಂಭಾವನೆ ಕೊಟ್ಟು ಹೋದನು.
****
No comments:
Post a Comment