Shri shripAdarAjaru
ArAdhane: jEshTa shuddha chaturdashI
Parampare: #9, in padmanAbha tIrthara maTa which later became popular as shripAdarAja maTa itself
sanyAsa name: lakshInArAyaNa muni
Birth: 1406
sanyAsa period: 1412 - 1504
vidyA gurugaLu: shri vibhudEndra tIrtharu, rAyara matA parampare
shishyaru: shri hayagrIva tIrtharu
vidyA shishyaru: shri vyAsarAjaru
brindAvana: narasimha tIrtha, muLabAgilu
श्रीरंगविट्ठल पदांबुज बंभराय श्रीपादराजगुरवेस्तु नमश्युभाय ॥
लक्ष्मीनारायणमुनीन्वंदे विद्यागुरून्मम ॥
ध्यायंतं मनसा नृसिंहचरणम् श्रीपादराजं गुरुं ।
ಶ್ರೀರಂಗವಿಟ್ಠಲ ಪದಾಂಬುಜ ಬಂಭರಾಯ ಶ್ರೀಪಾದರಾಜಗುರವೇಸ್ತು ನಮಶ್ಯುಭಾಯ ||
ಧ್ಯಾಯಂತಂ ಮನಸಾ ನೃಸಿಂಹಚರಣಮ್ ಶ್ರೀಪಾದರಾಜಂ ಗುರುಂ |
Parents | Sheshagiriyappa & Giriyamma |
Birth Place | Abboor |
Birth Name | Lakshminarayana |
Year of Birth | 1406 |
Upanayana | 1411 |
Brahmopadesha presence | Sri Svarnavarna Tirtharu |
Ashrama Gurugalu | Sri Svarnavarna Tirtharu |
Sanyasa Sweekara | 1412 @ Sriranga |
Ashrama Nama | Sri Lakshminarayana Tirtharu |
Ashrama Shishyaru | Sri Hayagreeva Tirtharu |
Vidya Gurugalu | Sri Vibudendra Tirtharu |
Upasya Moorthi | Gopinatha |
Ankita | Rangavittala(swapna labda), Gopinatha |
Main Shishya | Sri Vyasarajaru |
Rangavittala anugraha | Near Bheema River |
Madhwa Parampare | 8th after Acharya Madhwa |
Grantha | “Vagvajra” (one & only grantha available) |
Brahmahatya dosha removal | Salva Narasimha bhoopala in 1468 AD |
Amsha | Dhruvarajaru |
Daily Naivedya | 64 types bhakshya bhojya |
“Sripadaraja” title received | From Sri Raghunatha Tirtharu |
Got Sripadaraja title at | Karpara Narasimha kshetra |
Vidyapeeta sthapane | At Mulabagilu |
Vrundavana | Mulabagilu – Narasimha Tirtha in 1504AD |
Mruttika Vrundavana | Bangalore, Sriranga, etc |
Important Krutees | Narasimha Dandaka, Madhwanama, Venugeeta, Bhramarageeta, Ugaboga, Keertanaas, Suladees, |
Contemporaries | Brahmanya Tirtharu, Vyasarajaru, Vibudendraru, Vadirajaru, Purandaradasaru, Salva Narasimha Bhoopala, Somanatha Kavi, etc |
Mutt’s Moola purusharu | Sri Padmanabha Tirtharu |
Aradhana Day | Jyesta Shukla Chaturdashi |
Ashwatta Narasimha pratiste | At Karpara Kshetra |
Sripadarajara Keertanegalu – click
- Sripadaraja Pancharathnamaalika Stotra – click
- Sripadarajastakam by Srinidhi Tirtharu – click
- Sripadarajastakam by Vijayeendra Tirtharu – click
“Bhramarageete” by Sripadarajaru – click
Sripadarajaru – Life Story – Kannada – click
Sripadarajaru Life Story – English – click
“Madhwanama” – Kannada Sanskrit Telugu Tamil– click
“suLaadigaLu” “ಸುಳಾದಿಗಳು” – click
“Ugabhogagalu” “ಉಗಾಭೋಗಗಳು” – click
“Shripadaraja Stotra” By Vadirajaru – click
“उगाभॊगगळु” (Ugabogas) – by Sripadarajaru – click
kangalidyatako – ಕಂಗಳಿದ್ಯಾತಕೋ ಕಾವೇರಿ ರಂಗನ – click
- Srinidhi Tirtha’s Navapadya Suratnamala – click
- Sripadaraja Mutt Branches – click
An outstanding Saint in mAdhwa parampare, Shri ShrIpAdarAjaru is an incarnation of King Dhruva popularly known as Bhaktha Dhruva who went on to perform severe penance at a tender age to have the darshan of Lord Shriman nArAyaNa. Pleased with his penance Lord Shriman nArAyaNa blessed him as the monarch of Dhruva Mandala in the Universe for a period of Brahma Kalpa.
shripAdarAjaru was born to Shri shEshagiri AchArya and Smt. Giriamma in abbUr village near Chennapatna. During his childhood he was known as Lakshminarayana. After Upanayana, Shri Lakshminarayana was inducted into Yati Aashrama dharma by Shri Swarnavarna Theertharu and thenceforth was referred to as Shri Lakshminarayana Muni.
Shri Lakshminarayana Muni continued his further studies under the guidance of another great saint Shri vibhudEndra tIrtharu, of rAyara maTa. Given his deep scholarship, he was given the title of ShripAdarAjaru (king of sanyAsIs).
Shri shripAdarAjaru has made an outstanding contribution to propagate tatvavAda. He was a brilliant scholar as well as a great author. He had authored several works on Dvaita Siddhantha - vAgvajra in Sanskrit and madhwanAma in KannaDa are popular. He was Vidya Guru of his gifted disciple Shri Vyasarajaru who went on to become the rAja Guru of Vijayanagara Empire.
Shri ShrIpAdarAjarj reinitiated dAsa sahitya and composed several devaranAmAs in kannaDa.
Shri ShrIpAdarAjaru was honored to sit on the throne and kanakabhisheka was performed on him by King Saluva Narasimha Raya as a token of his gratitude to the great Saint for providing him relief from brahma hatya dOsha.
He was also invited to perform pUja at tirumala. He instead sent his favorite disicple - shri vyAsarAjaru, who did the pUja for 12 years and then handed back the responsibilities to the hereditary family which was performing pUja earlier.
shripAdarAjaru had sukha prArabhdha given his royal lineage. Every day, he used to offer 64 types of items in the naivEdya for God and then partake the same. This was true even when he was performing pUjE in remote and small places.
muLabAgilu became famous during his time as he was running a University there. In muLabAgilu town, he did the pratishTApane of shri lakshmInArAyana dEvaru. He has also done several other pratishTApanEs including the ashwath narasimha dEvaru in chikalparavi, the village where later shri vijaya dAsaru was born and he did sAdhanE at the feet of ashwath narasimha dEvaru.
There is also an interesting tale behind the popularity of narasimha tIrtha. When shrIpAddarAjaru had become old he wanted to have Ganga snAna but could not travel due to his old age. On a prayer made by him, River Ganga came down to mix with the waters of narasimha tIrtha, the pushkaraNi.
tham vandE narasimha tIrtha nilayam shri vyAsarAt pUjitham
dhyAyantam manasa narasimha charanam shri shrIpAdarAjam gurum.
*****
During his final journey on this earth Sri Sreepaadarajaru came down to Mulabagalu and took over the reigns of Sri Padmanabha Theertha Mutt, that thenceforth came to be famously known as Sri Sreepaadaraja Mutt. The place where Sri Sreepadarajaru settled down at Mulabagalu is known as Nrusimha Theertha where Lord Naarasimha got manifested in a Yoga form (Yoga Narasimha) from a sketch drawn by Saint Sri Akshobhya Theertharu with Angara
There is also an interesting tale behind the popularity of Nrusimha Theertha. On one occasion Sri Sreepadarajaru wanted to have Ganga Snana (bath in river Ganges) but could not travel due to his old age. On a prayer by him, it seems the Divine River Ganges came down to mix with the waters of Nrusimha Theertha. Since then, devotees believe, a dip in Nrusimha Theertha at Mulabagalu as equivalent to Ganga Snana. The place is also sanctified with the presence of Lord Hanuman adjacent to the Moola Brindavana installed by Sri Vyasarajaru subsequently.
A great saint, philosopher and a benevolent guru Sri Sreepaadarajaru, made Brindavana Pravesa on the 14th day (Chaturdasi) of bright fortnight (sukla paksha) in the lunar month Jyesta masam and fulfilling the desires of his devotes by mere darshan of his Brindavana, even by chanting his name. This day every year is celebrated as Sri SreepadaRajara Aaradhana. His moola Brindavana is located at Sri Nrusimha Theertha near Mulabagalu on the Bangalore – Chennai national high way about 100 km from Bangalore..
ಪದವಾಕ್ಯ ಪ್ರಮಾಣಾಬ್ದಿ ವಿಕ್ರೀಡನ ವಿಶಾರದಾನ್
ಲಕ್ಷ್ಮೀನಾರಾಯಣ ಮುನೀನ್ ವಂದೇ ವಿದ್ಯಾ ಗುರೂನ್ ಮಮ
( ಶ್ರೀವ್ಯಾಸರಾಜರು - ತಾತ್ಪರ್ಯ ಚಂದ್ರಿಕಾ )
ಜ್ಞಾನ ವ್ಯರಾಗ್ಯ ಭಕ್ತ್ಯಾದಿ ಕಲ್ಯಾಣ ಗುಣಶಾಲಿನಃ ಲಕ್ಷ್ಮೀನಾರಾಯಣ ಮುನೀನ್ ವಂದೇವಿದ್ಯಾಗುರೂನ್ ಮಮ
( ಶ್ರೀವ್ಯಾಸರಾಜರು - ನ್ಯಾಯಾಮೃತ )
********
Brief History of Sri Sripadaraja Theertha
*******
Prince Dhruva at the age of five aspired to sit on the lap of his father, king Uttanapada. But he was denied this privilege by his step mother, Suruchi, who exercised great influence on his father and was told that he could enjoy the privilege aspired for, only on being born as her son. Being vexed at this, he was advised by his own mother, sunithi, to pray God to accomplish his desire. Accordingly, Dhruva went to the dense forest to offer prayer to Lord Shriman Narayana.
********
- Narayana
- Lakshmi
- Vayu, Hanumantha
- Shiva
read more in kannada
click ಶ್ರೀಪಾದರಾಜರು ೧೫೦೪
******
info from sumadhwaseva.com--->
ಶ್ರೀಲಕ್ಷ್ಮೀನಾರಾಯಣ ಮುನಿಗಳು (ಶ್ರೀಪಾದರಾಜರು) ಶ್ರೀಮದಾಚಾರ್ಯರ ನಂತರ ೮ನೆಯವರು. ಮುಳಬಾಗಿಲು ಕ್ಷೇತ್ರದ ಹಿರಿಮೆಗರಿಮೆಗಳ ಪೂರ್ಣ ಅರಿವು ಅವರಿಗಿತ್ತು. ಅಪರೋಕ್ಷ ಜ್ಞಾನಿಗಳಾದ ಶ್ರೀ ಲಕ್ಷ್ಮೀನಾರಾಯಣ ಮುನಿಗಳು ಕಂಡ ಮುಳಬಾಗಿಲಿನ ಉತ್ಕೃಷ್ಟತೆಯನ್ನು ನಾವು ಅವಗಾಹಿಸಲು ಅಸಾಧ್ಯವಾದರೂ,ಸಾಮಾನ್ಯ ಸಾಧಕಮಾನವರ ದೃಷ್ಟಿಪಥದಲ್ಲಿ ಸಂಕ್ಷಿಪ್ತವಾಗಿ ನೋಡಹೊರಟರೆ ಅದ್ಭುತವಾದ ಮಹತ್ತರ ವಿಷಯಗಳು ಕೆಳಕಂಡಂತೆ ಹೊರಬೀಳುತ್ತವೆ.
********
ಇಂದು ಶ್ರೀಪಾದರಾಜ ಗುರುಗಳ ಮಧ್ಯ ಆರಾಧನಾ
ಶ್ರೀಪಾದರಾಜರ ಮಹಿಮೆಯನ್ನು ಸಾರುವ ವಿಜಯದಾಸರ ನಾಲ್ಕು ಶಬ್ಧಗಳು..
ಗೋಪಾದ ಉದಕದೊಳು ರತುನ ದೊರಕಿದಂತೆ|
ಸಾಮಾನ್ಯವಾಗಿ ರತ್ನವು ಸಮುದ್ರದ ಆಳದಲ್ಲಿ ದೊರೆಯುವ ವಸ್ತು. ಅದನ್ನು ಪಡೆಯಬೇಕಾದಲ್ಲಿ ಬಹಳಷ್ಟು ಪ್ರಯತ್ನದ ಆವಶ್ಯಕತೆ ನಮ್ಮ ಮುಂದಿದೆ. ಅದು ಸಿಕ್ಕರೂ ಅದರ ಮೇಲಿನ ಕೊಳೆಯನ್ನು ತೆಗೆದು ಅದನ್ನು ಶುದ್ಧಗೊಳಿಸಲು ಸಮಯ ಬೇಕೇ ಬೇಕು.
ಆದರೆ
ಅದೇ ರತ್ನ ಒಂದು ಗೋವಿನ ಹೆಜ್ಜೆಯ ಗುರುತಿನಲ್ಲಿ ನಿಂತಿರುವ ನೀರಿನಲ್ಲಿ ದೊರೆತರೆ ತೆಗೆದುಕೊಳ್ಳುವುದು ಎಷ್ಟು ಸುಲಭ ಅಲ್ವಾ? ಶುದ್ಧಗೊಳಿಸುವುದು ಇನ್ನು ಬೇಗ ಸಾಧ್ಯ
ಇದೇ ನಮ್ಮ ಗುರುಗಳಾದ ಶ್ರೀಪಾದರಾಜರ speciality. ದರ್ಶನಮಾತ್ರಾತ್ ಶ್ರೀಪಾದರಾಣ್ಮುನಿಃ
ಶ್ರೀಪಾದರಾಜರ ಸ್ಮರಣೆ ಮಾಡುವವರ ಪಕ್ಕದಲ್ಲಿ ನಿಂತರೂ ಸಾಕು ಇಹದಲ್ಲೂ ಸುಖ, ಪರದಲ್ಲೂ ಸುಖ ಪ್ರಾಪುತವಾಗುವುದು ಬಹಿರಂತರ ಸೌಖ್ಯ". ಇನ್ನು ಅವರ ಸ್ಮರಣೆಯನ್ನು ಮಾಡಿಬಿಟ್ಟರೆ ನಾವು ಕೇಳಿದ್ದೆಲ್ಲವು ಗೋಪಾದ ನೀರಿನಲ್ಲಿ ಸಿಕ್ಕ ರತ್ನದಷ್ಟು ಸುಲಭವಾಗಿ ಲಭ್ಯ.
ಅರುಣೋದಯದಲೆದ್ದು ಶ್ರೀಪಾದರಾಜರೆಂದು ಸ್ಮರಿಸಿದ ಮಾನವರಿಗೆ ಸರ್ವ ಸಂಪದವು"
ಲೋಕದಲ್ಲಿ ನಾವು ಯಾರ ಸ್ಮರಣೆ ಅಥವ ಸ್ತೋತ್ರ ಮಾಡುತ್ತೇವೆಯೋ ಅವರದೇ ಕರುಣೆ ಗಿಟ್ಟಿಸುವುದು ಕಷ್ಟ. ಆದರೆ
ಶ್ರೀಪಾದರಾಜರ ಮತ್ತೊಂದು speciality ಎಂದರೆ ಇವರ ಸ್ಮರಣೆಯನ್ನು ಮಾಡಿಬಿಟ್ಟರೆ ಬೇರೆ ಜ್ಞಾನಿಗಳ ಕರುಣೆಯೂ ಲಭ್ಯ. *"
ಇವರ ಪ್ರಸಾದವಾದರೆ ವ್ಯಾಸಮುನಿರಾಯ, ಕವಿರಾಯ| ಪುರಂದರದಾಸರು ಮಿಗಿಲಾದವರ ಕರುಣವಿನ್ನು ಸಿದ್ಧಿಸುವುದು ಕೇಳಿ||".
ಹಾಗಾದರೆ ಶ್ರೀಪಾದರಾಜರಿಗೆ ಇಂತಹ ವೈಭವ ಪ್ರಾಪ್ತವಾದದ್ದಾದರೂ ಹೇಗೆ?
" ಅಹಿಶಯನನ ಒಲುಮೆಯಿಂದ" ಅಂತ ಉತ್ತರಿಸಿದ್ದು ವ್ಯಾಸರಾಯರು.
ಇಂತಹ ಗುರುಗಳನ್ನು ಪಡೆದ ನಾವೇ ಧನ್ಯರು.
ಧ್ರುವಮರಿಯದಲೇ ಇದನೆ ಓದಿದ ಮನುಜನಿಗೆ|
ಬಂದ ಭವ ರೋಗ ಪರಿಹಾರ ವಿಜಯವಿಠ್ಠಲ ಒಲಿವ.||
🙏ಶ್ರೀ ಕೃಷ್ಣಾರ್ಪಣ ಮಸ್ತು🙏
✍ ನನ್ನ ಆತ್ಮೀಯ ರಾದ
ಶ್ರೀ ಭಾರತೀಶ. ಅವರು ಹೇಳಿದ್ದು.
**********
********
" ಶ್ರೀ ಶ್ರೀಪಾದರಾಜ ಸ್ತುತಿ "
ಶ್ರೀ ವ್ಯಾಸರಾಜರು.....
ಸುರತರುವಿನಂದದಿ ಬೇಡಿದಿಷ್ಟಾರ್ಥವ ।
ಕರೆದಿತ್ತ ಈ ಬುಧ ಜನರಿಗೆಲ್ಲಾ ।।
ಯದ್ವೃ೦ದಾವನ ಸೇವಯಾ ಸುವಿಮಲಾಂ ವಿದ್ಯಾಂ ಪಶುಂ ಸಂತತಿಮ್
ಜ್ಞಾನಾಜ್ಞಾನಾಮನಲ್ಪಕೀರ್ತಿನಿವಹಂ ಪ್ರಾಪ್ನೋತಿ ಸೌಖ್ಯಂ ಜನಃ ।
ತಂ ವಂದೇ ನರಸಿಂಹತೀರ್ಥ ನಿಲಯಂ ಶ್ರೀ ವ್ಯಾಸರಾಟ್ ಪೂಜಿತಮ್
ಧ್ಯಾಯಂತಂ ಮನಸಾ ನೃಸಿಂಹ ಚರಣಂ ಶ್ರೀಪಾದರಾಜಂ ಗುರುಮ್ ।।
ಯಾವ ಶ್ರೀ ಶ್ರೀಪಾದರಾಜರ ವೃಂದಾವನ ಸೇವೆಯಿಂದ ಮೋಕ್ಷ ಸಾಧಕ ವಿದ್ಯೆಯೂ; ಪಶು ಸಂಪತ್ತೂ; ಸಂತತಿ ಸಂಪತ್ತೂ ಲಭ್ಯವಾಗುತ್ತದೆಯೋ; ಯಾರ ನಾಮಸ್ಮರಣೆಯಿಂದಲೇ ಜ್ಞಾನಾಭಿವೃದ್ಧಿಯನ್ನೂ; ಮಹತ್ಕೀರ್ತಿ ಸಮೂಹವನ್ನೂ ಶೀಘ್ರದಲ್ಲಿಯೇ ಜನರು ಪಡೆಯುತ್ತಾರೆಯೋ ಅಂಥಾ ನರಸಿಂಹ ವಾಸಿಗಳನ್ನೂ; ಶ್ರೀ ವ್ಯಾಸರಾಜರಿಂದ ಪೂಜಿತರೂ; ಸದಾ ಶ್ರೀ ನರಸಿಂಹದೇವರ ಚರಣಾರವಿಂದದ ಸ್ಮರಣೆಯಲ್ಲಿಯೇ ನಿರತರೂ ಆದ ಶ್ರೀ ಶ್ರೀಪಾದರಾಜ ಗುರುಗಳನ್ನು ನಮಿಸುತ್ತೇನೆ!!
ಶ್ರೀ ವಿಜಯೀಂದ್ರತೀರ್ಥರು....
ತ್ವಂ ಚೇನ್ಮಾ ಜಯಸಿದ್ಧಿಚಾಮರಧುನೀಂ ಗಚ್ಛಾವಿನೋಚೇತ್ತದಾ
ಸನ್ಯಸ್ತೋಭವ ಪಂಡಿತೇತಿ ಸದಸೀ ಕ್ಷೀಣೀಪತೇ ಪತ್ರಿಕಾ ।
ಆಲೇಖ್ಯ ಪ್ರಿಯಶಿಷ್ಯವರ್ಯ ಯತಿನಾ ಯತ್ಯಾಶ್ರಮ ವಾದಿನಮ್
ಜಿತ್ವಾದಾಪಿತವಾಂಶ್ಚತಸ್ಯ ಸುಮತೀರ್ಭೂಯಾತ್ಸನಃ ಶ್ರೇಯಸೇ ।।
ನೀವು ಗೆದ್ದರೆ ಸೋತ ನಾವು ಗಂಗೆಯ ಪಾಲಾಗಿ ಬಿಡುವೆವು. ಇಲ್ಲವಾದರೆ ನೀವು ಸೋತಲ್ಲಿ ಸಂನ್ಯಾಸಾಶ್ರಮವೇ ಸ್ವೀಕರಿಸಬೇಕು ಎಂದು ಸವಾಲು ಎಸೆದ ರಾಜರ ಮೂಲಕ ಪತ್ರವನ್ನು ಕಳಿಸಿ ವಾದ - ಪ್ರತಿವಾದದ ಸಿದ್ಧತೆ ನಡೆಸಿದರು. ಕಡೆಗೆ ತಮ್ಮ ಶಿಷ್ಯನ ( ಶ್ರೀ ವ್ಯಾಸರಾಜರ ) ಜೊತೆಯಲ್ಲೇ ಜರುಗಿದ ಆ ವಾದದಲ್ಲಿ ಪ್ರತಿವಾದಿ ( ಶ್ರೀ ಪಕ್ಷಧರಮಿಶ್ರ ) ಸೋತು ಹೋದನು. ಸಂನ್ಯಾಸತ್ವ ಒಪ್ಪಿಕೊಂಡ. ಅಂಥಹಾ ಪ್ರತಿಭಾ ಸಂಪನ್ನರೂ, ಪರಮ ತಪಸ್ವಿಗಳೂ ಆದ ಶ್ರೀ ಶ್ರೀಪಾದರಾಜರು ನಮಗೆ ಮಂಗಳವನ್ನುಂಟು ಮಾಡಲಿ!!
ಶ್ರೀ ಪುರಂದರದಾಸರ ಪುತ್ರರೂ; ಶ್ರೀ ಭೃಗು ಮಹರ್ಷಿಗಳ ಅವತಾರರೂ ಆದ ಶ್ರೀ ಗುರುಮಧ್ವಪತಿವಿಠಲ " ರು...
ವರ ಧೃವನ ಅವತಾರ ಶ್ರೀಪಾದರಾಯರೇ ।
ಸಿರಿ ರಂಗವಿಠ್ಠಲನ್ನ ಉಪಾಸಕರು ।
ತರುಳ ಪ್ರಹ್ಲಾದನೇ ಜನಿಸಿದ ಶೇಷಾಂಶ ।
ಗುರು ವ್ಯಾಸರಾಯರೇ ಶ್ರೀ ಕೃಷ್ಣನ ಉಪಾಸಕರು ।।
ಸುರಮುನಿ ಅವತಾರ ನಾರದರೇ ಪುರಂದರದಾಸರು ।
ಸಿರಿ ಪುರಂದರವಿಠಲನುಪಾಸಕರು ।
ಧರೆಯೊಳಗೆ ಮೂವರಿಗೆ ನರರೆಂದ ನರರಿಗೆ ।
ನರಕ ತಪ್ಪದು ಕಾಣೋ ಗುರುಮಧ್ವಪತಿವಿಠ್ಠಲ ।।
ವರಧ್ರುವ ಶ್ರೀಪಾದರಾಜ ಗುರುಗಗಳು ಭಕ್ತ ಪ್ರಹ್ಲಾದ ಶ್ರೀ ವ್ಯಾಸರಾಜರು ಶಿಷ್ಯರತ್ನದ ಜೊತೆಯಲ್ಲಿ ಕರ್ನಾಟಕದ ಸೌಭಾಗ್ಯ ಸಂಪದ ಕನ್ನಡ ನುಡಿಯ ಶ್ರೀಮಂತಿಕೆ ಹೆಚ್ಚಿಸಿ ಈ ಹರಿದಾಸ ಪರಂಪರೆಯು ಮುಂದೆಯೂ ಸುಲಲಿತವಾಗಿ ಸದಾ ಮಂಜುಳ ನಿನಾದದಿಂದ ಭಕ್ತಿರಸ ಹರಿಯುವಂತಾಗಲು ಸ್ಫೂರ್ತಿಯಾದರು!!
ಶ್ರೀ ಶ್ರೀನಿಧಿತೀರ್ಥರು...
ಶ್ರೀವ್ಯಾಸರಾಜ ಫಣಿಬಂಧ ನಿವಾರಕಾಯ
ತದ್ಭಾಷಯೈವ ಫಣಿರಾಜ ಸಂತೋಷಕಾಯ ।
ಶ್ರೀಮತ್ಸುರತ್ನ ಖಚಿತೋಜ್ಜ್ವಲ ಕುಂಡಲಾಯ
ಶ್ರೀಪಾದರಾಜ ಗುರವೇsಸ್ತು ನಮಃ ಶುಭಾಯ ।।
ಶ್ರೀ ವ್ಯಾಸರಾಜರಿಗೆ ಒದಗಿದ ಸರ್ಪ ಬಂಧವನ್ನು ಸರವಾಗಿಯೇ ಬಿಡುಗಡೆಗೊಳಿಸಿದ; ಸರ್ಪದ ಭಾಷೆಯಿಂದಲೇ ಮಾತನಾಡಿ ಶ್ರೀ ಪದ್ಮನಾಭತೀರ್ಥರಿಗೂ ಪರಮ ಸಂತೋಷವನ್ನು ತಂದ; ಚೆನ್ನಾಗಿ ರತ್ನಖಚಿತವಾದ ಕಂಗೊಳಿಸುವ ಕರ್ಣಕುಂಡಲಗಳುಳ್ಳ ಪರಮ ಮಂಗಳಕರರಾದ ಶ್ರೀ ಶ್ರೀಪಾದರಾಜ ಗುರುಗಳಿಗೆ ನಮಸ್ಕರಿಸುತ್ತೇನೆ!!
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
" ಶ್ರೀ ಶ್ರೀಪಾದರಾಜರ ಭಕ್ತಿ ಸಾಹಿತ್ಯದ ಹಿರಿಮೆ "
ಕನ್ನಡ ಸಾಹಿತ್ಯದ ೨೦೦೦ ವರ್ಷಗಳ ಸುದೀರ್ಘ ಇತಿಹಾಸದಲ್ಲಿ " ಹರಿದಾಸ ಸಾಹಿತ್ಯ " ಒಂದು ಪ್ರಮುಖ ಘಟ್ಟ.
ಹೆಚ್ಚು ಕಡಿಮೆ ೮ ಶತಮಾನಗಳ ವ್ಯಾಪ್ತಿಯ ಈ ಭಕ್ತಿ ಸಾಹಿತ್ಯ ಪ್ರಕಾರವನ್ನು ಸುಮಾರು ೫೦೦೦ ಜನ ಹರಿದಾಸರು ತಮ್ಮ ಬಗೆ ಬಗೆಯ ರಚನೆಯಿಂದ ಮುಖ್ಯವಾಗಿ ಕೀರ್ತನೆಗಳಿಂದ ಸಮೃದ್ಧವಾಗಿಸಿದ್ದಾರೆ.
ಈ ಕೀರ್ತನೆಗಳು ಇಂದಿಗೂ ಜನಪ್ರಿಯವಾಗಿ ಪ್ರಚಾರದಲ್ಲಿವೆ.
ಕೆಲವು ಮುಖ್ಯ ಹರಿದಾಸರುಗಳ ಹೆಸರುಗಳು ಮನೆ ಮಾತಾಗಿದೆ.
ಸಾಹಿತ್ಯಕ ಶ್ರೀಮಂತಿಕೆಯಿಂದ ಮಾತ್ರವಲ್ಲದೆ ದ್ವೈತ ಸಿದ್ಧಾಂತವನ್ನು ಅಧ್ಯಯನ ಮಾಡುವ ದೃಷ್ಟಿಯಿಂದಲೂ " ಹರಿದಾಸ ಸಾಹಿತ್ಯ " ಮಹತ್ವದ್ದಾಗಿದೆ.
ಕರ್ನಾಟಕ ಸಂಗೀತಕ್ಕೆ ಹರಿದಾಸರ ಕೀರ್ತನೆಗಳ ಕೊಡುಗೆಯಂತೂ ಅಸಾಧಾರಣವಾದುದು.
ನಮ್ಮ ಪ್ರಾಚೀನ ಸಾಹಿತ್ಯದ ಇತರ ಕೃತಿಗಳೊಂದಿಗೆ ದಾಸ ಸಾಹಿತ್ಯವನ್ನು ಹೋಲಿಸಿದಾದ ಎದ್ದು ಕಾಣುವ ಮುಖ್ಯ ಅಂಶವೆಂದರೆ....
ಈ ಸಾಹಿತ್ಯದ ವಾಕ್ ಪರಂಪರೆ
ಗ್ರಂಥಸ್ಥವಾಗಿ ಉಳಿದು ಬಂದಿರುವುದಕ್ಕಿಂತಲೂ ಜನರ ಬಾಯಲ್ಲಿ ನಿಂತಿರುವುದೇ ಹೆಚ್ಚು
ಭಕ್ತರ ಹೃದಯದ ಮೊರೆಗಳಾದ ಈ ಕೀರ್ತನೆಗಳು ತಲೆಮಾರಿನಿಂದ ತಲೆಮಾರಿಗೆ ಹಬ್ಬಿ ಬಂದಿದೆ
ನೆನೆಪಿನಲ್ಲಿ ನಿಂತ ಈ ರಚನೆಗಳ ಗ್ರಂಥ ರೂಪದ ಕಡೆ ಯಾರೂ ಅಷ್ಟಾಗಿ ಗಮನ ವಹಿಸಲಿಲ್ಲ
ಈ ಕಾರಣದಿಂದ ಕೀರ್ತನೆಗಳ ಅಧೀಕೃತ ಪಠ್ಯ ಆವೃತ್ತಿಗಳು ನಮಗೆ ದೊರೆಯುವುದಿಲ್ಲ.
ಭಕ್ತನಿಗೆ ಭಗವಂತನ " ಚರಣ ರತಿ " ದೊರೆಯುವ ತನಕ ಈ ಮೊರೆ ಕರೆಗಳಿಗೆ ಕಡೆಯಿಲ್ಲ.
ಹರಿಯೇ ನಿನ್ನ ಒಮ್ಮೆ ನೆನೆದವ ।
ನರಕಕೆ ಹೋಗನಂತೆ ಆನಂ ಒಮ್ಮೆ ಇಮ್ಮೆ ನೆನೆವೆನಯ್ಯ ।।
ಎಂದು ಒಂದುಬಾರಿ ಪರಿತಪಿಸಿದರೆ, ಮತ್ತೊಮ್ಮೆ...
ಕರುಣದಿ ತನುಮನಂಗಳೆಲ್ಲವು । ನಿನ್ನ ।
ಚರಣ ಕಮಲಕೊಪ್ಪಿಸಿದ ಬಳಿಕ ।
ಮರಳಿ ಎನ್ನ ಮರಳು ಮಾಡುವರೇ ।
ಸರಕು ಒಪ್ಪಿಸಿದ ಮ್ಯಾಲೆ ಸುಂಕವುಂಟೇ ದೇವಾ ।
ಕರುಣಾಕರ ನಿನ್ನ ಚರಣದಡಿಯೊಳಿಟ್ಟು ಕಾಯೋ ರಂಗವಿಠಲ ।।
ಹರಿದಾಸರಿಗೆ ಮುಖ್ಯವಾಗಿ ಬೇಕಾಗಿರುವದು ಭೋಗ್ಯ ಭಾಗ್ಯಗಳಲ್ಲ. ಒಡವೆ ಒಡ್ಯಾಣಗಳಲ್ಲ.
ಆಗಬೇಕು ರಾಜ್ಯ ಭೋಗಗಳೆನಗೆಂದು ।
ಈಗ ನಾನು ಬೇಡಿ ಬಂದುದಲ್ಲ ।
ನಾಗಶಯನ ರಂಗವಿಠಲ ನಾ ನಿನ್ನ ।
ಬಾಗಿಲ ಕಾಯ್ವ ಭಾಗ್ಯ ಸಾಕೆಂದರೆ ।।
ಇದನಾದರೂ ಕೊಡದಿದ್ದರೆ ನಿನ್ನ ।
ಪದ ಕಮಲವ ನಂಬಿ ಭಜಿಸುವುದೆಂತೋ ।।
ಎಂದು ಪ್ರಶ್ನಿಸುವರು.
ನಾ ನಿನಗೇನೂ ಬೇಡುವುದಿಲ್ಲ ।
ಎನ್ನ ಹೃದಯ ಕಮಲದೊಳು ನೆಲೆಸಿರು ಹರಿಯೇ ।
ಎಂದು ವಿನಂತಿ ಮಾಡಿಕೊಂಡು, ತಮ್ಮ ಅವಯವಾದಿಗಳು ಆ ಭಗವಂತನ ಸೇವೆಯಿಂದ ಸಾರ್ಥಕವಾಗಲೆಂದು ಹಾರೈಸುವರು.
ವಯಸ್ಸಾದರೂ ವೈರಾಗ್ಯವಂಕುರಿಸದಂತಿರಲು....
ಎನ್ನ ಮನ ವಿಷಯಂಗಳಲಿ ಮುಣಗಿತೋ ।
ಎನ್ನ ತನುವು ವೃದ್ಧಾಪ್ಯ ಐದಿತೋ । ಅಂತ ।
ಕನ ಕರೆ ಬಾಹೋ ಹೊತ್ತಾಯಿತೋ । ಕಾಲ ವಿಳಂ ।
ಬನ ವಿನಿತಿಲ್ಲವಯ್ಯಾ ವ್ಯಾಳೆ ಅರಿತು ।
ಬಿನ್ನಹ ಮಾಡಿದೆ ।।
ಹೀಗೆ ತರಳನ ಬಿಡುವ ತಾಯಿಗಳು೦ಟೆ....
ನೀ ಕರುಣಾನಿಧಿಯೆಂಬ ಬಿರುದು ಸಲ್ಲಿಸು ದೇವಾ ।
ಎಂದು ಬಲವಾಗಿ ಮೊರೆ ಹೋಗುವರು. ಚಂಚಲ ಚಿತ್ತದ ಪರದಾಟವನ್ನು ಬಲ್ಲ ಶ್ರೀ ಶ್ರೀಪಾದರಾಜರು...
ನಾನೇ ಸಜ್ಜನನಾದರೆ ಇಂಥ ಹೀನ ವಿಷಯಂಗಳಿಗೆರಗುವೆನೇನಯ್ಯಾ ।
ಎಂದು ಹಲವಾರು ದುರಾಚಾರಗಳನ್ನು ಉಲ್ಲೇಖಿಸಿ....
ದುರಿತ ಗಜ ಪಂಚಾನನ ।
ನರಹರಿಯೇ ದೇವರ ದೇವ ಕಾಯೋ ಗೋವಿಂದ ।।
ಎಂದು ಸಕಲ ಸಂಕಷ್ಟ ಪರಿಹಾರಕನಾದ ಶ್ರೀ ಹರಿಯನ್ನು ಆಶ್ರಯಿಸುವರು.
ಭಕ್ತನಿಗೆ ಭಗವಂತನೆಷ್ಟು ಪ್ರಿಯನೋ ಅವನ ದಾಸರೂ ಅಷ್ಟೇ ಬೇಕಾದವರು.
ಉತ್ತಮರ ಸಂಗಯೆನಗಿತ್ತು ಸಲಹೋ ।
ಎಂದು ಸತ್ಸಂಗದ ಸೌಭಾಗ್ಯವನ್ನು ನಿವೇದಿಸಿಕೊಂಡು.....
ನೀನೆ ಬಲ್ಲಿದೆನೋ ರಂಗಾ ।
ನಿನ್ನ ಭಕ್ತರು ಬಲ್ಲಿದರೋ ।।
ಎಂದು ವಿಸ್ಮಯ ಪಡುವರು. ಏಕೆಂದರೆ, ಪರಮಾತ್ಮನು ಸರ್ವದಾ ಭಕ್ತಾಪರಾಧೀನನಾಗಿದ್ದರೆ.
ಬಾಲಕನಾದ ಪ್ರಹ್ಲಾದನಿಗಾಗಿ ಕಂಭದಿಂದ ಪ್ರಾದುರ್ಭಾವವಾದ ಅವನ ಭಕ್ತವಾತ್ಸಲ್ಯ ಅತಿಶಯವಾದುದು.
ಧರ್ಮರಾಯನ ಮನೆಗೆ ಕರೆದಲ್ಲಿ ಹೋಗುವನು.
ಅರ್ಜುನನ ರಥಕ್ಕೆ ಸಾರಥಿಯಾಗಲು ಹಿಂತೆಗೆಯುವವನಲ್ಲ.
ಬಲಿಯ ಮನೆಯ ಬಾಗಿಲು ಕಾಯಲು ಅಣಿಯಾದನು.
ತನ್ನನ್ನು ಬಾಣದಿಂದ ಹೊಡೆದು, ಆ ತರುವಾಯ ಹೊಗಳಿ ಹಾಡಿದ ಭಕ್ತ ಭೀಷ್ಮನಿಗೆ ಅಭಯವೀಯಲೂ ಸಿದ್ಧ.
ಈ ರೀತಿಯಾಗಿ ಶ್ರೀ ಧೃವಾಂಶ ಶ್ರೀಪಾದರಾಜರು ಭಕ್ತನ ಆಸೆ, ಆಕಾಂಕ್ಷೆಗಳನ್ನೂ, ಆತುರ ಆತಂಕಗಳನ್ನೂ ಬಿಡಿಬಿಡಿಯಾಗಿ ಬಣ್ಣಿಸಿರುವರು.
ಭಗವಂತನ ಕೃಪೆಯ ರಹಸ್ಯವನ್ನು ಶ್ರೀ ಶ್ರೀಪಾದರಾಜರು ....
ಆರು ಗತಿ ನಿನಗಧಿಕರಾರು ಧಾರುಣಿಯೊಳಗೆ ।
ತೋರಿಸೈ ಕರುಣಾನಿಧಿಯೇ ಕೃಷ್ಣಾ ।
ಈರೇಳು ಲೋಕಕಾಧಾರವಾದವಗೆ ಬಲು ।
ಭಾರವಾದವನೇ ನಾನು ಕೃಷ್ಣಾ ।
ಮೀರಿ ನುಡಿಯಲು ಹದಿನಾರೆರಡು ಪಲ್ಗಳು ।
ಬೇರು ಕಳಿಕಳಿಯಿತೊ ಕೃಷ್ಣಾ ।
ತೋರು ಬಂಕಾಪುರದ ಧಾರುಣಿ ಪುರವಾಸ ।
ವೀರ ನರಸಿಂಹ ದೇವ ಕೃಷ್ಣಾ ।।
ಎಂಬುದಾಗಿ ಬಂಕಾಪುರದ ಶ್ರೀ ನರಸಿಂಹನ ಸನ್ನಿಧಾನದಲ್ಲಿ ಈ ಮೊರೆ ಗಂಗಾ ಪ್ರವಾಹದಂತೆ ಹರಿದಿದೆ.
ಭಕ್ತನು ತನ್ನ ಅಜ್ಞಾನಕ್ಕಾಗಿ ತನ್ನನ್ನು ತಾನೇ ನಿಂದಿಸಿಕೊಳ್ಳುವಲ್ಲಿ....
ಹರಿ ನಾರಾಯಣನೆಂದು ಕರವೆತ್ತಿ ಮುಗಿದೊಮ್ಮೆ ಮೈ ।
ಮರೆದು ನಟಿಸಲಿಲ್ಲ ಕೃಷ್ಣಾ ।
ಹರಿ ಸ್ಮರಣೆ ಸ್ಮರಿಸಿ ಸಿರಿ ತುಲಸಿ ಪುಷ್ಪವನು ।
ಕರವೆತ್ತಿ ನೀಡಲಿಲ್ಲ ಕೃಷ್ಣಾ ।
ಸರ್ವಜ್ಞರಾಯರು ವಿರಚಿಸಿದ ಗ್ರಂಥವನು ।
ದರುಶನವೇ ಮಾಡಲಿಲ್ಲ ಕೃಷ್ಣಾ ।
ಸ್ಮರಿಸಲಾರದ ಪಾಪ ಸ್ಮರಣೆ ಪೂರ್ವಕ ಮಾಡಿ ।
ಸ್ಥಿರಭಾರನಾದೆನಲ್ಲೊ ಕೃಷ್ಣಾ ।।
ಶ್ರೀ ಕೃಷ್ಣನ ವಿಚಾರವನ್ನು ತೆಗೆದುಕೊಂಡರೆ ಶ್ರೀ ಶ್ರೀಪಾದರಾಜರ ಕೃತಿಗಳ ಬಹು ಭಾಗ ಇದಕ್ಕೆ ಮೀಸಲಾಗಿದೆ ಎನ್ನಬಹುದು.
ಕನ್ನಡದಲ್ಲಿ " ಗೋಪೀಗೀತೆ - ಭ್ರಮರಗೀತೆ - ವೇಣುಗೀತೆಗಳನ್ನು ರಚಿಸಿದ ರಸಿಕರಲ್ಲಿ ಶ್ರೀ ಶ್ರೀಪಾದರಾಜರಿಗೆ ಅಗ್ರ ಮರ್ಯಾದೆ ಸಲ್ಲುತ್ತದೆ.
ಶ್ರೀ ಕೃಷ್ಣನ ಬಾಲ್ಯ, ಯೌವನಗಳ ಲೀಲಾ ವಿಲಾಸವನ್ನು ಶ್ರೀ ಶ್ರೀಪಾದರಾಜರು ವಿಧ ವಿಧವಾಗಿ ವರ್ಣಿಸುತ್ತಾರೆ.
ತಾವಾಗಿಯೋ ಅಥವಾ ಗೋಪಿಯ ಪರವಾಗಿಯೋ ಶ್ರೀ ಶ್ರೀಪಾದರಾಜರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಒಂದೆರಡು ರಚನೆಗಳಿಗೆ ಅವರಿಗೆ ಶ್ರೀಮದ್ಭಾಗವತವೇ ಮುಖ್ಯ ಆಧಾರವೆನ್ನಿಸಿದರೆ, ಇತರ ರಚನೆಗಳಿಗೆ ಅವರ ರಸಾನುಭವವೇ ಸಾಕ್ಷಿಯಾಗಿದೆ.
" ವಾತ್ಸಲ್ಯ ಭಾವ '
ಹರಿದಾಸರಿಗೆ ಶ್ರೀ ಕೃಷ್ಣನ ಚರಿತ್ರೆಯಲ್ಲಿ ಅವನ ಬಾಲ್ಯವೆಂದರೆ ಅಚ್ಚುಮೆಚ್ಚು. ಶ್ರೀಮದ್ಭಾಗವತದ ದಶಮಸ್ಕಂದವನ್ನೆಲ್ಲಾ ಇಲ್ಲಿ ಧಾರಾಳವಾಗಿ ಬಳಸಿರುವ ಹಲವಾರು ನಿದರ್ಶನಗಳಿವೆ.
ಶ್ರೀ ಶ್ರೀಪಾದರಾಜರು ಶ್ರೀ ಬಾಲಕೃಷ್ಣನನ್ನು...
ಪೋಪು ಹೋಗೋಣ ಬಾರೋ ರಂಗ ।
ಪೋಪು ಹೋಗೋಣ ಬಾರೋ ।।
ಎಂದು ಕರೆಯುವ ಕೀರ್ತನೆ ಕನ್ನಡಿಗರ ಮನಸ್ಸನ್ನು ಸೂರೆಗೊಂಡಿದೆ. ಈ ಕೀರ್ತನೆಯಲ್ಲಿ ಶ್ರೀ ರಾಮ ಕೃಷ್ಣಾವತಾರವನ್ನು ಕಣ್ಣಿನ ಮುಂದೆ ಇರುವಂತೆ ಚಿತ್ರಿಸಿದ್ದಾರೆ.
ಕಂದ ಶ್ರೀ ಕೃಷ್ಣನನ್ನು ಕಂಡರೆ ಯಶೋದೆಗೆ ಎಷ್ಟು ಆನಂದವೋ! ಆ ತಾಯಿಯ ಅಕ್ಕರೆಯನ್ನು ಬಹಳ ಸುಂದರವಾಗಿ ಈ ಕೀರ್ತನೆಯಲ್ಲಿ ಚಿತ್ರಿಸಿದ್ದಾರೆ.
ಎಲ್ಲ್ಯಾಡಿ ಬಂದ್ಯೋ ಎನ್ನ ರಂಗಯ್ಯ ನೀ ।
ಎಲ್ಲ್ಯಾಡಿ ಬಂದ್ಯೋ ಎನ್ನ ಕಣ್ಣ ಮುಂದಾಡದೆ ।।
ಎಂದು ಹಂಬಲಿಸುವಳು. ಶ್ರೀ ಕೃಷ್ಣನಿಗೆ ಬೇಕಾದ ಹಾಲು, ಮೊಸರು, ಬೆಣ್ಣೆ, ಜೊತೆಗಾರರು ಮನೆಯಲ್ಲೇ ಇದ್ದರೂ ಅವನು ಕದ್ದು ಹೋಗುವುದನ್ನು ಆಕೆ ಸಹಿಸಲಾರಳು.
ಅಷ್ಟದಿಕ್ಕಿಲಿ ಅರಸಿ ಕಾಣದೆ । ಬಹಳ ।
ದೃಷ್ಟಿಗೆಟ್ಟೆನೋ ನಿನ್ನ ನೋಡದೆ ।।
ಎಂದು ತನಗಾದ ತಳಮಳವನ್ನು ಶ್ರೀ ಕೃಷ್ಣನ ಮುಂದೆ ತಾಯಿ ಯಶೋದೆ ಹೇಳಿಕೊಳ್ಳುವಳು.
****
ಮಧ್ವನಾಮ ...ಒಂದು ಚಿಂತನ
* ಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣ |
ಅಖಿಲ ಗುಣಸದ್ಧಾಮ ಮಧ್ವನಾಮ||*.....||ಪ||
ಇಲ್ಲಿ ಜಯ ಜಯ -ಎಂದು ಅತ್ಯಂತ ಮಂಗಳಕರವಾಗಿ ಪ್ರಾರಂಭವಾದ ಈ ಪದ್ಯ ಮುಖ್ಯಪ್ರಾಣರ ಮಹಿಮೆಯನ್ನು ಸೂಕ್ಷ್ಮವಾಗಿ ವೇದೋಕ್ತ ಎಂದು ತಿಳಿಸಿ, ಈ ಶಬ್ಧವು ಪ್ರಪಂಚದೊಳಗೆ ತುಂಬಿ ಚೇಷ್ಟಾರೂಪದಿಂದ ವ್ಯಾಪ್ತನಾಗಿ ಸಕಲ ಕಾರ್ಯಗಳಲ್ಲಿ ದಿಗ್ವಿಜಯ ಎನಿಸುವ ವಾಯುದೇವರನ್ನು ಸೂಚಿಸಿದೆ . *ಜಯ -ಜಯ * ಎಂದು ದ್ವಿರುಕ್ತಿ ವಾಚಕವು ವಾಯುದೇವರಿಗೆ ಸಮರಾದವರು ಈ ಜೀವಕೋಟಿಯಲ್ಲಿ ಯಾರೂ ಇಲ್ಲ ಎಂಬ ಪ್ರಮೇಯದ ಖಚಿತತೆಯ ಬಗ್ಗೆ ಪ್ರಮಾಣ .
ಜಗತ್ರಾಣ - ಎಂಬ ಶಬ್ಧ ವಾಯುದೇವರು ಬಾಹ್ಯದಲ್ಲಿದ್ದು ಈ ಬ್ರಹ್ಮಾಂಡದ ಸ್ಥಿರತೆಗೆ ಕಾರಣ ರಾಗಿದ್ದಾರೆ.
ಜಗದೊಳಗೆ ಸುತ್ರಾಣ- ಇಲ್ಲಿ ಶ್ರೀಪಾದರಾಜರು ಹೇಳುವುದೇನೆಂದರೆ , ವಾಯುದೇವರು ಬ್ಬಹ್ಮಾಂಡದ ಒಳ-ಹೊರಗೂ ವ್ಯಾಪ್ತರಾಗಿ ಅಲ್ಲಿರುವ ಸಕಲ -ಅಚೇತನಗಳಿಗೆ ಧಾರಕರಾಗಿ ಸಂರಕ್ಷಿಸುವರಾಗಿದ್ದಾರೆ.
**********
🌼 ಶ್ರೀ ಶ್ರೀಪಾದರಾಜರ ಕಥೆಗಳು 🌼
🌸 ರಂಗವಿಠಲ ಸಿಕ್ಕಿದ 🌸
ಭೀಮರಥೀತೀರದಲ್ಲಿ ಭೂಮಿಯಡಿಯಲ್ಲಿ ಒಂದು ಪೆಟ್ಟಿಗೆ ಇರುವ ವಿಷಯ ಸ್ವಪ್ನ ಸೂಚನೆ ಮೂಲಕ ಶ್ರೀಪಾದರಾಜರಿಗೆ ಗೂತ್ತಾಯಿತು. ಆ ಪೆಟ್ಟಿಗೆಯೊಳಗೆ ಶ್ರೀರಂಗವಿಠಲನ ವಿಗ್ರಹವಿರುವ ವಿಷಯವೂ ಗೊತ್ತಾಯಿತು. ಆಗ ಸ್ವಾಮಿಗಳು ಆ ಪೆಟ್ಟಿಗೆಯನ್ನು ತೆಗಿಸಿ ಶ್ರೀರಂಗವಿಠಲನನ್ನು ಪೂಜಿಸತೊಡಗಿದರು.
🌸 ಕಾಡಿನಲ್ಲಿ ಔತಣ 🌸
ಬ್ರಹ್ಮಣ್ಯತೀರ್ಥರಿಗೆ ಯಾವಾಗಲೂ ಊಟ ತಡವಾಗುತ್ತಿತ್ತು. ಆದರೆ ಶ್ರೀಪಾದರಾಜರಿಗೆ ಎಲ್ಲೆ ಇರಲಿ ಹನ್ನೆರಡು ಗಂಟೆಗೆ ಅರವತ್ತು ಭಕ್ಷಸಹಿತ ಊಟವಾಗುತ್ತಿತ್ತು. ಒಂದು ದಿನ ರಾಜ ವನಭೋಜನಕ್ಕಾಗಿ ಶ್ರೀಪಾದರಾಜರಿಗೆ ಮತ್ತು ಬ್ರಹ್ಮಣ್ಯತೀರ್ಥರಿಗು ಆಮಂತ್ರಣ ನೀಡಿದ. ಅವತ್ತು ಶ್ರೀಬ್ರಹ್ಮಣ್ಯತೀರ್ಥರಿಗೆ ಬೇಗ ಭಿಕ್ಷೆಯಾಗಬೇಕೆಂದು ವ್ಯವಸ್ಥೆ ಮಾಡಿದ. ಆದರೆ ಶ್ರೀಪಾದರಾಜರು ಕಾಡಿನಲ್ಲಿ ಪ್ರವೇಶ ಮಾಡಿದ್ದೆ ತಡವಾಗಿತ್ತು. ಆದಕಾರಣ ಅಲ್ಲಿ ಯಾರೋ ಒಬ್ಬ ಶ್ರೀಮಂತ ವನಭೋಜನಕ್ಕೇ ಬೇಕಾದ ವಸ್ತುಗಳನ್ನು ಸಿದ್ಧಪಡಿಸಿದ್ದ. ಅರವತ್ತು ಬಗೆಯ ಭಕ್ಷಗಳೂಡನೆ ಪರಮಾತ್ಮನಿಗೆ ನೈವೇದ್ಯವಾಗಿ ಶ್ರೀಪಾದರಾಜರ ಭಿಕ್ಷೆಯು ಅಯಿತು. ಇತ್ತ ಸರಿ ಹನ್ನೆರಡು ಘಂಟೆಗೆ ಬ್ರಹ್ಮಣ್ಯತೀರ್ಥರು ನೈವೇದ್ಯ ಮಾಡಲು ಹೊರಟಾಗ ಒಂದೂ ನಾಯಿ ಬಂದು ಅಡಿಗೆಯನ್ನು ಮುಟ್ಟಿಬಿಟ್ಟಿತು. ಪುನಃ ಎಲ್ಲ ತೆಗೆದು ಹೊರಗೆ ಹಾಕಿ ಶುದ್ಧಮಾಡಿ ಅಡುಗೆ ಮಾಡಿ ನೈವೇದ್ಯಕ್ಕೆ ಇಡುವಾಗ ಯಥಾಪ್ರಕಾರ ಮೂರು ಘಂಟೆ ಆಗಿತ್ತು. ಅಗ ಶ್ರೀಪಾದರಾಜರು ಎಲ್ಲ ಮುಗಿಸಿ ಬರುವಾಗ ಇನ್ನು ವನಭೋಜನ ನಡೆಯುತ್ತಿತ್ತು. " ಏನು ಸ್ವಾಮಿ ಇನ್ನು ಆಗಿಲ್ಲವಾ?" ಎಂದು ಕೇಳಿದಾಗ " ನಿಮ್ಮದು ಸುಖಪ್ರಾರಬ್ಧ , ನಮ್ಮದು ದುಃಖಪ್ರಾರಬ್ಧ " ಎಂದರಂತೆ ಬ್ರಹ್ಮಣ್ಯತೀರ್ಥರು. ರಾಜ ಉಭಯಶ್ರೀಗಳಲ್ಲೂ ಕ್ಷಮಾ ಬೇಡಿಕೊಂಡ. ಇಬ್ಬರೂ ಶ್ರೀಗಳವರು ರಾಜನನ್ನು ಕ್ಷಮಿಸಿ ಅನುಗ್ರಹಿಸಿದರು. ಇಂತಹ ಮಹಿಮೋಪೇತರಾದ ಶ್ರೀಪಾದರಾಜರ ಅನುಗ್ರಹ ನಮ್ಮೆಲ್ಲರ ಮೇಲೂ ನಿರಂತರವಿರಲಿ.
**********
ಶ್ರೀಪೂರ್ಣಪ್ರಜ್ಞರ ಶಿಷ್ಯಪ್ರಮುಖರಾದ ಶ್ರೀಪದ್ಮನಾಭತೀರ್ಥರಿಂದ ಪ್ರವರ್ತಿತವಾದ ಪರಂಪರೆಯನ್ನು ಅಲಂಕರಿಸಿ, ಶ್ರೀವಿಬುಧೇಂದ್ರತೀರ್ಥರಂತಹ ವಿದ್ವದ್ವಿಭೂತಿಯ ಶಿಷ್ಯರಾಗಿ, ಶ್ರೀವ್ಯಾಸತೀರ್ಥರಂತಹ ಲೋಕಮಾನ್ಯ ಯತಿಶ್ರೇಷ್ಠರ ಗುರುವಾಗಿ, ಶ್ರೀರಘುನಾಥತೀರ್ಥರಿಂದ ಶ್ರೀಪಾದರಾಜರೆಂದು ಮಾನಿತರಾದ ಮಹಾನುಭಾವರು ಶ್ರೀಲಕ್ಷ್ಮೀನಾರಾಯಣ ತೀರ್ಥರು. "ಅಮಿತ ಪುಣ್ಯ ಅಗ್ರಗಣ್ಯನ ವಿಮತಹರನ ವಿನಯಪರನ ದ್ಯುಮಣಿ ತೇಜನ ದೂರಿತದೂರನ ಶಮದಮಾದಿ ಗುಣಸಮುದ್ರನ" ಎಂದು ವ್ಯಾಸರಾಜರಿಂದ ಸ್ತುತ್ಯರಾದ ಯತಿವರೇಣ್ಯರು. ಸಂಸ್ಕೃತದಲ್ಲಿ ಶ್ರೀಜಯತೀರ್ಥಗುರುಸಾರ್ವಭೌಮರ ಅನುಪಮಕೃತಿ 'ಶ್ರೀಮನ್ನ್ಯಾಯ ಸುಧಾಗ್ರಂಥ' ಕ್ಕೆ 'ವಾಗ್ವಜ್ರ'ವೆಂಬ ಟಿಪ್ಪಣಿಯನ್ನು ರಚಿಸಿದ ಶ್ರೀಪಾದರಾಜರು ಶ್ರೀಮದಾಚಾರ್ಯರಿಂದ ಪ್ರೇರಣೆಹೊಂದಿದ ಶ್ರೀನರಹರಿತೀರ್ಥರೇ ಆದ್ಯರಾಗಿ ಉಳ್ಳ ಹರಿದಾಸಸಾಹಿತ್ಯಪರಂಪರೆಗೆ ಹೆಚ್ಚು ವ್ಯಾಪಕತೆಯನ್ನು ನೀಡಿದದ ಮಹಿತಾತ್ಮರು. ವೃತ್ತನಾಮ, ದೇವರನಾಮ,ಸುಳಾದಿ, ಉಗಾಭೋಗಗಳ ಬಳಕೆಯನ್ನು ವ್ಯಾಪಕವಾಗಿ ಬಳಕೆಗೆ ತಂದ ಮಹನೀಯರು. ಶ್ರೀರಂಗದಲ್ಲಿ ಬಹಳಷ್ಟುದಿನಗಳನ್ನು ಕಳೆದುದರಿಂದ, ತಮಿಳುನಾಡಿನ ಆಳ್ವಾರರು ರಚಿಸಿದ ದಿವ್ಯಪ್ರಬಂಧಗಳ ಪರಿಚಯದಿಂದ, ಸ್ಫೂರ್ತಿಯಿಂದ ಕನ್ನಡದಲ್ಲಿ ಹಾಡುಗಳನ್ನು ರಚಿಸಿದರು ಎಂಬ ಅಭಿಪ್ರಾಯ ವ್ಯಕ್ತವಾಗಿದ್ದರೂ,' ಇಯಲ್' ಪದ್ಧತಿಗೆ ಸೇರಿದ ಪಾಶುರಗಳು ಸಂಪ್ರದಾಯಸಂಗೀತದ ವಲಯದೊಳಗೆ ಬಂದಿರಲಾರದು. ಭಾವಪ್ರಧಾನವಾದ ಪಾಶುರಗಳಿಗೆ ರಾಗ-ತಾಳಗಳ ಕಟ್ಟುಪಾಡು ಅಷ್ಷಿರಲಾರದು ಎಂಬ ಅಭಿಪ್ರಾಯವೂ ವಿದ್ವಾಂಸರಿಂದ ವ್ಯಕ್ತವಾಗಿರುವುದರಿಂದ, ಪರೋಕ್ಷವಾಗಿ ಪಾಶುರಗಳ ಪ್ರೇರಣೆಯನ್ನು ಒಪ್ಪಬಹುದಾದರೂ, ಶ್ರೀಮಧ್ವರ ಹಾಡುಗಬ್ಬಗಳಿಂದ ಶ್ರೀಪಾದರಾಜರು ಪ್ರತ್ಯಕ್ಷವಾಗಿ ಪ್ರೇರೇಪಿತರಾದರು ಎಂದು ಹೇಳಬೇಕಾಗುತ್ತದೆ. ಕನ್ನಡ ಭಾಷೆಗೆ ಸಂಸ್ಕೃತ ಸಮಪೀಠವನ್ನು ನೀಡಿ, ಶ್ರೀಹರಿಯ ಪೂಜಾಕಾಲದಲ್ಲಿ ಕನ್ನಡ ಕೃತಿಗಳನ್ನು ಹಾಡುವ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಶ್ರೀವ್ಯಾಸರಾಜರಿಗೆ ಗುರುಗಳಾಗಿ, ಶ್ರೀವಾದಿರಾಜ, ಶ್ರೀವಿಜಯೀಂದ್ರ, ಶ್ರೀಪುರಂದರ, ಶ್ರೀಕನಕದಾಸರೇ ಮೊದಲಾದ ಯತಿವರೇಣ್ಯರಿಗೆ, ದಾಸಶ್ರೇಷ್ಠರಿಗೆ ಪರಮಗುರುಗಳಾಗಿ ದಾಸ ಸಾಹಿತ್ಯ ಪರಂಪರೆಗೆ ಸದೃಢವಾದ ಬುನಾದಿಯನ್ನು ಹಾಕಿಕೊಟ್ಟ ಪಾವನ ಚರಿತರು. ಶ್ರೀಹರಿಯ ಮಹಿಮೆ, ಭಗವದ್ಭಕ್ತಿಯ ಹಿರಿಮೆ, ಶ್ರೀಮಧ್ವಭಗವತ್ಪಾದರ ಸಿದ್ಧಾಂತದ ಮಹತ್ತ್ವ, ಆತ್ಮಶೋಧನೆ, ಲೋಕನೀತಿ ಮೊದಲಾದ ಅನೇಕ ವಿಷಯಗಳನ್ನು ಕುರಿತು ಶ್ರೀಪಾದರಾಜರು ರಚಿಸಿರುವ ಕನ್ನಡ ಕೃತಿಗಳು ತಮ್ಮ ಕಾವ್ಯಗುಣದಿಂದ, ಮಾಧುರ್ಯದಿಂದ, ಲಾಲಿತ್ಯದಿಂದ ಕನ್ನಡ ನುಡಿಯ ಇತಿಹಾಸದಲ್ಲಿ ಚಿರಸ್ಥಾಯಿಯಾಗಿವೆ.
ಶ್ರೀಪಾದರಾಜರ ಕೃತಿಗಳು ಇಂದು ಬಹುತೇಕ ಅನುಪಲಬ್ಧವಿದ್ದರೂ, ದೊರೆತಿರುವ ಕೃತಿಗಳಲ್ಲಿ ಕಾವ್ಯಸೌಂದರ್ಯ ವಿಶೇಷವಾಗಿ ಅಭಿವ್ಯಕ್ತಗೊಂಡಿದೆ. 'ಇಂದಿನಿರುಳಿನ ಕನಸಿನಲ್ಲಿ ಬಂದು ಮುಂದೆ ನಿಂದುದ ಕಂಡೆನೆ ಗೋವಳನ' ಕೃತಿಯಲ್ಲಿ ಶ್ರೀಕೃಷ್ಣನ ರೂಪಾತಿಶಯವನ್ನು ದೃಗ್ಗೋಚರವಾಗಿ ವರ್ಣಿಸಿದ್ದರೆ, 'ಅಂಬರದಾಳವನು ಇನಶಶಿಗಳಲ್ಲದೆ, ಅಂಬರತಳದೊಳಾಡುವ ಪಕ್ಷಿ ತಾ ಬಲ್ಲವೆ' , 'ಕಂಬಳಿಯ ಬುತ್ತಿಯಲಿ ಕಸವನಾರಿಸುವರುಂಟೆ?', 'ಸರಕು ಒಪ್ಪಿಸಿದ ಮೇಲೆ ಸುಂಕವುಂಟೆ', 'ಕಾಡ ಬೆಳದಿಂಗಳು ಈ ಸಂಸಾರ ಕತ್ತಲೆ ಬೆಳದಿಂಗಳು', 'ಹೆಸರುಳ್ಳನದಿಗಳು ಒಳಗೊಂಬ ಸಮುದ್ರನು ಬಿಸುಡುವನೆ ಕಾಲಹೊಳೆಗಳ ಗೋವಿಂದ', 'ಉಂಟಾದ ಕಾಲಕ್ಕೆ ನೆಂಟರು ಇಷ್ಟರು ಭಂಟರಾಗಿ ಬಾಗಿಲ ಕಾಯ್ವರು, ಉಂಟಾದತನ ತಪ್ಪಿ ಬಡತನ ಬಂದರೆ ಒಂಟೆಯಂದದಿ ಗೋಣನೆತ್ತುವರು' ಮೊದಲಾದ ನುಡಿಗಳು ಶ್ರೀಪಾದರಾಜರ ಜೀವನಾನುಭೂತಿ, ಕಾವ್ಯರಚನಾ ಕೌಶಲ್ಯಕ್ಕೆ ದ್ಯೋತಕಗಳಾಗಿವೆ.
ಶ್ರೀಮಧ್ವ ಮುನಿಗಳ ಅವತಾರತ್ರಯಗಳ ವಿಭವವನ್ನು ವರ್ಣಿಸುವ 'ಮಧ್ವನಾಮ' ವನ್ನು ರಚಿಸಿ, ವಾಯುದೇವರ ಉಪಾಸನೆಗೆ ಮಾರ್ಗವನ್ನು ರೂಪಿಸಿದ ಶ್ರೀಪಾದರಾಜರು ಸ್ವತ: ಪೀಠಾಧೀಶರಾಗಿದ್ದರೂ, ತಮ್ಮ ಶಿಷ್ಯ ಶ್ರೀವ್ಯಾಸರಾಜರನ್ನು ಕುರಿತು "ಇದಿರಾವನು ನಿನಗೀ ಧರೆಯೊಳುI ಪದುಮನಾಭನ ದಾಸ ಪರಮೋಲ್ಲಾಸ", "ಸಾಸಿರ ಜಿಹ್ವೆಗಳುಳ್ಳ ಶೇಷನೇ ಕೊಂಡಾಡಬೇಕು ವ್ಯಾಸಮುನಿರಾಯರ ಸನ್ನ್ಯಾಸದಿರವ" ಎಂದು ಮನತುಂಬಿ ಶಿಷ್ಯನನ್ನು ಪ್ರಾಂಜಲವಾಗಿ ಶ್ಲಾಘಿಸಿ ತಮ್ಮ ಔದಾರ್ಯವನ್ನು ತೋರಿದ್ದಾರೆ. ತಮ್ಮ ಅನನ್ಯವಾದ ಜೀವನಸಾಧನೆಯಿಂದ, ಕಾವ್ಯ ಸಿದ್ಧಿಯಿಂದ, ತಪೋನಿಧಿಗಳಾಗಿ ಅಧ್ಯಾತ್ಮಾಂಬರದಲ್ಲಿ 'ಧ್ರುವತಾರೆ' ಯಂತೆ ಮಿನುಗುತ್ತಿರುವ ಶ್ರೀಪಾದರಾಜರ ಮಹಿಮೆಯನ್ನು ಕುರಿತು ಶ್ರೀವ್ಯಾಸರಾಜರಂತಹ ಮಹಿತೋನ್ನತ ಚರಿತರೇ " ಮಹಿಮೆ ಸಾಲದೆ ಇಷ್ಟೇ ಮಹಿಮೆ ಸಾಲದೆ ಅಹಿಶಯನನ ಒಲುಮೆಯಿಂದ ಮಹಿಯೊಳೆಮ್ಮ ಶ್ರೀಪಾದರಾಜರ" ಎಂದು ಸ್ತುತಿಸಿರುವುದನ್ನು ಮನಸ್ಸಿಗೆ ತಂದುಕೊಂಡಾಗ ಮನಸ್ಸು ಮೌನದಿಂದ ಮುನಿವರ ಶ್ರೀಪಾದರಾಜರ ಶ್ರೀಪಾದಂಗಳಿಗೆ ಶರಣೆನ್ನುತ್ತದೆ.
'ತಂ ವಂದೇ ನರಸಿಂಹತೀರ್ಥನಿಲಯಂ ಶ್ರೀವ್ಯಾಸರಾಟ್ ಪೂಜಿತಂI
ಧ್ಯಾಯಂತಂ ಮನಸಾ ನೃಸಿಂಹಚರಣಮ್ ಶ್ರೀಪಾದರಾಜಂ ಗುರುಂ II '-
ಶ್ರೀಕೃಷ್ಣ,ಮಧ್ವ,ಶ್ರೀಪಾದರಾಜರು ಪ್ರೀತರಾಗಲಿ
*******
ಶ್ರೀಶ್ರೀಪಾದರಾಜರ (ಶ್ರೀ ಲಕ್ಷ್ಮೀನಾರಾಯಣತೀರ್ಥರ) ಮೂಲವೃಂದಾವನ - ಶ್ರೀ ನರಸಿಂಹ ತೀರ್ಥ, ಮುಳಬಾಗಿಲು.
ಇಂದಿನಿಂದ 3 ದಿನ ಶ್ರೀ ಶ್ರೀಪಾದರಾಜರ ಆರಾಧನೆ.
ಕಾಲೇ ಫಲತಿ ಸುರದ್ರುಮಃ
ಚಿಂತಾಮಣಿರಪಿ ಯಾಚನೇ ದಾತಾ |
ವರ್ಷತಿ ಸಕಲಮಭೀಷ್ಟಂ
ದಶರ್ನಮಾತ್ರಾತ್ ಶ್ರೀಪಾದರಾಣ್ಮುನಿಃ ||
ನಮ್ಮ ಶ್ರೀ ಗುರುರಾಯರ ಪೂರ್ವಾವತಾರಿಗಳೂ,
ಹರಿದಾಸಸಾಹಿತ್ಯದ ಮೇರುಶಿಖರ 'ಹಯವದನ' ನಾಮಾಂಕಿತ ಭಾವೀಸಮೀರ ಶ್ರೀಮದ್ ವಾದಿರಾಜತೀರ್ಥ ಗುರುಸಾರ್ವಭೌಮರ ಸಮಕಾಲೀನರೂ,
ಕರ್ನಾಟಕ ಸಂಗೀತ ಹಾಗೂ ದಾಸಸಾಹಿತ್ಯದ ಕೀರ್ತಿಶಿಖರಗಳಾದ ಪುರಂದರದಾಸರು - ಕನಕದಾಸರೇ ಮೊದಲಾದ ಸಂಗೀತ ರತ್ನಗಳ ಉಗಮಕ್ಕೆ ಕಾರಣೀಭೂತರೂ,
ವಿಜಯನಗರ ಸಾಮ್ರಾಜ್ಯದ ದಿಗ್ವಿಜಯಕ್ಕೆ ಹಂತಹಂತವಾಗಿ ಎದುರಾದ ಅಡೆತಡೆಗಳನ್ನು ಪರಿಹರಿಸಿಕೊಟ್ಟು ವಿದ್ಯಾರಣ್ಯರಂತೆಯೇ ವಿಜಯನಗರದ ಉತ್ತಾನಕ್ಕೆ ಕಾರಣೀಭೂತರಾಗಿ ಅನುಗ್ರಹದ ಸೆಲೆಯಾಗಿದ್ದು,
ತಿರುಪತಿಯಲ್ಲಿ ಲೌಕಿಕ ಕಾರಣಗಳಿಗಾಗಿ ಅಡಚಣೆಗಳನ್ನೆದುರಿಸಿದ್ದ ಶ್ರೀನಿವಾಸನ ಪೂಜೆಗೆ ಮೇಲ್ಪಂಕ್ತಿ ಹಾಕಿಕೊಟ್ಟು ತನ್ಮೂಲಕ ಲಭಿಸಿದ ಶ್ರೀನಿವಾಸನ ಅನುಗ್ರಹದ ಅನಂತಪುಣ್ಯಫಲವಾಗಿ
"ನಮ್ಮರಾಯರ" ರೂಪದಲ್ಲಿ ಭಕ್ತರಿಗೆ ಸಾಕ್ಷಾತ್ ಕಾಮಧೇನು ಕಲ್ಪವೃಕ್ಷ ಸಾದೃಶ್ಯವಾಗಿ ಅಪೇಕ್ಷಿತಫಲಗಳನ್ನು ನಿಸ್ಸಂಶಯವಾಗಿ ಅನುಗ್ರಹಿಸಿಕೊಡುವ ಶ್ರೀ ವ್ಯಾಸರಾಜಗುರುಸಾರ್ವಭೌಮರ ವಿದ್ಯಾಗುರುಗಳಾದ ಶ್ರೀ ಶ್ರೀಪಾದರಾಜರ ಚರಣಾರವಿಂದಗಳಿಗೆ ಭಕ್ತಿಪೂರ್ವಕ ಪ್ರಣಾಮಗಳನ್ನು ಸಲ್ಲಿಸೋಣವಲ್ಲವೇ?
ಪೂಜ್ಯಾಯ ರಾಘವೇಂದ್ರಾಯ
ಸತ್ಯಧರ್ಮ ರತಾಯಚ |
ಭಜತಾಂ ಕಲ್ಪವೃಕ್ಷಾಯ
ನಮತಾಂ ಕಾಮಧೇನವೇ ||
ಪುರಂದರ ಗುರುಮ್ ವಂದೇ
ದಾಸಶ್ರೇಷ್ಠಮ್ ದಯಾನಿಧಿಮ್
Aradhana of Shri Sripadaraja Gurusarvabhoumaru - Shri Narasimha Teertha, Mulabagilu.
ನಾಹಂ ಕರ್ತಾ ಹರಿಃ ಕರ್ತಾ
*********
“ಹರಿದಾಸ ಪಿತಾಮಹ”ಶ್ರೀ ಶ್ರೀಪಾದರಾಜರು
"ನಮಃ ಶ್ರೀಪಾದರಾಜಾಯ|
ನಮಸ್ತೇ ವ್ಯಾಸಯೋಗಿನೇ|
ನಮಃ ಪುರಂದರಾರ್ಯಾಯ|
ವಿಜಯರಾಜಾಯ ನಮಃ|
“ಹರಿದಾಸಪಿತಾಮಹ” ರೆಂಬ ಗೌರವಕ್ಕೆ ಪಾತ್ರರಾದ, ಶ್ರೀಪಾದರಾಜರ ಸಾಧನೆಯನ್ನು ಇತರ ದಾಸಶ್ರೇಷ್ಠರುಗಳೆಲ್ಲರೂ ಇವರನ್ನು ಹಲವು ಬಗೆಯಾಗಿ ಹೊಗಳಿದ್ದಾರೆ. ಈ ಕಾರಣದಿಂದಲೇ ಇರಬಹುದು ಪರಂಪರೆಯಿಂದ ಬಂದ ಈ ಮೇಲಿನ ಶ್ಲೋಕದಲ್ಲಿ ಧೃವಾಂಶ ಸಂಭೂತರೆಂದು ಪ್ರಖ್ಯಾತರಾಗಿರುವ ಶ್ರೀಪಾದರಾಜರನ್ನು ಅಭಿನಂದಿಸಿ ಪುರಸ್ಕರಿಸಲಾಗಿದೆ. ಕರ್ಣಾಟಕದಲ್ಲಿ 13ನೇ ಶತಮಾನದಲ್ಲಿ ಶ್ರೀಮಧ್ವಾಚಾರ್ಯರು ಬಿತ್ತಿದ ವೈಷ್ಣವ ಭಕ್ತಿ ಬೀಜ ನರಹರಿ ತೀರ್ಥರ ಕಾಲದಲ್ಲಿ ಮೊಳಕೆಯೊಡೆಯಿತಾದರೂ ಅದು ಚಿಗುರಿ ಹೆಮ್ಮರವಾಗತೊಡಗಿದ್ದು ಶ್ರೀಪಾದರಾಜರ ಕಾಲದಿಂದಲೇ. ಇಂದು ನಾವು ಬಹುವಾಗಿ ಕೊಂಡಾಡುವ, ಸಾಹಿತ್ಯಕ್ಷೇತ್ರಕ್ಕೆ ಕನ್ನಡ ನೀಡುವ ಕೊಡುಗೆಗಳಲ್ಲೊಂದು ಎಂದು ಹೆಮ್ಮೆಯಿಂದ ಬೀಗುವ ಹರಿದಾಸ ಸಾಹಿತ್ಯ ಲಭ್ಯವಾದುದು ಶ್ರೀಪಾದರಾಜರು ಪಟ್ಟ ಶ್ರಮದಿಂದ ಇಟ್ಟ ದಿಟ್ಟ ಹೆಜ್ಜೆಯಿಂದ.
ಶ್ರೀಪಾದರಾಜರ ಶಿಷ್ಯ ಶ್ರೇಷ್ಠರಾದ ವ್ಯಾಸರಾಯರು ತಮ್ಮ ಗುರುಗಳನ್ನು ಕುರಿತು ರಚಿಸಿರುವ ಅನೇಕ ರಚನೆಗಳು, ವಾದಿರಾಜರ ಕೀರ್ತನೆಗಳು ಹಾಗೂ ಸಂಸ್ಕøತದ ಶ್ರೀಪಾದರಾಜ ಗುರುರಾಜ ಸ್ತೋತ್ರ, ಮತ್ತು ವಿಜಯದಾಸರು ರಚಿಸಿರುವ ಶ್ರೀಪಾದರಾಜರ ಸುಳಾದಿ ಮುಂತಾದವುಗಳು ಶ್ರೀ ಪಾದರಾಜರ ಬದುಕಿನ ಮೇಲೆ ನಿಶ್ಚಿತ ಬೆಳಕನ್ನು ಬೀರುತ್ತವೆ. ಅಂತೆಯೇ ಶ್ರೀನಿಧಿತೀರ್ಥರ “ಶ್ರೀಪಾದರಾಜಾಷ್ಟಕ” ಮತ್ತು ಭೀಮಾಚಾರ್ಯರು ರಚಿಸಿರುವ “ಶ್ರೀ ಪೂರ್ಣಬೋಧ ಗುರುವಂಶ ಕಲ್ಪತರು” ಮುಂತಾದ ಸಂಸ್ಕøತ ಕೃತಿಗಳೂ ಸಹ ಅವರ ಯತ್ಯಾಶ್ರಮದ ನಂತರದ ವಿಶೇಷ ಸಂಗತಿಗಳನ್ನು ವರ್ಣಮಯವಾಗಿ ಚಿತ್ರಿಸಿವೆ. ಶ್ರೀಪಾದರಾಜರು ಸನ್ಯಾಸ ಸ್ವೀಕರಿಸುವ ಮುಂಚಿನ ಪ್ರಸಂಗವೊಂದನ್ನು ಬೇಲೂರು ಕೇಶವದಾಸರು ಸುದೀರ್ಘವಾಗಿ, ಆಕರ್ಷಕವಾಗಿ ತಮ್ಮ “ಕರ್ನಾಟಕ ಭಕ್ತಚರಿತೆ”ಯಲ್ಲಿ ಚಿತ್ರಿಸಿದ್ದಾರೆ.
ದಾಸಸಾಹಿತ್ಯ ಸಾಮ್ರಾಜ್ಯ ಸ್ಥಾಪಕರಾದ ಶ್ರೀಪಾದರಾಜರ ಪೂರ್ವಾಶ್ರಮದ ಹೆಸರು “ಲಕ್ಷ್ಮೀನಾರಾಯಣ” ಎಂಬುದಾಗಿತ್ತು. ತಂದೆ ಶೇಷಗಿರಿಯಪ್ಪ ಹಾಗೂ ತಾಯಿ ಗಿರಿಯಮ್ಮ. ಇವರ ಪುತ್ರನಾಗಿ ಚನ್ನಪಟ್ಟಣ ತಾಲೂಕಿನ ಅಬ್ಬೂರಿನಲ್ಲಿ ಕ್ರಿ.ಶ.1404ರಲ್ಲಿ ಜನಿಸಿದರು. ಅವರ ಸ್ಥಿತಿ-ಗತಿ ಅಷ್ಟಕಷ್ಟೆಯಾಗಿತ್ತು. ಒಮ್ಮೆ ಸ್ವರ್ಣವರ್ಣತೀರ್ಥ ಎಂಬ ಸ್ವಾಮಿಗಳು ಸಂಚಾರಮಾರ್ಗವಾಗಿ ಅಬ್ಬೂರಿನ ಬಳಿ ಬಂದಾಗ ದನಕರುಗಳನ್ನು ಹೊಡೆದುಕೊಂಡು ಹೋಗುತ್ತಿದ್ದ ಈ ಬಾಲಕನನ್ನು ಕಂಡು "ಮಗು ಅಬ್ಬೂರು ಇನ್ನೂ ಎಷ್ಟು ದೂರವಿದೆಯಪ್ಪ? ಎಂದು ಕೇಳಲು, ಬಾಲಕನು, “ಇಗೋ ನನ್ನನ್ನು ನೋಡಿ, ದನಗಳನ್ನು ನೋಡಿ, ಸೂರ್ಯನನ್ನು ನೋಡಿ. ಎಷ್ಟು ದೂರವೋ ಗೊತ್ತಾಗುತ್ತದೆ” ಎಂದು ಚಮತ್ಕಾರವಾಗಿ ಉತ್ತರಿಸಿದ ಈ ಬಾಲಕನಲ್ಲಿ ವಿಶಿಷ್ಟ ಪ್ರತಿಭೆಯನ್ನು ಗುರುತಿಸುತ್ತಾರೆ. ಮುಂದೆ ಸ್ವರ್ಣವರ್ಣತೀರ್ಥರ ಆಶ್ರಯದಲ್ಲಿ ಲಕ್ಷ್ಮೀನಾರಾಯಣರ ಬ್ರಹ್ಮೋಪನಯನ, ವಿದ್ಯಾಭ್ಯಾಸ ಇವುಗಳ ನಂತರ ಸಂನ್ಯಾಸ ದೀಕ್ಷೆಯನ್ನು ಕೊಟ್ಟು ಪೀಠಾಧಿಕಾರಕ್ಕೆ ತಕ್ಕ ವೇದಾಂತ ವ್ಯಾಸಂಗಕ್ಕಾಗಿ ಲಕ್ಷ್ಮೀನಾರಾಯಣತೀರ್ಥರನ್ನು ಸುಪ್ರಸಿದ್ಧರಾದ ರಾಘವೇಂದ್ರ ಮಠದ ಪೂರ್ವಪೀಳಿಗೆಯ ವಿಬುಧೇಂದ್ರ ತೀರ್ಥರಲ್ಲಿಗೆ ಕಳುಹಿಸಿಕೊಟ್ಟರು.
ಇಬ್ಬರೂ ಸಂಚಾರ ಮಾಡುತ್ತ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕೊಪ್ಪರ ಶ್ರೀಲಕ್ಷ್ಮೀನರಸಿಂಹಸ್ವಾಮಿ ಕ್ಷೇತ್ರಕ್ಕೆ ಬರುತ್ತಾರೆ. ಅದೇ ಸಮಯದಲ್ಲಿ ಶ್ರೀ ಉತ್ತರಾದಿ ಮಠದ ರಘುನಾಥತೀರ್ಥರು ಆಗಮಿಸಿದ್ದರು. ಶ್ರೀ ವಿಭುಧೇಂದ್ರರು ವಿದ್ಯಾಪಾರಂಗತರೆನಿಸಿದ್ದ ಶ್ರೀರಘುನಾಥರಿಗೆ ತಮ್ಮ ಶಿಷ್ಯನ ಪರಿಚಯ ಮಾಡಿಕೊಟ್ಟು ಅವನ ವಿದ್ಯಾಪರಿಶ್ರಮವನ್ನು ಅವಲೋಕಿಸಿ ಆಶಿರ್ವದಿಸಬೇಕೆಂದು ಕೋರಿದಾಗ, ಶ್ರೀ ಟೀಕಾಚಾರ್ಯರ “ನ್ಯಾಯಸುಧೆ”ಎಂಬ ಗ್ರಂಥದ ವಾಕ್ಯವೊಂದನ್ನು ವಿಮರ್ಶಿಸಲು ಹೇಳಲು, ಆ ಒಂದು ವಾಕ್ಯವನ್ನು ಆಧರಿಸಿ ಇಡೀ ಗ್ರಂಥವನ್ನೇ ವಿಶ್ಲೇಸಿದ ಇವರ ಪಾಂಡಿತ್ಯಕ್ಕೆ ಬೆರಗಾಗಿ ಶ್ರೀ ರಘುನಾಥರು ಮೆಚ್ಚುಗೆಯಿಂದ "ನಾವೂ ಬರೇ ಪಾದಂಗಳು, ತಾವಾದರೋ ಶ್ರೀ ಪಾದರಾಜರು. ಎಂದು ಮನಃಪೂರ್ವಕವಾಗಿ ನುಡಿಯುತ್ತಾರೆ. ಅಂದಿನಿಂದ ಶ್ರೀಲಕ್ಷ್ಮೀನಾರಾಯಣತೀರ್ಥರು “ಶ್ರೀಪಾದರಾಜ”ರಾದರು.
ಕೆಲದಿನಗಳಲ್ಲೆ ಸ್ವರ್ಣವರ್ಣತೀರ್ಥರು ವೃಂದಾವನಸ್ಥರಾಗುತ್ತಾರೆ. ಪದ್ಮನಾಭತೀರ್ಥರ ಮಠದ ಸರ್ವಾಧಿಪತ್ಯವೂ ಶ್ರೀಪಾದರಾಜರದಾಯಿತು. ಶ್ರೀರಂಗದಲ್ಲಿ ಹಲವು ವರ್ಷಗಳಿದ್ದು, ಸಂಚಾರ ಹೊರಟು ಮುಳುಬಾಗಿಲಿಗೆ ಬಂದು ಅಲ್ಲಿನ ಮಹತ್ವವರಿತು ಅಲ್ಲಿಯೇ ಮಠವನ್ನು ಸ್ಥಿರವಾಗಿ ಸ್ಥಾಪಿಸಿದರು. ಮುಳುಬಾಗಿಲು ವಿಜಯನಗರದ ಅರಸರ ಅಧಿಪತ್ಯಕ್ಕೆ ಒಳಪಟ್ಟು ತುಂಬಾ ಪ್ರಸಿದ್ಧವಾಗಿತ್ತು. ಕನ್ನಡದಲ್ಲಿ ಸಾಮಾನ್ಯ ಜನರಿಗೆ ತಿಳಿಯುವಂತೆ ಭಾಗವತದ ಕಥೆಗಳು, ಮಹಾಭಾರತ, ರಾಮಾಯಣಗಳು ಇವೇ ಮೊದಲಾದವನ್ನು ಕನ್ನಡೀಕರಿಸಿ ಹಾಡುಗಳನ್ನಾಗಿ ಪರಿವರ್ತಿಸಿ ಪೂಜಾ ಸಮಯದಲ್ಲಿ ಭಾಗವತರ ಮುಖೇನ ಹಾಡಿಸುವ ಪದ್ಧತಿಯನ್ನು ಜಾರಿಗೆ ತಂದರು. “ರಂಗ ವಿಠಲ” ಅಂಕಿತದೊಂದಿಗೆ ಅನೇಕ ಕೀರ್ತನೆಗಳನ್ನು ರಚಿಸಿದರು. ಸ್ವತಃ ಭ್ರಮರಗೀತೆ, ವೇಣುಗೀತೆ, ಗೋಪಿಗೀತೆಗಳಂಥ ಭಕ್ತಿಗೀತೆಗಳನ್ನು ಹಾಗೂ ಶ್ರೀ ವಾಯುದೇವರ ಮೂರು ಅವತಾರಗಳನ್ನು ವರ್ಣಿಸುವ “ಶ್ರೀಮಧ್ವನಾಮ” ವನ್ನು ರಚಿಸಿದ್ದಾರೆ.
ಇಂಥಹ ಮಧ್ವನಾಮದ ಪಠಣದಿಂದ ಸಿಗುವ ಫಲವನ್ನು ಜಗನ್ನಾಥದಾಸರು ತಮ್ಮ ಫಲಸ್ತುತಿಯಲ್ಲಿ “ಪುತ್ರರಿಲ್ಲದವರು ಸತ್ಪುತ್ರರೈದುವರು ಸರ್ವತ್ರದಲಿ ದಿಗ್ವಿಜಯವಹುದು ಸಕಲ ಶತ್ರುಗಳು ಕೆಡುವರು ಅಪಮೃತ್ಯು ಬರಲಂಜುವದು ಸೂತ್ರನಾಮಕನ ಸಂಸ್ತುತಿ ಮಾತ್ರದಿ” ಬಣ್ಣಿಸುತ್ತಾರೆ. ಶ್ರೀಪುರಂದರದಾಸರ ಸುಪುತ್ರರಾದ ಮಧ್ವಪತಿದಾಸರು ತಮ್ಮ ಉಗಾಭೋಗದಲ್ಲಿ “ವರಧ್ರುವನ ಅವತಾರ ಶ್ರೀಪಾದರಾಯರು” ಎನ್ನುತ್ತಾರೆ. ಇವರು ಧ್ರುವರಾಜನ ಅಂಶಜರು. ಇವರ ಮಹಿಮೆ ಅಪಾರವಾದುದು. ಅನೇಕ ಉಗಾಭೋಗಗಳು, ಕೀರ್ತನೆಗಳು, ಸುಳಾದಿಗಳು, ವೃತ್ತನಾಮ, ದಂಡಕಗಳೆಂಬ ಪ್ರಕಾರಗಳನ್ನು ಮಾಡಿದ್ದಾರೆ. ಶ್ರೀಪಾದರಾಜರ ಕನ್ನಡ ಕೃತಿಗಳಲ್ಲಿ ಪದಲಾಲಿತ್ಯ, ಅಲಂಕಾರ ಪ್ರೌಢಿಮೆ, ಶೃಂಗಾರ, ಶಾಂತಿ, ಭಕ್ತಿರಸಗಳ ನಿರೂಪಣೆ ಇವು ಓದುಗರ ಚಿತ್ತವನ್ನೂ ಹೃದಯವನ್ನು ಆಕರ್ಷಿಸುವವು. ಮತ್ತು ಸುಪ್ರಸಿದ್ಧವಾಗಿವೆ.
ಶ್ರೀಪಾದರಾಜರ ಮಹಿಮೆ ಅಪಾರವಾದುದು. ಶ್ರೀಪಾದರಾಜರು ಎಲ್ಲಿದ್ದರೂ ಅರವತ್ನಾಲ್ಕು ಬಗೆಯ ಪದಾರ್ಥಗಳನ್ನೇ ಮಾಡಿಸಿ ನೈವೇದ್ಯ ಮಾಡಿ ಭೀಕ್ಷಾಸ್ವೀಕಾರ ಮಾಡುತ್ತಿದ್ದರು. ಭೀಮರಥೀತೀರದಲ್ಲಿ ಭೂಗರ್ಭದಲ್ಲಡಗಿದ್ದ ಸ್ವರ್ಣಪೀಠಿಕೆಯೊಂದನ್ನು ಸ್ವಪ್ನ ಸೂಚನೆಯಿಂದ ತೆಗೆಸಿ ಅದರಲ್ಲಿ ದೊರೆತ ರಂಗವಿಠಲದೇವರನ್ನು ಪೂಜೆಗೆ ಇಟ್ಟುಕೊಂಡರು. ಕೋಲಾರ ಜಿಲ್ಲೆಯ ಮುಳುಬಾಗಿಲಿನಲ್ಲಿ ಶ್ರೀಪಾದರಾಜರು ಭಕ್ತಜನರ ಕೋರಿಕೆಯಂತೆ ಗಂಗೆಯನ್ನು ಸ್ತೋತ್ರ ಮಾಡಿ ನೃಸಿಂಹ ತೀರ್ಥದಲ್ಲೇ ಆಕೆ ಅವತರಿಸುವಂತೆ ಮಾಡಿ ಎಲ್ಲರಿಗೂ ಗಂಗಾ ಸ್ನಾನವನ್ನು ಮಾಡಿಸಿದರು. ಹೀಗೆ ಇವರ ಮಹಿಮೆಗಳ ಪಟ್ಟಿಯನ್ನು ಮಾಡುತ್ತಾ ಹೋದರೆ ಮುಗಿಯುವದಿಲ್ಲ.
ಜ್ಯೇಷ್ಠ ಮಾಸ ಬಂತೆಂದರೆ, ಶ್ರೀಪಾದರಾಜರ ದಿವ್ಯಪಾದ ಸ್ಮರಣೆ ತಪ್ಪದೆ ಬರುತ್ತದೆ. ಪ್ರಾತಃಕಾಲದಲ್ಲಿ ಇವರ ಸ್ಮರಣೆ ಬಂತೆಂದರೆ ಸಾಕು ಸೊಗಸಾದ ಊಟ ಅಂದು ಸಿದ್ಧ. ಇದು ಎಲ್ಲರ ಅನುಭವದ ಮಾತು. ಶ್ರೀ ವಿಜಯದಾಸರು, ಇವರ ವಿಷಯದಲ್ಲಿ ಒಂದು ಸುಳಾದಿಯಲ್ಲಿ ಆಡಿರುವ ಸವಿಮಾತುಗಳು, ಮನಃ ಪ್ರಸನ್ನತೆಯನ್ನೂ, ಇವರನ್ನು ಆಶ್ರಯಿಸದೇ ಇರುವನು ನರಪಶುವೆಂಬ ಜ್ಞಾನವನ್ನೂ ಒತ್ತಿ ತೋರಿಸುತ್ತವೆ. ಶ್ರೀಪಾದರಾಜರ ಕುರಿತಾದ ಸುಳಾದಿಯಲ್ಲಿ “ಇವರ ಪ್ರಸಾದವಾದರೆ ವ್ಯಾಸಮುನಿರಾಯ ಕವಿರಾಯ ಪುರಂದರದಾಸರಾಯರ ಕರುಣ ತಾನಾಗಿ ಸಿದ್ಧಿಪುದು.” “ದ್ವಿಪಾದ ಪಶುಕಾಣೋ ಈ ಮುನಿಯ ನಂಬದವ” ಎನ್ನುತ್ತಾರೆ.
ಕ್ರಿ.ಶ 1502ರಲ್ಲಿ ವೃಂದಾವನಸ್ಥರಾದ ಶ್ರೀಪಾದರಾಜರು ಭಾಗವತ ಧರ್ಮ ಕನ್ನಡ ಭಕ್ತಿ ಸಾಹಿತ್ಯಗಳಿಗೆ ಜೀವತುಂಬಿ ಧೃವತಾರೆಯಂತೆ ಬಾಳಿ, ಬೆಳಗಿದ್ದಾರೆ. ಗುಣನಿಧಿ ಶ್ರೀಪಾದರಾಜರನ್ನು ಜ್ಞಾನಶ್ರೇಷ್ಠರ ಗುಣಗಾನವು ಜ್ಞಾನಜ್ಯೇಷ್ಠರಿಂದ ಮಾಡಲ್ಪಟ್ಟರೇನೇ ಚಂದ. ಅದನ್ನು ನುಡಿದವನಿಗೆ ದೊರೆಯುವದು ಆನಂದ. ಎಂದು ಜ್ಞಾನಿಗಳು ಹೇಳುತ್ತಾರೆ. ಪ್ರಕೃತ “ಶ್ರೀಪಾದರಾಯ ಗುರುವೇ” ಎಂದು ಪ್ರಾರಂಭವುಳ್ಳ ಸುಳಾದಿ ಶ್ರೀ ವಿಜಯರಾಯರ ಕೃತಿಯನ್ನು ಓದಿ ನೋಡುವಾಗ ಶ್ರೀಪಾದರಾಜರ ಒಂದೊಂದು ಗುಣವೂ ರಮಾರಮಣನಿಗೆ ಎಷ್ಟು ಪ್ರೀತಿ ಎಂಬುದು ಅರ್ಥವಾಗದೆ ಇರದು.
ಜ್ಯೇಷ್ಠ ಶುದ್ಧ ಚತುರ್ದಶಿದಿನ ಈ ಪುಣ್ಯಾತ್ಮರ ಪುಣ್ಯದಿನ. ಕೋಲಾರ ಜಿಲ್ಲೆಯ ಮುಳುಬಾಗಿಲಿನಲ್ಲಿ ಶ್ರೀಪಾದರಾಜರ ಆರಾಧನೆಯನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ. ಶ್ರೀಪಾದರಾಜರನ್ನು ನೆನೆಸಿದವರು ಧನ್ಯ. ಅವರ ಸ್ಮರಣೆ ನಿರಂತರವಾಗಿರಲಿ. ಶ್ರೀ ಪಾದರಾಜರ ಮಧುರ ಸ್ಮರಣೆಗಾಗಿ ನಮಗೆ ನಿಲುಕಿದ ಅವರ ಮಾಡಿದ ಕೃತಿ ಬರೆದು-ಓದಿ-ಆನಂದಿಸೋಣ.
ಉಗಾಭೋಗ
“ಬಲ್ಲವನು ಎಲ್ಲವನು ಹರಿಯಿರಲು ಭಜಿಸದೆ|
ಕ್ಷುಲ್ಲದೇವರ ಬೇಡಿ ಸುಖವ ಬಯಸುವೆ ನೀನು|
ಕಲ್ಲುಗೋವಿನ ಪಾಲ ಕರುವು ಬಯಸಿದಂತೆ
ಹಲ್ಲು ಹೋಹದನರಿಯ ಅಕ್ಕಟಕಟ
ಬಲ್ಲಿದ ದೈವ ಶ್ರೀರಂಗ ವಿಠಲನು
ಕೈವಲ್ಯವನೇ ಕೊಟ್ಟು ಸಂತೈಸುವನು ಭಜಿಸೋ||”
ಎಂದ ಅವರ ಹಿತೋಪದೇಶವನ್ನು ಮನದಟ್ಟು ಮಾಡಿಕೊಂಡು-
“ಕಲಿಕಾಲಕೆ ಸಮಯುಗವಿಲ್ಲವಯ್ಯ|
ಕಲುಷಹರಿಸಿ ಕೈವಲ್ಯವೀವುದಯ್ಯ
ಸಲೆ ನಾಮ ಕೀರ್ತನೆ ಸ್ಮರಣೆ ಸಾಕಯ್ಯ
ಸ್ಮರಿಸಲು ಸಾಯುಜ್ಯ ಪದವೀವುದಯ್ಯ
ಬಲವಂತ ಶ್ರೀರಂಗವಿಠಲನ ನೆನೆದರೆ ಕಲಿಯುಗವೇ ಕೃತಯುಗವಾಗುವುದಯ್ಯ.”
ಎಂದು ಅವರಿತ್ತ ಧೈರ್ಯದಿಂದ ಬಾಳೋಣ.
||ಶ್ರೀ ಗು.ಮ.ಮ||
*********
Part 1
|| ಶ್ರೀ ವಿಠ್ಠಲಪ್ರಸಿದ ||
ಶ್ರೀ ಶ್ರೀಪಾದರಾಜರ ಆರಾಧನೆ.
ತಿರುಪತಿಯವೆಂಕಟನ ಅತೀ ಸಮೀಪದಲ್ಲಿ ತಪಸ್ಸನ್ನಾಚರಿಸುವಂತಹರು . ಸುಮಾರು ವರ್ಷಗಳಿಂದ ಅವರ ಚರಿತ್ರೆ ಬರೆಯುತ್ತಿದ್ದರೂ ಪ್ರತಿಸಲ ಅವರನ್ನು ನೆನೆಸುವಾಗ ಹೃದಯ ತುಂಬಿಬರುತ್ತದೆ ಗುರುಗಳನ್ನು ನೆನೆದು . ಕಲಿಯುಗದಲ್ಲಿ ಧ್ರುವರಾಜರ ಸಾಧನೆ ಮುಂದುವರೆದಿದೆ .ನಾಡು ನುಡಿಗಳಲ್ಲಿ ಭಗವಂತನನ್ನು ಕಂಡು ಅದಕ್ಕಾಗಿ ಶ್ರಮಿಸಿದ ಮಹಾಯೋಗಿಗಳವರು . ಶ್ರೀವೆಂಕಟೇಶನ ದರ್ಶನಕ್ಕೆ ಅರ್ಧದಾರಿ ಕ್ರಯಿಸಿ ಬೃಂದಾವನ ದರ್ಶನಕ್ಕೆ ಮುಳಬಾಗಿನಲ್ಲಿಳಿದಾಗ “ ಹರೇ ವೆಂಕಟ ಶೈಲವಲ್ಲಭ ಪೊರೆಯಬೇಕು ಎನ್ನ “ ಎಂಬುವ ಅವರಕೃತಿ ನಮಗೆ ಅರಿವಿಲ್ಲದಂತೆ ನಮ್ಮಿಂದ ಹೊರಡುತ್ತದೆ.
ಮುಳಬಾಗಿಲಿನಲ್ಲಿ ನೆಲೆಯಾಗುವುದಕ್ಕೆ ಮುಂಚೆ
ಮೂಲತಃ ಅಬ್ಬೂರಿನವರು . ಅಲ್ಲಿನ ನಾರಾಯಣಾಚಾರ್ಯರ ಮೂವರು ಪುತ್ರಿಯರಲ್ಲಿ
ದ್ವಿತೀಯ ಪುತ್ರಿಯ ಮಗನೆ ಲಕ್ಷ್ಮೀನಾರಾಯಣ .
ಪ್ರಥಮ ಪುತ್ರಿಯ ಪತಿ ನರಸಿಂಹಾಚಾರ್ಯರು
ಮುಂದೆ ಆಶ್ರಮ ಸ್ವೀಕರಿಸಿ ಶ್ರೀ ಬ್ರಹ್ಮಣ್ಯತೀರ್ಥರೆನಿಸಿದರು .
ಬಾಲಕ ಲಕ್ಷ್ಮೀನಾರಾಯಣನ ತಾಯಿಯನ್ನು
ತಮಿಳುನಾಡಿನ ಶ್ರೀರಂಗದಲ್ಲಿದ್ದ ಶೇಷಗಿರಿ ಆಚಾರ್ಯರಿಗೆ ವಿವಾಹ ಮಾಡಿಕೊಡಲಾಗಿತ್ತು.
ಬಾಲ್ಯದಿಂದಲೂ ಲಕ್ಷ್ಮೀನಾರಾಯಣ ಬಹಳ ಭಕ್ತ ತಮ್ಮ ತಂದೆ ಅನಾರೋಗ್ಯಪೀಡಿತರಾದಾಗ ಶ್ರೀ
ನರಸಿಂಹ ಪ್ರಾದುರ್ಭವದ ಸ್ತೋತ್ರ ಪಠಿಸಿ ತಂದೆಗೆ ಗುಣಪಡಿಸಿದ್ದ .
ಶ್ರೀರಂಗದಲ್ಲಿ ತಂದೆ ಪೌರೋಹಿತ್ಯ ಮಾಡುತ್ತಿದ್ದರು . ಬಾಲಕ ಲಕ್ಷ್ಮೀನರಸಿಂಹ
ವೇದಗಳ ಪಠಣೆ ಜೊತೆ ಸ್ಥಳೀಯ ಪ್ರಾಕೃತಭಾಷೆಯ ಸ್ತೋತ್ರಗಳಲ್ಲೂ ಪರಿಣಿತಿ ಹೊಂದಿದ್ದ .
ಮತ್ತೊಮ್ಮೆ ಶೇಷಗಿರಿಯಪ್ಪನಿಗೆ ಅನಾರೋಗ್ಯ ಭಾದಿಸಿದಾಗ ಸಂಸಾರ ಸಮೇತ ಅಬ್ಬೂರಿಗೆ ಬಂದುಬಿಟ್ಟರು . ಲಕ್ಷ್ಮೀನಾರಾಯಣ ತಾಯಿಯ ತೌರಿನಲ್ಲಿ ಮನೆಗೆಲಸ ಗೋಸೇವೆಯಲ್ಲಿ ನಿರತನಾದ .
ಒಮ್ಮೆ ಹಸುಗಳನ್ನು ಮೇಯಿಸುತ್ತಾ ಇದ್ದ ಬಾಲಕನನ್ನು ಸ್ವರ್ಣವರ್ಣತೀರ್ಥರು ನೋಡಿದರು ಅವರು ಆ ಸಮಯದಲ್ಲಿ ಅಬ್ಬೂರಿನ ಯತಿಗಳು ಶ್ರೀಬ್ರಹ್ಮಣ್ಯತೀರ್ಥರನ್ನು ಸಂದರ್ಶಿಸಲು ಬಂದಿದ್ದರು . ಊರಾಚೆ ಹಸುಗಳನ್ನು ಮೇಯಿಸುತ್ತಿದ್ದ ಲಕ್ಷ್ಮೀನಾರಾಯಣನನ್ನು ನೋಡಿ
ಮೇನೆಯಲ್ಲಿದ್ದ ಗುರುಗಳು “ಅಬ್ಬೂರು ಎಷ್ಟುದೂರವಿದೆ ?ಎಂದು ಪ್ರಶ್ನೆಮಾಡಿದರು .
ಬಾಲಕ ನೇರವಾಗಿ ಉತ್ತರಕೊಡದೆ ನಕ್ಕು ,ನನ್ನನ್ನು ನೋಡಿ ,ಸೂರ್ಯನನ್ನು ನೋಡಿ , ದನಕರುಗಳು ಹಿಂದಿರುಗುತ್ತಿವೆ ಇದನ್ನು ನೋಡಿದರೆ ಅಬ್ಬೂರು ಸಮೀಪದಲ್ಲಿದೆ ಎಂದು
ತಿಳಿಯುವುದಿಲ್ಲವೇ “ ಎಂದ . ಅವನ ಮೇಧಾವಿತನದಿಂದ ಗುರುಗಳು ಸಂತೋಷಿಸಿದರು . ತಾವು ಅರಸುತ್ತಿದ್ದ ಒಬ್ಬ ಶಿಷ್ಯ ಸಿಕ್ಕಿದನೆಂದುಕೊಂಡರು . ಮುಂದೆ ಅದೇ ಬಾಲಕ ಆಶ್ರಮ ಸ್ವೀಕರಿಸಿ ಶ್ರೀ ಲಕ್ಷ್ಮೀನಾರಾಯಣ
ಮುನಿಗಳೆಂದೆನಿಸಿದರು . ಇದಕ್ಕೆ ಮೊದಲು ಒಂದು ವಿಚಿತ್ರ ನಡೆಯಿತು . ಲಕ್ಷ್ಮೀನಾರಾಯಣನನ್ನು ಶಿಷ್ಯನಾಗಿ ಸ್ವೀಕರಿಸಲು ಶ್ರೀ ಸ್ವರ್ಣವರ್ಣರು ನಿರ್ಧರಿಸಿದಾಗ ತಂದೆ ಶೇಷಗಿರಿಯಪ್ಪ “ಪತ್ನಿಯ ಅನುಮತಿ ಕೇಳಿಹೇಳುತ್ತೇನೆ “ ಎಂದಿದ್ದರು . ಆಗ ಅವರ ಪತ್ನಿ ಗರ್ಭವತಿ , ಆಕೆಯನ್ನು ಸ್ವರ್ಣವರ್ಣ ತೀರ್ಥರು ಕರೆಸಿಕೇಳಿದಾಗ ಆಕೆ “ಸ್ವಾಮಿ ಹುಟ್ಟುವ ಮಗು ಗಂಡಾದರೆ ಲಕ್ಷ್ಮೀನಾರಾಯಣ ನಿಮ್ಮವನು ಹೆಣ್ಣಾದರೆ ಅವನು ನಮ್ಮವನು “ ಎಂದು ಹೇಳಿದ್ದಳು . ಅಂತೂ ಭಗವಂತನ ಸಂಕಲ್ಪದಿಂದ ಲಕ್ಷ್ಮೀನಾರಾಯಣ ಸ್ವರ್ಣವರ್ಣರ ಶಿಷ್ಯನಾದ . ಹಿಂದೆ “ಧ್ರುವ “ ಕೇವಲ ಬಾಲ್ಯ ಸಹಜವಾಗಿ ಲೌಕಿಕ ಸಿಂಹಾಸನಕ್ಕಾಗಿ ಬ್ರಹ್ಮಾಂಡಧಿಪತಿಯನ್ನು ಕುರಿತು ತಪಸ್ಸು ಮಾಡಿ ಧ್ರುವ ಮಂಡಲದ ಅಧಿಪತಿಯಾದರೆ , ಈ ಕಲಿಯುಗದ “ಧ್ರುವ” ಮೇನೆಯ , ಶಿಷ್ಯರ ಹತ್ತಿರ ನಮಸ್ಕರಿಸಿಕೊಳ್ಳುವ ಆಸೆಯಿಂದ ಹೋಗಿ ವೇದಾಂತ ಸಾಮ್ರಾಜ್ಯದ , ಮುಂದೆ ಸನ್ಯಾಸಿಗಳ ಸಮುದಾಯಕ್ಕೆ ರಾಜರೆನಿಸಿದರು .
ಶ್ರೀ ಸ್ವರ್ಣವರ್ಣತೀರ್ಥರು ಮಾದ್ವ ಸಿದ್ದಾಂತದ
ಪ್ರಾಥಮಿಕ ಪಾಠಗಳನ್ನು ಭೋದಿಸಿದರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಶ್ರೀ ವಿಭುದೇಂದ್ರರ ಬಳಿ ಕಳುಹಿಸಿದರು .
ಶ್ರೀ ವಿಭುದೇಂದ್ರತೀರ್ಥರು ಸಾಮಾನ್ಯರಲ್ಲ . ಸಂಪ್ರದಾಯ ಪ್ರವರ್ತಕರು . ಶ್ರೀಮನ್ಯಾಯ ಸುಧೆಯನ್ನು ಕಂಠಪಾಠ ಮಾಡಿದ್ದಂತ ಮೇಧಾವಿಗಳು . ಶ್ರೀ ರಾಮಚಂದ್ರತೀರ್ಥರ ಶಿಷ್ಯರು .ಇಂಥ ವಿಭುದೇಂದ್ರರ ಬಳಿ ಶ್ರೀಲಕ್ಷ್ಮೀನಾರಾಯಣ ಮುನಿಗಳು ವಿದ್ಯಾಭ್ಯಾಸಕ್ಕಾಗಿ ಬಂದರು .
ಗುರುಗಳು ಸಂಚಾರದಲ್ಲಿದ್ದಾಗ ಶಿಷ್ಯರೂ ಅವರನ್ನು ಅನುಸರಿಸಬೇಕು . ಹಾಗೆ ಸಂಚರಿಸುತ್ತ ಶ್ರೀ ವಿಭುದೇಂದ್ರ ಶ್ರೀಗಳು ಕೃಷ್ಣ ತೀರದಲ್ಲಿರುವ ರಾಯಚೂರು ಕ್ಷೆತ್ರದ ಕೊಪ್ಪರ ಎಂಬ ನಾರಸಿಂಹ ಕ್ಷೆತ್ರಕ್ಕೆ ಬಂದರು. ಅಲ್ಲಿಯೇ ಚಾತುರ್ಮಾಸ್ಯ ವ್ರತ ಸಂಕಲ್ಪ ಕೈಗೊಂಡರು .
ಅಲ್ಲಿನ ದೊರೆಯಿಂದ ಎಲ್ಲಾವ್ಯವಸ್ಥೆಯು ಆಗಿದ್ದಿತು . ಅದೇ ಸಮಯದಲ್ಲಿ ಉತ್ತರಾಧಿಮಠದ ಶ್ರೀ ರಘುನಾಥ ಯತಿಗಳ ಆಗಮನವೂ ಆಯಿತು . ಮಹಾ ಹರಿಭಕ್ತರಾಗಿದ್ದ
ಶ್ರೀರಘುನಾಥ ತೀರ್ಥರಿಗೆ ಪೂರ್ವಾಶ್ರಮದಿಂದಲೂ ಶ್ರೀವಿಭುದೇಂದ್ರರೆಂದರೆ ಅತ್ಯಂತ ಗೌರವ .
ಈಗ ಅಲ್ಲಿನದೋರೆ ಯಾದವರಾಯ ಎಲ್ಲ ಶ್ರೀಗಳಿಗೆ ಭಗವಂತನ ಪೂಜೆಗೆ ಅನುಕೂಲ ಕಲ್ಪಿಸಿದ್ದ . ಈ ಸಮಯದಲ್ಲಿ ಶ್ರೀವಿಭುದೇಂದ್ರರು
ಶಿಷ್ಯ ಶ್ರೀಲಕ್ಹ್ಮೀನಾರಾಯಣ ಮುನಿಗಳನ್ನು ಸಭೆಗೆ ಪರಿಚಯಿಸುವ ಉದ್ದೇಶದಿಂದ ನಾಲ್ಕು ತಿಂಗಳಕಾಲ ನ್ಯಾಯಸುಧೆಯನ್ನು ಅಖಂಡ ಪ್ರವಚನಮಾಡಲು ಹೇಳಿದ್ದರು . ಶ್ರೀ ಲಕ್ಷ್ಮೀನಾರಾಯಣ ಮುನಿಗಳು ಇಬ್ಬರು ಯತಿವರರ ಸಮ್ಮುಖದಲ್ಲಿ , ಶ್ರೀಮನ್ಯಾಯಸುಧಾ ಅನುವಾದ ಮಾಡುವಾಗ ಅವರ ನಿರೂಪಣಾ ಶೈಲಿ ಅಲೌಕಿಕಜ್ಞಾನ ಜ್ಞಾಪಕ ಶಕ್ತಿ ನೋಡಿ ಮೂಕ ವಿಸ್ಮಿತರಾಗಿದ್ದರು ವೇದಿಕೆಯ ಮೇಲಿದ್ದ ಹಿರಿಯ ಯತಿಗಳು.
ಇಲ್ಲಿ ಚಿಕ್ಕ ವಯಸ್ಸಿನ ಲಕ್ಷ್ಮೀನಾರಾಯಣ ಮುನಿಗಳ ಧೈರ್ಯ ಮೆಚ್ಚುವಂತಹುದು . ಶ್ರೀವಿಭುದೇಂದ್ರರು ವಿಧ್ಯೆಗೆ ಮೇರುಪರ್ವತ ದಂತಿದ್ದವರು . ಮಂಗಳ ಮಹೋತ್ಸವ ಅದ್ದೂರಿಯಾಗಿ ನಡೆಯಿತು.ಎಲ್ಲ ಗ್ರಂಥಗಳ ಮೆರವಣಿಗೆ , ಸಂಸ್ಥಾನ ಪೂಜೆ ಭೂರಿಭೋಜನ ರಾಜ ಏರ್ಪಡಿಸಿದ್ದ . ಇಂಥ ಸಂಭ್ರಮದಲ್ಲಿ ರಾಜನ ಆರುವರ್ಷದ ಮಗ ನೀರುತುಂಬಿದ್ದ ಪಾತ್ರೆಯಲ್ಲಿ ಬಿದ್ದು ಅಕಾಲ ಮರಣಕ್ಕೆ ಈಡಾದ .ಆ ಸಮಯದಲ್ಲಿ ಮೂರು ಶ್ರೀಗಳು ಸಂಸ್ಥಾನ ಪೂಜೆ ನಡೆಸುತ್ತಿದ್ದರು . ಕ್ಷಣಮಾತ್ರದಲ್ಲಿ ಸೂತಕ ಆವರಿಸಿಕೊಂಡಿತ್ತು . ಶ್ರೀಗಳಿಗೆ ಏನೂ ಮಾಡಲು ತೋರದೆ ದನ್ವಂತರಿ ಪ್ರಾರ್ಥನೆ ಮಾಡಿದರು
ಶ್ರೀ ಲಕ್ಷ್ಮೀನಾರಾಯಣ ಮುನಿಗಳು “ ಶ್ರೀ ನೃಸಿಂಹ ಪ್ರಾದುರ್ಭವ ದಂಡಕ” ಪಠಿಸಿ ತಮ್ಮ
ಆರಾಧ್ಯದೈವ ಗೋಪಾಲಕೃಷ್ಣನ ತೀರ್ಥವನ್ನು ಪ್ರೋಕ್ಷಣೆ ಮಾಡಿದರು. ಮತ್ತೂ ಹೇಳಿದರು “ಶ್ರೀಮನ್ಯಾಯಸುಧೆ ಗ್ರಂಥವನ್ನು ಭಕ್ತಿಯಿಂದ ಪಠಿಸುವುದು ನಿಜವಾದರೆ ಬಾಲಕನನ್ನು ಈ ಅಪಮೃತ್ಯುವಿನಿಂದ ಪಾರುಮಾಡು . ಈ ಗ್ರಂಥ ಮೋಕ್ಷ ಶಾಸ್ತ್ರ ವಾಗಿರುವುದು . ಈ ಗ್ರಂಥಕ್ಕೆ ಶ್ರೀಕರ ಶಾಸ್ತ್ರವೆಂದು ಹೆಸರಿರುವುದು ನಿಜವಾದರೆ ಬಾಲಕ ಎದ್ದುಕುಳಿತುಕೊಳ್ಳಲಿ .” ಎಂದು ಪ್ರಾರ್ಥಿಸಿದರು . ಬಾಲಕ ನಿದ್ದೆಯಿಂದ ಎದ್ದವನಂತೆ ಎದ್ದ.
ಎಲ್ಲರು ಸ್ವಾಮಿಗಳನ್ನು ಕೊಂಡಾಡಿದರು . ವಿಶೇಷವಾಗಿ ಉಭಯ ಶ್ರೀಗಳು ತಮ್ಮ ವಾತ್ಸಲ್ಯ ತೋರಿದರು . ಅದರಲ್ಲೂ ಶ್ರೀರಘುನಾಥ ತೀರ್ಥರು “ ನೀವು ಒಬ್ಬ ಮಹಾ ಪುರುಷರು . ಅವತಾರ ಪುರುಷರೂ ಕೂಡ . ಇಷ್ಟು ಚಿಕ್ಕವಯಸ್ಸಿನಲ್ಲೇ ಹರಿಗುರುಗಳ ಕೃಪೆಗೆ ಪಾತ್ರರಾಗಿದ್ದೀರಿ ,” ಎಂದು ಹೊಗಳಿದಾಗ , ಅವರ ವಿದ್ಯಾಗುರುಗಳು ಶ್ರೀ ವಿಭುದೇಂದ್ರರು
“ ನಿಮ್ಮಿಂದ ನಮಗೆ ಕೀರ್ತಿಬಂತು “ ಎಂದು ಸಂತೋಷಪಟ್ಟರು .
ಈ ಹೊಗಳಿಕೆಗೆ ಶ್ರೀ ಲಕ್ಷ್ಮೀನಾರಾಯಣ ಮುನಿಗಳು ಸಂಕೋಚಪಟ್ಟು “ ಸ್ವಾಮಿ ನೀವೆಲ್ಲಿ ನಾನೆಲ್ಲಿ”ಎನ್ನುವಷ್ಟರಲ್ಲಿ ಶ್ರೀ ರಘುನಾಥ ತೀರ್ಥರು
“ ನಾವು ಶ್ರೀಪಾದರು ನಿಜ ಆದರೆ ನೀವು ಶ್ರೀಪಾದರಿಗೆಲ್ಲ ರಾಜರು , ಶ್ರೀಪಾದ ರಾಜರು” ಎಂದು ಹೊಗಳಿದರು . ಅಲ್ಲಿ ನೆರೆದಿದ್ದ ಆಸ್ತಿಕರು “ಶ್ರೀಪಾದ ರಾಜಮುನಿಗಳಿಗೆ ಜಯವಾಗಲಿ “ ಎಂದು
ಜೈಕಾರ ಹಾಕಿದರು . ಅಂತ ಮೇಧಾವಿ ಯತಿವರ್ಯರುಗಳೇ ಶ್ರೀಪಾದ ರಾಜರೆಂದು ಕರೆದಮೇಲೆ ಆ ಹೆಸರಿನಿಂದಲೇ ಭಕ್ತಜನ ಗುರುತಿಸುವಂತಾಯಿತು .
ಲೇಖನ ತುಂಬಾ ಉದ್ದವಾಯಿತು ಕ್ಷಮೆಯಿರಲಿ.
ಅವರ ಆರಾಧನೆಯಂದು ಬಹುಮುಖ್ಯವಾದ
ಅವರಿಂದ ರಚಿತವಾದ ದೇವರನಾಮಗಳ ಸ್ಮರಣೆ .
ನಾಹಂ ಕರ್ತಾ ಹರಿಃ ಕರ್ತಾ
||ಶ್ರೀರಂಗವಿಠಲ ಗೋಪಿನಾಥರ್ಪಣಮಸ್ತು||
*Part 2
||ಶ್ರೀ ವಿಠ್ಠಲ ಪ್ರಸೀದತು ||
ಶ್ರೀ ಶ್ರೀಪಾದರಾಜರ ಮುಂದುವರೆದ ಚರಿತ್ರೆ
ಹಿಂದಿನ ಸಂಚಿಕೆಯಲ್ಲಿ ಶ್ರೀ ಲಕ್ಷ್ಮಿ ನಾರಾಯಣ ಯತಿಗಳು ಶ್ರೀಪಾದರಾಜರಾಗಿದ್ದು ಓದಿದಿರಿ .
ಶ್ರೀಪಾದರಾಜರು ,ಶ್ರೀಪದ್ಮನಾಭ ತೀರ್ಥರನಂತರ ಎಂಟನೇ ಯತಿಗಳು. ಆಚಾರ್ಯ ಕರಾರ್ಚಿತ ಶ್ರೀ ಗೋಪಿನಾಥ ಮೂರ್ತಿ ಈ ಸಂಸ್ಥಾನದ ಆರಾಧ್ಯ ದೈವ . ಶ್ರೀ ಶ್ರೀಶ್ರೀಪಾದತೀರ್ಥರ ಮಠ ಪೂರ್ವದಲ್ಲಿ ಶ್ರೀ ಪದ್ಮನಾಭತೀರ್ಥರ ಮಠ, ಅನಂತರ ಶ್ರೀ ಲಕ್ಷ್ಮೀಧರ ತೀರ್ಥರ ಮಠ ಎಂದು ಹೆಸರಾಗಿತ್ತು .
ಈಗ ಉಭಯಗುರುಗಳಿಂದ ಪ್ರಶಂಸೆ ಪಡೆದ ಯತಿಗಳು ಶ್ರೀಪಾದರಾಜರೆಂದು ಪ್ರಖ್ಯಾತರಾಗಿದ್ದರು .
ಈ ಘಟನೆಯನಂತರ ಶ್ರೀಪಾದರಾಜರು ಶ್ರೀರಂಗಕ್ಕೆ ಹಿಂತಿರುಗಿದರು . ಅವರ ಆಶ್ರಮಗುರುಗಳು ಶ್ರೀ ಸ್ವರ್ಣವರ್ಣ ತೀರ್ಥರು ತೀರಾ ವೃದ್ದಾಪ್ಯದಲ್ಲಿದ್ದರು , ಶಿಷ್ಯನಿಗೆ ದೊರೆತ ಪ್ರಶಸ್ತಿಯ ವಿಷಯಕೇಳಿ ಇದೆಲ್ಲ ವೇದವ್ಯಾಸರ ಅನುಗ್ರಹ ಎಂದು ಸಂತೋಷಪಟ್ಟರು .
ಮುಂದೆ ಗುರುಗಳು ಬೃಂದಾವನಸ್ಥರಾದರು .
ಶ್ರೀಪಾದರಾಜರು. ಸಂಸ್ಥಾನಕ್ಕೆ ಉತ್ತರಾಧಿಕಾರಿಗಳಾದರು .
ಶ್ರೀ ಶ್ರೀಪಾದರಾಜರು ಸಾಮಾನ್ಯರಲ್ಲ ಅವರ ಪೂರ್ವೀಕರಕಾಲದಿಂದಲೂ ಕರ್ನಾಟಕದ ಚರಿತ್ರೆಯಲ್ಲಿ ಕಾಣಿಸಿಕೊಂಡವರು .
ಅನೇಕ ಕೃತಿಗಳನ್ನು ರಚಿಸಿದರು . ಅವರಿಂದ ರಚಿತವಾದ ಗ್ರಂಥ ವಾಗ್ವಜ್ರ . ಅವರಕಾಲದಲ್ಲಿ ಪ್ರಾಕೃತಿಕ ಭಾಷೆಯಲ್ಲಿ
ಮಾತನಾಡುವುದೇ ಮೈಲಿಗೆ ಎಂದು ತಿಳಿದಿದ್ದಾಗ , ಅವರು ಶ್ರೀರಂಗದಲ್ಲಿ ಕಳೆದ ದಿನಗಳಲ್ಲಿ ರಂಗನಾಥನ ಸನ್ನಿಧಿಯಲ್ಲಿ ತಮಿಳು ಪ್ರಬಂಧಗಳನ್ನು ಕೆಳುತ್ತಾ ಬೆಳೆದವರು . ಆರಾಧ್ಯಧೈವ ಗೋಪಿನಾಥ . ಅಭಿಮಾನದ ದೈವ ಶ್ರೀರಂಗ , ಪಂಡರಾಪುರದ ವಿಠ್ಠಲ ಸೇರಿ ಮುದ್ದಾದ ರಂಗವಿಠಲ .
ಅವರ ಕೃತಿಗಳಲ್ಲಿ ವಾಯುಸ್ತುತಿ ಆಧರಿಸಿದ
ಕನ್ನಡ ವಾಯುಸ್ತುತಿ “ ಮಧ್ವನಾಮ “ ಮುಖ್ಯವಾದದ್ದು . ೨೯ ನುಡಿಗಳಿಂದ ಕೂಡಿದ
ಮಧ್ವನಾಮ. ಸುಂದರವಾದ ಮಧ್ವನಾಮದಲ್ಲಿ
ವಾಯುದೇವರನ್ನು ಮನಸಾರೆ ಸ್ತೋತ್ರಮಾಡಿದ್ದಾರೆ .
ಇಲ್ಲಿ ರಾಜರು “ ಜಯಜಯ ಜಗತ್ರಾಣ” ಎಂದು
ಆರಭಿಸಿದ್ದಾರೆ , ಜಯ ಶಬ್ದದಿಂ ವಾಯುದೇವರು
ಭಾವಿಬ್ರಹ್ಮರೆಂದು ಸೂಚಿಸಿದ್ದಾರೆ . “ಸುತ್ರಾಣ”
ಎಂಬ ಶಬ್ದದಿಂದ “ ಸರ್ವೇಶಾoಚ ಪ್ರಾಣಿನಾಂ
ಪ್ರಾಣಭೂತ “ ಎಂದಹಾಗೆ ಸಕಲ ಭೂತಗಳಲ್ಲಿ ಪ್ರಾಣದೇವರು ಎಂದು ಸೂಚಿಸಿ , “ಮಧ್ವ “ ಎಂಬ ನಾಮದಿಂದ ಮೋಕ್ಷ ಶಾಸ್ತ್ರ ಕರ್ತರೆಂದು
ಸೂಚಿಸಿದ್ದಾರೆ.
ಇವರ ವಾಯುಸ್ತುತಿ ಆಧಾರಿತ೨೯ ನುಡಿಗಳ “ಮದ್ವನಾಮ”ಕ್ಕೆ
ಮಹಿಮಾನ್ವಿತರಾದ ಶ್ರೀ ಜಗನ್ನಾಥದಾಸರು
ಮೂರುನುಡಿಗಳ ಫಲಸ್ತುತಿಬರೆದು ೩೨ ವಾಯುದೇವರ ೩೨ ಲಕ್ಷಣಗಳಿಗೆ ಸಾಟಿಯಾಗಿಸಿದ್ದಾರೆ .
ಅವರಕೃತಿಗಳಲ್ಲಿ ಮಧ್ವ ಸಿದ್ದಾಂತದ ಅನೇಕ
ಪ್ರಮೇಯಗಳನ್ನು ಕಾಣಬಹುದು .
ಹನುಮಂತದೇವರಮೇಲೆ ಅವರ ಭಕ್ತಿ ಹೀಗೆ
ಪ್ರಕಟಮಾಡಿದ್ದಾರೆ .
“ನಿರುತದಿ ದೈರ್ಯವೂ ನಿರ್ಭಯತ್ವವು
ಆರೋಗಾನಂದ ಆಜಾಡ್ಯ ವಾಕ್ಪಾಟುತ್ವ
ಹರೇ ರಂಗವಿಠಲ ಹನುಮಾ ಎನಲು”
ಎಂದಿದ್ದಾರೆ .
ಪರಮಾತ್ಮನಲ್ಲಿ ಅವರ ಭಕ್ತಿ ಹೀಗಿದೆ
“ಭವವೆಂಬ ಅಡವಿಯಲ್ಲಿ ತಾಪತ್ರಯದಿ ಸಿಲುಕಿ
ಭಯಗೊಳ್ವದಂತೆ ಗೆಲುವುದಕ್ಕೆ ಹರಿಯನಾಮ
ಹೊರತಾಗಿ ಮತ್ತುಂಟೆ ಎನ್ನ ಮನವ ನಿನ್ನ
ಚರಣದಲ್ಲಿಟ್ಟು ಸಲಹೋ ನಮೋ ರಂಗವಿಠಲ”
ಎಂದು ಸರ್ವ ಸಮರ್ಪಣಾ ಭಾವ ತೋರಿದ್ದಾರೆ .
ಅವರ ಶಿಷ್ಯ ಪ್ರಶಿಷ್ಯರ ವಿಧ್ಯೆಯನ್ನು ನೋಡಿಯೇ ಗುರುಗಳ ವರ್ಚಸ್ಸು ತಿಳಿಯಬಹುದು .
ಒಮ್ಮೆ ಶ್ರೀಪಾದರಾಜರು ಶ್ರೀ ಪದ್ಮನಾಭ ತೀರ್ಥರ
ಆರಾಧನೆ ಸಲುವಾಗಿ ಅನೆಗೊಂದಿಗೆ ಹೋಗಿದ್ದರು . ಅವರ ಯತಿಪರಂಪರೆಯ ಶ್ರೀ
ಲಕ್ಷ್ಮೀಧರ ಶ್ರೀಗಳು ಪ್ರತಿ ಕಾರ್ತಿಕ ಬಹುಳ ಚತುರ್ಥಿಯಂದು ಗುರುಗಳ ಆರಾಧನೆ ಮಾಡುವ
ಸಂಪ್ರದಾಯ ಆರಂಭಿಸಿದ್ದರು . ಈ ವಿರಾಜಮಾನರಾಗಿದ್ದ ಶ್ರೀಪಾದರಾಜರು ಈ ಸಂಪ್ರದಾಯ ಮುಂದುವರೆಸಿದ್ದರು . ಅಲ್ಲಿಗೆ ಹೋದ ಅವರಿಗೆ ಕನಸಿನಲ್ಲಿ ಒಂದು ಸರ್ಪ ಒಬ್ಬ ಬಾಲಕನರೂಪ ತಳೆದು ಕಾಲಿಗೆ ನಮಸ್ಕರಿಸಿದಂತೆ ಆಯಿತು . ಆನಂತರ ಆಕಾಶಕ್ಕೆ ಜಿಗಿದು ಸೂರ್ಯಮಂಡಲದಲ್ಲಿ ಲೀನವಾದ ಆ ಬಾಲಕ .
ಈ ಕನಸಿಗೆ ಅರ್ಥ ಏನು ಕೇಳಿದಾಗ “ಸೂರ್ಯ ಮಂಡಲತನಕ ಕೀರ್ತಿ ಬೆಳಗುವ
ಶಿಷ್ಯನನ್ನು ಶ್ರೀ ಪದ್ಮನಾಭ ತೀರ್ಥರು ಕರುಣಿಸಿದ್ದಾರೆ “ಎಂದು ವ್ಯಾಖ್ಯಾನ ದೊರೆಯಿತು.
ಆನೆ ಗೊಂದಿಯಿಂದ ಹಿಂದಿರುಗಿದ ಶ್ರೀ ಶ್ರೀಪಾದ ರಾಜರಿಗೆ , ಶ್ರೀಬ್ರಹ್ಮಣ್ಯ ತೀರ್ಥರು ತಮ್ಮ ಶಿಷ್ಯರೊಡನೆ ಭೇಟಿಗೆ ಬಂದಿದ್ದರು .
ಶಿಷ್ಯರನ್ನು ವ್ಯಾಸರಾಜರೆಂದು ಪರಿಚಯಿಸಿ ವಿದ್ಯಾದಾನ ಮಾಡಬೇಕೆಂದು ಕೇಳಿದರು .
ಓದುಗರಿಗೆ ತಿಳುವಳಿಕೆಗೆ , ಆಗ ಶ್ರೀಬ್ರಹ್ಮಣ್ಯ
ತೀರ್ಥರಿಗೆ ೬೫ ವರ್ಷ ವಯಸ್ಸು , ಶ್ರೀಪಾದರಾಜರಿಗೆ ೪೮ ವಯಸ್ಸು ಶ್ರೀವ್ಯಾಸರಾಜರು ಇನ್ನು ಬಾಲಕ. ಶ್ರೀಬ್ರಹ್ಮಣ್ಯ
ಶ್ರೀ ಪಾದರಾಜರು ಸಂಸ್ಥಾನ ಪೂಜೆಯಲ್ಲಿ ಕನ್ನಡ
ದೇವರನಾಮಗಳನ್ನು ಹಾಡುತ್ತಿರುವುದನ್ನು ನೋಡಿ ಆಶ್ಚರ್ಯದಿಂದ “ ಸಂಸ್ಕೃತ ವೇದಸಾರವನ್ನು ತಿಳಿಗನ್ನಡದಲ್ಲಿ ಹರಿಸಿದ್ದೀರಿ “
ಎಂದು ಪ್ರಶಂಸಿಸಿದರು .
ಶ್ರೀ ಪಾದರಾಜರು ಶಿಷ್ಯನ ಜವಾಬ್ದಾರಿಯನ್ನು ವಹಿಸಿಕೊಂಡರು .
ಮುಂದೆ ಶಿಷ್ಯನೊಡನೆ ಪಂಡರಾಪುರ ಯಾತ್ರೆಗೆ ತೆರಳಿದರು . ಅಲ್ಲಿ ಅವರಿಗೆ ಸ್ವಪ್ನದಲ್ಲಿ ಭಗವಂತ “ಭೀಮ ಶಂಕರ “ಎನ್ನುವ ಕಡೆ ಪಾಂಡವ ವಂಶಸ್ತ ಕ್ಷೆಮಕರಾಜ ತನ್ನ ವಿಗ್ರಹಗಳ ಭೂ ಸ್ಥಾಪನೆ ಮಾಡಿದ್ದಾನೆ , ಅದನ್ನು ನಿಮ್ಮ ಸಂಸ್ಥಾನ ವಿಗ್ರಹಗಳಜೊತೆ ಪೂಜಿಸಿ “ ಎಂದು ಹೇಳಿದ . ಅಲ್ಲಿ ನೆಲ ಶೋಧಿಸಿದಾಗ ಸಂಪುಟ ಗೋಚರವಾಯಿತು . ಅದರಲ್ಲಿ ರುಕ್ಮಿಣಿ ಸತ್ಯಭಾಮೆಯರ ಜೊತೆ ಇರುವ ರಂಗವಿಠಲ,
ಅವುಗಳನ್ನು ಜಾಂಬವತಿದೇವಿ ಪೂಜಿಸಿ ಅರ್ಜುನನ ಪೂಜೆಗೆ ಒಳಪಟ್ಟಿತ್ತು . ಮತ್ತೊಂದು ಸಂಪುಟದಲ್ಲಿ ರುಕ್ಮಿಣಿ ಸತ್ಯಭಾಮ ಸಮೇತ ಗೋಪಾಲಕೃಷ್ಣದೇವರು .
ಶ್ರೀಪಾದರಾಜರು ಈ ಮೊದಲು ರಾಜಠೀವಿಯಲ್ಲಿದ್ದವರು ,ಸುಖಪ್ರಾರಬ್ಧವುಳ್ಳವರಾಗಿದ್ದವರು .ಸನ್ಯಾಸಿಗಳಾಗಿದ್ದರು ರಾಜೋಚಿತ ಇಡುಪು ಧರಿಸುತ್ತಿದ್ದವರು . ತಲೆಗೆ ಮುತ್ತಿನ ಕುಲಾವಿ
ಕಿವಿಗಳಿಗೆ ರತ್ನಖಚಿತ ಕುಂಡಲಗಳು , ಹಣೆಯಲ್ಲಿ ಕಸ್ತೂರೀತಿಲಕ , ಮೈಗೆ ಶ್ರೀಗಂಧ ಲೇಪನ
ರಾಜ ಕಲೆಯಿಂದ ಕೂಡಿದ್ದವರು . ಪ್ರತಿದಿನ ಅಭ್ಯಂಗನ ಪರಿಮಳದ ಉಷ್ಣ ಸುಖೋದಕದಲ್ಲಿ .
ಭಗವಂತನಿಗೆ ೬೪ ಬಗೆಯ ಭಕ್ಷಗಳ ನೈವೇದ್ಯ ಪ್ರತಿದಿನ ಭಕ್ತವರ್ಗಕ್ಕೆ ಸಂತರ್ಪಣೆ ದಿನನಿತ್ಯದ ರೂಡಿ .
ಪಂಢರಪುರದಿಂದ ಬಂದಮೇಲೆ ಅವರಲ್ಲಿ ಬದಲಾವಣೆಗಳು ಕಂಡಿತು , ಹೆಚ್ಚುಕಾಲ ಧ್ಯಾನದಲ್ಲಿ ಕಳೆಯುತ್ತಿದ್ದರು . ಮೊದಲಿಗಿಂತ ಅಂತರ್ಮುಖರಾದರು .
ಅಂದು ಸ್ನಾನಕ್ಕೆ ಹೋದ ಶ್ರೀಪಾದರಾಜರು ತಾವು ಬರುವಷ್ಟರಲ್ಲಿ ಪೂಜೆಗೆ ಅಣಿಗೊಳಿಸಬೇಕೆಂದು ಶಿಷ್ಯ ವ್ಯಾಸರಾಜರಿಗೆ ಹೇಳಿ ಹೊರಟರು . ಎಲ್ಲವನ್ನು ರೇಷ್ಮೆ ವಸ್ತ್ರಗಳಿಂದ ಬೇರ್ಪಡಿಸಿ ಪೂಜಾಮಂಟಪದಲ್ಲಿ ಇಡುತ್ತಿದ್ದ ಶ್ರೀ ವ್ಯಾಸತೀರ್ಥರು ಫಂಡರಾಪುರದಿಂದ ತಂದಿದ್ದ ಸಂಪುಟವನ್ನು ಕೈಗೆತ್ತಿಕೊಂಡು ಸರಾಗವಾಗಿ ಅದರ ಮುಚ್ಚಳ ತೆಗೆದು ನೆಲದಮೇಲಿಟ್ಟರು . ವಿಗ್ರಹ ಮಾನವರಂತೆ ಉಸಿರಾಡುವುದನ್ನು ಗಮನಿಸಿದರು . ಆಕ್ಷಣ ಶ್ರೀವ್ಯಾಸರಾಜರು ಮೈಮರೆತರು , ಗೋಪಾಲಕೃಷ್ಣ ನರ್ತನ ಮಾಡತೊಡಗಿದ . ಯತಿಗಳು ಅಲ್ಲಿದ್ದ ಸಾಲಿಗ್ರಾಮ ತೆಗೆದುಕೊಂಡು ತಾಳಹಾಕತೊಡಗಿದರು . ಅವರಿಗೆ ಎಚ್ಚರಿಕೆಯೇ ಇದ್ದಂತಿರಲಿಲ್ಲ . ಸ್ವಲ್ಪಹೊತ್ತಿನಲ್ಲಿ ಎಚ್ಚರಗೊಂಡ ವ್ಯಾಸರಾಜರು ತಮ್ಮ ಎದುರಿಗೆ ಗುರುಗಳು ನಿಂತಿದ್ದನ್ನು ನೋಡಿದರು . ಗೋಪಾಲ ಕೃಷ್ಣ ನೃತ್ಯ ನಿಲ್ಲಿಸಿ ಬಲಗಾಲಿನಮೇಲೆ ಎಡಗಾಲು ಹಾಕಿನಿಂತಿದ್ದ . ಕೈಲಿದ್ದ ಸಾಲಿಗ್ರಾಮಗಳು ತಾಳದ ಪೆಟ್ಟಿಗೆ ಹೋಳಾಗಿದ್ದವು . ತಲೆ ತಗ್ಗಿಸಿ ನಿಂತ ವ್ಯಾಸರಾಜರನ್ನು “ ನಿನ್ನ ಭಕ್ತಿಗೆ ಸ್ವಾಮಿ ನಾಟ್ಯಮಾಡಿದ ನೀನು ಬಾಲಕನಲ್ಲ ಹರಿವಾಯುಗಳ ಅತ್ಯಂತ ಪ್ರೀತಿಪಾತ್ರನಾದವನು , ನಿನ್ನ ವರ್ತನೆ ಅಪರಾಧವಲ್ಲ , ದುರ್ಗಾದೇವಿಯಾದ ಹೊಸೂರಮ್ಮನ ಭಕ್ತರು ಪ್ರಾಣಪ್ರತಿಷ್ಠೆ ನೆರವೇರಿಸಲು ಕೋರಿದ್ದಾರೆ .ಆ ದೇವಿಗೆ ಕಣ್ಣನ್ನು ಮಾಡಿಸಿಕೊಡುವ ವಿಚಾರ ನನ್ನಲ್ಲಿತ್ತು . ನೀನು ಜೈತಯಾತ್ರೆಗೆ ಹೊರಡುತ್ತಿರುವಿ. ಈ ಸಾಲಿಗ್ರಾಮಗಳನ್ನು ದುರ್ಗಾದೇವಿಗೆ ಅರ್ಪಿಸಿ ವಾಖ್ಯಾರ್ಥಕ್ಕೆ ಹೊರಡು , ನಿನ್ನನ್ನು ವಾದದಲ್ಲಿ ಸೋಲಿಸಲು ಯಾರಿಗೂ ಸಾಧ್ಯವಾಗುವುದಿಲ್ಲ “
ಎಂದರು . ಅಷ್ಟೇ ಅಲ್ಲ ಅವರು ಕುಣಿಸಿದ ಗೋಪಾಲ ಕೃಷ್ಣನ ವಿಗ್ರಹವನ್ನು ಶಿಷ್ಯನಿಗೆ ಕಾಣಿಕೆಯಾಗಿ ಅರ್ಪಿಸಿದರು .
ಶ್ರೀಪಾದರಾಜರ ಕಾರುಣ್ಯ ಅಸಾಧಾರಣವಾದದ್ದು
ಎಲ್ಲರನ್ನು ಗೌರವವಾಗಿ ಕಾಣುವ ಕಾರುಣ್ಯ ಮೂರ್ತಿ ಅವರು. ಒಮ್ಮೆ ತಿರುಪತಿಯ ದರ್ಶನಕ್ಕೆ ಹೋಗಿದ್ದರು. ಅಲ್ಲಿ ಅವರಿಗೆ ಲಕ್ಷ್ಮೀನಾರಾಯಣ ಮುನಿಗಳಾಗಿದ್ದ ತಮ್ಮನ್ನು ಶ್ರೀಪಾದರಾಜರೆಂದು
ಘೋಷಿಸಿದ್ದ ಶ್ರೀರಘುನಾಥ ತೀರ್ಥ ಮುನಿಗಳ ಭೇಟಿಯಾಯಿತು .ಅವರು ಶ್ರೀಪಾದರಾಜರಿಗಿಂತ ಇಪ್ಪತ್ತು ವರ್ಷಗಳು ಹಿರಿಯರು , ತಮ್ಮ ಸಂಸ್ಥಾನ ಇಡೀಭರತ ಖಂಡ ವ್ಯಾಪಿಸಿದ್ದರು ಬಹಳ ಸರಳವ್ಯಕ್ತಿ . ಕೆಳಗಿನ ತಿರುಪತಿಯಲ್ಲಿ
ಒಂದು ಛತ್ರದಲ್ಲಿ ಉಭಯಶ್ರೀಗಳು ಭೇಟಿಯಾದರು .
ಪೂಜೆಯನಂತರ ಶ್ರೀ ರಘುನಾಥ ತೀರ್ಥರು
ತಮಗೆ ವೃದ್ದಾಪ್ಯ , ಶ್ರೀಪಾದರಾಜರು ಜೊತೆಯಲ್ಲಿ ಬಂದರೆ ಉತ್ತರ ಭಾರತ ತೀರ್ಥಕ್ಷೇತ್ರ ಯಾತ್ರೆ ಕೈಗೊಳ್ಳುವುದಾಗಿ ಹೇಳಿದಾಗ . ಮೊದಲ ಯಾತ್ರೆಯಾಗಿ ಶ್ರೀ ಪದ್ಮನಾಭ ತೀರ್ಥರ ದರ್ಶನ ಮಾಡಿ ಉಭಯಶ್ರೀಗಳು ಮುಂದುವರೆದರು .
ದಾರಿಯಲ್ಲಿ ಒಬ್ಬ ಶ್ರೀಮಂತನ ಮನೆಯಲ್ಲಿ
ಪೂಜೆಗೆ ಏರ್ಪಾಟಾಗಿತ್ತು . ತೀರಾ ಸರಳವಾಗಿದ್ದ ರಘುನಾಥ ತೀರ್ಥರು ಪಲ್ಲಕ್ಕಿ ಇಳಿದು ತಮ್ಮ
ಸಂಸ್ಥಾನದೇವರನ್ನು ತಲೆಯಮೇಲೆ ಇಟ್ಟುಕೊಂಡು ನಡೆದರು. ಭವ್ಯವಾದ ವೇಷಭೂಷಣ ತೊಟ್ಟಿದ್ದ ಶ್ರೀಪಾದರಾಜರು ಶಿಷ್ಯರಿಂದ ಪರಾಕು ಹೇಳಿಸಿಕೋಳ್ಳುತ್ತ ಸಾಗಿದರು . ಅಲ್ಲಿ ಶ್ರೀಮಂತ ಇಬ್ಬರು ಯತಿಗಳಲ್ಲಿ ಭೇದಭಾವ ತೋರಿದ . ಶ್ರೀಪಾದರಾಜರು ಅಸಮಾಧಾನಗೊಂಡರು . ಬೇಕೆಂದೇ ಹೀಗೆ ಮಾಡಿದ್ದಾರೆಂದು ನೊಂದುಕೊಂಡರು . ಈ ತಾರತಮ್ಯ ನೋಡಿ
ಶ್ರೀಪಾದರಾಜರು ಅವರುಕೊಟ್ಟ ಯಾವ ಸ್ತುಗಳನ್ನು ಬಳಸದೆ ತಮ್ಮ ಮಠದ ಗೋಪಿನಾಥನ ಪೂಜೆ
ಮಾಡಿದ್ದರು .ಅತ್ಯಂತ ಕರುಣಾಮಯಿ ಅವರು.
ಅವರ ಒಂದು ಕೃತಿಯ ಭಾಷಾ ಸೌಂದರ್ಯ ನೋಡೋಣ , ಅವರ ಮಾತೃಭಾಷೆ ಪ್ರೇಮ ಅವರ ಶಿಷ್ಯರು ಮುಖ್ಯವಾಗಿ ಶ್ರೀ ವ್ಯಾಸರಾಜರಾದಿಯಾಗಿ ಎಲ್ಲರೂ ಮುಂದುವರೆಸಿದರು ಕನ್ನಡನಾಡು ನುಡಿ ಸಮ್ರುದ್ದವಾಯಿತು .
ಅವರ ಕೃತಿಗಳು ಬಹುಮಟ್ಟಿಗೆ ಅವರ ಪ್ರಶಿಷ್ಯರಾದ ಶ್ರೀ ವಾದಿರಾಜರ ಕೃತಿಗಳನ್ನು ಹೋಲುತ್ತದೆ . ಒಂದು ದೇವರನಾಮದಲ್ಲಿ
ಮೂರುನುಡಿಗಳಲ್ಲಿ , ರಾಮಾಯಣ , ಭಾಗವತ
ಭಗವದ್ಗೀತೆ ಚಿಂತನೆ ನಡಿಸಿದ್ದಾರೆ . ಅದು ಹೀಗಿದೆ .
ರಂಗಾ ಮನೆಗೆ ಬಾರೋ ಕೃಪಾಂಗ ಶ್ರೀರಂಗ
ಎಂದು ಆರಂಭ ವಾಗುವ ದೇವರನಾಮದಲ್ಲಿ
ಮೊದಲ ಚರಣದಲ್ಲಿ ರಾಮಾವತಾರ ಸ್ಮರಣೆಮಾಡಿದ್ದಾರೆ , ಹನುಮಂತ ದೇವರ ಸೇವೆಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.
ವಾಲೀ ನಿಗ್ರಹ ಹೇಳಿದ್ದಾರೆ .
ಎರಡನೇ ಚರಣದಲ್ಲಿ ಕೃಷ್ಣರೂಪದ ಚಿಂತನೆ
ನಡೆಸುತ್ತ “ಹತ್ತಿದ ರಥವನ್ನು ಮುಂದೊತ್ತಿದ ಕೌರವ ಸೇನೆಗೆ ಮುಟ್ಟಿದ , ಉಭಯರಿಗೆ ಜಗಳವ ಬಿತ್ತಿದ , ಮತ್ತ ಮಾತಂಗಗಳನೆಲ್ಲ ಒತ್ತರಿಸಿ ಮುಂದೊತ್ತಿ ನಡೆಯುತ ಇತ್ತರದಿ ನಿಂತ ವರ ರಥಿಕರ ಕತ್ತರಿಸಿ ಕಾಳಗವ ಮಾಡಿದ|| ಎನ್ನುತ್ತಾರೆ ,
ಅಲ್ಲ ಶ್ರೀಕೃಷ್ಣ ಅರ್ಜುನನಿಗೆ ಸಾರಥಿ ಆಗಿದ್ದ
ಅವನೆಲ್ಲಿ ಯುದ್ಧಮಾಡಿದ , ಎಂದರೆ ಶ್ರೀಕೃಷ್ಣ
ಅರ್ಜುನನಿಗೆ ಗೀತೋಪದೇಶ ಮಾಡುವಾಗ “ “ನೀನು ನಿಮಿತ್ತ ಮಾತ್ರ ಅರ್ಜುನ “ ಎನ್ನುತ್ತಾನೆ ಕೃಷ್ಣ ಅದನ್ನು ಶ್ರೀಪಾದರಾಜರು ಒಂದು ನುಡಿಯಲ್ಲಿ ಅದನ್ನು ವಿವರಿಸಿದರೆ .ಅವರ ಶಿಷ್ಯರು ಇನ್ನೂ ಮುಂದೆ ಹೋಗಿ ಇಡೀ ಗೀತಾ ಸಾರವನ್ನೇ ಕನ್ನಡಲ್ಲಿ “ಕೇಳು ಪಾರ್ಥ” ಎಂದರು.
ಕೊನೆಯನುಡಿಯಲ್ಲಿ ,”ಉಂಗುರಗಳನ್ನು ನಿನ್ನ
ಅಂಗುಲಿಗಿಟ್ಟು ಕಂಗಳಿಂದಲಿ ನೋಡುವೆ , ಹೆಂಗಳ ಉತ್ತುಂಗದ ಕುಚoಗಳ ಆಲಂಗಿಸಿದ ಭುಜಂಗಳ ಕಮಲಸಮ ಪಾದಂಗಳ ಹಿಂಗದೆ ಸ್ಮರಿಸಿದ ಮಾತಂಗನ ಭಂಗವ ಪರಿಹರಿಸಿ ಭ್ಯಾಗದಿ ಮಂಗಳ ಸ್ವರ್ಗವನಿತ್ತ ಉತ್ತುಂಗ ವಿಕ್ರಮ ರಂಗವಿಠಲ” ಎಂದು ಗೋಪಿಕಾ ಸ್ತ್ರೀಯರ ಗಜೇಂದ್ರ ಮೋಕ್ಷ ಸ್ಮರಿಸಿದ್ದಾರೆ ವಿಶಿಷ್ಟ ಸಾಹಿತ್ಯದಿಂದ .
ಅನೇಕ ಸುಳಾದಿಗಳು , ಉಗಾಭೋಗಗಳು , ಗದ್ಯ ಪದ್ಯಗಳಿಂದ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ .
ಕ್ಷಣಿಕ ಸುಖಕ್ಕಾಗಿ ಶಾಶ್ವತ ಸುಖವನ್ನು ಕಡೆಗಣಿಸುವವರಿಗೆ “ ಮನೆಯಿಂದ ಸಂತೋಷ ಕೆಲವರಿಗೆ ಲೋಕದಲ್ಲಿ
ಧನದಿಂದ ಸಂತೋಷ ಕೆಲವರಿಗೆ ಲೋಕದಲ್ಲಿ
ವನಿತೆಯಿಂದ ಸಂತೋಷ ಕೆಲವರಿಗೆ ಲೋಕದಲಿ
ತನಯರಿಂ ಸಂತೋಷ ಕೆಲವರಿಗೆ ಲೋಕದಲಿ
ಇನಿತು ಸಂತೋಷ ಅವರಿವರಿಗಿರಲಿ ನಿನ್ನ
ನೆನೆವೊ ಸಂತೋಷ ಏನಾಗಿರಲಿ ನಮ್ಮ ರಂಗವಿಠಲ|| ಎಂದು ತಮ್ಮ ಭಕ್ತಿಯನ್ನು ಮೆರೆದಿದ್ದಾರೆ .
ವಾಖ್ಯಾರ್ಥಗಳಲ್ಲಿ ಜಯಪತ್ರಗಳನ್ನು ಸಂಪಾದಿಸಿ ತಿರುಪತಿಯ ಶ್ರೀನಿವಾಸನ ದರ್ಶನಕ್ಕೆ ಬಂದು
ತಮ್ಮ ಜಯಪತ್ರಗಳನ್ನು ಶ್ರೀನಿವಾಸನಿಗೆ ಅರ್ಪಿಸಿ
ಬಹು ಜನಪ್ರಿಯ ಕೃತಿ “ಹರೇ ವೆಂಕಟ ಶೈಲ ವಲ್ಲಭ “ ರಚಿಸಿ ವೆಂಕಟೇಶನ ಪಾದಗಳಿಗೆ ಸಮರ್ಪಿಸಿದರು .
ಇತಿಹಾಸಕಾರರು ತಮಾಷಿಯಾಗಿ ಹೇಳುವುದುಂಟು ಸೋಲೇ ಕಂಡಿರದ ಮಹಿಮಾನ್ವಿತರಾದ ಶ್ರೀ ಪಾದರಾಜರು
“ಶಿಷ್ಯನ ಕೀರ್ತಿಯಿಂದ ಪರಾಜಯಗೊಂಡರು” ಎಂದು.
ಮುಂದೆ ಸಾಳುವ ವಂಶದ ಉದ್ದಾರ ಹಾಗು
ಶ್ರೀಪಾದರಾಜರ ಕೊನೆಯದಿನಗಳು , ಹಾಗು
ವಿವಿಧ ಶಿಷ್ಯರು ಶ್ರೀಪಾದರಾಜರಮೇಲೆ ರಚಿಸಿದ
ಕೃತಿಗಳು ನಾಳೆಯ ಸಂಚಿಕೆಯಲ್ಲಿ.
ನಾಹಂ ಕರ್ತಾ ಹರಿಃ ಕರ್ತಾ
||ಶ್ರೀಕೃಷ್ಣಾರ್ಪಣಮಸ್ತು ||
******
ಪದವಾಕ್ಯ ಪ್ರಮಾಣಾಬ್ಧಿ ವಿಕ್ರೀಡನ ವಿಶಾರದಾನ್/
ಲಕ್ಷ್ಮೀನಾರಾಯಣಮುನೀನ್ ವಂದೇ ವಿದ್ಯಾಗುರೂನ್ಸದಾ
ಧೃವಾಂಶ ಸಂಭೂತರೂ, ಯತಿಗಳಾದರೂ ರಾಜರಂತೆ ಬದುಕಿದವರೂ, ಮಧ್ವನಾಮವೇ ಮೊದಲಾದ ಅಮೂಲ್ಯವಾದ ಕೃತಿರತ್ನಗಳನ್ನು ನೀಡಿದವರೂ, ಶ್ರೀ ಸ್ವರ್ಣವರ್ಣತೀರ್ಥರ ಶಿಷ್ಯರು, ಶ್ರೀ ಸೂರ್ಯಾಂಶರಾದ ಬ್ರಹ್ಮಣ್ಯತೀರ್ಥರ ಪೂರ್ವಾಶ್ರಮದ ಅನುಜರು, ಶ್ರೀಮದ್ವ್ಯಾಸರಾಜ ಗುರುಸಾರ್ವಭೌಮರಂತಹಾ ಅಮೂಲ್ಯವಾದ ವಾಗ್ವಜ್ರವನ್ನು ನೀಡಿದ ಗುರುಗಳು, ಮಹಾ ಮಹಿಮಾನ್ವಿತರೂ, ದಾಸ ಸಾಹಿತ್ಯದ ಔನ್ನತ್ಯವನ್ನು ಭಜನಾ ಪದ್ಧತಿಯ ಮೂಲಕ ಪ್ರಾರಂಭ ಮಾಡಿ ಕೀರ್ತನೆಗಳಿಂದ ಪರಮಾತ್ಮನ ಒಲಿಯುವ ಸೂಕ್ಷ್ಮ ಮಾರ್ಗವನ್ನು ತೋರಿದವರು, ನೆನೆದ ಮಾತ್ರಕ್ಕೆ ನಮ್ಮ ಸಕಲ ಕಷ್ಮಲಗಳನ್ನು ಕಳೆಯುವಂತವರೂ, ಯತಿಗಳ ಹರಿದಾಸರೆಲ್ಲರಿಂದಲೂ ಪೂಜಿತರಾದ , ಅಹಿಶಯನ ಒಲುಮೆಯಿಂದ ಮಹಿಯೊಳೊಮ್ಮೆ ಶ್ರೀಪಾದರಾಯರ ಮಹಿಮೆ ಸಾಲದೆ ಎಂದು ಪರಿಪರಿವಿಧಗಳಲ್ಲಿ ಗೇಗೀಯಮಾನರಾದ ಶ್ರೀ ಶ್ರೀಪಾದರಾಜ ಗುರುಸಾರ್ವಭೌಮರ ಆರಾಧನಾ ಪರ್ವ ಕಾಲ ಇಂದಿನಿಂದ ಮೂರು ದಿನ ನರಸಿಂಹತೀರ್ಥ, ಮುಳಬಾಗಿಲಲ್ಲಿ... ಅವರನ್ನು ನೆನೆದರೇ ಸಾಕು ಅನ್ನಪೂರ್ಣಾದೇವಿಯರ ಅನುಗ್ರಹ ಆಗುವುದು ಎನ್ನುವುದರಲ್ಲಿ ಅನುಮಾನ ಲವಲೇಶವೂ ಇಲ್ಲ. ಬೆಳಿಗ್ಗೆ ಎದ್ದು ಶ್ರೀಪಾದರಾಯರನ್ನು ನೆನೆದವರಿಗೆ ಆ ದಿನ ಊಟಕ್ಕೆ ತೊಂದರೆ ಇಲ್ಲ ಅಂತನ್ನೋದು ಜಗದ್ವಿದಿತ.... ನಮ್ಮ ಉದ್ಧಾರಕ್ಕಾಗಿಯೇ ಹುಟ್ಟಿಬಂದ ಶ್ರೀ ಮಹಾನ್ ಯತಿಗಳ ಸೇವೆ ಈ ಮೂರೂದಿನ ಮಾಡುವ ಮುಖಾಂತರ ಅವರ ಕಾರುಣ್ಯಕ್ಕೆ ಪಾತ್ರರಾಗೋಣ..
ಪರಮಾತ್ಮನ ಅನುಗ್ರಹಕ್ಕೆ ಸದಾ ಪಾತ್ರರಾದ ಶ್ರೀಪಾದರಾಜರ ಅನುಗ್ರಹ ಕಟಾಕ್ಷವೀಕ್ಷಣೆ ನಮ್ಮ ಸಮೂಹದ ಎಲ್ಲ ಸಜ್ಜನರಮೇಲೆ ಆಗಲೆಂದು ಅವರಲ್ಲಿ ಪ್ರಾರ್ಥನೆ ಮಾಡುತ್ತಾ ..
-Smt. Padma Sirish
ನಾದನೀರಾಜನದಿಂ ದಾಸಸುರಭಿ 🙏🏽**********
ನಾಲಿಗೆಗೆ ಭೂಷಣ| ನಾರಾಯಣನ ನಾಮ||
✍ಶ್ರೀಪಾದರಾಜರು
ಹಣವಿದ್ದವರು,ಸಿರಿವಂತರು,ಕೈ ಮೈಯೆಲ್ಲ ಕಡೆ ಬೇಕಾದ ಗಾತ್ರದ, ವಿವಿಧ ಶೈಲಿಯ ಆಭರಣ ಮಾಡಿಸಿಕೊಳ್ಳಬಹುದು..,
ಸಿಂಗರಿಸಕೊಳ್ಳಬಹುದು...
ಆದರೆ
ನಾಲಿಗೆಗೆ ಆಭರಣ ಮಾಡಿಸಿಕೊಳ್ಳುವರುಂಟೆ?
ಇಲ್ಲ !ತಾನೇ!!
ಇಲ್ಲಿ
ಶ್ರೀಪಾದರಾಜರು ಈ ಕೃತಿಯಲ್ಲಿ ದೇವರು ಕೊಟ್ಟ ಇಂದ್ರಿಯ ಗಳನ್ನು ಅವನಿಗೆ ಬಳಸಿ ಅಂತ ಸೂಚನೆಗಳನ್ನು ಕೊಟ್ಟರು.
"ಬಾಹ್ಯಕ್ಕೆ ಸಾಧ್ಯ ವಿಲ್ಲದ ಸಿಂಗಾರ ಅಂತರಂಗದಿಂದ ಅಲಂಕಾರ,ಮಾಡಬೇಕು"...
"ನಾರಾಯಣ ನೆಂಬ ನಾಮ ನಾಲಿಗೆಗೆ ಬಂದಾಗ ಭಗವಂತ ಒಲಿವ"..
ಕೊನೆಯಲ್ಲಿ ಹೇಳುತ್ತಾರೆ "ರಂಗವಿಠ್ಠಲ ನಿನ್ನ ನಾಮ ಅತಿ ಭೂಷಣ" ಎಂದಿದ್ದಾರೆ..
ಶ್ರೀಪಾದರಾಜರು ಹೆಜ್ಜೆ ಹೆಜ್ಜೆಗು ತಮ್ಮ ಉಪಾಸ್ಯ ಮೂರುತಿಯಾದ
ಶ್ರೀ ಹರಿಯನ್ನು ತಮ್ಮ ಜೀವನದ ಉದ್ದಕ್ಕೂ ಕೊಂಡಾಡಿದರು.
ದಾಸ ಸಾಹಿತ್ಯ ವನ್ನು ಬೆಳೆಯಲು ಪ್ರೋತ್ಸಾಹ ನೀಡಿದರು.
"ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ" ಎಂದು ನಮಗೆಲ್ಲ ಶ್ರೀರಂಗಂ ಕ್ಷೇತ್ರದ ಮಹಿಮೆಯನ್ನು ಅದರಲ್ಲಿ ತಿಳಿಸಿದರು..
🙏.ಶ್ರೀ ಕೃಷ್ಣಾರ್ಪಣಮಸ್ತು🙏
ಇಂತಹ ಮಹಾಮಹಿಮರ ಆರಾಧನೆ ಇಂದಿನಿಂದ ಮೂರು ದಿನಗಳ ಕಾಲ ನಡೆಯುತ್ತದೆ. ಶ್ರೀಪಾದರಾಜ ಗುರುಗಳು ಎಲ್ಲಾ ರಿಗು ಅನುಗ್ರಹ ಮಾಡಲಿ ಅಂತ ಪ್ರಾರ್ಥನೆ ಮಾಡುತ್ತಾ ನಮ್ಮ ಶ್ರೀ ವಿಜಯಪ್ರಭುಗಳು ಅವರ ಬಗ್ಗೆ ಹೇಳಿದ ವಾಣಿ.
"ದ್ವಿಪಾದ ಪಶುವು ಕಾಣೋ|
ಈ ಮುನಿಯ ನಂಬದವ||
🙏ಶ್ರೀ ಶ್ರೀಪಾದರಾಜ ಗುರುಭ್ಯೋ ನಮಃ🙏
**********
ಶ್ರೀ ವಿಠ್ಠಲ ಪ್ರಸೀದ
ಸಮೂಹದ ಎಲ್ಲ ಸದಸ್ಯರಿಗೆ ಶುಭ ಕಾಮನೆಗಳು .
ಇಂದಿನ ವಿಷಯ , ಭಾರತಿ ದೇವಿಯರು ಎದುರಿಸುತ್ತಿರುವ
ಸಂದಿಗ್ಧ ಪರಿಸ್ಥಿತಿ ಇಂದು ನಿನ್ನೆಯದಲ್ಲ ಶತಮಾನಗಳಿಂದ ವೇದಾಭಿಮಾನಿ ಭಾರತಿದೇವಿಗೆ ಅವರ ಪತಿ ಅವತರಿಸುವವರೆಗೂ ತಪ್ಪಲಿಲ್ಲ . ಯುಗಗಳಲ್ಲೂ ವೇದಮತ ದ್ವೇಷಿಗಳಾದ ರಾಕ್ಷಸರು ಹುಟ್ಟಿ ಸನಾತನ ಧರ್ಮವನ್ನು ಅಲ್ಲಗಳೆದು ಋಷಿಮುನಿಗಳನ್ನು ಹಿಂಸಿಸಿದ ರಕ್ಕಸರ ಅಹಂಕಾರವನ್ನು ಮುಖ್ಯಪ್ರಾಣದೇವರು ಭಗವಂತನ ಅಪ್ಪಣೆಯಿಂದ ಮರ್ದಿಸಿ ಧರ್ಮ ಸಂಸ್ಥಾಪನೆ ಮಾಡುತ್ತಾಬಂದರು . .
ಮುಂದೆ ಶ್ರೀಕೃಷ್ಣ , ವಾಯುದೇವರಿಂದ ಉಪದೇಶ ಪಡೆದ ದೂರ್ವಾಸರು ಅಧಿಕಾರಿಗಳಿಗೆ
ಉಪದೇಶಕೊಡುವ ಮೂಲಕ ಪರಂಪರೆ ಬೆಳಸಿದರು .ಈಮೊದಲೇ ಹಂಸ ನಾಮಕ ಪರಮಾತ್ಮನಿಂದ ಆರಂಭವಾಗಿ , ಬ್ರಹ್ಮದೇವರಿಂದ ಮುಂದುವರೆದು , ಸನಕಾದಿಗಳು ಧರ್ಮದ ಒಳಹೊಕ್ಕು
ದೂರ್ವಾಸರು ಅನುಭವಿಸಿ ತಮ್ಮ ಶಿಷ್ಯರಾದ ಜ್ಞಾನನಿಧಿಗಳಿಂದ ಮುಂದುವರೆಸಿದರು.
ಈ ವಿಷಯವನ್ನು ಶ್ರೀ ಪುರಂದರ ದಾಸರು ಒಂದು ಉಗಾಭೋಗದಲ್ಲಿ ಈ ರೀತಿ ವರ್ಣಿಸಿದ್ದಾರೆ .
“ ಶ್ರೀಪತಿಯ ನಾಭಿಯಲಿ ಅಜ ಜನಿಸಿದನು |
ಅಜನ ಮಾನಸಪುತ್ರರೇ ಸನಕಾದಿಗಳು|
ಸನಕಾದಿಗಳ ಶಿಷ್ಯರೇ ದೂರ್ವಾಸರು| ದುರ್ವಾಸರ ಶಿಷ್ಯರೇ ಪರತೀರ್ಥರು | ಪರತೀರ್ಥರ. ಶಿಷ್ಯರೇ ಸತ್ಯಪ್ರಜ್ಞರು | ಸತ್ಯಪ್ರಜ್ಞರ ಶಿಷ್ಯರೇ ಪ್ರಾಜ್ಞ ತೀರ್ಥರು | ಪ್ರಾಜ್ಞತೀರ್ಥರ ಶಿಷ್ಯರೇ ಅಚ್ಯುತಪ್ರಜ್ಞರು | ಅಚ್ಯುತ ಪ್ರಜ್ಞರ
ಕರಸಂಜಾತರೆ ಮಹಾಭಾಷ್ಯಕಾರರು | ಆ ಮಹಾ
ಭಾಷ್ಯಕಾರರೇ ನಮ್ಮ ಗುರುಮುಖ್ಯ ಪ್ರಾಣ |
ಗುರುಮುಖ್ಯಪ್ರಾಣ ಪತಿ ಶ್ರೀ ಪುರಂದರ ವಿಠಲನ ದಾಸರಿಗೆ ನಮೋ ನಮಃ | ಎಂದಿದ್ದಾರೆ ದಾಸವರೇಣ್ಯರು .
ಸನಕಾದಿಗಳ ಸತ್ಪರಂಪರೆಯಲ್ಲಿ ಅನೇಕ ಯತಿಗಳು ಬಂದು ವೇದಮತ ಮುಂದುವರೆಸಿದರು .
ವೇದಪರಂಪರೆಯನ್ನು ಪೋಷಿಸುತ್ತಿದ್ದ ರಾಜರು
ಪಾಂಡವ ವಂಶದವರು . ಕೊನೆಯರಾಜ ಕ್ಷೇಮಕ ರಾಜ . ಅವನ ನಂತರ ಕಲಿಪುರುಷ ಜಾಗೃತನಾದ .
ಬೇರೆ ಬೇರೆ ಮತಗಳು ಈ ವೇದಮತಗಳಿಗೆ ಸವಾಲೊಡ್ಡಿದವು .ಜೈನ ಬೌದ್ಧ ಮತಗಳು ವೇದಗಳನ್ನು ನೇಪಥ್ಯಕ್ಕೆ ಸರಿಸಿದವು .
ಧರ್ಮ ಪೋಷಿಸ ಬೇಕಾದ ರಾಜರುಗಳು ಈ
ಧರ್ಮಗಳ ಅನುಯಾಯಿಗಳಾದರು .
ಮುಂದೆ ಈ ಧರ್ಮಗಳ ಪ್ರಾಭಲ್ಯ ಕಡಿಮೆಯಾದರೂ ವೇದಗಳ ಅಪಾರ್ಥವುಳ್ಳ
ಅದ್ವೈತಮತ ಹರಡಿತು . ಈ ಮತಕ್ಕೆ ಆಳರಸರಾದ ಚಾಲುಕ್ಯರ ರಾಜಾಶ್ರಯ
ಬೇರೆ ಇತ್ತು . ಸ್ವಲ್ಪ ವೇದ ಮತಕ್ಕೆ ಪ್ರಾಬಲ್ಯ ಸಿಕ್ಕಿತು . ಸ್ವಯಂ ರಾಜ ಇಮ್ಮಡಿ ಪುಲಿಕೇಶೀ
ವೇದಮತಕ್ಕೆ ಬೆಂಬಲಕೊಟ್ಟು ಬ್ರಾಹ್ಮಣರ ಕುಟುಂಬ ಪೋಷಿಸಿದ .
ಸ್ವಲ್ಪ ವೇದಾಂತ ಪ್ರಾಬಲ್ಯ ಗೊಂಡರೂ ಸಿದ್ದಾಂತಕೊಸ್ಕರ ಕ್ರೌರ್ಯವೇ ನಡೆಯಿತು . ಪ್ರಾಜ್ಞತೀರ್ಥರು ಈ ಕ್ರೌರ್ಯಕ್ಕೆ ಬಲಿಪಶುವಾದರು.
ಮುಂದೆ ಹನ್ನೊಂದು ಹನ್ನೆರಡನೇ ಶತಮಾನದಲ್ಲಿ
ಪರಕೀಯರ ಲೂಟಿಗೆ ಒಳಗಾದಳು ಭಾರತಿ.
ಈ ಸಂಧಿಜ್ಞತೆ ಇತಿಹಾಸದಲ್ಲಿ ಮಹಾಭಾರತದಲ್ಲಿ ಅರ್ಜುನ ಸ್ತ್ರೀಯರನ್ನು ರಕ್ಷಣೆ ಮಾಡಲು ಅಶಕ್ತ ನಾದದನ್ನು ನೆನಪಿಸುವಂತಹುದು .
ವೇದಾಭಿಮಾನಿ ಪತ್ನಿಯನ್ನು ರಕ್ಷಿಸಲು ಪತಿಯೇ ಅವತರಿಸಿದರು . ಆನಂದ ಸಂವತ್ಸರದಲ್ಲಿ ಆನಂದತೀರ್ಥರ ಜನನ ಆಗಿ ಭಾರತಿ ಆನಂದ ಹೊಂದಿದಳು .
ಯಾವಕಾಲಕ್ಕೂ ಭಗವಂತನ ಕಿಂಕರಾದ ಗುರುಗಳು, ಪ್ರಖ್ಯಾತ ಕವಿಯೆಂದುಕೊಂಡಿದ್ದ
ಜಯದೇವನ ಕಾವ್ಯದಲ್ಲಿ ವಿರೋಧಾಭಾಸವನ್ನು ತೋರಿಸಿಕೊಟ್ಟರು .
ಮುಂದೆ ಇವರು ಅದೃಶ್ಯರಾದಾಗ ಖಿಲ್ಜಿ ವಂಶದ ದೊರೆಗಳಿಂದ ಭಾರತಿ ನಲುಗಿದ್ದಾಗ ಅವಳ ಪತಿ ಅವತರಿಸಿದಂತೆ , ಅಂತದೇ ಪರಿಸ್ಥಿತಿ ಹದಿನೈದನೇ ಶತಮಾನದಲ್ಲಿ ಉದಯಿಸಿದಾಗ ಅವತರಿಸಿದವರೇ ಶ್ರೀವ್ಯಾಸರಾಯರು .
ಆಕಾಲಕ್ಕೆ ಅವತರಿಸಿದವರು ಇಬ್ಬರು ಯತಿಗಳು . ಅಂದಿನ ಕಾಲದಲ್ಲಿ ಮತ್ತೆ ವೇದಮತಕ್ಕೆ ಹಿನ್ನಡೆಯಾದಾಗ ರಾಜಾಶ್ರಯದಿಂದ ವೇದಾಂತ ಸಾಮ್ರಾಜ್ಯವನ್ನು ಎತ್ತಿಹಿಡಿದವರು ಶ್ರೀಶ್ರೀಪಾದರಾಜರು ಶ್ರೀ ವ್ಯಾಸರಾಜರು . ಜೊತೆಗೆ ಸ್ಥಳೀಯ ಭಾಷೆಗೂ ಚಾಲನೆ ಇತ್ತು ವೇದ ವೇದಾಂತಗಳು ಜನ ಸಾಮಾನ್ಯರಿಗೆ ದೊರೆಯುವಂತೆ ಮಾಡಿದರು
ಆದರೆ ಕಾಲ ಬದಲಾಗಿದೆ , ವೇದಾಂತವನ್ನು ವ್ಯಾಪಾರ ಮಾಡಿಕೊಂಡಿರುವುದು ಇಂತ ದೇಶ
ಅತಿವೃಷ್ಟಿ ಅನಾವೃಷ್ಟಿಗೆ ರೋಗರುಜಿನಕ್ಕೇ ತತ್ತರಿಸುತ್ತಿರುವುದು ಬೇಸರದ ಸಂಗತಿಯಾದರೂ ನಮ್ಮ ದೇಶ ಸನಾತನ ಧರ್ಮದಿಂದ ಕೂಡಿದೆ ಎನ್ನುವುದಕ್ಕೆ ಕೆಲವು ನಿದರ್ಶನಗಳು .
ವೇದಗಳು ವಿಧಿಸುವ ನಿಯಮಗಳು ಧರ್ಮ ಎನ್ನಿಸ್ಸುತ್ತದೆ . ಇಂತಹ ವೇದವಾಖ್ಯಗಳು
ಕಣ್ಣಿಗೆ ಬಿದ್ದಾಗ “ಧನ್ಯ ಭಾರತೀಯ “ಎನ್ನಿಸುತ್ತದೆ
ಒಮ್ಮೆ ಒಂದು ಯುದ್ಧ ನೌಕೆ ನೋಡುವ ಭಾಗ್ಯ
ದೊರಕಿತ್ತು . ನೌಕಾ ಪಡೆಯ ಧ್ಯೇಯ ವಾಕ್ಯ ನೋಡಿದಾಗ ಮನಸ್ಸಿಗೆ ತುಂಬಾ ಇಷ್ಟವಾಯಿತು .
ಅವರ ಧ್ಯೇಯ ವಾಖ್ಯ “ ಶಂನೋ ವರುಣಃ “ ತೈತ್ತರೀಯ ಉಪನಿಷಿತ್ತಿನ ವಾಖ್ಯ.
ಭಾರತೀಯ ವಾಯುಸೇನಾ ಭಗವದ್ಗೀತೆಯ
೧೧ ನೇ ಅಧ್ಯಾಯದ “ ನಭ ಸ್ಪರ್ಶ ದೀಪ್ತಮ್ “ ಧ್ಯೇಯವಾಕ್ಯ ಹೊಂದಿದೆ .
ಕೆಲವು ವರ್ಷಗಳ ಹಿಂದೆ ಕಡಲ್ಗಳ್ಳರ ಲೂಟಿಯನ್ನು ತಡೆಯುವುದಕ್ಕೋಸ್ಕರ ರಕ್ಷಣಾ ಪಡೆಯನ್ನು ರಚಿಸಲಾಯಿತು . ಈ ಪಡೆಯ ದ್ಯೇಯ ವಾಕ್ಯ “ವಯಂ ರಕ್ಷಮಃ “ ಇದು ವಾಲ್ಮೀಕಿ ರಾಮಾಯಣದ್ದು . ಅಂಗದ ಯುದ್ಧ
ಸನ್ನದ್ಧನಾಗಿ ಹೇಳಿದ್ದು .
ಹಾಗೆ ವಿಶ್ವವಿದ್ಯಾ ನಿಲಯಗಳು “ ನಹಿ ಜ್ಞಾನೇನ ಸದೃಶ್ಯಮ್ ಪವಿತ್ರಮಿಹ ವಿದ್ಯತೇ “ ಎಂದು ಭಗವದ್ಗೀತಾ ವಾಖ್ಯ ಉಚ್ಛರಿಸುತ್ತದೆ .
ಇಡೀ ಭಾರತದ ಧ್ಯೇಯ ವಾಕ್ಯ ಸತ್ಯಮೇವಜಯತೇ ಎನ್ನುವ ಮಂಡೂಕ ಉಪನಿಷದ್ ನಿಂದ ಆಯ್ದದ್ದು .
ಯುದ್ಧನೌಕೆಯನ್ನು ಸ್ತ್ರೀಯಾಗಿ ಸಂಬೋದಿಸುತ್ತಿದ್ದನ್ನು ನೋಡಿ ಈ ಕುರಿತು ಕೇಳಿದಾಗ ಸಮುದ್ರ ವರುಣ ,ತಂದೆಯಾದರೆ
ನೌಕೆ ನಮ್ಮನ್ನು ರಕ್ಷಣೆ ಮಾಡುವುದರಿಂದ ತಾಯಿ ಎಂದರು ಅಲ್ಲಿನವರು .
“ ಶ್ರುತಿ , ಸ್ತ್ರೀ , ವೇದ ಆಮ್ನಾಯತ್ರಯೀ ಧರ್ಮಸ್ತು ತದ್ವಿದಿ : ಎಂದು .
ವೇದಮಾತೆ , ವೇದಪ್ರತಿಪಾದ್ಯನಾದ ಭಗವಂತ
ಯತೋ ಧರ್ಮ ತತೋ ಜಯಃ ಎನ್ನುವ ಧ್ಯೇಯವಾಖ್ಯ ಹೊಂದಿರುವ ಅನೇಕ ಸಂಸ್ಥೆಗಳು ಅಸ್ತಿತ್ವದಲ್ಲಿದೆ . ಇಡೀ ಭಾರತ ಈ ಧರ್ಮದ
ತಳಪಾಯದಲ್ಲಿ ನಿಂತಿದೆ .
ಒಬ್ಬ ಪ್ರಖ್ಯಾತ ಮಹನೀಯರು ಹೇಳಿದರು ಇತರೆ ಪ್ರಪಂಚದ ದೇಶಗಳು ನಾಶವಾದರೆ , ಸಂಪತ್ತು
ಸೌಂದರ್ಯ , ಪರಾಕ್ರಮ , ಆಡಳಿತ ಮರ್ಮ ನಾಶವಾಗುತ್ತೆ ಆದರೆ ಭಾರತ ಅಳಿದರೆ ಧರ್ಮವೇ ಪ್ರಪಂಚದಿಂದ ಹೋದಂತೆ ಎಂದು.
ವಾಯುದೇವರು ಅವತರಿಸಿ ಅವರಿಂದ ಸನಾತನ ಧರ್ಮಕ್ಕೆ ಕೊಟ್ಟ ಕೊಡುಗೆ ಅಪಾರ
ಇಂತ ಹರಿಭಕ್ತರಾದ ವಾಯುದೇವರನ್ನು ಸ್ಮರಿಸುತ್ತಾ ಹರಿ ವಾಯುಗುರುಗಳ ಅನುಗ್ರಹ ಎಲ್ಲರಿಗಾಗಲಿ ಎಂದು ಬೇಡುತ್ತಾ ಹರಿದಿನ ಎಲ್ಲರಿಗು ಶುಭವಾಗಲಿ .
ನಾಹಂ ಕರ್ತಾ ಹರಿಃ ಕರ್ತಾ
||ಶ್ರೀ ಕೃಷ್ಣಾರ್ಪಣ ಮಸ್ತು ||
**************
ಸಿರಿಕೃಷ್ಣದಿವ್ಯ ಪಾದಾಬ್ಜ ಚಿಂತಾಲೋಲ
ವರಹೇಮವರ್ಣಮುನಿಪತಿಯ ಸುಕುಮಾರ
ಗುರುಕುಲತಿಲಕ ಶ್ರೀಪಾದರಾಯ ಅಮಿತೋದ್ಧಾರಕ
ಶರಣಜನ ಸುರಧೇನು ಭಕ್ತಮಂದಾರ
ಯದ್ಬೃಂದಾವನಸೇವಯಾ ಸುವಿಮಲಾಂ ವಿದ್ಯಾಂ ಪಶೂನ್ ಸಂತತಿಂ
ಧ್ಯಾನಂ ಜ್ಞಾನಮನಲ್ಪಕೀರ್ತಿನಿವಹಂ ಪ್ರಾಪ್ನೋತಿ ಸೌಖ್ಯಂ ಜನಃ ||
ತಂ ವಂದೇ ನರಸಿಂಹತೀರ್ಥ ನಿಲಯಂ ಶ್ರೀ ವ್ಯಾಸರಾಟ್ ಪೂಜಿತಂ
ಧ್ಯಾಯಂತಂ ಮನಸಾ ನೃಸಿಂಹಚರಣಂ ಶ್ರೀಪಾದರಾಜಂ ಗುರುಂ//
ಶ್ರೀಮಚ್ಚಂದ್ರಿಕಾಚಾರ್ಯರೇ ಮೊದಲು ಎಲ್ಲಾ ಯತಿಗಳಿಂದ, ಎಲ್ಲ ದಾಸಾರ್ಯರಿಂದ ಪೂಜಿತರಾದ, ಗೇಗೀಯಮಾನರಾದ, ವೃಂದಾವನ ದರ್ಶನ ಮಾತ್ರಕ್ಕೆ ಮನದ ಕಷ್ಮಲಗಳನ್ನು ನಾಶಮಾಡುವಂತಹಾ, ಹರಿದಾಸ ಸಾಹಿತ್ಯದ ಭಜನಾ ಪ್ರಕಾರನ್ನೇ ಮೊದಲು ಎಲ್ಲ ಪ್ರಕಾರಗಳನ್ನು ಸಾಧಾರಣ ಜನ ಸಾಮಾನ್ಯರಿಗೆ ಮುಟ್ಟುವಂತೆ ಪ್ರಾಕೃತ ಭಾಷೆಯಲ್ಲಿ ವ್ಯಾಸ ಸಾಹಿತ್ಯದ ಹಿರಿಮೆಯನ್ನು ಒದಗಿಸಿ ಕೊಟ್ಟಂತಹ,
ಶ್ರೀ ಧೃವಾಂಶಜರ, ನೃಸಿಂಹ ತೀರ್ಥ ನಿವಾಸಿಗಳಾದ ಶ್ರೀ ಶ್ರೀಪಾದರಾಜರ ಮಧ್ಯಾರಾಧನೆಯ ಶುಭಾಭಿವಂದನೆಗಳೊಂದಿಗೆ...
(ಶ್ರೀ ಮಹಾನುಭಾವರ ಕುರಿತು ಬರಿಯಲು,ಮಾತನಾಡಲು ಸಹ ತುಂಬಾ ಅಲ್ಪಮತಿ ನಾನು, ಅವರನ್ನು ಭಕ್ತಿಯಿಂದ ಬೇಡುವುದಷ್ಟೇ ತಿಳಿದವಳು )
ಹಾಗೆಯೇ..
ಶ್ರೀಮದುತ್ತರಾದಿಮಠದ ಶ್ರೇಷ್ಠ ಯತಿಗಳೂ, 17 ನೇ ಶತಮಾನದ ಯತಿಗಳೂ, ಔರಂಗಜೇಬಿನಿಂದ ಸನ್ಮಾನ ಪಡೆದವರೂ, ವಾದಿಗಳಿಗೆ ಸಿಂಹದಂತಿರುವವರೂ, ನಾರೋಜಿ ಭಾಸ್ಕರನಿಂದ ಚಕ್ರವರ್ತಿ ಮುದ್ರೆಯನ್ನು ಪಡೆದವರು, ಮಠಕ್ಕೆ ಸರ್ಕಾರಿ ದರ್ಜೆಯನ್ನು ಕೊಡಿಸಿದಂತಹಾ ಪರಮ ಶ್ರೇಷ್ಠ ಯತಿಗಳಾದ ಶ್ರೀ ಸತ್ಯಾಭಿನವ ತೀರ್ಥರ (ನಾಚರಕೋಯಿಲ್, ತಮಿಳುನಾಡು) ಆರಾಧನೆಯ ಶುಭಾಶಯಗಳು....
ನಮಗಾಗಿಯೇ ಅವತಾರ ಮಾಡಿ ಬಂದ ಶ್ರೀ ಶ್ರೀಪಾದರಾಜ ಗುರುಸಾರ್ವಭೌಮರ ಅನುಗ್ರಹ ಕಟಾಕ್ಷವೀಕ್ಷಣೆ, ಜೊತೆಗೆ ಶ್ರೀ ಸತ್ಯಾಭಿನವತೀರ್ಥರ ಅನುಗ್ರಹವೂ ನಮ್ಮ ಸಮೂಹದಲಿ ಎಲ್ಲ ಸಜ್ಜನರಮೇಲೆ ಆಗಲೆಂದು ಬೇಡಿಕೊಳ್ಳುತ್ತಾ...
-Smt. Padma Sirish
ನಾದನೀರಾಜನದಿಂ ದಾಸಸುರಭಿ 🙏🏽
***************
||ಶ್ರೀ ವಿಠ್ಠಲ ಪ್ರಸೀದತು ||
ಶ್ರೀ ಶ್ರೀಪಾದರಾಜರ ಮುಂದುವರೆದ ಚರಿತ್ರೆ
ಹಿಂದಿನ ಸಂಚಿಕೆಯಲ್ಲಿ ಶ್ರೀ ಲಕ್ಷ್ಮಿ ನಾರಾಯಣ ಯತಿಗಳು ಶ್ರೀಪಾದರಾಜರಾಗಿದ್ದು ಓದಿದಿರಿ .
ಶ್ರೀಪಾದರಾಜರು ,ಶ್ರೀಪದ್ಮನಾಭ ತೀರ್ಥರನಂತರ ಎಂಟನೇ ಯತಿಗಳು. ಆಚಾರ್ಯ ಕರಾರ್ಚಿತ ಶ್ರೀ ಗೋಪಿನಾಥ ಮೂರ್ತಿ ಈ ಸಂಸ್ಥಾನದ ಆರಾಧ್ಯ ದೈವ . ಶ್ರೀ ಶ್ರೀಶ್ರೀಪಾದತೀರ್ಥರ ಮಠ ಪೂರ್ವದಲ್ಲಿ ಶ್ರೀ ಪದ್ಮನಾಭತೀರ್ಥರ ಮಠ, ಅನಂತರ ಶ್ರೀ ಲಕ್ಷ್ಮೀಧರ ತೀರ್ಥರ ಮಠ ಎಂದು ಹೆಸರಾಗಿತ್ತು .
ಈಗ ಉಭಯಗುರುಗಳಿಂದ ಪ್ರಶಂಸೆ ಪಡೆದ ಯತಿಗಳು ಶ್ರೀಪಾದರಾಜರೆಂದು ಪ್ರಖ್ಯಾತರಾಗಿದ್ದರು .
ಈ ಘಟನೆಯನಂತರ ಶ್ರೀಪಾದರಾಜರು ಶ್ರೀರಂಗಕ್ಕೆ ಹಿಂತಿರುಗಿದರು . ಅವರ ಆಶ್ರಮಗುರುಗಳು ಶ್ರೀ ಸ್ವರ್ಣವರ್ಣ ತೀರ್ಥರು ತೀರಾ ವೃದ್ದಾಪ್ಯದಲ್ಲಿದ್ದರು , ಶಿಷ್ಯನಿಗೆ ದೊರೆತ ಪ್ರಶಸ್ತಿಯ ವಿಷಯಕೇಳಿ ಇದೆಲ್ಲ ವೇದವ್ಯಾಸರ ಅನುಗ್ರಹ ಎಂದು ಸಂತೋಷಪಟ್ಟರು .
ಮುಂದೆ ಗುರುಗಳು ಬೃಂದಾವನಸ್ಥರಾದರು .
ಶ್ರೀಪಾದರಾಜರು. ಸಂಸ್ಥಾನಕ್ಕೆ ಉತ್ತರಾಧಿಕಾರಿಗಳಾದರು .
ಶ್ರೀ ಶ್ರೀಪಾದರಾಜರು ಸಾಮಾನ್ಯರಲ್ಲ ಅವರ ಪೂರ್ವೀಕರಕಾಲದಿಂದಲೂ ಕರ್ನಾಟಕದ ಚರಿತ್ರೆಯಲ್ಲಿ ಕಾಣಿಸಿಕೊಂಡವರು .
ಅನೇಕ ಕೃತಿಗಳನ್ನು ರಚಿಸಿದರು . ಅವರಿಂದ ರಚಿತವಾದ ಗ್ರಂಥ ವಾಗ್ವಜ್ರ . ಅವರಕಾಲದಲ್ಲಿ ಪ್ರಾಕೃತಿಕ ಭಾಷೆಯಲ್ಲಿ
ಮಾತನಾಡುವುದೇ ಮೈಲಿಗೆ ಎಂದು ತಿಳಿದಿದ್ದಾಗ , ಅವರು ಶ್ರೀರಂಗದಲ್ಲಿ ಕಳೆದ ದಿನಗಳಲ್ಲಿ ರಂಗನಾಥನ ಸನ್ನಿಧಿಯಲ್ಲಿ ತಮಿಳು ಪ್ರಬಂಧಗಳನ್ನು ಕೆಳುತ್ತಾ ಬೆಳೆದವರು . ಆರಾಧ್ಯಧೈವ ಗೋಪಿನಾಥ . ಅಭಿಮಾನದ ದೈವ ಶ್ರೀರಂಗ , ಪಂಡರಾಪುರದ ವಿಠ್ಠಲ ಸೇರಿ ಮುದ್ದಾದ ರಂಗವಿಠಲ .
ಅವರ ಕೃತಿಗಳಲ್ಲಿ ವಾಯುಸ್ತುತಿ ಆಧರಿಸಿದ
ಕನ್ನಡ ವಾಯುಸ್ತುತಿ “ ಮಧ್ವನಾಮ “ ಮುಖ್ಯವಾದದ್ದು . ೨೯ ನುಡಿಗಳಿಂದ ಕೂಡಿದ
ಮಧ್ವನಾಮ. ಸುಂದರವಾದ ಮಧ್ವನಾಮದಲ್ಲಿ
ವಾಯುದೇವರನ್ನು ಮನಸಾರೆ ಸ್ತೋತ್ರಮಾಡಿದ್ದಾರೆ .
ಇಲ್ಲಿ ರಾಜರು “ ಜಯಜಯ ಜಗತ್ರಾಣ” ಎಂದು
ಆರಭಿಸಿದ್ದಾರೆ , ಜಯ ಶಬ್ದದಿಂ ವಾಯುದೇವರು
ಭಾವಿಬ್ರಹ್ಮರೆಂದು ಸೂಚಿಸಿದ್ದಾರೆ . “ಸುತ್ರಾಣ”
ಎಂಬ ಶಬ್ದದಿಂದ “ ಸರ್ವೇಶಾoಚ ಪ್ರಾಣಿನಾಂ
ಪ್ರಾಣಭೂತ “ ಎಂದಹಾಗೆ ಸಕಲ ಭೂತಗಳಲ್ಲಿ ಪ್ರಾಣದೇವರು ಎಂದು ಸೂಚಿಸಿ , “ಮಧ್ವ “ ಎಂಬ ನಾಮದಿಂದ ಮೋಕ್ಷ ಶಾಸ್ತ್ರ ಕರ್ತರೆಂದು
ಸೂಚಿಸಿದ್ದಾರೆ.
ಇವರ ವಾಯುಸ್ತುತಿ ಆಧಾರಿತ೨೯ ನುಡಿಗಳ “ಮದ್ವನಾಮ”ಕ್ಕೆ
ಮಹಿಮಾನ್ವಿತರಾದ ಶ್ರೀ ಜಗನ್ನಾಥದಾಸರು
ಮೂರುನುಡಿಗಳ ಫಲಸ್ತುತಿಬರೆದು ೩೨ ವಾಯುದೇವರ ೩೨ ಲಕ್ಷಣಗಳಿಗೆ ಸಾಟಿಯಾಗಿಸಿದ್ದಾರೆ .
ಅವರಕೃತಿಗಳಲ್ಲಿ ಮಧ್ವ ಸಿದ್ದಾಂತದ ಅನೇಕ
ಪ್ರಮೇಯಗಳನ್ನು ಕಾಣಬಹುದು .
ಹನುಮಂತದೇವರಮೇಲೆ ಅವರ ಭಕ್ತಿ ಹೀಗೆ
ಪ್ರಕಟಮಾಡಿದ್ದಾರೆ .
“ನಿರುತದಿ ದೈರ್ಯವೂ ನಿರ್ಭಯತ್ವವು
ಆರೋಗಾನಂದ ಆಜಾಡ್ಯ ವಾಕ್ಪಾಟುತ್ವ
ಹರೇ ರಂಗವಿಠಲ ಹನುಮಾ ಎನಲು”
ಎಂದಿದ್ದಾರೆ .
ಪರಮಾತ್ಮನಲ್ಲಿ ಅವರ ಭಕ್ತಿ ಹೀಗಿದೆ
“ಭವವೆಂಬ ಅಡವಿಯಲ್ಲಿ ತಾಪತ್ರಯದಿ ಸಿಲುಕಿ
ಭಯಗೊಳ್ವದಂತೆ ಗೆಲುವುದಕ್ಕೆ ಹರಿಯನಾಮ
ಹೊರತಾಗಿ ಮತ್ತುಂಟೆ ಎನ್ನ ಮನವ ನಿನ್ನ
ಚರಣದಲ್ಲಿಟ್ಟು ಸಲಹೋ ನಮೋ ರಂಗವಿಠಲ”
ಎಂದು ಸರ್ವ ಸಮರ್ಪಣಾ ಭಾವ ತೋರಿದ್ದಾರೆ .
ಅವರ ಶಿಷ್ಯ ಪ್ರಶಿಷ್ಯರ ವಿಧ್ಯೆಯನ್ನು ನೋಡಿಯೇ ಗುರುಗಳ ವರ್ಚಸ್ಸು ತಿಳಿಯಬಹುದು .
ಒಮ್ಮೆ ಶ್ರೀಪಾದರಾಜರು ಶ್ರೀ ಪದ್ಮನಾಭ ತೀರ್ಥರ
ಆರಾಧನೆ ಸಲುವಾಗಿ ಅನೆಗೊಂದಿಗೆ ಹೋಗಿದ್ದರು . ಅವರ ಯತಿಪರಂಪರೆಯ ಶ್ರೀ
ಲಕ್ಷ್ಮೀಧರ ಶ್ರೀಗಳು ಪ್ರತಿ ಕಾರ್ತಿಕ ಬಹುಳ ಚತುರ್ಥಿಯಂದು ಗುರುಗಳ ಆರಾಧನೆ ಮಾಡುವ
ಸಂಪ್ರದಾಯ ಆರಂಭಿಸಿದ್ದರು . ಈ ವಿರಾಜಮಾನರಾಗಿದ್ದ ಶ್ರೀಪಾದರಾಜರು ಈ ಸಂಪ್ರದಾಯ ಮುಂದುವರೆಸಿದ್ದರು . ಅಲ್ಲಿಗೆ ಹೋದ ಅವರಿಗೆ ಕನಸಿನಲ್ಲಿ ಒಂದು ಸರ್ಪ ಒಬ್ಬ ಬಾಲಕನರೂಪ ತಳೆದು ಕಾಲಿಗೆ ನಮಸ್ಕರಿಸಿದಂತೆ ಆಯಿತು . ಆನಂತರ ಆಕಾಶಕ್ಕೆ ಜಿಗಿದು ಸೂರ್ಯಮಂಡಲದಲ್ಲಿ ಲೀನವಾದ ಆ ಬಾಲಕ .
ಈ ಕನಸಿಗೆ ಅರ್ಥ ಏನು ಕೇಳಿದಾಗ “ಸೂರ್ಯ ಮಂಡಲತನಕ ಕೀರ್ತಿ ಬೆಳಗುವ
ಶಿಷ್ಯನನ್ನು ಶ್ರೀ ಪದ್ಮನಾಭ ತೀರ್ಥರು ಕರುಣಿಸಿದ್ದಾರೆ “ಎಂದು ವ್ಯಾಖ್ಯಾನ ದೊರೆಯಿತು.
ಆನೆ ಗೊಂದಿಯಿಂದ ಹಿಂದಿರುಗಿದ ಶ್ರೀ ಶ್ರೀಪಾದ ರಾಜರಿಗೆ , ಶ್ರೀಬ್ರಹ್ಮಣ್ಯ ತೀರ್ಥರು ತಮ್ಮ ಶಿಷ್ಯರೊಡನೆ ಭೇಟಿಗೆ ಬಂದಿದ್ದರು .
ಶಿಷ್ಯರನ್ನು ವ್ಯಾಸರಾಜರೆಂದು ಪರಿಚಯಿಸಿ ವಿದ್ಯಾದಾನ ಮಾಡಬೇಕೆಂದು ಕೇಳಿದರು .
ಓದುಗರಿಗೆ ತಿಳುವಳಿಕೆಗೆ , ಆಗ ಶ್ರೀಬ್ರಹ್ಮಣ್ಯ
ತೀರ್ಥರಿಗೆ ೬೫ ವರ್ಷ ವಯಸ್ಸು , ಶ್ರೀಪಾದರಾಜರಿಗೆ ೪೮ ವಯಸ್ಸು ಶ್ರೀವ್ಯಾಸರಾಜರು ಇನ್ನು ಬಾಲಕ. ಶ್ರೀಬ್ರಹ್ಮಣ್ಯ
ಶ್ರೀ ಪಾದರಾಜರು ಸಂಸ್ಥಾನ ಪೂಜೆಯಲ್ಲಿ ಕನ್ನಡ
ದೇವರನಾಮಗಳನ್ನು ಹಾಡುತ್ತಿರುವುದನ್ನು ನೋಡಿ ಆಶ್ಚರ್ಯದಿಂದ “ ಸಂಸ್ಕೃತ ವೇದಸಾರವನ್ನು ತಿಳಿಗನ್ನಡದಲ್ಲಿ ಹರಿಸಿದ್ದೀರಿ “
ಎಂದು ಪ್ರಶಂಸಿಸಿದರು .
ಶ್ರೀ ಪಾದರಾಜರು ಶಿಷ್ಯನ ಜವಾಬ್ದಾರಿಯನ್ನು ವಹಿಸಿಕೊಂಡರು .
ಮುಂದೆ ಶಿಷ್ಯನೊಡನೆ ಪಂಡರಾಪುರ ಯಾತ್ರೆಗೆ ತೆರಳಿದರು . ಅಲ್ಲಿ ಅವರಿಗೆ ಸ್ವಪ್ನದಲ್ಲಿ ಭಗವಂತ “ಭೀಮ ಶಂಕರ “ಎನ್ನುವ ಕಡೆ ಪಾಂಡವ ವಂಶಸ್ತ ಕ್ಷೆಮಕರಾಜ ತನ್ನ ವಿಗ್ರಹಗಳ ಭೂ ಸ್ಥಾಪನೆ ಮಾಡಿದ್ದಾನೆ , ಅದನ್ನು ನಿಮ್ಮ ಸಂಸ್ಥಾನ ವಿಗ್ರಹಗಳಜೊತೆ ಪೂಜಿಸಿ “ ಎಂದು ಹೇಳಿದ . ಅಲ್ಲಿ ನೆಲ ಶೋಧಿಸಿದಾಗ ಸಂಪುಟ ಗೋಚರವಾಯಿತು . ಅದರಲ್ಲಿ ರುಕ್ಮಿಣಿ ಸತ್ಯಭಾಮೆಯರ ಜೊತೆ ಇರುವ ರಂಗವಿಠಲ,
ಅವುಗಳನ್ನು ಜಾಂಬವತಿದೇವಿ ಪೂಜಿಸಿ ಅರ್ಜುನನ ಪೂಜೆಗೆ ಒಳಪಟ್ಟಿತ್ತು . ಮತ್ತೊಂದು ಸಂಪುಟದಲ್ಲಿ ರುಕ್ಮಿಣಿ ಸತ್ಯಭಾಮ ಸಮೇತ ಗೋಪಾಲಕೃಷ್ಣದೇವರು .
ಶ್ರೀಪಾದರಾಜರು ಈ ಮೊದಲು ರಾಜಠೀವಿಯಲ್ಲಿದ್ದವರು ,ಸುಖಪ್ರಾರಬ್ಧವುಳ್ಳವರಾಗಿದ್ದವರು .ಸನ್ಯಾಸಿಗಳಾಗಿದ್ದರು ರಾಜೋಚಿತ ಇಡುಪು ಧರಿಸುತ್ತಿದ್ದವರು . ತಲೆಗೆ ಮುತ್ತಿನ ಕುಲಾವಿ
ಕಿವಿಗಳಿಗೆ ರತ್ನಖಚಿತ ಕುಂಡಲಗಳು , ಹಣೆಯಲ್ಲಿ ಕಸ್ತೂರೀತಿಲಕ , ಮೈಗೆ ಶ್ರೀಗಂಧ ಲೇಪನ
ರಾಜ ಕಲೆಯಿಂದ ಕೂಡಿದ್ದವರು . ಪ್ರತಿದಿನ ಅಭ್ಯಂಗನ ಪರಿಮಳದ ಉಷ್ಣ ಸುಖೋದಕದಲ್ಲಿ .
ಭಗವಂತನಿಗೆ ೬೪ ಬಗೆಯ ಭಕ್ಷಗಳ ನೈವೇದ್ಯ ಪ್ರತಿದಿನ ಭಕ್ತವರ್ಗಕ್ಕೆ ಸಂತರ್ಪಣೆ ದಿನನಿತ್ಯದ ರೂಡಿ .
ಪಂಢರಪುರದಿಂದ ಬಂದಮೇಲೆ ಅವರಲ್ಲಿ ಬದಲಾವಣೆಗಳು ಕಂಡಿತು , ಹೆಚ್ಚುಕಾಲ ಧ್ಯಾನದಲ್ಲಿ ಕಳೆಯುತ್ತಿದ್ದರು . ಮೊದಲಿಗಿಂತ ಅಂತರ್ಮುಖರಾದರು .
ಅಂದು ಸ್ನಾನಕ್ಕೆ ಹೋದ ಶ್ರೀಪಾದರಾಜರು ತಾವು ಬರುವಷ್ಟರಲ್ಲಿ ಪೂಜೆಗೆ ಅಣಿಗೊಳಿಸಬೇಕೆಂದು ಶಿಷ್ಯ ವ್ಯಾಸರಾಜರಿಗೆ ಹೇಳಿ ಹೊರಟರು . ಎಲ್ಲವನ್ನು ರೇಷ್ಮೆ ವಸ್ತ್ರಗಳಿಂದ ಬೇರ್ಪಡಿಸಿ ಪೂಜಾಮಂಟಪದಲ್ಲಿ ಇಡುತ್ತಿದ್ದ ಶ್ರೀ ವ್ಯಾಸತೀರ್ಥರು ಫಂಡರಾಪುರದಿಂದ ತಂದಿದ್ದ ಸಂಪುಟವನ್ನು ಕೈಗೆತ್ತಿಕೊಂಡು ಸರಾಗವಾಗಿ ಅದರ ಮುಚ್ಚಳ ತೆಗೆದು ನೆಲದಮೇಲಿಟ್ಟರು . ವಿಗ್ರಹ ಮಾನವರಂತೆ ಉಸಿರಾಡುವುದನ್ನು ಗಮನಿಸಿದರು . ಆಕ್ಷಣ ಶ್ರೀವ್ಯಾಸರಾಜರು ಮೈಮರೆತರು , ಗೋಪಾಲಕೃಷ್ಣ ನರ್ತನ ಮಾಡತೊಡಗಿದ . ಯತಿಗಳು ಅಲ್ಲಿದ್ದ ಸಾಲಿಗ್ರಾಮ ತೆಗೆದುಕೊಂಡು ತಾಳಹಾಕತೊಡಗಿದರು . ಅವರಿಗೆ ಎಚ್ಚರಿಕೆಯೇ ಇದ್ದಂತಿರಲಿಲ್ಲ . ಸ್ವಲ್ಪಹೊತ್ತಿನಲ್ಲಿ ಎಚ್ಚರಗೊಂಡ ವ್ಯಾಸರಾಜರು ತಮ್ಮ ಎದುರಿಗೆ ಗುರುಗಳು ನಿಂತಿದ್ದನ್ನು ನೋಡಿದರು . ಗೋಪಾಲ ಕೃಷ್ಣ ನೃತ್ಯ ನಿಲ್ಲಿಸಿ ಬಲಗಾಲಿನಮೇಲೆ ಎಡಗಾಲು ಹಾಕಿನಿಂತಿದ್ದ . ಕೈಲಿದ್ದ ಸಾಲಿಗ್ರಾಮಗಳು ತಾಳದ ಪೆಟ್ಟಿಗೆ ಹೋಳಾಗಿದ್ದವು . ತಲೆ ತಗ್ಗಿಸಿ ನಿಂತ ವ್ಯಾಸರಾಜರನ್ನು “ ನಿನ್ನ ಭಕ್ತಿಗೆ ಸ್ವಾಮಿ ನಾಟ್ಯಮಾಡಿದ ನೀನು ಬಾಲಕನಲ್ಲ ಹರಿವಾಯುಗಳ ಅತ್ಯಂತ ಪ್ರೀತಿಪಾತ್ರನಾದವನು , ನಿನ್ನ ವರ್ತನೆ ಅಪರಾಧವಲ್ಲ , ದುರ್ಗಾದೇವಿಯಾದ ಹೊಸೂರಮ್ಮನ ಭಕ್ತರು ಪ್ರಾಣಪ್ರತಿಷ್ಠೆ ನೆರವೇರಿಸಲು ಕೋರಿದ್ದಾರೆ .ಆ ದೇವಿಗೆ ಕಣ್ಣನ್ನು ಮಾಡಿಸಿಕೊಡುವ ವಿಚಾರ ನನ್ನಲ್ಲಿತ್ತು . ನೀನು ಜೈತಯಾತ್ರೆಗೆ ಹೊರಡುತ್ತಿರುವಿ. ಈ ಸಾಲಿಗ್ರಾಮಗಳನ್ನು ದುರ್ಗಾದೇವಿಗೆ ಅರ್ಪಿಸಿ ವಾಖ್ಯಾರ್ಥಕ್ಕೆ ಹೊರಡು , ನಿನ್ನನ್ನು ವಾದದಲ್ಲಿ ಸೋಲಿಸಲು ಯಾರಿಗೂ ಸಾಧ್ಯವಾಗುವುದಿಲ್ಲ “
ಎಂದರು . ಅಷ್ಟೇ ಅಲ್ಲ ಅವರು ಕುಣಿಸಿದ ಗೋಪಾಲ ಕೃಷ್ಣನ ವಿಗ್ರಹವನ್ನು ಶಿಷ್ಯನಿಗೆ ಕಾಣಿಕೆಯಾಗಿ ಅರ್ಪಿಸಿದರು .
ಶ್ರೀಪಾದರಾಜರ ಕಾರುಣ್ಯ ಅಸಾಧಾರಣವಾದದ್ದು
ಎಲ್ಲರನ್ನು ಗೌರವವಾಗಿ ಕಾಣುವ ಕಾರುಣ್ಯ ಮೂರ್ತಿ ಅವರು. ಒಮ್ಮೆ ತಿರುಪತಿಯ ದರ್ಶನಕ್ಕೆ ಹೋಗಿದ್ದರು. ಅಲ್ಲಿ ಅವರಿಗೆ ಲಕ್ಷ್ಮೀನಾರಾಯಣ ಮುನಿಗಳಾಗಿದ್ದ ತಮ್ಮನ್ನು ಶ್ರೀಪಾದರಾಜರೆಂದು
ಘೋಷಿಸಿದ್ದ ಶ್ರೀರಘುನಾಥ ತೀರ್ಥ ಮುನಿಗಳ ಭೇಟಿಯಾಯಿತು .ಅವರು ಶ್ರೀಪಾದರಾಜರಿಗಿಂತ ಇಪ್ಪತ್ತು ವರ್ಷಗಳು ಹಿರಿಯರು , ತಮ್ಮ ಸಂಸ್ಥಾನ ಇಡೀಭರತ ಖಂಡ ವ್ಯಾಪಿಸಿದ್ದರು ಬಹಳ ಸರಳವ್ಯಕ್ತಿ . ಕೆಳಗಿನ ತಿರುಪತಿಯಲ್ಲಿ
ಒಂದು ಛತ್ರದಲ್ಲಿ ಉಭಯಶ್ರೀಗಳು ಭೇಟಿಯಾದರು .
ಪೂಜೆಯನಂತರ ಶ್ರೀ ರಘುನಾಥ ತೀರ್ಥರು
ತಮಗೆ ವೃದ್ದಾಪ್ಯ , ಶ್ರೀಪಾದರಾಜರು ಜೊತೆಯಲ್ಲಿ ಬಂದರೆ ಉತ್ತರ ಭಾರತ ತೀರ್ಥಕ್ಷೇತ್ರ ಯಾತ್ರೆ ಕೈಗೊಳ್ಳುವುದಾಗಿ ಹೇಳಿದಾಗ . ಮೊದಲ ಯಾತ್ರೆಯಾಗಿ ಶ್ರೀ ಪದ್ಮನಾಭ ತೀರ್ಥರ ದರ್ಶನ ಮಾಡಿ ಉಭಯಶ್ರೀಗಳು ಮುಂದುವರೆದರು .
ದಾರಿಯಲ್ಲಿ ಒಬ್ಬ ಶ್ರೀಮಂತನ ಮನೆಯಲ್ಲಿ
ಪೂಜೆಗೆ ಏರ್ಪಾಟಾಗಿತ್ತು . ತೀರಾ ಸರಳವಾಗಿದ್ದ ರಘುನಾಥ ತೀರ್ಥರು ಪಲ್ಲಕ್ಕಿ ಇಳಿದು ತಮ್ಮ
ಸಂಸ್ಥಾನದೇವರನ್ನು ತಲೆಯಮೇಲೆ ಇಟ್ಟುಕೊಂಡು ನಡೆದರು. ಭವ್ಯವಾದ ವೇಷಭೂಷಣ ತೊಟ್ಟಿದ್ದ ಶ್ರೀಪಾದರಾಜರು ಶಿಷ್ಯರಿಂದ ಪರಾಕು ಹೇಳಿಸಿಕೋಳ್ಳುತ್ತ ಸಾಗಿದರು . ಅಲ್ಲಿ ಶ್ರೀಮಂತ ಇಬ್ಬರು ಯತಿಗಳಲ್ಲಿ ಭೇದಭಾವ ತೋರಿದ . ಶ್ರೀಪಾದರಾಜರು ಅಸಮಾಧಾನಗೊಂಡರು . ಬೇಕೆಂದೇ ಹೀಗೆ ಮಾಡಿದ್ದಾರೆಂದು ನೊಂದುಕೊಂಡರು . ಈ ತಾರತಮ್ಯ ನೋಡಿ
ಶ್ರೀಪಾದರಾಜರು ಅವರುಕೊಟ್ಟ ಯಾವ ಸ್ತುಗಳನ್ನು ಬಳಸದೆ ತಮ್ಮ ಮಠದ ಗೋಪಿನಾಥನ ಪೂಜೆ
ಮಾಡಿದ್ದರು .ಅತ್ಯಂತ ಕರುಣಾಮಯಿ ಅವರು.
ಅವರ ಒಂದು ಕೃತಿಯ ಭಾಷಾ ಸೌಂದರ್ಯ ನೋಡೋಣ , ಅವರ ಮಾತೃಭಾಷೆ ಪ್ರೇಮ ಅವರ ಶಿಷ್ಯರು ಮುಖ್ಯವಾಗಿ ಶ್ರೀ ವ್ಯಾಸರಾಜರಾದಿಯಾಗಿ ಎಲ್ಲರೂ ಮುಂದುವರೆಸಿದರು ಕನ್ನಡನಾಡು ನುಡಿ ಸಮ್ರುದ್ದವಾಯಿತು .
ಅವರ ಕೃತಿಗಳು ಬಹುಮಟ್ಟಿಗೆ ಅವರ ಪ್ರಶಿಷ್ಯರಾದ ಶ್ರೀ ವಾದಿರಾಜರ ಕೃತಿಗಳನ್ನು ಹೋಲುತ್ತದೆ . ಒಂದು ದೇವರನಾಮದಲ್ಲಿ
ಮೂರುನುಡಿಗಳಲ್ಲಿ , ರಾಮಾಯಣ , ಭಾಗವತ
ಭಗವದ್ಗೀತೆ ಚಿಂತನೆ ನಡಿಸಿದ್ದಾರೆ . ಅದು ಹೀಗಿದೆ .
ರಂಗಾ ಮನೆಗೆ ಬಾರೋ ಕೃಪಾಂಗ ಶ್ರೀರಂಗ
ಎಂದು ಆರಂಭ ವಾಗುವ ದೇವರನಾಮದಲ್ಲಿ
ಮೊದಲ ಚರಣದಲ್ಲಿ ರಾಮಾವತಾರ ಸ್ಮರಣೆಮಾಡಿದ್ದಾರೆ , ಹನುಮಂತ ದೇವರ ಸೇವೆಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.
ವಾಲೀ ನಿಗ್ರಹ ಹೇಳಿದ್ದಾರೆ .
ಎರಡನೇ ಚರಣದಲ್ಲಿ ಕೃಷ್ಣರೂಪದ ಚಿಂತನೆ
ನಡೆಸುತ್ತ “ಹತ್ತಿದ ರಥವನ್ನು ಮುಂದೊತ್ತಿದ ಕೌರವ ಸೇನೆಗೆ ಮುಟ್ಟಿದ , ಉಭಯರಿಗೆ ಜಗಳವ ಬಿತ್ತಿದ , ಮತ್ತ ಮಾತಂಗಗಳನೆಲ್ಲ ಒತ್ತರಿಸಿ ಮುಂದೊತ್ತಿ ನಡೆಯುತ ಇತ್ತರದಿ ನಿಂತ ವರ ರಥಿಕರ ಕತ್ತರಿಸಿ ಕಾಳಗವ ಮಾಡಿದ|| ಎನ್ನುತ್ತಾರೆ ,
ಅಲ್ಲ ಶ್ರೀಕೃಷ್ಣ ಅರ್ಜುನನಿಗೆ ಸಾರಥಿ ಆಗಿದ್ದ
ಅವನೆಲ್ಲಿ ಯುದ್ಧಮಾಡಿದ , ಎಂದರೆ ಶ್ರೀಕೃಷ್ಣ
ಅರ್ಜುನನಿಗೆ ಗೀತೋಪದೇಶ ಮಾಡುವಾಗ “ “ನೀನು ನಿಮಿತ್ತ ಮಾತ್ರ ಅರ್ಜುನ “ ಎನ್ನುತ್ತಾನೆ ಕೃಷ್ಣ ಅದನ್ನು ಶ್ರೀಪಾದರಾಜರು ಒಂದು ನುಡಿಯಲ್ಲಿ ಅದನ್ನು ವಿವರಿಸಿದರೆ .ಅವರ ಶಿಷ್ಯರು ಇನ್ನೂ ಮುಂದೆ ಹೋಗಿ ಇಡೀ ಗೀತಾ ಸಾರವನ್ನೇ ಕನ್ನಡಲ್ಲಿ “ಕೇಳು ಪಾರ್ಥ” ಎಂದರು.
ಕೊನೆಯನುಡಿಯಲ್ಲಿ ,”ಉಂಗುರಗಳನ್ನು ನಿನ್ನ
ಅಂಗುಲಿಗಿಟ್ಟು ಕಂಗಳಿಂದಲಿ ನೋಡುವೆ , ಹೆಂಗಳ ಉತ್ತುಂಗದ ಕುಚoಗಳ ಆಲಂಗಿಸಿದ ಭುಜಂಗಳ ಕಮಲಸಮ ಪಾದಂಗಳ ಹಿಂಗದೆ ಸ್ಮರಿಸಿದ ಮಾತಂಗನ ಭಂಗವ ಪರಿಹರಿಸಿ ಭ್ಯಾಗದಿ ಮಂಗಳ ಸ್ವರ್ಗವನಿತ್ತ ಉತ್ತುಂಗ ವಿಕ್ರಮ ರಂಗವಿಠಲ” ಎಂದು ಗೋಪಿಕಾ ಸ್ತ್ರೀಯರ ಗಜೇಂದ್ರ ಮೋಕ್ಷ ಸ್ಮರಿಸಿದ್ದಾರೆ ವಿಶಿಷ್ಟ ಸಾಹಿತ್ಯದಿಂದ .
ಅನೇಕ ಸುಳಾದಿಗಳು , ಉಗಾಭೋಗಗಳು , ಗದ್ಯ ಪದ್ಯಗಳಿಂದ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ .
ಕ್ಷಣಿಕ ಸುಖಕ್ಕಾಗಿ ಶಾಶ್ವತ ಸುಖವನ್ನು ಕಡೆಗಣಿಸುವವರಿಗೆ “ ಮನೆಯಿಂದ ಸಂತೋಷ ಕೆಲವರಿಗೆ ಲೋಕದಲ್ಲಿ
ಧನದಿಂದ ಸಂತೋಷ ಕೆಲವರಿಗೆ ಲೋಕದಲ್ಲಿ
ವನಿತೆಯಿಂದ ಸಂತೋಷ ಕೆಲವರಿಗೆ ಲೋಕದಲಿ
ತನಯರಿಂ ಸಂತೋಷ ಕೆಲವರಿಗೆ ಲೋಕದಲಿ
ಇನಿತು ಸಂತೋಷ ಅವರಿವರಿಗಿರಲಿ ನಿನ್ನ
ನೆನೆವೊ ಸಂತೋಷ ಏನಾಗಿರಲಿ ನಮ್ಮ ರಂಗವಿಠಲ|| ಎಂದು ತಮ್ಮ ಭಕ್ತಿಯನ್ನು ಮೆರೆದಿದ್ದಾರೆ .
ವಾಖ್ಯಾರ್ಥಗಳಲ್ಲಿ ಜಯಪತ್ರಗಳನ್ನು ಸಂಪಾದಿಸಿ ತಿರುಪತಿಯ ಶ್ರೀನಿವಾಸನ ದರ್ಶನಕ್ಕೆ ಬಂದು
ತಮ್ಮ ಜಯಪತ್ರಗಳನ್ನು ಶ್ರೀನಿವಾಸನಿಗೆ ಅರ್ಪಿಸಿ
ಬಹು ಜನಪ್ರಿಯ ಕೃತಿ “ಹರೇ ವೆಂಕಟ ಶೈಲ ವಲ್ಲಭ “ ರಚಿಸಿ ವೆಂಕಟೇಶನ ಪಾದಗಳಿಗೆ ಸಮರ್ಪಿಸಿದರು .
ಇತಿಹಾಸಕಾರರು ತಮಾಷಿಯಾಗಿ ಹೇಳುವುದುಂಟು ಸೋಲೇ ಕಂಡಿರದ ಮಹಿಮಾನ್ವಿತರಾದ ಶ್ರೀ ಪಾದರಾಜರು
“ಶಿಷ್ಯನ ಕೀರ್ತಿಯಿಂದ ಪರಾಜಯಗೊಂಡರು” ಎಂದು.
ಮುಂದೆ ಸಾಳುವ ವಂಶದ ಉದ್ದಾರ ಹಾಗು
ಶ್ರೀಪಾದರಾಜರ ಕೊನೆಯದಿನಗಳು , ಹಾಗು
ವಿವಿಧ ಶಿಷ್ಯರು ಶ್ರೀಪಾದರಾಜರಮೇಲೆ ರಚಿಸಿದ
ಕೃತಿಗಳು ನಾಳೆಯ ಸಂಚಿಕೆಯಲ್ಲಿ.
ನಾಹಂ ಕರ್ತಾ ಹರಿಃ ಕರ್ತಾ
||ಶ್ರೀಕೃಷ್ಣಾರ್ಪಣಮಸ್ತು ||
************
ಧೃವಾಂಶರ ಸ್ಮರಣೆ- ಆರಾಧನಾ ಕುಸುಮ
ಪಾಲಿಸಯ್ಯ ಸ್ವಾಮಿ ಕೃಷ್ಣಾ ಪಾಲಿಸಯ್ಯ ಎನ್ನ ನೀನು
ಪಾಲಿಸಯ್ಯ ಭಾಗ್ಯವಿತ್ತು ಭಕ್ತವತ್ಸಲಾ
ನಿತ್ಯಪೂರ್ಣ ಮಂಗಳವಿತ್ತು ನಿತ್ಯದಿ ಕಲ್ಯಾಣವಿತ್ತು
ನಿತ್ಯ ಸಲಹೋ ವ್ಯಾಸಮುನಿ ವಂದ್ಯ ಗೋಪೀನಾಥನೇ
ತುರುಬಿನಮ್ಯಾಲೆ ತುರುಬಿದ ಮೊಲ್ಲೆ ಮಲ್ಲಿಗೆ ಕುಸುಮಂಗಳ ರಂಗಾ
ಕೊರಳಲ್ಲಿ ಕಂಠೀಸರ ವನಮಾಲೆ ವರಕಲ್ಪತರುವನೆನ್ನಿ ರಂಗಾ
ಕರದಲಿ ವೇಣು ಬೆರಳಲ್ಲಿ ಮೀಟುತ ಮರಿದುಂಬಿ ಝೇಂಕಾರ ರಂಗಾ
ಸ ರೀ ಗ ಮ ಪ ದ ನೀ ಸ, ನ ನೀ ದ ಪ ಮ ಗ ರೀ ಸ ಅಧರದಲೂದುತಿರೇ ರಂಗಾ
ಸಿರಿ ಅರಸನು ಸಿರಿಪತಿ ರಂಗವಿಠ್ಠಲ ಸರಸದಿ ವೇಣುನಾದ ಮಾಡಿದಾ
ಶ್ರೀ ಶ್ರೀಪಾದರಾಜರ ಈ ಉಗಾಭೋಗ ಐತಿಹಾಸಿಕ ಹಿನ್ನಲೆಯನ್ನು, ಚರಿತ್ರೆಯ ದಾಖಲೆಯನ್ನು ಪರಮಾತ್ಮನ, ಆತನ ದಾಸರ ಮಧ್ಯದ ಭಕ್ತಿಯ ಬಾಂಧವ್ಯವನ್ನು ತಿಳಿಸಿ ಹೇಳುವುದೇ ಆಗಿದೆ...
ಶ್ರೀ ಶ್ರೀಪಾದರಾಜರು ಪಂಢರಾಪುರಕ್ಕೆ ಪಾಂಡುರಂಗನ ದರ್ಶನಕ್ಕೆ ಹೋದಾಗ ಅವರಿಗೆ ಭೀಮಾನದಿಯ ದಡದಲ್ಲಿ ಎರಡು ಸಂಪುಷ್ಟಗಳು ದೊರಿತವೆ, ಅದರಲ್ಲಿನ ಒಂದು ಸಂಪುಷ್ಟ ತೆರಿಯಲಾಗಿ ರಂಗವಿಠಲನ ಪ್ರತಿಮೆಯ ಜೊತೆ ರಂಗವಿಠಲ ಎನ್ನುವ ಅಂಕಿತವೂ ಪ್ದಾಪ್ತಿಯಾದ ವಿಷಯ ದಾಸ ಸಾಹಿತ್ಯದ ಸೇವೆ ಮಾಡುವ ಸಜ್ಜನರೆಲ್ಲರಿಗೂ ವಿದಿತವಾದ ವಿಷಯವೇ...
ಮತ್ತೊಂದು ಸಂಪುಷ್ಟದ ಮುಚ್ಚಳ ಸಹ ಎಷ್ಟೇ ಪ್ರಯತ್ನಿಸಿದರೂ ತೆರೆಯಲಾಗುವುದಿಲ್ಲ, ಸರಿ ದೈವೇಚ್ಛೆ ಎಂದು ಸುಮ್ಮನಾಗ್ತಾರೆ.
ನಂತರ ಒಮ್ಮೆ ಶ್ರೀ ಶ್ರೀಪಾದರಾಜರು ತಮ್ಮ ಸಂಸ್ಥಾನದ ಪ್ರತಿಮೆಗಳನ್ನೆಲ್ಲಾ ಅಣಿಮಾಡಿಡು, ನಾನು ಸ್ನಾನಕ್ಕೆ ಹೋಗಿ ಬರ್ತಿನಿ ಅಂತ ಶ್ರೀಮಚ್ಚಂದ್ರಿಕಾಚಾರ್ಯರಿಗೆ ಒಪ್ಪಿಸಿ ತಾವು ಸ್ನಾನಾದಿಗಳನ್ನು ಮುಗಿಸಲು ಹೋಗಿರ್ತಾರೆ,
ಶ್ರೀಮಚ್ಚಂದ್ರಿಕಾಚಾರ್ಯರು ಶ್ರೀಪಾದರಾಜರಿಗೆ ಭೀಮಾನದೀತೀರದಲ್ಲಿ ಸಿಕ್ಕಿದಂತಹಾ ಮತ್ತೊಂದು ಶ್ರೀಪಾದರಾಜರಿಗೂ ತೆಗೆಯದೆ ಬಿಟ್ಟ ಸಂಪುಷ್ಟವನ್ನು ಸುಲಭದಿಂದ ತೆಗದುಬಿಡ್ತಾರೆ, ಅದರಲ್ಲಿನ ಮುದ್ದಾದ ವೇಣುಗೋಪಾಲನ ಪ್ರತಿಮೆ ಸಾಕ್ಷಾತ್ ಕೃಷ್ಣನಾಗಿ ಕುಣಿಯಲು ಆರಂಭಿಸ್ತಾನೆ..
ಚಂದ್ರಿಕಾಚಾರ್ಯರು ಆನಂದ ಪರವಶರಾಗಿ , ಭಕ್ತ್ಯೋದ್ರೇಕದಿಂದ ತಲ್ಲೀನರಾಗುತ್ತಾ ಅಲ್ಲಿದ್ದ ಸಾಲಿಗ್ರಾಮಗಳನ್ನೇ ತಾಳಗಳಂತೆ ಮಾಡಿ ತಾಳವನ್ನು ಹಾಕುತ್ತಾ (ಬಾರಿಸುತ್ತ) ಪರಮ ಭಕ್ತಿಪಾರವಶ್ಯದಿಂದ ಕೃಷ್ಣನ ನರ್ತನೆಯ ಜೊತೆ ತಾವೂ ಹಾಡುತ್ತಾ, ಕುಣಿಯಲಾರಂಭಿಸಿದರು. ಶ್ರೀ ಚಂದ್ರಿಕಾಚಾರ್ಯರ ಈ ನರ್ತನೆಯನ್ನು ಕಂಡು, ಶಿಷ್ಯರಿಗೆ ಭಯವಾಗಿಬಿಡ್ತದೆ, ಅವರಿಗೆ ಕೃಷ್ಣ ಬಂದು ನರ್ತನೆ ಮಾಡ್ತಿರುವುದು ಕಾಣಿಸುವುದಿಲ್ಲ. ಆಗ ಶಿಷ್ಯರು ಭಯದಿಂದ ಓಡಿ ಹೋಗಿ ನಿಮ್ಮ ಶಿಷ್ಯನು ಏನೇನೋ ಮಾಡ್ತಿದ್ದಾನೆ, ವಿಚಿತ್ರ ವರ್ತನೆ ಮಾಡುತ್ತ ಕುಣಿಯುತ್ತಿದ್ದಾನೆ ಎಂದು (ಶ್ರೀಮಚ್ಚಂದ್ರಿಕಾಚಾರ್ಯರು ಸಾಲಿಗ್ರಾಮಗಳನ್ನು ತಾಳಗಳಂತೆ ಮಾಡಿ ಕುಣಿಯುತ್ತ, ಹಾಡ್ತಿರುವುದನ್ನು ) ತಿಳಿಸ್ತಾರೆ.
ಶ್ರೀ ಶ್ರೀಪಾದರಾಜರು ವೇಗದಲ್ಲಿ ಬಂದು ಅಲ್ಲಿದ್ದ ಕಿಟಕಿಯಿಂದ ಹಣಿಕೆ ಹಾಕಿ ನೋಡಿದ ತಕ್ಷಣ ಆ ಕುಣಿಯುತ್ತಿರುವ ಮುದ್ದಾದ ಕೃಷ್ಣನು ಮತ್ತೆ ವೇಣುಗೋಪಾಲನ ಸುಂದರ ಪ್ರತಿಮೆಯಾಗಿ ನಿಂತು ಬಿಡ್ತಾನೆ, ಅದೂ ಸಹ ಬಲಗಾಲು ಎಡಗಡೆ ಇಟ್ಟು, ಶಿಲ್ಪಶಾಸ್ತ್ರದ ವಿರುದ್ಧವಾಗಿ ನಿಂತುಬಿಡ್ತಾನೆ. ಅದನ್ನು ಕಂಡ ಶ್ರೀ ಶ್ರೀಪಾದರಾಜರು ಶ್ರೀಮಚ್ಚಂದ್ರಿಕಾಚಾರ್ಯರನ್ನು ಅಪ್ಪಿಕೊಂಡು, ನೀನು ತುಂಬಾ ಉತ್ತಮವಾದ ಜೀವ, ಪರಮಯೋಗ್ಯನಾದವನು, ಆ ಭಗವಂತನೇ ನಿನಗಾಗಿ ಬಂದಿರುವನು ಎಂದು ಆಶೀರ್ವಾದ ಮಾಡ್ತಾರೆ....
ಆ ಅದ್ಭುತವಾದ ಸಂದರ್ಭದಲ್ಲಿ
ಶ್ರೀ ಶ್ರೀಪಾದರಾಜರಿಂದ ಹೊರಬಂದ ಭಕ್ತಿಪೂರ್ವಕವಾದ ಪರಮಾತ್ಮನ ದಿವ್ಯದರ್ಶನದ, ಪರಮಾತ್ಮನ ಸಾಕ್ಷಾತ್ಕಾರವನ್ನು ತಿಳಿಸಿ ಹೇಳುವ ಉಗಾಭೋಗವಿದು..
ಈ ಉಗಾಭೋಗದಲ್ಲಿ ಶ್ರೀ ಕೃಷ್ಣನು ವೇಣುವನ್ನು ಊದುವ ಚಂದವನ್ನು, ವೈಜಯಂತೀ, ಕೌಸ್ತುಭ, ರತ್ನಾಭರಣಗಳಿಂದ ಭೂಷಿತವಾದ ಆ ಕೃಷ್ಣನ ಅಲಂಕಾರದ ಅಂದವನ್ನು, ಕೃಷ್ಣನು ವೇಣುವನ್ನು ಊದುವಾಗ ಆತನ ಅಧರದ ಲಾಲಿತ್ಯವನ್ನು, ಆ ವೇಣುನಾದದ ಮಾಧುರ್ಯವನ್ನು ವೇಣುವನ್ನು ಮೀಟುತ್ತಿರುವ ಮುದ್ದಾದ, ಕೋಮಲವಾದ ಬೆರಳುಗಳನ್ನು ಮನದುಂಬಿ ವರ್ಣಿಸಿದ್ದಾರೆ .
ವ್ಯಾಸಮುನಿವಂದ್ಯ ಗೋಪೀನಾಥನೆ ಎನ್ನುವ ಪದದಿಂದ ಶ್ರೀಮದ್ವ್ಯಾಸರಾಜರಿಂದ ವಂದಿಸಲ್ಪಟ್ಟ, ಸಾಕ್ಷಾತ್ಕರಿಸಲ್ಪಟ್ಟ ವೇಣುಗೋಪಾಲಾಭಿನ್ನ ತಮ್ಮ ಸಂಸ್ಥಾನದ ಮೂಲ ದೇವರಾದ ಗೋಪೀನಾಥನನ್ನು ಆನಂದದಿಂದ ಸ್ತುತಿಸಿ ವರ್ಣಿಸಿದ್ದಾರೆ...
ಒಟ್ಟಿನಲ್ಲಿ ಸಕಲ ಜಗತ್ತಿಗೆ ಒಡೆಯನಾದ, ಮಂಗಳ, ಗುಣಪೂರ್ಣನಾದ, ಸಕಲಗುಣಸಂಪನ್ನ, ಸ್ವರಮಣ, ಸರ್ವತಂತ್ರ್ಯ ಸ್ವತಂತ್ರ್ಯನಾದ ಶ್ರೀಹರಿ ಸಿರಿ ಅರಸನು, ಸಿರಿಪತಿ, ವೇದವ್ಯಾಸ, ರಾಮ, ಕೃಷ್ಣ ಏನೇ ರೂಪಗಳಲ್ಲಿ ಇದ್ದರೂ ಆ ಪರಮಾತ್ಮನು ಸಕಲ ಜಗತ್ತಿನ ಸಜ್ಜನ ಜೀವರಾಶಿಗೆ ತತ್ರಾಪಿ ವಿಷ್ಣುಭಕ್ತರಿಗೆ ತನ್ನ ಪರಮಕಾರುಣ್ಯವನ್ನು ನೀಡುವನೇ ಆಗಿದ್ದಾನೆ ಎನ್ನುವುದನ್ನು ಈ ಉಗಾಭೋಗದ ಮುಖಾಂತರ ಶ್ರೀಶ್ರೀಪಾದರಾಜರು ಭಕ್ತಿಯ ಪರಮೋತ್ಕೃಷ್ಟ ಮಾಹತ್ಮ್ಯವನ್ನು ತಿಳಿಸಿದ್ದಾರೆ..
ನಂತರದಲ್ಲಿ ಕುಣಿಯುತ್ತಿದ್ದ ಶ್ರೀಕೃಷ್ಣನ ಬಲಗಾಲಿನಮೇಲೆ ಹಾಗೆ ನಿಂತುಹೋದದ್ದು, ಆ ಪ್ರತಿಮೆ ಕುಂದಾಪುರ ವ್ಯಾಸರಾಜ ಮಠದ ಸಂಸ್ಥಾನದಲ್ಲಿ ಇಂದಿಗೂ ಪೂಜಿಸಲ್ಪಡುತ್ತಿರುವುದು ಜಗದ್ವಿದಿತವೇ..
ಪರಮಾತ್ಮನಲ್ಲಿ ಸಂಪೂರ್ಣ ಭಕ್ತಿ ಮಾಡಿದಾಗ ಪರಮಾತ್ಮನು ತಾನೇ ಒಲಿದು ಎದುರು ನಿಲ್ಲುವನೆಂದು ಶ್ರೀ ಧೃವಾಂಶರು, ಶ್ರೀ ಪ್ರಲ್ಹಾದರಾಜರು ಹುಟ್ಟಿಬಂದು ತೋರಿಸಿಕೊಟ್ಟು ಹೋಗಿದ್ದಾರೆ..
ವೈರಾಗ್ಯ ತುಂಬಿದ ನಿಸ್ವಾರ್ಥ ಭಕ್ತಿಯನ್ನು ಪರಮಾತ್ಮನು ಸದಾ ಗುರುಗಳ ಮುಖಾಂತರ ಕರುಣಿಸಲಿ ಎಂದು ಶ್ರೀಮಚ್ಚಂದ್ರಿಕಾಚಾರ್ಯರ, ಅವರ ಗುರುಗಳಾದ ಶ್ರೀ ಶ್ರೀಪಾದರಾಜರ, ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ ವೇಣುಗೋಪಾಲಾಭಿನ್ನ ಗೋಪೀನಾಥನಲ್ಲಿ ಪ್ರಾರ್ಥನೆ ಮಾಡುತ್ತಾ...
-Smt. Padma Sirish
ನಾದನೀರಾಜನದಿಂ ದಾಸಸುರಭಿ 🙏🏽**************
|| ಶ್ರೀ ವಿಠ್ಠಲ ಪ್ರಸೀದತು ||
ಇಂದು ಶ್ರೀಶ್ರೀಪಾದರಾಜ ಯತಿಗಳು . ನಿನ್ನೆ ಭಕ್ತವರ್ಗ ಭಕ್ತಿಯಿಂದ
ಭುವಿಗೆ ಅಹ್ಫಾನಿಸಲಾಗಿತ್ತು. ಸಾಮಾನ್ಯವಾಗಿ
ಪೂರ್ವಾರಾಧನೆಯಂದು ಭುವಿಗೆ ಬಂದ ಗುರುಗಳನ್ನು
ಉಚಿತ ಆಸನದಲ್ಲಿ ಕುಳ್ಳಿರಿಸಿ ಗೌರವಾರ್ಪಣೆ ಮಾಡುವದಿನ .
ಮಧ್ಯಾರಾಧನೆ ಅವರ ಮಹಿಮೆಗಳನ್ನು ಪ್ರಶಂಸಿಸಿ ಗೌರವ ಸಲ್ಲಿಸಬೇಕು .
ಉತ್ತರಾರಾಧನೆ ದಿನ ಅವರನ್ನು ಉಚಿತ ಮರ್ಯಾದೆಯೊಂದಿಗೆ ಬೀಳ್ಕೊಡಬೇಕು . ಅನಂತರ ಅವರು ತಪಸ್ಸಿಗೆ ಹಿದುರಿಗಿದಾಗ ಅವರ ದರ್ಶನ ಪಡೆಯಬೇಕು . ಅವರು ಶ್ರೀಹರಿಯನ್ನು ಕುರಿತು ಧ್ಯಾನದಲ್ಲಿರುವಾಗ
ಅವರ ಗುಣಗಾನ ಮಾಡಬೇಕು . ಇಂದು ಭಗವಂತನಿಗೆ ಅತಿಪ್ರಿಯ . ಆ ದೃಷ್ಟಿಯಿಂದ
ಶ್ರೀಪಾದರಾಜರನ್ನು ಅವರ ಶಿಷ್ಯ ಪ್ರಶಿಷ್ಯರು ಗುಣಗಾನ ಮಾಡಿದ್ದನ್ನು ಸ್ಮರಿಸೋಣ .
ಅವರ ವಿದ್ಯಾಶಿಷ್ಯರು ಶ್ರೀ ವ್ಯಾಸರಾಯರು ಅವರು ತಮ್ಮ ಗುರುಗಳ ಮಹಿಮೆಯನ್ನು ಕೊಡಾಡಿದ್ದಾರೆ .
||ಮಹಿಮೆ ಸಾಲದೇ ಇಷ್ಟೇ ಮಹಿಮೆಸಾಲದೆ ||
ಎಂಬ ಕೃತಿಯಲ್ಲಿ ಅವರ ಧಿವ್ಯ ಅಲಂಕಾರವನ್ನು
ವರ್ಣಿಸುತ್ತ “ಮುತ್ತಿನ ಕವಚ ಮೇಲ್ಕುಲಾವಿ
ರತ್ನಕೆತ್ತಿದ ಕರ್ಣಕುಂಡಲ ,ಕಸ್ತೂರಿ ಕುಕುಮ ಶ್ರೀಗಂಧ ಲೇಪನ ವಿಸ್ತಾರದಿಂದ ಮೆರೆದುಬರುವ” ಎಂದು ವರ್ಣಿಸಿದ್ದಾರೆ
ನಂತರ ಅವರು ಸಾಳ್ವ ನರಸಿಂಹ ರಾಜನಿಗೆ
ಬ್ರಹ್ಮಹತ್ಯಾ ದೋಷ ಕಳೆದಿದ್ದನ್ನು ವಿವರಿಸಿದ್ದಾರೆ
ಅವರ ನೈವೇದ್ಯ ವೈಖರಿಯನ್ನು ಗೌರವದಿಂದ ಪ್ರಶಂಸಿಸಿದ್ದಾರೆ .
ಮತ್ತೊಂದು ಕೃತಿ “ ನೆನೆದು ಬದುಕಿರೋ ಸಂತತ ನೆನೆದು ಬದುಕಿರೋ ನೆನೆದು ಬದುಕಿ
ಸುಜನೆರೆಲ್ಲ ಘನಕರುಣಾoಬುಧಿ ಶ್ರೀಪಾದರಾಯರ “ ಎನ್ನುವಲ್ಲಿ ತಮ್ಮಗುರುಗಳನ್ನು ಕರುಣೆಯ ಸಮುದ್ರಕ್ಕೆ ಹೋಲಿಸಿದ್ದಾರೆ .
ಅಂತ ಮಧ್ವ ಮತದ ಸಮುದ್ರದಲ್ಲಿ “ಪೂರ್ಣ ಚಂದ್ರ”ನಂತವರು ಎಂದಿದ್ದಾರೆ . ಮತ್ತೂ ವರ್ಣಿಸುತ್ತಾ ಅವರು ದುಷ್ಟ ಮತಗಳನ್ನು
ಗೆಲ್ಲುವ , ದಾನದಲ್ಲಿ ಕರ್ಣನಂತಿರುವ ದಯದ ಸಮುದ್ರನ ಜ್ಞಾನದಲ್ಲಿ ಪೂರ್ಣರಾಗಿರುವ
ವಾದದಲ್ಲಿ ಆನೆಯಂತಿರುವಿರಿ , ಸಾಧುಸುಜ್ಜನರ
ಕಲ್ಪವೃಕ್ಷನಂತಿರುವರು , ವೇದ ಶಾಸ್ತ್ರ ಪುರಾಣಗಳ ಅರಿಯುವಿಕೆಯಲ್ಲಿ ಆದಿಶೇಷನಂತಿರುವರು, ಅಪರಿಮಿತ ಪುಣ್ಯ ಸಂಪಾದನೆ ಮಾಡಿದವರು , ವಿನಯವಂತರು
ಶಮದಮ ಮುಂತಾದ ಸದ್ಗುಣದಿಂದ ಕೂಡಿದವರು ,ಕಮಲದಂತೆ ಕಣ್ಣುಳ್ಳ ಕೃಷ್ಣನ ಪ್ರಿಯರಾದವರು , ಸ್ವರ್ಣವರ್ಣರ ಕರಸಂಜಾತರಾದ ಜನ ಪ್ರಿಯರಾದ
ಗಾಂಭೀರ್ಯದಲ್ಲಿ ಸಮುದ್ರನಂತಿರುವ ಶ್ರೀಪಾದರಾಜರ ನೆನೆದು ಬದುಕಿರೋ.
ಎಂದು ಗೌರವ ಸಮರ್ಪಣೆಮಾಡಿದ್ದಾರೆ .
ಮತ್ತೊಂದು ಸುಧೀರ್ಘವಾದ ಕೀರ್ತನೆಯಲ್ಲಿ
“ ಪರಮತ ಘನವನ ಪಾವಕನೆ ಭೂಸುರನುತ ಪರಮಯೋಗಿ “ ಎನ್ನುತ್ತಾ ಹಲವಾರು ಮಹಿಮೆಗಳನ್ನು ಪ್ರಸ್ತುತ ಪಡಿಸುತ್ತಾರೆ .
ಅವರ ಅಂತ್ಯಂತ ಪ್ರೀತಿಪಾತ್ರರಾದ ರಘುನಾಥ ತೀರ್ಥರು , ಅವರು ತಾವು ಮೊದಲೇ ತಿಳಿಸಿದ್ದಂತೆ ಕೊನೆಯದರ್ಶನ ಕೊಡಲು ವಿಮಾನದಲ್ಲಿ ಬಂದಿದ್ದರು . ಶಿಷ್ಯರೊಡನೆ ಕುಳಿತ್ತಿದ್ದ ಶ್ರೀಪಾದರಾಜರು ಸಂಜ್ಞೆಯಿಂದಲೇ ಪರಸ್ಪರ ಮಾತಾಡಿದ್ದರು . ಇದನ್ನು ಶ್ರೀವ್ಯಾಸರಾಜರು ತಮ್ಮ ಕೃತಿಯಲ್ಲಿ ವರ್ಣಿಸಿದ್ದಾರೆ, ಹಾಗೆ ಒಮ್ಮೆ ಶ್ರೀವ್ಯಾಸರಾಯರು
ಧ್ಯಾನದಲ್ಲಿದ್ದಾಗ ಪದ್ಮನಾಭತೀರ್ಥರು ಸರ್ಪ ರೂಪದಿಂದ ಬಂದು ಪ್ರೀತಿಯಿಂದ ಬಂಧಿಸಿದಾಗ ಶ್ರೀಪಾದರಾಜರು ಸರ್ಪಭಾಷೆಯಲ್ಲಿ ಮಾತನಾಡಿ ಬಂಧ ಬಿಡಿಸಿದ್ದನ್ನು ನೆನೆಪಿಸಿಕೊಂಡು , ಸಿರಿಕೃಷ್ಣನ ಪಾದಕಮಲಗಳ ದುಂಬಿ ಎಂದು ಕೊಂಡಾಡಿದ್ದಾರೆ . ಅವರನ್ನು ಎಷ್ಟು ಪ್ರಶಂಸಿಸಿದರು ಸಾಲದು ತಮ್ಮ ಗುರುಗಳನ್ನು .
ಒಮ್ಮೆ ಶ್ರೀ ವ್ಯಾಸರಾಯರಿಂದ ಪಕ್ಷಾಧರಮಿಶ್ರ ಎಂಬ ವಾದಿ ಸೋತು ಇಂತಹವರ ಗುರುಗಳನ್ನು
ನೋಡಲು ಅಪೇಕ್ಷೆ ಪಟ್ಟ ಇಂತ ಪ್ರಸಂಗದಿಂದ ಗುರುಗಳು ಸಂತುಷ್ಟಗೊಂಡಿದ್ದರು .
ಮುಂದೆ ಶ್ರೀವ್ಯಾಸರಾಯರ ಶಿಷ್ಯರು ಸೋದೆಯ ವಾದಿರಾಜರು , ಶ್ರೀಪಾದರಾಜರನ್ನು ಕುರಿತು
“ ಶ್ರೀಪಾದರಾಯರ ಧಿವ್ಯ ಶ್ರೀಪಾದ ಭಜಿಸುವೆ “ ಎನ್ನುತ್ತಾ ಅವರ ಪರಮತ ಖಂಡನೆ , ವ್ಯಾಸರಾಯರಿಗೆ ವಿದ್ಯಾದಾನ , ಮದ್ವಮತ ಉದ್ದಾರ ಇಂಥ ವೆಂಕಟೇಶನ ಭಕ್ತರ ಕಾರುಣ್ಯ ಹಯವದನ ತಮಗೆ ಕೊಡಲಿ ಎಂದಿದ್ದಾರೆ.
ಶ್ರೀ ಪುರಂದರದಾಸರ ಕಿರಿಯಪುತ್ರ ‘ಮದ್ವಪತಿ ‘
ಅವರು ಶ್ರೀಪಾದರಾಜರನ್ನು “ ವರಧ್ರುವನ ಅವತಾರ ಶ್ರೀಪಾದರಾಯರು ಸಿರಿರಂಗನ ಉಪಾಸಕರು “ ಎಂದು ಅಧಿಕೃತವಾಗಿ ಹೇಳುತ್ತಾರೆ . ಇನ್ನು ಶ್ರೀವಿಜಯದಾಸರು ತಮ್ಮ
ಸುಳಾದಿಯಲ್ಲಿ
“ದೃವಮತಿಯಿಂದ ಭಜಿಸುವ ಮನುಜಗೆ
ಭವರೋಗ ಪರಿಹಾರ ವಿಜಯವಿಠಲನೊಲಿವ “
ಎಂದು ತಲೆ ಬಾಗುತ್ತಾರೆ .
ಇಂತ ಗುರುಗಳಾದ ಶ್ರೀ ಶ್ರೀಪಾದರಾಜರು ಕೋಲಾರಜಿಲ್ಲೆಯ ಮೂಡಣ ಬಾಗಿಲು ಎಂಬ
ಮುಳುಬಾಗಿಲಿನಲ್ಲಿ ನೆಲೆಸಿ ಶ್ರೀವೆಂಕಟೇಶನ
ದರ್ಶನ ಮಾಡುವವರಿಗೆ “ ಹರಿಯದರ್ಶನಕ್ಕೆ ಗುರುವಿನ ಅನುಗ್ರಹ ಅತ್ಯಾವಶ್ಯಕ” ಎಂದು
ತೋರುತ್ತ ನಿಂತಿದ್ದಾರೆ .
ಸೌವರ್ಣವರ್ಣ ಯತಿರಾಜ ಕರಾಬ್ಜ ಜಾತಾ
ಶ್ರೀಪಾದರಾಜ ಗುರುವೇಸ್ತು ನಮಃ ಶುಭಾಯ
ಎಂದು ನಾವೂ ಪ್ರಾರ್ಥಿಸೋಣ .
ನಾಹಂ ಕರ್ತಾ ಹರಿಃ ಕರ್ತಾ
||ಶ್ರೀರಂಗವಿಠಲ ಗೋಪಿನಾಥರ್ಪಣಮಸ್ತು ||
***************
ಶ್ರೀ ಶ್ರೀಪಾದರಾಜರ ಕಥೆಗಳು 🌼
🌸 ರಂಗವಿಠಲ ಸಿಕ್ಕಿದ 🌸
ಭೀಮರಥೀತೀರದಲ್ಲಿ ಭೂಮಿಯಡಿಯಲ್ಲಿ ಒಂದು ಪೆಟ್ಟಿಗೆ ಇರುವ ವಿಷಯ ಸ್ವಪ್ನ ಸೂಚನೆ ಮೂಲಕ ಶ್ರೀಪಾದರಾಜರಿಗೆ ಗೂತ್ತಾಯಿತು. ಆ ಪೆಟ್ಟಿಗೆಯೊಳಗೆ ಶ್ರೀರಂಗವಿಠಲನ ವಿಗ್ರಹವಿರುವ ವಿಷಯವೂ ಗೊತ್ತಾಯಿತು. ಆಗ ಸ್ವಾಮಿಗಳು ಆ ಪೆಟ್ಟಿಗೆಯನ್ನು ತೆಗಿಸಿ ಶ್ರೀರಂಗವಿಠಲನನ್ನು ಪೂಜಿಸತೊಡಗಿದರು.
🌸 ಕಾಡಿನಲ್ಲಿ ಔತಣ 🌸
ಬ್ರಹ್ಮಣ್ಯತೀರ್ಥರಿಗೆ ಯಾವಾಗಲೂ ಊಟ ತಡವಾಗುತ್ತಿತ್ತು. ಆದರೆ ಶ್ರೀಪಾದರಾಜರಿಗೆ ಎಲ್ಲೆ ಇರಲಿ ಹನ್ನೆರಡು ಗಂಟೆಗೆ ಅರವತ್ತು ಭಕ್ಷಸಹಿತ ಊಟವಾಗುತ್ತಿತ್ತು. ಒಂದು ದಿನ ರಾಜ ವನಭೋಜನಕ್ಕಾಗಿ ಶ್ರೀಪಾದರಾಜರಿಗೆ ಮತ್ತು ಬ್ರಹ್ಮಣ್ಯತೀರ್ಥರಿಗು ಆಮಂತ್ರಣ ನೀಡಿದ. ಅವತ್ತು ಶ್ರೀಬ್ರಹ್ಮಣ್ಯತೀರ್ಥರಿಗೆ ಬೇಗ ಭಿಕ್ಷೆಯಾಗಬೇಕೆಂದು ವ್ಯವಸ್ಥೆ ಮಾಡಿದ. ಆದರೆ ಶ್ರೀಪಾದರಾಜರು ಕಾಡಿನಲ್ಲಿ ಪ್ರವೇಶ ಮಾಡಿದ್ದೆ ತಡವಾಗಿತ್ತು. ಆದಕಾರಣ ಅಲ್ಲಿ ಯಾರೋ ಒಬ್ಬ ಶ್ರೀಮಂತ ವನಭೋಜನಕ್ಕೇ ಬೇಕಾದ ವಸ್ತುಗಳನ್ನು ಸಿದ್ಧಪಡಿಸಿದ್ದ. ಅರವತ್ತು ಬಗೆಯ ಭಕ್ಷಗಳೂಡನೆ ಪರಮಾತ್ಮನಿಗೆ ನೈವೇದ್ಯವಾಗಿ ಶ್ರೀಪಾದರಾಜರ ಭಿಕ್ಷೆಯು ಅಯಿತು. ಇತ್ತ ಸರಿ ಹನ್ನೆರಡು ಘಂಟೆಗೆ ಬ್ರಹ್ಮಣ್ಯತೀರ್ಥರು ನೈವೇದ್ಯ ಮಾಡಲು ಹೊರಟಾಗ ಒಂದೂ ನಾಯಿ ಬಂದು ಅಡಿಗೆಯನ್ನು ಮುಟ್ಟಿಬಿಟ್ಟಿತು. ಪುನಃ ಎಲ್ಲ ತೆಗೆದು ಹೊರಗೆ ಹಾಕಿ ಶುದ್ಧಮಾಡಿ ಅಡುಗೆ ಮಾಡಿ ನೈವೇದ್ಯಕ್ಕೆ ಇಡುವಾಗ ಯಥಾಪ್ರಕಾರ ಮೂರು ಘಂಟೆ ಆಗಿತ್ತು. ಅಗ ಶ್ರೀಪಾದರಾಜರು ಎಲ್ಲ ಮುಗಿಸಿ ಬರುವಾಗ ಇನ್ನು ವನಭೋಜನ ನಡೆಯುತ್ತಿತ್ತು. " ಏನು ಸ್ವಾಮಿ ಇನ್ನು ಆಗಿಲ್ಲವಾ?" ಎಂದು ಕೇಳಿದಾಗ " ನಿಮ್ಮದು ಸುಖಪ್ರಾರಬ್ಧ , ನಮ್ಮದು ದುಃಖಪ್ರಾರಬ್ಧ " ಎಂದರಂತೆ ಬ್ರಹ್ಮಣ್ಯತೀರ್ಥರು. ರಾಜ ಉಭಯಶ್ರೀಗಳಲ್ಲೂ ಕ್ಷಮಾ ಬೇಡಿಕೊಂಡ. ಇಬ್ಬರೂ ಶ್ರೀಗಳವರು ರಾಜನನ್ನು ಕ್ಷಮಿಸಿ ಅನುಗ್ರಹಿಸಿದರು. ಇಂತಹ ಮಹಿಮೋಪೇತರಾದ ಶ್ರೀಪಾದರಾಜರ ಅನುಗ್ರಹ ನಮ್ಮೆಲ್ಲರ ಮೇಲೂ ನಿರಂತರವಿರಲಿ ಎನ್ನುತ್ತಾ.
********
sripadarajara aradhane year 2021
" ಶ್ರೀ ಶ್ರೀಪಾದರಾಜರ ಉತ್ತರಾರಾಧನೆ ವಿಶೇಷ - 1 "
" ಶ್ರೀ ಹರಿದಾಸ ಸಾಹಿತ್ಯ ಪಿತಾಮಹ - ಶ್ರೀ ಶ್ರೀಪಾದರಾಜರು "
ಶ್ರೀಪೂರ್ಣಬೋಧ ಕುಲವಾರ್ಧಿ -
ಸುಧಾಕರಾಯ ಶ್ರೀವ್ಯಾಸರಾಜ -
ಗುರವೇ ಯತಿಶೇಖರಾಯ ।
ಶ್ರೀರಂಗವಿಟ್ಠಲ ಪದಾಂಬುಜ-
ಬಂಭರಾಯ ಶ್ರೀಪಾದರಾಜ -
ಗುರವೇಸ್ತು ನಮಶ್ಯುಭಾಯ ।।
ದಾಸ ಸಾಹಿತ್ಯದ ಎಲ್ಲಾ ಪ್ರಕಾರದಲ್ಲೂ ಪ್ರಪ್ರಥಮವಾಗಿ ಕೃತಿ ರಚನೆ ಮಾಡಿದ ಕೀರ್ತಿ ಶ್ರೀ ಶ್ರೀಪಾದರಾಜರಿಗೆ ಸಲ್ಲುತ್ತದೆ.
" ದಾಸ ಸಾಹಿತ್ಯದ ಪ್ರಕಾರಗಳು "
" ಭಾವನೆ " ಗಳು ಅಮೂರ್ತ ಸ್ವರೂಪವಾದರೆ - " ಭಾಷೆ " ಮೂರ್ತ ಸ್ವರೂಪ.
ಈ ಮೂರ್ತ ಸ್ವರೂಪವು - ಭಾವನೆ ಸಂದರ್ಭಗಳಿಗನುಗುಣವಾಗಿ ಭಿನ್ನ ಭಿನ್ನ " ಛಂದೋ " ರೂಪಗಳನ್ನು ಪಡೆದುಕೊಳ್ಳುತ್ತವೆ.
ಹೀಗಾಗಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ.....
1. ಚಂಪೂ 2. ವಚನ 3. ರಗಳೆ 4. ಜಾವಳಿ 5. ತ್ರಿಪದಿ 6. ಷಟ್ಪದಿ 7. ಸಾಂಗತ್ಯ 8. ವೃತ್ತನಾಮ 9. ಕೀರ್ತನೆ 10. ಉಗಾಭೋಗ 11. ಸುಳಾದಿ 12. ಗುಂಡಕ್ರಿಯೆ 13. ದಂಡಕ 14. ರಗಳೆ 15. ಜಾವಳಿ 16. ಲಾವಣಿ 17. ಕೋಲುಪದ 18. ಗೀ ಗೀ ಪದ 19. ಬಯಲಾಟ
ಮೊದಲಾದ ಅಚ್ಛ ಕನ್ನಡ ಛಂದೋ ಪ್ರಕಾರಗಳು ಬೆಳೆದು ಬಂದಿವೆ.
ದಾಸ ಸಾಹಿತ್ಯ ರಚನೆಯ ಸಂದರ್ಭದಲ್ಲಿ ಪಂಡಿತ ಸಮ್ಮುಖವಾಗಿದ್ದ " ಕನ್ನಡ ಭಾಷೆ " ಜನ ಸಮ್ಮುಖವಾಗ ತೊಡಗಿದು.
" ಜನ ಸಮ್ಮುಖ " ವೆಂದರೆ ಒಂದರ್ಥದಲ್ಲಿ ......
" ದೇಶೀಯ ಛಂದಸ್ಸುಗಳ ಪ್ರಚುರತೆಯ ಕಾಲ "
ಈ ಸಂದರ್ಭದಲ್ಲಿ ಜನ ಮಾನಸದಲ್ಲಿ ನೆಲೆಯೂರಿದ ದೇಶೀಯ ಛಂದಸ್ಸನ್ನು - " ಭಕ್ತಿ ಸಾಹಿತ್ಯ " ಕ್ಕೆ ಶ್ರೀ ಹರಿದಾಸರು ಮಾಧ್ಯಮವಾಗಿ ಆಯ್ದುಕೊಂಡರು.
" ಭಾವ ವೈವಿಧ್ಯ - ವಿಚಾರ ವೈವಿಧ್ಯಗಳಿಗನುಗುಣವಾಗಿ ಛಂದೋ ವೈವಿಧ್ಯಗಳು " ರೂಪುಗೊಂಡಿವೆ.
ಈ ವಿಧಾನವನ್ನು ಎಲ್ಲಾ ಹರಿದಾಸರೂ ಅಳವಡಿಸಿಕೊಂಡರು.
" ಕೀರ್ತನೆ "
ದಾಸ ಸಾಹಿತ್ಯವೆಂದರೆ " ಕೀರ್ತನೆ " ಗಳು ಯೆಂಬರ್ಥದಲ್ಲಿ ಕೀರ್ತನ ಪ್ರಕಾರ ಜನಜನಿತವಾಗಿದೆ.
ಈ ಬಂಧಗಳು ಸಾಮಾನ್ಯವಾಗಿ " ಛಂದೋ ವೃತ್ತ " - " ತಾಳ ವೃತ್ತ " ವೆಂದು ವಿಂಗಡಿಸಬಹುದು.
ಕೀರ್ತನೆಗಳನ್ನು....
ಶ್ರೀ ವಾದಿರಾಜರು " ಪದ " ವೆಂದೂ - ಶ್ರೀ ವ್ಯಾಸರಾಜರು " ಗೀತ " ಯೆಂದೂ - ಶ್ರೀ ವಿಜಯರಾಯರು " ಕೃತಿ " ಯೆಂದೂ - ಶ್ರೀ ಪ್ರಸನ್ನ ವೆಂಕಟದಾಸರು " ಪದಪದ್ಯ " ಯೆಂದೂ ಬಳಸಿದ್ದಾರೆ.
ಆದರೆ ಕಾಲಕಾಲಕ್ಕೆ ಈ ಪದಗಳ ಅರ್ಥ ರೂಪ ಬದಲಾಗುತ್ತಾಸಾಗಿದೆ.
ಹರಿದಾಸ ಸಾಹಿತ್ಯವು ಮೂಲದಲ್ಲಿ " ಸಂಗೀತ ಪಾಠ " ದಲ್ಲಿದ್ದು - ನಂತರದಲ್ಲಿ ಪ್ರಯೋಗಾನುಸಾರವಾಗಿ " ಸಂಕೀರ್ತನ ಪಾಠ " ಹಾಗೂ ಸಂಪ್ರವಚನ ಪಾಠ " ಗಳು ಕೆಲವು ಅಕ್ಷರಗಳ ಅಥವಾ ಶಬ್ದಗಳಿಂದಾಗಿರುವವು.
ಇದನ್ನು ಗಮನಿಸಿದರೆ ಶ್ರೀ ಹರಿದಾಸರ ಪದಗಳು ಮೂಲಭೂತವಾಗಿ ಸಂಗೀತ ಪ್ರಕಾರಕ್ಕೆ ಸೇರಿದ " ಪದ " ಗಳೆಂದೂ - ಭಜನೆ ಮಾಡುವವರು ವಹಿಸುವ ಸ್ವಾತಂತ್ಯದಿಂದ " ಸಂಕೀರ್ತನ " ವಾಗಿಯೂ - ಹರಿಕಥೆಯನ್ನು ಹೇಳುವವರು ಮತ್ತಷ್ಟು ಸ್ವಾತಂತ್ರ್ಯವನ್ನು ತೆಗದು ಕೊಳ್ಳುವುದರಿಂದ " ಸಂಪ್ರವಚ " ವಾಗಿಯೂ ಪರಿಗಣಿಸಿದ್ದಾರೆ.
ಕಂಜನೇತ್ರೆ ಶುಭ ಮಂಗಳ ಗಾತ್ರೇ ।
ಕುಂಜರದಂತೆ ಗಮನೆ ।
ರಂಜಿತಾಂಗಿ ನಿರಂಜನಾಂಗಿ ।। ಪಲ್ಲವಿ ।।
.... ಮಂಗಳ ಮಹಿಮ } ಕೇಶವಾ ।
ಲಿಂಗಿಸಿದ ಭೈಷ್ಮಿಯನ್ನು ।
ತುಂಗ ಗುಣ ಗೋಪೀನಾಥ ।
ರಂಗ ವಿಠ್ಠಲನು ಅನಂಗ ಜನಕನು ।। 17 ।।
ಶ್ರೀ ಶ್ರೀ ಪಾದರಾಜರು 80 ಹಾಡುಗಳನ್ನು ರಚಿಸಿದ್ದಾರೆ.
" ಉಗಾಭೋಗ "
ದಾಸ ಸಾಹಿತ್ಯ ಪ್ರಕಾರದಲ್ಲಿ " ಉಗಾಭೋಗ " ಕ್ಕೆ ವಿಶಿಷ್ಟ ಸ್ಥಾನವಿದೆ.
ಹರಿದಾಸರು ತಮ್ಮ ಭಕ್ತಿಯ ಉತ್ಕಟತೆಯನ್ನು ಅಭಿವ್ಯಕ್ತಿ ಗೊಳಿಸುವಾಗ ಗಾಯನ ಮಾಧ್ಯಮವಾಗಿ ಉಗಾಭೋಗವನ್ನು ರೂಪಿಸಿದ್ದಾರೆ.
[ ಈ ಕುರಿತು ನಮ್ಮ ಸಂಪಾದಕತ್ವದಲ್ಲಿ ಬಂದ " ಶ್ರೀ ನಾರದಾಂಶ ಪುರಂದರದಾಸರು - ಒಂದು ಅಧ್ಯಯನ " ಎಂಬ ಕೃತಿಯಲ್ಲಿ ಸುದೀರ್ಘವಾಗಿ ವಿವರಣೆ ಕೊಡಲಾಗಿದೆ ]
ಕರುಣದಿ ತನು ಮನ ಧನಂಗಳೆಲ್ಲವು । ನಿನ್ನ ।
ಚರಣಕಮಲಕೊಪ್ಪಿಸಿದ ಬಳಿಕ ।
ಮರಳಿ ಎನ್ನ ಮರುಳು ಮಾಡುವರೆ ।
ಸರಕು ಒಪ್ಪಿಸಿದ ಮ್ಯಾಲೆ ಸುಂಕವುಂಟೆ ದೇವಾ ।
ಕರುಣಾಕರ ನಿನ್ನ ಚರಣದಡಿಯೊಳಿಟ್ಟು -
ಕಾಯೋ ರಂಗವಿಠಲ ।।
ಶ್ರೀ ಶ್ರೀ ಪಾದರಾಜರು 17ಉಗಾಭೋಗಗಳನ್ನು ರಚಿಸಿದ್ದಾರೆ.
" ಗುಂಡಕ್ರಿಯೆ "
ದಾಸ ಸಾಹಿತ್ಯದಲ್ಲಿ ಆವಿರ್ಭಾವಗೊಂಡ ಇನ್ನೊಂದು ಪ್ರಕಾರವೆಂದರೆ " ಗುಂಡಕ್ರಿಯೆ ".
ಇದೂ ಕೂಡಾ ದಂಡಕದಂತೆ ಪ್ರಚಾರಕ್ಕೆ ಬರಲಿಲ್ಲ.
ಈ ಪ್ರಕಾರವನ್ನು ನಾವು ಹೆಚ್ಚಾಗಿ ಶ್ರೀ ವಾದಿರಾಜರ ಕೃತಿಗಳಲ್ಲಿ ಕಾಣಬಹುದು.
" ಗುಂಡಕ್ರಿಯೆ " ಯೆಂದರೆ [ To Pound ] " ಪುಡಿ ಮಾಡು " ಯೆಂದರ್ಥ. ಅಂದರೆ...
" ಯುಕ್ತಿ ಪೂರ್ವಕ ಇತರೆ ವಾದಿಗಳನ್ನು ನಿರುತ್ತಾರರನ್ನಾಗಿಸುವುದು "
ಯೆಂದು ಅರ್ಥ.
ಕಾರಣ ಸಂಸ್ಕೃತ ಪಂಡಿತರಾದ ಶ್ರೀ ಶ್ರೀ ಪಾದರಾಜರು ಸಂಸ್ಕೃತ - ಕನ್ನಡ ಭಾಷೆಗೆ ಅನೇಕ ಗ್ರಂಥಗಳನ್ನು ನೀಡಿದ್ದಾರೆ.
ಅವರ ವಾದಕ್ಕೆ ಮಾಯಾವಾದಿ ಪಂಡಿತರು ಸೋತು ಶರಣಾಗತರಾಗಿದ್ದಾರೆ.
ಅವರ ಗ್ರಂಥಗಳಲ್ಲಿ ಮಾಯಾವಾದಿಗಳನ್ನು ಖಂಡಿಸಿರುವ ವಿಷಯ ಹೇರಳವಾಗಿವೆ.
ಇನ್ನಾದರು ಭೇದ ಮತವನು ।
ಚೆನ್ನಾಗಿ ತಿಳಿಯೋ ರಂಗವಿಠಲನು ।
ತನ್ನ ದಾಸ್ಯವನು ಕೊಟ್ಟು ।
ಉನ್ನತ ಪದವೀವನು ನಿನಗೆ ।।
" ದಂಡಕ "
ಶ್ರೀ ಶ್ರೀಪಾದರಾಜರಿಂದ ಉಗಮಗೊಂಡ ದಾಸ ಸಾಹಿತ್ಯದ ಮತ್ತೊಂದು ಪ್ರಕಾರವೇ " ದಂಡಕ ".
" ದಂಡಕ " ಯೆಂದರೆ...
" ಅನಿಯತ ಪಾದಗಳಿರುವ - ಲಯ ಬದ್ಧವಾದ ಗದ್ಯ " ವನ್ನು " ದಂಡಕ ಯೆನ್ನುತ್ತಾರೆ .
ನಿಯತ ಗುಣಗಳಿರುವುದಾದರೂ - ಪಾದ ವಿಭಾಗವಿಲ್ಲದೆ ದಂಡಾಕಾರವಾಗಿದ್ದರಿಂದ ಈ ಪ್ರಕಾರಕ್ಕೆ ಈ ಹೆಸರು ಬಂದಿದೆ.
ಇದು ಸರಳ ರಗಳೆಯನ್ನು ಹೋಲುತ್ತದೆ.
ಇದರ ಸ್ವರೂಪವನ್ನು ಗದ್ಯಕ್ಕೂ - ಪದ್ಯಕ್ಕೂ ನಡುವಿನ ಶೈಲಿ ಎಂದು ಕರೆದಿದ್ದಾರೆ.
ಒಂದು ವಿಧವಾದ ಲಯಬದ್ಧವಾದ ಗದ್ಯವಿದು.
" ವೃತ್ತನಾಮ "
ದಾಸ ಸಾಹಿತ್ಯ ಪ್ರಕಾರದಲ್ಲಿ ಉಗಾಭೋಗಗಳಂತೆ " ವೃತ್ತನಾಮ " ವಿರಳವಾದರೂ ಅತ್ಯಂತ ಪ್ರಸಿದ್ಧಿಯಾಗಿವೆ.
ಆದರೆ " ವೃತ್ತನಾಮ " ಗಳ ಲಕ್ಷಣ ಇನ್ನೂ ಸ್ಪಷ್ಟವಾಗಿ ಲಕ್ಷಿಸಲು ಸಾಧ್ಯವಾಗಿಲ್ಲ.
ಈ ಬಗೆಯ ಕಾವ್ಯ ಪ್ರಭೇದವನ್ನು ಶ್ರೀ ಶ್ರೀಪಾದರಾಜರು " ವೃತ್ತನಾಮ " ಗಳನ್ನು ಪ್ರಪ್ರಥಮವಾಗಿ ರಚಿಸಿದರು.
ಇದರಲ್ಲಿ....
ಪಲ್ಲವಿ - ಒಂದು ವೃತ್ತ [ ಶ್ಲೋಕ ] ನುಡಿ - ಪದ - ಚರಣಗಳು ಇವೆ.
" ವೃತ್ತನಾಮ " ವೆಂದರೆ....
ಒಂದು ಪದದ ಪಲ್ಲವಿಯನ್ನು ಬರೆಯುವುದು - ಅನಂತರ ಒಂದು ವೃತ್ತವನ್ನು ಬರೆಯುವುದು - ನಂತರ ಚರಣವನ್ನು ಹಾಡುವುದನ್ನು " ವೃತ್ತನಾಮ " ಯೆನ್ನುತ್ತಾರೆ .
ಹರಿದಾಸ ಸಾಹಿತ್ಯದಲ್ಲಿ ಇವು ಅತ್ಯಂತ ಪ್ರಸಿದ್ಧಿಯಾಗಿವೆ.
ಮಾನನಿಧಿ ಶ್ರೀ ಹರಿಯು -
ಮಧುರಿಗೈದುವನಂತೆ ।
ಏನು ಪಥವನ್ನು ನಮಗೆ ।
ಮಾನವೇ ನಿನ್ನಿದಕೆ -
ಮಾನಿನಿಯರೆಲ್ಲರೂ ಕೂಡಿ ।
ಆಣೆಯನುಗಟ್ಟೆವನ -
ಅಡ್ಡಗಟ್ಟುವ ಬನ್ನಿ ।। ಪಲ್ಲವಿ ।।
:::: ಶ್ಲೋಕ :::::
ಹಲವೂ ಕಾಲದಿ ನಿನ್ನನ್ಯೇಹ -
ಸುಖವಾ ಹಾರೈಸಿಕೊಂಡಿರುತಿಹ್ಯಾ ।
ಲಲನಾಯೂಹವ ಬಿಟ್ಟು -
ಕ್ರೂರರೊಡನೆ ನೀ ಮಧುರಿಗೆ ಪೋದಡೇ ।
ಕಳಿಯಾಲಾರೆವೋ ಕಾಂತ ಕೇಳು -
ದಿನವಾ ಆ ಕಂತುವಿನ ಬಾಧೆಗೆ ।
ಘಳಿಗೊಂದುಯುಗವಾಗಿ -
ತೋರುತಿಹ್ಯದೇ ಜಲಜಾಕ್ಷ ನೀನಲ್ಲದೆ ।। 1 ।।
::: ಪದ :::
ಬ್ಯಾಡ ಮಧುರಿಗೆ ಪೋಗ-
ಬ್ಯಾಡೆಲವೋ ಶಿರಿ ಕೃಷ್ಣ ।
ಬೇಡಿಕೊಂಬೆವೋ ದೈನ್ಯದೀ ।
ನೋಡು ನಮ್ಮ್ಯಾಲೆ -
ದಯಮಾಡು ಮದನಂಗುರಿ ।
ಮಾಡುವುದನುಚಿತವೆಲೊ -
ಮಾಧವಾ ಕೃಪಾಕರನೇ ।। 1 ।।
:::: ಶ್ಲೋಕ ::::
ಮಾರಾನೆಂಬವನಂದು ಮಡಿದ -
ಹೋದ ಶಿವನ ಆ ಮೂರನೇಕಂಣೀಲಿ ।
ನಾರೇರಿಲ್ಲದೆ ನಾಭಿಯಲಿ -
ಪಡದಾ ಆ ಬ್ರಹ್ಮನೆಂಬಾತನಾ ।
ನಾರಿ ಇರ್ವ ಕುಮಾರ ರಾಣೆ -
ಹರಿಯುತಾ ತಾನೆಂತ್ತೆಂದರೆ ಮಾರೀ ।
ಹೊರಗಿನ ಧೋರಗೆ ಹೋಯಿತೆಂಬೋ -
ತೇರಾಗ್ಯೆದೆ ಭಾಕೀ ।। 9 ।।
:::: ಪದ :::::
ಹಲವು ಮಾತ್ಯಾಕೆಮಗೆ -
ಜಲಜಾಕ್ಷ ನಿನ್ನ ಪದ ।
ನಳಿನಗಳ ನೆರೆನಂಬಿಹ್ಯ ।
ಬಲುವಿನಿಂದಿರುತಿಪ್ಪ -
ಲಲನೆಯರನೆಲ್ಲರನು ಸಲಹು ।
ಸಲಹದೆ ಮಾಣೋ -
ರಂಗ ವಿಠ್ಠಲರೇಯಾ ।। 9 ।।
ಶ್ರೀ ಶ್ರೀಪಾದರಾಜರು 04 ವೃತ್ತನಾಮಗಳನ್ನು ರಚಿಸಿದ್ದಾರೆ.
" ತ್ರಿಪದಿ "
ಗೀರ್ವಾಣಾ ಭಾಷಾ ಕೋವಿದ " ರಾದ ಶ್ರೀ ಶ್ರೀಪಾದರಾಜರು....
" ಸಂಸ್ಕೃತ ಸಾಹಿತ್ಯವನ್ನು ಕನ್ನಡ ಸಾಹಿತ್ಯಕ್ಕೆ ತರಲು ಪ್ರಯತ್ನಿಸಿದಂತೆ ಮುಂದಿನ ಹರಿದಾಸರುಗಳು ಜನಪದೀಯ ಮಟ್ಟುಗಳನ್ನು - ಮಧ್ವ ತತ್ತ್ವಗಳನ್ನು ಮೇಳೈಸಿ ಪ್ರಚಾರಕ್ಕೆ ತಂದರು.
ಕನ್ನಡ ಸಾಹಿತ್ಯದ ಪ್ರಪ್ರಥಮ ಕಾಲದಲ್ಲಿಯೇ ತೋರಿ ಬರುವ ಅಂಶಗಣಬದ್ಧವಾದ " ತ್ರಿಪದಿ " ಪ್ರಕಾರ ಕೊನೆ ಕೊನೆಗೆ ಮಾತ್ರಾಗಣವಾಗಿ ಮಾರ್ಪಟ್ಟು ಜನಪ್ರಿಯತೆಯನ್ನು ಗಳಿಸಿತು.
ಕನ್ನಡ ನಾಡಿನ ಜನರ ನಾಲಿಗೆಯ ನಲಿದಾಡುವ ತ್ರಿಪದಿಯನ್ನು ಹರಿದಾಸರು ಸಮರ್ಥವಾಗಿ ಬಳಸಿಕೊಂಡಿದ್ದಾರೆ.
ವಿಶೇಷವಾಗಿ ಶ್ರೀ ವಾದಿರಾಜರು " ಬಿರುದಿನ ಸುವ್ವಾಲಿ " ಮತ್ತು ಶ್ರೀ ಜಗನ್ನಾಥದಾಸರು " ತತ್ತ್ವ ಸುವ್ವಾಲಿ " ಯಲ್ಲಿ ಬಳಸಿದ್ದಾರೆ.
" ಷಟ್ಪದಿ ಮತ್ತು ಸಾಂಗತ್ಯ "
ಕನ್ನಡ ಸಾಹಿತ್ಯ ಚರಿತ್ರೆಯನ್ನು ಅವಲೋಕಿಸಿದಾಗ ಒಂದೊಂದು ಯುಗಕ್ಕೂ ಒಂದೊಂದು ಮತ ಬೆನ್ನೆಲುಬಾಗಿ ನಿಂತಿವೆ.
ಹರಿದಾಸರು ಷಟ್ಪದಿ ಪ್ರಕಾರಗಳಲ್ಲಿ ಮಧ್ವ ತತ್ತ್ವಗಳನ್ನು ಮೇಳೈಸಿ ಉತ್ಕೃಷ್ಟವಾದ ಕೃತಿಗಳನ್ನು ಹರಿದಾಸ ಸಾಹಿತ್ಯಕ್ಕೆ ನೀಡಿದ್ದಾರೆ.
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಪ್ರಪ್ರಥಮಾಗಿ ಷಟ್ಪದಿಯನ್ನು ಕೊಡುಗೆಯಾಗಿ ನೀಡಿದವರು ಶ್ರೀ ಕವಿಸಾರ್ವಭೌಮ ಕನಕದಾಸರು.
ಒಟ್ಟಾರೆಯಾಗಿ ಹರಿದಾಸರು ರಚಿಸಿದ ಷಟ್ಪದಿ - ಸಾಂಗತ್ಯ ಪ್ರಕಾರಗಳು ಭಕ್ತಿ ಭಾವವನ್ನು ಹೊರಹೊಮ್ಮಿಸುವಲ್ಲಿ ಯಶಸ್ವಿಯಾಗಿವೆ.
" ಮುಂಡಿಗೆಗಳು "
ದಾಸ ಸಾಹಿತ್ಯದಲ್ಲಿ ಮುಂಡಿಗೆ [ ಒಗಟು ] ಪ್ರಕಾರ ಬಹು ವೈಶಿಷ್ಟ್ಯ ಪೂರ್ಣವಾಗಿವೆ.
ಮುಂಡಿಗೆಗಳು ಮೇಲ್ನೋಟಕ್ಕೆ ಕೀರ್ತನಗಳಂತೆ ಕಾಣುತ್ತವೆ.
ಆದರೆ ಮುಂಡಿಗೆಗಳಲ್ಲಿ ಅಡಗಿರುವ ರಹಸ್ಯಾರ್ಥವನ್ನು ಗಮನಿಸಿ ಮುಂಡಿಗೆಗಳನ್ನು ಗರುತಿಸಲಾಗುತ್ತದೆ.
by ಆಚಾರ್ಯ ನಾಗರಾಜು ಹಾವೇರಿ ಗುರು ವಿಜಯ ಪ್ರತಿಷ್ಠಾನ
***
" ಶ್ರೀ ಶ್ರೀಪಾದರಾಜರ ಉತ್ತರಾರಾಧನೆ ವಿಶೇಷ - 2 "
" ಸುಳಾದಿ "
" ಸುಳಾದಿ " ಯ ಶಬ್ದ ನಿಷ್ಪತ್ತಿಗೆ " ಸೂಡ " " ಸೂಳ " ಯೆಂಬ ದೇಶೀ ಮೂಲವಾದ ಕನ್ನಡ " ಸೂಡ " ವೇ ಯೆಂಬ ಅಭಿಪ್ರಾಯ !
ಸುಳಾದಿ ಎಂಬುದು ತುಂಬು ನಾದವು - ಒಂದು ನಿಶ್ಚಿತ ಕಲ್ಪನೆಯ ಮೇಲೆ ಬೆಳೆದಿರುವ ಸ್ವರೂಪವೆಂದು ಅನ್ವಯವಾಗುತ್ತದೆ.
ಕೇಶೀ ರಾಜನ ಪ್ರಕಾರ " ಸೂಡವು " - " ಸೂಳ "....
ವ್ಯವಹೃತಿಗಾಗವು ದೇಶೀ ।
ಯವೆನಿಪುವಾ ಹ್ರಸ್ವವನಿಸದೆ ಓ ಸಹಿತಮ್ ।
ಇವು ವರ್ಣವೃತ್ತಿಗೆ । ಸ ।
ಲ್ದುವು ಸಂದುಂ ಪ್ರಾಸದೆಡೆಗೆ ಸಲ್ಲವು ಯಮಕ ।
ವೃತ್ತಿಯಲ್ಲಿ " ಡಕಾರಮ್ ಮೂರ್ಧನ್ಯಮ್ " ।
ರಳ ನದರೊಳೇಕ ಸ್ಥಾನೀ;
ಆದಕಾರಣದನಿವು ।
ರ್ಣವೃತ್ತಿಗೆ ಸಲ್ದುವು ।।
ಸುಳುವಾದ ಹಾದಿ - ಸುಲಲಿತವಾದ - ಸುಲಭವಾದ - ಜ್ಞಾನಿಗಳಿಗೆ ಸುಲಭವಾಗಿ ಮನಸ್ಸಿಗೆ ಬೋಧೆಯಾಗುವ - ಹೊಳೆಯುವ ವಿಷಯವನ್ನು ಸಮಾಧಿಯಲ್ಲಿ ಯಥಾರ್ಥವಾಗಿ ವಿವರಿಸುವುದೇ " ಸುಳಾದಿ ".
ಆದಿಯಲ್ಲಿ ಸುಳಿದಿದ್ದು [ ಪ್ರಕಾಶಿಸಿದ್ದು ] " ಸುಳಾದಿ " ಯೆನ್ನುವರು.
" ಸುಳಾದಿ ಲಕ್ಷಣ - ಸಪ್ತ ತಾಳಗಳು "
ಆದಿ - ತ್ರಿತಾಳ - ಧ್ರುವ - ಅಟ್ಟ - ಮಠ್ಯ - ರೂಪಕ - ಝ೦ಪ
ಧ್ರುವಕೋ ಮಂಟಕಶ್ಚೈವ
ರೂಪಿಕೋ ಝ೦ಪಕಸ್ತಥಾ ।
ತ್ರಿಪುಟಶ್ಚ ತಾಲಾಖ್ಯ
ಶೈಕ್ಯತಾಲ ಇತಿ ಕ್ರಮಾತ್ ।
ಸಪ್ತ ಸೂಡಾದಿ ರಿತ್ಯುಕ್ತೋ
ಲಕ್ಷ್ಯ ಲಕ್ಷಣ ಕೋವಿದೈ ।।
ಮೇಲ್ಕಂಡ ಏಳು ತಾಳಗಳ ಸಮೂಹವಿದ್ದು ಇವುಗಳನ್ನು ಸುಳಾದಿ ಅನ್ನುತ್ತಾರೆ.
ಈ ಲಕ್ಷಣದಲ್ಲಿ ಮೊದಲು ಸುಳಾದಿ ರಚಿಸಿದವರೆಂದರೆ " ಶ್ರೀ ಶ್ರೀಪಾದರಾಜರು ".
ಸಾಮಾನ್ಯವಾಗಿ ಸುಳಾದಿಗಳು 5 - 7 - 9 -11 - 13 ತಾಳಗಳಲ್ಲಿ ರಚನೆಗೊಂಡಿರುತ್ತವೆ.
ಕೊನೆಗೊಂದು ಎರಡು ಪಾದದ " ಜತೆ " ಇರುತ್ತದೆ - ಸುಳಾದಿಯ ಸಾರವೆಲ್ಲ " ಜತೆ " ಯಲ್ಲಿಯೇ ಅಡಕವಾಗಿರುತ್ತದೆ.
ಸುಳಾದಿಯ ಪಾದಗಳ ಸಂಖ್ಯೆಯಲ್ಲಿ - ಪಾದದ ಉದ್ದದಲ್ಲಿ ನಿಯತತೆ ಇಲ್ಲ.
ಪ್ರತಿಯೊಂದು ತಾಳದಲ್ಲೂ ಹಾಗೂ ಜತೆಯಲ್ಲಿಯೂ ರಚನಕಾರರ ಅಂಕಿತವಿರುತ್ತದೆ.
ಸುಳಾದಿಯಲ್ಲಿ ಸಾಮಾನ್ಯವಾಗಿ ಅಂತ್ಯಪ್ರಾಸ ಕಂಡು ಬರುತ್ತದೆ - ಅಲ್ಲಲ್ಲಿ ಅಂತ್ಯಪ್ರಾಸದ ಸೊಗಸನ್ನೂ ಕಾಣಬಹುದು.
ಸುಳಾದಿಯು ಮೇಲ್ನೋಟಕ್ಕೆ ಸರಳ ರಗಳೆಯನ್ನು ಹೋಲುತ್ತದೆ.
ಕೀರ್ತನೆಗಳಿಗಿಂತ ಬಿಗಿಯಾದ ಬಂಧವನ್ನಿಲ್ಲಿ ಕಾಣುತ್ತೇವೆ.
ಮಧ್ವ ತತ್ತ್ವಗಳನ್ನು ಸಂಗೀತದ ಹಿನ್ನೆಲೆಯಲ್ಲಿ - ಸಾಹಿತ್ಯಕ ಚೌಕಟ್ಟಿನಲ್ಲಿ ಆಧ್ಯಾತ್ಮಿಕ ಮಹತ್ವದೊಂದಿಗೆ ಬಿತ್ತರಿಸುವ ಈ ಸುಳಾದಿ ಪ್ರಕಾರ ನಿಜಕ್ಕೂ ಕನ್ನಡ ಸಾಹಿತ್ಯಕ್ಕೆ ಹರಿದಾಸರ ಅದ್ಭುತವಾದ - ಅತ್ಯಮೂಲ್ಯವಾದ ಕೊಡುಗೆಯಾಗಿದೆ.
ಶ್ರೀ ಗೋರೆಬಾಳು ಹನುಮಂತರಾಯರು ಒಂದೊಂದು ತಾಳದಲ್ಲಿಯ ವಸ್ತು ನಿಷ್ಠೆಯನ್ನು ಹೀಗೆ ತಿಳಿಸಿದ್ದಾರೆ.
" ಧ್ರುವತಾಳದಲ್ಲಿ "
ವಸ್ತು ನಿಶ್ಚಯ ವಿಷಯ
" ಮಠ್ಯ ತಾಳದಲ್ಲಿ "
ವಸ್ತುವಿನ ಗುಣ ಧರ್ಮ ವಿವರಣೆ
" ರೂಪಕ ತಾಳದಲ್ಲಿ "
ವಸ್ತುವಿನ ಗುಣ ಧರ್ಮ ಕಾರಣ ವಿವೇಚನೆ
" ರೂಪಕ ತಾಳದಲ್ಲಿ "
ವಸ್ತು ಗುಣ ಧರ್ಮ ಕಾರಣ ಕಾರ್ಯ ರೂಪದಿ ಮನಸ್ಸಿನಲ್ಲಿ ಪರಿಣಮಿಸುವಿಕೆ
" ತ್ರಿಪುಟ ತಾಳದಲ್ಲಿ "
ಗುಣ ಧರ್ಮ ಕಾರ್ಯ ಪ್ರಾಪ್ತಿ ವಿಷಯ ಪ್ರಾರ್ಥನೆ
" ಅಟ್ಟ ತಾಳದಲ್ಲಿ "
ಮನೋ ವೇಗ ಸ್ತೋತ್ರ, ಸಂಗೀತ, ತಾಳ, ಕುಣಿತ
" ಆದಿ ತಾಳದಲ್ಲಿ "
ಸ್ತೋತ್ರಾನಂದದಲ್ಲಿ ನಲಿದಾಡುವಿಕೆ ಮತ್ತು ಸ್ವಲ್ಪ ಹೆಚ್ಚಿನ ಕುಣಿತ
ಹೀಗೆ ಮನೋಭಾವವು ಪರಮಾತ್ಮನಲ್ಲಿಟ್ಟು ಶ್ರೀ ಹರಿಯನ್ನು ಕುಣಿಸ್ಯಾಡುವ ಹರಿದಾಸರ ಸುಳಾದಿಗಳಿವು - ಸುಲಭದ ಹಾದಿಯಲ್ಲ.
ಮುಂದೆ " ಜತೆ " ಯಲ್ಲಿ ಎಲ್ಲ ಏಳು ತಾಳದಲ್ಲಿ ಹೇಳಿರುವುದು " ಜತೆ " (ಸರಿ ) ಯಾಗಿ ಕೊಡಿಕೊಂಡು ಬರುವುದು.
ಅಂದರೆ...
ಎರಡು ಸರಳ ರೇಖೆಗಳು ಹೇಗೆ " ಜತೆ " ಯಾಗಿರುವವೂ ಹಾಗೆ ಸಮನ್ವಯಿಸುವುದು " ಪದದ ಅರ್ಥ ಪಲ್ಲವಿಯಲ್ಲಿದ್ದಂತೆ ಸುಳಾದಿಗಳ ಅರ್ಥ - ಅಭಿಪ್ರಾಯ " ಜತೆ " ಯಲ್ಲಿರುತ್ತದೆ.
ಯೆಂದು ಏಳು ತಾಳಗಳಲ್ಲಿಯ ವಸ್ತು ವಿಶ್ಲೇಷಣೆಯನ್ನು ವಿವರಿಸಿದ್ದಾರೆ.
ಹೀಗೆ ವಿಶಿಷ್ಟ ಲಕ್ಷಣಗಳನ್ನು ಒಳಗೊಂಡ ಈ ಸಾಹಿತ್ಯ ಪ್ರಕಾರವು ನಿಜಕ್ಕೂ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹರಿದಾಸರ ಮಹತ್ವದ ಕೊಡುಗೆಯಾಗಿದೆ.
ಪ್ರತಿಯೊಂದು ಸುಳಾದಿಯಲ್ಲಿ ಆವೇಶ ಭಾವ ಕಾಣಿಸುತ್ತದೆ.
ಆಲೋಚನೆ - ಸೂತ್ರಪ್ರಾಯವಾದ ಮಾತಿನ ಸರಣಿ - ಆಧ್ಯಾತ್ಮಿಕ ಮಹತ್ವ ಇವೆಲ್ಲವೂ ಸ್ವಾನುಭವದ ಮೂಲಕ ಬಂದಿರುವುದನ್ನು ಗಮನಿಸಬಹುದು.
ಕೊನೆಯಲ್ಲಿ ಬರುವ ಎರಡು ಸಾಲಿನ " ಜತೆ " ಈ ದಾಸ ಸಾಹಿತ್ಯ ರೂಪದ ವಿಶಿಷ್ಟತೆಗೆ ಸಾಕ್ಷಿಯಾಗಿದೆ - ಯೆಂಬ ವಿಚಾರವು ಸುಳಾದಿಯ ಲಕ್ಷಣವನ್ನು ವಿವರಿಸುತ್ತದೆ.
" ಸುಳಾದಿ " ಯ " ಮಹತ್ವ "
ಹರಿದಾಸ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿಯೂ ಕೃತಿ ರಚನೆ ಮಾಡಿದ ಕೀರ್ತಿ ಶ್ರೀ ಶ್ರೀಪಾದರಾಜರಿಗೆ ಸಲ್ಲುತ್ತದೆ.
೧೦೦ ಕೀರ್ತನೆಗಳು = ೦೧ ಉಗಾಭೋಗ
೧೦೦ ಉಗಾಭೋಗ = ೦೧ ಸುಳಾದಿ
।। ಶ್ರೀ ಶ್ರೀಪಾದರಾಜರ ಸುಳಾದಿಗಳು ।।
" ವಿಶೇಷ ವಿಚಾರ "
ಈ ಕುರಿತು ಹೆಚ್ಚಿನ ಮಾಹಿತಿಗಾಗಿ -
ನಮ್ಮ ಸಂಪಾದಕತ್ವದಲ್ಲಿ ಬಂದ " ಶ್ರೀ ನಾರದಾಂಶ ಪುರಂದರದಾಸರು - ಒಂದು ಅಧ್ಯಯನ " [ 2010 ] ಎಂಬ ಕೃತಿಯಲ್ಲಿ ಸುದೀರ್ಘವಾಗಿ ವಿವರಣೆ ಕೊಡಲಾಗಿದೆ.
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
***
" ಈದಿನ ಪರಮ ಪವಿತ್ರವಾದ ದಿನ [ 23.06.21 - ಬುಧವಾರ ] - ಶ್ರೀ ಧೃವರಾಜರ ಅಂಶ ಸಂಭೂತರಾದ ಶ್ರೀ ಶ್ರೀಪಾದರಾಜರ ಆರಾಧನಾ ಮಹೋತ್ಸವ "
" ಭಕ್ತಿ ( ಹರಿದಾಸ ) ಸಾಹಿತ್ಯದಲ್ಲಿ ಜಾವಳಿಗಳು - ಒಂದು ಚಿಂತನೆ "
" ಜಾವಳಿ " ಶಬ್ದದ ಅರ್ಥ - ಹುಟ್ಟು ಎಲ್ಲವೂ ವಿವಾದಾಸ್ಪದವಾಗಿದೆ.
ಈ ಶಬ್ದವು ಹೊಸದಾದರೂ ಹಾಡಿನ ರೀತಿ ತುಂಬಾ ಹಳೆಯದು.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಈ ಜಾವಳಿಗಳು ಶ್ರೀ ಧೃವಾಂಶ ಶ್ರೀಪಾದರಾಜರ ಕಾಲದಲ್ಲಿ ಪ್ರಾರಂಭವಾಯಿತು.
" ಜಾವಳಿ " ಗಳು ಪದಗಳಂತೆ ಶೃಂಗಾರ ಪ್ರಧಾನವಾದುದು.
" ಜಾವಳಿ " ಕನ್ನಡ " ಜಾವಡಿ " ಎಂಬ ಲಘು ಶೃಂಗಾರ ಪದಗಳ ರೂಪಾಂತರ.
ಇವು ತಿಳಿಯಾದ ಅರ್ಥಪೂರ್ಣ ಸಾಹಿತ್ಯವುಳ್ಳ ರಚನೆಗಳಾಗಿವೆ.
" ಜಾವಳಿ " ಯಲ್ಲಿ ಪಲ್ಲವಿ - ಅನುಪಲ್ಲವಿ - ಚರಣಗಳಿಂದ ಕೂಡಿ, ಪದಗಳಲ್ಲಿರುವಂತೆ ಜಾವಳಿಯಲ್ಲಿಯೂ ನಾಯಕ - ನಾಯಕಿ - ಸಖಿ ಎಂಬ ಪ್ರಾತ್ರಗಳಿರುತ್ತವೆ.
ಜಾವಳಿಗಳ ವಿಷಯ ದೈವಿಕವಾಗಿರುತ್ತವೆ.
ಪದಗಳಲ್ಲಿರುವ ಗಂಭೀರ ಭಾವವು ಜಾವಳಿಗಳಲ್ಲಿ ಇರುವುದಿಲ್ಲ.
ಒಟ್ಟಿನಲ್ಲಿ " ಜಾವಳಿ " ಗಳು ತಮ್ಮದೇ ಆಕಾರವನ್ನು ಹೊಂದಿರುವ ಭಾವಪೂರ್ಣ ರಚನೆಗಳಾಗಿವೆ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಪದ್ಧತಿಗೆ ಸರಳ ಸುಂದವಾಗಿವೆ ಈ " ಜಾವಳಿ " ಗಳು!!
" ಗೋಪಿಯರು "....
ಹಲವು ಕಾಲವು ನಿನ್ನ ಸ್ನೇಹ ಸುಖವ -
ಹಾರೈಸಿ ಕೊಂಡಿರುತಿಹ ।
ಲಲನಾ ವ್ಯೂಹವ ಬಿಟ್ಟು ಅಕ್ರೂರನೊಡನೆ -
ನೀ ಮಧುರೆಗೆ ಪೋದರೆ ।
ಕಳೆಯಲಾಪೆವೇ ಕಾಂತ ಕೇಳು -
ದಿನವ ಈ ಕಂತುವಿನ ಬಾಧೆಗೆ ।
ಘಳಿಗೊಂದು ಯುಗವಾಗಿ ತೋರುತಿಹುದೋ -
ಜಲಜಾಕ್ಷ ನೀನಲ್ಲದೆ ।।
ಬ್ಯಾಡ ಮಧುರೆಗೆ ಪೊಗ -
ಬ್ಯಾಡೆಲವೋ ಶ್ರೀ ಕೃಷ್ಣ ।
ಬೇಡಿಕೊಂಬೆವೋ ದೈನ್ಯದಿ ।
ನೋಡು ನಮ್ಮ್ಯಾಲೆ -
ದಯಮಾಡು ಮದನಂಗೀಡು ।
ಮಾಡುವುದೇನುಚಿತವೆಲೋ -
ಮಾಧವ ಕೃಪಾಕರನೇ ।।
ಶ್ರೀ ಕೃಷ್ಣನು....
ಬಾಲ ಭಾವದಲಿಂದಾಲಿಂಗಸುಖವ -
ಬಹು ಬಗೆಯಲಿಂದುಳುಹಿದೆ ।
ಲೋಲಲೋಚನೆ ನಿಮ್ಮ ಬಿಟ್ಟು -
ಪುರದ ನಾರೇರಿಗಾನೊಲಿದರೆ ।
ನೀಲಕಂಠನು ಮೆಚ್ಚ ನೋಡು -
ನಿಜವ ನಮಗ್ಯಾತಕೀ ಸಂಶಯ ।
ಕಾಲಕ್ಷೇಪವನಲ್ಲಿ ಮಾಡೆ -
ಕಿಂಚಿತ್ಕಾಲಾದೊಳಾನೈದುವೆ ।।
ಪಾಲಿಸಿರೆನಗಪ್ಪಣೆಯ -
ಪಾಟಿಲ ಸುಗಂಧಿಯರೆ ।
ಕಾಲ ಹರಣವ ಮಾಡದೆ ।
ನಾಳೆ ಉದಯಕೆ ಪೋಗಿ -
ನಾಲ್ಕೆಂಟು ದಿನದೊಳು ।
ವ್ಯಾಳೆಗಿಲ್ಲಿಗೆ ಬರುವೆ -
ಕಾಳಾಹಿವೇಣಿಯರೆ ।।
ಎಂದು ನೀಲಕಂಠನ ಹೆಸರನ್ನು ಹೇಳಿ ಭರವಸೆಯ ಮಾತುಗಳನ್ನು ಆಡುವನು.
ನೀಲಮೇಘ ಶ್ಯಾಮನಿಗೆ ನೀಲಕಂಠನಲ್ಲದೆ ಬೇರಾರು ತಕ್ಕ ಸಾಕ್ಷಿ!!
ಎಮ್ಮ ತನುಮನ ತನ್ನಧೀನವಲ್ಲೇ ।
ಅನ್ಯವರಿಯೆವು ತನ್ನರಿದಂತೆ ಮಾಡಲಿ ।
ಎಮ್ಮಸುವು ತನ್ನಧೀನವಲ್ಲೇ ।
ಅನ್ಯವರಿಯೆವು ತನ್ನರಿದಂತೆ ಮಾಡಲಿ ।
ನಮ್ಮ ರಂಗವಿಠಲರೇಯಗೆ -
ಇನ್ನು ಸಲೆ ಮಾರುಹೋದೆವೆ ಕೆಳದಿ ।
ಅವನ ಹಂಬಲವೆನಗೆ ಜೀವನವವ್ವಾ ।
ಭುವನ ಮೋಹನ ರಂಗವಿಠಲನು ಕರುಣಿಯೇ ।।
ತಮ್ಮ ಪ್ರಿಯನ ಹಂಬಲದಿಂದ ಅವರು ತಮ್ಮ ಜೀವನವನ್ನು ಹಿಡಿದಿಟ್ಟಿದ್ದಾರೆಂಬ ಮಾತು ಸಾಕಷ್ಟು ಪರಿಣಾಮಕಾರಿಯಾಗಿದೆ.
ಈ ವಿರಹದ ತಾನವನ್ನೇ ಶ್ರೀ ಶ್ರೀಪಾದರಾಜರು ಇನ್ನೂ ಹಲವಾರು ತೆರನಾಗಿ ಮಿಡಿದಿರುವರು. ಒಮ್ಮೆ ಒಬ್ಬ ಗೋಪಿ...
ಒಲ್ಲೆನವ್ವಾ ಲಕುಮಿಯ ।
ನಲ್ಲ ಬಾರದಿದ್ದರೆ ತನು -
ಹೊರೆಯನೊಲ್ಲೆನವ್ವಾ ।।
ಎಂದು ಹೇಳ ತೊಡಗಿ...
ಹಾರ ಕೊರಳಿಗೆ ಭಾರ ಹೂವಿನ -
ಭಾರ ಸೈರಿಸಲಾರೆನೇ ।
ಮಾರನಯ್ಯನು ಬಾರದಿದ್ದರೆ -
ಮಾರನಂಬಿಗೆ ಗುರಿಯ ಮಾಡಿ ।।
ಎಂದು ತನ್ನ ಹೃದಯವನ್ನೇ ತೆರೆದಿಡುವಳು.
ತಿಳಿಗನ್ನಡದ ಈ ನುಡಿಗಳಲ್ಲಿ ಹೊರಹೊಮ್ಮಿರುವ ಭಾವ ಲಹರಿ ಗಮನಾರ್ಹವಾದುದು!!!
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
***
ಶ್ರೀಪಾದರಾಜರು:
(ನಾಳೆ ಮಹಾನುಭಾವರೂ ಶ್ರೀಚಂದ್ರಿಕಾಚಾರ್ಯರ ವಿದ್ಯಾಗುರುಗಳೂ ಧ್ರುವಾಂಶಸಂಭೂತರೂ ಆದ ಶ್ರೀಪಾದರಾಜಗುರು ಸಾರ್ವಭೌಮರ ಆರಾಧನಾ ಪರ್ವಕಾಲ)
ಶ್ರೀಪೂರ್ಣಪ್ರಜ್ಞರ ಶಿಷ್ಯಪ್ರಮುಖರಾದ ಶ್ರೀಪದ್ಮನಾಭತೀರ್ಥರಿಂದ ಪ್ರವರ್ತಿತವಾದ ಪರಂಪರೆಯನ್ನು ಅಲಂಕರಿಸಿ, ತಪೋನಿಧಿಗಳಾದ ಶ್ರೀಸ್ವರ್ಣವರ್ಣತೀರ್ಥರಿಂದ ಚತುರ್ಥಾಶ್ರಮವನ್ನು ಸ್ವೀಕರಿಸಿ, ಶ್ರೀವಿಬುಧೇಂದ್ರ ತೀರ್ಥ ರಂತಹ ವಿದ್ವದ್ವಿಭೂತಿಯ ವಿದ್ಯಾ ಶಿಷ್ಯರಾಗಿ, ಶ್ರೀವ್ಯಾಸತೀರ್ಥ ರಂತಹ ಲೋಕಮಾನ್ಯ ಯತಿಶ್ರೇಷ್ಠರ ಗುರುವಾಗಿ, ಶ್ರೀಪಾದರಾಜರೆಂದು ಜಗದ್ವಿಖ್ಯಾತರಾದ ಮಹಾನುಭಾವರು ಶ್ರೀಲಕ್ಷ್ಮೀನಾರಾಯಣ ತೀರ್ಥರು. "ಅಮಿತ ಪುಣ್ಯ ಅಗ್ರಗಣ್ಯನ ವಿಮತಹರನ ವಿನಯಪರನ ದ್ಯುಮಣಿ ತೇಜನ ದೂರಿತದೂರನ ಶಮದಮಾದಿ ಗುಣಸಮುದ್ರನ" ಎಂದು ವ್ಯಾಸರಾಜರಿಂದ ಸ್ತುತ್ಯರಾದ ಯತಿವರೇಣ್ಯರು. ಸಂಸ್ಕೃತದಲ್ಲಿ ಶ್ರೀಜಯತೀರ್ಥಗುರು ಸಾರ್ವಭೌಮರ ಅನುಪಮಕೃತಿ 'ಶ್ರೀಮನ್ನ್ಯಾಯ ಸುಧಾಗ್ರಂಥ' ಕ್ಕೆ 'ವಾಗ್ವಜ್ರ' ವೆಂಬ ಟಿಪ್ಪಣಿಯನ್ನು ಶ್ರೀಪಾದರಾಜರು ರಚಿಸಿದ್ದು, ಈ ಕೃತಿಗೆ 'ನ್ಯಾಯಸುಧೋಪನ್ಯಾಸ ವಾಗ್ವಜ್ರ' ಎಂಬ ಹೆಸರೂ ಇದೆ. ಶ್ರೀಮದಾಚಾರ್ಯ ರಿಂದ ಪ್ರೇರಣೆಹೊಂದಿದ ಶ್ರೀನರಹರಿತೀರ್ಥರೇ ಆದ್ಯರಾಗಿ ಉಳ್ಳ ಹರಿದಾಸ ಸಾಹಿತ್ಯ ಪರಂಪರೆಗೆ ಹೆಚ್ಚು ವ್ಯಾಪಕತೆಯನ್ನು ನೀಡಿದಂತಹ ಮಹಿತಾತ್ಮರು. ವೃತ್ತನಾಮ, ದೇವರನಾಮ, ಸುಳಾದಿ, ಉಗಾಭೋಗಗಳ ಬಳಕೆಯನ್ನು ವ್ಯಾಪಕವಾಗಿ ಬಳಕೆಗೆ ತಂದ ಮಹನೀಯರು. ಶ್ರೀರಂಗದಲ್ಲಿ ಬಹಳಷ್ಟುದಿನಗಳನ್ನು ಕಳೆದುದರಿಂದ, ತಮಿಳುನಾಡಿನ ಆಳ್ವಾರರು ರಚಿಸಿದ ದಿವ್ಯಪ್ರಬಂಧಗಳ ಪರಿಚಯದಿಂದ, ಸ್ಫೂರ್ತಿಯಿಂದ ಕನ್ನಡದಲ್ಲಿ ಹಾಡುಗಳನ್ನು ರಚಿಸಿದರು ಎಂಬ ಅಭಿಪ್ರಾಯ ವ್ಯಕ್ತವಾಗಿದ್ದರೂ,' ಇಯಲ್' ಪದ್ಧತಿಗೆ ಸೇರಿದ ಪಾಶುರಗಳು ಸಂಪ್ರದಾಯಸಂಗೀತದ ವಲಯದೊಳಗೆ ಬಂದಿರಲಾರದು. ಭಾವಪ್ರಧಾನವಾದ ಪಾಶುರಗಳಿಗೆ ರಾಗ-ತಾಳಗಳ ಕಟ್ಟುಪಾಡು ಅಷ್ಷಿರಲಾರದು ಎಂಬ ಅಭಿಪ್ರಾಯವೂ ವಿದ್ವಾಂಸರಿಂದ ವ್ಯಕ್ತವಾಗಿರುವುದರಿಂದ, ಪರೋಕ್ಷವಾಗಿ ಪಾಶುರಗಳ ಪ್ರೇರಣೆಯನ್ನು ಒಪ್ಪಬಹುದಾದರೂ, ಶ್ರೀಮಧ್ವರ ಹಾಡುಗಬ್ಬ ಗಳಿಂದ ಶ್ರೀಪಾದರಾಜರು ಪ್ರತ್ಯಕ್ಷವಾಗಿ ಪ್ರೇರೇಪಿತ ರಾದರು ಎಂದು ಹೇಳಬೇಕಾಗುತ್ತದೆ. ಶ್ರೀಮಧ್ವಭಗವತ್ಪಾದರ ಶಿಷ್ಯರು, ಕಿರಿಯ ಸಮಕಾಲೀನರಾದ ಕೆಲವು ಮಹನೀಯರು ಗೇಯವಾದಂತಹ ಕೃತಿಗಳ ರಚನೆಗೆ ನೀಡಿದಂತಹ ಪ್ರಾಮುಖ್ಯತೆಯನ್ನು ಗಮನಿಸುವುದು ಅತ್ಯವಶ್ಯವನೆಸುತ್ತದೆ. ಶ್ರೀಮದಾಚಾರ್ಯರ ಅಚ್ಚುಮೆಚ್ಚಿನ ಶಿಷ್ಯರಾದ
ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ ವಂಶದವರು ಸಂಸ್ಕೃತದಲ್ಲಿ ರಚಿಸಿರುವ ಹಾಡುಗಬ್ಬಗಳು ಶ್ರೀಮಧ್ವರಿಂದಲೇ ಪ್ರೇರೇಪಿತವಾದವುಗಳೆಂಬುದರಲ್ಲಿ ಯಾವುದೇ ಸಂಶಯವಿಲ್ಲ. ಕೃತಿಗಳ ಕೊನೆಯಲ್ಲಿ ಸೂಚಿಸಿರುವಂತೆ ಪಂಡಿತಾಚಾರ್ಯರ ವಂಶದವರು ರಚಿಸಿರುವ ಕೃತಿಗಳು ಅಪೂರ್ವವಾದ ಗೇಯಗುಣವನ್ನು ಹೊಂದಿವೆ. 'ಅಗಣಿತ ಪೂರ್ಣನಿರ್ದೋಷನಾನಾ ಗುಣಗಣಮನಂತಮಕ್ಷಯ್ಯದೇಹಮ್' ಎಂದು ಪ್ರಾರಂಭವಾಗುವ 'ವಾಸುದೇವ ಗೀತಿ',' ಜಲಚರತಯಾ ದದೌ ವೇದಮಾದೌ' ಎಂದು ಪ್ರಾರಂಭವಾಗುವ 'ರಮೇಶಗೀತಿ', 'ಉತ್ತಿಷ್ಠ ನರಸಿಂಹ ಸಂಹರ ಸಂಹರ' ಎಂದು ಮೊದಲಾಗುವ 'ನರಸಿಂಹ ಗೀತಿ', 'ಮಾಲತೀಕುಂದಮಂದಾರ ಮಾಲಾಮಲ್ಲಿಕೋಲ್ಲಾಸಿಧಮ್ಮಿಲ್ಲಮೌಲಿಮ್', 'ಚಂದ್ರವಿಭೂಷಣಚಂದ್ರಪುರೋಗೈರ್ವಂದ್ಯಪದಾಂಬುರುಹಂ ಪವಮಾನಮ್' ಎಂಬ ವಾಯುದೇವರ ಸ್ತುತಿ, 'ಇಂದುರುಚಿಸುಂದರಸುಮಂದಹಸಿತಾಸ್ಯಂ' ಎಂದು ಮೊದಲಾಗುವ 'ಮುಕುಂದ ಸ್ತೋತ್ರ', 'ನಳಿನಸೌಂದರ್ಯಜಿಷ್ಣುಂ ಪದಾಭ್ಯಾಂ ಲಳಿತರೂಪಾಂಗುಲೀಮಂಗಲಾಭ್ಯಾಮ್' ಎಂದು ಪ್ರಾರಂಭವಾಗುವ ಪೂರ್ಣಬೋಧಸ್ತುತಿ, 'ನಾಕಿನಾಯಕಯಾಚನಾಂಚನಮಾಚರನ್ ಕಿಲ ಕೇವಲಂ ಭಾಸ್ಕರಾನ್ವಯ ಭಾಸ್ಕರೋ ಭಗವಾನಭೂ: ಶುಭಸಂಪದೇ' ಎಂದು ಪ್ರಾರಂಭವಾಗುವ 'ರಾಮಗೀತ್ಯಷ್ಟಕ', 'ಗೋಪಿಕಾಸ್ತನಮಂಡಲಾರ್ಪಿತ ಕುಂಕುಮಾರುಣವಕ್ಷಸಂ' ಎಂದು ಮೊದಲಾಗುವ 'ಗೋಪಕುಮಾರಾಷ್ಟಕ' ಗಳು ಗೀತಸಾಹಿತ್ಯದಲ್ಲಿ ಅಪೂರ್ವವಾದಂತಹ ರಚನೆಗಳಾಗಿವೆ. ಇವುಗಳೊಂದಿಗೆ ಶ್ರೀಮಧ್ವಭಗವತ್ಪಾದರ ಸಾಕ್ಷಾತ್ ಶಿಷ್ಯರೂ, ಶ್ರೀಪೇಜಾವರ ಮಠದ ಮೂಲಯತಿಗಳೂ ಆದ ಶ್ರೀಅಧೋಕ್ಷಜತೀರ್ಥರ ಶಿಷ್ಯರೂ, ಶ್ರೀಭಗವತ್ಪಾದರ ಪ್ರಶಿಷ್ಯರೂ ಆದ ಶ್ರೀಕಮಲಾಕ್ಷ ತೀರ್ಥರು ರಚಿಸಿದ 'ಸುಖದ ಜ್ಞಾನನಿದಾನಕದ ಕರುಣಾಕಾರ ರಮಾದೇ' ಎಂದು ಪ್ರಾರಂಭವಾಗುವ ಹರಿಗಾಥೆ, ಮತ್ತು ಶ್ರೀಮಧ್ಭಾಗವತಕ್ಕೆ 'ಪದರತ್ನಾವಲೀ' ಎಂಬ ಅಪೂರ್ವವ್ಯಾಖ್ಯಾನವನ್ನು ಬರೆದ ಶ್ರೀಪೇಜಾವರ ಮಠದ ಶ್ರೀವಿಜಯಧ್ವಜತೀರ್ಥರು ರಚಿಸಿದ 'ಪ್ರಳಯೋದನ್ವದುದೀರ್ಣಜಲವಿಹಾರಾನಿಮಿಷಾಂಗಮ್ ಕಮಲಾಕಾಂತಮಖಂಡಿತವಿಭವಾಬ್ಧಿಂ ಹರಿಮೀಡೇ' ಎಂಬ ಅಪೂರ್ವವಾದ 'ದಶಾವತಾರ ಹರಿಗಾಥೆ' ಕೃತಿ ಗೇಯಸಾಹಿತ್ಯಕ್ಕೆ ಪ್ರಾರಂಭಿಕ ಹಂತದಲ್ಲಿ ಶ್ರೀಮಧ್ವಾಚಾರ್ಯರ ಪರಂಪರೆ ನೀಡಿದ ಕೊಡುಗೆಗೆ ನಿದರ್ಶನಗಳಾಗಿವೆ. ದುರಂತದ ಸಂಗತಿಯೆಂದರೆ ಶ್ರೀಪಾದರಾಜರ ಪೂರ್ವದಲ್ಲಿ ರಚಿತವಾಗಿರುವ ಈ ಅಪೂರ್ವ ಕೃತಿಗಳು ಶ್ರೀಶ್ರೀಪಾದರಾಜರು ಹರಿದಾಸಸಾಹಿತ್ಯ ಪರಂಪರೆಗೆ ನಿಶ್ಚಿತ ರೂಪಕೊಡುವ ಪೂರ್ವದಲ್ಲಿ ಉಂಟುಮಾಡಿರುವ ಪ್ರಭಾವದ ಬಗ್ಗೆ ಚರ್ಚೆ ಅತ್ಯಂತ ವಿರಳವಾಗಿದೆ. ಶ್ರೀಪಾದರಾಜರು ಶ್ರೀರಂಗದಲ್ಲಿದ್ದರು ಹಾಗಾಗಿ ಅಲ್ಲಿ ಆಳ್ವಾರರ ಪಾಶುರಗಳ ಪ್ರಭಾವಕ್ಕೆ ಒಳಗಾದರು ಎಂದು ಹೇಳುವ ವಿದ್ವಾಂಸರು ಯಾರೂ ಕರ್ನಾಟಕದ, ಶ್ರೀಮಧ್ವಾಚಾರ್ಯರ ಪರಂಪರೆಯಲ್ಲಿಯೇ ರಚಿತವಾಗಿರುವ ಸಂಸ್ಕೃತ ಭಾಷೆಯಲ್ಲಿ ರಚಿತವಾಗಿರುವ ಈ ಗೇಯಕೃತಿಗಳ ಬಗ್ಗೆ ಹೆಚ್ಚಾಗಿ ಉಲ್ಲೇಖಿಸ ದಿರುವುದು ಅಚ್ಚರಿಯ ಸಂಗತಿ. ದೇಶೀ ಭಾಷೆಯಲ್ಲಿ ದೇವರ ಸ್ತುತಿಗಳನ್ನು ರಚಿಸಿ, ತನ್ಮೂಲಕ ಒಂದು ನವಶಕೆಯನ್ನು ನಿರ್ಮಾಣ ಮಾಡಿದ ಆಳ್ವಾರರ ಪ್ರಭಾವವನ್ನು ಪೂರ್ಣವಾಗಿ ನಿರಾಕರಣಮಾಡದೆ ಈ ಒಂದು ಸಾಧ್ಯತೆಯ ಬಗ್ಗೆಯೂ ಗಮನ ಹರಿಸುವುದು ಅವಶ್ಯ. ಕನ್ನಡ ಭಾಷೆಗೆ ಸಂಸ್ಕೃತ ಸಮಪೀಠವನ್ನು ನೀಡಿ, ಶ್ರೀಹರಿಯ ಪೂಜಾಕಾಲದಲ್ಲಿ ಕನ್ನಡ ಕೃತಿಗಳನ್ನು ಹಾಡುವ ಸಂಪ್ರದಾಯಕ್ಕೆ ನಾಂದಿ ಹಾಡಿದವರು ಶ್ರೀಪಾದರಾಜರು. ಶ್ರೀಶ್ರೀಪಾದರಾಜರು ಪಲ್ಲವಿ, ಅನುಪಲ್ಲವಿ, ಚರಣ ಎಂಬ ಹೊಸಸ್ವರೂಪವನ್ನು ಗೀತೆಗೆ ನೀಡಿದರು. ಶ್ರೀಶ್ರೀಪಾದರಾಜರು ಗೀತಸಾಹಿತ್ಯಕ್ಕೆ ನೀಡಿದ ಈ ಅಪೂರ್ವವಾದ ಕೊಡುಗೆಯ ಬಗ್ಗೆ ಹೆಚ್ಚಿನ ಉಲ್ಲೇಖವನ್ನು ವಿದ್ವಾಂಸರು ಮಾಡದಿರುವುದು ಅಚ್ಚರಿ ಶ್ರೀವ್ಯಾಸರಾಜರಂತಹ ವಿಶ್ವವಂದ್ಯ ವಿದ್ವನ್ಮಣಿಗೆ ಗುರುಗಳಾಗಿ, ಶ್ರೀವಾದಿರಾಜ, ಶ್ರೀವಿಜಯೀಂದ್ರರೇ ಮೊದಲಾದ ಯತಿವರೇಣ್ಯರಿಗೆ, ಶ್ರೀಪುರಂದರ, ಶ್ರೀಕನಕದಾಸರೇ ಮೊದಲಾದ ದಾಸಶ್ರೇಷ್ಠರಿಗೆ ಪರಮಗುರುಗಳಾಗಿ ದಾಸ ಸಾಹಿತ್ಯ ಪರಂಪರೆಗೆ ಸದೃಢವಾದ ಬುನಾದಿಯನ್ನು ಹಾಕಿಕೊಟ್ಟ ಪಾವನ ಚರಿತರು ಶ್ರೀಪಾದರಾಜಗುರುಸಾರ್ವಭೌಮರು. ಶ್ರೀಹರಿಯ ಮಹಿಮೆ, ಭಗವದ್ಭಕ್ತಿಯ ಹಿರಿಮೆ, ಶ್ರೀಮಧ್ವ ಭಗವತ್ಪಾದರ ಸಿದ್ಧಾಂತದ ಮಹತ್ತ್ವ, ಆತ್ಮಶೋಧನೆ, ಲೋಕನೀತಿ ಮೊದಲಾದ ಅನೇಕ ವಿಷಯಗಳನ್ನು ಕುರಿತು ಶ್ರೀಪಾದರಾಜರು ರಚಿಸಿರುವ ಕನ್ನಡ ಕೃತಿಗಳು ತಮ್ಮ ಕಾವ್ಯಗುಣದಿಂದ, ಮಾಧುರ್ಯದಿಂದ, ಲಾಲಿತ್ಯದಿಂದ ಕನ್ನಡ ನುಡಿಯ ಇತಿಹಾಸದಲ್ಲಿ ಚಿರಸ್ಥಾಯಿಯಾಗಿವೆ.
ಶ್ರೀಪಾದರಾಜರ ಕೃತಿಗಳು ಇಂದು ಬಹುತೇಕ ಅನುಪಲಬ್ಧವಿದ್ದರೂ, ದೊರೆತಿರುವ ಕೃತಿಗಳಲ್ಲಿ ಕಾವ್ಯಸೌಂದರ್ಯ ವಿಶೇಷವಾಗಿ ಅಭಿವ್ಯಕ್ತ ಗೊಂಡಿದೆ. 'ಇಂದಿನಿರುಳಿನ ಕನಸಿನಲ್ಲಿ ಬಂದು ಮುಂದೆ ನಿಂದುದ ಕಂಡೆನೆ ಗೋವಳನ' ಕೃತಿಯಲ್ಲಿ ಶ್ರೀಕೃಷ್ಣನ ರೂಪಾತಿಶಯವನ್ನು ದೃಗ್ಗೋಚರವಾಗಿ ವರ್ಣಿಸಿದ್ದರೆ, 'ಅಂಬರದಾಳವನು ಇನಶಶಿಗಳಲ್ಲದೆ, ಅಂಬರತಳದೊಳಾಡುವ ಪಕ್ಷಿ ತಾ ಬಲ್ಲವೆ' , 'ಕಂಬಳಿಯ ಬುತ್ತಿಯಲಿ ಕಸವನಾರಿಸುವರುಂಟೆ?', 'ಸರಕು ಒಪ್ಪಿಸಿದ ಮೇಲೆ ಸುಂಕವುಂಟೆ', 'ಕಾಡ ಬೆಳದಿಂಗಳು ಈ ಸಂಸಾರ ಕತ್ತಲೆ ಬೆಳದಿಂಗಳು', 'ಹೆಸರುಳ್ಳನದಿಗಳು ಒಳಗೊಂಬ ಸಮುದ್ರನು ಬಿಸುಡುವನೆ ಕಾಲಹೊಳೆಗಳ ಗೋವಿಂದ', 'ಉಂಟಾದ ಕಾಲಕ್ಕೆ ನೆಂಟರು ಇಷ್ಟರು ಭಂಟರಾಗಿ ಬಾಗಿಲ ಕಾಯ್ವರು, ಉಂಟಾದತನ ತಪ್ಪಿ ಬಡತನ ಬಂದರೆ ಒಂಟೆಯಂದದಿ ಗೋಣನೆತ್ತುವರು' ಮೊದಲಾದ ನುಡಿಗಳು ಶ್ರೀಪಾದರಾಜರ ಜೀವನಾನುಭೂತಿ, ಕಾವ್ಯರಚನಾ ಕೌಶಲ್ಯಕ್ಕೆ ದ್ಯೋತಕಗಳಾಗಿವೆ.
ಶ್ರೀಮಧ್ವ ಮುನಿಗಳ ಅವತಾರತ್ರಯಗಳ ವಿಭವವನ್ನು ವರ್ಣಿಸುವ 'ಮಧ್ವನಾಮ' ವನ್ನು ರಚಿಸಿ, ವಾಯುದೇವರ ಉಪಾಸನೆಗೆ ಮಾರ್ಗವನ್ನು ರೂಪಿಸಿದ ಶ್ರೀಪಾದರಾಜರು ಸ್ವತ: ಪೀಠಾಧೀಶರಾಗಿದ್ದರೂ, ತಮ್ಮ ಶಿಷ್ಯ ಶ್ರೀವ್ಯಾಸರಾಜ ರನ್ನು ಕುರಿತು "ಇದಿರಾವನು ನಿನಗೀ ಧರೆಯೊಳುI ಪದುಮನಾಭನ ದಾಸ ಪರಮೋಲ್ಲಾಸ", "ಸಾಸಿರ ಜಿಹ್ವೆಗಳುಳ್ಳ ಶೇಷನೇ ಕೊಂಡಾಡಬೇಕು ವ್ಯಾಸಮುನಿರಾಯರ ಸನ್ನ್ಯಾಸದಿರವ" ಎಂದು ಮನತುಂಬಿ ಶಿಷ್ಯನನ್ನು ಪ್ರಾಂಜಲವಾಗಿ ಶ್ಲಾಘಿಸಿ ತಮ್ಮ ಔದಾರ್ಯವನ್ನು ತೋರಿದ್ದಾರೆ. ಇಂತಹ ಒಂದು ಔದಾರ್ಯ ಅನಪಮ. ತಮ್ಮ ಅನನ್ಯವಾದ ಜೀವನಸಾಧನೆ ಯಿಂದ, ಕಾವ್ಯ ಸಿದ್ಧಿಯಿಂದ, ತಪೋನಿಧಿಗಳಾಗಿ ಅಧ್ಯಾತ್ಮಾಂಬರದಲ್ಲಿ 'ಧ್ರುವತಾರೆ' ಯಂತೆ ಮಿನುಗುತ್ತಿರುವ ಶ್ರೀಪಾದರಾಜರ ಮಹಿಮೆಯನ್ನು ಕುರಿತು ಶ್ರೀವ್ಯಾಸರಾಜರಂತಹ ಮಹಿತೋನ್ನತ ಚರಿತರೇ" ಮಹಿಮೆ ಸಾಲದೆ ಇಷ್ಟೇ ಮಹಿಮೆ ಸಾಲದೆ ಅಹಿಶಯನನ ಒಲುಮೆಯಿಂದ ಮಹಿಯೊಳೆಮ್ಮ ಶ್ರೀಪಾದರಾಜರ" ಎಂದು ಸ್ತುತಿಸಿರುವುದನ್ನು ಮತ್ತು ಅತ್ಯಂತ ವಿನೀತಭಾವದಿಂದ 'ಶ್ರೀ ಶ್ರೀಪಾದರಾಜ ಪಂಚರತ್ನಮಾಲಿಕಾ' ಸ್ತೋತ್ರವನ್ನು ರಚಿಸಿ, "ಜ್ಞಾನವೈರಾಗ್ಯಭಕ್ತ್ಯಾದಿಕಲ್ಯಾಣಗುಣಶಾಲಿನ:, ಲಕ್ಷ್ಮೀನಾರಾಯಣಮುನೀನ್ ವಂದೇ ವಿದ್ಯಾಗುರೂನ್ ಮಮ" ಎಂದು ತಮ್ಮ ನ್ಯಾಯಾಮೃತ ಗ್ರಂಥದಲ್ಲಿ, "ಪದವಾಕ್ಯಪ್ರಮಾಣಾಬ್ಧಿವಿಕ್ರೀಡನವಿಶಾರದಾನ್, ಲಕ್ಷ್ಮೀನಾರಾಯಣಮುನೀನ್ ವಂದೇ ವಿದ್ಯಾಗುರೂನ್ ಮಮ" ಎಂದು ತಾತ್ಪರ್ಯ ಚಂದ್ರಿಕಾ ಗ್ರಂಥದಲ್ಲಿ ಸ್ತುತಿಸಿರುವುದನ್ನು ಹಾಗೂ ಶ್ರೀವಾದಿರಾಜರಂತಹ, ಶ್ರೀವಿಜಯೀಂದ್ರರಂತಹ ವಿದ್ವದ್ವರೇಣ್ಯರು ಮುಕ್ತಕಂಠದಿಂದ ಶ್ರೀಪಾದರಾಜರನ್ನು ಸ್ತುತಿಸಿರುವುದನ್ನು ಮನಸ್ಸಿಗೆ ತಂದುಕೊಂಡಾಗ ಮನಸ್ಸು ಮೌನದಿಂದ ಮುನಿವರ ಶ್ರೀಪಾದರಾಜರ ಶ್ರೀಪಾದಂಗಳಿಗೆ ಶರಣೆನ್ನುತ್ತದೆ.
'ತಂ ವಂದೇ ನರಸಿಂಹತೀರ್ಥನಿಲಯಂ ಶ್ರೀವ್ಯಾಸರಾಟ್ ಪೂಜಿತಂI
ಧ್ಯಾಯಂತಂ ಮನಸಾ ನೃಸಿಂಹಚರಣಮ್ ಶ್ರೀಪಾದರಾಜಂ ಗುರುಂII
ಶ್ರೀಕೃಷ್ಣ, ಮಧ್ವ, ಶ್ರೀಪಾದರಾಜರು ಪ್ರೀತರಾಗಲಿ
- ವೇಣುಗೋಪಾಲ ಬಿ.ಎನ್
***
No comments:
Post a Comment