info from sumadhwaseva.com--->
Sri Satyajnana Theertha
ಶ್ರೀ ಸತ್ಯಜ್ಞಾನತೀರ್ಥರು (ರಾಜಮಹೇಂದ್ರಿ)
ಸತ್ಯಜ್ಞಾನಾಖ್ಯತರಣಿ: ಸ್ವಾಂತಧ್ವಾಂತಂ ನಿಕೃಂತತು ||
सत्यज्ञानाख्यतरणि: स्वांतध्वांतं निकृंततु ॥
satyajAnAkhyataraNi: svAntadhvAntam nikRuntatu ||
Period 1906 – 1912
- Parents : Sri Krishnacharya Gangur and Smt Jeevubai
- Poorvashrama Name : Kinhal Jayacharya
- Birth place : Kinhala in 1877 Ishwara Samvatsara AshaDa krishna Panchami
- Upanayana : 1885 Parthiva Samvatsara, Shravana Krishna Triteeya
- Marriage : 1892 with Jeevoobai
-
Ashrama Sweekara : 12.10.1904 – KroDee Samvatsara Ashada Shukla Panchami – Narayanapete (AP)
- Pattabhisheka : 15.07.1906
- Pranadevara pratiste in Navavrundavana : 1908
- Vrundavana Pravesha : 30.01.1912 – Magha Shudda Ekadashi
- Vrundavana : Rajamahendri (AP)
- Mruttika Vrundavanas : Kamalapura, Chennai, Hyderabad, MaLakheda
- Vidya Gurugalu : Sri Satyadhyana Tirtharu
- Ashrama Gurugalu : Sri Satyadheera Tirtharu
- Ashrama Shishyaru : Sri Satyadhyana Tirtharu on 13.01.1912
- So Sri Satyadhyana Tirtharu is the Vidya Gurugalu & Ashrama Shishya of Sri Satyajnaana Tirtharu
- Aradhane: Magha Shuddha Ekadashi
- Sri Satyajnaana Tirtharu started the “Sri Madhwa Siddanthaabhivruddhikaarini Sabha” in 1905 (Sri Satya Dheera Tirtharu was also there) which is functioning even today.
Some of the miracles :
info from madhwamrutha.org--->
Sri Satyajnana Theertha was a favorite disciple of his guru and was a great scholar. He was a personification of vairagya. He has learnt his education from Sethuramacharya who later became his Ashrama sishya known as Satyadhyana Theertha. He performed Nyayasudha mangala in Malkhed. When he visited Tirupati, he was held back at the main door by temple authorities, later they allowed him to have darshan of the lord. After visiting Dharwad, Udupi, and other places, he came to Vijayawada where he became very ill. As instructed by his guru, he gave Ashrama to Sethuramacharya and named him as Satyadhyana Theertha and made him as his successor. He entered Vrundavana in Rajahmundry at very young age.
**********
He was born in 1879 in kinhal. He studied under shri sethurAmAchArya, who was the pUrvAshrama son of shri satyadhIra tIrtharu. Later, he initiated shri sethurAmAchArya as his successor and named him shri satyadhyAna tIrtharu. Sri SatyajnAna Tirtharu started the “Sri Madhwa Siddanthaabhivruddhikaarini Sabha” in 1905 (Sri Satya Dheera Tirtharu was also there) which is functioning even today.**********
ಸತ್ಯಧೀರ ಕರಾಬ್ಜೋತ್ಥ: ಜ್ಞಾನ ವೈರಾಗ್ಯ ಸಾಗರಃಸತ್ಯಜ್ಞಾನಾಖ್ಯ್ ತರಣಿ: ಸ್ವಾ0ತ ಧ್ವಾoತಂ ನಿಕೃ0ತತು
ಪ್ರಾತಃಸ್ಮರಣೀಯರಾದ ಮಹಾನುಭಾವರಾದ ಶ್ರೀ ಸತ್ಯಧ್ಯಾನ ತೀರ್ಥರಂಥ ಶಕ ಪುರುಷರನ್ನು ಮಾಧ್ವ ಸಮಾಜಕ್ಕೆ ಕರುಣಿಸಿದ ಜ್ಞಾನ ವೈರಾಗ್ಯ ಸಾಗರರು,ನಿನ್ನೆ - ಇಂದಿನ ಆರಾಧ್ಯರಾದ ಶ್ರೀ ಸತ್ಯಜ್ಞಾನ ತೀರ್ಥರು. ವೈರಾಗ್ಯ ಸಾಗರ: ಅಂತ ಅವರನ್ನು ಸ್ತುತಿಸಿದ ಹಾಗೆ ನಿಜವಾಗಿಯೂ ವೈರಾಗ್ಯ ಸಾಗರರೇ.ಪರಮಾತ್ಮನ ವಿಷಯದಲ್ಲಿ ಮಾತ್ರ ಆಸಕ್ತಿ, ಉಳಿದ ವಿಷಯಗಳಲ್ಲಿ ಅನಾಸಕ್ತಿ, ಇದು ವೈರಾಗ್ಯದ ಲಕ್ಷಣ.ಪರಮಾತ್ಮನನ್ನು ಕಾಣುವ ತವಕ, ಇದು ವೈರಾಗ್ಯವಂತರಲ್ಲಿ ಕಾಣುವ ಲಕ್ಷಣ/ಗುಣ.ಇಂಥಾ ಅನೇಕ ಪ್ರಸಂಗಗಳು ಶ್ರೀ ಸತ್ಯಜ್ಞಾನ ತೀರ್ಥರ ಜೀವನದಲ್ಲಿ ನೋಡಲಿಕ್ಕೆ ಸಿಗ್ತದ. ಇಂಥಾ ತವಕ ಇದ್ದವರ ಮೇಲೆ ಪರಮಾತ್ಮ ಯಾವ ರೀತಿ ಅನುಗ್ರಹ ಮಾಡ್ತಾನೆ, ಇಂಥವರು ಪರಮಾತ್ಮನಿಗೆ ಎಷ್ಟು ಪ್ರಿಯರು ಅನ್ನೋದು, ಸತ್ಯಜ್ಞಾನ ತೀರ್ಥರ ತಿರುಪತಿ ದಿಗ್ವಿಜಯದ ಪ್ರಸಂಗದಲ್ಲಿ ಕಾಣಲಿಕ್ಕೆ ಸಿಗುತ್ತದೆ.ಸತ್ಯಜ್ಞಾನ ತೀರ್ಥರು ತಿರುಪತಿ ಬೆಟ್ಟ ಏರಿ ಹೋಗುವಾಗ, ಭಯಂಕರ ಮಳೆ ಬರ್ತದ. ಉಳಿದ ಶಿಷ್ಯರು ಬೇರೆ ಬೇರೆ ಕಡೆ ಆ ಮಳೆಯಿಂದ ತಪ್ಪಿಸಿಕೊಳ್ಳಲಿಕ್ಕೆ ಆಶ್ರಯ ಪಡೀತಾರೆ. ಆದರೆ ಪರಮಾತ್ಮನ ದರ್ಶನ ಪಡೆಯುವ ತವಕ. ಮಳೆ ಛಳಿ ಯಾವುದೋ ಲೆಕ್ಕಿಸದೆ ರಾಮ ದೇವರ ಪೆಟ್ಟಿಗೆ ಹೊತ್ತು ಸಂಪೂರ್ಣ ಅನುವ್ಯಾಖ್ಯಾನ ವನ್ನು ಮುಖೋದ್ಗತ ವಾಗಿ ಪಾರಾಯಣ ಮಾಡ್ತಾ ಮುಂದ ಸಾಗ್ತಾ ಹೋಗ್ತಾರೆ. ಶುಕ್ರವಾರ ಬೆಳೆಗ್ಗೆಯ ಸಮಯಕ್ಕೆ ಹೋಗೋ ಅಷ್ಟರಲ್ಲಿ, ಅವತ್ತು ಅಭಿಷೇಕ, ಬಾಗಿಲು ಹಾಕಿ, ಸ್ವಾಮಿಗಳ ದರ್ಶನಕ್ಕೆ ಅಡ್ಡಿ ಮಾಡ್ತಾರೆ ಅಲ್ಲಿಯ ಮಹಾಂತರ. ತಿಲಕ ಧಾರಣ ಆಗಬೇಕು ವೆಂಕಟೇಶ ದೇವರಿಗೆ, ತನ್ನ ದರ್ಶನಕ್ಕಾಗಿ ಇಷ್ಟು ತವಕ ದಿಂದ ಬಂದ ತನ್ನ ಭಕ್ತನ ಮುಖ ತಾನು ನೋಡೋ ತನಕ ತನಗೆ ತಿಲಕ ಬ್ಯಾಡ ಅಂದ ವೆಂಕಪ್ಪ. ಎಷ್ಟು ಪ್ರಯತ್ನ ಮಾಡಿದರೂ ತಿಲಕ ನಿಲ್ಲದೇ ಇದ್ದಾಗ, ಅಲ್ಲಿಯ ಮಹಾಂತರಿಗೆ ಸೂಚನೆಯಾಗಿ ಸ್ವಾಮಿಗಳಲ್ಲಿ ಕ್ಷಮೆ ಬೇಡಿ, ಯೋಗ್ಯ ಆದರದಿಂದ ಕರೆತಂದು ವೆಂಕಪ್ಪನ ಮುಂದೆ ನಿಲ್ಲಿಸಿದಾಗ, ಆಗ ತಿಲಕ ಧಾರಣೆ ಆಯಿತು. ಶ್ರೀ ಸತ್ಯಜ್ಞಾನ ತೀರ್ಥರ ಮೂಲಕ, ಅವರ ಮಹಿಮೆಯನ್ನು ತೋರಿಸಿಕೊಡುವ ಜೊತೆಗೆ ನಮಗೆ, ಅವನನ್ನು ಕಾಣುವ ತವಕ ಹೇಗೆ ಇರಬೇಕು ಅನ್ನೋದನ್ನ ಕೂಡಾ ತೋರಿಸಿ ಕೊಟ್ಟಿದ್ದಾನೆ ಪರಮಾತ್ಮ. ಶ್ರೀ ಸತ್ಯಜ್ಞಾನ ತೀರ್ಥರಿಂದ ಕಲೆಯಬೇಕಾದ ನೀತಿ. ಜ್ಞಾನ ವೈರಾಗ್ಯ ಸಾಗರರು, - ಶ್ರೀ ಸತ್ಯಜ್ಞಾನ ತೀರ್ಥರು.ಪರಮಾತ್ಮನಿಗೆ ಪ್ರಿಯರು ಅಂದ್ರೆ ವಾಯುದೇವರಿಗೂ ಪ್ರಿಯರಾಗಿರಲೇ ಬೇಕು. ಇವರ ಜ್ಞಾನ, ಭಕ್ತಿ ವೈರಾಗ್ಯ ಎಂಥದ್ದು ಅನ್ನಲಿಕ್ಕೆ, ಕೋರ್ವಾರೇಶ ಗಾಳಿಯ ರೂಪದಲ್ಲಿ ಬಂದು ದರ್ಶನ ಕೊಟ್ಟಿದ್ದು, ಗಾಳಿಯ ರೂಪದಿಂದ ಬಂದು ಶ್ರೀರಾಮ ದೇವರ ಪೂಜೆಯನ್ನು ಆಲಿಸಿದ್ದು ಪ್ರಸಿದ್ಧ ಕಥೆ. ಇನ್ನು ಶ್ರೀಹರಿವಾಯುಗಳ ಭಕ್ತ ಶ್ರೇಷ್ಠರಾದ ಶ್ರೀಮತ್ ಟೀಕಾಕೃತ್ಪಾದರು ಸರ್ಪ ರೂಪದಿಂದ ಪೂಜಾ ಸಮಯದಲ್ಲಿ ಬಂದು ಮಳಖೇಡಕ್ಕೆ ಬರಬೇಕು ಅಂತ ಸೂಚಿಸಿದ್ದು ಟೀಕಾಕೃತ್ಪಾದರ ಅನುಗ್ರಹಕ್ಕೂ ನಿದರ್ಶನ. ಜ್ಞಾನ ಭಕ್ತಿ ವೈರಾಗ್ಯ ಕ್ಕೆ ನಿದರ್ಶನ. ಜ್ಞಾನ ವೈರಾಗ್ಯ ಸಾಗರರು - ಶ್ರೀ ಸತ್ಯಜ್ಞಾನ ತೀರ್ಥರು.ಅವರು ಸ್ವೀಕಾರ ಮಾಡುತ್ತಿದ್ದ ಆಹಾರ ಹೇಗೆ ಅಂದ್ರೆ, ಆಕಳಿಗೆ ಜೋಳ ಇತ್ಯಾದಿ ಹಾಕಬೇಕು, ಆಕಳು ತಿಂದು ಗೋಮಯ ಹಾಕಿದಾಗ, ಅದನ್ನು ಸಂಗ್ರಹಿಸಿ, ಅದನ್ನು ತೊಳೆದು, ಅದರಲ್ಲಿ ಏನು ಕಾಳು ಸಿಗ್ತಾವೋ ಆದಷ್ಟು ಮಾತ್ರ ಸ್ವೀಕಾರ ಮಾಡೋದು ಅಷ್ಟೇ. ಉಳಿದ ಭಕ್ಷ್ಯಗಳನ್ನು ರಾಮದೇವರ ನೈವೇದ್ಯ ಅನ್ನೋದರ ಸಲುವಾಗಿ, ಭಕ್ತಿಯಿಂದ ನಾಲಿಗೆಗೆ ಹಚ್ಚಿ ಸರಿಸಿಬಿಡೋದು ಅಷ್ಟೇ. ಇಂಥಾ ಕಠಿಣವಾದ, ವೈರಾಗ್ಯದ ಜೀವನವನ್ನು ನಡೆಸಿದವರು ಜ್ಞಾನವೈರಾಗ್ಯ ಸಾಗರರಾದ ಶ್ರೀ ಸತ್ಯಜ್ಞಾನ ತೀರ್ಥರು.ಪೂರ್ವಾಶ್ರಮದಲ್ಲಿ ಶ್ರೀ ಸೇತುರಾಮಾಚಾರ್ಯರು(ಮುಂದೆ ಶ್ರೀ ಸತ್ಯಧ್ಯಾನ ತೀರ್ಥರು ) ಇವರ ವಿದ್ಯಾ ಗುರುಗಳು. ಅವರಲ್ಲಿ ಆಗ ತೋರಿದ ಗುರುಭಕ್ತಿ ಅತ್ಯಂತ ಆದರ್ಶಪ್ರಾಯ. ಆತಕೂರು ಮಠದಿಂದ ನದಿಯತನಕ( 2-3 kms ಸುಮಾರು ) ಸೇತುರಾಮಾಚಾರ್ಯರನ್ನು ತಮ್ಮ ಹೆಗಲಮೇಲೆ ಕೂಡಿಸಿಕೊಂಡು ಹೋಗ್ತಾ ಇದ್ದರು, ಗುರು ಸೇವಾರೂಪದಲ್ಲಿ ಅಂತ ಹೇಳ್ತಾರೆ. ಅದೇ ರೀತಿ ಆಶ್ರಮ ಗುರುಗಳಾದ ಶ್ರೀ ಸತ್ಯಧೀರ ತೀರ್ಥರಲ್ಲಿ ತೋರಿದ ಗುರುಭಕ್ತಿ ಅದ್ವಿತೀಯ.ಮುಂದೆ ಶ್ರೀ ಸತ್ಯಧ್ಯಾನ ತೀರ್ಥರಂಥ ಮಹಾನುಭಾವರನ್ನು ಜಗತ್ತಿಗೆ ಕೊಟ್ಟು ಉಪಕಾರ ಮಾಡಿ, ಗೋದಾವರೀ ತೀರ ರಾಜಮಹೇಂದ್ರಿಯಲ್ಲಿ ಬೃಂದಾವನಸ್ಥರಾದರು.ಬಹಳ ಜಾಗೃತ ಕ್ಷೇತ್ರ. ಬೆಳೆಗ್ಗೆ ಗೋದಾವರಿ ಸ್ನಾನ, ಮಳಖೇಡದಲ್ಲಿ ಪಾಠ, ಚೆನ್ನೈ ನಲ್ಲಿ ಹಸ್ತೋದಕ, ಇದು ಅವರ ಇಂದಿನ ದಿನಚರಿ ಅಂತ ಪ್ರಸಿದ್ಧಿ ಇದೆ. ಅವರ ಬೃಂದಾವನ ಇರುವ ಜಾಗದಿಂದ ನದೀಗೆ ಹೋಗುವ ದಾರಿಯಲ್ಲಿ ಯಾರೂ ಮಲಗುವ ಹಾಗೆ ಇಲ್ಲ. ಬೆಳೆಗ್ಗೆ ಪಾದುಕಾಗಳ ಥಟ್ ಥಟ್ ಅಂತ ಶಬ್ದಗಳೂ ಕೆಲವರಿಗೆ ಕೇಳಿಸಿದೆ ಅಂತ ಹೇಳ್ತಾರೆ. ಇಂದಿಗೂ, ಬರುವ ಭಕ್ತರ ಮೇಲೆ ಅನುಗ್ರಹ ಮಾಡ್ತಾ ಇದ್ದಾರೆ. ಶ್ರೀ ಸತ್ಯಧ್ಯಾನ ತೀರ್ಥರು ಮಡಿಯಲ್ಲಿ ಇದ್ದಾಗ ಪ್ರಣವ ಜಪ, ಮಡಿ ಇಲ್ಲದಿದ್ದಾಗ ಅಂದ್ರೆ ಸಾಧಾರಣ ಮಡಿಯಲ್ಲಿ ಇದ್ದಾಗ ಶ್ರೀ ಸತ್ಯಜ್ಞಾನ ತೀರ್ಥರ ಸ್ಮರಣೆ ಮಾಡ್ತಾ ಇರ್ತೀವಿ. ಅಂಥಾ ಮಹಾನುಭಾವರ ಅನುಗ್ರಹದಿಂದ ನನಗೆ ಈ ಶಕ್ತಿ ಅಂತ ಹೇಳ್ತಾ ಇದ್ದರು ಅಂತ ಶ್ರೀ ಸತ್ಯಧ್ಯಾನರನ್ನು ಕಂಡವರು ಹೇಳೋ ಮಾತುಗಳು. ಇಂಥಾ ಜ್ಞಾನ ವೈರಾಗ್ಯ ಸಾಗರರಾದ ಶ್ರೀ ಸತ್ಯಜ್ಞಾನ ತೀರ್ಥರು ಸ್ವಾoತ ಧ್ವಾಂತ= ನಮ್ಮ ಒಳಗಿನ ಅಂಧಕಾರವನ್ನು- ಅಜ್ಞಾನವನ್ನು ಹೋಗಲಾಡಿಸಿ ಜ್ಞಾನದ ಪ್ರಕಾಶವನ್ನು ಕರುಣೆಸಿ ಅನುಗ್ರಹಿಸಲಿ ಅಂತ ಪ್ರಾರ್ಥಿಸುತ್ತಾ....ಶ್ರೀ ಸತ್ಯಜ್ಞಾನ ತೀರ್ಥ ಗುರುಭ್ಯೋ ನಮಃ*****
Period 1906 – 1912)
ಶ್ರೀಂ ಶ್ರೀ ಕಂ ಕಪಿಲಾಯ ನಮಃ
ಹರಿದಿನದ ಶುಭವಂದನೆಗಳು
ನಾದಬ್ರಹ್ಮ ಹರಿದಾಸರ ಮನೆದೇವರು ವಿಠಲನ ಸ್ಮರಣೆ ಕ್ಷಣಕ್ಷಣಕ್ಕೂ ಬಿಡದೆ ಆಗುವಂತಾಗಲಿ ನಮ್ಮ ಎಲ್ಲರಿಂದಲೂ..
ಮತ್ತೆ....
ಸತ್ಯಧೀರಕರಾಬ್ಜೋತ್ಥ: ಜ್ಞಾನವೈರಾಗ್ಯಸಾಗರ:ಸತ್ಯಜ್ಞಾನಾಖ್ಯತರಣಿ: ಸ್ವಾಂತಧ್ವಾಂತಂ ನಿಕೃಂತತು //
ಶ್ರೀಮದುತ್ತರಾದಿಮಠದ ಪರಮ ಶ್ರೇಷ್ಠ ಯತಿಗಳು, ವೆಂಕಪ್ಪನನ್ನು, ಉಡುಪಿ ಕೃಷ್ಣನನ್ನು ಒಲಿಸಿಕೊಂಡವರಾದ, 19ನೆಯ ಶತಮಾನದ ಯತಿಗಳಾದ, ಶ್ರೀ ಸತ್ಯಧ್ಯಾನತೀರ್ಥರ ವಿದ್ಯಾ ಶಿಷ್ಯರು, ಶ್ರೀ ಸತ್ಯಧೀರತೀರ್ಥರ ಕರಕಮಲ ಸಂಜಾತರಾದ , ಶ್ರೀ ಸತ್ಯಧ್ಯಾನರಿಗೆ ಆಶ್ರಮವನ್ನು ನೀಡಿದವರಾದ, ಶ್ರೀ ಮಧ್ವಸಿದ್ಧಾಂತಾಭಿವೃದ್ಧಿಕಾರಿಣಿ ಸಭೆಯನ್ನು ಸ್ಥಾಪನೆ ಮಾಡಿದವರಾದ, ಶ್ರೀ ಸತ್ಯಜ್ಞಾನತೀರ್ಥರ ಆರಾಧನಾ ಮಹೋತ್ಸವ ರಾಜಮಹೇಂದ್ರವರಂ (ಈಗ ರಾಜಮಂಡ್ರಿ), ಆಂಧ್ರಪ್ರದೇಶ.
ಶ್ರೀ ಯತಿಗಳ ಪರಮಾನುಗ್ರಹ ಸದಾಕಾಲ ನಮ್ಮ ಎಲ್ಲರಮೇಲಿರಲಿ ಎಂದು ಪ್ರಾರ್ಥನೆ ಮಾಡುತ್ತಾ...
-Smt. Padma Sirish
ನಾದನೀರಾಜನದಿಂ ದಾಸಸುರಭಿ ***ಶ್ರೀ ಸತ್ಯಜ್ಞಾನ ತೀರ್ಥರ ಚರಿತ್ರೆ ಮಾಘ ಶು. ಏಕಾದಶಿ.
ಲೇಖನ ಮಧುಸೂದನ ಕಲಿಭಟ್ ಬೆಂಗಳೂರು ( ಧಾರವಾಡ ) 23. 2.2021
ಅಭಿನವ ಆನಂದತೀರ್ಥ ರೆಂದೇ ಪ್ರಸಿದ್ಧರಾದ ಶ್ರೀ ಸತ್ಯಧ್ಯಾನರನ್ನು ಮಾಧ್ವ ಸಮಾಜಕ್ಕೆ ನೀಡಿದ ಮಹಾನುಭಾವರು, ಶ್ರೀ ಸತ್ಯಜ್ಞಾನ ತೀರ್ಥ ಶ್ರೀಪಾದರು. ಗುರುಪುತ್ರರಾದ ಶ್ರೀ ಕೊರ್ಲಹಳ್ಳಿ ಸೇತುರಾಮಾಚಾರ್ಯರ ಬಳಿ ಪೂರ್ವಾಶ್ರಮದಲ್ಲಿ ವೇದ ಶಾಸ್ತ್ರ ಅಭ್ಯಾಸ ಮಾಡಿ ನಂತರ ಅವರಿಗೆ ಆಶ್ರಮ ಕೊಟ್ಟ ಮಹಾನುಭಾವರು. ಇವರ ಪೂರ್ವಾಶ್ರಮದ ಹೆಸರು ಕಿನ್ನಾಳ ಜಯಾಚಾರ್ಯರು. ಆತಕೂರಿನಲ್ಲಿ ಗುರುಗಳ ಸಮಾರಾಧನೆ ಮಾಡಿಕೊಂಡು ಶ್ರೀಗಳು ಮಳಖೇಡಕ್ಕೆ ಬಂದರು. ಅಲ್ಲಿ ಒಂದು ಪವಾಡವು ನಡೆಯಿತು. ಸಂಸ್ಥಾನ ಪೂಜೆ ನಡೆದಾಗ ಒಂದು ಸರ್ಪವು ಶ್ರೀಗಳ ಕಡೆಗೆ ಬಂದಿತು. ಎಲ್ಲರೂ ಹೆದರಿ ದೂರ ಹೋದರು. ಶ್ರೀಗಳು ಭಕ್ತಿಯಿಂದ ಪೂಜೆಯನ್ನು ಮುಂದುವರೆಸಿದರು. ಸರ್ಪವು ಮಂಟಪದ ಕೆಳಗೆ ನುಸುಳಿ ಕುಳಿತಿತು. ಎಲ್ಲಜನರಿಗೂ ಏನಾಗುವದೋ ಎಂದು ಭಯ ಮತ್ತು ಕುತೂಹಲ. ಪೂಜಾ ನಂತರ ಶ್ರೀಗಳು ಒಂದು ಬೆಳ್ಳಿ ಬಟ್ಟಲಲ್ಲಿ ಹಾಲು ದೇವರಿಗೇವ್ನವೇದ್ಯ ಮಾಡಿ ಸರ್ಪದ ಮುಂದೆ ಇಟ್ಟರು. ಸರ್ಪವು ಹಾಲು ಕುಡಿದು ಯಾರಿಗೂ ಭಾದೆ ಕೊಡದೆ ಅದೃಶ್ಯವಾಯಿತು. ಗುರುಗಳು ಟೀಕಾರಾಯರ ಅಪ್ಪಣೆ ಆಗಿದೆ. ಮುಂದಿನ ಊರಿಗೆ ಹೋಗೋಣ ಎಂದು ಹೇಳಿದರು.ಮುಂದೆ ಒಂದು ದಿನ ಗುರುಗಳಿಗೆ ಸ್ವಪ್ನದಲ್ಲಿ ತಿರುಪತಿ ಶ್ರೀನಿವಾಸನ ದರ್ಶನ ಆಯಿತು. ಸಂಸ್ಥಾನ ತಿರುಪತಿಗೆ ಬಂದಿತು. ಗೋವಿಂದರಾಜ ಪಟ್ಟಣದಿಂದ ಮಹಾಂತನು ಗುರುಗಳನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಹೋದನು. ಬೆಟ್ಟದ ಮೇಲೆ ಸಾವಿರಾರು ಜನ ವಿಪ್ರರು ಕೂಡಿದರು. ಗುರುಗಳು ಮಹಾಂತನ ಸಂಗಡ ಇದ್ದರು. ಕಣ್ಣು ಮುಚ್ಚಿ ನಾನು ಬರುವ ವರೆಗೆ ತಿಲಕ ಧರಿಸುವದಿಲ್ಲವೇ ಎಂದರು. ಯಾರಿಗೂ ತಿಳಿಯಲಿಲ್ಲ. ಮಹಾಂತನಿಗೆ ಸಂಶಯ ಬಂದು ಮಂದಿರಕ್ಕೆ ಬಂದನು. ಆಶ್ಚರ್ಯ ಕಾದಿತ್ತು. ಶ್ರೀನಿವಾಸನಿಗೆ ಎಷ್ಟು ಪ್ರಯತ್ನಿಸಿದರೂ ತಿಲಕ ನಿಲ್ಲುತ್ತಿರಲಿಲ್ಲ.ಒಂದು ಸಲದ ತಿಲಕಕ್ಕೆ ಎಷ್ಟೋ ಖರ್ಚು ಏನು ಮದ ಬೇಕೆಂಬುದು ತಿಳಿಯದೇ ಕುಳಿತಿದ್ದರು. ಗುರುಗಳು ಗರ್ಭ ಗುಡಿ ಪ್ರವೇಶಿಸಿದರು. ತಿಲಕ ತಕ್ಷಣ ನಿಂತಿತು. ನಂತರ ಗುರುಗಳು ಪದ್ಮಾವತಿ, ಧಾರವಾಡ ಹುಬ್ಬಳ್ಳಿ ಸಂಚಾರ ಮಾಡಿಕೊಂಡು ಉಡುಪಿಗೆ ಬಂದು ಕೃಷ್ಣನ ದರ್ಶನ ತೆಗೆದುಕೊಂಡು ಕೆಲವು ದಿನ ಇದ್ದು ವಾಕ್ಯರ್ಥ ಸಭೆ ನಡೆಸಿ ಎಲ್ಲ ಪಂಡಿತರಿಗೆ ಸನ್ಮಾನ ಮಾಡಿದರು. ಆಮೇಲೆ ತಿರುಗಿ ಬರುವಾಗ ದೇಹದಲ್ಲಿ ಆಯಾಸವೆನಿಸಿ ಗುರುಪುತ್ರ ಸೇತುರಾಮಾಚಾರ್ಯರಿಗೆ ಸತ್ಯಧ್ಯಾನ ತೀರ್ಥರೆಂದು ಆಶ್ರಮ ನೀಡಿದರು. ಅರೋಗ್ಯ ಸುಧಾರಿಸಿತು. ನೂತನಸ್ವಾಮಿಗಳಿಂದಲೇ ಪೂಜೆ ಮಾಡಿಸಿ ಸಂತೋಷ ಪಟ್ಟರೂ. ರಾಜಮಹೇಂದ್ರಿ ಯಲ್ಲಿ ಮಾಘ ಶುದ್ಧ ಏಕಾದಶಿಯಂದು ಹರಿಧ್ಯಾನ ಪರರಾದರು. ಗುರುಗಳ ಅಂ. ಭಾ. ಮು. ಅಂ. ಶ್ರೀ ಹಯಗ್ರೀವ ದೇವರು ಸಕಲರಿಗೆ ಆಯುರಾರೋಗ್ಯ ಕೊಟ್ಟು ಕಾಪಾಡಲೆಂದು ಪ್ರಾರ್ಥಿಸುವ ಮಧುಸೂದನ ಕಲಿಭಟ್********by Hanumesha Vittala Dasaru on ಶ್ರೀ ಸತ್ಯಜ್ಞಾನರು
ಎಂಥಾದು ನಮ್ಮ ಗುರುಗಳ ಪಾದ ಕಂತುಪಿತನ ದಿವ್ಯಪಾದಾಅಂತಕನ ಭಯ ಬಿಡಿಸುವಾ ಪಾದ ಸಂತೋಷವಕೊಡುವಂಥ ಪಾದಾ ಪಬೇಡಿದ ವರ ನೀಡಿದಾ ಪಾದ ಮೂಢಮತಿಯನ್ನುಬಿಡಿಸುವ ಪಾದಾಬ್ಯಾಡಾದವರಲ್ಲಿ ಮುರಿಯುವ ಪಾದಾ ಪೊಡವಿಯಪಾವನ ಮಾಡ್ವ ಪಾದಾ 1ನಿತ್ಯ ಸುಖವನ್ನು ಕೊಡಿಸುವ ಪಾದಾ ಮಿಥ್ಯಾಸುಖವನ್ನುಬಿಡಿಸುವ ಪಾದಾಭಕ್ತ ಜನರಿಗೆ ಭಾಗ್ಯದ ಪಾದಾ ಸತ್ಯಜ್ಞಾನಾನಂದರ ದಿವ್ಯ ಪಾದಾ 2ಧೀರ ಹನುಮೇಶವಿಠಲನ ಪಾದಾ ಅರ್ಚಿಸಲುತುಳಸಿಯ ತಂದ ಪಾದಾಜರಿದು ಷಡ್ವೈರಿಗಳ ಗೆದ್ದ ಪಾದಾ ಪರಮ ಮಂಗಳಕರವಾದ ಪಾದಾ 3****
ಶ್ರೀಂ ಶ್ರೀ ಕಂ ಕಪಿಲಾಯ ನಮಃ
ಭೀಷ್ಮದ್ವಾದಶಿಯ, ಭೀಮ ದ್ವಾದಶಿಯ ಶುಭಾಶಯಗಳು...
ಇಂದು ಶ್ರೀಮದಾಚಾರ್ಯರ ನೇರ ಶಿಷ್ಯರು, ಶ್ರೀಮದಾಚಾರ್ಯರಿಂದಲೇ ಶಾಸ್ತ್ರವನ್ನು ಓದಿದವರು, ಅವರಿಂದಲೇ ಪೀಠಾಧಿಪತ್ಯವನ್ನು ಸ್ವೀಕಾರ ಮಾಡಿದವರು, ಅಷ್ಟ ಮಠದಲ್ಲಿನ ಪುತ್ತಿಗೆ ಮಠದ ಮೊದಲ ಯತಿಗಳು, ಶ್ರೀಮದಾಚಾರ್ಯರಿಂದಲೇ ವಿಠಲನ ಪ್ರತಿಮೆಯನ್ನು ಪಡೆದವರು, ಶ್ರೀಮದಾಚಾರ್ಯರ ಜೊತೆ ಇಡೀ ಭಾರತ ಯಾತ್ರೆಯನ್ನು ಮಾಡಿದವರೂ, ನಂತರ ಶ್ರೀ ಕವೀಂದ್ರತೀರ್ಥರಿಗೆ ಪೀಠವನ್ನು ನೀಡಿದವರೂ ಆದ ಶ್ರೀ ಉಪೇಂದ್ರತೀರ್ಥರ ಆರಾಧನಾ ಮಹೋತ್ಸವ ಕೃಷ್ಣಾ ನದೀತೀರದಲ್ಲಿ...
ಮತ್ತೆ...
ತಪೋವಿದ್ಯಾ ವಿರಕ್ತ್ಯಾದಿ ಸದ್ಗುಣೌ ಘಾಕರಾನಹಮ್/ವಾದಿರಾಜ ಗುರೂನ್ ವಂದೇ ಹಯಗ್ರೀವ ದಯಾಶ್ರಯಾನ್//
ತೀರ್ಥಪ್ರಬಂಧ, ಗುಂಡಕ್ರಿಯೆ, ರುಕ್ಮಿಣೀಶವಿಜಯ, ಯುಕ್ತಿಮಲ್ಲಿಕಾ ಮೊದಲಾದ ಅಪೂರ್ವ ಗ್ರಂಥ ಕರ್ತೃಗಳಾದ, ಲಾತವ್ಯರು, ಋಜುಗಣಸ್ಥರೂ, ಶ್ರೀಮಚ್ಚಂದ್ರಿಕಾಚಾರ್ಯರ ಪ್ರೀತಿಪಾತ್ರರು, ವ್ಯಾಸ-ದಾಸ ಸಾಹಿತ್ಯದ ಅಧಿನಾಯಕರೂ ಆದ ಪರಮ ಪರಮ ಮಹಿಮಾಶಾಲಿಗಳು, ಭಾವಿಸಮೀರರಾದ ಶ್ರೀಮದ್ವಾದಿರಾಜತೀರ್ಥ ಗುರುಸಾರ್ವಭೌಮರು ಎಲ್ಲ ಸಜ್ಜನರ ಉದ್ಧಾರಕ್ಕಾಗಿ ಅವತರಣ ಮಾಡಿದ ದಿನ ಇದು. ಇವರ ಕುರಿತು ಮಾಧ್ವರು ಎನ್ನುವ ಯಾರಿಗೂಪರಿಚಯ ಮಾಡುವ ಆವಶ್ಯಕತೆಯೂ ಇಲ್ಲ ಅಲ್ಲವೇ?...
ಮತ್ತೆ
ಸತ್ಯಧೀರಕರಾಬ್ಜೋತ್ಥ: ಜ್ಞಾನವೈರಾಗ್ಯಸಾಗರ:ಸತ್ಯಜ್ಞಾನಾಖ್ಯತರಣಿ: ಸ್ವಾಂತಧ್ವಾಂತಂ ನಿಕೃಂತತು //ಶ್ರೀಮದುತ್ತರಾದಿ ಮಠದ 19ನೇ ಶತಮಾನದ ಶ್ರೇಷ್ಠ ಯತಿಗಳೂ, ಮಹಾ ಮಹಿಮೆಗಳನ್ನು ತೋರಿದ ಯತಿಗಳೂ, ಮಧ್ವಸಿದ್ಧಾಂತ ಅಭಿವೃದ್ಧಿಕಾರಿಣಿ ಸಭೆಯನ್ನು ಪ್ರಾರಂಭಿಸಿದವರೂ ಹಾಗೂ ತಮ್ಮ ವೃಂದಾವನ ಪ್ರವೇಶವನ್ನು ಮುಂದೇ ಅರಿತಂತಹಾ ಮಹಾನುಭಾವರೂ , ಶ್ರೀ ಸತ್ಯಧ್ಯಾನತೀರ್ಥರ ಗುರುಗಳೂ ಆದ ಶ್ರೀ ಸತ್ಯಜ್ಙಾನ ತೀರ್ಥರ ಆರಾಧನೆಯೂ...
ಹಾಗೆಯೇ
ಭಜಾಮಿ ಕೃಷ್ಣ ರಾಜಾನಾಂ ಭೂಪತೇಸ್ತನುಜಂ ವಿಭುಂ/ ಜ್ಞಾನೋಪದೇಶ ಕರ್ತಾರಂ ಸರ್ವದಾನಂದ ರೂಪಿಣಂ//ಕಾಖಂಡಕಿ ಶ್ರೀ ಮಹಿಪತಿದಾಸರ ಪುತ್ರರಾದ, ಮಹಿಪತಿಸುತ, ಮಹಿಪತಿನಂದನ, ತರಳಮಹಿಪತಿ ಇತ್ಯಾದಿ ಅಂಕಿತಗಳಿಂದ ಅದ್ಭುತವಾದ ಕೃತಿಗಳನ್ನು ರಚನೆ ಮಾಡಿದ, ತಂದೆಯಂತೆ ದಾಸ ಸಾಹಿತ್ಯದ ಉನ್ನತಿಗೆ ತಮ್ಮ ಸೇವೆಯನ್ನು ಮಾಡಿದವರಾದ, ಪರಮ ಶ್ರೇಷ್ಠ ದಾಸವರೇಣ್ಯರಾದ ಶ್ರೀ ಕಾಖಂಡಕಿ ಕೃಷ್ಣದಾಸರ ಆರಾಧನೆಯೂ ಇಂದು...ಇಂಥಾ ಮಹಾನುಭಾವರ ಸ್ಮರೆಣೆಯೇ ನಮ್ಮ ಜನ್ಮದ ಸಾರ್ಥಕ್ಯವೂ ಹೌದು.. ಈ ಎಲ್ಲಾ ಮಹಾನುಭಾವರ ಅನುಗ್ರಹ ನಮ್ಮ ಎಲ್ಲರಮೇಲಿರಲಿ ಎಂದು ಅವರಲ್ಲಿ ಪ್ರಾರ್ಥನೆ ಮಾಡುತ್ತಾ ....
-Smt. Padma Sirish
ನಾದನೀರಾಜನದಿಂ ದಾಸಸುರಭಿ 🙏🏽****ಶ್ರೀ ಸತ್ಯಜ್ಞಾನತೀರ್ಥರ ಉತ್ತರಾರಾಧನೆಯ ಶುಭಸಂದರ್ಭದಲ್ಲಿ ಶ್ರೀಗಳ ಇಡೀ ಚರಿತ್ರೆಯ ಕುರಿತಾಗಿ ನನ್ನ ಆತ್ಮೀಯ ಅಣ್ಣನವರಾದ ಶ್ರೀ ಗುರುರಾಜಾಚಾರ್ಯ ಪಾಂಘ್ರಿ ರವರ ಅದ್ಭುತವಾದ ಲೇಖನ.
👇🏽👇🏽👇🏽👇🏽👇🏽👇🏽👇🏽👇🏽
ಶ್ರೀ ಸತ್ಯಜ್ಞಾನತೀರ್ಥರು ಆತಕೂರು ಶ್ರೀ ಸತ್ಯಧೀರ ತೀರ್ಥ ರ ಕರಕಮಲ ಸಂಜಾತರು. ಪೂರ್ವಾಶ್ರಮದ ವಿದ್ಯಾ ಗುರುಗಳು ಶ್ರೀಸೇತುರಾಮಾಚಾರ್ಯರು (ಬಳಿಕ ಶ್ರೀ ಸತ್ಯಜ್ಞಾನತೀರ್ಥರಿಂದ ಆಶ್ರಮ ಸ್ವೀಕರಿಸಿದ ಶ್ರೀ ಸತ್ಯಧ್ಯಾನ ತೀರ್ಥರು)
ಪೂರ್ವಾಶ್ರಮ :ಕಿನ್ಹಾಳ ಜಯಾಚಾರ್ಯರು ಅಂತತಂದೆ ಕಿನ್ಹಾಳ ಶ್ರೀ ಕೃಷ್ಣಾಚಾರ್ಯ.
ಪೂರ್ವಾಶ್ರಮದ ತಂದೆ ಕಿನ್ಹಾಳ ಶ್ರೀ ಕೃಷ್ಣಾಚಾರ್ಯರು 108 ಬಾರಿ ಶ್ರೀ ಭಾಗವತ ಪಾರಾಯಣ ಹಾಗೂ 108 ಬಾರಿ ಶ್ರೀರಾಮಾಯಣ ಪಾರಾಯಣ ಮಾಡಿದ್ದರಿಂದ ಶ್ರೀ ಸತ್ಯಧೀರ ತೀರ್ಥರು (ಶ್ರೀ ಸತ್ಯಜ್ಞಾನತೀರ್ಥ ರ ಗುರುಗಳು ಹಾಗೂ ಶ್ರೀ ಸತ್ಯಧ್ಯಾನ ತೀರ್ಥರ ಪೂರ್ವಾಶ್ರಮದ ತಂದೆ).. ಶ್ರೀ ಕಿನ್ಹಾಳ ಕೃಷ್ಣಾಚಾರ್ಯರಿಗೆ ರಾಮಾಯಣಿ ಕೃಷ್ಣಾಚಾರ್ಯ ಅಂತ ಬಿರುದು ಕೊಟ್ಟಿದ್ದರು.. ಈ ಶ್ರೀ ಕೃಷ್ಣಾಚಾರ್ಯರ ಸುಪುತ್ರ ರೇ ಶ್ರೀ ಕಿನ್ಹಾಳ ಜಯಾಚಾರ್ಯರು (ಶ್ರೀ ಸತ್ಯಜ್ಞಾನತೀರ್ಥ)
ತಾಯಿ ಸಾಧ್ವಿ ಜೀವೂ ಬಾಯಿಆಷಾಢ ಮಾಸದ ಕೃಷ್ಣ ಪಕ್ಷ ಪಂಚಮಿ ದಿನ ಶ್ರೀ ಜಯತೀರ್ಥರ ಆರಾಧನಾ ಪವಿತ್ರ ದಿನದಂದು ಶ್ರೀ ಕೃಷ್ಣಾಚಾರ್ಯರ ಪಂಚಮ ಪುತ್ರರಾಗಿ ಜನಿಸಿದ್ದರಿಂದ ಶ್ರೀಜಯಾಚಾರ್ಯರು/ಜಯತೀರ್ಥ ಅಂತ ನಾಮಕರಣ.
16 ನೇ ವಯಸ್ಸಿನಲ್ಲಿ ವಿವಾಹ. ಸದಾ ಪಾಠ ಪ್ರವಚನ ಜಪ ತಪ ಗಳಲ್ಲಿ ನಿಷ್ಠರು. ಇವರಿಗೆ ಶ್ರೀಹನುಮಂತಾಚಾರ್ಯರು ಅಂತ ಸುಪುತ್ರ.
ಹುಲಿಗಿ ಶ್ರೀ ಲಕ್ಷ್ಮೀ ದೇವಿಯ ಸನ್ನಿಧಾನ.. ಅಲ್ಲಿ ಬಂದು ತಂತ್ರಸಾರೋಕ್ತ 72 ಮಹಾಮಂತ್ರಗಳ ಜಪ ತಪ ಅನುಷ್ಠಾನ ಮಾಡಿಕೊಂಡು ಒಂದು ದಿನ ತುಂಗಭದ್ರಾ ತೀರದ ನಡು ಬಂಡೆಯಲ್ಲಿ ಆಹ್ನೀಕ ಮಾಡಿಕೊಂಡು ಕುಳಿತವರು.. ಒಮ್ಮೆಲೆ ನದಿಗೆ ಭಾರೀ ಪ್ರವಾಹ ಬಂದಿದೆ.. ಮೂರು ದಿನಗಳಾದರೂ ಪ್ರವಾಹ .ಇಳಿಯಲಿಲ್ಲ. ಅಲ್ಲಿಯೇ ಕುಳಿತು ಆಹ್ನೀಕ ಮಾಡಿಕೊಂಡು ತೀರ್ಥ ಸ್ವೀಕರಿಸುತ್ತ ಜಪ ತಪ ಪಾರಾಯಣ ಮಾಡುತ್ತ ಕುಳಿತ ಧೀರರು. ಬಳಿಕ ಸ್ಥಳೀಯರು ನೋಡಿ ಕರೆದುಕೊಂಡು ತೀರಕ್ಕೆ ಬಂದರು.
ಎಷ್ಟು ತಪಸ್ವಿಗಳು. 3 ದಿನ ಉಪವಾಸವಿದ್ದು ಆ ನದಿಯ ನಡು ಬಂಡೆಯ ಮೇಲೆ ಧೀರರಾಗಿ ಕುಳಿತು ಜಪತಪಾನುಷ್ಠಾನ ಮಾಡಿಕೊಂಡವರು.ಭಗವಂತನ ಇಚ್ಛೆ ಕಾರುಣ್ಯ.ಶ್ರೀ ಸತ್ಯಧೀರ ತೀರ್ಥರು ಸಂಸ್ಥಾನ ಪೂಜೆ ಮಾಡುವಾಗ ಎಡಬಲ ಸೇವೆ ಕಿನ್ಹಾಳ ಜಯಾಚಾರ್ಯರು ಮಾಡುತ್ತಾ ಇದ್ದರು.ಒಮ್ಮೆ ಶ್ರೀ ರಾಮಚಂದ್ರ ದೇವರ ಪೂಜೆ ಆಗಿ ದೇವರನ್ನು ಭುಜಂಗಿಸುವಾಗ ಕೂರ್ಮ ವ್ಯಾಸ ಮುಷ್ಟಿ ಸ್ವಾಮಿಗಳು ಸಂಪುಷ್ಟದಲ್ಲಿ ಇಡಬೇಕು ನಿರ್ಮಾಲ್ಯ ಎಡಬಲ ಸೇವೆ ಮಾಡುವ ಕಿನ್ಹಾಳ ಜಯಾಚಾರ್ಯರಿಗೆ ಕೊಡಬೇಕು ಆದರೆ ಆ ದಿನ ಕೂರ್ಮ ರೂಪಿ ವ್ಯಾಸಮುಷ್ಟಿ ಕೂಡ ಕಿನ್ಹಾಳ ಜಯಾಚಾರ್ಯರ ಕೈಗೆ ಬಂದು ಬಿಟ್ಟಿದೆ.. ಪರಮಾಶ್ಚರ್ಯದಿಂದ ಶ್ರೀ ಸತ್ಯ ಧೀರ ತೀರ್ಥರು ಯೋಚಿಸಿದರು
ಸಂಸ್ಥಾನದ 28 ಮುಖ್ಯ ಪರಮ ಪಾವನ ಮೂರ್ತಿಗಳಲ್ಲಿ ಈ ಕೂರ್ಮರೂಪಿ ವ್ಯಾಸ ಮುಷ್ಟಿ ಕೂಡ..ಈ ವ್ಯಾಸಮುಷ್ಟಿ ಹಿಂದೆ ಶ್ರೀ ರಘುನಾಥ ತೀರ್ಥರಿಗೆ ಒಲಿದು ಬಂದದ್ದು.ಶ್ರೀ ಸತ್ಯಧೀರ ತೀರ್ಥರು ಯೋಚಿಸಿದರು. ಈ 28 ರ ಪೈಕಿ ಈ ವ್ಯಾಸ ಮುಷ್ಟಿ ಸ್ಪರ್ಶಿಸುವವರು ಸಂಸ್ಥಾನದ ಪೂಜೆ ಮಾಡಿಕೊಂಡು ಹೋಗುವ ಸ್ವಾಮಿಗಳೇ ಆಗಬೇಕು ಇಲ್ಲವಾದಲ್ಲಿ ಮರಣ ಖಚಿತ ಅಂತ
ಕಿನ್ಹಾಳ ಜಯಾಚಾರ್ಯರ ಅಣ್ಣ ಕಿನ್ಹಾಳ ಗೋವಿಂದ ಆಚಾರ್ಯರಿಗೆ ಸುದ್ದಿ ತಲುಪಿ ಎಲ್ಲರಿಗೂ ಗಾಬರಿ ಆಯಿತು. ಶ್ರೀ ಸತ್ಯಧೀರ ತೀರ್ಥ ರು ಗಾಬರಿ ಆಗಬೇಡಿ ಅಂತ ಹೇಳಿ ಪ್ರಾಯಶ್ಚಿತ್ತ ರೂಪವಾಗಿ ಒಂದು ಕಾರ್ಯ ವಹಿಸುವಂತೆ ಆಜ್ಞೆ ಮಾಡಿದರು.ಬಾಗಲಕೋಟೆ ವೇಂಕಟ ದಾಸರೆಂಬ ಸಾಹುಕಾರ ರಲ್ಲಿ ಈ ಹಿಂದೆ ಒತ್ತು ಇಟ್ಟ ಶ್ರೀ ಮಠದ ಬಂಗಾರದ ವಸ್ತುಗಳನ್ನು ಹಣ ಕೊಟ್ಟು ತೆಗೆದುಕೊಂಡು ಬರಲು ಆಜ್ಞೆ ಮಾಡಿದಾಗ ಕಿನ್ಹಾಳ ಜಯಾಚಾರ್ಯರು ಕಿನ್ಹಾಳ ಗೋವಿಂದಾಚಾರ್ಯ ಸೇತುರಾಮಾಚಾರ್ಯ ಎಲ್ಲರೂ ಹೋದರು.
ಬಳಿಕ ಭಗವಂತನ ಇಚ್ಛೆ ಆಜ್ಞಾದಂತೆ ಶ್ರೀ ಸತ್ಯಧೀರ ತೀರ್ಥರು ವೇಲೂರು ಶ್ರೀನಿವಾಸಾಚಾರಾಯರಿಗೆ ಹೇಳಿ ಕಿನ್ಹಾಳ ಜಯಾಚಾರ್ಯರಿಗೆ ಬಾಗಲಕೋಟೆಯಿಂದ ಆತಕೂರು ಬರಲು ಹೇಳಿದರು.
ಆಶ್ರಮ ಸ್ವೀಕಾರದ ಹಿಂದಿನ ದಿನ ವಿದ್ಯಾ ಗುರುಗಳು ಶ್ರೀ ಸೇತುರಾಮಾಚಾರ್ಯರ(ಶ್ರೀ ಸತ್ಯಧ್ಯಾನ ತೀರ್ಥರು)ಸೇವೆ ಮಾಡಲೇ ಬೇಕೆಂದು ಅವರ ವಸ್ತ್ರಗಳನ್ನು ಮಾರ್ಜನಗೊಳಿಸಿ ಸಿದ್ಧ ಪಡಿಸಿ ತಂದರು
1905 ಅಶ್ವಿನ ಶುದ್ಧ ಪಂಚಮಿ ದಿನ ಕಿನ್ಹಾಳ ಜಯಾಚಾರ್ಯರಿಗೆ ಸನ್ಯಾಸ ಕೊಟ್ಟು ಶ್ರೀ ಸತ್ಯಜ್ಞಾನತೀರ್ಥ ಅಂತ ನಾಮಕರಣ ಮಾಡುತ್ತಾರೆ.28 ನೇ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿದ ನಂತರ ಶ್ರೀ ಸತ್ಯಜ್ಞಾನತೀರ್ಥರು ಶ್ರೀ ಸತ್ಯಧೀರ ತೀರ್ಥ ರ ಆಜ್ಞೆಯಂತೆ ಸಕಲ ಕಾರ್ಯೋದ್ಯುಕ್ತ ಆಗ್ತಾರೆ.. ಸನ್ಯಾಸ ಸ್ವೀಕರಿಸಿದ ನಂತರ ಅಲ್ಲಿಯ ಬಾಯಿಕೊಂಡ ಶ್ರೀನಿವಾಸ ಆಚಾರ್ಯ ಎಂಬುವರು ಇವರಿಗೇನು ಸನ್ಯಾಸ ಅಂತ ಮೊದಲು ಮಾಡಿಕೊಂಡು ಗುರು ನಿಂದನೆ ಮಾಡುತ್ತ ಅವರು ಮನೆ ಸೇರುವಷ್ಟರಲ್ಲಿ ಬಾಯಿ ತುಂಬ ಬೊಕ್ಕೆಗಳು ಬರತವೆ.ತುಂಬ ಗುಳ್ಳೆಗಳಾಗಿ ನೋವು ಅನುಭವಿಸಿ ಸ್ವಾಮಿಗಳವರ ಸನ್ನಿಧಿಗೆ ಬಂದು ಕ್ಷಮೆ ಯಾಚನೆ ಮಾಡುತ್ತಾರೆ.ಒಂದು ವರೆ ವರ್ಷ ನ್ಯಾಯಸುಧಾ ಪಾಠ ಹೇಳಿ ಸುಧಾಮಂಗಳ ಮಹೋತ್ಸವ ಮಳಖೇಡದಲ್ಲಿ 5 ದಿನಗಳ ಪರ್ಯಂತ ವೈಭವದಿಂದ ಮಾಡ್ತಾರೆ.ಶ್ರೀ ಮಧ್ವಸಿದ್ಧಾಂತ ಅಭಿವೃದ್ಧಿಕಾರಿಣಿ ಸಭಾ ಪ್ರಾರಂಭ ಮಾಡುತ್ತಾರೆ.. ಆಗಲೇ ಶ್ರೀ ಸತ್ಯ ಪರಾಕ್ರಮ ತೀರ್ಥರು ತಿರುಪತಿಯಲ್ಲಿ ಮಧ್ವಸಿದ್ಧಾಂತ ಉನ್ನಾಹಿನಿ ಸಭಾ ಪ್ರಾರಂಭ ಮಾಡಿರತಾರೆ.ಮಳಖೇಡದಲ್ಲಿ 1905 ರಲ್ಲಿ ಮಹಾ ವೈಭವದ ಸುಧಾಮಂಗಳ ಮಾಡಿದರು. ಅನೇಕ ವಿದ್ವಾಂಸರನ್ನು ಕರೆಯಿಸಿ ಅತಿ ವಿಜೃಂಭಣೆಯಿಂದ ನೆರವೇರಿಸಿದರು.ಆತಕೂರಿಗೆ ಶ್ರೀ ಸತ್ಯಧೀರ ತೀರ್ಥ ರು ಬಂದ ಮೇಲೆ ದೇಹಾಲಸ್ಯ ಆಗಿ ವೃಂದಾವನ ಪ್ರವೇಶ ಮಾಡ್ತಾರೆ.
ವೃಂದಾವನ ಪ್ರವೇಶ ಮಾಡುವ ಮುಂಚೆ ಶ್ರೀ ಸತ್ಯ ಜ್ಞಾನ ತೀರ್ಥರಿಗೆ ಹೇಳ್ತಾರೆ ಉಡುಪಿಕೃಷ್ಣ ನ ದರ್ಶನ ತಿರುಪತಿವೇಂಕಟರಮಣನ ದರ್ಶನ ಕ್ಕೆ ಹೋಗಬೇಕಾಗಿತ್ತು ಆಗಲಿಲ್ಲ ತಾವು ದರ್ಶನ ಮಾಡಿಕೊಂಡು ಬನ್ನಿ ಅಂತ ಹೇಳ್ತಾರೆ.
ವೃಂದಾವನ ಪ್ರವೇಶ ಆದ ಮೇಲೆ ಗುರುಗಳ ಮಹಾಸಮಾರಾಧನೆ ಅತಿ ವೈಭವದಿಂದ ಮಾಡಿ ಗುರುಗಳ ಆಜ್ಞೆ ಯಂತೆ ತಿರುಪತಿಗೆ ಪ್ರಯಾಣ ಮಾಡ್ತಾರೆ.
ಆತಕೂರು ರಾಯಚೂರು ಮೂಲಕ ತಿರುಪತಿಗೆ ಬಂದು ಬೆಟ್ಟ ಹತ್ತುತ್ತ ಅನುವ್ಯಾಖ್ಯಾನ ಪಾರಾಯಣ ಮಾಡುತ್ತ ಹತ್ತುವಾಗ .. ವಿಪರೀತ ಮಳೆ ಬಂದಿದೆ. ಶ್ರೀರಾಮಚಂದ್ರ ದೇವರ ಪೆಟ್ಟಿಗೆಗೆ ಮಳೆ ನೀರು ತಗಲದ ಹಾಗೆ ನೋಡಿಕೊಂಡು ತಾವು ಮಳೆಯನ್ನ ಲೆಕ್ಕಿಸದೆ ಬೆಟ್ಟ ಹತ್ತುತ್ತಾರೆ.
ಬಂದಾಗ ಶ್ರೀತಿರುಮಲ ಶ್ರೀನಿವಾಸ ದೇವರ ಅಭಿಷೇಕ ಆಗಿದೆ ಅಲಂಕಾರ ನಡೀತಾ ಇದೆ ಅಲಂಕಾರ ಆದ ಮೇಲೆ ನೇ ದರ್ಶನಕ್ಕೆ ಬಿಡುವುದು ಅಂತ ದೇವಸ್ಥಾನ ಅಧಿಕಾರಿ ಹೇಳ್ತಾರೆ.ಸ್ವಾಮಿಗಳು ಹೊರಗಡೆ ಭಕ್ತಿಯಿಂದ ಶ್ರೀನಿವಾಸ ದೇವರ ಸ್ಮರಣೆ ಮಾಡುತ್ತಾ ಪಾರಾಯಣ ಮಾಡುತ್ತ ನಿಂತಿದ್ದಾರೆ.ಅಲಂಕಾರ ಸಮಯದಲ್ಲಿ ಪಚ್ಚ ಕರ್ಪೂರಯುಕ್ತ ನಾಮಧಾರಣೆ ಮಾಡತಾ ಇದ್ದರೆ ನಾಮ ನಿಲ್ತಾ ಇಲ್ಲ. ಭಾರೀ ಪ್ರಯತ್ನ ಮಾಡಿದ್ದಾರೆ.
ಆಮೇಲೆ ಅಲ್ಲಿಯ ಮಹಾಂತರಿಗೆ ಅರ್ಚಕರಿಗೆ ಶ್ರೀನಿವಾಸ ದೇವರಿಂದ ಸೂಚನೆ ಆಗಿ ಹೊರಗಡೆ ಮಹಾ ತಪಸ್ವಿಗಳು ಜ್ಞಾನಿಗಳು ಬಂದಿದ್ದಾರೆ ಕರೆದುಕೊಂಡು ಬನ್ನಿ ಅಂತ ಹೇಳಿದಾಗಓಡಿ ಬಂದು ಅಲ್ಲಿಯವರು ಶ್ರೀ ಸತ್ಯಜ್ಞಾನತೀರ್ಥರು ಇದ್ದಲ್ಲಿ ಬಂದು ಪ್ರಾರ್ಥಿಸಿದಾಗ ಸ್ವಾಮಿಗಳು ದರ್ಶನಕ್ಕೆ ಬಂದು ದರ್ಶನ ಮಾಡಿ ಭಕ್ತಿಯಿಂದ ಪ್ರಾರ್ಥಿಸಿದಾಗ ಶ್ರೀನಿವಾಸ ದೇವರಿಗೆ ನಾಮಧಾರಣೆ ಮಾಡಲು ಆಗ ನಾಮ ಶೋಭಿಸುತ್ತ ನಿಂತಿದೆ.. ಭಗವಂತನ ಮಹಿಮೆ ಅಪಾರ.ಅಲ್ಲಿಯವರೆಲ್ಲ ಭಗವಂತನ ಮಹಿಮೆ ಗುರುಗಳ ಮಹಿಮೆ ಅಪಾರವಾಗಿ ಕೊಂಡಾಡತಾರೆ.ತಿರುಪತಿ ಯಾತ್ರೆ ಮುಗಿಸಿ ಮದರಾಸು ಟ್ರಿಪ್ಲಿಕೇನ್ ಗೆ ಬರುತಾರೆ.. ಅಲ್ಲಿ ಮಠವನ್ನು ಜೀರ್ಣೋದ್ಧಾರ ಮಾಡ್ತಾರೆ.ಸ್ವಾಮಿಗಳು ತ್ರಿಧಾಮಸಂಚಾರಿಗಳು ಅಂತಲೇ ಪ್ರಖ್ಯಾತಿ.ಬೆಳಿಗ್ಗೆ ರಾಜಮಹೇಂದ್ರಿ ಗೋದಾವರಿ ಸ್ನಾನ ಮಳಖೇಡ ಸುಧಾಪಾಠ ನಂತರ ಮಧ್ಯಾಹ್ನ ಮದರಾಸಿನಲ್ಲಿ ಭಿಕ್ಷೆ ಸ್ವೀಕಾರ ನಂತರ ಮತ್ತೆ ಗೋದಾವರಿಗೆ ಸ್ನಾನ ಮಾಡಲು.
ಮದರಾಸು ಟ್ರಿಪ್ಲಿಕೇನ್ ಮಠದಲ್ಲಿ ಇರುತ್ತಾರೆ. ಒಮ್ಮೆ ಶ್ರೀರಾಮಚಂದ್ರ ದೇವರ ಪೂಜೆಗೆ ಒಳ್ಳೆಯ ಹಸುವಿನ ಹಾಲು ಬೇಕಾಗಿದೆ. ಮಠದ ಅಧಿಕಾರಿ ಹೆಂಡತಿ ಜಾನಕಿ ಬಾಯಿಯವರು ತಮ್ಮ ಮಗ ಶ್ರೀನಿವಾಸರಾಯರು ಎಂಬುವರಿಗೆ ಮಠಕ್ಕೆ ಹಾಲು ಕೊಡಲು ಕೊಟ್ಟು ಕಳಿಸಿದ್ದಾರೆ.ಬಂದವರೇ ಪಾಠ ಹೇಳುತ್ತಿದ್ದ ಸ್ವಾಮಿಗಳ ಎದುರಿಗೆ ಹಾಲು ತಂದಿಟ್ಟಾಗ ಸ್ವಾಮಿಗಳು ಹೇಳ್ತಾರೆ.. ಇದು ಮೀಸಲು ಹಾಲು ಅಲ್ಲ.. ಇದು ಬಳಸಿರುವ ಹಾಲು ಅಂತ.. ಎಲ್ಲರಿಗೂ ಆಶ್ಚರ್ಯ..ಬೇರೆ ಹಾಲು ತಗೊಂಡು ಬನ್ನಿ ಅಂತ ಸ್ವಾಮಿಗಳ ಆಜ್ಞೆ.ಮನೆಗೆ ಬಂದು ಕೇಳಿದಾಗ ಜಾನಕಿಬಾಯಿ ಅವರ ಸೊಸೆ ಆ ಹಾಲನ್ನು ಸ್ವಲ್ಪ ಮಗುವಿಗೆ ಕುಡಿಸಿ ಮಿಕ್ಕ ಹಾಲು ಬೆಳ್ಳಿ ತಂಬಿಗೆಯಲ್ಲಿಟ್ಠು ಮಠಕ್ಕೆ ಕೊಟ್ಟಿರತಾರೆ..ನೋಡಿ ಗುರುಗಳು ಒಂದು ಸಲ ವೀಕ್ಷಿಸಲು ಮೀಸಲು ಹಾಲು ಅಲ್ಲ ಅಂತ ಹೇಳಿರುತ್ತಾರೆ.. ಎಂಥ ಜ್ಞಾನಿಗಳು..
ತಮ್ಮ ಪೂರ್ವಾಶ್ರಮದ ಅಣ್ಣನವರ ಮಗಳು ಕೊಲ್ಹಾಪುರಿಬಾಯಿ ಅವರು ತೀರ್ಥ ಕ್ಕೆ ಬಂದಾಗ ಸ್ವಾಮಿಗಳು ತೀರ್ಥ ಕೊಡಲಿಲ್ಲ. ಕಾರಣ ಏನು ಅಂತ ಕೇಳಿದಾಗ ಕೇವಲ ಮುಖ ನೋಡಿ ಶ್ವೇತ ಕುಷ್ಠ ರೋಗ ಇದೆ. ಅದಕ್ಕೆ ಪರಿಹಾರ ಕೂಡ ಹೇಳಿ ಬ್ರಾಹ್ಮಣರ ಭೋಜನ ಅನಂತರ ಎಲೆಗಳನ್ನು ತೆಗೆಯುವ ಸೇವೆ ಒಂದು ವಾರ ಮಾಡಿದ ಮೇಲೆ ರೋಗ ಪರಿಹಾರ ಆಯಿತು.ಒಮ್ಮೆ ಮಠದ ಶಿಷ್ಯರು ಎಲ್ಲ ಮುದ್ರೆ ತಗೊಳ್ತಾ ಇದ್ದಾರೆ ಆ ಸಮಯದಲ್ಲಿ ಒಬ್ಬರು ಹೆಣ್ಣು ಮಗಳಿಗೆ ಮಾತ್ರ ಮುದ್ರೆ ಕೊಡಲಿಲ್ಲ. ಯಾಕೆ ಅಂತ ಹೆಣ್ಣು ಮಗಳ ತಂದೆ ಕೇಳಿದಾಗ ಸ್ವಾಮಿಗಳು ಹೇಳ್ತಾರೆ ಮನೆಗೆ ಹೋಗಿ ಎಲ್ಲ ವಿಷಯ ತಿಳಿತದೆ ಅಂತ.. ನೋಡಿದರೆ ಅಳಿಯ ತೀರಿಕೊಂಡಿರತಾರೆ.ಒಮ್ಮೆ ಮದರಾಸು ಮಾಂಬಲ ಪ್ರಾಂತ್ಯದಲ್ಲಿ ಇದ್ದಾಗ ಸೈರಾಪೇಟ ದ ಲಕ್ಷ್ಮಣ ರಾಯರು ಎಂಬುವರು ತಮ್ಮ ಮನೆಯಲ್ಲಿ ಶ್ರೀ ರಾಮಚಂದ್ರ ದೇವರ ಪೂಜೆ ಭಿಕ್ಷೆ ಸ್ವೀಕಾರ ಕ್ಕೆ ಸ್ವಾಮಿಗಳಲ್ಲಿ ಬೇಡಿದಾಗ ಆಯಿತು ಬರುತ್ತೇವೆ ಅಂತಾರೆ. ಆದರೆ ಮಠದ ಸಿಬ್ಬಂದಿಗಳಿಗೆ ಅನಾರೋಗ್ಯ ಇರುವುದರಿಂದ ಹೋಗಲಾಗಲಿಲ್ಲ. ಲಕ್ಷ್ಮಣ ರಾಯರಿಗೆ ಹೇಳಿ ಇವತ್ತು ಬರಲಾಗುವುದಿಲ್ಲ ಆಮೇಲೆ ಬರುತ್ತೇವೆ ಅಂತ ಹೇಳಿದಾಗ ಲಕ್ಷ್ಮಣರಾಯರು ಶೀಘ್ರ ಮುಂಗೋಪಿಗಳು.. ನೀವು ಯಾಕೆ ಬರಲಿಲ್ಲ..ಅಂದಾಗ ಆ ಎಲ್ಲ ಸಾಮಗ್ರಿ ಇಲ್ಲಿಯೇ ತನ್ನಿ ಇವತ್ತು ಇಲ್ಲಿಯೇ ಮಾಡಿದರಾಯಿತು ಅಂತ ಅಂದಾಗ... ಯಾವಾಗಲೂ ಹೀಗೇ ನೇ.. ನೀವೆಲ್ಲ ಬರುವುದಿಲ್ಲ.. ಅಂತೆಲ್ಲಾ ಗಲಾಟೆ ಮಾಡಿ ಗುರುಗಳ ನಿಂದನೆ ಅಗೌರವ ಮಾಡುತ್ತ ಮನೆಗೆ ಹೋಗತಾರೆ.ಮನೆಗೆ ಹೋಗಿ ನೋಡಿದರೆ ಹೆಣ್ಣು ಮಗಳು ಬೆಂಕಿ ಅನಾಹುತಕ್ಕೆ ಒಳಗಾಗಿ ಮೈ ಸುಟ್ಟು ಕೊಂಡಿರತಾರೆ.. ಇದನ್ನು ನೋಡಿ ಅವಸರದಲ್ಲಿ ಸ್ವಾಮಿಗಳ ಹತ್ತಿರ ಬಂದು ಕ್ಷಮೆ ಯಾಚಿಸಿದಾಗ ಸ್ವಾಮಿಗಳು ಶ್ರೀ ರಾಮಚಂದ್ರ ದೇವರ ಪ್ರಸಾದ ರೂಪವಾದ ಗಂಧವನ್ನು ಲೇಪಿಸಲು ಹೇಳಿ ಒಂದೆರಡು ಘಂಟೆ ನೋವು ಪರಿಹಾರ ಆಗಿ.. ಮರುದಿನ ನೋಡಿದರೆ ಸುಟ್ಟ ಯಾವ ಗಾಯದ ಕಲೆಗಳೂ ಇಲ್ಲ.. ಪರಮಾಶ್ಚರ್ಯ..
ಎಂಥಹ ಮಹಾತಪಸ್ವಿಗಳು ಗುರುಗಳು ಎಷ್ಟು ಭಕ್ತಿಯಿಂದ ಶ್ರೀ ರಾಮಚಂದ್ರ ದೇವರ ಪೂಜೆ ಮಾಡ್ತಾ ಇದ್ದರು ಅಂತ.
ಬಳಿಕ ಅವರ ಮನೆಯಲ್ಲಿ ಯೇ ಪೂಜಾ ಭಿಕ್ಷೆ ಸ್ವೀಕಾರ ಮಾಡಿ ಪರಮಾನುಗ್ರಹ ಮಾಡ್ತಾರೆ.ಅನಂತರ ನವವೃಂದಾವನ ಕ್ಷೇತ್ರಕ್ಕ ಬರ್ತಾರ.ಶಿಥಿಲ ಆಗಿ ಹೋಗಿತ್ತು ಅದರ ಜೀರ್ಣೋದ್ಧಾರ ಮಾಡ್ತಾರೆ.ಪ್ರಾಣದೇವರ ಪ್ರತಿಷ್ಠಾಪನೆ ಕೂಡ ಅಲ್ಲಿ ಮಾಡ್ತಾರೆ.ನಂತರ ರಾಯಚೂರು ಮಾನವಿಯಲ್ಲಿ ಚಾತುರ್ಮಾಸ ಸಂದರ್ಭ ವೈಭವೋಪೇತ ಶ್ರೀ ರಾಮಚಂದ್ರ ದೇವರ ಪೂಜೆ ಭಿಕ್ಷೆ ಸ್ವೀಕಾರ ಅನ್ನ ಸಂತರ್ಪಣೆ ಎಲ್ಲ ಆಗಿದೆ. ಚಾತುರ್ಮಾಸ ಮುಗಿಯುವ ಸಂದರ್ಭ. ಸೀಮೋಲ್ಲಂಘನೆ ಮಾಡಬೇಕು ಬೇರೆ ಊರಿಗೆ ತೆರಳಬೇಕು. ಆ ದಿನ ರಾತ್ರಿ.. ಶ್ರೀಮಾನವಿ ಪ್ರಭುಗಳು ಶ್ರೀಜಗನ್ನಾಥದಾಸಾರ್ಯರು ಸ್ವಪ್ನದಲ್ಲಿ.. ನಾವು ಶ್ರೀ ಸತ್ಯಬೋಧ ಸ್ವಾಮಿಗಳ ಶಿಷ್ಯರು. ನಮಗೆ ಶ್ರೀ ರಾಮಚಂದ್ರ ದೇವರ ದರ್ಶನ ಮಾಡಿಸಲೇ ಇಲ್ಲವಲ್ಲ ಅಂತ ಹೇಳ್ತಾರೆ.ಆಗ ಮರುದಿನವೇ ಎಲ್ಲಾ ಶಿಷ್ಯರಿಗೂ ಬರ ಹೇಳಿ ಶ್ರೀ ಜಗನ್ನಾಥದಾಸಾರ್ಯರು ಹೇಳಿದಂತೆ.... ಮಾನವಿಯ ಆ ಮಂದಿರದಲ್ಲಿ ಯೇ ಶ್ರೀ ರಾಮಚಂದ್ರ ದೇವರ ಪೂಜೆ ಮಾಡ್ತಾರೆ.. ನೈವೇದ್ಯ ಮಹಾಮಂಗಳಾರತಿ ಭುಜಂಗಿಸುವಾಗ.. ತಮ್ಮ ಎಲ್ಲ ಶಿಷ್ಯರಿಗೂ ಯಾವುದೇ ಪಾರಾಯಣ ಈಗ ಬೇಡ.. ಶ್ರೀಜಗನ್ನಾಥದಾಸರು ಶ್ರೀ ರಾಮಚಂದ್ರ ದೇವರ ದರ್ಶನ ಮಾಡುತ್ತಿದ್ದಾರೆ... ನಂತರ ಹರಿನಾಮ ಸಂಕೀರ್ತನೆ ಮಾಡ್ತಾರೆ ಸ್ವಲ್ಪ ಮೌನ ಇರಲಿ ಅಂತ ಹೇಳ್ತಾರೆ..
ಯಾರಿಗೂ ಕೇಳಿಸದ ನಾಮಸಂಕೀರ್ತನೆ ಶ್ರೀ ಸತ್ಯಜ್ಞಾನತೀರ್ಥ ರಿಗೆ ಹಾಗೂ ಶ್ರೀ ಸೇತುರಾಮಾಚಾರ್ಯ(ಶ್ರೀ ಸತ್ಯಧ್ಯಾನ ತೀರ್ಥರಾಗುವವರು) ರಿಗೆ ಮಾತ್ರ ಕೇಳಿಸಿತು.. ಪರಮಾಶ್ಚರ್ಯ...
ಒಮ್ಮೆ ಪಂಢರಾಪೂರ ಪಾಂಡುರಂಗ ದರ್ಶನ ಮಾಡಿ ಅಕ್ಕಲಕೋಟ ಎಂಬ ಪ್ರಾಂತ್ಯಕ್ಕೆ ಬಂದಿದ್ದಾರೆ.. ಸಂಸ್ಥಾನ ಶ್ರೀ ರಾಮಚಂದ್ರ ದೇವರ ಪೂಜೆ ನಡೆದಾಗ.. ಪ್ರಾಂತ್ಯದ ಮಂತ್ರಿ ಅಧಿಕಾರಿ ವಾಮನ ರಾವ್ ರಾಳೆ ಎಂಬುವರು ಅಧಿಕಾರಿ ಪೋಷಾಕಿನಲ್ಲಿ ಬಂದು ದರ್ಶನಕ್ಕೆ ಬಂದಾಗ ಮಠದ ಸಿಬ್ಬಂದಿ ತಡೆದು ಅಧಿಕಾರಿ ಪೋಷಾಕು ಬೇಡ. ಮಡಿ ಪಂಚೆ ಉಟ್ಟು ಬನ್ನಿ ಅಂದಿದ್ದಾರೆ.
ಆದರೆ ಆ ಅಧಿಕಾರಿ ಇದಕ್ಕೆ ಒಪ್ಪದೇ ಇದೇ ಅಧಿಕಾರಿ ಪೋಷಾಕಿನಲ್ಲಿ ಯೇ ದರ್ಶನ ಕ್ಕೆ ಹೋಗೋದು ಅಂತ ಅಧಿಕಾರ ಮದದಿಂದ ಗಲಾಟೆ ಮಾಡಿಕೊಂಡಿದ್ದಾರೆ.ಮಠದ ಸಿಬ್ಬಂದಿ ಎಲ್ಲ ಸೇರಿ ಅವರನ್ನು ಮಠದ ಹೊರಗೆ ನಿಲ್ಲಿಸಿದ್ದಾರೆ.ಬಳಿಕ ಕೋಪದಿಂದ ಇದೆಲ್ಲಾ ಯೋಚಿಸಿಕೊಂಡು ನ್ಯಾಯಾಲಯಕ್ಕೆ ಹೋಗಿ ಮಠದವರ ಮೇಲೆ ಮೊಕದ್ದಮೆ ದಾಖಲಿಸಿದ್ದಾರೆ.
ದಾಖಲಿಸಿ ಮನೆಗೆ ಬಂದರೆ ವಿಪರೀತ ಹೊಟ್ಟೆ ನೋವು. ದಾರಿ ಕಾಣಲಿಲ್ಲ. ಅವರ ಪತ್ನಿ ಸ್ವಾಮಿಗಳಿಗೆ ಅಗೌರವ ಸಲ್ಲಿಸಿದ್ದು ಅಲ್ಲದೇ ಮೊಕದ್ದಮೆ ಹೂಡಿದ್ದು ಕಾರಣ ಎಂದಾಗ ಸ್ವಾಮಿಗಳ ಸನ್ನಿಧಿಗೆ ಬಂದು ಅಪರಾಧ ಕ್ಷಮೆ ಯಾಚಿಸಿದಾಗ ಕರುಣಾಶಾಲೀ ಗುರುಗಳು ಮನ್ನಿಸಿ ತೀರ್ಥ ಮಂತ್ರಾಕ್ಷತೆ ಕೊಟ್ಟು ಶ್ರೀ ರಾಮದೇವರ ಪ್ರಸಾದ ಸ್ವೀಕರಿಸಲು ಹೇಳಿ ಆ ಮೇಲೆ ಪ್ರಸಾದ ಸ್ವೀಕರಿಸಿದ ಮೇಲೆ ಉದರ ಶೂಲೆ ಪರಿಹಾರವಾಗಿದೆ.
ಮುಂದೆ ಉಡುಪಿ ಯಾತ್ರೆ ಮಾಡಿದ್ದಾರೆ. ಆಗ ಅದಮಾರು ವಿಬುಧಪ್ರಿಯ ತೀರ್ಥರ ಪರ್ಯಾಯ. ಶ್ರೀ ಸತ್ಯಜ್ಞಾನತೀರ್ಥರು ಉತ್ತರಾದಿ ಮಠದಲ್ಲಿ ತಂಗಿದ್ದಾರೆ. ರಥೋತ್ಸವ ಪ್ರಾರಂಭ ಆಯಿತು. ರಥ ಉತ್ತರಾದಿ ಮಠದ ಎದುರು ಬಂದಿದೆ. ಮುಂದೆ ಚಲಿಸುತ್ತಿಲ್ಲ.
ಎಲ್ಲ ಭಕ್ತರೂ ಶಿಷ್ಯ ರು ಭಾರೀ ಪ್ರಯತ್ನ ಮಾಡಿದ್ದಾರೆ ಆದರೂ ರಥ ಮುಂದೆ ಹೋಗತಾಯಿಲ್ಲ
ನೆರೆದ ಯತಿಗಳು ಜ್ಞಾನಿಗಳು ಯೋಚಿಸಿದ್ದಾರೆ. ಶ್ರೀ ಕೃಷ್ಣ ದೇವರ ದರ್ಶನ ದ ಸೂಚನೆ ಆಗಿದೆ. ಎಲ್ಲರೂ ಶ್ರೀಸತ್ಯಜ್ಞಾನ ತೀರ್ಥರಿಗೆ ನಡೆದ ವೃತ್ತಾಂತ ಹೇಳಿದಾಗ ಸ್ವಾಮಿಗಳು ಅವಸರದಲ್ಲಿ ಬಂದು ಭಕ್ತಿಯಿಂದ ಶ್ರೀ ಕೃಷ್ಣ ನ ದರ್ಶನ ಮಾಡಲಾಗಿ ರಥ ಮುಂದೆ ಚಲಿಸಿದೆ
ಇದು ಶ್ರೀ ವಿಬುಧಪ್ರಿಯ ಚರಿತ್ರೆಯಲ್ಲಿ ನಮೂದಿಸಲಾಗಿದೆ
ಮರುದಿನ ಅದಮಾರು ಶ್ರೀ ವಿಬುಧಪ್ರಿಯ ತೀರ್ಥರು ಶ್ರೀ ಕೃಷ್ಣ ನ ಪೂಜೆ ಮಾಡುತ್ತಿರುವಾಗ ಮೋಹಿನಿ ಅಲಂಕಾರ ಮಾಡ್ತಾ ಇದ್ದಾರೆ ಪಕ್ಕದಲ್ಲಿ ಶ್ರೀ ಸತ್ಯಜ್ಞಾನತೀರ್ಥರು ದೇವರ ದರ್ಶನ ಅಲಂಕಾರ ಕಣ್ತುಂಬಿಕೊಳ್ಳುತ್ತಿರುವಾಗ.. ಶ್ರೀ ವಿಬುಧಪ್ರಿಯ ತೀರ್ಥರು ಶ್ರೀ ಸತ್ಯಜ್ಞಾನತೀರ್ಥರಿಗೆ ಹೇಳ್ತಾರೆ. ಶ್ರೀ ಕೃಷ್ಣ ಮಂದಹಾಸದಿಂದ ಹೇಳ್ತಿದಾನೆ ತಾವು ಮೋಹಿನಿ ರೂಪದ ಭಗವಂತನಿಗೆ ಬಂಗಾರದ ಹೆರಳು ಸಮರ್ಪಣೆ ಮಾಡಬೇಕು ಅಂತ
ಆಗಲೇ ಸ್ವಾಮಿಗಳ ಪೂರ್ವಾಶ್ರಮದ ತಾಯೀ ಜೀವೂಬಾಯಿ ವಜ್ರ ಖಚಿತ ಬಂಗಾರದ ಹೆರಳು ತಂದಿದ್ದಾರೆ.. ಶ್ರೀ ಕೃಷ್ಣ ನಿಗೆ ಸಮರ್ಪಣೆ ಮಾಡಿದ್ದಾರೆ
ನವರತ್ನ ಖಚಿತ ಬಂಗಾರದ ಉಡುದಾರ ಟೊಂಕಿ ಕೂಡ ಸಮರ್ಪಣೆ ಮಾಡಿದ್ದಾರೆಶ್ರೀ ವಿಬುಧಪ್ರಿಯ ತೀರ್ಥರು ಶ್ರೀ ಸತ್ಯಜ್ಞಾನತೀರ್ಥರಿಗೆ ಹೇಳ್ತಾರೆ ನಾವು ವಿಬುಧಪ್ರಿಯ ರೇನೋ ಹೌದು ಆದರೆ ನೀವು ವಿಬುಧರು ಮಹಾಜ್ಞಾನಿಗಳು ಅಂತ.
ಜೋರಾಪುರದ ಪಾಂಡಪ್ಫ ಎಂಬುವವರ ಸೊಸೆ ಕಮಲಾಬಾಯಿ ಯಲಗೂರು ಪ್ರಾಣ ದೇವರ ಸೇವೆಗೆ ಅಂತ ಹೋದಾಗ ಪ್ರಾಣ ದೇವರು ಹೇಳಿದರಂತೆ ನಾವು ಸತ್ಯಜ್ಞಾನತೀರ್ಥ ರ ಜೊತೆಗೆ ಉಡುಪಿ ಯಾತ್ರೆಯಲ್ಲಿ ಇದ್ದೇವೆ. ಯಲಗೂರಿಗೆ ಬಂದ ಮೇಲೆ ಸೇವೆ ಮುಂದುವರೆಸು ಅಂತ.ಈ ಕಡೆ ಸ್ವಾಮಿಗಳು ಮಹಿಷಿ ಶ್ರೀ ಸತ್ಯಸಂಧ ತೀರ್ಥರ ದರ್ಶನಕ್ಕೆ ಹೋದಾಗ ಅಲ್ಲಿ ಯಲಗೂರು ಪ್ರಾಣದೇವರ ಅರ್ಚಕ ಬಂದಿರ್ತಾರೆ ಅವರಿಗೇ ಪ್ರಾಣದೇವರು ಆಜ್ಞೆ ಕೊಟ್ಟಿರತಾರೆ.. ಮಹಿಷಿಗೆ ಹೋಗು ಸ್ವಾಮಿಗಳಿಂದ ಮಂತ್ರಾಕ್ಷತೆ ತಗೊಂಡು ಬಾ ಅಂತ. ಆಗ ಅರ್ಚಕರು ನಡೆದ ವೃತ್ತಾಂತ ಹೇಳಿ ಮಂತ್ರಾಕ್ಷತೆ ಸ್ವೀಕರಿಸಿ ಯಲಗೂರು ಪ್ರಾಣ ದೇವರ ಮಹಾ ಮಹಿಮೆ ನೆನೆಯುತ್ತ ಯಲಗೂರಿಗೆ ಬಂದ ಮೇಲೆ ಪ್ರಾಣದೇವರು ಕಮಲಾಬಾಯಿ ಸ್ವಪ್ನದಲ್ಲಿ ಬಂದು ಯಲಗೂರಿಗೆ ಬಂದು ಸೇವೆ ಮುಂದುವರೆಸು ಅಂತ ಅಪ್ಪಣೆ ಮಾಡ್ತಾರೆ...ಹೊಸಪೇಟೆಯಲ್ಲಿ ಚಾತುರ್ಮಾಸ ಸಮಯ ಗಂಧ ಧಾರಣೆ ಸಮಯ ದ್ವಾದಶ ನಾಮ ಹಚ್ಚಿ ಕೊಳ್ಳುವ ಸಮಯದಲ್ಲೇ ಆ ಕಡಿಮೆ ಸಮಯದಲ್ಲಿ ಶ್ಲೋಕ ರಚಿಸುವವರಿಗೆ ಬಂಗಾರದ ಬಟ್ಟಲು ಕೊಡತೀವಿ ಅಂದಾಗ ಕೃಷ್ಣಾಚಾರ್ಯ ಎಂಬುವವರು ಬಹಳ ಸುಂದರ ಶ್ಲೋಕ ರಚಿಸಿದಾಗ ಬಂಗಾರದ ಬಟ್ಟಲು ಸ್ವಾಮಿಗಳು ದಯಪಾಲಿಸ್ತಾರೆ.ಮಳಖೇಡದಲ್ಲಿ ಮಧ್ವ ನವಮಿ ನಿಮಿತ್ತ ಸ್ವಾಮಿಗಳು ಹೋಗಿದ್ದಾರೆ. 20 ಸಾವಿರ ಜನ ಸೇರಿದ್ದರು. ಸೊನ್ನೆಯಿಂದ ಅಡಿಗೆಯವರು ಬಂದಿದ್ದಾರೆ. 5 ಅಥವ 6 ಸಾವಿರ ಜನ ಆಗಬಹುದು ಅಂದುಕೊಂಡರೆ 20 ಸಾವಿರ ಜನ ಬಂದಿದ್ದರು.
ಹೀಗಾಗಿ ಗಡಿಬಿಡಿಯಲ್ಲಿ ಅಕ್ಕಿ ಅನ್ನಕ್ಕಾಗಿ ಇಟ್ಟಿದ್ದಾರೆ. ಅಕ್ಕಿ ಶುದ್ಧೀಕರಣ ಆಗಿಲ್ಲ.. ಅಡುಗೆ ಸಿದ್ಧ ಆಗಿದೆ.. ಸ್ವಾಮಿಗಳು ತೀರ್ಥ ಕೊಟ್ಟು ದಕ್ಷಿಣೆ ಕೊಟ್ಟು ಎಲ್ಲರಿಗೂ ಪ್ರಸಾದಕ್ಕೆ ಕೂಡಿಸುವಾಗಆ ಪಂಕ್ತಿ ಯಲ್ಲಿ ಒಬ್ಬ ಊಟಕ್ಕೆ ಕುಳಿತವ.. ಏನಿದು ಅನ್ನದಲ್ಲಿ ಕಲ್ಲಿದೆ ಏಕೆ ಅಂತ ಗಲಾಟೆ ಮಾಡಿದಾಗ.. ಸ್ವಾಮಿಗಳು ಯಾಕೆ ಹೀಗೆ ಆಯಿತು ಅಂತ ಅಡುಗೆ ಸಿಬ್ಬಂದಿಗೆ ಕೇಳಿದಾಗ.. ತುಂಬ ಜನ ಹೀಗಾಗಿ ಅವಸರದ ಅಡುಗೆಯಲ್ಲಿ ಅಕ್ಕಿ ಆರಿಸಲಿಲ್ಲ ಹಾಗೆ ಅನ್ನ ಮಾಡಿದೀವಿ ಅಂದರು.ಆಗ ಆ ಸಿಡುಕಿನ ವ್ಯಕ್ತಿ.. ನೀವು ಕೂಡ ಕಲ್ಲು ಇರುವ ಅನ್ನ ಉಣತೀರಾ ಅಂತ ಕೇಳಿದ.. ಆಗಿನಿಂದ ಶ್ರೀ ಸತ್ಯಜ್ಞಾನತೀರ್ಥರು ನವಣೆ ಅಕ್ಕಿ ಅನ್ನ ಸ್ವೀಕರಿಸಲು ಪ್ರಾರಂಭ ಮಾಡಿದರು.ಜೋಳದ ನವಣಕ್ಕಿ ಹಸುವಿಗೆ ತಿನಿಸಿ ಬಳಿಕ ಆ ಹಸುವಿನ ಗೋಮಯ ತೆಗೆದು ತೊಳೆದು ಬಂದ ಆ ನವಣಕ್ಕಿ ತೆಗೆದು ಅಡುಗೆ ಮಾಡಿ ಅರ್ಪಣೆ ಮಾಡಿ ನಂತರ ಭಿಕ್ಷೆ ಸ್ವೀಕಾರ.. ಎಂಥ ಪರಮ ವೈರಾಗ್ಯ..
ಅದಕ್ಕೇ ಜ್ಞಾನವೈರಾಗ್ಯಸಾಗರ
ಅಂತ.. ಏನು ದೇವರಲ್ಲಿ ಪರಮ ಭಕ್ತಿ.. ಏನು ಮಹಾಜ್ಞಾನಿಗಳು.. ಏನು ವೈರಾಗ್ಯ..
ಮದರಾಸಿನಲ್ಲಿ ಒಮ್ಮೆ ಹೇಮಂತ ಋತು ಚಳಿಗಾಲ.. ಸ್ವಾಮಿಗಳು ಸ್ವಲ್ಪ ಹುಷಾರಿಲ್ಲ ಜ್ವರ.. ನಡುಗುತ್ತ ಇದ್ದಾರೆ.. ಮಲಗಿದ್ದಾರೆ.. ನಡುಗುವುದನ್ನು ಕಂಡ ಪೂರ್ವಾಶ್ರಮದ ಕಿನ್ಹಾಳ ಗೋವಿಂದಾಚಾರ್ಯ ರು ಕೇಸರಿ ಶಾಲು ತಂದು ಗುರುಗಳಿಗೆ ಹೊದಿಸಿದ್ದಾರೆ.
ಎಚ್ಚರವಾದಾಗ ಕೇಳಿದರು ಯಾರು ಶಾಲು ಹೊದಿಸಿದ್ದು ಅಂತ.. ಕಿನ್ಹಾಳ ಗೋವಿಂದಾಚಾರ್ಯ ರು ಹೊದಿಸಿದ್ದಾರೆ ಅಂತ ದಿವಾನರು ಹೇಳಿದಾಗ.. ಮಠದಲ್ಲಿ ಎರಡು ದೊಡ್ಡ ಕೊಳಗ ಇವೆ ಹುಳಿ ಸಾರು ಮಾಡಲು.. ಆ ಕೊಳಗ ತರಿಸಿ ತಣ್ಣೀರು ತುಂಬಿಸಿ ಅದರಲ್ಲಿ ಕುಳಿತು ದಿವಾನರಿಗೆ ಹೇಳಿದರಂತೆ ಈಗ ಶಾಲು ಹೊದಿಸಿ ನೋಡೋಣ ಅಂತ.. ಎಂಥ ಪರಮ ವೈರಾಗ್ಯ... ನೋಡಿ..
ಕೂತು ರಾಮದೇವರ ಧ್ಯಾನ ಜಪ ಮಾಡಿ ಜ್ವರ ಪರಿಹಾರ ಮಾಡಿಕೊಂಡ ಮಹಾನುಭಾವರು ಶ್ರೀ ಸತ್ಯ ಜ್ಞಾನ ತೀರ್ಥರು.
ಹೂವಿನಹಡಗಲಿ ರಂಗಾಪುರ ಶ್ರೀ ಲಕ್ಷ್ಮೀ ನರಸಿಂಹ ದೇವರ ದೇವಸ್ಥಾನ ದ ಪ್ರಾಕಾರದಲ್ಲಿ ಸಪ್ತಮ ಸ್ಕಂದ ಭಾಗವತ ಹೇಳುತ್ತ ಪ್ರದಕ್ಷಿಣೆ ಹಾಕ್ತಾ ಇದ್ದರು ಸ್ವಾಮಿಗಳು.ಎಲ್ಲ ಭಕ್ತಾದಿಗಳು ಹೋದ ಮೇಲೆ ಒಬ್ಬರು ತೇಜಸ್ವಿ.. ಹೊನ್ನಾಳಿ ಶ್ರೀನಿವಾಸ ತೀರ್ಥರು ಕಾಣಿಸಿಕೊಂಡರು. ಇಬ್ಬರೇ ಇದ್ದಾರೆ. ನರಸಿಂಹ ದೇವರು ಸಿಂಹ ಘರ್ಜನೆ ಮಾಡಿದ್ದಾರೆ. ಸ್ವಾಮಿಗಳು ದರ್ಶನ ಪಡೆದಿದ್ದಾರೆ.ಆಮೇಲೆ ಹೊನ್ನಾಳಿ ಶ್ರೀನಿವಾಸ ತೀರ್ಥರು ಅದೃಶ್ಯರಾದರು
ಮುಂದೆ ಎಕ್ಕುಂಡಿ ಗೆ ಹೋಗಿದ್ದಾಗ.. ಸುಧಾ ಪಾಠ ಪ್ರವಚನ ನಡೆದಾಗ ಒಂದು ವಾಕ್ಯ ದ ಅರ್ಥ ತಿಳಿಯದೆ ಎಲ್ಲರಿಗೂ ಗೊಂದಲ ಆಗಿದೆ. ರಾತ್ರಿ ಆಯಿತು ಮಲಗಿದ್ದಾರೆ. ಬೆಳಿಗ್ಗೆ ಶ್ರೀ ಸತ್ಯ ಜ್ಞಾನ ತೀರ್ಥರು ಶ್ರೀ ಸೇತುರಾಮಾಚಾರ್ಯರು ನದಿ ಸ್ನಾನಕ್ಕೆ ಹೋದಾಗ ಯಾದವಾರ್ಯ ರು ದರ್ಶನ ಕೊಟ್ಟು ಇವತ್ತಿನ ವಾಕ್ಯ ಅರ್ಥ ಚಿಂತನೆಗೆ ಎಲ್ಲ ಶಿಷ್ಯರು ಗೊಂದಲ ಮಾಡಿಕೊಳ್ಳಬೇಕಿಲ್ಲ.. ನಮ್ಮ ಟಿಪ್ಪಣಿ ಓದಿ ಅದರಲ್ಲಿ ಆ ವಾಕ್ಯಕ್ಕೆ ಸಮರ್ಪಕ ಉತ್ತರ ಇದೆ ಅಂತ ಆ ತೇಜಸ್ವಿ ಯಾದವಾರ್ಯ ರು ಕಾಣಿಸಿಕೊಂಡು ಇವರೀರ್ವರಿಗೂ ಹೇಳ್ತಾರೆ..ನಿವೃತ್ತಿ ಸಂಗಮ ಶ್ರೀ ಸತ್ಯನಿಧಿ ತೀರ್ಥರ ದರ್ಶನಕ್ಕೆ ಹೋದಾಗ ಶ್ರೀ ಜಯತೀರ್ಥರ ದರ್ಶನ ಸರ್ಪರೂಪದಲ್ಲಿ ಆದಾಗ ಹಾಲು ಇಡಲು ಸ್ವೀಕರಿಸಿ ಅನುಗ್ರಹ ಮಾಡಿದ್ದಾರೆ.
ಕೋರವಾರ ಪ್ರಾಣ ದೇವರ ಪ್ರತ್ಯಕ್ಷ ದರ್ಶನ ಪಡೆದರು. ಕೋರವಾರಕ್ಕೆ ಹೋದಾಗ ಶಿಷ್ಯರು ಮನೆಯಲ್ಲಿ ಪೂಜೆ ಮುಗಿಸಿ ಹೊರಟಾಗ ಪ್ರಾಣದೇವರು ಯಾಕೆ ರಾಮಚಂದ್ರ ದೇವರ ದರ್ಶನ ಮಾಡಿಸಲಿಲ್ಲ ಅಂತ ಕೇಳಿದರು.
ಪದ್ಧತಿ ಪ್ರಕಾರ ಯಾರ ಮನೆಯಲ್ಲಿ ಪೂಜೆ ಇರ್ತದೋ ಅವರು ಬಟ್ಟಲಲ್ಲಿ ಮಂತ್ರಾಕ್ಷತೆ ಇಟ್ಟು ಪ್ರಾಣ ದೇವರ ಸನ್ನಿಧಿಗೆ ಬಂದು ರಾಮದೇವರ ಪೂಜೆಗೆ ಬನ್ನಿ ಅಂತ ಆಹ್ವಾನ ನೀಡಬೇಕು.ಆಗ ಸ್ವಾಮಿಗಳು ಹಾಗೇ ಆಗಲಿ ಅಂದರು. ಬಲವಂತರಾವ ಕುಲಕರ್ಣಿ ಎಂಬುವರ ಮನೆಯಲ್ಲಿ ಪೂಜೆಗೆ ಸಿದ್ಧತೆ ನಡೆದಿದೆ. ಅವರ ಮನೆಯಿಂದ ಕೋರವಾರ ಪ್ರಾಣ ದೇವರ ದೇವಾಲಯ ದ ವರೆಗೂ ರಂಗೋಲಿ ಗೋಮಯದಿಂದ ಸಾರಿಸಿ.. ಅಲಂಕಾರ ಮಾಡಿದ್ದಾರೆ ಆ ದಾರಿ..
ಆಗ ಮನೆಯ ಯಜಮಾನ ಬಟ್ಟಲಲ್ಲಿ ಅಕ್ಷತೆ ತೆಗೆದುಕೊಂಡು ಪ್ರಾಣ ದೇವರಿಗೆ ಪೂಜೆಗೆ ಬನ್ನಿ ಅಂತ ಆಮಂತ್ರಣ ನೀಡಿದಾಗ ಪ್ರಾಣದೇವರು ಆಯ್ತು ಬರ್ತಿವಿ ಅಂತ ಸೂಚನೆ ಕೊಟ್ಟರು.
ತಲೆ ಅಲ್ಲಾಡಿಸಿ ಬರುವ ಸೂಚನೆ ಕೊಟ್ಟದ್ದು ಪ್ರತ್ಯಕ್ಷ ದರ್ಶಿಗಳು ಕಂಡದ್ದು ಚರಿತ್ರೆಯಲ್ಲಿ ದಾಖಲಾಗಿದೆ.
ಪೂಜೆ ನಡೆದಿದೆ. ನೈವೇದ್ಯ ಸಮಯದಲ್ಲಿ ಭಾರೀ ಗಾಳಿ ಪ್ರಾಣದೇವರ ದೇವಾಲಯದಿಂದ ಹೊರಟು ರಂಗೋಲಿ ಅಲಂಕಾರ ಮಾಡಿದ ದಾರಿಯಲ್ಲಿ ಹೋಗುತ್ತ ರಾಮದೇವರ ಪೂಜಾ ಮಂದಿರಕ್ಕೆ ಹೋಗಿ.. ನೈವೇದ್ಯ ಮಂಗಳಾರತಿ ರಮಾ ನೈವೇದ್ಯ ಪ್ರಾಣ ದೇವರ ನೈವೇದ್ಯ ಆದ ಮೇಲೆ ಮತ್ತೆ ಪ್ರಾಣದೇವರು ದೇವಸ್ಥಾನ ಕ್ಕೆ ಗಾಳಿ ರೂಪದಿಂದ ಬಂದಿದ್ದಾರೆ.
ಹೈದರಾಬಾದ ಶ್ರೀಮಂತ ದಾಮಾಜಿ ಅಂತ.. ಒಮ್ಮೆ ಸ್ವಾಮಿಗಳು ಅಲ್ಲಿ ಹೋದಾಗ ಅವರ ಶಿಷ್ಯರನ್ನು ಕೋಣ ಒಂದು ಅಟ್ಟಿಸಿಕೊಂಡು ಹೋದಾಗ ದಾಮಾ ಜೀ ಅವರ ವಾಹನ ಅಡ್ಡ ಬರಲಾಗೀ ಶಿಷ್ಯ ಆಪತ್ತಿನಿಂದ ಪಾರಾಗಿದ್ದಾರೆ. ಸ್ವಾಮಿಗಳು ಸಂತೋಷದಿಂದ ದಾಮಾ ಜೀ ಅವರಿಗೆ ಅನುಗ್ರಹ ಮಾಡಿ ಶಿಷ್ಯ ನ ಆಪತ್ತು ಪರಿಹಾರ ಮಾಡಿದ್ದಕ್ಕಾಗಿ ಅಭಿನಂದನೆ ಪೂರ್ವ ಕ ಮಂತ್ರಾಕ್ಷತೆ ಕೊಟ್ಟ ಒಂದು ವರ್ಷದಲ್ಲೀ ಯೇ ಸಂತಾನರಹಿತರಾದ ಅವರಿಗೆ ಸಂತಾನ ಭಾಗ್ಯ ಕರುಣಿಸಿದರು.
ಆಂಧ್ರದ ಗುಂಟೂರು ಮಾರ್ಗ ಗೋದಾವರಿ ತೀರ ರಾಜಮಹೇಂದ್ರಿ ಹೋಗುವಾಗ ಉತ್ತರಾಧಿಕಾರಿ ಯಾರೆಂದು ಚಿಂತಿಸುವಾಗ ಪುಷ್ಯ ಕೃಷ್ಣ ನವಮಿ ಶ್ರೀ ಸೇತುರಾಮಾಚಾರ್ಯರು ಪೂರ್ವಾಶ್ರಮದ ಗುರುಗಳು.. ಅವರಿಗೆ ಸನ್ಯಾಸ ದೀಕ್ಷೆ ಕೊಟ್ಟು ಶ್ರೀ ಸತ್ಯಧ್ಯಾನ ತೀರ್ಥರು ಅಂತ ನಾಮಕರಣ ಮಾಡುತ್ತಾರೆ.
ಆಗ ಹೇಳ್ತಾರೆ.. ಶ್ರವಣ ಮನನ ನಿಧಿಧ್ಯಾಸನ.. ಎಂಬಂತೆ ಜ್ಞಾನ ಪಡೆದ ಮೇಲೆ ಧ್ಯಾನ ಮುಖ್ಯ.. ತಮ್ಮಿಂದ ಮಠದ ಕೀರ್ತಿ ಬೆಳಗಲಿದೆ ಅಂತೆಲ್ಲಾ ಆಶೀರ್ವಾದ ಮಾಡ್ತಾರೆ.
ಸ್ವಲ್ಪ ದಿನಗಳ ನಂತರ ಶ್ರೀ ಸತ್ಯಜ್ಞಾನತೀರ್ಥರಿಗೆ ದೇಹಾಲಸ್ಯ. ಮಠದ ಶಿಷ್ಯರು ಬಂದು ಸೋಲಾಪುರದಿಂದ ವೈದ್ಯರು ಬರುವರು ಔಷಧಿ ತಗೊಳ್ಳಿ ಅಂತ ಪ್ರಾರ್ಥನೆ ಮಾಡ್ತಾರೆ. ಆದರೆ ಸ್ವಾಮಿಗಳು ಹೇಳ್ತಾರೆ. ಔಷಧಿ ಏನು ಮಾಡುತ್ತದೆ? ಭಗವತ್ ಸಂಕಲ್ಪ ದಂತೆ ಎಲ್ಲ ನಡೆಯುತ್ತದೆ ಅಂತಾರೆ.ಇನ್ನು ಒಂದು ತಿಂಗಳಲ್ಲಿ ನಾವೂ ವೃಂದಾವನಸ್ಥ ಆಗತೇವೆ ಆ ವೈದ್ಯರೂ ಕೂಡ ಇರಲ್ಲ ಅಂತಾರೆ.
ಮೈಯಲ್ಲಿ ಹುಷಾರಿಲ್ಲ.. ಶಕ್ತಿ ಇಲ್ಲ ಆದರೂ ವಾಕ್ಯಾರ್ಥಕ್ಕೆ ಬಂದ ಸಂಗಮೇಶ ಶಾಸ್ತ್ರೀ ಅವರೊಂದಿಗೆ ವಾಕ್ಯಾರ್ಥ ಮಾಡಿದ್ದಾರೆ.ಮಧ್ವಮತದ ವಿಜಯ ಪತಾಕೆ ಎತ್ತಿ ಹಿಡಿದಿದ್ದಾರೆ..
ಮಧ್ವನವಮಿ ನಂತರ ಏಕಾದಶಿ ದಿನ ಹರಿಧ್ಯಾನ ತತ್ಪರರಾಗಿ ಗೋದಾವರಿ ತೀರ ನರಸಿಂಹ ದೇವರ ಸನ್ನಿಧಾನ ರಾಜಮಹೇಂದ್ರಿಯಲ್ಲಿ ವೃಂದಾವನ ಪ್ರವೇಶ ಮಾಡುತ್ತಾರೆ.ಭಕ್ತರ ಅಭೀಷ್ಟಪ್ರದರಾಗಿ ಅನುಗ್ರಹ ಮಾಡುತ್ತಿದ್ದಾರೆ.ಶ್ರೀ ನರಸಿಂಹ ದೇವರ ಶ್ರೀನಿವಾಸ ದೇವರ ಶ್ರೀ ಕೃಷ್ಣ ದೇವರ ಪ್ರಾಣದೇವರ ಸಾಕ್ಷಾತ್ ದರ್ಶನ ಪರಮಾನುಗ್ರಹ ಕ್ಕೆ ಪಾತ್ರರಾಗಿದ್ದಾರೆ ಯಾದವಾರ್ಯ ರು ಹೊನ್ನಾಳಿ ಶ್ರೀನಿವಾಸ ತೀರ್ಥರು ಇವರನ್ನೆಲ್ಲ ಕಂಡವರು.ಮಹಿಮೆ ವರ್ಣಿಸಲು ಅಸಾಧ್ಯ.ಶ್ರೀ ಸತ್ಯಧ್ಯಾನ ತೀರ್ಥ ಶ್ರೀ ಸತ್ಯಜ್ಞಾನತೀರ್ಥ ಗುರುಗಳು ಅವರಂತರ್ಗತ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯ ರು ಅವರಂತರ್ಗತ ಶ್ರೀ ರಾಮಚಂದ್ರ ದೇವರು ಶ್ರೀ ಲಕ್ಷ್ಮೀ ನರಸಿಂಹ ದೇವರ ಅನುಗ್ರಹ ಸದಾ ಇರಲಿ ಎಂದು ಪ್ರಾರ್ಥಿಸುತ್ತ ಶ್ರೀ ಕೃಷ್ಣಾರ್ಪಣಮಸ್ತು****year 2021
ಶ್ರೀಮದುತ್ತರಾದಿ ಮಠದ 19ನೇ ಶತಮಾನದ ಶ್ರೇಷ್ಠ ಯತಿಗಳೂ, ಮಹಾ ಮಹಿಮೆಗಳನ್ನು ತೋರಿದ ಯತಿಗಳೂ, ಮಧ್ವಸಿದ್ಧಾಂತ ಅಭಿವೃದ್ಧಿಕಾರಿಣಿ ಸಭೆಯನ್ನು ಪ್ರಾರಂಭಿಸಿದವರೂ ಹಾಗೂ ತಮ್ಮ ವೃಂದಾವನ ಪ್ರವೇಶವನ್ನು ಮುಂದೇ ಅರಿತಂತಹಾ ಮಹಾನುಭಾವರೂ , ಶ್ರೀ ಸತ್ಯಧ್ಯಾನತೀರ್ಥರ ಗುರುಗಳೂ ಆದ ಶ್ರೀ ಸತ್ಯಜ್ಞಾನ ತೀರ್ಥರ ಆರಾಧನಾ (ಆಚರಣೆ ದ್ವಾದಶಿ) ಶುಭಸ್ಮರಣೆಗಳು ...
ಶ್ರೀಗಳ ಕುರಿತು ನಮ್ಮ ಶ್ರೀ ಸಮೀರಾಚಾರ್ಯ ಕಟ್ಟಿಯವರ ಲೇಖನ
👇🏽👇🏽👇🏽👇🏽👇🏽👇🏽👇🏽
ಶ್ರೀ ಸತ್ಯಜ್ಞಾನ ತೀರ್ಥ ಗುರುಭ್ಯೋ ನಮಃ
ಸತ್ಯಧೀರ ಕರಾಬ್ಜೋತ್ಥಃ
ಜ್ಞಾನ ವೈರಾಗ್ಯ ಸಾಗರಃ
ಸತ್ಯಜ್ಞಾನಾಖ್ಯ ತರಣಿಃ
ಸ್ವಾಂತ ಧ್ವಾಂತಂ ನಿಕೃಂತತು.
ಪ್ರಾತಃಸ್ಮರಣೀಯರಾದ ಮಹಾನುಭಾವರಾದ ಶ್ರೀ ಸತ್ಯಧ್ಯಾನ ತೀರ್ಥರಂತಹಾ
ಶಕ ಪುರುಷರನ್ನು ಮಾಧ್ವ ಸಮಾಜಕ್ಕೆ, ಇಡೀ ಜಗತ್ತಿಗೆ ಕರುಣಿಸಿದ ಜ್ಞಾನ ವೈರಾಗ್ಯ ಸಾಗರರು ಇಂದಿನ ಆರಾಧ್ಯರಾದ ಶ್ರೀ ಸತ್ಯಜ್ಞಾನ ತೀರ್ಥರು.
ವೈರಾಗ್ಯ ಸಾಗರಃ ಎಂದು ಅವರನ್ನು ಸ್ತುತಿಸಿದ ಹಾಗೆ ನಿಜವಾಗಿಯೂ ವೈರಾಗ್ಯ ಸಾಗರರೇ ಇವರು.
ಪರಮಾತ್ಮನ ವಿಷಯದಲ್ಲಿ ಮಾತ್ರ ಆಸಕ್ತಿ, ಉಳಿದ ವಿಷಯಗಳಲ್ಲಿ ಅನಾಸಕ್ತಿ, ಇದು ವೈರಾಗ್ಯದ ಲಕ್ಷಣ.
ಪರಮಾತ್ಮನನ್ನು ಕಾಣುವ ತವಕ, ಇದು ವೈರಾಗ್ಯವಂತರಲ್ಲಿ ಕಾಣುವ ಲಕ್ಷಣ/ಗುಣ.
ಇಂಥಹ ಅನೇಕ ಪ್ರಸಂಗಗಳು ಶ್ರೀ ಸತ್ಯಜ್ಞಾನ ತೀರ್ಥರ ಜೀವನದಲ್ಲಿ ನೋಡಲಿಕ್ಕೆ ಸಿಗುತ್ತದೆ. ದೇವರ ಕಾಣುವ ತುಡಿತ ಇದ್ದವರ ಮೇಲೆ ಪರಮಾತ್ಮ ಯಾವ ರೀತಿ ಅನುಗ್ರಹ ಮಾಡುವನು. ಈ ಪ್ರಕಾರದ ಸಂತರು ಪರಮಾತ್ಮನಿಗೆ ಎಷ್ಟು ಪ್ರಿಯರು ಎನ್ನುವುದು ಸತ್ಯಜ್ಞಾನ ತೀರ್ಥರ ತಿರುಪತಿ ದಿಗ್ವಿಜಯದ ಪ್ರಸಂಗದಲ್ಲಿ ಕಾಣಲು ಸಿಗುತ್ತದೆ.
ಸತ್ಯಜ್ಞಾನ ತೀರ್ಥರು ತಿರುಪತಿ ಬೆಟ್ಟ ಏರಿ ಹೋಗುವಾಗ, ಭಾರೀ ಮಳೆಯು ಇದ್ದಕ್ಕಿದ್ದಂತೆ ಸುರಿಯಲಾರಂಭಿಸುತ್ತದೆ. ಉಳಿದ ಶಿಷ್ಯರು ಬೇರೆ ಬೇರೆ ಕಡೆ ಆ ಮಳೆಯಿಂದ ತಪ್ಪಿಸಿ ಕೊಳ್ಳಲು ಆಶ್ರಯ ಪಡೆಯುತ್ತಾರೆ. ಆದರೆ ಪರಮಾತ್ಮನ ದರ್ಶನ ಪಡೆಯುವ ತವಕ. ಮಳೆ ಛಳಿ ಯಾವುದೂ ಲೆಕ್ಕಿಸದೇ ರಾಮ ದೇವರ ಪೆಟ್ಟಿಗೆ ಹೊತ್ತು ಸಂಪೂರ್ಣ ಅನುವ್ಯಾಖ್ಯಾನ ವನ್ನು ಮುಖೋದ್ಗತವಾಗಿ ಪಾರಾಯಣ ಮಾಡುತ್ತಾ ಮುಂದ ಸಾಗುತ್ತಾ ಶ್ರೀ ಸತ್ಯಜ್ಞಾನರು ಹೋಗುತ್ತಿದ್ದರು.
ಶುಕ್ರವಾರ ಬೆಳಿಗ್ಗೆಯ ಸಮಯಕ್ಕೆ ಹೋಗುವಷ್ಟರೊಳಗೆ ಅಭಿಷೇಕ ಮುಗಿದು ಬಾಗಿಲು ಹಾಕಿಬಿಟ್ಟಿದ್ದರು.
ಸ್ವಾಮಿಗಳ ದರ್ಶನ ಮಾಡ್ಲಿಕ್ಕೆ ಅಲ್ಲಿ ಮಹಾಂತರು, ಅಧಿಕಾರಿಗಳು ಬಿಡ್ಲಿಲ್ಲ.
ತಿಲಕ ಧಾರಣ ಆಗಬೇಕು ವೆಂಕಟೇಶ ದೇವರಿಗೆ, ತನ್ನ ದರ್ಶನಕ್ಕಾಗಿ ಇಷ್ಟು ತವಕದಿಂದ ಬಂದ ತನ್ನ ಭಕ್ತನ ಮುಖ ತಾನು ನೋಡೋ ತನಕ ತನಗೆ ತಿಲಕ ಬ್ಯಾಡ ಅಂದ ವೆಂಕಪ್ಪ. ಎಷ್ಟು ಪ್ರಯತ್ನ ಮಾಡಿದರೂ ತಿಲಕ ನಿಲ್ಲದೇ ಇದ್ದಾಗ, ಅಲ್ಲಿಯ ಮಹಾಂತರಿಗೆ ಸೂಚನೆಯಾಗಿ ಸ್ವಾಮಿಗಳಲ್ಲಿ ಕ್ಷಮೆ ಬೇಡಿ, ಯೋಗ್ಯ ಆದರದಿಂದ ಕರೆ ತಂದು ವೆಂಕಪ್ಪನ ಮುಂದೆ ನಿಲ್ಲಿಸಿದಾಗ, ತಿಲಕ ಧಾರಣೆ ಅನಾಯಾಸವಾಗಿ ಆಯಿತು.
ಶ್ರೀ ಸತ್ಯಜ್ಞಾನ ತೀರ್ಥರ ಮೂಲಕ, ಅವರ ಮಹಿಮೆಯನ್ನು ತೋರಿಸಿ ಕೊಡುವ ಜೊತೆಗೆ ನಮಗೆ, ಅವನನ್ನು ಕಾಣುವ ತವಕ ಹೇಗೆ ಇರಬೇಕು ಅನ್ನುವುದನ್ನು ವೆಂಕಪ್ಪ ತೋರಿಸಿ ಕೊಟ್ಟಿದ್ದಾನೆ.
ಪರಮಾತ್ಮನಿಗೆ ಪ್ರಿಯರು ಅಂದ್ರೆ ವಾಯುದೇವರಿಗೂ ಪ್ರಿಯರಾಗಿರಲೇಬೇಕು. ಇವರ ಜ್ಞಾನ, ಭಕ್ತಿ ವೈರಾಗ್ಯ ಅಸದೃಶ. ಕೋರ್ವಾರೇಶ ಗಾಳಿಯ ರೂಪದಲ್ಲಿ ಬಂದು ದರ್ಶನ ಕೊಟ್ಟಿದ್ದು, ಗಾಳಿಯ ರೂಪದಿಂದ ಬಂದು ಶ್ರೀರಾಮ ದೇವರ ಪೂಜೆಯನ್ನು ಆಲಿಸಿದ್ದು ಪ್ರಸಿದ್ಧ ಕಥೆ.
ಇನ್ನು ಶ್ರೀಹರಿವಾಯುಗಳ ಭಕ್ತ ಶ್ರೇಷ್ಠರಾದ ಶ್ರೀಮತ್ ಟೀಕಾಕೃತ್ಪಾದರು ಸರ್ಪ ರೂಪದಿಂದ ಪೂಜಾ ಸಮಯದಲ್ಲಿ ಬಂದು ಮಳಖೇಡಕ್ಕೆ ಬರಬೇಕು ಅಂತ ಸೂಚಿಸಿದ್ದು ಟೀಕಾಕೃತ್ಪಾದರ ಅನುಗ್ರಹಕ್ಕೂ ನಿದರ್ಶನ.
ಜ್ಞಾನ ಭಕ್ತಿ ವೈರಾಗ್ಯಕ್ಕೆ ನಿದರ್ಶನ. ಜ್ಞಾನ ವೈರಾಗ್ಯ ಸಾಗರರು - ಶ್ರೀ ಸತ್ಯಜ್ಞಾನ ತೀರ್ಥರು.
ಅವರು ಸ್ವೀಕಾರ ಮಾಡುತ್ತಿದ್ದ ಆಹಾರ ಹೇಗೆ ಅಂದರೆ, ಆಕಳಿಗೆ ಜೋಳ ಇತ್ಯಾದಿ ಹಾಕಬೇಕು, ಆಕಳು ತಿಂದು ಗೋಮಯ ಹಾಕಿದಾಗ, ಅದನ್ನು ಸಂಗ್ರಹಿಸಿ, ಅದನ್ನು ತೊಳೆದು, ಅದರಲ್ಲಿ ಏನು ಕಾಳು ಸಿಗುತ್ತವೋ ಅದಷ್ಟು ಮಾತ್ರ ಸ್ವೀಕಾರ ಮಾಡೋದು . ಉಳಿದ ಭಕ್ಷ್ಯಗಳನ್ನು ರಾಮದೇವರ ನೈವೇದ್ಯ ಅನ್ನೋದರ ಸಲುವಾಗಿ, ಭಕ್ತಿಯಿಂದ ನಾಲಿಗೆಗೆ ಹಚ್ಚಿ ಸರಿಸಿ ಬಿಡೋದು ಅಷ್ಟೇ. ಈ ರೀತಿ ವೈರಾಗ್ಯದ ಜೀವನವನ್ನು ನಡೆಸಿದವರು.
ಪೂರ್ವಾಶ್ರಮದಲ್ಲಿ ಶ್ರೀ ಸೇತುರಾಮಾಚಾರ್ಯರು(ಮುಂದೆ ಶ್ರೀ ಸತ್ಯಧ್ಯಾನ ತೀರ್ಥರು ) ಇವರ ವಿದ್ಯಾ ಗುರುಗಳು. ಅವರಲ್ಲಿ ಆಗ ತೋರಿದ ಗುರುಭಕ್ತಿ ಅತ್ಯಂತ ಆದರ್ಶಪ್ರಾಯ. ಆತಕೂರು ಮಠದಿಂದ ನದಿಯ ತನಕ( 2-3 kms ಸುಮಾರು ) ಸೇತುರಾಮಾಚಾರ್ಯರನ್ನು ತಮ್ಮ ಹೆಗಲಮೇಲೆ ಕೂಡಿಸಿಕೊಂಡು ಹೋಗುತ್ತಿದ್ದರು, ಗುರು ಸೇವಾರೂಪದಲ್ಲಿ ಅಂತ ಜನರಾಡುವರು.
ಅದೇ ರೀತಿ ಆಶ್ರಮ ಗುರುಗಳಾದ ಶ್ರೀ ಸತ್ಯಧೀರ ತೀರ್ಥರಲ್ಲಿ ತೋರಿದ ಗುರುಭಕ್ತಿ ಅದ್ವಿತೀಯ.
ಮುಂದೆ ಶ್ರೀ ಸತ್ಯಧ್ಯಾನ ತೀರ್ಥರಂಥಾ ಮಹಾನುಭಾವರನ್ನು ಜಗತ್ತಿಗೆ ಕೊಟ್ಟು ಉಪಕಾರ ಮಾಡಿ, ಗೋದಾವರೀ ತೀರ ರಾಜಮಹೇಂದ್ರಿಯಲ್ಲಿ ಬೃಂದಾವನಸ್ಥರಾದರು.
ಬಹಳ ಜಾಗೃತ ಕ್ಷೇತ್ರ.
ಬೆಳಗ್ಗೆ ಗೋದಾವರಿ ಸ್ನಾನ, ಮಳಖೇಡದಲ್ಲಿ ಪಾಠ, ಮದ್ರಪುರಿಯಲ್ಲಿ ಹಸ್ತೋದಕ, ಇದು ಅವರ ಇಂದಿನ ದಿನಚರಿ ಅಂತ ಪ್ರಸಿದ್ಧಿ ಇದೆ. ಅವರ ಬೃಂದಾವನ ಇರುವ ಜಾಗದಿಂದ ನದಿಗೆ ಹೋಗುವ ದಾರಿಯಲ್ಲಿ ಯಾರೂ ಮಲಗುವ ಹಾಗೆ ಇಲ್ಲ. ಬೆಳಿಗ್ಗೆ ಪಾದುಕೆಗಳ ಥಟ್ ಥಟ್ ಅಂತ ಶಬ್ದಗಳೂ ಕೆಲವರಿಗೆ ಕೇಳಿಸಿದೆ ಅಂತ ಕೆಲವು ಭಕ್ತರ ನುಡಿ. ಇಂದಿಗೂ, ಬರುವ ಭಕ್ತರ ಮೇಲೆ ಅನುಗ್ರಹ ಮಾಡುತ್ತಿದ್ದಾರೆ.
ಶ್ರೀ ಸತ್ಯಧ್ಯಾನ ತೀರ್ಥರು ಮಡಿಯಲ್ಲಿ ಇದ್ದಾಗ ಪ್ರಣವ ಜಪ, ಮಡಿ ಇಲ್ಲದಿದ್ದಾಗ ಅಂದ್ರೆಇರ್ತೀವಿ. ಅಂಥಾ ಮಹಾನುಭಾವರ ಅನುಗ್ರಹದಿಂದ ನನಗೆ ಈ ಶಕ್ತಿ ಅಂತ ಹೇಳುತ್ತಿದ್ದರು ಅಂತ ನನ್ನ ಅಜ್ಜವರು ಹೇಳ್ತಾ ಇದ್ದರು.
ಇಂಥಾ ಮಹಾನುಭಾವರಾದ ಶ್ರೀ ಸತ್ಯಜ್ಞಾನ ತೀರ್ಥರು
by Sameeracharya Katti
***
No comments:
Post a Comment