Friday, 10 May 2019

satyasantushta teertharu mysore 1842 matha uttaradi mutt yati 30 phalguna amavasya ಸತ್ಯಸಂತುಷ್ಟ ತೀರ್ಥರು


info from sumadhwaseva.com--->


Sri Satyasantushta Theertha


श्री सत्यसंतुष्टतीर्थरु, मैसूरु (उत्तराधिमठ)


ಆಶ್ರಮಗುರುಗಳು – ಶ್ರೀ ಸತ್ಯಸಂಕಲ್ಪತೀರ್ಥರು, ಮೈಸೂರು


ಆಶ್ರಮಶಿಷ್ಯರು- ಶ್ರೀ ಸತ್ಯಪರಾಯಣತೀರ್ಥರು, ಸಂತೇಬಿದನೂರು

Ashrama Gurugalu – Sri Satyasankalpa Tirtharu, Mysore
Ashrama Shishyaru – Sri Satyaparayana Tirtharu, Santebidanuru
Vrundavana @ Mysore Uttaradi Mutt Uttaradi Mutt Road, Mysore (Near Mysore Palace)
(He is the grandson of Poorvashrama of Sandhya Sandha Theertharu)
Ashrama Period – Just 8 months during 1841-1842AD
Poorvashrama Naama – Sri Baalacharya (Ghooli Bhaalacharya)
Profession – Asthana Pandit @ Mysore Palace
Vidya Gurugalu – Astapatri Vedavyasacharya (At that time he was a renowned Scholar in Shastras, Vyakarana & Dwaitha Siddantha)


ಸತ್ಯಸಂಕಲ್ಪವಾರ್ಧ್ಯುತ್ಥ: ಸತ್ಯಸಂತುಷ್ಠಚಂದ್ರಮಾ: |

ಪ್ರಾರ್ಥಿತಾಶೇಷದಾತಾ ಚ ಭಕ್ತವೃಂದಸ್ಯ ನಿತ್ಯದಾ ||



सत्यसंकल्पवाध्र्युक्थ: सत्यसंतुष्ठचंद्रमा: ।
प्रार्थिताशेषदाता च भक्तवृंदस्य नित्यदा ।

“Shastra Ghooli” – When he was one of the Asthana Pandits in Mysore Palace, a very well known Pandit by name Chandramouli Avadhani and challenged the Asthana Pandits of Mysore Palace. Even though there were several pundits, no one came forward to argue with Chandramouli Avadhani. Sri Balachaarya, took up the challenge and after a couple of days of Vagvada involving Tarka, Shastra and other philosophical points Sri Balaacharya emerged victorious. After the defeat of the pride ridden Chandramouli, the Maharaja of Mysore felt very happy and felicitated Sri Balacharya with the title “SHASTRA GHOOLI” .
Contemporaries : Sri Vidyanidhi Thirtharu of Vyasaraja Mutt, Sri Sugnanendra Theertharu of Rayara Mutt.
Mukhyaprana idol –  Sri Sheshachandrikacharyaru had given the idol of Mukhyaprana to the ancestors of Balacharya (in his poorvashrama).   Later on, as per the instruction of Sri Satya Santustaru, Sri Satya Parayanaru has done the Pratista of Sri Mukhya Pranadevaru at Uttaradi Mutt, Mysore just opposite to his Vrundavana.
**********

info from madhwamtrutha.org--->


Sri Satyasantushta Theertha was great pundit during his Poorvashrama and was well versed with Shastras. Mysore kings used to respect him for his scholarship. He was asthan vidwan to Mysore kingdom during his Poorvashrama.
Sri Satyasantushta Theertha was the contemporary of Sri Vidyanidhi Theertha of Sri Vyasaraja Mutt and Sri Sugnanendra Theertha of Sri Raghavendra Swamy Mutt. Sri Vyasaraja Mutts Peetadhipathi Sri Raghunatha Theertha (also famously known as Sri Sheshachandrikacharya) had presented the idol of Sri Mukhyaprana (which His Holiness has performed Pooja for many years) to Sri Balacharya’s ancestors as an honor to their knowledge and panditya.

Sri Satyasantushta Theertha gave Ashrama to Sri Gururajacharya (Poorvashrama Grandson of Sri Satyasandha Theertha) and named him Sri Satyaparayana Theertha and entered Vrundavana at Mysore besides his guru.
********

shri gurubyO namaha, hari Om...

phAlguNa bahuLa AmAvasya is the ArAdhane of shri satyasantushTa tIrtharu of uttarAdi maTa.

shri satyasantushTa tIrtharu...

Period: 8 months
Parampare: uttarAdi maTa, #30
Aradhana: phAlguNa amAvAsya
brindAvana: Mysore
gurugaLu: shri satyasankalpa tIrtharu
shishyaru: shri satyaparAyana tIrtharu

info from uttaradimutt.org---> Sri Sathyasanthustha Theertha was the Peethadipathi of Sri Uttaradi maTa for a period of just 8 months. Sri Sathyasankalpa tIrtharu initiated His Holiness into Sanyasa. During the period of His Holiness, Sri Uttaradi Matha was facing financial crisis and His Holiness was supposed to have improved the financial state to a large extent.

Sri Sathyasanthustha Theertha before becoming the Peethadipathi of Sri Uttaradi mAta was known by the name of Sri Balacharya. Sri Balacharya was the ashthana pandita in the Kingdom of Mysore. Sri Balacharya learnt Shastras under the tutelage of Sri Ashthapatri Vedavyasacharya who himself was a known exponent of Shastras, Vyakarana, Dvaita Siddantha as well as other philosophies. At that time all the well-known pandits were being nurtured and held in high esteem by the Maharaja of Mysore. The Maharaja of Mysore himself was again a great knowledgeable person and His Highness had always treated other pandits with due respect and provided them all the necessary benefits so that the flow of true knowledge would go on un-interrupted / unhindered.

In those days, there used to be a assembly of Pandits from various fields known as Vidhwat Sabhas under the sponsorship of the Maharajas. Each Pandit would put forth His views and there used to be debates associated with various topics. At the end of the sabha the pandits would be felicitated and honored appropriately. In one of those Sabhas held under the sponsorship of the Maharaja of Mysore, a very well known pandit Chandramouli Avadhani came over and with all false pride challenged the Ashthana Vidwans (Sri Balacharya was also one of them) into debate. All the vidwans were frightened and afraid to face Chandramouli Avadhani since they all knew the capabilities of him. Sri Balacharya took up the challenge thrown in by Chardramouli Avadhani and after a couple of days of arguments and counter arguments involving Tarka, Shastra and other philosophical points Sri Balacharya emerged victorious. The way Sri Balacharya debated with Chardramouli Avadhani looked like a WILD BULL putting forth its brute force. After the defeat of the pride ridden Chandramouli, the Maharaja of Mysore felt extremely happy and gave Sri Balacharya the title of "SHASTRA GHOOLI" and felicitated him appropriately.

One of the points that is worth mentioning is that Sri Balacharya belonged to the Navarathna lineage who are very well known for their knowledge on Sahstras, Dvaita Siddantha and other aspects of Tarka, Nyaya etc. The title called as "NAVARATHNA" was given to Sri Madgalacharya who along with his seven children and son-in-law had defeated many other pandits in the early days of when a similar Vidwat Sabha had taken place under the leadership of another Sri Uttaradi Math Peethadipathi "Sri Sathyavrata Theertha".  Sri Sathyasanthushtha Theertha was the contemporary of Sri Vidhyanidhi Theertha of Sri Vyasaraja Matha and Sri Sugynanendra Theertha of Sri Raghavendra Swamy Matha. Sri Vysaraja Math’s Peethadipathi Sri Raghunatha Theertha (also famously known as Sri Seshachandrikacharya) had presented the idol of Sri Mukhyaprana (which His Holiness has performed pooja for many years) to Sri Balacharya’s ancestors as a honor to their knowledge and panditya.

Even to this day the lineage is maintaining the same as a mark of respect to the ancestors as well as Sri Balacharya (Sri Sathyasanthustha Theertha). Sri Balacharya’s later generations have also been well known for their knowledge and innumerable number of books they had published.

Sri Sathyasanthustha Theertha also had a unique honor of leading a Vidwat Sabha under the sponsorship of the Maharaja of Mysore. His Holiness had on that occasion invited many scholars from all over India. He felicitated His student of pre-sanyasa days Sri Anandacharya. His Holiness also honored lots of other pandits with many gifts and the Maharaja of Mysore also followed suit in honoring the pandits appropriately. As said earlier, the time period of Sri Sathyasanthustha Theertha was just 8 months and the sanchara of His Holiness is known to be very less. Sri Sathyasanthustha Theertha initiated the Sri Gururajacharya (Grandson of Sri Sathyasandha Theertha) as the next successor for the Peethadipathi of Sri Uttaradi Math and named Him Sri Sathyaparayana Theertha who was a scholar par excellence.

Sri Sathyasanthustha Theertha entered Brindavana in Mysore and His brindavana is located next to the Brindavana of His Guru Sri Sathyasankalpa Theertha. His Holiness also had instructed Sri Sathyaparayana Theertha to do the pratishthana of Sri Mukhya Prana just opposite to their Brindavana and it is believed that even to this day Sri Sathyasanthustha Theertha learns the intricacies of Madhva Shastra under His Guru Sri Sathyasankalpa Theertha.

Contact DetailsPlace: Mysore Phone no: 0821-2445183

***
Sri Sri Sri 1008 Satyasantushta Tirtaru - Phalguna Bahula Amavasya

|| सत्यसंकल्पवार्ध्युत्थः सत्यसंतुष्टचंद्रमाः ।
प्रार्थिताशेषदाता च भक्तवृंदस्य नित्यदा ||


The poorvashrama name of Gurugalu was Ghooli Balacharya. Learned pundiths called him Shastra Ghooli because of his ability to turn any debate in his favour and win over opponents. He got ordained into sainthood by His gurugalu Sri Sri 1008 Satyasankalpa Tirtaru.

His poorvashrama disciple Anandalwa was adjudged the best scholar of the times in presence of the King and was duly recognized by his contemporaries. He organized debates and got one and all 
rewarded by the King, a sum of 3000 "Bahaduri" gold coins. It seemed like Yudishtira paying respect to all Vipras in the presence of Vedavyasadevaru - such was the spectacle. It is believed there was a shower of divine flowers on the occasion.

Sri Sri Satyasantushta swamigalu took ill, during the event and vested interests, in collusion with British officers tried to take over the matha by surrendering the properties to the Mysore kingdom. However, swamiji did not agree to such and the matha properties were safeguarded.

In a few days, difficult times passed. On advice of devotees and the King, swamigalu anointed Haveri Gururayachar as successor (he was the descendant of Sri Sri Satyasandha Tirtaru poorvashrama), and named him as Sri Sri 1008 Satyaparayana Tirtaru. 
After this event, mahaswamigalu attained the lotus feet of Srihari in Mysuru on Phalguna Bahula Amavasya.

ಸತ್ಯ ಸಂತುಷ್ಟ ತೀರ್ಥರು  ಫಾಲ್ಗುಣ ಬಹುಳ ಅಮಾವಾಸ್ಯೆ

ಗುರುಗಳ ಪೂರ್ವಾಶ್ರಮ ನಾಮ ಘುಳಿ ಬಾಳಾಚಾರ್ಯ.  ಯಾವದೇ ಶಾಶ್ತ್ರದಲ್ಲಿ ವಾದ ವಿದ್ದರೂ, ವಿಷಯವನ್ನು ತಮ್ಮ ಅಪಾರವಾದ ಪಾಂಡಿತ್ಯದ ಮೂಲಕ  ಎದುರಾಳಿಗಳ ವಾದಕ್ಕೆ ಬೀಗ ಹಾಕುತ್ತಿದ್ದರು. ಈ ಕಾರಣದಿಂದ ಶ್ರೀಗಳು  ವಿದ್ವಾಂಸರು ಇವರನ್ನು ಶಾಶ್ತ್ರ ಘುಳಿ ಎಂದು ಕರೆಯುತ್ತಿದ್ದರು. ಗರುಗಳಾದ ಸತ್ಯ ಸಂಕಲ್ಪರು ಇವರಿಗೆ ಆಶ್ರಮಕೊಟ್ಟು ಸತ್ಯ ಸಂತುಷ್ಟ ತೀರ್ಥರೆಂದು ಕರೆದರು. ತಮ್ಮ ಪೂರ್ವಾಶ್ರಮದ ಶಿಷ್ಯರಾದ ಆನಂದಾಳ್ವ  ರೆಂಬ ಪಂಡಿತರೇ ಶ್ರೇಷ್ಠ ವಿದ್ವಾಂಸರೆಂದು ಮಹಾರಾಜರೆದುರು  ತೀರ್ಮಾನ ಮಾಡಿಸಿ ಅವರಿಗೆ ಇತರೇ ಪಂಡಿತರಿಂದ ಜಯಪತ್ರ ಕೊಡಿಸಿದರು. 

ಪಂಡಿತರ ವಾಕ್ಯಾರ್ಥವನ್ನು ಏರ್ಪಡಿಸಿ ಸ್ವತಃ ಮಹಾರಾಜನಿಂದ ಸಕಲರಿಗೂ ಸಂಭಾವನೆ ಕೊಡಿಸಿದರು. ಮೂರುಸಾವಿರ ಬಹದೂರಿ ಬಂಗಾರದ ನಾಣ್ಯಗಳನ್ನು ಸಂಭಾವನೆಗಾಗಿ ಇಡಿಸಿದ್ದರು. ಈ ಸನ್ನಿವೇಶವನ್ನು ವೇದವ್ಯಾಸರೆದುರು ಧರ್ಮರಾಜ ಸಕಲ ವಿಪ್ರವರ್ಗಕ್ಕೆ ದಾನಮಾಡಿದಂತಾಯಿತು ಎಂದು ವರ್ಣಿಸಿದ್ದಾರೆ. ಆಗ ಪುಷ್ಪ ವೃಷ್ಟಿ ಆಯಿತೆಂದೂ ಪ್ರತೀತಿ ಇದೇ.  ಸತ್ಯಸಂತುಷ್ಟರಿಗೆ ಮಧ್ಯದಲ್ಲಿ ಅರೋಗ್ಯ ಸರಿಯಾಗಿ ಇರದೇ ಇದ್ದ ಕಾರಣ ಕೆಲವು ಪಂಡಿತರು ತಮಗೆ ಆಶ್ರಮ ಸಿಗಬೇಕೆಂದು  ಆಂಗ್ಲ ಸರಕಾರ ಮತ್ತು ಮೈಸೂರು ಸರಕಾರದ ವಶಕ್ಕೆ ಮಠದ ಆಸ್ತಿ  ಒಪ್ಪಿಸಬೇಕೆಂದು ಕಾಗದ ಪತ್ರ ಮಾಡಿಸಲು ಮುಂದಾದರು. ಗುರುಗಳು ಇದಕ್ಕೆ ಒಪ್ಪಿಗೆ ಕೊಡಲಿಲ್ಲ.  ನಂತರ ಕೆಲದಿನದ ನಂತರ ಭಕ್ತರು ಮತ್ತು ಅನುಯಾಯಿಗಳ ಮಾತಿನಂತೆ ಮಠದ ಆಸ್ತಿ ಉಳಿಯಿತು.  ಆಶ್ರಮವನ್ನು ಮಹಾರಾಜರ ಮಧ್ಯಸ್ತಿಕೆಯಂತೆ ಹಾವೇರಿ ಗುರುರಾಯಾಚಾರ್ಯರಿಗೆ ಕೊಟ್ಟರು.  ಶ್ರೀ ಸತ್ಯಸಂಧ ತೀರ್ಥರ ವಂಶಸ್ಥರಾಗಿದ್ದರು.  ಗುರುರಾಯಾಚಾರ್ಯರಿಗೆ ಸತ್ಯಪಾರಾಯಣತೀರ್ಥ ಎಂದು ಹೆಸರಿಟ್ಟು ತುರ್ಯಾಶ್ರಮ ಕೊಟ್ಟರು.  ಸತ್ಯಸಂತುಷ್ಟ ತೀರ್ಥರು ಫಾಲ್ಗುಣ ಅಮಾವಾಸ್ಯೆ ದಿನ ಹರಿ ಧ್ಯಾನ ಪರರಾದರು.
***

ಸತ್ಯ ಸಂತುಷ್ಟ ತೀರ್ಥರು  ಫಾಲ್ಗುಣ ಬಹುಳ ಅಮಾವಾಸ್ಯೆ

ಗುರುಗಳ ಪೂರ್ವಾಶ್ರಮ ನಾಮ ಘುಳಿ ಬಾಳಾಚಾರ್ಯ.  ಯಾವದೇ ಶಾಶ್ತ್ರದಲ್ಲಿ ವಾದ ವಿದ್ದರೂ, ವಿಷಯವನ್ನು ತಮ್ಮ ಅಪಾರವಾದ ಪಾಂಡಿತ್ಯದ ಮೂಲಕ  ಎದುರಾಳಿಗಳ ವಾದಕ್ಕೆ ಬೀಗ ಹಾಕುತ್ತಿದ್ದರು. ಈ ಕಾರಣದಿಂದ ಶ್ರೀಗಳು  ವಿದ್ವಾಂಸರು ಇವರನ್ನು ಶಾಶ್ತ್ರ ಘುಳಿ ಎಂದು ಕರೆಯುತ್ತಿದ್ದರು. ಗರುಗಳಾದ ಸತ್ಯ ಸಂಕಲ್ಪರು ಇವರಿಗೆ ಆಶ್ರಮಕೊಟ್ಟು ಸತ್ಯ ಸಂತುಷ್ಟ ತೀರ್ಥರೆಂದು ಕರೆದರು. ತಮ್ಮ ಪೂರ್ವಾಶ್ರಮದ ಶಿಷ್ಯರಾದ ಆನಂದಾಳ್ವ  ರೆಂಬ ಪಂಡಿತರೇ ಶ್ರೇಷ್ಠ ವಿದ್ವಾಂಸರೆಂದು ಮಹಾರಾಜರೆದುರು  ತೀರ್ಮಾನ ಮಾಡಿಸಿ ಅವರಿಗೆ ಇತರೇ ಪಂಡಿತರಿಂದ ಜಯಪತ್ರ ಕೊಡಿಸಿದರು. 

ಪಂಡಿತರ ವಾಕ್ಯಾರ್ಥವನ್ನು ಏರ್ಪಡಿಸಿ ಸ್ವತಃ ಮಹಾರಾಜನಿಂದ ಸಕಲರಿಗೂ ಸಂಭಾವನೆ ಕೊಡಿಸಿದರು. ಮೂರುಸಾವಿರ ಬಹದೂರಿ ಬಂಗಾರದ ನಾಣ್ಯಗಳನ್ನು ಸಂಭಾವನೆಗಾಗಿ ಇಡಿಸಿದ್ದರು. ಈ ಸನ್ನಿವೇಶವನ್ನು ವೇದವ್ಯಾಸರೆದುರು ಧರ್ಮರಾಜ ಸಕಲ ವಿಪ್ರವರ್ಗಕ್ಕೆ ದಾನಮಾಡಿದಂತಾಯಿತು ಎಂದು ವರ್ಣಿಸಿದ್ದಾರೆ. ಆಗ ಪುಷ್ಪ ವೃಷ್ಟಿ ಆಯಿತೆಂದೂ ಪ್ರತೀತಿ ಇದೇ.  ಸತ್ಯಸಂತುಷ್ಟರಿಗೆ ಮಧ್ಯದಲ್ಲಿ ಅರೋಗ್ಯ ಸರಿಯಾಗಿ ಇರದೇ ಇದ್ದ ಕಾರಣ ಕೆಲವು ಪಂಡಿತರು ತಮಗೆ ಆಶ್ರಮ ಸಿಗಬೇಕೆಂದು  ಆಂಗ್ಲ ಸರಕಾರ ಮತ್ತು ಮೈಸೂರು ಸರಕಾರದ ವಶಕ್ಕೆ ಮಠದ ಆಸ್ತಿ  ಒಪ್ಪಿಸಬೇಕೆಂದು ಕಾಗದ ಪತ್ರ ಮಾಡಿಸಲು ಮುಂದಾದರು. ಗುರುಗಳು ಇದಕ್ಕೆ ಒಪ್ಪಿಗೆ ಕೊಡಲಿಲ್ಲ.  ನಂತರ ಕೆಲದಿನದ ನಂತರ ಭಕ್ತರು ಮತ್ತು ಅನುಯಾಯಿಗಳ ಮಾತಿನಂತೆ ಮಠದ ಆಸ್ತಿ ಉಳಿಯಿತು.  ಆಶ್ರಮವನ್ನು ಮಹಾರಾಜರ ಮಧ್ಯಸ್ತಿಕೆಯಂತೆ ಹಾವೇರಿ ಗುರುರಾಯಾಚಾರ್ಯರಿಗೆ ಕೊಟ್ಟರು.  ಶ್ರೀ ಸತ್ಯಸಂಧ ತೀರ್ಥರ ವಂಶಸ್ಥರಾಗಿದ್ದರು.  ಗುರುರಾಯಾಚಾರ್ಯರಿಗೆ ಸತ್ಯಪಾರಾಯಣತೀರ್ಥ ಎಂದು ಹೆಸರಿಟ್ಟು ತುರ್ಯಾಶ್ರಮ ಕೊಟ್ಟರು.  ಸತ್ಯಸಂತುಷ್ಟ ತೀರ್ಥರು ಫಾಲ್ಗುಣ ಅಮಾವಾಸ್ಯೆ ದಿನ ಹರಿ ಧ್ಯಾನ ಪರರಾದರು.
***

ಶ್ರೀ ಸತ್ಯಸಂತುಷ್ಟ ತೀರ್ಥರು 

 ಲೇಖಕರು : ಫಣೀಂದ್ರ ಕೆ 

 ||ಸತ್ಯಸಂಕಲ್ಪವಾರ್ಧ್ಯುತ್ಥ: ಸತ್ಯಸಂತುಷ್ಠಚಂದ್ರಮಾ: | 
 ಪ್ರಾರ್ಥಿತಾಶೇಷದಾತಾ ಚ ಭಕ್ತವೃಂದಸ್ಯ ನಿತ್ಯದಾ || 

ಶ್ರೀ ಹಂಸ, ಉತ್ತರನಾಮಕ ಪರಮಾತ್ಮನ ಸಾಕ್ಷಾತ್ ಪರಂಪರೆಯಲ್ಲಿ, ಶ್ರೀ ಸನಕಾದಿ, ದುರ್ವಾಸರು, ಕೈವಲ್ಯ ತೀರ್ಥರು, ಪರತೀರ್ಥ, ಅಚ್ಚುತ ಪ್ರೇಕ್ಷಾದಿ ಸಕಲ ಪರಂಪರೆಯಲ್ಲಿ, ವಿಶ್ವಗುರು ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ  ಶ್ರೀ ಪದ್ಮನಾಭಾದಿ ಜಯತೀರ್ಥರು ಮೊದಲಾದ  ಶ್ರೀಮದ್ದುತ್ತರಾದಿ ಮಠದ ಯತಿ ಪರಂಪರೆಯಲ್ಲಿ  ಬರುವ ಶ್ರೀ ಸತ್ಯಸಂಕಲ್ಪ ತೀರ್ಥರ ಕರಕಮಲ ಸಂಜಾತರಾದ, ಮಹಿಷಪುರಿ ನಿವಾಸಿಗಳಾದ ಶಾಸ್ತ್ರಾರ್ಥದಲ್ಲಿ ಗೂಳಿಗಳಂತೆ ಪೂರ್ವಾಶ್ರಮದಲ್ಲಿ ಪ್ರಸಿದ್ಧರಾದ ಭಕ್ತರ ಪ್ರಾರ್ಥನೆಗೆ ಅತಿಶೀಘ್ರದಲ್ಲಿ ವರಗಳನ್ನು ಕರುಣಿಸುವ ಶ್ರೀಸತ್ಯಸಂತುಷ್ಟ ತೀರ್ಥರ ಆರಾಧನಾ ಮಹೋತ್ಸವ. 

ಶ್ರೀ  ಸತ್ಯಸಂತುಷ್ಟ ತೀರ್ಥರ ಪೂರ್ವಾಶ್ರಮದ ಹೆಸರು ಶ್ರೀ ಬಾಳಚಾರ್ಯರು . ಮೈಸೂರಿನ ರಾಜ್ಯದ ಆಸ್ತಾನ ಪಂಡಿತರು ಆಗಿದ್ದರು. ಪೂರ್ವಾಶ್ರಮದಲ್ಲಿ  ಅಮೋಘ ವಿದ್ವತ್ ಮತ್ತು ಪಾಂಡಿತ್ಯದಿಂದ  ಶಾಸ್ತ್ರಾರ್ಥ  ವಾದಿಗಳ ನಿಗ್ರಹ ಮಾಡುತ್ತಿದ್ದರು. ಮೈಸೂರು ರಾಜ್ಯಕ್ಕೆ ಯಾರಾದರೂ ಪಂಡಿತರು ಆಗಮಿಸಿದರೆ ರಾಜರು ಸೂಚಿಸುತ್ತಿದ್ದದ್ದು ಶ್ರೀ ಬಾಳಾಚಾರ್ಯರನ್ನೇ. 

ಇವರು ಶ್ರೀ ಅಸ್ತಪತ್ರಿ ವೇದವ್ಯಾಸಚಾರ್ಯರಲ್ಲಿ ಶಾಸ್ತ್ರ,ವ್ಯಾಕರಣ, ಮತ್ತು ದ್ವೈತ ಸಿದ್ದಾಂತ ಪಾಠಗಳನ್ನು ತತ್ವಶಾಸ್ತ್ರಗಳನ್ನೂ  ಕಲಿತಿದ್ದರು. ಮೈಸೂರು ಮಹಾರಾಜರು ಇವರಲ್ಲಿ ಅತ್ಯಂತ ವಿಶ್ವಾಸ ಮತ್ತು ಗೌರವಾದಿಗಳನ್ನು ತೋರುತ್ತಿದ್ದರು. 

 ಶಾಸ್ತ್ರಗೂಳಿ ಎಂಬ ಬಿರುದನ್ನೂ ಪಡೆದದ್ದು 
ಒಮ್ಮೆ ಮೈಸೂರು ಸಂಸ್ಥಾನದಲ್ಲಿ ಮಹಾರಾಜರ ಸಮ್ಮುಖದಲ್ಲಿ ವಿದ್ವತ್ಸಭೆ ನಡೆಯುತ್ತಿತ್ತು ಅಲ್ಲಿದ್ದ ಪ್ರತಿಯೊಬ್ಬ ಪಂಡಿತರು ತಮ್ಮ ಅಘಾದ ಪಾಂಡಿತ್ಯದಿಂದ  ಕೂಡಿದವರಾಗಿದ್ದರು,  ಅಲ್ಲಿ ಒಬ್ಬ ಅದ್ವೈತ ಪಂಡಿತರಾದ ಶ್ರೀ ಚಂದ್ರಮೌಳಿ ಅವಧಾನಿಗಳು ಇವರಲ್ಲಿ ಶಾಸ್ತ್ರಾರ್ಥವಿಚಾರಕ್ಕಾಗಿ ಇವರನ್ನು ಕರೆದರೂ, ಚಂದ್ರಮೌಳಿ ಅವಧಾನಿಗಳು ತಮ್ಮ ಪ್ರೌಢಿಮೆಯಿಂದ ಹೆಸರುವಾಸಿಯಾಗಿ ಬೇರೆಲ್ಲ ಸಂಸ್ಥಾನಗಳಲ್ಲಿ  ವಿಜಯ  ಪತ್ರ ಪಡೆದಿದ್ದವರು, ಇವರು ಶ್ರೀ ಬಾಳಾಚಾರ್ಯರ ಬಗ್ಗೆ ಕೇಳಿ ಹೇಗಾದರು ಮಾಡಿ ಇವರನ್ನು ಸೋಲಿಸಲೇಬೇಕೆಂದು ಇವರಲ್ಲಿ ಶಾಸ್ತಾರ್ಥವಿಚಾರ ಮಾಡಲು ಪ್ರಾರಂಭಿಸಿದರು, ಆಗಿನ ಮಹರಾಜರು ಕೂಡ ಈ ಸಭೆಯಲ್ಲಿ ಪಾಲ್ಗೊಂಡು ನಮ್ಮ ಮುಂದೆಯೇ ಈ ಶಾಸ್ತ್ರಾರ್ಥ ವಿಚಾರಗಳು ನಡೆಯಬೇಕು ಎಂಬುದಾಗಿ ಹೇಳಿ ಮಂಡನೆಗಳನ್ನು ಕೇಳಲಾರಂಭಿಸಿದರು, ಹೀಗೆ ಹಲವಾರು ದಿನ ಕಳೆಯಿತು, ತರ್ಕ, ಶಾಸ್ತ್ರ, ತತ್ವ, ಉಪನಿಷತ್ , ಹೀಗೆ ಎಲ್ಲಾ ವಿಷಯಗಳ ಮಂಡನೆಯಲ್ಲಿ ಶ್ರೀ ಬಾಳಾಚಾರ್ಯರು ವಿಜಯವನ್ನು ಹೊಂದುತ್ತಿದ್ದರು. ಕಡೆಯಲ್ಲಿ ಚಂದ್ರಮೌಳಿ ಅವಧಾನಿಗಳು ನಾವು ನಿಮ್ಮ ಪಾಂಡಿತ್ಯದ ಮುಂದೆ ಶರಣಾಗಿದ್ದೇವೆ, ನಮ್ಮಲ್ಲಿ ಪ್ರತಿಪಾದಿಸುವದಕ್ಕೆ ವಿಷಯಗಳು ಇಲ್ಲ ಎಂದು ಹೇಳಿದರು . ಹಾಗೆ ತಾವು ಸಂಪಾದಿಸಿದ್ದ ಎಲ್ಲಾ ವಿಜಯಪತ್ರಿಕೆಗಳನ್ನು ಶ್ರೀ ಬಾಳಾಚಾರ್ಯರಿಗೆ ಕೊಟ್ಟು ಇಷ್ಟು ನಾವು ಜ್ಞಾನದ ನಿಧಿಗಳನ್ನು ನಾವು ನೋಡಿಲ್ಲ ಎಂದು ಹೇಳಿದರು. ಸಂತಸಗೊಂಡ ಮಹಾರಾಜರು ನೀವು ಸಾಮಾನ್ಯರಲ್ಲ  " ಶಾಸ್ತ್ರ ಗೂಳಿ "  ಎಂದು ಬಿರುದನ್ನೂ ಕೊಟ್ಟು ವೈಭವದಿಂದ ಸನ್ಮಾನಿಸಿದರು . ನವರತ್ನ ಮನೆತನದಲ್ಲಿ ಬಂದಂತಹ  ನವರತ್ನರು ಎಂದು ವಿದ್ವಜನರು ಸನ್ಮಾನಿಸುತ್ತಿದ್ದರು. 

ಶ್ರೀ ಸತ್ಯಸಂಕಲ್ಪ ತೀರ್ಥರಿಂದ ಸನ್ಯಾಸಾಶ್ರಮ ಮೈಸೂರಿನಲ್ಲಿ ಸ್ವೀಕರಿಸಿ ಶ್ರೀ ಸತ್ಯಸಂತುಷ್ಟತೀರ್ಥರು ಎಂಬ ಆಶ್ರಮ ನಾಮಾಂಕಿತರಾಗಿದ್ದರು. ಇವರ ಸಮಕಾಲೀನರು, ಶ್ರೀ ವ್ಯಾಸರಾಜಮಠದ ಶ್ರೀ ವಿದ್ಯಾನಿಧಿ ತೀರ್ಥರು, ಶ್ರೀ ರಾಘವೇಂದ್ರ ಮಠದ ಶ್ರೀ ಸುಜ್ಞಾನೇಂದ್ರ ತೀರ್ಥರು. 

ಶ್ರೀ ವ್ಯಾಸರಾಜ ಮಠದ ಯತಿಗಳಾದ ಶ್ರೀ ರಘುನಾಥ ತೀರ್ಥರು ( ಶ್ರೀ ಶೇಷಚ0ದ್ರಿಕಾಚಾರ್ಯರು) ಮುಖ್ಯಪ್ರಾಣದೇವರ ಪ್ರತಿಮೆಯನ್ನು ಕೊಟ್ಟಿದ್ದರು, ಅದು ಈಗಿನ ಮೈಸೂರಿನ ಉತ್ತರಾಧಿಮಠದಲ್ಲಿ ಶ್ರೀ ರೋಗಮೋಚನ ಧನ್ವಂತರಿ ದೇವರ ಸನ್ನಿಧಾನದಲ್ಲಿ ಇದೆ . 

ತಮ್ಮ ಆಶ್ರಮಸಮಯದಲ್ಲಿ ಹಲವಾರು ವಿದ್ವತ್ಸಭೆಗಳನ್ನೂ ನಡೆಸಿದ್ದರು , ಸದಾ ಶಾಸ್ತ್ರಚಿಂತನೆ ಇವರ ಉಸಿರಾಗಿತ್ತು ಎಂದರೆ ತಪ್ಪಾಗಲಾರದು, ಮೈಸೂರಿನ ಮಹಾರಾಜರು ಇವರಲ್ಲಿ ಅತ್ಯಂತ ಭಕ್ತಿ, ಮತ್ತು ವಿನಮ್ರವಾಗಿ ಇದ್ದುದ್ದರಿಂದ ಆಗಿನ ಕಾಲದ ಪಂಡಿತರಿಗೆ ಮುತ್ತು ರತ್ನ ಪಾರಿತೋಷಕಾಧಿಗಳನ್ನೂ ಕೊಡಿಸುತ್ತಿದ್ದರು. 

 ಪೀಠದಲ್ಲಿದ್ದದ್ದು ಕೇವಲ ಎಂಟು ತಿಂಗಳು ಮಾತ್ರ, ಸ್ವಲ್ಪ ದೇಹಾಲಾಸ್ಯದಿಂದ ಪಂಡಿತರಾದ ಶ್ರೀ ಗುರುರಾಜಚಾರ್ಯ ( ಶ್ರೀ ಸತ್ಯಸಂದ ತೀರ್ಥರ ಪೂವ್ರಾಶ್ರಮದ ಮೊಮ್ಮಕ್ಕಳು)ರಿಗೆ ಆಶ್ರಮವನ್ನು ಕೊಟ್ಟು ಶ್ರೀ ಸತ್ಯಪಾರಾಯಣ ತೀರ್ಥರು ಎಂಬ ಆಶ್ರಮ ನಾಮ ಕೊಟ್ಟರು.

ಫಾಲ್ಗುಣ ಬಹುಳ ಅಮಾವಾಸ್ಯೆಯ೦ದು ಮೈಸೂರಿನಲ್ಲಿ ತಮ್ಮ ಗುರುಗಳ ಬಳಿಯಲ್ಲಿ ವೃಂದಾವನಸ್ತರಾದರು. ಮೈಸೂರಿನ ಅರಮನೆ ಸಮೀಪದಲ್ಲಿ  ವೃಂದಾವನವಿದ್ದು ಇತ್ತೀಚಿಗೆ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ರೋಗಾಮೋಚನ ಧನ್ವಂತರಿ ದೇವರ ಪ್ರತಿಷ್ಠೆಮಾಡಿದ್ದಾರೆ. 

ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ಇವರ ಹೆಸರಿಗೆ ಅರ್ಥವನ್ನು ನೀಡಿದ್ದಾರೆ. 

ಸತ್ಯ - ಸತ್ಯನಾಮಕನಾದ ನಾರಾಯಣನಲ್ಲಿ ಸದಾ ಸಂತುಷ್ಟರು 
ಸತಿ - ಸತಿಸುತಾದಿಗಳಲ್ಲಿ ಅ ಸಂತುಷ್ಟರು 
ಸತ್ಯ - ಸತ್ಯ ನಾಮಕ ಪರಮಾತ್ಮನನ್ನು, ಆ ಪರಮಾತ್ಮ ಸೃಷ್ಟಿಸಿದ ಪ್ರಪಂಚವನ್ನು ಸತ್ಯವನ್ನಾಗಿ ಸ್ಥಾಪಿಸುವಲ್ಲಿಯೇ ಸಂತುಷ್ಟರು . 
ಸಂತುಷ್ಟರು - ಸಾತ್ಯವತೇಯರಿಂದ (ವೇದವ್ಯಾಸರಿಂದ) ಉಕ್ತವಾದ ಸತ್ಯದಲ್ಲಿ ಬ್ರಹ್ಮಸೂತ್ರಗಳಲ್ಲಿ ಸಂತುಷ್ಟರು. 
ಸತ್ಯರಲ್ಲಿ - ಸತ್ಯ ಸಂಕಲ್ಪನಾದ ಶ್ರೀ ವಿಷ್ಣುವಿನಲ್ಲಿ ಸತ್ಯಸಂಕಲ್ಪರಾದ ಗುರುಗಳಲ್ಲಿ ಸಂತುಷ್ಟರು 

ಹೀಗೆ ಒಮ್ಮೆ ಅವರ ವೃಂದಾವನ ದರ್ಶನ ಮಾಡುವುದೇ ಪುಣ್ಯ,  ಶ್ರೀ ಸತ್ಯಸಂಕಲ್ಪತೀರ್ಥರು ಮತ್ತು ಶ್ರೀ ಸತ್ಯಸಂತುಷ್ಟತೀರ್ಥರ ದರ್ಶನ ಮಾಡಿ ಅವರ ಸೇವೆ ಮಾಡುವುದೇ ಭಾಗ್ಯ, ಗುರುಗಳ ಚರಣಾರವಿಂದದಲ್ಲಿ ಈ ಲೇಖನ ಪುಷ್ಪಸಮರ್ಪಣೆ .. ಲೋಪದೋಷಗಳಿದ್ದರೆ ನನ್ನದೇ ಮತ್ತು ಒಂದೆರಡು ವಿಷಯಗಳಿದ್ದರೆ ಗುರುಗಳ ಅನುಗ್ರಹ.... 

 ಪ್ರೀತೋಸ್ತು ಕೃಷ್ಣ ಪ್ರಭು 
 ಫಣೀಂದ್ರ ಕೆ
***


****

2020 aradhana day
********

No comments:

Post a Comment