Friday, 10 May 2019

satyasandha teertharu 1794 mahishi matha uttaradi mutt yati 26 jyeshta shukla dwiteeya ಸತ್ಯಸಂಧ ತೀರ್ಥರು












info from sumadhwaseva.com--->

Sri Satyasandha Tirtharu 

Ashrama period: 1783-1794

Aradhana – Jyesta Shudda Dwiteeya

Poorvashrama name – Haveri Ramachandra Rao

Predecessor – Sri Satyabodha Tirtharu (Savanooru)

Successor – Sri Satyavara Tirtharu (Santebidanuru)

Vrundavana – Mahishi (Tirthahalli Tq, in Shimoga District)



ವಿಷ್ಣೋ: ಪದಶ್ರಿದ್ಗೋವ್ರಾತೈ: ಸ್ವಾಂತಧ್ವಾಂತನಿವಾರಕ: |
ಶ್ರೀಸತ್ಯಸಂಧಸೂರ್ಯೋ ಯಂ ಭಾಸತಾಂ ನೋ ಹೃದಂಬರೇ ||




विष्णो: पदश्रिद्गोव्रातै: स्वांतध्वांतनिवारक: ।
श्रीसत्यसंधसूर्यो यं भासतां नो हृदंबरे ॥


|| viShNoH padashrit govrAtaiH svAntadhvAntanivArakaH .
shrIsatyasandhasUryo.ayaM bhAsatAM no hR^idambare ||

Mahishi – It is a mythological place visited by Ramachandra Devaru.  It is a place where Hanumantha Devaru installed an Ashwatha Tree and an Ashwatta Narayana pratima, there.



Contact Ph no 08181-235059




know more



********


info from madhwamrutha.org--->


Sri Satyasandha Theertha was great tapasvi. He chose Mahishi as his last resting place which is situated on the banks of river Tunga. He toured extensively all over to propagate dwaitha philosophy and acquired many sishyas. He established a mutt in Vijayawada in Andhra Pradesh and installed Mukhyaprana idol there. He also installed Lord Narasimha & Mukhyaprana idols in Rajahmundry. It is believed that goddess Ganga received bagina from him during his visit to Kashi. When he visited Gaya, the administrators did not allow him to enter the door of the lord. When Swamiji prayed lord for his darshan, the doors got opened and lord gave him darshan.

Sri Satyasandha Theertha gave Ashrama to Krishnacharya and named him as Sri Satyavara Theertha and entered Vrundavana at Mahishi.
Source: Uttaradhi mutt sampradaya paddathi, Guru Parampare by Krishna Kolhar Kulkarni, and other sources etc.
*********

info from FB madhwanet--->
Miracles

At Pandarapur, he got the darshan of Lord viTTala as a brahmachAri. 

During his sanchAra, it so happened that on one day he had no flowers at all to offer to rAma dEvarU at the time of his daily worship. He could not get any flowers in spite of his best efforts. When he was thus worried, an old man appeared as if from no where with lotus flowers and offered them for the pUja and disappeared even as everyone was watching him.

shri satyasandha tIrtharU felt supremely happy that Lord rAma himself had sent these lotus flowers for his own worship. On this occasion, in his supreme happiness he offered all the lotuses to rAma dEvaru and other deities and found that he had none left to offer to shri sIta dEviyarU. He was greatly worried. Miracle of miracles happened! A lotus flower jumped from shri rAma and sat on shri sItA making him very happy.

When he visited Gaya, the locals did not allow him to enter the temple. They said that they would not open the doors unless a large sum of money is paid. But the doors miraculously burst open for swAmIji. This happened day after day for seven days. When the locals realised their loss as no pilgrims came to them, they pleaded to be excused for their arrogance.

When shri satyasandha tIrtharU visited Udupi, he met the pontiffs of the ashTa maTAs. He spent some time there in scholarly discussions. The pontiffs were impressed with his knowledge of the shAstrAs. He was then cordially and respectfully invited to perform the samsthAna pUjE in each of the eight maTAs. He left Udupi after giving Udupi Krishna sizeable kAniKE and deep sense of admiration in the hearts of the noble pontiffs.

On one occasion when he visited Sangli, he performed his daily worship of samsthAna deties in front of the brindAvana of shri satyavrata tIrtharu, and did his Nyaya-Sudha pravachana. The brindAvana shook extensively side to side, many times, as if nodding its head in great appreciation of the pUjE and pravachana of this saint. This was seen by everyone present including the King Balaraj Urs.

Another incident was one of Panduranga viTTala himself coming in the form of an old brahmin to receive mudra from shri satyasandha tiIrtharU.

When he came to know that he had only a few days left in his mortal life, after annointing his successor, he gave detailed instructions on how his body, in case he passed away during sanchAra, should be taken to mahishi where he would like to have his brindAvana. He had chosen mahishi as it is a puranic place. Lord rAmA had visited this place. And hanumantha dEvarU had installed an ashwattha Tree and ashwatthanArayaNa pratima there.
Among his great achievements is a commentary on shri vishNu sahasranAma and vishNustuthi.
His biography is captured in satyasandha vijaya.

shri satyasandha tIrtha guruvAntargata, maharudradEva guruvAntargata, bhArathiramaNa mukhyaprANantargata, siTA patE shri digvijaya rAma dEvara pAdAravindakke gOvindA gOvindA...

shri krishNArpaNamastu...

********


info from uttaradimutt.org---> INTRODUCTION: Shri Satyasanda Tirtha was the next pontiff to adore the seat of Sri Uttaradi Math after Shri Satyabodha Tirtha. He was ordained into sanyasa by the doyen of Madhva Philosophy Shri Satyabodha Teertha. He was the pontiff of Shri Uttaradi Matha for 10 years, 2 months and 19 days.
  DARSHAN OF VITTHALA :
Since Satyasanda Teertha was with his guru for many years at one place, he started his sanchara only after becoming a pontiff. At Pandarapur he got the darshan of Lord Vithala as a brahmachari.
  MIRACLE OF MIRACLES:
During his sanchara, it so happened that on one day he had no flowers at all to offer to Moola Rama at the time of his daily worship. He could not get any flowers in spite of his best efforts. When he was thus worried, an old man appeared as if from no where with lotus flowers and offered them for the pooja and disappeared even as everyone was watching him.   Shri Satyasandha Teertha Swamiji felt supremely happy that Lord Moola Rama himself had sent these lotus flowers for his own worship. On this occasion, in his supreme happiness he offered all the lotuses to Moola Rama and other deities and found that he had none left to offer to Shri Sita. He was greatly worried. Miracle of miracles happened! A lotus flower jumped from Shri Moola Rama and sat on Shri Sita making him very happy.
 VISIT TO GAYA:
When he visited Gaya, he found the Gayawallas did not allow him to enter the temple. They locked the temple doors. They said that they would not open the doors unless a large sum of money is paid. When swamiji went there, the doors burst open facilitating the devotees to do their shastric rites themselves without the involvement of Gayawallas. This happened day after day for seven days. When the gayawallas realised their loss as no pilgrims came to them, they pleaded to be excused for their arrogance.  
VISIT TO UDUPI:
When Shri Satyasandha Teertha visited Udupi, he met the pontiffs of the eight Mathas established specially for worship of the God in the Shri Krishna Matha. He spent some time there in scholarly discussions. He impressed the pontiffs with his superiority and knowledge of the Sastras, He was then cordially and respectfully invited to worship the Uttaradi Matha Samsthana Murthy one day each in everyone of the eight MAtha with their own Samsthana Murthy. He left Udupi after giving Udupi Krishna sizeable Kanike and deep sense of admiration in the hearts of the noble pontiffs.
  VISIT TO SANGLI - BRINDAVANA TILTED IN APPRECIATION:
On one occasion when he visited Sangli, he performed his daily worship of Samsthana deities in fort of the Vrindavana of Shri Satyavrata Teertha, and did his Nyaya-Sudha pravachana. The Brindavana, shook extensively side to side, many times, as if nodding its head in great appreciation of the pooja and pravachana of this saint. This was seen by everyone present including the King Balaraj Urs. Everyone present was all thrilled at this miracle and praised the greatness of Shri Satyasandha Teertha.  
CHOOSES THE PLACE OF HIS BRINDAVANA :
At this stage he knew he had only a few days left in his life. He installed Jhulupi Krishnacharya Balacharya to succed him with name of Shri Satyavara Tirtha. He gave detailed instructions how his body, in case he passed away during sanchara, should be taken to Mahishi where he would like to have his Brindavana.  
LAST ADVICE TO DISCIPLES:
He advised everyone of his entourage and all the sishyas of Shri Uttaradi Matha and all the other Madhvas that they should all follow the example of himself and the two pontiffs of Shri Vyasaraja Matha and Shri Raghavendra Swamy Matha, who respect one another, not to have confrontations and differences among themselves but work for the good of the entire Madhwa community as such, as they were all, first and foremost, the followers of the great Acharya and that petty and narrow minded differences among them would do no good to any of them but weaken them in the long run.  
SATYASANDHA VIJAYA :
Shri Satyasandha Vijaya is a hagiological work on Sri Satyasandha tirtha. It records his pre and post sanyasa life giving details of his pooja, patha-pravachana, sanchara and brindavana. It also records many significant events that occured during his time.  
VITTHALA HIMSELF TAKES MUDRA:
Shri Satyasandha Vijaya describes two marvelous incidents one of Panduranga Vithala coming in the form of an old brahmin to receive Mudra from Shri Satyasandha Teertha swamiji and another as is already written is of Brindavana of Shri Satyavrata Teertha moving to and fro during the time of his puja and Bhashya pravachana.
|| Shri Krishnarpnamstu ||
WorksAmong his great achievements is a commentary on Shri Vishnu - Sahasranama and VishnustutiContact DetailsArchak, Sri Satyasandha Tirtha Vrindavan, Mahishi, Taluk: Tirthalli, District: Shimoga, State: Karnataka.

Contact Ph no 08181-235059

*********

Read more
click ಸತ್ಯಸಂReಧ ತೀರ್ಥರು 

*******

ಶ್ರೀಸತ್ಯಸಂಧತೀರ್ಥರ 
ಮಹಿಮಾ ಚರಿತ್ರೆ

🙏ಮಹಾಪರ್ವ ಪುಣ್ಯಕಾಲ ನಿಮಿತ್ತ ಸೇವಾರೂಪದಲ್ಲಿ ..🙏
       
ಮೂಲತಃ ಹಾವೇರಿಯವರು. ತಂದೆ ಶ್ರೀ ಮಧ್ವಾಚಾರ್ಯರು ತಾಯಿ ಶ್ರೀಮತಿ ಭಾರತೀಬಾಯಿ ಬಹಳ ಕಾಲ ಮಕ್ಕಳಾಗದಿರಲು ಸ್ವಪ್ನದಲ್ಲಿನ ಸೂಚನೆಯಂತೆ ಬಿದರಹಳ್ಳಿಯ ಶ್ರೀಅಶ್ವತ್ಥ ವೃಕ್ಷಾಂತರ್ಯಾಮೀ ಶ್ರೀ ಶ್ರೀನಿವಾಸನನ್ನು ಅಶ್ವತ್ಥ ಮರದಲ್ಲಿ ಪೂಜಿಸಿದ್ದರು... ಅನೇಕ ದಿನಗಳ ನಂತರ ಮಂತ್ರಾಲಯಕ್ಕೆ ತೆರಳಲು ಪ್ರೇರಣೆ ಆಯಿತು. ಅದರಂತೇ ಮಂತ್ರಾಲಯಕ್ಕೆ ತೆರಳಿ ಸೇವೆ ಮಾಡಿದರು
ಕೆಲ ಸಮಯದಲ್ಲಿ ಶ್ರೀ ರಾಯರು ಸ್ವಪ್ನದಲ್ಲಿ ಪ್ರತ್ಯಕ್ಷ ರಾಗಿ ತಾವೇ ಸಾಕ್ಷಾತ್ ಅವತರಿಸುವುದಾಗಿ ಅನುಗ್ರಹಿಸಿದರು. ಹೀಗೆ ರಾಯರ ಅನುಗ್ರಹದಿಂದ ಜನಿಸಿದ ಮಗನಿಗೆ ರಾಘವೇಂದ್ರ ಎಂದೇ ನಾಮಕರಣ ಮಾಡಿದರು
ತಂದೆಯಿಂದಲೇ ಮಧ್ವಶಾಸ್ತ್ರದ ಪಾಂಡಿತ್ಯ ಪಡೆದ ಅವರು ಒಮ್ಮೆ ಸವಣೂರಿನಲ್ಲಿದ್ದ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಬೋಧ ತೀರ್ಥರ ದರ್ಶನಕ್ಕೆ ತೆರಳಿದರು. ಶ್ರೀಗಳು ಸುಧಾ ಗ್ರಂಥದ ವಾಕ್ಯವೊಂದನ್ನು ಹೇಳಿ ಅದರ ಪೂರ್ವಾಪರಗಳನ್ನು ವಿಮರ್ಶಿಸುವಂತೆ ಸೂಚಿಸಿದರು. ಅದರಂತೇ ಶ್ರೀರಾಘವೇಂದ್ರಸ್ವಾಮಿಗಳವರು ಪಾಂಡಿತ್ಯ ಪೂರ್ವಕ ವಿಚಾರ ಮಂಡಿಸಿದರು. ಇವರ ವಿದ್ವತ್ತಿಗೆ ಮೆಚ್ಚಿದ ಶ್ರೀಗಳವರು ಇವರನ್ನು ಮಠದಲ್ಲೇ ಉಳಿಸಿಕೊಂಡು ಶಾಸ್ತ್ರೀಯ ಪಾಠ ಮುಂದುವರೆಸಿದರು
ಮುಂದೆ ತಮ್ಮ ಪೂರ್ವಾಶ್ರಮದ ಮೊಮ್ಮಗಳನ್ನೇ ಇವರಿಗಿತ್ತು ಮದುವೆ ಮಾಡಿಸಿದರು. ಹಾಗೂ ತಮ್ಮ ನಂತರ ಶ್ರೀ ಮೂಲರಾಮರ ಪೂಜೆಗೆ ಮಠದ ಉತ್ತರಾಧಿಕಾರಿಗೆ ಇವರೇ ಸೂಕ್ತ ಎಂದು ನಿರ್ಧರಿಸಿ ತುರೀಯಾಶ್ರಮ ದೀಕ್ಷೆ ನೀಡಿ 
ಶ್ರೀ ಸತ್ಯಸಂಧತೀರ್ಥ ಎಂದು ನಾಮಕರಣ ಮಾಡಿದರು
ತಮ್ಮ ತಪೋಬಲದಿಂದ ಇವರ ಆಯಸ್ಸು ಕ್ಷೀಣಿಸಿರುವುದನ್ನು ಅರಿತ ಶ್ರೀಸತ್ಯಬೋಧತೀರ್ಥರು ಶ್ರೀ ರಾಮರಕ್ಷಾ ಸ್ತೋತ್ರದಿಂದ
 ಅಭಿಮಂತ್ರಿಸಿ 12 ಬೆಳ್ಳಿ ಬಟ್ಟಲಲ್ಲಿ ತುಪ್ಪವನ್ನು ಅನುಗ್ರಹಿಸಿ ಸೇವಿಸುವಂತೆ ಸೂಚಿಸಿದರು.. 
ಶ್ರೀ ಸತ್ಯಸಂಧತೀರ್ಥರಿಗೆ ಹತ್ತು ಬಟ್ಟಲಿನ ತುಪ್ಪ ಮಾತ್ರ ಸೇವಿಸಲು ಸಾಧ್ಯವಾಯಿತು. ಹೀಗೆ ಗುರುಗಳ ಅನುಗ್ರಹದಿಂದ ಹತ್ತು ವರ್ಷಗಳ ಕಾಲ ಉತ್ತರಾದಿ ಮಠಾಧೀಶರಾಗಿ ಬೆಳಗಿದರು
ಒಮ್ಮೆ ಸಂಚಾರ ನಿಮಿತ್ತ ಸಾಂಗಲಿಗೆ ಆಗಮಿಸಿ ಶ್ರೀ ಸತ್ಯವೃತರ ಬೃಂದಾವನದ ಎದುರು ಶ್ರೀ ರಾಮರ ಪೂಜೆ ನೆರೆವೇರಿಸಿ, ಶ್ರೀಮನ್ಯಾಯ ಸುಧಾ ಗ್ರಂಥದ ಅನುವಾದ ಆರಂಭಿಸಿದರು.. ಇವರ ವಿದ್ವತ್ಪೂರ್ಣ ಪಾಠ ಕೇಳುತ್ತಾ ವೃಂದಾವನಸ್ಥ ಶ್ರೀ ಸತ್ಯವೃತರೂ ತಲೆ ತೂಗಿದರು.. ಇದರಿಂದಾಗಿ ಬೃಂದಾವನವು ತಲೆಯಾಡಿಸಿದಂತಾಗಿ ಅಲ್ಲಿದ್ದ ಎಲ್ಲರ ಮೈ ರೋಮಾಂಚನ ಗೊಂಡಿತು.. ದರ್ಶನಕ್ಕಾಗಿ ಆಗಮಿಸಿದ್ದ ಮಿರ್ಜಿಯ ದೊರೆ ಬಾಲರಾಜ್ ಅರಸ ಈ ಪವಾಡಕ್ಕೆ ಸಾಕ್ಷಿ ಯಾದರು
ಮುಂದೆ ಪುರಿಯ ಶ್ರೀ ಜಗನ್ನಾಥನ ದರ್ಶನಕ್ಕೆ ತೆರಳಿದರು.. ಅಲ್ಲಿನ ಪೂಜಾರಿಗಳು ದ್ರವ್ಯದ ಆಸೆಯಿಂದ ಮಂದಿರದ ಬಾಗಿಲಿಗೆ ಬೀಗ ಹಾಕಿದರು.. 
ಶ್ರೀ ಸತ್ಯಸಂಧತೀರ್ಥರು ಭಕ್ತಿಯಿಂದ ಪ್ರದಕ್ಷಿಣೆ ಹಾಕಲು ಆರಂಭಿಸಿದರು.. ಇದ್ದಕ್ಕಿದ್ದಂತೆ ಬೀಗ ಮುರಿದು ಬಿದ್ದಿತು... ಎಲ್ಲರೂ ಶ್ರೀಗಳ ಪಾದಗಳಿಗೆರಗೆ ಅವರಿಗೆ ಆದರದ ಸತ್ಕಾರವಿತ್ತರು
ಮುಂದೆ ನಿರ್ಜನ ಪ್ರದೇಶದಲ್ಲಿ ಶ್ರೀ ರಾಮದೇವರ ಪೂಜೆ ಮಾಡಬೇಕಾದ ಪ್ರಸಂಗ ಬಂದೊದಗಿತು.. ಪೂಜೆಗೆ ಪುಷ್ಪಗಳ ದೊರಕದೇ ಎಲ್ಲಾ ಚಿಂತಾಕ್ರಾಂತರಾದರು.. ಪವಾಡ ನಡೆದೇ ಹೋಯಿತು. ಎಲ್ಲಿಂದಲೋ ಪ್ರತ್ಯಕ್ಷ ರಾದ ಬ್ರಾಹ್ಮಣ ನೊಬ್ಬ ಸಹಸ್ರ ಕಮಲಗಳನ್ನಿತ್ತು ನೋಡನೋಡುತ್ತಿದ್ದಂತೇ ಅದೃಶ್ಯ ನಾಗಿದ್ದು ಎಲ್ಲರನ್ನೂ ಮೂಕ ವಿಸ್ಮಿತರನ್ನಾಗಿಸಿತು
ಮುಂದೆ ಗಯಾ ಕ್ಷೇತ್ರದಲ್ಲಿ ಅಲ್ಲಿನ ಪಾಂಡಾ.. ಗಯಾವಾಡರು.. ದುರಾಶೆಯಿಂದ ಶ್ರೀ ವಿಷ್ಣುಪಾದ ಮಂದಿರಕ್ಕೆ ಬೀಗ ಹಾಕಿದರು.. ಸ್ವಾಮಿಗಳ ಭಕ್ತಿ - ತಪೋಬಲದಿಂದ ಬೀಗ ಮುರಿದು ಬಿದ್ದವು.. ಗಯಾವಾಡರು ಶ್ರೀಗಳವರ ಕಾಲಿಗೆರೆಗಿ ಶಿಷ್ಯತ್ವ ಸ್ವೀಕರಿಸಿದರು.. ಇಂದಿಗೂ ಪ್ರತಿನಿತ್ಯ ಗಯಾದಲ್ಲಿ ಮಧ್ಯಾಹ್ನ ಉತ್ತರಾದಿ ಮಠದಿಂದ ವಿಷ್ಣುಪಾದಕ್ಕೆ ಪೂಜೆ ನಡೆಯುತ್ತದೆ
ಅಲ್ಲಿಂದ ಕಾಶಿಗೆ ಪ್ರಯಾಣ.. ಅನೇಕ ಅದ್ವೈತ ಪಂಡಿತರನ್ನು ವಾದದಲ್ಲಿ ಜಯಿಸಿದರು. ಪೂಜೆ ಮುಗಿಸಿ ಗಂಗೆಗೆ ಬಾಗಿಣ ಸಮರ್ಪಿಸಲು ನದಿಗೆ ಬಂದರು.. ನದಿಯಿಂದ ಗಂಗೆಯೇ ತನ್ನೆರಡೂ ಕೈಗಳಿಂದ ಶ್ರೀಗಳು ಅರ್ಪಿಸಿದ ಬಾಗಿಣವನ್ನು ಸ್ವೀಕರಿಸಿದ್ದನ್ನು ಎಲ್ಲರೂ ಕಂಡು ಪುಳಕಿತರಾದರು
ಪಂಢರಪುರದಲ್ಲಿ ಶ್ರೀ ವಿಠಲನ ದರ್ಶನ ಪಡೆದರು.
ಆ ದಿನ ಪೂಜಾನಂತರ ವಿಠಲ ಬ್ರಹ್ಮಚಾರಿಯಾಗಿ ಬಂದು ಶ್ರೀಗಳಿಂದ ತಪ್ತ ಮುದ್ರಾಧಾರಣೆ ಪಡೆದದ್ದೂ ಶ್ರೀಗಳವರ ದೈವೀಶಕ್ತಿಗೆ ಪ್ರಮಾಣವಾಗಿದೆ
ಮುಂದೆ ಮಳಖೇಡದಲ್ಲಿ ಜಯತೀರ್ಥರ ಸನ್ನಿಧಾನದಲ್ಲಿ ವಿಶೇಷ ತತ್ವಶಾಸ್ತ್ರದ ಅಪೇಕ್ಷೆ ಯಿಂದ 
ಸೇವೆ ಮಾಡಿದರು ಅವರ ಅನುಗ್ರಹದಿಂದ ಆಶ್ರಮ ಗುರುಗಳಾದ ಶ್ರೀಸತ್ಯಬೋಧತೀರ್ಥರ ಸನ್ನಿಧಾನ ದೊರಕಿತು.. ಇಂದಿಗೂ ವೃಂದಾವನದ ಉತ್ತರ ಭಾಗದಲ್ಲಿ ಶ್ರೀಸತ್ಯಬೋಧಾರ್ಯರ ಪೂಜೆ ನಡೆಯುತ್ತದೆ
 ಒಮ್ಮೆ ಕೊಲ್ಲಾಪುರದ ಬಳಿ  ಪೂಜೆಯ ಸಂದರ್ಭದಲ್ಲಿ 
ಶ್ರೀಮನ್ಮೂಲರಾಮದೇವರಿಗೆ ಅರ್ಪಿಸಿದ್ದ ಕಮಲದ ಹೂ ತಾನಾಗೇ ಶ್ರೀ ಸೀತಾದೇವಿಯ ಮುಡಿಗೇರಿದ ಅಪರೂಪದ ಪ್ರಸಂಗವೂ ಇವರ ಮಹಿಮೆಗೆ ಸಾಕ್ಷಿಯಾಗಿದೆ
ಮುಂದೆ ಉಡುಪಿಗೆ ಪ್ರಯಾಣ.. ಅಷ್ಟಮಠದ ಯತಿಗಳಿಂದ ಆದರಿಸಲ್ಪಟ್ಟರು. ಆ ಸಂದರ್ಭದಲ್ಲಿ ಯತಿಗಳೊಬ್ಬರು ಇವರಿಂದ ಪರಾಸ್ಥರಾದ ಹಿನ್ನೆಲೆಯಲ್ಲಿ ಘಟ್ಟ ಮೇಲೇರುವುದಿಲ್ಲ ಎಂದು ಹೇಳಿಬಿಟ್ಟರು. ಶ್ರೀಪಾದಂಗಳವರು ಶಾಂತಚಿತ್ತರಾಗಿ ತಮ್ಮ ಆಯುಷ್ಯದ ಅರಿವು ನಮಗಿದೆ. ಆದರೆ ತಾವು ತಮ್ಮ ವೃಂದಾವನಸ್ಥ ವಿಷಯ ಅರಿಯುವ ಮೊದಲೇ ದೇಹತ್ಯಾಗ ಮಾಡಲಿದ್ದು ಭಗವಂತನ  ಸೇವೆ ಮಾಡಿ ಎಂದು ಅಲ್ಲಿಂದ ಹೊರಟರು
ಘಟ್ಟ ದಾಟಿ ತೀರ್ಥಹಳ್ಳಿ ಸಮೀಪ ಹೋಗುವಾಗ ದೇಹಾಲಸ್ಯವಾಗಿ ತಮ್ಮ ಅಂತಿಮ ಕ್ಷಣ ಬಂದಿರುವುದನ್ನು ಮನಗಂಡು ಪೂರ್ವಾಶ್ರಮದ ಸಹೋದರರಾದ ಶ್ರೀ ಕೃಷ್ಣಾಚಾರ್ಯರನ್ನು ಕರೆಯಿಸಿದರು. ಪ್ರಾಣದೇವರಿಂದ ಪ್ರತಿಷ್ಠಿತ ಮಹಿಷಿಯ ಶ್ರೀ ಅಶ್ವತ್ಥ ನಾರಾಯಣ ನ ಸನ್ನಿಧಾನಕ್ಕೆ ತೆರಳುವಂತೆ ಸೂಚಿಸಿದರು  ಪಲ್ಲಕ್ಕಿ ಮುಂದೆ ಚಲಿಸುವಾಗ ಯಾವುದೇ ಮರಗಳಿಲ್ಲದೇ ಪ್ರಖರ ಸೂರ್ಯ ನ ಬೇಗೆಯನ್ನು ಶಿಷ್ಯರು ತಡೆಯದಾದರು.. ಶ್ರೀ ಗಳು ತಮ್ಮ ದಂಡವನ್ನು ಅಭಿಮಂತ್ರಿಸಿ ಸಹೋದರರಿಗಿತ್ತು ಮುಂದೆ ಹಿಡಿದು ನಡೆಯುವಂತೆ ಸೂಚಿಸಿದರು... ಏನಾಶ್ಚರ್ಯ ದೊಡ್ಡ ಮೋಡವೊಂದು ಎಲ್ಲರಿಗೂ ನೆರಳಾಗಿ ದಂಡವನ್ನೇ ಹಿಂಬಾಲಿಸಿತು
ಪವಿತ್ರ ತುಂಗಾನದಿ ಪಶ್ಚಿಮ ವಾಹಿನಿಯಾಗಿರುವ ಮಹಿಷಿ ಪುರಾಣ ಪ್ರಸಿದ್ಧ ಕ್ಷೇತ್ರ. ತಮ್ಮ ಉತ್ತರಾಧಿಕಾರಿಯಾಗಿ ಪೂರ್ವಾಶ್ರಮದ ಸಹೋದರರಿಗೆ ಪ್ರಣವ ಮಂತ್ರೋಪದೇಶ ನೀಡಿ ಸತ್ಯವರತೀರ್ಥರು ಎಂದು ನಾಮಕರಣ ಮಾಡಿ ಮಹಿಷಿಯ ಶ್ರೀ ಅಶ್ವತ್ಥ ನಾರಾಯಣ ಸನ್ನಿಧಿಯಲ್ಲಿ ಜ್ಯೇಷ್ಠ ಶುದ್ಧ ಬಿದಿಗೆ ವೃಂದಾವನಸ್ಥರಾದರು
       🙏🙏
***



||ಶ್ರೀ ವಿಠ್ಠಲ ಪ್ರಸೀದತು ||
 ಜೇಷ್ಠ ಶುದ್ಧ ದ್ವಿತೀಯ , ಮಹಿಮಾನ್ವಿತರಾದ  ಶ್ರೀ ೧೦೮ ಸತ್ಯಸಂಧ  ಗುರುಗಳ ಆರಾಧನೆ .  ಶ್ರೀಮದಾಚಾರ್ಯರ ಪರಂಪರೆಯಲ್ಲಿ ಬಂದ ೨೬ನೇ ಯತಿವರರು ಇವರು . ತಂದೆ ಮದ್ವಾಚಾರ್ಯರು , ತಾಯಿ ಭಾರತಿ ದೇವಿ ,  ಬಿದರಹಳ್ಳಿ ಅಶ್ವತ್ಥನಾರಾಯಣ ಹಾಗು ಮಂತ್ರಾಲಯ ಪ್ರಭುಗಳ ಸೇವೆಯಿಂದಾಗಿ ಪುತ್ರರತ್ನ ಜನವಾಯಿತು . ಹರಿಗುರುಗಳು ಒಲಿದು ವಿದ್ಯಾವಂತ , ಕರುಣಾಮೂರ್ತಿಯ ಮಗ ಜನಿಸುವನೆಂದು ಸೂಚನೆ ಸಿಕ್ಕಿತ್ತು . ಮಂತ್ರಾಲಯ ಪ್ರಭುಗಳ ವರಪ್ರಸಾದದಿಂದ ಜನಿಸಿದ್ದರಾದ್ದರಿಂದ ಅವರಿಗೆ ರಾಘವೇಂದ್ರನೆಂದು ಹೆಸರಿಟ್ಟರು ಹೆತ್ತವರು .
ಮಗು ರಾಘವೇಂದ್ರ ನಿಗೆ ಪುರಾಣದಲ್ಲಿ ಆಸಕ್ತಿ  ಭಗವಂತನಿಗೆ ನಿವೇದಿಸಿದ ಆಹಾರವೇ ಅಪೇಕ್ಷಿಸುತ್ತಿದ್ದ .
ತಂದೆ ಸಕಾಲದಲ್ಲಿ ಚೌಲ ಉಪನಯನಾದಿಗಳನ್ನು ಮಾಡಿದರು . ವಿವಾಹ ನಂತರ ಒಬ್ಬ ಮಗ ಮಗಳ ಜನನವಾಯಿತು .
ಸ್ವಲ್ಪ ಕಾಲದಲ್ಲೇ ಪತ್ನಿವಿಯೋಗವಾಯಿತು . 
ಸವಣೂರಿಗೆ ಬಂದು  ಆಗ ಪೀಠಾಧಿಪತಿಗಳಾಗಿದ್ದ 
ಶ್ರೀ ೧೦೮ ಸತ್ಯಭೋದರ ದರ್ಶನ ಮಾಡಿದರು.
ಅವರ ವಿಧ್ಯೆ ಪರೀಕ್ಷೆ ಮಾಡಲು ಗುರುಗಳು ಶ್ರೀಮನ್ಯಾಯಸುಧೆಯ ವಾಖ್ಯವನ್ನು ಕೊಟ್ಟು ಅದರ ವಿವರಣೆ ಕೇಳಿದರು  ಗುರುಗಳಿಗೆ ಸೂಕ್ತ ಉತ್ತರ ಸಿಕ್ಕಿ ಸಂತೋಷಗೊಂಡು ಮಠದಲ್ಲಿ ಆಶ್ರಯನೀಡಿದರು . ಹಾಗು ಶ್ರೀರಾಘವೇಂದ್ರ ಚಾರ್ಯರು ಪುನರ್ನಾಮಕರಣಹೊಂದಿ ರಾಮಚಂದ್ರಾಚಾರ್ಯರಾದರು . ಶ್ರೀಸತ್ಯಭೋದರು , ತಮ್ಮ ಪೂರ್ವಾಶ್ರಮದ  ಮೊಮ್ಮಗಳು ಸುಕನ್ಯಾ ಬಾಯಿಯನ್ನು ಆಚಾರ್ಯರಿಗೆ ವಿವಾಹಮಾಡಿಸಿದರು .
ಮುಂದೆ  ಶ್ರೀ ಸತ್ಯಭೋದರಿಗೆ ಆಶ್ರಮ ನೀಡಿ 
ಶ್ರೀಸತ್ಯಸಂಧರೆಂದು ಆಶ್ರಮ ನಾಮ ಕೊಡಲ್ಪಟ್ಟಿತು .
ಕ್ರಿ ಶ ೧೭೦೫   ಶೋಭನ ಸಂವತ್ಸರ ಫಾಲ್ಗುಣ ಪ್ರತಿಪದೆಯಂದು ಶ್ರೀ ಸತ್ಯಭೋದರು ಬೃಂದಾವನಸ್ಥರಾದರು .
ಗುರುಗಳು ತಮಗೊಪ್ಪಿಸಿದ ವೇದಾಂತ ಸಾಮ್ರಾಜ್ಯವನ್ನು ನಿರ್ವಹಿಸಿ ದೇಶಾದ್ಯಂತ ಸಂಚರಿಸಿ ಮಧ್ವಮತ ಪ್ರಚಾರ ಮಾಡಿದರು.
ಸಂಚಾರ ಮಾಡುತ್ತಾ ಶ್ರೀ ಸತ್ಯವ್ರತ ತೀರ್ಥರ ವೃಂದಾವನದ ಬಳಿಬಂದು ಶ್ರೀಮನ್ಯಾಯಸುಧಾ 
ಪ್ರವಚನ ಮಾಡಿದಾಗ ಶ್ರೀ ಸತ್ಯವ್ರತರ ಬೃಂದಾವನ ಶಿರಕಂಪನದಿಂದ ಚಲುಸುವಂತೆ ಮಾಡಿದರು. ಇದನ್ನು ನೋಡಿದ ಅಲ್ಲಿನ ಅರಸ 
ಅವರ ತಪಃ ಶಕ್ತಿಗೆ ಬೆರಗಾಗಿ ರಾಮನವಮಿಯದಿನ ತಮ್ಮಲ್ಲಿ ಬಂದು ಸಂಸ್ಥಾನ ಪೂಜೆ ಮಾಡಬೇಕೆಂದು ವಿಜ್ಞಾಪಿಸಿದ .
ಈ ಘಟನೆಯನ್ನು ಶ್ರೀ ಸತ್ಯಧರ್ಮರು , ಶ್ರೀಸತ್ಯಪರಾಕ್ರಮರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ .
ಅನೇಕ ಮಹಿಮೆಗಳು ಅವರದು , ಅದರಲ್ಲಿ ಗಯಾದಲ್ಲಿ ರಾಮದೇವರಪೂಜೆಗೆ ನಿರ್ಜನ ಪ್ರದೇಶದಲ್ಲಿ ಕಮಲಪುಷ್ಪಗಳು ದೊರಕಿದ್ದು ,
ಪೂರಿಜಗನ್ನಾಥನ ದೇವಸ್ಥಾನದ ಬೀಗಮುದ್ರೆಗಳು ತನಗೆತಾನೇ ತೆಗೆದುಕೊಂಡಿದ್ದು , ಗಯಾದಲ್ಲಿ ಹೆಚ್ಚಿನ ಹಣದಾಸೆಯಿಂದ ಅಲ್ಲಿನ ಗಯವಾಡರುಗಳು ದರ್ಶನ ನಿರಾಕರಿಸಿದ್ದು , ಬಿಗ ಕಳೆಚಿಕೊಂಡು ಗುರುಗಳಿಗೆ ದರ್ಶನಕ್ಕೆ ಅನುವುಮಾಡಿಕೊಟ್ಟಿದ್ದು 
ಕಾಶಿಗೆ ಹೋದಾಗ ಸ್ವತಃ ಭಾಗೀರಥಿ ತಾನೇ ಕೈನೀಡಿ ಭಾಗಿನ ಸ್ವೀಕರಿಸಿದ್ದು  ಮುಂತಾದ ಮಹಿಮೆಗಳಿಂದ ಪ್ರಸಿದ್ದರು ಶ್ರೀಗಳು .
ಮುಂದೆ ಸಂಚಾರದಲ್ಲಿ ಪಂಡರಾಪುರ , ಕೊಲ್ಹಾಪುರಕ್ಕೆ ಬಂದು ಭಗವಂತನ ದರ್ಶನ ಮಾಡಿದರು. ರಾಮೇಶ್ವರದಲ್ಲಿ ಉಪ್ಪಿನ ಭಾವಿಯನ್ನು ಸಿಹಿನೀರಿನದಾಗಿ ಮಾರ್ಪಡಿಸಿದರು
ಗೋದಾವರಿ ತೀರದಲ್ಲಿ ಶ್ರೀ ಸತ್ಯಧೀಶ ತೀರ್ಥರ ಸನ್ನಿಧಿಯಲ್ಲಿ ಶ್ರೀಲಕ್ಷ್ಮಿ ನರಸಿಂಹದೇವರ  ಪ್ರತಿಷ್ಠೆ ಮಾಡಿದರು. ಮಳಖೇಡದಲ್ಲಿ ಶ್ರೀ ಟೀಕಾರಾಯರ ಸೇವೆ ಮಾಡಿದರು. ತಂಜಾವೂರಿನ ರಾಜ ಅಮರಸಿಂಹನ ಅರಮನೆಯಲ್ಲಿ ಸಂಸ್ಥಾನ ಪೂಜೆ ನೆರವೇರಿಸಿದರು .
ಸುಬ್ರಮಣ್ಯದಲ್ಲಿ  ಸಂಸ್ಥಾನ ಪೂಜೆ ನಡೆಯುವ ಸಂದರ್ಭದಲ್ಲಿ ಘಟಸರ್ಪವೊಂದು ಕಾಣಿಸಿಕೊಂಡಿತು . ನೆರೆದಿದ್ದ ಜನ ರಾಮದೇವರ ಪೂಜೇನೋಡಲು ಶೇಷದೇವರೇ ಆಗಮಿಸಿದ್ದಾರೆ 
ಎಂದು ಕೊಂಡಾಡಿದರು . ಅಲ್ಲಿಂದ ಉಡುಪಿ ಕೃಷ್ಣನ ದರ್ಶನ ಮಾಡಿ ತಮ್ಮ ಅವಸಾನ ಸಮೀಪಿಸಿತೆಂದು ಮನಗೊಂಡು ತೀರ್ಥಹಳ್ಳಿಗೆ ಹಿಂದಿರುಗಿದರು .
ತಮ್ಮ ಪೂರ್ವಾಶ್ರಮದ ಸೋದರ ಕೃಷ್ಣಾಚಾರ್ಯರಿಗೆ ಅನುಗ್ರಹ ಪೂರ್ವಕವಾಗಿ 
ಫಲಮಂತ್ರಾಕ್ಷತೆಯನ್ನಿತ್ತು ಸತ್ಯವರರೆಂದು
ಆಶ್ರಮನೀಡಿ ತಮ್ಮ ಉತ್ತರಾಧಿಕಾರಿಯನ್ನಾಗಿಮಾಡಿದರು .
ಅವರು ಹೊರಡುವಕಾಲ ಸಮೀಪಿಸಿತು .
ಸ್ವಾಮಿಗಳುಎಲ್ಲರು ನೋಡುತ್ತಿರುವಂತೆ ಶ್ವಾಸಬಂಧ ಮಾಡಿದರು. ಅವರ ಶಿಷ್ಯರು
ನಾಲ್ಕಾರುಮಂದಿ ಹಿಡಿದರೂ ಅವರಶರೀರ 
ಒಂದು ಗೇಣು ಎತ್ತರದಲ್ಲಿ ನೇತಾಡಿತಂತೆ .
ಸ್ವಲ್ಪಹೊತ್ತಿನಲ್ಲೇ ಬ್ರಹ್ಮರಂದ್ರ ಒಡೆದು ಭಾರೀಶಬ್ದವಾಯಿತಂತೆ . ಗುರುಗಳು ಮೂಲರಾಮನ ಪಾದಸೇರಿದರು .
ಮಹಿಷಿಯ ಪ್ರಶಾಂತ ವಾತಾವರಣದಲ್ಲಿ ಅವರ
ಬೃಂದಾವನವಿದೆ .  ಅವರಿಂದ ರಚಿತವಾದ 
ಗ್ರಂಥಗಳು ೧)ಪುರುಷಸೂಕ್ತ ವ್ಯಾಖ್ಯಾನ ೨) ಘರ್ಮಸೂಕ್ತ ವ್ಯಾಖ್ಯಾನ ೩)   ಕೃಷ್ಣಸ್ತುತಿ ೪)
ಶ್ರೀಮದ್ವೀಷ್ಣುಸಹಸ್ರನಾಮ ವಿವೃತ್ತಿ ಅಥವಾ ಭಾಷ್ಯ  ( ಇವರ ಗ್ರಂಥಕ್ಕೆ ಮುಂದೆ ಸತ್ಯಪಾರಾಯಣರು ವ್ಯಾಖ್ಯಾನ ಮಾಡಿದ್ದಾರೆ )
 ಶ್ರೀಸತ್ಯ ಸಂಧ ಗುರುಗಳ ಚರಮ ಶ್ಲೋಕ ಇಂತಿದೆ .
||ವಿಷ್ನೋ:ಪದಶ್ರೀದ್ಗೋ ವ್ರಾತೈ:
ಸ್ವಾoತ ದ್ವಾoತ ನಿವಾರಕಃ 
ಶ್ರೀ ಸತ್ಯಸಂಧ ಸೂರ್ಯೋ ಯಂ 
ಭಾಸತಾಂ ನೋ ಹೃದಂಬರೇ ||
             ನಾಹಂ ಕರ್ತಾ ಹರಿಃ ಕರ್ತಾ

         ||ಶ್ರೀಕೃಷ್ಣಾರ್ಪಣಮಸ್ತು ||
***********


 ಮಹಿಷಿಯ ಮಹಾಮಹಿಮರು  - ಶ್ರೀ ಸತ್ಯಸಂಧ ತೀರ್ಥರು 

ಮಧ್ವಸಿದ್ದಾಂತದ ಪರಂಪರೆಯ ಶ್ರೀ ಉತ್ತರಾಧಿ ಮಠದ ಯತಿಪರಂಪರೆಯಲ್ಲಿ ಮೇರುಶಿಖರರಾದ ಸಪ್ತರ್ಷಿಗಳಲ್ಲಿ ಒಬ್ಬರಾದ  ಶ್ರೀ ಸತ್ಯಸಂಧ  ಸೂರ್ಯ ಎಂದೇ ಪ್ರಸಿದ್ಧರಾದ  ಮಹಿಷಿ ಕ್ಷೇತ್ರದಲ್ಲಿ ನಿತ್ಯವಾಸಿಪರಾದ  ಶ್ರೀ ಶ್ರೀ ಸತ್ಯಸಂಧ ತೀರ್ಥರ ಆರಾಧನಾ ಮಹೋತ್ಸವ. 

ವಿಷ್ಣೋ: ಪದಶ್ರಿದ್ಗೋವ್ರಾತೈ: ಸ್ವಾಂತಧ್ವಾಂತನಿವಾರಕ: |
ಶ್ರೀಸತ್ಯಸಂಧಸೂರ್ಯೋ ಯಂ ಭಾಸತಾಂ ನೋ ಹೃದಂಬರೇ ||

ವಿಷ್ಣುಸ್ತುತಿ ಕರ್ತರಾದ ಶ್ರೀ ಸತ್ಯಸಂದ ತೀರ್ಥರ ಮಹಿಮೆ ಮತ್ತು ಅವರ ಬಗ್ಗೆ ತಿಳಿಯಬಹುದಾದ ಗ್ರಂಥವೇ ಶ್ರೀ ಎಲಗೂರು ಅನಂತಾಚಾರ್ಯ ವಿರಚಿತ  "ಶ್ರೀ ಸತ್ಯ ಸಂಧ ವಿಜಯ"  ಅವರ ಕೆಲವೊಂದು ಮಹಿಮೆಗಳ ತಿಳಿಯುವ ಪ್ರಯತ್ನ ಮಾಡೋಣ. 

ಪೂರ್ವಾಶ್ರಮ ನಾಮ : ಹಾವೇರಿ ರಾಮಚಂದ್ರಚಾರ್ಯ ಮತ್ತು ರಾಘವೇಂದ್ರ ಚಾರ್ಯ ಎಂಬ ಎರಡು ಹೆಸರು ಇದೆ. 
ಆಶ್ರಮ ಗುರುಗಳು : ಶ್ರೀ ಸತ್ಯಬೋಧ ತೀರ್ಥರು 
ಆಶ್ರಮ ಶಿಷ್ಯರು : ಶ್ರೀ ಸತ್ಯವರ ತೀರ್ಥರು 
ವೃಂದಾವನ ಸ್ಥಳ : ಮಹಿಷಿ ಕ್ಷೇತ್ರ, ತೀರ್ಥ ಹಳ್ಳಿ ತಾಲೂಕು, ಶಿವಮೊಗ್ಗ ಜಿಲ್ಲೆ. 
ವೇದಾಂತ ಸಾಮ್ರಾಜ್ಯ ಆಳ್ವಿಕೆ : 1783  ರಿಂದ 1794  
ವೃಂದಾವನ ಕ್ಷೇತ್ರ ವಿಶೇಷ : ಶ್ರೀರಾಮದೇವರು ತನ್ನ ಪತ್ನಿಯಾದ ಸೀತಾದೇವಿಯ ಅನ್ವೇಷಣೆ ಕಾರ್ಯದಲ್ಲಿ ಈ ಕ್ಷೇತ್ರಕ್ಕೆ ಬಂದಿದ್ದರು ಮತ್ತು ಹನುಮಂತ ದೇವರು ಅಶ್ವಥ ವೃಕ್ಷ ಮತ್ತು ಅಶ್ವಥ ನಾರಾಯಣ ದೇವರನ್ನು ಪ್ರತಿಷ್ಠೆ ಮಾಡಿದ್ದರು. ಮುಂದೆ ಅಶ್ವಥ ನಾರಸಿಂಹದೇವರ ಕ್ಷೇತ್ರ ಎಂದೇ ಪ್ರಸಿದ್ಧ ವಾಯಿತು. ಪವಿತ್ರ ತುಂಗಾನದಿಯ ಸನ್ನಿದಿ ಮತ್ತು ಪ್ರಕೃತಿ ಸೌಂದರ್ಯದ ವಿಶೇಷ ಸಾನಿಧ್ಯ ಇಲ್ಲಿದೆ. 

ಶ್ರೀ ರಾಮಾಚಾರ್ಯರ ಜನನ 
ಶ್ರೀ ರಾಮಾಚಾರ್ಯರ ತಂದೆ ತಾಯಿಗಳಿಗೆ ಬಹುಕಾಲ ಮಕ್ಕಳಿರಲಿಲ್ಲ, ಹಾಗೆ ಅವರು ರಾಯರ ಭಕ್ತರಾಗಿದ್ದರು. ಆದರೆ ಆಗಿನ ಕಾಲದಲ್ಲಿ ಮಂತ್ರಾಲಯಕ್ಕೆ ಹೋಗಬೇಕಾದರೆ ಕನಿಷ್ಠ ಏಳು ದಿನ ನಡೆದೇ ಹೋಗಬೇಕಾಗಿತ್ತು. ಅಷ್ಟು ಅನುಕೂಲಗಳು ಇರಲಿಲ್ಲ. ತಂದೆ ತಾಯಿಯರು ಅಲ್ಲೇ ಹತ್ತಿರದಲ್ಲಿದ್ದ ಬಿದರಹಳ್ಳಿ ಯಲ್ಲಿ ಶ್ರೀ  ಶ್ರೀನಿವಾಸ ತೀರ್ಥರಿಂದ ಪ್ರತಿಷ್ಠಿತರಾದ ಶ್ರೀ ಅಶ್ವತ್ಥ ನಾರಾಯಣನ ಸೇವೆಯನ್ನು ಏಳು ದಿನಗಳ ಕಾಲ ಮಾಡಿದರು. ಮರುದಿನ ಬೆಳಗ್ಗೆಯೇ ಸ್ವಪ್ನವೇ೦ಬತ್ತೆ ರಾಯರೇ ನಿಜವಾಗಿ ಬಂದು ಇವರಿಗೆ ಒಂದು ಮಾವಿನ ಹಣ್ಣು ಮತ್ತು ಮಂತ್ರಾಕ್ಷತೆಯನ್ನು ಕೊಟ್ಟರು. ಅದು ನಿಜವೇ ಆಗಿತ್ತು. ಸ್ವಲ್ಪ ದಿನಗಳಲ್ಲಿ ಆಕೆ ಗರ್ಭವತಿ ಯಾದಳು. ಸಾಮಾನ್ಯ ಹೆಂಗಸರಂತೇ ಅವಳ ಬಯಕೆಗಳು ಇರಲಿಲ್ಲ. ಅವಳ ಬಯಕೆ ವಿಶೇಷವೇ ಆಗಿತ್ತು. ಒಂದು ದಿನ ಕಾಶಿಯಲ್ಲಿ ಸ್ನಾನ ಮಾಡಬೇಕು, ಮತ್ತೊಂದು ದಿನ ಲಕ್ಷ ಬ್ರಾಹ್ಮಣರಿಗೆ ಊಟ ಹಾಕಬೇಕು. ತಾವು ಉಪಯೋಗಿಸುತ್ತಿದ್ದ ಮಡಿಕೊಲು ಮಾಡಿ ದಂಡ ನಮಸ್ಕಾರದ ರೀತಿ ಮಾಡುತ್ತಿದ್ದರು. ಅವರ ತಂದೆಗೆ ತಿಳಿದಿತ್ತು ಇದು ಇವಳ ಬಯಕೆಅಲ್ಲ ಇವಳ ಒಳಗಿರುವ ಪುತ್ರನ ಬಯಕೆ.  ಹಾಗೆ ಒಂದು ದಿನ ಸತ್ಪುತ್ರ ಜನಿಸಿದ, ಬಾಲ್ಯದಲ್ಲೇ ಪೂರ್ಣಚಂದ್ರನ ಹಾಗೆ ಬೆಳೆಯುತ್ತಿದ್ದರು. ನಂತರ ಪಾಠಗಳಲ್ಲಿ ತಮ್ಮ ತಂದೆಯವರೇ ಪಾಠ ಮಾಡುತ್ತಿದ್ದರು, ಕೇವಲ ಒಂದು ಸಲ ಹೇಳಿದರೆ ಅದೇ ಮುಖಖರಗತವಾಗುತ್ತಿತ್ತು. ಜೊತೆಗೆ ಸುಧಾಪಾಠವಾಗುತಿತ್ತು.  ಹಾವೇರಿ ರಾಮಾಚಾರ್ಯರು ಪೂರ್ವಾಶ್ರಮದಲ್ಲೇ ಮಧ್ವಶಾಸ್ತ್ರ ಸುಧಾ  ಪಂಡಿತರಾದರು. ಒಮ್ಮೆ ರಾಮಾಚಾರ್ಯರಿಗೆ ಮದುವೆ ಮಾಡಬೇಕು ಎಂದು ತಂದೆತಾಯಿಗಳು ನಿರ್ಧರಿಸಿ ಶ್ರೀ ಸತ್ಯಬೋಧ ತೀರ್ಥರಲ್ಲಿ ಮಂತ್ರಾಕ್ಷತೆ ಪಡೆಯಲು ಸವಣೂರಿಗೆ ಹೋದರು. ಅಂದು ಇನ್ನು ಪೂಜೆ ಪ್ರಾರಂಭವಾಗಿರಲಿಲ್ಲ ಬಾಲಕ ರಾಮಾಚಾರ್ಯನ್ನು ಶ್ರೀ ಸತ್ಯಬೋಧ ತೀರ್ಥರು ಕೇಳಿದರು. ತಾವು ಏನು ಅಧ್ಯಯನ ಮಾಡಿದ್ದೀರಾ ಎಂದು ಆದರೆ ಶ್ರೀ ರಾಮಾಚಾರ್ಯರು ಸಂಕೋಚಗೊಂಡು ಇನ್ನು ಸುಧಾ ಅಧ್ಯಯನ ಮಾಡುತ್ತಿದ್ದೇನೆ ಎಂದು ಹೇಳಿದರು. ಆದರೆ ಅವರ ಮುಖದಲ್ಲಿ ವರ್ಚಸ್ಸು ಹೆಚ್ಚಿದ್ದನ್ನು ನೋಡಿ ಶ್ರೀ ರಾಮಾಚಾರ್ಯರಿಗೆ ಸುಧೆಯ ಅನುವಾದ ಮಾಡಲು ಹೇಳಿದರು. ಇವರ ಬಾಯಿಂದ ಹೊರಹೊಮ್ಮಿದ ಎರಡು ಪಂಕ್ತಿಗಳ ಸುಧಾನುವಾದ ಘಂಟೆಗಟ್ಟಲೆ ಹೊರಹೊಮ್ಮಿತು. ಮಠದ ದಿವಾನರು ಬಂದು ಶ್ರೀ ಸತ್ಯಬೋಧ ತೀರ್ಥರಲ್ಲಿ  ಈಗಾಗಲೇ ಗಂಟೆ ಮಧ್ಯಾನ್ಹ ಒಂದು ವರೆ ಆಗುತ್ತಿದೆ ರಾಮದೇವರ ಪೂಜೆಗೆ ತಡವಾಗುತ್ತಿದೆ ಎಂದು ಹೇಳಿದಾಗ ಇವರ ಅನುವಾದ ನಿಲ್ಲಿಸಿದರಂತೆ. ಶ್ರೀ ಸತ್ಯಬೋಧ ತೀರ್ಥರು ಸಂತಸಗೊಂಡು ಇವರಿಗೆ ಹರಿಸಿದರು. ನಂತರ ಇವರನ್ನು ಆಲಿಂಗನ ಮಾಡಿಕೊಂಡಿರಂತೆ, ನಂತರ ಇವರಿಗೆ ವ್ಯಾಕರಣತರ್ಕ ವಿಶೇಷ ಪಾಠಗಳನ್ನು ಮಠದಲ್ಲೇ ಇಟ್ಟುಕೊಂಡು ಮಾಡಿದರಂತೆ. 

ಪೂರ್ವಾಶ್ರಮ 
ಮುಂದೆ ಸತ್ಯಬೋಧ ತೀರ್ಥರ ಪೂರ್ವಾಶ್ರಮದ ಮಗನಾದ ಶ್ರೀ ಸೇತುಮಾಧವ ಚಾರ್ಯರ ಪುತ್ರಿಯಾದ ಸುಕನ್ಯಾ ಎಂಬ ವದುವುನೊಂದಿಗೆ ಮದುವೆ ಮಾಡಿದರು. ಶ್ರೀ ರಾಮಾಚಾರ್ಯರಿಗೆ ಒಂದು ಗಂಡು ಮಗು ಆಯಿತು ಅವರೇ ಸ್ವಾಮಿಚಾರ್ಯರು ಎಂದು ಹೆಸರಾದರು. ನಂತರ ಇನ್ನೊಂದು ಮಗುವಿನ ಗರ್ಭಿಣಿ ಆ ಸಮಯದಲ್ಲಿ ಶ್ರೀ ಸತ್ಯಬೋಧ ತೀರ್ಥರಿಗೆ  ಸ್ವಲ್ಪ ದೇಹಾಲಾಸ್ಯ ವಾಗಿ ಮುಂದೆ ಪೀಠವನ್ನು ಯಾರಿಗೆ ಕೊಡಬೇಕು ಎಂದು ಯೋಚಿಸುತ್ತಿರಲು ಆಗಿನ ಕಾಲದಲ್ಲಿ  ಪ್ರಕಾಂಡ ಪಂಡಿತರು ಇದ್ದರು, ಹರಿ ಸಂಕಲ್ಪದಂತೆ ಶ್ರೀ ರಾಮಚಾರ್ಯರಿಗೆ ಆಶ್ರಮ ಕೊಡಬೇಕು ಎಂದು ನಿರ್ಧರಿಸಿದರು.  ಮನೆಯಲ್ಲಿ ರಾಮಾಚಾರ್ಯರು ಆಶ್ರಮ ಸ್ವೀಕಾರದ ವಿಷಯ ತಿಳಿಸಲು ತಂದೆ ಒಪ್ಪಿದರು ತಾಯಿ ಒಪ್ಪಲಿಲ್ಲ, ಈಗಾಗಲೇ ಮದುವೆಯಾಗಿದೆ, ಇನ್ನು ಪತ್ನಿ ಗರ್ಭಿಣಿ, ಬೇಡವೆಂದು ಹಠ ಮಾಡಿದರು. ಆದರೆ ಸತ್ಯಭೋದ ತೀರ್ಥರ ಸಂಕಲ್ಪ ಮತ್ತು ಹರಿಯಾಜ್ಞೆಯಂತೆ ಸನ್ಯಾಸಶ್ರಮ ಸ್ವೀಕಾರಾ ಮಾಡಲು ಬಂದರು. 

ಆಯುಷ್ಯ ದಾನ 
ಶ್ರೀ ಸತ್ಯಬೋಧ ತೀರ್ಥರು ರಾಮಾಚಾರ್ಯರ ಮುಖವನ್ನು ನೋಡಲು ಅವರಿಗೆ ಆಯುಷ್ಯವೇ ಇರಲಿಲ್ಲ. ಗಾಬರಿಯಾಯಿತು ಆದರೂ ಮೂಲರಾಮನಲ್ಲಿ ಪ್ರಾರ್ಥಿಸಿ ಆಶ್ರಮ ಸ್ವೀಕಾರದ ದಿನವನನ್ನು ಮುಂದೆ ಹಾಕಿ, ರಾಮಾಚಾರ್ಯರಿಗೆ ಪ್ರತಿದಿನ ಬೆಳಗ್ಗೆ ನಾಲ್ಕುವರೆ ಗೆ ಬರಲು ಹೇಳಿದರು. ಪ್ರತಿದಿನ ಒಂದು ಬಟ್ಟಲಿನಲ್ಲಿ ತುಪ್ಪವನ್ನು ಅಭಿಮಂತ್ರಿಸಿ ತಮ್ಮ ಆಯುಷ್ಯವನ್ನು ತುಂಬಿ ಅವರಿಗೆ ಸ್ವೀಕಾರ ಮಾಡಲು ಹೇಳಿದರು. ಹೀಗೆ ಹತ್ತುದಿನ ಸ್ವೀಕಾರ ಮಾಡಿ ಹನ್ನೊಂದನೇ ದಿನ ಸ್ವಲ್ಪ ಕೈಜಾರಿ ತುಪ್ಪ ಕೆಳಗೆ ಬೀಳಲು ಅರ್ಧ ಬಟ್ಟಲು ಮಾತ್ರ ಉಳಿಯಿತು.ಹೀಗೆ ಹತ್ತುವರೆವರ್ಷಗಳ ಹೆಚ್ಚಿನ ಆಯುಷ್ಯ ಪ್ರಧಾನ ಮಾಡಿ   ಶ್ರೀ ಸತ್ಯಭೋಧ ತೀರ್ಥರು ಹರಿಯಿಚ್ಚೆ ಇಷ್ಟೇ ಎಂದು ತಿಳಿದು ಮುಂದೆ ಅವರಿಗೆ ಸನ್ಯಾಸಾಶ್ರಮ ಕೊಟ್ಟರು. 


ಸನ್ಯಾಸಾಶ್ರಮ ಸ್ವೀಕಾರ 
ರಾಮಾಚಾರ್ಯರಿಗೆ ಏನೆಂದು ಹೇಳಲು ಗೊತ್ತಾಗದೆ ಅವರು ಮಾಡಿದ ಅನುಗ್ರಹವನ್ನು ಸ್ಮರಿಸಿ ಆಶ್ರಮಸ್ವೀಕಾರದ ನಂತರ ತಮ್ಮ ಗುರುಗಳನ್ನು ಅನುಕ್ಷಣ ಸ್ಮರಿಸಿ ತಮ್ಮ ಗ್ರಂಥಗಳಲ್ಲೂ ಅವರ ಸ್ಮರಣೆ ಮಾಡಿದ್ದಾರೆ. ಸನ್ಯಾಸಾಶ್ರಮದ ನಂತರ 12  ದಿನ ಮಾತ್ರ ಸತ್ಯಬೋಧ ತೀರ್ಥರು ಇದ್ದು ನಂತರ ಹರಿಪಾದವನ್ನು ಸೇರಿದರು. ಅವರ ಬೃಂದಾವನ ನಿರ್ಮಾಣಮಾಡಿ ಅಲ್ಲಿಂದ ಶೂರ್ಪಾಲಯಕ್ಕೆ ಬಂದು ಅಲ್ಲಿ ಗುರುಗಳ ಮಹಾಸಮಾರಾಧನೆ ಮಾಡುತ್ತಾರೆ. ಬಂದ ಬ್ರಾಹ್ಮಣರಿಗೆ ರಜತ ಪಾತ್ರೆಗಳ ಧಾನಮಾಡಿ ಬಹು ವೈಭವದಿಂದ ಗುರುಗಳ ಸಮಾರಾಧನೆ ಮಾಡುತ್ತಾರೆ. ಅಲ್ಲಿಂದ ಮುಂದೆ ಸತ್ತಿ ಗ್ರಾಮಕ್ಕೆ ಬಂದು ಛಾ೦ದೋಘ್ಯ ಭಾಷ್ಯದ ಪಾಠ ಮಾಡಿ ಬಹುದಿನಗಳು ಅಲ್ಲಿದ್ದು ಅಲ್ಲಿನ ಜನರಿಗೆ ವಾಯುದೇವರ ದರ್ಶನ ಮಾಡಿಸುತ್ತಾರೆ. ಅಲ್ಲಿಂದ ಮಿರಾಜ್ ಗೆ ಬಂದು ಅಲ್ಲಿ ದಾದಾಶಾಸ್ತ್ರಿಗಳು ಪ್ರಕಾಂಡ ಅದ್ವೈತ ಪಂಡಿತರು ಅವರು ಶ್ರೀ ಸತ್ಯಸಂದ ತೀರ್ಥರಲ್ಲಿ ವಾಕ್ಯಾರ್ಥ ಮಾಡಿ ಅವರಿಂದ ಜಯಪತ್ರಿಕೆ ಪಡೆದು ಅವರಿಗೆ ಋಗ್ಭಾಷ್ಯದ ಶುದ್ಧ ಪಾಠವನ್ನು ಸರಿಯಾಗಿ ಮಾಡುತ್ತಾರೆ.  ದ್ವೈತಾದ್ವೈತ ಮತ್ತು ಉಪನಿಷದ್ ಪಾಠಗಳನ್ನು ಮಾಡಿ ಅಲ್ಲಿನ ಜನರ ಸಿದ್ದಾಂತದ ಪ್ರಮಾಣವನ್ನು ತೋರಿಸುತ್ತಾರೆ. 

ಸಾಂಗಲಿ ಸತ್ಯವ್ರತ ತೀರ್ಥರ ದರ್ಶನ ಮತ್ತು ಅವರಿಂದ ಪ್ರಶಂಸೆ  
ಮಿರಾಜ್ ನಿಂದ ಶ್ರೀ ಸತ್ಯವ್ರತ ತೀರ್ಥರ ಮೂಲ ಸಶರೀರ ವೃಂದಾವನಸನ್ನಿಧಾನಕ್ಕೆ ಬಂದು ಸತ್ಯವ್ರತ ತೀರ್ಥರ ಎದುರಿನಲ್ಲಿ ಮೂಲರಾಮದೇವರ ಪೂಜೆ ಮಾಡುತ್ತಾ ವಿಷ್ಣು ಸಹಸ್ರಮಾಮಕ್ಕೆ ಅರ್ಥಬರೆದ ಮಹಾತ್ಮರು ಪ್ರತಿಯೊಂದು ನಾಮದಲ್ಲಿ ಪರಮಾತ್ಮನ ಚಿಂತಿಸುತ್ತ ಅತಿಭಕ್ತಿಯಿಂದ ಅರ್ಚನೆ  ಪೂಜೆ ಮಾಡುತ್ತಾರೆ. ನಂತರ ಸುಧಾಪಾಠ ತಮ್ಮ ಶಿಷ್ಯರಿಗೆ ಮಾಡುತ್ತಾರೆ. ಒಂದುದಿನ ಪಾಠ ಮಾಡುವಾಗ ಇವರು ಕೊಡುತ್ತಿದ್ದ ಸುಧಾಪಂಕ್ತಿಗೆ ಉತ್ತಮವಾದ ವಿವರಣೆ ಹಾಗೆ ಸುಧೆಗೆ ವಿಶೇಷವಾದ ಅರ್ಥಾನುಸಂಧಾನ ಮಾಡುತ್ತಿದ್ದಗಾ ಬೃಂದಾವನದ ಒಳಗೆ ಕುಳಿತ ಶ್ರೀ ಸತ್ಯವ್ರತ ತೀರ್ಥರು ಇವರ ಪಾಠಕ್ಕೆ ಮೆಚ್ಚಿ ಅಲ್ಲಿಂದಲೇ ಸಶರೀರವಾಗಿ ತಲೆ ಅಲ್ಲಾಡಿಸಿದರೆ, ಅವರ ಬೃಂದಾವನ ಅಲುಗಾಡಿ ಮೇಲಿದ್ದ ವಸ್ತ್ರಗಳು ಮತ್ತು ಹೂಗಳು ಕೆಳಗೆ ಬಿದ್ದವಂತೆ. ಅಲ್ಲಿದ್ದ ಪ್ರತಿಯೊಬ್ಬರೂ ನೋಡುತ್ತಾರೆ. ಸಾಂಗಲಿ ಸಂಸ್ಥಾನದ ಮಹಾರಾಜನಿಗೆ ಈ ವಿಷ್ಯಗೊತ್ತಾಗಿ ಅಲ್ಲಿನ ಮಹಾರಾಜ ಇವರಿಗೆ ವಿಶೇಷ  ಕಾಣಿಕೆಗೊಳನ್ನು ಕೊಟ್ಟು ಇವರ ದಾಸನು ದಾಸನಾಗುತ್ತಾನೆ. ಮುಂದೆ ಕೋಲ್ಹಪುರ ಮಹಾಲಕ್ಷ್ಮಿದರ್ಶನ ಮತ್ತು ವಾದಿಗಳ ನಿಗ್ರಹ ಮಾಡಿ ಅಲ್ಲಿಂದ ಸೊಲ್ಲಾಪುರಕ್ಕೆ ಬಂದು ಅಲ್ಲಿ ಚಾತುರ್ಮಾಸ್ಯಕ್ಕೆ ಕೂರುತ್ತಾರೆ. 

ಸತ್ಯಸಂದ ತೀರ್ಥರಿಗೆ ತುಳುಜಭಾವಾನಿ ದರ್ಶನ ಕೊಟ್ಟಿದ್ದು
ಒಬ್ಬ ಶಿಷ್ಯ ಶ್ರೀ ಸತ್ಯಸಂದ ತೀರ್ಥರಲ್ಲಿ ಬಂದು ತಾನು ತುಳುಜಾಭವಾನಿಯ ದರ್ಶನಕ್ಕೆ ಹೋಗಬೇಕೆಂದು ಮಂತ್ರಾಕ್ಷತೆ ಕೇಳುತ್ತಾನೆ. ಆಗ ಶ್ರೀಸತ್ಯಸಂದ ತೀರ್ಥರು ತುಳುಜಾಪುರಕ್ಕೆ  ನಾವು ಹೋಗೋಣ ಚಾತುರ್ಮಾಸ್ಯದ ನಂತರ, ಏಕೆಂದರೆ ಶ್ರೀಮೂಲರಾಮಚಂದ್ರ ದೇವರು ಸೊಲ್ಲಾಪುರದಲ್ಲೇ ಇರಬೇಕಾದರೆ ಶ್ರೀಭೂದುರ್ಗ ಮಹಾಲಕ್ಷ್ಮಿ ಸನ್ನಿಧಾನಳಾದ ತುಳುಜಾಭವಾನಿ ಇಲ್ಲೇ ಬರುತ್ತಾಳೆ ಎಂದು ಹೇಳುತ್ತಾರೆ. ಈಗ ಹೋಗಬೇಡ ಎಂದು ಹೇಳುತ್ತಾರೆ. ಆ ಶಿಷ್ಯ ಇವರ ಮಾತು ಕೇಳದೆ ಇಲ್ಲ ನಮ್ಮ ಕುಲದೇವಿ ದರ್ಶನ ಮಾಡಲೇಬೇಕು ಎಂದು ಹೇಳಿ ಹೊರಟಾಗ ಇದ್ದಕ್ಕಾದ್ದ ಹಾಗೆ ಮಧ್ಯಾಹ್ನ ಸುತ್ತ ಮಂಜು ಕವಿದುಕೊಂಡು ತನ್ನ ಕಣ್ಣುಗಳು ಕಾಣಿಸದಂತಾಗುತ್ತದೆ. ಆಗ ಆ ಶಿಷ್ಯನ ಸ್ವಪ್ನದಲ್ಲೇ ತುಳುಜಭಾವಾನಿ ಪ್ರತ್ಯಕ್ಷಳಾಗಿ ಗುರುಗಳ ಮಾತಿನಲ್ಲಿ ವಿಶ್ವಾಸವಿಲ್ಲಾ ನಿನಗೆ. ಚತುರ್ಯುಗ ಮೂರ್ತಿ ರಾಮಚಂದ್ರ ದೇವರು ಇರುವಾಗ ಶ್ರೀ ಸತ್ಯಸಂದ ತೀರ್ಥರಲ್ಲಿ ನಾನೇ ಅಂತರ್ಗತಳಾಗಿ ರಾಮದೇವರ ಪೂಜೆ ಮಾಡುತ್ತೇನೆ ಎಂದ ಮೇಲೆ ಅಲ್ಲೇ ದರ್ಶನ ಮಾಡಿಕೊಳ್ಳಬೇಕು ಹೊರತು ಇಲ್ಲೇ ಯಾಕೆ ಬಂದೆ ಎನ್ನಲು, ಪುನಃ ನನಗೆ ಕಣ್ಣು ಕೊಡು ಎಂದು ಕೇಳಲು ತುಳುಜಾಭವಾನಿ ಪುನಃ ಶ್ರೀ ಸತ್ಯಸಂದ ತೀರ್ಥರಲ್ಲಿ ಹೋಗು ಮತ್ತು ಅವರ ದರ್ಶನ ಮಾಡಿ ಪುನಃ ಅವರನ್ನೇ ಕೇಳು ಅವರು ಪುನಃ ಕಣ್ಣು ಕೊಟ್ಟರೆ ನಿನಗೆ ಕಣ್ಣು ಬರುತ್ತದೆ ಎಂದು ಹೇಳುತ್ತಾರೆ. ನಂತರ ಆ ಶಿಷ್ಯ ಸತ್ಯಸಂದರಲ್ಲಿ ಪುನಃ ಅಪರಾಧ ಮನ್ನಿಸಬೇಕೆಂದು ಕೇಳಲು ಪುನಃ ಶಿಷ್ಯವಾತ್ಸಲ್ಯದಿಂದ ತೀರ್ಥ ಪ್ರೋಕ್ಷಣೆ ಮಾಡಲು ಪುನಃ ಕಣ್ಣುಗಳು ಬಂದವು. ಮೃತ್ತಿಕೆ ಮಹಿಮೆಯನ್ನು ತೋರಿಸಿ ನಂತರ ತೀರ್ಥದ ಮಹಿಮೆಯನ್ನು ತೋರಿಸಿ  ನಂತರ ಮೊದಲು ರಾಮಚಂದ್ರ ದೇವರ ದರ್ಶನ ಮಾಡಿ ಕುಲಸ್ವಾಮಿನಿಯಾದ ತುಳುಜಭವನೀ ದರ್ಶನ ವಾಗಲಿಲ್ಲ ವೆಂದು ಬೇಜಾರು ಮಾಡಿಕೊಂಡ. ಸತ್ಯಸಂದ ತೀರ್ಥರು ಇವನ ಮನಸ್ಸಿನ ಇಚ್ಛೆ ತಿಳಿದು ತುಳುಜಭಾವಾನಿಯನ್ನು ಪ್ರಾರ್ಥಿಸಲು ಅಲ್ಲೇ ಆಕೆ ಪ್ರಾದುರ್ಭಗೊಂಡು ಅಷ್ಟಾದಶಭುಜಗಳಿಂದ ಆಯುಧ ಸಹಿತ ಮಹಾಲಕ್ಷ್ಮಿ ಸ್ವರೂಪಳಾದ ಶ್ರೀ ತುಳುಜಭಾವಾನಿ ಮೂಲರೂಪದಲ್ಲೇ ಶ್ರೀ ಸತ್ಯಸಂದರಿಗೆ ಮತ್ತು ಆ ಶಿಷ್ಯನಿಗೆ ದರ್ಶನ ಕೊಟ್ಟಳು. ನಂತರ ಅಲ್ಲಿಂದ ತುಳುಜಾಪುರಕ್ಕೆ ಹೋಗಿ ತಾವು ದರ್ಶನ ಮಾಡಿ ಅಲ್ಲಿಂದ ಗಯಾಕ್ಷೇತ್ರಕ್ಕೆ ಸಂಚಾರ ಮಾಡುತ್ತಾರೆ.  


ಗಯಾದಿಗ್ವಿಜಯ 
ಮಾರ್ಗಮಧ್ಯದಲ್ಲಿ ಅನೇಕ ವಾದಿಗಳ ನಿಗ್ರಹ, ಅಲ್ಲಿಂದ ಕಾಶಿಗೆ ಪ್ರಯಾಣ, ಕಾಶಿಗೆ ಯಾವ ಮಧ್ವಪೀಠಾಧಿಪತಿಗಳು ಹೋದರು ವಾಕ್ಯಾರ್ಥ ಆಗಿನ ಪ್ರಖಾಂಡ ಪಂಡಿತರಾದ ಬಾಲಸ್ವಾಮಿ ಮುಂತಾದ ಪಂಡಿತರ ಜೊತೆ ವಾಕ್ಯಾರ್ಥ ದ್ವೈತಾದ್ವೈತ ವಿಚಾರಮಾಡಿ ಮಧ್ವಮತಸಿದ್ದಾಂತ ಸ್ಥಾಪನೆ ಮಾಡಿ ಅಲ್ಲಿಂದ ಮುಂದೆ ಗಯಾಕ್ಷೇತ್ರಕ್ಕೆ ಹೋಗುತ್ತಾರೆ. ಹಿಂದೆ ಶ್ರೀ ವಿದ್ಯಾಧೀಶ ತೀರ್ಥರ ಕಾಲದಲ್ಲಿಯಿದ್ದ ಉತ್ತಾರಾದಿ ಮಠಕ್ಕೆ ನೀಡುತ್ತಿದ್ದ ಗೌರವ ಎಲ್ಲವು ತಪ್ಪಿಹೋಗಿರುತ್ತದೆ. ಬಹಳಷ್ಟು ಮಧ್ಯೆ ಯಾವಾ ಯತಿಗಳು ಹೋಗದ ಕಾರಣ ಗಾಯವಾಡರು ಇವರಿಗೆ ದರುಶನ ಕೊಡದೆ ದೇವಾಲಯದ ಬಾಗಿಲು ತೆರೆಯುವುದಿಲ್ಲ. ಆಗಿನ ಕಾಲಕ್ಕೆ ಹದಿನೈದು ಸಾವಿರ ಕೊಡಬೇಕೆಂದು ಕೇಳಿದಾಗ. ಶ್ರೀ ಸತ್ಯಸಂದ ತೀರ್ಥರು ನೀವೇ ಅಷ್ಟು ದಕ್ಷಿಣೆಯನ್ನು ರಾಮಚಂದ್ರ ದೇವರ ಮುಂದೆ ಸುರಿಯಬೇಕು ಎಂದು ಹೇಳಿ. ನೀವು ಶ್ರೀಮಠಕ್ಕೆ ವಿದ್ಯಾಧೀಶ ತೀರ್ಥರು ಮಾಡಿಕೊಟ್ಟ ಪರಂಪರೆಗೆ ನೀವು ಇಂದು ಬೆಲೆ ನೀಡುತ್ತಿಲ್ಲ, ನಿಮಗೆ ಬೇಕಾದರೆ ಅದರ ಎರಡರಷ್ಟು ದಕ್ಷಿಣೆ ಕೊಡುತ್ತೇವೆ ಎಂದು ಹೇಳಿ ಮೊದಲು ಶ್ರೀಮಠಕ್ಕೆ ಗೌರವ ಕೊಡಬೇಕು ಎಂದು ಹೇಳಿ, ಹೊರಗಿನಿಂದಲೇ "ವಿಷ್ಣು ಪಾದ"ಸ್ತುತಿ ಮಾಡುತ್ತಾರೆ. ಇವರ ಭಕ್ತಿಗೆ ಮೆಚ್ಚಿದ ಪರಮಾತ್ಮ ಕೊಡಲೇ ಬೀಗಗಳು ತಾವಾಗಿಯೇ ಮುರಿದು ಬೀಳುತ್ತದೆ. ಗಯಾವಾಡರು ದಿಗ್ಬ್ರಾಂತರಾಗಿ ಇವರಲ್ಲಿ ಶರಣಾಗಿ ಗೌರವ ಕೊಟ್ಟು ತಾವೇ ಹದಿನೈದು ಸಾವಿರ ಕೊಟ್ಟು ನಾವೇ ನಿಮ್ಮ ದಾಸರಾಗಿ ಇವತ್ತಿನಿಂದ ನಿಮ್ಮ ಮಠದ ಅನುಯಾಯಿಗಳು ಎಂದು ಹೇಳಿ ಶರಣಾದರು. ಅಂದಿನಿಂದ ಇಂದಿನವರೆಗೂ ಉತ್ತರಾದಿ ಮಠದ ಮತ್ತು ಮಾಧ್ವ ಪರಂಪರೆಯ ಯಾವ ಯತಿಗಳು ಹೋದರು ಅವರಿಗೆ ವಿಶೇಷ ಮರ್ಯಾದೆ ಮತ್ತು ಮೊದಲ ಪೂಜೆ ಅವರಿಗೆ. ಜೊತೆಗೆ ಉತ್ತರಾಧಿ ಮಠದ ಯತಿಗಳಿಗೆ ವಿಷ್ಣುಪಾದದ ಪಕ್ಕದಲ್ಲೇ ಶ್ರೀ ರಾಮಚಂದ್ರ ದೇವರ ಪೂಜೆ ನಡೆಸುವ ಅಧಿಕಾರ ದೊರಕಿಸಿಕೊಟ್ಟರು. ಅಲ್ಲಿಂದ ಮುಂದೆ ಹೋಗಬೇಕಾದರೆ ಬಿಹಾರ ಪ್ರಾಂತ್ಯದಲ್ಲಿ ಕಳ್ಳರ ದಂಡು ಬಂದು ಇವರನ್ನು ಮುತ್ತಿಗೆ ಹಾಕಬೇಕು ಎಂದು ನಿರ್ಧರಿಸಿ ಬರಲು ಶ್ರೀ ಮಠದ ಸಂಪ್ರಾದಾಯದಂತೆ ರಾತ್ರಿ ಎಷ್ಟು ಹೊತ್ತಾದರೂ ಏಕಾದಶಿ ಹೊರತು ಮತ್ತೆಲ್ಲ ದಿನಗಳು ಒಂದು ಕೊಳಗ ಹುಳಿ ಮತ್ತು ಅನ್ನವನ್ನು ಮಾಡುವ ಪದ್ಧತಿ. ಬಂದಂತಹ ಕಳ್ಳರ ಗುಂಪಿಗೆ ಶ್ರೀ ಸತ್ಯಸಂದ ತೀರ್ಥರು ಉಪಚಾರ ಮಾಡಿ ಊಟ ಹಾಕಿದರು. ಶ್ರೀ ರಾಮದೇವರ ಪ್ರಸಾದದ ಮಹಿಮೆಯಿಂದ ಆ ಪವಿತ್ರ ನೈವೇದ್ಯ ಸ್ವೀಕಾರ ಮಾಡಿದ ತಕ್ಷಣ ಅವರ ದುರ್ಗುಣ ಸುಟ್ಟು, ಶ್ರೀ ಸತ್ಯಸಂದ ತೀರ್ಥರಲ್ಲಿ ಶರಣಾದರು. 

ಆಂಧ್ರಪ್ರದೇಶ ದಿಗ್ವಿಜಯ ಸುವರ್ಣ ಪುರಿ ನಿರ್ಮಾಣ (ಸೋನ್ ಕ್ಷೇತ್ರ)
ಅಲ್ಲಿಂದ ಪುನಃ ಬರುವಾಗ ಆಂಧ್ರ ಪ್ರದೇಶದ ವಿಶಾಖ ಪಟ್ಟಣ, ವಿಜಯನಗರಂ, ಶ್ರೀಕಾಕುಳಂ, ನರಹರಿತೀರ್ಥರಿಂದ ಪ್ರತಿಷ್ಠಿತವಾದ ರಾಂಮದೇವರ ದರ್ಶನ , ಶ್ರೀಕೂರ್ಮಕ್ಷೇತ್ರ ದರ್ಶನ ಅಲ್ಲಲ್ಲಿ ಪ್ರಾಣದೇವರ ಪ್ರತಿಷ್ಠೆ, ವೈಷ್ಣವ ದೀಕ್ಷೆ, ಮಧ್ವಮತ ಪ್ರಚಾರ, ರಾಜ ಮಹೇಂದ್ರಿಯಲ್ಲಿ, ಮಚಲಿಪಟ್ಟಣ, ವಿಜಯವಾಡದಲ್ಲಿ ದೊಡ್ಡ ಮುಖ್ಯಪ್ರಾಣದೇವರ ಪ್ರತಿಷ್ಠೆ ಮಾಡಿದರು. ಆಗಿನ ಕಾಲದಲ್ಲಿ ಸಾವಿರಾರು ಎಕ್ಕರೆ ಜಮೀನುಗಳು ದತ್ತಿಯಾಗಿ ಕೊಟ್ಟಿದ್ದರು. ಆವುಗಳು ಇಂದಿಗೂ ಕೆಲವೊಂದು ಜಮೀನುಗಳು ಶ್ರೀ ಸತ್ಯಸಂದ ತೀರ್ಥರ ಹೆಸರಿನಲ್ಲಿ ಇವೆ ಎಂದು ಹೇಳುತ್ತಾರೆ.   ಆಗಿನ ಕಾಲದಲ್ಲಿ ಮಾಡಿದ ಸಾಧನೆಗಳು ಮುಸ್ಲಿಮರ ಆಳ್ವಿಕೆಯಲ್ಲಿ ಇಷ್ಟು ಪಡೆದದ್ದು ಮಹತ್ವವಾದದ್ದು.  ಗಂಗಾದೇವಿ ಪ್ರತ್ಯಕ್ಷಕರಿಸಿಕೊಂಡ ಮಹಾನುಭಾವರು ಶ್ರೀ ಸತ್ಯಸಂದ ತೀರ್ಥರು ಮತ್ತು ಶ್ರೀ ಸತ್ಯಸಂದ ತೀರ್ಥರರಿಂದ ಬಂಗಾರದ ಮರದ ಭಾಗಿನ ತೆಗೆದುಕೊಂಡ ಗಂಗಾದೇವಿ. ಅಲ್ಲಿಂದ ಮುಂದೆ ರಾಮಚಂದ್ರ ದೇವರು ವನವಾಸ ಮಾಡಿದ ಸ್ಥಳ ಗೋದಾವರಿ ತೀರಾ, ವೃದ್ಧಗಂಗಾ ಕ್ಷೇತ್ರ ಸುವರ್ಣಪುರಿ ಸಾಲಿಗ್ರಾಮ ಕ್ಷೇತ್ರ ಪರಶುರಾಮರು ಯಜ್ನ್ಯ ಮಾಡಿದ ಸ್ಥಳ ಎಂಬಲ್ಲಿ ಒಂದು ಅಗ್ರಹಾರ ನಿರ್ಮಿಸಿದರು. ಈಗಲೂ ಅಲ್ಲಿ ನೂರಕ್ಕಿಂತ ಹೆಚ್ಚು ಮಾಧ್ವ ಕುಟುಂಬಗಳು ಇವೆ ಎಂದರೆ ಇನ್ನು ಆಗಿನ ಕಾಲದಲ್ಲಿ ಎಸ್ಟಿತೆಂಬುದು ಊಹಿಸಲು ಅಸಾಧ್ಯ.  ಅಲ್ಲಿ ಮುಖ್ಯಪ್ರಾಣದೇವರ ಪ್ರತಿಷ್ಠೆ ಮತ್ತು ಶ್ರೀ ವೆಂಕಟೇಶದೇವರ ಪ್ರತಿಷ್ಠೆ ಮಾಡಿ ಸ್ವಲ್ಪ ದಿನಗಳು ಅಲ್ಲೇ ಉಳಿದಿದ್ದರು.  ನಂತರ ಚನ್ನಪಟ್ಟಣ, ಶ್ರೀರಂಗಪಟ್ಟಣ ಮುಂತಾದ ಕಡೆಗಳಲ್ಲಿ ಅಪಾರ ಮಹಿಮೆ ಮತ್ತು ಗಂಗಾಸನ್ನಿದಾನ ತರಿಸಿದ್ದವರು. 

ಒಮ್ಮೆ ಶ್ರೀ ರಾಮಚಂದ್ರ ದೇವರ ಪೂಜೆ ಮಾಡಲು ಪುಷ್ಪಗಳೇ ಸಿಗದಿದ್ದಾಗ ಎಷ್ಟೇ ಪ್ರಯತ್ನ ಪಟ್ಟರು ಹೂಗಳು ಸಿಗಲಿಲ್ಲ ಹಾಗೆ ಯೋಚನೆ ಮಾಡುತ್ತಿದ್ದಾಗ ಶ್ರೀ ರಾಮಚಂದ್ರ ದೇವರು ಒಬ್ಬ ವೃದ್ಧ ಬಂದು ಗುರುಗಳಿಗೆ ಸಮರ್ಪಣೆ ಮಾಡಿಸಿದರು. ಹೀಗೆ ಪೂಜೆ ಮಾಡುವಾಗ ಇದ್ದ ಐದು ಹೂಗಳನ್ನು ಶ್ರೀ ಮೂಲ  ರಾಮಚಂದ್ರ ದೇವರು,ದಿಗ್ವಿಜಯರಾಮ  ದೇವರು, ವೇದವ್ಯಾಸದೇವರು, ವಂಶರಾಮಚಂದ್ರ ದೇವರು ಮತ್ತು ವಿಠಲ ದೇವರಿಗೆ ಏರಿಸಿದರೆ, ಸೀತಾದೇವಿಗೆ ಹೂವೆ ಇರುವುದಿಲ್ಲ. ಮನಸಿನಲ್ಲೇ ಒಂದು ಚೂರು ಸಂಕೋಚಗೊ೦ಡರಂತೆ, ತಕ್ಷಣ ರಾಮ ದೇವರು ಇವರ ಮನಸ್ಸನ್ನು ಅರಿತು ತಕ್ಷಣ ಮೂಲರಾಮದೇವರ ಮೇಲಿದ್ದ ಹೂವು ತಕ್ಷಣ ಸೀತಾದೇವಿಯ ಮೇಲೆ ಬಂದು ಕೂರುತ್ತದೆ. ಇದೆ ಇವರ ಪೂಜಾ ಮಹಿಮಾ.     


ಪಾಂಡುರಂಗ ಶ್ರೀ ಸತ್ಯಸಂದ ತೀರ್ಥರಿಂದಲೇ ಮುದ್ರಾಧಾರಣೆ ಮಾಡಿಸಿಕೊಂಡಿದ್ದು
ಒಮ್ಮೆ ಸಂಚಾರ ಕ್ರಮದಲ್ಲಿ ಶ್ರೀ ಸತ್ಯಸಂದ ತೀರ್ಥರು ಪಂಡರಪುರಕ್ಕೆ ಹೋಗಿದ್ದಾಗ ಅಲ್ಲಿನ ವೈಷ್ಣವರಿಗೆ ಮುದ್ರಾಧಾರಣೆ ಮಾಡಿದರು. ಒಬ್ಬ ಮುದುಕನ ಬಂದು ಇವರಿಂದ ನಾನು ವೃದ್ಧ ನನಗೆ ಪಂಡರ ಪುರಕ್ಕೆ ಹೋಗಿ ಮುದ್ರೆ ತೆಗೆದುಕೊಳ್ಳುವಷ್ಟು ಆಗುವುದಿಲ್ಲ. ನನಗೆ ಇಲ್ಲೇ ಮುದ್ರೆ ಕೊಡಿ ಎಂದು ಕೇಳಿದನು. ಸತ್ಯಸಂಧರು ಅಲ್ಲೇ ಮುದ್ರಾಧಾರಣೆ ಮಾಡಿದರು. ಆ ವ್ಯಕ್ತಿ ಅಲ್ಲಿಂದ ಅದೃಶ್ಯನಾಗಿ ಹೋಗುತ್ತಾನೆ. ನಂತರ ಶ್ರೀ ಸತ್ಯಸಂದ ತೀರ್ಥರು ಪಂಢರಪುರಕ್ಕೆ ಬಂದು ವಿಠಲನ ದರ್ಶನ ಮಾಡಲು ಇವರಿಂದ ಪಂಚ ಮುದ್ರೆ ಸ್ವೀಕರಿಸಿದ ವಿಠಲನ ಎದೆಯಲ್ಲಿ ಮುದ್ರೆಗಳು ಕೆಂಪಗೆ ರಾರಾಜಿಸುತ್ತದೆ. ಇದರ ಅಂತಾರ್ಯ ವೈಷ್ಣವ ಮುದ್ರೆಯನ್ನು ಸಾಕ್ಷಾತ್ ಭಗವಂತನೇ ಸ್ವೀಕರಿಸಿ ತೋರಿಸಿದ ಎಂದಮೇಲೆ ನಾವೆಲ್ಲರೂ ಖಂಡಿತ ಮುದ್ರಾಧಾರಣೆ ಮಾಡಿಸಿಕೊಳ್ಳಬೇಕು. ಹಂಸನಾಮಕಪರಮಾತ್ಮನಿಂದಲೇ ವಿಠಲ ಸ್ವೀಕಾರ ಮಾಡಿದನು ಎಂದೇ ತಿಳಿಯಬೇಕು. ತಾವು ಮೊದಲೇ ಪೂರ್ವಾಶ್ರಮದಲ್ಲೇ ವಿಠಲನ ದರ್ಶನ ಮಾಡಿದ್ದವರು.  ಕೆಲವುದಿನ ಉಡುಪಿಯಲ್ಲೇ ತಂಗಿ ಅಲ್ಲಿ ಕೃಷ್ಣನ ಸನ್ನಿದಿಯಲ್ಲಿ ಶಾಸ್ತ್ರಾರ್ಥವಿಚಾರ ವಿದ್ವತ್ ಘೋಷ್ಟಿ ಎಲ್ಲವು ನಡೆಯುತ್ತದೆ.  ಅಲ್ಲಿಂದ ಉತ್ತರಾದಿಮಠ ಮತ್ತು ಉಡುಪಿಯ ಅಷ್ಟಮಠಗಳ ಬಾಂದವ್ಯ ಹೆಚ್ಚಾಗುತ್ತದೆ. 

ಹೀಗೆ ಸ್ವತಃ ಶ್ರೀ ಸತ್ಯಸಂದ ತೀರ್ಥರಿಗೆ ತಮ್ಮ ಆಯುಷ್ಯ ಇನ್ನು ಹದಿನೈದು ದಿನವಿರುವುದು ಮೊದಲೇ ತಿಳಿದಿರುತ್ತದೆ, ಉಡುಪಿಯಲ್ಲೇ ಹನ್ನೆರಡು ದಿನಗಳು ಕಳೆದ ನಂತರ ಅಲ್ಲಿಂದ ತಮ್ಮ ಶಿಷ್ಯರಿಗೆ ಬೇಗ ಹೊರಡಲು ಹೇಳಿ ಅಲ್ಲಿಂದ ಮುಂದೆ ಸೀತಾನದಿಯ ತೀರಕ್ಕೆ ಬರುತ್ತಾರೆ ಅಷ್ಟರಲ್ಲೇ ದೆಹಾಲಾಸ್ಯ ತುಂಬಾ ಆಗಿರುತ್ತದೆ. ತಮ್ಮ ಶಿಷ್ಯರಲ್ಲಿ ಒಬ್ಬರಾದ ಶ್ರೀ ಹಾವೇರಿ ಕೃಷ್ಣಚಾರ್ಯರಿಗೆ ಸನ್ಯಾಸಶ್ರಮ ಕೊಟ್ಟು ಸತ್ಯವರ ತೀರ್ಥರು ಎಂದು ಆಶ್ರಮ ನಾಮ ಕೊಟ್ಟು, ಇನ್ನು ನಾವು ಯೋಗ ಸಾಮರ್ಥ್ಯದಲ್ಲಿ ಇರುವೆವು ನಮ್ಮ ದೇಹ ಅತಿ ಹಗುರ ವಾಗಿರುತ್ತದೆ ಮತ್ತು ರಾಮ ದೇವರು ಅಶ್ವತ್ಥ ನಾರಾಯಣ ಪ್ರತಿಷ್ಠೆ ಮಾಡಿದ ಸ್ಥಳದ ಹತ್ತಿರದಲ್ಲಿ ನಮ್ಮ ದೇಹ ಭಾರವಾದಾಗ ಅದೇ ಸ್ಥಳದಲ್ಲಿ ವೃಂದಾವನ ನಿರ್ಮಾಣ ಮಾಡಬೇಕೆಂದು ತಮ್ಮ ಶಿಷ್ಯರು ಶ್ರೀ ಸತ್ಯವರ ತೀರ್ಥರಿಗೆ ಹೇಳಿ ಪರಮಾತ್ಮನ ಧ್ಯಾನಕ್ಕೆ ಕುಳಿತು ಕೊಳ್ಳುತ್ತಾರೆ. ಜೇಷ್ಠ ಮಾಸದ ಬಿಸಿಲಿದ್ದರೂ ಇವರು ಸಂಚಾರ ಮಾಡುತಿದ್ದ ಸಮಯದಲ್ಲಿ ತಂಪಾದ ಮೋಡಗಳು ಇವರ ಜೊತೆ ಚಲಿಸುತ್ತಿದ್ದವಂತೆ. ಹೀಗೆ ಜೇಷ್ಠ ಶುದ್ಧ ದ್ವೀತೀಯದಂದು ಮಧ್ಯಾನ್ಹ ಮಹಿಷಿ ಕ್ಷೇತ್ರದಲ್ಲಿ ತಮ್ಮ ದೇಹತ್ಯಾಗ ಮಾಡಿ ಪರಮಾತ್ಮನಲ್ಲಿ ಲೀನಾವಾಗುತ್ತಾರೆ. 

ಹೀಗೆ ಶ್ರೀ ಸತ್ಯಸಂದ ತೀರ್ಥರ ವಿಷಯಗಳನ್ನು ತಿಳಿಯುತ್ತ ಹೋದರೆ ಅವರ ಮಹಿಮೆಗಳನ್ನು ತಿಳಿಯಲು ಸಾಧ್ಯವೇ ಇಲ್ಲ. ಇವರ ಕೃತಿಗಳಾದ ವಿಷ್ಣು ಸ್ತುತಿ ಮತ್ತು ವಿಷ್ಣು ಸಹಸ್ರಮಾಮ ಭಾಷ್ಯದಲ್ಲಿ ಪರಮಾತ್ಮನ ಭಜಿಸಿದ ಒಂದೊಂದು ನುಡಿಗಳು ಪರಮಾದ್ಭುತ. ಹೀಗೆ ಸತ್ಯಸಂದ ವಿಜಯದಲ್ಲಿ ಸೂಮಾರು 564 ಶ್ಲೋಕಗಳಲ್ಲಿ ವರ್ಣಿಸಿದ್ದಾರೆ. 

ಪ್ರೀತೋಸ್ತು ಕೃಷ್ಣ ಪ್ರಭೋ
ಶ್ರೀಶ ಸಮೀರ ದಾಸ
ಫಣೀಂದ್ರ 

ಹೀಗೆ ಹಲವಾರು ಮಹಿಮೆಗಳನ್ನು ತೋರಿಸಿ ಭಕ್ತರಿಗೆ ನಿತ್ಯ ಅನುಗ್ರಹ ಮಾಡುತ್ತಾ ಪ್ರಕೃತಿ ಸೌಂದರ್ಯದ ನಡುವೆ ತುಂಗಾನದಿ ತೀರದಲ್ಲಿ ಅಶ್ವಥ ಲಕ್ಷ್ಮಿ ನಾರಸಿಂಹ ಮತ್ತು ನಾರಾಯಣನ ಸೇವೆ ಮಾಡುತ್ತಾ ಶ್ರೀ ಸತ್ಯಸಂದ ತೀರ್ಥರು ವಿರಾಜಿಸುತ್ತಿದ್ದರೆ. ಅವರ ತೀರ್ಥ ಮತ್ತು ಮೃತ್ತಿಕೆಯ ಮಹಿಮೆಗಳು ಅಪಾರ. ಸಾಧ್ಯವಾದರೆ ಒಮ್ಮೆ ಅವರ ದರುಶನ ಮಾಡಿದರು  ಜನ್ಮ ಸಾರ್ಥಕ. ಶ್ರೀ ಸತ್ಯಸಂದ ತೀರ್ಥರಂತರ್ಗತ ಭಾರತಿರಮಣ ಮುಖ್ಯಪ್ರಾಣ೦ತರ್ಗತ ಶ್ರೀ ವೇದವ್ಯಾಸದೇವರ ಚರಣಕಮಲಗಳಿಗೆ ಈ ಪುಟ್ಟ ಲೇಖನ ಪುಷ್ಪಸಮರ್ಪಿಸುತ್ತಿದ್ದೇನೆ. ದೋಷಗಳೇನಿದ್ದರೂ ಅದು ನನ್ನದೇ ಮತ್ತು ಒಂದೆರಡು ಒಳ್ಳೆಯ ವಿಚಾರಗಳಿದ್ದರು ಅದು ಸತ್ಯಸಂದ ತೀರ್ಥರ ಅನುಗ್ರಹ 
ಶ್ರೀ ಕೃಷ್ಣಾರ್ಪಣಮಸ್ತು
**********
ಶ್ರೀ ಸತ್ಯಬೊಧತೀರ್ಥರ ಶಿಶ್ಯರು ಮಹಿಷಿಪುರವಾಸಿಗಳು ಉತ್ತರಾದಿಮಠಾಧೀಶರು ಶ್ರೀ ಶ್ರೀ ೧೦೦೮ ಶ್ರೀ ಸತ್ಯಸಂಧತೀರ್ಥರು. 
ಹಾವೆರಿ ಮಧ್ವಾಚಾರ್ಯ ಹಾಗೂ ಭಾರತಿದೆವಿ ದಂಪತಿಗಳ ಮಗನಾಗಿ ಜನನ. ಮಗುವಿಗೆ ರಾಘವೆಂದ್ರ / ರಾಮಚಂದ್ರ ಯೆಂದು ನಾಮಕರಣ.
ಏಳು ವರ್ಷಕ್ಕೆ ಉಪನಯನ. ಕಾವ್ಯ ವ್ಯಾಕರಣ ನ್ಯಾಯ ಶಾಸ್ತ್ರಗಳ ಅಧ್ಯಯನ ನಂತರ ಶ್ರೀ ಸತ್ಯಬೊಧ ತೀರ್ಥ ಶ್ರೀಪಾದಂಗಳಲ್ಲಿ  ವೆದಾಂತ ಗ್ರಂಥ ಗಳ, ಶ್ರೀ ಮನ್ಯಾಯಸುಧಾ  ಉದ್ಗ್ರಂಥಗಳ ಪಾಠವಾಯಿತು. ಸದಾಚಾರ ತೆಜಸ್ಸು ತುಂಬಿ ತುಳುಕುತ್ತಿತ್ತು.
ಶ್ರೀ  ಸತ್ಯಬೊಧ ತೀರ್ಥರ ಪೂರ್ವಾಶ್ರಮದ ಪುತ್ರ ಶ್ರೀ ಸೆತುನಾರಾಯಣಾಚಾರ್ಯರ ಮಗಳು " ಸುಕನ್ಯಾ" ಳೊಡನೆ ವಿವಾಹವಾದರು. ದೈವಾನುಗ್ರಹದಿಂದ ಎರಡು ಮಕ್ಕಳಾದವು. ನೂತನ ದಂಪತಿಗಳು ಮಠದಲ್ಲಿ ವಾಸಿಸುತ್ತಿದ್ದರು. ಶ್ರೀಗಳಲ್ಲಿ ಪ್ರೌಢಗ್ರಂಥಗಳ ಅಧ್ಯಯನ ಮಾಡಿದರು. ಕಥಾನಾಯಕ ರಾಮಚಂದ್ರ ಆಚರ್ಯರ ಆಚರಣೆ, ಜಪ, ತಪಾದಿಗಳನ್ನು ಗುರುಗಳು ಗಮನಿಸಿ ತಮ್ಮ ಉತ್ತರಾಧಿಕಾರಿ ಎಂದು ನಿರ್ಧರಿಸಿದರು. ಎಲ್ಲವೂ ಸರಿಯಾಗಿದ್ದು ಆಯುಶ್ಯ ಮಾತ್ರ ಅಲ್ಪವಾಗಿತ್ತು. ತಮ್ಮ ೧೦ ವರ್ಷ ಆಯುರ್ದಾನ ಮಾಡಿ  ಶೊಭನ ಸಂವತ್ಸರದ ಫಾಲ್ಗುಣ ಶುದ್ಧ ತ್ರಿತಿಯಾ ೧೭೮೩  ಶ್ರೀ ರಾಮಚಂದ್ರಾಚಾರ್ಯರಿಗೆ ಸನ್ಯಾಸ, ಪಟ್ಟಾಭಿಷೇಕ ಮಾಡಿ ಸತ್ಯಸಂಧತೀರ್ಥರೆಂದು ನಾಮಕರಣ. ೧೨ ದಿನಗಳ ನಂತರ  ಗುರುಗಳಾದ ಶ್ರೀ ಸತ್ಯಬೊಧತೀರ್ಥರು ಸವಣೂರಲ್ಲಿ ವ್ರುಂದಾವನ ಪ್ರವೇಶ. ಗುರುಗಳ ಆರಾಧನಾ ನಂತರ ದಿಗ್ವಿಜಯ ಮಾಡುತ್ತ ಸಾಂಗಲಿಗೆ ಬಂದರು. ಸಶರೀರ ವಾಗಿ ಬ್ರುಂದಾವನಸ್ಥರಾದ ಶ್ರೀ ಸತ್ಯವ್ರುತರ ಸನ್ನಿಧಿ. ಶ್ರೀ ಸತ್ಯಸಂಧರು ಭಕ್ತಿಯಿಂದ ಶ್ರೀ ಮೂಲರಾಮರ ಪೂಜೆ ಮಾಡುತ್ತಿರುವದನ್ನು ಕಂಡು ಆನಂದಗೊಂಡು ಶ್ರೀ ಸತ್ಯವ್ರುತರ ವ್ರುಂದಾವನ ಅಲುಗಾಡಲು ಪ್ರಾರಂಭವಾಯಿತು. ಸನ್ನಿಧಾನ ಬಲದಿಂದ  ಅವಶ್ಯವಾಗಿ ಜಡದಲ್ಲಿಯೂ ಕ್ರಿಯೆಯು ಕಂಡುಬರುತ್ತದೆ ಯೆಂದು ಸಾಬೀತು ಪಡಿಸಿದರು. ಸಾವಿರಾರು ಜನರು ಈ ಅಪೂರ್ವ ಘಟನೆಗೆ ಸಾಕ್ಷಿ ಯಾದರು.
ತಪ್ತ ಮುದ್ರಾಧಾರಣೆ ಮಹತ್ವ ತಿಳಿಸಲು ಶ್ರೀ ಪಾಂಡುರಂಗ ವಿಠ್ಠಲ ಬ್ರಾಹ್ಮಣ ರೂಪದಲ್ಲಿ ಬಂದು ಇವರಿಂದ ಮುದ್ರಾಧಾರಣೆ ಮಾಡಿಸಿಕೊಂಡನು. ಗಂಗಾದೆವಿಯು ಪ್ರತ್ಯಕ್ಷ ವಾಗಿ ಇವರಿಂದ ಸುವರ್ಣದ ಮರದ ಬಾಗಿಣ ಸ್ವೀಕರಿಸಿದಳು. ಉಡುಪಿ ಶ್ರೀ ಕ್ರಿಷ್ಣನನ್ನು ಪೂಜಿಸಿದ ಮಹಾಮಹಿಮರು. ಕೋಟಿ ತುಳಸಿ ಅರ್ಪಿಸಿದರು.
 ಶೆsಶ ದೆವರನ್ನು ಕಣ್ನಾರೆ ಕಂಡ ತಪಸ್ವಿಗಳು. ಅಷ್ಟ ಸಿದ್ದಿ ಪಡೆದ ಪ್ರಸಿದ್ಧ ಪುರುಷರು. ಬೆತ್ತದಲ್ಲಿ ಶಕ್ತಿ ತುಂಬಿದ ಮಹಿಮರು.
ಗಯಾವಾಡರು ವಿಷ್ಣುಪಾದ ಮಂದಿರಕ್ಕೆ ಕೀಲಿಹಾಕಿ  ವಿಷ್ಣುಪಾದ ದರ್ಶನಕ್ಕೆ ತಡೆದರು. ಶ್ರೀ ಸತ್ಯಸಂಧರ ದರ್ಶನ ಮತ್ತು ಸ್ಪರ್ಶದಿಂದ ಕೀಲಿ ಕೊಂಡಿಗಳು ಮುರಿದು ಬಿದ್ದವು. ಶ್ರೀಗಳ ಅಪಾರ ಮಹಿಮೆ ಕಂಡು ಗಯಾವಾಡರು ಶ್ರೀಗಳಿಗೆ ಶರಣಾದರು.
ಪ್ರತ್ಯಕ್ಷ  ಪಶುವಧೆ ಶಾಸ್ತ್ರನಿಶಿದ್ಧವೆಂದು ಪ್ರತಿಪಾದಿಸಿದರು. ಅದಕ್ಕಾಗಿ "ಪಿಷ್ಟ ಪಶುಮೀಮಾಂಸಾ " ಯೆಂಬ ಗ್ರಂಥ ರಚಿಸಿದರು.
ಪುರುಷ ಸೂಕ್ತಕ್ಕೆ, ಸರಸ್ವತಿ ಸೂಕ್ತ ಕ್ಕೆ ,ವೇದಗಳಿಗೆ & ವಿಷ್ಣು  ಸಹಸ್ರನಾಮಕ್ಕೆ ವ್ಯಾಖ್ಯಾನ ಮಾಡಿದರು. ೪೮ ಶ್ಲೋಕಗಳ ವಿಷ್ಣು ಸ್ತುತಿ ಮತ್ತು ಅಷ್ಟಾವಿಂಶತಿಮೂರ್ತಿ ಸ್ತುತಿ ರಚಿಸುರುವರು. ತಮ್ಮ ಸಾಧನಸಿದ್ಧಿಗಳಿಂದ ವೈಷ್ಣವ ಮತದ ಪ್ರಚಾರ, ಪ್ರಸಾರಮಾಡಿದರು. 
ತಮ್ಮ ಪೂರ್ವಾಶ್ರಮದ ತಮ್ಮಂದಿರಾದ ಹಾವೆರಿ ಕ್ರಷ್ಣಾಚಾರ್ಯರಿಗೆ  ತಮ್ಮ ಗುರುಗಳ ಆಜ್ನೆಯಂತೆ ಉತ್ತರಾಧಿಕಾರಿ ಯಾಗಿ ನೆಮಿಸಿ ಶ್ರೀ ಸತ್ಯವರತೀರ್ಥರೆಂದು ನಾಮಕರಣ ಮಾಡಿ ಸಂಸ್ಥಾನ ಒಪ್ಪಿಸಿದರು. ತುಂಗೆಯ ತಟದ ಮಹಿಷಿಯಲ್ಲಿ ಜೇಷ್ಠ ಶುದ್ಧ ದ್ವಿತೀಯ ೧೭೯೪  ದಂದು ವ್ರುಂದಾವನ ಪ್ರವೇಶ ಮಾಡಿ ಇಂದಿಗೂ ಅನುಗ್ರಹ ಮಾಡುತ್ತಿರುವರು. ಅವರು ನಮ್ಮೆಲ್ಲರನ್ನು ಅನುಗ್ರಹಿಸಲಿ

ಆಚಾರ್ಯರ ಶಾಸ್ತ್ರದಲ್ಲಿ ರತಿಯನ್ನು ನೀಡಲಿ.🙏🙏
*******

'ಮಧ್ವಮತದ ಮಹಿತಚರಿತರು' ಲೇಖನಮಾಲಿಕೆ- ಐವತ್ತೊಂದನೆಯ ಲೇಖನ- ಶ್ರೀಸತ್ಯಸಂಧ ತೀರ್ಥರು.

'ಶ್ರೀವಿಷ್ಣುಸಹಸ್ರನಾಮ' ಭಗವಂತನ ಸಾವಿರದ ಸಾವಿರನಾಮಗಳ ಅನುಸಂಧಾನಕ್ಕಾಗಿ ರಚಿತವಾಗಿರುವ ಅನುಪಮವಾದ ಸ್ತೋತ್ರ. ಶಾಸ್ತ್ರಗಳಲ್ಲಿ ಮಹಾಭಾರತ ಸಾರಭೂತವಾದದ್ದು, ಮಹಾಭಾರತದಲ್ಲಿ ವಿಷ್ಣುಸಹಸ್ರನಾಮ ಮತ್ತು ಗೀತಾ. ಅವುಗಳನ್ನು ಸರಿಯಾಗಿ ಅರಿತವನು ಬಾಳಿನಿಂದ ಬಿಡುಗಡೆ ಹೊಂದುತ್ತಾನೆ ಎಂಬುದು ಕೂರ್ಮಪುರಾಣದ ವಚನ. (ಭಾರತಂ ಸರ್ವಶಾಸ್ತ್ರೇಷು ಭಾರತೇ ಗೀತಿಕಾವರಾ ವಿಷ್ಣೋ: ಸಹಸ್ರನಾಮಾಪಿ ಜ್ಞೇಯಂ ಪಾಠ್ಯಂ ಚ ತದ್ ದ್ವಯಮ್"). ಸಮಸ್ತ ವೈದಿಕವಾಙ್ಮಯದ ಸಾರವಾಗಿರುವ ಶ್ರೀವಿಷ್ಣುಸಹಸ್ರನಾಮ ಬೃಹತೀಸಹಸ್ರದ ಸಾರರೂಪವೂ ಆಗಿದೆ. ವಿಶ್ವಗುರುಗಳಾದ ಶ್ರೀಮಧ್ವಾಚಾರ್ಯರು ಕಾಸರಗೋಡಿನ ಸಮೀಪದ ದೇವಾಲಯವೊಂದರಲ್ಲಿ "ವೇದಗಳಿಗೆ ಕನಿಷ್ಠ ಮೂರು ಅರ್ಥಗಳುಂಟು, ಮಹಾಭಾರತಕ್ಕೆ ಹತ್ತು ಅರ್ಥಗಳು ಮತ್ತು ವಿಷ್ಣುಸಹಸ್ರನಾಮ ಒಂದೊಂದು ನಾಮಕ್ಕೂ ನಿರಂತರವಾಗಿ ನೂರು ಅರ್ಥಗಳಿವೆ" ಎಂದು ಹೇಳಿದಾಗ ಅದನ್ನು ಒಪ್ಪದ ಪಂಡಿತರು 'ಹಾಗಾದರೆ ನೂರು ಅರ್ಥಗಳನ್ನು ಹೇಳಿ ನೋಡೋಣ' ಎಂದು ಪಂಥಾಹ್ವಾನ ನೀಡಿದರು. ಶ್ರೀಪೂರ್ಣಪ್ರಜ್ಞರು 'ವಿಶ್ವ'ಶಬ್ದದ ಸುಮಾರು 30 -35 ಅರ್ಥಗಳನ್ನು ನಿರ್ವಚನ ಸಹಿತ ಹೇಳಿ, ತಾವು ಹೇಳಿದ ಅರ್ಥಗಳನ್ನು ನೆನಪಿಟ್ಟುಕೊಂಡು ಯಾರಾದರೂ ಹೇಳಿದರೆ ಮುಂದಿನ ಅರ್ಥಗಳನ್ನು ವಿವರಿಸುತ್ತೇನೆ ಎಂದರು. ಸರ್ವಜ್ಞಾಚಾರ್ಯರ ಸವಾಲಿಗೆ ಪಂಡಿತರ ಸೋಲೇ ಉತ್ತರವಾಯಿತು. ವಿಷ್ಣುಸಹಸ್ರನಾಮಕ್ಕೆ ದೊರೆಯಬಹುದಾಗಿದ್ದ ಅಪೂರ್ವ ಅರ್ಥಾನು ಸಂಧಾನದಿಂದ ಜಗತ್ತು ವಂಚಿತವಾಯಿತು. ಹೀಗೆ ವಿಷ್ಣುಸಹಸ್ರನಾಮದ ಪ್ರತಿಯೊಂದೂ ನಾಮಕ್ಕೂ ಕನಿಷ್ಠ ನೂರು ಅರ್ಥಗಳಿವೆ ಎಂಬ ಅಪೂರ್ವ ವಿಷಯವನ್ನು ತಿಳಿಸಿ, ತಮ್ಮ ಗ್ರಂಥಗಳಲ್ಲಿ ಅನೇಕ ನಾಮಗಳಿಗೆ ಅಪೂರ್ವ ನಿರ್ವಚನಗಳನ್ನು ನೀಡಿರುವ ಶ್ರೀಮಧ್ವಭಗವತ್ಪಾದರ ಪರಂಪರೆಯಲ್ಲಿ ಶ್ರೀವಿಷ್ಣುಸಹಸ್ರನಾಮಕ್ಕೆ ಶ್ರೀವಿದ್ಯಾಧಿರಾಜರು ಒಂದು ವ್ಯಾಖ್ಯಾನವನ್ನು ರಚಿಸಿದ್ದಾರೆ. ಶ್ರೀವಾದಿರಾಜರೂ ತಮ್ಮ ಲಕ್ಷಾಲಂಕಾರದಲ್ಲಿ ವಿಷ್ಣುಸಹಸ್ರನಾಮದ ಕೆಲವು ಕ್ಲಿಷ್ಟನಾಮಗಳ ವಿವರಣೆಗಳನ್ನು ನೀಡಿದ್ದಾರೆ. ರಾಘವೇಂದ್ರಯೋಗಿ ಗಳೆಂಬುವರು ಅನ್ಯಮತೀಯರೊಬ್ಬರ ಭಾಷ್ಯದಲ್ಲಿರುವ ದೋಷಗಳನ್ನು ಎತ್ತಿ ತೋರಿ ಸುಂದರವಾದ ವ್ಯಾಖ್ಯಾನವನ್ನು ರಚಿಸಿದ್ದಾರೆ. ಆಚಾರ್ಯ ರಾಮಾನುಜರ ಪರಂಪರೆಯ ಶ್ರೀಪರಾಶರ ಭಟ್ಟರು ರಚಿಸಿರುವ ಅತ್ಯಂತ ವಿಸ್ತೃತವಾದ, ಸುಂದರವಾದ "ಭಗವದ್ಗುಣದರ್ಪಣ' ವ್ಯಾಖ್ಯಾನವೂ ಶ್ರೀವಿಷ್ಣುಸಹಸ್ರನಾಮಕ್ಕೆ ಉಪಲಬ್ಧವಿದೆ. ಶ್ರೀಮಧ್ವಪರಂಪರೆಯಲ್ಲಿ ಶ್ರೀವಿಷ್ಣುಸಹಸ್ರನಾಮಕ್ಕೆ ಉಪಲಬ್ಧವಿರುವ ಅತ್ಯಂತ ವಿಸ್ತೃತವಾದ ವ್ಯಾಖ್ಯಾನವನ್ನು ರಚಿಸಿದವರಲ್ಲಿ ಶ್ರೀಸತ್ಯಸಂಧತೀರ್ಥರು ಪ್ರಮುಖರಾಗಿದ್ದಾರೆ.
ಮಹಾನುಭಾವರಾದ ಶ್ರೀಸತ್ಯಬೋಧತೀರ್ಥರ ಕರಕಮಲಸಂಜಾತರಾಗಿ ಶ್ರೀಉತ್ತರಾದಿ ಮಠದ ಪರಂಪರೆಯನ್ನು ಅಲಂಕರಿಸಿದ ಶ್ರೀಸತ್ಯಸಂಧತೀರ್ಥರ ಪೂರ್ವಾಶ್ರಮದ ಹೆಸರು ಶ್ರೀರಾಮಚಂದ್ರಾಚಾರ್ಯರು( ಶ್ರೀರಾಘವೇಂದ್ರಾಚಾರ್ಯರು). ಶ್ರೀಸತ್ಯಬೋಧತೀರ್ಥರ ಪೂರ್ವಾಶ್ರಮದ ಪುತ್ರರಾದ ಶ್ರೀಸೇತುನಾರಾಯಣಾಚಾರ್ಯರ ಪುತ್ರಿಯನ್ನು ವಿವಾಹವಾಗಿದ್ದ ಮಹಾವಿದ್ವಾಂಸರಾದ ಶ್ರೀರಾಮಚಂದ್ರಾಚಾರ್ಯರು ತಮ್ಮ ಉತ್ತರಾಧಿಕಾರಿ ಗಳಾಗಬೇಕೆಂದು ಅಪೇಕ್ಷಿಸಿದ ಶ್ರೀಸತ್ಯಬೋಧರು ಸತ್ಯಸಂಧತೀರ್ಥರೆಂಬ ಆಶ್ರಮನಾಮದೊಂದಿಗೆ ತುರೀಯಾಶ್ರಮವನ್ನು ಅನುಗ್ರಹಿಸಿದರು. ಶ್ರೀಸತ್ಯಸಂಧರಿಗೆ ಅಲ್ಪಾಯುಷ್ಯ ವಿರುವುದನ್ನು ಅರಿತ ಶ್ರೀಸತ್ಯಬೋಧರು ಅವರಿಗೆ ಆಯುಷ್ಯವನ್ನೂ ಅನುಗ್ರಹಿಸಿದರು. ಗಯಾ, ಕಾಶೀ, ಜಗನ್ನಾಥಕ್ಷೇತ್ರ, ಫಂಡರಾಪುರ, ಕೊಲ್ಹಾಪುರ, ಮಳಖೇಡ ಮೊದಲಾದ ಕ್ಷೇತ್ರಗಳನ್ನು ಸಂದರ್ಶಿಸಿ ಅಲ್ಲಿ ತಮ್ಮ ತಪೋ ಮಹಿಮೆಯನ್ನು ತೋರಿ, ಭಕ್ತರನ್ನು ಅನುಗ್ರಹಿಸಿದ ಶ್ರೀಸತ್ಯಸಂಧರು ಅನೇಕ ಪ್ರದೇಶಗಳಲ್ಲಿ ಶ್ರೀಮುಖ್ಯಪ್ರಾಣದೇವರ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿದರು. ಮಹಿಮಾನ್ವಿತರಾದ ಶ್ರೀಸತ್ಯಸಂಧರ ಮಹಿಮೆಯನ್ನು ವರ್ಣಿಸುವ 'ಶ್ರೀಸತ್ಯಸಂಧವಿಜಯ' ಕಾವ್ಯವನ್ನು ಮರಾಠಿ ಭಾಷೆಯಲ್ಲಿ ಕೋನೇರಾತ್ಮಜ ಎಂಬ ಕವಿಯು ರಚಿಸಿದ್ದಾರೆ. ಸಂಸ್ಕೃತಭಾಷೆಯಲ್ಲಿಯೂ ಶ್ರೀಆನಂದತೀರ್ಥಾಚಾರ್ಯರೆಂಬುವರು 'ಶ್ರೀಸತ್ಯಸಂಧವಿಜಯ' ಕೃತಿಯನ್ನು ರಚಿಸಿದ್ದಾರೆ. ಶ್ರೀಹರಿಕಥಾಮೃತಸಾರ ಕರ್ತೃಗಳಾದ ಶ್ರೀಜಗನ್ನಾಥದಾಸರು "ವಂದಿಸು ಗುರು ಸತ್ಯಸಂಧ ಮುನಿಯಾ ವೃಂದಾವನಕೆ ಹರುಷದಿಂದ ಎಂದೆಂದು' ಎಂಬ ಕೃತಿಯನ್ನು ಶ್ರೀಸತ್ಯಸಂಧರನ್ನು ಕುರಿತು ರಚಿಸಿದ್ದು "ಗಂಗಾ ಪ್ರಯಾಗ ಗಯಾ ಶ್ರೀಶೈಲ ಅಹೋಬಿಲ ಭುಜಂಗಾದ್ರಿ ಮೊದಲಾದ ಕ್ಷೇತ್ರಗಳನು ಇಂಗಿತಜ್ಞರ ಸಹಿತ ಸಂಬಂಧ ಗೈಸಿ ವರಮಹಿಷ ತುಂಗಾತಟದಿ ವಾಸವಾಗಿಪ್ಪ ಯತಿವರಗೆ" ಎಂಬುದಾಗಿ ಶ್ರೀಸತ್ಯಸಂಧರ ವಿವಿಧ ಕ್ಷೇತ್ರಗಳ ಸಂದರ್ಶನವನ್ನು ವರ್ಣಿಸಿರುವ ಶ್ರೀಜಗನ್ನಾಥದಾಸಾರ್ಯರು ಶ್ರೀವಿಷ್ಣುಸಹಸ್ರನಾಮಕ್ಕೆ ಶ್ರೀ ಸತ್ಯಸಂಧರು ವ್ಯಾಖ್ಯಾನವನ್ನು ರಚಿಸಿರುವ ವಿಚಾರವನ್ನು 'ಶ್ರೀಮನೋರಮನ ಅತಿವಿಮಲತರ ಶಾಸ್ತ್ರ ನಾಮಾವಳಿಗೆ ಸುವ್ಯಾಖ್ಯಾನ ರಚಿಸಿ ಧೀಮಂತ ಜನರಿಗುಪದೇಶಿಸಿ ನಿರಂತರ ಧಾಮ ಜಗನ್ನಾಥವಿಠಲನ ಒಲುಮೆ ಪಡೆದವರಿಗೆ" ಎಂಬ ನುಡಿಗಳಲ್ಲಿ ವರ್ಣಿಸಿದ್ದಾರೆ. ಶ್ರೀಸತ್ಯಸಂಧರ ಭಾಷ್ಯವು ಅತ್ಯಂತ ಸುಂದರವಾಗಿದ್ದು, ಸುಲಭವೂ, ಸಂಕ್ಷಿಪ್ತವೂ ಆಗಿರುವುದರೊಂದಿಗೆ ಸರ್ವಮೂಲಗ್ರಂಥಗಳಲ್ಲಿ ಶ್ರೀಸತ್ಯಸಂಧರಿಗಿದ್ದಂತಹ ಅಪಾರ ಪರಿಶ್ರಮದ ದ್ಯೋತಕವೂ ಆಗಿದೆ. ಶಾಸ್ತ್ರರೀತ್ಯ ನಿರ್ವಚನ, ಪದಗಳ ಅರ್ಥ ಚಿಂತನೆಯಿಂದ ಶ್ರೀಸತ್ಯಸಂಧರ ಭಾಷ್ಯ ವಿಶಿಷ್ಟವಾಗಿದೆ. ಶ್ರೀಸತ್ಯಸಂಧರು ವಿಷ್ಣುಸಹಸ್ರನಾಮ ವ್ಯಾಖ್ಯಾನದೊಂದಿಗೆ ಪುರುಷಸೂಕ್ತವ್ಯಾಖ್ಯಾನ, ಘರ್ಮಸೂಕ್ತವ್ಯಾಖ್ಯಾನ, ಕೃಷ್ಣಸ್ತುತಿಗಳನ್ನೂ ರಚಿಸಿದ್ದಾರೆ. ಶ್ರೀಸತ್ಯವರರಿಗೆ ಆಶ್ರಮನೀಡಿ ತುಂಗಭದ್ರಾತೀರದ ಮಹಿಷಿಯಲ್ಲಿ ಜ್ಯೇಷ್ಠ ಶುದ್ಧ ದ್ವಿತೀಯಾದಂದು ಬೃಂದಾವನ ಪ್ರವೇಶ ಮಾಡಿದ ಶ್ರೀಸತ್ಯಸಂಧರ ಬಗೆಗಿನ ಲೇಖನ ಅವರ ಆರಾಧನಾ ಪರ್ವಕಾಲ ದಲ್ಲಿಯೇ ರಚಿತ ವಾಗಿರುವುದು ಯೋಗಾಯೋಗ.
ವಿಷ್ಣೋ: ಪದಶ್ರಿದ್ಗೋವ್ರಾತೈ: ಸ್ವಾಂತಧ್ವಾಂತನಿವಾರಕ: |
ಶ್ರೀಸತ್ಯಸಂಧಸೂರ್ಯೋ ಯಂ ಭಾಸತಾಂ ನೋ ಹೃದಂಬರೇ || ವೇಣುಗೋಪಾಲ ಬಿ.ಎನ್.
🙏🙏🙏
******


ವಿಷ್ಣೋ:ಪದಾಶ್ರೀತ್ ಗೋವ್ರಾತೈ: 
ಸ್ವಾಂತಧ್ವಾಂತ ನಿವಾರಕ:|ಶ್ರೀಸತ್ಯಸಂಧಸೂರ್ಯೋಯಂ 
ಭಾಸತಾಂ ನೋ ಹೃದಂಬರೇ||
ತುಂಗಾ ತೀರದ ಮಹಿಷಿಯ ರಮ್ಯ ಪರಿಸರದಲ್ಲಿ ನೆಲೆಸಿದ, ಶ್ರೀಸತ್ಯಸಂಧತೀರ್ಥರು ಪ್ರಚಂಡ ಪ್ರತಿಭಾಶಾಲಿಗಳು.ಅಖಿಲ ಭಾರತ ಸಂಚಾರ ಮಧ್ವಸಿದ್ಧಾಂತ ಪ್ರಚಾರ, ಶಿಷ್ಯರ ಸಂಗ್ರಹ.ಅವರ ಬಗ್ಗೆ ಸಂಸ್ಕೃತ, ಮರಾಠಿ ಭಾಷೆಗಳಲ್ಲಿ ವಿಜಯ ಕಾವ್ಯಗಳನ್ನು ಬರೆದಿದ್ದಾರೆ.

ಆಂಧ್ರದ ವಿಜಯವಾಡಾದಲ್ಲಿ ಬಹು ದೊಡ್ಡ ಮಠವನ್ನು ಸಂಪಾದಿಸಿದರು. ಅಲ್ಲಿ ಪ್ರಾಣದೇವರನ್ನು ಪ್ರತಿಷ್ಠಾಪಿಸಿದರು.

ರಾಜಮಹೇಂದ್ರಿಯಲ್ಲಿ ನರಸಿಂಹದೇವರ, ಪ್ರಾಣದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸಿದರು.ಅಲ್ಲದೇ, ಆಂಧ್ರದ ಪೂರ್ವ ಕರಾವಳಿಗುಂಟ ನೂರೆಂಟು ಪ್ರಾಣದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ ಖ್ಯಾತಿ ಇವರದು.

ಸಂಚಾರದಲ್ಲಿ ಪಂಢರಪುರಕ್ಕೆ ಬಂದಾಗ, ಪಂಢರಪುರದ ವಿಠಲನು ಸ್ವತಃ ಶ್ರೀಸತ್ಯಸಂಧತೀರ್ಥರಿಂದ ತಪ್ತ ಮುದ್ರೆಯನ್ನು ತೆಗೆದುಕೊಂಡನೆಂದು ಅವರ ಚರಿತ್ರೆಯಲ್ಲಿ ಬರುತ್ತದೆ.

ವಾರಣಾಸಿಗೆ ಹೋದಾಗ ಪೂಜೆಯ ಸಮಯದಲ್ಲಿ ಸಾಕ್ಷಾತ್ ಗಂಗೆ ಇವರಿಂದ ಬಾಗಿಣ ಪಡೆದಳು.

ಜ್ಯೇಷ್ಠ ಶುಕ್ಲ ದ್ವೀತಿಯದಂದು ಅವರು ಮಹಿಷಿಮಲ್ಲಿ ವೃಂದಾವನಸ್ಥರಾದರು.

ಯಾರಿಗೆ ಅನೂಕೂಲವಿದೆ ಅವಶ್ಯವಾಗಿ ಮಹಿಷಿಗೆ ಹೋಗಿ ಗುರುಗಳ ವಿಶೇಷ ಅನುಗ್ರಹಕ್ಕೆ ಪಾತ್ರರಾಗಿ.

ಯಾರಿಗೆ ಅನಾನುಕೂಲ ಇದೆ ಅವರು ಮನೆಯಲ್ಲಿಯೇ ಕುಳಿತು ಮೇಲೆ ತಿಳಿಸಿದ ಅವರ ಶ್ಲೋಕವನ್ನು 108 ಬಾರಿ ಪಾರಾಯಣ ಮಾಡಿ ಅವರ ವಿಶೇಷ ಅನುಗ್ರಹಕ್ಕೆ ಪಾತ್ರರಾಗೋಣ.

ಸತ್ಯಭೋದರಿಂದ ಆಯುಷ್ಯ ಪಡೆದವರು ಸತ್ಯಸಂಧರು ಅವರ ಸ್ಮರಣೆ, ಅವರ ಸೇವೆ ಮಾಡಿ ನಾವೂ ಧರ್ಮಮಾರ್ಗದಲ್ಲಿ ನಮ್ಮನ್ನು ನಾವು ತೂಡಗಿಸಿಕೊಳ್ಳಲು ಆಯುಷ್ಯ ಆರೋಗ್ಯ ಆವಶ್ಯಕ ಅವರ ಅನುಗ್ರಹ ನಮ್ಮೆಲ್ಲರ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ.
ಪಂ.ಜಯತೀರ್ಥಾಚಾರ್ಯ ಹಾವನೂರ
*********

🌿🌷🌿👃🌷🌿👃☘️🌷🌿☘️🌷🌿
ಸತ್ಯ ಸಂಧ ಗುರುವೆ ಪಾಲಿಪುದೆಮ್ಮ ಚಿತ್ತ ಶುಧ್ಧಿಯ ಮಾಡಿ ಮತ್ತೆ ಮತ್ತೆ ನಿಮ್ಮ ಸೇವಿಪ ಭಾಗ್ಯವ ಇತ್ತು ನೀ ದಯಮಾಡೊ ಸತ್ಯಬೋಧರ ಪ್ರಿಯ||ಪ||

ಪೂರ್ವಾಶ್ರಮದ ನಾಮವು ಹಾವೇರಿಯ ರಾಮಾಚಾರ್ಯರು ಎನ್ನಲು ಸತ್ಯ ಬೋಧರಿಗೆ ಪೂರ್ವಾಶ್ರಮದಿ ಅಳಿಯನಾಗಿರುತಿರಲು ತಾಯ ತಾನು ಸಂತಾನಕೆನುತ ಮಂತ್ರಾಲಯಕೆ ಹೋಗಿ ಸೇವಿಪೆ ತಾವೆ ಪುಟ್ಟುವುದಾಗಿ ತಿಳಿಸಿದ ಸ್ವಪ್ನದಲಿ ಶ್ರೀ ರಾಘವೇಂದ್ರರು||೧|| 
ಸವಣೂರು ಗ್ರಾಮದಿಂದ ಹೊರಟರು ತಾವು ಸಂಚಾರಕ್ಕೆ ಎನ್ನುತಾ ಮಾರ್ಗ ಮಧ್ಯದಿ ಪಂಡರಪುರ ಸೇರಿ ,ಬ್ರಾಹ್ಮಣ ನೊಬ್ಬನು ಮುದ್ರ ಧಾರಣೆ ಬೇಡೆ ಮರುದಿನವು ದರುಶನವ ಮಾಡಲು ಪಾಂಡುರಂಗನ ದೇಹದಲ್ಲಿ ತಪ್ತ ಮುದ್ರೆಗಳನ್ನ ಕಂಡು ಆಶ್ಚರ್ಯವ ಪೊಂದಿದರು ಅಂದು||೨|| 

ಸಂಚಾರ ಮಾರ್ಗದಲ್ಲಿ ನಿಂತರು ತಾವು ಅಡವಿಯ ಮಧ್ಯದಲಿ ಮೂಲರಾಮನ ಪೂಜೆಗನಿವಾರ್ಯ ವಾದಂಥ ಪುಷ್ಪವು ದೊರಕದೆ ಖಿನ್ನರಾಗಿರಲು ಬಡ ಬಡನೆ ಬ್ರಾಹ್ಮಣ ನು ಬಂದು ಸಹಸ್ರ ದಳಗಳ ಕಮಲ ತಂದು ಕಾಂತಿಯುತ ಪುಷ್ಪಗಳ ಕಂಡರೆ ಕಣ್ಮರೆಯಾದ ಬ್ರಾಹ್ಮಣ ನು ಅಂದು||೩|| 

ಭಕ್ತಿಯಿಂದಾ ಹೊರಟು ಮುಂದೆ ಮತ್ತೆ ಗಯಾಕ್ಷೇತ್ರವನೆ ಸೇರಲು ಗಯಾವಾಸಿಗಳು ತಾವು ವರಹರ ಕೊಡದಿರೆ ವಿಷ್ಣುಪಾದದರುಶನ ಆಗದೆಂದು ಬಿಂಕದಲಿ ಬೀಗವನು ಹಾಕಲುಜಂಕದಲೆ ಸ್ವಾಮಿಯನು ಬೇಡಲು ಕಳಚಿ ಬಿದ್ದವು ಬೀಗ ಮುದ್ರೆಯು ಬೆದರುತಲಿ ಕರೆದೊಯ್ದರಂದು||೪|| 


ಸತ್ಯವರ ತೀರ್ಥರಿಗೆ ಆಶ್ರಮಕೊಟ್ಟು ಅನುಗ್ರಹ ಮಾಡುತ್ತಲಿ ಆನಂದ ಸಂವತ್ಸರ ಜ್ಯೇಷ್ಟ ಬಹುಳ ಬಿದಿಗಿ ದಿನ ಪ್ರಯಾಣ ಮಾಡಿ ವಿಶೇಷವಾಗನುಗ್ರಹೀಸಿ ಮಧ್ವೇಶಕೃಷ್ಣ ನ ಪಾದ ಸೇರಿ ಮಹಿಷಿ ಕ್ಷೇತ್ರದಿ ಮೆರೆದ ಗುರುವೆ ಪೋಷಿಸೆಮ್ಮನು ಅನುದಿನದಿ ನೀ||೫||
*********

YEAR 2021

ಶ್ರೀಸತ್ಯಸಂಧ ತೀರ್ಥರು
 (1784 - 1794).:-
      ಶ್ರೀಸತ್ಯಸಂಧ ತೀರ್ಥರ ಪೂರ್ವಾಶ್ರಮದ ಹೆಸರು ಶ್ರೀರಾಮಾಚಾರ್ಯರು. ಇವರ ತಂದೆ ಹಾವೇರಿ ಮಧ್ವಾಚಾರ್ಯರು. ಬಿದರಹಳ್ಳಿಯ ಅಶ್ವತ್ಥನಾರಾಯಣನನ್ನು ಸೇವೆ ಮಾಡಿದಾಗ ಈ ಶ್ರೇಷ್ಠ ಮಗನ ಜನನವಾಯಿತು.
    ಶ್ರೀರಾಮಾಚಾರ್ಯರ ಸಕಲ ಅಧ್ಯಯನವೂ ಸವಣೂರಿನಲ್ಲಿ ಶ್ರೀ ಸತ್ಯಬೋಧ ತೀರ್ಥರಲ್ಲಿ ನಡೆಯಿತು. ಶ್ರೀ ಸತ್ಯಬೋಧ ತೀರ್ಥರೇ, ಇವರ ಪ್ರತಿಭೆ, ಯೋಗ್ಯತೆ, ಪಾಂಡಿತ್ಯಗಳನ್ನು ನೋಡಿ ಫಾಲ್ಗುಣ ಶುದ್ಧ ತೃತೀಯ 1784 ರಂದು ಇವರಿಗೆ ಪೀಠವನ್ಧು ಒಪ್ಪಿಸುತ್ತಾರೆ. ನಂತರ ಗುರುಗಳಾದ ಶ್ರೀಸತ್ಯಬೋಧರಿಗೆ ತಿಳಿಯುತ್ತದೆ, ಇವರು ಅಲ್ಪಾಯುಷಿಗಳು, ಬಹಳ ಆಯುಷ್ಯ ಇಲ್ಲ ಎಂದು ತಿಳಿದು, ಶ್ರೀಸತ್ಯಬೋಧತೀರ್ಥರು, ಚಿಕ್ಕ ಚಿಕ್ಕ ಬೆಳ್ಳಿ ಬಟ್ಟಲುಗಳಲ್ಲಿ ತುಪ್ಪ ವನ್ನು ತುಂಬಿ ( ಕೆಲವು ಕಡೆ ನೀರು, ಹಾಲು ಎಂದು ಹೇಳುತ್ತಾರೆ) ಅಭಿಮಂತ್ರಿಸಿ, ಶ್ರೀಸತ್ಯಸಂಧತೀರ್ಥರಿಗೆ ಕುಡಿಯಲು ತಿಳಿಸುತ್ತಾರೆ. ಅದರಂತೆ ಶ್ಯೀಸತ್ಯಸಂಧ ತೀರ್ಥರು ಒಂದೊಂದಾಗಿ ಬಟ್ಟಲಿಂದ ಕುಡಿಯುತ್ತಾ, 10 ಬಟ್ಟಲಿನಿಂದ ಕುಡಿದು,11ನೇ ಬಟ್ಟಲು ಕುಡಿಯುವಾಗ ಕೈ ಜಾರಿ ಬೀಳುತ್ತದೆ. ಅದಕ್ಕೆ ಗುರುಗಳು ಇರಲಿ ಇರಲಿ ಎಂದು ಹೇಳಿ, ಹೀಗೆ ಒಂದೊಂದು ಬಟ್ಟಲಿನಿಂದ ಒಂದೊಂದು ವರ್ಷದಂತೆ ಇವರಿಗೆ ಹತ್ತು ವರ್ಷದ ಆಯಷ್ಯವನ್ನು ನೀಡಿದ ವಿಚಾರವಿದೆ. ಹೀಗೆ ಶ್ರೀ ಸತ್ಯಬೋಧ ತೀರ್ಥರಿಂದ ಹತ್ತು ವರ್ಷದ ಆಯುರ್ದಾನ ಪಡೆದು, ಆನೇಕ ಮಹಿಮೆಗಳನ್ನು ತೋರಿ, ಮಹಿಮಾಶಾಲಿಗಳಾಗಿ ಮೆರದ ಮಹಾನುಭಾವರು ಶ್ರೀಸತ್ಯಸಂಧತೀರ್ಥರು.
     ಇವರು ತೋರಿಸಿದ ಪವಾಡಗಳು ಆನೇಕ. ಕಾಶಿಯಲ್ಲಿ ಗಂಗಾಪೂಜೆಯ ದಿನದಂದು ಬಂಗಾರದ ತಟ್ಟೆಯಲ್ಲಿ ಬಾಗಿನ ಅರ್ಪಿಸುತ್ತಿರುವಾಗ ಶ್ರೀಗಳವರ ಕೈಯಿಂದ ಸಾಕ್ಷಾತ್ ಭಾಗೀರಥಿಯೇ ಸ್ವಯಂ ಬಂದು ಸ್ವೀಕರಿಸಿದಳಂತೆ. ಪಂಡರ ಪುರದ ಶ್ರೀ ವಿಠಲದೇವರು ಬ್ರಾಹ್ಮಣ ವೇಷದಿಂದ ಬಂದು ಇವರಿಗೆ ದರ್ಶನ ನೀಡಿ ಮತ್ತು ಲೋಕ ಶಿಕ್ಷಣಾರ್ಥವಾಗಿ ಇವರಿಂದ ಮುದ್ರೆ ಹಾಕಿಸಿಕೊಂಡನಂತೆ. ಗಯಾವಾಡರು ಉನ್ಮತ್ತರಾಗಿ ವರ್ತಿಸಿದಾಗ ಅದಕ್ಕೆ ಪ್ರತಿಯಾಗಿ ರಾಮ ಗಯಾ ನಿರ್ಮಾಣವಾದದ್ದು ಇವರಿಂದಲೇ. ಇವರು ಬಂದರೆ ವಿಷ್ಣುಪಾದ ದೇವಸ್ಥಾನದ ಬೀಗಗಳು ಕಳಚಿ ಬಿದ್ದವು. ಆ ಪರಿಣಾಮವಾಗಿ ಗಯಾವಾಡರು ಇವರಲ್ಲಿ ಕ್ಷಮೆ ಕೇಳಿ, ಶ್ರೀಮಠದ ಶಿಷ್ಯರಾಗಿ ದಾಸಾನುದಾಸರಾದರಂತೆ. ಒಮ್ಮೆ ಸಾಂಗಲಿಯಲ್ಲಿ ಇವರು ಶ್ರೀಸತ್ಯವ್ರತರ ವೃಂದಾವನ ಎದುರು ಶ್ರೀಮನ್ನಾಯಸುಧಾ ಅನುವಾದ ಮಾಡಿದಾಗ ಶಿಲಾಮಯ ವೃಂದಾವನ ಅಲುಗಾಡಿ ಆನಂದ ಸೂಚಿಸಿತು. ಇದನ್ನು ನೂರಾರು ಜನ ಸಾಕ್ಷಾತ್ ನೊಡಿದ್ದಾರೆ.. ಈ ಫಟನೆಯನ್ನು ಶ್ರೀಸತ್ಯಧರ್ಮತೀರ್ಥರು, ಶ್ರೀಸತ್ಯಪರಾಕ್ರಮ ತೀರ್ಥರು ವರ್ಣಿಸಿದ್ದಾರೆ.
       ಶಾಸ್ತ್ರವೇತ್ತರು, ವ್ಯಾಖ್ಯಾನ ಚತುರರು ಆದ ಇವರ ಪುರುಷಸೂಕ್ತ, ವಿಷ್ಣುಸಹಸ್ರನಾಮಾದಿಗಳಿಗೆ ಮಾಡಿರುವ ವ್ಯಾಖ್ಯಾನ ಅಪೂರ್ವ ವಿಷಯಗಳಿಂದ ತುಂಬಿದೆ. ಶ್ರೀ ಜಗನ್ನಾಥ ದಾಸರು ಇವರನ್ನು " ವಂದಿಸುವೆ ಗುರು ಸತ್ಯಸಂಧ ಮುನಿಯ " ಎಂದು ಅನೇಕ ಪದ್ಯಗಳಿಂದ  ವರ್ಣಿಸಿರುವರು.
     ಸಕಲ ಶಾಸ್ತ್ರ ಹಾಗೂ ಅರ್ಥಗಳು ಇವರ ನಾಮಸ್ಮರಣೆಯಿಂದ ದೊರಕುತ್ತದೆ. ಇವರ ಬೃಂದಾವನ ಪ್ರದಕ್ಷಿಣೆಯಿಂದ ಎಲ್ಲಾ ಪವಿತ್ರ ನದಿಗಳ ಸ್ನಾನದ ಪುಣ್ಯಫಲ ಲಭಿಸುವುದು. ಸತ್ಸಂತಾನ, ಆರೋಗ್ಯ, ಹರಿಭಕ್ತಿ, ಜ್ಞಾನ ಕೊಡುವ ಕಾಮಧೇನು ಸತ್ಯಸಂಧ ತೀರ್ಥರು.
ಮೂಲ ವೃಂದಾವನ:- ಮಹಿಷಿ.
ವಿಷ್ಣೋಃ ಪದಶ್ರಿದ್ಗೋವ್ರಾತೈಃ ಸ್ವಾಂತಧ್ವಾಂತನಿವಾರಕಃ
ಶ್ರೀಸತ್ಯಸಂಧಸೂರ್ಯೋSಯಂ
ಭಾಸತಾಂ ನೋ ಹೃದಂಬರೇ 
ಶ್ರೀಮಧ್ವೇಶಾರ್ಪಣಮಸ್ತು
***

ಶ್ರೀ ಉತ್ತರಾದಿಮಠ:-ಶ್ರೀಸತ್ಯಸಂಧ ತೀರ್ಥರು (1784 - 1794).:-
      ಶ್ರೀಸತ್ಯಸಂಧ ತೀರ್ಥರ ಪೂರ್ವಾಶ್ರಮದ ಹೆಸರು ಶ್ರೀರಾಮಾಚಾರ್ಯರು. ಇವರ ತಂದೆ ಹಾವೇರಿ ಮಧ್ವಾಚಾರ್ಯರು. ಬಿದರಹಳ್ಳಿಯ ಅಶವತ್ಥನಾರಾಯಣನನ್ನು ಸೇವೆ ಮಾಡಿದಾಗ ಈ ಶ್ರೇಷ್ಠ ಮಗನ ಜನ್ನವಾಯಿತು.
    ಶ್ರೀರಾಮಾಚಾರ್ಯರ ಸಕಲ ಅಧ್ಯಯನವೂ ಸವಣೂರಿನಲ್ಲಿ ಶ್ರೀ ಸತ್ಯಭೋಧ ತಿರ್ಥರಲ್ಲಿ ನಡೆಯಿತು. ಶ್ರೀ ಸತ್ಯಭೋಧ ತಿರ್ಥರೆ, ಇವರ ಪ್ರತಿಭೆ, ಯೋಗ್ಯತೆ, ಪಾಂಡಿತ್ಯಗಳನ್ನು ನೋಡಿ ಫಾಲ್ಗುಣ ಶುಧ್ಧ ತೃತೀಯ 1784 ರಂದು ಇವರಿಗೆ ಪೀಠವನ್ಧು ಒಪ್ಪಿಸುತ್ತಾರೆ. ನಂತರ ಗುರುಗಳಾದ ಶ್ರೀಸತ್ಯಭೋಧರಿಗೆ ತಿಳಿಯುತ್ತದೆ, ಇವರು ಅಲ್ಪಆಯುಷಿಗಳು, ಬಹಳ ಆಯುಷ್ಯ ಇಲ್ಲ ಎಂದು ತಿಳಿದು, ಶ್ರೀಸತ್ಯಭೋಧಧತೀರ್ಥರು, ಚಿಕ್ಕ ಚಿಕ್ಕ ಬೆಳ್ಳಿ ಬಟ್ಟಲುಗಳಲ್ಲಿ ತುಪ್ಪ ವನ್ನು ತುಂಬಿ ( ಕೆಲವು ಕಡೆ ನೀರು, ಹಾಲು ಎಂದು ಹೇಳುತ್ತಾರೆ) ಅಭಿಮಂತ್ರಿಸಿ, ಶ್ರೀಸತ್ಯಸಂಧತೀರ್ಥರಿಗೆ ಕುಡಿಯಲು ತಿಳಿಸುತ್ತಾರೆ. ಅದರಂತೆ ಶ್ಯೀಸತ್ಯಸಂಧತೀರ್ಥರು ಒಂದೂಂದಾಗಿ ಬಟ್ಟಲಿಂದ ಕುಡಿಯುತ್ತಾ, 10 ಬಟ್ಟಲಿನಿಂದ ಕುಡಿದು,11ನೇ ಬಟ್ಟಲು ಕುಡಿಯುವಾಗ ಕೈ ಜಾರಿ ಬೇಳುತ್ತದೆ. ಅದಕ್ಕೆ ಗುರುಗಳು ಇರಲಿ ಇರಲಿ ಎಂದು ಹೇಳಿ, ಹೀಗೆ ಒಂದೂಂದು ಬಟ್ಟಲಿನಿಂದ ಒಂದೂಂದು ವರ್ಷದಂತೆ ಇವರಿಗೆ ಹತ್ತು ವರ್ಷದ ಆಯಷ್ಯವನ್ನು ನೀಡಿದ ವಿಚಾರವಿದೆ. ಹೀಗೆ ಶ್ರೀ ಸತ್ಯಭೋಧ ತೀರ್ಥರಿಂದ ಹತ್ತು ವರ್ಷದ ಆಯುರ್ದಾನ ಪಡೆದು, ಆನೇಕ ಮಹಿಮೇಗಳನ್ನು ತೋರಿ, ಮಹಿಮಶಾಲಿಗಳಾಗಿ ಮೆರದ ಮಹಾನುಭಾವರು ಶ್ರೀಸತ್ಯಸಂಧತೀರ್ಥರು.
     ಇವರುತೋರಿಸಿದ ಪವಾಡಗಳು ಆನೇಕ. ಕಾಶಿಯಲ್ಲಿ ಗಂಗಾಪೂಜೆಯ ದಿನದಂದು ಬಂಗಾರದ ತಟ್ಟಯಲ್ಲಿ ಬಾಗಿನ ಅರ್ಪಿಸುತ್ತಿರುವಾಗ ಶ್ರೀಗಳವರ ಕೈಯಿಂದ ಸಾಕ್ಷಾತ್ ಭಾಗೀರತಿಯೇ ಸ್ವಯಂ ಬಂದು ಸ್ವೀಕರಿಸಿದಳಂತೆ. ಪಂಡರ ಪುರದ ಶ್ರೀ ವಿಠಲ ದೇವರು ಬ್ರಾಹ್ಮಣ ವೇಷ ದಿಂದ ಬಂದು ಇವರಿಗೆ ದರ್ಶನ ನೀಡಿ ಮತ್ತು ಲೋಖಶಿಕ್ಷಣಾರ್ಥವಾಗಿ ಇವರಿಂಥ ಮುದ್ರೆ ಹಾಕಿಷಸಿಕೂಂಡನಂತೆ. ಗಯಾವಾಡರು ಉನ್ನತ್ತರಾಗಿ ವರ್ತಿಸಿದಾಗ ಅದಕ್ಕೆ ಪ್ರತಿಯಾಗಿ ರಾಮಗಯಾ ನಿರ್ಮಾಣವಾದದ್ದು ಇವರಿಂದಲೇ. ಇವರು ಬಂದರೆ ವಿಷ್ಣುಪಾದ ದೇಲಸ್ಥಾನದ ಬೀಗಗಳು ಕಳಚಿ ಬಿದ್ದವು. ಆ ಪರಿಣಾಮವಾಗಿ ಗಯಾವಾಡರು ಇವರಲ್ಲಿ ಕ್ಷಮೆ ಕೇಳಿ, ಶ್ರೀಮಠದ ಶಿಷ್ಯರಾಗಿ ದಾಸಾನುದಾಸರಾದರಂತೆ. ಒಮ್ಮ ಸಾಂಗಲಿಯಲ್ಲಿ ಇವರು ಶ್ರೀಸತ್ಯವ್ರತರ ವೃಂದಾವನ ಎದುರು ಶ್ರೀಮನ್ನಾಯಸುಧಾ ಅನುವಾದ ಮಾಡಿದಾಗ ಶಿಲಾಮಯ ವೃಂದಾವನ ಅಲುಗಾಡಿ ಆನಂದ ಸೂಚಿಸಿತು. ಇದನ್ನು ನೂರಾರು ಜನ ಸಾಕ್ಷಾತ್ ನೊಡಿದ್ದಾರೆ.. ಈ ಫಟನೆಯಧ್ನು ಶ್ರೀಸತ್ಯಧರ್ಮತೀರ್ಥರು, ಶ್ರೀಸತ್ಯಪರಾಕ್ರಮ ತೀರ್ಥರು ವರ್ಣಿಸಿದ್ದಾರೆ.
       ಶಾಸ್ತ್ರವೇತ್ರರು, ವ್ಯಾಖ್ಯಾನ ಚತುರರು ಆದ ಇವರ ಪುರುಷಸೂಕ್ತ, ವಿಷ್ಣುಸಹಸ್ರನಾಮಾದಿಗಳಿಗೆ ಮಾಡಿರುವ ವ್ಯಾಖ್ಯಾನ ಅಪೂರ್ವ ವಿಷಯಗಳಿಂದ ತುಂಬಿದೆ. ಶ್ರೀ ಜಗನ್ನಾಥ ದಾಸರು ಇವರನ್ನು " ವಂದಿಸುವೆ ಗುರು ಸತ್ಯಸಂಧ ಮುನಿಯ " ಎಂದು ಅನೇಕ ಪದ್ಯಗಳಿಂದ  ವರ್ಣಿಸಿರುವರು.
     ಸಕಲ ಶಾಸ್ತ್ರ ಹಾಗೂ ಅರ್ಥಗಳು ಇವರ ನಾಮಸ್ಮರಣೆ ಯಿಂದ ದೂರಕುತ್ತದೆ. ಇವರ ಬೃಂದಾವನ ಪ್ರದಕ್ಷಣೆ ಯಿಂದ ಎಲ್ರಾ ಪವಿತ್ರ ನದಿಗಳ ಸ್ನಾನದ ಪುಣ್ಯಫಲ ಲಭಿಸುವುದು. ಸತ್ಸಂತಾನ, ಆರೋಗ್ಯ, ಹರಿಭಕ್ತಿ, ಜ್ಞಾನ ಕೂಡುವ ಕಾಮಧೇನು ಸತ್ಯಂಧತೇರ್ಥರು.
ಆರಾಧನಾ ದಿಧ :- ಜ್ಯೇಷ್ಠಶುಧ್ಧ ದ್ವಿತೀಯಾ.
ಮೂಲವೃಂದಾವನ:- ಮಹಿಷಿ.

ವಿಷ್ಣೋ: ಪದಶ್ರಿದ್ಗೋವ್ರಾತೈ: ಸ್ವಾಂತಧ್ವಾಂತನಿವಾರಕ: |
ಶ್ರೀಸತ್ಯಸಂಧಸೊರ್ಯೋSಯಂ ಭಾಸತಾಂ ನೋ ಹೃದಂಬರೇ ||.
    
             -ಪೂರ್ಣಪ್ರಜ್ಞಾಚಾರ್, ಕಲುಮಂಗಿ, ಹೊಸಪೇಟೆ.
***

No comments:

Post a Comment