Monday 20 May 2019

hayagreeva teertharu mulabagilu 1536 matha sripadaraja mutt yati 10 karteeka pournima ಹಯಗ್ರೀವ ತೀರ್ಥರು





Sri. Hayagreeva Teertharu

VaagvajragraMtha saaraarthakOvidaM j~jaanabhaagyadaM |
sarvaabhIShTapradaataaraM hayagrIvaguruMbhajE ||


info from sripadarajamutt org---> Sri Hayagreeva Theertha looked after the educational institution that was established by Sri Sripadaraja for more than 32 years, thus continuing his legacy. After that, he selected one of his followers and named him Sri Sripathi Theertha and entered Brindavan in Mulbagal on Karthika shudha poornima.
********

shri gurubyO namaha...hari Om... 


kArtIka shuddha pourNami is the ArAdhane of shri hayagrIva tIrtharu of shripAdarAja maTa. He was the immediate shishyaru of shri shripAdarAja gurusArvabhowmaru himself.


shri hayagrIva tIrtharu... 


parampare: shri shripAdarAja maTa, #10
Period:  1500 - 1536
gurugaLu: shri shrIpAdarAjaru
shishyaru: shri shrIpathi tIrtharu
brindAvana: narasimha tIrtha, muLabAgilu


shri hayagrIva tIrtha varada gOvindA gOvindA... 


shri krishNArpaNamastu...
*******

**
ಕಾರ್ತಿಕ ಪೌರ್ಣಿಮೆ

ಶ್ರೀಂ ಶ್ರೀ ಕಂ ಕಪಿಲಾಯ ನಮಃ

ಕಾರ್ತೀಕ ಪೂರ್ಣಿಮಯ ಶುಭಾಶಯಗಳು ಎಲ್ಲರಿಗೂ.. ನಮ್ಮ ಎಲ್ಲರ ಜೀವನದಲ್ಲಿ ಸದಾ ಜ್ಞಾನದ ಬೆಳಕು ಪರಮಾತ್ಮನ ಅನುಗ್ರಹದಿಂದ ಬೆಳಗುತ್ತಿರಲಿ.. 

ರಮಾರಮಣಪಾದಾಬ್ಜಯುಗಳಾಸಕ್ತಮಾನಸಃ|ಜಯಧ್ವಜ ಮುನೀಂದ್ರೋಸೌ ಗುರುರ್ಭೂಯಾದಭೀಷ್ಟದಃ

ಶ್ರೀರಾಜೇಂದ್ರತೀರ್ಥ ಪೂರ್ವಾದಿ ಮಠದಲ್ಲಿ ಬಂದಂತಹಾ ಯತಿಗಳು, ಶ್ರೀರಾಜೇಂದ್ರ ತೀರ್ಥರ ಶಿಷ್ಯರು ಸ್ವಯಂ ಸೋದರರು, 14ನೇ ಶತಮಾನದ ಪರಮ ಶ್ರೇಷ್ಠ ಯತಿಗಳು, 
ಗುರುಗಳಂತೆ ಉತ್ತರ ಭಾರತದಲ್ಲಿ ಹೆಚ್ಚಿಗೆ ಸಂಚಾರ ಮಾಡಿ ಮಧ್ವ ಮತದ ಪತಾಕೆಯನ್ನು ಹಾರಿಸಿದವರಲ್ಲಿ ಗುರುಗಳಂತೆಯೇ ಸೇವೆ ಸಲ್ಲಿಸಿದವರು. ಬಂಗಾಳದಲ್ಲಿ ಅನೇಕ ಜನರಿಗೆ ವೈಷ್ಣವ ದೀಕ್ಷೆ ಕೊಟ್ಟು ಉದ್ಧಾರ ಮಾಡಿದ ಮಹಾನುಭಾವರು. ನಂತರ ಅವರ ಶಿಷ್ಯರಾದ   ಶ್ರೀ ಪುರುಷೋತ್ತಮ ತೀರ್ಥರಿಗೆ ಸಂಸ್ಥಾನವನ್ನು ಒಪ್ಪಿಸಿ ತಮ್ಮ ಗುರುಗಳ ಮತ್ತು ಪರಮ ಗುರುಗಳ ಬೃಂದಾವನ ಸನ್ನಿಧಾನವಾದ ಯರಗೋಳದಲ್ಲೇ ತಾವೂ ಕಾರ್ತಿಕ ಪೌರ್ಣಿಮೆಯ ದಿನ ಬೃಂದಾವನಸ್ಥರಾದರೂ ಆದ ಶ್ರೀ ಜಯಧ್ವಜತೀರ್ಥರ ಆರಾಧನಾ ಮಹೋತ್ಸವ ಇಂದು.. 

ಹಾಗೆಯೇ...

ಶ್ರೀಮದಾಚಾರ್ಯರ ಸಂಸ್ಥಾನದ ಮತ್ತೊಂದು ಪರಂಪರೆಯಾದ ಶ್ರೀಶ್ರೀಪಾದರಾಜರ ಮಠ(ಮುಳಬಾಗಿಲು ಮಠ) ಎಂದೇ ಖ್ಯಾತಿಹೊಂದಿದ ಪರಂಪರೆಯಲ್ಲಿ ಬಂದ ಶ್ರೀಹಯಗ್ರೀವ ತೀರ್ಥರ ಆರಾಧನೆ. 
ಶ್ರೀಪಾದರಾಜರ ಶಿಷ್ಯರೆಂದರೆ ಜಗತ್ತಿಗೆ ಖ್ಯಾತಿ ಇರುವುದು ಅದು ಶ್ರೀಮತ್ ಚಂದ್ರಿಕಾಚಾರ್ಯರು ಅಂತ. ಅವರು ವಿದ್ಯಾಶಿಷ್ಯರಾದರೆ, ಶ್ರೀಪಾದರಾಜರ ನಂತರ ಅವರ ಪರಂಪರೆಯಲ್ಲಿ ಬಂದ ಮಹಾನುಭಾವರೆಂದರೆ ಅವರ ಶಿಷ್ಯರಾದ ಶ್ರೀ ಹಯಗ್ರೀವ ತೀರ್ಥರು. ಶ್ರೀವ್ಯಾಸರಾಜರಂತೆಯೇ ಅವರೂ ಸಹಾ ಶ್ರೀಶ್ರೀಪಾದರಾಜರಲ್ಲಿಯೇ ಸಕಲ ಶಾಸ್ತ್ರಗಳ ಆಳವಾದ  ವಿದ್ಯಾಭ್ಯಾಸವನ್ನು ಮಾಡಿದವರು. ಶ್ರೀ ಶ್ರೀಪಾದರಾಜರಿಂದ ರಚಿತವಾದ ಕಬ್ಬಿಣದ ಕಡಲೆಯಂತೆಯೇ ಇರುವ ಶ್ರೀವಾಗ್ವಜ್ರ ಗ್ರಂಥದ ಆಳವಾದ ಅಧ್ಯಯನ ಮಾಡಿ ಆ ಗ್ರಂಥದ ಸಾರಾರ್ಥವನ್ನು ಚೆನ್ನಾಗಿ ಬಲ್ಲವರಾಗಿದ್ದರು. 1500 ರಿಂದ 1536ರ ವರಗೆ ಪೀಠ ಆಳಿದ ಮಹಾನುಭಾವರು, ಮುಂದೆ ಶ್ರೀ ಶ್ರೀಪತಿತೀರ್ಥರಿಗೆ ಸಂಸ್ಥಾನ ಒಪ್ಪಿಸಿ, ಶ್ರೀಪಾದರಾಜರಲ್ಲಿ  ವಿಶೇಷವಾಗಿ ಸೇವಾದಿಗಳನ್ನು ಮಾಡಿ, ಅವರ ಬೃಂದಾವನದ ಸನ್ನಿಧಾನದಲ್ಲಿಯೇ  ಅರ್ಥಾತ್ ಮುಳಬಾಗಿಲಿನಲ್ಲಿಯೇ ತಾವೂ  ಬೃಂದಾವನಸ್ಥರಾದ  ಮಹಾನುಭಾವರು... 

ಹಾಗೆಯೇ ಸೋಸಲೆ ಶ್ರೀ ವ್ಯಾಸರಾಜ ಮಠದ ಪರಂಪರೆಯಲ್ಲಿ ಬಂದಂತಹಾ, ವ್ಯಾಸ ಸಾಹಿತ್ಯದ ಜೊತೆ ದಾಸ ಸಾಹಿತ್ಯದ ಹಿರಿಮೆಯನ್ನು ಸಹಾ ತಮ್ಮ ಕೃತಿಗಳ ಮೂಲಕ ತಿಳಿಸಿ ಹೇಳಿದವರಾದ, ಶ್ರೀಮದ್ವಿದ್ಯಾರತ್ನಾಕರ ತೀರ್ಥರ ಪೂರ್ವಾಶ್ರಮದ ಪ್ರೇಮದ ಪುತ್ರರು, ಪರಮ ಶಿಷ್ಯರೂ ಆದ,  ನಾಮಗಿರಿ ನರಸಿಂಹ ದೇವರ ವಿಶೇಷ ಅನುಗ್ರಹದಿಂದ ಜನಿಸಿ, ಮಠದ, ಮತದ ಉದ್ಧಾರಕ್ಕಾಗಿಯೇ ಜೀವನವನ್ನು ಕಳೆದಂತಹಾ, ಶ್ರೀ ವಿದ್ಯಾವಾರಿಧಿ ತೀರ್ಥರ ಕರಕಮಲಸಂಜಾತರಾದ ಶ್ರೀ ವಿದ್ಯಾಪ್ರಸನ್ನತೀರ್ಥರು ಜನಿಸಿದ ಪುಣ್ಯದಿನವೂ ಇಂದು.. 

ಶ್ರೀ ಯತಿ ತ್ರಯರ  ಅಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನರಸಿಂಹನ ಅನುಗ್ರಹದಿಂದ ಸದಸ್ಯರೆಲ್ಲರಿಗೂ ಆರೋಗ್ಯ ಭಾಗ್ಯ ಸದಾ ಇರಲಿ ಎಂದು ಅವರಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ ..

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽
*******

No comments:

Post a Comment