info is from FB madhwanet--->
Sri SwarnaVarna Theertharu
Sri SwarnaVarna Theertharu
ArAdhane: jEshTa bahuLa chaturthi
Parampare: shripAdarAja maTa, #8
sanyAsa period: 1400 - 1420
Ashrama gurugaLu: shri satyavrata tIrtharu
shishyaru: shri shripAdarAjaru
brindAvana: srirangam
ವಸುಧಾತಲ ವಿಖ್ಯಾತಂ | ವೇದಾಂತಾದಿ ಗುಣಾರ್ಣವಂ |
ವೇದವೇದಾಂಗ ಚತುರಂ ಸ್ವರ್ಣವರ್ಣ ಗುರುಂಭಜೇ ||
vasudhaatalaviKyaataM vairaagyaadi guNaarNavaM |
vEdavEdaaMga chaturaM svarNavarNaguruM bhajE ||
He was regularly doing Srihari Chintane and was busy with japa tapa. As a result, his body was shining like gold. That is why he was called as "swarNavarNa tIrtharu".
Once he went to see shri Purushottama Tirtharu, the mathadipathi of vyAsarAja maTa, at abbUru. On his way, he saw an 8 year old boy who was grazing the cows. swarNavarNa tIrtharu asked the boy as to “How long is abbUru?”. The boy replied “See the western side, see the Sun, see us, the cows are returning home. You can calculate how long it is”. Even though boy didn’t tell the exact distance to abbUru, the way the boy answered impressed the swamiji. The reply was an indication that abbUr was not far way.
Shri swarNavarNa tIrtharu was very much attracted by the boy's talent. He narrated this to shri purushOtama tIrtharu and expressed the eagerness to have such a talented person as his disciple. Then he requested the boy's parents to send the boy with him. But the boy's parents hesitated.
Then with shri purushOthama tIrtharu's intervention, the boy's parents agreed to send the boy with shri swarNavarNa tIrtharu. Shri swarNavarNa tIrtharu along with the boy came back to Sri Rangam. In 1412 he arranged for the boy's Bramhopadesham, gave him sanyAsa and named him as Sri Lakshmi Narayana Muni.
Later Sri Lakshmi Narayana was sent to Sri Vibhudhendra tIrtharu for education. Sri Lakshmi Narayana stayed with him for eight years and became a learned man. He returned to Sri Rangam after his education.
In 1420 Sri Swarnavarna tIrtha made Sri Lakshmi Narayana Muni as his successor and entered the Brindavana in Sri Rangam.
shri swarNavarNa tIrtha varada gOvindA gOvindA...
**********
from sripadaraja mutt org---->
Swarnavarna Theertha looked after the ashram for few years. He also helped the kings in solving the problems faced by them at that time. He traveled to many neighboring states. He once visited Adi Ranga in Srirangapattana and Madhya Ranga in Shivanasamudra, both in Karnataka. He visited Sri Purushottama Theertha in his ashram, which was located at the banks of the Kanva River near Shivanasamudra.
There he saw a young boy who was studying under Sri Purushottama Theertha in his ashram. Sri Swarnavarna Theertha was very much attracted by the boy's talent. He narrated this to Sri Purushottama Theertha and expressed the eagerness to have such a talented disciple. that he requested the boy's parents to send the boy with him. But the boy's parents hesitated to send him.
Then with Sri Purushottama Theertha's intervention, Sri Purushottama Theertha requested the boy's parents to send the boy with Sri Swarnavarna Theertha. the parents accepted to send the boy. Fascinated by this strange incident, Sri Swarnavarna Theertha along with the boy came back to Sri Rangam. In 1412 he arranged for the boy's Bramhopadesham and renamed him as Sri Lakshmi Narayana.
Later Sri Lakshmi Narayana was sent to Sri Vibhudhendra Theertha for education. Sri Lakshmi Narayana stayed with him for eight years and became a learned man. He returned to Sri Rangam after his education.
In 1420 Sri Swarnavarna Theertha made Sri Lakshmi Narayana Muni as his successor and entered the Brindavana in Sri Rangam.
***********
info from madhwaseva.com
His real name is Parashurama Tirtharu. He was regularly doing Srihari Chintane and was busy with japa tapa. As such, his body was shining like gold. That is why he was called as Swarnavarna Tirtharu.
He helped the kings in solving the problems faced by them
Once he went to see Sri Purushottama Tirtharu, the mathadipathi of Abboor Matha in a pallakki. On his way, he saw a 8 years old boy who was grazing the cows. Swrnavarna Tirtharu asked the boy as to “How long is the distance to Abboor”. The boy replied “See the western side, see sun, see us, the cows are returning home. U can know how long is the distance.” Even though boy didn’t tell the exact distance to Abboor, the way the boy answered impressed the swamiji. The reply was an indication that the Abboor was not far way.
Swamiji met Sri Purushottama Tirtharu and enquired the swamiji about the boy. The boy was none other than Sri Lakshminarayana Muni who took the ashrama from Swarnavarna Tirtharu and later got the title Sripadarajaru.
He is the seventh pontiff after Srimadacharyaru.
*******
Contact
# 48, South Chittirai Steet
Srirangam
Contact:- Sri. Ragothama Achar & Sri Gururajachar
Ph:- (0431) 2431344
**********
4 yathis from Sri Sripadaraja Mutt paramapara (Sri Padmanabha theertha parampara), stayed at Srirangam, between 1364 to 1420, and. Played major role in the punar jeevana of Ranganatha temple and starting of nitya pooja to Lord Sri Ranganatha in the critical period of temple history.
shri parashurAma tIrtharu. (1354 – 1364), Shri Adiraja Teertharu (1364 – 1384), Shri Satyavrata Teertharu (1384 – 1400). Sri Swarnawarna theertha (1400-1420)
Sri Parasurama Theertha (1354 -1364). His brindavan is in the bank of Chandra pushkarani, inside Sri Rangam temple.
Gurugala to Sri Parasurama theertha is Sri Sankarshana theertharu. His Gurugalu Sri Lakshmi Dhara theertharu. Both of these gurugala went to Sri Nagar for madhwa matha prachara stayed there, later brindavanatharu there in Sri Nagar itself (no trace of brindavan till date). Sri Vyasarajaru during his sanchara to Sri Nagar worshipped these 2 brindavanas, established two big pong, did prathista of one pranadevaru there. Sri Sankarshana theertharu sent his shisya Sri Parashrama theertha to South india for the punar jeevana of Ranganatha temple. He entered the abandanded Ranganatha temple and started the regular pooja and renovation work, with the help of locals.
When we see the Srirangam history. The temple suffered a massive invasion during period 1322-1371. The entire temple structure was razed by enemy forces lead by Malikapur in 1311 and Tuglak in 1323. This period is called “Tulaka Kalabham”. The forces occupied the temple complex and stayed in the Chandanu mandapam near the present moola sthana, without Pooja for the Ranganatha. The Kilji dalapathy was suffering from many diseases, hence later they shifted to the complex near to the present Samayapuram.
In the year 1371 only utsava murthy of Sri ranganatha (namperumal) returned to Sri Rangam. The vigraha travelled many places and stayed in Tirupathi was quite some time (we can see Ranganayakula Mandapam at the Tirumala temple with inscription). Ranganatha utsava vigraha was restored to Srirangam by a Brahmana general named Gopanna or Gopanarya. He was the general to the army of prince Kampana (Kumara Kampana).
Opposite to the brindavan, we can see 2 Anjaneya vigraha. The figure resembles that the prathista done by Sri Vyasaraja maha prabhugalu (Gante at the tail, sowgandiga pushpa on hand) Similar to the one which is in Narasimha theertha (Mulbagal).
Sri Parashurama theertha brindavan has the carving of Mutt pattada devaru Sri Gopinatha. Gajalakshmi on the front side and With korma peetam (which clearly tells that this is brindavan of yathi, rather then mere Tulasi madam)
The next successors also stayed at the Srirangam and assisted in the Temple complex getting renovated and also smooth conducting the nitya pooja of svayam vyakta Ranganatha devaru. Also his shisyaru. These 4 madhwa yathis played a major role Renovation of temple and staring nitya pooja after massive destruction to the temple.
The paramapara continued in the service of Ranganatha.
Shri Adiraja Teertharu (1364 – 1384), Shri Satyavrata Teertharu (1384 – 1400). Sri Swarnawarna theertha (1400-1420).
During Sri Swarnawarnara period, the SriRangam slowly came to normalcy. Hence he started sanchara. His visit to Abbur to get young Lakshmi Narayana. All knows the story.
Later the young Lakshminaraya became Sri Lakshminaraya muni and served the Gopinatha devaru and Lord Ranganatha with his kannada pada padya suladis.
****

ಶ್ರೀ ಸ್ವರ್ಣವರ್ಣ ತೀರ್ಥರು
|| ವಸುಧಾತಲ ವಿಖ್ಯಾತಂ | ವೇದಾಂತಾದಿ ಗುಣಾರ್ಣವಂ |
ವೇದವೇದಾಂಗ ಚತುರಂ ಸ್ವರ್ಣವರ್ಣ ಗುರುಂಭಜೇ ||
ಶ್ರೀ ಪದ್ಮನಾಭ ತೀರ್ಥರ ಮೂಲ ಪರಂಪರೆಯಲ್ಲಿ ಬರುವ, ಆರನೇ ಪೀಠಾಧಿಪತಿಗಳು, ಶ್ರೀಮದಾಚಾರ್ಯರಿಂದ ಏಳನೇ ಯತಿಗಳು, ಸದಾ ತಪೋನಿರತರು, ತಮ್ಮ ದೇಹದ ತೇಜಸ್ಸಿನಿಂದಲೇ ಪ್ರಕಾಶಾರಾಗಿ ಸ್ವರ್ಣವರ್ಣ ದಿಂದ ಗೋಚರಿಸಿದಂತ, ಶ್ರೀ ಸತ್ಯವ್ರತ ತೀರ್ಥರ ಶಿಷ್ಯರು ಮತ್ತು ಜಗ್ಗತ್ತಿಗೆ ಶ್ರೀಪಾದರಿಗೆಲ್ಲ ರಾಜರಾದ ಶ್ರೀಪಾದ ರಾಜರನ್ನು ಕೊಟ್ಟಂತಹ ಮಹನೀಯರಾದ ಶ್ರೀಸ್ವರ್ಣವರ್ಣ ತೀರ್ಥರ ಆರಾಧನಾ ಮಹೋತ್ಸವ.
ಪೂರ್ವಾಶ್ರಮ ನಾಮ -
ಆಶ್ರಮ ನಾಮ - ಶ್ರೀ ಪರಶುರಾಮ ತೀರ್ಥರು
ವೃಂದಾವನ ಸನ್ನಿದಾನ - ಸ್ವಯಂವ್ಯಕ್ತ ಕ್ಷೇತ್ರ ಶ್ರೀರಂಗಂ
ವೇದಾಂತ ಸಾಮ್ರಾಜ್ಯ ಆಳ್ವಿಕೆ ಕಾಲ - 1400 - 1420
ಆಶ್ರಮಗುರುಗಳು - ಶ್ರೀ ಸತ್ಯವ್ರತ ತೀರ್ಥರು
ಆಶ್ರಮ ಶಿಷ್ಯರು - ಶ್ರೀ ಶ್ರೀಪಾದರಾಜರು (ಲಕ್ಷ್ಮೀನಾರಾಯಣ ಮುನಿಗಳು)
ಆರಾಧನಾ ದಿನ : ಜೇಷ್ಠ ಕೃಷ್ಣ ಚತುರ್ಥಿ
ಇವರ ಪೂರ್ವಾಶ್ರಮದ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವುದಿಲ್ಲ, ಆದರೆ ಕೆಲವು ಗ್ರಂಥಗಳಲ್ಲಿ ಉಲ್ಲೇಖಿಸಿರುವಂತೆ ಮತ್ತೆ ಶ್ರೀ ಶ್ರೀಪಾದರಾಜರ ಜೀವನ ಚರಿತ್ರೆ ನೋಡುವಾಗ, ಇವರ ಮಹಿಮೆ ತಿಳಿಯುತ್ತದೆ. ಇವರಿಗೆ ಪರಶುರಾಮ ತೀರ್ಥರು ಎಂದು ಆಶ್ರಮನಾಮ ವಿದ್ದರೂ, ಜನಗಳು ಇವರನ್ನು ಗುರುತ್ತಿಸಿತ್ತಿದ್ದಿದು ಶ್ರೀ ಸ್ವರ್ಣವರ್ಣ ತೀರ್ಥರು ಎಂದು. ಸದಾ ಹರಿಚಿಂತನೆ, ಜಪ ತಪ ಮತ್ತು ಅನುಷ್ಠಾನದಿಂದ ಇವರ ದೇಹ ಸ್ವರ್ಣ ಅಂದರೆ ಬಂಗಾರದ ಬಣ್ಣಕ್ಕೆ ತಿರುಗಿತ್ತು. ಆದರಿಂದ ಸ್ವರ್ಣವರ್ಣ ತೀರ್ಥರು ಎಂದು ಪ್ರಸಿದ್ಧ ರಾಗಿದ್ದರು. ಇವರ ಸಮಕಾಲೀನರು ಶ್ರೀ ಬ್ರಹ್ಮಣ್ಯ ತೀರ್ಥರ ಗುರುಗಳಾದ ಶ್ರೀ ಪುರುಷೋತ್ತಮ ತೀರ್ಥರು.
ಹಲವು ರಾಜರುಗಳು ಇವರಿಂದ ಮಾರ್ಗದರ್ಶನ ಪಡೆದವರು, ಶ್ರೀರಂಗಂನ ದೇವಾಲಯದ ಪುನರುಜ್ಜೀವನದಲ್ಲಿ ಇವರದು ಬಹಳಷ್ಟು ಪಾತ್ರ ವಹಿಸಿದ್ದಾರೆ. ಶ್ರೀ ರಂಗನಾಥ ದೇವರ ಪೂಜಾ ಕೈಂಕರ್ಯ ನಡೆಯುವ "ಚಂದ್ರ ಮಂಟಪಂ" ಇವರ ಸಲಹೆ ಮೇರೆಗೆ ನಿರ್ಮಾಣ ಮಾಡಿಸಿದ್ದು, ಮತ್ತು ಚಂದ್ರ ಪುಷ್ಕರಣಿ ಸಮೀಪದ ಕೆಲವು ಜಾಗ ಇವರಹೆಸರಿನಲ್ಲೇ ಇತ್ತು. ಆದರೆ ಕಾಲ ಕ್ರಮೇಣ ಕೈತಪ್ಪಿದೆ. ದೇವಸ್ಥಾನದ ಜೀರ್ಣೋದ್ದಾರ ಸಮಯದಲ್ಲಿ ಶ್ರೀರಂಗ ನಾಥ ದೇವರ ಉತ್ಸವ ಮೂರ್ತಿ ಕೆಲವು ಸಮಯಗಳವರೆಗೂ ಇವರ ಸಮಕ್ಷಮದಲ್ಲಿ ಪೂಜೆ ಗೊಳ್ಳುತ್ತಿತ್ತು. ಮುಂದೆ ಇದೆ ಕುರಿತಾಗಿ ಇವರ ಪವಾಡ ನೋಡೋಣ.
ಒಮ್ಮೆ ತಮ್ಮ ಉತ್ತರಾಧಿಕಾರಿಯನ್ನು ಹುಡುಕುತ್ತಿದ್ದ ಶ್ರೀ ಪರಶುರಾಮ ತೀರ್ಥರು ಸಂಚಾರ ಕ್ರಮದಲ್ಲಿ ಆದಿರಂಗ - ಶ್ರೀರಂಗಪಟ್ಟಣ, ಮಧ್ಯರಂಗ - ಶಿವನಸಮುದ್ರಕ್ಕೆ ಬಂದಿದ್ದರು, ನಂತರ ಕೆಲವುಕಾಲ ಅಲ್ಲೇ ಒಂದು ಆಶ್ರಮ ನಿರ್ಮಾಣ ಮಾಡಿ ಇದ್ದರು, ಇವರ ಜಪತಪ ಅನುಷ್ಠಾನಕ್ಕೆ ಒಂದು ತೀರ್ಥವನ್ನು ನಿರ್ಮಿಸಿದ್ದರು, ಅದು ಪರಶುರಾಮ ತೀರ್ಥ ಎಂದು ಹೆಸರಾಗಿತ್ತು, ಈಗ ಅದರ ಬಗ್ಗೆ ಸಂಶೋಧನೆ ಅಗತ್ಯವಾಗಿದೆ. ನಂತರ ಸಂಚಾರ ಕ್ರಮದಲ್ಲಿ ಪುರುಷೋತ್ತಮ ತೀರ್ಥರನ್ನು ಸಂದರ್ಶಿಸಲು ಬರುವಾಗ ಸಂಜೆಯ ಸಮಯವಾಗಿತ್ತು.
ಇನ್ನು ಅಬ್ಬುರಿಗೆ ತಲುಪಲು ಕೆಲವು ದೂರಇತ್ತು. ಮೇನೆಯಲ್ಲಿ ಕುತುಕೊಂಡು ಶ್ರೀರಂಗ ಪಟ್ಟಣದಿಂದ ಅಬ್ಬುರಿಗೇ ಬರುತ್ತೀದ್ದರು. ಅಬ್ಬುರು ಇನ್ನು ಎಷ್ಟು ದೂರವಿದೆ ಎಂಬುದನ್ನು ಅವರಿಗೇ ತಿಳಿಯ ಬೇಕಿತ್ತು . ಸುತ್ತಮುತ್ತ ನೋಡಿದಾಗ ಅಲ್ಲಿ ದನಗಳ ಹಿಂಡನ್ನು , ದನಕಾಯೂವ ಹುಡುಗರನ್ನು ನೋಡಿದರು . ಮೇನೆಯನ್ನು ನಿಲ್ಲಿಸಿ ಗೋಪಾಲಕರನ್ನು ಕರೆದರು . ಆದರೆ ಅವರು ಹೆದರಿ ಓಡಿಹೋದರು . ಅಗ ಲಕ್ಷ್ಮೀನಾರಾಯಣ ಎನ್ನುವ ಮಾತ್ರ ಸ್ವಾಮಿಗಳನ್ನು ನೋಡಿ ಹತ್ತಿರ ಬಂದು ಗುರುಗಳಿಗೆ ನಮಸ್ಕರಿಸಿದರು. ಇನ್ನು ಅಬ್ಬುರು ಎಷ್ಟು ದೂರವಿದೆ ಎನ್ನಲು, ಸೂರ್ಯ ಮುಳುಗುತಿದ್ದಾನೆ, ಗೋವುಗಳು ನಡೆಯುತ್ತಿವೆ ಸಂಜೆಯಾಗುತ್ತಿದೆ ಎಂದರೆ ಊರು ಸನಿಹದಲ್ಲೇ ಇದೆ ಅಲ್ಲವೇ ಎಂದು ಕಾವ್ಯಾತ್ಮಕ ಹಾಗು ಚುರುಕುತನದಿಂದ ಉತ್ತರಿಸಿದ. ಗುರುಗಳು ಆಶ್ಚರ್ಯಗೊಂಡರು, ಮತ್ತೆ ಸ್ವರ್ಣವರ್ಣ ತೀರ್ಥರು, ನೀನು ನಮ್ಮೊಂದಿಗೆ ಬರುವೆಯಾ ಎಂದು ಹೇಳಲು, ನಮ್ಮ ಅಣ್ಣನು ( ಶ್ರೀ ಬ್ರಹ್ಮಣ್ಯ ತೀರ್ಥರು) ಹೀಗೆ ಒಬ್ಬಯತಿಗಳಿಂದ ಸನ್ಯಾಸಶ್ರಮ ತೆಗೆದುಕೊಂಡ ಎಂದು ಹೇಳಿ, ಮನೆಗೆ ಹೋದ. ಗುರುಗಳು ಲಕ್ಷ್ಮೀನಾರಾಯಣನ ವರ್ಚಸ್ಸನ್ನು ಕಂಡು ಇವನೇ ನಮ್ಮ ಉತ್ತರಾಧಿಕಾರಿ ಎಂದು ತಿಳಿದು, ಶ್ರೀಪುರುಷೋತ್ತಮ ತೀರ್ಥರಲ್ಲಿ ವಿಚಾರಿಸಲು, ಶ್ರೀ ಶೇಷಗಿರಿಯಪ್ಪ ಮತ್ತು ಶ್ರೀಮತಿ ಗಿರಿಯಮ್ಮ (ಶ್ರೀಪಾದರಾಜರ ಪೂರ್ವಾಶ್ರಮದ ತಂದೆ ತಾಯಿಗಳು) ಅವರಲ್ಲಿ ಸನ್ಯಾಸಾಶ್ರಮದ ಬಗ್ಗೆ ತಿಳಿಸಲು, ದೈವವಶಾತ್ ಅವರು ಒಪ್ಪಿಗೆ ಸೂಚಿಸಿದರು, ಮುಂದೆ ಶ್ರೀ ಸ್ವರ್ಣವರ್ಣ ತೀರ್ಥರು ಲಕ್ಷ್ಮೀನಾರಾಯಣನಿಗೆ ಆಶ್ರಮ ಕೊಟ್ಟು ಶ್ರೀ "ಲಕ್ಷ್ಮೀನಾರಾಯಣ ತೀರ್ಥರು" ಎಂಬ ನಾಮಕರಣ ಮಾಡಿದರು.
ಮುಂದೆ ಶ್ರೀ ವಿಭುದೇಂದ್ರ ತೀರ್ಥರಲ್ಲಿ ಮತ್ತು ಶ್ರೀ ರಘುನಾಥ ತೀರ್ಥರಲ್ಲಿ ಹೆಚ್ಚಿನ ಅಭ್ಯಾಸಕ್ಕೆ ಬಿಟ್ಟು ತಾವು ಜೇಷ್ಠ ಕೃಷ್ಣ ಚತುರ್ಥಿಯಂದು ಪ್ರಥಮ ಸ್ವಯಂವ್ಯಕ್ತ ಕ್ಷೇತ್ರ ಶ್ರೀರಂಗಂ ನಲ್ಲಿ ವೃಂದಾವನಸ್ಥರಾದರು. ಇವರ ವೃಂದಾವನದಲ್ಲಿ ಪಟ್ಟದ ದೇವರಾದ ಶ್ರೀ ಗೋಪಿನಾಥ ದೇವರು, ಗಜಲಕ್ಷ್ಮಿ ಮತ್ತು ತುಳಸಿಮಣಿ ಹಿಡಿದಿರುವ ಶ್ರೀ ಸ್ವರ್ಣವರ್ಣ ತೀರ್ಥರ ವಿಗ್ರಹ ಕೆತ್ತಿದ್ದಾರೆ. ಮುಂದೆ ವ್ಯಾಸರಾಜರು ನರಸಿಂಹ ತೀರ್ಥದಲ್ಲಿರುವ ಶ್ರೀ ಮುಖ್ಯಪ್ರಾಣ ದೇವರ ವಿಗ್ರಹದ ಪ್ರತಿಕೃತಿಯನ್ನು ಇಲ್ಲಿ ಪ್ರತಿಷ್ಟಿಸಿದ್ದಾರೆ.
ಇತ್ತೀಚಿಗಷ್ಟೇ ಕೆಲವು ವರ್ಷಗಳ ಹಿಂದೆ ನಡೆದ ಪವಾಡವೇನೆಂದರೆ ಶ್ರೀ ರಂಗಾನಾಥ ಸ್ವಾಮಿ ಉತ್ಸವ ಹೊರಟಿತ್ತು, ಆದರೆ ದೇವಸ್ಥಾನದ ಕೆಲವು ಅಧಿಕಾರಿಗಳು ನಿರ್ಲಕ್ಷ ಮತ್ತು ಅತಿಯಾದ ಧೋರಣೆಯಿಂದ, ಶ್ರೀ ಸ್ವರ್ಣವರ್ಣ ತೀರ್ಥರ ವೃಂದಾವನದ ( ಶ್ರೀಮಠದ) ಎದುರು ಉತ್ಸವ ನಿಲ್ಲಿಸಬೇಡಿ ಹೊರಡಿ ಎಂದು ಆಜ್ನ್ಯೆಮಾಡಿದ, ಉತ್ಸವ ನಿರ್ವಾಹಕರು ಹಾಗೆ ಹೋರಾಡಲು ಪ್ರಯತ್ನಿಸಿದರು. ಕೆಲವು ಹಿರಿಯರು ಅವರಿಗೆ ಹೇಳಿದರು, ಶ್ರೀಪಾದರಾಜ ಮಠದ ಎದುರು ಉತ್ಸವ ನಿಲ್ಲಬೇಕು, ಆದರೆ ಅಧಿಕಾರಿಯ ಭಯ ಮತ್ತು ಧೋರಣೆಯಿಂದ ನಿಲ್ಲಿಸದೆ ಮುಂದೆ ಹೋಗಲು ಪ್ರಾರಂಭಿಸಿದರು.
ಒಂದೆರಡು ಹೆಜ್ಜೆ ಇಟ್ಟರು. ಆದರೂ ಉತ್ಸವವನ್ನು ಹೊರುವುದಕ್ಕೂ ಆಗಲಿಲ್ಲ, ಅಲ್ಲಿದ್ದ ವಿದ್ವಾ೦ಸರು ಒಬ್ಬರು ಎದ್ದು ಹೇಳುತ್ತಾರೆ, ಇಲ್ಲಿ ಸ್ವರ್ಣವರ್ಣ ತೀರ್ಥರ ವೃಂದಾವನವಿದೇ, ಶ್ರೀಮಠದಿಂದ ಮಂಗಳಾರತಿ ಮಾಡಿಸಿ, ಗುರುಗಳ ಸ್ಮರಣೆಮಾಡಿ, ಎಂದು ಹೇಳಲು ಅದರಂತೆ ಶ್ರೀಮಠದಿಂದ ಮಂಗಳಾರಾತಿ ಮಾಡಲು ಸುಲಭವಾಗಿ ಪ್ರಯಾಸ ವಿಲ್ಲದಂತೆ ಉತ್ಸವ ಸಾಗಿತು. ಅದರಂತೆ ಪ್ರತಿವರ್ಷವೂ ಕೂಡ ಶ್ರೀಸ್ವರ್ಣವರ್ಣ ತೀರ್ಥರ ವೃಂದಾವನದ ಎದುರು ಉತ್ಸವಗಳು, ರಥೋತ್ಸವಗಳು ಐದು ನಿಮಿಷ ನಿಲ್ಲಿಸಿಯೇ ಸಾಗುವುದು. ಈ ಕಲಿಯುಗದಲ್ಲೂ ಅವರ ಮಹಿಮೆ ನೋಡಬಹುದು ಎಂದರೆ ಗುರುಗಳು ಎಂತವರು ಎಂದು ಊಹಿಸಲು ಅಸಾಧ್ಯ.
ಪ್ರೀತೋಸ್ತು ಕೃಷ್ಣ ಪ್ರಭೋ
ಫಣೀಂದ್ರ ಕೆ
ಹೀಗೆ ಸ್ವರ್ಣವರ್ಣ ತೀರ್ಥರನ್ನು ಸ್ಮರಿಸುತ್ತ ಅವರ ಆಶೀರ್ವಾದದಿಂದ ನಮ್ಮಲ್ಲಿ ವಿದ್ವತ್ ಮತ್ತು ತೇಜಸ್ಸು ಹೆಚ್ಚಲಿ ಎಂದು ಬೇಡಿಕೊಳ್ಳುತ್ತ, ಶ್ರೀ ಸ್ವರ್ಣವರ್ಣತೀರ್ಥರ ಅಂತರ್ಗತನಾದ ಶ್ರೀ ಭಾರತಿರಮಣ ಮುಖ್ಯಪ್ರಾಣದೇವರು ಶ್ರೀ ಗೋಪಿನಾಥ ದೇವರಲ್ಲಿ ಈ ಲೇಖನಕುಸುಮ ಸಮರ್ಪಣೆ ಮಾಡುತ್ತಿದ್ದೇನೆ. ಏನಾದರೂ ಲೋಪದೋಷಗಳಿದ್ದರೆ ನನ್ನದೇ, ಒಂದೆರಡು ವಿಷಯಗಳಿದ್ದರೆ ಗುರುಗಳ ದಯೆ.
ಶ್ರೀ ಕೃಷ್ಣಾರ್ಪಣಮಸ್ತು.
***
ಲಕ್ಷ್ಮೀನಾರಾಯಣ :-
ಚೆನ್ನಪಟ್ಟಣದ ಹತ್ತಿರ " ಅಬ್ಬುರು " ಎಂಬ ಊರಿದೆ . ಅಲ್ಲಿ " ಶೇಷಗಿರಿ " " ಗಿರಿಯಮ್ಮ" ದಂಪತಿಯರು ವಾಸಮಾಡುತ್ತಿದ್ದರು . ತೋಟದಲ್ಲಿ ಮನೆ ಮಾಡಿಕೊಂಡು ತೋಟದಲ್ಲಿ ಉತ್ಪತ್ತಿಯಾಗುವ ತರಕಾರಿ , ತೆಂಗಿನ ಕಾಯಿ ಇತ್ಯಾದಿಗಳಿಂದ ಜೀವನ ಸಾಗಿಸುತ್ತಿದ್ದರು . ಅವರ ಮಗನೇ "ಲಕ್ಷ್ಮೀನಾರಾಯಣ " . ಬಹಳ ಬುದ್ಧಿವಂತ ಹುಡುಗನಾಗಿದ್ದ . ಬೆಳಿಗ್ಗೆ ದನಗಳನ್ನೂ ಮೆಯೀಸಿಕೊಂಡು ಗುಡ್ಡದ ಬಳಿ ಹೋಗುತ್ತಾನೆ . ಅವನನ್ತೇ ಅನೇಕ ಹುಡುಗರು ದನ ಮೆಯೀಸಿಕೊಂಡು ಬಂದಿರುತ್ತಾರೆ .ಅವರೊಡನೆ ಸೇರಿಕೊಂಡು ಆಟಗಳನ್ನು ಆಡುತ್ತಾ ಸಂಜೆ ವೇಳೆಗೆ ದನಗಳನ್ನು ಸುರಕ್ಷಿತವಾಗಿ ತಂದು ಬಿಡುತ್ತಾನೆ . ಆ ದನಕಾಯುವ ಹುಡುಗರಿಗೆಲ್ಲಾ " ಶ್ರೀಲಕ್ಷ್ಮೀ ನಾರಾಯಣರು " ಮುಖಂಡನಾಗಿ ಇರುತ್ತಿದ್ದರು .
ಶ್ರೀ ಸ್ವರ್ಣವರ್ಣತೀರ್ಥರು :-
ಜಗದ್ಗುರು ಶ್ರೀಮನ್ ಮಧ್ವಾಚಾರ್ಯರ ಮೊದಲನೇ ಶಿಷ್ಯರಾದ ಶ್ರೀಪದ್ಮನಾಭತೀರ್ಥರ ದಿವ್ಯ ಪರಂಪರೆಯಲ್ಲಿ ಬಂದವರು ಶ್ರೀ ಸ್ವರ್ಣವರ್ಣ ತೀರ್ಥರು. ಇವರ ಬೃಂದಾವನ ಕಲಿಯುಗದ ಭುವೈಕುಂಠ ಸ್ವಯಂವ್ಯಕ್ತ ಕ್ಷೇತ್ರಗಳಲ್ಲಿ ಒಂದಾದ ತಮಿಳುನಾಡಿನ ಶ್ರೀರಂಗ ಕ್ಷೇತ್ರದಲ್ಲಿ ಇದೇ. ಒಮ್ಮೆ ಸ್ವರ್ಣವರ್ಣ ತೀರ್ಥರು ಮೇನೆಯಲ್ಲಿ ಕುತುಕೊಂಡು ಶ್ರೀರಂಗ ಪಟ್ಟಣದಿಂದ ಅಬ್ಬುರಿಗೇ ಬರುತ್ತೀದ್ದರು. ಅಬ್ಬುರು ಇನ್ನು ಎಷ್ಟು ದೂರವಿದೆ ಎಂಬುದನ್ನು ಅವರಿಗೇ ತಿಳಿಯ ಬೇಕಿತ್ತು . ಸುತ್ತಮುತ್ತ ನೋಡಿದಾಗ ಅಲ್ಲಿ ದನಗಳ ಹಿಂಡನ್ನು , ದನಕಾಯೂವ ಹುಡುಗರನ್ನು ನೋಡಿದರು . ಮೇನೆಯನ್ನು ನಿಲ್ಲಿಸಿ ಗೋಪಾಲಕರನ್ನು ಕರೆದರು . ಆದರೆ ಅವರು ಹೆದರಿ ಓಡಿಹೋದರು . ಅಗ ಲಕ್ಷ್ಮೀನಾರಾಯಣರು ಮಾತ್ರ ಸ್ವಾಮಿಗಳನ್ನು ನೋಡಿ ಹತ್ತಿರ ಬಂದು ಗುರುಗಳಿಗೆ ನಮಸ್ಕರಿಸಿದರು.
************

ಶ್ರೀ ಸ್ವರ್ಣವರ್ಣ ತೀರ್ಥ ಗುರುಭ್ಯೋ ನಮಃ
ಶ್ರೀ ರಘುವರ್ಯ ತೀರ್ಥ ಗುರುಭ್ಯೋ ನಮಃ.
ಇಂದು ಮಹಾನುಭಾವರಾದ ಶ್ರೀ ಸ್ವರ್ಣವರ್ಣ ತೀರ್ಥರ ಮಧ್ಯಾರಾಧನೆ,
ಶ್ರೀ ರಘುವರ್ಯ ತೀರ್ಥರ ಉತ್ತರಾರಾಧನೆಯ ಪರ್ವಕಾಲ.
ಇಬ್ಬರ ಮಹಿಮೆಗಳೂ ಅನೇಕ, ಮಾಡಿದ ದೊಡ್ಡ ಅನುಗ್ರಹ ಅಂದ್ರೆ
ಇಬ್ಬರೂ ಮಹಾನುಭಾವರು ತಮ್ಮ ಶಿಷ್ಯರನ್ನು ನಮ್ಮ ಸಮಾಜಕ್ಕೆ, ಇಡೀ ಜಗತ್ತಿಗೆ ದೊಡ್ಡ ಉಪಕಾರವನ್ನು ಮಾಡಿದವರು.
ಶ್ರೀ ಸ್ವರ್ಣವರ್ಣ ತೀರ್ಥರು.
ಅತ್ಯಂತ ಅನ್ವರ್ಥಕ ಹೆಸರು.
ತೀರ್ಥ ಅಂದ್ರೆ ಶಾಸ್ತ್ರ, ಅದರಲ್ಲಿಯ ಪ್ರತಿ ವರ್ಣಗಳು ಪರಮಾತ್ಮನ ಉತ್ಕೃಷ್ಟತೆಯನ್ನು ಹೇಳುತ್ತವೆ ಆದ್ದರಿಂದ ಅವು ಸು=ಶೋಭನ ವರ್ಣಗಳು. ಅಂಥಾ ಸು ವರ್ಣ ಉಳ್ಳ ತೀರ್ಥ -ಶಾಸ್ತ್ರಗಳಲ್ಲಿ ರತರು, ಅನುಷ್ಠಾನ ಸಂಪನ್ನರು ಆದ್ದರಿಂದ ಶ್ರೀ ಸ್ವರ್ಣವರ್ಣ ತೀರ್ಥರು ಅಂತ ಅನ್ವರ್ಥಕ ಹೆಸರು.
ಇನ್ನೂ ಒಂದು ರೀತಿಯಿಂದಲೂ ಅನ್ವರ್ಥಕ ಹೆಸರು. ಯಾಕೆ ಅಂದ್ರೆ ನಮ್ಮ ಇತಿಹಾಸವನ್ನು ಸ್ವರ್ಣ ವರ್ಣ -ಸ್ವರ್ಣ ಅಕ್ಷರಗಳಲ್ಲಿ ಬರೆದಿಡುವಂಥ ಯುಗನಿರ್ಮಾಪಕರಾದ ಶ್ರೀ ಶ್ರೀಪಾದರಾಜರನ್ನು ಕೊಟ್ಟವರು.
ಶ್ರೀ ಶ್ರೀಪಾದರಾಜರ ಮಹಿಮೆ ಜಗಜ್ಜನಿತ. ಅವರ ದೊಡ್ಡ legacy ಅಂದ್ರೆ ಶ್ರೀ ಮದ್ವ್ಯಾಸರಾಜರಂಥ ಶಕಪುರುಷರನ್ನು -ವಿದ್ವತ್ ಚಕ್ರವರ್ತಿ ಗಳನ್ನು ತಯಾರು ಮಾಡಿದ್ದು. ಶ್ರೀ ವ್ಯಾಸರಾಜರು ಮುಂದೆ ಸ್ವತಃ ದಾಸಸಾಹಿತ್ಯಕ್ಕೆ ವಿಶೇಷವಾಗಿ ಪ್ರವರ್ತಕರು, ವ್ಯಾಸ ಸಾಹಿತ್ಯ ಅಂತೂ ಸರಿಯೇ ಸರಿ. ಶ್ರೀ ವ್ಯಾಸರಾಜರು ಶ್ರೀಮದ್ವಾದಿರಾಜ ಮಹಾಗುರುಗಳಿಗೆ, ಶ್ರೀ ವಿಜಯೀಂದ್ರ ತೀರ್ಥರೇ ಮೊದಲಾದವರಿಗೆ ಪಾಠ ಹೇಳಿದರು. ಶ್ರೀ ವಾದಿರಾಜ ಮಹಾಗುರುಗಳ ಒಂದು legacy ಪ್ರತ್ಯೇಕ, ಈ ಕಡೆ ಶ್ರೀ ವಿಜಯೀಂದ್ರ ತೀರ್ಥರಿಂದ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ತನಕ ಇನ್ನೊಂದು ಭವ್ಯ ಜ್ಞಾನ ಪರಂಪರೆ.
ಹೆಚ್ಚು ಕಡಿಮೆ 150- 200 ವರ್ಷದ ಆ ಕಾಲದಲ್ಲಿ ಈ ಎಲ್ಲಾ ಮಹಾನುಭಾವ ಯತಿಗಳೂ ಬಂದು ಹೋದರು, ಶ್ರೀ ಪುರಂದರ ದಾಸರು etc ದಾಸ ಶ್ರೇಷ್ಠರು ಬಂದು ಹೋದರು. ಒಂದು ಅರ್ಥದಲ್ಲಿ ಈ ಸುವರ್ಣ ಯುಗ, ಸ್ವರ್ಣ ವರ್ಣಗಳಲ್ಲಿ ಬರೆದು ಇಡಬೇಕಾದ ಈ ಯುಗ/ಕಾಲ, ಇದು ಪ್ರಾರಂಭ ಆಗಿದ್ದು ಶ್ರೀ ಶ್ರೀಪಾದರಾಜರಿಂದ. ಇಂಥಾ ಶ್ರೀಪಾದರಾಜರನ್ನು ಇಡೀ ಜಗತ್ತಿಗೆ ಕೊಟ್ಟ ಕೀರ್ತಿ -ಶ್ರೇಯಸ್ಸು -ಆ ಮಹಿಮೆ ಶ್ರೀ ಸ್ವರ್ಣವರ್ಣ ತೀರ್ಥರದ್ದು.
ಇನ್ನು ಶ್ರೀ ರಘುವರ್ಯ ತೀರ್ಥರು. ಮಹಾ ತಪಸ್ವಿಗಳು.
ಅವರ ಸ್ತೋತ್ರದಲ್ಲಿ ಹೇಳಿದಂತೆ ಮಹಾ ಪ್ರವಾಹಿನೀ ಭೀಮಾ ಯಸ್ಯ ಮಾರ್ಗೋಮದಾನ್ಮುದಾ, ಮಹಾ ಪ್ರವಾಹದಲ್ಲಿ ಇದ್ದ ಭೀಮಾ ನದೀ, ರಘುವರ್ಯ =ಶ್ರೀರಾಮ ದೇವರನ್ನು ಸದಾ ತಮ್ಮ ತಲೆಯ ಒಳಗೆ ಇಟ್ಟುಕೊಂಡು, ಆಗ ತಲೆಯಮೇಲೆಯೂ ಹೊತ್ತುಕೊಂಡು ಬರ್ತಾ ಇದ್ದ ಶ್ರೀ ರಘುವರ್ಯ ತೀರ್ಥರಿಗೆ ಮಾರ್ಗ ಬಿಟ್ಟಿತು ಅಂತ. ಇಂಥಾ ಮಹಾನುಭಾವರು ಶ್ರೀ ರಘುವರ್ಯ ತೀರ್ಥರು. ಸಂಸಾರ ಸಾಗರವನ್ನೇ ದಾಟಿಸುವ ತೀರ್ಥ -ಶಾಸ್ತ್ರದ ಮಹಿಮೆ ಏನು ಅನ್ನೋದರ ನಿದರ್ಶನ ಈ ಘಟನೆ..
ಶ್ರೀಮದಾಚಾರ್ಯರ ಇಂಥಾ ಶಾಸ್ತ್ರಗಳನ್ನು ಎಲ್ಲಾ ಕಡೆ ದಿಗ್ವಿಜಯ ಮಾಡಲಿಕ್ಕೆ ಈ ಜಗತ್ತಿಗೆ ಶ್ರೀ ರಘೂತ್ತಮ ತೀರ್ಥರಂಥ ಮಹಾನುಭಾವರನ್ನು ನೀಡಿದ ಕೀರ್ತಿ -ಶ್ರೇಯಸ್ಸು ಶ್ರೀ ರಘುವರ್ಯ ತೀರ್ಥರದ್ದು. ಕೇವಲ ತಮ್ಮ ಅನುಗ್ರಹ -ಸ್ವಪ್ನದಲ್ಲಿ ಬಂದು ನಾಲಿಗೆಯ ಮೇಲೆ ಬೀಜಾಕ್ಷರ ಬರೆದಿದ್ದರ ಫಲವಾಗಿ ಪುಟ್ಟ ಬಾಲಕರಿದ್ದಾಗಲೇ ಶ್ರೀ
ರಘೂತ್ತಮ ತೀರ್ಥರು ಯಾವ ವಿಶೇಷ ಅಧ್ಯಯನ ಇಲ್ಲದೇ ಶ್ರೀಮನ್ಯಾಯಸುಧಾದಂಥ ಉದ್ಗ್ರಂಥದ ಪಾಠ ಹೇಳುವವರಾದರು ಅಂದ್ರೆ ಶ್ರೀ ರಘುವರ್ಯ ತೀರ್ಥರ ಮಹಿಮೆ, ಗುರು ಪ್ರಸಾದದ ಮಹಿಮೆ ಏನು ಅನ್ನೋದು ಗೊತ್ತಾಗ್ತದೆ.
ಶ್ರೀಪಾದರಾಜರಿಂದ ಯಾವ ರೀತಿ ಸುವರ್ಣ ಯುಗದ ನಿರ್ಮಾಣ ಆದಂತೆ, ಶ್ರೀ ರಘೂತ್ತಮ ತೀರ್ಥರು ಕೂಡಾ ಒಂದು ಸ್ವರ್ಣಯುಗದ ನಿರ್ಮಾತರೇ.
ಅವರ ಶ್ಲೋಕದಲ್ಲಿ ಹೇಳಿದಂತೆ -
ಯಚ್ಚಿಷ್ಯಶಿಷ್ಯಶಿಷ್ಯಾದ್ಯಾಷ್ಟಪ್ಪಣ್ಣಾಚಾರ್ಯ ಸಂಜ್ಞಿತಾ:,
ಅವರ ಶಿಷ್ಯರು -ಪ್ರಶಿಷ್ಯರು ಕೇವಲ ದೊಡ್ಡ ವಿದ್ವಾಂಸರಲ್ಲ, ಟಿಪ್ಪಣಿಕಾರರು ಅಂತ ಪ್ರಸಿದ್ಧರಾದರು. ಶ್ರೀ ವೇದೇಶ ತೀರ್ಥರು, ಶ್ರೀ ವಿದ್ಯಾಧೀಶ ತೀರ್ಥರು, ಶ್ರೀ ಸತ್ಯವ್ರತ ತೀರ್ಥರು, ಶ್ರೀ ಸತ್ಯನಾಥ ತೀರ್ಥರು etc ಹೀಗೆ ಪ್ರತಿ ಒಬ್ಬರೂ ಮಹಾನ್ ಟಿಪ್ಪಣಿಕಾರರು. ಈ ಕಡೆ ಶ್ರೀ ವೇದೇಶ ತೀರ್ಥರಿಂದ ಶ್ರೀ ಯಾದವಾರ್ಯಾರು, ಶ್ರೀ ಶ್ರೀನಿವಾಸ ತೀರ್ಥರು- ಅವರ ಶಿಷ್ಯರು -ಉಮರ್ಜಿ, ಲಿಂಗೇರಿ, ಕಲ್ಲಾಪುರ etc ಟಿಪ್ಪಣಿಕಾರರ ಪರಂಪರೆ. ಇಂಥಾ ಒಂದು ಟಿಪ್ಪಣಿಕಾರರ ಸ್ವರ್ಣಯುಗ ನಿರ್ಮಾಣ ಮಾಡಿದವರು ಶ್ರೀ ರಘೂತ್ತಮ ತೀರ್ಥರು, ಇಂಥಾ ಶ್ರೀ ರಘೂತ್ತಮತೀರ್ಥರನ್ನು ಜಗತ್ತಿಗೆ ಕೊಟ್ಟು ಮಹಾ ಉಪಕಾರ ಮಾಡಿದವರು ಶ್ರೀ ರಘುವರ್ಯ ತೀರ್ಥರು.
ಈ ರೀತಿಯಾಗಿ ಎಂದಿಗೂ ಮರೆಯಲಾರದ -ತೀರಿಸಲಾರದ ಉಪಕಾರವನ್ನು ಇಡೀ ಜಗತ್ತಿನ ಮೇಲೆ ಮಾಡಿದವರು ಶ್ರೀ ಸ್ವರ್ಣವರ್ಣ ತೀರ್ಥರು, ಹಾಗೂ ಶ್ರೀ ರಘುವರ್ಯ ತೀರ್ಥರು.
ಇಬ್ಬರೂ ಮಹಾನುಭಾವರ ಕೃಪಾ ದೃಷ್ಟಿ ನಮ್ಮ ಮೇಲೆ ಇರ್ಲಿ, ಅವರ ಕೃಪೆಗೆ ಅರ್ಹರಾಗುವಂತೆ ನಮ್ಮ ಚರ್ಯೆ ಇರ್ಲಿ ಅಂತ ಪ್ರಾರ್ಥಿಸುತ್ತಾ
ಶ್ರೀ ಸ್ವರ್ಣವರ್ಣ ತೀರ್ಥ ಗುರುಭ್ಯೋ ನಮಃ
ಶ್ರೀ ರಘುವರ್ಯ ತೀರ್ಥ ಗುರುಭ್ಯೋ ನಮಃ.
*************
ಶ್ರೀ ಶ್ರೀಪಾದರಾಜರೆಂಬೊ ಧೃವನಕ್ಷತ್ರವನ್ನು ನಮಗೆ ನೀಡಿದ 14ನೇ ಶತಮಾನದ ಮಹಾನ್ ಯತಿಗಳಾದ ಶ್ರೀ ಸ್ವರ್ಣವರ್ಣತೀರ್ಥರ ಆರಾಧನಾ ಮಹೋತ್ಸವ.... ಶ್ರೀರಂಗದಲ್ಲಿ...
ಶ್ರೀ ಗುರುಗಳು ನಮಗೆ ಅವರ ಆಶೀರ್ವಾದಾನುಗ್ರಹಗಳನ್ನು ಸದಾಕಾಲ ನೀಡಲೆಂದು ಬೇಡಿಕೊಳ್ಳುತ್ತಾ...
ವಸುಧಾತಲ ವಿಖ್ಯಾತಂ ವೈರಾಗ್ಯಾದಿ ಗುಣಾರ್ಣವಂ/
ವೇದವೇದಾಂಗ ಚತುರಂ ಸ್ವರ್ಣವರ್ಣಗುರುಮ್ ಭಜೇ
*****
year 2021
ಶ್ರೀ ವಿಠ್ಠಲ ಪ್ರಸೀದ
ಇಂದು ಶ್ರೀ ಸ್ವರ್ಣವರ್ಣ ತೀರ್ಥರ
ಆರಾಧನೆ ದಿನ. ಕಿಂಚಿತ್ ಗುರುವಂದನೆ.
ಶ್ರೀಮದಾಚಾರ್ಯರ ಪರಂಪರೆ ಮುಂದುವರೆದು ಶ್ರೀ ಪದ್ಮನಾಭ ತೀರ್ಥರ ನಂತರ ಶ್ರೀ ಲಕ್ಸ್ಮಿಧರ ತೀರ್ಥರು, ಅವರ ನಂತರ ಶ್ರೀ ಆಧಿರಾಜರು, ನಂತರ ಶ್ರೀ ಸತ್ಯವ್ರತರು ಪೀಠವನ್ನು ಅಲಂಕರಿಸಿದರು.
ಶ್ರೀ ಸ್ವರ್ಣವರ್ಣ ತೀರ್ಥರು ಪೂರ್ವಾಶ್ರಮದಲ್ಲಿ ಪರಶುರಾಮಾಚಾರ್ಯರು. ಅವರ ತಂದೆ ವಿಜಯನಗರ ಸಾಮ್ರಾಟ ನ ಪುತ್ರ ಮುಳವಾಯಿ ಪ್ರಾಂತ್ಯ ಆಳುತ್ತಿದ್ದ ಕಂಪಿಲರಾಯನ ರಾಜಪುರೋಹಿತರು.
ಒಮ್ಮೆ ಶ್ರೀ ಸತ್ಯವ್ರತ ತೀರ್ಥರು ಶ್ರೀನಿವಾಸನ ದರ್ಶನಕ್ಕೆ ಹೋಗಿ ಮದ್ಯದಲ್ಲಿ ಮುಖ್ಯಪ್ರಾಣರ ದರ್ಶನಕ್ಕೆ ಮುಳುಬಾಗಿಲಿಗೆ ಬಂದಿದ್ದಾಗ ಪರುಶುರಾಮಚಾರ್ಯರ ಭೇಟಿ ಆಯಿತು. ಮುಳುಬಾಗಿಲಿನಲ್ಲೇ ಶ್ರೀ ಸತ್ಯವ್ರತ ತೀರ್ಥರು ಅಸ್ವಸ್ಥ ರಾದರು. ಅವರಿಗೆ ಪರಶುರಾಮಾಚಾರ್ಯರು ತಮ್ಮ ಪೀಠಕ್ಕೆ ಅರ್ಹರೆಂದು ವಿದ್ಯುಕ್ತವಾಗಿ ಆಶ್ರಮ ಪ್ರಧಾನ ಮಾಡಿ ಶ್ರೀ ಸ್ವರ್ಣವರ್ಣ ತೀರ್ಥರೆಂದು ಆಶ್ರಮ ನಾಮ ನೀಡಿ ಸತ್ಯವ್ರತ ತೀರ್ಥರು ಹರಿಪಾದ ಸೇರಿದರು.
ಶ್ರೀ ಸ್ವರ್ಣವರ್ಣ ತೀರ್ಥರು ಗೌರವರ್ಣದವರಿದ್ದರೆಂದು ಆ ಪ್ರಸಿದ್ಧ ನಾಮ. ಅವರ ಪೂರ್ವಾಶ್ರಮ ಬಂದುಗಳು ಅಬ್ಬೂರಿನ ಶ್ರೀ ಬ್ರಹ್ಮಣ್ಯ ತೀರ್ಥರು ಅವರ ಭೇಟಿಗೆ ಬಂದಿದ್ದಾಗ ಅವರ ಕಣ್ಣಿಗೆ ಧ್ರುವ ನಕ್ಷತ್ರ ಕಣ್ಣಿಗೆ ಬಿದ್ದಿತು ಅವರೇ ಬಾಲಕ ಲಕ್ಷ್ಮೀನಾರಾಯಣ.
ಮುಂದೆ ಸನ್ಯಾಸ ವಿಧಿಗಳೆಲ್ಲ ಪೂರೈಸಿ ದಂಡ ಕಮಂಡಲವಿಟ್ಟು 'ಲಕ್ಷ್ಮೀನಾರಾಯಣಮುನಿ 'ಎಂಬ ಆಶ್ರಮನಾಮ ಕೊಟ್ಟು ತಮ್ಮೊಡನೆ ಶ್ರೀರಂಗಕ್ಕೆ ಕರೆದೋಯ್ದರು.
ಮುಂದೆ ಲಕ್ಸ್ಮಿನಾರಾಯಣ ತೀರ್ಥರು ಪ್ರೌಢ ವಿದ್ಯಾಭ್ಯಾಸಕ್ಕಾಗಿ ಶ್ರೀ ಸ್ವರ್ಣವರ್ಣ ತೀರ್ಥರ ಅಭಿಲಾಷೆಯಂತೆ ಪೂರ್ವದಿ ಮಠ ಉತ್ತರಾದಿ ಮಠದ ಧಿವ್ಯ ಸೇತುವೆಯಂತೆ ಇದ್ದ
ಶ್ರೀ ವಿಭುದೇಂದ್ರ ತೀರ್ಥರ ಬಳಿ ಹೋದರು. ಅಲ್ಲಿ ಅವರ ಪಾಂಡಿತ್ಯಕ್ಕೆ ಶ್ರೀಪಾದರಾಜರೆಂಬ ಬಿರುದುಗಳಿಸಿ ಶ್ರೀರಂಗಕ್ಕೆ ಹಿಂದಿರುಗಿದ ಕೆಲವೇ ದಿನಗಳಲ್ಲಿ ಸ್ವರ್ಣವರ್ಣ ತೀರ್ಥರು ಶಿಷ್ಯನಿಗೆ ಸಂಸ್ಥಾನ ಒಪ್ಪಿಸಿ ಶ್ರೀರಂಗದಲ್ಲೇ ಕ್ರಿ. ಶ 1371 ರಲ್ಲಿ ಬೃಂದಾವನಸ್ಥರಾದರು.
ಶ್ರೀ ಬ್ರಹ್ಮಣ್ಯ ತೀರ್ಥರಂತೆ, ಶ್ರೀ ಸುಧೀಂದ್ರ ತೀರ್ಥರಂತೆ, ಶ್ರೀ ವ್ಯಾಸರಾಜರಂತೆ ಲೋಕೋತ್ತರ ಶಿಷ್ಯರನ್ನು ದಯಪಾಲಿಸಿದ ಕೀರ್ತಿ ಶ್ರೀ ಸ್ವರ್ಣ ವರ್ಣ ತೀರ್ಥರದು.
ಇಂತಹ ಮಹನೀಯರಿಗೆ ಒಂದು ಗುರುವಂದನೆ.
ನಾಹಂ ಕರ್ತ ಹರಿ ಕರ್ತ
ಶ್ರೀ ಕೃಷ್ಣಾರ್ಪಣಮಸ್ತು
***
ಶ್ರೀಸ್ವರ್ಣವರ್ಣತೀರ್ಥ ಶ್ರೀಪಾದಂಗಳವರು
***********
"ವಸುಧಾತಲ ವಿಖ್ಯಾತಂ/ವೇದಾಂತಾದಿ ಗುಣಾರ್ಣವಂ/
ವೇದ ವೇದಾಂಗ ಚತುರಂ ಸ್ವರ್ಣವರ್ಣ
ಗುರುಂ ಭಜೇ//
**""""******
ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಪ್ರಥಮ ಶಿಷ್ಯರಾದ ಶ್ರೀ ಪದ್ಮನಾಭ ತೀರ್ಥರ ಪರಂಪರೆಯಲ್ಲಿ
ಬಂದವರು ಶ್ರೀಸ್ವರ್ಣವರ್ಣತೀರ್ಥರು.
ಇವರಪೂರ್ವಾಶ್ರಮದಹೆಸರುಪರಶುರಾಮಾ
ಚಾರ್ಯರು ಎಂದು.ಶ್ರೀಮದಾಚಾರ್ಯರಿಂದ ಏಳನೇ ಯತಿಗಳು ಹಾಗೂ ಶ್ರೀಪದ್ಮನಾಭತೀರ್ಥರ ಪರಂಪರೆಯಲ್ಲಿ ಬರುವ ಆರನೇ ಪೀಠಾಧಿಪತಿಗಳು.
ಒಮ್ಮೆ ಶ್ರೀಸತ್ಯವ್ರತತೀರ್ಥರು ತಿರುಪತಿಯ ತಿಮ್ಮಪ್ಪನ
ದರ್ಶನ ಮಾಡಿಕೊಂಡು ಬರುವಾಗ ಮೂಡಲಬಾಗಿಲು
ಎಂದೇ ಪ್ರಸಿದ್ಧವಾಗಿರುವ ಮುಳಬಾಗಿಲಿನಲ್ಲಿ ಸ್ಥಾಪಿತ
ವಾಗಿರುವ ಅರ್ಜುನ ಪ್ರತಿಷ್ಠಾಪನೆಯೆಂದೇ ಹೆಸರು ಪಡೆದಿರುವ ಶ್ರೀಮುಖ್ಯಪ್ರಾಣ ದೇವರ ದರ್ಶನಕ್ಕೆಂದು
ಬಂದಾಗ ಪರಶುರಾಮಾಚಾರ್ಯರಿಗೆ ಗುರುಗಳ
ಭೇಟಿಯಾಗುತ್ತದೆ.
ಶ್ರೀಗಳವರಿಗೆ ಅಸ್ವಸ್ಥತೆ ಕಾಣಿಸಿಕೊಳ್ಳುತ್ತದೆ. ಕಣ್ಣಿಗೆ ಬಿದ್ದ ಪರಶುರಾಮಾಚಾರ್ಯರು ಗುರುಗಳ ಮನಸ್ಸನ್ನೂ ಗೆಲ್ಲುತ್ತಾರೆ. ಶ್ರೀಗಳವರ ಮನಸ್ಸಿನಲ್ಲಿ
ಪರಶುರಾಮಾಚಾರ್ಯರಿಗೇ ಆಶ್ರಮ ಕೊಡಬೇಕೆಂದು
ಕೊಳ್ಳುತ್ತಾರೆ.ಗುರುಗಳ ಮನಸ್ಸಿನಲ್ಲಿ ಬಂದ ಆಲೋಚನೆಯಂತೆ ಗುರುಗಳು ನಿತ್ಯಪೂಜಿಸುವ ಸಂಸ್ಥಾನದೇವರ ಸೂಚನೆಯೂ ಸೇರಿ ಅವರಿಗೆ
ಆಶ್ರಮ ಪ್ರಧಾನ ಮಾಡಿ "ಸ್ವರ್ಣವರ್ಣತೀರ್ಥ"ರೆಂದು
ನಾಮಕರಣವನ್ನು ಮಾಡಿ ತಮ್ಮ ಉತ್ತರಾಧಿಕಾರಿಗೆ
ಸಂಸ್ಥಾನಾಧಿಪತ್ಯವನ್ನು ವಹಿಸಿ ಕೊಡುತ್ತಾರೆ.
ಆಚಾರ್ಯರಿಗೆ ಅವರು ಸ್ವರ್ಣವರ್ಣ ಹೊಂದಿದ್ದರಿಂದ
ಆಪ್ರಸಿದ್ಧನಾಮಬರಲುಕಾರಣವಾಗಿದೆ.ಶ್ರೀಸ್ವರ್ಣವರ್ಣತೀರ್ಥರು ಮಹಾತಪಸ್ವಿಗಳು ಮತ್ತು ಅಪರೋಕ್ಷ ಜ್ಞಾನಿಗಳು.ಅಬ್ಬೂರಿನಲ್ಲಿದ್ದ ಶ್ರೀ ಬ್ರಹ್ಮಣ್ಯ ತೀರ್ಥರು ಇವರಪೂರ್ವಾಶ್ರಮದಬಂಧುಗಳಾಗಿದ್ದರು.ಶ್ರೀಪುರುಷೋತ್ತಮತೀರ್ಥರ ಭೇಟಿಗೆಂದುಶ್ರೀ ಸ್ವರ್ಣವರ್ಣ ತೀರ್ಥರು ಅಬ್ಬೂರಿಗೆ ಬರುತ್ತಿದ್ದಾಗ ಧೃವ ನಕ್ಷತ್ರದಂತೆ ಕಂಗೊಳಿಸುತ್ತಿದ್ದ ಲಕ್ಷ್ಮೀನಾರಾಯಣನೆಂಬ ಬಾಲಕ ಸಿಗುತ್ತಾನೆ.ಇವನುಗೋಪಾಲಕನಾಗಿರುತ್ತಾನೆ.ಶ್ರೀಸ್ವರ್ಣವರ್ಣತೀರ್ಥರಿಗೆ ಅಬ್ಬೂರು ಇನ್ನೆಷ್ಟು ದೂರವಿದೆ ಎಂಬುದನ್ನುತಿಳಿದುಕೊಳ್ಳಬೇಕಿತ್ತುಶ್ರೀಗಳವರ ಕಣ್ಣಿಗೆ
ಬಾಲಕ ಲಕ್ಷ್ಮೀನಾರಾಯಣನು ಕಾಣುತ್ತಾನೆ.ಇವರು ಮೇನೆಯಿಂದಲೇ ಈ ಬಾಲಕನನ್ನು ಕರೆದು ಏನಪ್ಪಾ ಇಲ್ಲಿಂದ ಅಬ್ಬೂರು ಎಷ್ಟು ದೂರವಿದೆ ಎಂದು ಕೇಳುತ್ತಾರೆ.ಸ್ವಾಭಾವಿಕವಾಗಿ ಯಾರಾದರೂ ಆಗಲಿ ಅಬ್ಬೂರಿನ ದೂರವನ್ನು ಇಷ್ಟು ಮೈಲಿ ಇದೆ ಎಂದು ಹೇಳುತ್ತಿದ್ದರು.ಆದರೆ ಬಾಲಕ ಲಕ್ಷ್ಮೀನಾರಾಯಣನು
ಕೊಟ್ಟಉತ್ತರಹೀಗಿದೆ"ನನ್ನನ್ನುನೋಡಿ,ದನಕರುಗಳನ್ನುನೋಡಿ,ಆಕಾಶದಲ್ಲಿನಸೂರ್ಯನನ್ನುನೋಡಿ"
ಎಂದು ಹೇಳುತ್ತಾನೆ.ಅಂದರೆಸೂರ್ಯನಾಗಲೇ ಮುಳುಗುವ ಸನ್ನಾಹದಲ್ಲಿದ್ದಾನೆ,ದನಕರುಗಳು ಮೇವುತಿನ್ನುವುದನ್ನು ನಿಲ್ಲಿಸಿ ಮನೆಯಕಡೆ ದಾರಿ ನೋಡುತ್ತಿವೆ.ನಾನೋ ಬಾಲಕ ಹೊತ್ತು ಮುಳುಗುವ ಮೊದಲೇ ದನಕರುಗಳನ್ನು ಕರೆದುಕೊಂಡು ಊರುಸೇರಬೇಕು".ಇವನ ಮಾತಿನಿಂದ ಶ್ರೀಗಳವರಿಗೆ ಅಬ್ಬೂರು ಸಮೀಪವಿದೆ ಎಂದು ತಿಳಿಯುತ್ತದೆ.ಈ ಚಮತ್ಕಾರದಉತ್ತರಕೊಟ್ಟಈಬಾಲಕನೇಮುಂದೆಶ್ರೀಸ್ವರ್ಣವರ್ಣತೀರ್ಥರಿಂದ ಸನ್ಯಾಸ ದೀಕ್ಷೆ ಪಡೆದು
"ಲಕ್ಷ್ಮೀನಾರಾಯಣತೀರ್ಥರೆಂದು ನಾಮಕರಣ ಹೊಂದುತ್ತಾರೆ.ಶ್ರೀರಘುನಾಥತೀರ್ಥರಿಂದ "ಶ್ರೀಪಾದರಾಜರು"ಎಂದು ನಾಮಕರಣ ಪಡೆಯುತ್ತಾರೆ.ಶ್ರೀಸ್ವರ್ಣವರ್ಣತೀರ್ಥರು ಶ್ರೀಪಾದರಾಜರಿಗೆ ಸಂಸ್ಥಾನಾಧಿಪತ್ಯವನ್ನು ವಹಿಸಿ
ಕ್ರಿಶ1371ರಲ್ಲಿ ಶ್ರೀರಂಗಂ ನಲ್ಲಿ ಬೃಂದಾವನಸ್ಥರಾದರು.
ಶ್ರೀಬ್ರಹ್ಮಣ್ಯತೀರ್ಥರಂತೆ,ಶ್ರೀಸುಧೀಂದ್ರತೀರ್ಥರಂತೆ ,ಶ್ರೀ ವ್ಯಾಸರಾಜ ರಂತೆ ಲೋಕೋದ್ಧಾರಕ್ಕಾಗಿ ಶಿಷ್ಯರನ್ನು ದಯಪಾಲಿಸಿದಂತೆ,ಶ್ರೀಪಾದರಾಜರಂತಹ ಮಹಾ
ಜ್ಞಾನಿಗಳನ್ನು ಲೋಕಕ್ಕೆದೊರಕಿಸಿಕೊಟ್ಟ ಕೀರ್ತಿ ಶ್ರೀಸ್ವರ್ಣವರ್ಣತೀರ್ಥ ಗುರುಗಳಿಗೆ ಸಲ್ಲುತ್ತದೆ.ಶ್ರೀಸ್ವರ್ಣವರ್ಣತೀರ್ಥರು ವೇದಾಂತ ಸಿಂಹಾಸನವನ್ನು ಒಟ್ಟು ಇಪ್ಪತ್ತುವರ್ಷಗಳಕಾಲ ಆಳಿದ ಯತಿಚಕ್ರವರ್ತಿಗಳು.ಶ್ರೀಗಳವರ ಮೂಲಬೃಂದಾವನವಿರುವುದು ಶ್ರೀರಂಗಂನಲ್ಲಿ.
ಒಂದು ಪವಾಡ ಸದೃಶವಾದ ಸನ್ನಿವೇಶವನ್ನು ಸ್ಮರಿಸಬೇಕು. ಅಂದು ಶ್ರೀರಂಗನಾಥಸ್ವಾಮಿಯ ಉತ್ಸವ ಹೊರಟಿತ್ತು.ಉತ್ಸವ ಸೀದಾ ಶ್ರೀಸ್ವರ್ಣವರ್ಣ
ತೀರ್ಥರ ಮಠದ ಮುಂದೆಯೇ ಹೋಗಬೇಕಿತ್ತು.ದೇವರ ಉತ್ಸವ ಶ್ರೀಗಳ ಸನ್ನಿಧಿಯಿರುವ ಮಠದ ಬಳಿ ಬಂದಾಗ ಮುಂದೆ ಹೋಗದೇ ಹಾಗೇ ನಿಂತು ಬಿಡುತ್ತದೆ.ಆಗ ಅಲ್ಲಿಯೇ ಇದ್ದ ವಿದ್ವಾಂಸರೊಬ್ಬರುಇಲ್ಲಿಶ್ರೀಸ್ವರ್ಣವರ್ಣತೀರ್ಥರ ಬೃಂದಾವನಸನ್ನಿಧಿಇದೆ.ಶ್ರೀಮಠದಿಂದಶ್ರೀರಂಗನಾಥಸ್ವಾಮಿಗೆ ಮಂಗಳಾರತಿ ಮಾಡಿಸಿಕೊಂಡು ಶ್ರೀಗಳವರ ಸ್ಮರಣೆಮಾಡಿ ಎಂದು ಹೇಳಿದರು .ಅದರಂತೆ ಶ್ರೀಗಳವರನ್ನು ಪ್ರಾರ್ಥಿಸಿ ಮಠದ ಅರ್ಚಕರು ಶ್ರೀರಂಗನಾಥಸ್ವಾಮಿಗೆ ಮಂಗಳಾರತಿಮಾಡಿದ ಕೂಡಲೇ ಉತ್ಸವ ಸುಲಭವಾಗಿ ಪ್ರಯಾಸವಿಲ್ಲದಂತೆ
ಮುಂದುವರೆಯಿತು.ಇಂತಹ ಮಹಾಮಹಿಮರು ಶ್ರೀಸ್ವರ್ಣವರ್ಣತೀರ್ಥ ಗುರುಗಳು.
ಶ್ರೀಗುರುಗಳ ಆರಾಧನೆಯ ದಿನವಾದ ಇಂದು,ನಾವೂ
ಸ್ಮರಣೆಮಾಡಿ ಭಕ್ತಿಯ ನಮನಗಳನ್ನು ಸಲ್ಲಿಸಿ ಅವರ ಅನುಗ್ರಹ ಪಡೆಯೋಣ.
********
No comments:
Post a Comment