info from sumadhwaseva.com--->
अनधीत्यमहाभाष्यं व्याख्यातं यदनुग्रहात्।
वन्दे तं विधिना सत्यनिधिं सज्ज्ञानसिद्धये॥
ಅನಧೀತ್ಯಮಹಾಭಾಷ್ಯಂ ವ್ಯಾಖ್ಯಾತಂ ಯದನುಗ್ರಹಾತ್|
ವಂದೇ ತಂ ವಿಧಿನಾ ಸತ್ಯನಿಧಿಂ ಸಜ್ಞಾನಸಿದ್ಧಯೇ ||
ವಂದೇ ತಂ ವಿಧಿನಾ ಸತ್ಯನಿಧಿಂ ಸಜ್ಞಾನಸಿದ್ಧಯೇ ||
anadhItyamahAbhASyaM vyAkhyAtaM yadanugrahAt l
vande taM vidhinA satyanidhiM sajj~nAnasiddhaye ||
When the disciples started to remove granite stone panels of Brindavana, they were surprised that they smelled the perfumes of Shri Gandha from the Moola Brindavana of Shri Satyanidhi Teertha. It is very interesting to convey that the disciples and His Holiness found a saligram, Japamala and Counch (Kamandala). The Kamandala was full of crystal clear water which seemed to have been filled up on the same day.
After completion of dismantling work the structure was carried to Kurnool and restructured in the premises of the Uttaradi Matha in the same architectural model as at Nivrutti Sangam dring the year 1984.
**********
info from madhwamrutha.org--->
ಮಹಾ ವೈರಾಗ್ಯ ನಿಧಿಗಳು ಶ್ರೀ ಸತ್ಯ ನಿಧಿ ತೀರ್ಥರು
||ಅನಧೀತ್ಯಮಹಾಭಾಷ್ಯಂ ವ್ಯಾಖ್ಯಾತಂ ಯದನುಗ್ರಹಾತ್|
ವಂದೇ ತಂ ವಿಧಿನಾ ಸತ್ಯನಿಧಿಂ ಸಜ್ಞಾನಸಿದ್ಧಯೇ ||
ಲೇಖಕರು: ಫಣೀಂದ್ರ ಕೆ
ನಿವೃತ್ತಿ ಸಂಗಮ - ತುಂಗಾಭದ್ರ ಮತ್ತು ಕೃಷ್ಣ ನದಿಗಳ ಸಂಗಮ ಸ್ಥಳದಲ್ಲಿ ವಿರಾಜಮಾನರಾಗಿದ್ದು, ಸತ್ಯ ನಾಮಕ ಹರಿಯ ನಿತ್ಯ ಸತ್ಯ ಪರಂಪರೆಯಲ್ಲಿ ಬರುವ ವಿಶ್ವಗುರು ಶ್ರೀ ಮಧ್ವಾಚಾರ್ಯರಿಂದ ಹತ್ತೊಂಬತ್ತನೇ ಯತಿಗಳಾಗಿ ಬಂದು ಶ್ರೀ ವಿಷ್ಣು ಸಹಸ್ರನಾಮಕ್ಕೆ ವ್ಯಾಖ್ಯಾನ ಬರೆದ ಮಹನೀಯರು ಶ್ರೀ ಸತ್ಯನಿಧಿ ತೀರ್ಥರು.
ಪೂರ್ವಾಶ್ರಮನಾಮ : ಶ್ರೀ ಕೌಲಿಗಿ ರಘುಪತ್ಯಾಚಾರ್ಯರು
ವೇದಾಂತ ಸಾಮ್ರಾಜ್ಯ ಕಾಲ : 1638 ರಿಂದ 1660
ಆಶ್ರಮ ಗುರುಗಳು : ಶ್ರೀ ಸತ್ಯವ್ರತ ತೀರ್ಥರು (ಸಾಂಗಲಿ)
ಆಶ್ರಮ ಶಿಷ್ಯರು : ಶ್ರೀ ಸತ್ಯನಾಥ ತೀರ್ಥರು (ವೀರಚೋಳಪುರಂ)
ಆರಾಧನಾ ದಿವಸ : ಮಾರ್ಗಶೀರ್ಷ ಶುದ್ಧ ದಶಮಿ
ಬೃಂದಾವನ : ನಿವೃತ್ತಿ ಸಂಗಮ ಆದರೆ ಈಗ ಬೃಂದಾವನ ಸ್ಥಳಾಂತರಗೊಂಡು ಕರ್ನೂಲು ಉತ್ತರಾಧಿ ಮಠದಲ್ಲಿದೆ
ಶ್ರೀ ಸತ್ಯವ್ರತ ತೀರ್ಥರ ಶಿಷ್ಯರು, ಶ್ರೀ ಸತ್ಯನಾಥ ತೀರ್ಥರ ಗುರುಗಳು, ಮಹಾತಪಸ್ವಿಗಳು ಶ್ರೀ ಸತ್ಯನಿಧಿ ತೀರ್ಥರು.
"ನಿಧೀಯತೇ ಅತ್ರ ನಿಧಿಹಿ" ಎಂಬಂತೆ ಏನನ್ನು ಮಾಡಿದರು ಅದಕ್ಕೆ ಫಲಕೊಡುವವನು ದೇವರು ಅವನಿಂದ ತಮ್ಮನ್ನು ನಂಬಿದವರಿಗೆ ಫಲಕೊಡಿಸುವವರು ಶ್ರೀ ಸತ್ಯನಿಧಿಗಳು ಎಂದು ಅನೇಕ ಗ್ರಂಥಗಳಲ್ಲಿ ಕೊಂಡಾಡಿದ್ದಾರೆ.
ಸಕಲಶಾಸ್ತ್ರಗಳಲ್ಲಿ ಪೂರ್ವಾಶ್ರಮದಲ್ಲೇ ಅಪಾರ ಪಾಂಡಿತ್ಯ ಹೊಂದಿದ್ದ ಶ್ರೀ ರಘುಪತ್ಯಾಚಾರ್ಯರು ವಾಕ್ಯಾರ್ಥಚಂದ್ರಿಕಾಚಾರ್ಯರೆಂದೇ ಪ್ರಸಿದ್ಧ ರಾಗಿದ್ದ ಶ್ರೀ ವಿದ್ಯಾಧೀಶ ತೀರ್ಥರ ಅನುಗ್ರಹದಿಂದ ಜನ್ಮ ತಾಳಿದವರು. ಪುಣ್ಯಸ್ತ೦ಭ ಅಥವಾ ಈಗಿನ ಪೂಣೆಯಲ್ಲಿ ಇವರ ತಂದೆತಾಯಿಗಳಾದ ಶ್ರೀ ಪುರುಷೋತ್ತಮ ಚಾರ್ಯರು ಮತ್ತು ಶ್ರೀ ಸತ್ಯದೇವಿಯವರು ವಾಸಿಸುತ್ತಿದ್ದರು, ದೇವಪೂಜೆ, ಶಾಸ್ತ್ರಾಧ್ಯಾಯನ, ಪಾಠ ಪ್ರವಚನಗಳಲ್ಲಿ ನಿರತರಾಗಿದ್ದರು. ಇವರ ತಂದೆತಾಯಿಗಳಿಗೆ ಶ್ರೀವಿದ್ಯಾಧೀಶ ತೀರ್ಥರು ಕನಸಿನಲ್ಲಿ ದರ್ಶನ ಕೊಟ್ಟು ಮುಂದೆ ಈ ಪೀಠವನ್ನು ಆಳುವ ಒಬ್ಬ ಸತ್ಪುತ್ರ ಜನಿಸುತ್ತಾನೆ ಎಂದು ಆಶೀರ್ವಾದ ಮಾಡಿದ್ದರು. ಕೆಲವರು ಇವರು ಪಾಂಡುರಂಗಿ ಮನೆತನಕ್ಕೆ ಸೇರಿದವರು ಎಂದು ಹೇಳುತ್ತಾರೆ. ವಿದ್ಯಾಧೀಶರ ಅನುಗ್ರಹದಿಂದ ಜನಿಸಿದ ಈ ಮಗುವಿಗೆ ಗುರುಗಳಾದ ಶ್ರೀ ರಘೋತ್ತಮ ತೀರ್ಥರ ಹೆಸರನ್ನು ರಘುನಾಥ ಅಥವಾ ರಘುಪಥ್ಯಚಾರ್ಯ ಎಂದು ಹೆಸರು ಇಟ್ಟರು. ಅಪಾರ ಪಾಂಡಿತ್ಯ ಮತ್ತು ವಿದ್ವತ್ತುಗಳಿಂದ ಕೂಡಿದ ರಘುನಾಥಚಾರ್ಯರಿಗೆ ಶ್ರೀ ಸತ್ಯವ್ರತ ತೀರ್ಥರು ತಮ್ಮಗುರುಗಳಾದ ಶ್ರೀವೇದನಿಧಿ ತೀರ್ಥರ ಆಶಯ ಮತ್ತು ಆದೇಶದಂತೆ ಸರ್ವಜ್ನ್ಯ ಪೀಠವನ್ನು ಬಹುಧಾನ್ಯ ಸಂವತ್ಸರ ಫಾಲ್ಗುಣ ಶುದ್ಧ ಷಷ್ಠಿಯಂದು ಆಶ್ರಮವನ್ನು ಕೊಟ್ಟು ಶ್ರೀ ಸತ್ಯನಿಧಿತೀರ್ಥರು ಎಂದು ಹೆಸರಿಸಿದರು. ಮುಂದೆ ಸಾಂಗಲಿಯಲ್ಲಿ ಶ್ರೀ ಸತ್ಯವ್ರತ ತೀರ್ಥರು ಸಶರೀರರಾಗಿ ವೃಂದಾವಸ್ತರಾದರು.
ಶ್ರೀ ಸತ್ಯನಿಧಿ ತೀರ್ಥರು ತಮ್ಮ ಗುರುಗಳ ವೃಂದಾವನ ಕಟ್ಟಿಸಿ ಮಹಾಸಮಾರಾಧನೆಯನ್ನು ಬಹು ವಿಜೃಂಭಣೆಯಿಂದ ಮಾಡಿ ವಿಪ್ರಶ್ರೇಷ್ಠರಿಗೆ ಹಿಂದೆದೂ ಕೇಳಿರದ ಹಾಗೆ ದಕ್ಷಿಣೆಗಳನ್ನೂ ಕೊಟ್ಟು ಅಲ್ಲಿದ್ದ ಎಲ್ಲ ಪಂಡಿತರಿಗೆ ವಿದ್ಯಾದಾನ ಮಾಡಲು ಆದೇಶಿಸಿ ಮುಂದೆ ಮಧ್ವಸಿದ್ಧಾಂತದ ಪ್ರಚಾರಕ್ಕೆ ತೆರಳಿದರು.
ವಿಪಕ್ಷ ವಿದ್ವಾ೦ಸರನ್ನು ಸೋಲಿಸಿದ ವರ್ಣನೆಯನ್ನು ನಾವು ವಿಸ್ತಾರವಾಗಿ "ಶ್ರೀ ಸತ್ಯನಿಧಿ ವಿಲಾಸ"ಎಂಬ ಗುರುಗಳ ಕುರಿತಾದ ಗ್ರಂಥದಲ್ಲಿ ನೋಡಬಹುದು. ಸರ್ಪಗಳು ಹೇಗೆ ಮಯೂರ ಅಥವಾ ಗರುಡನ ಝೇಂಕಾರದಲ್ಲಿ ವಿಲೀನವಾಗುವಂತೆ ಎಲ್ಲ ಮಾಯಿಗಳು ಇವರ ಮಧ್ವಸಿದ್ಧಾಂತದ ಝೇಂಕಾರಕ್ಕೆ ವಿಲೀನರಾದರು. ನ್ಯಾಯ ಸಮ್ಮತವಾದ ಶಾಸ್ತ್ರೀಯ ವಿಷಯಗಳನ್ನು ಮಂಡಿಸುವಲ್ಲಿ ಇವರು ನಿಪುಣರು. ಇವರ ವಿದ್ವತ್ ಕೌಶಲ್ಯಕ್ಕೆ ಮರುಳಾಗಿ ರಾಘವ ಪಂಡಿತನೆಂಬ ರಾಜನು ಇವರು ಬರುವ ಸುದ್ದಿಯನ್ನು ತಿಳಿದು, ತಳಿರು ತೋರಣಗಳಿಂದ ಶೃಂಗರಿಸಿ ಇವರನ್ನು ಬರಮಾಡಿಕೊಂಡು ಚಾತುರ್ಮಾಸವನ್ನು ತನ್ನ ಅರಮನೆಯಲ್ಲೇ ನೆರೆವೇರಿಸುವಂತೆ ಕೋರಿಕೊಂಡನು.
ಕಂಚಿ, ತಂಜಾವೂರು, ಮಧುರೆಗಳಲ್ಲಿ ವಾಕ್ಯಾರ್ಥಮಾಡಿ ದ್ವೈತ ಸಿದ್ದಾಂತವನ್ನು ಪ್ರತಿಪಾದಿಸಿದರು. ಕುಂಭಕೋಣದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳನ್ನು ಭೇಟಿಯಾಗಿ ಉಭಯತ್ರಯರು ಒಟ್ಟಿಗೆ ಪೂಜಾದಿಗಳನ್ನು ಮಾಡಿ ಪರಸ್ಪರ ಒಬ್ಬರನ್ನೊಬ್ಬರು ಸನ್ಮಾನಿಸಿದರು. ಅಲ್ಲಿಂದ ಮುಂದೆ ಬೀಜಾಪುರಕ್ಕೆ ಹೋದರು ಅಲ್ಲಿ ಅನಂತ ಪ್ರಭು ಎಂಬ ಧಾರ್ಮಿಕ ಮುಖಂಡನು ಇವರನ್ನು ಬಹುವೈಭವದಿಂದ ಬರಮಾಡಿಕೊಂಡನು. ಅಲ್ಲಿ ಮುದ್ರಾಧಾರಣೆ ಭಿಕ್ಷೆಗಳನ್ನೂ ಸ್ವೀಕರಿಸಿ ತರುವಾಯ ತಿರುಪತಿಗೆ ಬಂದರು. ಅಲ್ಲಿ ವೆಂಕಟೇಶದೇವರನ್ನು ದರ್ಶಿಸಿ ಮುಂದೆ ಕಂಚಿಗೆ ಹೋದರು, ಮೊದಲಿನಿಂದಲೂ ಕಂಚಿಯಲ್ಲಿ ವಿದ್ವಾ೦ಸರ ದಂಡೇ ಅಲ್ಲಿರುವುದು ಅವರೊಡನೆ ವಾಕ್ಯಾರ್ಥ ಮಾಡಿ ಗೆದ್ದು ಅಲ್ಲಿ ವರದರಾಜ ಆಲಯದಲ್ಲಿ ಗೌರವವನ್ನು ಪಡೆದು ಏಕಾಂಬರೇಶ್ವರನ ದರ್ಶನ ಪಡೆದರು, ಕ್ಷೇತ್ರದೇವತೆಯಾದ ಕಾಮಾಕ್ಷಿ ದೇವಿಯದರ್ಶನ ಪಡೆದು ಅಲ್ಲಿಯ ಬಿಡಾರದಲ್ಲಿ ಕುಳಿತಿದ್ದಾಗ ಅಲ್ಲಿಗೆ ಚಂಜಿನಗರದ ರಾಜ ಅನಂತ ವಿಭು ಎಂಬುವನು ಬಂದನು. ಶುದ್ಧ ಅದ್ವೈತಿಯಾದ ರಾಜ ಕೇವಲ ಇವರ ಮುಖದರ್ಶನ ದಿಂದ ಪುಳಕಿತರಾಗಿ ತಾನಾಗಿಯೇ ದ್ವೈತದಲ್ಲಿದ್ದ ಸಂದೇಹಗಳನ್ನು ನಿವಾರಿಸಿ ಎಂದು ಇವರಲ್ಲಿ ಕೇಳಿಕೊಂಡನು. ಅವನ ಸಂಶಯಗಳನ್ನು ಪರಿಹರಿಸಿದ ಶ್ರೀ ಸತ್ಯನಿಧಿ ತೀರ್ಥರು ಅವನಿಗೆ ಮುಂದೆ ನೀನು ಈ ಮಹಾಸಾಮ್ರಾಜ್ಯದ ಅಧಿಪತಿ ಯಾಗು ಎಂದು ಆಶೀರ್ವದಿಸಿದರು. ಅವರಿಗಾಗಿ ತಿಂತ್ರಿಣಿ ನದಿ ದಂಡೆಯಲ್ಲಿ ಒಂದು ಮಠವನ್ನು ಕಟ್ಟಿಸಿಕೊಟ್ಟನು ಅಲ್ಲೇ ಸ್ವಲ್ಪದಿನಗಳು ಶ್ರೀಸತ್ಯನಿಧಿ ತೀರ್ಥರು ತಂಗಿದ್ದರು.
ಸತ್ಯನಿಧಿ ತೀರ್ಥರ ವೈರಾಗ್ಯ
೧. ಶ್ರೀರಾಮಚಂದ್ರನಲ್ಲಿ ಭಕ್ತಿಯ ಮದುಕರವೃತ್ತಿ ಹೊರತು ತಮಗಾಗಿ ಮದುಕರವೃತ್ತಿ ಮಾಡಿದವರಲ್ಲ
೨. ಮೂಲರಾಮ ಪೂಜೆ ಮುಗಿದು ಶಾಸ್ತ್ರಧ್ಯಾಯನವಾದ ನಂತರವೇ ಭಿಕ್ಷೆ ಸ್ವೀಕಾರ ಅದು ರಾತ್ರಿಯೇ ಆಗುತ್ತಿತ್ತು.
೩. ತನ್ಮಯತೆಯಲ್ಲಿ ರಾಮನ ಪೂಜೆಯ ನಂತರ ಬಾಹ್ಯ ಪ್ರಪಂಚದ ಒಡನಾಟ
೪. ಯಾವತ್ತೂ ತಮಗಾಗಿ ಛತ್ರ ಚಾಮರ ಗೌರವಗಳನ್ನು ತೆಗೆದು ಕೊಂಡವರಲ್ಲ.
೫. ಮೂಲರಾಮನ ಪೂಜೆಯೊಂದೇ ಗುಡಿಸಿಲಿನಲ್ಲೂ ಅರಮನೆಯಲ್ಲೂ ಒಂದೇ ವೈಭವ ಹಾಕಿಕೊಟ್ಟವರು
೬. ಸದಾರಾಮದೇವರ ಚಿಂತನೆ, ಪ್ರತಿಯೊಬ್ಬರಲ್ಲೂ ರಾಮನ ಆದರ್ಶ ಕಂಡವರು.
೭ ನಿಶ್ಚಲವಾದ ಭಕ್ತಿ
ಮುಂದೆ ಶ್ರೀಮುಷ್ಣ, ಶ್ರೀರಂಗ, ವೃಷಭಾದ್ರಿ, ಮಧುರೆ ಮೀನಾಕ್ಷಿ ಮತ್ತು ಸುಂದರರಾಜರ ದರ್ಶನ, ರಾಮಸೇತು ಸ್ನಾನ, ತಾಮ್ರಪರ್ಣಿ, ಅನಂತಶಯನ, ದರ್ಶನ. ಗೋಕರ್ಣ ಮತ್ತು ಉಡುಪಿಕ್ಷೇತ್ರಗಳಲ್ಲಿ ಸ್ವಲ್ಪಕಾಲ ವಾಸ. ಅಲ್ಲಿಂದ ತಮ್ಮ ಕುಲದೈವ ಪಾಂಡುರಂಗ ವಿಠಲನ ದರ್ಶನ, ತಮ್ಮ ಗುರುಗಳ ಗುರುಗಳಾದ ವೇದನಿಧಿ ತೀರ್ಥರ ದರ್ಶನ, ಹಾಗೆ ವಿದ್ಯಾನಿಧಿತೀರ್ಥರು, ಅಕ್ಷ್ಯೋಭ್ಯ ಮತ್ತು ಶ್ರೀ ಜಯತೀರ್ಥರ ದರ್ಶನ ಮಳಖೇಡದಲ್ಲಿ ಮುಗಿಸಿ ಸುಧಾಮಂಗಳ ಮಾಡಿದರು.
ಶ್ರೀ ರಂಗನಾಥ ತೀರ್ಥರು - ಸತ್ಯನಾಥ ತೀರ್ಥರಾದದ್ದು
ಶ್ರೀ ಸತ್ಯನಿಧಿ ತೀರ್ಥರು ಇಬ್ಬರು ಶಿಷ್ಯರಿಗೆ ಆಶ್ರಮ ಕೊಟ್ಟರು, ಅವರು ಶ್ರೀ ಸತ್ಯಾನಂದ ತೀರ್ಥರು ಮತ್ತು ಶ್ರೀ ಗುಣನಿಧಿ ತೀರ್ಥರು. ಅಲ್ಲಿಂದ ಮುಂದೆ ಶ್ರೀರಂಗಂ ಗೆ ಬಂದಾಗ ಅಲ್ಲಿ ಒಂದು ವಿದ್ವತ್ಸಭೆನಡೆಯುತ್ತಿತ್ತು ಅಲ್ಲಿ ಒಬ್ಬ ಯತಿಗಳು ಶ್ರೀ ರಂಗನಾಥ ತೀರ್ಥರು ಅಪಾರ ಪಾಂಡಿತ್ಯವನ್ನು ಪ್ರದರ್ಶಿಸುತ್ತಿದ್ದರು. ಇವರ ಆಳವಾದ ವಿಚಾರ ಪ್ರತಿಪಾದನೆಯನ್ನು ನೋಡಿದ ಶ್ರೀ ಸತ್ಯನಿಧಿ ತೀರ್ಥರಿಗೆ ಬಹಳ ಮೆಚ್ಚುಗೆಯಾಯಿತು. ಇವರ ಬಗ್ಗೆ ವಿಚಾರಿಸಿದ ಸತ್ಯನಿಧಿ ತೀರ್ಥರು ತಮ್ಮ ಪೂರ್ವಿಕ ಗುರುಗಳಾದ ವಿದ್ಯಾನಿಧಿ ತೀರ್ಥರಿಂದ ಬಹಳ ಸಣ್ಣವಯಸ್ಸಿನಲ್ಲೇ ಸನ್ಯಾಸ ಸ್ವೀಕರಿಸಿದ್ದ ಮಹನೀಯರು ಮತ್ತು ತಮಗಿಂತ ಆಶ್ರಮ ಜೇಷ್ಠರು ಎಂದು ತಿಳಿಯಿತು. ಇವರೇ ತಮ್ಮ ಮುಂದಿನ ಉತ್ತರಾಧಿಕಾರಿಯಂದು ತಿಳಿದು ಅವರಿಗೆ ದಂಡ ವ್ಯತ್ಯಾಸ ಮಾಡಿ ಅವರಿಗೆ ಶ್ರೀ ಸತ್ಯನಾಥ ತೀರ್ಥರು ಎಂದು ಆಶ್ರಮ ನಾಮ ಕೊಟ್ಟರು. ಮುಂದೆ 14 ವರ್ಷಗಳ ಕಾಲ ಇವರಿಗೆ ಶಾಸ್ತ್ರಾಧ್ಯಯನ ಮಾಡಿಸಿದರು. (ದಯವಿಟ್ಟು ಲೇಖನ ಹಂಚುವವರು ಮೂಲ ಲೇಖಕರ ಹೆಸರಿನೊಂದಿಗೆ ಕಳುಹಿಸಿ)
ಮುದ್ಗಲ ವಂಶಕ್ಕೆ ನವರತ್ನ ಎಂಬ ಹೆಸರು ದಯಪಾಲಿಸಿದರು, ಈ ವಂಶದಲ್ಲೇ ಮುಂದೆ ಇಬ್ಬರು ಮಹನೀಯರು ಇವರ ಅನುಗ್ರಹದಿಂದ ಜನಿಸಿದರು ಅವರೇ ಶ್ರೀ ಸತ್ಯಧರ್ಮ ತೀರ್ಥರು, ಶ್ರೀ ಸತ್ಯಸಂಕಲ್ಪರು
ಶ್ರೀ ಸತ್ಯನಿಧಿ ತೀರ್ಥರು 21 ವರ್ಷ 9 ತಿಂಗಳು ಮತ್ತು 4 ದಿವಸಗಳಕಾಲ ಉತ್ತರಾಧಿಮಠದ ಪೀಠದಲ್ಲಿ ಕುಳಿತು ವೇದಾಂತ ಸಾಮ್ರಾಜ್ಯ ಆಳಿದರು ಇವರು "ಜಾಬಾಲಿ ಋಷಿಗಳ ಅಂಶ" ಎಂಬ ಪ್ರಸಿದ್ಧಿಯಾಗಿದ್ದಾರೆ. ಶ್ರೀಮದಾಚಾರ್ಯರಲ್ಲಿ ಅತಿವಭಕ್ತಿ ಹೊಂದಿದ ಶ್ರೀ ಸತ್ಯನಿಧಿ ತೀರ್ಥರು ಕರ್ನೂಲುನಲ್ಲಿ ಮತ್ತು ತುಮಕೂರಿನ ಆಚಾರ್ಯರ ಬಿಧಿಯಲ್ಲಿ ಎರಡು ವಿಶೇಷವಾದ ಮುಖ್ಯಪ್ರಾಣ ವಿಗ್ರಹ ಪ್ರತಿಷ್ಠೆ ಮಾಡಿದ್ದಾರೆ.
ಮೊದಲೇ ಶಿಲ್ಪಶಾಸ್ತ್ರದಲ್ಲಿ ವಿಶೇಷವಾಗಿದ್ದ ಶ್ರೀಗಳು ತಮ್ಮ ವೃಂದಾವನವನ್ನು ತಾವೇ ಸಿದ್ಧಪಡಿಸಿಕೊಂಡಿದ್ದು ಅದರಲ್ಲಿ ಕೇಶವಾದಿ ಚತುರ್ವಿಂಶತಿ ಮೂರ್ತಿಗಳನ್ನೂ, ಸ್ವತಹ ಕಾಮಧೇನುವಾದ ಅವರು ಕಾಮಧೇನುವಿನ ಚಿತ್ರ ಅದರಕೆಳಗೆ ತಮ್ಮ ಚಿತ್ರವನ್ನು ಕೆತ್ತಿಸಿ ಇಟ್ಟಿದ್ದರು. 1660 ನೇ ಇಸವಿ ಶಾರ್ವರಿ ನಾಮ ಸಂವತ್ಸರ ಮಾರ್ಗಶೀರ್ಷ ಶುದ್ಧ ದಶಮಿ ದಿನ ನಿವೃತ್ತಿ ಸಂಗಮ ಕೃಷ್ಣ ಮತ್ತು ತುಂಗಭದ್ರಾ ಸಂಗಮದಲ್ಲಿ ಹರಿಪಾದವನ್ನು ಸೇರಿದರು.
ಇವರ ಬೃಂದಾವನ ಮೊದಲು ನಿವೃತ್ತಿ ಸಂಗಮದಲ್ಲಿ ಇತ್ತು, ಆದರೆ ಶ್ರೀಶೈಲಂ ವಿದ್ಯುತ್ಉತ್ಪಾದನಾ ಘಟಕನಿರ್ಮಾಣ ವಾದ್ದರಿಂದ ಅಲ್ಲಿದ್ದ ಜಾಮೀನು ಹಳ್ಳಿಗಳು ಎಲ್ಲವು ಮುಳುಗಡೆ ಆಗುವದು ಎಂದು ಅಂದ್ರಸರ್ಕಾರ ಘೋಷಿಸಿದಾಗ ಶ್ರೀ ಸತ್ಯಪ್ರಮೋದ ತೀರ್ಥರು 1979 ರಲ್ಲಿ ಶ್ರೀ ಸತ್ಯನಿಧಿತೀರ್ಥರ ಬೃಂದಾವನವನ್ನು ಹಾಗು ಸಂಬಂದಿಸಿದ ಕಲ್ಲಿನ ಮಂಟಪ ಎಲ್ಲವನ್ನು ಜೋಪಾನವಾಗಿ ತೆಗೆಸಿ ಕಾಲ್ನಡಿಗೆಯಲ್ಲಿ ಕರ್ನೂಲಿನ ಉತ್ತರಾಧಿ ಮಠಕ್ಕೆ ತೆಗೆದು ಕೊಂಡು ಹೋಗಿ ಮೊದಲಿನಂತೆ ಜೋಡಿಸಿ ಪುನರ್ ನಿರ್ಮಾಣ ಮಾಡಿದರು. ಶ್ರೀಗಳ ವೃಂದಾವನ ತೆಗೆದಾಗ, ಶ್ರೀ ಸತ್ಯನಿಧಿತೀರ್ಥರ ಕುತ್ತಿಗೆಯ ಮೂಳೆ ಮತ್ತು ಅಸ್ತಿಗಳು, ಲೋಹದ ಕಮಂಡಲ, ಕಮಂಡದಲ್ಲಿ ಬತ್ತದ ತೀರ್ಥ, ಮುದ್ರೆಗಳು, ಗೋಪಿಚಂದನ ಮತ್ತು ಸಾಲಿಗ್ರಾಮಗಳನ್ನು ಒಳಗೊಂಡ ತಾಮ್ರದ ಸಂಪುಟ ಇವೆಲ್ಲವನ್ನೂ ತೆಗೆದುಕೊಂಡು ಕಲಾಕರ್ಷಣೆ ಮಾಡಿಸಿ ಪುನಃ ಪ್ರತಿಷ್ಠಾಪಿಸಿದರು.
ಶ್ರೀ ಸತ್ಯನಿಧಿ ತೀರ್ಥರು ನಂಬಿದವರಿಗೆ ಸಂಪತ್ತು ಸುಖಗಳನ್ನು ಕೊಡುತ್ತ ಇಂದಿಗೂ ಬರುವ ಭಕ್ತರನ್ನು ಅನುಗ್ರಹಿಸುತ್ತಿದ್ದಾರೆ. ಅಲ್ಲಿ ಭಕ್ತರ ಬಾಯಲ್ಲಿ ಈ ಮಾತುಗಳನ್ನು ಕೇಳಬಹುದು
ಭುವಿಯೊಳಗೆ ಶ್ರೀ ಸತ್ಯನಿಧಿತೀರ್ಥರಂತಹ ಯತಿಶ್ರೇಷ್ಟರಿಲ್ಲ
ಏಕಚಿತ್ತದಿಂದ ಶ್ರೀಗಳ ಚರಣಸೇವೆ ಮಾಡುವವಾರ ಕಾಮಧೇನು
ಇಷ್ಟಾರ್ಥಿಗಳಿಗೆ ಕಲ್ಪವೃಕ್ಷ, ನೊಂದ ಮನಗಳಿಗೆ ರೋಗರುಜಿನ ಪರಿಹಾರಕ್ಕೆ ಇವರೊಬ್ಬರೇ ಗುರುಗಳು
ಶ್ರೀ ಸತ್ಯನಿಧಿಗಳು "ಶ್ರೀ ಸತ್ಯನಿಧಿ ಗುರವೇ ಪಾಹಿ ಪಾಹಿ"
ಪ್ರೀತೋಸ್ತು ಕೃಷ್ಣ ಪ್ರಭುಃ
ಫಣೀಂದ್ರ ಕೆ
***
No comments:
Post a Comment