Friday, 10 May 2019

satyasankalpa teertharu mysore 1841 matha uttaradi mutt yati 29 ashada pournima ಸತ್ಯಸಂಕಲ್ಪ ತೀರ್ಥರು



info from sumadhwaseva.com--->

Sri Satyasankalpa Tirtha

Poorvashrama Name : Sri Navaratna Srinivasacharya
Sanyasa Period – 1830 to 1841
Aradhana – Ashada Shudda Pournima
Vrundavana – Mysore (Uttaradimutt)
Ashrama Gurugalu – Sri Satyadharma Thirtharu (Holehonnuru)
Ashrama Shishyaru – Sri Satya Santusta Thirtharu (Mysore)
Janma Naama – Shri Navaratna Shrinivasacharya.
Vrundavana pravesha – Plava Samvatsara , Ashadha Shuddha Poornima.

ಸತ್ಯಧರ್ಮಾಬ್ಧಿಸಂಭೂತ: ಚಿಂತಾಮಣಿವಿಜೃಂಭಿತ: |
ಸತ್ಯಸಂಕಲ್ಪಕಲ್ಪದ್ರು: ಕಲ್ಪಯೇತ್ ಕಾಮಧುಕ್ ಮಮ ||

सत्यधर्माब्धिसंभूत: चिंतामणिविजृंभित: ।
सत्यसंकल्पकल्पद्रु: कल्पयेत् कामधुक् मम ॥

satyadharmaabdhisaMbhUta: chiMtaamaNivijRuMbhita: |
satyasaMkalpakalpadru: kalpayEt kaamadhuk mama ||

One can notice the continuous flow of Ganga water in the front of his brindAvana.


info from madhwamrutha.org--->


Sri Satyasankalpa Theertha was the pontiff of Uttaradi Mutt from 1830 to 1841. His Poorvashrama name was Sri Navaratna Srinivasacharya. Sri Satyasankalpa Theertha was ordained as monk and succeeded to the pontificate in 1830. After being initiated to Vedanta Samrajya, he took up the construction of Vrundavana in Holehonnur of his beloved guru Sri Satyadharma Theertha and performed Mahasamaradhana. It is believed that goddess ganga gave darshan to him.

********

info from uttaradimutt.org---> Sri Satyasankalpa Teertha was next pontiff of the Shri Uttaradi Matha pontificated to the seat of Shri Uttaradi Matha by Shri Satyadharma Teertha during the period from 1830 to 1841.
His Purvasahrama Name was Shri Navaratna Shrinivasacharya. Shri Satyasankalpa Teertha was ordained as monk and succeeded to the pontificate in 1830. After being initiated to Vedantha Samrajyas , he took up the construction of Brindavana in Holehonnur to his beloved guru Shri Satyadharma Teertha and performed Mahasamaradhana.
Shri Satyasankalpa Teertha ordained Shri Ghuli Balacharya and named him as Shri Satyasantustha Teertha to the pontificate throne of Shri Uttaradi Matha and Shri Satyasankalpa Teertha entered the Brindavana in Mysore on 1841 Plava Samvatsara , Ashadha Shuddha Poornima.
Contact DetailsPlace: Mysore Phone no:0821-2445183/9880069122****
ಅನ್ನದಾತರು ಶ್ರೀ ಸತ್ಯಸಂಕಲ್ಪ ತೀರ್ಥರು 
ಶ್ರೀ  ಹಂಸನಾಮಕ ಪರಮಾತ್ಮ ನ ಮೂಲ ಪರಂಪರೆಯ ಉತ್ತರಾದಿ ಮಠದ ಯತಿಪರಂಪರೆಯಲ್ಲಿ ಬರುವ ಶ್ರೀ ಮಹಾಜ್ಞಾನಿಗಳು ತಮ್ಮ ಗುರುಗಳಾದ ಶ್ರೀ ಸತ್ಯಧರ್ಮ ತೀರ್ಥರ೦ತೆ ಗಂಗಾಸನ್ನಿಧಾನ ಪಾತ್ರರು, ನಿರಂತರ ಜಾತಿಬೇಧವಿಲ್ಲದೆ ಎಲ್ಲರಿಗು  ಹನ್ನೆರಡು ವರುಷ ಅನ್ನದಾನ ಮಾಡಿದ ಮಹಾತ್ಮರು ಮಹಿಷಪುರಿನಿವಾಸಿಗಳಾದ ಶ್ರೀ ಸತ್ಯಸಂಕಲ್ಪ ತೀರ್ಥರ ಆರಾಧನಾ ಮಹೋತ್ಸವ.
|| ಸತ್ಯಧರ್ಮಾಬ್ಧಿಸಂಭೂತ: ಚಿಂತಾಮಣಿವಿಜೃಂಭಿತ: | ಸತ್ಯಸಂಕಲ್ಪಕಲ್ಪದ್ರು: ಕಲ್ಪಯೇತ್ ಕಾಮಧುಕ್ ಮಮ ||
ಪೂರ್ವಾಶ್ರಮ ನಾಮ : ಶ್ರೀ ನವರತ್ನ  ಶ್ರೀನಿವಾಸ  ಚಾರ್ಯರುಆಶ್ರಮ ಗುರುಗಳು : ಶ್ರೀ ಸತ್ಯಧರ್ಮ ತೀರ್ಥರು (ಹೊಳೆಹೊನ್ನೂರು)ಆಶ್ರಮ ಶಿಷ್ಯರು : ಶ್ರೀ ಸತ್ಯ ಸಂತುಷ್ಟ ತೀರ್ಥರು  ವೇದಾಂತ ಸಾಮ್ರಾಜ್ಯ ಆಳ್ವಿಕೆ : 1830  ರಿಂದ 1842ವೃಂದಾವನ ಸ್ಥಳ : ಪ್ಲವ ನಾಮ ಸಂವತ್ಸರ, ಆಷಾಢ ಶುದ್ಧ ಪೌರ್ಣಮಿ, ಮೈಸೂರು.
ಪೂರ್ವಾಶ್ರಮದಲ್ಲಿ ನವರತ್ನ ಶ್ರೀ ಶ್ರೀನಿವಾಸ ಚಾರ್ಯರು ಶ್ರೀಮನ್ನ್ಯಾಯಸುಧಾ ಪಂಡಿತರು, ಪೂರ್ವಾಶ್ರಮದಲ್ಲಿ ಶ್ರೀ ಸತ್ಯಧರ್ಮ ತೀರ್ಥರ ಕಾಸ ತಮ್ಮಂದಿರು, ಶ್ರೀ ಸತ್ಯಧರ್ಮ ತೀರ್ಥರಿಂದ ಆಶ್ರಮವನ್ನು ತೆಗೆದು ಕೊಂಡರು. ಆನಂತರ ಎರಡು ವರ್ಷಗಳ ನಂತರ ಶ್ರೀ ಸತ್ಯಧರ್ಮ ತೀರ್ಥರು ಹೊಳೆ ಹೊನ್ನೂರಿನಲ್ಲಿ ಬೃಂದಾವನಸ್ಥರಾದರು. ನಂತರ ಸಂಚಾರ ಕ್ರಮದಲ್ಲಿ ಶ್ರೀರಂಗಪಟ್ಟಣ ಹಾಗೆ ಮೈಸೂರಿಗೆ ಬಂದರು.
ಮೈಸೂರಿನ ಅರಮನೆಯಲ್ಲಿ ವೈಭವದ ಶ್ರೀ ಮೂಲರಾಮಚಂದ್ರ ದೇವರ ಪೂಜೆ ನಡೆಯಿತು, ನಂತರದಲ್ಲಿ ಮೈಸೂರಿನ ಮಹಾರಾಜ ಕೃಷ್ಣರಾಜ ಒಡೆಯರ್ ರಿಗೆ   ಹಲವಾರು ಧರ್ಮೋಪದೇಶಗಳನ್ನೂ ಮಾಡಿದರು, ಇವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮೈಸೂರಿನ ಮಹಾರಾಜ ಇವರಿಗೆ ನವರತ್ನಗಳಿಂದ ಅಭಿಷೇಕ ಮಾಡ ಬೇಕೆಂದು ತಟ್ಟೆಯಲ್ಲಿ ಮುತ್ತು, ನವರತ್ನಗಳನ್ನೂ ತಂದರು, ಆಗ ಶ್ರೀ ಸತ್ಯಸಂಕಲ್ಪ ತೀರ್ಥರು ಒಂದು ಕ್ಷಣ ನಿಲ್ಲಿ ಎಂದರು, ನಿನ್ನ ಕೈಯಲ್ಲಿ ವೀರಲಕ್ಷ್ಮಿ, ರಾಜ್ಯಲಕ್ಷ್ಮಿ, ಎಲ್ಲ ಇದ್ದಾರೆ ಆದರೆ ಬ್ರಾಹ್ಮಣರಲ್ಲಿ ಪಂಚ ತೀರ್ಥಗಳು ಇರುತ್ತವೆ ಅವರ ಜೊತೆಗೆ ಮಾಡಿ ಎಂದು ಹೇಳಿ ನವರತ್ನಾಭಿಷೇಕ ಮಾಡಿಸಿಕೊಂಡ ಮಹನೀಯರು.
 ಶ್ರೀ ಸತ್ಯಸಂಕಲ್ಪ ತೀರ್ಥರ ಸಾಮಾಜಿಕ ಕಳಕಳಿ 
ಮುಂದೆ ಸಂಚಾರಕ್ರಮದಲ್ಲಿ ಹಾವೇರಿಯ ಹತ್ತಿರವಿರುವ  ಖರ್ಜಗಿ ಎಂಬ ಗ್ರಾಮಕ್ಕೆ ದಿಗ್ವಿಜಯ ಮಾಡುತ್ತಾರೆ, ಆ ಹಿಂದೆ ಅದೇ ಊರಿನಲ್ಲಿ ಶ್ರೀ ಸತ್ಯಧರ್ಮ ತೀರ್ಥರು ಅದ್ವೈತ ಪಂಡಿತ ವಿರೂಪಾಕ್ಷ ಶಾಸ್ತ್ರಿ  ಎಂಬುವರನ್ನು ವಾದದಲ್ಲಿ ಸೋಲಿಸಿದ್ದರು, ಆಗ ಅಭಿನವ ಗಧಾ ಮತ್ತು ಮಧ್ವತಂತ್ರಸಂಗ್ರಹ  ಎಂಬ ಗ್ರಂಥವನ್ನು ಬರೆದಿದ್ದು, ಅದೇ ಊರಿಗೆ ಶ್ರೀ ಸತ್ಯಸಂಕಲ್ಪ ತೀರ್ಥರು ಬರುತ್ತಾರೆ, ಅಲ್ಲಿ ಬರುವ ಹೊತ್ತಿಗೆ ಎಲ್ಲೆಲ್ಲೂ ದುರ್ಭಿಕ್ಷೆ, ಆಹಾಕಾರ, ಅನ್ನವಿಲ್ಲಾ, ಉದ್ಯೋಗವಿಲ್ಲ, ಯಾರಲ್ಲೂ ಹಣವಿಲ್ಲ.ಶ್ರೀಮಠದ ದಿವಾನರು ಹೇಳುತ್ತಾರೆ ಈ ಊರು ಯೋಗ್ಯವಲ್ಲ ಇಲ್ಲಿ ಭಿಕ್ಷೆ ಮತ್ತು ವೈಭವದ ಪೂಜೆಗೆ ಯೋಗ್ಯವಿಲ್ಲವೆಂದು. ಮುಂದೆ ಬೇರೆ ಊರಿಗೆ ಹೋಗೋಣ, ಶ್ರೀಮಠದ ಆದಾಯಕ್ಕೂ ಧಕ್ಕೆಯಾಗುತ್ತದೇ ಎಂದು ಹೇಳುತ್ತಾರೆ.
ಸತ್ಯಸಂಕಲ್ಪ ತೀರ್ಥರು ಹೇಳುತ್ತಾರೆ, ನಮಗೆ ಪರಮಾತ್ಮ ಈ ಭಾಗ್ಯ ಕೊಟ್ಟಿದ್ದಾನೆ, ಕಾರಣ ಇಷ್ಟು ಜನರಿಗೆ ಅನ್ನದಾನ ಮಾಡುವ ಭಾಗ್ಯ ದೊರೆತಿರುವುದು ನಮ್ಮ ಪುಣ್ಯವೇ ಸರಿ. ಯಾರು ಉಪವಾಸ ವಿರುತ್ತಾರೆ ಅವರಿಗೆ ಒಂದು ತುತ್ತು ಊಟಹಾಕಿದಾಗ ಅವನು ತಿಂದು ತೃಪ್ತಿ ಪಡುವ ಸಂತೋಷ ನಮಗೆ ಅನಂತ ಪುಣ್ಯ ಬರುತ್ತದೆ ಎಂದು ಹೇಳಿದರು. ಕೂಡಲೇ ಖರ್ಜಗಿ, ಕುಸುನೂರು, ಅತ್ತಿ ಮುಂತಾದ ಸುತ್ತಮುತ್ತಲಿನ ಊರಿಗೆ ರಾಯಸ ಕಳಿಸಿ, ನೀವು ಸಕುಟುಂಬ ಸಮೇತರಾಗಿ ಖರ್ಜಗಿಗೆ ಬಂದು ನೆಲಿಸಿ ಶ್ರೀ ಮಠದಲ್ಲಿ ಶ್ರೀಮನ್ಮೂಲರಾಮಚಂದ್ರ ದೇವರ ಪ್ರಸಾದ ಸ್ವೀಕರಿಸಬೇಕು, ಇದೆ ಅಜ್ನ್ಯಾಪತ್ರ ಎಂದು ಹೇಳಿದರು. ಒಂದಲ್ಲ ಎರಡಲ್ಲ ನಿರಂತರ ಹನ್ನೆರಡು ವರುಷ ಅನ್ನದಾನ ಮಾಡಿದ ಮಹಾತ್ಮರು, ಬ್ರಾಹ್ಮಣರನ್ನು ಮೊದಲು ಮಾಡಿಕೊಂಡು ಇಡೀ ಊರಿನ ಜನರಿಗೆ ಜಾತಿಬೇಧವಿಲ್ಲದೆ ಅನ್ನದಾನ ಮಾಡಿದ ಮಹಾತ್ಮರು.
ಈಗಿನಂತೆ ಆಗ ಶ್ರೀಮಠ ಹೆಚ್ಚು ಅನುಕೂಲವಾಗಿರಲಿಲ್ಲ, ಶ್ರೀಮಠಕ್ಕೆ ಬರುತ್ತಿದ್ದ ಆದಾಯ ದಿನ ಮಠನಡೆಯುವುದಕ್ಕೆ ಸಾಕಾಗುತ್ತಿತ್ತು. ರಾಜ ಮಹಾರಾಜರು ಕೊಟ್ಟಂತ ರತ್ನಗಳನ್ನೂ ಎಲ್ಲವನ್ನು ಒತ್ತೆ ಇತ್ತು ಧಾರವಾಡದ ರಾಮನಾಯಕರ ಹತ್ತಿರ ಕೊಟ್ಟರು, ಅವರು ಕೊಡುವ ಹಣದಿಂದ ಶ್ರೀ ಮಠದಲ್ಲಿ ನಿತ್ಯ ಎಲ್ಲರಿಗು ಊಟದ ವ್ಯವಸ್ಥೆ, ಹೀಗೆ ಸ್ವಲ್ಪ ದಿನ ನಡೆಯಿತು,ಶ್ರೀಮಠದಲ್ಲಿ ಎಲ್ಲ ಸಂಪತ್ತು ಕ್ರಮೇಣ ಖಾಲಿಯಾಗುತ್ತ ಬಂತು, ಕಡೆಗೆ ಶ್ರೀ ಸತ್ಯಾಭಿನವ ತೀರ್ಥರ ಪರಂಪರೆಯಿಂದ ಬಂದ " ವಜ್ರಮಂಟಪ " ವನ್ನು ಒತ್ತೆ ಇತ್ತು ಅನೇಕ ಲಕ್ಷ ವರಹಗಳನ್ನು ತಂದರು.ಶ್ರೀ ಸತ್ಯಸಂಕಲ್ಪ ತೀರ್ಥರಿಗೆ ಅಷ್ಟೇ ಅಲ್ಲಿನ ಜನರು ಹಸಿವಿನಿಂದ ಬಳಲಬಾರದು ಎಂದು ಹೇಳಿ ಎಲ್ಲರಿಗು ನಿತ್ಯ ಭೋಜನ ಮಾಡಿಸಿದರು. ಹೀಗೆ ಹನ್ನೆರಡು ವರುಷ ನಿರಂತರ ಅನ್ನದಾನ ಮಾಡಿದ ಮಹನೀಯರು ಶ್ರೀ ಸತ್ಯಸಂಕಲ್ಪ ತೀರ್ಥರು.
 ಮಂತ್ರಾಕ್ಷತೆ ಮಹಿಮೆ 
ಹೆಸರಿಗೆ ತಕ್ಕಂತೆ ಅವರ ಮಹಿಮೆ, ಅವರು ಕೊಟ್ಟ ಮಂತ್ರಾಕ್ಷತೆ ಸಂಕಲ್ಪದಂತೆ ಕೆಲಸ ಆಗುತ್ತಲೇ ಇತ್ತು.ಒಮ್ಮೆ ಹುಲುಗಿ ಶ್ರೀಯಃಪತ್ಯಚಾರ್ಯರು ಬಂದರು, ಅವರು ತಮ್ಮ 48 ನೇ ವಯಸ್ಸಿನ ವರೆಗೂ ಶ್ರೀಮನ್ನ್ಯಾಯಸುಧಾ ಗ್ರಂಥ ಅಧ್ಯಯನ ಮಾಡಿದವರು. ಒಟ್ಟು 12 ಬಾರಿ ಸುಧಾಮಂಗಲ ಮಾಡಿದವರು ಅವರ ಪ್ರಸಿದ್ಧ ಕೃತಿ " ದ್ವೈತ ದ್ಯುಮಣಿ " ಎಂಬ ಗ್ರಂಥ. ವೇದಾಂತ ಶಾಸ್ತ್ರ ತಿಳಿಯಲು ಬೇಕಾದ ಗ್ರಂಥ. ಅಂತಹ ಮಹಾ ವಿದ್ವಾಂಸರು ಬಂದು ಶ್ರೀ ಸತ್ಯಸಂಕಲ್ಪ ತೀರ್ಥರಲ್ಲಿ ಸಾಷ್ಟಾಂಗ ಪ್ರಣಾಮ ಮಾಡಿ ಕೇಳುತ್ತಾರೆ, ನಾನು ಒಂದು ವಿಶಿಷ್ಟ ವಾದ ಗ್ರಂಥವನ್ನು ಬರೆಯಬೇಕೆಂದು ಅಂದು ಕೊಂಡಿದ್ದೇನೆ ತಾವು ಸಂಕಲ್ಪ ಮಾಡಬೇಕು ನಿಮ್ಮ ಅನೂಜ್ಞೆ ಮಂತ್ರಾಕ್ಷತೆ ಕೊಡಬೇಕು ಎಂದು ಕೇಳಲು ಶ್ರೀ ಸತ್ಯಸಂಕಲ್ಪ ತೀರ್ಥರು ಅನುಗ್ರಹಿಸಿ ಮಂತ್ರಾಕ್ಷತೆ ಕೊಡುತ್ತಾರೆ, ಆಗ ಶ್ರೀ ಶ್ರೀಯಃಪತ್ಯಚಾರ್ಯರಿಂದ ಹೊರಬಂದ ವಿಶಿಷ್ಟಗ್ರಂಥವೇ " ದ್ವೈತ ದ್ಯುಮಣಿ " ಅದರ ಕಡೆಯಲ್ಲಿ ಶ್ರೀ ಸತ್ಯಸಂಕಲ್ಪ ತೀರ್ಥರ ಮಂತ್ರಾಕ್ಷತೆ ಮಹಿಮೆಯಿಂದಲೇ ಈ ಗ್ರಂಥ ಪೂರ್ಣವಾಗಿದೆ ಎಂದು ಹೇಳುತ್ತಾರೆ.
ಮಹಾನುಗ್ರಹ ಶಕ್ತಿಯನ್ನು ಪಡೆದವರು ಶ್ರೀ ಸತ್ಯಸಂಕಲ್ಪ ತೀರ್ಥರು, ಮುಂದೆ ತಮ್ಮ ಸಂಚಾರ ಕ್ರಮದಲ್ಲಿ ಪುನಃ ಮೈಸೂರಿಗೆ ಬಂದರು. ಕೃಷ್ಣರಾಜ ಒಡೆಯರ್ ಅವರ ಅಪೇಕ್ಷೆಯಂತೆ ಮತ್ತು ರಾಜರೇ ಸ್ವತಹ ನಿಂತು ಕಟ್ಟಿಸಿಕೊಟ್ಟಿದ್ದ  , ಮೈಸೂರು ಅರಮನೆಗೆ ಬಹಳ ಹತ್ತಿರದಲ್ಲಿ ಇರುವ ಶ್ರೀ ಮಠದಲ್ಲಿ ಹರಿಇಚ್ಛೆ ಯಂತೆ ಪ್ಲವನಾಮ ಸಂವತ್ಸರ ಆಷಾಢ ಬಹುಳ ಪೌರ್ಣಮಿಯಂದು ವೃಂದಾವನಸ್ಥರಾದರು. ಇವರ ನಂತರ ಗೂಳಿ ಬಾಳಚಾರ್ಯರು ಎಂದು ಹೆಸರಾದ ಪಂಡಿತರಿಗೆ  ಶ್ರೀ ಸತ್ಯಸಂತುಷ್ಟ ತೀರ್ಥರು ಎಂದು ಆಶ್ರಮ ನಾಮ ಕೊಟ್ಟು ಪೀಠದಲ್ಲಿ ವಿರಾಜಮಾನರಾದರು.
 ಗಂಗಸನ್ನಿದಾನ ಪಾತ್ರರು 
ಈಗಲೂ  ವೈಶಾಖದ೦ತ  ಬಿರುಬಿಸಲಿನಲ್ಲಿ ಇವರ ವೃಂದಾವನ ಸುತ್ತ ಗಂಗಾಸನ್ನಿದಾನವಿದೇ ಎಷ್ಟೇ ಒರೆಸಿದರು ಕೂಡಲೇ ನೆಲವೆಲ್ಲ ಒದ್ದೆಯಾಗಿಇರುತ್ತದೆ ಮತ್ತು ಮೇಲಿನ ಚಾವಣಿಗಳು ಮತ್ತು ಸುತ್ತಲೂ ಹನಿಗಳು ಬರುತ್ತವೆ ಎಂದರೆ ಗಂಗಸನ್ನಿದಾನ ಪಾತ್ರರು ಎಂದರೆ ಅತಿಶಯೋಕ್ತಿಯಲ್ಲ.
 ಪ್ರೀತೋಸ್ತು ಕೃಷ್ಣ ಪ್ರಭೋ  ಫಣೀಂದ್ರ 
ಹೀಗೆ ಅನವರತ ನಂಬಿದ ಭಕ್ತರನ್ನು ಈಗಲೂ ಮಂತ್ರಾಕ್ಷತೆಯಿಂದ ಪೊರೆಯುತ್ತಿರುವ ಶ್ರೀ ಸತ್ಯಸಂಕಲ್ಪ ತೀರ್ಥರ ಚರಣಗಳಿಗೆ ಅನಂತಾನಂತ ಪ್ರಣಾಮಗಳು, ಮೈಸೂರಿನ ಹೃದಯ ಬಾಗದಲ್ಲಿ ಇರುವ ಶ್ರೀಮಠದಲ್ಲಿ  ಈಗ ಶ್ರೀ ಸತ್ಯಾತ್ಮ  ತೀರ್ಥ ಶ್ರೀಪಾದಂಗಳವರು ಪ್ರತಿಷ್ಠಾಪಿಸಿದ ರೋಗ ಮೋಚನ ಧನ್ವಂತರಿ ಸನ್ನಿಧಾನ ವಿಶೇಷವಾಗಿದೆ. ಹಾಗೆ ಶ್ರೀ ಮಠದ ಜೀರ್ಣೋದ್ದಾರ ಕಾರ್ಯ ಕೂಡಾ ನಡೆಯುತ್ತಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಶ್ರೀ ಸತ್ಯಸಂಕಲ್ಪ ತೀರ್ಥರ ಸಾಮಾಜಿಕ ಕಳಕಳಿಯಂತೆ ನಾವು ನಮ್ಮ ಸುತ್ತಮುತ್ತಲಿನ ಅವಶ್ಯಕೆತೆ ಇರುವ ಜನರಿಗೆ ಆದಷ್ಟು ಸಹಾಯ ಮಾಡೋಣ, ಅನ್ನದಾನ,  ಮತ್ತು ವಿದ್ಯಾದಾನ ಮಾಡೋಣ. ಈ ಲೇಖನಕುಸುಮದಲ್ಲಿ ಏನಾದರೂ ಲೋಪದೋಷವಿದ್ದರೆ ನನ್ನದೆ ಎಂದು ಹೇಳುತ್ತಾ ಒಂದೆರಡು ವಿಷಯಗಳಿದ್ದರೆ ಶ್ರೀ ಸತ್ಯಸಂಕಲ್ಪ ಶ್ರೀ ವೇದವ್ಯಾಸ ದೇವರಿಗೆ ಸಮರ್ಪಿಸುತ್ತಾ ಶ್ರೀ ಕೃಷ್ಣಾರ್ಪಣಮಸ್ತು- phaneendra
********
ಶ್ರೀ ಸತ್ಯಸಂತುಷ್ಟತೀರ್ಥರ ಆರಾಧನಾ ನಿಮಿತ್ತ ಅವರ ಸ್ಮರಣೆ : -
ಶ್ರೀ ಸತ್ಯಸಂತುಷ್ಟತೀರ್ಥರು ವೃಂದಾವನಸ್ಥಳ ಮೈಸೂರು
ಸತ್ಯಸಂಕಲ್ಪವಾರ್ಧ್ಯುತ್ಥಃ ಸತ್ಯಸಂತುಷ್ಟಚಂದ್ರಮಾಃ ! ಪ್ರಾರ್ಥಿತಾಶೇಷದಾತಾ ಚಭಕ್ತವೃಂದಸ್ಯ ನಿತ್ಯದಾ !!
ಅರ್ಥ :- ಶ್ರೀ ಸತ್ಯಸಂಕಲ್ಪತೀರ್ಥರು ಎಂಬ ಸಮುದ್ರದಿಂದ ಹುಟ್ಟಿದಂಥ, ಪ್ರಾರ್ಥನೆ ಮಾಡಿದ ಎಲ್ಲರಿಗೂ ಎಲ್ಲವನ್ನೂ ಕರುಣಿಸುವಂಥ, ಭಕ್ತವೃಂದದವರಿಗೆ ಯಾವಾಗಲೂ ಜ್ಞಾನವನ್ನು ನೀಡುವ ಮೂಲಕ  ಆನಂದವನ್ನು ನೀಡುವಂಥ ಶ್ರೀ ಸತ್ಯಸಂತುಷ್ಟತೀರ್ಥರು ಎಂಬ ಚಂದ್ರರು ಅನುಗ್ರಹಿಸಲಿ.ಅಂತ ಪ್ರಾರ್ಥನೆ. ಎಲ್ಲರಿಗೂ ಶ್ರೀ ಸತ್ಯಸಂತುಷ್ಟತೀರ್ಥರು ಅನುಗ್ರಹಿಸಲಿ.
ಸರ್ವೇ ಜನಾಃ ಸುಖಿನೋ ಭವಂತು ! ಸುಘೋಷಾಚಾರ್ಯ ಕೊರ್ಲಹಳ್ಳಿ
******

No comments:

Post a Comment