shri gurubyo namaha, hari Om...
kArthIka bahuLa ashTami is the ArAdhane of shri raghunandana tIrtharu of rAyara maTa.
shri raghunandana tIrtharu...
ArAdhanE: kArthIka bahuLa ashTami
Period: 1492 - 1504
parampare: rAyara maTa, #13
Ashrama gurugaLu: shri jiTitraru
Ashrama shishyaru: shri surEndra tIrtharu
brindAvana: Hampi, on the banks of tungabhadra
परैपहृतामूलरामार्चा गुर्वनुग्रहात् ।
येनेनीता नमस्तस्मै रघुनंदनभिक्षवे
ಪರೈಪಹೃತಾಮೂಲರಾಮಾರ್ಚಾ ಗುರ್ವನುಗ್ರಹಾತ್ |
ಯೇನೇನೀತಾ ನಮಸ್ತಸ್ಮೈ ರಘುನಂದನಭಿಕ್ಷವೇ |
paraipahRutaamUlaraamaarchaa gurvanugrahaat |
yEnEnItaa namastasmai raGunandanabhikShavE |
shri raghunandana tIrtha guruvantargata, bhArati ramaNa mukhyaprANAntargata, sItApate shri mUla rAma dEvara pAdAravindakke gOvinda, gOvinda...
shri krishNArpaNamastu...
********
*ಶ್ರೀ ರಾಯರ ಮಠದ ಪರಂಪರೆಯಲ್ಲಿ ಧೃವತಾರೆಯಂತೆ ಕಂಗೋಳಿಸುವ*
*ಶ್ರೀ ರಘುನಂದನತೀರ್ಥರ ಆರಾಧನಾ ಮಹೋತ್ಸವ*
" ದಿನಾಂಕ : 30.11.2018 ಕಾರ್ತೀಕ ಬಹುಳ ಅಷ್ಟಮೀ -
ಶ್ರೀ ರಘುನನಂದನ ತೀರ್ಥರ ಆರಾಧನಾ ಮಹೋತ್ಸವ., ಹಂಪಿ "
ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಸತ್ಪರಂಪರೆತಾದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನದ ಇತಿಹಾಸದಲ್ಲಿ ಮಹಾ ತಪಸ್ವಿಗಳಾದ ಶ್ರೀ ಜಿತಾಮಿತ್ರರಂಥಾ ಗುರುಗಳನ್ನೂ; ಶ್ರೀ ಸುರೇಂದ್ರತೀರ್ಥರಂಥಾ ಶಿಷ್ಯರನ್ನೂ ಪಡೆದ ಶ್ರೀ ರಘುನಂದನತೀರ್ಥರ ಸ್ಥಾನಮಾನಗಳನ್ನು ಸುವರ್ಣಾಕ್ಷರದಿಂದ ಬರೆದಿಡಬೇಕಾದ ಐತಿಹಾಸಿಕ ವಿಷಯವಾಗಿದೆ.
ಶ್ರೀ ಮೂಲರಾಮಚಂದ್ರನನ್ನು ಒಲಿಸಿಕೊಂಡು; ಶ್ರೀಮದಾಚಾರ್ಯರ ಮೂಲಮಹಾ ಸಂಸ್ಥಾನದ ಕೀರ್ತಿಯನ್ನು ಅಜರಾಮರಗೊಳಿಸಿದ ಶ್ರೀ ರಘುನಂದನತೀರ್ಥರ ತಪಸ್ಸು, ಮಹಿಮೆ ಮತ್ತು ವಿದ್ಯೆ ಅನನ್ಯಸಾಮಾನ್ಯವಾದುದು.
ಶ್ರೀ ಪ್ರಾಣೇಶದಾಸರ ಕಣ್ಣಲ್ಲಿ....
ಬಗೆ ಬಗೆ ಭಜಿಸಲು ।
ಇಗಡ ಜನರನೊಲ್ಲ ।
ಬಗಿವಾನು ಸುಜನರನು ।
ರಘುನಂದನಾರ್ಯ ।।
" ಶ್ರೀ ರಘುನಂದನತೀರ್ಥರ ಸಂಕ್ಷಿಪ್ತ ಚರಿತ್ರೆ "
ಹೆಸರು : ಶ್ರೀ ವಿದ್ವಾನ್ ಶ್ರೀ ರಾಮಚಂದ್ರಾಚಾರ್ಯರು
ಆಶ್ರಮ ಗುರುಗಳು : ಶ್ರೀ ಜಿತಾಮಿತ್ರತೀರ್ಥರು
ಆಶ್ರಮ ಶಿಷ್ಯರು : ಶ್ರೀ ಸುರೇಂದ್ರತೀರ್ಥರು
ಆಶ್ರಮ ನಾಮ : ಶ್ರೀ ರಘುನಂದನತೀರ್ಥರು
ಕಾಲ : ಕ್ರಿ ಶ 1492 - 1504
ಆರಾಧನಾ ದಿನ : ಕಾರ್ತೀಕ ಬಹುಳ ಅಷ್ಟಮೀ
ಬೃಂದಾವನ ಸ್ಥಳ : ಹಂಪಿ
" ವೇದಾಂತ ಸಾಮ್ರಾಜ್ಯ ಪಟ್ಟಾಭಿಷೇಕ "
ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಸತ್ಪರಂಪರೆತಾದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧೀಶ್ವರರಾದ ಪ್ರಾತಃ ಸ್ಮರಣೀಯ ಶ್ರೀ ರಾಮಚಂದ್ರತೀರ್ಥರ ಕರಕಮಲ ಸಂಜಾತರಾದ ಪ್ರಾತಃ ಸ್ಮರಣೀಯ ಶ್ರೀ ವಿಬುಧೇಂದ್ರತೀರ್ಥರ ವರ ಪುತ್ರಕರಾದ ಶ್ರೀ ಜಿತಾಮಿತ್ರತೀರ್ಥರು ತಮ್ಮ ಉತ್ತರಾಧಿಕಾರಿಯನ್ನಾಗಿ ಷಾಷ್ಟೀಕ ವಂಶ ಸಂಜಾತರಾದ ಶ್ರೀ ರಾಮಚಂದ್ರಾಚಾರ್ಯರಿಗೆ ತುರ್ಯಾಶ್ರಮವನ್ನು ನೀಡಿ " ಶ್ರೀ ರಘುನಂದನತೀರ್ಥ " ರೆಂಬ ಅಭಿದಾನದೊಂದಿಗೆ ದ್ವೈತ ವೇದಾಂತ ದಿಗ್ವಿಜಯ ವಿದ್ಯಾ ಸಿಂಹಾಸನದಲ್ಲಿ ತಮ್ಮ ಅಮೃತ ಹಸ್ತಗಳಿಂದ ಪಟ್ಟಾಭಿಷೇಕವನ್ನು ಮಾಡಿದರು.
ಗುರುಗಳ ಮತ್ತು ಪರಮ ಗುರುಗಳ ಮಹಿಮೆಯನ್ನೂ; ಮೂಲ ಮಹಾ ಸಂಸ್ಥಾನದ ಮಹಿಮೆಯನ್ನೂ ಅರಿತ ಶ್ರೀ ರಘುನಂದನ ತೀರ್ಥರು ತಮಗೆ ಆಶ್ರಮವಾದದ್ದು ಸುಯೋಗವೆನಿತು. ಆದರೆ ಪರಮಾತ್ಮನಿಂದಲೇ ಪೂಜಿತವಾದ ಶ್ರೀ ಮೂಲರಾಮನನ್ನು ಪೂಜಿಸಲು ಆಗಲಿಲ್ಲವೆಂದು ಅವರು ಬಹಳಾ ಚಿಂತಿಸಿದರು. ಇದಕ್ಕೆ ಏನು ಮಾಡಬೇಕೆಂಬುದೇ ಅವರಿಗೆ ತೋರದಂತಾಯಿತು.
" ರಾಮನ ಹೆಸರನ್ನು ಪೊತ್ತ ಯತಿಗಳು ಮರಳಿ ರಾಮನ ತರಿಸುವ ನಿರ್ಧಾರ "
ತಮ್ಮ ಮಹಾ ಸಂಸ್ಥಾನದ ಪೂರ್ವೀಕ ಗುರುಗಳಾದ ಶ್ರೀ ನರಹರಿತೀರ್ಥರು ಈ ಶ್ರೀ ಮೂಲರಾಮ ಪ್ರತಿಮೆಯನ್ನು ಸಂಪಾದಿಸುವುದರಲ್ಲಿ ಎಂಥಹಾ ವಿಚಕ್ಷಣತೆಯನ್ನು ತೋರಿಸಿದ್ದರೆಂಬುದನ್ನು ಪರಂಪರಾಗತವಾಗಿ ತಿಳಿದು ಬಂದಿತ್ತು.
*******
" ಶ್ರೀ ರಘುನಂದನ - 1 "
" ದಿನಾಂಕ : 08.12.2020 ಮಂಗಳವಾರ ಕಾರ್ತೀಕ ಬಹುಳ ಅಷ್ಟಮೀ - ಶ್ರೀ ರಘುನನಂದನ ತೀರ್ಥರ ಆರಾಧನಾ ಮಹೋತ್ಸವ., ಹಂಪಿ "
ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಸತ್ಪರಂಪರೆಯಾದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನದ ಇತಿಹಾಸದಲ್ಲಿ ಮಹಾ ತಪಸ್ವಿಗಳಾದ ಶ್ರೀ ಜಿತಾಮಿತ್ರರಂಥಾ ಗುರುಗಳನ್ನೂ - ಶ್ರೀ ಸುರೇಂದ್ರತೀರ್ಥರಂಥಾ ಶಿಷ್ಯರನ್ನೂ ಪಡೆದ ಶ್ರೀ ರಘುನಂದನತೀರ್ಥರ ಸ್ಥಾನಮಾನಗಳನ್ನು ಸುವರ್ಣಾಕ್ಷರದಿಂದ ಬರೆದಿಡಬೇಕಾದ ಐತಿಹಾಸಿಕ ವಿಷಯವಾಗಿದೆ.
ಶ್ರೀ ಮೂಲರಾಮಚಂದ್ರನನ್ನು ಒಲಿಸಿಕೊಂಡು; ಶ್ರೀಮದಾಚಾರ್ಯರ ಮೂಲಮಹಾ ಸಂಸ್ಥಾನದ ಕೀರ್ತಿಯನ್ನು ಅಜರಾಮರಗೊಳಿಸಿದ ಶ್ರೀ ರಘುನಂದನತೀರ್ಥರ ತಪಸ್ಸು - ಮಹಿಮೆ ಮತ್ತು ವಿದ್ಯೆ ಅನನ್ಯಸಾಮಾನ್ಯವಾದುದು.
ಶ್ರೀ ಪ್ರಾಣೇಶದಾಸರ ಕಣ್ಣಲ್ಲಿ....
ಬಗೆ ಬಗೆ ಭಜಿಸಲು ।
ಇಗಡ ಜನರನೊಲ್ಲ ।
ಬಗಿವಾನು ಸುಜನರನು ।
ರಘುನಂದನಾರ್ಯ ।।
" ಶ್ರೀ ರಘುನಂದನತೀರ್ಥರ ಸಂಕ್ಷಿಪ್ತ ಚರಿತ್ರೆ "
ಹೆಸರು : ಶ್ರೀ ವಿದ್ವಾನ್ ಶ್ರೀ ರಾಮಚಂದ್ರಾಚಾರ್ಯರು
ಆಶ್ರಮ ಗುರುಗಳು : ಶ್ರೀ ಜಿತಾಮಿತ್ರತೀರ್ಥರು
ಆಶ್ರಮ ಶಿಷ್ಯರು : ಶ್ರೀ ಸುರೇಂದ್ರತೀರ್ಥರು
ಆಶ್ರಮ ನಾಮ : ಶ್ರೀ ರಘುನಂದನತೀರ್ಥರು
ಕಾಲ : ಕ್ರಿ ಶ 1492 -1504
ಆರಾಧನಾ ದಿನ : ಕಾರ್ತೀಕ ಬಹುಳ ಅಷ್ಟಮೀ
ಬೃಂದಾವನ ಸ್ಥಳ : ಹಂಪಿ
" ಶ್ರೀ ರಘುನಂದನ - 2 "
" ವೇದಾಂತ ಸಾಮ್ರಾಜ್ಯ ಪಟ್ಟಾಭಿಷೇಕ "
ರಚನೆ : ಶ್ರೀ ರಿತ್ತಿ ಸುಶೀಲೇಂದ್ರಾಚಾರ್ಯರು
ಅಂಕಿತ : ಶ್ರೀ ಗುರು ಶ್ಯಾಮಸುಂದರ
ಉಪದೇಶ ಗುರುಗಳು : ಶ್ರೀ ಶ್ಯಾಮಸುಂದರ ದಾಸರು
ರಾಗ : ಮೋಹನ ತಾಳ : ಆದಿ
ರಘುನಂದನ ಎನ್ನಘ
ಕಳೆಯೋ ಬೇಗ ।
ರಘುಪತಿಯ ಪಾದ
ಪದುಮ ಲೋಲನೆ ।। ಪಲ್ಲವಿ ।।
ಆನಂದತೀರ್ಥ
ಕುಲ ಸಂಭವನೇ ।
ಆನಂದ ಶಾಸ್ತ್ರ ತಿಳಿಸಿ
ಉದ್ಧರಿಸೋ ।। ಚರಣ ।।
ಚರಣಾರವಿಂದಕ್ಕೆರಗಿದೆ ನಾನು ।
ಮರೆಯದೆ ಯೆನ್ನ ಪೊರೆಯೊ
ಬೇಗ ನೀನು ।\ ಚರಣ ।।
ರಾಮ ಪಾದ ಧ್ಯಾನಾಸಕ್ತ
ಮುನಿ ನೀನು ।
ಕಾಮಿತಾರ್ಥವಿತ್ತು
ಪ್ರೇಮದಿಂದ ನೋಡು ।। ಚರಣ ।।
ಶರಣ ಜನರ ಕಾಯ್ವ
ಬಿರುದನ್ನು ಕೇಳಿ ।
ಮೊರೆ ಹೊಕ್ಕೆನಯ್ಯ ಕರುಣೆ
ತೋರೋ ಗುರುವೇ ।। ಚರಣ ।।
ಗುರು ಶ್ಯಾಮಸುಂದರನ
ಪಾದ ಭಜಕ ।
ನಿರುತ ಕಾಯಬೇಕೋ
ಶರಧಿಶಯನ ಪ್ರಿಯ ।। ಚರಣ ।।
ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಸತ್ಪರಂಪರೆತಾದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧೀಶ್ವರರಾದ ಪ್ರಾತಃ ಸ್ಮರಣೀಯ ಶ್ರೀ ರಾಮಚಂದ್ರತೀರ್ಥರ ಕರಕಮಲ ಸಂಜಾತರಾದ ಪ್ರಾತಃ ಸ್ಮರಣೀಯ ಶ್ರೀ ವಿಬುಧೇಂದ್ರತೀರ್ಥರ ವರ ಪುತ್ರಕರಾದ ಶ್ರೀ ಜಿತಾಮಿತ್ರತೀರ್ಥರು ತಮ್ಮ ಉತ್ತರಾಧಿಕಾರಿಯನ್ನಾಗಿ ಷಾಷ್ಟೀಕ ವಂಶ ಸಂಜಾತರಾದ ಶ್ರೀ ರಾಮಚಂದ್ರಾಚಾರ್ಯರಿಗೆ ತುರ್ಯಾಶ್ರಮವನ್ನು ನೀಡಿ " ಶ್ರೀ ರಘುನಂದನತೀರ್ಥ " ರೆಂಬ ಅಭಿದಾನದೊಂದಿಗೆ ದ್ವೈತ ವೇದಾಂತ ದಿಗ್ವಿಜಯ ವಿದ್ಯಾ ಸಿಂಹಾಸನದಲ್ಲಿ ತಮ್ಮ ಅಮೃತ ಹಸ್ತಗಳಿಂದ ಪಟ್ಟಾಭಿಷೇಕವನ್ನು ಮಾಡಿದರು.
ಗುರುಗಳ ಮತ್ತು ಪರಮ ಗುರುಗಳ ಮಹಿಮೆಯನ್ನೂ; ಮೂಲ ಮಹಾ ಸಂಸ್ಥಾನದ ಮಹಿಮೆಯನ್ನೂ ಅರಿತ ಶ್ರೀ ರಘುನಂದನ ತೀರ್ಥರು ತಮಗೆ ಆಶ್ರಮವಾದದ್ದು ಸುಯೋಗವೆನಿತು.
ಆದರೆ ಪರಮಾತ್ಮನಿಂದಲೇ ಪೂಜಿತವಾದ ಶ್ರೀ ಮೂಲರಾಮನನ್ನು ಪೂಜಿಸಲು ಆಗಲಿಲ್ಲವೆಂದು ಅವರು ಬಹಳಾ ಚಿಂತಿಸಿದರು.
ಇದಕ್ಕೆ ಏನು ಮಾಡಬೇಕೆಂಬುದೇ ಅವರಿಗೆ ತೋರದಂತಾಯಿತು.
***
" ಶ್ರೀ ರಘುನಂದನ - 3 "
" ರಾಮನ ಹೆಸರನ್ನು ಪೊತ್ತ ಯತಿಗಳು ಮರಳಿ ರಾಮನ ತರಿಸುವ ನಿರ್ಧಾರ "
ತಮ್ಮ ಮಹಾ ಸಂಸ್ಥಾನದ ಪೂರ್ವೀಕ ಗುರುಗಳಾದ ಶ್ರೀ ನರಹರಿತೀರ್ಥರು ಈ ಶ್ರೀ ಮೂಲರಾಮ ಪ್ರತಿಮೆಯನ್ನು ಸಂಪಾದಿಸುವುದರಲ್ಲಿ ಎಂಥಹಾ ವಿಚಕ್ಷಣತೆಯನ್ನು ತೋರಿಸಿದ್ದರೆಂಬುದನ್ನು ಪರಂಪರಾಗತವಾಗಿ ತಿಳಿದು ಬಂದಿತ್ತು.
ತಮ್ಮ ಪರಮ ಗುರುಗಳಾದ ಶ್ರೀ ವಿಬುಧೇಂದ್ರತೀರ್ಥರಲ್ಲಿ ಅವರ ಗುರುಗಳಾದ ಶ್ರೀ ರಾಮಚಂದ್ರತೀರ್ಥರಿಗೆ ಎಂಥಹಾ ಪ್ರೀತಿ ವಿಶ್ವಾಸವಿತ್ತೆಂಬುದು ಜಗತ್ತಿಗೆ ತಿಳಿದ ವಿಷಯ.
ಕಾರಣ ಶ್ರೀಮದಾಚಾರ್ಯರ ವಿದ್ಯೆ ಶ್ರೀ ಅಕ್ಷೋಭ್ಯತೀರ್ಥರಲ್ಲಿ; ಶ್ರೀ ಅಕ್ಶೋಭ್ಯತೀರ್ಥರ ವಿದ್ಯೆ ಶ್ರೀ ಜಯತೀರ್ಥರಲ್ಲಿ; ಶ್ರೀ ಜಯತೀರ್ಥರ ವಿದ್ಯೆ ಶ್ರೀ ರಾಜೇಂದ್ರತೀರ್ಥರಲ್ಲಿ; ಶ್ರೀ ರಾಜೇಂದ್ರತೀರ್ಥರ ವಿದ್ಯೆ ಶ್ರೀ ವಿಬುಧೇಂದ್ರತೀರ್ಥರಲ್ಲಿತ್ತು.
ಅಲ್ಲದೇ ಆ ಕಾಲದಲ್ಲಿ ಶ್ರೀ ವಿಬುಧೇಂದ್ರತೀರ್ಥರು ಶ್ರೇಷ್ಠ ವಿದ್ವಾಂಸರಾಗಿದ್ದರು.
ಭಾರತದುದ್ದಕ್ಕೂ ದ್ವೈತ ಸಿದ್ಧಾಂತ ಪ್ರಸಾರ - ಪ್ರಚಾರ ಮಾಡಿ ದ್ವೈತ ಸಿದ್ಧಾಂತ ವಿಜಯ ಪತಾಕೆ ಹಾರಿಸಿದ್ದರು.
ಮಹಾ ತಪಸ್ವಿಗಳೂ; ಮಹಿಮಾನ್ವಿತರೂ; ತ್ರಿಮತಸ್ಥ ವಿದ್ವಾಂಸರಿಂದಲೂ ಗೌರವಿಸಲ್ಪಟ್ಟವರು.
ಆದ್ದರಿಂದಲೇ ವಿದ್ಯಾ ಸಿಂಹದ ಮರಿಯಾದ ಶ್ರೀ ವಿಬುಧೇಂದ್ರತೀರ್ಥರ ಮೇಲೆ ಶ್ರೀ ರಾಮಚಂದ್ರತೀರ್ಥರಿಗೆ ಎಲ್ಲಿಲ್ಲದ ಪ್ರೀತಿ - ಅಂತಃಕರಣ - ಮಾತೃವಾತ್ಸಲ್ಯ.
" ಮುಳ್ಳಿನ ಮುಳ್ಳಿನಿಂದಲೇ ತೆಗೆಯಬೇಕು - ವಜ್ರವನ್ನು ವಜ್ರದಿನ್ದಲ್ಲೇ ಕತ್ತರಿಸಬೇಕು "
ನಾನ್ನುಡಿಯಂತೆ ಪರಕೀಯರು ಶ್ರೀ ಮೂಲರಾಮನನ್ನು ಅನ್ಯಾಯ ಮಾರ್ಗದಿಂದ ವಾಪಸ್ಸು ಪಡೆಯುವುದೇ ಸರಿಯೆಂದು ಶ್ರೀ ರಘುನಂದನತೀರ್ಥರು ನಿರ್ಧರಿಸಿದರು.
ತಮ್ಮ ಈ ನಿರ್ಧಾರವನ್ನು ತಮ್ಮ ಆಪ್ತರೊಂದಿಗೆ ಆಲೋಚಿಸಿದರು.
" ಬಾಡದ " ಮನೆತನಕ್ಕೆ ಸೇರಿದ " ಚಂದ್ರಭಟ್ಟ " ರೆಂಬುವರು ತಾವೇ ಮಹಾತ್ಕಾರ್ಯವನ್ನು ಮಾಡುವುದಾಗಿ ಭರವಸೆ ಕೊಟ್ಟು ಶ್ರೀ ಶ್ರೀಗಳವರ ಅಪ್ಪಣೆ ಪಡೆದು ಫಲ ಮಂತ್ರಾಕ್ಷತೆ ಪೂರ್ವಕ ಅನುಗ್ರಹ ಸಂಪಾದಿಸಿ; ಪರಮಠಕ್ಕೆ ಹೋಗಿ ಬಲ ಸೇವೆಗೆ ಸೇರಿಕೊಂಡು ಬಹುಕಾಲ ಅಲ್ಲಿಯೇ ಇದ್ದರು.
" ಆನಂದ ನಾಮ ಸಂವತ್ಸರ ಕಾರ್ತೀಕ ಶುದ್ಧ ಏಕಾದಶೀ ರಾತ್ರಿ ದೇವರನ್ನು ಭುಜಂಗಿಸದೇ ಇಟ್ಟಿದ್ದರಿಂದ ಶ್ರೀ ಮೂಲರಾಮನನ್ನು ತೆಗೆದುಕೊಂಡು ಅವರು ಮುಕ್ಕಾಂ ಮಾಡಿದ ಬಂಕಾಪುರದಿಂದ ಹೊರಟು; ಶ್ರೀ ರಘುನಂದನತೀರ್ಥರಿದ್ದ ಪೆನುಗೊಂಡಕ್ಕೆ ಬಂದು ಅಲ್ಲಿ ಶ್ರೀ ಶ್ರೀಗಳವರಿಗೆ ಆ ಶ್ರೀ ಮೂಲರಾಮನ ಪ್ರತಿಮೆಯನ್ನು ಒಪ್ಪಿಸಿದರು.
ಶ್ರೀ ಮೂಲರಾಮನನ್ನು ಭಕ್ತಿಯಿಂದ - ಆನಂದದಿಂದ ಶ್ರೀ ರಘುನಂದನತೀರ್ಥರು ಪೂಜಿಸಿದರು.
ಇಂದಿಗೆ ತಮ್ಮ ಜೀವನ ಸಾರ್ಥಕವಾಯಿತೆಂದು ಸಂತೋಷ ಪಟ್ಟರು.
ಶ್ರೀ ಚಂದ್ರಭಟ್ಟರಿಗೆ ಮಹಾ ಸಂಸ್ಥಾನದ ವತಿಯಿಂದ ವಿಶೇಷ ರೀತಿಯಲ್ಲಿ ಗೌರವಿಸಿ ಅವರಿಗೆ ಶ್ರೀ ಮಠದಲ್ಲಿ ಗೌರವಯುತ ಅಧಿಕಾರವನ್ನು ಕೊಟ್ಟರು.
" ಶಿಷ್ಯ ಸ್ವೀಕಾರ "
ಮಹಾ ವಿರಕ್ತರೂ, ಜ್ಞಾನಿಗಳೂ ಆದಾ ವಿದ್ವಾನ್ ಶ್ರೀ ವೇಂಕಟಕೃಷ್ಣಾಚಾರ್ಯರಿಗೆ ತುರ್ಯಾಶ್ರಮ ಕೊಟ್ಟು " ಸುರೇಂದ್ರತೀರ್ಥ " ಎಂದು ನಾಮಕರಣ ಮಾಡಿ ದ್ವೈತ ವೇದಾಂತ ದಿಗ್ವಿಜಯ ವಿದ್ಯಾ ಸಾಮ್ರಾಜ್ಯದಲ್ಲಿ ಪಟ್ಟಭಿಷೇಕ ಮಾಡಿ ಶ್ರೀ ಬ್ರಹ್ಮದೇವರ ಕರಾರ್ಚಿತ ಮೂಲರಾಮ; ಶ್ರೀಮದಾಚಾರ್ಯ ಕರಾರ್ಚಿತ ಶ್ರೀ ದಿಗ್ವಿಜಯರಾಮ; ಶ್ರೀ ಜಯತೀರ್ಥ ಕರಾರ್ಚಿತ ಶ್ರೀ ಜಯರಾಮದೇವರ ಪ್ರತಿಮಾ, ವ್ಯಾಸಮುಷ್ಟಿ ಸಹಿತ ವೇದವ್ಯಾಸಾದಿ ಸಮಸ್ತ ದೇವತಾ ಪ್ರತಿಮೆಗಳನ್ನು ನೀಡಿ ಅನುಗ್ರಹಿಸಿದರು.
***
" ಶ್ರೀ ರಘುನಂದನ - 4 "
" ಶ್ರೀ ರಾಮನಿಂದ ಪೂಜೆಗೊಂಡ ಶ್ರೀ ಮೂಲರಾಮನು ಶ್ರೀ ರಾಯರ ಮಠದ ಪರಂಪರೆಯಲ್ಲಿ ಇಂದಿಗೂ ವಿರಾಜಮಾನನಾಗಿ ಪೂಜೆಗೊಳ್ಳುತ್ತಿದ್ದಾನೆಂದು ಈ ಕೆಳಗಿನ ಜ್ಞಾನಿಗಳ ವಚನಗಳು ಖಚಿತ ಪಡಿಸುತ್ತವೆ ".
ಶ್ರೀ ಸುರೇಂದ್ರತೀರ್ಥರು...
ಪರೈಪಹೃತಾ ಮೂಲರಾಮಾರ್ಚಾ
ಗುರ್ವನುಗ್ರಹಾತ್ ।
ಏನಾನೀತಾ ನಮಸ್ತಸ್ಮೈ
ರಘುನಂದನ ಭಿಕ್ಷವೇ ।।
ಮೂಲರಾಮಾರ್ಚಾ
ಗುರ್ವನುಗ್ರಹಾತ್ ।
ಏನಾನೀತಾ ನಮಸ್ತಸ್ಮೈ
ರಘುನಂದನ ಭಿಕ್ಷವೇ ।।
ಶ್ರೀ ಪುರಂದರದಾಸರು "
ಇಂದಿನ ದಿನ ಸುದಿನವಾಯಿತು ।
ಇಂದಿರೇಶ ಮೂಲರಾಮಚಂದ್ರನ ।
ಪದ ಕಮಲಗಳ । ಸು ।
ರೇಂದ್ರ ಮುನಿಯು ತೋರಲು ।।
ಶ್ರೀ ವಿಜಯೀಂದ್ರತೀರ್ಥರು...
ಉರವಣಿಸಿ ಬಾಹ ತಟಕಿಯ ಮಹಾ ।ಕರಗಳ ನಿಮಿಷದಿ ಕತ್ತರಿಸುಯೆಂದು ।ಹಿರಿಯರು ಪೇಳಲು ಇದಿರು ಪೇಳದೆ ಅಸುರೆಯ ।।ಕರಗಳ ಕಡೆದ ವಿಜಯೀಂದ್ರರಾಮ ।ಸರಸಿಜಾಸನ ವಿನುತ ಸಿರಿ ಮೂಲರಾಮ ।।
ಶ್ರೀ ಮಧ್ವಕವಿ ( ಶ್ರೀ ವಿಜಯೀಂದ್ರ ವಿಜಯದಲ್ಲಿ )...
ತದ್ವಂಶೇ ಜನಿತೋ ಜ್ಞಾನಿ
ರಘುನಂದನ ಸಂಜ್ಞಿತಃ ।
ತೇನ ಸಂಪಾದಿತಾ ರಾಮ
ಪ್ರತಿಮಾ ಪರಹಸ್ತಗಾ ।।
ರಘುನಂದನಃ ಸ್ವಶಿಷ್ಯೇಣ
ವಿಪ್ರೇನ ಪ್ರಿಯವಾದಿನಾ ।
ಆನಯಾಮಾಸ ರಾಮಸ್ಯ
ಅರ್ಚಾಂ ಆಂ ಸೀತಯಾ ವಿನಾ ।।
" ಶ್ರೀ ವಾದೀಂದ್ರತೀರ್ಥರು "
ಅನ್ನೈರಪಹೃತಾಮರ್ಚಾಂ
ರಾಮಸ್ಯ ರಘನಂದನಃ ।
ಆಜಹಾರ ಪುನರ್ಮೌಲ್ಯಾತ್
ಶ್ರೀ ಸುರೇಂದ್ರಗುರೋರ್ಗುರುಃ ।।
ಶ್ರೀ ವಾದೀಂದ್ರತೀರ್ಥರು ಶ್ರೀ ಮೂಲರಾಮ ಸ್ತೋತ್ರವನ್ನು ಕನ್ನಡದಲ್ಲಿ..
ಮೂಲರಾಮನ ದಿವ್ಯ
ಮೂರುತಿ ಅರ್ಚಿಸಲೆನ್ನ ।
ಮೇಲು ಮೇಲಂಬೆನಯ್ಯಾ ।।
" ಶ್ರೀ ವಿಜಯರಾಯರು "
ವಸುಧೇಂದ್ರ ಮುನಿಯಿಂದ
ನಾನಾ ಪೂಜೆಯಗೊಂಡು ।
ವಸುಧೆಯೊಳಗೆ ಮೆರೆವ
ವಿಜಯವಿಠ್ಠಲ ಮೂಲರಾಮ ।।
" ಶ್ರೀ ಗೋಪಾಲದಾಸರು "
ಘನ್ನ ಮಹಾ ಮಹಿಮ
ಮೂಲರಾಮ ।
ನಿನ್ನ ಪರಿವಾರ ಸಹಿತ ।
ಎನ್ನ ಗುರು ವಸುಧೇಂದ್ರ ।
ಮುನ್ನ ನಿನ್ನರ್ಚಿಸುವ
ಭಾಗ್ಯವೆಂತೋ ।।
" ಶ್ರೀ ವ್ಯಾಸತತ್ತ್ವಜ್ಞತೀರ್ಥರು "
ವಾಸುದೇವ ಕವಿ
ಸನ್ನುತ ಶರಣಂ ।
ಮೂಲರಾಮ ವರ
ಕರುಣಾಭರಣಮ್ ।।
" ಶ್ರೀ ಶ್ಯಾಮಸುಂದರದಾಸರು "
ಶ್ಯಾಮಸುಂದರ ಮೂಲರಾಮ
ಪದಾರ್ಚಕ ।
ಕಾಮಕಾರ್ಮುಕ ಗಜಸ್ತೋಮ
ಸಿಂಗ ಮಂಗಳಾಂಗ ।।
***
" ಶ್ರೀ ರಘುನಂದನ - 5 "
" ಉಪ ಸಂಹಾರ "
ಬಾದರಾಯಣ - ಮಧ್ವ ಶಾಸ್ತ್ರ ಕೋವಿದರಾದ ಶ್ರೀ ರಘುನಂದನ ತೀರ್ಥರು ನಾಡಿನಾದ್ಯಂತ ಸಂಚರಿಸಿ - ಮಧ್ವ ಮತದ ವಿಜಯ ಪತಾಕೆಯನ್ನು ಹಾರಿಸಿ - ಸಂಚಾರ ಕ್ರಮದಲ್ಲಿ ಹಂಪಿ ಕ್ಷೇತ್ರಕ್ಕೆ ಬಂದು - ತುಂಗಭದ್ರಾ ನದಿ ನಡುಗಡ್ಡೆಯಲ್ಲಿ ವಿರಾಜಮಾನರಾದ ಶ್ರೀ ಪದ್ಮನಾಭ ತೀರ್ಥ - ಶ್ರೀ ಜಯತೀರ್ಥ - ಶ್ರೀ ಕವೀಂದ್ರ ತೀರ್ಥ - ಶ್ರೀ ವಾಗೀಶ ತೀರ್ಥರನ್ನು ದರ್ಶನ ಮಾಡಿ ಹಸ್ತೋದಕ ಸಮರ್ಪಸಿ - ಅಲ್ಲಿಂದ ಚಕ್ರತೀರ್ಥದ ಬಳಿಯಿರುವ ಸುಂದರ ರಮಣೀಯ ಪ್ರದೇಶಕ್ಕೆ ಬಂದು - ಕಾರ್ತೀಕ ಬಹುಳ ಅಷ್ಟಮೀಯಂದು ಲಯ ಚಿಂತನೆ ಗೈಯುತ್ತಾ ವೈಕುಂಠಕ್ಕೆ ಪ್ರಯಾಣ ಬೆಳೆಸಿದರು.
ಭೂದೇವಿಯ ಪುತ್ರಿಯಾದ ಸೀತಾದೇವಿಯ ಹೃದಯ ಕಮಲಕ್ಕೆ ಶ್ರೀ ಮೂಲರಾಮಚಂದ್ರದೇವರ ಪಾದ ಪದ್ಮಗಳಿಗೆ ದುಂಬಿಯಂತಿರುವ; ವೇದ - ವೇದಾಂತ ಮತ್ತು ಇನ್ನಿತರ ವಿದ್ಯೆಗಳಿಗೆ ( ಕಲೆಗಳಿಗೆ ) ಅಲಂಕಾರವಾದ; ಉದಯಿಸುತ್ತಿರುವ ಭಾಸ್ಕರನಂತೆ ತೇಜಸ್ವಿಗಳಾದ; ಅಸದೃಶ ತಪಃಶಕ್ತಿಯಿಂದ ಶ್ರೀ ಮೂಲರಾಮದೇವರನ್ನು ಒಲಿಸಿಕೊಂಡು ಸಂಪಾದಿಸಿದ ಸೌಶೀಲ್ಯಾದಿ ಸದ್ಗುಣ ಸಂಪತ್ತಿನಿಂದ ವಿರಾಜಮಾನರಾದವರು ಶ್ರೀ ರಘನಂದನತೀರ್ಥ ಶ್ರೀಪಾದಂಗಳವರು. ಅವರ ಸ್ಮರಣೆ ಮಾಡಿ ಧನ್ಯರಾಗೋಣ... !!!
ಪರೈಪಹೃತಾ ಮೂಲರಾಮಾರ್ಚಾ
ಗುರ್ವನುಗ್ರಹಾತ್ ।
ಏನಾನೀತಾ ನಮಸ್ತಸ್ಮೈ
ರಘುನಂದನ ಭಿಕ್ಷವೇ ।।
ರಾಗ : ಭೈರವಿ ತಾಳ : ರೂಪಕ
ಪಂಪಾ ಕ್ಷೇತ್ರದಿ ಯಿರುವ
ಶ್ರೀ ರಘುನಂದನ ।। ಪಲ್ಲವಿ ।।
ಹಂಪೆಯ ತುಂಗಾತಟದಿ ಮೆರೆವಾ ।
ಸಂಪದ ಪವನನ ಶಾಸ್ತ್ರದ ಜ್ಞಾನವಿತ್ತು ।
ತಂಪೆಸೆಯುತ ಭವ ಕಂಪನ ಒಡಿಪ ।। ಅ ಪ ।।
ಗುರು ಜಿತಾಮಿತ್ರರು ದಯದಿ -
ಆಶ್ರಮ ನೀಡಲು ।
ಹರುಷಗೊಂಡರಿವರು ತ್ವರದಿ ।
ಪರರಪಹರಿಸಿದ
ಶಿರಿ ಮೂಲರಾಮನ ।
ಗುರು ದಯದಲಿ ಪೊಂದಿ ।
ನಿರುತ ಪೂಜಿಸಿದ ।। ಚರಣ ।।
ಅಲ್ಲಲ್ಲಿ ವಿದ್ವಜ್ಜನರ ಕರೆದೂ -
ಮಧ್ವ ಮತೀಯ ।
ಎಲ್ಲ ಜನಕೆ ದಿವ್ಯ ಬಿರುದೂ ।
ಸಲ್ಲಿಸಿ ದುರ್ಮತರೆಲ್ಲರ ಸೋಲಿಸಿ ।
ನಿಲ್ಲಿಸಿ ಮನವನು
ಹರಿ ಧ್ಯಾನಗೈದಾ ।। ಚರಣ ।।
ಸುಖತೀರ್ಥರ ಶಾಸ್ತ್ರ ನಿತ್ಯ ಪಠಿಸಿ -
ಶ್ರೀ ಸುರೇಂದ್ರರಿಗೆ ।
ಅಖಿಲಾ ವಿಧಿಯಲ್ಲಿ
ಸಂನ್ಯಾಸ ಸಲಿಸೀ ।
ಮುಕುತಿ ಪ್ರದಾಯಕ
ಶ್ರೀ ಲಕುಮೀಶನ ।
ಸುಕರದಲೀ ಯಿತ್ತು
ಸಕಲರ ಪೋಷಿಸೆಂದಾ ।। ಚರಣ ।।
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
*******
No comments:
Post a Comment