Wednesday 1 May 2019

sudharmendra teertharu mantralaya 1872 matha rayara mutt yati 30 pushya bahula panchami ಸುಧರ್ಮೇಂದ್ರತೀರ್ಥರು




YathigaLu : Sri Sudharmendra theertharu
Punya dina : Pushya Krishna Panchami

Mutt / Parampare : SRS Mutt
Pontiff # : 30
Duration : 1861-1872

Poorvashrama name-Sri Ganeshacharyari, VyakaraNi
Predecessor : Sri Sujnanendra Theertharu
Successor : Sri Sugunendra Theertharu
Brindavana : Mantralaya
River : Tunga Bhadra

Dhyana Shloka 



ಸುಧಾಂಶುಮಿವ ಸಂಭೂತಂ ಸುಜ್ಞಾನೇಂದ್ರ ಸುಧಾಂಬುಧೌ ।
ಸುಧೀ ಸಂದೋಹ ಸಂಸೇವ್ಯಂ ಸುಧರ್ಮೇಂದ್ರ ಗುರುಂಭಜೇ ।।

sudhAMshumiva saMbhootaM 
sujnAnEndra sudhAMbhudau |
sudhEsaMdOha saMsEvyaM 

sudharmEndra guruM bhajE ||

He was the first to attain brindAvanA at manthrAlaya after shri vAdIndra tIrtharu. He was a contemporary of appAvaru and a close friend. Once in his pUrvAshrama when he prostrated to appAvaru, being the aparOxsha jnAni he was, appAvaru commented that from the next day, appAvaru would have to prostrate to him indicating that he was going to become a sanyAsi, which came true.


ಶ್ರೀಮಾನ್ ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಮಹಾನ ತಪಸ್ವಿಗಳಾದ , ರುದ್ರಾಅಂಶ ಸಂಭೂತರಾದ,  ರಾಯರಾ ಮೃತಿಕೆಯಿಂದ ಕುಷ್ಠ ರೋಗಾದಿಗಳ್ಳನು ಪರಿಹರಿಸಿದ ,  ಅಪರೋಕ್ಷ ಜ್ಞಾನಿಗಳಾದ ಶ್ರೀ ಇಭರಾಮಪುರ ಅಪ್ಪಾವರ ಪರಮಾಮಿತ್ರರಾದ ಶ್ರೀ ಶ್ರೀ ಸುಧರ್ಮೇಂದ್ರತೀರ್ಥರ ಆರಾಧನೆ
******

|| ಶ್ರೀ ಸುಧರ್ಮೇಂದ್ರತೀರ್ಥ ಗುರುಭ್ಯೋ ನಮಃ ||

ಮಧ್ವಾಚಾರ್ಯ ಮೂಲಮಹಾಸಂಸ್ಥಾನ ದಕ್ಷಿಣಾಧಿ ಕವೀಂದ್ರಮಠ ಈಗಿನ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಮಹಾತಪಸ್ವಿಗಳಾದ   ಶ್ರೀಸುಜ್ಞಾನೇಂದ್ರತೀರ್ಥರ ವರಕುಮಾರರಾದ ಶ್ರೀಸುಧರ್ಮೇಂದ್ರತೀರ್ಥರ ಆರಾಧನೆ.

ಹೆಸರು : ವಿದ್ವಾನ್ ಶ್ರೀ ಗಣೇಶಾಚಾರ್ಯರು
ಆಶ್ರಮ ಗುರುಗಳು : ಶ್ರೀ ಸುಜ್ಞಾನೇಂದ್ರತೀರ್ಥರು
ಆಶ್ರಮ ನಾಮ : ಶ್ರೀ ಸುಧರ್ಮೇಂದ್ರತೀರ್ಥರು
ಆಶ್ರಮ ಶಿಷ್ಯರು : ಶ್ರೀ ಸುಗುಣೇಂದ್ರತೀರ್ಥರು
ಕಾಲ : ಕ್ರಿ ಶ 1861 - 1872

ಸಮಕಾಲೀನ ಹರಿದಾಸರು ಮತ್ತು ಅಪರೋಕ್ಷ ಜ್ಞಾನಿಗಳು :
ಇಭರಾಮಪುರ ಅಪ್ಪಾವರು, ಯೋಗಿ ನಾರಾಯಣಾಚಾರ್ಯ,ಯಲಮೇಲಿ ಹಾಯಗ್ರೀವಾಚಾರ್ಯ, ಶ್ರೀ ಶೇಷದಾಸರ ,ಶ್ರೀ ಸುರಪುರದ ಆನಂದದಾಸರು ,ಶ್ರೀ ಕೃಷ್ಣಾವಧೂತರು , ಶ್ರೀ ಗುರು ಜಗನ್ನಾಥದಾಸರು, ಶ್ರೀ ವಿಜಯರಾಮಚಂದ್ರದಾಸರು, ಶ್ರೀ ಜಯೇಶವಿಠ್ಠಲರು.

ಶ್ರೀ ಅಪ್ಪಾವರ ಭವಿಷ್ಯವಾಣಿ :

ಅಪರೋಕ್ಷ ಜ್ಞಾನಿಗಳಾದ ಶ್ರೀ ಅಪ್ಪಾವರು ಪಂಚಮುಖಿ ಮುಖ್ಯಪ್ರಾಣ ಆರಾಧಕರು , ನಿರಂತರ ಶ್ರೀಮನ್ ನ್ಯಾಯಸುಧಾ ಪರಿಮಳ ಗ್ರಂಥದ ಪಾರಾಯಣದಿಂದ ಅವರು ನುಡಿದ ಪ್ರತಿಯೊಂದು ಮಾತು ಸತ್ಯವಾಗುತ್ತಿತು. 
 
ಶ್ರೀ ಗಣೇಶಾಚಾರ್ಯರು ಮಂತ್ರಾಲಯ ಅಪ್ಪಾವರ ಕಾಲದಲ್ಲಿ ಇದ್ದ ಮಹಾ ಪಂಡಿತರು. ಅಪ್ಪಾವರು ಶ್ರೀ ರಾಯರ ದರ್ಶನಕೆಂದು ಬಂದಿರುತ್ತಾರೆ. ಅಪ್ಪಾವರನು ಕಂಡು ದೀರ್ಘ ದಂಡ ನಮಸ್ಕಾರ ಮಾಡಿದ ಗಣೇಶಾಚಾರ್ಯರು. ನಮಸ್ಕಾರ ಮಾಡಿದಮೇಲೆ ಅಪ್ಪಾವರು ಅವರಿಗೆ ಇದು ನೀನು ನನಗೆ ಮಾಡುವ ಕೊನೆಯ ನಮಸ್ಕಾರ ನಾಳೆಯಿಂದ ನಾನು ನಿನಗೆ ಮಾಡುತ್ತೆನೆ ಅಂತ ಮಾರ್ಮಿಕವಾಗಿ ಆಚಾರ್ಯರಿಗೆ ಹೇಳುತ್ತಾರೆ.
 
ಮರುದಿನದ ಸಾಯಂಕಾಲ ಸಮಯಕೆ ಶ್ರೀಮಠದಿಂದ ಗಣೇಶಾಚಾರ್ಯರಿಗೆ ಈಗಲೇ ನಂಜನಗೂಡುಗೆ ಹೊರಡ ಬೇಕು, ಶ್ರೀ ಸುಜ್ಞಾನೇಂದ್ರ ತೀರ್ಥರಿಗೆ ದೇಹ ಅಲಸ್ಯವಾಗುತ್ತಿದೆ ಅವರು ಮುಂದಿನ ಜವಾಬ್ದಾರಿ ನಿಮಗೆ ವಹಿಸಿದರೆವೆಂದು ಹೇಳಿದ ತತ್ಕ್ಷಣ ನಂಜನಗೂಡುಗೆ ಪ್ರಯಾಣ ಬೆಳಸಿ ಮುಂದೆ ಅವರೇ ಪರಮಹಂಸ ಪೀಠದಲ್ಲಿ  ವಿರಾಜಾಮಾನರಾಗಿ ಸುಧರ್ಮೇಂದ್ರತೀರ್ಥರೆಂದು ಜಗನ್ಮಾನ್ಯರಾಗಿದರೆ.

ಸುಧರ್ಮೇಂದ್ರತೀರ್ಥರು ರಾಯರ ಮೃತಿಕ್ಕೆಯಿಂದ ಭಕ್ತರೊಬ್ಬರ ಕುಷ್ಠರೋಗ ಪರಿಹರಮಾಡಿ ಅನುಗ್ರಹಿಸಿದು ಇತಿಹಾಸ. ಶ್ರೀಗಳು ಬಹುಕಾಲ ಮಂತ್ರಾಲಯವೇ ತಮ್ಮ ಕಾರ್ಯಕ್ಷೇತ್ರವನ್ನಾಗಿ ಬಂದ ಭಕುತರ ದುರಿತಗಳಪರಿಹಾರ ಮಾಡಿ ವಿಶೇಷವಾಗಿ ರಾಯರ ಕರುಣೆಗೆ ಪಾತ್ರರಾಗಿದ್ದಾರೆ. ಶ್ರೀಗಳು ಮುಂದೆ ಶ್ರೀ ಸುಗುಣೇಂದ್ರತೀರ್ಥರಿಗೆ ಸಂಸ್ಥಾನದ ಜವಾಬ್ದಾರಿ ವಹಿಸಿ ಪುಷ್ಯ ಬಹುಳ ಪಂಚಮೀಯಂದು ಮಂತ್ರಾಲಯದಲ್ಲಿ ಬೃಂದಾವನ ಪ್ರವೇಶ ಮಾಡಿದಾರೆ. 

ಸುಧಾಂಶುಮಿವ ಸಂಭೂತಂ ಸುಜ್ಞಾನೇಂದ್ರ ಸುಧಾಂಬುಧೌ |
ಸುಧೀ ಸಂದೋಹ ಸಂಸೇವ್ಯಂ ಸುಧರ್ಮೇಂದ್ರ ಗುರುಂಭಜೇ ||
 
ಶ್ರೀ ಇಭರಾಮಪುರಾಧೀಶ
ವಿಷ್ಣುತೀರ್ಥಾಚಾರ್ಯ ಇಭರಾಮಪುರ.
*****

" ಶ್ರೀ ಸುಧರ್ಮೇಂದ್ರ - 1 "
" ಶ್ರೀ ಮಹಾರುದ್ರದೇವರ ಅಂಶ ಸಂಭೂತರಾದ ದುರ್ವಾಸ ಮುನಿಗಳ ಅವತಾರರು - ಶ್ರೀ ಸುಧರ್ಮೇಂದ್ರತೀರ್ಥರು "
" ದಿನಾಂಕ : 02.02.2021 - ಶ್ರೀ ಶಾರ್ವರಿ ನಾಮ ಸಂವತ್ಸರ ಉತ್ತರಾಯಣ ಹೇಮಂತ ಋತು ಪುಷ್ಯ ಕೃಷ್ಣ ಪಂಚಮೀ ಮಂಗಳವಾರ - ಶ್ರೀ ಸುಧರ್ಮೇಂದ್ರತೀರ್ಥರ ಆರಾಧನಾ ಮಹೋತ್ಸವ, ಶ್ರೀ ಕ್ಷೇತ್ರ ಮಂತ್ರಾಲಯ "
" ಶ್ರೀ ಗುರು ತಂದೆ ಗೋಪಾಲವಿಠ್ಠಲ " ರ ಕಣ್ಣಲ್ಲಿ...
ನೋಡಿರೈ ಸುಧರ್ಮೇಂದ್ರ -
ಗುರುಗಳ ನೋಡಿರೈ ।
ಈಡು ಯಿಲ್ಲದವರಾನಾಡೊಳಗೆ ।
ಬೇಡಿದಾಭೀಷ್ಟ ನೀಡುತಲಿ -
ನಲಿದಾಡುತಲಿ ಬರುವರಾ ।। ಪಲ್ಲವಿ ।।
ಸಪ್ತ ಪಂಚರುಣೋದಯ ಕಾಲದಿ ।
ನಿತ್ಯ ಸ್ನಾನವ ಮಾಡಿ ।
ಎಪ್ಪತ್ತೆರಡು ಮಹಾ -
ಮಂತ್ರಗಳನು ।
ನಿತ್ಯ ಬಿಡದೆ ಮಾಡಿ -
ಭೃತ್ಯ ಜನರಿಗೆ ।।
ಚಿತ್ತ ಪೂರ್ಣರ ಚಿತ್ತ -
ಶಾಸ್ತ್ರವ ನೀಡಿ ।
ಕ್ಷೇತ್ರ ಮೂರ್ತಿಯಾ -
ಮೂರ್ತಿ ಮೂರ್ತಿಯಾ ।
ತೀರ್ಥ ಮೂರ್ತಿಯಾ -
ಸ್ಫೂರ್ತಿಯಲಿಡುತಿಹರು ।। ಚರಣ ।।
ಮೂರು ನಾಲ್ಕು ಚಾರು ಅನ್ನವ ।
ಮೂರು ಈರರಿ ಗುಣಿಸಿ ।
ಮೂರು ಅನ್ನವಾ ಮೂಲರಾಮಗೆ ।
ಪಾರ ಸುರರಿಗೊಂದು ।।
ಚಿರ ಪಿತೃಗಳಿಗೊಂದು -
ಪಶುವಿಗೆ ಭೂಸುರರಿಗೆ ವೊಂದು ।
ಚಾರು ಚತುರಾನ್ನವ ಷಡ್ರಸಗಳ ।
ಆರು ನಾಲ್ಕು ಸಾರರುಣಿಸುವರಾ ।। ಚರಣ ।।
ಆರು ಆರು ಎರಡು -
ಸಾವಿರ ನಾಡಿಗಳಲಿ ।
ಹರಿಯಾ ಆರು -
ನಾಲ್ಕು ನೂರರಿಂರೆನ ।
ಸಾರದಿಂದಲಿ ತುತಿಯಾ ।
ಬ್ಯಾರೆ ಬ್ಯಾರೆ ಸ್ವರ ವ್ಯಂಜನದಲಿ ।।
ಸಾರಭೋಕ್ತ್ರನ ಮತಿಯಾ ।
ಸಾರ ಗುರು ತಂದೆ ಗೋಪಾಲವಿಠ್ಠಲನ್ನ ।
ಚಾರು ಚರಣವ ಸೇರಿ ಭಜಿಪರಾ ।। ಚರಣ ।।
ಶ್ರೀ ಕ್ಷೇತ್ರ ಮಂತ್ರಾಲಯದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಪರಮ ಪವಿತ್ರ ಸನ್ನಿಧಾನದಲ್ಲಿ ಬೃಂದಾವನಸ್ಥರಾಗಿರುವ - ಜ್ಞಾನ, ಭಕ್ತಿ, ವೈರಾಗ್ಯ ಪೂರ್ಣರಾದ ಮಹಾ ತಪಸ್ವಿಗಳೂ - ಶ್ರೀ ರುದ್ರದೇವರ ( ಶ್ರೀ ದುರ್ವಾಸ ಮುನಿಗಳ ) ಸಂಭೂತರೆಂದು ಜ್ಞಾನಿಗಳಿಂದ ಮಾನ್ಯರಾದವರು.
ಶ್ರೀ ಸುಧರ್ಮೇಂದ್ರತೀರ್ಥರು.ಗುರುವರ್ಯರೇ!
ನೀವು ಕರ್ಮಂದಿಗಳಿಂದ ನಮಸ್ಕೃತರಾಗಿರುವಿರಿ ಅಥವಾ ಪರಮಹಂಸ ಮಂಡಲಿಯಿಂದ ವಂದ್ಯನಾದ ಶ್ರೀ ಮಹಾರುದ್ರದೇವರ ಧನಸ್ಸನ್ನು ಭೇದಿಸಿ ಜಗನ್ಮಾತೆಯಾದ ಸೇತಾದೇವಿಯ ಕರ ಪಿಡಿದ ಶ್ರೀ ಮೂಲ ರಾಮದೇವರ ಪಾದ ಕಮಲಾರಾಧಕರಾಗಿ ಸರ್ವದಾ ಶ್ರೀ ಮೂಲ ರಾಮಚಂದ್ರನಿಗೆ ಸಮರ್ಪಿತವಾದ ತುಳಸೀ ಮಾಲೆಯನ್ನು ಧರಿಸಿ ಕಂಗೊಳಿಸುತ್ತಿದ್ದೀರಿ ಮತ್ತು ಮಮತಾದಿ ದೋಷ ರಹಿತರಾಗಿದ್ದೀರಿ.
ಅಂತೆಯೇ ಪವಿತ್ರಾತ್ಮರಾಗಿದ್ದೀರಿ.
ಸ್ವಾಮೀ ಸುಧರ್ಮೇಂದ್ರ ಗುರುವರ್ಯರೇ!
ನೀವು ಶ್ರೀ ಮಹಾರುದ್ರದೇವರ ಅಂಶ ಸಂಭೂತರಾದ ಶ್ರೀ ದುರ್ವಾಸ ಮುನಿಗಳ ಅವತಾರರಾಗಿದ್ದೀರಿ ಮತ್ತು ಶ್ರೀ ಹರಿಗೆ ಪ್ರೀತಿಕರವಾದ ಭಾಗವತ ಧರ್ಮದಲ್ಲಿ ನಿರತರಾಗಿದ್ದೀರಿ.
ಸ್ವಾಮೀ!
ನೀವು ಭಕ್ತ ಜನರ ಸಕಲ ಮನೋಭೀಷ್ಟಗಳನ್ನೂ ದಯಪಾಲಿಸುವರಾಗಿದ್ದೀರಿ ಹಾಗೂ ಶ್ರೀ ಕ್ಷೇತ್ರ ಮಂತ್ರಾಲಯ ವಾಸಿಗಳಾಗಿರುವಿರಿ.
ಸಕಲ ಪುರುಷಾರ್ಥಗಳನ್ನೂ ಕರುಣಿಸುವ ಸರ್ವ ಮಂತ್ರ ಪ್ರತಿಪಾದ್ಯನಾದ ಪರಮಾತ್ಮನಿಗೆ ಆಲಯರಾಗಿದ್ದೀರಿ ಅಂದರೆ ಆವಾಸಸ್ಥಾನರಾಗಿದ್ದೀರಿ.
ಇಂತು ಮಹಾ ಮಹಿಮೋಪೇತರಾಗಿರುವ ಶ್ರೀ ಕಾಂತಿ ಸಂಪನ್ನರೂ - ಸಂಪದ್ಭರಿತರೂ ಆದವರು ಶ್ರೀ ಸುಧರ್ಮೇಂದ್ರತೀರ್ಥ ಗುರುಪಾದರು.
" ಶ್ರೀ ಸುಧರ್ಮೇಂದ್ರತೀರ್ಥರ ಸಂಕ್ಷಿಪ್ತ ಮಾಹಿತಿ "
ಹೆಸರು : ವಿದ್ವಾನ್ ಶ್ರೀ ಗಣೇಶಾಚಾರ್ಯರು
ಶಾಖೆ : ಯಜುಶ್ಯಾಖೆ
ಗೋತ್ರ : ಭಾರದ್ವಾಜ
ವಂಶ : ಷಾಷ್ಟಿಕ
ಅಂಶ : ಶ್ರೀ ದುರ್ವಾಸ ಮುನಿಗಳು
ಕಕ್ಷೆ : 5
ಕುಲ ಗುರುಗಳು : ಶ್ರೀ ರಾಘವೇಂದ್ರತೀರ್ಥರು
ಆಶ್ರಮ ಗುರುಗಳು : ಶ್ರೀ ಸುಜ್ಞಾನೇಂದ್ರತೀರ್ಥರು
ಆಶ್ರಮ ನಾಮ : ಶ್ರೀ ಸುಧರ್ಮೇಂದ್ರತೀರ್ಥರು
ಆಶ್ರಮ ಶಿಷ್ಯರು : ಶ್ರೀ ಸುಗುಣೇಂದ್ರತೀರ್ಥರು
ಕಾಲ : ಕ್ರಿ ಶ 1861 - 1872
ಆಪ್ತಮಿತ್ರರು :
ಅಪರೋಕ್ಷಜ್ಞಾನಿಗಳೂ -ಶ್ರೀ ಮಂತ್ರಾಲಯ ಪ್ರಭುಗಳ ಚಿತ್ತಜ್ಞರೂ ಆದ ಶ್ರೀ ಇಭರಾಮಪುರ ಕೃಷ್ಣಾಚಾರ್ಯರು
ಸಮಕಾಲೀನ ಹರಿದಾಸರು :
ಶ್ರೀ ಶೇಷದಾಸರ - ಶ್ರೀ ಸುರಪುರದ ಆನಂದದಾಸರು - ಶ್ರೀ ಕೃಷ್ಣಾವಧೂತರು - ಶ್ರೀ ಗುರು ಜಗನ್ನಾಥದಾಸರು - ಶ್ರೀ ವಿಜಯರಾಮಚಂದ್ರದಾಸರು - ಶ್ರೀ ಜಯೇಶವಿಠ್ಠಲರು.
ಆರಾಧನೆ : ಪುಷ್ಯ ಬಹುಳ ಪಂಚಮೀ
ಮೂಲ ಬೃಂದಾವನ
ಸ್ಥಳ : ಶ್ರೀ ಕ್ಷೇತ್ರ ಮಂತ್ರಾಲಯ
" ಶ್ರೀ ಸುಗುಣೇಂದ್ರತೀರ್ಥರು ".....
ಸುಧಾಂಶುಮಿವ ಸಂಭೂತಂ
ಸುಜ್ಞಾನೇಂದ್ರ ಸುಧಾಂಬುಧೌ ।
ಸುಧೀ ಸಂದೋಹ ಸಂಸೇವ್ಯಂ
ಸುಧರ್ಮೇಂದ್ರ ಗುರುಂಭಜೇ ।।
***
" ಶ್ರೀ ಸುಧರ್ಮೇಂದ್ರ - 2 "
।। ಶ್ರೀ ಕೃಷ್ಣಾವಧೂತ ಕವೀಶ ವಿರಚಿತಃ
ಸುಧರ್ಮೇಂದ್ರ ಮಹೋದಯಃ ।।
ಶ್ರೀ ರಾಮಾಯ ನಮಃ ಪುನಃ ಪುನರಸೌ
ದದ್ಯಾತ್ ಸಮುದ್ಯದ್ಧಿಯಂ ವಾಣೀಂ
ಚಾಮೃತಧೋರಣೀಂ ಗುಣಲವಾನ್
ಸ್ತೋತುಂ ಗುರೋಃ ಪ್ರಾರಭೇ ।
ಯಸ್ಯಾಲಂ ಜಗತಿ ಪ್ರಕೃಷ್ಟಯಶಸಾಂ
ಧಾಟೀಭಿರಾಪಾಂಡರೇ ಶೇಕುರ್ವಸ್ತು
ವಿವೇಚನೇ ನ ಕವಯಃ
ಸ್ತೋತುಂ ಗುಣಾನ್ ಕಿಂ ಪುನಃ ।। 1 ।।
ಪ್ರಪಂಚದಲ್ಲಿರುವ ಕವಿಗಳೆಲ್ಲ ಯಶಸ್ಸಿನ ಬೆಳದಿಂಗಳಿನಿಂದ ಕೂಡಿದ ಗುರುಗಳ ಗುಣವನ್ನು ಸ್ತುತಿಸಲು ಸಮರ್ಥರಾಗಲಿಲ್ಲವೋ; ಅಂಥಹಾ ಗುರುಗಳ ಗುಣಗಳಂಶವನ್ನು ವರ್ಣಿಸಲು ಅಮೃತಕ್ಕೆ ಸಮಾನವಾದ ವೈಭವದಿಂದ ಕೂಡಿದ ಬುದ್ಧಿಯನ್ನು ಶ್ರೀ ರಾಮ ಕೊಡಲಿ!
ರಾಮ ತ್ವತ್ಕರುಣಾಮಬಾಧಸರಣಾಂ
ಯಾಚೇsದ್ಯ ಪೂರ್ವಾಧಿಕಾಂ
ಕಸ್ತೇ ವತ್ಸ ಸಮಾಗತೋ ಹಿ
ಸಮಯಃ ಚಿಂತಾಪ್ರದಸ್ತಾದೃಶಃ ।
ಕಾಂಶ್ಚಿತ್ತೋತುಮಹಂ ಯತೇ
ಗುಣಲವಾನ್ಮಂದಸ್ಸುಧರ್ಮೇಂದ್ರಗಾನ್
ಇತ್ಯಾಕರ್ಣ್ಯಂ ಕರಂ ಸ ಮೂರ್ಧ್ನಿ
ನಿದಧೌ ಸ್ತೋತುಂ ತತಃ ಪ್ರೋತ್ಸಹೇ ।। 2 ।।
ಶ್ರೀರಾಮನಿಗೆ ಹೇಳಿದೆ..
ಓ ರಾಮನೇ! ನಿನ್ನ ಕರುಣೆ ಹಿಂದಿಗಿಂತ ಹೆಚ್ಚು ನನ್ನಲ್ಲಾಗಬೇಕೆಂದು!
ಶ್ರೀರಾಮ ಕೇಳಿದ..
ಏಕಿಂಥಹ ಕಾತರ? ಎಂದು.
ನಾನು ಹೇಳಿದೆ..
" ಶ್ರೀ ಸುಧರ್ಮೇಂದ್ರರ ಗುಣಗಳನ್ನು ಬಣ್ಣಿಸಲು ದುಡುಕಿದ್ದೇನೆ " ಎಂದು.
ಇದನ್ನು ಕೇಳಿದ ಶ್ರೀರಾಮ ಕೈದಾವರೆಗಳಿಂದ ತಲೆಯನ್ನು ನೇವರಿಸಿದ.
ಆದ್ದರಿಂದ ಶ್ರೀ ಸುಧರ್ಮೇಂದ್ರ ಗುರುಗಳ ಸ್ತೋತ್ರ ಮಾಡ ಹೊರಟಿದ್ದೇನೆ.
ಮೋದಧ್ವಂ ಕವಿತಾಲತಾಮೃತರಸಂ
ಸಂಸೇವ್ಯ ಮೇ ಸೂರಯಃ ಪೂರ್ವೇಷಾಂ
ವಿದುಷಾಂ ಪ್ರಬಂಧ ರಚನಾ
ಕಿಂ ನಾಸ್ತಿ ಖೋಕತ್ರಯೇ ।
ನಿಸ್ಸಾರಾಶ್ರಯಣಾ ಪುರಾತನ
ಕೃತಿಃ ವರ್ಣನೀಯ೦ ಪರಂ
ಸೈಷಾ ಮೇ ಸರಸಾಶ್ರಿತಾ ಖಲು
ಯಯಾ ಭದ್ರಾ ಸುಧರ್ಮೇಂದ್ರಭೂಃ ।। 3 ।।
ಓ ವಿದ್ವಾಂಸರೇ! ಅದೇ ಹಳಬರ, ಅದೇ ಹಳೆಯದಾದ ಕೃತಿಯ ಚಿಂತನೆಯಲ್ಲಿ ಕಾಲ ಕಳೆಯುವಿರೇಕೆ?
ಭೂಮಿಯಲ್ಲಿ ಊರಿ ನಳನಳಿಸುತ್ತಾ ಬೆಳೆದ ಶ್ರೀ ಸುಧರ್ಮೇಂದ್ರರ ಕಾವ್ಯವೆಂಬ ಬಳ್ಳಿಯಲ್ಲಿನ ಅಮೃತವನ್ನು ಆಸ್ವಾದಿಸಿ!
ಕೈಲಾಸವಾಸೀ ಭೂಧರಾನ್ ಸೌರಗಿರೌ
ಹರ್ಮ್ಯಾಯತಿ ಪ್ರೇಯಸೀ ದರ್ಶಂ
ಪಶ್ಯತಿ ಚಂದ್ರಿಕಾಂ ನಿಜ
ಸಭಾಚಾರಂ ಚರತ್ಯಂಬರೇ ।
ದಿಕ್ಕಾಂತಾಸು ದುಕೂಲತಿ-
ಸ್ತನತಟೀಷ್ವಾಸಾಂ ಪಾಟೀರಾಯತೇ
ನರ್ನರ್ತಿ ತ್ರಿದಿವೇ ನಟೀವ
ನಿತರಾಂ ಕೀರ್ತಿಸ್ಸುಧರ್ಮೇಂದ್ರಭೂಃ ।। 4 ।।
ಶ್ರೀ ಸುಧರ್ಮೇಂದ್ರರ ಕೀರ್ತಿ ಬೆಟ್ಟಗಳನ್ನು ಹಣೆಗಣ್ಣನ ಮನೆಯಾಗಿಸುತ್ತವೆ. ಸಗ್ಗವನ್ನೂ ಕೇಳುಗರ ಮನೆಯಾಗುತ್ತದೆ. ಬೆಳದಿಂಗಳನ್ನು ನಖೆಯಾಗಿಸುತ್ತದೆ. ಆಕಾಶದಲ್ಲಿಯೂ ಸಭೆ ನಡೆವಂತೆ ಮಾಡುತ್ತದೆ. ದಿಸೆಗಳಿಗೆ ಬಟ್ಟೆಯಾಗುತ್ತದೆ. ಬೆಟ್ಟಗಳಂತೆ ಚಿರಕಾಲ ಬಾಳುತ್ತದೆ. ಸಗ್ಗದಲ್ಲಿನ ನಟಿಯಂತೆ ನರ್ತಿಸುತ್ತದೆ.
ಸುಧರ್ಮೇಂದ್ರಮುಪಾಶ್ರಿತ್ಯ
ಶೋಭತಾಂ ಕವಿತಾ ಮಮ ।
ಸದೃಢೋಪಘ್ನಸಂಪದ್ಧಾ
ಸುದೃಢಂ ಶೋಭತೇ ಲತಾ ।। 5 ।।
ಶ್ರೀ ಸುಧರ್ಮೇಂದ್ರರನ್ನಾಧರಿಸಿದ ನಾನಾ ಕವಿತೆ ಫಲವತ್ತಾದ ಭೂಮಿಯನ್ನಾಧರಿಸಿದ ನಳಿನಳಿಸುವ ಬಳ್ಳಿಯಂತೆ ಶೋಭಿಸಲಿ.
ಸತ್ಕವೇಃ ಕಾವ್ಯಮಾಶ್ರಿತ್ಯ
ನೇತಾ ಕಲ್ಪಂ ಸ ಜೀವತಿ ।
ಕಾವ್ಯಂ ಚಾಪಿ ಮಹಾನೇತೃ
ಸಂಸರ್ಗಾಚ್ಚಿರ ಜೀವಿತಮ್ ।। 6 ।।
ಕವಿತೆ ಗುಣವಂತವಾದಾಗ ಬಹಳ ಕಾಲ ಬಾಳುತ್ತದೆ. ಗುಣವಂತ ಕವಿತೆಯನ್ನು ಬಹಳ ಕಾಲ ಬಾಳುವಂತೆ ಮಾಡುತ್ತದೆ.
ಸತ್ಕಾವೇರ್ವಾಜ್ಮಯಾದರ್ಶ-
ಮವಲಂಬ್ಯ ಯಶೋsಮಲಮ್ ।
ನಾಯಕಸ್ಯ ಕವೇರ್ವಾಪಿ
ಚಿರಂ ಜೀವತಿ ನಿಶ್ಚಲಮ್ ।। 7 ।।
ಕಟ್ಟಿಗನ ಮಾತೆಂಬ ಕನ್ನಡಿಯನ್ನಾಧರಿಸಿ ಕವಿಯ ಮತ್ತು ನಾಯಕನ ಯಶಸ್ಸು ಬಹು ಕಾಲ ಬಾಳುತ್ತದೆ.
ಅತೋಹಂ ತ್ರೈಲೋಕ್ಯ ಪ್ರಕಟಿತ
ಸುಧರ್ಮೇಂದ್ರಯತಿನೋ ಮುಹುಃ
ಶ್ರಾವಂ ಶ್ರಾವಂ ಗುಣಮಣಿ-
ಮನರ್ಘ್ಯಂ ಚಿರತರಮ್ ।
ಯತೇ ಸ್ತೋತುಂ ಕೃಷ್ಣಃ
ಕವಿರಹವ ಮುಗ್ಧೋsಪಿ ಬಹುಧಾ
ಪ್ರಬಂಧಾನಾಂ ಕರ್ತಾ
ರಘುಪತಿಪದೈಕೋರು ಶರಣಃ ।। 8 ।।
ಆದುದರಿಂದ ಗುರುಗಳ ಗುಣಗಳನ್ನು ಹೇಳಲು ಆಸಕ್ತನಾದರೂ; ರಾಮನ ಪಾದಗಳಲ್ಲಿ ಅನನ್ಯ ಭರವಸೆ ಇಟ್ಟು ಬಹಳ ಗ್ರಂಥಗಳನ್ನು ರಚಿಸಿದ " ಕೃಷ್ಣ " ನೆಂಬ ಕವಿಯು ಲೋಕದಲ್ಲಿ ವ್ಯಾಪಿಸಿದ ಶ್ರೀ ಸುಧರ್ಮೇಂದ್ರರ ಗುಣಗಳನ್ನು ಕೇಳಿ ಕೇಳಿ ಸ್ತುತಿಸಲು ಬಯಸುತ್ತೇನೆ.
ಸಾರಸ್ಯಾದ್ವಾಕವೇರ್ನೇತು-
ರ್ಗೌರವಾದ್ವಾವಿಮತ್ಸರಾತ್ ।
ಸಾರಸ್ಯಾದ್ವಾದಯಾಲುತ್ವಾತ್
ಸ್ವೀಕುರ್ವಂತು ಕೃತಿ ಬುಧಾಃ ।। 9 ।।
ನಾಯಕನ ಗುಣಗಳಿಂದಲೋ; ಕಟ್ಟಿಗನ ರಸವತ್ತಾದ ಮಾತುಗಳಿಂದಲೋ; ಕವಿಯ ಮೇಲಿನ ಗೌರವದಿಂದಲೋ ವಿದ್ವಾಂಸರು ಈ ಕೃತಿಯನ್ನು ಸ್ವೀಕರಿಸಲಿ.
ಸುಧರ್ಮೇಂದ್ರಶ್ಚಂದ್ರೋ ನಿವಸತು
ಚಿರಾಯು ಕ್ಷಿತಿತಲೇ ಸಹಸ್ರಾಕ್ಷಸ್ಸಾಕ್ಷಾ-
ದವತರಿತ ಊರ್ವೀಸುರತಯಾ ।
ರಘೂತ್ತಂಸಸ್ಯಾರ್ಚಾಂ ಪುನರಪಿ
ವಿಧಾತುಂಕಿಮು ನಚೇತ್
ಸುಧರ್ಮೇಂದ್ರಾತ್ಯಾಖ್ಯಾಂ ನ ಭಜತಿ
ಕುತೋsನ್ಯೋ ಭುವಿ ಜನಃ ।। 10 ।।
ಶ್ರೀ ಸುಧರ್ಮೇಂದ್ರರೆಂಬ ಚಂದ್ರ ಈ ಭೂಮಿಯಲ್ಲಿ ಚಿರಕಾಲ ನೆಲೆಸಿರಲಿ. ಯಾರ ಶ್ರೀ ರಾಮ ಪೂಜಾ ವೈಭವವನ್ನು ನೋಡಲು ಇಂದ್ರನೇ ಸಾಕ್ಷಾತ್ತಾಗಿ ಇಳಿದು ಬರುತ್ತಾನೋ ಅಂಥಹಾ ಶ್ರೀ ಸುಧರ್ಮೇಂದ್ರರು ಈ ಭೂಮಿಯಲ್ಲಿ ತಮ್ಮ ಹೆಸರಿಗೆ ತಕ್ಕ ಗುಣಗಳನ್ನು ಪಡೆದಿದ್ದಾರೆ. ಅಂಥಹವರು ಅತ್ಯಂತ ಅಪರೂಪವಲ್ಲವೇ?
ಮಹಾ ಹಂಸೋಪನಿಷತ್ತಿನಲ್ಲಿ ಎಲ್ಲಾ ದೇವತೆಗಳೂ ಯತಿಯಲ್ಲಿ ಸನ್ನಿಹಿತರಾಗಿರುತ್ತಾರೆ ಎಂದು ಹೇಳಿದೆ. ಹಂಸ ಮತ್ತು ಪರಮಹಂಸರಲ್ಲಿ ವಿಶೇಷವಾಗಿ ಸನ್ನಿಹಿತರಾಗಿರುತ್ತಾರೆ. ಆದ್ದರಿಂದ ಯತಿಯನ್ನು ಪೂಜಿಸಿದರೆ, ಧ್ಯಾನಿಸಿದರೆ ಎಲ್ಲಾ ದೇವತೆಗಳನ್ನೂ ಪೂಜಿಸಿದಂತೆ ಮತ್ತು ಧ್ಯಾನಿಸಿದಂತೆ ಆಗುತ್ತದೆ.
ಗುರುಃ ಸುಧರ್ಮೇಂದ್ರ ಉದೇತುಕಾಮಂ
ಗುಣೈರ್ವಿನಿದ್ರೈರ್ಗಣನಾದರಿದ್ರೈಃ ।
ಮುದಂ ಜನಾನಾಂ ಜನಯನ್ನಜಸ್ರಂ
ಭೂಮೌ ದಧೌ ಯಃ ಖಲುವಾದಿ ಶಿಕ್ಷಾಮ್ ।। 11 ।।
ಶ್ರೀ ಸುಧರ್ಮೇಂದ್ರ ಗುರುಗಳು ಲೆಕ್ಕವಿಲ್ಲದಷ್ಟು ಪೂರ್ಣವಾಗಿರುವ ಗುಣಗಳಿಂದ ಜನಗಳಿಗೆ ನಿರಂತರವಾದ ಸಂತೋಷವನ್ನು ಕೊಡುತ್ತಾ ಭೂಮಿಯಲ್ಲಿರುವ ದುರ್ವಾದಿಗಳಿಗೆ ಶಿಕ್ಷೆಯನ್ನು ಕೊಟ್ಟರು.
ನಹಿ ಪ್ರಿಯ ಸ್ಫೂರತ್ಕೀರ್ತೇ
ಜೈತ್ರಯತ್ರೋನ್ಮುಖೋ ಭವ ।
ಇತಿ ವಾದಿವಧೂಃ ಪ್ರೋಚೇ
ಸುಧರ್ಮೇಂದ್ರ ವಿರಾಜತಿ ।। 12 ।।
ಒಳ್ಳೆಯ ಕೀರ್ತಿವುಳ್ಳ ಓ ವಾದಿಯೇ! ಇದೀಗ ವಾದದ ದಿಗ್ವಿಜಯಕ್ಕೆ ಹೋಗಬೇಡ. ಏಕೆಂದರೆ " ಶ್ರೀ ಸುಧರ್ಮೇಂದ್ರ " ರೆಂಬ ಶ್ರೇಷ್ಠ ವಿದ್ವಾಂಸರು ಇನ್ನೂ ಬದುಕಿದ್ದಾರೆ ಎಂಬುದಾಗಿ ಪಂಡಿತನ ಹೆಂಡತಿಯು ಹೇಳಿದಳು.
ವಿವರಣೆ :
ಈ ಶ್ಲೋಕದಲ್ಲಿ ಶ್ರೀ ಸುಧರ್ಮೇಂದ್ರರು ದಿಗ್ಧಂತಿ ಪಂಡಿತರೆಂದು ಎಲ್ಲೆಡೆ ವಿಖ್ಯಾತರಾಗಿದ್ದಾರೆ.
ಅವರ ವಿದ್ಯಾ ವೈಭವ ಪ್ರತಿಯೊಬ್ಬರನ್ನೂ ತಲುಪಿದೆ. ಆದ್ದರಿಂದಲೇ ಪಂಡಿತನ ಹೆಂಡತಿಯು ಗಂಡನಿಗೆ ಅಪಕೀರ್ತಿ ಬರಬಾರದೆಂದು ಹೀಗೆ ಹೇಳಿದ್ದಾಳೆ.
ವದಾಮ್ಯೇತಾದ್ ಧೀಮಾನ್
ಕಿಮಿತಿ ಕೃಪಣಾನರ್ಥಯಸಿ ತಾನ್
ವ್ರಜ ತ್ವಂ ಜಂಘಾಲುರ್ಗುರುವರ
ಸುಧರ್ಮೇಂದ್ರ ಚರಣಮ್ ।
ಪ್ರದಾನಾದ್ಯಸ್ಯಾಬ್ಧಿಃ ಶಮಮಯತಿ
ಮಜ್ಜೀವನಮಿತಿ ಪುರೋಧಾಯೇವಾಭ್ರಂ
ಜಿಗಮಿಷುಬುಧಾನಾಂ ಪ್ರಸರತಿ ।। 13 ।।
ಬುದ್ಧಿವಂತನೇ! ಏಕೆ ಉಳಿದವರನ್ನು ಬೇಡುವೆ. ಸಾಗು ಶ್ರೀ ಸುಧರ್ಮೇಂದ್ರರಲ್ಲಿಗೆ. ಸಮುದ್ರ ಮೋಡಗಳನ್ನೂ, ಮೋಡಗಳನ್ನು ಮುಂದಿಟ್ಟುಕೊಂಡು ಮಳೆಯನ್ನು ಕೊಡುತ್ತಿದ್ದರೂ ಶ್ರೀ ಸುಧರ್ಮೇಂದ್ರರ ಕೊಡುವಿಕೆಯಿಂದ ಸಾಮ್ಯವನ್ನು ಹೊಂದಲಾರೆನೆಂದು ಶಾಂತವಾಗುತ್ತದೆಯೋ ಅಂಥಹಾ ಕಲ್ಪವೃಕ್ಷದಂತಿರುವ ಶ್ರೀ ಸುಧರ್ಮೇಂದ್ರತೀರ್ಥರನ್ನು ಹೊಂದು ಎಂಬುದಾಗಿ.
ಚಾತುರ್ಯಂ ಕಿಮು ವರ್ಣತೇ
ಗುರುವರ ಶ್ರೀಮತ್ಸುಧರ್ಮೇಂದ್ರಗಂ
ದ್ರವ್ಯೋತ್ಸರ್ಜನಮಾರ್ಜನಂ
ಯದಕರೋತ್ ನಿರ್ಬಾಧಭಾಗ್ಯೋದಯಃ ।
ಯತ್ಪ್ರತ್ಯರ್ಥಿ ಜನೇಷು ಜನ್ಮ
ಸಹಜಂ ವೀಕ್ಷೈವ ದೈನ್ಯಂ
ಸುಹೃತ್ ದಾರಿದ್ಯ್ರಂ ಸಹತೇ ಹಿ
ಕೇವಲಮುಮೂನ್ಮತ್ವಾಶರಣ್ಯಾನೀತಿ ।। 14 ।।
ಶ್ರೀ ಸುಧರ್ಮೇಂದ್ರತೀರ್ಥರಲ್ಲಿರುವ ಚಾತುರ್ಯವನ್ನು ಏನೆಂದು ಹೇಳಲಿ! ಅವರ ಭಾಗ್ಯಕ್ಕೆ ಎಣೆಯಿಲ್ಲ. ಅವರನ್ನು ಬೇಡಿಕೊಂಡ ವಿದ್ವಜ್ಜನರಿಗೂ ಕೊರತೆ ಇಲ್ಲ. ದಾರಿದ್ರವಾದರೋ ತನಗೆ ಆಶ್ರಯದಾತರಿಲ್ಲದೇ ಶ್ರೀ ಸುಧರ್ಮೇಂದ್ರತೀರ್ಥರ ಪ್ರತಿವಾದಿಗಲನ್ನೇ ಆಶ್ರಯಿಸಿತು.
ಸಮಸ್ತ ದೇವ ಸಾನ್ನಿಧ್ಯ
ಸಿದ್ಧಿಭಜೋ ಜಗದ್ಗುರೋಃ ।
ಪಾವಿತ್ರ್ಯಂ ವ್ರಜತಾದ್ ವಾಣೀ
ಸುಧರ್ಮೇಂದ್ರಸ್ಯ ಕೀರ್ತನಾತ್ ।। 15 ।।
ಎಲ್ಲಾ ದೇವತೆಗಳ ಸಾನ್ನಿಧ್ಯದಿಂದ ಸಿದ್ಧಿಯನ್ನು ಹೊಂದಿದ ಶ್ರೀ ಸುಧರ್ಮೇಂದ್ರತೀರ್ಥರ ಕೀರ್ತನೆಯಿಂದ ನನ್ನ ಮಾತು ಪವಿತ್ರವಾಗಲಿ.
ಯಥಾ ತುಷ್ಠ೦ತಿ ವಿಬುಧಾಃ
ಸುಧರ್ಮೇಂದ್ರಮಹೋದಯಾತ್ ।
ತಥಾ ಕೃಷ್ಣ ಕವೀಶಸ್ಯ
ಸುಧರ್ಮೇಂದ್ರಮಹೋದಯಾತ್ ।। 16 ।।
ದೇವತೆಗಳು ಧರ್ಮದ ಉಗಮವಾದರೆ ಸಂತೋಷ ಪಡುವಂತೆ ಈ " ಶ್ರೀ ಸುಧರ್ಮೇಂದ್ರ ಮಹೋದಯ " ವೆಂಬ ಕೃಷ್ಣಾವಧೂತರ ಕಾವ್ಯದಿಂದ ಸಂತೋಷ ಪಡಲಿ.
ಕೋ ದಾಮತ್ವಮವಾಪ
ವಾರ್ಧಿಮಥನೇ ಮಂಥಾನತಾ೦
ಚಾಪ ಕೋ ಮಂಥಾನೋ
ವಿಧೃತಶ್ಚ ಕೇನ ವಿಭುನಾ
ಕೋsಭೂತ್ತಮೋಘ್ನಸ್ತತಃ ।
ಕಸ್ತತ್ರೋತ್ಥವಿಷಂ ಪಪೌ
ಸುರಗಣೇ ದತ್ತಂ ಚ ಕೇನಾಮೃತಂ
ತತ್ಪ್ರಶ್ನೋತ್ತರಮಧ್ಯವರ್ಣಘಟಿತೇ
ಭೂಯಾತ್ ಸುಭಕ್ತಿರ್ಮಮ ।।
ಅಮೃತ ಮಥನದಲ್ಲಿ....
ಯಾರು ಹಗ್ಗವಾದರೂ = ವಾಸುಕೀ;
ಯಾರು ಕಡಗೋಲಾದರೂ = ಭೂಧರ
ಯಾರು ಕಡಗೋಲನ್ನು ಧರಿಸಿದರೂ = ಕೂರ್ಮೆಣ -  ಕಡೆಯುವಾಗ
ಯಾರು ಅಲ್ಲಿ ಕತ್ತಲನ್ನು ಕಳೆದರೂ = ಚಂದ್ರಮಾಃ
ಯಾರು ವಿಷವನ್ನು ಕುಡಿದರೂ = ಸುಯೋಗೀ
ಯಾರು ಅಮೃತವನ್ನು ಕೊಟ್ಟರೂ = ಯೋಗೀಶ
ಈ ಪ್ರಶ್ನೆಗಳಿಗೆ ಉತ್ತರಗಳೇನಿವೆಯೋ ಆ ಪದಗ ಮಧ್ಯದ ವರ್ಣದಿಂದ ಕರೆಯಲ್ಪಡುವ ಯತಿಗಳಲ್ಲಿ ( ಸುಧರ್ಮೇಂದ್ರಯೋಗೀ ) ಅನನ್ಯ ಭಕ್ತಿ ಇರಲಿ.
ವಾಹೀಕೃತಮಹಾವಾಹ-
ಗಣಾಧಿಪವಿನಾಯಕೌ ।
ಭವತಾಂ ಭವತಾಂ ಭೂತ್ಯೈ
ಪಾರ್ವತೀಪರಮೇಶ್ವರೌ ।।
ನಂದಿಯನ್ನು ವಾಹನವನ್ನಾಗಿಸಿಕೊಂಡ ಶಿವನು, ಪಕ್ಷಿಯನ್ನು ವಾಹನವನ್ನಾಗಿಸಿಕೊಂಡ ವಿಷ್ಣುವು ನಮ್ಮ ಸಂಪತ್ತನ್ನು ಬೆಳೆಸಲಿ.
ಶ್ರೀ ವರದೇಶವಿಠ್ಥಲರು...
ದುರ್ಮತ ಧ್ವಂಸ । ಸ ।
ದ್ಧರ್ಮ ಸಂಸ್ಥಾಪಕ ।
ಕರ್ಮಂದಿ ವರ । ಸು ।
ಧರ್ಮೇಂದ್ರತೀರ್ಥ ।।
by ಆಚಾರ್ಯ ನಾಗರಾಜು ಹಾವೇರಿ
     ಗುರು ವಿಜಯ ಪ್ರತಿಷ್ಠಾನ
***

*****

No comments:

Post a Comment