Wednesday, 1 May 2019

yogeendra teertharu 1688 matha srirangam rayara mutt yati 18 maagha shukla dashami ಯೋಗಿಂದ್ರ ತೀರ್ಥರು

           



24998295461_1733d8a545_b.jpg
info from sumadhwaseva.com--->
Sri Yogeendra Theertharu(Sri Rangam)
Period : 1671 – 1688
Ashrama Gurugalu : Sri Raghavendra Swamy
Ashrama Shishyaru : Sri Sooreendra Teertharu
Aradhana Tithi : Maagha Shukla Dashami

Rayara Mutt


Period 1671-1688

Aradhana – Magha Shudda Dashami 
Vrundavana – Srirangam
Ashrama Gurugalu – Sri Raghavendra Tirtharu
Vidya Gurugalu      –  Sri Raghavendra Tirtharu
Poorvashrama Name – Sri Venkannacharya
Ashrama Shishyaru – Sri Sooreendra Tirtharu


saandrabOdhaaya shaastrEshu nistandramanasE harou |

raaGavEndrakumaaraaya namO yOgIMdrayOginE |
 
ಸಾಂದ್ರಬೋಧಾಯ ಶಾಸ್ತ್ರೇಶು ನಿಸ್ತಂದ್ರಮನಸೇ ಹರೌ |
ರಾಘವೇಂದ್ರಕುಮಾರಾಯ ನಮೋ ಯೋಗೀಂದ್ರಯೋಗಿನೇ |
सांद्रबोधाय शास्त्रेशु निस्तंद्रमनसे हरौ ।
राघवेंद्रकुमाराय नमो योगींद्रयोगिने ।
Three brothers VenkaNNaacharya, Vasudevacharya and Mudduvenkatakrishnacharya  – all three had adorned the Mantralaya Peeta with names Sri Yogindra Tirtha, Sri Sooreendra Tirtha and Sri Sumatheendra Tirtha respectively.  All the three had education from Raghavendra Tirtharu only.
He was direct disciple of Guru Raghavendra Swamy and next Yathigalu in the Rayara Matha Lineage.  
Victory –   He defeated Kaakashastri and others in debates at Bhagyanagar.
Muddalagadri Nayaka, who was ruling Madhurai,  gifted a village named  ‘Arambhanna’ on the banks of the river Tamraparni and Kalla Mutt lying to the west of Chitra street in Srirangam on the most sacred day of Akshaya Thritheeya in Siddharthi Samvatsara (1679).
He entered Vrundavanan @ Srirangam.
source: gurucharite
***************

shri yOgIndra tIrtharu was the grandson of shri rAyaru's pUrvAshrama brother - shri gururAjacharya. He had 4 brothers, who all became sanyAsIs. 3 of them adorned the rAyara maTa pITa subsequently as sUriNdra tIrtharu, sumatIndra tIrtharu and upendra tIrtharu. Shri munIndra tIrtharu did not adorn the pITa. All of them had studied directly under shri rAyaru himself. 
He was a great scholar having studied under shri rAyaru himself. 
********

Info from madhwasaints.wordpress.com--->

Sri Raghavendra swami’s poorvashrama brother’s grandsons were three, 
1. Sri Venkannacharya
2. Sri Vasudevacharya
3. Sri Muddhukrishnacharya.

Among them Sri Venkannacharya was called upon by Sri Raghavendra swami to succeed him as Sri Yogeendra theertha. Sri Yogeendra theertharu was a great scholar and gnyani. After Sri Raghavendra swami’s entry into his brindhavana, he established a code of pooja rituals at Manthralayam and started on his tour. He visited Kumbakonam, Srirangam and other kshethras.
He defeated kakashastri and others in debates at Bhagyanagar.
As Gururaja had moved away from Southern region, the swamiji went towards that region. After having darshan of Sri Vijayeendra theertharu at Kumbhakonam, he came to Srirangam.
The pilgrim of Srirangam was then under the administration of the Nayaks of grandson of Thirumalanayaka, son of Vishwanathanayaka and with tradition of the reverence, his ancestor had towards Mahasamsthan, he gifted a village ‘Arambhanna’ on the river tamraparni and Kalla Mutt lying to the west of Chitra street in Srirangam on the most sacred day of Akshaya Thritheeya in 1679 dedicating it to Lord Krishna.
While he was at Srirangam, he heard the voice (OM) of his guru Sri Raghavendra swami at a particular spot.
He remained there for the rest of his life and entered his brindhavana in the same premises.
His aaradhana falls on the day next to Madhwa navami, i.e. Magha- Shudha- Dhashami.(2-2-12).
Sri Yogeendra theertha poorvashrama brothers Sri Vasudevacharya and Sri Muddhukrishnacharya became sanyasis later in the name Sri Soorendra theertharu and Sri Sumateendra theertharu respectively.
*******

info from Raghavendraswamy wordpress.com
He had the great fortune of  learning under Raghavendra Swamy (1595-1671). He also had the  fortune of succeeding Raghavendra Swamy t the Sri Matha which subsequently came to be known as Raghavendra Swamy Matha or Mantralaya Matha.

He was also among the privileged people who saw Raghavendra or Rayaru as he is affectionately called entering Brindavana in Manchale or Mantralaya in August 1671. It was this man who reverentially held the hand of Raghavendra Swamy and led him to the Brindavana.

It was also this man who supervised all the rituals and rites connected with the worship of the Brindavana of Raghavendra Swamy. He was also a close relative of  Raghavendra Swamy  and he saw Rayaru at close distance for several decades.

He also has the distinction of personally supervising the first aradhane celebrations of Raghavendra Swamy.

The Aradhane of this saint was held recently at Srirangam in Tamil Nadu where his Brindavana is located. This holy person is none other Yogendra or Yogeendra Theertha.

Yogendra Theertha was the son of Raghavendra Swamy;s poorvashrama brother, Gururaja. A favourite of Raghavendra Swamy he learnt under him and spent years under his guidance. When the tome came for Rayaru to enter Brindavana, he choose Yogendra Theertha as his successor and gave him his last upadesha and patha (teaching religious texts).

Yogendra Theertha was on the peetha of Sri Matha from 1671 to 1688. He was followed by Soorendra Theertha his brother.

Before taking sanyasa, he was known as Venkannacharya. It was Raghavendra Swamy who bestowed on him the nomenclature  of Yogeendra Theertha.

His other brothers, Vasudevacharya and Mudduvenkatakrishnacharya, also succeded hi to the Sri Matha. Yogeendra was considered to be a brilliant scholar and intellect. It was during his time that Venkanna pant or Dewan Venkanna re-conveyed the village Manchale or Mantralaya to him.

After Rayaru entered Brindavana, Yogeendra stayed back for some time before embarking on sanchara. He defeated Kala Shastri and others at Bhagyanagar in debates  and upheld Dwaitha siddantha.

He then retraced the steps of Rayaru and visited Kumbakonam. Here, he had the darshana of Vijendra Theertha before coming to Srirangam which was then being administered by the Nayakas of Madurai.

Muddalagadri Nayaka of Madurai, gifted Arambhanna village on the banks of Tamraparni and also the Kalla Mutt located the west of Chitra street in Srirangam on Akshaya Thritheeya in Siddharthi Samvatsara (1679) to Yogendra Theertha. .

Rayaru then came in a dream to Yogendra Theertha and asked him to settle down at Srirangam itself.  He also entered Brindavana on the tenth day of Magha Shuddha in Vibhava Samvatsara.

Subsequently, his two brothers, Vasudevacharya  and Muddhukrishnacharya, also became pontiffs of the Sri Matha after him and entered Brindavana at Srirangam itself.

Even today, we can see the Brindavana of the three brothers at the Raghavendra Swamy Matha in Srirangam.
***

ಶ್ರೀಂ ಶ್ರೀ ಕಂ ಕಪಿಲಾಯ ನಮಃ

ಸಾಂದ್ರಬೋಧಾಯ ಶಾಸ್ತ್ರೇಷು  ನಿಸ್ತಂದ್ರ ಮನಸೇ ಹರೌ /
ರಾಘವೇಂದ್ರ ಕುಮಾರಾಯ ನಮೋ ಯೋಗೀಂದ್ರ ಯೋಗಿನೇ//

ಶ್ರೀ ರಾಯರ ಮಠದ 16ನೇ ಶತಮಾನದ ಪರಮ  ಶ್ರೇಷ್ಠ ಯತಿಗಳೂ, ಶ್ರೀ  ರಾಘವೇಂದ್ರ ಗುರುಸಾರ್ವಭೌಮರ ಕರಕಮಲಸಂಜಾತರಾದ, ಶ್ರೀ ಸೂರೀಂದ್ರತೀರ್ಥರ ಗುರುಗಳಾದ, ಪರಮ ವೈರಾಗ್ಯ ಗುಣಸಂಪನ್ನರು, ವಾಗ್ಮಿಗಳೂ, ಭಕ್ತಾಗ್ರೇಸರರೂ ಆದ, ರಾಯರ ನಂತರ ವೇದಾಂತ ಪೀಠವನ್ನಧಿರೋಹಿಸಿದ ಭೂಷಾಮಣಿಗಳಾದ ಶ್ರೀ ಯೋಗೀಂದ್ರತೀರ್ಥರ ಆರಾಧನಾ ಮಹೋತ್ಸವ, ಶ್ರೀರಂಗಂ , ತಮಿಳುನಾಡು ಲಿ...

ಇವರು  ಶ್ರೀರಾಮ (ಹರಿಪ್ರಸಾದಿತ) ಅಂಕಿತನಾಮದಿಂದ ಕೃತಿರಚನೆಯೂ ಮಾಡಿದ್ದಾರೆ...

ಶ್ರೀ ಮಹಾನ್ ಗುರುಗಳ ಅನುಗ್ರಹ ಸದಾ ನಮ್ಮ ಸಮೂಹದ ಸಜ್ಜನ ವರ್ಗದಮೇಲಿರಲೆಂದು ಆಶಿಸುತ್ತಾ...

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽
***


" ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಯೋಗೀಂದ್ರತೀರ್ಥರು " 
ದಿನಾಂಕ : 22.02.2021 - ಸೋಮವಾರ - ಶ್ರೀ ರಾಯರ ವರ ಕುಮಾರಕರಾದ ಶ್ರೀ ಯೋಗೀಂದ್ರತೀರ್ಥರ ಆರಾಧನಾ ಮಹೋತ್ಸವ, ಶ್ರೀರಂಗಂ 
ಶ್ರೀ ಪ್ರಾಣೇಶದಾಸರು... 
ಶ್ಲಾಘೀನ ಗುಣನಿಧಿ ।
ಮಾಗಧ ರಿಪು ದಾಸ ।
ರಾಘವೇಂದ್ರ ಪುತ್ರ ।
ಯೋಗೀಂದ್ರತೀರ್ಥಾ ।।
ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಸತ್ಪರಂಪರೆಯಾದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ವೇದಾಂತ ಸಾಮ್ರಾಜ್ಯದಲ್ಲಿ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ನಂತರ ವಿರಾಜಮಾನರಾದವರು ಅವರ ಸಾಕ್ಷಾತ್ ಆಶ್ರಮ ಶಿಷ್ಯರಾದ ಶ್ರೀ ಯೋಗೀಂದ್ರತೀರ್ಥರು. 
ಸ್ವಾಮೀ ಶ್ರೀ ಯೋಗೀಂದ್ರತೀರ್ಥ ಗುರುವರ್ಯರೇ! 
ನೀವು ವಿದ್ಯಾಭಿಮಾನಿಯಾದ ಶ್ರೀ ಭಾರತೀದೇವಿಯವರ ಪ್ರಿಯತಮರಾದ ಶ್ರೀ ವಾಯುದೇವರ ಅವತರರಾದ ಶ್ರೀಮದಾಚಾರ್ಯರ ಅಥವಾ ಶ್ರೀ ಬೃಹಸ್ಪತ್ಯಾಚಾರ್ಯರಿಗೆ ಅಥವಾ ಸಹಸ್ರ ಮುಖಗಳಿಂದ ವಾಗ್ಮಿಗಳಾದ ಶ್ರೀ ಶೇಷದೇವರಿಗೆ ಅಥವಾ ವಾಗ್ಮಿಗಳೆಲ್ಲರಿಗೂ ಪ್ರಭುಗಳಾದ ಶ್ರೀ ಮಧ್ವಾಚಾರ್ಯರ ಮತ = ತತ್ತ್ವವಾದ ( ದ್ವೈತ ) ಮತವನ್ನು......
ಪರಮತ ನಿರಾಕರಣ - ಸಿದ್ಧಾಂತ ಸ್ಥಾಪನೆ - ಪಾಠ ಪರ್ವಚನ - ಗ್ರಂಥ ರಚನಾದಿಗಳ ಮೂಲಕ ಸಂಪೋಷಿಸುವುದರಲ್ಲಿ ದೀಕ್ಷಾಬದ್ಧರಾಗಿದ್ದೀರಿ. 
ಪರಮಹಂಸರಾದ - ಸರ್ವವಂದ್ಯರಾದ ಶ್ರೀ ಮಂತ್ರಾಲಯ ಪ್ರಭುಗಳ ಪಟ್ಟದ ಶಿಷ್ಯರಾಗಿದ್ದೀರಿ. 
ಯೋಗಿ ಶ್ರೇಷ್ಠರಿಂದ ನಮಸ್ಕೃತರಾಗಿದ್ದೀರಿ. 
ಅಂತೆಯೇ ನೀವು ಶ್ರೀಮದಾಚಾರ್ಯರ ವೇದಾಂತ ಸಾಮ್ರಾಜ್ಯ ನಿರ್ವಹಣ ಧುರಂಧರರಾಗಿದ್ದೀರಿ. 
ಶ್ರೀ ಶೇಷಶಾಯಿಯಾದ ಶ್ರೀ ರಂಗನಾಥನ ಕ್ಷೇತ್ರವಾದ ಶ್ರೀರಂಗದಲ್ಲಿ ಬೃಂದಾವನದಲ್ಲಿ ವಿರಾಜಿಸುತ್ತಿದ್ದೀರಿ. 
ಆಶ್ರಿತ ಸಕಲ ಶಿಷ್ಯ - ಭಕ್ತರನ್ನು ಕಾಪಾಡುತ್ತಿರುವ ಮಹಾ ಮಹಿಮಾನ್ವಿತರು ಶ್ರೀ ಯೋಗೀಂದ್ರತೀರ್ಥ ಗುರುವರ್ಯರು!! 
" ಶ್ರೀ ಯೋಗೀಂದ್ರತೀರ್ಥರ ಸಂಕ್ಷಿಪ್ತ ಮಾಹಿತಿ " 
ಹೆಸರು : ವಿದ್ವಾನ್ ಶ್ರೀ ವೆಂಕಣ್ಣಾಚಾರ್ಯರು 
ತಂದೆ : ವಿದ್ವಾನ್ ಶ್ರೀ ವೇಂಕಟ ನಾರಾಯಣಾಚಾರ್ಯರು 
ಗೋತ್ರ : ಗೌತಮ 
ಮನೆತನ : ಬೀಗಮುದ್ರೆ 
ವಂಶ : ಷಾಷ್ಟಿಕ 
ತಾತ : 
ವಿದ್ವಾನ್ ಶ್ರೀ ಗುರುರಾಜಾಚಾರ್ಯರು ( ಶ್ರೀ ರಾಯರ ಪೂರ್ವಾಶ್ರಮ ಅಣ್ಣ ) ಮತ್ತು
ವಿದ್ವಾನ್ ಶ್ರೀ ವೇಂಕಟನಾಥಾಚಾರ್ಯರು ( ಶ್ರೀ ರಾಯರು ) 
ವಿದ್ಯಾ ಗುರುಗಳು : ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು 
ಆಶ್ರಮ ಗುರುಗಳು : ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು 
ಆಶ್ರಮ ನಾಮ : ಶ್ರೀ ಯೋಗೀಂದ್ರತೀರ್ಥರು 
ಆಶ್ರಮ ಶಿಷ್ಯರು : ಶ್ರೀ ಸೂರೀಂದ್ರತೀರ್ಥರು 
ಕಾಲ : ಕ್ರಿ ಶ 1671 - 1688 
ಅಂಕಿತ : ಶ್ರೀ ಹರಿ ಪ್ರಸಾದಾಂಕಿತ " ಶ್ರೀರಾಮ " 
" ಶ್ರೀ ಯೋಗೀಂದ್ರತೀರ್ಥರ ಕಣ್ಣಲ್ಲಿ ಶ್ರೀ ಮಂತ್ರಾಲಯ ಪ್ರಭುಗಳು " 
ರಾಗ : ಮುಖಾರಿ ತಾಳ : ತ್ರಿವಿಡಿ 
ಸರಸೀ ಸಂಭವಾ ಸುಂದರಾ ।
ಚರಣ ಯುಗ ಶರಣೆಂಬೆ ನಿನಗೆ ।। ಪಲ್ಲವಿ ।। 
ಕರುಣಿಸಿ ಪದವಾ ಪರಿಪಾಲಿಸಿದೆ ।
ಪರಮ ಪುರುಷನನುಗ್ರಹವ ಪಡೆದೆ ।। ಚರಣ ।। 
ವೈರಿ ನಿಕರವಾ ದೂರೀಕರಿಸಿದೆ ।
ಗುರು ರಾಘವೇಂದ್ರರಾಯ -
ಸ್ಮರಿಸೂವೆ ನಿಮ್ಮಾಯ ।। ಚರಣ ।। 
ಶ್ರೀರಾಮ ಪದಾಂಭೋಜ 
ವರ ಪೂಜಾ ಬಲದಿಂ ।
ದುರಿತಾವ್ಯನಗೆ ನೀ 
ಯಿರದಂತೆ ಮಾಡಿದೆ ।। ಚರಣ ।। 
" ಶ್ರೀ ಮೂಲರಾಮ ಸ್ತುತಿ "
ರಾಗ : ಭೈರವಿ ತಾಳ : ತ್ರಿವಿಡಿ 
ಯನ್ನನನ್ಯನಾ । ಮಾ ।
ಡಿ ನೋಡದೆ ಪಾಲಿಸಾಬೇಕೋ ।
ನಿನ್ನ ಮನದಲಿಟ್ಟರೆ ಸಾಕೋ ।। ಪಲ್ಲವಿ ।। 
ದುರಂತ ದುರಿತಾ । ರಾ ।
ಶಿ ರೂಪಾ ನಾನಾದಾಡೇನೋ ನಿನ್ನ ಪಾದ ।
ಸರಸೀರುಹ ಸ್ಮರಣೆ ಮಾಡಲು ।
ದುರಿತಾ ಉಂಟೆ ।।
ತರಣಿ ಕಿರಣಾ ಧರಣಿ ವ್ಯಾಪಿಸೆ ।
ಘೋರ ತಿಮರಾ ದೂರಾವಲ್ಲದೆ ।
ಕರುಣದಿಂದಲಿ ಕಾಯದಿದ್ದೊಡೆ ।
ಶರಣರಾರೋ ನೀನೆ ಪೇಳೋ ।। ಚರಣ ।। 
ಕರ್ಮ ಕಾಲ ಕಾಮ ।
ವಿಮತಿ ಪೂರ್ವ ಸರ್ವ ಕಾರಣಂಗಳು ।
ಹರಿಯೇ ನಿನ್ನ ತಂತ್ರವಲ್ಲದೆ ।
ಸ್ವತಂತ್ರ ನೀನೆ ।।
ಪ್ರೇರಕನಾಗಿ ಕರ್ಮಫಲವು ।
ಕ್ಯಲವನುಣಿಸಿ ಕ್ಯಲವನಳಿಸಿ ।
ಹರಿಯೇ ನಿನ್ನ ದರುಶನವಾನಿತ್ತು ।
ದೀನ ಜನರನ ಸಾಕುವಿಯಾಗಿ ।। ಚರಣ ।। 
ಮೀನ ಕೂರ್ಮ ವರಹ ರೂಪಾ ।
ಶ್ರೀ ನಾರಸಿಂಹ ವಾಮನ ।
ವಾನಾನಿ ರಾಮ । ರಾಮ ।
ಕೃಷ್ಣ ಬುದ್ಧ ಕಲ್ಕ್ಯಾದಿ ।।
ಅನೇಕ ರೂಪನಾಗಿ । ಚತು ।
ರಾನನಾದಿ ಭಕುತರಿಗೆ ।
ಜ್ಞಾನವಿತ್ತು ರಕ್ಷಿಸಿ ನೀ ।
ಮಾನಾದಾನೆ ಸಿರಿರಾಮ ।। ಚರಣ ।। 
ಯೆಂದು ಶ್ರೀ ಮೂಲರಾಮ - ಶ್ರೀ ದಿಗ್ವಿಜಯರಾಮ - ಶ್ರೀ ಜಯರಾಮದೇವರನ್ನು ಸಡಗರದಿಂದ ಪೂಜಿಸಿ ಪ್ರಾಥಿಸಿದರು. 
ಮುಂದೆ ಶ್ರೀ ಗುರುರಾಜರು ಮಾಡಿದ ವ್ಯವಸ್ಥೆ ಮತ್ತು ಆದೇಶಗಳಂತೆ ಶ್ರೀ ಗುರುರಾಜರಿಂದ ಪರಮಹಂಸಾಶ್ರಮ ಪ್ರದಾನ ಪೂರ್ವಕ ಸರ್ವಜ್ಞ ಸಿಂಹಾಸನಾಧಿಪತಿಗಳಾಗ ಶ್ರೀ ರಾಯರ ಪೂರ್ವಾಶ್ರಮ ಅಣ್ಣ ಶ್ರೀ ಗುರುರಾಜಾಚಾರ್ಯರ ಮೊಮ್ಮಕ್ಕಳಾದ ......
ಶ್ರೀ ಯೋಗೀಂದ್ರತೀರ್ಥರು ( ಶ್ರೀ ವೆಂಕಣ್ಣಾಚಾರ್ಯರು ) ಕ್ರಿ ಶ 1671 - 1688ರ ವರೆಗೆ ಸಂಸ್ಥಾನವನ್ನು ಆಳಿ ತಮ್ಮ ಪೂರ್ವಾಶ್ರಮ ಸಹೋದರರಾದ ಶ್ರೀ ವಾಸುದೇವಾಚಾರ್ಯ( ಶ್ರೀ ಸೂರೀಂದ್ರತೀರ್ಥರು ) - ಶ್ರೀ ಮುದ್ದುವೆಂಕಟಕೃಷ್ಣಾಚಾರ್ಯ ( ಶ್ರೀ ಸುಮತೀಂದ್ರತೀರ್ಥರು ) -  ಶ್ರೀ ವಿಜಯೀಂದ್ರಾಚಾರ್ಯರು ( ಶ್ರೀ ಉಪೇಂದ್ರತೀರ್ಥರು) ಗಳು ಒಬ್ಬರಾದ ಮೇಲೆ ಒಬ್ಬರು ಕ್ರಮವಾಗಿ ಪೀಠವನ್ನಾಳಾಬೇಕೆಂಬ ಶ್ರೀ ರಾಯರ ಆದೇಶವನ್ನು ಜಾರಿಗೆ ತಂದು  - ತಮ್ಮಂದಿರಾದ ಶ್ರೀ ವಾಸುದೇವಾಚಾರ್ಯರಿಗೆ ಪರಮಹಂಸಾಶ್ರಮವನ್ನಿತ್ತು " ಶ್ರೀ ಸೂರೀಂದ್ರತೀರ್ಥ " ರೆಂದು ನಾಮಕರಣದೊಂದಿಗೆ ವೇದಾಂತ ಸಾಮ್ರಾಜ್ಯ ಪಟ್ಟಾಭಿಷೇಕ ಮಾಡಿ ಸಂಸ್ಥಾನವನ್ನು ಒಪ್ಪಿಸಿ ಶ್ರೀರಂಗದಲ್ಲಿ ವೃಂದಾವನ ಪ್ರವೇಶ ಮಾಡಿದರು. 
ಆರಾಧನೆ : ಮಾಗ ಶುದ್ಧ ದಶಮೀ 
ಶ್ರೀ ಸೂರೀ೦ದ್ರ ತೀರ್ಥರು....  
ಸಾಂದ್ರಬೋಧಾಯ ಶಾಸ್ತ್ರೇಷು 
ನಿಸ್ತಂದ್ರ ಮನಸೇ ಹರೌ ।
ರಾಘವೇಂದ್ರ ಕುಮಾರಾಯ 
ನಮೋ ಯೋಗೀಂದ್ರ ಯೋಗಿನೇ ।। 
ಶ್ರೀ ಸುಮತೀಂದ್ರ ತೀರ್ಥರು " ಶ್ರೀ ಯೋಗೀ೦ದ್ರ ತಾರಾವಳೀ " ಯಲ್ಲಿ.....  
ಭದ್ರಂ ಶಾಸದ್ವಿನಿದ್ರಂ ನಿಜ ವಿಬುಧ -
ಗಣಾನ್ ಪ್ರೌಢಮಾಪ್ತೋ ಗುರುತ್ವಮ್
ಧಾಮ್ನಾ ನಿಸ್ಸೀಮಭೂಮ್ನಾ ವಿಮತಮ-
ಹಿಭೃತೋ ಜಿಷ್ಣುರುನ್ಮಾರ್ಗ ಧೃಷ್ಣೂನ್ ।
ದೀನಾನಾ೦ ದಾನವಾನಾದರಭರಕೃದ-
ನಂತಾಮರಾಣಾ೦ ಭೀಷಜ್ಯನ್
ಶ್ರೀಮಾನ್ಯೋಗೀ೦ದ್ರಧೀಮಾನ್ 
ಜಗತಿ ಜಯತಿ ಯತ್ಸಾಶ್ವಿನೀತಿಂ ವಿನೀತಿಮ್ ।।
ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ "  ಯಲ್ಲಿ.....  
ಯೋಗೀ೦ದ್ರತೀರ್ಥರ -
ಪಾದ ಸ್ಮರಿಸಿದರೆ ।
ಯೋಗಿವರ ಗುರುರಾಯ -
ಒಲಿವಾ ।। 1 ।। 
ಜಗದ್ಗುರು ಮಧ್ವರ-
ಸಂಸ್ಥಾನವನಾಳಿ ।
ಯೋಗಿ ಸೂರೀ೦ದ್ರರ-
ಗುರುವೆನಿಸಿದೆ ।। 2 ।। 
ಬಾದರಾಯಣ ಮತ ಶಾಸ್ತ್ರವನು ।
ಮೋದದಿ ರಾಯರಲಿ ಓದಿ ।
ವೇದಗಳಿಗೆ ಆಮೋದದಿಂದಲಿ ।
ವೇದಾರ್ಥವನು ಬರೆದ -
ವೆಂಕಟನಾಥನ -
ಪ್ರಿಯ ದೇಶಿಕ  ।। 3 ।। 
" ವಿಶೇಷ ವಿಚಾರ "
ಶ್ರೀ ವೆಂಕಟ ನಾರಾಯಣಾಚಾರ್ಯರಿಗೆ 5 ಜನ ಪುತ್ರರು.
ಈ ಐದು ಜನ ಅಣ್ಣ ತಮ್ಮಂದಿರು - ತಮ್ಮನಿಂದ ಅಣ್ಣನಿಗೆ ಆಶ್ರಮವಾದ ಕ್ರಮ ಶ್ರೀ ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನದಲ್ಲಿ ಒಂದು ಇತಿಹಾಸ. 
ವಿದ್ವಾನ್ ಶ್ರೀ ವೀಣಾ ಗರುಡವಾಹನ ಲಕ್ಷ್ಮೀ ನಾರಾಯಣಾಚಾರ್ಯರು { ಶ್ರೀ ಮುನೀಂದ್ರ ತೀರ್ಥರು ] ಇವರು ಜ್ಯೇಷ್ಠ ಪುತ್ರರು - ಇವರು " ಶ್ರೀ ವಿಬುಧೆಂದ್ರ ವಿಜಯ " ಗ್ರಂಥಕಾರರು. 
ಎರಡನೇ ಪುತ್ರರು ವಿದ್ವಾನ್ ಶ್ರೀ ವೀಣಾ ವಿಜಯೀ೦ದ್ರಾಚಾರ್ಯರು { ಶ್ರೀ ಉಪೇಂದ್ರ ತೀರ್ಥರು ].
ಮೂರನೇಯ ಪುತ್ರರು ವಿದ್ವಾನ್ ಶ್ರೀ ವೀಣಾ ಮುದ್ದು ವೆಂಕಟ ಕೃಷ್ಣಾಚಾರ್ಯರು [ ಶ್ರೀ ಸುಮತೀಂದ್ರ ತೀರ್ಥರು ]
ನಾಲ್ಕನೇಯ ಪುತ್ರರು ವಿದ್ವಾನ್ ಶ್ರೀ ವೀಣಾ ವಾಸುದೇವಾಚಾರ್ಯರು [ ಶ್ರೀ ಸೂರೀ೦ದ್ರ ತೀರ್ಥರು ]
ಐದನೇಯ ಪುತ್ರರು [ ಕಿರಿಯ / ಕೊನೆಯ } ವಿದ್ವಾನ್ ಶ್ರೀ ವೀಣಾ ವೆಂಕಣ್ಣಾಚಾರ್ಯರು [ ಶ್ರೀ ಯೋಗೀ೦ದ್ರ ತೀರ್ಥರು ] 
by ಆಚಾರ್ಯ ನಾಗರಾಜು ಹಾವೇರಿ
     ಗುರು ವಿಜಯ ಪ್ರತಿಷ್ಠಾನ
***
" ಶ್ರೀ ಯೋಗೀ೦ದ್ರತೀರ್ಥರ ಆರಾಧನಾ ಮಹೋತ್ಸವ., ಶ್ರೀರಂಗಂ "
ರಚನೆ : ಆಚಾರ್ಯ ನಾಗರಾಜು ಹಾವೇರಿ
ಮುದ್ರಿಕೆ : ವೆಂಕಟನಾಥ
ಯೋಗಿವರ್ಯ ಯೋಗೀ೦ದ್ರಾಚಾರ್ಯ ।
ಯೋಗಿ ಚಂದ್ರ ರಾಘವೇಂದ್ರಾರ್ಯ ಕುವರ ।। ಪಲ್ಲವಿ ।।
ವೆಂಕಟನಾರಾಯಣಾರ್ಯರ ಸುತನೇ ನಮೋ ।
ವೆಂಕಟನಾಥಾರ್ಯರ ಪೌತ್ರನೇ ನಮೋ ।
ವೆಂಕಣ್ಣಾರ್ಯ ನಾಮಾಂಕಿತನೇ ನಮೋ ।
ವೆಂಕಟೇಶನ ಕಾರುಣ್ಯ ಪಾತ್ರ ನಮೋ ನಮೋ ।। ಚರಣ ।।
ಗುರು ರಾಘವೇಂದ್ರ ಕರಸಂಜಾತ ನಮೋ ।
ಗುರು ಯೋಗೀ೦ದ್ರನೆಂದು ಮೆರೆದವನೇ ನಮೋ ।
ಗುರು ಮಧ್ವ ಸಾಮ್ರಾಜ್ಯದಿ ವಿರಾಜಿಸಿದವನೇ ನಮೋ ।
ಗುರು ಸೂರೀ೦ದ್ರ ಪಿತನೇ ನಮೋ ನಮೋ ।। ಚರಣ ।।
ಶ್ರೀರಂಗ ಕ್ಷೇತ್ರದಿ ಕಾವೇರಿ ತೀರ ವಾಸ ನಮೋ ।
ಶ್ರೀರಂಗದ ಮೂಲ ಬೃಂದಾವನದಿ ಶೋಭಿಪನೇ ನಮೋ ।
ಶ್ರೀರಂಗ ಮೂಲರಾಮನ ಧ್ಯಾನಿಪನಿಗೆ ನಮೋ ।
ಶ್ರೀರಂಗ ವೆಂಕಟನಾಥನಾರಾಧಕನೇ ನಮೋ ನಮೋ ।। ಚರಣ ।।
" ವಿಶೇಷ ವಿಚಾರ "
" ವೆಂಕಟನಾರಾಯಣಾರ್ಯರ ಸುತನೇ "
ಈ ಶ್ರೀ ವೆಂಕಟನಾರಾಯಣಾಚಾರ್ಯರು,ಶ್ರೀ ವೀಣಾ ತಿಮ್ಮಣ್ಣಭಟ್ಟರ ಪುತ್ರರಾದ ಶ್ರೀ ವೀಣಾ ಗುರುರಾಜಾಚಾರ್ಯರ ಮಕ್ಕಳು.
" ಶ್ರೀ ವೆಂಕಟನಾಥಾರ್ಯರ ಪೌತ್ರರು "
ಶ್ರೀ ರಾಯರ ಪೂರ್ವಾಶ್ರಮ ಸಹೋದರರಾದ ಶ್ರೀ ವೀಣಾ ಗುರುರಾಜಾಚಾರ್ಯರ ಮೊಮ್ಮಕ್ಕಳು ಆದ್ದರಿಂದ ಶ್ರೀ ರಾಯರಿಗೂ ಪೂರ್ವಾಶ್ರದಲ್ಲಿ ಮೊಮ್ಮಕ್ಕಳು ( ಶ್ರೀ ಯೋಗೀ೦ದ್ರತೀರ್ಥರು )
ಗುರು ವಿಜಯ ಪ್ರತಿಷ್ಠಾನ
****


information from
https://madhwafestivals.wordpress.com/2016/12/09)
Moola brindavanas situated in Tamilnadu
  1. Uttaradhi Mutt – 6
  2. Raghavendra Mutt – 7
  3. Vyasaraja Mutt – 9
  4. Sripadaraja Mutt – 15
  5. Other Brindavanas/Bidi sanyasigalu – 8

Sri  Yogeendra Theerthara Aradhana at Sri Rangam on Maagha Shukla Dashami - 15th February 2019.
His brindavana is located at Srirangam , Tamilnadu
Address:
Sri Sumatheendraswamigalavara Brindavana,
Sri Raghavendra Swamy Mutt,
Raghavendrapuram, SRIRANGAM –TRICHY 620006

***

No comments:

Post a Comment