info from sumadhwaseva.com--->
Sri Upendra Theertharu(Sri Rangam)
Sri Upendra Theertharu(Sri Rangam)
Period : 1725-28
Parampare: #20 in rAyara maTa
vidyA gurugaLu: shri rAghavEndra tIrtha himself
Ashrama gurugaLu: shri sumatIndra tIrtharu
Ashrama shishyaru: shri vAdIndra tIrtharu
brindAvana: srirangam
Father: vIna venkaTanArAyaNachAryaru
pUrvAshrama name: vINa vijayIndrAchAryaru
Period : 1725-1728
Ashrama Gurugalu : Sri Sumateendra Teertharu
Ashrama Shishyaru : Sri Vadeendra Teertharu
Aradhana – Margashira Bahula Astami
ಕೃಪಾರಸಾಮೃತಾಂಬೋಧಿಮಪಾರ ಮಹಿಮಾನ್ವಿತಮ್|
ಉಪಾಸ್ಮಹೇ ತಪೋಮೂರ್ತಿಮುಪೇಂದ್ರಮುನಿ ಪುಂಗವಂ||
ಉಪಾಸ್ಮಹೇ ತಪೋಮೂರ್ತಿಮುಪೇಂದ್ರಮುನಿ ಪುಂಗವಂ||
कृपारसामृतांबोधिमपार महिमान्वितम्।
उपास्महे तपोमूर्तिमुपेंद्रमुनि पुंगवं॥
उपास्महे तपोमूर्तिमुपेंद्रमुनि पुंगवं॥
kRupaarasaamRutaambOdhimapaara mahimaanvitam|
upaasmahE tapOmUrtimupEndramuni pungavam||
upaasmahE tapOmUrtimupEndramuni pungavam||
Janma Naama – Vijayendracharya
*********
shri upEndra tIrtharu...
shri upEndra tIrtharu...
Vrindavana Situated at : Sriranga
mArgashira bahuLa ashTami is the ArAdhane of shri upEndra tIrtharu of rAyara maTa.
He was one of the grandsons of rAyaru's pUrvAshrama brother. His brothers were shri yOgIndra tIrtharu, shri sUrIndra tIrtharu, shri sumatIndra tIrtharu, shri munIndra tIrtharu. shri yOgIndra tIrtharu, shri sUrIndra tIrtharu had earlier ascended the pITa - #17 and #18 in the parampare. shri munIndra tIrtharu remained a bidi sanyAsigaLu. All of these have brindAvanas at srirangam except for shri sUrIndra tIrtharu.
shri upEndra tIrtharu was a great scholar having directly studied under rAyaru himself.
shri upEndra tIrtha gurvAntargata, rAghavEndra tIrtha guruvantargata, bhAratIramaNa mukhyaprANAntargata sItApatE shri mUla rAma dEvara pAdAravindakke gOvinda, gOvinda...
shri krishNArpaNamastu..
He was one of the grandsons of rAyaru's pUrvAshrama brother. His brothers were shri yOgIndra tIrtharu, shri sUrIndra tIrtharu, shri sumatIndra tIrtharu, shri munIndra tIrtharu. shri yOgIndra tIrtharu, shri sUrIndra tIrtharu had earlier ascended the pITa - #17 and #18 in the parampare. shri munIndra tIrtharu remained a bidi sanyAsigaLu. All of these have brindAvanas at srirangam except for shri sUrIndra tIrtharu.
shri upEndra tIrtharu was a great scholar having directly studied under rAyaru himself.
shri upEndra tIrtha gurvAntargata, rAghavEndra tIrtha guruvantargata, bhAratIramaNa mukhyaprANAntargata sItApatE shri mUla rAma dEvara pAdAravindakke gOvinda, gOvinda...
shri krishNArpaNamastu..
***
ಶ್ರೀಉಪೇಂದ್ರತೀರ್ಥ ಶ್ರೀಪಾದಂಗಳವರು
***********
"ಕೃಪಾರ ಸಾಮೃತಾಂಭೋಧಿಮಪಾರ ಮಹಿಮಾನ್ವಿತಮ್/
ಉಪಾಸ್ಮಹೇ ತಪೋಮೂರ್ತಿ ಮುಪೇಂದ್ರ
ಗುರು ಪುಂಗವಮ್//
******
ಶ್ರೀಉಪೇಂದ್ರತೀರ್ಥ ಶ್ರೀಪಾದಂಗಳವರು ಜಗದ್ಗುರು
ಶ್ರೀಮನ್ಮಧ್ವಾಚಾರ್ಯರ ಮೂಲಮಹಾ ಸಂಸ್ಥಾನ
ಮತ್ತುವಿದ್ಯಾಮಠವೆಂದುಪ್ರಸಿದ್ಧವಾದಶ್ರೀರಾಘವೇಂದ್ರಸ್ವಾಮಿಗಳವರಮಠದಪರಂಪರೆಯಲ್ಲಿ"ಶ್ರೀರಾಯರ"ನಂತರ ವೇದಾಂತಸಾಮ್ರಾಜ್ಯದಪೀಠವನ್ನಲಂಕರಿಸಿದ ನಾಲ್ಕನೇ ಯತಿಗಳು.
ಇವರ ಪೂರ್ವಾಶ್ರಮದ ಹೆಸರುವೀಣಾವಿಜಯೀಂದ್ರಾ
ಚಾರ್ಯರುಎಂದು.ಇವರಪೂರ್ವಾಶ್ರಮದತಂದೆಯವರು ಶ್ರೀವೀಣಾ ವೆಂಕಟನಾರಾಯಣಾಚಾರ್ಯರು .
ವೀಣಾವೆಂಕಟನಾರಾಯಣಾಚಾರ್ಯರು ,ವೀಣಾಗುರುರಾಜಾಚಾರ್ಯರಪುತ್ರರು.ವೀಣಾಗುರುರಾಜಾಚಾರ್ಯರು ,ವೀಣಾವೆಂಕಟನಾಥಾಚಾರ್ಯರಅಣ್ಣಂದಿರು(ಶ್ರೀರಾಘವೇಂದ್ರಗುರುಸಾರ್ವಭೌಮರು)ವಿಜಯೀಂದ್ರಾಚಾರ್ಯರಸೋದರರುನಾಲ್ಕುಜನಇವರುಗಳುವೀಣಾವೆಂಕಣ್ಣಾಚಾರ್ಯರು(ಶ್ರೀಯೋಗೀಂದ್ರತೀರ್ಥರು)ವೀಣಾವಾಸುದೇವಾಚಾರ್ಯರು(ಶ್ರೀಸೂರೀಂದ್ರತೀರ್ಥರು)ವೀಣಾಮುದ್ದುವೆಂಕಟಕೃಷ್ಣಾಚಾರ್ಯರು(ಶ್ರೀಸುಮತೀಂದ್ರತೀರ್ಥರು)ವೀಣಾಲಕ್ಷ್ಮೀನಾರಾಯಣಾಚಾರ್ಯರು(ಶ್ರೀಮುನೀಂದ್ರತೀರ್ಥರು)
ಶ್ರೀರಾಘವೇಂದ್ರಗುರುಸಾರ್ವಭೌಮರು ಮತ್ತು
ಇವರ ಪೂರ್ವಾಶ್ರಮ ಸಹೋದರರಾಗಿದ್ದ ಗುರುರಾಜಾಚಾರ್ಯರುವಿಜಯೀಂದ್ರಾಚಾರ್ಯರವರ ತಾತಂದಿರು.ಶ್ರೀವಿಜಯೀಂದ್ರಾಚಾರ್ಯರು ತಮ್ಮ ಸಹೋದರರೊಂದಿಗೆ ಪ್ರಾಥಮಿಕ ವಿದ್ಯೆ ಮತ್ತು ಶಾಸ್ತ್ರಾ
ಧ್ಯಯನವನ್ನು ತಮ್ಮ ತಂದೆಯವರಲ್ಲಿಯೂ,ವೇದ-
ವೇದಾಂತ-ನ್ಯಾಯ ವ್ಯಾಕರಣ ಸಾಹಿತ್ಯ ಮೀಮಾಂಸಾ
ಶಾಸ್ತ್ರಾಧ್ಯಯನವನ್ನು ಶ್ರೀರಾಘವೇಂದ್ರಗುರುಸಾರ್ವ
ಭೌಮರಲ್ಲಿ ಕಲಿತು ಪ್ರಕಾಂಡ ಪಂಡಿತರೆಂದು ಪ್ರಸಿದ್ಧಿ
ಪಡೆದರು.
ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ ವಿದ್ಯಾ
ಶಿಷ್ಯರೆಂದರೆಇವರವಿದ್ವತ್ಪ್ರೌಢಿಮೆಯನ್ನುಯಾರಿಂದಲೂ ವರ್ಣಿಸಲು ಸಾಧ್ಯವಿಲ್ಲ.
ಶ್ರೀ ಸುಮತೀಂದ್ರತೀರ್ಥರು ಇವರನ್ನು ದ್ವೈತವೇದಾಂತ
ದಿಗ್ವಿಜಯ ವಿದ್ಯಾ ಸಿಂಹಾಸನದಲ್ಲಿ ಕುಳ್ಳಿರಿಸಿ ,ತಮ್ಮ
ಉತ್ತರಾಧಿಕಾರಿಯನ್ನಾಗಿ ಮಾಡಿಶ್ರೀಉಪೇಂದ್ರತೀರ್ಥ
ರೆಂದು ನಾಮಕರಣ ಮಾಡುತ್ತಾರೆ.
ಶ್ರೀಉಪೇಂದ್ರತೀರ್ಥರು ಸಂಸ್ಥಾನದ ಆಡಳಿತವನ್ನು
1725ರಿಂದ 1728ರ ತನಕ ಮೂರು ವರ್ಷಗಳ ಕಾಲ
ನಡೆಸಿ ಶ್ರೀನಿವಾಸಾಚಾರ್ಯರಿಗೆ ಪರಮ ಹಂಸಾಶ್ರಮವನ್ನು ಕೊಟ್ಟು "ವಾದೀಂದ್ರತೀರ್ಥ"ರೆಂದು
ನಾಮಕರಣಮಾಡುತ್ತಾರೆ.ಶ್ರೀನಿವಾಸಾಚಾರ್ಯರು ಶ್ರೀರಾಯರ ಪೂರ್ವಾಶ್ರಮದ ಮರಿಮೊಮ್ಮಕ್ಕಳು.
ಶ್ರೀವಾದೀಂದ್ರತೀರ್ಥರು ತಾವು ರಚಿಸಿರುವ ಗುರುಗುಣ ಸ್ತವನ ಸ್ತೋತ್ರದಲ್ಲಿ ತಮ್ಮ ಗುರುಗಳಾದ
ಶ್ರೀಉಪೇಂದ್ರತೀರ್ಥರನ್ನು ವಿಶೇಷವಾಗಿ ಸ್ತುತಿಸಿದ್ದಾರೆ.
",ಶ್ರೀಮೂಲರಾಮ ಹಾಗೂ ಶ್ರೀವೇದವ್ಯಾಸರ ಪಾದಗಳನ್ನೇ ಸದಾ ಧ್ಯಾನಿಸುತ್ತಿರುವವರಾದ ,ಮಧ್ವಸಿದ್ಧಾಂತದ ಅಪಾರ ಜ್ಞಾನದಿಂದ ಸರ್ವತ್ರ ಪೂಜಿತರಾದ ಶ್ರೀಸುಮತೀಂದ್ರ
ತೀರ್ಥರ ಶಿಷ್ಯರಲ್ಲಿ ಅಗ್ರಗಣ್ಯರಾದ,ನಿತ್ಯದಲ್ಲೂ ವೇದ ಉಪನಿಷತ್ತುಗಳ ಚಿಂತನೆಯಿಂದ ಪರಿಪಕ್ವವೂ,ನಿರ್ಮಲವೂ ಆದ ,ಜ್ನಾನಿವರೇಣ್ಯರೂ ಆದ ನಮ್ಮ ಗುರುವರ್ಯರಾದ ಶ್ರೀಉಪೇಂದ್ರತೀರ್ಥರೆಂಬ ಯತಿಶ್ರೇಷ್ಠರನ್ನು" ನಾನು ಆಶ್ರಯಿಸುತ್ತೇನೆ ಎಂದು ತಮ್ಮ ಗುರುಗುಣ ಸ್ತವನ
ಸ್ತೋತ್ರದಲ್ಲಿ ಸ್ತುತಿಸಿದ್ದಾರೆ
ಶ್ರೀಉಪೇಂದ್ರತೀರ್ಥ ಶ್ರೀಪಾದಂಗಳವರು ತಮ್ಮ ಪ್ರೀತಿಯ ಶಿಷ್ಯರಾದ ಬ್ಯಾಗವಾಟದ ನರಸಿಂಹ ದಾಸರಿಗೆ ಅನುಗ್ರಹ ಮಾಡಿ ಕೊಟ್ಟ ಶ್ರೀನರಸಿಂಹ
ಸಾಲಿಗ್ರಾಮ ಇಂದಿಗೂ ಮಾನವಿಯಲ್ಲಿರುವ ಜಗನ್ನಾಥದಾಸರಾಯರ ಸನ್ನಿಧಿಯಲ್ಲಿ ಪೂಜೆಗೊಳ್ಳುತ್ತಿದೆಎಂದುತಿಳಿದುಬಂದಿದೆ.ನರಸಿಂಹ
ದಾಸರು ಹರಿಕಥಾಮೃತಸಾರ ಎನ್ನುವ ಶ್ರೇಷ್ಠ ಗ್ರಂಥವನ್ನು ರಚಿಸಿರುವಹರಿದಾಸರತ್ನಜಗನ್ನಾಥದಾಸರ ತಂದೆಯವರು.
ಶ್ರೀಉಪೇಂದ್ರತೀರ್ಥರುಶ್ರೀರಾಘವೇಂದ್ರ-ಶ್ರೀಯೋಗೀಂದ್ರ-ಶ್ರೀಸುಮತೀಂದ್ರತೀರ್ಥರ ಸನ್ನಿಧಾನವಿರುವ ಪರಮ ಪವಿತ್ರಕ್ಷೇತ್ರವಾದ ಶ್ರೀರಂಗಂನಲ್ಲಿ ಮಾರ್ಗಶಿರ ಬಹುಳ ಅಷ್ಟಮಿ ತಿಥಿಯಂದು ಶ್ರೀಮೂಲರಾಮನ ಪಾದವನ್ನು ಸೇರಿದರು.ಇಂದಿನದಿನವನ್ನು ಶ್ರೀಗುರುಗಳ ಆರಾಧನಾ ದಿನವನ್ನಾಗಿ ಆಚರಿಸುತ್ತಾರೆ.
ಶ್ರೀಗುರುಗಳ ಆರಾಧನಾ ಪರ್ವಕಾಲದಲ್ಲಿ ಸ್ಮರಣೆ
ಮಾಡಿ ಭಕ್ತಿಯ ನಮನಗಳನ್ನು ಅರ್ಪಿಸಿ ಅವರ
ಅನುಗ್ರಹಕ್ಕೆ ಪಾತ್ರರಾಗೋಣ.
(received in WhatsApp)
***
5 Jan 2020
ಕೃಪಾರಸಾಮೃತಾಂಬೋಧಿಮಪಾರಮಹಿಮಾನ್ವಿತಮ್/
ಉಪಾಸ್ಮಹೇ ತಪೋಮೂರ್ತಿಮುಪೇಂದ್ರಗುರುಪುಂಗವಂ//
ಶ್ರೀ ರಾಯರ ಮಠದ 17ನೇ ಶತಮಾನದ ಪರಮ ಶ್ರೇಷ್ಠ ಯತಿಗಳಾದ, ರಾಯರ ಪೂರ್ವಾಶ್ರಮದ ಮೊಮ್ಮಗ ಹಾಗೂ ರಾಯರನ್ನೇ ವಿದ್ಯಾಗುರುಗಳನ್ನಾಗಿ ಪಡೆದವರೂ, ಶ್ರೀ ಸುಮತೀಂದ್ರತೀರ್ಥರಿಂದ ಆಶ್ರಮ ಸ್ವೀಕಾರ ಮಾಡಿದವರಾದ, ಶ್ರೀ ವಾದೀಂದ್ರತೀರ್ಥರೆಂಬೋ ವಜ್ರವನ್ನು ನೀಡಿದ ಶ್ರೀ ಉಪೇಂದ್ರ ತೀರ್ಥರ ಆರಾಧನಾ ಮಹೋತ್ಸವ ಇಂದಿನಿಂದ ಮೂರು ದಿನ (ಶ್ರೀರಂಗಂ) ಶ್ರೀ ಗುರುಗಳ ಅನುಗ್ರಹ ನಮ್ಮ ಸಮೂಹದಲ್ಲಿನ ಎಲ್ಲಾ ಸದಸ್ಯರ ಮೇಲೆ ಸದಾ ಇರಲಿ ಎಂದು ಅವರಲ್ಲಿ ಅವರ ಅಂತರ್ಗತ ಶ್ರೀರಾಮಚಂದ್ರನಲ್ಲಿ ಪ್ರಾರ್ಥನೆ ಮಾಡುತ್ತಾ....
-Smt. Padma Sirish
ನಾದನೀರಾಜನದಿಂ ದಾಸಸುರಭಿ 🙏🏽
***
" ದಿನಾಂಕ : 06.01.2021 - ಮಾರ್ಗಶಿರ ಬಹುಳ ಅಷ್ಟಮೀ ಬುಧವಾರ - ಶ್ರೀ ರಾಯರ ಉಭಯ ವಂಶಾಬ್ಧಿ ಚಂದ್ರಮರೂ - ಶ್ರೀ ರಾಯರ ವಿದ್ಯಾ ಶಿಷ್ಯರಾದ - ಶ್ರೀ ಉಪೇಂದ್ರತೀರ್ಥರ ಆರಾಧನಾ ಮಹೋತ್ಸವ., ಶ್ರೀರಂಗಂ "
ಕೃಪಾರಸಾಮೃತಾ೦ಬೋಧಿ-
ಮಪಾರಮಹಿಮಾನ್ವಿತಂ ।
ಉಪಾಸ್ಮಹೇ ತಪೋಮೂರ್ತಿಂ
ಉಪೇಂದ್ರ ಗುರುಪುಂಗವಮ್ ।।
" ಶ್ರೀ ಪ್ರಾಣೇಶದಾಸರ ಕಣ್ಣಲ್ಲಿ " ......
ಸಲ್ಲಾದ ಸುಖಗಳ ।
ನೆಲ್ಲಾವು ಬಂದು । ಶ್ರೀ ।
ನಲ್ಲಾನ ಭಜಿಸಲು ।
ಬಲ್ಲ ಶ್ರೀ ಉಪೇಂದ್ರಾ ।।
ಶ್ರೀ ಉಪೇಂದ್ರತೀರ್ಥ ಮುನಿವರ್ಯರೇ!
ನಿಮ್ಮ ಮಹಿಮೆ, ವೈಭವಗಳು ಅವರ್ಣನೀಯವಾಗಿವೆ.
ನೀವು ರಮೆಯರಸನ ಅವತಾರವಾದ ರಘುಕುಲತಿಲಕನಾದ ಶ್ರೀ ರಾಮಚಂದ್ರ ಅರ್ಥಾತ್ ಶ್ರೀ ಮೂಲರಾಮಚಂದ್ರದೇವರ ಚರಣ ಸರೋಜಗಳಿಗೆ ಭೂಷಣರಾಗಿದ್ದೀರಿ.
ಶ್ರೀ ಭಾರತೀ ಮುಖ್ಯಪ್ರಾಣದೇವರ ಅಥವಾ ಶ್ರೀ ಹರಿಯ ಜ್ಯೇಷ್ಠ ಪುತ್ರರಾದ ಶ್ರೀ ವಾಯುದೇವರ ಅಥವಾ ಶ್ರೀ ವಾಯುದೇವರ ಪ್ರಥಮಾವತಾರರಾದ ಶ್ರೀ ಹನುಮಂತದೆವರೇ ಶ್ರೀಮನ್ಮಧ್ವಾಚಾರ್ಯರಾಗಿ ವಿರಾಜಮಾನರಾದ ಪರಮ ಪಾವನವಾದ ಮುಖ್ಯ ಪೀಠದಲ್ಲಿ ಬಂದ ಮಹಾ ಭಾಗ್ಯಶಾಲಿಗಳಾಗಿದ್ದೀರಿ!!
ಶ್ರೀ ಪ್ರಹ್ಲಾದರಾಜರ - ಶ್ರೀ ಬಾಹ್ಲೀಕರಾಜರ - ಶ್ರೀ ವ್ಯಾಸರಾಜಾವತಾರಿಗಳಾದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ವಂಶವೆಂಬ ನದಿಯಲ್ಲಿ ವಿಹರಿಸುವ " ರಾಜಹಂಸ " ರಾಗಿದ್ದೀರಿ.
ಇಂಥಾ ವೈಭವ ಕೇವಲ ದೇವತೆಗಳಿಗೆ ಮಾತ್ರ ಲಭ್ಯವಾದ್ದರಿಂದ ನೀವೂ ದೇವಾಂಶರಾಗಿದ್ದೀರಿ.
ಉಭಯ ವಂಶಾಬ್ಧಿ ಚಂದ್ರಮರೂ; ಶ್ರೀ ರಾಯರ ಮರಿಮಕ್ಕಳೂ, ಶ್ರೀ ಬೃಹಸ್ಪತ್ಯಾಚಾರ್ಯರ ಅಂಶ ಸಂಭೂತರಾದ ಶ್ರೀ ವಾದೀಂದ್ರತೀರ್ಥರ ಆಶ್ರಮ ಗುರುಗಳಾದ ಶ್ರೀ ಉಪೇಂದ್ರತೀರ್ಥರ ಆರಾಧನಾ ಶುಭ ಸಂದರ್ಭದಲ್ಲಿ ಆ ಮಹಾ ಮಹಿಮಾನ್ವಿತರ ಕಿರು ಪರಿಚಯ ಮಾಡಿಸುವ ಚಿಕ್ಕ ಪ್ರಯತ್ನ ಇಲ್ಲಿದೆ.
" ಶ್ರೀ ಉಪೇಂದ್ರತೀರ್ಥರ ಸಂಕ್ಷಿಪ್ತ ಮಾಹಿತಿ "
" ಹೆಸರು "
ವೀಣಾ ಶ್ರೀ ವಿಜಯೀಂದ್ರಾಚಾರ್ಯರು
" ತಂದೆ "
ವೀಣಾ ಶ್ರೀ ವೇಂಕಟನಾರಾಯಣಾಚಾರ್ಯರು
( ವೀಣಾ ಶ್ರೀ ಗುರುರಾಜಾಚಾರ್ಯರ ಪುತ್ರ )
" ತಾತ "
ವೀಣಾ ಶ್ರೀ ಗುರುರಾಜಾಚಾರ್ಯರು
ಮತ್ತು
ವೀಣಾ ಶ್ರೀ ವೆಂಕಟನಾಥಾಚಾರ್ಯರು
( ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು )
ವಂಶ : ಷಾಷ್ಟಿಕ
ಮನೆತನ : ಬೀಗಮುದ್ರೆ
ಗೋತ್ರ : ಗೌತಮ
ಸಹೋದರರು :
ವೀಣಾ ಶ್ರೀ ವೆಂಕಣ್ಣಾಚಾರ್ಯರು - ಶ್ರೀ ಯೋಗೀಂದ್ರತೀರ್ಥರು
ವೀಣಾ ಶ್ರೀ ವಾಸುದೇವಾಚಾರ್ಯರು - ಶ್ರೀ ಸೂರೀಂದ್ರ ತೀರ್ಥರು
ವೀಣಾ ಶ್ರೀ ಮುದ್ದು ವೇಂಕಟ ಕೃಷ್ಣಾಚಾರ್ಯರು - ಶ್ರೀ ಸುಮತೀಂದ್ರತೀರ್ಥರು
ವೀಣಾ ಶ್ರೀ ಗರುಡವಾಹನ ಲಕ್ಷ್ಮೀನಾರಾಯಣಾಚಾರ್ಯರು -
ಶ್ರೀ ಮುನೀಂದ್ರತೀರ್ಥರು
( ಇವರು ಶ್ರೀ ವಿಬುಧೇಂದ್ರ ವಿಜಯ ಮಹಾ ಕಾವ್ಯವನ್ನು ರಚಿಸಿದ್ದಾರೆ ).
ವಿದ್ಯಾ ಗುರುಗಳು :
ಸಾಕ್ಷಾತ್ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು
ಆಶ್ರಮ ಗುರುಗಳು : ಶ್ರೀ ಸುಮತೀಂದ್ರತೀರ್ಥರು
ಆಶ್ರಮ ನಾಮ : ಶ್ರೀ ಉಪೇಂದ್ರತೀರ್ಥರು
ಆಶ್ರಮ ಶಿಷ್ಯರು : ಶ್ರೀ ವಾದೀಂದ್ರತೀರ್ಥರು
ವೇದಾಂತ ಸಾಮ್ರಾಜ್ಯಾಧಿಕಾರ : ಕ್ರಿ ಶ 1725 - 1728
ಆರಾಧನಾ ದಿನ : ಮಾರ್ಗಶೀರ್ಷ ಬಹುಳ ಅಷ್ಟಮೀ
ಬೃಂದಾವನ ಸ್ಥಳ : ಸ್ವಯಂವ್ಯಕ್ತ ಶ್ರೀ ಕ್ಷೇತ್ರ ಶ್ರೀರಂಗಂ
" ವಿದ್ಯಾಭ್ಯಾಸ "
ವೀಣಾ ಶ್ರೀ ವಿಜಯೀಂದ್ರಾಚಾರ್ಯರು ಸಹೋದರರೊಂದಿಗೆ ಪ್ರಾಥಮಿಕ ವಿದ್ಯೆ ಮತ್ತು ಶಾಸ್ತ್ರಾಧ್ಯಯನವನ್ನು ತಮ್ಮ ತಂದೆಯವರಲ್ಲಿಯೂ; ವೇದ - ವೇದಾಂತ, ನ್ಯಾಯ - ವ್ಯಾಕರಣ - ಸಾಹಿತ್ಯ - ಮೀಮಾಂಸಾ ಶಾಸ್ತ್ರಾಧ್ಯಯನವನ್ನು ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರಲ್ಲಿ ಮಾಡಿ ಪ್ರಕಾಂಡ ಪಂಡಿತರೆಂದು ಪ್ರಸಿದ್ಧಿ ಪಡೆದರು.
ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ವಿದ್ಯಾ ಶಿಷ್ಯರೆಂದರೆ ಇವರ ವಿದ್ವತ್ ಪ್ರೌಢಿಮೆಯನ್ನು ಯಾರಿಂದಲೂ ವರ್ಣಿಸಲು ಶಕ್ಯವಿಲ್ಲ.
" ಶ್ರೀ ವಿಜಯೀಂದ್ರಾಚಾರ್ಯರು ಶ್ರೀ ಉಪೇಂದ್ರತೀರ್ಥರಾಗಿ ವಿರಾಜಿಸಿದ್ದು "
ಪಂಡಿತೋತ್ತಮರೂ, ವೈರಾಗ್ಯ ನಿಧಿಗಳೂ; ಉತ್ತಮ ವಾಗ್ಮಿಗಳೂ ಆದ ವೀಣಾ ಶ್ರೀ ವಿಜಯೀಂದ್ರಾಚಾರ್ಯರಿಗೆ ಶ್ರೀಮದಾಚಾರ್ಯರ ಮುಖ್ಯ ಪೀಠದ ಸತ್ಸಂಪ್ರದಾಯದಂತೆ ಶ್ರೀ ಸುಮತೀಂದ್ರತೀರ್ಥರು ತುರ್ಯಾಶ್ರಮವನ್ನು ನೀಡಿ " ಉಪೇಂದ್ರತೀರ್ಥ " ರೆಂದು ನಾಮಕರಣ ಮಾಡಿ ತಮ್ಮ ಅಮೃತಮಯವಾದ ಹಸ್ತಗಳಿಂದ " ದ್ವೈತ ವೇದಾಂತ ದಿಗ್ವಿಜಯ ವಿದ್ಯಾ ಸಿಂಹಾಸನದಲ್ಲಿ ಕುಳ್ಳಿರಿಸಿ ಪಟ್ಟಾಭಿಷೇಕ " ಮಾಡಿದರು.
" ನೂತನ ಜಗದ್ಗುರುಗಳಿಂದ ಶ್ರೀ ಮೂಲರಾಮನ ಪೂಜೆ "
ಶ್ರೀಮದುಪೇಂದ್ರತೀರ್ಥರು ಚತುರ್ಯುಗ ಮೂರ್ತಿಯಾದ ಶ್ರೀ ಬ್ರಹ್ಮದೇವರ ಕರಾರ್ಚಿತ ಶ್ರೀ ಮೂಲರಾಮದೇವರನ್ನೂ; ಶ್ರೀಮದಾಚಾರ್ಯರ ಕರಾರ್ಚಿತ ಶ್ರೀ ದಿಗ್ವಿಜಯರಾಮದೇವರನ್ನೂ; ಶ್ರೀ ಜಯತೀರ್ಥರ ಕರಾರ್ಚಿತ ಶ್ರೀ ಜಯರಾಮದೇವರನ್ನೂ ಅತ್ಯಂತ ಭಕ್ತಿ ಶ್ರದ್ಧೆಗಳಿಂದ ಬಹಳ ವೈಭವದಿಂದ ನೆರವೇರಿಸಿದರು.
" ಗುರುಗುಣಸ್ತವನ " ದಲ್ಲಿ ಶ್ರೀ ವಾದೀಂದ್ರತೀರ್ಥರು ತಮ್ಮ ಗುರುಗಳಾದ ಶ್ರೀ ಉಪೇಂದ್ರತೀರ್ಥರನ್ನು ಈ ಕೆಳಗಿನಂತೆ ಸ್ತೋತ್ರ ಮಾಡಿದ್ದಾರೆ.
ಯೇ ರಾಮವ್ಯಾಸಪಾದಪ್ರಣಿಹಿತ
ಮನಸೋ ಮಧ್ವತಂತ್ರಪ್ರತಿಷ್ಠಾ
ಧುರ್ಯಾಮರ್ಯಾದಸಂವಿತ್ಸುಮಹಿತ
ಸುಮತೀಂದ್ರಾರ್ಯ ಶಿಷ್ಯಾಗ್ರಗಣ್ಯಾಃ ।
ನಿತ್ಯತ್ರಯ್ಯಂತಚಿಂತಾಪರಿಣತ-
ವಿಶದಾಶೇಷತತ್ತ್ವಾವಬೋಧ
ಪ್ರಖ್ಯಾತಾನ್ ತಾನ್ ಉಪೇಂದ್ರ
ವ್ರತಿ ವಿಬುಧಮಣೀನ
ದೇಶಿಕಾನಾಶ್ರಯೇsಯಮ್ ।।
ಶ್ರೀ ಮೂಲರಾಮ ಹಾಗೂ ಶ್ರೀ ವೇದವ್ಯಾಸರ ಪಾದಗಳನ್ನೇ ಸದಾ ಧ್ಯಾನಿಸುತ್ತಿರುವವರಾದ; ಮಧ್ವ ಸಿದ್ಧಾಂತದ ಪ್ರತಿಷ್ಠಾಪನೆಯಲ್ಲಿ ಸಮರ್ಥವಾದ ಅಪಾರ ಜ್ಞಾನದಿಂದ ಸರ್ವತ್ರ ಪೂಜಿತರಾದ ಶ್ರೀ ಸುಮತೀಂದ್ರತೀರ್ಥರ ಶಿಷ್ಯರಲ್ಲಿ ಅಗ್ರಗಣ್ಯರಾದ; ನಿತ್ಯದಲ್ಲೂ ವೇದ - ಉಪನಿಷತ್ತುಗಳ ಚಿಂತನೆಯಿಂದ ಪರಿಪಕ್ವವೂ; ನಿರ್ಮಲವೂ ಆದ ಅಶೇಷ ತತ್ತ್ವಜ್ಞಾನದಿಂದ ಪ್ರಸಿದ್ಧರಾದ; ನಮ್ಮ ಗುರುವರ್ಯರಾದ ಶ್ರೀ ಉಪೇಂದ್ರತೀರ್ಥರೆಂಬ ವ್ರತಿ ಶ್ರೇಷ್ಠರನ್ನು ನಾನು ಆಶ್ರಯಿಸುತ್ತೇನೆ.
ಮೇಲ್ಕಂಡ ವಿಷಯವನ್ನು ದೃಢ ಪಡಿಸುತ್ತಾ ಶ್ರೀ ಧೀರೇಂದ್ರತೀರ್ಥರು ಗುರುಗುಣಸ್ತವನಕ್ಕೆ ರಚಿಸಿದ " ಶ್ರೀ ಗುರುಗುಣನುತಿವ್ಯಾಖ್ಯೆ " ಯಲ್ಲಿ...
"ಯೋ ರಾಮವ್ಯಾಸ ಪಾದ
ಪ್ರಣಿಹಿತ ಮನಸಃ "
ಎಂಬ ವಿಶೇಷಣಕ್ಕೆ..
" ರಾಮವ್ಯಾಸೌ " ಮೂಲರಾಮ ವೇದವ್ಯಾಸೌ ತಯೋಃ ಪಾದೇಷು ಅಂಘ್ರಿಷು ಪ್ರಕರ್ಷೇಣ ನಿಹಿತಂ ಮನೋ ಯೇಷಾಂ ತೇ ತಥೋಕ್ತಾಃ "
ಎಂದೇ ವ್ಯಾಖ್ಯಾನಿಸಿದ್ದಾರೆ.
" ಶಿಷ್ಯ ಸ್ವೀಕಾರ "
ಪಂಡಿತೋತ್ತಮರೂ, ವೈರಾಗ್ಯ ನಿಧಿಗಳೂ, ಉತ್ತಮ ವಾಗ್ಮಿಗಳೂ ಮತ್ತು ಗ್ರಂಥಕರ್ತೃಗಳೂ ಆದ ವೀಣಾ ಶ್ರೀ ಶ್ರೀನಿವಾಸಾಚಾರ್ಯರಿಗೆ ಪರಮಹಂಸಾಶ್ರಮವನ್ನು ಕೊಟ್ಟು " ವಾದೀಂದ್ರತೀರ್ಥ " ರೆಂದು ನಾಮಕರಣ ಮಾಡಿ ತಮ್ಮ ಅಮೃತಮಯವಾದ ಹಸ್ತಗಳಿಂದ " ದ್ವೈತ ವೇದಾಂತ ದಿಗ್ವಿಜಯ ವಿದ್ಯಾ ಸಿಂಹಾಸನದಲ್ಲಿ ಕುಳ್ಳಿರಿಸಿ ಪಟ್ಟಾಭಿಷೇಕ " ಮಾಡಿದರು.
" ಅವತಾರ ಸಮಾಪ್ತಿ "
ಶ್ರೀಮದುಪೇಂದ್ರತೀರ್ಥರು " ಶ್ರೀ ರಾಘವೇಂದ್ರ - ಶ್ರೀ ಯೋಗೀಂದ್ರ - ಶ್ರೀ ಸುಮತೀಂದ್ರತೀರ್ಥರ " ಪರಮ ಪವಿತ್ರವಾದ ಸನ್ನಿಧಾನದಲ್ಲಿ ಮಾರ್ಗಶೀರ್ಷ ಬಹುಳ ಅಷ್ಟಮೀ ತಿಥಿಯಂದು ಶ್ರೀ ಮೂಲರಾಮನ ಪಾದಾರವಿಂದವನ್ನು ಸೇರಿದರು!!
कृपारसामृतांभॊधिमपारमहिमान्वितम् ।
उपास्महॆ तपॊमूर्तिमुपॆंद्रगुरुपुंगवम् ॥
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
***
कृपारसामृतांभॊधि-
मपारमहिमान्वितम् ।
उपास्महॆ तपॊमूर्ति-
मुपॆंद्रगुरुपुंगवम् ॥
*****
info from https://madhwafestivals.wordpress.com/2016/12/09
कृपारसामृतांभॊधि-
मपारमहिमान्वितम् ।
उपास्महॆ तपॊमूर्ति-
मुपॆंद्रगुरुपुंगवम् ॥
*****
info from https://madhwafestivals.wordpress.com/2016/12/09
Moola brindavanas situated in Tamilnadu
- Uttaradhi Mutt – 6
- Raghavendra Mutt – 7
- Vyasaraja Mutt – 9
- Sripadaraja Mutt – 15
- Other Brindavanas/Bidi sanyasigalu – 8
Rayara Mutt
Sri Upendra Theertharu(Sri Rangam)
No comments:
Post a Comment