Wednesday 20 March 2019

vedavedya teertharu 2 1616 sonda matha sode mutt yati 22 ashwija shukla dwiteeya ವೇದವೇದ್ಯ ತೀರ್ಥರು 2





Sri Vedavedya Theertha
Sri Vedavedya Theertha (1530 - 1616) is the 21st saint after Sri Vishnu Theertha in the guru parampare of Sode mutt.
Poorvashrama Name : —
Ashrama Guru : Sri Vadiraja Theertha
Ashrama Shishya : Sri Vidyanidhi Theertha
Aradhana : Asweeja Shudha Dwiteeya
Vrundavana : Sode
Sri Vedavedya Theertha took Ashrama from Sri Vadiraja Theertha and ruled the Peeta for 16 years. He is a great scholar. Being a disciple, he did Seva of Sri Vadiraja for 60 years. When he was very old, he was worried about his paryaya as Sri Vadiraja was still there. Then Sri Vadiraja left his paryaya (1596-97 AD) for him and went to Sode. This shows Sri Vadiraja had how much affection with him. With god’s grace he could able to do one more paryaya after entry of Vrundavana in the year 1612-13 AD. He had written many works, some of them are ‘Tantrasara Teeka’ and ‘Vadiraja stuti’.
After handing over Peeta to Sri Vidyanidhi Theertha he entered Vrundavana at Sode.

*******
info from sodemutt website--->
Sri Vedavedyatirtha was the direct disciple of Sri Vadiraja. Vadiraja gave Samnyasashrama to a qualified candidate and named him as Sri Vedavedyatirtha (1540). Vedavedyatirtha studied under his Guru and became a great scholar. He pleased his Guru Vadiraja by faithfully doing Japa, Tapa, studying lores, worship etc. Sri Vedavedyatirtha per-formed two biennial Par-yayas. The period of his first biennial Paryaya was 1596-97 (Udupi). And it was the period of fifth Paryaya of Vadiraja (Sode). Vedavedya used to say that he had the experience of holy and em-bodied presence of Vadiraja and hence it was Vadiraja's fifth Paryaya.
Vedavedya gave Ashrama to a deserving candidate in the year 1585 A.D. He named him Sri Vidyanidhitirtha. The disciple was rendering service of assistance to his Guru Vedavedya during Guru's first Paryaya. After the Vrindavanapravesha of Vadiraja, once, Vedavedya wished to have the Darshana and conversation with his master Vadiraja. For this he made an earnest appeal at Vrindavanasannidhi. Accordingly, Vadiraja gave him a hint of date and time through dream. On that stipulated day and time the front covered stone was slided by Sri Bhutaraja. Vedavedya with others, saw beautiful and delectable form of Vadiraja for one Muhurtha and felt very much delighted. During the period of Vedavedya's second biennial Paryaya, Venkatappanaik, a subordinate king of Ikkeri, gifted the Huvinakere village (1613) (the stone inscriptions seen in Krishnamatha Udupi). During that period, Vedavedya got renovated the Krishna temple with stone structure. He also got placed the copper roof with fixing Kalasha on that. At that time, the idol of Krishna was reinstalled as per prescriptions. Sri Vedavedyatirtha, realising the Svarupamahima of Rujutva of Vadiraja (the fact being Latavya Ruju god), introduced the system of Samapuja (worshipping Vadiraja with god Vayu and his incarnations namely Hanuma-Bhima and Madhva) from the day of Vrindavanapravesha of Vadiraja. He also brought inforce the proclamation of Paraku (Singing Vadiraja's titles in praise) at the end of evening worship daily. Since then, these customary observations have been put into practice with orderliness. Vedavedya is Rushi (Seer of presiding deity of Mantra) to Vadiraja Mantra. In Vrindavanakhyana, it is stated that Vedavedyatirtha is brimming with the power Siddhi of Vadiraja mantra

Vedavedya entered the holy Vrindavana in the year 1616 A.D. His holy tomb is situated at Sonda besides Vadiraja's Vrindavana. The Aradhana falls on Kartika month Krishnapaksha Trayodashi. Sri Vedavedya-tirtha has authored a commentary on Tantrasara, but that work is still unfound. From the available evidence seen in Vrindavanakhayana, Vadirajaguruvaracharitamrita and tradition, Vedavedya is known as one of the Ruju gods namely Gavya. The period of Samnyasashrama of Sri Vedavedya was 76 years and his period of incharge of Pontificial Empire was 15 years.
*******

ಶ್ರೀವೇದವೇದ್ಯತೀರ್ಥರು(ಆರಾಧನಾ ಪ್ರಯುಕ್ತ)

ಶ್ರೀಮದಾಚಾರ್ಯರ ಸನ್ಯಾಸ  ಶಿಷ್ಯರಲ್ಲಿ ಅವರ ಪರಮಾನುಗ್ರಹ  
 ಅಗ್ರಗಣ್ಯರಾದವರೂ, ಇಂದಿಗೂ ಕುಮಾರ ಪರ್ವತದಲ್ಲಿ ಧ್ಯಾನನಿರತರಾದವರೂ ಆದ   ಶ್ರೀವಿಷ್ಣುತೀರ್ಥರಿಗೆ ಇಬ್ಬರು ಸನ್ಯಾಸ ಶಿಷ್ಯರು. ಒಬ್ಬರು ಶ್ರೀವ್ಯಾಸತೀರ್ಥರು, ಮತ್ತೊಬ್ಬರು ಶ್ರೀಅನಿರುದ್ಧತೀರ್ಥರು. ಇಬ್ಬರೂ ಶ್ರೀಮದಾಚಾರ್ಯರ ವಿಶೇಷ  ಅನುಗ್ರಹಕ್ಕೆ ಪಾತ್ರರಾದವರು. 
ವೇದಾಂತ ಗುರುಸಹೋದರರ ಆಜ್ಞೆಯಂತೆ  ಶ್ರೀಅನಿರುದ್ಧ ತೀರ್ಥರಿಂದ ಶ್ರೀಸುಬ್ರಹ್ಮಣ್ಯ ಮಠದ ಪರಂಪರೆ ಮುಂದುವರೆದರೆ, ಶ್ರೀವ್ಯಾಸತೀರ್ಥರಿಂದ ಮುಂದುವರೆದ ಪರಂಪರೆಯೇ ಸೋಂದಾ ಮಠ ಎಂದು ಪ್ರಸಿದ್ಧವಾಗಿದೆ.
ಶ್ರೀವಾದಿರಾಜರು ಪೀಠಕ್ಕೆ ಬರುವುದಕ್ಕೂ ಮುಂಚೆ, ಇದು ಶ್ರೀವಿಷ್ಣುತೀರ್ಥ ಮಠ ಮತ್ತು ಕುಂಭಾಸಿ ಮಠ ಎಂದು ಕರೆಯಲ್ಪಡುತ್ತಿತ್ತು.* 
ಈ ಪರಂಪರೆಯಲ್ಲಿ  ಬಂದ  ಲಾತವ್ಯ ಋಜು ಚಕ್ರವರ್ತಿಗಳೂ ಆದ ಶ್ರೀವಾದಿರಾಜ ಗುರುಸಾರ್ವ ಭೌಮರ ಶಿಷ್ಯರು, ಗವ್ಯನಾಮಕ ಋಜುಗಳ ಅವತಾರಿಗಳೂ ಆದ ಇಂದಿನ ಆರಾಧನಾ ನಾಯಕರೇ  ಶ್ರೀವೇದವೇದ್ಯತೀರ್ಥರು.

 ಶ್ರೀವಾದಿರಾಜರಿಂದಲೇ ಶಾಸ್ತ್ರ ಜ್ಞಾನ ಹೊಂದಿದ ಇವರು,ಶ್ರೀರಾಜರಲ್ಲಿ ಮತ್ತು ಶ್ರೀಮದಾಚಾರ್ಯರಲ್ಲಿ ಅತೀವ ಭಕ್ತಿ ಶ್ರದ್ಧೆಗಳನ್ನು ಹೊಂದಿದ್ದರು. 
ರಾಜರು ತಾವು ಕೃಷ್ಣನ  ನಾಲ್ಕು ಪರ್ಯಾಯಗಳನ್ನು ಪೂರೈಸಿ, ಐದನೇ ಪರ್ಯಾಯ ತಮ್ಮ ಶಿಷ್ಯರಿಗೆ ಬಿಟ್ಟು ತಾವು ಸ್ವತಃ ಸೋದೆಯಲ್ಲಿ ಕೃಷ್ಣನನ್ನು ಪ್ರತಿಷ್ಠಾಪಿಸಿ, ಅಲ್ಲಿಯೇ ಎರಡು ವರ್ಷಗಳ ಕಾಲ ಪರ್ಯಾಯ ನೆರವೇರಿಸಿದ್ದಲ್ಲದೇ ಒಂದು ರೂಪದಿಂದ ಉಡುಪಿಯಲ್ಲೂ ಇದ್ದು ಶ್ರೀವೇದವೇದ್ಯರ ಜೊತೆ ಪರ್ಯಾಯ  ಪೂಜೆ ನೆರವೇರಿಸಿದರು. ಇದು ಶ್ರೀವೇದವೇದ್ಯತೀರ್ಥರಿಗೆ ನಿತ್ಯವೂ ಅನುಭವಕ್ಕೆ ಬರುತ್ತಿತ್ತು.

ಶ್ರೀವಾದಿರಾಜ ಗುರುಸಾರ್ವಭೌಮರು ತಾವೇ ಪ್ರತಿಷ್ಠಾಪಿಸಿ, ಪೂಜಿಸಿದ ಪಂಚವೃಂದಾವನದಲ್ಲಿ ಸಶರೀರದಿಂದ ಐದು ರೂಪಗಳನ್ನು ತೆಗೆದುಕೊಂಡು ಏಕಕಾಲಕ್ಕೆ  ಪ್ರವೇಶಿಸಿದ್ದನ್ನು ಹಾಗೂ, ನಂತರ ಇಂದ್ರ ದೇವರ ಪ್ರಾರ್ಥನೆಯಂತೆ ಸ್ವರ್ಗಲೋಕದಿಂದ  ಕಳುಹಿಸಿದ ವಿಮಾನದಲ್ಲೂ ಒಂದು ರೂಪದಿಂದ ಸಂಚರಿಸಿದ್ದನ್ನೂ ಪ್ರತ್ಯಕ್ಷ ದರ್ಶಿಸಿದ ಮಹಾನುಭಾವರು ಶ್ರೀವೇದವೇದ್ಯತೀರ್ಥರು. ಋಜುಗಳಾದ ಶ್ರೀವಾದಿರಾಜರ   ಸಮತ್ವ ಪೂಜೆಯೂ  ಪ್ರಾರಂಭವಾದದ್ದು ಇವರ ಕಾಲದಿಂದಲೇ ಎಂದು ಪ್ರತೀತಿ. 
ಶ್ರೀವಾದಿರಾಜರ ಪರಾಕು ಇವರೇ ಪ್ರಾರಂಭಿಸಿ ನಿತ್ಯವೂ ಸಂಜೆಯ ಪೂಜೆಯ ನಂತರ ಪರಾಕು ಹೇಳುವ ಸಂಪ್ರದಾಯ‌ ಪ್ರಾರಂಭಿಸಿದ್ದು, ಇಂದಿಗೂ ಇದು ಶ್ರೀಮಠದ  ಸಂಪ್ರದಾಯದಲ್ಲಿದೆ. ಇವರ ಅನುಗ್ರಹವಿಲ್ಲದೇ ಶ್ರೀವಾದಿರಾಜರ ಅನುಗ್ರಹವೇ ಸಿಗದು ಎಂದು ಸ್ವಯಂ ಶ್ರೀರಾಜರೇ ಸ್ವಾಪ್ನ ವೃಂದಾವನಾಖ್ಯಾನದಲ್ಲಿ ತಿಳಿಸಿದ್ದಾರೆ. 
ರಾಜರ ಬೃಂದಾವನ ಪ್ರವೇಶದ ಹಲವು ವರ್ಷಗಳ ನಂತರ, ಶ್ರೀವೇದವೇದ್ಯ ತೀರ್ಥರಿಗೆ ರಾಜರ ದರ್ಶನ ಮಾಡುವ ಹಂಬಲವಾದಾಗ, ರಾಜರನ್ನು ಕುರಿತು ಅನೇಕ ದಿನಗಳ ಕಾಲ ಭಕ್ತಿಯಿಂದ   ಸೇವಾದಿಗಳನ್ನು   ಮಾಡಿದಾಗ, ರಾಜರು ಇವರ ಸ್ವಪ್ನದಲ್ಲಿ ಬಂದು, ಇಂತಹ ದಿನ, ಇಂತಹ ಸಮಯದಲ್ಲಿ ನನ್ನ ಬೃಂದಾವನ ಮುಂದೆ ದರ್ಶನ ಕೊಡುತ್ತೇನೆ ಎಂದು ಅಭಯವಿತ್ತು, ಅನುಗ್ರಹಿಸಿದರು. ಅದರಂತೆಯೇ ಆ ಸಮಯದಲ್ಲಿ ಬೃಂದಾವನದ ಮುಂದೆ ರಾಜರ ಇತರ  ಏಕಾಂತ ಭಕ್ತರ ಜೊತೆ ಕೂತಿದ್ದಾಗ, ರಾಜರ ಆದೇಶದಂತೆ ಶ್ರೀಭೂತರಾಜರು, ಬೃಂದಾವನದ ಮುಂದೆ ಇರುವ ಕಲ್ಲನ್ನು ಸರಿಸಿದಾಗ, ಒಳಗಡೆ ಶ್ರೀಹಯಗ್ರೀವ ದೇವರಿಗೆ ಶ್ರೀಹನುಮ-ಭೀಮ-ಮಧ್ವ-
ವಾದಿರಾಜರು ಸೇವಾದಿಗಳನ್ನು ಮಾಡುತ್ತಿರುವ ದಿವ್ಯ  ದರ್ಶನವಾಯಿತು. 
ಶ್ರೀವಾದಿರಾಜರ ಪರಮಾನುಗ್ರಹಕ್ಕೆ ಪಾತ್ರರಾದ ಶ್ರೀವೇದವೇದ್ಯ ತೀರ್ಥರು ಕಾರ್ತಿಕ ಬಹುಳ ತ್ರಯೋದಶಿಯಂದು ಸೋದಾಕ್ಷೇತ್ರದಲ್ಲಿಯೇ ಬೃಂದಾವನಸ್ಥರಾದರು.
ಇವರ ಬೃಂದಾವನವನ್ನು ರಾಜರು ತಮ್ಮ ಸನ್ನಿಧಾನದಲ್ಲೇ ಇರುವಂತೆ ಅನುಗ್ರಹಿಸಿ ತಮ್ಮ ಪಂಚವೃಂದಾವನದ ಪಕ್ಕದಲ್ಲೇ ಇರಿಸಿಕೊಂಡಿದ್ದಾರೆ‌.

ಶ್ರೀವೇದವೇದ್ಯತೀರ್ಥರ ಮತ್ತು ಇವರ  ಮುಖಾಂತರ ಶ್ರೀವಾದಿರಾಜರ ಅನುಗ್ರಹ ನಮ್ಮೆಲ್ಲರ ಮೇಲೆ ಸದಾ ಇರಲಿ ಎಂದು ಭಕ್ತಿಯಿಂದ ಪ್ರಾರ್ಥಿಸೋಣ.
*******

No comments:

Post a Comment