******
ಇಂದು ಶ್ರೀ ಸ್ವಾದಿ ಮಠದ 17ನೆ ಶತಮಾನದ ಯತಿಗಳಾದ, ಮೊದಲ ಸಲ ಮಠದ ಜೀರ್ಣೋದ್ಧರಣ ಮಾಡಿಸಿದ, ಸಂಚಾರದಲ್ಲಿದ್ದರೂ ಸರ್ವಮೂಲ ಗ್ರಂಥಗಳ ಪಾರಾಯಣ, ಪ್ರವಚನ ಬಿಡದೆ ಮಾಡಿದ, ಶ್ರೀ ವಿಷ್ಣುಸಹಸ್ರನಾಮಕ್ಕೆ ಶ್ಲೋಕರೂಪವಾದ ವ್ಯಾಖ್ಯಾನವನ್ನು ರಚನೆ ಮಾಡಿದ, ಶ್ರೇಷ್ಠ ಕವಿಗಳೆಂದೇ ಖ್ಯಾತರಾದ, ಸುಭದ್ರಾಪಹರಣ ವೆನ್ನುವ ಕಾವ್ಯವನ್ನು ರಚಿಸಿದಂತಹ, ಶ್ರೀಮದಾಚಾರ್ಯರ, ರಾಜರ ವಿಶೇಷ ಆರಾಧಕರಾದ ಶ್ರೀ ವಿಭುದವರ್ಯ ತೀರ್ಥರ ಆರಾಧನಾ ಮಹೋತ್ಸವ ಇವರ ವೃಂದಾವನ ಸಹ ಉಡುಪಿಯಲ್ಲಿ ಇವರ ಗುರುಗಳಾದ ಶ್ರೀ ವಿಶ್ವವಂದ್ಯತೀರ್ಥರ ವೃಂದಾವನದ ಪಕ್ಕದಲ್ಲಿಯೇ ಇದೆ..
ಇವರ ಕುರಿತಾದ ಲೇಖನ ಸಮೂಹದ ಚಿರಂಜೀವಿ. ಸುಮುಖ್ ಮೌದ್ಗಲ್ಯ ಬರೆದಿರುವುದನ್ನು ಓದೋಣ ಬನ್ನಿ
👇🏽👇🏽👇🏽👇🏽👇🏽👇🏽👇🏽👇🏽
ಮಾರ್ಗಶಿರ ಕೃಷ್ಣ ಷಷ್ಠಿ
ಸಹಸ್ರನಾಮವ್ಯಾಖ್ಯಾನ ಕುಶಲಂ ವಾದಿರಾಟ್ ಪ್ರಿಯಮ್।
ವಂದೇ ವಿಭುದವರ್ಯಾರಂ ಪಾಠಪ್ರವಚನೇರತಮ್॥
ಶ್ರೀಮನ್ಮಧ್ವಾಚಾರ್ಯರ ನಂತರ ಶ್ರೀವಿಷ್ಣುತೀರ್ಥರ ಪರಂಪರೆಯಲ್ಲಿ ಬರುವ ಸೋದೆ ವಾದಿರಾಜಮಠದ 28ನೇ ಯತಿಗಳಾಗಿದ್ದ ಶ್ರೀವಿಭುದವರ್ಯತೀರ್ಥರ ಆರಾಧನೆ ಉಡುಪಿಯಲ್ಲಿ.
ಶ್ರೀವಿಶ್ವವಂದ್ಯತೀರ್ಥರಿಂದ ಆಶ್ರಮವನ್ನು ಸ್ವೀಕಾರಮಾಡಿದ ಯತಿಗಳು ಅತ್ಯಂತ ಮಹಾಜ್ಞಾನಿಗಳಾಗಿದ್ದರು ಮತ್ತು ಅತೀ ಹೆಚ್ಚು ಸಮಯವನ್ನು ನ್ಯಾಯಸುಧಾ, ಯುಕ್ತಿಮಲ್ಲಿಕಾ ಮುಂತಾದ ಗ್ರಂಥಗಳನ್ನು ಶಿಷ್ಯರಿಗೆ ಬೋಧಿಸುವುದರಲ್ಲಿ ತೊಡಗಿಸಿಕೊಳ್ಳುತ್ತಿದ್ದರು.
ಸುಭದ್ರಾಹರಣ ಎಂಬ ಮಹಾಕಾವ್ಯವನ್ನು ರಚಿಸಿದ ಮಹಾನುಭಾವರು.ಇದಲ್ಲದೇ ಶ್ರೀಗಳು ವಿಷ್ಣುಸಹಸ್ರನಾಮಕ್ಕೆ ಟೀಕಾಶ್ಲೋಕಗಳನ್ನು ರಚಿಸಿದ್ದಾರೆ. ಮಧ್ವಾಚಾರ್ಯರ ಶಾಸ್ತ್ರಗ್ರಂಥಗಳನ್ನು ತಮ್ಮ ಸಮಕಾಲೀನ ಯತಿಗಳಿಗೆ ಬೋಧಿಸಿದ್ದುಂಟು. ಹೆಚ್ಚು ಸಂಚರಿಸದೆ ನಿತ್ಯವೂ ಸರ್ವಮೂಲ ಗ್ರಂಥವನ್ನು ಬಿಡದೆ ಪಾರಾಯಣಮಾಡುತ್ತಿದ್ದರು.ಮೊಟ್ಟ ಮೊದಲಿಗೆ ಸೋದೆ ಶ್ರೀವಾದಿರಾಜ ಮಠದ ಜೀರ್ಣೋದ್ಧಾರದ ಕಾರ್ಯವನ್ನು ಕೈಗೊಂಡು ಸಂಪೂರ್ಣಗೊಳಿಸಿದರು.
ಒಮ್ಮೆ ಉದ್ಯಾವರದಲ್ಲಿ ರಾಮಕೃಷ್ಣನೆಂಬ ಬ್ರಾಹ್ಮಣನು ಶ್ರೀಗಳ ಬಗ್ಗೆ ಹೊಟ್ಟೆಕಿಚ್ಚಿನಿಂದ ಇಕ್ಕೇರಿಯ ರಾಜನಿಗೆ ಶ್ರೀಗಳ ಸ್ವಭಾವದ ಬಗ್ಗೆ ಇಲ್ಲಸಲ್ಲದ್ದನ್ನು ಹೇಳಿದನು. ಇದನ್ನು ತಿಳಿದ ರಾಜ ಶ್ರೀಗಳ ಮೇಲೆ ಆಕ್ರಮಣ ಮಾಡಿ ಶಿಕ್ಷಿಸುವುದಕ್ಕೆ ನಿರ್ಧಾರ ಮಾಡಿದನು. ಮತ್ತು ಗಡಿ ಭಾಗದಲ್ಲಿ ತನ್ನ ಸೇವಕರನ್ನು ಇಟ್ಟನು. ಶ್ರೀಗಳು ಸೋದೆ ಸಂಚಾರದಲ್ಲಿದ್ದರು ಮತ್ತು ಅವರು ಆ ಗಡಿ ಭಾಗವನ್ನು ದಾಟಿಯೇ ಮುಂದೆ ಹೋಗಬೇಕಿತ್ತು. ...
ಸೇವಕರು ಶ್ರೀಗಳ ಮೇಲೆ ಆಕ್ರಮಣ ಮಾಡಿದರು ಮತ್ತು ರಾಜನು ಶ್ರೀಗಳ ಸಂಸ್ಥಾನದಲ್ಲಿದ್ದಂತಹ ಎಲ್ಲ ಬಂಗಾರ , ಬೆಳ್ಳಿ ಮತ್ತು ಉಪಯುಕ್ತವಾದ ವಸ್ತುಗಳನ್ನೆಲ್ಲ ಕೊಳ್ಳೆ ಹೊಡೆದನು.
ಶ್ರೀಗಳವರು ಬಹಳ ಬೇಸರಗೊಂಡು ಸೋದೆಗೆ ಬಂದು ವಾದಿರಾಜರ ಬೃಂದಾವನದ ಮುಂದೆ ಕುಳಿತು ಉಪವಾಸ ಮಾಡುವುದಾಗಿ ನಿರ್ಧರಿಸಿದರು.
ಸ್ವಲ್ಪ ದಿನದ ನಂತರ ಶ್ರೀವಾದಿರಾಜರು ಸ್ವಪ್ನದಲ್ಲಿ ಬಂದು ಅವರಿಗೆ ಸಮಾಧಾನ ಮಾಡಿದರು.
ಶ್ರೀವಾದಿರಾಜರು ವಿಭುದವರ್ಯತೀರ್ಥರಿಗೆ " ಸುಭದ್ರಾಹರಣ "ವನ್ನು ರಚಿಸುವಂತೆ ಆಜ್ಞೆ ಮಾಡಿದರು. ಶ್ರೀಗಳವರು ಆದೇಶದಂತೆ ಗ್ರಂಥರಚನೆಯನ್ನು ಮಾಡಿದರು. ಗ್ರಂಥವು ಇನ್ನೇನು ಮುಗಿಯಬೇಕೆಂಬುವ ಸಂದರ್ಭದಲ್ಲಿ ವಾದಿರಾಜರು ಸ್ವಪ್ನದಲ್ಲಿ ಕಾಣಿಸಿಕೊಂಡು ಕೊನೆಯ ಶ್ಲೋಕವನ್ನು ರಚಿಸಬೇಡೆಂದು ಹೇಳಿದರು.
ಅನೇಕ ವರ್ಷಗಳ ಕಾಲ ಶ್ರೀಗಳು ಸೋದೆಯಲ್ಲೇ ನೆಲಸಿ ತಮ್ಮ ಪರಂಪರೆಯಲ್ಲಿ ಬಂದಂತಹ ಉಪಾಸನಾ ಮೂರ್ತಿಗಳನ್ನು ಬಾಳೆಲೆಯ ಮೇಲಿರಿಸಿ ಪೂಜಿಸುತ್ತಿದ್ದರು..
ಮುಂದೊಂದು ದಿನ, ಮತ್ತೆ ವಾದಿರಾಜರು ಸ್ವಪ್ನದಲ್ಲಿ ಕಾಣಿಸಿಕೊಂಡು ಕೊನೆಯ ಶ್ಲೋಕವನ್ನು ರಚಿಸಿ ಗ್ರಂಥವನ್ನು ಪೂರ್ಣಗೊಳಿಸಬೇಕೆಂದು ಆದೇಶಿಸಿದರು...ವಾದಿರಾಜರ ಸ್ವಪ್ನ ಸೂಚನೆಯಂತೆ ಶ್ಲೋಕವನ್ನು ರಚನೆಮಾಡುತ್ತಿರುವಾದ ಸಮಯದಲ್ಲಿ ಒಬ್ಬ ಶ್ರೀಮಂತನು ಬಂದು 16000 ಬೆಳ್ಳಿನಾಣ್ಯಗಳನ್ನು ಅರ್ಪಿಸಿದನು .ಶ್ರೀಗಳವರು ಅದರಿಂದ ದೇವರಿಗೆ ಸಲ್ಲುವ ಎಲ್ಲ ಆಭರಣಗಳನ್ನು ಮಾಡಿಸಿ ಪೂಜಿಸಿದರು...
ಕಾಲಕ್ರಮೇಣ ಶ್ರೀಗಳಿಗೆ ಮಾಡಿದ ದ್ರೋಹದಿಂದ ರಾಜನು ತನ್ನ ಹೆಂಡತಿ ಮಕ್ಕಳನ್ನು ಕಳೆದುಕೊಂಡು ವ್ಯಥೆ ಪಡುತ್ತಿದ್ದನು. ಪಶ್ಚಾತ್ತಾಪದಿಂದ ಸ್ವಾಮಿಗಳ ಎದುರುವಿಕೆಗಾಗಿ ಕಾಯುತ್ತಿದ್ದನು....
ಸ್ವಲ್ಪ ದಿನಗಳ ನಂತರ ಉಡುಪಿಯ ಮಾರ್ಗದಲ್ಲಿದ್ದಾಗ ರಾಜನು ಬಂದು ತನ್ನ ತಪ್ಪನ್ನು ಒಪ್ಪಿಕೊಂಡನು ಮತ್ತು ಕ್ಷಮಾಯಾಚಿಸಿದನು ಮತ್ತು ತನ್ನ ರಾಜ್ಯಕ್ಕೆ ಬಂದು ಸಂಸ್ಥಾನ ಪೂಜೆಯನ್ನು ಮಾಡಬೇಕೆಂದು ಬೇಡಿಕೊಂಡನು ...ಮೊದಲಿಗೆ ಶ್ರೀಗಳು ನಿರಾಕರಿಸಿದರೂ .....ತದನಂತರ ಒಪ್ಪಿಕೊಂಡರು.
ತಾನು ಕೊಳ್ಳೆಹೊಡೆದಿದ್ದ ವಸ್ತುಗಳನ್ನೆಲ್ಲ ಪುನಃ ತಂದು ಶ್ರೀಗಳಿಗೆ ಒಪ್ಪಿಸಿದಾಗ ಆಶ್ಚರ್ಯವೇನೆಂದರೆ ಪೆಟ್ಟಿಗೆಯಲ್ಲಿದ್ದ ಹಯಗ್ರೀವದೇವರ ಮುಖವಾಡ ಬಿಟ್ಟು ಮಿಕ್ಕಿದ್ದೆಲ್ಲ ಬೂದಿಯಾಗಿದ್ದವು. ರಾಜನು ಪ್ರಾಯಶ್ಚಿತ್ತವಾಗಿ ತನ್ನಲ್ಲಿದ್ದ ಚಿನ್ನದ ನಾಣ್ಯಗಳನ್ನು ಅರ್ಪಿಸಿದನು...
ರಾಮಕೃಷ್ಣನು ಈ ಪಾಪದಿಂದ ನರಳಿ ನರಳಿ ಸಾವನ್ನಪ್ಪಿದನು.
ಶ್ರೀಗಳವರು ಸತತ 11ವರ್ಷಗಳ ಕಾಲ ನ್ಯಾಯಸುಧಾ ಗ್ರಂಥವನ್ನು ಬೋಧಿಸಿ ವಿಜೃಂಭಣೆಯಿಂದ ಮಂಗಳವನ್ನು ಉಡುಪಿಯಲ್ಲಿ ನೆರವೇರಿಸಿದರು . ನ್ಯಾಯಸುಧಾ ಗ್ರಂಥಕ್ಕೆ ತಮ್ಮ ಇಳಿ ವಯಸ್ಸಿನಲ್ಲೂ ವಿಮಲಬೋಧಿನಿ ಎಂಬ ಟೀಕೆಯನ್ನು ಬರೆಯಲು ಶುರುಮಾಡಿದರು...ಆದರೆ ವಾದಿರಾಜರು ಸ್ವಪ್ನದಲ್ಲಿ ಬಂದು ಟೀಕೆಯನ್ನು ಬರೆಯಬೇಡವೆಂಬುದಾಗಿ ಆದೇಶಿಸಿದರು..ಹಾಗೂ ಈಗಾಗಲೇ ಬದುಕಿನ ಎಲ್ಲ ಗುರಿಗಳನ್ನು ಈಗಾಲೇ ಪೂರ್ಣಗೊಳಿಸಿರುವುದರಿಂದ...ಟೀಕೆಯನ್ನು ಬರೆಯಬೇಡಿರೆಂದು ವಿನಮ್ರತೆಯಿಂದ ಆದೇಶಮಾಡಿದರು...ಹೆಚ್ಚು ಧ್ಯಾನಾರೂಢರಾಗಿರುವಂತೆಯೂ ಹೇಳಿದರು...
ಶ್ರೀವಿಭುದವರ್ಯರು ಅರ್ಧದಲ್ಲೇ ಅದನ್ನು ಬಿಟ್ಟು ಉಡುಪಿಗೆ ತೆರಳಿದರು...
1724-1725 ರಲ್ಲಿ ಕೃಷ್ಣಪೂಜಾ ಪರ್ಯಾಯವನ್ನು ನೆರವೇರಿಸಿದರು ಮತ್ತು 17 ವರ್ಷಗಳ ಕಾಲ ವೇದಾಂತ ಸಾಮ್ರಾಜ್ಯವನ್ನಾಳಿದರು.
ಧ್ಯಾನಾರೂಢರಾಗಿಯೇ ಶ್ರೀಗಳವರು ಮಾರ್ಗಶಿರ ಕೃಷ್ಣ ಷಷ್ಠಿ 1739AD ಯಂದು ಬೃಂದಾವನಸ್ಥರಾದರು.
end
***
No comments:
Post a Comment