Wednesday, 20 March 2019

vishwottama teertharu sode 2007 matha sode mutt yati 36 shravana shukla panchami ವಿಶ್ವೋತ್ತಮ ತೀರ್ಥರು







Sri Viswottama Theertha (1934 - 2007)
Sri Viswottama Theertha is the 35th saint after Sri Vishnu Theertha in the guru parampare of Sode mutt.
Poorvashrama Name :
Ashrama Guru : Sri Viswendra Theertha
Ashrama Shishya : Sri Viswavallabha Theertha
Aradhana : Sravana Shudha Panchami
Vrundavana : Sode
Sri Viswottama Theertha took Ashrama from Sri Viswendra Theertha and ruled the Peeta for 64 years. He has born in the year 1934 corresponding to Sreemukha Nama Samvatsara Pushya Bahula Tryodashi. He took sanyasa in 1943 corresponding to Swabhanu Nama Samvatsara Bhadrapada Shudha Chathurthi. He was a great scholar, well researcher and was follower of sadaachara. He published many of the old manuscripts of the mutt in a book form. He loved to be live alone and mostly stayed in Sode. He published Mahabharata lakshalankara and others. He renovated mutts in Sode, Tirthahalli, Narala, Udyavara, Undaru, Hoovinakere and Naddentadi (Madhyavata). He built one mutt in Chennai and installed Mukhyaprana, Sri Vadiraja and Bhutaraja. He did 4 paryayas in his time in 1948-49, 1964-65, 1980-81 and 1996-97. He was Vidya guru to Sri Vidyasagara Theertha of Krishnapura mutt. He died on 18th August 2007, the day of Naga Panchami.

After handing over Peeta to Sri Viswavallabha Theertha he entered Vrundavana at Sode.
Sri Vishwottama Tirtha Swamiji was born in 1934 (Pushya bahula trayodashi) at Udyavar in Udupi taluk as the son of Krishnacharya and Krishnaveni. His pre-monastic name was Sri Madhava Acharya. It was in 1943,( Bhadrapada shuddha chaturthi of Swabhanu Samvatsara) that he was initiated into asceticism by his Guru Sri Vishwendra Tirtha. Following this incident he studied all scriptures including Vedanta under the tutelage of Sri Vidyaasamudra Tirtha of Sri Kaniyur Mata. He was an embodiment of docility, piety and righteousness. As he had a thorough mastery over the scriptures, he taught them to the pontiff of Sri Krishnaapura Mata and many others. His method of teaching was very impressive and unsurpassed.

Words cannot describe his politeness and courtesy in matters of tradition and convention. He bowed down with humbleness at the mention of Sri Vadiraja's glory and greatness.

The Swamiji's Sadhana involving meditation, views and teachings had a miraculous impact on the society. He was very fond of solitude and reading holy books. Collecting ancient manuscripts was his favourite pastime.

The Swamiji's achievements:

He published Sri Vadiraja's works as also the works of other eminent scholars.

He renovated the Puja Mandira and the Vrundaavana of Sri Vadiraaja and its surroundings at the holy place of Sondaa.

The Swamiji successfully completed four Paryayas in the divine presence of Lord Krishna and bagged the coveted Yadukula Tilaka award.

He executed the works connected with the renovation of the branches of the Mata at Kumbhasi, Hoovinakere, Naaraala, Naddenthaadi, Beelagi, Kenchagaaru and other places.
He established the 'Vrundaavanaakhyaana Silaalekhana Mandira'at Sri Sondaa.
During his third Paryaya he celebrated the fifth centenary festival of Sri Vadiraja's birth and in 2000, the fourth Aaraadhanotsava of Sri Vadiraja in a grand and splendid manner.
He further organized during his third Paryaya the all-India level Harikathaa competition most successfully.
He established the 'Bhavi Sameera Gurukula' at the holy place of Sri Sondaa.
A 'Goshaala' was got constructed by him at Hoovinakere.
He implemented the works connected with the educational institutions at Innanje and opened the science wing at the pre-university college there although no grant was received from the government.
He collected a good number of rare palm-leaf manuscripts and opened a special library for their preservation at Panjimaaru Mata.
With the convenience of the pilgrims coming to Sri Sondaa in view, he got constructed Trivikrama Dhama there.
Similarly, in order to solve the accommodation problem confronted by the pilgrims flooding the temple town of Udupi, he built the Sri Bhoovaraaha guest house at Udupi.
The construction of Vadiraja Mandira was also taken up during his fourth Paryaya.
Sri Bhootaraaja shrine was renovated and a Gopura was built at Sri Sode Mata, Udupi.
It was the period of the annual Chaturmasa observance in 2007. On the auspicious day of 18-08-2007, (Shravana Shuddha Panchami Sthiravaasara) the Swamiji completed his daily Puja and gave Teertha-prasaada to the devotees assembled there, participated in the congregation at Raajaangna and blessed the audience. Following this, Sri Vishwottama Swamiji blessed all the devotees with Phalamantraakshate. Chanting 'Raama, Raama, Raama clearly and with a cheerful smile blossoming on his face, the Swamiji left for his heavenly abode.
********
info from sodemutt website--->
Sri Vishwottamatirtha, who flourished in the 20th century was a saint pontiff of crown personality. He was stock sample of rare combination of discipline of Samnyasashrama and deep Shastric knowledge. He was always peaceful and calm. He used to deal with things with serene approach and sensible attempt. He used to prefer to have secluded place for deep deliberation of learning. Sri Vishwottamatirtha was born of pious couple Sri Krishnacharya and Smt Krishnaveni in Udyavara near Udupi in the year 1934 A.D. (Srimukha Samvatsara Pushya month Krishna Trayodashi). He underwent essential rites of refinement (Samskara) such as Jatakarma, Namakarana, Upanayana etc., as prescribed on time. His name was Madhava. Madhava didn't have much interest in sport and amusement. Since his childhood, he was liking lonely place. At this age, Madhava preferred to resort to mediation several times. Seeing that brilliant lad, Sri Vishwendratirtha wished to have that boy as his successor. But, parents did not like to sacrifice that lovely child. Lord Hayagriva gave a hint in the dream of mother. Then, parents handed over their son Madhava to Guru Vishwendratirtha wholeheartedly. Vishwendratirtha ordained Samnyasa-shrama to Madhava and named him Sri Vishwottamatirtha. It was in the year 1943 A.D. (Svabhanusamvatsara Bhadrapada month Shukla Chaturthi). After one month and five days, Vishwendratirtha entombed on Svabhanu Samvatsara Ashvina month Sukla Navami (1943). Then, Sri Vishwottamatirtha bore the responsibility of Matha. His basic learning started with the help of some local pundits. His personality was distinct one. He was an embodiment of honesty and nobleness. His majesty stood concealed like fire covered with ash. Swamiji continued his higher studies of Vedanta and other lores at the gracious presence of Sri Vidyasamudratirtha of Kaniyoor matha who was a scholar of repute and a great sage of self discipline. The unique power of intelligence, the act of comprehending, the strength of merit etc, of Vishwottamatirtha immensely pleased Guru Vidyasamudratirtha Swamiji. He gained the abundant wealth of knowledge and engaged in the prescribed practice of Japa, Tapa etc. He remained far away from publicity, prestige, praise etc. In respect of traditional prescription and practice, the decent, the humble and modest approach of Swamiji was beyond expression. His initiation, adherence, faithfulness and inclination towards Madhvasiddhanta and Rujutva of Vadiraja was distinct, firm and unfathomable. He had the responsible regard and unhampered alertness in case of Vadiraja and Bhutaraja Mahima. SriVishwotta-matirtha was a source of solution to the grievances of grieved. The Mantrakshata, blessed with favouring prayer by him, redressed the botherations of thousa-nds of faithful devotees. That Mantrakshata has, even now, become the prime safe guardian to many. His Hitopadesha has be-come serene light for hopeful and painless march in the life. His Mantropadesha has ene-rgised the virtuous power to worship, propitiate the divinities and Gurus to receive choicest bless-ings for spiritual achieve-ment and solace. He was a ray of hope to helpless. He was a light of enli-ghtenment to the learners. He was a rich treasure of scholarship to scholars. He was a devout delegate to deliver desired devices to faithful devotees. His lovely glance seemed to be worthy of seeing for he used to meet and treat even the unknown as known. The very seeing of Swamiji used to suggest the fact of presence of divinity. His prayer rescued hundred of devotees from untimely end and disasters. The beneficial expressions of Swamiji could, although scanty, always sustain the sweet remembrance of Vadiraja and Bhutaraja. Without that sweet reference, he said nothing. He preferred to have lonely place always. It was because of studying the holy texts repeatedly to understand and comprehend them better. He used to have one or other sacred book always in his hand. Out of classical academic interest, he had the credit of collecting the rare and old manuscripts related to different branches of knowledge. The number of manuscripts collected crosses two thousand. It was his individual and personal endeavour. Swamiji upgraded the Secondary Institution at Innanje to Pre- University College and introduced some courses relevant to modern science and technology.
Swamiji's daily observance related to Japa, Tapa, worship etc., was highly disciplined and time oriented. Neither there was compromise nor even concise in that. Vishwottamatirtha had having high regard and reverence incase of all saint superiors. He paid visit to Navavrindavana, Mantralaya, Uttanuru, Sankapur, Venisomapur, Chippagiri, Manavi, Chikalaparavi, Kenchanagudda, Hampi, Savanur, Thirukoyiluru, Kumbhakona, Rajamahendri, Sangali, Ritti, Holehonnuru, Madanur, Bhimanakatte and other holy centres and offered salutations to presiding deity and Guru. Swamiji started a big Goshala at Huvinakere for aged cows and thus tried his best to avoid cow-slaughter. Hundreds of cows are given shelter, food etc. and thus protected. He went on an extensive tour visiting all places from Kanyakumari to Vasudhara. He became virtuous by seeing Sri Ranga and other holy centres and also by taking holy dip in Ganga and other rivers.

Sri Vishwottamatirtha had many works and important statements by heart. His analysis, inquiry etc, was discretionary and judgement oriented. The style of teaching was uninterrupted and it was prime source of reflection and retention. Being leading scholar in Shastric field, he taught Shastric works like Nyayasudha and others to Sri Vidya-sagaratirtha Swamiji of Krishnapur matha and others. The teaching was superb and unique. Swamiji has brought to light many unpublished works of Vadiraja and others. The words anger, wrath etc., are unfound in his knowledge of words (Kosha). Therefore, he could manage the administration and transactions easily and successfully. Sri Vishwottamatirtha undertook the needful renovation and new construction work at many branches of his Matha namely, Kumbasi, Tirthahalli, Narala, Bilagi, Udyavara, Undaru, Huvinakere, Madhya-vata, Sode, Renjala, Udupi, Kenchagaru. In Sode, the reno-vation and construction of Poojamandira, Vrinda-vanasannidhi, retiring rooms, dining hall, kitchen, Gurukula etc., was historical one. To him, Soda Kshetra was all in all. He used to stay there during Chaturmasya and other occasions. He got engaged in special observance of Japa, Tapa etc, and got blessed graciously by Vadiraja and Bhutaraja. Sri Vishwottamatirtha performed four Paryayas (1948-49, 1964-65, 1980-81, 1996-97) on grand scale with great grace. During third Paryaya, Swamiji organised 500th year of Vadiraja Jayanthi on a large scale successfully. During fourth Paryaya (1996-97) he got constructed Vadiraja Mandira besides Badagumalige at Krishnamatha and consecrated to Lord Krishna. At the hint instruction of Vrindavanakhyana and dream indication, Swamiji got done the stone inscription of entire sacred text Vrindavanakhyana. He got built Akhyanamanidra in front of Panchavrindavana Sanidhi at Sode and consecrated it at the feet of Sri Lakshmi Hayavadana, an adorable deity of Madhva and Vadiraja. Vishwottamatirtha established Bhavisameera Gurukula at Sode in the year 2006 and thus gave impetus and importance to Shastric studies. On 18-08-2007, the revered Swamiji completed daily worship, participated in Haridasa function and gave blessing speech. After day meals, he favoured the mass of devotees with Mantrakshata and at about 2:00 pm uttering the Lord's holy name 'Rama, Rama, Rama' three times departed from the mortal body without any unnatural changes and abnormity. His period of incharge of pontificial Vedanta empire was 64 years. Let the sweet remembrance of holy name 'Vishwottamatirtha' remove all the obstacles for easy observance of divine worship and adoration and become the chief means for securing blessed favour of Sri Hari-Vayu-Vadirajaru, Bhutarajaru and others.
*******
ಶ್ರೀ ವಿಶ್ವೋತ್ತಮ ತೀರ್ಥರು - ಶ್ರೀಗಳವರು ಜನ್ಮತಾಳಿದ್ದು ೧೯೩೪ನೆ ಇಸವಿಯ ಶ್ರೀಮುಖ ಸಂವತ್ಸರದ ಪುಷ್ಯ ಬಹುಳ ತ್ರಯೋದಶಿ ಜನ್ಮಸ್ಥಳ ಉದ್ಯಾವರ,ಉಡುಪಿ ತಾಲ್ಲೂಕು,ತಂದೆ ಶ್ರೀ ಕೃಷ್ಣಾಚಾರ್ಯ,ತಾಯಿ ಶ್ರೀಮತಿ ಕೃಷ್ಣವೇಣಿ .ಪೂರ್ವಾಶ್ರಮದ ಹೆಸರು ಶ್ರೀ ಮಾಧವ ಆಚಾರ್ಯ.ಆಶ್ರಮ ಸ್ವೀಕಾರ ೧೯೪೩ನೆ ಇಸವಿಯ ಸ್ವಭಾನು ಸಂವತ್ಸರದ ಭಾದ್ರಪದ ಶುದ್ಧ ಚತುರ್ಥಿ.ಆಶ್ರಮ ಗುರುಗಳು ಶ್ರೀ ವಿಶ್ವೇಂದ್ರ ತೀರ್ಥರು.ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾಸಮುದ್ರ ತೀರ್ಥರಿಂದ ವೇದಾಂತಾದಿ ಸಕಲ ಶಾಸ್ತ್ರಗಳನ್ನು ಅಧ್ಯಯನ ಮಾಡಿದರು .ಶ್ರೀ ವಿದ್ಯಾ ಸಮುದ್ರ ತೀರ್ಥರಿಂದ ವೇದಾಂತಾದಿ ಸಕಲ ಶಾಸ್ತ್ರಗಳನ್ನು ಅಧ್ಯಯನ ಮಾಡಿದರು.

ಶ್ರೀಗಳವರದು ಒಂದು ವಿಶಿಷ್ಟ ವ್ಯಕ್ತಿತ್ವ ಸಾಧುತ್ವದ ಸಜ್ಜನಿಕೆಯ ಸಾಕಾರ ಮೂರ್ತಿ -ಶಾಸ್ತ್ರಾಧ್ಯಯನ ಸಂಪನ್ನರಾದ ಪೂಜ್ಯ ಶ್ರೀ ಗಳವರು ಶ್ರೀ ಕೃಷ್ಣಾಪುರ ಮಠದ ಶ್ರೀಗಳವರಿಗೂ ಹಾಗು ಇತರರಿಗೂ ಶಾಸ್ತ್ರ ಪಾಠ ಹೇಳಿದರು .ಶ್ರೀ ಗಳವರ ಬೋಧನಾ ಕ್ರಮವು ಅಪ್ರತಿಮ ಹಾಗು ಅಸದೃಶ .

ಪರಂಪರೆ ಹಾಗು ಸಂಪ್ರದಾಯ ವಿಷಯದಲ್ಲಿ ಅವರ ವಿನಯ ವಿನಮ್ರ ವರ್ತನೆ ವರ್ಣನಾತೀತ.ವಾದಿರಾಜರ ರುಜತ್ವ ಮಹಿಮಾ ವಿಷಯದಲ್ಲಂತೂ ಜವಾಬ್ದಾರಿಯ ಜಾಗ್ರತೆ .

ಶ್ರೀಗಳವರ ಅನಿತರ ತಪಸ್ಸು ,ದರ್ಶನ ,ಉಪದೇಶ ವಿಶಿಷ್ಟ ಫಲದಾಯಕವಾದುದು .ಶ್ರೀಗಳವರಿಗೆ ಏಕಾಂತ ಬಲು ಪ್ರೀತಿ .ಯಾವಾಗಲು ಗ್ರಂಥಾವಲೋಕನ ,ಹಸ್ತ ಪ್ರತಿಗಳನ್ನು ಸಂಗ್ರಹಿಸುವ ಹಂಬಲ .

ಶ್ರೀ ಗಳವರ ಕಾಲದಲ್ಲಿ ಸಂಪನ್ನಗೊಂಡ ಸಾಧನೆಗಳು :

1.ಶ್ರೀ ವಾದಿರಾಜರ ಹಾಗು ಇತರ ಜ್ಞಾನಿಗಳ ಅನೇಕ ಕೃತಿಗಳ ಪ್ರಕಾಶನ .

2.ಶ್ರೀ ಸೋಂದಾ ಕ್ಷೇತ್ರದಲ್ಲಿ ಪೂಜಾ ಮಂದಿರ ,ಶ್ರೀ ವಾದಿರಾಜರ ವೃಂದಾವನ ಸನ್ನಿಧಿ ಕಟ್ಟಡದ ನವೀಕರಣ .

3.ಪೂಜ್ಯ ಶ್ರೀಗಳವರು ಶ್ರೀಕೃಷ್ಣ ಸನ್ನಿಧಿಯಲ್ಲಿ ನಾಲ್ಕು ಪರ್ಯಾಯಗಳನ್ನು ಯಶಸ್ವಿಯಾಗಿ ಪೂರೈಸಿ ಯದುಕುಲತಿಲಕ ಪ್ರಶಸ್ತಿಗೆ ಭಾಜನರಾಗಿದ್ದಾರೆ .
4.ಕುಂಭಾಸಿ ,ಹೂವಿನಕೆರೆ ,ನಾರಾಳ ,ನಡ್ದೆಂತಾಡಿ,ಬೀಳಗಿ ,ಕೆಂಚಗಾರು ,ಇತ್ಯಾದಿ ಶಾಖಾ ಮಠದ ಜೀರ್ಣೋದ್ಧಾರ ಕಾರ್ಯಗಳು .


*******

36 sode mutt
ಶ್ರೀ ವಿಶ್ವೋತ್ತಮ ತೀರ್ಥ ಗುರುಭ್ಯೋ ನಮಃ-

"ಆಚಾರ್ಯರೇ, ಇಲ್ಲಿ ಬನ್ನಿ, ತಮಗೆ ರಾಜರ ಪ್ರಸಾದ ನೀಡುವಂತೆ ಶ್ರೀ ಗುರುರಾಜ ಆಜ್ಞೆಯಾಗಿದೆ, ....... ಬನ್ನಿ....ನಿನ್ನೆಯ ದಿನವೇ ಸೂಚನೆಯಾಗಿತ್ತು. ಮರೆತಿದ್ದೆವು "

ಇದು ಸುಮಾರು ೨೦ ವರ್ಷಗಳ ಹಿಂದಿನ ದಿನಗಳು. ಬೆಂಗಳೂರಿನಲ್ಲಿ ವಾಸವಾಗಿರುವ ಪಂಡಿತರೊಬ್ಬರು ಸಂಪೂರ್ಣ ಭಾಗವತ ಪಾರಾಯಣ ಮಾಡಿ ಶ್ರೀ ವಾದಿರಾಜಾಂತರ್ಗತ ಹಯಗ್ರೀವದೇವರಲ್ಲಿ ಸಮರ್ಪಣೆ ಮಾಡಬೇಕೆಂದು ಸಂಕಲ್ಪಿಸಿ ಸೋದಾ ಕ್ಷೇತ್ರಕ್ಕೆ ತೆರಳಿದರು. ಪಾಡ್ಯದಂದು ಪ್ರಾರಂಭ ಮಾಡಿ, ನಿತ್ಯವೂ ಒಂದು ಸ್ಕಂದ ಪಾರಾಯಣ ಮಾಡುತ್ತಿದ್ದರು. ಅಂತೆಯೇ ಏಕಾದಶಿಗೆ ೧೧ನೇ ಸ್ಕಂದದ ಪಾರಾಯಣ ಸಂಜೆ ವೇಳೆಗೆ ಮುಗಿದಿತ್ತು. ಗುರುರಾಜರ ವೃಂದಾವನಕ್ಕೆ ಯಥಾಶಕ್ತಿ ಪ್ರದಕ್ಷಿಣೆ ನಮಸ್ಕಾರಗಳನ್ನು ಸಲ್ಲಿಸಿದ ಪಂಡಿತೋತ್ತಮರು, ಗುರುರಾಜರ ವೃಂದಾವನದ ಮುಂದೆ ನಿಂತು ರಾಜರಲ್ಲಿ ಗುರುರಾಜ ಪ್ರಭೋ, ನನ್ನೊಳಗೆ ನಿಂತು ತಾವು ಮಾಡಿಸಿದ ಪಾರಾಯಣವನ್ನು ಉಪಾಸ್ಯ ಭಗವಂತನಿಗೆ ಸಮರ್ಪಣೆ ಮಾಡಿ, ಸಾಧನೆಗೆ ಕಾರಣರಾದ ರಾಜರ ಉಪಕಾರ ಸ್ಮರಣೆ ಮಾಡುತ್ತಾ ಮರುದಿನ ಮಾಡಲಿಚ್ಛಿಸಿದ ಮಂಗಳಕ್ಕೆ ರಾಜರ ಆಜ್ಞೆ ಕೋರುತ್ತಿದ್ದಂತೆಯೇ, ರಾಜರು ತಮ್ಮ ವೃಂದಾವನಕ್ಕೆ ಅಲಂಕೃತ ತುಳಸಿಯ ಮಾಲೆಯನ್ನು ಪ್ರಸಾದ ರೂಪದಲ್ಲಿ ಅನುಗ್ರಹಿಸಿದ್ದರು. ಸಂತೋಷದಿಂದ ಆ ಪಂಡಿತರು, ಮರುದಿನ ತಮ್ಮ ದೈನಂದಿನ ಆಹ್ನೀಕಾದಿಗಳನ್ನು ಪೂರೈಸಿ, ಪಾರಾಯಣವನ್ನು ಕೃಷ್ಣಾರ್ಪಣ ಮುಗಿಸಿ, ಗುರುಗಳಾದ ಶ್ರೀ ವಿಶ್ವೋತ್ತಮರಲ್ಲಿ ಮಂತ್ರಾಕ್ಷತೆಯನ್ನು ಪಡೆಯಲು ತೆರಳಿದರು.

ಅತ್ಯಂತ ಮಿತಭಾಷಿಗಳಾಗಿದ್ದ ಶ್ರೀ ವಿಶ್ವೋತ್ತಮ ತೀರ್ಥ ಶ್ರೀಪಾದರು, ಮುಗುಳ್ನಗುತ್ತಾ ಗುರುರಾಜರು ಭೂತರಾಜರು ಸಂತುಷ್ಠರಾಗಿದ್ದಾರೆ, ನಿಮ್ಮ ಸೇವೆ ಅಂತರ್ಯಾಮಿಗೆ ಸಲ್ಲಿದೆ ಎಂದು ಅನುಗ್ರಹಿಸಿ ಮಂತ್ರಾಕ್ಷತೆ ನೀಡಿದರು. ಹಿಂದಿನ ದಿನ ಗುರುರಾಜರ ವೃಂದಾವನದಿಂದ ಅನುಗ್ರಹವಾದ ತುಳಾಸಿಮಾಲೆಯ ವಿಚಾರವನ್ನು ಶ್ರೀಗಳಲ್ಲಿ ಹೇಳಿ ಪ್ರಸಾದವನ್ನು ಕೇಳಬೇಕು ಎಂದು ಮನಸ್ಸಿನಲ್ಲೇ ಅಂದುಕೊಂಡಿದ್ದ ಪಂಡಿತರು, ಭಾವುಕರಾಗಿ ಆ ವಿಷಯವನ್ನು ಹೇಳಲು ಆಗಲೇ ಇಲ್ಲ. ಸಂತೋಷಭರಿತರಾದ ಪಂಡಿತರು, ಶ್ರೀಗಳ ಕೋಣೆಯಿಂದ ಹೊರಬರುತ್ತಿದ್ದು, ಒಂದು ಹೆಜ್ಜೆ ಹೊಸ್ತಿಲ ಹೊರ ಇಟ್ಟಾಗ, ಶ್ರೀಗಳು, "ಆಚಾರ್ಯರೇ, ಇಲ್ಲಿ ಬನ್ನಿ, ತಮಗೆ ರಾಜರ ಪ್ರಸಾದ ನೀಡುವಂತೆ ಶ್ರೀ ಗುರುರಾಜರ ಆಜ್ಞೆಯಾಗಿದೆ, ....... ಬನ್ನಿ....ನಿನ್ನೆಯ ದಿನವೇ ಸೂಚನೆಯಾಗಿತ್ತು. ಮರೆತಿದ್ದೆವು " ಎಂದು, ಕೂಡಲೆ ಗುರುರಾಜರ ವೃಂದಾವನದ ಉತ್ತರೀಯವನ್ನು ಹಾಗು ತುಳಸಿಮಾಲೆಯನ್ನು ಪಂಡಿತರಿಗೆ ಅನುಗ್ರಹಿಸಿದರು.

ಈ ಸನ್ನಿವೇಷವನ್ನು ನೆನೆಸಿಕೊಂಡಾಗಲೆಲ್ಲ ನನಗೆ ಗೋಚರವಾಗುವುದೇನೆಂದರೆ, ಶ್ರೀಪಾದರು ನೇರವಾಗಿ ಗುರುರಾಜರಲ್ಲಿ ಸಂಭಾಷಣೆ ಮಾಡುತ್ತಿರುವ ಕಲ್ಪನಾ ದೃಷ್ಯ. ಅಂತಹ ಅಸಾಧಾರಣ ಸಾಧನೆ ಹಾಗು ರಾಜರಿಗೆ ಅತ್ಯಂತ ಪ್ರಿಯರು ಶ್ರೀ ಸ್ವರ್ಣವರ್ಣ ನಾಮಕ ಶ್ರೀ ವಿಶ್ವೋತ್ತಮತೀರ್ಥ ಶ್ರೀಪಾದಂಗಳವರು.

ಶ್ರೀ ವಾದಿರಾಜರ ಪರಮಾನುಗ್ರಹ ಪಾತ್ರರಾದ ಶ್ರೀ ವಿಶ್ವೋತ್ತಮ ತೀರ್ಥರು, ರಾಜರ ಅನೇಕಾನೇಕ ಸೂಚನೆಗಳನ್ನು ನಮಗೆಲ್ಲ ದಯಪಾಲಿಸಿದ್ದಾರೆ. ಅಂತಹ ಗುರುಗಳನ್ನು ಕಣ್ತುಂಬಿ ನೋಡುಹುದೇ ಪರಮಾನಂದವು. ಅವರ ಹಾದಿಯಲ್ಲಿ ನೆಡೆವ ಸಂಕಲ್ಪವೇ ಅವರ ಅನುಗ್ರಹಕ್ಕೆ ಸೋಪಾನ.ಪ್ರಾತಃಸ್ಮರಣೀಯರಾದ ಗುರುಗಳನ್ನು ವಿಶೇಷವಾಗಿ ಮನದುಂಬಿಸಿಕೊಳ್ಳೋಣ. ಅವರು ತೋರಿದ ಆದರ್ಶಗಳ ಪಾಲನೆಯಿಂದ ಅವರ ಅನುಗ್ರಹಕ್ಕೆ ಪಾತ್ರರಾಗೋಣ.

ಪ್ರೀತೋಸ್ತು ಕೃಷ್ಣಃ ಪ್ರಭೋ
****

year 2021
by acharya Nagaraju Haveri
" ದಿನಾಂಕ : 13.08.2021 ಶುಕ್ರವಾರ - ಶ್ರೀ ಪ್ಲವ ನಾಮ ಸಂವತ್ಸರ ದಕ್ಷಿಣಾಯನ ವರ್ಷ ಋತು ಶ್ರಾವಣ ಶುದ್ಧ ಪಂಚಮೀ [ ನಾಗರ ಪಂಚಮೀ ] - ಶ್ರೀ ರಾಯರ ಅಂತರಂಗ ಭಕ್ತರೂ - ಶ್ರೀ ಭಾವಿಸಮೀರ ವಾದಿರಾಜ ಗುರುಸಾರ್ವಭೌಮರ ಋಜುತ್ವ ಪ್ರತಿಪಾದಕರೂ - ಮಾತೃ ಹೃದಯರೂ ಆದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವಿಶ್ವೋತ್ತಮ ತೀರ್ಥರ ಆರಾಧನಾ ಮಹೋತ್ಸವ - ಶ್ರೀ ಕ್ಷೇತ್ರ ಸೋಂದಾ "
ಕೋಲ ವ್ಯಾಸ ಹಯಗ್ರೀವ 
ಪದಕಂಜ ಮಧುವೃತಂ ।
ಶ್ರೀ ವಿಶ್ವೋತ್ತಮಯೋಗೀ೦ದ್ರ 
ವಂದೇsಹಂ ವಾದಿರಾಟ್ ಪ್ರಿಯಮ್ ।।   
" ಶ್ರೀ ವಿಶ್ವೋತ್ತಮ ತೀರ್ಥರಸಂಕ್ಷಿಪ್ತ ಮಾಹಿತಿ "
ಹೆಸರು : ಶ್ರೀ ಮಾಧವ
ತಂದೆ : ಶ್ರೀ ಕೃಷ್ಣಾಚಾರ್ಯರು
ತಾಯಿ : ಸಾಧ್ವೀ ಕೃಷ್ಣವೇಣಮ್ಮ
ಜನನ : 13.01.1934
ಸಂವತ್ಸರ : ಶ್ರೀಮುಖ
ಮಾಸ : ಪುಷ್ಯ
ಪಕ್ಷ : ಕೃಷ್ಣ
ತಿಥಿ : ತ್ರಯೋದಶೀ
ವಾರ : ಶನಿವಾರ
ನಕ್ಷತ್ರ : ಜ್ಯೇಷ್ಠಾ
ರಾಶಿ : ವೃಶ್ಚಿಕ
ಜನ್ಮ ಸ್ಥಳ : ಉದ್ಯಾವರ [ ಉಡುಪಿ ಜಿಲ್ಲೆ ]
ವಿದ್ಯಾ ಗುರುಗಳು : 
ಶ್ರೀ ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾ ಸಮುದ್ರ ತೀರ್ಥರು
" ಶ್ರೀ ವಿಶ್ವೋತ್ತಮ ತೀರ್ಥರ ವೈಭವ "
ಪರಮಪೂಜ್ಯ ಶ್ರೀ ವಿಶ್ವೋತ್ತಮ ತೀರ್ಥರು ಅತ್ಯದ್ಭುತ ಪಾಂಡಿತ್ಯ ಹೊಂದಿದ ತಪೋನಿಧಿಗಳು.
ಪರಮಪೂಜ್ಯ ಶ್ರೀ ವಾದಿರಾಜರು ಹಾಗೂ ಶ್ರೀ ರಾಯರ ಅಂತರಂಗ ಭಕ್ತರಾಗಿದ್ದು - ಸಮಗ್ರ ಸ್ವಪ್ನ ವೃಂದಾವನಾಖ್ಯಾನವನ್ನು ಶಿಲಾ ಲೇಖನ ಮಾಡಿಸಿ ಶ್ರೀಮದ್ವಾದಿರಾಜ ಗುರ್ವಂತರ್ಗತ ಶ್ರೀ ಮಧ್ವವಲ್ಲಭ ಶ್ರೀ ಹಯವದನೋsಭಿನ್ನ ಶ್ರೀ ಭೂವರಾಹದೇವರಿಗೆ ಸಮರ್ಪಿಸಿದರು.
ಅತ್ಯಂತ ಪ್ರತಿಭಾಶಾಲಿಗಳಾದ ಪರಮಪೂಜ್ಯ ಶ್ರೀ ವಿಶ್ವೋತ್ತಮ ತೀರ್ಥರು - ಶ್ರೀಮದಾಚಾರ್ಯರ ಸರ್ವಮೂಲ - ಶ್ರೀ ಜಯತೀರ್ಥರ ಶ್ರೀಮನ್ನ್ಯಾಯಸುಧಾ - ಶ್ರೀ ವ್ಯಾಸರಾಜರ ನ್ಯಾಯಾಮೃತ, ಚಂದ್ರಿಕಾ, ತರ್ಕತಾಂಡವ - ಶ್ರೀ ವಾದಿರಾಜ ಗುರುಸಾರ್ವಭೌಮರಿಂದ ರಚಿತವಾದ ಪ್ರತಿಯೊಂದು ಗ್ರಂಥದಲ್ಲಿಯೂ - ಶ್ರೀ ರಾಘವೇಂದ್ರತೀರ್ಥರ ಪರಿಮಳ ಹಾಗೂ ಚಂದ್ರಿಕಾ ಪ್ರಕಾಶ ಮೊದಲಾದ ಗ್ರಂಥಗಳಲ್ಲಿ ಆಳವಾದ ಜ್ಞಾನವನ್ನು ಹೊಂದಿದ್ದರು.
ಶಾಸ್ತ್ರ ಸಾಹಿತ್ಯಗಳ ಪ್ರಭುತ್ವದ ಪ್ರೌಢಿಮೆಯಿಂದ ಹರಿದಾಸ ಸಾಹಿತ್ಯವನ್ನು ಬೆಳಗಿಸಿದ ಧೀರ ಧೀಮಂತ ಯತಿವರೇಣ್ಯರು ಶ್ರೀ ವಿಶ್ವೋತ್ತಮ ತೀರ್ಥರು.
ಶ್ರೀ ವಿಶ್ವೋತ್ತಮ ತೀರ್ಥರ ಸಾತ್ವಿಕ ಸದ್ಗುಣ - ತಮ್ಮ ಬದುಕನ್ನೇ ಭಗವಂತನ ಆರಾಧನೆಗಾಗಿಯೇ ಮೀಸಲಿಟ್ಟ ತಪಸ್ಸು - ಮೃದು ಹೃದಯಿಗಳಾಗಿ ಸತತ ದೇವತಾರಾಧನೆ - ಧ್ಯಾನ - ಮೌನ - ಮಿತಭಾಷಿತ್ವ - ತತ್ತ್ವ ಜ್ಞಾನಗಳೂ - ಸೌಹಾರ್ದಮಯ ನಡೆತೆಯಿಂದ ಮಾನವೀಯ ಮೌಲ್ಯಗಳ ತಪೋಮೂರ್ತಿಗಳೂ - ಮಹಾ ಮಹಿಮೋಪೇತರು.    
ಆಶ್ರಮ : 
ಶ್ರೀ ಪ್ರಭಾನು ನಾಮ ಸಂವತ್ಸರ ಭಾದ್ರಪದ ಶುಕ್ಲ ಚತುರ್ಥಿ [ 1943 ]
ಆಶ್ರಮ ಗುರುಗಳು : ಶ್ರೀ ವಿಶ್ವೇಂದ್ರ ತೀರ್ಥರು
ಶ್ರೀ ಕೃಷ್ಣ ಪರ್ಯಾಯ : 
1948 - 50, 1964 - 66, 1980 - 82, 1996 - 98   
( 4  ಶ್ರೀ ಕೃಷ್ಣ ಪರ್ಯಾಯ)
ವೇದಾಂತ ಸಾಮ್ರಾಜ್ಯಾಧಿಪತ್ಯ - 
ಕ್ರಿ ಶ 1943 - 2007 [ 64 ವರ್ಷಗಳು ]
" ಸಾಧನೆ "
ಹಸ್ತ ಪ್ರತಿಗಳ ಸಂಗ್ರಹ - ಶ್ರೀ ವಾದಿರಾಜರೇ ಹಾಗೂ ಅನೇಕ ಮಾಧ್ವ ಯತಿಗಳ ಗ್ರಂಥಗಳ ಸಂಪಾದನೆ ಹಾಗೂ ಪ್ರಕಟಣೆ
" ಕ್ಷೇತ್ರ ಸಂದರ್ಶನ ಮತ್ತು ಅನುಗ್ರಹ "
1. ಮಾದನೂರಿನ ತಪೋಮೂರ್ತಿ ಶ್ರೀ ವಿಷ್ಣುತೀರ್ಥರ ಮೂಲ ವೃಂದಾನವ ದರ್ಶನ ಮಾಡುವಾಗ ಅವರಿಗೆ ಶ್ರೀ ವಿಷ್ಣುತೀರ್ಥರು ವೃಂದಾವನ ಕೈಲಾಸ ಪರ್ವತದಂತೆ ಕಾಣಿಸಿತು.
2. ಶ್ರೀ ಕ್ಷೇತ್ರ ಮಾನವಿಯಲ್ಲಿ ಶ್ರೀ ಜಗನ್ನಾಥದಾಸರನ್ನು ಪ್ರತ್ಯಕ್ಷ ಕಂಡದ್ದು.
3. ಶ್ರೀ ಕ್ಷೇತ್ರ ಮಂತ್ರಾಲಯದಲ್ಲಿ ಶ್ರೀ ಪರಿಮಳಾಚಾರ್ಯರ ಪರಮಾನುಗ್ರಹ
4. ಚಿಪ್ಪಗಿರಿಯಲ್ಲಿ ಶ್ರೀ ಭೂತರಾಜರು ಸಹಾಯ ಮಾಡಿದ್ದು.
" ಮಹಿಮೆಗಳು "
1.  ಬಾಗಲಕೋಟೆಯ ಮಾರ್ಕೋಡು ಲಕ್ಷ್ಮೀನಾರಾಯಣ ರಾಯರಿಗೆ ಬಂದ ಅನ್ನ ನಾಳದ ಕ್ಯಾನ್ಸರನ್ನು ತಮ್ಮ ಅಮೃತ ಹಸ್ತಗಳಿಂದ ಮಂತ್ರಾಕ್ಷತೆ ಕೊಟ್ಟು ಅನುಗ್ರಹ ಮಾಡಿದರು - ಮುಂದೆ ಅವರು ೨೨ ವರ್ಷಗಳು ಬದುಕಿದ್ದರು.   
2. ಬೆಂಗಳೂರಿನ ಪುಟ್ಟ ಬಾಲಕನಿಗೆ ಧನ್ವಂತ್ರಿ ಮಂತ್ರದಿಂದ ಅಭಿಮಂತ್ರಸಿದ ಮಂತ್ರಾಕ್ಷತೆ ಕೊಟ್ಟು ಹರಿವಾಯುಗುರುಗಳು ಅನುಗ್ರಹ ಮಾಡುತ್ತಾರೆಂದು ಹೇಳಿ ಕೊಟ್ಟರು - ಕಾಲಾಂತರದಲ್ಲಿ ಆ ಹುಡುಗನಿಗೆ ಕಾಲು ಬಂತು ಎಂದು ಆ ಕುಟುಂಬದವರು ಶ್ರೀ ಶ್ರೀಗಳವರಿಗೆ ಹೇಳಲು ಶ್ರೀ ವಾದಿರಾಜರು - ಶ್ರೀ ಭೂತರಾಜರು ಅನುಗ್ರಹ ಮಾಡಿದ್ದಾರೆ ಎಂದು ಹೇಳುತ್ತಿದ್ದರು.
ಲೇಖನ ವಿಸ್ತಾರವಾಗುತ್ತದೆ ಎಂಬ ಭಯದಿಂದ ಒಂದೆರಡು ಮಹಿಮೆಗಳನ್ನು ಮಾತ್ರ ಇಲ್ಲಿ ಕೊಡಲಾಗಿದೆ - ಇವರ ಮಹಿಮೆಗಳನ್ನು ಹೇಳುತ್ತಾ ಹೊರಟರೇ ಒಂದು ಬೃಹತ್ ಗ್ರಂಥವೇ ಆದೀತು. 
" ಸಂಸ್ಥೆಗಳ ಸ್ಥಾಪನೆ ಮತ್ತು ನಿರ್ವಾಹಣೆ "
ಶ್ರೀ ಕಾಮಧೇನು ಗೋ ಸಂರಕ್ಷಣಾ ಕೇಂದ್ರ., ಹೂವಿನಕೆರೆ., ಕುಂಭಾಸಿ.
ಶ್ರೀ ಭಾವಿಸಮೀರ ಗುರುಕುಲ., ಸೋದೆ
ಶ್ರೀ ಭಾವಿಸಮೀರ ತತ್ತ್ವ ಪ್ರಸಾರಣ ಪ್ರತಿಷ್ಠಾನ., ಉಡುಪಿ
" ಪೋಷಕ ಸಂಸ್ಥೆಗಳು "
ಶ್ರೀ ಕೃಷ್ಣ ವಾದಿರಾಜ ಮಂದಿರ., ಬೆಂಗಳೂರು
ಶ್ರೀ ಹಯಗ್ರೀವ ಧಾಮ., ಬೆಂಗಳೂರು
ಶ್ರೀ ಲಕ್ಷ್ಮೀ ಹಯಗ್ರೀವ ಮಂದಿರ., ಬೆಂಗಳೂರು  
ಆಶ್ರಮ ಶಿಷ್ಯರು : ಶ್ರೀ ವಿಶ್ವವಲ್ಲಭ ತೀರ್ಥರು
ನಿರ್ಯಾಣ :
ಸರ್ವಜಿತ್ ನಾಮ ಸಂವತ್ಸರ ಭಾದ್ರಪದ ಶುದ್ಧ ಪಂಚಮೀ [ ನಾಗರ ಪಂಚಮೀ - 18.08.2007 ]
ವಿಶ್ವಾಧೀಶ ಕರಾಬ್ಜೋತ್ಥ 
ವಿಶ್ವೇಂದ್ರ ಕರಸಂಭವಂ ।
ವಿಶ್ವೋತ್ತಮ ಗುರು೦ ವಂದೇ 
ವಿರಕ್ತಿ ಪರಿಪೂರಿತಮ್ ।। 
" ವಿಶೇಷ ವಿಚಾರ "
ಶ್ರೀ ವಿಶ್ವೋತ್ತಮ ತೀರ್ಥರನ್ನು " " ಶ್ರೀ ವೃಂದಾವನಾಚಾರ್ಯ "  ಅವತಾರವೆಂದು ಬಲ್ಲವರು ಹೇಳುತ್ತಾರೆ - ಈ ಕುರಿತು ಇನ್ನೂ ಹೆಚ್ಚಿನ ಅಧ್ಯಯನ ಅಗತ್ಯವಿದೆ. .
ಆಚಾರ್ಯ ನಾಗರಾಜು ಹಾವೇರಿ  " ವೇಂಕಟನಾಥ " ಮುದ್ರಿಕೆಯಲ್ಲಿ... 
ವಿಶ್ವೋತ್ತಮ ವಿಶ್ವೇಂದ್ರ ಕುಮಾರ । 
ವಿಶ್ವವಲ್ಲಭ ಪಿತ ಗುರು ವಾದಿರಾಜ ಪ್ರಿಯ । 
ವಿಶ್ವನಾಮಕ  ವೇಂಕಟನಾಥೋSಭಿನ್ನ-
ಭೂವರಾಹ ಪದಾರ್ಚಕ ಸೋದೆಯಲಿ ನಿಂತ । 
ವಿಶ್ವೋತ್ತಮತೀರ್ಥರಿಗೆ ನಮೋ ನಮೋ ।।  ।।   
by ಆಚಾರ್ಯ ನಾಗರಾಜು ಹಾವೇರಿ
     ಗುರು ವಿಜಯ ಪ್ರತಿಷ್ಠಾನ
****

***
ಮರೆಯಲಾಗದ ಶ್ರೀಭೂತರಾಜರ ಮಹಿಮೆ ಮತ್ತು ಶ್ರೀವಿಶ್ವೋತ್ತಮತೀರ್ಥಶ್ರೀಪಾದರು

🙏On reaching a Milestone of 2.700+ Followers and Lakhs of Viewership, we would like to Thank you All. Kind Request to all the Readers of Acharya's Baraha to Read the Article in Original Language Kannada and not use the Translation Option in the Settings🙏

ಬರಹ:ಪಿ.ಲಾತವ್ಯ ಆಚಾರ್ಯ.ಉಡುಪಿ

ಶ್ರೀಭಾವಿಸಮೀರ ಶ್ರೀವಾದಿರಾಜಗುರುಸಾರ್ವಭೌಮರ ಮತ್ತು ಶ್ರೀಭೂತರಾಜರ ಅನನ್ಯ ಉಪಾಸಕರಾದ ಶ್ರೀವಿಶ್ವೋತ್ತಮತೀರ್ಥ ಶ್ರೀಪಾದರ ಕಾಲದಲ್ಲಿ ಭೂತರಾಜರ ಮಹಿಮೆಗೆ ಸಾಕ್ಷಿಯಾದ ಒಂದು ಅಪೂರ್ವ ನೈಜಘಟನೆ..

1979 ನೇ ಇಸವಿಯ ಸಂದರ್ಭ.
ಶ್ರೀವಿಶ್ವೋತ್ತಮತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವದ ಪೂರ್ವಭಾವಿಯಾಗಿ ಪವಿತ್ರ ತೀರ್ಥಕ್ಷೇತ್ರಗಳ ದರ್ಶನ ನಿಮಿತ್ತ ಕ್ಷೇತ್ರ ಪರ್ಯಟನೆ ಆರಂಭವಾಗಿತ್ತು.ಈ ನಿಮಿತ್ತ ಮಠದಲ್ಲಿದ್ದ ಹಳೆಯ ಫಾರ್ಜೆ ವಾಹನವನ್ನು ನೀಡಿ ಹಳದಿ ಬಣ್ಣದ ಹೊಸ ಮೆಟಡೋರ ವಾಹನವನ್ನು ಖರೀದಿಸಲಾಗಿತ್ತು.ಕೇರಳದ ಪ್ರಮುಖ ಕ್ಷೇತ್ರಗಳ ದರ್ಶನಕ್ಕಾಗಿ ಉಡುಪಿಯಿಂದಹೊರಟಿದ್ದ ಶ್ರೀಶ್ರೀವಿಶ್ವೋತ್ತಮತೀರ್ಥಶ್ರೀಪಾದರು ಎರ್ನಾಕುಲಂ ಸಮೀಪದ ತ್ರಿಪುಣಿತುರದ ಶ್ರೀರಾಮಮೂರ್ತಿರಾಯರ ಗೃಹದಲ್ಲಿ ಪಟ್ಟದದೇವರ ಸಹಿತವಾಗಿ ಮೊಕ್ಕಾಮ್ ಹೂಡಿದ್ದರು. ಶ್ರೀಪಾದರೊಡನೆ ತೀರ್ಥಕ್ಷೇತ್ರಗಳನ್ನು ದರ್ಶಿಸುವ ಭಾಗ್ಯನನಗೂ ಲಭಿಸಿತ್ತು.ನನ್ನ ಹಿರಿಯ ಸಹೋದರಿ ಶ್ರೀಮತಿಸಾವಿತ್ರಿಯವರ ಪತಿ ಶ್ರೀರಾಮಮೂರ್ತಿರಾಯರು ಅಲ್ಲೇ ಹಲವಾರು ವರ್ಷಗಳಿಂದ ಹೋಟೆಲ್ ಉದ್ಯಮವನ್ನು ನಡೆಸುತ್ತಿದ್ದರು. ರಾಯರಿಗೆ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರು,ಶ್ರೀವಿಶ್ವೋತ್ತಮತೀರ್ಥಶ್ರೀಪಾದರು ಮತ್ತು ಮಧ್ವಸಂಸ್ಥಾನವೆಂದರೆ ಅಪಾರ ಗೌರವ.ತಮ್ಮ ಮನೆಗೆ ಶ್ರೀವಿಶ್ವೋತ್ತಮತೀರ್ಥಶ್ರೀಪಾದರು ಹಾಗೂ ಮಠದ ಪಟ್ಟದದೇವರು ಆಗಮಿಸಿದ್ದರಿಂದ ರಾಮಮೂರ್ತಿರಾಯರಿಗೆ ಮತ್ತು ಪತ್ನಿ ಸಾವಿತ್ರಿಯಕ್ಕನಿಗೆ ಬಹಳ ಖುಷಿಯಾಗಿತ್ತು.ದೇವರಿಗೆ,ಶ್ರೀಗಳಿಗೆ ಹಾಗೂ ಮಠದ ಪರಿವಾರದವರಿಗೆ ಸಲ್ಲಬೇಕಿದ್ದ ವ್ಯವಸ್ಥೆಗಳ ಬಗ್ಗೆ ವಿಶೇಷ ನಿಗಾ ವಹಿಸಿದ್ದರು.ಕೇರಳದ ಪ್ರಮುಖ ದೇವಾಲಯಗಳ ಭೇಟಿ ಮತ್ತು ದರ್ಶನದ ವ್ಯವಸ್ಥೆಯನ್ನು ಸ್ವತಃ ರಾಮಮೂರ್ತಿಯವರೇ ಆಯೋಜಿಸಿದ್ದರು.

ರಾಯರ ಪೂರ್ವನಿರ್ಧರಿತ ಕಾರ್ಯಕ್ರಮದಂತೆ ಮೊದಲದಿನ ಶ್ರೀಪಾದರು ಶ್ರೀವಾದಿರಾಜಮಠಕ್ಕೆ ಸಂಬಂದಿಸಿದ ತ್ರಿಪುಣಿತುರದ ಸಮೀಪದಲ್ಲಿರುವ ಪುತ್ತನಬಂಗ್ಲಾವ್ ದೇವಾಲಯಕ್ಕೆ ಭೇಟಿನೀಡಿದರು.ಅದೇ ಸಂದರ್ಭದಲ್ಲಿ ಕೊಚ್ಚಿ ಮಹಾರಾಜರ ಸಂಸ್ಥಾನಕ್ಕೆ ಶ್ರೀವಿಶ್ವೋತ್ತಮತೀರ್ಥ ಶ್ರೀಪಾದರು ಆಗಮಿಸಿರುವ ಸುದ್ದಿಯು ರಾಮಮೂರ್ತಿರಾಯರಿಂದ ತಿಳಿಯಿತು.ತಕ್ಷಣ ರಾಜಮನೆತನದವರು ರಾಮಮೂರ್ತಿರಾಯರ ಮನೆಗೆ ಕುಟುಂಬ ಸಮೇತರಾಗಿ ಆಗಮಿಸಿ ತಮ್ಮಸಂಸ್ಥಾನಕ್ಕೆ ಆಗಮಿಸುವಂತೆ ಶ್ರೀ ವಿಶ್ವೋತ್ತಮತೀರ್ಥ ಶ್ರೀಪಾದರಿಗೆ ಆಹ್ವಾನ ನೀಡಿದ್ದರು.ಮಾರನೇದಿನವೇ ಕೊಚ್ಚಿರಾಜರ ಅರಮನೆಯಲ್ಲಿ ಶ್ರೀಪಾದರಿಗೆ ಆದ್ದೂರಿಯ ಸಮ್ಮಾನ,ಪಾದಪೂಜೆ ಅರ್ಪಣೆಯಾಯಿತು.ಜೊತೆಗೆ ಕೊಚ್ಚಿಮಹಾರಾಜರು ಶ್ರೀವಾದಿರಾಜರಸಂಸ್ಥಾನಕ್ಕೆ ಕೊಡುಗೆಯಾಗಿ ನೀಡಿದ್ದ ಇರಿಂಜಲಕುಡ ಆಂಜನೇಯ ದೇವಾಲಯಕ್ಕೂ ತೆರಳಿದ ಶ್ರೀಪಾದರು ಅಲ್ಲಿ ವಿಶೇಷ ಪೂಜೆ ಸಲ್ಲಿಸಿದರು.ಮೂರನೇದಿನ ತ್ರಿಪುಣಿತುರದ ಪ್ರಸಿದ್ದ ಕೃಷ್ಣದೇವಸ್ಥಾನ,ಶಿವದೇವಾಲಯ ಮತ್ತು ಊರ ಅಕ್ಕಪಕ್ಕದ ಕ್ಷೇತ್ರಗಳಿಗೆ ತೆರಳಿ ದರ್ಶನ ಪೂಜೆಪುರಸ್ಕಾರಗಳು ಸಂದವು.ತದನಂತರ ಕೇರಳದ ರಾಜಧಾನಿ ತಿರುವಂತಪುರದ ವಿಶ್ವವಿಖ್ಯಾತ ಅನಂತಪದ್ಮನಾಭ ದೇವಾಲಯಕ್ಕೆ ಪ್ರಯಾಣ.

ತಿರುವನಂತಪುರಕ್ಕೆ ಶ್ರೀಪಾದರ ಜೊತೆಗೆ ಬಂದಿದ್ದ ರಾಮಮೂರ್ತಿರಾಯರು ಅಲ್ಲಿನ ದೇವಾಲಯದ ಮುಖ್ಯಸ್ಥರಿಗೆ ಶ್ರೀವಿಶ್ವೋತ್ತಮತೀರ್ಥರ ಬರುವಿಕೆಯನ್ನು ಮುಂಚಿತವಾಗಿ ತಿಳಿಸಿದ್ದರು.ದೇವಾಲಯದ ರಾಜಮನೆತನ ಹಾಗೂ ಆಡಳಿತಮಂಡಳಿಯವರು ಶ್ರೀವಿಶ್ವೋತ್ತಮತೀರ್ಥರನ್ನು ವೈಭವದ ರಾಜಗೌರವದೊಂದಿಗೆ ಎದುರ್ಗೊಂಡು ಅಭಿನಂದಿಸಿದರು. ಶ್ರೀಪಾದರ  ದಿವ್ಯಹಸ್ತದಿಂದ ಅನಂತ ಪದ್ಮನಾಭದೇವರಿಗೆ ಪೂಜೆ ಸಲ್ಲಿಸುವಂತೆ ರಾಜಮನೆತನದವರು ಶ್ರೀಪಾದರಲ್ಲಿ ಪ್ರಾರ್ಥಿಸಿದರು.ಸಂತೋಷಗೊಂಡ ಶ್ರೀಪಾದರು ಪೂಜೆಯನ್ನು ಸಲ್ಲಿಸಿ ಬಹುವಿಧದ ರಾಜ ಮರ್ಯಾದೆಯನ್ನು ಸ್ವೀಕರಿಸಿದರು.ರಾಜ ಮನೆತನ ಹಾಗೂ ಅಲ್ಲಿ ನೆರೆದಿದ್ದ ಸಮಸ್ತರಿಗೆ ಮಂತ್ರಾಕ್ಷತೆ ನೀಡಿ ಹರಸಿದ್ದ ಶ್ರೀಪಾದರಿಗೆ ದೇವರದರ್ಶನ ಮತ್ತು ಅಲ್ಲಿನ ವ್ಯವಸ್ಥೆಯಿಂದ ತುಂಬಾ ಸಂತೋಷವಾಗಿತ್ತು.

ಮಧ್ಯಾಹ್ನದ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಅಲ್ಲಿಂದ ಮತ್ತೆ ತ್ರಿಪುಣಿತುರಕ್ಕೆ ಮರು ಪ್ರಯಾಣ.ರಾತ್ರಿಪೂಜೆಯು ರಾಮಮೂರ್ತಿಯವರ ಮನೆಯಲ್ಲೇ ನಿಗದಿಯಾಗಿತ್ತು.ಸಂಜೆ ಸುಮಾರು ಐದುಘಂಟೆಯ ಸಮಯ..ಅಲಪ್ಪಿ ನಗರಕ್ಕೆ ಸುಮಾರು 40ಕಿಲೋಮೀಟರ್ ದೂರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಮ್ಮ ವಾಹನ ವೇಗವಾಗಿ ಸಾಗುತ್ತಿತ್ತು.ಈ ಮೊದಲೇ ಹೇಳಿದಂತೆ ಹೊಸವಾಹನ.
ನಂಬರ್ ಪ್ಲೇಟ್ ಇದ್ದರೂ 
ಫಾರ್ ರೆಜಿಸ್ಟ್ರೇಷನ್ ಎಂಬ ಫಲಕ ಮಾತ್ರ ಇತ್ತು.ಹೆದ್ದಾರಿಯ ಒಂದು ತಿರುವಿನಲ್ಲಿ ಪೊಲೀಸರ ದೊಡ್ಡದಂಡು ಹೊಂಚುಹಾಕಿ ಕುಳಿತಿತ್ತು.
ನಮ್ಮ ವಾಹನದ ವೇಗ ನೋಡಿ ನಿಲ್ಲಿಸಿಯೇಬಿಟ್ಟರು.ಬಹಳ ವರಟಾಗಿ ವರ್ತಿಸುತ್ತಿದ್ದ ಪೊಲೀಸ್ ಅಧಿಕಾರಿಗಳು ವಾಹನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನಮ್ಮಿಂದ ತೆಗೆದುಕೊಂಡರು.ದುರದೃಷ್ಟವಶಾತ್ ನಮ್ಮ  ಹೊಸವಾಹನದ ಒಂದೆರಡು ಪ್ರಮುಖ ದಾಖಲೆಗಳು ಎಷ್ಟು ಹುಡುಕಿದರೂ ಸಿಗಲಿಲ್ಲ.ತಕ್ಷಣ ಸಿಟ್ಟಾದ ಪೊಲೀಸ್ ಅಧಿಕಾರಿಯು ವಾಹನವನ್ನು ಅಲಪ್ಪಿ ನಗರದ ಪೊಲೀಸ್ ಸ್ಟೇಶನಗೆ ತೆಗೆದುಕೊಂಡು ಬನ್ನಿ.ನಿಮ್ಮ ವಾಹನವನ್ನು ಈಗಿಂದೀಗಲೇ ಸೀಜ್ ಮಾಡುತ್ತೇವೆ ಎಂದು ಬೆದರಿಸಿದ.ನಮ್ಮೊಡನೆ ಕುಳಿತಿದ್ದ ರಾಮಮೂರ್ತಿರಾಯರು ಪೊಲೀಸ್ ಅಧಿಕಾರಿಗಳಲ್ಲಿ ಬಹುವಿಧದಿಂದ ವಿನಂತಿಸಿಕೊಂಡರು.ಎಷ್ಟೇ ಪ್ರಯತ್ನಿಸಿದರೂ ಅವರುಗಳು ಒಂದಿಷ್ಟೂ ಸ್ಪಂದಿಸಲಿಲ್ಲ.ದಂಡ ತೆರಲು ನಾವು ಸಿದ್ದರಿದ್ದರೂ ಅವರು ಅದಕ್ಕೆ ಒಪ್ಪದೇ ವಾಹನವನ್ನು ಸೀಜ್ ಮಾಡುವುದಾಗಿ ಪಟ್ಟು ಹಿಡಿದಿದ್ದರು.ರಾತ್ರಿಪೂಜೆಗೆ ತೊಂದರೆಯಾಗುವುದೆಂಬ ಭಯ ಎಲ್ಲರನ್ನೂ ಕಾಡುತ್ತಿತ್ತು.ಏನು ಮಾಡುವುದೆಂದು ತೋಚದೆ ಕೊನೆಗೆ ರಾಮಮೂರ್ತಿರಾಯರುಮುಖ್ಯಪೊಲೀಸ್ ಅಧಿಕಾರಿಯ ಬಳಿ ತೆರಳಿ ಹೇಳಿದರು.."ನಮ್ಮ ಗುರುಗಳು ವಾಹನದಲ್ಲಿ ಇದ್ದಾರೆ.ಅವರಿಗೆ ನಿಮ್ಮೊಡನೆ ಮಾತನಾಡ ಬೇಕಂತೆ.ದಯವಿಟ್ಟು ಬನ್ನಿ"ಎಂದು ರಾಮಮೂರ್ತಿರಾಯರು ಆತನ ಕೈಹಿಡಿದು ಕೇಳಿಕೊಂಡರು.ಹರಿಸ್ಮರಣೆಯಲ್ಲಿ ನಿರತರಾಗಿದ್ದ ಶ್ರೀಪಾದರ ಬಳಿ ಪೊಲೀಸ್ ಅಧಿಕಾರಿಯು ಬುಸುಗುಟ್ಟುತ್ತಾ ಬಂದ.ಮಠದ ವಾಹನದ ಬಾಗಿಲ ಬಳಿ ಬಂದು ವಾಹನದ ಮೆಟ್ಟಿಲು ಏರಿ ಶ್ರೀವಿಶ್ವೋತ್ತಮತೀರ್ಥ ಶ್ರೀಪಾದರ ಮುಖವನ್ನು ನೋಡಿದ ಪೊಲೀಸ್ ಅಧಿಕಾರಿಯು ಒಮ್ಮಿಂದೊಮ್ಮೆಲೆ ಬೆಚ್ಚಿಬಿದ್ದ.ಸ್ಥಿತಪ್ರಜ್ಞರಾಗಿ ಕುಳಿತಿದ್ದ ಶ್ರೀಪಾದರು  ಪೊಲೀಸ್ ಅಧಿಕಾರಿಯನ್ನು ಕಂಡಕೂಡಲೇ ಫಲ ಮಂತ್ರಾಕ್ಷತೆ ನೀಡಲು ಮುಂದಾದರು.ಆದರೆ ಶ್ರೀಪಾದರ ಮುಖವನ್ನೇ ಭಯದಿಂದ ದಿಟ್ಟಿಸುತ್ತಿದ್ದ ಅಧಿಕಾರಿಯು ಕಂಗಾಲಾಗಿದ್ದ.ತಕ್ಷಣವೇ ಶ್ರೀಪಾದರಿಗೆ ಕೈಮುಗಿದು ತನ್ನ ವಾಹನದ ಬಳಿ ದಡಬಡನೆ ಸಾಗಿದ.ರಾಮ ಮೂರ್ತಿಯವರು ಆತನನ್ನು ಹಿಂಬಾಲಿಸಿದರು.ಆತ ತನ್ನ ಕಾರಿಗೆ ತೆರಳಿ ಆಸನದಲ್ಲಿ ಕುಳಿತು ಇಡೀಬಾಟಲಿ ನೀರನ್ನು ಒಂದೇ ಉಸಿರಿನಲ್ಲಿ ಗಟಗಟನೆ ಕುಡಿದು ಮುಗಿಸಿದ.ಸಂಪೂರ್ಣ ಬೆವತುಹೋಗಿದ್ದ ಪೊಲೀಸ್ ಅಧಿಕಾರಿಗೆ ಏನೋ ಆರೋಗ್ಯ ಸಮಸ್ಯೆ ಇದ್ದಿರಬೇಕು ಎಂದು ರಾಮಮೂರ್ತಿಯವರಿಗೆ ಅನಿಸಿತು.ಅಧಿಕಾರಿಯು ಏದುಸಿರು ಬಿಡುತ್ತಿದ್ದ.ಒಂದೆರಡು ನಿಮಿಷದ ಮೊದಲು ಮಾತುಮಾತಿಗೆ ಎಲ್ಲರ ಮೇಲೂ ಸಿಟ್ಟಾಗುತ್ತಿದ್ದ ಅಧಿಕಾರಿಯು ಅರೆಕ್ಷಣದಲ್ಲಿ ಸಂಪೂರ್ಣ ಮಂಕಾಗಿದ್ದ.ಒಂದೈದು ನಿಮಿಷ ಕಳೆದಿರಬಹುದು.ಸ್ವಲ್ಪ ಚೇತರಿಸಿಕೊಂಡ ಪೊಲೀಸ್ ಅಧಿಕಾರಿಯು ತನ್ನ ಬಳಿಯಲ್ಲೇ ನಿಂತಿದ್ದ ರಾಮಮೂರ್ತಿಯವರನ್ನು ಬದಿಗೆಕರೆದು ಅವರ 
ಕಿವಿಯಲ್ಲಿ ಏನೋ ಹೇಳಿ ವಾಹನವನ್ನು ಈಗಲೇ ತೆಗೆದುಕೊಂಡುಹೋಗಿ ಎಂದು ಹೇಳಿದ.ನಾನು ಅಲ್ಲೇ ರಾಮಮೂರ್ತಿರಾಯರಜೊತೆಗಿದ್ದೆ.ಮಲಯಾಳ ಭಾಷೆಯಲ್ಲಿ ಇವರಿಬ್ಬರ ಸಂಭಾಷಣೆ ನಡೆಯುತ್ತಿದ್ದ ಕಾರಣ ಒಂದೆರಡು ವಿಷಯಗಳ ಹೊರತು ಬಹುತೇಕ ಮಾತುಕತೆಗಳು ಏನೆಂದೇ ಅರ್ಥವಾಗಲಿಲ್ಲ. ಪೊಲೀಸ್ ಅಧಿಕಾರಿಯು ತಾನುವಶಪಡಿಸಿಕೊಂಡಿದ್ದ ಮಠದ ವಾಹನದ ಎಲ್ಲಾ ದಾಖಲೆಗಳನ್ನು ಹಿಂತಿರುಗಿಸಿದ. ರಾಮಮೂರ್ತಿರಾಯರಿಗೂ ಕೈಯಲ್ಲೇ ದೊಡ್ಡ ನಮಸ್ಕಾರ ಹೇಳಿದ ಪೊಲೀಸ್ ಅಧಿಕಾರಿಯು ಬೇಗನೇ ತೆರಳುವಂತೆ ಸೂಚಿಸಿದ.ಜೊತೆಗಿದ್ದ ಇತರೇಪೊಲೀಸರು ತಮ್ಮ ಹಿರಿಯ ಅಧಿಕಾರಿಯ ವರ್ತನೆಯಿಂದ ಆಶ್ಚರ್ಯಚಕಿತರಾದರು.

ಒಂದು ಘಂಟೆಯಿಂದ ಸತಾಯಿಸಿದ್ದ ಪೊಲೀಸ್ ಅಧಿಕಾರಿಯು ಕಿಂಚಿತ್ ದಂಡವನ್ನೂ ಕೂಡಾ ವಿಧಿಸದೆ ಏಕಾಏಕಿಯಾಗಿ ವಾಹನವನ್ನು ತೆರವುಗೊಳಿಸಿದ್ದು ಎಲ್ಲರಿಗೂ ಆಶ್ಚರ್ಯವಾಗಿತ್ತು.ಶ್ರೀವಿಶ್ವೋತ್ತಮತೀರ್ಥಶ್ರೀಪಾದರು ಕುತೂಹಲ ತಡೆಯಲಾರದೆ "ಪೊಲೀಸರ ವರ್ತನೆಯಲ್ಲಿ ಈಅನಿರೀಕ್ಷಿತ ಬದಲಾವಣೆಗೆ ಕಾರಣವೇನೆಂದು" ಕೇಳಿದರು.ಅದಕ್ಕೆ ರಾಮಮೂರ್ತಿರಾಯರು "ಮನೆ ತಲುಪಿದ ಮೇಲೆ ಎಲ್ಲಾ ವಿಚಾರವನ್ನು ವಿವರವಾಗಿ ತಿಳಿಸುತ್ತೇನೆ ಅಂದರು".

ಅಂದು ಹುಣ್ಣಿಮೆಯಾದ ಕಾರಣ ರಾಮಮೂರ್ತಿರಾಯರ ಮನೆಯಲ್ಲಿ ಭೂತರಾಜರ ಪೂಜೆಯನ್ನೂ ಕೂಡಾ ಹಮ್ಮಿಕೊಳ್ಳಲಾಗಿತ್ತು.
ಎಲ್ಲವೂ ಮುಗಿಯುವಾಗ ಘಂಟೆ 10 ಆಗಿತ್ತು.ಶ್ರೀಪಾದರು ಫಲಾಹಾರ ಸ್ವೀಕರಿಸುತ್ತಿದ್ದರು.ಅಲ್ಲಿಗೆ ಆಗಮಿಸಿದ
ರಾಮಮೂರ್ತಿರಾಯರು 
ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಘಟನೆಯನ್ನು ಹೇಳುತ್ತಾ ಪೊಲೀಸ ಅಧಿಕಾರಿಯು ಹೇಳಿದ ಘಟನೆಯನ್ನು ಯಥಾವತ್ತಾಗಿ ವಿವರಿಸಿದರು.ಏನಾಗಿತ್ತೆಂದರೆ..ಶ್ರೀವಿಶ್ವೋತ್ತಮತೀರ್ಥರನ್ನು ಕಾಣಲು ಬಹಳ ದರ್ಪದಿಂದಲೇ ಮಠದ ವಾಹನದೊಳಗೆ ಕಾಲಿಟ್ಟ ಪೊಲೀಸ್ ಅಧಿಕಾರಿಯು "ಶ್ರೀಪಾದರ ಮುಖವನ್ನು ನೋಡುತ್ತಿದ್ದಂತೆ ದಂಗಾದ.ಏಕೆಂದರೆ ಶ್ರೀಪಾದರು ಕುಳಿತಿದ್ದ ಆಸನದ ಹಿಂಭಾಗದಲ್ಲಿ ಕಡುಕೆಂಪು ಬಣ್ಣದಬಟ್ಟೆ ಧರಿಸಿದ್ದ ಜಠಾಧಾರಿಯೊಬ್ಬರು ಕೆಂಗಣ್ಣಿನಿಂದ ಪೊಲೀಸ್ ಅಧಿಕಾರಿಯನ್ನೇ ನುಂಗಿಬಿಡುವಂತೆ ದುರುಗುಟ್ಟಿಕೊಂಡು ದಿಟ್ಟಿಸುತ್ತಿದ್ದರಂತೆ.ಜಠಾಧಾರಿಯ ಉಗ್ರರೂಪವನ್ನು ಕಂಡು ಬೆದರಿ ನಿಸ್ತೇಜನಾಗಿದ್ದ ಪೊಲೀಸ್ ಅಧಿಕಾರಿಗೆ ಆಕ್ಷಣದಲ್ಲಿ ಬಾಯಿ,ನಾಲಿಗೆ ಎಲ್ಲಾ ಒಣಗಿ ತಲೆಸುತ್ತು ಬಂದಿತ್ತಂತೆ.."ನಾನೆಂದೂ ಆತೆರನಾದ ಭಯಾನಕ ರೂಪವನ್ನು ಈವರೆಗೆ ಕಂಡಿರಲಿಲ್ಲ".ಎಂದು ಕಂಗಾಲಾಗಿದ್ದ ಅಧಿಕಾರಿಯು ನಡುಗುತ್ತಾ ನನ್ನಲ್ಲಿ ಹೇಳಿದ ಎಂದು ಶ್ರೀವಿಶ್ವೋತ್ತಮತೀರ್ಥರಿಗೆ ರಾಮಮೂರ್ತಿರಾಯರು ಸಂಪೂರ್ಣ ವರದಿ ಒಪ್ಪಿಸಿದರು.ರಾಯರ ಮಾತುಕೇಳಿ ಭಾವುಕರಾದ ಶ್ರೀಪಾದರು ಒಂದುಕ್ಷಣ ಮೌನಕ್ಕೆ ತೆರಳಿ ದೇವರ ಸ್ಮರಣೆಯಲ್ಲಿ ನಿರತರಾದರು.ಶ್ರೀಪಾದರಿಗೆ ಖುಷಿಯಿಂದ ಮಾತನಾಡಲಾಗದೆ ಗಂಟಲು ತುಂಬಿ ಬಂದಿತ್ತು.ಆದರೂ ಸಾವರಿಸಿಕೊಂಡು ಹೇಳಿದರು.."ನಂಬಿದವರ ರಕ್ಷಣೆಯಲ್ಲಿ ಸದಾ ನಿರತರಾಗಿರುವ ಭೂತರಾಜರ ಮಹಿಮೆಯ ಬಗ್ಗೆ ನಾನು ಎಷ್ಟು ಹೇಳಿದರೂ ಕಡಿಮೆಯೇ" ಎಂದು ಹೇಳಿ ಭೂತರಾಜರ ಮಹಿಮೆಯ ಹಲವುಕಥೆಗಳನ್ನು ಅಂದು ಹೇಳಿದ್ದರು.

ಪ್ರಕೃತ 80ರಹರೆಯದ ಶ್ರೀ ರಾಮಮೂರ್ತಿರಾಯರು ಪತ್ನಿಶ್ರೀಮತಿಸಾವಿತ್ರಿಯಕ್ಕನೊಂದಿಗೆ ತ್ರಿಪುಣಿತುರದಲ್ಲೇ ನೆಲೆಸಿದ್ದು ಈಗಲೂ ಹೋಟೆಲ್ ಉದ್ಯಮವನ್ನು ನಡೆಸುತ್ತಿದ್ದಾರೆ.ಅವರಮೂರೂ ಗಂಡುಮಕ್ಕಳು ನಾಡಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸೇವೆಸಲ್ಲಿಸುತ್ತಿದ್ದಾರೆ.
ಶ್ರೀವಿಶ್ವೋತ್ತಮತೀರ್ಥರು
ತೀರ್ಥಕ್ಷೇತ್ರ ಸಂದರ್ಶನಕ್ಕೆ ಆಗಮಿಸಿದ ಸಂದರ್ಭದಲ್ಲಿ ಎರಡುಭಾರಿ ಇವರ ಗೃಹದಲ್ಲಿ ತಂಗಿದ್ದರು.ಅಂದು ಕೇರಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಘಟನೆಯನ್ನು ರಾಮಮೂರ್ತಿರಾಯರು ಆಗಾಗ್ಗೆ ನೆನೆಪಿಸಿಕೊಳ್ಳುತ್ತಿರುತ್ತಾರೆ.

ಆತ್ಮೀಯರೇ ಇದೇ ಬರುವ ಸೆಪ್ಟೆಂಬರ್ 12ರಂದು ಶ್ರೀವಿಶ್ವೋತ್ತಮತೀರ್ಥಶ್ರೀಪಾದರ 14ನೇಆರಾಧನಾ ಮಹೋತ್ಸವ ಜರಗಲಿದೆ.ಅಪಾರ ತಪಃಶಕ್ತಿಯಿಂದ ಸದಾ ಭಕ್ತರ ಸರ್ವತೋಮುಖ ಪ್ರಗತಿಗಾಗಿ ಪ್ರಾರ್ಥಿಸುತ್ತಿದ್ದ ಶ್ರೀವಿಶ್ವೋತ್ತಮತೀರ್ಥಶ್ರೀಪಾದರ ವಿಶೇಷ ಅನುಗ್ರಹ ಸರ್ವರಿಗೂ ಪ್ರಾಪ್ತವಾಗಲಿ ಎಂದು ಈ ಪರ್ವಕಾಲದಲ್ಲಿ ಪ್ರಾರ್ಥನೆ.ಅಂತೆಯೇ
ಇಂತಹ ಮಹಾಮಹಿಮರ ಭಗವತ್ಚಿಂತನೆಯ ಜೀವಿತಾವಧಿಯಲ್ಲಿ ಸಂಭವಿಸಿದ ಅಪೂರ್ವ ಘಟನೆಗಳನ್ನು ಕಣ್ಣಾರೆ ಕಂಡ ಅನೇಕರು ಈಗಲೂ ಇದ್ದಾರೆ.ಈ ಘಟನೆಗಳು ಇತಿಹಾಸದ ಪುಟಗಳಿಂದ ಮರೆಯಾಗದಿರಲಿ, ಹಾಗೆಯೇ ಅವರ ಸಿದ್ದಿ- ಸಾಧನೆಗಳು ಎಲ್ಲರಿಗೂ ಪ್ರೇರಣೆಯಾಗಲಿ ಎನ್ನುವ ಉದ್ದೇಶದಿಂದ ಈ ಬರಹವು ನಿಮ್ಮಪುಟದಲ್ಲಿ ಪ್ರಕಟಗೊಳ್ಳುತ್ತಿದೆ.ನಿಮ್ಮೆಲ್ಲರ ಆಶೀರ್ವಾದ ಪ್ರೋತ್ಸಾಹ ಸದಾ ನಮಗಿರಲಿ.ಎಲ್ಲರಿಗೂ ಶುಭವಾಗಲಿ

II ಕೋಲವ್ಯಾಸ ಹಯಗ್ರೀವ ಪದಕಂಜ ಮಧುವ್ರತಂ ವಿಶ್ವೋತ್ತಮ ಯೋಗೀಂದ್ರಂ ವಂದೇsಹಂ ವಾದಿರಾಟ್ ಪ್ರಿಯಂ II
II ಕೃಷ್ಣಾಲಂಕಾರಸಂಸಕ್ತಂ ಸರ್ವಸಜ್ಜನಪೋಷಕಮ್!ಲಕ್ಷ್ಮೀವರಗುರುಂ ವಂದೇ ವಿಶ್ವೋತ್ತಮತೀರ್ಥಕರೋದ್ಭವಮ್ II
I ಶ್ರೀ ವಿಶ್ವೋತ್ತಮ ತೀರ್ಥ ಗುರುಭ್ಯೋ ನಮಃ I
I ಶ್ರೀ ಲಕ್ಷ್ಮೀವರತೀರ್ಥ ಗುರುಭ್ಯೋ ನಮಃ I
****

No comments:

Post a Comment