Wednesday 1 May 2019

varadendra teertharu pune 1785 matha rayara mutt yati 24 ashada shukla shashti ವರದೆಂದ್ರ ತೀರ್ಥರು







ಹರೇ ಶ್ರೀನಿವಾಸ 🙏🙏ಶ್ರೀ ಪ್ರಾಣೇಶ ದಾಸರ ಗುರುಭಕ್ತಿಗೆ ಒಲಿದು ಸ್ವಪ್ನಾಖ್ಯರಾಗಿ ನೆಲೆನಿಂತಿರುವ ಲಿಂಗಸುಗೂರಿನ ಶ್ರೀ ವರದೇಂದ್ರ ಗುರುಗಳ ದಿವ್ಯ ಸನ್ನಿಧಾನದಲ್ಲಿ ದೇಹಾಖ್ಯ ರಥ ಸಮರ್ಪಿಸಿ ಕೃತಾರ್ಥತೆಯ ಭಾವ ತಳಿಯುವ ದಿವ್ಯ ಘಳಿಗೆಯಲಿ ಉಪಸ್ಥಿತರಿದ್ದ ಸಾಧಕ ಮಹನೀಯರ ಸಮಾಗಮದ ಅಪರೂಪದ ಭಾವಚಿತ್ರ. ಇದರಲ್ಲಿ ಶ್ರೀ ಶಾಮಸುಂದರ ದಾಸರು,ಶ್ರೀ ಸುಳಾದಿ ಕುಪ್ಪೇರಾಯರು ( ಅಭಿನವ ಪ್ರಾಣೇಶದಾಸರ ಸಹೋದರರು ) ದಿವ್ಯಸಾಧಕರಾದ ಶ್ರೀ ಅಭಿನವ ಪ್ರಾಣೇಶ ದಾಸರು ( ಮಾಸ್ತರ ಹನುಮಂತರಾಯರು )ರಥ ನಿರ್ಮಾಣ ರೂವಾರಿಗಳಾದ ದಾಸಸಾಹಿತ್ಯ ಸಂಗ್ರಾಹಕರು- ಶ್ರೀ ವರದೇಂದ್ರ ಹರಿದಾಸ ಸಾಹಿತ್ಯ ಮಂಡಳಿಯ ಸಂಸ್ಥಾಪಕರೂ ,ಸುಂದರ ವಿಠಲಾಂಕಿತರಾದ ಶ್ರೀ ಗೋರೇಬಾಳು ಹನುಮಂತರಾಯರು,ಶ್ರೀ ಭೋಗೇಶರಾಯರು,ಗೋನವಟ್ಲಾ ಶ್ರೀ ರಾಘವೇಂದ್ರರಾಯರು ( ಈ ಮಾಹಿತಿ ಮತ್ತು ಫೋಟೊ ಒದಗಿಸಿದ ಶ್ರೀ ಜಿ.ರಾಮರಾವ್,ರಾಯಚೂರ ಇವರ ತಂದೆಯವರು ) ಶ್ರೀ ಸಂತೆಕೆಲ್ಲೂರ ವೆಂಕೋಬರಾಯರು ಮುಂತಾದ ಆಚಾರ್ಯವರ್ಗದವರಿದ್ದಾರೆ.. ಫೋಟೊ ಮತ್ತು ಮಾಹಿತಿ ಸೌಜನ್ಯ: ಶ್ರೀ ಜಿ.ರಾಮರಾವ್,ರಾಯಚೂರ
**********


info from sumadhwaseva.com--->

Sri Varadendra Theertha
parampare: rAyara maTa, #24
Period: 1761-1785
Ashrama Sweekara – Ashwija Bahula Saptami Vrusha Samvatsara (1761)
ArAdhana: AshaDa Shudda shashTi
pUrvashrama nAma: shri bAlarAmAchArya
Ashrama gurugaLu: shri vasudEndra tIrtharu
Ashrama shishyaru: shri bhuvanEndra tIrtharu
vrundAvana: Pune


vaadE vijayasheelaaya varadaaya varaarthinaaM|
vadaanyajanasiMhaaya varadEMdraaya tE nama:|
ವಾದೇ ವಿಜಯಶೀಲಾಯ ವರದಾಯ ವರಾರ್ಥಿನಾಂ|
ವದಾನ್ಯಜನಸಿಂಹಾಯ ವರದೇಂದ್ರಾಯ ತೇ ನಮ:|
वादे विजयशीलाय वरदाय वरार्थिनां।

वदान्यजनसिंहाय वरदेंद्राय ते नम:।
Apart from the Moola Brindavana of Sri Varadendra Theertharu and a Mrutika Brindavana of Raghavendra Theertharu right on top of it!
Above these two Brindavanas is of course a customary  idol of “Mukya Prana Devaru”.

Mruthika Vrundavana – Lingasugooru.

Swapna Vrundavana –

Initially Sri Varadendraru asked Praneshadasaru to give as “Daana” the land belonging to Praneshadasaru, which he did with great devotion to Sreegalu and Sri Moola Ramachandra Devaru.
Subsequently after attaining Nirvana, he came in his dream and told Praneshadasaru that his vishesha sannidhana is there in the Tulasi plant which was there in the donated place.
After some time, Sri Varadendra Tirtharu again came in the dream of Praneshadasaru and told him to do prathiste of his Mruttika Vrundavana in the same place where Tulasi Plant was there and that he had told him a date and time also for the Mruttika Vrundavana prathiste.    Sri Bhuvanendra Thirtharu, his successor had to come for Prathiste.   But due to overflooding in the Krishna River, he could not come in time, and as the time was nearing, Praneshadasaru did the Mrithika Vrundavana Prathiste himself, which Bhuvanendra Thirtharu also gave consent.
As such,  Sri Praresha Dasaru himself made the prathistapane of Sri Varadendra Theertharu at the pre-decided time.   That is why the Vrundavana @ Lingasugooru is popularly called as “Swapna Vrundavana”.
“SAPTAMO MATSAMO YOGi VARADENDRO BHAVISHYATI” –  Sri Rayaru had told that seventh after him will be equal to him.    And it is Varadendraru.
He was a great scholar. A well known victor in debates. The Mutt saw all round development during his period.
Sri Venugopalacharyaru is the Poorvashrama Brother of Vadeendraru.  Venugopalacharyaru had three sons, all the three became sanyasis of Rayara Mutt Parampare in different period.  They are :
1. Purushottamacharyaru         –  Sri  Vasudendra Theertharu
2. Balaramacharyaru                  – Sri Varadendra Theertharu
3. Lakshminarayanacharyaru   – Sri Bhuvanendra Theertharu
Sri Vasudendra Theertharu was instructed by his Gurugalu to give Ashrama to Sri Jayaramacharyaru (later he himself took ashrama in front of Vijayeendraru and was called as Dheerendra Theertharu).  But he could not trace him when he was about to give the ashrama, so, he gave ashrama to Varadendra Tirtha and instructed him to give Ashrama to Jayaramacharyaru.  He also could not trace him when he was about to give ashrama, so he gave  ashrama to his brother Lakshminarayanacharyaru and named him Bhuvanendraru with an instruction to give ashrama to Jayaramacharyaru.    By this time, Sri Jayaramacharyaru took ashrama in front of Vijayeendraru and was called as Dheerendra Theertharu)

Granthagalu  –

  1. Deva Pooja Paddathi (in Sanskrit)
  2. Tantrasara (Kannada)
Other Achievements –
1.  In Pune, which was under the control of Peshwas, a famous advaitha Pandita by name Ramashastri challenged Sri Varadendra Theertharu.    Vakyaartha went on,  Sri Varadendra Theertharu defeated him,  and Ramashastri gave the position of his residence as per the agreement before the Vakyaartha.
2.  Somaraja, another Nayaka (the leader), gave Bhoodana in 1774.
3. Veera venkata Tirumalaraya and Balasath Jang Bahadoor handed over the possession of Dhanapura Grama in 1769 to Rayara Mutt.
4.  Like Vyasa Sahitya, he gave scope for Dasa Sahitya also –  He helped Jagannathadasaru and Pranesha Dasaru. Sri Jagannathadasa, a scholar in four Shastras known to be a paragon among Haridasas, did his studies under the swamiji and composed Varadendrapancharathna malike, a poem in extollation of the swamiji.  It is indeed praiseworthy that an institution to promote publication of Haridasa literature under the name Varadendra Haridasa Sahitya Mandala has been functioning at Lingasugoor even today.
5. Contemporaries – Sri Satyabodharu, Sri Dheerendraru, Jagannathadasaru, Pranesha Dasaru of Lingasugooru., Vijayadasaru, Gopaladasaru.

There are several stotras on him.
1. Sri Varadendra Gurustotram by Sri Guru Jagannathadasaru.
2. Sri Varadendrastakam
3. Sri Varadendra Karavalambana Stotram by Guru Jagannathadasaru
4. Sri Varadendra Vijaya (in kannada) by Sri Prasanna Srinivasa Dasaru
5. “ Vandane maadirai Guruvaradendrara paadirai” – by Pranesha Dasaru (devaranama).
6. ” Hindina Sukarmavenu| Bandodagideyo
Naradendra raya banda Namma| Mandira kindu.||  by Pranesha Dasaru. (Devaranama)
Krishnarpanamastu



Mrutika vrundavana: Lingasuguru

read more here
Click for Varadendra vijaya by Sri Prasanna Srinivasa Daasaru

*******

info from madhwamrutha.org--->


Sri Varadendra Theertha 24th Saint from Sri Madhwacharya, has created a milestone in the parampare with winning debates over opponents and establishing Dwaitha Siddhanta & Sri Madhwacharya parampare mutt in predominantly Adwaitha dominated Poona city by winning over their heart and support.
“SAPTAMO MATSAMO YOGI VARADENDRO BHAVISHYATI”, this was believed to be told by Sri Raghavendra theertharu himself, which means that the seventh saint, who adores the Mahasamsthana after Sri Rayaru would be equal to himself.
Sri Balaramacharya (Poorvashrama Name of Sri Varadendra Theertha) was son of Sri Vengugopal Acharya belong to Shastika Bigamudra manetana. Sri Venugopal Acharya had three sons and all of them became the peetadipathi’s  of Sri Raghavendra Mutt parampare one after other.
Sri Purushothama Acharya – Sri Vasudendra Theertha
Balarama Acharya – Sri Varadendra Theertha
Lakshminarayana Acharya – Sri Bhuvanendra Theertha
Sri Balaramacharya studied under the able guidance from Sri Vadeendra Theertha & became scholar of high standard . Sri Vasudhendra Theertha gave Ashrama to Sri Balaramacharya & named him as Sri Varadendra Theertha. Sri Varadendra Theertha was a great scholar and a very good articulator of difficult Vedic & shastric phrases.  He was well respected dwaitha Vedanta philosopher, teacher  & debator of that time. He was equally good in handling the administrative matters. Sri Mutt saw all round developments during his regime. Swamiji was very versatile and undertook a very quick tour across south India. During his tour, Somaraja, a Nayak had his desire fulfilled by gifting estates to Swamiji in Jaya Nama Samvatsara. Rulers namely Veeravenkata Tirumalaraya and Balasatjung Bahadur gifted Dhanapur and other villages as a gift to Swamiji and to the Mutt.
Vyasa & Dasa Sahitya Samana poshane by Sri Varadendra Theertha:
Sri Varadendra Theertharu taught to many students , later many of them became great scholars & Aparoksha jnani’s. He created a team of scholars to do tatva prachara across different locations. Sri Srinivasacharya (Sri Jagannatha dasaru), IG Acharya (Sri Vyasatatvagna theertha), Muddu Krishnacharya (Sri Subhodendra theertha) etc.
Sri Varadendra Theertharu like Sri Vyasarajaru gave equal importance to both Vyasa and Hari Dasa Sahitya, He re- started & established Dasa parampare which was almost stopped post Sri Purandara dasa period. It was during his period, which saw the convergence of some of the great dasaru & Aparoksha jnani’s like Sri Vijaya Dasaru, Sri Gopala Dasaru, Sri Jagannata Dasaru, Sri Pranesha Dasaru and many Hari dasaru. The importance given by the Swamiji to Hari Dasa Sahitya can be seen even today in numerous bhajana mandali’s in Lingsugur, under the name of Sri Varadendra Theertha. Sri Varadendra Theertha Sahitya Mandali is doing research on Dasa Sahitya and many books are being published under this banner. Swamiji himself has composed Tantrasara in kannada which shows his mastery over Dasa Sahitya as well. Sri Jagannata Dasaru was one of his dearest disciple  of Swamiji has composed Sri Varadendrapancharatna Malika, which explains the greatness of Varadendraru in promoting dasa Sahitya
Sri Varadendra Theertha and Pranesha Dasaru had a special bonding between them. The Mruthika Vrundavana of Sri Varadendra Theertha is installed at Sri Pranesh Dasaru’s residence in Lingsugur. Sri Varadendra Theertha during his visit to Lingasugur stayed at Pranesha Dasara residence. During his stay there, Pranesha Dasaru, composed a song on Varadendraru which goes like this “Hindina SukarmavEnu bandodaidavO Varadendra raaya banda namma mandirakkindu”. Pranesha Dasaru offered Bhiksha and a bunch of hay stack as gift to Swamiji, as requested by him. Swamiji asked Pranesha Dasaru to keep it in his possession and he would collect his gift whenever he requires it.

It is well known that Sri Satyabodha Theertha of Uttaradhi Mutt had cordial relationship with Sri Varadendra Theertha and had a great respect towards him for his scholarship.
During his tour Swamiji reached Pune city which was full of great scholars during that period, as  Balaji Bajirao Peshwa was at the helm of affair. In his court of scholars he had a great Adwaitha scholar named Sri Ramashastry who is considered as judge. When Sri Varadendra Theertha reached Pune Sri Ramashastry challenged swamiji for a scholarary debate, to which swamiji accepted. The debate began on the condition that, in the event of Ramashastry losing the debate, he has to cede to the Swamiji and if otherwise, Swamiji should relinquish all his titles. Couple of days before the debate, Sri Jayaramacharya (Poorvashrama son of Sri Vadeendra Theertha & Future Sri Dheerendra theertha) co-incidentally came to Pune to seek the blessings of Swamiji. Sri Jayaramacharya join in the debate to support swamiji and played a key role in discussion. Sri Varadendra Theertha finally established Sri Acharya’s tatvasiddantha. Sri Ramashastry accepted the victory of Sri Varadendra and  As agreed, Sri Ramashastry ceded his own house & all his wealth to Swamiji and went to Kashi. The same house became a sacred abode of Sri Moola Rama & recognized as Sri Varadendra mutt belong to Sri Raghavendra Swamy & Srimadacharya’s parampare. The people of Pune greatly admired the Swamiji and treated him with special honors.
Sri Varadendra Theertha gave Ashrama to his Poorvashrama brother, Sri Lakshminarayana Acharya and named as Sri Bhuvanendra Theertha. Sri Varadendra Theertha attained Hari Pada on AshADa shuddha Shrasti. Sri Bhuvanendra Theertha installed the Vrundavana of his Guru at the same house, which Sri Varadendra Theertha received from Sri Ramashastry after his victory. Later days Mruthika vrundavana of Raghavendra Theertharu was on top of Sri Varadendra Theertha Vrundavana .
After entering to his Vrundavana, Sri Varadendra Theertha came in Pranesha Vittala Dasa’s dream(Swapna) & instructed that ” he would come to Lingsuguru in the form of a Tulsi Plant below the Hay stack donated by him and he has to install his Vrundavana at that same place and his padukas would arrive from Pune on the same day

Next day when Pranesha Dasaru cleared the Hay stack he saw the Tulsi Plant. He got “Purusha Shile” from Gulaganji Morade near Lingasuguru and made arrangements for a Vrundavana and the same was installed subsequently at Lingasuguru. The Vrundavana is now being worshipped by the Vamshikaru of Sri Pranesha Vittala Dasaru. Sri Varadesha Vittala Dasa has composed a song which depicts this incident.
His compositions :
  1. Deva Pooja Paddathi (in Sanskrit)
  2. Tantrasara (Kannada)
Contemporaries:
Sri Jagannatha Theertha (Sri Bhasyadeepikacharya), Sri Srinatha Thirtha & Sri Vidyanatha Thirtha  of Sri Vyasaraj Mutt
Sri Satyabhodha Theertha of Uttaradhi Mutt

Sri Vijaya Dasaru and his disciples
Sri Pranesha Dasaru and his disciples
Sri Gopala Dasaru and his disciples

Stotras on Sri Varadendra Theertha
Sri Varadendrapancharatna Malika by Sri Jagannata Dasaru

Sri Varadendra Guru Stotra by Sri Guru Jagannata dasaru
Sri Varadendrashtakam
Sri Varadendra Karavalamba Stotra by Sri Guru Jagannata dasaru
Sri Varadendra Vijaya


*********

AshADa shuddha shashti is the ArAdhane of shri vardEndra tIrtharu of rAyara maTa.

He was a great scholar. He has written the below works. 
1. Deva Pooja Paddathi (in Sanskrit)
2. Tantrasara (Kannada)

One of his most famous shishyarUs was shri jagannAtha dAsaru. He studied with swAmiji and has composed a stOtra on swamji - varadEndra pancharatna mAlika.

Blessings to prANEsha dAasaru:

prANEsha dAsaru was a shishyaru of shri jagannAtha dAsaru. He lived in lingasugUru. Once when swAmIji visited that place, shri prANEsha dAsaru hosted him. Before leaving swAmIji requested a piece of land in the backyard that was holding jowar crop. shri dAsaru delightfully donated the land to swAmIji. swAmIji asked dAsaru to continue to look after the land for now. 

Pune brindAvana:

During swAmIji's time, Balaji Bajirao was the chieftain of Pune and shri Rama Shastri was a judge in his court. Shri Shastri was a learned and pious man. A debate took place between swAmIji and shri Rama Shastri. It was agreed that Rama Shastri would vacate his house and surrender to swAmIji if he lost the debate. If swAmIji lost, he would relinquish all his titles and honors. Needless to say, shri varadEndra tIrtharu won the debate. Rama Shastri handed over the house. SwAmIji spent his last days in the same house at Pune and attained brindAvana at the house itself. There is mrithika brindAvana of rAyaru and praNadEvaru vigraha on top of the mUla brindAvana.

Lingasuguru brindAvana:

After attaining brindAvana, shri swAmIji appeared in the dream of prAnEsha dAsaru and mentioned that there would be a tuLasi plant in the jowar land that he had gifted and his presence is there in the plant and asked dAsaru to perform pUja there and take care of it. dAsaru woke up in the morning and when he looked in the place mentioned, he indeed saw a tuLasi plant. He started performing pUja daily. In due course, shri swAmIji again appeared in the dream of dAsaru and asked him to consecrate a brindAvana at that spot and also mentioned the date and time. prANEsha dAsaru dutifully did the consecration of the brindAvana at the anointed date and time. Due to this, this brindAvana is also called "swapna vrindAvana".  ArAdhane is performed to this day with all pomp and splendor. 

shri varadEndra tIrtha varada gOvindA gOvindA...

shri krishNArpaNamastu....
***********


ವಾದೇ ವಿಜಯಶೀಲಾಯ 
ವರದಾಯ ವರಾರ್ಥಿನಾಂ|
ವದಾನ್ಯಜನಸಿಂಹಾಯ| ವರದೇಂದ್ರಾಯ ತೇ ನಮಃ
🙏🙏🙏
ಇಂದು ಶ್ರೀ ರಾಯರ ಮಠದ ಪರಂಪರೆಯಲ್ಲಿ ಬಂದ ಸ್ವತಃ ಶ್ರೀರಾಯರೇ ಹೇಳಿದಂತೆ "ನನ್ನಿಂದ ಏಳನೇ ಯತಿಯಾಗಿ ನನ್ನ ಪೀಠದಲ್ಲಿ ಬರುವವರು ನನ್ನ ಸಮರು ಮತ್ತು ಅವರ ಹೆಸರು ವರದೇಂದ್ರ ರು ಅಂತ.
"ಸಪ್ತಮೋ ಮತ್ಸಮೋ ಯೋಗಿ ವರದೇಂದ್ರೋ ಭವಿಷ್ಯತಿ"
ಈ ಮಾತು ರಾಯರು ವೃಂದಾವನ ಪ್ರವೇಶ ಮಾಡುವ ಮೊದಲೇ ಹೇಳಿದ್ದು.
ಅಂತಹ ಮಹಾನುಭಾವರ ಆರಾಧನಾ ಪರ್ವಕಾಲ ಇಂದು.
ಶ್ರೀ ಪ್ರಾಣೇಶದಾಸರು ಹೇಳಿದಂತೆ
ವಿಷ್ಣುನ ಲೋಕ ಪ್ರವೇಶ ಮಾಡಿದ ಚರಿಯಾ|ಕೇಳಿರಿ ಪರಿಯಾ|
ಶಿಷ್ಟ ಜನರು ವಿಶ್ವಾವಸು ನಾಮಕ ಅಬ್ದ- ಆಷಾಡ ಶುದ್ಧ|
ಷಷ್ಟಿಯು ಕುಜವಾಸರ ಉತ್ತರ ನಕ್ಷತ್ರ ವರ- ಪುಣ್ಯ ಕ್ಷೇತ್ರ|
ನಟ್ಟ ನಡುವೆ ವೃಂದಾವನ ಮಧ್ಯ ದೊಳಿರುವ- ಸೌಖ್ಯವ ಸುರಿವಾ|
ವಂದನೆ ಮಾಡಿರೈ ಗುರು ವರದೇಂದ್ರ ರ ಪಾಡಿರೈ|

ಶ್ರೀ ವರದೇಶ ದಾಸರು ವರ್ಣನೆ ಮಾಡಿದ ಕೃತಿ ಯಲ್ಲಿ
ಅಬ್ದವು ವಿಶ್ವಾವಸು ಆಷಾಢದ| ಶುದ್ಧ ಷಷ್ಠಿ ಕುಜವಾರದಲ್ಲಿ|
ಸಿದ್ದಾಸನದಲ್ಲಿ ಕುಳಿತನು ಮುನಿವರ| ಶುದ್ಧ ಸಮಾಧಿಯ ನಿಕ್ಕುತಲಿ||
ಸಾಧನ ಬಹುವಿಧ ತೀರಿಸಿ ಮುನಿವರ| ಐದಿದ ಶ್ರೀಹರಿಯಾಲಯವ||
ಸಾಧು ಜನರನು ಪೊರಿಯಲು ಅಂಶದಿ| ಈ ಧರಿಯೊಳು ಚರಿಸುತಲಿರುವಾ||
ರಾಮ ರಾಮ ರಘೋತ್ತಮಾಂ ಪಾಹಿ||
🙏🙏🙏🙏
ಶ್ರೀ ಪ್ರಾಣೇಶದಾಸರಿಂದ ದಾನವಾಗಿಬ ತೆಗೆದು ಕೊಂಡ ಬಣವಿ ದೊಡ್ಡಿಯ ಜಾಗದಲ್ಲಿ ತಮ್ಮ ವೃಂದಾವನ ಪ್ರವೇಶ ನಂತರ ಅವರ  ಸ್ವಪ್ನದಲ್ಲಿ ಬಂದು  
ಅವರ ಬಣವಿ ದೊಡ್ಡಿಯಲ್ಲಿ ತುಲಸಿ ವೃಕ್ಷ ದ ರೂಪದಲ್ಲಿ ಬಂದು ಇದ್ದೀನಿ ಎಂದು ಹೇಳಿ ಅನುಗ್ರಹ ಮಾಡಿದ ಗುರುಗಳು.. 
ತದನಂತರ ಆ ಜಾಗದಲ್ಲಿ ವೃಂದಾವನ ನಿರ್ಮಾಣ ಮಾಡಲು ಹೇಳಿ ತಾವು ಅದರಲ್ಲಿ ಸನ್ನಿಹಿತರಾಗಿದ್ದಾರೆ.
ಹಾಗಾಗಿ ಇದು ಶ್ರೀ ವರದೇಂದ್ರ ಗುರುಗಳ ಸ್ವಪ್ನ ವೃಂದಾವನ.
ಕಸಬಾ ಲಿಂಗಸೂಗುರುನಲ್ಲಿದೆ ಈ ವೃಂದಾವನ.

ಚಿತ್ರ ದಲ್ಲಿ ಅವರ ಮೂಲ ಪಾದುಕೆಗಳು ಪುಣೆಯಿಂದ ಅವರೇ ಅಲ್ಲಿನ ಅರ್ಚಕರಿಗೆ ಹೇಳಿ ಲಿಂಗಸೂಗುರಿಗೆ ತರಿಸಿಕೊಂಡರು.
ಇಂತಹ ಗುರುಗಳ ಸ್ಮರಣೆ ಮಾಡಿದವನೇ ಧನ್ಯ.
ಶ್ರೀ ವರದೇಂದ್ರ ಗುರುಗಳ ಅಂತರ್ಯಾಮಿಯಾದ ಶ್ರೀ ಹರಿಗೆ ಈ ಲೇಖನ ಪುಷ್ಪ ಸಮರ್ಪಣೆ ಮಾಡುತ್ತಾ
🙏ಶ್ರೀ ಕೃಷ್ಣಾರ್ಪಣಮಸ್ತು🙏
ವರದೇಶ ವಿಠ್ಠಲನ ಸ್ಮರಿಸುತ ಲಿಂಗ ಸೂಗುರು| ಸುಕ್ಷೇತ್ರ ನಿವಾಸನಿಗೆ|
ಶ್ರೀ ವರದೇಂದ್ರ ಗೆ ನಮೋ ನಮೋ|
ಕೋವಿದ ವಂದ್ಯಗೆ ನಮೋ ನಮೋ|
🙏ಶ್ರೀ ವರದೇಂದ್ರಾಯ ನಮಃ🙏
*********

" ಶ್ರೀ ವರದೇಂದ್ರ - 1 "
" ದಿನಾಂಕ : 26.06.2020 ಶುಕ್ರವಾರ - ಆಷಾಢ ಶುದ್ಧ ಪಂಚಮೀ - ಶ್ರೀ ರುದ್ರದೇವರ ಅಂಶ ಸಂಭೂತರಾದ ಶ್ರೀ ವರದೇಂದ್ರ ತೀರ್ಥರ ಆರಾಧನಾ ಮಹೋತ್ಸವ - ಪೂನಾ ಮತ್ತು ಕಸಬಾ ಲಿಂಗಸೂಗೂರು "
ಶ್ರೀ ಪ್ರಾಣೇಶದಾಸರು....
ಪರ ಮತೋರಗ ವೀಪ ।
ಕರುಣಿ ವಿಗತ ಕೋಪ ।
ವರ ವೇದ ಸುಕಲಾಪ ।
ವರದೇಂದ್ರ ಭೂಪ ।।
ಶ್ರೀ ಗುರುಸಾರ್ವಭೌಮರ ಸದ್ವಂಶ ಸಂಜಾತರೂ; ಶ್ರೀಮದಾಚಾರ್ಯರ ವಿದ್ಯಾ ಸಿಂಹಾಸನಾಧೀಶ್ವರರೂ; ಸರ್ವ ಶಾಸ್ತ್ರ ಪಾರಂಗತರೂ; ಸಿದ್ಧಾಂತ ಸ್ಥಾಪಕರೂ; ಗೀರ್ವಾಣ ಭಾಷಾ ಕೋವಿದರೂ;ವ್ಯಾಸ - ದಾಸ ಸಾಹಿತ್ಯ ಪ್ರೋತ್ಸಾಹಕ - ಪೋಷಕರೂ ಆದವರು ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವರದೇಂದ್ರತೀರ್ಥ ಶ್ರೀಪಾದಂಗಳವರು.
" ಶ್ರೀ ಗುರುಗೋಪಾಲದಾಸರು ಕಂಡ ಶ್ರೀ ವರದೇಂದ್ರತೀರ್ಥರ ವೈಭವ "
ರಾಗ : ಕಾಂಬೋಧಿ ತಾಳ : ತ್ರಿವಿಡಿ
ವರದೇಂದ್ರ ಗುರು ನಿಮ್ಮ ಚರಿಯ ಗಣವೂ ।
ಧರೆಯೊಳಗೆ ಪರಿಪರ್ಯಾಶ್ಚರ್ಯಾಯಿತು ನೋಡೆ ।। ಪಲ್ಲವಿ ।।
ದಿನದಿನಕೆ ಅತಿಶಯ ವಿತರಣ ಗುಣಾಧಿಕವಾಗೆ ।
ಅನಿಮಿಷಾದ್ರಿ ಸವೆದು ಸರಿಯಲಾಗೀ ।
ದಿನಕರಗೆ ಮರೆಪೋಪದೆಂದು ಚಕ್ರವಾಕ ದ್ವಿಜ ।
ಘನ ಹರುಷದಲಿ ಕುಣಿ ಕಿಣಿದಾಡಿ ನಲಿದಾಡುವುದು ।। ಚರಣ ।।
ಹದಿನಾರು ಕಳೆಗಳಿಂದುಕ್ಕುವ ಉಡುರಾಜ ।
ಉಡಿಸಿ ಅಂಬರ ಮಧ್ಯದಲಿ ನಿಂತು ।
ಮುದನಿಧಿಯೆ ನಿಮ್ಮ ರೂಪವ ನೋಡಿ ಲಜ್ಜೆಯಲಿ ।
ಬುಧನ ಪ್ರಚಿಂತೆಯಲಿ ದಿನದಿನಕೆ ಅಣುವಾದ ।। ಚರಣ ।।
ತಾನೇ ಜಗಕ್ಯೆಲ್ಲವೊಬ್ಬನೆ ಗುರುವೆನಿಸಿದ । ಗೀ ।
ರ್ವಾಣರಾಚಾರ್ಯನಿರಲು ಯೀಗ ।
ಕ್ಷೋಣಿಯೋಳು ನಿಮ್ಮ ಗುರುತ್ವದ ಮಹಿಮೆಯ ಕಂಡು ।
ತಾ ನಿಲ್ಲದಲೆ ನಾಕವಾಸ ಮಾಡಿದ ಮುದದಿ ।। ಚರಣ ।।
ಕುಂಡಲೀಶನೆ ಸಕಲ ಭುವನದೊಳಗೆ ತಾನೆ ।
ಪಂಡಿತನೆಂದುವೊಪ್ಪಲು ಈಗ । ಭೂ ।
ಮಂಡಲದಲ್ಲಿ ನಿಮ್ಮ ಪ್ರವಚನಾದಿಗಳನ್ನು ।
ಕಂಡು ತಲೆವಾಗಿ ಕ್ಷೋಣಿಯವೊಳಕೆ ಸೇರಿದೆನೋ ।। ಚರಣ ।।
ಸುರರಾಜ ತ್ರಿಭುವನೈಶ್ವರ್ಯದಿಂದೊಪ್ಪುತಲಿ ।
ಧರೆಯೊಳು ನಿಮ್ಮ ಸಾಮ್ರಾಜ್ಯ ಕಂಡು ।
ಎರಡು ಕಂಗಳು ಸಾಲವೆಂದು ಹರುಷದಲಿ । ಸಾ ।
ವಿರ ನಯನ ಧರಿಸಿ ವೀಕ್ಷಿಸುತಿಹನು ಬೈರಗಾಗಿ ।। ಚರಣ ।।
ಆವ ಜನುಮದ ಸುಕೃತ ಫಲಿಸಿತೋ ಯೆನಗಿಂದು ।
ಅತಿ ಹಿರಿಯರುವೊಲಿದು ಕರುಣಿಸಿದರೋ ।
ಕೋವಿದಾಗ್ರಣಿ ಹರುಷದಿಂದ್ಯನ್ನ ನೋಡಲು ।
ಕೇವಲ ಧನ್ಯನಾದೆನು ಯಿವರ ಕರುಣದಲಿ ।। ಚರಣ ।।
ಗುರು ಕರುಣ ಬಲದಲ್ಲಿ ಅರಿಕರಿನಿಕರದೊಳಗೆ ।
ಹರಿಯಾಕ್ಷನೆನಿಸಿ ಧರೆಯಲಿ ಮ್ಯರೆಯುತ ।
ಮರುತ ಗುರುಗೋಪಾಲವಿಠ್ಠಲ ರಾಮವ್ಯಾಸರ ।
ಚರಣಾರ್ಚನೆಯ ಬಲದಿ ನಿರುತ ಸುಖದಲಿ ಮ್ಯರೆವ ।। ಚರಣ ।।
ವಿವರಣೆ :
ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಸತ್ಪರಂಪರೆಯಾದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧೀಶ್ವರರಾದ ಶ್ರೀ ರಾಘವೇಂದ್ರಸ್ವಾಮಿಗಳವರ ವೇದಾಂತ ದಿಗ್ವಿಜಯ ವಿದ್ಯಾ ಸಾಮ್ರಾಜ್ಯಾಧಿಪತಿಗಳಾದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವಾದೀಂದ್ರತೀರ್ಥರ ಕರ ಕಮಲ ಸಂಜಾತರಾದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವಸುಧೇಂದ್ರತೀರ್ಥರ ವರ ಪುತ್ರಕರಾದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವರದೇಂದ್ರತೀರ್ಥರ ಪ್ರೀತಿಯ ಶಿಷ್ಯರು ಶ್ರೀ ಗುರುಗೋಪಾಲದಾಸರು.
ಶ್ರೀ ವರದೇಂದ್ರತೀರ್ಥರ ಜಗದ್ಗುರುತ್ವ - ದಾನ ಶೌಂಡತ್ವ - ಪರಮತ ನಿರಾಕಣ ಪೂರ್ವಕ ದ್ವೈತ ಮತ ಸಂಸ್ಥಾಪಕತ್ವ - ಶಿಷ್ಯ ಪೋಷಕತ್ವ - ಶ್ರೀ ರಾಮ ವ್ಯಾಸ ಚರಣಾರ್ಚನೆಯ ವೈಭವಾದಿ ಗುಣಗಳನ್ನು ಪ್ರತ್ಯಕ್ಷವಾಗಿ ನೊಡಿ ಸಂತೋಷ ಸಂಭ್ರಮಗಳನ್ನು ಹೊಂದಿದ ಶ್ರೀ ಮಠದ ಶಿಷ್ಯರೂ ಆದ ಶ್ರೀ ಗುರುಗೋಪಾಲದಾಸರು ಅವರನ್ನು ಸಂದರ್ಶನ ಮಾಡಿದಾಗ ಅವರ ಮೈಮನಗಳು ಉಬ್ಬಿ ಮಾಡಿದ ಸ್ತೋತ್ರವಿದು.
ಶ್ರೀ ವರದೇಂದ್ರತೀರ್ಥರು ಸತ್ಪಾತ್ರರಲ್ಲಿ ಮಾಡಿದ ಸುವರ್ಣವೇ ಮೊದಲಾದ ದಾನಾದಿಗಳು ಎಷ್ಟು ಅಧಿಕವಾಯಿತೆಂದರೆ....
ಬಂಗಾರದ ಪರ್ವತವಾದ - ದೇವತಾ ವಿಹಾರ ಯೋಗ್ಯವಾದ ಮೇರು ಪರ್ವತವೂ ಅವರ ನಿರಂತರ ಸುವರ್ಣ ದಾನದಿಂದ ಕರಿಗಿ ಹೋಯಿತು.
ಹೀಗಾಗಿ ಮೇರುವಿನ ಸುತ್ತಲೂ ಇರುವ ಮಾನಸೋತ್ರರ ಪರ್ವತದ ಮೇಲೆ ರಥದಲ್ಲಿ ಕುಳಿತು ಸೂರ್ಯನು ಸಂಚರಿಸುತ್ತಿರುವಾಗ ಈ ವರೆಗೆ ಮೇರು ಪರ್ವತ ತನ್ನ ಔನ್ನತ್ಯವನ್ನು ಸೂರ್ಯನಿಗೆ ಮರೆಯಾಗಿ ಇನ್ನೊಂದು ಭಾಗದಲ್ಲಿ ಕತ್ತಲಾಗಿರುತ್ತಿತು,
ಈ ಹಗಲೂ ರಾತ್ರಿಗಳೆಂಬ ವ್ಯವಸ್ಥೆಯಿಂದಾಗ ಸೂರ್ಯನಲ್ಲಿ ಅತ್ಯಂತ ಮಿತ್ರತನ ಹೊಂದಿದ ಚಕ್ರವಾಕ ಪಕ್ಷಿಗೆ ರಾತ್ರಿ ಕಾಲದಲ್ಲಿ ಸೂರ್ಯನ ದರ್ಶನಾದಿಗಳಿಲ್ಲದೆ ದುಃಖವಾಗುತ್ತಿದ್ದುದು.
ಈಗ ಮೇರು ಕರಗಿ ಸರಿದಿದ್ದರಿಂದ ಸೂರ್ಯನಿಗೆ ಮರೆ ಮರೆಯಾಗಿ ನಿರಂತರ ಚಕ್ರವಾಕ ಪಕ್ಷಿಗೆ ಸೂರ್ಯ ದರ್ಶನ ಆಗುವಂತಾಗಿ ಅದು ವಿಶೇಷವಾಗಿ ಹರ್ಷದಿಂದ ಕುಣಿ ಕುಣಿದು ನಲಿದಾಡುವಂತಾಯಿತಂತೆ.
ಚಂದ್ರನು ತನ್ನ ಮಗನಾದ ಬುಧನ ಸೌಂದರ್ಯ ಶ್ರೀ ವರದೇಂದ್ರತೀರ್ಥರ ಸೌಂದರ್ಯಾದಿ ಗುಣಗಳ ಮುಂದೆ ನಿಸ್ತೇಜವಾದುದನ್ನು ಕಂಡು ತಾನು ಕ್ಷಯಿಸಲು ಪ್ರಾರಂಭಿಸಿದನಂತೆ.
ಶ್ರೀ ವರದೇಂದ್ರತೀರ್ಥರ ಜ್ಞಾನ ಮತ್ತು ಗುರುತ್ವವನ್ನು ಕಂಡು ತಾವು ತಲೆಬಾಗಿ ಶ್ರೀ ಬೃಹಸ್ಪತ್ಯಾಚಾರ್ಯರು ಸ್ವರ್ಗದಲ್ಲಿ ಮತ್ತು ಶ್ರೀ ಶೇಷದೇವರು ಪಾತಾಳದಲ್ಲಿ ವಾಸ ಮಾಡಿದಂತೆ.
ಶ್ರೀ ವರದೇಂದ್ರತೀರ್ಥರ ಐಶ್ವರ್ಯಾದಿಗಳನ್ನು ನೋಡಲೋಸುಗವೇ ಶ್ರೀ ಇಂದ್ರದೇವರು ಸಹಸ್ರಾಕ್ಷರಾದರಂತೆ.
ಶ್ರೀ ಹರಿ ವಾಯುಗಳ ಸಹಜ ದ್ವೇಷಿಗಳು ಶತ್ರುಗಳೆಂಬ ಆನೆಗಳಿಗೆ ಶ್ರೀ ವರದೇಂದ್ರತೀರ್ಥರು ಸಿಂಹಸದೃಶರು.
ಶ್ರೀ ಮೂಲರಾಮ ಶ್ರೀವ್ಯಾಸರ ಅರ್ಚನೆಯ ಬಲದಲ್ಲಿ ನಿರುತ ಸುಖದಲ್ಲಿ ಮ್ಯರೆವ ನಿಮ್ಮನು ಕಂಡು ಪರಿಪರ್ಯಾಶ್ಚರ್ಯಾಯಿತುಯೆಂದು ಉದ್ಗಾರ ತೆಗೆದಿದ್ದಾರೆ!!
***
" ಶ್ರೀ ವರದೇಂದ್ರ - 2 "
" ದಿನಾಂಕ : 26.06.2020 ಶುಕ್ರವಾರ - ಆಷಾಢ ಶುದ್ಧ ಪಂಚಮೀ - ಶ್ರೀ ರುದ್ರದೇವರ ಅಂಶ ಸಂಭೂತರಾದ ಶ್ರೀ ವರದೇಂದ್ರ ತೀರ್ಥರ ಆರಾಧನಾ ಮಹೋತ್ಸವ - ಪೂನಾ ಮತ್ತು ಕಸಬಾ ಲಿಂಗಸೂಗೂರು "
" ಶ್ರೀ ವರದೇಂದ್ರತೀರ್ಥರ ಸಂಕ್ಷಿಪ್ತ ಮಾಹಿತಿ "
ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಚಿನ್ನವಾಗಿ ನಡೆದು ಬಂದ ಸತ್ಪರಂಪರೆಯಾದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾಸಂಸ್ಥಾನಾಧೀಶ್ವರರಾದ ಶ್ರೀ ರಾಘವೇಂದ್ರಸ್ವಾಮಿಗಳವರ ಮಠದ ವೇದಾಂತ ವಿದ್ಯಾ ಸಾಮ್ರಾಜ್ಯಾಧೀಶ್ವರರೂ; ವೇದ - ವೇದಾಂತ - ಶ್ರುತಿ - ಸ್ಮೃತಿ - ಪುರಾಣ - ಇತಿಹಾಸ ಕೋವಿದರಾದ ಶ್ರೀ ವರದೇಂದ್ರತೀರ್ಥರ ಕಿರು ಪರಿಚಯದ ಪ್ರಯತ್ನ ಇಲ್ಲಿದೆ.
ಹೆಸರು : ವಿದ್ವಾನ್ ಶ್ರೀ ಬಲರಾಮಾಚಾರ್ಯರು
ತಂದೆ : ವಿದ್ವಾನ್ ಶ್ರೀ ವೇಣುಗೋಪಾಲಾಚಾರ್ಯರು
ವಿದ್ಯಾ ಗುರುಗಳು :
ವಿದ್ವಾನ್ ಶ್ರೀ ವೇಣುಗೋಪಾಲಾಚಾರ್ಯರು ಮತ್ತು ಶ್ರೀ ಶ್ರೀನಿವಾಸಾಚಾರ್ಯರು ( ಶ್ರೀ ವಾದೀಂದ್ರತೀರ್ಥರು )
ಗೋತ್ರ : ಗೌತಮ
ವಂಶ : ಷಾಷ್ಠಿಕ
ಇವರು ಶ್ರೀ ರಾಯರ ಪೂರ್ವಾಶ್ರಮ ಪುತ್ರರಾದ ಶ್ರೀ ಲಕ್ಷ್ಮೀನಾರಾಯಣಾಚಾರ್ಯರ ಮಕ್ಕಳಾದ ಶ್ರೀ ಪುರುಷೋತ್ತಮಾಚಾರ್ಯರಿಗೆ ಶ್ರೀ ಶ್ರೀನಿವಾಸಾಚಾರ್ಯರು ಮತ್ತು ಶ್ರೀ ವೇಣುಗೋಪಾಲಾಚಾರ್ಯ ಪುತ್ರರು. 
ಶ್ರೀ ಶ್ರೀನಿವಾಸಾಚಾರ್ಯರೇ ಶ್ರೀ ವಾದೀಂದ್ರತೀರ್ಥರು. 
ಶ್ರೀ ವೇಣುಗೋಪಾಲಾಚಾರ್ಯರಿಗೆ ಶ್ರೀ ಪುರುಷೋತ್ತಮಾಚಾರ್ಯರು, ಶ್ರೀ ಬಲರಾಮಾಚಾರ್ಯರು ( ಶ್ರೀ ಜಗನ್ನಾಥದಾಸರ ವಿದ್ಯಾ ಗುರುಗಳು ) ಮತ್ತು ಶ್ರೀ ಲಕ್ಷ್ಮೀನಾರಾಯಣಾಚಾರ್ಯರು. 
ಇವರುಗಳೂ ಶ್ರೀ ರಾಯರ ಮರಿ ಮಕ್ಕಳು.
ಶ್ರೀ ಪುರುಷೋತ್ತಮಾಚಾರ್ಯರು ( ಶ್ರೀ ವಸುಧೇಂದ್ರತೀರ್ಥರು )
ಶ್ರೀ ಬಲರಾಮಾಚಾರ್ಯರು ( ಶ್ರೀ ವರದೇಂದ್ರತೀರ್ಥರು )
ಶ್ರೀ ಲಕ್ಷ್ಮೀನಾರಾಯಣಾಚಾರ್ಯರು ( ಶ್ರೀ ಭುವನೇಂದ್ರತೀರ್ಥರು )
ಅಂಶ : ಶ್ರೀ ರುದ್ರದೇವರು
ಶ್ರೀ ಸುಂದರವಿಠಲರು...
ನಿಜ ಗುರುಗಳೇವೆ ಋಜುಪುಂಗವರಾಗಿ ।
ಅಜನ ಪಟ್ಟಕೆ ಸಾರುವ ಆ ಕಲ್ಪದಲಿ ।
ಭಜನೆಯಗೈದು ಪಂಕಜನಾಭನ ಪಾದ ।
ಭುಜಗೇಶ ಅಜನಯ್ಯಗೆ ತಲ್ಪನಾಗ್ವಿ ।।
ಆವೇಶ : ಶ್ರೀ ಚತುರ್ಮುಖ ಬ್ರಹ್ಮದೇವರು
ಶ್ರೀ ಅಹ್ಲಾದಾಂಶ ಗುರುಜಗನ್ನಾಥದಾಸರು...
ಧಾತಾಂಶರಿಂದಲಿ ತಾನುದ್ಭವಿಸೀ 
ಸದ್ಗುರುವರನೆನಿಸೀ ।
ಧೂತ ಪಾಪಾತ್ಮಕನು 
ತಾನಾಗೀ ಶ್ರೀ ಹರಿಗೆ ಬೇಕಾಗೀ ।
ಪ್ರೀತ ಗುರುಜಗನ್ನಾಥವಿಠಲನತೀ ।
ಪ್ರೀತಿಲಿ ಭಜಿಸುತ ದೂತರ ಪೊರೆವಾ ।।
ಶ್ರೀ ವರದೇಂದ್ರವಿಠಲರು....
ಧಾತಾಂಶದಿಂದಲಿ ಭೂತಳದಲ್ಲಿ 
ಜನಿಸಿದೆ ಮುದದಲ್ಲಿ ।
ಪ್ರೀತರಾಗುತಲೆ ಬಂದಿಹರಿಲ್ಲಿ 
ಆದ ಕಾರಣದಲ್ಲಿ ।
ಭೂತವೇತಾಳದ ಭೀತಿಗಳಲ್ಲಿ 
ಪೋಪವು ಜವದಲ್ಲಿ ।।
ವಾತ ವಿನುತ 
ವರದೇಂದ್ರವಿಠಲನ ।
ದೂತ ನೆನಿಸುತಿಹ 
ಭೂತಳೇ೦ದ್ರ ಸುತ ।।
ಆಶ್ರಮ ಗುರುಗಳು : ಶ್ರೀ ವಸುಧೇಂದ್ರತೀರ್ಥರು
ಆಶ್ರಮ ನಾಮ : ಶ್ರೀ ವರದೇಂದ್ರತೀರ್ಥರು
ಕಾಲ : ಕ್ರಿ ಶ 1761 - 1785 
ರಾಗ : ಭೈರವಿ ತಾಳ : ಆದಿ
ಪರಮ ಸಂಭ್ರಮದಿ 
ರಾಜಿಸುವ ನೋಳ್ಪರಿಗೆ ।। ಪಲ್ಲವಿ ।।
ಸುರರಾಜನಂತೆ ಭೂಸುರಗಣ ಮಧ್ಯದಲ್ಲಿ ।
ಮೆರೆವ ದುರ್ವಿಷಯಕೆ ಪಾವಕಾ ।
ನಿರುತ ಸದ್ಧರ್ಮ ಶಿಕ್ಷಿಸುವಲ್ಲಿ । ವರ ದಂಡ ।
ಧರನಂತೆ ಇರುವ ದಿಗ್ವಿಜಿಯಿಸುವ ।। ಚರಣ ।।
ಜ್ಞಾನಾದಿ ಗುಣ ರತ್ನಾಕರನೆನಿಸಿ ಕುಮತ ।
ಪಾನೀಯಧರಗಳಿಗೆ ಪವಮಾನನೆನಿಪ ।
ದೀನ ಜನರಿಗೆ ಧನಪ ವೈರಾಗ್ಯ ತಪದಲಿ ।
ಕೃಶಾನುಕೇತನ ತೆರದಲೊಪ್ಪುವ ಜಸ್ರ ।। ಚರಣ ।।
ಸೂರಿಕುಲವರಿಯ ವಸುಧೇಂದ್ರರಾಯ । ಕರಸ ।
ರೋರಹದಿ ಜನಿಸಿ ಪರಮೋತ್ಸಹದಲಿ ।
ಶ್ರೀ ರಾಮ ವ್ಯಾಸ ಜಗನ್ನಾಥವಿಠಲನ । ಚರ ।
ಣಾರವಿಂದರ್ಚನೆಯ ಪಡೆದು ಸಂತೋಷಿಸುವ ।। ಚರಣ ।।
ವಿದ್ಯಾ ಶಿಷ್ಯರು :
ಶ್ರೀ ಶ್ರೀನಿವಾಸಾಚಾರ್ಯರು ( ಶ್ರೀ ಜಗನ್ನಾಥದಾಸರು ), ಶ್ರೀ ಭುವನೇಂದ್ರತೀರ್ಥರು
ಆಶ್ರಮ ಶಿಷ್ಯರು : ಶ್ರೀ ಭುವನೇಂದ್ರತೀರ್ಥರು
ಶ್ರೀ ಜಗನ್ನಾಥದಾಸರು...
ಭುವನೇಂದ್ರ ಮುನಿಪ ಎನ್ನ ।
ಅವಗುಣಗಳೆಣಿಸದಲೆ 
ಅನುದಿನದಿ ಪಾಲಿಪುದು ।। ಪಲ್ಲವಿ ।।
... ವರದೇಂದ್ರ ಯತಿವರ್ಯ ಕರಕಮಲ ಸಂಜಾತ ।
ನಿರುಪಮ ಜಗನ್ನಾಥವಿಠಲ ದೂತ ।
ನೆರೆನೆಂಬಿದೆನೋ ನಿನ್ನ - ಪರಿಪಾಲಿಸು ಎನ್ನ ।
ಮರೆಯಲಾಗದು ಜಿತಸ್ಮರ ಭೂವರಪ್ರವರ ।।
***
" ಶ್ರೀ ವರದೇಂದ್ರ  - 3 "
ಅಂಕಿತ : ಶ್ರೀ ಹರಿ ಪ್ರಸಾದಾಂಕಿತ " ವರದೇಂದ್ರಯತಿ "
ಶಿಷ್ಯರು : 
ಶ್ರೀ ಪ್ರಾಣೇಶದಾಸರು ಮತ್ತು ಅವರ ಶಿಷ್ಯ ಪ್ರಶಿಷ್ಯರು
ಸಮಕಾಲೀನ ಹರಿದಾಸರು :
ಶ್ರೀ ಗುರುಗೋಪಾಲದಾಸರು - ಶ್ರೀ ವರದ ಗೋಪಾಲದಾಸರು - ಶ್ರೀ ತಂದೆ ಗೋಪಾಲದಾಸರು ಮತ್ತು ಅವರ ಶಿಷ್ಯ ಪ್ರಶಿಷ್ಯರು.
" ಭಕ್ತಜನ ಮಂದಾರ "
ಶ್ರೀ ವರದೇಂದ್ರತೀರ್ಥರು ಮಹಾ ಮಹಿಮರೂ; ವಿದ್ಯೆಗೆ ಮಾತೃ ಸ್ಥಾನವೆಂದು ಪ್ರಖ್ಯಾತವೂ - ಸಂಪದ್ಭರಿತವೂ ಆದ ಪೂನಾ ಪಟ್ಟಣದಲ್ಲಿ ಖ್ಯಾತ ಪಂಡಿತರೂ - ರಾಜಕೀಯ ನ್ಯಾಯಾಧೀಶರೂ - ಶ್ರೇಷ್ಠ ವಾದ ಕುಶಲರೂ ಆದ ಶ್ರೀ ರಾಮಶಾಸ್ತ್ರಿ ಪ್ರಭುಣೆಯವರನ್ನು 9 ದಿನಗಳ ಕಾಲ ಅವರೊಡನೆ ವಾದ ಮಾಡಿ ಪರಾಜಯಗೊಳಿಸಿ; ದ್ವೈತ ವಿಜಯ ದುಂದುಭಿಯನ್ನು ಮೊಳಗಿಸಿ; ಪಣಬಂಧದಂತೆ ಶ್ರೀ ರಾಮಶಾಸ್ತ್ರಿಗಳ ಮನೆಯನ್ನು ಪೇಶ್ವೆ ರಾಜರ ರಾಜಗುರುತ್ವವನ್ನೂ; ಗ್ರಾಮ ಭೂಮಿಗಳನ್ನು ಪಡೆದು ಅಖಂಡ ಕೀರ್ತಿಗೆ ಪಾತ್ರರಾಗಿ ಪೂನಾ ಪಟ್ಟಣದ ಬೃಂದಾವನದಲ್ಲಿ ವಿರಾಜಮಾನರಾಗಿ ಸಜ್ಜನ ಭಕ್ತರನ್ನು ಕಲ್ಪವೃಕ್ಷ ಕಾಮಧೇನುವಿನಂತೆ ರಕ್ಷಿಸುತ್ತಿರುವರು.
" ಶ್ರೀ ಭೂತರಾಜರ ಅಂಶ ಸಂಭೂತರೂ - ಶ್ರೀ ರಾಯರ ಮತ್ತು ಶ್ರೀ ವರದೇಂದ್ರ ತೀರ್ಥರ ಅಂತರಂಗ ಭಕ್ತರೂ - ಶ್ರೀ ರಾಯರ ಮಠದ ಶಿಷ್ಯರೂ ಆದ ಶ್ರೀ ವರದ ಗೋಪಾಲವಿಠಲ ಕೃತ ಶ್ರೀ  ವರದೇಂದ್ರತೀರ್ಥ ಸ್ತೋತ್ರ "
ರಾಗ : ಸೌರಾಷ್ಟ್ರ ತಾಳ : ಆದಿ
ಚಿತ್ರವಾಗಿದೆ ನೋಡು ನಮಗೆ ।
ಸತ್ಯ ಗುಣಸಾಂದ್ರ ವರದೇಂದ್ರ ।
ಯತಿಗಳ ಮಹಿಮೆ ।। ಪಲ್ಲವಿ ।।
ವಿದ್ವದ್ವಿಶೇಷಕ್ಕೆ ಶೇಷ 
ತಲೆದೂಗಿದನು ।
ಸದ್ವ್ರಯದ ದಾನಕೆ 
ಕರ್ಣನ ಮೀರಿದಾ ।
ಬುದ್ಧಿಯಲಿ ಧೀಕ್ಷಣ 
ಮನ್ನಿಸಿದಾ ಸದಾಚಾರ ।
ಪದ್ಧತಿಯ ನೋಡಿ ಬ್ರಹ್ಮನು 
ಸಮ್ಮತಿಸಿದ ಬಲು ।। ಚರಣ ।।
ಸರ್ವಜ್ಞತಾ ಗುಣಕೆ ಶರ್ವ 
ಬಲು ಶ್ಲಾಘಿಸಿದ ।
ಊರ್ವಿ ಪೊಗಳಿದಳಿವರ
ಕ್ಷಮೆ ಧರ್ಮಕೇ ।
ಸರ್ವದಾ ಧೈರ್ಯ 
ಗಾಂಭೀರ್ಯಕೆ ಮಹಾ । ಹಿಮ ।
ಪರ್ವತಾಭ್ಧಿಗಳು ಸೈ 
ಸೈಯೆಂದವರಿಕೊ ।। ಚರಣ ।।
ವರದ ಗೋಪಾಲವಿಠಲನ 
ವಲಿಮಿಂದ । ಶ್ರೀ ।
ವರದೇಂದ್ರ ಯತಿ 
ವರಪ್ರದ ಮಹಿಮೆಗೆ ।
ಸುರಧೇನು ಕಲ್ಪತರು 
ವರ ಚಿಂತಾರತುನಗಳು ।
ಸ್ವರ್ಗ ಲೋಕದಲ್ಲಿ 
ಬೆರಗಾದವಿದಕೊ ।। ಚರಣ ।।
***
" ಶ್ರೀ ವರದೇಂದ್ರ  - 4 "
" ಶ್ರೀವರದೇಂದ್ರತೀರ್ಥರು ಶ್ರೀ ಧೀರೇಂದ್ರತೀರ್ಥರಲ್ಲಿ ತೋರಿದ ಮಾತೃವಾತ್ಸಲ್ಯ "
ಶ್ರೀ ವರದೇಂದ್ರತೀರ್ಥರಿಗೆ ಶ್ರೀ ಧೀರೇಂದ್ರತೀರ್ಥರ ಮೇಲೆ ಪ್ರೀತಿ - ಅಂತಃಕರಣ ಮತ್ತು ಮಾತೃವಾತ್ಸಲ್ಯವಿತ್ತು. ಕಾರಣ ಶ್ರೀ ಧೀರೇಂದ್ರತೀರ್ಥರು ಶ್ರೀ ರಾಯರ ಮರಿಮೊಮ್ಮಗ - ಶ್ರೀ ವಾದೀಂದ್ರತೀರ್ಥರ ಪೂರ್ವಾಶ್ರಮ ಪುತ್ರರೂ - ಶ್ರೀ ವರದೇಂದ್ರತೀರ್ಥರ ಪೂರ್ವಾಶ್ರಮ ತಮ್ಮಂದಿರು ( ದೊಡ್ಡಪ್ಪನ ಮಕ್ಕಳು ) ಹಾಗೂ ಉದ್ಧಾಮ ಪಂಡಿತರು.
ವಿದ್ಯಾ ಪಕ್ಷಪಾತಿಗಳಾದ ಶ್ರೀ ವರದೇಂದ್ರತೀರ್ಥರು " ತಾಯಿ ಹೇಗೆ ತನ್ನ ಮಗುವನ್ನು ವಾತ್ಸಲ್ಯದಿಂದ ಕಾಣುತ್ತಾಳೋ ಹಾಗೆಯೇ ಶ್ರೀ ಧೀರೇಂದ್ರತೀರ್ಥರಲ್ಲಿ ಅಂತಃಕರಣದ ವಾತ್ಸಲ್ಯ " ತೋರುತ್ತಿದ್ದರು.
" ಶ್ರೀ ಭೂತರಾಜರ ಅಂಶ ಸಂಭೂತರೂ - ಶ್ರೀ ರಾಯರ ಮತ್ತು ಶ್ರೀ ವರದೇಂದ್ರ ತೀರ್ಥರ ಅಂತರಂಗ ಭಕ್ತರೂ - ಶ್ರೀ ರಾಯರ ಮಠದ ಶಿಷ್ಯರೂ ಆದ ಶ್ರೀ ವರದ ಗೋಪಾಲವಿಠಲ ಕೃತ ಶ್ರೀ ಮೂಲರಾಮ ಸ್ತೋತ್ರ "
ಪ್ರಸಂಗ : 
ಶ್ರೀ ವರದೇಂದ್ರತೀರ್ಥರಿಂದ ಶ್ರೀ ಚತುರ್ಮುಖ ಬ್ರಹ್ಮದೇವರ ಕರಾರ್ಚಿತ ಮೂಲರಾಮ ದೇವರ ಪೂಜಾ ಸಂದರ್ಭ 
ರಾಗ : ಯದುಕುಲಕಾಂಬೋಧಿ    ತಾಳ : ಏಕ
ಎದ್ದು ನಿಂತ ಬಗೆಯೇನೊ 
ಮೂಲರಾಮ ಪೇಳು ।
ಬುಧ ವರದೇಂದ್ರ ಯತಿ 
ಮನ ಕುಮುದ ಸೋಮ ।। ಪಲ್ಲವಿ ।।
ಸೀತೆಯನ್ನು ನೆನಿಸಿ ಶೀಘ್ರದಿ ತಾಹೆನೆಂದೆದ್ದೆಯೊ ।
ಪಾಥೋದಿಪಥ ಕೊಡದ ಕಾತುರದಲಿಂದೆದ್ದೆಯೊ ।
ಯಾತುಧಾನರ ಬಾಲವ ಘಾತಿಸುವೆನೆಂದೆದ್ದೆಯೊ ।। 
ಶೀತಾಂಶು ವದನ ಶುಭ ರದನ ತಿಳಿಸು ।
ಪ್ರೀತಿಯಲಿ ವರದೇಂದ್ರ ಯತಿ ಮನೋಧಾಮ ।। ಚರಣ ।।
ಭಕುತರಿಗೆ ಭಯ ಬಾರಗೊಡನೆಂದು ನಿಂತೆಯೊ ।
ಭಕುತಿಯಲಿ ಭಜಕರಿಗೆ ಧೇನಿಸಲು ನಿಂತೆಯೊ ।
ಸಕಲೇಷ್ಟಪ್ರದ ಮಹಾ ಪ್ರಭುಯೆಂದು ನಿಂತೆಯೊ ।।
ಮುಕುತೇಶ ಮೂಲರಘುರಾಮ ಯತಿಯು ।
ಭಕುತಿಯಲಿ ಭಜಿಸೆ ನಿಂತೆಯೊ ಪೂರ್ಣಕಾಮ ।। ಚರಣ ।।
ಶರಚಾಪ ಧರಿಸಿ ದಶಶಿರನ ತರಿಯಲಿ ನಿಂತೆಯೊ ।
ಪರಿಪರಿಯಲಿ ಭಕುತರನ ಪಾಲಿಸಲಿ ನಿಂತೆಯೊ ।
ಶರಣ ಜನರುಗಳು ಕರೆದರೆಂದೆನುತ ನಿಂತೆಯೊ ।।
ವರದ ಗೋಪಾಲವಿಠಲಾ ವರದೇಂದ್ರ ।
ವರದರೀ ಪ್ರಾಕೃತ ಭಯ ಪರಿಹರಿಪ ।। ಚರಣ ।।
***
" ಶ್ರೀ ವರದೇಂದ್ರ - 5 "
" ಹರಿದಾಸ ಸಾಹಿತ್ಯಕ್ಕೆ ಶ್ರೀ ವರದೇಂದ್ರತೀರ್ಥರ ಕೊಡುಗೆ "
ಶ್ರೀ ವರದೇಂದ್ರತೀರ್ಥರ ಮತ್ತು ಶ್ರೀ ಜಗನ್ನಾಥದಾಸರ ಗುರುಶಿಷ್ಯರ ಬಾಂಧವ್ಯ ಅತಿ ಮಧುರವಾಗಿತ್ತು. 
ಒಮ್ಮೆ ಶ್ರೀ ಜಗನ್ನಾಥದಾಸರು ಸಚ್ಚಾಸ್ತ್ರ ಕೋವಿದರಾದರೂ; ತಮ್ಮಂಥಾ ವಿದ್ಮಣ್ಮಣಿಗಳಿಗೆ ವಿದ್ಯಾ ಗುರುಗಳಾಗಿದ್ದ ಶ್ರೀ ವರದೇಂದ್ರತೀರ್ಥರಲ್ಲಿಗೆ ಬಂದು ಸಾಷ್ಟಾಂಗವೆರಾಗಿ ಕೈ ಜೋಡಿಸಿ ನಿಂತು....
ಸ್ವಾಮೀ !  
ಗೀರ್ವಾಣಾಭಾಷಾ ಕೋವಿದ ಚಕೋರಚಂದ್ರಮರೇ, ತಾವು ಪಾಮರರಾದ ನಮ್ಮಂಥವರ ಉದ್ಧಾರಾರ್ಥವಾಗಿ " ತಂತ್ರಸಾರ " ವನ್ನು ಕನ್ನಡದಲ್ಲಿ ರಚಿಸಿ ಅನುಗ್ರಹಿಸಬೇಕೆಂದು ಸವಿನಯವಾಗಿ ಪ್ರಾರ್ಥಿಸಿಕೊಂಡರು.
ಆಗ ಗುರುಗಳು ಸಂತೋಷ ಪಟ್ಟು...
ದಾಸಾ ! 
ನೀನು ಕನ್ನಡದಲ್ಲಿ ಕೃತಿಗಳನ್ನು ರಚಿಸುವಲ್ಲಿ ನಮಗೆ ಸಂತೋಷವಾಗಿರುವಲ್ಲಿ ನಿನಗೆ ಸಂಶಯವೇ? 
ನಿನ್ನ ಕೃತಿಗಳು ನಮಗೆ ಪ್ರಿಯವಾದುವುಗಳೇ. 
ನಾವೂ ಕನ್ನಡವನ್ನು ಪ್ರೀತಿಸುತ್ತೇವೆ. 
ಶ್ರೀ ಹರಿಯ ಪ್ರೀತ್ಯರ್ಥವಾಗಿಯೂ - ನಿನ್ನ ಅಭಿಲಾಷೆಯನ್ನು ಪೂರೈಸಲಿಕ್ಕಾಗಿಯೂ ನಾವು " ತಂತ್ರಸಾರ " ವನ್ನು ಕನ್ನಡದಲ್ಲಿ ರಚಿಸುತ್ತೇವೆಂದು ಹೇಳಿ...
ತಂತ್ರಸಾರ ಸಂಗ್ರಹ ( ಕನ್ನಡ ) - ( ಓಂಕಾರ - ಮಾತ್ರ ವರ್ಣಗಳ ಉತ್ಪತ್ತಿ ) ಸೃಷ್ಠಿ ಪ್ರಕರಣ - " ವರದೇಂದ್ರಯತಿ " ಎಂಬ ಹರಿಪ್ರಸಾದಂಕಿತದಲ್ಲಿ ಕೃತಿಗಳನ್ನು ರಚಿಸಿದ್ದಾರೆ.
ಪಾಹಿ ಪಂಕೇರುಹೇಕ್ಷಣಾ ಸರ್ವಕಾಮದಾ ।
ಪಾಹಿ ಪದ್ಮಾಲಯ ನಿಕೇತನ ಸದಾ ।। ಪಲ್ಲವಿ ।।
.... ವರದೇಂದ್ರಯತಿ ರಚಿತ ತಂತ್ರಸಾರವನು ।
ಬರದೋದಿ ಕೇಳಿ ಮೋದಿಪ ಸುಜನರ ।
ವರ ಮೂಲರಾಮ ವೇದವ್ಯಾಸರಿಹಪರದಿ ।
ಕರುಣಿಪರು ಬೇಡಿದಿಷ್ಟಾರ್ಥಗಳನು ।।
ಮಂಗಳ ರಮಾಪತಿಗೆ ಮಂಗಳ ದೃಹಿಣಪಿತಗೆ ।
ಮಂಗಳ ದಶಪ್ರಮತಿ ಮುನಿ ಮಾನ್ಯಗೆ ।
ಮಂಗಳ ಶಿವೇಂದ್ರಾದಿ ಸುರನಿಕರ ಪೂಜ್ಯಗೆ ।
ಮಂಗಳ ಜಗದ್ವಿಲಕ್ಷಣ ಮೂರ್ತಿಗೆ ।।
ಇಪ್ಪತ್ತರೊಂಭತ್ತು ಪದಗಳೆಂಬತಿ ವಿಮಲ ।
ಪುಷ್ಪ ಮಾಲಿಕೆ ಮೂಲರಾಮನಡಿಗೆ ।
ಅರ್ಪಿಸಿದೆ ವೀಸುಮನ ನಾಮವನುದಿನದಲ್ಲಿ ।
ಒಪ್ಪದಿಹ್ಯದೇ ಬುಧರ ಮಸ್ತಕದಲಿ ।।
ಎಂದು ಪದ ರಚನೆ ಮಾಡಿದರು. ಈ ಪದ್ಯವನ್ನು ಓದಿದರೆ ಶ್ರೀ ಗುರುಗಳು ಎಷ್ಟು ದಾಕ್ಷಿಣ್ಯಶೀಲರೂ; ನಿಗರ್ವಿಗಳೂ; ಕರುಣಾಳುಗಳೂ ಎಂಬುದು ಗೊತ್ತಾಗುತ್ತದೆ.
ಶ್ರೀ ವರದೇಂದ್ರತೀರ್ಥರ ನೈಜ ಸ್ವಭಾವವನ್ನು ಅರಿಯುವಲ್ಲಿ ಸಹಕಾರಿಯಾದ ಈ ಕೃತಿಯು ಸಿಕ್ಕಿರುವುದುದೇ ನಮ್ಮ ಭಾಗ್ಯ!!
" ಗ್ರಂಥಗಳು "
ದೇವಾಪೂಜಾ ಪೂಜಾ ಪದ್ಧತಿ ಮತ್ತು ತಂತ್ರಸಾರೋಕ್ತ ಸೃಷ್ಟಿ ಪ್ರಕರಣ ಕನ್ನಡ ಕೃತಿ
" 18ನೇ ಕಕ್ಷಾಪನ್ನರಾದ ಶ್ರೀ ಪರಾವಹನೆಂಬ ಮರುತ್ತಿನಂಶ ಸಂಭೂತರಾದ ಶ್ರೀ ಪ್ರಾಣೇಶದಾಸರ ವದನಾರವಿಂದದಲ್ಲಿ ಹೊರಹೊಮ್ಮಿದ ಶ್ರೀ ರುದ್ರದೇವರ ಅಂಶ ಸಂಭೂತರಾದ ಶ್ರೀ ವರದೇಂದ್ರ ತೀರ್ಥ ಸ್ತುತಿ "
ರಾಗ : ಆನಂದಭೈರವಿ  ತಾಳ : ರೂಪಕ 
ಹಿಂದಿನ ಸುಕರ್ಮವೇಸು ।
ಬಂದೊದಗಿದವೊ । ವರ ।
ದೇಂದ್ರರಾಯ ಬಂದ ನಮ್ಮ ।
ಮಂದಿರಕಿಂದು ।। ಪಲ್ಲವಿ ।।
ಮುತ್ತಿನ ಅಂದಣದೊಳು ।
ಸತ್ತಿಗಿ ನೆರಳಲಿ । ಪ್ರ ।
ಶಸ್ತವಾಗಿ ವೇದಶಾಸ್ತ್ರ ।
ವೊತ್ತಿವೊಂದುವ ।।
ಉತ್ತಮ ಬುಧರ ಕೂಡ । 
ಭೃತ್ಯರ ಸಂಗಡ ಬಹು ।
ಹತ್ತೆಂಟು ಬಿರುದಾವಳಿ -
ಯುಕ್ತ ಬಂದರು ।। ಚರಣ ।।
ತಂಡತಂಡಕ್ಕೆ ಜನರು ।
ಹಿಂಡುಗೂಡಿ ಫಲಗಳ ।
ಕೊಂಡು ಬಂದು ಮಾಡುವರು ।
ದಂಡ ಪ್ರಣಾಮ ।।
ಪಂಡಿತಾಗ್ರಗಣ್ಯರು । ಭೂ ।
ಮಂಡಲದೊಳಾಗ ಶ್ರೀಯಾ ।
ಖಂಡಲನಂತೆ ತೋರ್ವ । ಕ ।
ಮಂಡಲಧರ ।। ಚರಣ ।।
ಶ್ರೀಕರ ಪ್ರಾಣೇಶವಿಠಲ-
ನೇಕಾಂತದಿ ಬಲಿಸುವಲ್ಲಿ ।
ಈ ಕುಂಭಿಣಿಯೊಳಗೀತ -
ಗೆ ಕಾಣೆನೀಡ ।।
ನೀ ಕಾಯಬೇಕೆಂದವರ ।
ಶೋಕವ ಪರಿಹರಿಸಿ ।
ಜೋಕೆ ಮಾಡುವ ನಿತ್ಯ । ದೇ ।
ಶಿಕ ಕುಲಪತಿ ।। ಚರಣ ।।
***
" ಶ್ರೀ ವರದೇಂದ್ರ - 6 "
" ಪರವಾದಿ ದಿಗ್ವಿಜಯ ಮತ್ತು ಬೃಂದಾವನ ಪ್ರವೇಶ "
ಶ್ರೀ ವರದೇಂದ್ರತೀರ್ಥರು ಸಂಚಾರತ್ವೇನ ಪೂನಾಕ್ಕೆ ದಿಗ್ವಿಜಯ ಮಾಡಿಸಿದರು. 
ಪೇಶ್ವೇಯವರ ಕಾಲದಿಂದಲೂ ವಿದ್ವಜ್ಜನಗಳಿಂದ ತುಂಬಿದ ಪಟ್ಟಣ ಪೂನಾ. 
ಅಲ್ಲಿ ಶ್ರೀ ರಾಮಶಾಸ್ತ್ರಿಗಳೆಂಬ ಉದ್ಧಾಮ ಪಂಡಿತರು. 
ಶ್ರೀ ವರದೇಂದ್ರತೀರ್ಥರಲ್ಲಿ ವಾದ ಮಾಡಿ ಶ್ರೀಗಳವರ ವಾದವನ್ನು ಒಪ್ಪಿಕೊಂಡು ವಾದ ನಿಯಮದ ಪ್ರಕಾರ ತಮ್ಮ ಮನೆಯನ್ನು ಶ್ರೀ ವರದೇಂದ್ರತೀರ್ಥರಿಗೆ ದಾನವಾಗಿ ಕೊಟ್ಟುಬಿಟ್ಟರು
ಶ್ರೀ ವರದೇಂದ್ರತೀರ್ಥರು ಆ ಮನೆಯನ್ನು ಮಠವನ್ನಾಗಿ ಪರಿವರ್ತಿಸಿ ಅಲ್ಲೇ ವಾಸ ಮಾಡತೊಡಗಿದರು. 
ಆ ಮಠದಲ್ಲಿಯೇ ಶ್ರೀ ವರದೇಂದ್ರತೀರ್ಥರ ಮೂಲ ಬೃಂದಾವನ ವಿರಾಜಮಾನವಾಗಿದೆ!!
ರಾಗ : ಸುರಟ ತಾಳ : ಅಟ್ಟ
ಪಾಲಿಸೋ ಪಾಲಿಸೋ । ಕರು ।
ಣಾಲಯ ವರದೇಂದ್ರ ಮುನಿ 
ಸುಖಸಾ೦ದ್ರ ।। ಪಲ್ಲವಿ ।।
ಪುಣ್ಯ ಮಂದಿರ ವಾಸ ।
ಸನ್ನುತ ಜನಪಾಲ ।
ಬನ್ನ ಪಡಿಸದಲೆ ।
ಯನ್ನನುದ್ಧರಿಸೋ ।। ಚರಣ ।।
ದೀನ ಸುರದ್ರುಮ ।
ಹೀನ ಪಂಕಜ ಸೋಮ ।
ಮಾನಿ ಸುಜ್ಞಾನಿ ।
ನಿನ್ನೇನು ಬಣ್ಣಿಪೆನೋ ।। ಚರಣ ।।
ತ್ರುಟಿ ಮಾತ್ರ ಬಿಡದಲೇ ।
ಘಟನೆಯ ಮಾಡಿಸೋ ।
ಸಟೆಯಲ್ಲ । ಪ್ರಾಣೇಶ ।
ವಿಠಲನ ಸ್ಮರಣೆ ।। ಚರಣ ।।
ವಾದೇ ವಿಜಯಶೀಲಾಯ 
ವರದಾಯ ವರಾರ್ಥಿನಾಮ್ ।
ವದಾನ್ಯ ಜನ ಸಿಂಹಾಯ 
ವರದೆಂದ್ರಾಯ ತೇ ನಮಃ ।।
ಆಚಾರ್ಯ ನಾಗರಾಜು ಹಾವೇರಿ....
ವ್ಯೋಮಕೇಶನೇ ಧರೆಗಿಳಿದು ।
ಕಾಮಿತಗಳ ಕೊಡುತಿಪ್ಪ 
ವರದೇಂದ್ರ ರೂಪದಲಿ ।। ಪಲ್ಲವಿ ।।
ಗುರು ವಸುಧೇಂದ್ರರ 
ಕರ ಸಂಜಾತ ನೆನಿಸಿ ।
ಗುರು ಭುವನೇಂದ್ರ ಪಿತ 
ವರದೇಂದ್ರರಾಯ ।। ಚರಣ ।।
ಜಗನ್ನಾಥದಾಸರಿಗೆ 
ವಿದ್ಯಾದಾತನಾಗಿ ।
ಜಗನ್ನಾಥ ಮೂಲರಾಮನರ್ಚಕ 
ವರದೇಂದ್ರ ರಾಯ ।। ಚರಣ ।।
ಹರಿದಾಸ ಪ್ರಾಣೇಶರಾಯ
ಗುರುಜಗನ್ನಾಥ ಶಿಷ್ಯ ಪ್ರಶಿಷ್ಯರನ್ನು ।
ಹರಿ ವೆಂಕಟನಾಥನ ಕರುಣದಿ ಸಲುಹಿ
ಪೋಷಿಸಿದ ದಾಸ ಸಾಹಿತ್ಯವನು 
ಬೆಳೆಸಿದ ಮಹರಾಯ ।। ಚರಣ ।।
by ಆಚಾರ್ಯ ನಾಗರಾಜು ಹಾವೇರಿ
     ಗುರು ವಿಜಯ ಪ್ರತಿಷ್ಠಾನ
***

" ಶ್ರೀ ವರದೇಂದ್ರ ತೀರ್ಥರ ಮಧ್ಯಾರಾಧನೆ ವಿಶೇಷ "
" ಹರಿದಾಸರ ಕಣ್ಣಲ್ಲಿ ಶ್ರೀ ವರದೇಂದ್ರತೀರ್ಥರು "
೧. ಶ್ರೀ ಗುರುಗೋಪಾಲದಾಸರು..
ವರದೇಂದ್ರ ಗುರು ನಿಮ್ಮ ಚರಿಯ ಗಣವೂ ।
ಧರೆಯೊಳಗೆ ಪರಿಪರ್ಯಾಶ್ಚರ್ಯಾಯಿತು ನೋಡೆ ।।
... ಗುರು ಕರುಣ ಬಲದಲ್ಲಿ ಅರಿಕರಿನಿಕರದೊಳಗೆ ।
ಹರಿಯಾಕ್ಷನೆನಿಸಿ ಧರೆಯಲಿ ಮ್ಯರೆಯುತ ।
ಮರುತ ಗುರುಗೋಪಾಲವಿಠ್ಠಲ ರಾಮವ್ಯಾಸರ ।
ಚರಣಾರ್ಚನೆಯ ಬಲದಿ ನಿರುತ ಸುಖದಲಿ ಮ್ಯರೆವ ।।
೨. ಶ್ರೀ ವರದ ಗೋಪಾಲದಾಸರು....
ಚಿತ್ರವಾಗಿದೆ ನೋಡು ನಮಗೆ ।
ಸತ್ಯ ಗುಣಸಾಂದ್ರ ವರದೇಂದ್ರ ।
ಯತಿಗಳ ಮಹಿಮೆ ।।
... ವರದ ಗೋಪಾಲವಿಠಲನ ವಲಿಮಿಂದ । ಶ್ರೀ ।
ವರದೇಂದ್ರ ಯತಿ ವರಪ್ರದ ಮಹಿಮೆಗೆ ।
ಸುರಧೇನು ಕಲ್ಪತರು ವರ ಚಿಂತಾರತುನಗಳು ।
ಸ್ವರ್ಗ ಲೋಕದಲ್ಲಿ ಬೆರಗಾದವಿದಕೊ ।।
೩. ಶ್ರೀ ಜಗನ್ನಾಥ ದಾಸರು...
ಪರಮ ಸಂಭ್ರಮದಿ ರಾಜಿಸುವ ನೋಳ್ಪರಿಗೆ ।।
... ಸೂರಿಕುಲವರಿಯ ವಸುಧೇಂದ್ರರಾಯ । ಕರಸ ।
ರೋರಹದಿ ಜನಿಸಿ ಪರಮೋತ್ಸಹದಲಿ ।
ಶ್ರೀ ರಾಮ ವ್ಯಾಸ ಜಗನ್ನಾಥವಿಠಲನ । ಚರ ।
ಣಾರವಿಂದರ್ಚನೆಯ ಪಡೆದು ಸಂತೋಷಿಸುವ ।।
೪. ಶ್ರೀ ಪ್ರಾಣೇಶದಾಸರು...
ಗುರು ವರದೇಂದ್ರ ದಯಾ೦ಬುಧೇ ।
ಶರಣಾಗತ ವತ್ಸಲ ಈಶಾ ।
ಚರಣ ಕಮಲ ಷಟ್ಪದ ಪಾಲಿಸು 
ಕಾಷಾಯ ವಸನ ಭೂಷಾ ।।
.... ಮಾನಿ ಪೂಜ್ಯ ಸುಜ್ಞಾನಿ ಧೀರ 
ಸದ್ಭಾನುಚಂದ್ರ ಭಾಸ ।
ದೀನ ಪೋಷಕ ನಿಜಾನುಗ 
ಪಾಲಕ ಕ್ಷೋಣಿಪ ನಿರ್ದೋಷ ।
ಸಾನುರಾಗದಲಿ ಪೋಣಿಸು 
ಸನ್ಮತಿ ಮೌನಿ ಕುಲಾಧೀಶ ।
ನೀನಿಲ್ಲದೆ ಶ್ರೀ ಪ್ರಾಣೇಶವಿಠಲ 
ತಾನೊಲಿಯನು ಲೇಶ ।।
೫. ಶ್ರೀ ಕಾರ್ಪರ ನರಹರಿ...
ವರದೇಂದ್ರತೀರ್ಥರ ಪದ ಧ್ಯಾನ ।
ಮುಕ್ತಿ ಮಾರ್ಗಕೆ ಸೋಪಾನ ।।
... ಶರಣರ ಪೊರೆವ ಕಾರ್ಪರನರಸಿಂಹನ ।
ಕರುಣ ಪಾತ್ರ ತವ ಸೇವನ ।।
೬. ಶ್ರೀ ಗುರುಜಗನ್ನಾಥದಾಸರು...
ರಥವನೇರಿದ ಯತಿಕುಲನಾಥ 
ಸದ್ಗುಣ ವಿಖ್ಯಾತಾ ।।
... ಧಾತಾಂಶರಿಂದಲಿ ತಾನುದ್ಭವಿಸೀ 
ಸದ್ಗುರುವರನೆನಿಸೀ ।
ಧೂತ ಪಾಪಾತ್ಮಕನು ತಾನಾಗೀ 
ಶ್ರೀ ಹರಿಗೆ ಬೇಕಾಗೀ ।
ಪ್ರೀತ ಗುರುಜಗನ್ನಾಥವಿಠಲನತೀ ।
ಪ್ರೀತಿಲಿ ಭಜಿಸುತ ದೂತರ ಪೊರೆವಾ ।।
೭. ಶ್ರೀ ವರದೇಶವಿಠಲರು....
ವರದೇಂದ್ರ ಗುರು ನಿಮ್ಮ ಚರಣ ।
ಸರಸಿರುಹಸಾರಿದೆ ಪೊರೆಯುವದೈ ।।
... ಈಸುಪದ ಪೇಳ್ವನೆ ಧನ್ಯ ಜಗಧೀಶನ ತುತಿಸಿದ ಪುಣ್ಯ ।
ದೇಶಿಕಪತಿ ಮುನಿಮಾನ್ಯ ವರದೇಶವಿಠಲಾಗ್ರಗಣ್ಯ ।।
೮. ಶ್ರೀ ವರದೇಂದ್ರವಿಠಲರು...
ಗುರುವೇ ಲಾಲಿಸುರ ತರುವೆ ಲಾಲಿ ।
ಪರಮ ಭಕ್ತರನ್ನ ನಿರುತ ಪೊರೆವ ಲಾಲಿ ।।
... ಈಶ ಲಾಲಿ ಪರಿತೋಷ ಲಾಲಿ ।
ಶ್ರೀಶ ವರದೇಂದ್ರವಿಠಲ ದಾಸ ಲಾಲಿ ।।
೯. ಶ್ರೀ ಸುಂದರವಿಠಲರು...
ಜೋ ಜೋ ವಾದೀಂದ್ರ ಕಾರಕಮಲೋದ್ಭವ ।
ಜೋ ಜೋ ವಸುಧೇಂದ್ರ ಕರಕಮಲ ಸಂಜಾತ ।
ಜೋ ಜೋ ವರವೀವ ವರಯತಿ ತಿಲಕನೆ ।
ಜೋ ಜೋ ವರದೇಂದ್ರ ಗುರುರಾಜ ಪ್ರಭುವೇ ।।
... ಛಂದುಳ್ಳ ಶೃಂಗಾರ ರಥವ ಮಧ್ಯದಲಿ ।
ಅಂದುಳ್ಳೆ ಹೃದ್ರತ್ನ ಗದ್ದುಗೆಯಲಿ ಕುಳಿತು ।
ಬಂದಾರ್ತ ಭಕುತ ಜನರಗೆಲ್ಲ । ಮನೋ ।
ಮಂದಿರ ಸುಂದರ ವಿಠಲನ ತೋರ್ವಿ ।।
೧೦. ಶ್ರೀ ಅಭಿನವ ಪ್ರಾಣೇಶವಿಠಲರು...
ವರದೇಂದ್ರರು ಸುಂದರ ರಥದೊಳು ಸಾಗಿ ।
ಬರುವ ಸೊಬಗು ನೋಡೈ ।
ಧರಣಿ ಸುರರು ಅತಿ ಹರುಷದಿಂದ ದ್ವಯ ।
ಕರಗಳೆತ್ತಿಯಾಲ್ಪರಿದು ಕರೆಯುತಿರೆ ।।
... ನಾನಾ ತರದ ಗಾಯನ ವಾದನದ 
ಸುನಾದವು ಆರತಿ ।
ಸಾನುರಾಗದಲಿ ಬೆಳಗುವವರ 
ಮಹಾವಾದವು ।
ಕ್ಷೋಣಿ ಸುರರ ನಿಗಮಾಗಮ 
ಶ್ರುತಿಗಳ ಘೋಷವು ಪರವಶ ।
ವಾಣಿಲಿ ಪಾಡುತ ನರ್ತಕರ ನಟನಾದವು ।।
ಆನತ ಜನ ಸುರಧೇನು ದೀನರಘ 
ಕಾನನಸುರ ಮುಖ ।
ಮೌನಿವರ್ಯ ಶ್ರೀಮಾನದಭಿನವ-
ಪ್ರಾಣೇಶವಿಠಲನ ।
ಧೇನಿಸುತಲಿ ದೇವೇಂದ್ರ ಬೀದಿಯೊಳು ।।
೧೧. ಶ್ರೀ ಗುರುಶ್ರೀಶ ಪ್ರಾಣೇಶವಿಠಲರು...
ವರದೇಂದ್ರ ಗುರು ನಿಮ್ಮ 
ಚರಣ ಸರಸೀರುಹ ।
ಮರೆಯದೆ ಮೊರೆಹೊಕ್ಕೆ 
ಪರಿಪಾಲಿಸೋ ।।
... ವರಯತಿ ವಸುಧೇಂದ್ರ 
ಕರಕಂಜಸ೦ಜಾತ ।
ಸುರ ಸಾಂಶ ಸುಗುಣಾ 
ಸುಸುಖಸಾಂದ್ರನೇ ।
ನಿರುತದಿ ಸುಖತೀರ್ಥಾ
ಗುರುಮತಾಬ್ಧಿಲಿಮತ್ಸ್ಯ ।
ಗುರುಶ್ರೀಶಪ್ರಾಣೇಶವಿಠಲ 
ಸಂಪ್ರೀತಾ ( ಯ ) ।।
೧೨. ಶ್ರೀ ಶ್ಯಾಮಸುಂದರದಾಸರು...
ವರದೇಂದ್ರ ವರದೇಂದ್ರ ।
ವರದಾಯಕ ಗುರು ವರಗುಣಸಾಂದ್ರ ।।
... ಹೇಮೋದರ ವಿತ ಶ್ಯಾಮಸುಂದರನ ।
ಪ್ರೇಮಪಾತ್ರ ಪುಣ್ಯಧಾಮ ಮಹಾತ್ಮ ।।
೧೩. ಶ್ರೀ ಪ್ರಸನ್ನ ಶ್ರೀನಿವಾಸದಾಸರು...
ವರದೇಂದ್ರತೀರ್ಥಾರ್ಯ 
ಗುರುವರರ ಪದಯುಗ್ಮ ।
ಸರಸೀರುಹದಲ್ಲಿ ಸತತ 
ನಾ ಶರಣಾದೆನೋ ।
ವರ ಸಮೀರಗ ಕೃಷ್ಣ 
ರಾಮ ಹಯಮುಖ ವ್ಯಾಸ ।
ನರಹರಿ ಪ್ರಿಯರಿವರು 
ಸಾಧು ವರಪ್ರದರು ।।
... ಬಾದರಾಯಣ ತಾನೇ 
ನುಡಿಸಿದೀ ನುಡಿಗಳ್ । ಭಕ್ತಿ ।
ಯಿಂದೋದಿ ಕೇಳ್ವರ್ಗೆ ವ
ರದೇಂದ್ರ ಮಧ್ವಸ್ಥ । ಅಜನ ।
ಪಿತ ಶ್ರೀ ಪ್ರಸನ್ನ ಶ್ರೀನಿವಾಸ 
ಶ್ರೀಶ ತುಳಸೀಶ ।
ವಿತ್ತ ವಿದ್ಯಾಯುರಾರೋಗ್ಯ 
ಜ್ಞಾನ ಭಕ್ತ್ಯಾದಿಗಾಳೀವ ।।
" ಶ್ರೀ ವರದೇಂದ್ರ ತೀರ್ಥರ ಮೇಲಿನ ಹರಿದಾಸರು ರಚಿಸಿದ ಕೃತಿಗಳ ವಿವರ "
ಶ್ರೀ ಗುರು ಗೋಪಾಲ ವಿಠಲರು - 2
ಶ್ರೀ ವರದ ಗೋಪಾಲ ವಿಠಲರು- 2
ಶ್ರೀ ಜಗನ್ನಾಥ ವಿಠಲರು - 
5 ಪದ ಮತ್ತು ಶ್ರೀ ವರದೇಂದ್ರ ಪಂಚರತ್ನ ಸ್ತೋತ್ರಮ್ 
ಶ್ರೀ ಪ್ರಾಣೇಶ ವಿಠಲರು - 10
ಶ್ರೀ ಅಭಿನವ ಜನಾರ್ದನ ವಿಠಲರು - 1
ಶ್ರೀ ಗುರು ಜಗನ್ನಾಥ ವಿಠಲರು - 5
ಶ್ರೀ ವರದೇಶ ವಿಠಲರು - 5
ಶ್ರೀ ವರದೇಂದ್ರ ವಿಠಲರು - 4
ಶ್ರೀ ಮೋದ ವಿಠಲರು - 2
ಶ್ರೀ ಗುರು ಶ್ರೀಶ ಪ್ರಾಣೇಶ ವಿಠಲರು - 1
ಶ್ರೀ ಸುಂದರ ವಿಠಲರು - 1
ಶ್ರೀ ಶ್ಯಾಮಸುಂದರ ದಾಸರು - 2
ಶ್ರೀ ಕಾರ್ಪರ ನರಹರಿ - 1
ಶ್ರೀ ಪ್ರಸನ್ನ ಶ್ರೀನಿವಾಸ ದಾಸರು - 2
ಶ್ರೀ ಅಭಿನವ ಪ್ರಾಣೇಶ ವಿಠಲ - 5
ಶ್ರೀ ಲಕುಮೀಶ ದಾಸರು - 8
ಆಚಾರ್ಯ ನಾಗರಾಜು ಹಾವೇರಿ.....
ವಸುಧೇಂದ್ರ ಕರ 
ಸಂಜಾತನೇ ನಮೋ ।
ಭೂಸುರ ವಂದ್ಯ 
ವರದೇಂದ್ರ ನಮೋ ।।
ಧಾತಾಂಶ ನೀನಹುದೋ । ವಿಧಿ ।
ಪಿತ ನಾರಾಯಣನ ಪ್ರೀತಿಯ 
ಪೌತ್ರ ನೀನಹುದೋ ।।
ತಂತ್ರಸಾರೋಕ್ತ ಓಂಕಾರ ।
ಮಂತ್ರ ವರ್ಣಗಳನು -
ಮೋದದಲಿ ತಿಳಿಸಿದೆ ।
ಮಂತ್ರವೇದ್ಯ ವೇಂಕಟ-
ನಾಥನಾರಾಧಕ ।।
by ಆಚಾರ್ಯ ನಾಗರಾಜು ಹಾವೇರಿ
     ಗುರು ವಿಜಯ ಪ್ರತಿಷ್ಠಾನ
********

june 2020 aradhane
***
Year 2021
ಶ್ರೀ ವರದೇಂದ್ರ ತೀರ್ಥರು 

 ವಾದೇ ವಿಜಯಶೀಲಾಯ ವರದಾಯ ವರಾರ್ಥಿನಾಂ |
 ವದಾನ್ಯಜನಸಿಂಹಾಯ ವರದೇಂದ್ರಾಯ ತೇ ನಮ:| 

ಮಂತ್ರಾಲಯ ಮಠದ ಯತಿ ಪರಂಪರೆಯಲ್ಲಿ ಬರುವ ಮಹಾಜ್ನ್ಯಾನಿಗಳು, ವಾದಿಸಿಂಹ ಎಂದೇ ಪ್ರಸಿದ್ದರಾದವರು, ನಂಬಿದ ಭಕ್ತರಿಗೆ ಪರಮಾತ್ಮನ ಅನುಸಾರವಾಗಿ  ವರಗಳನ್ನು ಕೊಡುವುದರಲ್ಲಿ ಇಂದ್ರರು, ಶ್ರೀ ಸತ್ಯಭೋದ ತೀರ್ಥರ , ಶ್ರೀ ಧೀರೇಂದ್ರ ತೀರ್ಥರ  ಸಮಕಾಲೀನರು, ಶ್ರೀವಿಜಯದಾಸರು, ಶ್ರೀ ಗೋಪಾಲದಾಸರು,   ಶ್ರೀ ಜಗನ್ನಾಥ ದಾಸರು, ಶ್ರೀ ಪ್ರಾಣೇಶದಾಸರು, ಶ್ರೀ ಗುರುಜಗನಾಥದಾಸರಿಗೆ ಗುರುಗಳು, ಮಾರ್ಗದರ್ಶಕರು ಆಗಿದ್ದ ಮಹನೀಯರು      ಪುಣ್ಯನಗರ ನಿವಾಸಿಗಳಾದ ಶ್ರೀ ವರದೇಂದ್ರ ತೀರ್ಥರ ಆರಾಧನಾ ಮಹೋತ್ಸವ.

 ಪೂರ್ವಾಶ್ರಮನಾಮ - ಶ್ರೀ ಬಲರಾಮಾಚಾರ್ಯರು
ಆಶ್ರಮ ಸ್ವೀಕಾರ - ಆಶ್ವಿಜ ಬಹುಳ ಸಪ್ತಮಿ ವೃಷನಾಮ ಸಂವತ್ಸರ
ಆಶ್ರಮ ಗುರುಗಳು - ಶ್ರೀ ವಸುದೇಂದ್ರ ತೀರ್ಥರು
ಆಶ್ರಮ ಶಿಷ್ಯರು - ಶ್ರೀ ಭುವನೇಂದ್ರ ತೀರ್ಥರು
ವೃಂದಾವನ ಸ್ಥಳ - ಪೂನಾ ( ಪುಣ್ಯ ಪಟ್ಟಣ/ನಗರ)
ಆರಾಧನಾ - ಆಷಾಢ ಶುದ್ಧ ಷಷ್ಠಿ
ವೇದಾಂತ ಸಾಮ್ರಾಜ್ಯ ಕಾಲ : 1761 ರಿಂದ 1785

ಮಂತ್ರಾಲಯ ಮಹಾಪ್ರಭುಗಳಿಂದ ಏಳನೇಯವರಾದಯತಿಗಳು, ರಾಯರು ಜೀವಿತಾವಧಿಯಲ್ಲೇಯೇ ನಮ್ಮಿಂದ ಮುಂದೆ ಏಳನೆಯವರಾಗಿ " ಸಪ್ತಮೋ ಮತ್ಸ್ಯಾಮೋ ಯೋಗಿ ವರದೇ೦ದ್ರೋ ಭವಿಷ್ಯತೀ "  ಎಂದು ಹೇಳಿದ್ದರು, ಅದೇ ರೀತಿ ಶ್ರೀವರದೇಂದ್ರ ತೀರ್ಥರು ಹಂಸನಾಮಕ ಪರಮಾತ್ಮನ ಪೀಠದಲ್ಲಿ ವಿರಾಜಿಸಿದವರು. ರಾಯರಿಗೆ ಸಮಾನರಾದವರು ಇಲ್ಲ ಹಾಗೆ ರಾಯರೇ ನಮ್ಮ ನಂತರ ನಮ್ಮವಿದ್ವತ್ಗೆ ನಾವು ಸೂಚಿಸುವ ಮತ್ತೊಬ್ಬರು ಎಂದರೆ ವರದೇಂದ್ರ ತೀರ್ಥರು ಎಂದು ತಾವೇ ಹೇಳಿದ್ದಾರೆ. ರಾಯರಲ್ಲಿ ಸೇವೆಮಾಡಿದ ಬಹುಮಂದಿಗೆ ರಾಯರೇ ಸೂಚಿಸಿದ ವ್ಯಕ್ತಿಗಳು ಎಂದರೆ ಶ್ರೀ ವರದೇಂದ್ರ ತೀರ್ಥರು.  

ಅನ್ವರ್ಥ ಎಂಬಂತೆ ವರದೇಂದ್ರ ತೀರ್ಥರ ನಾಮ " ವರ" + "ಇಂದ್ರ" = ವರದೇಂದ್ರ ಎಂದು ನಂಬಿದ ಸೇವೆಮಾಲ್ಪ ಭಕ್ತರಿಗೆ ವರಗಳನ್ನು ಕೊಡುವ ಇಂದ್ರರೇ ಆಗಿದ್ದರೆ. ರಾಯರಂತೆ ಇಂದು ಅನೇಕ ಮಹಿಮೆಗಳನ್ನು ತೋರಿಸುತ್ತಿದ್ದಾರೆ.

ರಾಯರ ಪೂರ್ವಾಶ್ರಮದ ಮರಿಮೊಮ್ಮಕ್ಕಳಾದ ವೇಣುಗೋಪಾಲಚಾರ್ಯರ ಮಕ್ಕಳು ಶ್ರೀ ವರರಾಮಚಾರ್ಯರು, ಇವರಿಗೆ ಮೂರುಜನ ಮಕ್ಕಳು. ಶ್ರೀ ಪರಶುರಾಮಾಚಾರ್ಯರು, ಶ್ರೀ ಬಲರಾಮಾಚಾರ್ಯರು, ಲಕ್ಷ್ಮೀನಾರಾಯಣ ಚಾರ್ಯರು. ಶ್ರೀ ಪರಶುರಾಮಾಚಾರ್ಯರು ಶ್ರೀ ವಾದೀ೦ದ್ರ ತೀರ್ಥರಿಂದ ಆಶ್ರಮ ಪಡೆದು ಶ್ರೀ ವಸುದೇಂದ್ರ ತೀರ್ಥರಾದರು. ಶ್ರೀ ಬಲರಾಮಚಾರ್ಯರು ಶ್ರೀ ವಸುದೇಂದ್ರ ತೀರ್ಥರಿಂದ ಆಶ್ರಮ ಪಡೆದು ಶ್ರೀ ವರದೇಂದ್ರ ತೀರ್ಥರಾದರು.

ಇವರ ಕಾಲಘಟ್ಟದಲ್ಲಿ ಸಂಗ್ರವಾದ ಕೃತಿ " ದೇವಪೂಜಾ ಪದ್ಧತಿ" ಮತ್ತು ಕನ್ನಡದಲ್ಲಿ " ತಂತ್ರಸಾರ ಸಂಗ್ರಹ"  ಎಂಬ ಗ್ರಂಥಗಳನ್ನೂ ಬರೆದಿದ್ದಾರೆ. ಕನ್ನಡದ ಸುಧಾ ಎಂದೇ ಖ್ಯಾತವಾದ "ಶ್ರೀ ಹರಿಕಥಾಮೃತ ಸಾರ" ಎಂಬ ಪವಿತ್ರಗ್ರಂಥ ರಚನೆ ಪ್ರಾರಂಭವಾದದ್ದು ಇವರ ಸಮ್ಮುಖದಲ್ಲಿ ಪುಣ್ಯಪಟ್ಟಣದಲ್ಲಿ.  ಶ್ರೀ ವರದೇಂದ್ರ ತೀರ್ಥರಲ್ಲಿ ಕೆಲಸಮಯ ಅಲ್ಲಿದ್ದು ಅವರಿಂದ ಶಾಸ್ತ ಪಾಠಗಳನ್ನು ತಿಳಿದು ಭಗವತ್ ಪ್ರೇರಣೆಯಿಂದ ಹರಿಕಥಾಮೃತಸಾರ ಎಂಬ ಮಹಾ ಕೃತಿಯನ್ನು ರಚಿಸಲು ಶ್ರೀ ಜಗನ್ನಾಥ ದಾಸರು ಪ್ರಾರಂಭ ಮಾಡುತ್ತಾರೆ.

 ಪುಣ್ಯಪಟ್ಟಣಕ್ಕೆ ದಿಗ್ವಿಜಯ 

ಈ ಹಿಂದೆ ಶ್ರೀ ವಾದಿರಾಜ ಗುರುಸಾರ್ವಭೌಮರು ಈ ಪುಣ್ಯ ಪಟ್ಟಣಕ್ಕೆ ದಿಗ್ವಿಜಯ ಮಾಡಿ ಅಲ್ಲಿ, " ಶ್ರೀರುಕ್ಮಿಣೀಶ ವಿಜಯ " ಎಂಬ ಗ್ರಂಥವನ್ನು ರಚಿಸಿ ಆನೆಯ ಮೇಲೆ ಮೆರವಣಿಗೆ ಮಾಡಿಸಿದ ಕೀರ್ತಿ ಇತಿಹಾಸದಲ್ಲಿ ಅವಿಸ್ಮರಣೀಯವಾದದ್ದು. ಅಲ್ಲಿಂದ ಸ್ವಲ್ಪ ಕಾಲ ಪುಣ್ಯಪಟ್ಟಣಕ್ಕೆ ಯಾರು ಹೋಗಿರಲಿಲ್ಲ. ಮತ್ತೊಮ್ಮೆ ಮಧ್ವಸಿದ್ಧಾಂತಕ್ಕೆ ಅಲ್ಲಿ ಅದೇ ವೈಭವ ತರಬೇಕು ಎಂದು ಸಂಚಾರ ಪ್ರಾರಂಭ ಮಾಡುತ್ತಾರೆ. ಅಲ್ಲಿನ ಆಸ್ಥಾನದಲ್ಲಿ ದೊಡ್ಡ ಅದ್ವೈತಿ ಪ್ರಗುಣೆ ಶಾಸ್ತ್ರಿಗಳು ಎಂಬುವರು ವಾಕ್ಯಾರ್ಥ ಮಾಡುತ್ತಾರೆ. ಈ ವಾಕ್ಯಾರ್ಥಕ್ಕೆ ಒಂದು ಷರತ್ತು ವಿಧಿಸಿ ಯಾರು ಈ ವಾಕ್ಯಾರ್ಥದಲ್ಲಿ ಸೋತರು ತಾವು ತಮ್ಮ ಸಂಸ್ಥಾನ ಅಥವಾ ತಮ್ಮ ಎರಡು ವಸ್ತ್ರಗಳ್ನ್ನು ಬಿಟ್ಟು ಇನ್ನುಳಿದ ಎಲ್ಲ ವಸ್ತುಗಳನ್ನು ಗೆದ್ದವನಿಗೆ ಕೊಡಬೇಕು. ಎಂದು ಪಣದೊಂದಿಗೆ ವಾಕ್ಯಾರ್ಥ ಪ್ರಾರಂಭವಾಗುತ್ತದೆ. ಹೀಗೆ ನಿರಂತರ ವಾಕ್ಯಾರ್ಥ ನಡೆದಮೇಲೆ ಪ್ರಗುಣಶಾಸ್ತ್ರಿಗಳು ಪರಾಜಿತರಾಗುತ್ತಾರೆ.

ಇಂದಿಗೆ ನಾವು ಪುಣೆಯ  ಲಕ್ಷ್ಮಿ ರೋಡ್ ನಲ್ಲಿ ಕಾಣುವ ವೈಭವದ ಅರಮನೆಯೇ ಶ್ರೀ ವರದೇಂದ್ರ ತೀರ್ಥರು ವಾದದಲ್ಲಿ ಗೆದ್ದ ಮಠವಾಗಿದೆ. ಅಲ್ಲೇ ವರದೇಂದ್ರ ತೀರ್ಥರ ವೃಂದಾವನ ಸನ್ನಿದ್ದಾನವಾಗಿದೆ. ಪ್ರಗುಣ ಶಾಸ್ತ್ರಿಗಳ ದೇವರ ಮನೆಯಲ್ಲೇ ವರದೇಂದ್ರ ತೀರ್ಥರ ವೃಂದಾವನ ಜೊತೆಗೆ ಪಂಚಲಿಂಗಗಳ ಸನ್ನಿದಾನ ನಾವು ಇಂದಿಗೂ ನೋಡಬಹುದಾಗಿದೆ. ಅವರ ಕಾಲದಲ್ಲಿದ್ದ ಕಟ್ಟಿಗೆಯಲ್ಲಿ ಮಾಡಿದ ಮಂಟಪ ಇಂದಿಗೂ ನಾವು ನೋಡಬಹುದು. ಅಲ್ಲಿನ ವಿಶೇಷವೆಂದರೆ ಶ್ರೀ ವರದೇಂದ್ರ ತೀರ್ಥರ ವೃಂದಾವನದ ಮೇಲೆ ರಾಯರ ಮೃತ್ತಿಕಾ ವೃಂದಾವನ ನಾವು ನೋಡಬಹುದು. 

 ಗ್ವಾಲಿಯರ್ ರಾಜನ ಆತಿಥ್ಯ 
ಗ್ವಾಲಿಯರ್ ನ ರಾಜ ಶ್ರೀ ವರದೇಂದ್ರ ತೀರ್ಥರು ಆಗಮಿಸಿದರೆ ಅವನ ಸಿಂಹಾಸನವನ್ನೇ ಬಿಟ್ಟು ಕೊಡುತ್ತಿದ್ದ ಮತ್ತು ಇಂದಿಗೂ ಗ್ವಾಲಿಯರ್ ನ ವಸ್ತುಸಂಗ್ರಹಾಲಯದಲ್ಲಿ ಆ ವಿಧದ ಒಂದು ಭಾವಚಿತ್ರವಿದೆ.

 ಲಿಂಗಸೂರಿನಲ್ಲಿ ವರದೇಂದ್ರ ತೀರ್ಥರ ಸ್ವಪ್ನವೃಂದಾವನ (ಮೃತ್ತಿಕಾ ವೃಂದಾವನ) ನಿರ್ಮಾಣ. 

ಹರಿದಾಸ ಸಾಹಿತ್ಯದಲ್ಲಿ ಮಾನ್ಯರಾದ ಶ್ರೀ ಪ್ರಾಣೇಶ ದಾಸರು, ಶ್ರೀ ವರದೇಂದ್ರ ತೀರ್ಥರ ಸಮಕಾಲೀನರು, ಯಾವಾಗಲೂ ಶ್ರೀ ವರದೇಂದ್ರ ತೀರ್ಥರಲ್ಲಿ ಅತೀವ ಭಕ್ತಿ ಮತ್ತು ಪ್ರೀತಿ. ಲಿಂಗಸೂರಿನಲ್ಲಿ ಅನೇಕದಿನಗಳು ಪರ್ಯಂತ ಶ್ರೀ ವರದೇಂದ್ರ ತೀರ್ಥರು ವಾಸ್ತವ್ಯ ಮಾಡಿದ್ದರು. ಒಂದು ದಿನ ವರದೇಂದ್ರ ತೀರ್ಥರು ಪ್ರಾಣೇಶ ದಾಸರಲ್ಲಿ ನಿಮ್ಮ ಮನೆಯ ಹಿತ್ತಲನ್ನು ಸಂಸ್ಥಾನಕ್ಕೆ ಕೊಟ್ಟು ಬಿಡಿ ಎಂದು ಕೇಳುತ್ತಾರೆ. ಅದೇ ರೀತಿ ಪ್ರಾಣೇಶ ದಾಸರು ಕೊಡುತ್ತಾರೆ. ನಂತರ ದಿನಗಳಲ್ಲಿ ಶ್ರೀ ವರದೇಂದ್ರ ತೀರ್ಥರು ಪುಣ್ಯಪಟ್ಟಣಕ್ಕೆ ಹೊರಟು ಬಿಡುತ್ತಾರೆ ಅಲ್ಲಿಂದ ಈ ಕಡೆಗೆ ಬರುವುದಿಲ್ಲ.
ಪ್ರಾಣೇಶ ದಾಸರಿಗೆ ಶ್ರೀ ವರದೇಂದ್ರ ತೀರ್ಥರು ವೃಂದಾವನಸ್ತರಾದರು ಎಂಬ ವಿಷಯ ಗೊತ್ತಾಗುತ್ತದೆ. ಅತೀವ ದುಃಖದಿಂದ ವರದೇಂದ್ರ ತೀರ್ಥರನ್ನು ಪ್ರಾರ್ಥಿಸಲು ಸ್ವಪ್ನದಲ್ಲಿ ಶ್ರೀ ವರದೇಂದ್ರ ತೀರ್ಥರು ಅವರಿಗೆ ನೀವು ಸಮರ್ಪಣೆ ಮಾಡಿದ ಜಾಗದಲ್ಲಿ ಹುಲ್ಲಿನ ರಾಶಿಯನ್ನು ಇಟ್ಟಿದ್ದೀರಾ , ಆ ಜಾಗವನ್ನು  ಒಬ್ಬ ವ್ಯಕ್ತಿ ನಿಲ್ಲುವಷ್ಟು ಅಗೆದರೆ ನಿಮಗೆ ಒಂದು ತುಳಸಿ ಬೃಂದಾವನ ಸಿಗುತ್ತದೆ. ಅದರಲ್ಲಿ ನನ್ನ ಸನ್ನಿದಾನ ಸದಾವಿರುತ್ತದೆ ಎಂದು ಹೇಳಲು, ಅದೇ ರೀತಿ ಅಗೆದು ನೋಡಿದಾಗ ತುಳಸಿ ಬೃಂದಾವನ ಸಿಗುತ್ತದೆ. ಅದನ್ನೇ ಅಲ್ಲಿ ಪ್ರತಿಷ್ಠೆ ಮಾಡಿದ್ದರು. ಸ್ವಲ್ಪ ಸಮಯಕಾಲದಲ್ಲಿ ಪುಣ್ಯಪಟ್ಟಣದ ಒಬ್ಬ  ವಿಪ್ರನಿಗೆ ತಮ್ಮ ಪಾದುಕೆಯನ್ನು ಲಿಂಗಸೂರಿನಲ್ಲಿ ತೆಗೆದು ಕೊಂಡು ಹೋಗಲು ಆದೇಶಿಸುತ್ತಾರೆ. ಅದೇ ರೀತಿ ಆ ವಿಪ್ರ ಅಲ್ಲಿಗೆ ಕಾಲುನಡಿಗೆಯಲ್ಲಿ ತಲೆಯಮೇಲೆ ಹೊತ್ತುಕೊಂಡು  ಪಾದುಕೆಗಳನ್ನೂ  ತೆಗೆದು ಕೊಂಡು ಹೋಗಿ ಬೃಂದಾವನದ ಮುಂದೆ ಇಡಲು ನಾವು ಇಲ್ಲಿ ಸಂಪೂರ್ಣವಾಗಿ ಇಲ್ಲೇ ಸನ್ನಿಹತವಾಗಿದ್ದೇವೆ ಎಂದು ಸೂಚನೆ ತೋರಿಸಿದ್ದಾರೆ. ಇಂದಿಗೂ ಕೂಡ ಸ್ವಪ್ನಲಬ್ದ ವೃಂದಾವನಕ್ಕೆ ಪೂಜೆ, ಆರಾಧಾನಾದಿಗಳು ವೈಭವದಿಂದ ನಡೆಯುತ್ತಿದೆ. ಹೀಗೆ ವರದೇಂದ್ರ ತೀರ್ಥರು ಅಪಾರ ಮಹಿಮಾನ್ವಿತರು.

ಇವರ ಕಾಲದಲ್ಲಿ ಶ್ರೀ ಮಠದ ಸರ್ವಾಂಗೀಣ ಅಭಿವೃದ್ಧಿ ಯಾಯಿತು, ಹಲವಾರು ರಾಜರುಗಳು ಇವರ ಮಾರ್ಗದರ್ಶನಕ್ಕಾಗಿ ಸಾಲುಗಟ್ಟಿ ಪುಣ್ಯನಗರಕ್ಕೆ ಬರುತ್ತಿದ್ದರು. ರಾಮಶಾಸ್ತ್ರಿ ಎಂಬ ಅದ್ವೈತಿ ಪಂಡಿತ ಇವರಲ್ಲಿ ವಾದ ಮಾಡಿ ಸೋತು ತಾನು ವಾಸಿಸುತ್ತಿದ್ದ ಮನೆಯನ್ನೇ ಇವರಿಗೆ ಬರೆದು ಕೊಟ್ಟ. ವೀರವೆಂಕಟ ತಿರುಮಲರಾಯ ಎಂಬ ರಾಜ ಇವರಿಗೆ ದಾನಪುರ ಎಂಬ ಗ್ರಾಮವನ್ನೇ ಬರೆದುಕೊಟ್ಟಿದ್ದ.

ಲಿಂಗಸೂರಿನಲ್ಲಿ ಇವರಿಂದ ಆರಂಭವಾದ " ವರದೇಂದ್ರ ಹರಿದಾಸ ಸಾಹಿತ್ಯ ಮಂಡಲ" ಇಂದಿಗೂ ಕಾರ್ಯನಿರ್ವಹಿಸುತ್ತಿದೆ.

ಹೀಗೆ ಅನೇಕ ಮಹಿಮೆಗಳನ್ನು ತೋರಿಸಿ, ವ್ಯಾಸ ಸಾಹಿತ್ಯ ಮತ್ತು ದಾಸ ಸಾಹಿತ್ಯಕ್ಕೆ ಉತ್ತೇಜನ ನೀಡಿದ ಮಹನೀಯರು ಆಷಾಢ ಶುದ್ಧ ಷಷ್ಠಿಯಂದು ಪುಣ್ಯಪಟ್ಟಣ ಈಗಿನ ಪೂನಾದಲ್ಲಿ ಹರಿಪಾದವನ್ನು ಸೇರಿದರು.

 ಪ್ರೀತೋಸ್ತು ಕೃಷ್ಣ ಪ್ರಭೋ. 
 ಫಣೀಂದ್ರ ಕೆ
***
 

ಹೀಗೆ ಗುರುಗಳ ಮಹಿಮೆ ಅಪಾರ ಸೇವೆ ಮಾಡುವವರಿಗೆ ಅವರ ಅಭೀಷ್ಟಾನುಸಾರ  ವರಗಳ ಕರುಣಿಸುವ ಮಹನೀಯರು ಶ್ರೀ ವರದೇಂದ್ರ ತೀರ್ಥರು. ಯತಾಶಕ್ತಿ ಮೂರುದಿನ, ಐದುದಿನ ಸೇವೆ ಮಾಡುವವರಿಗೆ ಅನುಗ್ರಹ ಮಾಡುವ ಕಾರುಣ್ಯ ಮೂರ್ತಿಗಳು ಶ್ರೀ ವರದೇಂದ್ರ ತೀರ್ಥರು. ಅವರ ದರುಶನ ನಮಗೆ ಆಗಬೇಕಾದರೆ ಅವರ ದೃಷ್ಟಿ ನಮ್ಮ ಮೇಲೆ ಶೀಘ್ರವಾಗಿ ಆಗಲಿ ಎಂದು ಪ್ರಾರ್ಥಿಸುತ್ತ ಗುರುಗಳ ಚರಣಾರವಿಂದಗಳಲ್ಲಿ ಈ ಲೇಖನ ಕುಸುಮವನ್ನು ಅರ್ಪಿಸುತ್ತಿದ್ದೇನೆ.

 ಶ್ರೀ ಕೃಷ್ಣಾರ್ಪಣಮಸ್ತು.
****
year 2021
by Nagaraju Haveri
" ಶ್ರೀ ವರದೇಂದ್ರ - 1 "
" ಈದಿನ - > ದಿನಾಂಕ : 15.07.2021 ಗುರುವಾರ - ಶ್ರೀ ಪ್ಲವ ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಆಷಾಢ ಶುದ್ಧ ಷಷ್ಟೀ - ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಉಭಯ ವಂಶಾಬ್ಧಿ ಚಂದ್ರಮರೂ - ಶ್ರೀ ಜಗನ್ನಾಥದಾಸರ ವಿದ್ಯಾ ಗುರುಗಳೂ - ಶ್ರೀ ಪ್ರಾಣೇಶದಾಸರ ಉದ್ಧಾರಕ ಗುರುಗಳೂ ಆದ   ಶ್ರೀ ವರದೇಂದ್ರತೀರ್ಥರ ಆರಾಧನಾ ಮಹೋತ್ಸವ - ಪೂನಾ, ಕಸಬಾ ಲಿಂಗಸೂಗೂರು "
ಶ್ರೀ ಪ್ರಾಣೇಶದಾಸರು....
ಪರ ಮತೋರಗ ವೀಪ ।
ಕರುಣಿ ವಿಗತ ಕೋಪ ।
ವರ ವೇದ ಸುಕಲಾಪ ।
ವರದೇಂದ್ರ ಭೂಪ ।।
ಶ್ರೀ ಗುರುಸಾರ್ವಭೌಮರ ಸದ್ವಂಶ ಸಂಜಾತರೂ - ಶ್ರೀಮದಾಚಾರ್ಯರ ವಿದ್ಯಾ ಸಿಂಹಾಸನಾಧೀಶ್ವರರೂ - ಸರ್ವ ಶಾಸ್ತ್ರ ಪಾರಂಗತರೂ - ಸಿದ್ಧಾಂತ ಸ್ಥಾಪಕರೂ - ಷಡ್ದರ್ಶಿನೀ ವಲ್ಲಭರೂ -   ಗೀರ್ವಾಣ ಭಾಷಾ ಕೋವಿದರೂ -ವ್ಯಾಸ - ದಾಸ ಸಾಹಿತ್ಯ ಪ್ರೋತ್ಸಾಹಕ - ಪೋಷಕರೂ ಆದವರು ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವರದೇಂದ್ರತೀರ್ಥ ಶ್ರೀಪಾದಂಗಳವರು!!
" ಶ್ರೀ ಗುರುಗೋಪಾಲದಾಸರು ಕಂಡ ಶ್ರೀ ವರದೇಂದ್ರತೀರ್ಥರ ವೈಭವ " **
ರಾಗ : ಕಾಂಬೋಧಿ ತಾಳ : ತ್ರಿವಿಡಿ
ವರದೇಂದ್ರ ಗುರು ನಿಮ್ಮ -
ಚರಿಯ ಗಣವೂ ।
ಧರೆಯೊಳಗೆ ಪರಿ-
ಪರ್ಯಾಶ್ಚರ್ಯಾಯಿತು ನೋಡೆ ।। ಪಲ್ಲವಿ ।।
ದಿನದಿನಕೆ ಅತಿಶಯ...
... ನಿರುತ ಸುಖದಲಿ ಮ್ಯರೆವ ।। ಚರಣ ।।
" ವಿವರಣೆ "
ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಸತ್ಪರಂಪರೆಯಾದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧೀಶ್ವರರಾದ ಶ್ರೀ ರಾಘವೇಂದ್ರಸ್ವಾಮಿಗಳವರ ವೇದಾಂತ ದಿಗ್ವಿಜಯ ವಿದ್ಯಾ ಸಾಮ್ರಾಜ್ಯಾಧಿಪತಿಗಳಾದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವಾದೀಂದ್ರತೀರ್ಥರ ಕರ ಕಮಲ ಸಂಜಾತರಾದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವಸುಧೇಂದ್ರತೀರ್ಥರ ವರ ಪುತ್ರಕರಾದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವರದೇಂದ್ರತೀರ್ಥರ ಸಮಕಾಲೀನರು ಶ್ರೀ ಗುರುಗೋಪಾಲದಾಸರು.
ಶ್ರೀ ವರದೇಂದ್ರತೀರ್ಥರ ಜಗದ್ಗುರುತ್ವ - ದಾನ ಶೌಂಡತ್ವ - ಪರಮತ ನಿರಾಕಣ ಪೂರ್ವಕ ದ್ವೈತ ಮತ ಸಂಸ್ಥಾಪಕತ್ವ - ಶಿಷ್ಯ ಪೋಷಕತ್ವ - ಶ್ರೀ ರಾಮ ವ್ಯಾಸ ಚರಣಾರ್ಚನೆಯ ವೈಭವಾದಿ ಗುಣಗಳನ್ನು ಪ್ರತ್ಯಕ್ಷವಾಗಿ ನೊಡಿ ಸಂತೋಷ ಸಂಭ್ರಮಗಳನ್ನು ಹೊಂದಿದ - ಶ್ರೀ ಮಠದ ಶಿಷ್ಯರೂ ಆದ ಶ್ರೀ ಗುರುಗೋಪಾಲದಾಸರು ಅವರನ್ನು ಸಂದರ್ಶನ ಮಾಡಿದಾಗ ಅವರ ಮೈಮನಗಳು ಉಬ್ಬಿ ಮಾಡಿದ ಸ್ತೋತ್ರವಿದು.
ಶ್ರೀ ವರದೇಂದ್ರತೀರ್ಥರು ಸತ್ಪಾತ್ರರಲ್ಲಿ ಮಾಡಿದ ಸುವರ್ಣವೇ ಮೊದಲಾದ ದಾನಾದಿಗಳು ಎಷ್ಟು ಅಧಿಕವಾಯಿತೆಂದರೆ....
ಬಂಗಾರದ ಪರ್ವತವಾದ - ದೇವತಾ ವಿಹಾರ ಯೋಗ್ಯವಾದ ಮೇರು ಪರ್ವತವೂ ಅವರ ನಿರಂತರ ಸುವರ್ಣ ದಾನದಿಂದ ಕರಿಗಿ ಹೋಯಿತು. 
ಹೀಗಾಗಿ ಮೇರುವಿನ ಸುತ್ತಲೂ ಇರುವ ಮಾನಸೋತ್ರರ ಪರ್ವತದ ಮೇಲೆ ರಥದಲ್ಲಿ ಕುಳಿತು ಸೂರ್ಯನು ಸಂಚರಿಸುತ್ತಿರುವಾಗ ಈ ವರೆಗೆ ಮೇರು ಪರ್ವತ ತನ್ನ ಔನ್ನತ್ಯವನ್ನು ಸೂರ್ಯನಿಗೆ ಮರೆಯಾಗಿ ಇನ್ನೊಂದು ಭಾಗದಲ್ಲಿ ಕತ್ತಲಾಗಿರುತ್ತಿತು.
ಈ ಹಗಲೂ ರಾತ್ರಿಗಳೆಂಬ ವ್ಯವಸ್ಥೆಯಿಂದಾಗ ಸೂರ್ಯನಲ್ಲಿ ಅತ್ಯಂತ ಮಿತ್ರತನ ಹೊಂದಿದ ಚಕ್ರವಾಕ ಪಕ್ಷಿಗೆ ರಾತ್ರಿ ಕಾಲದಲ್ಲಿ ಸೂರ್ಯನ ದರ್ಶನಾದಿಗಳಿಲ್ಲದೆ ದುಃಖವಾಗುತ್ತಿದ್ದುದು. 
ಈಗ ಮೇರು ಕರಗಿ ಸರಿದಿದ್ದರಿಂದ ಸೂರ್ಯನಿಗೆ ಮರೆ ಮರೆಯಾಗಿ ನಿರಂತರ ಚಕ್ರವಾಕ ಪಕ್ಷಿಗೆ ಸೂರ್ಯ ದರ್ಶನ ಆಗುವಂತಾಗಿ ಅದು ವಿಶೇಷವಾಗಿ ಹರ್ಷದಿಂದ ಕುಣಿ ಕುಣಿದು ನಲಿದಾಡುವಂತಾಯಿತಂತೆ!
ಚಂದ್ರನು ತನ್ನ ಮಗನಾದ ಬುಧನ ಸೌಂದರ್ಯ ಶ್ರೀ ವರದೇಂದ್ರತೀರ್ಥರ ಸೌಂದರ್ಯಾದಿ ಗುಣಗಳ ಮುಂದೆ ನಿಸ್ತೇಜವಾದುದನ್ನು ಕಂಡು ತಾನು ಕ್ಷಯಿಸಲು ಪ್ರಾರಂಭಿಸಿದನಂತೆ!
ಶ್ರೀ ವರದೇಂದ್ರತೀರ್ಥರ ಜ್ಞಾನ ಮತ್ತು ಗುರುತ್ವವನ್ನು ಕಂಡು ತಾವು ತಲೆಬಾಗಿ ಶ್ರೀ ಬೃಹಸ್ಪತ್ಯಾಚಾರ್ಯರು ಸ್ವರ್ಗದಲ್ಲಿ ಮತ್ತು ಶ್ರೀ ಶೇಷದೇವರು ಪಾತಾಳದಲ್ಲಿ ವಾಸ ಮಾಡಿದಂತೆ!
ಶ್ರೀ ವರದೇಂದ್ರತೀರ್ಥರ ಐಶ್ವರ್ಯಾದಿಗಳನ್ನು ನೋಡಲೋಸುಗವೇ ಶ್ರೀ ಇಂದ್ರದೇವರು ಸಹಸ್ರಾಕ್ಷರಾದರಂತೆ!
ಶ್ರೀ ಹರಿ ವಾಯುಗಳ ಸಹಜ ದ್ವೇಷಿಗಳು - ಶತ್ರುಗಳೆಂಬ ಆನೆಗಳಿಗೆ [ ಮಾಯಾವಾದಿಗಳೆಂಬ ಆನೆಗಳಿಗೆ ]  ಶ್ರೀ ವರದೇಂದ್ರತೀರ್ಥರು ಸಿಂಹಸದೃಶರು!
ಶ್ರೀ ರಾಮ ಶ್ರೀವ್ಯಾಸರ ಅರ್ಚನೆಯ ಬಲದಲ್ಲಿ ನಿರುತ ಸುಖದಲ್ಲಿ ಮ್ಯರೆವ ನಿಮ್ಮನು ಕಂಡು ಪರಿಪರ್ಯಾಶ್ಚರ್ಯಾಯಿತು ಯೆಂದು ಉದ್ಗಾರ ತೆಗೆದಿದ್ದಾರೆ!!
*
" ಶ್ರೀ ವರದೇಂದ್ರ - 2 "
" ಶ್ರೀ ವರದೇಂದ್ರತೀರ್ಥರ ಸಂಕ್ಷಿಪ್ತ ಮಾಹಿತಿ "
ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಚಿನ್ನವಾಗಿ ನಡೆದು ಬಂದ ಸತ್ಪರಂಪರೆಯಾದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾಸಂಸ್ಥಾನಾಧೀಶ್ವರರಾದ ಶ್ರೀ ರಾಘವೇಂದ್ರಸ್ವಾಮಿಗಳವರ ಮಠದ ವೇದಾಂತ ವಿದ್ಯಾ ಸಾಮ್ರಾಜ್ಯಾಧೀಶ್ವರರೂ; ವೇದ - ವೇದಾಂತ - ಶ್ರುತಿ - ಸ್ಮೃತಿ - ಪುರಾಣ - ಇತಿಹಾಸ ಕೋವಿದರಾದ ಶ್ರೀ ವರದೇಂದ್ರತೀರ್ಥರ ಕಿರು ಪರಿಚಯದ ಪ್ರಯತ್ನ ಇಲ್ಲಿದೆ!!
ಹೆಸರು : ವಿದ್ವಾನ್ ಶ್ರೀ ಬಲರಾಮಾಚಾರ್ಯರು
ತಂದೆ : ವಿದ್ವಾನ್ ಶ್ರೀ ವೇಣುಗೋಪಾಲಾಚಾರ್ಯರು
ವಿದ್ಯಾ ಗುರುಗಳು :
ವಿದ್ವಾನ್ ಶ್ರೀ ವೇಣುಗೋಪಾಲಾಚಾರ್ಯರು ಮತ್ತು ಶ್ರೀ ಶ್ರೀನಿವಾಸಾಚಾರ್ಯರು ( ಶ್ರೀ ವಾದೀಂದ್ರತೀರ್ಥರು )
ಗೋತ್ರ : ಗೌತಮ
ವಂಶ : ಷಾಷ್ಠಿಕ
ಇವರು ಶ್ರೀ ರಾಯರ ಪೂರ್ವಾಶ್ರಮ ಪುತ್ರರಾದ ಶ್ರೀ ಲಕ್ಷ್ಮೀನಾರಾಯಣಾಚಾರ್ಯರ ಮಕ್ಕಳಾದ ಶ್ರೀ ಪುರುಷೋತ್ತಮಾಚಾರ್ಯರಿಗೆ.....
ಶ್ರೀ ಶ್ರೀನಿವಾಸಾಚಾರ್ಯರು ಮತ್ತು ಶ್ರೀ ವೇಣುಗೋಪಾಲಾಚಾರ್ಯ ಪುತ್ರರು. 
ಶ್ರೀ ಶ್ರೀನಿವಾಸಾಚಾರ್ಯರೇ ಶ್ರೀ ವಾದೀಂದ್ರತೀರ್ಥರು. .
ಶ್ರೀ ವೇಣುಗೋಪಾಲಾಚಾರ್ಯರಿಗೆ....
ಶ್ರೀ ಪುರುಷೋತ್ತಮಾಚಾರ್ಯರು
ಶ್ರೀ ಬಲರಾಮಾಚಾರ್ಯರು 
( ಶ್ರೀ ಜಗನ್ನಾಥದಾಸರ ವಿದ್ಯಾ ಗುರುಗಳು ) 
ಮತ್ತು 
ಶ್ರೀ ಲಕ್ಷ್ಮೀನಾರಾಯಣಾಚಾರ್ಯರು. 
( ಈ ಮೂವರು ಶ್ರೀ ರಾಯರ ಮರಿ ಮಕ್ಕಳು )
ಮುಂದೆ..... 
ಶ್ರೀ ಪುರುಷೋತ್ತಮಾಚಾರ್ಯರು ( ಶ್ರೀ ವಸುಧೇಂದ್ರತೀರ್ಥರು )
ಶ್ರೀ ಬಲರಾಮಾಚಾರ್ಯರು ( ಶ್ರೀ ವರದೇಂದ್ರತೀರ್ಥರು )
ಶ್ರೀ ಲಕ್ಷ್ಮೀನಾರಾಯಣಾಚಾರ್ಯರು ( ಶ್ರೀ ಭುವನೇಂದ್ರತೀರ್ಥರು )
*
" ಶ್ರೀ ವರದೇಂದ್ರ - 3 "
ಅಂಶ : ಶ್ರೀ ರುದ್ರದೇವರು **
ಆಶ್ರಮ ಗುರುಗಳು : ಶ್ರೀ ವಸುಧೇಂದ್ರತೀರ್ಥರು
ಆಶ್ರಮ ನಾಮ : ಶ್ರೀ ವರದೇಂದ್ರತೀರ್ಥರು **

ವಿದ್ಯಾ ಶಿಷ್ಯರು :
ಶ್ರೀ ಶ್ರೀನಿವಾಸಾಚಾರ್ಯರು 
( ಶ್ರೀ ಜಗನ್ನಾಥದಾಸರು ) 
ಶ್ರೀ ಭುವನೇಂದ್ರತೀರ್ಥರು
ಉತ್ತರಾಧಿಕಾರಿಗಳು  : ಶ್ರೀ ಧೀರೇಂದ್ರತೀರ್ಥರು
ಆಶ್ರಮ ಶಿಷ್ಯರು :  ಶ್ರೀ ಭುವನೇಂದ್ರತೀರ್ಥರು
ಶ್ರೀ ಜಗನ್ನಾಥದಾಸರು...
ಭುವನೇಂದ್ರ ಮುನಿಪ ಎನ್ನ ।
ಅವಗುಣಗಳೆಣಿಸದಲೆ ಅನುದಿನದಿ ಪಾಲಿಪುದು ।। ಪಲ್ಲವಿ ।।
... ವರದೇಂದ್ರ ಯತಿವರ್ಯ ಕರಕಮಲ ಸಂಜಾತ ।
ನಿರುಪಮ ಜಗನ್ನಾಥವಿಠಲ ದೂತ ।
ನೆರೆನೆಂಬಿದೆನೋ ನಿನ್ನ - ಪರಿಪಾಲಿಸು ಎನ್ನ ।
ಮರೆಯಲಾಗದು ಜಿತಸ್ಮರ ಭೂವರಪ್ರವರ ।।
ಅಂಕಿತ : ಶ್ರೀ ಹರಿ ಪ್ರಸಾದಾಂಕಿತ " ವರದೇಂದ್ರಯತಿ "
ಶಿಷ್ಯರು : ಶ್ರೀ ಪ್ರಾಣೇಶದಾಸರು ಮತ್ತು ಅವರ ಶಿಷ್ಯ ಪ್ರಶಿಷ್ಯರು
ಸಮಕಾಲೀನ ಹರಿದಾಸರು :
ಶ್ರೀ ಗುರುಗೋಪಾಲದಾಸರು - ಶ್ರೀ ವರದ ಗೋಪಾಲದಾಸರು - ಶ್ರೀ ತಂದೆ ಗೋಪಾಲದಾಸರು ಮತ್ತು ಅವರ ಶಿಷ್ಯ ಪ್ರಶಿಷ್ಯರು.
*· 
" ಶ್ರೀ ವರದೇಂದ್ರ - 4 "
" ಭಕ್ತಜನ ಮಂದಾರ "
ಶ್ರೀ ವರದೇಂದ್ರತೀರ್ಥರು ಮಹಾ ಮಹಿಮರೂ - ವಿದ್ಯೆಗೆ ಮಾತೃ ಸ್ಥಾನವೆಂದು ಪ್ರಖ್ಯಾತವೂ - ಸಂಪದ್ಭರಿತವೂ ಆದ ಪೂನಾ ಪಟ್ಟಣದಲ್ಲಿ ಖ್ಯಾತ ಪಂಡಿತರೂ - ರಾಜಕೀಯ ನ್ಯಾಯಾಧೀಶರೂ - ಶ್ರೇಷ್ಠ ವಾದ ಕುಶಲರೂ ಆದ ಶ್ರೀ ರಾಮಶಾಸ್ತ್ರಿ ಪ್ರಭುಣೆಯವರನ್ನು 9 ದಿನಗಳ ಕಾಲ ಅವರೊಡನೆ ವಾದ ಮಾಡಿ ಪರಾಜಯಗೊಳಿಸಿ; ದ್ವೈತ ವಿಜಯ ದುಂದುಭಿಯನ್ನು ಮೊಳಗಿಸಿ - ಪಣಬಂಧದಂತೆ ಶ್ರೀ ರಾಮಶಾಸ್ತ್ರಿಗಳ ಮನೆಯನ್ನು ಪೇಶ್ವೆ ರಾಜರ ರಾಜಗುರುತ್ವವನ್ನೂ; ಗ್ರಾಮ ಭೂಮಿಗಳನ್ನು ಪಡೆದು ಅಖಂಡ ಕೀರ್ತಿಗೆ ಪಾತ್ರರಾಗಿ ಪೂನಾ ಪಟ್ಟಣದ ಬೃಂದಾವನದಲ್ಲಿ ವಿರಾಮಾನರಾಗಿ ಸಜ್ಜನ ಭಕ್ತರನ್ನು ಕಲ್ಪವೃಕ್ಷ ಕಾಮಧೇನುವಿನಂತೆ ರಕ್ಷಿಸುತ್ತಿರುವರು!!**

" ಶ್ರೀವರದೇಂದ್ರತೀರ್ಥರು ಶ್ರೀ ಧೀರೇಂದ್ರತೀರ್ಥರಲ್ಲಿ ತೋರಿದ ಮಾತೃವಾತ್ಸಲ್ಯ "
ಶ್ರೀ ವರದೇಂದ್ರತೀರ್ಥರಿಗೆ ಶ್ರೀ ಧೀರೇಂದ್ರತೀರ್ಥರ ಮೇಲೆ ಪ್ರೀತಿ - ಅಂತಃಕರಣ ಮತ್ತು ಮಾತೃವಾತ್ಸಲ್ಯವಿತ್ತು. 
ಕಾರಣ ಶ್ರೀ ಧೀರೇಂದ್ರತೀರ್ಥರು ಶ್ರೀ ರಾಯರ ಮರಿಮೊಮ್ಮಗ - ಶ್ರೀ ವಾದೀಂದ್ರತೀರ್ಥರ ಪೂರ್ವಾಶ್ರಮ ಪುತ್ರರೂ - ಶ್ರೀ ವರದೇಂದ್ರತೀರ್ಥರ ಪೂರ್ವಾಶ್ರಮ ತಮ್ಮಂದಿರು ( ದೊಡ್ಡಪ್ಪನ ಮಕ್ಕಳು ) ಹಾಗೂ ಉದ್ಧಾಮ ಪಂಡಿತರು.
ವಿದ್ಯಾ ಪಕ್ಷಪಾತಿಗಳಾದ ಶ್ರೀ ವರದೇಂದ್ರತೀರ್ಥರು " ತಾಯಿ ಹೇಗೆ ತನ್ನ ಮಗುವನ್ನು ವಾತ್ಸಲ್ಯದಿಂದ ಕಾಣುತ್ತಾಳೋ ಹಾಗೆಯೇ ಶ್ರೀ ಧೀರೇಂದ್ರತೀರ್ಥರಲ್ಲಿ ಅಂತಃಕರಣದ ವಾತ್ಸಲ್ಯ " ತೋರುತ್ತಿದ್ದರು!!
" ಹರಿದಾಸ ಸಾಹಿತ್ಯಕ್ಕೆ ಶ್ರೀ ವರದೇಂದ್ರತೀರ್ಥರ ಕೊಡುಗೆ "
ಶ್ರೀ ವರದೇಂದ್ರತೀರ್ಥರ ಮತ್ತು ಶ್ರೀ ಜಗನ್ನಾಥದಾಸರ ಗುರುಶಿಷ್ಯರ ಬಾಂಧವ್ಯ ಅತಿ ಮಧುರವಾಗಿತ್ತು. 
ಒಮ್ಮೆ ಶ್ರೀ ಜಗನ್ನಾಥದಾಸರು ಸಚ್ಚಾಸ್ತ್ರ ಕೋವಿದರಾದರೂ - ತಮ್ಮಂಥಾ ವಿದ್ಮಣ್ಮಣಿಗಳಿಗೆ ವಿದ್ಯಾ ಗುರುಗಳಾಗಿದ್ದ ಶ್ರೀ ವರದೇಂದ್ರತೀರ್ಥರಲ್ಲಿಗೆ ಬಂದು ಸಾಷ್ಟಾಂಗವೆರಾಗಿ ಕೈ ಜೋಡಿಸಿ ನಿಂತು....
ಸ್ವಾಮೀ! 
ಗೀರ್ವಾಣಾಭಾಷಾ ಕೋವಿದ ಚಕೋರಚಂದ್ರಮರೇ!
ತಾವು ಪಾಮರರಾದ ನಮ್ಮಂಥವರ ಉದ್ಧಾರಾರ್ಥವಾಗಿ " ತಂತ್ರಸಾರ " ವನ್ನು ಕನ್ನಡದಲ್ಲಿ ರಚಿಸಿ ಅನುಗ್ರಹಿಸಬೇಕೆಂದು ಸವಿನಯವಾಗಿ ಪ್ರಾರ್ಥಿಸಿಕೊಂಡರು.
ಆಗ ಗುರುಗಳು ಸಂತೋಷ ಪಟ್ಟು ದಾಸಾ! 
ನೀನು ಕನ್ನಡದಲ್ಲಿ ಕೃತಿಗಳನ್ನು ರಚಿಸುವಲ್ಲಿ ನಮಗೆ ಸಂತೋಷವಾಗಿರುವಲ್ಲಿ ನಿನಗೆ ಸಂಶಯವೇ? 
ನಿನ್ನ ಕೃತಿಗಳು ನಮಗೆ ಪ್ರಿಯವಾದುವುಗಳೇ. 
ನಾವೂ ಕನ್ನಡವನ್ನು ಪ್ರೀತಿಸುತ್ತೇವೆ. 
ಶ್ರೀ ಹರಿಯ ಪ್ರೀತ್ಯರ್ಥವಾಗಿಯೂ - ನಿನ್ನ ಅಭಿಲಾಷೆಯನ್ನು ಪೂರೈಸಲಿಕ್ಕಾಗಿಯೂ ನಾವು " ತಂತ್ರಸಾರ " ವನ್ನು ಕನ್ನಡದಲ್ಲಿ ರಚಿಸುತ್ತೇವೆಂದು ಹೇಳಿ...
ತಂತ್ರಸಾರ ಸಂಗ್ರಹ ( ಕನ್ನಡ ) - ( ಓಂಕಾರ - ಮಾತ್ರ ವರ್ಣಗಳ ಉತ್ಪತ್ತಿ ) ಸೃಷ್ಠಿ ಪ್ರಕರಣ - " ವರದೇಂದ್ರಯತಿ " ಎಂಬ ಹರಿಪ್ರಸಾದಂಕಿತದಲ್ಲಿ ಕೃತಿಗಳನ್ನು ರಚಿಸಿದ್ದಾರೆ.
ಪಾಹಿ ಪಂಕೇರುಹೇಕ್ಷಣಾ ಸರ್ವಕಾಮದಾ ।
ಪಾಹಿ ಪದ್ಮಾಲಯ ನಿಕೇತನ ಸದಾ ।। ಪಲ್ಲವಿ ।।
.... ವರದೇಂದ್ರಯತಿ ರಚಿತ ತಂತ್ರಸಾರವನು ।
ಬರದೋದಿ ಕೇಳಿ ಮೋದಿಪ ಸುಜನರ ।
ವರ ಮೂಲರಾಮ ವೇದವ್ಯಾಸರಿಹಪರದಿ ।
ಕರುಣಿಪರು ಬೇಡಿದಿಷ್ಟಾರ್ಥಗಳನು ।।
ಮಂಗಳ ರಮಾಪತಿಗೆ ಮಂಗಳ ದೃಹಿಣಪಿತಗೆ ।
ಮಂಗಳ ದಶಪ್ರಮತಿ ಮುನಿ ಮಾನ್ಯಗೆ ।
ಮಂಗಳ ಶಿವೇಂದ್ರಾದಿ ಸುರನಿಕರ ಪೂಜ್ಯಗೆ ।
ಮಂಗಳ ಜಗದ್ವಿಲಕ್ಷಣ ಮೂರ್ತಿಗೆ ।।
ಇಪ್ಪತ್ತರೊಂಭತ್ತು ಪದಗಳೆಂಬತಿ ವಿಮಲ ।
ಪುಷ್ಪ ಮಾಲಿಕೆ ಮೂಲರಾಮನಡಿಗೆ ।
ಅರ್ಪಿಸಿದೆ ವೀಸುಮನ ನಾಮವನುದಿನದಲ್ಲಿ ।
ಒಪ್ಪದಿಹ್ಯದೇ ಬುಧರ ಮಸ್ತಕದಲಿ ।।
ಎಂದು ಪದ ರಚನೆ ಮಾಡಿದರು. 
ಈ ಪದ್ಯವನ್ನು ಓದಿದರೆ ಶ್ರೀ ಗುರುಗಳು ಎಷ್ಟು ದಾಕ್ಷಿಣ್ಯಶೀಲರೂ - ನಿಗರ್ವಿಗಳೂ - ಕರುಣಾಳುಗಳೂ ಎಂಬುದು ಗೊತ್ತಾಗುತ್ತದೆ.
ಶ್ರೀ ವರದೇಂದ್ರತೀರ್ಥರ ನೈಜ ಸ್ವಭಾವವನ್ನು ಅರಿಯುವಲ್ಲಿ ಸಹಕಾರಿಯಾದ ಈ ಕೃತಿಯು ಸಿಕ್ಕಿರುವುದುದೇ ನಮ್ಮ ಭಾಗ್ಯ!!
" ಗ್ರಂಥಗಳು "
ದೇವಾಪೂಜಾ ಪೂಜಾ ಪದ್ಧತಿ
" ಪರವಾದಿ ದಿಗ್ವಿಜಯ ಮತ್ತು ಬೃಂದಾವನ ಪ್ರವೇಶ "
ಶ್ರೀ ವರದೇಂದ್ರತೀರ್ಥರು ಸಂಚಾರತ್ವೇನ ಪೂನಾಕ್ಕೆ ದಿಗ್ವಿಜಯ ಮಾಡಿಸಿದರು. 
ಪೇಶ್ವೇಯವರ ಕಾಲದಿಂದಲೂ ವಿದ್ವಜ್ಜನಗಳಿಂದ ತುಂಬಿದ ಪಟ್ಟಣ ಪೂನಾ. 
ಅಲ್ಲಿ ಶ್ರೀ ರಾಮಶಾಸ್ತ್ರಿಗಳೆಂಬ ಉದ್ಧಾಮ ಪಂಡಿತರು. 
ಶ್ರೀ ವರದೇಂದ್ರತೀರ್ಥರಲ್ಲಿ ವಾದ ಮಾಡಿ ಶ್ರೀಗಳವರ ವಾದವನ್ನು ಒಪ್ಪಿಕೊಂಡು ವಾದ ನಿಯಮದ ಪ್ರಕಾರ ತಮ್ಮ ಮನೆಯನ್ನು ಶ್ರೀ ವರದೇಂದ್ರತೀರ್ಥರಿಗೆ ದಾನವಾಗಿ ಕೊಟ್ಟುಬಿಟ್ಟರು.
ಶ್ರೀ ವರದೇಂದ್ರತೀರ್ಥರು ಆ ಮನೆಯನ್ನು ಮಠವನ್ನಾಗಿ ಪರಿವರ್ತಿಸಿ ಅಲ್ಲೇ ವಾಸ ಮಾಡತೊಡಗಿದರು. 
ಆ ಮಠದಲ್ಲಿಯೇ ಶ್ರೀ ವರದೇಂದ್ರತೀರ್ಥರ ಮೂಲ ಬೃಂದಾವನ ವಿರಾಜಮಾನವಾಗಿದೆ!! **

by  ಆಚಾರ್ಯ ನಾಗರಾಜು ಹಾವೇರಿ
      ಗುರು ವಿಜಯ ಪ್ರತಿಷ್ಠಾನ
****
    

No comments:

Post a Comment