ArAdhana: AshADa shudda Chaturthi
Ashrama nAma: shri raghunAtha tIrtharu
Parampare: sOsale vyAsarAja maTa, #22
Ashrama Gurugalu: Sri Lakshmi Narayana Thirtharu
Period: 1700-1755 (55 Years)
Ashrama Shishyaru:
1. Sri Lakshminidhi Tirtharu - entered vrundavana before gurugaLu at Srirangam
2. Sri Jagannatha Thirtharu (Bhashyadeepikacharyaru), Vrundavana @ Tirumakoodalu
sarvasarvaM sahEshAnas
sabhAsu jitavAdirAT |
sarvadA sarvadO bhUyAt raghunAthamunIshvara: ||
सर्वसर्वंसहेशानस्सभासु जितवादिराट् ।
सर्वदा सर्वदो भूयात् रघुनाथमुनीश्वर:॥
ಸರ್ವಸರ್ವಂಸಹೇಶಾನಸ್ಸಭಾಸು ಜಿತವಾದಿರಾಟ್ |
ಸರ್ವದಾ ಸರ್ವದೋ ಭೂಯಾತ್ ರಘುನಾಥಮುನೀಶ್ವರ:||
sarvasarvaMsahEshaanassabhaasu jitavaadiraaT |
sarvadaa sarvadO bhUyaat raGunaathamunIshvara:||
sarvasarvaMsahEshaanassabhaasu jitavaadiraaT |
sarvadaa sarvadO bhUyaat raGunaathamunIshvara:||
Bhashyadeepikacharya’s words on Sheshachandrika charya :
yEnaayaM niraNaayi madhvaguru sad bhaaShyaprakaashaashaya:
praaKaMDi prativaadidarshanagaNa: praabaMdhigurvarNava: |
shiShyEbhya: samadaayi vittamubhayaM praalaMbhividyaasanaM
sOyaM shrIraGunaathayatiraaT shuddhiM vidadhyaanmatE: ||
ಯೇನಾಯಂ ನಿರಣಾಯಿ ಮಧ್ವಗುರು ಸದ್ ಭಾಷ್ಯಪ್ರಕಾಶಾಶಯ:
ಪ್ರಾಖಂಡಿ ಪ್ರತಿವಾದಿದರ್ಶನಗಣ: ಪ್ರಾಬಂಧಿಗುರ್ವರ್ಣವ: |
ಶಿಷ್ಯೇಭ್ಯ: ಸಮದಾಯಿ ವಿತ್ತಮುಭಯಂ ಪ್ರಾಲಂಭಿವಿದ್ಯಾಸನಂ
ಸೋಯಂ ಶ್ರೀರಘುನಾಥಯತಿರಾಟ್ ಶುದ್ಧಿಂ ವಿದಧ್ಯಾನ್ಮತೇ: ||
येनायं निरणायि मध्वगुरु सद् भाष्यप्रकाशाशय:
प्राखंडि प्रतिवादिदर्शनगण: प्राबंधिगुर्वर्णव: ।
शिष्येभ्य: समदायि वित्तमुभयं प्रालंभिविद्यासनं
सोयं श्रीरघुनाथयतिराट् शुद्धिं विदध्यान्मते: ॥
Granthagalu
1. Shesha Tatparya Chandrika (Last Two parts of Chandrika, the first 2 parts being composed by shri vyAsarAja gurusArvabhoumaru)
2. Tantrasara Sangraha Vyakyana (Tatvakarnika)
3. Bruhatee Sahasra Vyakyana (Tatvasaara)
4. Padaartha Viveka
5. Karma Nirnaya Vyakyana
6. Ishavasyopanishad Bhashya Teeka Vyakhyana
7. Gangastotra
How he became SHESHACHANDRIKACHARYA?
Actually his ashrama name is Sri Raghunatha Thirtharu. Sri Vyasarajaru had written the commentary for Brahmasootra Bhashya titled “Tatparya Chandrika” but he had written only for the first two Chapters leaving the last two chapters. When his disciples asked him why he has not completed the Tatparya Chandrika, he had told them that it would be written by another yathi in the parampare itself, quoting “Dashamo Matsamo Bhavet and that he will complete the same”. Sri Raghunatha Tirtharu is the 10th yati in sOsale vyAsarAja maTa after sri vyAsarAjaru and wrote the commentary for the remaining (shEsha) 2 chapters and came to be known as shEsha chandrikAchAryaru. He is treated as equal to Sri Vyasarajaru. This work is Shesha Tatparya Chandrika. It is vyakhyAna roopa of Tatvaprakashika and is also the completion of the work by Sri Vyasarajaru “Tatparya Chandrika”.
TatvakarNika:
It is a vyakyana grantha for Acharya Madhwa’s Tantrasara grantha.
Ishavasyopanishad
Bhashya Teeka vyakyana:
Here he has extracted the quotes from Jayatheertha’s granthas, Chandrikacharya’s granthas, Raghoottama Tirtha’s
Bruhadaranyakopanishad Vyakyana.
Gave the title Bhashyadeepikacharya to his shishyaru, Jagannatha Tirtharu:
Once when some Turushkaas tried to enter the maTa and steal the ornaments and idols, Jagannatha Tirtharu, who was the ashrama shishya of Sheshachandrikacharya, carried the box containing the idols and crossed the Kaveri River and saved it from being snatched by the thieves. But on the way, he got injured (hit by weapon – shastraghata). As such, jagannAtha tIrtharu felt and said he was not eligible to do Gopalakrishna dEvara pooja. He concentrated his time in shastra pravachana, writing granthas like Bhashyadeepika, Sootradeepika, etc. One day, he was writing the Bhashyadeepika grantha, and was tired and sleeping. Sri Raghunatha Tirtharu who saw his shishya, took all the manuscripts and read them. He was very happy and satisfied with the extent and quality of work. He told Jagannatha Tirtharu that there is no such dosha of shastraghata (injury) on him and blessed him that he can do the pooja of Gopalakrishna and gave him the title of “Bhashyadeepikacharya”.
After the great philosopher saint entered Brindavana in Thirumakoodalu, mischief mongers poisoned the mind of the then king, Hyder Ali, who ordered that the BrindAvana be uprooted next day. That night Hyder Ali got a dream in which the entire Srirangapatnam was getting engulfed and Tippu Sultan being swept away. The comfort was provided in the dream itself promising to rescue the entire Srirangapatnam provided the proposal to uproot the brindAvana was given up. The proposal was not only given up but permanent honours were ordered for the Brindavan and the maTa.
shri sesha chandrikAchArya varada gOvindA gOvindA...
shri krishNArpaNamastu...
read more here
Sri Shesha Chandrikacharyaru
click here – KANNADA VERSION – PDF
Click here – ENGLISH Version PDF
Click for Devaranamas on Sheshachandrikacharya
********
info from madhwamrutha.org--->
Sri Sheshachandrikacharya took Ashrama from Sri Lakshmi Narayana Theertha and is Twenty Second saint from Madhwacharya. Below is his brief introduction.
The Tatvavada philosophy was founded as the only correct interpretation of Vedanta philosophy and clearly defined by the 37 monumental works of Acharya Madhwa (1238-1317 AD). The Sarvamula compositions could be broadly divided in three main groups – Sutra Prasthana (based on the Brahma sutras composed by Vedavyasa), Geetha Prasthana (based on Bhagavadgeetha) and Upanishad Prasthana (based on the Upanishads). In addition, Acharya Madhwa also composed several Nirnaya works on the Ithihasa and Purana (Mahabharata and Bhagavatha), Polemical works on specific issues called Prakaranas such as Khandana Thrayas, Epistemology and Ontology, Rituals, comprehensive primers for study of his system like Vishnutatvanirnaya. He had also composed an illustrative commentary on the interpretation of the Vedas – Rig Bhashya. It is remarkable and unique that a founder of a new school could compose all the definitive works of the new system, taking on uncompromisingly, well entrenched and fully defined systems like Advaita and Vishishtadvaita, entirely on the strength of his own work and the prevailing authoritative compositions. It is for this reason that the Sarvamula compositions have served as the final arbiters and defining authority of all philosophical questions pertaining to the school for the 800 years that have elapsed since. Unlike other systems, different variants with differing interpretations of a few key sources have not surfaced in Tatvavada of Madhwa, and all his successors have invariably demonstrated by their explanatory Teekas and Tippanis, the holistic view, total internal consistency and complete agreement with all the recognized authorities of Acharya Madhwa’s statements. It is a measure of his own depth of scholarship and encyclopaedic knowledge base, that a complete understanding and analysis of all his works has never been claimed even by some brilliant minds, who graced the pontifical seats that he and his followers have founded. In his own time, he was described as Vedapravachanacharya, Poornabodha, Sarvajna etc. by erudite scholars who held debates with him and lost.
The very vastness of the field of knowledge covered, not only in Vedas, Vedangas, and Pancharathras, but in Mimamsa, Nyaya, 18 main Puranas and Upapuranas of equal number, Mahabharata and numerous authoritative texts quoted such as Brahma Tarka and taking note of all the definitive compositions of his predecessors of different schools has meant that Acharya Madhwa’s compositions are virtually beyond the capacity of persons with adequate knowledge of Sanskrit and without a teacher to guide them. But on the other hand, a rudimentary understanding was also possible, with the promise of great depths to be sought by diligence, industry and faith. The Teekas of Prachina teekakakaras like Sri Padmanabha Theertha, who had listened to Madhwa’s original expositions and clarified their questions with him directly are also very brief and to the point. It is Sri Jaya Theertha who gave a complete and comprehensive coverage of all the important compositions of Sarvamula, which has now become virtually inseparable with the originals for study, as they have made it possible to understand in greater measure Acharya Madhwa’s compositions. His Teekas also gave the background of each Siddhanta proposition, identifying the opposing viewpoints at issue (Poorva paksha), the supporting authorities, Logical principles for determination of the purport of the texts etc. Eventually, supplementary commentaries (Tippanis) were also composed by succeeding ascetic saints to help a clear and complete understanding of Tatvavada.
Quite naturally, the new school also attracted criticism from others, which needed reasoned rebuttals. A time came, when the total picture had to be fully clarified, and defended against opponents. It was Sri Vyasaraja who took up this formidable task and made the three monumental compositions – Vyasathraya – Tatparya Chandrika, Nyayamrutha and Tarkathandava. This was itself an elaborate effort as all criticism already raised and likely to arise in future had to be taken into account, answered fully, the defects in the opponent’s view points shown, based on his own premises and final conclusions drawn. It needed complete knowledge of not only Tatvavada, but of the other systems also, the epistemological and ontological differences and their effects on the conclusions, the accepted authorities, the Mimamsa doctrines accepted by the contending schools and above all a global picture of the issues involved. Perhaps nothing like it has been attempted anywhere else and one but Sri Vyasaraja could do it. Scholars generally accept that study of Vyasathraya is even more difficult than the direct study of Acharya Madhwa’s compositions, along with its supporting texts and Teekas. Surendranath Dasgupta in his magnum opus – “A history of Indian Philosophy” has this to say – “In my opinion, Jaya Theertha and Vyasa-Theertha present the highest dialectical skill in Indian thought. … The logical skill and depth of acute dialectical thinking shown by Vyasa-Theertha stands almost unrivalled in the whole field of Indian thought”.
The methodology, basic principles, analytical approaches and dispassionate conclusions adopted by Sri Vyasa Theertha has also been appreciated by his opponents, who have opined that his work Nyayamrutha is an excellent, reliable and unbiased source text helpful for understanding Advaita itself, gathering matter scattered over several books and different sources. It became the forerunner of a series of polemical books starting with Advaita siddhi of Sri Madhusudana Saraswati. Unfortunately, Vyasaraja who had lived a full life of 92 years, out of which 72 years were as a head of his Matha could not complete the Tatparya Chandrika after the first two chapters in his life time. When he was asked about it, he replied that it would be done by a successor, who would be of equal competence and who would be tenth in line after him. The person concerned who completed this unique and matchless work of writing the Chandrika composition on the lines of the great Vyasaraja himself, was Sri Raghunatha Theertha, also known as Sheshachandrikacharya. He has done it without blemish, following the footsteps of his predecessor and introducing some improvements of his own and has thus placed Tatvavada itself in an impregnable position. The other works of Sri Raghunatha Yathi are as follows:
- Padarthaviveka – only name is known by references else where
- Thatvakanika – published. Deals with Tanthrasara or rituals
- Commentary on Karma Nirnaya of Madhwa
- Commentary on Brihatheesahasra.
- Commentary on Ishavasyopanishad Bhashya
In all these works, he is shown to be thoroughly familiar with all the compositions of his own school and those of other schools up to his time, and takes up issues of grammar where called for. He quotes from many Mimamsa and Nyaya sources as well as very apt illustrative examples to help easier understanding. His classification of Adhikaranas into Peetikas (Smaller sets dealing with one aspect at a time) along with his practice of summing up his points in Poorvapaksha and Siddhanta in short slokas is exceedingly useful as an aid to recapitulate and memorise the evolution of the logical principles and successive derivations of the philosophical issues. His analysis is specially useful in his showing how each word of Teekacharya’s commentaries is significant in reproducing the correct interpretation of Acharya Madhwa’s statements in different compositions on the same subject as in Anuvyakhyana, Nyayavivarana, Sutra Bhashya and Anubhashya. He demonstrates clearly how Madhwa’s position is consistent, homogenous and without any logical contradiction in all his works.
It is unfortunate that unlike Vyasaraja, no biographical data has been preserved of this great scholar. It is believed that he was born in Gudibande of Kolar district of Karnataka state. He studied in Kashi and became an accomplished scholar at any early age. His very long stay in the pontifical seat for 55 years and painstaking works of literature suggest that he must have taken Sanyasa very early, perhaps as an young lad, like Vyasaraja. His predecessor, Sri Lakshmi Narayana Theertha bears the same name as the Vidyaguru of Sri Vyasaraja – Sripadaraja, was also Lakshmi Narayana Theertha. His successor Sri Jagannata Theertha seems to have been with him for several decades and must have been his Vidya Disciple also, as he has also made a major contribution in writing Bhashyadeepika. It is believed that while he spent most of time, in the pontifical seat in Kumbhakonam, towards the end of his life he came to Srirangapattana and Bannur to see the Ranganathaswamy and Mukhyaprana installed by Sri Vyasaraja. He reached Thrimakuta kshethra near Mysore, where the three rivers Kaveri, Kapila and Sphatika mingle, a couple of days before his end. This place was already noted for the Brahmashwatha tree, the temples of Gunja Narasimha Swamy, and Agasthyeswara, the last named being next to the confluence of the rivers. He decided to leave his mortal body and entrusted his seat to the most deserving Jagannata Theertha and on Ashada Shudha Chathurthi, left for his heavenly abode.
There was a curious incident after his Vrundavana pravesha. The premises of Agasthyeswara was under the control of Shaivites and a few Advaita followers. When his Vrundavana was installed there, near the river bank, they objected and gave a complaint to the ruler Hyderali of the erstwhile Mysore state, who gave a peremptory order that it should be shifted away. The local Amildar however did not react immediately. The next day, Hyderali saw a dream, where his son Tippu was drowning in a flooded Kaveri river. None of his servants were prepared to get into the swift currents to save him. He saw the big Aswatha tree and a saint sitting beneath meditating. Hyderali begged him to save his son, in his own Urdu language. The saint did so effortlessly, by swimming in the fast river currents, and brings the young boy back to the shore. Next day, he sent for Poornaiyya, his Dewan and asked him about the significance of his dream. Poornaiyya knew about the greatness of Sri Sheshachandrikacharya already and explained that this saint of Hyderali dream was none other than the famous ascetic. Poornaiyya also explained that he had not intervened in the earlier dispute about his Vrundavana location as the Nawab should not consider him as partisan to his own sect. finally Hyderali rescinded his earlier order and instead allotted the adjacent land to the Vrundavana itself and got a small Mantapa constructed next to it for use of worshippers. Recently, at the time of Sri Vidyapayonidhi Theertha, the vacant place was used to construct a big hall where the Vrundavana is housed along with other Vrundavanas of Srinatha Theertha and Sri Lakshmivallabha Theertha and installation of Mukhyaprana.
There is also a Stotra composed by Sri Vidya Rathnakara Theertha with 18 stanzas, describing his achievements. It is seen that performance of Sevas at the location by aspirants gives the desired results in the same manner as in Manthralaya or Navavrundavana.
After handing over mahasamsthana to Sri Jagannata Theertha, he entered Vrundavana at Tirumakoodalu.
*********
“SHESHACHANDRIKA” –Actually his ashrama name is Sri Raghunatha Tirtharu.
Sri Raghunatha Tirtharu is the 10th yathi after Sri Vyasarajaru, and he is treated as equal to Sri Vyasarajaru and as he wrote the remaining (Shesha) last the parts of Chandrika he is called as Sheshachandrika charyaru.
Shesha Tatparya Chandrika – This is vyakyana roopa of Tatvaprakashika and is also the completion of the work by Sri Vyasarajaru's “Tatparya Chandrika”. As he wrote the grantha to complete the Vyasarajaru’s work, which enabled the Madhwa parampare to understand Sutraprastana in detail, he is given the title “Sheshachandrika charya”.
TatvakarNika – It is a vyakyana grantha for Acharya Madhwa’s Tantrasara grantha.
Ishavasyopanishad Bhashya Teeka vyakyana – Here he has extracted the quotes from Sri Jayatheertha’s granthas, Chandrikacharya’s granthas, Raghoottama Tirtha’s Bruha-daranyakopanishad Vyakyana.
Similarity between Chandrikacharya & Sheshachandrikacharya:
– Both have vidya guru as Sri Lakshminarayana Tirtharu.
Sri Vyasarajaru had Sri Lakshminarayana Muni, who became Sripadarajaru.
Info : Sumadhwaseva
ಶ್ರೀಂ ಶ್ರೀ ಕಂ ಕಪಿಲಾಯ ನಮಃ
ಶ್ರೀಮದ್ವ್ಯಾಸರಾಜ ಮಠದ, 17ನೇ ಶತಮಾನದ ಯತಿಗಳಾದ, ಶ್ರೀ ಲಕ್ಷ್ಮೀನಾರಾಯಣತೀರ್ಥರ ಶಿಷ್ಯರೂ, ಶ್ರೀ ಭಾಷ್ಯದೀಪಿಕಾಚಾರ್ಯರ ಗುರುಗಳೂ, ಶ್ರೀ ಚಂದ್ರಿಕಾಚಾರ್ಯರ ಬೃಹತ್ ಗ್ರಂಥವಾದ ತಾತ್ಪರ್ಯಚಂದ್ರಿಕಾ ವನ್ನು ಪೂರ್ಣಮಾಡಿ (ಶ್ರೀ ಚಂದ್ರಿಕಾಚಾರ್ಯರು ತಿಳಿಸಿದಂತೆ) ಶೇಷಚಂದ್ರಿಕಾಚಾರ್ಯರೆಂದೆ ಖ್ಯಾತರಾದ ಶ್ರೀ ರಘುನಾಥತೀರ್ಥರ ಆರಾಧನಾ ಮಹೋತ್ಸವ ಇಂದಿನಿಂದ ಮೂರುದಿನ, ನಮ್ಮ ತಿ. ನರಸೀಪುರದ ತಿರುಮಕೂಡಲಿನಲಿ..
ಹಾಗೆಯೇ ಶ್ರೀ ರಾಯರ ಮಠದ 19ನೇ ಶತಮಾನದ ಯತಿಗಳು, ಶ್ರೀ ಸುಕೃತೀಂದ್ರತೀರ್ಥರ ಶಿಷ್ಯರು, ಶ್ರೀ ಸುವೃತೀಂದ್ರತೀರ್ಥರ ಗುರುಗಳು, ಮಾಘಮಾಸದಲ್ಲಿಯೂ ಮಳೆಯನ್ನು ತರಿಸಿದ ಮಹಾನ್ ಚೇತನರೂ, ಬಾಲ ಚಕ್ರವರ್ತಿ ಎಂದು ಹೈದರಾಬಾದ್ ನವಾಬಿನಿಂದ ಶ್ಲಾಘಿತರಾದ , ಉಡುಪಿಯಲ್ಲಿ ರಾಯರ ಮೃತ್ತಿಕಾ ವೃಂದಾವನವನ್ನು ಪ್ರತಿಷ್ಠೆ ಮಾಡಿದ ಶ್ರೀ ಸುಶೀಲೇಂದ್ರತೀರ್ಥರ ಆರಾಧನಾ ಮಹೋತ್ಸವ ಇಂದು..
ಶ್ರೀ ಯತಿದ್ವಯರ ಅನುಗ್ರಹ ಸದಾ ನಮ್ಮ ಎಲ್ಲರಮೇಲಿರಲಿ ಎಂದು ಪ್ರಾರ್ಥನೆಮಾಡುತ್ತಾ....
***
ಪ್ರಾರ್ಥಿಸುವೆ ರಘುನಾಥತೀರ್ಥರ
ಪ್ರಾರ್ಥಿಸುವೆ ಪುರುಷಾರ್ಥಪ್ರದರ ಪ
ಸಾರ್ಥಕವಾಗಲು ಪಾರ್ಥಿವ ದೇಹವು
ಜಗದಲಿ ಕೀರ್ತಿಗಳಿಸಿದವರ ಅ.ಪ
ನೇದೃಶಂ ಸ್ಥಲಿಮಲಂ ಶಮಲಘ್ನಂ
ನಾಸ್ಯತೀರ್ಥಂ ಸಲಿಲಸ್ಯಸಮಂ ವಾಃ
ನಾಸ್ತಿ ವಿಷ್ಣುಂ ಸದೃಶಂ ನನುದೈವಂ
ಸತ್ಯ ವಚನಗಳಿವೆಂದು ಸೂಚಿಸುತ
ಆಸ್ತಿಕ ಜನಮನ ರಂಜಕ ತ್ರಿಮಕುಟ
ಕ್ಷೇತ್ರನಿವಾಸ ಪವಿತ್ರತಮ ಚರಿತರ 1
ವ್ಯಾಸರಾಜ ಗುರುವರ್ಯ ರಚಿತ ತಾ
ತ್ಪರ್ಯ ಚಂದ್ರಿಕಾ ಗ್ರಂಥವನು
ವಾಸುದೇವ ನರಹರ್ಯನುಗ್ರಹದಿ
ಉರ್ವರಿತವ ವಿರಚಿಸಿ ಮೆರೆದ
ಶೇಷಚಂದ್ರಿಕಾಚಾರ್ಯರೆಂಬೊ ಗುರು
ವ್ಯಾಸರಾಜರ ಪರಾವತಾರರ 2
ರಾಗ ದ್ವೇಷಗಳ ತೊರೆಯುತ ತ
ನ್ನನು ರಾಗದಿಂದ ಭಜಿಸುವ ಜನಕೆ
ಭೂಗಕಲ್ಪ ತರುವಂತೆ ಅರಿಷ್ಠವ ನೀಗಿ
ಸಾಧು ಭೋಗಗಳೀವ
ಯೋಗಿಜನ ಮನೋನಯನ ಪ್ರಸನ್ನ ಶ್ರೀ
ರಾಘವೇಂದ್ರರಪರಾವತಾರರ 3
********
2019 july 6
ಆಷಾಢ ಶುದ್ಧ ಚತುರ್ಥಿ ( ಚೌತಿ ) - ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಶೇಷಚಂದ್ರಿಕಾಚಾರ್ಯರ ಆರಾಧನಾ ಮಹೋತ್ಸವ - ತಿರುಮಕೂಡಲು "
ಶ್ರೀ ರಘುನಾಥತೀರ್ಥರ or ಶ್ರೀ ಶೇಷಚಂದ್ರಿಕಾಚಾರ್ಯರ ಕಾಲ : 1700 - 1755
ಶ್ರೀ ರಘುನಾಥತೀರ್ಥರ ಆಶ್ರಮ ಗುರುಗಳು " ಶ್ರೀ ಲಕ್ಷ್ಮೀನಾರಾಯಣ ತೀರ್ಥರು.
ಶ್ರೀ ರಘುನಾಥತೀರ್ಥರ ಆಶ್ರಮ ಶಿಷ್ಯರು " ಶ್ರೀ ಭಾಷ್ಯದೀಪಿಕಾಚಾರ್ಯರು ( ಶ್ರೀ ಜಗನ್ನಾಥತೀರ್ಥರು )
ಶ್ರೀ ರಘುನಾಥತೀರ್ಥರು ಆಷಾಢ ಶುದ್ಧ ಚತುರ್ಥಿ ತಿರಮಕೂಡಲಿನಲ್ಲಿ ಬೃಂದಾವನಸ್ಥರಾದರು!!
ಶ್ರೀ ಭಾಷ್ಯದೀಪಿಕಾಚಾರ್ಯರು...
ಸರ್ವಂ ಸರ್ವಂ ಸಹೇಶಾನಃ
ಸುಭಾಸು ಜಿತವಾದಿರಾಟ್ ।
ಸರ್ವದಾ ಸರ್ವದೋ
ಭೂಯಾದ್ರಘುನಾಥ ಮುನೀಶ್ವರಃ ।।
" ಶ್ರೀ ಚಂದ್ರಿಕಾಚಾರ್ಯರ ಚಿಕ್ಕ ಆವೃತ್ತಿ - ಶ್ರೀ ಶೇಷ ಚಂದ್ರಿಕಾಚಾರ್ಯರು "
" ಶ್ರೀ ಶೇಷಚಂದ್ರಿಕಾಚಾರ್ಯರ ಕುರಿತು ಹೇಳುವಾಗ ಶ್ರೀ ಚಂದ್ರಿಕಾಚಾರ್ಯರ ವಿದ್ಯಾ ವೈಭವ - ಗ್ರಂಥಗಳ ವೈಶಿಷ್ಟ್ಯ ಸ್ಮರಣೆ ಮಾಡಲೇಬೇಕಾದ ಅವಶ್ಯ ಕರ್ತವ್ಯ "
" ಶೇಷ ಚಂದ್ರಿಕಾ " ರಚನೆಯ ಹಿನ್ನೆಲೆ :
ವೇದಾಂತ ವಿಶ್ವದಲ್ಲಿ ಶ್ರೀ ವ್ಯಾಸರಾಜರದ್ದು ಒಂದು ವಿಕ್ರಮಾಂಕ ಚಲಿತ.
ಅವರ ಲೋಕೋತ್ತರ ಪಾಂಡಿತ್ಯದ ಪ್ರಭಂಜನ ರಭಸಕ್ಕೆ ಪೊಳ್ಳು ಪಂಡಿತರ ಜೊಳ್ಳು ವಾದಗಳೆಲ್ಲಾ ಧೂಳಿಪಟವಾಗಿ ಹಾರಿ ಹೋದವು.
ಆಧ್ಯಾತ್ಮ ಪ್ರಪಂಚದಲ್ಲಿ ಶ್ರೀ ಪರಶುರಾಮನಂತೆ ಶ್ರೀ ವ್ಯಾಸರಾಜ ಗುರುಸಾರ್ವಭೌಮರು.
ತಮ್ಮ ಶಾಸ್ತ್ರದ ಸಾಣಿಗೆ ತೀಡಿ ಹದನಗೊಂಡ ನುಡಿಗೊಡಲಿಯಿಂದ ವೈಯ್ಯಾಯಿಕ, ಪ್ರಭಾಕರ, ನೈಯಾಯಿಕ, ಮಾಯಾವಾದಿ ಮುಂತಾದ ನಾನಾ ಮತೀಯರ ವಾದಾನುವಾದಗಳನ್ನೆಲ್ಲಾ ತುಳಿದು ಹಾಕಿದರು.
" ಮಧ್ವ ಮತ " ದ " ಜಯಭೇರಿ " ಯನ್ನು ಎಲ್ಲೆಡೆಗೆ ಮೊಳಗಿಸಿದರು.
ಶ್ರೀ ವ್ಯಾಸರಾಜರ " ತರ್ಕತಾಂಡವ " ಗ್ರಂಥವನ್ನು ತೆಗೆದು ನೋಡಿದರೆ ಆಗಮದ ಭದ್ರ ಬುನಾದಿಯಿಲ್ಲದೆ ಬರೀ ಯುಕ್ತಿ ಮತ್ತು ಬುದ್ಧಿ ಶಕ್ತಿಗಳ ಬಲದಿಂದ ಕಟೆದು ನಿಲ್ಲಿಸಿದ ವೈಯ್ಯಾಯಿಕರ ಮಾತಿನ ಕೋಟೆಗಳೆಲ್ಲವೂ ಮಂಜಿನ ಮಹಡಿಗಳಂತೆ ಒಂದೊಂದೇ ವಾಸ್ತವಿಕ ವಿಚಾರ ರಶ್ಮಿಗಳಿಂದ ಕುಸಿದು ಕುಪ್ಪಳಿಸಿ ಹೋಗುತ್ತಿವೆಂಬುದನ್ನು ಕಾಣಬಹುದು.
ಕಾಶೀ ನವದ್ವೀಪದ ಅಂದಿನ ನವ್ಯ ನ್ಯಾಯದ ನಿರತಿಶಯ ಕೌಶಲದ ಕಿರೀಟವನ್ನೇ ಹೊತ್ತ ಪಕ್ಷಧರಮಿಶ್ರಾದಿ ಪಂಡಿತರು ಶ್ರೀ ವ್ಯಾಸರಾಜರಿಂದ ನ್ಯಾಯಶಾಸ್ತ್ರದಲ್ಲೇ ಸೋತು ಶ್ರೀ ವ್ಯಾಸರಾಜರ ವಿದ್ಯಾ ಗುರುಗಳಾದ ಶ್ರೀ ಶ್ರೀಪಾದರಾಜರ ಊರಾದ ಮುಳಬಾಗಿಲ ವರೆಗೆ ಬಂದು ತಮ್ಮ ಸೋಲನ್ನು ಒಪ್ಪಿ ಶರಣಾತರಾಗಿ " ವ್ಯಾಸರಾಜರೆಂದರೆ ಬರೀ ವ್ಯಾಸರಾಜರಲ್ಲ! ಸಾಕ್ಷಾತ್ ವೇದವ್ಯಾಸರೇ " ಎಂದು ನುಡಿದು ಶ್ರೀ ವ್ಯಾಸರಾಜರ ಪಾಂಡಿತ್ಯದ ಬಗ್ಗೆ ತಮಗಿರುವ ಅಗಾಧ ಶ್ರದ್ಧೆಯನ್ನು ಅವರ ವಿದ್ಯಾ ಗುರುಗಳಾದ ಶ್ರೀ ರ್ಶ್ರೀಪಾದರಾಜರ ಮುಂದೆ ವ್ಯಕ್ತ ಮಾಡಿ ಹೋದನು.
ಆದರೆ ಶ್ರೀ ವ್ಯಾಸರಾಜರ ಇನ್ನೊಂದು ಗ್ರಂಥವಾದ " ನ್ಯಾಯಾಮೃತ " ದ ವಿಷಯವೇ ಬೇರೆ.
ಅದೊಂದು ತರ್ಕಕಠೋರವಾದ ಅದ್ವೈತ ಕುಠಾರ.
ಅದು ಮಾಯಾವಾದಿಗಳ ಮತ - ಮಾತು - ಮತಿ ರೀತಿಗಳ ಮೂಲ ನಾಲಗಳನ್ನೇ ಕಡೆದು ಕೊಚ್ಚಿ ಹಾಕಿಬಿಡುತ್ತದೆ.
ಇಂದಿಗೂ ಅದ್ವೈತಿಗಳಿಗೆ " ನ್ಯಾಯಾಮೃತ " ವೆಂದರೆ ಒಂದು ಸಿಂಹಸ್ವಪ್ನವಿದ್ದಂತೆ.
ನ್ಯಾಯಾಮೃತದಲ್ಲಿ ಶ್ರೀ ವ್ಯಾಸರಾಜರು ಹಾಕಿದ ಪೇಚಿನಿಂದ ಬಿಡಿಸಿಕೊಳ್ಳಲಿಕ್ಕಾಗಿ ಮಧುಸೂದನ ಸರಸ್ವತಿಯೇ ಮೊದಲಾದ ಸ್ಮಾರ್ತ ಜಗಜಟ್ಟಿಗಳು 500 ವರ್ಷಗಳಿಂದಲೂ ಪ್ರಯತ್ನ ಮಾಡುತ್ತಲೇ ಇದ್ದಾರೆ.
ಆದರೆ ಶ್ರೀ ವ್ಯಾಸರಾಜರ ನುಡಿಯ ಹಿಡಿತ, ಯುಕ್ತಿಯ ಪಟ್ಟಬಂಧಗಳು ದುರ್ವಿಮೋಚಗಳಾಗಿವೆ ಎಂಬುದು ಗೊತ್ತಾಗುತ್ತದೆ.
" ನ್ಯಾಯಾಮೃತ ಗ್ರಂಥ " ಇರುವ ವರೆಗೂ ಅದ್ವೈತ ಪಂಥವು ತಲೆಯೆತ್ತುವದೇ ಸಾಧ್ಯವಿಲ್ಲ!!
ಇನ್ನು ಶ್ರೀ ವ್ಯಾಸರಾಜರ ಮತ್ತೊಂದು ಗ್ರಂಥ " ಚಂದ್ರಿಕಾ ".
ಇದು ಶ್ರೀ ವ್ಯಾಸರಾಜರ ಕಲಶ ಕೃತಿ ಹಾಗೂ ಅರಸು ಕೃತಿ..
ಆದುದರಿಂದಲೇ ಶ್ರೀ ವ್ಯಾಸರಾಜರಿಗೆ " ಚಂದ್ರಿಕಾಚಾರ್ಯ " ರೆಂದು ಹೆಸರು ಬಂದಿತು.
" ಚಂದ್ರಿಕೆ " ಯು ಶ್ರೀಮದಾಚಾರ್ಯರ ಸರ್ವಜ್ಞತ್ವಕ್ಕೆ ಹಿಡಿದ ಒಂದು ರನ್ನಗನ್ನಡಿ.
ಚಂದ್ರಿಕೆಯಲ್ಲಿ ಸೂತ್ರಕಾರರಾದ ಶ್ರೀ ವೇದವ್ಯಾಸರ ಹೃದಯಾಕಾಶದಲ್ಲಿ ತೊಳಗುವ ಪ್ರತಿಯೊಂದು ಭಾವೋನ್ಮೇಷವೂ ಸಕಲಾವಿಕಲವಾಗಿ ಪ್ರತಿಬಿಂಬಿತವಾಗಿವೆ ಮತ್ತು ಶಂಕರ, ರಾಮಾನುಜ ಮುಂತಾದ ಭಾಷ್ಯಕಾರರೆಲ್ಲರೂ ಶ್ರೀ ಬಾದರಾಯಣೀಯ ಆಶಯಾಕೂತಗಳಿಂದ ಎಷ್ಟು ದೂರದಲ್ಲಿದ್ದಾರೆ ಇತರ ಭಾಷ್ಯಕಾರರು ಅಡ್ಡದಾರಿ ಹಿಡಿದು ಯಾವ ಯಾವ ಹಳ್ಳಕೊಳ್ಳ ದರಿ ಕೊರಿಗಳಲ್ಲಿ ಬಿದ್ದಿದ್ದಾರೆ ಎಂಬುದೆಲ್ಲವೂ ಸ್ಪಷ್ಟವಾಗಿಯೇ ಕಂಡು ಬರುತ್ತದೆ.
ಮಧ್ವ ಭಾಷ್ಯೆಯು ಮಾತ್ರ ಸೂತ್ರದ ಹೆಜ್ಜೆಗೆ ಕಟ್ಟಿದ ಗೆಜ್ಜೆಯೋ ಏನೋ ಎನ್ನುವಷ್ಟು ವ್ಯಾಸ ಧ್ವನಿಯನ್ನೇ ಪ್ರತಿಧ್ವನಿಸುತ್ತಾ ಹೊರಟಿದೆ ಎನ್ನುವುದು " ಮಧ್ವ ಭಾಷ್ಯದ ಉಪನ್ಯಾಸವೆಂದರೆ ವ್ಯಾಸ ಹೃದಯದ ವಾಸ್ತವಿಕ ವಾಗ್ವಿಲಾಸ " ಎಂಬುವುದು ಚಂದ್ರಿಕೆಯ ಪುಟ ಪುಟಗಳಲ್ಲಿಯೂ ಕಂಡು ಬರುತ್ತದೆ.
ಪ್ರತಿ ಅಧಿಕಾರಣದಲ್ಲೂ ಎದ್ದು ಕಾಣುತ್ತದೆ.
ಶ್ರೀ ಮಧ್ವ ಸಿದ್ಧಾಂತಕ್ಕೆ ಶ್ರೀ ಆಚಾರ್ಯರ ನಂತರ ಮೌಲಿಕವಾದ ಕಾಣಿಕೆಯಿಟ್ಟ ಮಹನೀಯರಲ್ಲಿ ಶ್ರೀ ಟೀಕಾಚಾರ್ಯರು ಅಗ್ರಗಣ್ಯರಾಗಿದ್ದಾರೆ.
ಶ್ರೀ ವ್ಯಾಸರಾಜರು ದ್ವಿತೀಯರಾಗಿಯೂ ಅದ್ವಿತೀಯರಾಗಿದ್ದಾರೆ.
ಮುಂದೆಲ್ಲವೂ " ವ್ಯಾಸೋಚ್ಛಿಷ್ಟಮಿದಂ ಜಗತ್ " .....
ಚಂದ್ರಿಕಾ ಗ್ರಂಥವು ಸ್ವತಂತ್ರ ಕೃತಿಯಲ್ಲ. ಶ್ರೀ ವೇದವ್ಯಾಸರ ಬ್ರಹ್ಮಸೂತ್ರಕ್ಕೆ - ಶ್ರೀಮದಾಚಾರ್ಯರು ಬರೆದ ಭಾಷ್ಯಕ್ಕೆ - ಶ್ರೀ ಜಯತೀರ್ಥರು " ತತ್ತ್ವಪ್ರಕಾಶಿಕಾ " ಎಂಬ ಟೀಕಾ ಗ್ರಂಥವನ್ನು ಬರೆದಿದ್ದಾರೆ.
ಆ ಶ್ರೀ ಜಯತೀರ್ಥರ ತತ್ತ್ವಪ್ರಕಾಶಿಕೆಗೆ ಚಂದ್ರಿಕಾ ಟಿಪ್ಪಣಿಯಾಗಿದೆ.
ಇದನ್ನು ಬಾಯಿ ಬಿಟ್ಟು ಹೇಳಬೇಕಾಗುತ್ತದೆ.
ಇಲ್ಲದಿದ್ದರೆ ಇದೊಂದು ಸ್ವತಂತ್ರ ಗ್ರಂಥವೇ ಎಂದು ಯಾರಿಗಾದರೂ ಎನಿಸಲಿಕ್ಕೆ ಸಾಕು.
ಇದೇ ಇದರ ವೈಶಿಷ್ಟ್ಯ!
ಈ ಚಂದ್ರಿಕೆಯಿಂದ ಶ್ರೀ ಜಯತೀರ್ಥರು " ಸರ್ವಜ್ಞ ಕಲ್ಪರೇ " ಎಂಬ ಮಾತು ಸಿದ್ಧಾಂತಿತವಾಗುತ್ತದೆ ಹಾಗೂ ಶ್ರೀ ಟೀಕಾಚಾರ್ಯರು ಗುರುಕಾರುಣ್ಯ ಸರಣಿಯ ಪ್ರಪತ್ತಿಯಿಂದ ಪಡೆದ ಅಭೂತಪೂರ್ವವಾದ ಪ್ರತಿಭಾ ವಿಲಾಸ ಹಾಗೂ ಪಾಂಡಿತ್ಯ ಪ್ರಕಾಶಗಳ ವಿರಾಟ್ ಸ್ವರೂಪದ ಸಮ್ಯಗ್ ದರ್ಶನವೂ ಆಗುತ್ತದೆ ಮತ್ತು ಶ್ರೀ ಮಧ್ವಾಚಾರ್ಯರ ಮಾತುಗಳೆಂದರೆ ವೇದ ಶಾಸ್ತ್ರ ಪುರಾಣಾದಿ ಪ್ರಮಾಣ ಕುಂಡಗಳಲ್ಲಿ ಹೂತು ನಿಂತ ಪ್ರಮೇಯ ಪುಷ್ಪ ವಾಟಿಕೆಯೇ ಸರಿ ಎಂಬ ವಿಷಯವು ಪ್ರತಿಯೊಬ್ಬನಿಗೂ ಖಾತರಿಯಾಗುತ್ತದೆ.
ಆದುದರಿಂದಲೇ ಶ್ರೀ ಮಂತ್ರಾಲಯ ಪ್ರಭುಗಳು....
ಟೀಕಾ ಗಾಂಭೀರ್ಯಮುದ್ಧರ್ತು೦
ವ್ಯಾಸತೀರ್ಥಾದಯಃ ಕ್ಷಮಾ: ।
ಶ್ರೀ ಜಯತೀರ್ಥರ ಟೀಕಾ ಗ್ರಂಥದ ಗಾಂಭೀರ್ಯವನ್ನು ತಿಳಿದು ಅದನ್ನು ಎತ್ತಿ ತಿಳಿಸಬೇಕೆಂದರೆ ಶ್ರೀ ವ್ಯಾಸರಾಜರೊಬ್ಬರೇ ಸಮರ್ಥರು ಎಂದು ಪ್ರಾಂಜಲ ಪಣದಿಂದ ನುಡಿದಿದ್ದಾರೆ.
ಈ ಚಂದ್ರಿಕೆಯಲ್ಲಿ ಶ್ರೀ ವ್ಯಾಸರಾಜರು ಶ್ರೀ ಟೀಕಾಚಾರ್ಯರ ಮತ್ತು ಶ್ರೀ ಮಧ್ವಾಚಾರ್ಯರ ಮತ ಹಾಗೂ ಮತಿಗಳ ಮಹತೋ ಮಹೀಯಸ್ತ್ವವನ್ನು ಸರ್ವತಃ ಶ್ರೇಷ್ಠತ್ವವನ್ನೂ ಮನಗಾಣಿಸಿ ಭಾಮತೀ - ವಿವರಣ - ಶಾರೀರ ಭಾಷ್ಯ - ಶ್ರೀಭಾಷ್ಯಾದಿ ಕರ್ತೃಗಳಾದ ಶ್ರೀ ಶಂಕರಾಚಾರ್ಯ, ಶ್ರೀ ರಾಮಾನುಜಾಚಾರ್ಯ ಮತ್ತು ಅವರ ಶಿಷ್ಯಾನುಯಾಯಿ ಮುಂತಾದವರು ಪ್ರತಿಪಾದಿಸಿದ ಮತಗಳೆಲ್ಲ " ಸರ್ವಾಪದ್ಧ " ಎಂದು ಖಂಡಿಸಿ ಅವರ ವಿಧಾನಗಳನ್ನೆಲ್ಲಾ ತಲೆಕೆಳಗಾಗುವಂತೆ ಮಾಡಿ ಅವರ ಮತಿಗಳೆಲ್ಲ ಶೀರ್ಷಾಸನ ಹಾಕುವಂತೆ ಮಾಡಿದ್ದಾರೆ.
ಈ ವಿಷಯದಲ್ಲಿ ಶ್ರೀ ವ್ಯಾಸರಾಜರು ಹಿಡಿದ ಹಾದಿಯೇ ಬೇರೆ. ಸೈದ್ಧಾಂತಿಕ ವಿಷಯೋವಿನ್ಯಾಸ ನಿರೂಪಣಾದಿಗಳಲ್ಲಿ ಅವರು ಶ್ರೀ ಟೀಕಾಚಾರ್ಯರು ಮತ್ತು ಶ್ರೀ ಮಧ್ವಾಚಾರ್ಯರ ಕ್ರಮವನ್ನೇ ಅನುಸರಿಸಿದರೂ ವಿಪಕ್ಷ ಖಂಡನದ ಪ್ರಸಂಗಗಳಲ್ಲಿ ಅವರು ಹೂಡುವ ಹೂಟವೇ ಬೇರೆ.
ಮಾಯಾವಾದಿ ಮೃಗಗಳನ್ನು ಹಿಡಿಯಲು ಶ್ರೀ ಚಂದ್ರಿಕಾಚಾರ್ಯರು ತೀರಾ ಹೊಚ್ಚ ಹೊಸದಾದ ವ್ಯಾಸವಾಗುರಾಗಗಳನ್ನೇ ರಚಿಸಿದ್ದಾರೆ.
ಹೀಗೆ ಯಾವ ಪ್ರಾಚೀನ ಆಚಾರ್ಯರ ವಾಚೋಕ್ತವಾಗುವ ಮಹಾ ಚಾತುರ್ಯದ ಕೆಲ ಹಲವಾರು ಮಾತಿನ ಹಿಡಿತ,
ಭಾವದ ಬಂಧ ಯುಕ್ತಿಯ ಮಲಕು, ಶಾಸ್ತ್ರದ ತಳಕು, ತರ್ಕದ ತಿರುಗಣಿ, ಪ್ರಮಾಣದ ಪಟ್ಟಿವರಸೆಗಳನ್ನು ನಾವು ಚಂದ್ರಿಕೆಯಲ್ಲಿ ಕಾಣಬಹುದು.
ಈ ಎಲ್ಲ ಯುಕ್ತಿ ಚಾತುರಿ ಮತ್ತು ಉಕ್ತಿ ವೈಖರಿಯ ಹಿಂದೆ ಗಟ್ಟಿಯಾದ ಪ್ರಮಾಣದ ನೆಲೆಗಟ್ಟು,
ಅನುಭವದ ಆಧಾರ, ಶಾಸ್ತ್ರೀಯ ಸತ್ಸಂಪ್ರದಾಯಗಳ ಬಲಿಷ್ಠ ಬೆಂಬಲ ಮತ್ತು ದಾರ್ಶನಿಕ ಪ್ರಪಂಚದ ನಿಯಮ ನಿಬಂಧನೆಗಳ ಹಿನ್ನೆಲೆಯೂ ಅಬಾಧಿತವಾಗಿ ಇದ್ದುದರಿಂದಲೇ ಈ ಶ್ರೀ ವ್ಯಾಸ ವಾಗ್ ವ್ಯೂಹಗಳೆಲ್ಲ ವಿದ್ವನ್ಮಾನ್ಯವೂ, ವಿಮತೀಯರಿಗೂ ಏನೂ ಹೆಸರಿಡಲು ಬಾರದಂತಾವುಗಳು ಆಗಿವೆ.
" ದಶಮೋತತ್ಸಮಃ " ಎಂಬ ಪದಕ್ಕೆ ಅರ್ಥ ಹೀಗಿದೆ...
ಶ್ರೀ ಚಂದ್ರಿಕಾಚಾರ್ಯರು ಅಪ್ಪಣೆ ಕೊಡಿಸಿದ " ದಶಮೋಮತ್ಸಮಃ " ಎಂಬ ವಚನಾನುಸಾರ...
ಶ್ರೀ ವ್ಯಾಸರಾಜರ ಶಿಷ್ಯ ಪರಂಪರೆಯಲ್ಲಿ ಶ್ರೀ ರಘುನಾಥತೀರ್ಥರು ಹತ್ತನೆಯವರು.
ಶ್ರೀ ರಘುನಾಥತೀರ್ಥರು ಜ್ಞಾನಿಗಳು.
ದ್ವೈತ ವೇದಾಂತಕ್ಕೆ ವಜ್ರ ಕವಚದಂತಿರುವ ವ್ಯಾಸತ್ರಯಗಳಲ್ಲೊಂದಾದ " ತಾತ್ಪರ್ಯ ಚಂದ್ರಿಕಾ " ಎಂಬ ಗ್ರಂಥದ ಅವಶಿಷ್ಟ ಭಾಗವೆಂದರೆ " ತತ್ತ್ವಪ್ರಕಾಶಿಕೆ " ಯ ಮೂರು - ನಾಲ್ಕನೆಯ ಅಧ್ಯಾಯಗಳ ವ್ಯಾಖ್ಯಾನ ಭಾಗವನ್ನು ರಚಿಸುವವರು.
ಆ ಭಾಗಕ್ಕೆ " ಶೇಷ ಚಂದ್ರಿಕಾ " ಎಂದು ಹೆಸರು.
" ಶೇಷ ಚಂದ್ರಿಕಾ " ಸುಮಾರು 20000 ಗ್ರಂಥಗಳನ್ನೊಳಗೊಂಡಿರುವ ದೊಡ್ಡ ಗ್ರಂಥವು.
" ತತ್ತ್ವಪ್ರಕಾಶಿಕೆ " ಯ 3, 4 ಅಧ್ಯಾಯಗಳು ಕ್ರಮವಾಗಿ ಸಾಧನ, ಫಲಗಳನ್ನು ನಿರೂಪಿಸುವುವು.
ಈ ಭಾಗದಲ್ಲಿ ಮುಮುಕ್ಷುಜ್ಞೇಯವಾದ ಬಹು ಪ್ರಮೇಯಗಳು ಅಡಗಿವೆ.
ಅವು ಬಹು ಸೂಕ್ಷ್ಮ ದೃಷ್ಟಿಯಿಂದ ಪರಿಭಾವಿಸಿ ತಿಳಿಯಬೇಕಾದ ಅಂಶಗಳು.
ಅಂಥಹಾ ಗಹನವಾದ ಪ್ರಮೇಯಗಳನ್ನೆಲ್ಲಾ ಪರಪಕ್ಷ ನಿರಾಕರಣ ಪೂರ್ವಕವಾಗಿ ಚೆನ್ನಾಗಿ ನಿರೂಪಿಸಿ ಮೂಲ ಟೀಕಾ ಭಾವವನ್ನು ಆವಿಷ್ಕರಿಸಿದ ಕಾರಣ ಆ ಗ್ರಂಥ ನಾಮದಿಂದಲೇ ಪ್ರಖ್ಯಾತರಾಗಿ - ರಾಜ ಸಭೆಗಳಲ್ಲಿ ಬಂದ ವಾದಿಗಳನ್ನೆಲ್ಲಾ ಜಯಿಸಿ, ಸಿದ್ಧಾಂತ ಸ್ಥಾಪನೆ ಮಾಡಿ ಶ್ರೀ ಶೇಷಚಂದ್ರಿಕಾಚಾರ್ಯರು ಪಂಡಿತರ, ರಾಜ - ಮಹಾರಾಜರ ಮನ್ನಣೆಯನ್ನು ಪಡೆದರು.
ಶ್ರೀ ರಘುನಾಥತೀರ್ಥರ ವಾಜ್ಮಯ ತಪಸ್ಸಿಗೆ ಮೆಚ್ಚಿ ಶ್ರೀ ಚಂದ್ರಿಕಾಚಾರ್ಯರೇ ಅವರಲ್ಲಿ ಒಂದು ಅಂಶದಿಂದ ತಾವೇ ನಿಂತು ಇಲ್ಲವೇ ಅವರ ಕೃಪಾ ವಿಶೇಷವೇ ಅವರಲ್ಲಿದ್ದು ಈ ಅನನ್ಯ ಸಾಧ್ಯವಾದ ಚಂದ್ರಿಕಾ ಪೂರಣ ರೂಪವಾದ ಕಾರ್ಯವನ್ನು ಮಾಡಿತು ಎಂದು ಹೇಳಬೇಕು!
ಶ್ರೀ ರಘುನಾಥತೀರ್ಥರು ತಂತ್ರಸಾರಕ್ಕೆ " ತತ್ತ್ವಕಣಿಕಾ " ಎಂಬ ವ್ಯಾಖ್ಯಾನವನ್ನೂ, ಗಂಗಾಸ್ತುತಿ ಎಂಬ ಗ್ರಂಥವನ್ನೂ ರಚಿಸಿದ್ದಾರೆ.
ಬೃಹತೀ ಸಹಸ್ತ್ರ ವ್ಯಾಖ್ಯಾನ ( ತತ್ತ್ವಸಾರ ) ಮತ್ತು ರಘುನಾಥತೀರ್ಥೀಯ ಈಶಾವಾಸ್ಯೋಪನಿಷದ್ಭಾಷ್ಯ ಟೀಕೆ ಮೊದಲಾದ ಉದ್ಗ್ರಂಥಗಳನ್ನು ರಚಿಸಿದ್ದಾರೆ.
***
Wednesday 24.06.2020
2019 july 6
ಆಷಾಢ ಶುದ್ಧ ಚತುರ್ಥಿ ( ಚೌತಿ ) - ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಶೇಷಚಂದ್ರಿಕಾಚಾರ್ಯರ ಆರಾಧನಾ ಮಹೋತ್ಸವ - ತಿರುಮಕೂಡಲು "
ಶ್ರೀ ರಘುನಾಥತೀರ್ಥರ or ಶ್ರೀ ಶೇಷಚಂದ್ರಿಕಾಚಾರ್ಯರ ಕಾಲ : 1700 - 1755
ಶ್ರೀ ರಘುನಾಥತೀರ್ಥರ ಆಶ್ರಮ ಗುರುಗಳು " ಶ್ರೀ ಲಕ್ಷ್ಮೀನಾರಾಯಣ ತೀರ್ಥರು.
ಶ್ರೀ ರಘುನಾಥತೀರ್ಥರ ಆಶ್ರಮ ಶಿಷ್ಯರು " ಶ್ರೀ ಭಾಷ್ಯದೀಪಿಕಾಚಾರ್ಯರು ( ಶ್ರೀ ಜಗನ್ನಾಥತೀರ್ಥರು )
ಶ್ರೀ ರಘುನಾಥತೀರ್ಥರು ಆಷಾಢ ಶುದ್ಧ ಚತುರ್ಥಿ ತಿರಮಕೂಡಲಿನಲ್ಲಿ ಬೃಂದಾವನಸ್ಥರಾದರು!!
ಶ್ರೀ ಭಾಷ್ಯದೀಪಿಕಾಚಾರ್ಯರು...
ಸರ್ವಂ ಸರ್ವಂ ಸಹೇಶಾನಃ
ಸುಭಾಸು ಜಿತವಾದಿರಾಟ್ ।
ಸರ್ವದಾ ಸರ್ವದೋ
ಭೂಯಾದ್ರಘುನಾಥ ಮುನೀಶ್ವರಃ ।।
" ಶ್ರೀ ಚಂದ್ರಿಕಾಚಾರ್ಯರ ಚಿಕ್ಕ ಆವೃತ್ತಿ - ಶ್ರೀ ಶೇಷ ಚಂದ್ರಿಕಾಚಾರ್ಯರು "
" ಶ್ರೀ ಶೇಷಚಂದ್ರಿಕಾಚಾರ್ಯರ ಕುರಿತು ಹೇಳುವಾಗ ಶ್ರೀ ಚಂದ್ರಿಕಾಚಾರ್ಯರ ವಿದ್ಯಾ ವೈಭವ - ಗ್ರಂಥಗಳ ವೈಶಿಷ್ಟ್ಯ ಸ್ಮರಣೆ ಮಾಡಲೇಬೇಕಾದ ಅವಶ್ಯ ಕರ್ತವ್ಯ "
" ಶೇಷ ಚಂದ್ರಿಕಾ " ರಚನೆಯ ಹಿನ್ನೆಲೆ :
ವೇದಾಂತ ವಿಶ್ವದಲ್ಲಿ ಶ್ರೀ ವ್ಯಾಸರಾಜರದ್ದು ಒಂದು ವಿಕ್ರಮಾಂಕ ಚಲಿತ.
ಅವರ ಲೋಕೋತ್ತರ ಪಾಂಡಿತ್ಯದ ಪ್ರಭಂಜನ ರಭಸಕ್ಕೆ ಪೊಳ್ಳು ಪಂಡಿತರ ಜೊಳ್ಳು ವಾದಗಳೆಲ್ಲಾ ಧೂಳಿಪಟವಾಗಿ ಹಾರಿ ಹೋದವು.
ಆಧ್ಯಾತ್ಮ ಪ್ರಪಂಚದಲ್ಲಿ ಶ್ರೀ ಪರಶುರಾಮನಂತೆ ಶ್ರೀ ವ್ಯಾಸರಾಜ ಗುರುಸಾರ್ವಭೌಮರು.
ತಮ್ಮ ಶಾಸ್ತ್ರದ ಸಾಣಿಗೆ ತೀಡಿ ಹದನಗೊಂಡ ನುಡಿಗೊಡಲಿಯಿಂದ ವೈಯ್ಯಾಯಿಕ, ಪ್ರಭಾಕರ, ನೈಯಾಯಿಕ, ಮಾಯಾವಾದಿ ಮುಂತಾದ ನಾನಾ ಮತೀಯರ ವಾದಾನುವಾದಗಳನ್ನೆಲ್ಲಾ ತುಳಿದು ಹಾಕಿದರು.
" ಮಧ್ವ ಮತ " ದ " ಜಯಭೇರಿ " ಯನ್ನು ಎಲ್ಲೆಡೆಗೆ ಮೊಳಗಿಸಿದರು.
ಶ್ರೀ ವ್ಯಾಸರಾಜರ " ತರ್ಕತಾಂಡವ " ಗ್ರಂಥವನ್ನು ತೆಗೆದು ನೋಡಿದರೆ ಆಗಮದ ಭದ್ರ ಬುನಾದಿಯಿಲ್ಲದೆ ಬರೀ ಯುಕ್ತಿ ಮತ್ತು ಬುದ್ಧಿ ಶಕ್ತಿಗಳ ಬಲದಿಂದ ಕಟೆದು ನಿಲ್ಲಿಸಿದ ವೈಯ್ಯಾಯಿಕರ ಮಾತಿನ ಕೋಟೆಗಳೆಲ್ಲವೂ ಮಂಜಿನ ಮಹಡಿಗಳಂತೆ ಒಂದೊಂದೇ ವಾಸ್ತವಿಕ ವಿಚಾರ ರಶ್ಮಿಗಳಿಂದ ಕುಸಿದು ಕುಪ್ಪಳಿಸಿ ಹೋಗುತ್ತಿವೆಂಬುದನ್ನು ಕಾಣಬಹುದು.
ಕಾಶೀ ನವದ್ವೀಪದ ಅಂದಿನ ನವ್ಯ ನ್ಯಾಯದ ನಿರತಿಶಯ ಕೌಶಲದ ಕಿರೀಟವನ್ನೇ ಹೊತ್ತ ಪಕ್ಷಧರಮಿಶ್ರಾದಿ ಪಂಡಿತರು ಶ್ರೀ ವ್ಯಾಸರಾಜರಿಂದ ನ್ಯಾಯಶಾಸ್ತ್ರದಲ್ಲೇ ಸೋತು ಶ್ರೀ ವ್ಯಾಸರಾಜರ ವಿದ್ಯಾ ಗುರುಗಳಾದ ಶ್ರೀ ಶ್ರೀಪಾದರಾಜರ ಊರಾದ ಮುಳಬಾಗಿಲ ವರೆಗೆ ಬಂದು ತಮ್ಮ ಸೋಲನ್ನು ಒಪ್ಪಿ ಶರಣಾತರಾಗಿ " ವ್ಯಾಸರಾಜರೆಂದರೆ ಬರೀ ವ್ಯಾಸರಾಜರಲ್ಲ! ಸಾಕ್ಷಾತ್ ವೇದವ್ಯಾಸರೇ " ಎಂದು ನುಡಿದು ಶ್ರೀ ವ್ಯಾಸರಾಜರ ಪಾಂಡಿತ್ಯದ ಬಗ್ಗೆ ತಮಗಿರುವ ಅಗಾಧ ಶ್ರದ್ಧೆಯನ್ನು ಅವರ ವಿದ್ಯಾ ಗುರುಗಳಾದ ಶ್ರೀ ರ್ಶ್ರೀಪಾದರಾಜರ ಮುಂದೆ ವ್ಯಕ್ತ ಮಾಡಿ ಹೋದನು.
ಆದರೆ ಶ್ರೀ ವ್ಯಾಸರಾಜರ ಇನ್ನೊಂದು ಗ್ರಂಥವಾದ " ನ್ಯಾಯಾಮೃತ " ದ ವಿಷಯವೇ ಬೇರೆ.
ಅದೊಂದು ತರ್ಕಕಠೋರವಾದ ಅದ್ವೈತ ಕುಠಾರ.
ಅದು ಮಾಯಾವಾದಿಗಳ ಮತ - ಮಾತು - ಮತಿ ರೀತಿಗಳ ಮೂಲ ನಾಲಗಳನ್ನೇ ಕಡೆದು ಕೊಚ್ಚಿ ಹಾಕಿಬಿಡುತ್ತದೆ.
ಇಂದಿಗೂ ಅದ್ವೈತಿಗಳಿಗೆ " ನ್ಯಾಯಾಮೃತ " ವೆಂದರೆ ಒಂದು ಸಿಂಹಸ್ವಪ್ನವಿದ್ದಂತೆ.
ನ್ಯಾಯಾಮೃತದಲ್ಲಿ ಶ್ರೀ ವ್ಯಾಸರಾಜರು ಹಾಕಿದ ಪೇಚಿನಿಂದ ಬಿಡಿಸಿಕೊಳ್ಳಲಿಕ್ಕಾಗಿ ಮಧುಸೂದನ ಸರಸ್ವತಿಯೇ ಮೊದಲಾದ ಸ್ಮಾರ್ತ ಜಗಜಟ್ಟಿಗಳು 500 ವರ್ಷಗಳಿಂದಲೂ ಪ್ರಯತ್ನ ಮಾಡುತ್ತಲೇ ಇದ್ದಾರೆ.
ಆದರೆ ಶ್ರೀ ವ್ಯಾಸರಾಜರ ನುಡಿಯ ಹಿಡಿತ, ಯುಕ್ತಿಯ ಪಟ್ಟಬಂಧಗಳು ದುರ್ವಿಮೋಚಗಳಾಗಿವೆ ಎಂಬುದು ಗೊತ್ತಾಗುತ್ತದೆ.
" ನ್ಯಾಯಾಮೃತ ಗ್ರಂಥ " ಇರುವ ವರೆಗೂ ಅದ್ವೈತ ಪಂಥವು ತಲೆಯೆತ್ತುವದೇ ಸಾಧ್ಯವಿಲ್ಲ!!
ಇನ್ನು ಶ್ರೀ ವ್ಯಾಸರಾಜರ ಮತ್ತೊಂದು ಗ್ರಂಥ " ಚಂದ್ರಿಕಾ ".
ಇದು ಶ್ರೀ ವ್ಯಾಸರಾಜರ ಕಲಶ ಕೃತಿ ಹಾಗೂ ಅರಸು ಕೃತಿ..
ಆದುದರಿಂದಲೇ ಶ್ರೀ ವ್ಯಾಸರಾಜರಿಗೆ " ಚಂದ್ರಿಕಾಚಾರ್ಯ " ರೆಂದು ಹೆಸರು ಬಂದಿತು.
" ಚಂದ್ರಿಕೆ " ಯು ಶ್ರೀಮದಾಚಾರ್ಯರ ಸರ್ವಜ್ಞತ್ವಕ್ಕೆ ಹಿಡಿದ ಒಂದು ರನ್ನಗನ್ನಡಿ.
ಚಂದ್ರಿಕೆಯಲ್ಲಿ ಸೂತ್ರಕಾರರಾದ ಶ್ರೀ ವೇದವ್ಯಾಸರ ಹೃದಯಾಕಾಶದಲ್ಲಿ ತೊಳಗುವ ಪ್ರತಿಯೊಂದು ಭಾವೋನ್ಮೇಷವೂ ಸಕಲಾವಿಕಲವಾಗಿ ಪ್ರತಿಬಿಂಬಿತವಾಗಿವೆ ಮತ್ತು ಶಂಕರ, ರಾಮಾನುಜ ಮುಂತಾದ ಭಾಷ್ಯಕಾರರೆಲ್ಲರೂ ಶ್ರೀ ಬಾದರಾಯಣೀಯ ಆಶಯಾಕೂತಗಳಿಂದ ಎಷ್ಟು ದೂರದಲ್ಲಿದ್ದಾರೆ ಇತರ ಭಾಷ್ಯಕಾರರು ಅಡ್ಡದಾರಿ ಹಿಡಿದು ಯಾವ ಯಾವ ಹಳ್ಳಕೊಳ್ಳ ದರಿ ಕೊರಿಗಳಲ್ಲಿ ಬಿದ್ದಿದ್ದಾರೆ ಎಂಬುದೆಲ್ಲವೂ ಸ್ಪಷ್ಟವಾಗಿಯೇ ಕಂಡು ಬರುತ್ತದೆ.
ಮಧ್ವ ಭಾಷ್ಯೆಯು ಮಾತ್ರ ಸೂತ್ರದ ಹೆಜ್ಜೆಗೆ ಕಟ್ಟಿದ ಗೆಜ್ಜೆಯೋ ಏನೋ ಎನ್ನುವಷ್ಟು ವ್ಯಾಸ ಧ್ವನಿಯನ್ನೇ ಪ್ರತಿಧ್ವನಿಸುತ್ತಾ ಹೊರಟಿದೆ ಎನ್ನುವುದು " ಮಧ್ವ ಭಾಷ್ಯದ ಉಪನ್ಯಾಸವೆಂದರೆ ವ್ಯಾಸ ಹೃದಯದ ವಾಸ್ತವಿಕ ವಾಗ್ವಿಲಾಸ " ಎಂಬುವುದು ಚಂದ್ರಿಕೆಯ ಪುಟ ಪುಟಗಳಲ್ಲಿಯೂ ಕಂಡು ಬರುತ್ತದೆ.
ಪ್ರತಿ ಅಧಿಕಾರಣದಲ್ಲೂ ಎದ್ದು ಕಾಣುತ್ತದೆ.
ಶ್ರೀ ಮಧ್ವ ಸಿದ್ಧಾಂತಕ್ಕೆ ಶ್ರೀ ಆಚಾರ್ಯರ ನಂತರ ಮೌಲಿಕವಾದ ಕಾಣಿಕೆಯಿಟ್ಟ ಮಹನೀಯರಲ್ಲಿ ಶ್ರೀ ಟೀಕಾಚಾರ್ಯರು ಅಗ್ರಗಣ್ಯರಾಗಿದ್ದಾರೆ.
ಶ್ರೀ ವ್ಯಾಸರಾಜರು ದ್ವಿತೀಯರಾಗಿಯೂ ಅದ್ವಿತೀಯರಾಗಿದ್ದಾರೆ.
ಮುಂದೆಲ್ಲವೂ " ವ್ಯಾಸೋಚ್ಛಿಷ್ಟಮಿದಂ ಜಗತ್ " .....
ಚಂದ್ರಿಕಾ ಗ್ರಂಥವು ಸ್ವತಂತ್ರ ಕೃತಿಯಲ್ಲ. ಶ್ರೀ ವೇದವ್ಯಾಸರ ಬ್ರಹ್ಮಸೂತ್ರಕ್ಕೆ - ಶ್ರೀಮದಾಚಾರ್ಯರು ಬರೆದ ಭಾಷ್ಯಕ್ಕೆ - ಶ್ರೀ ಜಯತೀರ್ಥರು " ತತ್ತ್ವಪ್ರಕಾಶಿಕಾ " ಎಂಬ ಟೀಕಾ ಗ್ರಂಥವನ್ನು ಬರೆದಿದ್ದಾರೆ.
ಆ ಶ್ರೀ ಜಯತೀರ್ಥರ ತತ್ತ್ವಪ್ರಕಾಶಿಕೆಗೆ ಚಂದ್ರಿಕಾ ಟಿಪ್ಪಣಿಯಾಗಿದೆ.
ಇದನ್ನು ಬಾಯಿ ಬಿಟ್ಟು ಹೇಳಬೇಕಾಗುತ್ತದೆ.
ಇಲ್ಲದಿದ್ದರೆ ಇದೊಂದು ಸ್ವತಂತ್ರ ಗ್ರಂಥವೇ ಎಂದು ಯಾರಿಗಾದರೂ ಎನಿಸಲಿಕ್ಕೆ ಸಾಕು.
ಇದೇ ಇದರ ವೈಶಿಷ್ಟ್ಯ!
ಈ ಚಂದ್ರಿಕೆಯಿಂದ ಶ್ರೀ ಜಯತೀರ್ಥರು " ಸರ್ವಜ್ಞ ಕಲ್ಪರೇ " ಎಂಬ ಮಾತು ಸಿದ್ಧಾಂತಿತವಾಗುತ್ತದೆ ಹಾಗೂ ಶ್ರೀ ಟೀಕಾಚಾರ್ಯರು ಗುರುಕಾರುಣ್ಯ ಸರಣಿಯ ಪ್ರಪತ್ತಿಯಿಂದ ಪಡೆದ ಅಭೂತಪೂರ್ವವಾದ ಪ್ರತಿಭಾ ವಿಲಾಸ ಹಾಗೂ ಪಾಂಡಿತ್ಯ ಪ್ರಕಾಶಗಳ ವಿರಾಟ್ ಸ್ವರೂಪದ ಸಮ್ಯಗ್ ದರ್ಶನವೂ ಆಗುತ್ತದೆ ಮತ್ತು ಶ್ರೀ ಮಧ್ವಾಚಾರ್ಯರ ಮಾತುಗಳೆಂದರೆ ವೇದ ಶಾಸ್ತ್ರ ಪುರಾಣಾದಿ ಪ್ರಮಾಣ ಕುಂಡಗಳಲ್ಲಿ ಹೂತು ನಿಂತ ಪ್ರಮೇಯ ಪುಷ್ಪ ವಾಟಿಕೆಯೇ ಸರಿ ಎಂಬ ವಿಷಯವು ಪ್ರತಿಯೊಬ್ಬನಿಗೂ ಖಾತರಿಯಾಗುತ್ತದೆ.
ಆದುದರಿಂದಲೇ ಶ್ರೀ ಮಂತ್ರಾಲಯ ಪ್ರಭುಗಳು....
ಟೀಕಾ ಗಾಂಭೀರ್ಯಮುದ್ಧರ್ತು೦
ವ್ಯಾಸತೀರ್ಥಾದಯಃ ಕ್ಷಮಾ: ।
ಶ್ರೀ ಜಯತೀರ್ಥರ ಟೀಕಾ ಗ್ರಂಥದ ಗಾಂಭೀರ್ಯವನ್ನು ತಿಳಿದು ಅದನ್ನು ಎತ್ತಿ ತಿಳಿಸಬೇಕೆಂದರೆ ಶ್ರೀ ವ್ಯಾಸರಾಜರೊಬ್ಬರೇ ಸಮರ್ಥರು ಎಂದು ಪ್ರಾಂಜಲ ಪಣದಿಂದ ನುಡಿದಿದ್ದಾರೆ.
ಈ ಚಂದ್ರಿಕೆಯಲ್ಲಿ ಶ್ರೀ ವ್ಯಾಸರಾಜರು ಶ್ರೀ ಟೀಕಾಚಾರ್ಯರ ಮತ್ತು ಶ್ರೀ ಮಧ್ವಾಚಾರ್ಯರ ಮತ ಹಾಗೂ ಮತಿಗಳ ಮಹತೋ ಮಹೀಯಸ್ತ್ವವನ್ನು ಸರ್ವತಃ ಶ್ರೇಷ್ಠತ್ವವನ್ನೂ ಮನಗಾಣಿಸಿ ಭಾಮತೀ - ವಿವರಣ - ಶಾರೀರ ಭಾಷ್ಯ - ಶ್ರೀಭಾಷ್ಯಾದಿ ಕರ್ತೃಗಳಾದ ಶ್ರೀ ಶಂಕರಾಚಾರ್ಯ, ಶ್ರೀ ರಾಮಾನುಜಾಚಾರ್ಯ ಮತ್ತು ಅವರ ಶಿಷ್ಯಾನುಯಾಯಿ ಮುಂತಾದವರು ಪ್ರತಿಪಾದಿಸಿದ ಮತಗಳೆಲ್ಲ " ಸರ್ವಾಪದ್ಧ " ಎಂದು ಖಂಡಿಸಿ ಅವರ ವಿಧಾನಗಳನ್ನೆಲ್ಲಾ ತಲೆಕೆಳಗಾಗುವಂತೆ ಮಾಡಿ ಅವರ ಮತಿಗಳೆಲ್ಲ ಶೀರ್ಷಾಸನ ಹಾಕುವಂತೆ ಮಾಡಿದ್ದಾರೆ.
ಈ ವಿಷಯದಲ್ಲಿ ಶ್ರೀ ವ್ಯಾಸರಾಜರು ಹಿಡಿದ ಹಾದಿಯೇ ಬೇರೆ. ಸೈದ್ಧಾಂತಿಕ ವಿಷಯೋವಿನ್ಯಾಸ ನಿರೂಪಣಾದಿಗಳಲ್ಲಿ ಅವರು ಶ್ರೀ ಟೀಕಾಚಾರ್ಯರು ಮತ್ತು ಶ್ರೀ ಮಧ್ವಾಚಾರ್ಯರ ಕ್ರಮವನ್ನೇ ಅನುಸರಿಸಿದರೂ ವಿಪಕ್ಷ ಖಂಡನದ ಪ್ರಸಂಗಗಳಲ್ಲಿ ಅವರು ಹೂಡುವ ಹೂಟವೇ ಬೇರೆ.
ಮಾಯಾವಾದಿ ಮೃಗಗಳನ್ನು ಹಿಡಿಯಲು ಶ್ರೀ ಚಂದ್ರಿಕಾಚಾರ್ಯರು ತೀರಾ ಹೊಚ್ಚ ಹೊಸದಾದ ವ್ಯಾಸವಾಗುರಾಗಗಳನ್ನೇ ರಚಿಸಿದ್ದಾರೆ.
ಹೀಗೆ ಯಾವ ಪ್ರಾಚೀನ ಆಚಾರ್ಯರ ವಾಚೋಕ್ತವಾಗುವ ಮಹಾ ಚಾತುರ್ಯದ ಕೆಲ ಹಲವಾರು ಮಾತಿನ ಹಿಡಿತ,
ಭಾವದ ಬಂಧ ಯುಕ್ತಿಯ ಮಲಕು, ಶಾಸ್ತ್ರದ ತಳಕು, ತರ್ಕದ ತಿರುಗಣಿ, ಪ್ರಮಾಣದ ಪಟ್ಟಿವರಸೆಗಳನ್ನು ನಾವು ಚಂದ್ರಿಕೆಯಲ್ಲಿ ಕಾಣಬಹುದು.
ಈ ಎಲ್ಲ ಯುಕ್ತಿ ಚಾತುರಿ ಮತ್ತು ಉಕ್ತಿ ವೈಖರಿಯ ಹಿಂದೆ ಗಟ್ಟಿಯಾದ ಪ್ರಮಾಣದ ನೆಲೆಗಟ್ಟು,
ಅನುಭವದ ಆಧಾರ, ಶಾಸ್ತ್ರೀಯ ಸತ್ಸಂಪ್ರದಾಯಗಳ ಬಲಿಷ್ಠ ಬೆಂಬಲ ಮತ್ತು ದಾರ್ಶನಿಕ ಪ್ರಪಂಚದ ನಿಯಮ ನಿಬಂಧನೆಗಳ ಹಿನ್ನೆಲೆಯೂ ಅಬಾಧಿತವಾಗಿ ಇದ್ದುದರಿಂದಲೇ ಈ ಶ್ರೀ ವ್ಯಾಸ ವಾಗ್ ವ್ಯೂಹಗಳೆಲ್ಲ ವಿದ್ವನ್ಮಾನ್ಯವೂ, ವಿಮತೀಯರಿಗೂ ಏನೂ ಹೆಸರಿಡಲು ಬಾರದಂತಾವುಗಳು ಆಗಿವೆ.
" ದಶಮೋತತ್ಸಮಃ " ಎಂಬ ಪದಕ್ಕೆ ಅರ್ಥ ಹೀಗಿದೆ...
ಶ್ರೀ ಚಂದ್ರಿಕಾಚಾರ್ಯರು ಅಪ್ಪಣೆ ಕೊಡಿಸಿದ " ದಶಮೋಮತ್ಸಮಃ " ಎಂಬ ವಚನಾನುಸಾರ...
ಶ್ರೀ ವ್ಯಾಸರಾಜರ ಶಿಷ್ಯ ಪರಂಪರೆಯಲ್ಲಿ ಶ್ರೀ ರಘುನಾಥತೀರ್ಥರು ಹತ್ತನೆಯವರು.
ಶ್ರೀ ರಘುನಾಥತೀರ್ಥರು ಜ್ಞಾನಿಗಳು.
ದ್ವೈತ ವೇದಾಂತಕ್ಕೆ ವಜ್ರ ಕವಚದಂತಿರುವ ವ್ಯಾಸತ್ರಯಗಳಲ್ಲೊಂದಾದ " ತಾತ್ಪರ್ಯ ಚಂದ್ರಿಕಾ " ಎಂಬ ಗ್ರಂಥದ ಅವಶಿಷ್ಟ ಭಾಗವೆಂದರೆ " ತತ್ತ್ವಪ್ರಕಾಶಿಕೆ " ಯ ಮೂರು - ನಾಲ್ಕನೆಯ ಅಧ್ಯಾಯಗಳ ವ್ಯಾಖ್ಯಾನ ಭಾಗವನ್ನು ರಚಿಸುವವರು.
ಆ ಭಾಗಕ್ಕೆ " ಶೇಷ ಚಂದ್ರಿಕಾ " ಎಂದು ಹೆಸರು.
" ಶೇಷ ಚಂದ್ರಿಕಾ " ಸುಮಾರು 20000 ಗ್ರಂಥಗಳನ್ನೊಳಗೊಂಡಿರುವ ದೊಡ್ಡ ಗ್ರಂಥವು.
" ತತ್ತ್ವಪ್ರಕಾಶಿಕೆ " ಯ 3, 4 ಅಧ್ಯಾಯಗಳು ಕ್ರಮವಾಗಿ ಸಾಧನ, ಫಲಗಳನ್ನು ನಿರೂಪಿಸುವುವು.
ಈ ಭಾಗದಲ್ಲಿ ಮುಮುಕ್ಷುಜ್ಞೇಯವಾದ ಬಹು ಪ್ರಮೇಯಗಳು ಅಡಗಿವೆ.
ಅವು ಬಹು ಸೂಕ್ಷ್ಮ ದೃಷ್ಟಿಯಿಂದ ಪರಿಭಾವಿಸಿ ತಿಳಿಯಬೇಕಾದ ಅಂಶಗಳು.
ಅಂಥಹಾ ಗಹನವಾದ ಪ್ರಮೇಯಗಳನ್ನೆಲ್ಲಾ ಪರಪಕ್ಷ ನಿರಾಕರಣ ಪೂರ್ವಕವಾಗಿ ಚೆನ್ನಾಗಿ ನಿರೂಪಿಸಿ ಮೂಲ ಟೀಕಾ ಭಾವವನ್ನು ಆವಿಷ್ಕರಿಸಿದ ಕಾರಣ ಆ ಗ್ರಂಥ ನಾಮದಿಂದಲೇ ಪ್ರಖ್ಯಾತರಾಗಿ - ರಾಜ ಸಭೆಗಳಲ್ಲಿ ಬಂದ ವಾದಿಗಳನ್ನೆಲ್ಲಾ ಜಯಿಸಿ, ಸಿದ್ಧಾಂತ ಸ್ಥಾಪನೆ ಮಾಡಿ ಶ್ರೀ ಶೇಷಚಂದ್ರಿಕಾಚಾರ್ಯರು ಪಂಡಿತರ, ರಾಜ - ಮಹಾರಾಜರ ಮನ್ನಣೆಯನ್ನು ಪಡೆದರು.
ಶ್ರೀ ರಘುನಾಥತೀರ್ಥರ ವಾಜ್ಮಯ ತಪಸ್ಸಿಗೆ ಮೆಚ್ಚಿ ಶ್ರೀ ಚಂದ್ರಿಕಾಚಾರ್ಯರೇ ಅವರಲ್ಲಿ ಒಂದು ಅಂಶದಿಂದ ತಾವೇ ನಿಂತು ಇಲ್ಲವೇ ಅವರ ಕೃಪಾ ವಿಶೇಷವೇ ಅವರಲ್ಲಿದ್ದು ಈ ಅನನ್ಯ ಸಾಧ್ಯವಾದ ಚಂದ್ರಿಕಾ ಪೂರಣ ರೂಪವಾದ ಕಾರ್ಯವನ್ನು ಮಾಡಿತು ಎಂದು ಹೇಳಬೇಕು!
ಶ್ರೀ ರಘುನಾಥತೀರ್ಥರು ತಂತ್ರಸಾರಕ್ಕೆ " ತತ್ತ್ವಕಣಿಕಾ " ಎಂಬ ವ್ಯಾಖ್ಯಾನವನ್ನೂ, ಗಂಗಾಸ್ತುತಿ ಎಂಬ ಗ್ರಂಥವನ್ನೂ ರಚಿಸಿದ್ದಾರೆ.
ಬೃಹತೀ ಸಹಸ್ತ್ರ ವ್ಯಾಖ್ಯಾನ ( ತತ್ತ್ವಸಾರ ) ಮತ್ತು ರಘುನಾಥತೀರ್ಥೀಯ ಈಶಾವಾಸ್ಯೋಪನಿಷದ್ಭಾಷ್ಯ ಟೀಕೆ ಮೊದಲಾದ ಉದ್ಗ್ರಂಥಗಳನ್ನು ರಚಿಸಿದ್ದಾರೆ.
***
Wednesday 24.06.2020
ಶ್ರೀಂ ಶ್ರೀ ಕಂ ಕಪಿಲಾಯ ನಮಃ
ಶ್ರೀಮದ್ವ್ಯಾಸರಾಜ ಮಠದ, 17ನೇ ಶತಮಾನದ ಯತಿಗಳಾದ, ಶ್ರೀ ಲಕ್ಷ್ಮೀನಾರಾಯಣತೀರ್ಥರ ಶಿಷ್ಯರೂ, ಶ್ರೀ ಭಾಷ್ಯದೀಪಿಕಾಚಾರ್ಯರ ಗುರುಗಳೂ, ಶ್ರೀ ಚಂದ್ರಿಕಾಚಾರ್ಯರ ಬೃಹತ್ ಗ್ರಂಥವಾದ ತಾತ್ಪರ್ಯಚಂದ್ರಿಕಾ ವನ್ನು ಪೂರ್ಣಮಾಡಿ (ಶ್ರೀ ಚಂದ್ರಿಕಾಚಾರ್ಯರು ತಿಳಿಸಿದಂತೆ) ಶೇಷಚಂದ್ರಿಕಾಚಾರ್ಯರೆಂದೆ ಖ್ಯಾತರಾದ ಶ್ರೀ ರಘುನಾಥತೀರ್ಥರ ಆರಾಧನಾ ಮಹೋತ್ಸವ ಇಂದಿನಿಂದ ಮೂರುದಿನ, ನಮ್ಮ ತಿ. ನರಸೀಪುರದ ತಿರುಮಕೂಡಲಿನಲಿ..
ಹಾಗೆಯೇ ಶ್ರೀ ರಾಯರ ಮಠದ 19ನೇ ಶತಮಾನದ ಯತಿಗಳು, ಶ್ರೀ ಸುಕೃತೀಂದ್ರತೀರ್ಥರ ಶಿಷ್ಯರು, ಶ್ರೀ ಸುವೃತೀಂದ್ರತೀರ್ಥರ ಗುರುಗಳು, ಮಾಘಮಾಸದಲ್ಲಿಯೂ ಮಳೆಯನ್ನು ತರಿಸಿದ ಮಹಾನ್ ಚೇತನರೂ, ಬಾಲ ಚಕ್ರವರ್ತಿ ಎಂದು ಹೈದರಾಬಾದ್ ನವಾಬಿನಿಂದ ಶ್ಲಾಘಿತರಾದ , ಉಡುಪಿಯಲ್ಲಿ ರಾಯರ ಮೃತ್ತಿಕಾ ವೃಂದಾವನವನ್ನು ಪ್ರತಿಷ್ಠೆ ಮಾಡಿದ ಶ್ರೀ ಸುಶೀಲೇಂದ್ರತೀರ್ಥರ ಆರಾಧನಾ ಮಹೋತ್ಸವ ಇಂದು..
ಶ್ರೀ ಯತಿದ್ವಯರ ಅನುಗ್ರಹ ಸದಾ ನಮ್ಮ ಎಲ್ಲರಮೇಲಿರಲಿ ಎಂದು ಪ್ರಾರ್ಥನೆಮಾಡುತ್ತಾ....
-Smt. Padma Sirish
ನಾದನೀರಾಜನದಿಂ ದಾಸಸುರಭಿ 🙏🏽***
|| ಶ್ರೀ ಮನ್ಮೂಲಗೋಪಾಲ ವಿಜಯೇತೆ ||
|| ಶ್ರೀ ವ್ಯಾಸರಾಜೋ ವಿಜಯತೇ ||
|| ಶ್ರೀ ಜಗನ್ನಾಥತೀರ್ಥ ಗುರುಭ್ಯೋ ನಮಃ ||
ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಶ್ರೀವ್ಯಾಸರಾಜ ಮಠದ ಮಹಾತಪಸ್ವಿಗಳಾದ ಶೇಷಚಂದ್ರಿಕಾಚಾರ್ಯರ ವರಕುಮಾರರಾದ ಭಾಷ್ಯದೀಪಿಕಾಚಾರ್ಯರೆಂದೇ ಜಗನ್ಮಾನ್ಯರಾದ ಶ್ರೀಗಾಲವ ಋಷಿಗಳ ಅಂಶಸಂಭೂತರಾದ ಶ್ರೀ ಜಗನ್ನಾಥತೀರ್ಥರ ಪುಣ್ಯದಿನ
ಆಶ್ರಮ ಗುರುಗಳು : ಶೇಷಚಂದ್ರಿಕಾಚಾರ್ಯರು
ಕಾಲ : 1755-1770
ಆಶ್ರಮ ಶಿಷ್ಯರು : ಶ್ರೀನಾಥತೀರ್ಥರು
ಬೃಂದಾವನ : ಕುಂಭಕೋಣ
ಶ್ಲೋಕ :
ವಿದ್ವತ್ಪಂಕಜ ಮಾರ್ತಾಂಡ: ವಾದಿಮತ್ತೇಭಕೇಸರೀ |
ಜಗನ್ನಾಥಗುರುರ್ಭೂಯಾತ್ ಜ್ಯಾಯಸೇ ಶ್ರೇಯಸೇ ಮಮ |
ಶ್ರೀಪಾದರು ಭಾಷ್ಯದೀಪಿಕ ಮತ್ತು ಸೂತ್ರದೀಪಿಕ ಎಂಬ ಶ್ರೇಷ್ಠ ಗ್ರಂಥವನ್ನು ರಚಿಸಿದ್ದಾರೆ. ಶ್ರೀಮನ್ಮಧ್ವಾಚಾರ್ಯರ ಬ್ರಹ್ಮಸೂತ್ರಭಾಷ್ಯಕೆ ವ್ಯಾಖ್ಯಾನವೇ ಭಾಷ್ಯದೀಪಿಕ. ಇದಕಾಗಿಯೇ ಭಾಷ್ಯದೀಪಿಕಾಚಾರ್ಯರೆಂದು ಜಗನ್ಮಾನ್ಯರಾಗಿದ್ದಾರೆ.
ಒಮ್ಮೆ ದಾಳಿಕೋರರು ಸಂಸ್ಥಾನದಲ್ಲಿ ಇರುವ ಹಲವು ರತ್ನಾಭರಣವನು ಕದಿಯಲು ಬಂದಿದರು. ಸಂಸ್ಥಾನದ ದೇವರ ಪೆಟ್ಟಿಗೆ ಸಮೇತವಾಗಿ ಶ್ರೀಗಳು ರಬ್ಬಸದಿಂದ ಹರಿಯುತ್ತಿದ ಕಾವೇರಿಯಲ್ಲಿ ಸುಮಾರು 20 ಮೈಲಿ ಈಜಿಕೊಂಡು ಹೋಗಿ ಸಂಸ್ಥಾನದ ದೇವರನು ದಾಳಿಕೊರರಿಂದ ಸಂರಕ್ಷಣೆ ಮಾಡಿದರು.
ಶ್ರೀ ಭಾಷ್ಯದೀಪಿಕಾಚಾರ್ಯರು ರಚಿಸಿದ ನರಸಿಂಹ ಸ್ತೋತ್ರ
ಆಮ್ರಸ್ತಂಭಾತ್ ಸಮಾಗತ್ಯ ತಾಮ್ರತುಂಡಂ ನಿಹತ್ಯಹಃ ।
ನಮ್ರಂ ನೌಮಿ ಜಗನ್ನಾಥಂ ಕಮ್ರೋsಪಾತ್ತಂ ನೃಕೇಸರೀ ||
ನರಸಿಂಹದೇವರ ಸ್ಮರಣೆಯಿಂದ ಆಪತ್ತು ಪರಿಹಾರ:
ಒಮ್ಮೇ ತಮಿಳುನಾಡಿನ ತೆಕ್ಕಲೂರು ಎಂಬ ಪ್ರಾಂತದ ಸಂಚಾರದಲ್ಲಿದಾಗ ಸೈನಿಕರ ತಂಡವೂಂದು ಶ್ರೀಗಳ ಮೇಲೆ ದಾಳಿಯನ್ನು ಮಾಡಿದರು.
ಶ್ರೀಗಳು ನರಸಿಂಹನನ್ನು ಸ್ಮರಿಸಿದರು.ಹತ್ತಿರದ ಮಾವಿನ ಮರದಿಂದ ವಿಚಿತ್ರ ಶಕ್ತಿಯೊಂದು ಪ್ರಕಟವಾಗಿ ದಾಳಿಕಾರರ ತಂಡವನ್ನು ಹೊಡೆದೊಡಿಸಿದರು.
ಶ್ರೀ ಜಗನ್ನಾಥತೀರ್ಥರು ಸಂಸ್ಥಾನದ ಜವಾಬ್ದಾರಿ ಶ್ರೀನಾಥತೀರ್ಥರಿಗೆ ವಹಿಸಿ ಪುಷ್ಯ ಮಾಸ ಶುಕ್ಲ ಪಕ್ಷದ ದ್ವಿತೀಯದಂದು ಕುಂಭಕೋಣದಲ್ಲಿ ಬೃಂದಾವನ ಪ್ರವೇಶ ಮಾಡಿದರು.
ಶ್ರೀ ಇಭರಾಮಪುರಾಧೀಶ
ವಿಷ್ಣುತೀರ್ಥಾಚಾರ್ ಇಭರಾಮಪುರ
*******
year 2020
***
year 2021
ಶ್ರೀಂ ಶ್ರೀ ಕಂ ಕಪಿಲಾಯ ನಮಃ
ಆಷಾಢ ಶುದ್ಧ ತೃತೀಯ
ಸರ್ವಸರ್ವಂಸಹೇಶಾನಸ್ಸಭಾಸುಜಿತವಾದಿರಾಟ್/
ಸರ್ವದಾ ಸರ್ವದೋ ಭೂಯಾತ್ ರಘುನಾಥಮುನೀಶ್ವರಃ//
ಶ್ರೀಮದ್ವ್ಯಾಸರಾಜ ಮಠದ, 17ನೇ ಶತಮಾನದ ಯತಿಗಳಾದ, ಶ್ರೀ ಲಕ್ಷ್ಮೀನಾರಾಯಣತೀರ್ಥರ ಶಿಷ್ಯರೂ, ಶ್ರೀ ಭಾಷ್ಯದೀಪಿಕಾಚಾರ್ಯರ (ಶ್ರೀ ಜಗನ್ನಾಥತೀರ್ಥರ) ಗುರುಗಳೂ, ಶ್ರೀ ಚಂದ್ರಿಕಾಚಾರ್ಯರ ಬೃಹತ್ ಗ್ರಂಥವಾದ ತಾತ್ಪರ್ಯಚಂದ್ರಿಕಾ ವನ್ನು ಪೂರ್ಣಮಾಡಿ (ಶ್ರೀ ಚಂದ್ರಿಕಾಚಾರ್ಯರು ತಿಳಿಸಿದಂತೆ) ಶೇಷಚಂದ್ರಿಕಾಚಾರ್ಯರೆಂದೆ ಖ್ಯಾತರಾದ ಶ್ರೀ ರಘುನಾಥತೀರ್ಥರ ಆರಾಧನಾ ಮಹೋತ್ಸವ ಇಂದಿನಿಂದ ಮೂರುದಿನ, ನಮ್ಮ ಕಾವೇರೀ ದಡದ ತಿರುಮಕೂಡಲಿನ ನರಸೀಪುರದಲ್ಲಿ.
(T. Narsipura, Mysore)
***
ಶ್ರೀ ಗುರುಭ್ಯೋ ನಮಃ
ಶ್ರೀ ರಘುನಾಥ ತೀರ್ಥ (ಶ್ರೀ ಶೇಷಚಂದ್ರಿಕಾಚಾರ್ಯ) ಗುರುಭ್ಯೋ ನಮಃ
ಪ್ರಾತಃಸ್ಮರಣೀಯರಾದ, ಮಹಾನುಭಾವರಾದ, ಶ್ರೀ ವ್ಯಾಸರಾಜ ಮಠದ ಪರಂಪರೆಯಲ್ಲಿ ಬರುವ
ಶ್ರೀ ಶೇಷಚಂದ್ರಿಕಾಚಾರ್ಯರು ಅಂತಲೇ ಪ್ರಸಿದ್ಧರಾದ, ಶ್ರೀ ರಘುನಾಥ ತೀರ್ಥರ ಆರಾಧನೆಯ ಪರ್ವಕಾಲ.
ಅಪಾರ ಮಹಿಮಾವಂತರು, ಮಹಾಜ್ಞಾನಿಗಳು, ತಪಸ್ವಿಗಳು.
ದಶಮೋ ಮತ್ಸಮೋ ಯೋಗಿ ಅಂತ ಸ್ವತಃ ಶ್ರೀಮಚ್ಚಂದ್ರಿಕಾಚಾರ್ಯರು ಅರ್ಥಾತ್ ಶ್ರೀ ವ್ಯಾಸರಾಜ ಗುರುಸಾರ್ವಭೌಮರೇ ಹೇಳಿದ್ದಾರೆ ಅಂತ ಪ್ರಸಿದ್ದ.
ಆದರೂ ವಾಕ್ ಶುದ್ಧಿಗಾಗಿ ಗುರುಗಳ ಮಹಿಮೆ ಹೇಳೋದು ನಮ್ಮ ಕರ್ತವ್ಯ, ನಮಗೆ ತಾರಕ. ಆದ್ದರಿಂದ ಅವರ ಒಂದು ಮಹಿಮೆಯನ್ನು ಮಾತ್ರ ಸ್ಮರಿಸುವ ಪ್ರಯತ್ನ.
ಆ ಮಹಾನುಭಾವರು ರಚಿಸಿದ ಒಂದು ಶ್ಲೋಕವನ್ನು ನೋಡುವ ಮೂಲಕ ಅವರನ್ನು ಸ್ಮರಿಸುವ ಪ್ರಯತ್ನ.
ವೇದಾರ್ಥ ನಿರ್ಣಾಯಕವಾದ ಬ್ರಹ್ಮಸೂತ್ರಗಳು, ಅದಕ್ಕೆ ಶ್ರೀಮದಾಚಾರ್ಯರ ಭಾಷ್ಯ, ಅದರ ತತ್ವವನ್ನು ಪ್ರಕಾಶಗೊಳಿಸಲಿಕ್ಕೆ ಶ್ರೀಮಟ್ಟೀಕಾಕೃತ್ಪಾದರ ಅತ್ಯದ್ಭುತವಾದ ಟೀಕಾ =ತತ್ವಪ್ರಕಾಶಿಕಾ, ಇದರ ವ್ಯಾಖ್ಯಾನರೂಪವಾದದ್ದು ಶ್ರೀಮದ್ವ್ಯಾಸರಾಜರ ತಾತ್ಪರ್ಯ ಚಂದ್ರಿಕಾ.
ಇಂಥಾ ಅದ್ಭುತವಾದ ಅಕಾಟ್ಯವಾದ ಗ್ರಂಥ ರಚಿಸಿದವರು ಆದ್ದರಿಂದ
ಶ್ರೀ ಚಂದ್ರಿಕಾಚಾರ್ಯರು ಅಂತಲೇ ಪ್ರಸಿದ್ದರಾದವರು ಶ್ರೀ ವ್ಯಾಸರಾಜರು.
ಇಂಥಾ ಶ್ರೀ ವ್ಯಾಸರಾಜರು ತಾತ್ಪರ್ಯ ಚಂದ್ರಿಕಾದಲ್ಲಿ ಬ್ರಹ್ಮಸೂತ್ರದಲ್ಲಿನ ಮೊದಲೆರಡು ಅಧ್ಯಾಯಗಳು =ಸಮನ್ವಯಾಧ್ಯಾಯ ಮತ್ತು ಅವಿರೋಧ್ಯಾಧ್ಯಾಯ, ಇವುಗಳಿಗೆ ಮಾತ್ರ ವ್ಯಾಖ್ಯಾನ ರಚಿಸಿ ಶೇಷ ಉಳಿದಂಥ ಇನ್ನೆರಡು ಅಧ್ಯಾಯಗಳ ವ್ಯಾಖ್ಯಾನವನ್ನು ತಮ್ಮಿಂದ 10ನೇಯ ವರಾಗಿ ಬರುವವರು ಮಾಡ್ತಾರೆ, ಅವರಿಗೂ ಸೇವಾಭಾಗ್ಯ ಸಿಗಲಿ ಅಂತ ಭವಿಷ್ಯ ನುಡಿದಿದ್ದರು ಅಂತ ಪ್ರಸಿದ್ಧ.
ಋಷೀಣಾಂ ಪುನರಾದ್ಯಾನಾಂ
ವಾಚಮರ್ಥೋsನುಧಾವತಿ ಅಂತ ಪ್ರಸಿದ್ಧ ವಾಕ್ಯ.
ಸಾಮಾನ್ಯರು ಒಂದು ವಿಷಯ /ವಸ್ತು ಬಗ್ಗೆ ಸತ್ಯ ನುಡಿಯಬೇಕು ಅಂದ್ರೆ ವಸ್ತು ನೋಡಿ, ವಿಚಾರ ಮಾಡಿ, ಆಮೇಲೆ ಸತ್ಯ ಯಾವುದು ಅಂತ ನಿರ್ಣಯ ಮಾಡಿ ಹೇಳಬೇಕು.
ಆದರೆ ಋಷಿಗಳ, ಶ್ರೀ ವ್ಯಾಸರಾಜರಂಥ ಜ್ಞಾನಿಗಳ ವಿಷಯ ಹಾಗಲ್ಲ.
ವಾಚಮರ್ಥೋsನುಧಾವತಿ, ವಸ್ತುಗಳೇ ಅವರ ಮಾತನ್ನು ಅವಲಂಬಿಸುತ್ತದೆ.
ಅಂದ್ರೆ ವಸ್ತು ಇದ್ದಂತೆ ಅವರು ಮಾತನಾಡೋದಿಲ್ಲ, ಅವರು ನುಡಿದಂತೆ ವಸ್ತುಗಳು ಇರುತ್ತವೆ. ಅಂದ್ರೆ, ಅವರು ಆಡಿದ ಎಲ್ಲಾ ಮಾತುಗಳು ಸತ್ಯ ವಾಗ್ತಾವೆ ಅಂತ ತಾತ್ಪರ್ಯ.
ಈ ಮಾತಿಗೆ ನಿದರ್ಶನ ಅಂದ್ರೆ ಇಂದಿನ ಆರಾಧ್ಯರಾದ -
ಶ್ರೀ ಶೇಷಚಂದ್ರಿಕಾಚಾರ್ಯರು
ಶ್ರೀ ವ್ಯಾಸತೀರ್ಥ ಮುನಿಗಳು ನುಡಿದಂತೆ, ಮುಂದೆ ತಾತ್ಪರ್ಯಚಂದ್ರಿಕಾ ಗ್ರಂಥದ ಶೇಷಭಾಗವನ್ನು ಪೂರ್ತಿಮಾಡಿ
ಶೇಷಚಂದ್ರಿಕಾಚಾರ್ಯರು ಅಂತ ಪ್ರಸಿದ್ದರಾದರು.
ಸರಿ, ಶೇಷ ತಾತ್ಪರ್ಯಚಂದ್ರಿಕಾ ರಚಿಸಿ ಕೊಟ್ಟು ಮಹೋಪಕಾರ ಮಾಡಿದರು. ಆದರೆ ಶ್ರೀ ರಘುನಾಥ ತೀರ್ಥರಿಗೆ, ತಾವು ಮಾಡಿದ ವ್ಯಾಖ್ಯಾನ -ಇದು ಮೂಲ ಗ್ರಂಥಕಾರರಿಗೆ ಸಮ್ಮತ ಇದೆಯೋ ಇಲ್ಲೋ ಅನ್ನೋದರ ನಿರ್ಣಯ ಮಾಡಿಕೋಬೇಕಾಗಿತ್ತು.
ಅಥವಾ ತಾವು ರಚಿಸಿದ ಗ್ರಂಥ, ಇದು ಶ್ರೀ ವ್ಯಾಸರಾಜರಿಗೆ ಸಮ್ಮತ ಅಂತ ತೋರಿಸಿ ಕೊಡಬೇಕಾಗಿತ್ತು.
ಅದಕ್ಕೇನು ಮಾಡಿದರು ಅಂದ್ರೆ ತಮ್ಮ ಶೇಷ ಚಂದ್ರಿಕಾಗ್ರಂಥವನ್ನು ನವಬೃಂದಾವನದಲ್ಲಿ ಶ್ರೀ ವ್ಯಾಸರಾಜರ ಮುಂದೆ ಇಟ್ತು ಸಮರ್ಪಣೆ ಮಾಡಿದರು.
ಶೇಷ ತಾತ್ಪರ್ಯ ಚಂದ್ರಿಕಾ ಗ್ರಂಥದ ಮಂಗಳ ಶ್ಲೋಕಗಳಲ್ಲಿಯೇ ಹೇಳಿದ್ದಾರೆ ->>
ವ್ಯಾಸರಾಜೇಂದುಮಾಶಾಸೇ ಚಂದ್ರಿಕಾ ಯಸ್ಯ ಸಮ್ಮತಾ
ದುರ್ವಾದಿಚೋರಾನ್ ವಿದ್ರಾವ್ಯ ರಕ್ಷಿತಂ ಭುವನತ್ರಯಂ
ಅಂತ.
ತಮ್ಮ ಗ್ರಂಥದ ಸಮ್ಮತಿಯನ್ನು ನಾನು ವ್ಯಾಸರಾಜರು ಎಂಬ ಚಂದ್ರರಿಂದ ಆಶಿಸುತ್ತೀವಿ ಅಂತ ಹೇಳ್ತಾ ಇದ್ದಾರೆ.
ಈ ವ್ಯಾಸರಾಜರು/ಅವರ ಈ ಚಂದ್ರಿಕಾ ಗ್ರಂಥ ಎಂಥವರು /ಎಂಥದ್ದು ಅನ್ನೋದನ್ನು ಹೇಳ್ತಾ ಇದ್ದಾರೆ.
ಕಳ್ಳರಿಗೆ ದೊಡ್ಡ ಶತ್ರು ಅಂದ್ರೆ ಅದು ಬೆಳದಿಂಗಳು. ಒಳ್ಳೆ ಬೆಳದಿಂಗಳು ಇತ್ತು, bright ಆಗಿ ಇತ್ತು ಅಂದ್ರೆ ಕಳ್ಳರಿಗೆ, ಚೋರರಿಗೆ ಅಪಹಾರವಾಗಲಿ, ತಪ್ಪಿಸಿಕೊಂಡು ಹೋಗೋದಾಗಲೀ ಇಂಥವು ಏನೂ ಮಾಡಲಿಕ್ಕೆ ಆಗೋದಿಲ್ಲ. ಬಹಳ ಕಷ್ಟ ಆಗ್ತದೆ. ಶ್ರೀ ವ್ಯಾಸರಾಜರು ಅನ್ನುವ ಚಂದ್ರರಿಂದ ಬಂದ ಚಂದ್ರಿಕಾ ಗ್ರಂಥ ಏನಿದೆ, ಆ ಗ್ರಂಥ ಸೂಸುವ ಪ್ರಕಾಶದ ದೆಸೆಯಿಂದ, ಇಂಥಾ ಬೆಳದಿಂಗಳ ದೆಸೆಯಿಂದ,
ಪರಮಾತ್ಮನ ಗುಣಗಳನ್ನು ಅಪಹಾರ ಮಾಡುವ, ವೇದಾರ್ಥಗಳನ್ನು ಅಪಹಾರ ಮಾಡುವ ದುರ್ವಾದಿಗಳು ಅನ್ನೋ ಚೋರರು ಓಡಿ ಹೋದರು. ಓಡಿಸುವಂಥದ್ದು. ಹೀಗೆ ಮಾಡಿ ದುರ್ವಾದಿಗಳಿಂದ ಲೋಕತ್ರಯಗಳನ್ನು ರಕ್ಷಣೆ ಮಾಡುವ ಅತ್ಯದ್ಭುತ ಗ್ರಂಥ ಅದು ಶ್ರೀವ್ಯಾಸರಾಜರ ತಾತ್ಪರ್ಯ ಚಂದ್ರಿಕಾ ಗ್ರಂಥ.
ಇಂಥಾ ಗ್ರಂಥದ ಶೇಷಭಾಗವನ್ನು ಪೂರ್ತಿ ಮಾಡಿದ್ದೀನಿ ಇದಕ್ಕೆ ತಮ್ಮ ಸಮ್ಮತಿ ಯನ್ನು ಆಶಿಸುತ್ತೀವಿ ಅಂತ ಸ್ತೋತ್ರ ಮಾಡಿದ್ದಾರೆ ಶ್ರೀ ರಘುನಾಥತೀರ್ಥರು.
ಬೃಂದಾವನದ ಮುಂದೆಯೇ ತಮ್ಮ ಸಂಪೂರ್ಣ ಶೇಷಚಂದ್ರಿಕಾವನ್ನು ಅನುವಾದ ಮಾಡಿದರು
ಶ್ರೀ ರಘುನಾಥ ತೀರ್ಥರು.
ಈ ತರಹ ಸಮ್ಮತಿಯನ್ನು ಯಾಚಿಸಿದಾಗ ಶ್ರೀಮದ್ವ್ಯಾಸರಾಜರ ಬೃಂದಾವನ ಅಲ್ಲಾಡಿತು ಅರ್ಥಾತ್ ಶ್ರೀಮಚ್ಚಂದ್ರಿಕಾಚಾರ್ರ್ಯರು ಶ್ರೀ ರಘುನಾಥ ತೀರ್ಥರು ರಚಿಸಿದ ಶೇಷ ಚಂದ್ರಿಕಾಗ್ರಂಥಕ್ಕೆ ಈ ಮೂಲಕ ತಮ್ಮ ಸಮ್ಮತಿಯನ್ನು ಸೂಚಿಸಿದರು. ಶೇಷಚಂದ್ರಿಕಾಚಾರ್ಯರು ಅನ್ನುವ ಹೆಸರು ಸಾರ್ಥಕವಾಯಿತು.
ವ್ಯಾಸಯೋಗಿಚರಿತೆಯಲ್ಲಿ ಹೇಳ್ತಾರೆ -
ಶ್ಲಾಘಾಕಂಪನಮೇಕಮೇವ ಶಿರಸ: ಶ್ರೀವ್ಯಾಸಯೋಗೀಶಿತು:.... ಅಂತ.
ಯಾರಾದ್ರೂ ಶಾಸ್ತ್ರಗಳ ಅನುವಾದವನ್ನು ಮಾಡಬೇಕಾದರೆ ಶ್ರೀವ್ಯಾಸರಾಜರು ಅದನ್ನು ಕೇಳಿ ಬಹಳ ಛಲೋ ಹೇಳಿದಿ ಹಾಗೇ ಹೀಗೆ ಅಂತ ಏನೇನೂ ಹೇಳೋದು ಬೇಕಾಗಿಲ್ಲ. ಶ್ರೀ ವ್ಯಾಸರಾಜರು ಸುಮ್ಮನೆ ಒಂದು ಬಾರಿ ತಲೆ ಅಲ್ಲಾಡಿಸಿದರೆ ಸಾಕು, ಅಷ್ಟೇ ಸಾಕು, ಆ ವ್ಯಕ್ತಿ ಪಂಡಿತ ಅಂತ ಲೆಕ್ಕ. ಅವನ ಉದ್ಧಾರ ಆಯಿತು ಅಂತಲೇ ಲೆಕ್ಕ.
ಹೀಗಿದ್ದಾಗ ವಿದ್ವಚ್ಚಕ್ರವರ್ತಿಗಳಾದ
ಬೃಂದಾವನಸ್ಥರಾದ ಶ್ರೀ ವ್ಯಾಸರಾಜರು, ಕಂಪನ ಮೂಲಕ ಶೇಷ ಚಂದ್ರಿಕಾ ಗ್ರಂಥಕ್ಕೆ ತಮ್ಮ ಸಮ್ಮತಿ ಸೂಚನೆ ಮಾಡಿದರು. ಇದರಿಂದ,
ಶೇಷಚಂದ್ರಿಕಾಕಾರರಾದ ಶ್ರೀ ರಘುನಾಥ ತೀರ್ಥರ ಪಾಂಡಿತ್ಯ, ಅವರ ಮಹಿಮೆ ಏನು ಅನ್ನೋದು ಗೊತ್ತಾಗ್ತದೆ.
ಅಂಥಾ ಮಹಿಮಾನ್ವಿತರು ಶ್ರೀ ರಘುನಾಥ ತೀರ್ಥರು -ಶೇಷಚಂದ್ರಿಕಾಚಾರ್ಯರು.
ಶ್ರೀ ಚಂದ್ರಿಕಾಚಾರ್ಯರಿಗೆ ವಿದ್ಯಾಗುರುಗಳು =ಶ್ರೀ ಲಕ್ಷ್ಮೀನಾರಾಯಣ ತೀರ್ಥರು ಅರ್ಥಾತ್ ಶ್ರೀಪಾದರಾಜರು.
ಶ್ರೀ ಶೇಷ ಚಂದ್ರಿಕಾಚಾರ್ಯರ ಆಶ್ರಮ ಗುರುಗಳು ಶ್ರೀ ಲಕ್ಷ್ಮೀ ನಾರಾಯಣ ತೀರ್ಥರು.
ಶ್ರೀ ವಿಜಯೀಂದ್ರ ಗುರುಗಳೇ ಮೊದಲಾದ ಮಾಹಾನುಭಾವರನ್ನು ಶಿಷ್ಯರನ್ನಾಗಿ ಉಳ್ಳವರು ಶ್ರೀ ಚಂದ್ರಿಕಾಚಾರ್ಯರಾದರೆ,
ಭಾಷ್ಯದೀಪಿಕಾಚಾರ್ಯರು ಅಂತಲೇ ಪ್ರಸಿದ್ದರಾದ ಶ್ರೀ ಜಗನ್ನಾಥ ತೀರ್ಥರೇ ಮೊದಲಾದ ಶಿಷ್ಯರನ್ನು ಪಡೆದವರು ಶ್ರೀ ಶೇಷ ಚಂದ್ರಿಕಾಚಾರ್ಯರು.
ಹೀಗೆ ನಾವು ಸಾದೃಶ್ಯವನ್ನು ನೋಡಬಹುದಾಗಿದೆ.
ತಂತ್ರಸಾರ ಗ್ರಂಥಕ್ಕೆ ಅಪೂರ್ವವಾದ, ಸರ್ವಮಾನ್ಯವಾದ ತತ್ವಕಣಿಕಾ ಅನ್ನುವ ವ್ಯಾಖ್ಯಾನವನ್ನು ರಚಿಸಿದ ಮಹಾನುಭಾವರು.
ಇನ್ನೂ ಅನೇಕ ಗ್ರಂಥಗಳನ್ನು ರಚನೆ ಮಾಡಿ ಮಹೋಪಕಾರ ಮಾಡಿದ್ದಾರೆ. ಅನೇಕಾನೇಕ ಜನರಿಗೆ ಅನುಗ್ರಹ ಮಾಡಿದ್ದಾರೆ, ಕಾಮಧೇನುಗಳು ಎನಿಸಿದ್ದಾರೆ.
ಇಂಥಾ ಮಹಾಮಹಿಮರಾದ ಶ್ರೀ ಶೇಷ ಚಂದ್ರಿಕಾಚಾರ್ಯರ ಅನುಗ್ರಹ, ನಮ್ಮ ಮೇಲೆ ಇದ್ದು
ಭಗವತ್ತತ್ವದ ಪ್ರಕಾಶ, ಭಗವಂತನ ಕಾರುಣ್ಯಕ್ಕೆ ಪಾತ್ರರಾಗುವಂತೆ ನಮ್ಮನ್ನು ಮಾಡಲಿ ಅಂತ ಪ್ರಾರ್ಥಿಸುತ್ತಾ
ಶ್ರೀ ಗುರುಭ್ಯೋ ನಮಃ
ಶ್ರೀ ರಘುನಾಥ ತೀರ್ಥ =
ಶ್ರೀ ಶೇಷಚಂದ್ರಿಕಾಚಾರ್ಯಗುರುಭ್ಯೋ ನಮಃ
***
ಶ್ರೀಂ ಶ್ರೀ ಕಂ ಕಪಿಲಾಯ ನಮಃ
ಪದವಾಕ್ಯಪ್ರಮಾಣೋಂಭೋನಿಧಿಪಾರೀಣತಾಭೃತೇ/ ಸರ್ವತಂತ್ರ ಸ್ವತಂತ್ರಾಯ ಪ್ರಣಮಾಮಿಮುಹುರ್ಮುಹುಃ//
ಶ್ರೀ ವಿದ್ಯಾರತ್ನಾಕರತೀರ್ಥರು ಸ್ತುತಿಸಿದ ಶ್ರೀ ಶೇಷಚಂದ್ರಿಕಾಚಾರ್ಯರ ಸ್ತುತಿಯಿಂದ
ವಾಯುದೇವರ ಅವತಾರಿಗಳಾದ ಶ್ರೀಮದಾಚಾರ್ಯರು ರಚಿಸಿದ ಬ್ರಹ್ಮಸೂತ್ರ ಭಾಷ್ಯದ ಗ್ರಂಥಕ್ಕೆ ಶ್ರೀಮಟ್ಟೀಕಾಕೃತ್ಪಾದರು ರಚಿಸಿದ ತತ್ವಪ್ರಕಾಶಿಕೆ ಟೀಕೆಗೆ
ಭಾಗವತೋತ್ತಮರಾದ ಶ್ರೀಪ್ರಹ್ಲಾದರಾಜರ ಅವತಾರಿಗಳೂ,ವಾಯುನಾಚ ಸಮಾವಿಷ್ಟರೂ, ಶೇಷಾವೇಶಯುಕ್ತರೂ ಆದ ಶ್ರೀವ್ಯಾಸರಾಜ ಗುರುಸಾರ್ವಭೌಮರು ಚಂದ್ರಿಕಾ ರಚಿಸಿದ್ದು, ಮೂಲ ಟೀಕೆಯ ಮೊದಲ ಎರಡು ಅಧ್ಯಾಯಗಳಿಗೆ ಮಾತ್ರ ಪೂರ್ಣಗೊಂಡವು. ಉಳಿದ ಎರಡು ಅಧ್ಯಾಯಗಳಿಗೆ ವ್ಯಾಖ್ಯಾನ ರಚಿಸಿದ ಶ್ರೀಚಂದ್ರಿಕಾಚಾರ್ಯರನ್ನು ತಮ್ಮ ಶಿಷ್ಯರು ಗುರುಗಳನ್ನು ಕುರಿತು ಕಬ್ಬಿಣದ ಕಡಲೆಯಾದ ಈ ಗ್ರಂಥದ ಮಿಕ್ಕ ಅಧ್ಯಾಯಗಳಿಗೆ ವ್ಯಾಖ್ಯಾನ ಯಾಕೆ ರಚಿಸಲಿಲ್ಲ ಮತ್ತು ನಿಮ್ಮ ಪ್ರೌಢ ವಾದ ಜಾಡನ್ನೇ ಹಿಡಿದು ಕೃತಿಕಾರರ ಆಂತರ್ಯವನ್ನು ಚೆನ್ನಾಗಿ ಅರಿತು ಸಮಗ್ರವಾಗಿ ಬಿಂಬಿಸುವ ಸಾಮರ್ಥ್ಯ ಯಾರಿಗಿದೆ ಎಂದು ಕೇಳಿದಾಗ, ಶಿಷ್ಯರನ್ನು ಕುರಿತು ಶ್ರೀ ವ್ಯಾಸರಾಜ ಗುರುಸಾರ್ವಭೌಮರು ತಾವೇ ಸ್ವತಃ ಹೇಳಿದ್ದು ದಶಮೋಮತ್ಸಮೋ ಭವೇತ್ ಎನ್ನುವ ಭವಿಷ್ಯವಾಣಿ. ಜ್ಞಾನಿಗಳ ವಚನ ಎಂದಿಗೂ ಸುಳ್ಳಾಗುವುದಿಲ್ಲ ಅಲ್ಲವೇ! ಹಾಗೇ ಶ್ರೀ ವ್ಯಾಸರಾಜಗುರುಸಾರ್ವ ಭೌಮರ ನಂತರ ಅವರ ದಿವ್ಯ ಪರಂಪರೆಯಲ್ಲಿ ಹತ್ತನೆಯವರಾಗಿ ಬಂದವರೇ ತಮ್ಮ ಆಶ್ರಮನಾಮವನ್ನೂ ಮರೆಸುವಷ್ಟು ತಮ್ಮ ಗ್ರಂಥದ ಹೆಸರಿನಿಂದಲೇ ಪ್ರಸಿದ್ಧರಾದ ಶ್ರೀಶೇಷಚಂದ್ರಿಕಾಚಾರ್ಯರೆಂದೇ ಇಂದಿಗೂ ಅಶೇಷ ಭಕ್ತರು ಸ್ಮರಿಸುವ ಶ್ರೀರಘುನಾಥತೀರ್ಥರು.
ಶ್ರೀಮಚ್ಚಚಂದ್ರಿಕಾಚಾರ್ಯರು ರಚಿಸದೇ ಉಳಿಸಿ ಬಿಟ್ಟ ಮಿಕ್ಕ ಎರಡು ಅಧ್ಯಾಯಗಳಿಗೆ ವ್ಯಾಖ್ಯಾನ ರಚಿಸಿದ ಮಹಾನುಭಾವರು.
ಶೇಷಚಂದ್ರಿಕಾಚಾರ್ಯರೆಂಬೊ ಗುರು ವ್ಯಾಸರಾಜರಪರಾವತಾರರ ಎಂದೇ ಶ್ರೀವಿದ್ಯಾಪ್ರಸನ್ನತೀರ್ಥರಿಂದ ಸ್ತುತಿಸಲ್ಪಟ್ಟವರೂ ಆದ ಶ್ರೀ ಶೇಷಚಂದ್ರಿಕಾಚಾರ್ಯರ ಪೂರ್ವಾರಾಧನೆಯ ಈ ಶುಭ ಸಂದರ್ಭದಲ್ಲಿ ಅವರ ಸ್ತುತಿಪದ ಹಾಡುವ ಅವರ ಸ್ಮರಣೆ ಮಾಡುವ ಮೂಲಕ ಅವರ ಅನುಗ್ರಹಕ್ಕೆ ಪಾತ್ರರಾಗೋಣ...
****
year 2021
by Sri Nagaraju Haveri
" ಶ್ರೀ ಶೇಷಚಂದ್ರಿಕಾಚಾರ್ಯರು - 1 "
" ದಿನಾಂಕ : 14.07.2021 ಶ್ರೀ ಪ್ಲವ ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಆಷಾಢ ಶುದ್ಧ ಚತುರ್ಥೀ ಬುಧವಾರ - ಶ್ರೀ ವ್ಯಾಸರಾಜ ಮಠಾಧೀಶರೂ, ಶೇಷ ಚಂದ್ರಿಕಾ ವ್ಯಾಖ್ಯಾನಕಾರರೂ ಆದ ಶ್ರೀ ರಘುನಾಥ ತೀರ್ಥರ ಆರಾಧನಾ ಮಹೋತ್ಸವ - ತಿರುಮಕೂಡಲು "
ಶ್ರೀ ಶೇಷಚಂದ್ರಿಕಾಚಾರ್ಯರ ಕುರಿತು ತಿಳಿದುಕೊಳ್ಳುವ ಪೂರ್ವದಲ್ಲಿ - " ಶ್ರೀ ಚಂದ್ರಿಕಾಚಾರ್ಯರ ವಿದ್ಯಾ ವೈಭವ - ಪಾಂಡಿತ್ಯ - ಗ್ರಂಥ ರಚನಾ ಕೌಶಲ - ವಾದಿನಿಗ್ರಹ - ವ್ಯಾಸತ್ರಯಗಳ ಶ್ರೇಷ್ಠತೆ " ಕುರಿತು ತಿಳಿದು ಕೊಳ್ಳುವ ಪ್ರಯತ್ನ ಮಾಡೋಣ....
ಸರ್ವಂ ಸರ್ವಂ ಸಹೇಶಾನ-
ಸ್ಸಭಾಸು ಜಿತವಾದಿರಾಟ್ ।
ಸರ್ವದಾ ಸರ್ವದೋ
ಭೂಯಾದ್ರಘುನಾಥ ಮುನೀಶ್ವರಃ ।।
" ಶ್ರೀ ರಘುನಾಥ ತೀರ್ಥರ ಸಂಕ್ಷಿಪ್ತ ಮಾಹಿತಿ "
ಆಶ್ರಮ ನಾಮ : ಶ್ರೀ ರಘುನಾಥ ತೀರ್ಥರು
ಅವತಾರ ಕಾಲ : ಕ್ರಿ ಶ 1641
ಜನ್ಮ ಸ್ಥಳ : ಗುಡಿಬಂಡೆ ( ಕೋಲಾರ ಜಿಲ್ಲೆ )
ಆಶ್ರಮ ಗುರುಗಳು : ಶ್ರೀ ಲಕ್ಷ್ಮೀ ನಾರಾಯಣ ತೀರ್ಥರು
ಆಶ್ರಮ ಶಿಷ್ಯರು : ಶ್ರೀ ಭಾಷ್ಯದೀಪಿಕಾಚಾರ್ಯರು
ವೇದಾಂತ ಸಾಮ್ರಾಜ್ಯಾಧಿಪತ್ಯ : ಕ್ರಿ ಶ 1700 - 1755
ಅಂಕಿತ : ರಘುನಾಥಯತಿ
ಬೃಂದಾವನ ಸ್ಥಳ : ತಿರುಮಕೂಡಲು
ವೇದಾಂತ ವಿಶ್ವದಲ್ಲಿ ಶ್ರೀ ವ್ಯಾಸರಾಜ ಗುರುಸಾರ್ವಭೌಮರು ಒಂದು ವಿಕ್ರಮಾಂಕ ಚರಿತ.
ಶ್ರೀ ವ್ಯಾಸರಾಜ ಗುರುಸಾರ್ವಭೌಮರ ಲೋಕೋತ್ತರ ಪಾಂಡಿತ್ಯದ ಪ್ರಭಂಜನ ರಭಸಕ್ಕೆ ಪೊಳ್ಳು ಮತಗಳ ಜೊಳ್ಳು ವಾದಗಳೆಲ್ಲಾ ಧೂಳೀಪಟವಾಗಿ ಹಾರಿಹೋದವು.
ಆಧ್ಯಾತ್ಮಿಕ ಪ್ರಪಂಚದ ಪರಶುರಾಮನಂತೆ ಶ್ರೀ ವ್ಯಾಸರಾಜ ಗುರುಸಾರ್ವಭೌಮರು ತಮ್ಮ ಶಾಸ್ತ್ರದ ಸಾಣೆಗೆ ತೀಡಿ ಹದನಗೊಂಡ ನುಡಿಗೊಡಲಿಯಿಂದ ವೈಶೇಷಿಕ - ಪ್ರಾಭಾಕರ - ನೈಯಾಯಿಕ - ಮಾಯಾವಾದಿ ಮುಂತಾದ ನಾನಾ ಮತೀಯರ ವಾದಾನುವಾದಗಳನೆಲ್ಲ ತರಿದೊಗೆದು ಮಧ್ವ ಮತದ ಜಯಭೇರಿಯನ್ನು ಎಲ್ಲೆಡೆಗೆ ಮೊಳಗಿಸಿದರು.
ಭಾರತೀಯ ಶಾಸ್ತ್ರ ಪ್ರಪಂಚದಲ್ಲಿ ತಾರ್ಕಿಕರ ವಿರಾಟ ಹಾರಾಟ ಬಹಳ.
ನಿಷ್ಪಕ್ಷ ಹಾಗೂ ನಿರ್ದಾಕ್ಷಿಣ್ಯವಾದ ವಿಚಾರದ ಒರೆಗಲ್ಲಿಗೆ ಮಸೆದು ಹದನಗೊಂಡ ಮಿದಳು.
ಮೇಧಾಶಕ್ತಿಯಿಂದ ಶ್ರೀ ವ್ಯಾಸರಾಜ ಗುರುಸಾರ್ವಭೌಮರು ಪ್ರತಿಯೊಂದು ವಿಷಯವನ್ನೂ ಪೃಥಕ್ಕರಿಸಿ - ಪರಿಕಿಸಿ - ನಿರುಕಿಸಿ - ವಿವೇಚಿಸಿಯೇ ನಿರ್ಣಯಕ್ಕೆ ಬರುವುದರಿಂದ ಪ್ರಾಯಃ ಅವರ ನಿರ್ಣಯವು ಸತ್ಯದ ಸೀಮೆಯಲ್ಲಿಯೇ ಸುಳಿದಾಡುತ್ತಿರುತ್ತದೆ.
ಆದರೂ ಅವರು ಒಮ್ಮೆಮ್ಮೆ ಶುಷ್ಕ ತರ್ಕದ ಬೆನ್ನು ಹತ್ತಿ ಶಬ್ದದ ಮೇಲೆ ಲಾಗ ಹಾಕಹತ್ತಿದಾಗ ಅವರ ಪರಿಷ್ಕಾರದ ಅಬ್ಬರದಲ್ಲಿ ವಾಸ್ತವಾರ್ಥವು ಕಣ್ಮರೆಯಾಗಿ ಬಿಡುತ್ತದೆ.
ಆದರೆ ಬುದ್ಧಿವಂತರಾದ ಅವರು ತಾವು ಹೇಳಿದ ಜೊಳ್ಳು ಮಾತನ್ನೇ ಜೋರಾಗಿ ಯುಕ್ತಿ ಪ್ರಯುಕ್ತಿಗಳಿಂದ ಸಾಧಿಸಿ ವಾದಿಸಿ ಸತ್ಯವೆನಿಸಿಬಿಡುತ್ತಾರೆ.
ಆದರೆ ತಾರ್ಕಿಕ ಕ್ಷೇತ್ರದಲ್ಲಿ ಬುದ್ಧಿಯ ಬಲಾತ್ಕಾರ ಮಾಡುವ ww ತಯಾರಿಕಾ ಹೆಬ್ಬುಲಿಗಳನ್ನು ಕೆಣಕುವ ಸಾಹಸ ಯಾರಿಗೂ ಆಗಿದ್ದಿಲ್ಲ - ಈಗಲೂ ಆಗುವುದಿಲ್ಲ.
ಈ ಭೂತಲದಲ್ಲಿ ನಾವೇ ಬೃಹಸ್ಪತಿಯ ಭೌದ್ಧಿಕ ವಾರಸುದಾರರೆಂದು ಜಂಭವನ್ನು ಕೊಚ್ಚಿಕೊಳ್ಳುವ ಈ ನ್ಯಾಯ ಕೇಸರಿಗಳ ಮೀಸೆ ಹಿಡಿದು ಅಲುಗಾಡಿಸಿ ಅವರ ರ್ಕದ ತಪ್ಪು ತಿಪ್ಪರಲಾಗಗಳನ್ನು ತೋರಿಸಿ ಕೊಟ್ಟು ವಾದಕ್ಷೋದಗಳನ್ನೆಲ್ಲ ಏಕೈಕ ವೀರರೆಂದರೆ - ಬಲಭೀಮನ ಗುರು ಗರಡಿಯಲ್ಲಿ ತಯಾರಾದ ಶ್ರೀ ವ್ಯಾಸರಾಜ ಗುರುಸಾರ್ವಭೌಮರೊಬ್ಬರೇ!
ಶ್ರೀ ವ್ಯಾಸರಾಜ ಗುರುಸಾರ್ವಭೌಮರ " ತರ್ಕತಾಂಡವ " ಗ್ರಂಥವನ್ನು ತೆರೆದು ನೋಡಿದರೆ....
ಆಫಾಮದ ಭದ್ರ ಬುನಾದಿಯಿಲ್ಲದೆ ಬರೀ ಯುಕ್ತಿ ಹಾಗೂ ಬುದ್ಧಿ ಶಕ್ತಿಗಳ ಬಲದಿಂದ ಕಟೆದು ನಿಲ್ಲಿಸಿದ ನೈಯಾಯಿಕರ ಮಾತಿನ ಕೋಟೆಗಳೆಲ್ಲವೂ ಮಹಡಿಗಳಂತೆ ಒಂದೊಂದೇ ವಾಸ್ತವಿಕ ವಿಚಾರ ರಷ್ಮಿಗಳಿಂದ ಕರಗಿ ಕುಪ್ಪಳಿಸಿ ಹೋಗುತ್ತವೆ ಎಂಬುದನ್ನು ಕಾಣಬಹುದು.
ಕಾಶೀ ನವದ್ವೀಪದ ಅಂದಿನ ನವ್ಯ ನ್ಯಾಯದ ನಿರತಿಶಯ ಕೌಶಲದ ಕಿರೀಟವನ್ನೇ ಹೊತ್ತ ಪಕ್ಷಧರ ಮಿಶ್ರಾದಿ ಪಂಡಿತರು ಶ್ರೀ ವ್ಯಾಸರಾಜ ಗುರುಸಾರ್ವಭೌಮರಿಂದ ನವೀನ ನ್ಯಾಯ ಶಾಸ್ತ್ರದಲ್ಲಿಯೇ ಸೋತು ಅವರ ಗುರುಗಳಿದ್ದ ಊರಿಗೆ " ಮುಳಬಾಗಿಲ " ದ ವರೆಗೆ ಬಂದು ತಮ್ಮ ಸೋಲನ್ನು ಒಪ್ಪಿ ಶರಣಾಗತರಾಗಿ...
" ವ್ಯಾಸರಾಜರೆಂದರೆ ಬರೀ ವ್ಯಾಸರಾಜರಲ್ಲ - ಸಾಕ್ಷಾತ್ ವೇದವ್ಯಾಸರೇ "
ಯೆಂದು ನುಡಿದು - ಅವರ ಪಾಂಡಿತ್ಯದ ಬಗೆಗೆ ತಮಗಿರುವ ಅಗಾಧ ಶ್ರದ್ಧೆಯನ್ನು ಅವರ ಗುರುಗಳಾದ ಶ್ರೀ ಶ್ರೀಪಾದರಾಜರ ಮುಂದೆ ವ್ಯಕ್ತ ಮಾಡಿ ಹೋದರು - ಇದುವೇ ನಮ್ಮ ಪ್ರೀತಿಯ ಶ್ರೀ ವ್ಯಾಸರಾಜ ಗುರುಸಾರ್ವಭೌಮರ ವಿದ್ಯಾ ವೈಭವ ".
ಆದರೆ ಶ್ರೀ ವ್ಯಾಸರಾಜ ಗುರುಸಾರ್ವಭೌಮರ ಇನ್ನೊಂದು ಗ್ರಂಥವಾದ " ನ್ಯಾಯಾಮೃತ " ದ ವಿಷಯವೇ ಬೇರೆ.
" ನ್ಯಾಯಾಮೃತ " ವೊಂದು " ತರ್ಕ ಕಠೋರವಾದ ಮಾಯಾಮತ ಕುಠಾರ "
" ನ್ಯಾಯಾಮೃತ " ವು ಮಾಯಾವಾದಿಗಳ ಮತ ಮತಿ ಮಾತು ರೀತಿಗಳ ಮೂಲ ಸಾಲುಗಳನ್ನೇ ಕಡಿದು ಕೊಚ್ಚಿ ಹಾಕಿಬಿಡುತ್ತದೆ.
ಇಂದಿಗೂ ಮಾಯಾವಾದಿಗಳಿಗೆ " ನ್ಯಾಯಾಮೃತ " ವೆಂದರೆ ಒಂದು " ಸಿಂಹ ಸ್ವಪ್ನ " ವಿದ್ದಂತೆ.
ನ್ಯಾಯಾಮೃತದಲ್ಲಿ ಶ್ರೀ ವ್ಯಾಸರಾಜ ಗುರುಸಾರ್ವಭೌಮರು ಹಾಕಿದ ಪೇಚಿನಿಂದ ಬಿಡಿಸಿಕೊಳ್ಳಲಿಕ್ಕಾಗಿ ಶ್ರೀ ಮಧುಸೂಧನ ಸರಸ್ವತೀಯೇ ಮೊದಲಾದ ಮಾಯಾವಾದಿ ಜಗಜ್ಜಟ್ಟಿಗಳು 482 ವರ್ಷಗಳಿಂದಾ ಪ್ರಯತ್ನ ಮಾಡುತ್ತಲೇ ಇದ್ದಾರೆ.
ಆದರೆ ಶ್ರೀ ವ್ಯಾಸರಾಜ ಗುರುಸಾರ್ವಭೌಮರ ನುಡಿಯ ಹಿಡಿತ - ಯುಕ್ತಿಯ ಪಟ್ಟ ಬಂಧಗಳೂ ದುರ್ವಿಮೋಚಗಳಾಗಿವೆಯೆಂಬುದು....
ನ್ಯಾಯಾಮೃತ ಲಘು ಮತ್ತು ಗುರ್ವಾಮೋದ - ಚಂದ್ರಿಕೋದಾಹೃತ ನ್ಯಾಯವಿವರಣ - ತರಂಗಿಣೀ - ಕಂಟಕೋದ್ಧಾರ - ಸೌಗಂಧ್ಯ ಮುಂತಾದ ಗ್ರಂಥಗಳಿಂದ ಗೊತ್ತಾಗುತ್ತದೆ.
" ನ್ಯಾಯಾಮೃತ " ಗ್ರಂಥವಿರುವ ವರೆಗೂ ಮಾಯಾವಾದ ಪಂಥವು ತಲೆಯೆತ್ತುವದೇ ಸಾಧ್ಯವಿಲ್ಲ!
" ವಿಶೇಷ ವಿಚಾರ "
ಶ್ರೀ ನ್ಯಾಯಾಮೃತಕ್ಕೆ - ಶ್ರೀ ವ್ಯಾಸರಾಜ ಗುರುಸಾರ್ವಭೌಮರು ವೃಂದಾವನಸ್ಥರಾದ ಮೇಲೆ ಜನಿಸಿದ ಶ್ರೀ ಮಧುಸೂಧನ ಸರಸ್ವತೀ " ಅದ್ವೈತಸಿದ್ಧಿ " ಯೆಂಬ ಗ್ರಂಥವನ್ನು ರಚಿಸಿದ್ದಾರೆ.
ಆ " ಅದ್ವೈತಸಿದ್ಧಿ " ಗೆ ಪ್ರಪ್ರಥಮ ಖಂಡನಾ ಗ್ರಂಥವನ್ನು ಬರೆದವರು ಶ್ರೀ ವಿಜಯೀ೦ದ್ರತೀರ್ಥರು.
" ಕಾಲಗಳು "
ಶ್ರೀ ವ್ಯಾಸರಾಜ ಗುರುಸಾರ್ವಭೌಮರು : ಕ್ರಿ ಶ 1447 - 1539
ಶ್ರೀ ವಿಜಯೀ೦ದ್ರತೀರ್ಥರು : ಕ್ರಿ ಶ 1517 - 1614
ಶ್ರೀ ಮಧುಸೂಧನ ಸರಸ್ವತೀ - ಕ್ರಿ ಶ 1540 - 1640
ಶ್ರೀ ಆನಂದ ಭಟ್ಟಾರಕರು - ಕ್ರಿ ಶ 1535 - 1610
ಶ್ರೀ ತರಂಗಿಣೀ ರಾಮಾಚಾರ್ಯರು - ಕ್ರಿ ಶ 1550 - 1640
ಶ್ರೀ ವ್ಯಾಸರಾಜ ಗುರುಸಾರ್ವಭೌಮರನ್ನು ಶ್ರೀ ಮಧುಸೂಧನ ಸರಸ್ವತೀ ಆಗಲೀ - ಶ್ರೀ ಆನಂದ ಭಟ್ಟಾರಕರು ಆಗಲೀ - ಶ್ರೀ ತರಂಗಿಣೀ ರಾಮಾಚಾರ್ಯರು ಆಗಲಿ ಪ್ರತ್ಯಕ್ಷವಾಗಿ ಕಂಡಿಲ್ಲ ಮತ್ತು ಈ ಮೂವರೂ ಶ್ರೀ ವ್ಯಾಸರಾಜ ಗುರುಸಾರ್ವಭೌಮರ ಸಮಕಾಲೀನರಲ್ಲ!!
*
" ಶ್ರೀ ಶೇಷಚಂದ್ರಿಕಾಚಾರ್ಯರು - 2 "
ಶ್ರೀ ವ್ಯಾಸರಾಜ ಗುರುಸಾರ್ವಭೌಮರ ಮೂರನೇ ಗ್ರಂಥ ರತ್ನವಾದ " ಚಂದ್ರಿಕೆ " ಯು ಅವರ " ಕಲಶ " ಕೃತಿ ಅಥವಾ " ಅರಸು ಕೃತಿ " [ Master Piece = ಮೇರುಕೃತಿ ].
ಆದುದರಿಂದಲೇ ಶ್ರೀ ವ್ಯಾಸರಾಜ ಗುರುಸಾರ್ವಭೌಮರಿಗೆ " ಚಂದ್ರಿಕಾಚಾರ್ಯ " ರೆಂದು ಹೆಸರು ಬಂದಿತು.
" ಚಂದ್ರಿಕೆ " ಯು ಶ್ರೀ ಮನ್ಮಧ್ವಾಚಾರ್ಯರ ಸರ್ವಜ್ಞತ್ವಕ್ಕೆ ಹಿಡಿದ ಒಂದು ರನ್ನ ಗನ್ನಡಿ.
" ಚಂದ್ರಿಕೆ " ಯಲ್ಲಿ ಸೂತ್ರಕಾರರಾದ ಶ್ರೀಮನ್ವೇದವ್ಯಾಸದೇವರ ಹೃದಯಾಕಾಶದಲ್ಲಿ ತೊಳಗುವ ಪ್ರತಿಯೊಂದು ಭಾವೋನ್ಮೇಷವೂ ಸಕಲಾವಿಕಲವಾಗಿ ಪ್ರತಿಬಿಂಬಿತವಾಗಿದೆ.
ಇತರೆ ಭಾಷ್ಯಕಾರರೆಲ್ಲರೂ ಶ್ರೀ ಬಾದರಾಯಣೀಯ ಆಶಯಾಕೂತಗಳಿಂದ ಎಷ್ಟು ದೂರದಲ್ಲಿದ್ದಾರೆ ಮತ್ತು ಇತರ ಭಾಷ್ಯಕಾರರು ಅಡ್ಡ ದಾರಿ ಹಿಡಿದು ಯಾವ - ಯಾವ ಹಳ್ಳ ಕೊಳ್ಳ, ದರಿ - ಕೋರಿಗಳಲ್ಲಿ ಬಿದ್ದಿದ್ದಾರೆ ಎಂಬುದೆಲ್ಲವೂ ಸ್ಪಷ್ಟವಾಗಿ ಕಂಡು ಬರುತ್ತದೆ.
" ಮಧ್ವ ಭಾಷ್ಯ ಮಾತ್ರ ಸೂತ್ರದ ಹೆಜ್ಜೆಗೆ ಕಟ್ಟಿದ ಗೆಜ್ಜೆಯೋ ಏನೋ ಎನ್ನುವಷ್ಟು " ವ್ಯಾಸಧ್ವನಿ " ಯನ್ನೇ ಪ್ರತಿಧ್ವನಿಸುತ್ತಾ ಹೊರಟಿದೆ ಎನ್ನುವುದೂ - ಮಧ್ವ ಭಾಷ್ಯದ ಉಪನ್ಯಾಸವೆಂದರೆ ವ್ಯಾಸ ಹೃದಯದ ವಾಸ್ತವಿಕ ವಾಗ್ವಿನ್ಯಾಸ ಎಂಬುವದೂ " ಚಂದ್ರಿಕೆ " ಯ ಪುಟ ಪುಟಗಳಲ್ಲಿ ಕಂಡು ಬರುತ್ತದೆ.
ಮಧ್ವ ಸಿದ್ಧಾಂತಕ್ಕೆ ಶ್ರೀಮದಾಚಾರ್ಯರ ಅನಂತರ ಮೌಲಿಕವಾದ ಕಾಣಿಕೆಯಿತ್ತ ಮಹನೀಯರಲ್ಲಿ ಶ್ರೀ ಟೀಕಾಚಾರ್ಯರು ಅಗ್ರಗಣ್ಯರಾಗಿದ್ದರೆ.
ಶ್ರೀ ವ್ಯಾಸರಾಜ ಗುರುಸಾರ್ವಭೌಮರು ದ್ವಿತೀಯರಾಗಿ - ಅದ್ವಿತೀಯರಾಗಿದ್ದಾರೆ.
ಮುಂದೆಲ್ಲವೂ....
" ವ್ಯಾಸೋಚ್ಛಿಷ್ಟಮಿದಂ ಜಗತ್ "
" ಚಂದ್ರಿಕಾ " ಗ್ರಂಥವು ಸ್ವತಂತ್ರ ಕೃತಿಯಲ್ಲ.
ಶ್ರೀ ವೇದವ್ಯಾಸದೇವರ ಬ್ರಹ್ಮಸೂತ್ರಕ್ಕೆ ಶ್ರೀಮದಾಚಾರ್ಯರು ಬರೆದ ಭಾಷ್ಯಕ್ಕೆ ಶ್ರೀ ಟೀಕಾಕೃತ್ಪಾದರು " ತತ್ತ್ವ ಪ್ರಕಾಶಿಕಾ " ಯೆಂಬ ಗ್ರಂಥವನ್ನು ಬರೆದಿದ್ದಾರೆ.
ಶ್ರೀಮಜ್ಜಯತೀರ್ಥರ " ತತ್ತ್ವ ಪ್ರಕಾಶಿಕಾ " ಗ್ರಂಥಕ್ಕೆ " ಚಂದ್ರಿಕಾ " ಗ್ರಂಥವು ಟಿಪ್ಪಣಿಯಾಗಿದೆ.
ಇದನ್ನು ಬಾಯಿ ಬಿಟ್ಟು ಹೇಳಬೇಕಾಗುತ್ತದೆ - ಇಲ್ಲದಿದ್ದರೆ ಇದೊಂದು ಸ್ವತಂತ್ರ ಗ್ರಂಥವೇ ಎಂದು ಯಾರಿಗಾದರೂ ಎನಿಸಲಿಕ್ಕೆ ಸಾಕು!
ಇದೇ ಈ ಕೃತಿಯ - ಚಂದ್ರಿಕಾ ಗ್ರಂಥದ ವೈಶಿಷ್ಟ್ಯ!
ಈ " ಚಂದ್ರಿಕೆ " ಯಿಂದ ಶ್ರೀ ಜಯತೀರ್ಥರು " ಸರ್ವಜ್ಞ ಕಲ್ಪರೇ " ಎಂಬ ಮಾತು ಸಿದ್ಧಾಂತಿತವಾಗುತ್ತದೆ ಹಾಗೂ ಶ್ರೀ ಟೀಕಾಕೃತ್ಪಾದರ ಗುರುಕಾರುಣ್ಯ ಸರಣಿಯ ಪ್ರಪತ್ತಿಯಿಂದ ಪಡೆದ ಅಭೂತ ಪೂರ್ವವಾದ ಪ್ರತಿಭಾ ವಿಲಾಸ ಹಾಗೂ ಪಾಂಡಿತ್ಯ ಪ್ರಕಾಶಗಳ ವಿರಾಟ್ ಸ್ವರೂಪದ ಸಮ್ಯಗ್ ದರ್ಶನವು ಆಗುತ್ತದೆ.
ಶ್ರೀಮನ್ಮಧ್ವಾಚಾರ್ಯರ ಮಾತುಗಳೆಂದರೆ " ವೇದ - ಶಾಸ್ತ್ರ - ಪುರಾಣಾದಿ ಪ್ರಮಾಣ ಕುಂಡಗಳಲ್ಲಿ ಹೂತು ನಿಂತ ಪ್ರಮೇಯ ಪುಷ್ಪ ವಾಟಿಕೆ " ಯೇ ಸರಿಯೆಂಬ ವಿಷಯ ಪ್ರತಿಯೊಬ್ಬನಿಗೂ ಖಾತರಿಯಾಗುತ್ತದೆ.
ಆದುದರಿಂದಲೇ ಶ್ರೀ ಮಂತ್ರಾಲಯ ಪ್ರಭುಗಳಾದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು....
" ಟೀಕಾ ಗಾಂಭೀರ್ಯಮುದ್ಧರ್ತುಂ -
ವ್ಯಾಸತೀರ್ಥಾದಯಃ ಕ್ಷಮಾ: ।। "
ಶ್ರೀಮಜ್ಜಯತೀರ್ಥರ ಟೀಕಾ ಗ್ರಂಥದ ಗಾಂಭೀರ್ಯವನ್ನು ತಿಳಿದು ಅದನ್ನು ಎತ್ತಿ ತಿಳಿಸಬೇಕೆಂದರೆ ಶ್ರೀ ವ್ಯಾಸರಾಜ ಗುರುಸಾರ್ವಭೌಮರೊಬ್ಬರೇ ಎಂದು ಪ್ರಾಂಜಲ ಪಣದಿಂದ ನುಡಿದಿದ್ದಾರೆ.
ಈ " ಚಂದ್ರಿಕೆ " ಯಲ್ಲಿ ಶ್ರೀ ವ್ಯಾಸರಾಜ ಗುರುಸಾರ್ವಭೌಮರು....
ಶ್ರೀ ಟೀಕಾಕೃತ್ಪಾದರ ಮತ್ತು ಶ್ರೀಮನ್ಮಧ್ವಾಚಾರ್ಯರ ಮತ ಹಾಗೂ ಮತಿಗಳ ಮಹತೋ ಮಹೀಯಸ್ತ್ವವನ್ನೂ ಸರ್ವತಃ ಶ್ರೇಷ್ಠತ್ವವನ್ನೂ ಮನಗಾಣಿಸಿ ಭಾಮತೀ - ವಿವರಣ - ಶಾರೀರ ಭಾಷ್ಯ ಕರ್ತೃಗಳೂ ಹಾಗೂ ಅವರ ಶಿಷ್ಯಾನುಯಾಯಿ ಮುಂತಾದವರು ಪ್ರತಿಪಾದಿಸಿದ ಮತಗಳೆಲ್ಲ ಸರ್ವಾಪದ್ದ ಎಂದು ಖಂಡಿಸಿ ಅವರ ವಿಧಾನಗಳನ್ನೆಲ್ಲ ತಲೆ ಕೆಳಗಾಗುವಂತೆ ಮಾಡಿ ಅವರ ಮತಿಗಳೆಲ್ಲ ಶೀರ್ಷಾಸನ ಹಾಕುವಂತೆ ಮಾಡಿದ್ದಾರೆ.
ಈ ವಿಷಯದಲ್ಲಿ ಶ್ರೀ ವ್ಯಾಸರಾಜ ಗುರುಸಾರ್ವಭೌಮರು ಹಿಡಿದ ದಾರಿಯೇ ಬೇರೆ,
ಸೈದ್ಧಾಂತಿಕ ವಿಷಯವಿನ್ಯಾಸ ನಿರೂಪಣಾದಿಗಳಲ್ಲಿ ಅವರು ಶ್ರೀ ಟೀಕಾರಾಯರು ಹಾಗೂ ಶ್ರೀಮದಾಚಾರ್ಯರ ಕ್ರಮವನ್ನೇ ಅನುಸರಿಸಿದರೂ - ವಿಪಕ್ಷ ಖಂಡನದ ಪ್ರಸಂಗದಲ್ಲಿ ಶ್ರೀ ವ್ಯಾಸರಾಜ ಗುರುಸಾರ್ವಭೌಮರು ಹೂಡುವ ಹೂಟವೇ ಬೇರೆ - ಆಡುವ ಆಟವೇ ಬೇರೆ.
ಮಾಯಾವಾದಿ ಮೃಗಗಳನ್ನು ಹಿಡಿಯಲು ಶ್ರೀ ಚಂದ್ರಿಕಾಚಾರ್ಯರು ತೀರ ಹೊಚ್ಚ ಹೊಸದಾದ ವ್ಯಾಸವಾಗುರಾಗಳನ್ನೇ ರಚಿಸಿದ್ದಾರೆ.
ಹೀಗೆ ಯಾವ ಪ್ರಾಚೀನ ಆಚಾರ್ಯರ ವಾಚೋಕ್ತವಾಗುವ ಮಹಾ ಚಾತುರ್ಯದ ಕೆಲ ಹಲವಾರು ಮಾತಿನ ಹಿಡಿತ - ಭಾವದ ಬಂಧ ಯುಕ್ತಿಯ ಮಲಕು - ಶಾಸ್ತ್ರದ ತಳಕು - ತರ್ಕದ ತಿರುಗಣಿ - ಪ್ರಮಾಣಗಳ ಪಟ್ಟವರಸೆಗಳನ್ನೂ " ಚಂದ್ರಿಕೆ " ಯಲ್ಲಿ ಕಾಣಬಹುದು.
ಈ ಎಲ್ಲಾ ಯುಕ್ತಿ ಚಾತುರಿ ಹಾಗೂ ಉಕ್ತಿ ವೈಖರಿಯ ಹಿಂದೆ ಗಟ್ಟಿಯಾದ ಪ್ರಮಾಣದ ನೆಲೆಗಟ್ಟು - ಅನುಭವದ ಆಧಾರ - ಶಾಸ್ತ್ರೀಯ ಸತ್ಸಂಪ್ರದಾಯಗಳ ಬಲಿಷ್ಠ ಬೆಂಬಲ ಮತ್ತು ದಾರ್ಶನೀಕ ಪ್ರಪಂಚದ ನಿಯಮ ನಿಬಂಧನೆಗಳ ಹಿನ್ನೆಲೆಯು ಅಬಾಧಿತವಾಗಿ ಇದ್ದುದರಿಂದಲೇ ಈ ವ್ಯಾಸ ವಾಗ್ ವ್ಯೂಹಗಳೆಲ್ಲ ವಿದ್ವನ್ಮಾನ್ಯವೂ - ವಿಮತೀಯರಿಗೂ ಏನೂ ಹೆಸರಿಡಲು ಬಾರದಂಥವುಗಳು ಆಗಿವೆ.
ಆದುದರಿಂದಲೇ " ನ್ಯಾಯಾಮೃತ " ದ ವಿರುದ್ಧವಾಗಿ ಯಾರೋ ಒಬ್ಬಿಬ್ಬರು ಧ್ವನಿ ಎತ್ತುವ ಸಾಹಸ ಮಾಡಿದ್ದರೂ " ಚಂದ್ರಿಕೆ " ಯ ವಿರುದ್ಧ ಮಾತೆತ್ತುವ ಹುಚ್ಚು ಸಾಹಸವನ್ನೂ ಕೂಡಾ ಮೊನ್ನೆ ಮೊನ್ನೆಯ ವರೆಗೆ ಯಾವ ನಿಜವಾದ ಮಾಯಾವಾದಿ ವಿದ್ವಾಂಸರೂ ಮಾಡಿರಲಿಲ್ಲ.
ಶ್ರೀ ಮಧುಸೂದನ ಸರಸ್ವತೀ - ಶ್ರೀ ವಾಚಸ್ಪತಿ ಮಿಶ್ರ - ಶ್ರೀಹರ್ಷಾ - ಶ್ರೀ ಚಿತ್ಸುಖಾಚಾರ್ಯ ಮುಂತಾದ ದಿಗ್ದಂತಿ ಪಂಡಿತರೆಲ್ಲರೂ " ಚಂದ್ರಿಕೆ " ಯ ಮುಂದೆ ಕೈಯೂರಿ - ಬಾಯ್ಕಟ್ಟಿ - ಮೂಕ ಸಮ್ಮತಿ ತೋರಿದಾಗ - ಇತ್ತೀಚಿನ ಶ್ರೀ ರಾಮಸುಬ್ಬಾಶಾಸ್ತ್ರಿ - ಶ್ರೀ ಅನಂತ ಕೃಷ್ಣ ಶಾಸ್ತ್ರಿ ಮುಂತಾದರು " ಚಂದ್ರಿಕೆ " ಯ ಬುಡ ತಿಳಿದುಕೊಳ್ಳುವ ಶಕ್ತಿಯಿಲ್ಲದೆ ಒಡಬಡಿಸಿದರೆ ಅದು " ಚಂದ್ರಿಕೆ " ಯ ಮೇಲಿನ ಘುಖ ಟೀಕೆಯಂತೆ ಸಾರ್ಥಥಾ ಅನುಪಾದೇಯವಾಗುವುದರಲ್ಲಿ ಸಂದೇಹವಿಲ್ಲ.
ಅವುಗಳ ಮೇಲೆ ಬೇಕಾದಷ್ಟು ಖಂಡನ ಮಂಡನಗಳು ಹುಟ್ಟಿವೆ - ಹುಟ್ಟುತ್ತಲೇ ಇವೆ.
ಆದರೆ ಇವಾವುದರಿಂದಲೂ " ಚಂದ್ರಿಕೆ " ವಿಶ್ವಾಲ್ಹಾದಕ ಸ್ವರೂಪಕ್ಕೆ ಯಾವ ಚ್ಯುತಿಯೂ ಇಲ್ಲ - ಯಾವ ಕ್ಷತಿಯೂ ಇಲ್ಲ.
ಈ ಜಗನ್ಮಾನ್ಯವಾದ " ಚಂದ್ರಿಕಾ " ಗ್ರಂಥವು ನಮ್ಮ ಮಾಧ್ವರ ದುರ್ದೈವದಿಂದ ಅರ್ಧಕ್ಕೆ ನಿಲ್ಲಿಸಲ್ಪಟ್ಟಿದೆ.
ಈಗಿರುವ ಸುಮಾರು ೧೧೦೦ ಪುಟದ " ಚಂದ್ರಿಕಾ " ಗ್ರಂಥವು ನಮ್ಮ " ತತ್ತ್ವ ಪ್ರಕಾಶಿಕೆ " ಯ ಅರ್ಧ ಎಂದರೆ ಪ್ರಥಮ ದ್ವಿತೀಯ ಈ ಎರಡು ಅಧ್ಯಾಯಕ್ಕೆ ಮಾತ್ರ ಇರುತ್ತದೆ.
ಮೂರು - ನಾಲ್ಕು ಅಧ್ಯಾಯಗಳಿಗೆ ಶ್ರೀ ವ್ಯಾಸರಾಜರ ಟೀಕೆ ಚಂದ್ರಿಕೆಯು ಯಾವುದೋ ಕಾರಣದಿಂದ ಬರೆಯಲ್ಪಡಲಿಲ್ಲ.
ಇವೆರಡು ಅಧ್ಯಾಯ ಬರೆಯುವಷ್ಟರಲ್ಲಿ ಶ್ರೀ ಚಂದ್ರಿಕಾಚಾರ್ಯರ ತಲೆಗೆ ವ್ಯಾಸರಾಜ ವಿಶ್ವವಿದ್ಯಾಲಯ ಹಾಗೂ ವಿಜಯನಗರದ ರಾಜಕಾರಣ - ಮಧ್ವ ಮತ ಪ್ರಸಾರ - ದಿಗ್ವಿಜಯಾದಿ ಕಾರ್ಯಭಾರಗಳ ಒತ್ತಡ ಹೆಚ್ಚಾಗಿ ಅವರಿಗೆ ಅವುಗಳನ್ನು ಪೂರ್ತಿಗೊಳಿಸಲಿಕ್ಕೆ ಆಗಲಿಲ್ಲ.
*
" ಶ್ರೀ ಶೇಷಚಂದ್ರಿಕಾಚಾರ್ಯರು - 3 "
" ತತ್ತ್ವ ಪ್ರಕಾಶಿಕೆ " ಯ ಮುಂದಿನ ಮೂರು - ನಾಲ್ಕು ಅಧ್ಯಾಯಗಳಿಗೆ ಚಂದ್ರಿಕೆಯ ಬೆಳಕಿಲ್ಲದೆ ಕೂಡುವ ಪ್ರಸಂಗ ಬಂದಿತು.
ಆಗಿನ ಕಾಲದಲ್ಲಿ ಪಂಡಿತರಿಗೂ - ಪಂಡಿತೋತ್ತಮರಾದ ಪೀಠಾಧಿಪತಿಗಳಿಗೂ ಕೊರತೆಯೇನಿರಲಿಲ್ಲ.
ಆದರೆ ಆ ಚಂದ್ರಿಕೆಯ ಅಸಾಧಾರಣವಾದ ಶೈಲಿ ಮತ್ತು ಸಮಸ್ತ ಶಾಸ್ತ್ರೋಧಧಿಗಳ ಸರ್ವಂಕಷವಾದ ಪ್ರಗಲ್ಭ ಸರಣಿಯನ್ನು ನೋಡಿದ ಯಾರಿಗೆ ತಾನೇ ಆ ಕಾರ್ಯವನ್ನು ಮುಂದುವರೆಸುವ ಧೈರ್ಯವಾದೀತು!
ಹೀಗಾಗಿ ಎಷ್ಟೋ ವರ್ಷ - ಎಷ್ಟೋ ತಲೆಮಾರು ತತ್ತ್ವಪ್ರಕಾಶಿಕೆಯ ಮೂರು - ನಾಲ್ಕು ಅಧ್ಯಾಯಗಳು ನಿಶ್ಚಂದ್ರಿಕೆಗಳಾಗಿಯೇ ಉಳಿಯಬೇಕಾಯಿತು.
ಮುಂದೆ ಈ ಕಾರ್ಯವನ್ನು ಶ್ರೀ ರಘುನಾಥ ತೀರ್ಥರು ಶ್ರೀ ವೇದವ್ಯಾಸರ - ಶ್ರೀ ಮಧ್ವಾಚಾರ್ಯರ ಹಾಗೂ ಶ್ರೀ ವ್ಯಾಸರಾಜರ ಪರಮಾನುಗ್ರಹದಿಂದ ಪೂರ್ತಿ ಮಾಡಿ ಶ್ರೀ ಶೇಷಚಂದ್ರಿಕಾಚಾರ್ಯರೆಂದು ಪ್ರಸಿದ್ಧಿ ಪಡೆದರು.
ಚಂದ್ರಿಕಾ ಮತ್ತು ಶೇಷಚಂದ್ರಿಕಾ ಎರಡೂ ಗ್ರಂಥಗಳ ಪದಪಂಕ್ತಿ - ವಚನ ರಚನಾ ವಿಶೇಷ - ತತ್ತ್ವ ನಿರೂಪಣಾ ವೈಖರೀ - ಮೂಲ ಗ್ರಂಥದ ಅರ್ಥಾಪ ಪ್ರಣಾಲೀ - ಪ್ರತಿಪಕ್ಷ ಖಂಡನ ಚಾತುರಿ ಮುಂತಾದವುಗಳನ್ನು ಸೂಕ್ಷ್ಮವಾಗಿ - ತುಲನಾತ್ಮಕವಾಗಿ ಅಭ್ಯಸಿಸಿದವರಿಗೆ " ಸೋsಯಂ ವ್ಯಾಸಃ " ಎಂಬ ಸುಜ್ನೈಕ ಪ್ರಾಪ್ಯಪ್ರತ್ಯಭಿಜ್ಞೆಯು ಬರುತ್ತದೆ.
ಇಲ್ಲದಿದ್ದರೆ ವಿಭಿನ್ನ ಕರ್ತೃಕ ಗ್ರಂಥಗಳ ಈ ಆಚೂಲ ಮೂಲ ಶೈಲಿಯ ಏಕತಾನತೆಗೆ ಕಾರಣ ಹೇಳುವುದು ಕಠಿಣವಾಗುವುದು.
ಅಥವಾ
ಶ್ರೀ ರಘುನಾಥ ತೀರ್ಥರ ವಾಙ್ಞಯ ತಪಸ್ಸಿಗೆ ಮೆಚ್ಚಿದ ಶ್ರೀ ಚಂದ್ರಿಕಾಚಾರ್ಯರು ಒಂದು ಅಂಶದಿಂದ ತಾವೇ ನಿಂತು - ಇಲ್ಲವೇ ಅವರ ಕೃಪಾ ವಿಶೇಷವೇ ಅವರಲ್ಲಿದ್ದು ಈ ಅನನ್ಯಸಾಧ್ಯವಾದ " ಚಂದ್ರಿಕಾ " ಪೂರಣ ರೂಪವಾದ ಮಹಾ ಕಾರ್ಯವನ್ನು ಮಾಡಿತು ಎಂದು ಹೇಳುವುದು ಸೂಕ್ತ.
" ದಶಮೋಮತ್ಸಮಃ "
ಶ್ರೀ ಚಂದ್ರಿಕಾಚಾರ್ಯರು ಅಪ್ಪಣೆ ಕೊಡಿಸಿದ " ದಶಮೋಮತ್ಸಮಃ " ಯೆಂಬ ವಚನಾನುಸಾರ ಅವರ ಶಿಷ್ಯ ಪರಂಪರೆಯಲ್ಲಿ ಶ್ರೀ ರಾಘುನಾಥ ತೀರ್ಥರು ಹತ್ತನೆಯವರು.
ಶ್ರೀ ರಘುನಾಥ ತೀರ್ಥರು ದೊಡ್ಡ ಜ್ಞಾನಿಗಳು.
ದ್ವೈತ ವೇದಾಂತಕ್ಕೆ ವಜ್ರ ಕವಚದಂತಿರುವ " ವ್ಯಾಸತ್ರಯ " ಗಳಲ್ಲೊಂದಾದ " ತಾತ್ಪರ್ಯ ಚಂದ್ರಿಕಾ " ಯೆಂಬ ಗ್ರಂಥದ ಅವಶಿಷ್ಟ ಭಾಗವೆಂದರೆ " ತತ್ತ್ವ ಪ್ರಕಾಶಿಕೆ " ಯ ಮೂರು - ನಾಲ್ಕನೆಯ ಅಧ್ಯಾಯಗಳ ವ್ಯಾಖ್ಯಾನ ಭಾಗ ರಚಿಸಿರುವರು.
ಅದಕ್ಕೆ " ಶೇಷ ಚಂದ್ರಿಕೆ " ಯೆಂದು ಹೆಸರು.
ಶೇಷಚಂದ್ರಿಕೆಯು ಸುಮಾರು 20000 ಗ್ರಂಥಗಳನ್ನೊಳಗೊಂಡ ದೊಡ್ಡ ಗ್ರಂಥವು.
" ತತ್ತ್ವ ಪ್ರಕಾಶಿಕೆ " ಯ ಮೂರು - ನಾಲ್ಕು ಅಧ್ಯಾಯಗಳು ಕ್ರಮವಾಗಿ ಸಾಧನಾ - ಫಲಗಳನ್ನು ನಿರೂಪಿಸುವವು.
ಈ ಭಾಗದಲ್ಲಿ ಮುಮುಕ್ಷುಜ್ಞೇಯವಾದ ಬಹು ಪ್ರಮೇಯಗಳು ಅಡಗಿವೆ.
ಅವು ಬಹು ಸೂಕ್ಶ್ಮ ದೃಷ್ಟಿಯಿಂದ ಪರಿಭಾವಿಸಿ ತಿಳಿಯಬೇಕಾದ ಅಂಶಗಳು.
ಅಂಥಹಾ ಗಹನವಾದ ಪ್ರಮೇಯಗಳನ್ನೆಲ್ಲ ಪರಪಕ್ಷ ನಿರಾಕರಣ ಪೂರ್ವಕವಾಗಿ ಚನ್ನಾಗಿ ನಿರೂಪಿಸಿ - ಮೂಲ ಟೀಕಾ ಭಾವವನ್ನು ಆವಿಷ್ಕರಿಸುವ ಕಾರಣ ಆ ಗ್ರಂಥ ನಾಮದಿಂದಲೇ ಪ್ರಖ್ಯಾತರಾಗಿ - ರಾಜ ಸಭೆಗಳಲ್ಲಿ ಬಂದ ವಾದಿಗಳನ್ನೆಲ್ಲಾ ಜಯಿಸಿ - ದ್ವೈತ ಸಿದ್ಧಾಂತ ಸ್ಥಾಪನೆ ಮಾಡಿ ಈ ಶ್ರೀ ಶೇಷಚಂದ್ರಿಕಾಚಾರ್ಯರು ಪಂಡಿತರ - ರಾಜರ ಹಾಗೂ ಮಹಾರಾಜರ ಮನ್ನಣೆಯನ್ನು ಪಡೆದರು.
" ಗ್ರಂಥಗಳು "
ಶೇಷಚಂದ್ರಿಕಾ ಗ್ರಂಥದ ಜೊತೆಗೆ....
1. " ತಂತ್ರಸಾರ " ಗ್ರಂಥಕ್ಕೆ " ತತ್ತ್ವಕರ್ಣಿಕಾ "
2. ಬೃಹತೀ ಸಹಸ್ರ ವ್ಯಾಖ್ಯಾನ " ತತ್ತ್ವಸಾರ "
3 ಪದಾರ್ಥ ವಿವೇಕ
4. ಕರ್ಮನಿರ್ಣಯ ವ್ಯಾಖ್ಯಾನ
5. ಈಶಾವಾಸ್ಯೋಪನಿಷದ್ಭಾಷ್ಯ ಟೀಕಾ ವ್ಯಾಖ್ಯಾನ
6. ಗಂಗಾಸ್ತೋತ್ರ
ಮೈಸೂರು ಹತ್ತಿರ ಕಾವೇರಿ - ಕಪಿಲ ಸಂಗಮ ಸ್ಥಳವಾದ " ತಿರುಮಕೂಡಲು " ಕ್ಷೇತ್ರದಲ್ಲಿ ಆಷಾಢ ಶುದ್ಧ ಚತುರ್ಥೀ ಶ್ರೀ ಹರಿಯ ಪಾದಾರವಿಂದ ಸೇರಿದರು.
*
" ಶ್ರೀ ಶೇಷಚಂದ್ರಿಕಾಚಾರ್ಯರು - 4 "
ಮಹಾ ತಪಸ್ವಿಗಳಾದ ಈ ಮಹಾನುಭಾವರು ಈಗಲೂ ಅಲ್ಲಿ ಸೇವಿಸುವ ಭಕ್ತವೃಂದಕ್ಕೆ ಐಹಿಕಾಮುಷ್ಮಿಕ ಶ್ರೇಯಸ್ಸನ್ನು ಅನುಗ್ರಹಿಸುತ್ತಿರುವರು.
ಶ್ರೀ ವ್ಯಾಸರಾಜ ಮಠದಲ್ಲಿ - ಮಾಧ್ವ ಇತಿಹಾಸದಲ್ಲಿ ಅತಿಮಾನ್ಯ ಸ್ಥಾನವನ್ನು ಪಡೆದ ಮಹನೀಯರು.
ಶ್ರೀ ರಘುನಾಥತೀರ್ಥರು ಹದಿನೆಂಟನೆಯ ಶತಮಾನದ ಆದಿಯಲ್ಲಿ ಇದ್ದರೆಂಬ ಅಂಶವು ಕ್ರಿ ಶ 1709ನೇ ಇಸ್ವಿಯಲ್ಲಿ....
ಜಯರಂಗರಾಯ - ಚೊಕ್ಕನಾಥರಾಯರಿಂದ ಕೊಡಲ್ಪಟ್ಟ ಶಾಸನದಿಂದ ವ್ಯಕ್ತವಾಗುತ್ತದೆ.
ಈ ಮಹನೀಯರು ಪೂರ್ವೋಕ್ತ ರೀತಿಯಲ್ಲಿ ಗ್ರಂಥ ರಚನಾದಿಗಳನ್ನು ಮಾಡಿ ಆಸೇತು ಹಿಮಾಚಲ ತೀರ್ಥ ಯಾತ್ರಾ ರೂಪ ದಿಗ್ವಿಜಯಗಳಿಂದ ಸನ್ಮಾರ್ಗ ಉಪದೇಶಿಸಿರುವರು.
ಶ್ರೀ ರಘುನಾಥ ತೀರ್ಥರು ಶ್ರೀ ವ್ಯಾಸರಾಜ ಮಠದ ಶ್ರೀ ಲಕ್ಷ್ಮೀ ನಾರಾಯಣ ತೀರ್ಥ ಶ್ರೀಪಾದರ ಕರಕಮಲ ಸಂಜಾತರು.
ಇವರ ಸಾಕ್ಷಾತ್ ಶಿಷ್ಯರೇ " ಶ್ರೀ ಭಾಷ್ಯದೀಪಿಕಾಚಾರ್ಯರು " ಯೆಂದು ಪ್ರಸಿದ್ಧರಾದ ಶ್ರೀ ಜಗನ್ನಾಥ ತೀರ್ಥರು.
ಈ ಗುರು ಶಿಷ್ಯರು 30 ವರ್ಷಗಳ ಕಾಲ ಸರ್ವಜ್ಞ ಸಿಂಹಾಸನದಲ್ಲಿ ಮಂಡಿಸಿ - ಸರ್ವಜ್ಞ ಶಾಸ್ತ್ರಗಳಲ್ಲಿ ಅಜರಾಮರವಾದ ಗ್ರಂಥಗಳನ್ನು ರಚಿಸಿದ್ದು ಮಾಧ್ವ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡತಕ್ಕ ಸಂಗತಿಯಾಗಿದೆ.
ಶ್ರೀ ಶೇಷಚಂದ್ರಿಕಾಚಾರ್ಯರು ತಮ್ಮ ಸಂಸ್ಥಾನದ ಭದ್ರತೆಗೂ ವಿಶೇಷ ಗಮನಕೊಟ್ಟು...
ಕೊಡೆಯಾಲ - ಶೇಷಗಿರಿಹಳ್ಳಿ - ಎಲಹಂಕ - ಶೆಟ್ಟಿಹಳ್ಳಿ ಮುಂತಾದ ಗ್ರಾಮಗಳನ್ನೂ ಮತ್ತು ಇತರ ಭೂಸ್ಥಳಗಳನ್ನೂ ಶ್ರೀಮಠಕ್ಕೆ ಸಂಪಾದಿಸಿದ್ದಾರೆ.
" ಶೇಷಚಂದ್ರಿಕಾ " ದಂಥ ಅಮೂಲ್ಯ ಗ್ರಂಥವು ಇಲ್ಲಿಯವರೆಗೂ ಅಚ್ಚಾಗಿದ್ದಿಲ್ಲ - ಅಲ್ಲಲಿ ನಾಲ್ಕೆಂಟು ಕೈಬರಹದ ಪ್ರತಿಗಳು ಮಾತ್ರ ಉಪಲಬ್ಧವಿದ್ದು - ಇವುಗಳ ಮೇಲೆಯೇ ಪಾಠ ಪ್ರವಚನ ನಡೆಯುತ್ತಿವೆ.
ಸಕಲ ಸಜ್ಜನರಿಗೂ ಈ ಅಪೂರ್ವ ಗ್ರಂಥವು ಉಪಲಬ್ಧವಾಗಬೇಕೆಂದು ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಈ " ಶೇಷಚಂದ್ರಿಕೆ " ಯನ್ನು ನಾಡಿನ ಪ್ರಸಿದ್ಧ ಪಂಡಿತರಿಂದ ಪರಿಶೋಧಿಸಿ - ಮುದ್ರಣ ಮಾಡಿಸಲು ಪ್ರಾರಂಭ ಮಾಡಿದ್ದರು.
ಮಾಧ್ವ ಮಹಾ ಮಂಡಲವು ಮಾಡತಕ್ಕ ಜ್ಞಾನ ಪ್ರಸಾರ ಕಾರ್ಯದಲ್ಲಿ ಈ ಗ್ರಂಥ ಪ್ರಕಾಶನವು ಒಂದು ಮೈಲುಗಲ್ಲಾಗಿದೆ.
ಶ್ರೀ ಭಾಷ್ಯದೀಪಿಕಾಚಾರ್ಯರು...
ಯೇನಾಯಂ ನಿರಣಾಯಿ ಮಧ್ವಗುರು ಸದ್ಭಾಷ್ಯ ಪ್ರಕಾಶಾಶಯಃ
ಪ್ರಾಖಂಡಿ ಪ್ರತಿವಾದಿ ದರ್ಶನ ಗಣಃ ಪ್ರಾಬಂಧಿಗುರ್ವರ್ಣವಃ ।
ಶಿಷ್ಯೇಭ್ಯಃ ಸಮದಾಯಿ ವಿತ್ತಮುಭಯಂ ಪ್ರಾಲಂಭಿವಿದ್ಯಾಸನಂ
ಸೋಯಂ ಶ್ರೀ ರಘುನಾಥ ಯತಿರಾಟ್ ಶುದ್ಧಿ೦ ವಿದಧ್ಯಾನ್ಮತೇ: ।।
**
" ಶ್ರೀ ಶೇಷಚಂದ್ರಿಕಾಚಾರ್ಯರ ವದನಾರವಿಂದದಲ್ಲಿ ಹೊರಹೊಮ್ಮಿದ " ಶ್ರೀ ಪುರಂದರದಾಸರ ಸ್ತುತಿ "
ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಗಳಾದ....
ಶ್ರೀ ಶ್ರೀಪಾದರಾಜ ಮಠ - ಶ್ರೀ ವ್ಯಾಸರಾಜ ಮಠ - ಶ್ರೀ ರಾಘವೇಂದ್ರಸ್ವಾಮಿಗಳವರ ಮಠದ ಯತಿಗಳೂ - ಹರಿದಾಸರು " ಹರಿದಾಸ ಸಾಹಿತ್ಯ ಕ್ಷೇತ್ರ " ಕ್ಕೆ ನೀಡಿದ ಕೊಡುಗೆ ಅಪಾರವಾಗಿವೆ.
ಶ್ರೀ ಚಂದ್ರಿಕಾಚಾರ್ಯರೂ ಮತ್ತು ಶ್ರೀ ಶೇಷಚಂದ್ರಿಕಾಚಾರ್ಯರು - ಈರ್ವರೂ ಶ್ರೀ ಪುರಂದರ ದಾಸರ ಮೇಲೆ ಕೃತಿಗಳನ್ನು ರಚಿಸಿದ್ದಾರೆ.
ಶ್ರೀ ಚಂದ್ರಿಕಾಚಾರ್ಯರು....
ಕಂಗಳಿಗೆ ಹಬ್ಬವಾಯಿತಯ್ಯ ।
ಮಂಗಳಾತ್ಮ ಪುರಂದರ -
ವಿಠ್ಠಲನ ದಾಸರ ಕಂಡು ।।
ಮತ್ತೊಂದು ಕೃತಿಯಲ್ಲಿ.....
ಗೀತ ನರ್ತನದಿಂದ -
ಕೃಷ್ಣನ್ನ ಪೂಜಿಸುವಾ ।
ಪೂತಾತ್ಮ ಪುರಂದರ-
ದಾಸರಿವರಯ್ಯಾ ।।
ಎಂದೂ ಶ್ರೀ ಪುರಂದರದಾಸರ ಮಹಿಮೆಯನ್ನು ಮನದುಂಬಿ ಹರ್ಷದಿಂದ ಸ್ತುತಿಸಿ ನರ್ತನ ಮಾಡಿದರೆ....
ತಿರುಮಲೆಯ ಚೆಲುವ ಶ್ರೀ ಶ್ರೀನಿವಾಸನ ತಿರುಮಲ ಬೆಟ್ಟದಲ್ಲಿ ಶ್ರೀ ಪುರಂದರದಾಸರನ್ನು ಅನುಗ್ರಹಿಸಿದ ಪರಿಯನ್ನು - ಶ್ರೀ ಶೇಷಚಂದ್ರಿಕಾಚಾರ್ಯರು ಹೃದಯ ತುಂಬಿ ಆನಂದದಿಂದ ಈ ಕೆಳಗಿನಂತೆ ಸ್ತುತಿಸಿ ಆನಂದಿಸಿದ್ದಾರೆ.
ರಾಗ : ಕೇದಾರಗೌಳ ತಾಳ : ಝ೦ಪೆ
ವೆಂಕಟೇಶನ ಯಾತ್ರಿಗೆ ದಾಸರು ಪೋದಾಗ ।
ವೆಂಕಟೇಶನೆಂಬ ಶಿಷ್ಯನ ಕೂಡಿಕೊಂಡು ।। ಪಲ್ಲವಿ ।।
ಬ್ರಹ್ಮತೀರ್ಥದೊಳಗೆ ಬ್ರಹ್ಮ ರುದ್ರಾದಿಗಳು ।
ತಮ್ಮ ತಮ್ಮ ವಾಹನವ ನೇರಿಕೊಂಡು ।
ತಮ್ಮ ಸತಿಯರ ಕೂಡ ಸೌಮ್ಯದಿಂದದಲಿ ಬಂದು ।
ಸುಮ್ಮನಸರೂ ಶಿರಿರಮಣನ್ನ ತುತಿಸಿದರು ।। ಚರಣ ।।
ತಾಳಪಾಕರೆಲ್ಲ ಕೂಡಿ ಮ್ಯಾಳ ಸಹಿತಾಗಿ ।
ಕೀಲಿಗಳ ಹಾಕಿದರು ದ್ವಾರಗಳಿಗೆ ।
ಭಾಳ ಬಗೆ ಬಗೆ ದ್ವಾರ ದಾಸರು ತೆಗೆಯೆನಲು ।
ಖೂಳತನದಲಿ ದೇವರಾಜ್ಞೆಯಿಲ್ಲೆಂದರು ।। ಚರಣ ।।
ಆಗ ದಾಸರು ವೇಗದಲಿ ನಿಂದು । ದೇವ ।
ರಿಗೆ ಬಗೆ ಬಗೆಯ ಸ್ತುತಿ ಮಾಡಲು ।
ಭೋಗಿಶಯನನು ಬಂದು ಬಾಗಿಲಗಳನು ತೆರೆದ ।
ಹೀಗೇಳು ದ್ವಾರಗಳು ಏಳು ನುಡಿಗೆ ।। ಚರಣ ।।
ಈ ಮಹಿಮೆ ನೋಡೆವರು ಪ್ರೇಮದಿಂ ದಾಸರಿಗೆ ।
ಈ ಮಹಿಮೆ ತಿಳಿಪದೆಂದು ನಮನ ಮಾಡೆ ।
ಅಮ್ಮಮ್ಮ ಇವರಿಗೆ ಸರಿಗಾಣೆ ಜಗದೊಳಗೆ ।
ರಮ್ಮೆಯರಸ ಪ್ರತ್ಯಕ್ಷ ಸುಮ್ಮನೇ ಮುಂದಾಡುವನು ।। ಚರಣ ।।
ಸ್ವಾಮಿ ಪುಷ್ಕರಣಿ ಸ್ನಾನವ ಮಾಡಿ ಸಕಲ । ಸ ।
ತ್ಕರ್ಮಾನುಷ್ಠಾನಂಗಳೆಲ್ಲ ಸಾರಿ ।
ಸ್ವಾಮಿ ಸಂದರುಶನ ಪ್ರೇಮದಿಂದಲಿ ಕೊಂಡು ।
ಆ ಮಹಾ ಪ್ರಸಾದಗಳು ಭುಂಜಿಸಿದರಾಗಾ ।। ಚರಣ ।।
ಆ ಮಹಿಮೆಯನು ಕಂಡು ತಮ್ಮ ಶಿಷ್ಯನ ಕರೆದು ।
ನಮ್ಮ ದೇವರ ಮಹಿಮೆ ನೋಡೆನ್ನಲೂ ।
ವಮ್ಮೆ ಕಂಡು ವಮ್ಮೆ ಕಾಣದಲೆ ಆ ಶಿಷ್ಯ ।
ಸ್ವಾಮಿ ಯೆನುತಲಿ ಆಗ ಮೂರ್ಛಗತನಾದ ।। ಚರಣ ।।
ಈ ಮಹಿಮೆಯನು ನೋಡಿ ಪ್ರೇಮದಿಂ ದಾಸರಿಗೆ ।
ರಾಮ ವೇದವ್ಯಾಸರಾ ನೈವೇದ್ಯಕೆ ।
ಸ್ವಾಮಿ ಬರಬೇಕೆಂದು ಕರೆಯಲಾಕ್ಷಣದಲ್ಲಿ ।
ಸೌಮ್ಯದಲಿ ಬಂದು ಭೋಜನವ ಮಾಡಿದರು ।। ಚರಣ ।।
ಮಠದೊಳಗೆ ದಾಸರು ಭೋಜನವ ಮಾಡಿ । ವೆಂ ।
ಕಟರಮಣನ ಯಜ್ಞ ಮಂಟಪದೊಳು ।
ವಿಠಲನ್ನ ಸ್ಮರಣೆ ಮಾಡುತ ರಾತ್ರಿ ಮಲಗಿರಲು ।
ಕಠಿಣ ತೃಷೆಯಾಗೆದ್ದು ಹುಡುಕೆ ಜಲಪಾತ್ರಿಲ್ಲ ।। ಚರಣ ।।
ಹಾಗೆ ಕೂಗಲು ತಮ್ಮ ವರದನೆ ಬಾಯಂದು ।
ವೇಗದಿಂ ಬಾಗಿಲವ ತೆರದು ಬಂದು ।
ಆಗ ಚಿನ್ನದ ಚಂಬು ಥಾಲಿ ನೀರನೆ ತುಂಬಿ ।
ಬ್ಯಾಗ ಸುತನ ರೂಪದಿಂದಂದು ಕೊಡಲಾಗ ।। ಚರಣ ।।
ಜಲವ ಕೊಂಡಾವಾಗ ಬಲು ಪಾನವನು ಮಾಡಿ ।
ಕಳದು ಆ ತೃಷಿಯ ಬಾಧಿಯನು ಎಲ್ಲ ।
ಜಲಪಾತ್ರಿ ಕೊಂಡು ಶಿಟ್ಟಲೆ ಹೊಡೆಯೆ ತಲೆ ಮ್ಯಾಲೆ ।
ವಲ್ಲೆ ವಲ್ಲೆ ಅಪರಾಧ ಸ್ವಾಮಿ ದಯಮಾಡೆಂದ ।। ಚರಣ ।।
ಶಿರದಲ್ಲಿ ರಕ್ತವಾ ಹೊರಡೆ ಗುಡಿಯನು ಹೊಕ್ಕು ।
ಪರಮ ಆನಂದದಿಂ ನಿಂದ ಮೇಲೆ ।
ಮರದಿನೋದಯದಲ್ಲಿ ಅರ್ಚನೆಯ ಕಾಲದಲಿ ।
ಶಿರವ ನೋಡಲು ರಕ್ತ ಕಂಡರಾಗವರು ।। ಚರಣ ।।
ಆಶ್ಚರಿಯ ನೋಡಿ ಪ್ರಾಣಾಚಾರ ಬೀಳಲು ।
ಅಚ್ಯುತನ ಸ್ವಪ್ನದಲಿ ಬಂದು ತಾನು ।
ಹೆಚ್ಚಿನವನೊಬ್ಬ ದಾಸ ನಿಶ್ಚಯದಿ ನಿನ್ನೆ ರಾತ್ರಿ ।
ಅಚ್ಚ ಚಂಬು ಕೊಂಡು ಬಡೆದನಾಗ ।। ಚರಣ ।।
ಆವಾಗ ಸಕಲ ಜನರೆಲ್ಲ ಆ ದಾಸರಿಗೆ ।
ಭಾವದಲಿ ನಮಿಸಿ ಸ್ತೋತ್ರ ಮಾಡಿ ।
ದೇವಮುನಿ ವಂದ್ಯನ ಮಹಿಮೆಗಳನು ತಿಳಿದು ।
ಕಾವಕೊಲ್ಲುವ ಸ್ವಾಮಿ ಹರಿ ಬಲ್ಲವರ ಮಹಿಮೆ ।। ಚರಣ ।\
ನಾರದನೆ ತಾ ಬಂದು ಧಾರುಣಿಯ ಮ್ಯಾಲೆ । ಅವ ।
ತಾರವನು ಮಾಡಡೆ ಯಿತರರಿಗೆ ಎಲ್ಲ ।
ಪಾರಮಾರ್ಥಿಯಲಿ ಉದ್ಧಾರ ಮಾಡುವನೆಂದು ।
ನಾರದರೆ ಪುರಂದರದಾಸರೆನಿಸಿದರು ।। ಚರಣ ।\
ಈ ಪರಿಯ ಮಹಿಮೆಯನು ಕಂಡು ಆ ಗಿರಿ ಮ್ಯಾಲೆ ।
ತಾಪತ್ರಯವ ಕಳೆದು ಈ ಪದವನು ।
ಪಾಪನಾಶನ ಮೂಲರಾಮ ಕೃಷ್ಣ ವೇದವ್ಯಾಸರಾ ।
ವಪ್ಪುವ ಭೃತ್ಯನಾದ ರಘುನಾಥಯತಿ ಹೇಳಿದನೂ ।। ಚರಣ ।।
ಮೇಲ್ಕಂಡ ಪದದಲ್ಲಿ ಶ್ರೀ ಶ್ರೀನಿವಾಸನು ಶ್ರೀ ಪುರಂದರದಾಸರ ಮೇಲೆ ತೋರಿದ ಕಾರುಣ್ಯಾತಿಶಯವನ್ನೂ - ಶ್ರೀ ನಾರದರ ಅವತಾರವೇ ಶ್ರೀ ಪುರಂದರದಾಸರೆಂದು ಸ್ಪಷ್ಟ ಪಡಿಸಿದ್ದಾರೆ.
ಶ್ರೀ ವೇದವ್ಯಾಸದೇವರು " ಗರುಡಪುರಾಣ " ದ " ದೇವಖಾಂಡ " ದಲ್ಲಿ....
ನಾರದೋ ವಿಷ್ಣು ಸೇವಾರ್ಥಂ
ವಾಯ್ವಾವೇಶಯುತೋsಜನಿ ।
ಪುರಂದರ ಇತಿ ಖ್ಯಾತಸ್ತತ್ವ-
ಮಾರ್ಗ ಪ್ರದರ್ಶಯನ್ ।।
ಶೂದ್ರ ಯೋನೌ ಚ ಸಂಜಾ-
ತೋ ನಾರದಃ ಪೂರ್ವ ಜನ್ಮನೀ ।
ತದ್ದೋಷ ಪರಿಹಾರಾರ್ಥಂ -
ರುದ್ರಚೋದಿತ ಮಾನಸಃ ।।
ನಾನಾ ವಿಧಂ ಪದ್ಯಮಾಲಾಂ -
ವಿಷ್ಣೋರರ್ಥ ಪ್ರಕಾಶಿಕಾಂ ।
ಚಕಾರ ವಿಠ್ಠಲ ಪ್ರೀತೈ: -
ದುಃಖ ಪ್ರಾರಬ್ಧ ಮೋಕ್ಷಣೀ೦ ।।
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
***
" ಹರಿದಾಸ ಸಾಹಿತ್ಯಕ್ಕೆ ಶ್ರೀ ಶೇಷಚಂದ್ರಿಕಾಚಾರ್ಯರ ಕೊಡುಗೆ "
ದಾಸ್ಯಮೇವ ಪರೋ ಧರ್ಮ
ದಾಸ್ಯಮೇವ ಪರಂ ಹಿತಂ ।
ದಾಸ್ಯೈ ನೈವ ಪರಾನ್ಮುಕ್ತಿ:
ಅನ್ಯಥಾ ನಿರಯಂ ವ್ರಜೇತ್ ।।
" ದಾಸ " ರೆಂದರೆ ಶ್ರೀ ಹರಿಯ ಹರಿಕಾರರಾದ ಹರಿದಾಸರೆಂದೇ ತಿಳಿಯಬೇಕು.
" ಸಾಹಿತ್ಯ " ಯೆಂಬುದು ವಿಶ್ವ ಮಾನ್ಯವಾದುದು.
ಯಾವುದೇ ಒಂದು ವಿಷಯವನ್ನು ಸವಿವರವಾಗಿ ತಿಳಿಯುವ ಲೇಖನವು ಸಾಹಿತ್ಯವಾಗುತ್ತದೆ.
ದಾಸ ಸಾಹಿತ್ಯವು ಸಾಹಿತ್ಯ, ಸಂಗೀತ ಹಾಗೂ ಸಂಸ್ಕೃತಿ ಪರಂಪರೆಯ ಒಂದು ಮಹತ್ತರವಾದ ಭಾಗ.
ಆ ಹರಿದಾಸ ಪಂಥದವರು ಸೃಷ್ಟಿಸಿದ ಸಾಹಿತ್ಯದ ಗುರಿ ಜೀವನವನ್ನು ಉಜ್ಜೀವನವಾಗಿಸಿ ಸಾಧಕರನ್ನು ಸಾಧನೆಗೆ ಅಣಿಯಾಗಿಸುವುದು.
ಹರಿದಾಸ ಸಾಹಿತ್ಯದ ಮುಖ್ಯ ಗುರಿಗಳಲ್ಲಿ ಶ್ರೀಮದಾನಂದತೀರ್ಥರ ಸಿದ್ಧಾಂತ ಪ್ರಚಾರವೇ ಮುಖ್ಯ ಗುರಿ.
ಸಕಲ ಜೀವರಿಗೆ ಸಹಿತವಾದುದೇ ದಾಸ ಸಾಹಿತ್ಯ.
ಜನ ಸಾಮಾನ್ಯರಲ್ಲಿ ಧರ್ಮಪ್ರಜ್ಞೆ - ದೈವೀಪ್ರಜ್ಞೆ ಮೂಡಿಸುವುದೇ ಹರಿದಾಸರ ಮುಖ್ಯ ಧ್ಯೇಯ.
ನಿಜ ಅರ್ಥದಲ್ಲಿ ಹರಿದಾಸ ಪಂಥವು ಆದಿ ಅಂತ್ಯಗಳಿಲ್ಲದ್ದು.
ಶ್ರೀ ಹರಿಯೇ ಈಶ ( ಸರ್ವೋತ್ತಮ ).
ಮುಕ್ತಿಯೋಗ್ಯರಾದ ಅನಂತ ಜೀವ ರಾಶಿಗಳೇ ಅವನ ದಾಸರು.
ಈಶ ನೆನಿಸಿದ ಶ್ರೀ ಹರಿಯು ನಿತ್ಯ.
ಆ ಈಶನ ಅಧೀನರಾದ ದಾಸರೂ ನಿತ್ಯವೇ ಆಗಿರುವರು.
ಸಕಲ ಶಾಸ್ತ್ರ ನಿರ್ಣಾಯಕವಾದ ಈಶ - ದಾಸ ಭೇದವನ್ನು ಲೋಕಕ್ಕೆ ತಿಳಿಯ ಪಡಿಸಿದವರು ಶ್ರೀ ವಾಯುದೇವರ ಸಾಕ್ಷಾತ್ ಅಂಶ ಸಂಭೂತರಾದ ಶ್ರೀಮದಾಚಾರ್ಯರು.
ಶ್ರೀಮದಾಚಾರ್ಯರ ದ್ವೈತ ( ವೈಷ್ಣವ ) ಸಿದ್ಧಾಂತವೇ ಹರಿದಾಸ ಸಾಹಿತ್ಯದ ಮುಖ್ಯಭಾಗ ಮತ್ತು ಜೀವಾಳ
ದಾಸ ಸಾಹಿತ್ಯವು...
ಭಕ್ತಿ ಸಾಹಿತ್ಯದ ಒಂದು ಪ್ರಮುಖ ಪ್ರವಾಹ.
ಸಂಗೀತದ ಒಂದು ಉತ್ತಮ ಮಾಧ್ಯಮ.
ಆಧ್ಯಾತ್ಮಿಕ ಚಿಂತನೆ
ಸಾಧನೆಗಳ ಆಕರ
ಹರಿ ದಾಸ ಸಾಹಿತ್ಯವು ಮಧ್ವ ಸಿದ್ಧಾಂತವನ್ನು ಯಥಾವತ್ತಾಗಿ ಆವಿಷ್ಕರಿಸಿದ ಅದ್ಭುತ ಸಾಹಿತ್ಯ.
ಶಾಸ್ತ್ರದ ಮೂಲ ತತ್ತ್ವಗಳನ್ನು ವಿದ್ವಾಂಸರಿಗೆ ವಿವರಣ ರೂಪವಾಗಿ - ಪಾಮರರಿಗೆ ಬೋಧಕ ರೂಪವಾಗಿ ಅತ್ಯಪೂರ್ವ ರೀತಿಯಲ್ಲಿ ನಿರೂಪಿಸಿದ್ದು ಇದರ ಹಿರಿಮೆ.
ಶ್ರೀಮದಾಚಾರ್ಯರ ದ್ವಾದಶ ಸ್ತೋತ್ರಾದಿ ಕೃತಿಗಳ ಹಿನ್ನೆಲೆಯಲ್ಲಿ ಮೂಡಿ ಬಂದ ಈ ಸಾಹಿತ್ಯ - ದಿನ ನಿತ್ಯದ ಸರಳ ದೃಷ್ಟಾಂತಗಳೊಂದಿಗೆ ಶ್ರೀ ಹರಿಯ ಪಾರಮ್ಯ - ಕಾರುಣ್ಯ ಮೊದಲಾದುವುಗಳನ್ನು ನಿರೂಪಿಸಿದ ರೀತಿ ಬಣ್ಣನೆಗೆ ಮೀರಿದ್ದು.
ಹರಿ ದಾಸ ಸಾಹಿತ್ಯದ ಬೆಳವಣಿಗೆಗೆ ನಾಂದಿ ಹಾಡಿದವರು ಶ್ರೀಮದಾಚಾರ್ಯರ ದ್ವಿತೀಯ ಪಟ್ಟದ ಶಿಷ್ಯರಾದ ಶ್ರೀ ನರಹರಿತೀರ್ಥರು - ನಂತರ ಶ್ರೀ ಜಯತೀರ್ಥರು ಮತ್ತು ಶ್ರೀ ವಿಬುಧೇಂದ್ರತೀರ್ಥರು
ಶ್ರೀ ನರಹರಿತೀರ್ಥರ [ ರಘುಪತಿ / ನರಹರಿ ] - ಶ್ರೀ ಜಯತೀರ್ಥರು [ ಶ್ರೀ ರಾಮ / ಶ್ರೀ ಜಯರಾಮ ] ಮತ್ತು ಶ್ರೀ ವಿಬುಧೇಂದ್ರತೀರ್ಥರ [ ವಿಬುಧರಾಮ ] ನಂತರ ದಾಸ ಸಾಹಿತ್ಯಕ್ಕೆ ಮೆರಗು ಕೊಟ್ಟವರು ಶ್ರೀ ಶ್ರೀಪಾದರಾಜರು.
ಶ್ರೀ ಶ್ರೀಪಾದರಾಜರ [ ರಂಗವಿಠ್ಠಲ ] ನಂತರ ಹರಿ ದಾಸ ಸಾಹಿತ್ಯದ ಉಜ್ವಲ ಪರಂಪರೆಯನ್ನು ಬೆಳೆಸಿದವರು ಶ್ರೀ ವ್ಯಾಸರಾಜ ಗುರುಸಾರ್ವಭೌಮರು [ ಶ್ರೀಕೃಷ್ಣ / ಸಿರಿಕೃಷ್ಣ ].
ಶ್ರೀ ವ್ಯಾಸರಾಜ ಗುರುಸಾರ್ವಭೌಮರ ನೇತೃತ್ವದಲ್ಲಿ " ದಾಸಕೂಟ " ಪ್ರಾರಂಭವಾಯಿತು.
ಶ್ರೀ ಭಾವಿಸಮೀರ ವಾದಿರಾಜರೂ [ ಹಯವದನ ] - ಶ್ರೀ ವಿಜಯೀ೦ದ್ರರೂ [ ವಿಜಯೀ೦ದ್ರರಾಮ ] - ಶ್ರೀ ಶ್ರೀ ಗೋವಿಂದ ಒಡೆಯರು [ ಗುರುಕೃಷ್ಣ / ಗುರುಮುದ್ದುಕೃಷ್ಣ ] - ಶ್ರೀ ಪುರಂದರದಾಸರು [ ಪುರಂದರವಿಠ್ಠಲ ] - ಶ್ರೀ ಕನಕದಾಸರೂ [ ಬಾಡದಾದಿಕೇಶವ / ಆದಿಕೇಶವ ] - ಶ್ರೀ ವರದ ಪುರಂದರದಾಸರು [ ವರದ ಪುರಂದರವಿಠ್ಠಲ ] - ಶ್ರೀ ಗುರು ಪುರಂದರದಾಸರು [ ಗುರು ಪುರಂದರವಿಠ್ಠಲ ] - ಶ್ರೀ ಅಭಿನವ ಪುರಂದರದಾಸರು [ ಅಭಿನವ ಪುರಂದರವಿಠ್ಠಲ ] - ಶ್ರೀ ವೈಕುಂಠದಾಸರು ಮತ್ತು ಶ್ರೀ ಪುರಂದರದಾಸರ ಕಿರಿಯ ಪುತ್ರರಾದ ಶ್ರೀ ಗುರು ಮಧ್ವಪತಿ [ ಗುರು ಮಧ್ವಪತಿ / ಮಧ್ವಪತಿ ವಿಠ್ಠಲ ] ಗಳು ಈ ದಾಸಕೂಟದಲ್ಲಿ ಸೇರಿದರು.
ಶ್ರೀ ಪುರಂದರದಾಸರ ಯುಗವಂತೂ ದಾಸ ಸಾಹಿತ್ಯದ " ಸುವರ್ಣ ಯುಗ " ವೆನ್ನುತ್ತಿದ್ದರು.
ಇವರು ಸಾಮಾಜಿಕ ಹಾಗೂ ಲೋಕ ನೀತಿಯ ಕುರಿತು ಖಡಾಖಂಡಿತವಾಗಿ ದೇಶವಾಣಿ ( ಆಡು ಭಾಷೆಯಾದ ಅಚ್ಛ ಕನ್ನಡದಲ್ಲಿ ) ಕೀರ್ತನೆಗಳನ್ನು ರಚಿಸಿದರು.
ಹೀಗೆ ಹರಿದಾಸರುಗಳಿಂದ ಬೆಳೆದು ಹೆಮ್ಮರವಾಗಿ ದಾಸ ಸಾಹಿತ್ಯ ವೃಕ್ಷವು ಫಲವೀಯುತ್ತಾ ಪ್ರಥಮ ಘಟ್ಟದ ಬೆಳವಣಿಗೆಗೆ ಸಾಧನೆಯಾಯಿತು
ಇಂಥಾ ಶ್ರೇಷ್ಠ ದಾಸ ಕೂಟದಲ್ಲಿ ಅರಳಿದ ಹೂವು " ಶ್ರೀ ಶೇಷ ಚಂದ್ರಿಕಾ ಚಾರ್ಯರು "
" ರಘುನಾಥ ಯತಿ " ಯೆಂಬ ಅಂಕಿತದಲ್ಲಿ.....
" ಶ್ರೀ ಶೇಷಚಂದ್ರಿಕಾಚಾರ್ಯರ ವದನಾರವಿಂದದಲ್ಲಿ ಹೊರಹೊಮ್ಮಿದ " ಶ್ರೀ ಪುರಂದರದಾಸರ ಸ್ತುತಿ "
ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಗಳಾದ....
ಶ್ರೀ ಶ್ರೀಪಾದರಾಜ ಮಠ - ಶ್ರೀ ವ್ಯಾಸರಾಜ ಮಠ - ಶ್ರೀ ರಾಘವೇಂದ್ರಸ್ವಾಮಿಗಳವರ ಮಠದ ಯತಿಗಳೂ - ಹರಿದಾಸರು " ಹರಿದಾಸ ಸಾಹಿತ್ಯ ಕ್ಷೇತ್ರ " ಕ್ಕೆ ನೀಡಿದ ಕೊಡುಗೆ ಅಪಾರವಾಗಿವೆ.
ಶ್ರೀ ಚಂದ್ರಿಕಾಚಾರ್ಯರೂ ಮತ್ತು ಶ್ರೀ ಶೇಷಚಂದ್ರಿಕಾಚಾರ್ಯರು - ಈರ್ವರೂ ಶ್ರೀ ಪುರಂದರ ದಾಸರ ಮೇಲೆ ಕೃತಿಗಳನ್ನು ರಚಿಸಿದ್ದಾರೆ.
ಶ್ರೀ ಚಂದ್ರಿಕಾಚಾರ್ಯರು....
ಗೀತ ನರ್ತನದಿಂದ ಕೃಷ್ಣನ್ನ ಪೂಜಿಸುವಾ ।
ಪೂತಾತ್ಮ ಪುರಂದರದಾಸರಿವರಯ್ಯಾ ।।
ಎಂದೂ ಶ್ರೀ ಪುರಂದರದಾಸರ ಮಹಿಮೆಯನ್ನು ಮನದುಂಬಿ ಹರ್ಷದಿಂದ ಸ್ತುತಿಸಿ ನರ್ತನ ಮಾಡಿದರೆ....
ತಿರುಮಲೆಯ ಚೆಲುವ ಶ್ರೀ ಶ್ರೀನಿವಾಸನ ತಿರುಮಲ ಬೆಟ್ಟದಲ್ಲಿ ಶ್ರೀ ಪುರಂದರದಾಸರನ್ನು ಅನುಗ್ರಹಿಸಿದ ಪರಿಯನ್ನು - ಶ್ರೀ ಶೇಷಚಂದ್ರಿಕಾಚಾರ್ಯರು ಹೃದಯ ತುಂಬಿ ಆನಂದದಿಂದ ಈ ಕೆಳಗಿನಂತೆ ಸ್ತುತಿಸಿ ಆನಂದಿಸಿದ್ದಾರೆ.
ರಾಗ : ಕೇದಾರಗೌಳ ತಾಳ : ಝ೦ಪೆ
ವೆಬ್ಕಟೇಶನ ಯಾತ್ರೆಗೆ ದಾಸರು ಪೋದಾಗ ।
ವೆಂಕಟೇಶನೇಬ ಶಿಷ್ಯನ ಕೂಡಿಕೊಂಡು ।। ಪಲ್ಲವಿ ।।
ಬ್ರಹ್ಮತೀರ್ಥದೊಳಗೆ.... ರಘುನಾಥಯತಿ ಹೇಳಿದನೂ ।। ಚರಣ ।।
ಮೇಲ್ಕಂಡ ಪದದಲ್ಲಿ ಶ್ರೀ ಶ್ರೀನಿವಾಸನು ಶ್ರೀ ಪುರಂದರದಾಸರ ಮೇಲೆ ತೋರಿದ ಕಾರುಣ್ಯಾತಿಶಯವನ್ನೂ - ಶ್ರೀ ನಾರದರ ಅವತಾರವೇ ಶ್ರೀ ಪುರಂದರದಾಸರೆಂದು ಸ್ಪಷ್ಟ ಪಡಿಸಿದ್ದಾರೆ.
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
****
No comments:
Post a Comment