Tuesday 30 April 2019

vidyakanta teertharu sosale 1824 matha vyasaraja mutt yati 28 jyeshta shukla navami ವಿದ್ಯಾಕಾಂತ ತೀರ್ಥರು






Aradhana of Sri Vidyakanta theertharu of Sosale Vyasaraja matha 


Sri Vidyakanta theertharu
Ashrama Period  – 1812-1824
Poorvashrama Name  –  Nacchappacharya
Ashrama guru             –  Sri Vidyavallabha Theertha
Ashrama Shishya         –  Sri Vidyanidhi Theertha
Aradhana                     – Jeshta Shudha Navami


Vrundavana Place      – Sosale

ಚತುಃಷಷ್ಟಿಕಲಾಯುಕ್ತಃ ಸರ್ವಸ್ವಾಂಬುಧಿಪಾರಗಃ l
ವಿದ್ಯಾಕಾಂತಗುರುರ್ಭೂಯಾದಸ್ಮದಿಷ್ಟಾರ್ಥಸಿದ್ಧಯೇ ll

Chatushahstikalaayuktaha sarvaswambudhipaaragaha l
Vidyakaantagurubhooyadasmadishtartha siddhaye ll

Sri Vidyakanta Theertha took Ashrama from Sri Vidyavallabha Theertha as the Twenty Eighth saint from Madhwacharya adorning the Vedantha Samrajya of Hamsanamaka Paramatma Saakshath parampare. 


He was the step brother of shri vidyAvallabha tIrtharu in his pUrvAshrama. 

He was Poorvashrama relative of Sri Vidyavallabha Theertha. He also received honours from kings of Mysore, Kochi, Tiruvankore etc. he received villages like Halkurike Sarthanahalli as gifts from Mysore king. Samsthana main deity Sri Moola Gopalakrishna received vaijayantimala during his time. He wrote many Kannada songs after Sri Vyasaraja with ankita as “Vidyakanta”.

He was a great scholar and his shishyaru describes him as being proficient in all 64 vidyAs. He was sent on a sanchAra by his guru. When they later met at nava brindAvana, he presented 20 "jaya pathrike" to his guru which he had won in various debates during his sanchara. 

His gurugaLu, vidyAvallabha tIrtharu, is referred to as abhinava vyAsarAjaru and he is referred to as abhinava vijayIndraru.

He was honored by Kings of Mysore, Travancore, Cochi and Pudukottai. Mysore Maharaja gifted him some villages. During his time, "vyjayantimala" jewel was offered for gOpAlakrishNa dEvaru.

Once shri vidyAvallabha tIrtharu and shri vidyAkAntha tIrtharu did chaturmAsa at shrirangapaTTaNa along with shri sujanEndra tIrtharu of rAyara maTa. shri vidyAvallabha tIrtharu used to do pravachana in the morning on tAtparya chandrika, shri sujanEndraru on nyAyAmruta in the afternoon and shri vidyAkAntharu on taraka tAnDava in the evening everyday. 

shri vidyAkAntharu had written a commentary on taraka tAnDava. He has also composed devaranAmAs in Kannada. 


He was the first to enter brindAvana at sOsale and 7 other yatIs have since entered there with the last being shri vidyA prasanna tIrtharu in 1969.

After handing over mahasamsthana to Sri Vidyanidhi Theertha, he entered Vrundavana at Sosale.

*****


ಇಂದು ಸೋಸಲೆ ಶ್ರೀ ವ್ಯಾಸರಾಜ ಮಠದ 28ನೇ ಪೀಠಾಧಿಪತಿಗಳಾದ ಶ್ರೀ ವಿದ್ಯಾಕಾಂತ ತೀರ್ಥರ ಆರಾಧನಾ ಮಹೋತ್ಸವ.
ಆರಾಧನೆ -  ಜೇಷ್ಠ ಶುದ್ಧ ನವಮೀ.
ಸ್ಥಳ - ಸೋಸಲೆ, ಟಿ ನರಸೀಪುರ.
ಇವರು ಪೀಠಾಧಿಪತಿಗಳಾಗಿದ್ದ ಅವಧಿ - 1812 - 1824
ಪೂರ್ವಶ್ರಮ ನಾಮ :  ಶ್ರೀ ನರಸಿಂಹಾಚಾರ್ಯರು.
ಇವರ ಆಶ್ರಮ ಗುರುಗಳು - ಶ್ರೀ ವಿದ್ಯಾವಲ್ಲಭ ತೀರ್ಥರು 
ಇವರ ಆಶ್ರಮ ಶಿಷ್ಯರು - ಶ್ರೀ ವಿದ್ಯಾನಿಧಿ ತೀರ್ಥರು🙏

ಚತುಃಷಷ್ಟಿಕಲಾಯುಕ್ತಃ ಸರ್ವಸ್ವಾಂಬುಧಿಪಾರಗಃ l
ವಿದ್ಯಾಕಾಂತಗುರುರ್ಭೂಯಾದಸ್ಮದಿಷ್ಟಾರ್ಥಸಿದ್ಧಯೇ ll🙏

ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರ ಪರಮಪವಿತ್ರ ವಿದ್ಯಾಪರಂಪರೆಯಾದ 
ಶ್ರೀರಾಜೇಂದ್ರತೀರ್ಥಶ್ರೀಪಾದರ ಪೂರ್ವಾದಿ ಮಠದ 
ಶ್ರೀಮದ್ ವ್ಯಾಸರಾಜಸಂಸ್ಥಾನದ ಅಧಿಪತಿಗಳಾದ
ಶ್ರೀಮದ್ ವಿದ್ಯಾಕರ್ಣಾಟಕಸಿಂಹಾಸನಾಧೀಶ್ವರಾದ 
ನಮ್ಮ ಪರಂಪರೆಯಲ್ಲಿ ಮತ್ತೊಬ್ಬ ಶ್ರೀ ವಿಜಯೀಂದ್ರತೀರ್ಥರೆಂದೇ ಪ್ರಖ್ಯಾತರಾದ
ಶ್ರೀ ಶ್ರೀನಾಥತೀರ್ಥಶ್ರೀಪಾದಂಗಳವರ ವಿದ್ಯಾಶಿಷ್ಯರೂ
ಶ್ರೀ ವಿದ್ಯಾವಲ್ಲಭತೀರ್ಥಶ್ರೀಪಾದಂಗಳವರ ಶಿಷ್ಯರೂ ಆದ
ಶ್ರೀ ವಿದ್ಯಾಕಾಂತತೀರ್ಥಶ್ರೀಪಾಂದಗಳವರ ಆರಾಧನಾ ಮಹೋತ್ಸವ.

ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಧೀಶ್ವರರೂ, ಚತು: ಷಷ್ಟೀ ಕಲಾಸಂಪನ್ನರೂ ಆದ ಶ್ರೀ ವಿದ್ಯಾಕಾಂತತೀರ್ಥರು🙏

ಶ್ರೀ ವಿದ್ಯಾಕಾಂತತೀರ್ಥರು
ಶ್ರೀ ಮೂಲಗೋಪಾಲದೇವರಿಗೆ ವೈಜಯಂತೀ ಮಾಲೆಯನ್ನು ಸಮರ್ಪಿಸಿದ ಮಹಾತ್ಮರು. 

ಅಂಕಿತ : ವಿದ್ಯಾಕಾಂತ

ಗ್ರಂಥಗಳು : ಮಗಳಾಷ್ಟಕಮ್ ಮತ್ತು ಶ್ರೀ ಶೇಷಚಂದ್ರಿಕಾಚಾರ್ಯ ಕುರಿತು ರಘುನಾಥಾಷ್ಟಕಮ್

" ರಾಜ ಮರ್ಯಾದೆ " :
ಮೈಸೂರು, ಕೊಚ್ಚಿ, ತಿರುವಾಂಕೂರು ಮಹಾರಾಜರುಗಳಿಂದ ಗೌರವಿಸಲ್ಪಟ್ಟರು.

ಮೈಸೂರು ಮಹಾರಾಜರು ಹಾಲ್ಕುರಿಕೆ ಮತ್ತು ಸಾರ್ಥನ ಹಳ್ಳಿ ಗ್ರಾಮಗಳನ್ನು ದಾನವಾಗಿ ಸಮರ್ಪಿಸಿದರು!

" ವಾದಿ ನಿಗ್ರಹ ಮತ್ತು ಚತು: ಷಷ್ಟೀ ಕಲಾ ಸಂಪನ್ನರು "

ಶ್ರೀ ವಿದ್ಯಾಕಾಂತತೀರ್ಥರು ಸೋಮಭಟ್ಟ ಎಂಬ ಪೇಶ್ನ ಶಾಸ್ತ್ರ ಪಂಡಿತನನ್ನು ಸೋಲಿಸಿದರು ಮತ್ತು ನೃತ್ಯ ಶಾಸ್ತ್ರದಲ್ಲಿ ಸ್ಪರ್ಧಿಸಲು ಬಂದ ಅದ್ವೈತ ನೃತ್ಯ ಪಟುವನ್ನು ನೃತ್ಯ ಶಾಸ್ತ್ರದ ಪ್ರಕಾರ ಸೋಲಿಸಿದ ಧೀರರು!!

ಅರವತ್ನಾಲ್ಕು ಕಲೆಗಳಲ್ಲಿ ಪ್ರವೀಣರಾದ
ಸಕಲಶಾಸ್ತ್ರಗಳನ್ನೂ ಬಲ್ಲ
ಶ್ರೀ ವಿದ್ಯಾಕಾಂತತೀರ್ಥಶ್ರೀಪಾದರು 
ನಮ್ಮ ಮನಸ್ಸಿನ ಅಭೀಷ್ಟಗಳನ್ನು ಪೂರೈಸಲಿ.🙏
*****

info from sumadhwaseva.com--->


(ವ್ಯಾಸರಾಜ ಮಠ ಪರಂಪರೆ)

ಚತು:ಷಷ್ಠಿಕಲಾಯುಕ್ತ: ಸರ್ವಜ್ಞಾಂಬುಧಿಪಾರಗ: |
ವಿದ್ಯಾಕಾಂತಗುರುರ್ಭೂರ್ಯಾದಸಮದಿಷ್ಟಾರ್ಥ ಸಿದ್ದಯೇ ||

ಪೂರ್ವಾಶ್ರಮ ನಾಮ – ನಚ್ಚಪ್ಪಾಚಾರ್ಯರು
ಆಶ್ರಮ ಕಾಲ             – ೧೮೧೨- ೧೮೨೪
ಆಶ್ರಮ ಗುರುಗಲು      – ಶ್ರೀ ವಿದ್ಯಾವಲ್ಲಭ ತೀರ್ಥರು
ಆಶ್ರಮ ಶಿಷ್ಯರು         – ಶ್ರೀ ವಿದ್ಯಾನಿಧಿ ತೀರ್ಥರು
ವೃಂದಾವನ              – ಸೋಸಲೆ
ಆರಾಧನ                  – ಜ್ಯೇಷ್ಠ ಶುದ್ಧ ನವಮಿ
ಸಾಧನೆಗಳು              – ಇವರು ಮೈಸೂರು, ತಿರುವಾಂಕೂರು, ಕೊಚ್ಚಿ, ಪುದುಕೋಟೈ ಮುಂತಾದ ಸಂಸ್ಥಾನಗಳ ರಾಜರುಗಳಿಂದಲೂ ಮಾನ್ಯರಾಗಿ, ಮೈಸೂರು ಮಹಾರಾಜರಿಂದ “ಹಾಲ್ಕುರಿಕೆ, ಸಾರ್ಥನಹಳ್ಳಿ” ಮುಂತಾದ ಗ್ರಾಮಗಳನ್ನು ದಾನವಾಗಿ ಪಡೆದರು.  ಇವರ ಕಾಲದಲ್ಲಿ ಗೋಪಾಲಕೃಷ್ಣದೇವರ ಪೂಜೆಗಾಗಿ ಅಮೋಘವಾದ ವೈಜಯಂತಿಮಾಲ ಎಂಬ ದಿವ್ಯಾಭರಣವನ್ನು ಸಂಪಾದಿಸಿದರು.
ಕೃತಿಗಳು             –  ಇವರು ಕನ್ನಡ ಭಾಷೆಯಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆಂದು ಪ್ರತೀತಿ ಇದೆ.


श्री विद्याकांत तीर्थरु

(व्यासराज मठ परंपरॆ)

पूर्वाश्रम नाम – नच्चप्पाचार्यरु
आश्रम काल      – १८१२- १८२४
आश्रम गुरुगलु   – श्री विद्यावल्लभ तीर्थरु
आश्रम शिष्यरु  – श्री विद्यानिधि तीर्थरु
वृंदावन        – सोसलॆ
आराधन          – ज्येष्ठ शुद्ध नवमि


**************


ಶ್ರೀ ವಿಠ್ಠಲ ಪ್ರಸೀದತು 
ಜೇಷ್ಠ ಶುದ್ಧ  ನವಮಿ, ಶ್ರೀ ವ್ಯಾಸರಾಜ ಮಠ ಪರಂಪರೆಯ ಹದಿನೇಳನೇ ಪೀಠಾಧಿಪತಿಗಳಾದ ಶ್ರೀ ೧೦೮ ವಿದ್ಯಾಕಾಂತ
ಯತಿಗಳ ಆರಾಧನೆ .
ಶ್ರೀವ್ಯಾಸರಾಜ ಮಠದ  ಪರಂಪರೆಯಲ್ಲಿ ಬಂದ
ಶ್ರೀ ೧೦೮ ರತ್ನಾಕರತೀರ್ಥರು  ರಚಿಸಿದ 
“ “ಹರಿಗುರು ಮಂಗಳಾಷ್ಟಕ “ ದಲ್ಲಿ                     
“ ವಿದ್ಯಾಕಾಂತಯತೀಶ್ವರಃ ಪ್ರಚುರಧಿರ್ವಿದ್ಯಾನಿಧಿರ್ಯೋಗಿರಾಡ್
ವಿದ್ಯಾಪೂರ್ಣಪದೋsಥ. ಮಸ್ಕರಿವರಃ  ತತ್ಪಾಣಿ
ಪದ್ಮೋದಿತಃ | ಎಂದು ಉಲ್ಲೇಖಿಸಿರುವ ಗುರುಪರಂಪರೆಯ ಶ್ರೀ ೧೦೮ ವಿದ್ಯಾಕಾಂತ ತೀರ್ಥರ  ಆರಾಧನೆ ಇಂದು. 
ಮದ್ವ ಶಾಸ್ತ್ರ ಸಂಪನ್ನರಾದ ಶ್ರೀ ನಾಚಪ್ಪಚಾರ್ಯ 
ಶ್ರೀ ವಿದ್ಯಾವಲ್ಲಭ ತೀರ್ಥರಲ್ಲಿ ೧೮೧೨ ರಲ್ಲಿ 
   ಸನ್ಯಾಸ ಸ್ವೀಕರಿಸಿ ಶ್ರೀ ವಿದ್ಯಾಕಾಂತ ತೀರ್ಥರೆನಿಸಿದರು. ಶ್ರೀಗಳು ಅರವತ್ತ ನಾಲ್ಕು  ವಿಧ್ಯೆಗಳಲ್ಲಿ ಪಾರಂಗತರೆಂದು ಅವರ ಶಿಷ್ಯರು ಕೊಂಡಾಡುತ್ತಾರೆ .  ಒಮ್ಮೆ ಅವರಗುರುಗಳಾದ ಶ್ರೀ ವಿದ್ಯಾವಲ್ಲಭರು ಸಂಚಾರಕ್ಕೆ ಕಳುಹಿಸಿದ್ದಾಗ ವಾದದಲ್ಲಿ ಗೆದ್ದು ಸರಿಸುಮಾರು ೨೦ ಜಯಪತ್ರಗಳನ್ನು ತಂದು ಗುರುಗಳಿಗೆ  ಒಪ್ಪಿಸ್ಸಿದ್ದರು . ಅವರ ಗುರುಶಿಷ್ಯ ಸಂಬಂದವನ್ನು ಶ್ರೀವ್ಯಾಸರಾಜರು ಹಾಗು ಶ್ರೀವಿಜಯೀoದ್ರರಿಗೆ ಹೋಲಿಸಿದ್ದರು ಜನ . ಇವರಕಾಲದಲ್ಲಿ ಶ್ರೀ ಮೂಲಗೋಪಾಲಕೃಷ್ಣನಿಗೆ ಅಮೂಲ್ಯವಾದ ವೈಜಯಂತಿ ಹಾರ  ರಾಜಮನೆತನಗಳಿಂದ ಪ್ರಾಪ್ತವಾಗಿತ್ತು . ಶ್ರೀಗಳು ಶ್ರೀವ್ಯಾಸರಾಜರ “ತರ್ಕತಾಂಡವಕ್ಕೆ ಟೀಕೆಯನ್ನು ರಚಿಸಿದ್ದಾರೆ  . 
ಶ್ರೀ ವ್ಯಾಸರಾಜರನಂತರ ಕನ್ನಡ ಕೃತಿಗಳನ್ನು ರಚಿಸಿದ ಅತಿವಿರಳ ಪೀಠಸ್ಥರಲ್ಲಿ ಇವರೂ ಒಬ್ಬರು . ಮೈಸೂರು , ತಿರುವಾಂಕೂರು ಮಹಾರಾಜರುಗಳಿಂದ ಗ್ರಾಮಗಳನ್ನು ಉಂಬಳಿಯಾಗಿ ಪಡೆದು ಮಠದ ಸ್ಥಿರಾಸ್ತಿಯನ್ನು 
ವೃದ್ಧಿಗೊಳಿಸಿದ ಹೆಗ್ಗಳಿಕೆ ಇವರದು .
ಹನ್ನೆರಡು ವರ್ಷಗಳ ಕಾಲ ಪೀಠದಲ್ಲಿದ್ದು  ೧೮೨೪ ನೇ ಇಸವಿ ಜೇಷ್ಠ ಶುದ್ಧ ನವಮಿ ಸೋಸಲೆಯಲ್ಲಿ ಬೃಂದಾವನಸ್ಥರಾದರು . ಸೋಸಲೆಯಲ್ಲಿ ಬೃಂದಾವನಸ್ಥರಾದ  ಏಳು ಯತಿಗಳಲ್ಲಿ ಇವರೇ ಮೊದಲಿಗರು .
ಇವರ ಆಶ್ರಮ ಶಿಷ್ಯರು ಶ್ರೀ ವಿದ್ಯಾನಿಧಿ ತೀರ್ಥರು ಇವರ ಪೂರ್ವಾಶ್ರಮದ ಹಿರಿಯ ಸಹೋದರರು
ಕೇವಲ ೪೮ ದಿನಗಳು ಪೀಠದಲ್ಲಿ ಇದ್ದರು . 
 ೩೦ನೆ ಯತಿಯಾಗಿ, ಶ್ರೀವಿದ್ಯಾನಿಧಿ ತೀರ್ಥರು
ಶ್ರೀ ವಿದ್ಯಾಕಾಂತ ತೀರ್ಥರ ಪೂರ್ವಾಶ್ರಮದ
ಪುತ್ರ ವೆಂಕಟ ನರಸಿಂಹಾಚಾರ್ಯರಿಗೆ 
ಧೀಕ್ಷೆಕೊಟ್ಟು ಶ್ರೀ ವಿದ್ಯಾ ಪೂರ್ಣ ತೀರ್ಥರೆಂದು ಆಶ್ರಮ ನಾಮವನ್ನಿತ್ತು ಪೀಠವನ್ನು ಅಲಂಕರಿಸುವಂತೆ ಮಾಡಿ   ಮಠದ ಉತ್ತರೋತ್ತರ ಅಭಿವೃದ್ಧಿಗೆ ಕಾರಣರಾದರು .
ಶ್ರೀ ವಿದ್ಯಾಕಾಂತ ತೀರ್ಥರ ಚರಮ ಶ್ಲೋಕ ಹೀಗಿದೆ .
||ಚತು: ಷಷ್ಠಿ ಕಲಾಯುಕ್ತ: ಸರ್ವಜ್ಞಾoಬುಧಿಪಾರಾಗ:
ವಿದ್ಯಾಕಾಂತಗುರುರ್ಭುಯಾದಸ್ಮದಿಷ್ಟಾರ್ಥ 
ಸಿದ್ಧಯೇ ||
ಶ್ರೀ ಮೂಲ  ಗೋಪಾಲಕೃಷ್ಣ ,ಪಟ್ಟಾಭಿರಾಮ ಪಾದಪದ್ಮ  ಆರಾಧಕರಾದ ಶ್ರೀ ೧೦೮ ವಿದ್ಯಾಕಾಂತ ಗುರುವರ್ಯರಿಗೆ  ಭಕ್ತಿ ಪೂರ್ವಕ ಸಾಷ್ಟಾಂಗ ನಮಸ್ಕಾರಗಳು .
           ||ನಾಹಂ ಕರ್ತಾ ಹರಿಃ ಕರ್ತಾ||

        ||ಶ್ರೀಕೃಷ್ಣಾರ್ಪಣಮಸ್ತು ||
******

1800ರ ದಶಕದಲ್ಲಿ ಶ್ರೀ ವಿದ್ಯಾಕಾಂತ ತೀರ್ಥ ಶ್ರೀಪದಂಗಲವರ ಕಾಲದಲ್ಲಿ ಮಾಡಿದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಮಯದಲ್ಲಿ ಶ್ರೀ ಮೂಲ ಗೋಪಾಲಕೃಷ್ಣದಿ ಸಾಂಸ್ಥಾನ ಮೂಲ ಮೂರ್ತಿಗಳನ್ನು ಅಲಂಕರಿಸುವ ಅಮೂಲ್ಯವಾದ "ವೈಜಯಂತಿ ಮಾಲಾ (ವೈಜಯಂತಿ ಮಾದರಿಯ ಹಾರ)". ಈ "ವೈಜಯಂತಿ ಮಾಲಾ" ಅನ್ನು ಮೈಸೂರು ಮಹಾರಾಜರಾದ ಶ್ರೀ ಮುಮ್ಮಡಿ ಕೃಷ್ಣರಾಜ ವೊಡಾಯರ್ ಅವರು ಶ್ರೀ ವಿದ್ಯಾಕಾಂತ ತೀರ್ಥರು ಅವರಿಗೆ ಉಡುಗೊರೆಯಾಗಿ ನೀಡಿದರು. ಇಂದು ಹಲವಾರು ಕೋಟಿ ಮೌಲ್ಯದ, ಈ ವೈಜಯಂತಿ ಮಾಲೆಯೂ ಇಡೀ ಪೀಠವನ್ನು ಅದರ 6 ಅಡಿ ಉದ್ದದಲ್ಲಿ ಆವರಿಸಿದೆ ಎಂದು ಹೇಳಲಾಗುತಿತ್ತು 🙏


The Priceless "VAIJAYANTHI MAALA(Vaijayanthi pattern necklace)" which adorns Shri Moola GopalaKrishnaadi samsthaana moola moorthis during Krishna Janmashtami made during Shri Vidyakantha Theertha Shripadangalavara time in 1800s. 
This "VAIJAYANTHI MAALA" was gifted by Maharaja of Mysore Shri Mummadi Krishnaraja Wodayar to Shri Vidyakantha Teertharu. Worth several crores today, the mala as it was gifted then is said to have covered the entire Peetha in its length of 6 Feet.
******

18 June 2021

ಇಂದು ಶ್ರೀ ರಾಯರ ಮಠದ 18ನೇ ಶತಮಾನದ  ಪರಮಶ್ರೇಷ್ಠ ಯತಿಗಳೂ, ಶ್ರೀ ರಾಯರ ಪೂರ್ವಾಶ್ರಮದ ಮೊಮ್ಮಕ್ಕಳು, ಗುರುಗುಣಸ್ತವನವನ್ನು ನೀಡಿದವರು, ಶ್ರೀ ಉಪೇಂದ್ರತೀರ್ಥರ ಶಿಷ್ಯರು, ಶ್ರೀ ವರದೇಂದ್ರತೀರ್ಥರ ಗುರುಗಳು, ಮಹಾನ್ ಯೋಗಿವರೇಣ್ಯರು, ಶ್ರೀ ರಾಯರಿಂದ ಅನುಗ್ರಹಿಸಲ್ಪಟ್ಟು ಅವರ ಪಕ್ಕದಲ್ಲೇ ಸ್ಥಾನವನ್ನು ಪಡೆದು, ರಾಯರ ಸೇವೆಯನ್ನು ಮಾಡುತ್ತಿರುವವರು, ತಪಶ್ಶಕ್ತಿ  ಸಂಪನ್ನರು,  ಶ್ರೀ ವಿಜಯಪ್ರಭುಗಳೇ ಮೊದಲು ಎಲ್ಲ ಶ್ರೇಷ್ಠ ಹರಿದಾಸರಿಂದ ಗೇಗೀಯಮಾನರಾದವರಾದ
 ಶ್ರೀ ವಾದೀಂದ್ರತೀರ್ಥರ (ಮಂತ್ರಾಲಯ) ಮಧ್ಯಾರಾಧನಾ ಮಹೋತ್ಸವವು... 

ಹಾಗೆಯೇ 

ಚತು:ಷಷ್ಠಿಕಲಾಯುಕ್ತ: ಸರ್ವಜ್ಞಾಂಬುಧಿಪಾರಗ:/
ವಿದ್ಯಾಕಾಂತಗುರುರ್ಭೂರ್ಯಾದಸಮದಿಷ್ಟಾರ್ಥ ಸಿದ್ದಯೇ //

ಶ್ರೀಮದ್ವ್ಯಾಸರಾಜ ಮಠ, ಸೋಸಲೆಯ, ಮಹಾನ್ ಯತಿಗಳೂ ಚತುಃ ಷಷ್ಟಿ ಕಲಾ ನೈಪುಣ್ಯರು, ವಾದಿಗಳಿಗೆ ಸಿಂಹಸ್ವಪ್ನದಂತಿರುವರು, ಶ್ರೀಮದ್ವ್ಯಾಸರಾಜ ಗುರುಸಾರ್ವಭೌಮರ ನಂತರ ವಿದ್ಯಾಕಾಂತ ಎನ್ನುವ ಅಂಕಿತನಾಮದಿಂದ ಕನ್ನಡದಲಿ ಕೃತಿ ರಚನೆ ಮಾಡಿ ಖ್ಯಾತಿ ಪಡೆದವರು, ದೇವತೆಗಳಿಂದ  (ಆಕಾಶದಿಂದ)  ಪುಷ್ಪವೃಷ್ಟಿಯನ್ನು ಅನುಗ್ರಹ ರೂಪವಾಗಿ ಪಡೆದವರು, ಮಹಾನುಭಾವರು ಆದ ಶ್ರೀ ವಿದ್ಯಾಕಾಂತ ತೀರ್ಥರ (ಸೋಸಲೆ, ತಿ. ನರಸೀಪುರ) ಆರಾಧನೆಯೂ..
***
.

No comments:

Post a Comment